Loading Events

« All Events

  • This event has passed.

ಎಂ. ವೆಂಕಟಕೃಷ್ಣಯ್ಯ

September 5, 2023

೫-೯-೧೮೪೪ ೮-೧೧-೧೯೩೩ ಮೈಸೂರು ತಾತಯ್ಯನೆಂದೇ ಪ್ರಸಿದ್ಧರಾಗಿದ್ದ ಸಮಾಜ ಸೇವಕರು, ಸಾಹಿತಿ, ಪತ್ರಿಕೋದ್ಯಮಿಗಳಾಗಿದ್ದ ಎಂ. ವೆಂಕಟ ಕೃಷ್ಣಯ್ಯನವರು ಹುಟ್ಟಿದ್ದು ಹೆಗ್ಗಡದೇವನ ಕೋಟೆ ತಾಲ್ಲೂಕು ಮಗ್ಗೆ ಗ್ರಾಮದಲ್ಲಿ. ತಂದೆ ಸುಬ್ಬಯ್ಯ, ತಾಯಿ ಭಾಗೀರತಮ್ಮ. ಚಿಕ್ಕಂದಿನಲ್ಲೇ ತಂದೆಯ ಪ್ರೀತಿಯಿಂದ ವಂಚಿತರು. ಕಡುಬಡತನ. ಕಷ್ಟದಿಂದ ವಿದ್ಯಾಭ್ಯಾಸ. ಮೈಸೂರಿನ ರಾಜಾ ಸ್ಕೂಲಿನಲ್ಲಿ, ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಓದಿ ಮೆಟ್ರಿಕ್ಯುಲೇಷನ್ ತೇರ್ಗಡೆ. ಉದ್ಯೋಗಕ್ಕಾಗಿ ಆರಿಸಿಕೊಂಡದ್ದು ಉಪಾಧ್ಯಾಯ ವೃತ್ತಿ. ಆಗ ತಾನೇ ಪ್ರಾರಂಭವಾಗಿದ್ದ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ನೇಮಕ. ಮುಖ್ಯೋಪಾಧ್ಯಾಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿದವರು. ಉಪಾಧ್ಯಾಯ ವೃತ್ತಿಯ ಜೊತೆಗೆ ಸಮಾಜ ಸೇವೆ. ಶಾರದಾ ವಿಲಾಸ್ ವಿದ್ಯಾಸಂಸ್ಥೆ, ಅನಾಥಾಲಯ ಮುಂತಾದುವುಗಳ ಸ್ಥಾಪನೆ. ಸಾರ್ವಜನಿಕ ಜೀವನದಲ್ಲಿ ಗಳಿಸಿದ್ದ ಗಣ್ಯಸ್ಥಾನ. ಮೈಸೂರು ಪುರಸಭೆ, ಪ್ರಜಾ ಪ್ರತಿನಿ ಸಭೆ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್, ನ್ಯಾಯ ನಿರ್ಣಾಯಕ ಸಭೆ ಮುಂತಾದುವುಗಳಲ್ಲಿ ಸದಸ್ಯರಾಗಿ ಸೇವೆ. ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅಪಾರ. ಹಿತಬೋನಿ, ವಿದ್ಯಾದಾಯಿನಿ, ಸ್ವಾ, ಸಂಪದಭ್ಯುದಯ, ಗ್ರಾಮ ಜೀವನ ಮುಂತಾದ ಕನ್ನಡ ಪತ್ರಿಕೆಗಳು, ವೆಲ್ತ್ ಆಫ್ ಮೈಸೂರ್, ಮೈಸೂರು ಪೇಟ್ರಿಯಟ್, ನೇಚರ್ ಕ್ಯೂರ್‌ಮೊದಲಾದ ಇಂಗ್ಲಿಷ್ ಪತ್ರಿಕೆಗಳನ್ನು ಹಲವಾರು ವರ್ಷ ನಡೆಸಿದ ಕೀರ್ತಿ. ಸ್ವಾತಂತ್ರ್ಯ ಚಳವಳಿಗೆ ಈ ಪತ್ರಿಕೆಗಳ ಮೂಲಕ ಕೊಟ್ಟ ಪ್ರೋತ್ಸಾಹ, ವಿಚಾರಧಾರೆ, ವಾಕ್ ಸ್ವಾತಂತ್ರ್ಯ ಬೆಳೆಸಲು ಪಟ್ಟ ಶ್ರಮ, ರಾಜ್ಯಶಾಸ್ತ್ರ, ಸಾಹಿತ್ಯ, ಸಂಸ್ಕೃತಿ, ಬಗೆಗೆ ಬರೆದ ಲೇಖನಗಳು. ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ಪತ್ರಿಕೆ ಪ್ರಕಟಣೆಗೆ ಪ್ರತಿಬಂಧಕಾಜ್ಞೆ. ಸಾಹಿತ್ಯರಂಗದಲ್ಲೂ ಅದ್ವಿತೀಯ ಸೇವೆ. ವಿದ್ಯಾರ್ಥಿ ಕರಭೂಷಣ, ಧನಾರ್ಜನೆಯ ಕ್ರಮ, ಚೋರ ಗ್ರಹಣ ತಂತ್ರ, ಅರ್ಥಸಾಧನ, ಆರೋಗ್ಯ ಸಾಧನ ಪ್ರಕಾಶಿಕೆ ಮುಂತಾದ ಕೃತಿಗಳ ರಚನೆ. ಇವರ ಸೇವೆಯನ್ನು ಗುರುತಿಸಿದ ಕನ್ನಡದ ಜನತೆ ದಾವಣಗೆರೆಯಲ್ಲಿ ನಡೆದ ೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತೋರಿದ ಗೌರವ. ನಿಧನರಾದದ್ದು ನವಂಬರ್ ೮ರ ೧೯೩೩ರಲ್ಲಿ. ಮೈಸೂರು ನಗರದ ಬಸ್ಟಾಂಡಿನ ಬಳಿ ಇವರ ಪ್ರತಿಮೆ ಸ್ಥಾಪಿಸಿ ಮೈಸೂರಿಗರು ತೋರಿದ ಗೌರವ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೃಷ್ಣಮೂರ್ತಿ ಪುರಾಣಿಕ – ೧೯೧೯-೧೩.೧೧.೧೯೮೫ ಶ್ರೀಕಂಠ ಕೂಡಿಗೆ – ೧೯೪೮ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ – ೧೯೫೩

Details

Date:
September 5, 2023
Event Category: