Categories
ರಚನೆಗಳು

ಪ್ರಸನ್ನ ಶ್ರೀನಿವಾಸದಾಸರು

ಅಂಕಿತ ಪದ (ಶ್ರೀ ಪ್ರಸನ್ನ ಭೂವರಾಹ)
೧೪೨
ಶ್ರೀಶ ಪ್ರಸನ್ನ ಭೂವರಾಹ ಚಿನ್ಮಯದೇವ – ಬಿಸಜಜ ಸಮೀರಾದಿ ಸುರವೃಂದ ವಂದ್ಯ – ಬಿಸಜಜಾಂಡದ ದೊರೆ ಸಹಸ್ರನಾಮನೆ ದಯ – ದಿಂಸಲಹೋ ಜ್ಞಾನಾದಿ ಧನವಿತ್ತು ಇವನ ಪ
ಶ್ರೀಧರನೆ ಸುಖಮಯನೆ ಭೂಧರನೆ ಭೀತಿಹರ ವೇಧ ಮನುವಿಗೆ ಒಲಿದ ಶ್ವೇತವರಾಹ || ದಿತಿಜಹರ ವಸೂಮತೀಯ ಉದ್ಧರಿಸಿ ಕಾಯ್ದಿಯೋ ನೀದಯದಿ ಸುಮತಿಯನು ಇತ್ತು ಪಾಲಿಪುದು ೧
ಕಾಲ ಗುಣ ಕರ್ಮ ನಿಮಿತ್ತ ಬಂದಿಹ ಇವನ ಬಲವಂತ ಕಷ್ಟಗಳ ಉಪಶಮಿಸಿ ಇವನಿಂ || ಒಳ್ಳೇಸಾಧನ ಮಾಡಿಸುವದು ನೀಕೃಪೆಯಿಂದ | ಬಾಲೇಂದುಧರ ವಿನುತ ಭಕ್ತವತ್ಸಲ ೨
ಭೂಮ ಉರುಗುಣ ಪೂರ್ಣ ನಿರ್ದೋಷ ಶ್ರೀರಮಣ ಶ್ಯಾಮ ವರ್ಣನೆ ಚಕ್ರ ಶಂಖ ಭೂಧರನೆ || ಕಾಮಪಿತ ವೇಧಪಿತ ಭೂವರಾಹ ನಮೋ | ನಮೋ ಶ್ರೀ ಪ್ರಸನ್ನ ಶ್ರೀನಿವಾಸ ಸಲಹೆಮ್ಮ

ಶ್ರೀ ಶುಕ್ರಾಚಾರ್ಯ ಸ್ತೋತ್ರ
೯೩
ಶ್ರೀಶಪ್ರಿಯ ಭೃಗುವಂಶಜಾತ ಶುಕ್ರಾಚಾರ್ಯ
ನೀ ಸಲಹೋ ಎನ್ನನ್ನ ನಮೋ ನಮೋ ನಮಸ್ತೇ ಪ
ಶ್ರೀ ಪದ್ಮನಾಭಜನು ಸುಪವಿತ್ರ ವಿಧಿಸುತ
ಭೃಗು ಅಪತ್ಯನು ಕವಿ ತತ್ಪುತ್ರರತ್ನನು ಶುಕ್ರ
ಈ ಪುಣ್ಯ ಶ್ಲೋಕ ಶುಕ್ರಾಚಾರ್ಯ ಉಷನ ಶ್ರೀಪ
ಪ್ರಿಯನಿಗೆ ನಮೋ ಮಂತ್ರ ತಂತ್ರ ಮಹಾಕವಿಗೆ ೧
ದೈತ್ಯಮಂತ್ರಿಯೇ ಸರ್ವಶಾಸ್ತ್ರ ಪ್ರವಾರ್ತಾರ
ದೈತ್ಯಾನಂ ಪರಮಂ ಗುರುಂ ಪ್ರಭುಸ್ತಾರಾ ಗಣಾನಾಂ
ಮಹಾದ್ಯುತಿಯೇ ನಮೋ ಎನ್ನ ಪೀಡೆಗಳ ಪರಿಹರಿಸಿ
ದಯದಿಪಾಲಿಸೆನ್ನನ್ನು ಹರಿಭಕ್ತ್ಯಾದಿಗಳಿತ್ತು ೨
ಅಕಳಂಕ ಅಜಪಿತ ಪ್ರಸನ್ನ ಶ್ರೀನಿವಾಸನು
ಶುಕ್ರನೆಂದೆಣಿಸುವನು ಶೋಕ ರಹಿತನಾದ್ದರಿಂದ
ಶ್ರೀಕರಾರ್ಚಿತ ಈ ಶುಕ್ರ ನಿನ್ನೋಳ್ ಪ್ರಕಾಶಿಪನು
ಶುಕ್ರನ್ನ ಒಲಿಸೆನಗೆ ಶುಕ್ರಾಭಿದ ಮಹಾಯಶನೇ ೩ ಪ

ಇದೊಂದು ಸಂಸ್ರ‍ಕತದಲ್ಲಿರುವ
ಶ್ರೀ ಭವಾನಿ ಕ್ಷೇತ್ರಸ್ತ ಸಂಗಮೇಶ್ವರ ಸ್ತೋತ್ರ
೭೬
ಸಂಗಮೇಶ್ವರ ಶರಣು ಸದಾಶಿವ
ಸಂಗಮೇಶ್ವರ ರಂಗ ಶ್ರೀಪತಿಯರ ಅಚಲಭಕ್ತಿಯನಿತ್ತು
ಭಂಗವಿಲ್ಲದೆ ಪರಿಪಾಲಿಸೋ ಎನ್ನ ನೀ ಪ
ರಮ್ಯ ಭವಾನಿ ಕಾವೇರಿ ಸಂಗಮದಲಿ |
ಉಮೆ ಸಹಿತದಿ ನಿಂತು ಎಮ್ಮ ಪಾಲಿಸುತಿ ನೀ || ೧
ಅಮರ ಸುಮನಸ ವೃಂದಾರಾಧ್ಯನೇ |
ಷಣ್ಮುಖ ಗಜಮುಖ ತಾತ ಕೃಪಾನಿಧೆ ೨
ಶುದ್ಧ ಸ್ಪಟಿಕಾಮಲ ನಿರ್ಮಲ ಕಾಯನೆ |
ದುಗ್ಧ ಸಾಗರ ಭವಶೇಖರ ಶಂಕರ |
ಸ್ನಿಗ್ಧ ಲೋಹಿತ ಜಟಾಜೂಟಿ ಗಂಗಾಧರ |
ಮೃತ್ಯುಂಜಯ ಅಹಿಭೂಷಣ ಶರಣು ೩
ಅಸಿತ ಲೋಹಿತ ಸಿತ ಶ್ಯಾಮ ವಿಧ್ಯುನ್ನಿಭ |
ಭಾಸಿಪ ಪಂಚ ಸುವದನ ತ್ರಿಲೋಚನ |
ಈಶಾನಮಃ ದೇವನೇ ವೇದ ನಾಯಕಿ ಪತಿಯೇ |
ಅಜಪಿತ ಪ್ರಸನ್ನ ಶ್ರೀನಿವಾಸಗೆ ಪ್ರಿಯ ೪

೧೨೬
ಪ್ರಥಮ ಕೀರ್ತನೆ
ಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿ
ಸತತ ಶರಣಾದೆ ನಾಹಿತದಿ ಪಾಲಿಪರು
ಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನ
ವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪ
ಹಂಸನಾಮಕ ವಿಷ್ಣು ವನರುಹಾಸನ ಸನಕ
ದೂರ್ವಾಸ ಮೊದಲಾದ ಗುರು ವಂಶಜಾತ
ದಶಪ್ರಮತಿ ಸರಸಿಜನಾಭ ನರಹರಿತೀರ್ಥ
ಬಿಸಜ ಚರಣಂಗಳಲಿ ಸತತ ನಾ ಶರಣು | ೧
ಮಾಧವ ಅಕ್ಷೋಭ್ಯ ಜಯವಿದ್ಯಾಧಿರಾಜ ರಾ –
ಜೇಂದ್ರ ಕವೀಂದ್ರ ವಾಗೀಶ ರಾಮಚಂದ್ರ
ವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವ
ಸತಪೋನಿಧಿ ಯತಿವರ್ಯರಿಗೆ ನಮಿಪೆ ೨
ವೇದಾಂತ ಕೋವಿದರು ರಘುನಾಥ ರಘುವರ್ಯ
ಪದವಾಕ್ಯತತ್ವಜ್ಞ ರಘೂತ್ತಮಾರ್ಯರಿಗೆ
ವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆ
ವೇದನಿಧಿಗಳಿಗೆ ನಾ ಬಾಗುವೆ ಶಿರವ ೩
ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆ
ಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆ
ಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆ
ಭೃತ್ಯ ನಾ ಎನ್ನ ವಂದನೆಗಳರ್ಪಿಸುವೆ ೪
ಸತ್ಯಬೋಧರ ಮಹಿಮೆ ಬಹು ಬಹು ಬಹುಳವು
ವೇದ್ಯ ಎನಗೆ ಅತಿ ಸ್ವಲ್ಪ ಮಾತ್ರ
ಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದು
ಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು ೫
ರಾಮಾಚಾರ್ಯರು ಸಣ್ಣ ವಯಸ್ಸಿನವರು
ನೇಮದಿಂದಾಶ್ರಮೋಚಿತ ಕರ್ಮಪರರು
ರಾಮ ಹಯಶೀರ್ಷ ನರಸಿಂಹನ ಗುಣರೂಪ
ಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು ೬
ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯ
ಗುರುಗಳ ಸಂಸ್ಥಾನ ಪೀಠಕ್ಕೆ ಬಂದು
ಸೂರಿವರ್ಯರು ಸತ್ಯಬೋಧ ತೀರ್ಥರು ಎಂದು
ಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ ೭
ಬಾದರಾಯಣ ಮಾಧ್ವ ಸಚ್ಛಾಸ್ತ್ರ ಬೋಧಿಸಿ
ಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿ
ವೇದ ವಿರುದ್ದ ದುರ್ವಾದಗಳ ಕತ್ತರಿಸಿ
ಮೇದಿನಿಸಜ್ಜನರ ಪೊರೆದಂಥ ಧೀರ ೮
ಪೀಠ ಆರೋಹಿಸಿದ ಪೂರ್ವಗುರುಗಳ ಪೋಲು
ಮಠಕ್ಕೆ ಮಾನ್ಯಗಳ ಅಭರಣಗಳನ್ನ
ಪಟ್ಟಣ ಪ್ರಮುಖರು ಧನಿಕರು ಭೂಪಾಲರು
ಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು ೯
ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದ
ಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆ
ಬಂಧಿಸಿದ ಶ್ರೀಮಠವ ರಾಮೇಶ್ವರ ರಾಜ
ಬಂತು ಸೈನ್ಯವು ತಿರುಚಿನಾಪಳ್ಳಿಯಿಂದ ೧೦
ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್
ಕಾರನು ಸೈನ್ಯವನು ಕಳುಹಿಸಿದನು
ವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿ
ಗುರುಗಳ ಕರೆತಂದ ತಿರುಚಿನಾಪಳ್ಳಿಗೆ ೧೧
ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈ
ಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿ
ವರಧನಾಪಹಾರಿಯು ಎಂದು ಆಪಾದಿಸಿ
ನಿರೋಧಿಸಿದ ಶೋಧನೆ ಮಾಡುವ ನೆವದಿ ೧೨
ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆ
ಗುರುಗಳು ರಾಮದೇವರ ಪೆಟ್ಟಿಗೆಯ
ತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿ
ಹರಿಯ ಮಾನಸ ಪೂಜೆ ಮಾಡುತ ಕುಳಿತರು ೧೩
ಜಾನೋಜಿರಾಯನು ವಾದಿಸೆ ಸುಲ್ತಾನ
ತನ್ನ ಸರ್ಕಾರ ಶೋಧಕರ ಕಳುಹಿಸಿದ
ತನ್ನ ಹಿರಿಯರ ಮತ್ತು ಇತರ ರಾಜರುಗಳ
ಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ ೧೪
ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದ
ಹರಿ ಪೂಜೆ ಗುರು ಪೂಜೆ ಮಾಡಿಸಿ ಕಾಣಿಕೆಯು
ಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನು
ಗುರು ಸತ್ಯಬೋಧರ ಕೀರ್ತಿವರ್ಧಿಸಿತು ೧೫
ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯ
ತರಿಸಿ ಹರಿಪೂಜೆಯ ಮಾಡಿ ಮುದದಿಂದ
ಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯ
ಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ ೧೬
ಮಾರ್ಗದಲಿ ತಂಜಾವೂರಿನ ರಾಜನು
ಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದ
ನಗರದಲಿ ಪ್ರಮುಖ ಪಂಡಿತ ಗೋಸಾಯಿಯ
ನಿಗಮಾಂತ ವಾದದಲಿ ಸೋಲಿಸಿದರು ೧೭
ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿ
ಗಂಭೀರತರ ದೊಡ್ಡ ಮಂಟಪ ಕಟ್ಟಿ
ಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನ
ಸಭೆಯಕೂಡಿ ವಾಕ್ಯಾರ್ಥ ನಡೆಸಿದರು ೧೮
ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯ
ಸಾರಂಗಪಾಣಿ ಕುಂಭೇಶ್ವರ ಕ್ಷೇತ್ರ
ಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದು
ಸೇರಿದರು ತಿರುಪತಿ ವೇಂಕಟಾಚಲಕ್ಕೆ ೧೯
ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆ
ಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆ
ನೀರುಮಧ್ಯದಿ ಇರುವ ಜಂಬುಕೇಶ್ವರನಿಗೆ
ಭಾರಿ ಪುಣ್ಯದೆ ಕಾವೇರಿಗೆ ನಮಿಪೆ ೨೦
ಶಾಙ್ರ್ಗಧರ ಚಕ್ರಧರ ಕುಂಭೇಶ್ವರ ಅಂಬ
ಮಂಗಳನಾಯಕಿ ವಿಜಯೀಂದ್ರರಿಗೆ
ನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆ
ಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ ೨೧
ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹ
ಶ್ರೀರಮಾಪತಿ ಇಹನು ಸರ್ವೇಷ್ಟದಾತ
ಪರಿಪರಿ ಭಕ್ತರ ಪೀಡೆಗಳ ಪರಿಹರಿಪ
ಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ ೨೨
ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನ
ಭಾರಿ ಆಲಯ ಉಂಟು ಶಿವಕುಮಾರರಿಗೂ
ಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯ
ತೀರದಲಿ ಶ್ರೀರಘೂತ್ತಮರು ಕುಳಿತಿಹರು ೨೩
ಪಿನಾಕಜಾ ಈ ಪಿನಾಕಿಯಲ್ಲಿಹನು
ಅನಿಮಿತ್ತ ಬಂಧು ಶ್ರೀಕೇಶವ ಸರ್ವೇಶ
ಸ್ನಾನ ಜಪದಾನಗಳು ಪಣ್ಯಪ್ರದತತ್ತೀರ
ವನದಲ್ಲಿ ಶ್ರೀ ರಘೂತ್ತಮರ ವೃಂದಾವನ ೨೪
ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋ
ಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂ
ಕಾಯವಾಕ್ಕು ಮನದಿ ಟೀಕಾ ಭಾವ ಬೋಧರಿಗೂ
ಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ ೨೫
ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆ
ವೀರ ಚೋಳಪುರದಲ್ಲಿ ಶ್ರೀ ಸತ್ಯನಾಥ
ತೀರ್ಥರು ಅಭಿನವ ಚಂದ್ರಿಕಾಕಾರರು
ಇರುತಿಹರು ವೃಂದಾವನದಲ್ಲಿ ವಂದೇ ೨೬
ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬ
ಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವ
ಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿ
ತಿರುಪತಿಗೆ ಹೊರಟರು ಗುರುಸರ್ವಭೌಮ ೨೭
ಹೇಮಗರ್ಭನ ತಾತ ಶ್ರಿಪತಿ ಜಗನ್ನಾಥ
ಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸ
ರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆ
ನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ ೨೮ ಪ

೧೨೬-೧
ದ್ವಿತೀಯ ಕೀರ್ತನೆ
ಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿ
ಸತತ ಶರಣಾದೆ ನಾಹಿತದಿ ಪಾಲಿಪರು
ಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನ
ವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪ
ವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿ
ಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದ
ಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡು
ವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು ೧
ತಿರುಪತಿಯಲಿ ಹನುಮದಾದಿ ಲಕ್ಷ್ಮಣ ಸೇವ್ಯ
ಶ್ರೀರಾಮಸೀತಾ ಸಮೇತನಿಗೆ ನಮಿಪೆ
ಉರುಗೇಶಶಯ್ಯ ಶ್ರೀ ಗೋವಿಂದರಾಜನಿಗು
ಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ ೨
ಒಂದು ಗಾವುದ ದೂರದೊಳಗೇವೆ ಇರುತಿಹುದು
ಪದ್ಮ ಸರೋವರವು ತತ್ತೀರದಲ್ಲಿ
ವೇದವಿಗ್ರಹ ಘೃಣಿ ಆದಿತ್ಯ ಸೂರ್ಯನು
ನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು ೩
ಸಮೀಪದಲಿ ದೊಡ್ಡ ಆಲಯವಿಹುದಲ್ಲಿ
ಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣ
ರಾಮನ ಸಹಕುಳಿತು ವಂದಿಸುವ ಸಜ್ಜನರ
ಕ್ಷೇಮಲಾಭವ ಸದಾ ಪಾಲಿಸುತಿಹನು ೪
ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜ
ಲಕ್ಷ್ಮೀಸಮೇತನು ಕಾರುಣ್ಯ ಶರಧಿ
ಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿ
ವಿಷ್ಣು ಭಕ್ತರ ಸದಾಕಾಯುತಿಹನು ೫
ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿ
ವನಜ ಆಸನದಲ್ಲಿ ಶ್ರೀ ಪದ್ಮಾವತಿಯು
ದೀನ ಕರುಣಾಕರಿಯು ವರ ಅಭಯ ನೀಡುತ್ತ
ಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು ೬
ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿ
ಪಾದ್ಯಳು ಪದ್ಮಾವತಿ ಕಮಲವಾಸಿನಿಯು
ಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆ
ಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ ೭
ವೇಂಕಟಾಚಲದ ಅಡಿವಾರದಲಿ ಇರುತಿದೆ
ಅಕಳಂಕ ಸುಪವಿತ್ರ ಕಪಿಲತೀರ್ಥ
ಲಿಂಗ ಆಕಾರದಲಿ ಕಪಿಲೇಶ್ವರ ಇಹನು
ಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ ೮
ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿ
ಗೋಪುರಾಲಯದಲ್ಲಿ ನೃಸಿಂಹನ ನಮಿಸಿ
ಶ್ರೀಪ ವರಾಹ ವೇಂಕಟನ ಕಾಣಿಸುವಂತ
ಆ ಭೇಟಿ ಹನುಮನಿಗೆ ಶರಣು ಶರಣೆಂಬೆ ೯
ಸ್ವಾಮಿವೇಂಕಟನ ಆಲಯದ ಗೋಪುರಕಂಡು
ಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವ
ಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂ
ನಮಿಸುವೆ ಅಶ್ವತ್ಥನಾರಾಯಣಗು ೧೦
ಕಪಿಲೇಶ್ವರಾನುಗ್ರಹದಿ ಹನುಮಂತನ
ಅ ಪವನಜನ ದಯದಿ ಭೂಧರಾ ವರಾಹನ
ಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನ
ಶ್ರೀ ಪದ್ಮ ಪದಯುಗದಿ ಶರಣು ಶರಣಾದೆ ೧೧
ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆ
ದೇವ ದೇವ ಶಿಖಾಮಣಿ ಕೃಪಾನಿಧಿ ಸುಹೃದ
ನವರತ್ನ ಖಚಿತ ಆಭರಣ ಕಿರೀಟಿಯು
ಶಿವದ ವರ ಅಭಯ ಕರಕಟಿ ಚಕ್ರಿಶಂಖಿ ೧೨
ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನ
ಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿ
ಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡು
ಪದುಮ ಸರೋವರಾಲಯಗಳ ಐದಿದರು ೧೩
ವೇಂಕಟಗಿರಿಯಿಂದ ಕರ್ನೂಲು ಗದ್ವಾಲ
ಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿ
ಭಕುತರಿಗೆ ದರ್ಶನ ಉಪದೇಶ ಕೊಟ್ಟರು
ಮಾರ್ಗದಲಿ ಹನುಮಂತ ಕ್ಷೇತ್ರ ಇಹುದು ೧೪
ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆ
ಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸು
ಧೈರ್ಯವು ನಿರ್ಭಯತ್ವವು ಆರೋಗ್ಯವು
ದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ ೧೫
ಹೇಮಗರ್ಭನ ತಾತ ಶ್ರಿಪತಿ ಜಗನ್ನಾಥ
ಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸ
ರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆ
ನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ ೧೬ ಪ
|| ಇತಿ ದ್ವಿತಿಯ ಕೀರ್ತನೆ ||

