Categories
ರಚನೆಗಳು

ಕೃಷ್ಣವಿಠಲದಾಸರು

ಶ್ರೀನರಹರಿಯನ್ನೂ,
೨೨
ನಂಬಿದೇ ನರಹರಿಯೆ ನಾ ಪ
ನಂಬಿದೆನೊ ಬ್ರಹ್ಮಾದಿ ವಂದಿತ ಪೂರ್ಣ ಸುಗುಣ
ಕಂದಂಬ ನಿರುಪಮ ನಿತ್ಯಮುಕ್ತಾಮುಕ್ತ ಜೀವದ
ಬಿಂಬ ನಾಯಕ ನಿರಜ ಬ್ರಹ್ಮಜ ವಿಶ್ವ ಭಾಸಕ
ಅಂಭ್ರಣೀಪತಿ ಸರ್ವತಂತ್ರ ಸ್ವತಂತ್ರ
ಮುಕ್ತಿದನೇಕನೆಂಬುದಾ ಅ.ಪ
ನೊಂದು ನೊಂದೆನೊ ಭವದಿ ಹಿಂದುಮುಂದನು ಕಾಣೆ
ಬಂಧ ನೀಡುವ ನೀನೆ ಬಂಧಾ ಬಿಡಿಸಲುಬೇಕೊ ಸ್ವಾಮಿ
ತಂದೆ ನೀನನಿಮಿತ್ತ ಬಂಧುವು ಇಲ್ಲ
ಸಂಶಯವೆಂದು ಪೊಗಳುವೆ
ಪೂರ್ಣ ಪೂರ್ಣಾನಂದ ಸಜ್ಜನನಂದ ಕಾಮದ ಸಾಮ
ಶಾಶ್ವತ ಸಾರ್ವಭೌಮ ಮಹೇಂದ್ರನಮಿಸುವೆ
ಪೂರ್ಣಚಂದ್ರ ಸುತೇಜಭವಹರ ೧
ದಡ್ಡನೋ ನಾನಿನ್ನುಗುಡ್ಡತೆರವಿದೆ ಕರ್ಮ
ಅಡ್ಡಿಯಾಗಿದೆ ಸುಖಕೆ
ವಡ್ಡುವೆ ಸರ್ವಸ್ವನಿನಗೆ ದೊಡ್ಡವನು ನೀವಲಿಯೆ ಎನ್ನಯ
ದಡ್ಡತನ ನಿನ್ನೇನುಮಾಳ್ಪದು ಸಡ್ಡೆಮಾಡದೆ ದೋಷರಾಶಿಯ
ದೊಡ್ಡಹಿರಿಯರ ಕರುಣಕೊಡಿಸುತ ದುಡ್ಡುಕಾಸಿನ
ಮಮತೆ ತೊಲಗಿಸಿ
ಲಡ್ಡು ತಿನ್ನಿಸಿಜ್ಞಾನ ಭಕ್ತಿಯ ಜಾಡ್ಯಜರಿಸೈಹುಟ್ಟುಸಾವಿನ
ಗುಡ್ಡಹೊತ್ತ ಮಹಾಂತರೊಡೆಯನೇ ೨
ಹಣ್ಣೆಂದು ವಿಶಯದಾ ಹುಣ್ಣುಮೆದ್ದಿಹೆ ಸಿರಿ “ಕೃಷ್ಣವಿಠಲ”ನೆ
ನಿನ್ನಾಕರುಣವೆ ತಾರಕ ಇನ್ನುಮುನ್ನು ನಿನ್ನ ನಂಬಿಹೆ
ಜ್ಞಾನಮಾನವ ನೀಡ್ವದಾತನೆ ಸಣ್ಣವನ ಪಿಡಿದಿನ್ನು ನೀ
ಪ್ರಸನ್ನನಾಗೆಲೊ ದೇವದೇವನೆ ನಿನ್ನದಾಸರ ಭಾಗ್ಯವೊಂದೇ
ಸಾಕು ಸಾಕೈಯೆಂದು ಬೇಡುವೆ ಅನ್ಯರೊಳ್‍ರತಿ ಇಲ್ಲದಿರಲೈ
ಮಾನ್ಯ ಮಧ್ವರ ಮತದಿ ನಿಲಿಸು ೩

ಈ ಪದದಲ್ಲಿ ಮಧ್ವಮತದ
೨೩
ನಂಬಿದ್ಯಾ ಮನವೇ ನಂಬಿದ್ಯಾ ಪ
ನಂಬಿದ್ಯ ಮನವೆ ಕೊಂಡಾಡಿದ್ಯ
ಆನಂದ ತೀರ್ಥರ ಮತವೆಸತ್ಯವೆಂದು ಅ.ಪ
ಇಂದಿರೆ ರಮಣನೆ ಪರದೈವವೆಂದು
ಬಂಧನಾದಿ ಅಷ್ಟಕರ್ತೃತ್ವ ಆತನದೆಂದು
ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು
ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು ೧
ನಾರಾಯಣನೆ ಸರ್ವೋತ್ತುಮನು ಎಂದು
ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು
ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು
ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು ೨
ಸಾಕಾರಸರ್ವೇಶ ನಿರ್ವಿಕಾರ ನೆಂದು
ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು
ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು
ಅಕಳಂಕ ಚರಿತ ಅನಾದಿ ಅಜ ಅಪ್ರಮೇಯನೆಂದೂ೩
ವೇದಗೋಚರ ತಾವೇದಾತೀತನೆಂದು
ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು
ಮಧುಸೂಧನನು ಚಿನ್ಮಯ ವಪುಷನೆಂದು
ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು೪
ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು
ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು
ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ
ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು೫
ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು
ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು
ಪರಮ ಪುರುಷನೆ ಅಪವರ್ಗ ಗತಿದಾಯಕನೆಂದೂ
ಮಾರಮಣನ ಪಾದ ಭಜನೆಯೆ ಸಾರವೆಂದೂ ೬
ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ
ಕಾರ್ಯಗಳನು ಮಾಡಿ ಮಾಡಿಸುವನೆಂದು
ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ
ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು೭
ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು
ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು
ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು
ಇಕ್ಷು ಚಾಪನ ಪಿತನಚಿಂತಾದ್ಭುತನೆಂದು ೮
ಹಂಸಾದಿ ಹದಿನೆಂಟು ರೂಪಗಳ ಧರಿಸಿ
ಅಂಶಾಂಶರೂಪದಿ ಚೇತನಾ ಚೇತನ ದೊಳ
ಹೊರಗೆ ವ್ಯಾಪಿಸಿ
ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ
ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು ೯
ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು
ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ
ಕೃತಿ ಪತಿಯು ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ
ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು೧೦
ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು
ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು
ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು
ಚತುರಾನನಾದಿಗಳಿಗೆಲ್ಲಾ ಎಂದು೧೧
ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ
ಗುಣನಿಧಿ ಅನಾದಿ ಅಪರೋಕ್ಷ ಪ್ರಭುವು
ಅಣು ಮಹದ್ಘನ ರೂಪ ಚರಿತ ಭಾರತೀಶ
ವಾಣೀ ಪತಿಯ ಪದಾರ್ಹ ವಾತದೇವನು ಎಂದು ೧೨
ಹನುಮ ಭೀಮ ಮಧ್ವ ಮೂರಾವತಾರದ ದೇವ
ಅನುಪಮ ಬಲನಿಸ್ಸೀಮ ಪುರುಷತೇಜ
ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ
ಗುಣಕರ್ಮಗಳುಣೀಸೀ ನಿಜಗತೀ
ಹರಿಯಾಜ್ಞೆಯಂತೀವನೆಂದೂ ೧೩
ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು
ಆತನೇಲೋಕಕ್ಕೆಲ್ಲ ಗುರವು ಎಂದು
ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು
ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು ೧೪
ಹರಿಯ ಮತವೆ ಹನುಮನ ಮತವು ಎಂದು
ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ
ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ
ತಾರತಮ್ಯ ಪಂಚ ಭೇದವು ಸತ್ಯವೆಂದು ೧೫
ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು
ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು
ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು
ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು ೧೬
ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು
ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು
ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು
ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು ೧೭
ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು
ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು
ಜೀವ ಜಡಕೆ ಭೇದ ಈ ಪರಿ ಪಂಚ ಭೇದವೆಂದು
ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ ೧೮
ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು
ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು
ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು
ಅರವಿಂದನಾಭಗೆ ಸರ್ವರು ಸದಾದಾಸರೆಂದು ೧೯
ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು
ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು
ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು
ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು೨೦
ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ
ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು
ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ
ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು ೨೧

ಸಮಾಜದಲ್ಲಿರುವ ಜನರ
೯೭
ನಡತೆ ನನ್ನದು ಕೇಳಿರಯ್ಯ ಪ
ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ.
ಒಡವೆ ತರದಿಹನೆಂದು ಕೋಪ
ಮಡದಿನಟಿಸುತ ಹೆದರೀ
ಒಡನೆ ಸ್ನಾನವ ಮಾಡಿತಂದು
ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ
ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು
ಕೊಡಲಿ ಹರಿಯು ಭೂರಿ ನೋಡುವೆನೆಂತೆಂಬೆ ೧
ಒರಿಸೆ ಸಾಲಿಗ್ರಾಮ ಗೃಹದಿ
ಅರಿವೆ ಹರಕು ಸಹ ಇಲ್ಲವೆನ್ನೇ
ತರುವೆನೆನುತ ತಿಂಗಳಾರು
ಅರಿತು ತಳ್ಳುವೆ ಕಾಲ ಬರಿದೇ ಆಹಾ
ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ
ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ ೨
ಹರಿಗೆ ದೀಪವ ಹಚ್ಚೆ ತೈಲ
ಇರದು ತಾರೆನೆ ಹಡೆದ ತಾಯಿ
ಬರಲಿ ಸಂಬಳ ತರುವೆ ಕೊಡುವಿ
ಉರಿವ ಕಾಟವನೆಂದು ನುಡಿವೆ ಆಹಾ
ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ
ಹರಕು ಜಿಹ್ವೆಂಇÀಇ ಚಪಲ ಪೂರ್ಣಮಾಡುವೆ ನಿರುತ ೩
ವೃತ್ತಪತ್ರಿಕೆಯಲ್ಲಿ ಹೆಸರು
ಎತ್ತಿಹಾಕುವರೆನೆ ಒಡನೆ
ವಿತ್ತದಾನವಗೈವೆ ಬರಿ ಉ-
ನ್ಮತ್ತಕಾರ್ಯಕಾದರು ಸರಿಯೇ ಆಹಾ
ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು
ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ೪
ಉಂಡು ತೇಗುವ ಧನಿಕ ಜನರ
ಕಂಡು ಕರೆಯುತ ಭಾರಿ ಊಟ
ತೊಂಡನಂದದಿ ನೀಡಿ ಮನದಿ
ಉಂಡು ಹರುಷವ ನೆನೆವೆ ಧನ್ಯ\ ಆಹಾ
ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು
ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ೫
ದಾನಗೈದರು ಒಮ್ಮಿಂದೊಮ್ಮೆ
ಮಾನಪಡೆಯಲು ಊರ ಒಳಗೆ
ನಾನೆಂಬ ಹಂಕಾರ ಬಿಡದೆ
ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ
ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು-
ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ೬
ನೂರಿತ್ತು ಸಂಬಳ ಹಿಂದೆ ಮನದಿ
ಊರಿತ್ತು ಹರಿಭಕ್ತಿ ಎಲ್ಲಿ ಈಗ
ನೂರ್ಹತ್ತು ಕೊಟ್ಟರು ದೇವ ಬೆ-
ನ್ಹತ್ತಿದೆ ತಾಪತ್ರಯ ಬಹಳ ಆಹಾ
ಭಾರತ ಮಿಗಿಲಿದೆ ಚರಿತೆ ಸಂಶಯವಿಲ್ಲ ಬೀರದಿರೆ
ಸಿರಿ ಕೃಷ್ಣವಿಠಲನೆ ದೃಷ್ಟಿ
ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ೭

ಐಹಿಕದಲ್ಲಿ ಬಿದ್ದು ಬಳಲಿ
೨೪
ನನಗಾವ ಬಲವಿಲ್ಲ ನಿರುಪಮನೆ ಹೇಳೈಯ
ವನಜ ಸಂಭವ ಜನಕ ತವ ಚರಣ ವಲ್ಲದಲೆ ಪ
ಮಣಿದು ಬೇಡುವೆನೈಯ ಪ್ರಣತಾರ್ಥಿ ಹರಕೃಷ್ಣ
ಜನುಮಗಳ ಹರಿಸುತಲಿ ಭವಬಂಧ ಬಿಡಿಸೈಯಅ.ಪ
ನರರ ನಂಬಿದೆ ನೈಯ ಸಿರಿಯುರಿಗೆ ಬಾಯ್ಬಿಟ್ಟೆ
ಅರಿಯದೆಲೆ ತವ ಮಹಿಮೆ ಬರಿದೆ ಬಳಲಿದೆಭವದಿ
ಧೊರೆ ತನವು ಸವಿಯಹುದೆ ತವ ಸವಿಯ ಕಂಡವಗೆ
ಜರಿಯ ದಲೆ ಬಡವನನು ಕರೆದು ಪಾಲಿಸು ತಂದೆ ೧
ಹಣ ವನಿತೆ ಭೂ ವಿಷಯ ಉಂಡುಂಡು ಬೆಂಡಾದೆ
ತನುಜ ಕರಣಗಳಿನ್ನು ಶತ್ರುಗಳ ಸಮವಿಹವು
ಗುಣ, ಪೂರ್ಣ ಬಿಂಬನನು ನೆನೆಯ ಗೊಡದಲೆ
ನಿತ್ಯ ಇನಸುತನ ಪುರದೆಡೆಗೆ ಸೆಳೆಯುತಿಹವೋ ಸ್ವಾಮಿ ೨
ನರರಿಗಾಶ್ರಯ ಸುರರು ಸುರರಿಗಾಶ್ರಯ
ನೀರ ಮರುತಗಾಶ್ರಯ ಸಿರಿಯು ಸಿರಿರಮಣನೀನಿರಲು
ಚರಣ ಸೇವಕ ನೆನ್ನ ನರರಿಗೊಡ್ಡುವರೇನೊ
ಸರ್ವೇಶ ಅಕ್ಷರನೆ ಮೊರೆ ಹೊಕ್ಕೆ ಸಲಹೈಯ ೩
ದೇವ ದೇವರ ದೇವ ದೇವತ್ವ ನೀಡುವನೆ
ಕಾವ ಜೀವರ ನಿಚಯ ಸಾರ್ವಭೌಮನು ನೀನು
ನೀವಲಿದು ಪೊರೆಯದಿರೆ ಆಗುವುದೆ ಸುಖಮುಕ್ತಿ
ನಾವಿಕನು ನೀನೆಂದು ನಂಬಿದೆನು ಕೈಪಿಡಿಯೊ ೪
ಅಗಲಿ ಬದುಕಿರಲಾರೆ ಗೋಪ ಪುರುಷನೆ ನಿನ್ನ
ಸುಗಮ ಮಾಡಿಸು ಪಥವ ಸರ್ವಜ್ಞ ತವಪುರಕೆ
ನಗವೈರಿ ಜಯತೀರ್ಥ ವಾಯು ವಂತರದಿರ್ಪನಗೆ
ಮೊಗದ ಶ್ರೀಕಾಂತ ಕೃಷ್ಣವಿಠಲನೆ ಬೇಗ ೫

ತಾವು ಶ್ರೀಹರಿಯನ್ನು
೨೫
ನಾ ನಿನ್ನ ಮರೆತರೆ ನೀ ಯನ್ನ ಮರೆವರೆ
ದೀನ ವತ್ಸಲ ರಂಗ ದಾನವಾಂತಕ ಕೃಷ್ಣ ಪ
ಜ್ಞಾನಗಮ್ಯನೆ ನಿನ್ನ ಧ್ಯಾನ ದೊಳಿಟ್ಟೆನ್ನ
ಮಾನದಿಂದಲಿ ಕಾಯೋ ಶ್ರೀನಿವಾಸ ಪ್ರಭುವೆ ಅ.ಪ.
ದಿನಕರನ ಜನರು ನೆನೆಯದೆ ಬಿಟ್ಟರೆÉ
ಜನರನ್ನು ಬೆಳಗದೆ ದಿನಕರ ಬಿಡುವನೆ
ಹೀನವಿಷಯದಿ ಮುಳುಗಿ ತೇಲುವ ಎನ್ನ
ನೀನಾಗಿ ಪೊರೆದರೆ ಘನತೆಯಲ್ಲವೆ ದೇವಾ ೧
ಪೆತ್ತ ಮಕ್ಕಳು ಬಲು ಕತ್ತೆಗಳಾದರು
ಹೆತ್ತ ತಾಯಿಯು ತಾನು ಎತ್ತದೆ ಬಿಡುವಳೆ
ಮತ್ತನಾನಾದರು ಉತ್ತಮೋತ್ತಮಸ್ವಾಮಿ
ವಾತ್ಸಲ್ಯತೋರಯ್ಯ ಹಸ್ತಿವರದ ಧೊರೆಯೇ ೨
ಗೋವತ್ಸಹಾಲಿಗೆ ಗೋವಿನಗುದ್ದಲು
ತವಕದಿ ಉಣಿಸದೆ ಗೋವು ಬಿಡುವುದೇ
ತವಪಾದ ಕಮಲದಿ ಅವಿನೀತನಾದರೆ
ಸುವಿವೇಕ ಜ್ಞಾನವ ಈಯದಿರುವರೇನೋ ೩
ಕರಿ ಧೃವ ಭಕ್ತರ ಪೊರೆಯಲಿಲ್ಲವೆ ನೀನು
ಘೋರಪಾಪಗಳ ತರಿದೆ ಅಜಾಮಿಳಗೇ
ವರವಿತ್ತು ವ್ಯಾಧಗೆ ವರಕವಿಯೆನಿಸಿದೇ
ಭಾರವೆ ನಾನಿನಗೆ ಕರುಣಾಸಾಗರ ರಂಗ ೪
ಜಯಮುನಿ ಅಂತರ ವಾಯುವಿನೊಳಗಿಪ್ಪ
ರಾಯ ಶ್ರೀಕೃಷ್ಣವಿಠಲನೆ ನಂಬಿದೆ
ಕಾಯವಚ ಮನದಿ ಜೀಯನೆ ಗತಿಯೆಂಬೆ
ನೋಯಿಸದೆ ಭವದಿ ದಯಮಾಡಿ ಸಲಹಯ್ಯ ೫

