Categories
ರಚನೆಗಳು

ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಪಾರ್ವತೀ ಸ್ತೋತ್ರ
೮೦
ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ
ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ಪ
ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ
ಅತಿದಯದಿ ಪಾಲಿಸೆನ್ನ ಕಲುಷ ಪರಿಹರಿಸೇ ೧
ಗಜಮುಖನತಾಯೆ ನೀ ಗಿರಿರಾಜ ಆತ್ಮಜೆ
ವಜ್ರಿ ಮನ್ಮಥನುತೆ ಭಜಕಗೇ ಶುಭದೆ ೨
ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ
ಭಕ್ತಾಗ್ರಣೀ ಸದಾಶಿವನ ಅರ್ಧಾಂಗಿ ನಮೋ ೩

ನಾಮಕ್ಕಲ್ (ಸೇಲಂ ಜಿಲ್ಲಾ) ಕ್ಷೇತ್ರದಲ್ಲಿ
ಶ್ರೀ ರಮಾದೇವಿ
೬೪
ಅಂಬೋನಿಧಿ ಹೃದಂಬರ ವಾಸಿನಿ
ಅಂಬಾ ಬಾ ಬಾ ಅಂಬುಧಿಜಾ ನಮೋ ಪ
ಅಂಬುಜನಾಭನ ನಿಜಸತಿ ಶ್ರೀ ಭೂ
ಅಂಭ್ರಣಿ ಚಾಮರ ವ್ಯಜನ ರಥಾಂಗ ಪೂ
ಕಂಬು ಮಾಲಾದಿ ಸುರೂಪದಿ ಹರಿಗೆ ನೀ
ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ
ಮಂದರಗಿರಿಯಿಂದ ಸಿಂಧುವ ಮಥಿಸಲು
ನಿಂದು ಪ್ರಕಟವಾದೆ ಇಂದಿರಾದೇವಿಯೆ
ಕುಂದೇನಿಲ್ಲದ ಸುಂದರಗುಣನಿಧಿ
ಬಂಧಮೋಚಕ ಆನಂದಸುಪೂರ್ಣ ಗೋ
ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ
ಮಂದಜಭವ ಶಿವ ವೃಂದಾರಕನುತ ೧
ಹರನ ಚಾಪವ ಶ್ರೀರಾಮನು ಮುರಿಯಲು
ವರ ವನಮಾಲೆಯ ಅರ್ಪಿಸಿ ನಿಂದೆ
ಸುರಮುನಿರಾಜರು ಪುರಜನರೆಲ್ಲರು
ಸುರಿಯಲು ಪೂಮಳೆ ಸಂಭ್ರಮದಿಂದಲಿ
ಸರಿಪರರಿಲ್ಲದ ಶ್ರೀ ರಘುರಾಮನು
ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ ೨
ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ
ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ
ಹೇಮಗರ್ಭಾದಿ ಸಮಸ್ತ ಸುಜನರಿಗೆ
ರಮೆ ನಿನ್ನಯ ಸುಮಂದ ಕಟಾಕ್ಷವು
ಕಾಮಿತ ಫಲದವು ಮೋಕ್ಷಹೇತುವೆ ದೇವಿ
ನಮೋ ನಮೋ ಪ್ರಸನ್ನ ಶ್ರೀನಿವಾಸನ ಸತಿ ೩

ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ
೧೦೦
ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ
ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ
ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ
ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ ಪ
ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ
ಜಗದಾದಿ ಮೂಲಗುರು ಅಗುರು ಶ್ರೀ ಹಂಸ
ವಾಗೀಶ ಸನಕಾದಿ ದೂರ್ವಾಸಾದಿಗಳ
ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ ೧
ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ
ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ
ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ
ಖಚರೇಂದ್ರ ಫಣಿಪಮೃಡ ಅಮರೇಂದ್ರವಂದ್ಯ ೨
ಶ್ರೀ ಮಧ್ವ ಆನಂದತೀರ್ಥ ಕರ ಅಬ್ಜಜರು
ಪದ್ಮನಾಭನೃಹರಿ ಮಾಧವಾಕ್ಷೋಭ್ಯ
ಈ ಮಹಾಗುರುಗಳು ಸರ್ವರಿಗು ಆನಮಿಪೆ
ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು ೩
ಸಾಧು ವೈದಿಕ ವೇದಾಂತ ಸತ್ತತ್ವ ಮತ
ಮಧ್ವ ಮತವೇ ಅನ್ಯ ಯಾವುವೂ ಅಲ್ಲ
ಎಂದು ನಿಶ್ಚೈಸಿ ಶೋಭನಭಟ್ಟಸ್ವಾಮಿ
ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು ೪
ಸೂರಿವರ ಶೋಭನ ಭಟ್ಟಾದಿಗಳಂತೆ
ಸಾರಾಸಾರ ವಿವೇಕಿ ಗೋವಿಂದ
ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ
ಎರಗಿ ಶರಣಾದರು ಮಧ್ವರಾಯರಲಿ ೫
ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ
ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ
ಈ ಧರೆಯಲ್ಲಿ ತೋರಿಹ ಮಧ್ವರಾಯರ
ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು ೬
ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು
ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ
ಅಚಲ ಸತ್ತತ್ವನಿಶ್ಚಯ ಜ್ಞಾನಿ ಶಾಸ್ತ್ರಿಗೆ
ಅಕ್ಷೋಭ್ಯ ನಾಮನ ಇತ್ತರಾಚಾರ್ಯ ೭
ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ
ತನ್ನ ಮಠದಲ್ಲಿ ಅಕ್ಷೋಭ್ಯತೀರ್ಥರಿಗೆ
ವನರುಹನಾಭರಿಂದ ನಾಲ್ಕನೇ ಸ್ಥಾನವ
ಘನದಯದಿ ಇತ್ತರು ಆನಂದಮುನಿಯು ೮
ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ
ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ
ಪದ್ಮನಾಭ ನರಹರಿ ಮಾಧವ ತೀರ್ಥರು
ವೇದಾಂತ ಪೀಠದಲಿ ಕುಳಿತುಜ್ವಲಿಸಿದರು ೯
ಪದ್ಮನಾಭತೀರ್ಥರ ಪಾದಪದ್ಮಗಳಿಗೆ
ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ
ವಿದ್ಯಾಕುಶಲರು ಸೂರಿಗಳ ಚರಣಕ್ಕೆ
ಸಂತೈಪರೆಮ್ಮ ಸದಾ ನಮೋ ಸರ್ವದಾ ೧೦
ನರಹರಿತೀರ್ಥರು ಚರಣ ಸರಸೀರುಹದಿ
ಶರಣಾದೆ ಕಾಯ್ವರು ಈ ಮಹಾನ್ ಇಹರು
ವರಾಹ ತನಯಾ ಸರಿದ್ವರಾಕ್ಷೇತ್ರದಲಿ
ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ ೧೧
ಮಾಧವತೀರ್ಥರ ಪಾದಪದ್ಮಗಳಿಗೆ
ಸದಾನಮೋ ನಮೋ ಎಂಬೆ ಇವರ ಪೀಳಿಗೆಯ
ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ
ಆದರದಿ ನಮಿಸುವೆ ಸದಾ ಪೊರೆವರೆಮ್ಮ ೧೨
ಸುಲಭರು ಸುಜನರಿಗೆ ಶರಣರ ಸಲಹುವರು
ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ
ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ
ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ ೧೩
ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ
ಶರಣಾದ ಪುರುಷನ ಪಶ್ಚಾತ್ತಾಪ
ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು
ಏರಿ ಮರ ನದಿಯಲಿ ಬೀಳೆ ಹೇಳಿದರು ೧೪
ತನ್ನಯ ಮಹಾಪಾಪ ಕಳೆಯುವ ಗುರುಗಳು
ಏನು ಹೇಳಿದರೂ ಮಾಡುವೆ ತಾನೆಂದು
ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ
ದೀನ ರಕ್ಷಕ ಗುರು ಇಳಿಯೆ ಹೇಳಿದರು ೧೫
ವೃಕ್ಷದಿಂದಿಳಿದ ಆ ವಿಪ್ರಘಾತುಕನ ಮೇಲೆ
ಅಕ್ಷೋಭ್ಯತೀರ್ಥರು ಶಂಖತೀರ್ಥವನ್ನ
ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ
ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು ೧೬
ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ
ಶಂಕೆಯಲ್ಲದೆ ತಿಳಿಸಿ ಬಂದು ಬೇಡುವವರ
ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ
ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು ೧೭
ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ
ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ
ಶ್ರೀ ಮನೋಹರನನ್ನ ಅಪರೋಕ್ಷಿಕರಿಸುವ
ಸುಮಹಾ ಉಪಾಯವ ಅರುಹಿಹರು ದಯದಿ ೧೮
ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ
ವೇದ ವಂಚಕ ದುರ್ಮತಗಳ ಖಂಡನವ
ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ –
ರೆಂದು ಮರ್ಯಾದೆಗಳ ಕೊಂಡಿಹರು ಜಗದಿ ೧೯
ಅದ್ವೈತವಾದಿಯು ಶಾಂಕರ ಮಠಾಧೀಶ
ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು
ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ
ವಾದಿಸಿದರು ಮುಳುಬಾಗಿಲು ಸಮೀಪ ೨೦
ಶ್ವೇತಕೇತು ಉದ್ದಾಲಕರ ಸಂವಾದ
ತತ್ವ ಮಸಿ ವಾಕ್ಯವೇ ವಾದದ ವಿಷಯ
ವೇದಾಂತ ದೇಶಿಕರು ರಾಮಾನುಜೀಯತಿಯ
ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು ೨೧
ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು
ಸಆತ್ಮಾ ತತ್ವಮಸಿ ಎಂಬುವಂಥಾದ್ದು
ಭೇದ ಬೋಧಕವೋ ಅಭೇದ ಬೋಧಕವೋ
ಎಂದು ವಾದವು ಆ ಈರ್ವರಲ್ಲಿ ೨೨
ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ
ಭೇದವೇ ಬೋಧಿಸುವುದು ಆ ವಾಕ್ಯವೆಂದು
ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು
ಸೋತಿತು ವಿದ್ಯಾರಣ್ಯರ ಐಕ್ಯವಾದ ೨೩
ಅಸಿನಾತತ್ವ ಮಸಿನಾ ಪರಜೀವಪ್ರಭೇದಿನಾ
ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್
ಎಂದು ಬರೆದರು ತಮ್ಮಯ ಗ್ರಂಥದಲ್ಲಿ
ಮಧ್ಯಸ್ತ ವೇದಾಂತದೇಶಿಕ ಸ್ವಾಮಿಗಳು ೨೪
ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ
ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ
ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ
ಸ್ಥಾಲಿ ಪುಲೀಕ ನ್ಯಾಯದಲಿ ಪೇಳಿಹುದು ೨೫
ನದಿ ದಡದಿ ಕುಳಿತಿದ್ದ ಅಕ್ಷೋಭ್ಯತೀರ್ಥರು
ಎದುರಾಗಿ ನದಿಯಲ್ಲಿ ಆಚೆ ದಡದಿಂದ
ಕುದುರೆ ಸವಾರನು ವರ್ಚಸ್ವಿ ಯುವಕನು
ಬೆದರದೆ ಪ್ರವಾಹದಲಿ ಬರುವುದು ಕಂಡರು ೨೬
ಕುದುರೆ ಮೇಲ್ ಆಸೀನನಾಗಿದ್ದ ಯುವಕನು
ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ
ಉದಕವ ಕೈಯಿಂದ ತುಂಬಿಕೊಳ್ಳದಲೇ
ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು ೨೭
ಮಾಧವ ಮಧ್ವರು ಮೊದಲೇ ಸೂಚಿಸಿದಂತೆ
ಇಂದು ಆ ಕುರುಹರಿತು ಅಕ್ಷೋಭ್ಯರು
ಇದು ಏನು ಪಶುವಂತೆ ಎಂದು ಧ್ವನಿಗೂಡಲು
ಹಿಂದಿನ ಜನ್ಮ ಯುವಕಗೆ ನೆನಪು ಬಂತು ೨೮
ಪಶು ಶಬ್ದ ಗುರುಮುಖದಿಂಬಂದಲಾಕ್ಷಣ ಪೂರ್ವ
ಸಂಸ್ಕಾರ ಪ್ರತಿಭೆಯು ಉದಯವಾಯ್ತು
ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು
ಹಸನಾಗಿ ಟೀಕೆ ಬರೆಯಲಾಜ್ಞ ಕೊಂಡದ್ದು ೨೯
ನಗಾರಿಸಮ ಬಲಿಯುವಕನು ಪ್ರವಾಹದ
ವೇಗ ಲೆಕ್ಕಿಸದಲೇ ದಡಕೆ ತಾ ಬಂದು
ಮುಗಿದುಕರ ಬಾಗಿಶಿರ ನಮಿಸಿ ಅಕ್ಷೋಭ್ಯರ
ಆಗಲೇ ಸಂನ್ಯಾಸ ಕೊಡಲು ಬೇಡಿದನು ೩೦
ಗಾಧಿ ಅರ್ಜುನ ಸಮ ಬಲರೂಪದಲಿ ತೋರ್ಪ
ಈತ ರಾಯರ ಸುತನಾದರೂ ವೈರಾಗ್ಯ
ಯುತ ಭಕ್ತಿಮಾನ್ ಸುಶುಭಲಕ್ಷಣನು ಎಂದು ಹರಿ
ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ ೩೧
ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ
ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ
ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ
ಜಯ ಘೊಷ ಹರಡಿತು ಪರಿಮಳ ಸುಗಂಧ ೩೨
ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ
ರಮಾಪತಿ ಪೂಜಾಸತ್ತತ್ವವಾದ
ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ
ಸುಮ್ಮುದದಿ ಅರುಹಿದರು ಗುರುಸಾರ್ವಭೌಮ ೩೩
ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು
ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ
ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು
ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ೩೪
ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ
ಹನ್ನೊಂದು ನೂರು ಅರವತ್ತೇಳ ಶಕವರುಷ
ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ
ಮಧ್ವ ಹೃದಯಾಬ್ಜಗನ ಪುರವ ಐದಿದರು ೩೫
ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ
ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ
ಬಂದು ಬೇಡುವವರಿಷ್ಟಾರ್ಥ ಪೂರೈಸುತ
ವೃಂದಾವನದಲ್ಲಿ ಕುಳಿತಿಹರು ಕರುಣಿ ೩೬
ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ
ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ
ಮಧ್ವಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ
ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು ೩೭ ಪ
|| ಶ್ರೀ ಅಕ್ಷೋಭ್ಯ ತೀರ್ಥಚರಿತೆ ಸಂಪೂರ್ಣಂ ||

ಶ್ರೀ ಪ್ರಸನ್ನ ಶ್ರೀನಿವಾಸ ಸ್ತುತಿಗಳು
೩೨
ಅದ್ರಿಜಾಪತಿ ಪಿತನ ಪಿತ ಸುಭದ್ರೆಯ ಪ.
ಅಣ್ಣ ಸಮುದ್ರಜಾಪತಿ ಪ್ರಸನ್ನ
ಶ್ರೀನಿವಾಸನೇ ನಮೋ || ೧
ಕ್ಷುದ್ರ ವಿಷಯಾದ್ರಿಗಳ ವಜ್ರ ಮನೋ ವಾಂಛಿಸ್ತದ
ಕಪರ್ದಿನುತ ವಿಧಿಪಿತ ಪ್ರಸನ್ನ ಶ್ರೀನಿವಾಸ || ೨

ಶ್ರೀ ವೀರರಾಘವ
೫೨
ಅಪ್ರತಿ ಕೃಪಾನಿಧಿಯೆ ವೀರರಾಘವ ದೇವ
ಕ್ಷಿಪ್ರದಲೆ ಎನ್ನಭೀಷ್ಟಗಳ ಪೂರೈಸೊ ಪ
ಫಣಿಪಗಿರಿ ವೆಂಕಟನೆ ಎನ್ನ ಕುಲದೇವನೆ
ಅನಂತ ಗುಣಪರಿಪೂರ್ಣ ಅನಂತ ಸುಖರೂಪ
ವನಜೆಸಹ ನೀ ಇಲ್ಲಿ ವೀರರಾಘವನೆನಿಸಿ
ಫಣಿಶಾಯಿ ಕಾಮದನಾಗಿರುವೆ ವಿಧಿತಾತ ೧
ನಿನ್ನ ದರ್ಶನ ಮಾಳ್ಪ ಜನರ ಕಾಮದನೆಂದು
ನಿನ್ನ ಬಳಿ ಬಂದಿಹೆನೊ ನಿನ್ನ ದಯದಿಂದ
ಎನ್ನಭೀಷ್ಟಗಳೆಲ್ಲ ನೀ ಬಲ್ಲೆಯೋ ಸ್ವಾಮಿ
ಘನ್ನ ಔದಾರ್ಯ ಕರುಣಾಂಬುಧಿಯೇ ಶರಣು ೨
ವೇಧ ಮಂದಮುನಿಪೂಜ್ಯ ಬದರೀಶ ಉಡುಪೀಶ
ಸ್ವಾದಿ ಯತಿವರಪೂಜ್ಯ ಭೂಧರ ಹಯಾಸ್ಯ
ಪಾದತ್ರಯ ವಿಖ್ಯಾತ ವರದ ನರಹರಿ ರಂಗ
ಮದ್ಗೇಹನಿಲಯ ಶ್ರೀ ಪ್ರಸನ್ನ ಶ್ರೀನಿವಾಸ ೩

ಶ್ರೀ ಅಷ್ಟಾಕ್ಷರ ವಾಮನಮಂತ್ರ
೧೯
ಅಮಲ ಗುಣಪರಿಪೂರ್ಣ ಅಮೃತಸಖ ಚಿನ್ಮಯನೆ
ವಾಮನ ಸುಮಂಗಳನೆ ನಮೋ ನಮೋ ನಮಸ್ತೆ ಪ
ಅಮಿತ ಸುಂದರರೂಪ ಕಮಲಾದಿ ಸ್ತ್ರೀಯರಿಗು
ಬ್ರಹ್ಮಾದಿ ಭಕ್ತರಿಗು ಸ್ವಾಮಿ ಸರ್ವಾಶ್ರಯನೆ ಅ ಪ
ಸರ್ವದಾ ಸರ್ವತ್ರ ಸರ್ವ ಸ್ವಾಮಿಯು ನೀನು
ಕೇವಲ ಸುನಿಷ್ಕಳನು ಸರ್ವ ಉತ್ರ‍ಕಷ್ಟ
ಸರ್ವ ವೇದಾದಿಗಳಿಂ ಸರ್ವಜ್ಞ ನೀ ಜÉ್ಞೀಯ
ಸರ್ವವಂದ್ಯನೆ ನಮೋ ಪ್ರಣವ ಪ್ರತಿಪಾದ್ಯ ೧
ಉದಿತಭಾಸ್ಕರನಿಭ ಸ್ವಕಾಂತಿಯಲಿ ಜ್ವಲಿಸುವೆ
ಸುದರ್ಶನವು ಶಂಖವು ಗದಾ ಜ್ಞಾನಮುದ್ರೆ
ಪದುಮೆ ಸಹ ಸರ್ವ ಜಗದಂತರ್ಬಹಿವ್ರ್ಯಾಪ್ತ
ವೇಧಾವಿಸೇವ್ಯ ಅಜ ಮಂತವ್ಯ ವಿಷ್ಣು ೨
ಔದಾರ್ಯದಲಿ ಬಲಿಯ ಬೇಡಿ ಇಳಿಸಿ ಉಳಿಸಿ
ಪಾದದಿಂದಲಿ ವಿಯದ್ಗಂಗೆಯನು ಪಡೆದೆ
ಒದಗಿಸಿದೆ ಇಂದ್ರನಿಗೆ ಸ್ವರ್ಗಾಧಿಪತ್ಯವನು
ಪದುಮಜನ ಪಿತ ನಮೋ ಪ್ರಸನ್ನ ಶ್ರೀನಿವಾಸ ೩

