Categories
ರಚನೆಗಳು

ಕೃಷ್ಣವಿಠಲದಾಸರು

ರಂಗನ ಮಹಿಮೆಗಳನ್ನು ಕೊಂಡಾಡಿದ್ದಾರೆ.
೪೧
ರಂಗ ಕರುಣಿಸೊ ಚರಣಾ ಶ್ರೀ ಪ
ರಂಗಗರುಡತುರಂಗಸಿರಿಮನ ತುಂಗಭವಗಜ ಸಿಂಗರಿಪುಕುಲ
ಭಂಗ ಮಹಿಮತರಂಗ ದೇವೋತ್ತುಂಗನಿಜನಿಸ್ಸಂಗ ನರಹರಿ ಅ.ಪ
ದೇವಸಕಲ ಸೃಷ್ಠಿಯಗೈವ ಸುಸ್ವಭಾವ
ದೇವ ತ್ರಿಭುವನ ಜೀವಭಕ್ತರ ಕಾವಶೃತಿತತಿ
ಭಾವ ದೋಷಾಭಾವನಿಜಸುಖ
ವೀವ ಬ್ರಾಹ್ಮಿಯ ಮಾವ ತರಿತರಿ ನೋವ ಪರಿಮರ ೧
ವೇಧ ಸುಜನಕೆ ಬೋಧೆಯಿತ್ತ ಮಹಾನುಭಾವ
ಛೇಧಖಳಜನ ಖೇದ ಸಜ್ಜನ ಮೋದನಿರ್ಗತ
ಭೇದ ಸಿರಿನುತ ಪಾದವ್ಯಾಹೃತಿ
ನಾದಸಿರಿಜಗ ಭೇದ ಸುಖಮಯ ಸಾಧು ಶಿರಶ್ರೀ೨
ಶ್ರೀಶ ನಿಜದಾಸ ಜನರ ಮನ ಉಲ್ಲಾಸಾ
ಶ್ರೀಶ ತರಿತರಿ ಪಾಶ ಕೊಡುಕೊಡು ಲೇಸ ನಿಖಿಳರ
ಭಾಸ ಸಿರಿಮನೆ ವಾಸ ವಿಶ್ವನು
ಪೋಷ ಬ್ರಹ್ಮಸುಕೋಶ ನಿರ್ಗತ ನಾಶ ೩
ಸತ್ಯ ನಿತ್ಯಾನಿತ್ಯ ಜಗರೂಪ ಸ್ವತಂತ್ರ
ಸತ್ಯ ಸತ್ಯನೆ ಸತ್ಯಲಕುಮಿ ಕಳತ್ರ ಪರಮಪ
ವಿತ್ರ ಚಿನ್ಮಯ ಭೃತ್ಯವತ್ಸಲ
ನಿತ್ಯನೂತನ ಸತ್ಯವತಿಸುತ ಚಿತ್ತಮಂದಿರ ೪
ವಿಶ್ವತೈಜಸ ಪ್ರಾಜ್ಞತುರಿಯ ಶರಣು
ಅಶ್ವತ್ಥ ವಿಶ್ವವಿಶ್ವಗ ವಿಷ್ಣುಜಗ ಬಲ
ವಿಶ್ವಪ್ರೇರಕ ಜಿಷ್ಣುಸಾರಥಿ ಕೃಷ್ಣವರಸ್ಥಿತ
“ಕೃಷ್ಣವಿಠಲ” ಶಿಷ್ಟದೋಷಸಹಿಷ್ಣುವಂದಿಪೆ ೫

ಈ ಪದದಲ್ಲೂ ರಂಗನಾಥನ
೪೨
ರಂಗ ರಂಗನಾಥ ಬೇಗ ಬಾರೋ ಪ
ತುಂಗಮಹಿಮ ಬಂದು ಭವಭಂಗ ಮಾಡೋ ಅ.ಪ
ತಂದೆಯೆಂದು ಇಂದು ಬಂದೆ ಕುಂದುಎಲ್ಲಹಿಂದುದೂಡೋ
ಮುಂದುಮಾಡಿ ಛಂದಭಕ್ತಿ ಕಂದನೆಂದು ಕೈಯ ಪಿಡಿಯೋ ೧
ಬಂಧುವಲ್ಲೆ ನೀನೇ ಜಗಕೆ ನಂದಶಯಸ ಬಂಧಮೋಚಕಾ
ಬಂದು ಬಂದು ಭವದಿನೊಂದೆ ಎಂದು
ಕಾವೆ ಪೇಳುಗೋವಿಂದಾ ೨
ಬಿಂಬನೀನು ಹೌದು ಪ್ರತಿಬಿಂಬ ನಾನು ನನ್ನ ವ್ಯಾಪಾರ
ಬಿಂಬ ನಿನ್ನಾಧೀನವಿರಲು
ಅಂಬೋದೇಕೋ ದೋಷಿಯೆಂತೆನ್ನಾ ೩
ಹಂಬಲವ ಬಿಟ್ಟುಸಕಲ ನಂಬಿದೆನೋ ಸ್ವಾಮಿಯೆಂತೆಂದು
ತುಂಬಿಶುಧ್ದ ಜ್ಞಾನ ಭಕುತಿ ಅಂಬುಜಾಕ್ಷಯಿಂಬು ನೀಡೈಯ್ಯಾ೪
ನೀನೇ ಮುಕ್ತಿ ನೀನೆ ಭುಕ್ತಿ ನೀನೇ ಪ್ರಾಣ ನೀನೆಸರ್ವಸ್ವ
ಏನು ಇನ್ನು ಮಾಡಲಾಪೆ ನೀನೆವಲಿದು ಕಾಯಬೇಕೈಯ್ಯ೫
ದೋಷದೂರ ನಾಶರಹಿತ ವಾಸುದೇವ ಪೂರ್ಣ ಸುದ್ಗುಣಾ
ತೋಷಕಾಯ ಶ್ರೀಶನಿನ್ನ ದಾಸನೆಂದು ಒಪ್ಪಿಕೊಳ್ಳಯ್ಯ ೬
ಏಕಾನೇಕರೂಪ ಸಕಲ ಲೋಕ ಸೃಜಿಸಿ ಅಳಿವೆ ಅನೀಕಾ
ಬೇಕು ಎನಿಪೆ ಭಕ್ತರಲ್ಲಿ ಸಾಕಬೇಕು ಶ್ರೀಗೆ ನಾಯಕ ೭
ವೇದ ವೇದ್ಯ ವೇದಾತೀತ ಮೋದ ಪೂರ್ಣ ಬಾದರಾಯಣಾ
ಆದಿಮಧ್ಯ ಅಂತ್ಯದೂರ ಸಾಧುಪ್ರಾಪ್ಯನೇಮ ವರ್ಜಿತಾ ೮
ಶರಣು ಶರಣು ಮಧ್ವಸದನ ಶರಣು ಶರಣು ಬೃಹತಿಪ್ರತಿಪಾದ್ಯ
ಶರಣು ಶರಣು “ಕೃಷ್ಣವಿಠಲ” ಶರಣು ರಂಗ ಕರುಣಾ ಸಾಗರ೯

ಇದು ಶ್ರೀ ಜಗನ್ನಾಥ ದಾಸರ
ಜಗನ್ನಾಥದಾಸರು
೮೦
ರಕ್ಷಿಸೋ-ಗುರುವರ-ರಕ್ಷಿಸೋ ಪ
ರಕ್ಷಿಸೊ ಗುರುವರ ನಂಬಿದೆ ನಿನ್ನ
ಈಕ್ಷಿಸೊ ಕರುಣ ಕಟಾಕ್ಷದಲಿನ್ನ
ಶಿಕ್ಷಿಸು ಮಧ್ವಾಗಮವ ಮುನ್ನ
ಉಕ್ಕಿಸು ಭಕ್ತಿ ವಿರಕ್ತಿ ಚೆನ್ನ | ಆಹ
ಲಕ್ಷ್ಮೀಕಾಂತನ ಅಪರೋಕ್ಷದಲಿ ಕಂಡು ಪ್ರ-
ತ್ಯಕ್ಷ ಔತಣ ಉಂಡ ದಕ್ಷ ಶ್ರೀ ಜಗನಾಥ ವಿಠಲನ ದೂತ ಅ.ಪ.
ನರಸಿಂಹದಾಸರ ಕುವರಾ-ಧರಿಸಿದೆ ಶ್ರೀನಿವಾಸನಪೆಸರ
ವರಕವಿತಾ ಹುಟ್ಟಿನ ಸಾರ-ಮೆರೆಯಿತು ಕೀರ್ತಿ ಅಪಾರ \ಆಹ
ವರದೇಂದ್ರನ್ನ ಅಶುಕವಿತಿಯಲಿಪೊಗಳಿ ವರಶಿಷ್ಯನಾಗುತ
ಮೂರೊಂದು ಶಾಸ್ತ್ರದಿ ಕಡುಹುಲಿ ಎನಿಸಿದೆ ೧
ನ್ಯಾಯಶಾಸ್ತ್ರದಿ ಜಗಜ್ಜಟ್ಟೀ-ವೇದಾಂತರಸಗಳ ಭಟ್ಟಿ
ಮಾಯಾವಶಿರ ಮೆಟ್ಟಿ-ಅಹಂಕಾರ ಶಿರದಲಿಟ್ಟಿ ಆಹ
ಶ್ರೇಷ್ಠವಿಜಯದಾಸರು ಮನೆ ಮುಟ್ಟಿ ಕರೆದರು ನಿನ್ನ ಬಹು
ಕೆಟ್ಟ ಅಹಂಕಾರದಿ ಪೋಗದೆ ಅನಿಷ್ಟವ ಗಳಿಸಿ
ಬಹು ಕಂಗೆಟ್ಟೀ ಬತ ೨
ಹಿರಿಯರ ದ್ರೋಹ ಗೈದುದರಿಂದ-ಕರಗಿ
ಹೋಯಿತು ಕಳೆಮುಖದಿಂದ
ಜರಿದರು ಜನರು ನಿಂದೆಗಳಿಂದ-ಗುರುಕ್ಷಯ
ಕಚ್ಚಿತು ಭರದಿಂದ ಆಹ
ಭರದಿ ಹರಿಯ ಕರುಣ ಜರುಗಿ ಪೋದುದಕಂಡು
ಕೊರಗಿ ಕೊರಗುತ ಕ್ಷೇತ್ರ ತಿರುಗುತ ಕೊನೆಗೆ
ಗುರು ರಾಘವೇಂದ್ರರ ಪುರವ ಸೇರುತ ಬಹಳ
ಸೊರಗಿ ಕಾಯ ದೆರಗಿ ಸೇವೆಯಗೈದೆ ೩
ಕರುಣಾಮಯನು ಸ್ವಪ್ನದಿ ಗುರುವು-
ಗುರು ದ್ರೋಹ ಕಾರಣ ವರುಹಿ
ಸುರಿಸಿ ಆಶೀರ್ವಾದವ ಶಿರದಿ-
ತೆರಳೆಂದ ವಿಜಯದಾಸರ ಬಳಿ ಆಹ
ತೆರೆದು ಕಂಗಳು ಒಡನೆ ತರಿದು ಮದಮಾತ್ಸರ್ಯ
ಚರಣದಿಂದಲೆ ನಾರಿ ಎರಗಿ ದಾಸರ ಕರುಣ
ಕರೆದು ಕುಡಿಯುತ ಶಿಷ್ಯ-
ವರನು ಎನಿಸುತ ಚರಣಸಾರುವ ಬಿಡದೆ ಗೋಪಾಲದಾಸರ ೪
ಕಂಡು ಶಿಷ್ಯಪ್ರಚಂಡ ಗುರುವು-ಉದ್ದಂಡ ಮಹಿಮ
ಸ್ವಗುರುಭಾವವತಿಳಿದು
ಕುಂಡಲಿಗಿವ ಜ್ಞಾನಬೀರಲೆಂದು ಉಂಡು ಸಂತಸ
ತನ್ನಾಯುವನೆ ಇತ್ತ ಆಹ
ಕೊಂಡು ಆಯುರ್ದಾನ ತೊಂಡನೆಂದಡಿಗೆರಗಿ
ಕೊಂಡು ಶ್ರೀಹರಿದಾಸ ಗಂಡುದೀಕ್ಷೆಯ ಒಡನೆ
ತಾಂಡವಾಡುತ ಪೋಗಿ ಪಾಂಡುರಂಗನ ಪುರದಿ
ಮಂಡೆ ಮುಳುಗಿಸೆ ನದಿಲಿ ಕಂಡೆ ಅಂಕಿತ ಶಿರದಿ ೫
ಪಂಡಿತನಾನೆಂಬ ಹೆಮ್ಮೆ ಬರಿ-ಪುಂಡತನವಲ್ಲದೆ ಹರಿಯ ನಿಜ
ತೊಂಡ ಲಕ್ಷಣವಲ್ಲೆಂಬ ತತ್ವಪ್ರಕಾಂಡವಾಯಿತು
ನಿನ್ನ ಚರಿತೆ ಆಹ
ತಂಡತಂಡದ ಕವನ ದಂಡೆ ಹಾರಲು ಹರಿಗೆ
ಪಂಢರೀಶನು ಭಕ್ತ ಶೌಂಡ ನಿನಗೆ ಕಾಣಿಸೆ
ಕೊಂಡು ಔಡಣ ನಡಿಸೆ
ಉಂಡು ಸಂತಸದಿಂದ ತುಂಡುಗೈಯುವ ಭವವ
ಕಂಡೆ ನಾಕವ ಭುವಿಲಿ ೬
ದೇಶದೇಶಗಳ ಸಂಚರಿಸಿ-ಹೇಸಿ ಮತಗಳ ನಿರಾಕರಿಸಿ
ಬೀಸಿ ಮತಿಮತ ಗಾಳಿ ಸುಖಿಸೆ-ಆಶು ಶಿಷ್ಯರ
ಪೊರೆದೆ ಹರೆಸಿ ಆಹ
ಭಾಷಾದ್ವಯ ಯೋಜನೆ ಮೀಸಲು ನಿನಗೆಂಬೆ
ವ್ಯಾಸ ರಾಜಾದಿಗಳ ಆಶೆಯಂದದದಿ ತತ್ವ-
ರಾಶಿ ತುಂಬುತ ಗ್ರಂಥರಾಜ ರಚಿಸುತ ಜಗಕೆ
ತೋಷ ತಂದಿತ್ತಿಯೊ ದಾಸಜನರುಲ್ಲಾಸ ೭
ಶ್ರೀಮದ್ಧರಿಕಥಾಮೃತಸಾರ-ನೇಮ ದಿಂದೋದುವನೆ ಧೀರ
ತಾಮಸರಿಗಿದು ಬಹಳದೂರ-
ನೀಮಾಡಿದೆ ಮಹೋಪಕಾರ ಆಹ
ಕಾಮವರ್ಜಿತವಾಗಿ ಪ್ರೇಮದಿ ನರಹರಿಯ
ಭಾಮಸಹ ಸಂತತ ನೇಮದಿಂ ಧ್ಯಾನಿಸುತ
ಹೋಮಿಸುವೆ ನಿತ್ಯ ಸಕಲೇಂದ್ರಿಯ ವ್ಯಾಪಾರ
ಧೂಮಕೇತುವು ಎನಿಸುತ ನಮ್ಮಘಕಾನನಕೆ ೮
ಪ್ರಾಣೇಶ ಕರ್ಜಗಿ ದಾಸಾರ್ಯರವೃಂದ-
ನೀನಾಗಿ ಪೂರೆದಂತೆ ಘನ ಅಭಿಮಾನದಿಂದ
ದೀನರೆಮ್ಮಯವೃಂದ ಕಾಯೆಂಬೆ ಮುದದಿಂದ-
ತಾಣ ನಿಮ್ಮದೆ ನಮಗೆ ದಾಸಪಂಥ ಸ್ತಂಭ ಆಹ
ಕೃಷ್ಣಾಗ್ರಜ ಶಲ್ಯ ಸಹ್ಲಾದ ಮತ್ತಾ
ಮಾನ್ಯ ಪುರಂದರ ದಾಸಾತ್ಮಜನೀನಂತೆ
ದೀನಜನೋದ್ಧಾರಗೈಯ್ಯೆ ಮುಂದೇಳುಬಾರಿ
ಜನ್ಮಯೆತ್ತು ವಿಯಂತೆ ಶರಣು ಕರುಣಾಮಯ ೯
ಪ್ರಾಕೃತ ಭಾಷೆಮಲಿನ ವೆಂತೆಂದು-ತಾಕಿಸಿದ್ದರು
ಕನ್ನಡಕೆ ಮುಳ್ಳು
ಸೋಕಿಸುತ ಪರಾವಿದ್ಯೆಮದ್ದು-ಶೋಕ ಹರಿಸಿದೆ
ಕುವರ ನೀಮುದ್ದು ಆಹ
ಶರ್ಕರಾಕ್ಷಸಗೋಸ್ಥ ಅನುಸಂಧಾನ ಕ್ರಮ ಸು
ನೀಕವಡಗಿಸಿ ಕವನ ಕಡಲೊಳು ಸಾಕಿಹೆ ಹರಿ
ಭಕ್ತಸಂಘವ ಹಿರಿಯ ದಾಸರ ಪಥವನನುಸರಿಸಿ
ಶಕ್ತನಾವನು ಗುಣಿಸೆ ನಿನ್ನುಪಕಾರ ಜಗಕೆ ೧೦
ಸಣ್ಣವನು ನಾ ನಿನ್ನು ಗುರುವೇ-ನಿನ್ನವ ಸತ್ಯ ಮನ್ಮನ ಪ್ರಭುವೆ
ಮನ್ನಿಸಪರಾಧ ಕಲ್ಪ ಧ್ರುಮವೆ-ಚಿಣ್ಣರ ಸಲಹೆ ಪಿತಗೆ ಶ್ರಮವೆ ಆಹ
ಘನ್ನ ಜಯತೀರ್ಥ ವಾಯ್ವಂತರ್ಗತ ಶ್ರೀ
ಕೃಷ್ಣವಿಠಲ ತದ್ವನನೆಂದು ಭಜಿಸುವ ಭಾಗ್ಯ
ಜನ್ಮಜನ್ಮಂತರ ಕೊಟ್ಟು ಕಾಪಾಡುವಂಥ
ನಿನ್ನಭಯಕರವೆನ್ನ ಶಿರದಲಿಡುವಲಿ ಸತತ ೧೧