೧೨೬ – ೩
ಚತುರ್ಥ ಕೀರ್ತನೆ
ಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿ
ಸತತ ಶರಣಾದೆ ನಾಹಿತದಿ ಪಾಲಿಪರು
ಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನ
ವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪ
ಸತ್ಯಬೋಧಾರ್ಯರು ಭಾಗೀರಥಿ ಕುರಿತು
ಯಾತ್ರೆ ಮಾಡಲು ಮನದಿ ಯೋಚಿಸುತಲಿದ್ದಾಗ
ಇದ್ದ ಕಡೆಯಲ್ಲೆ ಗಂಗಾ ಬಂದು ಒದಗುವಳು
ಎಂದು ಸ್ವಪ್ನವು ಆಯಿತು ಅಂದು ರಾತ್ರಿಯಲಿ ೧
ಶ್ರೀ ಮಠಕ್ಕೆ ಅರ್ಧಗಾವುದ ದೂರ ಇರುವಂಥ
ಭೂಮಿಯಲಿ ಕೃಷಿಕೂಪ ಬಹು ದೊಡ್ಡದಲ್ಲಿ
ಸಮೀಪಸ್ತ ಔದುಂಬರ ತರು ಮೂಲದಿಂ
ಅಮರ ತಟನೀ ಬರುವ ವೇಳೆಯು ತಿಳಿಯಿತು ೨
ಶ್ರೀಗುರು ನವಾಬನಿಗೂ ಖಂಡೇರಾಯನಿಗು
ನಗರ ಜನರಿಗು ತಿಳಿಸಿ ಆ ಸ್ಥಳಕ್ಕೆ ಪೋಗೆ
ಗಂಗಾವತರಣವು ಆಯಿತು ಸೂಚಿತವೇಳೆ
ಕಂಗೊಳಿಸುವ ಬಾಗೀರಥೀ ಧಾರಾಸುರಿದು ೩
ತ್ರಿವಿಕ್ರಮ ಸುಪಾದಜಾ ತ್ರಿಜಗತ್ ಪಾವನಿಗಂಗಾ
ತ್ರಿದಶೇಶ್ವರಿ ನಳಿನಿ ಸೀತಾನಮಸ್ತೆ
ತ್ರಾಹಿ ಜಾಹ್ನವಿ ಭಾಗೀರಥೀ ನಮೋ ಭೋಗವತಿ
ತ್ರಿಪಥ್‍ಗಾಮಿನಿ ಪಾಹಿ ಮಾಲತಿ ನಂದಿನಿ ೪
ನವಾಬನು ಮಂತ್ರಿಯು ನೆರೆದಿದ್ದ ಜನರೆಲ್ಲ
ದೇವ ತಟಿನಿ ಧಾರಾ ಸುರಿದದ್ದು ನೋಡಿ
ದೈವೀಕ ಈ ಮಹಿಮೆ ಕೊಂಡಾಡಿ ಸ್ನಾನಜಪ
ಸೇವೆದಾನಾದಿಗಳ ಮಾಡಿದರು ಮುದದಿ ೫
ವಿಷ್ಣುತೀರ್ಥ ಎಂಬ ನಾಮ ಈ ತೀರ್ಥಕ್ಕೆ
ವಿಷ್ಣು ಭಕ್ತಾಗ್ರಣಿ ಸದಾಶಿವನ ಲಿಂಗ
ವಿಷ್ಣು ತೀರ್ಥದ ದಡದಿ ಇಹುದು ಶರಣೆಂಬೆ
ವಿಷ್ಣು ್ವಂಘ್ರಿ ಜಾತೆಗೂ ಉಮೇಶನಿಗೂ ಶ್ರೀಶಗೂ ೬
ಶ್ರೀ ಸತ್ಯಬೋಧರು ಗಂಗೆಯ ತರಿಸಿದ್ದು
ಶ್ರೀ ಸತ್ಯಬೋಧರ ಬಹು ಇಂಥ ಮಹಿಮೆ
ವಸುಮತಿಯಲಿ ಹರಡಿ ದೇಶ ದೇಶಗಳಿಂದ
ಭೂಸುರರು ಸಜ್ಜನರು ಬಂದು ಸೇವಿಪರು ೭
ಪಟ್ಟಣದ ಮಧ್ಯದಿ ನವಾಬ ಕೊಡಿಸಿದ ಸ್ಥಳದಿ
ಕಟ್ಟಡವು ಶ್ರೀಮಠ ವಿಸ್ತಾರವಾದ್ದು
ಮಠದಲ್ಲೇ ಉಂಟೊಂದು ಸೋಪಾನ ಭಾವಿಯು
ಕಟ್ಟೆಯಲಿ ಶಿವಲಿಂಗ ಭಾವಿಯಲಿ ಗಂಗಾ ೮
ಭೃಗು ಅಂಶ ವಿಜಯದಾಸಾರ್ಯರ ಪ್ರಭಾವವು
ಏಕದಂತಾಂಶ ಗೋಪಾಲ ದಾಸಾರ್ಯರ ಪ್ರಭಾವ
ಭಾಗಣ್ಣಾನುಜರು ಈರ್ವರು ಪ್ರಭಾವವ
ಶ್ರೀ ಗುರುಗಳು ಮೆಚ್ಚಿ ಮಾನ್ಯ ಮಾಡಿದರು ೯
ವಿದ್ವತ್ಸ್‍ಭೆಯಲಿ ಗೋಪಾಲದಾಸಾರ್ಯರು
ಆ ದಾಸವರ್ಯರ ಅನುಜರು ಈರ್ವರು
ದೇವತಾಂಶದವರು ಅಪರೋಕ್ಷ ಪ್ರಚುರರು
ಎಂದು ಜನರಿಗೆ ನಿದರ್ಶನ ತೋರಿಸಿದರು ೧೦
ವಿಠ್ಠಲ ನೃಹರಿವ್ಯಾಸ ಶ್ರೀಸಹ ವೇಂಕಟರಾಮ
ಘೋಟಕಾಸ್ಯ ಮಧ್ವೇಶನ್ನರಾಧಿಪಂತ
ಮಠದಲ್ಲಿ ಜಗನ್ನಾಥ ದಾಸಾರ್ಯರ ಸೇವೆ
ಕೊಂಡು ಬಹು ಪ್ರೀತಿಯಲಿ ಅನುಗ್ರಹ ಮಾಡಿಹರು ೧೧
ಅಮಲ ವೈದಿಕ ತತ್ವ ಮಧ್ವಸಿದ್ಧಾಂತವ
ಭೂಮಿ ದೇವರಿಗೆ ಬೋಧಿಸಿ ಸರ್ವಜನರ್ಗು
ಕ್ಷೇಮ ಒದಗಿಸಿ ರಮಾಕಾಂತನ್ನ ಸ್ಮರಿಸುತ
ಈ ಮಹಿಯೋಳ್ ಸರ್ವಜನ ಪ್ರಿಯತಮರಾಗಿಹರು ೧೨
ಒಳ್ಳೆರೀತಿಯಲಿ ಚತ್ವಾರಿ ವತ್ಸರ ಮಠ
ಆಳಿ ಶಾಲಿಶಕ ಹದಿನೇಳ್ ನೂರೈದು
ಫಾಲ್ಗುಣ ಕೃಷ್ಣ ಪ್ರತಿಪದ ದಿನ ಹರಿಧ್ಯಾನ
ದಲ್ಲಿ ಕುಳಿತರು ಲೋಕ ಚಟುವಟಿಕೆ ತೊರೆದು ೧೩
ಸತ್ಯಬೋಧರ ವೃಂದಾವನದಿ ಅವರೊಳಿಹನು
ಸತ್ಯಬೋಧಾಹ್ವಯನು ಶ್ರೀಸಹಹಯಾಸ್ಯ
ವಾತಸೇವಿತ ರಾಮಕೃಷ್ಣನೃಹರಿ ವ್ಯಾಸ
ಭೃತ್ಯವತ್ಸಲ ವಾಮದೇವನುತನಾಗಿ ೧೪
ದರ್ಶನ ಪ್ರದಕ್ಷಿಣೆ ನಮನ ಪಾದೋದಕ
ಸಂಸ್ರ‍ಕತಿ ಸುಚರಿತ್ರೆ ಪಾರಾಯಣ
ಸಚ್ಛಾಸ್ತ್ರ ಪ್ರವಚನ ಜಪತಪದಾನಾದಿಗಳು
ವಾಂಛಿತಪ್ರದ ಸರ್ವ ಪೀಡಹರವು ೧೫
ಪುತ್ರಧನ ಆರೋಗ್ಯ ಆಯುಷ್ಯ ಮಾಂಗಲ್ಯ
ತಾಪತ್ರಯ ಪರಿಹಾರ ರೋಗ ನಿವೃತ್ತಿ
ಕ್ಷಿಪ್ರಲಭಿಸುವುವು ಹರಿಗುರುಗಳ ದಯದಿಂದ
ಸುಶ್ರವಣ ಪಠನ ಈ ಗ್ರಂಥಮಾಳ್ಪರಿಗೆ ೧೬
ಸತ್ಯಸಂಧಾರ್ಯರು ಮಹಾಮಹಿಮ ಶಿಷ್ಯರು
ಸತ್ಯಬೋಧರ ಆರಾಧನ ಭಕ್ತಿ
ಉತ್ಸಾಹದಿ ಮಾಡಿದರು ಅದ್ಯಾಪಿ ಸಹಸ್ರಾರು
ಭಕ್ತರು ಸೇವಿಸುತಿಹರು ಪ್ರೇಮದಲಿ ೧೭
ಹೇಮಗರ್ಭನ ತಾತ ಶ್ರಿಪತಿ ಜಗನ್ನಾಥ
ಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸ
ರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆ
ನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ ೧೮ ಪ
|| ಇತಿ ಶ್ರೀ ಸತ್ಯಬೋಧ ಚರಿತ್ರೆ ಸಂಪೂರ್ಣಂ ||

ಶ್ರೀ ಸತ್ಯ ಸಂಧರ ಚರಿತ್ರೆ
೧೨೭
ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿ
ಭೃತ್ಯನಾ ಎಂದೆಣಿಸಿ ನಿತ್ಯ ಪಾಲಿಸುವುದು
ಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮ
ಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪ
ನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆ
ವಿಧಿ ಸನಕ ಮೊದಲಾದ ಗುರು ಪರಂಪರೆಗೆ
ಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದ
ತೀರ್ಥರಾಂಬುಜ ಪಾದಗಳಿಗೆ ಆನಮಿಪೆ ೧
ಪದ್ಮನಾಭ ನರಹರಿ ಮಾಧವ ಅಕ್ಷೋಭ್ಯರ
ಪದ್ಮಾಂಘ್ರಿಗಳ ನಮಿಸಿ ಜಯತೀರ್ಥರ
ವಿದ್ಯಾಧಿರಾಜರ ಪಾದ ಪಂಕಜಕ್ಕೆರಗಿ
ವಿದ್ಯಾಧಿರಾಜರು ಈರ್ವರಿಗೂ ನಮಿಪೆ ೨
ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆ
ರಾಮಚಂದ್ರರಿಗೆ ಆ ಯತಿವರರ ಹಸ್ತ
ಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆ
ನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ ೩
ವೇದಾಂತ ಕೋವಿದರು ರಘುನಾಥ ರಘುವರ್ಯ
ಪದವಾಕ್ಯ ತತ್ವಜ್ಞ ರಘೂತ್ತಮಾರ್ಯರಿಗೆ
ವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆ
ವೇದನಿಧಿಗಳಿಗೆ ನಾ ಬಾಗುವೆ ಶಿರವ ೪
ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆ
ಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆ
ಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯ
ಬೋಧರಿಗೆ ಎನ್ನ ವಂದನೆ ಅರ್ಪಿಸುವೆ ೫
ಸತ್ಯಬೋಧಾರ್ಯರ ಕರಕಮಲ ಸಂಜಾತ
ಸತ್ಯಸಂಧರ ಮಹಿಮೆ ಬಹು ಬಹು ಬಹಳ
ವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯು
ಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ ೬
ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯ
ಹಾವೇರಿಯವರು ಈ ಯತಿವರ ಮಹಂತ
ದೇವ ಸ್ವಭಾವರು ವೇದಾಂತ ಕೋವಿದರು
ಸರ್ವದಾ ಹರಿನಾಮ ಸಂಸ್ಮರಿಸುವವರು ೭
ರಾಮಚಂದ್ರಾಚಾರ್ಯ ಸರ್ವಪ್ರಕಾರದಲು
ತಮ್ಮ ಸಂಸ್ಥಾನ ಪೀಠಾರ್ಹರು ಎಂದು
ನೇಮದಿಂ ಪ್ರಣವೋಪದೇಶ ಅಭಿಷೇಕ
ಸಂಮುದದಿ ಮಾಡಿದರು ಸತ್ಯಬೋಧಾರ್ಯ ೮
ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿ
ಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತ
ಧರೆಯಲ್ಲಿ ಜ್ಞಾನಿ ಶ್ರೇಷ್ಠರು ಎಂದು ಸ್ತುತಿಕೊಂಡ
ಧೀರ ಗುರುವರ ಸತ್ಯಸಂಧರಿಗೆ ನಮಿಪೆ ೯
ಸತ್ಯಂ ವಿದಾತಂ ನಿಜ ಭೃತ್ಯ ಭಾಷಿತಂ
ಅಂದು ಕಂಬದಿ ತೋರ್ದ ಹರಿ ಪ್ರಹ್ಲಾದನಿಗೆ
ಇಂದು ವಟು ರೂಪದಿ ಬಂದು ವಿಠ್ಠಲ ಸತ್ಯ
ಸಂಧರಿಗೆ ತೋರಿದನು ತನ್ನಿಚ್ಛೆಯಿಂದ ೧೦
ವಿಠ್ಠಲನ್ನ ವಂದಿಸಿ ಪಂಡರೀಪುರದಿಂದ
ಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರ
ಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತ
ಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ ೧೧
ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರು
ವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದು
ನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದು
ಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ ೧೨
ಶ್ರೀವಿಷ್ಣು ಪಾದ ಮಂದಿರದ ಮುಖದ್ವಾರ
ಅವಿವೇಕದಲಿ ಗಯಾವಾಳರು ಬಂಧಿಸಲು
ಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರು
ವಿಶ್ವವಿಷ್ಣು ವಷಟ್ಕಾರನು ವಲಿದ ೧೩
ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲ
ಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆ
ಈ ರೀತಿ ಅದ್ಬುತವು ಜರುಗಿದ್ದು ಕಂಡು
ಎರಗಿ ಕೊಂಡಾಡಿದರು ಅಲ್ಲಿದ್ದ ಜನರು ೧೪
ತಮ್ಮ ತಪ್ಪುಗಳನ್ನು ಮನ್ನಿಸೆ ಕ್ಷಮೆ ಬೇಡಿ
ತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆ
ಹೇಮ ರತ್ನಾದಿಗಳ ಕಾಣಿಕೆ ಅರ್ಪಿಸಿ
ನಮಿಸಿ ಪೂಜಿಸಿದರು ಗಯಾವಾಳರು ೧೫
ಸೂರಿ ಕುಲ ತಿಲಕರು ಸತ್ಯ ಸಂಧಾರ್ಯರು
ಹರಿ ಪೂಜೆ ಮಾಡುವಾಗ ಹರಿ ಶಿರಿ ವಾಯು
ಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆ
ಬರುವುದು ನೋಡುವ ಯೋಗ್ಯ ಭಕ್ತರಿಗೆ ೧೬
ಶ್ರೀ ಹರಿ ಅರ್ಚನೆಗೆ ಸ್ವಾಮಿಗಳು ಕುಳಿತರು
ಬ್ರಾಹ್ಮಣ ಮಹಾಪುರುಷ ಓರ್ವನು ಬಂದ
ಸಹಸ್ರದಳ ಸುಂದರತರ ಕಮಲಪುಷ್ಪವ
ಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ ೧೭
ಪ್ರಣವ ಅಷ್ಟಾಕ್ಷರಿ ಮೊದಲಾದ ಮಂತ್ರಗಳ
ಆಮ್ನಾಯ ಋಗ್ ಯಜುಸ್ಸಾಮಾಥರ್ವಣದ
ಅನುಪಮ ಮಹಾ ಇತಿಹಾಸ ಎರಡರಸಾರ
ವಿಷ್ಣು ಸಹಸ್ರನಾಮಗಳಿರುತಿವೆಯು ೧೮
ಉತ್ರ‍ಕಷ್ಟತಮ ವಿಷ್ಣು ಸಹಸ್ರ ನಾಮಂಗಳ
ಶ್ರೀ ಕೃಷ್ಣ ಸುಪ್ರೀತಿ ಕರ ವ್ಯಾಖ್ಯಾನ
ಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣು
ಸೂರಿವರಧೀರರು ಸತ್ಯ ಸಂಧಾರ್ಯ ೧೯
ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿ
ವೃಂದಾವನದಿ ಕೂಡುವ ಕಾಲ ಬರಲು
ಭೂದೇವಿ ಪತಿ ವಕ್ತ್ರದಿಂದುದಿತ
ಸಾಧು ಸುಪವಿತ್ರ ತೀರಕ್ಕೆ ಬಂದಿಹರು ೨೦
ಹದಿನೇಳು ನೂರು ಹದಿನಾರನೇ ಶಾಲಿ ಶಕ
ಆನಂದ ಸಂವತ್ಸರ ಜೇಷ್ಠ ಶುದ್ಧ
ದ್ವಿತೀಯ ಪುಣ್ಯತಮ ದಿನದಲ್ಲಿ ಶ್ರೀಹರಿಯ
ಪಾದ ಯೆಯ್ದಿದರು ಈ ಗುರುವರ ಮಹಂತ ೨೧
ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿ
ದೊಡ್ಡದಲ್ಲದ ಗ್ರಾಮ ಮಹಿಷಿ ಎಂಬುವಲಿ
ಕ್ರೋಡಜಾ ತೀರಸ್ಥ ವೃಂದಾವನ ಸದನ
ಮಾಡಿ ಕುಳಿತರು ಮತ್ತೊಂದು ಅಂಶದಲಿ ೨೨
ವೃಂದಾವನದೊಳು ಇಹ ಸತ್ಯಸಂಧರೊಳು
ನಿಂತಿಹನು ಸತ್ಯಸಂಧನು ಮುಖ್ಯವಾಯು
ವಾತ ದೇವನೊಳು ಸತ್ಯಸಂಧ ನಾಮಾವಿಷ್ಣು
ಸತ್ಯಜ್ಞಾನಾನಂತಾನಂದ ವಾಯು ಇಹನು ೨೩
ವೃಂದಾವನಸ್ಥರ ಈ ರೀತಿ ತಿಳಿಯುತ್ತ
ಬಂದು ಸೇವಿಸುವವರಿಗೂ ಸ್ಮರಿಸುವವರಿಗೂ
ಕುಂದು ಕೊರತೆ ನೀಗಿ ಇಷ್ಟಾರ್ಥ ಲಭಿಸುವವು
ಇಂದಿರಾಪತಿ ದಯಾಸಿಂಧು ಪಾಲಿಸುವನು ೨೪
ಹನುಮಸ್ತ ಅಜನಪಿತ ‘ಶ್ರೀ ಪ್ರಸನ್ನ ಶ್ರೀನಿವಾಸ’
ಮೀನ ಕಮಠ ಕ್ರೋಡ ನೃಹರಿ ವಟು ಪರಶು
ದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶ
ಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು ೨೫ ಪ
|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||

