Categories
ರಚನೆಗಳು

ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಗಾಯತ್ರಿ ಪ್ರಣವ ಮಂತ್ರ ರಹಸ್ಯ
೬೨-೪
ಪ್ರಣವಾಷ್ಟ ದ್ವಾದಶಾಕ್ಷರ ಮನುಗಾಯತ್ರೀ |
ಘನ ಪುರುಷಸೂಕ್ತ ಸಾಹಸ್ರನಾಮಾ ನಿಗಮ ವೇದ್ಯ ||
ವರ್ಣ ವ್ಯಂಜನ ಸ್ವರಾಕ್ಷರ ಪ್ರತಿ ಪಾದ್ಯಾನಂತ ಕ್ರಿಯ |
ಗುಣ ರೂಪ ಶ್ರೀಶ ನಮೋ ಸರ್ವೇಶ ಗುರುಗ |
ಅನಂತ ಕ್ರಿಯ ಗುಣರೂಪ ಅನಘ ನಮೋ ವಾಯುಸ್ತ |
ಗುಣರೂಪಾ ಕ್ರಿಯಾ ‘ನಮೋ’ ಅನಘವಾಯುಸ್ತ ||
ಅನಿಷ್ಟಹರ ಇಷ್ಟಪ್ರದ ವಿಷ್ಣುಸಾಸಿರನಾಮಾ ||
ಅನುಷ್ಟಪ್ ಛಂದಸ್ ಶ್ರೀ ಕೃಷ್ಣದೇವತೆಯು
ಅನಘ ಜ್ಞಾನಾದಿ ನಿರ್ದೋಷ ಗುಣನಿಧಿ
ಗುಣಪೂರ್ಣ ಅನಘ ಅಕಾರವಾಚ್ಯ ಅಂಭ್ರಣೀಶ
ವಿಷ್ಣು ಅವತಾರ ವೇದ ವ್ಯಾಸನೇ ಋಷಿಯು ||
ಪ್ರಣವೀಷ್ಟ ದ್ವಾದಶಾಕ್ಷರ ಮನುಗಾಯತ್ರೀ |
ಘನ ಪುರುಷ ಸೂಕ್ತ ಸಾಸಿರನಾಮವೇದ |
ವರ್ಣ ಸ್ವರವ್ಯಂಜನಾಕ್ಷರ ಸಾದು ಶರಧಿ
ಅನುಪಮ ಸರ್ವೋತ್ತಮ ಪ್ರತಿಪಾದ್ಯ ಶರಣು ||

೧೦೧
ಪ್ರಥಮ ಕೀರ್ತನೆ
ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರ
ಸುವೃತತಿ ಜಾಂಫ್ರಿಯಲಿ ಶರಣಾದೆ ಸತತ
ಸರ್ವೇಷ್ಟದಾತರು ವಿಜ್ಞಾನ ಬೋಧಕರು
ಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪ
ಅಖಿಳ ಗುಣ ಆಧಾರ ನಿರ್ದೋಷ ಶ್ರೀರಮಣ
ಜಗದಾದಿ ಮೂಲಗುರು ಅಗುರು ಶ್ರೀ ಹಂಸ
ವಾಗೀಶ ಸನಕಾದಿ ದೂರ್ವಾಸಾದಿಗಳ
ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ ೧
ಪುರುಷೋತ್ತಮ ತೀರ್ಥ ಅಚ್ಯುತ ಪ್ರೇಕ್ಷರಿಗೆ
ಪುರುಷೋತ್ತ ಮಾರ್ಯರ ಕರ ಕಮಲ ಜಾತ
ವರ ವಾತ ಅವತಾರ ಆನಂದತೀರ್ಥರ
ಚರಣ ಪದ್ಮದಲಿ ನಾ ಶರಣಾದೆ ಸತತ ೨
ಶ್ರೀ ಮಧ್ವ ಆನಂದ ತೀರ್ಥ ಕರ ಅಬ್ಜಜರು
ಪದ್ಮನಾಭ ನೃಹರಿ ಮಾಧವಾಕ್ಷೋಭ್ಯ
ಈ ಮಹಾ ಗುರುಗಳು ಸರ್ವರಿಗು ಆನಮಿಪೆ
ಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ ೩
ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲು
ಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕ
ವಾತನ್ನೊಲಿಸಿಕೊಳ್ಳ ದವರ್ಗೆ ಹರಿ ಒಲಿಯ
ಎಂದು ಜಗಕೆ ತೋರ್ದ ವಾಲಿಯೇ ಇಂದ್ರ ೪
ವಾತಾವತಾರ ಹನುಮಂತನೇ ದ್ವಾಪರದಿ
ಕೌಂತೇಯ ಭೀಮನು ಅವನಿಗೆ ಅನುಜ
ಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜ
ಪಾದ ಮೂಲದಿ ಕುಳಿತ ಕೃಷ್ಣನು ಒಲಿದ ೫
ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನ
ಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿ
ಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸ
ಅಕಳಂಕ ಸುಖಜಿತ್ ವಪುಷ ಶ್ರೀಪತಿಯು ೬
ಆಮ್ನಾಯ ತತಿ ಪುರಾಣಗಳು ಪೇಳ್ವಂತೆ
ರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್
ಭೀಮನೇ ಯತಿ ರೂಪದಲ್ಲಿ ಬಂದಿಹನೆಂದು
ಸುಮನಸ ರಾಜ ಪುಟ್ಟಿದನು ಪುನಃ೭
ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದು
ಹೊತ್ತು ಮಧ್ವಾಚಾರ್ಯರ ಪುಸ್ತಕಗಳ
ಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠ
ಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ ೮
ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳ
ಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿ
ವಿನಯದಿ ಕೇಳ್ದರು ಶಿಷ್ಯರು ಟೀಕೆಗಳ
ಗ್ರಂಥಗಳಿಗೆ ಯಾರು ಮಾಡುವುದು ಎಂದು ೯
ಈ ಗೋರಾಜನೇ ಟೀಕೆಗಳ ಸಂರಚಿಸಿ
ಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವ
ಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲು
ಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು ೧೦
ಯುಕ್ತ ಕಾಲದಿ ಈ ಗೋರಾಜ ನೇವೆ
ರಘುನಾಥ ದೇಶಪಾಂಡೆ ರುಕ್ಮಾಬಾಯಿಗೆ
ಮಗನಾಗಿ ಜನಿಸಿದನು ಮಂಗಳವೇಢೆಯಲಿ
ಈ ಗ್ರಾಮ ಪಂಢರಪುರದ ಸಮೀಪ ೧೧
ಧೋಂಡುರಾಯನು ಎಂಬ ನಾಮದಲಿ ಬೆಳೆದ
ಗಂಡಿಗೆ ಉಪನಯನ ಮದುವೆಯೂ ಆಯ್ತು
ಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿ
ಚಂಡ ಶ್ರೀಮಂತರ ಮನೆತನದವಳು ೧೨
ಒಂದುದಿನ ಧೋಂಡುರಾಯನು ನದೀ ದಡಕೆ
ಬಂದನು ಕುದುರೆಯ ಮೇಲೇರಿಕೊಂಡು
ಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿ
ನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ ೧೩
ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರು
ಎದುರಾಗಿ ನದಿಯಲ್ಲಿ ಆಚೆದಡದಿಂದ
ಕುದುರೆ ಸವಾರನು ವರ್ಚಸ್ವಿ ಯುವಕನು
ಬೆದರದೆ ಪ್ರವಾಹದಲಿ ಬರುವದು ನೋಡಿದರು ೧೪
ಕುದುರೆ ಮೇಲ್ ಅಸೀನನಾಗಿದ್ದ ಯುವಕನು
ಕ್ಷುತ್ ತೃಷೆ ಶಮನಕ್ಕೆ ಯತ್ನ ಮಾಡುತ್ತಾ
ಉದಕವ ಕೈಯಿಂದ ತುಂಬಿಕೊಳ್ಳದಲೇ
ಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು ೧೫
ಮಾಧವ ಮಧ್ವರು ಮೊದಲೇ ಸೂಚಿಸಿದಂತೆ
ಇಂದು ಆ ಕುರುಹ ಅರಿತು ಅಕ್ಷೋಭ್ಯರು
ಇದು ಏನು ‘ಪಶು’ ವಂತೆ ಎಂದು ಧ್ವನಿಕೊಟ್ಟರು
ಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು ೧೬
ಪ್ರವಾಹದ ನಗಾರಿಯ ಸಮಬಲಿ ಧೋಂಡು
ವೇಗ ಲೆಕ್ಕಿಸದಲೇ ದಡಕೆ ತಾ ಬಂದು
ಮುಗಿದ ಕರ ಬಾಗಿ ಶಿರ ನಮಿಸಿ ಅಕ್ಷೋಭ್ಯರ
ಆಗಲೇ ಸಂನ್ಯಾಸಕೊಡಲು ಬೇಡಿದನು೧೭
ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪ
ಈತ ರಾಯರ ಸುತನಾದರೂ ವೈರಾಗ್ಯ
ಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದು ಹರಿ
ಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ ೧೮
ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ
ಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕ
ಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷ
ಜಯ ಷೋಷ ಹರಡಿತು ಪರಿಮಳ ಸುಗಂಧ ೧೯
ತಂದೆ ರಘುನಾಥರಾಯನು ಸುದ್ದಿ ಕೇಳಿ
ಬಂದು ಅಕ್ಷೋಭ್ಯರ ಕಂಡು ಬಲುಕೋಪ
ದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿ
ಎಂದು ವಾದಿಸಿದನು ಪುತ್ರ ಮೋಹದಲಿ ೨೦
ಪೂರ್ವಧೋಂಡುರಾಯ ಈಗ ಜಯತೀರ್ಥರು
ತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸ
ಈ ವಿಷಯ ತಿಳಕೊಂಡರೂ ಸಹ ರಘುನಾಥ
ಸೇವಕರ ಸಹ ಮಗನ ಕರಕೊಂಡು ಹೋದ ೨೧
ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆ
ಶಯನಗೃಹದೊಳು ಪತ್ನಿ ಸಹಿತ ಕಳುಹಿದನು
ಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿ
ಭಯದಿಂದ ಹೊರಬಂದು ಹೇಳಿದಳು ವಿಷಯ ೨೨
ತನ್ನ ಪತಿ ಧೊಂಡರಾಯನ್ನ ತಲ್ಪದಲಿ
ಕಾಣದೆ ಅವರಿದ್ದ ಸ್ಥಾನದಲಿ ಸರ್ಪ
ಘನ ಧೀರ್ಘ ಗಾತ್ರ ವಿಸ್ತಾರ ಹೆಡೆಯಿಂದ
ಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು ೨೩
ರಘುನಾಥರಾಯನು ಹರಿಚಿತ್ತ ಇದು ಎಂದು
ಮಗನ ಪ್ರಭಾವವ ಅರಿತು ತ್ವರಿತದಲಿ
ಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿ
ಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು ೨೪
ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದು
ದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿ
ದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àು
ಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು ೨೫
ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದ
ಶ್ರೀ ರಮಾಪತಿ ಪೂಜಾ ಸತ್ತತ್ವವಾದ
ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ
ಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು ೨೬
ಶಕ ವರುಷ ಹನ್ನೊಂದು ನೂರು ಅರವತ್ತೇಳು
ಮಾರ್ಗ ಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿ
ಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿ
ಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು ೨೭
ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತ
ದಿಗ್ವಿಜಯದಲಿ ದುರ್ವಾದಿಗಳ ಗೆದ್ದು
ಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿ
ಪ್ರಖ್ಯಾತರಾದರು ಜಯತೀರ್ಥ ಆರ್ಯ ೨೮
ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಪೂರ್ಣ ಪ್ರಜ್ಞರ ಹೃತ್‍ಸ್ಥ ಜನ್ಮಾದಿ ಕರ್ತ
ಗುಣ ಪೂರ್ಣ ನಿರ್ದೋಷ ಶ್ರೀಯಃ ಪತಿಗೆ ಪ್ರಿಯಘನ ಕರುಣಿ
ಜಯತೀರ್ಥ ಗುರು ನಮೋ ಪಾಹಿ ೨೯
|| ಪ್ರಥಮ ಕೀರ್ತನೆ ಸಮಾಪ್ತ ||

ದ್ವಿತೀಯ ಕೀರ್ತನೆ
ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರ
ಸುವೃತತಿ ಜಾಂಫ್ರಿಯಲಿ ಶರಣಾದೆ ಸತತ
ಸರ್ವೇಷ್ಟದಾತರು ವಿಜ್ಞಾನ ಬೋಧಕರು
ಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪ
ನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿ
ವರವ ಪಡೆದಿಹರು ಈ ಜಯತೀರ್ಥ ಆರ್ಯ
ಬರೆವುದಕೆ ಲೇಖನವು ಅಡಿಕೆಯು
ಅರದೂರ ದುರ್ಗೆಯು ಕೊಟ್ಟಿಹಳು ಇವರ್ಗೆ ೧
ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರ
ಪರಸುಖಪ್ರಮೂಲಗ್ರಂಥಗಳ ಟೀಕಾ
ಬರೆದಿಹರು ಅನುಪಮ ಉತ್ತಮ ರೀತಿಯಲಿ
ಭರದಿ ಓದುವವರೇ ಬಲ್ಲರು ಮಹಿಮೆ ೨
ಶ್ರೀ ಮಧ್ವಕೃತವು ಶ್ರೀ ಬ್ರಹ್ಮ ಸೂತ್ರ ಭಾಷ್ಯವು
ಆ ಮೂಲಗ್ರಂಥವು ಎರಡು ಸಾವಿರವು
ಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವು
ಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ ೩
ಅನುವ್ಯಾಖ್ಯಾನದ ನಾಲಕ್ಕು ಸಾವಿರ
ಘನತರ ಗ್ರಂಥಕ್ಕೆ ಜಯತೀರ್ಥರ
ಜ್ಞಾನಪ್ರದ ಅಜ್ಞಾನಗಿರಿ ವಜ್ರ ಟೀಕೆಯ
ಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ ೪
ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದ
ಘನ್ನ ಶುಭತರ ಮಧ್ವ ವಿಜಯದಲ್ಲಿ
ಅನುವ್ಯಾಖ್ಯಾನದ ಟೀಕಾ ಸುಧಾ ಎಂದು
ಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು ೫
ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂ
ತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂ
ತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂ
ತತ್ವೋದ್ಯೋತಕ್ಕೂ ಕರ್ಮ ನಿರ್ಣಯಕ್ಕೂ ೬
ಮಾಯಾವಾದ ಉಪಾಧಿ ಖಂಡನಗಳಿಗೂ
ಮಿಥ್ಯಾತ್ವಾನುಮಾನ ಖಂಡನಕ್ಕೂ
ನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂ
ನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ ೭
ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂ
ಅಷ್ಟಾದಶ ಈ ಗ್ರಂಥಗಳಿಗೆ
ಪಟು ಪಟೀಯಸವಾಗಿ ಟೀಕೆಯಾ ಬರೆದಿಹರು
ಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು ೮
ಪ್ರತ್ಯಕ್ಷ ಅನುಮಾನ ಆಗಮ ಪ್ರಮಾಣಗಳ
ರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯು
ಮಾಧವನ ಸರ್ವೋತ್ತಮ ಜಗತ್ ಸತ್ಯತ್ವ
ಇಂಥಾದ್ದು ಸಾಧಿಸುವ ವಾದಾವಳಿಯು ೯
ತಂತ್ರಸಾರ ಪಾಂಚರಾತ್ರಾಗಮಾನುಸರಿಸಿ
ಪದ್ಯಮಾಲಾನಾಮ ಗ್ರಂಥದಲ್ಲಿ
ಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರು
ಶತಾಪರಾಧ ಸ್ತೋತ್ರವು ಮಾಡಿಹರು ೧೦
ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾ
ದುರ್ವಿದ್ಯಾ ದುರ್ಮತಗಳನ್ನ ಛೇದಿಸುತ
ಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತ
ಭುವಿಯಲಿ ಪ್ರಖ್ಯಾತರಾದರು ಜಯಾರ್ಯ ೧೧
ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವ
ಗ್ರಂಥ ಓದಿ ನೋಡಿ ಅರ್ಥವಾಗದಲೆ
ಗ್ರಂಥಕ್ಕೆ ಜಯರಾಯರು ಬರೆದ ಟೀಕೆಯ
ಓದಲು ಅರ್ಥವು ವಿಶದವಾಯ್ತು ೧೨
ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥ
ಸರ್ವ ಪ್ರಕಾರದಲೂ ಉತ್ತಮವಾಗಿಹುದು
ಸರ್ವಜ್ಞ ಮುನಿಗಳ ಗ್ರಂಥದ ಸರಿಯಾದ
ಭಾವವ ವಿವರಿಸುವುದೆಂದು ಹೇಳಿದರು ೧೩
ಈ ರೀತಿ ವಿದ್ಯಾರಣ್ಯರು ಕೊಂಡಾಡಿ
ಪುರಿ ರಾಜಬೀದಿಯಲಿ ಆನೆ ಅಂಬಾರಿ
ಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾ
ಮರ್ಯಾದೆ ಮಾಡಿದರು ವಿಜಯನಗರದಲಿ ೧೪
ಮಧ್ವಗಂಥಗಳನ್ನು ಜಯಾರ್ಯ ಬರೆದಿರುವ
ಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತ
ವಿದ್ಯಾರಣ್ಯರು ನಮಸ್ಕಾರ ಮಾಡಿದರು
ಎಂದು ಇತಿಹಾಸವ ಸುಜನರು ಪೇಳುವರು ೧೫
ಸ್ವಮತ ಪರಮತ ವಿದ್ವಜ್ಜನರಿಂದ
ಈ ಮಹಾಮಹಿಮ ಟೀಕಾಚಾರ್ಯ ಆರ್ಯ
ಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿ
ತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು ೧೬
ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರ
ಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನ
ಶೀಲತಮ ಜಯರಾಯ ಅಲ್ಲಿಯೇ ನಿಂತರು
ಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ ೧೭
ಹನ್ನೊಂದು ತೊಂಭತ್ತು ಶಕ ವಿಭವ ಆಷಾಢ
ಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರು
ತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿ
ಶ್ರೀ ನಾರಾಯಣನ ಪಾದ ಸೇರಿದರು ೧೮
ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿ
ಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತ
ಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮ ಗುರು
ಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು ೧೯
ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಪ್ರಸನ್ನ ಗೋಪೀವಲ್ಲಭ ಕೃಷ್ಣ ಅಂಕಿತಪದ
೧೪೪
ಪ್ರಸನ್ನ ಗೋಪೀವಲ್ಲಭ ಕೃಷ್ಣ ಶರಣು ನೀ ಸಲಹೊ ಇವಳನ್ನು ಸುಹೃದ ಕರುಣಾಳೊ |
ಬೇಸರ ವಿಲ್ಲದೆ ಪತಿ ಗುರು ಸೇವಾ ಸದ್ರತಿ ಶ್ರೀಶ ನಿನ್ನಲಿ ಭಕ್ತಿ ಸಜ್ಞಾನ ಬೆಳೆಸೊ ಪ
ಪುಟ್ಟಿದಾರಭ್ಯ ಬಹು ಕಷ್ಟಮೋಹದಲ್ಲಿದ್ದು ನೆಟ್ಟಗೆ ಬಂದಿಹಳಿಲ್ಲಿ ನಿನ್ನ ದಯದಿಂದ |
ವಿಷ್ಣು ಭಕ್ತಿ, ಜ್ಞಾನ, ವೈರಾಗ್ಯ ಆರೋಗ್ಯ ಇಷ್ಟ ಸಂಪತ್ತುಗಳ ಇತ್ತು ಪಾಲಿಪುದು || ಪ್ರಸನ್ನ||
ನೀಪಾಲು ಬೆಣ್ಣೆಯ ಕೊಂಡು ಸುಜನರ ಕಾಯ್ದಿ ಗೋಪಿಕಾ ಸ್ತ್ರೀಯರ ಭಕ್ತಿಗೆ ವೊಲಿದಿ |
ವಿಪ್ರಸತಿ ಪ್ರೇಮದಲಿ ಕಳುಹಿಸಿದ ಅವಲಕ್ಕಿ ಶ್ರೀಪನೀ ಸ್ವೀಕರಿಸಿ ಸೌಭಾಗ್ಯ ವಿತ್ತಿ ೧
ಸೌಂದರ್ಯ ಸಾರ ನಮೊ ಜಗದೇಕ ವಂದ್ಯ ವಿಭು, ಸತ್ಯಾ ರಕ್ಮಿಣಿಯುತನೆ ಷಣ್ಮಹಿಷಿ ಸೇವ್ಯ |
ನಿರ್ದೋಷ ಗುಣಗಣಾರ್ಣವ ಸರ್ವೋತ್ತಮನಮೊ ಪದುಮಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ೨