ಗುಣ ರೂಪ ಮಹಿಮೆಗ
೨೬
ನಾರಾಯಣತೇ – ನಮೋ ನಮೋ
ತಾರಕ ಪದಯುಗ – ನಮೋ ನಮೋ ಪ
ಪಾರಾಶರತೇ ನಮೋ ನಮೋ ಗುಣ
ವಾರಿಧಿ ಸುಖಮಯ – ನಮೋ ನಮೋ ಅ.ಪ
ಇಂದಿರೆ ಮನುಕುಮುದೇಂದು ಪರಾವರ
ನಂದಗುಣಾರ್ಣವ ನಮೋ ನಮೋ
ಸಿಂಧುಶಯನ ಅರವಿಂದ ಸುನಾಭ
ಮಹೇಂದ್ರ ವಿನಾಂತನೆ ನಮೋ ನಮೋ೧
ಸುಂದರ ವೀ ಜಗ _ ತಂದೆ ಮಹಾಬಲ
ಕುಂದು ವಿದೂರನೆ ನಮೋ ನಮೋ
ಬಂಧ ವಿಮೋಚಕ ಮಂದಜ ಭವಮನ
ಸ್ಪಂದನ ಕರುಣಿಯೆ ನಮೋ ನಮೋ೨
ಸುಂದರ ತಮ ಅರವಿಂದ ಸುಲೋಚನ
ಕಂಧರ ಪಾಣಿಯ ನಮೋ ನಮೋ
ನಂದನ ಕಂದ ಮುಕುಂದ ಜನಾರ್ಧನ
ಛಂದಸು ವೇದ್ಯನೆ ನಮೋ ನಮೋ ೩
ನಾಶರಹಿತ ಸ್ವತಂತ್ರಗುಣಾತ್ಮಕ
ವಾಸುದೇವತೇ ನಮೋ ನಮೋ
ಭೇಶಕಾಂತಿ ಮುಕ್ತೇಶ ಪರಾಮೃತ
ವಿಶ್ವಜೂತಿ ಬಲ ನಮೋ ನಮೋ ೪
ಶೇಷಶಯನ ವಾರಾಸಿಗೇಹ
ಮಾಯೇಶ ಸನಾತನ ನಮೋನಮೋ
ಓಸು ಜಾಡಾಜಡ ರಾಸಿ ಬಿಂಬಗುಣ
ಭಾಸಕ ನಾಯಕ ನಮೋ ನಮೋ ೫
ದೇವ ದೇವ ಜಗ ಪಾವನ ಚರಿತ
ವಿಭಾವರಿ ಚರಹರ ನಮೋ ನಮೋ
ಜೀವರ ಜೀವ ವಿಭಾವ ಸುನಾಯಕ
ಭಾವುಕ ಜನಪ್ರಿಯ ನಮೋ ನಮೋ ೬
ಅಂಡಜವಾಹನ ಪುಂಡರೀಕನುತ
ಪಾಂಡುರಂಗತೇ ನಮೋ ನಮೋ
ತೊಂಡವತ್ಸಲಾಖಂಡ ವಿಜಯ
ಕೋದಂಡಪಾಣಿ ತೇ ನಮೋ ನಮೋ ೭
ವೆಂಕಟೇಶ ಭವ ಸಂಕಟ ನಾಶಕ
ಶಂಕರ ಮಹಿಮನೆ ನಮೋ ನಮೋ
ಸುಂಕ ಸುಲಿವ ಬಿರುದಾಂಕಿತ ಕುಟಿಲಾ
ಟಂಕರಹಿತ ತೇ ನಮೊ ನಮೋ ೮
ಶಿಷ್ಠವರದ ಪರಮೇಷ್ಠಿ ಜನಕ
“ಶ್ರೀ ಕೃಷ್ಣವಿಠಲ” ವಿಭು ನಮೋ ನಮೋ
ಅಷ್ಟಕರ್ತ ಶಿಪಿವಿಷ್ಠಸುನಾಮಕ
ಧಿಟ್ಟ ನೃಸಿಂಹನೆ ನಮೋ ನಮೋ ೯

ತನ್ನ ಸ್ಮರಣೆಯನ್ನು ಕೊಡದೆ
೨೭
ನ್ಯಾಯ ವೇನೋ ಕೃಷ್ಣಯ್ಯ _ ನ್ಯಾಯವೇನೋ ಪ
ಜೀಯ ನಿನ್ನ ಸ್ಮರಣೆ ಕೊಡದೆ ಎರಡು ಭ್ರಷ್ಟ ಮಾಡಿಸೊದು ಅ.ಪ.
ಇತ್ತಲಿಲ್ಲ ಅತ್ತಲಿಲ್ಲ ಅರ್ಥಮಾನ ಹೋಯಿತಲ್ಲಾ
ಕತ್ತೆಯಂತೆ ಕಾಲ ಕಳೆಸಿ ಸುತ್ತಿ ಸುತ್ತಿ ಚರಿಸೋದು ೧
ಹೊಟ್ಟೆಬಟ್ಟೆಗಾಗಿ ಹೊಗಿ ಕೆಟ್ಟ ಜನರ ಸೇವೆ ಮಾಡಿ
ಸುಟ್ಟು ಸುಟ್ಟು ಹೋಯ್ತು ಕಾಯ ಭ್ರಷ್ಟನಾಗಿ ಮಾಡೋದೆನ್ನ ೨
ಮಾಯಪಾಶದಲ್ಲಿ ಹಾಕಿ ಹೇಯ ವಿಷಯ ಆಶೆಕೊಟ್ಟು
ನ್ಯಾಯ ಮಾರ್ಗ ತೋರದೇನೆ ನೋಯಿಸೋದು ಎನ್ನನೀನು ೩
ಮೋಸಮಾಡಿ ಪರರಗಂಟು ಆಶೆಯಿಂದ ಕೂಡಿಹಾಕಿ
ಘಾಸಿಭವದಲಿ ನೂಕಿ ಕ್ಲೇಶಪಡಿಸುವುದು ಎನ್ನ ೪
ಅಂದು ಇಂದು ಎಂದು ಹೇಳಿ ಮಂದನಾಗಿ ಕಾಲಕಳೆಸಿ
ಇಂದಿರೇಶ ನಿನ್ನ ಪಾದ ದ್ವಂದ್ವ ಧ್ಯಾನ ಮರೆಸೋದು ೫
ಮಧ್ವಮತದಲ್ಲಿ ಪುಟ್ಟಿ ಮಧ್ವಗ್ರಂಥ ಓದದೇನೆ
ಶುದ್ಧಮೂಢನಾಗಿ ತಿರುಗಿ ಗದ್ದನೆನಿಸುವುದು ಎನ್ನ೬
ಇನ್ನು ಮುನ್ನು ನೀನೆ ಗತಿ ಎನ್ನ ಕೈ ಪಿಡಿಯೊ ಬೇಗ
ಘನ್ನ ನವನೀತಧರ ಚೆನ್ನ ಶ್ರೀ ತಾಂಡವ ಕೃಷ್ಣವಿಠಲ ೭

ಪತಿವ್ರತ ಸ್ತ್ರೀಯರ
೯೮
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ
ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ.
ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು
ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು
ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು
ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು ೧
ಮಿತಮಾತು ಇರಬೇಕು ಸುತರ ಪಾಲಿಸಬೇಕು
ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು
ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು
ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು ೨
ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು
ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು
ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು
ಹರಿಯ ಪಾಡಲಿಬೇಕು ೩
ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು
ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು
ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು
ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು ೪
ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ
ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ
ಮುಚ್ಚಬಾರದು ನಿಜವ ಹಚ್ಚಬಾರದು ಷೋಕು
ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು ೫
ಪಾಪವ ತೊರಿಬೇಕು ಲೇಪನವ ಬಿಡಬೇಕು
ಕೋಪವ ಬಿಡಬೇಕು ಕಪಟತ್ವ ಬಿಡಬೇಕು
ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು
ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು ೬
ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು
ನಗೆಮೊಗವಿರಬೆಕು ಸವಿಮಾತು ಗುಣಬೇಕು
ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು
ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ
ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು ೭

ತಮ್ಮಲ್ಲಿ ಕುಂದುಗಳಿದ್ದರೂ
೨೮
ಪೊರೆಯದಿರುವರೇ _ ಶ್ರೀ ರಮಣಾ ಪ
ದುರಿತಗಜಕೆ ನೀ ಪಂಚಾನನಾ ಅ.ಪ.
ಸಿರಿಯ ಮದದಿ ನಾನರಿಯದೆ ಪೋದರೆ
ಗರುಡಗಮನ ನೀ ಮರೆತುಬಿಡುವರೇ
ಕರುಣಶರಧಿ ಸರಿ ಬಿರುದು ಪೊಳ್ಳಾಗದೇ
ಚರಣಪಿಡಿವೆ ಪೊರೆ ಮರುತನೊಡೆಯ ಹರಿ೧
ಪಾತಕಿ ಎಂಬುವ ನೀತಿಯನುಡಿದೊಡೆ
ಪೂತರಮಾಡುವ ಖ್ಯಾತಿಯ ಬಿಡುವೆಯ
ನಾಥನೆ ನಂಬಿದೆ ಕಾತರ ಪಡುತಿಹೆ
ಪ್ರೀತಿಲಿ ಕಾಣಿಸು ಆರ್ತಿವಿದೂರ ೨
ನಡಿಯುವ ಚರಣವು ಎಡುವುದು ಸಹಜವೆ
ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ
ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ
ಕಡಲಶಯನ ಪಿಡಿ ಬಿಡದೆ ಕೊಡುತ ರತಿ ೩
ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ
ಶರಣರ ಪೊರೆಯುವ ವರಗುಣ ಭೂಷಣ
ಅರಿಯೆನುಪಾಯವ ಶರಣುಶರಣೈಯ
ಪರಮಪುರುಷ ಭಗಸರಸದಿ ನಲಿನಲಿ ೪
ಸಾಕುವ ಬಿಂಬನೆ ನೂಕಿದೆ ಯಾತಕೆ
ಹಾಕುತ ಮಂಕನು ಏಕಾಯತನ
ನಾಕರೊಡೆಯ ಭವನೂಕುತ ಬೇಗನೆ
ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ ೫

ಶ್ರೀಹರಿಯ ದಶಾವತಾರಾದಿಗಳನ್ನೂ,
೩೦
ಬಂದ ಶ್ರೀ ಹರಿ ಬಂದ ಪ
ಬಂದ ಬಂದ ಮುಚುಕುಂದ ಪರದ ಅರ-
ವಿಂದನಯನ ಗೋವಿಂದ ಪರಾತ್ವರ
ಕಂದನೆನ್ನ ಮನ ಮಂದಿರಕೀಗಲೆ
ನಂದವ ನೀಡುತ ಇಂದಿರೆಸಹಿತದಿ ಅ.ಪ.
ನೀರೊಳಗಾಡುವ ವೀರನು ಬಂದ ಭಾರಿಗಿರಿಯನು
ಪೊತ್ತವ ಬಂದ
ನಾರಿಯವೇಷದಮೋಹಕ ಬಂದ ವಾರಿಜೆಸಿರಿವರ
ಅಜಿತನುಬಂದ
ಚಾರುವರಾಹನು ಭೂಸಹಬಂದ ಪೋರನ ಸಲಹಿದ
ಘೋರನು ಬಂದ
ಮೂರಡಿ ಯಾಚಕ ವಾಮನ ಬಂದ ಹಾರಿಸಿ ಕ್ಷಿತಿಪರ
ಭಾರ್ಗವ ಬಂದ
ತಾರಕನಾಮದ ರಾಮನುಬಂದ
ಕೌರವವಂಶಕುಠಾರನು ಬಂದ
ಚಾರುದಿಗಂಬರ ಬುದ್ಧನುಬಂದ ಏರುತ ಕುದುರೆಯ
ಕಲ್ಕಿಯು ಬಂದ ೧
ಬಾದರಾಯಣ ಮಹಿದಾಸನುಬಂದ ವೇದಗಳ
ಉಸುರಲು ಹಯಮುಖಬಂದ
ಬೋಧಿಸಿ ಸಾಂಖ್ಯವ ಕಪಿಲನು ಬಂದ ಸಿದ್ಧಿಗಳೀಯಲು
ದತ್ತನುಬಂದ
ಸಾಧುತಪೋನಿಧಿ ಋಷಭನು ಬಂದ ಮೋದವ
ನೀಡಲು ಯಜ್ಞನುಬಂದ
ವೇಧನ ಗುರುತಾಹಂಸನು ಬಂದ
ಸಾಧುಹರಿನಾರಾಯಣ ಬಂದ
ಛೇದಿಸಲಘ ಬಡಬಾನಳ ಬಂದ ಮೋದಮಯ
ಶಿಂಶುಮಾರನು ಬಂದ
ಗೋಞ್ಸ್ರ ಕೃಷ್ಣನು ತಾಪಸಬಂದ ಶೋಷಿಸಿಭವ
ಧನ್ವಂತ್ರಿಯು ಬಂದ ೨
ವಾಸುದೇವ ಜಗಜೀವವಿಲಕ್ಷಣ ನಾಶರಹಿತ
ಶ್ರೀ ವಿಷ್ಣುವು ಬಂದ
ದೋಷದೂರ ಪರಿಪೂರ್ಣ ಗುಣಾರ್ಣವ ಕ್ಲೇಶಕಳೆದು
ಉಲ್ಲಾಸದಿ ಬಂದ
ಶೇಷಶಯನ ಭವಭಂದವಿಮೋಚಕ ದಾಸಜನರ
ಸಂತೋಷನು ಬಂದ
ವಿಶ್ವ ತೈಜಸ ಪ್ರಾಜ್ಞತುರ್ಯನು ಭಾಸವ ಬೀರುತ
ಕರುಣದಿ ಬಂದ
ಶ್ವಾಸವಿನುತ ಪರಮೇಶ ಸನಾತನ ಶಾಶ್ವತಸುಖಿ
ಮುಕ್ತೇಶನು ಬಂದ
ಕೇಶವಾದಿ ಚತುರ್ವಿಂಶತಿ ರೂಪ ವಿಲಾಸದಿ
ಪರಾದ್ಯನಂತನು ಬಂದ ೩
ಏಕಾನೇಕಸುರೂಪ ವಿನಾಯಕ ಮಾಕಳತ್ರ
ಜಗನೂಕೂವ ಬಂದ
ನಾಕಪತಿ ಪುರುಹೂತ ವಿನುತ ಸುರನೀಕಪೋಷ
ಸಕಲಾರ್ತಿಹರ ತಾ ಬಂದ
ಶೋಕ ದೂರ ನಿಸ್ಸೀಮನು ಬಂದ ನೋಕನೀಯ
ವೈರಾಜ್ಯನು ಬಂದ ಶೃತಿ-
ನೀಕ ಸುವಂದಿತನಿರುಪಮ ಬಂದ ವಾಕುಮನಕೆ
ಸಾಕಲ್ಯಸಿಗದ ಪುಣ್ಯ-
ಶ್ಲೋಕ ಪರಾವರಸ್ಥಾನನು ಬಂದ ನಾಲ್ಕುನಾಶ
ವಿವರ್ಜಿತ ಭಗಲೋಕೈಕ ವಂದ್ಯ
ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ೪
ಸರ್ವನಿಯಾಮಕ ಸರ್ವಸುನಾಮಕ
ಸರ್ವಸಾಕ್ಷಿಗಭೀರ ಪರಾಕು
ಸರ್ವಸುವ್ಯಾಪ್ತನೆ ಸರ್ವಸುಭೋಕ್ತನೆ ಸರ್ವತಂತ್ರ
ಸ್ವತಂತ್ರನೆ ಪರಾಕು
ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು
ಸರ್ವರಿಗುತ್ತಮ ಸರ್ವರಸರ್ವನೆ ಸರ್ವಶಬ್ದ
ಪ್ರತಿಪಾದ್ಯಪರಾರು
ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು
ಸಮನೆ ಪರಾಕು
ಶರ್ವವಂದ್ಯ ಜಗದೇಕನಾಥ ನಿಜ ಸಾರ್ವಭೌಮ
ಸಚ್ಚಿದಾನಂದ ಪರಾಕು ೫
ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು
ನಿತ್ಯಾಹೇಯ ಪರತಃಪರಾತರ ಸತ್ತಾದಿ
ನಿಖಿಳಪ್ರದಾಯಕ ಪರಾಕು
ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು
ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು
ನೀತ ಜ್ಞಾನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು
ಮಾತರಿಶ್ವ ಸರ್ವಾಂತರ್ಯಾಮಿ ನಿರ್ಲಿಪ್ತ ಸರ್ವಸುಸಾರ
ಭೋಕ್ತ ಪರಾಕು ೬
ಜಯಜಯದೇವವರೇಣ್ಯ ಪರಾಕು ಜಯಜಯ ಪಂಚ
ರೂಪಾತ್ಮ ಪರಾಕು
ಜಯಜಯವ್ಯಾಹೃತಿ ತತಿ ನುತವಂದ್ಯ ಜಯಜಯ
ಪುರುಷ ಸೂಕ್ತ ಸುಗೇಯ
ಜಯಜಯ ಮುನಿಗಣ ಧ್ಯಾತಪರಾಕು ಜಯಜಯ
ಪ್ರಖ್ಯಾತ ಮಹಾಮಹಿಮ ಪರಾಕು
ಜಯಜಯ ಆತ್ಮಾರಾಮಪರಾಕು ಜಯಜಯ ಸಾಸಿರ
ನಾಮಕ ಪರಾಕು
ಜಯಜಯ ಅಚ್ಯುತಾನಂತ ಸುನಾಮ ಜಯಜಯ
ಓಂಕಾರಾಧಿಪ ಪರಾಕು
ಜಯಜಯ ಅನಾದಿಸರ್ವಜ್ಞ ವಿಭೂತಿ ಜಯಜಯ
ಇಂದಿರಾರಾದ್ಯ ಮಹೇಶ ಪರಾಕು ೭
ವೈಕುಂಠಾದಿ ತ್ರಯಧಾಮ ನಿಷ್ಕುಟಿಲ ಭಕ್ತರಲಿ
ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ
ದಕ್ಕನು ನಿಜ ಖಳರಿಗೆ ಭೀಮ ತಕ್ಕಾಫಲಂಗಳ ನೀಡುವ
ಕರುಣಾಮಣಿ ಶ್ರೀಕಾಮ
ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ
ಉಕ್ಕದ ತಗ್ಗದ ವಿಭು ನಿಷ್ಕಾಮ ಮುಕ್ತಾಮುಕ್ತ
ವಿನುತ ಗುಣಲಲಾಮ
ಮುಕ್ತಿದ ಶ್ರೀಮದನಂತ ಸುನಾಮ ಭಕ್ತರ ಭಿಡೆಸಲಿಸುವ
ಮೇಘಶ್ಯಾಮ ೮
ನಂದತೀರ್ಥ ಮುನಿಮಾನಸ ಚಂದಿರ ಇಂದೀವರನಿಭ
ಸುಂದರ ಬಂದ
ಹಿಂದೆ ಮುಂದೆ ಎಂದೆಂದಿಗು ನಿಜಸುಖದಿಂದಲೆ
ಸೃಷ್ಠಿಸ್ಥಿತಿಲಯಗೈವ ಮು-
ಕುಂದ ಶೃತಿ ಪರಾಕಾಷ್ಠಾನುಬಂದ | ವಂದಿಪ ಜನರಘ
ವೃಂದಕಳೆದು ನಿಜ-
ನಂದವ ನೀಡುವ ಭೂತಿದ ವಿಭುವರ ಪರಮಾನಂದ
ಸುಧಾರ್ಣವ ಬೃಹತೀನಾಮಗ
ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ
ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು
ಮಂದಜ ಭವ ಪರಿವಾರದ ಕೂಡಿಯೆ ಬಂದಾ ೯

