Categories
ಶರಣರು / Sharanaru

ಶಿವಲೆಂಕ ಮಂಚಣ್ಣ

ಅಂಕಿತ: ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
ಕಾಯಕ: ಪಂಡಿತ

ಪಂಡಿತ ಪರಂಪರೆಗೆ ಸೇರಿದ ಈತನ ಮೂಲಸ್ಥಳ ಕಾಶಿ. ಕಲ್ಯಾಣಕ್ಕೆ ಬಂದು ಶರಣನಾಗುತ್ತಾನೆ. ಉರಿಲಿಂಗದೇವ ಈತನ ಶಿಷ್ಯ. ಕಾಲ-೧೧೬೦. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ಅಂಕಿತದಲ್ಲಿ ೧೩೨ ವಚನಗಳು ದೊರೆತಿವೆ. ಪುರಾಣಗಳಲ್ಲಿ ಈತ ಪರವಾದಿಗಳನ್ನು ವಾದದಲ್ಲಿ ಸೋಲಿಸಿ ಶಿವಾಧಿಕ್ಯವನ್ನು ಮೆರೆಯುತ್ತ, ಹಲವು ಕಡೆ ಸಂಚರಿಸಿದ ಸಂಗತಿ ಉಕ್ತವಾಗಿದೆ. ಅಷ್ಟಾವರಣ, ಷಟ್-ಸ್ಥಲ, ವ್ರತಾಚಾರಗಳ ನಿರೂಪಣೆ ಈತನ ವಚನಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಜೊತೆಗೆ ಡಾಂಭಿಕ ಗುರುಗಳ ಟೀಕೆ, ಕಾಯಕ ದಾಸೋಹಗಳ ವಿವರಣೆಯೂ ಬಂದಿದೆ.

ಷಟ್ ಸ್ಥಲ, ಅಷ್ಟಾವರಣಗಳ ನಿರೂಪಣೆ, ಒಳ್ಳೆಯ ಚಿಂತಕ, ಸಾಮಾಜಿಕ ವಿಡಂಬನೆಯಲ್ಲಿ ಮೊನಚಿದೆ.