ಶ್ರೀ ಅಚ್ಯುತಾನಂತ ಗೋವಿಂದ ಸ್ತೋತ್ರ
೪೨
ಪ್ರೋಚ್ಯಸುಗುಣಾರ್ಣವ ಶ್ರೀಶ ನಿರ್ದೋಷ
ಅಚ್ಯುತಾನಂತ ಗೋವಿಂದಾಯ ನಮಃ || ಪ
ಪ್ರಾತರುದಿತಾರ್ಕ ನಿಭ ತೇಜಸ್ವಕಾಂತಿಮಾನ್
ರತ್ನ ಛವಿ ಜ್ವಲಿಸುವ ಕಿರೀಟಿಯೆ ಶರಣು
ಪ್ರತತ ಪ್ರಜ್ವಲ ಮಂಡಲೋಪಮ ಕುಂಡಲಗಳು
ವಿತತ ಮಹಿಮನೆ ನಿನ್ನ ಕಿವಿಯಲಿ ಪೊಳೆಯುತೆ ೧
ರಾಜರಾಜೇಶ್ವರನೆ ಸರ್ವಾಯುಧೋಪೇತ
ನಿಜಬಲಾಮಿತ ಶಕ್ತ ಚತುರ್ಬಾಹು ಶರಣು
ಭಜಕರಕ್ಷಕ ಶಂಖ ಚಕ್ರಧರ ದೇವನೆ
ತ್ರಿಜಗದೀಶನೆ ವಿಪೋ ಪರಿ ಸಂಸ್ಥಸ್ವಾಮಿ ೨
ಅನಂತ ನಿತ್ಯನೆ ನಿನ್ನನ್ನ ಸರ್ವದೇವತೆಗಳು
ಸನಕಾದಿ ಮುನಿವರರು ಉಪಾಸಿಪರು ಶರಣು
ಘನವರದ ಅಭಯದನೇ ಸರ್ವ ಲೋಕವಕಾಯ್ವ
ವನಜಭವಪಿತ ನಮೋ ಪ್ರಸನ್ನ ಶ್ರೀನಿವಾಸ ೩

ಸಾಯುಧ ಚತುರ್ವಿಂಶತಿ ವಿಷ್ಣುರೂಪ ಸ್ತೋತ್ರ
೪೬
ಬಲದ ಅಜಾನುಕರ ಮೊದಲು ಪ್ರದಕ್ಷಿಣದಿ
ಸಲಿಲಜಾದಿಧರರಮಾಪತೇ ನಮಸ್ತೇ ಪ
ಅರವಿಂದ -ಶಂಖ ಸುದರ್ಶನ ಕೌಮೋದಕೀ
ಧರನಮೋ ಕೇಶವ ಶ್ರೀಶ ಬ್ರಹ್ಮೇಶ ೧
ದರಾಂಬುಜಗದಾಚಕ್ರಧರಶ್ರೀಶ ನಮೋ
ನಾರಾಯಣ ದೋಷದೂರಗುಣಪೂರ್ಣ ೨
ಕೌಮೋದಕೀಚಕ್ರದರಕಮಲಹಸ್ತನೇ
ನಮೋ ಮಾಧವ ಲಕ್ಷ್ಮೀರಮಣ ಮಾಂ ಪಾಹಿ ೩
ಚಕ್ರ ಕೌಮೋದಕೀ ಪ್ರಫುಲ್ಲ ಅರವಿಂದ
ಶಂಖ ಧರ ಗೋವಿಂದ ನಮೋ ವೇದವೇದ್ಯ ೪
ಗದಾಸರೋರುಹಶಂಖಚಕ್ರಧರವಿಷ್ಣೋ
ಮೋದಮಯ ಸರ್ವತ್ರ ಬಹಿರಂತವ್ರ್ಯಾಪ್ತ ೫
ಸಹಸ್ರಾರ ಶಂಖಾಬ್ಜ ಗದಾಧರ ನಮಸ್ತೇ
ಪಾಹಿ ಮಧುಸೂಧನ ಮಹಾರ್ಹ ಹಯಶೀರ್ಷ ೬
ಅಂಬುಜಗದಾಚಕ್ರ ಶಂಖೀ ತ್ರಿವಿಕ್ರಮನೆ
ಪುಷ್ಪಜಾರ್ಚಿತ ತ್ರಿಪದ ನಮೋ ವಿಶ್ವರೂಪ ೭
ಶಂಖಾರಿ ಕೌಮೋದಕೀ ಪದ್ಮ ಹಸ್ತನೇ
ಮಂಗಳ ಸುಸೌಂದರ್ಯ ವಾಮನ ನಮಸ್ತೇ ೮
ಇಂದೀವರಾರಿಗದಾಶಂಖೀ ನಮಸ್ತೇ
ಶ್ರೀಧರ ಸದಾ ನಮೋ ಶ್ರೀವತ್ಸ ಪಾಹಿ ೯
ಗದಾ ಚಕ್ರ ಪದ್ಮಧರಾ ಹಸ್ತ ಹೃಷಿಕೇಶ
ಇಂದ್ರಿಯ ನಿಯಾಮಕ ದೇವದೇವೇಶ ೧೦
ಶಂಖಾಬ್ಜರಿಗದಾಧರಪದ್ಮನಾಭ
ಅಕಳಂಕ ಮಹಿಮ ಜಗಜ್ಜನ್ಮಾದಿಕರ್ತ ೧೧
ಕಮಲಧರ ಕೌಮೋದಕೀ ಚಕ್ರೀ ಈಶ
ದಾಮೋದರ ದೇವ ಸುಜ್ಞಾನದಾತ ೧೨
ಕೌಮೋದಕೀ ಶಂಖ ಅಬ್ಜಾರಿಪಾಣಿನ್
ಮಮ ಪಾಪಹರ ಸಂಕರ್ಷಣ ಜಯೇಶ ೧೩
ಗದಾಶಂಖ ಚಕ್ರಾಬ್ಜಹಸ್ತ ಮಾಯೇಶ
ಸದಾ ನಮೋ ಳಾಳುಕ ಡರಿ ವಾಸುದೇವ ೧೪
ರಥಾಂಗ ಕಂಬು ಗದಾ ಕಮಲಧರ ಪ್ರದ್ಯುಮ್ನ
ಕೃತಿದೇವಿರಮಣ ನಮೋ ಭಾಸ್ವ ಮದ್ ಹೃದಯೇ ೧೫
ರಥಾಂಗ ಗದಾಕಂಬು ಕಮಲ ಹಸ್ತ ನಮೋ
ಶಾಂತೀಶ ಅನಿರುದ್ಧ ಶರಣು ಮಾಂ ಪಾಹಿ ೧೬
ಅರಿ ಕಮಲ ಶಂಖ ಗದಾಧರ ಪುರುಷೋತ್ತಮ
ಕ್ಷರಾ ಕ್ಷರೋತ್ತಮ ಪೂರುಷ ಸ್ವತಂತ್ರ ನಮೋ ಪಾಹಿ ೧೭
ಪದ್ಮ ಗದಾ ಶಂಖಾರಿಧರ ಅಧೋಕ್ಷಜ ನಮೋ
ಮೋದಮಯ ಕಪಿಲ ಭಾಮನ ಡರಕ ವಿಶ್ವ ೧೮
ಚಕ್ರಾಬ್ಜ ಗದಾ ಶಂಖ ಭಕ್ತ ರಕ್ಷಕ ನಮೋ
ಸದಾನಂದ ಚಿನ್ಮಯ ಅನಘ ಅವಿಕಾರಿ ೧೯
ಅಬ್ಜಾರಿ ಶಂಖ ಗದಾಧರ ಜನಾರ್ಧನ ನಮೋ
ಅಜಿತ ಅಜ ಸಂಸಾರ ಬಂಧ ಹರ ಸುಖದಾ ೨೦
ದರಗದಾ ಅರಿ ಅಬ್ಜ ಧರ ಉಪೇಂದ್ರ ನಮೋ
ಇಂದ್ರಾನುಜನೇ ಬ್ರಹ್ಮ ರುದ್ರಾದಿ ವಂದ್ಯ ೨೧
ದರ ಸುದರ್ಶನ ಕಮಲ ಕೌಮೋದಕೀ ಪಿಡಿದ
ಹರಿ ಶ್ರೀಯಃಪತಿ ಅಭಯ ವರದನೇ ಶರಣು ೨೨
ಶಂಖ ಕೌಮೋದಕೀ ಅಬ್ಜಾರಿಧರ ಕೃಷ್ಣ
ಸುಖಜ್ಞಾನ ಚೇಷ್ಟಾ ರೂಪ ನಮೋ ಶ್ರೀಶ ೨೩
ಮಧ್ವ ಹೃದ್ವನಜಸ್ಥ ಚತುರ್ವಿಂಶತಿ ರೂಪ
ಉದ್ದಾಮ ಪರಮಾರ್ತ ಹರಿ ಶ್ರೀಶ ಶರಣು ೨೪
ಮತ್ಸ್ಯ ಕೂರ್ಮ ಕ್ರೋಡ ನರಸಿಂಹ ವಟು ರೇಣು –
ಕಾತ್ಮಜ ಶ್ರೀರಾಮ ಕೃಷ್ಣ ಶಿಶು ಕಲ್ಕಿ ೨೫
ಆನಂದಚಿನ್ಮಯ ಅನಂತ ರೂಪನೇ ನಮೋ
ವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ ೨೬

ಶ್ರೀ ಜಗನ್ನಾಥದಾಸರ ಸ್ತೋತ್ರ
೧೩೮
ಬಾಗುವೆ ಶಿರ ಪುರಂದರ ವಿಜಯ ಗೊಪಾಲ
ಜಗನ್ನಾಥ ನಿನಗೂ ನಿನ್ನ ದಾಸರು ಸರ್ವರಿಗೂ ಪ
ಜಗನ್ನಾಥದಾಸರ ನಾಮವರ್ಣಂಗಳಲಿ
ಜಗನ್ನಾಥ ನೀಪೋಳೆದು ಸ್ಮರಿಪರ ಪಾಲಿಸುವಿ ಅ ಪ
‘ಜ’ ಎನಲು ಅಜ ಅಭಯ ಅಮೃತ ಉರುಕ್ರಮ ಅನಘ
ಘನ ದಯದಿ ಭವವ ನದಿ ಸುಲಭದಿದಾಟಿಸುವಿ
‘ಗ’ ಎನಲು ನಿಗಮೈಕ ವೇದ್ಯ ಪೀಡೆಗಳಳಿದು
ಜ್ಞಾನಭಕುತಿಗಳಿತ್ತು ಕಾಯ್ವ ವಿಪಗಮನ ೧
‘ನಾ’ ಎನಲು ಶ್ರೀಶಹರಿ ಬ್ರಹ್ಮಶಿವ ಮುಖವಂದ್ಯ
ಆನತೇಷ್ಟಪ್ರದನೇ ಸೌಭಾಗ್ಯವೀವಿ
‘ಥ’ ಎನಲು ರಕ್ಷಿಸುವಿ ಶ್ರೀ ಕೃಷ್ಣ ಗೋವಿಂದ
ಅನ್ನಾದ ಅನ್ನದನೆ ಗಿರಿಧರ ಅನೀಶ ೨
ನರನರಪ ಗಂಧರ್ವ ಪಿತೃ ಋಷಿ ಸುರವೃಂದ
ಸ್ಮರ ಗೋಪ ಗೌರೀಶ ಭಾರತೀ ವಾಣಿ
ವರವಾಯು ವಿಧಿವಿನುತ ಶ್ರೀವಿಭಾವ ನವಿಭೋ
ಪ್ರಸನ್ನ ಶ್ರೀನಿವಾಸ ಜಗನ್ನಾಥ ಶರಣು ೩

ಪ್ರಸನ್ನ ಶ್ರೀ ಕೃಷ್ಣಾಮೃತಸಾರ
೨೭
ಬಾರೋ ಎನ್ನ ಮನಕೆ ಗೋಪಾಲಕೃಷ್ಣ
ಬಾರೋ ಎನ್ನ ಮನಕ್ಕೆ ಪ
ಬಾರೋ ಎನ್ನ ಮನಕೆ ಭಾಮೆ ರುಕ್ಮಿಣೀ ಸಹ
ಸರಸೀರುಹಾಸನ ಶಿವಾದ್ಯಮರ ವಂದ್ಯ ಅ.ಪ.
ಮೋದಚಿನ್ಮಯ ಜಗಚೇಷ್ಟಕ ಬಲರೂಪ
ಯದುಪತೇ ಕೃಷ್ಣ ನೀನು ದೇವಕೀ ಸುತನೆನಿಸಿ
ಮೇದಿನಿಯಲಿ ಅವತಾರ ಮಾಡಿದ ಅಜ
ಸಾಧು ಸದ್ಭಕ್ತರ ಸದ್ಧರ್ಮ ರಕ್ಷಿಸಲು ೧
ಪೂತನಿ ಶಕಟ ತೃಣಾವರ್ತ ವತ್ಸ ಬಕ
ಅಘಧೇನು ಕೇಶಿ ಚಾಣೂರ ಮುಷ್ಟಿಕ
ದೈತ್ಯ ಕುವಲಯ ಪೀಡಾ ಕಂಸಾದಿ ದುಷ್ಟರನ್ನ
ಸದೆದು ಭೂಬಾರವ ಇಳಿಸಿದಿ ಶೌರಿ೨
ಸುಂದರ ವದನದಲ್ಲಿ ಜಗವೆಲ್ಲಾ ತೋರಿಸಿದಿ
ಉದ್ಧರಿಸಿ ಮಣಿಗ್ರೀವ ನಳಕೂಪರನ್ನ
ಮುಖಾದಿಂದ್ರಶ್ಚಾಗ್ನಿ ದಾವಾಗ್ನಿಯನು ನುಂಗಿ
ನಂದನ್ನ ವರ್ಣಾಲಯದಿಂದ ಬಿಡಿಸಿ ತಂದಿ ೩
ನಾಗಪತ್ನಿಯರಿಗೂ ಕಾಳಿಂಗನಿಗೂ ಒಲಿದು
ನಗವನ್ನ ಎತ್ತಿ ಗೋ ಗೋಪಾ ಜನರ ಕಾಯ್ದಿ
ಉಕ್ಕುವ ಪ್ರೇಮದಿಂ ಸೇವಿಸಿದ ಗೋಪಿಯರ
ಭಕುತೀಗೆ ಮೆಚ್ಚಿ ಯೋಗ್ಯ ಸಾಧನ ಫಲವಿತ್ತಿ ೪
ಸುದರ್ಶನಾಭಿದ ವಿದ್ಯಾಧರನ್ನ ಶಾಪದಿಂದ
ಪಾದ ಸ್ಪರ್ಶವನಿತ್ತು ಮೋಚನೆ ಮಾಡಿ
ಉದ್ಧರಾಕ್ರೂರ ಸ್ತ್ರೀ ವಾಯುಕ ಮಾಲಾಕಾರ
ಮೊದಲಾದವರ್ಗೂ ವಿಪ್ರ ಸ್ತ್ರೀಯರಿಗೂ ಒಲಿದಿ ೫
ಬಲಭದ್ರ ಸುಭದ್ರ ಸಹ ಕೃಷ್ಣ ಜಗನ್ನಾಥ
ಮಾಲೋಲ ನಿನ್ನಯ ಬಾಲಲೀಲೆಗಳು
ಬಲು ಶುಭತಮ ಪಾಲ್‍ಬೆಣ್ಣೆಯ ಪ್ರಿಯ ಈಶ
ಪಾಲಾಬ್ಧಿಶಾಯಿ ಅಚ್ಚುತಾನಂದ ಗೋವಿಂದ ೬
ಈರಾರು ಯೋಜನ ದ್ವಾರಕಾ ದುರ್ಗವು
ಸುರದ್ರುಮ ಲತೋದ್ಯಾನ ವಿಚಿತ್ರೋಪ ವನಗಳ್
ಪುರುಟ ಶೃಂಗೋನ್ನತ ಸ್ಫಟಿಕ ಅಟ್ಟಾಳ
ಗೋಪುರಗಳು ನವರತ್ನ ಸ್ವರ್ಣಗೃಹಗಳ್ ೭
ಆಶ್ಚರ್ಯ ಕಡಲ್‍ಮಧ್ಯ ದ್ವಾರಕಾ ನಿರ್ಮಿಸಿ
ಅಚ್ಛನ್ನ ಭಕ್ತ ಸೇವಕರೊಡೆ ಇದ್ದಿ
ಮುಚುಕುಂದನಿಗೆ ಒಲಿದು ಕಾಲನ್ನ ಕೊಲ್ಲಿಸಿದಿ
ರಚಿಸಿದಿ ಮದುವೆಯ ಅಣ್ಣ ಬಲರಾಮಗೆ ೮
ಸಿಂಧುಜಾ ಇಂದಿರಾ ಜನಕಜಾ ಸೀತೆಯೇ
ಪ್ರಾದುರ್ಭವಿಸಿಹಳು ರುಕ್ಮಿಣೀ ಭೈಷ್ಮಿ
ಸಿಂಧುಜನಕಾ ತೆರದಿ ಅಲ್ಲದೇ ಭೀಷ್ಮಕ
ಪುತ್ರ ದುಷ್ಟಗೆ ಸೋತು ಚೈದ್ಯನಿಗೆ ಕೊಡಲಿದ್ದ ೯
ಅನಾದಿ ನಿತ್ಯ ನಿನ್ನ ಸತಿ ರಮಾ ರುಕ್ಮಿಣಿ
ಜ್ಞಾನ ತೇಜಃ – ಪುಂಜ ಭಕ್ತಿಪ್ರವಾಹ ಓಲೆ
ನಿನಗೆ ಕಳುಹಿಸಿದಳು ದ್ವಿಜವರ ಶ್ರೇಷ್ಠ
ಬ್ರಾಹ್ಮಣ ಅಚ್ಛಿನ್ನ ಭಕ್ತನ ಕೈಯಲ್ಲಿ ೧೦
ಉನ್ನಾಮ ಉದ್ದಾಮ ಅಚ್ಚುತ ನೀ ನಿತ್ಯ
ಆನಂದ ಚಿತ್ತನು ಯದುಪತಿ ಕೃಷ್ಣ
ನೀನೇ ತನ್ನ ಪತಿ ಸಿರಿ ತಾನು ಎಂದು
ಅನಘ ಲಕ್ಷ್ಮೀಭೈಷ್ಮಿ ಪತ್ರದಿ ಹೇಳಿಹಳು ೧೧
ಸುಧಾಕಲಶ ವಿಪ ಕಿತ್ತಿ ತಂದ ತೆರದಿ
ಚೈದ್ಯ ಮಾಗಧ ಸಾಲ್ವಾದಿ ಕಡೆಯಿಂದ
ಎತ್ತಿತಂದಿಯೋ ಸ್ವಯಂವರದಿಂದ ಶ್ರೀಭೈಷ್ಮಿಯ
ವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ ೧೨
ಜಯ ಕೃಷ್ಣ ನೀ ರುಕ್ಮಿಣೀ ಸಮೇತದಿ ಬಾರೆ
ಜಯಭೇರಿ ತಾಡಿಸಿ ದ್ವಾರಕಾವಾಸಿಗಳು
ಗಾಯಕರು ನರ್ತಕರು ವಿಪ್ರಮುತ್ತೈದೆಯರು
ಜಯ ಜಯತು ಎನ್ನುತಾನಂದ ತೋರಿಸಿದರು ೧೩
ಯದುಪುರಿಯಲಿ ಮನೆ ಮನೆಯಲಿ ಮಹೋತ್ಸವ
ಮುದದಿ ಅಲಂಕೃತವಾಗಿ ಸ್ತ್ರೀ ಪುರುಷರು
ಜ್ಯೋತಿ ಉಜ್ವಲ ದೀಪಾವಳಿ ಪೂರ್ಣಕುಂಭಗಳು
ಛಂದ ಗೊಂಚಲ ಪುಷ್ಪರತ್ನ ತೋರಣಗಳ್ ೧೪
ಸಂಜಯ ಕುರು ಕೇಕಯಾದಿ ರಾಜರುಗಳು
ರಾಜಕನ್ಯೆಯರು ಗಜಗಳ್ ಓಡ್ಯಾಟ
ಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದ
ಸುಚರಿತ್ರೆ ಪೊಗಳಿದರು ನರನಾರಿರೆಲ್ಲರು ೧೫
ಚತುರ್ಮುಖ ವಾಯು ಶಿವ ವೈನತೇಯನು ಶೇಷ
ಶತಮುಖ ಸ್ಮರ ಅಹಂಕಾರಿಕ ಪ್ರಾಣ
ಮೊದಲಾದ ಅಮರರು ಮುನೀಂದ್ರರು ವೇದ
ಮಂತ್ರ ಘೋಷಿಸೆ ಮದುವೆ ವೈಭವ ಏನೆಂಬೆ ೧೬
ಪೂರ್ಣಜ್ಞಾನಾತ್ಮನೆ ಪೂರ್ಣ ಐಶ್ವರ್ಯಾತ್ಮ
ಪೂರ್ಣಪ್ರಭಾನಂದ ತೇಜ ಶಕ್ತ್ಯಾತ್ಮ
ಆನಮಿಪೆ ಅಚ್ಚುತಾನಂತ ಗೋವಿಂದ
ಕೃಷ್ಣ ರುಕ್ಮಿಣಿನಾಥ ಜಗದೇಕ ವಂದ್ಯ ೧೭
ಆದರದಿ ಸುರರಾಜ ವಿಪ್ರರ ವೃಂದ
ಯಾದವರುಗಳು ಶ್ರೀ ರುಕ್ಮಿಣಿಕೃಷ್ಣ
ನಿತ್ಯ ಸತಿಪತಿ ಮದುವೆ ನೋಡಿ ಹಿಗ್ಗಿದರು
ಶ್ರೀದ ನೀ ಕೊಡುವಿಯೊ ಸೌಭಾಗ್ಯ ಇದು ಪಠಿಸೆ ೧೮
ಯೋಗೇಶ್ವರ ದೇವ ದೇವ ಶ್ರೀಯಃಪತೇ
ಅಗಣಿತ ಗುಣಪೂರ್ಣ ಅಪ್ರಮೇಯಾತ್ಮನ್
ಶ್ರೀಕೃಷ್ಣ ವಿಷ್ಣೋ ಶ್ರೀರಮಾರುಕ್ಮಿಣಿ
ಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ ೧೯
ರುಕ್ಮಿಣಿ ಪತ್ರಧರ ದ್ವಿಜವರ ಶ್ರೇಷ್ಠರು
ಧರ್ಮ ಭೀಮಾರ್ಜುನ ಸಹದೇವ ನಕುಲ
ಅಮಲ ಭಕ್ತಾಗ್ರಣಿ ವಿದುರನು ಇಂಥ
ಸುಮಹಾ ಭಕ್ತ ವಿನುತ ವಂದ್ಯನೇ ನಮೋ ನಮೋ ೨೦
ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತ
ಜಯತು ಜಗಜ್ಜನಾದಿಕರ್ತ ನಮೋ ನಮೋ
ಜಯತು ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸ
ಜಯತು ಜಯತು ದಶಪ್ರಮತಿ ಹೃತ್‍ಪದ್ಮಸ್ಥ ೨೧
-ಇತಿ ಕೃಷ್ಣಾಮೃತಸಾರ ಸಂಪೂರ್ಣಂ –