ಕೃಷ್ಣನನ್ನು ಅವನ ಅವತಾರ
೨೯
ಬಂದ-ಬಂದ _ ಇಂದಿರೇಶ ನಂದನಂದನಾ
ನಂದಪೂರ್ಣ ನಿಖಿಳ ಜನಕ ಕಂಧರಾಶ್ರಯಾ ಪ
ಬಂದ ಬಂದ ಭಜಕ ಬಂಧು
ಮಂದರಾದ್ರಿಧರ ಅರ-
ವಿಂದನಯನ ಸುಂದರಾಂಗ
ಸಿಂಧುಶಯನ ನಳಿನನಾಭ ಅ.ಪ.
ನೀಲಮೇಘ ಶ್ಯಾಮಸುಂದರಾತನಿಗೆ
ಮೇಲುಸಮರು ಇಲ್ಲವೆನಿಸಿದ
ಲೀಲೆಯಿಂದ ಜಗವ ಸೃಜಿಸಿ
ಪಾಲಿಸುತ್ತ ಮತ್ತೆ ಅಳಿಸಿ
ಆಲದೆಲೆಯಮೇಲೆ ಸಿರಿ
ಲೋಲನಾಗಿ ಮೆರೆವ ಕೃಷ್ಣ ೧
ಐದು ರೂಪದಿಂದ ಕ್ರೀಡಿಪಾ ಪ್ರಕೃತಿ
ಬೋಧ್ಯ ಸಿರಿಗುನಾಥ ನಾಯಕಾ
ಆದಿಮಧ್ಯ ಅಂತ್ಯ ಶೂನ್ಯ
ಮೋದಪೂರ್ಣ ಜ್ಞಾನಕಾಯ
ಮೋದ ಮುನಿಯ ಹೃದಯಸದನ
ಗೋಧರಾತಪತ್ರ ಶ್ರೀಪ ೨
ಆದಾನಾದಿ ಕರ್ತ ಬ್ರಹ್ಮನೂ ದಿವಿಜ
ಸಾಧುಸಂಘ ಸೇವೆ ಗೊಂಬನೂ
ವೇದವೇದ್ಯ ವೇದ ವಿನುತ
ವೇದ ಭಾಗಗೈದು ಪೊರೆದ
ಛೇದ ಭೇದರಹಿತ ಗಾತ್ರ
ಸಾಧು ಪ್ರಾಪ್ಯ ಬಾದರಾಯಣ ೩
ದಾಸಜನಕೆ ಮುಕ್ತಿನೀಡುವ ಮಹಿ-
ದಾಸಕಪಿಲ ಪೂರ್ಣ ಕಾಮನೂ
ದೋಷ ದೂರ ನಾಶರಹಿತ
ವಾಸುದೇವ ಕ್ಲೇಶವಿದೂರ
ಈಶವಿಧಿಗಳನ್ನು ಕುಣಿಪ
ಕೇಶವಾದ್ಯನಂತ ರೂಪ೪
ಮೊತ್ತಜಗಕೆ ಸತ್ತೆನೀಡುವಾ ನಿಖಿಳ
ಸತ್ಯ ಜಗದ ಚೇಷ್ಟೆನಡೆಸುವಾ
ಮೊತ್ತಶಬ್ದ ಘೋಷವರ್ಣ
ಮತ್ತೆ ಪ್ರಣವ ಮಂತ್ರಗಣದಿ
ಸ್ತುತ್ಯನಾಗಿ ನಿಖಿಳ ಯಜ್ಞ
ಭೋಕ್ತನಾಥ ಅಂಗಭೂತ ೫
ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ
ವಿಷ್ಣು ಪುರುಷಸೂಕ್ತ ಸುಮೇಯಾ
ವಿಶ್ವಕರ್ತ ವಿಶ್ವಭೋಕ್ತ
ವಿಶ್ವರೂಪ ವಿಶ್ವಭಿನ್ನ
ವಿಶ್ವವ್ಯಾಪ್ತ ಶಶ್ವದೇಕ
ವಿಶ್ವ ತೈಜಸ ಪ್ರಾಜ್ಞತುರ್ಯ ೬
ಸತ್ಯಧರ್ಮಗಳನು ಕಾಯುವಾ ದುಷ್ಟ
ದೈತ್ಯತತಿಯ ದಮನಗೈಯ್ಯುವಾ
ಮತ್ಸ್ಯಕೂರ್ಮ ಕೋಲ ಚರಿತ
ಭೃತ್ಯಭಾಗ್ಯ ನಾರಸಿಂಹ
ಸತ್ಯಶೀಲ ಬಲಿಯವರದ
ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ೭
ಜೀವಜೀವ ವಿಶ್ವ ಬಿಂಬನು ರಾ
ಜೀವಪೀಠನನ್ನು ಪಡೆದನೂ
ರಾವಣಾರಿ ಕೃಷ್ಣ ಬುದ್ಧ
ಭಾವಿಕಲ್ಕಿ ನಿತ್ಯಮಹಿಮ
ಭಾವಜಾರಿ ಪ್ರೀಯ ಸಖನು ೮
ಹಯಗ್ರೀವ ದತ್ತ ಋಷಭನೂ ಅಪ್ರ-
ಮೇಯ ಹಂಸ ಶಿಂಶುಮಾರನು
ಜಯಮುನೀಂದ್ರ ವಾಯುಹೃಸ್ಥ
ಜಯೆಯ ರಮಣ ಕೃಷ್ಣವಿಠಲ
ದಯದಿ ಪೊರೆಯಲೆಮ್ಮನೀಗ
ಜಯವು ಎನುತ ನಲಿದು ನಲಿದು ೯

ವ್ಯರ್ಥ ಕಾಲಹರಣ ಮಾಡದೆ
೯೩
ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರಿ ಪ
ಚಿನ್ನ ಕೃಷ್ಣನ ಚೆನ್ನಾಗಿ ನೆನೆದು ಪ್ರಸನ್ನ ಮಾಡಿರಿ ಅ.ಪ.
ಸತಿಯು ಸುತರು ಗತಿಯು ಎಂದು ಕೆಡಲು ಬೇಡಿರಿ
ಮಿತಿಯು ಇಲ್ಲ ಮೇರೆಯು ಇಲ್ಲ ಫಲವು ಇಲ್ಲ ಕೇಳಿರಿ
ಮತಿಯ ಹರಿಯ ಅಡಿಯಲ್ಲಿಟ್ಟು ಪ್ರೀತಿಮಾಡಿರಿ
ಗತಿಯನೀಡಿ ತ್ವರಿತದಿಂದ ಪೊರೆವ ನಿಮ್ಮ ನೊಡಿರಿ ೧
ಅಂದು ಇಂದು ಎಂದು ಹೇಳಿ ಕಾಲ ಕಳೆಯ ಬೇಡಿರಿ
ಇಂದು ನಿಮ್ಮನು ಇಂದೆ ಶುಭ ಇಂದೆ ನೆನೆಯಿರಿ
ಬಂದು ಯಮನ ಭಟರು ಕರೆದರೆ ಏನು ಮಾಡೋರಿ
ಮುಂದೆ ಇಂಥ ಜನ್ಮಬಹುದೆ ಬಂಧ ನೂಕಿರಿ೨
ಆಶಪಾಶ ಮೋಸ ಬಲುಕ್ಲೇಶ ತಿಳಿಯಿರಿ
ಹೇಸಿಕೆ ಸಂಸಾರವನು ಘಾಸಿಕೆ ನೋಡಿರಿ
ವಾಸವೇಶ ಜಯಮುನೀಂದ್ರ ವಾಯುಸ್ಥ ಕೃಷ್ಣ ವಿಠಲನ
ದಾಸನಾಗಿ ಗೆಜ್ಜೆಕಟ್ಟಿ ನಿರಾಶೆಯಿಂದ ಭಜಿಸಿರಿ ೩

ಶ್ರೀಹರಿಯ ನಾನಾ ಅವತಾರ
೩೧
ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ ಪ
ಗುಲ್ಲು ಮಾಡದೆ ಬೇಗ ನಿಲ್ಲೈಯ ಮನದಲಿ ಅ.ಪ
ಸಿರಿಕಾಂತ ನೀನಾಗಿ ತಿರುಪೆ ಬೇಡಿದೆ ಯಾಕೆ
ಪರಮ ಪುರುಷನು ಎನಿಸಿ ತುರುವ ಕಾಯ್ದೇಕೆ
ಪರಿವಾರ ಸುರರಿರಲು ಕರಡಿಕಪಿಗಳ ಸೈನ್ಯ
ನೆರವು ಯಾತಕೆ ನಿನಗೆ ಚರಿತೆ ಸೋಜಿಗವಯ್ಯಾ ೧
ಅಷ್ಟಕರ್ತನಿಗೇಕೆ ಸಂತತವು ಜಪತಪವು
ಪಟ್ಟ ಮಹಿಷಿಯರಿರಲು ಕುಬ್ಜೆಕೂಡಿದೆ ಯಾಕೆ
ಉಟ್ಟು ಸೀರೆಯ ಖಳರ ವಂಚಿಸಿದ ಬಹು ಶೂರ
ನಿಷ್ಟೆಯಿಂದಲಿ ಬಲಿಯ ಬಾಗಿಲನು ಕಾಯುವನೆ ೨
ಬೆಣ್ಣೆ ಕಳ್ಳರ ಗುರುವೆ ಹೆಣ್ಣು ಕದ್ದವ ನೀನು
ಮಣ್ಣು ಮಾಡಿದೆ ಕುಲವ ಯೆಂಜಲುಂಡವ ದೊರೆಯೆ
ಅಣ್ಣ ತಮ್ಮಂದಿರಲಿ ಕಲಹವನು ವÀಡ್ಡುತಲಿ
ನುಣ್ಣ ಗೆಲ್ಲರ ಮಾಡಿ ನಿಷ್ಕಪಟಿಯೆನಿಸಿದೆಯೊ ೩
ಅನ್ಯರಿಗೆ ಉಪಕಾರಿ ಅನನ್ಯರಾ ಶತ್ರುವು
ಬೆನ್ನು ಬಿದ್ದವಗೆ ಭವ ಭ್ರಷ್ಟತ್ವ ನೀಡುವೆಯೊ
ನಿನ್ನಾಳ ನಿಖಿಳರಿಗು ತೊರ್ಗೊಡದ ಬಹುಗೂಢ
ಕಣ್ಣು ಕೈ ಕಾಲೆಲ್ಲ ಸಮವೇನೆ ನಿನಗಯ್ಯ ೪
ದೊಡ್ಡ ದೇವನು ಎನಿಸಿ ಗುಡ್ಡವೇತಕೆ ಹೊಕ್ಕೆ
ಗಿಡ್ಡರೂಪವ ತೋರಿ ದೊಡ್ಡದಾಗುತ ಎಂದು
ಅಡ್ಡಿಯಿಲ್ಲದೆ ಬಲಿಯ ಹೆಡ್ಡನೆನಿಸಲು ಬಹುದೆ
ಗುಡ್ಡೆಯಿಲ್ಲದೆ ಚರಿಪ ವಡಲು ಬಗೆದಾ ಘೋರ ೫
ಪೂಡವಿಗೊಡೆಯನು ಎನಿಸಿ ಹಡೆದ ಮಾತೆಯ ಕಡಿದೆ
ಅಡವಿ ಬೇರನು ತಿಂದೆ ಕಡಲೊಳಗೆ ಸಂಚರಿಪೆ
ಮಡದಿಯನು ಕಳಕೊಂಡು ಹುಡುಕುತಲಿ ತಿರುಗಿದೆಯೋ
ಸಡಗರದಿ ಹಯವೇರಿ ಕೆಡುಕು ಕಡಿಯುವೆಯಂತೆ ೬
ನಾಮಕುಲಗೋತ್ರಗಳ ನೆಲೆಯಕಂಡವರಿಲ್ಲ
ಸಾಮಸರಿ ನಿರ್ಗುಣವು ಪೂರ್ಣಗುಣ ನೀನಂತೆ
ವಾಮನೀನಾವರಿಸಿ ವಳ ಹೊರಗೆ ಲೋಕಗಳ
ನೇಮದಿಂ ಕಾಯುವನು ಪುಡುಕಿದರು ಸಿಗೆಯೇಕೇ ೭
ಮಂಗಳಾಂಗನು ಅಂತೆ ಲಿಂಗವರ್ಜಿತನಂತೆ
ಶೃಂಗಾರರಸನಂತೆ ಭಂಗರಹಿತನು ಅಂತೆ
ಲಿಂಗವೆರಡೂ ಅಂತೆ ಸಿಸ್ಸಂಗ ನೀನಾಗಿ
ಅಂಗದಲಿ ಅಂಗನೆಯ ಧರಿಸಿ ಮೆರೆಯುವೆಯೇಕೆ ೮
ವೇದ ಬೋಧೆಯನಿತ್ತಗಾಧ ವರ್ಜಿತ ಮಹಿಮ
ಮೋದ ಮಯ ನೀ ನಿನ್ನ ನಾದಿನಿಯ ಬೆರೆದೇಕೆ
ಸಾಧುಗುಣಪೂರ್ಣ ಭಾನುವನು ಮರೆ ಮಾಡಿ
ಮೈದುನನ ಸಲಹಿದ್ದು ಬಹುನ್ಯಾಯ ವೇನೈಯ್ಯ ೯
ಹಾಲು ಕೊಟ್ಟವಳನ್ನು ಲೀಲೆಯಿಂದಲಿ ಕೊಂದೆ
ಶೀಲಸತಿಯಳ ಬೆರದು ವ್ರತವಳಿದು ಪರವಿತ್ತೆ
ಕಾಲನಾಮಕನಾಗಿ ಜಗವೆಲ್ಲ ನುಂಗುವನೆ
ಹೇಳುವರು ಕೇಳುವರು ನಿನಗಿಲ್ಲವೇನೈಯ್ಯಾ ೧೦
ಏನೆಂದು ವರ್ಣಿಸಲಿ ನಿನ್ನಯ ವಗತನವ
ಮಾನ್ಯ ಸತಿ ಚಂಚಲೆಯು ಮಗಳ ಮಾರ್ಗವುಡೊಂಕು
ಮಾನಾಭಿಮಾನಗಳ ಬಿಟ್ಟವರೆ ಪರಿವಾರ
ನೀನಿರದಠಾವಿಲ್ಲ ನಿನಗಿಲ್ಲ ತುದಿಮೊದಲು ೧೧
ಸರ್ವಜ್ಞನಾದವಗೆ ಸಾಂದೀಪ ಗುರುವೇಕೆ
ಸರ್ವ ನಾಮವು ಕೂಡೆ ನಾಮಕರಣವು ಏಕೆ
ಸರ್ವಸ್ವಾಮಿಯು ಎನಿಸಿ ಸಾರಥಿಯು ಆದೇಕೆ
ಸರ್ವ ತೋಮುಖ ನೀನು ಜಗವಿಲಕ್ಷಣ ನೈಯ್ಯಾ೧೨
ಒಬ್ಬರಲಿ ನೀಜನಿಸಿ ಮತ್ತೊಬ್ಬರಲಿ ನೀ ಬೆಳೆದೆ
ತಬ್ಬಲಿಯೆ ವಾಸ್ತವದಿ ಉಬ್ಬಿಳಿತವರ್ಜಿತವೆ
ಅಬ್ಬಬ್ಬ ಬ್ರಹ್ಮಾಂಡ ಹಬ್ಬಿ ನಡೆಸುವ ಧೀರ
ಕೊಬ್ಬಿದಾ ಖಳಗಂಜಿ ಮಧುರೆಯನು ತೊರೆದೇಕೊ ೧೩
ಮೇದಿನಿಗೆ ನೀ ಸ್ವಾಮಿ ಮದುವಾದೆ ಮಗಳನ್ನು
ಬೈದವಗೆ ಗತಿಯಿತ್ತೆ ಭಕ್ತರಿಗೆ ಕೂಳಿಲ್ಲ
ಮೋದ ಮಯ ನುಂಡುಣಿಸಿ ನಿರ್ಲೇಪನೀ ನಿರ್ಪೆ
ವಿದುರ ನೌತಣ ಕೊಂಡೆ ಕನ್ಯೆಯಲಿ ನೀ ಬಂದೆ ೧೪
ಜಯ ಮುನಿ ಹೃದಯದಲಿ ವಾಯುವಿನಂತರ ದಿರ್ಪ
ಶ್ರೀಯರಸ ತಾಂಡವ ಕೃಷ್ಣವಿಠಲನೆ ನೀನು
ಮಾಯಾವಿ ತೋರಗೊಡೆ ನಿಜಮರ್ಮಖಳಜನಕೆ
ಜೀಯನೆ ಮೊರೆಹೊಕ್ಕೆ ನಿನ್ನಿರವ ತೋರೈಯ್ಯಾ ೧೫

ಶ್ರೀಕೃಷ್ಣನ ರೂಪ
೩೨
ಬಾರೊ ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣ ಮನದಸದನಕೆ ಪ
ತೊರೊ ಕೃಷ್ಣ ತೊರೊಕೃಷ್ಣ ತೊರೊಕೃಷ್ಣ ಚರಣ ಬಡವಗೆ ಅ
ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆ
ಸಿರಿಯ ರಮಣ ನೀರಜಸುಗುಣಸುರರ
ಪೊರೆವ ಧರಣಿ ಧರಿಪನೆ ೧
ಸಿರಿಯಮದದಿ ಮರೆತೆ ನಿನ್ನ ಕರೆದು ಪೊರೆಯೊ ಶರಣರಕ್ಷಕಾ
ಅರಿಯೆ ಮಹಿಮೆ ತರಳನಾನು ತೊರೆಯೆ
ಅಳಿವೆ ಕ್ಷೇಮ ಧಾಮನೆ ೨
ವೇದವಿನುತ ಮೋದಭರಿತ ಸಾಧುಚರಿತ ಆದಿ ಕಾರಣಾ
ಮಂದಮತಿಯು ಕುಂದನಳಿದು ತಂದೆ
ಕಾಯೊ ಬಂಧನೀಡ್ವನೇ೩
ನೀರಜಾಕ್ಷ ವಾರಿನಿಲಯ ಸೂರಿಗಮ್ಯ ಪೂರ್ಣಧಾಮನೆ
ಸರ್ವನಾಮ ಸರ್ವಕರ್ಮ ಸರ್ವಶ್ರೇಷ್ಟಸರ್ವ ಪ್ರೇರಕಾ ೪
ಇಂದಿರೇಶ ನಂದಪೂರ್ಣ ಸುಂದರಾಂಗ ಬಂಧಮೋಚಕ
ಕುಂದುರಹಿತ ವಂದನಾರ್ಹ ಬಿಂದು ಬಿಂಬ ಕಂಧರಾಶ್ರಯ ೫
ಭುವನ ವಿತತ ಭುವನಮೂಲ ಭುವನ ಪಾಲ ಭುವನನಾಶಕ
ಭುವನ ಭಿನ್ನ ಸ್ತವನ ಪ್ರೀಯ ಕವನವರಿಯೊ ಕವಿಬಿರೀಡಿತ
ಮುಕುತರೊಡೆಯ ಮುಕುತಿದಾತ ಭಕುತ ಪ್ರೀಯ
ಭಕುತಿದಾಯಕ
ಶಕುತ “ಶ್ರೀಕೃಷ್ಣವಿಠಲ” ಯುಕುತಿ ಗೊಲಿಯ ಲಕುಮಿನಾಯಕ

