Categories
ವಚನಗಳು / Vachanagalu

ಶಿವಯೋಗಿ ಸಿದ್ಧರಾಮೇಶ್ವರ ವಚನಗಳು

ಎಲೆ ಬಸವಾ, ಎಲೆ ಚೆನ್ನಬಸವಾ,
ಸಟೆ ಏಕೋನಿಷ್ಠೆಯಾಯಿತ್ತಯ್ಯಾ,
ದಿಟ ಪುಟ ಮುಕ್ತಿಯಾಯಿತ್ತಯ್ಯಾ,
`ಮತಿಕಾಲನಾಶಂ’ ನಮೋ ಕಪಿಲಸಿದ್ಧಮಲ್ಲಿನಾಥಯ್ಯಾ,
ಬಸವಣ್ಣನಿಂದ ಪ್ರಾಣಂಗಸಂಬಂಧವಡಗಿತ್ತು./501
ಎಲೆ ಭವಗೇಡಿ ನಿನ್ನುವನು ತೋರದೆ ಕಾಡಿದೆ ಹಿಂದೆ.
ಅಯ್ಯಾ, ತನುಗುಣ ಸಾಹಿತ್ಯ ನೀನೆ.
ನೀನೆನ್ನ ಮನದ ಮಹೋತ್ಸವನೆ ಅಯ್ಯಯ್ಯಾ,
ಅವ್ವೆಯ ಅಯ್ಯನಾಗಿಯೆಂದಿಪ್ಪೆ
ಕಪಿಲಸಿದ್ಧಮಲ್ಲಿಕಾರ್ಜುನ./502
ಎಲೆ ಭ್ರಾಂತುಗೊಂಡ ಮರುಳೆ, ನೀ ಕೇಳಾ, ಹಾ! ಹಾ!
ಅಯ್ಯಾ, ಈಶ್ವರ ತಾ ಮುನ್ನ ಹರಸಿ ಕಟ್ಟಿದ ನೊಸಲಪಟ್ಟವ
ಬೇರೆ ಮತ್ತೊಬ್ಬರು ಹೆಚ್ಚಿಸಿ ಕುಂದಿಸಿ ಕಟ್ಟಬಲ್ಲರೆ?
ಅಯ್ಯಾ ಎನ್ನ ಕಪಿಲಸಿದ್ಧಮ್ಲನಾಥಯ್ಯಾ,
ತಾ ಮುನ್ನ ಹರಸಿ ಕಟ್ಟಿದಂತಹುದಯ್ಯಾ./503
ಎಲೆಯವ್ವ, ಆತನ ಬಾಯಲ್ಲಿ ಬೆಳವುತ್ತದ್ದೆ ನಾ,
ಎಲೆಯವ್ವ, ಆತನ ಸರದೊಳಗೆ ಕೂಡಿ ಸರಹುತ್ತಿದ್ದೆ ನಾ,
ಎಲೆಯವ್ವ, ಎಲೆಯವ್ವ, ಆತನ ಗಳದೊಳಗೆ ಕೂಡಿ ಗಳಹುತ್ತಿದ್ದೆ ನಾ,
ಎಲೆಯವ್ವ, ಎಲೆಯವ್ವ, ಆತನ ಅಪ್ಪುದಪ್ಪಿನೊಳಗೆ ಹುಟ್ಟಿ
ದಪ್ಪಗೊಂಡು ಬೆಳವುತ್ತಿದ್ದೆ ನಾ,
ಕಪ್ಪು ಕಪ್ಪುಗಳನೆ ನುಂಗಿ ತನ್ನ ಕಪ್ಪ ಮೆರೆವನವ್ವಾ
ಎನ್ನ ಕಪಿಲಸಿದ್ಧಮಲ್ಲಿನಾಥ, ದೇವರ ದೇವ/504
ಎಲೆಯವ್ವ, ಎಲೆ ಎಲೆಯವ್ವ,
ಹುಟ್ಟಿದ ಮಕ್ಕಳು ತಂದೆಗೆ ಬೇಟಗೊಂಬರೆ? ಅಯ್ಯಾ.
ಎಲೆಯವ್ವ, ಎಲೆ ಎಲೆಯವ್ವ,
ಹಡೆದ ಮಕ್ಕಳ ಕೈವಿಡಿವರೆ? ಎಲೆಯವ್ವ.
ಪಾಪವಿನಾಶಿ ನೀನಾಗಿ ನಿನಗೆ ಮೂಗಿನಳೈವ ದೆಸೆ ಕಾಣ!
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ./505
ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ:
ಮೊಲೆಯ ನಂಬಿದ್ದ ನಂಬಿಯಣ್ಣಂಗೆ ಮುದ್ದು ಕುಂಟಣಿಗನಾದ.
ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ: ಸರಳಿಲೆ ಹೊಯ್ದ ಪಾಂಡವಂಗೆ ಪಾಶುಪತಾಸ್ತ್ರವನಿತ್ತ.
ಎಲ್ಲ ದೇವರಂತರಲ್ಲ ನೋಡವ್ವಾ ಈ ದೇವ: ಕ್ಲಟ್ಟ ಶಂಖಿಯಂಗೆ ಕೈವಲ್ಯಪದವಿಯ ಕೊಟ್ಟನಂದು.
ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ: ಒಬ್ಬ ಬಿಲ್ಲೇಶಯ್ಯನಿಂದ ಸಹಸ್ರ ಕಂಡುಗ
ಕಪಿಲೆಯಮೃತವ ಕೊಂಡ ನೋಡವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನ./506
ಎಲ್ಲ ಪುರಾಣಕ್ಕೆ ಹೆಸರುಂಟು, ನಮ್ಮ ಪುರಾಣಕ್ಕೆ ಹೆಸರಿಲ್ಲ
ನೋಡಯ್ಯಾ.
ಂಗದ ಮಹತ್ವವ ಹೇಳಿದಲ್ಲಿ ಲಿಂಗಪುರಾಣವೆನಿಸಿತ್ತು.
ಷಣ್ಮುಖನ ಮಾಹಾತ್ಮ್ಯವ ಹೇಳಿದಲ್ಲಿ ಸ್ಕಂದಪುರಾಣವೆನಿಸಿತ್ತು.
ವೀರಭದ್ರನ ಮಾಹಾತ್ಮ್ಯವ ಹೇಳಿದಲ್ಲಿ ದಕ್ಷಖಂಡವೆನಿಸಿತ್ತು.
ಶಿವನ ಮಹಿಮೆ, ಕಾಶೀಮಹಿಮೆಯ ಹೇಳಿದಲ್ಲಿ
ಶಿವಪುರಾಣ ಕಾಶೀಖಂಡವೆನಿಸಿತ್ತು.
ಪಾರ್ವತಿಯ ಮಾಹಾತ್ಮ್ಯವ ಹೇಳಿದಲ್ಲಿ ಕಾಳೀಪುರಾಣವೆನಿಸಿತ್ತು.
ನಮ್ಮ ಪುರಾಣ ಹೆಸರಿಡಬೇಕೆಂದಡೆ,
ನಿಶ್ಶಬ್ದ ನಿರವಯಲ ಪುರಾಣ ತಾನೆಯಾಯಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./507
ಎಲ್ಲ ಮರಂಗಳೊಳು ಅಯ್ಯಾ ಸೊಲ್ಲಿಡಬಲ್ಲಡೆ
ಅಯ್ಯ ಬಲ್ಲತನವೆಂಬುದೇನರಿದು ಹೇಳು.
ಸಲ್ಲಲಿತವೆಂಬ ಸತ್ಯದ ನೆಲೆಯನರಿದರೆ
ಬಲ್ಲಹ ಇಹಪರಕೆ ಗುರು ಕಪಿಲಸಿದ್ಧಮಲ್ಲಿಕಾರ್ಜುನ./508
ಎಲ್ಲ ರ್ಪಮಥರು ಲಿಂಗವ ಧರಿಸುತ್ತರಲು
ನಾನೇನು ಒಲ್ಲೆನೆಂಬುವುದು ಕರ್ಮದ ಬಲೆಯೆ, ಮಾಯದ
ಬಲೆಯೊ?
ಎಲೆ ಕಪಿಲಸಿದ್ಧಮಲ್ಲಿನಾಥಯ್ಯಾ, ನಾ ಧರಿಸಿಕೊಂಬುವೆ ಲಿಂಗವ.
ನೀ ಕರಸಿಕೊಂಬುವನಾಗು ಮತ್ತೊರ್ವನ ನಿನ್ನ ಪೂಜೆಗೆ;
ನಾ ನಿನ್ನವನಲ್ಲೆಲೆ ದೇವಾ./509
ಎಲ್ಲ ವಾಹಿ ಇವಗೆ ನೋಡಾ!
ನೀರೆಣ್ಣೆ ಬೆಣ್ಣೆ ಇವಗೆ ನೋಡಾ!
ಈ ವಾಹಿ ಕಿಚ್ಚು ಇವಗೆ ಸವೆದೆನವ್ವಾ!
ಎಂತುಟನು ಸರಿಮಾಡಿ ನುಂಗುವ ಕಪಿಲಸಿದ್ಧಮಲ್ಲಿನಾಥಯ್ಯ!/510
ಎಲ್ಲ ಹೆಂಗೂಸುಗಳು ಬಂದು ಮುಟ್ಟಿ ಮೂವಟ್ಟೆಯ
ನೆರೆವಳು ನಲ್ಲನ ಇವಳೈವರವರೆಲ್ಲರ
ನಾವೀ ಮೂಗನ ನೆರೆವೆವವ್ವಾ
ಉಸುರದೆ ಬಂದವನ, ಉಸುರದೆ ನೆರೆವ
ಕಪಿಲಸಿದ್ಧಮಲ್ಲಿನಾಥನ./511
ಎಲ್ಲರ ಎಲ್ಲ್ಲಂ[ತಲ್ಲ್ವ] ನಿನ್ನ ಪರಿ ಹೊಸತು.
ಆಬೆ ಅನಾಹತ ಅಪರಸ್ಥಾನಕ್ಕೆ ಬಂದಡೆ ನೀನು ಪೂರ್ವಸ್ಥಾನಕ್ಕೆ
ಬಪ್ಪಿ,
ಆಬೆ ಪೂರ್ವಸ್ಥಾನಕ್ಕೆ ಬಂದಡೆ ನೀನು ದಕ್ಷಿಣಸ್ಥಾನಕ್ಕೆ ಬಪ್ಪಿ,
ಆಬೆ ದಕ್ಷಿಣಸ್ಥಾನಕ್ಕೆ ಬಂದಡೆ ನೀನು ಪಂಚಮಸ್ಥಾನಕ್ಕೆ ಬಪ್ಪಿ,
ಆಬೆ ಅನಾಹತ ಅಪರಸ್ಥಾನವನೆಯ್ದಲಾರದೆ ಇದ್ದಡೆ
ಕೋಹಂ ನಿಚ್ಚಣಿಗೆಯನಿಕ್ಕಿಟ್ಟು,
ಸಂಗಮಸ್ಥಾನಕ್ಕೆ ಸಂಯೋಗ ಪ್ರಾಪ್ತಿಯಂ ಮಾಡಿಸಿದೆ.
ನಿನ್ನ ಸಂಯೋಗದ ಸುಖದಿಂದ ಸಂಪನ್ನೆಯಾಗಿ
ಇಹಪರವೆಂಬುದನು ಏಕವ ಮಾಡಿದಳು.
ಅವ್ವೆಯ ಕರುಣದಿಂದ ಎನಗೆ ಅರಿದಪ್ಪ ಆಧಿಕ್ಯವಿಲ್ಲ
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಗುರುವಿನ ಕರುಣದಿಂದ
ಸದ್ಭಕ್ತಿಯನರಿದು ಸಕಲಯೋಗಕ್ಕೆ ಮೂಲನಾದೆನು./512
ಎಲ್ಲರ ನೆನಹಿನ ಆಯುಷ್ಯದ ಪುಂಜವೆ,
ಅವಧಾರು ಅವಧಾರು;
ಅಯ್ಯಾ ಎನ್ನ ನೆನಹಿನ ಮಂಗಳನೆ,
ಅವಧಾರು ಅವಧಾರು,
ಕಪಿಲಸಿದ್ಧಮಲ್ಲಿಕಾರ್ಜುನ./513
ಎಲ್ಲರ ಪರಿಯಲ್ಲ ಅವನ ಪರಿ ಹೊಸತು;
ಕಾಲಾರರಲ್ಲಿ ನಡೆವ, ಕಿವಿಯಲಿ ಉಂಬ,
ಮೂಗಿನಲ್ಲಿ ನೋಡುವ, ಬಾಯಲ್ಲಿ ಭಾವಿಸುವ,
ಕಣ್ಣಿನ್ಲ ಮೂರ್ಛೆಹೋಹ,
ಬಂದುದನತಿಗಳೆವ, ಬಾರದುದ ತನ್ನದೆಂಬ;
ಇಂಥಾ ವಿನೋದವಿಚಿತ್ರನವ್ವಾ, ಕಪಿಲಸಿದ್ಧಮಲ್ಲಿಕಾರ್ಜುನನು./514
ಎಲ್ಲರ ಪರಿಯಲ್ಲ ಎಮ್ಮ ಗಂಡನ ಪರಿ.
ಒಬ್ಬರು ಬಲ್ಲುದ ತಾನರಿಯ, ತಾ ಬಲ್ಲುದನೊಬ್ಬರರಿಯರು.
ತವಕ ಬಂದಲ್ಲಿ ಕೂಡುವ, ಅಲ್ಲದಡೊಲ್ಲದ ಹಾಂಗಿರ್ಪ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನು/515
ಎಲ್ಲರ ಬಣ್ಣಿಸಬಹುದು, ಎನ್ನ ಗುರುದೇವನ ಬಣ್ಣಿಸಬಾರದು.
ಅಲ್ಲನ ನುಡಿಸಬಹುದು, ಎನ್ನ ನಲ್ಲ ಕಪಿಲಸಿದ್ಧಮಲ್ಲೇಂದ್ರನ
ರೂಹು
ಚೆನ್ನಬಸವನ ನುಡಿಸಿ ಗೆಲಬಾರದು, ಖುಲ್ಲತನಂದದಾದಡೂ
ಕಲ್ಲಯ್ಯಾ./516
ಎಲ್ಲರ ಮರೆಯಬಹುದು;
ಎನ್ನ ವಲ್ಲಭ ಗುರುಮೂರ್ತಿಯ ಮರೆಯಬಾರದು.
ಎಲ್ಲರ ಕೀರ್ತಿಸಬಹುದು;
ಎನ್ನ ಗುರುಮೂರ್ತಿಯ ಕೀರ್ತಿಸಬಾರದು.
ಎಲ್ಲರು ಹೋಗಲಾಡಿದರೆಂದು ಎನ್ನ ನಲ್ಲನು ಹೋಗಲಾಡನು,
ನೀ ಹೋಗಲಾಡೆನೆ, ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ಪಾದಸಾಕ್ಷಿಯಾಗಿ./517
ಎಲ್ಲರಿಗಿಂತಲೂ ಶಿವಭಕ್ತರಧಿಕರೆಂಬ ಕಾರಣವೇನಯ್ಯಾ?
ನಿತ್ಯ ಲಿಂಗಾರ್ಚನೆ ಮೂರು ವೇಳೆ;
ಲಿಂಗಾರ್ಚನೆಗೊಮ್ಮೆ ಲಿಂಗತ್ರಯಪೂಜೆ;
ಪೂಜೆಗೊಮ್ಮೆ ಮಹಾಪ್ರಣವ ಜಪ; ಜಪಕ್ಕೊಮ್ಮೆ ನಿಜಧ್ಯಾನ;
ನಿಜಧ್ಯಾನಕ್ಕೊಮ್ಮೆ ಚಿತ್ತಿನ ಲಯ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./518
ಎಲ್ಲರಿಗೆರಡು ಕಣ್ಣೆಂಬುದ ಲೋಕವೆಲ್ಲ ಬಲ್ಲದು.
ಎನಗೆ ಮೂರು ಕಣ್ಣೆಂಬುದ ಲೋಕವೆಲ್ಲ ಬಲ್ಲದು.
ಎರಡು ಕಣ್ಣಿನವನಲ್ಲ, ಮೂರು ಕಣ್ಣಿನವನಲ್ಲ,
ಒಂದೆ ಕಣ್ಣು ನೋಡಾ, ಅಲ್ಲಮ ಕಪಿಲಸಿದ್ಧಮಲ್ಲಿಕಾರ್ಜುನ./519
ಎಲ್ಲರು ತಪವ ಮಾಡಿದರು;
ನಮ್ಮ ಶ್ರೀಶೈಲನ ತಪದಂತೆ ತಪದ-ಒರ್ವರನು ಕಾಣೆ.
ಎಲ್ಲರು ಲಿಂಗವ ಪೂಜಿಸಿದರು;
ನಮ್ಮಮ್ಮನವರ ಪೂಜೆಯಂತೆ [ಪೂಜೆಯ] ಒರ್ವರನು ಕಾಣೆ.
ಎಲ್ಲರು ಮಹಿಮೆಯ ಮಾಡಿದರು;
ನಮ್ಮ ಶ್ರೀಶೈಲವಲ್ಲಭ ಕಪಿಲಸಿದ್ಧಮಲ್ಲನಂತೆ ಒರ್ವರನು ಕಾಣೆ,
ಬೊಮ್ಮಣ್ಣಾ./520
ಎಲ್ಲರು ಲಿಂಗವ ಪೂಜಿಸಿ ಮಹಾಪದಸ್ಥರಾದ ಪರಿಯನೊರೆವೆ
ಕೇಳಾ: ಸ್ಫಟಿಕ ಶಿಲಾಮಯ ಲಿಂಗವ ಪೂಜಿಸಿ,
ಸತ್ಯಲೋಕವ ಪಡೆದ ನೋಡಾ, ವಿಧಾತ್ರನು.
ಇಂದ್ರನೀಲಮಣಿ ಲಿಂಗವ ಪೂಜಿಸಿ,
ವೈಕುಂಠವ ಪಡೆದ ನೋಡಾ, ನಾರಾಯಣನು.
ಮರಕತಂಗವ ಪೂಜಿಸಿ ಅಮರಾವತಿಯ ಪಡೆದ ನೋಡಾ,
ಉಪೇಂದ್ರನು.
ಚಿಂತಾಮಣಿ ಲಿಂಗವ ಪೂಜಿಸಿ,
ಅನಂತ ಸ್ತ್ರೀಯರ ಪಡೆದ ನೋಡಾ ಇಂದ್ರನು.
ಸುವರ್ಣಲಿಂಗವ ಪೂಜಿಸಿ, ಅಳಕಾವತಿ ನವನಿಧಿ ಉಚ್ಚೆ ಶ್ರವ
ಪರಮಾತ್ಮಮಿತ್ರತ್ವ ಪಡೆದ ನೋಡಾ, ಕುಬೇರನು.
ಹಿತ್ತಾಳೆಯ ಲಿಂಗವ ಪೂಜಿಸಿ,
ಸರ್ವಸಖತ್ವ ಸರ್ವದ್ರವ್ಯತ್ವ ಶಿವಕರುಣತ್ವ ಪಡೆದ ನೋಡಾ,
ಪವನನು.
ಕಾಂಸ್ಯಮಯ ಲಿಂಗವ ಪೂಜಿಸಿ,
ಅಷ್ಟದಿಕ್ಕುಗಳ ಪಡೆದರು ನೋಡಾ, ವಸುಗಳು.
ಮೃಣ್ಮಯ ಲಿಂಗವ ಪೂಜಿಸಿ,
ಸಂಜೀವನ ಮೊದಲಾದೌಷಧಿಗಳ ಪಡೆದರು ನೋಡಾ,
ಅಶ್ವಿನೀಕುಮಾರರು.
ಶ್ವೇತಶಿಲಾಮಯ ಲಿಂಗವ ಪೂಜಿಸಿ,
ಮಹತ್ಪ್ರಭೆ ಸಹಸ್ರಕಿರಣ ಪಡೆದ ನೋಡಾ ಸೂರ್ಯನು.
ಮೌಕ್ತಿಕಲಿಂಗವ ಪೂಜಿಸಿ,
ಸರ್ವಸಸಿ ಅಂಕುರತ್ವ ಶಿವಮೌಳಿಧಾರಣತ್ವ ಪಡೆದ ನೋಡಾ,
ಚಂದ್ರನು.
ವಿಚಿತ್ರವರ್ಣದ ಲಿಂಗವ ಪೂಜಿಸಿ,
ತಮ್ಮ ತಮ್ಮ ಜನನ ಮಹತ್ವ ಪಡೆದವು ನೋಡಾ, ನಕ್ಷತ್ರಂಗಳು.
ಪಚ್ಚಮಯ ಲಿಂಗವ ಪೂಜಿಸಿ,
ಸರ್ವಶಾಸ್ತ್ರ ಧುರೀಣತ್ವವ ಪಡೆದ ನೋಡಾ ಬುಧನು.
ಕಬ್ಬಿಣ ಲಿಂಗವ ಪೂಜಿಸಿ ದೈತ್ಯಾಚಾರತ್ವವ ಪಡೆದ ನೋಡಾ
ಶುಕ್ರನು.
ವಿದ್ರುಮ ಲಿಂಗವ ಪೂಜಿಸಿ, ರಸಿಕತ್ವ ಪಡೆದ ನೋಡಾ
ಮಂಗಳನು.
ಮಾಣಿಕ್ಯ ಲಿಂಗವ ಪೂಜಿಸಿ,
ಸರ್ವಮಂತ್ರ ಕುಶಲತ್ವ ಪಡೆದ ನೋಡಾ, ಬೃಹಸ್ಪತಿಯು.
ಅಧೋಮಯ ಲಿಂಗವ ಪೂಜಿಸಿ,
ಸರ್ವರಲ್ಲಿ ಕಷ್ಟತ್ವ ತನ್ನುಪಾಸಕರಲ್ಲಿ ಸುಖತ್ವ ಪಡೆದ ನೋಡಾ,
ಶನಿಯು.
ಧೂಮ್ರಮಯ ಲಿಂಗವ ಪೂಜಿಸಿ,
ಅಮೃತವ ಪಡೆದರು ನೋಡಾ, ರಾಹು ಕೇತುಗಳು.
ಗೋಮಯ ಲಿಂಗವ ಪೂಜಿಸಿ,
ಕಲ್ಪತರುಗಳ ಪಡೆದರು ನೋಡಾ, ನಿರುತಿಯರು.
ಕುಶ ಲಿಂಗವ ಪೂಜಿಸಿ, ಅನೇಕ ಸಿದ್ಧಿಗಳ ಪಡೆದರು ನೋಡಾ,
ಸಿದ್ಧರು.
ಮೂಲಿಕೆ ಲಿಂಗವ ಪೂಜಿಸಿ
ಮರಣದೂರತ್ವ ದುಃಖಸಮೀಪತ್ವ ಪಡೆದರು ನೋಡಾ,
ಧನ್ವಂತರಿಗಳು.
ಶಂಖ ಲಿಂಗವ ಪೂಜಿಸಿ,
ಶಿವಪ್ರಸನ್ನತ್ವ ಪಡೆದ ನೋಡಾ, ಮಾರ್ಕಂಡೇಯನು.
ಪವಿತ್ರ ಲಿಂಗವ ಪೂಜಿಸಿ,
ಅಂತಃಕರಣತ್ವ ಪಡೆದ ನೋಡಾ, ಸರ್ವರಲ್ಲಿ ವಸಿಷ್ಠನು.
ದರ್ಭಸ್ತಂಭ ಲಿಂಗವ ಪೂಜಿಸಿ,
ಅರ್ಧಬ್ರಹ್ಮತ್ವ ಪಡೆದ ನೋಡಾ, ವಿಶ್ವಾಮಿತ್ರನು.
ಕೂರ್ಚ ಲಿಂಗವ ಪೂಜಸಿ,
ಸರ್ವದೇವತಾಶಿಕ್ಷತ್ವ ಪಡೆದ ನೋಡಾ, ವಾಮದೇವನು.
ತಮ್ಮ ಜ್ಞಾನಸ್ವರೂಪ ಲಿಂಗವ ಸದಾ ಪೂಜಿಸಿ,
ಜ್ಞಾನವ ಪಡೆದರು ನೋಡಾ, ಸನಕಾದಿ ಮಹಾಮುನಿಗಳು.
ಶಿರೋರತ್ನ ಲಿಂಗವ ಪೂಜಿಸಿ, ದಿವ್ಯ ಸುಂದರತ್ವ ದಿವ್ಯ ಬುದ್ಧಿ
ಶಕ್ತಿತ್ವ
ಅನೇಕ ವರ್ಷ ನಿರ್ಜರತ್ವಪಡೆದರು ನೋಡಾ, ನಾಗರ್ಕಳು.
ಕೀಟಾಕೃತಿ ಲಿಂಗವ ಪೂಜಸಿ,
ಶಿವಸಭಾಪ್ರಸನ್ನತ್ವ ಪಡೆದರು ನೋಡಾ, ರಾಕ್ಷಸರು.
ತ್ರಿಪುರ ಲಿಂಗವ ಪೂಜಿಸಿ,
ಅನೇಕ ಪುರಗಮನತ್ವ ಕಿಂಚಿತ್ ಕಿಂಚಿತ್ ಕುಟಿಲತ್ವ ಪಡೆದರು
ನೋಡಾ, ಬ್ರಹ್ಮರಾಕ್ಷಸ ಪಿಶಾಚಿಗಳು.
ತ್ರಿಲೋಹ ಂಗವ ಪೂಜಿಸಿ,
ಅದೃಶ್ಯತ್ವ ಗೋಪನೀಯ ಕಾರ್ಯತ್ವ ಪಡೆದರು ನೋಡಾ,
ಗುಹ್ಯಕದೇವತೆಗಳು.
ಪಂಚಲೋಹ ಂಗವ ಪೂಜಿಸಿ,
ಅನೇಕ ಮಂತ್ರಸ್ಧಿತ್ವ ಪಡೆದರು ನೋಡಾ, ಶಾಬರಾ
ಮಾಂತ್ರಿಕರು.
ವಜ್ರ ಲಿಂಗವ ಪೂಜಿಸಿ,
ನಿತ್ಯ ಶಿವಾಭಿಷೇಕ ಮಾಡುವರು ನೋಡಾ, ಸಪ್ತ ಮಾತೃಕೆಯರು.
ಪ್ರಸೂನ ಲಿಂಗವ ಪೂಜಿಸಿ,
ಮೂರು ಲೋಕವ ತನ್ನೊಳ್ಮಾಡಿದ ನೋಡಾ, ಮನ್ಮಥನು.
ಇಚ್ಛಾಂಗವ ಪೂಜಿಸಿ,
ಆದಿನಾರಾಯಣನ ಪಡೆದಳು ನೋಡಾ, ಲಕ್ಷ್ಮಿಯು.
ಕ್ರಿಯಾಂಗವ ಪೂಜಿಸಿ,
ಬ್ರಹ್ಮನ ಪಡೆದಳು ನೋಡಾ, ಸರಸ್ವತಿಯು.
ಪತಿ ಎಂಬ ಲಿಂಗವ ಪೂಜಿಸಿ,
ಪತಿವ್ರತತ್ವ ಪಡೆದರು ನೋಡಾ, ಅರುಂಧತಿ ಅನುಸೂಯೆ,
ಅನಲಾಯಿ ಸಾವಿತ್ರಿಯರು.
ಬಿಲ್ವಫಲ ಲಿಂಗವ ಪೂಜಿಸಿ,
ನಮ್ಮ ಪ್ರಥಮಪಾದವ ಪಡೆದರು ನೋಡಾ, ಧರ್ಮದೇವತೆಗಳು.
ಜಂಬೂಫಲ ಲಿಂಗವ ಪೂಜಿಸಿ,
ಸರ್ವರ ಪ್ರಾಣಾಕರ್ಷಣವ ಪಡೆದಳು ನೋಡಾ, ಮೃತ್ಯುದೇವತೆ.
ನಿಂಬಫಲ ಲಿಂಗವ ಪೂಜಿಸಿ,
ನಿರೋಗ ಆರೋಗ್ಯ ಪಡೆದಳು ನೋಡಾ, ಆರೋಗ್ಯದೇವತೆ.
ಆಕಾಶ ಲಿಂಗವ ಪೂಜಿಸಿ ಬಯಲ ಪಡೆದರು ನೋಡಾ,
ಗಂಬರರು.
ಧ್ವಜ ಗವ ಪೂಜಿಸಿ ಖೇಚರತ್ವ ಪಡೆದರು ನೋಡಾ,
ಗಗನಚಾರಿಗಳು.
ಮೋಹ ಲಿಂಗವ ಪೂಜಿಸಿ,
ಸರ್ವಜನವಶ್ಯತ್ವ ಪಡೆದುವು ನೋಡಾ, ಪಶುಪ್ರಾಣಿಗಳು.
ಬೀಜಧಾನ್ಯ ಲಿಂಗವ ಪೂಜಿಸಿ,
ಸರ್ವಧಾನ್ಯವ ಪಡೆದರು ನೋಡಾ, ಕರ್ಷಕರು.
ಇಂತಪ್ಪ ನಾನಾಕೃತಿ ಲಿಂಗವ ಪೂಜಿಸಿ, ಹಲಕೆಲವು
ಪದಸ್ಥರಾದರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ./521
ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ,
ಎಮ್ಮಮ್ಮನವರ ಮಂತ್ರವ ಜಪಿಸಿ ಸೇವೆಯಲ್ಲಿರಲಾರರು
ನೋಡಾ, ಮನುಮುನೀಶ್ವರರು.
ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ ಎಮ್ಮಮ್ಮನವರ ಮಂತ್ರ
`ಸರ್ವಮಂಗಳಾಯೈ ಶಿವಾಯೈ ಜಗದಂಬಾಯೈ
ಜಗದ್ವಂದ್ಯಜಗದಾಧಾರಾಯೈ ನಮೋ ನಮಃ!’ ಎನ್ನರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ, ಮಹಾಪ್ರಮಥರು./522
ಎಲ್ಲರೂ ಜಪಿಸುವ ಜಪವ ಜಪಿಸಲಾರೆನಯ್ಯಾ.
ಕ್ಷಣಕ್ಕೊಮ್ಮೆ `ನಮಃ ಶಿವಾಯ’ ಎಂಬೆ;
ಕ್ಷಣಕ್ಕೊಮ್ಮೆ `ನಮಃ ಶಿವಾಯ’ ಎಂಬೆ.
ಕ್ಷಣ ಕ್ಷಣಕ್ಕೊಮ್ಮೆ ಇದೆ ಮಂತ್ರ ಘನವೆಂದುಸುರುವೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ/523
ಎಲ್ಲರೊಳಗಿಪ್ಪರೆ ಅಲ್ಲ್ಲ ರಚಿಸುವೊಡೆ
ಎಲ್ಲರೋಪಾಯೆ ಎಲೆ ಅಯ್ಯ ನೀನು.
ಸಲ್ಲಲಿತ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಭಕ್ತರಲ್ಲಿಯಲ್ಲದೆ ನೀನು ಸುಲಭನಲ್ಲ./524
ಎಲ್ಲಿ ನೋಡಲು ತಾಯ ಕೊಂದವರೂಟ ಘನವಾಗಿದೆ.
ಈ ಗುಣ ಹರಿವ ಹಕ್ಕೆಗೆ ಸಂಬಂಧವಿಲ್ಲ.
ನಿಮ್ಮೂಟವಂ ಕಂಡವರೊಳರೆ ಚೆನ್ನಬಸವಣ್ಣನಲ್ಲದೆ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಧರ್ಮವಿಡಿದ ಚೆನ್ನಬಸವಣ್ಣನಿಂದ ಸುಖವ ಕಂಡೆನು./525
ಎಸಳ ಕುಸುಮ ನಿವಾರಿಸಲು ಅಯ್ಯಾ,
ನಾನು ನಿನ್ನ ದೆಸೆಗೆ ಕಂಬೇಟಗೊಂಡೆನಯ್ಯಾ.
ಪಶುಪಾಶಮೋಚನ ಅಯ್ಯಾ,
ನಿನ್ನ ದೆಸೆ ಇದ್ದೆಸೆಯಾಗಯ್ಯಾ.
ಶಶಿಧರಾ, ನಿಮ್ಮ ವಶಕ್ಕೆನ್ನ ತೆಗೆದುಕೊಳ್ಳಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./526
ಎಸಳ ಕುಸುಮಂದಲತ್ತ ಪಸರಿಸಿತು.
ಪಂಕವೆಂಬ ದೆಸೆ ಇದ್ದೆಸೆಗೆಟ್ಟರಾಡುವ
ಪರಿಯನೆನಗೆ ತೋರರಯ್ಯ.
ಇದ್ದೆಸೆಯ ಮುದ್ದೆಸೆಯನೊದ್ದೆಸೆಯ ಮಾಡಿ
ಸಲಹು ಕಪಿಲಸಿದ್ಧಮಲ್ಲಿಕಾರ್ಜುನ./527
ಎಸಳ ಮಂಟಪದಲ್ಲಿ ಕುಸುಮನಾಳದ ಭೇದ
ಶಶಿಧರನ ಮಸ್ತಕದ ಧವಳಗಿರಿಯ
ಒಸರುವ ಆನಂದ ವಿಪರೀತ ಭಾಷ್ಪವಿನ-
ಲೆಸೆರ್ದುದೈದೆ ಸದ್ಭಕ್ತಿಕ್ರೀಯು.
ಶಶಿಧರ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ವಶದೊಳಿರ್ಪಂಗಲ್ಲದೆ ಕಾಣಲರಿದು./528
ಎಸಳ ಸಸಿ ಕುಸುಮಭೂಷಣನೆ
ಅಯ್ಯಾ, ದೆಸೆಯಿದ್ದೆಸೆಗೆಟ್ಟೆ ನಾನಯ್ಯಾ.
ಶಶಿಧರಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಎನ್ನ ವಶಕೆ ತಂದಿರಿಸು ಕಂಡಾ ಅಯ್ಯಾ./529
ಎಸಳೆಸಳ ಸೋಹೆಯಲಿದ್ದು ಅಟ್ಟಿ ಕರೆದಡೆ ಬಂದ
ನಾ ಅವನ ಬೆನ್ನ ಬೆನ್ನ ಹೊಗಲಿ ಹೊಗಲಿಯವ್ವಾ.
ಆ ಸುಳಿಗೊಂಡ ಸುಕ್ಷೋಣಿದ್ವಾರದೊಳಗೆ
ಲಕ್ಕದ ಮೇಲೆ ತೊಂಬತ್ತು [ಆರು] ಸಾಸಿರ ಲಿಂಗವವ್ವಾ.
ಅವನ ಬೆನ್ನ ಬೆಳಗಿನ ಆದಿಲಿಂಗ ನಾಳಪಟ್ಟಣ,
ರೂಪನಾಶನಾದ ಕಪಿಲಸಿದ್ಧಮಲ್ಲಿನಾಥನ./530
ಎಸುಗೆ ಕಂಗಳಲ್ಲಿಕ್ಕು ಕುಸುಮದಂಬಿನ ಘಾಯ
ದೆಸೆಗೆಟ್ಟು ಹೋಹರೈ ಮೂಜಗದವರು.
ಮಮಶ ನಿಮ್ಮ ದೆಸೆಗವನು ಹೊದ್ದನೈ
ಸಲಹು ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./531
ಎಸೆವಡೆದ ಮೃಗದಂತೆ ಎನ್ನ ಮನ ಶಂಭುವೆ
ಕಲ್ಲೆನ್ನದು ಮುಳ್ಳೆನ್ನದು.
ಭಕ್ತಿಯೆಂಬ ಸಂಕಲೆಯನಿಕ್ಕೆನ್ನ ಮನಕ್ಕೆ
ಕಪಿಲಸಿದ್ಧಮಲ್ಲಿಕಾರ್ಜುನ/532
ಏಕಜನ್ಮನ್ಯೇವ ವಿದ್ಯಾಪ್ರಾಪ್ತಿರ್ಭವಿಷ್ಯ್ಕತಿ’
ಎಂಬ ವಾಕ್ಯವದು ಪುಸಿಯೇನಯ್ಯಾ?
ಶಾಸ್ತ್ರವನೋದಿ ಓದಿ ಪಿಶಾಚಿಯಾಗನೆ ಅಂದು ಕಾಶಿಯಲ್ಲಿ ಹರಿದತ್ತನು?
ವಾಸಿದಲ್ಲಿ ಫಲವೇನಯ್ಯಾ, ವಾದಿಸಬೇಡ!
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸದೆ ವ್ಯರ್ಥ
ದಿನಗಳೆಯಬೇಡ. |/533
ಏಕಪಂಕ್ತಿಯಲ್ಲಿ ತಾ ಭೋಜನಭೇದ ಮಾಡಬಾರದು.
ಭೋಜನಭೇದ ಮಾಡಿದಡೆಯು ತಾನೆಣಿಸಬಾರದು.
ತಾನೆಣಿಸಿದಲ್ಲಿಯೂ ಅನ್ಯರಿಗೆ ್ಕಳಿಯಬಾರದು.
ಅನ್ಯರಿಗೆ ತಿಳಿದಡೆಯು ಮನೆ ಬೇರಾಗಬಾರದು.
ಮನೆ ಬೇರಾದಡೆಯು ಮನ ಬೇರಾಗಬಾರದು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./534
ಏಕೆನ್ನ ಸಿರಿಗಳು ಕೆರೆಗಳು ಮರಗಳು ಫಲಗಳು
ಬೀಯದ ಮುನ್ನ ಒಯ್ಯನೆ ಮಾಡಿ ಭೋ,
ಹಾಲುಳ್ಳಲ್ಲಿ ಹಬ್ಬವನು.
ಎನ್ನ ಭಕ್ತಿ-ಮುಕ್ತಿ ಸವೆಯದ ಮುನ್ನ
ಲಿಂಗವೆ ಜಂಗಮವೆಂದು ಮಾಡಿ ಭೋ.
ಸ್ವಾತಂತ್ರಯ್ಯ ತನ್ನನೀವ
ಕಪಿಲಸಿದ್ಧಮಲ್ಲಿಕಾರ್ಜುನ./535
ಏಕೈಕನೆಂ…….
ಅನೇಕ ವಿಧ ಸದ್ಭಕ್ತಿ ಪದವನರಿದು
ಆ ಗುರುವಿನಾ ಮನದ ಮತಿಯ ಬೆಳಗುವ
ನಿರ್ಮಳಾಂಗನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./536
ಏಕೋದೇವಾಯೆಂದು ಮನೆಮನೆದಪ್ಪದೆ
ಗಿರಿಯ ತಡಿಯ ಕಡಲ ಮುಡಿಯ ಜಡೆಯನೆಂಬರು.
ಅಯ್ಯಾ, ಎಂದಡಾನು ನಗುತ್ತಲಿರ್ದೆ,
ಆ ಆಧಾರದಲ್ಲಿ ರೂಪುಯೆಂಟು ಇಲ್ಲದಂದು
ಹೆಸರು ನಿನಗೇನು ಹೇಳಾ?
ಕಪಿಲಸಿದ್ಧಮಲ್ಲಿಕಾರ್ಜುನ
ನೀನು ಆಮುಖಶೂನ್ಯ ಕಾಣಾ/537
ಏನಯ್ಯಾ, ಏನಯ್ಯಾ! ಮಕ್ಕಳಿಗೆ ಜನಕರು ಕಾಡುವರೊ?
ನಾನು ಗುರುಸ್ಥಲಕ್ಕೆ ಯೋಗ್ಯನಲ್ಲ, ಲಿಂಗಸ್ಥಲಕ್ಕೆ ಯೋಗ್ಯನಲ್ಲ,
ಜಂಗಮಸ್ಥಲಕ್ಕೆ ಯೋಗ್ಯನಲ್ಲ,
ನಾ ನಿಮ್ಮ ರಾಜಾಂಗಣದ ಕೂಲಿಕಾರ,
ಕಪಿಲಸಿದ್ಧಮಲ್ಲಿಕಾರ್ಜುನ./538
ಏನೆಂದೆನಲ್ಲದ ಅಖಂಡ ಪರಿಪೂರ್ಣ ಪರಮಾನಂದ ಪರಬ್ರಹ್ಮವು
ತಾನೆಂಬ ಅರಿವಿನ ಬಲದ ಅಹಂಕಾರವಿಲ್ಲವಾಗಿ, ಅದ್ವೆ ತಿಯಲ್ಲ;
ಉಭಯವಿಟ್ಟರಸುವ ಗಜೆಬಜೆಯಲ್ಲಿ ಸಿಲುಕನಾಗಿ, ದ್ವೈತಿಯಲ್ಲಿ.
ಇಂತೀ ದ್ವೆ ತಾದ್ವೆ ತವೆಂಬ ಉಭಯನಾಮ
ನಷ್ಟವಾದ ಅಭೇದ್ಯಮಹಿಮನ
ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರೆ ಬಲ್ಲರು/539
ಏನೆಂದೆನಿಸದ ವಸ್ತು, ಅಪ್ರಮಾಣಮೂರ್ತಿ
ಬಸವ ಎಂಬ ಪದಕ್ಕೆ ನಿಂದಿತ್ತಯ್ಯಾ ನಿಮ್ಮ ಪ್ರಸಾದ,
ಅರಿಯಬಾರದ ಬಸವನೆಂಬ ವಸ್ತುವನರುಹಿತ್ತಯ್ಯಾ ನಿಮ್ಮ
ಪ್ರಸಾದ.
ಬಸವನೆಂಬ ನಿಜವ ನಿಮ್ಮಲ್ಲಿ ನಿಲಿಸಿತ್ತಯ್ಯಾ ನಿಮ್ಮ ಪ್ರಸಾದ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಅರ್ಪಿತ ಅನರ್ಪಿತವಾಯಿತ್ತಯ್ಯಾ,
ನಿಮ್ಮ ಬಸವವಿಡಿದು./540
ಏನೆಂಬೆ ಏನೆಂಬೆ ಕೊಟ್ಟ ದೇವರಂದವ !
ಮನದಲ್ಲಿ ಘನಲಿಂಗವಾಯಿತ್ತು,
ಧ್ಯಾನದಲ್ಲಿ ಭಾವಲಿಂಗವಾಯಿತ್ತು,
ನೇತ್ರದಲ್ಲಿ ಶಿವಲಿಂಗವಾಯಿತ್ತು,
ಹೃದಯದಲ್ಲಿ ಮಹಾಲಿಂಗವಾಯಿತ್ತು,
ಎನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅಳವಟ್ಟಿತ್ತು.
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ,
ಎಲ್ಲ ಕಡೆಯಲ್ಲಿ ಪರಾತ್ಪರ ವಸ್ತುವಾಗಿ, ಚೆನ್ನಬಸವಣ್ಣನಾಗಿ,
ನಾನು ಮರೆದೆನಯ್ಯಾ ಎನ್ನ ನಾಮವ, ನೋಡಯ್ಯಾ ಪ್ರಭುವೆ./541
ಏನೋ ಏನೋ ಗಂಡಾ,
ನಿಮ್ಮ ತಂದೆ ಬಂದೈದಾನೆ;
ನಾನೇನುವನರಿಯೆನೈ.
ನೀನೆ ನಿಮ್ಮ ತಂದೆಯ ಸಂತೈಸಿ,
ಎನಗವರ ಕರುಣವ ಪಾಲಿಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./542
ಏರಿಯನೇರಿ ಬರುವಲ್ಲಿ
ಮೂವತ್ತಾರು ಮಂಟಪದ ಮಣಿಯ ತುಂಬಿ
ಕೇರಿ ಕೇರಿಯ ತುದಿಯ ತಿರುಗಲು,
ಸುಂಕಿಗರಿನ್ನೂರ ಹದಿನಾರು ಮಂದಿ
ಮೂವತ್ತಾರು ಮಂಟಪದಲ್ಲಡಗಿದರಯ್ಯಾ.
ಏರಿ ಬರುವ ಪುರುಷ ಮೂವರು ತಳವಾರರ ಕೂಡಿಕೊಂಡು,
ಮೂವತ್ತಾರು ಮಂಟಪದಲ್ಲಿ ಅಡಗಿದ
ಇನ್ನೂರ ಹದಿನಾರು ಸುಂಕಿಗರನರಸಲು
ಮೂವರು ತಳವಾರರು ತನ್ನ ನುಂಗಿದರಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./543
ಏಳು ಸೀಮೆಯನು ದಾಟಿಪ್ಪಳವ್ಯಯದ
ಸೋಮ ಕುಂಭವನು ಹೊತ್ತು ನಿತ್ಯತ್ವದಾ
ಸ್ವಾನುಭೂತೈಕ್ಯದಲಿ ತಾನು ಸಂಗಮವಾಗೆ
ಸೋಮ ಕೊಡ[ನೊಡೆ]ದುದೈ ಕಪಿಲಸಿದ್ಧಮಲ್ಲಿಕಾರ್ಜುನ/544
ಏಳೆಂಟು ಠಾವಿನ ಮಠವ ಶುದ್ಧವ ಮಾಡಿ
ಧಾರುಣಿಯ ಸುದ್ದಿಯನು ಹದುಳಮಾಡಿ
ಆರೈದು ಸಕಲ ನಿಷ್ಕಲದೊಳಗೆ ವೇದ್ಯ
ಗೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ./545
ಐ ಬ್ರಹ್ಮಂದತ್ತಲಾದ ಸೀಮೆಯ,
ಆ ಸೀಮೆಯ ಮೀÙರೆದ ಸಂಬಂಧ,
ಆ ಸಂಬಂಧ ಅಯ್ಯನ ರೂಪು,
ಆ ಅಯ್ಯ ವಾಙ್ಮನಕಗೋಚರನೆಂಬರು.
ಆ ಅಯ್ಯ ಭಕ್ತ ಕಾರಣ ಪರಶಿವಮೂರ್ತಿಯೆಂದೆಂಬರು.
ಆವುದು ಹುಸಿ? ಆವುದು ದಿಟ?
ಈ ಉಭಯದ ಸಂಸಿದ್ಧವ ನಿನ್ನವರು ನೀವು ಬಲ್ಲಿರಿ,
ಅನೇಕೆಂದರಿಯೆ ಕಪಿಲಸಿದ್ಧಮಲ್ಲಿಕಾರ್ಜುನ/546
ಐಕ್ಯನೆಂಬಾತ ಅನ್ಯವನರಿಯ ತನ್ನುವನರಿಯ;
ಸಕಲವನರಿಯ ನಿಷ್ಕಲವನರಿಯ.
ಸರ್ವಸ್ವವೂ ಲಿಂಗವಾದಾತನಾಗಿ
ತನ್ನ ಮೀರಿದ ಪರತತ್ವ ಒಂದೂ ಇಲ್ಲವಾಗಿ,
ಎಲ್ಲಾ ತತ್ವಂಗಳಿಗೂ ಮಾತೃಸ್ಥಾನವಾದಾತನು.
ಲಿಂಗವನವಗ್ರಹಿಸಿಕೊಂಡಿಪ್ಪ ಪರಮ ಸೀಮೆ ತಾನಾಗಿ,
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ
ಕಳೆಗಳ ಲಿಂಗಕಳೆಗಳ ಮಾಡಿದ ಲಿಂಗೈಕ್ಯನು./547
ಐಗ್ರಾಮ ಚೌಗ್ರಾಮ ಅಯ್ಯ ನಿನ್ನಯ ಸೀಮೆ.
ಅತ್ಯೋನ್ನತದ ಫಲಕ್ಕೊಸರುತಿಹದು
ಒಸರುತಿಹ ಲಿಂಗವನು ವಶಕೆ ತಂದು ಶಿಷ್ಯಂಗೆ
ಹೆಸರಿಟ್ಟು ಕೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ./548
ಐದಕ್ಕರವವು ಎಮ್ಮಮ್ಮನವರು.
ಮುಂದಣ ಅಕ್ಕರವದು ಜಗಜ್ಜನಕನದು.
ಮುಂದೊಂದು ತಾರೆ, ಮುಂದೊಂದು ತಾರೆ
ಇಡಲದು ತೋರುವಳು ಈ ಸ್ಥಾನಮೀಸಂಪದ್ವೆ ಭವ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./549
ಐದಕ್ಷರ ಆದಿಯಾದ, ಇಪ್ಪತ್ತೈದಕ್ಷರ ಸಂಯೋಗದ
ಮೂವತ್ತಾರಕ್ಷರವಾನಂದದ
ಆನಂದ ಸಾನಂದ ಶೂನ್ಯ ತನ್ನಯ ಅಂಗ
ಭಾನುವಿನ ಪ್ರಭೆಯಪ್ಪ
ಹೇಮ ಕಲಶಕ್ಕೆಲಸಂದಿದ ಮೇಲೆ
ಆಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನ./550
ಐದಾರು ಏಳೆಂಟೆಂದೆಂಬ ಬಲೆಯಲ್ಲಿ ಸಿಲಿಕಿ
ಎಯ್ದೆಗಾರಾಗುತ್ತಲಿದ್ದೇನೆ.
ಮೀರಲಾರೆನು ಕರ್ಮಂಗಳನು
ಹಾರು ಮಾಡಿಹವು ಎನ್ನ ಬೇರೆ ಮತ್ತೊಂದು ಉಳ್ಳಡೆ ತೋರಾ.
ಸಾರುವ ಶ್ರುಗಳಿಗಿಂದತ್ತಲಾದ ಮಹಾಘನ ನೀನು ನೀರ
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಂದೆ./551
ಐದು ಪುರದ ಪಟ್ಟಣದ ಪಾದಘಾತದ ಆ ಅಯ್ಯಾ
ಹಾವಸಿ ಕುಂದದಲ್ಲಾ! ಬಾವಿಯ ಹಾವಸಿ ಕುಂದದಲ್ಲಾ.
ಬಾವಿಯ ಕಟ್ಟಿದ ಕಲ್ಲೆಲ್ಲಾ ಬರೆಯ ಹಾವಸೆ ನೋಡಾ ಅಯ್ಯಾ.
ಹಾವಸೆ ಕುಂದದಲ್ಲಾ!