ಶ್ರೀ ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ
೪೫
ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||
ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||
ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆ
ಪರಮ ಭಾಗವತೇಷ್ಟ ಚಿಂತಾಮಣಿಯೇ ಜಯ ಜಯ
ಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪ
ಪ್ರಣವಾಷ್ಠಾಕ್ಷರ ದಿವ್ಯ | ಆರು ಅಕ್ಷರ ಮಂತ್ರ ಸುಪ್ರತಿಪಾದ್ಯ
ವಿಶ್ವಾದಿ ಎಂಟು ರೂಪಚಿನ್ಮಯ ಕಾಯ |
ಅರಿದರಧೃತ ಹಸ್ತ ಹಸ್ತವರದ ಅಭಯ | ಜಯ ಜಯತು ಜೀಯ
ಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇ
ಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂ
ಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|
ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |
ವಾಸುದೇವನೆ ಏಕದಶ ಶತಾನಂತ ರೂಪ ನಿರ್ದೋಷ ಗುಣನಿಧೇ |
ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮ
ಶಿವಾದಿ ವಂದ್ಯನೇ || ಬಾರೋ ೧
ಪ್ರಚುರ ಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕ ಕರ್ತ
ಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆ
ಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |
ಚಕ್ರಧರವರ ಅಭಯಹಸ್ತನೇ ಅಜಿತ ಅಜ ಜಗದೇಕವಂದ್ಯನೆ
ಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿ
ಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯ
ವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆ
ಉತ್ತರಾಸುಧಾಮ ಉದ್ಧವ ಗೋಪಿಜನ ಅಕ್ರೂರ ವರದನೇ
ಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿ
ರಮಣನೆ ಶರಣು ಸಂತತ || ಬಾರೋ ೨
ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನ
ಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾ
ಅಭಯವರಕರ ಘನ್ನ | ಅಮಲೇಂದು ವದನಂ ||
ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗ
ತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆ
ಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇ
ಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |
ಅನ್ನವಾಹನ ತಾತ ಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |
ಘನ ದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||
ಬಾರೋ ಬಂದಿರೋ ಶ್ರೀಶ|| ೩

ಪ್ರಸನ್ನ ಶ್ರೀ ಜಯರಾಮಚಂದ್ರ ಸ್ತೋತ್ರ
೧೪೩
ಬಿಸಜನಯನನೆ ಇವಗೆ ಒಲಿಯೋ ದಯದಿಂದ ಪ
ವೇದ ತತಿಗಳಿದಿರ್ಯ ಉರುಗುಣಾಂಬುಧಿ ಶ್ಶಾಮ ಸುಂದರನೆ ಸೀತಾಸಮೇತ ವಿಭು ನಿನ್ನ ಪಾದಪದುಮಗಳಲ್ಲಿ ಹನುಮದಾದಿಗಳೆಲ್ಲ ಆದರದಿ ಸರ್ವದಾ ಭಜಿಸುವರೋ ಸ್ವಾಮಿ ೧
ವರ ಅಭಯ ಕರಗಳಲ್ಲಿ ಶರಚಾಪ ಪಿಡಿದಿರುವಿ ಕಾರುಣ್ಯ ಬೀರುವ ನೋಟ ಮುಗಳ್‍ಹಾಸ ಶರಣಾದೆ ನಿನಗೆನಾ ಸುಕೃತ್ ವಿಭುವೇ ಸದಾ ವರಜ್ಞಾನ ಭಕ್ತ್ಯಾದಿ ಐಶ್ವರ್ಯ ಈಯೋ ೨
ಅನಂತಾರ್ಕ ಶಶಿಅಧಿಕ ಕಾಂತಿಯಿಂ ಜ್ವಲಿಸುತಿ ಅನಂತ ಪಾಪಗಳೆಲ್ಲ ಮನ್ನಿಸಿ ದಯದಿ ಎನ್ನ ಇವನ ಸರ್ವವೈಷ್ಣವರ ಕಾಯಯ್ಯ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ೩

ಶ್ರೀ ಕೃಷ್ಣ ತೋಡಿ
೨೫
ಬ್ರಾಹ್ಮಣಸ್ತ್ರೀಯರಲಿ ಭೋಜನವನುಂಡೆ
ಬ್ರಹ್ಮಾಂಡದೊಡೆಯ ಶ್ರೀ ಗೋಪಾಲಕೃಷ್ಣ ಪ
ಸ್ನಾನ ಜಪ ತಪ ಹೋಮ ವ್ರತ ಅನುಷ್ಠಾನಗಳು
ಅನುದಿನವು ವೇದ ಪಾರಾಯಣ ಪ್ರವಚನ
ಘನ ವಿಷಯ ವಾಕ್ಯಾರ್ಥ ಪೂಜೆ ಮೊದಲಾದವು
ನಿನ್ನ ತಿಳಿಯದೆ ಏನೂ ಫಲದವು ಅಲ್ಲ ೧
ನಿನ್ನ ಮಹಿಮೆ ಕೆಲವು ಬ್ರಾಹ್ಮಣರು ಅರಿಯದೆಲೆ
ನಿನ್ನ ಪ್ರೀತಿಗೇವೆ ಯಜ್ಞವೆಂಬುದು ಮರೆತು
ಅನ್ನ ಕೊಡುವುದು ಇಲ್ಲ ಈಗ ಹೋಗೆನಲಾಗ
ವನಿತೆಯರಲಿ ಪೋದೆ ಅನ್ನ ಅನ್ನಾದ ೨
ಜÁರ ಚೋರನಂತೆ ನಿನ್ನ ವಿಡಂಬನವ
ನಾರೀಮಣಿಗಳು ಕೇಳಿ ತತ್ತತ್ವವರಿತು
ಹರಿ ನಿನಗೆ ಬಿಡಿಸಿ ಬಹು ಧನ್ಯರಾದರೊ ಸ್ವಾಮಿ
ಸರಸಿಜಾಸನ ತಾತ ಪ್ರಸನ್ನ ಶ್ರೀನಿವಾಸ ೩

ಶ್ರೀ ಗೋಪಾಲ ದಾಸಾರ್ಯ ವಿಜಯ
ಶ್ರೀ ಲಕ್ಷ್ಮೀ
೧೩೭
ಭಾಗಣ್ಣ ಗೋಪಾಲ ದಾಸಾರ್ಯರ್ ಪಾದಕ್ಕೆ
ಬಾಗಿ ಶರಣಾದೆನು ಸತತ ನಿಶ್ಚಯದಿ
ಜಗದಾದಿ ಕರ್ತ ಅಜ ಅಘದೂರ ಸುಗುಣಾಬ್ಧಿ
ತುರಗಾಸ್ಯ ವಿಜಯ ಶ್ರೀನಿವಾಸ ಪ್ರಿಯತಮರು || ಭಾಗಣ್ಣ ಪ
ನಾರ ಸುಗುಣಾರ್ಣವನು ಶ್ರೀರಮಾಪತಿ ಹಂಸ
ಸರಿಸಿಜಾಸನ ಸನಕ ದೂರ್ವಾಸ ಇಂಥಾ
ಪರಮೋತ್ರ‍ಕಷ್ಟ ಗುರು ಪರಂಪರೆಗೆ ಶರಣೆಂಬೆ
ಪುರುಷೋತ್ತಮಾಚ್ಯುತ ಪ್ರೇಕ್ಷರಿಗೆ ಶರಣು ೧
ಸದಾಗಮಾಮಾಯಗಳು ಬ್ರಹ್ಮ ಧಾಮವೆಂದು
ಉದ್ಘೋಷಿಸುತಿವೆ ಮುಖ್ಯವಾಯುದೇವ
ಮಾತರಿಶ್ವ ಸೂತ್ರ ಪವಮಾನ ಮುಖ್ಯಪ್ರಾಣ
ಪ್ರತಿರಹಿತ ಬಲಜ್ಞಾನ ರೂಪ ಹನುಮ ಭೀಮ ಮಧ್ವನ್ನ ೨
ಪ್ರೋಚ್ಚಸುರವರ ವಾಯುವಿನ ತೃತೀಯಾವತಾರ ಮಧ್ವ
ಅಚ್ಯುತ ಪ್ರೇಕ್ಷರಲಿ ಸಂನ್ಯಾಸಕೊಂಡು
ಪ್ರಚ್ಛನ್ನ ಬೌದ್ಧಾದಿ ಮತ ಪಂಕದಿ ಬಿದ್ದಿದ್ದ
ಸಜ್ಜನರನ್ನುದ್ಧರಿಸಿ ಸತ್ಜ್ಞಾನವಿತ್ತ ೩
ಶ್ರೀ ಮಧ್ವಗುರು ವಂಶಸ್ಥ ಪದ್ಮನಾಭ ನರಹರಿ
ಮಾಧವಾಕ್ಷೋಭ್ಯಜಯ ವಿದ್ಯಾಧಿರಾಜ
ವಿದ್ಯಾಧಿರಾಜರ ಶಿಷ್ಯರು ಈರ್ವರು
ಸಾಧು ಉತ್ರ‍ಕಷ್ಟರೀ ತೀರ್ಥರ್‍ಗಳಿಗೆ ಶರಣು ೪
ಶ್ರೀ ವಿದ್ಯಾಧಿರಾಜರ ಪ್ರಥಮ ಶಿಷ್ಯ ರಾಜೇಂದ್ರ
ಹಸ್ತ ಪದ್ಮ ಜಾತರು ಜಯಧ್ವಜಾರ್ಯ
ಮಾಧವನ ಏಕಾಂತ ಭಕ್ತ ಪುರುಷೋತ್ತಮರು
ತತ್ಸುತ ಬ್ರಹ್ಮಣ್ಯರೀ ಸರ್ವರಿಗೂ ಶರಣು ೫
ಪದ್ಮನಾಭ ತೀರ್ಥಜ ಲಕ್ಷ್ಮೀಧರರ ವಂಶ
ಜಾತ ಸುವರ್ಣವರ್ಣ ತೀರ್ಥಾಭಿದರ
ಸುತಲಕ್ಷ್ಮೀ ನಾರಾಯಣ ಯತಿವರ್ಯ ಶ್ರೀ
ಪಾದರಾಜರು ಈ ಸರ್ವರಿಗೂ ಶರಣು ೬
ಶಿಂಶುಮಾರ ಪುಚ್ಛಶ್ರಿತರ ಅವತಾರರೇ
ವಸುಮತೀಖ್ಯಾತ ಶ್ರೀಪಾದರಾಜರಲಿ
ಭಾಷ್ಯಾಧಿಗಳ ಕಲಿಯೇ ಬ್ರಹ್ಮಣ್ಯ ತೀರ್ಥರ
ಶಿಷ್ಯವರ್ಯ ವ್ಯಾಸರಾಜರು ಸೇರಿದರು ೭
ವಾದಿಗಜ ಕೇಸರಿ ಮಧ್ವಮತೋದ್ಧಾರರು
ಮೇದಿನೀ ಪ್ರಖ್ಯಾತ ಮಹಾಭಾಗವತರು
ಸಾಧುಜನ ಆಹ್ಲಾದ ಶ್ರೀ ವ್ಯಾಸರಾಜರಲಿ
ಸದಾ ಶರಣು ಪಾಲಿಪರು ಪ್ರತಿ ಕ್ಷಣ ದಯದಿ ೮
ಆನಂದ ಮುನಿಕರ ಅರವಿಂದ ಸಂಜಾತ
ವಿಷ್ಣುತೀರ್ಥ ವಂಶಜ ವಾಗೀಶರ ಹಸ್ತ
ವನರುಹೋತ್ಪನ್ನರು ಸುಮಹಾಮಹಿಮರು
ಘನ ದಯಾನಿಧಿ ವಾದಿರಾಜ ಸ್ವಾಮಿಗಳು ೯
ಯುಕ್ತಿಮಲ್ಲಿಕಾ ಮೊದಲಾದ ತತ್ವಬೋಧಕವಾದ
ಗ್ರಂಥ ಪದ್ಯ ಕೀರ್ತನೆಗಳ್ ಸಜ್ಜನರಿಗಿತ್ತು
ಸೋದೆಯಲ್ಲಿ ತ್ರಿವಿಕ್ರಮಮೂರ್ತಿ ನಿಲ್ಲಿಸಿಹರು
ಭೂಧರ ಹಯಾಸ್ಯ ಪ್ರಿಯತಮ ಶ್ರೀ ವಾದಿರಾಜಾರ್ಯ ೧೦
ತೀರ್ಥಪಾದ ಶ್ರೀಪತಿಯು ಬ್ರಹ್ಮ ಶಿವಾದ್ಯಮರ ಸಹ
ಸದಾ ಸನ್ನಿಹಿತವಾಗಿರುವ ಮತ್ತು
ತೀರ್ಥವನ ಕ್ಷೇತ್ರಗಳೊಳುತ್ತಮ ವೃಂದಾವನದಿ
ಅತ್ಯಕ್ತ ದೇಹದಿ ಕುಳಿತಿಹರು ಗುರುರಾಟ್ ೧೧
ಬುಧರು ತಿಳಿದಂತೆಯೇ ಬ್ರಹ್ಮಾಂಡ ಪುರಾಣದಲ್ಲಿ
ವಾದಿರಾಜರು ಭಾವೀಕಲ್ಪ ಮುಖ್ಯವಾಯು
ಎಂದು ಪ್ರಸಿದ್ಧರೀ ಸುದುಪಾಸ್ಯ ಮದ್ಗುರುವರ್ಯರಲ್ಲಿ ಶರಣಾದೆ
ಸದಾನಮೋ ಲಾತವ್ಯಾಚಾರ್ಯ ಕರುಣಾಬ್ಧೆ ೧೨
ವಿದ್ಯಾಧಿರಾಜರ ಎರಡನೇ ಶಿಷ್ಯರು
ಕವೀಂದ್ರ ಪೀಳಿಗೆಯ ಶ್ರೀರಾಮಚಂದ್ರ
ದ್ವಿತೀಯ ಶಿಷ್ಯ ವಿದ್ಯಾನಿಧಿ ವಂಶಜಾತರು
ಆದ್ಭುತಮಹಿಮರು ಕರುಣಿ ರಘೋತ್ತಮರು ೧೩
ಕಾಮಿತಪ್ರದ ಟೀಕಾಭಾವ ಬೋಧಾರ್ಯರು
ಎಮ್ಮಪಾಲಿಪ ರಘೋತ್ತಮರಿಗೆ ಶರಣು
ರಾಮಚಂದ್ರರ ಮೊದಲನೆ ಶಿಷ್ಯ ವಿಬುಧೇಂದ್ರ
ಈ ಮಹಾತ್ಮರ ವಂಶಜರು ಸರ್ವರಿಗೂ ನಮಿಪೆ ೧೪
ದುರ್ಜನರ ಕುಮತಗಿರಿವಜ್ರ ವಿಜಯೀಂದ್ರರು
ಸಜ್ಜನರುದ್ಧಾಕರು ಸುಧೀಂದ್ರಸೂರಿ
ನಿಜವಿರಾಗಿ ಯಾದವೇಂದ್ರ ವಿಜ್ಞಾನಿಯು
ಭಜಕಜನ ಸುರಧೇನು ರಾಘವೇಂದ್ರಾರ್ಯ ೧೫
ಯಾರುಹಿಂದೆ ಏಡಮೂಕ ಬ್ರಾಹ್ಮಣನಾಗಿದ್ದಾಗ
ಯಾರದ್ವಾರಾ ಶ್ರೀ ವಾದಿರಾಜರು ಸ್ವಪ್ನದಲ್ಲಿ
ಉತ್ರ‍ಕಷ್ಟ ಶುಭತಮ ವೃಂದಾವನಾಖ್ಯಾನ ತಾವೇ ಹೇಳಿದರು
ಆಸೂರಿ ವಿಶ್ವಪ್ರಿಯಾರ್ಯರಿಗೆ ಶರಣು ೧೬
ಸೂರಿಕುಲತಿಲಕರು ವಾದಿಕರಿಹರಿ ಖ್ಯಾತ
ಸಿರಿವ್ಯಾಸರಾಯರಲಿ ಮುದ್ರಿಕೆಯ ಕೊಂಡ
ನಾರದರ ಅವತಾರರೆಂದು ಪ್ರಸಿದ್ಧರು
ಪುರಂದರ ದಾಸಾರ್ಯ ಕರುಣಾಂಬುಧಿಗೆ ಆನಮಿಪೆ ೧೭
ನಿರ್ಝರ ವೃಂದ ಋಷಿ ಭೃಗುಮುನಿಯೇ ಧರೆಯಲ್ಲಿ
ವಿಜಯದಾಸಾರ್ಯರಾಗಿ ಮೆರೆದವರ್ಗೆ ಶರಣು
ವಿಜಯವಿಟ್ಠಲನೊಲಿಯೆ ಜ್ಞಾನ ಭಕ್ತಿಸತ್ತತ್ವ
ಸಜ್ಜನರಿಗೆ ಬೋಧಿಸಿದ ನಿವ್ರ್ಯಾಜ ಕರುಣಿ ೧೮
ಆಲಸ್ಯದಿನಾ ಮೈಥಿಲೀಪತಿ ಪಲ್ಲಿಯಲ್ಲಿ
ಮಲಗಿರಲು ಶ್ರೀ ಗೋಪಾಲದಾಸಾರ್ಯರು
ಬಲುಕರುಣದಲ್ಲಿ ಮುಂದೆ ನಿಂತು ಯತಿಕೃತ
ಮಾಲೋಲ ಪೂಜೆನೋಡಿ ಒದಗಿದ ಗುರುವರ್ಯ ೧೯
ಉಮಾಸೂನು ವಿಘ್ನಹರ ಕ್ಷಿಪ್ರಪ್ರಸಾದನು
ಈ ಮಹೀಯಲ್ಲಿ ಗೋಪಾಲದಾಸರಾಗಿ
ರಮಾಪತಿಯ ಸೇವಿಸಿ ಸಜ್ಜರನ್ನುದ್ಧರಿಸಿಹರು
ನಮಿಸಿ ಶರಣಾದೆ ಈ ಉದಾರ ಕರುಣಿಗೆ ೨೦
ಸುಪವಿತ್ರೆ ಸೌಭಾಗ್ಯಪ್ರದ ಮಂತ್ರಗಳನೆಗೆ
ಉಪದೇಶಮಾಡಿದ ಕಪಿಗೋತ್ರದವರು
ಸುಪುಣ್ಯ ಶೇಶ್ಲೀಕರು ಉದಾರ ಸಾತ್ವಿಕರು
ಶ್ರೀಪತಿ ಕೃಷ್ಣಪ್ರಿಯ ಶ್ರೀರಾಮಾಚಾರ್ಯರಿಗೆ ಶರಣು ೨೧
ತರುಣತನಾರಭ್ಯ ಹರಿದಾಸತ್ವ ಒದಗಿಸಿ
ಪರಿಪರಿ ವಿಧದಲ್ಲಿ ಔದಾರ್ಯದಿಂದ
ಕಾರುಣ್ಯಬೀರಿ ಕಾಪಾಡುತಿರುವಂಥಾ ಈ
ಹರಿಪ್ರತಿಮಾರೂಪ ಗುರುಸರ್ವರಿಗೂ
ತಂದೆ ತಾಯಿಗೂ ಶರಣು ೨೨
ದಧಿಶಿಲಾ ಎಂಬುವರು ಆಡಂಬರ ಪ್ರಿಯರು
ಮಂದಿಗಳು ಮೊಸರು ಕಲ್ಲೆಂದು ಕರೆಯುವರು
ಸಾಧು ವೈಷ್ಣವ ವಿಪ್ರ ಮುರಾರಿರಾಯರು
ಸಾಧ್ವಿ ವೆಂಕಮ್ಮ ದಂಪತಿ ಇದ್ದ ಕ್ಷೇತ್ರ ೨೩
ಪುತ್ರ ರತ್ನಗಳು ನಾಲ್ಕು ಈ ದಂಪತಿಗೆ
ಅಗ್ರಜ ಭಾಗಣ್ಣ, ಸೀನಪ್ಪ, ದಾಸಪ್ಪ
ತರುವಾಯ ರಂಗಪ್ಪ ನಾಲ್ಕನೆಯವನಾಗಿ
ಗೌರವದಿ ಚರಿಸಿತು ಮುರಾರಿರಾಯರ ಕುಟುಂಬ ೨೪
ಸಂಸಾರಾವಸ್ಥೆಯಲ್ಲಿ ನಶ್ವರ ಸುಖ ದುಃಖ
ಮಿಶ್ರವಾಗಿಯೆ ಉಂಟು ಆ ನಿಯತಿಯಲ್ಲಿ
ಭೂಸುರವರ್ಯರು ಮುರಾರಿರಾಯರು ಸ್ವರ್ಗ
ತಾ ಸೇರಿದರು ಸತಿ ಸುತರನ್ನು ಬಿಟ್ಟು ೨೫
ಬಾಲಕರನ್ನು ಪ್ರಿತ್ರವ್ಯರು ಲೆಕ್ಕಿಸದಿರಲು
ಮಾಲೋಲ ಪಾಲಿಸುವ ಕರ್ತನ್ನೇ ನಂಬಿ
ಶೀಲೆ ವೆಂಕಮ್ಮ ಮಕ್ಕಳನ್ನ ಕರಕೊಂಡು
ಒಳ್ಳೆಯ ಜನಪದ ಶಂಖಪುರವೈದಿದಳು ೨೬
ಶಂಖಪುರ ಹತ್ತಿರವೇ ಹನೂಮಂತನ ಗುಡಿ
ಮಕ್ಕಳ ಸಹ ಅಲ್ಲಿ ವಾಸಮಾಡಿ
ಮುಖ್ಯ ಪ್ರಾಣದೇವರ ಸೇವಿಸಿದ ಫಲವಾಗಿ
ಚಿಕ್ಕ ಜಮೀನು ಕೊಂಡಳು ದಾನವಾಗಿ ೨೭
ದಾನ ಕೊಟ್ಟವನಿಗೆ ಬಲು ಪುಣ್ಯ ದೊರೆಯಿತು
ದಾನಿಗಳು ಭಾಗವತ ಶ್ರೇಷ್ಠರಾದ್ದರಿಂದ
ಹನುಮ ಗೋಪಾಲಾನುಗ್ರಹದಿಂದ ಐವರೂ
ಧಾನ್ಯಸಮೃದ್ದಿ ತೊರೆದರು ಆತಂಕ ೨೮
ಕುಲ್ಕರ್ಣಿ ಎಂಬಂಥ ಸರ್ಕಾರ ಅಧಿಕಾರಿ
ವೆಂಕಮ್ಮನಲ್ಲಿ ಮಾತ್ಸರ್ಯ ದ್ವೇಷ ಬೆಳೆಸಿ
ಸರ್ಕಾರ ಕೆರೆ ನೀರು ಕದ್ದು ಹೊಯಿಸಿದಳೆಂದು ಆ
ಚಿಕ್ಕ ಜಮೀನ ಒಡಮೆ ಕಿತ್ತಿಕೊಂಡ ೨೯
ಸಾಧ್ವೀ ವೆಂಕಮ್ಮನಿಗೂ ಮಹಾತ್ಮ ತತ್ಪುತ್ರರಿಗೂ
ಅಧಮ ಅಧಿಕಾರಿ ಮಾಡಿದ ದ್ರೋಹದಿಂದ
ಪುತ್ರ ಸಂತಾನ ವಂಶಕ್ಷೀಣವಾಯಿತು ಅವಗೆ
ಅಂದಿನಿಂದ ಕೆರೆ ಅದ್ಯಾಪಿ ನೀರಿಲ್ಲ ಆ ಕೆರೆಯಲ್ಲಿ ೩೦
ದೀನರಿಗೂ ಸಾಧು ಮಹಾತ್ಮರಿಗೂ ಮಾಳ್ಪ
ಸಣ್ಣದೋ ದೊಡ್ಡದೋ ದ್ರೋಹಕ್ಕೆ ದಂಡನಾ
ಅನುಭವ ಕ್ಷಿಪ್ರದಲ್ಲೋ ಮೆಲ್ಲಗೋ ಅಪರಾಧಿ ಮೂರ್ಖಗೆ
ದೀನ ರಕ್ಷಕ ಸತ್ಪತಿ ಶ್ರೀ ಹರಿ ಈವ ೩೧
ಭಾಗಣ್ಣ ಸೀನಪ್ಪ ದಾಸಪ್ಪ ರಂಗಪ್ಪ
ಲೌಕಿಕ ವಿದ್ಯಾ ಕಲಿತು ಉಪಾಧ್ಯಾಯರಲ್ಲಿ
ಭಾಗಣ್ಣನಿಗೆ ಶಾನುಭೋಗ ಮುಂಜಿಮಾಡಿ
ಭಗವದ್ವಿಷಯ ಕಲಿತರೂ ಭಾಗಣ್ಣ ೩೨
ತತ್ಕಾಲ ಲೌಕಿಕ ಶ್ರೀತನ ಕೊರತೆ ನೋಡಿ
ಬಂಧುಗಳಿವರನ್ನುದಾಸೀನಮಾಡಿದರು
ಇಂದಿರಾ ಪತಿ ವೆಂಕಟಕೃಷ್ಣಗೋಪಾಲ
ಬಂದು ಶ್ರೀ ಒದಗಿಸಿದ ಕ್ಷಿಪ್ರದಲೆ ಇವರ್ಗೆ ೩೩
ಬ್ರಹ್ಮಚಾರಿ ಭಾಗಣ್ಣ ಗಾಯತ್ರೀ ಮಂತ್ರವ
ಅಹರಹ ಸೂಕ್ಷ್ಮಾರ್ಥ ಅನುಸಂಧಾನ
ವಿಹಿತ ಶ್ರದ್ಧಾ ಉದ್ಭಕ್ತಿಪೂರ್ವಕ ಜಪಿಸೆ
ಶ್ರೀ ಹಯಾಸ್ಸ ನಾರಾಯಣನು ಒಲಿದ ಕ್ಷಿಪ್ರದಲೆ ೩೪
ವೇದೋಚ್ಚಾರಣವೇ ಗಾನವು ಜಗದ್ರಕ್ಷಣೆಯೇ ತ್ರಾಣವು
ಮಾಧವನೇ ಗಾಯತ್ರಿನಾಮ ಹಯಗ್ರೀವ
ಭೂತಪೂರ್ಣವಾಗ್ವಶ್ರೀ ಪೃಥ್ವೀ ಆಶ್ರಯ ಶರೀರವ್ಯಾಪ್ತನು
ಹೃದಯ ಪ್ರಾಣಾಧಾರದಿವ ಪರಸ್ವರೂಪ
ಪಾದತ್ರಯವು ಜಗತ್ ಪಾದ ಸದೃಶ ೩೫
ಜ್ಞಾನಸುಖ ಬಲಪೂರ್ಣ ಸರ್ವ ಜಗದಾದಿಕರ್ತ
ದಿನಪತೇಜ ಸ್ಫೂರ್ತಿದ ಚೇಷ್ಟಕಾಧಾರ
ಶ್ರೀ ನಾರಾಯಣದೇವ ನಿನ್ನ ಚಿಂತಿಪೆ ಭಜಿಪೆ
ಅನುಪಮ ಸರ್ವೋತ್ತಮ ನಮೋ ಕೇಶವಾದಿ ನಾಮ ೩೬
ಲೌಕಿಕ ವಿಷಯಗಳೊಳ್ ಮನವಾಕ್ಕು ಚಲಿಸದೆ
ಏಕಚಿತ್ತದಿ ಗಾಯತ್ರೀ ಪ್ರತಿಪಾದÀ್ಯ
ಶ್ರೀ ಗಾಯತ್ರೀನಾಮ ನಾರಾಯಣನನ್ನ
ಭಾಗಣ್ಣ ಜಪಿಸಿದರು ಕಂಡರು ಶ್ರೀಕರನ್ನ ೩೭
ಏಕಾಂತದಲ್ಲಿ ವೃಕ್ಷಮೂಲದಲ್ಲಿ ಕುಳಿತಿದ್ದ
ಭಾಗಣ್ಣನ ಜಪಕೆಡಿಸಿ ಓರ್ವ ದುಷ್ಟ
ಹಾಕಿದನು ಕುದಿನೀರು ಬೊಬ್ಬೆಗಳ್ ಅವನ ಮೇಲೆದ್ದವು
ಚಿಕಿತರಾಗಿ ಜನರು ಹೊಗಳಿದರು ಭಾಗಣ್ಣನ ೩೮
ಮತ್ತೊಂದುದಿನ ಇದಕೆÀ ಮುಂದೆಯೋ ಹಿಂದೆಯೋ
ಸುತ್ತಿ ಭಾಗಣ್ಣ ವೃಕ್ಷಮೂಲದಲಿ ಸರ್ಪ
ಹಿತದಿ ಆಶೀರ್ವದಿಸಿ ಪೋದಂತೆ ಪೋಯಿತು
ಇದು ನೋಡಿ ಜನರು ಕೊಂಡರು ಭೀತಿ, ಆಶ್ಚರ್ಯ ಮರ್ಯಾದೆ ೩೯
ಅಂದು ಮೃತಸರ್ಪ ಅರಿಯರಿಯರು ಶಮೀಕರು ಸಮಾಧಿಯಲಿ
ಇಂದು ತನ್ನ ಸರ್ಪ ಸುತ್ತಿರುವುದು ಭಾಗಣ್ಣ ಅರಿಯರು
ಇಂದಿರೇಶ ಒಲಿದವನಿವನೆಂದು ಶೇಷನೇ ಆಲಿಂಗಿಸಿದನೋ
ಸ್ಕಂಧ ತನ್ನಯ ಸಹೋದರನೆಂದಪ್ಪಿ ಕೋಂಡನೋ ೪೦
ತತ್ವಮಾತೃಕಾನ್ಯಾಸಗಳ ಚರಿಸಿ
ಮಂತ್ರ ಮೂಲ ಪ್ರಣವ ಅಷ್ಟಾಕ್ಷರೀ ಗಾಯತ್ರೀ
ಭಕ್ತಿ ಪೂರ್ವಕ ಜಪಿಸಿ ಹೊರ ಒಳಗೆ ಶ್ರೀಹರಿಯ
ವ್ಯಾಪ್ತಿ ವಿಜ್ಞಾನ ಪುಟ್ಟಿತು ಈ ಚೌತಾಪರೋಕ್ಷಿಗೆ ೪೧
ವ್ಯಾಪ್ತಿ ದರ್ಶಿಯು ಇವರು ಶ್ರೀ ವಿಷ್ಣು ಅನುಗ್ರಹದಿ
ಇಂದಿನ ಹಿಂದಿನ ಮುಂದಿನ ವಿಷಯ ಜ್ಞಾನ
ವೇದ್ಯವಾಯಿತು ಹರಿಸ್ಮರಣಾ ಪೂರ್ವ ಆಲೋಚನದಿ
ಬಂದು ಕೇಳುವವರಿಗೆ ಯೋಗ ಪೇಳಿದರು ೪೨
ಯೋಗಕ್ಷೇಮ ಸರ್ವಕೂ ನಿಯಾಮಕನು ಹರಿಯೇವೆ
ಭಾಗಣ್ಣ ಈತತ್ವಜ್ಞಾನ ಪೂರ್ವಕದಿ
ಲೌಕಿಕ ಧನ ಅಪೇಕ್ಷಿಸದಿದ್ದರೂ ಜನರು
ಬಾಗಿ ದ್ರವ್ಯಗಳಿತ್ತು ಬೇಡಿದರು ಸ್ವೀಕರಿಸೆ ೪೩
ಭವಿಷ್ಯ ಪೇಳುವುದರಲ್ಲಿ ಖ್ಯಾತಿ ಹರಡಿದ್ದಲ್ಲದೆ
ಸರ್ವೇಶನ ಸ್ತೋತ್ರಕವನ ಪಟು ಎಂದು
ಸರ್ವರೂ ಕೊಂಡಾಡಿ ಆ ಊರಿಗೆ ಬಂದ ಪ್ರಖ್ಯಾತ
ಕವಿಯನ್ನ ನಿಗ್ರಹಸಿ ಓಡಿಸಿದರು ಧೀರ ೪೪
ದಿಗ್ವಜಯ ಜಯಶೀಲನೆಂದು ಖ್ಯಾತ ಆ ಕವಿ
ಭಾಗಣ್ಣ ಸೋಲಿಸಿ ಓಡಿಸಿದ್ದು
ಭಾಗಣ್ಣನ ಪ್ರಭಾವವ ಹರಡಿಸಿತು ನಾಡಲ್ಲಿ
ಭಾಗಣ್ಣಗೆ ಸನ್ಮಾನ ಮಾಡಿದರು ೪೫
ಗದ್ವಾಲರಾಜನು ಇನ್ನೂ ಬಹು ಪ್ರಮುಖರು
ಬಂದು ನೇರವಾಗಿ ಭಾಗಣ್ಣನಲ್ಲಿ
ವಂದಿಸಿ ಸನ್ಮಾನ ಪ್ರಶಸ್ತಿಗಳ ಅರ್ಪಿಸಿ
ಪೋದರು ಶ್ಲಾಫಿಸುತ ತಮ್ಮ ತಮ್ಮ ಸ್ಥಳಕೆ ೪೬
ಹಿಂದೆ ದ್ರವ್ಯ ಹೀನನಾಗಿದ್ದ ಭಾಗಣ್ಣನಿಗೆ
ಇಂದು ಶ್ರೀಕೃಷ್ಣನ ಒಲುಮೆಯಿಂದ
ಬಂದು ಸೌಭಾಗ್ಯ ಶ್ರೀ ದ್ರವ್ಯಗಳು
ಔದಾರ್ಯದಿ ದಾನಾದಿಗಳ್ ಮಾಡಿದರು ೪೭
ಇಷ್ಟರಲ್ಲೇ ಸೀನಪ್ಪ ದಾಸಪ್ಪ ರಂಗಪ್ಪ
ಪ್ರೌಢವಯಸ್‍ಐದಿ ಗದ್ವಾಲು ಹೋಗೆ ಅಲ್ಲಿ
ಮೌಢ್ಯ ಮಾತ್ಸರ್ಯದಿ ರಾಜ್ಯಾಧಿಕಾರಿಗಳು
ಕಡು ನಿರೋಧ ಮಾಡಿದರು ಮೂವರನ್ನು ೪೮
ವೆಂಕಟೇಶನ ಇಚ್ಛಾ ಈಮೂವರು ಅಣ್ಣ
ಭಾಗಣ್ಣ ನಾಶ್ರಯದಲ್ಲೇವೆ ಇದ್ದು
ಅಗಲದೆ ಶ್ರೀಹರಿಗುಣಾನುವರ್ಣನಾಗಳ
ಸುಗಾನ ಮಾಡುತ್ತಾ ಇರಬೇಕು ಎಂದು ೪೯
ಭಾಗಣ್ಣ ಅರ್ಯರು ಗದ್ವಾಲಿಗೆ ಪೋಗಿ
ಸುಗುಣವಂತ ತಮ್ಮಂದಿರನ್ನ ಕರೆತಂದು
ಅಗಣಿತ ಗುಣಾರ್ಣವ ಶ್ರೀಯಃ ಪತಿಯ ಸೇವೆಗೆ
ಯೋಗ್ಯೋಪದೇಶ ಪೂರ್ವಕ ತಯಾರು ಮಾಡಿದರು ೫೦
ದಾಸಪ್ಪ ಸೀನಪ್ಪ ರಂಗಪ್ಪ ತಮ್ಮ ಜ್ಞಾನಭಕ್ತಿ
ಕಾಶಿಸಿ ವರ್ಧಿಪುದು ದಿನೇ ದಿನೇ ಹೆಚ್ಚಿ
ಶ್ರೀ ಶ್ರೀನಿವಾಸನ ಪ್ರೀತಿಗೆ ಭಾಗಣ್ಣ
ಚರಿಸುವ ಅನ್ನದಾನಾದಿಗಳಲ್ಲಿ ಸೇವಿಸಿದರು ೫೧
ದ್ರವ್ಯ ಧಾನ್ಯರಾಶಿಗಳು ತುಂಬಿದ್ದು ಕಂಡು
ದೇವ ಬ್ರಾಹ್ಮಣ ಸೇವೆಗೆ ಅಕ್ಕಿ ಹೆಚ್ಚು ಬೇಡೆಂದು
ಯಾವರೂ ಕಾಣದೆ ವೆಂಕಮ್ಮ ಮುಚ್ಚಿಡಲು
ಯಾವತ್ತೂ ಅಕ್ಕಿಯು ಹುಳುವಾಯ್ತು ಮರುದಿನ ೫೨
ಹರಿಬಲುಮೆಯಿಂದ ಭಾಗಣ್ಣ ಈ ರೀತಿ ತೋರಿಸಲು
ಹರಿಭಕ್ತಿ ವೈರಾಗ್ಯ ಹೆಚ್ಚಿತು ಮಾತೆಗೆ
ಭಾರಿತರ ಕೀರ್ತನಾ ಸೇವೆ ಅತಿಶಯ ಚರ್ಯ
ಅರಿತು ನಾಡೆಲ್ಲವೊ ಕೊಂಡಾಡಿತು ಭಾಗಣ್ಣನ ೫೩
ಉತ್ತನೂರು ಸಮೀಪವು ಐಜೀ ಎಂಬುವ ಗ್ರಾಮ
ಉತ್ತಮ ಬ್ರಾಹ್ಮಣ

ಶ್ರೀ ಭಾರತೀದೇವಿ
೭೨
ಭಾರತಿ ತವ ಚರಣಾಂಬುರುಹವ ನಂಬಿದೆ ಪೊರೆ ಎನ್ನ ಪ
ಹರಿಸಿರಿ ಪ್ರಿಯತರ ಮರುತನ ನಿಜಪತಿ
ಹರ ಶಕ್ರಾದಿಗಳಿಂದಾರಾಧಿತೆ ಅಪ
ಉದಿತ ಭಾಸ್ಕರನ ಪೋಲ್ವ ದ್ಯುತಿಯಿಂದ
ಜ್ವಲಿಸುವೆ ಶುಭಕಾಯೆ
ಹೃದಯಾಂತರ್ಬಹಿ ಶ್ರೀಶನ ಕಾಂಬುವ
ಜ್ಞಾನ ಭಕುತಿಯೀಯೆ ತಾಯೆ ೧
ಬಲ ಕರದಲಿ ಜ್ಞಾನ ಊಧ್ರ್ವದಿ
ಅಭಯ ಮುದ್ರೆಯು ಶುಭದ
ಒಲಿವ ಸುವರಮುದ್ರೆ ಪುಸ್ತಕ
ವಾಮದಿ ವಿದ್ಯಾಪ್ರದೆ ಸುಖದೆ ೨
ಶತಸುಖಪಿತ ಪ್ರಸನ್ನ ಶ್ರೀನಿ
ವಾಸನು ಸುಖಮಯನು
ಸತತ ಎನಗೆ ಒಲಿವಂತೆ ನೀ
ದಯಮಾಡೆ ಮಾತೆ ಭಾರತಿ ಶರಣು ೩