ಶ್ರೀ ಸತ್ಯಪ್ರಿಯ ತೀರ್ಥ ವಿಜಯ
೧೨೪
ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ
ನಿತ್ಯ ಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |
ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿ ಹಯ
ವಕ್ತ್ರ ಶ್ರೀರಾಮನಿಗೆ ಪ್ರಿಯತರ ಮಹಂತ ಪ
ಅಶೇಷಗುಣಗಣಾಧಾರ ವಿಭು ನಿರ್ದೋಷ
ಹಂಸ ಶ್ರೀ ಪತಿಯಿಂದುದಿತ ಗುರುಪರಂಪರೆಗೆ
ಬಿಸಜಭವ ಸನಕಾದಿ ದೂರ್ವಾಸ ಮೊದಲಾದ
ವಂಶಜರು ಅಚ್ಚುತ ಪ್ರೇಕ್ಷರಿಗೆ ನಮಿಪೆ ೧
ಪುರುಷೋತ್ತಮ ತೀರ್ಥ ಅಚ್ಚುತ ಪ್ರೇಕ್ಷರ
ಕರಕಮಲ ಜಾತರೂ ಮಹಾಭಾಷ್ಯಕಾರರು
ವರವಾಯು ಅವತಾರ ಆನಂದ ತೀರ್ಥರ
ಚರಣವನಜದಿ ನಾ ಸರ್ವದಾ ಶರಣು ೨
ಪದ್ಮನಾಭ ನರಹರಿ ಮಾಧವ ಅಕ್ಷೋಭ್ಯ
ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ
ಮೇಧಾ ಪ್ರವೀಣ ಜಯ ತೀರ್ಥಾರ್ಯರಿಗೂ
ವಿದ್ಯಾಧಿರಾಜರಿಗೂ ನಮೋ ನಮೋ ಶರಣು ೩
ವಿದ್ಯಾಧಿರಾಜರಿಗೆ ಶಿಷ್ಯರು ಈರ್ವರು
ಮೊದಲನೆಯವರು ರಾಜೇಂದ್ರ ತೀರ್ಥಾರ್ಯ
ನಂತರ ಕವೀಂದ್ರ ತೀರ್ಥಾರ್ಯ ಇವರುಗಳ
ಪಾದಾರವಿಂದಗಳಿಗೆ ನಾ ನಮಿಪೆ ೪
ವಾಗೀಶ ತೀರ್ಥರು ಕವೀಂದ್ರ ಹಸ್ತಜರು
ವಾಗೀಶ ಕರಜರು ರಾಮಚಂದ್ರಾರ್ಯ
ಈ ಗುರುಗಳಿಗೀರ್ವರು ಶಿಷ್ಯರು ಇಹರು
ಬಾಗುವೇ ಇವರ್ಗಳಿಗೆ ಸಂತೈಸಲೆಮ್ಮ ೫
ಮೊದಲನೆಯವರು ವಿಭುದೇಂದ್ರ ತೀರ್ಥಾರ್ಯರು
ವಿದ್ಯಾನಿಧಿ ತೀರ್ಥಾರ್ಯರು ಅನಂತರವು
ವಿದ್ಯಾನಿಧಿ ಸುತ ರಘುನಾಥ ತೀರ್ಥರು
ವಂದಿಸುವೆ ಈ ಸರ್ವಗುರು ವಂಶಕ್ಕೆ ೬
ರಘುನಾಥ ಕರಕಮಲ ಜಾತ ರಘುವರ್ಯರಿಗೂ
ರಘೂತ್ತಮ ವೇದವ್ಯಾಸ ವಿದ್ಯಾಧೀಶ
ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ
ಸತ್ಯಾಭಿನವ ಸತ್ಯಪೂರ್ಣರಿಗೆ ನಮಿಪೆ ೭
ಸತ್ಯಪೂರ್ಣ ತೀರ್ಥರಿಗೆ ಶಿಷ್ಯರು ಇಬ್ಬರು
ಸತ್ಯವರ್ಯ ತೀರ್ಥರು ಮೊದಲನೆಯವರು
ಸತ್ಯವಿಜಯ ತೀರ್ಥರು ಎರಡನೆ ಶಿಷ್ಯರು
ವಂದನಾದಿ ಮರ್ಯಾದೆ ಮಾಳ್ಪುದು ಜೇಷ್ಠರಿಗೆ ೮
ಸತ್ಯವರ್ಯ ತೀರ್ಥರೇ ಮುಂದಕ್ಕೆ ಸತ್ಯಪ್ರಿಯ
ರೆಂದು ಕರೆಸಿಕೊಂಡರು ವಿರಾಗಿಕೋವಿದರು
ಸುಂದರ ದೇಶವು ಗೋದಾವರೀ ಕ್ಷೇತ್ರಕ್ಕೆ
ಸತ್ತತ್ವ ಬೋಧಿಸಲು ವಿಜಯ ಮಾಡಿದರು ೯
ಸತ್ಯ ವಿಜಯರು ಗುರು ಆಜ್ಞೆಯಿಂ ತಾವೂನೂ
ತತ್ವ ಬೋಧ ಸಂಚಾರ ಮಾಡಿದರು ಆಗ
ಸತ್ಯಪೂರ್ಣ ತೀರ್ಥರು ತಾವೇ ಕರ್ನಾಟಕ
ಪ್ರಾಂತ್ಯಕ್ಕೆ ಹೊರಟರು ದಿಗ್ವಿಜಯಕಾಗಿ೧೦
ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರೀಯರು
ಗೋದಾವರೀ ತೀರ ವಿಜಯ ಮಾಡುವಾಗ
ಭೂದೇವ ನರದೇವಪುರಿ ನಗರ ಪ್ರಮುಖರು
ಉತ್ಸಾಹದಿ ಭಕ್ತಿ ಮರ್ಯಾದೆ ಮಾಡಿದರು ೧೧
ಬಿಸಾಜಿಪಂತ ನಾರಾಯಣ ನರಳೀಪಂತ
ವಿಶ್ವಾಸದಿ ಇಂಥಾ ಪ್ರಮುಖ ಜನರು
ಈ ಸಂನ್ಯಾಸ ರತ್ನ ಸತ್ಯಪ್ರಿಯ ಆರ್ಯರಿಗೆ
ಸ್ವಾಗತ ಪೂಜೆ ಮಾಡಿದ್ದು ಖ್ಯಾತ೧೨
ಸಜ್ಜನರು ದೊಡ್ಡವರು ನಾಯಕರು ಗುರುಗಳ
ಪೂಜಿಸುವ ಸಮಯ ಬಂದು ಅಲ್ಲಿ ಮೊದಲನೆ
ಬಾಜೀರಾವ್ ಎಂಬಂಥ ಅರಸನು ಅವನೂ ಸಹ
ನಿಜ ಭಕ್ತಿ ಭಾವದಿಂದಲಿ ಪೂಜಿಸಿದ ೧೩
ತಾನು ಪೂಜಿಸಿ ಗ್ರಾಮ ದಾನ ಮಾಡಿದ್ದಲ್ಲದೆ
ಘನ ಮಹಾತ್ಮ ಸ್ವಾಮಿಗಳ ಪೂಜಿಸಿರೆಂದು
ತ್ನನ ಮುದ್ರೆ ಪತ್ರ ಬೇರೆ ರಾಜರ್ಗೆ ಕಳುಹೆಂದು
ತನ್ನ ಸಹ ಬಂದಿದ್ದ ಮಂತ್ರಿಗೆ ಹೇಳಿದನು ೧೪
ಗೋದಾವರೀ ತೀರ ಸ್ಥಳಗಳಲಿ ಈ ರೀತಿ
ಸತ್ಯಪ್ರಿಯ ಆರ್ಯರು ಸಂಚರಿಸಲಾಗ
ಸತ್ಯ ಪೂರ್ಣ ತೀರ್ಥರು ದಕ್ಷಿಣದಲ್ಲಿ
ಕ್ಷೇತ್ರಾಟನದಿ ಇರುತಿದ್ದರು ಮುದದಿ ೧೫
ಸತ್ಯಪೂರ್ಣರಿರುತ್ತಿದ್ದ ಸಂಚಾರ ಸ್ಥಳದ
ಹತ್ತಿರವೆ ಕೊಂಗು ನಾಡು ತೋಂಡ ದೇಶ
ಸತ್ಯವಿಜಯರು ಅಲ್ಲಿ ಸಂಚರಿಸಿ ಬಂದರು
ಸತ್ಯ ಪೂರ್ಣರು ಹರಿ ಪಾದ ಸೇರುವಾಗ ೧೬
ಸತ್ಯವಿಜಯರ ಕೈಗೆ ಸಂಸ್ಥಾನ ಬರಲು
ಸತ್ಯಭಿನವ ಸತ್ಯಪೂರ್ಣರ ಪದ್ಧತಿ
ಯಂತೆ ಸಂಸ್ಥಾನ ಆಡಳಿತ ಮಾಡುತ್ತಾ
ಮತ್ತೂ ತೋಂಡ ದೇಶ ಸಂಚಾರಕ್ಕೆ ಹತ್ತಿದರು ೧೭
ಎನ್ನ ಎನ್ನಂಥವರ ಅನಂತ ಅಪರಾಧಗಳ
ಘನ ದಯದಿ ಕ್ಷಮಿಸಿ ಬಹು ಕೃಪದಿ ಪಾಹೀ
ವನರುಹಾಸನಪಿತ ಮಧ್ವಸ್ಥ ಶ್ರೀಪತಿ
‘ಪ್ರಸನ್ನ ಶ್ರೀನಿವಾಸ’ ಪ್ರಿಯ ಸತ್ಯಪ್ರಿಯ ಆರ್ಯ ೧೮ ಪ

