Categories
ವಚನಗಳು / Vachanagalu

ಶಿವಯೋಗಿ ಸಿದ್ಧರಾಮೇಶ್ವರ ವಚನಗಳು

ತಿಳಿದು ನುಡಿ ಕೊಡಬೇಕಲ್ಲದೆ,
ತಿಳಿಯದ ನುಡಿಯದು ಅಪಭ್ರಂಶವಯ್ಯಾ.
[ತಿಳಿ] ನುಡಿ ಎರಡೊಂದಾದಡೆ,
ಮೃಡಮ್ಕರ್ೂ ಕಪಿಲಸಿದ್ಧಮಲ್ಲಿಕಾರ್ಜುನ
ನುಡಿಗೊಮ್ಮೆ ನುಡಿವ ನೋಡಾ, ಬೊಮ್ಮಣ್ಣಾ./1001
ತಿಳಿದೆ ನಾ ತಿಳಿದೆ ನಾ ಎಂದು ಹಲಬರು ಹೋದರು
ಅಹಂಕಾರದಲ್ಲಿ.
[ತಿಳಿಯೆ ನಾ]ಳಿಯೆ ನಾ ಎಂದು ಹಲಬರು ಹೋದರು
ಮರವೆಯಲ್ಲಿ.
ತಿಳಿದೆನೆಂಬುದು ತಿಳಿಯೆನೆಂಬುದು ಜ್ಞಾನದ ಮೈದೊಡಕು.
ತಿಳಿಯೆ ಅರಿವು ಮರವೆಯೆಂಬುಭಯವ ತಿಳಿದು ತಿಳಿಯದಂತಿರೆ,
ತಿಳಿನೀರ ನಳಿನಾಕ್ಷನುತ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ./1002
ತಿಳಿದೊಮ್ಮೆ ಜಪಿಸಿದ ಜಪವದು ಜಪ,
ಜಪಮಾಲಿಕೆಯ ಪಿಡಿಯನು ನೋಡಾ;
ತಿಳಿದೊಮ್ಮೆ ಜಪಿಸಿದ ಜಪವದು [ಜಪ].
ಜಪದ ರೀತಿಯನರುಪುವ ಜಪಮಾಲಿಕೆಯ ಪಿಡಿಯನು
ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನನ ಶರಣ./1003
ತಿಳಿಯದ ಜನರು ಅವು ಶಿವನಲ್ಲ, ಜಡಜೀವಿಗಳು ಎಂಬುವರು.
ಅದೆಂತಯ್ಯಾ `ಪಂಚತತ್ತ್ವಂ ಮುಖೋದ್ಭೂತಂ’
ಎಂಬಾಗಮವಾಕ್ಯಸಿದ್ಧಿ?
ಪಂಚತತ್ತ್ವದಿಂಗಳೆಲ್ಲ ಶಿವನ ಪಂಚಮುಖದಿಂದಿದಾದವು.
ಆ ಪಂಚತತ್ತ್ವಂದ ಸಕಲ ಚರಾಚರಬ್ರಹ್ಮಾಂಡವಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾನ ಲೀಲೆಯಿಂದ ಕಲ್ಲಯ್ಯಾ./1004
ತಿಳಿಯದೆ ಜಪಿಸಿದ ಮಂತ್ರ ನಿಷ್ಫಲವಾದುದು ನೋಡಾ,ಗುರುವೆ.
ಪ್ರಣವಪಲ್ಲವಗಳರಿದು ಜಪಿಸುವುದು ಸಫಲ ನೋಡಾ,ಗುರುವೆ.
ಇದರಂದವ ತೋರಿದ ಎನ್ನ ಗುರು ಚೆನ್ನಬಸವ ನೋಡಾ,ಗುರುವೆ.
ಕಪಿಲಸಿದ್ಧಮಲ್ಲಿಕಾರ್ಜುನಾ./1005
ತಿಳಿಯದೆ ಪೂಜಿಸಿದಡಾಗುವುದೇನೊ ಅಯ್ಯಾ!
ತಿಳಿದು ತಿಳಿದು ಮಾಡಬೇಕು ಲಿಂಗಪೂಜೆಯ;
ತಿಳಿದು ತಿಳಿದು ಮಾಡಬೇಕು ಜಂಗಮಾರ್ಚನೆಯ.
ತಿಳಿದು ಮಾಡಬೇಕು; ತಿಳಿಯದೆ ಮಾಡಲು
ನಿನ್ನ ಸಿದ್ಧಿಗೆ ಸಿದ್ಧರಾದರಲ್ಲದೆ,
ನಿನ್ನಂಗ ದೊರೆಕೊಂಬ ಪರಿಯ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1006
ತುಂಬಿ ತುಳುಕಿ ಅಂಬರಕೆ
ಗಂಭೀರ ತೆರೆ ಹಾಯುತ್ತಿರಲು,
ಸಂಭ್ರಮದ ಶರಧಿ ಹೆಚ್ಚಿತೇ
ಕಾಡುತ್ತಿದ್ದೆ ನಾನೂ ಎಲೆ ಅಯ್ಯಾ,
ಆಕಾರವ ಮೀರಿದ ನಿರಾಕಾರ ಭಕ್ತಿ
ಏಕೋದೇವ ಕಪಿಲಸಿದ್ಧಮಲ್ಲಿಕಾರ್ಜುನ./1007
ತುರಗವೆಪ್ಪತ್ತರ ಖುರಪಟದ ಘಲ್ಲಣಿಗ
ಹರಿದು ಎಯ್ದಿತು ರೇಣು ಬ್ರಹ್ಮಾಂಡಕೆ
ಬ್ರಹ್ಮಾಂಡದವರೆಲ್ಲ ತಮ್ಮೊಳಗೆ ಧೃತಿಗೆಟ್ಟು
ತಮ್ಮ ಲೋಕದೊಳಿಪ್ಪ ಕೂಪ ಜಲದಾ,
ಸೊಮ್ಮಿನೊಳು ಮತಿಗೆಟ್ಟು
ನಿರ್ಮಳಜ್ಞಾನಿಯ ಸೊಮ್ಮು ತಾವಾದರೈ
ಕಪಿಲಸಿದ್ಧಮಲ್ಲಿಕಾರ್ಜುನ./1008
ತುರಿಯ ತುರಿಯದ ತವಕ ತವಕ,
ಕರುಣಿ ಕರುಣಿ
ನಿನ್ನ ಮನದ ಕೊನೆಯಲ್ಲಿ ಎನ್ನುವನಿರಿಸಾ
ಸಂದು ಸವೆದು ಒಂದು ಮಾಡಾ ಅಯ್ಯ.
ಎನ್ನ ಹಿಂದು ಮುಂದುವ ಕೆಡಿಸಾ
ಆನಂದ ಶೂನ್ಯದಲ್ಲಿ ಆ ಮಧ್ಯವಸಾನದಲ್ಲಿ
ಶೂನ್ಯನನ್ನು ಮಾಡಿಸು ಕಪಿಲಸಿದ್ಧಮಲ್ಲಿನಾಥಯ್ಯ./1009
ತೃಪ್ತವ ಮಾಡಿ ಮಾಡಿ ತನಗೆ ಬೇಕೆನ್ನ ಪ್ರಸಾದಿ,
ಬಂದುದನತಿಗಳೆದು ಅಲ್ಲವೊಲ್ಲೆನೆನ್ನ ಪ್ರಸಾದಿ,
ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಬಪ್ಪನೆಂಬ ರೂಪಿನಲ್ಲಿ
ಲೋಪವ ಮಾಡಿದ ಪ್ರಸನ್ನ ಪ್ರಸಾದಿ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಬಸವಣ್ಣನು./1010
ತೆರೆಹಿಲ್ಲದ ಘನವು ಕುರುಹಿಂಗೆ ಬಂದ ಕಾರಣವೇನು ಹೇಳಾ,
ಎಲೆ ಅಯ್ಯಾ, ಭಕ್ತಿ ಕಾರಣ.
ಇಚ್ಛೆಗೆ ಬಂದ ಬಳಿಕ ಉಪಚಾರಕ್ಕೆ ತೆರೆಹುಂಟೆ ?
ಕಪಿಲಸಿದ್ಧಮಲ್ಲಿನಾಥಾ, ಬಿಜಯಮಾಡಾ, ಕರುಣಿಗಳರಸಾ./1011
ತೋರಿ ಕೆಡುವ ದೇಹ ನಾನೆಂದು ನಂಬರಾ ಮನವೆ.
ತೋರುವ ಅರಿವು ನಾನೆಂದು ನಂಬು ಕಂಡೆಯಾ ಮನವೆ.
ತೋರಿ ಕೆಡುವುದು ಮಾಯಾತ್ಮಕವು ಮನವೆ.
ತೋರಿ ತೋರುವುದದು ನಿರುಪಾಧಿಕ, ನಿಜಾನಂದ,
ಕಪಿಲಸಿದ್ಧಮಲ್ಲಿಕಾರ್ಜುನ, ಕಂಡೆಯಾ ಮನವೆ./1012
ತೋರಿಪ್ಪ ಒಳಗೊಂದು ಮೀರಿವೌ ಎಂಟು,
ಗಾರು ಮಾಡುತ್ತವೆ ವರ್ಗವಾ ಮೀರಿ ಮೀರಿ,
ನೂರೆಂಟರ ಕಳಾಪ್ರವೇಶದಲ್ಲಿ
ತೋರಿಪ್ಪುದು ಧಾತುವೇಳು
ಅನಾ ಮೂರುತಿ
ಕಪಿಲಸಿದ್ಧಮಲ್ಲೇಶ್ವರಯ್ಯ
ನಿನ್ನ ನೆನಹಿನ ಮೂರುತಿಯ ಮೂಲ./1013
ತೋರುವ ಜಗತ್ತು ಬ್ರಹ್ಮವೆಂದೊಮ್ಮೆ ವಾದಿಸುವೆ.
ತೋರುವ ಜಗತ್ತು ಮಾಯೆಯೆಂದೊಮ್ಮೆ ವಾದಿಸುವೆ.
ತೋರಿಯಡಗಿದಲ್ಲಿ ಮಾಯೆ ಎನಿಸಿತ್ತು;
ತೋರಿ ತೋರಿದಲ್ಲಿ ಬ್ರಹ್ಮವೆನಿಸಿತ್ತು.
ತೋರಿದ್ಲ ತೋರಿ ಕೆಡದಲ್ಲಿ ಏನೆಂದೆನಿಸದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1014
ತ್ರಾಹಿ ತ್ರಾಹಿ ಬಸವಾ,
ತ್ರಾಹಿ ತ್ರಾಹಿ ಚೆನ್ನಬಸವಾ,
ತ್ರಾಹಿ ತ್ರಾಹಿ ಪ್ರಭುವೆ,
ಕಪಿಲಸಿದ್ಧಮಲ್ಲಿನಾಥಯ್ಯಾ./1015
ತ್ರಾಹಿ ತ್ರಾಹಿ, ಎನ್ನ ಭಾವಕ್ಕೆ ಮೂಲಿಗ ನೀನೆ ಅಯ್ಯಾ.
ತ್ರಾಹಿ ತ್ರಾಹಿ, ಎನ್ನ ಜ್ಞಾನಕ್ಕೆ ಮೂಲಿಗ ನೀನೆ ಅಯ್ಯಾ.
ತ್ರಾಹಿ ತ್ರಾಹಿ, ಎನ್ನ ಕಾಯಕ್ಕೆ ಮೂಲಿಗ ನೀನೆ ಅಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ./1016
ತ್ರಾಹಿಮಾಂ ಪರಮೇಶ್ವರ ಜಯ
ಭಕ್ತಿಜ್ಞಾನಮಾಕಾರ ನೀನೆಯಯ್ಯ ಚೆನ್ನಬಸವಣ್ಣ.
ಏಕೋದೇವ ದೇವಧರ್ಮ ಧರ್ಮಗುಣ ಗುಣಪ್ರಕಾಶ
ಪ್ರಕಾಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
ನಿಮ್ಮಿಂದ ಪ್ರಾಣಂಗಸಂಬಂಧವಾಗಿ
ನಿಮಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣ./1017
ತ್ರಿಣಯ ವಿನಯ ಇಷ್ಟದೃಷ್ಟ ಭಕ್ತಿ ಭೀಮ ಬಸವ,
ಗಮನಸುಮನ ನಿಯತ ಸಮಯ ಭಕ್ತರೂಪ ಬಸವ,
ಪ್ರಾಣಕಾಯರೂಪ ತತ್ವಜ್ಞಾನ ವಿನಾಯಕ ಬಸವ,
ಕಪಿಲಸಿದ್ಧಮಲ್ಲಿನಾಥಯ್ಯಾ, ಪ್ರಾಣಲಿಂಗ ಏಕ ಬಸವ/1018
ತ್ರಿಭುವನದಲ್ಲಿ ನಿನ್ನ ಹೊಲಬು ನಿತ್ಯವಾಯಿತ್ತು.
ಭಕ್ತಿ ಗಂಭೀರವೆಂಬ ಹೊಳೆ ಹರಿಯತ್ತು,
ಸುಲಭವೆ ಎಲ್ಲರಿಗೆ ಲೋಕದವರು?
ಉಂಬಂತೆ ಉಂಬವರಿಗೆ
ಲೋಕದವರು ಬಹಂತೆ ಬಪ್ಪುವರಿಗೆ
ಭಕ್ತಿ ಶರಧಿಯ ಬಿದ್ದು ಮಜ್ಜನ ಮಾಡಬಹುದೆ?
ಕಪಿಲಸಿದ್ಧಮಲ್ಲಿಕಾರ್ಜುನ./1019
ತ್ರೈಲಿಂಗಕಾನಂದ ಬೀಜಮಾತ್ರವು ನೀನು
ತ್ರೈವಿದ್ಯ ಮೂರಾರುವಿದ್ಯ ನೀನೆ
ತ್ರೈಂಗ ಮೂಲಕ್ಕೆ ಮುನ್ನಾದ ಮೂರೊಂದು ಪ್ರಸಾದಂಗ
ಕಪಿಲಸಿದ್ಧಮಲ್ಲಿಕಾರ್ಜುನ./1020
ದರಿದ್ರ ಧನಾಢ್ಯಂಗಂಜುವನಲ್ಲದೆ ದರಿದ್ರಂಗಂಜುವನೆ?
ದೊರೆ ಮಹಾದೊರೆಗಂಜುವನಲ್ಲದೆ ದೊರೆತನಕ್ಕಂಜುವನೆ?
ಪರಶಿವಯೋಗಿ ಅಂತರ್ಯಾಮಿಗಂಜುವನಲ್ಲದೆ,
ಲೋಕದ ಗುಂಗಿಗಳಿಗಂಜುವನೆ, ಕಪಿಲಸಿದ್ಧಮಲ್ಲಿಕಾರ್ಜುನಾ./1021
ದರಿದ್ರಂಗೆ ಧನದಾಸೆ, ಶೂರಂಗೆ ರಣದಾಸೆ,
ಕಾಮಿಗೆ ಸ್ತ್ರೀಯಾಸೆ, ನೀಚಂಗೆ ಕಲಹದಾಸೆ,
ಪಂಡಿತಂಗೆ ಸಭೆಯಾಸೆ, ಕೋಗಿಲೆಗೆ ವಸಂತದಾಸೆ,
ಪತತಿವ್ರತೆಗೆ ಗಂಡಸು ಮುನಿದಿಹನು[ಬಹ]ನೆಂಬಾಸೆ,
ಎನಗೆ ಶ್ರೀಗುರು ಚೆನ್ನಬಸವ ಸ್ವಾಮಿಗಳ ಪಾದೋದಕದಾಸೆ,
ಕಪಿಲಸಿದ್ಧಮಲ್ಲಿಕಾರ್ಜುನ./1022
ದರ್ಪಣದಲ್ಲಿ ಮುಖವ ನೋಡುವರಲ್ಲದೆ,
ದರ್ಪಹರನಲ್ಲಿ ಮುಖವ ನೋಡುವರೊಬ್ಬರೂ ಇಲ್ಲ,
ನೋಡಯ್ಯಾ.
ನ್ಯಾಯದಲ್ಲಿ ದ್ರವ್ಯವ ಕೊಡುವರಲ್ಲದೆ,
ನ್ಯಾಯಾತೀತನ ಪೂಜೆಗೆ ಒಬ್ಬನೂ ಭಂಡಾರವೀಡಾಡಲಿಲ್ಲ;
ಕಪಿಲಸಿದ್ಧಮಲ್ಲಿಕಾರ್ಜುನಗಳ್ಳರು!/1023
ದಾನಿ ಮುನ್ನಾನಲ್ಲ, ಏನು ಗುಣವೆನ್ನಲ್ಲಿ?
ನೀ ಕಾಡಲ್ಕೆ ಎನಗೆ ತೆರಹಿಲ್ಲವ್ವಾ.
ದಾನವನು ಬೇಡಿದೆನು
ಭಕ್ತಿ ಭಿಕ್ಷವ ನೀಡಿ
ಅನಾದನಾದನು ಚೆನ್ನಬಸವಣ್ಣನು.
ಕೇಳೆಲೆಗೆ ಮಾಯೆ, ನೀ ನನ್ನತ್ತ ಹೊದ್ದದಿರು
ಗಾರುಮಾಡುವರು ನಿನ್ನನೆನ್ನ ನಿರ್ಮಾಯರು.
ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರನ
ಭಾವಶುದ್ಧದ ಸತ್ವವನು ವಿಡಿದು./1024
ದಾಯ ಬಣ್ಣ ಲೀಯವಾಗಿ
ಮೇಲೆ ಮುಗ್ಧೆಯ ಕೂಟ.
ಆರೂಢದಾಧಿಕ್ಯ ಸ್ಥಾನ ಆರಾರಲ್ಲಿ ಅನುಮಾನಿಸದೆ
ಮೀರಿ ಮೂವತ್ತಾರ ಕಳೆದು ತೋರಿದ
ಸಂಯೋಗಕ್ಕಾನು ಬೆರಗಾದೆನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ./1025
ದಾಯ ಬಣ್ಣಗಳನು ಓರಂತೆ ಮನೆಮಾಡಿ
ಜೀವಗಳೆಗಳನವರ ಮನೆಯರಿಸಿ
ಸಾವಧಾನ ನಿರಂತರವೆಂಬ ಸಮ್ಯಜ್ಞಾನ ರೂಪನು
ಗುರು ಕಪಿಲಸಿದ್ಧಮಲ್ಲಿಕಾರ್ಜುನ. /1026
ದಾಯವ ನುಂಗಿದ ಬಣ್ಣ, ಬಣ್ಣವ ನುಂಗಿದ ದಾಯ
ರಂಜನ ಪ್ರವೇಶವಾದಲ್ಲಿ ಯವಾದೆನಯ್ಯಾ.
ನಿನ್ನೊಡನೆ ಯವಾದೆ.
ಸಂಯೋಗಸ್ಥಾನದಲ್ಲಿ ನೀ ಸಹಿತ ವಿಯೋಗಿಯಾದೆ.
ಶುದ್ಧ ಸಿದ್ಧಪ್ರಸಿದ್ಧದಲ್ಲಿ ಪ್ರವೇಶಿಸಿದೆ.
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ
ಸೀಮೆಯ ಮೀರಿ ಸಂಬಂಧಿಯಾದೆನು./1027
ದಾಯವ ನುಂಗಿದ ಬಣ್ಣ
ಬಣ್ಣವ ನುಂಗಿದ ದಾಯ,
ಆನಂದ ಪ್ರವೇಶಿಸಿದಲ್ಲಿ ತಾನೆಯಾದಳವ್ವೆ
ಅನಾಹತ ಸ್ವರವನರ್ಪಿತವ ಮಾಡಿ
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನಲ್ಲಿ ನಿತ್ಯಳಾದಳವ್ವೆ./1028
ದಾಯವೆಂಬ ಕುಳಿಯಲ್ಲಿ ಅದ್ದರು,
ಅನಂತಕೋಟಿ ಜನರು.
ಆಳುತ್ತ ಮುಳುಗುತ್ತೈದಾರೆ,
ಕೋಟಿ ಕೋಟಿ ಬ್ರಹ್ಮಾದಿಗಳು.
ಆಳುತ್ತೇಳುತ್ತೈದಾರೆ, ಅನೇಕ ಕೋಟಿ ವಿಷ್ಣಾಗಳು.
ಗುರುಕರುಣದಿಂದ ಅಯ್ಯನಾಜ್ಞೆವಿಡಿದು
ಅಕ್ಷರದ್ವಯದ ಆಧಾರವಿಡಿದವರೆಲ್ಲಾ
ಆ ಕುಳಿಗೆ ಹೊರಗಾದರು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ಮಹಾಬೆಳಗಿನಲ್ಲಿ ಬಯಲಾದರು./1029
ದಿಟ್ಟ ಲಿಂಗವ ತನ್ನ ಇಷ್ಟ ಕರಸ್ಥಳದಲ್ಲಿಟ್ಟು
ಬಟ್ಟೆಗಟ್ಟಿದನೆರಡು ದೆಸೆದೆಸೆಗಾಗಿ,
ಅವ್ವ ನೀನೊಳಗಾಗಿ ಸೀಮೆ ಸಾಯುಜ್ಯದಲ್ಲಿ
ಸೊಲ್ಲನಿಟ್ಟಾತ ಗುರುವವ್ವಾ ಕಪಿಲಸಿದ್ಧಮಲ್ಲಿಕಾರ್ಜುನ./1030
ದೀಕ್ಷಾತ್ರಯದಲ್ಲಿ ವ್ಯಕ್ತನಾದೆ
ಶಿಕ್ಷ ಸಂಬಂಧಿಸುವಲ್ಲಿ ಭೀತನಾದೆ
ಮುಗ್ಧೆಯ ಕನಸಿನಲ್ಲಿ ಮುಕ್ತನಾದೆ
ಧನ-ತನು-ಮನಂಗಳ ಮೂರ ಮರೆದವನ
ತಾಮಸಂಗಳು ಹಲವನಳಿದವನ
ರಜಂಗಳು ಕೆಲವನುಳಿದವನ ಭೇದಿಸಿ ಕಂಡೆ.
ಅದೇನು ಗುಣ? ಅವ್ಯಯ ನಾನಾ ವಾಯಸ್ಥಾನದಲ್ಲಿ
ಶುದ್ಧ ಸಂಗಮ ಪ್ರಯೋಗಿಸಿದ ಕಾರಣ!
ಕ್ಷೆಯಾಯಿತ್ತು ಕಾಯಕ್ಕೆ,
ಶಿಕ್ಷೆಯಾಯಿತ್ತು ಸರ್ವಾಂಗಕ್ಕೆ
ಸ್ವಾನುಭಾವವಾಯಿತ್ತು ಕರಣೇಂದ್ರಿಯ ಸರ್ವಕ್ಕೆ.
ದೀಕ್ಷಾತ್ರಯವು ಸಂಬಂಧಿಸಿದ ಕಾರಣ
ನೀ ನಾನಾದೆ, ಕಪಿಲಸಿದ್ಧಮಲ್ಲಿಕಾರ್ಜುನ./1031
ದೀಕ್ಷಾತ್ರಯದಲ್ಲಿ ಸಂಪನ್ನರಾಗಿ,
ಪ್ರಸಾದದ್ಲ ಲೋಲುಪ್ತರಾಗಿ,
ಜಂಗಮವೆ ಲಿಂಗವೆಂಬವರ ಸಂಗದೊಳಿರಿಸೆನ್ನ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನಿಮ್ಮ ಧರ್ಮ./1032
ದೀಪದಂತಿಹ ಜನ್ಮ
ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು.
ಮೇಘದಂತಿಹ ಜನ್ಮ
ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು.
ಶಿಶುವಿನಂತಹ ಜನ್ಮ
ಬದುಕುವುದು ್ಕಳಿಯದು, ಬದುಕಿ ಬಾಳೀತೆಂಬುದು
ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1033
ದೀಪವಖಿಲಲೋಕದಲ್ಲಿ ಏಕವಾಗಿಪ್ಪಳೆ
ಏಕಯ್ಯಾ ಮರುಗುತಿಪ್ಪರು?
ಅಯ್ಯಾ, ಆಕಾರವನು ನಂಬದೆ
ಅಯ್ಯಾ, ನಿಕಾರದೊಳಗೆ ಇಹರು,
ಏಕದೇವನೆಂದು ಹೊಗಳುವ
ಶ್ರುತಿಯ ಆಯರಿದು ಜಪಿಸಿದೆ
ಕಪಿಲಸಿದ್ಧಮಲ್ಲಿನಾಥನಾ ಅವ್ವೆ./1034
ದೀಪ್ತಿ ಮೂರ್ತಿಗಳೊಳಗೆ ಮೂಲವಪ್ಪಡೆ ತಾನು
ರೀತಿ ಧಾತುಗಳನು ಅವಗ್ರಹಿಸಿತೈ
ಮಾತಿನ ಬ್ರಹ್ಮಾಂಡ ಮಾತೆಯಾಗಕಾನು
ನೀತಿ ನಿಜನೆಂದನೈ ಕಪಿಲಸಿದ್ಧಮಲ್ಲಿಕಾರ್ಜುನ./1035
ದುಡ್ಡಿನ ಲಿಂಗವು ಮೋಕ್ಷವ ಕೊಡಬಲ್ಲಡೆ,
ಅಡ್ಡ ಬೀಳುವುದೇಕಯ್ಯಾ ಗುರುವಿಗೆ?
ಜಡ್ಡಳಿದ ಭಕ್ತಂಗೆ ಭಕ್ತಿಯ ಜಡ್ಡು ಏಕಯ್ಯಾ ಗುರುವೆ,
ಮಡ್ಡು ಡಿಂಡಿಮನಾದಪ್ರಿಯ ಕಪಿಲಸಿದ್ಧಮಲ್ಲಿಕಾರ್ಜುನಾ./1036
ದುರಿತಘರಟ್ಟಂಗೆ ಧೂಪಾರತಿಯನು ಕೊಡುವ ಪುರಾತರು
ಕೇಳಿರಯ್ಯಾ
ಹೋಗು ಹೋಗೆಂಬ ಬೀಸಣಿಗೆ
ಅಡಗಡಗೆಂಬ ಘಂಟೆಯ ಸಬುದಕ್ಕೆ
ತೆರಳ್ದೋಡಿಹೋದವು ಪಾಪಂಗಳು.
ಪಾಪಿಯ ಪಾದ ಬಂದರಸಿ ಕೊಂಡೊಯ್ದವು
ಕಪಿಲಸಿದ್ಧಮಲ್ಲಿನಾಥನೊಲ್ಲದವರ./1037
ದುಷ್ಕರ್ಮಂಗಳ ಮಾಡುವರನಂತರುಂಟು,
ಸತ್ಯರ್ಮಂಗಳ ಮಾಡುವರೊಬ್ಬರೂ ಇಲ್ಲ ನೋಡಯ್ಯಾ,
ದುಷ್ಕರ್ಮವೆಂದಡೆ ವಿಷಯವಾಸನೆ,
ಸತ್ಕರ್ಮವೆಂದಡೆ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವ ವಾಸನೆ./1038
ದೂರದ ಬಟ್ಟೆಯ ಹೋಗಿ ಪಥಶ್ರಾಂತನಾಗಿದ್ದು,
ಹಿಂದೆ ತಿರುಗಿ ನೋಡರು ಕಂಡಾ, ಎಲೆ ಗಂಡನೆ.
ಹಿಂದೆ ತಿರುಗಿ ನೋಡಿದಲ್ಲಿ ಕೆಟ್ಟರು ಕೋಟಿ ಬ್ರಹ್ಮಜ್ಞರು,
ಹಿಂದೆ ತಿರುಗಿ ನೋಡಿದಡೆ ಮುಂದೆ ವಿಸ್ತಾರವೆಂದಿದ್ದೆಯಾದಡೆ
ತಂದೆ ಒವ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ./1039
ದೂಷಣೆ ನಿಮಿತ್ತ ಲಿಂಗಧಾರಣಶಿಕ್ಷೆ ಎಂದಲ್ಲಿ,
ಬರಿಯ ಪ್ರಾಣಲಿಂಗಿಗಳೆಂದು ದೂಷಣೆಯಾದುಲ್ಲವೆ,
ಪುರಾತರ ನುಡಿಯಲ್ಲಿ?
ಇದು ಕಾರಣ, ಹಿರಿಯರಿಷ್ಟಲಿಂಗದ ಭಾವ ಧಾರಣಶಿಕ್ಷೆಯಾದಡೆ,
ನಿಮ್ಮ ಶರಣ ಲಿಂಗಧಾರಣಶಿಕ್ಷೆಗೆ ಮನಮಾಳ್ಪ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./1040
ದೃಷ್ಟವಪ್ಪ ಗುರುಕರುಣದಲ್ಲಿ ಇಷ್ಟಂಗವ
ಸಂಬಂಧಿಸಿಕೊಟ್ಟ ಬಳಿಕ ಮರಳಿ ಯೋಗವುಂಟೆ?
ಸರ್ವಯೋಗಕ್ಕೆ ಶಿವಯೋಗ ಮಹಾಯೋಗವೆಂದರಿದ ಬಳಿಕ,
ಮತ್ತೆ ಕಿರಿದು ಯೋಗವೆಂದು ಪಾದೋದಕ ಪ್ರಸಾದಕ್ಕೆ ಹೊರಗಾಗಿ
ಗುರುವಾಜ್ಞೆಯ ಮೀರಿದ ಗುರುದ್ರೋಹಿಗಳ ಎನ್ನತ್ತ ತೋರದಿರಯ್ಯ,
ನಿಮ್ಮ ಧರ್ಮ.
ದೀಕ್ಷಾತ್ರಯದಲ್ಲಿ ಸಂಪನ್ನರಾಗಿ, ಪ್ರಸಾದದ್ಲ ಲೋಲುಪ್ತರಾಗಿ,
ಜಂಗಮವೆ ಂಗವೆಂಬವರ ಎನಗೊಮ್ಮೆ ತೋರಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ./1041
ದೆಸೆ ವೀರಭಕ್ತಿಯ ಎಸೆವ ಸುರಗಿಯ ಹಿಡಿದು
ದೆಸೆಗೆಡಿಸಿ ಕೊಲುವೆನೀ ಮಾಯೆಯನ್ನು.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನನ ಮುಂದೆ
ಹಾಸ ಪರಿಯವ ಮಾಡುವೆನು ನೋಡು ಸಾಕು./1042
ದೆಸೆದಿಕ್ಕು ವಲಯದ ಹೆಸರಿಡಬಾರದುದೊಂದು
ಪಸರಿ ಪರ್ಬಿತ್ತು ನೋಡಯ್ಯಾ.
ಮೂಲವೊಂದು, ಫಲಮೂರು, ಲೀಲೆಯಿಂದಾರಾಗಿ
ತೋರಿದವು;
ಬೇರೆ ಬೇರೆ ಅನ್ಯವಾದವು.
ತೋರದ ಒಂದರಲ್ಲಿ ಬೇರುಮಾಡಿ ಕಂಡೆಹೆನೆಂದಡೆ,
ತೋರಿತ್ತು ಆ ಮೂಲಕ್ಕೆ ಮೂಲ ಕಂಡಯ್ಯಾ.
ವಿಚಿತ್ರಮೂಲ ಕಪಿಲಸಿದ್ಧಮಲ್ಲೇಶ್ವರನ ಹತ್ತೆ ಸಾರಿದ ರೂಪು!/1043
ದೆಸೆದಿಕ್ಕುವಳೆಯಕ್ಕೆ ಹೆಸರುಳ್ಳ ಗ್ರಾಮಕ್ಕೆ
ವಸುಧೆಯೆಂಟು ದ್ವಾರ ಒಂಬತ್ತು
ದ್ವಾರಪಾಲಕರೆಲ್ಲ ಅಯ್ಯ,
ನಿಮ್ಮ ಹೋಬಳಿಯ ಹೊರುತ್ತೈದಾರೆ.
ಕಾನನ ಕಂಬನಿಯೊಳಗಾಳುತ್ತೇಳುತ್ತೈದಾರೆ
ಕಪಿಲಸಿದ್ಧಮಲ್ಲಿನಾಥಯ್ಯ./1044
ದೆಸೆದಿಗ್ವಲಯದಲ್ಲಿ ಪಸರಿ ಪರ್ಬಿತ್ತು ನಿನ್ನ ನಾಮ.
ವಸುಧೆಯೆಲ್ಲವು ಹೆಣ್ಣು, ನೀನು ಗಂಡು.
ಬಸವಾಕ್ಷರತ್ರಯಂದುದ್ಭವಿಸಿ ಸಕಲ ಬ್ರಹ್ಮಾಂಡಂಗಳಾದವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1045
ದೇವ ನಿನ್ನಯ ಪರಿಯನಾರಯ್ಯಲರಿದಯ್ಯ
ಆರೈದ ಶರಣರು ನಿನ್ನ ಪದದಲ್ಲಿ
ಓರಂತೆ ಆನಂದಸ್ಥಾನದಲಿ ತಾವು
ನಿನ್ನಯ ರೂಪ ಭಾವ ತಪ್ಪದೆ ಇಪ್ಪರೈ ಗುರುವೆ
ಕಪಿಲಸಿದ್ಧಮಲ್ಲಿಕಾರ್ಜುನ./1046
ದೇವನಾನಂದದ ಭಕ್ತರ ನಿಲವ ಕೇಳಿರಯ್ಯಾ
ಹರಿವ ನಯ ತೆರನಂತೆ ಹರವಾಗಿಪ್ಪರಯ್ಯಾ
ತಾವು ಮಾಡುವರಲ್ಲದೆ ಮಾಟದೊಳಗಿರರು
ಕಪಿಲಸಿದ್ಧಮಲ್ಲಿಕಾರ್ಜುನ./1047
ದೇವನಿಂತವನೆಂದು ನಂಬಲಾಗದಯ್ಯಾ:
ಬಾ ಎಂದು ಹೇಳಿ ಬಯಲಾದ ದೇವನೊಳ್ಳಿದನೆ?
ದೇವನಿಂತವನೆಂದು ನಂಬಲಾಗದಯ್ಯಾ: ತನ್ನ ಕಾರ್ಯಕ್ಕೆ ಹೆಣಗಾಡಿಸಿದವ ಒಳ್ಳಿದನೆ?
ಕಪಿಲಸಿದ್ಧಮಲ್ಲಯಾ, ನಿನ್ನ ಲೀಲೆ ತಿಳಿಯದಾರಿಂಗೂ. /1048
ದೇವನೊಂದೆರಡು ಬದಿಗಳ ಮಾಡಿಟ್ಟನು
ಆ! ಹೋ! ವಾ! ಹಾ! ಅಯ್ಯಾ!
