Categories
ಶರಣರು / Sharanaru

ವೈದ್ಯ ಸಂಗಣ್ಣ

ಅಂಕಿತ: ಮರುಳ ಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ
ಕಾಯಕ: ವೈದ್ಯ

ವೈದ್ಯ ವೃತ್ತಿಯನ್ನು ಕಾಯಕವಾಗಿ ಸ್ವೀಕರಿಸಿದ್ದ ಸಂಗಣ್ಣ ಶರಣನಾಗಿಯೂ ಉತ್ತಮ ವಚನಗಳನ್ನು ರಚಿಸಿದ್ದಾನೆ. ಕಾಲ-೧೧೬೦. ‘ಮರುಳಶಂಕರ ಪ್ರಿಯ ಸಿದ್ಧರಾಮೇಶ್ವರ ಅಂಕಿತದಲ್ಲಿ ೨೧ ವಚನಗಳು ದೊರೆತಿವೆ. ಹೆಚ್ಚಾಗಿ ಎಲ್ಲವೂ ವೈದ್ಯ ವೃತ್ತಿಯ ಪರಿಭಾಷೆಯಲ್ಲಿ ತತ್ವವನ್ನು ಬೋಧಿಸುತ್ತವೆ. ಇಲ್ಲಿ ಉಲ್ಲೇಖಿಸುವ ನಾಡಿಗಳ ವಿವರ, ವ್ಯಾಧಿಗಳ ಬಗೆ, ಔಷಧಗಳ ಪ್ರಕಾರಗಳು ಈತನ ವೈದ್ಯಶಾಸ್ತ್ರ ಪರಿಣತಿಯನ್ನೂ, ಅವುಗಳಿಗೆ ಆತ ಜೋಡಿಸುವ ತಾತ್ವಿಕ ಪರಿವೇಶವನ್ನೂ ಏಕಕಾಲಕ್ಕೆ ಪ್ರಕಟಿಸುತ್ತವೆ.

ವೈದ್ಯ ಸಂಗಣ್ಣ ಶರೀರದ ಕಾಯಿಲೆಗಳ ಉಪಶಮನಕ್ಕೆ ಬಹಿರಂಗದ ಚಿಕಿತ್ಸೆಯ ಜೊತೆಗೆ ಅಂತರಂಗದ ಚಿಕಿತ್ಸೆಯೂ ನಡೆಯಬೇಕೆಂಬುದು ಅವನ ವಚನಗಳ ಆಶಯ. ಶಿವಯೋಗ, ಷಟ್-ಸ್ಥಲಗಳ ವಿವರಣೆಯೂ ಬಂದಿದೆ.