ಶ್ರೀ ವಿಷ್ಣು ತೀರ್ಥ ಅಣು ವಿಜಯ
೧೩೧
ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ
ಚರಣಸರಸೀರುಹದಿ ಶರಣಾದೆ ಸತತ
ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ
ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ
ಟೀಕಾಚಾರ್ಯರ ಪಾದ ಸೇವಿಸಿದ ಫಲವಾಗಿ
ಭಾಗೀರಥಿ ಬಾಳಾಚಾರ್ಯರಲಿ ಜನಿಸಿ
ವೇಂಕಟರಾಮಾರ್ಯ ಐಜಿಯವರ ಸುಪವಿತ್ರ
ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ ೧
ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ
ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು
ಸತ್ಯಸಂಧರಸುತ ಸತ್ಯವರ ತೀರ್ಥರಿಂ
ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ ೨
ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು
ವಿಷ್ಣು ತೀರ್ಥರು ಈ ಸೂರಿ ಈರ್ವರಿಗೆ
ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ
ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ ೩
ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ
ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ
ಮೂವತ್ತು ಪ್ರಕರಣ ಶ್ರೀ ಭಾಗವತ – ಸಾರೋ
ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು ೪
ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು
ಆಧ್ಯಾತ್ಮ ರಸರಂಜಿನಿ ಅಮೃತಫÉೀಣ
ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ
ಸಾಧನವಾಗಿಹುದನ್ನು ರಚಿಸಿಹರು ಇವರು ೫
ಹದಿನಾರು ಪ್ರಕರಣ ಶೋಡಶಿ ಎಂಬುಞ್ರÀಲಿ
ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ
ಮೋಕ್ಷಾಂತ ಶೋಡಶಿಯಲ್ಲಿಹುದು
ಭಕ್ತಿ ಶುಚಿಯಲಿ ಪಠನೀಯ ರಹಸ್ಯವು ೬
ಬಂಧಕವು ಬಂಧ ನಿವೃತ್ತಿಯು ಬಿಂಬ
ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು
ಐದನೇ ಪ್ರಕರಣ ಸ್ಥೂಲ ದೇಹ ಸೃಷ್ಟಿಯು,
ಅವಸ್ಥಾತ್ರಯ ನಿರ್ಮಾಣ ಆರನೆಯದು ೭
ಪ್ರಾಣವ್ಯಾಪಾರವು ಭೋಜನ ಪ್ರಕರಣವು
ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು
ತನು ಅಧಿಷ್ಠಾನ ರಥಾಧಿ ಪ್ರಕರಣವು
ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು ೮
ಸ್ವಪ್ನವು ಸುಷುಪ್ತಿಯು ಗಮನಾಗಮನವು
ಇನಿತು ಶುಭ ಮೋಕ್ಷ ಪ್ರಕರಣ ಷೋಡಶವು
ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ
ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ ೯
ಜೀವಹೋಮ – ಉಪನಯನ ಸೂರ್ಯಗತಿ ಯಜ್ಞ
ಪವಿತ್ರತಮ ವೇದಾಧ್ಯಯನ ಭಿಕ್ಷಾಟನ
ವೈಶ್ವಾನರ ಪ್ರಿಯ ಭೋಜನ ಪಾಪಲೇಪ
ಜೀವ ಪ್ರಯಾಣ ಮಾರ್ಗವು ನವಮ ೧೦
ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ
ಶುದ್ಧಯಜ್ಞ ‘ಸ್ವರೂಪಯಜ್ಞ’ ಸುಲಭಪೂಜಾ
ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ
ಆದಿತ್ಯಗ ಮಧು ಸುಖ ಪೂರ್ಣ ವಿಷಯ ೧೧
ಯೋಗ್ಯ ಆಧಿಕಾರಿಗೆ ಮಾತ್ರ ಈಸೌ –
ಭಾಗ್ಯಪ್ರದ ಜ್ಞಾನ ಪುಷ್ಠಿಕರಣ
ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು
ಅಯೋಗ್ಯರಿಗೆ ಸರ್ವಥಾ ಕೊಡಕೂಡದು ೧೨
ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್
ಐದಿಹರಿಪುರಲಯವ ಚಿಂತನೆಮಾಡಿ
ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ
ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು ೧೩
ಮತ್ತೊಂದು ಅಂಶದಿ ವೃಂದಾವನದಿಹರು
ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು
ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ
ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು ೧೪
ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ
ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ
‘ಮಹಿಸಿರಿ’ ಶ್ರೀ ಪ್ರಸನ್ನ ಶ್ರೀನಿವಾಸನ
ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು ೧೫ ಪ
|| ಸಂಪೂರ್ಣಂ||

ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು
ಶ್ರೀ ಸೂರ್ಯದೇವ ಸ್ತೋತ್ರ
೮೮
ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ
ಘನ್ನ ದಯಾಳುವಾಗಿಹಿ ಸೂರಿ ಪ್ರಾಪ್ಯ ಪ
ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್
ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ
ಅಮಯ ದೂರ ಸುಗುಣ ಗಣಾರ್ಣವ ದೇವ
ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ ೧
ಕೇಯೂರ ಮಕರ ಕುಂಡಲವಾನ್ ಕಿರೀಟಿಯೆ
ದಿವ್ಯಮಾಲಾಮಣಿ ಅರಿದರ ಧಾರಿ
ಅವ್ಯಯಾನಂದ ಚಿತ್ ಚಾಮೀಕರ ವಪು
ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ ೨
ಹಿಂಕಾರ ಪ್ರಸ್ತಾವ ಆದಿ ನಮೋ ನಮೋ
ಉದ್ಗೀಥ ಪ್ರತಿಹಾರೋಪದ್ರವ ನಿಧನ
ಉತ್ರ‍ಕಷ್ಟ ಸಾಮ ಪ್ರತಿಪಾದ್ಯ ನಾರಾಯಣ
ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ ೩
ಭೂತೇಂದ್ರಿಯ ಕರ್ಣಾದಿಗಳಿಗೆ ದೂರ
ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು
ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ
ಒದಗಿಸಿಹ ತನ್ನ ಸೂರ್ಯನೆಂಬೋ ನಾಮ ೪
ಸೂರ್ಯದೇವನೆ ದಯಾವಂತನೆ ನಮೋ ನಮೋ
ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ
ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ
ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ ೫
ಗ್ರಹಗಳಲಿ ಆದಿ ಮಾರ್ತಾಂಡ ಸೂರ್ಯ ನೀ
ಅಹರಹ ಎನ್ನಸರ್ವಪೀಡೆಗಳ್ ಕಳೆದು
ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ
ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ ೬
ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ
ತ್ರಿವೃತ್ ಉರುಕ್ರಮ ಸೂರ್ಯ ನಿನ್ನ ಪ್ರೀತಿಪಾತ್ರ
ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ
ಕರುಣದಿ ಎನ್ನನು ಎನ್ನವರನು ಕಾಯೋ ೭ ಪ

ಮಹತ್ ಎಂಬ ಬ್ರಹ್ಮನ ಸ್ವಾಮಿ
ಪ್ರಸನ್ನ ಶ್ರೀ ವರಾಹ

ಪ್ರಥಮ ಅಧ್ಯಾಯ
ಆದಿವರಾಹ ಸಾರ
ಆದರದಿ ಶರಣಾದೆ ಭೂದರ ವರಾಹನೇ
ಶ್ರೀಧರಾರಮಣ ವಿಧಿ ಶ್ರಧ್ಧೇಶ ವಂದ್ಯ
ಬದರಶೇಖರ ಮುಖ ಸುರವಿನುತ ವಾಂಛಿತದ
ಮೋದಚಿನ್ಮಯ ಭೂವರಾಹ ಯಜ್ಞೀಶ ಪ
ಅದ್ವಿತೀಯನು ನೀನೇ ಪದುಮಜಾಂಡದ ಒಡೆಯ
ಪದುಮಭವನೊಳಿದ್ದು ಭುವನಗಳ ಸೃಜಿಸಿ
ವೃಂದಾರಕರೊಳು ನಿಂತು ಕೃತಿ ನಡೆಸುತ್ತ
ಒದಗುವಿ ಸುಖಜ್ಞಾನ ಬಲಪೂರ್ಣ ಹರಿಯೇ ೧
ಅಂದು ಸ್ವಾಯಂಭುವ ಮನು ವೇನಗರ್ಭನಲಿ
ಬಂದು ನಮಿಸಿ ಭಿನ್ನಹವ ಮಾಡೆ
ವಿಧಿ ಹೇಳಿದ ಜನಾದರ್ನ ಯಜ್ಞಪರಮಾತ್ಮ
ಶ್ರೀದ ಭದ್ರದ ಈಜ್ಯ ಪೂಜ್ಯ ನೀನೇ ಎಂದು ೨
ಸ್ವಾಯಂಭುವ ಸಾಮ್ರಾಟ್ ಪೇಳಿದ ಮಹಾ
ಅಂಬುಧಿ ಕೆಳಗಡೆ ಮಗ್ನ ಆಗಿ
ಈ ಭೂಮಿ ಇರುವುದು ಉದ್ಧರಿಸಿ ಸ್ಥಾನವ
ತನ್ ಪ್ರಜೆಗಳಿಗೆ ಒದಗಿಸಬೇಕು ಎಂದ ೩
ಇರುವುದಕೆ ಸ್ಥಳ ಪ್ರಜೆಗಳಿಗೆ ಒದಗಿಸಲು
ಪರಮೇಷ್ಟಿರಾಯ ತನ್ನ ಹೃದ್ ವನಜದಿ
ಸುಪ್ರಕಾಶಿಪ ಪರಮ ಪೂರುಷ ನಿನ್ನನ್ನು
ಪರಮಾದರದಲ್ಲಿ ಧ್ಯಾನಿಸಿದನು ೪
ಮಹಿಶಿರಿಕಾಂತ ನಿನ್ನನು ಧ್ಯಾನಿಸುತಲಿದ್ದ
ಬ್ರಹ್ಮನ ಮೂಗಿಂದ ಹರಿ ಅನಘ ನೀನು
ವರಾಹ ಮರಿ ಅಂಗುಷ್ಟ ಮಾತ್ರ ಪ್ರಮಾಣದಿ
ಬಹಿರ್ಗತನು ಆದಿಯೋ ಚಿದಾನಂದರೂಪ ೫
ಒಂದೇ ಕ್ಷಣದಿ ಗಜಮಾತ್ರ ವರ್ಧಿಸಿದಿಯೋ
ಅದ್ಭುತ ಈ ರೂಪ ಕಂಡು ಅಲ್ಲಿ
ಇದ್ದ ಮರೀಚಿ ಪ್ರಮುಖ ವಿಪ್ರರು ಮನು
ಮೊದಲಾದವರು ಬಹು ಬೆರಗಾದರಾಗ ೬
ಪುಂಡಲೀಕಜಾಂಡದಲಿ ಇಂಥ ಸೂಕರ ರೂಪ
ಕಂಡಿಲ್ಲ ಎಲ್ಲೂನು ಇದು ಮಹಾಶ್ಚರ್ಯ
ಗಂಡ ಶಿಲಾವೋಲ್ ಕ್ಷಣ ಮಾತ್ರದಲಿ
ಚಂಡ ಈ ಕ್ರೋಡವು ದೊಡ್ಡದಾಗಿಹುದು ೭
ಈ ನಿನ್ನ ಸೂಕರ ರೂಪವ ನೋಡುತ್ತ
ಮುನಿಗಳು ತರ್ಕಿಸಿ ಮೀಮಾಂಸ ಮಾಡೆ
ಅನಿಮಿತ್ತಬಂಧು ಹರಿ ಒಲಿದು ಬಂದಿರುವಿ
ಎಂದು ವನಜಸಂಭವ ಸಂತೋಷ ಹೊಂದಿದನು ೮
ಮಹಾವರಾಹ ರೂಪನೇ ವಿಭೋ ನೀನು
ಮಹಾಧ್ವನಿಯಲಿ ಗರ್ಜಿಸಿದಿ ಆಗ
ಆ ಹೂಂಕಾರವು ದಿಕ್ಕು ವಿದಿಕ್ಕುಗಳ
ಮಹಾಂಬರವ ತುಂಬಿತು ಪ್ರತಿಧ್ವನಿಯಿಂದ೯
ಅಪ್ರತಿ ಮಹಾಮಹಿಮ ಉರುಪರಾಕ್ರಮ ನೀನು೦
ಅಂಬುಧಿಯೊಳು ಲೀಲೆಯಿಂದಲಿ ಪೊಕ್ಕು
ಸುಪವಿತ್ರತಮ ನಿನ್ನ ದಂಷ್ಟ್ರದ ಮೇಲಿಟ್ಟುಕೊಂಡು
ಕ್ಷಿಪ್ರದಲಿ ನೀರಮೇಲ್ ತಂದಿ ಭೂಮಿಯನು ೧೦
ನೀರೊಳಗಡೆ ತಡೆದ ಆದಿದೈತ್ಯನ ಕೊಂದು
ನೀರಮೇಲ್ ಇರಿಸಿದಿ ಭೂಮಿಯ ಎತ್ತಿ
ಸರಸಿಜೋದ್ಭವ ಮುಖ್ಯಸುರಮುನಿ ವೃಂದವು
ಕರಮುಗಿದು ಸ್ತುತಿಸಿದರÀು ಕೃತಜ್ಞ ಭಕ್ತಿಯಲಿ ೧೧
ಜಿತಂಜಿತಂತೇ ಅಜಿತ ಯಜ್ಞಾಭಾವನ
ಎಂದು ಜಯಷೋಷವ ಮಾಡಿ ಮುದದಿ
ಸುತಪೋನಿಧಿಗಳು ಸ್ತುತಿಸಿ ನಮಿಸಿದರು
ವೇದವೇದ್ಯನೇ ಸೂಕರರೂಪ ನಿನ್ನನ್ನ ೧೨
ದೇವೇಶನೇ ನಮೋ ನಮಸ್ತೆ ಅಖಿಳ ಮಂತ್ರದೇವತಾ
ದ್ರವ್ಯಾಯ ಸರ್ವಕೃತವೇ ಕ್ರಿಯಾತ್ಮನೇ
ವೈರಾಗ್ಯ ಭಕ್ತ್ಯಾತ್ಮಜಯಾನುಭಾವಿತ
ಜ್ಞಾನಾಯ ವಿದ್ಯಾ ಗುರುವೇ ನಮೋ ನಮಃ೧೩
ಈ ರೀತಿ ಇನ್ನೂ ಬಹುವಾಗಿ ಸ್ತುತಿಸಿದರು
ಹರಿ ವರಾಹನೇ ಭೂದರ ಧರೋದ್ಧಾರ
ನರಸುರರು ಶುಚಿಯಿಂ ಪಠಿಸಿ ಎಲ್ಲರೂ ಕೇಳೆ
ಸುಪ್ರಸನ್ನನು ಆಗಿ ಭದ್ರÀವನು ಈವಿ ೧೪
ಜ್ಞಾನಸುಖ ಪೂರ್ಣ ಪ್ರಸನ್ನ ಶ್ರೀನಿವಾಸ
ಅನತೇಷ್ಟಪ್ರದ ಭೂವರಾಹ ಹಯಗ್ರೀವ
ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ
ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ ೧೫
-ಇತಿ ಪ್ರಥಮ ಅಧ್ಯಾಯ ಪೂರ್ಣಂ –

ದ್ವಿತೀಯ ಅಧ್ಯಾಯ
ಹಿರಣ್ಯಾಕ್ಷ ಸಂಹಾರ
ಆದರದಿ ಶರಣಾದೆ ಭೂದರ ವರಾಹನೇ
ಶ್ರೀಧಾರಾರಮಣ ವಿಧಿ ಶ್ರದ್ಧೇಶ ವಂದ್ಯ
ಬದರಶೇಖರ ಮುಖ ಸುವಿನುತ ವಾಂಛಿತದ
ಮೋದ ಚಿನ್ಮಯ ಭೂವರಾಹ ಯಜÉ್ಞೀಶ À
ಜ್ಞಾನಸುಖ ಭೂಮಾದಿ ಗುಣಪೂರ್ಣ ನಿರ್ದೋಷ
ಪೂರ್ಣಬಲ ಹರಿ ಯಜ್ಞಮೂರುತಿ ವರಾಹ
ಹನನ ಮಾಡಿ ಆದಿದೈತ್ಯನ ನೀರಿಂದ
ಕ್ಷೋಣಿಯ ನಿನ್ ದಂಷ್ಟ್ರ ಮೇಲಿಟ್ಟು ತಂದಿ ೧
ಭೂಮಿ ಉದ್ಧರಿಸಲು ಮಾತ್ರವಲ್ಲದೇ ಆ
ಹೇಮಾಕ್ಷ ಅಸುರನ್ನ ಸಂಹಾರ ಮಾಡೆ
ನೀ ಮಹಾಕ್ರೋಡರೂಪವÀ ಪ್ರಕಟಿಸಿದಿ ವಿಭೋ
ಅಮಲ ಅಪ್ರಾಕೃತ ಚಿನ್ಮಯ ವಪುಷ ೨
ಏಕದಾ ಬ್ರಹ್ಮನ ಸುತರು ಸನಕಾದಿಗಳು
ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು
ದಿಗ್ವಾಸಸ ಶಿಶುರೂಪ ಆ ಮುನಿವರರ
ಲೆಕ್ಕಿಸದೆ ತಡೆದರು ದ್ವಾರಪಾಲಕರು ೩
ಜಯವಿಜಯರೆಂಬುವ ಆ ದ್ವಾರಪಾಲಕರಿಗೆ
ಮಾಯೇಶ ಹರಿ ಪ್ರಿಯತರ ಮುನಿಶ್ರೇಷ್ಠರು
ಈಯಲು ಶಾಪವ ಆ ವಿಷ್ಣು ಪಾರ್ಷದರು
ದೈತ್ಯಜನ್ಮವ ಹೊಂದಿದರು ಪತನವಾಗಿ ೪
ಪತಿ ಕಶ್ಯಪ ಮುನಿ ಅಹ್ನೀಕದಲಿ ಇರಲು
ದಿತಿ ದೇವಿ ಬಂದು ಅಪತ್ಯಕಾಮದಲಿ
ಸಂಧ್ಯಾಕಾಲದಿ ಇಚ್ಛಿಸಿ ನಿರ್ಬಂಧಿಸಿ
ತಾ ಧರಿಸಿದಳು ಗರ್ಭ ವಿಧಿ ವಿರುದ್ಧದಲಿ ೫
ಸುತಪೋನಿಧಿ ಕಶ್ಯಪ ತೇಜೋಲ್ಬಣದಿ
ದಿತಿದೇವಿ ಜಠರದಲಿ ವಿಷ್ಣುಪಾರ್ಶದರು
ಪತಿತ ಆ ಜಯವಿಜಯರು ಪ್ರವೇಶಿಸಿದರು
ಆ ಆದಿದೈತ್ಯನು ಸಹ ಮೊದಲೇ ಅಲ್ಲಿ ಹೊಕ್ಕಿದ್ದ ೬
ಅಬ್ಧಿಯಿಂ ನೀ ಭೂಮಿ ಎತ್ತೆ ತಡೆದು ಹತ –
ನಾದ ಆ ದೈತ್ಯನು ಅಬ್ಜದೋದ್ಭವನು
ದಿತಿದೇವಿ ಉದರದಿ ಪ್ರವೇಶ ಮಾಡಿದ ಅವನೋಳ್
ಶ್ರೀದ ನಿನ್ ಪಾರ್ಶದನು ಆವಿಷ್ಟನಾದ ೭
ಆದಿ ಹೇಮಾಕ್ಷನೊಳು ವಿಷ್ಣು ದ್ವಾರಪ ವಿಜಯ
ದಿತಿದೇವಿ ಅವರ ಸುತ ಹಿರಣ್ಯಾಕ್ಷನೆಂದು
ಉದಿಸಿದನು ಅಣ್ಣ ಜಯ ಹಿರಣ್ಯಕಶಿಪು ಸಹ
ಅತಿಪರಾಕ್ರಮಯುತನು ಲೋಕಕಂಟಕನು ೮
ಗದೆ ಹಿಡಿದು ಹಿರಣ್ಯಾಕ್ಷ ದಿಗ್ವಿಜಯ ಮಾಡಿ
ಭೀತಿ ಪಡಿಸಿದ ದೇವತಾ ಜನರನ್ನೆಲ್ಲ
ಅತಿಬಲಯುತನಿವ ಧರೆಯ ಸೆಳಕೊಂಡು
ಉದಧಿಯೊಳು ಹೊಕ್ಕನು ಆರ್ಭಟಮಾಡುತ್ತ ೯
ವರುಣಾದಿ ಸುರರು ನಿನ್ನಲಿ ಮೊರೆ ಇಡಲು
ವರಶ್ಯಾಮಸುಂದರ ವರಾಹ ಹರಿ ನೀನು
ನೀರೊಳು ಲೀಲೆಯಿಂದಲಿ ಪೊಕ್ಕು ಆ ದೈತ್ಯ
ಹಿರಣ್ಯಾಕ್ಷನ ಸಹ ಯುದ್ದ ಮಾಡಿದಿಯೋ ೧೦
ಸುರವೃಂದ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು
ಕರದಿಂದ ಹೊಡೆದು ಆ ದೈತ್ಯನ ಕೊಂದು
ಧರೆಯನುದ್ಧರಿಸಿ ನೀ ಮೇಲೆತ್ತಿ ತಂದಿಯೋ
ಉರುಪರಾಕ್ರಮ ಭಕ್ತವತ್ಸಲ ಕೃಪಾಳೋ ೧೧
ಭೂದರ ವರಾಹ ಹರಿ ನಿನ್ನ
ಕೃತಜ್ಞ ಮನದಿ ಸನ್ನಮಿಸಿ ಸ್ತುತಿಸಿದರು
ಉದಾರ ವಿಕ್ರಮ ಹಿರಣ್ಯಾಕ್ಷನ್ನ ನೀನು
ಕೊಂದ ನಿನ್ನಯ ಕ್ರೀಡಾ ವರ್ಣಿಸಲಶಕ್ಯ ೧೨
ಕಮಲಾರಮಣ ಶ್ವೇತವರಾಹ ಮೂರುತಿ ನಮೋ
ಶಾಮಚಾರ್ವಾಂಗ ನಮೋ ಭೂವರಾಹ
ಬ್ರಹ್ಮ ಪವಮಾನರಿಂದಲಿ ಸದಾ ಪೂಜ್ಯನೇ
ಸ್ವಾಮಿ ಕರುಣಾಂಬುಧಿಯೇ ಶರಣು ಮಾಂಪಾಹಿ ೧೩
ಮೀನ ಕೂರ್ಮ ಕ್ರೋಢ ನರಸಿಂಹ ವಾಮನ
ರೇಣುಕಾದೇವಿಯ ಸುತ ರಾಮಚಂದ್ರ
ಕೃಷ್ಣ ಬುದ್ಧ ಕಲ್ಕಿ ವ್ಯಾಸ ಹಯಗ್ರೀವ
ಆನಮಿಪೆ ಅವನೀಶ ಭೂ ಶ್ರೀಶ ಪಾಹಿ ೧೪
ಉತ್ತಿಷ್ಠ ಶ್ರೀಕರ ಭೂಧರ ವರಾಹ ನಮೋ
ಸದಾನಂದಮಯ ಜಗಜ್ಜ್ಮದಿ ಕರ್ತ
ನಿರ್ದೋಷ ಗುಣಪೂರ್ಣ ಅನಿಷ್ಟ ಪರಿಹರಿಸಿ
ಸದ್ಜ್ಞಾನ ಬಲ ಅಯಸ್ಸು ಧನ ಯಶಸ್
ವರ್ಧಿಸುವಿ ದಯದಿ ೧೫
ಶ್ಯಾಮ ಅರಿಶಂಖಧರ ಅಭಯ ಸದ್ವರಹಸ್ತ
ಭೂಮಿಧರ ಸರ್ವವಾಂಛಿತ ಸಿದ್ಧಿದಾತ
ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನೇ
ಮನ್ಮನದಿ ಸರ್ವದಾ ಹೊಳೆಯೋ ಕರುಣಾಳು ೧೬
ಗುರು ಗುರೋರ್ಗುರು ಗುರೋರ್ಗುರುವಿನ ಗುರು
ಶ್ರೀ ರಾಘವೇಂದ್ರ ಗುರುರಾಜ ಲಾತವ್ಯ ಋಜುವರ್ಯ ಮಧ್ವ
ವಾರಿಜಾಸನ ಸರ್ವಹೃದ್ವನಜ ಅಂತಸ್ಥ
ಶಿರಿ ಮಹೀರಮಣ ವರಾಹ ನಮೋ ಶರಣು ೧೭
ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸ
ಅನತೇಷ್ಟಪ್ರದ ಭೂವರಾಹ ಹಯಗ್ರೀವ
ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ
ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ ೧೮
-ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ –

ಶ್ರೀ ರುಧಿರೋದ್ಗಾರಿ ಸಂವತ್ಸರ ಸ್ವಾಮಿ ಧನ್ವಂತರಿ ಸ್ತೋತ್ರ
೧೫೫
ಆನಂದ ಚಿನ್ಮಾತ್ರ ವಪುಷ ಸರ್ವಾಧಾರ ಅನಘ ಕೂರ್ಮಹಯ ಶೀಷ್ರ್ಯ ಸ್ತ್ರೀರೂಪ ಅಜಿತ ಆನಮೋ ರುಧಿರೋದ್ಗ್ಗ್ಗಾರಿ ಸಂವತ್ಸರ ಸ್ವಾಮಿ ಅನುತ್ತಮ ಸರ್ವೋತ್ತಮ ಧನ್ವಂತರಿ ರಮೇಶ ಪ
ರಾಜಗುರು ಮಂತ್ರಿಗುರು ಸೀನಾಧಿಪತಿ ಬುಧನು ರಾಜಿಸುವರು ಸೂರ್ಯೇಂದು ಕವಿ ಭೂಮ ರವಿಜ ಪ್ರಜ್ವಲಿಸಿ ನೀ ಇವರೊಳ್ ಕೃತಿಯ ನಡೆಸಿ ಲೋಕ ಪ್ರಜೆಗಳಿಗೆ ಮಳೆ ಬೆಳೆ ಸೌಖ್ಯವಿತ್ತು ಪೂೀಷಿಸುವಿ ೧
ದೇಶದೇಶ ರಾಜ್ಯಾಧಿಪರ್ಗಳ ಪರಸ್ಪರ ಸಂಶಯ ದುರ್ಮನವ ಆಗಾಗ ಶಾಂತ ಮಾಡುವುದು ಮೋಸಗಾರ ಕುಜನರು ಚೋರ ಕ್ರೂರರು ಮಾಳ್ಪ ಹೊಸ ಹೊಸ ಚಟುವಟಿಕೆ ಪರಿಹರಿಸಿ ಕಾಯೋ ಲೋಕವನು ೨
ವೇದವ್ಯಾಸವಿರಚಿತ ಸಾತ್ವಿಕ ಪುರಾಣಗಳ ಯಥಾರ್ಥ ಪೇಳಿದೆ ದುಷ್ಟಾರ್ಥ ಪೇಳಿ ಜನರ ಮೋಹಿಸಿ ಸಾಧು ಸ್ತ್ರೀಪುರುಷರ ಪ್ರೌಢಕನ್ಯೆ ಬಾಲರ ವಂಚಿಪ ಧೂರ್ತರನು ಅಡಗಿಸಿ ಸತ್ಯಧರ್ಮ ಸಂತಾನ ಬೆಳೆಸೋ ೩
ರಾಜ ಸಚಿವನು ಬೃಹಸ್ಪತಿಯಂತರ್ಗತನಾದ ರಾಜರಾಜೇಶ್ವರನೆ ನೀ ಅಂದು ಮಾನವಿಗೆ ಮದುವೆ ಉಜ್ವಲ ತಪಸ್ವಿಗೆ ಪುತ್ರರ ಒದಗಿಸಿದಿ ಇಂದು ನಿಜ ಭಕ್ತಸುತ ಕಾಮ ಪರಕಾಮ ಜನರಿಗೆ ಒಲಿಯೋ ೪
ಹಿಂದಿನ ಇಂದಿನ ಸ್ವಕರ್ಮ ಪರಕರ್ಮ ಲಬ್ಧ ಮಾಂದ್ಯ ನರತ್ವಕೆ ಚರ್ಮ ಸೂತಕ ಗರ್ಭಿ ವ್ಯಾಧಿಪೀಡಿತ ಸಜ್ಜನರಿಗೆ ಸುಖವೀಯೋ ವೇಧಪ ಪ್ರಸನ್ನ ಶ್ರೀನಿವಾಸ ರುಧಿರೋಧ್ಗಾರಿ ಸ್ವಾಮಿ ೫

ಶ್ರೀ ಪುರುಷೋತ್ತಮವಿಲಾಸ
೬೨-೨
ಆನಂದ ಜ್ಞಾನಮಯ ಅಖಿಲ ಗುಣ ಪರಿಪೂರ್ಣ ||
ಅನಘ ಲಕ್ಷ್ಮೀರಮಣ ಶರಣು ಜಗದೀಶ ಪ
ವನಜಾಸನಾದಿ ಸುರರಿಂದ ಆರಾಧಿತನೇ |
ವನಜಜಾಂಡದಿ ಜಗಜ್ಜನ್ಮಾದಿಪತೇ ಅಪ
ಆಮ್ನಾಯಕೂ ಅಮಿತ ಅನಂತ ಗುಣಕ್ರಿಯಾರೂಪ
ಅನಂತ ಶೀರ್ಷಾನಂತ ಉರುಸುಗುಣಪೂರ್ಣ||
ಅನಂತಾಕ್ಷ ಸರ್ವಜ್ಞ ಸಾಕ್ಷಿ ಸರ್ವಾಧ್ಯಕ್ಷ ||
ಅನಂತಪಾದನು ಅನಂತರೂಪಸರ್ವಸ್ಥ ೧
ಸಹಸ್ರಪಾತ್ ಸತ್ಯಂ ಸತ್‍ಸೃಷ್ಟಿ ಜೀವನದ
ಸಹಸ್ರಾಕ್ಷಜ್ಞಾನಂ ಎರಡು ವಿಧಜ್ಞಾನ ||
ಸಹಸ್ರಶೀರ್ಷಾನಂತಂ ಆನಂದ ಆನಂದ
ಮಹಾಮಹಿಮ ಪೂರ್ಣಗುಣ ಪುರುಷನೀಬ್ರಹ್ಮ ೨
ನಾಕಭೂಪಾತಾಳ ಜಗದಂತರ್ಬಹಿವ್ರ್ಯಾಪ್ತ ||
ಭಕುತರ ಸಮೀಪಸ್ಥ ಇತರರಿಗೆ ದೂರ ||
ಏಕಾತ್ಮ ಪರಮಾತ್ಮ ಪರಮ ಪುರುಷವಿಷ್ಣೋ
ನೀಕಾಲಗುಣ ದೇಶಾಪರಿಶ್ಚಿನ್ನ ಭೂಮನ್ ೩
ಪ್ರಕೃತಿಶಚವ್ಯಕ್ತ – ಮಹದಾದಿ ತತ್ವಂಗಳಿಗೇ |
ಆಕಾಶ ಮೊದಲಾದ ಭೂತ ಪಂಚಕಕ್ಕೆ ||
ಸುಖಮಯನೇ ನೀಸರ್ವೆ ಚೇತನಾ ಚೇತನಕೆ |
ಏಕ ಆಶ್ರಯ ಅನಂತ ಶೀರ್ಷಾಕ್ಷಪಾದ ೪
ಪರಮೇಶ ಅವಿಕಾರ ಸಮರ್ಥ
ಉರು ತೈಜಸಚ್ಛಕ್ತಿ ರೂಪವಷಟ್ಕಾರ
ಪ್ರಕ್ರತಿ ಸರ್ವದಿ ನೀನು ಸ್ವೇಚ್ಛೆಯಿಂ ತುಂಬಿರುವಿ |
ಪ್ರಕೃತಿ ಸರ್ವವು ನಿನ್ನಧೀನವೋ ಸ್ವಾಮಿ ೫
ದ್ಯುಭ್ವಾದಿ ಜಗತ್ತಿಗೆ ಆಧಾರಾಧಿಷ್ಠಿತನು
ದುಭ್ವಾದಿಗಳವ್ಯಾಪ್ಯ ವ್ಯಾಪಕನು ನೀನು
ಸರ್ವಸ್ಥನಾಗಿ ನೀ ಸರ್ವವಶಿಯಾದುದರಿಂ
ಸರ್ವನೀನೇಂದೆನಿಸಿಕೊಂಬಿಯೋ ಸ್ವಾಮಿ ೬
ಆಧಾರ ಆಧೇಯೆ ಅನಂತಾಲ್ಪಶಕ್ತಿಯು
ಅಧಿಷ್ಠಾನಾಷ್ಟಿತ ವ್ಯಾಪ್ಯ ವ್ಯಾಪಕವು
ಭೇದ ಈರೀತಿಯಲಿ ಸುಸ್ಪಷ್ಟವಾಗಿದೆಯು
ಇದಂಸರ್ವಂ ಉಕ್ತಿ ನಿನ್ ಸ್ವಾಮಿತ್ವ ಬೋಧಕವು ೭
ಹಿಂದಿನಮುಂದಿನ ಇಂದಿನ ಜಗತ್ತೆಲ್ಲ
ಅಧೀನ ನಿನ್ನಲ್ಲಿ ಸ್ವಾಮಿ ಸರ್ವವಶಿಸರ್ವ |
ಓದುನವು ಕರ್ಮಫಲಭುಂಜಿಪ ಸಂಸಾರಿಗಳು
ಅದರಂತೆ ಮುಕ್ತರಸ್ವಾಮಿ ಆಶ್ರಯನು ೮
ಇವು ಮಾತ್ರವÉೀ ನಿನ್ನ ಮಹಿಮೆಗಳು ಪರಮಾತ್ಮ ||
ಇವÀಕಿಂತ ಅಧಿಕೋಚ್ಚ ಅಪರಿಮಿತ ಮಹಿಮಾ
ಸರ್ವ ಈ ಚೇತನಾಚೇತನ ಪ್ರಪಂಚವು
ಸರ್ವೇಶ ನಿನ್ನಂಶ ಸಹೃದಯ ಕಿಂಚಿತ್ತು ೯
ಒಡೆಯನಿನ್ನಮಿತ ಶಕ್ತಿಯೊದಂಶದಲೆ
ಜಡಜಗತ್ ಇರುವಿಕೆ ವಿಕಾರವುಸರ್ವ ||
ಜಡ ಭಿನ್ನರಲಿ ನಿನ್ನ ಸಾದೃಶ್ಯ ಅತಿ ಸ್ವಲ್ಪ
ನಡಿವುದು ಪಾದ ವೊಂದಂ ಶೃತ ಸುಪಾದನು ೧೦
ಅಧೀನತ್ವದಿಂಜಗತ್ ಇದಂಸರ್ವಂ ಎಂದಂತೆ –
ಪಾದೋಸ್ಯ ವಿಶ್ವದಲಿ ಭಿನ್ನಾಂಶಜೇಯ ||
ಸದೃಶ್ಯ ಮಾತ್ರದಲÉೀ ಭಿನ್ನಜೀವರು ನಿನ್ನ
ಪಾದರಾಗಿತಿಹರೋ ಚಿತ್ಚೇತ್ಯಯಂತ ೧೧
ಪೂರ್ಣಗುಣನಿಧಿ ಅನಘ ಜನ್ಮಾದಿಕರ್ತಅಜ
ಆವಣ್ನಯೋನಿತ ಪ್ರಾಪ್ಯ ಮಧ್ವಸ್ಥ ಶರಣು ||
ವನಜಭವಪಿತ ಶ್ರೀಶ ಪ್ರಸನ್ನ ಶ್ರೀನಿವಾಸ ನಮೋ
ಅನಂತ ಗುಣಪೂರ್ಣ ನೀ ಅನಂತನು ಪರಮ ಪುರಷ ೧೨

ಪ್ರಸನ್ನ ಶ್ರೀ ಕಲ್ಕಿ
೨೯
ಆನಂದ ಜ್ಞಾನಮಯ ಅಮಿತ ವಿಕ್ರಮ ಕಲ್ಕಿ
ಅನಘ ಲಕ್ಷ್ಮೀರಮಣ ಶರಣು ಮಾಂ ಪಾಹಿ
ಕೃಷ್ಣ ನರಹರಿ ಕಪಿಲ ತಿಲಕ ವೇಂಕಟರಮಣ
ಪ್ರಾಣ ಹೃದ್‍ವನಜಸ್ಥ ರಕ್ಷಮಾಂ ಸತತ ಪ
ಶ್ರೀ ದುರ್ಗಾಭೂರಮಣ ವಿಷ್ಣು ರುದ್ರ ಬ್ರಹ್ಮ
ಐದು ರೂಪನೆ ಲಕ್ಷ್ಮೀ ಮಾಯಾ ಜಯಾ ಕೃತಿ
ಶಾಂತೀಶ ಹಯವದನ ಹಂಸ ಮಹಿದಾಸನೆ
ಶ್ವೇತವರಾಹ ಚಿನ್ಮಯ ಮೀನ ಕೂರ್ಮ ೧
ಧನ್ವಂತರಿ ಶರಣು ಅಜಿತ ಸ್ತ್ರೀರೂಪನೇ
ಘನಭೂಮಿಧರ ನಾರಸಿಂಹ ವಾಮನ ತ್ರಿಪದ
ರೇಣುಕಾತ್ಮಜರಾಮ ವೇಣುಗೋಪಾಲ ನಮೋ
ಜ್ಞಾನದಾಯಕ ಬುದ್ಧ ಸುಜನಪ್ರಿಯ ಕಲ್ಕಿ ೨
ವೃಷಭ ತಾಪಸ ಯಜ್ಞ ದತ್ತ ವಡವಾವಕ್ತರ
ಕೃಷ್ಣ ಹರಿನಾರಾಯಣ ವೇದವ್ಯಾಸ
ದೋಷದೂರನೆ ಶಿಂಶುಮಾರ ಸುಗುಣಾರ್ಣವನೆ
ಶ್ರೀಶ ಸರ್ವಾಶ್ರಯ ಅನಂತ ಸುಖರೂಪ ೩
ಭೂಲೋಕದಲಿ ಮಣಿಮಂತಾದಿ ಅಸುರರು
ಶೀಲ ಹರಿಭಕ್ತರನ ಕಂಡು ಸಹಿಸದಲೆ
ಬಾಲ ಶಶಿಶೇಖರನ ಸ್ತುತಿಸಿ ವರಗಳ ಪಡೆದು
ಇಳೆಯಲಿ ಜನಿಸಿದರು ತತ್ವಜ್ಞನಿಗಳ ವೋಲ್ ೪
ಬಾದರಾಯಣ ಸೂತ್ರ ವಿರುದ್ಧ ಭಾಷ್ಯಗಳ್ ಮಾಡಿ
ವೇದೋಪನಿಷದ್‍ಗಳಿಗೆ ಅಪ ಅರ್ಥ ಪೇಳಿ
ಸಾಧುಗಳ ಮನಕೆಡಿಸೆ ಮಧ್ವಾಖ್ಯ ಸೂರ್ಯನು
ಉದಿಸಿ ಸಜ್ಜನರ ಹೃತ್ತಿಮಿರ ಕಳೆಯೆ ೫
ಶ್ರೀಪತಿ ವಿಷಯಕ ಜ್ಞಾನ ಮರೆ ಮಾಡುವ
ಇಪ್ಪತ್ತು ಮೇಲೊಂದು ಅಪದ್ದ ದುರ್ಭಾಷ್ಯ
ಅಪವಿತ್ರ ಅಚರಣೆ ದುಸ್ತರ್ಕ ದುರ್ವಾದ
ಈ ಪರಿಸ್ಥಿತಿಯ ನೆಟ್ಟಗೆ ಮಾಡಿದಾ ಮಾಧ್ವ ೬
ಇಪ್ಪತ್ತಿ(ತ್ತು) ಎರಡನೇ ಭಾಷ್ಯಾ ಸಿದ್ಧಾಂತವ
ಉಪನಿಷದ್ ದಶಕಕೆ ಸರಿಯಾದ ಭಾಷ್ಯಗಳ
ಸಪ್ತ ತ್ರಿಂಶತ್ ಒಟ್ಟುಗ್ರಂಥ ಸುರಧೇನುವ
ಅಪವರ್ಗಾನಂದ ಒದಗಿಸಿದ ಯೋಗ್ಯರಿಗೆ ೭
ಸದ್ಧರ್ಮ ಆಚರಣೆ ಯೋಗ್ಯ ಉಪಾಸನಾ
ಭಕ್ತಿ ಸವೈರಾಗ್ಯ ಜ್ಞಾನ ಉನ್ನಾಹ
ಅಧಿಕಾರಿಗಳು ಈ ಪರಿಯಲಿ ಸುಖಿಸಲು
ಕ್ಷಿತಿಯ ಜನರಿಗೆ ಲಭಿಸಿತು ಕ್ಷೇಮ ೮
ಕಾಲವು ಜರುಗಿತು ದೈತ್ಯರು ನೋಡಿದರು
ಮೆಲ್ಲಮೆಲ್ಲನೆ ಪುನಃ ವಿಷಮ ಮಾಡಿದರು
ಶೀಲರ ಹಿಂಸಿಸಿ ಸದ್ಧರ್ಮ ಕೆಡಿಸಿದರು
ಖಳರು ಕ್ರೌರ್ಯವ ವರ್ಧಿಸಿದರು ದಿನ ದಿನದಿ ೯
ಮಹಾಭಯಂಕರ ದೈತ್ಯ ಸಮೂಹವ
ಸಂಹನನ ಮಾಡಿದಳು ಮಹಾದುರ್ಗಾದೇವಿ
ಬ್ರಾಹ್ಮಣಕುಲದಲಿ ಪ್ರಾದುರ್ಭವಿಸಿದ ದೇವಿ
ಮಹಾದುರ್ಗಾ ಜಗದಾಂಬಾ ಶರಣು ಮಾಂಪಾಹಿ ೧೦
ದಿನಗಳು ಪಕ್ಷಗಳು ಮಾಸ ಋತು ವರುಷಗಳು
ನಿನ್ನ ನಿಯಮನದಿಂದ ಕಾಲ ಪ್ರವಹಿಸಿತು
ಜನಗಳು ಕಲಿಯುಗದ ಕಡೇ ಭಾಗ ಬರಲಾಗ
ಹೀನ ಕರ್ಮಂಗಳಲಿ ಆಸಕ್ತರಾದರು ೧೧
ಪುರಾಣಂಗಳಲಿ ಕಲಿಯಗದ ಸ್ಥಿತಿಗತಿಯು
ವಿವರಿಸಿದಂತೆಯೇ ನೆನೆಯಲೂ ಭೀತಿ –
ಕರ ಪಾಪಕರ್ಮದಲಿ ಜನರು ರತರಾಗಿರಲು
ನರಪರ ಕ್ರೂರತನ ದಿನ ದಿನ ಹೆಚ್ಚಿತು ೧೨
ಜ್ಞಾನಾದಿ ಸಂಪತ್ತು ಕಳಕೊಂಡ ಜನರು
ವಿಷ್ಣು ದ್ವೇಷಿಗಳಾಗಿ ಬಹು ಬಹು ನೀಚ-
ತನದಲಿ ಇರುತಿರಲು ದೇವತಾವೃಂದವು
ನಿನ್ನ ಬೇಡಿದರು ಪುನಃ ಧರ್ಮಸ್ಥಾಪಿಸಲು ೧೩
ಯದಾಯದಾಹಿ ಸದ್ಧರ್ಮಕ್ಕೆ ಹಾನಿಯು
ಅಧರ್ಮಕ್ಕೆ ವೃದ್ಧಿಯು ಆಗುವದೋ ಆಗಾಗ
ಸಾಧುಗಳ ರಕ್ಷಣೆಗೆ ಪಾಪಿಗಳ ಹನನಕ್ಕೆ
ಸದ್ಧರ್ಮ ಸ್ಥಾಪನೆಗೆ ಅವತಾರ ಮಾಳ್ಪಿ ೧೪
ಭೂಮಿಯಲಿ ಸುಪವಿತ್ರ ಶಂಭಳ ಗ್ರಾಮದಲಿ
ಬ್ರಾಹ್ಮಣ ಮಹಾತ್ಮ ವಿಷ್ಣು ಯಶಸ್ ಭವನದಲಿ
ಅಮಿತ ಪೌರುಷಜ್ಞಾನ ಆನಂದಮಯ ನೀನು
ವಿಮಲ ಕಲ್ಕ್ಯವತಾರ ಮಾಡಿದಿ ಮಹೋಜ ೧೫
ಕಲ ಎಂದರೆ ಜ್ಞಾನ ಕ ಎಂದರಾನಂದ
ಕಲ್ಕೆಂದರೆ ಜ್ಞಾನ ಆನಂದ ರೂಪ
ಶೂಲಿ ವಜ್ರಿಗಳಿಗೆ ಸುಖಜ್ಞಾನ ಬಲ ಕೊಡುವ
ಠಲಕನಮೋ ಪಾಪಹರ ಸೌಭಾಗ್ಯದಾತ ೧೬
ಲೋಕವಿಲಕ್ಷಣ ಸುಪ್ರಭಾಶ್ವ ಏರಿ
ನಿಖಿಳ ದುರ್ಮತಿ ಭೂಪಾಲ ಚೋರರನ್ನ
ಅಖಿಳ ಪಾಪಿಗಳ ಅಧರ್ಮ ಆಚರಿಸುವರ
ಶ್ರೀಕಾಂತದ್ವೇಷಿಗಳ ಕತ್ತರಿಸಿ ಕೊಂದಿ ೧೭
ಸತ್ಯವ್ರತ ಸುರವೃಂದ ವಸುಮತಿ ಪ್ರಹ್ಲಾದ
ಶತಮಖ ಪ್ರಜೆಗಳು ವಿಭೀಷಣ ಸುಗ್ರೀವ
ಪಾರ್ಥಸುಧಾಮ ರಕ್ಷಕನೇ ಸುರಬೋಧಕನೇ
ಸತ್ಯಧರ್ಮರ ಕಾಯ್ವ ಕರುಣಾಳು ಕಲ್ಕಿ ೧೮
ಜ್ಞಾನಸುಖ ಭೂಮದಿ ಗುಣಪೂರ್ಣ ನಿರ್ದೋಷ
ವಿಷ್ಣು ಪರಮಾತ್ಮ ಹರಿ ಉದ್ದಾಮ ಬ್ರಹ್ಮ
ಪೂರ್ಣಪ್ರಜ್ಞರ ಹೃಸ್ಥ ವನಜಭವಪಿತ ಕಲ್ಕಿ
ಪ್ರಸನ್ನ ಶ್ರೀನಿವಾಸ ಶರಣು ಮಾಂಪಾಹಿ ೧೯
-ಇತಿ ಕಲ್ಕ್ಯಾವತಾರ ಸಂಪೂರ್ಣಂ –