ಮೆಚ್ಚು ನಿಮ್ಮದೆನುತ್ತಿರಲು ಮತ್ತೆ ವಿಚಾರಿಸುತ್ತಿಹುದು
ನಿಮ್ಮದೆ ಮರುಳುತನವಯ್ಯಾ,
ಹೋ! ವಾ! ಅಯ್ಯಾ!
ಪರಿಣಾಮವುಳ್ಳಡೆ ಹಿಡುವುದು
ಅಲ್ಲದಿದ್ದರೆ ಬಿಟ್ಟು ಹೋಹುದು,
ಕಪಿಲಸಿದ್ಧಮಲ್ಲಿನಾಥನ./1049
ದೇವರ ದೇವ! ಮುನಿಗಳ ಉಮಾದೇವಿ ಕನ್ನಿಕೆಯರ
ನಿಜವನೊಡಹರಿದು ಕೇಳವ್ವ ಕೇಳವ್ವ!
ನಿನ್ನ ಭಾಗ್ಯದಳತೆಗಳ ಉಂಗುಟದಲಾಳುತ್ತಿರುವ ಜಗಜುಗವ
ನೀನಿನ್ನು ಮುನ್ನ ಹುಟ್ಟಿದವಂಗೆ ಭೋಗಿಯಾಗಿಪ್ಪೆಯವ್ವೆ
ಎನ್ನ ಕಪಿಲಸಿದ್ಧಮಲ್ಲಿನಾಥದೇವಗವ್ವ!/1050
ದೇವರ ದೇವನಾಣೆಯನೂ ರಾಣಿ ವಾಸದಾಣೆಯನೂ ಇಡರಯ್ಯಾ.
ಹಾ! ಹಾ! ಅಯ್ಯಾ ಬೇಡಯ್ಯಾ, ಮೇಲೆಕರದಿಮ್ಮಿತ್ತು.
ಅವರ ಹಿಂಬಲ್ಲುಮುಂಬಲ್ಲುಗಳನೆ ಕೂರಹದಲೆ ತರಿತರಿದು
ನರಕದಲ್ಲಿಕ್ಕುವರು ಕಪಿಲಸಿದ್ಧಮಲ್ಲಿನಾಥನಾಳು ನೇಮಕರು./1051
ದೇವರಿಗೆ ಕೃಷಿಯ ನೇಮಕವ ಮಾಡುವರಲ್ಲದೆ,
ದೇವರ ಪ್ರಥಮ ಮುಖ ಭೂಮಿ ಎಂದರಿಯರೀ ಲೋಕ.
ದೇವರಿಗೆ ನಯ ಜಲವೆರೆಯಬೇಕೆಂಬ ನೇಮಕವ
ಮಾಡುವರಲ್ಲದೆ,
ದೇವರ ದ್ವಿತೀಯ ಮುಖ ಜಲ ಎಂದರಿಯರೀ ಲೋಕ.
ದೇವರಿಗೆ ದೇವಿಗೆಯ ನೇಮಕವ ಮಾಡುವರಲ್ಲದೆ,
ದೇವರ ತೃತೀಯ ಮುಖ ಜ್ಯೋತಿಯೆಂದರಿಯರೀ ಲೋಕ.
ದೇವರಿಗೆ ತಾಲವೃಂತದ ನೇಮಕವ ಮಾಡುವರಲ್ಲದೆ,
ದೇವರ ಚತುರ್ಥಮುಖ ವಾಯುವೆಂದರಿಯರೀ ಲೋಕ.
ದೇವರಿಗೆ ಆಶ್ರಯವ ಮಾಡಬೇಕೆಂಬ ನೇಮಕವ
ಮಾಡುವರಲ್ಲದೆ,
ದೇವರ ಪಂಚಮುಖ ಆಕಾಶವೆಂದರಿಯರೀ ಲೋಕ.
ದೇವರಿಗೆ ಪ್ರಾಣಪ್ರತಿಷ್ಠೆಯ ಮಂತ್ರ ಹೇಳುವರಲ್ಲದೆ,
ದೇವರ ಆರನೆಯ ಮುಖ ಆತ್ಮಪ್ರಾಣವೆಂದರಿಯದೀ ಲೋಕ,
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1052
ದೇವರು ಕೈವೀಸಕೆ ಅವರಿವರೆನ್ನೆ ಕಂಡಯ್ಯಾ!
ನೆಲೆಗೊಳ್ಳಲೀಯದು ಮೊಲೆಗಳಲೆಸೆವೆ ನೀ ಅಯ್ಯಾ!
ಭಾಷೆಯಾಳು ಕಾಮನು.
ಕಪಿಲಸಿದ್ಧಮಲ್ಲಿನಾಥನೆಸರ ಹೇಳಿದವರನೆಸುವನಯ್ಯಾ./1053
ದೇವಿ ದೇವನಾ ನಂಬಿದಾ
ನಂಬಿದವೈವರ ನಿಲವ ಕೇಳಿರೊ ಅಯ್ಯಾ!
ಹರಿವ ನದಿಗಳಂತೆ ಪರಹಿತಾರ್ಥವಾಗಿಪ್ಪರಯ್ಯಾ,
ತಾವು ಮಾಡುವರಲ್ಲದೆ ಮೂಲದೊಳಗಿರರು,
ಕಪಿಲಸಿದ್ಧಮಲ್ಲಿನಾಥನ ಕೂಡಿಪ್ಪರಯ್ಯಾ./1054
ದೇವಿಯರಿಬ್ಬರಿಲ್ಲದಂದು,
ಪ್ರಧಾನಿಮಂತ್ರಿಗಳಿಲ್ಲದಂದು,
ಆರಾರೂ ಇಲ್ಲದಂದು ನೀನಾಮುಖಶೂನ್ಯನಯ್ಯಾ.
ಅರ್ಥಾಂತಾನ್ವಯಕೆ ನೀ ಮೂಲನೆಂಬೆ.
ನಿನ್ನೊಡನೆ ಬಂದಾತ ಬಸವಣ್ಣ.
ನೀನು ತಮಂಧದಲ್ಲಿ ಜ್ಞಾನಭಾಸ್ಕರದೀಪ್ತಿಯಂ
ಪ್ರವೇಶಿಸಲುಪಟ್ಟಡೆ,
ನೀ ಸಕಲವನು ನಿಃಕಲವನು ಪ್ರಾಪಂಚಿಕವನು ತಾತ್ಪರ್ಯವ
ಮಾಡುವಾಗ
ನೀನೆ ಎಂದೆಂಬೆ, ಅದು ಬಸವಣ್ಣನನುಮತ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀನನಾದಿಮೂಲದೊಡೆಯನೆಂದೆಂಬೆ.
ನಿಮ್ಮ ಬಲ್ಲಾತ ಬಸವಣ್ಣ;
ಗುರು-ಲಿಂಗ-ಜಂಗಮತ್ರಯವು ಬಸವಣ್ಣನಂಶಿಕವು./1055
ದೇಶ ಪರಿಭಾಷೆಯಲ್ಲಿ ಅಸುರದ ಲಾಂಛನ
ದೂಸೆಯಪ್ಪವರೆಲ್ಲರರಿಯಲಹುದೆ?
ಸರ್ವೆಶ ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿ
ಭಾಷೆಯಾದಂಗಲ್ಲದರಿಯಲಿಲ್ಲ/1056
ದೇಶ ಪರಿಭಾಷೆಯಲ್ಲಿ ಅಸುರದಲಾಂದ್ಯನದ
ಘಾಸಿಯಪ್ಪವರೆಲ್ಲರರಿಯಲಹುದೆ?
ಸರ್ವೆಶ ಕಪಿಲಸಿದ್ಧಮಲ್ಲಿಕಾರ್ಜುನನ
ಭಕ್ತಿಭಾಷೆವೋದಂಗಲ್ಲದರಿಯಲ್ಲ./1057
ದೇಶವ ತಿರುಗಿದಡೇನು, ಕಾಶೀ ರಾಮೇಶ್ವರ
ಯಾತ್ರೆಯ ಮಾಡಿದಡೇನು,
ಕೋಶತ್ರಯವನರಿದು ದಾಂಟದನ್ನಕ್ಕ?
ದೇಶವ ತಿರುಗಿದಲ್ಲಿ ಲಕ್ಷಣಾಲಕ್ಷಣಾವಲೋಕನವೆ ಪ್ರಾಪ್ತಿ ;
ಯಾತ್ರೆಯ ಮಾಡಿದಲ್ಲಿ ಮೂಢಜನಕ್ಕೆ ಸಾಧುದೃಷ್ಟತ್ವವೆ ಪ್ರಾಪ್ತಿ.
ಕೋಶತ್ರಯವ ದಾಂಟಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ
ಸ್ವಭಾವವೆ ಪ್ರಾಪ್ತಿ ನೋಡಾ, ಕೇದಾರಯ್ಯಾ./1058
ದೇಹ ಎರಡರಲ್ಲಿ ಭಾವ ಒಂದಾಗದವ ಪ್ರಾಣಂಗಿಯಲ್ಲ.
ದೇಹ ಮೂರರಲ್ಲಿ ಸಾಕ್ಷಿ ತಾನಾಗದವ ಪ್ರಾಣಂಗಿಯಲ್ಲ.
ದೇಹ ನಾಲ್ಕರಲ್ಲಿ ನಿದ್ರ್ವಂದ್ವ ಅಸಾಕ್ಷಿಕ ತಾನಾಗದವ
ಪ್ರಾಣಲಿಂಗಿಯಲ್ಲ.
ಈ ಛಂದವ [ನುಅ]ನಿಂದೆಯೆಂದೆನಾಗಿ.
ಚೆನ್ನಬಸವನ ಗುರುಮೂರ್ತಿಯಿಂದ,
ಆತನ ಒಕ್ಕುದ ಮಿಕ್ಕುದ ಕಾಯ್ದುಕೊಂಡಿಪ್ಪಾತನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1059
ದೇಹ ಕಂದಡೇನು? ದೇಹ ಇಂದುವಿನಂತಾದಡೇನು?
ದೇಹ ಬಾತು ಬಿದ್ದಡೇನು?
ದೇಹ ಇದ್ದ ಯೋಗ್ಯತೆಗೆ ಮೈಗೊಟ್ಟಡೇನಯ್ಯಾ?
ಅಂತರಂಗ ಶುದ್ಧವಾದ ಬಳಿಕ ಹೇಗಿದ್ದಡೇನಯ್ಯಾ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1060
ದೇಹ ನಾನಲ್ಲ, ಜೀವ ನಾನಲ್ಲವೆಂಬುದದು ಶಿವನೆನಿಸಿತ್ತು.
ಶಿವ-ಜೀವಂಗೆ ಭೇದವೆಂಬುದು ಇಲ್ಲ ಕಾಣಾ.
ಉದಕವಿದ್ದೆಡೆಯಲ್ಲಿ, ಗಗನಪರಿಪೂರ್ಣದಲ್ಲಿ,
ರವಿ ತಾರೆ ಮೇಘವಾದಂತೆ-
ಪರಿಪೂರ್ಣ ವಸ್ತುವೆ ಚಿದಾಕಾಶದಲ್ಲಿ ಶಿವ ಜೀವ ಮಾಯಾ
ಪ್ರಕೃತಿ ಎನಿಸಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1061
ದೇಹ ನಾನೆಂದು ನಂಬಿದೆ, ಎಲೆ ಮನವೆ.
ದೇಹದಲ್ಲಿಹ ಗುಣಂಗಳು ನಿನ್ನಲ್ಲಿ ಕಂಡಯ್ಯಾ ಮನವೆ.
ಪೃಥ್ವಿಯ ಗುಣ ಶಾಂತಿ, ಉದಕದ ಗುಣ ಸ್ವಾದ,
ಅಗ್ನಿಯ ಗುಣ ಸರ್ವಭಕ್ಷಣ, ವಾಯುವಿನ ಗುಣ ನಿರ್ಮಲತ್ವ,
ಆಕಾಶದ ಗುಣ ನಿರ್ವಯಲು.
ಈ ಪಂಚತತ್ವದ ಗುಣ ನಿನ್ನಲ್ಲಿರಲು,
ನೀನೆ ಪಂಚಮುಖ ನೋಡಾ ಮನವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1062
ದೇಹದ ಗುಣ ಇರುವಂಗೆ ತಪ್ಪದು ನೋಡಾ ಎಂಬಲ್ಲಿ
ಕ್ಷುಧೆ ತೃಷೆಗಳಿಗಲ್ಲದೆ ದುರ್ಗುಣಕ್ಕುಂಟೇನೋ ಅಯ್ಯಾ?
ಕ್ಷುಧೆ ತೃಷೆ ಇಲ್ಲರೆ ದೇಹ ಬೀಹವಾಗುವುದು.
ದುರ್ಗುಣವಿಲ್ಲದಡೆ ಬೀಹವಾಗದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1063
ದೇಹದ ಸಿರಿಯ ಆಗುಹೋಗನರಿಯಬಾರದು
ಆಗೆಂದರಿಯಬಾರದು, ಈಗೆಂದರಿಯಬಾರದು
ಇದನೋಜೆಮಾಡಿಕೊಳ್ಳಿ ಶಿವಭಕ್ತಿಯಿಂದ
ಕಪಿಲಸಿದ್ಧಮಲ್ಲಿಕಾರ್ಜುನ./1064
ದೇಹವ ನಿರ್ದೆಹಿಗೊಪ್ಪಿಸಿದಲ್ಲಿ ದೇಹ ನಿರ್ದೆಹವಾಗಿತ್ತು.
ಮನವ ಲಿಂಗಕ್ಕರ್ಪಿಸಿದಲ್ಲಿ ಮನಲಿಂಗವಾಗಿ ಮನ ಲೀಯವಾಯಿತ್ತು.
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತಯ್ಯಾ.
ದೇಹ ಮನ ಭಾವವಳಿದಲ್ಲಿ ಕಾರಣಕಾಯ ಅಕಾಯವಾಯಿತ್ತು.
ಎನ್ನ ದೇಹದ ಸುಖವ ಲಿಂಗ ಭೋಗಿಸುವುದಾಗಿ,
ಶರಣಸತಿ ಲಿಂಗಪತಿ ಎಂಬ ಭಾವ ಅಳವಟ್ಟಿತ್ತಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1065
ದೇಹವ ಮುಟ್ಟಿದವರು ನಿರ್ದೆಹಿಯ ಮುಟ್ಟುವುದದು ದುರ್ಲಭವಯ್ಯಾ.
ನಿರ್ದೆಹಿಯ ಮುಟ್ಟಿದವರು ದೇಹವ ಮುಟ್ಟರು ನೋಡಯ್ಯಾ.
ಮುಟ್ಟಿದವ ಕ್ಷಣಿಕ ಸುಖ ಕಂಡ; ಮುಟ್ಟದವ ನಿಜಾನಂದ ಸುಖ ಕಂಡ,
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1066
ದೇಹವೆಂಬ ದೇವಾಲಯದಲ್ಲಿ
ದೇವಾಲಯದವರ ಮೂವರು ಮಂದಿಯ ಕಾಣದೆ
ಕಂಗೆಟ್ಟಿದ್ದೇನೆ ಗುರುವೆ.
ದೇಗುಲದೊಡೆಯರ ಕರತಂದು ದೇವಾಲಯದಂತುವ ತೋರಾ
ಕಪಿಲಸಿದ್ಧಮಲ್ಲಿನಾಥಯ್ಯಾ./1067
ದೇಹವೆಂಬುದು ಅವಿದ್ಯೆ ಎಂಬುವರು; ಅದೆಂತಯ್ಯಾ?
ದೇಹ ತಾನಿಲ್ಲರೆ ಆಶ್ರಯಿಸುವ ಪರಿ ಎಂತಯ್ಯಾ?
ಅರಿದಡೆ ಆಶ್ರಯಿಸ; ಮರೆದಡೆ ಆಶ್ರಯಿಸುವ.
`ಅಜ್ಞಾನಾದಧಶ್ಚಲ್ಕ’ ಎಂಬುದ ಅರಿದೆನಯ್ಯಾ,
ದೇಹವದು ಜಡಸಾಕ್ಷಿ!
ಅಜಡವೆಂಬ ಭಾವ ವಚನದಲ್ಲಲ್ಲದೆ
ಅನುಭಾವದ್ಲಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1068
ದೇಹಸಂಗವ ಕಳೆದು ವಾಯು ಪ್ರಾಣವ ಕೊಂದು
ಕಾಯ ನಿರ್ಮಳತೆಯನು ಮಾಡಿ
ಎನ್ನ ವಾಯದಲೋನ್ನತದ ವ್ಯಾಕುಲವ ಬಿಡಿಸೀಗ
ಏಕಾಕ್ಷರದ ಭೇದವನರುಪಿ ಚತುಃಪದವನತಿಗಳೆದು
ಶುದ್ಧ ಆನಂದ ಭಾವತ್ರಯ ಲಿಂಗ ಮೂಲವನು ಮಾಡಿ
[ಭಾ]ವಿಸುತ
ಸಕಳ ನಿಃಕಳ ತತ್ತ್ವ ತುರೀಯ ತ್ವಂಪದ ತತ್ತ್ವಾರ್ಥವನೋರಂತೆ
ಅರುಪಿದ
ಆನಂದ ತತ್ವಾತೀತನು ಶ್ರೀಗುರು ಚೆನ್ನಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1069
ದೋಷವು ಮನದಲ್ಲಿದ್ದು ಕಾಯದಲ್ಲಿಲ್ಲದವಗೆ ಶತಜನ್ಮಕ್ಕೆ
ಮೋಕ್ಷ.
ಕಾಯದ್ಲದ್ದು ಮನದಲ್ಲಿಲ್ಲದವಗೆ ಮೂರು ಜನ್ಮಕ್ಕೆ ಮೋಕ್ಷ.
ಕಾಯ ಮನೋಯುಗದಲ್ಲಿಲ್ಲದವ ಮೋಕ್ಷರೂಪು ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1070
ಧನಕ್ಕೆ ಮನಕ್ಕೆ ಕಾಮಿಸರು ಎನ್ನಯ್ಯಾ,
ನಿಮ್ಮ ನೆನೆದು ನಿಮ್ಮ ನೋಡಿ
ನಿಮ್ಮ ತೋರಿ ನಿಮ್ಮ ಚಿತ್ತದಲ್ಲಿರಿಸಾ.
ಸಲೆ ನಿಮ್ಮ ಬೇಡುವ ಮನ, ದಾಸಿಮನ ಮಾಡರೆನ್ನ
[ಕಪಿಲಸಿದ್ಧ] ಮಲ್ಲಿಕಾರ್ಜುನಯ್ಯ ತಂದೆ./1071
ಧರಿಸಿದ ಲಿಂಗವ ವರಿಸಬಲ್ಲಡೆ ಗಿರಿಜೆಯ ಅರಸನೆಂಬೆ.
ಸ್ಥಾವರವ ಪೂಜಿಸಿದವನ ಉಮಾವರನೆಂಬವನ
ಗಾವಿಲನೆಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1072
ಧರೆ ಇಲ್ಲದೆ ಬೆಳೆಯಬಹುದೆ ಧಾನ್ಯವ ?
ಮಳೆ ಇಲ್ಲದೆ ನೋಡಬಹುದೆ ಬೆಳೆಗಳ ?
ಒಂದು ವಸ್ತುವಿಗಾದಡೂ ದ್ವಂದ್ವವೆ ಬೇಕು.
ನಮ್ಮ ಕಪಿಲಸಿದ್ಧಮಲ್ಲನ ನೋಡುವಡೆ
ಲಿಂಗಪೂಜೆ ಜಂಗಮದಾಸೋಹವೆ ಬೇಕು./1073
ಧರೆ ದೆಸೆವಳಯವೆಲ್ಲ ತನಗಾದಡೂ ನಿಲ್ಲಳು.
ಎನಿತು ತ್ರಿಭುವನ ರಾಜ್ಯ ಪದಂಗಳು ತನಗಾದಡೂ ನಿಲ್ಲಳು.
ಅನಿತರೊಳು ತೃಪ್ತಿವಡೆಯಳು.
ಈ ಆಸೆಯೆಂಬವಳಿಂದವೆ ನಿಮ್ಮಡೆಗಾಣದಿಪ್ಪೆನು.
ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ
ಎಂದು ನಿಮ್ಮನೊಡಗೂಡಿ ಬೇರಾಗದಿಪ್ಪೆನೊ, ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1074
ಧರೆಯಗಲದ ಜಲವು
ಕರಣೇಂದ್ರಿಯಗುಣವು
ತರತರದ ತೇಜದ ತೆರೆಯು ಬಂದು
ಪರಿಭವದ ತಡಿಗೆ ಹಾಕದ ಮುನ್ನ
ಮೃಡನೆ ನೀ ಕೈಗುಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ/1075
ಧರೆಯಗಲದೊಳಗೊಂದು ಹಿರಿದಪ್ಪ ಲೋಭವು
ತನುವೆಂಬುದನು ತಾನು ಲೀಯ್ಯಮಾಡಿ
ಮನ ಮಗ್ನದೊಳಗೆ ನೆಲೆಗೊಂಡನೆಂದಡೆ
ನೆಲಗೊಳ್ಳಲೀಯ್ಯದೆ ತನ್ನ ಮಾಯವ ಮಾಡಿತ್ತು
ಕರುಣಾಕರನೆ ಕಳೆದು ಕಾಯಯ್ಯ ತಂದೆ
ಕಪಿಲಸಿದ್ಧಮಲ್ಲಿಕಾರ್ಜುನಾ./1076
ಧರ್ಮವ ಧರಿಸಿದ ಬಳಿಕ
ಲಿಂಗಾರ್ಚನೆಯ ಮಾಡಿ ಸಾಯಬಹುದಯ್ಯಾ.
ಸತ್ತಡೆ ಸಾಯಬಹುದು,
ಹೊತ್ತಿಗೊಮ್ಮೆ ಸೂರ್ಯನಂತೆ ಬರಬಾರದಯ್ಯಾ.
ಬಂದಡೆ ಬರಬಹುದು,
ತನ್ನಾಯತವ ಮರೆದಿಬಾರದಯ್ಯಾ,
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ./1077
ಧವಳ ಮಂಟಪದೊಳಗೆ ಅವನಿಪ್ಪ ಎಮ್ಮ ನಲ್ಲ.
ಅವನ ಕೃಪೆಯಿಂ ಮಠವು ಪ್ರಬಲವಾಗೆ
ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರನ
ನೆನಹಿನ ಮಠಕಾನು ನಿತ್ಯವಕ್ಕೆ/1078
ಧಾತುವ ಮೀರಿದ್ದ ಬಣ್ಣವ,
ಅಜಾತ ನಿನ್ನ ಕೂಟವ,
ಆರಿಗಯ್ಯಾ ಭೇದಿಸಲಕ್ಕು?
ಅಭೇದ್ಯ ಕಾರಣ ಶಿವನೇ,
ಆ ಅಕ್ಷರದಲ್ಲಿ ಅಮೋದದಾನತದ ಭೇದವ
ಆ ಭೇದವ ಭೇದಿಸಲಾಹುದೆ
ಕಪಿಲಸಿದ್ಧಮಲ್ಲಿಕಾರ್ಜುನಾ/1079
ಧ್ಯೇಯಕ್ಕೆ ಅ್ಕರೂಪು ದಾಯನುಂಗಿಪ್ಪುದೀ
ತಾನೊಂದು ರೂಪಾಗಿ ದಾಯವಿಲ್ಲದೆ ಇಪ್ಪುದು.
ಅದು ನಿಹಿತ ತಾನು ದಾಯವು
ವಾಯವು ಕಾಯಕ್ಕೆ ಅತಿ ಬ್ರಹ್ಮವಾಯಂದರಿಯಲ್ಕೆ
ಸುಲಭ ತಾನೆ ಕಾಳದಲಿ ಧವಳತೆಯ
ಸಾನಂದದನ್ವತೆಯ
ಸಾಯದೆ ಸತ್ತಾದ ಕಂಡನಿದನು.
ಕಂಡು ಬ್ರಹ್ಮಾಂಡವನು ಉಂಡನದನನ್ವಯದ ಮಂಡಲಕ್ಕದು ಕರ
ಚೋದ್ಯ.
ತಾನು ಕಂಡು ಕಾಣದೆ ಈಗ ಉಂಡು ಉಣ್ಣದೆ
ಈಗ ಕಂಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1080
ನ ಒಂದರಲ್ಲಿ ವಾರ ಏಳು ನೋಡಾ.
ಆ ಏಳು ವಾರಗಳೆಂಬುವುದು ಕಲ್ಪಿತವಲ್ಲದೆ
ದೃಷ್ಟಿಯನ್ನಿಟ್ಟು ನೋಡಬಾರದು ನೋಡಾ.
ದೇವರೆಂಬುವುದೊಂದು ನೋಡಾ.
ಆ ದೇವರೆಂಬುವುದೊಂದರಲ್ಲಿ,
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ವಿರಾಟ್ಪುರುಷರೆಂಬುವುದು;
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1081
ನಂಟರಿಷ್ಟರನ್ಯರಾರಾದೊಡೆಯೂ ಬಂದು ನಿಂದಿರ್ದಡೆ,
ಅವರಿವರೆಂದೆನ್ನದೆ ಮನವಿಚ್ಛಂದವಾಗದೆ
ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತಾಗುಣ
ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ/1082
ನಂಬಿದೆನಯ್ಯಾ ಪ್ರಭುವಿನ ಪಾದವ.
ನಂಬಿದೆನಯ್ಯಾ ಬಸವಣ್ಣನ ಪಾದವ.
ನಂಬಿ ನಚ್ಚಿ ನಿಮ್ಮ ಮೊರೆಹೊಕ್ಕೆನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1083
ನಂಬಿದೆನಯ್ಯಾ ಲಿಂಗವ ನೋಡಿ;
ನಂಬಿದೆನಯ್ಯಾ ಲಿಂಗದೊಡಗೂಡಿ.
ನಂಬಿದೆನಯ್ಯಾ ನಾನೆ ಚೆನ್ನಬಸವಣ್ಣನೆಂದು,
ಕಪಿಲಸಿದ್ಧಮಲ್ಲಿಕಾರ್ಜುನಾ./1084
ನಟ್ಟಡವಿಯೊಳಗೆ ಇರುಳು-ಹಗಲೆನ್ನದೆ
ಅಪ್ಪಾ! ಅಯ್ಯಾ! ಎಂದು ನಾನರಸುತ್ತ ಹೋದಡೆ,
`ನಾನಿದ್ದೇನೆ ಬಾ ಮಗನೆ’ ಎಂದು ಕರೆದು, ಎನ್ನ ಕಂಬನಿದೊಡೆದು,
ತನ್ನ ನಿಜವ ತೋರಿದ ಪಾದವಿಂದೆನ್ನಲ್ಲಿಗೆ ನಡೆದುಬಂದಡೆ
ನಾನರಿಯದೆ ಮರುಳುಗೊಂಡೆಹೆನೆಂದು ಎನ್ನ ಮನದೊಳಗೆಚ್ಚರ
ಮಾಡಿದೆ.
ಆತನನರಸಿಕೊಂಡು ಬಂದೆನ್ನ ಹೃದಯದಲಿಂಬಿಟ್ಟುಕೊಂಬೆ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ./1085
ನಡನಡ ನಡುಗುವ ಅವಗುಣ ಮನಂಗಳ
ಅವಧಿಗಳು ನೆರೆದೆಂದಿಂಗೆ ಪೋಪವೆಂದು
ನಿಮ್ಮೊಡಗೂಡಿ ಬೇರಾಗದೆಂಪ್ಪೆನೊ?
ಕಪಿಲಸಿದ್ಧಮಲ್ಲಿಕಾರ್ಜುನ./1086
ನಡೆ ನೋಡುವ ಸುಖದ ಸುಗ್ಗಿ ನೀನೆ ಅಯ್ಯಾ,
ಕಾಯ ಜೀವದ ಗುಣ ನೀನೆ ಅಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ. ||/1087
ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ.
ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯಾ.
ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗ,
ನುಡಿಯ ಬ್ರಹ್ಮಂಗಳಿಂದಪ್ಪುದೇನೊ!/1088
ನಡೆ-ನೋಟ-ಭಾವ-ದೃಷ್ಟಿ ಲಯವಾಯಿತ್ತು.
ಗಮನ ಗಾಂಭೀರ್ಯವಡಗಿತ್ತು ; ಕಾಲಕಂಠವಳಿಯಿತ್ತು.
ಗಮನ-ಸುಮನವಡಗಿತ್ತು, ಕದಳಿ ಲೋಕದಳವಾಯಿತ್ತು.
ಪ್ರಸಾದ ಸಂಬಂಧ ಬಲುಹಿನಲ್ಲಿ ನಿಂದಿತ್ತು.
ಮಾತು ಮನವಾಯಿತ್ತು, ಅನುಭಾವವೈಕ್ಯವಾಯಿತ್ತು.
ನಮ್ಮ ಕಪಿಲಸಿದ್ಧಮಲ್ಲಿನಾಥನಲ್ಲಿ
ನಮ್ಮ ಚೆನ್ನಬಸವಣ್ಣನ ಪ್ರಾಣಂಗಸಂಬಂಧ
ಪರಿಣಾಮದಲ್ಲಿ ನಿಂತ್ತು./1089
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ ;
ಸಮುದ್ರ್ ನೀರು ಬಾರವಯ್ಯಾ ನದಿಗೆ.
ನಾನು ಹೋದೆನಯ್ಯಾ ಲಿಂಗದ ಕಡೆಗೆ;
ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ.
ಮಗ ಮುನಿದಡೆ ತಂದೆ ಮುನಿಯನು;
ನಾ ಮುನಿದಡೆ ನೀ ಮುನಿಯೆ ನೋಡಯ್ಯಾ,
ಕಪಿಲಸಿದ್ಧಮಲ್ಲಿನಾಥಾ./1090
ನನ್ನ ಕೋಪವೆಂಬುದು ನಿಮ್ಮ ಕಣ್ಣು ನೋಡಯ್ಯಾ;
ನಾನೇತರೊಳಗೇನು ಹೇಳಯ್ಯಾ!
ನಿಮ್ಮ ಜ್ಞಾನದ ತೇಜದ ಮುಂದೆ ಎನ್ನರಿವು ಏತರದು
ಹೇಳಯ್ಯಾ!
ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯಾ.
ಎನಗೆ ಬೇರೆ ಸ್ವತಂತ್ರತೆಯುಂಟೆ, ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1091
ನನ್ನಿಚ್ಛೆ ತನ್ನ ತಂದೀತೆಂದರಿಯೆ;
ಆತನಿಚ್ಛೆಯಿಂದ ನಾ ಬಂದೆನೆಂಬುದ ಅರಿಯೆ.
ನನ್ನಿಚ್ಛೆಯಾಗಲಿ, ಶಿವನಿಚ್ಛೆಯಾಗಲಿ, ಬಂದುದು ನೀ ನಾನೆಂದೆ.
ಇದಕ್ಕೆ ಇನ್ನು ಬರಬಾರದ ಚೆನ್ನ ಮಾರ್ಗವ ತೋರಾ,
ಚೆನ್ನಬಸವ ಕಪಿಲಸಿದ್ಧಮಲ್ಲಿಕಾರ್ಜುನಾ./1092
ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ.
ಸ್ಮೃತಿಗಳು ಸಮುದ್ರದ ಪಾಲಾಗಲಿ;
ಶ್ರುತಿಗಳು ವೈಕುಂಠವ ಸೇರಲಿ;
ಪುರಾಣಗಳು ಅಗ್ನಿಯ ಸೇರಲಿ;
ಆಗಮಗಳು ವಾಯುವ ಹೊಂದಲಿ.
ಎಮ್ಮ ನುಡಿ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ
ಹೃದಯದೊಳು ಗ್ರಂಥಿಯಾಗಿರಲಿ./1093
ನಮ್ಮ ನಲ್ಲನೂ ನಾವೂ ನೆರೆವಲ್ಲಿ
ಅವ ಬಂದು ರುುಳಪಿಸುವ ಹಾಹಾ ಯ್ಯಾ ಯ್ಯಾ ಯ್ಯಾ.
ಅವಗೆ ನಿಮಗೆ ಮತ್ಸರವುಂಟು.
ಆತನ ಕೈಕಾಲ ಛೇಸಿ ನಾವು ನಿಶ್ಚಿಂತ
ಮನೆಗೆ ಹೋಹ ಬಾರಾ ಬಾರಾ ಎಂದಳು
ಕಪಿಲಸಿದ್ಧಮಲ್ಲಿನಾಥಯ್ಯನ./1094
ನಯನೇಂದ್ರಿಯಂಗಳು ಮುಟ್ಟದೆ,
ಶ್ರೋತ್ರೇಂದ್ರಿಯಂಗಳು ಮುಟ್ಟದೆ,
ಘ್ರಾಣೇಂದ್ರಿಯಂಗಳು ಮುಟ್ಟದೆ,
ಜಿಹ್ವೇಂದ್ರಿಯಂಗಳು ಮುಟ್ಟದೆ,
ತ್ವಗಿಂ್ರಯಂಗಳು ಮುಟ್ಟದೆ-
ಇಂತು ಇಂದ್ರಿಯಂಗಳು ಹಲವ ಹರಿಯದೆ,
ಇವು ಈಶನಮುಖವೆಂದರ್ಪಿಸಾ ಸೂಸಲೀಯದೆ,
ಸರ್ವಕರಣಂಗಳು ಈಶನ ಕರಣಂಗಳೆಂದರ್ಪಿಸಾ.
ಎಲೆ ಅಯ್ಯಾ, ನಿನಗೆ ಗುರುಕರುಣವಾದ ಬಳಿಕ,
ಸರ್ವಾಂಗ ಲಿಂಗಾಂಗವೆಂದರ್ಪಿಸಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯವ ಕೂಡಾ ಅಯ್ಯಾ/1095
ನರಜನ್ಮಕ್ಕೊಮ್ಮೆ ಬಂದ ಬಳಿಕ,
ಗುರುವಿನ ಕುರುಹ ಕಾಣಬೇಕು.
ಗುರುವಿನ ಕುರುಹ ತಾ ಕಂಡ ಬಳಿಕ,
ಶಿಷ್ಯನಾಗಿ ಗುರುಕರಜಾತನಾಗಬೇಕು.
ಗುರುಕರಜಾತನಾದ ಬಳಿಕ, ಗುರುಸ್ವರೂಪಾಗಿ,
ಕಪಿಲಸಿದ್ಧಮಲ್ಲಿಕಾರ್ಜುನನ ಪಾದಪದ್ಮದಲ್ಲಿ ಐಕ್ಯವ ಗಳಿಸಬೇಕು,
ಘಟ್ಟಿವಾಳಯ್ಯಾ./1096
ನರವೇಷವನು ಕಳೆದು ಶಿವವೇಷವನು ಮಾಡಿ
ಉರುತರವು ಪ್ರಸನ್ನ ಪ್ರಸಾದವ
ಪರಿಯನರುಪಿ ಭವ ತಪ್ಪಿಸಿದ ಗುರು
ಆದ ನಿಸ್ತಾರವೆಂದಾತ ಶಿಷ್ಯ ಕಪಿಲಸಿದ್ಧ ಮಲ್ಲಿಕಾರ್ಜುನಾ./1097
ನರಸಮುದ್ರವೆಂಬುದೊಂದು
ಕೊಳಚೆಯೊಳಗಣ ಚಿಕ್ಕ ಮಹಾಕೊಳಚೆಯೊಳಗೆ
ಅಯ್ಯಾ, ಲೋಕ ಬಿದ್ದು ತೇಕಾಡುತ್ತಿದೆ.