ದಾಸರ ಎಲ್ಲ ದೀರ್ಘಕೃತಿಗಳಲ್ಲಿ
೧೬
ಪ್ರಸನ್ನ ಶ್ರೀ ವಾಮನ
ಪ್ರಥಮ ಅಧ್ಯಾಯ
ಶ್ರೀ ವಾಮನ ಪ್ರಾದುರ್ಭಾವ ಸಾರ
ಭೂಮಾದಿ ಗುಣನಿಧಿಯೇ ಅನಘ ಮಂಗಳರೂಪ
ವಾಮನ ಸುಸೌಂದರ್ಯಸಾರ ಲಕ್ಷ್ಮೀಶ
ಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆ
ಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪ
ಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿ
ಸುದರ್ಶನ ಗದಾ ಜ್ಞಾನಪ್ರದ ದರಾ ಹಸ್ತ
ಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥ
ಶೃತಿವೇದ್ಯ ಅಜಸೇವ್ಯ ಪ್ರಣವ ಪ್ರತಿಪಾದ್ಯ ೧
ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನ
ಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತ
ಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳು
ಅವತಾರಗಳ ಮಾಡಿ ಸಜ್ಜನರ ಕಾಯುವಿ ೨
ವೇದೋದ್ಧರ ಮತ್ಸ್ಯ ಸತ್ಯವ್ರತನಿಗೆ ಒಲಿದಿ
ಮಂದರವ ಪಾಲ್ಗಡಲಲಿ ಪೊತ್ತ ಕೂರ್ಮ
ಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿ
ದೈತ್ಯಹರ ಭೂಮಿ ಉದ್ಧರ ಭೂವರಾಹ ೩
ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇ
ವಿಷ್ಟ ವಾಮನ ತ್ರಿವೃತ್ ಗೋಪಬಾಲ
ಸುಪವಿತ್ರ ಜಮದಗ್ನಿಸುತ ಪರುಶುರಾಮ
ಪ್ರಭಂಜನ ಸೇವ್ಯ ಶ್ರೀರಾಮಚಂದ್ರ ೪
ಅಜ್ಞಾನ ಹೃತ್ತಿಮಿರ ಸೂರ್ಯ ವೇದವ್ಯಾಸ
ನಿಜಭಕ್ತಜನ ಪಾಂಡವಪ್ರಿಯ ಕೃಷ್ಣ
ದುರ್ಜನ ವಿಮೋಹಕ ಸುರಸುಬೋಧಕ ಬುಧ್ಧ
ಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ ೫
ಷಡ್ರೂಪ ಹಯವದನ ಮಹಿದಾಸ ತಾಪಸ
ಕ್ಷಿಪ್ರ ವಸುಪ್ರದ ಶ್ರೀಕರ ಯಜ್ಞ್ಯ ಕಪಿಲ
ಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪ
ಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ ೬
ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನು
ಆ ಆರ್ಯನ ಸುತ ವಿರೋಚನನೆಂಬುವನು
ಆ ದೈತ್ಯನ ಪುತ್ರ ಬಲಿಮಹಾರಾಜನು
ಆಧಿಕ್ಯ ಹೊಂದಿದನು ಬಲಪೌರುಷದಲಿ ೭
ದೈತ್ಯೇಯ ಬಲಿರಾಜ ಬಲಉನ್ನಾಹದಿಂ
ಜಗತ್ರಯವ ತನ್ನ ವಶ ಮಾಡಿಕೊಂಡ
ಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನ
ವಿದುರರಾಗಲು ದೇವಮಾತೆ ಯೋಚಿಸಿದಳು ೮
ಸರ್ವಭೂತ ಗುಹಾವಾಸ ವಾಸುದೇವ ಜಗದ್ಗುರು
ಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದ
ಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದು
ದೇವಮಾತೆಗೆ ಪತಿ ಕಶ್ಯಪ ಪೇಳಿದನು ೯
ಆದಿವರಾಹನೇ ಮಹಾಪುರುಷ ಸರ್ವ –
ಭೂತ ನಿವಾಸನೇ ವಾಸುದೇವ
ಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವ
ವಿದ್ಯಾಧಿಪತಿ ಶುಭಮಂಗಳ ಸ್ವರೂಪ ೧೦
ಸರ್ವ ಜಗಜ್ಜ£್ಮÁದಿಕರ್ತನೇ ಜಗದೀಶ
ಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇ
ವಿಶ್ವತೋ ಮುಖ ಆದಿದೇವ ನಿನಗೆ ನಮೋ
ಶ್ರೀವರ ನಾರಾಯಣ ನರಹರೇ ಸ್ವಾಮಿ ೧೧
ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನ
ಸಿರಿಕಾಂತ ಸರ್ವೇಶ ಕೇಶವ ನಮಸ್ತೆ
ಪುರುಟಾಂಬರಧಾರಿ ಸುರವರೇಣ್ಯನೇ ನಮೋ
ಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ ೧೨
ಅದಿತಿ ದೇವಿಯು ಪಯೋವ್ರತವ ಮಾಡಿದಳು
ವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದ
ಆದಿ ಪೂರುಷ ಭಗವಂತ ಶಂಖ ಚಕ್ರ
ಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ ೧೩
ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿ
ಆನಂದ ಬಾಷ್ಪವ ಸುರಿಸುತ್ತ ದೀರ್ಘ
ಪ್ರಣಾಮವ ಮಾಡಿದಳು ಗದ್ಗದ ಕಂಠದಿಂ
ನಿನ್ನ ಸ್ತುತಿಸಿದಳು ಆ ದೇವಮಾತೆ ೧೪
ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳ
ನಾಮಧೇಯನೇ ಯಜÉ್ಞೀಶ ಯಜ್ಞಪುರುಷ
ಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋ
ಶ್ರೀದ ಶ್ರೀಪತೇ ವಿಷ್ಣೋ ಧೀನನಾಥ ೧೫
ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವ
ಅಕಳಂಕ ಸರ್ವೋರು ಸಚ್ಚಕ್ತಿಪೂರ್ಣ
ಏಕಾತ್ಮ ಸರ್ವಜ್ಞ ಸುಖಜ್ಞಾನಪ್ರದ ಭೂಮನ್
ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ ೧೬
ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀ
ಅದಿತಿಯ ಸುತನೆನಿಸಿ ಭವಿಸುವಿ ಎಂದಿ
ಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿ
ಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ ೧೭
ಜಗನ್ನಿವಾಸನೆ ನೀನು ದೇವಮಾತೆಯೊಳು
ಝಗಝಗಿಸಿಪೊಳೆದಿಯೋ ಉರು ಮಹಾತೇಜ
ಪೊಗಳಲಳವೇ ನಿನ್ನ ಲೀಲಾವತಾರಗಳ
ಅಗಣಿತ ಮಹಿಮೆಗಳ ದೇವ ದೇವೇಶ ೧೮
ಸನಾತನನೇ ಅನಘನೇ ಅಜನೇ ಭಗವಂತನೇ
ನೀನು ಅದಿತಿಯಲಿ ಅವತರಿಪುದರಿತು
ವನರುಹಾಸನ ಹಿರಣ್ಯಗರ್ಭನು ಬಂದು
ಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು ೧೯
ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇ
ತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದ
ತೋಯಜಾಕ್ಷ ಶಿಪಿವಿಷ್ಟ ವಿಷ್ಣು ಸರ್ವೋತ್ತಮ
ಅಚ್ಯುತಾನಂತೋರು ಶಕ್ತಿಮಯ ನಿನ್ನ ೨೦
ಪದುಮಭವ ಸನ್ನುತನೇ ಆನಂದಮಯ ನೀನು
ಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿ
ಚತುರ್ಭುಜವು ಶಂಖಗದಾ ಅಬ್ಜ ಚಕ್ರ
ಪೀತ ಕೆಂಪು ವಸನವನ್ನ ಧರಿಸಿದ್ದಿ ೨೧
ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯು
ನಳಿನಾಯತೇಕ್ಷಣ ಮಕರಕುಂಡಲವು
ಆನಂದ ಸುಪ್ರಚುರ ವದನಾರವಿಂದವು
ಏನೆಂಬೆ ಗಂಭೀರವಕ್ಷ ಶ್ರೀವಕ್ಷ ೨೨
ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳು
ವನಜಾಸನಾಶ್ರಿತ ಕೌಸ್ತುಭಮಣಿಯು
ಸುನೂಪುರ ತೊಟ್ಟ ಶುಭಮಂಗಳಪಾದ
ನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ ೨೩
ಸೌರ ಶ್ರಾವಣ ಸಿಂಹ ಚಾಂದ್ರ ಭಾದ್ರಪದ
ನೀ ಪ್ರಾದುರ್ಭವಿಸಿದ್ದು ಸಿತ ಶ್ರಾವಣ ದ್ವಾದಶಿ
ಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರು
ಸುರಗಾಯಕರುಗಳ ಗಾಯನ ನೃತ್ಯ ೨೪
ಜಯ ಜಯತು ಜಯ ಜಯ ವಾಮನ ವಟುರೂಪ
ಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋ
ಜಯ ಜಯತು ಸರ್ವ ಜಗಜ್ಜನ್ಮಾದಿಕರ್ತ
ಜಯ ಜಯ ಪರಮ ಪೂರ್ಣೈಶ್ವರ್ಯ ಜಯತು ೨೫
ಸುಂದರ ವಟು ವಾಮನ ನಿನ್ನ ನೋಡಿ
ಮಂದಜಾಸನ ಮಹಾ ಋಷಿವರ್ಯರು ಬಹು
ಆನಂದಭರಿತರು ಆಗಿ ಸಂಸ್ಕಾರ
ಅಂದದಿ ಚರಿಸಿದರು ವೈದೀಕ ರೀತಿಯಲಿ ೨೬
ಬ್ರಹ್ಮಾದಿದೇವರು ಮಹಾಋಷಿಗಳು ಪರ –
ಬ್ರಹ್ಮ ವಾಮನ ನಿನಗೆ ಉಪನಯನರೂಪ
ಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿ
ಮಹಾರ್ಹನೇ ನಿನಗಿದು ಅವತಾರ ಲೀಲ ೨೭
ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆ
ದೇವತಾವೃಂದವು ನೆರದಿದ್ದ ಮುನಿಗಳು
ಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂ
ಈ ವಿಧದಿ ಮುದಮನದಿ ಅರ್ಪಿಸಿದರು ೨೮
ಕಮಂಡಲ ವೇದಗರ್ಭನು, ಕೃಷ್ಣಾಜಿನ
ಭೂಮಿ, ದಂಡ, ಸೋಮ, ಕುಶ ಸಪ್ತ ಋಷಿಗಳು
ಸುಮೇಖಳ ಕಶ್ಯಪ, ಕೌಪೀನ ಅದಿತಿಯು
ಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು ೨೯
ಈ ರೀತಿ ಮೇಖಳ ಸೂತ್ರ ಆಚ್ಛಾದನ
ಛತ್ರ ಕೃಷ್ಣಾಜಿನ ಕಮಂಡಲು ದಂಡ
ಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆ
ಪರಿಪರಿ ದೇವತೆಗಳು ಅರ್ಪಿಸಿದರು ೩೦
ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋ
ಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನ
ಮಹೋತ್ಸವದ ವೈಭವವು ಹೋಮ ಪೂಜಾದಿಗಳು
ಮಹಿಯಲ್ಲಿ ಅಸದೃಶವು ಸರ್ವಕಾಲದಲು ೩೧
ಸೂತ್ರ ಮೇಖಳ ಕೌಪೀನ ಆಚ್ಛಾದನ
ಛತ್ರಮಾಲಾ ಕಮಂಡಲು ದಂಡಹಸ್ತ
ಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪ
ಶ್ರೀರಮಣ ಪದ್ಮಭವ ರುದ್ರಾದಿವಂದ್ಯ ೩೨
ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತ
ಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯ
ಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸ
ಮುದಜ್ಞಾನಧನ ಆಯುರ್ಭಾಗ್ಯದನೇ ಶರಣು ೩೩
-ಇತಿ ಪ್ರಥಮಾಧ್ಯಾಯ ಸಂಪೂರ್ಣಂ –
ದ್ವಿತೀಯ ಅಧ್ಯಾಯ
ದಾನಪ್ರಕರಣ ಸಾರ
ಭೂಮಾದಿ ಗುಣನಿಧಿಯೇ ಅನಘ ಮಂಗಳರೂಪ
ವಾಮನ ಸುಸೌಂದರ್ಯಸಾರ ಲಕ್ಷ್ಮೀಶ
ಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆ
ಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪ
ಸರಸಿಜೋದ್ಭವ ಸುರವೃಂದ ಮಹಾಋಷಿಗಳು
ಮರೀಚಿಸುತ ಮೊದಲಾದ ಸುಧೀಗಳು ನಿನಗೆ
ಚರಿಸಿದ ಉಪನಯನ ರೂಪಮಹೋತ್ಸವವ
ಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ ೧
ನೋಡಿದ ಮಾತ್ರದಲೆ ಸುಜನ ವಿಶ್ವಾಸಿಗಳು
ಮಾಡಿದ ಪಾಪ ಪರಿಹರಿಪ ನರ್ಮದೆಯ
ದಡ ಉತ್ತರದಲಿ ಯಜ್ಞ ಶಾಲೆ ಕಟ್ಟಿ
ದೊಡ್ಡ ಕ್ರತು ಮಾಡುತ್ತಿದ್ದನು ಬಲಿರಾಜ ೨
ಮೌಂಜಿ ಮೇಖಳ ಸೂತ್ರದಿಂದ ಬೆಳಗುತ್ತ
ಸಜಲ ಕಮಂಡಲು ಸುದಂಡ ಛತ್ರ
ಪ್ರಜ್ವಲಿಪ ಚಿನ್ಮಯ ಜಟಿಲ ವಾಮನ ವಿಪ್ರ
ಯಜ್ಞ ಶಾಲೆಯೊಳು ಪ್ರವೇಶ ಮಾಡಿದಿಯೋ ೩
ಜ್ವಲಿಸುವ ಸ್ವಕಾಂತಿಯುಕ್ ಮಾಯಾ ಮಾಣವಕ
ಬಾಲ ಸುಂದರ ಬ್ರಹ್ಮಚಾರಿ ಹರಿ ನಿನ್ನ
ಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿ
ಬಲುಹರುಷದಲಿ ಎದ್ದು ಸ್ವಾಗತಮಾಡಿದರು ೪
ಭಗವಂತ ವಾಮನ ನಿನ್ನ ಪಾದದಿ ಬಲಿ
ಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂ
ಹೀಗೆಂದು ತನ್ನ ಪಿತೃಗಳು ತೃಪ್ತರಾದರು
ತನ್ನ ಕುಲ ಪಾವಿತವಾಯ್ತೆಂದು ಪೇಳ್ದ ೫
ವನಜಜಾಂಡದ ಒಡೆಯ ರಾಜರಾಜೇಶ್ವರನೇ
ನಿನ್ನ ಮುಂದೆ ಕರ ಮುಗಿದು ಬಲಿರಾಜ
ಧೇನು ಕಾಂಚನ ಗ್ರಾಮ ವಿಪ್ರ ಕನ್ಯಾದಿಗಳು
ಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ ೬
ಸುಗಮ ಸುಹೃತ್ ಧರ್ಮಯುಕ್ ಈ ಮಾತಲ್ಲಿ
ಭಗವಂತ ನೀ ಪ್ರೀತನಾದದ್ದು ಪ್ರಕಟಿಸಿ
ಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯ
ಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ ೭
ಆಕಾಶದಲಿ ಆಹ್ಲಾದಕರ ಉಡುಪನು
ಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸು
ಉತ್ರ‍ಕಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿ
ಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು ೮
ಮಹಾ ಗದಾಯುಧದಾರಿ ದಿಗ್ವಿಜಯ ಶೂರನು
ಆ ಹಿರಣ್ಯಾಕ್ಷನ ಅಣ್ಣನು ಆದ
ಪ್ರಹ್ಲಾದಪಿತ ಹಿರಣ್ಯಕಶಿಪು ವೀರನು
ಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು ೯
ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತ
ದ್ವಿಜವತ್ಸಲ ತನ್ನ ಆಯುಷ್ಯವ
ದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದು
ಮೂರ್ಜಗ ಅರಿವುದು ಬಲಿ ಆ ಕುಲೀನ ೧೦
ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರ
ಈ ಧರ್ಮವಂತ ಬಲಿ ಎಂದು ನೀ ಪೇಳಿ
ಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿ
ಪದಾಮಮ ಎಂದು ಭೂಮಿ ಯಾಚಿಸಿದಿ ೧೧
ನಳಿನಜಾಂಡದ ದೊರೆ ಹರಿ ನಿನ್ನ ಮಾಯೆಯಿಂ
ಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದ
ಬಲಿಯು ತನ್ನಲಿ ಕೊಂಡವ ಪೂರ್ಣನಾಗುವ
ಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು ೧೨
ಕರ್ಮಜ ದೇವತಾ ಕಕ್ಷದವ ಬಲಿರಾಜ
ಕರ್ಮ ನಿಮಿತ್ತದಿ ಸಂಸಾರ ಸುಳಿಯ
ಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿ
ಧರ್ಮನೀತಿ ಪೇಳಿದಿ ಶ್ರೀಶ ಮುಕುಂದ ೧೩
ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆ
ಮಿತಿಯಿಲ್ಲ ಬೆಳೆಯುವುದು ಮೇಲು ಮೇಲು
ಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸು
ವರ್ಧಿಸುವುದು ಮತ್ತು ಸುಖವೀವುದೆಂದಿ ೧೪
ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿ
ಮೂರಡಿ ಮಾತ್ರವೇ ಕೊಳ್ಳುವಿ ಎನಲು
ಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲು
ಅರಿತು ಶಿಷ್ಯನ ಎಚ್ಚರಿಸಿದ ಶುಕ್ರ ೧೫
ವೇದ ವೇದಾಂತ ಕೋವಿದ ಶುಕ್ರಾಚಾರ್ಯರು
ಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರು
ದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನ
ಭಕ್ತವರ್ಯರು ಎಂದು ನಮಿಪೆ ಸಂತೈಸು ೧೬
ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರ
ಶ್ರೀಶ ಭಗವಂತನು ವಿಷ್ಣು ಅವ್ಯಯನೆ
ಕಶ್ಯಪ ಅದಿತಿಯಲಿ ಭವಿಸಿ ದೇವತೆಗಳ
ಕಾರ್ಯಸಾಧನಕಾಗಿ ಬಂದಿರುವ ಎಂದ ೧೭
ಮತ್ತು ಪೇಳಿದ ಈ ದಾನ ಕೊಡುವುದರಿಂದ
ದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸು
ಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ –
ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ ೧೮
ಇಂಥಾ ಮಾಯಾ ಮಾಣವಕ ಹರಿ ವಾಮನನು
ಪಾದ ಎರಡಲಿ ಧರೆ ದಿವಿ ಅಳೆದು ಮೂರ –
ನೇದನು ಬಲಿ ಕೊಡಲು ಆಗದೆ ನರಕ ಪೋಗು –
ವದು ತಪ್ಪಿಸೆ ದಾನ ಕೊಡಬೇಡ ಎಂದ ೧೯
ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರ
ತನ್ನ ಶಿಷ್ಯನಿಗೆ ಬೋಧಿಸಿದರೂ ಸಹ
ಮನ ಸೋಲದೆ ಬಲಿರಾಜ ಧಾರೆ ಎರೆದು
ದಾನವ ಕೊಡುವೆನು ಎಂದ ವಿನಯದಲಿ ೨೦
ಗುರುಗಳ ಮಾತಲ್ಲಿ ಅನಾದರವ ತೋರಿಸಿದ

ಶ್ರೀಭೂವರಾಹ ಸ್ತೊತ್ರ

ಭೂವರಾಹ ಭುವನವ ತಂದ ಭೂವರಾಹ ಪ.
ಆನಮಿಪೆ ನಿನ್ನಂಬುಜ ಚರಣಕೆ ಆನಮಿಪೆ||
ಆನಮಿಸುವೆಮ್ಮ ದೋಷಗಳೆಣಿಸದೆ ಕಾಯೋ || ಭೂವರಾಹ ಅ.ಪ.
ನಾಶಿಜಾತ ನಾಶರಹಿತ ನಾಶಿಜಾತ ವಾಸುದೇವ
ನಾಳಿಜಾತ-ಜಲದೊಳು ಪೊಕ್ಕು ಅಸುರನಕೊಂದು-
ವಸುಧೆಯ ತಂದು-ಭೂವರಾಹ ೧
ಅಂಬುಜಾಕ್ಷ | ಶಂಭುವಂದ್ಯ ಅಂಬುಜಾಕ್ಷ ಅಂಬು ಜೇಶ|
ಅಂಬುಜಾಕ್ಷ -ಅಂಬುಧಿ ಪೊಕ್ಕು-ಜಾಂಬುನದಾಕ್ಷಣ
-ಕೊಂದಿಧರೋದ್ಧರ – ಭೂವರಾಹ ೨
ಸಹಸ್ರಶೀರ್ಷ| ಸಹಸ್ರ ಅಕ್ಷ ಸಹಸ್ರಪಾದ ಸಹಸ್ರನಾಮ-
ಸಹಸ್ರ ಶೀರ್ಷ- ಬ್ರಹ್ಮನಜನಕ ಮಹಿಶಿರಿ ಈಶ-
ಪ್ರಸನ್ನ ಶ್ರೀನಿವಾಸ ||ಭೂವರಾಹ ೩
||ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು||