ತಮ್ಮ ಮನದೈವವಾದ
೩೩
ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ
ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ
ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು
ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ.
ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು
ರಾಗದಿನೋಡುತ ಬಗೆ ಬಗೆ ಹರ್ಷದ
ನಗೆಮೊಗಹಾಸದಿ ಬಿಗಿಯುತ ಮನ
ನಿಗಮಾಗಮ ವಂದಿತ ಅಗಣಿತ ಗುಣನಿಧಿ ೧
ಸಾಗರನಳಿಯನೆ ಸಾಗರಶಯನನೆ
ಯಾಗ ಸುಭೋಕ್ತನೆ ಯೊಗಿಗಳರಸನೆ
ಬಾಗುವೆ ಚರಣದಿ ಸಾಗುತ ಮನ ಬಡ ಬಡ
ನೀಗಿಸಿ ಮಲಮನದಾಗಸಗೀಗಲೆ ೨
ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ
ತನುಮನವೆಲ್ಲವ ಮಿನುಗಿಸಿ ಜ್ಞಾನವÀ
ಧಣಧಣ ತಾಳಕೆ ಅಭಿನಯಸಹಿತದಿ
ಕುಣಿಯುತ ಕುಣಿಸುತ ದಣಿಸದೆ ಕರುಣದಿ ೩
ಕರ್ಜಿಸಿ ರಾಮದ ಕಜ್ಜಿಯಮನದಿಂ
ಮಜ್ಜನಗೈಸುತ ಭಕ್ತಿಯಕಡಲಲಿ
ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ-
ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು ೪
ಇಂದಿರೆಯರಸನೆ ಚಂದ್ರನ ಹಳಿವನೆ
ಛಂದಸುವೇದ್ಯನೆ ಬಂಧ ಸುಮೋಚಕ
ಬಂಧುವೆ ಸರ್ವರ ಮಂದಜಭವಪಿತ
ತಂದೆಯೆ ವಿಶ್ವದ ನಂದವ ನೀಡಲು ೫
ವೇದವ ತಂದವ ವೇದನ ಪೊರೆದವ
ಭೂಧರ ಪೊತ್ತವ ಮಾಧವನಾದವ
ಮೋದವ ತಂದವ ಖೇದವ ತರಿದವ
ಮೇದಿನಿ ಪೊರೆದವ ಛೇದಿಸಿ ಬಂದವ ೬
ಮೇದಿನಿ ಅಳೆದವ ಮೇದಿನಿ ಇತ್ತವ
ಮೇದಿನಿಸುತೆಯಳ ಮೋದದಲಾಳ್ದವ
ಮೇದಿನಿಸುತಹರ ವೇದವ ಕಾಯ್ದವ
ಛೇದಿಸಿ ಕಲಿಗಣ ಹಾದಿಯ ತೊರುವ ೭
ನಂದನಂದ ಅರವಿಂದ ನಯನ ಬಹು
ಸುಂದರತಮಶ್ರೀ ಮಂದಿರ ಗೋಕುಲ
ಚಂದಿರ ಶುಭಗುಣಸಾಂದ್ರ ಮಹೋಜಸ
ಇಂದ್ರನ ಹಳಿದ ಮಹೇಂದ್ರ ಪರಾತ್ಪರ೮
ಗೋಪಿಕಂದ ಬಹು ಗೋಪಿಕಾಮಸ್ತ್ರೀ
ರೂಪಧಾರಿ ನಗಚಾಪವರದ ಶಿವ
ಚಾಪ ಭಂಗ ಭವತಾಪ ಹರಣ ನಿ-
ರ್ಲೇಪ ದುಃಖ ಸುಖಲಾಪ ಚರಿತ ಭಗ ೯
ವಾಸುದೇವ ಸಂತೋಷದಾತ ಗೋಕೇಶವೇದ್ಯ
ವಾಗೀಶ ಜನಕ ನಿಜದಾಸಪೋಷ ಖಳ-
ನಾಶ ಶಕ್ತ ರವಿಭಾಸ ದಾತ ಮಹಿ-
ದಾಸಪೂರ್ಣವಿಭು ೧೦
ಕಂಸ ವೈರಿ ಕುರುವಂಶ ಧ್ವಂಸ ನಿಜ
ಹಂಸರೂಪ ಯದುವಂಶ ಚಂದ್ರ ನೀ-
ಲಾಂಶುಧಾಮ ಗರುಡಂಸಗಮನ ಭವ
ಹಿಂಸೆ ದಮನ ದೇವಾಂಶಗಣಪೋಷ ೧೧
ತುಂಬಿರೆಜಯಜಯ ದುಂಧುಭಿನಾದವು
ಅಂಬರಸುರಗಣ ವರ್ಷಿಸೆಕುಸುಮವ
ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ
ಕಂಬು ಚಕ್ರಾಂಕಿತ ಪಾಣಿಯೆಸರಸರ ೧೨
ಮಂಗಳಮೂರ್ತಿಯೆ ಮಂಗಲ ದಾತನೆ
ಅಂಗಜರಿಪುಗಳ ಭಂಗವ ಹರಿಸುತ
ತಿಂಗಳು ಬೆಳಕಿನ ತುಂಗ ಸುರೂಪವ
ಕಂಗಳು ಮನಸಿನ ಸಂಗದಿ ತೋರುತ೧೩
ಸಾಸಿರ ಶಿರಮುಖ ಸಾಸಿರ ನೇತ್ರನೆ
ಸಾಸಿರ ಬಾಹುವೆ ಸಾಸಿರನಾಮಕ
ಸಾಸಿರಕೀರ್ತಿನಿರ್ದೋಷ ಸುಖಪೂರ್ಣ
ಶ್ವಾಸವಿನುತ ವಿಶ್ವಾಸವ ಬೀರುತ ೧೪
ಜಯಮುನಿ ಹೃದಯಗ ವಾಯು ವಿನಾಯಕ
ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ
ಪ್ರೇಮದ ಮನವಳಿದ ಹೇಯದು ನಿನ್ನಯ
ಧೇಯವೆ ನಡೆಸುತ ಶ್ರೀ ಯವ ನೀಡಲು ೧೫

ಶ್ರೀ ಹರಿಯ ಅವತಾರ
೩೪
ಬಿದ್ದೆ ನಿಮ್ಮಯ ಪಾದದಲ್ಲಿ ನಾ ಪ
ಮಧ್ವರಾಯರ ಮನದಲ್ಲಿ ಇದ್ದು ವಲಿವ ವೇದವ್ಯಾಸ ಅ.ಪ.
ವೇದ ಓದದ ಶುದ್ಧ ಕಳ್ಳನಾ ಮೆದ್ದು ಮೆಲ್ಲುತ ವೃದ್ಧನಾದೆ ಭಲ್
ಗದ್ದ ದಾಸಗೆ ಕರುಣದಿ ತೋರಿ ಉದ್ಧರಿಸುವ ಬಗೆ ಬಲ್ಲೀ ೧
ಅನ್ಯದೇವರ ನಾ ನೊಲ್ಲೆ ನಿನ್ನ ಪಾದವ ಬಿಡಲೊಲ್ಲೆ
ಘನ್ನಕರುಣಿ ನೀನು ಬಲ್ಲೆ ನಿನ್ನ ಬಿಡಲು ಜಗಕಲ್ಲೇ ೨
ಉತ್ತಮೋತ್ತಮ ದೇವ ಸತ್ಯ ಭೃತ್ಯಜೀವನು ಎಂಬೆನಿತ್ಯ
ಭಕ್ತ ಪ್ರಥಮ ಪ್ರಾಣನೀನೇ ಮುಕ್ತಿನಿನ್ನಾಧೀನವೇನೇ ೩
ಇಂದಿರಾದೇವಿ ನಿನ್ನ ರಾಣಿ ಕಂದರು ವಿಧಿ ಪರಿವಾರ
ಎಂದೆಂದಿಗೂ ಭಿನ್ನರೇನೇ ಎಂದೆಂದು ಅಧೀನರೇನೇ ೪
ಶ್ರೀಕೃಷ್ಣವಿಠಲ ಏಕ ಸಕಲ ದೋಷ ವಿದೂರ
ಸಕಲ ಸದ್ಗುಣ ಪೂರ್ಣ ಹಾಗೆ ಅಕಟ
ಪೊರೆಯೋ ಎಂದು ಕೂಗಿ ೫

ಒಬ್ಬ ಯುವ ಗೃಹಿಣಿಯು
೯೪
ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ
ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ
ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ
ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ
ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ
ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ ೧
ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ
ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ
ವಿತ್ತ ವಿದ್ದರು ಭೃತ್ಯರಿದ್ದರು ತೊತ್ತಿನಂತೆ
ದುಡಿಯ ಬೇಕಮ್ಮ ಮಗಳೆ
ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ ೨
ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ
ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ
ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ
ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ ೩
ಕಂಡು ಕಂಡುದೆ¯್ಲ ಬಯಸೆ ಕ್ಲೇಶ ಕೇಳಮ್ಮ ಮಗಳೆ
ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ
ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ
ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ ೪
ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ
ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ
ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ
ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ ೫
ಇಲ್ಲದ ಸಲ್ಲದ ಡಂಭ ಬೇಡ ಸೊಲ್ಲು ಕೇಳಮ್ಮ ಮಗಳೆ
ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ
ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ ೬
ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ
ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ
ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ
ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ ೭
ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ
ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ
ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ
ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ ೮
ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ
ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ
ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ
ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ ೯
ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ
ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ
ವಿತತ ವಿಷ್ಣುವು ದ್ರೌಪತಿಯಂತೆ ಸಲಹುವನೆಂಬೆ
ಕೇಳಮ್ಮಾ ಮಗಳೆ
ಜತನ ಮಾಡಿ ನೀತಿಯ ಮರ್ಮ ನಿತ್ಯ ಸುಖಿಸಮ್ಮ ೧೦
ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ
ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ
ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ
ಸತತ ಜಯಮುನಿ ವಾಯ್ವಂತರ್ಗತ ಶ್ರೀಕೃಷ್ಣವಿಠಲನ
ಮೊರೆಯ ಹೋಗಮ್ಮ ೧೧

ಶ್ರೀ ರಾಘವೇಂದ್ರ ಸ್ವಾಮಿಗಳ
೭೦
ಭಜಿಸಿ ಬದುಕಿರೋ _ ಭರದಿ
ಸುಜನ ರೆನಿಸಿರೋ ಪ
ಭಜಕ ಭೂಜ _ ಸುಜನ ರಾಜ
ರಾಘವೇಂದ್ರರಾ ಅ.ಪ
ಕಲಿಯ ತುಳಿಯಲು _ ಸುಜನ ಮಲಿನ ಕಳಿಯಲು
ಒಲಿದು ಭವಿಯೊಳು _ ಬಂದ ಅಲವ ಮಹಿಮರ ೧
ವೇಧ ದೂತರ _ ಪ್ರಹ್ಲಾದರೆಂಬರ
ಸಾಧು ಸೇವ್ಯರ _ ದುರ್ಬೋಧೆ ಕಳಿವರ ೨
ನಾರಸಿಂಹನ ಕರುಣ ಸೂರೆ ಪಡದಿಹ
ಭಾರಿ ಭಕ್ತರ ದೇವರ್ಷಿ ಛಾತ್ರರ ೩
ವ್ಯಾಸರಾಯರ _ ಶ್ರೀನಿವಾಸ ಯಜಕರ
ಶೇಷದೇವರ ಆವೇಶ ಯುಕ್ತರ ೪
ರಾಜ ಗುರುಗಳು ಕವಿರಾಜ ಮಾನ್ಯರು
ನೈಜ ತೇಜರು ನಿವ್ರ್ಯಾಜ ಪ್ರೇಮರು ೫
ಹರಿಯ ತರಿಸಿದಾ ಮುರಹರನ ಕುಣಿಸಿ ದಾ
ಮುರವ ಹರಿಸಿದಾ ಧೊರೆಗೆ ಹರುಷ ಸುರಿಸಿದಾ ೬
ಮಾನವಂತರಾ ಬಹುಜ್ಞಾನವಂತರಾ
ದಾನ ಶೀಲರಾ ಅನುಮಾನ ರಹಿತರ ೭
ಭ್ರಾಂತಿ ವಾದವ ವಿಶ್ರಾಂತಿ ಗೊಳಿಸಿದ
ಶಾಂತಿ ಸಾಗರ ವೇದಾಂತ ಭಾಸ್ಕರ ೮
ಶ್ರೀ ಸುಧೀಂದ್ರರ ವಿಶ್ವಾಸ ಪುತ್ರರ
ದೋಷದೂರರ _ ಗುರು ದೋಷ ಕಳಿವರ ೯
ಮಂತ್ರ ಸಿದ್ಧರು ಬಹು ಗ್ರಂಥ ಕರ್ತರು
ತಂತ್ರ ಮಲ್ಲರು ಹರಿ ಮಂತ್ರಿ ಸಚಿವರು ೧೦
ಯೋಗಿ ವರ್ಯರ ಭವ ರೋಗ ವೈದ್ಯರ
ರಾಗ ರಹಿತರ ವೈರಾಗ್ಯ ಭಾಗ್ಯರ ೧೧
ವಾದಿ ಭೀಕರ ಶ್ರೀವಿಜೀಂದ್ರ ಪೌತ್ರರ
ಮೋದ ತೀರ್ಥದಿ ನಿತ್ಯ ಮಿಂದು ಮೀಯ್ವರ ೧೨
ತರ್ಕದಿಂದಲು ಹರಿಯು ಶಕ್ತಿಯಿಂದಲು
ಯುಕ್ತಿಯಿಂದಲು ಒಲಿಯ ಭಕ್ತಿ ಇಲ್ಲದೆ ೧೩
ಶ್ರೀಶ ದಾಸರ ಪದ ಪಾಂಶು ಧರಿಸದೆ
ದೇಶ ತಿರುಗಲು ಬರಿಘಾಸಿ ಸಿದ್ಧವು ೧೪
ಭಕ್ತರೊಲಿಯದೆ ನಿಜ ಭಕ್ತಿ ಸಿಕ್ಕದು
ಪಕ್ವವಾಗದೆ ಭಕ್ತಿ ದಕ್ಕ ಶ್ರೀ ಹರಿ ೧೫
ಇವರ ಮಂತ್ರವ ಭಕ್ತ ಜವದಿ ಜಪಿಸಲು
ಅವಗೆ ಕರಗತ ಸಿದ್ಧ ಭವದಿ ವಾಂಛಿತ ೧೬
ಜ್ಞಾನಿಯಾಗುವ ಬಹುಮಾನ ಪಡೆಯುವ
ಶ್ರೀನಿವಾಸನ ಭಕ್ತ ಶ್ರೇಣಿ ಸೇರುವ ೧೭
ಅಲ್ಪ ಸೇವೆಯೆ ಮೇರು ಕಲ್ಪ ವಾಹುದೊ
ಕಲ್ಪಕಾದರು ಕಾಕು ಸ್ವಲ್ಪ ತಟ್ಟದೊ ೧೮
ಸುತ್ತಿ ನಮಿಸಲು ನಿಖಿಳ ಯಾತ್ರೆಯಾ ಫಲ
ಭಕ್ತ ಪಡೆಯುವ ಸಂದೇಹ ಸಲ್ಲದೊ ೧೯
ಪುತ್ರ ನೀಡುವ ಸಂಪತ್ತು ದೊರಕಿಪ
ವೃತ್ತಿ ಕಲ್ಪಿಪ ಆಪತ್ತು ಕಳಿಯುವ ೨೦
ರಾಮ ನರಹರಿ ಕೃಷ್ಣ ಬಾದರಾಯಣ
ಪ್ರೇಮದಿಂದಲಿ ದಿವಿಜ ಸ್ತೋಮ ವೆಲ್ಲವು ೨೧
ಸೇರಿ ಇವರಿಗೆ ಕೀರ್ತಿ ಸೂರೆ ಕೊಡುತಿರೆ
ಪಾರವಿಲ್ಲವು ಸತ್ಯ ಮಹಿಮೆ ಗೆಂಬುವೆ ೨೨
ಅಗ್ನಿ ತುಲ್ಯರು ಶಂಕು ಕರ್ಣ ವಿದಿತರು
ವಿಘ್ನ ಕಳಿವರು ಶ್ರೀ ಸತ್ಯ ಸಂಧರು ೨೩
ಗುರುವು ಒಲಿದರೆ ತಾ ಹರಿಯು ಒಲಿಯುವ
ಗುರುವು ಮುನಿದರೆ ಯಾರು ಪೊರೆವರಿಲ್ಲವೊ ೨೪
ಶುದ್ಧ ಭಕ್ತಿಲಿ ಈ ಪದವ ಪಠಿಸಲು
ಸಿಧ್ಧಿ ಸತ್ಯವು ಸರ್ವತ್ರ ವಿಜಯವು೨೫
ಸಾರಿ ಸಾರುವೆ ಕೇಳಿ ಕ್ರೂರ ಕಲಿಯಲಿ
ದೂರ ಸಾಧನೆ ಇವರ ಸೇರ ದಿರ್ಪಗೆ೨೬
ಜಿಷ್ಣು ಸೂತ ಶ್ರೀ ಕೃಷ್ಣ ವಿಠಲನ
ಶ್ರೇಷ್ಟ ಭಕ್ತರ ಶ್ರೀ ರಾಘವೇಂದ್ರರ೨೭

ಇದು ಶ್ರೀವಾದಿರಾಜಸ್ವಾಮಿಗಳ
ಭೂತರಾಜರು
೭೮
ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ ಪ
ಖ್ಯಾತ ವಾದಿರಾಜ, ಗುರುವ | ಪ್ರೀತಿಪಾತ್ರ
ಭಾವಿರುದ್ರ ಜೈ ಜೈ ಜೈ ಅ.ಪ.
ಮೂಲ ಹರಿಯ ನಾಮ ಧರಸಿ | ವ್ಯಾಳ ವಿನುತ ಗುರುವಿನಲ್ಲಿ
ಶೂಲಿ ಯಂತೆ ವಿದ್ಯೆ ಘಳಿಸಿ | ಕಾಳ ಮನದಿ ಮೆರೆದ
ಮುನಿಗೆ ಜೈ ಜೈ ಜೈ ೧
ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ |
ಗುರುಗಳನ್ನು ಬಿಡದೆ ಬೆದಕಿ, ಪುರದಲಾದೆ
ಬೊಮ್ಮರಕ್ಕಸ ಜೈ ಜೈ ಜೈ ೨
ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ |
ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ೩
ಏನು ನಿನ್ನ ಜ್ಞಾನ ಮಾನ, ಹೀನ ಜನ್ಮ ಬಂದರೂನು |
ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ೪
ಕರುಣ ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ |
ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ |೫
ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ |
ಅಮರನಾಥ ಗುರುವು ನೀನು, ನಮಗೆ ಮಗನು
ಸುಖದಿ ಬಾಳೆಂದು೬
ನಾರಸಿಂಹ ನಿನ್ನ ಬಿಂಬ, ಭಾರಿ ಗಾತ್ರ ಕೆಂಪು ನೇತ್ರ |
ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ ೭
ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು |
ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ ೮
ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ
ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ ೯
ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ
ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ೧೦
ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ
ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ೧೧
ಶೃಂಗ ಪುರದಿ ಖಳರ ಸೊಕ್ಕು ಭಂಗ ಗೈದು ನಿಂತೆ ಅಲ್ಲ
ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ೧೨
ಗುರುವು ಕೊಟ್ಟ ನೂಪೂರಾವ, ಧರಿಸಿ
ಕುಣಿದು ಮುದದಿ ಭಜಿಪೆ
ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ೧೩
ಸ್ವಾದಿ ಕ್ಷೇತ್ರದಲ್ಲಿ ನೆಲಸಿ | ವಾದಿರಾಜ ವೈರಿ ವೃಂದ
ಬೂದಿಗೈದು ಭಕ್ತಿಗಣಕೆ, ಮೋದ ಕೊಡಿಸು ತಿರ್ಪೆಭೂಪ |ಜೈ೧೪
ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ
ರಾಜ ದಯದಿ ಮೆರೆವ ನಿನ್ನ | ನೈಜ ಮಹಿಮೆ
ಅಳಿಯೆ ಸಿಗದು ಜೈ ೧೫
ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ |
ಕುಂದು ರಹಿತ ಹರಿಯ ಯಜಿಸಿ, ಇಂದು ಉಂಬೆ ದಿವ್ಯ ಪದವಿ೧೬
ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ |
ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ೧೭
ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ
ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ೧೮
ಕರ್ಣ ಆವಿ ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು |
ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ೧೯
ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ
ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ೨೦
ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ |
ನಾಥ ಶ್ರೀ _ ಕೃಷ್ಣ ವಿಠಲ, ಪ್ರೀತಿ ಯಿಂದ ನಲಿದು
ನಲಿವ ಜೈ ಜೈ ಜೈ ೨೧

