ಶೀಲಾಗೌಡ

೦೯.೦೮.೧೯೫೭ ಚಿತ್ರಕಲೆಯಲ್ಲಿನ ಅಭಿವ್ಯಕ್ತಿಗಾಗಿ ಹೊಸ ಹೊಸ ಆಯಾಮಗಳನ್ನು ಶೋಧಿಸುತ್ತಿರುವ ಶೀಲಾಗೌಡರು ಹುಟ್ಟಿದ್ದು ಭದ್ರಾವತಿ. ತಂದೆ ಎಚ್‌.ಎಲ್‌. ನಾಗೇಗೌಡ, ತಾಯಿ ಲಕ್ಷ್ಮಮ್ಮ.  ಕೆನ್‌ಕಲಾಶಾಲೆ, ಬರೋಡ, ಕೋಲ್ಕತ್ತಾದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ಮತ್ತು ಪ್ಯಾರಿಸ್‌ ಲಂಡನ್‌ ಮುಂತಾದೆಡೆಗಳಲ್ಲಿ ಚಿತ್ರ ಕಲಾಭ್ಯಾಸ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. […]

ಕಡೆಂಗೋಡ್ಲು ಶಂಕರಭಟ್ಟ

೯-೮-೧೯೦೪ ೧೭-೫-೧೯೬೮ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಪತ್ರಕರ್ತರಾದ ಶಂಕರಭಟ್ಟರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮಂಗಳೂರಿನ ಕೆನರಾ ಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಧಾರವಾಡದ […]

ಡಾ. ಮಳಲಿ ವಸಂತ ಕುಮಾರ್

೧೦.೦೮.೧೯೪೫ ತಮ್ಮ ಅಧ್ಯಯನ ಹಾಗೂ ಗ್ರಂಥ ರಚನೆಗಳಿಂದ ಜಾನಪದ ಕ್ಷೇತ್ರದಲ್ಲಿ ಪ್ರಖ್ಯಾತರಾಗಿರುವ ವಸಂತ ಕುಮಾರ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಳಲಿ ಎಂಬಲ್ಲಿ. ತಂದೆ ಪಟೇಲ್ ಚಿಕ್ಕೇಗೌಡರು, ತಾಯಿ ದೇವಮ್ಮ. ಪ್ರೌಢಶಾಲೆಯವರೆಗೆ ಓದಿದ್ದು ಮಳಲಿಯಲ್ಲಿ ತಂದೆಯ ಮಾರ್ಗದರ್ಶನದಲ್ಲಿ. ಮಹಾರಾಜ ಕಾಲೇಜಿನಲ್ಲಿ […]

ಡಾ. ಬಸವರಾಜ ಮಲಶೆಟ್ಟಿ

೧೦.೦೮.೧೯೪೯ ಪ್ರಖ್ಯಾತ ನಾಟಕಕಾರ, ವೈಚಾರಿಕ ಲೇಖನಗಳ ಬರಹಗಾರರಾದ ಬಸವರಾಜ ಮಲಶೆಟ್ಟಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ. ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಚಿಕ್ಕಂದಿನಿಂದಲೂ ರಂಗಭೂಮಿಯ ಸಂಪರ್ಕ, ತಂದೆಯವರ ನೇತೃತ್ವದ ಬಯಲಾಟಗಳ ಪಾತ್ರಧಾರಿ. ಬೆಳೆದ ಆಸಕ್ತಿಯಿಂದ “ಉತ್ತರ ಕರ್ನಾಟಕದ […]

ಡಾ. ವಿ.ಕೃ. ಗೋಕಾಕ್

೧೦-೮-೧೯೦೯ ೨೮-೪-೧೯೯೨ ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರೆಂದೇ ಪ್ರಸಿದ್ಧರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ತಂದೆ ಕೃಷ್ಣಗೋಕಾಕ, ತಾಯಿ ಸುಂದರಮ್ಮ. ಪ್ರಾರಂಭಿಕ ಶಿಕ್ಷಣ ಸವಣೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ. ೧೯೩೬ರಲ್ಲಿ ಉನ್ನತ ವ್ಯಾಸಂಗಕ್ಕಾಗಿ […]