ಇದು ಸಹ ಶ್ರೀ ರಾಘವೇಂದ್ರ ಸ್ವಾಮಿಗಳ
೭೨
ರಾಜರ ನೋಡಿದಿರಾ _ ಗುರು _ ರಾಜರ ನೊಡಿದಿರಾ ಪ
ರಾಜರ ನೊಡಿ _ ಭಕುತಿಯ ಮಾಡಿ
ಗೋಜನ ಕರುಣಕೆ _ ಭಾಜನ ರಾದೀರಾ ಅ.ಪ.
ತುಂಗ ಮಹಿಮರು _ ನರ – ಸಿಂಗ ಭಕ್ತರು
ಭಂಗರಹಿತರು _ ಸುರ _ ಸಂಘ ಮಾನಿತರು ೧
ಯೋಗಿ ವರ್ಯರು _ ಬಹು _ ತ್ಯಾಗಶೀಲರು
ರಾಗ ಶೂನ್ಯರು _ ಭವ _ ರೋಗ ವೈದ್ಯರು ೨
ತಂತ್ರ ಮಲ್ಲರು _ ಬಹು _ ಗ್ರಂಥಕರ್ತೃಗಳು
ಮಂತ್ರ ಸಿದ್ಧರು _ ಮ _ ಹಂತ ಮಠದವರು ೩
ಶಾಂತ ಮೂರ್ತಿಗಳು _ ವೇ _ ದಾಂತ ಬಲ್ಲವರು
ದಾಂತ ಶೇಖರರು _ ಏ _ ಕಾಂತ ಭಕ್ತರು ೪
ರಾಘವೇಂದ್ರರು _ ಇವರೆ _ ವ್ಯಾಸರಾಜರು
ಭಾಗ್ಯವಂತರು _ ಪ್ರ _ ಹ್ಲಾದರಾಜರು ೫
ದೂಡು ಸಂಶಯಾ ನೀ _ ಮಾಡು ಭಕುತಿಯಾ
ಬೇಡು ಬಯಕೆಯಾ ಪೋ _ ಗಾಡು ದುಃಖವಾ ೬
ಸೃಷ್ಠಿ ನಾಯಕಾ _ ಶ್ರೀ _ ಕೃಷ್ಣವಿಠಲನ
ಶ್ರೇಷ್ಠ ಭಕ್ತರೂ _ ಸಂ-ತುಷ್ಠಿ ನೀಡುವರು ೭

ಶ್ರೀಹರಿಯ ಚತುರ್ವಿಂಶತಿ
೪೩
ರಾಧಾಕೃಷ್ಣ ಮುರಾರಿ ಜಯ ಜಯ
ವೇದ ವೇದ್ಯನೆ ವಿಷ್ಣು ಜಯ ಜಯ
ಮೋದತೀರ್ಥ ಸುವಂದ್ಯ ಜಯ ಜಯ
ಮಾಧವಾ ಮಧುಸೂದನಾ ಪ
ಶ್ರೀಧರಾ ಪ್ರದ್ಯುಮ್ನ ಜಯ ಜಯ
ಗೋಧರಾ ಶ್ರೀ ಮತ್ಸ್ಯ ಜಯ ಜಯ
ಭೂಧರಾಧರ ಕೂರ್ಮ ಜಯ ಜಯ
ಭೂಧವ ದಾ-ಮೋದರಾ ೧
ನಾರಸಿಂಹ ಉ-ಪೇಂದ್ರ ಜಯ ಜಯ
ಚಾರುವಾಮನ ಪೋರ ಜಯ ಜಯ
ಶ್ರೀ ತ್ರಿವಿಕ್ರಮ ವೀರ ಜಯ ಜಯ
ಭಾರ್ಗವಾ-ದ್ವೀಜ ಪೋಷಕಾ ೨
ರಾಮ ಲೋಕೋ-ದ್ಧಾರ ಜಯ ಜಯ
ಸಾಮವಾಸುದೇವ ಜಯ ಜಯ
ಧೀಮ ತಾಂವರ ಬುದ್ಧ ಜಯ ಜಯ
ಶ್ರೀಮನೋಹರ ಕಲ್ಕಿ ಕಲಿವೈರಿ ೩
ಈಶ ರಸ ಅನಿ-ರುದ್ಧ ಜಯ ಜಯ
ದೋಶಹರ ಸಂ-ಕಷ್ರ್ಣ ಜಯ ಜಯ
ಶ್ರೀಶಹರಿ ಹೃಷಿಕೇಶ ಜಯ ಜಯ
ಕೇಶವಾ ನಾರಾಯಣಾ ೪
ಬಾದರಾಯಣ-ದತ್ತ ಜಯ ಜಯ
ವೇಧ ಅಚ್ಚುತ-ಕಪಿಲ ಜಯ ಜಯ
ಮಧ್ವಗುರು ಮಹಿ-ದಾಸ ಜಯ ಜಯ
ಪದ್ಮನಾಭ ಅಧೋಕ್ಷಜ ೫
ಶ್ರೀ ಜನಾರ್ಧನ-ಋಷಭಜಯ ಜಯ
ನೈಜತೇಜಾ ನಂತ ಜಯ ಜಯ
ವಾಜಿವದನ ಇಂ-ಇಂದ್ರ ಜಯ ಜಯ
ರಾಜ ಭಕುತರ ಭೋಜ ಸುರರಾಜ ೬
ಯಜ್ಞ ಅಜ ಧನ್ವಂತ್ರಿ ಜಯ ಜಯ
ಪೃಶ್ನಿ ಗರ್ಭ ಮುಕುಂದ ಜಯ ಜಯ
ಚೆನ್ನ ಬೋಧಕ ಹಂಸ ಜಯ ಜಯ
ಶಿಂಶುಮಾರ ಸುಮೋಹಿನಿ ೭
ಪಾಂಡುರಂಗ ವಿ-ಠೋಬ ಜಯ ಜಯ
ತೊಂಡವತ್ಸಲ-ವರದ ಜಯ ಜಯ
ಗಂಡುಗಲಿ ತಿ-ಮ್ಮಪ್ಪ ಜಯ ಜಯ
ರಂಗನಾಥ ಪ-ರಾದ್ಯನಂತನೆ ೮
ವಿಶ್ವತೈಜಸ-ಪ್ರಾಜ್ಞ ಜಯ ಜಯ
ಶಶ್ವದೇಕನೆ-ತುರಿಯ ಜಯ ಜಯ
ಶ್ರೀಶ “ಶ್ರೀ ಕೃಷ್ಣ-ವಿಠಲ” ಜಯ ಜಯ
ಗೋವಿಂದಾ ಪುರು-ಷೋತ್ತಮಾ ೯

ಶ್ರೀ ಹರಿಯ ದಶಾವತಾರ
೪೪
ರಾಮ ಗೋವಿಂದ-ಹರಿ-ಕೃಷ್ಣ ಗೋವಿಂದ
ಕೃಷ್ಣ ಗೋವಿಂದ- ಹರಿ-ರಾಮ ಗೊವಿಂದ ಪ
ರಾಮ ರಾಮ ಕೃಷ್ಣಕೃಷ್ಣ _ ಕೃಷ್ಣಕೃಷ್ಣ ರಾಮರಾಮ
ರಾಮ ಕೃಷ್ಣ ರಾಮರಾಮ _ ಕೃಷ್ಣ ರಾಮ ಕೃಷ್ಣ ಕೃಷ್ಣ ಅ.ಪ.
ಮತ್ಸ್ಯಕೂರ್ಮ ಭೂವರಾಹ _ ಜೈ ಜೈ ವಾಮನ
ನಾರಸಿಂಹ ತ್ರಿವಿಕ್ರಮ _ ಶರಣು ಉಪೇಂದ್ರ ೧
ಶ್ರೀಶ ವಿಷ್ಣು ಬುದ್ಧ ಕಲ್ಕಿ _ ಭೃಗುಜ ಜಯೇಶ
ವಾಸುದೇವ ಹೃಷಿಕೇಶ _ ಕೇಶವಾಚ್ಯುತ ೨
ಪದ್ಮನಾಭ ಅಧೋಕ್ಷಜ _ ಅನಿರುದ್ಧ ಶ್ರೀಧರ
ವೇದವ್ಯಾಸ ಕಪಿಲದತ್ತ _ ಮಧುಸೂದನ ೩
ವಿಶ್ವ ತೈಜಸ ಪ್ರಾಜ್ಞತುರ್ಯ-ಬ್ರಹ್ಮ ಧಾಮ
ಪೃಶ್ನಿಗರ್ಭ ಮಹಿದಾಸ _ ಪುರುಷೋತ್ತಮ ೪
ಅಜಪರಶ್ರೀನಿವಾಸ _ ಸಾಸಿರಾನಂತ
ವಾಜಿವದನ ಶಿಂಶುಮಾರ _ ಸಚ್ಚಿದಾನಂದ ೫
ನಾರಾಯಣ ಜನಾರ್ದನ _ ಹಂಸ ಪ್ರದ್ಯುಮ್ನ
ದಾಮೋದರ ಯಜ್ಞ ಋಷಭ _ ದೇವ ಮಾಧವ ೬
ಅಪ್ಪ ಉರಗಾದ್ರಿ ವಾಸ _ ವೆಂಕಟೇಶ
ಅಪ್ರಮೇಯ ರಂಗನಾಥ _ ಪಾಂಡುರಂಗ ೭
ಸತ್ಯವ್ಯಕ್ತ ಸತ್ಯನೇತ್ರ _ ಸತ್ಯಪರ ಭಿನ್ನ
ನಿತ್ಯತೃಪ್ತ _ ಸತ್ತದಾತ _ ಪುರುಷ ಮಹಾಂತ ೮
ಲಕ್ಷ್ಮೀರಮಣ ಕೃಷ್ಣವಿಠಲ _ ಮುಕ್ತರಾಶ್ರಯ
ಲಕ್ಷ್ಯಮಾಡೆ ಮುಕ್ತಿ ಕೊಡುವ _ ಭಕ್ತವತ್ಸಲ೯

ಇದು ಶ್ರಿರಾಮನ ಮಹಿಮೆಯನ್ನು
೪೫
ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ಪ
ರಾಮನನೋಡುತ ಪ್ರೇಮವ ಸುರಿಸುತ
ನಾಮವ ನುಡಿಯುತ ನೇಮದಿ ಬೇಡುತ ಅ.ಪ
ಅಜಭವಾದಿಗಳರಸನೀತಾ ಮತ್ತೆ
ನಿಜಭಕುತರಿಗೆ ಮುಕ್ತಿಪ್ರದಾತ
ತ್ಯಜಿಸಿ ದುಷ್ಟರಸಂಗ ಭಜಿಸಿ ಶಿಷ್ಯರ ಸಂಗ
ಭುಜಗಭವವೆಂದರಿತು ನಿಜಸುಖಮೆಲ್ಲಲು ೧
ನಿತ್ಯವೇದಗಳಿಂ ಪ್ರತಿ ಪಾದ್ಯ ಮತ್ತೆ
ನಿತ್ಯಾನಿತ್ಯ ಜಗಸೃಜಿಪ ದೇವದೇವೇಶ
ಮುಕ್ತಾಮುಕ್ತಾಶ್ರಯ ಸತ್ಯ ಪ್ರಾಣನ ಹೃಸ್ಥ
ಉತ್ತಮೋತ್ತಮನೆಂದು ಎತ್ತಿಕೈಗಳ ಮುಗಿದು ೨
ಭಕ್ತಿಯಿಂದಲಿ ನೋಡೆ ಸರ್ವಾಘಹರವೋ
ಮತ್ತೆಪಾಡಲು ಕಾಮಿತ ಕರಗತವೊ
ಹಸ್ತಿವರದನ ನೋಡೆ ಮತ್ತರಿಗೆ ಸಾಧ್ಯವೆ
ವತ್ತುತ ಗೃಹಕೃತ್ಯ ಬೇಗ ಉತ್ತಮರಲ್ಲಿ ೩
ಸುಲಭವಲ್ಲವೊ ಇಂಥಾ ಸಮಯ
ಘಳಿಸಿ ನೋಡೀದವನೆ ಕೃತಾರ್ಥ
ಕುಳಿತು ಹೃದಯದಿ ನಿತ್ಯ ಸಲಹುತ್ತಿರುವಂಥ
ಅಲವ ಮಹಿಮಾರ್ಣವ ಲಲನೆ ಲಕ್ಷ್ಮಿಯ ನಾಳ್ವ ೪
ಸರ್ವನಾಮಕ ನಿವನೂ ಮತ್ತೆ
ಸರ್ವಪ್ರೇರಕ ಬಲಖ್ಯಾತ ನಿಹನೂ
ಸರ್ವ ಸರ್ವಾಧಾರ ಸರ್ವೇಶ ಶಾಶ್ವತ
ಸರ್ವಗುಣಗಣ ಪೂರ್ಣ ಸರ್ವವ್ಯಾಪ್ತನಾದ ೫
ಆರಿಲ್ಲ ಸಮವಧಿಕ ಇವಗೇ ಮತ್ತೆ
ಆರು ಕಾಣರು ನೆಲೆಯ ಸಾಕಲ್ಯ ಸತ್ಯ
ಸಾರವಿಲ್ಲದ ಜಗದಿ ಸಾರನೊಬ್ಬನೆ ಇವನು
ತೊರು ಪಾದಗಳೆಂದು ಸಾರಿಬೀಳುತ ಅಡ್ಡ ೬
ಶರಣೆಂದ ವಿಭೀಷಣಗೆ ಪಟ್ಟ ಕಟ್ಟಿದನೂ
ಕರುಣದಿಂದಲಿ ಶಬರಿಯ ಪೊರೆದವನು
ದುರುಳ ಪಾಪಿಯ ದೊಡ್ಡ ಕವಿಯ ಮಾಡಿದ ಮಹಿಮ
ಪರಮ ಪಾವನ “ಕೃಷ್ಣವಿಠಲ” ಪರಾತ್ಪರ
ಕರುಣ ಬೇಕಾದವರು ೭

ಲೋಕದಲ್ಲಿನಿಜವಾಗಲೂ
೧೦೦
ಲಘುವಾವುದೆಂಬುದನು ನಿಜವಾಗಿ ನುಡಿಯುವೆನು
ಸುಗುಣವಂತರು ಕೇಳಿ ವಿನಯದಲಿ ಬೇಡುವೆನು ಪ
ಲಘುತೃಣವು ತಾನಲ್ಲದಿಟವೆ ಸರಿ ಈ ಮಾತು
ಲಘುತೃಣವ ತಾವುಂಡು ಪಾಲ್ಕೊಡವೆ ಗೋವುಗಳು ಅ.ಪ.
ನಾರಿಯನು ಸಾಕುವೆಡೆ ಕೈಲಾಗದ ಲಘುವು
ಭಾರಿಸಿರಿಯನು ಪತಿಗೆ ತಾರದಾ ಸೊಸೆ ಲಘುವು
ನಾರಿಯರ ಕೈಗೊಂಬೆಯಾಗಿರುವ ನರ ಲಘುವು
ಸಿರಿವಂತ ನೆಂಟರಲಿ ಬಡವ ಸೇರಲು ಲಘುವು ೧
ವಿತ್ತವಿಲ್ಲದ ಪಿತನು ಪುತ್ರನಿಲ್ಲಿರೆ ಲಘುವು
ಪುತ್ರವತಿಯರ ನಡುವೆ ಸವತಿ ಬಂಜೆಯು ಲಘುವು
ಅತ್ತಿಗೆಗೆ ಬಹು ಲಘುವು ರಿತ್ತ ಮೈದುನ ಮಂದಿ
ಭತ್ರ್ಯತಾನತಿ ಲಘುವು ಶ್ರೀಮಂತ ಕನ್ನಿಕೆಗೆ ೨
ಆಧುನಿಕ ಮಂಡಲಿಗೆ ಪೌರಾಣಗಳು ಲಘುವು
ಮೋದತೀರ್ಥರ ಮತಕೆ ಮಿಕ್ಕುದೆಲ್ಲವು ಲಘುವು
ವೇದನುತ “ಶ್ರೀಕೃಷ್ಣವಿಠಲ”ನ ನೆನೆಯದವ ಶುದ್ಧಲಘು
ತಮನೈಯ ವೃದ್ಧ ಸಮ್ಮತ ಹೌದು ೩

ಗೆಜ್ಜೆ ಕಟ್ಟಿಕೊಂಡು ಕುಣಿದು
೮೫
ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ಪ
ಗೆಜ್ಜೆ ಕಟ್ಟಿದ್ದೊರೆ ಕೃಷ್ಣ ಭಜನೆಯಲ್ಲಿ ಮಾನದಲ್ಲಿ ಅ.ಪ.
ಆರು ವಲಿದು ಮಾಡೊದೇನು ಆರುಮುನಿದು ಮಾಡೊದೇನು
ಊರುಮಂದಿ ನಕ್ಕರೇನು ಚಾರು ಚಾರು ಮೆಚ್ಚಲೇನು
ಭಾರಿದೇವ ವಿಶ್ವಜನಕೆ ಹರಿಯದಾಸನೆಂದು ಇನ್ನು
ಈರ ಮತವ ಸಾರಿಸಾರಿನಲಿದು ನಲಿದು ಸುಖಿಪುದಕ್ಕೆ ೧
ದುಡ್ಡು ಕಾಸುಬೇಡ ನಮಗೆ ದೊಡ್ಡತನವು ಬೇಡ ಹಾಗೆ
ಹೆಡ್ಡತನನ ಬಿಟ್ಟು ಪಿರಿಯಕೃಷ್ಣನನ್ನು ಭಜಿಸಲಿಕ್ಕೆ
ಅಡ್ಡಿಏನು ಕುರುಡು ಮನವೆ ನೆನೆದುನೆನೆದು ನೋಡುನೀನೆ
ದೊಡ್ಡತನವೆ ಸತ್ಯವೀದು ದಡ್ಡತನವೆ ದುರಭಿಮಾನ ೨
ಹರಿಯದಾಸದೀಕ್ಷೆ ಪಡೆಯೆ ಸುಲಭವಲ್ಲ ಸುಲಭವಲ್ಲ
ದುರಿತ ರಾಶಿಪೋಗಿ ಶುದ್ಧ ಚಿನ್ನದಂತೆ ಆಗದೇನೆ
ಹಿರಿದು ಕಾಣೊ ಇಂಥಾ ಜನ್ಮ ಬರಿಯ ಮಾತಿಗೊಲಿಯದೇವ
ಅರಿವಿನಂತೆ ನಡೆಯದಿರಲು ತೊರೆದು ಎಲ್ಲ ದುರಭಿಮಾನ ೩
ಗೆಜ್ಜೆಕಟ್ಟಿ ಕುಣಿದು ಕುಣಿಯೆ ಲಜ್ಜೆನಾಶವಾಹುದೈಯ್ಯ
ಲಜ್ಜೆನಾಶವಾಗಿ ಭಕ್ತಿಯುಕ್ತಿ ಉಕ್ಕಿಹರಿಯುತಿರಲು
ಅಬ್ಜಪೀಠ ಪಿತನುತಾನೆ ಅಪ್ಪಿಕೊಂಡು ನಲಿದುನಲಿವ
ಅಬ್ಜನಾಭ ನಲಿದು ವಲಿಯೆ ಹೆಚ್ಚುಉಂಟೆ ಅದರಕ್ಕಿಂತ ೪
ಮೆರೆಯುತಿರಲು ದುಷ್ಟಕಲಿಯು ಅನ್ಯಮಾರ್ಗ ಸಾಧ್ಯವಿಲ್ಲ
ಹರಿಯ ಭಜನೆ ಒಂದೇ ದಾರಿ ಹರಿಯ ವಲಿಸೆ ಸಿದ್ಧವೀದು
ಜರಿದು ವಿಷಯ ಬೆರಸಿ ಭಕ್ತಿ ಸಿರಿಯ ರಮಣ “ಕೃಷ್ಣವಿಠಲ”
ಚರಣ ಯುಗವ ಭಜಿಸಿ ನೀನು ಮಾನ್ಯನಾಗೋ ಧನ್ಯನಾಗೊ ೫