ಶ್ರೀ ಭಾವ ಸಂವತ್ಸರ ಸ್ತೋತ್ರ
೧೫೧
ಭೇಶ ಸರ್ವೇಶ್ವರ ಶ್ರೀಪತಿಯೇ ಈ ಭಾವ ಸಂವತ್ಸರ ನಿಯಾಮಕನು ನಮೋ ನಮೋ ಸ್ವಾಮಿ ಪ
ಇಲ್ಲಿ ಬರುವ ನುಡಿಗಳ ಅರ್ಥ ಅನುಸಂಧಾನಗಳ ಎಲ್ಲ ವೇದ ಆಗಮ ಗಾಯತ್ರಿ ಮಹಾಮಂತ್ರ ಬಾಹ್ಯರಿಗೆ ಅಲ್ಲ ಮೀರುವರಿಗೆ ಒಳ್ಳೇದು ಅಲ್ಲ ೧
ಶ್ರವಣ ಪಠನ ಫಲಮೋಕ್ಷಸಾಧನ ಜ್ಞಾನ ಅವಾಂತರ ಫಲ ಕೀರ್ತಿ ಯಶಸ್‍ಲಾಭ ಕಷ್ಟಕಲುಷÀನಾಶ ವಿವಾದ ಸಂವತ್ ಸಂಜ್ಞಾನ ಅಧೋ ಪ್ರಾಪ್ತಿ ಯಥಾಯೋಗ್ಯ ೨
ಆಂಗೀರಸ ವರುಷ ಶ್ರವಣಕ್ಕೆ ಅನುಕೂಲ ಶ್ರೀ ಭಾವವು ಮನನಕ್ಕೆ ಅನುಕೂಲ ಸಾಧನ ಈಗ ಈ ಭಾವ ಸಂವತ್ಸರ ಉತ್ತಮರೀತಿಯಲ್ಲಿ ಮಾಳು ಸುಧ್ಯಾನಕೆ ೩
ವೇದಪ್ರತಿಪಾದ್ಯ ಸರ್ವೋತ್ತಮ ಸರ್ವಸ್ವಾಮಿಯ ಸಾಕ್ಷಾತ್ಕಾರ ತನ್ನಿಚ್ಛೆ ಇಂದಲೇ ಈವ ಶ್ರೀ ವಿಷ್ಣು ಪ್ರೀತಿಕರ ಸಾಧನ ೪
ಸದಾಗಮದಿಂದಲ್ಲೇ ಯಥಾಯೋಗ್ಯ ಸಂವೇದ್ಯ ವಿಷ್ಣು ತ್ರಯೀಮಯನು ಧರ್ಮಮಯನು ತಪೋಮಯನು ಅವನೇ ಜಗಜ್ಜನ್ಮಾದಿ ಕರ್ತುತ್ಪಾದಿಗಳ ಕಲ್ಯಾಣತಮ ಮಹಿಮೆಗಳ ೫
ಶ್ರದ್ಧಾಭಕ್ತಿಯಿಂ ವಿಶೇಷ ಜಿಜ್ಞಾಸವ ಸೌಶೀಲ್ಯ ಗುಣವಂತ ಅಜಶಂಕರಾದಿಗಳಿಂ ಮಾಡಲ್ಪಟ್ಟ ಷಡ್ಗುಣೋಪಲಕ್ಷಿತ ಅನಂತ ಕಲ್ಯಾಣ ಗುಣರೂಪನಾದ ಭಗವಂತನ ಪ್ರಸಾದ ಲಭಿಸೇ ಸಾಧನಸುಧ್ಯಾನ ೬
ಭಗವಾನ್ ಭೇಶ ಸರ್ವೇಶ್ವರ ಅಜನ ಪಿತ ಪ್ರಸನ್ನ ಶ್ರೀನಿವಾಸ ತನ್ನಿಚ್ಛೆ ಇಂದಲೇ ಸಜ್ಜೀವರಗೀವ ಯೋಗ್ಯತೆ ಅರಿತು ಅಪರೋಕ್ಷ್ಯ ಕರುಣಾಸಮುದ್ರ ಶ್ರೀಪ ೭

ಶ್ರೀ ಪಾರ್ವತೀದೇವಿ
೭೯
ಮಂಗಳಗೌರೀ ಪಾರ್ವತಿ ಅಂಬಾ ಶಿವಾ
ನಮಸ್ತೆ ಪಾಲಯಂ ಮಾಂ ಪ
ಗೌರವರ್ಣಾ ವರ ಪೀತಾಂಬರಧರಾ
ವರ ಅಭಯಕರಾ ಪಾಲಯ ಮಾಂ ೧
ಧ್ಯಾಯಾಮಿತ್ವಮ್ ಮಂಗಳ ಶುಭದಾ
ಭಾಗ್ಯದಾ ಸಂತತಂ ಪಾಲಯ ಮಾಂ ೨
ವೃತತಿಜಾಸನಪಿತ ಪ್ರಸನ್ನ ಶ್ರೀನಿವಾಸ
ಭಕ್ತೀಂ ದೇಹಿ ಮೇ ಕೃಪಯಾ ಅಂಬಾ ೩

ಈ ಭವಾನಿ ಕ್ಷೇತ್ರವು ಮೆಟ್ಟೂರಿನಿಂದ
ವೃದ್ಧಾಚಲ ಶ್ರೀ ಈಶ್ವರ
೭೭
ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ ರಮಣ
ಪಾಲಯ ಮಾಂ ಪ
ಭೂರ್ಭುವಃ ಸ್ವಹಃ ಪತಿ ಶ್ರೀ ಮುಷ್ಣವರಾಹ
ಮಹಾಬಲ ಪ್ರೋಜ್ವಲ ನರಹರಿ ಪ್ರಿಯ ನಮೋ ೧
ವಿದ್ಯುದಶಿತ ಶಿತ ಲೋಹಿತ ಶ್ಯಾಮೋ
ವದನ ತ್ರಿಲೋಚನ ಮೃತ್ಯುಂಜಯ ನಮೋ ೨
ಬಾಲ ಬದರಧರ ಶೈಲ ಸುತಾಯುತ
ಮೌಲಿ ಜಟಾ ಸ್ಫಟಕಾಮಲ ಕಾಂತಿಮಾನ್ ೩
ಇಂದಿರ ರಮಣ ಸ್ವತಂತ್ರ ಸರ್ವೋತ್ತಮ
ಬಿಂದು ಮಾಧವ ತವ ಮಂದಿರೇ ಭಾಸತಿ ೪
ಸರ್ಪಾಭರಣ ತ್ರಿಶೂಲಿ ಧೂರ್ಜಟ ಮಮ
ಪಾಪಂ ದ್ರಾವಯ ಕೃಪಯ ಸಂತತ ೫
ಶಂಭೋ ಶಕ್ರಾದ್ಯಮರ ಜಗದ್ಗುರೋ
ಸುಪ್ರದರ್ಶಯ ಮಮ ಮನಸಿ ಶ್ರೀ ಯಃ ಪತೇಂ ೬
ಭಾಗ್ಯ ಸಂವೃದ್ಧಿ ದಾ ವೃದ್ಧಾಂಬಾ ಪತೇ
ಯೋಗಕ್ಷೇಮಂ ವಹ ದಯಾಯಾ ಮಮ ೭
ದರ್ಶನಾರಭ್ಯ ಮದ್ ಹೃದಯೇ ವಿರಾಜಿಸಿ
ಶ್ರೀಶ ಭಾರತಿ ಪತಿ ಸಹ ತ್ಪಂ ಕೃಪಾಳೋ ೮
ವೃತತಿ ಜಾಸನ ಪಿತ ಪ್ರಸನ್ನ ಶ್ರೀನಿವಾಸ
ಭೂತಿದ ಶಿವ ಪ್ರಿಯ ಶಿವತೇ ನಮೋ ನಮೋ ೯

ಶ್ರೀ ಪಂಚಾಕ್ಷರ ಶಿವ
೭೫
ಮಂಗಳಾತ್ಮಕ ಶಿವ ಗಂಗಾಧರ ನಮೋ ಪಾಲಯಮಾಂ ಕ
ಪುರಂದರ ಗುರುವರಂ ಧ್ಯೇಯೋರುದ್ರಂ
ಶರಣಮುಮೇಶ ಜನಾರ್ಧನ ಪ್ರಿಯತರಂ
ವಿದ್ಯುತ್ ಶುಭ್ರಂ ಕೃಷ್ಣಂ ರತ್ನಂ ಶ್ಯಾಮಂ ಏನಂ
ಪಂಚ ಮುಖೋಹಿ ೨
ಜಟಾಮಕುಟ ಫಟಕಾಮಲಕಾಂತಿಮಾನ್
ಉಡುಪಕಲಾಧರ ಪಾಲಯಮಾಂ ೩
ಉರಗಭೂಷಣತ್ವಂ ಗಿರುಜಾಯುಕ್ತಂ
ಹರ ಮಮ ಪಾಪಂ ಕೃಪಯಾ ಸತತಂ ೪
ಕುಸುಮಸಂಭವಪಿತ ಪ್ರಸನ್ನ ಶ್ರೀನಿವಾಸ
ಕೇಶವ ಶಿವಪ್ರಿಯ ಶಿವ ತೇ ನಮೋ ನಮೋ ೫

ಶ್ರೀ ಮದುರೈ ಮೀನಾಕ್ಷಿ ಸ್ತೋತ್ರ
೮೧
ಮೀನಲೋಚನೆ ಅಂಬಾ ದೀನಪಾಲಕೆ
ನಿಂತಲ್ಲಿ ಶರಣೆಂದೆ ಎನ್ನ ಪೊರೆವ ಭಾರ ನಿನ್ನದೇ ಮಾತೆ ಪ
ಕಣ್ಣು ಕಿವಿ ನಾಲ್ಕು ಕುದುರೆ ದೇಹವೆಂಬ ಹರಿಯರಥಕೆ
ನಿನ್ನಧೀನ ಅಶ್ವಗತಿ ಸನ್ಮಾರ್ಗದಿ ನಡೆಸಿ ಕಾಯೆ೧
ಕಂಡು ಕೇಳಿ ನುಡಿವದೆಲ್ಲ ಉಂಡು ಉಟ್ಟು ಮಾಳ್ಪುದೆಲ್ಲ
ಪುಂಡರೀಕ ನಯನ ಶ್ರೀಶ ರಥಿಕ ಪ್ರೀತಿ ಆಗೆ ಮಾಡೆ ೨
ಮಂದಜಾಸನ ತಾತ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯ
ಇಂದುಧರ ಸತಿಯೇ ಶರಣು ಸ್ಕಂಧ ವಿಘ್ನರಾಜರ ಮಾತೆ ೩

ಶ್ರೀ ಪ್ರಸನ್ನ ಶ್ರೀನಿವಾಸ ಕಲ್ಯಾಣ (ಅಣು)
೩೪
ಮೇರು ಸುತ ಗಿರಿವಾಸ |
ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತ ನಿರ್ದೋಷ |
||ಶ್ರೀ ಶ್ರೀನಿವಾಸ ||
ವಿಷ್ಣು ಸರ್ವೋತ್ತಮ ಸಾಕ್ಷಾತ್ |
ರಮಾದೇವಿ ತದಂತರಾ |
ತದಧೌ ವಿಧಿ ವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |
ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |
ವ್ಯಾಳಗಿರಿ ವಲ್ಮೀಕ ಪೊಕ್ಕಿ ಶ್ರೀವತ್ಸಶರಣು |
ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪ
ವೃಷಭ ಅಂಜನ ಶೇಷ |
ವೇಂಕಟಾದ್ರಿಯ ನೆನೆಯೆ ಪಾಪವಿನಾಶ |
ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ |
|| ಶ್ರೀ ಶೇಷಾಚಲೇಶ ||
ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |
ಆಸಿಯತಲೆಯಲಿ ತಡೆದು ಗೋವನು ಕಾಯ್ದ _
ಕರುಣಿಯೆ ಭಕ್ತವತ್ಸಲ |
ತುಚ್ಛಗೋಪನು ಭಯದಿ ಅಸುಬಿಡೆ
ಚೋಳರಾಯಗೆ ಶಾಪವಿತ್ತು |
ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |
ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |
ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ –
ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ ೧
ಅಸಮ ಸತ್ಯವಾಗೀಶ |
ಜಗನ್ಮಾತೆಯೆಂದು ಪೇಳಿದಂತೆ ಆಕಾಶ |
ಕಂಡಪದ್ಮದಿ ಪದುಮ ಸುಮುಖವಿಲಾಸ |
ಶಿಶುವಕೊಂಡಳು ಧರಣಿ ಬಹು ಸಂತೋಷ |
|| ದಿಂದ ವಿಹಿತ ಆಶ ||
ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |
ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |
ನಾರದನು ಬಹು ವೃದ್ಧರೂಪದಿ ಬಂದು –
ಹಸ್ತರೇಖೆ ನೋಡುತ |
ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |
ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |
ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ –
ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ ೨
ಧರಣಿಯೊಡನೆ ಸಂವಾದ |
ಮಾಡೆ ಬಕುಳಾ ಪೋಗೆ ನೀನು ಪುಳಿಂದ |
ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |
ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ |
|| ಕಣಿಪೇಳ್ವ ಚೆಂದ ||
ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |
ಭರದಿ ಶುಕ ಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ –
ಗರುಡ ಶೇಷ ಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |
ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |
ಸೇರಿಪುರಿಯ ಅಜರ ಮಂದಿರ ಪೋಲ್ವ –
ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |
ಸರಸಿಜಾಸನ ತಾತ ಪ್ರಸನ್ನ ಶ್ರೀನಿವಾಸನೆ
ವಿಶ್ವಪಾಲಕ ಹೇ ದಯಾನಿಧೇ ಶರಣು –
ಶರಣು ಹೇ ಸೌಭಾಗ್ಯದಾತಾ ಪ.೩
||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||

