Categories
ರಚನೆಗಳು

ಪ್ರಸನ್ನ ಶ್ರೀನಿವಾಸದಾಸರು

ಪ್ರಳಯ ಕಾಲದಲ್ಲಿ ಈ ಭೂಸಹಿತವಾಗಿ
ಶ್ರೀ ಪ್ರಸನ್ನ ಶ್ರೀನಿವಾಸದಾಸರ ಶ್ರೀಹರಿ ಪ್ರಾದುರ್ಭಾವಗಳು
ಪ್ರಸನ್ನ ಶ್ರೀ ಮತ್ಸ್ಯಾವತಾರ

ಲೀಲಾವತಾರನೇ ಪ್ರಳಯಾಬ್ದಿ ಸಂಚರನೇ
ಮಾಲೋಲ ಸುಖಚಿತ್ ತನು ಮತ್ಸ್ಯರೂಪ
ಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇ
ಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪ
ಪ್ರಳಯದಲಿ ಭೂರಾದಿ ಲೋಕಂಗಳು
ಮುಳಗಿರಲು ಹುಯಗ್ರೀವನಾಮ ದಾನವನು
ಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನ
ಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ ೧
ಗೋ ವಿಪ್ರ ಸುರ ಸಾಧು ಜನರ ವೇದಂಗಳ –
ಕಾವ ಸರ್ವೇಶ್ವರನೇ ಪುರುಷಾರ್ಥದಾತ
ಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆ
ಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ ೨
ಹಂಸ ಐರಾವತ ತಿತ್ತಿರಾ ಶುಕಗಳು
ಈ ಪಕ್ಷಿಗಳಲ್ಲಿ ತರತಮ ಉಂಟು
ಸುಸುಖ ಐಶ್ವರ್ಯೋನ್ನಾಹ ಅದರಂತೇವೇ
ಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ ೩
ಗುರುರ್ಗುರ್ರೋ ಗುರು ಮನು ಶುಕ ಮಧ್ವಾಂತಸ್ಥ
ಪರಮಾತ್ಮ ಹರಿ ವಿಷ್ಣೋ ಉದ್ದಾಮ ಸಾಮ
ಅರದೂರ ಅನಂತೋರು ನಿಜಶಕ್ತಿ ಪರಿಪೂರ್ಣ
ಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ ೪
ಸರ್ವೋತ್ತಮನು ನಾರಾಯಣನೇ ಎಂದರಿತು
ದ್ರವಿಡ ದೇಶಾಧಿಪನು ಸತ್ಯವ್ರತರಾಯ
ಸುವಿವೇಕದಿ ನಿನ್ನ ಕುರಿತು ತಪವಚರಿಸಿದನು
ಭಾವ ಶುದ್ಧನು ಸಲೀಲಾಶನ ದೃಢವ್ರತನು ೫
ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತ
ವೈವಸ್ವತ ಮನುವೇ ಇಂದಿನ ಮನುವು
ಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್೦
ಅವನಿಗೆ ನಮೋ ಎಂಬೆ ನಿನ್ನವನೆಂದು ೬
ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿ
ನಿಜ ಭಕ್ತಿಯಿಂದ ಜಲತರ್ಪಣವ ಚರಿಸೆ
ಅಂಜಲಿ ಉದಕದಲಿ ಮುದ್ದು ಮರಿ ಮೀನೊಂದು
ಸರಿಜ್ಜಲ ಸಹಿತದಿ ಬಂದದ್ದು ಕಂಡ ೭
ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆ
ಅರುಹಿತು ತನ್ನ ವೃತ್ತಾಂತವ ಆ ಮೀನು
ಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದು
ನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ ೮
ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನ
ಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡು
ಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದ
ಮರುದಿನ ಉದಯದಲಿ ಕಂಡ ಆಶ್ಚರ್ಯವ ೯
ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇ
ಆ ಮತ್ಸ್ಯ ಮರಿ ಬೆಳೆದಿದ್ದು ಆಶ್ಚರ್ಯ ಕಂಡ
ಕಮಂಡಲು ಸಾಲದೇ ವಿಸ್ತಾರವಾದ ಸ್ಥಳ
ನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ ೧೦
ಉದಕ ತುಂಬಿದ ಕುಂಟೆ ಸರೋವರವನ್ನು
ಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯ
ಅತಿಶಯ ಲೀಲಾ ವಿನೋದವ ಕಂಡ ರಾಜ
ಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ ೧೧
ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದು
ಮಹಾರಾಜನಿಗೆ ಆ ಮೀನು ಹೇಳಿ ತಾನು
ಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನು
ಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆ
ಮೀನು ಮತ್ತೂ ದೊಡ್ಡದಾಯಿತು ೧೨
ಶತಯೋಜನ ಮಹಾವೀರ್ಯ ಜಲಚರಗಳು
ಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿ
ಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್
ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ ೧೩
ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇ
ದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿ
ಕಾವ ಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇ
ಸರ್ವದಾ ನಮೋ ಜಗಜ್ಜ್ಮಧಿ ಕರ್ತ ೧೪
ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿ
ಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನ
ಪೂರ್ವಕ ನಿನ್ನಲ್ಲಿ ಸುಸ್ನೇಹರತನಾದ
ವಿವೇಕಿ ಪ್ರಪನ್ನರ ಸಲಹಿ ಗತಿ ಈವಿ ೧೫
ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲು
ಮುದದಿಂದ ಇನ್ನೂನು ನಿನ್ನ
ವೃತತಿಜೇಕ್ಷಣ ಜಗತ್ಪತಿಯೇ ನೀನು ಆ
ಮತಿವಂತನಿಗೆ ಪೇಳಿದಿ ಅವತಾರಕಾರ್ಯ ೧೬
ಏಳುದಿನವಾಗಲು ಭೂರಾದಿ ಲೋಕಗಳು
ಪ್ರಳಯಜಲದಲ್ಲಿ ಮುಳುಗಿ ಹೋಗುವವು
ಒಳ್ಳೇ ಓಷಧಿ ಸರ್ವವೀರ್ಯತರ ಬೀಜ –
ಗಳ ಸಪ್ತಋಷಿ ಸಹ ಕಾದಿರು ಎಂದಿ ೧೭
ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದು
ಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದು
ಅದರಲಿ ಅರೋಹಿಸಬೇಕು ಬೀಜಗಳ
ಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ ೧೮
ಎಲ್ಲೆಲ್ಲೂ ಪ್ರಳಯಜಲ ತುಂಬಿ ತುಳಕಾಡುವುದು
ಲೋಲ್ಯಾಡುವುದು ನೌಕ ಗಾಳಿರಭಸದಲಿ
ಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನ
ಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ ೧೯
ನಾವೆಯನು ಬಂಧಿಸಲು ರಜ್ಜು ಸರ್ಪವು ಎಂದು
ಸುವ್ರತ ರಾಜನಿಗೆ ಉಪಾಯ ಪೇಳಿದ
ಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮ
ವಿಶ್ವ ವಿಷ್ಣೋ ಸೃಷ್ಟಾ ಪಾತಾ ರಮೇಶ ೨೦
ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆ
ಹರಿ ನೀನು ಬೋಧಿಸಿ ಅಂತರ್ಧಾನವು ಆಗೇ
ಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶ
ಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ ೨೧
ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವು
ಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿ
ಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರು
ಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ ೨೨
ಚಂಡಮಾರುತ ಪ್ರಚಂಡ ಮೇಘವು ಕರಿ
ಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆ
ಕಂಡು ನಾವೆಯ ರಾಜಕೊಂಡು ಬೀಜಗಳ ಕರ
ಕೊಂಡು ಋಷಿಗಳ ಏರಿಕೊಂಡನು ಬೇಗ ೨೩
ಕೇಶವನೇ ನಿನ್ನ ಧ್ಯಾನಿಸಲು ಆಗ
ಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲು
ಈಶ ನಿನ್ನಯ ಶೃಂಗಕ್ಕೆ ನೌಕವ ಕಟ್ಟಿ
ಸಂಸ್ತುತಿಸಿದನು ಮಧುಸೂಧನನೇ ನಿನ್ನ ೨೪
ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯ
ಶುಭತಯ ವಿಜ್ಞಾನ ಬೋಧಕವು ಅದರ
ಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿ
ಸೌಭಾಗ್ಯಪ್ರದ ಶ್ರೀಶ ಮಾಂಪಾಹಿ ೨೫
ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂ
ಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದ
ಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದ
ಅನಾದಿ ಅವಿದ್ಯಾ ಪೀಡಿತ ಜನ ಸಂರಕ್ಷನ್ನ ೨೬
ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನ
ಮೇರು ಇತರಾ ದೇವಹೂತಿ – ಸುತ ಶರಣು
ಘೋರ ಸಂಸಾರ ಬಂಧ ಮೋಚಕ ಹರಿಯೇ
ವರ ಸುಖಪ್ರದ ಸಂರಕ್ಷಕ ಮಾಂಪಾಹಿ ೨೭
ಶಕ್ರಾದಿ ಜಗತ್ತಿಗೆ ಗುರು ಗಂಗಾಧರನು
ಗಂಗಾಧರನಿಗೆ ಗುರು ಪ್ರಾಣ ಪದ್ಮಜರು
ಪಂಕಜಾಸನ ಪ್ರಾಣರಿಗೆ ಗುರು ರಮೇಶನು ಹರಿಯೇ
ಆ ಗುರು ಮೂಲಗುರು ಪರಮಗುರ್ರೋಗುರುವು ೨೮
ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರು
ಎಂದು ತಿಳಿದು ಬದ್ಧ ಜೀವರ ಮೋಕ್ಷ ಪುರುಷಾರ್ಥ
ಅವಿದ್ಯಾಸೆ್ಞನ ಕಳೆದು ಪುಟವಿಟ್ಟ
ಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ ೨೯
ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇ
ಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯು
ನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನು
ಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ ೩೦
ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನು
ಶರ್ವ ಅಜ ಶಕ್ರಾದಿಗಳ ನಿಯಾಮಕನು
ಸರ್ವಾದಾನಂದಮಯ ಗುಣನಿಧಿ ಆತ್ಮನು
ಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು ೩೧
ದೇವದೇವೋತ್ತಮನೇ ಆದಿಪೂರುಷ ಶ್ರೀಶ
ವಿಶ್ವೇಶ್ವರ ಮತ್ಸ್ಯರೂಪ ಭಗವಂತ
ನೀ ವಿಹಾರವು ಮಾಡಿ ಪ್ರಳಯಾರ್ಣವದಲಿ
ಕವಿವರ್ಯ ರಾಜನಲಿ ಸುಪ್ರೀತನಾದಿ ೩೨
ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದು
ಯುಕ್ತ ಕಾಲದಿ ಈಗ ಪ್ರಳಯವು ತೀರೆ
ಸಾಧುವರ್ಯನು ಜ್ಞಾನವಿಜ್ಞಾನ ಕೋವಿದನು
ಸತ್ಯವ್ರತನಿಗೆ ಮನು ಪದವಿಯನು ಇತ್ತಿ ೩೩
ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆ
ಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯು
ಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶ
ಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ ೩೪
– ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ –

ಪ್ರಸನ್ನ ಶ್ರೀ ಕೂರ್ಮ

ಪ್ರಥಮ ಅಧ್ಯಾಯ
ಶ್ರೀ ಕೂರ್ಮ ಪ್ರಾದುರ್ಭಾವ
ಲೀಲಾವತಾರನೇ ಸರ್ವ ಲೋಕಾಧಾರ
ಮಾಲೋಲ ಸುಖಚಿತ್ ತನು ಕೂರ್ಮರೂಪ
ಪಾಲಾಬ್ಧಿಜಾಪತಿ ಅನಘ ಅಜಿತ ಧನ್ವಂತರಿ
ಲೀಲಾ ಮೋಹಿನಿ ಅನಘ ಶರಣು ಮಾಂಪಾಹಿ ಪ
ವೇದಾದಿ ಸಚ್ಛಾಶ್ರ(ಪ್ರ)ಮೇಯ ವೇದವತೀಶ
ಪದುಮಜಾಂಡವ ಪಡೆದ ಜಗದೇಕಭರ್ತಾ
ಅದ್ವಿತೀಯನು ಸ್ವಾಮಿ ಸಮರಧಿಕರಿಲ್ಲದವ
ವೇಧ ಮುಕ್ಕಣ್ಣಾದಿ ಸುರಸೇವ್ಯ ಪಾಹಿ ೧
ಸತ್ಯ ಜ್ಞಾನಾನಂತ ಭೂಮಾದಿ ಗುಣನಿಧಿಯೇ
ಸತ್ಯಸೃಷ್ಟಿ ಮಾಳ್ಪಿ ಸತ್ಯನಾಮಾ
ಪ್ರತ್ಯಕ್ಷ ಪ್ರಮಾಣ ಸಿದ್ಧವು ಈ ಜಗತ್ತು
ತತ್ರ‍ಸಷ್ಟಿ ಪಾಲನಾದಿಗಳೆಲ್ಲ ಸತ್ಯ ೨
ಸೃಷ್ಟಿ ಪ್ರವಾಹವು ಅನಾದಿಯೂ ನಿತ್ಯವೂ
ಘಟಾದಿ ಕಾರ್ಯಗಳ ಉಪಾದಾನ ಕಾರಣ
ಮೂಲ ಜಡಪ್ರಕೃತಿಯೂ ಅನಾದಿಯೂ ನಿತ್ಯವೂ
ಸೃಷ್ಟ್ಯಾದಿಕರ್ತಾ ನಿನ್ನಾಧೀನವು ಎಲ್ಲಾ ೩
ಕಾರ್ಯಕಾರಣಾತ್ಮಕ ಜಗತ್ತು ಸರ್ವಕ್ಕೂ
ತೋಯಜಾಕ್ಷನೇ ನೀನು ನಿಮಿತ್ತ ಕಾರಣನು
ನಿಯಾಮಕನು ನೀನೇವೇ ಚಿದಚಿತ್ ಅಖಿಳಕ್ಕೂ
ಅನ್ಯರಿಗೆ ಸ್ವಾತಂತ್ರ್ಯ ಸಾಮಥ್ರ್ಯವಿಲ್ಲ ೪
ವಿಧಿ ಶಿವಾದಿ ಸರ್ವ ಸುರಾಸುರರುಗಳಿಗೆ
ಸತ್ತಾಪ್ರತೀತಿ ಪ್ರವೃತ್ತಿಪ್ರದ ಹರಿಯೇ
ಭೂತಭವ್ಯ ಭವತ್ಪ್ರಭುವು ವಿಷ್ಣು ನೀನೇವೇ
ಚೇತನಾ ಚೇತನಾಧಾರ ಸರ್ವತ್ರ ೫
ದೂರ್ವಾಸರ ಶಾಪ ನಿಮಿತ್ತದಿ ಸ್ವರ್ಗದ
ಐಶ್ವರ್ಯವು ಕ್ಷಿಣವು ಆಗಿ ಬಹುವಿಧದಿ
ದೇವಶತೃಗಳ ಬಲ ಉನ್ನಾಹವಾಗಲು
ದೇವರಾಜನು ಬ್ರಹ್ಮನಲ್ಲಿ ಪೋದ ೬
ವಾಸವ ವರುಣಾದಿ ಸುರರ ಮೊರೆ ಕೇಳಿ
ಬಿಸಜಸಂಭವ ಶಿವ ಶಕ್ರಾದಿಗಳ ಕೂಡಿ
ಶ್ರೀಶನೇ ರಕ್ಷಕನು ಎಂದು ನಿನ್ನಲ್ಲಿ ಬಂದು
ಸಂಸ್ತುತಿಸಿದನು ಪರಮ ಪೂರುಷ ನಿನ್ನನ್ನ ೭
ಅವ್ಯಯನೇ ಸತ್ಯನೇ ಅನಂತನೇ ಅನಘನೇ
ಶ್ರೀವರನೇ ಪೂರ್ಣೈಶ್ವರ್ಯ ಮಹಾಪುರುಷ
ದೇವವರೇಣ್ಯ ನಿನ್ನಲ್ಲಿ ಸ್ತುತಿ ಬ್ರಹ್ಮ
ಸುವಿನಯದಿ ಮಾಡಿದ ವೇದಾರ್ಥಸಾರ ೮
ಸಹಸ್ರಾರ್ಕೋದಯ ದ್ಯುತಿ ಸುಂದರರೂಪ
ಮಹಾರ್ಹ ಭಗವಂತ ಹರಿ ಈಶ್ವರನೇ ನೀನು
ಬ್ರಹ್ಮಾದಿಗಳ ಸ್ತುತಿಗೆ ಪ್ರಸನ್ನನು ಆಗಿ
ಮಹಾನುಭಾವ ನೀ ಒಲಿದಿ ಕೃಪೆಯಿಂದ ೯
ಪದುಮನಾಭನೇ ನಿರ್ವಾಣ ಸುಖಾರ್ಣವನೇ
ಪದುಮಭವ ಸನ್ನಮಿಸಿ ಪೇಳಿದ್ದ ಕೇಳಿ
ಸಿಂಧುವ ಮಥನ ಮಾಡಲಿಕೆ ಬೇಕು ಎಂದಿ
ಅದರ ಬಗ್ಗೆ ಉಪಾಯವ ಅರುಹಿದಿ ವಿಭುವೇ ೧೦
ಕ್ಷೀರಾಬ್ಧಿಯಲಿ ವೀರು ತೃಣ ಲತೌಷಧಿ ಇಟ್ಟು
ಗಿರಿಶ್ರೇಷ್ಠ ಮಂದರವ ಕಡೆಗೋಲು ಮಾಡಿ
ವರಸರ್ಪ ವಾಸುಕಿಯ ಹಗ್ಗ ಮಾಡಿ ಮಥಿಸಿ
ಅಮೃತೋತ್ಪಾದನ ಯತ್ನಿಪುದು ಎಂದಿ ೧೧
ದೈತ್ಯ ದಾನವರೆಲ್ಲ ಶತೃಗಳು ಆದರೂ
ಸಂಧಿಯ ಅವರೊಡೆ ಮಾಡಿ ಕೂಡಿ
ಮಂದರವ ಸಿಂಧುವಲಿ ತಂದಿಟ್ಟು ಮಥಿಸುವುದು
ಸುಧೆಯ ಉತ್ಪಾದನಕೆ ಉಪಾಯ ಇದು ಎಂದಿ ೧೨
ದೈತ್ಯರ ಸಹಕಾರ ಬಗೆ ಯುಕ್ತಿಗಳ ಪೇಳಿ
ಭೀತಿ ಪಡಬೇಡ ವಿಷ ಉಕ್ಕಿ ಬರುವಾಗ
ಅದಿತಜರಿಗೇವೇ ಫಲ ಲಭಿಸುವುದು ಎಂದು
ದಿತಿಜರಿಗೆ ಕ್ಲೇಶ ಭವಿಸುವುದು ಎಂದಿ ೧೩
ಪುರುಷೋತ್ತಮ ಜಗತಃಪತಿ ಅಜಿತನಾಮಾ
ಸುರರಿಗೆ ಬೋಧಿಸಿದ ರೀತಿ ಅನುಸರಿಸಿ
ಶಕ್ರಾದಿಗಳು ವೈರೋಚನಾದಿಗಳೊಡೆ
ತ್ವರಿತ ಯತ್ನಿಸಿದರು ಕಡಲ ಮಥನಕ್ಕೆ ೧೪
ದೂರದಲ್ಲಿ ಇದ್ದ ಆ ಅತಿಭಾರ ಗಿರಿಯನ್ನ
ಸುರರು ದಾನವರೆತ್ತಿ ಸಮುದ್ರ ತಟಕೆ
ತರಲು ಬಹು ಯತ್ನಿಸಿದರು ವ್ಯರ್ಥದಿ
ಗಿರಿಯ ಭೂ ಮೇಲೆತ್ತೆ ಅಸಮರ್ಥರು ೧೫
ಮೇರುಗಿರಿ ಬದಿ ಇದ್ದ ಮಂದರಾಚಲವು
ರುದ್ರ ರುದ್ರವರ ಬಲಯುತವು ಎತ್ತಲು ಅಶಕ್ಯ
ಸುರದಾನವರು ಬೆರಗಾಗೇ ಒಂದೇ ಕರದಿಂ
ಗಿರಿಯ ನೀ ಎತ್ತಿ ಗರುಡನ ಮೇಲೆ ಇಟ್ಟಿ ೧೬
ಗರುಡನಿಂದ ತಮ್ಮ ಮೇಲೆ ಇರಿಸೆ ಪರಿಕ್ಷಾರ್ಥ
ಭಾರ ತಾಳದೇ ಸುರಾಸುರರು ಹತರಾಗೇ
ಕಾರುಣ್ಯ ನೋಟದಿ ಬದುಕಿಸಿದಿ ಮೃತರನ್ನ
ತೀವ್ರ ಗಾಯಗಳನ್ನ ಸೌಖ್ಯ ಮಾಡಿದಿಯೋ ೧೭
ಲೀಲೆಯಿಂದಲಿ ಪುನಃ ಒಂದೇ ಹಸ್ತದಿ ಗಿರಿಯ
ಮೇಲೆತ್ತಿ ಗರುಡನ ಹೆಗಲಲಿಟ್ಟು ಕುಳಿತು
ಪಾಲಸಾಗರದಲ್ಲಿ ಸ್ಥಾಪಿಸಿ ಮಥನಕ್ಕೆ
ವ್ಯಾಳನ ಹಗ್ಗದಂದದಿ ಸುತ್ತಿಸಿದಿಯೋ ೧೮
ಪುಚ್ಛಭಾಗವು ಅಮಂಗಳವು ಬೇಡವೆಂದು
ಅಸುರರ ವಾದಾ ಮುಖಭಾಗ ಹಿಡಿಯೇ
ವಾಸುಕಿಯ ಪುಚ್ಛಾಂಗ ದೇವತೆಗಳು ಹಿಡಿದು
ಶ್ರೀಶ ನೀ ಸಹಕರಿಸೆ ಮಥನವ ಮಾಡಿದರು ೧೯
ಪರಮ ಯತ್ನದಿ ಅಮೃತಾರ್ಥ ಪಯೋನಿಧಿಯ
ಗಿರಿಯಿಂದ ಮಂಥನ ಸುರಾಸುರರು ಮಾಡೆ
ಪರಮಗುರುತರ ಅದ್ರಿ ಆಧಾರವಿಲ್ಲದೆ
ಸರಿದು ಮುಳುಗಿ ಬೇಗ ಕೆಳಗಡೆ ಹೋಯಿತು ೨೦
ಶೈಲವು ಮುಳುಗಲು ಸುಧಾಕಾಂಕ್ಷಿಗಳ ಮನ
ವ್ಯಾಕುಲದಿ ಮುಖಕಾಂತಿ ಮ್ಲೌನವು ಆಯಿತು
ಎಲ್ಲಾ ಶ್ರಮವು ವ್ಯರ್ಥ ಎಂದು ಬೆರಗಾಗಿರೆ
ಬಲು ಕೃಪೆಯಲಿ ನೀನು ಒದಗಿದಿ ಆಗ ೨೧
ಅದ್ಭುತ್ ಮಹತ್ ಕಚ್ಛಪ ರೂಪದಲಿ ನೀ
ಅಬ್ಧಿಯಲಿ ಬೇಗನೇ ಬಂದು ಮೇಲೆ
ಎಬ್ಬಿಸಿದಿ ಆ ಮಂದರಾಚಲಗಿರಿಯ
ಸುಬಲ ಪೂರುಷ ನಮೋ ಚಿನ್ಮೋದಗಾತ್ರ ೨೨
ಚನ್ಮೋದಮಯ ಮಹಾ ಕೂರ್ಮ ರೂಪನೇ ನಿನ್ನ
ಅಮಿತ ಸುಬಲ ಲಕ್ಷ ಯೋಜನ ವಿಸ್ತಾರ
ಸುಮಹಾ ದ್ವೀಪದಂದಿರುವ ಪೃಷ್ಠದ ಮೇಲೆ
ಆ ಮಹಾದ್ರಿಯ ಹೊತ್ತಿ ಪುನರ್ ಮಥಿಸಲೊದಗಿದಿ ೨೩
ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧೀಶ
ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ
ವನಜಭವಪಿತ ಶ್ರೀಪ್ರಸನ್ನ ಶ್ರೀನಿವಾಸ
ಧನ್ವಂತರೀ ಶರಣು ಅಜಿತ ಸ್ತ್ರೀ ಕೂರ್ಮ ೨೪
-ಇತಿ ಪ್ರಥಮಾಧ್ಯಾಯ ಸಂಪೂರ್ಣಂ-
ದ್ವಿತೀಯ ಅಧ್ಯಾಯ
ನೀಲಕಂಠ ವೃತ್ತಾಂತ
ಲೀಲಾವತಾರನೇ ಸರ್ವಲೋಕಾಧಾರ
ಮಾಲೋಲ ಸುಖಚಿತ್ ಕೂರ್ಮರೂಪ
ಪಾಲಾಬ್ಧಿಜಾಪತಿ ಅಜಿತ ಧನ್ವಂತರೀ
ಲೀಲಾ ಮೋಹಿನಿ ಅನಘ ಶರಣು ಮಾಂಪಾಹಿ ಪ
ಸಿರಿವರ ಹರಿ ಕೂರ್ಮನ ಪೃಷ್ಠೋಪರಿನಿಂತ
ಗಿರಿಯಿಂದ ಅಸುರರು ಸುರರು ಪುನರ್ಮಥಿಸೆ
ಗಿರ್ಗಿರಿ ಗಿರಿ ಗಿರಿ ಎಂದು ಭ್ರಮಿಸಿತು ಗಿರಿಯು
ಪರಿಮಳ ಪೂ ಸುರಿಸಿದರು ಬ್ರಹ್ಮಾದಿಗಳು ೧
ವಾಸುಕಿ ತಾಳದೇ ಬುಸು ಬುಸು ಎಂದು ಮೇಲ್
ಶ್ವಾಸದಿ ವಿಷಜ್ವಾಲೆ ಹೊರಗೆ ಬಿಡಲು
ಅಸುರ ಬಲಿ ಇಲ್ವಾದಿಗಳು ಬಿಸಿ ಸಹಿಸದೇ
ಘಾಸಿ ಹೊಂದಿದರು ದಾವಾಗ್ನಿ ಪೀಡಿತರ ಪÉೂೀಲ್ ೨
ದಿತಿಜರು ಅದಿತಿಜರು ಎಷ್ಟೇ ಯತ್ನಿಸಿದರೂ
ಸುಧಾ ಇನ್ನೂ ಪುಟ್ಟದೇ ಇರುವುದ ಕಂಡು
ದಂತ ಶೂಕವ ಆಗ ಸ್ವಯಂ ನೀನೇ ಹಿಡಿದು
ಮಥನ ಮಾಡಿದಿ ಸ್ವಾಮಿ ಕಾರುಣ್ಯದಿಂದ ೩
ಪೀತಾಂಬರಿ ಸುಖ ಚಿನ್ಮಾತ್ರ ಚಾರ್ವಾಂಗ
ಸದಾ ನಮೋ ಶರಣಾದೆ ಲೋಹಿತಾಕ್ಷ
ದಿತಿಜಾ ಅದಿತಿಜಾರೊಡೆ ನೀನು ಸಹಮಥಿಸಲು
ಲತಾ ಓಷಧಿ ಕಲುಕಿ ಉಕ್ಕಿತು ಸಿಂಧು ೪
ಹಾಹಾ ಭಯಂಕರವು ಇದೇನು ಲೋಕಗಳ
ದಹಿಸುವಂದದಿ ಫೇಣ ಉಕ್ಕಿ ಬರುತಿದೆಯು
ಮಹಾ ವೀರ್ಯತರ ಹಾಲಾಹಲವೆಂಬ ವಿಷ ಇದು
ಮಹೀಭರ್ತಾ ಮಹಾದೇವ ಮಹಾದ್ರಿದೃತ್ ಪಾಹಿ ೫
ಅಸಮ ಸ್ವಾತಂತ್ರ್ಯ ನಿಜಶಕ್ತಿ ಪರಿಪೂರ್ಣ
ವಿಶ್ವರಕ್ಷಕ ನೀ ವಿಷಭಯ ನಿವಾರಿಸೆ
ಸ್ವಸಮರ್ಥನಾದರೂ ಭೃತ್ಯರ ಕೀರ್ತಿಯ
ಪ್ರಸರಿಸೆ ಒದಗಿದಿ ಮಹಾದೇವ ಶಾಸ್ತ ೬
ಮಹತ್ ಎಂಬ ಬ್ರಹ್ಮನ ಸ್ವಾಮಿ ಆದುದರಿಂದ
ಮಹಾದೇವ ಎಂಬುವ ನಾಮ ನಿನ್ನದೇವೇ
ಮಹಾದೇವ ಶಿವ ಈಶ ರುದ್ರಾದಿ ಶಬ್ದಗಳು
ಮಹಾಮುಖ್ಯ ವೃತ್ತಿಯಲಿ ನಿನಗೇವೇ ವಾಚಕವು ೭
ಭಸ್ಮಧರ ದೇವನಿಗೆ ಮಹಾದೇವ ಎಂಬುವ
ನಾಮ ಔಪಚಾರಿಕದಲ್ಲೇವೇ ರೂಢ
ಬ್ರಹ್ಮನಾಮನು ನೀನೇ ಬ್ರಹ್ಮಾಂತರ್ಯಾಮಿಯು
ಬ್ರಹ್ಮನೊಳು ಇದ್ದು ನೀ ಭುವನಂಗಳ ಪಡೆವಿ ೮
ರುದ್ರ ನಾಮನು ನೀನೇ ರುದ್ರಾಂತರ್ಯಾಮಿಯು
ರುದ್ರನೊಳು ಇದ್ದು ನೀ ಸಂಹಾರವ ಮಾಡುವಿ
ತತ್‍ತತ್ರಸ್ಥಿತೋ ವಿಷ್ಣುಃ ತತ್‍ಚ್ಛಕ್ತಿ ಪ್ರಬೋಧÀಯನ್
ರುದ್ರನಿಂ ವಿಷಪಾನ ನಿನ್ನ ನಿಯಮನವೇ ೯
ಶಕ್ರಾದಿ ಸರ್ವರಿಗೂ ಗುರು ಆಶ್ರಯನು ಶಂಕರನು
ಶಂಕರನಿಗೆ ಆಶ್ರಯನು ಗುರುಮುಖ್ಯವಾಯು
ಮುಖ್ಯವಾಯುಗಾಶ್ರಯ ಶ್ರೀಕಾಂತ ನೀನು
ಶ್ರೀಕಾಂತ ನೀನೇವೇ ಸರ್ವಾಶ್ರಯ ಅನೀಶ ೧೦
ಯಾವ ಮಹಾದೇವನೊಲಿಯದೇ ವಾಯು ಒಲಿಯ
ಆ ವಾಯು ಒಲಿಯದೇ ಹರಿ ತಾನೂ ಒಲಿಯ
ಆ ವಾಯು ಹರಿಒಲಿಯದಿರೆ ಬೇರೆ ಗತಿಇಲ್ಲ
ಆ ವಾಯು ಹರಿಧಾಮ ಮಹಾದೇವ ಸ್ತುತ್ಯ ೧೧
ಸರ್ವಾಂತರ್ಯಾಮಿ ಯಾವನಲಿ ಪ್ರಸನ್ನನು ಆಗಿ
ಯಾವನ ಮೂಲಕ ಶಕ್ರಾದಿಗಳ ಕಷ್ಟ
ತೀವ್ರದಿ ಪೋಗುವುದೋ ಆ ಮಹಾದೇವನ ಸ್ತುತಿಸಿದರು ಸುರರು
ಶಿವಾಂತರ್ಯಾಮಿ ಶ್ರೀಹರಿ ಮಹಿಮೆಗಳ ಕೂಡಿ ೧೨
ಕರತಲೀಕೃತ್ಯ ಹಾಲಾಹಲ ವಿಷವ
ಶಕ್ರಾದಿ ಜನರಲ್ಲಿ ಕೃಪೆ ಮಾಡಿ ಉಂಡು
ಕರುಣಾಳು ಮಹಾದೇವ ಭೂತದಯಾಪರನು ಈ
ಹರಿಭಕ್ತಾಗ್ರಣಿ ಶಿವ ಉಮೇಶನಿಗೆ ಶರಣು ೧೩
ಹರಿ ಬ್ರಹ್ಮ ಪಾರ್ವತಿ ಪ್ರಜೇಶ್ವರರು
ಹರನ ಈ ಮಹತ್ಸೇವೆ ಬಹು ಶ್ಲಾಘಿಸಿದರು
ಕರದಿಂದ ಕೆಳಗೆ ಪ್ರಸ್ಕನ್ನ ಗರವಾದ್ದು
ಸರೀಸೃಪ ವೃಶ್ಚಿಕಾದಿಗಳೊಳು ಸೇರಿತು ೧೪
ಗರವು ಭೂಷಣವಾಯಿತು ವೈರಾಗ್ಯಾಧಿಪ ಶಿವಗೆ
ಸುಪ್ರಸಿದ್ಧನು ಆದ ನೀಲಕಂಠನೆಂದು
ಧೀರ ಕರುಣಾಂಬುನಿಧಿ ನಂಜುಂಡೇಶ್ವರನು ಈ
ಗಿರಿಜೇಶನಿಗೆ ನಾ ನಮಿಪೆ ಶರಣೆಂದು ೧೫
ಈ ಕೃಪಾಕರ ನೀಲಕಂಠ ಕರತಲೀಕೃತ್ಯ
ಆ ಕಾಲಕೂಟವಿಷ ಉಂಡ ಮಹತ್ಕಾರ್ಯ
ಸಂಕೀರ್ತಿ ಪೇಳಿರುವುದು ಶ್ರೀ ಭಾಗವತದಿ
ಬಾಕಿ ಬಹು ಮಹೋಲ್ಪಣ ವಿಷ ವಿಷಯ ಶೃತಿ ವೇದ್ಯ ೧೬
ಉರಗಭೂಷಣ ವಿಪ ಉರಗಪರುಗಳಿಗಿಂತ
ನೂರುಗುಣ ಎಂಬುದಕೆ ಅತ್ಯಧಿಕ ಬಲಿಯು
ವರಮುಖ್ಯ ಪ್ರಾಣ ಜಗತ್ ಪ್ರಾಣಗೆ ಸಮರಿಲ್ಲ
ನೀರಜಜಾಂಡದಿ ಎಲ್ಲೂ ಶರಣೆಂಬೆ ಇವಗೆ ೧೭
ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರ
ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ
ವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಧನ್ವಂತರಿ ಶರಣು ಅಜಿತ ಸ್ತ್ರೀ ಕೂರ್ಮ&ಟಿಬ್ಸ್

ಶ್ರೀ ಬೃಹಸ್ಪತಿ ಸ್ತೋತ್ರ
೮೭
ವಂದಿಪೆ ದೇವ ಗುರೋ ನಿನ್ನ ಪಾದಾಂಬುಜದ್ವಯಕೆ
ಇಂದುಶೇಖರ ಅರವಿಂದಾಸನುತ ಇಂದಿರೇಶಗೆ –
– ಪ್ರಿಯ ಹಿತದಿಪಾಲಿಸೊ ಎನ್ನ ಪ
ಬ್ರಹ್ಮಮಾನಸ ಪುತ್ರ ಅಂಗೀರ ಶ್ರದ್ಧಾದಂಪತಿಗೆ
ಬೃಹಸ್ಪತಿ ನೀ ಮಗನಾಗಿ ಜನಿಸಿ ಖ್ಯಾತನಾದಿಯೋ ತಾರೇಶ
ಬ್ರಹ್ಮಜ್ಞಾನದಲಿ ಬುದ್ಧಿ ಕೌಶಲ್ಯದಿ ಬ್ರಹ್ಮಿಷ್ಠನೆ ನಿನಗೆಣೆಯುಂಟೆ ೧
ದೇವತಾ ವೃಂದಕ್ಕೆ ತಪೋಧನ ಋಷಿಗಳ ಸಮೂಹಕ್ಕೆ
ಸರ್ವಲೋಕತ್ರಯ ಸಜ್ಜನರಿಗೆ ಗುರು ಶರಣೆಂಬೆ ಕಾಂಚನಸನ್ನಿಭನೇ
ದೇವಮಂತ್ರಿಯೇ ವಿಶಾಲಾಕ್ಷ ಸದಾ ನೀ ಲೋಕಹಿತೇ –
– ರತ ಪಾಲಯಮಾಂ ೨
ಪದುಮಾಸನ ಪಿತನು ಪ್ರಸನ್ನ ಶ್ರೀನಿವಾಸ ಪದುಮೇಗೆ
ಮದುವೆ ಪತ್ರಿಕಾ ಮಹೋತ್ಸವ ಸೇವೆ ಮುದದಿ ಗೈದಿಯೋ ನೀ ಎನ್ನ
ಗೃಹದಿ ಮದುವೆ ಪೂಜೆ ಶ್ರೀಹರಿ ಪ್ರೀತಿಗೆ ನಿರಂತರ ಮಾಡಿಸೋ ೩

ಶ್ರೀ ನರಸಿಂಹ ಸ್ತೋತ್ರ
೧೧
ವಂದಿಸು ನರಹರಿಯ ಮನವೆ ವಂದಿಸು ನರಹರಿಯ
ವಂದ್ಯವಂದ್ಯನು ಬಹು ಸುಂದರ ಸುಖಮಯ
ಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪ
ಸಿಂಧು ಸಂಚರ ಬಹು ಸುಂದರ ಗಿರಿಧರ
ತಂದನು ವಸುಧೆಯ ಕಂದನ ಕಾಯ್ದ ಪು
ರಂದರವರದ ಮುನೀಂದ್ರ ಕುಮಾರ ಕ
ಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿ
ನಿಂದ ದಿಗಂಬರ ಕುಂಭಿಣಿ ಸುರನುತ
ಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದು
ಅಂಧ ಮೂಢರ ತನ್ನ ಅಂದ ಮೋಹದಿ ಕಟ್ಟಿ
ದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತ
ಇಂದಿರಾಕಾಂತನನಂತ ಸುಗುಣಗಳ
ಚಿಂತಿಸಿ ಯೋಗ್ಯದಿ ೧ಕಂದದ ಪ್ರೇಮದಿ
ವಂದಿಸು ನರಹರಿಯ ೧
ವೇದಾಂತರ್ಗತ ಬಾದರಾಯಣ ಹರಿ
ಪಾದಾರಾಧಕ ಮೋದ ಸುತೀರ್ಥರ
ಪಾದಾವಲಂಬಕ ಸಾಧು ಸುಮೇಧರ
ಹೃದಯಾಕಾಶದಿ ಪದುಮದ ಮೂಲದಿ
ಸದಮಲಾತ್ಮನಾದಿತ್ಯನುಪೋಲು ೨
ವಿಧವಿಧಭಾಸದಿ ಪದೆ ಪದೆ ನೋಡುತ
ವಿಧಿಯ ತಾತನ ಬಹು ಮೋದ ಸುಗುಣಗಳ
ಮುದದಲಿ ಚಿಂತಿಪ ಕೋವಿದ ಹಿರಿಯರ
ಪಾದ ಸುಪಾಂಶುವ ನಿಯಮದಿ ಪೊಂದಿ ನೀ
ಪದುಮೇಶನ ನಿನ್ನ ಹೃದಯದಿ ಚಿಂತಿಸಿ
ವಂದಿಸು ನರಹರಿಯ ೩
ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆ
ಅರ್ಜಿತ ದ್ವೇಷದಿ ೩ ಮೂರ್ಜಗ ಶತ್ರು
ಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆ
ಧೂರ್ಜಟಸೇವ್ಯ ಜನಾರ್ಧನ ನರಹರಿ
ಗರ್ಜಿಪ ವದನನು ಸಜ್ಜನಪಾಲಕ
ಅಜಸುರರೆಲ್ಲರು ತೇಜೋಮಯ ಅತಿ
ಜ್ವಲಿಸುವ ನಖದಿಂ ದುರ್ಜನ ರಾಜನ
ಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತು
ಸೃಜ್ಯಾಸೃಜ್ಯರ ಪ್ರಾಜ್ಞನ ಮರೆಯದೆ
ವಂದಿಸು ನರಹರಿಯ ೩
ಸೃಷ್ಟ್ಯಾಧೀಶನದೃಷ್ಟನಾಗಿರುತಿಹ
ಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನು
ಶಿಷ್ಟರ ಇಷ್ಟ ಸುದೃಷ್ಟಿಯ ಬೀರುತ
ಶಿಷ್ಟರ ಬಹು ವಿಧ ಕಷ್ಟಗಳಳಿದು ೪
ಅಭೀಷ್ಟಗಳೀವನು ದುಷ್ಟರ ಶಿಕ್ಷಿಪ
ಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲ
ಶ್ರೇಷ್ಠೋತ್ತಮ ಪರಮೇಷ್ಠಿ ಜನಕನಿವ
ಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನು
ದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನು
ತಿಷ್ಟನು ನಿನ್ನೊಳುತ್ರ‍ಕಷ್ಟನೆಂದರಿತು
ವಂದಿಸು ನರಹರಿಯ ೪
ಸರಿಪರರಿಲ್ಲದ ಸಿರಿಯರಸನ ಚಾರು
ಚರಣಾರಾಧನ ಪರಸುಖವೀವುದು
ಸಿರಿದೊರೆ ಸುಹೃದನು ಸಿರಿಸಹ ಮೆರೆಯುತ
ಅರಿತ ಸುಜನರನು ಪೊರೆವನು ದಯದಿ
ಮೊರೆಯನು ಲಾಲಿಸಿ ಪೊರೆದನು ಗರ್ಭವ
ಮರೆತು ನಾರಾ ಎಂದ ನರಸುರಗೊಲಿದನು
ಪೊರೆದನು ದಯದಿ ನರಾಧಮ ಎನ್ನನು
ಕರಿವರ ದ್ರೌಪದಿವರದ ವಿಖ್ಯಾತನು
ಸರಸಿಜಭವತಾತ ಪ್ರಸನ್ನ ಶ್ರೀನಿವಾಸ
ಪೊರೆವನು ನೆನೆವರ ಸಿರಿಭೂದೊರೆಯೆಂದು
ವಂದಿಸು ನರಹರಿಯ ೫

ಶ್ರೀ ದುಂದುಭಿ ಸಂವತ್ಸರ ಸ್ತೋತ್ರ
೧೫೪
ವಂದೇ ದುಂದುಭಿ ಸಂವತ್ಸರ ನಿಯಾಮಕಗೆ ಇಂದಿರಾಪತಿ ಪೂರ್ಣ ಆನಂದ ಚಿನ್ಮಯಗೆ ಚಂದಕರದಲಿ ವಂಶ ಇಷ್ಟಿ ಕರುಣಾದೃಷ್ಟಿ ನಂದನಂದನ ವಸುದೇವ ದೇವಕೀ ಸುತಗೆ ಪ.
ರಾಜಾ ಶುಕ್ರನು ಬುಧ ಮಂತ್ರಿ ಮೊದಲಾದವರೊಳು ರಾಜಸುತ ಏಕಸ್ಪರಾತ್ ಅಂತರ್ಯಾಮಿ ಈ ಜಗಜ್ಜನರ ಸಾಧು ಸಾಧನಕ್ಕಾಗಿ ನಿವ್ರ್ಯಾಜ ಕರುಣದಿ ಮಳೆ ಬೆಳೆ ಸೌಖ್ಯಗಳ ಈವ ೧
ಅಲ್ಲಲ್ಲಿ ಅಗ್ನಿ ಭಯ ಚೋರ ದುಷ್ಟರ ಭಯ ಸುಳ್ಳುವಾದಿಗಳ ಚಟುವಟಿಕೆ ಆಗಾಗ ಕಳೆದು ಸಜ್ಜನರನ್ನು ಕಾಪಾಡಿ ಲೋಕ ಕ್ಷೇಮ ಮಾಲೋಲ ಮಾಳ್ಪನು ಪಾರ್ಥ ಸಖ ಪಾಂಡವೇಯ ಪಾಲ ೨
ಪುತ್ರ ಸಂತಾನ ಬೇಕೆಂಬ ಸಾಧು ಭಕ್ತರಿಗೆ ವೈರಾಡಿ ವರದನು ವಿಪ್ರನಿಗೆ ಒಲಿದವನು ಚಂದ್ರ ಶೇಖರ ನುತನು ವನಜ ಭವ ತಾತನು ಶ್ರೀ ಪ್ರಸನ್ನ ಶ್ರೀನಿವಾಸನ ದಯದಿ ಈವ ಸಂತಾನ ಸಂಪತ್ತು ೩
– ಶ್ರೀ ಕೃಷ್ಣಾರ್ಪಣಮಸ್ತು –