ಶ್ರೀ ಕೃಷ್ಣನ ಸ್ಮರಣೆಯನ್ನು
೧೦೧
ಲೌಕಿಕ ಏತಕ್ಕೆ ನಮಗೆ ಪ
ಲೋಕೇಶ ಕೃಷ್ಣನ್ನ ಮರಿಸಿ ಕೆಡಿಸುವಂಥ ಅ.ಪ.
ಸುಳ್ಳು ಹೇಳಲಿಬೇಕು ಕಳ್ಳನಾಗಲಿಬೇಕು
ಮೆಲ್ಲನೆ ಸವಿಮಾತು ಆಡಿನಟಿಸಬೇಕು
ಪುಲ್ಲನಾಭನ ಬಿಟ್ಟು ಹುಲ್ಲುಮಾನವನನ್ನು
ನಲ್ಲ ನೆಂದೆರಗುತ ಕಾಲ ಕಳಿಸುವಂಥ ೧
ಗಡ್ಡ ಬೋಳಿಸಬೇಕು ದುಡ್ಡುಗಳಿಸಬೇಕು
ಬಡ್ಡಿಗೆ ಕೊಡಬೇಕು ದೊಡ್ಡ ಮನೆಯ ಕಟ್ಟಿ
ಅಡ್ಡಿಯಿಲ್ಲದೆ ಮೆರೆದು ದೊಡ್ಡವನಾಗಬೇಕು
ಹೆಡ್ಡಮಂದಿಯಲಿರಿಸಿ ಗೊಡ್ಡು ದೇಹವ ಮಾಳ್ವ ೨
ಸತಿಸುತ ಧನಗಳನೆ ಗತಿ ದೈವನೆನಬೇಕು
ಹಿತದಿಂದ ದುಡಿಯುತ ಸತಿಯರಿಗಿಡಬೇಕು
ಗತಿದಾಯಕ ನಮ್ಮ “ಶ್ರೀ ಕೃಷ್ಣವಿಠಲ”ನ್ನ
ಶಾಸ್ತ್ರನೇತ್ರದಿ ನೋಡೆ ಪುರಸೊತ್ತು ಕೊಡದಂಥ ೩

ರೂಪ, ಮಹಿಮೆಗಳನ್ನು ವರ್ಣಿಸಿ

ವಂದಿಪೆ ಮುದದಿಂದಲಿ ನಾನು
ವಂದಿಪೆ ಮುದ್ದು ಗಣಪಗೆ ವಂದಿಪೆ ಪ
ನಂನಂದನನಾಮ ಮನದೊಳು ಆ-
ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ.
ಆಕಾಶಕಭಿಮಾನಿ ಶ್ರೀಕಂಠವರಪುತ್ರ
ರಾಕೇಂದುವದನ ಶ್ರೀಕಾಂತ ನಿಜಭಕ್ತ
ಏಕಾಂತದಲಿ ಹರಿ ಆಕಾರತೋರಿಸಿ
ನೂಕುತಭವಪಾಶ ಸಾಕು ಸಾಕು ಎಂದು ೧
ವರವರದಾಯಕ ಸುರಗಣಪೂಜಿತ
ವರಕರಿಮುಖವೇಷ ವರಸರ್ಪಕಟಿಸೂತ್ರ
ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ
ಭರದಿಂದ ತರಿಯುತ ಕರುಣದಿ ಸಲಹೆಂದು ೨
ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ
ಮದನನಸೋದರ ಮುದವಿದ್ಯೆದಾಯಕ
ಮಧ್ವಾಗಮದಲಿ ಅದ್ದುತ ಎಮ್ಮನು
ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು ೩
ಏಕದಂತನೆ ವರ ಆಖುವಾಹನ
ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ
ರಕ್ತಾಂಬರ ತನು ರಕ್ತಗಂಧಪ್ರಿಯ ವಿ –
ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು ೪
ಪಾಶಾಂಕುಶ ಶಶಿದರ್ಪಭಂಜನ
ಶ್ರೀಶನಾಭಿವಾಸ ವಿಶಾಲಕರ್ಣಯುತ
ನಾಶಗೈಸುತವಿಷಯ ವಾಸನೆಗಳೆಲ್ಲ
ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು ೫
ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ
ಸರಿನೀನು ಧನಪಗೆ ಗುರುಶೇಷಶತರಿಗೆ
ತರಿದು ತಾಪತ್ರಯ ವರಜ್ಞಾನ ವೈರಾಗ್ಯ
ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು ೬
ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ
ನವನೀತ ಧರಿಸಿಹ ಸಿರಿ ತಾಂಡವ ಕೃಷ್ಣವಿಠಲ
ರಾಯನ ಧ್ಯಾನ ಕಾಯಾ ವಾಚಾ ಮನಸಾ
ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು೭

ಶ್ರೀಹರಿಯ ಅನೇಕ ರೂಪ
೪೬
ವಂದಿಸು _ ಶ್ರೀ ಹರಿಯ ಪ
ಇಂದಿರೆನಾಥ ಮಹೇಂದ್ರ ಪರಾತ್ವರ
ಸುಂದರ ಜಗಪಿತ ನಂದ ಮಹೋದಧಿ
ಕಂದರ ನಾಯಕ ಸಿಂಧು ಶಯನ ಅರ-
ವಿಂದ ಸುನಾಭ ಮುಕುಂದ ಮುರಾರಿಯ ಅ.ಪ.
ವೇದಸುಗೋಚರ _ ಖೇದವಿವರ್ಜಿತ _ ಸಾದರನುತಿಪರ
ಮೋದಸುದಾಯಕ _ ಮೇದಿನಿವರಭವ _
ಖೇದವಿಮೋಚಕ
ಮಾಧವ ಗೀತಾ _ ಬೋಧಕ ವಿಧಿಗುರು ೧
ಅಕ್ಷರ ನಿಖಿಳಾ _ ಧ್ಯಕ್ಷ ನಿರಂಜನ _ ಪಕ್ಷಿ ಧ್ವಜ ಜಗ
ಕುಕ್ಷಿ ಪರಾಮೃತ _ ರಕ್ಷಿಸಿ ಜಗವಂ
ಭಕಿÀ್ಷಪಧೋಕ್ಷಜ _ ಸಾಕ್ಷಿ ನಿರಪೇಕ್ಷ ಸುಪಕ್ಷನ೨
ಸತ್ಯಾಧಾರ ವಿಚಿತ್ರ ಗುಣಾರ್ಣವ _ ಸತ್ಯವ್ರತ ಪುರು
ಷೋತ್ತಮ ನಿರ್ಮಲ_ ಸತ್ಯವತೀಸುತ _ ನಿತ್ಯತೃಪ್ತ ಮ
ಹಾತ್ಮಜಗಾತತ _ ಭೂತಿದ ಹೃಸ್ಥನ ೩
ಸೋಮಕರಿಪು ಸುರಸ್ತೋಮ ಸಹಾಯಕ _
ಭೂಮಿಯ ವರಜಯ
ಕ್ಷೇಮದ ವಾಮನ _ ಭೀಮ ಪರಾಕ್ರಮ _
ಭೂಮಿಜೆನಾಥಸು
ಧಾಮಸಖಖಳಭ್ರಾಮಕ ಕಲ್ಕಿಯೆ೪
ಶಿಷ್ಠ ಸುಪೋಷಕ _ ದುಷ್ಟವಿನಾಶಕ _
ತುಷ್ಠಿ ಮಾಯಾ ಪರ-
ಮೇಷ್ಠ ಜನಕ- ಶ್ರೀ ಕೃಷ್ಣವಿಠಲಪದ
ನಿಷ್ಠರ ಸೇರಿ ವಿಶಿಷ್ಠ ಸಮರ್ಪಿಸಿ ೫

ಶ್ರೀನಿವಾಸನನ್ನು ಅನೇಕ ಪರಿಯಲ್ಲಿ
೪೭
ವರದ ವೆಂಕಟ ಶ್ರೀನಿವಾಸ ಪ
ಕರುಣದಿ ಪಿಡಿಯೊ ಎನ್ನ ಶೇಷಗಿರೀಶಾಅ.ಪ.
ಘೋರ ಭವದಿ ನೊಂದೆನು ಇಂದು
ಪಾರುಗಾಣೆನೂ ಭಾರ ನಿನ್ನದು ಎಂದು
ಸಾರಿ ಬೇಡಿದೆ ನಿನಗೆ ಭಕ್ತಬಂಧು
ದೂರಮಾಡಲು ಬೇಡ ಕರುಣಾ ಸಿಂಧು
ವಾರಿಜಾಸನ ವಂದ್ಯ ನೀರಜನಯನನೆ
ಶರಣರ ಪೊರೆಯುವ ಸುರ ದ್ರುಮನೆ
ಪರಿಪರಿ ಭವಣೆಯ ತರಿಮಹಿದಾಸನೆ
ಚರಣ ಸೇವಕರ ಸೇವಕನೆನಿಸೊ ಶ್ರೀಶನೆ
ದುರುಳ ಅಸುರನ ಶಿರವ ತರಿದು
ತರಳ ಪ್ರಹ್ಲಾದನ ಪೊರೆದೆ ಎಂದು
ಸುರರು ಪೊಗಳವುದನ್ನು ತಿಳಿದು
ಭರದಿ ಬಂದು ಶಿರವ ನಮಿಸುವೆ ನಿಂದು ೧
ಸಿರಿ ಅಜಭವಾದಿ ವಂದಿತ ಚರಣ
ಪರಿಮಿತಿಯಿಲ್ಲದ ಗುಣ ಗಣ ಪೂರ್ಣ
ನೀರಜ ಭವಾಂಡೋದಯಕೆ ಕಾರಣ
ವೀರ ವೈಷ್ಣವರ ದುರಿತ ಹರಣ
ಕ್ರೂರಜನ ಕುಠಾರ ದೇವನೆ
ಗರುಡಗಮನ ಭೀಮರೂಪನೆ
ಅರಗಳೆಣಿಸದೆ ಪೊರೆಯಂ ಬೇಗನೆ
ಕರವ ಮುಗಿದು ಸಾರಿ ಬೇಡುವೆ
ಕರಿಯ ತೊಡರನು ತರಿದು ನಕ್ರನ
ಶಿರವ ಸೀಳಿದ ಕರುಣಿ ಕೃಷ್ಣನೆ
ಸೀರೆ ಪಾಲಿಸಿ ಪೊರೆದ ದಾತನೆ
ಮರಳಿ ಬರುವ ಭವವ ಬಿಡಿನೊ ರಂಗನೆ ೨
ನಂಬಿದವರ ಕಲ್ಪವೃಕ್ಷ
ನಂಬದವರ ಕಲುಷಕೆ ಶಿಕ್ಷಾ
ಇಂಬಾಗಿ ಸರ್ವತ್ರ ಸುಜನರ ರಕ್ಷಾ
ತುಂಬಿದ ವೈಭವದಿ ಮೆರೆಯೊ ದಕ್ಷಾ
ಕಂಬುಕಂಠನೆ ನಿನ್ನ ನಂಬಿದೆ
ಅಂಬರದಲಿ ಕಾಣೆಂದು ಬೇಡಿದೆ
ಬಿಂಬನ ನಾಮನುಡಿಸೆಂದು ಕೇಳಿದೆ
ಶಂಬರವೈರಿ ನಿನ್ನ ಚರಣವ ಸಾರಿದೆ
ಶಂಭುವಂದಿತ ತುಂಬುರ ಪ್ರಿಯ
ನಂಬಿ ಭಜಿಸುವೆ ತುಂಬು ಮನದೊಳು
ಅಂಬುಜಾಕ್ಷನೆ ಜಯತೀರ್ಥ ಮುನೀಂದ್ರ
ಬೆಂಬಲವಾಯುಗ ಶ್ರೀ ಕೃಷ್ಣವಿಠಲಾ ೩

ಇದು ಒಂದು ಉದಯರಾಗ
ಗಜೇಂದ್ರ ಮೋಕ್ಷ
೧೦೯
ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ
ಗರುಡಗಮನ ನಮ್ಮ ಕರಿವರದಹರಿಯನ್ನ
ನಿರುತ ನೆನೆನೆನೆದು ಬದಿಕಿರಯ್ಯಾ ಪ
ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ
ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ.
ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ
ಇರುವುದೂ ಋತುಮಂತ ವರುಣನ ವರವನವು ಅಲ್ಲಿ
ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ
ಮೆರೆವೋರು ಸುರಸಂಘ ನಾರಿಯರ ಸಹಿತಾ ೧
ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ
ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ
ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ
ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು ೨
ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ
ನಿಂದು ಹೊರಾಡೆ ಸುರವೃಂದ ಬೆರಗಾಯಿತು
ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ
ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ ೩
ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು
ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು
ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ
ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ ೪
ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ
ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ
ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ
ಉತ್ಪತ್ತಿವರ್ಜಿತ ಅಚ್ಯುತಾನಂತನಿಗೆ ಎತ್ತಿ ಸೊಂಡಿಲನಾ
ಆರ್ತದಲಿ ಕರೆವೆನೋ ೫
ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ
ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ
ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ
ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ ೬
ಎಲ್ಲವಾ ತಿಳಿದವಗೆ ಎಲ್ಲ ಕಾಲಗಳಲ್ಲಿ
ಎಲ್ಲ ಕೆಲಸಗಳನ್ನು ನಿಲ್ಲದೆಲೆ
ಮಾಡುವಗೆ ವಂದಿಸುವೆನೋ
ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ
ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ ೭
ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ
ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ
ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ
ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ ೮
ವೇದಗಮ್ಯನುನೀನೆ ವೇದದಾಯಕ ನೀನೆ
ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ
ಖೇದವರ್ಜಿತನೀನೆ ಅಂದ ಸಾರವು ನೀನೆ
ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ ೯
ಜ್ಞಾನಿಗೋಚರನೀನೆ ಗುಣಾತೀತನು ನೀನೆ
ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ
ಜ್ಞಾನದಾಯಕನೀನೆ ಆನಂದಮಯನೀನೆ
ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ ೧೦
ಸಾಕಾರ ನಿರಾಕಾರ ಆಕಾರ ಅಹೇಯ
ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ
ವಿಕಾರ ವರ್ಜಿತನೆ ಲೋಕೈಕವೀರಾನೆ
ನೀ ಕೆವಲನು ಮುಕ್ತೇಶ ಸಲಹೋ ೧೧
ಏನು ಕೊಡಲೊ ದೇವ ದೀನನು ನಾನಯ್ಯ
ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ
ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ
ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ ೧೨
ಪರಿಪರಿಯಲಿ ಕರಿ ತಾನು ಮೊರೆಯಿಡುತ ಕೂಗಲು
ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ
ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ
ಹರುಷದಿಂದಲಿ ಹರಿಯು ಗುರುಡನೇರುತ ಬರಲು
ತರಿದು ನಕ್ರನ ಭರದಿ ಕರಿಯಪೊರೆಯೆ ಆದ ೧೩
ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ
ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ
ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು
ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ ೧೪
ದೇವಲನ ಶಾಪದಲಿ ಆ ವರ ನಕ್ರನಾಗಿದ್ದ
ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ
ದೇವೇಶ ಹುಸಿನಗುತ ಈವೆ ವರವನು ಕೇಳಿ
ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ
ನಾ ಒಲಿವೆ ತವಕದಲಿ ಎಂದನೂ ೧೫
ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ
ಹರಿ ಹರೀಶ ಶರಣೆಂದು ಸುರರು ಮೊರೆಯಿಟ್ಟರಾಗ
ಹರಿವಾಯುಗುರುಗಳು ಕರುಣದಿಂದಲಿ ಇದನು
ಅರುಹಿ ಬರೆಯಿಸಿದರಿಂದು ಪೋರನನು
ಮನ್ನಿಪುದು ಬುಧರೂ ೧೬
ಮುದ್ದುಜಯತೀರ್ಥರ ಹೃದಯದಲಿನಲಿಯುವ
ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ
ಮಾಧವ ಶ್ರೀಕೃಷ್ಣವಿಠಲರಾಯನು ಬೇಗ
ಮುದ ಮೋದ ಸುರಿಸುವ ಈ ಪದವ ಪಠಿಸಲೂ ೧೭