ಶ್ರೀ ರಾಹುದೇವ ಸ್ತೋತ್ರ
೯೦
ಆಬಸ್ಯ ಹರಿ ಅನುಗ್ರಹ ಪಡೆದ ರಾಹುದೇವನೇ ನಮೋ ಪ
ಸ್ವರ್ಭಾನು ಛಾಯಾಗ್ರಹಕೆ ನೀ ದೇವ ಅಪ
ಹೃತ್‍ತಿಮಿರ ತನು ರೋಗ ಸರ್ವಪೀಡೆ ಪರಿಹರಿಸಿ
ಸುದರ್ಶನೀಯ ಒಲಿಸೆನಗೆ ಸತ್ಜ್ಞಾನ ಕರ್ಮಜದೇವ ೧
ಮಹಾವೀರ್ಯನೇ ಊಧ್ರ್ವಕೇಶ ಮಹಾಶೀರ್ಷನೆ
ಮಹಾವಕ್ತ್ರ ಮಹಾದಂಷ್ಟ್ರ ಮಹಾಯಶ ನಮಸ್ತೇ ೨
ನೀರಜಪಿತ ಶ್ರೀ ಪ್ರಸನ್ನ ಶ್ರೀನಿವಾಸ ವಿಭು
ಹರಿಯ ಭೃತ್ಯನೇ ನಮೋ ಪಾಹಿ ಮಾಂ ಸತತ ೩

ಶ್ರೀ ತುಳಸಿ
೮೪
ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ಪ
ಎಂದೆಂದಿಗೂ ನಾ ನಿನ್ನಧೀನವೆ ಮಾತೆ ಸಿಂಧುಶಯನ
ಪ್ರಿಯೆ ವರದೆ ಆನಂದದೆ ಅ.ಪ
ಆದಿಕಾರಣ ವಿಷ್ಣು ಪ್ರಿಯಳೆ ಶ್ಯಾಮಲೆ ಕೋಮಲೆ
ವಿಧಿಶರ್ವವಂದಿತೆ ವಿದ್ಯಾಧರಾದಿ ಅರ್ಚಿತೆ
ಆದರದಲಿ ನಿನ್ನ ಪಾದಪಂಕಜಗಳ
ಪ್ರತಿದಿನ ಸ್ಮರಿಪೆನೆ ವೃಂದಾವನಸ್ಥಿತೆ ತುಳಸಿ ಸುರೇಶ್ವರಿ೧
ಈರಾರು ಅಕ್ಷರ ಮಂತ್ರ ಸುಪ್ರತಿಪಾದ್ಯೆ
ನಾರದನುತೆ ನಾರಾಯಣ ಮನಃಪ್ರಿಯಳೆ
ಘೋರ ಪಾತಕ ಬಹು ಪಾಪಹಾರಿಣಿ ನಿನ್ನ
ಚಾರುಪಾದಗಳಿಗೆ ನಮಿಪೆ ಪೊರೆಯೆ
ಎನ್ನ ವರದೆ ತುಳಸೀದೇವಿ ೨
ನಿನ್ನ ಸ್ಮರಣೆ ಮಾಡೆ ಸರ್ವತ್ರ ವಿಜಯವಹುದೆ
ನಿನ್ನ ಸಂದರ್ಶನದಿ ಸರ್ವಪಾಪವು ಪೋಪುವೆ
ಎನ್ನ ಪಾತಕ ತಾಪಾದಿ ೧ ಗಳಳಿಯೆ
ಘನ್ನ ಪ್ರಸನ್ನ ಶ್ರೀನಿವಾಸನ ನಿಜಸತಿ ವಿರಜೆ ತುಳಸೀಮಾತೆ ೩

ಶ್ರೀ ಜಗನ್ನಾಥದಾಸರ ಚರಿತ್ರೆ
ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ
(ಅಪ್ಪಾವರು)
೧೪೦
ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ |
ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ ||
ಇಭರಾಜ ವರದನಿಗು ದ್ರುಪದಾತ್ಮಜಾಪತಿಗು |
ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ
ಶ್ರೀರಾಮನರಹರಿ ಶ್ರೀಕರನಾರಾಯಣ |
ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ ||
ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ |
ಅರವಿಂದದಲಿ ನಾನು ಶರಣು ಶರಣಾದೆ ೧
ಪಂಚಮುಖ ಹನುಮಂತ ನರಸಿಂಹ ಗರುಡ
ವಾಂಛಿತಪ್ರದ ವರಾಹ ಹಯವದನ ||
ಈ ಅಂಜನಾಸುತನನ್ನು ತತ್ ಅಂತಸ್ಥ |
ಪಂಚರೂಪ ಶ್ರೀಶನ್ನ ಪೂಜಿಪಮಹಂತ ೨
ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು
ಅಪ್ಪಮಕ್ಕಳಂತೆ ಕಾಯ್ದಿರಿ ಜನರ ||
ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ
ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ ೩
ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು
ತಾಳಿಗೋರೂಪ ಪಾದಜ ಧಾನ್ಯ ಉಂಡು ||
ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು |
ಜಲಜನಾಭನ ಗಾಯಕನೆಂದು ಆಶಿಸಿದಿರಿ ೪
ಬೊಮ್ಮನ ಪಿತ ‘ಶ್ರೀ ಪ್ರಸನ್ನ ಶ್ರೀನಿವಾಸನಲಿ’
ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ ||
ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು
ಪ್ರೇಮಾನುಗ್ರಹದಯದಿ ಪಾಲಿಪುದು ಶರಣು ೫ ಪ
|| ಸಂಪೂರ್ಣಂ ||

ಶ್ರೀ ವಿಶ್ವ ಪರಮಾತ್ಮ ಸ್ತೋತ್ರ
೫೦
ಈಶ ವಿಶ್ವ ರಮೇಶ | ಪಾಲಿಸೆನ್ನನು ದಕ್ಷಿಣಾಕ್ಷಿನಿವಾಸ |
ರೂಪಾಂತರದಿ ನೀ | ವಾಮನಯನದಿ ಕಾಶ | ಶರಣು ಶರಣು |
ಸರ್ವೇಶ | ಜಾಗೃತ ಕಾಲದಿ ಸರ್ವ ವ್ಯಾಪಾರಗಳ ಮಾಡಿಸುವಂಥ
ವಿಭುವೆ| ಮಂಗಳಾತ್ಮ ನಿಸ್ಸಂಗ ಚಿನ್ಮಯ ಸರ್ವಸುಖ
ಸೌಭಾಗ್ಯ ದಾತನೇ ಪ
ಕಂಜನೇತ್ರ ಶ್ರೀರಾಮ | ಸರ್ವದಲ್ಲಿ ಸಮ ಸಾಮ ಜ್ಞಾ£ಶೃಂಗ ನಾಮ
ಯಾಜ್ಯ ಸ್ವರೂಪದಿಂದ ನೀ ಯರ್ಜು ನಾಮ | ಉತ್ಥಾಪಕೊತ್ತ ನಾಮ
ಸರ್ವಪಾಪೋಜ್ಜಿತ ಉನ್ನಾಮನೇ ದೀಪ್ತ ಇಂಧನ ವಾಮ ಮಂಗಳ |
ಸರ್ವ ವೇದಗಳಿಂದ ಸರ್ವದಾ ವಾಣಿ ಪ್ರಾಣ ಸಂಸ್ತುತ್ಯ ಶ್ರೀಶನೇ
ದಿವ್ಯದೃಷ್ಟಿ ಗೋಚರ ವಿರಾಜನೇ ಶ್ರೀ ರಮಾ ಸಮೇತನಾಗಿಹ
ಸರ್ವದಾ ಸುಖ ಪೂರ್ಣ ಆತ್ಮನೇ |
ಮೃತ್ಯು ವರ್ಜಿತ ಅಮೃತ ಜಯ ಜಯ ೧
ಭಯ ವಿವರ್ಜಿತ ಅಭಯ | ಗುಣಪೂರ್ಣ ಬ್ರಹ್ಮ ಪುರುಷ
ಪೂರ್ಣೈಶರ್ಯ | ಶಂಖ ಚಕ್ರ ಗದಾಬ್ಜ ಸಂಯುತ ದಿವ್ಯ |
ಶಬಲ ವರ್ಣ ಸುವರ್ಣ ವಸ್ತು ನಿಸ್ಸಂಗ ನಿನ್ನ ಸ್ಥಾನವಾದುದರಿಂದಲೇವೇ
ಸರ್ವ ಉದಕಾದ್ಯ ಅಖಿಳವಸ್ತು ಅಸಂಗವಾಗಿವೆ ಎನ್ನ ಕಂಣ್ಗಳು |
ಸರ್ವದಾ ಸೌಂದರ್ಯ ರೂಪ ಶ್ರೀವಾಮನನೆ ಎನ್ನ ಎಡದ ಕಣ್ಣಲಿ
ಸರ್ವ ನಿಜ ಸದ್ಭ್ಭಕ್ತಭಾಮನ ದಕ್ಷಿಣಾಕ್ಷಿಗತ ನಿಯಾಮಕ | ೨
ವಿಶ್ವ ಶರಣು ಶುಭಾಂಗ | ಎರಡು ಪಾದವು ನಾಲ್ಕು ಹಸ್ತವು ಏಕ |
ಕುಂಡಾದಂಡ ಹೀಗೆ ಜ್ಞಾನ ಸುಖ ಸಪ್ತಾಂಗ ಪಾಹಿಮಾಂ ಮಂಗಳಾಂಗ
ಹತ್ತು ಮೇಲೊಂಬತ್ತು ಮುಖಗಳು ಮಧ್ಯ ಗಜಮುಖ ಮಂಗಳಪ್ರದ |
ಮೋದಮಯ ನರಮುಖ ಒಂಬತ್ತು ಬಲದ ಪಾಶ್ರ್ವದಿ ಹಾಗೂ ಎಡದಿ |
ಖೇದರಹಿತ ಜ್ಞಾನಮಯ ಒಂಬತ್ತು ನರಮುಖ ವಿಶ್ವ ಚಕ್ಷುಸ |
ಪದ್ಮಜನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ವಿಶ್ವನೇ ಶರಣು ಸಂತತ | ೩

ಶ್ರೀ ಯುವನಾಮ ಸಂವತ್ಸರ ಸ್ತೋತ್ರ
೧೫೨
ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ.
ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ ೧
ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ ೨
ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ ೩
ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು ೪
ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ ೫