ಕೃಷ್ಣನ ಬಾಲಲೀಲೆಗಳನ್ನು,
೩೫
ಮಗುವು ಅಲ್ಲ ಕಾಣೆ ಗೋಪಿ ಇವನು ನಿನ್ನಾ ಪ
ಜಗವ ನಿರ್ಮಿಸಿ ಪಾಲಿಸಿ ಅಳಿಸುವ
ಅಗಣಿತ ಸುಗುಣಾ ಭರಣನೆ ಇವನು ಅ.ಪ
ಬೆಣ್ಣೆಯ ಕದ್ದನು ಸಣ್ಣವನಿಹ ಬಹು
ಚಿಣ್ಣರ ಕೂಡುತ ಗೋಗಣ ಕಾಯುವ
ಮನ್ಮನ ಪುಥ್ಥಳಿ ಕಳಿಸುವದಾಗದು
ಎನ್ನುವ ನುಡಿಗಳ ಬದಿಗಿಡು ತಾಯಿ
ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ
ಉನ್ನತ ರಕ್ಕಸಿ ಪೂತಣಿಯನ್ನಿವ
ಮಣ್ಣನು ಕಂಡರು ಕಂಸನದೂತರು
ಪೂರ್ಣಾನಂದನು ಸರಿ ಇವನಮ್ಮ ೧
ಜಾರ ಚೋರ ಸುಕುಮಾರನು ಸುಂದರ
ನಾರೇರ ವಲಿಸಿ ಸೇರಿದ ನಿಶಿಯಲಿ
ಪೋರನೆಂಬ ಮನ ದೂರವಗೈದುಗ
ಭೀರ ಮಹಿಮ ಜಗ ಸಾರನೆಂದರಿಯೆ
ಭಾರಿಗಿರಿಯನೆತ್ತಿ ಊರಿಗೆ ಊರನು
ಸೇರಿಸಿ ಪೊರೆದಿಹಪಾರಮಹಿಮ ಜಂ
ಭಾರಿದರ್ಪಹರ ಪೋರನೆ ಬಿಡುಬಿಡು
ನೀರೆ ನಿಗಮ ಸಂಚಾರನೆ ಖರೆಯೆ ೨
ಕಾಲ್ಗಳು ಸೋಕಲು ಶಕಟನು ಬಿದ್ದನು
ಶೀಳುತ ಕೊಕ್ಕನು ಬಕನಂ ಕೊಂದನು
ಕಾಳಿಯ ತುಳಿಯುತ ಗರ್ವವ ನಿಳಿಸಿದ
ಲೀಲಾಜಾಲದಿ ಜ್ವಾಲೆಯ ನುಂಗಿದ
ಬಾಲರು ಕೇಳಲು ಆಲಯತೋರಿದ
ಪಾಲಿಸಿ ವರುಣನ ತಂದೆಯ ಕಂದನ
ಲೋಲನೆ ಸರಿ ಜಗಮೂಲನು ಕೇಳೆ ೩
ನಾರಿಯು ಆಗುತ ಮೋಹವ ತುಂಬಿದ
ನೀರಜ ನಾಭಗೆ ಗೊಲ್ಲತಿಯ ಗಣ
ಬೀರಲ್ ಸಾಧ್ಯವೆ ಮೋಹವ ನೆಂದಿಗು
ಶ್ರೀರತಿದಾಯಕ ಕೊಳ್ಳುವನೇ ರತಿ
ಮೂರನೈಯ ಭವ ತಾರಕ ಶುಭ
ಶೃಂಗಾರ ಪೂರ್ಣ ಪರಿವಾರದಭೀಷ್ಠವ
ಪೂರೈಸಿದ ಖರೆ ಭೂರಿದಯಾಮಯ
ನಾರಾಯಣನಿವ ದೋಷ ವಿದೂರ ೪
ಮೆಲ್ಲಗೆ ಬಾಯೊಳು ಎಲ್ಲವ ತೋರಿದ
ಮಲ್ಲನು ಸರ್ವರ ವಲ್ಲಭ ಸಿದ್ಧವು
ಗೊಲ್ಲನ ವೇಷದಿ ಇಲ್ಲಿಹನಮ್ಮ
ಇಲ್ಲವೆ ಸಮರಿವಗೆಲ್ಲಿಯ ಸತ್ಯ
ಮಲ್ಲರ ಮರ್ದಿಸಿ ಕೊಲ್ಲುತ ಕಂಸನ
ನಿಲ್ಲಿಸಿ ಧರ್ಮವ ಕಾಯುವ ನಮ್ಮ
ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ
ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ ೫

ಶ್ರೀ ಶ್ರೀನಿವಾಸ ಕಲ್ಯಾಣ
೧೦೮
ಲಾವಣಿ
ಮದುವೆಯ ಮಾಡಿಕೊಂಡ ಮುದದಿಂ ಮಾಧವ ಪ
ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ.
ದೇವ ದೇವೇಶನು ಯಾರೆಂತೆಂದು
ಕೋವಿದ ಭೃಗುಮುನಿ ಹುಡುಕುತ ಬಂದು
ಪಾರ್ವತಿ ಪತಿಹರ ವಿಧಿಗಳ ಜರಿದು
ಧಾವಿಸಿ ಹರಿಯೆಡೆ ಬರ್ಪುದ ಕಂಡು
ಭಾವಜ ಪಿತರತಿ ಸೋಗನು ಹಾಕೆ
ದೇವನ ಮಾಯೆಯು ಮುಸುಕಲು ಮುನಿಗೆ
ಈ ವಿಧ ಸಲ್ಲದು ಹರಿಗೆಂತೆಂದು
ಪಾವನ ನೆದೆಯನು ವದ್ದನು ದುಡುಕಿ೧
ಭರದಿಂ ಮಾಧವ ಚರಣವ ತೊಳೆದು
ಹರಿಸುತ ದುಗುಡವ ಭಕ್ತನಿಗಂದು
ಕರದಿಂ ದೊತ್ತುತ ಚರಣದ ಕಣ್ಣು
ತರಿಯಲು ಹೆಚ್ಚಿನ ಸಾಧನೆ ಮುನಿಗೆ
ಹರುಷದಿ ತೆರಳಿದ ಋಷಿವರ ತಾನು
ಅರಿಯುತ ಕಾಂತನ ಮನವಂ ಸಿರಿಯು
ಸರಸರ ಕೋಪವ ನಟಿಸುತ ತಾನು
ಬಿರುಸಿನ ನುಡಿಗಳ ಆಡಿದಳಂದು ೨
ಏನಿದು ಮುನಿ ವಿಪರೀತವು ಥರವೆ
ನಾನಿಹ ಸ್ಥಳವನು ವದೆಯುವದೆಂದು
ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ
ನಾನಿಹೆ ಬರಿಸತಿ ಭಕ್ತರೆ ಹೆಚ್ಚು
ಕಾನನ ಸೇರುವೆ ನನಗೇಕೀ ಮನೆ
ಮಾನವು ಹೊಯಿತು ಯನ್ನಲು ಸತಿಯು
ಮೌನವ ಧರಿಸಲು ಗಂಡನು ನಗುತ
ದೀನರ ಪೊರೆಯಲು ಬಂದಳು ಭುವಿಗೆ ೩
ಗಂಡನ ಬಿಡುವಳೆ ಲಕ್ಷ್ಮೀದೇವಿ
ಪುಂಡರ ಮಾತಿದು ನಂಬಿಲುಬೇಡಿ
ಗಂಡನ ಮನತೆರ ನಟಿಸಿದಳಷ್ಟೆ
ಗಂಡನು ಹಾಗೆಯೆ ತೊರೆಯುತ ಧಾಮ
ಕುಂಡಿಲಿ ಗಿಳಿಯುತ ಅಲೆಯುತ ಹೊರಟ
ಕಂಡಲ ಗಿರಿಯೆಡೆ ನಡೆತಾತಂದ
ಕಂಡನು ಹುತ್ತವ ಒಂದೆಡೆ ತಾನು
ಕುಂಡಲಿಗೊಡೆಯನು ನೆಲಸಿದನಲ್ಲಿ ೪
ಪಾವನ ಗಿರಿಯದು ಕೇಳಿರಿ ಎಲ್ಲ
ದೇವನ ಖಗಮೃಗ ಬಳ್ಳಿಗಳಾಗಿ
ದೇವ ಸಮೂಹವು ಸೇವಿಪರಲ್ಲಿ
ಕೋವಿದ ಋಷಿಗಳು ಧ್ಯಾನಿಪರೈಯ
ಭಾವಸು ಭಕ್ತಿಲಿ ನೋಡಲು ಗಿರಿಯ
ಜೀವರ ಪಾಪಗಲೆಲ್ಲಾ ನಾಶ
ನೋವನು ಕಾಣರು ಹರಿಕೃಪೆ ಮುಂದೆ
ದೇವನು ಇರೆ ಇದೆ ಭೂವೈಕುಂಠ ೫
ಕೃತಯುಗದಲ್ಲಿದು ವೃಷಭಾಚಲವು
ಗತಿಸಿದ ರಕ್ಕಸ ಹರಿಯಿಂತೆಂದು
ಸುತನಂ ಪಡೆಯಲು ಅಂಜಿಲಿದೇವಿ
ಅತಿ ತಪಗೈದಳು ತ್ರೇತೆಯಲೆಂದು
ಮತಿಯುತಳಾಕೆಯ ನಾಮವೆ ಆಯ್ತು
ಉತ್ತಮ ನೆಂಬುವ ಗರ್ವವ ನೀಗಿ
ಸ್ತುತಿಸಿದ ಶ್ವಾಸನ ಶೇಷನು ಎಂದು
ಇತ್ತರು ಮೂರಲಿ ಶೇಷನ ನಾಮ ೬
ವೆಂಕಟ ಗಿರಿಯಿದು ಕಲಿಯುಗದಲ್ಲಿ
ಸಂಕಟ ನೀಗಿದ ಮಾಧವನಿಲ್ಲಿ
ಸಂಕಟ ನೀಡುವ ಪಾಪಗಳನ್ನು
ಶಂಕರ ಹರಿತಾ ಕಡಿಯುವನೆಂದು
ವೆಂಕಟ ನೆನಿಸುತ ಮೆರೆಯುವ ನಿಲ್ಲಿ
ಶಂಕೆಯ ಮಾಡದೆ ಶರಣೆಂದಲ್ಲಿ
ಪಂಕಜ ನೇತ್ರನು ಪೊರೆಯುವನಿಲ್ಲಿ
ಮಂಕುಗಳಾಗದೆ ಭಜಿಸಿರಿ ಬೇಗ ೭
ಎದೆಂದಗಲದ ಇಂದಿರೆ ಕೆರಳೆ
ತಂದೆಯು ತೊರೆದನೆ ನಿಜ ವೈಕುಂಠ
ಪೊಂದಿಹ ಹುತ್ತವ ಏನಿದು ಛಂದ
ಕಂದನು ನಾನಿಹೆಎನ್ನುತ ಬೊಮ್ಮ
ತಂದೆಗೆ ಕ್ಷೀರವ ಕರೆಯಲುನಿತ್ಯ
ಛಂದದ ಗೋತನು ಧರಿಸುತ ಶಿವನ
ಕಂದನ ಗೈಯುತ ಮಾತೆಯ ಸಹಿತ
ಬಂದನು ಚೋಳನ ಅರಮನೆಯೆಡೆಗೆ ೮
ಕೊಳ್ಳಲು ರಾಣಿಯು ಸೇರುತ ಗೋಷ್ಠಿ
ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ
ಇಲ್ಲವೆ ಆಗಲು ರಾಣಿಗೆ ಹಾಲು
ಗೊಲ್ಲನ ಶಿಕ್ಷಿಸಿ ಬೈಯಲು ಬಹಳ
ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ
ಕೊಲ್ಲಲು ಗೋವನು ಕೊಡಲಿಯನೆತ್ತೆ
ಬಲ್ಲಿದ ತಡೆಯಲು ಶಿರವನು ಒಡ್ಡೆ
ನಿಲ್ಲದೆ ಗಗನದಿ ಚಿಮ್ಮಿತು ರಕ್ತ ೯
ನೋಡುತ ಮಡಿಯಲು ಗೊಲ್ಲನು ಅಲ್ಲೆ
ಓಡುತ ಗೋಗಣ ಹಟ್ಟಿಯ ಸೇರೆ
ಜಾಡನು ಪಿಡಿಯುತ ಚೋಳನು ಬರಲು
ಕೇಡಿಗ ನೃಪನೆ ಪಿಚಾಚಿಯು ಆಗೆನೆ
ಬಾಡಿದ ಮೋಗದಿಂ ರಾಜನು ನಮಿಸಿ
ಬೇಡಲು ಕ್ಷಮೆಯನು ಬಹುಪರಿಹರಿಯ
ನೀಡಿವಿಶಾಪವ ವೆಂಕಟ ಕರುಣಿ
ಆಡಲು ತೊಡಗಿದ ಈ ವಿಧ ಮುಂದೆ ೧೦
ಆದುದು ಆಯಿತು ಚೋಳನೆ ಕೇಳು
ಸಾದರದಿಂದಲಿ ಭುಂಜಿಸು ಕರ್ಮ
ಪದ್ಮಾವತಿ ಯೆಂಬಾಕೆಯ ಮುಂದೆ
ಮೋದದಿ ಮುದುವೆಯ ನಾಗುವೆ ಆಗ
ಭೂಧವ ಮಾವನು ನೀಡುತ ಮಕುಟ
ನಾಧರಿಸುವೆನದ ಪ್ರತಿ ಕವಿ ವಾರ
ನಾಧರಿಸುವಾಗಿಲ್ಲದೆ ಬಾಧೆ
ಪೊಂದುವಿ ಕಲಿಕೊನೆ ಪೂರ್ವಾವಸ್ಥೆ ೧೧
ಪೇಳತ ಲೀಪರಿ ಚೋಳಗೆ ದೇವ
ಲೀಲೆಯ ತೊರಲು ಘಾಯವ ಪಿಡಿದು
ಕೇಳಲು ಔಷಧ ಗುರುವನು ಸ್ಮರಿಸಿ
ಆಲಸ್ಯಗೈಯದೆ ಬಂದವ ನುಡಿಯೆ
ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ
ಶೈಲದ ಸ್ವಾಮಿ ವರಾಹನು ಸಿಗುತ
ಕೇಳಲು ವೆಂಕಟ ಕಥೆ ವಿಸ್ತಾರ
ಪೇಳಲು ತಬ್ಬಿದ ಕ್ರೋಡನ ಚತುರ ೧೨
ಏನಿದು ಬಹು ವಿಪರೀತವು ಪೇಳಿ
ಶ್ರೀನಿಧಿ ಸತಿ ಬಿಟ್ಟಲೆಯುವುದೆಂತು
ಪೂರ್ಣಾನಂದಗೆ ಗೊಲ್ಲನ ಪೆಟ್ಟೆ
ಚಿನ್ಮಯ ನೆತ್ತರು ಚಿಮ್ಮುವದುಂಟೆ
ಅನ್ನವೆ ಕ್ಷುಧೆ ತೃಷೆ ದೂರಗೆ ಹಾಲು
ಅನ್ಯರು ವೈದ್ಯರೆ ಧನ್ವಂತ್ರೀಗೆ
ಕಾಣನೆ ಔಷಧಿ ಪೂರ್ಣಪ್ರಜ್ಞ
ತಾನಿರೆ ವೆಂಕಟ ತಿಳಿಯನೆ ಕ್ರೋಡ ೧೩
ಲೀಲೆ ಇದೆಲ್ಲವು ಕೊಡುವದವಗೆ
ಬೀಳಿಸಿ ಮೋಹದಿ ಕುಜನರ ತರಿವ
ಪಾಲಿಪ ಸುಜನರ ಬೀರುತ ಜ್ಞಾನ
ಲೀಲಾಮಯನವ ಸರಿಯೆಂತೆನ್ನಿ
ಕೇಳಲು ಕ್ರೋಡನ ವಾಸಿಸೆ ಜಾಗ
ಕೇಳುವರಾರೈ ನೀನಿರೆ ಯನ್ನ
ಬೀಳುವರೆಲ್ಲರು ನಿನ್ನಡಿಭರದಿ
ಧಾಳಿಯೆ ನನ್ನಯ ಪ್ರಭುತನವೆಂದ ೧೪
ಮುಂದೆಯೆ ನೀನಿರು ನಾಹಿಂದಿರುವೆ
ಬಂದವರೆಲ್ಲರು ನಿನಗೊಂದಿಸುತ
ವಂದಿಸಲೆನ್ನದು ವಲಿಯುವೆನಾಗ
ಮುಂದಿಹ ನಿನಗೇ ಮೊದಲಲಿ ಪೂಜೆ
ಛಂದದಿ ಶಾಸನ ಹೀಗೇ ಬರದು
ಮಂದಿರ ಕೆಡೆ ಕೊಡು ಎನ್ನಲು ನಗುತ
ನಂದದಿ ನೀಡುತ ಹಾಗೆಯೆ ಎಲ್ಲ
ಕಂದನ ಸೇವಿಸೆ ಬಕುಳೆಯ ಕೊಟ್ಟ ೧೫
ತಗ್ಗಿರೆ ಸಾಧನ ವೆಗ್ಗಳಗೈವ
ವೆಗ್ಗಳ ಸಾಧನೆ ತಗ್ಗಿಪ ದೈವ
ಹಗ್ಗವು ಸರಿಇವ ನಿಚ್ಚೆಯು ಕೇಳಿ
ಅಗ್ಗದ ಪ್ರಭುವರ ಇವತಾನಲ್ಲ
ತಗ್ಗಿಸಿ ವಿಷಯ ಬಗ್ಗಿಸಿ ಮನವನು
ಹಿಗ್ಗುತ ಭಜಿಸಲು ಚರಣ ಸರೋಜವ
ತಗ್ಗದ ಸೌಖ್ಯವ ನೀಡುತ ಕಾವ
ಮುಗ್ಗದೆ ಭವದಲಿ ಭಜಿಸಿರಿ ಬೇಗ ೧೬
ಬಕುಳೆ ಯಶೋದೆಯು ಪೂರ್ವದಿ ಕೇಳಿ
ರುಕ್ಮಿಣಿ ಮುದುವೆಯ ನೋಡದಲಾಕೆ
ಉಕ್ಕಿದ ಮೋಹದಿ ಬಯಸಲು ನೋಡೆ
ಭಕ್ತಳ ಬಯಕೆಯ ಸಿದ್ಧಿಸೆ ದೇವ
ಬಕುಳೆಯ ಜನ್ಮದಿ ನಿಂದಿಹಳೆಂದು
ಅಕ್ಕರೆಯಿಂದಲಿ ತಾ ಕರತಂದು
ಚೊಕ್ಕಸುಕಂದನ ತೆರದಲಿ ನಿಂದ
ಭಕ್ತಿಲಿ ಸೇವೆಯ ಗೈದಳು ಬಕುಳೆ ೧೭
ನಾರಾಯಣ ಪುರ ನಾಮದ ನಗರಕೆ
ದೊರೆಯೆನಿಸಿದ್ದನು ಆಕಾಶರಾಯ
ಕೊರಗುತ ಬಹುದಿನ ಸುತರಿಲ್ಲೆಂದು
ಧರಣಿಯ ಶೋಧಿಸೆ ಯಾಗಕ್ಕೆಂದು
ದೊರಕಲು ಕಮಲವು ದೊಡ್ಡದು ಒಂದು
ತೆರೆಯುತ ನೋಡಲು ಶಿಶು ತಾನೊಂದು
ಬೀರುತ ಕಾಂತಿಯ ಕಾಣಿಸಲಂದು
ದೊರಕಿತು ಕನ್ಯಾಮಣಿಯೆಂತೆಂದು ೧೮
ಅರಮನೆ ಗಾ ಶಿಶು ಹರುಷದಿ ತಂದು
ಸರಸಿಜಮುಖಿ ಪದ್ಮಾವತಿಯೆಂದು
ಕರೆಯುತ ರಾಣಿಯು ಸಾಕುತ ಬಂದು
ವರುಷಗಳುರುಳಲು ಕಾಲದಿ ಕನ್ಯೆ
ಸಿರಿತೆರ ಲಕ್ಷಣ ಗಣದಿಂ ಬೆಳೆಯೆ
ವರಿಸಲು ಈಕೆಯ ನರರಿಂದಾಗದು
ಹರಿಯೇ ಸರಿವರವೆನ್ನುತ ಮನದಿ
ಅರಸುತ ವರನಂ ಬಳಲಿದ ಧೊರೆಯು ೧೯
ವೇದವತೀ ಈಕೆಯು ತ್ರೇತೆಯಲೆನ್ನಿ
ಮಾಧವ ಮನತೆರ ತೆರಳುವ ಸೀತೆ
ಮೋದದಿ ಸೇರಲ್ ಗಿರಿ ಕೈಲಾಸ
ಖÉೀದಗಳುಣ್ಣುತ ಲಂಕೆಯಲಿದ್ದು
ಸಾಧಿಸಿ ಖಳರವಿನಾಶವನಲ್ಲಿ
ಮೇದಿನಿ ಸುತೆಯಳ ಸೇವಿಸಿ ಬಹಳ
ಶ್ರೀಧರನನ್ನೇ ವರಿಸಲು ಬಯಸೆ
ಮೋದದಲಾಗಲಿಯಂದಳು ಸೀತೆ ೨೦
ಶಕ್ರನು ಶಿಖಿಸಹ ಇದ್ದಹಾಗೆ
ಲೋಕಕೆ ತೋರಲು ಸೀತೆಯ ರಾಮ
ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ
ತಕ್ಕಣ ಬಂದರು ಸೀತೆಯರಿಬ್ಬರು
ಅಕ್ಕರೆಯಿಂದಲಿ ನುಡಿಯುತ ಕಥೆಯು
ಸಕ್ಕದಿ ನಿಂತಿಹ ಈಕೆಯ ನೀನು
ಈಕ್ಷಿಸಿ ಪಿಡಿಕೈಯೆನ್ನಲು ಸೀತೆ
ರಕ್ಕಸ ವೈರಿಯು ಮಡದಿಗೆ ನುಡಿದ ೨೧
ಒಂದೇ ಬಾಣವು ಒಂದೇ ವಚನವು
ಒಂದೇ ನಡತೆಯು ಒಬ್ಬಳುಮಡದಿ
ಇಂದೆನಗೆಂಬುದು ತಿಳಿಯದೆ ನಿನಗೆ
ಛಂದದಿ ಕಲಿಯಲಿ ನಡಿಸುವೆ ಬಯಕೆ
ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ
ಇಂದಿನ ಯುಗದಲಿಯನ್ನಲು ರಾಮ
ವಂದಿಸಿ ನಡೆದರು ಎಲ್ಲರು ಆಗ
ಹಿಂದಿನ ವರತೆರ ಬಂದಿಹಳೀಗ ೨೨
ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ
ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ
ಭಾಷೆಯ ಪಡದಿರೆ ಸವತಿಯ ಪಟ್ಟಕೆ
ಘಾಸಿಯ ನೀಡುತ ರಾವಣ ಬಂದು
ಆಶಿಸಿ ಸಂಗವ ದುಡುಕುತ ನುಡಿಯೆ
ರೋಷದಿ ಶಾಪವ ನೀಡಿದಳೀಕೆ
ನಾಶಕೆ ಕಾರಣಳಾಗುವೆ ನಾನೆ
ಭ್ರಷ್ಟನೆಯೆನ್ನುತ ಶಿಖಿ ಸೇರಿದಳು ೨೩
ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ
ಲಕ್ಷಣ ನಿಭಿಡಿತಳಾಗಿಹ ಕನ್ಯೆ
ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ
ಪಂಕಜ ನೇತ್ರೆಯು ಪಂಕಜವದನೆಯು
ಪಂಕಜ ಗಂಧಿ ಭುಜಂಗ ಸುವೇಣಿ
ಶಂಕರ ನಗೆನುಡಿ ಗುರುಲಾವಣ್ಯ
ಶಂಖ ಸುಪದ್ಮಾರೇಖೆಗಳಿಂದ
ಲಂಕೃತ ಅಂಗೈ ಪಾದಗಳ್ಹಾಗೆ ೨೪
ಕಾಮನ ಬಿಲ್ಲನು ಹಳಿಯುವ ಹುಬ್ಬು
ಸೋಮನ ಮೀರಿಪ ಯುಗಯುಗ ಕಾಂತಿ
ಸಾಮಜಗಮನೆ ರಂಭೋರುಗಳು
ಕೋಮಲ ಚಂಪಕ ನಾಶಿಕ ತುಟಿಗಳು
ಕಾಮದ ಪೀವರ ಕುಚಯುಗಹಾಗೆ ಸು
ನೇಮದಿ ಬೆಳದಿಹ ಪಲ್ಗಳ ರಾಜಿ
ವಾಮನಿತಂಬಜಘನದ್ವಯವ
ಭಾಮೆ ಸಫಾಲದಿ ಮೆರೆದಳು ತಾನು ೨೫
ಈಕೆಯು ಕಮಲೆಯ ತೆರೆದಿಂ ಬೆಳೆದು
ಸಾಕಲು ಕರೆದಳು ಕನಕಸುವೃಷ್ಟಿ
ಕಾಕನು ಕಾಣದೆ ರಾಜನು ಮೆರೆದ
ನಾಕವೆ ಎನಿಸಿತು ರಾಜನಮನೆಯು
ಜೋಕೆಯಲೊಂದಿನ ಸಖಿಯರ ಕೂಡಿ
ಈಕ್ಷಿಸೆ ಪುರವುದ್ಯಾನವ ಕುವರಿ
ಸೌಖ್ಯದಿ ತೆರಳುತೆಯಿರುತಿರುವಲ್ಲಿ
ನಾಕದ ನಾರದ ವದಗಿದನಲ್ಲಿ ೨೬
ಹರಿಕಾರ್ಯಾಂಗನು ಬಂದನು ಎನ್ನುತ
ಗುರು ಸತ್ಕಾರಂಗಳಗೈದು-ಆ
ತುರ ತೋರಲು ತಿಳಿಯೆ ಭವಿಷ್ಯ
ಕರಗಳ ನೋಡುತ ತೂಗುತ ತಲೆಯು
ಸಿರಿತೆರ ಲಕ್ಷಣ ಕಾಣುವೆನಮ್ಮ
ಹರಿಯೇ ಸರಿ ವರಿಸಲ್ ನಿನ್ನ
ಅರಸುತ ಬರುವನು ತಾನೆ ನಿನ್ನ
ಬರಿ ಮಾತಲ್ಲವು ನೋಡೆಂತೆಂದ ೨೭
ಪೇಳುತ ಲೀ ಪರಿ ಹೊರಡಲ್ ಮುನಿಯು ಲಾಲಿಸಿ