ಶ್ರೀವಿಠಲದೇವರು
೩೯
ವಂದೇ ವಿಠಲರಾಯ ಇಂದಿರೆ ಬಂದು
ನಿಂದು ಪಾಲಿಸೋ ಎನ್ನ ಇಂದ್ರನ ಇಂದ್ರ ಪ
ಪೂರ್ಣ ಜ್ಞಾನಾತ್ಮ ಸುಪೂರ್ಣೈಶ್ವರ್ಯನೆ
ಪೂರ್ಣ ಪ್ರಭಾತ್ಮ ಸುಪೂರ್ಣ ಆನಂದ
ಪೂರ್ಣ ತೇಜಾತ್ಮನೇ ಪೂರ್ಣ ಅದೋಷನೆ
ವನರುಹಭವನಿಂದರ್ಚಿತಧ್ಯೇಯ ವಿಭುವೆ ೧
ಶರಣಸರೋಜವು ಸಮಕಟಿ ಕರಗಳು
ಸುರಪ ನೀಲಾಭ ಶ್ರೀ ತುಳಸಿಯ ಹಾರ
ಪುರುಷೋತ್ತಮ ವಿಭು ಖರದಕ್ಷ ವಾಮದಿ
ಪದಾರವಿಂದವು ಸರಸಿಜನಯನ ೨
ವೃತತಿಜಾಸನಪಿತ ಪ್ರಸನ್ನ ಶ್ರೀನಿವಾಸ
ಪ್ರತತ ಪರಾತ್ಪರ ಹೃತ್ತಿಮಿರಾರ್ಕ
ನುತಜನಹಿತ ಕರಧನಭಕ್ತಿಪ್ರದ ಜಗನ್
ಮಾತೆ ರುಕ್ಮಿಣಿ ಸತ್ಯಭಾಮಾಪತೇ ನಮೋ ೩

ಶ್ರೀ ಬ್ರಹ್ಮಣ್ಯ ತೀರ್ಥ ಗುರುಗಳ ಸ್ತೋತ್ರ
೧೦೨
ವರ ಗುರುವರ್ಯ ಶ್ರೀ ಬ್ರಹ್ಮಣ್ಯತೀರ್ಥರ |
ಚರಣ ಕಮಲಕೆ ನಾ ಅನುದಿನ ನಮಿಪೆ ಪ
ಪರಿಪರಿ ದುರಿತವ ತ್ವರಿತದಿ ತರಿದು ಶ್ರೀ |
ಹರಿಮಧ್ವ ಚರಣಂಗಳಲಿ ಭಕ್ತಿ ಕೊಡುವಂತೆ ಅ ಪ
ವರ ಮಧ್ವಮುನಿ ಹೃಸ್ಥ ನರಹರಿ ಶ್ರೀಕೃಷ್ಣ |
ಕರಗಳ ಕಟಿಯಲಿಟ್ಟಿರುವ ವಿಠಲರಾಯ ||
ವರ ವೇದವ್ಯಾಸ ವರಾಹನರ್ಚಕರಾದ |
ವರ ಪುರುಷೋತ್ತಮ ಮುನಿಕರ ಕಮಲಜ ೧
ವಿಪ್ರ ವೃದ್ಧರಿಗೆ ಇವರು ದಯವನ್ನು ಬೀರಿ |
ಪುತ್ರ ಭಾಗ್ಯವನಿತ್ತು ಆ ವ್ಯಾಸ ಮುನಿಯನು ||
ಸುಪ್ರಖ್ಯಾತರ ಮಾಡಿದಂಥ ಪ್ರಸಿದ್ಧರೀ – |
ಸುಪ್ರಬುದ್ಧರ ಮಹಿಮೆಯು ಜ್ವಲಿಪುದು ಎಲ್ಲೂ ೨
ಪರಮ ದಯದಿ ಎನ್ನ ಕಷ್ಟದುರಿತ ಕೀಳ್ತು |
ಪರಮ ಸದ್ಗುರುವರ್ಯರೆ ಪೊರೆಯಿರಿ ಎನ್ನ ||
ಸರಸಿಜೋದ್ಭವ ತಾತ ‘ ಪ್ರಸನ್ನ ಶ್ರೀನಿವಾಸ ’
ವರ ಕಾಂತಿಯಿಂ ಪ್ರಜ್ವಲಿಸುತಿಹ ನಿಮ್ಮೊಳು ೩ ಪ

ಐಜಿ ಗ್ರಾಮವು ಆಂದ್ರ ಪ್ರದೇಶಕ್ಕೆ
ಶ್ರೀ ವರದೇಂದ್ರ ವಿಜಯ
೧೨೧
ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |
ಸರಸೀರುಹದಲ್ಲಿ ಸತತ ನಾ ಶರಣಾದೆನು |
ವರ ಸಮೀರಗ ಕೃಷ್ಣ ರಾಮ ಹಯ ಮುಖವ್ಯಾಸ |
ನರಹರಿ ಪ್ರಿಯರಿವರು ಸಾಧುವರಪ್ರದರು ಪ
ರಂಗನ ಪಾದೋದಕವು ಸುಪವಿತ್ರ ತಮವೆಂದು
ಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |
ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವು
ಶಂಕೆ ಇಲ್ಲ ಬ್ರಹ್ಮಗುರು ಶಿವ ಶಿಷ್ಯ ಕೇಳಿ ಕೇನ ೧
ರಜತ ಜಾಂಬೂನವ ತಾಮ್ರವÀನು ಮರಗದವ |
ವಜ್ರ ಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |
ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |
ರಾಜಿಸುತೆ ರವಿ ಸೋಮ ತಾರೆಗಳ ಜ್ಯೋತಿಯಿಂದ ೨
ರಾಘವ ಯಾದವ ವೇಂಕಟಧಾಮ ಹನುಮ ಭೀಮ |
ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |
ಅಘದೂರ ಗುಣನಿಧಿ ಸಮೀರಗ ಮಹಿದಾಸ – |
ನಿಗೆ ಪ್ರಿಯ ಬೃಹತಿ ಋಕ್ ಶ್ರೀ ವಿಷ್ಣು ಸಾಸಿರ ನಾಮ ೩
ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿ
ಸುರವೃಂದದವರು ಮರುದ್ಗಣದವರು ತೋರಿ |
ಇರುತಿದ್ದ ಕಾಲದಲಿ ವಿಜ್ಞಾನ ಭಕ್ತಿ ಯೋಗೀಶ |
ವರದೇಂದ್ರ ತೀರ್ಥ ಗುರುರಾಜ್ ವಿಜಯ ಮಾಡಿದರು ೪
ಜಗನ್ನಾಥದಾಸರ ಸಖ ಶಿಷ್ಯರಾಗಿಹ ನಮ್ಮ |
ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |
ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |
ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು ೫
ತಮ್ಮ ದ್ವಿತೀಯ ಸವನ ಮಧ್ಯ ಬ್ಯಾಗವಟ್ಟಿ ನರ – |
ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿ
ಶ್ರೀ ಮಾಧ್ವ ಬಾದರಾಯಣಿ ಪರ ವಿದ್ಯಾಗ್ರಂಥಗಳ |
ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ ೬
ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |
ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |
ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |
ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆ ಹೇತು ೭
ಪಾದಪೂಜೆ ಸಭ್ಯರಿಂದಲಿ ಗುರು ಮರ್ಯಾದೆಗಳು |
ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |
ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |
ಬಂದು ನೆರೆದ ಜನರಲಿ ಗಮನ ಬೀರಿದರು ೮
ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |
ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |
ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |
ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು ೯
ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |
ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |
ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |
ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ ೧೦
ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |
ಎನ್ನುತ ಅನವಶ್ಯ ಹೆಚ್ಚು ಸೊಲ್ಲು ವೆಚ್ಚ ಮಾಡದೇ |
ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |
ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು ೧೧
ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |
ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯ ಗುರು ಮಹಂತರು |
ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |
ಇನ್ನುಳಿದ ತಮ್ಮ ವಿಜಯ ಯಾತ್ರೆ ಕ್ಷೇತ್ರಗಳಿಗೆ ೧೨
‘ಶ್ರದ್ಧ ಯಾಧೇಯಂ’ ಎಂಬ ಶೃತಿ ಶಾಸನ ಅನುಸಾರ |
ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |
ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |
ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು ೧೩
ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |
ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |
ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |
ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿ ಗುರು ನಿಂತರು ೧೪
ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |
ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |
ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |
ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ ೧೫
ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿ
ಶ್ವಾಸ ಉಕ್ಕುತ ಪ್ರಾಣೇಶದಾಸರು ವೃಂದಾವನವ |
ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |
ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು ೧೬
ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |
ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |
ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |
ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ ೧೭
ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |
ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |
ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |
ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ ೧೮
ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |
ಆಪ್ರಾಕೃತವಾದ್ದು ಹಸ್ತಸ್ಥ ಪ್ರಾಕೃತ ಪೀಯೂಷದೋಳ್ |
ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |
ಹರಿ ಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ ೧೯
ದೋಷೋಜ್ಜಿತ ಗುಣ ಪೂರ್ಣ ಶ್ರೀಹರಿ ತುಳಸೀನಾಮ |
ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |
ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |
ವೃಷಭ ಶ್ರೀಯಕ್ ಸಪರಿವಾರ ಜ್ವಲಿಸುತಿಹನು ೨೦
ಉತ್ತಮ ಶ್ಲೋಕ ಪರಮೈಶ್ವರ್ಯ ರೂಪ ವಿಷ್ಣುವೇ ಅಧಿ |
ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |
ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |
ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ ೨೧
ಸುಮನಸ ವಂದಿತ ತುಳಸೀನಾಮಕ ಲಕ್ಷ್ಮಿಯು |
ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |
ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |
ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ ೨೨
ಬಾದರಾಯಣ ತಾನೇ ನುಡಿಸಿದೀ ನುಡಿಗಳ್ ಭಕ್ತಿ | –
ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ – |
ಪಿತ ‘ಶ್ರೀ ಪ್ರಸನ್ನ ಶ್ರೀನಿವಾಸ’ ಶ್ರೀಶ ತುಳಸೀಶ |
ವಿತ್ತ ವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ ೨೩ ಪ
|| ಇತಿ ಶ್ರೀ ವರದೇಂದ್ರ ವಿಜಯ ಸಂಪೂರ್ಣಂ ||

ನಿರ್ವೈಷಮ್ಯ ಯಾಚನೆ ಸ್ತೋತ್ರ
(ತ್ರಿವಿಕ್ರಮ ದೇವರ ಸ್ತೋತ್ರ)
೧೭
ವಾಮನ ಸುಸೌಂದರ್ಯಸಾರ ಲಕ್ಷ್ಮೀಶ
ಬ್ರಹ್ಮೇಶ ಮುಖ ವಂದ್ಯ ಕರಣ ಸೌಭಾಗ್ಯದನೆ
ಬ್ರಹ್ಮಾಂಡ ಬಹಿರಂತ ವ್ರ್ಯಾಪ್ತ ಸರ್ವೇಶ ಪ
ವಾಮನನು ವಿಶ್ವರೂಪ ಪ್ರಕಟಿಸಿ ದಾನ ವಸ್ತು
ಭೂಮಿ ದಿವಿಯ ಈರಡಿಯಲಿ ವ್ಯಾಪಿಸಿದ್ದು
ನೇಮಿ ವಿಪ್ರಚಿತ್ತಿ ಪೇಳ್ದ ಮಾಯಾಜಾಲವು ಅಲ್ಲ
ವಿಷಮ ವಂಚನ ದೋಷಕಿಂಚಿತ್ತು ಇಲ್ಲ ೧
ಪ್ರಥಮವಾಗಿ ಶ್ರೀ ವಿಷ್ಣುರೂಪ ಒಂದೊಂದಲ್ಲೂ
ಅನಂತರೂಪ ಬಲ ಸುಖಜ್ಞಾನಾದಿ ಪೂರ್ಣವಾಗಿ
ಶಶ್ವಧೇಶ ಪ್ರಕಾರ ಇಹುದೆಂದು ಶಾಸ್ತ್ರ ಸಾರುತಿದೆ
ಸ್ವತಃ ಅವ್ಯಕ್ತ ಹರಿ ಪ್ರಕಟಿಸುವ ಸ್ವಇಚ್ಛೆಯಿಂ ಆಗಾಗ ೨
ಅಣೋರಣೀಯಾನ್ ಮಹಿತೋ ಮಹೀಯಾನ್
ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪ
ತಾನೆ ವ್ಯಕ್ತ ಮಾಡಿದನು ವಿಷ್ಣು ವ್ಯಾಪನ ಶೀಲ
ಗುಣ ರೂಪ ಅಭಿನ್ನ ಅವ್ಯಯನು ೩
ಮತ್ತು ಬಲಿರಾಜನಿಗೆ ಶುಕ್ರಾಚಾರ್ಯರು
ಮೊದಲೇವೆ ಹೇಳಿಹರು ವಾಮನನು ವಿಷ್ಣು ಅವ್ಯಯನು
ಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನ ಕೇಳಿ
ಕ್ಷಿತಿ ದಿವಿಪರ್ವದ ಎರಡು ಪಾದದಿಂ ಅಳೆವನೆಂದು೪
ಈ ರೀತಿ ಬಲಿರಾಜ ದಾನ ಕೊಡುವ ಪೂರ್ವದಲೆ
ಹರಿವ್ಯಾಪನ ಶೀಲ ಅವ್ಯಯನೆ ವಾಮನ ಎಂದು
ಅರಿತೇವೆ ಶಕ್ರಸಾಧಕ ದಾನ ಕೊಟ್ಟಿಹನು
ಮುಚ್ಚುಮರಿ ವಿಷಮ ವಂಚನೆಗೆ ಸಿಲುಕಿ ಅಲ್ಲ ೫
ಮೋಸಕ್ಕೆ ಓಳಗಾಗಿ ಅಲ್ಲ ಮನಸಾ ತಿಳಿದೇ
ಅಸುರರಿಪು ವಿಷ್ಣುಗೆ ಬಲಿರಾಜ ತಾನೇ
ಶ್ರೀ ಶಾರ್ಪಣ ಜಗತ್ರಯದಾನ ಕೊಟ್ಟಿಹನು
ಎಂದು ಹೇಳಿ ಕೀರ್ತಿಸಿಹರು ದೇವಗಾಯಕರು ೬
ಕಿನ್ನರ ಕಿಂಪುರುಷ ಗಂಧರ್ವರು ಕೊಂಡಾಡಿದರು
ಮನಸ್ವಿ ನಾನೇನ ಕೃತಂ ಸುದುಷ್ಕರಂ
ವಿದ್ವಾದದಾದ್ ಯದ್‍ರಿಪವೇ ಜಗತ್ರಯಂ
ಏಕೋನವಿಂ ಶದ ಧ್ಯಾಯ ಶ್ಲೋಕ ಇಪ್ಪತ್ತು ೭
ಬಲಿರಾಜನೂ ರಾಣಿ ವಿಂದ್ಯಾವಳಿಯೂ
ಅಲ್ಲಿ ಬಂದ ಪ್ರಹ್ಲಾದ ಮಹಾರಾಜನೂ
ಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲ
ಬಲಿಗೆ ಮಹಾನುಗ್ರಹ ಮಾಡ್ಡನೆಂದು ತಿಳಿದಿಹರು ೮
ಮಧ್ವಸ್ತ ಸರ್ವಸ್ಥ ಮಸ್ತ ವಿಧಿತಾತ
ಜ್ಯೊತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯ
ಮೋದ ಮಯ ಶ್ರೀಯುತ ಪ್ರಸನ್ನಶ್ರೀನಿವಾಸ
ಮುದಜ್ಞಾನ ಧನ ಆಯುರ್ ಭಾಗ್ಯದನೆ ಶರಣು ೯
|| ಶ್ರೀ ಮಧ್ವೆಶಾರ್ಪಣಮಸ್ತುಃ ||

ಶ್ರೀ ಚಂದ್ರ ಸ್ತೋತ್ರ
೮೯
ವಾಮನ ಹಯಾಸ್ಯ ಶ್ರೀಹಂಸ ಧನ್ವಂತರಿ
ರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ ಪ
ಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತ
ಬ್ರಹ್ಮದೇವನ ಸುತನು ಬಹುಗುಣಿ ಅತ್ರಿ
ಬ್ರಹ್ಮಿಷ್ಠ ಈ ಋಷಿಯ ನೇತ್ರಜನು ಸೋಮ ನೀ
ಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ ೧
ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರ
ಸುಧಾಮೂರ್ತಿಯೇ ಸುಧಾಸ್ಶನ ಸುಧಾಗಾತ್ರ
ದಧಿ ಶಂಖ ತುಷಾರಾಭ ಆಹ್ಲಾದ ಕೃಣ್ಣಮೋ
ಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ ೨
ತ್ರಿಭುವನಗಳ ಜೈಸಿ ರಾಜಸೂಯ ಯಜ್ಞಗೈದಿ
ತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶ
ಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್
ಅಂಬರದಿಪೊಳೆವೆ ಸುಜ್ಞಾನ ಭಕ್ತಿ ಎನಗೀಯೋ ೩ ಪ

ಶ್ರೀ ವಿಜಯದಾಸರು
೧೩೪
ವಿಜಯದಾಸರೆ ನಿಮ್ಮ ಪಾದವನಜಗಳನ್ನು
ಭಜಿಸೆ ಭಾಗ್ಯವದೆಂದು ಸಾಧುಜನಮತವು ಪ
ವಸುಧೆ ವೈಕುಂಠಪತಿ ವಿಜಯ ವೆಂಕಟಕೃಷ್ಣ
ಬಿಸಜಭವಪಿತ ಬಿಂದು ಮಾಧವಗೆ ಪ್ರಿಯ
ವಾಸವಾಹ್ವಯ ದಾಸಶ್ರೇಷ್ಠರಿಗೆ ಪ್ರಿಯತಮರೆ
ದಾಸವರ ಸುರವರ್ಯ ವಿಜಯಾರ್ಯ ಶರಣು ೧
ಮೃತ್ಯು ಅಪಮೃತ್ಯುಗಳ ತರಿದು ನಂಬಿದವರಿಗೆ
ಸತ್ಯಾರಮಣನೊಲುಮೆ ಒದಗಿಸಿದಿರಿ
ಮತ್ರ್ಯರಲಿ ನಾ ಮಂದ ನಿಮ್ಮ ನಂಬಿದೆ ಎನ್ನ
ಭೃತ್ಯನೆಂದೆನಿಸಿ ವಾತ್ಸಲ್ಯದಿ ಪಾಲಿಪುದು ೨
ಎನ್ನ ಸರ್ವೇಂದ್ರಿಯವು ಹೀನವಿಷಯದಿ ರತವು
ಬಿನ್ನಹವ ಮಾಡಲ್ಕೆ ಬಗೆ ಏನು ಕಾಣೆ
ಘನ ಔದಾರ್ಯನಿಧಿ ನಿಮಗೆ ಶರಣೆಂಬುವುದು
ಒಂದನ್ನೆ ನಾ ಬಲ್ಲೆ ಶರಣು ಸುರಧೇನು ೩
ಇಷ್ಟಧನ ಆಯುಷ್ಯ ಕೀರ್ತಿ ಉನ್ನತಜಯ
ದುಷ್ಟಭಯ ಬಂಧನಿಗ್ರಹವು ವೈರಾಗ್ಯ
ಉತ್ರ‍ಕಷ್ಟ ಹರಿಭಕ್ತಿ ಜ್ಞಾನವೀವುವು ನಿಮ್ಮ
ಶ್ರೇಷ್ಠಪದ ಕೀರ್ತನೆ ನಾಮ ಸಂಸ್ಮರಣೆ ೪
ಅಜನ ಜನಕನು ಶ್ರೀ ಪ್ರಸನ್ನ ಶ್ರೀನಿವಾಸನು
ಅಜಿತ ಅಜನಂದಿನೀಪಿತನು ಗೋಪಾಲ
ಅಬ್ಜ ಶಂಖವ ಪಿಡಿದ ವರ ಅಭಯಹಸ್ತ ಶ್ರೀ
ವಿಜಯ ವಿಜಯಾಪತಿಯ ದಾಸರಿಗೆ ಶರಣು ೫

ಶ್ರೀ ತಿರುವಳ್ಳೂರ್ ಶ್ರೀ ವೀರರಾಘವ ಸ್ತೋತ್ರ
೫೧
ವೀರರಾಘವ ಸ್ವಾಮಿ ಸಿರಿ ಕನಕ ವಲ್ಲೀಶ
ಶರಣಾದೆ ಪೊರೆ ಎನ್ನ ಕರುಣಾ ಸಮುದ್ರ ಪ
ಮರುತಾದಿ ಸುರಸೇವ್ಯ ಉರುಗುಣಾರ್ಣವ ದೋಷ
ದೂರ ಸ್ರಷ್ಟಾಪಾತ ಪರಮೈಕ ಈಶ ಅ ಪ
ಜಗಜ್ಜನ್ಮಾದ್ಯಷ್ಟಕ ಸುಕತೇ ನೀನೇವೆ
ನಿಗಮೈಕವೇದ್ಯನೇ ಏಕಾತ್ಮ ಭೂಮನ್
ಗೋಗಣಗಳೆಲ್ಲವೂ ಪೊಗುಳುತಿವೆ ನಿನ್ನನ್ನೇ
ಏಕ ವಿಧದಲ್ಲಿ ಇದಕೆ ಸಂದೇಹವಿಲ್ಲ ೧
ನಿವ್ರ್ಯಾಜ ಭಕ್ತನ ಆತಿಥ್ಯವನು ಸ್ವೀಕರಿಸಿ
ಸತ್ಯವಾಗಿ ವರವ ಈವಿ ಭಕ್ತರಿಗೆ ಎಂದಿ
ಸತ್ಯಲೋಕಾಧಿಪ ಪದಾರ್ಹನನುಯಾಯಿಗಳ
ಭೃತ್ಯನಾದೆನ್ನ ಪೊರೆ ಉದ್ಯಾಕರ್À ತೇಜ ೨
ನೀನಾಗಿಯೇ ನೀನು ನಿನ್ನ ಸ್ಥಳಕೆ ಕರೆ
ನಿನ್ನದರುಶನವಿತ್ತಿ ನಿನಗೇವೆ ನಾ ಶರಣು
ಮನೋವಾಕ್ ಕಾಯದ ಎನ್ನ ಸರ್ವಕರ್ಮಗಳೊಪ್ಪಿ
ಘನ ದಯವ ಬೀರೊ ‘ ಪ್ರಸನ್ನ ಶ್ರೀನಿವಾಸ’ ೩

ಶ್ರೀ ವೇದನಾಯಕಿ – ಭವಾನಿ
೮೩
ವೇದನಾಯಕಿ
ಆದರದಲಿ ನಿನ್ನಾರಾಧಿಪ ಭಕ್ತರ
ಸಾದರದಲಿ ಸದಾ ಕಾಯ್ವ ಉದಾರಿ ಪ
ಅಮೃತ ಸರಿತ ಕಾವೇರಿ ಭವಾನಿ
ಸುಮ್ಮನೋಹರ ಸಂಗಮ ಕ್ಷೇತ್ರದಲ್ಲಿ
ಅಮಲ ಸ್ಪಟಿಕ ನಿಭ ಕಾಂತಿಮಾನ್ ಈಶ
ಸಮೇತ ವಿರಾಜಿಪ ಸುಮನಸನುತೆ –
– ಮನ್ಮಾತೆ ನಮಸ್ತೆ ೧
ಸ್ನಾನ ಸಂಧ್ಯಾ ಜಪ ಸೇವೆ ಅರ್ಚನೆಗಳು
ಏನೇನು ಮಾಡದೆ ಹೀನ ಕರ್ಮದಿ ರತ
ಎನ್ನ ಮನ್ನಿಸಿ ಬಹುದಯದಿ ಸದಾ ನೀ
ಘನತರ ಪಾಲಿಸೆ ಮೀನಲೋಚನೆ –
– ಮನ್ಮಾತೆ ಕೃಪಾಕರಿ ೨
ವೇಧನ ಪಿತ ಜಗ ಜನ್ಮಾದಿ ಕಾರಣ
ಆದಿಕೇಶವ ಶ್ರೀ ಸುಂದರೀ ರಮಣ ಪ್ರ –
ಮೋದಿ ಗೋಪಾಲ ಪ್ರಸನ್ನ ಶ್ರೀನಿವಾಸ
ಶ್ರೀದನ ಕಾಣಿಸೆ ಖೇಶ ವಲ್ಲೀಶನ ಮಾತೆ –
– ಮನ್ಮಾತೆ ೩

ಕಂಚೀಪುರವು ತಮಿಳುನಾಡಿನ ಚೆನ್ನೈಗೆ
ಶ್ರೀ ಕಂಚೀಪುರ ನರಸಿಂಹ

ಶರಣಂ ಶರಣಂ ಪಾಲಯ ಮಾಂ ಪ
ವರ ಕಂಚೀಪುರ ಯೋಗನೃಕೇಸರಿ
ಪಾಲಯ ಮಾಂ ಅ .ಪ
ಪೂರ್ಣ ಅದೋಷ ಸುಚಿನ್ಮಯ ನೃಹರೇ
ಪೂರ್ಣಾನಂದ ಭೋ ಏಕಾತ್ಮ ೧
ಮತ್ಕುಲದೇವ ಶ್ರೀ ವೆಂಕಟಕೃಷ್ಣ
ವರದ ಕೃಪಾಂಬುಧೆ ಪಾಲಯ ಮಾಂ ೨
ಯೋಗಕ್ಷೇಮಂ ಮಮವಹ ಸ್ವಾಮಿ
ಕಾಮಿತಫಲದ ದಯಾನಿಧೆ ಭೂಮನ್ ೩
ಮೀನಾದಿದಶ ಅನಂತ ಸುರೂಪ
ಅನುಪಮ ಸುಖಮಯ ಪಾಲಯ ಮಾಂ ೪
ಮಂದಜಭವಪಿತ ಪ್ರಸನ್ನ ಶ್ರೀನಿವಾಸ
ಇಂದಿರಾಪತಿ ನರಸಿಂಹ ನಮಸ್ತೆ ೫
ಶ್ರೀ ಚಿಂತಲವಾಡಿ ನರಸಿಂಹ

ಶ್ರೀ ಸೌಭಾಗ್ಯ ಪ್ರದ ಹನುಮಂತ
(ಅಣು ಸುಂದರ ಕಾಂಡ)
೬೭
ಶರಣು ಪಾಲಿಸೋ ಹನುಮ |
ಕರುಣಾಳು ಅಂಜನಾಸೂನು ನಿನ್ನ ಮಹಿಮೆ
ವರ್ಣಿಸಲು ನಾಬಲ್ಲೆನೆ ಹೇ ವಾಯು ಪುತ್ರನೇ ಅಸಮ
ಬಲಜ್ಞಾನ ರೂಪನೆ ನಿನಗೆ ಇಷ್ಟ ಶ್ರೀರಾಮ
ಜೀವರಲಿ ನೀ ಉತ್ತಮ |
ಶರಣು ಫಲ್ಗುಣ ಸಖ ಪಿಂಗಾಕ್ಷನೇ
ಶರಿಧಿ ದಾಟಿದಿ ಅಮಿತ ವಿಕ್ರಮ
ವಾರ್ತೆ ಸೀತೆಗೆ ಪೇಳಿ ದಶಮುಖ
ಸರ್ವತರದಿ ಸೌಮಿತ್ರಿ ಪ್ರಾಣ ಪ್ರ –
ದಾತ ಹರಿ ವರ ಶರಣು ಶರಣು ಮಹಾತ್ಮ ಸಹೃದನೇ
ಶರಣು ಪಾಲಿಸೋ ಹನುಮ ಪ
ಪೂರ್ಣಪ್ರಜ್ಞ ನೀನೆಂದು ಬಹು ಹರುಷ ತೋರಿದ |
ರಾಘವನ ಕರೆತಂದು ರವಿಜನಿಗೆ ಸಖ್ಯ | ಮಾಡಿಸಿ ನೀ ಸಿಂಧು |
ದಾಟುತ್ತ ಮೈನಾಕನ್ನೇ | ಶ್ಲೇಷಿಸಿ ನಿಂದು
ವಿಶ್ರಾಂತಿ ಕೊಳ್ಳದೆ ಮುಂದು |
ಹಾರಿ ಸುರ ಸೆಯೊಳ್ ಲೀಲೆಯಿಂದಲಿ ಹೊಕ್ಕು ಹೊರಟು –
ಸುರರು ಪೂಮಳೆ
ಕರಿಯೇ ಸಿಂಹಿಕಾ ಉದರ ಸೀಳಿ ದ್ವಾರ ಪಾಲಕೆಯನ್ನ ಜಯಿಸಿ
ಪುರಿ ಪ್ರವೇಶವ ಮಾಡಿ ಸೀತಾಕೃತಿಯ ಕಂಡುಂಗರುವ ಕೊಟ್ಟು
ಕ್ರೂರ ರಾಕ್ಷಸ ಅಕ್ಷಾದಿಗಳ ಕೊಂದು ಲಂಕಾಪುರಿಯ ಸುಟ್ಟು
ಭರದಿ ತಿರುಗಿ ಬಂದು ರಾಘವನಂಘ್ರಿಯಲಿ ಸನ್ನಮಿಸಿ ಸೀತೆಯ
ಚೂಡಾರತ್ನವನಿಟ್ಟು ರಾಮಾಲಿಂಗನ ನೀ
ಕೊಂಡಿಯೋ ಸೌಭಾಗ್ಯ ನಿಧಿಯೇ
ಶರಣು ಪಾಲಿಸೋ ಹನುಮ ೧
ಜಯತು ಶರಣು ಶ್ರೀರಾಮ | ಶರಣೆಂದ
ವಿಭೀಷಣನನ್ನ | ಅತಿ ಪ್ರೇಮ
ದಿಂದ ನೀ ಸ್ವೀಕರ್ಯನೆನಲು ಶ್ರೀರಾಮ |
ಬಂದು ಅಭಯವ ನಿತ್ತ ಪೂರ್ಣಕಾಯ |
ಅಮಿತ ಸುಗುಣ ಸುಧಾಮ|
ಮಾರ್ಜಗಾರಿ ಸಸೈನ್ಯ ರಾವಣ ನನ್ನ ಜಹಿಯಲು | ಸೇತು ಕಟ್ಟಿಸಿ |
ಸುಜನ ರಕ್ಷಕ ಉರುಪರಾಕ್ರಮ ಅಜಿತರಾಮನು ಪೋಗೆ ಲಂಕೆಗೆ |
ಜಾಂಬವಾನ್ ಸುಗ್ರೀವ ಸಹ ನೀ ಜಾನಕೀಶಗೆ ಸೇವೆ ಸಲ್ಲಿಸಿ |
ಸಂಜೀವಿನಿಗಳ ತಂದು ರಾಮಾನುಜಗೆ ಪ್ರಾಣವನಿತ್ತು ರಾವಣ
ಭಂಜನವ ರಘುರಾಮ ಮಾಡಿ ಅಯೋಧ್ಯೆ
ಬರುವುದು ಪೇಳಿ ಭರತಗೆ |
ನಿಜ ಸಂತೋಷದಿ ಸೀತಾರಾಮಗೆ ರಾಜ್ಯ ಪಟ್ಟಾಭಿಷೇಕ ಗೈಸಿದಿ –
ಶುಭ ಸುಚರಿತನೆ ಶರಣು ಪಾಲಿಸೋ ಹನುಮ ೨
ರಾಮಭದ್ರನು ನಿನ್ನ | ಅನುಪಮೋತ್ತಮ ಸೇವೆ ಮೆಚ್ಚಿ ಏನನ್ನ |
ನೀನಗೀವುದು ನಿನ್ನ ಸೇವೆ ಸಮ ಬಹುಮಾನ |
ಮೋಕ್ಷ ಸಾಲದು ಪೇಳು ಬೇಕಾದ್ದನ್ನ | ಎನಲು ನೀ ರಾಮನ್ನ |
ನಮಿಸಿ ಪ್ರೇಮದಿ ರಾಮಚಂದ್ರನೆ ನಿನಗೆ ಇಷ್ಟ ಸರ್ವಜೀವರು
ರಾಮನಲ್ಲಿ ಮಾಳ್ಪ ಭಕ್ತಿಗೆ ಅಧಿಕ ನಿತ್ಯ ಪ್ರವೃದ್ಧವಾದ
ಪರಮ ಭಕ್ತಿವೊಂದನ್ನೇ ಈವುದು ಎಂದು ನೀ ಕೇಳೆ ವಿನಯದಿ
ಪ್ರೇಮದಿಂದ ತಥಾಸ್ತು ಎನ್ನುತ ಬ್ರಹ್ಮಪದ ಸಹಭೋಗ ಸಾಂಪ್ರತ
ಸಮಸ್ತವಾದ ಸೌಭಾಗ್ಯ ಸಮೃದ್ಧಿಯ ಇತ್ತು ಒಲಿದನು ಅಜನಪಿತ ಶ್ರೀ
ರಮೆಯ ಅರಸ ಪ್ರಸನ್ನ ಶ್ರೀನಿವಾಸ ಭೂಮ ಏಕಾತ್ಮ ರಾಮ
ಪ್ರಮೋದಿ ವಿಭುವು _ ಶರಣು ಪಾಲಿಸೋ ಹನುಮ ೩

ಶ್ರೀ ಪುರಂದರದಾಸರು
೧೩೨
ಶರಣು ಪುರಂದರ ದಾಸರಾಯರೆ ಶರಣು ಶರಣು ದಯಾನಿಧೆ
ಶರಣು ವ್ಯಾಸಮುನೀಂದ್ರ ಪ್ರಿಯತಮ ಶರಣು ಮನ್ಮನೋಭೀಷ್ಟದ ಪ.
ಜ್ಞಾನಭಕ್ತಿವೈರಾಗ್ಯ ಶಮದಮ
ಗುಣಗಣಾದಿ ಸಂಪನ್ನ ನೀ
ಹೀನ ವಿಷಯಗಳಲ್ಲಿ ರತನು
ಬೂಟಕನು ಗುಣಹೀನ ನಾ ೧
ನಿನ್ನ ಸುಸ್ವಭಾವವಾದ ಔ
ದಾರ್ಯಗುಣದಿಂದ ಎನ್ನನ್ನು
ಇನ್ನು ಮುಂದೆ ಕೊರತೆ ಸರ್ವವ
ಪರಿಹರಿಸಿ ಪಾಲಿಸೋ ೨
ಶ್ರೀ ಪುರಂದರ ವಿಜಯ ವಿಠ್ಠಲ
ಗೋಪಾಲ ಕಪಿಲ ಶ್ರೀಶಗೆ
ಪುಷ್ಪ ಜನಪಿತ ಶ್ರೀ ಪ್ರಸನ್ನ
ಶ್ರೀನಿವಾಸಗೆ ಪ್ರಿಯತಮ ೩

ಶ್ರೀ ಸೌಭಾಗ್ಯ ಸಪ್ತತ್ರಿಂಶತಿ
೭೧
ಶರಣು ವಿಧಿ ವಾಣೀಶ ಶರಣು ಧೃತಿ ಶ್ರಧ್ದೇಶ |
ಶರಣು ಋಜುವರ್ಯರಲಿ ಶರಣು ಶರಣಾದೆ ಪ
ಮೀನಕೂರ್ಮ ಕ್ರೋಡ ನರಸಿಂಹ ವಟುರೂಪ
ರೇಣುಕಾತ್ಮಜ ರಾಮ ಶ್ರೀ ಕೃಷ್ಣ ಜಿನಜ ||
ವಿಷ್ಣು ಯಶಸ್ಸುತ ಅಜಿತ ಶ್ರೀಶನಿಗೆ ಪ್ರಿಯತಮ |
ಅನುಪಮ ಜೀವೋತ್ತಮರ ಚರಣಕಾನಮಿಪೇ ೧
ಪುರುಷವಿಧಿ ಕಾಲವಿಧಿ ವಾಸುದೇವೋತ್ಪನ್ನ |
ವಿರಿಂಚ ಮಹತ್ತತ್ವತನು ಅನಿರುದ್ಧ ಜಾತ ||
ನಾರಾಯಣ ನಾಭಿ ಕಮಲಜ ಚತುರ್ಮುಖನು |
ಸರಸ್ವತೀಪತಿ ರುದ್ರ ತಾತನಿಗೆ ನಮಿಪೆ ೨
ಈ ನಾಲ್ಕು ಬ್ರಹ್ಮನ ಅವತಾರದಲಿ ಶುಕ್ಲ |
ಶೋಣಿತ ಸಂಬಂಧ ಇಲ್ಲವೇ ಇಲ್ಲ ||
ಜ್ಞಾನಾದಿ ಐಶ್ವರ್ಯದಲಿ ಯಾರು ನಾಲ್ಮುಗಗೆ |
ಎಣೆ ಇಲ್ಲ ಹದಿನಾಲ್ಕು ಲೋಕದಲಿ ಎಲ್ಲೂ ೩
ಭಯವು ಅಜ್ಞಾನವು ಸಂಶಯವು ಇವಗಿಲ್ಲ
ಸತ್ಯ ಲೋಕಾಧಿಪನ ಸುರರ ಅಧ್ಯಕ್ಷ ||
ಹಯಮುಖ ತ್ರಿವೃತ್ತುರೀಯ ಹಂಸ ಇತರಾಸೂನು |
ತೋಯಜಾಕ್ಷ ಕೇಶವನ ಪ್ರಥಮ ಪ್ರತಿಬಿಂಬ ೪
ಜಗಜ್ಜನ್ಮಾದ್ಯಷ್ಟಕ ಕರ್ತನ ನಿಯಮನದಿ |
ಜಗವ ಪಡೆದಿಹ ಬ್ರಹ್ಮಸತ್ವವಿಗ್ರಹನು ||
ಖಗಪ ಭುಜಗಪ ಶಿವಾದ್ಯನಂತ ಜೀವೋತ್ತಮನು |
ಅಘರಹಿತ ತಾರಕ ಗುರು ಶತಾನಂದ ೫
ಅವನಿಯಲಿ ಅವತಾರ ಬ್ರಹ್ಮದೇವನಿಗಿಲ್ಲ |
ಭಾವಿ ಬ್ರಹ್ಮನು ಮುಖ್ಯವಾಯುದೇವ ||
ದೇವೀಜಯಾ ಸಂಕರುಷಣಾತ್ಮಜನು ಈ |
ಭುವಿಯಲ್ಲಿ ತೋರಿಹನು ಹರಿಯ ಪ್ರಥಮಾಂಗ ೬
ಧೃತಿ ಪ್ರಭಂಜನ ವಾಯು ಸ್ಮರ ಭರತ ಗುರುವರನು |
ಮಾತರಿಶ್ವನು ಸೂತ್ರ ಪವಮಾನ ಪ್ರಾಣ ||
ಎದುರು ಸಮರಿಲ್ಲ ಈ ಬ್ರಹ್ಮ ಧಾಮನಿಗೆಲ್ಲೂ |
ಸದಾ ನಮೋ ಭಾರತೀರಮಣ ಮಾಂಪಾಹಿ ೭
ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ |
ಪ್ರತಿಷ್ಠಿತವೂ ಜೀವರ ದೇಹಕಾಧಾರ ||
ತ್ರಾತಪೋಷಕ ಸರ್ವವಶಿ ಪ್ರಜ್ಞಾಶ್ರೀದನು |
ತತ್ವಾದಿ ದೇವ ವರಿಷ್ಠ ಚೇಷ್ಟಕನು ೮
ಶ್ರೀಶ ಹಂಸಗೆ ಪ್ರಿಯ ಶ್ವಾಸ ಜಪ ಪ್ರವೃತ್ತಿಸುವ |
ಬಿಸಜಜಾಂಡವ ಹೊತ್ತು ಕೊಂಡು ಇರುತಿಹನು ||
ಅಸಮ ಸಾಮಥ್ರ್ಯದಿ ಸರ್ವ ಕ್ರಿಯೆ ಮಾಡಿಸುವ |
ಶಾಸ್ತನಾಗಿಹ ಪಂಚ ಅವರ ಪ್ರಾಣರಿಗೆ ೯
ಬಲ ಜ್ಞಾನಾದಿಗಳಲ್ಲಿ ಹ್ರಾಸವಿಲ್ಲವು ಇವಗೆ |
ಎಲ್ಲ ಅವತಾರಗಳು ಸಮವು ಅನ್ಯೂನ ||
ಶುಕ್ಲ ಶೋಣಿತ ಸಂಬಂಧ ಇಲ್ಲವೇ ಇಲ್ಲ |
ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ ೧೦
ವಾಯುದೇವನ ಒಲಿಸಿಕೊಳ್ಳದ ಜನರಿಗೆ |
ಭಯ ಬಂಧ ನಿವೃತ್ತಿಯು ಸದ್ಗತಿಯು ಇಲ್ಲ ||
ಮಾಯಾ ಜಯೇಶನ ಪರಮ ಪ್ರಸಾದವು |
ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ ೧೧
ಶ್ರೀರಾಮಚಂದ್ರನು ಒಲಿದ ಸುಗ್ರೀವಗೆ |
ಮಾರುತಿಯ ಒಲಿಸಿಕೊಂಡವನವನೆಂದು ||
ಮಾರುತಿಯ ಒಲಿಸಿಕೊಳ್ಳದ ವಾಲಿ ಬಿದ್ದನು |
ಕರ್ಣನೂ ಹಾಗೇವೇ ಅರ್ಜುನನು ಗೆದ್ದ ೧೨
ರಾಮನಿಗೆ ಸನ್ನಮಿಸಿ ವನದಿ ದಾಟುತ ಹನುಮ |
ಶ್ರಮರಹಿತನು ಸುರಸೆಯನು ಜಯಿಸೆ ಸುರರು ||
ಪೂಮಳೆ ಕರೆಯಲು ಸಿಂಹಿಕೆಯನು ಸೀಳಿ |
ಧುಮುಕಿದ ಲಂಕೆಯಲಿ ಲಂಕಿಣಿಯ ಬಡಿದ ೧೩
ರಾಮ ಪ್ರಿಯೆಗುಂಗುರವ ಕೊಟ್ಟು ಚೂಡಾರತ್ನ |
ರಾಮಗೋಸ್ಕರ ಕೊಂಡು ವನವ ಕೆಡಹಿ ||
ಶ್ರಮ ಇಲ್ಲದೆ ಅಕ್ಷಯಾದಿ ಅಧಮರ ಕೊಂದು |
ರಾಮ ದೂತನು ಹನುಮ ಲಂಕೆಯ ಸುಟ್ಟ ೧೪
ಶ್ರೀರಾಮನಲಿ ಬಂದು ನಮಿಸಿ ಚೂಡಾಮಣಿಯ |
ಚರಣದಿ ಇಡೆ ರಾಮ ಹನುಮನ ಕೊಂಡಾಡಿ ||
ಸರಿಯಾದ ಬಹುಮಾನ ಯಾವುದು ಇಲ್ಲೆಂದು |
ಶ್ರೀರಾಮ ತನ್ನನ್ನೇ ಇತ್ತಾಲಿಂಗನದಿ ೧೫
ಮೂಲ ರೂಪವನೆನೆದ ಲಕ್ಷ್ಮಣನ ಎತ್ತಲು |
ಕೈಲಾಗದೆ ರಾವಣನು ಸೆಳೆಯೆ ಆಗ ||
ಲೀಲೆಯಿಂದಲಿ ಎತ್ತಿ ರಾಮನಲಿ ತಂದನು |
ಬಲವಂತ ಹನುಮ ಶೇಷಗುತ್ತಮತಮನು ೧೬
ಮೃತ ಸಂಜೀವಿನಿಯಾದಿ ಔಷಧಿ ಶೈಲವನು |
ತಂದು ಸೌಮಿತ್ರಿ ಕಪಿಗಳಿಗೆ ಅಸು ಇತ್ತ ||
ಮುಂದಾಗಿ ಪೋಗಿ ಶ್ರೀರಾಮ ಬರುವುದು ಪೇಳಿ |
ಕಾಯ್ದ ರಾಮಾನುಜನ ಅಗ್ನಿ ಮುಖದಿಂದ ೧೭
ಇತರರು ಮಾಡಲು ಅಶಕ್ಯ ಸೇವೆ ಹನುಮ |
ಗೈದಿ ಮೋಕ್ಷವು ಸಾಲ್ದು ಏನು ಕೊಡಲೆನ್ನೆ ||
ಸದಾ ಸರ್ವ ಜೀವರಿಂದಧಿಕ ಭಕ್ತಿ ಒಂದೇ |
ಕೇಳ್ದ ಶ್ರೀರಾಮನ್ನ ವೈರಾಗ್ಯ ನಿಧಿಯು ೧೮
ಗಂಡು ಶಿಶು ಬೀಳಲು ಗುಂಡು ಪರ್ವತ ಒಡೆದು |
ತುಂಡು ನೂರಾಯಿತು ಕಂಡಿಹರು ಅಂದು ಬೋ – ||
ಮ್ಮಾಂಡದಲಿ ಪ್ರಚಂಡ ಭೀಮಗೆ ಸಮ |
ಕಂಡಿಲ್ಲ ಕೇಳಿಲ್ಲ ನೋಡಿ ಭಾರತವ ೧೯
ಉಂಡು ತೇಗಿದ ಗರಳ ತಿಂಡಿಯ ಭೀಮನು |
ಉಂಡು ಹಾಲಾಹಲವ ಹಿಂದೆ ಈ ವಾಯು ||
ಹಿಂಡಿ ಸ್ವಲ್ಪವ ಮುಕ್ಕಣ್ಣಗೆ ಕೊಟ್ಟನು |
ಬಂಡು ಮಾತಲ್ಲವಿದು ಕೇಳಿ ವೇದವನು ೨೦
ಅರಗು ಮನೆಯಿಂದ್ಹೊರಟು ಸೇರಿ ವನವನು ಅಲ್ಲಿ |
ಕ್ರೂರ ಹಿಡಿಂಬನ ಕೊಂದವನ ಸೋದರಿ ||
ಭಾರತೀ ಯಕ್ಸ ್ವರ್ಗ ಶಿಕಿಯು ಹಿಡಿಂಬಿಯ
ಕರಪಿಡಿದ ಭೀಮನು ಅನುಪಮ ಬಲಾಢ್ಯ ೨೧
ಬಕ ಕೀಚಕ ಜರಾಸಂಧಾದಿ ಅಸುರರು |
ಲೋಕ ಕಂಟಕರನ್ನ ಕೊಂದು ಬಿಸುಟು ||
ಲೋಕಕ್ಕೆ ಕ್ಷೇಮವ ಒದಗಿಸಿದ ಈ ಅಮಿತ |
ವಿಕ್ರಮ ಭೀಮನಿಗೆ ಸಮರಾರು ಇಲ್ಲ ೨೨
ಕಲಿ ಕಲಿಪರಿವಾರ ದುರ್ಯೋಧನಾದಿಗಳ |
ಬಲವಂತ ಭೀಮನು ಬಡಿದು ಸಂಹರಿಸಿದ ||
ಕಲಿಹರ ಸುಜನಪಾಲ ಭೀಮ ಸಮ್ರಾಟನ |
ಕಾಲಿಗೆ ಎರಗುವೆ ದ್ರೌಪದೀ ಪತಿಗೆ ೨೩
ಮಾಲೋಲ ಕೃಷ್ಣನ ಸುಪ್ರೀತಿಗಾಗಿಯೇ |
ಬಲ ಕಾರ್ಯಗಳ ಮಾಡಿ ಅರ್ಪಿಸಿದ ಭೀಮ ||
ಕಲಿಯುಗದಿ ಈ ಭೀಮ ಅವತಾರ ಮಾಡಿಹನು |
ಕಲಿಮಲಾಪಹ ಜಗದ್ಗುರು ಮಧ್ವನಾಗಿ ೨೪
ಹನುಮಂತನ ಮುಷ್ಠಿ ಭೀಮಸೇನನ ಗದೆ |
ದಾನವಾರಾಣ್ಯವ ಕೆಡಹಿದ ತೆರದಿ ||
ಆಮ್ನಾ ಯಸ್ರ‍ಮತಿ ಯುಕ್ತಿಯುತ ಮಧ್ವ ಶಾಸ್ತ್ರವು |
ವೇನಾದಿಗಳ ಕುಮತ ತರಿದು ಸುಜನರ ಕಾಯ್ತು ೨೫
ಇಳೆಯ ಸುಜನರ ಭಾಗ್ಯ ಶ್ರುತಿ ಪುರಾಣಂಗಳು |
ಪೇಳಿದಂತೆ ಕೊಂಡ ಯತಿರೂಪ ವಾಯು ||
ಮೇಲಾಗಿ ಇದ್ದ ನಮ್ಮ ಅಜ್ಞಾನ ಕತ್ತಲೆಯ |
ತೊಲಗಿಸಿದನು ಈ ಮಧ್ವಾಖ್ಯ ಸೂರ್ಯ ೨೬
ದುರ್ವಾದ ಕುಮತಗಳು ಸಜ್ಜನರ ಮನ ಕೆಡಿಸೆ |
ತತ್ವವಾದವ ಅರುಪಿ ಸಜ್ಜನರ ಪೊರೆದ ||
ಮೂವತ್ತು ಮೇಲೇಳು ಗ್ರಂಥ ಚಿಂತಾಮಣಿ |
ಸುವರ್ಣ ಕುಂದಣ ಪದಕ ಯೋಗ್ಯರಿಗೆ ಇತ್ತ ೨೭
ದುಸ್ತರ್ಕ ದುರ್ಮತ ಬಿಸಿಲಿಲ್ಲಿ ಬಾಡುವ |
ಸಸಿಗಳು ಸಾತ್ವಿಕ ಅಧಿಕಾರಿಗಳಿಗೆ ||
ಹಸಿ ನೀರು ನೆರಳು ಈ ಮಾಧ್ವ ಮೂವತ್ತೇಳು |
ಸಚ್ಛಾಸ್ತ್ರ ಪೀಯೂಷ ಗೋಕಲ್ಪ ತರುವು ೨೮
ಮೂಢ ಅಧಮರ ದುಷ್ಟ ಮತಗಳ ಸಂಪರ್ಕದಿ |
ಈಡಿಲ್ಲದ ಮೋದಪ್ರದ ಜ್ಞಾನ ಕಳಕೊಂಡು ||
ಬಡತನದಿ ನರಳುವ ಸಜ್ಜನರ ಪೋಷಿಪುದು |
ನೋಡಿ ಈ ಸುರಧೇನು ಮಾಧ್ವ ಮೂವತ್ತೇಳ ೨೯
ಬಿಲ್ವಪ್ರಿಯ ಶಿವ ಈಡ್ಯ ಸಾರಾತ್ಮ ಕೃಷ್ಣನ |
ಚೆಲ್ವ ಉಡುಪಿ ಕ್ಷೇತ್ರದಲಿ ನಿಲ್ಲಿರಿಸಿ ||
ಎಲ್ಲ ಭಕ್ತರ ಕಾವ ಸುಖಮಯ ಜಗತ್ಕರ್ತ |
ಮೂಲ ರಾಮನ ಸಾಧು ಜನರಿಗೆ ಕಾಣಿಸಿದ ೩೦
ಮಹಿದಾಸ ಬೋಧಿಸಿದ ತತ್ವವನು ವಿವರಿಸುತ |
ಮಹಂತ ಪೂರ್ಣಪ್ರಜ್ಞ ಬದರೀಗೆ ತೆರಳಿ ||
ಮಹಿಶಿರಿಕಾಂತ ಶ್ರೀ ವ್ಯಾಸನ ಬಳಿ ಇಹನು |
ಅಹರಹ ಪ್ರೇಮದಿಂಸಂಸ್ಮರಿಸೆತೋರ್ವ ೩೧
ರಾಮ ಕೃಷ್ಣವ್ಯಾಸ ಜಾನಕೀಸತ್ಯಾ |
ರುಕ್ಮಿಣೀ ಅಂಭ್ರಣಿ ಪ್ರಿಯತಮ ಹನುಮ ||
ಭೀಮ ಮಹಾ ಪುರುಷೋತ್ತಮ ದಾಸರಿಗೆ |
ನಮಿಪೆ ವಿಪಶೇಷ ಶಿವಾದ್ಯಮರ ಸನ್ನತರ್ಗೆ ೩೨
ಚತುರ್ಮುಖ ವರವಾಯು ಸರಸ್ವತಿ ಭಾರತಿಗೆ |
ಸದಾ ಶ್ರೀಹರಿಯಲ್ಲಿ ಭಕ್ತಿ ಅಚ್ಛಿನ್ನ ||
ಅತಿರೋಹಿತ ಜ್ಞಾನ ಪ್ರಾಚುರ್ಯರಾಗಿಹರು |
ಸಾಧಾರಣವಲ್ಲ ಋಜುಗಳ ಮಹಿಮೆ ೩೩
ಋಜುಗಳ ರಾಜೀವ ಚರಣಗಳಿಗಾ ನಮಿಪೆ |
ಭುಜಗಶಯ್ಯನಲಿ ಭಕ್ತಿ ಸಹಜ ಇವರಲ್ಲಿ ||
ಭುಜಗ ಭೂಷಣಾದಿಗಳಿಗಧಿಕತಮ ಬಲಜ್ಞಾನ |
ತ್ರಿಜಗಮಾನ್ಯರು ತ್ರಿಗುಣ ತಾಪವರ್ಜಿತರು ೩೪
ಅಪರೋಕ್ಷ ಋಜುಗಣಕೆ ಅನಾದಿಯಾಗಿಯೇ ಉಂಟು |
ತಪ್ಪದೇ ಶತಕಲ್ಪ ಸಾಧನವ ಗೈದು ||
ಶ್ರೀಪನ ಅಪರೋಕ್ಷ ಇನ್ನೂ ವಿಶೇಷದಿ |
ಲಭಿಸಿ ಕಲ್ಕ್ಯಾದಿ ಸುನಾಮ ಧರಿಸುವರು ೩೫
ಕಲ್ಕ್ಯಾದಿ ಪೆಸರಲ್ಲಿ ಪ್ರತಿ ಒಂದು ಕಲ್ಪದಲು |
ಅಕಳಂಕ ಇವರು ಬಹು ಸುವಿಶೇಷ ಸಾಧನದಿ ||
ಭಕ್ತ್ಯಾದಿ ಗುಣಕ್ರಮದಿ ಅಧಿಕ ಅಭಿವ್ಯಕ್ತಿಯಿಂ |
ಮುಖ್ಯ ವಾಯು ಬ್ರಹ್ಮಪದವ ಪೊಂದುವರು ೩೬
ಈ ಬ್ರಹ್ಮಾದಿಗಳೊಳು ಇದ್ದು ಕೃತಿಮಾಡಿಸುವ |
ಶಿರಿಸಹ ತ್ರಿವೃನ್ನಾಮ ಪ್ರಸನ್ನ ಶ್ರೀನಿವಾಸ ||
ಸುಹೃದ ಸೌಭಾಗ್ಯದಗೆ ಜಯ ಜಯತು ಅರ್ಪಿತವು |
ಹರಿವಾಯು ನುಡಿಸಿದಿದು ಜಯತು ಹರಿವಾಯ ೩೭

ರಕ್ತಾಕ್ಷಿ ಸಂವತ್ಸರ ಸ್ತೋತ್ರ
೧೫೬
ಶರಣು ಶರಣು ರಕ್ತಾಕ್ಷಿ ವರ್ಷದ ಸ್ವಾಮಿ ಶ್ರೀ ನರಸಿಂಹನೇ ಶರಣು ದುರ್ಗಾರಮಣ ಜಗಜ್ಜನ್ಮಾದಿ ಕಾರಣ ಪಾಹಿಮಾಂ ಪ
ಸರಸಿಜಾಸನ ಶಿವ ಶಕ್ರಾದಿ ಸುರಸುವಂದಿತ ಪಾದನೇ ಶ್ರೀ ರಮಾಯುತನಾಗಿ ನೀ ಸಂವತ್ಸರದ ನಾಯಕರೊಳು ಇರುತ ಪ್ರಜೆಗಳ ಯೋಗ ಕ್ಷೇಮವ ವಹಿಸಿ ಪೊರೆವಿ ದಯಾನಿದೇ ೧
ರಾಜ ಸೋಮನು ಮಂತ್ರಿ ಭೃಗು ಸೇನಾಧಿಪತಿ ಬೃಹಸ್ಪತಿ ಪ್ರಜ್ವಲಿಪರ ವಿಸಸ್ಯ ನಾಯಕ ಶನಿಯು ಧಾನ್ಯ ಅಧಿಪನು ರಾಜರಾಜೇಶ್ವರನೆ ನಿನ್ನ ಆಜ್ಞಯಿಂದ ಚರಿಪರು ೨
ಶರಣು ಭಕ್ತರ ಕಾಯ್ವ ಕರುಣಾ ವಾರಿ ವಿಧಿ ನೀ ಸರ್ವದಾ ತರಿದು ಪಾಪವ ಪುಣ್ಯ ಒದಗಿಸಿ ಭಕ್ತಿ ಜ್ಞಾನ ಆಯುಷ್ಯ ಆರೋಗ್ಯವಿತ್ತು ಕಾಯೋ ಅಜಪಿತ ಪ್ರಸನ್ನ ಶ್ರೀನಿವಾಸನೇ ೩

ಇದೊಂದು ಚಿಕ್ಕ ಕೃತಿಆಗಿದೆ. ಶ್ರೀಹರಿಯ
ಶ್ರೀ ವರಾಹ ನರಹರಿ ಧನ್ವಂತರಿ
೧೫
ಶರಣು ಶರಣು ಶರಣು ಭೂವರಾಹ ಮೂರುತಿ
ಶರಣು ಶರಣು ಧನ್ವಂತರಿ
ಶರಣು ಭಾರತೀರಮಣವಂದ್ಯನೆ ಶರಣು ನೃಹರೆ ಕೃಪಾನಿಧೆ ಪ
ವಾರಿಧಿಯಿಂದ ಕ್ರೂರ ಅಸುರನ
ಮುರಿದು ಧರೆಯನುದ್ಧರಿಸಿದೆ
ಘೋರ ವ್ಯಾಧಿಸಮುದ್ರದಿಂದು –
ದ್ಧರಿಸೊ ಎನ್ನ ಕೃಪಾನಿಧೆ ೧
ಸುರರ ಪೊರೆಯಲು ಅಮೃತ ತಂದೆ
ಪರಮ ಪೂರುಷ ಭೇಷಜ
ಶಿರ ಉರಾದಿ ಸರ್ವ ಅಂಗದಿ
ಸುರಿದು ಅಮೃತವ ಪೊರೆ ಎನ್ನ ೨
ಮೃತ್ಯು ಮೃತ್ಯುವೆ ದಯದಿ ಎನ್ನಪ –
ಮೃತ್ಯು ತರಿದು ಪಾಲಿಸೊ
ನಿತ್ಯ ಸುಖಮಯ ವಿಧಿಯ ತಾತ
ಪ್ರಸನ್ನ ಶ್ರೀನಿವಾಸನೆ ೩

ಶ್ರೀ ವಿಜಯ ದಾಸಾರ್ಯ ಚರಿತ್ರೆ
೧೩೫
ಶರಣು ಶರಣು ಶರಣು ವಿಜಯದಾಸಾರ್ಯರೆ
ಶರಣಾದೆ ತವ ವಾರಿಜಾಂಘ್ರಿಯುಗ್ಮದಲಿ
ಸೂರಿ ಸುರ ಜನ ಗಂಗಾಧರ ವಾಯು ವಿಧಿ ಎನುತ
ಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪ
ಅಶೇಷ ಗುಣಗಣಾರ್ಣವ ಅನಘ ಶ್ರೀರಮಣ
ಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣ
ಹಂಸ ನಾಮಕ ಪರಂ ಬ್ರಹ್ಮ ವಿಧಿ ಸನಕಾದಿ
ದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ ೧
ವ್ಯಾಸರಾಜರ ಮುಖ ಕಮಲದಿಂದುಪದಿಷ್ಟ
ದಾಸರಾಜರು ಪುರಂದರದಾಸಾರ್ಯ
ವಸುಧೆಯಲ್ಲಿ ನಾರದರೇ ಪುರಂದರ ದಾಸರು ಎನಿಸಿ
ಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು ೨
ಹರಿ ಸಮೀರರೂ ಸದಾ ಪ್ರಚುರರಾಗಿಹ
ಪುರಂದರ ದಾಸಾರ್ಯರ ವರ ಶಿಷ್ಯರೇವೆ
ಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರು
ಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು ೩
ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮ
ಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರು
ಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆ
ಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ ೪
ನಮೋ ಬ್ರಹ್ಮ ವಾಯು ವಿಪ ಫಣಿಪ ಶುಕ ಸಂಕ್ರಂದ
ಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿ
ಕಾಮಯುಕ್ ಸೂತ ಗಂಧರ್ವ ನೃಪ ಶ್ರೇಷ್ಠರಿಗೆ
ಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ ೫
ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜ ಪುಂಜ
ಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸ
ಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆ
ತಾನೇ ಸೇವಿಸಿದನು ಭೃಗು ಋಷಿಯು ಅಂದು ೬
ಸುರ ನದಿ ತೀರದಲಿ ಭೂಸುರರು ಋಷಿಗಳು
ಸತ್ರಯಾಗ ಎಂಬಂಥ ಜ್ಞಾನ ಕರ್ಮ
ಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿ
ಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ ೭
ಶೃತಿ ಸ್ರ‍ಮತಿ ಪುರಣೇತಿಹಾಸಾದಿಗಳಲ್ಲಿ
ಅದ್ವಿತೀಯನು ಸರ್ವೋತ್ತಮ ಹರಿ ಶ್ರೀಶ
ಪದುಮಭವ ರುದ್ರಾದಿ ಸುರರು ತಾರ ತಮ್ಯದಲಿ
ಸದಾ ಅವರಂಬುದನು ಪರಿಕ್ಷೆ ಮಾಡಿದರು ೮
ನೇರಲ್ಲಿ ತಾ ಪೋಗಿ ಅರಿತು ಪೇಳಿದರು
ಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತಞ್ನÀಂತರ
ಸರಸಿಜಾಸನ ವಾಣಿ ರುದ್ರಾದಿ ಸುರರು
ತರತಮದಿ ಅವಗ್ವÀರು ಸಂಶಯವಿಲ್ಲ ಎಂದು ೯
ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿ
ಅರುಹಿದಂತೆ ಈಗ ವಿಜಯ ದಾಸಾರ್ಯ
ನಾರದ ಪುರಂದರ ದಾಸಾರ್ಯರನ್ನನುಸರಿಸಿ
ಹರಿ ಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ ೧೦
ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನು
ಧೂರ್ಜಟೆ ಉಮಾಸುತನು ಕ್ಷಿಪ್ರ ಪ್ರಸಾದ
ಗಜ ಮುಖನೆ ಗೋಪಾಲ ದಾಸಾರ್ಯರಾಗಿ
ಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು ೧೧
ಪುರಂದರ ದಾಸಾರ್ಯರು ವಿಜಯರಾಯರಲ್ಲಿ
ಇರುವರು ಒಂದಂಶದಿಂದ ಜ್ವಲಿಸುತ್ತ
ಬರೆಸಿಹರು ಇಪ್ಪತ್ತು ಮೇಲೈದು ಸಾವಿರ
ಶ್ರೀವರನ ಸಂಸ್ತುತಿ ತತ್ವ ಕವಿತೆಗಳ ೧೨
ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂ
ಸುತಪೋನಿಧಿ ಭೃಗು ಮೂಲ ರೂಪದಲು
ತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲು
ಗಾಯತ್ರಿ ನಾಮನ್ನ ಸಂಸೇವಿಸುವರು ೧೩
ಪುರಂದರಾರ್ಯರ ಮನೆಯಲ್ಲಿ ಗೋವತ್ಸ
ತರುವಾಯು ಸುಕುಮಾರ ಮಧ್ವಪತಿಯಾಗಿ
ಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃ
ಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು ೧೪
ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದು
ಹೆಸರುಂಟು ರೂಢಿಯಲಿ ಚೀಕಲಾಪುರಿಯು
ಕುಸುಮ ಭವ ಪಿತ ಅಂಭ್ರಣಿ ಪತಿ ಎನ್ನ
ಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು ೧೫
ಶ್ರೀ ಪದ್ಮನಾಭ ತೀರ್ಥರ ಕರ ಕಂಜದಿಂದ
ಉದ್ಭೂತ ಲಕ್ಷ್ಮೀಧರರ ವಂಶಜರು
ಶ್ರೀಪಾದ ರಾಜರೂ ಈ ಕ್ಷೇತ್ರದಲಿ
ಸ್ಥಾಪಿಸಿದರು ಅಶ್ವತ್ಥ ನರಹರಿಯ ೧೬
ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂ
ಸಂಭೂತ ತುಂಗಾ ಸರಿದ್ವರದ ತೀರ
ಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವು
ಸಂರಕ್ಷಿಸುವ ನಾರಸಿಂಹ ಭದ್ರದನು ೧೭
ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳು
ಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿ
ನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆ
ಶರಣಾದೆ ಪೊರೆಯುತಿಹ ವಾಂಛಿತ ಪ್ರದನು ೧೮
ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿ
ಭೂಸುರವರರು ಶ್ರೀನಿವಾಸಾಚಾರ್ಯರಲಿ
ಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರು
ಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು ೧೯
ಕುಸುಮಾಲಯ ಪದ್ಮಾವತಿ ನೆನಪು ಕೊಡುವ
ಕುಸುಮ ಕೋಮಲ ಮುಖಿ ಆದ ಕಾರಣದಿ
ಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯ
ಈ ಶ್ರೀನಿವಾಸ ಆಚಾರ್ಯ ಕರ ಹಿಡಿದರು ೨೦
ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭ
ಅಬ್ಧಿಯಿಂ ಹುಟ್ಟಿತು ಉತ್ತಮ ರತ್ನ
ಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್
ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ ೨೧
ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆ
ದಾಸಪ್ಪನಲ್ಲದೆ ಇನ್ನೂ ಕೆಲಪುತ್ರರು
ಕೇಶವಾನುಗ್ರಹದಿ ಹುಟ್ಟಿ ಸಂಸಾರದಿ
ಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ ೨೨
ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯು
ಹರಿದತ್ತ ಧನದಲ್ಲಿ ತೃಪ್ತರಾಗುತ್ತ
ಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿ
ಹರಿ ಮಹಿಮೆ ಹೇಳುತ್ತ ಭಕ್ತಿ ಬೆಳಸಿದರು ೨೩
ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆ
ಕರ್ಮ ಸುಳಿಯು ಮೆಲ್ಲ ಮೆಲ್ಲನೆ ತೋರಿ
ಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತ
ಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ ೨೪
ಬದರ ಮುಖ ಬ್ರಹ್ಮವರ್ಚಸ್ವಿ ದಾಸಪ್ಪ
ಹದಿನಾರುವತ್ಸರದ ಬ್ರಹ್ಮಚಾರಿ
ಮಾಧವನೆ ಹಾದಿ ತೋರುವ ತನಗೆ ಎಂದು
ಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ ೨೫
ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿ
ಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯ
ಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯ
ಜಲಜಪಾದಗಳಿಗೆ ಬಾಗಿದರು ಶಿರವ ೨೬
ಆದವಾನಿ ನಗರ ನವಾಬನ ಸರ್ಕಾರ
ಅಧಿಕಾರಿ ಡಾಂಭಿಕ ಓರ್ವನ ಗೃಹದಿ
ಮದುವೆ ಪೂರ್ವದ ದೇವರ ಸಮಾರಾಧನೆಯು
ಹೋದರು ಆ ಮನೆಗೆ ದಾಸಪ್ಪ ಆರ್ಯ ೨೭
ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿ
ಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆ
ಇಂದು ಆದವಾನಿ ಗೃಹಸ್ಥ ದಾಸಪ್ಪನ
ಉದಾಸೀನ ಮಾಡಿದ್ದು ನೂತನಾನುಭವ ೨೮
ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃ
ಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದು
ಆದವಾನೀಯಿಂದ ಹೊರಟು ಮಾರ್ಗದಲಿ
ಇದ್ದ ಛಾಗಿ ಎಂಬ ಗ್ರಾಮ ಸೇರಿದರು ೨೯
ಉಪೋಷಣದಿ ತನುವು ಬಾಡಿದ್ದರೂ ಮುಖ
ಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿ
ಬಪ್ಪ ದಾಸಪ್ಪನ್ನ ನೋಡಿ ಕೇಶವರಾಯ
ಎಂಬ ವಿಪ್ರನು ಕರೆದ ತನ್ನ ಮನೆಗೆ ೩೦
ಛಾಗಿ ಗ್ರಾಮದ ಪ್ರಮುಖ ಕೇಶವರಾಯನು
ಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾ
ಭಗವಂತನ ಶ್ರೇಷ್ಠ ಪ್ರತೀಕ ಇವರೆಂದು
ಭಾಗಿ ಶಿರ ಆತಿಥ್ಯ ನೀಡಿದರು ಮುದದಿ ೩೧
ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿ
ಶ್ರೀ ಮನೋಹರನಿಗೆ ದಾಸಪ್ಪ ಅದನ್ನ
ಸಂಮುದದಿ ನೈವೇದ್ಯ ಅರ್ಪಿಸಿ ಉಂಡರು
ರಮಾ ಪತಿ ನಿತ್ಯ ತೃಪ್ತಗೆ ತೃಪ್ತಿ ಆಯ್ತು ೩೨
ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿ
ಭಿನ್ನ ಕರ್ಮವ ಮಾಡಿ ಮಾಡಿಸುವ ಅನಘ
ಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನ
ಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ ೩೩
ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿ
ದೇವದೇವೋತ್ತಮ ದೇವಶಿಖಾಮಣಿಯ
ಮೂವತ್ತೆರಡು ಮುವತ್ತಾರು ಬಾರಿ ಮೇಲೆ
ಸೇವಿಸಿಹರು ಎಂದು ಕೇಳಿಹೆನು ೩೪
ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂ
ದೇಶದೇಶದಿ ಹರಿಕ್ಷೇತ್ರ ಪೋಗಿಹರು
ಕಾಶೀಗೆ ಮೂರು ಸಲ ಪೋಗಿ ಬಂದಿರುವರು
ಕಾಶಿ ಬದರಿ ನಮಗೆ ಇವರ ಸಂಸ್ಮರಣೆ ೩೫
ಪಂಕೇರುಹೇಕ್ಷಣ ವರಾಹ ವೆಂಕಟ ಪತಿಯ
ವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃ
ತಾ ಕಂಡು ಆನಂದಪುಲಕಾಶ್ರು ಸುರಿಸಿ
ಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು ೩೬
ತಿರುಗಿ ಚೀಕಲಪುರಿ ಬಂದು ಹೆತ್ತವರ
ಚರಣ ಪದ್ಮಗಳಲ್ಲಿ ನಮಿಸಿ ಅಲ್ಲಿ
ನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತ
ಪರಿತೋಷಿಸಿದರು ಗಾರ್ಹ ಧರ್ಮದಲಿ ೩೭
ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ
ರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯ
ವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿ
ನಿಜದಿ ಶರಣು ಶರಣು ಶರಣಾದೇ ಸತತ ೩೮
-ಇತಿಃ ಪ್ರಥಮಾಧ್ಯಾಯಃ-
ದ್ವಿತೀಯಾಧ್ಯಾಯ
ಶರಣು ಶರಣು ಶರಣು ವಿಜಯದಾಸಾರ್ಯರೆ
ಶರಣಾದೆ ತವ ವಾರಿಜಾಂಘ್ರಿಯುಗ್ಮದಲಿ
ಸೂರಿ ಸುರ ಜನ ಗಂಗಾಧರ ವಾಯು ವಿಧಿ ಎನುತ
ಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪ
ತಿರುಪತಿ ಘಟಿಕಾದ್ರಿ ಕಾಶಿ ಮೊದಲಾದ
ಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆ
ಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರು
ವಿಪ್ರರ ಮುಂದೆ ಶುಭ ಮುಹೂರ್ತದಲಿ ತಂದೆ ೧
ಗುಣರೂಪವಂತಳು ವಧು ಅರಳಿಯಮ್ಮ
ಘನಮಹಾ ಪತಿವ್ರತಾ ಶಿರೋಮಣಿಯು ಈಕೆ
ತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿ
ಅನವರತ ಮಾಡುವ ಸೌಭಾಗ್ಯವಂತೆ ೨
ಪುತ್ರೋತ್ಸವಾದಿ ಶುಭ ಸಂಭ್ರಮಗಳು ಆದುವು
ನಿತ್ಯ ಹರಿತುಳಸೀಗೆ ಪೂಜಾ ವೈಭವವು
ತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತು
ಶ್ರೀದಹರಿವಿಠ್ಠಲನು ತಾನೇವೆ ಒಲಿದ ೩
ಧನಸಂಪಾದನೆಗಾಗಿ ಅನ್ಯರನು ಕಾಡದೆ
ಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇ
ದಿನಗಳ ಕಳೆದರು ಹೀಗೆ ಇರುವಾಗ
ಫಣಿಪಗಿರಿವೇಂಕಟನು ಮನದಲ್ಲಿ ನಲಿದ ೪
ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದು
ಹೊರಟರು ವೇಂಕಟನಾಥನ್ನ ನೆನೆದು
ಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿ
ಏರಿದರು ಎರಗಿದರು ನಾರಸಿಂಹನಿಗೆ ೫
ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿ
ಕರೆವರು ಬಾಷಿಂಗನರಸಿಂಹನೆಂದು
ಹರಿದಾಸರಿಗೊಲಿವ ಕಾರುಣ್ಯಮೂರ್ತಿಯು
ಕರುಣಿಸಿದ ಜಗನ್ನಾಥದಾಸರಿಗೆ ಪೀಠ ೬
ದಾಸಪ್ಪ ವಿಜಯದಾಸರು ಆದ ತರುವಾಯ
ಈಶಾನುಗ್ರಹವ ಬ್ಯಾಗವಟ್ಟಿಯವರ್ಗೆ
ಶಿಷ್ಯರದ್ವಾರಾ ಒದಗಿ ಜಗನ್ನಾಥ
ದಾಸರಾಗಿ ಮಾಡಿಹರು ಪರಮದಯದಿಂದ ೭
ನರಸಿಂಹನಪಾದ ಭಜಿಸಿ ಅಲ್ಲಿಂದ
ಗಿರಿ ಅರೋಹಣವನ್ನ ಮುಂದುವರಿಸಿ
ಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆ
ವರ ಅಂಜನಾಸೂನು ಹನುಮಗೆರಗಿದರು ೮
ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನ
ಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿ
ಮಹಾದ್ವಾರದಲಿ ಕರಮುಗಿದು ಉತ್ತರದಿ
ಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು ೯
ಭೂರ್ಭುವಃ ಸ್ವಃಪತಿ ಭೂಧರ ವರಾಹನ್ನ
ಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯ
ಇಭರಾಜವರದನ್ನ ಸ್ಮರಿಸುತ್ತ ಸುತ್ತಿ
ಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ ೧೦
ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನ
ಭೂಧರನ್ನ ನೋಡುತ್ತ ನಿಂತ ಹನುಮನ್ನ
ವಂದಿಸಿ ಮಹಾದ್ವಾರ ಸೇರಿ ಕೈಮುಗಿದು
ಇಂದಿರೇಶನ ಆಲಯದೊಳು ಹೋದರು ೧೧
ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದು
ಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿ
ಒಳಹೋಗೆ ಅಪ್ಪಣೆ ಜಯವಿಜಯರ ಕೇಳಿ
ಬಲಗಾಲ ಮುಂದಿಟ್ಟು ಹೋದರು ಒಳಗೆ ೧೨
ಬಂಗಾರ ಬಾಗಿಲ ದಾಟಲಾಕ್ಷಣವೇ
ಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟ
ಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟ
ಗಂಗಾಜನಕ ವೆಂಕಟೇಶನ್ನ ನೋಡಿದರು ೧೩
ಆನಂದಜ್ಞಾನಮಯ ಪಾದಪಂಕಜತತ್ರ
ಸುನೂಪುರ ಉಡಿ ವಡ್ಯಾಣ ಕೌಶೇಯ
ಮಿನುಗುವಾಂಬರ ಸಾಲಿಗ್ರಾಮದ ಹಾರ
ಘನ ಮಹಾ ಹಾರಗಳು ಸರಿಗೆ ವನಮಾಲೆ ೧೪
ಶ್ರೀವತ್ಸ ಕೌಸ್ತುಭಮಣಿ ವೈಜಯಂತೀ
ದಿವ್ಯ ಪ್ರಜ್ವಲಿಸುವ ಪದಕಂಗಳು
ಕಿವಿಯಲ್ಲಿ ಮಿಂಚಿನಂದದಿ ಪೊಳೆವ ಕುಂಡಲ
ಸರ್ವಾಭರಣಗಳ ವರ್ಣಿಸಲು ಅಳವೇ ೧೫
ಅಕಳಂಕ ಪೂರ್ಣೇಂದು ಮುಖಮುಗುಳುನಗೆಯು
ಕಂಗಳು ಕಾರುಣ್ಯ ಸುರಿಸುವನೋಟ
ಕಾಕು ಇಲ್ಲದ ನೀಟಾದ ಫಣೆ ತಿಲಕವು
ಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ ೧೬
ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನ
ಮಹಾನಂದದಿ ನೋಡಿ ಸನ್ನಮಿಸಿ ಮುದದಿ
ಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿ
ಮಹಾಪ್ರಾಕಾರದಲಿ ಕೊಂಡರು ಪ್ರಸಾದ

ಶ್ರೀ ಕಂಚಿ ಕಾಮಾಕ್ಷಿ
೮೨
ಶರಣು ಶರಣು ಶರಣು ಶರಣು ಕಾಮಾಕ್ಷಿ
ಶರಣು ಮೋಹಿನಿ ಮಾ ವಾಣಿ ಶರ್ವಾಣಿ ಪ
ಹರಿ ಸಿರಿ ಸರಸ್ವತಿ ಸಹ ಪ್ರಜ್ವಲಿಸುವೆ
ಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪ
ಏಕಾತ್ಮಾನಂದಮಯ ನಿಖಿಳ ಗುಣಾರ್ಣವ
ಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆ
ಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾ
ರಕರಿಗೆ ಪೀಯೂಷ ಕರುಣಿಸಿ ಉಣಿಸಿದೆ ೧
ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆ
ಕಮಲಾಸನಾದಿ ಸುಮನಸವಂದಿತೆ ತ್ರಾತೆ
ಕಮಲನಾಭನ ಸೇವೆ ವನಮಾಲೆ ಚಾಮರಾ
ದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ ೨
ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅ
ಧೋಕ್ಷಜ ಸರ್ವಾಂತರಾತ್ಮನ ತೀವ್ರ
ಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತು
ರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ ೩
ಹೇಮ ಅಂಕುಶ ಪಾಶ ಇಕ್ಷುದಂಡವು ಪುಷ್ಪ
ಕೋಮಲಹಸ್ತ ೨ ನಾಲ್ಕಲ್ಲಿ ಶೋಭಿತವು
ಕಾಮಿತವರಪ್ರದೆ ಕಾತ್ಯಾಯನಿ ಉಮಾ
ಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ ೪
ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್
ಸೂತ್ರವು ಮಣಿಗಳೊಳಂತೆ ಧಾರಕ ಹರಿ
ವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸ
ಗತಿ ಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ ೫

ಸಿದ್ಧಿ ಪ್ರದಾಯಕನೂ ಆದ ಸಿದ್ಧಿ ವಿನಾಯಕನಿಗೆ
ಶ್ರೀ ಕ್ಷಿಪ್ರ ಪ್ರಸಾದ ಗಣೇಶ

ಶರಣು ಶರಣು ಶರಣು ಸಿಧ್ಧಿ ವಿನಾಯಕ
ಶರಣು ಸಿಧ್ಧಿ ಪ್ರದಾಯಕ ಪ
ಸ್ಕಂಧ ಅನುಜನೆ ಬಂದು ಈಗನೇ
ಅಂದದಿ ಎನ್ನ ಪಾಲಿಸೋ
ರಕ್ತವರ್ಣ ಸುರೇಶ್ಮಿ ವಸನನೆ ೧
ಉದಯ ಭಾಸ್ಕರ ತೇಜನೇ
ಅಜನ ತಾತ ಪ್ರಸನ್ನ ಶ್ರೀನಿವಾಸನಿಗೆ
ನಿಜದಾಸ ಗಜಮುಖ ೨

ಶ್ರೀ ಶುಕಮುನಿ ಸ್ತೋತ್ರ (ಗುಪ್ತ)
೯೭
ಶರಣು ಶುಕಮುನಿರಾಯ ಶರಣು ಮಾಂಪಾಹಿ ಪ
ಕಾರ್ತಿಕ ಸಿತತದಿಗೆ ಗುರುಬ್ರಾಹ್ಮಿ ಶ್ರವಣದಲಿ
ಅತಿವಿಮಲ ತವರೂಪ ತೋರಿದಿಯೋ ಕರುಣಿ ೧
ಬಲಿ ಶಕ್ರವರದ ಬಲಿ ಫಲಿಯನೀಕಂಡೆನ್ನ
ಪಾಲಿಪುದಕೆ ದಯದಿ ಬಲದಿಂದ ಬಂದ್ಯಾ ೨
ವೇಧಪಿತ ಪ್ರಸನ್ನ ಶ್ರೀನಿವಾಸನ ಗುಣಗಾನ
ಸ್ವಾದು ಸುಧೆ ಸುರಿಸುತ್ತ ಶ್ರೀ ವಿಜಯ ಕೊಡುತಿ ೩
|| ಶ್ರೀಮಧ್ವಾಂತರ್ಗತ ಕೃಷ್ಣಾರ್ಪಣಮಸ್ತು ||

ಕೇರಳ ಪ್ರಾಂತ್ಯದ ತ್ರಿಚೂರು ನಗರಕ್ಕೆ
ಶ್ರೀ ಧರ್ಮಪುರಿ ಕ್ಷೇತ್ರ ಪರವಾಸುದೇವ ಸ್ತೋತ್ರ
೬೧
ಶರಣು ಹೊಕ್ಕೆನೋ ನಿನ್ನ |
ಪರವಾಸುದೇವನೇ ಪಾಲಿಸೆನ್ನಲಿ ಕೃಷ್ಣ |
ಕರಿರಾಜವರದನೇ ಶರಣ ವತ್ಸಲ ಘನ್ನ |
ಭಕ್ತಜನ ಪ್ರಸನ್ನ |
ಉರುಗುಣಾರ್ಣವ ವೇದವೇದ್ಯನೆ |
ಶಿರಿ ಕರಾಂಬುರುಹಾಚೀತಾಂಘ್ರಿ |
ಸರೋಜ ವಿಧಿ ಶಿವಾದ್ಯಮರ ವಂದ್ಯನೆ ಸರ್ವಕರ್ತಾ
ಶರಣುಹೊಕ್ಕೆನೋ ನಿನ್ನ|| ಪ
ಮೀನ ಕೂರ್ಮ ವರಾಹ | ಚಿನ್ಮಾತ್ರವಪುಷವೀರಭದ್ರ ನೃಸಿಂಹ ||
ಬಲಿರಾಯಗೊಲಿದು ಕೆಡಹಿದೈತ್ಯ ಸಮೂಹ ||
ದುಷ್ಟನೃಪರ ಸೀಳಿ ಬಿಸುಟು ಬ್ರಹ್ಮ | ಕುಲವರವಾಯು ಮಹಾರ್ಹ
ಹನುಮಪ್ರಿಯರವಿ ಸುತ ವಿಭೀಷಣರಿಗೆ ನೀ ಅಭಯನೀಡಿ ಪಾಂಡು –
ತನಯರು ದ್ರೌಪದೀ ವಿದುರ ಉದ್ಧವ ಇನ್ನು
ಬಹು ಸಜ್ಜನರಿಗೊಲಿದು ||
ಜನಜನೆನಿಸಿದಿ ದೈತ್ಯಮೋಹಕ ಸುರಸುಬೋಧಕ ಬುದ್ಧಶರಣು |
ಕ್ಷೋಣಿಯಲ್ಲಿ ಚೋರರಾಜರ ಸದೆದು –
ಧರ್ಮಸ್ಥಾಪಿಸಿದಿ ಹೇ ಕಲ್ಕಿ ನಮೋ ನಮೋ ಪಾಹಿ ಸಂತತ ೧
ಸರ್ವಗತ ಸರ್ವೇಶ | ಸರ್ವೇಶ್ವರನು ನೀನೇ ಕಾಲವಸ್ತುದೇಶ ||
ಸರ್ವತ್ರಒಳಹೊರ ವ್ಯಾಪ್ತನಾಗಿಹ ಶ್ರೀಶ ||
ಶ್ರೀತತ್ವ ನಿನ್ನಲಿ ಓತಪ್ರೋತಮಹೇಶ | ಅಕರನೇನಿರ್ದೋಷ ||
ಸಚ್ಚಿತ್ ಸುಖಮಯ ಆತ್ಮಾಪ್ರೇದಕ್ಕೂ ಅಮಿತ ಸತ್ಕಲ್ಯಾಣಗುಣನಿಧೇ ||
ಸರ್ವಜಗಚ್ಚೇಷ್ಟೆಯನು ಗೈಸುತಿ ಸ್ವಪ್ರಯೋಜನ ರಹಿತಸ್ವಾಮಿಯೇ |
ಅಜಿತರುಚಿರಾಂಗದನೇ ಸ್ವಾಸ್ಯನೇ ಸರ್ವಭೂತಾಂತರಾತ್ಮನೇ ||
ಅಚ್ಯುತನೇ ಸಂಪೂರ್ಣ ಕಾಮನೇ ಅತಿಜ್ಞಾನ ವೈರಾಗ್ಯ ಸಂಪತ್‍ದಾತ
ಕರುಣಿ | ಗುರುವೇಂಕಟ || ಶರಣು || ೨
ಧರ್ಮಪುರಿಯಲ್ಲಿರುತ್ತಿ | ಶೇಷಶಯನನೇ
ನಮೋ ಪರವಾಸುದೇವ ಪ್ರಮೋದಿ ||
ಮದ್ದೋಷ ಕಳೆದು ಸದ್ಧರ್ಮದಲಿ ಇಡು ದಯದಿ |
ವೃಷಾತಪಿಯೇ ಕಪಿತನಾಮಕನಮೋ ಆನಂದಿ ನಂದಾ ನಂದನ ನಂಹಿ
ಜಗದಾಧಾರ ಶ್ರೀಕೂರ್ಮನಭ ಅರ್ಕಾದಿ ಧಾರಕ ಶಿಂಶುಮಾರನೇ
ಸಾಗರವು ಭೂಮಿಯನು ನುಂಗದೇ ಹಿಂದೆ ಸೆಳೆದು ಧರೆಯರಕ್ಷಿಪ ||
ಸಾಗರದಲ್ಲಿರುವ ವಡವಾವತ್ತಅಗ್ನಿನೀನು ಸವತ್ರ ಹರವು |
ಮುಖ್ಯ ರಕ್ಷಕ ವೇಧತಾತ ಪ್ರಸನ್ನ ಶ್ರೀನಿವಾಸ ಶ್ರೀಪತಿಗರುಡಕೇತನ
ಶರಣು ಹೊಕ್ಕೆನೋನಿನ್ನ ೩

ಶ್ರೀ ಶುಕ್ಲನಾಮ ಸಂವತ್ಸರ ಸ್ತೋತ್ರ
೧೪೭
ಶುಕ್ಲ ಸಂವತ್ಸರದ ಮುಖ್ಯ ಸ್ವಾಮಿಯು ಸುಖಪೂರ್ಣ ಶೋಕಾದಿ ದೋಷ ದೂರ ಶ್ರೀ ಉಪೇಂದ್ರನಿಗೆ ಆನಮಿಸುವೇ ಪ.
ದೇವಗುರು ಬೃಹಸ್ಪತಿ ದೇವೇಂದ್ರ ಮೊದಲಾದ ಸರ್ವ ದೇವ ವಿಧ ಶಿವ ವಿಧ ಸೇವ್ಯ ಶ್ರೀ ಲಕ್ಷ್ಮೀಶ ಸರ್ವೇಶನು ತಾನೆ ಈ ವರುಷರಾಜ ಶುಕ್ರನೊಳು ಮತ್ತು ವರುಷ ನಿತ್ಯ ನಾಯಕರು ಸಚಿವ ಸೇನಾ ಸಸ್ಯ ರಸ ನಿರಸಾಧಿ ಪತಿಗಳೊಳಾಗಿರುವ ೧
ಇದ್ದು ಶೃತಿಗಳ ನಡೆಸಿ ಲೋಕ ಜನರಿಂದ ವಿಹಿತಾ ವಿಹಿತ ಸಾಧನ ಗೈಸಿ ಸಜ್ಜನರಿಗೆ ಕಷ್ಟ ಬಾರದೇ ಕಾಯುವ ಸಾಧು ಸಾಧನ ಮಾಳ್ಪದಕೆ ಅನುಕೂಲ ಶುಕ್ಲ ಸಂವತ್ಸರ ಸಂತಾಪ ಸಿಡಿಲು ಗಾಳಿ ಔಷ್ಣವ ಜಯಿಸಬಹುದು ಹರಿದಯದಿ ೨
ಚೌರ್ಯ ಅಸತ್ಯ ನಿಂದಾ ನಿಷ್ಠುರ ದುಷ್ಟ ತನಾದಿಗಳು ಸಂತ್ಯಜಿಸಿ ಪತಿ ತಾಯಿ ತಂದೆ ಗುರು ಸೇವಾ ಹರಿ ಪೂಜೆ ಕಾಯ ವಾಙ್ಮನದಿಂದ ಮಾಳ್ಪರಿಗೆ ಮಧ್ವ ಹುದಬ್ಜಗನು ತೋಯಜಾಸನ ಪಿತ ಪ್ರಸನ್ನ ಶ್ರೀನಿವಾಸ ಒಲಿದು ಸಂರಕ್ಷಿಸುವನು ೩
| ಶ್ರೀ ಕೃಷ್ಣಾರ್ಪಣಮಸ್ತು |