ಪ್ರಸನ್ನ ಶ್ರೀ ದತ್ತಾತ್ರಯ
೩೧
ಮೊದಲನೇ ಅಧ್ಯಾಯ
ಪಾತಿವ್ರತ್ಯ ಮಹಾತ್ಮೆ
ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ
ಪದ್ಮಜಾದಿ ದೇವರ್ಗೆ ಜ್ಞಾನಬೋಧಕನು ಅನಘ
ಮುದಬಲ ಜ್ಞನಾದಿ ಗುಣಗರ್ಣಾಣವ ಸರ್ವತ್ರ
ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ
ನಿರ್ದೋಷ ಗುಣಪೂರ್ಣ ವಿಷ್ಣು ಸರ್ವೋತ್ತಮ ಸ್ವತಂತ್ರ
ಶ್ರೀದ ಶ್ರೀಪತಿ ಜಗಜ್ಜನ್ಮಾದಿಕರ್ತನು ಸಚ್ಛಾಶ್ರ –
ದಿಂದಲೇ ವೇದ್ಯನು ಮೂರು ವಿಧ ಜೀವರಿಗೆ ಯೋಗ್ಯ
ಸಾಧನಕೆ ಗತಿಯ ಮಾಡುವ ಅವತಾರ ಲೀಲಾ ೧
ಸುಪುಷ್ಪಭವ ಬ್ರಹ್ಮದೇವನೋಳ್ ತತ್ ಶಬ್ದವಾಚ್ಯನು
ಶ್ರೀ ಪುರುಷೋತ್ತಮನೆ ಪ್ರಜಾಸೃಷ್ಟಿ ಮಾಡಿಸುವನು
ತ್ರಿಪುರಾರಿ ಭಸ್ಮಧರ ರುದ್ರನೋಳ್ ತನ್ನಾಮದಲಿ
ಶ್ರೀ ಪುರುಷೋತ್ತಮನೇ ಸಂಹಾರ ಮಾಳ್ಪ ಅಂತರ್ಯಾಮಿ ೨
ಉರುಜ್ಞಾನ ಸುಖ ಬಲಾದ್ಯಮಿತ ಗುಣಧಾಮನ
ಕರ ಚರಣಾದ್ಯವಯವಕ್ಕೂ ಅವಗೂ ಅವನು
ಧರೆಯಲ್ಲಿ ಅವತಾರ ಮಾಡುವ ರೂಪಗಳಿಗೂ
ಪರಿಪೂರ್ಣವಾಗಿ ಅಭೇದ ಭೇದಲೇಶವೂ ಇಲ್ಲ ೩
ದ್ವಿ ಷೋಡಶ ಶುಭಲಕ್ಷಣ ತನುವುಳ್ಳ ಬ್ರಹ್ಮಗೂ
ವಿಷಕಂಠ ರುದ್ರಗೂ ಪರಸ್ಪರ ಭೇದ ಅಂತಸ್ಥ
ವಿಷ್ಣುಗೂ ಇವರುಗಳಿಗೂ ಭೇದವು, ಅಂತರ್ಯಾಮಿ
ವಿಷ್ಣು ಒಬ್ಬನೇ ದ್ವಿರೂಪದಲ್ಲಿ ಇವರಲ್ಲಿಹ ೪
ಹತ್ತಾವತಾರ ಮತ್ಸ್ಯಾದಿರೂಪಗಳು ಮಾತ್ರವಲ್ಲ
ಅನಂತರೂಪನು ಅನಂತಗುಣ ಕ್ರಿಯಾವಂತನು
ಕ್ಷಿತಿಯಲ್ಲಿ ಬಲಕಾರ್ಯಕ್ಕೆ ಕೆಲವು ಅವತಾರ
ಹಿತಕರ ಹಲವು ಜ್ಞಾನಬೋಧಕ್ಕೇವೇ ಕೆಲವು ೫
ಆಮಯ ಲೇಶವೂ ಇಲ್ಲದ ಸುಪೂರ್ಣ ಜ್ಞಾನಾನಂದಾ
ಧ್ಯಾತ್ಮನು ಜ್ಞಾನಕಾರ್ಯಕ್ಕಾಗಿ ಅವತರಿಸುವನು
ಶ್ರೀಮಾನ್ ಹಯಗ್ರೀವ ಸನತ್ಕುಮಾರ ದತ್ತ ಕಪಿಲ
ಧೀಮಾನ್ ಪರಾಶರ ವಾಸವೀಸೂನು ಐತರೇಯಾದಿ ೬
ದ್ವಾಪರದಲ್ಲೇವೆ ಅಲ್ಲಲ್ಲಿ ಕಲಿವಿಷ ಹರಡಿ
ತಪೋಧನರು ಗೌತಮರು ಶಪಿಸೆ ಜ್ಞಾನಕುಂದೆ
ಶ್ರೀಪ ವೇದವ್ಯಾಸ ಜ್ಞಾನ ತೇಜಃಪುಂಜ ಬಂದು ತೋರಿ
ಆ ಪೀಡಿಸುವ ಅಜ್ಞಾನ ತರಿದು ಸಜ್ಞಾನ ಇತ್ತ ೭
ಹಿಂದೆ ಬ್ರಹ್ಮದೇವರಾಜ್ಞಯಿಂ ಅತ್ರಿಋಷಿವರ್ಯರು
ನಿಂತರು ಋಕ್ಷಗಿರಿಯಲ್ಲಿ ಅಪತ್ಯಾಪೇಕ್ಷೆಯಿಂದ
ಅದ್ಭುತ ತಪವಚರಿಸಿ ಜಗದೀಶ್ವರ ಸಮ –
ಪುತ್ರ ಕೊಡೆ ಚಿಂತಿಸಿ ಹರಿಯಲ್ಲಿ ಶರಣಾದರು ೮
ಹರಿ ತಾನು ತನ್ನ ಅಧಿಷ್ಟಾನರಾದ ಬ್ರಹ್ಮೇಶ್ವರ
ಕರಕೊಂಡು ಋಷಿ ಮುಂದೆ ನಿಂತು ಯುಕ್ತಮಾತನ್ನಾಡಿ
ಮೂರು ಮಂದಿಗಳು ತಾವು ಪುತ್ರರಾಗುವೆವು ಎಂದ
ತರುವಾಯ ತಾನಿತ್ತ ವರವ ಒದಗಿಸಿದನು ೯
ಶ್ರೀ ಭಾಗವತ ಈ ವಿಷಯ ಒಳಗೊಂಡು ಇಹುದು
ಶ್ರೀ ಭಗವನ್ ಆಂಭ್ರಣಿ ಪತಿ ವೇದವ್ಯಾಸ ಸಂಕೃತ
ಈ ಭೂರಾದಿ ಜಗತ್ತಿನಲ್ಲಿ ಪ್ರಖ್ಯಾತ ಪುರಾಣಂಗಳೊಳ್
ಶ್ರೀ ಭಗವಾನ್ ದತ್ತಾತ್ರಯನ ಅವತಾರವು ವೇದ್ಯ ೧೦
ಗೀರ್ವಾಣ ಛಂದಸ್ಸು ಅಷ್ಟಿಯಲಿ ಬರೆಯುವದೆಂದು
ಶ್ರೀವರನ ಹಿತಾಜ್ಞಯಿಂ ಪ್ರಸನ್ನ ಶ್ರೀನಿವಾಸೀಯ
ಶ್ರೀವಿಷ್ಣು ಸಹಸ್ರನಾಮ ಭಾಷ್ಯ ಕನ್ನಡದಲ್ಲಿ
ಅಳವಡಿಸಿದಂತೆ ಅಷ್ಟೀ ಛಂದಸ್ಸಲಿ ಈ ಗ್ರಂಥವ ೧೧
ಈ ಗ್ರಂಥದಲಿ ಶ್ರೀಭಾಗವತವು ಮಾರ್ಕಂಡೇಯವು
ಭಾಗವತರಿಗೆ ಉಪಾಸನಾ ಹೇತು ಪಂಚರಾತ್ರ
ಆಗಮವು ಒಳಗೊಂಡ ವಿಷಯಗಳು ಇವೆಯು
ಅಕಳಂಕ ಮನಃ ಕಾಯ ಶುದ್ಧಿಯಿಂ ಪಠಣೀಯವು ೧೨
ಗುರುಮಂತ್ರ ಉಪದೇಶವಿಲ್ಲದಂತಹ ಸ್ತ್ರೀ ಜನ
ಶೂದ್ರರು ಬ್ರಹ್ಮಬಂಧುಗಳು ಈ ಗ್ರಂಥ ಪಠಿಸಲು
ಹರಿಭಕ್ತ ಸಾಧು ವೈದಿಕ ಬ್ರಾಹ್ಮಣರ ಅಪ್ಪಣೆ
ಕೋರಿ ಅವರ ಅಪ್ಪಣೆಯಿಂದ ಓದಬಹುದು ೧೩
ಪ್ರತಿಷ್ಠಾನಪುರದಲ್ಲಿ ಕೌಶಿಕಾಹ್ವಯ ದ್ವಿಜನು
ವ್ಯಾಧಿ ಪೀಡಿತನು ಕುಷ್ಠಿ ನಡಮಾಡಲು ಅಶಕ್ತ
ಆತನ ಪತ್ನಿಯು ಸಾಧುಗುಣವತಿ ಬಲುಶ್ರೇಷ್ಠ
ಪತಿವ್ರತೆಯು ಪತಿ ಹೇಳಿದಂತೆ ನಡೆಯುವಳು ೧೪
ಒಂದು ದಿನ ಆ ಬ್ರಾಹ್ಮಣನು ನೋಡಿದ ಬಾಗಿಲಾಚೆ
ಬೀದಿಯಲಿ ಹೋಗುತ್ತಿದ್ದ ಸುಂದರಿ ವೇಶ್ಯೆಯೋರ್ವಳಲಿ
ಸೋತು ಮನ ಅವಳನ್ನು ತಾನು ಹೊಂದಬೇಕೆನ್ನಲು
ಸಾಧ್ವಿಸತಿ ಪತಿಯನ್ನು ಎತ್ತಿದಳು ಸೊಂಟದಲಿ ೧೫
ರಾತ್ರಿ ಕತ್ತಲೆಮಾರ್ಗ ತಿಳಿಯದಲೆ ಪತಿಯನ್ನು
ಹೊತ್ತುಕೊಂಡು ಹೋಗುವಾಗ ಪತಿಯ ಕಾಲು ತಾಕಿತು
ಹಾದಿಯಲ್ಲಿ ಕಬ್ಬಿಣ ಸಲಾಕದಲ್ಲಿ ಚುಚ್ಚಿಸಿ ಇದ್ದ
ಸುತಪೋಧನ ಮಾಂಡವ್ಯರ ಕಟಿ ಸಮೀಪ ಹಾಹಾ ೧೬
ಅನ್ಯಾಯದಿ ಆ ರಾಜ್ಯದರಸ ಆ ಮಹಾಮುನಿಯ
ಧನಚೋರನೆಂದು ಶೂಲಕ್ಕೆ ಹಾಕಿಸಿದ್ದ ಆ ಶೂಲ
ಕಾಣದೇ ಕೌಶಿಕನ ಕಾಲ್ತಗಲಿ ಬಲು ನೋವಾಗಿ
ಮುನಿ ಶಾಪವಿತ್ತರು ಸೂರ್ಯೋದಯಲ್ಲೇ ಸಾಯೆಂದು ೧೭
ಹಾಹಾ ಇದು ಏನು ಮುನಿಗಳಿಗೆ ನೋವಾಯಿತಲ್ಲಾ
ಮಹಾತ್ಮರ ಶಾಪ ವೀಣಾಗಲಾರದು ಮಾಂಗಲ್ಯವ
ತಾಹೇಗೆ ಉಳಿಸಿಕೊಳ್ವದು ಎಂದು ಪತಿ ಅಂತಸ್ಥ
ಶ್ರೀಹರಿಯ ಸ್ಮರಿಸಿ ಆ ಪತಿವ್ರತೆ ಹೇಳಿದಳು ೧೮
ಸೂರ್ಯೋದಯವಾಗದಿದ್ದರೆ ಶಾಪವು ಫಲಿಸದು
ಸೂರ್ಯೋದಯವಾಗಬೇಡಿ ಎಂದು ಹೇಳಿದಳು ಸಾಧ್ವಿ
ಆರ್ಯಧರ್ಮ ಲೋಕಕಾರ್ಯ ಸರ್ವವೂ ಸ್ತಬ್ಧವಾದವು
ಎಲೆಲ್ಲೂ ಕತ್ತಲೆಯು ಭಾನು ಉದಯಿಸಲಿಲ್ಲ ೧೯
ಇಂದ್ರಾದಿ ದೇವರ್ಗಗಳು ಬ್ರಹ್ಮನಲಿ ಮೊರೆಯಿಡಲು
ಪತಿವ್ರತೆ ಮಹಾತ್ಮನೆ ಮತ್ತೊಬ್ಬ ಪತಿವ್ರತೆಯೇ
ಪ್ರತಿ ಮಾಡುವಳು ಅತ್ರಿಋಷಿ ಪತ್ನಿ ಅನಸೂಯಾ
ಪತಿವ್ರತಾ ರತ್ನಳಾ ಸಹಾಯ ಕೇಳೆಂದರು ವೇಧ ೨೦
ಶಕ್ರಾದಿ ಸುರರುಗಳು ಅನಸೂಯಾದೇವಿಯಲಿ
ಕೋರಿಕೆ ಮಾಡಲು ಆಕೆ ದೇವತೆಗಳ ಸಮೇತ
ಧೀರ ಪತಿವ್ರತೆಯಾದ ಕೌಶಿಕಾ ಗೃಹಕೆ ಹೋಗಿ
ಪರಿಚಯ ಮಾಡಿಕೊಂಡು ಕೊಂಡಾಡಿದಳಾ ಸಾಧ್ವಿಯ ೨೧
ಮಹಾಭಾಗರು ಇಂದ್ರಾದಿಗಳಿಗೂ ಅನಸೂಯಗೂ
ವಿಹಿತೋಪಚಾರ ಪೂಜÁದಿಗಳ ಮಾಡಿ ಆ ಸಾಧ್ವಿ
ಮಹಾಭಾಗ್ಯ ಆಗಮನ ಎನ್ನುತ್ತ ಕಾರಣವನು
ಬಹು ಹಿತದಲಿ ಕೇಳಿದಳು ತನ್ನ ಸ್ಥಿತಿ ಹೇಳಿ ೨೨
ಅನಸೂಯ ಹೇಳಿದಳು ಸೂರ್ಯ ಉದಿಸುವದಕ್ಕೆ
ನೀನೊಪ್ಪು ನಿನ್ನ ಪತಿ ಬದುಕಿಸಲ್ಪಡುವನು
ಎನ್ನುತೆ ಕೌಶಿಕಾ ಸಾಧ್ವಿಯು ಅನುಮೋದನೆ ಕೊಂಡು
ಇನ ಉದಿಸಲಿ ಎಂದ ಅಘ್ರ್ಯ ಕೊಟ್ಟಳು ಮುದದಿ ೨೩
ಉದಿಸಿದನು ಸೂರ್ಯ ಮುನಿಶಾಪ ಫಲಿಸಿತು
ಬಿದ್ದ ಕೆಳಗೆ ಕೌಶಿಕ ತತ್‍ಕ್ಷಣವೇ ಬದುಕಿ ಎದ್ದ
ಪತಿವ್ರತಾ ಶಿರೋಮಣಿ ಅನಸೂಯಾ ದೇವಿ ಪ್ರಭಾವ
ಪತಿವ್ರತಾ ಮಹಾತ್ಮೆ ಜ್ವಲಿಸಿತು ಲೋಕದಲ್ಲಿ ೨೪
ಕೌಶಿಕನ್ನ ಬದುಕಿಸಿದ್ದು ಮಾತ್ರವಲ್ಲದೇ ಸರ್ವ
ಕುಷ್ಠಾದಿ ರೋಗ ಪರಿಹರಿಸಿ ಯುವವಾಗಿ ಮಾಡಿ
ಅಯುಷ್ಯ ಬಹುನೂರು ವರ್ಷಗಳ ಅನುಗ್ರಹಿಸಿ
ತುಷ್ಠಿ ಸುಖಜೀವನ ಒದಗಿಸಿದಳ್ ಅನಸೂಯಾ ೨೫
ಅನಸೂಯೆಯ ಪಾತಿವ್ರತ್ಯ ಮಹಾತ್ಮೆಯ ಶ್ಲಾಘಿಸಿ
ಏನು ವರ ಕೇಳಿದರೂ ಕೊಡುವವೆಂದು ಸುರಪ
ಆನಿಮಿಷರು ಹೇಳಲು ಪತಿವ್ರತಾ ಶಿರೋಮಣಿ
ವಿಷ್ಣು ವಿಧಿ ಶಿವ ತನ್ನಲ್ಲವತರಿಸಲೆಂದಳು ೨೬
ತಥಾಸ್ತು ಎಂದ ದೇವತೆಗಳ ವರ ಸತ್ಯಮಾಡೆ
ಸುತಪಸ್ವಿ ಅತ್ರಿಗೆ ಹಂಸ ವೃಷಾರೂಡರು
ಪ್ರತ್ಯಕ್ಷದಿ ಹೇಳಿದಂತೆಯೂ ಅನಸೂಯ ಅತ್ರಿಗೆ
ಪುತ್ರರೆಂದುದಿಸಿದರು ಸೋಮಸ್ತ ಬ್ರಹ್ಮೇಶ ವಿಷ್ಣು ೨೭
ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ
ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ
ಅರ್ಕಕೋಟ್ಯಾಮಿತ ತೇಜನೇ ಬ್ರಹ್ಮಾದ್ಯಮರ ಗುರೋ
ಜಗದೀಶ ದತ್ತಾತ್ರಯನಮೋ ಪ್ರಿಯತಾಂ ಶರಣು ೨೮

-ಇತಿ ಪ್ರಥಮಾದ್ಯಾಯ ಸಂಪೂರ್ಣಂ-
ಎರಡನೇ ಅಧ್ಯಾಯ
ಶ್ರೀ ದತ್ತಾತ್ರಯ ಪ್ರಾದುರ್ಭಾವ ಸಾರ
ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ
ಪದ್ಮಜಾದಿ ದೇವರ್ಗೆ ಜ್ಞಾನಭೋಧಕನು ಅನಘ
ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ
ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ
ಬ್ರಹ್ಮಾವಿಷ್ಟನು ಸೋಮ ಔಷಧಿಗಳ ರಾಜನಾದ
ಉನ್ಮಾದ ಚರ್ಯದಿ ಕೋಪ ಪ್ರಕಟಿಸಿ ಮೆರೆವರು
ತಮ್ಮ ಶಿಷ್ಯರೊಡಗೂಡಿ ಶಿವಾವತಾರ ದೂರ್ವಾಸ
ಸುಮ್ಮನಸ ಸಜ್ಜನ ಹಿತರು ದುಷ್ಟನಿಗ್ರಹರು ೧
ತನ್ನನ್ನ ತಾನೇ ಸುತನಾಗಿ ದತ್ತಮಾಡಿಕೊಂಡನು
ವಿಷ್ಣು ಅತ್ರಿ ದಂಪತಿಗೆ ಆದ ಕಾರಣ ಪ್ರಖ್ಯಾತೆ
ಉನ್ನಾಮ ದತ್ತಾತ್ರಯ ಕ್ಷೋಣಿ ಯೋಗ್ಯಾಧಿಕಾರಿಗಳಿಂ
ಘನಭಕ್ತಿಯಿಂ ಶುಚಿಯಿಂ ಜಪ್ಯ ಸ್ಮರಣೀಯಿಂ ಶ್ರೋತವ್ಯ ಜಯತು ೨
ಕಲ್ಯಾಣತಮ ಪೂರ್ಣ ಅಮಲ ಗುಣಗಣ ಸಿಂಧು
ಮಾಲೋಲ ಶ್ರೀವಕ್ಷ ಶ್ರೀಶನೇ ಪ್ರಾದುರ್ಭವಿಸಿದನು
ಚೆಲುವ ಅನುಪಮ ಸೌಂದರ್ಯಸಾರ ಸರ್ವೋತ್ತಮ
ಲೀಲಾನಂದಮಯ ಚಿನ್ಮಾತ್ರಗಾತ್ರ ಭಕ್ತೇಷ್ಟದಾತ ೩
ಕಮಲಾಸನಾವಿಷ್ಟ ಸೋಮ ರುದ್ರಾವತಾರ ದೂರ್ವಾಸ
ತಮ್ಮ ತಮ್ಮ ಉದ್ಯೋಗಸಾಧನಕೆ ಬೇರೆ ಬೇರೆ ಹೋಗೆ
ಸುಮನೋಹರ ರೂಪ ಶ್ರೀಮನೋರಮ ದತ್ತಾತ್ರಯ
ಸುಮಹಾ ಯೋಗಿಯಾದ ನಿಸ್ಸಂಗ ಯೋಗೇಶ್ವರೇಶ್ವರ ೪
ಅತ್ರೇಯರು ಮೂವರು ಹೀಗೆ ಬೇರೆ ಬೇರೆಯಾಗಿಯೇ
ತಮ್ಮ ತಮ್ಮ ರೂಪದಲ್ಲೇ ಇದ್ದರು ಒಂದಾಗಿ ಅಲ್ಲ
ಸೋಮ ಶಿವ ದತ್ತರಿಗೆ ಬೇರೆ ಬೇರೆ ಮಂತ್ರವುಂಟು
ಸೋಮ ಪಂಚ ಶಿವ ಪಂಚ ದತ್ತ ನವಅಕ್ಷರವು ೫
ಪ್ರೋದ್ಯ ದಿವಾಕರ ಪೋಲ್ವ ವರ್ಣವುಳ್ಳ ಶುಭಗಾತ್ರ
ಆದಿತ್ಯ ಸಹಸ್ರಾಮಿತ ಮಹೋತ್ರ‍ಕಷ್ಟ ತೇಜಃಪುಂಜ
ವ್ಯಾಪ್ತ ಸರ್ವತ್ರ ಜ್ಞಾನಾಭಯಕರನು ಬ್ರಹ್ಮಾದಿ
ತ್ರಿದಿವ ಸುಬೋಧಕನು ಕಪಿಲನು ದತ್ತಾತ್ರಯ ೬
ಇಂಥ ಮಹಾಮಹಿಮನು ಕಪಿಲ ದತ್ತಾತ್ರಯನು
ಅಧಿಕಾರಿಗಳಿಗೆ ಅಪರೋಕ್ಷಜ್ಞಾನ ಮೋಕ್ಷದಾತ
ಶ್ರೋತೃ, ಮಂತ್ರ, ಧ್ಯಾತೃಗಳಿಗೆ ಕಪಿಲ ದತ್ತಾತ್ರಯ
ಭಕ್ತಿ ಮೆಚ್ಚಿ ಸದಾ ಸಂರಕ್ಷಿಸಿ ಇಷ್ಟಾರ್ಥ ಕೊಡುವ ೭
ಪದ್ಮ ಭವಾದ್ಯಮರರಿಂ ಧ್ಯಾತ ದತ್ತಾತ್ರಯ ಹರಿ
ಮೇದಿನಿ ನರರಂತೆ ಅವತಾರ ಲೀಲೆ ಚರಿಸಿ
ಅದ್ಭುತ ಯೋಗಾನುಷ್ಠಾನದಿ ಇರುತಿರೆ ಜನರು
ಈತನ ಸೌಂದರ್ಯ ಯೋಗಸಾಮಥ್ರ್ಯ ಹೊಗಳಿದರು ೮
ಸಹಸ್ರಾರು ಋಷಿಪುತ್ರ ಬ್ರಹ್ಮಚಾರಿಗಳು ಬಂದು
ಅಹರ್ನಿಶಿ ಯೋಗೇಶ್ವರೇಶ್ವರ ದತ್ತನಾಶ್ರಮದಿ
ಬಹಳುತ್ಸಾಹದಲಿ ಸುತ್ತು ಮುತ್ತು ಗುಂಪುಗೂಡಿ
ಮಹಾಯೋಗಾಭ್ಯಾಸಕ್ಕೆ ಚ್ಯುತಿಯ ಕಲ್ಪಿಸಿದರು ೯
ಯೋಗ್ಯರು ಸಜ್ಜನರು ಈ ಭಕ್ತ ಋಷಿಕುವರರು
ಯೋಗ್ಯಸಾಧನೆ ಅವರವರ ಆಶ್ರಮದಲ್ಲಿಯೇ –
ಗೈಯಲಿ ಬೇಕೆಂದು ಅವರುಗಳು ಹೋಗೋ ಉಪಾಯ
ನಿಶ್ಚೈಸಿ ಮುಳುಗಿದ ದತ್ತನು ಸರೋವರದೊಳು ೧೦
ಸುರಮಾನದಿ ಸಾವಿರವರ್ಷ ಭಗವಾನ್ ದತ್ತನು
ಸರೋವರದೊಳಿದ್ದನು ಹೊರಜನಕ್ಕೆ ಕಾಣದೆ
ಆ ಋಷಿಪುತ್ರರು ತೀರದಲಿ ಇಕೋ ಈಗ ನಾಳೆ
ಬರುವನು ಮೇಲೆ ಎಂದು ಕಾಯುತ್ತಿದ್ದರು ದೃಢದಿ ೧೧
ಜಲಧಿ ಉಕ್ಕಿ ಹರಿದು ಕ್ಷೋಣಿಯ ಮುಳುಗಿಸದೆ
ಜಲಮಧ್ಯ ತಾನಿದ್ದು ಕಾಯುವ ವಡವಾ ಮುಖಾಗ್ನಿ
ಜಲಮಧ್ಯದಿ ಈಗ ಹೊಕ್ಕಿರುವ ದತ್ತಾತ್ರಯನು
ಮುಳುಗಿರುವುದು ಆಶ್ಚರ್ಯವಲ್ಲ ಈರ್ವರೂ ಏಕ ೧೨
ಬಲುದೀರ್ಘ ದೇವವರ್ಷಗಳು ಸಾಸಿರವಾದರೇನು
ಶೀಲತಮ ವರವಾಯುವು ವರುಣನು ಬುಧಾದಿ
ಜಲಾಭಿಮಾನಿಗಳು ಕಿಂಕರರಾಗಿ ಇರುತಿಹರು
ಜಲಶಾಯಿ ನಾರಾಯಣ ಅವತಾರ ದತ್ತನಿಗೆ ೧೩
ಒಂದು ದಿನ ಕೆರೆನೀರು ಚಲಿಸಲು ಸಂತೋಷದಿ
ಬಂದರೂ ಬಂದರೂ ಎಂದು ಕೂಗೆ ಋಷಿಕುವರರು
ಇಂದಿರಾಪತಿ ದತ್ತ ಮೇಲೆದ್ದು ಬಂದ ಬದಿಯಲ್ಲಿ
ಇಂದಿರಾಂಗಿ ನಾರೀಮಣಿ ಓರ್ವಳ ಆಲಿಂಗಿಸುತ ೧೪
ಯಾರನ್ನೂ ಲೆಕ್ಕಿಸದೆ ಕಾಮವಿಲಾಸ ಕೇಳಿಯ
ಆ ಸ್ತ್ರೀಯೊಡನೆ ಮಾಡುತ್ತಿದ್ದುದು ಕಂಡು ಯುವಕರು
ಅರರೆ ಇದೇನಿದು ಯೋಗಿ ಹೀಗಾದರೆ ಎನ್ನುತ
ತ್ವರಿತ ತೆರಳಿದರು ಜುಗುಪ್ಸೆಯಲ್ಲಿ ತ್ಯಜಿಸಿ ೧೫
ಆ ಪುಣ್ಯವಂತ ಋಷಿಪುತ್ರರು ತಿಳಕೊಳ್ಳಲಿಲ್ಲ
ಆ ಸ್ಛುರದ್ರೂಪಿಣಿ ನಾರಿ ಸಾಕ್ಷಾತ್ ಲಕ್ಷ್ಮೀದೇವಿಯೆಂದು
ವಿಪುಲ ಮನ ಹರುಷ ತೋರಿಸಿ ದತ್ತಾತ್ರಯನು
ಕೈಪಿಡಿದು ಲಕ್ಷ್ಮಿಯ ಕರೆದುಹೋದ ಆಶ್ರಮಕೆ ೧೬
ಯಾವ ತನ್ನಾಶ್ರಮದಿ ಸ್ವಾಧ್ಯಾಯ ಪ್ರವಚನಗಳ್
ದಿವ್ಯ ಯೋಗ ಅಭ್ಯಾಸ ಶಿಷ್ಯರ್ಗೆ ಶೀಕ್ಷಾದಿಗಳ್
ಯಾವಾಗಲೂ ಹಿಂದೆ ನಡೆಸುತ್ತಿದ್ದನೋ ಅಲ್ಲಿ ಈಗ
ದೇವಿಯೊಡನೆ ಲೀಲಾವಿಲಾಸಗಳ ತೋರಿಸಿದ ೧೭
ಮಂದ ಧೀಗಳು ಈ ವಿಡಂಬನೆ ಕಂಡು ಮೋದದಲಿ
ಶ್ರೀದತ್ತ ಈ ರೀತಿ ಆದನಲ್ಲಾ ಎಂದು ಮಾತನಾಡೆ
ಸುಧೀಗಳು ಬೃಹಸ್ಪತ್ಯಾದಿಗಳು ದತ್ತಾತ್ರಯನು
ಮೋದಚಿನ್ಮಯ ನಿರ್ದೋಷ ಹರಿ ಶ್ರೀಶನೆ ಎಂದರು ೧೮
ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ
ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ
ಅರ್ಕಕೋಟ್ಯಮಿತ ತೇಜನೇ ಬ್ರಹ್ಮಾದ್ಯಮರ ಗುರೋ
ಜಗದೀಶ ದತ್ತಾತ್ರಯ ನಮೋ ಪ್ರಿಯತಾಂ ಶರಣು ೧೯
-ಇತಿ ಎರಡನೇ ಅದ್ಯಾಯ ಸಂಪೂರ್ಣಂ –

ಮೂರನೇ ಅದ್ಯಾಯ
ಸಂಪತ್‍ಲಕ್ಷ್ಮೀ ವೃತ್ತಾಂತ
ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ
ಪದ್ಮಜಾದಿ ದೇವರ್ಗೆ ಜ್ಞಾನಬೊಧಕನು ಅನಘ
ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ
ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ
ಸುರಪ ಜಂಭಾಸುರನಿಂದ ಅಪಜಯವ ಕೊಂಡು
ಸುರಗುರು ಪ್ರೇರಣೆಯಿಂ ದತ್ತಾತ್ರಯನಲಿ ಹೋಗಿ
ಶರಣು ಹೊಕ್ಕು ಸೇವಗೈಯಲು ಆಗ ಅವನನ

ಶ್ರೀ ವಾಯುದೇವರು
೬೫
ಕಾಯೊ ಹನುಮರಾಯ ನಿನ್ನ
ತೋಯಜ ಪಾದಕೆ ಕಾಯ ಮನದಿ ನಮೋ ಪ
ಭಾರತೀಶ ಕೃಪಾಸಮುದ್ರನೆ
ವಾರಿಜಜಾಂಡದಿ ಸರ್ವಜೀವರೊಳಿದ್ದು
ಮೂರೇಳು ಸಾಸಿರ ನೂರಾರು ಜಪಗಳ
ಇರುಳು ಹಗಲು ನರಹರಿಗೆ ಅರ್ಪಿಪ ಸುರ ೧
ಮಾತರಿಶ್ವಪ್ರಖ್ಯಾತ ಮಹಿಮನೆ
ವೀತ ಕಲುಷನೆ ವಾತ ಪ್ರಭಂಜನ
ಸತತ ಎನ್ನನು ಅತಿ ಹಿತದಿ ನೀ ಸಲಹುವೆ
ಪ್ರತತ ಶ್ರೀ ನೃಹರಿಯ ಪ್ರಥಮಾಂಗನೆ ದಣಿ ೨
ಪಾತ್ರರೊಳಗೆ ಸತ್ಪಾತ್ರ ಮಾಡೆನ್ನ
ಸೂತ್ರಸುಖ ಸಿತಗಾತ್ರ ಪವಿತ್ರನೆ
ಮಾತ್ರಾಕರಣನಿಯಂತೃ ಮಹಂತನೆ
ಚಿತ್ರ ಪುರುಷ ಮಾಕಳತ್ರನ ತೋರಿಸೊ ೩
ದೇವಜನನುತ ಭಾವಿ ಬ್ರಹ್ಮನೆ
ಕಾವ ಕರುಣಿಯೆ ಪವಮಾನ ನಮೋ ನಮೋ
ಭಾವುಕರೊಡೆಯ ಶ್ರೀದೇವಿ ಶಾಂತಿಯ ಪತಿ
ದೇವವರೇಣ್ಯನನಿರುದ್ಧನ ತೋರಿಸೊ ೪
ಶುದ್ಧ ಫ್್ಪರುಣಾಬ್ಧಿ ನಮೋ ನಮೋ
ಶುದ್ಧ ಭಕ್ತ್ಯಾದಿ ಸಂಪತ್ತು ಎನಗಿತ್ತು
ಉದ್ಧರಿಸೊ ಎನ್ನ ಶ್ರದ್ಧೇಶ ಮುಖ್ಯಪ್ರಾಣ
ಪದ್ಮೆ ಕೃತೀಶ ಪ್ರದ್ಯುಮ್ನಗೆ ಪ್ರಿಯತಮ ೫
ಜ್ಞಾನಬಲರೂಪ ಹನುಮ ನಮೋ ನಮೋ
ಜ್ಞಾನಸುಖಮಯ ಜಾನಕೀಶನ ದೂತ
ಇನನ ಸುತನಿಗೆ ವಿಭೀಷಣನಿಗೆ ರಾಮ
ತಾನೂ ಒಲಿದ ನೀನೊಲಿದ ಕಾರಣದಿ ೬
ಕುಂತಿಸುತ ಬಲವಂತ ಭೀಮ ಶ್ರೀ
ಕಾಂತ ಕೃಷ್ಣನೇಕಾಂತ ಭಕ್ತಾಗ್ರಣಿ
ಭ್ರಾಂತ ಕುಜನಕಲಿ ಅಂತಕ ಸುಜನರ
ಸಂತತ ಪೊರೆವ ಧನಂಜಯಗೊಲಿದನೆ ೭
ಪಂಚಭೇದ ಪ್ರಪಂಚ ಸತ್ಯವಿ
ರಿಂಚಿಪಿತನೆ ಸ್ವತಂತ್ರ ಸರ್ವೋತ್ತಮ
ಚಿಂತಿಸೆ ಭಕ್ತಿಯಿಂ ಮಿಂಚುಪೊಲ್ ತೋರಿ ನಿ
ರಂತರ ನಿಜಸುಖವೀವನೆಂದೆಯೊ ಮಧ್ವ ೮
ಶ್ರೀಶ ಚಿನ್ಮಯ ದೋಷದೂರನು
ವ್ಯಾಸ ಸುಖಮಯ ಪ್ರಸನ್ನ ಶ್ರೀನಿವಾಸ
ಭಾಸಿಪ ನಿನ್ನಯ ಹೃತ್ಸರಸಿಜದಲಿ
ದಾಶರಥಿಯ ಮುಖ್ಯ ದಾಸವರ್ಯನೆ ನಮೋ ೯

ಶ್ರೀ ಕುಮಾರ
೮೬
ಕುಮಾರ ಪಾಲಿಸೋ ನಿನ್ನ ಚಾರು ಚರಣಕೆ ನಾ
ನಮಿಪೆ ಕೃಪಾಕರ ಪ
ಸುಂದರಾನನ ಸ್ಕಂಧ ಕಾಮಗೋ
ವಿಂದಸುತ ಸುಂದರಾಂಗ ಪ್ರದ್ಯುಮ್ನನೆ
ಇಂದಿರೇಶನ ದಯ ತಂದು ನೀ ಒದಗಯ್ಯ
ವಂದಿಪೆ ನಿನ್ನರವಿಂದ ಪಾದಕೆ ನಾ ೧
ಸೂರ ಪದುಮಾದಿ ಅಸುರರೆಲ್ಲ ನೀ
ಮುರಿದು ಪೊರೆದೆಯೊ ಮೂರು ಜಗವ ಎನ್ನ
ಘೋರ ಬಾಧೆಗಳನ್ನು ತರಿದು ನೀ ಪೊರೆಯಯ್ಯ
ಧೀರ ಉದಾರನೆ ಸುರಸೇನಾಧಿಪ ೨
ಸೋಮವದನ ಉಮೇಶಸುತ ಗುಹ
ಪ್ರೇಮದಯದಿ ಭ್ರಮಾಕಲುಷ ಕೀಳೊ
ಬೊಮ್ಮನ ತಾತ ಪ್ರಸನ್ನ ಶ್ರೀನಿವಾಸ
ವಾಮನ ಶ್ರೀಶನ ಪ್ರೇಮ ಸುಪಾತ್ರನೆ ೩

ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ
೧೫೭
ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಪದುಮದಲಿ ಶರಣಾದೆ ಸರ್ವಗ್ರಹದಲ್ಲಿ ಇದ್ದು ತಾ ಕೃತಿ ನಡೆಸಿ ಶರಣರ ಕಾಯ್ವ ಪ
ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ ೧
ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ ೨
ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ ೩

ಭಕ್ತಿಯಿಂದ ಬೇಡಿದ ವರಗಳನ್ನು
ಶ್ರೀ ಗಣೇಶ

ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು
ವಿಪ್ರ ಪ್ರಬುಧ್ಧರಿಗೆ ಪ್ರಿಯತರ ಗಣೇಶ
ಅಪ್ರತಿಸುಪೂರ್ಣ ಸಚ್ಛಕ್ತಿಸ್ವರೂಪನು
ಸುಪ್ರಕಟ ನಿನ್ನೊಳು ಪ್ರಭಂಜನಸಮೇತ ಪ
ಬಾಲಾರ್ಕನಿಭ ವಸ್ತ್ರ ತನುಮಾಲ್ಯ ಲೇಪನದಿ
ಹೊಳೆಯುವ ಮಹೋದರ ಗಜಾನನ ಸುಫಲದ
ಥಳಥಳಿಪ ಪಾಶ ದಂತಾಂಕುಶಾಭಯಹಸ್ತ
ಒಲಿದು ವಿಘ್ನವ ಕಳೆದು ಕಾಮಿತಾರ್ಥವನೀವೆ ೧
ನಾಕಭೂಪಾತಾಳ ನಿಖಿಳ ಲೋಕಂಗಳ
ಮುಕ್ತಾಮುಕ್ತರ ಸರ್ವಧಾರಕಾಕಾಶ
ಏಕಾತ್ಮ ವಿಶ್ವನು ಪ್ರಕಾಶಿಪನು ನಿನ್ನೊಳು
ಶಂಕರಾತ್ಮಜ ಭೂತಾಕಾಶಾಭಿಮಾನಿ ೨
ತ್ರಾತ ಪದ್ಮಜಪಿತ ಪ್ರಸನ್ನ ಶ್ರೀನಿವಾಸನ
ಅತಿ ವಿಮಲ ನಾಭಿಧೇಶದಲಿರುವೆ ಮುದದಿ
ಕಾರ್ತಿಕೇಯನ ಅನುಜ ವಿತ್ತಪಗೆ ಸಮ ಶೇಷ
ಶತಸ್ಥರಿಗೆ ಉತ್ತಮನೆ ಗುರುವರ ನಮಸ್ತೆ ೩

ಶ್ರೀ ಅಂಗಾರಕ ಸ್ತೋತ್ರ
೯೨
ಗಂಗಾಜನಕ ಜಯೇಶ ಪ್ರಿಯತರ
ಮಂಗಳ ನಮೋ ನಮೋ ಪಾಲಯಮಾಂ ಪ
ತುಂಗ ಮಹಿಮ ವರಾಹಧರಾಸುತ
ಮಂಗಳಪ್ರದತೇ ನಮೋ ನಮೋ ಅಪ
ಸಾಧು ಜನಪ್ರಿಯ ವೃಷ್ಟಿಕೃದ್ ವೃಷ್ಟಿ
ಹರ್ತಾದುರ್ಜನ ಭೀಕರ ಭೋ
ವಿದ್ಯುತ್ತೇಜ ಕುಮಾರ ನಮೋ ನಮೋ
ಶಕ್ತಿಪಾಣೇ ತ್ವಂ ಪಾಲಯಮಾಂ ೧
ಸಾಮಗಾನ ಪ್ರಿಯ ದೇಹಿಮೇ ಸಪ್ತ –
ಸಾಮಭಕ್ತಿ ಪ್ರತಿಪಾದ್ಯ ಹರೌ
ನಿರ್ಮಲ ಭಕ್ತಿಂ ಸಜ್ಜನ ಸಂಗಂ
ಜ್ಞಾನಾಯುರ್ಬಲಾದ್ವೈಶ್ವರ್ಯಂ ೨
ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸ
ವಿಶ್ವರೂಪನು ನಿನ್ನೊಳ್ ಜ್ವಲಿಸುತಿಹ
ಅಂಗಾರಕ ನಮೋ ಭೂಮಿಜ ಕೇವಲ
ಕೃಪಯಾ ಸಂತತ ಪಾಲಯಮಾಂ ೩ ಪ

ಶ್ರೀಲಕ್ಷ್ಮೀನಾರಾಯಣ ಸ್ತುತಿ

ಗುಣಪೂರ್ಣಾಚ್ಯುತೋ ವಿಷ್ಣುಃ ಅಪ್ರಾಕೃತರೂಪವಾನ್
ಅನ್ನದಾತಾ, ಧನದಾತಾ ಆಯುಷಾÀ್ಯರೋಗ್ಯದೋ ಹರಿಃ
ಚಕ್ಷುದಾತಾ ಜ್ಞಾನದಾತಾ ದೇಹಿ ತ್ವಮಿ ಭಕ್ತಿ ಸದಾ
ಮದಾದರ್ಭಿಹಿಃ ಸರ್ವತ್ರ ತ್ವಮೇವ ಜ್ವಲತಿ ಸದಾ
ತ್ವತ್ರ‍ಕಪಯಾ ಏವ ಪಶ್ಯಾಮಿ ಭೋ ವಾಮನ ಭಾಮನಾ
ಮದ್‍ಹೃಸ್ಥ ಹರಿಣಾವೇ ಕ್ರಿಯಾದರ್ಶನ ಚಿಂತನಂ
ವಾಯು ಯಜ್ಞಸ್ಯ ಪಾದಸ್ತೇಃ ಮನ್ಮನತಿಚ್ಛಾಮೀಚ
ವಾಯುಯಜೇ ಸದಾತೀಕ್ಷು ಯಜ್ಞನಾಮಾ ಶ್ರೀಯಃ ಪತಿಃ
ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ಸದಾ ವಂದೇ ಮಮಸ್ವಾಮಿಃ

ಶ್ರೀ ಕರ ಅಷ್ಟಾಕ್ಷರ ಮಂತ್ರದ ವಿವರಗಳನ್ನೊಂಡ
ಶ್ರೀಕರ ಅಷ್ಟಾಕ್ಷರ ಮಂತ್ರ
೪೭
ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ
ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ
ಉತ್ತಮೋತ್ತಮಗುತ್ತ ಮೋತ್ತ ಮೋದೀತ
ಚೇತನಾಚೇತನರಿಗುತ್ತಮಾಶ್ರಯನು
ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು
ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ ೧
ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ
ಕ ಎಂದರಾನಂದಶತ ಸುಖಾಂತಸ್ಥ
ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು
ಇಂದಿರೇಶನೆ ಎನಗೆ ಸೌಭಾಗ್ಯವೀಯೊ ೨
ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು
ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ
ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ
ಇಹಪರದಿ ನಿಖಿಳ ಐಶ್ವರ್ಯವೀವೆ ೩
ರವಿ ಸೋಮ ಕಂಬು ಅರಿ ಶಂಖನಿಧಿ ಪದ್ಮನಿಧಿ
ದಿವ್ಯ ಹಸ್ತಗಳಲಿ ಶೋಭಿತವಾಗುಂಟು
ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು
ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ ೪
ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ
ಇನಗಮಿತದೀಪ್ತ ಆಭರಣ ಜ್ವಲಿಸುತಿವೆ
ವನರುಹಾಸನ ತಾತ ಶ್ರೀಕರ ಪ್ರಸನ್ನ
ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು ೫

ರೋಗ ಪರಿಹಾರ ಸ್ತುತಿ
೫೮
ಗುರುಗ ಧನ್ವಂತರೀ ವರಾಹ ನರಹರಿ ನಿನ್ನಾ
ಚರಣಕೆರಗುವೆ ಎನ್ನ ಬಿನ್ನಪಕೇಳಿ ಪೊರೆ ಇವಳನ್ನಾ ಪ
ಉದರ ಶೂಲಿ ಎನಲು ವೈದ್ಯಪಂಡಿತರು
ಶಸ್ತ್ರ ಪ್ರಯೋಗಿಸಲಿಹರು ಅವಶ್ಯ ಇಲ್ಲದಲೆ ೧
ಶಸ್ತ್ರದ ವೈಷಮ್ಯ ಬಾಧೆಗಳ ಕಳೆದು
ನಿತ್ರಾಣ ನರ ಉದರ ಮಾಂದ್ಯಗಳ ತಿದ್ದಿ ಕಾಪಾಡು ೨
ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸ ಘೃಣಿಯೇ
ನಿನ್ನ ದಯದಿಂದಲೇ ಜೀವರು ನಮ್ಮೆಲ್ಲರ ಯೋಗ ಕ್ಷೇಮಗಳು ೩

ಶ್ರೀ ರಘೂತ್ತಮ ಗುರು ಸ್ತೋತ್ರ
೧೨೩
ಗುರುರಾಜ ರಘೂತ್ತಮ ಗುರುರಾಜ
ಗುರುರಾಜ ನಮೋ ನಮೋ ನಿನ್ನ ಪಾದ
ಸರಸಿಜಯುಗಳದಿ ನಾ ಶರಣು ಅಹ
ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು
ಕರುಣದಿ ಸಲಹೆನ್ನ ದುರಿತಗಳಳಿದು ಪ
ನಿವ್ರ್ಯಾಜ ಕರುಣಿ ರಘುವರ್ಯ ಗುರು
ವರ್ಯ ಸುಮೇಧರ ದಿವ್ಯ ಚಾರು
ತೋಯಜ ಕರದಿಂದ ಉದಯನಾಗಿ
ಯೈದಿದಿ ನಿಗಮ ಸಾಮ್ರಾಜ್ಯ ಅಹ
ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ
ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ ೧
ಬದರೀಶ ನಿರ್ಣೀತತತ್ವ ಅರ್ಥ
ವಿಸ್ತಾರ ಮಾಡಿದ ಮಧ್ವ ಟೀಕೆ
ಜಯತೀರ್ಥ ಬರೆದ ತದ್ಭಾವ ಪೇಳಿ
ಒದಗಿಸಿದೆಯೊ ಜ್ಞಾನ ಸುಖವ ಅಹ
ಮುದ ಜ್ಞಾನ ಸೌಭಾಗ್ಯ ಸಾಧು ವೈಷ್ಣವತನ
ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ ೨
ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ
ಧರೆಯಳದವನ ಸೇವಿಸಿ ಗಂಗಾ
ಧರಷಡಾನನ ಇಲ್ಲಿ ವಾಸಿಸುವ ಈ
ಕ್ಷೇತ್ರ ವೃಂದಾವನ ವಾಸಿ ಅಹ
ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ
ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ ೩
ಸುರವೃಂದ ಶ್ರೇಷ್ಠ ನೀನಹುದು ಎನ್ನ
ಪರಿ ಪರಿ ಬಾಧೆಯ ತರಿದು ಸರ್ವ
ಕೊರತೆನೀಗಿಸಿ ಸಿರಿ ಇತ್ತು ಹರಿ
ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ
ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ
ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ ೪
ರಾಮನೃಕೇಸರಿ ವ್ಯಾಸ ಸತ್ಯ
ಭಾಮ ರುಕ್ಮೀಣಿ ದೇವಿ ಅರಸ ಭೂಮ
ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ
ಭೀಮಹನುಮ ವಂದ್ಯ ಶ್ರೀಶ ಅಹ
ಹೇಮಗರ್ಭನ ತಾತ ‘ಪ್ರಸನ್ನ ಶ್ರೀನಿವಾಸ’
ರಮೆಯರಸನ ಪ್ರಿಯತಮ ಜೀಯ ೫
|| ಶ್ರೀ ಕೃಷ್ಣಾರ್ಪಣಮಸ್ತು ||

ಶ್ರೀ ವೃದ್ಧಾಚಲ ಈಶ್ವರ ಸ್ತುತಿ
ಶ್ರೀ ದಕ್ಷಿಣಾ ಮೂರ್ತಿ ಸ್ತೋತ್ರ
೭೮
ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ
ಪುರಂದರ ಮುಖ ಸುರ ವೃಂದ ವಂದಿತರು
ಪರಮಾತ್ಮನು ಶ್ರೀ ರಾಘವ ಸಿಂಹನ
ಪರಮ ಭಕ್ತಾಗ್ರಣಿ ಶರಣರ ಸುರತರು ಪ
ಮೌತಿಕಾಕ್ಷಮಾಲ ಅಮೃತ ಕಲಶ ಅಭಯ
ವಿದ್ಯಾಮುದ್ರಾ ದರ್ಶಕ ಕೈ ಪದ್ಮಗಳ್
ಸುಂದರ ತರ ಶುದ್ಧ ಸ್ಫಟಿಕಾಮಲವರ್ಣ
ಇಂಥ ದಕ್ಷಿಣ ಮೂರ್ತಿಗೆ ಆನಮಿಸುವೆ ೧
ಉರಗ ಭೂಷಣ ದಿವ್ಯ ಹೊಳೆವ ಆಭರಣಗಳ್
ಚಂದ್ರ ಚೂಡ ತ್ರಿನೇತ್ರ ಕೃಪಾಕರ
ದಕ್ಷ ಪ್ರಜೇಶ್ವರಾ ದ್ಯಮರರಿಂದೀಡ್ಯ ಈ
ದಕ್ಷಿಣ ಮೂರ್ತಿಯ ಸ್ಮರಿಸೆ ಸಂತೈಪರು ೨
ಶ್ರೀಪತಿ ಜ್ಞಾನ ಪ್ರದರ್ಶಸಿ ತೇಜಸ್ ಐಶ್ವರ್ಯ ಈವೋರು
ಅಪಮೃತ್ಯು ವಿಷರೋಗ ಪರಿಹರಿಸುವರು
ಅಬ್ಜಜ ಪಿತ ಶ್ರೀ ಪ್ರಸನ್ನ ಶ್ರೀನಿವಾಸ
ಹೃತ್ಪದ್ಮದಿ ಕಾಂಬ ಮೇಧಾಕೊಡುವರು |
ಗುರುವರ ದಕ್ಷಣಾ ಮೂರ್ತಿಗೆ ಎರಗುವೆ ೩