ಶ್ರೀ ಮಧ್ವಾಚಾರ್ಯರ ಅವತಾರವನ್ನೂ
೫೭
ಮಧ್ವನುದಿಸಿದನು ಭೂತಳದಲಿ ಪ
ವದ್ದು ದುರ್ಮತ ತಿದ್ಧಿ ಸುಜನರ ಪದ್ಮನಾಭನ ಪಾದಸೇವಿಸೆ ಅ.ಪ
ದೇವ ದುಂದುಭಿಗಳ್À ಮೊಳಗೆ ದೇವಗಣಗಳು
ಕುಣಿದು ಕುಣಿಯೇ
ಗೀರ್ವಾಣಮಾತೆಯು ನಲಿದುನಲಿಯೆ ಪೂರ್ವಜಾತರ
ಖೇದ ಉಕ್ಕಿಹರಿಯೆ
ಸರ್ವಲಕ್ಷಣದಿಂದ ಶೊಭಿಪ ಸರ್ವತೆರದಲಿ ಪೂರ್ಣಕಾಯದಿ
ಸರ್ವಜೀವರ ನಾಥನಾಯಕ ಸರ್ವರೀಶನ ಆಜ್ಞೆಧರಿಸುತ ೧
ವಾಸುದೇವನಲ್ಲೆ ರತನು ವಾಸುದೇವನ ತೋರಿ ಪೊರೆವಾ
ದೋಷವಿಲ್ಲದ ಮಹಾಮಹಿಮಾ ನಾಶವಿಲ್ಲದ ಜ್ಞಾನಸ್ವರೂಪಾ
ತೋಷಬೀರುತ ಮಧ್ಯಗೇಹಗೆ ವಾಸುದೇವ ಸುನಾಮಗೊಳ್ಳುತ
ನಾಶಮಾಡುತ ದೋಷಜ್ಞಾನವ ಭಾಸಬೀರಲು ವೇದರಾಶಿಯ ೨
ವನಜಜಾಂಡವ ಪೊತ್ತಿಹಧೀರ ವನಜನಾಭವ ಮುಖ್ಯದೂತ
ಅನಿಲ ದೇವನ ತೃತೀಯ ರೂಪ ವನಜಸಂಭವ ಪದಕೆ ಬರುವ
ಅನಘ ಜಯಮುನಿ ವಾಯು ಹೃದಯದಿ ಕುಣಿವ
“ಶ್ರೀಕೃಷ್ಣವಿಠಲ”
ದಯದೊಳ್ ಮಣಿವೆ ಸುಜನರ ಬಂಧನೀಗಿಸಿ
ದಣಿವು ಕಾಣದೆ ವೇದವತಿಯಲಿ ೩

ಇದು ಶ್ರೀ ಮಧ್ವಾಚಾರ್ಯರ ಸ್ತೊತ್ರ
೫೮
ಮಧ್ವರಾಯರ ಶುದ್ಧಸಿದ್ಧಾಂತ ಪದ್ಧತಿಯಲಿ
ಇದ್ದ ಮನುಜಗೆ ಕರಸಿದ್ಧವೈಯ್ಯಾ ಮುಕುತೀ ಪ
ಬಿದ್ದು ಪೋಗುವುದಘ ವೃಂದಗಳೆಲ್ಲವು
ಶುದ್ಧಜ್ಞಾನದಿ ಸತ್ಯ ಉದ್ಭರಿಪ ಹರಿ ವೇದಸಿದ್ಧವಿದುಕಾಣೋ ಅ.ಪ.
ತ್ರೇತೆಲಿ ಇವರು ವಾತಸುತನು ಎನಿಸಿ
ಖ್ಯಾತಿಯಿಂದಲಿಲಂಕೆ ಸುಟ್ಟು
ಪ್ರೀತಿಲಿ ರಾಮನ ಭಜಿಸಿದರೋ
ವ್ರಾತಖಳಕುಲ ಘಾತಿ ಮಾಡಿಸಿ, ವೀತಿಹೋತ್ರಗೆ ತುತ್ತು ನೀಡುತ
ಪ್ರೀತಿಯಿಂದಲಿ ಸೇವೆಮಾಡಲು
ನಾಥರಾಮನ ವರದಿ ಮುಂದಿನ
ಧಾತನಾಗಿ ಬರುವ ನಮ್ಮ ೧
ದ್ವಾಪರದಲಿವರು ಪಾಪಿ ದುರ್ಯೋಧನನ
ಭೂಪನಂದದಿ ಅಳಿಸಿ ಶ್ರೀಪತಿಸೇವೆನಡಿಸಿದರೋ
ಶ್ಯಾಮಸುಂದರ ಕೃಷ್ಣರಾಯನ ನೇಮದಿಂದಲಿನಾಮ ಪಠಿಸುತ
ತಾಮಸಾರನು ಯಮಗೆ ಕಳಿಸಿ ಕಾಮವಿಲ್ಲದೆ ಯಜ್ಞವನಡೆಸಿದ
ಭಾಮೆ ದ್ರೌಪದಿ ಪ್ರೇಮ ಪತಿಯಾದ೨
ಕಲಿಯುಗ ಕಳ್ಳರು ಸಲ್ಲದರ್ಥಗಳನ್ನು
ನಿಲ್ಲದೆ ನಿಗಮಕ್ಕೆ ಮಾಡಲು ಎಲ್ಲ ಸುರರು ಮೊರೆಯಿಡಲು
ವಲ್ಲಭನು ಶ್ರೀನಲ್ಲ ನಲ್ಲದೆ ಇಲ್ಲ ಜಗದೊಳು ಎಂದು ಸ್ಥಾಪಿಸಿ
ಕ್ಷುಲ್ಲಕರ ಪಿಡಿದು ಹಲ್ಲು ಮುರಿಯುತ
ಎಲ್ಲವೇದದ ಎಲ್ಲನಾದವು
ನಲ್ಲ ಹರಿ ಯಂತೆಂದು ತೋರಿದ ೩
ಜೀವೇಶ ಬೇಧವು ಪಂಚಬೇಧವು ಸುಳ್ಳು ತಾವೆ ನಾಥರು ಜಗಕೆ
ತಾರತಮ್ಯವು ಠಕ್ಕೂ ಶಿವನೆ ಸರ್ವೋತ್ತಮ ಬ್ರಹ್ಮನಿರ್ಗುಣನು
ಈ ವಿಧವಾದವ ವೇದವ್ಯಾಸರ ಕಂಡು ಬದರಿಲಿ
ಮುದದಿ ಸಾಧಿಸಿ ಸೂತ್ರ ಭಾಷ್ಯವ ಮಾಧವನೆ ಜಗದಾದಿಕಾರಣ
ನೆಂದರುಹಿ ಮಹದಾನಂದ ಶಾಸ್ತ್ರವ ನಿಂದು
ಬೋಧಿಸಿ ಮೋದ ನೀಡಿದ ೪
ಮಧ್ವರಾಯರವಾಣಿ ಶುದ್ಧವೇದದಸಾರ
ವೇದವ್ಯಾಸರ ಮತವು ಇದುಸಿದ್ಧ ಹರಿ ಆಣೆ ಕೇಳಿ
ಗದ್ದರಾಗದೆ ಬಿದ್ದು ಇವರಡಿ ತಿದ್ದಿ ಮನವನು ಒದ್ದುದುರ್ಮತ
ಪದ್ಮನಾಭನ ಪಾದಧ್ಯಾನದಿ ಅದ್ದಿ ಚಿತ್ತವ
ಸಿದ್ಧಮಾಡಿರೋ ಮುಕ್ತಿಪಥವ ೫
ಪರಿಸರನೀತನು ಪರಮಾಪ್ತನುಹರಿಗೆ ಗುರುವೊ ಜಗಕೆಲ್ಲ
ಬರುವ ಬ್ರಹ್ಮನು ಕಾಣೋ
ಸರಿಯು ಇಲ್ಲವು ಯಾರು ಈತಗೆ ದೂರ
ಓಡಿಸುಮಾರಿಮತಗಳ
ಈರದೇವನ ಸಾರಿಸಾರೆಲೊ ದೂರ
ಇಲ್ಲವೊ ಹರಿಯ ಧಾಮವು ೬
ಮೂರುಹತ್ತು ಎರಡು ಗುರುಲಕ್ಷಣ ಕಾಯರು
ನಿರುತ ಹಂಸೋಪಾಸನೆ ಮೂರುವಿಧದಲ್ಲಿ ಮಾಳ್ವರು
ಭಾರತೀಶನ ಸಾರಗುಣಗಳ ಸೂರಿಗಳಿಗಳವಲ್ಲ ಅರಿಯಲು
ನೀರಜಾಕ್ಷನನಿರುತ ಕಾಂಬುವ ಸಮೀರ ದೇವನ
ಚರಣಪಿಡಿಯಿರೋ ೭
ದಶದಿಶೆಗಳ ವಳಗೆ ಬಿಸಜನಾಭನ ಕೀರ್ತಿ
ಎಸೆದು ಹಿಗ್ಗುವ ನಮ್ಮ ಅಸಮ ಮಧ್ವರನೋಡೋ
ವ್ಯಾಸದೇವರ ಆಶೆಯಿಂದಲಿ ದೋಷಜ್ಞಾನವ
ನಾಶಮಾಡುತ
ತೋಷ ಬೀರುವ ಗ್ರಂಥರಾಶಿಯ ಶಿಷ್ಯರಿಗೆ
ಮಂದಿಟ್ಟು ಹರಿಯ
ಭಾಸಕರು ಎಂದೆನಿಸಿದ ೮
ಅನಿಲದೇವನ ನಾಮ ಕನಸಿಲಾದರು ಒಮ್ಮೆ
ನೆನೆದವನೇ ಧನ್ಯ ಮಾನ್ಯನೋ ಜಗದೊಳಗೆ
ನಾನು ನಾನೆಂಬೋ ಹೀನಮತ ಸುಡು ಸಾನುರಾಗದಿ
ದೀನನೆನಿಸುತಲಿ
ದಾನಿ ಜಯಮುನಿ ಅನಿಲನಂತರ ಶ್ರೀನಿವಾಸ ಕೃಷ್ಣವಿಠಲಗೆ
ಶರಣು, ಶರಣು, ಶರಣೆಂದು ೯

ತಮ್ಮಲ್ಲಿ ಅನೇಕ ದೋಷಗಳಿದ್ದಾಗ್ಯೂ
೩೬
ಮನಸಿನ ಮಲಿನವ ಮನಸೀಜನೈಯನೆ
ಹನನ ವೈದಿಸದಿರೆ ಬದುಕುವ ದೆಂತೊ ಪ
ವನಜ ಸಂಭವ ಜನಕ ತನುಮನ ಪ್ರೇರಕ
ಬಿನುಗು ಮಾನವ ನಾನು ಶರಣುಹೊಕ್ಕೆನೈಯ ಅ.ಪ
ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ
ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ
ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ
ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ
ದೀನಜನಮಂದಾರ ಕರುಣೋದಾರ ಮಹಿಮನೆ
ಮಾನಮತ್ತವಮಾನ ನಿನ್ನಾಧೀನ ವಲ್ಲವೆ
ತನುಮನೇಂದ್ರಿಯ ನಾಥ ನಾಯಕ
ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ ೧
ನೋಡಬಾರದ ನೋಟ ನೋಡಿ ಆಯಿತು ಜೀಯ
ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ
ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ
ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು
ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು
ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ
ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ
ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು ೨
ಮುಂದು ಮಾಡುತ ಹಿಂದೆ
ಹಿಂದು ಮಾಳ್ವರೆ ಇಂದು ಕಂದನಲ್ಲವೆ ನಾನು
ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ
ಎಂದಿಗಾದರು ಸಾಧ್ಯವಾಹುದೆ ನನಗೆ
ತಂದೆ ಜಯಮುನಿವಾಯು ಹೃದಯಗ
ನಂದಮಯ ಶ್ರೀ ಕೃಷ್ಣವಿಠಲ
ಬಂಧುನೀನೇ ಸರ್ವಕಾಲದಿ ಎಂದು ಸಿದ್ಧವು ನಿಖಿಳ ವಿಶ್ವಕೆ
ಕುಂದುಮಯ ಅಭಿಮಾನ ಮನಸಿಗೆ
ತಂದಿಡದೆಯೆಂದೆಂದು ಸಲಹುತ
ಕುಂದು ಗೈದವನೆಂದು ನುಡಿಯದೆ
ನಿಂದು ನಡಿಸೈ ಮುಂದಿನಾ ಪಥ ೩

