Categories
e-ದಿನ

ನವೆಂಬರ್-14

 

ಪ್ರಮುಖ ಘಟನಾವಳಿಗಳು:

1666: ಸ್ಯಾಮುಯೆಲ್ ಪೆಪೀಸ್ ನಾಯಿಗಳ ನಡುವೆ ಮೊದಲ ರಕ್ತದ ವರ್ಗಾವಣೆಯನ್ನು ವರದಿ ಮಾಡಿದರು.

1732: ಮೊದಲ ವೃತ್ತಿಪರ ಗ್ರಂಥಪಾಲಕರನ್ನು ಉತ್ತರ ಅಮೇರಿಕಾದಲ್ಲಿ ನೇಮಿಸಲಾಯಿತು.

1832: ಕುದುರೆಯಿಂದ ಓಡಬಲ್ಲ ಮೊದಲ ಸ್ಟ್ರೀಟ್ ಕಾರ್ ನ್ಯೂಯಾರ್ಕ್ ನಗರದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.

1896: ನಯಾಗಾರ ಜಲಪಾತದ ವಿದ್ಯುತ್ ಸ್ಥಾವರದ ಕಾರ್ಯಾಚರಣೆ ಆರಂಭವಾಯಿತು.

1904: ರಾಜ ಸಿ.ಜಿಲ್ಲೆಟ್ ಮೊದಲ ಜಿಲೆಟ್ ಕ್ಷೌರ ಕತ್ತಿಯಲ್ಲಿ ಬಳಸುವ ಬ್ಲೇಡಿಗೆ ಪೇಟೆಂಟ್ ಪಡೆದರು.

1908: ಆಲ್ಬರ್ಟ್ ಐನ್ಸ್ಟೈನ್ ಬೆಳಕಿನ ಕ್ವಾಂಟಮ್ ಸಿದ್ಧಾಂತವನ್ನು ಪ್ರಸ್ತುತ ಪಡಿಸಿದರು.

1922: ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ದೇಶೀಯ ರೇಡಿಯೋ ಸೇವೆ ಪ್ರಾರಂಭಿಸಿತು.

1927: ವಿಶ್ವದ ಅತ್ಯಂತ ದೊಡ್ಡ ಅನಿಲ ಟ್ಯಾಂಕರ್ ಸ್ಪೋಟಿಸಿದ ಕಾರಣ ಪಿಟ್ಸ್ ಬರ್ಗಿನಲ್ಲಿ 28 ಮಂದಿ ಮೃತ ಪಟ್ಟರು.

1968: ಯೂರೋಪಿನ ಮೊದಲ ಶ್ವಾಸಕೋಶದ ಕಸಿಯನ್ನು ಮಾಡಲಾಯಿತು.

1991: ಇಂಟರ್ನ್ಯಾಷನಲ್ ಡಯಾಬಿಟೀಸ್ ಫೆಡರೇಶನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು.

ಪ್ರಮುಖ ಜನನ/ಮರಣ:

1889: ಭಾರತದ ಮೊದಲ ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರು ಜನಿಸಿದರು.

1891: ಪಳೆಯುಳಿಕೆಯನ್ನು ಅಧ್ಯಯನ ಮಾಡಿದ ಭಾರತೀಯ ಪೇಲಿಯೋಬಾಟನಿಸ್ಟ್ ಬೀರ್ಬಲ್ ಸಹ್ನಿ ಜನಿಸಿದರು.

1914: ಭಾರತದ ಪತ್ರಕರ್ತ ಮತ್ತು ವಕೀಲ ವೆಂಗಾಯಿಲ್ ಕುನ್ಹಿರಾಮನ್ ನಾಯನರ್ ನಿಧನರಾದರು.

1947: ಭಾರತದ ಚಿತ್ರ ರಂಗದ ನಿರ್ದೇಶಕ ಮತ್ತು ಚಿತ್ರಕಥೆಗಾರ ಭಾರತನ್ ಜನಿಸಿದರು.

1971: ಭಾರತದ ಖ್ಯಾತ ಬಾಣಸಿಗ ಮತ್ತು ಲೇಖಕ ವಿಕಾಸ್ ಖನ್ನಾ ಜನಿಸಿದರು.

1977: ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಸಸ್ನೆಸ್ ಸಂಸ್ಥಾಪಕ, ಗುರು ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ನಿಧನರಾದರು.

1979: ಭಾರತದ ಖ್ಯಾತ ಗಾಯಕ ಪುಶ್ಕರ್ ಲೇಲೆ ಜನಿಸಿದರು.

2013: ಭಾರತದ ಚಿತ್ರ ನಿರ್ಮಾಪಕ ಮತ್ತು ವ್ಯವಸ್ಥಾಪಕ ಸುಧೀರ್ ಭಟ್ ನಿಧನರಾದರು.

2013: ಭಾರತದ ಪತ್ರಕರ್ತ ಮತ್ತು ಲೇಖಕ ಹರಿ ಕೃಷ್ಣ ದೇವ್ಸಾರೆ ನಿಧನರಾದರು.

2015: ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಕೆ.ಎಸ್.ಗೋಪಾಲಕೃಷ್ಣನ್ ನಿಧನರಾದರು.