Categories
e-ದಿನ

ನವೆಂಬರ್-21

 

ಪ್ರಮುಖ ಘಟನಾವಳಿಗಳು:

1871: ಸಿಗಾರ್ ಹಚ್ಚುವ ಯಂತ್ರಕ್ಕೆ ಎಂ.ಎಫ್.ಗೆಲೆಥ್ ಅವರು ಪೇಟೆಂಟ್ ಪಡೆದರು.

1877: ಥಾಮಸ್ ಎಡಿಸನ್ ತಮ್ಮ ಧ್ವನಿಲೇಖನ ಯಂತ್ರದ ಆವಿಷ್ಕಾರವನ್ನು ಘೋಷಿಸಿದರು.

1947: ಸ್ವತಂತ್ರ ಭಾರತದ ಮೊದಲ ಅಂಚೆ ಚೀಟಿಯಲ್ಲಿ ಭಾರತದ ಧ್ವಜವನ್ನು ಮುದ್ರಿಸಲಾಯಿತು. ಇದನ್ನು ಕೇವಲ ವಿದೇಶಿ ವ್ಯವಹಾರಗಳಿಗೆ ಬಳಸಲಾಯಿತು.

1962: ಚೀನಾ-ಭಾರತದ ಯುದ್ಧದಲ್ಲಿ ಚೀನಾ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿತು.

1963: ಇಸ್ರೋದ ಪ್ರಮುಖ ಸಂಶೋಧನಾ ವಿಭಾಗವಾದ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಸ್ಥಾಪಿಸಲಾಯಿತು.

1964: ವಿಶ್ವದ ಅತೀ ಉದ್ದ ತೂಗು ಸೇತುವೆಯಾದ “ವೆರ್ರಾಜಾನೋ ನ್ಯಾರೋಸ್” ನ್ಯೂಯಾರ್ಕ್ ನಗರದಲ್ಲಿ ತೆರೆಯಲಾಯಿತು.

1971: ಭಾಗಶಃ ಮುಕ್ತಿ ವಾಹಿನಿ (ಬಂಗಾಳದ ಗೆರಿಲ್ಲಾಗಳು) ಸಹಾಯದಿಂದ ಭಾರತೀಯ ಪಡೆಗಳು ಗರೀಬ್ ಪುರ್ ಕದನದಲ್ಲಿ ಪಾಕಿಸ್ತಾನ ಸೇನೆಯನ್ನು ಸೋಲಿಸಿತು.

ಪ್ರಮುಖ ಜನನ/ಮರಣ:

1899: ಒಡಿಸ್ಸಾದ ಮೊದಲ ಮುಖ್ಯಮಂತ್ರಿ ಆಗಿದ್ದ ಹರೆಕೃಷ್ಣ ಮಹಾತಾಬ್ ಜನಿಸಿದರು.

1920: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಣಿತತಜ್ಞ ಕೆ.ಎಸ್.ಚಂದ್ರಶೇಖರನ್ ಜನಿಸಿದರು.

1921: ತಮಿಳುನಾಡಿನ ಸಮಾಜಿಕ ಕಾರ್ಯಕರ್ತೆ ಸರೋಜಿನಿ ವರದಪ್ಪನ್ ಜನಿಸಿದರು.

1939: ಖ್ಯಾತ ನಟಿ, ನೃತ್ಯಗಾರ್ತಿ ಹೆಲೆನ್ ಜನಿಸಿದರು.

1970: ನೋಬಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ,ರಾಮನ್ ನಿಧನರಾದರು.

1985: ಭಾರತದ ಕ್ರಿಕೆಟ್ ಆಟಗಾರ ರಾಮನಾಥ್ ಕೆನ್ನಿ ನಿಧನರಾದರು.

1987: ಭಾರತದ ಚೆಸ್ ಆಟಗಾರ ಈಶಾ ಕರವಾಡೆ ಜನಿಸಿದರು.

1991: ಮದ್ರಾಸಿನ ಪ್ರಾಂಥ್ಯದಲ್ಲಿ ಶಿಕ್ಷಣ ಸಚಿವ ಟಿ.ಎಸ್.ಅವಿನಾಶ್ ಲಿಂಗಂ ಚೆಟ್ಟಿಯಾರ್ ನಿಧನರಾದರು.

2009: ಖ್ಯಾತ ಮೃದಂಗಂ ವಾದಕ ರಾಮನಾದ್ ರಾಘವನ್ ನಿಧನರಾದರು.

2015: ಭಾರತೀಯ-ಪಾಕಿಸ್ತಾನ ಕವಿ ಮತ್ತು ರಾಜಕಾರಣಿ ಅಮೀನ್ ಫಹೀಮ್ ನಿಧನರಾದರು.