All Day

ಟೈಗರ್ ವರದಾಚಾರ್

೧.೮.೧೮೭೬ ೧.೧.೧೯೫೦ ಟೈಗರ್ ಬಿರುದಾಂಕಿತ ವರದಾಚಾರ್ಯರು ಹುಟ್ಟಿದ್ದು ಮದರಾಸಿನ ತಿರುವಟ್ಟಿಯಾರ್ ಬಳಿ ಇರುವ ಕಲಡಿಪೇಟ್‌. ತಂದೆ ರಾಮಾನುಜಾಚಾರ್ಯ, ತಾಯಿ ಕಲ್ಯಾಣಿ ಅಮ್ಮಾಳ್‌. ಓದಿದ್ದು ಎಫ್‌. ಎ. ವರೆಗೆ. ಪಟ್ಲಂ ಸುಬ್ರಹ್ಮಣ್ಯ ಅಯ್ಯರ್ ಬಳಿ ಮೂರು ವರ್ಷ ಕಾಲ ತಿರುವಯ್ಯಾರಿನಲ್ಲಿ ಗುರುಕುಲ ಪದ್ಧತಿಯಲ್ಲಿ […]

ಎಂ.ಜಿ. ನಂಜುಂಡಾರಾಧ್ಯ

೧-೮-೧೯೧೪ ೭-೧೧-೧೯೯೧ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಂಜುಂಡಾರಾಧ್ಯರು (ಅಮರವಾಣಿ) ಹುಟ್ಟಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗುಂಡ್ಲಹಳ್ಳಿ. ತಂದೆ ಗಂಗಾಧರಯ್ಯ, ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲಿ. ಪ್ರೌಢ ವ್ಯಾಸಂಗಕ್ಕೆ ಸೇರಿದ್ದು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ. ಅಲಂಕಾರಶಾಸ್ತ್ರ, ವಿಶಿಷ್ಟಾದ್ವೈತ ವೇದಾಂತಗಳಲ್ಲಿ ವಿದ್ವಾನ್ ಪದವಿ. ಹಿಂದಿ ರಾಷ್ಟ್ರಭಾಷಾ ವಿಶಾರದ, ಕನ್ನಡದಲ್ಲಿ ವಿದ್ವಾನ್ ಪದವಿ ಪಡೆದ ತ್ರಿಭಾಷಾ ಪಂಡಿತರು. ಉದ್ಯೋಗಕ್ಕಾಗಿ ಸೇರಿದ್ದು ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ. ನಂತರ ಮೈಸೂರಿನ ಮಹಾರಾಜ […]