ಇದೂ ಸಹ ಶ್ರೀವಾದಿರಾಜರ ಸ್ತುತಿ
೬೬
ವಾದಿರಾಜಗುರು ನಿಮ್ಮಡಿಗೆರಗುವೆ
ಸಾದರದಿಂದಲಿ ಮಂದನ ಕೈಪಿಡಿಯೋ ಪ
ಸಾಧುಜನಾಶ್ರಯ ಮೇದಿನೀಸುರತರು
ಪಾದವಪಿಡಿದಿಹೆ ಬೋಧಿಸು ವಿಜ್ಞಾನ ಅ.ಪ.
ಕಾದಿಡೆ ಸುಜನಕೆ ಮಧ್ವಾಗಮನಿಧಿ
ಸಾದರದುದಿಸಿದಿ ಬುಧಜನಕುಲಮೌಳಿ
ಬೂದಿಯ ಮಾಡುತ ದುರ್ಮತಜಾಲವ
ಮಾಧವ ಮಧ್ವರ ಸೇವೆಯ ಸಲ್ಲಿಸಿದೇ ೧
ಕವಿತಾವನಿತೆಯ ಕುಣಿಸುತ ಶಾಸ್ತ್ರವ
ನವವಿಧ ರಸದಿಂ ಪೇಳಿದೆ ಶಿಷ್ಯರಿಗೆ
ಭುವಿಯಲಿ ಮೆರೆದೆಯೋ ಮಧ್ವಾನುಜ ತೆರ
ಪವನ ಮತಾಬ್ಧಿಯ ಸೋಮನೆ ಶರಣೆಂಬೆ೨
ರಿಕ್ತಬ್ರಹ್ಮನ ಭಕ್ತರ ನೊಲ್ಲನು
ಯುಕ್ತಿಗಳೆಂಬುವ ಮಲ್ಲಿಗೆ ಪಟ್ಟಲಿ
ಶಕ್ತಯತೀಂದ್ರನೆ ಅಡಗಿಸಿ ಸರ್ವೋ-
ದ್ರಿಕ್ತನ ಗುಣಗಣ ಸಾಧಿಸಿ ನೀ ಮರೆದೇ೩
ತೀರ್ಥಕ್ಷೇತ್ರವ ಪಾವನಗೈಯ್ಯಲು
ಸುತ್ತುತನೀಡಿದೆ ತೀರ್ಥಪ್ರಬಂಧವನೂ
ಪಾರ್ಥಿವ ಮೊರೆಯಿಡೆ ಅಕ್ಷತೆನೀಡುತ
ಶತ್ರುಗಳಳಿಸುತ ಪೊರೆದೆಯೊ ಕರುಣಾಳು೪
ಅರವತ್ನಾಲ್ಕು ಕಲಾಜ್ಞನೆ ಗುಣನಿಧಿ
ಸುರಗಣಗಚ್ಚಿರಿಯೇ ಸರಿ ತವ ಮಹಿಮ
ಹರಿಸಿದೆ ಮೃತ್ಯುವ ರಾಜನ ಅಳಿಯಗೆ
ಸಿರಿಪತಿ ವ್ಯಾಸರ ಕಂಡೆಯೊ ಪ್ರತ್ಯಕ್ಷ೫
ಗುಂಡಕ್ರಿಯೆ ವೈಕುಂಠ ವರ್ಣನೆ
ಕಂಡಕಂಡಪದ ಪುಂಜವ ಪಾಡುತಲೀ
ಕೂಡದು ಭಾಷಾ ಸಡಗರ ವೆಂಬುದ
ಪಂಡಿತನಿಕರಕೆ ತೋರಿದೆ ಯತಿತಿಲಕಾ೬
ಜಂಗಮಗರುವನ ಭಂಗಿಸೆ ತವಕದಿ
ಇಂಗಿಸಿ ಸಲಹಿದೆ ವಿಪ್ರರ ಕಷ್ಟಗಳ
ಗಂಗಾಪಿತ ತ್ರಿವಿಕ್ರಮ ದೇವನ
ಮಂಗಳ ಸುರಿಸಲು ಸ್ವಾದಿಲಿ ಸ್ಥಾಪಿಸಿದೆ೭
ಗೋಧರ ಹಯಮುಖ ಸಾಕ್ಷಾತ್ತಿ ಎಂಬುವ
ಛಂದದಿ ನೀಡಿದ ಓದನವೆಂತೆನೆ
ಸಾಧ್ಯವೆ ಶೇಷನು ಪೊಗಳಲು ನಿಮ್ಮನು
ಮಂದಿರನವನಿವ ನೆನ್ನುತ ಕೈ ಪಿಡಿಯೋ೮
ಇಂದ್ರನ ದೂತರ ತಡೆಯುತ ದಿನತ್ರಯ
ಚಂದದಿ ಕುಳಿತೆಯಾ ಬೃಂದಾವನದೊಳಗೆ
ಇಂದಿಗು ನೋಳ್ಪರು ಬುಧಜನ ನಿಮ್ಮನು
ವೃಂದಾರಕಗಣ ವಂದಿತ ಚರಣಯುಗ೯
ಸುಂದರ ಹಯಮುಖ ರಾಮನು ಕೃಷ್ಣನು
ವೇದವ್ಯಾಸರು ಹನುಮಾದಿ ತ್ರಯರು
ಮಧ್ಯದಿ ಕುಳಿತಿಹ ನಿನ್ನ ಸುನಾಲ್ಕೆಡೆ
ನಿಂದಿಹರೆಂಬುದು ಸಿದ್ಧವು ಮಹಮಹಿಮಾ ೧೦
ಬೃಂದಾವನ ಪಂಚದಿ ಹರಿ ತಾನಿಹ
ಚಂದದಿ ಸೇವೆಯ ಕೊಳ್ಳುತ ನಿನ್ನಿಂದ
ಸುಂದರ ದಶಗಳ ಪಂಚನುರೂಪವ
ವಂದಿಸಿ ನೋಡುತ ನೆನೆಯುವೆ ಏನೆಂಬೆ೧೧
ಗಂಗಾಪಿತ ತ್ರಿವಿಕ್ರಮದೇವನ
ಹಿಂಗದೆ ನೆನೆಯುವೆ ಲಕ್ಷಾಭರಣವನು
ರಂಗಗೆ ನೀಡಿದೆ ನಮ್ಮಯ ಭವವನು
ಇಂಗಿಸೆ ಕಷ್ಟವೇ ಗುರುವರ ದಯಮಾಡೋ೧೨
ಜಯಮುನಿ ಹೃದಯದಿ ವಾಯುವಿನಂತರ
ಜಯದಿಂ ನಲಿಯುವ ಶ್ರೀಕೃಷ್ಣವಿಠಲನ
ದಯದಿಂ ತೊರಿಸು ಭಾವೀಜಯಾಸುತ
ಹಯಮುಖ ಕಿಂಕರ ನಮಿಸುವೆ ಭೂಯಿಷ್ಠಾ೧೩

ವಿಷ್ಣುವಿನ ಅನೇಕ ಅವತಾರ
೪೮
ವಿಶ್ವೇಶ ವೆಂಕಟೇಶ_ ವಿಶ್ವಾದಿ ಪರರೂಪಿ
ಶ್ರೀ ವಿಷ್ಣು ಪರಬ್ರಹ್ಮ_ನಮೋ ನಮೋ ಪ
ವಿಶ್ವಾತ್ಮ ಶ್ರೀಗುರು _ ವಿಶ್ವಾನ್ನ ಅನ್ನದ
ವಿಶ್ವಸ್ಥ ಶ್ರೀ ಕೃಷ್ಣ _ ನಮೋ ನಮೋ ಅ.ಪ
ಕೇಶವಾ ಮಾಧವಾ _ ಗೋವಿಂದ ಅಚ್ಯುತ
ವಾಸುದೇವಾನಂತ _ ನಾರಾಯಣಾ೧
ಗೋಧರಾ ಶ್ರೀಕರಾ _ ಶ್ರೀಮತ್ಸ್ಯ ಕಚ್ಛಪ
ಶುದ್ಧಾನಂದಾತ್ಮಕ _ ನಾರಸಿಂಹ ೨
ಶ್ರೀಧರಾ ವಾಮನಾ _ ಪ್ರದುಮ್ನ ಹೃಷಿಕೇಶ
ಆದ್ಯಂತ ವರ್ಜಿತ _ ತ್ರಿವಿಕ್ರಮಾ ೩
ಭಾರ್ಗವಾ ರಾಘವಾ _ ಶ್ರೀ ಕೃಷ್ಣ ಉಪೇಂದ್ರ
ಯೋಗೇಶ ಬುದ್ಧಕಲ್ಕಿ ಜನಾರ್ದನ ೪
ಪದ್ಮಾಕ್ಷ ಪದ್ಮನಾಭ _ ಶ್ರೀ ಮಧುಸೂದನ
ಪದ್ಮೇಶ ಅನಿರುಧ್ಧ _ ಸಂಕರ್ಷಣ ೫
ದಾಮೋದರಾ ದತ್ತ _ ಕಪಿಲ ಶಿಂಶುಮಾರ
ಭೂಮಾ ಅಧೋಕ್ಷಜ _ ಸೀಮಾಶೂನ್ಯ ೬
ಶ್ರೀ ವಿಷ್ಣುಹರಿಯಜ್ಞ _ ಧನ್ವಂತ್ರಿ ಮಹಿದಾಸ
ಶ್ರೀ ವಂದ್ಯ “ಕೃಷ್ಣವಿಠಲ” ಪಾರಾಶರ೭

ವ್ಯಾಸ-ದಾಸ ಕೂಟಗಳು
೧೦೨
ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ಪ
ಈಶ ಹೊರತು ಮಿಕ್ಕ ಜನರು ದಾಸರೇ ಸರಿ ಅ.ಪ.
ವೇದವ್ಯಾಸದೇವ ದೇವ ಸರ್ವರಿಗೆ ಈಶ ಕಾಣಿರೋ
ಮೋದಮುನಿಯು ಆತನಿಗೆ ಮುಖ್ಯದಾಸ ಶಾಸ್ತ್ರಸಿದ್ದವೋ
ಎಂದಮೇಲೆ ನೀನು ಯಾರು ಸಾಕ್ಷಿಕೇಳಿ ಬೇಗ ನುಡಿಯಲೋ
ಛಂದ ಭಜಿಸಿ ಜ್ಞಾನ ಘಳಿಸಿ ದಾಸನೆಂದು ಹರಿಯ ಭಜಿಸೆಲೋ ೧
ಧರ್ಮಶಾಸ್ತ್ರ ಮರ್ಮಬಿಟ್ಟು ಓದಿ ಓದಿ ಏನು ಫಲವೊ
ನಿರ್ಮಲಾತ್ಮ ನಿತ್ಯ ತೃಪ್ತ ನಿರ್ಜರೇಶ ನೊಲಿಮೆ ಮುಖ್ಯವೋ
ಕಮಲೆಯರಸ ಕಲ್ಪವೃಕ್ಷ ಹೃಸ್ಥದೊರೆಯ ಕಾಣಬೇಕೆಲೋ
ಕರ್ಮಬಿಡದೆ ಆಶೆತೊರೆದು ಕರ್ಮಪತಿಯ ಶರಣು ಪೊಗೆಲೋ ೨
ವೇದಶಾಸ್ತ್ರ ಸ್ರ‍ಮತಿಗಳಲ್ಲಿ ಪೇಳಿರುವ ತತ್ವಗಳನ್ನು
ಮೋದಮನಿಯ ಮತವ ಬಿಡದೆ
ನಡತೆಯಿಂದ ನಡಿಸಿ ನಡಿಸುತ
ಇಂದಿರೇಶನ ದಾಸಜನರು ಪದಗಳಿಂದ ಪಾಡಿ ಪಾಡುವ
ಖೇದವಳಿದು ಸಾಧು ಜನಕೆ ನಂದ ಸೂರೆಗೈದು ನಲಿವರೋ ೩
ವೇಷದಿಂದ ಭಾಷೆಯಿಂದ ಶ್ರೀಶನೊಲಿಮೆ ಕಾಣಲಾಗದೋ
ದಾಸನೆಂದು ದೈನ್ಯದಿಂದ ದ್ವೇಷ ತ್ಯಜಿಸಿ ಕೂಗಬೇಕೆಲೋ
ವಿಷಯವಳಿದು ಮಮತೆ ಬಿಟ್ಟು ಗೆಜ್ಜೆಕಟ್ಟಿ
ಕುಣಿದು ಕುಣಿಯಲೊ ೪
ಶಕ್ತಿಜರಿದ್ವಿರಕ್ತಿಬೇಡಿ ಭಕ್ತಿಯಿಂದ ಭಜಿಸಿ ಭಜಿಸೆಲೊ
ಶಕ್ತ ವಿಜಯಸೂತ ಶ್ರೀ ವಾಯುಹೃಸ್ಥ “ಕೃಷ್ಣವಿಠಲ”
ಯುಕ್ತಿಯಿಂದ ಬಂಧಬಿಡಸಿ ನಿತ್ಯಸುಖವ ನಿತ್ತು ಕಾಯ್ವನೊ
ಭಕ್ತಿಯಿಂದ ಶಕ್ಯನಾದ ಜ್ಞಾನ ಘಳಿಸಿ ಕೊಲ್ಲು ಸಂಶಯ ೫

ಇದೂ ಸಹ ಶ್ರೀ ರಾಘವೇಂದ್ರ
೭೩
ಶರಣ ಜನ _ ಪರಿಪಾಲ
ಗುರು ಸಾರ್ವ _ ಭೌಮಾ
ದೊರಕಿಸುತ ಹರಿಕರುಣ
ಪೊರೆ ರಾಘವೇಂದ್ರಾ ಪ
ಅಂದು ಹರಿ ತವಶರದಿ
ತಂದು ಕರ ಪೊರೆದಂತೆ
ನಂದಿ ಸುತ ದುರಿತೌಘ
ಇಂದೆನಗೆ _ ಮೈದೊರು ಗುರುವೇ
ಕುಂದು ಮಯ ಕಲಿಯೊಳಗೆ
ಕಂದುತಿಹ ಕಂದರನು
ತಂದೆ ಗುರು ಕಾಯದಿರೆ
ಮುಂದು ಬರೆ ಆಗುವದೆ ಸ್ವಾಮೀ ೧
ಕತ್ತಲೆಯು ಸುತ್ತಿಹುದು
ಮುತ್ತಿಹವು ಕುತ್ತುಗಳು
ಬತ್ತಿಹವು ಶಕ್ತಿಗಳು
ಹತ್ತವೈ ಚಿತ್ತದೊಳು ಏನೂ
ಎತ್ತುಗಳ ತೆರದಂತೆ
ಸುತ್ತುತಲಿ ಭವದಲ್ಲಿ
ಭಕ್ತಿಯನು ಕಾಣದಲೆ
ಮೃತ್ಯುವಿಗೆ ತುತ್ತಾಹೆ ನಲ್ಲೋ ೨
ಪರಿಪರಿಯ ಹರಕೆಗಳ
ಪೂರೈಸಿ ಭಕುತರಿಗೆ
ನಿರುತದಲಿ ಪೊರೆವವಗೆ
ಭಾರವೇ ನಾ ನೊಬ್ಬ ಧೊರೆಯೇ
ಗುರು ಸೇವೆ ಮಾಡರಿಯೆ
ಬರಿ ಮೂಢ ಕಡು ಪಾಪಿ
ಶಿರವಿಡುವೆ ಚರಣದಲಿ
ಕರುಣಾಳು ಭರವಸೆಯೆ ನನಗೇ ೩
ಪ್ರಹ್ಲಾದ ಬಲಿತಾತ
ಬಾಹ್ಲೀಕ ಕುರುಪೋಷ
ಶ್ರೀ ಹರಿಯು ಗುರುಭಕ್ತಿ
ವಾಹಿನಿಯ ಹರಿಸೈಯ ಸತ್ಯಸಂಧಾ
ದೇಹದಲಿ ಬಲವಿಲ್ಲ
ಈಹಗಳು ಬಿಡದಲ್ಲ
ಬಾಹಿರನು ನಿನಗಲ್ಲ
ತ್ರಾಹಿ ಗುರು ನೀ ಬಲ್ಲೆ ಎಲ್ಲಾ೪
ಶ್ರೀ ಮಧ್ವ ಗುರು ಚೇಲ
ತಾಮಸರ ನಿರ್ಮೂಲ
ಶ್ರೀಮಂತ ಗುಣಮಾಲ
ಶ್ರೀ ಮನೋಹರ ಕೃಷ್ಣವಿಠಲ ಯಜಕಾ
ಕಾಮಿತಾ ಫಲದಾತ
ಪಾಮರನ ತವಭೃತ್ಯ
ಸ್ತೋಮದಲಿ ಸೇರಿಸುತ
ನೇಮದಲಿ ಹರಿನಾಮ ನುಡಿಸೆಂಬೆ ಸತತಾ ೫

ಇದು ಶ್ರೀ ರಾಘವೇಂದ್ರ
ಸುವ್ವಿಮಟ್ಟು
೭೪
ಶರಣು ರಾಘವೇಂದ್ರ ಗುರುವೆ
ಶರಣು ವ್ಯಾಸರಾಜ ಪ್ರಭವೆ
ಶರಣು ನಾರಸಿಂಹ ಭಕ್ತ
ಶರಣು ಶರಣು ಶಂಕು ಕರ್ಣನೆ ಪ
ನಿರುತ ನಿಮ್ಮ ಚರಣ ಕಮಲ
ಗೆರಗಿ ಎರಗಿ ಬೇಡಿ ಕೊಂಬೆ
ತರಿದು ದುರಿತ ರಾಶಿ ಭರದಿ
ಹರಿಯ ಕರುಣ ಕೊಡಿಸು ಕರುಣಿಯೆ ಅ.ಪ
ವಿಧಿಯ ಶಾಪ ಧರಿಸಿ ಮುದದಿ
ಉದಿಸಿ ಬಂದು ದೈತ್ಯ ಕುಲದಿ
ಹೃದಯ ಗತನೆ ವಿಶ್ವವ್ಯಾಪ್ತ
ಪದುಮನಾಭನೆಂದು ತೋರ್ದೆಹೋ
ಬುಧರ ಮಕುಟ ಭಕ್ತಿ ಶರಧಿ
ಅಧನ ರಾಜ ಮದನ ತೇಜ
ಮಧುರ ಬೋಧ ಮಧ್ವ ಚೇಲ
ತ್ರಿದಶ ಮಾನ್ಯ ಪ್ರಹ್ಲಾದ ಬಾಹ್ಲೀಕ ೧
ಕಲಿಯು ಬರಲು ಗುರುವು ಸಹಿತ
ತುಳಿದು ಶೃತಿ ವಿರೋಧ ಬೋಧೆ
ಸಲಹೆ ಸುಜನ ತತಿಯ ಸುಮತಿ
ಚಲುವ ಕುವರ ನೆನಿಸಿ ಬಂದೆ ಹೋ
ಬಲಿಸಿ ಕೃಷ್ಣನನ್ನು ಕುಣಿಸಿ
ಬಲಿಸಿ ವಾಯು ಮತವ ಮೆರಸಿ
ಒಲಿದು ನೃಪಗೆ ರಾಜ್ಯವಾಳಿ
ಹಳಿದೆ ವಿಧುವ ಕೀರ್ತಿ ವಿಭವದಿ ೨
ಮತ್ತೆ ಬಂದೆ ರಾಘವೇಂದ್ರ
ಹತ್ತು ಆರು ಮತ್ತೆ ನಾಲ್ಕು
ಮೊತ್ತ ಕಲೆಗಳೆಲ್ಲ ಬಲ್ಲ
ಸತ್ಯ ಪ್ರಾಣ ಶಾಸ್ತ್ರ ಮೆಲ್ಲನೆ
ಎತ್ತ ಸಾಟಿ ಕಲ್ಪವೃಕ್ಷ
ನಿತ್ಯ ವಿವಿಧ ಮಹಿಮೆ ತೋರ್ಪೆ
ಇತ್ತು ಪೊರೆವೆ ಜನರ ಬಿಢೆಯ
ಭಕ್ತಿ ವಿತ್ತ ನೀಡು ಭೃತ್ಯಗೆ ೩
ನಾರಸಿಂಹ ವೇದ ವ್ಯಾಸ
ಮೂರುತೀಶ ರಾಮಚಂದ್ರ
ಸೂರಿಗಮ್ಯ ಕೃಷ್ಣ ದೇವ
ಭಾರಿ ಮಧ್ವ ಸುರರು ಎಲ್ಲರು
ಸೇರಿ ನಿಮ್ಮ ನಡಿಸಿ ಕಾರ್ಯ
ಸೂರೆ ಗೈಸುತಿರಲು ಕೀರ್ತಿ
ಪಾರವಿಲ್ಲ ಮಹಿಮೆಗೆಂಬೆ
ಈರ ಪಿತನ ಕರುಣ ಭೂಷಿತ ೪
ರಾಘವೇಂದ್ರ ನಿಮ್ಮ ನಾಮ
ಯೋಗ್ಯ ಜಪಿಸೆ ಭಕ್ತಿಯಿಂದ
ಶ್ರೀಘ್ರನಾಶ ಅಘಸಮೂಹ
ಹಾಗೆ ಸಿದ್ಧಿ ವಾಂಛಿತಂಗಳು
ಯೋಗ ಸಿದ್ಧಿ ಭೋಗ ಸಿಧ್ಧಿ
ಯೋಗ ಪತಿಯ ಭಕ್ತಿ ಸಿಧ್ಧಿ
ಬೇಗ ಪಡೆದು ಕ್ರಮದಿ ಭವದ
ಬೇಗ ನೀಗಿ ಮುಕ್ತಿ ಕಾಂಬುವ ೫
ದಾನ ಗೈದನಿಷ್ಟ ಪುಣ್ಯ
ದೀನ ಸುಜನ ಶಿಷ್ಯ ತತಿಗೆ
ಶ್ರೀನಿವಾಸನನ್ನು ಯಜಿಪ
ದಾನ ಶೌಂಡ ನಿಮಗೆ ಸಾಟಿಯ
ಕಾಣೆ ಕಾಣೆ ಸತ್ಯ ಸತ್ಯ
ನಾನು ಮೂಢ ಪಾಪಿ ಕೃಪಣ
ಏನು ಸೇವೆ ಮಾಡಲಾಪೆ
ಭಾನು ತೆರದಿ ಕಾಯ ಬೇಕೆಂಬೆ ೬
ನಿನ್ನ ನೆನೆದ ಮಾತ್ರಕಿನ್ನು
ಅನ್ನ ವಸನ ಎಲ್ಲ ಸಿಧ್ಧ
ಹೊನ್ನು ಹೆಣ್ಣು ಮಣ್ಣು ಮಿಷಯ
ನಿನ್ನ ಕೇಳ್ವ ಜ್ಞಾನಿ ಆಹನೆ
ಮನ್ನಿಸೆನ್ನ ದೋಷರಾಶಿ
ನಿನ್ನ ಶಿಷ್ಯನೆಂದು ಗ್ರಹಿಸು
ಮನ್ನ ಮಾಡು ಭವವ ಬೇಗ
ಕಣ್ಣು ನೀಡು ಜ್ಞಾನ ದೆಂಬುವೆ ೭
ಜಯ ಸುಧೀಂದ್ರ ಪ್ರೇಮ ಪುತ್ರ
ಜಯ ವಿಜೀಂದ್ರವರ ಸುಪೌತ್ರ
ಜಯ ಜಯೇಂದ್ರ ಕರುಣ ಪಾತ್ರ
ಜಯ ಕವೀಂದ್ರ ಮಧ್ವ ಛಾತ್ರನೆ
ಜಯ ಭವಾಭ್ದಿ ಪೋತ ಚರಣ
ಜಯ ದಯಾಭ್ದೆ ಸುಗುಣ ಕೋಶ
ಜಯ ಯತೀಂದ್ರ ಕಾಮಧೇನು
ಜಯವು ಜಯವು ಜ್ಞಾನ ಭಾಸ್ಕರ ೮
ಸತ್ಯಸಂಧ ಸತ್ಯ ಸ್ತಂಭ
ಸತ್ಯ ಭೃತ್ಯ ಸತ್ಯ ವೇತ್ತ
ಸತ್ಯನಾಥ ನೊಲಿ ಮೆಯಿಂದ
ಹೃಸ್ಥ ಹರಿಯು ನಿತ್ಯ ಕಾಂಬನೆ
ಸತ್ಯ ಮಾತೆ ಸಿರಿಯ ನಾಳ್ವ
ಮುಕ್ತಿದಾತ ಕೃಷ್ಣವಿಠಲ
ಚಿತ್ತದಲ್ಲಿ ಸುಳಿಯಲೆಂಬಭೃತ್ಯ ಬಯಕೆ ಸತ್ಯ ಮಾಡ್ಪ್ರಭೋ ೯