ಶ್ರೀ ಸಂತಾನ ಗೋಪಾಲಕೃಷ್ಣ
೧೪೧
ಗೋಪಿ ವಲ್ಲಭ ಬಾಲ ಗೋಪಾಲ ಕೃಷ್ಣ ಶ್ರೀಪ ಸುಗುಣಾರ್ಣವನೇ ನಿರ್ದೋಷ ಶರಣು ಪುಷ್ಪಭವ ಭವಸರ್ಪರಾಜ ವಿಪ ಸುರಪಾದ ಸುಪುಣ್ಯ ಶ್ಲೋಕರಿಂ ಸದಾ ವಿನುತ ಸ್ವಾಮಿ ಪ
ವಿಪ್ರಸಹ ಪಾರ್ಥನ್ನ ಕರಕೂಂಡು ರಥವೇರಿ ಪರ್ವತ ಲೋಕಾಲೋಕ ದಾಟ ತಮಸ್ ಕತ್ತರಿಸಿ ಶ್ರೀಪತಿಯೇ ನಿನ್ನ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣೀಯೇ ೧
ಅಂದು ವೈರಾಟಿಯು ಪಾಹಿ ಪಾಹಿ ಮಹಾ ಯೋಗಿನ್ ದೇವ ದೇವ ಜಗತ್ ಪತೇ ನಾನ್ಯಂ ತತ್ ಅಭಯಂ ಪಸ್ಯೆ ಎಂದು ನಾಥನೇ ನಿನ್ನ ಮೊರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ ೨
ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲು ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುದು ೩
ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆಲುವ ಶಂಖ ಕೌಮೋದಕೀಧರನೇ ಮಾಲಕ್ಷ್ಮೀ ವಕ್ಷನೀ ವರ ಅಭಯ ಪ್ರದನಾಗಿ ಸಲುಹುತಿಯೇ ಭಕ್ತರನ ಗುರುಗ ಶ್ರೀ ಕೃಷ್ಣ ೪
ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಂಛಿತ ಪ್ರದನೇ ೫

ಶ್ರೀ ಗೋಪೀವಲ್ಲಭ ಗೋಪಾಲವಿಠಲ
೧೪೪-೧
ಗೋಪೀವಲ್ಲಭ ಗೋಪಾಲ ವಿಠಲದೇವ ಕಾಪಾಡೊ ಇವಳ ಭಕ್ತ್ಯಾದಿಗಳನಿತ್ತು ಪ
ಶ್ರೀಪ ಕೃಷ್ಣ ನಿನ್ನ ಭಕ್ತಸುಜ್ಞಾನಿಗಳ ಸತ್ಪಂಥದಲಿ ಇಟ್ಟು ದಯದಿ ಪಾಲಿಪುದು ಅಪ
ಭೀಷ್ಮಕನ ಸುತೆ ಸತ್ಯಭಾಮಾಸಮೇತ ನೀ ವಾಮಚಿನ್ಮಯ ಹರಿಣ್ಮಣಿನಿಭ ಸುಕಾಯ ಅಮಲ ಸುಸ್ವರ ವೇಣು ಅಭಯ ವರಹಸ್ತದಲಿ ವಾಮದಷ್ಟದಿ ಶಂಖ ತಮ ತರಿವ ಚಕ್ರ ೧
ಇಂದಿರಾಪತಿ ಕಂಬುಗ್ರೀವದಲಿ ಕೌಸ್ತುಭವು ಇಂದುಧರೆ ಆಶ್ರಿತನಾಗಿರುವ ವೈಜಯಂತಿ ಸುಂದರ ಸು¥ಟ್ಟೆ ಪೀತಾಂಬರವನುಟ್ಟಿಹ ಸೌಂದರ್ಯಸಾರನೆ ಜಗದೇಕವಂದ್ಯ ೨
ವನಜನಾಭನೆ ಅಜನೆ ವನಜಾಪತಿಯೆ ನಮೋ ವನಜಸಂಭವಪಿತ ಪ್ರಸನ್ನ ಶ್ರೀನಿವಾಸ ವನಜಲೋಚನ ಮಧ್ವ ಸಾಧು ಸುಜನರ ಹೃದಯ ವನಜಕೆ ದಿನಪ ನಮ್ಮೆಲ್ಲರನು ಪೊರೆಯೊ ೩

ಚಿಂತಾಮಣಿ ಎಂಬ ಪ್ರಖ್ಯಾತಮಣಿಯನ್ನು
೧೦
ಚಿಂತಾಮಣಿಗಮಿತ ಚಿಂತಾಮಣಿ
ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ಪ
ಕಂತುಪಿತ ಕೊಟ್ಟರುವ ಸಾಮಥ್ರ್ಯದಿಂದಲೇ
ಚಿಂತಾಮಣಿಯು ಐಹಿಕ ವಸ್ತುವೀವುದು
ಅನಂತ ಶ್ರೀಪತಿ ಚಿಂತಲವಾಡಿ ಕರುಣಿ ಸ್ವ –
ತಂತ್ರನು ಇಹಪರದಿ ಐಶ್ವರ್ಯವ ೧
ಕಾಕುಮನ ವಾಕ್ಕಾಯ ಶುದ್ಧ ಮಾಡುವ ದೇವಿ
ಶ್ರೀ ಕಾವೇರಿ ತೀರದಲಿ ಕುಳಿತು ಸರ್ವ
ಭಕುತರಿಗೆ ವರವೀವ ಶ್ರೀಕಾಂತ ನರಸಿಂಹ
ಸುಖಜ್ಞಾನಮಯ ದೋಷದೂರ ಗುಣನಿಧಿಯು ೨
ಮಮಕಾರ ಅಹಂಕಾರ ಡಂಭತನವನು ಬಿಟ್ಟು
ಮಮಸ್ವಾಮಿ ಸರ್ವರಿಗೂ ಪರಮೈಕಸ್ವಾಮಿಯು
ಸುಮನಸಾರ್ಚಿತ ಕುಸುಮಸಂಭವನ ತಾತನು
ರಮಾಪತಿ ಪ್ರಸನ್ನ ಶ್ರೀನಿವಾಸ ನಮೋ ಎನ್ನಿ ೩

ಶ್ರೀ ನರಸಿಂಹ ಮಂತ್ರ
೧೨
ಜಯ ಜಯ ಜಯ ನರಸಿಂಹ
ಜಯ ಜಯ ಮಹಾಲಕ್ಷ್ಮೀರಮಣ
ಜಯ ನಿರಾಮಯ ಸರ್ವೋತ್ರ‍ಕಷ್ಟ ಆಹ
ಜಯ ಕಮಲಜ ಮೃಡಾದ್ಯಮರವಂದ್ಯನೆ ನಮೋ
ಭಯಬಂಧಹರ ಭಕ್ತ ಜನರ ರಕ್ಷಕ ಸ್ವಾಮಿ ಪ
ಅರದೂರ ಗುಣಪರಿಪೂರ್ಣ
ಉಗ್ರವೀರನೆ ಮಹಾವಿಷ್ಣು
ಉರುಕಾಂತಿ ಸರ್ವತೋಮುಖನೆ ಆಹ
ನರಸಿಂಹ ಭಯಕರಾಶ್ರಿತಜನರ ರಕ್ಷಕ
ಶರಣಾದೆ ನಿನಗೆ ನಾ ಮೃತ್ಯುಮಾರಕ ನಮೋ ೧
ಸೃಷ್ಟಾ ಪಾತಾ ಅತ್ತ ತ್ರಾತಾ
ದುಷ್ಟ ದೈತ್ಯರಿಗತಿ ಕ್ರೂರ
ಶ್ರೇಷ್ಠ ಅಸಮಬಲರೂಪ ಆಹ
ಇಷ್ಟಭಕ್ತನ ಕಾಯೆ ಕಂಬದಿಂದಲಿ ಬಂದು
ತ್ರ‍ಕಷ್ಟ ಪ್ರಜ್ವಲಿಪ ನಖದಿ ಸೀಳ್ದೆ ಭ್ರಷ್ಟನ ೨
ವಿಶ್ವಸ್ಥ ಬಹಿರಂತವ್ರ್ಯಾಪ್ತ
ವಿಶ್ವ ವಿಷ್ಣು ವಷಟ್ಕಾರ
ಸರ್ವಜ್ಞ ನಿರ್ದೋಷ ಸುಗುಣಿ ಆಹ
ರವಿಕೋಟಿ ಅಮಿತ ಸಕಾಂತಿಯಿಂ ಜ್ವಲಿಸುವೆ
ವಿಶ್ವತೋಮುಖ ಸರ್ವಸಾಕ್ಷಿಸ್ವತಂತ್ರ ೩
ನರನಲ್ಲ ನರರೂಪಧಾರಿ
ನೀ ಮೃಗವಲ್ಲವು ಸಿಂಹವದ್ರೂವ
ನರಮೃಗಗಳಲಿ ನೀ ಸಮನು ಆಹ
ಧರೆ ದಿವಿ ಪಾತಾಳ ಜಂತು ಸರ್ವಾಂತಸ್ಥ
ಉರು ಜ್ಞಾನ ಬಲರೂಪ ಅನಂತ ನೀ ಏಕ ೪
ನ ಎಂದರೆ ಸರ್ವವಂದ್ಯ
ರ ಎಂದರೆ ಸುಖ ಜ್ಞಾನ
ಸಿಂ ಎಂದರೆ ಗುಣಸಾರ ಆಹ
ಇಂದಿರಾಪತಿ ಮಹದೈಶ್ವರ ರೂಪನು
ಹ ಎಂದರೆ ನೀನು ಪೂರ್ಣ ನಿರ್ದೋಷ ೫
ಭೂತಾದಿ ದುಷ್ಟ ಗ್ರಹಗಳ
ಖದ್ರೂಜಾದಿ ಸರ್ವ ವಿಷವ
ನೀ ದಯದಿ ಪರಿಹರಿಪೆ ಆಹ
ಭಕ್ತ ಜನರಿಗೆ ನೀ ಶುಭವಿತ್ತು ಅಕಾಲ
ಮೃತ್ಯುವ ತರಿವ ರಕ್ಷಕ ನಮೋ ಎಂಬೆ ೬
ದ್ವಾತ್ರಿಂಶ ಚತುರ್ವಿಂಶಾಕ್ಷರದ
ಮಂತ್ರ ಗಾಯತ್ರಿ ಪ್ರತಿಪಾದ್ಯ
ವೃತತಿಜಾಸನ ಮಂತ್ರ ಋಷಿಯು ಆಹ
ಅಧಿಕಾರಿಗಳು ಇದನು ಶ್ರವಣ ಪಠಣ ಮಾಡೆ
ಭೀತಿ ಮೋಹವ ಬಿಡಿಸಿ ನಿಖಿಳೇಷ್ಟವೀವೆ ೭
ಜಯ ಜಯ ನರಸಿಂಹಸ್ವಾಮಿ
ಜಯ ಜಯ ಸರ್ವಜ್ಞ ಭೂಮನ್
ಜಯ ಮಹಾ ತೇಜೋಬಲವೀರ್ಯ ಆಹ
ಜಯ ಪುರುಷೋತ್ತಮ ವೇಧಾದಿ ಸುರರಿಂದ
ಇಜ್ಯಪೂಜ್ಯನು ದೃಢಭಕ್ತಿಯಿಂ ಮುದದಿ ೮
ನಾರ ಉರು ಗುಣಸಿಂಧು
ನರಸಿಂಹ ಸುಪ್ರೀತನಾಗೊ
ಚಿರಜ್ಞಾನ ಭಕ್ತಿಯ ಸತತ ಆಹ
ಪರಮರಿಲ್ಲದ ಬಲಿ ನಿನ್ನಲಿ ಧ್ಯಾನ
ತೀವ್ರ ಪ್ರೇರಿಸು ಎನಗೆ ಅನಂತ ಅನುತ್ತಮ ೯
ಪ್ರೋದ್ಯಾರ್ಕನಿಭ ದೀಪ್ತವಾದ
ವರ್ತುಲ ಉರು ನೇತ್ರತ್ರಯವು
ಹಸ್ತದ್ವಯವು ಜಾನುವರೆಗೂ ಆಹ
ಸುದರ್ಶನಿ ಶಂಖಿ ಮಹಾಲಕ್ಷಿಯುತ ಕೋಟಿ
ಆದಿತ್ಯಾಧಿಕತೇಜ ಉತ್ರ‍ಕಷ್ಟ ಶಕ್ತ ೧೦
ಮೀನ ಕಮಠ ಕ್ರೋಡ ನೃಹರಿ
ಮಾಣವ ಪರಶ್ವಿ ಸುಧನ್ವಿ
ಕೃಷ್ಣ ಬುದ್ಧ ಕಲ್ಕಿ ಶರಣ ಆಹ
ವನರುಹನ ತಾತ ಪ್ರಸನ್ನ ಶ್ರೀನಿವಾಸ
ಅನಿಷ್ಟಹ ಇಷ್ಟದ ಎನಗೆ ದಯವಾಗೊ ೧೧

ರಾಮಾಯಣದಲ್ಲಿ ಬರುವ ಅನೇಕ
ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ
೭೦
ಜಯ ಜಯ ಜಯ ಮಧ್ವ ಜಯ ಜಯ
ಜಯ ಮಧ್ವ ಮುನಿರಾಯ ನಿನ್ನ ಚಾರು
ತೋಯಜಾಂಘ್ರಿಯಲಿ ನಾ ಶರಣು ಅಹ
ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ
ಕಾಯ ವಾಙ್ಮನ ಕರ್ಮ ದೋಷ ಮನ್ನಿಸಿ ಕಾಯೋ ಪ
ಭಾವಿ ವಿರಂಚಿ ಮಹೋಜ ಜಯಾ –
ದೇವಿ ಸಂಕರ್ಷಣ ತನೂಜ ಸೂತ್ರ
ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ –
ದೇವಿ ಹೃದಬ್ಜವಿರಾಜ ಅಹ
ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ
ವನರುಹ ನಿಷ್ಠ ಹನುಮಭೀಮ ಮಧ್ವ ೧
ಜಯತು ಶ್ರೀಹರಿ ರಾಮಚಂದ್ರ ಭಕ್ತ
ಜಯದ ಮೋದದ ಅರ್ತಿಹಂತ ಕೃಷ್ಣ
ಜಯತು ಕಾರುಣ್ಯ ಸಮುದ್ರ ಭಕ್ತ
ಜಯದ ಕ್ಷೇಮದ ಜ್ಞಾನ ಸುಖದ ಅಹ
ರಾಮವಚನ ಕಾರ್ಯರತ ಹನುಮಗೆ ನಮೋ
ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ ೨
ಜಯತು ಶ್ರೀಹರಿ ವೇದವ್ಯಾಸ ಭಕ್ತ
ಜಯದ ಹೃತ್ತಿಮಿರ ನಿರಾಸ ಮಾಳ್ಪ
ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ –
ರಾಯಗೆ ನಿಜಗುರು ಶ್ರೀಶ ಅಹ
ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ
ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ ೩
ಅಸುರರು ಪುಟ್ಟಿ ಭೂಮಿಯಲಿ ಸಾಧು
ಭೂಸುರರೆಂದು ತೋರುತಲಿ ವೇದ
ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ
ವಶವಾಗೆ ಸುಜನರಲ್ಲಿ ಅಹ
ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ
ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ ೪
ಮಧ್ಯಗೇಹರ ಮನೆಯಲ್ಲಿ ಮುಖ್ಯ
ವಾಯುವೇ ಶಿಶುರೂಪ ತಾಳಿ ಬಲ
ವಯಸ್ಸಲ್ಲೇ ಯತಿವರ್ಯರಲ್ಲಿ ಕೊಂಡಿ
ಸಂನ್ಯಾಸ ಸುಪ್ರಮೋದದಲಿ ಅಹ
ಮಧ್ಯಗೇಹರ ಪುರುಷೋತ್ತಮತೀರ್ಥರ
ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ ೫
ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ
ಗುರುಗಳ ಸೇವಿಸಿ ಮೋಕ್ಷ ಮೋದ
ಉರುಗುಣಸಿಂಧು ನಿರ್ದೋಷನಾದ
ಶಿರಿವರನು ಕಮಲಾಕ್ಷ ಅಹ
ಭಾರಿ ಪ್ರಸಾದವ ದಯದಿ ಬೀರಲ್ಲೇವೆ
ದೊರೆಯುವದೆಂದು ಬೋಧಿಸಿದೆಯೋ ಮಧ್ವ ೬
ಶ್ರೀಶ ವೇದವ್ಯಾಸನಲ್ಲಿ ಗೀತಾ
ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ –
ದೇಶಕೊಂಡು ಮತ್ತಿಲ್ಲಿ ಬಂದು
ವ್ಯಾಸನಭಿಪ್ರಾಯದಲ್ಲಿ ಅಹ
ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ
ಬೀರಿದ ಅಧಿಕಾರಿಗಳಿಗೆ ನೀ ದಯದಿ
ಮೂಲಗ್ರಂಥಗಳು ಮೂವತ್ತು ಏಳು ೭
ಳಾಳುಕ ಪ್ರಿಯತಮವಾದ್ದು ಭಕ್ತಿ
ಶೀಲತ್ವ ಸುಖಜ್ಞಾನವಿತ್ತು ಪರ –
ದಲ್ಲಿ ಕೈವಲ್ಯ ತೋರುವುದು ಅಹ
ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು
ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ ೮
ಗೀತಾಭಾಷ್ಯವು ಸೂತ್ರ ಭಾಷ್ಯಗೀತಾ
ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು
ತತ್ವನಿರ್ಣಯಾ ಋಗ್ಭಾಷ್ಯ ತತ್ವೋ –
ದ್ಯೋತ ಭಾಗವತ ತಾತ್ಪರ್ಯ ಅಹ
ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ
ನಿರ್ಣಯ ಯಮಕ ಭಾರತ ಕರ್ಮ ನಿರ್ಣಯ ೯
ಸನ್ನ್ಯಾಯ ವಿವರಣ ತಂತ್ರಸಾರ
ಅನುವ್ಯಾಖ್ಯಾನವು ಸದಾಚಾರ ಸ್ರ‍ಮತಿ
ಅನುತ್ತಮ ದ್ವಾದಶಸ್ತೋತ್ರ ಯತಿ
ಪ್ರಣವ ಕಲ್ಪದಿ ಪ್ರಣವಸಾರ ಅಹ
ಉಪನಿಷದ್ಭ್ಬಾಷ್ಯವು ಹತ್ತು ಉತ್ರ‍ಕಷ್ಟವು
ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ ೧೦
ಮನನ ಮಾಡಲು ಐತರೇಯ ಪುನಃ
ಶ್ರವಣ ಮಾಡಲು ತೈತಿರೀಯ ಸಂ –
ಚಿಂತಿಸಲು ಈಶಾವಾಸ್ಯ ಬಹು
ಘನವಿದ್ಯಾಯುತವು ಛಾಂದೋಗ್ಯ ಅಹ
ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು
ಸತತ ಸಂಸ್ಮರಣೀಯ ಜ್ಞಾನದಾಯಕವು೧೧
ಕೃಷ್ಣಾಮೃತ ಮಹಾರ್ಣದಿ ಬಾಲ
ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ
ಜ್ಞಾನ ಸಾಧನವ ಬೋಧಿಸಿ ನರ –
ಸಿಂಹನ ನಖಸ್ತುತಿ ಮುದದಿ ಅಹ
ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ
ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ ೧೨
ಮಾಯಾ ಅವಿದ್ಯಾ ಆವೃತವು ಬ್ರಹ್ಮ
ಅದ್ಯಸ್ಥ ಜಗತೆಂಬ ಮತವ ತರಿದು
ಮಾಯಾವಾದ ಖಂಡನವ ಮಾಡಿ
ನ್ಯಾಯ ಪ್ರಮಾಣ ಲಕ್ಷಣವ ಅಹ
ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ –
ಡನವ ಉಪಾಧಿಖಂಡನ ಸಹಗೈದಿ ೧೩
ತಾರತಮ್ಯ ಪಂಚಭೇದ ಸತ್ಯ
ಹರಿಯೇ ಸರ್ವೋತ್ತಮ ಸುಹೃದ ಶಿರಿ
ವರನೇ ಸ್ವತಂತ್ರ ಪ್ರಮೋದ ಸ್ವಾಮಿ
ಸೃಷ್ಟಾ ಪಾತಾ ಅತ್ತಾತ್ರಾಹ ಅಹ
ತತ್ವ ವಿವೇಕವು ತತ್ವ ಸಂಖ್ಯಾನವು
ನಿತ್ಯ ಸುಪಠನೀಯ ಹರಿ ಸರ್ವೋತ್ರ‍ಕಷ್ಟ ೧೪
ನೀನಿಂತು ನುಡಿಸಿದೀ ನುಡಿಯು ನಿನ್ನ
ಸನ್ನಿಧಾನದಿ ಸಮರ್ಪಣೆಯು ನಾನು
ಏನೂ ಓದದ ಮಂದಮತಿಯು ನೀನು
ಪೂರ್ಣಪ್ರಜ್ಞನು ಜೀವೋತ್ತಮನು ಅಹ
ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ
‘ಪ್ರಸನ್ನ ಶ್ರೀನಿವಾಸ’ ನ್ನೊ ಲಿಸೋ ಎನಗೆ ಜೀಯ ೧೫