ಚಂದ್ರಭಾಗಾದೇವಿ

೧೧.೦೮.೧೯೨೧ ೧೪.೦೪.೧೯೯೭  ನೃತ್ಯ ಪ್ರದರ್ಶನದ ಮೂಲಕ ಪ್ರಪಂಚದಾದ್ಯಂತ ಹೆಸರುಗಳಿಸಿದ್ದ ಚಂದ್ರಭಾಗಾದೇವಿಯವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ. ಹೆಸರಾಂತ ಲೇಖಕರಾದ ಪಡುಕೋಣೆ ರಮಾನಂದರಾಯರು ಮತ್ತು ಲೇಖಕಿ ಸೀತಾದೇವಿಯವರ ಮಗಳು. ಓದಿದ್ದು ಬಿ.ಎಸ್ಸಿ ಕೆಮಿಸ್ಟ್ರಿ. ಶಿವರಾಮಕಾರಂತರಿಂದ ಫ್ರೀಸ್ಟೈಲ್‌ ನೃತ್ಯಾಭ್ಯಾಸ ತರಬೇತಿ. ನೃತ್ಯ ಶಿಕ್ಷಣ […]

ಜಿ.ಎಸ್. ಅವಧಾನಿ

೧೧-೮-೧೯೪೪ ೨೦-೮-೨೦೦೦ ಗಣಪತಿ ಶಿವರಾಮ ಅವಧಾನಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೂಡಗೇರಿ. ತಂದೆ ಶಿವರಾಮ ಅವಧಾನಿ, ತಾಯಿ ಸಾವಿತ್ರಿ. ಪ್ರಾರಂಭಿಕ ಶಿಕ್ಷಣ ಮೂಡಗೇರಿ ಮತ್ತು ಹೊನ್ನಾವರ. ದೂರದ ಶಿವಾಜಿ ವಿಶ್ವವಿದ್ಯಾಲಯ (ಮಹಾರಾಷ್ಟ್ರ)ದಲ್ಲಿ ಎಂ.ಎ. ಪದವಿಗಾಗಿ ಕನ್ನಡವನ್ನು ಮುಖ್ಯ […]

ಎಂ.ಎ. ನರಸಿಂಹಾಚಾರ್

೧೨.೦೮.೧೯೨೪ ಕರ್ನಾಟಕ ಸಂಗೀತದ ದಿಗ್ಗಜರಲ್ಲೊಬ್ಬರಾದ ನರಸಿಂಹಾಚಾರ್ಯರು ಹುಟ್ಟಿದ್ದು ಮೈಸೂರು. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್, ತಾಯಿ ರಾಜಮ್ಮ. ಸಂಗೀತಾಸಕ್ತ ತಂದೆ, ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ತಾಯಿಯಿಂದ ಸಂಗೀತದ ಬಗ್ಗೆ ಬೆಳೆದ ಆಸಕ್ತಿ. ಅಕ್ಕ ಮತ್ತು ಭಾವನವರಾದ ಕೆ. ನರಸಿಂಹಾಚಾರ್ಯ ದಂಪತಿಗಳೇ ಸಂಗೀತದ ಮೊದಲ […]

ಡಾ. ಲತಾ ಗುತ್ತಿ

೧೨-೮-೧೯೫೩ ಸಾಹಿತಿ, ಪ್ರವಾಸಾಸಕ್ತೆ ಲತಾಗುತ್ತಿಯವರು ಹುಟ್ಟಿದ್ದು ಬೆಳಗಾವಿಯಲ್ಲಿ. ತಂದೆ ನಾಗನಗೌಡ, ತಾಯಿ ಶಾಂತಾದೇವಿ ಪಾಟೀಲ. ತಂದೆ ರಾಜ್ಯಸರಕಾರದ ಅಕಾರಿಯಾಗಿದ್ದುದರಿಂದ ಹಲವಾರು ಕಡೆಗೆ ವರ್ಗ. ಪ್ರಾರಂಭಿಕ ಶಿಕ್ಷಣ ಹಲವಾರು ಕಡೆಗಳಲ್ಲಿ ಬೆಳಗಾವಿಯಲ್ಲಿ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ ಮತ್ತು ಇಂಗ್ಲಿಷ್) […]

ಡಾ. ವರದರಾಜ ಹುಯಿಲಗೋಳ

೧೩-೮-೧೯೧೭ ೧೦-೧೦-೧೯೯೩ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಗಣ್ಯ ಕೊಡುಗ ನೀಡಿರುವ ವರದರಾಜರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳದಲ್ಲಿ. ತಂದೆ ರಾಜೇರಾಯರು, ತಾಯಿ ಗೋದಾವರಿಬಾಯಿ. ರಂ.ಶ್ರೀ. ಮುಗಳಿಯವರು ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು. ಪ್ರಾರಂಭಿಕ ಶಿಕ್ಷಣ ಮುದ್ದೇ ಬಿಹಾಳ. ಹೈಸ್ಕೂಲು […]