ಇದರಿಂದ ಹೊಲ್ಲ ;
ಕೈಯ ನೀಡು, ಕಪಿಲಸಿದ್ಧಮಲ್ಲಿಕಾರ್ಜುನಾ, ನೀನು./1098
ನಲ್ಲ! ನಿಮ್ಮ ಬೇಟ ವಿಷಯದ ಬೇಟವಯ್ಯಾ.
ನಲ್ಲ! ನಿಮ್ಮ ಬಯಲಿಗೆ ಬೇಟಗೊಂಡೆನಯ್ಯಾ.
ಅಯ್ಯಾ, ಅಕ್ಕಟಾ, ಇವಳೆನ್ನ ಸಬುದಕ್ಕೆ ಬೇಟಗೊಂಡಳೆಂದು
ಕೂಡಿ ಕೂಡಿ ಕೂಡೈ ಎನ್ನ,
ಕಪಿಲಸಿದ್ಧಮಲ್ಲೇಶ್ವರದೇವಾ./1099
ನಲ್ಲನ ನೋಟದ ಬೇಟದ ಕೂಟದ ಪರಿಯ
ನಾನೇನೆಂದು ಹೇಳುವೆ? ವಿಪರೀತ ಕೆಳದಿ.
ಕೂಟದ ಸುಖದಲ್ಲಿ ನೋಟ ಕಂಬೆಳಗಾದಡೆ
ಬೇಟ ಬೇರುಂಟೆ? ಹೇಳು ಅವ್ವಾ.
ನೋಡಿದ ದೃಷ್ಟಿ ಎವೆಗುಂದದೆ? ಮೋಹದ ಪರಿ ಎಂತುಂಟು?
ಹೇಳಾ ಅವ್ವಾ.
ನೋಟ ಬೇಟ ಕೂಟ ಸಮಸುಖ ಸಮರತಿಯಾದಡೆ
ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ./1100
ನವಗ್ರಹ ವರ್ಣಂಗಳ ಧ್ಯಾನವೆಂಬುವುದು
ನವಸಹಸ್ರಕರ್ಣಿಕೆಯಲ್ಲಿರುವ ಪರಂಜ್ಯೋತಿ ರೂಪುಪ್ರಾಪ್ತಿ ನೋಡಾ.
ದ್ವಾದಶಾದಿತ್ಯವರ್ಣಂಗಳ ಧ್ಯಾನವೆಂಬುವುದು
ದ್ವಾದಶಾತ್ಯರ ಪ್ರಭೆಯ ನುಂಗಿದ
ಮಹಾಲಿಂಗಮೂರುತಿ ಪ್ರಾಪ್ತಿ ನೋಡಾ.
ಷೋಡಶಕಲಾವರ್ಣಂಗಳ ಧ್ಯಾನವೆಂಬುವುದು
ಷೋಡಶಕಲಾಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ
ನೋಡಾ,
ಕೇದಾರ ಗುರುದೇವಾ./1101
ನಸುನಗೆಯ ಢಾಳದಲ್ಲಿ ಎಸೆದಿಪ್ಪ ನನ್ನ ನಲ್ಲನೆ.
ಹೊಸ ಕುಸುಮದ ಕಾಣಿಕೆಯ ತಂದೆನು;
ಶಿಶುವೆಂದು ಮನ್ನಿಸಿದ ಶಿಶು ಸಸಿಯ ಫಲಕ್ಕೆ
ಮೂಲಸ್ವಾಮಿಯಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1102
ನಾ ನಿಮ್ಮ ರೂಪ ವಿಚಾರಿಸುವನಲ್ಲ ಕೇಳಾ;
ನಮ್ಮ ಧ್ಯಾನದಲ್ಲಿ ಇಪ್ಪಾತನಲ್ಲ ಕೇಳಾ.
ಅತ್ತಿಷ್ಠದ್ದಶಾಂಗುಲದಲ್ಲಿ ನಿಮ್ಮನಿಲಿಸಿ,
ನಾನೊಂದೆಡೆಯಲ್ಲಿ ಇಪ್ಬಾತನಲ್ಲ ನೋಡಾ.
ಓಂಕಾರವೆಂಬ ಪೀಠಿಕೆ ನಾನಾಗಿ
ನಿಶ್ಶಬ್ದವೆಂಬ ಲಿಂಗವ ನೆಲೆಗೊಳಿಸಿ
ಬೆರಸಿ ಬೇರಿಲ್ಲದೆ ಇಪ್ಪೆ ನೋಡಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ, ನೀವು ಪ್ರಣವರೂಪಾಗಿ./1103
ನಾ ಬಲ್ಲೆನೈ ನಿನ್ನ, ನೀ ಬಲ್ಲೆಯೈ ಎನ್ನ.
ಆರಯ್ಯ ಬಲ್ಲನೈ ಬಸವಣ್ಣನು.
ಭಾನುವಿನ ಉದಯಕ್ಕೆ ಆಯಕ್ಷರ ಭೇದ
ಆನತದಿ ನೀನಾದೆ ಬಸವ ತಂದೆ.
ಸೀಮೆಗೆಟ್ಟಾ ಲೋಕ ಏನಾದಡೇನಯ್ಯಾ
ಆನು ನಿನ್ನೊಳಗಡಗಿ ಐಕ್ಯಪದದ
ಆನತವನೈದಿ ನಾ ಕೂಡೆ ಸುಖಿಯಾದ ಬಳಿಕೇನಾದಡೇನಯ್ಯ
ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನ./1104
ನಾ ಮಾಡಿದ ಕೆರೆಯೆತ್ತ, ಕರಿಕಾಲಚೋಳ ಮಾಡಿದ ಕೆರೆಯೆತ್ತ?
ನಾ ಮಾಡಿದ ಬತ್ತವೆತ್ತ, ದೇವಬತ್ತಗಳೆತ್ತ?
ಕಪಿಲಸಿದ್ಧಮಲ್ಲಿಕಾರ್ಜುನದೇವ[ನ]ಭಾಗ್ಯವೆತ್ತ,
ಪ್ರಮಥಚಿಂತಾಮಣಿಯ ಪಾದೋದಕವೆತ್ತ? ಕೇಳಾ ಕೇದಾರಯ್ಯಾ./1105
ನಾ ಮಾಡಿದ ಪೂಜಾಫಲ ಅಂತಿಂತಲ್ಲ.
ಬಾಣ ಪೂಜಿಸಿದ ಫಲ ಬಾಗಿಲ ಕಾಯಲ್ಲಿ ಹೋಯಿತ್ತು.
ಮಯೂರ ಪೂಜಿಸಿದ ಫಲ ವಿದ್ಯಾದಾನದಲ್ಲಿ ಹೋಯಿತ್ತು.
ಹನುಮಂತ ಪೂಜಿಸಿದ ಫಲ ವಜ್ರ ದೇಹದಲ್ಲಿ ಹೋಯಿತ್ತು.
ನಾ ಪೂಜಿಸಿದ ಫಲ ಕೊಟ್ಟು ಕೊಟ್ಟು ತೀರದೆ ನಿಂತ್ತು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1106
ನಾ ಮುನ್ನ ಉಳಿದೆ ಕಳೆದೆ ಮಿಂಡರ
ನೀ ಹೋಗಿ ತಾರಗೆ ಅವ್ವಾ.
ಚಿತ್ತವು ಮನವು ಹೋಗಿ
ನಾನವನ ಹತ್ತಿದ ಮನವ ತರಲಿಕಾರೆನಹೊ.
ಅಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
ನಾನೀಗ ಏಗೆಯ್ದರೂ ಬಿಡಲಾರೆನವ್ವ./1107
ನಾಗೇಂದ್ರನ ವಿಷವನು, ಬ್ರಹ್ಮನ ಕಪಾಲವನು
ಮತ್ತೊಬ್ಬರಿಗೆ ಹಿಡಿಯ ತೀರುವುದೆ, ಎಲೆ ಅಯ್ಯಾ ?
ಎತ್ತಿದಡೆ ಮೇಲೇಳುಲೋಕವನುರುಹುವುದು;
ಇಳುಹಿದಡೆ ಕೆಳಗೇಳುಲೋಕವನುರುಹುದು;
ಇವನೆತ್ತದೆ ಇಳುಹದೆ ಕೊಂಡಾಡುವ ದೇವ
ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯನೆ!/1108
ನಾಗೇಶನ ತಿಳಿದೆವೆಂಬರು ಆನಾಗದೆ ಹೋದರು, ನಾಗಾಯಿ.
ನಾಗಕುಂಡಲನರಿದೆವೆಂಬರು ನಾಗದೇವತೆಗಳಾದರು, ನಾಗಾಯಿ.
ನಾಗಾಂಕನ ಅರಿದು ತಾನಾಗದೆ ನಾಗಕಂಕಣನಾದ, ನಾಗಾಯಿ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./1109
ನಾಟಿ ಭುಕ್ತಂ ಕ್ಷೀಯತೇ ಕರ್ಮ’ ಎಂದುದಾಗಿ
ಬಾಳದಕ್ಷರವ ತೊಡೆಯಲಿಕೆ ಆರಳವಯ್ಯಾ,
ಗುರುಕಾರುಣ್ಯವುಳ್ಳವರಿಗಲ್ಲದೆ?
ಗುರವೆ, ಎನ್ನ ಭವಕ್ಕೆ ಬಾರದಂತೆ ತಪ್ಪಿಸಿದೆ;
ತೋರಿಸಿದೆ ಉರುತರ ಪಾದೋದಕ-ಪ್ರಸಾದವ;
ನಿನ್ನ ಗುಣದಿಂದ ತನುಗುಣ ನಾಸ್ತಿಯಾದೆ.
`ನಾಟಿಭುಕ್ತಂ’ ಎಂಬುದ ಮೀರಿ ಶಿವಭೋಕ್ತೃವಾದೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿನ್ನ ಕೂಡಿದೆ./1110
ನಾದ ಬಿಂದು ಕಳೆಗಳಲ್ಲಿ ಆದಿಯಾಮೋದವಾದ
ಭೇದಾದಿ ಭೇದವನ್ನು
ಭೇದಿಸಿಹೆನೆಂದಾನು, ಅಯ್ಯಾ.
ವೇಧೆ ವಿಕಳನಾದೆನು ಕಂಡಾ,
ಸಾದಾಖ್ಯ ದೇಹದ ಮೀರಿದ ಬ್ರಹ್ಮವಾದೆನು
ಕಪಿಲಸಿದ್ಧಮಲ್ಲಿನಾಥಯ್ಯ./1111
ನಾದ ಬಿಂದುವಿನಲ್ಲಿ ಆದಿಬ್ರಹ್ಮನ ಕೂಡಿ
ವಾದ ಸಾದಾಖ್ಯಗಳನೊಡಗೂಡಿದ
ಆನಂದ ತುಂಬಿಗಳ ಭೇದ ಭೇಯ ಕೂಡಿ,
ಮೋದ ಮೂವತ್ತಾರು ತತ್ತ್ವಂಗಳ ಭೇದಗಳ ಭೇಸಿ,
ಅಕ್ಷರದ್ವಯದಲ್ಲಿ ತಾನು ಸಂಗಮವಾದ ನಿಶ್ಚಯದಲಿ;
ತವಕಿಸುವ ಕರಣವನು, ಹರಿವ ಪ್ರಪಂಚುವನು,
ಒಸರುವ ಬಿಂದುವನು ಪಸರಿಸುವ ಭೇದವನು
ದೆಸೆಗೆಟ್ಟು ಕಂಡೆ, ಕಪಿಲಸಿದ್ಧಮಲ್ಲೇಶ್ವರಾ./1112
ನಾದ ಬಿಂದುವೆಂಬಲ್ಲಿ ಅಂಗ ಲಿಂಗ ಸಂಬಂಧವೆಂಬೆನಯ್ಯಾ,
ನಾದ ಪ್ರಾಣ, ಬಿಂದು ಕಾಯವಾದ ಕಾರಣ.
ನಾದ ಸ್ವರವಲ್ಲ, ಬಿಂದು ಕಾಯವಲ್ಲ ;
ಉಭಯ ಸೂತಕರಹಿತ ಕಂಡಯ್ಯಾ.
ನಾದ ಬಿಂದುವಿನ ಒಡ್ಡ ತೋರಿ ಮನ ಮಗ್ನವಾದ ನಿಲವ
ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೆ ಬಲ್ಲೆ./1113
ನಾನಾ ಭವದಲ್ಲಿ ಬಂದು, ಮಾಡಿದುದನುಂಬ
ಲೋಕದ ಲೌಕಿಕಗಳಿರಾ ಕೇಳಿರೇ, ನೀವು: ಏಕೋದೇವನರ್ಚಿಸಿರೇ.
ಜನ್ಮಕರ್ಮವೆಂಬ ಕಾನನದೊಳಗೆ ಬೀಳದೆ,
ಐದಾರೇಳೆಂಟೆಂದೆಂಬ ಮೃಗದ ಕೈಯ್ಲಿತಿನಿಸಿಕೊಳ್ಳದೆ,
ಐದು ಬಾಣವನುಳ್ಳವಂಗೆ ನೀನು ಗುರಿಯಾಗದೆ
ನೆನೆಯಾ ಶಿವನ ವಿಚಿತ್ರಮೂಲ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ,
ಹತ್ತೆ ಸಾರಿ ನೀನು ಸುಖಿಯಾಗು./1114
ನಾನಾ ವಿಧದ ಶುದ್ಧ ಸಿದ್ಧ ಪ್ರಸಿದ್ಧದಾ
ಸಾರವನು ಉಂಡು ತಾ ಗುರುವಾದನೈ
ಧಾರುಣೋದ್ಧಾರದ ಅತ್ಯಂತ ಕಳೆಯ ಇರಿಸಿದಾತ
ಗುರು ಕಪಿಲಸಿದ್ಧಮಲ್ಲಿಕಾರ್ಜುನ./1115
ನಾನಾ ವ್ರತನೇಮಂಗಳಾದವು;
ಸತ್ಯ ಶುದ್ಧ ಕಾಯಕ ನೇಮಂಗಳಾದವು;
ಖಂಡಿತ ಕಾಯಕ ಅಖಂಡಿತ ಕಾಯಕದವರ ಕಂಡೆವು;
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನದೇವರಲ್ಲಿ
ಅಂದಿಂಗೆ ನೂರು ತುಂಬಲು ಒಮ್ಮೆ ಪುರಾತರ ಕಂಡೆವು./1116
ನಾನಿಲ್ಲರೆ ನೀನ್ಲೆಯವನಯ್ಯಾ?
ಬಾಣನ ಮನದ್ಲ ಸ್ಕಿ ಬಾಗಿಲ ಕಾಯ್ದಿರಿ ಅಣ್ಣಾ.
ಸಿಂಧುಬಲ್ಲಾಳನ ವಧುವಿನ್ಲ ಸ್ಕಿ ಸ್ವಯಂಭು ಆಳಿರಿ.
ಚೋಳಿಯಕ್ಕನ ಭಕ್ತಿಯ್ಲ ಸ್ಕಿ ಮಾಜಿರಿ ಅಮ್ಮನವರಿಗೆ,
ಕಪಿಲಸಿದ್ಧಮಲ್ಲಿಕಾರ್ಜುನ/1117
ನಾನೀನೆಂಬ ಮನ ನೀನೆಯಾದೆ ಬಸವಾ.
ತಾನೆಂಬ ತನು ನೀನೆಯಾದೆ ಬಸವಾ.
ಕಪಿಲಸಿದ್ಧಮಲ್ಲಿನಾಥನೆ,
ನೀನೆಂಬ ಮಾಟ ನೀನೆ ಬಸವಾ./1118
ನಾನು ನಾನೊ, ನೀನು ನೀನೊ,
ಬಸವ ಬಸವಾ,
ಮೌನಮುಗ್ಧ ಬಸವ ನೀನೆ,
ಕಪಿಲಸಿದ್ಧಮಲ್ಲಿನಾಥಯ್ಯಾ./1119
ನಾನೇನ ಮಾಡುವುದೆಲ್ಲವನು ನೀನೆಂದೆ ಇದ್ದೆನಯ್ಯಾ.
ನಾನೇ ಮಾಡುವುದೆಲ್ಲವನು ನೀನೆ ಅಲ್ಲವೆಂದಡೆ
ಅದು ಮಾಣ, ನಿಮ್ಮಾಣತಿ.
ಕಾಣಬಾರದ ಘನವ ಕಾಯದಲ್ಲಿ ಧರಿಸಿ,
ಹೇಳಬಾರದ ನಿಜವ ಮನದಲ್ಲಿ ನೆಲೆಗೊಳಿಸಿ,
ತೋರಬಾರದ ಕುರುಹ ಎನ್ನರಿವಿನಲ್ಲಿರಿಸಿ
ಇನ್ನು ನಿಮ್ಮ ಕಾಂಬಂತೆ ಮಾಡಾ,
ಕಪಿಲಸಿದ್ಧಮಲ್ಲಿನಾಥಾ./1120
ನಾಯಂತೆ ಮನುಜರಪ್ಪರೆ ಅಯ್ಯ.
ನಾಯಿ ಕಚ್ಚಿದಂತೆ ಕಚ್ಚುವರೆ?
ಅವರು ಅರೆನಾಯಾದರೆ, ನಾವು ನೆರೆನಾಯಪ್ಪರೆ!
ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರದೇವ./1121
ನಾಲ್ಕು ಯುಗಂಗಳು ಸಹಸ್ರ ವೇಳೆ ತಿರುಗಿದಡೆ, ಬ್ರಹ್ಮಂಗೊಂದು
ಬ್ರಹ್ಮನಂದು ಸಹಸ್ರ ವೇಳೆ ತಿರುಗಿದಡೆ, ವಿಷ್ಣುವಿಗೊಂದು ಗಳಿಗೆ.
ವಿಷ್ಣು ತಾನು ಹನ್ನೆರಡು ಲಕ್ಷ[ವೇಳೆ]ತಿರುಗಿದಡೆ,
ಮಹೇಶ್ವರಂಗೊಂದು ನಿಮಿಷ.
ಅಂತಪ್ಪ ಮಹೇಶ್ವರರನೇಕ ಲೀಲೆ ಧರಿಸಿದಲ್ಲಿ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆ ಸಮಾಪ್ತಿ,
ನೋಡಯ್ಯಾ ಬಾಚರಸರೆ./1122
ನಾಸಿಕವಿದ್ದು ನಾಸಿಕರೋಗವಿದ್ದಡೆಂತು?
ಅಲ್ಲಿ ಯೋಗವ ನಡೆಸಲು ಮನಕ್ಕೆ ಶಾಂತಿಯಿಲ್ಲ.
ಶಾಂತಿಯಿಲ್ಲದಲ್ಲಿ ಭವಶಾಂತಿಯೆಂತು,
ಕಪಿಲಸಿದ್ಧಮಲ್ಲಿಕಾರ್ಜುನ./1123
ನಿಂದಿಸಿದಲ್ಲಿ ಕುಂದುವನಲ್ಲ ಜಂಗಮನು.
ವಂದಿಸಿದಲ್ಲಿ ಆನಂದಮಯನಲ್ಲ ಜಂಗಮನು.
ಬಂದುಪಚಾರದಲ್ಲಿ ಸಂದುಗೊಳ್ಳುವನಲ್ಲ ಜಂಗಮನು.
ಬಂದಲ್ಲಿ ನೀಡರೆ ಕ್ರೋಧಿಯಲ್ಲ ಜಂಗಮನು.
ಇಂದುಧರ ಕಪಿಲಸಿದ್ಧಮಲ್ಲನೆಂಬೆ ಇಂತಪ್ಪ ಜಂಗಮನು/1124
ನಿಜದ ಪ್ರಭೆ ನಿತ್ಯಪ್ರಕಾಶ ತೋರುತ್ತದೆೆ ಎನಗಯ್ಯಾ.
ಮ್ಕರ್ೂಯಾಗಿದೆ ಎನ್ನ ಕಣ್ಣ ಮುಂದೆ ಅಯ್ಯಾ.
ಇದರ ಪ್ರಭೆಯ ಕಂಡು ಬೆರಗಾದೆನಯ್ಯಾ,
ಕಪಿಲಸಿದ್ಧಮ್ಲನಾಥಯ್ಯಾ,
ಕರುಣಿಸಯ್ಯಾ, ನಿಮ್ಮ ಧರ್ಮ./1125
ನಿಜವ ನಂಬಿದ ಬ್ರಹ್ಮ ಅಜಲೋಕದಲ್ಲಿಪ್ಪ.
ಭಜನಾಕ್ಷರದ್ವಯದ ಸಿಂಹಾಸನದ
ನೆಲೆಯ ಮೇಟ್ಟು ಕುರುಹುಗೆಡಬಲ್ಲಡೆ,
ತೆರಹಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನ./1126
ನಿಟಿಲ್ಲಾಕ್ಷಾರ್ವ ಕಾರ ಕರಣಿಕಂ ಭವಾ ಬಸವ ಬಸವಾ,
ನಿಜತತ್ವಜ್ಞಾನ[ತನು] ಬಸವ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯಾ,
ಬಸವಣ್ಣನಿಂದ ನಿಮ್ಮ ಪ್ರಾಣಂಗವ ಕಂಡೆನಯ್ಯಾ./1127
ನಿತ್ಯ ನಿತ್ಯ ಕೋಣವ ತಿನ್ನಬಲ್ಲಡೆ,
ಸದಾಚಾರಿ ಜಂಗಮವೆಂಬೆ.
ನಿತ್ಯ ನಿತ್ಯ ಕೋಡಗನ ಹಿಡಿದು ಆಡುಗಳ ತಿನಬಲ್ಲಡೆ
ಪ್ರಾಣಲಿಂಗಿ ಎಂಬೆ ಕಪಿಲಸಿದ್ಧಮಲ್ಲಿಕಾರ್ಜುನ./1128
ನಿತ್ಯಪ್ರಸಾದವನು ತಥ್ಯ ಮಾಡೈ ಗುರುವೆ
ಭಕ್ತಿತ್ರಯದ ನಿತ್ಯನಿರುಪಮ
ಕಪಿಲಸಿದ್ಧಮಲ್ಲೇಶ್ವರನೆ,
ಭಕ್ತಿಪಥವನೆ ಕುಡುವುದೊದು ತಂದೆ./1129
ನಿತ್ಯಲಿಂಗಾರ್ಚನೆಯ ಅತ್ಯಂತಂ ಮಾಡಿ
ಮತ್ತೆ ಸಮತೆಯ ಕೈಯಲನುಜ್ಞೆ ತೊಡೆದು
ನಿತ್ಯಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರನ
ಅರ್ಚಿಸುವ ಭಕ್ತರಿಗೆ ಭವ ದೂರವೆ/1130
ನಿತ್ಯವೆಂದಡೆ ಲಿಂಗ, ಅನಿತ್ಯವೆಂದಡೆ ಅಂಗ.
ನಿತ್ಯವೆಂದಡೆ ಜ್ಙಾನ, ಅನಿತ್ಯವೆಂದಡೆ ಅಜ್ಙಾನ.
ನಿತ್ಯ ಕಾರ್ಯವು ಸತ್ಕರ್ಮ, ಅನಿತ್ಯ ಕಾರ್ಯಗಳೆ ವಿಷಯಂಗಳು.
ವಿಷಯಂಗಳೆ ನಿತ್ಯಂಗಳಾಗಲು,
ಜ್ಙಾನಿಯೆಂದು, ಐಕ್ಯನೆಂದು, ಪ್ರಮಥನೆಂದು, ವೀರಶೈವನೆಂದು,
ಕಪಿಲಸಿದ್ಧಮಲ್ಲಿಕಾರ್ಜುನನೆಂದು ಬೇರೆ ಉಂಟೇನೊ,
ಹಾವಿನಹಾಳ ಕಲ್ಲಯ್ಯಾ ?/1131
ನಿಧಾನವ ಕಂಡರೆ ಜಲಗ ತೊಳೆಯಲೇಕೆ?
ಮಾಣಿಕ್ಯ ದೊರಕೊಂಡರೆ ಕೊಳ್ಳಿಯ ಬೆಳಕೇಕೆ?
ಕಾಮಧೇನು ಕರೆವರೆ ಕರುವಿನ ಹಂಗೇಕೆ?
ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನದೇವರು
ತಮ್ಮ ನಿಜರೂಪವ ತೋರಿದ ಬಳಿಕ
ಆರಾಧನೆಯೆಂಬ ಉಪಚಾರದ ಹಂಗೇಕೆ ಹೇಳಾ./1132
ನಿನಗೆ ನೀನೆ ಕರ್ತನು ಬಸವಾ;
ಎನಗೆ ನೀನೆ ಕರ್ತನು ಬಸವಾ;
ನಾ ಮಾಡುವ ಭಕ್ತಿಗೆ ನೀನೆ ಕರ್ತನು ಬಸವಾ.
ಕರುಣಿ ಕಪಿಲಸಿದ್ಧಮಲ್ಲಿನಾಥ ಬಸವಾ./1133
ನಿನ್ನ ದೇಹ ನೋಡುವಡೆ ಪಂಚಭೌತಿಕ,
ನೀ ನೋಡುವಡೆ ಜೀವಾಂಶಿಕ;
ನಿನ್ನ ಧನ ನೋಡುವಡೆ ಕುಬೇರನದು,
ನಿನ್ನ ಮನ ನೋಡುವಡೆ ವಾಯುವ ಕೂಡಿದ್ದು ;
ವಿಚಾರಿಸಿ ನೋಡಿದಡೆ ಬ್ರಹ್ಮನದು.
ನಾ ಮಾಡುವೆನೆಂದಡೆ ಅದು ಆದಿಶಕ್ತಿ ಚೈತನ್ಯ ;
ನಾ ತಿಳಿದಿಹೆನೆಂದಡೆ ಅದು ಜ್ಞಾನದ ಬಲ.
ಆ ಜ್ಞಾನವು ನಾ ಎಂದಡೆ ಇದಿರಿಟ್ಟು ತೋರುತ್ತದೆ.
ತೋರುವ ಆನಂದಮೂರ್ತಿ ನಾ ಎಂದಡೆ
ಅದು ಸಾಕ್ಷಿಯಾಗಿ ನಿಂದಿತ್ತು.
ಸಾಕ್ಷಿ ಎಂಬುದದು ತಿಳಿದು ತಿಳಿಯದೆಂಬುದಕ್ಕೆ,
ಬಯಲಾದ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ತಂದೆಯು. /1134
ನಿನ್ನ ನೀ ತಿಳಿದು ನೋಡಿದಡೆ ಶಿವಮಯ ಜಗತ್ತು ನೋಡಾ.
ಓಂಕಾರ ಪ್ರಣವವೆ ಪ್ರಕೃತಿಯಾಗಿ ನಿಂದಿತ್ತು;
ನಕಾರ ಪ್ರಣವವೆ ಪೃಥ್ವಿಯಾಗಿ ನಿಂದಿತ್ತು;
ಮಕಾರ ಪ್ರಣವವೆ ಉದಕವಾಗಿ ನಿಂದಿತ್ತು;
ಶಿಕಾರ ಪ್ರಣವವೆ ಅಗ್ನಿಯಾಗಿ ನಿಂದಿತ್ತು;
ವಕಾರ ಪ್ರಣವವೆ ವಾಯುವಾಗಿ ನಿಂದಿತ್ತು;
ಯಕಾರ ಪ್ರಣವವೆ ಸರ್ವವಸ್ತು ಆಚರಿಸುವುದಕ್ಕೆ ಆಕಾಶವಾಗಿ
ನಿಂದಿತ್ತು.
ನೆನೆನೆನೆದು ಸುಖಿಯಾದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ./1135
ನಿನ್ನಡಕ ನೀನೆಯಾದೆ ಬಸವಲಿಂಗವೆ.
ಎನ್ನ ಚಿತ್ಪಿಂಡದ ರೂಪು ನಿಮ್ಮ್ಲ
ತ್ಲಯವಾಯಿತ್ತು ಬಸವ ಗುರುವೆ.
ಭಾವಿಸಿಹೆನೆಂಬ ಭಾವ ನಷ್ಟವಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿನಾಥನ ಗುರು ಬಸವಾ./1136
ನಿನ್ನನಾರು ಬಲ್ಲರು ಎನ್ನವರಲ್ಲದೆ?
ಅಂದು ನೀನು ಅನಾಹತಲೋಕದಲ್ಲಿ ದೇಶಿಕನಾಗಿ ಇರಲಾಗಿ
ನಿನ್ನನೆನ್ನವರು ಸಲಹರೆ?
ನೀನು ಶುದ್ಧ ಸಿದ್ಧ ಧವಳದಲಿ ಬಂದಡೆ
ನಿನ್ನೊಡನೆ ಬಂದು ಊಡಿಸಿದರೆಮ
……………………………..
[ಕಪಿಲಸಿದ್ಧಮಲ್ಲಿಕಾರ್ಜುನಾ]/1137
ನಿನ್ನನೊಲಿಸುವಡೆ ನಿರಹಂಭಾವವೆ ತೃಪ್ತಿ;
ಅನ್ಯಭಾವಂಗಳನೊಲ್ಲೆನಯ್ಯಾ.
ಹೊನ್ನು ಹೆಣ್ಣು ಮಣ್ಣು ಮುನ್ನವೆ ಸಟೆ ಮಾಡಿ,
ದಾಸೋಹದದಲ್ಲಿ ಸುಖಿಯಾದೆನಯ್ಯಾ,
ಕಪಿಲಸಿದ್ಧಮಲ್ಲೇಶ್ವರಾ./1138
ನಿನ್ನವನಾಗಿ ಅನ್ಯರ ಬೇಡುವ
ಅನ್ಯಾಯವನೇನೆಂಬೆನೆಲೆಯಯ್ಯಾ.
ನಿನ್ನನರ್ಚಿಸಿದ ಪುರಾತನರು ನೀವೆಯಾದರು.
ನಿನ್ನನರ್ಚಿಸಿದ ಬಸವಣ್ಣ ನೀನೆಯಾದ.
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ಗುರುವಾಗಿ ಬಂದೆನ್ನ ಭವದ ಬೇರ ಹರಿದ ಬಳಿಕ
ನಿನ್ನವರು ನೀನು ನಾನೆಂಬ ಸಂದೇಹವೇಕಯ್ಯ?/1139
ನಿನ್ನವರ ಮೂರ್ತಿಧ್ಯಾನದಿಂದ ನೀನಪ್ಪೆ
ಅಪ್ಪೆನಪ್ಪೆನಯ್ಯಾ ದ್ವಯವಿಲ್ಲದೆ.
ನೀ ಬಂದು ಇರಿಸಿದಂತೆ ಇದ್ದು ಹೇಳಿದ ಹಾಂಗೆ
ನೆನೆದೆನಾದಡೆ ಆನವರಪ್ಪುದೇನರಿದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1140
ನಿನ್ನಾಜ್ಞೆಯಿಂದ ಲೋಕ ಒಪ್ಪಿಪ್ಪುದಯ್ಯಾ, ತಂದೆ.
ಬಸವಣ್ಣನಾಜ್ಞೆಯಿಂದ ನೀನಿಪ್ಪೆಯಾಗಿ,
ಅನಿಮಿಷಾನಂದದಲ್ಲಿ ಬಸವಾಕ್ಷರತ್ರಯ
ಗುರು ಬಸವಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1141
ನಿಮ್ಮ ನಂಬಲೊಲ್ಲದ ಸಂದೇಹಿ ಮನಂಗಳ
ಸಂದುಗಳು ಬಿಚ್ಚಿ ಪರಿದೆಂದಿಂಗೆ ಪೋಪವು,
ಎಂದು ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನು
ಕಪಿಲಸಿದ್ಧಮಲ್ಲಿಕಾರ್ಜುನಾ./1142
ನಿಮ್ಮ ನಿಜದಂತುವನಾರು ಬಲ್ಲರಯ್ಯಾ?
ಚತುರ್ದಶ ಭುವನಂಗಲೆಲ್ಲವು
ನಿಮ್ಮ ಕರಸ್ಥಳದೊಳಗಡಗಿಪ್ಪವಯ್ಯಾ.
ನಿಮಗೆಣೆಯಪ್ಪ ದೇವರುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ./1143
ನಿಮ್ಮ ನುಡಿಯ ಇರವಿನಂತೆ,
ಪ್ರಮಥರ ಇರವೊ, ನಿಮ್ಮ ಇರವೊ?
ಒಂದಕ್ಕೊಂದು ಒಂದಕ್ಕೊಂಬತ್ತು ಮಾಡಿ ನುಡಿದಡೆ,
ಸಹಜವೆಂಬುವ ಭಾವ ಅದೆಂತು?
ಕಪಿಲಸಿದ್ಧಮಲ್ಲಿಕಾರ್ಜುನ ಶರಣರಲ್ಲಿ ಸಹಜಪ್ರೇಮವುಳ್ಳಡೆ,
ಸಕಲರ ನುಡಿಯೆ ಇಷ್ಟ ಕೇಳಾ, ಕಿನ್ನರಯ್ಯಾ./1144
ನಿಮ್ಮ ಶಕ್ತಿ ಆತನಲ್ಲಿಪ್ಪುದು ಕಂಡಯ್ಯಾ,
ಆತನ ಪ್ರಾಣ ನಿಮ್ಮಲ್ಲಿಪ್ಪುದು.
ನಿಮ್ಮ ತಮ್ಮ ಭೇದವನಾರು ಬಲ್ಲರು ಹೇಳಯ್ಯಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಶರಣ ಬಸವಣ್ಣನ ಅನುವ ನೀವೆ ಬಲ್ಲಿರಿ./1145
ನಿಮ್ಮ ಶ್ರೀಪಾದವ ಹರಿದು ಹತ್ತುವ
ನೆನೆವ ಮನವ ಕೆಡಿಸಲೆಂದು
ಮೋಹದ ಗಾಳಿ ಕೈವೀಸಲೊಡನೆ
ಕೋಪದ ಕಿಚ್ಚು ಹತ್ತಿ ಬೆಂದೆನಯ್ಯಾ.
ನಿಮ್ಮ ನೆನೆವ ಮನವ ಕಾಡುವ ವಿಧಿಯ
ಕೊಂದು ನೆಲೆಸೆನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ!/1146
ನಿಮ್ಮನರಿವರನರಿವೆನಯ್ಯಾ.