ಶಿಖರದ ಮೇಲಣ ಒರತೆ ಕುಂದದೇನು ಕಾರಣ
ಕಪಿಲಸಿದ್ಧಮಲ್ಲಿನಾಥಯ್ಯನೊ ಅಯಾ/552
ಐದು ಬ್ರಹ್ಮದಲ್ಲಿ ಅಯ್ಯಾ, ನೀನು ಅತಿಶಯ ಜ್ಯೋತಿರ್ಮಯನು.
ಆನಂದಸ್ಥಾನದಲ್ಲಿ ಅಯ್ಯಾ, ನೀನು ಅತಿಶಯ ನಿತ್ಯಮಯನು.
ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು.
ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯನು.
ಗುರುವಿನ ಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ
ಶಿವನೇ,
ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ./553
ಐದೆ ಬಿನ್ನಾಣಿಕೆ ಬಿನ್ನಾಣಿಯ ಬಸುರಲ್ಲಿ ಹುಟ್ಟಿದವಳು
ಬಾಯಲ್ಲಿ ಬಳೆದೊಟ್ಟವಳು; ಬಾಯಲ್ಲಿ ತಲೆಯಾದವಳು;
ತಲೆಯೊಳಗೆ ಮೊಲೆಯಾದವಳು; ಮೊಲೆಯೊಳಗೆ
ನಾಭಿಯಾದವಳು;
ನಾಭಿಯೊಳಗೆ ಬಸುರಾದವಳು; ಬಸುರೊಳಗೆ ಬೆನ್ನಾದವಳು;
ಬೆನ್ನೊಳಗೆ ಕಾಲಾದವಳು;
ಗಂಡಂಗೆ ಕೈಯೆಂದು ಬಾಯಲಿ ಹಿಡಿದು ಹರಿದವಳು
ಕಪಿಲಸಿದ್ಧಮ್ಲನಾಥನ ಬಾಯಲ್ಲಿ ಭೋಗಿಯಾದವಳು.
ಇಂತಪ್ಪ ವಿದ್ಯದ ಬೇಟದ ಮಾತಿನ ಕೊಂಬ ಹೇಳಿದಡೆ, ಅಲ್ಲಿಗೆ
ಬಂದಡೆ
ತಾ ಕಂಡಯ್ಯಾ, ಐದೆ ಬಿನ್ನಾಣಿಕೆ!/554
ಐನಾಯೆಂಬ ಅಕ್ಷರದ ಭೇದವನರಿತಡೆ
ಅಪ್ಪುದರಿದೊಂದೂ ಇಲ್ಲ.
ಸೀಮೆಯ ಮೀರಿದ ಸಂಬಂಧ
ಸಂಬಂಧವ ಮೀರಿದ ಸೀಮೆ, ಅನುಮತದ ಮೀರಿದ ಆಧಿಕ್ಯ
ಅಕ್ಷರವೆರಡರ ಅಧಿಕಾರ
ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗ./555
ಐವರ ಎನ್ನ ದುಃಖ,
ನಿನ್ನ ಅಡಿಮಸ್ತಕದಲೆ ಇದ್ದಲ್ಲಿ
ಹುಟ್ಟು ಹೊಂದಿಲ್ಲದೆ ಹೋಗು.
ಅಯ್ಯ, ನಿನ್ನ ದೆಸೆಗÙರಸುತ್ತದ್ದೇನೆ
ಕವಿಲೆಯ ಕಂದನಂತೆ.
ನಾನಿದ್ದೇನೆಂದು ಬಾರಾ ಕಪಿಲಸಿದ್ಧಮಲ್ಲಿಕಾರ್ಜುನ/556
ಐವರ ಸಂಗಡ ಉದಯದಲ್ಲಿ ಹೊರವಂಟಿರಾದಡೆ, ಕೇಳಿರಣ್ಣಾ,
ಮಧ್ಯಾಹ್ನಕ್ಕೆ ಬಂದಿರಾದಡೆ,
ಕಳೆಯಳಿದು ಕಳೆಯ ತಪ್ಪದೆ ನಿಂದಿರಾದಡೆ,
ಬಟ್ಟೆ ಸರಿಸ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿಗೆ ಹೋಯಿತ್ತು./557
ಒಂದ ತೋರಿದಡದರ ಹಿಂದು ಮುಂದರಿದನೈ
ಸಂದುಗೆಟ್ಟಾನಂದ ಸಕಲನಿಷ್ಕಲದಲ್ಲಿ.
ಮುಂದಿಪ್ಪ ಬ್ರಹ್ಮಾಂಡದಂತರವನು ಅರಿದಾತ
ಆನಂದಮಯ ಶಿಷ್ಯನೈ ಕಪಿಲಸಿದ್ಧಮಲ್ಲಿಕಾರ್ಜುನ./558
ಒಂದನೆಯ ಬೀಜ ಬಿತ್ತಿ ಬೆಳೆಯದಲೆ ಬೆಳೆಯಿತ್ತು.
ಎರಡನೆಯದು ಬೀಜ ಸೃಷ್ಟು ್ಯನ್ಮುಖವಾಯಿತ್ತು.್ವ
ಮೂರನೆಯ ಬೀಜ ಅಲ್ಲಲ್ಲಿ ಜನಿಸಿತ್ತು.
ನಾಲ್ಕನೆಯ ಬೀಜ ಮತ್ರ್ಯದಲ್ಲಿ ಜನಿಸಿ ಅಂಕುರಿಸಿತ್ತು.
ಐದನೆಯ ಬೀಜ ಇದ್ದು ಇದ್ದು ಅಂಕುರಿಸದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./559
ಒಂದರಲ್ಲಿ ಓಂಕಾರ ಭವಿಸಿತ್ತು.
ಎರಡರಲ್ಲಿ ವ್ಯಾಪ್ತಿ ಭವಿಸಿತ್ತು.
ಮೂರರಲ್ಲಿ ಮುಕ್ತ್ಯಂಗನೆಯ ಸಂಗ ಸಮನಿಸಿತ್ತು.
ನಾಲ್ಕರಲ್ಲಿ ಆ ಎಂಬ ಅಕ್ಷರದಂತುವನರಿದೆ.
ಅಯ್ದರಲ್ಲಿ ಆ ಬ್ರಹ್ಮತಾತ್ಪರ್ಯಶುದ್ಧವ ನಿರೀಕ್ಷಿಸಿದೆ.
ಆರರಲ್ಲಿ ಅವ್ಯಯ ಅನಿಮಿಷಸ್ಥಾನವ ಕಂಡೆ.
ಮೀರಿದೆ ಮೂವತ್ತಾರ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ `ತತ್ವಮಸಿ’
ಸಂಗಮದಲ್ಲಿ ಸಂಯೋಗಿಯಾದೆ./560
ಒಂದಾಕಳು ಒಂಬತ್ತೂರ ಸೋದು ಸವಿಯಹೋದಡೆ,
ಕೈವಲ್ಯ ಸೂರೆಯೆಲ್ಲಿಹುದಯ್ಯಾ?
ಒಂಬತ್ತು ಆಕಳು ಒಬ್ಬ ಸೋದ ಸವಿಗಾರಂಗೆ ಬೇಹುದೇನಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ?/561
ಒಂದಾದವಂಗೆ ಬಂದ ಸುಖದುಃಖಂಗಳ ಭಂಗವೇನಯ್ಯಾ?
ಒಂದಾದವಂಗೆ ಇಂದುಧರನೊಲವೇನಯ್ಯಾ?
ಒಂದಾದವಂಗೆ ಕನಕಲೋಷ್ಠವೆಂಬುದೇನಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./562
ಒಂದಿಲ್ಲದಡೆ ಪರ್ವತ ಸಂಧಿಯದೇಕಯ್ಯಾ ಯತಿಗೆ?
ಅಂದಾಶ್ರಯಿಸಿದ ಮಯೂರ ಚಂದವಾಯಿತ್ತೇನಯ್ಯಾ?
ಇವೆಲ್ಲ ಬರಿಯ ಭ್ರಮೆ!
ಸಂದಳಿದು ಇಂದುಧರ ತಾನಾಗಬಲ್ಲಡೆ,
ಗಿರಿ ಗ್ರಾಮ ವನವಾಸದ ಗೊಂದಿ ಏಕಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./563
ಒಂದು ಕೈಯಾದುದು ಗಂಡು.
ಅಂದು ಲಗ್ನವಾಗಬೇಕೆಂದು ಬಂದನಯ್ಯಾ ಲಿಂಗವು.
ಆ ಲಿಂಗ ರಮಣನಾಗಬೇಕೆಂದು ಹೋದಡೆ
ನೆರೆದು ಸುಮ್ಮನಾದ ನೋಡಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ./564
ಒಂದು ಕೋಳಿ ಕೂಗುತ್ತದೆ ಇರುಳು ಹಗಲೆನ್ನದೆ;
ಅದನರಿಯರಲ್ಲಾ ಮತ್ರ್ಯದ ಗಣಂಗಳು
ಅರಿದಡೆ ಭವಬಂಧವಿಲ್ಲ, ಮರೆದಡೆ ಜನನ ಮರಣಕ್ಕಳವಿಲ್ಲ!
ಕಪಿಲಸಿದ್ಧಮಲ್ಲಿಕಾರ್ಜುನ./565
ಒಂದು ಜೋಳಿಗೆಯೊಳಗೆರಡು ಗೋವುಗಳಾಡುತೈದಾವೆ ನೋಡಾ
ಒಂದು ಗೋವದು ಬಹು ಮೋಹನದು;
ಒಂದು ಗೋವದು ಬಹು ಕ್ರೂರ ಸ್ವಭಾವದು;
ಒಂದು ಗೋವಿನ ಸಾಧನೆಯದು ಕೀಳ ಭವಕ್ಕೆ ಲೇಸು;
ಒಂಜು ಗೋವಿನ ಸಾಧನೆಯದು ಕಪಿಲಸಿದ್ಧಮಲ್ಲಿಕಾರ್ಜುನನ
ಮಂದಿರದ ಸಾಧನೆ ಲೇಸು ನೋಡಾ, ಕೇದಾರ ಗುರುದೇವಾ/566
ಒಂದು ಮಣಿಪರೀಕ್ಷೆಗೆ ಮೂವತ್ತಾರು ಮಣಿ ನೋಡಿದೆನಯ್ಯಾ.
ಮೂವತ್ತಾರು ಮಣಿ ಕೂಡಿ ಒಂದು ಮಣಿ ಪರೀಕ್ಷಿಸಿದಡೆ,
ಮೂವತ್ತಾರು ಮಣಿ ಇಲ್ಲ ನೋಡಯ್ಯಾ.
ಪರೀಕ್ಷೆಯಾಗದಿರೆ, ಆ ಮಣಿಗಳು
ಮಣಿಮಣಿಗೆ ಸೇರ್ಪಡೆಯಾದವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./567
ಒಂದು ಮುಳ್ಳು ಮೂರು ಲೋಕದ ಜನರಿಗೆ ನಟ್ಟಿತ್ತು.
ಆ ನಟ್ಟ ಮುಳ್ಳು ಮುರಿಯಬೇಕೆಂದಾರರಿಯರು.
ಆ ಮುಳ್ಳು ಮುರಿದವ ಮೂಲೋಕದರಸು
ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ,
ಹಾವಿನಹಾಳ ಕಲ್ಲಿನಾಥಾ./568
ಒಂದು ಮೂಲಸ್ತಂಭವಿಡಿದ ದೇವಾಲಯದಲ್ಲಿ
ಚಂದಚಂದದ ಬಾಗಿಲು ಮೂವತ್ತಾರು.
ಒಂದೊಂದು ಎಂಟೆಂಟೆಂಬ ಘನಕ್ಕೆ ಘನ ಸಂತಸ ಸುಖವಾಯಿತ್ತಯ್ಯಾ.
ಇಂದ್ರಿಯಾರ್ಪಣ ಸುಖಗೋಷ್ಠಿ ಸಾಧ್ಯವಾಯಿತ್ತಯ್ಯಾ.
ನಿಮ್ಮ ದಯದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ./569
ಒಂದೂ ಅಲ್ಲದ ನೆಲನ ಸುರಿವುದ ಒಲೆಯ ಸುರಿವುದ ಕೇಳಿರಣ್ಣಾ.
ಒರಟಂಗೆ ಶಿಕ್ಷೆ ದೀಕ್ಷೆಯ ಮಾಡುವುದ ಸುಡುವುದಯ್ಯಾ.
ಒಂದೂ ಅಲ್ಲದವಂಗೆ ಕೊಟ್ಟು ದೀಕ್ಷೆಯ
ಸುಟ್ಟ ಫಲವೆಂದ ಕಪಿಲಸಿದ್ಧಮಲ್ಲಿನಾಥದೇವರ ದೇವ./570
ಒಂದೆ ವಸ್ತು ಅವಸ್ಥಾತ್ರಯ ಕಿಂಚಿದಜ್ಞತ್ವ ಹೊಂ
ಜೀವನೆನಿಸಿತ್ತಯ್ಯಾ,
ಆ ಜೀವ ಕತರ್ೃತ್ವಭೋಕ್ತೃತ್ವಕ್ಕೆ ಒಳಗಾಗಿ
`ದೇಹ ನಾನು’ ಎಂದಿತ್ತಯ್ಯಾ.
`ದೇಹ ನಾನು’ ಎಂಬುವ ವಾಸನೆಯೊಳಗಾಗಿ,
ಕಾಲತ್ರಯಕ್ಕೊಳಗಾಗಿ, ಅಸ್ವತಂತ್ರನಾಗಿ ನೆಲಸಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./571
ಒಂದೆ ವಸ್ತು ಭೇದವಾಗಿ ಕಾಡಿತ್ತಯ್ಯಾ:
ಎನ್ನ ದೇಹ ವಸ್ತುವೆಂದಡೆ, ಹಲವು ರೂಪಾಗಿ ತೋರಿತ್ತು,
ಕಾರಣ ವಸ್ತುವೆಂದಡೆ, ಸ್ಥೂಲಸೂಕ್ಷ್ಮ ್ಕಳಿಯದೆ ಹೋಯಿತ್ತು,
ಕಾರಣಾತೀತವೆಂದಡೆ, ಸಾಕ್ಷಿಯಾಗಿ ಕ್ರಿಯಂಗಳ ಮಾಡಿಸಿತ್ತು.
ಸಾಕ್ಷಿಯಾಗಿ ನಿಂದರಿವೆ ವಸ್ತುವೆಂದಡೆ, ಚೇತನವಾಗಿ ನಿಂದಿತ್ತು.
ಇದರಿರವ ಬಲ್ಲಾತನೆ ಭಕ್ತ, ನೋಡಿ ಬಯಲಾದಾತನೆ ಜಂಗಮ,
ಬಯಲಾಗಿ ರೂಪಕ್ಕೆ ಬಂದಾತನೆ ಪ್ರಾಣಲಿಂಗಿ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./572
ಒಂದೇ ವಸ್ತು, ತನ್ನ ವಿಚಿತ್ರಮಹಿಮೆಯ ಕೇಳುವಲ್ಲಿ ಕರ್ಣವಾಗಿ,
ಸ್ಪರ್ಶಿಸುವಲ್ಲಿ ತ್ವಕ್ಕಾಗಿ, ನೋಡುವಲ್ಲಿ ನೇತ್ರವಾಗಿ,
ರುಚಿಸುವಲ್ಲಿ ರಸನೆಯಾಗಿ, ಪರಿಮ[ಳವಘ್ರಾಣಿ]ಸುವಲ್ಲಿ ಘ್ರಾಣವಾಗಿ
ನಿಂದೆ ನೀ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./573
ಒಂದೊಂದು ಪರಿಯ ಪ್ರಕೃತಿಯ ಬೊಂಬೆಗಳಾಡಕೆ
ಕಂಡೂ ಕಾಣದಂತೆ ಸೀಯ್ಯರವರು.
ಗಂಡುಗ ಕಾಮನನು ಭಂಡುಮಾಡಿಯೆ ತಗುಳದ
ಗಂಡುಗ ಶರಣರಾಳಯ್ಯಾ ನಾನು.
ಕಾಮಹರ ನಿಸ್ಸೀಮ ಕಪಿಲಸಿದ್ಧಮಲ್ಲೇಶಾ
ಶರಣು ಶರಣೆಂಬೆನಯ್ಯಾ ನಿಮ್ಮವರ ಶ್ರೀಚರಣಕ್ಕೆ/574
ಒಂದೊಂದು ಪರಿಯ ಬೊಂಬೆಗಳು ಬಂದು
ಬಂದಾಡಲ್ಕೆ ಕಂಡು ಕಂಡು ನೊಂದೆನಯ್ಯಾ.
ಅದರ ದಂದ ಹೊದ್ದಿಹಿದೆಂದು,
ಒಬ್ಬಳು ಹೆಂಗೂಸಿಗೆ ಗಂಡರು ನಾಲ್ವರು.
ಆಕೆ ಗಭರ್ಿಣಿಯಾಗದ ಮುನ್ನವೆ ಪ್ರಸೂತೆಯಾದಳು ನೋಡಾ.
ಗಂಭೀರಸ್ಥಳಕ್ಕೆ ನೀವು ಹೋದಿರಾದಡೆ,
ಬಂಜೆಯ ಮಕ್ಕಳು ಮೂವರೈದಾರೆ.
ಆರು ಗೃಹಂಗಳಂ ಕಟ್ಟಿಕೊಂಡು
ಮೂವತ್ತಾರನೆಯ ಮಂಟಪದಲ್ಲಿ
ಪರಮಸೀಮೆಯಂ ಮೀರಿದ
ಅವರ ಹಿಂದು ಮುಂದರಿತು
ಅವು ಪಡುವ ನಿಗ್ರಹಂಗಳಂ ಕಂಡು,
ಈ ಮಂದಮತಿಗಯಪ್ಪ ಬೊಂಬೆಗಳ ಹಿಂದು ಮುಂದ ನಾಶವಂ
ಮಾಡಿ,
ತಂದೆ ನಿಮ್ಮ ಅಂದವ ತೋರಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನಾ./575
ಒಂದೊಂದು ಮಠದಲ್ಲಿ
ತುಂಬಿ ಒಂಬತ್ತರಾಳಾಪ
ಸಂಭ್ರಮ ಮೊರೆವುತದೆ ಅಯ್ಯಾ.
ಆನತದ ಮೀರಿಪ್ಪ
ಮೇಣು ಆದಿಯ ಆಧಾರದಿಂದತ್ತ
ತುಂಬಿದಾ ಕೊಡದಲಿ ಒಂದು ಬಿಂದು ಭವಿಸಲು
ಸಂದುದಖಿಳ ಬ್ರಹ್ಮಾಂಡವು.
ಎನ್ನ ತಂದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ನಿಮ್ಮ ಭಕ್ತಿಯಾದಂದ ವಾರುಧಿಯ ಪರಿಯಾಯ. /576
ಒಂದೊಂದು ವೇಷ ದುರ್ವೆಷದಲ್ಲಿ ಬಂದುದ
ಮಾಡಿದ ಮೇಲೆ ಕಂಡ! ಓಓ! ಅಯ್ಯಾ.
ಪೂರ್ವಾಚಾರಿಯ ಮರೆಯರಾ, ಹಾ! ಹಾ! ಅಯ್ಯಾ.
ಅಲ್ಲಿ ಭಕುತಿ ವಿಕೃತಿಗಳ ಮಾಡುವರೆ?
ಕಪಿಲಸಿದ್ಧಮಲ್ಲೇಶ್ವರನನು ಕಂಡಾ!/577
ಒಡಗೂಡಿದ ಒಚ್ಚತನವ ಬಿಡುಮನರು ಬಲ್ಲರೆ,
ಮೃಡ ನಿಮ್ಮ ಶರಣರಲ್ಲದೆ?
ಕಡಲೊಳಗಣ ಮುತ್ತಿಪ್ಪ ಕಡು ಪೂತದ ಭೇದವನು
ಜಡಜೀವಿಗಳು ಬಲ್ಲರೆ, ಮೃಡ ನಿಮ್ಮ ಶರಣರಲ್ಲದೆ?
ಕಪಿಲಸಿದ್ಧಮಲ್ಲಿಕಾರ್ಜುನ./578
ಒಡಲು ಪ್ರಾಣವನ್ನು ಇಕ್ಕಿ ಒಡಗೂಡಿದ
ಶರಣರ ಒಡಗೂಡಿರಿಸಾ ಎನ್ನನು.
ನುಡಿಯ ಬ್ರಹ್ಮಾಕ್ಕಾನಾರೆನು ಅಯ್ಯಾ ಎನ್ನ.
ಅಡಿಗಡಿಗೆ ಎನ್ನ ಜರಿಯದೆ.
ಎಲೆ ಮೃಡನೆ, ಶೂನ್ಯ ತಾನಾದ ಕರುಣನಾಗು
ಕಪಿಲಸಿದ್ಧಮಲ್ಲಿನಾಥಯ್ಯ./579
ಒಡೆಯರುಳ್ಳ ತೊತ್ತಾನು; ತಾಯುಳ್ಳ ಶಿಶುವಾನು;
ಸ್ವತಂತ್ರವೇಕಯ್ಯಾ, ನಿಮ್ಮವರ ನಡುವೆ ಎನಗೆ?
ನಿಮ್ಮವರು ಎನ್ನನೊಲ್ಲದಿದ್ದ ದುಃಖವನು ಮರೆವೆ ನಾನು;
ನಿಮ್ಮವರಾಜ್ಙೆಯ ಮೀರಿದೆನಾಯಿತ್ತಾದಡೆ ನಿಮ್ಮಾಣೆಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./580
ಒಣಗಿದ ಮರವದು ಭೂಮಿಯಲ್ಲೇ ಲೀನ ನೋಡಾ,
ಒಣಗದ ಮರವದು ಭೂಮಿಯಲ್ಲೇ ಲೀನ ನೋಡಾ,
ತಿಳಿದ ಯೋಗಿಯ ಲಯವಿಲ್ಲೆ!
ಸ್ವರ್ಗಕ್ಕೆ ಹೋದೆಹೆನೆಂಬುದು ಗೊಡ್ಡು-ಹುಸಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./581
ಒಪ್ಪಿಪ್ಪ ಭೇದವನು, ಅಪ್ಪು ರೂಪಾದುದನು,
ತಪ್ಪದೆ ತ್ವಮಸಿಯೆನಿಸುವ ಭೇದವ,
ಗುರುವಿನ ಒಪ್ಪದ ಕಂಡೆ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನ./582
ಒಪ್ಪು ಮೂರಾರರಲಿ.
ಅಪ್ಪು ತಾನೆಂಟರಲಿ.
ತಪ್ಪದೆ ತುರಿಯದನುಮಿಷವನಾದಾ.
ತತ್ವ ತ್ವಮಸಿಯಪ್ಪ
ಕಪಿಲಸಿದ್ಧಮಲ್ಲಿಕಾರ್ಜುನ./583
ಒಪ್ಪುದನಲ್ಲದುದನೊಪ್ಪವ ಮಾಡುವಿರಯ್ಯಾ.
ನಿಮ್ಮೊಲವು ಚೆಲುವು ಕಂಡಯ್ಯಾ.
ನೀವೆಂತು ನೋಡಿದಡಂತಿಪ್ಪುದಲ್ಲದೆ,
ಅಪ್ಪುದಲ್ಲವೆಂಬವರಿಲ್ಲ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ./584
ಒಬ್ಬ ಮೂರ್ತಿ ಹಲವು ರೂಪಾಗಿ ಪೂಜಿಸಿಕೊಂಡ ನೋಡಾ, ಮನವೆ:
ಆಂಗವಾಗಿ ತುಪ್ಪದ ಅಭಿಷೇಕ ಕೈಕೊಂಡ;
ಅಮೃತಲಿಂಗವಾಗಿ ಅಮೃತದಭಿಷೇಕ ಕೈಕೊಂಡ;
ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಾಗಿ
ಸರ್ವಾಭಿಷೇಕ ಕೈಕೊಂಡ ನೋಡಾ ಮನವೆ./585
ಒಬ್ಬ ಸಿದ್ಧಸಾಧಕ ಚಿಗರಿಯ ಸಾಕುತಲಿದ್ದಾನೆ;
ಮತ್ತೊಬ್ಬ ಸಿದ್ಧಸಾಧಕ ಚಿಗರಿಯ ಮರಿಯ ಸಾಕುತಲಿದ್ದಾನೆ.
ಆ ಸಿದ್ಧಸಾಧಕನ ನುಂಗಲು ಬರುತ್ತವೆ ಚತುರ್ದಶ ವ್ಯಾಘ್ರಂಗಳು.
ನುಂಗಲು ಬಂದ ವ್ಯಾಘ್ರಂಗಳ ಚಿಗರಿಯು, ಚಿಗರಿಯ ಮರಿಯು
ಹೊಡೆದುದ ಕಂಡು ನಾನಂಜಿ ಸಾಗರವ ಹೊಕ್ಕೆ,
ಕಪಿಲಸಿದ್ಧಮಲ್ಲಿಕಾರ್ಜುನ./586
ಒಬ್ಬರ ಮನವ ನೋಯಿಸಿ,
ಒಬ್ಬರ ಮನವ ಘಾತವ ಮಾಡಿ,
ಗಂಗೆಯ ಮುಳುಗಿದಡೇನಾಗುವುದಯ್ಯಾ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತ್ತಯ್ಯಾ.
ಅದು ಕಾರಣ, ಮನವ ನೋಯಿಸಿದವನೆ, ಒಬ್ಬರ ಘಾತವ
ಮಾಡಿದವನೆ,
ಪರಮಪಾವನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./587
ಒಬ್ಬರಸು ಮೋಹಿತನಾಗಿ, ಅಂದೇ ಲಗ್ನವಾಗಿ,
ಅಂದೇ ರತಿಯಾಗಿ ಅಂದೇ ಪತಿ ಮೃತಿಯಾದ
ದರಿದ್ರ ನಾರಿಯ ತೆರನಾಯಿತ್ತೆನ್ನ ಮನ.
ಒಬ್ಬರಸು ಭೂಪ್ರದಕ್ಷಿಣೆ ಮಾಡಿ
ಭೂದೇವಿಯ ಮಗನ ಜನನ ವಾರ್ತೆಯನಂದೇ ಕೇಳಿ,
ಅಂದೇ ಮಗನ ಮೃತಿಯಾದರಸನ ಮನವಾದ ತೆರನಾಯಿತ್ತೆನ್ನ ಮನ.
ತನ್ನ ಕೊಟ್ಟು ತಾ ಹೋದಡೆ ಗುರುಸ್ಥಲ ಹೋಯಿತ್ತು.
ಲಿಂಗಸ್ಥಲ ಹೋಯಿತ್ತು, ಜಂಗಮಸ್ಥಲ ಮೊದಲೆ ಹೋಯಿತ್ತು.
ಇನ್ನಾರ ಪಾದವಿಡಿವೆ? ಕಪಿಲಸಿದ್ಧಮಲ್ಲಿಕಾರ್ಜುನ
ಚೆನ್ನಬಸವ ಮಹಾಪ್ರಭುವೆ./588
ಒಯದ ಮೂರ್ತಿ:ಒಸಿಕೊಟ್ಟ ನಮ್ಮ ಚೆನ್ನಬಸವ.
ಉಯುವ ಮೂರ್ತಿ:ಬಲೆಯ ಹಾಕಿಕೊಟ್ಟ ನಮ್ಮ ಚೆನ್ನಬಸವ.
ಕಯುಗ ಕಯಹ ಕಾಲಾಧರಧರ ಗುರುವೈಕ್ಯವನರಿದು,
ಇನ್ನರುಹಿನ ಮನೆಯಲ್ಲಿರಲಾರೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ./589
ಒಲಿದು ಮೋಕ್ಷವ ಕೊಡಲಿ,
ಕೊಡದೆ ಭವಕ್ಕೆ ಬೀಜವ ಮಾಡಲಿ,
ಬಿಡೆ, ಬಿಡೆನಯ್ಯಾ ನಿಮ್ಮ ಪೂಜೆಯ;
ಬಿಡೆ, ಬಿಡೆನಯ್ಯಾ ನಿಮ್ಮ ದಾಸೋಹವ.
ಅದರ ಮಾನಾಪಮಾನವು ನಿಮ್ಮದು ನೋಡಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಪರಮಪವಿತ್ರ ಇಷ್ಟಂಗವೆ./590
ಒಲಿವೆ ನಿನ್ನವರ ನೀನೆಂದಡೆ.
ಒಲಿವೆ ನಿನ್ನವರ ಮೂರ್ತಿಧ್ಯಾನದಲ್ಲಿ ಮೂರ್ಛೆವೋದರೆ.
ಒಲಿವೆ ವಿಭೂತಿ ರುದ್ರಾಕ್ಷಿ ಲಾಂಛನಧಾರಿಯ.
ಮಾನಸ ವಾಚಕ ಕಾಯಕದಲ್ಲಿ ನೀನೆಂದಡೆ ಒಲಿವೆ,
ಅಲದಿದ್ದಡೆ ವೈತಾಳಿಕರ ಸಂಯೋಗದ ಹಾಂಗೆ
ವೈಶಿಕವ ಬಳಸಿದಡೆ ಏಕೊಲಿವೆಯಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ./591
ಒಲುಮೆಯ ನಲ್ಲನನು
ಒಲಿಸಿ ನೆರೆದೆನೆಂಬ ಮರುಳತನವನೇನೆಂಬೆನಯ್ಯಾ.
ಒಲಿಸಲೇಕೆ? ತಾನೆ ಒಲಿದಾನು.
ನಿನ್ನಲ್ಲಿ ದೃಢಕೆ ಸಂಬಂಧ ಸಮನಿಸಲುಳ್ಳಡೆ
ತಾನೆ ಒದಾನು.
ನಿನ್ನಲ್ಲೀಕ್ಷಾತ್ರಯ ಸಂಪನ್ನತೆಯುಳ್ಳಡೆ
ತಾನೆ ಒದಾನು.
ಒಲಿದಾನು. ಒಸದೊಡೊಲಿವನೆ, ಕಪಿಲಸಿದ್ಧಮಲ್ಲಿಕಾರ್ಜುನ./592
ಒಳಗಣವರೈವರ ಎನ್ನ ಕಣ್ಣಿಂಗೆ ತಳವೆಳಗು ಮಾಡಯ್ಯಾ.
ಬೆಳವಿಗೆಯ ಬೀಜವ ಬಿತ್ತಿ,
ಆ ಫಲದ ರುಚಿಯನುಂಡುಕೊಳ್ಳಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ./593
ಒಳಗೆಯೆಂದಡೆ ಹೊರಗೆ ಹತ್ತುವೆ.
ಹೊರಗೆಯೆಂದಡೆ ಒಳಗೆ ಹತ್ತುವೆ.
ಅಯ್ಯಾ, ಹಾ! ಅಯ್ಯಾ; ಹಿಡಹಿಡಿಯೊಳಗೊಂಬತ್ತೆಡೆಯ
ತಿರುಗಿ ಹೋದೆಯಯ್ಯಾ.
ಹಾ! ಅಯ್ಯಾ, ಕಣ್ಣೀರ ಕಣ್ಣೊಳಗಡಗುವೆ
ಕಪಿಲಸಿದ್ಧಮಲ್ಲಿನಾಥಯ್ಯ./594
ಓಂ ಜಯ ಪರಮೇಶ್ವರಂ ಪರಮಾತ್ಮಂ
ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು.
ಒಬ್ರ್ಬಣಿಗೆಯಾಗಿ ಯೋಗಿಗಳ ಮನದ
ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಪ್ಪೆನಯ್ಯಾ,
ಬೇಗ ಬಾರ ಬಾರಯ್ಯಾ ಬಾರಾ.
ವಜ್ರಲೇಪದ ಬಿದ್ದಿದ್ದೇನೆ,
ಬೇಗ ಬಂದೆತ್ತಯ್ಯಾ ಎತ್ತಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ./595
ಓದ ಫಲ ಕೂಚಭಟ್ಟನಂತಾಗಬಾರದು.
ಓದ ಫಲ ಪರಾಶರನಂತಾಗಬಾರದು.
ಓದ ಫಲ ಮಯೂರನಂತಾಗಬಾರದು.
ಓದ ಫಲ ನಮ್ಮ ಹಾವಿನಹಾಳ ಕಲ್ಲಯ್ಯನ
ಮನೆ ಶ್ವಾನನಂತಾಗಬೇಕು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./596
ಓದಿದ ಫಲ ಶಿವಲೆಂಕ ಮಂಚಣ್ಣಂಗಾಯಿತ್ತು.
ಓದಿದ ಫಲ ಹಲಾಯುಧಂಗಾಯಿತ್ತು.
ಓದಿದ ಫಲ ಮಲಯರಾಜಂಗಾಯಿತ್ತು.
ಓದಿದ ಫಲ ಜನ್ಮವಳಿದವಂಗಾಯಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./597
ಓದುವುದದು ಸದ್ಗುಣಕ್ಕಲ್ಲದೆ ಕಿವಿಯನೂದುವುದಕ್ಕೇನೋ, ಅಯ್ಯಾ?
ಮಾಡುವ ಭಕ್ತಿ ಮೋಕ್ಷಕ್ಕಲ್ಲದೆ ಡಂಬಾಚಾರಕ್ಕೇನೋ, ಅಯ್ಯಾ?
ಆಡುವ ವೇಷ ದ್ರವ್ಯಕ್ಕಲ್ಲದೆ ಜನರಾಡಂಬರಕ್ಕೇನೋ, ಅಯ್ಯಾ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./598
ಓರಂತೆ ಮಾಡಯ್ಯಾ ನಿನ್ನವರೊಳಗೆ
ಮನ್ನಣೆಯಿಂದ ಮಚ್ಚಿಸಯ್ಯಾ
ನಿನ್ನವರ ಪಾದೋದಕವ ನಚ್ಚಿಸಯ್ಯಾ,
ನಿನ್ನವರ ಪ್ರಸಾದವ ನಚ್ಚಿಸಿ ಮಚ್ಚಿಸಿ
ಮನಕ್ಕೆ ನೀನೇ ಮಂಗಳವಾಗಿ
ಅಚ್ಚಿಗಬಡಿಸದಂತಿರಿಸಾ ಕಪಿಲಸಿದ್ಧಮಲ್ಲಿಕಾರ್ಜುನ./599
ಕಂಗಳ ಬೇಟೆಯನಾಡುವ ಕಾಮನ ಸಂಗಕ್ಕೆನ್ನ ಸಲಿಸದೆ,
ಮಂಗಳಮಯವಪ್ಪ ಉರುತರ ಭಕ್ತಿಯ ಸಂಗಕ್ಕೆನ್ನ ಸಲಿಸಯ್ಯಾ,
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ./600
ಕಂಗಳಂಗಳದಲಿಹ ಮಂಗಳಾಂಗನ ಬೆಳಗು
ಹಿಂಗದಂತಾದುದೈ ಸಕಲದೊಳಗೆ.
ಮಂಗಳಮಯನೆ ಕಪಿಲಸಿದ್ಧಮಲ್ಲೇಶ್ವರಾ
ಲಿಂಗ ನಿಮ್ಮಿಂದರಿದು ಧನ್ಯನಾದೆ./601
ಕಂಜಕರ್ಣಿಕೆ ನಿನ್ನ ಅಂಜನದ ನೇತ್ರವನು
ಕುಂಜರನ ಮಸ್ತಕದ ಸುಧೆಯ ಕೂಪ
ಭುಂಜಿಸುವ ಮಧುಕರನ ಕಂಜನಾಳದ ಸುದ್ದಿ
ಅಜಲೋಕದಾರೈದ ಸುದ್ದಿಯನು
ಓರಂತೆ ಅರಿದಾತ ತಾನು ನೀನಪ್ಪನೈ
ಕಪಿಲಸಿದ್ಧಮಲ್ಲಿಕಾರ್ಜುನ/602
ಕಂಜಕರ್ಣಿಕೆ ನಿನ್ನ ರಂಜನೆಯ ಪರಿ ಹೊಸತು,
ಭಂಜಿಸುತ್ತದೆ ಲೋಕವೀರೇಳನು
ಕಂಜನಾಳದ ಒಳಗೆ ಕುಂಜರನ ಗಮನದ
ರಂಜಿಸುತ್ತದೆ ಸ್ಥೂಲಸೂಕ್ಷ್ಮದಲ್ಲಿ.
ಆಯಂಜನಾನಾಯೆಂಬ ಅಕ್ಷರದ ಹತ್ತಾರ
ರಂಜಿಸಲ್ಕೆ ಕಪಿಲಸಿದ್ಧಮಲ್ಲಿಕಾರ್ಜುನ./603
ಕಂಜದೊಳಗಣ ಹಳ ರಂಜಿಸುವ ಭೇದಕ್ಕೆ
ಅಂಜುತೈದಾರೆ ಸಕಲ ಯೋಗಿಗಳೆಲ್ಲ ಧಾತುಗೆಟ್ಟು
ಹಳದಿರಿತಿ ಧಾತುವ ನುಂಗಿದಾತ ಶಿವಯೋಗಿ.
ಈ ಯೋಗಿಯತೀ ನಿಜ ನಿಷ್ಪ್ಕಯ
ಓತೊಮ್ಮೆ ಅರಿದಡೆ, ಆತನೆ ಶಿವಯೋಗಿ
ಕಪಿಲಸಿದ್ಧಮಲ್ಲಿಕಾರ್ಜುನ./604
ಕಂಠಪ್ರಮಾಣ ಜಲವ ಹೊಕ್ಕು
ಪದುಮಾಸನವ ಕೊಂಡು ಇದ್ದೆನವ್ವಾ.
ಮುಖ ಮುಗಿದು ಆತನ ಧ್ಯಾನಿಸುತ್ತಿರ್ದೆನವ್ವಾ.
ಆತ ಬಂದು ಮುಟ್ಟಲೊಡನೆ ಮುಖವರಳ್ದು ಹಿಡಿವೆನು,
ಕಪಿಲಸಿದ್ಧಮಲ್ಲಿಕಾರ್ಜುನನ./605
ಕಂಡ ಕನಸು ದಿಟವಾಗಿ ಕಂಡೆನೆಂಬೆ
ಕಂಡೆನೆಂಬುದು ಬೆನ್ನ ಬಿಡದು ನೋಡಾ.
ಕಂಡುದ ಕಾಣೆನೆಂಬುದ ಎರಡನೂ ಅರಿಯದೆ
ತವಕ ತಲ್ಲಣಕ್ಕೆ ಎಡೆಯಾದೆನು.
ತವಕದ ಕೂಟ ನಿಮ್ಮಲ್ಲಿ ತದುಗತವಾದೆನು
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಕರುಣವೆನಗೆ ಸಾಧ್ಯವಾಯಿತ್ತು./606
ಕಂಡಲ್ಲಿ ಕರೆಯೆ ಮಾಯ, ನಿಂದಲ್ಲಿ ನಿರಾಮಯ.
ಇವಗೆ ಕೂತು ವಿಕಳಾವಸ್ಥೆಗೊಂಡೆನವ್ವಾ.
ಮತ್ತೆ ಮುಂದೆ ನಿಂದವರ ಸಾರೆಂಬೆನು, ಹಿಂದುಗಳೆವೆನು.
ಮುಂದಕ್ಕೆ ಸಾರಿದವರ ನೋಡುತ್ತಿದ್ದೆನವ್ವಾ.
ಕಂಡವರ ಸಾರೆಂಬೆ; ನಿಂದ ಬಯಲ ನೆರೆವೆ.
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನವ್ವಾ./607
ಕಂಡು ಕಂಟಣಿಸಿ ಓಸರಿಸಪ್ಪಳು ನೋಡಾ,
ಆಕೆಯಂತಿರಬೇಡವೆ ಹಿರಿಯರು?
ಆ ಮನ ವಿಚ್ಛಂದವಾಗದೊಂದೆಯಂದದಲಿಪ್ಪ
ನಿಮ್ಮದೊಂದು ಸಮತಾಗುಣ
ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ./608
ಕಂಡೆನಯ್ಯಾ, ನೀನೊಡ್ಡಿದೊಡ್ಡಣೆಯ,
ಕಿರಿಕಿರಿದಾಗಿ ತರಿದಡೆ ಹಿರಿಹಿರಿದಾಗಿ ನೆನೆವೆನು;
ಕಾಯವ ಬೇಡಿದಡೀವೆನು.
ಪ್ರಾಣ ನಿಮ್ಮದಾಗಿ, ಉಳಿದ ಹಂಗು ನಮಗಿಲ್ಲ,
ಕಪಿಲಸಿದ್ಧಮಲ್ಲಿನಾಥಯ್ಯಾ./609
ಕಂಡೆನು ಎಂದೆಂಬೆ, ಉಂಡುಂಡು ಕಾಬಡೆ
ಖಂಡಜ್ಞಾನಿಗಳಾದ ಪಾಪವೇನು?
ಮಂಡಳದ ಸ್ದುಯನು ಕಂಡ ಶಿಶುಲೋಕಕ್ಕೆ
ಉಂಡುತಿಲ್ಲದೆ ಎಯ್ದಿತಾನಂದದ
ಖಂಡೇಂದುಶೇಖರನ ಕಂಡಿದ್ದ ಕೂಟವನು
ಕಂಡವರು ಹೇಳಿರೈ ಕಪಿಲಸಿದ್ಧಮಲ್ಲೇಶ್ವರನ./610
ಕಂಬುವಿನ ಭೇದದ ಅಂಬಿತ್ತು ಅಜಕೋಟಿ,
ಕಂಬುವಿಂ ಭವಿಸಿತ್ತು ಜಗವೆಲ್ಲವು.
ಆ ಕಂಬುಯೋಗಕ್ಕೆ ತಾನಿಂಬಪ್ಪ ತಾತ್ಪರ್ಯ
ಶಂಭು ನೀನಹೆ ಶುದ್ಧ ನೆಲೆ ತಾನದು.
ಸಂಭ್ರಮದ ಬಿಂಬದಿಂದೊಂಬತ್ತು ನಾಳದ
ತುಂಬಿಯಾಳಾಪದಾ ಮಧು ಪುಷ್ಪದ
ಸಂಭ್ರಮದ ಖೇಚರದ ಆನಂದರಚನೆಯ
ಶಂಭು ನೀನಾದೆ, ಕಪಿಲಸಿದ್ಧಮಲ್ಲೇಶ್ವರಾ./611
ಕಟೆದ ಕಲ್ಲ ಲಿಂಗವ ಮಾಡಿಕೊಟ್ಟಾತ ಗುರುವೆಂಬರು;
ಆ ಲಿಂಗವ ಧರಿಸಿದಾತ ಶಿಷ್ಯನೆಂಬರು.
ಕೊಟ್ಟ ಗುರು ದೇಶಪಾಲಾದ; ಕೊಟ್ಟ ಕಲ್ಲು ಲಿಂಗವೊ?
ಕಲ್ಲಿನ ಕಲ್ಲು ಕಲ್ಲೆಂಬಡೆ, ಲಿಂಗವ ಮಾಡಿ ಕೊಟ್ಟ;
ಲಿಂಗವೆಂದಡೆ ಪೂಜಾವಿರಹಿತವಾಯಿತ್ತು.
ಪೂಜೆಯಿಲ್ಲದ ಲಿಂಗ ಪಾಷಾಣ.
ಹೋದ ಗುರುವಿನ ಲಿಂಗ ಪಾಷಾಣಭೇದಿ;
ಭೇದಿಸಿದಡೆ ಹುರುಳಿಲ್ಲ.
ನದಿಯ ದಾಟುವಲ್ಲಿ ಭೈತ್ರವ ಹಿಡಿದು,
ದಾಂಟಿದಂತ್ಯದಲಿ ಬಿಟ್ಟುಹೋದರು.
ಬಿಟ್ಟ ನಾವೆ ಮತ್ತೊಬ್ಬರಿಗೆ ಲೇಸು,
ಈ ಲಿಂಗ ಬರದು ಆರಿಗೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./612
ಕಟೆದ ಕಲ್ಲು ಲಿಂಗವೆಂದೆನಿಸಿತು; ಕಟೆಯದ ಕಲ್ಲು ಕಲ್ಲೆನಿಸಿತ್ತು.
ಪೂಜಿಸಿದ ಮಾನವ ಭಕ್ತನೆನಿಸಿದನು; ಪೂಜಿಸದ ಮಾನವ
ಮಾನವನೆನಿಸಿದನು.
ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು ;
ಮಾನವನಾದಡೇನು? ಭಕ್ತಿಗೆ ಕಾರಣಿಕನಾದನು.
ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./613
ಕಟ್ಟಿದ ಲಿಂಗವ ಬಿಟ್ಟು, ನಟ್ಟಿದ ಲಿಂಗವನಟ್ಟಿ,
ಮೊಟ್ಟೆ ಮೊಟ್ಟೆ ತಾವರೆ ಮೊದಲಾದ ಪುಷ್ಪವ
ಧರಿಸುವಾತನಿರವು
ಚಾಂಡಾಲನ ಇರವು ನೋಡಾ;
ಆತನ ಸಂಗ ಮಾಗರ ಸಂಗ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./614
ಕಡದ ಕಂಬದ ನಡುವೆ
ಮೃಡ ನಿನ್ನ ಒಡಲಾಗಿ ಕಂಬ ನೀರಾಯಿತಯ್ಯಾ.
ಅಯ್ಯಾ, ಸಾಕಲ್ಯವ ನಿಃಕರಿಸಿ
ಅನೇಕ ನಿರವಯವನೆಯ್ದಿ,
ಆಕಾರಕ ಸಿದ್ಧ ದೇವರ ದೇವನೆ ಕೇಳು
ಕಪಿಲಸಿದ್ಧಮಲ್ಲಿನಾಥಯ್ಯಾ./615
ಕಣ್ಣೊಂದರ್ಲ ಮುಕ್ಕಣ್ಣನ ಬಣ್ಣವಡಗಿಹುದು.
ಆ ಬಣ್ಣದ್ಲ ಚಿದ್ಬಣ್ಣ ಚಿತ್ರಗಳಾದವು.
ಆ ಚಿತ್ರಗಳಿರವ ಚೆನ್ನಬಸವಣ್ಣನೆ ಬಲ್ಲನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./616
ಕಣ್ಣೊಳಗೆ ಮೂರು ಬಣ್ಣದ ಚಿತ್ರದಲ್ಲಿ
ಚಿನ್ಮಯರೂಪು ಹೊಳೆಯುತ್ತಿದೆ ನೋಡಾ.
ಕಣ್ಣಾರ ನೋಡಿದಡೆ ಮುಕ್ಕಣ್ಣನ ರೂಪು ಅದೆ ನೋಡಾ,
ನೋಡದಿರೆ ಅವ ಹಾಳು ಮಣ್ಣು ನೋಡಾ,
ಮೂಲೋಕದೆರೆಯ ಕಪಿಲಸಿದ್ಧಮಲ್ಲಿಕಾರ್ಜುನನು./617
ಕಣ್ಬೇಟವೆಂಬ ಕಾನನದಲ್ಲಿ ಅರಸ್ಕ್ತುದ್ದೇನೆ.
ಭಕ್ತಿಯೆಂಬ ಹೊಮ್ಮಿಗವ ಸೋವುತ್ತಿದ್ದೇನೆ.
ಂಗತ್ರಯವೆಂಬ ಬಲೆಗಾಗಿ ಮಿಗ ಸಿಕ್ಕಿ ಬಲೆ ಹರಿದೊಂದಾದಡೆ,
ಎಯ್ದಿದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಪರಮ ಮುಕ್ತಿರಾಜ್ಯವನು./618
ಕತ್ತಲೆಯ ಕಾನನ ಇತ್ತರದ ಮಧ್ಯದ
ಸುತ್ತಿಪ್ಪುದದು ಅಖಿಲಲೋಕಕಾಗಿ.
ಬೇರು ನಾಶವು ಆಗಿ, ದೀಪ್ತಿ ಅತಿ ಪ್ರಜ್ವಲ್ಯ
ಮೂಲಾಧಾರಕ್ಕೆ ಮುನ್ನ ಬಸವಣ್ಣನು,
ಬಸವಣ್ಣನ ಕರುಣ ಸದಮಲಜ್ಞಾನಕ್ಕೆ
ದೆಸೆ ನಾನು ಆದೆನೈ ಕಪಿಲಸಿದ್ಧಮಲ್ಲಿಕಾರ್ಜುನ./619
ಕತ್ತಲೆಯೊಳಗಡಗಿದ ನೆಳಲಿನ ಬೀಜ
ಬಿತ್ತದ ಮುನ್ನ ಮಾಮರನಾಯಿತ್ತು.
ತನ್ನ ನೆಳಲೆಲ್ಲಾ ಬೆಳದಿಂಗಳು.
ನೋಡ ಹೋದವರ ಕಣ್ಣೆಲ್ಲಾ ಒಡೆದವು.
ಉಲುಹಿದ್ದೂ ಉಲುಹಿಲ್ಲ ; ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ಆ ಮರದ ಹೋಟೆಯೊಳಗಣ ಮಧುವಿನಂತಿದ್ದನು./620
ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು
ಸುಚಿತ್ತದಿಂದವೆ ಕಂಡೆ.
ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ
ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ.
ಆನಿಪ್ಪ ಲೋಕದಲ್ಲಿ ತಾನಿಪ್ಪ
ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ
ನಾನಿಪ್ಪ ಸಂಯೋಗ ಮೂÙರÙರ ಮೇಲಿಪ್ಪ
ಮುಕ್ತ್ಯಾಂಗನೆಯರ ಕೂಟ
ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ/621
ಕನಕ ಒಂದರಲ್ಲಿ ಕಡಗ ಕಂಠಿಯಾದಂತೆ,
ಶಕುನವೊಂದರಲ್ಲಿ ಶಕುನ ಬೇರಾದಂತೆ,
ಘನಕೆ ಘನವಾದ ಪರವಸ್ತುವಿನಲ್ಲಿ ಜನನವಾಯಿತ್ತು
ಮೂಲೋಕದ, ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ./622
ಕನಕದಗಿರಿಗೆ ಕಾಂತಿಯಿಟ್ಟಿತು ಪ್ರಭೆ
ವಿನಯದ ಅನುಭಾವಕ್ಕೆ ಚಿನ್ನದ ವರ್ಣವನೇಕೀಕರಿಸಲು
ಅನುವಾಯಿತ್ತು ನಾಲ್ಕೆಸಳಪೀಠ
ಆ ಪೀಠದಲ್ಲಿ ದಾಸ ನಿಂದು ಆಚಾರವಿಡಿದು ನಡೆಯಲು
ಭೂಮಿಯ ಕಳೆದುಕೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು.
ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ./623
ಕಪ್ಪಿನ ಬಣ್ಣದಾಕೆ ಇಪ್ಪಿರವನರಿಯರು,
ಅಬೆಯ ಕೈಯೊಳಗಾದರು,
ಕೋಟಿ ಹರಿವಿರಂಚಾದಿಗಳು.
ಗುರುವಾಜ್ಞೆಯಿಂದ ಅ
ಯ್ಯನಪ್ಪ ಅಕ್ಷರದ್ವಯವನರಿದಡೆ
ಆಬೆಯ ಕೈಗೆ ತಾವು ಹೊರಗಪ್ಪರು
ಕಪಿಲಸಿದ್ಧಮಲ್ಲಿಕಾರ್ಜುನನ ಕಾಬರು./624
ಕಬ್ಬುನ ಪರುಷವ ಮುಟ್ಟಿ
ಪರುಷವಾಗದೊಡಾ ಪರುಷಕ್ಕೆ ಕೊರತೆಯಲ್ಲವೆ?
ಅಯ್ಯಾ, ನಿಮ್ಮ ಪೂಜಿಸಿ ನೀವೆಯಾಗದೊಡೆ
ನಿಮ್ಮ ದೇವತ್ವಕ್ಕೆ ಹಾನಿಯಲ್ಲವೆ!
ಅಯ್ಯಾ ನಿಮ್ಮ ದೇವತ್ವಕ್ಕೆ ಹಾನಿಯಾಗದಂತೆ ಮಾಡಾ
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./625
ಕಮಲ ಸಿಂಹಾಸನದ ವಿಮಲಾತ್ಮನನು ಮಾಡಿ
ಸುಮನ ಗುರುಲಿಂಗ ಜಂಗಮವನೊಂದುಮಾಡಿ
ಪರಮ ಜ್ಞಾನೋದಯದ ಚೇತನದೊಳಿಟ್ಟ
ಶ್ರೀಗುರು ಚೆನ್ನಬಸವಣ್ಣ ಪರಂಜ್ಯೋತಿರ್ಮಯನಯ್ಯ
ಕಪಿಲಸಿದ್ಧಮಲ್ಲಿಕಾರ್ಜುನ./626
ಕರ ಕಂಗಳನು ಮನೆಯ ತೆರಹು ಮಾಡಿಯೆ
ಶ್ರೋತೃ ಕರದೊಳಗೆ ಶಿವಲಿಂಗ ಸ್ಥಾಪ್ಯಗೊಳಿಸಿ
ನೆನಹುಗೆಟ್ಟಾ ಸೀಮೆ ನಿಷ್ಕಳದ ಪದವುವನು
ಅರಿಹಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ/627
ಕರಂಗಳೆ ಮನೆಯಾಗಿ, ಕರಂಗಳೆ ಕರಂಗಳಾಗಿ,
ಅರ್ಪಿಸುವ ಭೇದವನಾರು ಬಲ್ಲರಯ್ಯಾ, ಚೆನ್ನಬಸವಣ್ಣನಲ್ಲದೆ?
ತನು ಪ್ರಾಣ ಇಷ್ಟಲಿಂಗ ಸಂಬಂಧಿಯಾಗಿ,
ಇಂದ್ರಿಯಂಗಳೈದು ಮುಖಂಗಳಾಗಿ,
ಅರ್ಪಿಸುವ ಭೇದವನಾರು ಬಲ್ಲರಯ್ಯಾ ಚೆನ್ನಬಸವಣ್ಣನಲ್ಲದೆ?
ಆನಂದಸ್ಥಾನದಲ್ಲಿ ಅನಿಮಿಷಾಕ್ಷರದ ಸಂಯೋಗ ಅರ್ಪಣದ
ಭೇದವ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಚೆನ್ನಬಸವಣ್ಣ ಬಲ್ಲ ;
ಮಿಕ್ಕಿನವರಿಗೆ ಸಾಮಾನ್ಯವೆಂಬೆನೆಂಬೆ !/628
ಕರಗಳಾನತವಾಗೆ ಮುಖಗಳು ಹಲವಾಗೆ
ತನುಪ್ರಾಣಯಿಷ್ಟಕೆ ತನ್ನ ರೂಪೆ
ಆನೀ ನೆನಹಿನ ಹಲವ ನುಂಗಿ ಬೆಳಗ ನೆಲೆಯ
ತೋರಬಲ್ಲಡೆ ಗುರು ಕಪಿಲಸಿದ್ಧಮಲ್ಲಿಕಾರ್ಜುನ/629
ಕರಡಿಗೆಯೊಳೊಬ್ಬ ಕುರುಡ ಮೂರುತಿ ತೋರುತ್ತಾನೆ.
ಒಡನೊಡನೆ ನಡೆದಡೆ ಮೈಯೆಲ್ಲಾ ಚಕ್ಷುವಾಗಿ ತೋರುತ್ತಾನೆ.
ನಡೆಯದಿರ್ದಡೆ ಕಪಿಲಸಿದ್ಧಮಲ್ಲಿಕಾರ್ಜುನನು ಕುರುಡ,
ಇವನೂ ಕುರುಡ ನೋಡಾ, ಕೇದಾರ ಗುರುದೇವಾ./630
ಕರಣ ಕಂದೆರವುದನು ಆರಯ್ಯ ಅರಿವರು?
ಕರಣೇಂದ್ರಿಯಂಗಳರತ ನಿತ್ಯರಲ್ಲದೆ.
ನೆನಹಿನ ಬ್ರಹ್ಮಾಂಡವೊಳಕೊಂಡ ಸೀಮೆಯನು
ತನು ಮಧ್ಯಕರದ ಕಂಡೆ.
ಪ್ರಸಾದ ತೆಂಗವ ಮರಳಿ ಸಕಲಕ್ಕಾನೆ ನಿಷ್ಕಲಕೆ ನಿತ್ಯನೈ
ಅಜಾತರೂಪ ಕಪಿಲಸಿದ್ಧಮಲ್ಲಿಕಾರ್ಜುನ./631
ಕರಣ ಕಾನನದೊಳಗಾನು ಹೊಲಬುಗೆಟ್ಟೆನಯ್ಯಾ;
ನೆನಹೆಂಬ ಮಠದೊಳಗೆ ನಿರ್ಮಳನಾದೆನಯ್ಯಾ;
ಘನತರ ಸಂಯೋಗದಲ್ಲಿ ನೀನು ನಾನಾದೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಸಂದು ಸವೆದು ಒಂದಾದೆ./632
ಕರಣಂಗಳ ಕಳೆದು ಇರವಿನ ಬ್ರಹ್ಮ ನಿಜದಲ್ಲಿ ನಿಂತ್ತಯ್ಯಾ.
ಆತ್ಮಸಂಗ ಸಂಯೋಗದ ಇರವು ನಿಮ್ಮಲ್ಲಿ ನಿಜವಾಯಿತ್ತಯ್ಯಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಚೆನ್ನಬಸವಣ್ಣನ ಕೃಪೆ ನಿಮ್ಮಿಂದ
ಸಾಧ್ಯವಾಯಿತ್ತಯ್ಯಾ ಪ್ರಭುವೆ./633
ಕರಣಂಗಳೆಲ್ಲವನು ಹದುಳದಿಂದವೆ ಬೆಳಗಿ
ಕರುಣದಿಂದಿರಿಸಿದನು ತೂಗಿ ತೂಗಿ.
ಕರಣಹರಣುಪಕರಣವಾಗಿಪ್ಪ ಗಿರ್ವಾಣ ಪದವ
ನರಿದಾತ ಶ್ರೀ ಗುರು ಕಪಿಲಸಿದ್ಧಮಲ್ಲಿಕಾರ್ಜುನ./634
ಕರಣಾದಿ ಗುಣಗಳನು ಕಳೆಯಲೀಯದೆ ಕಳೆದು,
ಹದುಳವಿರಿಸಿದ ಮನದ ಮಧ್ಯದಲ್ಲಿ.
ತನುತ್ರಯದ ಮಲತ್ರಯವ ಅಜಲೋಕದಲು ಸುಟ್ಟು,
ಹದುಳವಿರಿಸಿದ ಸಮತೆ ಸಂಗಮದ.
ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರನ
ನೆನಹ ತೋರುವ ಮುಕುರ ಸಮತೆ ರೂಪು./635
ಕರಣಾದಿಗಳೆಲ್ಲ ಪರಶಿವನೆಂದ ಬಳಿಕ,
ಆ ಕರಣಾದಿಗಳ `ಭೋಜನ ಕೊಳ್ಳು’ ಎನಬಾರದೆಂದು,
`ಪರಶಿವಪ್ರಸಾದ’ ಎಂಬ ನಾಮವಿಟ್ಟನಯ್ಯಾ ಶ್ರೀಗುರು.
ಆ ಕಾರಣ ಬಂದ ಪ್ರಸಾದವೆಲ್ಲ ಶಿವಪ್ರಸಾದವೆಂದು
ಭುಂಜಿಸಬೇಕಲ್ಲದೆ,
ಕಟು ಆಮ್ಲ ತಿಕ್ತವೆಂದು ಭೋಗಿಸಿದಡೆ,
ಭವ ತಪ್ಪದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./636
ಕರದ ಮಹಾತ್ಮೆಯನು ಹೊಗಳುವರೆ ಎನ್ನಳವೆ?
ಕರುಣಾಕರನೆ ಬಲ್ಲ ಗುರುರಾಯನು.
ಹಲವು ಬ್ರಹ್ಮಾಂಡವನು ಒಳಗಿಟ್ಟ ಘನವನು
ಧರಿಸಿಪ್ಪುದದು ಭಕ್ತಿಕರವು ನೋಡಾ.
ಆ ಶರಣರ ಕರವನು ಹೊಗಳುವವು ವೇದಂಗಳಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನ./637
ಕರದಲ್ಲಿ ಲಿಂಗವನು ಗುರು ಕುಡಲಿಕಾನಂದ
ತನುವಿನೊಳು ಭೇದಿಸುವ ಪರಿಯ ನೋಡಾ.
ಉರುತರವು ಕೈವಲ್ಯಪದ ದೀಕ್ಷತ್ರಯ
ಭವಿಸುವಾತನು ತಾನು ಪರಮಜ್ಞಾನಿ ಶಿಷ್ಯನು
ಕಪಿಲಸಿದ್ಧಮಲ್ಲಿಕಾರ್ಜುನ./638
ಕರದಲ್ಲಿ ಶಿವಲಿಂಗ
ಉದರದಲ್ಲಿ ಅಗ್ನಿ ಪರಿಯಂತೆ ಪ್ರಸಾದಲಿಂಗ ಭವಿಸಿ,
ತನುಮಲತ್ರಯವನು, ಘನಪಾಶವರ್ಗವನು,
ನೆನಹಿಂದ ಸುಟ್ಟುದದು ಪರಿಯಂತರವುಯೆಯ್ದಿ.
ಸಕಲವನು ತೋರುವಾ ಅಪ್ರಮಾಣ ಪ್ರಸಾದಲಿಂಗ
ಕಪಿಲಸಿದ್ಧಮಲ್ಲಿಕಾರ್ಜುನ./639
ಕರದಲ್ಲಿಯ ಅರುಹು ಕರಕರಿಸಿ ಬೆರಸಿದಂತಾದಡೆ,
ಕರಕಂಜದ ಪರವಸ್ತು ತಾನೆ ನೋಡಾ.
ಕರದಲ್ಲಿಯ ಅರುಹು ಕರದಂತಾಗಬಾರದಯ್ಯಾ.
`ಕರಾಭ್ಯಾಂ ರಹಿತಸ್ಯ ಕುತಃ ಕರ್ಮ ಕುತ ಆನಂದಃ|’
ಎಂಬುದು ಪ್ರಸಿದ್ಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ/640
ಕರಮನದಲ್ಲಿ ತನುವಾದೆ ಅಯ್ಯ,
ಮನದ ಮಧ್ಯಸ್ಥಾನ ನೀನು.
ತನು ಪ್ರಾಣ ಇಷ್ಟವಾದೆ.
ಮನದ ಮಂಗಳನೆ ಅವಧಾರು
ತನುಗುಣದೂರನೆ ನಮೋ, ಕಪಿಲಸಿದ್ಧಮಲ್ಲಿಕಾರ್ಜುನ/641
ಕರವೆ ಭಾಂಡವಾಗಿ ಜಿಹ್ವೆಯೆ ಕರವಾಗಿ,
ಇಂದ್ರಿಯಂಗಳೈ ಮುಖವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೋ?
ಆನಂದದಲ್ಲಿ ಸಾನಂದವನರ್ಪಿಸಿ ಸಾನಂದದಲ್ಲಿ ನಯವಾಗಿಪ್ಪ
ಪ್ರಸಾದಿಯ ಪರಿಯಿನ್ನೆಂತೊ?
ತನುತ್ರಯಂಗಳ ಮೀರಿ ಮನತ್ರಯಂಗಳ ದಾಂಟಿಪ್ಪ
ಪ್ರಸಾದಿಗೆ ಆವುದ ಸರಿಯೆಂಬೆ?
ಬಂದುದನತಿಗಳೆಯೆ, ಬಾರದುದ ಬಯಸೆ.
ತನುಮುಖವೆಲ್ಲ ಲಿಂಗಮುಖ, ಸ್ವಾದಿಸುವವೆಲ್ಲ ಲಿಂಗಾರ್ಪಿತ;
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ
ಲಿಂಗಾರ್ಪಿತವಲ್ಲದೆ ಅನರ್ಪಿತವ ನೋಡ;
ತಟ್ಟುವ ಮುಟ್ಟುವ ಭೇದಂಗಳೆಲ್ಲವು ಸರ್ವಾರ್ಪಿತ.
ಆತನುರುತರ ಸಮ್ಯಕ್ಜ್ಞಾನಿಯಾದ ಕಾರಣ ಪ್ರಸನ್ನತೆಯಾಯಿತ್ತು.
ಪ್ರಸನ್ನ ಪ್ರಸಾದತೆಯಲ್ಲಿ ನಿತ್ಯನಪ್ಪಾತ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ಉರುತರ ಮಹಾಜ್ಯೋತಿರ್ಮಯನು./642
ಕರಸ್ಥಲಕೆ ಲಿಂಗ ಬರೆ
ಕರಣೇಂದ್ರಿಯಂಗಳಾ ಕರಗಳೆ ಅಯ್ಯನಾ ಪರಿಯಾದವೈ.
ಪರಿಯ ಪರಿಯಾ ಒರೆದು ನೋಡುವ ಲೀಲೆ
ಪರೀಕ್ಷಿಸುವದೆಲ್ಲವದು ಶುದ್ಧಸಿದ್ಧ ಪ್ರಸಿದ್ಧ
ಪರಿಣಾಮವನರಿವಡೆಯು ತವಕಿಗಳಿಗದು ದೂರ.
ಗುರುಕರುಣವುಳ್ಳವರ ಹೊಲಬು ತಾನು
ಕರುಣಿ ಮಹಾದಾನಿ ಕಪಿಲಸಿದ್ಧಮಲ್ಲಿಕಾರ್ಜುನನ ಜ್ಞಾನ,
ಕರಣೇಂದ್ರಿಯವು ಶುದ್ಧ./643
ಕರಿಕೆಯ ಕಂಡು ಪಶುಗಳಾಶ್ರಯಿಸುವವು.
ಔತಣ ಕಂಡು ್ವಜರಾಶ್ರಯಿಸುವರು.
ಯುದ್ಧವ ಕಂಡು ಶೂರರಾಶ್ರಯಿಸುವರು.
ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು.
ಇವರೆಲ್ಲ ಮಾಯಾಮೂಕರಲ್ಲದೆ ಮಾಯಾರಹಿತರಲ್ಲಯ್ಯಾ.
ಕಂಡು ಕಂಡು ಕಣ್ದೆರೆದು ನೋಡದ
ಮಹಾಮಹಿಮ ಜಂಗಮನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./644
ಕರುಣ ಕಂಬನಿಯ ದೆಸೆದೆಸೆಗೆಟ್ಟ
ವಾರುಧಿಯೊಳಗೆ ಮುಸುಕಿ ಮುಸುಕಿ
ಮೋಹಿಸುತ್ತಿರ್ದೆಯಯ್ಯಾ.
ದೆಸೆಗೆಟ್ಟ ಪಶುವಾನಿದ್ದೆ
ಪಶು ಪಾಶಮೋಚನನು ನೀನಾದೆ.
ಈ ಹಸುಳೆಯ ತೆಗೆದು ನಿನ್ನ ವಶಕ್ಕೆ
ಇತ್ತ ಬಾಯೆಂದೆ,
ಕರುಣಿ ಕಪಿಲಸಿದ್ಧಮಲ್ಲಿಕಾರ್ಜುನ./645
ಕರುಣರಸ ಹರಿವಲ್ಲಿ
ಮಹಾಕಾರುಣ್ಯ ಸುಧಾಪ್ರವಾಹವಪ್ಪಲ್ಲಿ
ಆರಯ್ಯಾ ನಿನ್ನನರಿವವರು?
ಲೋಕಾಲೋಕಂಗಳಿಗೆ ಏಕೋದೇವ ನೀನು
ಅನಾದಿಮೂಲಕ್ಕೆ ಮೂಲಸ್ವಾಮಿ ನೀನೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./646
ಕರುಣಾಕರ, ಕರತಳಾಮಳಕ ಎಂದಪ್ಪುದಯ್ಯಾ?
ನಿನ್ನ ನೆನಹಿನ ಮಹಾಸಮುದ್ರದೊಳಗದ್ದಿ ಎಂದಾಳ್ವೆನಯ್ಯಾ?
ಬಂದುದು ಬಾರದೆಂಬ ಸಂದೇಹವನೆಂದು ಸವೆವೆನಯ್ಯಾ?
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಎಂದಯ್ಯಾ ಕರುಣ ಕಂದರೆವುದು?/647
ಕರುಣಾಕರನೆ ಎಂದು ಹೊಗಳುತೈದಾವೆ ಶ್ರುತಿಯು;
ಐದಡೆ ಹಾನಿ ಬಿರಿದಿಂಗೆ.
ಅಯ್ಯಾ, ಅಯ್ಯಾ, ಕರುಣಾಕರ ಕಪಿಲಸಿದ್ಧಮಲ್ಲೇಶ್ವರಾ,
ಓರಂತೆ ಮಾಡಿ ಸಲಹಯ್ಯಾ ಎನ್ನನು./648
ಕರುಣಾಕರನೆ, ಎನ್ನ ದೆಸೆಗೆಟ್ಟ ಪಶುವನು
ಹಸಗೆಡಿಸೂದು ನಿನಗುಚಿತವೆ ಹೇಳಾ!
ಸಕಲ ಸಾನಂದನೆ ಆನಂದರೂಪನೆ
ವಿಕಲವನು ಮಾಣಿಸಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./649
ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ,
ನಿರ್ಮಳ ಬಸವಾ, ಶಿವಜ್ಞಾನಿ ಬಸವಾ,
ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪದವು.
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ./650
ಕರುಣಿ, ಮಹಾದಾನಿ,
ನಿನ್ನವರಿಗೆ ನೀನು ಕರುಣ ಕಂದೆರೆವ ಭೇದವ,
ಅವರ ಮನದ ಮಸ್ತಕದಲ್ಲಿ
ನಿನ್ನ ಮಹಾಜ್ಯೋತಿ ಬೆಳಗುವ ಭೇದವ,
ಅರಿಯಬಹುದೆ ಎಲ್ಲರಿಗೆ,
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಂಗವೆ,
ನಿನ್ನ ಕರುಣವುಳ್ಳವರಿಗಲ್ಲದೆ?/651
ಕರುಣಿಯೆಂದು ಮರೆವೊಕ್ಕಡೆ ನಿಃಕರುಣಿಯಪ್ಪೆ.
ಎಲೆ ಅಯ್ಯಾ, ಅರಿಯದೆ ಕಿರಿದು ಮಾಡಿದಡೆ
ದಾನಿಯೆಂದು ಭವಕ್ಕೆ ಗುರಿಮಾಡುವರೆ?
ಎಲೆ ಅಯ್ಯಾ, ಮರಳಿ ಬಾರದಂತೆ ಮಾಡಯ್ಯಾ, ನಿಮ್ಮ ಧರ್ಮ.
ಕಪಿಲಸಿದ್ಧಮಲ್ಲಿಕಾರ್ಜುನ./652
ಕರ್ಪರದ ಕರದಲ್ಲಿ ಇದ್ದ ಮೂಜಗವೆಲ್ಲವು
ತಪ್ಪತಿ ಸಿದ್ಧಾಂತವನು ಭೇದಿಸಿ,
ಶಬ್ದಬ್ರಹ್ಮವು ಮೀರಿದತ್ತ ಬ್ರಹ್ಮಾಂಡವು
ಇತ್ತೆರವು ಕಂದೊಳಲು ಮೂಲೋಕಕೆ.
ಅಯ್ಯ ಕೇಳಯ್ಯ, ನಿನ್ನಮೃತಹಸ್ತವನೊಮ್ಮೆ
ಒಯ್ಯನೆ ನೀಡಿ ಪರಮಪದದಲ್ಲಿ
ಕೈಯೈದರಲ್ಲಿ ಮುಖವು, ನಯನದಲ್ಲಿ ಜಿಹ್ವೆ
ತಾನುಣುತಪ್ಪ ಕರಮುಖದಲ್ಲಿ
ಚೋದ್ಯವ ಬೆಳಗಿನಲ್ಲಿ ಗುರುಕರಣವಿಡಿಪ್ಪ
ಭಾವ ಸಜ್ಜನ ಶುದ್ಧ ಸದ್ಭಕ್ತರ
ಇಂದ್ರಿಯಂ ಐದು ನಿನ್ನುಂಬ ಜಿಹ್ವೆಯಾಗಿ
ಸಂದಣಿಪ ಕರಣ ನಿನ್ನಯ ಚೇತನ.
ಇಂತು ಭಕ್ತಂಗೆ ಪ್ರಾಣವು ಶೂನ್ಯ ನಿನಗೀಗ
ಅಂತರಿಪ ಕಾಯವಿಲ್ಲದ ಪರಿಯನು,
ಇಂತು ವಿಚಾರಿಸುವಡೆ ಭಕ್ತ ಕಾರಣ ಪರಶಿವನು
ಸಂತತಂ ಕಪಿಲಸಿದ್ಧಮಲ್ಲಿಕಾರ್ಜುನ./653
ಕರ್ಮಜಸವೆಂಬ ಹಮ್ಮಿನ ತೇಜದ
ನಿರ್ಮಳಜ್ಞಾನಿ ನಿಮ್ಮನರಿಯೆನಯ್ಯಾ, ಕರ್ಮಕ್ಕೊಳಗಾದೆನು,
ಮೋಹಮೊಲನ ಬಲೆಗೆ ಗುರಿಯಾದೆನು.
ಕಾಯಯ್ಯಾ ಕರುಣಿ ಕಪಿಲಸಿದ್ಧಮಲ್ಲಿಕಾರ್ಜುನ./654
ಕರ್ಮತ್ರಯಂಗಳ ಭೋಗಿಸಿದಲ್ಲದೆ ಬಿಡದು’ ಎಂಬ ಶ್ರುತಿಗೇಳಿ
ಮನದೆರೆದು ಮಾತಾಡನಯ್ಯಾ.
ದುಃಖಂ ಭೋಗಿಸಿದ ಕರ್ಮತ್ರಯದೊಳಗಯ್ಯಾ.
ಆದ ಭೋಗ ಸುಖವಾದಡೆ ಮುಂದೆ ಭವಕ್ಕೆ ಈಡಯ್ಯಾ.
ಸುಖದುಃಖಗಳ ಸಮಾನಗೊಂಡವಂಗೆ
ವಿಧಿತ್ರಯಂಗಳಿನ್ನೆಲ್ಲಿಹವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./655
ಕರ್ಮದ ಗಡಣ ಹಿಂಗಿಸು ; ಪಾಪದ ರಾಶಿಯ ತೊಲಗಿಸು;
ಸಂಸಾರದಾಶೆಯ ಬೆಂದ ಮನದ ಕಾಟವ ಮಾಣಿಸು.
ಮಾಯದ ತಲೆಯನರಿದು ಮರಳಿ ಬಾರಾ ಎನ್ನ ಕರಕ್ಕೆ, ನಿಮ್ಮ ಧರ್ಮ.
ನಿಮಗಾಣೆ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ./656
ಕರ್ಮವನರಿತೆನ್ನ ನಿಃಕರ್ಮಿಯ ಮಾಡಯ್ಯಾ ಗುರುವೆ.
ಈ ಕರ್ಮಕ್ಕಾನಾರೆನು ತಂದೆ.
ಅಯ್ಯಾ, ಎನ್ನ ನಿಃಕರ್ಮಿಯ ಮಾಡಯ್ಯಾ ಗುರುವೆ.
ಆನತ ಘನಗುರುವೆ ಕಪಿಲಸಿದ್ಧಮಲ್ಲಿನಾಥಾ,
ಎನ್ನ ನಿನ್ನವರಂತೆ ಮಾಡಾ, ನಿಮ್ಮ ಧರ್ಮ/657
ಕರ್ಮಸಾಕ್ಷಿ ತಾನಾದಲ್ಲಿ,
ಅಸ್ತಮಾನೋದಯಕ್ಕೆ ಒಳಗಾದನಯ್ಯಾ ಸೂರ್ಯನು.
ಕರ್ಮಸಾಕ್ಷಿ ತಾನಾಗಿ ಆಚರಿಸಿದಲ್ಲಿ,
ಜನನ ಮರಣಕ್ಕೆ ಒಳಗಾದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./658
ಕರ್ಮಿಗಳು ಶಿವಪಥಕ್ಕೆ ಬಪ್ಪಾಗಳವರ
ಕರ್ಮ ಬೆಂಬತ್ತಿ ಕಾಡುವದಯ್ಯಾ.
ಲಿಂಗಾರಾಧನೆಯ ಮಾಡಲೀಯದು.
ಸಂದೇಹವನೆ ತೋರಿಸಿ ಕೆಡಿಸುವದಯ್ಯಾ.
ಏಕೆ? ಅವರು ಮಾಡಿದ ಕರ್ಮವನುಣಬೇಕಾಗಿ!
ಇದನರಿದು ನಿಮ್ಮ ನೆರೆನಂಬಿ ಪೂಜಿಸೆ ಹರಿವುದು ಕರ್ಮ,
ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವಾ./659
ಕರ್ಮಿಯ ಕರ್ಮ ನಿಷ್ಕರ್ಮವಲ್ಲೆಂದು ನಂಬಬಾರದಯ್ಯಾ.
ಮುಮುಕ್ಷುವಿನ ಮೋಕ್ಷ ಮೂರರಲ್ಲೆಂದು ನಂಬಬಾರದಯ್ಯಾ.
ಅಭ್ಯಾಸಿಯ ಮೋಕ್ಷ ಜನ್ಮದ್ವಯದಲ್ಲೆಂದು ನಂಬಬಾರದಯ್ಯಾ.
ಅನುಭಾವಿಯ ಮೋಕ್ಷ ಜನ್ಮ ಒಂದರಲ್ಲೆಂದು ನಂಬಬಹುದೆ
ಅಯ್ಯಾ?
ಆರೂಢನ ಜನ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಜನ್ಮವೆಂದು
ನಂಬಲೇಬೇಕು,
ಹಾವಿನಹಾಳ ಕಲ್ಲಯ್ಯಾ./660
ಕಲ್ಪವೃಕ್ಷ ಮರನೆನ್ನಬಹುದೆ?
ಕಾಮಧೇನು ಪಶುವೆನ್ನಬಹುದೆ?
ಪರುಷದ ಕಣಿ ಪಾಷಾಣವೆನ್ನಬಹುದೆ?
ನಮ್ಮ ಕಪಿಲಸಿದ್ಧಮಲ್ಲಕಾರ್ಜುನನ ನುಂಗಿದವರೆಲ್ಲ
ಮಾನವರೆನ್ನಬಹುದೆ?/661
ಕಲ್ಪವೃಕ್ಷಕ್ಕೆ ಸಮಮಾಡಿ ಹೇಳಿದೆನಯ್ಯಾ,
ಕರಸ್ಥಲದ ಮಹಾಂಗಮೂರ್ತಿಗೆ.
ಅಲ್ಲಲ್ಲ, ಕಲ್ಪಿಸಿ ಬೇಡಿದಡೆ ಕೊಡುವುದದು ಸುರಾಮೃತವ;
ಮೃತ [ವ] ಬೇಡಿದಡೆ ಕೊಡುವುದಯ್ಯಾ ಭವದ ಗೋಳಾಟ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./662
ಕಲ್ಪಿತೋದಕ ಒಂದು , ಅರ್ಪಣೋದಕ ಮೂರು,
ಮತ್ತೆ ಅಂಗೋದಕವು ತ್ರಯವಾಗಿಯು,
ಮಿಕ್ಕ ಪ್ರಸಾದೋದಕ ಅವು ಮೂರು,
ಸತ್ವರಜತಮವತಿಗಲೆದವರಿಯಲರಿದು ತಾನು
ಚಿತ್ತಶುದ್ಧನಾಗಿ ಗುರುಕರುಣದಿಂದವೆ
ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಮತ್ತೆ ಸಂದಿಲ್ಲದಿಹೆ ಕೂಡಿದಾನಂದ ಭೇದದೊಲು
ತತ್ತ್ವಮಸಿಯಪ್ಪನೈ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ./663
ಕಲ್ಮುಡಿಗನ ಕೈಯಲ್ಲಿ ಕಲ್ಲುಳಿ ಕೊಟ್ಟಡೆ,
ಕೊಟ್ಟಂತಲ್ಲದೆ ಕಲ್ಲು ರೂಪಾಗಿ ಬಾರದಯ್ಯಾ.
ಆದ್ಯರ ವಚನ ಅವಿದ್ಯಾವಂತನ ಜಿಹ್ವೆಯಲ್ಲಿದ್ದಡೆ,
ಇದ್ದಂತಲ್ಲದೆ ವಿದ್ಯಾಮಯಕೀರ್ತಿಯಾಗನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./664
ಕಲ್ಲಿನಲ್ಲಿ ವಲ್ಲಭನಿದ್ದಾನೆಂದು ಅಲ್ಲಾಡುತ್ತಾರೆ ನೋಡಾ,
ಅಲ್ಲಯ್ಯಾ, ಈ ಖುಲ್ಲಮನುಜರು.
ಕಲ್ಲಿನಲ್ಲಿ ವಲ್ಲಭನ ಕಂಡೆವೆಂದು ಬಡಿದಾಡುತ್ತಾರೆ ನೋಡಾ,
ಅಲ್ಲಯ್ಯಾ, ಈ ಹೊಲ್ಲಮನುಜರು.
ಕಲ್ಲಿನಲ್ಲುಂಟು, ಮಣ್ಣಿನ್ಲಲ್ಲವೆಂದೆಂಬಡೆ,
ಅಂತರ್ಯಾಮಿ ಪರಿಪೂರ್ಣತ್ವ ಭಂಗವಹುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./665
ಕಲ್ಲು ಘನವೆಂದಡೆ,ಲಿಂಗದ ಪೂಜ್ಯತ್ವ ಕಲ್ಲಿಗೆ ಬಂದಿತೇನಯ್ಯಾ?
ನೀರು ಘನವೆಂದಡೆ, ಪಾದೋದಕಕ್ಕೆ ಸರಿಬಂತೇನಯ್ಯಾ?
ಶೂದ್ರ ಘನವೆಂದಡೆ, ಅಷ್ಟೆ ಶ್ವರ್ಯ ಕೊಟ್ಟಿತೇನಯ್ಯಾ?
ಘನಕ್ಕೆ ಘನವು ನಿಮ್ಮಷ್ಟಾವರಣಂಗಳು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./666
ಕಲ್ಲು ನೀರಲ್ಲಿದ್ದಂತಲ್ಲದೆ,
ನೀರ ನುಂಗಿ ನೀರಾಗಬಹುದೆ ಅಯ್ಯಾ?
ಅಗ್ನಿ ನೀರಲ್ಲಿದ್ದಂತಲ್ಲದೆ,
ನೀರ ನುಂಗಿ ನೀರಾಗಬಹುದೆ, ಅಯ್ಯಾ?
ಪ್ರಸಾದಿ ಭವದಲ್ಲಿದ್ದಂತಲ್ಲದೆ,
ಭವ ನುಂಗಿ ಭವಿಯಾಗಬಹನೆ, ಅಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ?/667
ಕಲ್ಲು ಹಿಡಿದು ಅಲ್ಲಮನ ನೋಡುವೆವೆಂಬವರ
ಖುಲ್ಲ ಮನುಜರೆಂಬೆ.
ಕಲ್ಲು ಹಿಡಿದವರೆಲ್ಲ ಅಲ್ಲಮನಾಗಲು
ಭವಬೀಜ ಇನ್ನೆಲ್ಲಿಯದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ. /668
ಕಲ್ಲುದೇವರಲ್ಲಿ ವಲ್ಲಭನಿದ್ದಾನೆಂದು ಲಲ್ಲೆಗರೆಯಬೇಡ,
ಖುಲ್ಲತನದಿಂದ.
ಒಮ್ಮೆ ಅರಿಯಬಲ್ಲಡೆ, ಕಪಿಲಸಿದ್ಧಮಲ್ಲಿಕಾರ್ಜುನನ ಶರಣರ
ಪಾದದಲ್ಲಿ ತಲ್ಲೀಯವಾಗಾ, ಕಲ್ಲಯ್ಯಾ./669
ಕಸವಕೊಂಡು ಹೊಸ ಧಾನ್ಯವ ಕೊಟ್ಟಡೆ, ಒಲ್ಲೆಂಬ ಚದುರರಾರು?
ಜಲವ ಕೊಂಡು ಅಮೃತವ ಕೊಟ್ಟಡೆ, ಒಲ್ಲೆಂಬ ಭಾಷೆಯದಾರದು?
ಎನ್ನಂತರಂಗದ ಜ್ಞಾನವ ಕೊಂಡು
ಸುಜ್ಞಾನವಪ್ಪ ನಿಮ್ಮ ಕರತೇಜವ ಕೊಟ್ಟಡೆ,
ಒಲ್ಲೆನೆಂಬ ಪಾತಕಿ ಯಾರು?
ಕಪಿಲಸಿದ್ಧಮಲ್ಲಿಕಾರ್ಜುನ ಮಡಿವಾಳ ತಂದೆ./670
ಕಸವಿದ್ದು ಕೃಷೀವಲನಿಲ್ಲದೆ,
ಅಸಮಾಕ್ಷವಲನಿಲ್ಲದೆ ಅಸಮಾಕ್ಷಗುಣವಿರೆ,
ಈ ಕಸ ಗುಣದ ಕೇಡು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./671
ಕಳವಳದ ಕಂದೆರವಿಗೊಳಗು ಮಾಡಿರಿ.
ಹಾ! ಹಾ! ಎಲೆ ಅಯ್ಯಾ,
ಎನ್ನ ವಿಕಾರದಲ್ಲಿ ಗುರಿ ಮಾಡಿರಯ್ಯಾ.
ಕೋಪದ ಕಾಡುಗಿಚ್ಚಿಗೆ ಅಡವಿಯ ಗುರಿಮಾಡಿರಿ
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./672
ಕಳೆಯೊಳಗಣ ಭೇದ, ಕಳೆ ನಾದದ ಭೇದ
ಕಳಾವಿದರಿಗಲ್ಲದೆ ವೇದ್ಯವಲ್ಲ.
ಮಧುಕರನುಂಡಿಪ್ಪ ಸದಮದದ ಪರಿಮಳವ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಲ್ಲ./673
ಕಾಜಿನ ಮಣಿ ಪಚ್ಚದಂದವಿರೆ, ಕಾಜಿನ ಮಣಿಯೆ ಪ್ರಸಿದ್ಧ.
ಲೋಕದ ಮಾನವ ಯೋಗಿಯಂತಿರೆ, ಲೋಕದ ಮಾನವನೆ
ಪ್ರಸಿದ್ಧ.
ಬಾಹ್ಯವರ್ಣ ಜನಪ್ರಸಿದ್ಧವಲ್ಲದೆ,
ಕಪಿಲಸಿದ್ಧಮಲ್ಲಿಕಾರ್ಜುನನ ಚಿತ್ತಕ್ಕೆ ಪ್ರಸಿದ್ಧವಲ್ಲ./674
ಕಾಡದೆ ಎನ್ನ ಮನದಿಚ್ಛೆಯ ಮಾಡಯ್ಯಾ, ನಿಮ್ಮ ಧರ್ಮ!
ಕಾಡುವುದುಚಿತವೆ ಅಯ್ಯಾ, ನಿಮ್ಮ ಕರುಣದ ಕಂದ ನಾನು!
ನಿಮ್ಮ ಕರುಣದ ಕಂದ ನಾನಯ್ಯಾ!
ಎಂದುತನಕ ಕಾಡುವಿರಿ ಅಂದುತನಕ ನೋಡುವೆನು.
ಹಿಂದುಮುಂದುಗೆಟ್ಟವನೆಂದು ಏಡಿಸಿದಡೆ
ತಂದೆ! ನಾ ನಿಮ್ಮನೇಕೆ ಬಿಡುವೆ.
ಕರುಣಿಸು ಎನ್ನ ಪರಮಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ./675
ಕಾಣಬಹುದು ಕೈಗೆ ಸಿಲುಕದು;
ಅರಿಯಬಹುದು ಕುರುಹಿಡಬಾರದು;
ಭಾವಿಸಬಹುದು ಬೆರಸಬಾರದು.
ಇಂತೀ ಉಪಮಿಸಬಾರದ ಮಹಾಘನವ
ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣನೇ ಬಲ್ಲ./676
ಕಾತ ವೃಕ್ಷವವ್ವಾ ನೀನು,
ಪಕ್ಷಿಗಳು ಹಲವಾಗಿ ಬಂದು
ಹಣ್ಣ ಮೆಲಿಯಲ್ಕೆ ನನದಾಡುವೆ.
ಪಕ್ಷಿ ವೃಕ್ಷವ ನುಂಗಿದಡೆ ಎಂತು ಸೈರಿಸಲಹುದೌ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./677
ಕಾದುವರೆ ಕೈಯೆರಡುಂಟೆ?
ಬೇಡುವರೆ ಬಾಯಿ ಹರಿಯದುಂಟೆ?
ಕಾದಬಾರದು ಬೇಡಬಾರದು,
ಕೂಡುವ ಕಾಲಕ್ಕೆ ಕೂಡಲಿಡಬಾರದು ಕಾಣಾ,
ಗುರು ಚೆನ್ನಬಸವಣ್ಣನಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಾ./678
ಕಾಮ ಕಾಡಿತು, ಕ್ರೋಧ ಕೊಂದಿತು,
ಆಮಿಷವೆನ್ನನೆಳೆವುಕ್ಕಿದೆ.
ಕರುಣ ಮಾಡಾ ಹರಹರ ಮಹಾದೇವಾ,
ಕರುಣ ಮಾಡಾ ಶಿವಶಿವ ಮಹಾದೇವಾ.
ಕರುಣ ಮಾಡಾ ದೆಸೆಗೆಟ್ಟ ಪಶುವಿನೊಮ್ಮೆ,
ಕರುಣ ಮಾಡಾ ವಶವಲ್ಲದ ಶಿಶುವಿಂಗೊಮ್ಮೆ.
ಕರುಣ ಮಾಡಾ ಅನ್ಯವನ್ನು ನಾನರಿಯೆ.
ನಿಮ್ಮ ಪಾದವನುರೆ ಮಚ್ಚಿದೆನು, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ ತಂದೆ./679
ಕಾಮಧೇನುವಿನ ವಂಶವಿವು ಎಂದಡೆ,
ಹಿಂಡಲರಿಯವು ನೋಡಾ, ಅವುಗಳು.
ಕಾಮಾರಿಯ ರೂಪುಗಳಿವರೆಂದಡೆ,
ಅರಿಷಡ್ವರ್ಗಂಗಳಳಿಯಪಡೆಯವು ನೋಡಾ ತ್ರಿಶಕ್ತಿಗಳು.
ನಾ ನಿನ್ನವನೆಂದಡೆ [ನಿಮ್ಮ] ಮಹಿಮೆಗಳನರಿಯಬಾರದು
ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./680
ಕಾಮನನು ನೋಡಿದ ಕಂಗಳಲ್ಲಿ ನೋಡದೆ
ಸೋಮನಯನದಿ ನೋಡಿ ಸಲಹು ತಂದೆ
ಕಾಮಾರಿಯಯ್ಯ ನೀನು, ಕಾಮಂಗೆ ಒಪ್ಪಿಸರು ಎನ್ನ
ಕಪಿಲಸಿದ್ಧಮಲ್ಲಿಕಾರ್ಜುನ./681
ಕಾಮವಿಕಾರಕ್ಕೆ ಕಳವಳಿಸಿ ಮನವು
ಹೇಮದಿಚ್ಛೆಗೆ ಹೆಚ್ಚಿ ಹೆಚ್ಚಿ
ಕಾಮಾರಿ ನಿಮ್ಮುವ ನೆನೆಯದೀಮನವು
ಓರಂತೆ ನರಕಕ್ಕಿಳಿದೆನೆಂಬುದು.
ಕಾರುಣ್ಯಾಕರ ಎನ್ನುವನಾರೈದು ಓರಂತೆ ಮಾಡು,
ಕಪಿಲಸಿದ್ಧಮಲ್ಲಿಕಾರ್ಜುನ./682
ಕಾಮಸಂಗವನಳಿದು ಹೇಮದಿಚ್ಛೆಯ ತೊರೆದು,
ನಿಮ್ಮ ನಾಮ ನೆಲೆಯಾಗಿಪ್ಪವರ ತೋರಾ, ಅಯ್ಯಾ ನಿಮ್ಮ
ಧರ್ಮ
ಕಪಿಲಸಿದ್ಧಮಲ್ಲಿಕಾರ್ಜುನ,
ಅವರ ಪಾದವ ತೋರಿ ಬದುಕಿಸಯ್ಯಾ./683
ಕಾಮಾರಿರೂಪು ಬಂದಾನೆಂದು,
ಕಾಮಾದ್ಯರಿಷಡ್ವರ್ಗಂಗಳ ಮಾಡದಿರು ಮನವೆ,
ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ./684
ಕಾಮಿನಿಯೆಂಬಾಯಕನ ಕರದಲ್ಲಿ ಒಪ್ಪಿಹ
ಲೋಕಂಗಳು ಹಲವು ಕಂಡಾ, ಅವ್ವ.
ಶೂಲದಾಕೃತಿಯಲ್ಲಿ ಮುನ್ನೂರು ದಳದಲ್ಲಿ
ಮೋಹಿಸುತ್ತಿರ್ದವು ಕಂಡಾ,
ನಾಮ ನಾಮವೆಂಬುದರೊಳಗೆ ನಿರ್ನಾಮವಾಗಿದ್ದ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./685
ಕಾಮಿಯ ಕಾಮಿನಿಯು ನೋಡಿದಳೆಂಬಂತೆ,
ಉಪಾಧಿಯ ನಿರುಪಾಧಿ ಲಿಂಗದ ಕೃಪೆಯಾಯಿತ್ತೆಂಬಂತೆ
ನುಡಿವರಯ್ಯಾ.
ಕಾಮಿನಿಯ ದೃಷ್ಟಿ ಕಾಮಿಯಲ್ಲಿರಲು ಕಾಮಿಯೆ ಅಯ್ಯಾ?
ಲಿಂಗದ ದೃಷ್ಟಿ ಅಂಗಗುಣದವನಲ್ಲಿರಲು ಆತ ಲಿಂಗಗುಣಿಯೆ?
ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ./686
ಕಾಮಿಸಿದೆನಯ್ಯಾ ಬಸವಣ್ಣನ ಭಕ್ತಿಗೆ;
ಕಾಮಿಸಿದೆನಯ್ಯಾ ಬಸವಣ್ಣನ ಯುಕ್ತಿಗೆ;
ಕಾಮಿಸಿದ ಕಾಮವೆ ಕೈಸಾರಿತ್ತಯ್ಯಾ, ಬಸವಣ್ಣನ ಕರುಣದಿಂದ,
ಕಪಿಲಸಿದ್ಧಮಲ್ಲಿನಾಥಯ್ಯಾ/687
ಕಾಮುಖವಳಿದು ಕರಣಂಗಳು ದಮೆ ಒಂದಾಯಿತ್ತಯ್ಯಾ.
ವ್ಯೋಮಪ್ರಸಾದಿ ಸಮಯವಾಯಿತ್ತಯ್ಯಾ ನಿಮ್ಮಿಂದ.
ಇನಿತಾದ ಸುಖ ತಾನೊಂದೆ ಲಿಂಗಭಾವವಾಯಿತ್ತಯ್ಯಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮದಯದಿಂದ ಚೆನ್ನಬಸವಣ್ಣನ ಪ್ರಸಾದವಾಯಿತ್ತು./688
ಕಾಯ ಧರಿಸಿದವ ನವನೀತ ರೋಮದಂತಿರಬೇಕು,
ಮುಕುರದ ಪ್ರತಿಬಿಂಬದಂತಿರಬೇಕು,
ಬೆಟ್ಟದಲ್ಲಿಯ ಕಾಡಕಿಚ್ಚಿನಂತಿರಬೇಕು,
ಆಷಾಢದಲ್ಲಿಯ ಚಂಡಮಾರುತನಂತಿರಬೇಕು,
ಸರ್ವರಲ್ಲಿ ಸರ್ವರಂತಾಗಿರಬೇಕು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./689
ಕಾಯ ನಾನೆಂದಡೆ ಕರ್ಮಕಾಂಡಿ.
ಸಕಲ ಕ್ರಿಯೆ ಈಶಾರ್ಪಣವೆಂದಡೆ ಭಕ್ತಿಕಾಂಡಿ.
ಸಕಲ ಕರ್ಮ ಸಾಕ್ಷಿಯೆಂದಡೆ ಜ್ಞಾನಕಾಂಡಿ.
ಕಾಂಡತ್ರಯವಿಲ್ಲದ ಅಖಂಡನ ತೋರಾ,
ಕಪಿಲಸಿದ್ಧಮಲ್ಲಿಕಾರ್ಜುನಾ./690
ಕಾಯ ಮುನ್ನವೊ, ಕಾಯದಲ್ಲಿಪ್ಪ ಮನ ಮುನ್ನವೊ?
ಮನ ಮುನ್ನವೊ, ಮನದಲ್ಲಿಪ್ಪ ಚೈತನ್ಯ ಮುನ್ನವೊ?
ಚೈತನ್ಯ ಮುನ್ನವೊ, ಚೈತನ್ಯಾತ್ಮಕ ಮಾಯೆ ಮುನ್ನವೊ?
ಅವು ಮುನ್ನವಲ್ಲ, ಮುನ್ನವಲ್ಲ ;
ನಿನ್ನ ನಿರಾಳ ನಿಜದ ನಿರ್ವಯಲಿನ
ಶೂನ್ಯಾಶೂನ್ಯವೆ ಮುನ್ನ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./691
ಕಾಯ ಲಿಂಗವೊ ಕಾಯದ ಸಾರಿಪ್ಪ ಲಿಂಗ ಲಿಂಗವೊ?
ಪ್ರಾಣ ಲಿಂಗವೊ ಪ್ರಾಣದಲ್ಲಿ ಸಾರಿಪ್ಪ ಲಿಂಗ ಲಿಂಗವೊ?
ಜ್ಞಾನ ಲಿಂಗವೊ ಜ್ಞಾನದ ಮೊನೆಯ ಮೇಲೆ ತೋರುವ ಬೆಳಗು
ಲಿಂಗವೊ?
ಲಿಂಗ ಪ್ರಾಣ ಪ್ರಾಣಂಗವೆಂಬುದನೆಂತೆಂದರಿಯೆನು.
ನಿಮ್ಮ ಕಾಯದ ಕರಸ್ಥಲವ ಸಾರಿದ ಲಿಂಗ
ಪ್ರಾಣದೊಳು ವೇದ್ಯವಾದ ಪರಿಯ ಹೇಳಾ ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನ./692
ಕಾಯ ಸೊನೆಯರತಲ್ಲದೆ ಹಣ್ಣಿನ ರಸ ಚಿಹ್ನದೋರದು.
ಕಾಯ ಕರ್ಮವ ಮಾಡಿ, ಜೀವ ಜ್ಞಾನವನರಿದು,
ವಿವಿಧಭಾವ ಶುದ್ಧಿಯಾದಲ್ಲದೆ ಮೇಲೆ ಕಾಣಲಿಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವ/693
ಕಾಯದ ಕರಸ್ಥಳದಲ್ಲಿ ನೀನು ಶೂನ್ಯನಾಗಿಪ್ಪೆಯಲ್ಲಾ, ಎಲೆ ಅಯ್ಯಾ.
ಆನಂದಸ್ಥಾನದಲ್ಲಿ ಅನಿಮಿಷನಾಗಿಪ್ಪೆ ಅಯ್ಯಾ.
ಆಯಾಧಾರ ನಿನಗೆ ತಥ್ಯವಾಗಿಪ್ಪುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./694
ಕಾಯದ ಹೊರಕಣ್ಣ ಮುಚ್ಚಿ
ಮನ ಭಾವದರಿವಿನೊಳಕಣ್ಣ ತೆರೆದು
ಬಂದಾನೆಂಬ ಪರವಶಕ್ಕೆ ಕಿವಿಯಾಂತು ಕೇಳುತ್ತಿದ್ದೇನೆ.
ಅದೆತ್ತಣಿಂದ ಸುಳಿದನೆಂದರಿಯೆನಯ್ಯಾ.