ಶ್ರೀ ಶೇಷ ಚಂದ್ರಿಕಾರ್ಯರ ಸ್ತೋತ್ರ
೧೦೬
ಶೇಷಚಂದ್ರಿಕಾ ಆರ್ಯರೇ ಶರಣು ಶೇಷಚಂದ್ರಿಕಾ
ಶೇಷಶಾಯಿ ನಿರ್ದೋಷ ಗುಣಾಂಬುಧಿ ಶ್ರೀಶಗೆ –
ಪ್ರಿಯ ರಘುನಾಥ ಯತೀಂದ್ರ –
ಇಂದಿರಾ ಸಹ ಹಂಸ ಬೋಧಿತ ಪ
ಮಂದಜಭವ ಸನಕಾದ್ಯರ ವಂಶಜಾ
ನಂದ ಮುನೀಂದ್ರ ಪರಂಪರ ಲಕ್ಷ್ಮಿ
ನಾರಾಯಣ ಯೋಗೀಂದ್ರ ಸಂಜಾತ ಶೇಷಚಂದ್ರಿಕಾರ್ಯರೇ ೧
ಭೈಷ್ಮಿ ಮೈಥಿಲಿ ಈಶ ಶ್ರೀ ಕೃಷ್ಣ ರಾಮನ್ನ
ತೋಷಿಸಿ ತಂತ್ರ ಸುಸಾರದಿ ಅರ್ಚಿಸಿ
ಭಾಷ್ಯ ದೀಪಿಕಾರ್ಯ ತತ್ ಶಿಷ್ಯ ಶಿಷ್ಯ ಜಗನ್ನಾಥ
ಯತಿ ಸಂಸೇವಿತ ಕಾವೇರಿ ನರ –
ಸಿಂಹ ಕ್ಷೇತ್ರದಿ ಇಷ್ಟ ಶೇಷಚಂದ್ರಿಕಾ ಆರ್ಯರೇ ಶರಣು ೨
ಬಂಧು ಭಯದಿಂದ ಹೊರನಿಂದೆ ಮಂದನ್ನ
ದಯದಿಂದ ಒಳಕರತಂದು ಸದನುಸಂಧಾನ
ಒದಗಿಸಿ ಅರವಿಂದಜ ತಾತ
ಪ್ರಸ್ನನ ಶ್ರೀನಿವಾಸ ಪ್ರಿಯಕರ ನರಾಂಶ ಸಂಯತ ಗುರುವರ –
ಮಹಂತ ಶರಣು – ೩ ಪ

ಶ್ರೀ ಶೇಷದೇವರು
೭೩
ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ಶೇಷದೇವ ಪ
ಷಡ್ಗುಣೈಶ್ವರ್ಯಪೂರ್ಣ ಕೇವಲಾನಂದರೂಪ
ಜಡಜಾಕ್ಷ ಜಯೇಶನಿಗೆ ಪರ್ಯಂಕ ನಮೋ ನಮೋ ೧
ದ್ಯುಭ್ವಾದಿಗಳಿಗಾಧಾರ ವೇದವತೀಶ ಕೂರ್ಮ
ವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ ೨
ಗಿರಿಸಿಂಧುಯುತಧರೆ ಬ್ರಹ್ಮಾಂಡ ಸರ್ವವ
ಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು ೩
ಖದ್ರೂಜಾದಿ ವಿಷ ಸರ್ವದೋಷವೆನಗೆ ತಗಲದಂತೆ
ಕರ್ದಮರ ಸುತನಲ್ಲಿ ಭಕ್ತಿಜ್ಞಾನ ಸತತವೀಯೊ ೪
ಶ್ರಷ್ಟಿಧರ ಶುಕ್ಲವರ್ಣ ಸಹಸ್ರಫಣಿ ನೀಲವಾ¸
ಸೃಷ್ಟಿಕರ್ತ ವೇಧತಾತ ಪ್ರಸನ್ನ ಶ್ರೀನಿವಾಸನ ತೋರೊ ೫

ಶ್ರೀತಾಂದೊಣಿ ವೆಂಕಟರಮಣ
ಶ್ರೀ ನಾಮಗಿರಿ ಅಮ್ಮ
೬೩
ಶ್ರೀ ನಾಮಗಿರಿ ಅಮ್ಮ ನಿನ್ನ ನಾ ನಂಬಿದೆ ಸಲಹೆನ್ನ
ಶ್ರೀ ನರಸಿಂಹನ ನಿಜಸತಿ ಶುಭಕರಿ
ವನರುಹಜಾಂಡದ ಜನನಿ ಭೂ ಅಂಭ್ರಣಿ ಅ.ಪ
ಬೊಮ್ಮನ ಪ್ರಳಯದಲಿ ಕಮಲಜ ಆಲದ ಎಲೆಯಾಗಿ
ಸ್ವಾಮಿ ಸ್ವಾಪ್ಯನ ಬಹುನಂದದಿ ಸ್ತುತಿಸಿ
ಸಮಸ್ತಜಗತ್ ಸತ್ರ‍ಸಷ್ಟಿಯ ಗೈಸಿದೆ ೧
ಕ್ಷೀರಾಂಬುಧಿಯಿಂದ ತೋರಿ ನೀ ಸರ್ವಜನರ ಮುಂದೆ
ನಾರ ಅಜಿತ ಸರ್ವೋತ್ತಮ ಹರಿಗೆ ನೀ
ನಿರಂತರ ನಿಜಸತಿಯೆಂದು ಪ್ರಕಟಿಸಿದೆ ೨
ಘನ ಬಾಲಭಕ್ತನಿಗೆ ಒಲಿದ ವೃತಿತಿಜಾಸನ ಪಿತನು
ಹನುಮವಂದಿತ ಶ್ರೀ ಪ್ರಸನ್ನ ಶ್ರೀನಿವಾಸ
ನರಸಿಂಹನ ಸಹ ಭಕ್ತಜನರ ಪೊರೆವೆ ೩

ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ
೧೦೩
ಪ್ರಥಮ ಕೀರ್ತನೆ
ಶ್ರೀ ಪಾದರಾಜಗುರು ಸಾರ್ವಭೌಮರ ಪಾದ
ನಾಪೊಂದಿ ಶರಣಾದೆ ಎಮ್ಮ ಪಾಲಿಪರು
ಶ್ರೀಪ ನರಹರಿ ಶಿಂಶುಮಾರ ಹಯಮುಖರಾಮ
ಗೋಪಿವಲ್ಲಭ ರಂಗ ಒಲಿದಿಹ ಮಹಂತಪ
ಶ್ರೀ ಹಂಸ ಲಕ್ಷ್ಮೀಶನಾಭಿ ಭವ ಸನಕಾದಿ
ಮಹಂತ ದೂರ್ವಾಸಾದಿಗಳ ಗುರು ಪರಂಪರೆಯ
ಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ –
ರುಹ ಪಾದಗಳಲಿನಾ ಶರಣು ಶರಣಾದೆ ೧
ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕ
ಕಲುಷವಾದಗಳಲ್ಲಿ ಮನಸೋತು ಪೋಗೆ
ಳಾಳುಕನ ಪರಮಪ್ರಸಾದ ಹೊಂದುವ ಜ್ಞಾನ
ಇಳೆಯಲಿ ಮಧ್ವ ಬೋಧಿಸಿದ ಅವತರಿಸಿ ೨
ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವ
ಹರಿ ಆಜÉ್ಞಯಲಿ ಸುಜನರನುದ್ದರಿಸೆ ಜನಿಸಿ
ಪರಮ ಸತ್ತತ್ವವಾದ ಅರುಪಿ ಬದರಿಗೆ
ತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ ೩
ವೈದಿಕ ಸದಾಗಮದಿ ಬೋಧಿತ ತಾತ್ವಿಕ
ದ್ವೈತ ಸಿದ್ಧಾಂತದ ಆದಿಗುರು ಮಧ್ವ
ಬದರಿಗೆ ತೆರಳಲು ಶ್ರೀ ಪದ್ಮನಾಭ –
ತೀರ್ಥರಾರೋಹಿಸಿದರು ಮಧ್ವಮಠ ಪೀಠ ೪
ಈ ಆದಿಮಠ ಗುರು ಪರಂಪರೆಯು ನರಹರಿ
ತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥ
ಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವ
ಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ ೫
ವಿದ್ಯಾಧಿರಾಜರು ಜಯತೀರ್ಥಜಾತರು
ವರ್ಧಿಸಿದರು ಈ ಆದಿ ಮಠವನ್ನ
ಆದಿಮಠ ಭಿನ್ನಾಂಶ ಮಠಗಳು ಪಂಕಜನಾಭ
ಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು ೬
ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾ
ಆದರದಿ ಶರಣಾದೆ ಸಂತೈಪರೆಮ್ಮ
ಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿ
ಮೊದಲನೇಯವರು ಶ್ರೀ ಲಕ್ಷ್ಮೀಧರರು ೭
ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರು
ಮಾಲೋಲ ಶ್ರೀರಂಗನಾಥನ ಪ್ರಿಯ
ಶೀಲ ಯತಿವರ ಸ್ವರ್ಣವರ್ಣತೀರ್ಥರು ಅವರ
ಜಲಜಕರಜಾತ ಶ್ರೀಪಾದರಾಜಾರ್ಯ ೮
ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರ
ಕಾಲಿಗೆ ಎರಗುವೆ ಕರುಣಾಶಾಲಿಗಳು
ಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವು
ಬಲ್ಲನೆ ನಾನು ವರ್ಣಿಸಲು ಘನತರವು ೯
ಯತಿರಾಜರಿವರ ಮಹಿಮೆ ಬಹು ಬಹು ಬಹಳ
ವೇದ್ಯ ಎನಗೆ ಅತಿ ಸ್ವಲ್ಪವೇವೇ
ಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದು
ಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು ೧೦
ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿ
ಚೆನ್ನಪಟ್ಟಣಕೆರಡು ಕ್ರೋಶದೊಳಗೇವೇ
ಸಣ್ಣ ಗ್ರಾಮವು ಅಬ್ಬೂರು ಎಂಬುದುಂಟು
ಕಣ್ವತೀರ್ಥಾಭಿಧ ಪುಣ್ಯನದೀತೀರ ೧೧
ವಿದ್ಯಾಧಿರಾಜರ ಕರಕಮಲೋತ್ಪನ್ನರು
ವೇದ ವೇದಾಂತ ಕೋವಿದರುಗಳು ಈರ್ವರು
ವಿದ್ಯಾಧಿರಾಜ ಈರ್ವರಲಿ ಪೂರ್ವಜರು
ವಾದಿಗಜ ಸಿಂಹ ರಾಜೇಂದ್ರ ಯತಿವರರು ೧೨
ರಾಜೇಂದ್ರ ತೀರ್ಥಜ ಜಯಧ್ವಜರ ಹಸ್ತ
ಕಂಜ ಸಂಜಾತ ಪುರುಷೋತ್ತಮ ತೀರ್ಥರು
ರಾಜರಾಜೇಶ್ವರ ಪಟ್ಟಾಭಿರಾಮನ್ನ
ಪೂಜಿಸುತ ಇದ್ದರು ಅಬ್ಬೂರಿನಲ್ಲಿ ೧೩
ಪುರುಷೋತ್ತಮಾರ್ಯರ ಮಹಿಮೆ ನರರಿಂದ
ಅರಿವುದಕೆ ಸಾಕಲ್ಯ ಶಕ್ಯವು ಅಲ್ಲ
ಶಿರಿವರನ ಪೂರ್ಣಾನುಗ್ರಹಕೆ ಪೂರ್ಣ
ಪಾತ್ರರಾಗಿಹ ಈ ಕರುಣಿಗೆ ಶರಣು ೧೪
ಘೃಣಿ ಸೂರ್ಯ ಆದಿತ್ಯ ತೇಜಸ್ಸಲಿ ಬೆಳಗುವ
ವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನ
ತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯ
ಅನಘ ನಾಮವನಿತ್ತು ಪ್ರಣವ ಉಪದೇಶಿಸಿದರು ೧೫
ವಾಜಿ ವಕ್ತ್ರನು ನರಸಿಂಹ ವಿಠಲನು
ಯಜ್ಞ ವರಾಹ ಶ್ರೀರಾಮ ಯದುಪತಿಯ
ಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವ
ಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ ೧೬
ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನ
ಕುರಿತು ಬರುತಿಹರು ಸ್ವರ್ಣವರ್ಣ
ತೀರ್ಥರು ಆಗ ಸಾಯಂಕಾಲ ಇನ್ನೆಷ್ಟು
ದೂರವೋ ಎಂದು ಶಂಕಿಸಿದರು ಮನದಿ ೧೭
ಮಾರ್ಗದಲಿ ದನಗಳ ಮೇಸುವ ಬಾಲಕರೊಳು
ಅಕಳಂಕ ವರ್ಚಸ್ವಿ ಹುಡುಗ ಓರ್ವನ್ನ
ತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರು
ಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು ೧೮
ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿ
ಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿ
ಅಹಂ ಮಾ ಎಂದು ಕೂಗೋ ಧೇನುಗಳ ನೋಡಿ
ಬಹು ಸಮೀಪವು ಗ್ರಾಮ ಎಂದು ಸೂಚಿಸಿದ ೧೯
ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿ
ಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದು
ಭಾಸವಾಗಿ ಲೋಕರೀತಿಯಲಿ ಕೇಳಿದರು
ಹೆಸರು ಏನು ಯಾರ ಮಗ ಮನೆ ಎಲ್ಲಿ ೨೦
ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದ
ಅಮ್ಮಗಿರಿಯಮ್ಮನು ತಂದೆಯು ಶೇಷಗಿರಿ
ಲಕ್ಷ್ಮೀನಾರಾಯಣಾಭಿದನು ತಾನೆಂದು
ಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ ೨೧
ಕ್ರಮದಿ ಬರೆ ಓದು ವಿದ್ಯೆ ಕಲಿಯದಿದ್ದರೂ
ಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸ
ಸುಮಹಾ ಪೂರ್ವಸಾಧನದಿ ಎಂದರಿತರು
ಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು ೨೨
ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದ
ಉಪಚಾರಗಳನ್ನು ಕೊಂಡು ಬಾಲ
ತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆ
ಒಬ್ಬ ಬಾಲನು ತಮಗೂ ಬೇಕೆಂದರು ೨೩
ತಥಾಸ್ತು ಎನ್ನುತಲಿ ಪುರುಷೋತ್ತಮರ
ತಂದೆ ತಾಯಿಗಳನ್ನು ಕರೆತರಿಸಿ ಬೇಗ
ಮುದದಿ ಮಾಡಿದರು ಲಕ್ಷ್ಮೀನಾರಾಯಣಗೆ
ವೇದಾಧಿಕಾರ ಬರುವಂಥ ಉಪನಯನ ೨೪
ಬಹ್ಮೋಪದೇಶಾದಿ ಮಂತ್ರೋಪದೇಶಗಳು
ವಿಹಿತ ರೀತಿಯಲ್ಲಿ ಆದ ತರುವಾಯ
ಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸ
ಮಹಾ ಪ್ರಣವ ಉಪದೇಶ ಕೊಟ್ಟರು ಗುರುವು ೨೫
ಗುರು ಸ್ವರ್ಣವರ್ಣ ತೀರ್ಥರು ವಾತ್ಸಲ್ಯವ
ಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥ
ಆಶ್ರಮೋಚಿತ ನಾಮ ಕೊಟ್ಟು ಬಾಲನ್ನ
ಸೇರಿಸಿಕೊಂಡರು ತಮ್ಮ ಪರಂಪರೇಲಿ ೨೬
ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯ
ಕಂದನು ದನ ಮೇಸೋ ಲಕ್ಷ್ಮೀನಾರಾಯಣ
ಇಂದು ಲಕ್ಷ್ಮೀನಾರಾಯಣ ತೀರ್ಥರಾಗಿ
ವೇದಾಂತ ಸಾಮ್ರ್ರಾಜ್ಯ ಯುವರಾಜನಾದ ೨೭
ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು –
ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀ
ಧರಾದಿ ಗುರುಗಳಿಗೂ ಸುವರ್ಣವರ್ಣರಿಗೂ
ಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ ೨೮
ರಾಜೀವ ಭವ ಪಿತ ರಾಜರಾಜೇಶ್ವರನು
ರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸ
ಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದ
ರಾಜರೊಳು ಇವರಲ್ಲಿ ಶರಣು ಶರನಾದೆ೨೯ ಪ
-ಪ್ರಥಮ ಕೀರ್ತನೆ ಸಂಪೂರ್ಣಂ-
ದ್ವಿತೀಯ ಕೀರ್ತನೆ
ಶ್ರೀ ಪಾದರಾಜಗುರು ಸಾರ್ವಭೌಮರ ಪಾದ
ನಾಪÉÇಂದಿ ಶರಣಾದೆ ಎಮ್ಮ ಪಾಲಿಪರು
ಶ್ರೀಪ ನರಹರಿ ಶಿಂಶುಮಾರ ಹಯಮುಖರಾಮ
ಗೋಪೀವಲ್ಲಭ ರಂಗ ಒಲಿದಿಹ ಮಹಂತ ಪ
ಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆ
ಆಮ್ನಾಯ ನಿಗಮಾಂತ ವಿದ್ಯೆಗಳ ಕಲಿಸೆ
ಘನ ಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿ
ಸಣ್ಣ ಯತಿ ಪ್ರಖ್ಯಾತರಾದರು ಜಗದಿ ೧
ವಿಭುದೇಂದ್ರ ರಘುನಾಥ ಮೊದಲಾದ ಯತಿವರರು
ಈ ಬಾಲಯತಿಯ ಪಾಂಡಿತ್ಯ ಪ್ರಭಾವವ
ಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ
‘ಶ್ರೀಪಾದ ರಾಜರು’ ಎಂದು ವರ್ಣಿಸಿದರು ೨
ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರ
ಮಂದಿಗಳು ವಿದ್ವಜ್ಜನರು ಸಜ್ಜನರು
‘ಆನಂದ ಉತ್ಸಾಹದಿ ಶ್ರೀಪಾದರಾಜ’
ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ ೩
ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹ
ರಂಗನಾಥನ್ನ ಕಂಡು ಸ್ಥಾಪಿಸಿ ಮಠವ
ಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತ
ತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ ೪
ವರುಷಗಳು ಜರಗಿತು ಶ್ರೀಪಾದರಾಜರು
ಊರು ಊರಿಗೆ ದಿಗ್ವಿಜಯವ ಮಾಡುತ್ತ
ಪರ ಪಕ್ಷ ಕುಮತಗಳ ಛೇದಿಸಿ ಸತ್ತತ್ವ
ಆರುಪಿದರು ಯೋಗ್ಯಾಧಿಕಾರಿಗಳಿಗೆ ೫
ಮುಳಬಾಗಿಲು ಎಂದು ಆಧುನಿಕರು ಕರೆವಂಥ
ಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತ
ಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾ
ಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ ೬
ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತ
ಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನು
ಬಾಲೇಂದು ಶೇಖರನು ಗಿರಿಜಾ ಸಮೇತ
ಶೈಲ ತೋಟಗದ್ದೆ ಅಟವಿಗಳು ಇಹವು ೭
ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿ
ವರ ಮಧ್ವಸಿದ್ಧಾಂತ ಜಯ ಶಿಲಾ ಲಿಖಿತ
ಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇ
ಭಾರಿತರ ವಾದವು ನಡೆಯಿತು ಹಿಂದೆ ೮
ಶ್ವೇತಕೇತು ಉದ್ದಾಲಕರ ಸಂವಾದ
ತತ್ವಮಸಿ ವಾಕ್ಯವೇ ವಾದ ವಿಷಯ
ವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರು
ವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ ೯
ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯ
ಸ ಆತ್ಮಾ ತತ್ವಮಸಿ ಎಂಬುವಂಥಾದ್ದು
ಭೇದ ಬೋಧಕವೋ ಅಭೇದ ಬೋಧಕವೋ
ಎಂದು ವಾದವು ಆ ಈರ್ವರಲ್ಲಿ ೧೦
ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂ
ಭೇದವೇ ಬೋಧಿಸುವುದು ಆ ವಾಕ್ಯವೆಂದು
ಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರು
ಸೋತಿತು ವಿದ್ಯಾರಣ್ಯರ ಐಕ್ಯವಾದ ೧೧
ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರು
ವಿದ್ಯಾರಣ್ಯ ಎಂಬುವ ಮಹಾರಣ್ಯವ
ತತ್ವಮಸಿ ಅಸಿಯಿಂದ ಅಕ್ಷೋಭ್ಯರು
ಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ ೧೨
ಶ್ರೀಪಾದರಾಜರ ಮಠವು ಆ ಸ್ಥಳಕೆ
ಸಮೀಪವೇ ಅಲ್ಲುಂಟು ನರಸಿಂಹ ತೀರ್ಥ
ಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾ
ಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ ೧೩
ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರ
ಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿ
ಭಗವಂತ ಶ್ರೀಪತಿಯ ಒಲಿಸಿಕೊಳ್ಳುವ ಮಾರ್ಗ
ಭಾಗವತ ಧರ್ಮ ಸಚ್ಛಾಸ್ತ್ರ ಬೋಧಿಸಿದರು ೧೪
ಅಲ್ಲಲ್ಲಿ ವಾದಿಸಿ ದುರ್ವಾದಿ ಕುಮತಿಗಳ
ಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿ
ಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತ
ಶೀಲತ್ವ ಔನ್ನತ್ಯ ವೇದ ಸನ್ನತಿಯ ೧೫
ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರು
ಶ್ರೀ ಪುರುಷೋತ್ತಮ ತೀರ್ಥರ ಕೈಯಿಂದ
ಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿ
ಪರಿಪಾಲಿಸುತ್ತಿದ್ದರು ಯತಿ ಧರ್ಮ ೧೬
ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯ
ಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿ
ಮಹಾರ್ಹ ಕೇಶವನ ಆರಾಧಿಸುತಿಹರು
ಬಾಹ್ಯ ಜನರ ಸಂಪರ್ಕವಿಲ್ಲದಲೇ ೧೭
ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳು
ಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನ
ಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿ
ಮಹಾತ್ಮ ಪುತ್ರನ ಹಡೆಯೆ ವರ ನೀಡಿದರು ೧೮
ತಮಗೆ ಆ ಮಗುವನ್ನು ಕೊಡಬೇಕು ಎಂದು
ಬ್ರಹ್ಮಣ್ಯರು ಪೇಳಿದ್ದ ಅನುಸರಿಸಿ
ಆ ಮಗುವ ದಂಪತಿಗಳ್ ನೀಡೆ ಶಿಶುವು
ಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ ೧೯
ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದು
ಶ್ರೀ ಹರಿ ನೈವೇದ್ಯದಿಂ ವರ್ಧಿಸಿ ಬಾಲ
ವಿಹಿತ ವಯಸ್ಸಲ್ಲೇವೇ ಉಪನಯನವು ಆಗಿ

ಶ್ರೀ ಪ್ರಸನ್ನ ರಘೂತ್ತಮ ತೀರ್ಥರ ಚರಿತ್ರೆ
೧೨೨
ಶ್ರೀ ರಘೂತ್ತಮರಂಘ್ರಿ ರಾಜೀವಯುಗ್ಮದಲಿ
ಶಿರಬಾಗಿ ಶರಣಾದೆ ಧನ್ಯನಾದೆ
ಶ್ರೀರಾಮಚಂದ್ರನ ಪೂರ್ಣಾನುಗ್ರಹ ಪೂರ್ಣ
ಪಾತ್ರರು ಎಮ್ಮ ಪಾಲಿಸುವ ಕರುಣಾಳು ಪ
ಶ್ರೀ ಹಂಸ ಲಕ್ಷ್ಮೀಶ ಪರಮಾತ್ಮ ಸರ್ವೇಶ
ಬ್ರಹ್ಮ ಸನಕಾದಿಗಳ ಗುರುಪರಂಪರೆಯ
ಬ್ರಹ್ಮಪದ ಐದುವ ಶ್ರೀ ಆನಂದತೀರ್ಥರ
ನೀರ್ರುಹ ಚರಣಂಗಳಲ್ಲಿ ಶರಣಾದೆ ೧
ಪಂಕೇರುಹನಾಭ ನರಹರಿಮಾಧವ
ಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜ
ವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರ
ವಾಗೀಶ ಶ್ರೀ ರಾಮಚಂದ್ರರಿಗೆ ಶರಣು ೨
ಶ್ರೀ ರಾಮಚಂದ್ರರ ಕರಜರು ಈರ್ವರಿಗೂ
ಎರಡನೇಯವರು ವಿದ್ಯಾನಿಧಿಯ ಹಸ್ತ
ಅರವಿಂದೋತ್ಪನ್ನ ರಘುನಾಥರಿಗೆ ನಮೋ ಎಂಬೆ
ಸೂರಿವರ ರಘುವರ್ಯರಲ್ಲಿ ಶರಣಾದೆ ೩
ರಘುವರ್ಯ ಗುರುರಾಜ ಕರಕಮಲ ಸಂಜಾತ
ರಘೂತ್ತಮ ತೀರ್ಥರ ಚರಣಕಾನಮಿಪೆ
ಅಗಣಿತ ಗುಣಾಂಬುಧಿ ಅಘದೂರ ರಘುಪತಿಯ
ಹೃದ್ಗುಹಾ ಒಳಹೊರಗೆ ಕಾಂಬುವಧೀರ ೪
ರಾಮಚಂದ್ರಾಚಾರ್ಯ ನಾಮ ಬಾಲಕನು
ಬ್ರಹ್ಮಚಾರಿಯು ಧೃಢವ್ರತನು ಹರಿಭಕ್ತ
ಸುಮನೋಹರಮೂರ್ತೇ ಗುಣಗುಣಾಲಂಕೃತನು
ಈ ಮಹಾವೇದಾಂತ ಪೀಠಕ್ಕೆ ಅರ್ಹ ೫
ತಮ್ಮ ಮಠ ಶಿಷ್ಯರಲು ಮಾಧ್ವ ಸಜ್ಜನರಲ್ಲೂ
ಸುಮಹಾಪಂಡಿತರು ಇರುತಿದ್ದರೂನು
ಈ ಮಹಾ ಪುರುಷ ಬಾಲನೇ ತಕ್ಕವನೆಂದು
ನೇಮಿಸಿದರು ಪೀಠಕ್ಕೆ ರಘುವರ್ಯ ಗುರುವು ೬
ರಘೂತ್ತಮತೀರ್ಥ ನಾಮದಿ ತುರೀಯಾಶ್ರಮ
ರಘುವರ್ಯರೀ ರಾಮಚಂದ್ರಗೆ ಇತ್ತು
ರಾಘವನ ಪೂಜಾದಿ ಸಂಸ್ಥಾನ ಅಧಿಕಾರ
ನಿಗಮಾಂತ ಗುರುಗಳು ನಿಯಮನ ಮಾಡಿದರು ೮
ವೇದವೇದಾಂತ ಸಚ್ಛಾಸ್ತ್ರ ಪಂಡಿತನು
ವಿದ್ಯಾರ್ಥಿ ಬಹುಮಂದಿಗೆ ಪಾಠ ಪೇಳುವ
ವಿದ್ವಾಂಸ ಓರ್ವನ್ನ ರಘುವರ್ಯ ತೀರ್ಥರು
ವಿದ್ಯೆ ಕಲಿಸಲು ಏರ್ಪಾಡು ಮಾಡಿದರು ೯
ಶೇಷಪ್ಪನಾಯಕರ ಮಕ್ಕಳು ಈರ್ವರಲಿ
ಜ್ಯೇಷ್ಠ ಪುತ್ರನು ವಿದ್ವಾಂಸರಲಿ ಪ್ರಮುಖ
ಶಿಷ್ಯರೂ ಬಹು ಜನರು ಈತನಿಗೆ ಉಂಟು
ಭೂಷಣವೆಂದೆನಿಸಿದನು ಮಾಧ್ವ ಸಮೂಹಕ್ಕೆ ೧೦
ಸಾವಿರದ ನಾನ್ನೂರು ಎಪ್ಪತ್ತ ಒಂಭತ್ತು
ಸಂವತ್ಸರದಲಿ ಶಾಲಿವಾಹನದಿ
ದಿವಸ ತದಿಗೆ ಕೃಷ್ಣ ಜ್ಯೇಷ್ಠ ಪಿಂಗಳದಿ
ಶ್ರೀವರನಪುರಕೆ ತೆರಳಿದರು ರಘುವರ್ಯರು ೧೧
ದಯಾಳು ರಘುವರ್ಯರು ಸಮಾಧಿಸ್ಥರಾಗಲು
ಬಾಲ್ಯಾವಸ್ಥೆಯಲಿ ಇದ್ದ ರಘೂತ್ತಮರು
ವಿದ್ಯಾವ್ಯಾಸಂಗ ಗುರು ನಿಯಮನದಂತೇಯೆ
ಗೈಯಲಿ ಪೋದರು ಆ ವಿದ್ವಾಂಸನಲ್ಲಿ ೧೨
ಮಣೂರು ಎಂದ್ಹೆಸರು ಉಳ್ಳ ಆ ಊರಲ್ಲಿ
ಘನ ವಿದ್ವನ್ಮಣಿಯಲ್ಲಿ ಕಲಿಯುವಾಗ
ಧನವಂತ ಊರು ನಾಯಕ ರಘೂತ್ತಮರಲ್ಲಿ
ಬಿನ್ನೈಸಿದ ಭೋಜನಕೆ ಬರಬೇಕೆಂದು ೧೩
ಸ್ವಾಮಿಗಳಿಗೆ ಪಾಠ ಹೇಳುವ ವಿಪ್ರನೂ
ಆ ಮನೆಯಲಿ ಊಟಕ್ಕೆ ಬಂದಿದ್ದ
ನೇಮ ಆಹ್ನೀಕ ಮುಗಿಸಿ ಬರಲಿಕ್ಕೇ
ತಾಮಸವು ಆಯಿತು ವಿಲಂಬವು ಸ್ವಲ್ಪ ೧೪
ಸ್ವಾಮಿಗಳ ಬಾಲ್ಯತ್ವ ವಿದ್ಯಾರ್ಥಿತ್ವವು
ಆ ಮನೆಯಲಿ ಗೃಹಸ್ಥನನ್ನೂ ವಿಪ್ರನನ್ನೂ ಮೋಹಿಸಿತು
ತಮ್ಮ ಯೋಗ್ಯತೆ ಸ್ಥಾನ ಮರೆತು ಗರ್ವದಿ ವಿಪ್ರ
ಸ್ವಾಮಿಗಳ ಲೆಕ್ಕಿಸದೆ ಕುಳಿತನು ಭೋಜನಕೆ ೧೫
ಅಂದು ರಾತ್ರಿಸ್ವಪ್ನದಲಿ ರಘುವರ್ಯ ಗುರುಗಳು
ಬಂದು ಪೇಳಿದರ್ತಮ್ಮ ಪ್ರೇಮಿಶಿಷ್ಯರಿಗೆ
ಇಂದಿನಾರಭ್ಯ ಪಾಠವ ನಿಲಿಸು ವಿಪ್ರನಲಿ
ಕುಂದು ಇಲ್ಲದೆ ಹೇಳುವೆ ನೀನೇವೆ ೧೬

ಈ ರೀತಿ ಸ್ವಪ್ನವು ಆಗೇ ರಘೂತ್ತಮರು
ವಿಪ್ರನಲಿ ಪಾಠಕ್ಕೆ ಪೋಗುವುದು ತೊರೆದು
ಆ ಪಂಡಿತವರ್ಯರಿಗಿಂತ ಉತ್ತಮ ರೀತಿ
ತಾಪೇಳಿದರು ಪಾಠ ಮಠದಿ ಶಿಷ್ಯರಿಗೆ ೧೭
ಗುರುಗಳಲಿ ಹರಿ ಇಷ್ಟ ಗುರುದ್ವಾರ ಒಲಿವನು
ಗುರು ಅನುಗ್ರಹ ಇದ್ದರೇ ಹರಿ ಅನುಗ್ರಹ
ಗುರು ಪ್ರಸಾದವ ಪಡೆದ ಶ್ರೀ ರಘೂತ್ತಮರಿಗೆ
ಶಾಸ್ತ್ರ ಜ್ಞಾನವು ಪ್ರಜ್ವಲಿಸಿತು ಪೂರ್ಣದಲಿ ೧೮
ಜಾತಾಪರೋಕ್ಷಿಗಳು ದೇವತಾಂಶರಿಗೇವೆ
ಜ್ಞಾತವಾಗುವ ಪದ ವಾಕ್ಯದ ತಾತ್ಪರ್ಯ
ಈ ದೇವತಾಂಶ ಶ್ರೀ ರಘೂತ್ತಮ ಗುರುವರರು
ಸಂದೇಹವಿಲ್ಲದೆ ತಿಳಿದು ಬೋಧಿಸಿದರು ೧೯
ತನ್ನಲ್ಲಿ ವ್ಯಾಸಂಗ ಪೂರೈಸದ ಬಾಲ
ಏನು ಪಾಠವ ಹೇಳೇ ಶಕ್ತನೆಂದರಿಯೆ
ಕಾಣದೆ ಮರೆಯಾಗಿ ನಿಂತು ಆ ವಿಪ್ರ
ಶ್ರವಣ ಮಾಡಿದ ಗುರುಗಳು ಬೋಧಿಸುವುದು ೨೦
ಸಂದಿಗ್ಧÀ್ದವಾಗಿ ತನಗಿದ್ದ ವಿಷಯಗಳನ್ನೂ
ಅದ್ಭ್ಬುತ ರೀತಿಯಲಿ ಅನಾಯಾಸವಾಗಿ
ಅತಿವಿಶದದಿ ರಘೂತ್ತಮರು ಪೇಳಲು ಕೇಳಿ
ಬಂದು ಮುಂದೆ ನಿಂತು ನಮಿಸಿದನು ವಿಪ್ರ ೨೧
ತಾನು ಮಾಡಿದ ಉದಾಸೀನ ಅಪರಾಧಗಳ
ಘನ ದಯದಿ ಕ್ಷಮಿಸಬೇಕೆಂದು ಬೇಡುತ್ತ
ತನು ದಂಡವತ್ ಭುವಿಯಲಿ ಬಿದ್ದು ನಮಿಸಿದನು
ದೀನದಯಾಳು ಗುರು ಅಭಯ ನೀಡಿದರು ೨೨
ದಿಗ್ವಿಜಯ ಮಾಡುತ್ತ ಅಲ್ಲಲ್ಲಿ ದುರ್ಮತ
ದುರ್ವಾದಿಗಳನ್ನು ಖಂಡಿಸಿ ಸಿದ್ಧಾಂತ
ತತ್ವಬೋಧಿಸಿ ಜಗತ್ ಪ್ರಖ್ಯಾತರಾದರು
ಶಾಶ್ವತ ನಿಜಸುಖ ಮಾರ್ಗದರ್ಶಕರು ೨೩
ರಘುವರ್ಯ ಗುರುಗಳು ನೇರಲ್ಲು ಸ್ವಪ್ನದಲು
ರಘೂತ್ತಸಮರಿಗೆ ಪೇಳಿದ ಪ್ರಕಾರ
ದಿಗ್ವಿಜಯ ಸಮಯದಿ ಸಂಸ್ಥಾನಕ್ಕೆ ಭೂಷಣ
ಬಗೆಬಗೆ ವಸ್ತು ಪರಿವಾರ ಸೇರಿಸಿದರು ೨೪
ವೇದಾಂತ ಸಾಮ್ರಾಜ್ಯ ರಾಜಗುರುರಾಜರು
ಹಸ್ತಿ ಘೋಟಕ ಕೊಂಬು ವಾದ್ಯಮೇಳಗಳು
ಸುತ್ತಲೂ ವಿದ್ವಜ್ಜನ ವೇದಘೋಷದ ಮಧ್ಯ
ಮುತ್ತು ಪಲ್ಲಕ್ಕಿಯೊಳು ಕುಳಿತರು ದೇವರ ಸಹ ೨೫
ಪೋದ ಕಡೆಗಳಲಿ ದಿಗ್ವಿಜಯ ರಾಮಾರ್ಚನೆ
ವಿದ್ವಜ್ಜನ ಸಭೆ ವಾಕ್ಯಾರ್ಥ ಪಾಠ
ಸಿದ್ಧಾಂತ ಸ್ಥಾಪನೆ ದುರ್ಮತ ನಿರಾಸವು
ಸಾಧು ಸಜ್ಜನರ ಉದ್ಧಾರ ಪ್ರತಿದಿನವು ೨೬
ಬಾದರಾಯಣ ನಿರ್ಣೀತ ರೀತಿಯಲಿ
ಮಧ್ವರಾಯರು ಬರೆದ ಗ್ರಂಥಗಳಿಗೆ
ಅದ್ಬುತ ಟೀಕೆ ಜಯತೀರ್ಥರು ಮಾಡಿಹರು
ಸದ್ಭಾವ ಬೋಧವು ರಘೂತ್ತಮರ ರಚನೆ ೨೭
ಟೀಕಾ ಭಾವಬೋಧರು ಎಂದು ಪ್ರಖ್ಯಾತ
ರಘೂತ್ತಮರ ಎಲ್ಲೆಲ್ಲೂ ವಿದ್ವಜ್ಜನರು
ನಗರ ಪಟ್ಟಣ ಗ್ರಾಮ ನಾಯಕರು ಪ್ರಮುಖರು
ಸ್ವಾಗತ ಅರ್ಪಿಸಿ ಪೂಜಿಸಿದರು ಮುದದಿ ೨೮
ಪುಟ್ಟಿದಾರಭ್ಯ ಹರಿ ಪಾದ ಕಮಲದಿ ಮನ
ಇಟ್ಟು ರಘುವರ್ಯರು ಕೊಟ್ಟ ಸಂಸ್ಥಾನ
ಪಟ್ಟ ಆಳಿ ಸರ್ವೋತ್ತಮನನ್ನ ಸೇವಿಸಿ
ಶ್ರೇಷ್ಠತಮ ಸುಖಪ್ರದ ಮಾರ್ಗ ತೋರಿಹರು ೨೯
ಹದಿನೈದು ನೂರು ಹದಿನೇಳು ಶಕ ಮನ್ಮಥ
ಶುದ್ಧ ಏಕಾದಶಿ ಪೌಷ್ಯದಲಿ ಹರಿಯ
ಪಾದಸೇರಿದರು ಸಂಸ್ಥಾನ ಆಡಳಿತ
ವೇದವ್ಯಾಸ ತೀರ್ಥರು ಮಾಡಲಿಕೆ ಬಿಟ್ಟು ೩೦
ಮತ್ತೊಂದು ಅಂಶದಲಿ ವೃಂದಾವನದೊಳು
ಹತ್ತಾವತಾರ ಹರಿ ದ್ಯಾನಪರರಿಹರು
ಭಕ್ತರು ಅಲ್ಲಲ್ಲಿ ಅರ್ಚಿಸಿ ಸೇವಿಸುವ
ಮೃತ್ತಿಕೆಯಲ್ಲು ಸಹ ಇದ್ದು ಪಾಲಿಪರು ೩೧
ವೃಂದಾವನ ತಿರುಕೋಯಿಲೂರ್ ಮಣಂಪೂಂಡಿ
ಎಂದು ಕರೆಯಲ್ಪಡುವ ಗ್ರಾಮದಲಿ ಇಹುದು
ಇಂದುಶೇಖರ ಚಾಪದಿಂದ ಉದಿಸಿದ ಪುಣ್ಯ
ನದಿಯು ಹರಿಯುತ್ತೆ ಮಜ್ಜನವು ಅಘಹರವು ೩೨
ಮಂದಜಾಸನ ಮೊದಲಾದ ಸುರವೃಂದ
ವಂದಿತ ರಮಾಪತಿಯು ರಘೂತ್ತಮಾಂತಸ್ಥ
ವೃಂದಾವನದಿ ಗುರು ಹರಿಭಕ್ತಿ ಪೂರ್ವಕದಿ
ಬಂದು ಸೇವಿಪರಿಗೆ ವಾಂಛಿತಗಳೀವ ೩೩
ಗಾಳಿ ಬಿಸಿಲು ಮಳೆ ಮಂಜುಗಳ ಲೆಕ್ಕಿಸದೆ
ಮಾಲೋಲನ ಧ್ಯಾನಿಸುತ ವೃಂದಾವನದೊಳು
ಕುಳಿತಿಹರು ಪರಮ ಕಾರುಣಿಕ ಈ ಗುರುಗಳು
ಪಾಲಿಸುತಿಹರು ಎಮ್ಮ ಅನುಗಾಲ ದಯದಿ ೩೪
ವೃಂದಾವನ ದರ್ಶನ ತೀರ್ಥ ನಮಸ್ಕಾರ
ಪ್ರದಕ್ಷಿಣೆ ಅರ್ಚನೆ ಹಸ್ತೋದಕ
ವಂದನೆ ಸೇವಾದಿಗಳ ಮಾಳ್ಪ ಸಜ್ಜನರ
ಕುಂದು ಕೊರತೆಗಳಳಿವ ಇಷ್ಟಾರ್ಥ ಪ್ರದರು ೩೫
ಪಿಲ್ಲಿ ಶೂನ್ಯಾದಿ ವಾಮಾಚಾರ ಪೀಡೆಗಳು
ಗಾಳಿದುಷ್ಟಗ್ರಹ ಪೈಶಾಚಾದಿಗಳು
ಕಳವಳಿಕೆ ಬುದ್ದಿಭ್ರಮೆ ವ್ಯಾಧಿದಾರಿದ್ರ್ಯಾದಿ
ಎಲ್ಲ ದೋಷಗಳನ್ನ ಪರಿಹರಿಸುವರು ೩೬
ಸವೈರಾಗ್ಯ ಜ್ಞಾನವ ಭಕುತಿ ಅಪರೋಕ್ಷವ
ಸೇವಿಪ ಯೋಗ್ಯರಿಗೆ ಒದಗಿಸಿ ಉದ್ಧರಿಸಿ
ಸರ್ವವಿಧದಲು ಭಾಗ್ಯ ಆಯುಷ್ಯ ಆರೋಗ್ಯ
ಈವರು ಭಕ್ತಯಲಿ ಸ್ಮರಿಸಿ ವಂದಿಪರ್ಗೆ ೩೭
ಉತ್ತಮ ತರಗತಿ ದೇವತಾಂಶರು ಇವರು
ಮಧ್ವಮತದುಗಾಬ್ಧಿ ಪೂರ್ಣಚಂದ್ರ
ಹತ್ತು ತಿಂಗಳು ಹೊತ್ತು ಹೆತ್ತ ಉತ್ತಮ ಸಾಧ್ವಿ
ಮಾತೆಯ ಭಾಗ್ಯ ಏನೆಂಬೆ ಇಂಥವರ ೩೮
ಸೂರಿ ಸುರವರ ಶ್ರೀ ರಘೂತ್ತಮರ ಚರಣದಲಿ
ಶರಣಾದೆ ಎನ್ನಯ ಎನ್ನಸೇರಿದವರ
ಪರಿಪರಿ ಪೀಡೆಗಳ ಪಾಪಗಳ ಅಳಿದು
ಕಾರುಣ್ಯ ಔದರ್ಯದಿ ಪಾಲಿಸುವರು ೩೯
ಸರಿದ್ವರ ಪಿನಾಕಿನಿಯಲಿ ಕೇಶವ ಜಗವ
ಈರಡಿಯಲಿ ಅಳೆವ ತ್ರಿವಿಕ್ರಮನು ಶಿರಿಯು
ಇರುತಿಹರು ಹನುಮ ಶಿವಸ್ಕಂಧ ತೀರಗಳಲಿ
ಶರಣೆಂಬೆ ಇವರೆಲ್ಲರ್ಗು ಶ್ರೀ ರಘೂತ್ತಮರಿಗೂ ೪೦
ಕಮಲಭವಪಿತ ‘ಶ್ರೀ ಪ್ರಸನ್ನ ಶ್ರೀನಿವಾಸ ‘
ಕಮಲಾಯುತ ವಿಶ್ವ ರೂಪ ತ್ರಿವಿಕ್ರಮಗೂ
ಭೀಮ ಶಿವಸ್ಕಂಧರಿಗು ಪ್ರಿಯತಮ ರಘೂತ್ತಮರ
ಈ ಮಂಗಳ ಚರಿತ ಶ್ರೀ ಕೃಷ್ಣಾರ್ಪಿತವು ೪೧ ಪ
|| ಇತಿ ಶ್ರೀ ರಘೂತ್ತಮ ತೀರ್ಥ ಚರಿತ್ರೆ ಸಂಪೂರ್ಣಂ ||