ತಮ್ಮಲ್ಲಿರುವ ದೋಷಗಳನ್ನು ಮನ್ನಿಸಿ
೩೭
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ
ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ.
ಅನುದಿನದಿ ಧನವನಿತೆ _ ಎಂತೆಂಬ ಕಾನನದಿ
ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ
ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ
ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ ೧
ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ
ಹಂಸರೂಪಿಯ ಮರೆತ _ ಸಂಶಯಾತತಜನಕೆ
ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು
ಕಂಸ ಮರ್ಧನ ಶೌರಿ _ ದಾಸನೆನ್ನನು ಮಾಡಿ೨
ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ
ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು
ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ
ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ ೩

ಕಲಿಕಾಲದ ಜನರ ನಡವಳಿಕೆಗಳನ್ನು
೩೮
ಮಲಗಿದನು ಶ್ರೀರಂಗ ಶ್ರೀರಂಗ ಪ
ಕಲಿಜನರ ನೋಡುತಲಿ ಅಳುಕಿದಾಮನದಿಂದ ಅ.ಪ
ಜೀವ ಜಗಬಿಂಬನಿಗೆ ಯಾವುದೈ ಆಯಾಸ
ಕಾವ ಸಚರಾಚರವ ಶ್ರೀವರನಿಗುಂಟೆ ನಿದ್ರೇ
ಸಾರ್ವಭೌಮನಿಗೆ ಕ್ಷುದ್ರಜೀವ ಸಮರೆಂತೆಂಬ
ಕೋವಿದಾಭಾಸಗಣ ಸೇವೆಕೊಳ್ಳನು ಎಂದು ೧
ವೈದೀಕರೆನ್ನುತಲಿ ವೇದಮರ್ಮವ ತಿರುಚಿ
ಬೌದ್ಧಮತವನೆ ಮತ್ತೆ ಬೊಧಿಪರೆ ಈ ಜನರು
ಸಾಧು ಸಮ್ಮತ ಮಧ್ವವಾದ ನೋಡದೆ ಬರಿದೆ
ಸಾಧು ವೇಷದಿ ತಿರಿಪ ಗರ್ದಭರ ಕಂಡಂಜಿ ೨
ನಾಮಜಪವೇನಿಲ್ಲ ನೇಮ ನಿಷ್ಠೆಗಳಿಲ್ಲ
ನಾಮ ಹಾಕುವ ದೊಡ್ಡ ನೇಮವಂದೇಯಿಹುದೆ
ಹೇಮಗೋಸುಗ ತತ್ವ ಹೋಮಮಾಡುವ ಎಲ್ಲ
ಕಾಮ ಕಾಮಿನಿ ಜನರ ವಾಮಗುಣಗಣನೆನೆದು ೩
ಅನ್ನದೇವನ ತೊರೆದು ಅನ್ನಕೊಂಬರೆ ಕ್ರಯಕೆ
ಅನ್ಯರೆನ್ನದೆ ಹರಿಗೆ ಇನ್ನು ಘಳಿಪರೆ ನಿರಯ
ಹುಣ್ಣಂತಮವಿಪರೀತ ಕಣ್ಣಿಂದ ನೊಡದವ
ಧನ್ಯಧನ್ಯನು ಎಂದು ಕಣ್ಣುಗಳ ಮುಚ್ಚುತಲಿ ೪
ಶ್ರೀಲೊಲ ಮಲಗಿದಡೆ ಏಳುವುದು ಜಗವೆಂತು
ವ್ಯಾಳಗುರುಹೃಸ್ಥ “ಶ್ರೀ ಕೃಷ್ನವಿಠಲ”ನೆ
ತಾಳಿ ಕೃಪೆ ಹೃದಯದಲಿ ಶೀಲರೂಪವ ತೋರೊ
ಕಾಲನಿಗೆ ನೀ ಕಾಲ ವಾಲಗವ ಕೈಕೊಂಡು ೫

ಇದು ಶ್ರೀ ಮಧ್ವಾಚಾರ್ಯರ ಸ್ತೋತ್ರ
*
ವಾದೀಗಳಾಗೆದ್ದು ಸಿದ್ಧಾಂತ ಸ್ಥಾಪಿಸಿ ಮುದ್ದು ಕೃಷನ ತಂದ
ವೇದ ವ್ಯಾಸರ ಪ್ರಿಯ ಮಧ್ವರಾಯ ಮಧ್ವರಾಯ ಪ
ಬಿದ್ದೆ ನಿಮ್ಮಯ ಚಲುವ ಪಾದಪದ್ಮಂಗಳಿಗೆ ವೇದ
ವಿದ್ಯೆಯ ಕೋರಿ ಉದ್ದಾರ ಮಾಡೈಯ
ಮಧ್ವರಾಯ ಮಧ್ವರಾಯ ಅ.ಪ
ಅಂದು ಹನುಮನಾಗಿ ಸಿಂಧುವಿನ ದಾಟಿ
ತಂದು ಚೂಡಾಮಣಿ
ನಿಂದೆ ರಾಮನ ಮುಂದೆ ಮಧ್ವರಾಯ ಮಧ್ವರಾಯ
ಮಂದ ಮತಿಯು ನಾನು ವಂದೀಸುವೆ ನಿನಗೆ
ಕಂದನು ಎಂತೆಂದು
ಮುಂದೆ ಪಾಲಿಸ ಬೇಕು ಮಧ್ವರಾಯ ಮಧ್ವರಾಯ ೧
ದ್ವಾಪರ ಯುಗದಲ್ಲಿ ದ್ರೌಪದಿ ಗಂಡನೆನಿಸಿ ಪಾಪಿಗಳಾಕೊಂದು
ಶ್ರೀ ಪತಿ ಸೇವೆ ಮಾಡ್ದೆ ಮಧ್ವರಾಯ ಮಧ್ವರಾಯ
ಕೋಪವು ಮಾಡದೆ ತಾಪಗಳೋಡಿಸಿ ಗೋಪಾಲ ಕೃಷ್ಣನ
ಕೃಪೆಯ ಕೊಡಿಸೈಯ ಮಧ್ವರಾಯ ಮಧ್ವರಾಯ ೨
ದುರುಳ ಮಾಯಿಗಳೆಲ್ಲ ಹರಿಯ ದೂರುತ್ತಿರಲು ಸುರರ
ಪ್ರಾರ್ಥನೆಯಂತೆ ಧರೆಯೊಳು ನೀ ಬಂದೆ
ಮಧ್ವರಾಯ ಮಧ್ವರಾಯ
ಕರೆಕರೆ ಭವ ಬಿಡಿಸಿ ವೀರ ವೈಷ್ಣವ ನೆನಿಸಿ ಸಾರಿ ಸಾರಿಸ ಬೇಕು
ಹರಿಯ ನಾಮವನ್ನು ಮಧ್ವರಾಯ ಮಧ್ವರಾಯ ೩
ಲೋಕದಿ ಸಜ್ಜನರ ಸಾಕಬೇಕು ಎಂದು ಬೇಕೆಂದು ಯತಿಯಾದೆ
ಶ್ರೀಕಾಂತ ಪಟ್ಟಪುತ್ರ ಮಧ್ವರಾಯ ಮಧ್ವರಾಯ
ಲೋಕನಾಯಕ ಹರಿಯ ಏಕಾಂತದಲಿ ತೋರಿ
ನೂಕೋದುರಿತ ರಾಶಿ
ಲೋಕಕ್ಕೆಲ್ಲಾ ಗುರು ಮಧ್ವರಾಯ ಮಧ್ವರಾಯ ೪
ಹರಿಯು ಸರ್ವೋತ್ತಮ ಸಿರಿಯು ಆತನರಾಣಿ
ಸುರರೆಲ್ಲ ಪರಿವಾರ
ತಾರತಮ್ಯವ ತೋರ್ದೆ ಮಧ್ವರಾಯ ಮಧ್ವರಾಯ
ದೂರ ಓಡಿಸಿ ಕಲಿಯ ಕರೆದು ಪೊರೆಯ ಬೇಕು
ಸೂರಿಗಳೊಡೆಯನೆ
ಭಾರತಿ ಪ್ರಾಣಕಾಂತ ಮಧ್ವರಾಯ ಮಧ್ವರಾಯ೫
ದುರುಳರ ದುರ್ಭಾಷ್ಯ ಜರಿದು ಹಾಕಿದೆ
ಮತ್ತೆ ಹರಿಯಮತದಂತೆ
ಬರೆದೆಯೊ ಹೊಸ ಭಾಷ್ಯ ಮಧ್ವರಾಯ ಮಧ್ವರಾಯ
ಮೂರು ರೂಪವ ತಾಳಿ ಮೂರು ಲೋಕವ
ಪೊರೆದೆ ಹರಿಯಪ್ರಧಮಾಂಗ
ವೀರ ಮಾರುತಿ ದೇವ ಮಧ್ವರಾಯ ಮಧ್ವರಾಯ ೬
ಬೃಹತೀಗೆ ನೀ ಪ್ರತಿಮ ಬಹುರೂಪ ಧಾರಕ ವಹಿಸೊ ಎಮ್ಮೆಯ
ಭಾರ ಅಹಿ ಭೂಷಣ ಪ್ರಿಯ ಮಧ್ವರಾಯ ಮಧ್ವರಾಯ
ಬ್ರಹ್ಮಜ್ಞಾನಿ ಹನುಮ ಬ್ರಹ್ಮಪದವಿ ಸಿದ್ಧ
ದಹಿಸೋ ಸೋಹಂ ಜ್ಞಾನ
ಮಹಿಯೊಳು ಅಪ್ರತಿಮ ಮಧ್ವರಾಯ ಮಧ್ವರಾಯ ೭
ಮೂರು ಪಂಗಡರಲ್ಲಿ ಮೂರು ರೀತಿಯ
ಜಪ ಬೇರೆ ಬೇರೆ ಮಾಡಿ
ಮೂರು ಗತಿಯ ತೋರ್ಪೆ ಮಧ್ವರಾಯ ಮಧ್ವರಾಯ
ಮೂರು ಕೋಟಿಯ ರೂಪ ಮೂರಾರಿಗಳ ತಂದೆ
ಭಾರೀಶಕ್ತನು ನೀನು
ಆರು ಸರಿಯು ನಿನಗೆ ಮಧ್ವರಾಯ ಮಧ್ವರಾಯ ೮
ಸಾನಂದ ಗುಣಪೂರ್ಣ ಶ್ರೀನಿವಾಸನು ಎಂದು
ಆನಂದ ಶಾಸ್ತ್ರವ
ಸಾನುರಾಗದಿ ಪೇಳ್ದೆ ಮಧ್ವರಾಯ ಮಧ್ವರಾಯ
ಬಿನಗು ಮಾನವ ನಾನು ಏನು ಬಲ್ಲೆನು ನಿನ್ನ
ಜ್ಞಾನಾದಿಗಳ ಕೊಟ್ಟು
ನೀನಾಗಿ ಕಾಯ ಬೇಕೋ ಮಧ್ವರಾಯ ಮಧ್ವರಾಯ ೯
ಹರಿಯ ಮಂದಿರ ನೀನು ಭಾರಿ ಕೂರ್ಮನು
ಜಗ ಭಾರವ ವಹಿಸಿದೆ
ಮೇರೆ ಗಾಣದ ಸತ್ವ ಮಧ್ವರಾಯ ಮಧ್ವರಾಯ
ಗರಳ ಭುಕುವೆ ಸ್ವಾಮಿ ಶರಣು ಶರಣೆಂಬೆನೂ
ಹರಿಯ ಅರಿವ ಮರ್ಮ
ಕರುಣದಿ ಅರುಹೈಯ್ಯ ಮಧ್ವರಾಯ ಮಧ್ವರಾಯ ೧೦
ಸಾಮ ದೂರನೆ ವಂಶ ಗೋವತ್ಸ ರೂಪಿಯೆ
ಅಮರ ವೃಂದಕ್ಕೆಲ್ಲ
ಹರಿಯ ತೋರಿಸಿ ಕೊಟ್ಟೆ ಮಧ್ವರಾಯ ಮಧ್ವರಾಯ
ನೇಮದಿಂದಲಿ ನೀ ಪಾತರ್ನಾಮಕ ಸಿದ್ದ
ಬೊಮ್ಮದೇವಗು ಬಲವ
ಕೊಟ್ಟನ್ನ ಕೊಳ್ಳುವೆ ಮಧ್ವರಾಯ ಮಧ್ವರಾಯ ೧೧
ಬದರೀಗೆ ನೀ ಪೋಗಿ ವೇದ ವ್ಯಾಸರ ಕಂಡು
ಬಂದು ಮೂವತ್ತೇಳು
ಸುಂದರ ಗ್ರಂಥ ಮಾಡ್ದೆ ಮಧ್ವರಾಯ ಮಧ್ವರಾಯ
ಶುದ್ದ ಸತ್ವಮೂರ್ತಿ ಬದ್ಧನು ನೀನಲ್ಲ ವದ್ದು ಅವಿದ್ಯೆಯ
ತಿದ್ದೊ ಎಮ್ಮೆಯ ಮನ ಮಧ್ವರಾಯ ಮಧ್ವರಾಯ ೧೨
ಸುಖ ತೀರ್ಥ ಮುನಿರಾಯ ಸಖನಾಗಿ ಸಲಹೈಯ
ಅಖಿಳಾಗಮಾವೇತ್ತ
ಸುಖದ ಪ್ರಾರಬ್ಧವೋ ಮಧ್ವರಾಯ ಮಧ್ವರಾಯ
ಅಖಿಳ ಖಳವೈರಿ ಅಖಿಳಾಂಡದೊಳು ವ್ಯಾಪ್ತ
ಸಕಲ ಲಕ್ಷಣವಂತ
ಸಕಲ ತತ್ವರಪತಿ ಮಧ್ವರಾಯ ಮಧ್ವರಾಯ ೧೩
ತತ್ವೇಶ ರೊಳಗೆಲ್ಲ ನಿನ್ನವ್ಯಾಪಾರವು ಉತ್ತಮ ನಿನ್ನಲ್ಲಿ
ಹರಿಯ ವ್ಯಾಪಾರವು ಮಧ್ವರಾಯ ಮಧ್ವರಾಯ
ನಿತ್ಯ ಕೃಷ್ಣನಕಾಂಬ ಸೂತ್ರನಾಮಕದೊರೆ
ಸತ್ತುಹುಟ್ಟುವ ಕಟ್ಟು ಕಿತ್ತುಪಾಲಿಸು ಜಿಯ ಮಧ್ವರಾಯ
ಮಧ್ವರಾಯ ೧೪
ಸತ್ಯಾ ಖ್ಯಾತನೆ ನಮಿಪೆ ಮೂರ್ತ ವಿರುದ್ಧ ದೊರೆ |
ಉತ್ತುಮೋತ್ತುಮ
ವಿಷ್ಣು ನಿನ್ನ ದ್ವಾರವೆ ವಲಿವ ಮಧ್ವರಾಯ ಮಧ್ವರಾಯ
ನಿತ್ಯ ಯಜ್ಞವ ನಡಿಸಿ ಸರ್ವಗಾತ್ರಗಳಲ್ಲಿ |
ನಿತ್ಯ ತೃಪ್ತನಿಗೀವೆ
ನಿಷ್ಕಾಮ ಭಕ್ತಿ ನಿಧಿ ಮಧ್ವರಾಯ ಮಧ್ವರಾಯ೧೫
ಶ್ರೀ ವಿಷ್ಣುತರುವಾಯ ಸಕಲ ಶ್ರುತಿಗಳಿಂದ |
ದಿವಿಜಾನಾಯಕ ನೀನು
ಪ್ರತಿ ಪಾದ್ಯ ಹೌದಯ್ಯಮಧ್ವರಾಯ ಮಧ್ವರಾಯ
ದೇವ ದೇವೆಶನ ಮುಖ್ಯ ಮಂತ್ರಿಯೆ ನಿನ್ನ |
ಸೇವಕರೆನಿಸುವ
ಭಾಗ್ಯವಿತ್ತು ಕಾಯೋ ಮಧ್ವರಾಯ ಮಧ್ವರಾಯ ೧೬
ಯೋಗಿಗಳೊಡಯನೆ ಯೋಗ ಕ್ಷೇಮ ರೂಪಿ |
ನಾಗಾರಿಶಿವ ಗುರುವೆ
ಬೇಗದಿ ಭವ ಬಿಡಿಸು ಮಧ್ವರಾಯ ಮಧ್ವರಾಯ
ಹಗಲು ಮಾನಿಯೆ ದೊರೆ ಅಶನ ಪಿಪಾಸಕ್ಕೆ |
ನೀಗಿಸು ಇವರ ಬಾಧೆ
ಪಂಚ ಕೋಶಗ ಪ್ರಾಣ ಮಧ್ವರಾಯ ಮಧ್ವರಾಯ೧೭
ಈ ಪದ್ಮ ಜಾಂಡವ ನೆರಡು ಭಾಗವ ಮಾಡಿ |
ಶ್ರೀ ಪತಿದಯದಿಂದ
ತಾಳ ಹಾಕುವ ಶಕ್ತ ಮಧ್ವರಾಯ ಮಧ್ವರಾಯ
ಸರ್ಪ ಶಯನ ನೊಲಿಯೆ ಮಾರಾರಿ ವೃಂದಕು |
ನೀಪಾಲಿಸಿದ ರುಂಟು
ಏನೆಂಬೆ ನಿಮ್ಮ ಮಹಿಮೆ ಮಧ್ವರಾಯ ಮಧ್ವರಾಯ೧೮
ಭಾನುಸ್ಥ ಪ್ರಭು ನೀನು ಆಧ್ಯಾತ್ಮಗತನಾಗಿ | ಸಾನುರಾಗದಿ ಜಗ
ಜೇಷ್ಟೆಯ ನಡಿಸುವೆ ಮಧ್ವರಾಯ ಮಧ್ವರಾಯ
ಶ್ರೀನಿವಾಸನ ಪೂರ್ಣ ಕೃಪೆಗೆ ನೀ ಪಾತ್ರನು | ಪೂರ್ಣ ಭೋದ
ಗುರುವೆ ದೀನರೆಮ್ಮನು ಪಿಡಿ ಮಧ್ವರಾಯ ಮಧ್ವರಾಯ೧೯
ಅಣವು ಮಹದ್ ಘನ ಪೂರ್ಣ ಪ್ರಜ್ಞನು ನೀನು | ಅನ್ನಜೀವರು
ನಿನಗೆ ಅನ್ನ ಶ್ರೀಶಗೆ ನೀನು ಮಧ್ವರಾಯ ಮಧ್ವರಾಯ
ನಿನ್ನ ರೂಪಗಳಲ್ಲಿ ನ್ಯೂನವಿಲ್ಲವು ಗುಣದಿ | ಮಣಿಸದೆ ಚಿತ್ತದಲ್ಲಿ
ಉಣಿಸೋ ಹರಿ ಕೀರ್ತನೆ ಮಧ್ವರಾಯ ಮಧ್ವರಾಯ ೨೦
ಭೇದಬೊಧೆಯ ನಿತ್ತು ಉದ್ದಾರ ಮಾಡಿದೆ | ವಾದಿ ಭೀಕರಯತಿ
ಶ್ರೆದ್ಧೆ ಮನೋಹರ ಮಧ್ವರಾಯ ಮಧ್ವರಾಯ
ಮುದ್ದು ಕೃಷ್ಣನ ತಂದು ತಿದ್ದಿ ಪದ್ದತಿಗಳ | ಶುದ್ಧವೈಷ್ಣವರಿಗೆಲ್ಲ
ವೃದ್ಧಿ ಮಾಡಿದೆ ಭಕ್ತಿ ಮಧ್ವರಾಯ ಮಧ್ವರಾಯ ೨೧
ಗುರು ಪ್ರಾಣ ನಾಥನೆ ಹರಿಯ ಮನದಂತೆ | ಪರಿಪರಿಲೀಲೆಯ
ನಿರುತ ತೋರುತಲಿಪ್ಪೆ ಮಧ್ವರಾಯ ಮಧ್ವರಾಯ
ಭರತ ಪ್ರಭುವೆ ನಿನ್ನ ಚರಣವ ಸಾರಿದೆ | ಗಾರು ಸಂಸಾರದಿ
ದಾರಿ ತೋರಲಿ ಬೇಕು ಮಧ್ವರಾಯ ಮಧ್ವರಾಯ ೨೨
ಜಯ ಜಯ ಜಯ ಹನುಮ ಜಯ ಜಯ ಜಯ ಭಿಮ
ಜಯ ಜಯ ಜಯ ಮಧ್ವ ಜಯ ಜಯ
ಮುಖ್ಯಪ್ರಾಣ ಮರಾಮರಾ
ಜಯ ಜಯತೀರ್ಥ ವ್ಯಂದ್ಯನೆ ಜಯ ಕೃಷ್ಣವಿಠಲನ
ಜಯ ಜಯ ಪೊಗಳುವೆ ಜಯ ನೀಡಿ ಸಲಹೊ
ಮಧ್ವರಾಯ ಮಧ್ವರಾಯ ೨೩