ತಮಿಳುನಾಡಿನಲ್ಲಿ ಮೆಟ್ಟೂರಿನಿಂದ
ಪ್ರಸನ್ನ ರಾಮಾಯಣ ಸುಂದರಕಾಂಡ
೬೯
ಜಯ ಜಯ ಜಯ ರಾಮಚಂದ್ರ
ಜಯ ರಾಮಭದ್ರ ಸರ್ವೇಶ
ಜಯ ಜಯ ಜಯ ರಾಮ ಸ್ವರತ ಆಹ
ಜಯ ಸೀತಾರಮಣ ನೀ ಭಯಬಂಧ ಮೋಚಕ
ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ
ಶಾಶ್ವತ ಸುಗುಣಾಬ್ಧಿ ರಾಮ
ಸವೇಶ್ವರನೆ ಬಲವೀರ್ಯ
ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ
ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ
ಸಾಗರ ಸರ್ವವು ಕಲಕಿ ಓಡಿತು ಕೂಡ ೧
ಹಿಂದೆ ಪರ್ವತಗಳ ಪಕ್ಷ
ಹನನ ಕಾಲದಿ ವಾಯು ತನ್ನ
ಹಿತದಿ ರಕ್ಷಿಸಿದನು ಎಂದು ಆಹ
ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ
ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ೨
ಶ್ರಮರಹಿತನು ಎಂದೂ ಹನುಮ
ಶ್ರಮ ನಿವಾರಣ ಅನಪೇಕ್ಷ
ಆಶ್ಲೇಷಿಸಿ ನಗವರನ ಆಹ
ನಿಸ್ಸೀಮ ಪೌರುಷ ಬಲಯುತ ಹನುಮನು
ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ ೩
ಪವನಜನ ನಿಜಬಲವ
ಪರೀಕ್ಷಿಸೆ ಸುರಸೆಯ ಸುರರು
ಪ್ರೇರಿಸಿ ವರವನ್ನು ಕೊಡಲು ಆಹ
ಫಣಿಗಳ ತಾಯಿ ಅವಳು ಬಾಯಿ ತೆರೆಯಲು
ಪೊಕ್ಕು ಲೀಲೆಯಿಂ ಹನುಮ ಹೊರಹೊರಟ೪
ಸುರರು ಆನಂದದಿ ಆಗ
ಸ್ತುತಿಸಿ ಹನುಮನ ಕೊಂಡಾಡಿ
ಸುರಿಯಲು ಪುಷ್ಪದ ಮಳೆಯ ಆಹ
ಶೀಘ್ರ ಪವನಜನು ಮುಂದೆ ತಾ ಹೋಗುತ್ತ
ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ ೫
ಸರಸಿಜಾಸನ ವರಬಲದಿ
ಸಿಂಹಿಕಾ ಲಂಕಾ ಪೋಗುವರ
ಸೆಳೆದು ತಾ ನಿಗ್ರಹಿಸುವಳು ಆಹ
ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ
ಸೀಳಿದ ಹನುಮ ಅವಳ ಶರೀರದಿ ಪೊಕ್ಕು ೬
ತನ್ನ ನಿಸ್ಸೀಮ ಬಲವನು
ತೋರಿಸಿ ಈ ರೀತಿ ಹನುಮ
ಧುಮುಕಿದ ಲಂಬ ಪರ್ವತದಿ ಆಹ
ತೋರ್ಪುದು ಲಂಕಾ ಪ್ರಕಾರದೊಲ‌ ಈ ಗಿರಿ
ತನ್ನ ರೂಪವ ಸಣ್ಣ ಹನುಮ ಮಾಡಿದನಾಗ ೭
ಆಗಿ ಬಿಡಾಲದೊಲ್ ಸಣ್ಣ
ಅಸಿತ ಕಾಲದಿ ಪೋಗೆ ಪುರಿಗೆ
ಅಲ್ಲಿದ್ದ ಲಂಕಿಣಿ ತಡೆಯೆ ಆಹ
ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ
ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ ೮
ಶ್ರೀಘ್ರ ಅಶೋಕ ವನದಲಿ
ಶಿಂಶುಪಾವೃಕ್ಷ ಮೂಲದಲಿ
ಸೀತಾ ಅಕೃತಿಯನು ಕಂಡ ಆಹ
ಸೀತೆಗೆ ಏನೇನು ಭೂಷಣ ಉಂಟೋ
ಸೀತಾ ಆಕೃತಿಗೂ ಸಹ ಅದರವೊಲಿತ್ತು ೯
ಅವನಿಯೋಳು ನಿನ್ನ ವಿಡಂಬ
ಅರಿತು ಅನುಸರಿಸಿ ಹನುಮ
ಅದರಂತೆ ಪರಿಪಂಥಾವಳಿಗೆ ಆಹ
ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ
ಆಕೆ ಚೂಡಾಮಣಿ ನಿನಗೆಂದು ಕೊಟ್ಟಳು ೧೦
ಅರಿಯರು ರಾಕ್ಷಸರಿದನು
ಅಮರರು ಕಲಿಮುಖರೆಲ್ಲ
ಅವಲೋಕಿಸಿದರು ಈ ಕಾರ್ಯ ಆಹ
ಅಮರರು ಲೋಕವಿಡಂಬವಿದೆಂದರಿಯೆ
ಅಧಮ ಕಲ್ಯಾದಿಗಳ್ ಮೋಹಿತರಾದರು ೧೧
ಕೃತಕೃತ್ಯವಾಗಿ ತಾ ಹನುಮ
ಕೋವಿದೋತ್ತಮ ಬಲವಂತ
ಕಾಣಿಸಿಕೊಳ್ಳುವ ಮನದಿ
ಕಿಂಚಿತ್ತೂ ಭಯವೇನೂ ಇಲ್ಲದೆ ವನವನು
ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು ೧೨
ಕುಜನ ರಾಕ್ಷಸರನು ಕೊಲ್ಲೆ
ಕೂಗಿ ಆರ್ಭಟಮಾಡೆ ಹನುಮ
ಕೇಳಿ ಚೇಷ್ಟೆಗಳ ರಾವಣನು ಆಹ
ಕಪ್ಪು ಕಂಠನ ವರ ಆಯುಧಯುತರು
ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ ೧೩
ಆರ್ಭಟದಿಂದ ಘೋಷಿಸುತ
ಅವರು ಆವರಿಸಿ ಹನುಮನ
ಆಯುಧಗಳ ಪ್ರಯೋಗಿಸಲು ಆಹ
ಅತಿ ಬಲಯುತ ಪವನಜ ಮುಷ್ಟಿಪ್ರಹರದಿ
ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ ೧೪
ಕಡುಕೋಪದಿಂದ ರಾವಣನು
ಕಳುಹಿದನು ಏಳು ಮಂತ್ರಿ
ಕುವರರ ವರ ಬಲಯುತರ ಆಹ
ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ
ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು ೧೫
ಅನುಪಮ ಬಲಕಾರ್ಯಕೇಳಿ
ಅಧಮ ರಾವಣ ತನ್ನ ಸುತನ
ಅಕ್ಷನ ಕಳುಹಲು ಹನುಮ ಆಹ
ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ
ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ ೧೬
ಅತಿ ದುಃಖದಿಂದ ರಾವಣನು
ಅಕ್ಷನಗ್ರಜ ಇಂದ್ರಜಿತನ
ಅಜಿತ ಹನುಮನಲಿ ಕಳುಹೆ ಆಹ
ಇಂದ್ರಜಿತನ ಅಸ್ತ್ರಗಳ ವ್ಯರ್ಥಮಾಡಿ ತಾ
ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ ೧೭
ರಾವಣನಲಿ ಕೊಂಡು ಪೋಗೆ
ರಾವಣ ಪ್ರಶ್ನೆಯ ಮಾಡೆ
ರಾಮಗೆ ನಮಿಸಿ ಹನುಮನು ಆಹ
ರಘುವರ ರಾಮ ದುರಂತ ವಿಕ್ರಮ ಹರಿ
ರಾಕ್ಷಸಾಂತಕ ದೂತ ಮಾರುತಿ ತಾನೆಂದ ೧೮
ರಘುವರ ಪ್ರಿಯೆಯನು ಬೇಗ
ರಾಮಗರ್ಪಿಸಲೊಲ್ಲೆ ಎನ್ನೆ
ಹನುಮ ಪ್ರಕೋಪದಿ ಅವನ ಆಹ
ರಾಜ್ಯ ಮಿತ್ರ ಬಂಧು ಸರ್ವನಾಶ
ರಾಘವ ಮಾಡುವನೆಂದು ಪೇಳಿದನು ೧೯
ಅಜ ಶಿವ ಮೊದಲಾದ ಸರ್ವ
ಅಮರೇಶ್ವರರು ತಾವು ತಡೆಯ
ಆಶಕ್ತರು ರಾಮಬಾಣವನು ಆಹ
ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ
ಅಸಮರ್ಥನೆಂದ ಪ್ರಭಂಜನ ಸುತನು ೨೦
ಪ್ರಭಂಜನ ೧ ಸುತ ಮಾತು ಕೇಳಿ
ಪ್ರಕುಪಿತನಾಗಿ ರಾವಣನು
ಪ್ರಯತ್ನಿಸೆ ಹನುಮನ ಕೊಲ್ಲೆ ಆಹ
ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು
ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ೨೧
ಆತಿಭಾರ ವಸ್ತ್ರ ಕಟ್ಟುಗಳಿಂ
ಅಧಮರು ಸುತ್ತಿ ಬಾಲವನು
ಅಗ್ನಿಯ ತೀವ್ರದಿ ಹಚ್ಚೆ ಆಹ
ಅಗ್ನಿಯ ಪರಸಖ ವಾಯು ಆದುದರಿಂದ
ಅಂಜನಾಸುತ ನಿರಾಮಯನ ಸುಡಲೇ ಇಲ್ಲ ೨೨
ಅಧಮ ರಾಕ್ಷಸರ ಚೇಷ್ಟೆಗಳ
ಅಸಮ ಬಲಾಢ್ಯನು ಹನುಮ
ಅನುಭವಿಸಿ ಕುತೂಹಲದಿ ಆಹ
ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು
ಅತಿ ಮುದದಲಿ ಗರ್ಜಿಸಿದ ರಾಮದೂತ ೨೩
ಅಧಮ ಸಪುತ್ರ ರಾವಣನ
ಅಲ್ಪ ತೃಣೋಪಮ ಮಾಡಿ
ಅವರೆದುರಿಗೆ ಪುರಿ ಸುಟ್ಟು ಆಹ
ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ
ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ ೨೪
ಸಮಸ್ತ ವಾನರ ವರರೊಡನೆ
ಸಮರ್ಥ ಹನುಮ ಧೀರ ಬಂದು
ಶುಭಸೂಚಕ ಚೂಡಾಮಣಿಯ ಆಹ
ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ
ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ ೨೫
ಭಕ್ತಿ ಸವೈರಾಗ್ಯ ಜ್ಞಾನ
ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು
ಪ್ರಾಣ ಯೋಗ ಬಲ ಇಂಥಾ ಆಹ
ಪ್ರಕೃಷ್ಟ ಸುಗುಣಗಳು ತುಂಬಿ ಇರುವುವು ಈ
ಪ್ರಭಂಜನ ವಾಯು ಹನುಮನಲಿ ಸರ್ವದಾ ೨೬
ಸರ್ವೇಶ ರಾಮ ಅಗಾಧ
ಸದ್ಗುಣಾರ್ಣವ ನೀ ಹನುಮನ
ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ
ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ
ಸುಪ್ರಮೋದದಿ ಹನುಮನ ಆಲಿಂಗನ ಮಾಡಿ೨೭
ನೀ ನಿಂತು ನುಡಿಸಿದೀ ನುಡಿಯು
ನಿನ್ನಡಿಗಳಿಗೆ ಅರ್ಪಣೆಯು
ನಮ್ಯ ಮಾರುತಿ ಮನೋಗತನೆ ಆಹ
ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ
ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ ೨೮

ಪ್ರಸನ್ನ ಶ್ರೀನಿವಾಸ ಕಲ್ಯಾಣ
೩೫
ಜಯ ಜಯ ಜಯ ಶ್ರೀನಿವಾಸ
ಜಯಾ ಶಾಂತಿ ಕೃತಿ ಮಾಯಾ ಶ್ರೀಶ
ಭಯಬಂಧಮೋಚಕ ಜೀಯ ಆಹ
ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ
ಮಂದಜಭವ ಸುರವೃಂದ ಸಂಸೇವ್ಯ ಜಯ ಪ
ಸುರಸರಿತ ತೀರದಿಂದ
ಸುರಮುನಿ ಭೃಗು ಬಂದು ನಿನ್ನ
ಪರಸಮರಹಿತನೆಂದರಿತ ಆಹ
ಸಿರಿಯು ನಿನ ಭಾವವನುಸರಿಸಿ ಬೇಗ
ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ ೧
ಮೇರುಸುತನೆ ಹಾಟಕಾದ್ರಿ
ವೀರ ಭಕುತ ವೃಷಭಾದ್ರಿ
ಕೀರುತಿ ಇತ್ತಿ ತಂಜನೆಗೆ ಆಹ
ಸರೀಸೃಪಾವರಿಸಿದ ಸೌರಭ್ಯಗಿರಿಯಿದು
ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ ೨
ನೀನಿದ್ದ ಸ್ಥಳವೇ ವೈಕುಂಠ
ನಿನಗಾರು ಸಮರುಂಟೆ ಶ್ರೀಶ
ದೀನ ಸುಜನರಿಗೆ ನಂಟ ಆಹ
ಧೇನು ಪಾಲ್ಗರೆಯಲು ಪಾಲಕ ಹೊಡೆಯಲು
ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ ೩
ಏಳು ೨ತಾಳದ ಉದ್ದ ರಕ್ತ
ತಾಳಲಾರದೆ ಬಿದ್ದ ಗೋಪ
ಚೋಳರಾಯಗೆ ಕೊಟ್ಟೆ ಶಾಪ ಆಹ
ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ
ಶೀಲ ಸುರರ ಗುರು ಚಿಕಿತ್ಸೆಯನೈದಿದೆ ೪
ಸ್ವಗತ ಭೇದವಿಲ್ಲದಂಥ
ಸ್ವಚ್ಛ ಚಿತ್ಸುಖಮಯನಂತ
ಸ್ವಾನಿರ್ವಾಹಕ ವಿಶೇಷ ಆಹ
ಶ್ವೇತವರಾಹನ ಸಂವಾದದಿಂದಲಿ
ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು ೫
ಸರಸ್ವತೀ ಸ್ವಾಮಿ ಪುಷ್ಕರಣಿ
ಸುರಮುನಿನರರಿಗೆ ಸ್ನಾನ
ಪರಸುಖಮಾರ್ಗ ಸೋಪಾನ ಆಹ
ಸುರತಟಿನ್ಯಾದಿ ಸುತೀರ್ಥಗಳೆಲ್ಲವು
ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ ೬
ಆದಿಕಾರಣ ನಿನ್ನ ೩ಲೀಲಾ
ಮೋದಸಂಭ್ರಮವನ್ನು ನೋಡೆ
ಕಾದುಕೊಂಡಿಹರು ಕೋವಿದರು ಆಹ
ಸಾಧು ಸಂಭಾವಿತ ಬಕುಳಾದೇವಿಯುಗೈದ
ಸ್ವಾದ ಭೋಜ್ಯವನುಂಬ ನಿತ್ಯ ಸಂತೃಪ್ತ ೭
ಮಂಗಳ ಚಿನ್ಮಯ ರಂಗಾ –
ನಂಗನಯ್ಯನೆ ಮೋಹನಾಂಗ
ತುಂಗ ಮಹಿಮನೆ ಶುಭಾಂಗ ಆಹ
ಬಂಗಾರ ಕುದುರೆ ಮೇಲಂಗನೇರಲಿ ೪ಬಂದ
ಶೃಂಗಾರವೇನೆಂಬೆ ಎಂದಿಗೂ ಸ್ವರಮಣ೮
ತೋಂಡಮಾನ ರಾಯನಣ್ಣ
ಚಂಡಭೂಪನು ಆಕಾಶ
ಕಂಡನು ಕಮಲದೊಳ್ ಶಿಶುವ ಆಹ
ಅಂಡ ಅಖಿಳ ಕೋಟಿ ಅಸಮ ಈ ಶಿಶುವನ್ನು
ಹೆಂಡತಿ ಧರಣಿಯು ಕೊಂಡಳು ಮಗಳಾಗಿ ೯
ಮೂಲೇಶ ನಿನ್ನಯ ರಾಣಿ
ಮೂಲಪ್ರಕೃತಿ ಗುಣಮಾನಿ
ಕೀಲಾಲಭವ ಭವ ತಾಯಿ ಆಹ
ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು
೫ ಬಾಲೇರ ಸಹ ಪುಷ್ಪವನಕೆ ಬಂದಿಹಳೊ ೧೦
ಮಹಿದೇವಿ ಕಮಲವಾಸಿನಿಯು
ಬಹಿನೋಟಕ್ಕೆ ರಾಜಸುತೆಯು
ಬಹು ಚಿತ್ರ ಪುಷ್ಪವ ಕೊಯ್ಯೆ ಆಹ
ಮಹತಿಪಾಣಿಯು ಬಹು ವಯೋರೂಪದಲಿ ಬಂದು
ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ ೧೧
ಹಾಟಕಗಿರಿಯಿಂದ ನೀನು
ಬೇಟೆಯಾಡುವ ರೂಪ ತಾಳಿ
ಘೋಟಕವೇರಿ ಸಂಭ್ರಮದಿ ಆಹ
ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ
ನಾಟಕವಾಡಿದ್ದು ಪಾಡಲರಿಯೆನೊ ೧೨
ನಿತ್ಯನಿರ್ಮಲ ಅವಿಕಾರ
ಮತ್ರ್ಯರವೋಲು ನೀ ೧ನಟಿಸೋ
ಕೃತ್ಯಗಳರಿವರು ಯಾರೋ ಆಹ
ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ
ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ ೧೩
ಪೊಂದಿದೆ ಫುಲ್ಕಸೀ ರೂಪ
ಮಂಧಜಭವ ಶಿಶುವಾಗೆ
ನಂದಿನಿಧರ ಯಷ್ಟಿಯಾದ ಆಹ
ಮಂದಜಭವಾಂಡ ಗುಣಗುಲ್ಮ ಮಾಡಿ ನೀ
ಕಂಧರದಲಿ ಗುಂಜ ಕಂಬುಸರವ ತೊಟ್ಟೆ ೧೪
ನಾರಾಯಣಪುರಿಯಲ್ಲಿ
ಮಾರನಯ್ಯನೆ ನಿನ್ನ ಸುಗುಣ
ವಾರಿಧಿ ಪೊಕ್ಕಳು ಪದುಮೆ ಆಹ
ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು
ಪರಿಪರಿ ಪರಿಹಾರ ಪರದು ನೋಡಿದರಾಗ ೧೫
ಶುದ್ಧ ಸುಂದರ ಸುಖಕಾಯ
ವೃದ್ಧ ಫುಲ್ಕಸೀ ವೇಷಧಾರಿ
ಬದ್ಧ ಶೋಕರ ಬಳಿ ಪೋದೆ ಆಹ
ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ
ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ ೧೬
ವಹಿಸಿ ನಿನ ಶಾಸನ ಬಕುಳ
ಮಹದೇವನಾಲಯದಿಂದ
ಮಹಿಳೆಯರ ಸಹ ಕೂಡಿ ಆಹ
ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ
ಬಹು ಶುಭವಾರ್ತೆಯ ತಂದು ಪೇಳಿದಳೊ ೧೭
ಶುಕಮುನಿ ಕರಪ್ರದವಾದ
ಆಕಾಶ ನೃಪ ಲಗ್ನಪತ್ರ
ಸ್ವೀಕರಿಸಿದೆ ಬಹು ಹಿತದಿ ಆಹ
ವಾಗೀಶ ಶಶಿಧರ ನಾಗೇಶ ಸೌಪರ್ಣ
ನಾಕೀಶ ಮೊದಲಾದ ಸುರರನು ಕರೆದೆ ೧೮
ಶಿಷ್ಟ ಸನ್ಮುನಿಜನ ಕೂಟ
ತುಷ್ಟ ಸುಮನಸ ಸಮೂಹ
ಶ್ರೇಷ್ಠಸುಗಂಧಿ ಆಗಮನ ಆಹ
ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ
ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ ೧೯
ಮಾಯ ಜಯೇಶ ಶ್ರೀವತ್ಸ
ಛಾಯೇಶಗುಪಾಯ ಪೇಳಿ
ತೋಯಜೆಯನು ಕರೆತಂದೆ ಆಹ
ಮಾಯಾ ಜಯಾ ಸಿರಿ ಕೃತಿ ಕಾಂತಿ ನಿನ್ನಿಂದ
ವಿಯೋಗರಹಿತರು ಎಂದೂ ಎಲ್ಲೆಲ್ಲೂ ೨೦
ಬೃಹದಣುವಿಗೆ ಸತ್ತಾಪ್ರದನೆ
ಸುಹೃದ ಸಂತೃಪ್ತ ಮುಖಾಬ್ಧೇ
ದೃಢವ್ರತ ಶುಕಮುನಿಗೊಲಿದೆ ಆಹ
ಬೃಹತೀ ಫಲಾನ್ನವನುಂಡು ಫೂತ್ಕಾರದಿ
ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ ೨೧
ಸುಜನರಿಗಾನಂದ ದಾತ
ದ್ವಿಜರೂಢ ಜಗದೀಶ ನೀನು
ಅಜಸುರರೊಡಗೂಡಿ ಬರೆ ಆಹ
ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ
ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ ೨೨
ಅಜರ ಮಂದಿರ ಪೋಲ್ವ ಮನೆಯು
ಪ್ರಜುವಲಿಸುವ ದಿವ್ಯ ಸಭೆಯು
ನಿಜಭಕ್ತ ಪುರುಜನ ಗುಂಪು ಆಹ
ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ
ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ ೨೩
ಸುರಮುನಿಜನ ಮೂರು ವಿಧಕೆ
ತರತಮ ಯೋಗ್ಯತೆ ಆರಿತು
ಪರಿಪರಿ ಸಾಧನವಿತ್ತೆ ಆಹ
ನೀರರುಹಜಾಂಡವು ನಿನ್ನಾಧೀನವು
ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ ೨೪
ನೀ ನಿಂತು ನುಡಿಸಿದೀ ನುಡಿಯು
ನಿನ್ನಡಿಗಳಿಗೆ ಅರ್ಪಣೆಯು
ಚನ್ನಮಾರುತ ಮನೋಗತನೆ ಆಹ
ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ
ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ ೨೫