ನಿಮ್ಮ ಮರೆವರ ಮರೆವೆನಯ್ಯಾ.
ಮಾಯಿದೇವಿಗೆ ಮತವ ಕೊಟ್ಟು
ಎಲ್ಲ ಹಿರಿಯರ ಜರಿವೆಯಯ್ಯಾ.
ಇವೆಲ್ಲವ ತೋರಿ ನೀ ಗೆಲುವೆಯಯ್ಯಾ
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ./1147
ನಿರಾಕಾರ ಪರವಸ್ತು ತಾನೆಂದರಿದಡೆಯು
ಕಿರಿದಾಗಿ ನುಡಿಯಲೆಬೇಕು, ಗುರುದೇವಾ.
ಜಡದೇಹಿ ನಾನೆಂಬರುಹು ಉಳ್ಳವಂಗಾದಡೆಯು ಅರುಹಿಕೊಡಲೆ
ಬೇಕು,
ಸಜ್ಜನರವರು ಗುರುದೇವಾ,
ಮಹಾಮಹಿಮ ಕಪಿಲಸಿದ್ಧಮಲ್ಲಿಕಾರ್ಜುನದೇವಾ./1148
ನಿರಾಕಾರದ ಮೂರ್ತಿಯ ಆಕಾರಕ್ಕೆ ತಂದೆಯಲ್ಲಾ ಬಸವಾ!
ಆಕಾರದ ಮೂರ್ತಿಯ ಹೃದಯಕಂಜದಲ್ಲಿ ವಾಸಗೊಂಡು
ತೋರಿದೆಯಲ್ಲಾ ಬಸವಾ!
ಈ ಆಕಾರಕ್ಕೆ ತಂದು, ಭಕ್ತಿಯನನುಗೈದು,
ಗುವಶದ್ಲ ಬೆಳೆದೆಯಲ್ಲಾ ಬಸವಾ?
ಇನ್ನಾಕಾರವ ನಿರಾಕಾರದ್ಲ ಅನುಗೊಳಿಸಬೇಕೆಂದು,
ಕಪಿಲಸಿದ್ಧಮಲ್ಲಿಕಾರ್ಜುನನ ಹೃದಯದಲ್ಲಿ
ಮರೆಯಾದೆಯಲ್ಲಾ ಬಸವಾ!/1149
ನಿರಾಕಾರಮೂರ್ತಿ ನೀನಾಕಾರಕ್ಕೆ ಬಂದೆ ಎನಲಾರೆ.
ಆಕಾರಮೂರ್ತಿ ನಿರಾಕಾರಕ್ಕೆ ಹೋಹುದೆಂದೆನಲಾರೆ.
ನಿಂತಡೆ ನೆರಳಿಲ್ಲ, ನೋಡಿದಡೆ ರೂಹಿಲ್ಲ;
ಮುಟ್ಟಿದಡೆ ಸ್ಪರ್ಶವಿಲ್ಲ, ನಡೆದಡೆ ಹೆಜ್ಜೆಯಿಲ್ಲ,
ನೀನೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನಲ್ಲೆನಬಹುದೆ?/1150
ನಿರ್ಗುಣ ಮಹಾದೇವನೆಂದ ಬಳಿಕ ಗುಣಹೀನನಲ್ಲವೆ?
ಸಗುಣನವನು ತನ್ನರಿವಿಗೆ;
ನಿರ್ಗುಣನವನು ಜಗಜ್ಜೀವಿಗಳಿಗೆ.
ಅರಿದಡೆ ನಿರ್ಗುಣನಲ್ಲ, ಸಗುಣ ಗುಣಾಗ್ರಗಣ್ಯ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1151
ನಿರ್ಮಲ ಕರ್ಮವದು ನವರಂಧ್ರಪ್ರಕ್ಷಾಲನಂ.
ನಿರ್ಮಲ ಕರ್ಮವದು ವಸ್ತ್ರನಿರ್ಮಲತ್ವಂ.
ನಿರ್ಮಲ ಕರ್ಮವದು ಕಪಿಲಸಿದ್ಧಮಲ್ಲಿಕಾರ್ಜುನನ ಮನಷ್ಟಂ./1152
ನಿರ್ಮಲ ಕರ್ಮವದು ಸದ್ಗ್ಕಗೆ ಸಾಧನ ನೋಡಾ.
ನಿರ್ಮಲ ಕರ್ಮವದು ಜ್ಞಾನಕ್ಕೆ ವರ್ಧನ ನೋಡಾ.
ನಿರ್ಮಲ ಕರ್ಮವದು ಕಪಿಲಸಿದ್ಧಮಲ್ಲಿಕಾರ್ಜುನನ
ಕೂಡುವ ಕೂಟ ನೋಡಾ./1153
ನಿರ್ವಾಣ ಪುರುಷರಿಗೆ ಕ್ಷುಧೆಯಾಗಿ ಕಾಡಿತ್ತು.
ಅಯ್ಯಾ, ಮಹಾಯೋಗಿಗಳಿಗಾಗಲೀ
ಕರ್ಮ ತಾತ್ಪರ್ಯಕ್ಕೆ ತನ್ನ ಮಯವಿತ್ತುದೈ
ಇನ್ನೇವೆನೈ ಕಪಿಲಸಿದ್ಧಮಲ್ಲಿಕಾರ್ಜುನ./1154
ನಿರ್ವಾಣ ಹೋಹರ ಕಂಡರೆ ಅವರನರಿವ ಕೇಳಿರಣ್ಣಾ.
ಕ್ರೋಧ-ಲೋಭ-ಹರುಷಾವೆರಸಿಹರ ಕಾಣೆವಣ್ಣಾ.
ಅಯ್ಯಾ, ಅನೀಸುವೆರಸಿ ನಿರ್ವಾಣಿಯೆಂದರೆ,
ಕಪಿಲಸಿದ್ಧಮಲ್ಲಿನಾಥಯ್ಯನು ನಗುವನಯ್ಯಾ./1155
ನಿರ್ವಿಷಯನಾಗಬೇಕೆಂದು ಹೇಳುವರಲ್ಲದೆ,
ಆದವರನೊಬ್ಬರನೂ ಕಾಣೆ ನೋಡಯ್ಯಾ,
ಆಗುವುದೆ, ಆಗುವುದೆ ಮಾಯಾಂಶಿಕಂಗೆ?
ಆಗುವುದು ನಿನ್ನಂಶಿಕಂಗಲ್ಲದೆ ಇನ್ನಾರಿಗಯ್ಯಾ,
ಕಪಿಲಸಿದ್ಧಮಲ್ಲಿನಾಥಾ./1156
ನಿಶ್ಚಲ ಶರಣರ ಮನೆಯಂಗಳದಲ್ಲಿ
ಅಷ್ಟಾಷಷ್ಟಿ ತೀರ್ಥಂಗಳು ನೆಲಸಿಪ್ಪವಯ್ಯಾ.
ನೀನು ಇನಿಸುವೆರಸಿ ಒಲಿದಲ್ಲಿ ನೆಲಸಿಪ್ಪವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ/1157
ನಿಷ್ಕಳಾತ್ಮನನು ಅರ್ಚಿಸೇನೆಂದೆಂಬೆ
ಆ ನಿಷ್ಕಳವನರ್ಚಿಸುವ ಪರಿ ಹೇಂಗೊ? ಎಲೆ ಅಯ್ಯಾ: ನೀನು ಸಕಲದೊಳಗೆ ಇದ್ದು ನಿಷ್ಕಳವ ಭೇದಿಸಿ
ಪೂರತನಾದೆನೆಂಬೆ.
ನೀನೀ ಬೀಡಲಿರದ್ದು
ಒಬ್ಬಳ ಸಂಗವನೈವರು ಮಾಡುವಲ್ಲಿ
ಕಾಬ ಪರಿಯ ಹೇಗೊ? ಗುರು ಕರಣವುಳ್ಳವಂಗಲ್ಲದೆ.
ಅನಾಹತಲೋಕದಲ್ಲಿ ವಿಶ್ರಮಿಸುವಲ್ಲಿ,
ಮೂಲ ತೊಡಗಿ ಸಾದಾಖ್ಯಪರಿಯಂತರ ಹೊಲಬುದಪ್ಪಿ ಬಪ್ಪಾಗ
ಕಂಡವರಾರೊ ನಿನ್ನ ಪರಿಯ, ಗುರು ಕರಣವುಳ್ಳವಂಗಲ್ಲದೆ.
ಆಧಾರ ಮೂಲ ಮಧ್ಯ ಅಪರಸ್ಥಾನ
ಹೃತ್ಸರೋಜದೊಳಿರ್ದ ಕನ್ನಿಕೆ
ಬೆಳಗುಗೊಡನಂ ಹೊತ್ತು ಸೂಸಯದೆ
ಮೂವತ್ತಾರು ಮನೆಯನು ನೋಡಿ
ಸಾವಿರಂಗ ಪ್ರತಿಷ್ಠೆಯ ಮಾಡಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ಇದ್ದೆಸೆಯನಿದ್ದೆಸೆಯಾದಳು./1158
ನೀ ಒಲಿವ ಮುಖ ತಿಳಿಯದು ನೋಡಯ್ಯಾ ಆರಿಂಗೆ-
ಬ್ರಾಹ್ಮಣನ ಮೃಷ್ಟಾನ್ನವ ಬಿಟ್ಟು, ಬೇಡನ ಮಾಂಸಕ್ಕೊಲಿದೆ ದೇವಾ;
ಸೌಂದರಚೋಳನ ನೈವೇದ್ಯವನೊಲ್ಲದೆ,
ಚೋಳಿಯಕ್ಕನ ಉಚ್ಛಿಷ್ಟಕ್ಕೆ ಮೈಗೊಟ್ಟೆ ದೇವಾ;
ಚೋಳನ ಭೋಜನವನೊಲ್ಲದೆ,
ಚೆನ್ನಯ್ಯನಕೂಡ ಜಾತಿಗೆಟ್ಟು ಮೈಗೊಟ್ಟು ಒಲಿದೆ ದೇವಾ;
ಒಲಿಸಿಹೆನೆಂದಡೆ ಅಸಾಧ್ಯ!
ಒಲಿಯನೆಂದಡೆ, ಒಂದರಗಳಿಗೆ ಶ್ವೇತಗೆ ಪದವ ಕೊಟ್ಟೇ ದೇವಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನದೇವಾ./1159
ನೀನಲ್ಲದವರ ಹಾರೆನಯ್ಯಾ ;
ನೀನಲ್ಲದವರ ಬೇಡೆನಯ್ಯಾ ;
ನೀನಲ್ಲದವರ ಮೂಗಳೆ[ಯೆ]ನಯ್ಯಾ ;
ನೀನಲ್ಲದವರ ಬೇಡಿದಡೆ ಹುರುಳಿಲ್ಲವಯ್ಯಾ,
ಕಪಿಲಮಲ್ಲಿಕಾರ್ಜುನಾ./1160
ನೀನು ತಾನು ಹಿಡಿಯದುದೆಲ್ಲವ ತೇಜದಲುಡಿಸಿ
ಹೆರರಿಗೆ ಭಾಜನ ಮಾಡಿದೆಯವ್ವ
ನೀನಿವನಲ್ಲಿದ್ದು ಉಣ್ಣದೆ ಹೋದೆ ಮಗಳೆ.
ಅವ್ವಾ, ಇಂತು ಬರಿದಾಗಿ ಬರಿದಾತನ ಕೂಡಿದೆ
ಕಪಿಲಸಿದ್ಧಮಲ್ಲಿನಾಥನನೆಯವ್ವಾ./1161
ನೀನು ಸಕಲದಲ್ಲಿ ಸ್ವಾತ್ಮಿಸುವ ಭೇದವ
ನೀನು ನಿಃಕಲದ್ಲ ಪ್ರವೇಶಿಸುವ ಭೇದವ
ನೀನು ಸಕಲ ನಿಃಕಲಾತ್ಮಕವಾಗಿ ತೊಳಗಿ ಬೆಳಗುತಿಪ್ಪ ಭೇದವ
ಅರಿಯಬಹುದೆ ಎಲ್ಲರಿಗೆ?
ಆನಂದಸ್ಥಾನದಲ್ಲಿ ಬೆಳಗುತ್ತಿಪ್ಪ ಅಕ್ಷರದ್ವಯದ ಭೇದವ
ಅನ್ಯರಿಗೆಂತರಿಯಬಹುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1162
ನೀನೆಂದವನೀಗ ಆರು ಬೇಯ ಕಳವ
ಆರೂಢವನು ಮಾಳ್ಪ ನಿನ್ನ ಪದಕೆ
ಆರೈದು ಎನ್ನುವನು ಓರಂತೆ ನೋಡದಡೆ
ಆನವಗೆ ಗುರಿಯಪ್ಪೆನೈ ಕಪಿಲಸಿದ್ಧಮಲ್ಲಿಕಾರ್ಜುನ/1163
ನೀರ ಕುಡಿದು ಅಗ್ನಿಯ ನುಂಗಿದವರ ಜಂಗಮವೆಂಬೆ.
ಊರ ನೋಡಿ ಸೇರದವರ ಜಂಗಮವೆಂದೆಂಬೆ.
ಹೆಣ್ಣ ಭೋಗಿಸಿ ಮುಕ್ಕಣ್ಣನ ಪಡೆದಾತನ ಜಂಗಮವೆಂಬೆನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1164
ನೀರ ಕ್ಷೀರದ ಸಂದುಗಳ ಹಂಸೆ ಬಿಚ್ಚಬಲ್ಲುದು, ನೋಡಯ್ಯಾ.
ದೇಹದ ಜೀವದ ಸಂದ ನೀವು ಬಿಚ್ಚಬಲ್ಲರಲ್ಲದೆ
ನಾನೆತ್ತ ಬಲ್ಲೆನಯ್ಯಾ?
ನೀವಿಕ್ಕಿದ ತೊಡಕ ಬಿಡಿಸಬಾರದು;
ನೀವು ಬಿಡಿಸಿದ ತೊಡಕನಿಕ್ಕಬಾರದು.
ಕಪಿಲಸಿದ್ಧಮಲ್ಲಿನಾಥಯ್ಯಾ,
ಎನ್ನ ಕಾಯದ ಜೀವದ ಹೂಗೆಯ ಬಿಡಿಸಾ, ನಿಮ್ಮ ಧರ್ಮ./1165
ನೀರ ಮೇಲೆ ನಡೆವವರನಂತರುಂಟು ;
ಖೇಚರರಾಗಿ ನಡೆವವರನಂತರುಂಟು.
ಕಪಿಲಸಿದ್ಧಮಲ್ಲಿಕಾರ್ಜುನಾ,
ಕಾಲಿಲ್ಲದೆ ನಡೆವವರೊರ್ವರಿಲ್ಲ./1166
ನೀರನೆರೆಯದೆ ಒಂದು ಮರನಾಯಿತ್ತು ನೋಡವ್ವಾ;
ಆ ಮರಕ್ಕೆ ಊಧ್ರ್ವಶಾಖೆ ಅಧಃಶಾಖೆ ಟೊಂಗೆಗಳಾದವು
ನೋಡವ್ವಾ;
ಮತ್ತನಂತ ಪರ್ಣಂಗಳಾದವು.
ಊಧ್ರ್ವಶಾಖೆಯ ನೋಡಹೋದಡೆ, ಅಧಃಶಾಖೆ ಕಾಣಬಾರದು;
ಅಧಃಶಾಖೆಯ ನೋಡಹೋದಡೆ, ಊಧ್ರ್ವಶಾಖೆ ಕಾಣಬಾರದು.
ಅದು ವಿಚಾರಿಸಿ ನೋಡಿದಡೆ ಒಂದೆಯಾಗಿಹುದು.
ಇದರ ಕುರುಹ ನೋಡಿ ನಿಬ್ಬೆರಗಾದೆ ನೋಡವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./1167
ನೀರಪಟ್ಟಣದೊಳಗೆ ನಿರವಯವ ತಂದಿರಿಸಿ
ತೋರಿದನು ಒಂದು ಸೂಚನೆ ಮಾತ್ರವ,
ಆನಂದ ಗುರುವಿನ ಆಜ್ಞೆ ಮೀರಿದಡೆ
ಗುರುವೆ ಪಾಸಿದನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./1168
ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ.
ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ.
ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ.
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1169
ನೀರಿಲ್ಲದಲ್ಲಿ ಜಳಕವ ಮಾಡಿ,
ತರುವಿಲ್ಲದಲ್ಲಿ ಪುಷ್ಪವನ್ನೆತ್ತಿ
ಕರವಿಲ್ಲದೆ ಪೂಜಿಸಬಲ್ಲಡೆ ಜಂಗಮವೆಂಬೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ,
ಆನು ತ್ರಿಕರಣಶುದ್ಧನಾಗಿ./1170
ನೀರು ನೀರನೆ ಕಡೆದು ನೀರೊಳಗೆ ಉತ್ಪತ್ಯ
ನಿರಾಲಂಬರೂಪವು.
ಅರಣ್ಯದೊಳಗೆ ಮತ್ತೆ ಓರಂತೆ ಇದ್ದಡೆ
ಕಾರಣವ ಹೇಳುವನು ಭಕ್ತಿರೂಪಾ.
ಮೂರು ತಾನೇಯಾಗಿ, ಆರರಲಿ ಅನುಕರಿಸಿ
ಆರಾರನೇ ಮೀರಿ ಗುರುಕರುಣದಾ
ತೋರುವ ಶಿವಭಕ್ತಿ ಮೀರಿಪ್ಪ ವೈರಾಗ್ಯ
ನೀರು ನಿರ್ಮಲ ವಜ್ರ ಕಪಿಲಸಿದ್ಧಮಲ್ಲಿಕಾರ್ಜುನಾ./1171
ನೀರೊಳಗೆ ಯಂತ್ರವನೆ ಹೂಡಿ
ನಿರಾಮಯವ ತುಂಬಿ,
ತುಂಬಿದ ನೀರೊಳಗೆ ಒಲೆಯ ಹೂಡಿ
ಅಡುಕಿ ಸುಡುವಿನಂಶವ
ನೀವು ನೋಡಲೊಡನೆ ಎಲ್ಲಾ ಉತ್ಪತ್ಯ
ಕಪಿಲಸಿದ್ಧಮಲ್ಲಿಕಾರ್ಜುನಾ./1172
ನೀಲಕಂಧರ ನಿನ್ನ ಶೂಲ ಮಸ್ತಕದಲ್ಲಿ
ತೋರಿಪ್ಪ ಬೆಟ್ಟವೆಂಟು,
ಹರಿದು ಹಬ್ಬಿತ್ತು
ನಿನ್ನಯ ನಾಮದ ಪರಿಣತೆಯ ಸುಧೆಯ ಬಳ್ಳಿ ಫಲವಾಯಿತು.
ಮೂರರಲ್ಲಿ ಮರಳಿ ಬಿತ್ತಿದಡಿಲ್ಲದಂತೆ
ಕುರುಹುಗೆಟ್ಟು ಹೋಯಿತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ
ನಿನ್ನ ನುಂಗಿದ ಫಲಕ್ಕೆ ಭವವಿಲ್ಲ ನೋಡಾ./1173
ನೀಲಕಂಧರಗಿರಿಯ ಮೇಪ್ಪ ನೀನಲ್ಲ.
ಆಲಸ್ಯವಿಲ್ಲದೆ ಅತಿಶಯದ
ಬಾಲ ಕನಸಿನ ಲೀಲೆಯಾಯಿತ್ತು ಭಕ್ತಿಯ
ಹೇಳುವಡೆ ಆರಿಗೆಯು ಉಪಮೆಯಿಲ್ಲ.
ಭಾಳನಯನದ ಮೇಲೆ ಬಾಲೆಯರ ಸಂಯೋಗ.
ಈರಾರು ಬೆಳಕವರ ಇಕ್ಕೆಲದಲ್ಲಿ.
ಸ್ಥೂಲ ಸೂಕ್ಷ ್ಮದಲ್ಲಿ ಮೇಪ್ಪ ಘನವದರ
ಈರೇಳು ಘಟಿಸುವ ಲೋಕಕ್ಕೆ
ದಿಕ್ಕರಿಗಳೆಂಟಾಗಿ ಬೆಟ್ಟವೆಂಟಾಗಿರ್ಪ
ಘನತರದ ನಿಜವ ಬಲ್ಲವರಾರು? ಹೊಲಬನರಿವವರಾರು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನಿಜಭಕ್ತಿಯ?/1174
ನೀಲಕಂಧರನೆಂಬಾತ ಬಾಲತ್ವದಲ್ಲಿ
ಭಾಮಿನಿಯ ಒಡಗೂಡಿ ಸಂದು ಸವೆದು,
ಇದು ಕ್ರೀ ಇದು ನಿಃಕ್ರೀ, ಇದು ಶುದ್ಧ ಇದು ಸಿದ್ಧ ಇದು
ಪ್ರಸಿದ್ಧ,
ಇದು ಭಾವ ಇದು ನಿರ್ಭಾವವೆಂದು ಅರುಪುವಾಗ
ಪಿಂಡಾಂಡಂಗಳಿಲ್ಲ; ಅಷ್ಟಮೂರ್ತಿ ಕೂಡಿದ ರುದ್ರನಿಲ್ಲ.
ಆನಂದವೆ ಒಡಲಾಗಿಪ್ಪ ಮಹಾತ್ಮನ ನಿಜವ ಕಂಡಾತ ಬಸವಣ್ಣ.
ಆ ಬಸವಣ್ಣನೆನಗರುಪಿದ ಗುಣದಿಂದ ಶುದ್ಧನಾದೆನು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನೆನ್ನ ಪರಮಾರಾಧ್ಯರು./1175
ನೀಲಬಿಂದುವಿನಲ್ಲಿ ಲೋಲುಪ್ತರೆಲ್ಲರೂ
ಆಲಸ್ಯವೇನವ್ವ ಅವನೆಡೆಗಳಲ್ಲಿ.
ಬಾಲಕನ ಕನಸಿನ ಮೇಲೆ ತಾನಾದೊಡೆ
ಆಲಸ್ಯವಿಲ್ಲವದು ಮುಂದೆ ತತ್ವಂಗಳ
ಎರಡು ಮೂರನು ಐದನಾಲ್ಕು
ಏಳನು ಎಂಟ ಏಕಮಾಡಿ ಕೂಡುವ
ಕಪಿಲಸಿದ್ಧಮಲ್ಲಿಕಾರ್ಜುನಾ./1176
ನೀಲಲೋಹಿತ ಗಣೇಶ್ವರಾಯ, ಕಾಲಲೋಹಿತ ಗಣೇಶ್ವರಾಯ.
ಕಪಾಲ ಮೂಲಾಧಾರ ಗಣೇಶ್ವರಾಯ, ಮಾರಹರ
ಗಣೇಶ್ವರಾಯ.ವೃಷಾಂಕವಾಹನ ಗಣೇಶ್ವರಾಯ, ಜಗದಂಬಾಸ್ವರೂಪ ಗಣೇಶ್ವರಾಯ.
ಕಾಲಕಂಠ ಗಣೇಶ್ವರಾಯ, ಪಾರ್ವತೀಧ್ಯಾನಾಸಕ್ತ ಗಣೇಶ್ವರಾಯ.
ಸೋಮವಿಭೂಷಣ ಗಣೇಶ್ವರಾಯ, ಕುಮಾರಪಿತ ಗಣೇಶ್ವರಾಯ.
ವೀರಭದ್ರ ಗಣೇಶ್ವರಾಯ, ವ್ಯಾಲಭೂಷಣ ಗಣೇಶ್ವರಾಯ.
ಶಾಂಭವಮುನೀಶ್ವರ ಗಣೇಶ್ವರಾಯ, ವೃಷಭಯೋಗೀಶ್ವರ
ಗಣೇಶ್ವರಾಯ.
ನಮೋ ನಮಃ ಶಂಕರ ಗಣೇಶ್ವರಾಯ,
ನಮೋ ನಮಃ ಕಪಿಲಸಿದ್ಧಮಲ್ಲಿಕಾರ್ಜುನಾಯ,
ಮಹಾದೇವಾಯ ನಮೋ ನಮಃ./1177
ನೀವಲ್ಲದರ ಹಾರೆನಯ್ಯಾ.
ನೀವಲ್ಲದರ ಬೇಡೆನಯ್ಯಾ.
ನೀವಲ್ಲದರ ಹೊಗಳೆನಯ್ಯಾ.
ನೀವಲ್ಲದರ ಮೊಗಳೆನಯ್ಯಾ,
ನೀವಲ್ಲದರ ಬೇಡಿದರೆ ಹುರುಳಿಲ್ಲವಯ್ಯಾ
ಎನ್ನ ಕಪಿಲಸಿದ್ಧಮಲ್ಲಿನಾಥಾ. ||/1178
ನೀವು ಮಹಿಮರು; ನಿಮ್ಮ ಮಹಿಮೆ ತಿಳಿಯದು ನೋಡಯ್ಯಾ.
ನಿಮ್ಮ ಸತ್ವವೆ ಬಸವಣ್ಣನು, ನಿಮ್ಮ ಜ್ಞಾನವೆ ಚೆನ್ನಬಸವಣ್ಣನು,
ನಿಮ್ಮ ರಾಣಿಯರೆ ಅಕ್ಕನಾಗಮ್ಮನು,
ನಿಮ್ಮ ಮಹತ್ವವೆ ಪ್ರಭುದೇವರು
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1179
ನುಡಿದ ನಡೆ ಸಮನಿಸಿತ್ತಯ್ಯಾ ಸಂಗನ ಬಸವಣ್ಣಂಗೆ.
ನುಡಿದ ನಡೆ ಸಮನಿಸಿತ್ತಯ್ಯಾ ಪ್ರಭುವಿಂಗೆ.
ನಡೆಸಿದ ನಡೆ ಸಮನಿಸದಯ್ಯಾ ನಿಮ್ಮಾತಂಗಲ್ಲದೆ ಆತಂಗೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1180
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು.
ಉತ್ತಮ ಮಧ್ಯಮ ಕನಿಷ್ಠವೆಂಬುವ
ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು.
ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು.
ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1181
ನುಡಿಯಬಹುದೆ ಅದ್ವೈತವನೊಂದುಕೋಟಿ ವೇಳೆ?
ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ?
ನುಡಿದಂತೆ ನಡೆವ, ನಡೆದಂತೆ ನುಡಿವ
ಸದ್ಭಕ್ತಿ ಸದಾಚಾಎಯುಕ್ತ ಮಹಾತ್ಮರ
ಪಾದವ ಹಿಡಿದು ಬದುಕಿಸಯ್ಯಾ, ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1182
ನುಡಿವಲ್ಲಿ ದೋಷವನಾರಿಸದೆ ಬಾಯಿಚ್ಛೆಗೆ ಬಂದಂತಾಡಿದಡೆ
ಅದು ಹೆಮ್ಮೆಯಲ್ಲದೆ ಸಹಜಜ್ಞಾನವಲ್ಲ.
ಅದೇನು ಕಾರಣವೆಂದಡೆ,
ಪಾಷಾಣದ ಮೂರ್ತಿ ಘನವೆಂದಡೆ ಅಗ್ನಿಯಿಂದ ಭಂಗ.
ಅಗ್ನಿ ಘನವೆಂದಡೆ ತೋಯದಿಂದ ಭಂಗ.
ತೋಯ ಘನವೆಂದಡೆ ಮಾರುತನಿಂದ ಭಂಗ.
ಮಾರುತ ಘನವೆಂದಡೆ ಬಯಲಿನಿಂದ ಭಂಗ.
ಬಯಲು ಘನವೆಂದಡೆ ಅಂತಃಕರಣದಿಂದ ಭಂಗ.
ಅಂತಪ್ಪಂತಃಕರಣ ಘನವೆಂದಡೆ ಮಾಯೆಯಿಂದ ಭಂಗ.
ಮಾಯೆ ಘನವೆಂದಡೆ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ
ಪರಬ್ರಹ್ಮದಿಂದ ಭಂಗ ಕೇಳಾ, ಮಡಿವಾಳ ತಂದೆ./1183
ನುಡಿಹಿಡಿದು ತಾಕರ್ಿಕರಂತೆ ತಕರ್ಿಸುವಾತ ನಾನಲ್ಲ.
ಆಡುವ ಮಾತಿಗೆ ಈಡ ಮಾಡುವ ನುಡಿಯಲ್ಲಿ ವಾಕ್ಪಟುತನವು
ನಿಜವಲ್ಲ.
ನಡೆಯುವ ನಂದಿ ಕುಂಟುವುದುಂಟು,
ಹೋಗುವ ಮನುಜ ಎಡಹುವುದುಂಟು,
ಮಾತಾಡುವ ಶರಣ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ತಪ್ಪಿದಡೆ ತಪ್ಪಲ್ಲ ಕೇಳಾ ಪ್ರಭುವೆ./1184
ನೆನಸುವೆ ಮರಸುವೆ ನೀನೆನ್ನ ತಂದೆ,
ಎನ್ನ ಗುಣದೋಷ ನಿಮ್ಮದು.
ಕೇಳಯ್ಯಾ ಎನ್ನ ಬಿನ್ನಪವ: ನಿಮ್ಮ ನೆನೆವವ ನಾನಲ್ಲ ಕಂಡಯ್ಯಾ;
ನಿಮ್ಮಂದ ನಿಮ್ಮ ನೆನೆವನು, ಕೃಪೆಮಾಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ./1185
ನೆನಹಿನ ನಲ್ಲನು ಮನೆಗೆ ಬಂದಡೆ
ಮನದಲ್ಲಿ ಗುಡಿಗಟ್ಟುವೆನವ್ವಾ.
ತೋರಣ ತೋರಣ ಮಾಮರ ಮಾಮರ ತೋರಣಗಟ್ಟುವೆನವ್ವಾ.
ಕಾಮಸಂಗವಳಿದು ನಿಷ್ಕಾಮಸಂಗಕ್ಕೆಳಸುವೆನವ್ವಾ
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವೆನವ್ವಾ./1186
ನೆನಹಿನ ಮನೆಯೊಳಗೆ ಆನಿದ್ದೇನೆಂದಡೆ
ಮನವು ಮತ್ತನ್ಯಕ್ಕೆ ಹರಿವುದಯ್ಯಾ.
ಮನಕ್ಕಿನ್ನೇವೆನೇವೆ?
ಎನ್ನ ಮನದೊಡೆಯ ಮಹಾದಾನಿ
ನಿನ್ನ ಪಾದಂಗಳನುರೆ ಮಚ್ಚಿಸಿ
ಎನ್ನ ಶುದ್ಧಾತ್ಮನ ಮಾಡಿ ಕರುಣಿಸಯ್ಯಾ ಪರಮಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ/1187
ನೆನಹಿನ ಸಂಯೋಗದಾ ನೆಲೆಮನೆಯಲ್ಲಿಪ್ಪೆ ಕಂಡವ್ವಾ.
ಚಲನೆಯಿಲ್ಲದೆ ಕೂಡವ್ವಾ
ಅವ್ವಾ ನೀನು ಚಲನೆಯಿಲ್ಲದೆ ಕೂಡಾ.
ಚಿತ್ತ ವಿಚಿತ್ತವಾದಡೆ ಮತ್ತೆ ಒಯನವ್ವಾ, ಕಪಿಲಸಿದ್ಧಮಲ್ಲಿನಾಥಯ್ಯ./1188
ನೆನಹು ಮುಕ್ತಾಫಳವಾಗಿ ತರುಣಿ ನಿನ್ನ ಗಳದಲ್ಲಿ
ಚಲನೆಯಿಲ್ಲದೆ ದಾಯವಾದವೊ ಅವ್ವಾ.
ಆ ಮಧ್ಯಬಿಂದುವಿನೊಳು
ಭೇದಿಸಿದ ನಾದ ಕಳೆಯ ದಾಯವ ನೋಡಾ,
ದಾಯಂ ಮಣಿಯ ಆಭರಣದಲ್ಲಿ ಆಬೆ ಒಪ್ಪಿದಳಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ./1189
ನೆನೆದಡಾಗದು ಸಾಧಿಸದನ್ನಕ್ಕ ;
ಸಾಧಿಸಿದಡಾಗದು ತಿಳಿಯದನ್ನಕ್ಕ ;
ತಿಳಿಯದಡಾಗದು ಎಳೆ ಭಾಲಚಂದ್ರಧರ
ಕಪಿಲಸಿದ್ಧಮಲ್ಲಿಕಾರ್ಜುನನ ಅಮಳ ಕೈವಲ್ಯಪದವು./1190
ನೆನೆವರ ಮನದೊಳಗೆ ಮನೆಗಟ್ಟಿಯಿಪ್ಪೆ ನೀನಯ್ಯಾ.
ನಂಬಿದ ಶರಣರಿಗೊಲಿದು ಕೈಲಾಸವನೊಪ್ಪೆ ನೀನಯ್ಯಾ.
ನಿಮ್ಮ ನಂಬಲೊಡನೆ ಕೈಲಾಸದಲೊಡಬೀಡಾಗಿಪ್ಪೆಯಯ್ಯಾ,
ಎನ್ನ ಕಪಿಲಸಿದ್ಧಮಲ್ಲೇಶ್ವರದೇವ./1191
ನೆರೆದೆನು ನೆರೆದೆನು ಎಂಬಡೆ ನಾನೇನು ಎರವೆ?
ಶ್ರೀಗುರುಸ್ವಾಮಿ ಎನ್ನ ನಿನ್ನ ನಿನ್ನನೆನ್ನ ಕರಸ್ಥಲದಲ್ಲಿ ಸ್ಥಾಪ್ಯಗೊಳಿಸಿದ
ಬಳಿಕ,
ಮಹಾಜ್ಯೋತಿರ್ಮಯದಲ್ಲಿ ತಮವುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಪ್ರಸಾದವನೊಡಗೂಡಿದ
ಬಳಿಕ,
ಬೇರೆ ನಾನೊಂದು ನದಿಯೆನಲುಂಟೆ? ಪ್ರಭುವೆ/1192
ನೆರೆಮನೆಯ ಕೇರಿಯೊಳಗೆ ಗುರುಕರುಣ ಪಾತ್ರೆಯ
ಹರುಷದಿಂದ ಭಿಕ್ಷವ ತಂದೆ ಅವ್ವಾ,
ಕರಣ ಶುದ್ಧಮಾಡಿ ಉಣ್ಣ ಬಾರಾ.
ನೆನಹಿನ ಗುಣದಲ್ಲಿ ಕರುಣ ಕಾನನದಲ್ಲಿ
ತೆರಹುಗೆಟ್ಟು ಇದ್ದೆನು ಕಂಡಾ.
ಕರುಣಾಕರನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ನೆನಹಿನಲ್ಲಿ ಯವಾದೆನು./1193
ನೆಲದೊಳಗೆ ಭವಿಸಿತ್ತು ಹಲವು ಪರಿಯ ಬಣ್ಣ
ಉಲಿದಾಡುವುದು ದಾಯದಾಯದೊಳಗೆ
ಸ್ಥೂಲ ಮೂರಾಕೃತಿಯ ಮೇಲೆ ಸೂಕ್ಷ ್ಮ ನಿಂದು
ಆ ಸ್ಥೂಲಕ್ಕೆ ಸೂಕ್ಷ ್ಮಕ್ಕೆ ಅಂತ ತಾನೆ.
ಆರೂಢದಾ ಘನವ ಆರು ಬಲ್ಲವರಯ್ಯಾ,
ಆಲಯವ ಮೀರಿಪ್ಪ ಸಂಬಂಧಿಯಾ.
ಭಾಳದಿ ಮೇಲಿಪ್ಪ ಕಾರಣದ ಸನುಮತ್ಯ
ಆರಾರರಿಂದತ್ತ ಆದನಾ ತಾ ತೋರಿಪ್ಪ
ನಿಸ್ಸೀಮ ಆನಂದ ಕಪಿಲಸಿದ್ಧಮಲ್ಲಿಕಾರ್ಜುನ./1194
ನೆಲೆಗೊಳ್ಳದು ಎಂದು ಬಿಡಬಾರದಯ್ಯಾ.
ನೆಲೆಯದು ನೆಲೆಯದು ಎಂದು ಅನುಭವಿಸಬೇಕಯ್ಯಾ.
ನೆಲೆಯಿಲ್ಲದದು ನೆಲೆಯಲ್ಲಿಹುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1195
ನೆಲ್ಲ ಗಿಡುವಿನಮರೆಯಲೊಂದು ಹುಲ್ಲು ಗಿಡವಾನಯ್ಯಾ.
ನಿಮ್ಮ ಚರಣವೆ ಶರಣು ಶರಣೆಂದು
ನಾನು ಧನ್ಯನಾದೆನು ನೋಡಯ್ಯಾ.
ನಿಮ್ಮ ನೆನೆದವರೆಲ್ಲ ಧನ್ಯರು,
ಕಪಿಲಸಿದ್ಧಮಲ್ಲಿನಾಥಯ್ಯ./1196
ನೇಮಾಕ್ಷರದ ರೀತಿ ನಾಮ ಪ್ರಸಾದದ
ಸಾಮ ಮಂಡಲದಲ್ಲಿ ಭವಿಸ್ಕುಹುದು,
ನಾಮ ನಿರ್ನಾಮ ನಿತ್ಯದ ನಿಜದ ಐಕ್ಯದೊಳು
ಮೂಲ ಲಿಂಗತ್ರಯವು ಕಪಿಲಸಿದ್ಧಮಲ್ಲಿಕಾರ್ಜುನಾ./1197
ನೈರುತಿಯೆಂಬಳು ಜಲದ ಮನೆಯ ಸ್ಥಳದಲ್ಲಿ ಇಪ್ಪಳು
ಬಾಸಣಿಸಿದ ಶಿಖರದ ಮೇಲೆ.
ಧರಣಿಯ ಮೂರುತಿ ತನಗೆ ನೋಡಾ!
ವಿಕಟದ ವೀರೆಯರಿಬ್ಬರಿಗೆ ವಿಕಟದ ಗಂಡ,
ಕಪಿಲಸಿದ್ಧಮಲ್ಲಿನಾಥಯ್ಯ./1198
ನೋಟಕ್ಕೆ ನೋಯವಾಯಿತ್ತು ನಿಮ್ಮ ಪ್ರಸಾದ;
ಶಬ್ದಕ್ಕೆ ಶಬ್ದವಾಯಿತ್ತು ನಿಮ್ಮ ಪ್ರಸಾದ;
ಸ್ಪರುಷನಕ್ಕೆ ಸ್ಪರುಷನವಾಯಿತ್ತು ನಿಮ್ಮ ಪ್ರಸಾದ;
ಗಂಧಕ್ಕೆ ಗಂಧವಾಯಿತ್ತು ನಿಮ್ಮ ಪ್ರಸಾದ;
ರಸಕ್ಕೆ ರಸವಾಯಿತ್ತು ನಿಮ್ಮ ಪ್ರಸಾದ;
ಪರಿಣಾಮಕ್ಕೆ ಪರಿಣಾಮವಾಯಿತ್ತು ನಿಮ್ಮ ಪ್ರಸಾದ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಚೆನ್ನಬಸವಣ್ಣನ ಧರ್ಮವಯ್ಯಾ./1199
ನೋಟದ ಬೆರಗು ನೀನೆಯಯ್ಯಾ;
ಕೂಟದ ಕೂಟ ನೀನೆಯಯ್ಯಾ,
ಕಪಿಲಸಿದ್ಧಮ್ಲನಾಥಾ./1200
ನೋಟದ ಭಕ್ತಿ ಬಸವನಿಂದಾಯಿತ್ತು;
ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ.
ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ?
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1201
ನೋಟವೆ ಕೂಟವಾಗಿ
ಕೂಟವೆ ಜೀವನವಾಗಿ ನಿದರ್ಾಟಿಸುವ
ಗಂಡನೆನಗೆಂದಪ್ಪನಯ್ಯಾ, ಎಂದಪ್ಪನಯ್ಯಾ?
ಅಪ್ಪು[ವೆ] ಗುರುಕರುಣಂದ
ಕಪಿಲಸಿದ್ಧಮಲ್ಲಿಕಾರ್ಜುನ./1202
ನೋಡಯ್ಯಾ, ನೋಡಯ್ಯಾ, ಲಿಂಗದ ಮಹಿಮೆಯ;
ತಾನು ಸೋಂಕಿ ಎನ್ನ ಕಳೆದ, ಎನ್ನ ಸೋಂಕಿ ತಾನೆ ಉಳಿದ.
ನೋಡಯ್ಯಾ, ನೋಡಯ್ಯಾ, ಲಿಂಗದ ಮಹಿಮೆಯ: ತಾನೆಂಬುದನುಳುಹದೆ ನಿಶ್ಶೂನ್ಯವಾಗಿ ನಿಂದ ನೋಡಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1203
ನೋಡವ್ವಾ ನೋಡವ್ವಾ ಇದರಂದವ: ತಾ ಬಂದಡೆನ್ನ ಕರ ಒಂದು ತಾಯಾಯಿತ್ತು.
ಮತ್ತೊಂದು ಕರ ತಂದೆಯಾಯಿತ್ತು.
ಅವರವರು ಕೂಡಿದಲ್ಲಿ ಶಬ್ದವಿಲ್ಲದ ಕೂಸು ಹುಟ್ಟಿತ್ತು.
ಆ ಕೂಸು ಎನ್ನಟ್ಟಿ ಬಿಟ್ಟಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1204
ನೋಡಿ ನೋಡಿ ಕಂದದಿದ್ದಡೆ,
ಕೂಡಿ ಕೂಡಿ ಲೀಯವಾಗದಿದ್ದಡೆ,
ಆ ನೋಟ ಕೂಟ ಏತಕ್ಕೆ ಹೇಳಾ, ಎಲೆ ಅವ್ವಾ?
ಕಪಿಲಸಿದ್ಧಮಲ್ಲಿಕಾರ್ಜುನಾ,
ನಿನ್ನ ಕೂಡಿ ನೀನಾಗದಿದ್ದಡೆ,
ಆ ನೋಟ ಕೂಟ ಏತಕ್ಕೆ ಹೇಳಾ ಅವ್ವಾ?/1205
ನೋಡಿದಡೆ ಮೂರ್ತಿಯಾಗಿದೆ
ಹಿಡಿದಡೆ ಬಯಲಾಗಿದೆ
ನುಡಿದಡೆ ಬ್ರಹ್ಮಬಾಯದೆಗೆದಂತಿದೆ,
ಶಿವ ಶಿವ! ಈ ಸುಳುಹು ಎನ್ನ ಪರಮಗುರು
ಕಪಿಲಸಿದ್ಧಮಲ್ಲಿನಾಥನಲ್ಲದೆ ಮತ್ತೊಂದಾಗಲರಿಯದು./1206
ನೋಡುವ ನರರಿಗೆ ನಿನ್ನ ರೂಹು ತೋರದಯ್ಯಾ.
ನುಡಿಸುವ ನರರಿಗೆ ನೀ ನುಡಿದುದು ಮಾಡುವುದಲ್ಲಯ್ಯಾ.
ಹಾಡುವ ನರರಿಗೆ ನೀ ಮನವನೀಡುಮಾಡುವನಲ್ಲಯ್ಯಾ.
ತೋರುವ ತೋರ್ಪ, ನುಡಿವ ನುಡಿಸುವ ಪ್ರಮಥರ
ಏಕೆ ಒಳಕೊಂಡೆ ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1207
ನೋಡುವುದದು, ನೋಡಲೇಬೇಕು;
ಮಾಡುವುದದು, ಮಾಡಲೇಬೇಕು,
ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1208
ನ್ಯಾಯಿ ತಾನಾದಡೆ ಅನ್ಯಾಯ ಮಾಡಬಾರದು;
ಲಿಂಗ ತಾನಾದಡೆ ಅಂಗಿ ತಾನಾಗಬಾರದು;
ಭೋಗಿ ತಾನಾದಡೆ ತಾ ಯೋಗಿಯಾಗಬಾರದು,
ಕಪಿಲಸಿದ್ಧಮಲ್ಲಿಕಾರ್ಜುನಾ./1209
ಪಂಚಬ್ರಹ್ಮವನೆನಗೆ ವಂಚಿಸದೆ ತೋರಿರಿ ಚೆನ್ನಬಸವಣ್ಣಾ.
ಪಂಚಾಕ್ಷರದ ಭೇದವನರುಹಿರಿ ಚೆನ್ನಬಸವಣ್ಣಾ.
ಪಂಚಭೂತಾತ್ಮವನು ಕಳೆದು ಶಿವಲಿಂಗವನು
ಪಂಚಮದೊಳಗಿರಿಸಿದೈ ಚೆನ್ನಬಸವಣ್ಣ ಗುರುವೆ,
ಕಪಿಲಸಿದ್ಧಮಲ್ಲಿನಾಥಾ./1210
ಪಂಚಮುಖವರ್ಣಂಗಳವು ಪಂಚಮುಖನಂಘ್ರಿರೇಣುವಿಗೆ
ಯೋಗ್ಯ ನೋಡಾ.
ಷಣ್ಮುಖವರ್ಣಂಗಳವು ಅಷ್ಟಮೂರ್ತಿಯ
ಪದಪದ್ಮದೈಕ್ಯಕ್ಕೆ ಯೋಗ್ಯ ನೋಡಾ.
ಷಡ್ಚಕ್ರವರ್ಣಂಗಳವು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ
ನೋಡಾ,
ಎಂದರುಹಿದ ಗುರು ಚೆನ್ನಬಸವಣ್ಣನ ಪಾದವ ನೆನೆನೆನೆದು
ಮುಕ್ತನಾದೆ ನೋಡಾ./1211
ಪಂಚವರ್ಣದ ಗಿಳಿಯೊಂದು ಪ್ರಪಂಚರಚನೆಗೆ ಬಂದು.
`ಭವ ಬ್ರಹ್ಮ, ಭವ ಬ್ರಹ್ಮ’ ಎಂಬುತ್ತಿದೆ,
ಆ ಗಿಳಿಯು ಮೂರು ಮನೆಯ ಪಂಜರದಲ್ಲಿ ಕೂತು,
`ಕುರುಷ್ವ ಲಿಂಗಪೂಜಾಂ, ಲಿಂಗಪೂಜಾಂ’ ಎಂಬುತ್ತಿದೆ.
ಆ ಗಿಳಿಯ ವಚನವ ಕೇಳಿದಾತಂಗೆ ಸುಖ, ಗಿಳಿಗೆ ಸುಖ;
ಕೇಳದವಂಗೆ ಸುಖವಿಲ್ಲ, ಹೇಳಿದವಂಗೆಯು ಸುಖವಿಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1212
ಪಂಚಾಕ್ಷರವೆಂಬುದದು ಪಂಚಮುಖಪ್ರಸಾದ
ನೋಡಾ, ಬಸವಂಗೆ.
ಪಂಚಾಕ್ಷರಮಂತ್ರವೆಂಬುದು ಮಹಾದೇವಿಯ ಪ್ರಸನ್ನತೆ
ನೋಡಾ, ಚೆನ್ನಬಸವಂಗೆ.
ಪಂಚಾಕ್ಷರಮಂತ್ರವೆಂಬುದು ಪಂಚಾವಸ್ಥ್ಕಾತೀತ
ಪರವಸ್ತುವಿನಲ್ಲಿ ಮೇಳನ ನೋಡಾ, ಪ್ರಭುದೇವಂಗೆ.
ಪಂಚಾಕ್ಷರವೆಂಬುದು ಪಂಚವರ್ಷದ ಕುಮಾರಾವಸ್ಥೆ
ನೋಡಾ, ಸನತ್ಕುಮಾರಂಗೆ, ಕಪಿಲಸಿದ್ಧಮಲ್ಲಿಕಾರ್ಜುನಾ./1213
ಪಂಚಾಕ್ಷರವೆಂಬುದು ಶಿವನ ಪಂಚಾವಸ್ಥೆ ನೋಡಾ,
ಪಂಚಾಕ್ಷರವೆಂಬುದು ಪಂಚಾಚಾರಫಲದಾಯಕ ನೋಡಾ.
ಪಂಚಾಕ್ಷರವೆಂಬುದು ಪಂಚಮುಖ ಪಂಚಮುಖಿ ಮಹಾದೇವಿ
ಕಪಿಲಸಿದ್ಧಮಲ್ಲಿಕಾರ್ಜುನನ ಪ್ರಸನ್ನತೆ ನೋಡಾ,
ಎಂದು ತಿಳುಹಿದ ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ
ಎಂಬೆ,
ನೋಡಾ, ಮಡಿವಾಳ ಮಾಚಯಾ/1214
ಪಂಚೀಕರಣ ಕ್ರಿಯದಿಂದಲ್ಲದೆ ದೇಹದಿಂದರಿಯಬಾರದು.
ಪಂಚೇಂದ್ರಿಯ ಪಂಚಮುಖಂದಲ್ಲದೆ ಸ್ವತಂತ್ರ
ತಿಳಿಯಬಾರದು ನೋಡಾ, ಕಲ್ಲಯ್ಯಾ.್ಙ/1215
ಪಂಚೇಂದ್ರಿಯವೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುವಂತೆ ಮಾಡಯ್ಯಾ.
ಮೀಸಲು ಬೀಸರವೋಗದ ಮುನ್ನ
ನೀ ನಿತ್ಯವಾಗಿ ಪ್ರಯೋಗಿಸಯ್ಯಾ.
ಎನ್ನಾಸುರದ ಸ್ನೇಹವಿಂಗಿಹೋಗದ ಮುನ್ನ ಈಶನ ನೀ ಕೂಡಿಕೊಳ್ಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1216
ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು
ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು
ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ.
ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ
ನೀರಾಟ ನಿಂದು ನೆಲೆಗೊಂಡನಯ್ಯ ನಿಮ್ಮ ಶರಣ
ಚೆನ್ನಬಸವಣ್ಣನು.
ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ./1217
ಪಟ್ಟಣವೈದು ವಳೆಯ ಹದಿನಾಲ್ಕು
ಅಗಳೆ ಕೆಸರು ಘಾತ ಗಾಜರು ಮೂವರು.
ಇಪ್ಪತ್ತೈದು ಮಂದಿ ತಳವಾರರು
ಸಮಗೂಡದೆ ಹೋರುತ್ತೈದಾರೆ.
ಗಾಜರು ಮೂವರು ಒಬ್ಬರಾಗಿ
ಕೋಟೆ ಬಿದ್ದು ಕೆಸರರತು
ಇಪ್ಪತ್ತೈದು ಮಂದಿ ತಳವಾರರ
ಮೂಲ ನಾಶವಂ ಮಾಡಿದರೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಕಟ್ಟುವೆ ಸ್ಥಿರಪಟ್ಟ/1218
ಪಡೆವೆನೆಂಬ ದುಃಖದಿಂದ ಹಡೆದಡೆ
ಕೈಕೊಂಬುದು ದುಃಖಕ್ಕೆಡೆಯಿಲ್ಲದೆ ಕಡು ದುಃಖವಪ್ಪುದು.
ಈ ದುಃಖವ ಎಂದಿಗೆ ನೀಗಿ
ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ
ಕಪಿಲಸಿದ್ಧಮಲ್ಲಿಕಾರ್ಜುನಾ./1219
ಪತ್ರೆಯ ತಿಂದಾಡು ಮುಕ್ತವಾದುದೆಂಬುದ
ಬಲ್ಲಡೆ ಹೇಳಿರಯ್ಯಾ.
ಲಿಂಗವ ಪೂಜಿಸಿದ ವರ್ಣಿಕ ಲಿಂಗವಾದನೆಂಬುದ ಬಲ್ಲಡೆ
ಹೇಳಿರಯ್ಯಾ.
ಜಂಗಮವ ಸಂತೃಪ್ತಿ ಬಡಿಸಿದ ಭಕ್ತ ಭವವಿರಹಿತನಾದುದ
ಬಲ್ಲಡೆ ಹೇಳಿರಯ್ಯಾ.
ಇವೆಲ್ಲ ಚತುರ್ವಿಧ ಪದಕ್ಕೆ ಒಳಗು!
ತನ್ನ ತಾ ತಿಳಿದ ವೀರಶೈವ ಭವಕ್ಕೆ ಬಂದನೆಂಬ ದ್ವಿರುಕ್ತಿಯನು
ಬಲ್ಲಡೆ ಹೇಳಿರಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ./1220
ಪತ್ರೆಯ ನೇಮದವರು ಒಂದು ಕೋಟಿ.
ಲಿಂಗಾರ್ಚನೆಯ ನೇಮದವರು ಒಂದು ಕೋಟಿ.
ಜಂಗಮ ತೃಪ್ತಿಯವರು ಒಂದು ಕೋಟಿ.
ತನ್ನ ತಾ ತಿಳಿಯುವ ನೇಮದವರು ಒಬ್ಬರೂ ಇಲ್ಲವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1221
ಪತ್ರೆಯ ನೇಮದವರು ನೋಡಯ್ಯಾ ಪಶು ಆಡುಗಳು.
ಲಿಂಗಾರ್ಚನೆಯ ನೇಮದವರು ನೋಡಯ್ಯಾ ಚತುರ್ವರ್ಣದವರು.
ಜಂಗಮ ಸಂತೃಪ್ತಿಯ ನೇಮದವರು ನೋಡಯ್ಯಾ ಭಕ್ತರು.
ತನ್ನ ತಾ ತಿಳಿದ ನೇಮದವರು ನೋಡಯ್ಯಾ ವೀರಶೈವಾಗ್ರಗಣ್ಯರು,
ಕಪಿಲಸಿದ್ಧಮಲ್ಲಿಕಾರ್ಜುನಾ./1222
ಪದ ಫಲ ಭವಕೆ ತಾರರಯ್ಯ ನಿನ್ನ ಧರ್ಮ.
ಪದದಿಂದ ಫಲದಿಂದ ಭವ,
ಆ ಭವದಿಂದ ನರಕ.
ಇಂತಪ್ಪವನೆನಗೆ ತೋರರಯ್ಯ ನಿಮ್ಮ ಧರ್ಮ.
ಇಂತಪ್ಪವನೆನ್ನವರಿಗೆಯೂ ತೋರದಿರಯ್ಯಾ
ನಾನೂ ಎನ್ನವರೂ ಕೂಡಿ ನಿನ್ನ ಬೇಡಿಕೊಂಬೆವಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ./1223
ಪದವ ಬಯಸರು ಅವರು ಫಲವ ಬಯಸರು ಅವರು
ಹದುಳದಿಂದಿಪ್ಪರೈ ಫಲಪದವು ಹೊದ್ದದೆ.
ಶಶಿಧರನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಸಹಲೋಕವೆ ಅವರು ಇದ್ದ ಲೋಕ./1224
ಪರತರವ ಸಾಧಿಸುವಡೆ ಪ್ರಪಂಚದ ವಿಷಯ ಅಳಿದಿರಬೇಕು.
ರಾಜ್ಯವ ಸಾಧಿಸುವಡೆ ಪ್ರಾಣದಾಸೆಯ ಮರೆದಿರಬೇಕು.
ವಿದ್ಯೆಯ ಸಾಧಿಸುವಡೆ ಅನ್ಯ ಆಸೆಯ ಮರೆದಿರಬೇಕು.
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವಡೆ
ಸಂಶಯವಳಿದು ನಿಶ್ಚಿಂತನಾಗಬೇಕು./1225
ಪರಮಪದದಲ್ಲಿ ಅರಿದಪ್ಪ ಆಳಾಪವ
ಅಜಲೋಕದಲ್ಲಿ ಮಾಡುವೆ.
ಎಲೆ ಭ್ರಮರಾ, ಬಲ್ಲಾ ಅಯ್ಯನ ಸುದ್ದಿಯ?
ಅಯ್ಯ ಎದೆಗೆ ಚರ್ಮವಂ ಹೊದೆದು ಶುದ್ಧ ಧವಳಿತವೆಂಬ
ಮನೆಯಲ್ಲಿ
ಕಾಮ್ಯಲಂಪಟಿಯ ಸಂಗವ ಮಾಡುವಾಗ ಬಲ್ಲಾ.
ಉರುತರ ದಿವ್ಯಜ್ಞಾನ ಪ್ರವೇಶಿಸುವಾಗ
ಆ ಕಾಮ್ಯಲಂಪಟಿ ಅಯ್ಯನೊಳು ಸಂದು ಸವದು
ಒಂದಾದುದ ಬಲ್ಲಾ.
ನಿತ್ಯಗುರು ನಿತ್ಯಲಿಂಗ ನಿತ್ಯಜಂಗಮವಲ್ಲದೆ
ಅನಿತ್ಯನೆಂಬವರಿಗೆ ಅಪ್ಪುದೆ ಭಕ್ತಿ?
ಕಪಿಲಸಿದ್ಧ ಮ್ಲಕಾರ್ಜುನಾ./1226
ಪರರಾಣಿಯರ ನೋಡುವಲ್ಲಿ, ಅಂಧನಾಗಿಪ್ಪ ನೋಡಾ ಜಂಗಮನು.
ಪರಧನವ ಕಂಡಲ್ಲಿ, ಹುಲಿಯ ಕಂಡು ಹುಲ್ಲೆಯಂತೆ
ಭೀತಿಬಡುವ ನೋಡಾ ಜಂಗಮನು.
ದುರ್ನರರ ಸಂಭಾಷಣೆಯ ಕೇಳುವಲ್ಲಿ
ಅ್ಕಮೂರ್ಖನಾಗಿಪ್ಪ ನೋಡಾ ಜಂಗಮನು.
ದುಷ್ಕರ್ಮಪಥದೊಳರಸುವಲ್ಲಿ, ಕಡುಜಡ ಹೆಳವ ನೋಡಾ ಜಂಗಮನು.ಅಕ್ಷಾಂಗವಿಷಯಗಳೊಳು, ನಿಷ್ಕರುಣಿಯಾಗಿಪ್ಪ ನೋಡಾ
ಜಂಗಮನು.
ಶಿವನಿಂದಕರ ಸ್ವರಗೇಳುವಲ್ಲಿ, ಬಧಿರನಾಗಿಪ್ಪ ನೋಡಾ ಜಂಗಮನು.
ದುರಾತ್ಮರಿಗೆ ಜ್ಞಾನದ್ರವ್ಯ ಕೊಡುವಲ್ಲಿ, ಲೋಭಿಯಾಗಿಪ್ಪ
ನೋಡಾ ಜಂಗಮನು, ಕಪಿಲಸಿದ್ಧಮಲ್ಲಿಕಾರ್ಜುನನು/1227
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ
ಬ್ರಹ್ಮವನರಿದೆನೆಂಬ ಯೋಗಿ ಕೇಳಾ.
ಅದು ಸಗುಣದಲ್ಲಿ ತಾತ್ಪರ್ಯ
ಅದು ನಿಷ್ಕಳದಲ್ಲಿ ನಿತ್ಯ
ಅರಿದೆನೆಂಬ ಯೋಗಿ ಕೇಳಾ.
ಅದು ಅನಾಹತದಲ್ಲಿ ಆನಂದ,
ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ
ಅದು ಪದ ನಾಲ್ಕು ಮೀರಿದ ಮಹಾಮತ.
ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು,
ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ,
ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ
ತಾನೆ.
ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ
ಮದದ ಮಾತ್ಸರ್ಯದ ಬಣ್ಣ ಹಲವರಿದ
ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ.
ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ,
ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋಧಿ,
ಐದರಲ್ಲಿ ಆನಂದ, ಆರರಲ್ಲಿ ತಾನೆ,
ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು
ಮೂವತ್ತಾರು ವೃಕ್ಷಂಗಳ ಮೇಲೆ
ಹಣ್ಣೊಂದೆ ಆಯಿತ್ತು ಕಾಣಾ.
ಆ ಹಣ್ಣು ಹಣಿತು, ತೊಟ್ಟುಬಿಟ್ಟು
ನಿರ್ಮಳ ಜ್ಞಾನಾಮೃತಂ ತುಂಬಿ
ಭೂಮಿಯ ಮೇಲೆ ಬಿದ್ದಿತು.
ಆ ಬಿದ್ದ ಭೂಮಿ ಪರಲೋಕ.
ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ.
ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ
ಆ ಲೋಕದಲ್ಲಿರಲಿಲ್ಲ.
ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು
ನಿತ್ಯವು ಸೇವಿಸಿ ಸತ್ಯಮುಕ್ತನಾಗಿ
ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು
ತಾನು ಕಾಂಕ್ಷೆಗೆ ಹೊರಗಾಗಿ
ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ
ನಿತ್ಯಸಂಗಮಕ್ಕೆ ಸಂಯೋಗವಾಗಿ
ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ
ಅನಾಹತ ಮೂಲಗುರುವಾಗಿ,
ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ./1228
ಪರಶಕ್ತಿಯಾದಿ ಐದನೊಡಗೂಡಿದ
ಪರತತ್ವದ ಪ್ರಮಾಣವನರಿತೆನೆಂಬ ಯೋಗಿ ಕೇಳಾ,
ನಿನ್ನ ಚಿತ್ತ ಬುದ್ಧಿ ಮನ ಅಹಂಕಾರವೆಂಬಲ್ಲಿ
ತಪ್ಪದೆ ಪ್ರವೇಶಿಸಿಪ್ಪಾಕೆ ಐದರೊಳಗೊಬ್ಬಳು.
ಇನಿತು ಸಂಬಂಧಿಯೈಸಿ ನೀನು
ಇದರೊಳಗಾತು ಸಿಲುಕುವನಲ್ಲ
ಪರಬ್ರಹ್ಮದ ಸೊಮ್ಮುಹಮ್ಮಳಿದು
ಬ್ರಹ್ಮಸ್ಥಾನದಲ್ಲಿ ನಿರ್ಮಳಜ್ಞಾನಿಯಾಗಿಪ್ಪ
ಆತನಿದಕ್ಕ ಸಿಕ್ಕ, ನೀನಿದರೊಳಗಣವನು
ಅಯ್ಯ ವಾಙ್ಮನಸಾಗೋಚರನು
ಕಪಿಲಸಿದ್ಧಮಲ್ಲಿಕಾರ್ಜುನನ ಪ್ರಮಾಣನು./1229
ಪರಸ್ತ್ರೀಯರಾದಿಯನ್ನು ಆಬೆ ತಾನು ಬೆರಸಿ ಬೆರೆಯಳೈ
ಬಾರನು ಅವರ ಪರಸ್ಥಾನಕ್ಕೆ.
ಬಂದಡೆ ಮೂಲಸ್ವಾಮಿಯಪ್ಪಳವರ
ಮೂಲ ನಾಶಮಾಡುವಳು.
ಮಾಡಿದಾನಂದಲ್ಲಿ ನೋಡಿ ತನ್ನಮಯವಪ್ಪಳು
ಕಪಿಲಸಿದ್ಧ ಮಲ್ಲಿನಾಥಯ್ಯನವ್ವೆ./1230
ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ.
ಕುರುಹಿಂಗೆ ಬಂದ ಸೀಮ ನೀನಲ್ಲ.
ಏಕಯ್ಯ ನಿನಗೆ ಪ್ರಾಪಂಚಿಕವು?
ಆನಂದಮಧ್ಯದ ಅಪರವಾಗಿ,
ಅಪರಮಧ್ಯದಲಿ ಪೂರ್ವನಾಗಿ
ಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ.
ಆರಯ್ಯಾ ಬಲ್ಲರು ನಿನ್ನ ಪರಿಯ?
ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು.
ಏಕಂಗನಿಷ್ಠಾಪರರು ಅವರು ಬಲ್ಲರು.
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ ಏಕಯ್ಯಾ,
ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು./1231
ಪರಿಯ ಬಲ್ಲವರಾರು? ಹವಣನರಿವವರಾರು?
ತನುತ್ರಯವನತಿಗಳೆದು
ಸತ್ಯದಾ ತೆರನ ಬಲ್ಲವರಾರು?
ನಿಜವನರಿದವರಾರು?
ನಿಷ್ಕಳದಲಾನಂದ ಸಂಯೋಗದಾ
ಪೂರತೆಯ ನಾಳದ ಆನಂದ ಮಣಿಗಟ್ಟಿ
ಆನು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ./1232
ಪರಿಶ್ರುತದ ಭಕ್ತಿಯ ಸವೆದು ಮಾಡಿದ ಚಿತ್ತ
ತನು ಮುಖದ ಯೋಗಕ್ಕೆ ತಮವ ಕಳುಹಿ
ಭ್ರಮೆಗೆಟ್ಟ ಸದ್ಭಕ್ತಿ ಅನುವನು ಅರಿದಾತ
ಕರುಣಾಕರನು ಶಿಷ್ಯ ಕಪಿಲಸಿದ್ಧ ಮಲ್ಲಿಕಾರ್ಜುನಾ./1233
ಪರುಷ ಸೋಂಕಿದ ಬಳಿಕ ಕಾಬರ್ೊನ್ನದ ಕೇಡು ನೋಡಿರಯ್ಯಾ,
ಜ್ಯೋತಿ ಸೋಂಕಿದ ಬಳಿಕ ತಮಂಧದ ಕೇಡು ನೋಡಿರಯ್ಯಾ.
ಅಮೃತ ಸೋಂಕಿದ ಬಳಿಕ ರೋಗದ ಕೇಡು ನೋಡಿರಯ್ಯಾ.
ನಮ್ಮ ಕಪಿಲಸಿದ್ಧಮಲ್ಲನ ಸೋಂಕಿದ ಬಳಿಕ ಭವದ ಕೇಡು
ನೋಡಿರಯ್ಯಾ./1234
ಪರುಷಲಿಂಗವ ಕೈಯಲ್ಲಿ ಹಿಡಿದು ಸ್ವರ
ಫಲವನೀಯೆಂಬರು.
ಶ್ರೀಗುರುಸ್ವಾಮಿ ಕರಸ್ಥಲಕಿತ್ತುದು ಹುಸಿಯೆ?
ಇವಂದಿರು ಕೆಟ್ಟಕೇಡಿಂಗೆ ಕಡೆಯಿಲ್ಲ.
ಮುಟ್ಟಿಯೂ ಮುಟ್ಟದವರನೇನೆಂಬೆನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ/1235
ಪರ್ವತದ ಮಹಿಮೆಯದು ಘನವೆಂದಡೆ,
ಪರ್ವತದಲ್ಲಲ್ಲದೆ ವೇಶ್ಯಾಕೋಶಕ್ಕೆ ಹರಿದು
ಹರನೆಂದೆನಿಸದಿರಯ್ಯಾ.
ಶರಣರ ಮಹಿಮೆಯದು ಘನವೆಂದಡೆ,
ಶಿವಶರಣನಲ್ಲಲ್ಲದೆ ಕಿಂಚಿಜ್ಞ ಮಾನವನಲ್ಲಿ ಹರಿಯದು
ನೋಡಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1236
ಪಶುಗಳಿಗೆಲ್ಲ ಪೃಷ್ಠದಲ್ಲಿ ಬಾಲವಿದ್ದಡೆ,
ಮಾಡುವೆನೆಂಬವನ ಮುಖದಲ್ಲಿ ಬಾಲ ನೋಡಾ.
ಪಶುಗಳಿಗೆಲ್ಲ ಮಸ್ತಕದಲ್ಲಿ ಶೃಂಗವಿದ್ದಡೆ,
ಮಾಡಿದ ಪೂಜೆ ಕೈ ಕೊಂಡೆನೆಂಬವನ
ಮನದ ಕೊನೆಯ ಮೇಲೆ ಶೃಂಗ ನೋಡಾ.
ಮಾಡಿದೆನೆಂಬುದುಳ್ಳನ್ನಕ್ಕ ಭಕ್ತನೆಂಬೆ[ನೆ] ಅಯ್ಯಾ?
ಮಾಡಿಸಿಕೊಂಡೆನೆಂಬುದುಳ್ಳನ್ನಕ್ಕ,
ನಿರುಪಾದಿ ನಿರಂಜನ ಜಂಗಮನೆಂಬೆನೆ ಅಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1237
ಪಸರಿ ಪರ್ಬಿ ಮಾಯೆ ದೆಸೆವರಿವುದಯ್ಯಾ
ವಿಷಮಾಕ್ಷನಾದಡೆಯು ಗೆಲುವೆನೆನುತ
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನಾ./1238
ಪಾಕಾರಂ ಪಾವನಂ ಜ್ಞಾನಂ ದೋಕಾರಂ ದೋಷನಾಶನಂ
ದಕಾರಂ ತು ದಯಾಕಾರಂ ಕಕಾರಂ ಕರ್ಮನಾಶನಂ||’
ಎಂಬುದು ಪುಸಿಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1239
ಪಾತಕರಟ್ಟಿ ಪುಣ್ಯಪುರುಷರಿಗರುಹುವಲ್ಲಿ ತಮ್ಮಪ್ಪಣೆಯೆ ಅಯ್ಯಾ?
ಆರೂ ಅರಿಯದ ಬೋಧೆಯನರುಹಬೇಕೆಂಬಪೇಕ್ಷೆ
ಲಿಂಗದಲ್ಲಿ ತೋರಿದುದು ಎನ್ನ ಸುಕೃತವಲ್ಲ ಎನ್ನ ಯೋಗದ ಬಲವಲ್ಲ
ನಿಮ್ಮ ಪಾದದ ಮಹಾಕೃಪೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ/1240
ಪಾದೋದಕವು ಲಿಂಗದ ಮೇಲೆ ಎರದಲ್ಲಿ ಜಂಗಮ ಘನವಾಯಿತ್ತು.