೧೨೪-೧
ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ
ನಿತ್ಯ ಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |
ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿ ಹಯ
ವಕ್ತ್ರ ಶ್ರೀರಾಮನಿಗೆ ಪ್ರಿಯತರ ಮಹಂತ ಪ
ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರು
ಗೋದಾವರಿಯಿಂದ ರಾಯಚೂರು ಪೋಗಿ
ಆ ದೇಶ ಅಧಿಪತಿ ಪೀತಾಸಿಂಗನಿಗೆ
ಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ ೧
ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹು
ಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆ
ಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿ
ಬೀಗ ಹಾಕಿತ್ತು ಸ್ವಾಮಿಗಳು ಹೋದಾಗ ೨
ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರು
ಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗ
ಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲು
ಶ್ರೀ ಸ್ವಾಮಿಗಳ ಅರಸ ಪೂಜಿಸಿದನು ೩
ತರುವಾಯ ಶ್ರೀರಂಗಪಟ್ಟಣಕೆ ಬಂದು
ಶ್ರೀರಂಗನಾಥನ್ನ ಸೇವಿಸಲು ಮುದದಿ
ಶ್ರೀರಂಗಪಟ್ಟಣದ ಅರಸನು ಭಕ್ತಿಯಿಂ
ಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ ೪
ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣ
ರಜತ ದಂಡಗಳು ಶ್ವೇತ ಛತ್ರ
ಇಂಥಾವು ಸಂಸ್ಥಾನ ಚಿಹ್ನೆಗಳ ರಾಜನು
ಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ ೫
ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿ
ತೀರ್ಥಾಟನ ಮಾಡಿ ಗದ್ವಾಲು ಸೇರಿ
ಮತ್ತೆ ತೋಂಡ ದೇಶದ ಆರ್ಕಾಟಿಗೆ ಹೋಗಿ
ಆದೇಶ ಮಂತ್ರಿಯಿಂದ ಕೊಂಡರು ಸೇವ ೬
ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರು
ಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿ
ಶಿಷ್ಯೋದ್ಧಾರಕ್ಕೆ ವಿಜಯ ಮಾಡುತ್ತಿರಲು
ಶ್ರೀ ಸತ್ಯವರ್ಯರು ಬಂದರು ಆರಣಿಗೆ ೭
ಆರಣೀರಾಯನು ವೇಂಕಟನು ಸ್ವಾಮಿಗಳ
ಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇ
ವಸ್ತ್ರಾಭರಣ ಹೇಮಾಭೀಷೇಕಾದಿಗಳ
ಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ ೮
ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡು
ಹರಿ ಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತ
ಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿ
ಪುರಿ ಜನರು ಜಯ ಘೋಷ ಮಾಡುತಿರಲು ೯
ಎನ್ನ ಎನ್ನಂಥವರ ಅನಂತ ಅಪರಾಧಗಳ
ಘನ ದಯದಿ ಕ್ಷಮಿಸಿ ಬಹು ಕೃಪದಿ ಪಾಹೀ
ವನರುಹಾಸನಪಿತ ಮಧ್ವಸ್ಥ ಶ್ರೀಪತಿ
‘ಪ್ರಸನ್ನ ಶ್ರೀನಿವಾಸ’ ಪ್ರಿಯ ಸತ್ಯಪ್ರಿಯ ಆರ್ಯ ೧೦ ಪ

೧೨೪-೨
ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ
ನಿತ್ಯ ಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |
ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿ ಹಯ
ವಕ್ತ್ರ ಶ್ರೀರಾಮನಿಗೆ ಪ್ರಿಯತರ ಮಹಂತ ಪ
ಆರಣೀ ಸಜ್ಜನರ ಸೌಭಾಗ್ಯ ಏನೆಂಬೆ
ಸೂರಿವರ ಸತ್ಯವರ್ಯ ಭಾವಿ ಸತ್ಯಪ್ರಿಯರ
ಆರಾಧಿಸಿ ಕಳುಹಿಸಿದ ಸ್ವಲ್ಪ ಕಾಲದಲೆ
ಆರಣಿಗೆ ಬಂದರು ಸತ್ಯವಿಜಯಾರ್ಯ ೧
ಸಂಸ್ಥಾನ ಮೂರ್ತಿಸ್ಥ ಹರೀಪೂಜೆ ವೈಭವವು
ನಿತ್ಯ ಪ್ರವಚನ ಪಾಠ ಕೀರ್ತನೆ ಏನೆಂಬೆ
ಸತ್ಯವಿಜಯರು ಯುಕ್ತ ಕಾಲದಲಿ ದೇಹ
ಅದಾರುಢ್ಯ ಹೊಂದಿದರು ರಾಜಗೆ ಹೇಳಿದರು ೨
ತಮ್ಮ ತರುವಾಯ ಸಂಸ್ಥಾನ ಸರ್ವಾಡಳಿತ
ಶ್ರೀಮನೋಹರ ಹರಿಪ್ರಿಯರು ಸತ್ಯವರ್ಯ
ಸುಮನೋಹರ ಸತ್ಯಪ್ರಿಯ ತೀರ್ಥ ನಾಮದಲಿ
ರಮಾರಮಣನ ಸೇವೆಗೆ ವಹಿಸಬೇಕೆಂದು ೩
ಆದ ಕಾರಣ ಆ ಸ್ವಾಮಿಗಳ ಕರೆತರಿಸಿ
ಭಕ್ತಿ ವಿನಯದಿ ಮಠವ ಒಪ್ಪಿಸಬೇಕೆಂದು
ಹಿತದಿ ಆಜ್ಞಾಪಿಸಿ ಹರಿಪುರಯೈದಿದರು
ಚೈತ್ರ ಕೃಷ್ಣ ಪುಣ್ಯದಿನ ಏಕಾದಶಿ ದ್ವಾದಶಿಲಿ ೪
ಆರಣೀರಾಜನು ಸತ್ಯವರ್ಯ ತೀರ್ಥರಲಿ
ಅರಿಕೆ ಮಾಡಿ ಸ್ವಾಮಿಗಳು ಕೆಲವು ದಿನಮೇಲ್
ಆರಣಿಗೆ ಪೋದರು ಶ್ರೀಮಠದ ಆಡಳಿತ
ಹರಿ ಪ್ರೀತಿ ಸೇವೆಗೆ ಕೊಂಡರು ತಾವು ೫
ಮೊದಲೇವೆ ಶ್ರೀ ಸತ್ಯವರ್ಯ ತೀರ್ಥರ ಮಠ
ಸಂಸ್ಥಾನ ವೈಭವದಿ ಪ್ರಕಾಶಿಸುತ್ತಿತ್ತು
ಸತ್ಯ ವಿಜಯರ ಕೋರಿಕೆಯಂತೆ ಈವಾಗ
ಹೊಂದಿದರು ಸತ್ಯವಿಜಯರ ಸಂಸ್ಥಾನ ೬
ಸತ್ಯಾಭಿನವರ ಪದ್ಧತಿಯಲ್ಲಿ ಶ್ರೀಮಠ
ಸತ್ಯಪೂರ್ಣ ಸತ್ಯವಿಜಯರಿಂದ ವೈಭವದಿ
ಇದ್ದ ಆಮಠ ಪೀಠ ಅಲಂಕರಿಸಿದರೀಗ
ಸತ್ಯವರ್ಯ ವೈರಾಗ್ಯ ನಿಧಿಯು ಶ್ರೀಮಾನ್ ೭
ಬಾದರಾಯಣ ರಾಮ ಯದುಪತಿಯ ಸೇವೆಗೆ
ಪ್ರೀತಿಗೆ ಸ್ವಾಮಿಗಳು ಮಠವನ್ನು ಹೊಂದಿ
ಸತ್ಯವಿಜಯರು ಕೋರಿದಂತೆ ತಮ್ಮಯನಾಮ
ಸತ್ಯಪ್ರಿಯತೀರ್ಥರೆಂದು ಕೊಂಡರು ಮುದದಿ ೮
ಧನ ಸತ್ಯಪ್ರಿಯ ತೀರ್ಥರು
ವಿಜೃಂಭಣೆಯಿಂದ ಚರಿಸಿ ಪುರಜನರ್ಗೂ
ರಾಜನಿಗೂ ಫಲ ಮಂತ್ರಾಕ್ಷತೆಗಳ ಕೊಟ್ಟು
ರಾಜ ಮಾರ್ಯಾದೆ ಕೊಂಡುಹೊರಟರು ಅಲ್ಲಿಂದ ೯
ಆಂಧ್ರದೇಶದ ಕಡಪ ಉತ್ತರ ಕರ್ನಾಟಕ
ಮತ್ತು ದಕ್ಷಿಣ ಕರ್ನಾಟಕ ಶ್ರೀರಂಗ
ಇಂಥ ಸ್ಥಳಗಳಲ್ಲಿ ಸಂಚಾರ ಮಾಡುತ್ತಾ
ಹಿತದಿ ಅನುಗ್ರಹಿಸಿದರು ಭಕ್ತವೃಂದಕ್ಕೆ ೧೦
ಪೀತಾಸಿಂಗ ರಾಘವಜಿ ಮುರಾರಿ ಮೊದಲಾದ
ಕೃತಜ್ಞ ಜನ ಪ್ರಮುಖರ ಭಕ್ತಿ ಯುತವಾದ
ಭೂದಾನ ಗ್ರಾಮದಾನ ಮಾಡಿದ್ದ ಸ್ವೀಕರಿಸಿ
ಶ್ರೀದನಿಗೆ ಅರ್ಪಿಸುತ ಒಲಿದರು ಸಜ್ಜನಕೆ ೧೧
ರಾಯಚೂರು ಹರಿಯಾಚಾರ್ಯರೆಂಬ ವೈಷ್ಣವ
ಕಾಯವಾಙ್ಮನ ಇದ್ದ ಬ್ರಾಹ್ಮಣ ದಂಪತಿಯು
ಪ್ರಿಯ ವತ್ಸರುಗಳೊಡೆ ಸ್ವಾಮಿಗಳ ಕಡೆ ಬಂದು
ವಿನಯದಿ ನಮಿಸಿ ನಿಂತರು ಮಠದಲ್ಲಿ ೧೨
ಹರಿಯಾಚಾರ್ಯರ ಮಕ್ಕಳಲಿ ರಾಮಾರ್ಯ
ಸ್ಫುರದ್ವರ್ಚಸ್ ಯುತ ಬಹುಚೂಟಿಯಾದ ಮಗನು
ಶ್ರೀ ಶ್ರೀಗಳು ಆ ಹುಡುಗಗೆ ಮಠದಲ್ಲಿ
ಶಾಸ್ತ್ರಾಭ್ಯಾಸಾದಿಗಳ ಒದಗಿಸಿದರು ೧೩
ಕಾಲಕ್ರಮದಲ್ಲಿ ವಟುಗೆ ವಿವಾಹ ಮಾಡಿದರು
ಮಕ್ಕಳು ರಾಮಚಾರ್ಯರಿಗೆ ಎರಡು
ಮಾಲೋಲ ಇಚ್ಛೆಯಿಂ ಸ್ವಾಮಿಗಳು ದಕ್ಷಿಣ
ಸ್ಥಳ ಯಾತ್ರೆ ಗೈದರು ಸೇತು ಸಮೀಪ ೧೪
ಮಾನಾಮಧುರೆಯ ವೇಗವತೀ ತೀರವು
ತನ್ನ ಮಠವನ್ನು ಸ್ಥಾಪಿಸಿದರು ಅಲ್ಲಿ
ಘನ ಮಹಾ ಸೂರಿಯು ರಾಮಚಾರ್ಯರನ್ನ
ತನ್ನ ಸಮೀಪದಲ್ಲೇ ನಿಲ್ಲಿಸಿದರು ೧೫
ಬಹು ವರ್ಷ ಸಂನ್ಯಾಸ ರತ್ನರಾಗಿ ಬೆಳಗಿ
ವಹಿಸಿ ಸಂಸ್ಥಾನವ ಏಳು ವರ್ಷ
ಶ್ರೀಹರಿಗೆ ಪ್ರಿಯರಾಮಾಚಾರ್ಯರಿಗೆ ಸಂನ್ಯಾಸ
ವಿಹಿತದಿ ಇತ್ತರು ಶ್ರೀ ಸ್ವಾಮಿಗಳು ೧೬
ಸತ್ಯಪ್ರಿಯ ಗುರುವರ್ಯ ತಮ್ಮ ಪ್ರಿಯ ಶಿಷ್ಯರಿಗೆ
ಸತ್ಯಬೋಧ ತೀರ್ಥವೆಂಬ ಸಂನ್ಯಾಸ ನಾಮವನ್ನಿತ್ತು
ಚೈತ್ರ ಶುದ್ಧ ಹದಿಮೂರನೆ ಪುಣ್ಯ ದಿನದಿ
ಯದುಪತಿಯ ಧ್ಯಾನಿಸುತ ಹರಿಪುರಯೈದಿದರು ೧೭
ಮತ್ತೊಂದು ಅಂಶದಲಿ ಬೃಂದಾವನದಲ್ಲಿ
ನಿಂತಿಹರು ಅಶ್ವಾಸ್ಯಧ್ಯಾನಪರರಾಗಿ
ಹಿತದಿ ಕೊಡುತಿಹರು ವಾಂಛಿತವ ಶರಣರಿಗೆ
ಸದಾನಮೋ ಮಾಂಪಾಹಿ ಗುರುವರ್ಯ ಶರಣು ೧೮
ಎನ್ನ ಎನ್ನಂಥವರ ಅನಂತ ಅಪರಾಧಗಳ
ಘನ ದಯದಿ ಕ್ಷಮಿಸಿ ಬಹು ಕೃಪದಿ ಪಾಹೀ
ವನರುಹಾಸನಪಿತ ಮಧ್ವಸ್ಥ ಶ್ರೀಪತಿ
‘ಪ್ರಸನ್ನ ಶ್ರೀನಿವಾಸ’ ಪ್ರಿಯ ಸತ್ಯಪ್ರಿಯ ಆರ್ಯ ೧೯ ಪ

