Categories
e-ದಿನ

ಡಿಸೆಂಬರ್- 5

 

ಪ್ರಮುಖ ಘಟನಾವಳಿಗಳು:

1846: ಸಿ.ಎಫ್.ಸ್ಕೋನ್ಬೀನ್ ಸೆಲ್ಲುಲೋಸ್ ನೈಟ್ರೇಟ್ ಸ್ಪೋಟಕಕ್ಕಾಗಿ ಪೇಟೆಂಟ್ ಪಡೆದರು.

1876: ಸ್ಟಿಲ್ಸನ್ ತಿರುಚಳಿಗೆ ಡಿ.ಸಿ.ಸ್ಟಿಲ್ಸನ್ ಪೇಟೆಂಟ್ ಪಡೆದರು.

1879: ಮೊದಲ ಸ್ವಯಂಚಾಲಿತ ದೂರವಾಣಿ ಬದಲಾಯಿಸುವ ವ್ಯವಸ್ಥೆಗೆ ಪೇಟೆಂಟ್ ನೀಡಲಾಯಿತು.

1943: ಜಪಾನ್ ಏರ್ಫೋರ್ಸ್ (ಐಜೆಎಎಎಫ್) ಮತ್ತು ನೌಕಾಪಡೆ (ಐಜಿಎನ್ಎಎಫ್) ಗಳ ಸಂಯೋಜಿತ ಪಡೆಗಳು ಕಲ್ಕತ್ತಾದಲ್ಲಿ ತೀವ್ರ ಬಾಂಬ್ ದಾಳಿ ನಡೆಸಿದರು.

1951: ಮೊದಲ ಪುಶ್ ಬಟನ್ ನಿಯಂತ್ರಿತ ಗ್ಯಾರೇಜ್ ವಾಷಿಂಗ್ಟನ್ ಡಿಸಿ ಯಲ್ಲಿ ಪ್ರಾರಂಭವಾಯಿತು.

1997: ಭಾರತದ ತಮಿಳುನಾಡು ಮತ್ತು ಕೇರಳದಲ್ಲಿ ಪ್ರತ್ಯೇಕ ಪ್ರಯಾಣಿಕ ರೈಲುಗಳ ಸ್ಫೋಟದಿಂದ ಕನಿಷ್ಟ 10ಮಂದಿ ಮೃತ ಪಟ್ಟು 64 ಮಂದಿ ಗಾಯಗೊಂಡರು.

1999: ಭಾರತದ ಯುಕ್ತಾ ಮುಖಿ ವಿಶ್ವ ಸುಂದರಿ 99 ಸ್ಪರ್ಧೆಯಲ್ಲಿ ಗದ್ದು, ಲಂಡನ್ನಿನಲ್ಲಿ ಕಿರೀಟ ಧಾರಣೆ ಮಾಡಿದರು.

ಪ್ರಮುಖ ಜನನ/ಮರಣ:

1898: ಭಾರತ-ಪಾಕಿಸ್ತಾನದ ಕವಿ ಮತ್ತು ಅನುವಾದಕ ಜೋಷ್ ಮಲಿಹಬಾದಿ ಜನಿಸಿದರು.

1939: ಭಾರತೀಯ ಶಾಸ್ತ್ರೀಯ ಸಂಗೀತಕಾರ, ಸರೋದ್ ವಾದಕ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಶೀಶ್ ಖಾನ್ ಜನಿಸಿದರು.

1950: ಭಾರತೀಯ ರಾಷ್ಟ್ರೀಯತಾವಾದಿ, ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಶ್ರೀ ಅರಬಿಂದೋ ಘೋಷ್ ನಿಧನರಾದರು.

1951: ಭಾರತದ ಕಲಾವಿದ, ಲೇಖಕ ಮತ್ತು ಶಿಕ್ಷಣ ತಜ್ಞ ಅಭನಿಂದ್ರನಾಥ್ ಟ್ಯಾಗೋರ್ ನಿಧನರಾದರು.

1954: ತಮಿಳು ಬರಹಗಾರ, ಚಲನಚಿತ್ರ ಮತ್ತು ಸಂಗೀತ ವಿಮರ್ಶಕ, ಭಾರತ ಸ್ವಾತಂತ್ರ ಹೋರಾಟಗಾರ ಮತ್ತು ಪತ್ರಕರ್ತ ಕಲ್ಕಿ ಕೃಷ್ಣಮೂರ್ತಿ ನಿಧನರಾದರು.

1963: ಪಾಕಿಸ್ತಾನದ 5ನೇ ಪ್ರಧಾನಿ ಹುಸ್ಸೇನ್ ಶಹೀದ್ ಸುಹ್ರಾವಾರ್ದಿ ನಿಧನರಾದರು.

1965: ಭಾರತದ ವಸ್ತ್ರ ವಿನ್ಯಾಸಕ ಮನಿಷ್ ಮಲ್ಹೋತ್ರಾ ಜನಿಸಿದರು.

1974: ಭಾರತೀಯ ಪತ್ರಕರ್ತ ಮತ್ತು ಲೇಖಕ ರವೀಶ್ ಕುಮಾರ್ ಜನಿಸಿದರು.

1985: ಭಾರತದ ಕ್ರಿಕೆಟ್ ಆಟಗಾರ ಶಿಖರ್ ಧವಾನ್ ಜನಿಸಿದರು.

2016: ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ನಿಧನರಾದರು.