All Day

ಸಾರಾ ಅಬೂಬಕ್ಕರ್

೩೦-೬-೧೯೩೬ ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಯನ್ನು ಅಭಿವ್ಯಕ್ತಿಸಿದ ಲೇಖಕಿ ಸಾರಾ ಅಬೂಬಕ್ಕರ್ ರವರು ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್, ತಾಯಿ ಚೈನಾಬಿ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಸಬೇಕೆಂದು ಬಾಲ್ಯದಲ್ಲೇ ಹುಟ್ಟಿದ ನಿರ್ಧಾರ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ರೊಡನೆ ವಿವಾಹ. […]

ದಾಕ್ಷಾಯಣಿ ರಾಜಕುಮಾರ್

೩೦.೦೬.೧೯೬೯ ಸಂಗೀತ ಮನೆತನದಿಂದ ಬಂದ ದಾಕ್ಷಾಯಣಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ತಾತನವರಾದ ಪಿಟೀಲು ರಾಮಯ್ಯನವರು ಅರಮನೆಯ ವಾದ್ಯವೃಂದದಲ್ಲಿ ಪ್ರಖ್ಯಾತ ಕಲಾವಿದರಾಗಿದ್ದರೆ ತಂದೆ ಮಂಜಪ್ಪ ಹೆಸರಾಂತ ಗಾಯಕರು. ತಾಯಿ ಶಾರದಮ್ಮ ಸಂಗೀತ ಪ್ರೇಮಿ. ಎಳೆ ವಯಸ್ಸಿನಿಂದಲೇ ಸಂಗೀತದಲ್ಲಿ ಬೆಳೆದ ಆಸಕ್ತಿಯನ್ನು ಗಮನಿಸಿದ […]