ಅರುಹಿನ ನೇತ್ರಕ್ಕೆ ಸರ್ವನ ಪ್ರತಿಬಿಂಬ ಸೂಚಿಸಿ ಹೊಳೆದಡೆ
ಕಣ್ದುಂಬಿ ನೋಡಿದೆ ಮನದುಂಬಿ ನೆನೆದೆ,
ಆ ಪ್ರತಿಬಿಂಬವಿಡಿದು ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವೆನು./695
ಕಾಯವ ನಿಶ್ಚೈಸಲಿಲ್ಲ, ಜೀವವ ನಿಶ್ಚೆ ಸಲಿಲ್ಲ;
ಕಾಯ ಜೀವ ಎರಡಕ್ಕೂ ನೆಲೆಯಿಲ್ಲವಯ್ಯಾ.
ಸುಖವ ನಿಶ್ಚೈಸಲಿಲ್ಲ, ದುಃಖವ ನಿಶ್ಚೈಸಲಿಲ್ಲ;
ಸುಖ-ದುಃಖ ಎರಡಕ್ಕೂ ನೆಲೆಯಿಲ್ಲವಯ್ಯಾ.
ರಾಜ್ಯವ ನಿಶ್ಚೈಸಲಿಲ್ಲ, ಲಕ್ಷಿ ್ಮಯ ನಿಶ್ಚೈಸಲಿಲ್ಲ?
[ರಾಜ್ಯ-ಲಕ್ಷಿ ್ಮ ಎರಡಕ್ಕೂ ನೆಲೆಯಿಲ್ಲವಯ್ಯ್ವಾ]
ಅಭ್ರಚ್ಛಾಯೆ, ಮರೀಚಿಕಾಜಲ, ಮಹೇಂದ್ರಜಾಲವಯ್ಯಾ ನನ್ನದು.
ಮನೆ ನನ್ನದು, ಧನ ನನ್ನದು ಎಂಬ ಮರುಳ ಕೇಳಾ-
ಕನಸಿನ ಸುಖ ಕಣ್ದೆರೆದಲ್ಲಿ ಹೋಯಿತ್ತು.
ಹಾಲುಳಲ್ಲಿ ಹಬ್ಬವ ಮಾಡಿ, ಗಾಳಿಯುಳಲ್ಲಿ ತೂರಿಕೊಳ್ಳಿರಿ;
ಬಳಿಕಲರಸಿದರುಂಟೆ? ಪರಮ ಸುಖವು.
ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನನ
ಹರಿಗೋಲುಳಲ್ಲಿ ತೊರೆಯ ದಾಂಟಿದೆ./696
ಕಾಯವಿಡಿಹನ್ನಕ್ಕರ ಕಾಮವೆ ಮೂಲ;
ಜೀವವಿಡಿಹನ್ನಕ್ಕರ ಕ್ರೋಧವೆ ಮೂಲ;
ವ್ಯಾಪ್ತಿಯುಳ್ಳನ್ನಕ್ಕರ ಸಕಲ ವಿಷಯಕ್ಕೆ ಆಸೆಯೆ ಮೂಲ.
ಎನ್ನ ಆಸೆ ಘಾಸಿಮಾಡುತ್ತಿದೆ,
ಶಿವಯೋಗದ ಲೇಸಿನ ಠಾವ ತೋರು,
ಕಪಿಲಸಿದ್ಧಮಲ್ಲಿಕಾರ್ಜುನಾ./697
ಕಾಯವಿರೆ ಗುರುವ ನೆರೆವೆನೆಂಬವಂಗೆ ಹೇಳುವೆನಯ್ಯಾ.
ತನುವೊಂದೆ ತನುವಾಗಿ, ಧನವೊಂದು ಧನವಾಗಿ,
ಮನವೊಂದೆ ಮನವಾಗಿ,
ಹಿಡಿವ ಗತಿ ಒಂದಾದ ಭಕ್ತಿಯ ಶಿವಕೂಟ ಒಂದೆ
ಕಪಿಲಸಿದ್ಧಮಲ್ಲಿಕಾರ್ಜುನ./698
ಕಾಯವೆ ಪೀಠಿಕೆ ಪ್ರಾಣವೆ ಲಿಂಗವಾಗಿರಲು,
ಬೇರೆ ಮತ್ತೆ ಕುರುಹೇಕಯ್ಯಾ?
ಕುರುಹುವಿಡಿದು ಕೂಡುವ ನಿರವಯವುಂಟೆ? ಜಗದೊಳಗೆ.
ನಷ್ಟವ ಕೈಯಲ್ಲಿ ಹಿಡಿದು ದೃಷ್ಟವ ಕಂಡೆಹೆನೆಂದಡೆ,
ಕಪಿಲಸಿದ್ಧಮಲ್ಲಿನಾಥಯ್ಯನು ಸಾಧ್ಯವಹ ಪರಿಯ ಹೇಳಾ ಪ್ರಭುವೆ. /699
ಕಾಯ್ದ ಕರ್ಬುನ ನೀರನೊಳಕೊಂಬಂತೆ,
ಬಿದ್ದ ಬಿಂದುವ ಭೂಮಿಯೊಳಕೊಂಬಂತೆ,
ನವನೀತ ಘೃತವನೊಳಕೊಂಬಂತೆ,
ವೀಳ್ಯ ರಸವೊಳಕೊಂಬಂತೆ-
ಎನ್ನ ಕಾಯವ ತನ್ನ ಕಾಯದಲ್ಲಿ ಒಳಕೊಂಬ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ ಮಹಾಶರಣನ/700
ಕಾಲಕರ್ಣಿಕೆಯನ್ನು ಮೀರಿಪ್ಪನೆಮ್ಮ ನಲ್ಲ
ತೋರಿ ಬಿಡನಾಕೆಯ ಸಂಗಂಗಳಾ.
ಕ್ರೀಗಳನು ನೀಕರಿಸಿ ನಿಃಕ್ರಿಯೆ ನೆಲೆಗೊಳಿಸಿ,
ಆರು ವರ್ಗದಲಾತನೈಕ್ಯನಾಗಿ,
ಸಂಬಂಧ ಸಮನಿಸಿಯು ಕರ್ಮವನು ಅತಿಗಳೆದು
ಸೊಮ್ಮಾತನಿಹತತಾ ಪರತತ್ವದಾ ನಿಃಕರ್ಮಿ
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನೆಂಬ
ಕರ್ಮದೊಳಗೆ ತಾ ಕರ್ಮಿಯಾದ./701
ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ,
ನಿಮ್ಮಭೇದಿಸುವರಾರು ಹೇಳಾ ಎಲೆ ಅಯ್ಯಾ.
ಎನ್ನ ಭವಕರ್ಮವು ಕಳೆಯಲಿಕೆ ಏಕರೂಪವಾಗಿ ಬಂದೆಯಯ್ಯಾ.
ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ,
ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ.
ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು
ನಾನಿಂದು ಕಂಡೆ ಕಾಣಾ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./702
ಕಾಲವೇಕೆ ಬಾರದಯ್ಯಾ ಇಂದಿನ ಅವಸ್ಥೆಗೆ?
ಲಿಖಿತವೇಕೆ ತೊಡೆಯದಯ್ಯಾ ಇಂದಿನ ಅವಸ್ಥೆಗೆ?
ಇಂದಿನಿಸು ಬಾರದೇಕಯ್ಯಾ, ಎನ್ನ ದೇವ ಕಪಿಲಸಿದ್ಧಮಲ್ಲಿಕಾರ್ಜುನ,
ನಿಮಗೆ ಕೂರ್ತ ಅವಸ್ಥೆಯೊಳಗೆ?
ಲಿಖಿತ ತೊಡೆಯದು, ಪ್ರಾಣ ಬಿಡದು,
ಇಂತಿರಿಸದಿ, ಎನ್ನದೇವರ ದೇವಾ./703
ಕಾಲಿನಿಯೆಂಬ ಮಾನಿನಿ
ಕಾನನ ಕಂಬನಿಯೊಳಗಾಳುತ್ತ ಮುಳುಗುತ್ತೈದಾಳೆ,
ತನ್ನೊಳಗೆ ಆಳುತ್ತ ಮುಳುಗುತ್ತೈದಾಳೆ.
ಆರೂಢದಾ ಕೂಟದಲ್ಲಿವರಿತು
ಬತ್ತಿದಡೆ ಆನು ನೀನಪ್ಪೆ ಕಂಡಾ.
ಎನ್ನ ದೇವ ಕಪಿಲಸಿದ್ಧಮಲ್ಲಿಕಾರ್ಜುನ
ಕಾಲಿನಿಯ ಪರಿ ವಿಪರೀತ./704
ಕಾಲು ಮೇಲು ಮಾಡಿ, ಕೋಲು ಕೆಳಯಿಕೆ ಊರಿ,
ಕಾಲಕಾಲ ತಪಶ್ಚರ್ಯ ಮಾಡಿದಡೆ ಕಾಲಾಂತಕ ನೋಡಾ.
ದೇಶಕಾಲವಸ್ತುತ್ರಯವನರಿದಲ್ಲಿ,
ಕಾಲಾರಿ ಕಾಲಕಾಲದಲ್ಲಿ ಕಾಲ್ದೊಡಕಾಗಿರುವ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./705
ಕಾಲ್ಲದವಂಗೆ ಕಾಲ ಕೊಟ್ಟೆ ಬಸವಾ;
ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ;
ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯಾ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯಾ/706
ಕಾಷ್ಠದಿಂದ ಮುಟ್ಟಿದ ನೀರ ತಾ ಮುಟ್ಟನೆಂಬಂತೆ,
ಬಿಸಿನಿಂದ ಬಳಲಿ, ಕಾಯ ತಾನಲ್ಲೆಂಬಂತೆ,
ಮನಮುಟ್ಟಿದ ವಿಷಯ ತಾ ಮುಟ್ಟನೆಂಬ ವೇದಾಂತಿಯ
ಹಲ್ಲುದೋರೆ ಮೂಗ ಕೊಯ್ವನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನನವರ./707
ಕಾಳರಾಕ್ಷಸಿಯಾಗಿಸಿ ಕುತ್ತಿಗೆ ಪಿಡಿದು ಕೊಯ್ದು ತಿನ್ನುತ್ತಿ
ತಿನ್ನಲೊಲ್ಲದೆಚ್ಚಿ ಭರದಿಂದ ಕನ್ನಿಕೆಯಾಗಿ ತೆಗೆದಪ್ಪ್ಲಿಕೊಳ್ಳ್ವ
ಕೊಂಡಡೆ, ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪುದು
ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ./708
ಕೀಳಾಗಿ ಹೋದಂತೆ ಆಳ್ದಂಗೆ ಅಮೃತ ಕೊಟ್ಟಿತ್ತಯ್ಯಾ [ಆವು]
ಆಳಾಗಿ ನಡೆದಂತೆ ಮೋಕ್ಷವ ಕೊಟ್ಟನಯ್ಯಾ, ಮಹೇಶನು.
ಕೀಳಾಳು ಬಹು ಲೇಸು ಕಂಡಯ್ಯಾ, ಲೋಕದ ಪ್ರಾಣಿಗಳಿಗೆ,
ಕಪಿಲಸಿದ್ಧಮಲ್ಲಿಕಾರ್ಜುನಾ./709
ಕುಂಕುಮದ ಗಿರಿ ಕೊನೆಯೇರಿ ಬೆಳೆಯೆ, ಆಯತವಿಡಿದು
ಸುಖವ ಕಂಡು
ಅನುಭವದವಳಿಗೆ [ಪಚ್ಚವರ್ಣ್ವ] ಸುಖವನೇಕೀಕರಿಸಿ ನೋಡಲು
ಆಯತವಾಯಿತ್ತಯ್ಯಾ ಕುಂಕುದಮ [ಹನ್ನೆರಡಸಳ] ಪೀಠ,
ಆ ಪೀಠದಲ್ಲಿ ವೀರಭೃತ್ಯನೆಂಬವ ನಿಂದು,
ಜಂಗಮವಿಡಿದು ನಡೆಯೆ,
ಅನಿಲಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ
ಚೆನ್ನಬಸವಣ್ಣನು,
ಕಪಿಲಸಿದ್ಧಮಲ್ಲಿನಾಥಯ್ಯಾ,
ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ./710
ಕುಂಜರ ಬಂದು ಮೇಲುವಾಯ್ದು ಸೀಳ್ದಿಡುಕ್ಕುಗೆಯಾ,
ಮೇಣು ಎತ್ತಿಕೊಂಗೆಯಾ.
ಎತ್ತಿಕೊಂಡಡೆ, ಮನವಿಚ್ಛಂದವಾಗದೆ
ಒಂದೆಯಂದಿ ಇಪ್ಪಂತಪ್ಪ ನಿಮ್ಮದೊಂದು ಸಮತಾಗುಣ
ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನ/711
ಕುಂಡಲಿ ಬಂದು ಕೀಡಿಯನು ಕುಂಡಲಿಯ ಮಾಡಿತ್ತಯ್ಯಾ.
ಅಗ್ನಿ ಬಂದು ಕಾಷ್ಠವ ಅಗ್ನಿಯ ಮಾಡಿತ್ತಯ್ಯಾ.
ಮಹೇಶ ಬಂದು ಭಕ್ತನ ಮಹೇಶನ ಮಾಡಿ ಗಮಿಸಿದನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./712
ಕುಂಡಲಿ ಭ್ರೂಮಧ್ಯವನೊಂದಿನಿಂದು, ಪೂರ್ವ ಹೃದಯವ ಪೂರೈಸಿ,
ಮಧ್ಯ ಹೃದಯವನವಗ್ರಹಿಸಿ, ಊಧ್ರ್ವ ಹೃದಯವನೊಡಗೂಡಿ,
ಪಶ್ಚಿಮಚಕ್ರದಲ್ಲಿ ಪ್ರಾಣನಿವಾಸಿಯಾಗಿಪ್ಪನಾ ಶರಣ.
ಓಂ ಮೂಲದ ಆ ಪಶ್ಚಿಮ ಶಿಖಾಚಕ್ರದಲ್ಲಿ ಮನೋಭಾವವಡಗಿ,
ಸಹಸ್ರದಳ ಕಮಲದ ಬಯಲೊಳಗೆ ಬಯಲಾಗಿ,
ನೀನು ತಾನಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ
ಶರಣೆಂದು ಬದುಕಿದೆನು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./713
ಕುಂಬಾರನ ಆವಿಗೆಯಲ್ಲಿ ಕುಂಬಾರನಿಲ್ಲ;
ಕಂಬಾರನ ಕಲಶಂಗಳಲ್ಲಿ ಕಂಬಾರನಿಲ್ಲ.
ಆವಿಗೆ ಕಲಶಂಗಳಲ್ಲಿ ಅಸ್ತಿತ್ವ ಉಂಟಾಗಿಹ
ಕುಂಬಾರ ಕಂಬಾರನಂತಿಪ್ಪ ನೋಡಾ,
ಈ ಪ್ರಪಂಚದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ./714
ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?
ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?
ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,
ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆ
ತೆಲುಗ ಜೊಮ್ಮಯ್ಯನಾಗಬಲ್ಲರೆ?/715
ಕುಡಿ ನಿಮಿರ್ದ ದಾಡೆಗಳ
ಅಸುರಗಣದೃಷ್ಟಿಯ ಹರಹು ಮಂಡೆಯ
ಕೆಲಬಲದೊಂದು ದಾಡೆ ಆಕಾಶವನಳ್ಳಿರಿವುದು,
ಒಂದು ದಾಡೆ ಭೂಮಿಯನುತ್ತರಿಸುವುದು.
ಭೂಮಿ ಭೂತಕೋಟಿಯಾಗಿ ಸುತ್ತಿದಡೆ ಉದ್ದಂಡ.
ಭೂತ ತೊಂಡಾಣೆಯ ಮಾಣಿಸಯ್ಯಾ,
ಎಲೆ ಕಪಿಲಸಿದ್ಧಮಲ್ಲಿನಾಥಾ,
ನೀ ಸದ್ಧರ್ಮಿಯಾದಡೆ ಅಯ್ಯಾ./716
ಕುರಣಾಕರನೆ, ನಿನ್ನ ವಸವಾದಪ್ಪುದಯ್ಯಾ,
ಸಕಲ ಬ್ರಹ್ಮಾಂಡವು-ನಾನು ಸಹಿತವಾಗಿ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿನ್ನ ಕರುಣ ಕಾನನದೊಳಗೆ ಲೀಯವಾದೆ./717
ಕುರಿಯ ಹೆಸರು ಒಂದೆ, ಅಗ್ನಿಯ ಹೆಸರು ಒಂದೆ ಆದಲ್ಲಿ,
ಅಗ್ನಿಯ ಸಾಮಥ್ರ್ಯ ಕುರಿಗೆ ಬಂದೀತೇನಯ್ಯಾ?
ಕಪ್ಪೆಯ ಹೆಸರು ಹಾವಿನ ಹೆಸರು ಒಂದೆ ಆದಲ್ಲಿ,
ಹಾವಿನ ಸಾಮಥ್ರ್ಯ ಕಪ್ಪೆಗೆ ಬಂದೀತೇನಯ್ಯಾ?
ನನ್ನ ಹೆಸರು, ನಮ್ಮ ಶಿವಶರಣರ ಹೆಸರು ಒಂದೆ ಆದಲ್ಲಿ,
ಅವರ ಸಾಮಥ್ರ್ಯ ಎನಗೆ ಬಂದೀತೇನಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./718
ಕುರುಡು ಸೂಳೆಗೆ ಕುಂಟ ಬೊಜಗನು
ಕೋಲ ಹಿಡಿದು ನಡೆವಂತೆ ಸೂಳೆತನಗಳ ಮಾಡುವಿರಿ;
ಮೊಲೆ ಮುಡಿಗಳ ತೋರುವಿರಯ್ಯಾ.
ಶಿವಭಕ್ತ ಮರುಳ ಪ್ರಪಂಚುರಹಿತನು
ಕಪಿಲಸಿದ್ಧಮಲ್ಲಿಕಾರ್ಜುನ./719
ಕುಲಜ ಅಕ್ಕುಲಜರು ಜಾತ್ಯಜಾತರು ಬಂದು
ಕರಂಗಳ ಮುಗಿಯಲೊಡನೆ ಕರಗಳ ಮುಗಿವುಪ್ಪಡೆ
ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ./720
ಕುಲಜನಾಗಿ ನಾನೇವೆನಯ್ಯಾ?
ಕುಲದ ಬಳಿಯ ದೇವನಲ್ಲ, ಮನದ ಬಳಿಯ ದೇವನೈಸೆ.
ಆವ ಯೋನಿಜನಾದಡೇನು?
ನೀನೊಲಿದವನೆ ಕುಲಜನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./721
ಕುಲದಲ್ಲಿ ಶೂದ್ರನಾದಡೇನು
ಮನದಲ್ಲಿ ಮಹಾದೇವ ನೆಲೆಗೊಂಡವನೆ ವೀರಶೈವ ನೋಡಾ.
“ಕಾಂಚನಂ ರಜತಂ ತಾಮ್ರಂ ರಸಯೋಗಾತ್ಸುವರ್ಣತಾಂ
ತಥಾ ಶಿವಜ್ಞಾನರಸಾಚ್ಛೂದ್ರಃ ಸದ್ಯಃ ಶಿವತಾಂ ವ್ರಜೇತ್||’
ಎಂಬುದು ಸಟೆಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಂಗವೆ?/722
ಕುಲದಿಂದಧಿಕವೆಂದು ಹೋರಾಡುವ ಅಣ್ಣಗಳಿರಾ, ಕೇಳಿರಯ್ಯಾ.
ಬ್ರಾಹ್ಮಣನವ ಮಧುವಯ್ಯ, ಚಂಡಾಲನವ ಹರಳಯ್ಯ,
ದೂರ್ವಾಸನವ ಮಚ್ಚಿಗ, ಊರ್ವಶಿಯಾಕೆ ದೇವಾಂಗನೆ,
ಚಂಡಾಲನವ ಪರಾಶರ, ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ.
`ಜಪತಸ್ತಪತೋ ಗುಣತಃ’ ಕಪಿಲಸಿದ್ಧಮಲ್ಲಿಕಾರ್ಜುನಾ ಕೇಳಾ,
ಕೇದಾರಯ್ಯ./723
ಕುಲದ್ಲಯೂ ಅಧಿಕ ಜ್ಞಾನದಲ್ಲಿಯೂ ಅಧಿಕನಾಗಲಾಗಿ,
ಆ ಕುಲೀನ ಜ್ಞಾನವಂತನಲ್ಲಿ ಸಮರಸ ಸಲ್ಲದು ನೋಡಾ,
ಗುರುವೆ.
ಶಿವಶಕ್ತಿಯೆ ಸತ್ಕುಲ, ಶಿವಧ್ಯಾನವೆ ಸತ್ಕುಲ,
ಶಿವಪೂಜೆಯೆ ಸತ್ಕುಲ ನೋಡಾ ಗುರುವೆ.
ಶಿವಕಥಾವರ್ಣನವೆ ಸತ್ಕುಲ, ಶಿವಗೋಷ್ಠಿಯೆ ಸತ್ಕುಲ ನೋಡಾ
ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ./724
ಕುಲಮದ ಪೊತ್ತಲ್ಲಿ ಚಂಡಾಲಗಿತ್ತಿಯಾಗಿ ಕೆಡಿಸಿತ್ತು ಮಾಯೆ,
ಮಯೂರನೃಪಗೆ.
ಛಲಮದ ಪೊತ್ತಲ್ಲಿ ಮಾಂಸ ಭೋಗಿಸಿತ್ತು ಮಾಯೆ,
ವೀರ ವಿಕ್ರಮಗೆ.
ಧನಮದ ಪೊತ್ತಲ್ಲಿ ದರಿದ್ರವಾಗಿ ಕಾಡಿತ್ತು ಮಾಯೆ,
ಹರಿಶ್ಚಂದ್ರಂಗೆ,
ರೂಪಮದ ಪೊತ್ತಲ್ಲಿ ಕುರೂಪನ ಮಾಡಿತ್ತು ಮಾಯೆ,
ನಳಂಗೆ.
ಯೌವನಮದ ಪೊತ್ತಲ್ಲಿ ಹಿಡಿಂಬಿಯಾಗಿ ಕಾಡಿತ್ತು ಮಾಯೆ,
ಭೀಮಂಗೆ.
ವಿದ್ಯಾಮದ ಪೊತ್ತಲ್ಲಿ ಅಜ್ಞಾನವಾಗಿ ಕಾಡಿತ್ತು ಮಾಯೆ,
ಅಂದು ಪರ್ವತದಲ್ಲಿ ಕವಿ ವಾದಿಶೇಖರಂಗೆ.
ರಾಜಮದ ಪೊತ್ತಲ್ಲಿ ರಾಕ್ಷಸನ ಮಾಡಿತ್ತು ಮಾಯೆ,
ಮುಮ್ಮಡಿ ಸಿಂಗನೃಪಂಗೆ.
ತಪೋಮದ ಪೊತ್ತಲ್ಲಿ ಹಲವು ಆಗಿ ಕಾಡಿತ್ತು ಮಾಯೆ,
ವಿಶ್ವಾಮಿತ್ರಂಗೆ.
ಇಂತೀ ಅಷ್ಟಮದವಳಿದು ಅಷ್ಟಾವರಣ ಧರಿಸಿಪ್ಪ
ಮಹಾಗಣಂಗಳು ಲಯವಿಲ್ಲದ ರಾಜಯೋಗವ
ಪಡೆದಿಹರಯ್ಯಾ.
ಕಪಿಲಸಿದ್ಧಮಲ್ಲಿಕಾರ್ಜುನಾ./725
ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ:
ಕುಲವೇ ಡೋಹರನ? ಕುಲವೇ ಮಾದಾರನ?
ಕುಲವೇ ದೂರ್ವಾಸನ?
ಕುಲವೇ ವ್ಯಾಸನ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?
ಕುಲವ ನೋಳ್ಪಡೆ ಹುರುಳಿಲ್ಲ ;
ಅವರ ನಡೆಯ ನೋಳ್ಪಡೆ ನಡೆಯುವರು ತ್ರಿಲೋಕದಲ್ಲಿಲ್ಲ
ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./726
ಕುಲಾಕುಲ ಅನುಭವಕ್ಕಲ್ಲದೆ ಸಮರಸಕ್ಕೇನೋ ಅಯ್ಯಾ?
ವಾದವಿವಾದವೆಂಬುದು ಶಾಸ್ತ್ರದಲ್ಲಲ್ಲದೆ ಸಭೆಯಲ್ಲೇನ ಅಯ್ಯಾ?
ಹಾಸ್ಯಾಹಾಸ್ಯ ನುಡಿಗಡಣದಲ್ಲಲ್ಲದೆ
ನುಡಿಯುವ ಕಾಯದಲ್ಲೇನೋ ಅಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./727
ಕುಳಿಗರ್ಾಳಿಯೊಳು ಕುಳಿತಂತಲ್ಲದೆ
ಉದರದ ಕುಳಿ ತಂಪಾಗುವುದೆ ಅಯ್ಯಾ?
ಕುಳಿರ್ವಶವಿದ್ಯೆಯ ನೋಡಿದಂತಲ್ಲದೆ,
ಭವದ ಕುಳಿ ತಪ್ಪುವದೆ ಅಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./728
ಕೂಟದ ತುರೀಯದ ಬೇಟ ಮತ್ತೆರಡಾಗಿ,
ಆಟವನು ಆಡಿದೆನು ಚಿತ್ರತರದ.
ಕೂಟವೂ ಬೇಟವೂ ಆಟ ಮತ್ತೊಂದಾಗಿ,
ನೋಟಂಗಳನಿಮಿಷದ ದೃಷ್ಟಿ ನಟ್ಟು,
ತಾನು ತಾನಾಗೀಗ ಸಾನಂದ ಸಂಬಂಧ.
ಆನಂದ ಮುಕ್ತ್ಯಂಗನೈಕ್ಯನಾಗಿ
ಲೋಕದೊಳಗಿದ್ದು ಲೌಕಿಕನು ತಾನಲ್ಲದೆ
ಏಕೈಕನಾದೆ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./729
ಕೂಟದ ರಚನೆಯ ಸಂದಳಿದು ನೋಟ ನಿಮ್ಮ್ಲ ನಟ್ಟು
ಸಮಕಳೆ ಎಂದಪ್ಪುದಯ್ಯಾ, ಸಮರತಿ ಎಂದಪ್ಪುದಯ್ಯಾ.
ಹಂಗ ಹರಿದು, ದಂದುಗ ಉಡುಗಿ
ಎನ್ನನೆಂದಿಂಗೆ ಒಳಕೊಂಬೆಯೊ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ/730
ಕೂಟದ ಸುಖದಲ್ಲಿ ತನ್ನ ಮರೆಯದ
ಕೂಟವೇತಕಯ್ಯಾ?
ಪ್ರಾಣಲಿಂಗದ ಸಂಬಂಧದಲ್ಲಿ ಕರಣಂಗಳನರಿಯದ
ಪ್ರಾಣಲಿಂಗ ಸಂಬಂಧವೇತರದಯ್ಯಾ?
ಹಂಗುಳ್ಳನ್ನಬರ ಶರಣನಲ್ಲ.
ವ್ಯಾಕುಳದ ಹಂಗು ಹರಿದಡೆ ಆತ ಲಿಂಗೈಕ್ಯ
ಕಪಿಲಸಿದ್ಧಮಲ್ಲಿಕಾರ್ಜುನ ಸಹಗಮನಿ./731
ಕೂಟದ ಸುಖದಲ್ಲಿ ನೋಟ ಕಂಬೆಳಗಾಗೆ,
ಬೇಟಂ ದೆಸೆದೆಸೆವರಿದಳವ್ವೆ.
ಅವನಿಪ್ಪ ಗೂಢವನು ನೀನಿದರ್ಾಡಿಸುತ್ತೆಲವೊ
ನಿನ್ನನೆನ್ನಂಗದ ಕೊಲ್ಲದಿರ್ದಡೆ,
ಕಪಿಲಸಿದ್ಧಮಲ್ಲಿಕಾರ್ಜುನನಹೆ./732
ಕೂಟದ ಸುಖದಲ್ಲಿ ನೋಟ ಕಂಬೆಳಗಾಗೆ
ಬೇಟ ಬೇರುಂಟೆ ಹೇಳಾ? ಅವ್ವಾ.
ನೋಡಿದ ದೃಷ್ಟಿ ಎವೆ ಕುಂದದಡೆ
ಮೋಹದ ಪರಿಯೆಂತುಟು ಹೇಳಾ?
ನೋಟ ಬೇಟ ಕೂಟ
ಸಮಸುಖ ಸಮರತಿಯಾದರೆ ಕಪಿಲಸಿದ್ಧಮಲ್ಲಿನಾಥಯ್ಯ
ಬೇರಿಲ್ಲವವ್ವಾ./733
ಕೂಡುವ ತವಕವೆ ನಿಮ್ಮ್ಲ
ನೀ ಕೂಪನಾಗಿದ್ದ ಕೂಪೆ ನೋಡಯ್ಯಾ.
ನೀನೊಲ್ಲದಿದ್ದರೆ ಒಲ್ಲೆನಯ್ಯಾ.
ಎನ್ನರಿವು ಮರವೆ ಇಬ್ಬರಿಗೂ ಸಮ ನೋಡಯ್ಯಾ.
ಎನ್ನ ಬಯಕೆಯೊಳಗಣ ಬಯಕೆಯ
ನಿಧಾನವು ನೀನೆಂದು ಕಂಡ ಬಳಿಕ
ಬಯಸುವಾತ ನೀನೆ ಕಾಣಾ,
ಕಪಿಲಸಿದ್ಧಮಲ್ಲಿನಾಥಯ್ಯಾ./734
ಕೂಲಸೂತಕವಿಲ್ಲದ ಜಂಗಮ ಕೋಟ್ಯನುಕೋಟಿ.
ಮಲಮುಟ್ಟದ ಜಂಗಮ ಕೋಟ್ಯನುಕೋಟಿ.
ಶೀಲಸತ್ಯಸದಾಚಾರಿ ಜಂಗಮ ಕೋಟ್ಯನುಕೋಟಿ.
ಹಲವು ಹೊಳೆಯಬಾರದ ಜಂಗಮ
ಸುಳುಹಿನ ಕಳೆದೋರಿಸ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ ಮಹಾಮಹಿಮನು./735
ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೊ?
ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ
ಇನ್ನೆಂತೊ?
ಬೇಯದ ಅಶನವನುಂಬ ತಾವಾವುದು
ಕಪಿಲಸಿದ್ಧಮಲ್ಲಿಕಾರ್ಜುನಲಿಂಗಕ್ಕೆ?/736
ಕೃಸರಪದಾರ್ಥ ಕೃಷೀವಲರುಂಡರೆಂದಡೆ ಆಶ್ಚರ್ಯವೇನಯ್ಯಾ?
ನೃಪನುಂಡನೆಂದಡೆ ಆಶ್ಚರ್ಯ.
ಚರ್ಯಾತೀತ ಉಂಡನೆಂದಡೆ ಬಹು ಆಶ್ಚರ್ಯ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./737
ಕೆರೆ ತೊರೆ ದೇಗುಲಂಗಳ ಕಡೆಯಿಂದ ನಿಮ್ಮ ಕಂಡೆ,
ಎಡಹುವ ಕಲ್ಲ ತೆಗೆವ ಮರೆಯಲ್ಲಿ ನಿಧಾನವ ಕಂಡಂತೆ.
ಎನ್ನ ಮರವೆಯ ತಮದ ಅದ್ರಿಗೆ ದಿನಮಣಿ ಜನಿಸಿದಂತೆ.
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆಂಬ ಭ್ರಾಂತು ಸ್ವಯವಾಯಿತ್ತು.
ಪ್ರಭುದೇವರ ಕಾರುಣ್ಯದಿಂದ./738
ಕೆರೆಯ ಅಗಳುವ ಅಣ್ಣಂಗಳೆಲ್ಲ
ಮೂಲೋಕದೆರೆಯನ ಪಾದದಲ್ಲಿ ಬಿದ್ದು ಹೊರಳಾಡುತ್ತಾರೆ ನೋಡಾ
ದೊರೆಯ ಮಾರಾರಿಯನರಿದು ತ್ರಿಪುರಾರಿ ತಾವಾಗರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ./739
ಕೆರೆಯ ಕಟ್ಟಿಸುವವನೆ ಕರ್ಮಿ?
ಅಗ್ರವನೆತ್ತಿಸುವವನೆ ಪಾತಕಿ?
ಶಿವಾಲಯವ ಕಟ್ಟಿಸುವವನೆ ದ್ರೋಹಿ?
ಗುರುಹಿರಿಯರ ಕಂಡರೆ ನಮಿಸಿದಾತನೆ ಚಾಂಡಾಲ
ಸತ್ರಿಯಿಂದ ಶಿವಾರ್ಚನೆಯ ಮಾಡದಾತನೆ ಅನಾಚಾರಿ
ಇಂತೀ ಐವರನೊಳಗೊಂಬನೆ?
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ./740
ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,
ಆಗುವುದೆ ಆಗುವುದೆ ಲಿಂಗಾರ್ಚನೆ?
ನೀರೆರೆಯಕ್ಕಾತನೇನು ಬಿಸಿನಿಂದ ಬಳಲಿದನೆ?
ಪುಷ್ಪದಿಂದ ಧರಿಸಕ್ಕಾತನೇನು ವಿಟರಾಜನೆ?
ನಿನ್ನ ಮನವೆಂಬ ನೀರಿಂದ,
ಜ್ಞಾನವೆಂಬ ಪುಷ್ಪಂದ ಪೂಜಿಸಬಲ್ಲಡೆ
ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./741
ಕೆರೆಯಲ್ಲಿಯ ತೀರ್ಥ, ಮನದಲ್ಲಿಯ ಸರ್ವ ಜೀವದಯಾಪರತ್ವ
ಮೆೃದೆಗೆದಡೆ, ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ.
ನಮ್ಮಿರ್ವರ ಮುಂದೆ ಕೇದಾರ ಗುರುಗಳೆ ಸಾಕ್ಷಿ,
ಕಪಿಲಸಿದ್ಧಮಲ್ಲಿಕಾರ್ಜುನಾ./742
ಕೆಲವರು ಲಿಂಗವ ಪೂಜಿಸಿ ಪಡೆದರು ಗತಿಯ;
ಕೆಲವರು ಲಿಂಗವ ಪೂಜಿಸಿ ಪಡೆದರು ಮತಿಯ;
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ,
ಪಡೆಯಲಿಲ್ಲ ಅವನ ಜ್ಯೋತಿಯ?/743
ಕೇಳವ್ವಾ ಕೆಳದಿ, ನಾನಿದ್ದ ಪರಿಗಳ ಹೇಳುವೆ ನಿನಗೆ;
ಶಿಲೆಯ ಮೇಲೆ ಸೈವೆರಗಾಗಿ ತಲೆಯ ಬಿಟ್ಟಿದ್ದ ಪರಿಯ;
ವಾಯುಭಕ್ಷಕಳಾಗಿದ್ದ ಪರಿಗಳ ನೋಡವ್ವಾ.
ಆ ನಿದ್ದ ಪರಿಗಳ ಕಂಡು ಕರುಣಿಸಿ ಗಂಡನಾದನು
ಎನ್ನ ಕಪಿಲಸಿದ್ಧಮಲ್ಲಿನಾಥದೇವರ ದೇವ ನೋಡವ್ವಾ/744
ಕೇಳವ್ವಾ, ಕೆಳದಿ, ಹೋಗೆಲಗವ್ವಾ, ನೋಡವ್ವಾ ಕೆಳದಿ;
ಅವನಿಪ್ಪ ಠಾವಿನ ನೆಲೆಯೆನಗೆ ತೋರೆಲಗವ್ವಾ;
ಅವನಿಬ್ಬಟ್ಟೆಗಾರನು, ಇಬ್ಬೀಡಲಿಪ್ಪನು;
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಂಡೆನು, ಬಾರಾ./745
ಕೇಳವ್ವಾ, ಕೇಳವ್ವಾ ಕೆಳದಿ ಹೇಳುವೆ ನಿನಗೆ:
ಆಹಾ! ಕಂಗಳಲ್ಲಿ ಕಾಬೆ, ಮತ್ತೆ ಕಾಣೆ!
ಮನದಲ್ಲಿ ಹಿಡಿವೆ, ಹಿಡಿದು ಮತ್ತೆ ಕಾಣೆನವ್ವಾ!
ಮಿಂಚಿನ ರವೆರವೆಯಂತೆ ತೋರುವನಡಗುವ,
ನಮ್ಮ ಕಪಿಲಮಲ್ಲಿನಾಥದೇವನು!/746
ಕೇಳು ಕೇಳಾ, ಎಲೆ ಅಯ್ಯಾ,
ಆದಿ ಅನಾದಿ ಇಲ್ಲದಂದು ಬಸವಣ್ಣನೆ ಭಕ್ತ;
ನಾದ ಬಿಂದು ಕಳೆಗಳಿಲ್ಲದಂದು ನೀನೆ ಜಂಗಮ.
ಶಿವ-ಶಕ್ತಿಗಳುದಯವಾಗದ ಮುನ್ನ ಬಸವಣ್ಣನೆ ಭಕ್ತ.
ಸುರಾಳ-ನಿರಾಳವೆಂಬ ಶಬ್ದ ಹುಟ್ಟದ ಮುನ್ನ ನೀನೆ ಜಂಗಮ.
ಈ ಉಭಯ ಭಾವದಲ್ಲಿ ಭೇದವುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ?
ಬಸವಣ್ಣನಾರೆಂಬುದ ನಿಮ್ಮ ನೀವೆ ತಿಳಿದು ನೋಡಿ
ಕೃಪೆಮಾಡಾ ಪ್ರಭುವೆ./747
ಕೇಳು ಕೇಳಾ, ಎಲೆ ಅಯ್ಯಾ,
ಬಸವಣ್ಣನು ಅನಿಮಿಷಂಗೆ ಲಿಂಗವ ಕೊಟ್ಟ ಕಾರಣ ಮತ್ರ್ಯಕ್ಕೆ
ಬಂದೆನೆಂಬರು.
ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ
ಜೈನ ಚಾರ್ವಾಕ ಕಾಳಾಮುಖ ಎನಿಸುವ ಷಡ್ದರ್ಶನಾಗಳು ಹೆಚ್ಚಿ,
ವಿಭೂತಿ ರುದ್ರಾಕ್ಷಿ ಪಂಚಾಕ್ಷರವನರಿಯದೆ
ನರಕಕ್ಕೆ ಭಾಜನವಾಗಿ ಪೋಪರೆಂದು,
ದೇವರು ನಂದಿಕೇಶ್ವರನ ಮುಖವ ನೋಡಲು,
ಆ ಪ್ರಶ್ನೆಯಿಂದ ಬಂದನಯ್ಯಾ ಬಸವಣ್ಣ ಪರಹಿತಾರ್ಥನಾಗಿ.
ದೇವರು ದೇವಿಯರಿಗೆ ಪ್ರಣವಾರ್ಥವ ಬೋಧಿಸುವಾಗ
ದೇವಿಯರ ಮುಡಿಯಲ್ಲಿ ಹೊನ್ನ ತುಂಬಿಯಾಗಿ
ಷಣ್ಮುಖ ಕೇಳಿದ ಪ್ರಶ್ನೆಯಿಂದ ಬಂದನೆಂಬರಯ್ಯಾ, ಚೆನ್ನಬಸವಣ್ಣನು.
ಸಟೆ ಸಟೆ! ಆ ನುಡಿಯ ಕೇಳಲಾಗದು. ಅದೇನು ಕಾರಣವೆಂದಡೆ: ಷಡ್ವಿಧಸ್ಥಲಕ್ಕೆ ಸ್ಥಾಪನಾಚಾರ್ಯನಾಗಿ
ಸಕಲ ಪ್ರಮರ್ಥರ್ಗೆ ವೀರಶೈವವ ಪ್ರತಿಷ್ಠೆಯ ಮಾಡಲೋಸ್ಕರ
ಬಂದನಯ್ಯಾ ಚೆನ್ನಬಸವಣ್ಣನು.
ದೇವರ ಸಭೆಯಲ್ಲಿ ನಿರಂಜನನೆಂಬ ಗಣೇಶ್ವರನು
ಮಾಯಾಕೋಳಾಹಳನೆಂದು ಹೊಗಳಿಸಿಕೊಂಡು ಬರಲಾಗಿ
ಆ ಸಮಯದಲ್ಲಿ ದೇವಿಯರು ದೇವರ
ಮಾಯಾಕೋಳಾಹಳನಾದ ಪರಿಯಾವುದೆಂದು ಬೆಸಗೊಳಲು,
ಆ ಪ್ರಶ್ನೆಯಿಂದ ಪ್ರಭುದೇವರು ಮತ್ರ್ಯಕ್ಕೆ ಬಂದರೆಂಬರಯ್ಯಾ.
ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಸುಜ್ಞಾನಿ ನಿರಹಂಕಾರರ ಭಕ್ತಿಗೋಸ್ಕರ ಪ್ರತ್ಯಕ್ಷವಾಗಿ
ಬಸವಾದಿ ಪ್ರಮಥರ್ಗೆ ಬೋಧಿಸಿ,
ತನ್ನ ನಿಜಪದವ ತೋರಬಂದರಯ್ಯಾ ಪ್ರಭುದೇವರು.
ದಕ್ಷಸಂಹಾರದಿಂದ ಬರುವಾಗ ಗುಪ್ತಗಣೇಶ್ವರನ ನಿರಿ ಸೋಂಕಲು,
ಆ ಪ್ರಶ್ನೆಯಿಂದ ಬಂದನೆಂಬರಯ್ಯಾ ಮಡಿವಾಳನು.
ಸಟೆ ಸಟೆ! ಆ ನುಡಿಯ ಕೇಳಲಾಗದು,
ಅದೇನು ಕಾರಣವೆಂದಡೆ: ಬಿಜ್ಜಳ ಪರವಾದಿಗಳ ಸಂಹರಿಸಲೋಸ್ಕರ
ಬಸವಣ್ಣನ ನಿಮಿತ್ತವಾಗಿ ಬಂದನಯ್ಯಾ ಮಡಿವಾಳ ಮಾಚಯ್ಯಗಳು.
ಇಂತಿವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳಿಗೆ
ವಾಸನಾಧರ್ಮವೆಂದಡೆ ಅಘೋರ ನರಕ ತಪ್ಪದಯ್ಯಾ.
ಇವರು ಮುಖ್ಯವಾದ ಪ್ರಮಥ ಗಣಂಗಳಿಗೆ ಶಾಪವೆಂದು ಕಲ್ಪಸಿದಡೆ,
ನಾಯಕ ನರಕ ತಪ್ಪದು, ಎಲೆ ಶಿವನೆ
ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮಾಣೆ/748
ಕೇಳು ಕೇಳೆನ್ನ ಭಾಷೆ, ಅರಿದು ಕಂಡಾ ಅವ್ವಾ,
ನಲ್ಲನೊಮ್ಮೆ ತೋರಿದಡೆ ಎನ್ನ ಸರಿಹರಿ ನೋಡಿದೆ ಅವ್ವಾ.
ಕಪಿಲಸಿದ್ಧಮಲ್ಲಿನಾಥ ರೂಪಂಬಿಟ್ಟು ಅಗಮ್ಯನಾದಡೆ
ಅಗಮ್ಯ ರೂಪಂಬಿಡಿಸಿ ಹಿಡಿವೆನೆ ಅವ್ವಾ./749
ಕೈಗಳ ಬಿಚ್ಚಿ ಬಿಸಾಟಡೆ ಬಿಡೆನು !
ಮೈಗಳ ಕಡಿದು ಹರಹಿದಡೆ ಬೆಡೆನು, ಬಿಡೆ ನಿಮ್ಮ ಚರಣವ.
ತನುವಳಿದಡೆ ಜ್ಙಾನತನುವಿನಿಂದ ಕೊಡುವೆ
ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ./750
ಕೈಯಲ್ಲಿ ಹಿಡಿದು ಕಾಬುದು ಕರ್ಮಪೂಜೆಯಲ್ಲವೆ?
ಮನದಲ್ಲಿ ನೆನೆದು ಮಾಡುವುದೆಲ್ಲವು ಕಾಯದ ಕರ್ಮವಲ್ಲವೆ?
ಭಾವಶುದ್ಧವನರಿವ ಪರಿ ಇನ್ನಾವುದು?
ಕಪಿಲಸಿದ್ಧಮಲ್ಲಿಕಾರ್ಜುನ./751
ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ.
ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ.
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು.
ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ.
ಇದರಾಡಂಬರವೇಕಯ್ಯಾ?
ಎಮ್ಮ ಪುರಾತರಿಗೆ ಸದಾಚಾರದಿಂದ ವ್ರ್ಕಸಿ,
ಅಂಗಾಂಗ ಸಾಮರಸ್ಯವ ತಿಳಿದು,
ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./752
ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು
ಕಂಡ ಕಂಡ ಪುರುಷನನಪ್ಪಲು
ಅಪ್ಪಿನ ಸುಖ ಸಂತಾನವಾಯಿತ್ತೆನಗೆ.
ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು
ಕರಣಿಕ ಹೇಳಿದನಯ್ಯಾ ಮೂವತ್ತಾರು ಕುಮಾರರನು.
ಆ ಕುಮಾರನ ಕೂಟದಲ್ಲಿರಲು, ಹೆತ್ತ ಮಕ್ಕಳ ಕೂಟವೆಂದಡೆ,
ಹುಟ್ಟಿದರಯ್ಯಾ, ಇನ್ನೂರ ಹದಿನಾರು ರಾಜಕುಮಾರರು.
ಆ ಕುಮಾರರ ಚೆಲುವಿಕೆಯ ಕಂಡು,
ಆ ಚೆಲುವಿಕೆಯ ಮಕ್ಕಳ ನೆರೆಯಲು
ಪತಿವ್ರತೆಯೆನಿಸಿಕೊಂಡು, ಒಬ್ಬನೆ ಪುರುಷನೆಂದಳಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಹೆಂಡ್ಕ/753
ಕೋಟಿ ಕೋಟಿ ಜನ್ಮವ ತಾಳಿ ಕೋಟಲೆಗೊಳುವುದೇಕಯ್ಯಾ?
ಕೋಟಿಯೊಳಗರ್ಧ, ಅರ್ಧದೊಳಗರ್ಧ ನಾಟಿಸಿದೆ.
`ನಮಃ ಶಿವಾಯ’ ಎಂದಡೆ, ಕೋಟಿ ಕೋಟಿ ನರಕಂಗಳನೀಡಾಡಿ,
ಮಹಾದೇವಿಯರ ಮಂರದ ಕೋಟೆಯನೇರಿಸಿತ್ತು.
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./754
ಕೋಡಗಂಗೆ ನಾಲ್ಕರ ಚೇಳು ಕಡಿಯಿತ್ತು ನೋಡಾ.
ಚೇಳೊಂದರ ಮೂಲಿಕೆ ಹಾಳು ಮಾಡಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./755
ಕ್ರಿಯಾಜ್ಞಾನ ಎಂಬುದಕ್ಕೆ ಭೇದ ್ಕಲಾಂಶವಿಲ್ಲ, ನೋಡಾ.
`ದ್ವಂದ್ವೇನ ಭೇದಃ’ ಎಂಬ ಅಥರ್ವಣಶಾಖೆಯದು ಸಟೆಯೆ?
ಸೂಕ್ಷ್ಮೇಂ್ರಯ ನಿಗ್ರಹದ್ಲ ಜ್ಞಾನವೆನಿಸಿತ್ತು.
“ಜ್ಞಾನಂ ವಿನಾ ಕ್ರಿಯಾ ನೋ ಭ್ಕಾ,
ಕ್ರಿಯಾಂ ವಿನಾ ನೋ ಭ್ಕಾ ತತ್’
ಎಲೈ ಕಪಿಲಸಿದ್ಧಮಲ್ಲಿಕಾರ್ಜುನ./756
ಕ್ರಿಯೆ ಎಂಬುದು ಪಿಪೀಕನ ಗುಣ.
ಜ್ಞಾನವೆಂಬುದು ವಿಹಂಗದ ಗುಣ.
ಮೆಲ್ಲಮೆಲ್ಲನೆ ್ಕಳಿದ್ಲ ಕ್ರಿಯೆ ಎನಿಸಿತ್ತು ;
ಏಕಕಾಲಕ್ಕಳವಟ್ಟ್ಲ ಕಪಿಲಸಿದ್ಧಮಲ್ಲಿಕಾರ್ಜುನನ ಮನೆಯ
ಸೂರೆಗೊಂಬ ತಸ್ಕರಜ್ಞಾನವೆನಿಸಿತ್ತು, ಮರುಳು ಶಂಕರಯ್ಯಾ./757
ಕ್ರಿಯೆಗಳ್ಲ ಭೇದವಲ್ಲದೆ ಜ್ಞಾನದ್ಲ ಭೇದವಿಲ್ಲಯ್ಯಾ.
`ಕ್ರಿಯಾಸು ಶತಶೋ ಭೇದಾ ಜ್ಞಾನಮೇಕಂ ವಿರಾಜತೇ|
ಸುರುಚೀನಿ ಪದಾಥರ್ಾನಿ ಜಿಹ್ವೆ ್ಯಕ್ಯವ ವಿರಾಜತೇ||’
ಎಂಬುಪನಿಷತ್ತು ಪುಸಿಯಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./758
ಕ್ರಿಯೆಯದು ಚೆನ್ನಬಸವಣ್ಣನ ಎಡಪಾದ,
ಜ್ಞಾನವದು ಚೆನ್ನಬಸವಣ್ಣನ ಬಲಪಾದ,
ನಾನವರ ಚಮ್ಮಾವುಗೆ, ನೀನವರ ಮನೆದಾಸ, ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./759
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ;
ಗುರುವಿನ ಗದ್ದುಗೆ ಬೇಕಿಲ್ಲ ;
ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ;
ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು
ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ./760
ಕ್ರೀವಿಡಿದು ಆಚರಿಸಬೇಕಲ್ಲದೆ, ಅಕ್ರೀಯೊಡನಾಚರಿಸಲಾಗದು.