ಅಜ್ಞಾನದಿಂದ ಕೃಷ್ಣನನ್ನು ದೇವರೆಂದು
೩೯
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ
ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ
ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ.
ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ
ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ
ಬೆಟ್ಟವನೆತ್ತುತ ವೃಷ್ಟಿಯ ತಡೆದನೆ
ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ
ಇಷ್ಟಾದರುನಾವು ತಿಳಿಯದೇ
ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ
ಪಟ್ಟೆ ಪೀತಾಂಚರ ಕದ್ದವನೆಂದೇವೇ
ಪುಟ್ಟವನಿವ ಗೋಗೋಷ್ಟಿಯ ಕಾಯುವ
ಇಟ್ಟನು ಕಣ್ಣನು ನಮ್ಮಲೆಂದೇವೇ
ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ-
ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ-
ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ-
ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ ೧
ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ
ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ
ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು
ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ
ಬಾಲಿಶರಾಗುತ ತಿಳಿಯದೆ ಕಳ್ಳನು ಪಾಲ್ಬೆಣ್ಣೆಯ
ಮೆದ್ದನು ಎಂದೇವೇ
ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ
ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ
ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ
ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ-
ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ
ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ
ಸ್ವರತ ರಮಾಧವ ಕೃಷ್ಣನು ಎನ್ನದೇ ೨
ತಿಂಗಳ ಬೆಳಕಲಿ ರಂಗನು ಬಂದಾನೇ
ಅಂಗಜತಾಪವ ಹರಿಸುವೆನೆಂದಾನೆ
ಕಂಗಳಿಗ್ಹಬ್ಬವ ನೀಡುತ ಪೊರೆದಾನೇ
ಹಿಂಗದೆ ತನುಮನ ಎಲ್ಲವ ಸೆಳೆದಾನೇ
ಮಂಗಳಕಾಯನು ನೀಡಲು ನಮಗಾ
ಲಿಂಗನ ಸುಖವನು ಬಹುಮುಡಿ ಆದಾನೇ
ಅಂಗವ ಮರೆಸುತ ಮಹದಾನಂದ ತ-
ರಂಗದಿ ಒಯ್ಯುತ ಚೆಲುವನು ಕೂಡಿದನೇ
ಅಂಗನೆ ಬುದ್ಧಿಲಿ ಇವನನು ತಿಳಿಯದೇ
ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ
ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ
ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ
ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ
ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ
ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ
ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು
ಭಾಗವತಗ್ಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ ೩

ಶ್ರೀ ರಾಘವೇಂದ್ರ ಸ್ವಾಮಿಗಳನ್ನು
೭೧
ಯಾತಕೆ ಮರೆತೆನ್ನ ಯತಿಕುಲ ತಿಲಕನೆ
ಪ್ರೀತಿಯ ಬಯಸುತ ಬಂದೆ ಪ
ವಾತಸುತಗತಿಪ್ರಿಯ ದೂತನೆ ನಾಥನೀನೆಂತೆಂದು ನಂಬಿದೆ
ವಾತಪಿತನಡಿ ಮತಿಯ ಪ್ರೇರಿಸೋ
ಖ್ಯಾತಗುರು ಶ್ರೀ ರಾಘವೇಂದ್ರನೆ ಅ.ಪ.
ದೇಶದೇಶದಿ ಬರುವ ದಾಸಜನರÀಘ
ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ
ಶೇಷಶಯನನ ದೋಷ ಜ್ಞಾನ ವಿಶೇಷದಿಂದಲಿ ನ್ಯಾಸಮಾಡಿದೆ
ದಾಸನೆನ್ನಯ ದೋಷ ಕಳೆಯುತ ಬೀಸು ದೃಷ್ಟಿಯ
ಭೂಸುರೋತ್ತಮ ೧
ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ
ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ
ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ
ನಲ್ಲ ಯತಿವರ ಕಾಲಿಗೆರಗುವೆ ಶೀಲಭಕುತಿಯ ಪಾಲಿಸೀಗಲೆ ೨
ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ
ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ
ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ
ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ ೩
ದಾತ ಈತನೆಂಬ ಖ್ಯಾತಿ ಬಿರುದು ನಿನಗೆ
ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ
ನಾಥ ಜಯಮುನಿ ಪ್ರೀತಿಯ ಪಡೆಯುತ ಗೀತೆ
ಬೋಧೆಯ ನೀತಿ ಪೇಳಿದೆ
ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ೪
ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ
ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ
ಚಾರು ಮಂಗಳಚರಿತ ನರಹರಿ ಭಾರಿಸೇವಿಪ ಸೂರಿ ಶೇಖರ
ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ ೫
ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ
ನೂಕಿ ದುರಿತರಾಶಿ ಸಾಕುಹರಿಯ ತೋರಿ
ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ
ಏಕಮನಸಿಲಿ ಧ್ಯಾನಿಪ ಧೊರೆ ನಾಕ ಋಷಿಗತಿಪ್ರಿಯ ಶಿಷ್ಯನೆ ೬
ಪಾಹಿ ಜ್ಞಾನದ ಖಣಿಯೆ ಪಾಹಿ ಭಕ್ತರ ನಿಧಿಯೆ
ಪಾಹಿ ಮತಿಮತಸ್ಥಂಭ ಪಾಹಿ ಶ್ರೀ ಹರಿಯ ದೂತ
ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ
ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ ೭

ಈ ಬಕುಕಿನಲ್ಲಿ ಅನೇಕ ಕೊರತೆಗಳು
೯೯
ಯಾತರ ಸುಖವಯ್ಯಾ ಇದು ಇನ್ಯಾತರ ಸುಖವಯ್ಯಾ ಪ
ಶ್ರೀ ತರುಣೀಶನ ಮರೆತು ಸಂಸಾರದಿ ಬಾಳುವುದೆಂತೆನೆ ಅ.ಪ.
ಹಣ ಉಳ್ಳ ಮನುಜಂಗೆ ಗುಣವುಳ್ಳ ಸತಿಯಿಲ್ಲ
ಗುಣವುಳ್ಳ ಸತಿಯಿರೆ ಗುಣಡೊಂಕುಪತಿಯು
ಅನುಕೂಲವಿರೆಎರಡು ತನಯರೊಬ್ಬರು ಇರರು
ಗುಣಿಸಿ ನೋಡಲು ಎಲ್ಲು ನ್ಯೂನತೆ ಸರಿಯೈ ೧
ವಿತ್ತವಿದ್ದರೆ ಹಿತರು ಬಂಧು ಬಳಗವೆಲ್ಲ
ವಿತ್ತವಿಲ್ಲಾದಿರಲು ನಿಂದಿಸಿ ನಗುತಿಹರು
ಬತ್ತಲೆ ಬಂದುದು ಬತ್ತಲೆ ಪೋಪುದು
ಮತ್ತೆ ಮಮತೆ ಯಾಕೊ ಮಧ್ಯೆ ಮತ್ತಿದ್ದುದಕೆ ೨
ಸಂತೆಯತೆರಸರಿ ಸತಿಸುತ ಪರಿಜನ
ನಿಂತು ಪೋಪರು ತಮ್ಮಯ ಋಣತೀರೆ
ಅಂತ್ಯವಿಲ್ಲ ಸಂಸಾರದ ಶರಧಿಗೆ
ಸಂತಸಪ್ರದವೆಂಬ ಭ್ರಾಂತಿಯ ನೀಗಯ್ಯ ೩
ಜನನ ಮರಣವೆಂಬ ದುಃಖವೆ ತಾಕಿರೆ
ದಿನದಿನ ಪ್ರತಿದಿನ ರೋಗದ ಕಾಟಗಳು
ಗುಣಿಸಿ ನೋಡಲು ಮತ್ತೆ ಮನಕೆ ನೆಮ್ಮದಿ ಇಲ್ಲ
ಅನಿಲ ಮಂದಿರ ನೊಲಿಸಿ ಗುಣದೂರನಾಗಯ್ಯ ೪
ಕಾಲನೆಡೆಗೆ ಜನ ಬೀಳ್ಪುದು ನೋಡಿಯು
ಬಾಳು ಸ್ಥಿರವೆಂದು ಕೇಳಿಲಿ ಮುಳುಗುವುದೇ
ಬಾಲ ಯೌವ್ವನ ಮತ್ತೆ ಮುಪ್ಪಿಲಿ ಬೀಳುವ
ಸ್ಥೂಲ ಶರೀರವೆ ಗೋಳಿನ ಸೆರೆಮನೆಯೈ೫
ಊಟ ತಿಂಡಿಗೆ ಮೇಲ್ನೋಟದ ಕೀಟಗೆ
ಪಾಟು ಪಡುತ ಕರ್ಮ ಮೂಟೆಯ ಘಳಿಸುವರೇ
ಏಟು ತಿನ್ನದೆ ಭವ ಕಾಟಕ ದಾಟಲು
ಘೋಟಕಾಸ್ಯನ ಪದವಾರಿಜ ಪಿಡಿಯೈಯ್ಯ ೬
ಮಂದನಾಗದೆ ಬಹು ಮುಂದಿನ ಗತಿ ನೋಡು
ವಂದಿಸಿ ಜಯತೀರ್ಥ ವಾಯ್ವಾಂತರ್ಗತ
ಇಂದಿರೆ ಪತಿ ಕೃಷ್ಣವಿಠಲನ ಭಜಿಸಲು
ಕುಂದುಗಳಿಲ್ಲದೆ ಶಾಶ್ವತಾನಂದವು ಕೇಳಯ್ಯ ೭

ತಮ್ಮ ಅವಗುಣಗಳ ಪಟ್ಟಿಯನ್ನೇ
೮೪
ಯಾತರವ ನಾನೈಯ ಇಂದಿರೇಶ ಪ
ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ
ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ
ವಾಸಪಗೆ ಸಮರೆಂದು ದೋಶಿಗಳ ಪೊಗಳೀ
ಕಾಸುಗಳಿಸಲು ದಾಸ ವೇಷ ಹಾಕಿದ ಶೂರ
ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ ೧
ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ
ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ
ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ
ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು ೨
ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ
ದೋಷವಾದವ ಮಾಡಿ ವ್ಯಾಸದಾಸರ ದ್ರೋಹ
ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ
ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು ೩
ಮಾನವರ ಬಹುಮಾನ ಸಾನುರಾಗದಿ ಬಯಸಿ
ನಾನು ಮೋದಿಸುವೆ ಹೀನ ಮತಗಳ ಹುಳುಕು
ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ
ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು೪
ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ
ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ
ಆತ್ಮಸ್ತುತಿ ಪರನಿಂದೆ ನಿತ್ಯ ನೇಮವುಯನಗೆ
ಈತರದ ಹರಿದಾಸ ಮಾತರಿಶ್ವಗೆ ದೂರ ೫
ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ
ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ
ಮಾನಿನೀ ಮನೆ ಸೊಲ್ಲು ಏನು ಬಿಡೆದಿಹೆನಲ್ಲ
ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ೬
ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ
ಯೆಂತು ಪೇಳಲಿ ಜೀಯ ಸಂತ ಜಯಮುನಿ
ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ
ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ೭

ಶ್ರೀಹರಿಯ ದಶಾವತಾರಾದಿ
೪೦
ಯೆಂದು ಪಿಡಿಯುವಿ ಕೈಯ್ಯ
ಇಂದಿರೇಶ ಚಲುವ ಕೃಷ್ಣನೆ ಪ
ಮುಂದೆ ಹೋಗಲು ಬಂಧಮಾಡುತ
ಕುಂದು ಅಳಿಯುತ ತಂದೆ ದಯೆತೊರಿ ಅ.ಪ
ಒಂದು ಅರಿಯದ ಮಂದ ನಾನಯ್ಯ
ಕಂದಿ ಕುಂದಿದೆ ಭವದಿ ಕೇಳಯ್ಯ
ಬಂಧು ಬಳಗವು ಯಾರು ಇಲ್ಲಯ್ಯ
ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ
ಅಂದು ಸಭೆಯೊಳು ಮಂದಗಮನೆಯ
ಒಂದು ನೊಡದೆ ಬಂದು ಸಲಹಿದ
ಸಿಂಧು ಶಯನಾನಂದ ಮೂರುತಿ
ನಂದನಂದನ ಶ್ಯಾಮಸುಂದರ
ಬಂಧು ಸರ್ವರ ಬಂಧಮೋಚಕ
ಮಂದರಾದ್ರಿ ಧರನೆ ಯದುಕುಲ
ಚಂದ್ರ ಶೋಭಾಸಾಂದ್ರ ಕೃಷ್ಣನೆ
ಬಂದು ಚಂದದಿ ಸಲಹಿ ಎನ್ನನು ೧
ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ
ಮೇಲೆ ಯೌವನ ಒಡನೆ ಬಂತಲ್ಲಿ
ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ
ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ
ಕಾಲಕಳೆದೆನು ಪಗಡೆ ಜೂಜಿನಲಿ
ಮಲ್ಲಮರ್ದನ ಮಾತುಲಾಂತಕ
ಚಲ್ವಸೂಕರ ಪುಲ್ಲಲೊಚನ
ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ
ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ
ವೆಲ್ಲಸಲಹುವ ಎಲ್ಲ ವೇದದ ಸಾರ ಶ್ರೀ
ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ
ಚಲ್ವನಾರಿ ವೇಷಧಾರಿಯೆ ಬುದ್ಧ ಕಲ್ಕಿಯೆ
ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ
ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ೨
ಮೂರು ತಾಪವ ಹರಿಪ ಬಗೆಯೇನೋ
ವೈರಿ ಆರರ ಭರದಿ ತರಿ ನೀನೂ
ಮೂರು ಋಣಗಳು ಉಳಿಯೆಗತಿಯೇನು
ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು
ಸಾರಸಜ್ಜನ ಪ್ರಾಪ್ಯ ಶುಭಗುಣ
ಸಾರ ಕರುಣಾ ಪೂರ್ಣವಾರಿಧಿ
ಮಾರಜನಕನೇ ಋಷಭಮಹಿದಾಸ
ತೋರು ಜ್ಞಾನವ ಬಾದರಾಯಣ
ಮೀರಲಾರೆನು ವಿಷಯವಾಸನೆ
ಭಾರತೀಶನ ಒಡೆಯ ಕೃಷ್ಣನೆ
ಭಾರ ನಿನ್ನದು ಎನ್ನ ಪೊರೆವದು
ಶೂರ ಭಾರ್ಗವ ಮತ್ಸ್ಯ ವಾಮನ
ಧೀರ ಧೃವನಾ ಪೊರೆದ ವರದನೆ
ಬೀರಿ ಭಕ್ತಿ ಜ್ಞಾನ ವೈರಾಗ್ಯ ೩
ಎನ್ನ ಯೋಗ್ಯತೆ ನೋಡಿ ಫಲವೇನು
ನಿನ್ನ ಘನತೆ ತೋರಿ ಪೊರೆ ನೀನು
ನಿನ್ನ ದಾಸನ ಮಾಡು ಎನ್ನನ್ನು
ಅನ್ಯಹಾದಿಯ ಕಾಣೆ ನಾ ನಿನ್ನು
ಬೆನ್ನು ಬಿದ್ದೆನು ಇನ್ನೂಮುನ್ನೂ
ಮಾನ್ಯ ಮಾಧವ ವಿಶ್ವ ತೈಜಸ
ಪ್ರಾಜ್ಞತುರಿಯ ಹಂಸ ವಿಷ್ಣುವೇ
ಜ್ಞಾನ ಭೋಧಕ ಸನತ್ಕುಮಾರನೇ
ಮೌನಿ ದತ್ತಾತ್ರೇಯ ಹಯಮುಖ
ದೀನವತ್ಸಲ ಯಜ್ಞ ಧನ್ವಂತ್ರಿ
ಶ್ರೀನಿವಾಸ ರಾಮ ಕಪಿಲನೆ
ಜ್ಞಾನ ನಿಧಿ ಮುನಿ ನಾರಾಯಣನೆ
ನೀನೆ ಅನಿರುದ್ಧಾದಿ ರೂಪನು
ಧ್ಯಾನಗೊಚರ ಶಿಂಶುಮಾರನೆ
ಸಾನುಕೂಲದಿ ನೀನೆ ವಲಿಯುತ
ಊನ ಮಾಡಿಸಿ ಕರ್ಮ ಸಂಚಯ೪
ಆದಪೊದ ಮಾತು ಏಕ್ಕಯ್ಯ
ಮಧ್ವರಾಯರ ಪ್ರೀಯ ಶೃತಿಗೇಯ
ಮೋದದಾಯಕ ಮುಂದೆ ಸಲಹೈಯ್ಯ
ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ
ತಿದ್ದಿ ಮನವನು ಕದ್ದು ಅಘವನು
ಒದ್ದು ಲಿಂಗವ ಶುದ್ಧಜ್ಞಾನದ
ಸಾಧು ಜಯಮುನಿ ವಾಯುವಂತರ
ಮಾಧವ ಶ್ರೀ ಕೃಷ್ಣವಿಠಲನೆ
ಪಾದ ಮಧುಪರ ವೃಂದ ಮಧ್ಯದಿ
ವೇದ ಸಮ್ಮತ ಗಾನ ಸುಧೆಯನು
ಶುದ್ಧಭಕ್ತಿ ಜ್ಞಾನದೊಡಗೂಡಿ
ಮೆದ್ದು ಪಾಡುತ ಕುಣಿವ ಭಾಗ್ಯವ
ಮುದ್ದು ಕೃಷ್ಣನೆ ನೀನೆ ಎನಗಿತ್ತು ೫

Leave a Reply

Your email address will not be published. Required fields are marked *