ಶ್ರೀ ಶ್ರೀನಿವಾಸದೇವರು
೩೩
ಸರ್ವಾಂತರ್ಯಾಮಿ ಸ್ವತಂತ್ರ ಶ್ರೀನಿವಾಸ ಸರ್ವಾಂತರ್ಯಾಮಿ ಸ್ವತಂತ್ರ
ಸರ್ವಾಂತರ್ಯಾಮಿ ಹರಿ ಸುಂದರ ಜ್ಞಾನಾನಂದ
ಇಂದಿರೆಕಾಂತ ಅರಿವಿಂದಸಂಭವನಯ್ಯ ಪ
ಅದ್ಭುತ ಅಚಿಂತ್ಯ ಶಕ್ತ ಅಮ್ಮ ಲಕುಮಿಯ
ಅಮಲ ಪ್ರೇಮದಿ ಇವನ ಆಡಿಗಳಿಗೆರಗುವರ
ಅಘಕೂಟ ತೊಲಗಿಸಿ ಅಪವರ್ಗವೀವ ಸ್ವಾಮಿ
ಚಿಂತಿಸಿ ವಂದಿಪ ಸುಜನರ ಮನದೊಳು
ಚಂದಿರನಂದದಿ ನಿಂದಿವ ಪೊಳೆಯುತ
ಹಿಂದಿನ ಮುಂದಿನ ಕರ್ಮವ ಕಳೆದಿನ
ಕುಂದದಾನಂದವನೀವ ಮುಕುಂದನು ೧
ಜನ್ಮಾದಿ ಮುಖ್ಯ ಕಾರಣ ಜಾನಕೀಶ ಜಲಜಸಂಭವನಯ್ಯ
ಜಿಹ್ವಾದ್ವಯನು ದ್ವಿಜ ಜಲಧರ ಮೊದಲಾದ
ಜನರೊಳು ಇದ್ದು ಕಾಣದೆ ಜಾಣತನದಿ ಚರಿಪನು
ಶೀಘ್ರದಿ ಒಲಿವನು ಸೇವಿಪ ಜನರಿಗೆ
ಸುಗ್ರೀವನ ಸಖ ಲಕ್ಷ್ಮಣನಗ್ರಜ
ಜಾಗೃತ ಸ್ವಪ್ನ ಸುಷುಪ್ತಿ ಪ್ರವರ್ತಕ
ವಿಗ್ರಹ ರೂಪದಿ ನಿಂತಿಹನಿಲ್ಲಿ ೨
೧.ಆಲೋಚನೆಗೂ
ಶಾಸ್ತ್ರದಿಂದಲೆ ಗೋಚರ ಸಾತ್ಯವತಿ
ಶಾಸ್ತ್ರವೆಲ್ಲಕೂ ಅತೀತ
ಸರ್ವಾಶ್ರಯನು ಇವ ಶಂಭೂ ಶಂಕರನುತ
ಸರ್ವತ್ರ ವ್ಯಾಪ್ತ ಅಮಲ ಸರ್ವ ವಿಲಕ್ಷಣ ಹರಿಯು
ಸರಿಪರರಿಲ್ಲವು ಇವಗೆಲ್ಲೆಲ್ಲು ಹರ ವಿಧಿ ಸುರ
ಮುನಿ ಸನ್ನುತ ಶ್ರೀಶನು ವರ ವರ ವೆಂಕಟ
ನಿಂತಿಹನಿಲ್ಲಿ ಸರಸಿಜಭವ ತಾತ
ಪ್ರಸನ್ನ ಶ್ರೀನಿವಾಸ ೩

ಸಾಧನ ದೇಹವಿದು
೬೨-೩
ಸಾಞ್ನ ದೇಹವಿದು
ಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪ
ವಿಹಿತಾವಿಹಿತವು ಈರ್ವಿಧ ಕರ್ಮದಿ
ವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿ
ಅಹಿಪಶಯ್ಯನ ಸನ್ಮಹಿಮೆಗಳರಿತು ವ
ರಾಹನ ದಯದಲಿ ಪರಸುಖ ಪೊಂದಲು ೧
ಬೇಸರ ತೊರೆದು ಸುಶಾಸ್ತ್ರವನೋದಿ
ಸಾಸಿರ ನಾಮನ ಭಾಸುರ ಗುಣ ಕ್ರಿಯರೂಪಗಳ
ಈಶನ ದಯದಿ ಸದ್ಯೋಚಿಸಿ ಹಿಗ್ಗುತ
ವಾಸುದೇವನೆ ಸರ್ವೇಶನೆಂದರಿಯಲು ೨
ವಿಷಯೀಕ್ಷಣಗಳು ಕ್ಷಣಸುಖವೀವುವು
ಶೇಷಗಿರೀಶನೆ ಅಕ್ಷಯಸುಖದನು ಸುಖಮಯನು
ದೋಷದೂರ ಶ್ರೀ ಲಕ್ಷ್ಮಿಯ ರಮಣನೆ
ಪೋಷಕ ಮನೋಗತ ತಿಮಿರಕೆ ಪೂಷನು ೩
ತಾರಕ ಗುರು ಉದಾರ ಸುಮನದಲಿ
ದಾರಿಯ ತೋರಿಸಿ ಉದ್ಧರಿಸಲು ಬಹು ದಯದಿ
ವಿಧಾತೃ ಸಮೀರ ಸುಮೇಧರು ಚಿಂತಿಪ
ವಾರಿಧಿಶಯ್ಯ ಪರೇಶನು ತೋರುವ ೪
ಸಪ್ತ ಸುಸ್ಥಾನದಿ ಮರುತಾದಿಗಳೊಡೆ
ಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನು
ಸುಪ್ತಿ ಜಾಗೃತ ಸ್ವಪ್ನಾದಿ ಕಾಲದಿ ಕಾಯುವ
ಆಪ್ತ ಸುಹೃದನಿವಗಾರು ಈಡಿಲ್ಲವು ೫
ಪಂಚ ಸುನಾಡಿಯೋಳ್ ಪಂಚ ಸುವರ್ಣದಿ
ಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯು
ವಿರಿಂಚ ಸಮೀರ ಸುಮೇಧರು ಬಹು ವಿಧ
ಚಿಂತಿಸಿ ನಮಿಪ ಪ್ರಪಂಚದ ಒಡೆಯನು ೬
ಪದುಮದ ದಳಗಳು ಐದು ಮೂರುಂಟು
ಅದರ ಮೂಲದಿ ಇಹ ಸದಮಲ ಲಕ್ಷ್ಮೀಶ
ಬಾಧಿಪ ಕರ್ಮವ ಸುಡುವ ಸಂಕರುಷಣ
ಸದಮಲ ಪೊರೆಯುವ ಒಳಹೊರಗೆ ೭
ಶ್ರವಣ ಮನನ ಸುಧ್ಯಾನದ ಬಲವು
ಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿ
ಶ್ರೀಶನ ಮಹಿಮೆಗಳರಿತು ಸದೃಷದಿ
೧ಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ ೮
ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದು
ಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯ
ವಿಕಸಿತಾಬ್ಜಜ ತಾತ ಪ್ರಸನ್ನ ಶ್ರೀನಿವಾಸ
ಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ ೯

ಶ್ರೀ ಬುಧ ಸ್ತೋತ್ರ
೯೫
ಸೂರಿ ಸಂಪ್ರಾಪ್ಯ ಶ್ರೀ ನಾರಾಯಣ ಪ್ರಿಯ ಬುಧನೇ
ನಮೋ ನಮೋ ನಮೋ ನಿನಗೆ ಪ
ಸೂರಿಪ್ರಿಯಕರ ವಿದ್ವಾನ್ ನಮೋ ಎನ್ನ ಕುಂದು
ನೀಗಿಸಿ ಪೊರೆ ಮಹಾದ್ಯುತಿಯೇ ಅ.ಪ
ಪ್ರಿಯಂಗುಕಲಿಕಾ ಶಾಮರೂಪಿಯೆ ಚಾರ್ವಾಂಗ –
– ಬುಧನೇ ನಿನಗೆಣೆಯುಂಟೇ
ಸೌಮ್ಯನೆ ಸೌಮ್ಯಗುಣವಂತನೇ ನಮೋ ಶಶಿಸುತ
– ದಯದಿಂ ಪಾಲಯಮಾಂ ೧
ಅಂಬುವು ಚೂರ್ಣಪಿಂಡೀ ಭಾವ ಹೇತುವಾಗಿಹುದು –
– ನೀ ಅಂಬು
ಅಭಿಮಾನಿ ಮಹ ಪಂಡಿತನಾದುದರಿಂದ ಬೇಡುವೆ –
– ನಿನ್ನ ವಿನಯದಲಿ ೨
ಅಂಬುವತ್ ಜ್ಞಾನಯುಕ್ ಸ್ನೇಹಾನುರಾಗ ಎಂಬ –
– ಭಕ್ತಿ ಅಂಬುಜನಾಭ ಬಿಂಬನಲಿ
ಅನುಕಂಪಯಾ ನೀ ಒದಗಿಸೊ ಎನಗೆ ಅಂಭ್ರಣಿಪತಿ
– ಶ್ರೀವ್ಯಾಸಗೆ ಪ್ರಿಯನೆ ೩
ಮೂರ್ಲೋಕದಿ ಖ್ಯಾತ ವಿಧುಕುಲ ಪ್ರವರ ನೀ –
– ಬುದ್ಧಿ ಗಾಂಭೀರ್ಯದಿ ಶ್ರೇಷ್ಠನೆಂದು
ಮಾಲೋಲ ಆತ್ಮಜ ನಿನ್ನನು ಬುಧನೆಂದು –
– ನಾಮಕರಣವ ಮಾಡಿದನು ೪
ಹೇಮಗರ್ಭನಪಿತ ಪ್ರಸನ್ನ ಶ್ರೀನಿವಾಸ ಪೂರ್ಣ –
– ಹೊಳೆಯುತಿಹ ನಿನ್ನಲ್ಲಿ
ನಾಮಾತ್ಮಿಕ ಉಷ ಶನಿ ಕರ್ಮಪ ಮೊದಲಾದವರಿಗೆ –
– ವರ ಬುಧನೇ ನಮೋ ನಮೋ ೫