ಙ್ಙಆನವಿಡಿದು ನೋಡಬೇಕಲ್ಲದೆ, ದೃಷ್ಟಿವಿಡಿದು ನೋಡಬಾರದು,
ಲಿಂಗವಿಡಿದು ಪೂಜಿಸುವುದಲ್ಲದೆ, ಅಂಗವಿಡಿದು ಪೂಜಿಸಲಾಗದು,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./761
ಕ್ಲುಪ್ತವ ಮಾಡಿ ತನಗೆ ಬೇಕೆನ್ನ ಪ್ರಸಾದಿ ಬಸವಣ್ಣ.
ಬಂದುದನತಿಗಳೆದು `ಅಲ್ಲ ಒಲ್ಲೆ’ ಎನ್ನ ಪ್ರಸಾದಿ ಬಸವಣ್ಣ.
ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಲೋಪಮಾಡಿದ
ಪ್ರಸನ್ನ ಪ್ರಸಾದಿ ಕಾಣಾ, ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./762
ಕ್ಷೀರ ಶರಧಿಯೊಳಿರುವ ಹಂಸೆಗೆ
ಅನ್ಯ ಕ್ಷೀರದ ಹಂಗುಂಟೇನಯ್ಯಾ?
ಸುಗಂಧಮಯ ಪುಷ್ಪದಲ್ಲಿರುವ ಭೃಂಗಂಗೆ
ಅನ್ಯ ಪರಿಮಳದ ಹಂಗುಂಟೇನಯ್ಯಾ?
ಸಮುದ್ರದೊಳಿರುವ ಮಂಡೂಕಂಗೆ
ಅನ್ಯ ಅಂಬುವಿನ ಹಂಗುಂಟೇನಯ್ಯಾ?
ಮೊಲೆಯನುಣ್ಣುವ ಶಿಶುವಿಂಗೆ
ಅನ್ಯ ಕ್ಷೀರ ನೀರಿನ ಹಂಗುಂಟೇನಯ್ಯಾ?
ಸಕಲಪ್ರದಾಯಕ ಲಿಂಗದೊಳಿದ್ದ ಶರಣಂಗೆ
ಅನ್ಯ ಪದದಾಶೆಯ ಹಂಗುಂಟೇ?
ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ./763
ಖರಕರ ಕೋಟಿ ಪ್ರಭೆ
ಪ್ರಭೆಯಂ ಮೀರಿಪ್ಪ ತೆರಹುಗೆಟ್ಟ ಸೀಮೆಯಲ್ಲಿ
ಬಿಂದು ಭೇದವಾದ
ಅಯ್ಯದಂದವನಾರು ಬಲ್ಲರು?
ಆನಂದ ಸಚ್ಚಿದಾನಂದ ಸ್ಥಾನದಲ್ಲಿ
ಶೂನ್ಯ ಕಾನನದೊಳಪ್ಪಿರವ್ವಾ
ಅರಿವ ನಿನ್ನುವನು
ಎಲೆ ಕುರುಹಿಲ್ಲದ ಸೀಮನೆ,
ಕಪಿಲಸಿದ್ಧಮಲ್ಲಿಕಾರ್ಜುನನ
ನೆನಹಿನ ಬ್ರಹ್ಮಾಂಡವಡಗುವವೆ ಅಯ್ಯಾ./764
ಗಂಗೆಯ ಮುಳುಗಿ ಬಂದವರೆಲ್ಲಾ ಪಾಪವ ಮಾಡಿ ಸತ್ತಡೆ,
ಅವರಿಗೆ ಪುಣ್ಯದ ಪದವಿಯುಂಟಾದಡೆ, ಗಂಗೆ ಘನವೆಂಬೆ,
ಮುಳುಗಿ ಪಾಪವ ಮಾಡದೆ ಸತ್ತು ಹೋದಡೆ,
ಪುಣ್ಯದ ಪದವಿಯವರಿಗುಂಟಾದಡೆ ಘನವೆಂಬೆ,
ಕಪಿಲಸಿದ್ಧಮಲ್ಲಿಕಾರ್ಜುನ./765
ಗಂಗೆಯೆ ಘನ ಮುಟ್ಟಿದ ಪ್ರಾಣಿಗಳೆಲ್ಲಾ ದೇವತೆಗಳೆಂದಡೆ,
ಗಂಗೆಯ ಸಂಚಾರ ಸಾವಿರಾರು ಗಾವುದ.
ಅದರಲ್ಲಿಯ ಪ್ರಾಣಿಗಳು ಅನಂತಾನಂತ.
ಇಷ್ಟು ಜೀವಿಗಳೆಲ್ಲಾ ದೇವರಾದಡೆ,
ಸ್ವರ್ಗದಲ್ಲಿ ನಿಯಮಿತ ದೇವತೆಗಳೆಂಬುದು ಅಪ್ರಸಿದ್ಧ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ./766
ಗಂಡ ಬಾರನು ಎನ್ನ ತವರೂರಿಗೆ ಹೋಗುವೆವೆನಲು,
ನೋಡೆ, ನೋಡೆಲಗವ್ವಾ
ಬೇಟೆಯನಾಡುವ ನಾಯತಲೆಯ ಕೊಯ್ದಿಟ್ಟು,
ತಾ ಬೇರೆ ಬೇಟಕಾರನಾದ.
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ನೆಲೆಯಲ್ಲಿ ನಿಲವ ಕೊಂಡನು;
ಹುಚ್ಚನ ಸಂಗ ನಿಶ್ಚಯವಾಯಿತು./767
ಗಂಡನ ಕಂಡ ಹೆಂಡತಿ ಭಂಡಾದಳು;
ನಕ್ಕರು ನಾಣುಗೆಟ್ಟರೈವತ್ತು ಕೋಟಿ ಮಂ.
ಉಂಡವರುಪವಾಸಿಗಳಾದರು
ಕಪಿಲಸಿದ್ಧಮಲ್ಲಿನಾಥಯ್ಯಾ./768
ಗಂಧವೃಕ್ಷವ ಕಡಿದಲ್ಲಿ
ನೊಂದೆನೆಂದು ಗಂಧವ ಬಿಟ್ಟಿತ್ತೆ ಅಯ್ಯಾ?
ಚಂದದ ಸುವರ್ಣವ ತಂದು ಕಾಸಿ ಬಡಿದಡೆ,
ನೊಂದನೆಂದು ಕಳಂಕ ಹಿಡಿಯಿತ್ತೆ ಅಯ್ಯಾ?
ಸಂದು ಸಂದು ಕಡಿದ ಕಬ್ಬು ಯಂತ್ರದಲ್ಲಿಟ್ಟು ತಿರುಹಿ ಕಾಸಿದಡೆ,
ನೊಂದೆನೆಂದು ಸಿಹಿಯಾಗುವುದ ಬಿಟ್ಟಿತ್ತೆ ಅಯ್ಯಾ?
ತಂದು ತಂದು ಭವಕಟ್ಟಿಬಿಟ್ಟಡೆ,
ನಿಮ್ಮರಿವು ಬಿಟ್ಟೆನೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ/769
ಗಟ್ಟಿ ಹಿಡಿದು ಗೊತ್ತ ಮುಟ್ಟಬಾರದಯ್ಯಾ.
ನೀರಲ್ಲಿಯ ಕ್ರೀಡೆ ಕುಂಬಳಕಾಯಿಗಲ್ಲದೆ
ದೊಡ್ಡ ಬಂಡೆಗುಂಟೇನಯ್ಯಾ?
ಚರಿಸುವ ಜೀವಿಗೆ ನಿರ್ವಯಲ ಪರವಸ್ತು ಲಿಂಗವಲ್ಲದೆ,
ಪಾಷಾಣಮಯ ಲಿಂಗವೆ ಅಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ?/770
ಗಡಣ ಸಂಗಮದಲ್ಲಿ ಮೃಡನನರ್ಚಿಸ ಬಂದೆ
ಮೃಡ ಸಿಲುಕುವನುವಲ್ಲ ನಿನ್ನ ಕರದ.
ಕರ ಕರದ ಸಂಬಂಧ ಸಿಲುಕುವನ
ಸಾಯುಜ್ಯ ಕರದಿಂದ ಮೇಲೆ ತಾ
ಮಂಗಳಾಂಗ ಬೆಳಗುವಂ ದೀಪ್ತಿಯ.
ನೆನಹು ಅಕ್ಷರದ್ವಯದ ಅನುಮಿಷದ ಸಿದ್ಧ ಆದ್ಯಂತ
ಶೂನ್ಯ ಕಪಿಲಸಿದ್ಧಮಲ್ಲಿಕಾರ್ಜುನನ
ಭೇದ ಭೇದಿಗೆ ಅಲ್ಲದೆ ವೇದ್ಯವಲ್ಲ./771
ಗಣಿತ ಒಂದಕ್ಕೆ ಪೂಜೆ ಒಂದೆರಡು ಮೂರಾದಲ್ಲಿ
ಹತ್ತು ಶತ ಸಹಸ್ರವೆನಿಸಿತ್ತಯ್ಯಾ.
ಪರಾತ್ಪರವಸ್ತು ಉಪಾಧಿವಶದಿಂದ
ಈಶತ್ವ ಜೀವತ್ವ ಪ್ರಕೃತಿ ಮೊದಲಾದ ಇಂದ್ರಜಾಲವಾಯಿತ್ತು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./772
ಗಮನವರಿತು ಸುಳಿಯಬಲ್ಲಡೆ
ಆಪ್ಯಾಯನವರಿತು ಉಣಬಲ್ಲಡೆ
ಇಚ್ಛೆಯರಿತು ಬೇಡಬಲ್ಲಡೆ
ಈ ತ್ರಿವಿಧ ಗುಣದ ಅನುವ ಬಲ್ಲವರು
ದೇವರಿಗೆ ದೇವರಾಗಿಪ್ಪರು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ./773
ಗರ್ಭದಾ ಅಂತ್ಯದಲ್ಲಿ ಒಬ್ಬನೆಯಿದ್ದ
ಅಯ್ಯಾ, ಸರ್ಬಗತ ನೀನೆ ಕಂಡಾ ಅಯ್ಯಾ.
ಒಂದೊಂದು ಪರಿಯಲ್ಲಿ
ಆಡುವಾನಂದ ಗುಣವ ನೋಡಯ್ಯಾ.
ಶೂನ್ಯ ಶೂನ್ಯಕಾಯನಾ
ಕರಸ್ಥಲಕೆ ದೇವನಾದೆ
ಕಪಿಲಸಿದ್ಧಮಲ್ಲಿಕಾರ್ಜುನ./774
ಗರ್ಭವಿದ್ದಂಗನೆಗೆ ಒಮ್ಮೆ ಸಂಭ್ರಮವಲ್ಲದೆ,
ಗರ್ಭಗರ್ಭಕ್ಕೊಮ್ಮೆ ಸಂಭ್ರಮವಿಲ್ಲ ನೋಡಾ, ಗುರುವೆ.
ನೀನಿದ್ದ ಭಕ್ತಿಗೊಮ್ಮೆ ಒರೆದು ನೋಡಬಾರದು ನೋಡಾ,
ಗುರುವೆ.
ನಾನಿದ್ದ ಕೇರಿಯವರೆಲ್ಲರ ಒಮ್ಮೆ ಲಜ್ಜಿಸಬಹುದಲ್ಲದೆ,
ಮತ್ತೆ ಮತ್ತೆ ಲಜ್ಜಿಸುವುದು ಬೇಡ,
ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ./775
ಗಾರಪ್ಪ ವರ್ಗವನು ತೋರಬಲ್ಲಡೆ ಯೋಗಿ
ತೋರಿ ತೋರಿಯೆ ಮೀರಿ ಸಾದಾಖ್ಯದ
ದೇಹ ಪ್ರಪಂಚುವಯೆಯ್ದಿಯೆಯ್ದದ ಆತ
ಆನಂದ ಶಿವಯೋಗಿ ಕಪಿಲಸಿದ್ಧ ಮಲ್ಲಿಕಾರ್ಜುನಾ./776
ಗಿರಿಗಹ್ವರದೊಳಗರಸಿ ತೊಳಲಿ ಬಳದೆನವ್ವಾ.
ನೋಡಿ ನೋಡಿ ಕಣ್ಣು ನಟ್ಟಾಲಿ ಬಿದ್ದವವ್ವಾ.
ನೀನು ಗುರುವಾಗಿ ಬಂದು ಎನ್ನ ಭವವ ಹರಿದೆ.
ನೀನು ಭಕ್ತ ಕಾರಣ ಪರಶಿವಮೂರ್ತಿಯೆಂದರಿದೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./777
ಗುಣ ನೋಡಿ ಬಿಟ್ಟವ ಕ್ಷೀರಘೃತವ ಕಾಣದೆ ಹೋದನಯ್ಯಾ.
ಗುಣ ನೋಡಿ ಹಳಿದವ ಅರುಹಿನ ಕುರುಹ ಅರಿಯದೆ
ಹೋದನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./778
ಗುಣ ನೋಡುವಡೆ ಕೀಳು ಗುಣವಯ್ಯಾ ಧೇನುವಿನಲ್ಲಿ.
ನಿಂದಿಸುವ, ಬಂದ ಭಕ್ತರ ಹಾದು ಹೋಗುವ ಕುಂದುವಡೆಯದೆ,
ಮಲತ್ರಯ ಪೊಂದದ ಸಚ್ಚಿದಾನಂದ ಗುಣವುಂಟಯ್ಯಾ
ಮಹೇಶನಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./779
ಗುಣದಿಂದ ಹಾರುವನಲ್ಲದೆ, ಅಗಣಿತ ವಿದ್ಯಾಭ್ಯಾಸದಿಂದ
ಹಾರುವನಲ್ಲ.
ಹಾರುಬೇಕು ಮಲತ್ರಯಂಗಳ; ಹಾರಬೇಕು ಸೃಷ್ಟಿ-ಸ್ಥಿತಿ ಲಯವ;
ಹಾರಬೇಕು, ಸರ್ಪಹಾರ ಕಪಿಲಸಿದ್ಧಮಲ್ಲಿಕಾರ್ಜುನನ ಆ
ಹಾರದಲಿ/780
ಗುಣವ ನೋಡದೆ ಹೊಗಳುವ ಜಂಗಮವು ಬ್ರಹ್ಮನ ಸಂತತಿ.
ಕಾಡಿ ಬೇಡುವ ಜಂಗಮವು ನಾರಾಯಣನ ಸಂತತಿ.
ವ್ಯಾಪಾರಿಕ ಜಂಗಮವು ಈಶ್ವರನ ಸಂತತಿ.
ಹೊಗಳದೆ, ಕಾಡದೆ, ಬೇಡದೆ,
ಬಲಾತ್ಕಾರದಿಂದುಣ್ಣದೆ, ವ್ಯವಹರಿಸದೆ,
ಭಿಕ್ಷಮುಖದಿಂದುಂಬ ಜಂಗಮವ ನೋಡಿ,
ಎನ್ನ ಮನ ನೀವೆಂದು ನಂಬಿತ್ತಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./781
ಗುದ್ದಾ[ಡಿ] ರತ್ನವ ಕದ್ದು ಒಯ್ಯಬಲ್ಲಡೆ ಭಕ್ತನೆಂಬೆ.
ಮುದ್ದುಳ್ಳನ್ನವ ಮೆದ್ದಬಲ್ಲಡೆ ಮಹೇಶನೆಂಬೆ.
ಜಿದದಿನ ಭಕ್ತಿಯ ಗೆದ್ದು ಒಯ್ದಡೆ,
ಕಪಿಲಸಿದ್ಧಮಲ್ಲನ ಮನೆಯ ಮುದ್ದುಕುಮಾರನೆಂಬೆ ನೋಡಾ,
ಮಡಿವಾಳ ಮಾಚಣ್ಣನೆ./782
ಗುರು ಏರಿದ ಮಂಚವನೇರಿದನಾದಡೆ,
ಕಾಲ್ಗಳು ಹರಿದು ಹೋಗಲಿ ದೇವಾ.
ಗುರು ಹೊದ್ದ ವಸ್ತ್ರವ ಹೊದ್ದೆನಾದಡೆ,
ಚರ್ಮವು ಸುಲಿದು ಹೋಗಲಿ ದೇವಾ.
ಗುರು ಮುಟ್ಟಿದ ಪದಾರ್ಥವ ಮುಟ್ಟಿದೆನಾದಡೆ,
ಪುಳುಗೊಂಡವ ಮಾಡ ಕಪಿಲಸಿದ್ಧಮಲ್ಲಿಕಾರ್ಜುನದೇವ./783
ಗುರು ತೋರಿದಡೆ ಕೀಲು ಇಂದರಿದು ಬಂದಿತ್ತೆಲಗವ್ವಾ.
ನಾರೀಪರನೆಂಬಲ್ಲಿ ನಾರಿಯಾದೆನೆಲೆಗವ್ವಾ, ಇನ್ನಾರೆ!
ನೆರೆಯಬೇಕಾದಡೆ, ಗಂಡ ಕಪಿಲಸಿದ್ಧಮಲ್ಲಿಕಾರ್ಜುನ,
ಬಯಗೆ ಬಯಲಾಗಿ ಏಕವಾದನೆಲಗವ್ವಾ./784
ಗುರು ತೋರಿದನು ಲಿಂಗ- ಜಂಗಮವ.
ಪಾದೋದಕ-ಪ್ರಸಾದವ ಕೊಳಹೇಳಿದನಲ್ಲದೆ
ಇವ ತೊರೆಯ ಹೇಳಿದನೆ?
ಅಹಮ್ಮೆಂದು ಪ್ರಸಾದದ್ರೋಹಿಗಳಾಗಿ,
ನಾನೆ ಎಂದು ಲಿಂಗದ್ರೋಹಿಗಳಾಗಿ,
ವಿಭೂತಿ-ರುದ್ರಾಕ್ಷಿ ಸಾಕ್ಷಾತ್ ಶಿವನೆಂದರಿಯದೆ,
ಅವರಾಚರಣೆಯ ನೋಡಿ ನಿಂದಿಸಿ
ಜಂಗಮದ್ರೋಹಿಗಳಾಗ ಹೇಳಿದನೆ?
ಜಂಗಮದಲ್ಲಿ ಜಾತಿಯ, ಪ್ರಸಾದದಲ್ಲಿ ರುಚಿಯ,
ಂಗದ್ಲ ಮೃದುವನರಸುವ, ಸಮಯದ್ಲ ವಿಶ್ವಾಸವಿಲ್ಲದ
ಮಿಟ್ಟಿಯ ಭಂಡರ ತೋರರಯ್ಯಾ ಎನಗೆ
ಕಪಿಲಸಿದ್ಧಮಲ್ಲಿಕಾರ್ಜುನ./785
ಗುರು ಮುಟ್ಟಿ ಬಂದ ಶುದ್ಧ ಪ್ರಸಾದಿಯಾದಡೆ,
ವಾತ ಪಿತ್ತ ಶ್ಲೇಷ್ಮವಳಿದಿರಬೇಕು.
ಲಿಂಗ ಮುಟ್ಟಿ ಬಂದ ಸಿದ್ಧ ಪ್ರಸಾದಿಯಾದಡೆ,
ಆದಿವ್ಯಾಧಿಗಳಿಲ್ಲದಿರಬೇಕು.
[ಜಂಗಮ ಮುಟ್ಟಿ ಬಂದ ಪ್ರಸಿದ್ಧ ಪ್ರಸಾದಿಯಾದಡೆ,
ಅಜ್ಞಾನರೋಗವಿಲ್ಲದಿರಬೇಕು.]
ಮೂರರ ಅರುಹು ಗಟ್ಟಿಗೊಳ್ಳುವ ಮಾಹಾಪ್ರಸಾದಿಯಾದಡೆ,
ಮರಣವಿಲ್ಲದಿರಬೇಕು.
ಪ್ರಸಾದ ಪ್ರಸಾದವೆಂದು ತ್ರಿವಿಧ ಪ್ರಸಾದವ ಸೇವಿಸಿ,
ಸರ್ವರಂತೆ ಮಲತ್ರಯಕ್ಕೊಳಗಾಗುವರ
ಪ್ರಸಾದಿಗಳೆಂದು ನಂಬದಿರಾ,
ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ ಕಬ್ಬಿಲರಿರಾ./786
ಗುರು ಶಿಷ್ಯಾನಂದವ ಮನಸಿಗೆ ಬಂದಂತೆ
ಹೇಳುವೆನು ಎಲೆ ಅವ್ವಾ.
ಬಾಲನ ಮಾತಿಗೆ ಮಾತೆಪಿತರಿಗೆ ಪ್ರೀತಿಯಪ್ಪಂತೆ
ಎನ್ನ ಮಾತ ಆಲಿಸುವವರು ಶಿವಭಕ್ತರು,
ಎನ್ನ ಮಾತಾ ಪಿತರು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ./787
ಗುರು ಸಮಾಧಿಯ ಸಮ ತನ್ನ ಸಮಾಧಿಯ ಮಾಡಲಂದು,
ವೀರವಿಕ್ರಮಚೋಳನ ದೇಹ ಬಯಗೆ ಬಾಯಿದೆರೆದು
ಬರಲಿಲ್ಲವೆ?
ಗುರು ಸಮಾಧಿಯ ಮುಂದೆ ತನ್ನ ಸಮಾಧಿಯ ಮಾಡಲಂದು,
ರಾಜೇಂದ್ರಚೋಳನ ದೇಹ ಎದ್ದು ನಮಿಸಿ ಸಮಾಧಿಯ
ಹೋಗಲಿಲ್ಲವೆ?
ಇದರ ಕೀಲ ಪ್ರಮಥರು ಅರಿಯರೆ?
ಇದರಂದವ ಗೌರಿ ನಾಗಾಯಿ ಅರಿಯಳೆ?
ಇದರ ಕೀಲ ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ರಾಣಿ
ನೀಲಾಂಬಿಕೆಯರಿಯಳೆ ಸೊಡ್ಡಯ್ಯಾ?/788
ಗುರುಗದ್ದಿಗೆಯ ಏರಿದಲ್ಲಿ ಭೇದವಿಲ್ಲೆಂಬರಿವು ಅಚ್ಚೊತ್ತಿದಡೆ,
ಹೇಳುವೆ ಕೇಳಯ್ಯಾ;
ಗುರುಗದ್ದಿಗೆಯಲ್ಲಿ ಹರಿವ ಮಶಕ ತಿಗುಣಿಗಳಿಗೆ ಅಭೇದವೊ
ಭೇದವೊ?
ಅಲ್ಲಿ ಭೇದಾಭೇದವೆಂಬ ಜ್ಞಾನವಿಲ್ಲ.
ಇದು ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ಮನಕ್ಕೆ ಸೊಗಸದು,
ಕೇಳಾ ಪ್ರಭುವೆ./789
ಗುರುಪಾದುಕೆಯ ಮೆಟ್ಟಿ
ಅಮರಗುಂಡದ ಮಲ್ಲಿಕಾರ್ಜುನಭೃತ್ಯ ಭಂಗಬಟ್ಟು
ಗುರುಕರುಣವ ಪಡೆಯಲಿಲ್ಲವೆ?
ಗುರುಪಾದುಕೆಯ ಮೆಟ್ಟಿ
ಅಮರಶೇಖರನೆಂಬರಸು ಪಾದವ ಕಡಿಸಲ್ಲವೆ?
ಗುರುಪಾದುಕೆಯ ಮೆಟ್ಟಿ
ರಾಜೇಂದ್ರಚೋಳ ತನ್ನ ರಾಣಿಯ ಸಂಗ ಬಿಡಲ್ಲವೆ?
ಗುರುಪಾದುಕೆಯ ಮೆಟ್ಟಿ
ಸಿಂಹಚೋಳ ಪಂಡಿತರ ಪಾದ ತುಂಡಿಸಲ್ಲವೆ?
ಇದು ಕಾರಣ,
ಗುರುಪಾದುಕೆ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನನ
ಪೂಜೆಯ ಚಮ್ಮಾವುಗೆಂದು ನಂಬಿದೆ.
ಹುಸಿಯಾದಡೆ, ಪ್ರಮಥಸಂಕುಲದಲ್ಲಿ ಗುರು ಕೊಟ್ಟ
ಗುರುಮೂರ್ತಿ ಇಲ್ಲದಂತೆ ಮಾಡಾ ಪ್ರಭುವೆ./790
ಗುರುಪಾದೋದಕ ಸಕಲಕ್ರಿಯೆಗಳಿಗೆ ಬರುವುದು.
ಕ್ರಿಯಾಪಾದೋದಕ ಭಸ್ಮಶುದ್ಧತೆಗೆ ಬರುವುದು.
ಜ್ಞಾನಪಾದೋದಕ ಅರ್ಪಣಂಗೈವುದಕ್ಕೆ ಬರುವುದು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ./791
ಗುರುಪಾದೋದಕದಿಂದ ಲಿಂಗಮಜ್ಜನ ಮಾಡಬಹುದಲ್ಲದೆ,
ಬರಿಯುದಕದಿಂದೆರೆಯಬಹುದೆ ಕರಸ್ಥಲದ ತೇಜವ?
ಮೀರಿದ ಮೀರಿದ ಮಾರ್ಗ ಹೇಳಿದರಯ್ಯಾ, ಎನ್ನ ಗುರುಗಳು.
ಅನ್ಯಜಲವನೆರೆದೆನಾದಡೆ, ತಲೆ-ತಲೆದಂಡ
ಕಪಿಲಸಿದ್ಧಮಲ್ಲಿಕಾರ್ಜುನ./792
ಗುರುಪಾದೋದಕವಿಲ್ಲದಲ್ಲಿ, ಜಂಗಮಪಾದೋದಕವಿಲ್ಲದಲ್ಲಿ,
ಪ್ರಣವೋದಕದಿಂದಂಗಸ್ನಾನ ಮಾಳ್ಪುದಯ್ಯಾ.
ಪ್ರಣವೋದಕದಿಂದ ಲಿಂಗಸ್ನಾನ ಲಿಂಗ್ಕಾಷೇಕ ಮಾಳ್ಪುದಯ್ಯಾ.
ಗುರುವಿನಲ್ಲಿ ಗುರುಪಾದೋದಕವುಂಟು,
ಲಿಂಗಪಾದೋದಕವುಂಟು, ಜಂಗಮಪಾದೋದಕವುಂಟು.
ಲಿಂಗದಲ್ಲಿ ಗುರುಪಾದೋದಕವಿಲ್ಲ, ಜಂಗಮ ಪಾದೋಕವಿಲ್ಲದ
ನಿಮಿತ್ತ
ಜಂಗಮವ ಬರಿಸಿಕೊಂಡು ಕ್ರೀಯ ಮಾಳ್ಪ ಭಕ್ತನ ಪಾದಕ್ಕೆ
ನಮೋ ನಮೋ ಎಂಬೆ, ಕಪಿಲಸಿದ್ಧಮಲ್ಲಿಕಾರ್ಜುನ./793
ಗುರುಪಾದೋದಕವೆಂದು, ಕ್ರಿಯಾಪಾದೋದಕವೆಂದು.
ಜ್ಞಾನಪಾದೋದಕವೆಂದು ಮೂರು ತೆರನುಂಟು.
ಗುರುಪಾದೋದಕವೆಂದಡೆ,
ಅಯ್ಯಗಳ ಪಾದಗಳ ಎರಡಂಗುಲಿಗಳಲ್ಲಿ,
ಪಾದಗಳೆರಡರ ಮೂಲಾಂಗುಲಿ ಹಿಮ್ಮಡಗಳ ಅಗ್ರದಲ್ಲಿ
ತನ್ನ ಪಂಚಾಂಗುಲಿಯಿಂದ ಉದಕನದ್ದಿ,
ಮಂತ್ರವಳಹುವುದೆ ಗುರುಪಾದೋದಕ.
ಕ್ರಿಯಾಪಾದೋದಕವೆಂದಡೆ,
ಪಾದದ್ವಯದ ಅಂಗುಗಳಲ್ಲಿ ಶಿವನ ಶಕ್ತಿಯ ಪ್ರಣವವ ಬರೆದು,
ಭಸ್ಮವ ಧರಿಸಿ, ನೇತ್ರದಳಗಳ ಅರ್ಪಣಂಗೈದು,
ತನ್ನ ತರ್ಜನಿಯ, ಮೂರು ವೇಳೆ ಪ್ರಣವಸಹಿತ
ಪಂಚಾಕ್ಷರೀಮಂತ್ರಂ
ಗುರುಪಾದೋದಕವನದ್ದಿ ಎಳೆಯುವುದೆ ಕ್ರಿಯಾಪಾದೋದಕ.
ಜ್ಞಾನಪಾದೋದಕವೆಂದಡೆ,
ದಶಾಂಗುಗಳಲ್ಲಿ ದಶಪ್ರಣವ ಮಂತ್ರದಿಂದ ಭಸ್ಮಂ ಲಿಖಿಸಿ,
ಷೋಡಶೋಪಚಾರಂ ಪೂಜೆಯ ಮಾಡಿ,
ಎರಡಂಗುಲಿ ಮಧ್ಯದಲ್ಲಿ ಮೂರು ಸ್ಥಾನಂಗಳಲ್ಲಿ,
ಪಂಚಾಕ್ಷರೀಮಂದಿಂದ ಎರೆಯುವುದೆ ಜ್ಞಾನಪಾದೋದಕ.
ಇಂತಪ್ಪ ಪಾದೋದಕತ್ರಯಂಗಳ ಸೇವಿಸಿ ಸುಖಿಸಬಲ್ಲಡೆ
ಆತನೆ ಪರಾತ್ಪರವಸ್ತು, ಕಪಿಲಸಿದ್ಧಮಲ್ಲಿಕಾರ್ಜುನದೇವಾ./794
ಗುರುಪಾದೋದದಿಂದ ಂಗಮಜ್ಜನ
ಮಾಡುವೆನೆಂಬ ಭಾಷೆ ಎನ್ನದಯ್ಯಾ.
ಗುರುಪಾದೋದದಿಂದ ಸ್ವಯಂಪಾಕರಚನೆ
ಎಂಬ ಭಾಷೆ ಎನ್ನದಯ್ಯಾ.
ಗುರುಪಾದೋದದಿಂದ ಶಿರಃಸ್ನಾನ, ಅಂಗಸ್ನಾನ, ಮುಖಸ್ನಾನ
ಎಂಬ ಭಾಷೆ ಎನ್ನದಯ್ಯಾ.
ಗುರುಪಾದೋದಕಂದ ಸರ್ವಶುದ್ಧ
ಎಂಬ ಭಾಷೆ ಎನ್ನದಯ್ಯಾ.
ಇದು ಕಾರಣ, ಗುರುವೆ ಘನವೆಂದು,
ಗುರುಪಾದೋದಕವೆ ಎನ್ನ ಮೋಕ್ಷದ ಬೀಡೆಂದು ಡಂಗುರ ಹೊಯ್ವೆ.
ಇದು ಕಿಂಚಿತ್ಹುಸಿಯಾದಡೆ ಕಪಿಲಸಿದ್ಧಮಲ್ಲಿಕಾರ್ಜುನ
ನಾಯಕನರಕದಲ್ಲಿಕ್ಕದೆ ಮಾಣ್ಬನೆ? ಮಡಿವಾಳ ತಂದೆ./795
ಗುರುಪಾದೋದದಿಂದ ಸ್ಥೂಲ ದೇಹಶುದ್ಧಿ;
ಕ್ರಿಯಾಪಾದೋದಕದಿಂದ ಸೂಕ್ಷ್ಮ ದೇಹಶುದ್ಧಿ ;
ಜ್ಞಾನಪಾದೋದಕದಿಂದ ಕಾರಣ ದೇಹಶ್ಧು ;
ಗುರುಪಾದೋದಕದಲ್ಲಿ ಇಷ್ಟಂಗ ಸಂಬಂಧ;
ಕ್ರಿಯಾಪಾದೋದಕದಲ್ಲಿ ಪ್ರಾಣಂಗ ಸಂಬಂಧ;
ಜ್ಞಾನಪಾದೋದಕದಲ್ಲಿ ಭಾವಂಗ ಸಂಬಂಧ.
ಅದು ಕಾರಣ, ಪಾದೋದಕವೆ ಪ್ರತ್ಯಕ್ಷ ಪರಬ್ರಹ್ಮ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ./796
ಗುರುಮುಖದಿಂದಾಗಲಿ, ಶಾಸ್ತ್ರಮುಖದಿಂದಾಗಲಿ,
ಮತ್ತಾವ ಮುಖದಿಂದಾಗಲಿ ತಿಳಿದನುಭಾವಿಯೆ ಸಂಸ್ಕಾರಿ ನೋಡಾ.
ಆತನೆ ಪರಮವೀರಶೈವ ನೋಡಾ.
ಆತನೆ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ, ಕಲ್ಲಯ್ಯಾ./797
ಗುರುಲಿಂಗ ಬಸವಣ್ಣ, ಚರಲಿಂಗ ಬಸವಣ್ಣ,
ಕರುಣಾಕರನು ಚೆನ್ನಬಸವಣ್ಣನು.
ಶರಣಸ್ಥಲದ ಕಲ್ಪ ಸುರಭೂಜ ಫಲವಿತ್ತ
ಕರುಣಾಕರನು ಚೆನ್ನಬಸವಣ್ಣನು.
ಆ ಬಸವಣ್ಣನ ಕೃಪೆಯಿಂದ ಆ ಅಕ್ಷರವರಿದು
ಸಾಧಿಸಿದೆ ನಿಮ್ಮುವನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./798
ಗುರುವಾಕ್ಯದಿಂದ ನಾರದನಿಗನಂತಜನ್ಮ ಪ್ರಳಯವಾಯಿತ್ತು.
ಗುರುವಾಕ್ಯದಿಂದ ಚಿದ್ಘನಶಿವಾಚಾರ್ಯರಿಗೆ ಬೋಧರತ್ನ ದೊರಕಿತ್ತು.
ಗುರುವಾಕ್ಯದಿಂದ ಮಳೆಯ ಮಲ್ಲೇಶಂಗೆ
ಪಾತಾಳ ಪದಾರ್ಥ ಸಿದ್ಧಿಯಾಯಿತ್ತು.
ಗುರುವಾಕ್ಯದಿಂದ ವೀರಸೇನಂಗೆ ರಣಭೂಮಿ ಕಂಪಿಸಿತ್ತು.
ಗುರುವಾಕ್ಯದಿಂದ ಅನಂತಜನರಿಗೆ ಅನಂತಫಲಗಳಾದವು.
ಗುರುವಾಕ್ಯದಿಂದ ಪ್ರಮಥರ ಮನೆಯಲ್ಲಿ ಪರಮಾತ್ಮ ಸಂಚರಿಸಿದನು.
ಗುರುವಾಕ್ಯದಿಂದ ಆ ರಾಮಸಿದ್ಧನಿಗೆ ಅಘೋರಮೂರ್ತಿ
ಪ್ರಾಪ್ತವಾಯಿತ್ತು.
ಇದು ಕಾರಣ ಗುರುವೆ ಘನವೆಂದರಿದು
ಗುರುವಾಗಿ ಗುರುಪೂಜೆಯ ಮಾಡಬೇಕಲ್ಲದೆ
ಗುರುಸಮ್ಮುಖದಲ್ಲಿ ಗದ್ದುಗೆಯನೇರಿದಡೆ,
ಕಪಿಲಸಿದ್ಧಮಲ್ಲಿಕಾರ್ಜುನ ಕರಸಿತಗ, ಕೇಳಾ ನಿಜಗುಣಯ್ಯಾ./799
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿರಿ;
ಲಿಂಗವಾಗಿ ಬಂದೆನ್ನ ಮನದ ಮನವ ಕಳೆದಿರಿ;
ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು
ಪರಮ ಸೀಮೆಯ ಮಾಡಿರಿ.
ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ.
ಇನ್ನೆನಗತಿಶಯವೇನೂ ಇಲ್ಲ./800
ಗುರುವಾಜ್ಞೆಯ ಮೀರಿದೆನಾದಡೆ
ಎನ್ನ ಸುಕೃತವೆಲ್ಲ ಕಿಲ್ಬಿಷವಾಗಲಿ ದೇವಾ.
ಗುರುಸಂಜ್ಞೆಯ ಅರಿಯೆನಾದಡೆ,
ಎನ್ನ ಬ್ರಹ್ಮಸಂಜ್ಞೆ ಬತ್ತಿಹೋಗ ದೇವಾ.
ಗುರುದ್ವಾರವ ಕಾಯದಿದ್ದೆನಾದಡೆ
ಎನ್ನ ಪಶ್ಚಿಮದ್ವಾರ ಸಿಗದೆ ಹೋಗಲಿ ದೇವಾ.
ಗುರುಪುತ್ರರ ಗುರುವೆನ್ನದಿದ್ದೆನಾದಡೆ, ಯಮಗುಂಡು ನನಗಿರಲಿ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ./801
ಗುರುವಿಂಗಾದಡೆಯು ಬಸವಣ್ಣನೆ ಬೇಕು;
ಲಿಂಗಕ್ಕಾದಡೆಯು ಬಸವಣ್ಣನೆ ಬೇಕು;
ಜಂಗಮಕ್ಕಾದಡೆಯು ಬಸವಣ್ಣನೆ ಬೇಕು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ಬೇಕು./802
ಗುರುವಿಂಗೆ ಗುರುವಿಲ್ಲ, ಲಿಂಗಕ್ಕೆ ಲಿಂಗವಿಲ್ಲ ;
ಜಂಗಮಕ್ಕೆ ಜಂಗಮವಿಲ್ಲ, ನನಗೆ ನಾನಿಲ್ಲ.
ಕಣೆರೆದು ನೋಡುವಡೆ ಆರಿಗೆ ಆರೂ ಇಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಾ./803
ಗುರುವಿಂದನ್ಯ ದೈವವಿಲ್ಲೆಂಬುದಕ್ಕೆ ಆಗಮವಾಣಿಯೆ ಸಾಕ್ಷಿ.
ಅದೆಂತೆಂದಡೆ: “ಗುರುದೇವೋ ಮಹಾದೇವೋಗುರುದೇವಸ್ಸದಾಶಿವಃ|
ಗುರುದೇವಾತ್ಪರಂ ನಾಸ್ತಿ ತಸ್ಮೆ ಶ್ರೀಗುರುವೆ ನಮಃ||
ಗುರುಃ ಶಂಭುರ್ಗುರುರ್ಜ್ಞಾನಂ ಗುರುರ್ಮಾತಾ ಗುರುಃ ಪಿತಾ|
ಗುರುರ್ಬಂಧುರ್ಗುರುಃ ಸಾಕ್ಷಾದ್ದೇವತಾಗಣಪುಂಗವಃ||
ಅನುಷ್ಠಾನಾಕಾಂ ಪೂಜಾಂ ಯಃ ಕರೋತಿ ಗುರುಂ ವಿನಾ|
ಯಾತಿ ನೀಚಾನಿ ಜನ್ಮಾನಿ ತಸ್ಮಾದ್ಗುರುವರಂ ಭಜೇತ್||
ಷಣ್ಮಾಸೇ ವ್ಯಾಪಿ ವರ್ಷೆ ವಾ ವರ್ಷೆ ವಾ ದ್ವಾದಶಾತ್ಮಕೇ|
ಗುರೋರಾಲೋಕನಂ ಯಸ್ತು ನ ಕರೋತಿ ಸ ಪಾಪವಾನ್||’
ಎಂಬುದೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./804
ಗುರುವಿಗೆ ಘನಗುರು ಮಾಚಿತಂದೆಗಳು;
ಲಿಂಗಕ್ಕೆ ಘನಲಿಂಗ ಮಾಚಿತಂದೆಗಳು;
ಜಂಗಮಕ್ಕೆ ನಿರಂಜನ ವಸ್ತು ನಮ್ಮ ಮಾಚಿತಂದೆಗಳು.
ಅಂತಪ್ಪ ಮಾಚಿತಂದೆಗೆ ಪೇಳ್ವ ತ್ರಾಣ ಎನ್ನಹುದೆ?
ಕಪಿಲಸಿದ್ಧಮಲ್ಲಿಕಾರ್ಜುನ./805
ಗುರುವಿಗ್ರಹವಿಡಿದು ಸರ್ವಾನುಗ್ರಾಹಕ ನೀನೆ ದೇವಾ.
ಚರವಿಗ್ರಹವಿಡಿದು ಚರಾಚರಂಗಳಿಗೆ ಚರಿಸಿ
ಸುಕೃತಿಗತಿಯನೀವ ಚರರೂಪ ನೀನೆ ದೇವಾ.
ಲಿಂಗವಿಗ್ರಹವಿಡಿದು ಸರ್ವರಿಂ ಪೂಜೆಗೊಂಡು
ಅವರವರಾಭಿಷ್ಟಭೋಗವ ಕೊಡುವ ದೇವ ನೀನೆ
ಕಪಿಲಸಿದ್ಧಮಲ್ಲಿಕಾರ್ಜುನ./806
ಗುರುವಿಡಿದು ತನುವಾಯಿತ್ತು ;
ಲಿಂಗವಿಡಿದು ಮನವಾಯಿತ್ತು ;
ಜಂಗಮವಿಡಿದು ಧನವಾಯಿತ್ತು ;
ಬಸವಣ್ಣವಿಡಿದು ಭಕ್ತಿಯಾಯಿತ್ತು ;
ಕಪಿಲಸಿದ್ಧಮಲ್ಲಿನಾಥಯ್ಯ/807
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ;
ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ;
ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ;
ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ;
ಎನಗಾಧಿಕ್ಯವಪ್ಪ ವಸ್ತು ಬೇರೊಂದಿಲ್ಲ.
ಅದೇನುಕಾರಣ? ಅವ ನಾನಾದೆನಾಗಿ.
ಗುರುವೆ ಎನ್ನ ತನುವಿಂಗೆ ಲಿಂಗಕ್ಷೆಯ ಮಾಡಿ,
ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ,
ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು
ಜಂಗಮದಿಕ್ಷೆಯ ಮಾಡಿ,
ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ
ಕಾರಣ,
ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು,
ಆ ಲೋಕಕ್ಕೆ ಹೊರಗಾದೆನಾಗಿ.
ಅದೇನು ಕಾರಣ?
ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ.
ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ,
ಭವಪಾಶ ವಿಮೋಚನ, ಅವ್ಯಯ,
ಮನದ ಸರ್ವಾಂಗ ಲೋಲುಪ್ತ,
ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನಾ,
ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ
ಅಸಂಖ್ಯಾತರೆಲ್ಲರನು ತೋರಿದೆ ಗುರುವೆ./808
ಗುರುವಿನ ಕೃಪೆಯಿಂದ
ಸಾಧಾರಣ ತನುವ ಮರೆದೆ.
ಗುರುವಿನ ಕೃಪೆಯಿಂದ
ಮಲತ್ರಯದ ಪಂಕವ ತೊಳೆದೆ.
ಗುರುವಿನ ಕೃಪೆಯಿಂದ
ದೀಕ್ಷಾತ್ರಯಂದನುಭವಿಯಾದೆ.
ಗುರುವಿನ ಕೃಪೆಯಿಂದ
ಶುದ್ಧಸಿದ್ಧಪ್ರಸಿದ್ಧ ಪ್ರಮಾಣವನರಿದವನಾದೆ.
ಎನಗೆ ಅಧಿಕ್ಯವಪ್ಪ ವಸ್ತು ಎನಗೆ ಬೇರೊಂದೂ ಇಲ್ಲ.
ಅದೇನು ಕಾರಣ? ಅವನಾದೆನಾಗಿ.
ಗುರುವೆ ಎನ್ನ ತನುವಿಗೆ ಲಿಂಗದೀಕ್ಷೆಯ ಮಾಡಿ,
ಎನ್ನ ಜ್ಞಾನಕ್ಕೆ ಸ್ವಾನುಭಾವದೀಕ್ಷೆಯ ಮಾಡಿ,
ಎನ್ನ ತನುಮನದ್ಲ ವಂಚನೆಯಿಲ್ಲದೆ
ಮಾಡಲೆಂದು ಜಂಗಮಕ್ಷೆಯ ಮಾಡಿ,
ಎನ್ನ ಸರ್ವಾಂಗವೂ ನಿನ್ನ ವಿಶ್ರಾಮಸ್ಥಾನ
ಶುದ್ಧಮಂಟಪವಾದ ಕಾರಣದಲ್ಲಿ
ಲೋಕವ್ಯಾಪ್ತಿಯನರಿದೆ, ಲೋಕವೆನ್ನೊಳಗಾಯಿತು,
ಆ ಲೋಕಕ್ಕೆ ಹೊರಗಾದೆ.
ಅದೇನು ಕಾರಣ?
ಜನನ ಮರಣ ಪ್ರಳಯಕ್ಕೆ ನಾ ಹೊರಗಾದೆ ನಾ.
ನೀ ಸದ್ಗುರುವೆ
ಎನ್ನ ಭವದ ಬೇರ ಹರಿದೆ ಗುರುವೆ,
ಭವಪಾಶ ವಿಮೋಚನಾ
ಅವ್ವೆಯ ಮನದ ಸರ್ವಾಂಗಲೋಲುಪ್ತ
ಭುಕ್ತಿ ಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನ
ನೀನಾಗಿ ಚೆನ್ನಬಸವಣ್ಣನಾಗಿ,
ಪ್ರಭು ಮೊದಲಾದ ಅಸಂಖ್ಯಾತರೆಲ್ಲರನೂ
ತೋರಿದೆ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ/809
ಗುರುವಿನ ಭಕ್ತಿಕ್ರೀಯ ಬೆಳಗಿನ್ನೆಂತೊ;
ಶಿಷ್ಯನಳಿವ ಪೂಜಾಸಂಭ್ರಮವಿನ್ನೆಂತೊ;
ಪ್ರಮಥರ ಶಿವಲಿಂಗಕೂಟವಿನ್ನೆಂತೊ;
ಪ್ರಭುಗಳ ನಿರೀಕ್ಷಣೆಯಿನ್ನೆಂತೊ;
ಮಡಿವಾಳನ ಮಹಾನುಭಾವವಿನ್ನೆಂತೊ;
ಕಪಿಲಸಿದ್ಧಮಲ್ಲಿಕಾರ್ಜುನ./810
ಗುರುವಿನಿಂದ ಲಿಂಗವ ಕಂಡೆನಲ್ಲದೆ
ಲಿಂಗದ ಲಿಂಗವ ಕಾಣಲಿಲ್ಲಯ್ಯಾ.
ಲಿಂಗದಿಂದ ಫಲಪದಂಗಳ ಕಂಡೆನಲ್ಲದೆ
ಫಲಪದಗಳಿಂದ ಫಲಪದಂಗಳ ಕಾಣಲಿಲ್ಲಯ್ಯಾ.
ಜಂಗಮದಿಂದ ಮೋಕ್ಷವ ಕಂಡೆನಲ್ಲದೆ
ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ, ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./811
ಗುರುವಿಲ್ಲದಲ್ಲಿ ಜಂಗಮವಿಲ್ಲವೆ?
ಜಂಗಮವಿಲ್ಲದಲ್ಲಿ ತಾ ಜಂಗಮವಲ್ಲವೆ?
ತಾ ಜಂಗಮನಲ್ಲದಲ್ಲಿ ಲಿಂಗವಿಲ್ಲವೆ?
ಲಿಂಗೋದಕದಿಂದ ಸರ್ವಾಚಾರ ಶುದ್ಧವಾಗವೆ?
ಕಪಿಲಸಿದ್ಧಮಲ್ಲಿಕಾರ್ಜುನ./812
ಗುರುವಿಲ್ಲದೆ ಲಿಂಗಪೂಜೆಯ ಮಾಡಿದೆನಾದಡೆ
ಆ ಪೂಜೆ ಮೃತಮಹಿಷನ ಮೆರವಣಿಗೆಯಂತೆ.
ಗುರುವಿಲ್ಲದೆ ಗಣಾರಾಧನೆಯ ಮಾಡಿದೆನಾದಡೆ
ಪತಿವ್ರತೆಯರಿಲ್ಲದ ಪಾರ್ವತಿಯರ ಪೂಜೆಯಂತೆ.
ಗುರುವಿಲ್ಲದೆ ಲಗ್ನವ ಮಾಡಿದೆನಾದಡೆ
ಶೂಲವನೇರುವ ಪುರುಷನ ಭೋಗದಂತೆ.
ಗುರುವಿಲ್ಲದೆ ದೀಕ್ಷೆಯ ಮಾಡಿದೆನಾದಡೆ
ಪಾರ್ವತಿಯರಿಲ್ಲದ ರುದ್ರರಾಜನ ಮನೆಯಂತೆ
ಕಪಿಲಸಿದ್ಧಮಲ್ಲಿಕಾರ್ಜುನದೇವಾ./813
ಗುರುವೆ ಎನ್ನ ತನುವಿಂಗೆ ಲಿಂಗಕ್ಷೆಯ ಮಾಡಿ
ಎನ್ನ ಜ್ಞಾನಕ್ಕೆ ಸ್ವಾನುಭಾವಕ್ಷೆಯ ಮಾಡಿ
ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ
ಮಾಡಲೆಂದು ಜಂಗಮದೀಕ್ಷೆಯ ಮಾಡಿ
ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ
ಶುದ್ಧಮಂಟಪವಾದ ಕಾರಣ,
ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು,
ಆ ಲೋಕಕ್ಕೆ ಹೊರಗಾದೆ.
ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ.
ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ,
ಭವಪಾಶವಿಮೋಚ[ನ]ನೆ,
ಅನ್ವಯ ಮನದ ಸರ್ವಾಂಗಲೋಲುಪ್ತ,
ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ
ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ./814
ಗುರುವೆ, ಇಹಪರ ಗುರುವೆ, ಗುರುವೆ ಕರುಣಾಕರನೆ,
ಗುರುವೆ, ಶುದ್ಧಾತ್ಮನೆ ನಿರ್ಮಳಾಂಗ.
ಗುರುವೆ, ನಿನ್ನಂತೆ ಎನ್ನುವನು ಮಾಡಿದ ಪರಮ
ಗುರುವೆ, ನೀನು ಕಪಿಲಸಿದ್ಧಮಲ್ಲಿನಾಥ./815
ಗುರುವೆ, ನಿಗಮಕ್ಕಭೇದ್ಯನೆ,
ಅಕ್ಷರ ಮೂರರ ರೂಪನೆ,
ಅಕ್ಷರ ಎರಡರ ನಿತ್ಯನೆ,
ಅಕ್ಷರ ನಾಲ್ಕಕ್ಕೆ ಸಿಕ್ಕದನೆ,
ಅಕ್ಷರ ಐದಕ್ಕಿಂದತ್ತಲಾದವನೆ,
ಅಕ್ಷರ ಏಳ ಮೀರಿದವನೆ,
ಅಕ್ಷರವಾರ ನೀ ಜರಿದವನೆ,
ಅಕ್ಷರವಾರರ ರೂಪನೆ,
ಆರರಕ್ಷರಕ್ಕೆ ಅನಾಮಯನೆ,
ಅಕ್ಷರವೆಂಟರ ರೂಪನೆ,
ಹದಿನಾರಕ್ಷರಕ್ಕೆ ಸಂಪೂರ್ಣನೆ,
ಇವು ಮೊದಲಾದ ಅಕ್ಷರ ಹಲವನು
ಏಕವ ಮಾಡಿ ತೋರಬಲ್ಲ ರೂಪನೆ,
ಆನಂದಮಯನ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ
ತೋರಿದ ಪರಮಗುರುವೆ./816
ಗುರುಸಮ್ಮುಖದಲಿ ಲಿಂಗಪೂಜೆಯ ಮಾಡಲಾಗದು.
ಗುರುಸಮ್ಮುಖದಲ್ಲಿ ತಾನೊಂದಾಸನದ ಮೇಲೆ ಇರಲಾಗದು.
ಗುರುಸಮ್ಮುಖದಲ್ಲಿ ವೀಳ್ಯವ ಭೋಗಿಸಲಾಗದು.
ಗುರುಸಮ್ಮುಖದಲ್ಲಿ ಸ್ವೇಚ್ಛಾಚಾರಿಯಾಗಿ ನಿದ್ರೆಗೈಯಲಾಗದು.
ಗುರುಸಮ್ಮುಖದಲ್ಲಿ ವಿದ್ಯೆಯ ಹೇಳಲಾಗದು.
ಗುರುಸಮ್ಮುಖದಲ್ಲಿ ಏನೊಂದು ನುಡಿಯಲಾಗದು.
ಗುರುಸಮ್ಮುಖದಲ್ಲಿ ಹಾಸ್ಯವ ಮಾಡಲಾಗದು.
ಅದು ಕಾರಣ, ಇಂತಪ್ಪ ಕೃತ್ಯಂಗಳ ಮಾಡಿದೆನಾದಡೆ
ಕಪಿಲಸಿದ್ಧಮಲ್ಲಿಕಾರ್ಜುನದೇವರು, ಮನದಿಂದ ಮಹಾಜ್ಞಾನದಿಂದ
ದೂರಾಗ ಕೇಳಾ ಪ್ರಭುವೆ./817
ಗುರುಸಾಹಿತ್ಯ ಚೆನ್ನಬಸವಂಗಾಯಿತ್ತು ;
ಲಿಂಗಸಾಹಿತ್ಯ ಬಸವಂಗಾಯಿತ್ತು ;
ಜಂಗಮಸಾಹಿತ್ಯ ಅಲ್ಲಮದೇವಂಗಾಯಿತ್ತು ;
ಪ್ರಸಾದಸಾಹಿತ್ಯ ಬಿಬ್ಬಿಬಾಚರಸಂಗಾಯಿತ್ತು ;
ಪಾದೋದಕಸಾಹಿತ್ಯ ಹೊಡೆಹುಲ್ಲ ಬಂಕಯ್ಯಂಗಾಯಿತ್ತು ;
ಭಸ್ಮಸಾಹಿತ್ಯ ಅಕ್ಕನಾಗಮ್ಮಂಗಾಯಿತ್ತು ;
ರುದ್ರಾಕ್ಷಿಸಾಹಿತ್ಯ ಸರ್ವಪ್ರಮಥರಿಗಾಯಿತ್ತು.
ಮಂತ್ರಸಾಹಿತ್ಯದವರ ಕಂಡಡೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಿವರೆ ಎಂದು
ಎನ್ನ ಮನ ನಂಬಿತ್ತು ನೋಡಾ, ಮಡಿವಾಳ ಮಾಚಯ್ಯ./818
ಗುರುಸ್ವಾಮಿ ಧರಿಸುವ ಮಡಿಯ ನಾ ಸುತ್ತಿದೆನಾದಡೆ,
ಶಿರವು ಬಿರಿದು ಬೀಳಾಗಲಿ ದೇವಾ.
ಗುರುಸ್ವಾಮಿ ಧರಿಸುವ ಕಂಠಮಾಲೆಯ ನಾ ಧರಿಸಿದೆನಾದಡೆ,
ಕಂಠ ಕತ್ತರಿಸಿ ಹೋಗ ದೇವಾ.
ಗುರುಸ್ವಾಮಿ ಪಾನವ ಮಾಡುವ ಗಿಂಡಿಯ ನಾ ಪಾನವ
ಮಾಡಿದೆನಾದಡೆ
ನಾಲಗೆ ಸೀಳಿಹೋಗ ದೇವಾ.
ಗುರುಸ್ವಾಮಿ ಶಯನಿಸುವ ಸುಪ್ಪಿತ್ತಿಗೆಯಲ್ಲಿ ನಾ ಶಯನ
ಮಾಡಿದೆನಾದಡೆ
ಎನ್ನಂಗದಲಿ ಕ್ರಿಮಿಗಳು ಬೀಳ ದೇವಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ./819
ಗೃಹಸ್ನಾನಂ ಕನಿಷ್ಠಂ ಚ ಕೂಪಸ್ನಾನಂ ತು ಮಧ್ಯಮಂ||
ಉತ್ತಮಂ ತು ನದೀಸ್ನಾನಂ ಸತ್ಯಂ ಪರ್ವತನಂದನೇ||’
ಎಂಬುದಂತಿರ.
ಎಮ್ಮ ಮನಸಿನ ಕಲ್ಮಷಗಳಳಿದುದೆ ಮಹಾಸ್ನಾನ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./820
ಗೃಹಸ್ಯ ರತ್ನಂ ಪ್ರಾಯಸ್ತು ಬಾಲಕೋ ಹಿ ವರಾನನೇ’
ಎಂಬಾಗಮವಾಕ್ಯವಂತಿರಲಿ.
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಶರಣರ ಮಹಾಮಂದಿರಕ್ಕೆ
ಲಿಂಗಪೂಜೆಯ ರತ್ನಪ್ರಾಯ ನೋಡಾ, ಹಾವಿನಹಾಳ ಕಲ್ಲಯ್ಯಾ./821
ಗೆದ್ದವ ಗರಡಿಕಾರನಲ್ಲದೆ ಬಿದ್ದು ಎದ್ದವ ಗರಡಿಕಾರನೆ ಅಯ್ಯಾ?
ಎದ್ದವ ಜಂಗಮವಲ್ಲದೆ ಬಿದ್ದು ಎದ್ದವ ಜಂಗಮವೆ ಅಯ್ಯಾ?
ಬೀಳಲಾಗದು ಜಂಗಮ; ಬೀಳಲಾಗದು ಜಗದ ಹಿರಿಯರು,
ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./822
ಗ್ರಾಮ ಚೌಗ್ರಾಮದಲಿ ಸೀಮೆಗೆಟ್ಟುತದು
ಸಿದ್ಧಗ್ರಾಮವ ಮುರಿದೊತ್ತುತೈದೂದೆ
ಗ್ರಾಮಬಲ ನಾಶವಾಗೆ ಸೀಮೆಗೆಡಲು,
ಸಾನಂದದ ಆನಂದಕ್ಕೆ
ತನ್ನನು ಕಳೆದು, ನಾನಾ ಗುಣದಲ್ಲಿ
ಭಾನು ವಿಕಸ ಪ್ರಬಲವನೆಯ್ದಿದೆ
ಕಪಿಲಸಿದ್ಧಮಲ್ಲಿಕಾರ್ಜುನ./823
ಗ್ರಾಮ ಪಟ್ಟಣವೈದು ಐದೈದು ನಾಯಕರು
ತೋರಿಪ್ಪರದ ಕಂಡು ಪ್ರತ್ಯಯವನು.
ಸೀಮೆ ಸಂಬಂಧವನು ಮೀರಿಪ್ಪ ನಾಯಕರು
ತಾವು ನಿಂದರು ಗಡಿಯ ಸಂಬಂಧವ
ಪರದಳವು ಬರಲಾಗಿ ಅರಿಯದೆ ಇದಿರಾಡಿ
ಅರಿತು ಬಿಟ್ಟರು ವೀರಧೀರರಾಗಿ.
ಅರಿವುಮರಹನೆ ನುಂಗಿ ಕುರುಹುಗೆಟ್ಟಾ ಸೀಮೆ
ತೆರಹಿಲ್ಲದಾತ [ತಾ] ಪರಮಯೋಗಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ತೆರಹಿನ ಪಟ್ಟಣದ ಪ್ರಭೆಯಿಂತುಟು./824
ಗ್ರಾಮಕ್ಕೊಬ್ಬರಸಿಲ್ಲದೆ ಗ್ರಾಮವಳುತ್ತಿದೆ ನೋಡಾ.
ಗ್ರಾಮವನಾಳುವ ಅರಸಿನ ಮನೆಯ್ಲ ಸದೆ ಬೆಳೆಯಲ್ಲಿದೆಯಯ್ಯಾ.
ಗ್ರಾಮಕ್ಕೆ ಬಂದ ಕಟ್ಟರಸಿಂಗೆ ಪಟ್ಟವ ಕಟ್ಟಿ,
ಅರಸಿನ ಮನೆಗಳನನುಗೆಯ್ದು, ಹರುಷದಿಂದ
ಕಾಣಿಕೆಯಿಕ್ಕಿಸಿಕೊಳ್ಳಾ,
ಕಪಿಲಸಿದ್ಧಮಲ್ಲಿನಾಥಯ್ಯಾ./825
ಗ್ರಾಮವೆಂಟರ ಒಳಗೆ ಆನಂದದಾಳಾಪ
ಸ್ವಾನುಭೂತ್ರೈತೆಕದಲಿ ಸೌಖ್ಯವಾಗಿ
ಭಾನುವಿನುದಯದ ಪ್ರಭೆಯ ನುಂಗಿದ ದೀಪ್ತಿ
ಅಜಾತ ಗುರುವಿನ ರೂಪು ಕಪಿಲಸಿದ್ಧಮಲ್ಲಿಕಾರ್ಜುನಾ./826
ಘಟವ ಮಾಡಿದವ ಘಟದ್ಲರವಂತೆ,
ಭೂಷಣವ ಮಾಡಿದವ ಭೂಷಣದ್ಲರದಂತೆ,
ಕೃಷಿಯ ಮಾಡಿದವ ಕೃಷಿಯ್ಲರದಂತೆ,
ತೈಲವ ತೆಗೆದವ ತೈಲದ್ಲರದಂತೆ,
ಮನೆಯ ಕಟ್ಟಿದವ ಮನೆಯ್ಲರದಂತೆ,
ಪಿಂಡವ ಮಾಡಿದವ ಪಿಂಡದೊಳಿರದಂತೆ,
ಬ್ರಹ್ಮಾಂಡವ ರಚಿಸಿದವ ಬ್ರಹ್ಮಾಂಡದೊಳಿರದಂತೆ,
ಅರಿಯದ ಮನುಜರ ಅರುಹಿನ ಮನೆಯೊಳಿಪ್ಪ ನೋಡಾ,
ಕಪಿಲಸಿದ್ಧಮಲ್ಲೇಂದ್ರನೆಲೆ ಮಲ್ಲಶೆಟ್ಟಿ./827
ಘಟವೆಂಬುದು ದಿಟವಲ್ಲ ನೋಡಾ, ಕೇದಾರಯ್ಯಾ.
ಪಟವೆಂಬುದು ದಿಟವಲ್ಲ ನೋಡಾ, ಕಲ್ಲಯ್ಯಾ.
ಮಾಡಿದ ಘಟ, ನೆಯ್ದ ವಸ್ತ್ರಪಟ ಕಡೆ ಕಾಣಬಲ್ಲಡೆ,
ಲಯವೆಂಬುದಲ್ಲಿಹುದು ಹೇಳಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನನ ಸಾನ್ನಿಧ್ಯದಲ್ಲಿ?/828
ಘಟಸರ್ಪನ ಘಣಾಮಣಿಯ ಬೆಳಗಿನ ಪ್ರಭೆ ಹಿರಿದು:
ಸ್ಥಿರವಾಗಿ ಇರಬಲ್ಲಡೆ.
ನಿಸ್ತಾರ, ನಿಸ್ತಾರ, ನಿಸ್ತಾರವು
ಸತ್ಯಪ್ರಭೆಯಿಂದಲು ವಿಚಿತ್ರಸ್ಥಾನವಾದಡೆ,
ಮತ್ತೆ ನಿತ್ಯ ತಪ್ಪದು,
ಕಪಿಲಸಿದ್ಧಮಲ್ಲಿನಾಥಯ್ಯ./829
ಘಟ್ಟಣೆಯ ಲೋಕದ
ಬೆಟ್ಟಗಳಾರಾಗಿ ಇಕ್ಕೆಲಲೀರಾರು ಸೂರಿಯನನೂ
ಮತ್ತೆ ಪ್ರಭೆಯನು ಮಾಡಿ
ಹೊತ್ತಿಪ್ಪ ತತ್ವಕ್ಕೆ ಸೀಮೆ ತಾನೂ
ಒತ್ತೆರನು ಮುತ್ತೆರನು, ಮುತ್ತೆರನು, ಒತ್ತೆರನು
ಮತ್ತೆ ತ್ವಮಸಿಯ ರೂಪು ತಾನು ವಿಚಿತ್ರ
ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಭಕ್ತಿತಾತ್ಪರ್ಯದ ಪರಿಯಿಂತುಟು./830
ಘನಕ್ಕೆ ಘನವಾದ ಪರವಸ್ತು ಲಿಂಗಮೂರ್ತಿ ಬಂದೆನ್ನ ಕರಸ್ಥಲಕ್ಕೆ.
ಬಂದ ಲಿಂಗಮೂರ್ತಿಯಂ ಕಂಡು ಮನ ಹಾರೈಸಿ ತನು ಕರಗಿತ್ತು.
ಆ ಲಿಂಗವಂ ಕಂಡು ಕಪಿಲಸಿದ್ಧಮಲ್ಲಿನಾಥನೆನ್ನ
ಅಂತರಂಗದಲ್ಲಿದ್ದನು./831
ಘನಕ್ಕೆ ಘನವೆಂಬವರ ಮನಕ್ಕೆ ತಂದು
ಅನುಗೊಳಿಸಿದೆಯಲ್ಲಾ, ಅಲ್ಲಮದೇವಾ.
`ಸರ್ವಂ ಖಲ್ವಿದಂ ಬ್ರಹ್ಮ’ ಎಂದು ವಾಸಿದಲ್ಲಿ,
ಲಿಂಗತ್ರಯದಲ್ಲಿ ಬೋಧಗೊಳಿಸಿದೆಯಲ್ಲಾ, ಅಲ್ಲಮದೇವಾ.
ಮಾಡಿ ನೀಡುವೆನೆಂಬವರ ರೂಹು
ಮೂಡದಂತೆ ಮಾಡಿದೆಯಲ್ಲಾ, ಅಲ್ಲಮದೇವಾ.
ದೃಷ್ಟಿಗೆ ಬಿದ್ದವರ ಮಹದೈಶ್ವರ್ಯಕ್ಕಿಟ್ಟು,
ನೀ ನೆಟ್ಟನೆ ಬೆಟ್ಟದಲ್ಲಿಯ ಬಟ್ಟಬಯಲ
ಕದಳಿಯ ಹೋಗಿ ಬಟ್ಟಬಯಲಾಗಿ,
ಜಗದಂತರ್ಯಾಮಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ
ನಿಂದೆಯಲ್ಲಾ ಅಲ್ಲಮದೇವಾ/832
ಘನಸುಖದ ಸಂಪನ್ನನಾಗಿ
ನಿಮ್ಮ ಕರುಣಕಾವುದು ಕಡೆಯು,
ಮನಸಿಜನ ಮದವ ಮಾಯೆಯನೆಲ್ಲವ ಹರಿದು
ನಿಮ್ಮ ಪದದ ಹದುಳವಿರಿಸಿದಿರಯ್ಯಾ
ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರಾ./833
ಘರ್ಜನೆಯಿಂ ಸಿಡಿಲು ಅಡಸಿ ಬಂದು ಪೊಯ್ವುತ್ತಿರಲಿ,
ಪೊಯ್ಯವೊಲ್ಲದೆ ವಾಯವಿಮಾನಂಗಳಿಂದ ಎತ್ತಿಕೊಳ್ಗ್ವೆ
ಎತ್ತಿಕೊಂಡಡೆ, ಮನವಿಚ್ಛಂದವಾಗದೊಂದೆಯಂದದ್ಲಪ್ಪಂತಪ್ಪ
ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ./834
ಘಾತವಪ್ಪ ಸರಧಿ ಪ್ರೇತವಪ್ಪ ಅಡವಿ
ಪಾತಕ ಭವಕೆ ಬಹ ಕೂಪದೊಳಗೆ
ನೂಕಿದರೆ ಬೀಳೆ, ನಿನ್ನಾಧಾರವುಂಟು.
ಅನಾಸಂಸಿದ್ಧ ಯೋಗಮೂರ್ತಿ
ನಿನ್ನ ಒಡನಾಡಿ ನಾ ನಿನ್ನ ಠಕ್ಕನರಿಯೆನೆ
ಕಪಿಲಸಿದ್ಧಮಲ್ಲಿಕಾರ್ಜುನ./835
ಚತುರ್ವರ್ಣಿಯಾದಡೇನು,
ಚತುರ್ವರ್ಣಾ್ಕತನೆ ವೀರಶೈವ ನೋಡಾ.
ಚತುರ್ವೆಯಾದಡೇನು,
್ಲಚರಮ್ವ ದೇಹವಳಿಯದವನೆ ಚಾಂಡಾಲ ನೋಡಾ.
ಚತುರಂಗಬಲಯುಕ್ತನಾದಡೇನು,
ಚತುರಗುಣವಿಲ್ಲದ್ದಡೆ ದೇಶವನಾಳ್ವ ಪರಿಯ ನೋಡಾ.
್ಲಚರಮ್ವ ದೇಹಿಯಾಡೇನು,
ಗಜಚರ್ಮಧರ ಕಪಿಲಸಿದ್ಧಮಲ್ಲಿಕಾರ್ಜುನ
ಪ್ರಸನ್ನವಾಗದನ್ನಕ್ಕ ಬಾಳುವೆ ನೋಡಾ./836
ಚರಣ ಲಿಂಗವಾಗಿ ಕರ ಜಿಹ್ವೆಯಾಗಿ
ಮಸ್ತಕದಲ್ಲಿ ಸಕಲ ಬ್ರಹ್ಮಾಂಡಗಳ ವ್ಯಾಪ್ತಿಯನು
ಅಕ್ಷರವೆರಡರಲ್ಲಿ ಆಂದೋಳವಂ ಮಾಡಿ
ಹರಿಯಲೀಯ್ಯದೆ ಹದುಳ ಮಾಡಿದಾತ ಗುರು!
ಎನ್ನ ಶಬ್ದ-ಸ್ಪರ್ಶ-ರೂಪು-ರಸ-ಗಂಧ-
ಧಾನ್ಯ-ಧಾರಣ-ಸಮಾಧಿ ಸನ್ನಿಹಿತ ಗುರು!
ದೀಕ್ಷೆ ಶಿಕ್ಷೆ ಸ್ವಾನುಭಾವ ಸಂಪನ್ನತೆಯನುಳ್ಳಾತ ಗುರು!
ಆದ್ಯಂತರದಲ್ಲಿ ಸಹಸ್ರ ಕಮಲದೊಳಗಣ
ಕಂಜಕರ್ಣಿಕೆಯ ಮನ್ಮಸ್ತಕದ್ಲ ಒಪ್ಪಿಪ್ಪ
ಅಕ್ಷರದ್ವಯದ ಆಂದೋಳನವನುಳ್ಳಾತ ಗುರು!
ಅನಾಮಯಸ್ಥಾನದಲ್ಲಿ ಬಹುದಳದ ಕಮಲದೊಳಗೆ ಒಪ್ಪಿಪ್ಪ
ಹಮ್ಮೆಂಬ ಬಿಂದುವಿನ ಆನಂದ ಮಧ್ಯಸ್ಥಾನದ
ಶುದ್ಧ ಸಿಂಹಾಸನವನಿಕ್ಕಿ ಅದೆ ಮನೆಯಾಗಿರಲುಳ್ಳಾತ ಗುರು!
ನಿತ್ಯ ನಿರಂಜನರೂಪೆ ತದ್ರೂಪಾಗಿ
ಶಕ್ತಿಪಂಚಕದ ಆಜ್ಞೆಯ ಹೊದ್ದಪ್ಪಾತ ಗುರು!
ಅನಿಮಿಷಸ್ಥಾನದಲ್ಲಿ ಇಪ್ಪ ಶಕ್ತಿತ್ರಯದ
ಕ್ರಿಯಾಕಾರವ ನಡೆಸುವಾತ ಗುರು!
ತನುಗುಣಪ್ರಾಪಂಚಿಕವನತಿಗಳೆದು
ಸೀಮೆಯ ಮೀರಿದ ಸಂಬಂಧಿ
ಪ್ರಮಾಣಿಲ್ಲದ ಪರಮಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ./837
ಚರಿತ್ರೆಗಳನೋದುವುದೇ ವಾಕ್ಸಿದ್ಧಿ
ಭವವಳಿದು ಭಾಷಣೆಯ ಮಾಡುವುದೇ ವಾಕ್ಸಿದ್ಧಿ
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ
ಪಾದೋದಕ ಪ್ರಸಾದವ ಸ್ವೀಕರಿಸುವುದದೆ ವಾಕ್ಸಿದ್ಧಿ
ಕಂಡಯ್ಯಾ, ಅಣ್ಣ ಮಡಿವಾಳ ಮಾಚಯ್ಯಾ./838
ಚರಿಸಿ ಜಂಗಮವೆನಿಸಿತ್ತಯ್ಯಾ ಲಿಂಗವು.
ನೆಲಸಿ ಲಿಂಗವೆನಿಸಿತ್ತಯ್ಯಾ ಲಿಂಗವು.
ಇದರಿರವ ಅರುಹಿದಲ್ಲಿ ಗುರುವೆನಿಸಿತ್ತಯ್ಯಾ ಲಿಂಗವು.
ಗುರು ಲಿಂಗ-ಜಂಗಮಕ್ಕೆ ತಿಲಾಂಶ ಭೇದವಿಲ್ಲ ನೋಡಾ, ಎಲೆ ದೇವಾ.
ಭೇದಿಸದವಗೆ ಭವಬಾದೆ ತಪ್ಪುವದೆ,
ದೇವರ ದೇವ ಕಪಿಲಸಿದ್ಧಮಲ್ಲಿಕಾರ್ಜುನದೇವಾ?/839
ಚರಿಸುವ ಚರನಿಗೆ ಚಚರ್ೆಯೆ ಭೂಷಣ.
ಸುಂದರ ನಾರಿಗೆ ಗಂಭೀರ ಪುರುಷನೆ ಭೂಷಣ.
ಕೊಳನಲ್ಲಿಯ ನೀರಿಗೆ ಕಲಹಂಸೆಯೆ ಭೂಷಣ.
ವನದಲ್ಲಿಯ ವಸಂತಕ್ಕೆ ಕೋಕಿಲನಾದವೆ ಭೂಷಣ.
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಶರಣರಿಗೆ
ನಿರ್ಮಲ ನಿಜಾನಂದವೆ ಭೂಷಣ./840
ಚರಿಸುವ ಜನರೆಲ್ಲ ದೇವರಲ್ಲ;
ಚರಿಸಿ ಚರಿಸಿ ಭ್ರಮೆಗೊಂಡರು ಮತ್ತೆ ದೇವರು ದೇವರುಎಂದು, ನೋಡಾ.
ಚರಿಸುವ ಜನರು ದೇವರು, ಚರಿಸದ ವಸ್ತು ದೇವರು,
ನಾ ನೀನೆಂಬುಭಯ ದೇವರು,
ಕಪಿಲಸಿದ್ಧಮಲ್ಲಿಕಾರ್ಜುನದೇವರು ದೇವರು./841
ಚರ್ಮವ ಧರಿಸಿಪ್ಪನೆಂಬರು, ಅದು ಪುಸಿಯೇನಯ್ಯಾ?
ಪಂಚ ದೇಹಾಂತರ್ಯಾಮಿಯೆಂಬುದು ಶ್ರುತಿಸಿದ್ಧ.
`ಕೃತಿವಾಸಸೇ ನಮಃ, ಜಗದಂತರ್ಯಾಮಿನೇ ನಮಃ’
ಬ್ರಹ್ಮಕಪಾಲವ ಧರಿಸಿ ತೃಪ್ತಿಯಪ್ಪನೆಂಬರು,
ಅದು ಪುಸಿಯೇನಯ್ಯಾ? ಸರ್ವಮುಖದಲ್ಲಿ ಭೋಜಿಸುವುದಾಗಿ.
“ಮಹಾದೇವೀ ಚರಣಂ ಚ ಮುಖೇನಾಸ್ವಾದನಂ ಚಿರಂ|
ಕರೋಮಿ ಪ್ರಮುದಾ ಲೇಹ್ಯಂ ಚೋಹ್ಯಂ ಭಿಕ್ಷಾದಿಕಂ
ಮಹತ್||’
ಎಂಬುದು ಆಗಮಸಿದ್ಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ/842
ಚಾತುಷ್ಟ ಬ್ರಹ್ಮದಲಿ
ಅನೇಕ ವಿಧ ಸಂಗಮದ
ಸಾಕಲ್ಯ ದೇಹವನು ಕಳೆದು,
ಸತ್ಯಾನಂದ ಏಕಮಯನೆನಿಪ ಭವದೂರನು.
ಆತನನು ತಂದು ಮನಮಧ್ಯದೊಳಿರಿಸಿದ
ಅಜಾತ ಗುರುವೈ ಕಪಿಲಸಿದ್ಧಮಲ್ಲಿಕಾರ್ಜುನ./843
ಚಿಂತೆ ನಿಶ್ಚಿಂತವಾಗದಯ್ಯಾ,
ನಿಶ್ಚಿಂತ ನೆಲೆಮನೆಯಯ್ಯಾ, ಎನಗೆಂದಪ್ಪುದು ಹೇಳಾ.
ಆನಂದಸ್ಥಾನದಲ್ಲಿ ತಾತ್ಪರಿಯದಿಂದ
ನೀ ನಾನೆಂದಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./844
ಚಿರಂಜೀವಿ ಎಂದಡೆ ನಿರೋಗಿ; ಚಿರಂಜೀವಿ ಎಂದಡೆ ಸಶಕ್ತ;
ಚಿರಂಜೀವಿ ಎಂದಡೆ ಬಹುಕಾಲ ಬದುಕುವವನು.
ಚಿರಂಜೀವಿ ಎಂದಡೆ ಪ್ರಳಯವ ಮೀರುವವನಲ್ಲ.
ಕಪಿಲಸಿದ್ಧಮಲ್ಲಿಕಾರ್ಜುನ, ಬ್ರಹ್ಮವೆಂಬ ಶಬ್ದ ಬೇರುಂಟೆ?/845
ಚೌಕೋಣೆಯ ಮಂಟಪದಲ್ಲಿ ಪಂಚಕೋಣೆಯ ದೇವ,
ತ್ರಿಕೋಣೆಯಲ್ಲಿ ನಿಂತು ಸುಳಿಯುತ್ತಿರ್ಪ.
ಆ ತ್ರಿಕೋಣೆಗಳಿದ್ದಂತಿರ್ಪವೆಂಬುದ ಅರಿಯಬಾರದು.
ಹೊತ್ತಿಗೊಮ್ಮೆ ಪರಿಪರಿಯಾಗಿ ಕೇಡುಗೊಂಡುವು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./846
ಚೌಗ್ರಾಮಕೊಳದಲ್ಲಿ ಎಸೆವ ಚಾದಗವಕ್ಕಿ
ಒಸರುವಮೃತವನು ಕೊಳ್ಳಾ.
ಸೀಮೆಗೆಟ್ಟ ಅಮೃತವನು ಆರೈದು ಕೊಳಬಲ್ಲಡೆ
ಇದ್ದೆಸೆಯ ಸೀಮೆಗೆಡುವೆ ನೀನು ಕಂಡಾ.
ಮರಾಳ ಮರಾಳನೆಂಬ ಹಕ್ಕಿ ಹಾರದ ಮುನ್ನ
ನೀನೆಯ್ದು ಅವ್ಯಯ ಪದವ
ಕಪಿಲಸಿದ್ಧಮಲ್ಲಿನಾಥನೆಂಬ
ಸುಖಸಮುದ್ರದಲಾಳಾ/847
ಜಂಗಮವ ಪೂಜಿಸುವಡೆ ಜಗದ್ಭರಿತ ನೋಡಾ.
ನೋಡುವಂತೆ ಏಕದೇಹಿ ನೋಡಯ್ಯಾ.
ಲಿಂಗವ ಪೂಜಿಸುವಡೆ,
`ಲಿಂಗಮಧ್ಯೇ ಜಗತ್ಸರ್ವಂ’ ಎಂದು ಶ್ರುತಿ ಸಾರುತ್ತಿದೆ.
ಗುರುವ ಪೂಜಿಸುವಡೆ,
`ಗೀರಿತಿ ಜ್ಞಾನಂ ಗುರುಃ’ ಎಂದು [ಶಬ್ದೋತ್ಪತ್ತಿ] ಉಂಟು.
ಇವೆಲ್ಲ ನನಗೆ ಅಸಾಧ್ಯ ನೋಡಾ.
ನಿನ್ನ ಪೂಜಿಸೆ ನಿನ್ನ ಕೈಕೊಂಬ ಪರಿಯ ಹೇಳಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./848
ಜಂಗಮವಾಗಿ ಫಲವೇನಯ್ಯಾ, ಜಗದ ಹಂಗುದೊರೆಯದನ್ನಕ್ಕ?
ಯೋಗಿಯಾದಲ್ಲಿ ಫಲವೇನಯ್ಯಾ, ನಿನ್ನಂಗ ಬರದನ್ನಕ್ಕ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./849
ಜಂಗಮವಾಗಿ ಫಲವೇನು,
ನೋಡಿ ಮನದೆರೆದು ಮಾತನಾಡಿಸಿ
ಜನಜನನವಿಪಿನದಾವಾನಲವಾಗದನ್ನಕ್ಕ?
ಜಂಗಮವಾಗಿ ಫಲವೇನು
ಭಕ್ತ ತನುತಾಪತ್ರಯವ ನೋಡಿ ಮನದೆರೆದು
ಮಾತನಾಡಿಸಿ ಮರುಗದನ್ನಕ್ಕ?
ಜಂಗಮವಾಗಿ ಫಲವೇನು,
ಭಕ್ತ ವಾಂಛಿತಾರ್ಥಂಗಳನರಿದು, ಪೂಜಾಮುಖಂ ಭೂತಿಯ
ಕೊಟ್ಟು,
ಆತನ ಪ್ರಪಂಚ ಸಂಭ್ರಮವ ನೋಡದನ್ನಕ್ಕ?
ಜಂಗಮವಾಗಿ ಫಲವೇನಯ್ಯಾ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ,
ಸುಭಕ್ತರ ಹಸ್ತದಲ್ಲಿ ಕೊಟ್ಟು ಮೋಹ ಮಾಡದನ್ನಕ್ಕ?/850
ಜಂಗಮವಾದುದಕ್ಕೆ ಇದೆ ಚಿಹ್ನೆ ನೋಡಾ:
ಅಂಗವಿಡಿದು ಲಿಂಗವ ಪೂಜಿಸುವ;
ಲಿಂಗವಿಡಿದು ಅಂಗವ ಪೂಜಿಸ ನೋಡಾ.
ಶತದಳ ಸಹಸ್ರಸೂರ್ಯವರ್ಣದ ಪದ್ಮದೊಳಿಪ್ಪ
ಮಹಾಂಗವನರುಹಿ, ಪ್ರಾಣಂಗಿಯ ಕೂಟವನರಿಪಾತನೆ
ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ./851
ಜಂಗಮೋ ಹಿ ಜಗತ್ಪೂಜ್ಯೋ ಜಂಗಮೋಹಿ ಸದಾಶಿವಃ|
ಕ್ರೋಧಾನ್ನಾಶಯತೇ ಲೋಕಂ ಮೋಹಾಲ್ಲೋಕಂ ವಿವರ್ಧತೇ||’
ಇಂತಪ್ಪ ಪರಮ ಜಂಗಮದ ಪಾದಕ್ಕೆ ನಮೋ ನಮೋ
ಎಂಬೆನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./852
ಜಗ ಜನಕ ಜನನಿಯರಿಬ್ಬರ ಇರವ ಕೇಳಾ ಅಯ್ಯಾ,
ಹಾ ಆಆ ಹೋ ಯೇ ಯೇ ಅಯ್ಯಾ,
ಸಸಿ ಬೀಜದಂತೆ ಶಿವನು ಶಯ್ವರಿ ಕಂಡಾ ಅಯ್ಯಾ
ಇಲ್ಲಿ ಒಮ್ಮೆಯೂ ಭೇದವಿಲ್ಲ
ಕಪಿಲಸಿದ್ಧಮಲ್ಲಿನಾಥಯ್ಯನಾ./853
ಜಗದಗಲದಲಿ ಹಬ್ಬಿ ಲಿವುತೈದುದೆ ಮಾಯೆ.
ಅದ ಕೆಡಿಸಿ ಎನ್ನ ಹರುಷಿತನ ಮಾಡಿ
ಉರುತರ ಕೈವಲ್ಯ ಪದವನಿತ್ತಾ ಗುರು ನೀನು
ಕಪಿಲಸಿದ್ಧಮಲ್ಲಿಕಾರ್ಜುನ ದೇವ ಗುರುವಾದಿಲೈ./854
ಜಗದೆರೆಯ ಮಾಡಿದನೊಂದು ಕುರಿಮರಿಯ.
ಆ ಕುರಿಮರಿ ಮೇಯುತ್ತಿದೆ.
ಸರ್ವಜಗದವರೆಲ್ಲ ಅನಂತರಕ್ಕಸರು ಹಿಂಸೆ ಮಾಡುತಲೈದಿದರು.
ಹೋದ ರಕ್ಕಸರು ಸತ್ತರು:ಇದ್ದ ಕುರಿಮರಿ ಇದ್ದಂತಿಪ್ಪುದು!
ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ./855
ಜಗದೊಳಹೊರಗೆ ನೀನಿಪ್ಪೆಯಯ್ಯಾ.
ಇಪ್ಪ ನೆಲೆಯ ಹೋಹ ಗತಿಯ ಕಾಣಲಾರಿಗೆ ಬಾರದಯ್ಯಾ.
ನೋಡ ನೋಡ ಅಡಗಿ ಹೋಹೆ
ಎನ್ನ ಕಪಿಲಸಿದ್ಧಮಲ್ಲಿನಾಥ, ನೀ ಶೂನ್ಯನಯ್ಯಾ./856
ಜಗಪ್ರಳಯದ್ಲ ಸುಳಿಯಬಹುದು ಅನೇಕ ಯುಗಜುಗಂಗಳ್ಲ.
ನಿಮ್ಮ ಶರಣರ ಚಿತ್ತ ಬೇಸರವಾದ್ಲ
ಸುಳಿಯಬಾರದೊಂದು ನಿಮಿಷ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./857
ಜಗವನಾಡಿಸುವನು, ಜಗವನೇಡಿಸುವನು.
ಜಗದ ನಟನಾಟಕನ ಪರಿಯ ನೋಡಯ್ಯಾ!
ಜಗವ ರಂಜಿಸುವನು, ಜಗವ ಭುಜಿಸುವನು.
ಜಗದೊಳಗಿಪ್ಪನು, ಜಗದ ಹೊರಗಿಪ್ಪನು.
ಜಗಕೆ ತೋರಿಯೂ ತೋರದಂತಿಪ್ಪನು.
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪನು.
ಉದಕ-ಪದ್ಮಪತ್ರದಂತಿಪ್ಪನು.
ನಿಜಗುರುವೆ, ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರನೆ,
ನೋಟ ತೀರಲೊಡನೆ ಜಗದಾಟ ತೀರಿತು./858
ಜಗವಾಧರಿಸಿದ ಕಣ್ಣು ತನ್ನ ತಗುಳ್ವ ಕಾಯವ ಕಾಣದು.
ತಿಳಿವ ಅರಿವು ತನ್ನ ತಗುಳ್ವ ಭವದ ಮೊನೆಯ ಕಾಣದು.
ವಿವೇಕಪರನಾದಡೆ ಕಾಣದುದು ಕಾಂಬುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./859
ಜಡ, ಅಸತ್ಯ, ಸುಖ ದುಃಖ, ಅನಿತ್ಯ, ಖಂಡಿತ
ಎಂಬೈದು ಲಕ್ಷಣ ಮಾಯಾತ್ಮಕವಯ್ಯಾ.
ಮೂಢಮಯ ಕಲ್ಲು ಮೊದಲಾದವೆ ಜಡದೃಶ್ಯ ನೋಡಯ್ಯಾ.
ಮೃಗದಲ್ಲಿಲ್ಲದ ಶಶವಿಷಾಣಾಧಿಕವೆ ಅಸತ್ಯವಯ್ಯಾ.
ರಜೋಗುಣಿಯ [ಸಹಾ]ಸಹ್ಯ ವೃತ್ತಿಯೆ [ಸುಖ] ದುಃಖ
ಕಂಡಯ್ಯಾ.
ತೋರಿ ಕೆಡುವ ದೇಹಾಧಿಕವೆ ಅನಿತ್ಯ ಕಂಡಯ್ಯಾ.
ಕಾಲಪರಿಚ್ಛೇದಾಧಿಕವೆ ಖಂಡಿತ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./860
ಜಡಕ್ಕೆ ಜಡವ ಕಟ್ಟಿ ಅಜಡನಾದೆನೆಂಬ ಜಡ ನಾನಲ್ಲವೆ ದೇವಾ?
ಜಡಪೂಜೆ ಸಂಪದಾ ಜಾಡ್ಯಕ್ಕೆ ಒಳಗು ಅಲ್ಲವೆ ದೇವಾ?
ಅಜಡಪೂಜೆ ಮೋಕ್ಷಕ್ಕೆ ಒಳಗು ಅಲ್ಲವೆ ದೇವಾ?
ಜಡ ಅಜಡವೆಂದೆನಿಸದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ./861
ಜನಕ್ಕೆ ಜಂಗಮನಲ್ಲದೆ ಎನ್ನ ಮನಕ್ಕೆ ಜಂಗಮನಲ್ಲ ನೋಡಾ;
ಎನ್ನ ಮನಕ್ಕೆ ಜಂಗಮನಲ್ಲದೆ
ಎಮ್ಮ ಪುರಾತರಿಗೆ ಜಂಗಮನಲ್ಲ ನೋಡಾ;
ಎಮ್ಮ ಪುರಾತರಿಗೆ ಜಂಗಮನಲ್ಲದೆ
ಚೆನ್ನಬಸವಣ್ಣಂಗೆ ಜಂಗಮನಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./862
ಜನನ ಮರಣ ದೇಹಧರ್ಮವಲ್ಲದೆ ಜಂಗಮಕ್ಕೆಲಿಹದೋ!
ಕ್ಷುದಾ-ತೃಷೆ ಪ್ರಾಣಧರ್ಮವಲ್ಲದೆ ಜಂಗಮಕ್ಕೆಲಿಹದೊ!
ಸುಖ-ದುಃಖ ಮನೋಧರ್ಮವಲ್ಲದೆ ಜಂಗಮಕಕ್ಕೆಲಿಹದೊ!
ಜ್ಞಾನಾಜ್ಞಾನಂಗಳು ಮುಮುಕ್ಷುವಿಂಗಲ್ಲದೆ,
ನಿಮ್ಮಲ್ಲಿ ಸಮರಸವಾದ ಸಚ್ಚಿದಾನಂದ ಶಿವಯೋಗಿ
ಜಂಗಮಕ್ಕೆಲ್ಲಿಹದೊ, ಕಪಿಲಸಿದ್ಧಮಲ್ಲಿಕಾರ್ಜುನಾ!/863
ಜನನವಿಲ್ಲದ ಮೂರ್ತಿ ಮನದ ಮೊನೆಯಲ್ಲಿ ಚರಿಸ್ಕ್ತುದೆ
ನೋಡವ್ವಾ.
ಘನಕ್ಕೆ ನಿಲುಕದ ಮೂರ್ತಿ ಅಣುರೇಣುವಿನಲ್ಲಿ
ಮನೆಮಾಡಿ ಚರಿಸುತ್ತಿದೆ ನೋಡವ್ವಾ.
ತಿಳಿಹೆ ನಾನೆಂದಡೆ ತಿಳಿಯದೆ ದೂರವಾಗಿ ಚರಿಸುತ್ತಿದೆ
ನೋಡವ್ವಾ.
ಇದರಂದವನರಿದರಿದು ಬೇಸತ್ತು ಬೆಂಬಿದ್ದೆನವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನಂಗೆ./864
ಜನರ ಗೊತ್ತೆಂಬಲ್ಲಿ,
ಪಾಪವ ಕಳೆದು ಪುಣ್ಯರಾಗಬೇಕೆಂಬರುಹು ತಲೆದೋರ್ಪುದಲ್ಲದೆ,
ಭೋಗರಹಿತ ಪುಣ್ಯದಾಶೆಯಿಲ್ಲ.
ಪುಣ್ಯದಾಶೆ ಇದ್ದಡೆ, ನಿಮ್ಮ ಲಿಂಗದಾಶೆ ಎನಗೆ ಸತ್ಯ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನ./865
ಜನರಿಲ್ಲದ ಘಟ್ಟದೊಳು ಘನವಿಲ್ಲದೊಂದು ಪಟ್ಟಣವಿದೆ ನೋಡಾ.
ಪಟ್ಟಣವೊಂದರೊಳು ಮೂರು ಕಟ್ಟಿಗೆಯಿವೆ ನೋಡಾ.
ಮೂರರಲ್ಲಿ ಮೂಲೋಕ ಮುಟ್ಟಿ, ಮುಟ್ಟಿ,
ಕಪಿಲಸಿದ್ಧಮಲ್ಲಿಕಾರ್ಜುನನ ನೆಟ್ಟನೆ ಘಟ್ಟಿಗೊಳ್ಳವು ನೋಡಾ,
ದಿಟ್ಟ ನಿಜ ನಟ್ಟ ಘಟ್ಟಿವಾಳಾ/866
ಜನಿತವಿಲ್ಲದೆ ನಿರ್ಜನಿತನಾದೆ
ಸ್ಥೂಲ ಸೂಕ್ಷ್ಮದಲ್ಲಿ ನಿತ್ಯನಾದೆ
ನಿಮ್ಮ ಘನವ ನೋಡಲ್ಕೆ ನಿಗಮಕ್ಕಭೇದ್ಯನು
ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದೆ
ಕಪಿಲಸಿದ್ಧಮಲ್ಲಿಕಾರ್ಜುನ./867
ಜನ್ಮಕ್ಕೊಮ್ಮೆ ಬಂದು `ಶಿವಾಯ ನಮಃ’ ಎಂದಡೆ ಸಾಲದೆ?
ಜನ್ಮಕ್ಕೊಮ್ಮೆ ಬಂದು `ಹರಾಯ ನಮಃ’ ಎಂದಡೆ ಸಾಲದೆ?
ಜನ್ಮಕ್ಕೊಮ್ಮೆ ಬಂದು ಬಸವನ ಪ್ರಸಾದವ ತೆಗೆದುಕೊಂಡಡೆ
ಸಾಲದೆ?
ಜನ್ಮಕ್ಕೊಮ್ಮೆ ಬಂದು ಚೆನ್ನಬಸವಣ್ಣನ ಪಾದೋದಕ[ವ]
ತೆಗೆದುಕೊಂಡಡೆ ಸಾಲದೆ?
ಜನ್ಮಕ್ಕೊಮ್ಮೆ ಬಂದು ಪ್ರಭುವಿನ ಪಾದಕ್ಕೆ ವಂದಿಸಿದಡೆ ಸಾಲದೆ?
ಜನ್ಮಕ್ಕೊಮ್ಮೆ ಬಂದು ಮಡಿವಾಳಣ್ಣನ ಅನುಭವದಲ್ಲಿದ್ದಡೆ
ಸಾಲದೆ?
ಜನ್ಮಕ್ಕೊಮ್ಮೆ ಬಂದು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿದಡೆ
ಸಾಲದೇನೋ ಕಲ್ಲಯ್ಯಾ/868
ಜನ್ಮವನೊಮ್ಮೆ ಧರಿಸಿದ ಬಳಿಕ,
ಜನನವಿನಾಶ ವಿಗ್ರಹ ಮೂರ್ತಿಯ ಪೂಜಿಸಲೆ ಬೇಕು.
ಜನ್ಮವನೊಮ್ಮೆ ಧರಿಸಿದ ಬಳಿಕ,
ಶ್ರೀಶೈಲ ಮಹಿಮೆಯ ಸಾಧಿಸಿ ನೋಡಲೇಬೇಕು ನೋಡಾ,
ಕಪಿಲಸಿದ್ಧಮಲ್ಲಿಗಿಕಾರ್ಜುನಾ./869
ಜಪ ತಪವ ಮಾಡಿದಡೇನಯ್ಯಾ ತಾನು?
ನೇಮ ಸಮಾಧಿಯ ಮಾಡಿದಡೇನಯ್ಯಾ,
ನಿಮ್ಮ ಪಾದೋದಕ ಪ್ರಸಾದವ ವರ್ಮವನರಿಯದನ್ನಕ್ಕ?
ಮುಂಡೆಯ ಬದುಕಿಂಗೆ ಮೂಲಸ್ವಾಮಿಯ ಕುರುಹಿಡಬಹುದೆ?
ಕಪಿಲಸಿದ್ಧಮಲ್ಲಿಕಾರ್ಜುನ./870
ಜಪವೆಂಬುದು ಪಾಪಕ್ಕೆ ಬಹು ತಾಪ ನೋಡಯ್ಯಾ.
ಜಪವೆಂಬುದು ಪುಣ್ಯದ ನಾಣ್ಯ ನೋಡಯ್ಯಾ.
ಜಪವೆಂಬುದು ಚೆನ್ನಬಸವಣ್ಣನ ಪಾದದಲ್ಲಿಯೆ ಐಕ್ಯ
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./871
ಜಪವೇನು, ತಪವೇನು,
ಸಾಧಿಸುವಾತಂಗದು ದುರ್ಲಭವಲ್ಲವೆ, ಮನವೆ?
ನೇಮವೇನು, ನಿತ್ಯವೇನು,
ಸಾಧಿಸುವಾತಂಗದು ದುರ್ಲಭ ದೇವಾ.
ಪೂಜೆಯ ಸೋಜಿಗತನದ ಮಹಾಮಹತ್ವವೇನು?
ಸಾಧಿಸುವಾತಂಗದು ದುರ್ಲಭವಲ್ಲವೆ?
ಹೇ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ./872
ಜಪಿಸಬಾರದು ಜಪಿಸಬಾರದು ಕುಮಂತ್ರಂಗಳ.
ಜಪಿಸಬಾರದು ಜಪಿಸಬಾರದು ಮೋಹನದ ಮಂತ್ರಂಗಳ.
ಜಪಿಸಬಾರದು ಜಪಿಸಬಾರದು ಮಾರಣಮಂತ್ರಂಗಳ.
ಜಪಿಸಬೇಕು ಜಪಿಸಬೇಕು, `ಕಪಿಲಸಿದ್ಧಮಲ್ಲಿಕಾರ್ಜುನಾಯ
ನಮಃ’
ಎಂದು ಕೇಳಾ ಕೇದಾರ ಗುರುದೇವಾ./873
ಜಪಿಸಬೇಕು ಜಪಿಸಬೇಕು ದೇಹ ನಾನಲ್ಲೆಂದು.
ಜಪಿಸಬೇಕು ಜಪಿಸಬೇಕು ಜೀವಾತ್ಮ ಸಾಕ್ಷಿಯಲ್ಲೆಂದು.
ಜಪಿಸಬೇಕು ಜಪಿಸಬೇಕು ನಾ ಚೆನ್ನಬಸವನೆಂದು.
ಜಪಿಸಬೇಕು ಜಪಿಸಬೇಕು ಕಪಿಲಸಿದ್ಧಮಲ್ಲಿಕಾರ್ಜುನನ
ಪಾದಪದ್ಮ ಭ್ರಮರವೆಂದು./874
ಜಪಿಸಬೇಕು ಜಪಿಸಬೇಕು ಸತ್ಯಶೀಲವ.
ಜಪಿಸಬೇಕು ಜಪಿಸಬೇಕು ಪರಹಿತವ.
ಜಪಿಸಬೇಕು ಜಪಿಸಬೇಕು ಪರಸ್ತ್ರೀ ಪರಧನವನೊಲ್ಲೆನೆಂಬುದ.
ಜಪಿಸಬೇಕು ಜಪಿಸಬೇಕು ಗುರು-ಲಿಂಗ-ಜಂಗಮ ದಾಸೋಹವ.
ಜಪಿಸಬೇಕು ಜಪಿಸಬೇಕು `ಕಪಿಲಸಿದ್ಧಮಲ್ಲಿಕಾರ್ಜುನಾಯ ನಮಃ’
ಎಂದು, ಕೇಳಾ ಕೇದಾರ ಗುರುದೇವಾ./875
ಜಯಸಮಯವನಪ್ಪಿದ ಕರ ಬಸವಾ,
ಕರುಣಗೃಹ, ವಿಮಲ ಶುದ್ಧಸಮಯ ಭಾವಭರಿತ,
ಭರಿತಪೂರ ಪುರೋಪಜೀವ, ನಮೋ ಬಸವಾ,
ನಮೋ ಪ್ರಾಣಲಿಂಗಿ ಬಸವಾ,
ಕಪಿಲಸಿದ್ಧಮಲ್ಲಿನಾಥಾ, ನಮೋ ಬಸವಾ./876
ಜಲದ ಸಿಂಹಾಸನದ ಕೆಲದಲಷ್ಟಮ ಬೆಟ್ಟ
ಕುಲಗಿರಿಗಳೆರಡು ಮತ್ತಿಕ್ಕೆಲದ.
ನೆಲೆಯನರಿಯರು ಬ್ರಹ್ಮಕುಲವನರಿಯರು
ಯೋಗ ಹೊಲಬುಗೆಟ್ಟರು ಯೋಗಸಿದ್ಧರೆಲ್ಲ.
ಈರಾರನೊಂದೆಂದು ಹಿಡಿದಾತ ನಿಷ್ಕಲ ಯೋಗಿ
ತಾ ಕಪಿಲಸಿದ್ಧಮಲ್ಲಿನಾಥ./877
ಜಲದಲ್ಲಿ ಉದಯಿಸಿ ಮತ್ತೆ ಜಲವು ತಾನಲ್ಲ;
ಜಲವೆಂದಿಪ್ಪುದೀ ಲೋಕವೆಲ್ಲಾ.
ಪರಮಗುರು ಬಸವಣ್ಣ ಜಗವ ಪಾಲಿಸ ಬರಲು
ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ.
ಆ ಸುದ್ದಿಯನರಿಯದೆ ಅನೇಕ ಜಡರುಗಳೆಲ್ಲ
ಬೇಕಾದ ಪರಿಯಲ್ಲಿ ನುಡಿವುತ್ತಿಹರು.
ಸತ್ತಪ್ರಾಣಿಯನ್ನೆತ್ತಿ ಒಪ್ಪಿಪ್ಪ ನಿಶ್ಚಯವು
ಮತ್ರ್ಯದವರಿಗುಂಟೆ ಶಿವಗಲ್ಲದೆ?
ಶಿವಗುರು ಬಸವಣ್ಣ, ಬಸವಗುರು ಶಿವನಾಗಿ,
ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿಯಾದನು.
ಬಸವಣ್ಣನ ನೆನಹು ಸುಖಸಮುದ್ರವಯ್ಯಾ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಬಸವಣ್ಣನ ತೋರಿರಾಗಿ ಬದುಕಿದೆನಯ್ಯಾ ಪ್ರಭುವೆ./878
ಜಲದಲ್ಲಿ ಚಂದ್ರನಿಲ್ಲ, ಜಲವೆಲ್ಲ ಮಾಯಾತ್ಮಕ.
ವಸ್ತುವಲ್ಲ; ವಸ್ತ್ವಾತ್ಮಕ ಮಾಯೆಯಲ್ಲ.
ಉಪಾಧಿಯಿಂದ ತೋರ್ಪುದೆಲ್ಲ ನಿಜವೆ ಅಯ್ಯಾ?
ಸ್ಠಾಣು ಚೋರ ನ್ಯಾಯದಂತೆ, ಶುಕ್ತಿ ರಜತ ನ್ಯಾಯದಂತೆ,
ರಜ್ಜು ಸರ್ಪ ನ್ಯಾಯದಂತೆ, ಅಧ್ಯಾರೋಪವಾದ ಅವಿದ್ಯೆಯಲ್ಲಿ
ಲೇಸುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ./879
ಜಲದಲ್ಲಿ ನೊರೆ ತೆರೆ ಬುದ್ಬುದವಿದ್ದಂತೆ,
ಕನಕದಲ್ಲಿ ಅಲಂಕಾರವಿದ್ದಂತೆ,
ಬೀಜದಲ್ಲಿ ಎಲೆ ಶಾಖೆ ಬೀಜವಿದ್ದಂತೆ
ಒಂದೆ ವಸ್ತುವಿನಲ್ಲಿ ಗುಣತ್ರಯವಾದವು;
ಗುಣತ್ರಯಂದ ಮಲತ್ರಯಂಗಳಾದವು;
ಮಲತ್ರಯಂಗಳಿಂದ ಲೋಕರಚನೆ ಹೆಚ್ಚಿತ್ತು;
ಲೋಕರಚನೆ ಹೆಚ್ಚಿದಲ್ಲಿ ಪಾಪಪುಣ್ಯಂಗಳಾದವು;
ಪಾಪಪುಣ್ಯಂಗಳಿಂದ ಸ್ವರ್ಗನರಕಂಗಳಾದವು;
ಸ್ವರ್ಗನರಕಂಗಳಿಂದ ಭೇದವಾಗಿಯಾಗಿ ಕೆಟ್ಟ ಕೇಡ ನೋಡಿ
ತನ್ನ ಮಾಯೆಯ ಸೆಳೆದನು.
ಮಾಯೆಯ ಸೆಳೆದಲ್ಲಿ, ಸರ್ವವು ಲಯವಾಗಿ ನೀನೊಬ್ಬನೆ
ಉಳಿದೆ.
ಉಳಿದೆ ಎಂಬುದು ಶಾಸ್ತ್ರಪ್ರಸಿದ್ಧ-
ಸಮುದ್ರದ ನೀರು ಮೇಘವಾಗಿ, ಮೇಘದ ನೀರು
ಹಳ್ಳಕೊಳ್ಳವಾಗಿ, ಮತ್ತೆ ಸಮುದ್ರವಾದಂತೆ.
ಅದರಂತೆ ಒಂದೆ ಸ್ಥಲದಲ್ಲಿ ನಿಂತು ನೋಡಲೊಲ್ಲದೆ,
ಅನೇಕ ಸ್ಥಾನಗಳ ಧರಿಸಿ ಹೋಗುವುದದು ಉಚಿತವಲ್ಲ, ಎಲೆ
ಜೀವವೆ
ಎಂದು ಬೋಧಿಸಿದ ಸದ್ಗುರು ಚೆನ್ನಬಸವಣ್ಣನ ಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./880
ಜಲದಲ್ಲಿಯ ಚಂದ್ರನ ಚಲನೆ ಜಲದಲ್ಲಲ್ಲದೆ,
ನಿಜಚಂದ್ರನಲ್ಲಿಲ್ಲವಯ್ಯಾ.
ಘಟದಲ್ಲಿಯ ಪ್ರತಿಬಿಂಬಗಳು ಘಟದಲ್ಲಲ್ಲದೆ ಬಿಂಬದಲ್ಲಿಲ್ಲ
ನೋಡಯ್ಯಾ.
ಜಲದಲ್ಲಿಯ ಚಂದ್ರನ ಚಲನೆ ಘಟದಲ್ಲಿಯ ಪ್ರತಿಬಿಂಬ
ನಿಜವಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./881
ಜಲದೊಳಗೆ ಭವಿಸಿತ್ತು ಜಲಕೆ ನಂದದ ಕಿಚ್ಚು.
ಆ ಜಲಂಗಳು ಹಲವು:ಮತ್ತೆ ತನ್ನೊಳಗೆ ಜನನವು ಆ ಸ್ಥಳ.
ಜಲಕೆ ನೆಲೆಯಾದ ಸೀಮೆ ತಾನೆ ಆ ಸ್ಥಳವು.
ಸೀಮೆಯ ಮೀರಿ, ಒಲವೆ ಒಡಮನೆಯಾದ
ಕಪಿಲಸಿದ್ಧಮಲ್ಲಿಕಾರ್ಜುನ./882
ಜಲದೊಳಗೆ ಭವಿಸಿಪ್ಪ ಜಲದ ನಾದವ ಭೇದ
ಜಲಶಿಲೆಯೊಪ್ಪುದೊಂದಾನತದಲಿ
ಬಸವಾಕ್ಷರತ್ರಯದ ನೆನಹುವಿಡಿದಾತಂಗೆ
ನಿತ್ಯಪದವು ಕರುಣಾಕರನೆ, ಕಪಿಲಸಿದ್ಧಮಲ್ಲಿಕಾರ್ಜುನ./883
ಜಲದೊಳಗೆ ಮತ್ಸ ್ಯ ಜಲವ ತನ್ನ ನಾಸಿಕದತ್ತ
ಹೊದ್ದಲೀಯದ ಪರಿಯ ನೋಡಾ ಅಯ್ಯಾ.
ಶರಣ ಸರ್ವಪ್ರಪಂಚಿನೊಳಗಿದ್ದು
ಆ ಪ್ರಪಂಚು ತನ್ನತ್ತ ಹೊದ್ದಲೀಯದ ಪರಿಯ ನೋಡಾ ಅಯ್ಯಾ.
ಮತ್ಸ್ಯಂಗಾ ಬುದ್ಧಿಯ, ಶರಣಂಗೀ ಬ್ಧುಯ ಕರುಣಿಸಿದೆಯಲ್ಲಾ,
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ./884
ಜಲದೊಳಗೆ ಹುಟ್ಟಿದ ಬುದ್ಬುದಂಗಳು ಜಲದೊಳಗಡಗುವಂತೆ
ನಿನ್ನೊಳಗಡಗಿಪ್ಪುದನಾರು ಬಲ್ಲರಯ್ಯಾ?
ಶರಣ ದೇಹಿಕ ದೇವ ಮಹವನೊಡಗೂಡಿಪ್ಪ ಭೇದವ
ಬಲ್ಲವರಾರಯ್ಯ?
ಕೊಡನೊಳಗಣ ಚಂದ್ರ ಹಲವರೊಳಗೆ ವರ್ತಿಸುವಂತೆ
ನೀನವರೊಳಗೆ ಹೊದ್ದಪ್ಪುದನು ನಿನ್ನವರಲ್ಲದರಿವರಾರೈ
ಕಪಿಲಸಿದ್ಧಮಲ್ಲಿಕಾರ್ಜುನ. /885
ಜಲದ್ಲಪ್ಪ ಜಲವ ನೋಡಾ;
ಮನೆಯ್ಲಪ್ಪ ಮನೆಯ ನೋಡಾ;
ಅಹಂಕಾರದ್ಲಪ್ಪ ಅಹಂಕಾರವ ನೋಡಾ.
ಇವೆಲ್ಲ ಬಯಲ್ಲ ನಿಂದಡೆ ತೋರ್ಪವು.
ಬಯಲ್ಲ ನಿಂದು ಬಯಲ ಬಯಲ ಮಹಾಬೆಳಗಿನ ಬೆಳಗ
ನೋಡಬಲ್ಲಡೆ ಶರಣ, ಕಪಿಲಸಿದ್ಧಮಲ್ಲಿಕಾರ್ಜುನ./886
ಜಲವ ತರದೆ, ಪಾವಕವ ಹೊತ್ತಿಸದೆ,
ಪಾಕವ ಮಾಡಿ ಉಣಬಲ್ಲಡೆ ಐಕ್ಯನೆಂಬೆ, ಆರೂಢನೆಂಬೆ,
ಆರುಸ್ಥಲವ ಮೀರಿದ ಮಹಾಯೋಗಿ ಎಂಬೆ,
ಕಪಿಲಸಿದ್ಧಮಲ್ಲಿಕಾರ್ಜುನಾ./887
ಜಲವಿಡಿಯ ಪರಿವಿಡಿಯ ಪದವಿಡಿಯ ಭವವಿಡಿಯ
ಒಲವನೊಲ್ಲೆನು ಅವನಕಾಂಕ್ಷೆ ಇಲ್ಲ.
ಗುರುಕರುಣದಾಜ್ಞೆಯ ಪರುಷಂಗವ ಪಡೆದು
ಒಳಹೊರಗೆನ್ನದೆ ಭೇದಿಸುವೆನು
ಶ್ರೀಗುರು ಚೆನ್ನಬಸವಣ್ಣ ಸಹರೂಪದ ಭಾವಶುದ್ಧನಪ್ಪೆ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನ./888
ಜಾಗ್ರ ಸ್ವಪ್ನ ಸುಷುಪ್ತಿ ತುರೀಯದೊಳು ಲೇಸಾಗಿ
ತನ್ನ ತಾಮಸವ ಹರಹಿತಯ್ಯಾ.
ಒಂದನರಿಯಲ್ಕೆ ಆ ಮೂರು ನಾಶವೈ.
ಮಾಯೆಯ ಗೆಲು ಬಳಿಕ, ಕಪಿಲಸಿದ್ಧಮಲ್ಲಿಕಾರ್ಜುನ./889
ಜಾಗ್ರದಲ್ಲಿಹ ಮನುಷ್ಯಂಗೆ
ಸ್ವಪ್ನ ಸುಷುಪ್ತಿ ಮಿಥ್ಯವೆಂಬುದು ಪ್ರಸಿದ್ಧ.
ಸ್ವಪ್ನದಲ್ಲಿಹ ಮನುಷ್ಯಂಗೆ [ಜಾಗ್ರ] ಸುಷುಪ್ತಿ
ಎಂಬುದು ತೋರಬಾರದು,
ಸುಷುಪ್ತಿಯಲ್ಲಿ ಜಾಗ್ರ ಸ್ವಪ್ನವೆಂಬುದು ತಿಲಮಾತ್ರ
ತಿಳಿಯಬಾರದು,
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./890
ಜಾತಿ ವಿಜಾತಿಯು ನೀರ್ಗುಡಿಯ ಹೋದರೆ
ಸುಡು ಹೋಗೆಂದು ನೂಂಕಿತ್ತೆ ಆ ಜಲವು!
ಆ ಜಲದಂತಾಗಬೇಡವೆ ಹಿರಿಯರಾದವರು.
ಎನ್ನ ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಬುದ್ಧಿ ಎನ್ನನೆಂದು ಬಂದು ಪೊರ್ದಿಪ್ಪುದೊ
ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನದೇವರದೇವಾ./891
ಜಾರನಲ್ಲವೆ ಭವಭವದಲ್ಲಿ ಸೌಂದರನಂಬಿ?
ಜಾರೆಯಲ್ಲವೆ ಭವಭವದಲ್ಲಿ ಸೂಳೆ ಪದ್ಮಲದೇವಿ?
ಜಾರನಾಗಿ, ಜಾರೆಯಾಗಿ ಜಾರಿದರಂದು
ಜನನ ಬವಣೆಯಲ್ಲಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./892
ಜಾರನಾದಡೆ ಗೋಪಾಲಮೂರ್ತಿಯಂತಿರಬೇಕು;
ಜಾರನಾದಡೆ ಹಾದರದ ಬೊಮ್ಮಯ್ಯನಂತಿರಬೇಕು;
ಜಾರನಾದಡೆ ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿಯಂತಿರಬೇಕು,
ನೋಡಿದೊ, ಕಿರಿಯರಿರಾ!/893
ಜಾರನು ಜಾರನು ಭವದಲ್ಲಿ ನೋಡಾ ಮನವೆ.
ಜಾರನು ಜಾರನು ಸತ್ಯದಲ್ಲಿ, ನೋಡಾ ಮನವೆ.
ಜಾರನು ಜಾರನು ನಿನ್ನಲ್ಲಿ ನೋಡಾ ಮನವೆ.
ಜಾರನು ಜಾರನು, ಕಪಿಲಸಿದ್ಧಮಲ್ಲಿಕಾರ್ಜುನ ಪಾದಯುಗವ,
ನೋಡಾ ಮನವೆ./894
ಜಾರನೆಂಬುವ ನಾಮ ಮಾರಹರಂಗೆ ಸಲುವಳಿಯಯ್ಯಾ!
ಜಾರನು ಜಾರನು ಕಪಿಲಸಿದ್ಧಮಲ್ಲಿಕಾರ್ಜುನನ
ಶರಣರ ಮನದ ಮನೆಯ ಕೊನೆಯಲ್ಲಿ/895
ಜೀವಾತ್ಮಕ ಜೀವನಲ್ಲ, ಜೀವಾತ್ಮಕ ಶಿವನಲ್ಲ.
ಶಿವನಂತುವನರಿಯದೆ ಹೋದವು ವೇದಗಳು,
ಜೀವನಂತುವನರಿಯದೆ ಹೋದರು ಮಹಾಮುನಿಗಳು.
ಶಿವಜೀವಕ್ಕೆ ಭೇದವಿಲ್ಲೆಂಬುವರ ನಾ ನೋಡಲಾರೆನು,
ಕಪಿಲಸಿದ್ಧಮಲ್ಲಿಕಾರ್ಜುನಾ./896
ಜೀವಾತ್ಮವೆಂಬುದು ಪಂಚಭೂತಮಯ
ದೇಹವನಾಶ್ರಯಿಸಿತ್ತು ನೋಡಾ.
ಪರಮಾತ್ಮವೆಂಬುದು ಅಜಾಂಡ ನೂರಾರನೊಳಗುಮಾಡಿ,
`ಅತ್ಯತಿಷ್ಠದ್ದಶಾಂಗುಲಂ’ ಎನಿಸಿತ್ತು ನೋಡಾ.
ಅಂತರಾತ್ಮವೆಂಬುದು ಜೀವಾತ್ಮವನಳಿದು
ಪರಮಾತ್ಮನಲ್ಲಿ ಕೂಡುವ ಕೂಟವೆನಿಸಿತ್ತು.
ಈ ಆತ್ಮತ್ರಯ ಕಡೆಗೆ ಕಪಿಲಸಿದ್ಧಮಲ್ಲಿಕಾರ್ಜುನನ ರೂಪು
ಪ್ರಸಿದ್ಧ ನೋಡಾ, ಕೇದಾರಯ್ಯಾ./897
ಜ್ಞಾನ ಜ್ಞಾನವೆಂದು ಕೇಳಿದೆವಯ್ಯಾ ಗುರುಹಿರಿಯರಿಂದ.
ಕೇಳಿದಲ್ಲಿ ಅಂಗವಾಲಿಲ್ಲ, ಕೇಳದೆ ಬಿಟ್ಟ್ಲಲ್ಲಿ ಅಂಗವಾಯಿತ್ತು.
ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ/898
ಜ್ಞಾನಕ್ರಿಯಾಗಳಿಂದ ಲಿಂಗದಲ್ಲಿ ನಿಬ್ಬೆರಗಾದ ನೀಲಮ್ಮನ
ಪಾದದ ಕಂದ ನಾನು, ಪಾದದ ದಾಸ ನಾನು,
ಪಾದದ ಪಾದುಕೆ ನಾನು, ಪಾದುಕೆಯ ಧೂಳಿ ನಾನು,
ಕಪಿಲಸಿದ್ಧಮಲ್ಲಿಕಾರ್ಜುನ./899
ಜ್ಞಾನವದು ದುರ್ಲಭವಲ್ಲ,
ಅದರ ಭಾವ ದುರ್ಲಭವಯ್ಯಾ.
ಭಾವವದು ದುರ್ಲಭವಲ್ಲ,
ಅದರ ಏಕತ್ವವದು ದುರ್ಲಭ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./900
ಜ್ಞಾನವಿಡಿದಾಷರಿಸಿದರಲ್ಲದೆ, ಕ್ರೀವಿಡಿದಾಚರಿಸಲಿಲ್ಲವು.
ಕ್ರೀವಿಡಿಧಛೃಈಶೀಧೃರ್ಳಳೇ, ಜ್ಞಾನವಿಡಿದಾಚರಿಸಲಿಲ್ಲವು.
ರೂಪುವಿಡಿದು ನರೀಕ್ಷಿಸುವರಲ್ಲದೆ, ಅರೂಪವಿಡಿದು ನಿರೀಕ್ಷಿಸರು.
ಜ್ಞಾನಕ್ರಿಯೆವಿಡಿದಾಚರಿಸಿದರು ನಮ್ಮ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ, ಚೆನ್ನ ಬಸವಣ್ಣನವರು./901
ಜ್ಞಾನವೆ ಕಾರಣವಾಯಿತ್ತು ಭಕ್ತಿಯ ವ್ಯಕ್ತಿಗೆ.
ನಿಷ್ಠಾಭಾವವೆ ಕಾರಣವಾಯಿತ್ತು ನಿಮ್ಮ ಒಲುಮೆಗೆ,
ನಿಮ್ಮ ಸಮರಸಕ್ಕೆ ಕಪಿಲಸಿದ್ಧಮಲ್ಲಿಕಾರ್ಜುನ./902
ಜ್ಞಾನವೆಂದು ವಿವಾದಿಸುವ ಅಣ್ಣಗಳಿರಾ, ಕೇಳಿರಯ್ಯಾ:
ಜ್ಞಾನವೆಂದಡೆ ಮಹತ್ವಗಳ ಮಾಡಿ ಮೆರೆದುದು ಜ್ಞಾನವೆ?
ಅಲ್ಲಲ್ಲ.
ಜ್ಞಾನವೆಂದಡೆ ಸ್ವರ್ಗದ ವಾರ್ತೆಯ ಕೇಳಿ
ಕೀರ್ತಿಯ ಹಬ್ಬಿದುದು ಜ್ಞಾನವೆ? ಅಲ್ಲಲ್ಲ.
ಜ್ಞಾನವೆಂದಡೆ ತತ್ಕಾಲಕ್ಕಾಗುವ ಸುಖದುಃಖಗಳ
ಹೇಳಿದುದು ಜ್ಞಾನವೆ? ಅಲ್ಲಲ್ಲ.
ಇವೆಲ್ಲಾ ಸಾಧನೆಯ ಮಾತು.
ಅಘೋರಮುಖದಿಂದ ಹುಟ್ಟಿದ ಮಂತ್ರಂಗಳೆಲ್ಲಾ,
ಜಪಿಸಿದಲ್ಲಿ ಮಹತ್ವಗಳಾದವು.
ಸೂಕ್ಷ್ಮತಂತ್ರವ ಗಣಿಸಿದಲ್ಲಿ ಸ್ವರ್ಗದ ವಾರ್ತೆಯ ಹೇಳಿದನು.
ಪ್ರಸಂಗಚಿಂತಾಮಣಿಯ ನೋಡಿ ಸುಖದುಃಖಂಗಳ ಹೇಳಿದನು.
ಇವೆಲ್ಲಾ ಪರಸಾಧನೆಯಯ್ಯಾ.
ನಿನ್ನರಿವು ಕೈಕರಣವಾಗಿರೆ ದೇಹವಳಿದಡೇನು, ದೇಹ ಧರಿಸಿ
ಬಂದಡೇನು?
ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./903
ಜ್ಞಾನಾಭ್ಯಾಸದಲ್ಲಿ ವಟಮೂಲಿಕೆಯ ಬೀಜದಂತಿರಬಲ್ಲಡೆ ಭಕ್ತನಯ್ಯಾ.
ಆ ಜ್ಞಾನದಲ್ಲಿ ಅಗ್ನಿಯಂ್ಕರಬಲ್ಲಡೆ ಭಕ್ತನಯ್ಯಾ.
ಭಕ್ತನು ಭಕ್ತನು ಎಂದು ಬೆಳೆದ ಧಾನ್ಯಂಗಳನಟ್ಟು
ಬೆಟ್ಟಬಿಲ್ಲಯ್ಯನ ರೂಹಕ್ಕೆ ಒಟ್ಟಿ ಭಕ್ತನಾದೆನೆಂಬವನ ಯುಕ್ತಿ
ಲೊಳಲೊಟ್ಟೆಯಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./904
ಜ್ಞಾನಿಗಳಾದ ಬಳಿಕ ಪರಿಪೂರ್ಣ ಜಗತ್ತೆಂದರಿಯಬೇಕು.
ಜ್ಞಾನಿಗಳಾದ ಬಳಿಕ ಪಾಪವಾಸನೆ ತೊರೆದಿರಬೇಕು.
ಜ್ಞಾನಿಗಳಾದ ಬಳಿಕ ಅನ್ಯರ ನುಡಿಗೆ ಒಳಗಾಗಬಾರದು.
ಜ್ಞಾನಿಗಳಾದ ಬಳಿಕ ಅನ್ಯರ ನಿಂದೆಗೆ ಒಳಗಾಗಬಾರದು,
ಕಪಿಲಸಿದ್ಧಮಲ್ಲಿಕಾರ್ಜುನ./905
ಜ್ಞಾನಿಗಳು ತಾವಾದ ಬಳಿಕ ಅನ್ಯರ ಹಂಗಿನೊಳಗಾಗಬಾರದು.
ಜ್ಞಾನಿಗಳು ತಾವಾದ ಬಳಿಕ ಅನ್ಯರ ಕುಲವ ಬೆರಸಬಾರದು.
ಜ್ಞಾನಿಗಳು ತಾವಾದ ಬಳಿಕ ಅಸತ್ಯವ ನುಡಿಯಬಾರದು
ಕಪಿಲಸಿದ್ಧಮಲ್ಲಿಕಾರ್ಜುನ./906
ಜ್ಞಾನಿಗಳು ತಾವಾದ ಬಳಿಕ ತ್ರಿಕಾಲ ಲಿಂಗವ ಪೂಜಿಸಬೇಕು.
ಜ್ಞಾನಿಗಳು ತಾವಾದ ಬಳಿಕ ಜಂಗಮ ದಾಸೋಹದಲ್ಲಿರಬೇಕು.
ಜ್ಞಾನಿಗಳು ತಾವಾದ ಬಳಿಕ ನುಡಿಕೊಟ್ಟು ತಪ್ಪಬಾರದು
ಕಪಿಲಸಿದ್ಧಮಲ್ಲಿಕಾರ್ಜುನ./907
ಜ್ಞಾನಿಗಳು ತಾವಾದ ಬಳಿಕ ಮುಕುರದ ಬಿಂಬದಂತಿರಬೇಕು.
ಜ್ಞಾನಿಗಳು ತಾವಾದ ಬಳಿಕ ಜ್ಞಾನದಲ್ಲಿ ಕದಲದಂತಿರಬೇಕು.
ಜ್ಞಾನಿಗಳು ತಾವಾದ ಬಳಿಕ ಸಂಶಯರಹಿತರಾಗಿರಬೇಕು
ಕಪಿಲಸಿದ್ಧಮಲ್ಲಿಕಾರ್ಜುನ./908
ಜ್ಞಾನಿಗಳು ತಾವಾದ ಬಳಿಕ ವಿಶ್ವಾಸಘಾತವ ಮಾಡಬಾರದು.
ಜ್ಞಾನಿಗಳು ತಾವಾದ ಬಳಿಕ ಪರದೂಷಣೆ ಮಾಡಬಾರದು.
ಜ್ಞಾನಿಗಳು ತಾವಾದ ಬಳಿಕ ಪರದ್ರವ್ಯವನಪಹರಿಸಬಾರದು.
ಜ್ಞಾನಿಗಳು ತಾವಾದ ಬಳಿಕ ಗುರುಸೇವೆಯಲ್ಲಿರಬೇಕು
ಕಪಿಲಸಿದ್ಧಮಲ್ಲಿಕಾರ್ಜುನ./909
ಜ್ಞಾನಿಗಳು ತಾವಾದ ಬಳಿಕ, ಅನ್ಯರ ಸ್ತೋತ್ರಕ್ಕೆ ಒಳಗಾಗಬಾರದು.
ಜ್ಞಾನಿಗಳು ತಾವಾದ ಬಳಿಕ, ಗುರುಹಿರಿಯರಿಗಂಜಿ ನಡೆಯಬೇಕು.
ಜ್ಞಾನಿಗಳು ತಾವಾದ ಬಳಿಕ, ಅನ್ಯಸ್ತ್ರೀ ತನ್ನ ಮಾತೆಯಂತಿರಬೇಕು
ಕಪಿಲಸಿದ್ಧಮಲ್ಲಿಕಾರ್ಜುನ./910
ಜ್ಞಾನಿಗಳು ನಾವೆಂದು ಕಂಡಂತಾಚರಿಸಿದಡೆ ಜ್ಞಾನಿಗಳಲ್ಲ.
ಆರೂಢ ನಾವೆಂದು ಕಂಡ ಕಂಡಂತಾಚರಿಸಿ
ಕಂಡಲ್ಲತಿಂದಡೆ ಆರೂಢರೆ ಅವರಲ್ಲ.
ಜ್ಞಾನಿಯ ಪರಿ ಬೇರೆ, ಆರೂಢನ ಪರಿ ಬೇರೆ, ಪರಮಹಂಸನ
ಪರಿ ಬೇರೆ.
ಅರಿತಡೆ ಹೇಳಾ, ಅರಿಯರ್ದಡೆ ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನನ ಸಾನ್ನಿಧ್ಯದಲ್ಲಿ, ಕೇದಾರಯ್ಯಾ./911
ಜ್ಯೋತಿಷ್ಯವದು ಜ್ಯೋತಿಯಂತಯ್ಯಾ:
ಕೂಡುವ ಕಾಲಕ್ಕೆ ಪ್ರಕಾಶಮಯವು: ಕೂಡದ ಕಾಲಕ್ಕೆ ದಗ್ಧಮಯವು.
ಇದರಂತುವನರಿದವ ವರರುಚಿಯಲ್ಲದೆ,
ಮತ್ತೊರ್ವನ ಕಾಣೆ, ಕಪಿಲಸಿದ್ಧಮಲ್ಲಿಕಾರ್ಜುನ/912
ತಂಡತಂಡದ ಅಜಾಂಡದ ಹಾಹೆಗಳ
ಒಂದೊಂದರ ಒಂದೊಂದರ ಕ್ರಿಯಾಳಾಪದಂದುಗ ಸಮನಿಸದೆ
ಹಿಂದುಮುಂದರ ಸಂದು ಹರಿದು ಎಂಪ್ಪೆನಯ್ಯಾ.
ಶಿವಭಕ್ತಿಯಲ್ಲಿ ಅವ್ಯಯ ಆಲಯದಲ್ಲಿ ಆನಂದ ಕ್ರಿಯಾಳಾಪದ
ಹಾಡುತ್ತ ನನದಾಡುತ್ತ ಎಂಪ್ಪೆನಯ್ಯಾ?
ನಿನ್ನ ನೆನಹಿನ ಸಂಯೋಗ ಸಂಗಸುಖದಲ್ಲಿ ಎಂದಿಪ್ಪೆನಯ್ಯಾ?
ಶುದ್ಧದ ಒಳಿತೆಯೆಂಬ ಮನೆಯಲ್ಲಿ
ತ್ವಂಪದ ಸೀಮೆಯ ಮೀರಿ ಎಂತಿಪ್ಪೆನಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನ./913
ತಂದೆಯೊಡನುಂಡ ಶಿಶು ತಾಯಿಯೊಡನುಣ್ಣದೆ?
ಮನೆಯಲುಂಡ ಮಿತ್ರನು ತನ್ನ ಮಿತ್ರನಲ್ಲುಣ್ಣನೆ?
ಇದು ಕಾರಣ,
ಅಲ್ಲಮಯ್ಯನ ಬೋಧೆಯನು, ತಮ್ಮ ಬೋಧೆಯನು
ಕೇಳುವ ಬಾಲರಿಗೆ ಜನನೀಜನಕರ ಭೋಜನ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./914
ತಕರ್ಿಸಿದ್ಲ ವಾಸಿ ಶಿಖಾಮುದ್ರೆ ಸಾಧಿಸುವವರೊಂದು ಕೋಟಿ.
ವೇದಾಂತದ್ಲ ವಾಸಿ ಶಿಖಾಮುದ್ರೆಯ ಸಾಧಿಸುವವರೊಂದು ಕೋಟಿ.
ಶರಣನ ವಾದಿಸಿ ಶಿಖಾಮುದ್ರೆಯ ಸಾಧಿಸುವದದು
ಶರಣನ ಬಿಟ್ಟು ಶರ ತಾಗಿದವರಲ್ಲೋರ್ವರಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./915
ತಟ್ಟುವ ಮುಟ್ಟುವ ಭೇದವನು
ತಟ್ಟದೆ ಮುಟ್ಟದೆ ಅರ್ಪಿಸುವಾನಂದವನು,
ಅರ್ಪಿತವಿಲ್ಲದೆ ಎಯ್ದುವ ತೃಪ್ತಿಯನು,
ತೃಪ್ತಿಯಲಾದ ಪರಿಣಾಮವನು,
ಪರಿಣಾಮದಲಾದ ಪ್ರಸನ್ನತೆಯನು,
ಪ್ರಸನ್ನತೆಯಲಾದ ಪ್ರಸಾದವನು ಕೊಂಡು
ನಿತ್ಯರಾಗಿಪ್ಪವರ ಎನಗೆ ತೋರಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ./916
ತಟ್ಟುವ ಮುಟ್ಟುವ ಭೇದವನೊಲ್ಲ ; ಅದೇನು ಕಾರಣ?
ಐದಾರು ಪ್ರಸಾದದಲ್ಲಿ ಈರೈದು ಪಾದೋದಕದ್ಲ ಸಂಪನ್ನನಾಗಿ
ಅವನ ಲಿಂಗತನುವೆನ್ನರಿ ಕಂಡಿರೆ, ಅದು ಪ್ರಸಾದತನು.
ಆತನ ಮಸ್ತಕದಲ್ಲಿ ಒಪ್ಪಿಪ್ಪ ಲಿಂಗದ ಗುಣಂದ,
ಆತನು ಲಿಂಗತನುವಾದನೈಸಲ್ಲದೆ
ಆತನು ಸಾಕ್ಷಾತ್ಪ್ರಸಾದತನು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./917
ತಟ್ಟುವ ಮುಟ್ಟುವ ಭೇದವುಳ್ಳನ್ನಬರ ಶರಣನಲ್ಲ.
ಅದೇನು ಕಾರಣವೆಂದಡೆ, ತಟ್ಟದೆ ಮುಟ್ಟದೆ ಕೊಂಬನಾಗಿ.
ತಟ್ಟುವ ಮುಟ್ಟುವ ಭೇದಂಗಳೆಲ್ಲಾ ತನುಗುಣಕ್ಕೆ ದಾರಿ.
ತಟ್ಟದೆ ಮುಟ್ಟದೆ ಬಟ್ಟಬಯಲಾಗಿ,
ಕೊಂಬಾತನೆ ತತ್ವಮಸಿಯಾದ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./918
ತತ್ತ್ವ ಸಾಂಗತ್ಯಂದತ್ತಲಾಗಿಹ ಬ್ರಹ್ಮ
ಸುತ್ತಿಪ್ಪ ಕ್ರೀ ತಾನು ಭಕ್ತಿಯಾಗಿ
ತ್ವಮಸಿ ಸಂಗಮದಂಗಪಾಶದ ತದ್ರೂಪವಾದ
ಈಷಣತ್ರಯಗಳನು ಮೀರಿರ್ಪುದು
ಬಂದ ಬಟ್ಟೆಯ ಬಾರ, ಉಂಡ ಊಟವನುಣ್ಣ
ಹಿಂದುಮುಂದರಿದಾತ ಸಂದಿಲ್ಲದೆ
ಶಿವಭಕ್ತಿಯನರಿದು ನೀವಿಪ್ಪೆಡೆಗೆ ಬಂದ
ಕಪಿಲಸಿದ್ಧಮಲ್ಲಿಕಾರ್ಜುನ./919
ತತ್ಪೂಜಾಲ್ಲಭತೇ ಮುಕ್ತಿಸ್ತತ್ಪೂಜಾಲ್ಲಭತೇ ಧನಂ’
ಎಂಬಾಗಮ ಪುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./920
ತತ್ವ ತುರೀಯಂಗಳಿಂದತ್ತ ಮೀರಿದ ಸೀಮೆ
ಕತ್ತಲೆಯ ಒಳಗಿಪ್ಪ ಕರ ರೂಪಿನಾ,
ಎರಡು ಮತ್ತೊಂದಾಗಿ ಎರಡಿಲ್ಲದೊಂದಾಗಿ,
ಐದೆಯರು ಐವರಾ ಸಂಗಂಗಳಾ.
ಆರರಲ್ಲಿಯೆ ನಿಂದು, ತೋರಲೀಯದೆ ಸಂದ
ಕರ್ಮಂಗಳಾ ಮೀರಿ ಏಳರ ಒಳಗೆ
ತೋರಿ ಮತ್ತೊಪ್ಪಿಪ್ಪ ತೋರದಿಹ ಸಾರೂಪ್ಯ ಅಷ್ಟಮದಲಿ
ಆರು ಮೂರನು ಎಂಟು ಐದು ಆರನು ಹತ್ತ
ಹವಣಿಸಿದೆ ತತ್ವದಲಿ ಏಕಮಾಡಿದ
ಬ್ರಹ್ಮಲೋಕದ ಗುರುವಾಗಿ ಶಕ್ತಿಯ ಘನತರದ
ಮಸ್ತಕದ ಒದವಿಪ್ಪ ಅಕ್ಷರದ್ವಯರೂಪು
ನೀನೆ ಕಪಿಲಸಿದ್ಧಮಲ್ಲಿಕಾರ್ಜುನ./921
ತತ್ವ ಪ್ರಾಪಂಚಿಕದ ಅತ್ತಲಾದ ಸೀಮೆಯನು
ಮತ್ತೆ ಸಂಗಮರೆಲ್ಲ ಅರೆವುಪ್ಪರು.
ಭಕ್ತ್ಯಂಗನೆಯ ಕ್ರೀಯ, ಮುಕ್ತ್ಯಂಗನೆಯ ಕೂಟ,
ತತ್ವಮಸಿಯಲ್ಲರಿತೆ ಕಪಿಲಸಿದ್ಧಮಲ್ಲೇಶ್ವರಾ./922
ತತ್ವಮಸಿಯಿಂದತ್ತ ಮಿಥ್ಯವಾಗಲು ಯೋಗ,
ತಥ್ಯವಾಯಿತು ನಿತ್ಯ ಭಕ್ತಿಯೋಗ,
ಮಿಥ್ಯವಪ್ಪೀ ದೇಹ ನಿತ್ಯಕಾಯವಪ್ಪುದ ಕಂಡು,
ಮತ್ತೆ ನಚ್ಚಿ ಒಚ್ಚತವೋದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./923
ತತ್ವಮಸಿಯೆಂಬ ವೃಕ್ಷದ ಕೆಳಗೆ ದ್ವಯವಿಲ್ಲವೆಂದು
ಏಕಏಕವೆಂದು ಆಡುತ್ತೈದಾನೆ.
ಅದು ನಿತ್ಯಮುಕ್ತಿ, ಅದೆ ವಿಸ್ತಾರವೆಂದು ಆಡುತ್ತೈದಾನೆ.
ಈಡ ದ್ವಾರಕ್ಕೆ ಹೋದಿರಾದಡೆ
ನಾಲ್ವರ ಮೂಲ ನಾಶವ ಮಾಡಿ,
ಅವ್ವೆಯ ಸರ್ವಾಂಗಮಂ ಸೂರೆಗೊಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೊಡಗೂಡಿದರೆ
ಗಿರಿಯ ಮೇಲಣ ದುರ್ಗವಂ ಬಲ್ಲೆ./924
ತತ್ವಮಸಿಯೊಳಗೆ ನಿತ್ಯ ಹೊಕ್ಕಿಪ್ಪುದನು
ಮತ್ತೆ ಶೂನ್ಯಾಂಗರಿಗೆ ಅರಿಯಲಹುದೆ?
ಕಡಲ ಒಳಗಿಹ ಕಿಚ್ಚು ಕಡಲ ಸುಡದಿಹ ಭೇದ
ಒಡಗೂಡಿದಾ ಭೇದ, ಶರಣರಿಗಾ
ಕಡಲ ದಾಂಟಿಯೆ ನಿಂದು
ತಡಿಯೊಳಗೆ ತಾ ಮಿಂದು ಒಡಗೂಡಿದನು
ಶುದ್ಧಧವಳಾಂಗನ ಹಲವು ಚಿತ್ತವು ಬಿಟ್ಟು
ಗುರುವಿನ ಅನುಮತ ಅನುಮಿಷಂಗದ ಭೇದವರಿದು
ತನುತ್ರಯದ ಮಲತ್ರಯದ
ಅನುಭೇದವನು ಸುಟ್ಟು,
ತನುಜ್ಞಾನಿ ಸಂಬಂಧಿಲಿಂಗ ಮೂರರೊಳಗೆ
ಅಂಗಸುಖವನೆ ಬಿಟ್ಟು ಲಿಂಗಸುಖಿ ತಾನಾಗಿ
ಮಂಗಳಾಂಗನಾ ಕಪಿಲಸಿದ್ಧಮಲ್ಲೇಶ್ವರ./925
ತತ್ವವಾರಾರರಲಿ ಮುತ್ತಿಪ್ಪ ಸೀಮೆಯನು
ಹೊತ್ತಿಪ್ಪುದದು ಒಂದು ಬಿಂಬ ನೋಡಾ.
ಮೂರರಂ ಮುಕ್ತಿಯ ಆರರಂ ಸತ್ವದಲಿ
ಮೀರಿಪ್ಪುದದು ಭಕ್ತಿಶಕ್ತಿ ನೋಡಾ.
ಕ್ರಿಯೆ ಮೂರನು ಮೀರಿ ನಿಃಕ್ರಿಯೆ ಮನೆಯಾಗಿ
ಸ್ವಾನುಭಾವವು ಶುದ್ಧಜ್ಯೋಯಾಗಿ
ರಂಜನೆಯ ಭೇದದಲಿ ರಂಜಿಸುವ ಪ್ರಕಟದ
ಕಂಜಕನ್ನಿಕೆಯ ಸುಮಧ್ಯದಲ್ಲಿ
ಅಂಜದೆ ಆನಂದ ಕುಂಜರನ ಮಸ್ತಕದ
ರಂಜಿಸುವ ಶುದ್ಧ ಪ್ರಭಾ ಕೋಟೆಯ
ಅಜಲೋಕದಾ ಸುದ್ದಿಜಗವ ಮೂರರಲೊಪ್ಪಿ
ನಿಜದಿಂದ ಕಂಡೆ ಕಪಿಲಸಿದ್ಧಮಲ್ಲೇಶ್ವರನ/926
ತದನುಸರಣಾತ್ ಜನ್ಮ ಜನ್ಮ’ ಎಂಬುದು ಹುಸಿಯಲ್ಲ,
ಹುಸಿಯಲ್ಲ, ನೋಡಯ್ಯಾ.
ಭೇದಬ್ಧುಯಿಂದಲ್ಲದೆ ಅಭೇದಬ್ಧುಗೆ ತೋರಬಾರದು.
`ಸರ್ವಂ ಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್’ ಎಂಬುದ
ನಿಶ್ಚಯ ನೋಡಯ್ಯಾ, ಎಲೆ ಂಗವೆ./927
ತನು ಉಂಟೆಂಬ ಭಾವ ಮನದಲ್ಲಿಲ್ಲವಯ್ಯಾ;
ಮನ ಉಂಟೆಂಬ ಭಾವ ಅರುಹಿನಲಿಲ್ಲವಯ್ಯಾ;
ಅರುಹು ಉಂಟೆಂಬ ಭಾವ ನುಡಿಯೊಳಗಿಲ್ಲವಯ್ಯಾ.
ಇಂತೀ ತನು ಮನ ಜ್ಙಾನವೆಂಬ ತ್ರಿವಿಧವು ಏಕಾರ್ಥವಾದ
ಬಳಿಕ,
ಆವ ತನುವಿನ ಮೇಲೆ ಸ್ವಾಯತವ ಮಾಡುವೆ?
ಎನ್ನ ಕಾಯವೆ ಬಸವಣ್ಣನು, ಎನ್ನ ಪ್ರಾಣಲಿಂಗವೆ ಪ್ರಭುದೇವರು,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ಒಳಗು ಹೊರಗೆಂಬುದಿಲ್ಲ ಕಾಣಾ, ಚೆನ್ನಬಸವಣ್ಣಾ./928
ತನು ಕೊಟ್ಟ ಬಳಿಕ ದೇಹವೆಲ್ಲಿಹದೊ?
ಧನ ಕೊಟ್ಟ ಬಳಿಕ ಭೋಗಂಗಲೆಲ್ಲಿಹವೊ?
ಇವೆಲ್ಲ ಬರಿಯ ಭ್ರಮೆ!
ಕೊಟ್ಟೆವೆಂಬವರ ಮುಖವ ನೋಡಲಾಗದು.
ಕೊಟ್ಟು ಭಕ್ತನಾದೆನೆಂಬ ನುಡಿ ಸಮನಿಸದಯ್ಯಾ ಗುರುವೆ,
ನಿಮ್ಮ ಶರಣರ ಬುದ್ಧಿಗೆ ಕಪಿಲಸಿದ್ಧಮಲ್ಲಿಕಾರ್ಜುನಾ./929
ತನು ಕೊಟ್ಟು ಭಕ್ತನಾದೆಹೆನೆಂದಡೆ,
ತನು ಮಲಭಾಂಡವಯ್ಯಾ.
ಮನ ಕೊಟ್ಟು ಭಕ್ತನಾದೆಹೆನೆಂದಡೆ,
ಮನ ವಾಯುಮಿತ್ರನಯ್ಯಾ.
ಧನ ಕೊಟ್ಟು ಭಕ್ತನಾದೆಹೆನೆಂದಡೆ,
ಎನ್ನ ಬಂಧುಗಳ ಭಾವ ಅದರಲ್ಲಯ್ಯಾ.
ಇವೆಲ್ಲ ಅಶುದ್ಧ ಪದಾರ್ಥಂಗಳ ಕೊಟ್ಟು ಭಕ್ತನಾಗುವೆನೆ?
ಆಗಲರಿಯೆನು.
ಮಾಡಿ ಮಾಡಿ ಭಕ್ತನಾಗಿಹೆನೆಂಬವರಿಗೆ ಕೊಟ್ಟು
ಭಕ್ತನಾಗುವೆನೆಂದಡೆ,
ನೀವೆಯಾಗಿ ನಿಂದಲ್ಲಿ ಕೊಡಲಿಕ್ಕಿಂಬಿಲ್ಲಾ,
ತೆಗೆದುಕೊಂಬುವಡೆ ಹಸ್ತವಿಲ್ಲಾ,
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ./930
ತನು ಕೊಡುವಡೆ ಗುರುವಿನದು;
ಮನ ಕೊಡುವಡೆ ಲಿಂಗದದು;
ಧನ ಕೊಡುವಡೆ ಜಂಗಮದದು;
ಅವರ ಪದಾರ್ಥವನವರಿಗೆ ಕೊಟ್ಟು ಭಕ್ತನಾದೆನೆಂಬವರ
ಹಿರಿಯತನದ ಕೇಡ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./931
ತನು ತುಂಬಿ ದಕ್ಷಿಣೆಯ ಮಾಡಿ
ಒಂದು ಕೋಟಿ ಮಾನವರಿಗೆ ಇಚ್ಛಾಭೋಜನವನಿಕ್ಕಿ
ನಿರ್ಮಳಮನಭಕ್ತಿಯಿಂದ ಒಂದು ಸಿಂಪುದದಿಕಂದ
ಅಯಿದೆರಡು ಪುಷ್ಪದಿಂದ ಲಿಂಗಪುರುಷನ ಮಿಗಿಲಿಂದ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./932
ತನು ನಿಮ್ಮದಾಗಿ ಮನ ನಿಮ್ಮದಾಗಿ ಧನ ನಿಮ್ಮದಾಗಿ
ಇನಿತೆಲ್ಲ ನೋಡಲು ಸರ್ವಸ್ವವೂ ನಿಮ್ಮದಾಗಿ
ನಿಮಗರ್ಪಿತವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ./933
ತನು ಭ್ರೂಮಧ್ಯದಲ್ಲಿ,
ಮನವನಾನಂದಲ್ಲಿ,
ಲೋಕ ಲೋಕಂವೇಕವಾದವೈ.
ಅಯ್ಯಾ ನೀನು ತನು ಮನ ನೀನೆ ಅಪ್ಪಿ ಕಂಡಾ
ಆದಿಯಾಧಾರಕ್ಕೆ ಸ್ವಾಮಿ ನೀನೆ ನೀನೆ,
ಕಪಿಲಸಿದ್ಧಮಲ್ಲಿನಾಥಯ್ಯ./934
ತನುಗುಣ ಪ್ರಪಂಚಿಕವ ಹೊದ್ದ ಬಸವಣ್ಣ ;
ಸೀಮಾ ಸಂಬಂಧಿಗಳಲ್ಲಿ ನಿಲ್ಲ ಬಸವಣ್ಣ ;
ಎರಡೆಂಟೆಂದರಿಯ ಬಸವಣ್ಣ ;
ಅಂಗಮುಖವೆಲ್ಲವು ಲಿಂಗಮುಖವಾಗಿಪ್ಪ ಬಸವಣ್ಣ ;
ಪ್ರಾಣವೆಲ್ಲವು ಲಿಂಗಪ್ರಾಣವಾಗಿಯೆ ಸಮನಿಸುವ ಬಸವಣ್ಣ ;
ಅನರ್ಪಿತವಧಾನಂಗಳ ಭೇದವನು ಕಾಯದ ಕರದಿಂದರ್ಪಿಸದೆ,
ಸ್ವಾನುಭಾವ ಸಮ್ಯಕ್ ಜ್ಞಾನ ಕರಂಗಳಿಂದರ್ಪಿಸುವ ಬಸವಣ್ಣ ;
ನಿತ್ಯ ಪ್ರಸಾದವ ಕೊಂಬ ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಪರಸಮಯವನೊಳಕೊಂಡಿಪ್ಪ
ಬಸವಣ್ಣನ ಪರಿ ಇಂತುಟು./935
ತನುಗುಣಗಳನತಿಗಳೆದ ಪ್ರಸಾದಿ;
ತಾಮಸಂಗಳ ಮೀರಿದ ಪ್ರಸಾದಿ;
ವರ್ಗಂಗಳ ದಾಂಟಿದ ಪ್ರಸಾದಿ;
ಇಂದ್ರಿಯಂಗಳು ಈಶನ ಮುಖವಾದ ಪ್ರಸಾದಿ;
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಪ್ರಸಾದಿ./936
ತನುಗುಣದ ಪಾತ್ರೆಯಲಿ ತವಕಿಸುವ ಭೇದವನು
ಅನುನಯದ ಮಲತ್ರಯದ ದುರ್ವಾಕ್ಯವನು
ಘನತರದ ಸುದ್ದಿಯನು ಐದೈದುವೊಂದಾಗಿ
ತನುಗುಣವನತಿಗಳೆದು ಪ್ರಾಪಂಚಿಕಾತತ್ವದಿಂದತ್ತತ್ತ ಮತ್ತೆ
ತ್ವಮಸಿಯಾಗಿ ಭಕ್ತಿ ಕಾರಣ ಲೋಕರೂಪನಾಗಿ
ಏಕೈಕ ಸಂಬಂಧಿ ಆಕಾರ ನಿರ್ವಿಘ್ನ
ಆನಂದದವ್ಯಯದ ಅಂತ್ಯದಲ್ಲಿ
ಅವ್ವೆಯ ಮುಖಕಮಳ ಐಯನಜಾತಸ್ಯ
ಸಂಯೋಗಕದು ಶುದ್ಧ ಮುಗ್ಧನಾಗಿ
ಮೂರ ಮತ್ತೊಂದೆಂದು ಒಂದು ಮೂರರ ತೃಪ್ತಿ ಸಂದಳಿದೆ
ಕಪಿಲಸಿದ್ಧಮಲ್ಲಿಕಾರ್ಜುನ./937
ತನುಗುಣವನತಿಗಳೆದು ನಿನ್ನ ಕೂಡಿದಲ್ಲಿ ಅವ್ವೆ,
ತಾಮಸಿ ತಾಮಸಿಯಾದಳು ಅವ್ವೆ,
ಸೋಮಪ್ರಭೆಯ ಪ್ರಭೆಯಂ
ಒಳಗೆ ಕೂಡಿ ಅವ್ವೆ ನಿರ್ನಾಮವಾದಳು.