ಆ ಲಿಂಗೋದಕ ಸ್ವೀಕರಿಸಿದಲ್ಲಿ ಜಂಗಮಕ್ಕೆ ಲಿಂಗ ಘನವಾಯಿತ್ತು.
ಲಿಂಗದ ಕಳೆಯೆ ಜಂಗಮ, ಜಂಗಮದ ಕಳೆಯೇ ಲಿಂಗ;
ಆವುದ ಘನವೆಂಬೆ; ಆವುದ ಕಿರಿದೆಂಬೆ?
ಲಿಂಗ-ಜಂಗಮ ನೇತ್ರದಲ್ಲಿಯ ಪ್ರಕಾಶದಂತೆ ತಿಳಿದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1241
ಪಾದೋದಕವೆಂಬುದು ಪರಮಾತ್ಮನ ಚಿದ್ರೂಪು ನೋಡಾ.
ಪಾದೋದಕವೆಂಬುದು ಮೋಕ್ಷದ ಮಾರ್ಗ ನೋಡಾ.
ಪಾದೋದಕವೆಂಬುದು ಪಾಪದ ಕೇಡು ನೋಡಾ.
ಪಾದೋದಕವೆಂಬುದು ಪ್ರಮಥರ ಇರವು ನೋಡಾ.
ಪಾದೋದಕವೆಂಬುದು ಕಪಿಲಸಿದ್ಧಮಲ್ಲಿಕಾರ್ಜುನನ ಮಹಿಮೆನೋಡಾ./1242
ಪಾಪವ ಮಾಡಿ ಮುಳುಗಿದಡೇನು,
ಮುಳುಗಿ ಪಾಪವ ಮಾಡಿದಡೇನು?
ಗಂಗೆ ಪದವಿಯ ಕೊಟ್ಟಡೆ ಅದು ದುರ್ಗುಣವೆ ಅಯ್ಯಾ.
ಸದ್ಗುಣವಾದಡೂ ಆಗಲಿ,
ಈ ಮನುಜರು ಮಾಡುವ ಕರ್ಮಕ್ಕೆ
ಆಕೆಯ ಸದ್ಗುಣ ಸಂಧಾನವಾಯಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1243
ಪಾವನವಾದೆನು ಬಸವಣ್ಣಾ,
ನಿಮ್ಮ ಪಾವನಮೂರ್ತಿಯ ಕಂಡು.
ಪರತತ್ವವನೈದಿದೆ ಬಸವಣ್ಣಾ,
ನಿಮ್ಮ ಪರಮಸೀಮೆಯ ಕಂಡು.
ಪದ ನಾಲ್ಕು ಮೀರಿದೆ ಬಸವಣ್ಣಾ,
ನಿಮ್ಮ ಪರುಷಪಾದವ ಕಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ;
ಬಸವಣ್ಣಾ, ಬಸವಣ್ಣಾ, ಬಸವಣ್ಣಾ,
ನೀನು ಗುರುವಾದೆಯಾಗಿ./1244
ಪುಣ್ಯ ಪಾಪಗಳಿಗೆ ದೂರ ಹೇಳುವರಲ್ಲದೆ,
ಸಮೀಪ ಹೇಳುವರನಾರನು ಕಾಣೆ.
ಪುಣ್ಯ ಪಾಪ ಸಂಕೀರ್ತವಾದಲ್ಲಿ
ಕುಲಹೀನ ಕೀರ್ತಿವಂತ, ಸತ್ಕುಲ ಅಕೀರ್ತಿವಂತ
ಇದೆ ಕೀರ್ತಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1245
ಪುಣ್ಯದ ಬಲಿಯದು ಪಾಪದಲ್ಲಿ ಪುಣ್ಯ ಬದಲ್ಲಿಯೆ ನೋಡಯ್ಯಾ.
ಪಾಪದ ಬಯಲಿದು ಪುಣ್ಯದಲ್ಲಿ ಪಾಪ ಬಲಿಯೆ ನೋಡಯ್ಯ.
ನಾಗನ ಸ್ವಭಾವವೆ ವಿಷ; ಮಧ್ಯಕ್ಷೀರ ಕ್ಷೀರವಾಗದು,
ವಿಷವೆ ಸಹಜ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1246
ಪುಣ್ಯಪಾಪಂಗಳನರಿಯದ ಮುನ್ನ
ಅನೇಕ ಭವಂಗಳಲ್ಲಿ ಬಂದು
ನಿಮ್ಮ ನಿಲುವನರಿಯದೆ ಕೆಟ್ಟನಯ್ಯಾ.
ಇನ್ನು ನಿಮ್ಮ ಶರಣುವೊಕ್ಕೆನಾಗಿ,
ನಾ ನಿಮ್ಮನೆಂದೂ ಅಗಲದಂತೆ ಮಾಡಾ ಅಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ!
ನಿಮ್ಮಲ್ಲಿ ಒಂದು ಬೇಡುವೆ;
ಎನ್ನ ಕರ್ಮಬಂಧನ ಬಿಡಿವಂತೆ ಮಾಡಾ
ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1247
ಪುಣ್ಯಪಾಪಂಗಳಾದಡೇನು? ಈಶ್ವರ ಕಲ್ಪನೆಯಿಲ್ಲದನ್ನಕ್ಕ
ಮಾಡೆಂದು ಮಾಡಿಸಬಾರದಯ್ಯಾ.
ನೋಡಯ್ಯಾ ನೋಡಯ್ಯಾ ಮುನ್ನಿನ ಕಲ್ಪನೆಯುಳ್ಳವರ
ಬೇಡೆಂದು ಮಾಣಿಸಬಾರದಯ್ಯಾ, ನೋಡಾ!
ಅಯ್ಯಾ, ನೀನೆಹಗೆ ಕಲ್ಪಿಸಿದೆ ಅಹಗೆ ಅಹರು
ಎನ್ನ ಕಪಿಲಸಿದ್ಧಮಲ್ಲೇಶ್ವರದೇವ./1248
ಪುಣ್ಯಪಾಪವೆಂಬುದದಾರಿಗರಿಕೆಯುಂಟಯ್ಯಾ?
ಪುಣ್ಯವಂತಿರ, ಪಾಪವಂತಿರ;
ಪೂಜಿಸಿ ಪಡೆವುದದು ಪುಸಿಯಲ್ಲ.
ಇದು ಕಾಕುಭಾಷೆ ಎಂದಲ್ಲಿ,
ಪೂಜಿಸಿದವಂಗೆ ಸಂಪದಾಶಕ್ತಿಮುಕ್ತಿ ಬರುವುದೇನಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1249
ಪುಣ್ಯವ ಮಾಡಬೇಕೆಂದು ಮರುಗಬೇಡ,
ಪಾಪವ ಮಾಡದಿದ್ದಡೆ ಪುಣ್ಯ ದಿಟ.
ಬೇರೆ ತೀರ್ಥ ಬೇಡ
ಸತ್ಯವ ನುಡಿವಲ್ಲಿ ಸಂದಿಲ್ಲದಿಹನು.
ಕಪಿಲಸಿದ್ಧಮಲ್ಲಿಕಾರ್ಜುನ
ಹುಸಿಗೆ [ಹುರುಡಿಗನು]/1250
ಪುತ್ರನ ಪೂಜೆಯು ಜನಕನಿಗೆ ದುಃಖಕರವಲ್ಲ.
ಸತಿಯ ವೈಭವವು ಪತಿಗೆ ಪ್ರಾಣಹಾನಿಯಲ್ಲ.
ತನ್ನ ಭೃತ್ಯನಿಗಾದ ಜಯಘೋಷ ಅರಸನಿಗೆ ಅಸಂತೋಷವಲ್ಲ.
ಇದು ಕಾರಣ, ಶಿಷ್ಯನ ಸಮರಸದಲ್ಲಿ
ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಂಗೆ ಕೇಳಲು ಅದು ಯೋಗ್ಯವಲ್ಲ,
ಅಲ್ಲಮಮಹಾಪ್ರಭುವೆ./1251
ಪುದುಗಿದ್ದ ಸಂಸಾರ ಬಂಧನಂಗಳ ಪೆರ್ದೊರೆ
ಎಂದಿಂಗೆ ಬಿಟ್ಟುಪೋಪುದು?
ಎಂದಿಪ್ಪೆ ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನು,
ಕಪಿಲಸಿದ್ಧಮಲ್ಲಿಕಾರ್ಜುನಾ./1252
ಪುರಾಣವ ಹೇಳಿದವರೆಲ್ಲ ಪುರಾಣಿಕರು ನೋಡಾ.
ಭವಭವದ ಶಾಸ್ತ್ರವ ಹೇಳಿದವರೆಲ್ಲ ಶಾಸ್ತ್ರಿಗಳು ನೋಡಾ.
ವೇದಾಂತವ ಹೇಳಿದವರೆಲ್ಲ ವೇದಾಂತಿಗಳು ನೋಡಾ
ಭವಭವದ್ಲ.
ಆದ್ಯರ ವಚನ ಹೇಳಿದವರೆಲ್ಲ ಪುರಾತರು ನೋಡಾ
ಭವಭವದಲ್ಲಿ,
ಕಪಿಲಸಿದ್ಧಮಲ್ಲಿಕಾರ್ಜುನಾ./1253
ಪೂಗಂಧವವಂಗೆ ಗಂಧವಾರಣೆ ಮಾಡಿ ತೋರುತ ಬರಲಿ
ಮೆಚ್ಚಿದನೆಂದು ಇವಳ ಕಂಡು ಅವ್ವ
ಎಲ್ಲ ಗುಣ ಇವಳಲುಂಟೆಂದು ಮೆಚ್ಚ್ಲಿ[ದೆ]ನೆಂದು
ಕಪಿಲಸಿದ್ಧಮಲ್ಲಿನಾಥನೊಲಿದು ನೆರದರೆ ಕಾಮಿಯಾದೆನಗೆಯವ್ವಾ./1254
ಪೂಜಾಫಲದಿಂದ ಅರ್ಜುನ ಬಾಣಂಗಳೆಲ್ಲ
ಅರಳ್ಗಳಾದುವಯ್ಯಾ ನಿನ್ನಲಿಂಗಕ್ಕೆ.
ಪೂಜಾಫಲದಿಂದ ಕನ್ನಯ್ಯನ ಮಾಂಸವೆಲ್ಲ
ಪರಮ ಷಡ್ರುಚಿಯಾಯಿತ್ತಯ್ಯಾ, ನಿನ್ನ ರಸನೆಗೆ.
ಪೂಜಾಫಲದಿಂದ ಚೋಳಿಯ ರತಿ
ಪರಮಲೀಲಾನಂದವಾಯಿತ್ತಯ್ಯಾ, ದೃಷ್ಟಿಗೆ.
ಪೂಜಾಫಲಂದ ಅಮ್ಮನವರ ಅಪಶಬ್ದಗಳೆಲ್ಲ
ಸಾಮಗಾನವ ತಿರಸ್ಕರಿಸಿದುವಯ್ಯಾ ನಿನ್ನ ಶ್ರೋತ್ರಕ್ಕೆ.
ಪೂಜಾಫಲಂದಂದು ಚಂದ್ರಚೂಡಿಯ ಕೈಯ ಮದುಗುಣಿಯ
ಪುಷ್ಪ
ಗಂಧಮಯವಾಗಿ ಮಸ್ತಕಕ್ಕಲಂಕಾರವಾಯಿತ್ತಯ್ಯಾ.
ಪೂಜಾಫಲ ಅಂತಿಂತಲ್ಲ, ಪೂಜಾಫಲ ಸ್ವಾದೀನವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1255
ಪೂಜಾಫಲವಂಕಂತಲ್ಲ ;
`ಪೂಜಾಫಲಂ ಫಲಂ ಮನ್ಯೇ ತವ ಪಾಣಿಗ್ರಹಂ ಶಿವೇ’
ಪೂಜಾಫಲವಂ್ಕಂತಲ್ಲ ;
`ಪೂಜಾಫಲಂ ಫಲಂ ಮನ್ಯೇ ಮದ್ಧಾ ್ಯನಾಸಕ್ತಪೂರುಷಃ’
ಎಂದು ನೀ ಹೇಳಿದ ವಾಕ್ಯ ಹುಸಿಯೇನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ?/1256
ಪೂಜಾರ್ಥವಾಗಿ ಎನ್ನ ಹಸ್ತಕ್ಕೆ ಇಷ್ಟಂಗವಾಗಿ ಬಂದೆಯಯ್ಯಾ.
ಪೂಜಿಸುವಲ್ಲಿ ಭಕ್ತನಾಗಿ ನಿಂದೆಯಯ್ಯಾ.
ಜನ್ಮವಳಿವಲ್ಲಿ ಜಂಗಮವಾಗಿ ಬಂದು, ಪಾದೋದಕ ಪ್ರಸಾದವ ಕೊಟ್ಟೆ.
ಪೂಜಾಫಲ ತೀರ್ಗಡೆ ಮಾಡಬೇಕೆಂದು,
ಎನ್ನ ಮನಭಾಂಡಾರವ ನೋಡಬಂದೆಯಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ/1257
ಪೂಜಿಸಹೋದಡೆ ಪೂಜಾಪದಾರ್ಥವಿಲ್ಲದಂತಾಯಿತ್ತಯ್ಯಾ,
ನಮ್ಮ ಚೆನ್ನಬಸವೇಶ್ವರ ಗುರುವಿನ ಬೋಧೆಯಿಂದ.
ಮಾಡಿಸಹೋದಡೆ ಮಾಡುವ ರೂಪು ಇಲ್ಲದಂತಾಯಿತ್ತಯ್ಯಾ,
ಅಲ್ಲಮನ ವಚನದಿಂದ .
ಇದರಿರವ ತಿಳಿಯಬೇಕೆಂದು ಹೋದಡೆ ಆನು ಕಾಣೆ,
ಕಪಿಲಸಿದ್ಧಮಲ್ಲಯ್ಯಾ./1258
ಪೂಜಿಸುವ ಪೂಜಕನ ಏಡಿಸಿತ್ತೈ ಮಾಯೆ
ಆರೈದು ರುದ್ರಪದವರಸುವವರ.
ಏಡಿಸಿಯೆ ಕಾಡಿತ್ತು ಮಾಯೆಗಜಕಂಜುವೆನು
ಕಾಯಯ್ಯಾ, ಕಪಿಲಸಿದ್ಧ ಮಲ್ಲಿಕಾರ್ಜುನಾ./1259
ಪೂಜೆಯ ಉಪಕರಣ ನೋಡಿ ಎನ್ನ ಮನಕ್ಕೆ ಬಹಳ ಬಾಧೆಯಾಯಿತ್ತು.
ಗುರುವಿನ ಪರಮಗುರು ಸಂಗನ ಬಸವಯ್ಯ ಪೂಜಿಸಬಂದಡೆ,
ಕಪಿಲಸಿದ್ಧಮಲ್ಲಿಕಾರ್ಜುನನ ಬಾಲಕ ಅಂಗವಿರಹಿತನಾದನು,
ಶ್ರೀಗುರುಮೂರ್ತಿಯೆ./1260
ಪೂಜೆಯ ಪರಿಯನೊರೆವೆ ಆಸಾ ದೇವಾ:
‘ಮನೋ ನಿರ್ಮಲಮ್ಕಷೇಕಂ ತಸ್ಯ ನಾಹಂ ಜಡ ಇ್ಕ
ಭಸ್ಮಧಾರಣಂ|
ನಾಹಂ ಸಾಕ್ಷೀತ್ಯಮಲಬಿಲ್ವಂ ತನ್ಮಸ್ತಕೇ||’
ಇಂತಪ್ಪ ಪೂಜೆಯ ಮಾಡದೆ ಮರೆದೆ.
ಎಲೆಮರೆಯ ನೀರಸುಟ್ಟ ಬೂಯದಂ ಪೂಜಿಸಿ,
ಸ್ಧಿಗಳ ಗುದ್ದಾಟಕ್ಕೊಳಗಾದವರ ಕಡೆಮೆಟ್ಟಿ ಬಿಟ್ಟಿಪ್ಪನೆ,
ಬೆಟ್ಟಜೆಪ್ಕ ಟ್ಟ ಕಪಿಲಸಿದ್ಧಮಲ್ಲಿಕಾರ್ಜುನ./1261
ಪೂರ್ವದ ಜೀಣಲಿಂಗ ಮೈ ತೊರೆದಲ್ಲಿ
ದುಃಖವ್ಲಿಷ್ಟು ದೇವಾ.
ಪೂರ್ವದಮೃತಕಲಹದಲ್ಲಷ್ಟು ದುಃಖ ದೇವಾ.
ದುಃಖದಿಂದಖಿಲಾಂಗ ವಹ್ನಿಕಣಗಳಾದವು ದೇವಾ,
ಇಂತಪ್ಪಗ್ನಿಕಣಕ್ಕೆ ನಿಮ್ಮ ವಿಲೋಕನವೆ ವೃಷ್ಟಿಧಾರೆ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ./1262
ಪೂರ್ವಸಿಂಹಾಸನದಲ್ಲಿ,
ಮಹಾಪರ್ವತದ ಮಸ್ತಕದಲ್ಲಿ,
ಆ ಪರ್ವತಕ್ಕೆ ಕಾವಲು ಒಂಬತ್ತಾಗಿ,
ಆ ಒಂಬತ್ತ ಕೂಡಿದ ದ್ವಾರ ಕೆಳಗಾಗಿ,
ಅದರಿಂದ ನಡೆಯುತಿದ್ದು ಸಕಲ ವ್ಯವಹಾರಂಗಳು.
ಆ ಪೂರ್ವದ್ವಾರದಲ್ಲಿ ಮಹಾಜ್ವಲ,
ಮಹಾಜ್ವಲದಲ್ಲಿ ಗಂಭೀರ ಕಮಲ,
ಗಂಭೀರ ಕಮಲದಲ್ಲಿ ಭವಿಸಿದಗ್ನಿ,
ಪೂರ್ವದ್ವಾರವ ತಾಗೆ ಅಲ್ಲಿದ್ದ ವಾಯುರಾಜನು
ದುರ್ಗ ಒಂಬತ್ತಕ್ಕೆ ಒಂದೇ ದ್ವಾರದಲ್ಲಿ ದಾಳಿಯನಿಟ್ಟು
ನಾಯಕ ದುರ್ಗದಲ್ಲಿದ್ದ ಸುಗುಣ ಸುಜ್ಞಾನವೆಂಬ ಸರೋವರ ಹೊಕ್ಕು,
ಮೂರು ಮೆಟ್ಟಿನ ಭಾವಿಯನ್ನಿಳಿದು,
ಆ ಜಲವ ಕದಡಲಾಗಿ
ಬಪ್ಪ ಬಾಹತ್ತರ ನಿಯೋಗದ ಧಾಳಾಧಾಳಿಯಂ ಕಂಡು,
ಅಯ್ಯ, ಜಲವ ಹೋಗೆ ಇವರು ಕದಡಿದ ಜಲದೊಳಗೆ
ಹೋದವರೆಲ್ಲಾ ಮುಕ್ತರಾ,
ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಹಿಡಿಗೊಳಗಾದ./1263
ಪೃಥುವಿಯ ಪ್ರಮಾಣಗಳನಿರ್ದಾಂಟಿಸಿ
ಪ್ರಮಾಣ ಕಟ್ಟಿದ ನೆಲೆಮನೆ ಅಯ್ಯಾ ನಿನ್ನದು.
ಬಳಸುತ್ತಿಪ್ಪ ಹಲವು ವ್ಯವಹಾರವ
ಕೊಂಡ ಭಂಡಂಗಳೆಲ್ಲಾ ತೀರಿ ನಿನ್ನ ಮೆಲುವಾಯ್ದರೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಭಕ್ತಿ ಜ್ಞಾನ ವೈರಾಗ್ಯನಾದಾ./1264
ಪೃಥುವಿಯ ಮೇಲಪ್ಪ ಬಿಗಿದ ಪಾದಶಿಲೆ
ದಾಯದ ಚಲನೆಯಾಗದಿರು ಕಂಡಾ, ಎಲೆ ಅಯ್ಯಾ.
ಅಯ್ಯ, ಅವ್ಯಯಪದವ
ಅಯ್ಯನೊಯ್ಯನೆಯಿದಯ್ಯ ಎಲೆ ಅಯ್ಯ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಅಯ್ಯನತ್ತ ಶುದ್ಧನಾಗಯ್ಯ/1265
ಪೊರಕಣ್ಣನೆ ಮುಚ್ಚಿ, ಒಳಕಣ್ಣನೆ ತೆರೆದು
ಬಂದಾನೆಂಬ ರಭಸಕ್ಕೆ ಕಿವಿಯಾತು ಕೇಳುತ್ತಿದ್ದೆನು.
ಅದೆತ್ತಣಿಂದ ಸುಳಿದನೆಂದರಿಯೆನಯ್ಯಾ.
ಸರ್ವ ಪ್ರತಿಬಿಂಬ ಹೊಳೆದರೆ
ಕಣ್ಣ ತುಂಬಿ ತುಂಬಿ ಹಿಡಿದೆ.
ಆ ಪ್ರತಿಬಿಂಬವಿಡಿದೆ ಕಪಿಲಸಿದ್ಧಮಲ್ಲಿಕಾರ್ಜುನನ ಮಾಡುವೆನು./1266
ಪ್ರಣವಾಕ್ಷರಂ ಮೇಲೆ ಒಪ್ಪಿಪ್ಪ ಬೀಜಾಕ್ಷರದ ಪರಿಯಿನ್ನೆಂತೊ?
ವೈನೈಯೆಂಬ ಶುದ್ಧ ಧವಳತೆಯ ಮೀರಿಪ್ಪ
ಅಕ್ಷರವೆರಡು, ಒಂದೆಸಳಿನ ಕಮಳ,
ನಿತ್ಯನೆಂಬ ಅಧಿದೇವತೆ
ಶುದ್ಧ ಸ್ಫಟಿಕ ಸಂಕಾಶವರ್ಣ
ನಿತ್ಯನಿರಂಜನನೈಕ್ಯಪದವು,
ಕಪಿಲಸಿದ್ಧಮಲ್ಲಿನಾಥಯ್ಯನ ಕೂಟ
ಜಗದಾಟ ಭವದಾಟ ಜನ್ಮನಾಶ./1267
ಪ್ರಥಮನಾಮಕ್ಕೀಗ ಬಸವಾಕ್ಷರವೆ ಬೀಜ.
ಗುರುನಾಮ ಮೂಲಕ್ಕೆ ಅಕ್ಷರಾಂಕ.
ಬಸವಣ್ಣ ಬಸವಣ್ಣ ಬಸವಣ್ಣ ಎಂದೀಗ
ದೆಸೆಗೆಟ್ಟೆನೈ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ./1268
ಪ್ರಥಮಸ್ಥಾನದಲ್ಲಿ ಒಡಗೂಡಿದಳು,
ಪಂಚಬ್ರಹ್ಮನ ಅಪರಸ್ಥಾನದಲ್ಲಿ ಒಡಗೂಡಿದಳು,
ಸಹಸ್ರದಳದ ಕಂಜಕನ್ನಿಕೆಯ ಮಧ್ಯಮಸ್ಥಾನದಲ್ಲಿ
ಶಕ್ತಿ ಪಂಚಕವನ್ಕಗಳೆದಳು.
ಅವರ ಹಣೆಯಲ್ಲಿ ಕ್ತವ ಬರೆದು,
ಅಜಲೋಕದಲ್ಲಿ ಆನಂದ ಪ್ರಕಾಶನವನೊಡಗೂಡಿದ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಆನಂದಸ್ಥಾನದಾಶಕ್ತಿ./1269
ಪ್ರಪಂಚದಲ್ಲಿ ಭೂಭಾರಿಯಲ್ಲದೆ
ಪಾರಮಾರ್ಥದಲ್ಲಿ ಭೂಭಾರಿಯೇನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ?/1270
ಪ್ರಪಂಚದಿಂದ ಪಾರಮಾರ್ಥವ ಕಂಡೆನೆಂಬುದು ದುರ್ಲಭ.
ಶಿಷ್ಯನಾಗಿ ಗುರುವ ಕಾಣಬೇಕು;
ಭಕ್ತನಾಗಿ ಜಂಗಮವ ಕಾಣಬೇಕು.
ಇದು ಕಾರಣ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಗುರುವ ಕಂಡುದು
ಸುಕೃತ;
ಪ್ರಭುವಿನ ಪೂರ್ಣಕೃಪೆ ಕೇಳಾ, ಕೇದಾರಯ್ಯಾ./1271
ಪ್ರಭುವಿನ ದಯದಿಂದ ಬಂದೆನ್ಲಿಗೆ
ಇಷ್ಟಲಿಂಗದ ಮರ್ಮವನರಿದೆ.
ಗುರು ಬಸವನ ದಯೆ, ಚೆನ್ನಬಸವನ ಕೃಪೆ.
ಇದಕ್ಕೆ ಮಿಗಿಲಾಗಿ ಕಂಡು ಧನ್ಯನಾದೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1272
ಪ್ರಸಾದ ಕಾಯನಾದ ಬಳಿಕ ರಸರಸಾಯನೌಷಧಿಯ ಹಂಗೇಕೊ?
ಮನದಿಚ್ಛೆಯ ಪೂರ್ಣವಾದ ಬಳಿಕ ಮಂತ್ರದ ಲಕ್ಷ್ಯದ ಹಂಗೇಕೊ?
ನೀನಿಲ್ಲಿಗೆ ಬಂದ ಬಳಿಕ ಪರ್ವತದ ಹಂಗೇಕಯ್ಯಾ ಎನಗೆ,
ಕಪಿಲಸಿದ್ಧಮಲ್ಲಿನಾಥಾ?/1273
ಪ್ರಸಾದ ಪ್ರಸಾದವೆಂದು ಆಡಂಬರಿಸುವ
ಅಣ್ಣಗಳ ಪಥ ನೋಡಿ ಕೈಬಡಿದು ನಕ್ಕಂತಾಯಿತಯ್ಯಾ.
ಪ್ರಸಾದವಿಲ್ಲದಿರೆ ಲೋಕರಂಜನೆಯೊ ಪ್ರಸಾದವೊ?
`ಬಹು ವರ್ತಂತೇ ಪ್ರಾಣಿನೋ ಬಹುಶಃ ಶಿವೇ’
ಎಂಬ ವೀರತಂತ್ರ ಪುಸಿಯೇನಯ್ಯಾ?
ಪ್ರಸಾದ ಪ್ರಸಾದವೆಂದು ಮುಖದೋರದೆ ಮೂಗ ಮುಚ್ಚಿ
ನುಂಗುವರ ಕಂಡು ಹೊಟ್ಟೆ ಜೋಲಾಡುವಂತೆ ನಕ್ಕ ಕರುಣಾಕರ
ಕಪಿಲಸಿದ್ಧಮಲ್ಲಿಕಾರ್ಜುನದೇವನು./1274
ಪ್ರಸಾದತತ್ವದ ಪ್ರಾದೇಶಿಕನು ನೀನೆ,
ಸಾದಾಖ್ಯತತ್ವಗಳ ಸಮನಿಸದಿಹ
ನಾದಬಿಂದುಕಳೆಯ ಆಮಧ್ಯಾವಸಾನ
ಮೂದೇವರಿಗೆ ತಾನು ಶಕ್ತವಲ್ಲಾ.
ಅವ್ವೆಯ ಕರದಲ್ಲಿ ಅವ್ಯಯ ತಾನಿಪ್ಪ
ಒಯ್ಯನೆ ನಡೆಯಯ್ಯ ಮಠದೊಳಯಿಂಕೆ.
ಮಠದೊಳಗಣ ಭೇದ ಕುಟಿಲಕ್ಕೆ ಇಂಬಿಲ್ಲ,
ಮಠವ ಶುದ್ಧಿಯ ಮಾಡೆಲೆ ಮರುಳು ತಾಯೆ.
ಅಡಿಗಡಿಗೆ ಸಂಗಮದ ನುಡಿಯ ನೀನಾಡಿ
ಒಡಗೂಡವ್ವಾ ಕಪಿಲಸಿದ್ಧಮಲ್ಲಿಕಾರ್ಜುನನಾ./1275
ಪ್ರಸಾದವೈದಾರ ಪಾದೋದಕವೆರಡೈದ
ಆದಿಯಕ್ಷರದಲ್ಲಿ ದೀಕ್ಷಾತ್ರಯ.
ನಾದದಿಂದವೆ ತೂಗಿ ಬಿಂದು ಸಮನಿಸದೀಗ
ಆಧಾರಸ್ಥಾನಕ್ಕೆ ಅತ್ಯ್ಕತಿಷ್ಠತ್.
ಮೂಲಸ್ಥಾನದಲ್ಲಿದ್ದ ಮುನ್ನೂರು ಕಮಲಕ್ಕೆ
ಆದಿಭ್ರಮರನು ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ./1276
ಪ್ರಸಾದಿಯಾದಾತ ಪ್ರಳಯಕ್ಕೊಳಗಾಗ,
ಇಂದ್ರಿಯಗಳ ಹರಿಯಯ,
ಬಂದುದನ್ಕಗಳೆಯ – ಅದು ಲಿಂಗಮುಖದಿಂ ಬಂದುದಾಗಿ,
ಆತನ ಅಂಗ ಸರ್ವಾಂಗಲಿಂಗಾಂಗ;
ಆತನ ನಡೆ-ನುಡಿ ಚೈತನ್ಯ ಸಾಕ್ಷಾತ್ ಅಯ್ಯನ ಸದ್ಭಾವ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ
ನಿತ್ಯಪ್ರಸಾದಿಯ ಪರಿಯಿಂತುಂಟು./1277
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ
ಕ್ರಕರ ದೇವದತ್ತ ಧನಂಜಯ – ಇಂತೀ ದಶವಾಯುಗಳು.
ಅಲ್ಲಿ ಪ್ರಾಣವಾಯು ಇಂದ್ರನೀಲವರ್ಣ ಕಂಡದ ಅಧೋ
ಭಾಗೆಯಲ್ಲಿರ್ದ
ಹೃದಯ ಪಾದ ನಾಭಿ ನಾಶಿಕವಧರಂಗಳಲ್ಲಿ ಉಚ್ಛಾ ್ವಸ
ನಿಶ್ವಾಸಂಗಳಿಂದ ಚರಿಸುತ್ತಿಹುದು.
ಅಪಾನವಾಯು ಇಂದ್ರಗೋಪವರ್ಣ, ವಾಯು ಶಿಶ್ನ ಉರ
ಜಾನು ಪಾದ ಜಂಘೆ ನಾಭಿಮೂಲ ಜಠರದಲ್ಲಿರ್ದು
ಮಲ ಮೂತ್ರಂಗಳ ಪೊರಮಡಿಸುತ್ತಿಹುದು.
ವ್ಯಾನವಾಯು ಗೋಕ್ಷೀರವರ್ಣ, ಕರ್ಣ ಅಕ್ಷಿ ಘ್ರಾಣ
ಗಂಡಾಗ್ರ ಗುಲ್ಫಂಗಳಲ್ಲಿ ವರ್ತಿಸುತ್ತ ಹಿಡಿವುದು ಬಿಡುವುದು
ಇವು ಮೊದಲಾದ ವ್ಯಾಪಾರಂಗಳ ಮಾಡುತ್ತಿಹುದು.
ಉದಾನವಾಯು ಎಳೆಮಿಂಚಿನವರ್ಣ, ಹಸ್ತಪಾದಾ
ಸರ್ವಸಂದುಗಳಲ್ಲಿರ್ದು
ಸಂದು ಸಂದುಗಳಿಗೆ ಪಟುತ್ವಮಂ ಪುಟ್ಟಿಸುತ್ತಿಹುದು.
ಸಮಾನವಾಯು ಶುದ್ಧ ಸ್ಫಟಿಕವರ್ಣ, ದೇಹ ಮಧ್ಯದಲ್ಲಿರ್ದು
ಸರ್ವ ಸಂದುಗಳಲ್ಲಿ ವ್ಯಾಪಿಸಿಕೊಂಡು, ಕೊಂಡಂತಹ ಅನ್ನರಸವ
ಸರ್ವಾಂಗಕ್ಕೆ ಸಮಾನವಂ ಮಾಡಿ ಅಷ್ಟಕೋಟಿ
ರೋಮನಾಳಂಗಳಿಗೂ
ಹಂಚಿಕ್ಕಿ ಅಂಗವಂ ಪೋಷಿಸುತ್ತಿಹುದು.
ನಾಗವಾಯು ಬಾಲಸೂರ್ಯನ ವರ್ಣ, ಕಂಠಸ್ಥಾನದ್ಲರ್ದು
ವರ್ಧಿ ನಿರೋಧಂಗಳಿಂದುದ್ಗಾರಮಂ ಮಾಡಿಸುತ್ತಿಹುದು.
ಕೂರ್ಮವಾಯು ಕುಂದೇಂದುವಿನ ವರ್ಣ, ನೇತ್ರಮೂಲದಲ್ಲಿರ್ದು
ಉನ್ಮೀಲನ ನಿಮೀಲನಾಡಿಗಳನು ಮಾಡುತ್ತಿಹುದು.
ಕೃಕರವಾಯು ನೀಲವರ್ಣ ಕಾಯದಲ್ಲಿರ್ದು ಕ್ಷುಧಾ
ಧರ್ಮಂಗಳಂ ಮಾಡುತ್ತಿಹುದು.
ದೇವದತ್ತವಾಯು ಸ್ಫಟಿಕವರ್ಣ, ತಾಳಮೂಲದಲ್ಲಿರ್ದು
ಅಗುಳಿಕೆಯಾರಡಿಗಳಂ ಪುಟ್ಟಿಸ್ಕ್ತುಹುದು.
ಧನಂಜಯವಾಯು ಸಪ್ತ ಜಾಂಬೂನದ ವರ್ಣ,
ಶೋಕರಾಗಂಗಳ ಪುಟ್ಟಿಸಿ ಹಾಡಿಸ್ಕ್ತುಹುದು.
ಇಂತೀ ದಶವಾಯುಗಳ ದೇಹವನುದ್ಧರಿಸುತ್ತಿಹವು.
ಈ ವಾಯುವನೇರಿ ಜೀವನು ಈಡಾಪಿಂಗಳ ಮಾರ್ಗದಲ್ಲಿ
ವ್ಯವಹರಿಸುತ್ತಿಹನು.
ಈ ವಾಯುಗ್ಕಯನರಿದು ಯೋಗಿಸುವುದೇ ಯೋಗ.
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಿಜವನೈದುವದೇ ಮಾರ್ಗವು/1278
ಪ್ರಾಣದ ತತ್ವದ ಪ್ರಾಪಂಚುವಿಲ್ಲದಿರು,
ಏಕ ಏಕಾರ್ಥವೆಂದು ನಿರ್ವಾಣದ
ಆಕಾರಧ್ಯಾನವು ಬೇಕು ಮನ ಕರದಲ್ಲಿ.