ದೇವರನಾಮ – ಶ್ರೀ ಸೇತುಮಾಧವ ಸ್ತೋತ್ರ
೬೨-೧
ಸೇತುಮಾಧವ ವಿಭುವೇ | ನಿನ್ನಯ ದಿವ್ಯ
ವೃತತಿಜ ಪದಯುಗಳ |
ಸತತ ನಂಬಿದೆ ಎನ್ನ ಹಿತದಿ ಪಾಲಿಸಿ ಸದಾ
ಕೃತ ಕೃತ್ಯ ಧನ್ಯನ ಮಾಡಿ ಸಲಹೋ ಸ್ವಾಮಿ ಪ
ಪುಟ್ಟಿದಾರಭ್ಯ ನಿನ್ನ | ನಾಮವ ಒಂದು |
ತೃಟಿಯು ಭಜಿಸಲಿಲ್ಲವೋ |
ವಿಠ್ಠಲರಾಯ ಪರಮೇಷ್ಟಿಯ ಪಿತ ಎನ್ನ
ಕಷ್ಟಗಳಳಿದು ಸಲಹೋ ಸರ್ವೋತ್ರ‍ಕಷ್ಟ ||
ಕೃಷ್ಣ ಕೃಷ್ಣಾವರದ ಅಜಮಿಳ
ಭ್ರಷ್ಟತನವ ಎಣಿಸದೇ ಬಹು
ನಿಷ್ಟ ವಿಪ್ರ ಸುಧಾಮಗೊಲಿದ
ತ್ರಿಧಾಮ ನಮೋ ಮಧ್ವೇಷ್ಟ ಪಾಹಿ ೧
ಸೇತು ಸರ್ವಾಶ್ರಯನೇ | ನೀನೊಬ್ಬನೇ |
ಮುಕ್ತಾ ಮುಕ್ತಾಶ್ರಯನು |
ತ್ರಾತನೀನೇವೆ ಯೆಂದರಿತವರ ಭೀತಿಹರ
ಪಾತ ಸರ್ವೋತ್ತಮ ಜಗದೇಕ ಈಶ
ದ್ಯುಧರಾ ಪಾತಾಳ ಸರ್ವಾಧಾರನಾಗಿಹ
ಪ್ರಭುವೇ ನಿನ್ನಯ ಅತಿ ಅಗಾಧಸುಮಹಿಮೆ ಅನಂತವು |
ಮೋದ ಮಯ ದಶ ಶತ ಸಹಸ್ರಾನಂತರೂಪನೇ || ೨
ಹೀನಮಂದನು ನಾನೆಂದು | ದೂರನೀ ||
ಎನ್ನ ಮಾಡದೇ ಸಲಹೋ |
ಎನ್ನ ಹಿರಿಯರು ನಿನ್ನಚ್ಛನ್ನ ಭಕ್ತರೋ
ಘನದಯಾಂಬುಧೇ ಗಂಗಾ
ಜನಕ ಪಾವನ ನಾಮಾ |
ಮನೋವಾಕ್ಕಾಯದಿ ನಿಂತು ಎನ್ನೊಳು
ನೀನೆ ಮಾಡಿ ಮಾಡಿಸುವುದೆಲ್ಲ
ನಿನಗೆ ಸುಪ್ರೀತಿಯಾಗಲೋ ಮುಕ್ –
ಕಣ್ಣ ವಿಧಿಪ ಶ್ರೀ ಪ್ರಸನ್ನ ಶ್ರೀನಿವಾಸ ಶ್ರೀಶ ||೩

ಬೆಂಗಳೂರು ಮೈಸೂರು ರಾಜ್ಯರ¸
ಶ್ರೀ ರಾಮಕಪಿಲ
೩೬
ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನ
ತಾಮರ ಸಪದಯುಗಳಕಾ ನಮಿಪೆ ಕಾಯೊ ಪ
ಹೇಮಗರ್ಭನ ತಾತ ಭಾಮೆ ಭೈಷ್ಮಿಯ ರಮಣ
ವಾಮ ಚಿತ್ಸುಖಕಾಯ ಅಮರಗುಣಪೂರ್ಣ ಅಪ
ಶ್ರೀಕರನೆ ಸುಖಮಯನೆ ಲೋಕಪಾಲಕ ಸ್ವಾಮಿ
ಸ್ವೀಕರಿಸೊ ಈ ಸೇವೆ ಭಕುತಜನಪ್ರಿಯ
ನಾಕ ಭುವಿ ಪಾತಾಳ ಲೋಕಂಗಳಲಿ ವ್ಯಾಪ್ತ
ಏಕಕಾರಣ ಸಾಕ್ಷಿಸುಖ ಸಾರಭೋಕ್ತಾ ೧
ಭೂರಮಣ ಸಾರಾತ್ಮ ನೀ ರಮಿಪೆ ನಿನ್ನೊಳಗೆ
ಮಾರ ಕಮಲಜತಾತ ಶರಣು ಶರಣಾದೆ
ಹಾರ ಅರಿಶಂಖಾಬ್ಜ ಭಾರಿಗದೆ ಚಾಪಧರ
ಘೋರತರ ಭಯಹಾರಿ ನಾರಸುರಸೇವ್ಯ ೨
ನೋಡಬೇಕೆಲೊ ನಿನ್ನ ಮೂಢಮನೋತಿಮಿರಾರ್ಕ
ಬಾಢವೆನ್ನುತ ಬೇಗ ನೋಡೆನ್ನ ದಯದಿ
ಪಾಡಿ ಪೊಗಳುವೆ ನಿನ್ನ ಈಡು ಇಲ್ಲದ ವಿಶ್ವ
ಮೂಡಲ ಸುನಗವಾಸ ಪ್ರಸನ್ನ ಶ್ರೀನಿವಾಸ ೩

ಶ್ರೀ ಶಿವ
೭೪೧
ಸೋಮಶೇಖರ ಶಿವನೆ ಹೈಮವತಿವರ ನಿನ್ನ
ತಾಮರಸ ಪದಯುಗಳಕಾ ನಮಿಪೆ ಕಾಯೋ ಪ
ಕಾಮಹರ ಸ್ಕಂಧಪಿತ ಅಮರೇಂದ್ರ ಮುಖವಿನುತ
ರಾಮ ನರಹುದಾಸ ಅಮರತಟನೀಧರನೆ ಅಪ
ರುದ್ರನೇ ನಮೋ ಎನ್ನುಪದ್ರವಗಳನು ತರಿದು
೧ಭದ್ರವನು ಇಟ್ಟೆನ್ನ ಉದ್ಧರಿಸೊ ದಯದಿ
ರುದ್ರ ಭವಬಂಧಹರ ದುರ್ಗಾರಮಣನಾದ
ಪದ್ಮಭವತಾತನಿಗೆ ಪ್ರಿಯತರನೆ ತ್ರಿಪುರಾರಿ ೧
ಈಶ ಶಿವ ಮಹದೇವ ಈಶಾನ ನಮೋ ನಿನಗೆ
ವಾಸವಾದ್ಯಮರ ಜಗದ್ಗುರುವೆ ಶರಣೆಂಬೆ
ಈಶ ಕೇಶವ ದೋಷದೂರ ಸುಖಮಯ ಶ್ರೀಶ
ದಾಶಾರ್ಹನಲಿ ಎನ್ನ ಮನವ ಚಲಿಸದೆ ನಿಲಿಸೊ ೨
ತೀರ್ಥಪಾದನು ಸರ್ವ ಚೇತನರ ದೇಹಸ್ಥ
ಕೃತ್ತಿವಾಸನು ಶ್ರೀ ಪ್ರಸನ್ನ ಶ್ರೀನಿವಾಸ
ಕೃತಿಜಯಾಶ್ರದ್ಧೇಶ ಸಹ ಜ್ವಲಿಪ ನಿನ್ನೊಳಗೆ
ಕೃತ್ತಿವಾಸನೆ ನಮೋ ಶುಭದ ಪಾರ್ವತೀಶ ೩

ಸತ್ಯಧರ್ಮತೀರ್ಥರ ಸ್ತುತಿ
೧೨೯
ಸ್ಮರಿಸಿ ಬದುಕಿರೊ ಸತ್ಯ ಧರ್ಮತೀರ್ಥರ
ಚರಣಕೆರಗಿರೊ ಹರಿದಾಸವರ್ಯರ ಪ
ಸತ್ಯವರ ಕರ ಸರಸಿಜಾತರ
ಸತ್ಯಾರಮಣನ ಒಲಿಸಿಕೊಂಡ ಧೀರರ ೧
ಸತ್ಯ ಸಂಕಲ್ಪರ ಧರೆಗೆ ಇತ್ತವರ
ಭೃತ್ಯರಘಗಳ ತರಿದು ಕಾಯ್ವರ ೨
ದೇವಕೇಯನ ಕಥಾ ಭಾಗವತಾರ್ಥಸು
ವ್ಯಾಖ್ಯ ಮಾಡಿದ ಪ್ರಖ್ಯಾತ ಮಹಿಮರ ೩
ನೆನೆದಮಾತ್ರದಿ ಎನ್ತಪ್ಪು ಎಣಿಸದೆ
ಕ್ಷಣದಿ ತಾಪದಿ ಪರಿಹರಿಸಿ ಪೊರೆವರ ೪
ಸಲಿಲ ಕಾಂಚನ ಪುರದಲ್ಲಿರುವರ |
ಒಲಿದು ಕಾಯ್ವರ ಕರೆದ ಮಾತ್ರದಿ ಬಂದು ೫
ಸತ್ಯಬೋಧರ ಸತ್ಯಸಂಧರ
ಸತ್ಯವರರಸುಕುಲ ಸುಜಾತರ ೬
ಮಧ್ವಹೃತ್ಪದ್ಮ ದಾಸವಿಧಿಪಿತ |
ಶ್ರೀದ ಪ್ರಸನ್ನ ಶ್ರೀನಿವಾಸ ಪ್ರೀಯರ ೭

ಶ್ರೀ ನಾಮಕಲ್ ಹನುಮಂತ
೬೮
ಹನುಮಂತನ ಪಾದ ವನಜಕೆ ಶರಣು ಪ
ಹನುಮಂತನ ಪಾದ ವನಜಕ್ಕೆ ಎರಗಲು
ಅನಿಷ್ಟಗಳಳಿದು ಇಷ್ಟಾರ್ಥಗಳೀವ ಅ ಪ
ಇನಸುತಗೊಲಿದನು ಹನುಮ ಆದುದರಿಂದ
ಇನಕುಲ ತಿಲಕನು ತಾನೂ ಪಾಲಿಸಿದ ೧
ಅನಿಮಿಷರಲಿ ಇವ ಪ್ರಥಮನಾಗಿಹ – ಭಾವಿ
ವನರುಹಾಸನ ಜಗತ್ ಪ್ರಾಣ ಜೀವೋತ್ತಮ ೨
ನಾಮಗಿರೀಶ ಶ್ರೀ ಪ್ರಸನ್ನ ಶ್ರೀನಿವಾಸನ್ನ
ನಮಗೆಲ್ಲ ಒಲಿಸಲು ನಾಮಶಿಲದಿ ನಿಂತ ೩