ಆನಂದದಾ ಆದಿಗೆ ತಾನೆ ಮೂಲಸ್ವಾಮಿಯಾದಳು
ಕಪಿಲಸಿದ್ಧಮಲ್ಲಿಕಾರ್ಜುನನ ಅವ್ವೆ./938
ತನುಗುಣಾದಿಗಳೆಲ್ಲ ನೀ ಮಾಡಲಾದವು.
ಮನ ಪ್ರಾಣ ನೆನಹಿನ ಸಂಗಮದಲಿ ಸಮನಿಸಬಲ್ಲನೆ ಅಯ್ಯ?
ಸ್ಥೂಲ ಸೂಕ್ಷ ್ಮ ಕಾರಣವೆಂಬವು ನೀ ಮಾಡಲಾದುವಲ್ಲದೆ ನಿಮ್ಮ
ಧರ್ಮ.
ನಿನ್ನ ಮೀರಿ ಅಧಿಕವುಂಟೆ? ಸರ್ವರಲ್ಲಿ ಸಿದ್ಧನು.
ಎನ್ನ ಹೊದ್ದಿಯೂ ಹೊದ್ದದಂತಿರೆ,
ಎನ್ನ ಸರ್ವಾಂಗದಲ್ಲಿ ನೀನೆಯಾಗಿ ತೋರಯ್ಯಾ!ಲ್ಲ
[ಅನಂಗ]ವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ,
ನಿಮ್ಮ ಧರ್ಮ! ನಿಮ್ಮ ಧರ್ಮ!/939
ತನುತ್ರಯ ಮಲತ್ರಯಂಗಳೆಂಬ ಶಂಕೆಯಲ್ಲಿ ಕೆಡದೆ,
ಹಮ್ಮಿನ ಬೊಮ್ಮನ ನೀನಾಡದೆ ಮಾಡಾ ಲಿಂಗಾರ್ಚನೆಯ,
ಶ್ರೋತ್ರಿಯ ಕೈಗಳಿಂದ ಇಷ್ಟಂಗಾರ್ಚನೆಯ,
ನೇತ್ರದ ಕೈಯಿಂದ ಗುರುಲಿಂಗಾರ್ಚನೆಯ.
ಇಂತು ತ್ರಿವಿಧ ಮುಟ್ಟಿ ಕರಕರಂಗಳಲ್ಲಿ
ಚರಂಗಾರ್ಚನೆಯ ಮಾಡಿರಯ್ಯಾ ಮನಮುಟ್ಟಿ.
ಚರಂಗಾರ್ಚನೆಯಿಂದ
ಭಕ್ತನೆನಿಸುವೆ, ಮಾಹೇಶ್ವರನೆನಿಸುವೆ,
ಪ್ರಾಣಲಿಂಗಿ, ಶರಣ, ಪ್ರಸಾದಿ, ಐಕ್ಯನೆನಿಸುವೆ,
ಜನನ ಮರಣಾದಿಗಳಿಗೆ ದೂರನೆನಿಸುವೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ
ಶುದ್ಧಸಿದ್ಧ ಪ್ರಸಿದ್ಧ ಏಕ ಏಕ ಎನಿಸುವೆ./940
ತನುತ್ರಯದ ಗುಣದಲ್ಲಿ ತಾಮಸಿಯಲ್ಲ ಬಸವಣ್ಣ;
ಮನತ್ರಯದಲ್ಲಿ ಮತ್ತನಲ್ಲ ಬಸವಣ್ಣ;
ಮಲತ್ರಯದಲ್ಲಿ ಮಗ್ನನಲ್ಲ ಬಸವಣ್ಣ;
ಲಿಂಗತ್ರಯದಲ್ಲಿ ನಿಪುಣ ಬಸವಣ್ಣ;
ಐದಾರು ಪ್ರಸಾದದಲ್ಲಿ ಪ್ರಸನ್ನ ಬಸವಣ್ಣ;
ಈರೈದು ಪಾದೋದಕದಲ್ಲಿ ಪ್ರಭಾವ ಬಸವಣ್ಣ;
ಎರಡು ಮೂರು ಭಕ್ತಿಯಲ್ಲಿ ಸಂಪನ್ನ ಬಸವಣ್ಣ;
ಮೂವತ್ತಾರು ತತ್ತ್ವದಿಂದತ್ತತ್ತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಕೂಡಿ,
ಫಲಪದಕ್ಕೆ ದೂರವಾದನಯ್ಯಾ ನಮ್ಮ ಬಸವಣ್ಣನು. /941
ತನುತ್ರಯದಲ್ಲಿ ಘನಂಗ ಪ್ರಾಣಸಂಬಂಧಿಯಾದವರ
ತೋರಯ್ಯಾ, ನಿಮ್ಮ ಧರ್ಮ.
ಅವಯವಂಗಳೆ ನಿಮ್ಮ ವದನಂಗಳಾಗಿ,
ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ,
ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ,
ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ,
ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು.
ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಂತೆ, ನಿನಗೆ ಕಾಣಬಹುದು.
ಅಲ್ಲದ್ದಡೆ ನಿನಗೆಯೂ ಅಭೇದ್ಯ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./942
ತನುತ್ರಯದಲ್ಲಿ ಪ್ರವೇಶಿಸುವಾತ,
ಮನತ್ರಯದಲ್ಲಿ ಸರ್ವಹಂತ,
ಲೋಕ ಲೋಕಂಗಳೆಂಬಂಥ ಸೀಮೆಯಲ್ಲಿ ದಾತ
ಸ್ವಾತಂತ್ರನೆ ತಾನೆ ಸಲೆಯಾರಾಧ್ಯವಾದಾತನೆಂದೆಂಬೆ.
ಆತನೆ ಶರಣನೆಂದೆಂಬೆ,
ಆತನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬೆ./943
ತನುಮಧ್ಯ ಮಂಟಪದ ಒಳಗೆ ದಾಯಂಗೊಳಿಸಿ
ತನು ಮಲತ್ರಯವ ದಹಿಸಿ,
ಜ್ಯೋತಿರ್ಮಯ ಲಿಂಗವನು ತನ್ನ ಮನದ ಕೊನೆಯಲ್ಲಿತ್ತ ಗುರು,
ಅದ ನಿಸ್ತಾರವೆಂದು ಹಿಡಿದ,
ಆಯ ಇದರಲ್ಲಿ ಆಜ್ಞಾವಿಲೋಕನದ ಆನಂದ ಶಿಷ್ಯನು,
ಅಪ್ರಮಾಣನವ್ವಾ ಕಪಿಲಸಿದ್ಧಮಲ್ಲಿಕಾರ್ಜುನ./944
ತನುಮಧ್ಯ ವಿದಳಾಚಲದೊಳಗೆ
ಭಾಸ್ಕರಭವನ ಬೆಳಗುತಿಪ್ಪುದು
ಲೋಕ ಹದಿನಾಲ್ಕರ ಅಜಲೋಕದೊಳಗೆ
ಆತ ಬೆಳಗುವ ಪ್ರಜ್ವಲದ ಪ್ರಭೆಯ ಮಂಟಪವು
ತಾನೆರಡಾಗುತ ದಿವ ರಾತ್ರೆ ಒಡಗೂಡಿ ಭರಿತ ಪರಿಮಳವಾಗೆ
ವಳಯ ಹದಿನಾಲ್ಕುರೊಳು ಬೆರೆಸಿಪ್ಪ ಜ್ಯೋತಿಯನು
ತಿಳಿದು ನೋಡಿದಡತ್ಯಧಿಕ ಸರ್ವಜ್ಞನೆನಿಪ
ಲೋಕಾಲೋಕದ ಏಕವ ಮಾಡಲಿಕಾತ
ಆಕಾರ ಚತುಷ್ಟಯವ ಮೀರಿದಾತ
ವರ್ಣಾಶ್ರಮವ ಕಳೆದು ನಿರ್ಮಳಾನಂದದೊಳು
ಸೊಮ್ಮುಗೆಟ್ಟಾತ ಪರಶಿವ ಕಪಿಲಸಿದ್ಧಮಲ್ಲಿಕಾರ್ಜುನ./945
ತನುಮಧ್ಯದ ಲಿಂಗತ್ರಯವ ನೆಲೆಗೊಳಿಸಿದ ಶ್ರೀಗುರು.
ಪ್ರಸಾದಲಿಂಗತ್ರಯಕ್ಕೆ ಲೋಭವಿಲ್ಲದವರನೇನೆಂಬೆನಯ್ಯಾ?
ಲಿಂಗತ್ರಯ ನೆಲೆಗೊಂಡ ಹಾಗೆ
ಪ್ರಸಾದ ಲಿಂಗತ್ರಯ ನೆಲೆಗೊಳ್ಳರ್ದಡೆ
ಅವರು ಗುರ್ವಾಜ್ಞೆಗೆ ದೂರವೆಂಬೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಎನಗೆ ನಿಮ್ಮ ತೋರಿದ ಬಸವಣ್ಣನಾಣೆ./946
ತನುಮನ ಮಧ್ಯದಲ್ಲಿ ಘನಸಿಂಹಾಸನವನಿಕ್ಕಿ
[ನ]ವನೆಣಿಸುತ್ತಿರ್ಪೆನಯ್ಯಾ,
ಒಂದೊಂದು ಒಂದೊಂದೆನುತ್ತ,
ಆನಂದಪದವ ನೆನಸುತ್ತ ಅಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಸಂದು ಸವೆದು ಬೆರಸುವೆನಯ್ಯಾ./947
ತನುಮುಖ ತಾನೆ ಎಂಬ ಯೋಗದ ಹೊಲಬನರಿದವರು
ಅತ್ತಲೂ ಚರಿಸುವರು ಇತ್ತಲೂ ಚರಿಸುವರು
ಪರಮಾರ್ಥವ ಮಿಂಚಿನ ರವೆ ರವೆಯಂತೆ ಅಪ್ಪುವರಡಗುವರಯ್ಯ
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./948
ತನುಮುಖ ತಾನೆ
ನಿನ್ನಾಯಾಧಾರವಯ್ಯಾ,
ನೆಲೆಗೆಟ್ಟ ಶೂನ್ಯ ನೀನೆ ಅಯ್ಯಾ,
ಫಲಪದವವನತಿಗಳೆದ ಲೀಯ ಲೀಯಾ
ಸ್ಥಾನದಲಿ ನೆಲೆಮನೆ ನೀನು ಕಂಡಾ,
ಕಪಿಲಸಿದ್ಧಮಲ್ಲಿಕಾರ್ಜುನ
ಉರುತರ ಸ್ವಾತಂತ್ರ ನೀನೆ ಅಯ್ಯಾ./949
ತನುವ ಗುರುವಿಂಗಿತ್ತು ಗುರುವಾದನಯ್ಯಾ ಬಸವಣ್ಣನು
ಮನವ ಲಿಂಗಕ್ಕಿತ್ತು ಲಿಂಗವಾದನಯ್ಯಾ ಬಸವಣ್ಣನು
ಧನವ ಜಂಗಮಕ್ಕಿತ್ತು ಜಂಗಮವಾದನಯ್ಯಾ ಬಸವಣ್ಣನು
ಇಂತೀ ತ್ರಿವಿಧವ ತ್ರಿವಿಧಕ್ಕಿತ್ತು ಸದ್ಗುರು
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಎಲ್ಲರಿಗೆ ಗುರುವಾದನಯ್ಯಾ ಬಸವಣ್ಣನು./950
ತನುವಿಗೊಳಗಾದಾತ ಗುರುವೆ?
ಮನಕ್ಕೊಳಗಾದಾತ ಲಿಂಗವೆ?
ಧನಕ್ಕೊಳಗಾದಾತ ಜಂಗಮವೆ?
ತನು-ಮನ-ಧನ ತನ್ನ ಮನಕ್ಕಲ್ಲದೆ
ಗುರು-ಲಿಂಗ-ಜಂಗಮದಲ್ಲುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ./951
ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ
ಬಸವಣ್ಣ.
ಮನವಿಡಿದು ದಾಸೋಹವ ಮಾಡಿ ಲಿಂಗಪ್ರಸಾದಿಯಾದ
ಬಸವಣ್ಣ.
ಧನವಿಡಿದು ದಾಸೋಹವ ಮಾಡಿ ಜಂಗಮಪ್ರಸಾದಿಯಾದ
ಬಸವಣ್ಣ.
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ
ಸದ್ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಸ್ವಯಪ್ರಸಾದಿಯಾದನಯ್ಯಾ ಬಸವಣ್ಣ./952
ತನುವಿದ್ದು ತನುವಿಲ್ಲ, ಮನವಿದ್ದು ಮನವಿಲ್ಲ,
ಭಾವವಿದ್ದು ಭಾವವೆಂಬ ಬುದ್ಧಿಯಿಲ್ಲ.
ನೀನೆಂಬುಂಟಾಗಿ ಭೃತ್ಯಾಚಾರವಿಲ್ಲ.
ನೀನೆಂಬುದುಂಟಾಗಿ ಅಹಂಕಾರವಿಲ್ಲ.
ಕಪಿಲಸಿದ್ಧಮಲ್ಲಿನಾಥಯ್ಯನಲ್ಲಿ ಲಿಂಗಸಂಗ ನಿರ್ಲೇಪವೆಂಬುದ
ಇದಿರಿಂಗೆ ನುಡಿದು ಹಾಳಬಾರದು ಕಾಣಾ, ಚೆನ್ನಬಸವಣ್ಣಾ./953
ತನುವಿನ ಕ್ರಿಯಾಕಾರದಲ್ಲಿ ಒಡಲುಗೊಂಡಿಹವರು
ಉಣ್ಣೆನೆಂದಡೆ ಅವರ ವಶವೆ?
ತನುಗುಣ ನಾಸ್ತಿಯಾದವರು ಉಣ್ಣೆನೆಂದಡೆ ಸಲುವುದಲ್ಲದೆ
ಕಾಮವಿಕಾರಕ್ಕೆ ಸಂದು, ತಾಮಸಕ್ಕೆ ಮೈಗೊಟ್ಟು ಇಪ್ಪವರೆಲ್ಲರೂ
ಉಣ್ಣೆನೆಂದಡೆ ಹರಿವುದೆ?
ನಿಜಗುರು ನಿಜಲಿಂಗ ನಿಜಜಂಗಮ ನಿತ್ಯಪ್ರಸಾದವ
ಶ್ರೀಗುರು ಕರುಣದಿಂದ ಪಡೆದು ಅರಿದಾಚರಿಸಿದವರಿಗಲ್ಲದೆ
ಭವವ ತಪ್ಪಿಸಬಾರದು ಕಾಣಾ ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನ./954
ತನುವಿನಪ್ಪ ಅವಸ್ಥೆಗಳೆನಿತೆನಿತುವಂ
ಬೇರೆಂದು ಮರೆದು
ನಿಮ್ಮ ಕೂಡಿ ಬೇರಾಗದೆಂದಿಪ್ಪೆನು
ಕಪಿಲಸಿದ್ಧಮಲ್ಲಿಕಾರ್ಜುನ./955
ತನುವೆಂಬ ಮಹಾಪರ್ವತದಲ್ಲಿ ಒಸರುತ್ತಿಪ್ಪ
ನಿರ್ಝರಿಗಳಿಂದ ಆ ಘನವನೊಡಗೂಡುವಿರ ಹೇಳಿರೆ?
ಸ್ಥೂಲಸಮುದ್ರ ಅರವತ್ತುನಾಲ್ಕು ಕೋಟಿಯು
ಮೂವತ್ತೆರಡು ಲಕ್ಷವು ಮೂವತ್ತೆರಡು ಸಾವಿರದ
ಪರಿಪೂರ್ಣವಾಗಿಪ್ಪುದಾಗಿ
ಅವು ತಮ್ಮ ತಮ್ಮ ಘನತೆಗೆ ತಾವೆ ಘನವೆಂದು ಮೊರವುತೈದಾವೆ.
ಅವು ನೀವು ಸಿಡಿದುಬೀಳುವ ತುಂತುರುಮಾತ್ರಕ್ಕೆ ಸಮವಪ್ಪುದೆ?
ಅಂತಪ್ಪ ಸಮುದ್ರಂಗಳು ಸವಾಲಕ್ಷಕೂಡಿ
ನೀನೆಯ್ದುವ ಮಹಾಸಮುದ್ರದ ಒಂದು ಬಿಂದುವಿಗೆ ಸರಿಯೆ?
ಅಯ್ಯಾ ನೀವೆಂಬ ಮಹಾಸುಧಾಸಮುದ್ರಕ್ಕೆ,
ಕಪಿಲಸಿದ್ಧಮಲ್ಲಿಕಾರ್ಜುನ./956
ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ,
ಇನಿದು ಬಂದಡೆ ಅದಕ್ಕಿಂಬುಗೊಡದೆ,
ಇರುತಿರ್ಪ ಸರ್ಪವನು ತೆಗೆದು
ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ,
ವಾಕ್ಯಂಗಳ್ಲ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ
ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ./957
ತನುವೈದು ದಳವೈದು ಘನ ಮಂತ್ರವೈದನು
ಅನುವಿಂದಲವಕವಕೆ ದೀಕ್ಷೆಮಾಡಿ
ಒಳಗು ಹೊರಗೆನ್ನದೆ ಜ್ಯೋತಿಂಗವ ಪಡೆವ
ಪರಮಗುರುವಿನ ಪರಿಯು ಕಪಿಲಸಿದ್ಧ ಮಲ್ಲಿಕಾರ್ಜುನಾ./958
ತನುವೈದು, ತನು ಮೂರು, ಕರಣ ನಾಲ್ಕು, ಭ್ರಮೆಯಾರು,
ಅನುನಯನ ಗುರುವಿನ ಕರುಣವಿಡಿದಾತಂಗೆ,
ತನು ಬ್ರಹ್ಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ./959
ತನ್ನ ಕಾರ್ಯಕ್ಕೆ ಹೋಗುತ್ತ ಅಡವಿಯಲಿ ಅಸ್ತಮಾನವಾಗೆ
ಹಸಿದು ನಿಲಲಾರದೆ ಉಣಲಿಕ್ಕಿರವ್ವಾಯೆಂದು ಬೇಡಿದರೆ,
ನೀನಾರಾತನಾರಾತನೆಂದರೆ ರೋಮರುಷ್ಟಿಯರತ್ಸಾತ್ರ?
ನೋಡಯ್ಯ.
ಇತ್ತ ಬಾರಯ್ಯಾ ಬಾರಯ್ಯಾ ಎಂದು ಕರೆದು
ವೃಕ್ಷ ಭಿಕ್ಷವನಿಕ್ಕಿದುವು.
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಶರಣರ ಹೆಸರು
ಕಲ್ಪವೃಕ್ಷ ನೋಡಯ್ಯಾ./960
ತನ್ನ ಬೆನ್ನ ಎನ್ನನೊಯ್ದ
ಮಾಯಾಪಟ್ಟಣವ ಹೊಕ್ಕೆ.
ಐದು ಮುಖಂಗಳ ಕಂಡೆನು.
ಮುಖದೊಳಗೆ ಮುಖಂಗಳು ಅಗೆಯ ಹೊಯ್ದಂತಿದ್ದವಾತನ
ತೂರ್ಯಾವಸ್ಥೆ ವೇದಂದ ಊಧ್ರ್ವಮುಖವಾಗಿ
ತುರಿಸುತ್ತಿದ್ದ ಕಾರಣ.
ವೇದಪುರದಿಂದತ್ತ ತಲಹಿಲ್ಲದ ಬಯಲಾದನವ್ವಾ,
ಎನ್ನ ಕಪಿಲಸಿದ್ಧಮಲ್ಲಿನಾಥದೇವರ ದೇವ./961
ತನ್ನ ಮರೆದು ನಿನ್ನ ರೂಪಾದವರ
ನಿನ್ನವರೆ ಪ್ರಾಣವೆಂದೆಂಬವರ
ನಿನ್ನವರ ಮೂರ್ಖಧ್ಯಾನದಲ್ಲಿ (ಮ್ಕರ್ೂಧ್ಯಾನದ್ಲ) ಮೂರ್ಛೆವೋದವರ
ನಿನ್ನವರ ಕೀರ್ತಿಸುವವರ
ನೀನೆಂದೆ ನಿನ್ನವರನರ್ಚಿಸುವವರ ಸಂಗಸುಖದೊಳಗೆ
ಎನ್ನನಿರಿಸಯ್ಯಾ ನಿಮ್ಮ ಧರ್ಮ,
ಅನಂಗವಿದಾರಣ, ಕಪಿಲಸಿದ್ಧಮಲ್ಲಿಕಾರ್ಜುನ./962
ತನ್ನನರಸಿ ಬಪ್ಪವರ ತಾನರಸಿ ಬಪ್ಪ ನೋಡಾ.
ಎನ್ನ ದೇವನೆಲ್ಲಿದ್ದನಲ್ಲಿಗೆ ಹೋಗಿ
`ಬಾರಾ’ ಎಂದು ಮನದೊಳಗೆ ಅಚೊತ್ತಿಕೊಂಬೆ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ./963
ತನ್ನವರೆನ್ನಬಾರದು, ತನ್ನ ಬಂಧುಗಳೆನ್ನಬಾರದು;
ತನಗನ್ಯರೆನ್ನಬಾರದು.
ತಮ್ಮ ತಮ್ಮ ಮನಕ್ಕೆ ಮನವೆ ಸಾಕ್ಷಿ;
ಮನಕ್ಕೆ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನನೆ ಸಾಕ್ಷಿ,
ಬಿಲ್ಲೇಶಯ್ಯಾ./964
ತನ್ನೊಳಗೆನ್ನ ಗತವ ಮಾಡಿದ ಬಳಿಕ
ಆಯ ಪದವ ತೋರಿದ ಬಳಿಕ ಮತ್ತಾವುದೂ ಇಲ್ಲಯ್ಯ.
ಆದಿಪದವ ನುಂಗಿದ ಬಳಿಕ ಇನ್ನಾವುದೂ ಇಲ್ಲಯ್ಯ.
ನೋಡಯ್ಯ, ಎನ್ನ ಹಡದೂ ಕೂಡದಿದ್ದಡೆ
ನಿನಗಾವುದು ನಡೆವುದು ಹೇಳಾ,
ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ./965
ತಪವ ಮಾಡಿ ಸ್ವರ್ಗವ ಪಡೆದೆಹೆನೆಂಬವನ ಮುಖವ
ನೋಡಲಾಗದು.
ಮಾದಿಗ ಡೋಹರ ಶ್ವಪಚ ನೀಚಗುಣವುಳ್ಳವರು
ಹೋಹುದೆಲ್ಲ ಸ್ವರ್ಗವೇನಯ್ಯಾ?
ಲಿಂಗದ ಕುರುಹ ್ಕಳಿದು, ಅಂಗಗುಣಂಗಳನ್ಕಗಳೆದು
ಲಿಂಗವಾದುದೆ ಸ್ವರ್ಗ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./966
ತಪವ ಮಾಡಿ ಸ್ವರ್ಗವ ಪಡೆದೆಹೆನೆಂಬವನ ಮುಖವ
ನೋಡಲಾಗದು.
ಮಾದಿಗ ಡೋಹರ ಶ್ವಪಚ ನೀಚಗುಣವುಳ್ಳವರು
ಹೋಹುದೆಲ್ಲ ಸ್ವರ್ಗವೇನಯ್ಯಾ?
ಲಿಂಗದ ಕುರುಹ ್ಕಳಿದು, ಅಂಗಗುಣಂಗಳನ್ಕಗಳೆದು
ಲಿಂಗವಾದುದೆ ಸ್ವರ್ಗ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
ಹಾಡು /967
ತಮ್ಮ ನುಡಿಯಿಂದ ಅರಸು ಅರಸನಲ್ಲ ;
ಆಳುಗಳಿಂದರಸನೆಂಬ ಬಿರುದು ತೋರ್ದಡೂ ತೋರ;
ಅಲ್ಲಿ ಅಧಿಕಾರದ ಕಲೆ ಅರಸಂಗಲ್ಲದೆ,
ಆಳಿಂಗಿಲ್ಲ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ/968
ತಮ್ಮಿಚ್ಛೆಗೆ ಬಂದ ಪದಾರ್ಥ ಲಿಂಗದಿಚ್ಛೆ ಎಂಬರು;
ತಮ್ಮಿಚ್ಛೆಗೆ ಬರದ ಪದಾರ್ಥ ಲಿಂಗದಿಚ್ಛೆ ಇಲ್ಲವೆಂಬರು.
ಹೋದ ವಾಕ್ಕು ಶಿವಾಜ್ಞೆ ಎಂಬರು.
ಇದ್ದ ಮಾತು ತನ್ನಾಜ್ಞೆ ಎಂಬರು, ಅದೆಂತಯ್ಯಾ?
ಇಚ್ಛೆಗೆ ಒಳಗಾಗುವನಲ್ಲಯ್ಯಾ ಲಿಂಗವು.
`ಶಿವೋ ದಾತಾ ಶಿವೋ ಭೋಕ್ತಾ’ ಎಂಬುದ ತಿಳಿದು,
ಲಿಂಗಮುಖಂದ ಬಂದ ಪದಾರ್ಥವ ಕೈಕೊಂಬಡೆ,
ಅಚ್ಚ ಲಿಂಗೈಕ್ಯನೆಂಬೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./969
ತಮ್ಮೊಲಿದತ್ತ ಹರಿಹಂಚಮಾಡಿ ಕಾಡುತ್ತಿಪ್ಪ
ಎನಿತೆನಿತಿಂದ್ರಿಯಂಗಳ ಒಡಗಡಣದಲು ಪೋಗದೆಂದಿಪ್ಪೆಯೆಂದು
ನಿಮ್ಮೊಡಗೂಡಿ ಬೇರಾಗದೆಂಪ್ಪೆನೊ?
ಕಪಿಲಸಿದ್ಧಮಲ್ಲಿಕಾರ್ಜುನ./970
ತರುಗಳ ಮುರಿದು ಗಗನಕ್ಕೀಡಾಡುವ
ಅನಿಲ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ ಮುರಿದೊತ್ತಿ
ಕೆಡಹುತಿಪ್ಪ
ವ್ಯಾಧಿ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತ್ತಿರ್ಪ
ನಿದ್ರೆ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು.
ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ?
ರೂಪೆಂದಡೆ ಶಬ್ದ, ನಿರೂಪೆಂದಡೆ ಶೂನ್ಯ;
ಈ ಎರಡರ ಆದಿಯಿಂದತ್ತತ್ತ ಕಾಣಾ.
ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು./971
ತರುಣ ಬೆಟ್ಟದ ನಡುವೆ ತಪಸಿ ಕುಳ್ಳಿದ್ದಹನೆ,
ತರಗೆಲೆಗಳೂ ತನಗೆ ಆಧಾರವು.
ಆ ಆಧಾರ ಆಧೇಯ ಮುನ್ನಿಲ್ಲ
ಮೂದೇವರಿಗೆ ದೀಕ್ಷಾಗುರು ತಾನೆಯಾಗಿ,
ನಾನಾ ವಿಧದ ಗುಣದ ಸ್ವಾನುಭಾವದ ಮನೆಯ
ಭಾನುವಿನ ಉದಯದಲಿ ವಿಕಸವಾಗಿ,
ನಾನಾ ಗುಣರೂಪ ಕಪಿಲಸಿದ್ಧಮಲ್ಲಿಕಾರ್ಜುನನ
ಕೂಡಿದಾ ಸುಖತರದ ಅರೂಪುವಾಗಿ/972
ತರ್ಕವನು ಮೀರಿಪ್ಪ ತತ್ವ ಕ್ರೀಯಾಗಿಪ್ಪ
ಮತ್ತೆ ತ್ವಮಸಿಯ ಸೀಮೆ ಒಡಲಪ್ಪನೈ.
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಂಗಿಯ
ಮುಟ್ಟಿದ್ದ ಆರರ ಪರಿಯಿಂತುಟೈ.
ಕಪಿಲಸಿದ್ಧಮಲ್ಲಿಕಾರ್ಜುನನ
ಭಕ್ತಿಕ್ರೀಯನು ಕೂಡಿದಾತ ನಾನು./973
ತಲೆಯನುರಸ್ಥಲಕ್ಕೆ ಬಚ್ಚಿಡುವಳೀ ಶಿಶು ಕಣ್ಣಲುಂಬಳು.
ಮಗಳ ಕಣ್ಣ್ಲ ದಹಿಸುವಳು
ಇವಳು ಬಾಯಲಾದರೆ ಹಿಡಿದುಂಡಹಳೆಂದು
ನಾಸಿಕದಲುಂಬಂತೆ ಮಾಡಿದ,
ಕಪಿಲಸಿದ್ಧಮಲ್ಲಿನಾಥಯ್ಯ./974
ತವಕಿಸುವಡೆ ತಾಮಸಿಯೆ? ಕೂಡುವಡೆ ಭೇದಿಯೆ?
ಸಂದು ಸವೆದು ಒಂದಾದ ಬಳಿಕ ಕೂಡುವೆನೇನ?
ತವಕಿಸುವೆನೇನ?
ಉರುತರವಪ್ಪ ಲಿಂಗವ ಕರಸ್ಥಲದಲ್ಲಿ ಬಿಜಯಂಗೈಸಿಕೊಂಡು
ತವಕಿಸಿ ಕೂಡಿಹೆನೆಂಬ ಜಡಮತಿಗಳ ಎನ್ನತ್ತ ತೋರರಯ್ಯ
ಕಪಿಲಸಿದ್ಧಮಲ್ಲಿಕಾರ್ಜುನ./975
ತಾ ಜಿತೇಂ್ರಯನಾಗಿ ಹಲಕೆಲವು ತಪಸ್ಸಿನಾಸೆ ತನಗೇಕಯ್ಯಾ?
ತಾ ಪರುಷರಾಗಿ ಅನ್ಯ ರಜತ ತಾಮ್ರ ಚಿನ್ನದಾಸೆ ತನಗೇಕಯ್ಯಾ?
ತಾ ಜೀವನ್ಮುಕ್ತನಾಗಿ ಭವದ ನಿಬಿಡದಾಸೆ ತನಗೇಕಯ್ಯಾ?
ತಾ ಕಪಿಲಸಿದ್ಧಮಲ್ಲಿಕಾರ್ಜುನನಾಗಿ
ಮೂಲೋಕದ ಸುದ್ದಿಯಾಸೆ ತನಗೇಕಯ್ಯಾ, ಕೇದಾರಯ್ಯಾ?/976
ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!/977
ತಾ ಮುನ್ನವೊ, ತನ್ನ ಮನ ಮುನ್ನವೊ?
ತನ್ನ ಕಾಯ ಮುನ್ನವೊ, ತಾ ಮುನ್ನವೊ, ಅಯ್ಯಾ?
ತಾ ಮುನ್ನೆಂಬಲ್ಲಿ ತಿಳಿಯದೆ ಹೋಯಿತ್ತು.
ಮನ ಮುನ್ನೆಂಬಲ್ಲಿ ಕಾಯಕ್ಕೊಳಗಾಯಿತ್ತು.
ಕಾಯ ಮುನ್ನೆಂಬಲ್ಲಿ ಜಡಮಯ ಪ್ರಳಯಕ್ಕೊಳಗಾಯಿತ್ತು.
ತಾ ಮುನ್ನಲ್ಲ, ತನ್ನ ಮನ ಮುನ್ನಲ್ಲ, [ತನ್ನ ಕಾಯ ಮುನ್ನಲ್ಲ್ವ]
ತಿಳಿದಾಗಲೆ ಮುನ್ನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./978
ತಾ ಶಿವಭಕ್ತನಾಗಿ ತನ್ನ ಬಂಧುಗಳ ಭವಿತನದಲ್ಲಿರಿಸಬಾರದಯ್ಯಾ.
ಮಾತಿನಿಂದಾಗಲಿ ಮನದಿಂದಾಗಲಿ ಭೀತಿಯಿಂದಾಗಲಿ
ಶಿವಭಕ್ತಿಯ ಪೂರೈಸುವುದಯ್ಯಾ.
“ಆತ್ಮೀಯಾನ್ವಿವಿಧಾನ್ ಭೋಗಾಂ ಸ್ತ್ರೀಪುತ್ರಪ್ರಮುಖಾನಪಿ|
ಸ್ವಾತ್ಮನೋಪಿ ವಿಶೇಷೇಣ ತೇಷಾಂ ಚೈವ ಮಾನಯೇತ್||’
ಎಂಬ ನುಡಿಯ ನೋಡಿದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ, ವಾತುಲದಲ್ಲಿ ಕಲ್ಲಯ್ಯಾ./979
ತಾಗಿತ ತಪ್ಪಿಬಹುದೆ? ಬಂದುದನತಿಗಳೆಯಬಾರದು.
ಅಂದಂದಿಗೆ ಅಂದಂದಿಗೆ ಬಂದುದನುಂಬ ಕಾಲಕ್ಕೆ
ಒಲ್ಲೆನೆಂದರೆ ಮಾಬುದೆ?
ಒಡಲಿಗೊಂದು ವಿಧಿಯಾಗಿ
ವಿಧಿಗೊಂದು ಒಡಲಾದ ಬಳಿಕ
ನಿಜಗುರುವೆ ಸ್ವತಂತ್ರ ಕಪಿಲಸಿದ್ಧಮಲ್ಲಿನಾಥಾ
ನಿನ್ನ ಕರಸ್ಥಲಕೆ ಓಡೇಕೆ!/980
ತಾತನಿಂದ ತೌರುಮನೆಯೂಟ ಸವಿಯಾಯಿತ್ತೆಂದನಯ್ಯಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ತಂದೆ ಚೆನ್ನಬಸವಣ್ಣನೆಂಬ ಮಾವ ತೌರಿಗನಾದನು./981
ತಾತ್ಪರಿಯ ವರ್ಮ ಕಳೆಯನರಿತು
ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರಭಾವಮುಖದಲ್ಲಿಪ್ಪವರ
ಅವರನೇನೆಂಬೆ?
ಅವರ ಸಿದ್ಧರೆಂಬೆನೋ? ಅವರ ಶುದ್ಧರೆಂಬೆನೋ?
ಅವರ ಪ್ರಸಿದ್ಧರೆಂಬೆನೋ?
ಅವರ ಸರ್ವಾಂಗ ಸನುಮತರೆಂಬೆ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನ./982
ತಾತ್ಪರಿಯೆವೆಂಬ ಮನೆಯಲ್ಲಿ ಕರಣಂಗಳ ಬೆಳಗಿ
ಆನಂದವೆಂಬಾತಂಗೆ ಭಕ್ತಿಮುಕ್ತ್ಯಂಗನೆಯರು
ನಿಶ್ಚಲದಿಂದ ನಿತ್ಯಂಗೆ ಬೋನವ ಮಾಡುತೈದಾರೆ.
ಆ ಬೋನ ಧ್ಯಾನ ಸಮಾಧಿಯ ಮೀರಿತ್ತು.
ಅದೆ ನಿತ್ಯ ಚೊಕ್ಕರಸ[ವುಂಬ]ಯೋಗಿಗಳಿಗೆ ಯೋಗಕ್ಕೆ
ನೆಲೆಯಾಗುತ್ತದೆ.
ಬೀಜವು ತಾನೆ, ಓಗರವು ತಾನೆ, ತೃಪ್ತಿಯು ತಾನೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವ ತತ್ವವು ತಾನೆ!/983
ತಾನಿಟ್ಟ ಬೇತಾಳ ತನ್ನನಂಜಿಸಿತೆಂಬ
ನಾಣ್ಣುಡಿಯ ನಿಮ್ಮಲ್ಲಿ ಕಂಡೆನು
ನಾಗೇಂದ್ರ ನೋಡಿ ನಗಲು ನಗಲು
ವಿಷದ ಸಿಡಿಕೆಗಳ ತಾಗಿ ಬೆಂದ ಕಾಮನು
ಎಸಲಟ್ಟಿದರೆಂಬ ಅವಗತಿಗಳ ತಂದು ತಂದು ಇಕ್ಕಿದಾರು ಕಾಣವ್ವಾ!
ಎಡೆಯಪಾತಕರು ನೆರೆದು ಮಾಡಿದರು ಕಾಣವ್ವಾ!
ಆನು ಮಾಡಿದೆನೆಂಬ ಚಿತ್ತಮಕ್ಕು,
ಕಪಿಲಸಿದ್ಧಮಲ್ಲಿನಾಥ ದೇವರ ದೇವನವ್ವಾ./984
ತಾನು ಧನವಂತನಾಗಬೇಕೆಂಬಾಶೆಯುಳ್ಳಡೆ,
ಜಪಿಸಿ ನೋಡಾ ಶ್ರೀಮಂತ್ರವ.
ತಾನುಪೇಂದ್ರನಾಗಬೇಕೆಂಬಾಶೆಯುಳ್ಳಡೆ,
ಜಪಿಸಿ ನೋಡಾ ಶಕ್ತಿಮಂತ್ರವ.
ತಾನು ಬ್ರಹ್ಮನಾಗಬೇಕೆಂಬಿಚ್ಚೆಯುಳ್ಳಡೆ,
ಜಪಿಸಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ-ಮಹಾದೇವಿಯ ಮಹಾಮಂತ್ರವ./985
ತಾನು ಪ್ರಪಂಚಿಕನಾಗಿ ಪರಮಾರ್ಥವ
ಪಡೆಯಬೇಕೆಂಬಾಶೆಯುಳ್ಳಡೆ,
ಪರಧನ ಪರಸ್ತ್ರೀಯರ ವಿವರ್ಜಿಸಿ ಪೂಜಿಸುವ ಪರಶಿವನ.
ತಾನು ಪ್ರಪಂಚಿಯಾಗಿ ಕೀರ್ತಿಯ ಪಡೆಯಬೇಕೆಂಬಾಶೆಯುಳ್ಳಡೆ,
ಜೀವದಯಾಪರತ್ವ, ಮೃಷಾಭಾಷಾನಿರಾಕರಣತ್ವ,
ಯಾಚಕರೊಳ್ಧಾತೃತ್ವವ ಮಾಡಿ [ಪೂಜಿಸುವ] ನೋಡಾ ಪರಶಿವನ.
ಇದೆ ಅಂತರಂಗದ ವಿಚಾರ, ಇದೆ ಬಹಿರಂಗದಲ್ಲಿ ಭೂಷಣ.
ಇದೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಬೊಮ್ಮ ತಾನು,
ಕಂಡೆಯಾ ಬೊಮ್ಮಯ್ಯಾ./986
ತಾನು ಮಾನವಂತನಾದಡೆ,
ಅಹಂಕಾರದ ನಾಶದಲ್ಲಿ ಮರೆಯ ಮಾಡಿಕೊಂಡಿರ್ಪುದು
ಬಹುಕರ ಲೇಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./987
ತಾನೊಮ್ಮೆ ಸ್ಥೂಲಕ್ಕೆ ಬಂದ ಬಳಿಕ,
ಆತನ ನಾನು ಒಮ್ಮೆ ಸೊಮ್ಮಗೊಳಿಸಬೇಕು.
ತಾನೊಮ್ಮೆ ಸಿದ್ಧನಾಗಿ ನಿಂದ ಬಳಿಕ,
ಕಪಿಲಸಿದ್ಧಮಲ್ಲಿಕಾರ್ಜುನನ ಕೀಲ ತಿಳಿಸಬೇಕು, ಕೇದಾರಯ್ಯಾ./988
ತಾಮಸದಿಂದ ನಿನ್ನ ನೆನವರಿಗೆ
ತಾಮಸದ ಪದವನೀವಿರಯ್ಯ
ಆರೈದು ನಿನ್ನುವನು ಓರಂತೆ ನೆನವರಿಗೆ
ಕಾರುಣ್ಯದಪದವನೀವೆಯಯ್ಯ.
ಅನಾದಿ ಮೂರುತಿ ಕಪಿಲಸಿದ್ಧಮಲ್ಲಿನಾಥಯ್ಯಾ,
ಆರೇನ ಮಾಡಿದುದನಂತಿವೆ./989
ತಾಮಸದಿಂದ ನಿನ್ನ ನೆನೆವವರಿಗೆ
ತಾಮಸಪದವನೀಯುವಿರಯ್ಯಾ.
ಆರೈದು ನಿನ್ನುವನು ಓರಂತ ನೆನೆವವರಿಗೆ
ಕಾರುಣ್ಯ ಪದವನೀವೆ ಅಯ್ಯಾ,
ಅನಾದಿ ಮೂರ್ಕು ಕಪಿಲಸಿದ್ಧಮಲ್ಲಿನಾಥಯ್ಯಾ./990
ತಾಮಸವಾದಲ್ಲಿ ತಾಮಸಿಯಾಗಿ,
ಸೀಮೆಗೆಟ್ಟ್ಲಲ್ಲಿ ಸಂಬಂಧಿಯಾಗಿ,
ಅನುಮಿಷ ಮೀರಿದಲ್ಲಿ ಆಂದೋಳವಾಗಿ,
ಸೀಮೆಗೆಟ್ಟ್ಲಲ್ಲಿ ಕುರುಹು ತಾನಾಗಿ,
ಮಹಾರ್ಣವದಲ್ಲಿ ಮಧ್ಯ ತಾನಾಗಿ,
ಎಲ್ಲಾ ಭೂತಕ್ಕೆ ದಯವುಳ್ಳ ಮಹಾಭೂತಿ ತಾನಾಗಿ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ
ನಿತ್ಯ ಲಿಂಗಾರ್ಚನೆಯ ಮಾಡುವ
ಶಿವಯೋಗಿಯ ಪರಿಯಿಂತುಟು./991
ತಾಮಸಿ ಎಲ್ಲೆಲ್ಲಿ ತಾಮಸಿ ಅಲ್ಲ್ಲ,
ಸೋಮಕಳೆಯಿಂದ್ಲ ಸುಖತರದಲ್ಲಿ,
ಕಾಮ್ಯರ್ಥವಂ ಬಿಟ್ಟು ಪದ ನಾಲ್ಕನುಂ ಮೀರಿ
ನಾ ನಿಮ್ಮನೆಯ್ದಿದೆ ಕಪಿಲಸಿದ್ಧಮಲ್ಲಿನಾಥಯ್ಯ./992
ತಾಮಸಿಯ ಕೂಟದ ತಾಮಸಿ ನಾನಾದೆ
ಸಾಮಪ್ರಭೆಯಲ್ಲಿ ಶುದ್ಧ ಮುಗ್ಧನಾದೆ
ನಾನಾ ಕಳಾಭೇದ ತಾನು ನೀನಾಗಿ
ಊರು ಆರರ ಅತಿ ಸಂಬಂಧದ
ಹಲವು ಮೂರನೆ ಬಿತ್ತಿ
ಫಲವು ಮತ್ತೊಂದಾಗಿ ಒದವಿತ್ತು.
ತುರಿಯದಾ ಸಂಯೋಗಕೆ ಸಾನಂದಜ್ಯೋತಿಯ
ತಾನು ತಾನೊಂದಾಗಿ ಭಾನುವಿನ ಉದಯದ
ಅನುಭವಿಸಿದ ಸಾಮ ಶುದ್ದಾಂಗದಲಿ
ನಾನಾ ಧವಳ ಮನೆಯ ಕಾರಣದಲಿ
ಮುಕ್ತಿ ಮೂರ್ಛೆವೋಗಿ ಪರಮ ಹರುಷದಲೀಗ
ಉರುತರಂ ಕೈವಲ್ಯ ಒದವಿ ನಾ ನೀನಾದೆ.
ಸದುಹೃದಯದಾ ಕಪಿಲಸಿದ್ಧಮಲ್ಲಿಕಾರ್ಜುನ
ಗುರುವಾಗಿ ಬಂದೀಗ
ಭವದ ಬೇರನು ಹರಿದ ನಿಶ್ಚಯಾರ್ಥದಿಂ/993
ತಾಯ ಮದಾಯಮನಾಗಳು ಹು! ಹೂ! ಹೊ! ಹಾ! ಅವ್ವೆ
ಆನು ತನ್ನ ಬಿಟ್ಟಡೆ ತಾನೆನ್ನ ಬಿಡಳು ನೋಡಾ!
ಬಿಟ್ಟಡೆ ಬಿಡದೆ ಒಪ್ಪಿಸುವೆ, ಕಪಿಲಸಿದ್ಧಮಲ್ಲಿನಾಥಯ್ಯಗೆ/994
ತಾಯೆ, ತವರೆ, ಬಸವ ಬಸವಾ,
ಭಕ್ತಿಮುಕ್ತಿಯ ರೂಪು ಬಸವನ ಪ್ರಸಾದವಯ್ಯ,
ಕಪಿಲಸಿದ್ಧಮ್ಲನಾಥಯ್ಯಾ./995
ತಾಯೆ, ಪರಮ ಸುಖಾಚಾರದ ಮೂರ್ತಿಯನಡಗಿಸಿ
ನೀನೆಯಾದೆಯವ್ವಾ.
ತಾಯೆ, ಮಹಾಜ್ಞಾನಕ್ಪತದಲ್ಲಿ ನೀನೆಯಡಗಿದೆಯವ್ವಾ.
ತಾಯೆ, ನೀಲಮ್ಮನೆಂಬ ಸುಖವಾಸಮೂರ್ತಿ,
ಕಪಿಲಸಿದ್ಧಮಲ್ಲಿನಾಥಯ್ಯ,
ನಮ್ಮ ತಾಯೆ ನೀಲಮ್ಮನಾದಳು./996
ತಾಳಬ್ರಹ್ಮಾಂಡದ್ಲ ಆರೆಸಳಿನಾ ಕಮಳ
ಮೇಪ್ಪನಾನತದ ಸುಖತರದ,
ಆರಾರನೆ ನುಂಗಿ
ಆರು ಮತ್ತ್ಕಶಯದ ಮೀರಿ
ಬ್ರಹ್ಮಾಂಡವನು ಸೂಕ್ಷ ್ಮದಲ್ಲಿ
ಅತಿಶಯದ ಭೇದ ನಾನಾ ಗುಣದ ಸಂಬಂಧ
ಕಪಿಲಸಿದ್ಧಮಲ್ಲಿಕಾರ್ಜುನನ ಕರತಳದಲ್ಲಿ./997
ತಿಳಿ ನೀರೆಂಬೆ ತಿಳಿನೀರೆಂಬೆ,
ತಿಳಿ ನೀ ಎಂದು ಒಂದು ದಿನ ಅಂದಿಲ್ಲೆಲೆ ಮಾನವಾ.
ಕ್ಷಣಕ್ಕೆ ಕ್ಷಣಕ್ಕೆ ತಿಳಿ ನೀ ಎಂದಡೆ,
ತಳುಹುದೆ ತನ್ನ ನಿಜವ ಕೊಡನೆ ಕಪಿಲಸಿದ್ಧ ಮಲ್ಲೇಂದ್ರ ?/998
ತಿಳಿದು ತಿಳಿದು ವಿಷಯಕ್ಕೆ ಮೈಗೊಟ್ಟಡೆ
ಅನುಭಾವಿಯೆ, ಅಯ್ಯಾ?
ಅಳಿದು ಅಳಿದು ಆನಂದಕ್ಕೆ ಮೈಗೊಟ್ಟಡೆ ಅಜ್ಞಾನಿಯೆ, ಅಯ್ಯಾ?
ತಿಳಿದು ಬಳಿಕ ವಿಷಯಗಳಳಿಯಬೇಕು.
ಅಳಿದ ಬಳಿಕ, ಎಳೆಯ ಚಂದ್ರಧರ
ಕಪಿಲಸಿದ್ಧಮಲ್ಲಿಕಾರ್ಜುನನಾಗಲೆಬೇಕು./999
ತಿಳಿದು ತಿಳಿದು ಸಾಕ್ಷಿಯಾದಡೆ, ತಾ ಉಳಿಯಲಿಲ್ಲ ನೋಡಯ್ಯಾ.
ಉಳಿಯಲಿಲ್ಲ ಉಳಿಯಲಿಲ್ಲವೆಂದಡೆ, ಈ ಶಬ್ದವೆಲ್ಲಿಹುಹದಯ್ಯಾ?
ವಿಚಾರದಿಂದ ಒಳಗಾಗುವುದು, ಅವಿವೇಕದಿಂದ ದೂರಾಗುವುದು.
ಸರ್ವ ಜಗದ್ರೂಪು ನಿಮ್ಮದೆಂದು ನಂಬಿ,
ಸಕಲಲೋಕಾಲೋಕಕ್ಕೆ ಕೈಮುಗಿದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1000