ಸಾಕಾರದಿಂದತ್ತ ಶೂನ್ಯಭೇದ
ಅನೇಕ ರೂಪನು ಕಪಿಲಸಿದ್ಧಮಲ್ಲಿಕಾರ್ಜುನನ
ಬೇಕಾದವೀ ಪರಿಯ ತಪ್ಪದಿಹುದು./1279
ಪ್ರಾಣಲಿಂಗ ಸಂಬಂಧಿಯಾದ ಬಳಿಕ
ಪರಸ್ತ್ರೀ ಪರದ್ರವ್ಯವ ಮುಟ್ಟದಿರಬೇಕು.
ಅಂಗಲಿಂಗ ಸಂಬಂಧಿಯಾದ ಬಳಿಕ
ಸ್ತ್ರೀಸಂಗವ ತೊರೆಯಲೇಬೇಕು.
ಪ್ರಸಾದಲಿಂಗ ಸಂಬಂಧವಾದ ಬಳಿಕ
ಆಪ್ಯಾಯನವರಿಯಲೇಬೇಕು.
ಸರ್ವಾಂಗಂಗ ಸಮ್ಮತ ಸಂಬಂಧಿಯಾದ ಬಳಿಕ ಸರ್ವವೂ
ತಾವಾಗಿರಬೇಕು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಇಂತಪ್ಪವರು ಸುಲಭರೆ? ಎತ್ತಾನಕೊಬ್ಬರಲ್ಲದೆ./1280
ಪ್ರಾಣಲಿಂಗಿಯಾದಾತನು ಪ್ರಳಯಕ್ಕೊಳಗಾಗನು.
ಅನ್ಯಕ್ಕೆ ಕೈಯಾನನು ಎಲ್ಲವೂ ತನ್ನೊಳಗೆ ಇಪ್ಪವಾಗಿ.
ತನ್ನ ಮೀರಿದುದೊಂದು ಆಧಿಕ್ಯ ಬೇರಿಲ್ಲಾಗಿ.
ಕೈವಲ್ಯಲಿಂಗವು ಪ್ರಾಣವೆಂಬ ಸತಿಗೆ ಸಂಯೋಗ ಸಮನಿಸಿದ
ಬಳಿಕ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ಉರುತರ ಪ್ರಾಣಲಿಂಗಿ./1281
ಪ್ರಾಪಂಚಿಕ ಸೀಮೆಯ ಮೀರಿದ ಭೇದವ,
ಆನಂದ ಸ್ಥಾನದ ಆಂದೋಳವ,
ಆರರ ಕರಣಂಗಳ ತೋರುವ ಅಜ್ಞಾನವ ಮೀರಿದೆ ಮಧ್ಯಮದಲ್ಲಿ
ಕಪಿಲಸಿದ್ಧಮಲ್ಲಿಕಾರ್ಜುನ/1282
ಪ್ರಾಪಂಚಿಕವ ಮೀರಿ ಪರಮಾಣನ್ಕಗಳೆದು
ನಾದ ಬಿಂದುವಿನ್ಲ ಆಯಾಗಿ
ಮೋದದೊಂದಾಮೋದ ಆನಂದ ಮಧ್ಯಮದ ಭೇದವನು
ಭೇಸುವ
ತಾನು ತಾನೆ ಸೂಕ್ಷ ್ಮದ ಘನತೆಯಲು
ಆನಂದದಾಂದೋಳ ಭೇಸಿಯೆ ಕಂಡೆ ನಾ.
ಶುದ್ಧ ಮಧ್ಯಮದ ಭೇದಕ್ಕ್ಕತೀತನಾ
ಕಪಿಲಸಿದ್ಧಮಲ್ಲೇಶ್ವರನು,
ನಾದ ಬಿಂದುವಿನಲ್ಲಿ ಪೂರ್ಣನಾಗಿ/1283
ಪ್ರಾಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ!
ಕಲ್ಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ!
ಲಿಕ್ತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ!
ಇಂದಿನಿತು ಏಕೆಬಾರದು? ನಾನೇನು ಮಾಡುವೆನು ದೇವಾ!
ಅಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿನಗೆ ಕೂಪ ಅವಸ್ಥೆಯ ಪ್ರಾಣ ಬಿಡದುಲಿ ಕ್ತಬಾರದು
ಎನ್ನನಿಂತಿರಿಸುವರೆ ಹೇಳೆಲೆ ದೇವಯ್ಯಾ./1284
ಫಲ ಪದವನತಿಗಳೆದು
ಹೊಲೆಗಲಸಿ ದಲಗೆಟ್ಟು
ಕುಲವನಾಳಿದವರಾರೊ ಅಯ್ಯಾ.
ನೀ ಸಲ್ಲದಿನ್ನು ನೆಲೆಗಟ್ಟು ಬ್ರಹ್ಮದೊಳಗೆ,
ಅಯ್ಯ, ನಿನ್ನ ಹೊಲೆಗಲಸಿ ಹೊರಗಾದೆ.
ಅಯ್ಯಾ, ದಲವೆ ಫಲವಾಗಿ
ಹೊಲೆಯ ನೆಲೆಯಾದಡೆ
ಒಲವು ತಪ್ಪದು ಕಪಿಲಸಿದ್ಧಮಲ್ಲಿಕಾರ್ಜುನಾ./1285
ಫಲಪದಭವಕ್ಕೆ ತಾರರಯ್ಯಾ ನಿನ್ನ ಧರ್ಮ.
ಫಲಪದದಿಂದ ಭವ, ಆ ಭವದ ನರಕ.
ಇಂತಪ್ಪವನೆನಗೆಯು ಎನ್ನವರಿಗೆಯು ತೋರರಯ್ಯಾ, ನಿನ್ನ ಧರ್ಮ.
ನಾನು ಎನ್ನವರು ನಿನ್ನನೇ ಬೇಡಿಕೊಂಬೆವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1286
ಫಲಪದವನತಿಗಳೆದು ಹಲವು ಸೀಮೆಯ ಮೀರಿ
ಹೊಲಬುಗೆಟ್ಟಾತನ್ಕ ಬ್ರಹ್ಮವಾದ,
ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ
ತನುಗುಣಕೆ ತಾ ದೂರವಾಗಿ.
ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು
ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ./1287
ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ;
ಅವರವನೊಲ್ಲರು!
ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು.
ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು!
ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ?
ನಿನ್ನ ಕೊಡನೆಮ್ಮವರೊಲ್ಲರು ಕಾಣಾ,
ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ/1288
ಫಲವ ಮೀರಿದ ಪದವು, ಪದವ ಮೀರಿದ ಸೀಮೆ,
ಫಲಪದಕೆ ದೂರವಾಗಿಯೆ ಚಿತ್ರಿಸಿ ಕರುಣವ ಹಿಡಿದಾಚಾರ್ಯ
ಕರುಣಶುದ್ಧತೆಯಿಂದ ತರುಣಿಯ ಮಸ್ತಕದ
ಸಿಂಹಾಸನಾ ಕಾಲಕರ್ಮವ ಕಳೆದು
ಬೆಳಗು ಬೆಳಗಿನಲೀಗ ತಿಳಿದ ಬ್ರಹ್ಮಾಂಡದಾ ಸೊಮ್ಮು
ಭಕ್ತಿ ವೀರಮಾಹೇಶ್ವತಿರವು ಆರಿಗಾಗದು ದೇವ,
ಸೋಹಮೆಂಬುದಕ್ಕತ್ಯ್ಕತಿಷ್ಠ ಕಾನನದ
ಕಾವೋದ ಕಂಬನಿಯ ಭಾನು ತಾ ಕಪಿಲಸಿದ್ಧಮಲ್ಲೇಶ್ವರಾ/1289
ಬಂಜೆಯ ಪಶು ತಿಂದಂತಂತಲ್ಲದೆ,
ತಿಂದು ದಂದುಗ ಮಾಡದು ನೋಡಾ.
ಮನೆಯ ಮಂದಿಯ ಅಂದವರಿಯದಯ್ಯಗಳು ಉಂಡಂತಲ್ಲದೆ,
ಉಂಡು ಪರಮರ ಮಾಡಿ ಪರೋಪಕಾರ ತೀರ್ಚರು
ನೋಡಾ ಜಗದ ಜೀವಿಗಳದು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1290
ಬಂದ ದಾರಿ ಬಿಟ್ಟವನೆ ಜೀವನ್ಮುಕ್ತ ;
ಬಂದ ದಾರಿ ಮೆಟ್ಟದವನೆ ಜೀವನ್ಮುಕ್ತ ;
ಬಂದ ದಾರಿಯನರಿಯದವನೆ ಸಕಲ ಸಾಮ್ರಾಜ್ಯಪದಸ್ಥ ;
ಕಪಿಲಸಿದ್ಧಮಲ್ಲಿಕಾರ್ಜುನನವನು./1291
ಬಂದ ಪದಾರ್ಥವ ನೋಡಿ ಹಿಗ್ಗುವನಲ್ಲ ಶರಣ:
ಬಾರದ ಪದಾರ್ಥವನಿಚ್ಛೆ ಸಿ ಕುಗ್ಗುವನಲ್ಲ ಶರಣ.
ಶರಣನ ನಡೆಯೆ ಂಗರೂಪು;
ಶರಣನ ನುಡಿಯೆ ಂಗಪ್ರಸಾದ.
ಪೂಜಿಸಿದಡೆ ಹಷರ್ಿಯಾಗನು, ಪೂಜಿಸರೆ ಕ್ರೋಧಿಯಾಗದು.
ಬೆಳೆಯುವ ಹೊಲ ಪ್ರಾಣಿಮಾತ್ರಕ್ಕಲ್ಲದೆ ತನ್ನೊಳಗಿಲ್ಲ.
ಪೂಜಿಸಿದ ಫಲ ಭಕ್ತಂಗಲ್ಲದೆ ಂಗಕ್ಕಿಲ್ಲ.
ಬಂದ ಪದಾರ್ಥ ಂಗವೆಂದನಲ್ಲದೆ
ಪದಾರ್ಥವೆಂದು ಭಾವಿಸಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣನು./1292
ಬಂದ ಮಹೇಶ ಬಂದಂತೆ ಪೋಪನಲ್ಲ ನೋಡಯ್ಯಾ.
ಬಂದ ಬರವು ಭವಕ್ಕೆ ಆಗರ,
ನಿಂದ ಬರವು ಜ್ಞಾನಕ್ಕೆ ಆಗರ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1293
ಬಂದಯ್ಯಗಳಿಗನ್ನವ ಕೊಟ್ಟೆನೆಂಬವನ ಮುಖವ ನೋಡಲಾಗದು.
ಕೊಡಕ್ಕಾತನೇನು ಅನಾದಿ ಬಸವನೊ?
ತೆಗೆದುಕೊಳಲಿಕ್ಕಾತನೇನು ಅನಾ ಪ್ರಭುವೊ?
ಹೊಲೆದು ಬರುವುದೆಲ್ಲ ಹೊಲೆಪದಾರ್ಥ,
ನಿರುಪಾಧಿಯಿಂದ ಬಂದ ಪದಾರ್ಥ ಶಿವಪ್ರಸಾದ.
ಆ ಪ್ರಸಾದವೆ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗೆ
ಮಹಾ ಆರೋಗಣೆಯಾಯಿತ್ತು!/1294
ಬಂದಲ್ಲುಪಚರಿಸುವುದಲ್ಲದೆ,
ನಿಂದ ನಿಂದಲ್ಲುಪಚರಿಸುವುದು ಭಕ್ತಿಯ ಕೊಂಕು ನೋಡಯ್ಯಾ.
ಉಪಚಾರಕ್ಕೆ ಬಂದಾತ ಜಂಗಮನ ನೋಡಯ್ಯಾ;
ಉಪಚರಿಸಿದವ ಭಕ್ತನಲ್ಲ.
ಅನುಭವಕ್ಕೆ ಬಂದಿಹನಯ್ಯಾ ಜಂಗಮನು,
ಅನುಭವಕ್ಕೆ ಮಾಡುವನಯ್ಯಾ ಉಪಚಾರವ ಭಕ್ತನು,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1295
ಬಂದು ಬಂದು ಹೋಗರಾ, ಮನವೆ.
ನಿಂದು ನಿಂದು ನಡೆಯರಾ, ಮನವೆ.
ಬಂದು ಬಂದು ನೀನಿಂಧುದರ
ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸು, ಮನವೆ./1296
ಬಂದು ಮೂವತ್ತರೊಳು ಸಂದ ಅಕ್ಷರವಾÙರು
ಒಂದಕ್ಕೆ ಅಕ್ಷರವು ಆರು.
ಆರೂನೆಲ್ಲ ಘಟ್ಟಣಿಗೆ ಮುನ್ನ
ಫಲಿತವಾಯಿತು ಮಠವು.
ಮಠದಿಂದ ಮೇಲೆ ತಾಣಕಂಬನಿರುಗೆ
ಕಂಬದಿಂ ಮೇಲೊಪ್ಪಿ ಇಂಬಪ್ಪ ತುಂಬಿಯ
ಶಂಭುವೆಂಬಾ ಕುಸುಮ ವಿಕಾಸವಾಗೆ,
ಅಂಬರದ ಮೇಗ ಬಿಂಬವೆಸೆದುದ ಕಂಡೆ,
ಶಂಭುವೆ ಕಪಿಲಸಿದ್ಧಮಲ್ಲಿಕಾರ್ಜುನಾ/1297
ಬಂದುದದು ಬರ, ಬಾರದದು ಬರ.
ದೇವ ಬರಬಹುದು ಬರಬಹುದೆ?
ಬಲ್ಲವನಾದ ಬಳಿಕ ಬರಬಾರದು ಬರಬಾರದು.
ಬರಬಾರದು ಬಲ್ಲವನಾದ ಬಳಿಕ.
ಕಪಿಲಸಿದ್ಧಮಲ್ಲನ ಮಾಯೆಯ ಎಡೆಯಾಟಕ್ಕೆ./1298
ಬಂದೆ [ಹೆ] ನೆಂದು ಹೇಳಿದ ಬಳಿಕ,
ಬಾರದೆ ಇಪ್ಪನೆ ಹೇಳಾ, ಭಾಳಲೋಚನನು?
ನಿಂದೆಹೆನೆಂದು ನಿರೂಪಿಸಿದ ಬಳಿಕ ನಿಲ್ಲದಿಪ್ಪನೆ!
ಇಂದುಧರ ಬಂದಡೆ ಬಹು ಲೇಸು,
ನಿಂದಡೆ ಎರಡು ಲೇಸು.
[ಬಂದೆಹೆನೆಂದು] ಬಾರ[ದಿದ್ದಡೆ];
ನಿಂತಿ[ದೆಹೆನೆಂ]ದು ನಿಂರದ್ದಡೆ,
ಇಂದು ಈ ಪೂಜೆ ಸಮಾಪ್ತಿ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1299
ಬಂದೊಮ್ಮೆ ಜಪಿಸುವುದಾಗದಿರೆ,
ನಿಂದೊಮ್ಮೆ ನೆನೆಯಬೇಕು ನೋಡಾ, ಮಂತ್ರ ಮೂರನು.
ಬಂದೊಮ್ಮೆ ಜಪಿಸುವುದಾಗದಿರೆ,
ನಿಂದೊಮ್ಮೆ ನೋಡಬೇಕು ನೋಡಾ,
ಕಪಿಲಸಿದ್ಧಮ್ಲಕಾರ್ಜುಲಿಂಗವ./1300
ಬಗೆಬಗೆದು ನೋಡಿದಡೆ ದೇಹವೆಲ್ಲ
ಮೂರು ಮಾತ್ರೆಯಿಂದಾದುವಯ್ಯಾ.
ಸ್ಥೂಲದೇಹ ಅಕಾರಪ್ರಣವ, ಸೂಕ್ಷ್ಮದೇಹ ಉಕಾರ ಪ್ರಣವ,
ಕಾರಣದೇಹ ಮಕಾರಪ್ರಣವ,
ಮೂರು ಮಾತ್ರೆ ಏಕವಾದಲ್ಲಿ ಓಂಕಾರವಾಯಿತ್ತು.
ತತ್ಪ್ರಣವಕ್ಕೆ ಸಾಕ್ಷಿಯಾಗಿ ನಿಂದೆ;
ನಿಂದೆನೆಂಬುದಕ್ಕೆ ಅನಿರ್ವಾಚ್ಯ ಪ್ರಣವವಾದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1301
ಬಡವರ ಭೋಜನ ಭೋಗಿಸಿದವ ಭವಾನೀಪುತ್ರ ನೋಡಯ್ಯಾ.
ಕಡವರನ ಎಡೆಗೊಂಡವ ವಿಷ್ಣುವಿನ ವಂಶದವ ನೋಡಯ್ಯಾ.
ಬಡವರ ಭೋಜನ ಅಮೃತ ಸೇವನೆ;
ಕಡವರನಮೃತ ಸುರಾಪಾನ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1302
ಬಢವ ನಿಧಾನವ ಕಂಡಂತೆ,
ಹಾರುವ ಮಾಳವ ಕಂಡಂತೆ,
ಶಿಶು, ತನ್ನ ತಾಯ ಕಂಡಂತೆ,
ವೀರ ತಾನು ಪರಸೇನೆಯ ಕಂಡಂತೆ,
[ಆನು] ಚೆನ್ನಬಸವಣ್ಣನ ಪಾದವ ನೋಡಿ ಹರುಷಿತನಾದೆ,
ಮಾಡಿ ಮಾಡಿಸಾ ಉಪದೇಶವ, ನೋಡಿ ನೋಡಿಸಾ
ಮಹಿಮೆಯ.
ಇದರದ್ಭುತವೇಕೆಂದಡೆ, ಕೊಡಿಸಾ ಎನ್ನ ಕೈಯಲ್ಲಿ ಇಷ್ಟಲಿಂಗವ,
ಪರಮಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ./1303
ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ.
ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ
ವಾಸನೆ ನಿಂದುಲ್ಲವೆ? ಅಯ್ಯಾ.
ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು
ಭಾವಶುದ್ಧವಾಗಿರ್ಪನು./1304
ಬಯಸರು ಬಯಸರು ಅನ್ಯೋನ್ಯವನು.
ನೀನು ಬಯಸಿದಂತಾಗದದು,
ನಿಬ್ಬಯಕೆಯು ತನುವಿನೊಳಗಳವಡಲು
ಮನ ಮಹಾ ಸಾಯುಜ್ಯಪದವ ಮೀರಿಪ್ಪುದೈ
ಕಪಿಲಸಿದ್ಧಮಲ್ಲಿಕಾರ್ಜುನ./1305
ಬಯಸುವೆನಯ್ಯಾ ನಿನ್ನವರ ಸಂಗವ
ಎಳಸುವೆನಯ್ಯಾ ನಿನ್ನವರ ಸಂಗಕ್ಕೆ
ಬಯಕೆ ಬೇರನ್ಯಕ್ಕೆಳಸದಂತೆ
ಹರುಷಿತನ ಮಾಡಯ್ಯಾ ಭಕ್ತಿಯೊಳಗೆ,
ಕಪಿಲಸಿದ್ಧಮಲ್ಲಿಕಾರ್ಜುನ./1306
ಬರುವ ಮುಂದೆ ಪುರುಷನಿದ್ದೆ; ಬಂದ ಬಳಿಕ ಸ್ತ್ರೀಯಾದೆ;
ಇನ್ನು ಮೇಲೆ ನಪುಂಸಕನಾದೆ.
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಬೇಕೆಂದಲ್ಲಿ
ಪುರುಷನಾದೆ ನೋಡವ್ವಾ, ಎನ್ನ ಹೆತ್ತ ತಾಯೆ!/1307
ಬಲ್ಲಿದ ಬಾಣನ ಬಾಗಿಲ ಕಾಯ್ದರವರು ಭೂತಗಳೇನಯ್ಯಾ?
ಅಪ್ಪ ರೇವಣಸಿದ್ಧ ನೀರುಹೊತ್ತನೆಂಬರು;
ನಮ್ಮ ನೀರು ಹೊರುವವರವರು ಕೂಲಿಕಾರರೇನಯ್ಯಾ?
`ಸರ್ವೆಷಾಂ ಹೃ ಸ್ಥಿತಶ್ಚಂದ್ರಮೌಲೀ’
ಎಂಬ ಶ್ರುತಿವಾಕ್ಯವ ನಂಬು ನಂಬು,
ಕಪಿಲಸಿದ್ಧಮಲ್ಲಿಕಾರ್ಜುನನ ಮುಂದೆ ಎಲೆ ಮನವೆ./1308
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ.
ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ.
ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ.
ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ.
ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ.
ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ.
ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ.
ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ.
ಎನ್ನ ಬಲ್ಲತನಕ್ಕೆ ಮಂಗಳವನೀಯೆ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ
ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ
ಆನು ನಿನ್ನೊಡನೆ ಬಾರದೆ ಉಳಿದುದುಂಟೆ?
ಆನೇನು ಭೇದವಾಗಿಪ್ಪೆನೆಲೆ ಅಯ್ಯಾ.
ಸಂದು ಸವೆದು ಹಂಗು ಹರಿದು
ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ
ಗರುವತನ?
ಕಪಿಲಸಿದ್ಧಮಲ್ಲಿಕಾರ್ಜುನ./1309
ಬಲ್ಲ್ಲ ಲಿಂಗವನು ಸೊಲ್ಲುಗೊಳಿಸಿದನವ್ವಾ
ಎಲ್ಲಾ ಕಳಜ್ಞನನು ತಾನೆನಿಸಿ.
ಸೊಲ್ಲಿನ ಬ್ರಹ್ಮಾಂಡ ಅಲ್ಲಿ ಆವರ್ಚಿಸಲು
ಸಲ್ಲಿತ ಜ್ಞಾನಗುರು ಕಪಿಲಸಿದ್ಧಮಲ್ಲಿಕಾರ್ಜುನಾ./1310
ಬಸವ ಕಾರಣ ವಸುಧೆ, ವಸುಧೆ ಕಾರಣ ಬಸವ,
ಬಸವ ಕಾರಣ ಚೆನ್ನಬಸವ ಬಂದ.
ಬಸವ ಚೆನ್ನಬಸವ ಪ್ರಭು ಶಿವನೆಂಬ ಮಾತೆಯ
ಶಿಶುವಾಗಿ ಜನಿಸಿದೆನಯ್ಯಾ ಕಪಿಲಸಿದ್ಧಮಲ್ಲಿನಾಥಾ.ಚೆನ್ನಬಸವಣ್ಣ/1311
ಬಸವ ಬಸವಾ, ಭವರೋಗ ವೈದ್ಯ,
ಬಸವ ಬಸವಾ, ನಿನ್ನರಿವು ನೀನೆ.
ಬಸವ ಬಸವಾ, ಕಾಲಕಲ್ಪಿತನಷ್ಟ ನೀನೆ.
ಬಸವಾ, ಕಪಿಲಸಿದ್ಧಮಲ್ಲಿನಾಥನಲ್ಲಿ
ನೀನೆಲ್ಲಿ ಅಡಗಿದೆಯೊ ಬಸವಾ./1312
ಬಸವ ಬಾರನು ಬಯಲಳಿದು ಬಯಲಿಗೆ.
ಚೆನ್ನಬಸವ ಬಾರನು ಬಯಲಳಿದು ಬಯಲಿಗೆ.
ನಾ ಬಾರದೆ ಅಯ್ಯಾ, ನಾನೆ ಜಂಗಮ, ನನ್ನ ಗುರುವೆ ಭಕ್ತ,
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1313
ಬಸವಣ್ಣ ಬಸವಣ್ಣ ಭಕ್ತಿ ಬೀಜ ನಷ್ಟ.
ಬಸವಣ್ಣ ಬಸವಣ್ಣ ಬಸವಣ್ಣ ಮುಕ್ತಿಬೀಜ ನಷ್ಟ.
ಬಸವಣ್ಣ ಮೋಕ್ಷವೆಂಬುದು ಮುನ್ನವೆ ಅಡಗಿತ್ತು.
ಬಸವಣ್ಣ ತೋರದೆ ಬೀರದೆ ಹೋದೆಹೆನೆಂಬೆ,
ಮಹಾಜ್ಞಾನಿ ಬಸವಣ್ಣಾ, ನೀನೆಲ್ಲಿಯಡಗಿದೆಯೊ
ಕಪಿಲಸಿದ್ಧಮಲ್ಲಿನಾಥ ಬಸವಾ?/1314
ಬಸವಣ್ಣನ ನೆನೆದು ಮಾಡುವ ಭಕ್ತಿ ನಡೆವುದಯ್ಯಾ;
ಬಸವಣ್ಣನ ನೆನೆಯದೆ ಮಾಡುವ ಭಕ್ತಿ ಎಳತಟವಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ./1315
ಬಸವಣ್ಣನ ಮನೆಯ ಸ್ವಾನಂದ ನೋಡಿದಡೆ,
ಎನ್ನ ಮನ ಬೇಸರವಾಗದೆ
ಶಿವದಾಸನೆಂದು ಜೀವನ್ಮುಕ್ತನೆಂದು ಹೊಗಳುವೆನಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ/1316
ಬಸವಣ್ಣನ ಸಮತೆ ಎನಗಾಗದಯ್ಯಾ.
ಅಯ್ಯಾ, ಲಿಂಗಸ್ಥಲ-ಜಂಗಮಸ್ಥಲ-ಪ್ರಸಾದಸ್ಥಲ ನಿನಗಾಗದಯ್ಯಾ.
ತ್ರಿವಿಧ ಸಕೀಲಸಂಬಂಧವನರಿದಡೆ
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ,
ಇತ್ತ ಬಾ ಎಂದೆತ್ತಿಕೊಳ್ಳನೆ ಅಯ್ಯ!/1317
ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ,
ಬಸವಣ್ಣನೇ ಪರಮಬಂಧುವೆನಗೆ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ./1318
ಬಸವನ ಹಾಡದರ, ಬಸವನ ಹೊಗಳದರ
ಬಸವಾಕ್ಷರತ್ರಯದ ಜಪವಿಲ್ಲದ ದೆಸೆಗೇಡಿ ಮನುಜರ
ಎನ್ನತ್ತ ತೋರದಿರಯ್ಯಾ, ತಂದೆ
ವಿಷಮಾಕ್ಷ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1319
ಬಸವನನು ಹೊಗಳುವವರ, ಬಸವನನು ನೆನೆವವರ,
ಬಸವನನು ಗುರು ಚರ ಇಷ್ಟವೆನಿಪ
ಸದಮಲಜ್ಞಾನಪ್ರಕಾಶ ಸದ್ವರ್ತನರ
ಹೊರೆಯೊಳಗೆನ್ನನಿರಿಸಯ್ಯಾ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1320
ಬಸವನವ ಎರಡನೆಯ ಶಂಭುವೆನ್ನುವರು.
ನಾವು ಮೂರನೆಯ ಶಂಭುವೇನಯ್ಯಾ?
ತನ್ನ ತಾ ತಿಳಿದಲ್ಲಿ ಎರಡನೆಯ ಶಂಭುವೆನಿಸಿದ:
ತನ್ನ ತಾ ಮರೆದಲ್ಲಿ ಮಹೀತಳದ ಮಾನವನೆನಿಸಿದ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1321
ಬಸವನೇ ಮಾತೆಯಯ್ಯ, ಬಸವನೇ ತಾತನಯ್ಯ.
ಬಸವನೇ ಇಹಪರಕೆ ದಾತ, ನಾಥ.
ಬಸವಾಕ್ಷರತ್ರಯದ ಸೋಪಾನವಿಡಿದೀಗ
ತ್ರೈಲಿಂಗಕ್ಕೆ ಆನು ಮೂಲವಾದೆ.
ಬಸವ ಚೆನ್ನಬಸವ ಪ್ರಭುವಿನ ಕರುಣದಿಂದ
ದೆಸೆಯೆರಡುಗೆಟ್ಟೆನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1322
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ.
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ./1323
ಬಹಿರಂಗದದಲ್ಲಿ ಬಿಟ್ಟ ಮಹೇಶರು ಬ್ರಹ್ಮನ ವಂಶದವರು.
ಅಂತರಂಗದ್ಲ ಬಿಟ್ಟ ಮಹೇಶರು ವಿಷ್ಣುವಿನ ವಂಶದವರು.
ಎರಡರಲ್ಲಿ ಬಿಟ್ಟ ಮಹೇಶರು
ಕಪಿಲಸಿದ್ಧಮಲ್ಲಿಕಾರ್ಜುನ-ಮಹಾದೇವಿಯ ಸಂಗದಿಂದ
ಹುಟ್ಟಿದವರು ಕಾಣಾ, ಯೋಗಿನಾಥಾ./1324
ಬಹುಪರಿಯ ಪುಷ್ಪದಲಿ
ಹೊಸಪರಿಯ ಜಲದಲ್ಲಿ ಎಸೆದಿಪ್ಪ
ಲೋಕ ಬ್ರಹ್ಮಾಂಡಗಳ ಮುಸುಕಿಪ್ಪ
ಶಕ್ತಿಯ ಹಸಿಯ ಮಸ್ತಕದಲ್ಲಿ
ಒಸೆದು ಅರ್ಚಿಪನಾತ ಪರಮಯೋಗಿ.
ಸಾಗರದ ಮೇಲಿಪ್ಪ ಯೋಗಪಂಚಮದಲ್ಲಿ
ಭೋಗಿಪನು ನಿತ್ಯತೃಪ್ತನಾಗಿ.
ಮೇಲಿಪ್ಪ ಕಳೆಗಳಲಿ
ತೋರಿಪ್ಪ ಸತ್ವದಲ್ಲಿ
ತಾನಿಪ್ಪನೈ ಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರಾ./1325
ಬಾಣನವನೊಬ್ಬ ಲಿಂಗಪೂಜಕ.
ಮಾದಾರ ಚೆನ್ನಯ್ಯನವನೊಬ್ಬ ಲಿಂಗಪೂಜಕ.
ಈ ಕಪಿಲಸಿದ್ಧಮಲ್ಲಿಕಾರ್ಜುನನ ಮಹಾಮಂದಿರದಲ್ಲಿ
ನಾನೊಬ್ಬ ಲಿಂಗಪೂಜಕ./1326
ಬಾತೆಗೆಟ್ಟ ಬಾಳುವೆಗಳೆಲ್ಲಾ ನಿಮ್ಮ ಹೋಲುವವೆ?
ಬುದ್ಧಿಯ ಕಲಿ ಮಗಳೆ,
ಗುರುವಿನ ಮನದಲ್ಲಿ ಏನಿಹುದು ಅಹಂಗಹುದುವ್ವಾ.
ಬುದ್ಧಿಗೆ ಬುದ್ಧಿ ಲೆಕ್ಕಕ್ಕೆ ಲೆಕ್ಕ ಸರಿಯಾದಡೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಯೋಗ್ಯವಾಗವ್ವಾ./1327
ಬಾರ[ದೆ] ಗಂಡ, ಬಡವಾ[ದೆ]
ಉಣ್ಣ್ಲದ್ವೆ ಗಂಡ, ಉಪವಾಸವಿ[ದ್ದೆ]
ನನ್ನ ಕಣ್ಣ ನೀರು ನಿನ್ನ ಕಣ್ಣ ತಾಗಲೊ
ಕಪಿಲಸಿದ್ಧಮಲ್ಲಿನಾಥಾ./1328
ಬಾರದ ಭವವ ಬಂದೆನುಣ್ಣದುದನುಂಡೆನಯ್ಯಾ;
ನಾನು ಮಾಡಿದುದನು.
ಇನ್ನು ಭವಕ್ಕೆ ಬಾರದಂತೆ ಮಾಡಾ ತಂದೆ.
ಕರ್ಮವನುಣ್ಣದಂತೆ ನಿರೂಪಿಸಯ್ಯಾ,
ಅಯ್ಯಾ ನಿಮ್ಮ ಧರ್ಮ.
ವಿಚಿತ್ರಮೂಲ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಹತ್ತೆ ಸಾರುವ ಮನಕ್ಕೆ ಮಂಗಳವನೀಯಯ್ಯಾ ಗುರುವೆ./1329
ಬಾರಯ್ಯಾ, ಎನ್ನ ಸರ್ವಾಂಗದ ಗಂಡನೆ.
ಬಾರಯ್ಯಾ, ಎನ್ನ ಹೃದಯಕಮಲದಳಾಸನನೆ.
ಬಾರಯ್ಯಾ, ಎನ್ನ ಚಿತ್ತದ ಸೌಂದರನೆ.
ಬಾರಯ್ಯಾ, ಎನ್ನ ಶುದ್ಧ ಸಿದ್ಧ ಪ್ರಸಿದ್ಧ ಪ್ರಾಣೇಶ್ವರನೆ.
ಬಾರಯ್ಯಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ, ಸಂದಿಲ್ಲದೆ./1330
ಬಾಲಕನ ಹಣ್ಣು ಬಾಲಕಂಗಲ್ಲದೆ ಪಿತಂಗೇನೋ ಅಯ್ಯಾ?
ಭಕ್ತನ ಸೊಮ್ಮು ಭಕ್ತಂಗಲ್ಲದೆ,
ನಿರವಯ ನಿರಾಳ ಗುರು-ಲಿಂಗ-ಜಂಗಮಕ್ಕೇನೋ ಅಯ್ಯಾ?
ತನು-ಮನ-ಧನದೊಳಗಾ[ದೆನೆಂ]ಬವನ
ಬೆನ್ನ ಬಾರನೆತ್ತದೆ ಬಿಡುವನೆ, ಕಪಿಲಸಿದ್ಧಮಲ್ಲಿಕಾರ್ಜುನಾ?/1331
ಬಾಲನಾಗಿದ್ದಂದು ಕರೆದು ಎತ್ತಿ ಮ್ದುಕ್ಕಿ
ಮೊಲೆವಾಲಕೊಟ್ಟು ಸಲಹಿದ ಬಸವಾ.
ಮೂಲ ಶಿವಜ್ಞಾನಕ್ಕೆ ದೀಪ್ತಿಯನಿಕ್ಕಿ ಸಲಹಿದ ಬಸವಾ.
ಎನಗೆ ನೀನೆ ಗತಿಯಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ ಬಸವಾ./1332
ಬಾಲರು ಇನಿದ ಮಚ್ಚಿದಂತೆ ನಾ ನಿಮ್ಮ ಮಚ್ಚಿ ಬಿಡುವೆನೆ?
ಮಚ್ಚಿದ ಮನಕ್ಕೆ ತುಚ್ಛ ಬಾರದಂತೆ ಮಾಡು ಕಂಡಾ.
ಎಲೆ ಅಯ್ಯಾ, ಅಯ್ಯಾ, ನಿಮ್ಮ ಧರ್ಮ.
ಸರ್ವರೆಲ್ಲರೂ ಈ ನಿನ್ನವ ನಿನ್ನವನೆಂದೆಂಬರು.
ಎನ್ನ ಮಾನಸ-ವಾಚಕ-ಕಾಯಕದಲ್ಲಿ ನೀನಲ್ಲದೆ ಅನ್ಯವನರಿಯೆ.