ಶ್ರೀ ಪುರಂದರ ದಾಸಾರ್ಯ ಸ್ತೋತ್ರ
೧೩೩
ಹರಿದಾಸ ಶ್ರೇಷ್ಠ ಶ್ರೀ ಪುರಂದರ ದಾಸಾರ್ಯರ
ಸರಸೀರುಹಾಂಘ್ರಿಯಲಿ ಶರಣಾದೆ ಸತತ ||
ವೈರಾಗ್ಯ ಯುಕ್ಜ್ಞಾನ ಭಕ್ತ್ಯಾದಿ ಸಂಪತ್ತು
ಕರುಣದಲಿ ಒದಗಿಸಿ ಶ್ರೀಕೃಷ್ಣ ನ್ನೊಲಿಸುವರು ||
ಈ ಪುಣ್ಯತಮ ಭರತಖಂಡದಲಿ ಪ್ರಖ್ಯಾತ ||
ಕೃಪಾಂಬುಧಿ ಜಗನ್ನಾಥವಿಠ್ಠಲ ರುಕ್ಮಿಣೀಶ ||
ರೂಪಗುಣ ಭೇಧವಿಲ್ಲದ ಪೂರ್ಣನಿರ್ದೋಷ
ಶ್ರೀಪ್ರಸನ್ನ ವೇಂಕಟನೇ ನಮೋ ಪದ್ಮಾವತೀಶ ೧
ಪುರುಷರೂಪತ್ರಯ ಕ್ಷರಾ ಕ್ಷರೋತ್ತಮ ಭೂಮ |
ಅರದೂರ ಗುಣನಿಧಿ ನಾರಾಯಣಗೆ ಶರಣು |
ಸುಪ್ರೇಮಾತಿಶಯದಲಿ ಸದಾ ಪತಿಯ ಸೇವಿಸುವ
ನಿರಾಮಯಳು ಸುಖಪೂರ್ಣಲಕ್ಷ್ಮಿಗೆ ಶರಣು ೨
ದ್ವಿಷೋಡಶ ಲಕ್ಷಣದಿ ರಾಜಿಪವಿಧಿ
ದಶಪ್ರಮತಿಗು ವಾಣಿ ಭಾರತಿಯರಿಗು ನಮಿಪೆ
ಶ್ರೀಶನ ಪೂರ್ಣಾನುಗ್ರಹ ಪೂರ್ಣಪಾತ್ರರು
ಉತ್ರ‍ಕಷ್ಟರಜು ಸ್ತೋಮ ಚರಣಕಾನಮಿಪೆ ೩
ಉತ್ತಮ ಶ್ಲೋಕನ್ನ ಜಪಿಸಿ ಪೂಜಿಪ ಶಿವ
ಹೊತ್ತು ಸೇವಿಪಗರುಡ ಪರ್ಯಂಕ ಶೇಷ
ಭಕ್ತಾಗ್ರಣಿ ಈ ಸರ್ವರಿಗು ನಮಿಸುವೆನು
ಮಾಧವನ ಷಣ್ಮುಹಿಷಿಯರಿಗು ನಮಿಪೆ ೪
ವಿಮಲ ಚರಿತರು ಉಮಾಸೌಪರ್ಣಿ ವಾರುಣಿಗು |
ಅಮರೇಂದ್ರ ಮನ್ಮಥಮುನಿಗು ನಮನಮಾಡಿ
ನಮಿಸುವೆ ಅಹುಪ್ರಾಣದೇವನಿಗೆ ಗುರು ಶಚಿ
ಕಾಮಸತಿ ಸುತದತ್ತ ಸ್ವಾಯಂಭುವಗೆ ೫

ಇಂದಿರೆ ವಂದೆ ಆನಂದೀ ತುಳಸೀದೇವಿ
ಶ್ರೀ ತುಳಸಿ
೮೪
ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ಪ
ಎಂದೆಂದಿಗೂ ನಾ ನಿನ್ನಧೀನವೆ ಮಾತೆ ಸಿಂಧುಶಯನ
ಪ್ರಿಯೆ ವರದೆ ಆನಂದದೆ ಅ.ಪ
ಆದಿಕಾರಣ ವಿಷ್ಣು ಪ್ರಿಯಳೆ ಶ್ಯಾಮಲೆ ಕೋಮಲೆ
ವಿಧಿಶರ್ವವಂದಿತೆ ವಿದ್ಯಾಧರಾದಿ ಅರ್ಚಿತೆ
ಆದರದಲಿ ನಿನ್ನ ಪಾದಪಂಕಜಗಳ
ಪ್ರತಿದಿನ ಸ್ಮರಿಪೆನೆ ವೃಂದಾವನಸ್ಥಿತೆ ತುಳಸಿ ಸುರೇಶ್ವರಿ೧
ಈರಾರು ಅಕ್ಷರ ಮಂತ್ರ ಸುಪ್ರತಿಪಾದ್ಯೆ
ನಾರದನುತೆ ನಾರಾಯಣ ಮನಃಪ್ರಿಯಳೆ
ಘೋರ ಪಾತಕ ಬಹು ಪಾಪಹಾರಿಣಿ ನಿನ್ನ
ಚಾರುಪಾದಗಳಿಗೆ ನಮಿಪೆ ಪೊರೆಯೆ
ಎನ್ನ ವರದೆ ತುಳಸೀದೇವಿ ೨
ನಿನ್ನ ಸ್ಮರಣೆ ಮಾಡೆ ಸರ್ವತ್ರ ವಿಜಯವಹುದೆ
ನಿನ್ನ ಸಂದರ್ಶನದಿ ಸರ್ವಪಾಪವು ಪೋಪುವೆ
ಎನ್ನ ಪಾತಕ ತಾಪಾದಿ ೧ ಗಳಳಿಯೆ
ಘನ್ನ ಪ್ರಸನ್ನ ಶ್ರೀನಿವಾಸನ ನಿಜಸತಿ ವಿರಜೆ ತುಳಸೀಮಾತೆ ೩

ಹಾಡಿನ ಹೆಸರು :ಇಂದಿರೆ ವಂದೆ ಆನಂದೀ ತುಳಸೀದೇವಿ
ಹಾಡಿದವರ ಹೆಸರು :ಕೇದಾರ್ ಸಿ. ಎಸ್.
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಗೋಪೀವಲ್ಲಭ ಗೋಪಾಲ
ಶ್ರೀ ಗೋಪೀವಲ್ಲಭ ಗೋಪಾಲವಿಠಲ
೧೪೪-೧
ಗೋಪೀವಲ್ಲಭ ಗೋಪಾಲ ವಿಠಲದೇವ ಕಾಪಾಡೊ ಇವಳ ಭಕ್ತ್ಯಾದಿಗಳನಿತ್ತು ಪ.
ಶ್ರೀಪ ಕೃಷ್ಣ ನಿನ್ನ ಭಕ್ತಸುಜ್ಞಾನಿಗಳ ಸತ್ಪಂಥದಲಿ ಇಟ್ಟು ದಯದಿ ಪಾಲಿಪುದು ಅ.ಪ.
ಭೀಷ್ಮಕನ ಸುತೆ ಸತ್ಯಭಾಮಾಸಮೇತ ನೀ ವಾಮಚಿನ್ಮಯ ಹರಿಣ್ಮಣಿನಿಭ ಸುಕಾಯ ಅಮಲ ಸುಸ್ವರ ವೇಣು ಅಭಯ ವರಹಸ್ತದಲಿ ವಾಮದಷ್ಟದಿ ಶಂಖ ತಮ ತರಿವ ಚಕ್ರ ೧
ಇಂದಿರಾಪತಿ ಕಂಬುಗ್ರೀವದಲಿ ಕೌಸ್ತುಭವು ಇಂದುಧರೆ ಆಶ್ರಿತನಾಗಿರುವ ವೈಜಯಂತಿ ಸುಂದರ ಸು¥ಟ್ಟೆ ಪೀತಾಂಬರವನುಟ್ಟಿಹ ಸೌಂದರ್ಯಸಾರನೆ ಜಗದೇಕವಂದ್ಯ ೨
ವನಜನಾಭನೆ ಅಜನೆ ವನಜಾಪತಿಯೆ ನಮೋ ವನಜಸಂಭವಪಿತ ಪ್ರಸನ್ನ ಶ್ರೀನಿವಾಸ ವನಜಲೋಚನ ಮಧ್ವ ಸಾಧು ಸುಜನರ ಹೃದಯ ವನಜಕೆ ದಿನಪ ನಮ್ಮೆಲ್ಲರನು ಪೊರೆಯೊ ೩

ಹಾಡಿನ ಹೆಸರು :ಗೋಪೀವಲ್ಲಭ ಗೋಪಾಲ
ಹಾಡಿದವರ ಹೆಸರು :ಮೇದಿನಿ ಉದಯ್, ಜ್ಯೋತಿ ಕುಲಕರ್ಣಿ
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಿನ್ನಧೀನವು ಎಲ್ಲ ಘನ್ನ ಮಹಿಮ
ಅಧೀನ ಸ್ತೋತ್ರ
೫೬
ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ಪ
ಬೊಮ್ಮನ ಪಿತ ನೀನು ಅಮ್ಮ ಲಕುಮಿಪತೆ
ಎಮ್ಮನು ಪೊರೆ ಶ್ರೀನಿವಾಸ ೧
ಬೃಹದಣುರೂಪನೆ ಮಹದಣು ಸರ್ವದಿ
ಬಹಿರಂತರದಿ ಇಹ ಮಹಾವಿಷ್ಣು ಪರಮಾತ್ಮ ೨
ಸಿರಿಯು ನಿನ್ನೊಡಗೂಡಿ ಚರಿಪಳು ಎಲ್ಲೆಲ್ಲೂ
ಸರಿ ಯಾರು ನಿನಗಿಲ್ಲ ಪರರುಂಟೆ ಸಿರಿಸೇವ್ಯ ೩
ನಿಜವರ್ಣ ಪ್ರತಿಪಾದ್ಯ ಅಜ ನರಹರೇ ನಮೋ
ಸೃಜಾಸೈಜ ಅಂಗಗಳೊಳ್ ಜ್ವಲಿಸುವೆ ಶಕ್ತೀಶ ೪
ಪೋಷ ಕಲುಷಹ ಶೇಷಗಿರೀಶನೆ
ದೋಷವೇನಿಲ್ಲದ ಹೃಷೀಕೇಶ ಕ್ಷೇತ್ರಜ್ಞ ೫
ಏಕಮಾದ್ವಿತೀಯ ಸರ್ವೋತ್ತಮ ಭೂಮನ್
ಸಾಕಲ್ಯ ನಿನ್ನ ತಿಳಿಯಲು ಅಶಕ್ಯ ೬
ಪ್ರಾರ್ಥಿಸಲರಿಯೆ ನಾ ದಯದಿ ನೀ ಸಲಹೆನ್ನ
ವೃತತಿಜಾಸನ ತಾತ ಪ್ರಸನ್ನ ಶ್ರೀನಿವಾಸ ೭

ಹಾಡಿನ ಹೆಸರು :ನಿನ್ನಧೀನವು ಎಲ್ಲ ಘನ್ನ ಮಹಿಮ
ಹಾಡಿದವರ ಹೆಸರು :ಬಾಲಸುಬ್ರಹ್ಮಣ್ಯ ಶರ್ಮ
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸೋಮರವಿ ಭಾಸಕನೆ ರಾಮ
ಶ್ರೀ ರಾಮಕಪಿಲ
೩೬
ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನ
ತಾಮರ ಸಪದಯುಗಳಕಾ ನಮಿಪೆ ಕಾಯೊ ಪ
ಹೇಮಗರ್ಭನ ತಾತ ಭಾಮೆ ಭೈಷ್ಮಿಯ ರಮಣ
ವಾಮ ಚಿತ್ಸುಖಕಾಯ ಅಮರಗುಣಪೂರ್ಣ ಅಪ
ಶ್ರೀಕರನೆ ಸುಖಮಯನೆ ಲೋಕಪಾಲಕ ಸ್ವಾಮಿ
ಸ್ವೀಕರಿಸೊ ಈ ಸೇವೆ ಭಕುತಜನಪ್ರಿಯ
ನಾಕ ಭುವಿ ಪಾತಾಳ ಲೋಕಂಗಳಲಿ ವ್ಯಾಪ್ತ
ಏಕಕಾರಣ ಸಾಕ್ಷಿಸುಖ ಸಾರಭೋಕ್ತಾ ೧
ಭೂರಮಣ ಸಾರಾತ್ಮ ನೀ ರಮಿಪೆ ನಿನ್ನೊಳಗೆ
ಮಾರ ಕಮಲಜತಾತ ಶರಣು ಶರಣಾದೆ
ಹಾರ ಅರಿಶಂಖಾಬ್ಜ ಭಾರಿಗದೆ ಚಾಪಧರ
ಘೋರತರ ಭಯಹಾರಿ ನಾರಸುರಸೇವ್ಯ ೨
ನೋಡಬೇಕೆಲೊ ನಿನ್ನ ಮೂಢಮನೋತಿಮಿರಾರ್ಕ
ಬಾಢವೆನ್ನುತ ಬೇಗ ನೋಡೆನ್ನ ದಯದಿ
ಪಾಡಿ ಪೊಗಳುವೆ ನಿನ್ನ ಈಡು ಇಲ್ಲದ ವಿಶ್ವ
ಮೂಡಲ ಸುನಗವಾಸ ಪ್ರಸನ್ನ ಶ್ರೀನಿವಾಸ ೩

ಹಾಡಿನ ಹೆಸರು :ಸೋಮರವಿ ಭಾಸಕನೆ ರಾಮ
ಸಂಗೀತ ನಿರ್ದೇಶಕರು :ಶ್ರೀಲತಾ ಆರ್. ಎನ್.
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