ಇದೂ ಸಹ ಶ್ರೀವಾದಿರಾಜರ ಸ್ತುತಿ
೬೭
ಶರಣು ವಾದಿರಾಜ ಗುರುವೆ ಶರಣು ವಾಜಿವಕ್ತ್ರಪ್ರಿಯನೆ
ಶರಣು ನಂದಮುನಿಯ ಅನುಜ ಶರಣು
ಭಾವಿ ಮುಖ್ಯಪ್ರಾಣನೆ ಪ
ದುರಿತರಾಶಿ ತರಿದು ಎನ್ನ ಭರದಿ ಕರುಣ ತೋರಿ ನಿನ್ನ
ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ.
ಘೋರಕಲಿಯು ಬಂದನೆಂದು ಸಾರಿ
ಹರಿಯಮುಂದೆ ನಿಂದು
ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ
ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು
ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ ೧
ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ
ತೊರೆಯದೇನೆ ಕಾಯ ಕುಳಿತೆ ಭರದಿ ವೃಂದಾವನದಲೀ
ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ
ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ ೨
ಹನುಮ ಭೀಮ ಮಧ್ವಹಾಗೆ ಗಣಪನೈಯ್ಯ ಸುರರು ಎಲ್ಲ
ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು
ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ
ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ ೩
ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ
ತೊರೆದು ಕಾಮ ಹರಿಯ ಯಜಿಸಿ ಮೆರೆವ
ನಿಮ್ಮ ಮಹಿಮೆಗೇನೆಂಬೆ
ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು
ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ ೪
ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ
ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ
ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು
ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ೫
ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ
ದುರಳ ಚೈವ ಕೊಡಲು ಶಾಪ ಹರುಷದಿಂದ
ಕೊಂಡು ಭುವಿಯಲಿ
ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು
ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ೬
ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ
ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ
ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು
ದಾನಗೈದ ನಿನ್ನ ಸತಿಗೆ ಜ್ಞಾನಪೂರ್ಣಬಲನು ನೀನ ಹೋ ೭
ಸೇರಿ ಇಹರು ಬ್ರಹ್ಮವಾಯು ಚಾರು ಭ್ರಾತೃನಿನ್ನ ಬದಿಲಿ
ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ
ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ
ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ೮
ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ
ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ
ಕಂಗಳಿಂದ ನೋಡೆ ಕೇಳೆ ಭಂಗ ಸತ್ಯಸರ್ವಪಾಪ
ಅಂಗವದ್ದಿ ಭಜಿಪ ನರಗೆ ರಂಗ ಒಲಿವ ಸುರರು ಕೈವಶ ೯
ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ
ಘನ್ನ ಜ್ಞಾನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ
ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ
ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ ೧೦
ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು
ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ
ಸುತ್ತ ಪಂಚನಿಲಯಗಳಲಿ ನಿತ್ಯ ಧೊರೆಯ ರೂಪಗಳನು
ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ ೧೧
ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ
ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ
ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು
ಹರುಷದಿಂದ ಹಾಡಿ ನಮಿಸೆ ದೊರೆಯ
ಕೊಡುವೆ ಕಾಮಿತಾರ್ಥವ ೧೨
ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ
ಆ ಪರೇಶ ಒಲಿದು ಜ್ಞಾನ ದೀಪ ವಿಡುವ ಹೃದಯಕಮಲದಿ
ಕೋಪ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ
ಲೇಪ ರಹಿತನಾಗಿ ಭವದ ಕೂಪ ದಾಟ ಪೋಪ ಬೇಗಹೋ೧೩
ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ
ಅಮರ ಜ್ಞಾನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ
ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ
ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ೧೪
ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು
ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ
ಟೊಂಕದಿರುವ ಸೂತ್ರ ತಾನು ಕಿಂಕಿಣೀ ಸುರಾವದಿಂದ
ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ೧೫
ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ
ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ
ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ
ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ ೧೬
ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ
ತರಿಸಿ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ
ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ
ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ೧೭
ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ
ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ
ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ
ಶುದ್ಧ ವಿಷ್ಣುಭಕಿತ ತೋರಿ ಮಧ್ವಸುತರ ಪೊರೆದ ದಾನಿಹೋ ೧೮
ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ
ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ
ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ
ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ ೧೯
ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು
ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ
ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ
ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ ೨೦
ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ
ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ
ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ
ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು ೨೧
ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ
ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ
ಮುದದಿ ವಾದಿರಾಜ ಹೃದಯ ಸದನ ವಾಜಿವಕ್ತ್ರಗೆರಗಿ
ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ೨೨

ಶ್ರೀ ಹರಿಯ ಚತುರ್ವಿಂಶತಿ
೪೯
ಶರಣು ಶರಣು ಕೃಷ್ಣಕೃಷ್ಣ ಶರಣು ಶರಣು ರಾಮ ರಾಮ
ಶರಣು ಶರಣು ಶ್ರೀನಿವಾಸ ಶರಣು ಶರಣು ಶ್ರೀ ಹರೇ ಪ
ಗುರುಸು ಭಕ್ತಿ ನೀಡಿ ಎನಗೆ ವರಿಸಿ ಶುದ್ಧ ದಾಸನೆಂದು
ಕರುಣ ತೋರೊ ಕೇಶವ ಅನಂತ ರೂಪಿಯೇ ಅ.ಪ
ಲೇಸಿನಿಂದ ಬ್ರಹ್ಮಶಿವರ ಪ್ರೇರಿಸುತ್ತ ಜಗವ ಪೊರೆವೆ
ದಾಸನೆಂದು ಮೊರೆಯ ಹೊಕ್ಕೆ ಕಾಯೊ ಕೇಶವಾ ೧
ವಾರಿನಿಲಯ ದೋಷದೂರ ಪೂರ್ಣಕಾಮ ಮುಕ್ತರೀಶ
ಪಾರರಹಿತ ಸುಗುಣ ಶರಧಿ ನಾರಾಯಣ ೨
ವೇದಮಾತೆ ಶೃತಿ ಸುಗೀತೆ ವೇದಮಾನಿ ಲಕ್ಷಿರಮಣ
ಆದಿಮಧ್ಯ ಅಂತ್ಯ ಶೂನ್ಯ ಶರಣು ಮಾಧವ ೩
ವೇದವೇದ್ಯ ವೇದ ವಿನುತ ವೇದ ಸಾರ ವೇದಬಲ್ಲ
ಸಾಧು ಪ್ರಾಪ್ಯ ವೇದಪಾಲ ಶರಣು ಗೋವಿಂದ ೪
ವಿಶ್ವಜನಕ ವಿಶ್ವಪಾಲ ವಿಶ್ವವ್ಯಾಪ್ತ ವಿಶ್ವಭೋಕ್ತ
ವಿಶ್ವಜೂತಿ ವಿಶ್ವಬಲನೆ ಶರಣು ವಿಷ್ಣುವೆ ೫
ಆದಿ ದೈತ್ಯರನ್ನು ಕೊಂದು ಮೇದಿನೀಯ ಪೊರೆದ ದೇವ
ಬಾಧೆ ಹರಿಸು ಮೂರು ವಿಧಧ ಮಧುಸೂದನ ೬
ಲೋಕತ್ರಯವ ನಳೆದ ನೇಕ ಏಕನಿನಗೆ ಸಾಟಿಯಾರು
ಜೋಕೆಯಿಂದ ಸಾಕಬೇಕು ತ್ರಿ-ವಿಕ್ರಮ ೭
ಸೋಮ ಹಳಿದ ಕಾಂತಿಧಾಮ ನೇಮದಿಂದ ಬಲಿಯ ಕಾಯ್ದೆ
ಹೇಮ ಜ್ಯೋತಿ ಪೂರ್ಣ ಸುಖಿಯೆ ಶರಣು ವಾಮನ ೮
ಬೊಮ್ಮಶಿವರ ಕುಣಿಸಿ ಆಳ್ವ ಅಮ್ಮ ಪ್ರಕೃತಿಯನ್ನು ಧರಿಸಿ
ಸುಮ್ಮಗೇನೆ ಜಗವ ಕಾವೆ ಶರಣು ಶ್ರೀಧರ ೯
ಕರಣ ವ್ರಾತದಲ್ಲಿ ನಿಂತು ಕರಣಕಾರ್ಯಗಳನು ನಡಿಸಿ
ಕರಣ ಪತಿಗಳನ್ನು ಪೊರೆವೆ ಹೃಷಿಕೇಶನೆ ೧೦
ಉದರದಲ್ಲಿ ಜಗವ ಪೊತ್ತು ಸದರದಿಂದ ಒಪ್ಪಿಕೊಂಡೆ
ಉದರದಲ್ಲಿ ರಜ್ಜುಭಂಧ ದಾಮೋದರ ೧೧
ಚೊಕ್ಕವಿಧಿಯ ಹಾಗೆ ಜಗವ ಕುಕ್ಷಿಯಲ್ಲಿ ಪಡೆದ ದೇವ
ಅಕ್ಷರೇಡ್ಯ ಶರಧಿ ಶಯನ ಪದ್ಮನಾಭನೆ೧೨
ಭಕ್ತಜನರ ಪಾಪಸೆಳೆವ ಶಕ್ತ ಪ್ರಲಯ ಸ್ತುತಿಗೈವ ದೇವ
ಮುಕ್ತಿದಾತ ವಿಶ್ವಕುಕ್ಷಿ ವಾಸುದೇವನೆ ೧೪
ಮೇರೆಯಿರದ ಕಾಂತಿಮಯನೆ ಸೇರಿ ಭಾಸ ಕೊಡುವೆ ರವಿಗೆ
ಬೀರಿ ಜ್ಞಾನ ಭ್ರಾಂತಿ ಹರಿಸು ಪ್ರ-ದುಮ್ನನೆ ೧೫
ನೀ ನಿರೋಧ ಕಾಣೆ ಎಂದು ನೀನೆ ಸಿಗುವೆ ಭಕ್ತಿ ಬಲೆಗೆ
ನಾನು ಮೂಢ ಕೃಪಣ ಕ್ಷಮಿಸು ಅನಿ-ರುಧ್ಧನೆ ೧೬
ಕ್ಷರರು ಜೀವ ರಾಶಿ ಎಲ್ಲಕ್ಷರ ವಿರುಧ್ಧ ಲಕ್ಷ್ಮಿತಾನು
ವರನು ಭಿನ್ನ ಉಭಯರಿಂದ ಪುರುಷೋತ್ತಮ ೧೭
ಕರಣಗಳಿಗೆ ಸಿಗುವನಲ್ಲ ಕರಣಗಳಲಿ ಭೇದವಿಲ್ಲ
ಕರಣಜಯವ ಸಿಧ್ಧಿಸೆನಗೆ ಅ-ಧೋಕ್ಷಜ೧೮
ದೋಶರಹಿತ ಮುಕ್ತರೀಶ ನಾಶರಹಿತ ಲಕ್ಷ್ಮಿರಮಣ
ಈಶಬಿಂಬ ಜೀವ ಹೃಸ್ಥ ನಾರಸಿಂಹನೆ ೧೯
ಚ್ಯುತಿ ವಿದೂರ ಸತ್ಯಮಹಿಮ ಸತತ
ಜೀವರೊಡನೆ ವಿತತ(ಇರುವೆ)
ಸ್ತುತಿಸೆ ನಿನ್ನ ಶಕ್ತಿ ನೀಡೊ ಶರಣು ಅಚ್ಯುತ ೨೦
ಇಂದ್ರನನುಜ-ನಿಜಮಹೇಂದ್ರ ತಂದೆ ಸುಖವ-ದಿವಿಜಣಕೆ
ವಂದ್ಯ ವಂದ್ಯ-ವಂದಿಸುವೆನು ಶ್ರೀ- ಉಪೇಂದ್ರನೆ ೨೧
ಸೃಷ್ಠಿಗೈದು ಜಗವ ಲಯಿಪೆ ದುಷ್ಟದಮನ ಶಿಷ್ಟವರದ
ಹುಟ್ಟು ಸಾವು ಕಟ್ಟು ಬಿಡಿಸೊ ಶ್ರೀ ಜನಾರ್ದನ ೨೨
ಯಜ್ಞಭೋಕ್ತ ಮನುವ ಪೊರೆದೆ ಭಗ್ನಗೈಸಿ ದೋಷವೆನ್ನ
ಜ್ಞಾನ ನೀಡೋ ಸುಜ್ಞನೆನಿಸು ವಾಜಿವದನ ಶರಣು ಶ್ರೀಹರೇ ೨೩
ನಿತ್ಯಕೀರ್ತಿ ವಿಭವ ಮೂರ್ತಿ ಭಕ್ತಮನವ ಪಾಪ ಸೆಳಿವೆ
ರಿಕ್ತನಾನು ಸರ್ವವಿಧಧಿ ಕಾಯೊ ಶ್ರೀಕೃಷ್ಣ ೨೪
ಸರ್ವ ಶಬ್ದವಾಚ್ಯ “ಶ್ರೀಕೃಷ್ಣವಿಠಲ”ನನ್ನು ನೆನೆಯೆ
ಸರ್ವಸುಖಗಳಿತ್ತುಕಾವ ಜಿಷ್ಣು ತೆರದಿ ಸತ್ಯಹೋ ೨೫

