Loading Events

« All Events

  • This event has passed.

ಪ್ರಸನ್ನಕುಮಾರಿ ಸತ್ಯಂ

November 30, 2023

೩೦೧೧೧೯೩೦ ೨೦೨೦೦೫ ಪ್ರಸಿದ್ಧ ಸಂಗೀತ ವಿದುಷಿ ಪ್ರಸನ್ನಕುಮಾರಿ ಸತ್ಯಂ ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ನಂಜುಂಡಶಾಸ್ತ್ರಿ, ತಾಯಿ ಲಕ್ಷ್ಮೀದೇವಮ್ಮ. ಸೋದರತ್ತೆ ಅಶ್ವತ್ಥಲಕ್ಷ್ಮಮ್ಮನವರ ಉತ್ತೇಜನ. ಬಿ.ಎಂ. ಶಿವಪ್ಪ, ರಂಗಶೆಟ್ಟಿ, ಚಿಂತಲಪಲ್ಲಿ ಕೃಷ್ಣಮೂರ್ತಿಯವರಲ್ಲಿ ಪ್ರಾರಂಭಿಕ ಶಿಕ್ಷಣ. ಚಂದ್ರಸಿಂಗ್, ಪಲ್ಲವಿ ಚಂದ್ರಪ್ಪ, ಬೆಳಕವಾಡಿ ವರದರಾಜ ಅಯ್ಯಂಗಾರ್ ಮತ್ತು ಮದರಾಸಿನ ರಾಜಗೋಪಾಲ ಅಯ್ಯಂಗಾರ್‌ರಲ್ಲಿ ಉನ್ನತ ಶಿಕ್ಷಣ. ಬೆಂಗಳೂರಿನ ಗಾಂಧಿನಗರ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಕಾಲ, ಕರ್ನಾಟಕ ಸರಕಾರ ನಡೆಸುವ ವಿದ್ವತ್ ಪರೀಕ್ಷೆಯ ಮುಖ್ಯ ಅಧೀಕ್ಷಕರಾಗಿ, ಅನೇಕ ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಸಲ್ಲಿಸಿದ ಸೇವೆ. ಮೈಸೂರಿನ ವಿಠ್ಠಲರಾವ್ ರಾಮಮಂದಿರ, ಬೆಂಗಳೂರಿನ ಪ್ರತಿಷ್ಠಿತ ಸಂಗೀತಗೋಷ್ಠಿಗಳು, ಕರ್ನಾಟಕ ಗಾನಕಲಾ ಪರಿಷತ್, ಪುರಂದರ ಸೇವಾ ಸಮಿತಿಗಳಲ್ಲದೆ ಆಂಧ್ರ, ತಮಿಳುನಾಡುಗಳ ಅನೇಕ ಸಭೆ, ಸಂಗೀತೋತ್ಸವಗಳು, ಆಕಾಶವಾಣಿಯ ಹಿರಿಯ ಕಲಾವಿದೆಯಾಗಿ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ, ಕರ್ನಾಟಕ ಸರಕಾರದಿಂದ ಜೆ. ಚನ್ನಪ್ಪ ಸ್ಮರಣಾರ್ಥ ಬಂಗಾರದ ಪದಕ, ಮಧುರ ಗಾನವಾಣಿ, ಗಾನ ಚಂದ್ರಿಕೆ, ಕಲಾಸರಸ್ವತಿ, ನಾದ ಕಲಾಭೂಷಣ ಮುಂತಾದ ಬಿರುದುಗಳು, ತ್ಯಾಗರಾಜ ಗಾನಸಭಾದ ಶಂಕರ ಜಯಂತಿ ಸಂಗೀತೋತ್ಸವದ ಅಧ್ಯಕ್ಷತೆ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಡಾ. ಸಿದ್ಧಲಿಂಗಪ್ಪ ಎಸ್.ಆರ್. – ೧೯೩೯ ಅನುರಾಧ ಮಧುಸೂದನ್ – ೧೯೫೯ ಗಿರಿ ಬಿ.ವಿ.ವಿ. – ೧೯೬೦ ಶಾರದಾಮಣಿ ಶೇಖರ್ – ೧೯೬೪ ಗುಣವತಿ ಪ್ರಭಾಕರ್ – ೧೯೬೫

Details

Date:
November 30, 2023
Event Category: