Categories
e-ದಿನ

ನವೆಂಬರ್-22

 

ಪ್ರಮುಖ ಘಟನಾವಳಿಗಳು:

1899: ಮಾರ್ಕೋನಿ ವೈಯರ್ ಲೆಸ್ ಸಂಸ್ಥೆ ಅಮೇರಿಕಾದ ನ್ಯೂಜರ್ಸಿಯಲ್ಲಿ ಸ್ಥಾಪಿಸಲಾಯಿತು.

1906: ಬರ್ಲಿನಿನ ಅಂತರರಾಷ್ಟ್ರೀಯ ರೇಡಿಯೋ ಟೆಲಿಗ್ರಾಫಿಕ್ ಕನ್ವೆನ್ಷನ್ SOS ಸಂಕೇತವನ್ನು ಅಳವಡಿಸಿಕೊಳ್ಳಲಾಯಿತು.

1910: ಗಾಲ್ಫ್ ಕ್ಲಬ್ ಗಳಲ್ಲಿ ಮರದ ದಿಬ್ಬಗಳ ಬದಲು ಸ್ಟೀಲ್ ದಿಬ್ಬವನ್ನು ಅಳವಡಿಸಲು ಆರ್ಥರ್ ಎಫ್ ನೈಟ್ ಪೇಟೆಂಟ್ ಪಡೆದರು.

1932: ಬೆಲೆಯನ್ನು ಮತ್ತು ಪ್ರಮಾಣವನ್ನು ವಿತರಿಸುವ ಪಂಪಿಗೆ ಪೇಟೆಂಟ್ ಪಡೆಯಲಾಯಿತು.

1935: ಅಮೇರಿಕಾದ ಮೊದಲ ಪೆಸಿಫಿಕ್ ಏರ್‍ ಮೇಲ್ ಅಂಚೆವಿತರಣೆ ಮಾಡಲಾಯಿತು.

1951: ಭಾರತದ ರಾಷ್ಟ್ರಪತಿ ಸಂವಿಧಾನದ ಆರ್ಟಿಕಲ್ 280ರ ಅಡಿಯಲ್ಲಿ ಭಾರತದ ಹಣಕಾಸು ಆಯೋಗವನ್ನು ಸ್ಥಾಪಿಸಲಾಯಿತು.

1954: ಅಮೇರಿಕಾದಲ್ಲಿ ಹ್ಯುಮೇನ್ ಸೊಸೈಟಿಯನ್ನು ಸ್ಥಾಪಿಸಲಾಯಿತು.

1969: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿಗಳು ಒಂದು ಜೀನಿನ ಪ್ರತ್ಯೇಕತೆಯನ್ನು ಘೋಷಿಸಿದರು.

1972: ಜೆನೆರಲ್ ಇನ್ಸುರೆನ್ಸ್ ಕಾರ್ಪರೇಷನ್ ಆಫ್ ಇಂಡಿಯಾ, ಭಾರತದ ಅತ್ಯಂತ ಹಳೆಯ ವಿಮೆ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1989: ವೀನಸ್, ಮಾರ್ಸ್, ಯುರೇನಸ್, ನೆಪ್ಟ್ಯೂನ್, ಸಾಟರ್ನ್ ಮತ್ತು ಚಂದ್ರನ ಸಂಯೋಗ ಜರುಗಿತು.

ಪ್ರಮುಖ ಜನನ/ಮರಣ:

1899: ಸ್ವಾತಂತ್ರ ಹೋರಾಟಗಾರ ಮತ್ತು ಬುಡಕಟ್ಟು ಜನಾಂಗದ ನಾಯಕ ಶಹೀದ್ ಲಕ್ಷ್ಮಣ್ ನಾಯಕ್ ಜನಿಸಿದರು.

1915: ನಟ, ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಕಿಶೋರ್ ಸಾಹು ಜನಿಸಿದರು.

1943: ರಾಜಕಾರಣಿ ಮತ್ತು ಭಾರತದ 24ನೇ ರಕ್ಷಣಾ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್ ಜನಿಸಿದರು.

1955: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಜನಿಸಿದರು.

1963: ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯವರನ್ನು ಹತ್ಯೆ ಮಾಡಲಾಯಿತು.

1979: ತಮಿಳು ಮತ್ತು ತೆಲುಗು ಚಿತ್ರರಂಗದ ನಟ ಶಶಾಂಕ್ ಜನಿಸಿದರು.

1989: ಭಾರತದ ಕ್ರಿಕೆಟ್ ಆಟಗಾರ ವಿಜಯ್ ರಾಜೀಂದ್ರನಾಥ್ ನಿಧನರಾದರು.

1997: ಸ್ವಾತಂತ್ರ ಹೋರಾಟಗಾರ, ಗಾಯಕ, ಪತ್ರಕರ್ತ ಮತ್ತು ಚಿತ್ರ ನಿರ್ಮಾಪಕ ತ್ಯಾಗರಾಜನ್ ಸದಾಶಿವಂ ನಿಧನರಾದರು.

2012: ಭಾರತದ ಪತ್ರಕರ್ತ ಮತ್ತು ರಾಜಕಾರಣಿ ಪಿ.ಗೋವಿಂದ ಪಿಳ್ಳೈ ನಿಧನರಾದರು.

2016: ಭಾರತದ ಖ್ಯಾತ ಗಾಯಕ ಎಂ.ಬಾಲಮುರಳಿಕೃಷ್ಣ ನಿಧನರಾದರು.