ಶ್ರೀ ನರಹರಿ ತೀರ್ಥ ವಿಜಯ
೯೯
ಪ್ರಥಮ ಕೀರ್ತನೆ
ಯೋಗಾನಂದ ನರಹರಿ ರಾಮಪ್ರಿಯತಮರು
ಯೋಗಿವರ ನರಹರಿತೀರ್ಥರ ಪಾದ
ಯುಗ್ಮ ವನರುಹದಿ ನಾ ಶರಣಾದೆ ಸಂತತ
ಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪ
ಅಶೇಷ ಗುಣಗಣಾಧಾರ ವಿಭು ಶ್ರೀ ರಮಣ
ಹಂಸ ನಾಮಕ ಪರಮಾತ್ಮನಿಗೆ ನಮಿಪೆ
ಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿ
ವಂಶಜ ಗುರುಗಳು ಸರ್ವರಿಗು ನಮಿಪೆ ೧
ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮಾರ್ಯ ಕರ
ತೋಯಜೋತ್ಪನ್ನ ಆನಂದ ತೀರ್ಥರಿಗೆ
ಕಾಯ ವಾಙ್ಞನದಿಂದ ಶರಣಾದೆ ಸಂತತ
ತೋಯಜ ಭವಾಂಡದ ಸಜ್ಜನೋದ್ಧಾರ ೨
ಶ್ರೀವರ ವೇದವ್ಯಾಸನವತಾರಕನುಸರಿಸಿ
ಭಾವಿ ಬ್ರಹ್ಮನು ಮುಖ್ಯ ವಾಯುದೇವ
ದೇವೀ ಜಯಾ ಸಂಕರ್ಷಣಾತ್ಮಜನು ಈ
ಭುವಿಯಲ್ಲಿ ತೋರಿಹ ಆನಂದ ತೀರ್ಥ ೩
ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇ
ಬಲ ಕಾರ್ಯ ಮಾಡಿದ ಹನುಮಂತ ಭೀಮ
ಕಲಿಯುಗದಿ ಈ ಭೀಮ ಅವತಾರ ಮಾಡಿಹನು
ಕಲಿ ಮಲಾಪಹ ಜಗದ್ಗುರು ಮಧ್ವನಾಗಿ ೪
ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರು
ಪದ್ಮನಾಭ ನೃಹರಿ ಮಾಧವಾಕ್ಷೋಭ್ಯ
ಈ ಮಹಾ ಗುರುಗಳು ಸರ್ವರಿಗು ಆ ನಮಿಪೆ
ಸುಮನಸ ಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು ೫
ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪ
ಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂ
ಸುಮಹಿಮ ಹರಿದಾಸವರ್ಯರು ಸರ್ವರಿಗು
ಸನ್ಮನದಿ ಆ ನಮಿಪೆ ಸಂತೈಪರೆಮ್ಮ ೬
ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರ
ವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿ
ದುಸ್ತರ್ಕ ದುರ್ಮತ ಅಟವಿಗಳ ಛೇದಿಸಿ
ದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ ೭
ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವ
ರಾಯರ ಸಂಗಡ ವಾದಕ್ಕೆ ನಿಂತು |
ಭಾರಿ ಪಂಡಿತ ರತ್ನಶೋಭನ ಭಟ್ಟನು
ಶರಣಾಗಿ ಮಧ್ವರಾಯರ ಶಿಷ್ಯನಾದ ೮
ಶೋಭನ ಭಟ್ಟಾಖ್ಯ ಈಗುಣಗ್ರಾಹಿಯು
ಶುಭಪ್ರದೆ ಲೋಕ ಪಾವನಿ ವೃದ್ಧ ಗಂಗೆ
ಎಂಬುವ ಗೋದಾವರೀ ತೀರದಲಿ ಮಧ್ವ
ಅಬ್ಜಹಸ್ತದಿಕೊಂಡ ತುರ್ಯಾಶ್ರಮ ೯
ಸತ್ತತ್ವವಾದದ ಸೊಬಗನ್ನ ಮಧ್ವ
ವದನಾಂಬುಜದಿಂದ ಕೇಳಿ ಸುಪವಿತ್ರ
ಪದ್ಮನಾಭ ತೀರ್ಥಾಖ್ಯ ನಾಮವ ಹೊಂದಿದ
ಮುದದಿಂದ ಈ ಮಹಾತ್ಮನು ಶೋಭನನು ೧೦
ಕಳಿಂಗ ರಾಜನ ಮಂತ್ರಿಯ ಕುಮಾರನು
ಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿ
ಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿ
ಲೀಲಾವಿನೋದ ಚಟುವಟಿಕೆ ತೊರೆದವನು ೧೧
ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವ
ವೇದ ವೇದಾಂತ ವಿದ್ಯೆ ಸರ್ವ ಹೊಂದಿ
ಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನು
ವಿದ್ವಚ್ಛಿರೋಮಣಿ ಎಂದೆನಿಸಿಕೊಂಡ ೧೨
ರಾಮ ಮಹೇಂದ್ರ ಪುರ ಪ್ರಾಂತ್ಯಸ್ಥವಾದಿ
ಗಜ ಸಿಂಹ ಶೋಭನ ಭಟ್ಟನು ಈಗ
ತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದು
ನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ ೧೩
ಹಿತಕರ ಈಸುದ್ದಿ ಕೇಳಲಿಕ್ಕೇವೆ
ಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿ
ಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿ
ಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ ೧೪
ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್
ಸುದೃಢ ಜ್ಞಾನಿಯು ಋಜುಮಾರ್ಗ ಚರಿಪ
ಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವ
ಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ ೧೫
ನರಹರಿ ತೀರ್ಥಾಖ್ಯ ಶುಭತಮನಾಮವ
ಶಾಸ್ತ್ರಿಗೆ ಇತ್ತರು ಆನಂದ ಮುನಿಯು
ಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆ
ಇರುವುದು ಎಂದರು ಸರ್ವಜ್ಞ ಮುನಿಯು ೧೬
ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿ
ಚರಿಸುವ ಕಾಲವು ಬರಲಿಕ್ಕೆ ಇದೆಯು
ಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದ
ತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು ೧೭
ಗಜಪತಿ ರಾಜನ ಅರಮನೆಯಲ್ಲಿ
ರಾಜೀವೇಕ್ಷಣ ಮೂಲರಾಮನು ಸೀತಾ
ರಾಜಭಂಡಾರದಲ್ಲಿ ಮಂಜೂಷದಲಿ
ರಾಜಿಸುತ ಇಹರು ಮೂರ್ತಿ ರೂಪದಲಿ ೧೮
ಕಳಿಂಗದೇಶಾಧಿಪ ಗಜಪತಿಯ ವಂಶದಲಿ
ಬಾಲರಾಜನು ಅವನ ಪ್ರತಿನಿಧಿಯಾಗಿ
ಆಳುವುದು ರಾಜ್ಯವ ಎಂದು ಆಚಾರ್ಯರು
ಪೇಳಿದರು ನರಹರಿ ತೀರ್ಥ ಆರ್ಯರಿಗೆ ೧೯
ಬಾಲರಾಜನು ಯುವಕನಾಗಿ ರಾಜ್ಯವನ್ನು
ಆಳುವ ಯೋಗ್ಯತೆ ಹೊಂದಿದ ಮೇಲೆ
ಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನ
ಕೇಳಿತರಬೇಕು ಎಂದರು ಲೋಕ ಗುರುವು ೨೦
ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತು
ಸಾಧುಜನ ಉದ್ಧಾರ ಬೋಧಕ್ಕೆ
ಪದ್ಮನಾಭ ತೀರ್ಥರ ತತ್ಕಾಲ ನಿಲ್ಲಿರಿಸಿ
ಬಂದರು ಉಡುಪಿಗೆ ಪೂರ್ಣ ಪ್ರಮತಿಗಳು ೨೧
ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇ
ಸಮಯ ಒದಗಿತು ರಾಣಿ ಬಿನ್ನೈಸಿದಳು
ಸ್ವಾಮಿ ತಾವೇ ರಾಜ್ಯ ಆಳಬೇಕೆಂದಳು
ಸಮ್ಮತಿಸಿದರು ಶ್ರೀ ನರಹರಿ ಮುನಿಯು ೨೨
ಮಂತ್ರಿ ಪದವಿ ಪರಂಪರೆ ಪ್ರಾಪ್ತವಾಗಿ
ತಂದೆ ವಹಿಸಿದ್ದರು ಅವರ ಮುಖದಿಂದ
ಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದ
ರೀತಿಯ ಅರಿತವರು ಈ ಹೊಸಯತಿಯು ೨೩
ನರಹರಿ ತೀರ್ಥರ ರಾಜ್ಯ ಆಡಳಿತದಲಿ
ಪರಿಪರಿ ರಾಜತಂತ್ರಗಳ ಕೌಶಲ್ಯ
ಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟ
ಶತ್ರು ನಿಗ್ರಹ ಶಿಷ್ಟ ಪಾಲನ ಏನೆಂಬೆ ೨೪
ದಂಡೆತ್ತಿ ಆಗಾಗ ಬರುತಿದ್ದ ಶಬರಾದಿ
ತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನ
ಕಂಟಕ ದುರ್ಮತಿಗಳಿಂದ ಕಾಪಾಡಿದರು
ಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ ೨೫
ಆಶ್ರಮೋಚಿತ ನಿತ್ಯ ಜಪಪೂಜ ಕಾರ್ಯಗಳು
ಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹ
ಲೇಶವೂ ಕೊರತೆ ಇಲ್ಲದೆ ಮುದದಿ
ಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು ೨೬
ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಯೋಗಾನಂದ ನರಹರಿ ಮೂಲ ರಾಮ
ನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿ
ಬಾಗಿ ಶರಣಾದೆ ನಾ ಸದಾ ಪೊರೆವರೆನ್ನ ೨೭
– ಇತಿ ಶ್ರೀ ಪ್ರಸನ್ನ ನರಹರಿತೀರ್ಥ ವಿಜಯ ಪ್ರಥಮೋದ್ಯಾಯಃ –
ದ್ವಿತೀಯ ಕೀರ್ತನೆ
ಯೋಗಾನಂದ ನರಹರಿ ರಾಮಪ್ರಿಯತಮರು
ಯೋಗಿವರ ನರಹರಿತೀರ್ಥರ ಪಾದ
ಯುಗ್ಮ ವನರುಹದಿ ನಾ ಶರಣಾದೆ ಸಂತತ
ಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪ
ಶ್ರೀ ಕೂರ್ಮ ಕ್ಷೇತ್ರದಲಿ ಕೂರ್ಮೇಶ್ವರಾಲಯದಿ
ಯೋಗಾನಂದ ನರಸಿಂಹಗೆ ಗುಡಿಯ
ಯೋಗಿವರ ನರಹರಿತೀರ್ಥರು ಕಟ್ಟಿಸಿ
ಯೋಗಾನಂದ ನರಸಿಂಹನ ಸ್ಥಾಪಿಸಿದರು ೧
ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲು
ಕೃತಜ್ಞ ಮನದಿಂದ ಆ ಯುವಕರಾಜ
ಇತ್ತನು ಸನ್ನಮಿಸಿ ನರಹರಿತೀರ್ಥರಿಗೆ
ಸೀತಾರಾಮ ವಿಗ್ರಹದ ಮಂಜೂಷ ೨
ನರಹರಿತೀರ್ಥರು ಶ್ರೀಮದಾಚಾರ್ಯರಲಿ
ನೇರವಾಗಿ ಪೋಗಿ ಸಮರ್ಪಿಸಲು ಆಗ
ಶ್ರೀರಾಮ ಸೀತಾದೇವಿಯ ಮಧ್ವಮುನಿ
ಕ್ಷೀರಾದಿ ಪಂಚಾಮೃತದಿ ಪೂಜಿಸಿದರು ೩
ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾ
ಆರಾಧನಾರ್ಚನೆ ಮೂರು ತಿಂಗಳು ಹದಿ –
ನಾರುದಿನ ತಾಮಾಡಿ ಪದ್ಮನಾಭತೀರ್ಥರು
ತರುವಾಯ ಪೂಜಿಸಲು ಆಜ್ಞೆ ಮಾಡಿದರು ೪
ಮೂರನೇಬಾರಿ ಬದರಿಗೆ ಆಚಾರ್ಯರು
ತೆರಳಲು ಪದ್ಮನಾಭರು ತಾವು ಪೂಜೆ
ಚರಿಸಿ ನಿಯಮನದಂತೆ ಆರು ವರ್ಷ ತರುವಾಯ
ನರಹರಿತೀರ್ಥರಿಗೆ ಇತ್ತರು ಮೂರ್ತಿಗಳ ೫
ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆ
ಬ್ರಹ್ಮದೇವರು ಮಾಡಿ ಸೂರ್ಯವಂಶ
ಭೂಮಿಪಾಲಕ ಕೈಯಿಂದ ಪೂಜೆಯ ಕೊಂಡು
ಕ್ರಮದಿ ದಶರಥರಾಜ ಕರಕೆ ಲಭಿಸಿದವು ೬
ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇ
ದಶರಥ ಆರಾಧಿಸಿದ ತರುವಾಯ
ಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನು
ಶಿರಿಸೀತ ತಾ ಕೊಂಡಳು ಪೂಜೆಗಾಗಿ ೭
ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವ
ಸೌಮಿತ್ರಿ ಆ ಮೂರ್ತಿಗಳನ್ನು ತಾನು
ಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡು
ನೇಮದಿ ಪೂಜಿಸುತ್ತಿದ್ದನು ಬಹುಕಾಲ ೮
ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿ
ನಿಜಭಾವದಲಿ ಮಾಳ್ಪ ಅನುದಿನ ಅವನು
ರಾಜೀವೇಕ್ಷಣ ರಾಮನನ್ನು ತಾ ನೋಡದಲೆ
ಭೋಜನ ಮಾಡಲಾರನು ಅಂಥಭಕ್ತ ೯
ವಿಪ್ರವರ ಅವಾತ ವೃದ್ಧಾಪ್ಯದಲಿ
ಅರಮನೆ ದರ್ಬಾರ ಮಂಟಪಕೆ ಬಂದ
ಶ್ರೀರಾಮಚಂದ್ರನು ರಾಜಕಾರ್ಯೋದ್ದೇಶ
ಹೊರಗೆ ಹೋಗಿದ್ದನು ಏಳುದಿನ ಹೀಗೆ ೧೦
ಏಳು ದಿನವೂ ಆ ವಿಪ್ರೋತ್ತಮ ಊಟ
ಕೊಳ್ಳದೇ ದೇಹಬಲ ಬಹು ಬಹು
ಕುಗ್ಗಿಮೆಲ್ಲನೆ ಎಂಟನೆ ದಿನ ಬಂದು
ಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ ೧೧
ಕಣ್ಣಿಗೆ ಏಳುದಿನ ಕಾಣದ ಶ್ರೀರಾಮ
ಆನಂದಮಯ ಶ್ರೀನಿಧಿಯ ಕಂಡಲ್ಲೇ
ಬ್ರಾಹ್ಮಣನು ಆನಂದ್ರೋದೇಕವು ಉಕ್ಕಿ
ಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ ೧೨
ಏಳುದಿನ ಉಪವಾಸದಿಂದಲೇ ತನುವಿನ
ಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆ
ಕನಕ ಆಸನದಿಂದಲಿ ರಾಮ
ಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ ೧೩
ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿ
ಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರ
ಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳ
ತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ ೧೪
ಅನುದಿನ ವೃದ್ಧ ದೆಶೆಯಲ್ಲಿ ಬರಬೇಡವು
ಅನಾಯಾಸದಿ ತನ್ನ ಪ್ರತಿಮೆಯಲ್ಲಿ
ಕಾಣಬಹುದು ಎಂದು ಶ್ರೀರಾಮ ಪೇಳಿದನು
ಆನಂದದಿ ಕೊಂಡ ಬ್ರಾಹ್ಮಣ ಮೂರ್ತಿಗಳ ೧೫
ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದ ವಿಪ್ರ
ಯುಕ್ತ ಕಾಲದಿ ತನು ಬಿಡುವ ಸಮಯದಲಿ
ವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದ
ಸೀತಾರಾಮ ಪ್ರತಿಮೆಗಳ ಭಕ್ತಿಯಲಿ ೧೬
ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕ
ಸುಮಹಾಭಕ್ತಿಯ ಮಾಳ್ಪ ಹನುಮಂತ
ಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದ
ಸಮ್ಮುದದಿ ಅರ್ಚಿಸಿದ ಸೀತಾರಾಮನ್ನ ೧೭
ಸೌಗಂಧಿಕಾಪುಷ್ಪತರಲು ಭೀಮನು ಪೋಗಿ
ಮಾರ್ಗದಲಿ ತನ್ನಯ ಪ್ರಥಮಾವತಾರ
ಸಾಕೇತರಾಮಪ್ರಿಯತಮ ಅಂಜನಾಸುತನ
ಸಂಗಡವಾದಿಸಿದ ಲೋಕರೀತಿಯಲ್ಲಿ ೧೮
ನರಾಧಮರ ಮೋಹಿಸುವ ಸಜ್ಜನರ ಮೋದಿಸುವ
ಚರ್ಯಸಂವಾದ ತೋರಿಸಿ ರೂಪದ್ವಯದಿ
ತರುವಾಯು ಹನುಮನು ಭೀಮನಿಗೆ ಕೊಟ್ಟನು
ಶ್ರೀರಾಮಸೀತಾ ಮೂಲಪ್ರತಿಮೆಗಳ ೧೯
ಭೀಮಸೇನನು ಆನಂದದಿ ಅರ್ಚಿಸಿದ
ಸುಮನೋಹರ ರಾಮಸೀತಾದೇವಿಯನ್ನ
ಈ ಮಹಾಹರಿಭಕ್ತ ಪಾಂಡವರ ವಂಶದಿ
ಕ್ಷೇಮಕ ರಾಜನು ಕಡೆಯಾಗಿ ಬಂದ ೨೦
ಮೂಲರಾಮಸೀತೆಯ ಮುದದಿಂದ ಪೂಜಿಸಿದ
ಶೀಲಭಾ

ಶ್ರೀ ವಿಭವ ಸಂವತ್ಸರ ಸ್ತೋತ್ರ
೧೪೬
ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆ ಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪ
ರಾಜಿಸುವ ವಿಭವ ನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿ ನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು ೧
ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರ ವಿಭವಸಿತ ಪ್ರತಿಸತ್ ಊಶನ ಶುಕ್ರ ಭಾರ್ಗವ ವಾಸರವು ನಮೋ ಎಂಬೆ ಶುಕ್ರನಿಗೆ ನಮ್ಮ ಹಿತಕಾಯ್ವಿ ೨
ದಿನೋದಯದಿ ವಿಭವ ಸಂವತ್ಸರ ಸಿತಪಕ್ಷ ದ್ವಿತಿಯೇಯು ಸೌರವಾಸರವು ರಾಜಶನೈಶ್ಚರಗೂ ಮಂತ್ರಿ ಬುಧ ಮೊದಲಾದವರಿಗೂ ನಮೋ ಎಂಬೆ ದಯವಾಗಲಿ ೩
ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜ ರಾಜ ಜನ ಮನಸ್ತಾಪ ಜನಕಾಷ್ಟ ನೀದಯದಿ ಪರಿಹರಿಸಿ ಸಲಹೋ ಕೃಪಾನಿಧಿಯೇ ನರಹರಿಯೇ ೪
ಧವಳ ಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವು ಎಂದುಂಟು ಅದು ಪ್ರಾಮಾಣಿಕ ಎಂದು ತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ ೫
ಸಂವತ್ಸರ ನಿಯಾಮಕ ಹರಿ ರೂಪಗಳ ಸೋಚಿತ ಆಚರಣೆ ಸಹ ಸಂಸ್ಮರಿಸಿ ಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿ ಮಾಳ್ಪಜನರಿಗೆ ಸುಖಕಾಲ ೬
ಕಮಲ ಸಂಭವ ಪಿತ ಕಮಲಾಲಯ ಪತಿ ಅಮಲ ಪೂರ್ಣಾನಂದಾದಿಗುಣ ನಿಧಿಯು ಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನು ತನ್ನ ಭಕ್ತರಿಗೆ ಈವ ಸುಕ್ಷೇಮವನು ಸರ್ವದಾ ೭

ಪ್ರಜೋತ್ಪತ್ತಿ ಸಂವತ್ಸರ ಸ್ತೋತ್ರ
೧೪೮
ರಾಜ ರಾಜೇಶ್ವರಗೆ ರಾಜರಾಜೇಶ್ವರಿ ಪತಿಗೆ ರಾಜೀವ ಭವಪಿತಗೆ ಶರಣು ನಮೋ ಶ್ರೀಪದ್ಮನಾಭನಿಗೆ ಪ
ಪ್ರಭವಾದಿ ಷಷ್ಠಿ ಸಂವತ್ಸರದಿ ಪ್ರಾಬಲ್ಯ ಪೆಚ್ಚಿವುದು ಈ ವರುಷ ಸುಪ್ರಜೋತ್ಪತ್ತಿ ಸ್ಸಾಧು ಕ್ಷೇಮಕರ ಯೋಜನೆಗಳಿಗೆ ಸುಸಂಸ್ರ‍ಕತರು ಪ್ರಾರಂಭಿಸುವುದಕೆ ಅನುಕೂಲ ಅಧಿಕಾರವರ್ಗವು ಈ ರೀತಿ ತಿಳಿವುದು ೧
ಸಂವತ್ಸರ ರಾಜ ಸೂರ್ಯ ಮಂತ್ರಿಯೂ ಸಹ ತಂದತರ್ಯಾಮಿ ಸೂರಿ ಪ್ರಾಪ್ಯಘೃಣಿಯು ಸರ್ವವಿಧದಲ್ಲು ದಯೆ ಪಾಲಿಸುವ ನವನಾಯಕರೊಳು ಸಹ ಇದ್ದು ಸರ್ವೇಶ ಶ್ರೀಪ ಪದ್ಮನಾಭನು ಸ್ಮರಿಸುವವರ ಸುರಧೇನುವು ೨
ಸುಖಪೂರ್ಣ ಚಿನ್ಮಯನು ನಿತ್ಯತೃಪ್ತನುಪಜ್ಞನ್ಯನೊಳು ಇದ್ದು ಮಳೆಗರೆವ ಶ್ರೀಹರಿ ಅರ್ಕವಿಧು ಗ್ರಹನಕ್ಷತ್ರಗಳೊಳ್ ಇದ್ದು ಜ್ಯೋತಿ ಹರಿ ಬೆಳಕು ಕೊಡುವ ಮಕ್ಕಳು ಮೊಮ್ಮಕ್ಕಳು ಸುಖವೀವ ಶ್ರೀರಮೇಶನು ವೇದನಾಯಕಿ ಎಂಬ ಉಮೆಯರಸನ ಸಂಗಮೇಶ್ವರೊಳಿದ್ದು ೩
ಸರ್ವವಾಂಛಿತವೀವ ಸರ್ವಸ್ಥ ಲಕ್ಷ್ಮೀರಮಣ ಸರ್ವೋತ್ತಮನು ಸರ್ವಕಲ್ಯಾಣ ಸುಗುಣಾರ್ಣವನು ನಿದರ್ಷನು ವಾಂಛಿಸುವವರು ಪರವಿತ್ತಸ್ಥೇಯ ಪರನಿಂದಾ ವ್ಯಭಿಚಾರರೇತಸ್ಸ್ಸಂಗಮ ತ್ಯಜಿಸಲೇಬೇಕು ೪
ಬಾಲ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ದೈವಭಕ್ತಿ ಮತ್ತು ಸಾಧುನೀತಿಗಳ ಪಾಠಗಳ ಬೋಧಿಸುವುದು ಅಧಿಕಾರವರ್ಗದವರು ಮಾಡಲೇಬೇಕು ಇಳೆಯಲ್ಲಿ ಪ್ರಜಾಕ್ಷೇಮ ಅಭಿವೃದ್ಧಿ ಆಗಲಿಕ್ಕೆ ಇದು ಉಪಾಯ ಹರಿದಯದಿ ೫
ವಸುಂಧರೆಯಲ್ಲಿ ಇನ್ನು ಬೆಳೆಯುವುದು ಪ್ರಜಾ ಉಪಯೋಗ ಆಗಿ ಮಿಕ್ಕದ್ದೇ ಪರದೇಶಕೆ ಕೊಡಬಹುದು ಆಸುರೀ ಸಂಪತ್ತು ಬೆಳಸದೆ ದೈವಿ ಸಂಪತ್ತೇ ಗುರಿಯಾಗಿ ಸರ್ವರು ತಮ್ಮ ತಮ್ಮ ಸಮಯಗಳ ನೀತಿಗಳ ಆಚರಿಸಲು ರಾಷ್ಟ್ರ ಲೋಕಗಳಿಗೆ ಲಾಭ ೬
ಎನ್ನ ಮಾತುಗಳಲ್ಲ ಇವು ಕ್ಷೇಮಕರ ಪ್ರಜೋತ್ಪತ್ತಿಸ್ವಾಮಿ ಶ್ರೀಪದ್ಮನಾಭ ಶ್ರೀನಿವಾಸ ನುಡಿಸಿದವು ಎನ್ನನ್ನು ಎನ್ನವರನ್ನು ಸರ್ವಲೋಕಜನರನ್ನು ರಕ್ಷಿಸಲಿ ಶ್ರೀಹರಿ ಸರ್ವದಾ ೭

ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ
೨೬
ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆ
ಈ ಜಗದಿ ಎಣೆಯುಂಟೆ ಅರಸಿನೋಡೆ ||
ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |
ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪ
ಏನು ಯತ್ನಿಸಿದರೂ ತೆರೆಯಲಿಕ್ಕಾಗದ |
ಸ್ವರ್ಣಮಂಜೂಷದೊಳು ಮೂರ್ತಿಗಳ್ ||
ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |
ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ ೧
ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |
ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||
ಭಕ್ತಾಗ್ರೇಸರು ತರಳ ಪ್ರಹ್ಲಾದನಿಗೆ |
ಎದುರಾರು ಉಳ್ಳರೈಧರೆಯ ಮ್ಯಾಲೆ ೨
ಬಾಲಕಸ್ತುತಿಸಿದ್ದು ನರಹರಿ ಹರುಷದಿ |
ಕೇಳಿದನು ಆನಂದದಿ ತಾನರ್ತಿಸಲು |
ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |
ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ ೩
ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |
ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||
ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡು
ಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ ೪
ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |
ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||
ತೀರ್ಥರ ಕರ ಅರವಿಂದೋತ್ಪನ್ನ ಈ |
ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ ೫
ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |
ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||
ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |
ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ ೬
ಸಾರಾತ್ಮ ಸುಖಮಯ ಶ್ರುತಿ ವೇದ್ಯ ಮಹದಾದಿ |
ಚರಾಚರ ಜಗತ್ ಕರ್ತ ಪರಮ ಪೂರುಷನು ||
ಮೂರಡಿ ಬೇಡಿದ ಮುರಳೀಧರ ಶ್ರೀಮನ್
ನ್ನಾರಾಯಣ ಸರ್ವವಂದ್ಯನೇ ಸ್ವಾಮಿ ೭
ಈ ರೀತಿ ಹೊಗಳುವ ಸರಿಗಮ ಪದನಿ |
ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||
ಪರಮ ಭಾಗವತ ಮಹಾತ್ಮರು ಕೀರ್ತಿಸೆ |
ಶ್ರೀ ಕೃಷ್ಣ ಧಿಕ್ತೈ ಎಂದೆನುತ ಕುಣಿದ ೮
ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |
ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |
ಶುಭತಮ ಗುಣ ಕಥನ ಶ್ರವಣದಿಂ ಲಭ್ಯವು |
ಶ್ರೀಭಾಗವತಾಷ್ಟಮ ದಶಮ ಏಕಾದಶದಿ ೯
ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |
ರುಕ್ಮಿಣಿ ಸತ್ಯಾಯುಕ್ ಅಭಯ ವರದ ||
ಶಂಖಾರಿ ಹಸ್ತ ಹಿರಣ್ಮಣಿ ನಿಭ ಕೃಷ್ಣ |
ಜಗದೇಕ ವಂದ್ಯನು ಮುದದಿ ತಾಕುಣಿದ ೧೦
ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |
ನರಸಿಂಹ ಪರಂಬ್ರಹ್ಮ ನಮೋ ವರಾಹ ||
ನಾರಾಯಣ ವಾಸುದೇವ ಸಂಕರುಷಣ |
ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧ ಪಾಹಿ ೧೧