ಈ ಪದದಲ್ಲಿ ಶ್ರಿಹರಿಯ ಅನೇಕ
೫೦
ಶರಣು ಹೋಗುವೆನಯ್ಯ ನಾನು ಪ
ಸಿರಿ ಅಜಭವ ಶಕ್ರ
ಸುರಸ್ತೋಮಗಳನೆಲ್ಲ
ಸರಸದಿಂದ ಆಳ್ವ
ಪರಮಪುರುಷ ಹರಿಗೆ
ಶಿರಬಾಗಿ ನಮಿಸುತ ಅ.ಪ.
ನಿರುತ ಆನಂದದಿ
ಮೆರೆದು ಇರುವಂಥ
ನಿರಜ ನಿತ್ಯನು ಆದ
ಉರಗನ ಮೇಲ್ವರಗುತ
ಪರಮ ಪರಾತ್ಪರ
ಪರಮವೇದದ ಸಾರ
ಪರಮ ಸದ್ಗುಣ ಪೂರ್ಣ
ಪುರುಷಸೂಕ್ತ ವಂದ್ಯ
ಪರಿಪರಿ ರೂಪದಿ
ಸರ್ವತ್ರ ಇರುವಂಥ
ನಿರ್ಗುಣ ನಿರಾಕಾರ
ನಿರುಪಮ ನಿಸ್ಸೀಮ
ನಿರುತ ತೃಪ್ತನು ಆದ
ಸರ್ವಸಾರ ಭೋಕ್ತ
ಸರ್ವರ ಬಿಂಬನು
ಸರ್ವಗುಣ ಪೂರ್ಣ
ಸರ್ವರ ಆಧಾರ
ಸರ್ವೇಶ ಸ್ವತಂತ್ರ
ಸರ್ವಶಬ್ದ ವಾಚ್ಯ
ಸರ್ವರಿಂ ಭಿನ್ನನು
ಸರಸಸೃಷ್ಟಿಯ ಮಾಳ್ವ
ನೀರಜನಾಭಗೆ
ಚರಣವ ಪಿಡಿಯುತ್ತ
ಉರುಗಾಯನ ದೇವ
ಸಲಹು ಸಲಹೆಂದು ೧
ವಾರಿಯೊಳಾಡುವ
ಭಾರವಹೊರುವ
ಕೋರೆಯತೀಡುವ
ಕರುಳಾನು ಬಗೆಯುವ
ವರವಟು ಆಗುವ
ಪರಶುವ ಪಿಡಿಯುವ
ನಾರಿಯ ಹುಡುಕುವ
ನಾರಿಯ ಕದಿಯುವ
ಬರಿಮೈಯ್ಯ ತೋರುವ
ತುರುಗವನೇರುವ
ನಾರಿಯು ಆದವ
ಭಾರತ ಮಾಡುವ
ವರ ಸಾಂಖ್ಯ ಹೇಳುವ
ಕರಿಯನು ಪೊರೆಯುವ
ಪೋರಗೆ ಒಲಿದವ
ವರ ಋಷಭನಾದ
ಹರಿ ಯಜ್ಞ ನಾದವ
ತರಿವ ರೋಗಂಗಳ
ವರಹಂಸ ರೂಪನು
ತುರುಗ ವೇಷಧಾರಿ
ನಾರಾಯಣ ಮುನಿಯೆ
ಗುರು ದತ್ತಾತ್ರೇಯನೆ
ಪರಿಸರ ಪರಮಾಪ್ತ
ಪೊರೆಯೊ ಮಹಿದಾಸನೆಂದು
ಕರವೆತ್ತಿ ಮುಗಿಯುತ ೨
ಪಾಪಿಯ ಪೊರೆದವಗೆ
ತಾಪ ಇಲ್ಲದವಗೆ
ಅಪವರ್ಗದಾತಗೆ
ವಿಪನ ಏರಿದವಗೆ
ಗೋಪತಿಯಾದವಗೆ
ತಾಪವ ಮೆದ್ದವಗೆ
ಚಾಪವ ಮುರಿದವಗೆ
ಚಪಲ ಇಲ್ಲ ದವಗೆ
ಕಪಟರ ವೈರಿಗೆ
ಗುಪ್ತದಿ ಇರುವಗೆ
ವಿಪ್ರನ ಸಖನಿಗೆ
ಅಪ್ರಮೇಯನಿಗೆ
ಗೋಪೇರ ವಿಟನಿಗೆ
ತಾಪಸ ಪ್ರೀಯಗೆ
ವಿಪ್ರಶಿಶು ತಂದವಗೆ
ಮುಪ್ಪಿಲ್ಲ ದವಗೆ
ತ್ರಿಪುರಾರಿ ಸಖಗೆ
ಕೃಪಣ ವತ್ಸಲನಿಗೆ
ತಪ್ಪು ಮಾಡದವಗೆ
ಆಪ್ತತಮನಿಗೆ
ಸಪ್ತ ಶಿವವ್ಯಕ್ತನಿಗೆ
ಶ್ರೀಪತಿಯಾದವಗೆ
ಕಪಟನಾಟಕ ಪ್ರಭು
ಗೋಪಾಲಕೃಷ್ಣಗೆ
ಒಪ್ಪಿಸಿ ಸರ್ವಸ್ವ
ಅಪ್ಪನೆ ಅಪ್ಪನೆ
ತಪ್ಪದೆ ಸಲಹೆಂದು ೩
ಅನ್ನವು ಆದವಗೆ
ಅನ್ನಾದ ನೆಂಬುವಗೆ
ಅನ್ನದ ಖ್ಯಾತನಿಗೆ
ಚಿನ್ಮಯ ರೂಪಗೆ
ಬೆಣ್ಣೆಯ ಕಳ್ಳಗೆ
ಅನಾಥನಾದವಗೆ
ಕನಕಮಯನಿಗೆ
ಅನಂತರೂಪನಿಗೆ
ಉಣ್ಣದೆ ಇರುವವಗೆ
ಉಣ್ಣುತ ಉಣಿಸುವವಗೆ
ಜ್ಞಾನಿಗಮ್ಯನಿಗೆ
ಜ್ಞಾನ ದಾಯಕನಿಗೆ
ಗುಣತ್ರಯ ದೂರಗೆ
ಭಾನುವ ತಡೆದವಗೆ
ಆನತ ಬಂಧುವಿಗೆ
ಅನುಪಮನಾದವಗೆ
ತನುಮನ ಪ್ರೇರಿಪಗೆ
ದಾನವ ವೈರಿಗೆ
ತನ್ನಲ್ಲೆ ರಮಿಸುವನಿಗೆ
ಮನ್ಮಥ ಪಿತನಿಗೆ
ಪೆಣ್ಣಿನ ಪೊರೆದವಗೆ
ಅಣುವಿಗೆ ಅಣುವಿಹಗೆ
ಘನಕೆ ಘನ ತಮನಿಗೆ
ಕಣ್ಣಿಲ್ಲದೆ ನೋಳ್ಪ
ಉನ್ನತ ಪ್ರಭುವಿಗೆ
ಬೆನ್ನು ಬೀಳುವೆ ನಾನು
ಇನ್ನು ಕಾಯೋ ಎಂದು ೪
ಹೇಯನಾಗದ ಶೃತಿ
ಗೇಯನು ಸುಜನರ
ಪ್ರೀಯನು ಸರ್ವರ
ಕಾಯುವ ಸುಂದರ
ಹಯಮುಖ ಸರ್ವದ
ಪ್ರಾಯದಿ ಮೆರೆಯುವ
ಗಾಯನ ಪ್ರಿಯನಾದ
ಮಾಯಾರಮಣ ಭಾವ
ಮಾಯೆ ಹರಿಸಿ ಮುಕ್ತಿ
ಭಾಗ್ಯ ಭಕ್ತರಿಗೀವ
ತೋಯಜಾಂಬಕ ಸುರ
ನಾಯಕರಿಗೆ ಭಕ್ತಿ
ತೋಯದಿ ಮುಳುಗಿಪ
ಶ್ರೀಯರಸಾಭಯ
ದಾಯಕ ಗುರು ಮಧ್ವ
ರಾಯರ ಪ್ರಿಯನಾದ
ಜೇಯ ಜಯಮುನಿ
ವಾಯುವಿನ ಅಂತರದಿ
ನವನೀತ ಧರಿಸಿರ್ಪ
ತಾಂಡವ ಸಿರಿಕೃಷ್ಣ
ವಿಠಲ ರಾಯನಿಗೆ
ಕಾಯ ವಾಚಮನದಿ
ಗೈಯ್ಯುವ ಸಕಲವನು
ಈಯುತ ನಮಿಸುತ
ಜೀಯನೆ ಜೀಯನೆ
ಕಾಯಯ್ಯ ಕಾಯೆಂದು ೫

೭೫
ಷಟ್ಪದಿ
ಶ್ರೀ ರಮೇಶ ಪದಾಬ್ಜ ಭೃಂಗ ಸಮೀರ ಮತಕುಲ ದೀಪ ಶಾಸ್ತೋದ್ದಾರ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ ೧
ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ ೨
ವೇದ ವೇದ್ಯ ವಿನಾಂತ ತದ್ವನ ಸಾಧು ಪೂರ್ಣಾನಂದ ಚಿನ್ಮಯಗಾಧ ವರ್ಜಿತ ಮಹಿಮ ಸೃಷ್ಠ್ಯಾ ದ್ಯಷ್ಠ ಕರ್ತ ವಿಭುಸಾಧು ವಾಚದಕಾರ ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ ೩
ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ ೪
ಬಾಲ ವೃದ್ಥರು ಹಾಗೆ ವನಿತಾ ಸಾಲುಗಳು ಮತ್ತಿತರ ಜನತಾವೆಲ್ಲ ಕೂಡುತ ನಿಮ್ಮ ಭಜಿಸುವ ಬಗೆಯ ನೇ ನೆಂಬೆಭೂಲಲನೆಯನಲಂಕರಿಸಿದನೆ ಪಾಲಿಸುತ ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ ೫ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ ೬
ಹಂತ ನಿಮ್ಮಯ ಶಾಂತ ಗುಣ ನಾ ನೆಂತು ಬಣ್ಣಿಪೆ ನೂಕಿದ ಖಳಗಣಾಂತದಲಿವಿಧಿ ಶಂಖು ಕರ್ಣನ ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ ೭
ಕುಂತಿಕಂದನ ಯುಗದಿ ಕರಕರೆ ಕಂತೆ ಕುರುಕುಲಕಾಟೆಕ್ಕಲಿ ಬರೆಅಂತೆಯೇ ಸರಿ ವ್ಯಾಸರಾಜಗೆ ತಾಳಲೀ ಜನ್ಮಸ್ವಂತ ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ ೮
ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ ೯
ನೀನು ನಿಂತಿಹೆ ಎಂದು ನಾಸ್ತಿಕರಿನ್ನು
ತಿರುಗುತಲಿಹರು ತಮ್ಮಯ
ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು
ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ
ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ ೧0
ಮೃತ್ತಿಕೆಯೆ ತಾ ನಿತ್ತು ಸಲಹಿತು ವಿತ್ತಪುತ್ರ ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ ೧೧
ಇಂತು ಸಿದ್ಧವು ಇಲ್ಲ ಜಗದಲಿ ಪಂಥ ಒಡ್ಡವೆ ನಿಮ್ಮ ತೆರಗುರುವೆಂತ ರಾಮ ಪದಾಬ್ಜ ಮಧುಕರ ಮಧ್ವ ಮುನಿಕಂದಗೀತೆ ಸ್ರ‍ಮತಿ ಶೃತಿ ಸೂತ್ರ ಮರ್ಮವ ಕಿತ್ತು ಕೊಟ್ಟೆಯೊ ಶಿಷ್ಯ ಸಂಘಕೆಸುತ್ತಿ ಕಲಿಯುತ ಮುಕ್ತಿ ಸೂರೆಯ ಮಾಡಲೆಂದು ಖರೆ ೧೨
ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ
ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ ೧೩
ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ ೧೪
ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ೧೫ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ ೧೬
ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ ೧೭
ಶತ್ರುವೀತನನನ್ಯರಿಗೆ ನಿಜ ಮಿತ್ರ ಮತಿಮತ ಸಂತತಿಗೆ ಸಂಶಪ್ತ ಸುಜನಗೆ ಕಾಮಧೇನುವು ಜ್ಞಾನ ಭಾಸ್ಕರನುಮತ್ತೆ ಹರಿಗುರು ದೂತ ನಿವ ಬಹು ಶಕ್ತ ನೀಡುವ ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು ೧೮
ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ ೧೯
ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ ೨೦
ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು ೨೧

ಇದು ಶ್ರೀಹರಿಯ ನಾನಾ ಅವತಾರಗಳನ್ನೂ
೫೧
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ
ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ.
ಶ್ರೀನಿವಾಸ, ಲಕ್ಷ್ಮೀ ನಿವಾಸ, ಜಗದೊಳುವಾಸ, ನಿರುಪಮ
ಈಶ, ತರಿಯುವೆ ಕ್ಲೇಶಾ
ನಿರ್ಗತದೋಷ, ದಾನವನಾಶ, ಸೃಷ್ಠಿವಿಲಾಸ,
ಕೊಡುಲೇಶ, ಕೊಡುಲೇಶ
ತಡೆಯಲಿಬೇಡ, ಬಿಡುಬಿಢೆಮಾಯ, ಪೊಡವಿಗೆ
ಜೀಯ, ಸಡಗರ ದೈವ
ಬಡವನು ನಾನು ಕೊಡುವುದು ಏನು, ಅಡಿಗಳನೀಡು,
ಇಡುವೆನು ಮೌಳಿ, ಇಡುವೆನು ಮೌಳಿ
ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ
ಮುನಿನುತ ಪಾತ್ರ, ಗುಣಗಣವ್ರಾತ, ಅನುದಿನ ಪ್ರೀತ,
ತನುಮನನಾಥ ತನುಮನನಾಥ
ಇಂದಿರೆಯರಸ, ಚಂದ್ರನ ಹಳಿವ, ಸುಂದರರೂಪ,
ಕುಂದುಗಳಳಿದು,
ಬಂಧನ ಬಿಡಿಸೊ, ಮಂದರಧಾರಿ, ನೊಂದೆನೊ ಭವದಿ,
ಕಂದನ ಸಲಹೋ ಕಂದನ ಸಲಹೋ ೧
ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ
ಮಾಧವ ಶರಣು ಸಾಧುಸುಸಂಗ ಸಾಧಾರದೀಯೋ
ವೇಧನ ತಂದೆ ವೇಧನತಂದೆ
ವೇದವ ತಂದು ವೇಧನಿಗಿತ್ತೆ, ಪಾದದಿ ಬಿದ್ದರು
ಸೋದರ ಪ್ರಜೆಗಳು
ಸಾಧಿಸಿ ಸುಧೆಯ, ಮೋದದಿ ಪೊರೆದೆ, ಶೋಧಿಸಿ
ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ
ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ
ಕರುಣ ಅಪಾರ, ಸುರಪರಿವಾರ, ವಿಶ್ವಾಧಾರ,
ಸಾರಕೆ ಸಾರ ಸಾರಕೆ ಸಾರ
ನಾರಿಯ ತಂದೆ, ಕ್ರೂರನಕೊಂದೆ, ಘೋರನು ಆದೆ,
ಕಂಭದಿಬಂದೆ
ಭಯವನು ತಂದೆ, ದೈತ್ಯನ ಕೊಂದೆ, ನಂದವ ತಂದೆ,
ಕಂದನ ಪೊರೆದೆ ಕಂದನ ಪೊರೆದೆ ೨
ಅದಿತಿಯಕಂದ, ವಾಮನ ಛಂದ, ಯಾಗಕೆ ಬಂದ,
ಬಲಿಯೆಡೆನಿಂದ
ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ
ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ
ಗಗನವು ಮುಗಿಯೆ, ಬಲಿಕೈಮುಗಿಯೆ,
ಶಿರವನ್ನೀಯೆ, ಭಕ್ತನಕಾಯೆ,
ಅಭಯವನೀಯೆ, ಹರಿಸುತಮಾಯೆ,
ಬಾಗಿಲಕಾಯ್ದೆ, ಬಾಗಿಲಕಾಯ್ದೆ
ವರಮುನಿಕುವರ, ಪರಶುವಪಿಡಿದ, ಧೊರೆಗಳ ತಂದ,
ವಿಪ್ರರ ಪೊರೆದ,
ಚಕ್ರನ ಗರ್ವ, ಮುರಿದನು ಶೂರ, ಸುರಮುಖದಿರುವ,
ವರಸಮರಿಲ್ಲ ವರಸಮರಿಲ್ಲ
ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ,
ಸತ್‍ಜನಪ್ರೇಮ,
ದೇವಲಲಾಮ, ಆತ್ಮಾರಾಮ, ಕ್ಷೇಮಸುಧಾಮ,
ಮಂಗಳ ನಾಮ ಮಂಗಳನಾಮ ೩
ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ
ಮೋಹನರಾಮ, ಹನುಮನಕಾಮ, ಇಲ್ಲವುಸೀಮಾ,
ಜಯಜಯರಾಮ ಜಯಜಯರಾಮ
ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ
ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ
ಯೋಗಿಯಕೂಡಿ, ಹೋಗುತ ಬೇಗ, ನೀಗಿಸಿ ಬಾಧೆ,
ಆಗಿಸಿ ಯಾಗ,
ಹೋಗಿಸಿಶಾಪ, ಬಾಗಿಸಿ ಬಿಲ್ಲು, ಆಗಲು ಮುದುವೆ,
ಸಾಗುತ ಬಂದ ಸಾಗುತ ಬಂದ
ತಂದೆಯ ವರವ, ಛಂದದಿನಡಿಸಿ, ಪೊಂದುತಲಡವಿ,
ಕೊಂದನು ಖಳರ,
ಮಂದರ ಮೋಹಿಸೆ, ಇಂದಿರೆಯಗಲಿದಂದದಿ ತೋರಿ,
ಮುಂದಕೆ ನಡೆದ ೪
ವಾಲಿಯ ಕುಟ್ಟಿ, ಸೇತುವೆ ಕಟ್ಟಿ, ಲಂಕೆಯ
ಮುಟ್ಟಿ, ಕಳ್ಳನ ಮೆಟ್ಟಿ
ಭಕ್ತಗೆಪಟ್ಟ ವಲಿಯುತ ಕಟ್ಟಿ, ತಿರುಗುತ ದಿಟ್ಟ,
ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ
ನಿಜ ದೊರೆ ಇವನೆ ಅಜಪಿತನಿವನೆ, ಅಜರನು ಇವನೆ,
ನಿಜಮುನಿಇವನೆ, ನಿಜವಿಧಿ ಇವನೆ,
ನಿಜಶಿವನಿವನೆ, ನಿಜಕ್ರತುಇವನೆ, ಅಜಿತನು ಇವನೆ,
ಸರ್ವೇಶ, ಸರ್ವೇಶ
ದೇವಕಿಕಂದ, ಗೋಪಿಯನಂದ, ಪೂತಣಿಕೊಂದ,
ಬೆಣ್ಣೆಯ ತಿಂದ
ಕುಣಿವುದು ಛಂದ, ಬಹು ಛಂದ, ಬಹು ಛಂದ,
ಪೋರನು ಎನಿಸಿ, ಚೋರನು ಎನಿಸಿ
ಜಾರನು ಎನಿಸಿ, ಮಾರನು ಎನಿಸಿ, ವೀರನು
ಎನಿಸಿ, ಕ್ರೂರನು ಎನಿಸಿ,
ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ ೫
ಕಂಸನ ಕೊಂದೆ, ಗುರವಡಿ ನಿಂದೆ, ಕಂದನ ತಂದೆ,
ಊರಿಗೆ ಬಂದೆ,
ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು
ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು
ಚತುರನು ಹರಿಯು, ದ್ವಾರಕೆಗೈದು, ಪ್ರಜೆಗಳಮುಂದು,
ಸಾಗಿಸಿ ಬಂದು,
ಶೃಗಾಲನ ಮುರಿದು, ಓಡುತನಡೆದು, ಗುಹೆಯನು
ವೊಕ್ಕೂ, ತಾಮುಕುಂದ ತಾಮುಕುಂದ,
ಭೃಷ್ಮೆಯ ನಾಥ, ಪಾಂಡವ ದೂತ, ಪಾರ್ಥನ
ಸೂತ, ಜಗವಿಖ್ಯಾತ
ಬೋಧಿಸಿ ಗೀತ, ತೋರುವ ಆತ್ಮ, ಕೌರವ ವ್ರಾತ,
ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ
ಗುಣಗುಣಿ ಭೇದ, ಅವಯವ ಭೇದ, ಉದರಗ ಭೇದ,
ಕಾಲದಿ ಭೇದ
ದೇಶದಿ ಭೇದ, ಮೂಲಾಂಶ ಭೇದ ಇಲ್ಲವು ಎಂದು,
ಇಲ್ಲವು ಎಂದು
ವಿಭುಶರಣೆಂಬೆ, ವಿಭುಶರಣೆಂಬೆ ೬
ಸುಜನರ ಬಂಧು, ಉತ್ತಮ ಬುದ್ಧ, ಬತ್ತಲೆನಿಂದು,
ವೇದಸುವೃಂದ,
ಸಂಶಯವೆಂದು, ಕುಜನರ ಮನಕೆ, ತವಕದಿತಂದು,
ತ್ರಿಪುರರಕೊಂದ,
ಬಲು ಪ್ರೌಢ, ಬಲು ಪ್ರೌಢ, ತನ್ನನು ಬಲ್ಲ, ಅನ್ಯರ
ಬಲ್ಲ, ಎಲ್ಲವ ಬಲ್ಲ
ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ,
ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ,
ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ
ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ,
ಜೀವನು ಅಲ್ಲ, ಜಡವೂ ಅಲ್ಲ, ಕಾಲವು ಅಲ್ಲ,
ಸ್ವಾಮಿಯು ಇಲ್ಲ, ತಾನೇ ಎಲ್ಲ
ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ರ‍ಕಷ್ಠ ೭
ಕಲಿಯುಗ ಮುಗಿಯೆ, ಧರ್ಮವು ಮುಳುಗೆ,
ಕುಜನರ ಮುರಿಯೆ,
ಸುಜನರ ಪೊರೆಯೆ, ತೇಜಿಯನೇರಿ, ಕಲ್ಕಿಯು
ಎನಿಸಿ, ಧರ್ಮವನುಳುಹಿ,
ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ,
ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ
ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ
ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ
ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ,
ಇವನೇನಲ್ಲ, ಅದ್ಭುತಮಹಿಮ, ಅದ್ಭುತಮಹಿಮ,
ಪ್ರಕೃತಿಯ ಸತ್ತಾ,
ಜೀವರ ಸತ್ತಾ, ಜಡಗಳಸತ್ತಾ ಬಗೆ ಬಗೆ ಸತ್ತಾ,
ಸಕಲವ ನೀತ, ನೀಡುವ ದಾತ,
ಸರ್ವಸುವ್ಯಾಪ್ತ, ಸರ್ವಸ್ವತಂತ್ರ೮
ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ
ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ
ಮಧ್ವರಗುರುವೆ, ಮಧ್ವರ ಗುರುವೆ, ಮೇದಿನಿಯೊಳಗೆ,
ವೇದಗಳಳಿಯೆ,
ಮೇದಿನಿಸುರರ ಖೇದವು ಬೆಳೆಯೆ, ಆದರದಿಂದ
ವಿಧಿ ಮುಖಸುರರು,
ಛೇದಿಸಿಕತ್ತಲೆ ಮೋದವನೀಡೆ, ಪಿಡಿದರು ಪಾದ,
ಪಿಡಿದರು ಪಾದ
ಶೋಧಿಸಿ ವೇದ, ವೇದ ವಿಭಾಗ, ಮಾಧವ
ನೀನು ಮೇದಿನಿಗಿತ್ತೆ
ವೇದಸುಮರ್ಮ, ಬೋಧಿಸೆ ಸೂತ್ರ ಗೈದ ಮಹೇಶ,
ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ
ನಿತ್ಯಾಹೇಯ, ಸಾತ್ವವತೇಯ ಶ್ರೀವಿಧಿಗೇಯ,
ಛಂದದಸುಕಾಯ
ನಾ ನಿರುಪಾಯ ನಾಗಿಹೆ ಜೀಯ, ಭಾರತಪೇಯ
ಕುಡಿಸೈ ಜೀಯ
ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ ೯
ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ
ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ,
ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ
ಬೇಡವೆನಯ್ಯ, ಬಿಡದಿರುಕೈಯ್ಯ,
ಭವಬಿಡಿಸಯ್ಯ, ಭಯಹರಿಸಯ್ಯ
ಭಕ್ತಿಯೆ ಧ್ಯೇಯ, ಸತ್ಯವಿದ್ಯೆಯ, ದಯಮಾಡಯ್ಯ,
ದಯಮಾಡಯ್ಯ
ಪೊರೆಮಹಿದಾಸ, ನಿಖಳರ ಭಾಸ, ವಾರಿನಿವಾಸ,
ಶರಣುಪರೇಶ
ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ,
ನೀಹೃಷೀಕೇಶ, ನೀಹೃಷೀಕೇಶ, ವಿಶ್ವನೆಶರಣು, ತೈಜಸ ಶರಣು,
ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು
ಋಷಭನೆ ಶರಣು, ದತ್ತನೆಶರಣು, ಹಯಮುಖಶರಣು
ಶರಣು ಅನಂತ, ಶರಣು ಅನಂತ ೧೦
ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ
ಬಿಂಕವ ತೊರಿಯೋ, ಮಂಕನು ನಾನು, ಡೊಂಕನು
ತಿದ್ದೊ, ಪಂಕಜನಯನ
ಶಂಕೆಯ ಬಿಡಿಸಿ, ಶಂಕೆಯ ಬಿಡಿಸಿ, ದೊಡ್ಡವ ನೀನು,
ದಡ್ಡನು ನಾನು
ದುಡ್ಡೇನಿಲ್ಲ, ವಡ್ಡಿಹೆ ಮನವ ಅಡ್ಡಿಯು ಏನೊ ವಡ್ಡಲು
ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ
ಜಯಮುನಿ ಆಣೆ, ಗುರುಗಳ ಆಣೆ,
ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ,
ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ,
ಮರುತನ ಮತದ
ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ
ಇಂದಿರೇಶನ ದಾಸರ ನಮಿಪೆ, ಕಂದನ ಪದವಿದು
ನಂದದಿ ಪಠಿಸೆ
ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ
ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ ೧೧

ದಾಸರು ತಮ್ಮ ಡಾಂಭಿಕ ಜೀವನದ
೮೬
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ
ಚಪಲ ತನದಿ ಬಹು ಕಪಟಭಕುತಿನಟಿಸಿ
ವಿಪುಳಮತಿಯು ಎನಿಸಿ ಗುಪಿತ ದೋಷಿಯು ಆದೆ ಅ.ಪ.
ಬಟ್ಟೆ ನೋಡಲು ಬಹು ಛಂಧ-ಮೇಲೆ
ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ
ಪಟ್ಟೆಮಡಿಗಳ ಭಾರೀ ಥಳಕೊ-ಬಹಳ
ದಟ್ಟ ತುಳಸೀಸರಗಳ ಹೊಳಪೂ ಆಹಾ
ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು
ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ
ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು
ಕೂಗಿ ಪಾಡುವಂಥ ಭ್ರಷ್ಟ ಮಾನವ ನನಗೇ ೧
ವೇದ ವಾದಗಳೇನು ಕಾಣೆ-ಶುದ್ಧ
ಸಾಧು ಕರ್ಮಗಳೊಂದು ಇಲ್ಲ-ಜನರ
ಮೋದಗೋಸುಗವೇನೆ ಎಲ್ಲ_ಕಾಮ
ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ
ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ
ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ
ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ
ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ ೨
ನೇಮನಿಷ್ಠೆಗಳಾಟ ಹೊರಗೆ-ಗೃಹದಿ
ಪ್ರೇಮವಿಲಾಸ ಆಟ ಕೂಟಜನ
ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ
ಕಾಮುಕನಾಗಿ ಚರಿಸಿದೆ ಜಗದೀ ಆಹಾ
ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ
ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ
ತಾಮಸರಿಗೆ ಉಪದೇಶ ನೀಡುತ ಸತ್ಯ-
ಭಾಮೆಯರಸ ನಿನಗೆ ದೂರನಾದೆನಲ್ಲಾ ೩
ಹಾಡಿಹಾಡುವೆ ಎತ್ತಿ ಸುತ್ತ ಜನರು
ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ
ಹಾಡಿನಲ್ಲಿಹ ಸವಿಯುಣ್ಣ ದೇನೆ
ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ
ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ
ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ
ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ
ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ೪
ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ
ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ
ಹಾರುತ ತತ್ವರಾಶಿ ನುಡಿದು-ಊರು ಜ-
ನರಮುಂದೆ ಪಾಂಡಿತ್ಯ ತೋರ್ಪೆ ಆಹಾ
ನಾರಿ ಮನೆ ಧನಮ ಮತೆ ದೂರಗೈಯ್ಯದೆ ಮನದಿ
ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ
ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ
ಪಾರುಗಾಣದ ಕರುಣ ತೋರದಿದ್ದರೆ ಇನ್ನು ೫
ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ
ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ
ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ
ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ
ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ
ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು
ಗುಡುಗಿ ಗುಡುಗುವೆ ನಿತ್ಯ ಎನ್ನ ಅನಾದಿ
ಜಾಡ್ಯವ ಹರಿಸಿ ಬಡಿದು ಭಕ್ತಿಯ
ನೀ ಕಲಿಸದಿದ್ದರೆ ಈಗ ೬
ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ
ದಡ್ಡನೆಂಬುದ ಬಲ್ಲೆ ಮನದಿ-ಹಾಗೂ
ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು
ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ
ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ
ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ
ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ
ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ ೭
ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ
ಮೆಚ್ಚಿ ಬಂದಿಹ ನವನು ಬಿಡುವನೇನು
ಇಚ್ಛೆ ನನ್ನದು ನಡೆಯದೇ ನೊಂದು
ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ
ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ
ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು
ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ
ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ ೮
ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ
ದಾಸರ ಪ್ರಿಯ ಮೋಹನ್ನ ಪರಂಪರೆಯ
ದಾಸನೆನಿಸಿ ಯೆನ್ನ ಮೆರೆಸಿ ಹೀಗೆ
ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ
ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ
ನಾಶವಾಗದೆ ದೋಷ ಭಾಸವಾಗದೆ ಜ್ಞಾನ
ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ
ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ೯

ಇದು ಶ್ರೀ ಮಧ್ವಾಚಾರ್ಯರನ್ನು
ಮಂದಾಸಲ ರಗಳೆ
೬೦
ಶ್ರೀಮದ್ಗುರುವರ ಪವನಗೆ ಜಯ ಜಯ
ರಾಮ ಪದಾಂಬುಜ ಭೃಂಗಗೆ ಜಯ ಜಯ
ತಾಮಸ ಕುರುಕುಲ ಧ್ವಂಸಕ ಜಯ ಜಯ
ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ ೧
ವಾಸುದೇವ ಸುನಾಮಕ ಜಯ ಜಯ
ದೋಷ ಜ್ಞಾನ ವಿನಾಶಕ ಜಯ ಜಯ
ಭೇಷ ಸೂರ್ಯ ವಿಭಾಸಕ ಜಯ ಜಯ
ವ್ಯಾಸ ಸುಭೋಧೆಯ ದರ್ಪಣ ಜಯ ಜಯ ೨
ಶುಭಗುಣಲಕ್ಷಣ ಶೋಭಿತ ಜಯ ಜಯ
ಅಭಯ ಪ್ರದ ಭವ ಮೋಚಕ ಜಯ ಜಯ
ಇಭವರದಾಜ್ಞಾಧಾರಕ ಜಯ ಜಯ
ವಿಭುಧ ಸುಖಾಂಬುಧಿ ಸೋಮನೆ ಜಯ ಜಯ೩
ನಿತ್ಯ ಸದಾಗಮ ಕೋಶಗೆ ಜಯ ಜಯ
ಸತ್ಯವತೀಸುತ ಪ್ರೀಯಗೆ ಜಯ ಜಯ
ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ
ಭೃತ್ಯ ಮನೋರಥ ಸುರತರು ಜಯ ಜಯ ೪
ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ
ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ
ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ
ತುಚ್ಚಮತಾಟವಿ ಪಾವಕ ಜಯ ಜಯ ೫
ಯತಿ ಕುಲಾಂಬುಜ ತರಣಿಗೆ ಜಯ ಜಯ
ಶೃತಿತತಿ ವಿಮಲ ಸುಭೋದಕ ಜಯ ಜಯ
ರತಿಪತಿ ಪಿತವರ ದೂತಗೆ ಜಯ ಜಯ
ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ ೬
“ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ
ಲೋಕ ಹಿತಪ್ರದ ನಿಜಗುಣ ಜಯ ಜಯ
ಶ್ರೀಕರ ಶುಭಕರ ಜಯಕರ ಜಯ ಜಯ
ಆಕಮಲಾಸುತ ರಯೀಪತಿ ಜಯ ಜಯ ೭