ದಾಸರ ಶಿಷ್ಯಳೊಬ್ಬಳು ಉದರ ಶೂಲೆಯಿಂದ
ಶ್ರೀ ರಾಜಸೂಯಾ ಅಗ್ರಪೂಜಾ ಸ್ತೋತ್ರ
೫೯
ರಾಜನ ಭಾಗ್ಯವಿದು | ಧರ್ಮರಾಜನ ಭಾಗ್ಯವಿದು ಪ
ರಾಜೀವ ಜಾಂಡದ ಏಕಸ್ವರಾಟ್ ಶ್ರೀ
ಕೃಷ್ಣನ ರಾಜೀವ ಅಂಘ್ರಿ ಸುಯುಗ್ಮವ
ರಾಜಸೂಯದಿ ತಾ ಪೂಜಿಸಿದ ಅ.ಪ
ಚಿತ್ರವಿಚಿತ್ರವು ಸ್ತಂಭತೋರಣಗಳು
ರತ್ನ ಮಾಣಿಕ್ಯ ಮರುಗದದಿ
ಚಂದ ಹೊಳೆವ ಸಭೆ ರಾಜರು ಸುತಪೋ
ಧನರು ಕುಳಿತಿರೆ ಮಾಧವಗೆ
ಮೊದಲು ಪೂಜೆಯ ಮಾಡಿ ಯಜ್ಞವಾ
ಚರಿಸಿದ ವಿಧಿ ಪೂರ್ವಕದಿ ಶ್ರಧ್ಧೆಯಲಿ ೧
ಶಂತನುಸುತ ಗಾಂಗೇಯರು ನೆರೆದಿದ್ದ
ಸಾಧು ಸನ್ಮುನಿಜನ ಮನದಂತೆ
ಇಂದಿರೆಯರಸ ಶ್ರೀ ಕೃಷ್ಣಗೆ ಸಮರು
ಅಧಿಕರು ಇಲ್ಲದ ಜಗದೀಶ
ವಿಧಿ ಈಶಾನದಿ ಸರ್ವನಿಯಾಮಕ
ಕೃಷ್ಣನೇ ಪೂಜ್ಯನು ಎಂದರು ದೃಢದಿ ೨
ಗಂಗಾಜಲವ ಜಾಂಬೂನದ ಕಲಶದಿ
ಮಾದ್ರೇಯನು ತಾ ತಂದೀಯೇ
ಗಂಗಾಜನಕ ವರಾಂಗಿ ಸುವಕ್ಷ ಐ
ಶಂಗವಾಸನ ಅರಿಶಂಖವ ಪಿಡಿದವನ
ಅಂಘ್ರಿ ಸುಕಂಜದ್ವಯವ ಯುದಿಷ್ಠಿರ
ಅವನೀಜನಗೈದ ಭಕ್ತಿಯಲಿ ೩
ಮನುಷ್ಯವತ್ ಲೀಲಾ ದ್ವಿಭುಜನು ಚಿನ್ಮಯ
ಭಜಕಗೆ ಚತುರ್ಭುಜ ಕಾಣಿಸುವ
ಜ್ಞಾನರೂಪದಿ ಹರಿ ವನಜ ಸಂಭವನಲಿ
ಇಹ ಕ್ರಿಯಾರೂಪದಿ ವಾಯುನಲಿ
ವಾಣೀ ಭಾರತಿಯಲಿ ಇಚ್ಚಾಶಕ್ತಿ
ರೂಪದಿ ಪ್ರಚುರನು ಸರ್ವೇಶ ೪
ರಥನಾಭಿಯಲಿ ಅರಗಳ ತೆರದಿ
ಸಮಸ್ತವು ಪ್ರತಿಷ್ಠಿತ ವಾಯುನಲಿ
ಕ್ಷಿತಿಯಲಿ ಸ್ವಯಮೇವ ವಾಯುವೆ
ಜನಿಸಿ ಜಗದಂತರಾತ್ಮ ಭೀಮನಾಗಿ
ಯುಧಿಷ್ಠಿರನಲಿ ಸಮಾಭಿಷ್ಟನಾಗಿಹ ಸೌಮ್ಯ
ರೂಪದಿ ಕೃಷ್ಣನ ಸೇವಿಸಲು ೫
ಸೌಮ್ಯರೂಪದಿ ಒಳಗಿದ್ದು ಶ್ರೀ ಕೃಷ್ಣಗೆ
ಅಗ್ರ ಪೂಜಾದಿ ರಾಜಸೂಯ
ತಾ ಮಾಡಿ ಸ್ವಯಂ ತನ್ನ ಅವತಾರ
ಭೀಮಗೆ ಅಣ್ಣನೆಂದೆನಿಸುತಿಪ್ಪ
ಧರ್ಮರಾಜನ ಕೈಯಿಂದ ಮಾಡಿಸಿದನು
ಭಕ್ತಾನುಕಂಪಿ ಶ್ರೀಹರಿಯ ಪ್ರೀತಿಸಿದ ೬
ಮನಶುಚಿಯಲಿ ಈ ನುಡಿಗಳ ಪಠಿಸುವ
ಶ್ರವಣವ ಮಾಡುವ ಸುಜನರಿಗೆ
ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಪಾಂಡವ ಪ್ರಿಯ ಶ್ರೀ ರುಕ್ಮಿಣೀಶ
ಮನಶೋಕಾದಿ ತಾಪತ್ರಯ ನೀಗಿಸಿ
ಯೋಗ್ಯವಾಂಛಿತವೀವ ಬಹುದಯದಿ ೭

ಪ್ರಸನ್ನ ಶ್ರೀ ರಾಜರಾಜೇಶ್ವರ ಸ್ತೋತ್ರ ಹಾಗೂ ಶ್ರೀ ಕಪಿಲ
೪೩
ರಾಜರಾಜೇಶ್ವರನೇ ರಾಜೀವವದನ ಶ್ರೀ
ರಾಜರಾಜೇಶ್ವರಿ ಪತೇ ಶರಣು ಮಾಂಪಾಹಿ
ರಾಜೀವಪಿತ ನೀನು ಕನ್ಯೆಯರಿಗೆ ವರ
ಪ್ರಜಾಸಂಪತ್ ಉದ್ಯೋಗ ಈವಿ ಭಜಕರಿಗೆ ಪ
ವೇಧ ಕಾಯಜ ಸ್ವಾಯಂಭುವ ಮನು ಶತರೂಪಾ
ಈ ದಂಪತಿಗೆರಡು ಗಂಡುಗಳು ಪ್ರಿಯವ್ರತ
ಉತ್ಥಾನಪಾದ ಮೂರು ಹೆಣ್ಣು ಮಕ್ಕಳು
ಅಕೂತಿ ದೇವಹೂತಿ ಪ್ರಸೂತಿ ಎಂಬುವರು ೧
ಶ್ರೀಪತಿಯೇ ನಿನ್ನ ಕಾರುಣ್ಯ ಬಲದಿಂದ
ಸುಪುಣ್ಯ ಶ್ಲೋಕ ಆದಿಮನು ತನ್ನ
ರೂಪ ಗುಣ ಶ್ರೇಷ್ಠ ಕನ್ಯೆಯರಿಗೆ ತಕ್ಕಾನು –
ರೂಪ ವರರುಗಳಿಗೆ ಮದುವೆ ಮಾಡಿಸಿದನು ೨
ಪುತ್ರಿಕಾ ನಿಯಮದಿ ಆಕೂತಿ ದೇವಿಯನು
ಸುತಪೋಧನ ಪ್ರಜೇಶ್ವರ ರುಚಿಗೆ ಕೊಟ್ಟ
ನಿರ್ದೋಷ ಕಲ್ಯಾಣ ಗುಣಗಣಾರ್ಣವ ನೀನು
ಪ್ರಾದುರ್ಭವಿಸಿದಿ ಯಜ್ಞಶ್ರೀಯು ದಕ್ಷಿಣಾದೇವಿಯು ೩
ಕರ್ದಮ ಪ್ರಜೇಶ್ವರರ ಭಕ್ತಿ ತಪಸ್ ಏನೆಂಬೆ
ಶ್ರೀದ ನಿನ್ನಯ ಭಕ್ತ ವಾತ್ಸಲ್ಯಕ್ಕೆಣೆಯುಂಟೆ
ಪದ್ಮಜನು ಕರ್ದಮಗೆ ಪ್ರಜಾಃಸ್ರುಜ ಎನ್ನಲು
ಭಕ್ತಿಯಿಂ ತಪಗೈಯೇ ಪ್ರತ್ಯಕ್ಷನಾದಿ ೪
ಸುಪುಷ್ಕರಾಕ್ಷ ನೀ ಸೂರ್ಯ ತೇಜಃಪುಂಜ
ಪ್ರಪನ್ನರ್ಗೆ ಬೀರುವ ಕಾರುಣ್ಯನೋಟ
ವಿಪುಲಾಬ್ಜ ವದನ ಸುಂದರಸುಳಿಗೊರಳು
ಸುಭ್ರಾಜ ಕುಂಡಲ ಕಿರೀಟದ ಹೊಳಪು ೫
ಉರುಕಾಂತಿಯಿಂ ಜ್ವಲಿಪ ಅರಿ ಶಂಖ ಗದೆಯ
ಶುಭ್ರೋತ್ಪಲ ಪುಷ್ಪ ಕರಗಳ ಹಿಡಿದಿಹಿ
ವಿರಾಜಿಸುವ ಕೌಸ್ತುಭಶಿತ ಪದ್ಮೋತ್ಪಲಸ್ರಜ
ಶ್ರೀರಮಣ ನಿನ್ನ ಶ್ರೀವತ್ಸ ಸೌಂದರ್ಯ ಏನೆಂಬೆ ೬
ದ್ವಿಷೂೀಡಶ ಶುಭಲಕ್ಷಣ ಸುಲಕ್ಷಿತ
ಪುಷ್ಪಭವ ವರವಾಯು ಸಂಸೇವ್ಯ ಶ್ರೀಶ
ಶೇಷಾಹಿ ಭೂಷಣಾದ್ಯಮರ ಸನ್ನುತ ನೀನು
ಪಕ್ಷಿಸೋಪರಿ ಅಂಬರದಿ ನಿಂತಿ ೭
ಉತ್ತಮಶ್ಲೋಕ ನಿನ್ನ ಕರ್ದಮ ಹರುಷದಿನೋಡಿ
ಕ್ಷಿತಿಯಲ್ಲಿ ಬಿದ್ದು ಸನ್ನಮಿಸಿ ಸ್ತುತಿಸೇ
ಮಾಧವನೇ ನೀನು ಹೇಳಿದಿ ಸ್ವಾಯಂಭುವನು
ಶತರೂಪಾ ದೇವಹೂತಿ ಸಹ ಬರುವನೆಂದು ೮
ಆ ಮನು ದಂಪತಿಯು ಮತ್ತು ದೇವಹೂತಿಯು
ಧರ್ಮನಿಷ್ಠರೂ ಸದ್ಗುಣಾದಿ ಶ್ರೇಷ್ಠರೆಂದಿ
ರಮಣೀಯ ಆಕೆಯ ಕರ್ದಮರು ಪರಸ್ಪರ ಅರ್ಹರೆಂದಿ
ಹೆಣ್ಣುಮಕ್ಕಳೊಂಬತ್ತು ಸ್ವಯಂ ನೀ ಅವತರಿಪಿ ಎಂದಿ ೯
ಸತಿ ಸುತಾ ಸಹ ಸ್ವಾಯಂಭುವ ಬರಲು ಮುನಿಯು
ಆದರದಿ ಸ್ವಾಗತ ನೀಡಿ ರಾಜನಲಿ ಯುಕ್ತ
ಸದ್ಭೋಧ ರೂಪದಲಿ ಮಾತನಾಡೆ ಮನವು
ಬಂದ ಕಾರ್ಯ ಹೇಳಿದನು ವಿನಯ ಗಾಂಭೀರ್ಯದಿ ೧೦
ದುಹಿತ್ರು ಸ್ನೇಹ ಪರಿಕ್ಲಿಷ್ಟ ಮನದಿಂದ ದೀನ
ನಾ ಹೇಳುವುದು ಕೃಪೆಯಿಂದ ಕೇಳಿರಿ ತಮ್ಮ
ಬಹುಶೀಲ ಗುಣ ವಯಸ್ ರೂಪಾದಿಗಳ
ಮಹರ್ಷಿ ನಾರದರು ಹೇಳಿ ಕೇಳಿಹಳು ದೇವಹೂತಿ ೧೧
ಸರ್ವಾತ್ಮನಾ ತಮಗೆ ಅನುರೂಪ ಗೃಹಿಣಿ ಅಗುವಳು
ಅವಳನ್ನ ದಯದಿಂದ ವಧುವಾಗಿ ಸ್ವೀಕರಿಸಿ
ವಿವಾಹ ವಿಧಿಪೂರ್ವಕ ಮಾಡಿಕೊಳ್ಳಿರಿ ಎಂದು
ಈ ವಿಧದಿ ರಾಜ ಕೋರಲು ಮುನಿಯು ಒಪ್ಪಿದನು ೧೨
ಸಾಧು ಮಾತುಗಳಾಡಿ ಹಸನ್ಮುಖವ ತೋರಿಸಿ
ಕರ್ದಮರು ಅರವಿಂದನಾಭನ್ನ ಸ್ಮರಿಸುತ್ತ
ಶಾಂತವಾಗಿ ಸುಮ್ಮನೇ ಕುಳಿತರು ಆಗ ಮನು
ವಿಧಿಪೂರ್ವಬ್ರಾಹ್ಮಿವಿವಾಹಕ್ಕೆ ಏರ್ಪಾಡು ಮಾಡಿದನು ೧೩
ಶ್ರೀವರನೇ ನಿನ್ನಾನುಗ್ರಹ ಬಲದಿಂದಲೇ
ದಿವ್ಯಾಭರಣ ಉಡುಗೊರೆ ವೈಭವದಿಂದ
ದೇವಹೂತಿ ಕರ್ದಮರ ವಿವಾಹ ಮಾಡಿ ಕೃತಕೃತ್ಯ
ಸ್ವಾಯಂಭುವ ಬರ್ಹಿಷ್ಮತಿ ಸೇರಿದನು ೧೪
ಕರ್ದಮರು ದೇವಹೂತಿಯು ಗೃಹಸ್ಥತನ ಚರಿಸಿದನು
ಪತಿ ಇಂಗಿತವರಿತು ಪಾರ್ವತಿ ಶಿವನಿಗೆ
ಎಂತಹ ಸೇವೆ ಮಾಳ್ಪಳೋ ಅದರಂತೆ ಪ್ರೀತಿಯಿಂದ
ಪತಿಸೇವೆ ಮಾಡುತ್ತಿಹಳು ದೇವಹೂತಿ ಸಾಧ್ವಿ೧೫
ಯೋಗಾತಿಶಯ ಸಾಮಥ್ರ್ಯದಿ ಕರ್ದಮರು
ಕಾಮಗ ವಿಮಾನ ನಿರ್ಮಿಸಿ ದಾಂಪತ್ಯ
ಸುಖ ವಿಹಾರವ ಮಾಡಿ ಹೇ ಸ್ವಾಮಿ ನಿನ್ನ ಕೃಪದಿ
ಮಕ್ಕಳು ಸ್ತ್ರೀ ಪ್ರಜಾ ಒಂಭತ್ತು ಹುಟ್ಟಿದವು ೧೬
ಶ್ರೀಕರ ನಾರಾಯಣ ನೀ ಕಪಿಲಾವತಾರ
ಆ ಕರ್ದಮರು ದೇವಹೂತಿ ಮಗನೆನಿಸಿ
ಉತ್ರ‍ಕಷ್ಟ ಸಾಧು ಸಾಂಖ್ಯ ತತ್ವೋಪದೇಶವ
ಅ ಕುಟಿಲ ಮಾತೆಗೆ ಬೋಧಿಸಿದ್ದು ಪ್ರಸಿದ್ಧ ೧೭
ಕರ್ದಮರ ಒಂಭತ್ತು ಕನ್ಯೆಯರು ಕಲಾ, ಅನಸೂಯ,
ಶ್ರಧ್ಧಾ, ಹರ್ವಿಭೂ, ಗತಿ, ಕ್ರಿಯಾ, ಊರ್ಜಾ, ಶಾಂತಿ ಖ್ಯಾತಿ
ಸಾಧ್ವಿಗಳಿವರು ಮರೀಚತ್ರಿ, ಅಂಗೀರ, ಪುಲಸ್ತ್ಯ ಪುಲಹ
ಕ್ರತು ವಶಿಷ್ಟಾ ಭೃಗುಗಳಿಗೆ ಮದುವೆ – ಆದರೀ ಕ್ರಮದಿ ೧೮
ಐಶ್ವರ್ಯವಂತ ಸ್ವಾಯಂಭುವ ಮನು ತನ್ನ ಮಗಳು
ಪ್ರಸೂತಿಯನು ಬ್ರಹ್ಮಪತ್ರ ದಕ್ಷನಿಗೆ ಕೊಟ್ಟು ಆಕೆ
ಪ್ರಸವಿಸಿದಳು ಷೋಡಶಾಮಲಲೋಚನೆ ಪುತ್ರಿಯರ
ಸುಶೀಲ ಸಾಧ್ವಿಯರು ಮದುವೆ ಅದರು ಸುಲಭದಿ ೧೯
ಶ್ರಧ್ಧಾ, ಮೈತ್ರಿ, ದಯಾ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾ
ಉನ್ನತಿ, ಬುದ್ಧಿ, ಮೇಧಾ, ತಿತಿಕ್ಷಾ, ಹ್ರೀ ಮೂರ್ತಿ
ಹದಿಮೂರು ಈ ಕನ್ಯೆಯರು ಮದುವೆ ಆದರು ಧರ್ಮಗೆ
ಸಾಧ್ವಿ ಸ್ವಾಹಾಪತಿ ಅಗ್ನಿಪಿತೃಗಳ ಪತ್ನಿ ಅದಳು ಸ್ವಧಾ ೨೦
ಶ್ರೀ ರಮಾಪತಿ ನಿನ್ನ ಕಾರುಣ್ಯ ಏನೆಂಬೆ
ಪಿತೃದೇವರೊಳ್ ಅಂತರ್ಗತನಾಗಿ ನೀನೇ
ಪಿತೃದೇವರ್ಗಳನ್ನ ಪುತ್ರ ಸಂತಾನ ಬೇಕೆಂದು
ನರರು ಬೇಡಿಕೊಂಡರೆ ಭಕ್ತಿ ಮೆಚ್ಚಿ ಫಲವೀವಿ ೨೧
ಸತಿದೇವಿ ಭವನ ಪತ್ನಿಯಾದಳು ವಿಹಿತದಿ
ಪತಿಭಕ್ತಿ ಪತಿಸೇವಾ ಸದಾರತಳು ಭವಾನಿ
ಹದಿನಾರು ಕನ್ಯೇಯರ ದಕ್ಷನು ಹರಿ ನಿನ್ನದಯದಿ
ಮದುವೆ ಮಾಡಿ ಕೊಟ್ಟನು ಹಾಗೂ ಪುನರವತಾರದಲ್ಲೂ ೨೨
ಧನಹೀನರಿಗೂ ನೀನು ಉದಾರ ಕಾರುಣ್ಯದಿ
ಧನಒದಗಿಸಿ ಮದುವೆ ಮಾಡಿಸುವಿಯೋ
ಮುನಿವರ್ಯ ರುಚಿಕರಿಗೆ ವರುಣನ ದ್ವಾರ ನೀ
ಕನ್ಯಾಶುಲ್ಕ ಒದಗಿಸಿ ವಿವಾಹ ಮಾಡಿಸಿದಿ ೨೩
ಪಶುಪತ್ನಿ ಸಂತಾನ ಯಜ್ಞ, ಧನ ವಿವಾಹೋತ್ಸವ
ಯಶಸ್ ತೇಜೋಬಲ ವೀರ್ಯ ಪ್ರಜಾಸೃಷ್ಟಿ ಅಧಿಕಾರ
ಐಶ್ವರ್ಯ ಇಂತಹುದು ದಕ್ಷಗೆ ಬಹು ಕೊಟ್ಟು –
-ಅವನೋಳ್ ಇದ್ದು
ಯಶ ಎಂದು ಕರೆಸಿಕೊಂಬ ಶ್ರೀರಮಣ ಶ್ರೀಕರ –
-ನಮೋ ನಮೋ ನಿನಗೆ ೨೪
ನಂದಿನೀಧರ ಶಿವನೊಳ್ ಅಂತರ್ಯಾಮಿಯಾಗಿರುತ
ಪುಂಸ್ತ್ರೀ ಪ್ರಜಾಸೃಷ್ಟಿ ಮುಂಜಿ ಮದುವೆ ಮಕ್ಕಳು ಮೊಮ್ಮಕ್ಕಳು
ಇಂಥಾ ಸಂತಾನ ಮತ್ತು ಆಯುಷ್ಯ ಸುಖವೀವಿ ಪ್ರಜಾತಿಹಿ
ಅಮೃತಂ ಆನಂದ ಎಂದು ಕರೆಸಿಕÉೂಂಬ ನಿನಗೆ ಶರಣು ೨೫
ಮನು ಸ್ವಾಯಂಭುವ ದಕ್ಷ ಮರುತ ದೇವತೆಗಳೊಳ್
ಶ್ರೀನಿಧಿಯೇ ನೀನಿದ್ದು ಪ್ರಜೋತ್ಪತ್ಯಾದಿಗಳನ್ನು ಈವಿ
ಈ ನುಡಿಗಳ ಪಠಣ ಫಲ ಮೋಕ್ಷ ಹೇತು – ಸಜ್ಞಾನ ಲಾಭವು
ಇನ್ನೂ ಅವಾಂತರ ಫಲ ವಿವಾಹ ಸಂತಾನ
ಆಯುರಾರೋಗ್ಯ ಉದ್ಯೋಗ ಪ್ರಾಪ್ತಿ ೨೬
ಮಂದಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಒಂದು ಪುತ್ರ ಬೇಕೆನ್ನೆ ಮೂವರನ್ನು ನೀ ಕೊಟ್ಟೆ
ಅಂದು ನೀನೇ ತೋರ್ದಿ ಮಗನಾಗಿ ಮನುವಿಗೆ
ಒಂದೇಮನದಿ ಇದು ಪಠಿಸೆ ನೀ ಒಲಿವೆ ೨೭
-ಇತಿ ಶ್ರೀ ರಾಜೇಶ್ವರ ಸ್ತೋತ್ರ ಸಂಪೂರ್ಣಂ –