ಶ್ರೀ ವಾಯು ದೇವರ ಮೂಲರೂಪ
ವಾಯ ದೇವರ ಮಹಿಮಾ ವರ್ಣನೆ
೬೧
ಮೂರವತಾರ , ಷಟ್ಪದಿ
ಶ್ರೀರಮೇಶ ವಿಧೀರ ವಿಪವೃತ್ರಾರಿ
ಸುರಗಣ ವಿನುತ ಸರ್ವಾಧಾರ
ನಿರುಪಮನೆ ಸ್ವತಂತ್ರಗುಣಾರ್ಣವ ಪ್ರಭುವೇ |
ಸಾರವಾಚದ ಕಾರ ಪತಿ ಓಂಕಾರ
ವ್ಯಾಹೃತಿ ವಾಚ್ಯ ಸರ್ವಪ್ರೇರಕ
ಬಲಸುಭಾಸಕ ಹರಿಯೆ ವಾಗ್ರಸನೆ ನಮಿಪೆ ೧
ಆಪ್ತನೆಂದರೆ ಪ್ರಾಣ ಸರಿ ಪರಮಾಪ್ತ
ಹರಿಯ ಯಥಾರ್ಥಜ್ಞಾನ ಪ್ರಾಪ್ತಿ ಮಾಡಿಸಿ
ವಿಷ್ಣು ಕರುಣವ ಕೊಡಿಸುವನು ತಾನು |
ಆಪ್ತ ನೆನ್ನೆಯಥಾರ್ಥ ಪೇಳುವ ಮತ್ತೆ
ನಿಶ್ಚಯ ಜ್ಞಾನವುಳ್ಳವ ಶಕ್ತ ಕರುಣ
ಪಟುತ್ವಯುತನಿರ್ವಂಚನೆಗಳಿಂದ ೨
ಶಿಷ್ಯ ವಾತ್ಸಲ್ಯ ಯುತ ಗುರುಸರಿ
ವಿಶ್ವ ಜನಕನ ಪ್ರಥಮ ಭಕ್ತಶ್ವಾಸಗಿಂತಲು
ಬೇರೆಯವನಿಲ್ಲ ಪವಮಾನನವ |
ದೋಷ ಸಂಶಯ ರಹಿತ ಹರಿ ವಿಶ್ವಾಸ
ಪಾತ್ರ ವಿಶೇಷ ಮಹಿಮಸುರಾಶ್ರಯ
ನಿವನು ವಂಶನೆ ನಿಸುವ ಸೂತ್ರಗಾನಮಿಪೆ ೩
ಯಾವ ಜ್ಞಾನ ಬಲ ಸ್ವರೂಪ ಸುದೇವ
ಕ್ರೀಡಾದಿ ಗುಣಯುತ ಭವನಾವಿಕ
ಪ್ರಭು ವಾಯುವಿನಗುಣ ಚರಿತೆ ವೃಂದಗಳ |
ಪಾವನ ಬಳಿತ್ಥಾದಿ ಶೃತಿಗಳು
ಸಾವಧಾನದಿ ಪೊಗಳುವವೊ ಆಭಾವಿ
ಬ್ರಹ್ಮನ ಮೂಲ ರೂಪವುಜ್ಞಾನ ಬಲಮಯವು ೪
ಮೂಲ ರಾಮಾಯಣ ವಿಶೇಷವ
ಪೇಳುವ ಹನುಮನೇ ಪ್ರಥಮ ನಿಹಖೂಳ
ದಿತಿ ಜನ ಸೈನ್ಯ ಮಾರಕ ಭೀಮ ನೆರಡೆನ್ನಿ |
ಶೀಲ ಸಖಗಳ ನೀವ ಶಾಸ್ತ್ರವ
ಪಾಲಿಸಿದ ಗುರು ಮಧ್ವರಾಯರೆ ಮೂಲ
ಮುಖ್ಯ ಪ್ರಾಣ ದೇವನ ಮೂರನೆಯ ರೂಪ ೫
ಪ್ರಾಣ ನೀತ್ರಯ ರೂಪಗಳು ಸಮವೆನ್ನುವದು
ಸರ್ವ ವಿಷಯದಿ ಮುಕ್ಕಣ ಪ್ರಮುಖರ
ಜ್ಞಾನ ದಾತೃವಿಗಿನ್ನು ಸಮವುಂಟೆ |
ಜ್ಞಾನ ವಾಚಕ ಹನುಮ ಶಬ್ದವು
ಪೂರ್ಣ ಹರಿ ಸಂದೇಶವೈದನು
ಜಾನಕಿಗೆ ನಿರ್ದೋಷ ವಾಕ್ಯಗಳನ್ನು ಧೀಮಂತ ೬
ಪಂಚರಾತ್ರಾಗಮ ಪುರಾಣ ವಿರಂಚಿ
ಜನಕನ ತೋರ್ಪವೇದವು ವಂಚಿಸದ
ಇತಿಹಾಸಗಳು ಕೂಡುತಲಿ ಸಪ್ತಗಳ |
ಮಿಂಚಿಸುತ ಸುಜ್ಞಾನ ಪಾಪದ
ಸಂಚಯ ತರಿವ ಕಾರಣದಿ ಬಲಿವಂಚಕನ
ಭಕ್ತರು ಕರೆಯುವರು ಸಪ್ತಶಿವ ವೆಂದು೭
ಮಾತೆಯಂದದಿ ಹಿತವ ನೀಡುವ
ಶಾಸ್ತ್ರ ವಚನಕೆ ಮಾತೃ ವೆಂಬರು
ಸಪ್ತ್ರ ಶಿವಕರ ಮಾತೃಗಳ ಧರಿಸಿಪ್ಪ ನಿವನೆಂದು |
ಖ್ಯಾತನಾಗಿಹ ಭೀಮ ನಾಮದಿ ತೀರ್ಥವೆನ್ನಲು
ಶಾಸ್ತ್ರವಿದಿತವು ಮತ್ತೆ ಮಧುವೆನೆ
ಸುಖವು ಮುಕ್ತಿಯನೀವ ಶಾಸ್ತ್ರವನು ೮
ಇತ್ತ ದೇವನೆ ಮಧ್ವನೆಂಬರು
ಸುತ್ತುತೀತ್ರಯ ನಾಮದರ್ಥವ ನಿತ್ಯ
ತಿಳಿಯುತ ಪಠಿಸಿ ಪಾಡಲುವಾಯು ದೇವನನು |
ಭಕ್ತ ಬಾಂಧವನಾತ ವಲಿಯುತ ತತ್ವವೇತ್ತನ
ಮಾಳ್ವ ನಿಶ್ಚಯ ಭೃತ್ಯನಾನೆಂತೆಂದು
ಮಧ್ವರ ಸಾರಿ ಭಜಿಸುತಿರಿ೯
ಮೂಢ ಭಕ್ತಿ ಇದಲ್ಲ ಗುರುವೆಡೆ
ಈಡು ಕಾಣೆನು ಜೀವ ಕೋಟಿಲಿ
ಪ್ರೌಢ ಮಧ್ವಗೆ ಪೂರ್ಣ ಪ್ರಜ್ಞನೆ ಈತ ಶ್ರುತಿ ಸಿದ್ದ |
ಬೀಡು ಮಾಡಿಹ ವಿದ್ಯೆ ನೂಕುತ
ತೊಂಡ ನೆಂದಿವರಡಿಗೆ ಬೀಳಲು
ಪಾಂಡುರಂಗನ ಬಿಚ್ಚಿ ತೋರುವ ಗೋ ಸಮುದ್ರದಲಿ೧೦
ಏನ ಪೇಳಲಿ ಏನಪೇಳಲಿ
ಜ್ಞಾನನಿಧಿ ಸರ್ವಜ್ಞ ಗುರುವರ
ತಾನು ಗೈದ ಮಹೋಪಕಾರವ ಮುಕ್ತಿಯೋಗ್ಯರಿಗೆ |
ಜ್ಞಾನ ಬಾಹುದೆ ಬಿಟ್ಟರೀತನ
ಶೂನ್ಯವೆ ಸರಿ ಎಲ್ಲ ಆತಗೆ ಮನ್ನಿಸುವನೆ
ಅನನ್ಯವನು ಹರಿ ಶರಣು ಆಚಾರ್ಯ ೧೧
ಈತನೇ ಆನಂದ ತೀರ್ಥನು
ಈತನೇ ಆಚಾರ್ಯ ನಿಶ್ಚಯ
ಈತನೇ ಸರಿಮಾತರಿಶ್ವನು ವಾಯುವಿನರೂಪ |
ಈತ ಚರಿಸುವ ಶಾಸ್ತ್ರವ್ಯೂಹದಿ
ದೈತ್ಯರಿಂದಾಚ್ಛಾದಿತ ಗುಣಯುತ
ಆತ್ಮಪೂರ್ಣಾನಂದ ದೇವನ ಶಾಸ್ತ್ರಮಥಿಸುತಲಿ ೧೨
ಬಿಚ್ಚಿತೋರುವ ಸಾರ ವೃಂದಕ್ಕೆ
ಚುಚ್ಚುವನು ದುರ್ವಾದಿ ಮತಗಳ
ಕೆಚ್ಚೆದೆಯವನು ಗರ್ಜಿಸುತವೇದೋಕ್ತವಾಕ್ಯಗಳ |
ಹೆಚ್ಚು ಹೆಚ್ಚೇ ಸರಿಯು ವಿಷ್ಣುವು
ಸ್ವಚ್ಛ ಪೂರ್ಣಾನಂದ ಸುಖಮಯ
ಪೃಚ್ಛ ಪರಿವಾರ ಸರಿ ವಿಧ್ಯಾದಿಗಳು ಹರಿಗೆಂದು ೧೩
ಕಚ್ಚಿಲತೆಗಳ ಬಿಸುಡುವಂದದಿ
ನುಚ್ಚು ಮಾಡುವ ಪ್ರಶ್ನೆನೀಕವ
ಅಚ್ಚನಾರಾಯಣನೆ ಪ್ರೇರಕ ನಿವಗೆ ಜನಕನಿಹ |
ಮೆಚ್ಚು ಮಗ ಶ್ರೀ ಲಕ್ಷೀ ದೇವಿಗೆ
ರಚ್ಚೆತನುವನು ಕಿತ್ತುವೋಡಿಸಿ
ಹೆಚ್ಚಿಸುವ ಸುಜ್ಞಾನ ದೀಪವ ಹರಿಯ ಪ್ರಧಮಾಂಗ೧೪
ಕೊಟ್ಟು ಉಂಗುರ ಸುಟ್ಟುಲಂಕೆಯ
ಬಿಟ್ಟು ಕಾಮವ ಮೆಟ್ಟಿಖಳರನು
ಜಟ್ಟಿ ಹನುಮನು ಪಟ್ಟ ಪುತ್ರನ ಪದವಿ ಸಾಧಿಸಿದ |
ಹುಟ್ಟಿ ಕುಂತಿಲಿ ಕುಟ್ಟಿ ಕುರುಕುಲ
ಇಟ್ಟು ಮನದಲಿ ದಿಟ್ಟ ಕೃಷ್ಣನ
ಅಟ್ಟಿ ಹಾಸದಿ ಮೆರೆದ ಭೀಮನು ಜ್ಞಾನ ಭಾಸ್ಕರನು೧೫
ಹುಟ್ಟು ಸಾವಿನ ಕಟ್ಟು ಬಿಡಿಸಲು
ಘಟ್ಟ ದಡಿಯಲಿ ಭಟ್ಟನೆನಿಸುತ
ತೊಟ್ಟು ಕಾವಿಯ ಬಟ್ಟೆ ತವಕದಿ ಭ್ರಷ್ಟದಸ್ಯುಗಳ |
ಕೆಟ್ಟ ಮತಗಳ ಸುಟ್ಟು ವಾದದಿ
ಕೊಟ್ಟು ಸುಜನಕೆ ಸೂತ್ರ ಭಾಷ್ಯವ
ನೆಟ್ಟ ಸಂತರ ಮನದಿ ವಿಷ್ಣುವ ಶ್ರೇಷ್ಠಗುರುಮಧ್ವ೧೬
ಏಕೆ ಭಯ ನಮಗಿನ್ನು ನಿರಯದ
ಏಕೆ ಸಂಶಯ ಮುಕ್ತಿ ವಿಷಯದಿ
ಏಕೆ ಕಳವಳ ಮಧ್ವರಾಯರ ಶಾಸ್ತ್ರ ಪೀಯೂಷ |
ಜೋಕೆಯಿಂ ಪ್ರತಿದಿನವು ಸೇವಿಸೆ
ಶ್ರೀಕಳತ್ರನು ಕೈಯ ಬಿಡುವನೆ
ನಾಕಪತಿಯಿಂಬಿಟ್ಟು ಸಲಹುವ ಶಾಸ್ತ್ರಸಿದ್ಧವಿದು ೧೭
ಹೆಚ್ಚು ಮಾತೇಕಿನ್ನು ಹರಿಮನ
ಮೆಚ್ಚುಯೆನಿಸಿಹ ಮಧ್ವರಾಯರು
ಬಿಚ್ಚಿತೋರಿದ ತೆರದಿ ಶೃತಿಗಳ ಭಜಿಸಿಖಳ ಜನಕೆ |
ಬಚ್ಚಿಡುತ ವಿಜ್ಞಾನ ಮರ್ಮವ
ನುಚ್ಚು ನೂಕುತ ದುರ್ಮತಕಿಡಿರಿ
ಕಿಚ್ಚು ಕಮಲೇಶ ನೊಲಿಮೆಗೆ ಬೇರೊಂದು ಪಥವಿಲ್ಲ ೧೮
ನಮ್ಮಹಿರಿಯರ ಖಿನ್ನನುಡಿಗಳ
ನೊಮ್ಮನದಿ ನೀವೆಲ್ಲ ಕೇಳಿರಿ
ರಮ್ಮೆಯರಸಗೆ ಸಮ್ಮತದ ಸಚ್ಛಾಸ್ತ್ರದರ್ಪಣವ |
ಹೆಮ್ಮೆಯಿಂದಲಿ ಕೊಟ್ಟು ಬಂದೆವು
ಒಮ್ಮೆಯಾದರು ನೋಡುವರೆ ಈ
ನಮ್ಮ ಸಂತತಿ ಹಾ ಹರಿ ಹರೀಯೆಂಬ ಕ್ರಾಂತಿಯುತ೧೯
ಉಣ್ಣಿರುಣ್ಣಿರಿ ಮಧ್ವಕಂದರೆ
ಉಣ್ಣುತಲಿ ಭವ ಹುಣ್ಣುವಳಿಯಿರಿ
ಅಣ್ಣ ಪ್ರಾಣನದಯವ ಯಾಚಿಸಿಘನ್ನ ಶಾಸ್ತ್ರಾನ್ನ |
ಅನ್ನ ಶೃತಿಗಳು ವಿವಿಧ ಸ್ರ‍ಮತಿಪ
ಕ್ವಾನ್ನ ಪಾಯಸ ಗೀತೆ ಭಕ್ಷ್ಯಗಳೆನ್ನಿ
ಬಗೆ ಬಗೆ ಸರ್ವ ಮೂಲವ ಸೂತ್ರಗಳೆ ಸಾರು ೨೦
ತುಪ್ಪವೆನ್ನಿರಿ ನ್ಯಾಯ ಸುಧೆಯನು
ಗೊಪ್ಪರಾಜರ ಗ್ರಂಥ ಹಲ್ಪವು
ಅಪ್ಪರಾಯರ ವಾಣಿ ಕ್ಷೀರವು ದಾಸ ಸಾಹಿತ್ಯ |
ತಪ್ಪದೆಲೆ ತಿಂಬಂಥ ತಿಂಡಿಯು
ಚಪ್ಪರಿಸಿ ಭಾರತದ ಕೂಟನು
ವಪ್ಪುವನು ಶ್ರೀ ಕೃಷ್ಣ ದೇವನು ಭಕ್ತ ನುಣ್ಣಲಿವ ೨೧
ಎಂತು ಪೊಗಳಲಿ ನಿಮ್ಮ ಗುರುವರ
ಹಂತ ಸುರಗಣ ವೆಲ್ಲ ನಿಮ್ಮಡಿ
ನಿಂತು ಪಡೆದರು ಜ್ಞಾನ ಪ್ರಾತರ್ನಾಮಕನೆಶರಣು |
ಕಂತೆ ಮತಗಳ ನಾಶಗೈದನ
ನಂತ ಮಹಿಮನೆ ದೀನ ನಾನಿಹೆ
ಕುಂತಿ ನಂದನ ನೀನೆ ತಿಳಸೈ ಸಕಲ ಶಾಸ್ತ್ರಾರ್ಥ ೨೨
ಮೂರ್ತಳೆನಿಸುವ ಚಂದ್ರಮಾನಿನಿನಾಥ
ಪ್ರಾಣನೆ ಸೂರ್ಯ ನೊಳ್ ಆದಿತ್ಯ
ನಾಮದಿ ನಿಂತು ದಿಕ್ಪತಿಗಳಿಗೆ ಶಕ್ತಿಗಳ |
ಇತ್ತು ಸೃಷ್ಠಿಯ ಕಾರ್ಯ ವೆಸಗುವೆ
ಉತ್ತರಾಯಣ ಪಗಲು ಮಾನಿಯೆ-
ನಿತ್ಯ ಪ್ರೇರಿತ ನೀಪ್ರಜಾಪತಿನಾಮ ಹರಿಯಿಂದ ೨೩
ಖ್ಯಾತ ಮೂರ್ತಾ ಮೂರ್ತ ಧಾರಕೆ
ತತ್ವಪತಿಗಳ ಪೋಷತನುವಲಿ
ಮೃತ್ಯುಹಾಗಶನಾಪಿಪಾಸಾಪಾನ ನಾಮಗಳ |
ಎತ್ತಿ ನಡಿಸುವೆ ದೇಹ ಕಾರ್ಯವ್ರಾತ
ಬಿಡಲೇನೊಂದು ನಡೆಯದು
ಮಾತರಿಶ್ವನೆ ನಿಧಿಗು ಆರ್ಯುರ್ದಾತ ನೆನಿಸಿರ್ಪೆ ೨೪
ಅನ್ನ ವಿಧಿಯಿಂ ಕೊಂಬೆ ಸಮಸರಿ
ಯನ್ನ ಬ್ರಹ್ಮಗೆ ಜೀವ ಗಣತಾವುಣ್ಣಲಾರರು
ನಿನ್ನ ಬಿಡೆ ಪ್ರಾಣದಿ ಪಂಚಕನೆ |
ಸ್ವಪ್ನ ನಿದ್ರಾ ಸಮಯದೊಳ್ ಹರಿಯನ್ನು
ಕೂಡಿರೆ ಕರಣಪರು ಘನಯಜ್ಞ
ನಡಿಸಿ ಸರ್ಮರ್ಪಿಸುವೆ ನೀನೊಬ್ಬ ದೇವನಿಗೆ ೨೫
ನಿನ್ನ ನಂಬಿದ ಭಕ್ತನಿಗೆ ಭವ
ಹುಣ್ಣು ಮುಟ್ಟದು ವಿಷ್ಣು ವಲಿಯುತ
ಮನ್ನಿಸುವ ಹರಿಯಾಜ್ಞೆಯಿಂಮುಕ್ತಿದನು ನೀ ಹೌದು |
ಘನ್ನ ಬಾಧ್ವನೆ ವಿಶ್ವ ವಂಶನೆ
ನಿನ್ನ ಮಹಿಮೆಯಗಣ್ಯ ಸಿದ್ಧವು
ನಿನ್ನ ಧೊರೆ ಹರಿ ಒಬ್ಬ ಜೀವೋತ್ತುಮನೆ ಅಶರೀರ೨೬
ಜ್ಞಾನ ಬಲ ಐಶ್ವರ್ಯಗಳು ಪರಿಪೂರ್ಣ
ಸರಿ ವೈರಾಗ್ಯ ಹಾಗೆಯೆ ಪ್ರಾಣನಿನ್ನಲಿ
ಕರಿಸುವೆಯೊ ಆಧ್ಯರ್ಧ ನಾಮದಲಿ |
ಮಾನ್ಯ ವಿಷ್ಣುಸಹಾಯ ನಿನಗೈನ್ಯೂನ
ವಿಲ್ಲವು ಯಾವ ತೆರದಲುಕಾಣೆ
ಅಪಜಯ ಜೀವ ಸಾಧನೆಯೆಲ್ಲ ನಿನ್ನಿಂದ ೨೭
ಶೇಷಗಸದಳ ನಿನ್ನ ಪೊಗಳಲು
ಶೇಷ ಸರಿ ಬಡದಾಸನಹೆ ವಿಶ್ವಾಸದಿಂ
ಸಂವತ್ಸರನೆ ನೀಕಾಯಬೇಕೆಂಬೆ |
ಏಸು ಜನ್ಮಗಳನ್ನು ಕೊಟ್ಟರು
ಶ್ವಾಸ ಪತಿತವ ಮತದಿ ಪುಟ್ಟಿಸಿ
ದಾಸ ಭಾಗ್ಯವ ನೀಡು ಹರಿಯೊಳ್ ಶುದ್ಧ ಭಕ್ತಿಯುತ೨೮
ಎರಡು ಸಹ ಮೂವತ್ತು ಲಕ್ಷಣ
ವಿರುತಿಹ ಜಗದ್ಗುರುವೆ ವಿಷ್ಣುವಿಗೆರಡು
ಬಗೆವರ ಮುರಿದು ಶೃತಿಗಳಸಾರ ವೇನೆನ್ನ
ಎರಡು ಸರಿಯೆಂತೆಂದು ಸ್ಥಾಪಿಸಿ
ಎರಡು ವಿದ್ಯೆಗಳಿರವು ತೊರುವ
ಲೆರಡು ಸುಖಗಳ ಪಡೆಯೆಸಾಧನ ಮಾರ್ಗ ನೀಡ್ವೆಬತ ೨೯
ಸರ್ವ ಶಕ್ತನೆ ಶರ್ವ ವಿನುತನೆ
ಸರ್ವ ಸರ್ವಗ ಹಿರಿಯ ತನಯನೆ
ಸರ್ವ ಜಗದಾಧಾರ ಪೋಷಕ ಸರ್ವ ತೋವರನೆ |
ಸರ್ವ ಕಾಲದಿ ಸರ್ವ ದೇಶದಿ
ಸರ್ವ ಗುಣದಿಂ ಹರಿಯ ಯಜಿಸುವ
ಸರ್ವ ಸದ್ಗುಣ ಪೂರ್ಣ ದೋಷವಿದೂರ ಸರ್ವಜ್ಞ ೩೦
ಹಿಂದೆ ಪೂರ್ವಜರೆಲ್ಲ ಕೂಡುತಲೊಂದು
ಪಾಯವಗೈದು ಮೃತ್ಯುವತಂದು
ವಡ್ಡಲ್ ದಿವಿಜ ವೃಂದಕೆ ಕುಂದು ವದಗಿಸಲು |
ಕಂದುತಳಿಯಲ್ ನಿಖಿಲ ಸುರಗಣ
ಕುಂದು ಮೃತ್ಯುವ ಗೈದು ಪುಡಿಪುಡಿ
ವಂದನಾರ್ಹನು ಒಬ್ಬನೀನೇ ಯೆಂದು ಸ್ಥಾಪಿಸಿದೆ ೩೧
ಪಾಹಿ ಅಮ ಶುಚಿ ಯೊಗ ಕ್ಷೇಮನೆ
ಪಾಹಿ ಅಮರಲಲಾಮ ಅನಿಲನೆ
ಪಾಹಿ ಹರಿಯಾ ಭಾಸಕನೆನಿರಪೇಕ್ಷ ನಿರವದ್ಯ |
ಪಾಹಿ ಸತ್ಯ ವಿಶುದ್ಧ ಸತ್ವನೆ
ಪಾಹಿ ಲಕ್ಷ್ಮೀ ಪುತ್ರ ಭೃತ್ಯನೆ
ಪಾಹಿ ಜೀವಗ ಬಾದರಾಯಣಪ್ರೀಯ ಮಹರಾಯ ೩೨
ಪಾಹಿ ಹನುಮನೆ ಭೀಮ ಮಧ್ವನೆ
ಪಾಹಿ ದುರ್ಮತ ಧ್ವಾಂತ ಸೂರ್ಯನೆ
ಪಾಹಿ ನತಜನ ಪಾಲ ಪ್ರಾಣನೆ ಪಾಹಿ ಶ್ರೀಸುತನೆ |
ಪಾಹಿ ಜಗದಾಧಾರ ಸೂತ್ರನೆ
ಪಾಹಿ ಸಾಮನೆವಂಶ ದೂರನೆ
ಪಾಹಿ ಹರಿಯಚ್ಛಿನ್ನ ಭಕ್ತನೆ ಪಾಹಿ ವಿಜ್ಞಾನ ೩೩
ಪಾಹಿ ಋಜುಪತಿ ವಾಯುಕೂರ್ಮನೆ
ಪಾಹಿ ಜೀವ ಲಲಾಮ ಗುಣನಿಧಿ
ಪಾಹಿ ಶುಚಿ ಸರ್ವಜ್ಞ ಸಾಮಗಭಾವಿ ಶತಮೋದ |
ಪಾಹಿ ಸತ್ಯನೆ ಕಲಿವಿದಾರಣ
ಪಾಹಿ ಗುರು ಗೋವತ್ಸ ರೂಪಿಯೆ
ಪಾಹಿ ಮಿಷ್ಣು ಪದಾಬ್ಜಮಧುಕರ ಭಾರತೀ ಕಾಂತ ೩೪
ಪಾಹಿ ಅಮೃತನೆ ವಿಶ್ವರಜ್ಜುವೆ
ಪಾಹಿ ಬೃಹತೀ ಛಂದ ಮಾನಿಯೆ
ಪಾಹಿ ಹಂಸೋಪಾಸಕ ಪ್ರಭು ಆಖಣಾಶ್ಮಸಮ |
ಪಾಹಿ ಸಾಯಂಖ್ಯಾತ ಜೀವಗ
ಪಾಹಿ ಜಗಚೇಷ್ಠಾ ಪ್ರವರ್ತಕ
ಪಾಹಿ ಅನಿಲನೆ ಶೇಷವಿಪಶಿವ ವಂದಿತಾಂಘ್ರಿಯುಗ ೩೫
ಪಾಹಿ ಪರಿಸರ ಪಂಚ ಕೋಶಗ
ಪಾಹಿ ಗುಣನಿಧಿ ಕೊವಿದೋತ್ತಮ
ಪಾಹಿ ನಮಿಸುವೆ ಅಣುಮಹದ್ಘನ ರೂಪ ವಿಖ್ಯಾತ |
ಪಾಹಿ ವಿಶ್ವಗ ವ್ಯಸನ ವರ್ಜಿತ
ಪಾಹಿ ಹರಿಯನು ನಿತ್ಯನೋಳ್ಪನೆ
ಪಾಹಿ ವಿಷ್ಣುದ್ವಾರ ಶರಣೈ ಪಾಹಿ ಹರಿ ಸಚಿವ ೩೬
ಜಯ ಜಯವು ಶ್ರೀ ಹನುಮ ಭೀಮಗೆ
ಜಯ ಜಯವು ಶ್ರೀ ಮಧ್ವರಾಯಗೆ
ಜಯ ಜಯವು ತತ್ವೇಶರರಸಗೆ ಮುಖ್ಯಪ್ರಾಣನಿಗೆ |
ಜಯ ಜಯವು ಜಯತೀರ್ಥ ಹೃಸ್ಥಗೆ

Leave a Reply

Your email address will not be published. Required fields are marked *