`ಭೃತ್ಯಾಪರಾಧ ಸ್ವಾಮಿನೋ ದಂಡ’ ಎಂಬುದುಂಟು.
ನಿನ್ನ ಬಲ್ಲಂತೆ ಸಲಹು ಕಪಿಲಸಿದ್ಧಮಲ್ಲಿಕಾರ್ಜುನಾ./1333
ಬಾವಿಯೊಳಗೊಂದು ಬಾಲಚಂದ್ರನ ಜನನ
ಸ್ಥೂಲಸೂಕ್ಷ ್ಮಕ್ಕೆ ತಾನು ಮೂಲನಾಗಿ,
ಆರೈದುವೋರಂತೆ ಧಾರುಣಿಯ ಸಮನವನು
ತಾನು ನಡೆಸುತ್ತಿಕ್ಕು ಸುಚಿತ್ತದಿಂದ,
ಆ ಚಿತ್ತವನು ಮನವನು ಮತ್ತೆ ಸ್ವಸ್ಥಾನದ
ಹತ್ತೆ ಸಾರಿಸಿದಾತ ನಿತ್ಯನಾ ಮತ್ತೆ,
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ
ಚಿತ್ತವೆಲ್ಲವೂ ನಿಶ್ಚಿತ್ತವಾಗಿ./1334
ಬಿಂದು ಕೂಟವು ತಾನು ಒಂಬತ್ತು ಪರಿಯಾಗೆ
ಒಂಬತ್ತು ವಿಧದಲ್ಲಿ ಒಸರಿವರಿದು
ಶಂಭುವಿನ ಮಸ್ತಕದ ಇಂಬಪ್ಪ ಸಸಿಗವು
ತುಂಬಿ ಒಸರುವರೆ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ/1335
ಬಿಟ್ಟ ಪದವಿಯ ಬಟ್ಟೆಗೆ ಪೋಪಾತನಲ್ಲ ನೋಡಾ, ಶರಣನು.
ಬಿಟ್ಟು ಬಿಟ್ಟು ಬಯಟ್ಟು ಅಟ್ಟೆಬಟ್ಟೆಗೊಂಡರು ಭವಕ್ಕೆ.
ಹಿಡಿದು ಹಿಡಿದು ಭವಕ್ಕೆ ಬಾರದೆ ಭವವಿರಹಿತರಾದರು
ಕಂಡೆಯಾ,
ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಮಹಾಮಹಿಮ ಶರಣರು./1336
ಬಿಟ್ಟು ಮಹೇಶನಾದೆನೆಂಬುದು ಅರುಹಿನ ಕೇಡು.
ಹಿಡಿದು ಭಕ್ತನಾದೆನೆಂಬುದು ನಿಜದ ಕೇಡು.
ಬಿಡುವುದು ಹಿಡಿವುದು ಮನಃಕ್ಪತವಲ್ಲದೆ,
ಕಲ್ಪನಾರಹಿತ ಭಕ್ತ-ಮಹೇಶರಲ್ಲಿಪ್ಪುದೇನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1337
ಬಿನ್ನಾಣ ದೇಹವನು ತನ್ನಮಯ ಮಾಡಿದನು
ಉನ್ನತೋನ್ನತ ಲಿಂಗವನು ತೋರಿ
ಫಲಪದವ ಹೊದ್ದದ ಹಾಂಗೆ ಮಾಡಿದನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1338
ಬಿಳಿಯ ತತ್ತಿಯೊಳಗೆ ಹಲವು ಬ್ರಹ್ಮಾಂಡವೈ,
ಒಲವಿಂದಪ್ಪವವು ಸಮತೆ.
ತಾಯ ಹಲವು ತತ್ತಿಯನಿಟ್ಟು
ಮರಳಿ ಆಡುತ್ತಿಪ್ಪುದದು ಕರುಣ ಸಮತೆಯ ಸಾಕ್ಷಿಯೆನಿಪ ಭಕ್ತಿ.
ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು
ಇಂಥ ಸಕಲವನು ಧರಿಸಿ ಶರಣರ ಕರದಲಿ./1339
ಬಿಳಿಯಗಿರಿ ತಳವೆಳಗಾಗಿ ಬೆಳೆಯೆ ಅನುವಿಡಿದು ಸುಖವ ಕಂಡು
ಅನುಭವದವಳಿಗೆ ಮಿಂಚುವರ್ಣ ಸುಖವನೇಕೀಕರಿಸಿ ನೋಡಲು
ಅನುವಾಯಿತ್ತಯ್ಯಾ ಬೆಳ್ಪಿನ ಹದಿನಾರೆಸಳ ಪೀಠ.
ಆ ಪೀಠದಲ್ಲಿ ಸಜ್ಜನನೆಂಬವ ನಿಂದು ಪ್ರಸಾದವಿಡಿದು ನಡೆಯೆ
ವ್ಯೋಮದ ಗುಣ ಕೆಟ್ಟು ನೆಲೆಗೊಂಡನಯ್ಯಾ
ನಿಮ್ಮ ಶರಣ ಚೆನ್ನಬಸವಣ್ಣನು.
ಕಪಿಲಸಿದ್ಧಮಲ್ಲಿನಾಥಯ್ಯಾ,
ಚೆನ್ನಬಸವಣ್ಣನಿಂದ ಬದುಕಿದೆನು./1340
ಬೀಜವೊಂದರಲ್ಲಿ ಐದು ಬೀಜಂಗಳ ಕಂಡೆ.
ಐದನೆಯ ಬೀಜದಿಂದಾರಯ್ಯಲು ಬೀಜವೊಂದೆ ಕಂಡೆ.
ಮತ್ತೈದನೆಯ ಬೀಜದಿಂದಾರಯ್ಯಲು ಐದು ಬೀಜವ ಕಂಡೆ.
ಇದರಂದವನರುಹಾ, ಕಪಿಲಸಿದ್ಧಮಲ್ಲಿಕಾರ್ಜುನಾ./1341
ಬೀಜವೊಂದರಲ್ಲಿ ಸೋಜಿಗದ ಮೂರ್ಕು
ಮಾಡುವ ಬುದ್ಧಿಯೊಳೈದಾನೆ ನೋಡವ್ವಾ.
ಬೀಜವ ನೋಡಿದಡೆ ತಾನು ಬೀಜ.
ಅದರಲ್ಲಿಯ ಸೋಜಿಗನು ತಾನು ಮಾಡುವ ಬುದ್ಧಿ
ತಾ ಎನಬಾರದು, ಮಾಯೆ ಎನಬಾರದು.
ಇವರಿರ್ವರಲಿ ಜೂಜು ಇಟ್ಟು ಚಸುತ್ತದೆ ನೋಡವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬೆ ಮಹಾವಸ್ತುವವ್ವಾ./1342
ಬೀಸುವ ಗಾಳಿ ಧೂಳಿಯನೆತ್ತಲು
ಮಸುಳಿದನೆ ಸೂರ್ಯನು?
ಆ ಸೂರ್ಯನಂತೆ ಬೆಳಗುತ್ತಿರವೇಡಾ!
ಹಿರಿಯರ ಮನವು ಮನವಿಚ್ಛಂದವಾಗದೆ
ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತೆಯ ಗುಣ
ಎನ್ನನೆಂದು ಪೊದ್ದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ./1343
ಬೆಟ್ಟವ ನೆಮ್ಮಿ ಕಟ್ಟಿಗೆಯ ತಳುವದು ಅದಾವಚ್ಚರಿ!
ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವುದು ಅದಾವಚ್ಚರಿ!
ಪರಕಾಯವ ತೊಟ್ಟಿದ್ದಲ್ಲಿ ಅಚ್ಚರಿ ಅರಿಬಿರಿದೆ.
ನಿಮ್ಮುವ ಕಾರುಣ್ಯವಾಗಿದ್ದ್ಲ ಎನಗೆಲ್ಲಿಯೂ ಸುಖ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ
ಪ್ರಭುದೇವರಿಂದ ಬದುಕಿದೆ./1344
ಬೆರಸಿ ಬೆಚ್ಚಾತನ ಕಂಡೆನೆಂಬೆನಯ್ಯಾ;
ಆತನ ಬಟ್ಟೆಯ ಕಾಣೆ ನೋಡಯ್ಯಾ.
ಶರೀರವಿಡಿದಿಪ್ಪ ಶತಕೋಟಿ ಜೀವಂಗಳ ಭೇದವನರಿಯೆನು;
ನಿಮ್ಮ ನಾನೆತ್ತ ಬಲ್ಲೆನಯ್ಯಾ?
ನೀವು ಮಾಡಿದ ಬೆಂಬಳಿಯಲ್ಲಿ ಹೊರೆಗಾಣಲಾಪೆನಲ್ಲದೆ
ನಾ ಬೇರೆ ಕಾಂಬುದು ಹುಸಿ!
ನೀ ತೋರಯ್ಯಾ ಎನಗೆ, ಕಪಿಲಸಿದ್ಧಮಲ್ಲಿನಾಥಯ್ಯಾ/1345
ಬೆಳಗು ಬೆಳಗು ಹಳಚುವಲ್ಲನ ಕತ್ತಲೆ ಉಳಿಯಬಲ್ಲುದೆ ಅಯ್ಯಾ ?
ಶರಣರು ಮಹಾನುಭಾವ ಗೋಷ್ಠಿಯ ಮಾಡುವಲ್ಲಿ,
ಸಂಗದೊಳಿರ್ದವರ ಅಜ್ಙಾನವಳಿದು ನಿಜವನೈದುವರಯ್ಯಾ.
ನಿಮ್ಮ ಮಹಾನುಭಾದ ಸೋಂಕಿನ ಸೆರಗಿನೊಳಗಿರ್ದು
ನಾನು ಪರಮಸುಖಿಯಾಗಿ ಮಡಿವಾಳನ ಪಾದದಲ್ಲಿ
ಮನ ಮಗ್ನವಾದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ./1346
ಬೇಕು ಬೇಡೆನ್ನದೆ, ಸಾಕು ಸವಿಯೆನ್ನದೆ,
ಆಕಾರವಿದು ತಾನು ಒಲ್ಲೆನೆನದೇಕೈಕ ರುದ್ರ ನಾನಾದೆನು ಎನ್ನದೆ,
ಅನೇಕ ಪರಿಯಿಂ ಭಜಿಸು ಸಮತೆ ಪದವಾ.
ಆ ಪದದ ಫಲದಿಂದ ನೀ ತಾನೆ ಅಪ್ಪೆಯೈ
ಏಕೆ ಭ್ರಾಂತಪ್ಪೆಯೈ.
ಗುರು ಕರುಣವು ತನ್ನ ಪದವನೆಯ್ದಿತ್ತು,
ನಿನ್ನ ಭವನಾಶವನು ಮುನ್ನವೆ ಮಾಡೂದು
ನಂಬು ಕಪಿಲಸಿದ್ಧಮಲ್ಲೇಶನಾ./1347
ಬೇಡ ಬೇಡಯ್ಯ ಕಾಡಲಾಗದು ಎನ್ನ
ರೂಢೀಶ ನೀನೆನ್ನ ತಡಿಗೆ ಚಾಚಾ.
ಗಾಡಿಗತನದಿಂದ ನೋಯಿಸಿದಡೆ
ನೋಡಿ ಮೊರೆಯಿಡುವೆನೈ ಬಸವಣ್ಣಂಗೆ.
ಆರೂಢನೆ ನಿಮ್ಮ ಗಾರುಮಾಡಿಸುವರೆಮ್ಮವರಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1348
ಬೇಡಲಾಗದು ಜಂಗಮ, ಬೇಡಿಸಲಾಗದು ಭಕ್ತ.
ಬೇಡಿದವ ನೋಡರೆ, ಬೇಡ ಬೇಡ ಭಕ್ತಿಯ ಆಡಂಬರವ,
ಮೃಡಮ್ಕರ್ೂ ಕಪಿಲಸಿದ್ಧಮಲ್ಲಿಕಾರ್ಜುನಾ./1349
ಬೇಡಿ ಉಂಡವ ಬೇಡದುದ ಬೇಡನೆ ಅಯ್ಯಾ?
ಬೇಡಲಾರದವ ಬೇಡದುದ ಬೇಡನಯ್ಯಾ.
ಕಾಡಿದ ಜಂಗಮ ಈಡಾಡಿದನಯ್ಯಾ ಭಕ್ತನ.
ಬೇಡದ ಜಂಗಮ ಭಕ್ತನ ಕೂಡಿಕೊಂಡ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1350
ಬೋಧವೆಂದಡೆ,
ಕರ್ಣವನೂ ಮಂತ್ರವ ಹೇಳಿದುದು ಭೋಧವೆ? ಅಲ್ಲಲ್ಲ!
ಬೋಧವೆಂದಡೆ,
ತನುತ್ರಯಸಾಕ್ಷಿ ನೀನೆ ಪರವಸ್ತು ಎಂಬುದೆ ನಿಜಬೋಧ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./1351
ಬ್ರಹ್ಮ ಪೂಜಿಸುವ, ವಿಷ್ಣು ಪೂಜಿಸುವ, ಇಂದ್ರ ಪೂಜಿಸುವ,
ರವಿ ಪೂಜಿಸುವ, ಚಂದ್ರ ಪೂಜಿಸುವ-
ಅಂದಂಂಗೆ ಬಂದ ಸುಖದುಃಖಗಳನುಣ್ಕಪ್ಪರು.
ಅದು ಕಾರಣ, ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ.
ಪ್ರಾಸಾದಂಗಪ್ರಾಣಿಗಳಿಗೆ ಭವವಿಲ್ಲ, ಸಂದಿಲ್ಲ ;
ಇದು ನಿಶ್ಚಯ, ನಂಬು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಾಣೆ./1352
ಬ್ರಹ್ಮನ ಪೂಜಿಸಿ ಸೃಷ್ಟಿಗೊಳಗಾಗುವುದ ಬಲ್ಲೆ.
ರುದ್ರನ ಪೂಜಿಸಿ ಲಯಕ್ಕೊಳಗಾಗುವುದ ಬಲ್ಲೆ.
ನಮ್ಮಿಷ್ಟಲಿಂಗಮೂರ್ತಿಯ ಪೂಜಿಸಿ ಲಿಂಗವಾಗಿ
ಸರ್ವವಳಿವುದ ಬಲ್ಲೆ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1353
ಬ್ರಹ್ಮನಾದಡಾಗಲಿ, ವಿಷ್ಣುವಾದಡಾಗಲಿ,
ಇಂದ್ರನಾದಡಾಗಲಿ, ಚಂದ್ರನಾದಡಾಗಲಿ,
ಎಮ್ಮ ಶಿವಶರಣರ ನೋವು ಎನ್ನ ನೋವು ನೋಡಾ.
`ಅವರನೊರಸುವೆನುರುಹುವೆ’ಯೆಂದು
ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ನೊಸಲ ಕಣ್ಣಿಂಗೆ ಬೆಸನನಿತ್ತಡೆ,
ನಿಲಬಲ್ಲ ಗರುವರನಾರನೂ ಕಾಣೆ./1354
ಬ್ರಹ್ಮಾಂಡಂಗಳಿಂದತ[ತ್ತ]್ವಲಾದ ಆದ್ಯಕ್ಷರದ
ಭೇದವ ಭೇದಿಸಿ ಸಾದಾಖ್ಯ ತತ್ತ್ವವನತಿಗಳೆದು
ಶುದ್ಧ ಸಿದ್ಧ ಪ್ರಸಿದ್ಧ ಪಂಚಮಬ್ರಹ್ಮಕ್ಕೆ ಸೊಮ್ಮಾದ
ಆರುವರ್ಣಂಗಳ ಐವತ್ತೆರಡಕ್ಷರದ
ಆನಂದಸ್ಥಾನವ ಬಲ್ಲಾತ ಗುರು.
ಇಪ್ಪತ್ತೈದಕ್ಷರದ ಹತ್ತೆ ಹೊದ್ದಪ್ಪ ಪರಮಗುರುವೆ
ನೀನು ಶಿಷ್ಯ ಕಾರಣ ಪರಶಿವಮೂರ್ತಿ ಗುರುರೂಪಾದೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1355
ಬ್ರಾಹ್ಮಣನ ಉತ್ಪತ್ತಿ ಸದ್ಯೋಜಾತಮುಖದಿಂದಾಯಿತ್ತು.
ಕ್ರಿಯನ ಉತ್ಪತ್ತಿ ವಾಮದೇವಮುಖಂದಾಯಿತ್ತು.
ವೈಶ್ಯನ ಉತ್ಪ್ಕ್ತ ಅಘೋರಮುಖಂದಾಯಿತ್ತು.
[ಶೂದ್ರನ ಉತ್ಪತ್ತಿ ತತ್ಪುರುಷಮುಖಂದಾಯಿತ್ತ್ವು.]
ಲಿಂಗಾಂಗಿಯ ಉತ್ಪ್ಕ್ತ ಈಶಾನ್ಯಮುಖಂದಾಯಿತ್ತು.
ಪ್ರಮಥರ ಉತ್ಪ್ಕ್ತ ನಿರಂಜನ ಪ್ರಣವದ ಘೋಷವುಳ್ಳ
ಕಪಿಲಸಿದ್ಧಮಲ್ಲಿಕಾರ್ಜುನನ ಗೋಪ್ಯಮುಖಂದಾಯಿತ್ತು
ನೋಡಾ, ಕಲ್ಲಯ್ಯಾ./1356
ಭಕ್ತ ತಾನಾದ ಬಳಿಕ ಪಂಚಮುದ್ರೆಗಳಿಂದಲಂಕೃತನಾಗಿರಬೇಕು.
ಅಲಂಕಾರಿ ತಾನಾದ ಬಳಿಕ ಶಿವಮುದ್ರೆ ಶಿವಭಾವ
ಅಚ್ಚೊತ್ತಿರಬೇಕು.
“ಗುರೌ ಲಿಂಗೇಕ್ಷಮಾಲಾಯಾಂ ಮಂತ್ರೇ ಭಸ್ಮನಿ ಪಂಚಸು
ಏತಾಸು ಶಿವಮುದ್ರಾಸು ಶಿವಸದ್ಭಕ್ತಿಮಾಚರೇತ್||’
ಎಂದು ವಾತುಲಾಗಮದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ
ವಚನವುಂಟು, ನೋಡಾ ಕೇದಾರಯ್ಯಾ/1357
ಭಕ್ತ ಭಕ್ತನ ಕಂಡಲ್ಲಿ ಕೈಮುಗಿವುದೆ ಭಕ್ತಸ್ಥಲ.
ಜಂಗಮ ಜಂಗಮವ ಕಂಡಲ್ಲಿ ಶರಣೆಂಬುದೆ ಜಂಗಮಸ್ಥಲ.
ಭಕ್ತ ಜಂಗಮ ಎಂದು ಬೇರುಂಟೆ ?
ರಸದಂತೆಡ ಭಕ್ತ, ರುಚಿಯಂತೆ ಜಂಗಮ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1358
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು
ಹೆಸರಿಟ್ಟುಕೊಂಬಿರಿ.
ಆರು ಪರಿಯಲ್ಲಿ ಆರಾದವನರಿಯಿರಿ.
ಭಕ್ತನಾದಡೇಕೆ ಭವದ ಬೇರು?
ಮಾಹೇಶ್ವರನಾದಡೇಕೆ ಪ್ರಳಯಕ್ಕೊಳಗಿಹ?
ಪ್ರಸಾದಿಯಾದಡೇಕೆ ಇಂದ್ರಿಯವೈದ ಅನಿಗ್ರಹಿಯಾಗಿಹ?
ಪ್ರಾಣಲಿಂಗಿಯಾದಡೇಕೆ ಉತ್ಪತ್ತಿ ಸ್ಥಿತಿ ಲಯಕೊಳಗಾಗಿಹ?
ಶರಣನಾದಡೇಕೆ ಉಪಬೋಧೆಗೊಳಗಾಗಿಹ?
ಐಕ್ಯನಾದಡೇಕೆ ಇಹ-ಪರವನರಿದಿಹ?
ಇವೆಲ್ಲ ಠಕ್ಕ, ಇವೆಲ್ಲ ಅಭ್ಯಾಸ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ನಿಮ್ಮ ಷಡುಸ್ಥಲವಭೇದ್ಯ!/1359
ಭಕ್ತಂಗೆ ಜಂಗಮಂಗೆ
ರೂಪದಿಂದ ಭೇದವೊ, ಆಚರಣೆಯಿಂದ ಭೇದವೊ ? ಅಲ್ಲಲ್ಲ.
ಭಕ್ತನಾದರೊ, ಮೂರಕ್ಕೆ ಒಳಗು ;
ಜಂಗಮವಾದರೊ, ಮೂರಕ್ಕೆ ಹೊರಗು.
ಒಳಗಾದವರಿಗೆ ಹೊರಗಾದವರ ಪಾದೋದಕವಲ್ಲದೆ
ಒಳಗಾದವರ ಪಾದೋದಕ ಸಲ್ಲದು.
ತೆಗೆದುಕೊಂಡವರಿಗೆ ನರಕ ತಪ್ಪದು ;
ಕೊಟ್ಟವಂಗೆಯೂ ಭವ ಹಿಂಗದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1360
ಭಕ್ತಂಗೆ ಭಕ್ತಿಯೆ ಲಿಂಗಾರ್ಚನೆ;
ಮಹೇಶಂಗೆ ಜ್ಞಾನ ವೈರಾಗ್ಯವೆ ಲಿಂಗಾರ್ಚನೆ.
ಪ್ರಸಾದಿಗೆ ಸಮದೃಷ್ಟಿಯೆ ಲಿಂಗಾರ್ಚನೆ;
ಪ್ರಾಣಲಿಂಗಿಗೆ `ಪಂಚಪ್ರಾಣಾಃ’ ಎಂಬುದೆ ಲಿಂಗಾರ್ಚನೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1361
ಭಕ್ತಂಗೆ ಲಿಂಗಪೂಜೆ ಜಂಗಮದಾಸೋಹ ವಿಘ್ನವಯ್ಯಾ.
ಮಹೇಶಂಗೆ ವಿಷಯಂಗಳಳಿವುದೆ ವಿಘ್ನವಯ್ಯಾ.
ಪ್ರಸಾದಿಗೆ ನಿರ್ಮಲ ಮನಸ್ಸಾಗುವುದೆ ವಿಘ್ನವಯ್ಯಾ.
ನಿರ್ವಿಘ್ನರಾದವರನೊರ್ವರು ಕಾಣೆ
ನಿರ್ವಯಲ ನಿಜಾನಂದದರುಹಿನ ಕುರುಹ ಬಿಟ್ಟು,
ಕಪಿಲಸಿದ್ಧಮಲ್ಲಿಕಾರ್ಜುನ ಮಹಾದೇವನಲ್ಲಿ./1362
ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ, ಬಳ ದೊರಕಿಸುವುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1363
ಭಕ್ತನಾಗಿ ಭಕ್ತಿಯ ಮಾಡುವುದದು ಲೇಸಯ್ಯಾ;
ಶಕ್ತಿಯಿಲ್ಲದಿರೆ ತಮ್ಮ ಪಾದಕೃಪೆ ಇಷ್ಟವೆಂಬುದದು ಬಹು
ಲೇಸಯ್ಯಾ.
ಮಹೇಶನ ಮಲತ್ರಯವಳಿವುದು ದುರ್ಲಭ ಕಂಡಯ್ಯಾ,
ಚರಿಸಿ ಚರಿಸಿ ಜಗವನ್ನುದ್ಧರಿಸುವುದು ಬಹು ದುರ್ಲಭ
ಕಂಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1364
ಭಕ್ತನಾಗಿ ಭಕ್ತಿಯಿಲ್ಲದವ ಶಿವದ್ರೋಹಿ ನೋಡಾ, ಮನವೆ.
“ಯೋ ಭಕ್ತೋ ಭಕ್ತಿಮಾನ್ ಲೋಕೇ ಭೇದಂ
ಮೋಹಾತ್ಕರೋತಿ ಹಿ|
ಶಿವದ್ರೋಹೀ ಸ ವಿಜ್ಞೇಯಸ್ಸರ್ವಕರ್ಮಬಹಿಷ್ಕೃತಃ||’
ಎಂಬ ವಾಕ್ಯ ಪಾಲಿಸಿದೆ ನೋಡಾ, ಮನವೆ.
ಎನ್ನ ಗುರು ಚೆನ್ನಬಸವ ಕಪಿಲಸಿದ್ಧಮಲ್ಲಿಕಾರ್ಜುನನಿಂದೆ,
ಮನವೆ. /1365
ಭಕ್ತನಾಗಿ ಮಲತ್ರಯಂಗಳೊಳಾಳುವುದು ಲೇಸು ಕಂಡೆಯಾ, ಮನವೆ;
ಜಂಗಮವಾಗಿ ಮಲತ್ರಯಂಗಳಳಿವುದು ದುರ್ಲಭ ಕಂಡೆಯಾ, ಮನವೆ;
ಭಕ್ತ ಮಹೇಶ ಪ್ರಸಾದಿಸ್ಥಲತ್ರಯಂಗಳ ಮೀರಿ,
ಪ್ರಾಣಲಿಂಗಿಸ್ಥಲದಲ್ಲಿ ನಿಂದೆಯಲ್ಲಾ, ಮನವೆ.
ಇನ್ನು ಮೈದೆಗೆದು ತಿರಿದುಂಡಡೆ, ಬೆನ್ನ ಬಾರನೆತ್ತುವ ನೋಡಾ, ಮನವೆ;
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಭೂಪಾಲನು./1366
ಭಕ್ತನಾದ ಬಳಿಕ ಜಂಗಮ ಮೆಚ್ಚಬೇಕು;
ಜಂಗಮವಾದ ಬಳಿಕ ಭಕ್ತ ಮೆಚ್ಚಬೇಕು,
ಭಕ್ತನ ಕಾಯವೆ ಜಂಗಮದ ಕಾಯ;
ಜಂಗಮದ ಕಾಯವೆ ಭಕ್ತನ ಕಾಯ;
ಕಪಿಲಸಿದ್ಧಮಲ್ಲೇಶಯ್ಯನಲ್ಲಿ ಇದೆ ಉಪಾಯ./1367
ಭಕ್ತನಾದ ಬಳಿಕ ಜಂಗಮದ ಗುಣವನರಸಲೇಕೊ?
ಮಹೇಶನಾದ ಬಳಿಕ ವಿಷಯಕ್ಕೆಳಸುವುದದೇಕೊ?
ಪ್ರಸಾದಿಯಾದ ಬಳಿಕ ಕಂಡುದಕ್ಕೆ ಕೈದುಡುಕುವುದೇಕೋ?
ಪ್ರಾಣಲಿಂಗಿಯಾದ ಬಳಿಕ ಪ್ರಪಂಚದ ಹಂಗದೇಕೊ?
ಶರಣನಾದ ಬಳಿಕ ಮೋಕ್ಷದ ಹಂಗೇಕೊ?
ಐಕ್ಯನಾದ ಬಳಿಕ ಕಪಿಲಸಿದ್ಧಮಲ್ಲಯ್ಯನ ನಾಮಸ್ಮರಣೆಯದೇಕೊ?/1368
ಭಕ್ತನಾದ ಬಳಿಕ ಭಕ್ತಿವಿಡಿದಾಚರಿಸುವುದೆಂತಯ್ಯಾ?
ಭಕ್ತ ತಾನಾದ ಬಳಿಕ ಭಕ್ತಿಯ ಹೊಲಬನರಿಯಬೇಕು.
ಭಕ್ತ ತಾನಾದ ಬಳಿಕ ಜ್ಞಾನಕ್ರಿಯಾವಿವರವ ವಿಚಾರಿಸಿ,
ನೋಡಬೇಕು.
ಭಕ್ತ ತಾನಾದ ಬಳಿಕ ಅರುಹಿನ ಕುರುಹುವಿಡಿದಾಚರಿಸಬೇಕು.
ಭಕ್ತ ತಾನಾದ ಬಳಿಕ ತಾಪತ್ರಯಕ್ಕೊಳಗಾಗದೆ,
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ ಹೊಂದಲೇಬೇಕು./1369
ಭಕ್ತನಾದ ಬಳಿಕ ಭಕ್ತಿಸ್ಥಲವಳವಡುವುದೆ ದುರ್ಲಭ.
ಮಹೇಶನಾದ ಬಳಿಕ ಮಹೇಶಸ್ಥಲವಳವಡುವುದೆ ದುರ್ಲಭ.
ಭಕ್ತಸ್ಥಲ ಬಸವಣ್ಣಂಗಾಯಿತ್ತು;
ಮಹೇಶಸ್ಥಲ ಚೆನ್ನ ಬಸವಣ್ಣಂಗಾಯಿತ್ತು.
ಮೀರಿದ ಸ್ಥಲ ನಮ್ಮ ಪ್ರಭುವಿಂಗಾಯಿತ್ತು.
ಕಪಿಲಸಿದ್ಧಮಲ್ಲಯ್ಯ, ಎನಗಿನಿತೊಂದೊರೆವ ಪರಿ ?/1370
ಭಕ್ತನಾದ ಬಳಿಕ ವಿರಕ್ತಿಯ ನೋಡಿ ಆಚರಿಸುವುದಲ್ಲದೆ,
ಭಕ್ತಿ ಲಕ್ಷ ್ಯಕ್ಕೆ ಮೈಗೊಡುವುದೆಂತಯ್ಯಾ?
ಭಕ್ತನಾದಡೆ ವಸ್ತ್ರಾನ್ನಕ್ಕೆ ಭಕ್ತನಲ್ಲದೆ,
ಸಾಮರಸ್ಯಕ್ಕೆ ಭಕ್ತನೆ ಅಯ್ಯಾ?
“ಭಕ್ತಸಂಪನ್ನಭಕ್ತೋಪಿ ದೃಷ್ಟಾ ್ವ ಗುಣಗಣಾನಿ ವೈ|
ಸ್ವೀಕಾರಯೇಜ್ಜಂಗಮಸ್ಯ ಪಾದೋದಕಮಹನರ್ಿಶಂ||’
ಎಂಬ ವಾಕ್ಯವದು ಅಬದ್ಧವೇನಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./1371
ಭಕ್ತನಾದ ಬಳಿಕ, ಅವರಿವರೆನ್ನದೆ ಮಾಡುವುದಯ್ಯಾ ಪ್ರಸಂಗವ.
ಭಕ್ತನಾದ ಬಳಿಕ, ಅವರಿವರೆನ್ನದೆ ಶರಣೆಂದು ಮನ್ನಿಸುವುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1372
ಭಕ್ತನಾದಡೆ ಬಸವಣ್ಣನಂತಾಗಬೇಕು,
ಜಂಗಮವಾದಡೆ ಪ್ರಭುವಿನಂತಾಗಬೇಕು.
ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು.
ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1373
ಭಕ್ತನಾದಡೇನು, ಮಹೇಶನಾದಡೇನು?
ಮೊದಲಲ್ಲಿ ಶಕ್ತಿಯ ಜಪವೆ ಜಪ ನೋಡಾ.
ಭಕ್ತನಾದಡೇನು, ಮಹೇಶನಾದಡೇನು?
ಕಡೆಯಲ್ಲಿ ಶಿವನ ಜಪವೆ ಜಪ ನೋಡಾ.
ಜಪ ರೀತಿ, ಜಪ ಲಕ್ಷಣ, ಜಪ ಪ್ರಣವಂಗಳರಿಯದೆ,
ತಾಪತ್ರಯಕ್ಕೊಳಗಾಗಿ ಭವಕ್ಕೀಡಾದರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1374
ಭಕ್ತನಾದುದಕ್ಕೆ ಇದೆ ಚಿಹ್ನವು ನೋಡಾ, ಎಲೆ ದೇವಾ.
ಕೈಯಲ್ಲಿರಲು ಮಾಂಸದ ಮುದ್ದೆ,
ಬಾಯಲ್ಲಿರಲು ವಾರಾಂಗನೆಯ ತಾಂಬೂಲ,
ಮನದಲ್ಲಿರಲು ಕ್ಕ್ರಯ ಭಾವ,
ಕೊರಳಲ್ಲಿರಲು ಲಿಂಗ, ದೇಹದಲ್ಲಿರಲು ಲಿಂಗಲಾಂಛನ,
ಜಂಗಮವೆಂದು ನಂಬುವುದು ಕಾಣಾ,
ಕಪಿಲಸಿದ್ಧಮಲ್ಲಿನಾಥಾ./1375
ಭಕ್ತನು ಭಕ್ತಿಯಿಂದರ್ಪಣ ಮಾಡಿಸುವಡೆ,
ಭಕ್ತಂಗೆ ಭಕ್ತಶ್ಥಲ.
ಜಂಗಮನು ಆ ಭಕ್ತನ ಭಕ್ತಿಯ ವಹಿಸಿ ಪಾದೋದಕ ಕೊಡುವುದೆ
ಆ ಜಂಗಮಕ್ಕೆ ಭಕ್ತಸ್ಥಲ.
ಭಕ್ತಂಗಾಗಲಿ, ಜಂಗಮಕ್ಕಾಗಲಿ ಭಕ್ತಿಯೆ ಬೇಕು.
ಭಕ್ತಿಯಿಲ್ಲದೆ ಮೆರೆವವರು ಭಕ್ತರಲ್ಲಾ ಜಂಗಮರಲ್ಲಾ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1376
ಭಕ್ತರ ನುಡಿ ಅಭವನಲ್ಲದೆ
ಅನ್ಯವ ನುಡಿಯದು, ಅನ್ಯಕೆ ಎಡೆಯಾಗದು.
ಆತನ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ
ಪಂಚೇಂದ್ರಿಯಂಗಳು ಆತನ ಐದು ಮುಖಂಗಳಯ್ಯಾ!
ಆತ ಪತಿ, ಆತ ಸತಿ: ಆತನ ಕರಣಂಗಳೆಲ್ಲವು ಈಶನ ಉಪಕರಣಗಳು.
ಆತನ ಕರಣಂಗಳೆಲ್ಲವು ಈಶನ ಹೇಮಶೈಲ.
ಆತ ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣ,
ಆತಂಗೊಂದೂ ಇದಿರಿಲ್ಲ; ಆತ ಲೋಕಕ್ಕೆ ಉಪದೇಶಿಕ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ತಾತ್ಪರ್ಯ ಭಕ್ತಿ./1377
ಭಕ್ತರಿಪ್ಪರು ಮೂಲೋಕದಲ್ಲಿ ;
ಮಹೇಶರಿಲ್ಲ ಲೋಕಲೋಕದಲ್ಲಿ
ಮಹೇಶರಿಪ್ಪರು ಎಮ್ಮ ಪ್ರಮಥರಲ್ಲಿ ;
ಮಹಾಶಾಂತರಿಲ್ಲ ನೋಡಾ, ಕಲಿಕಲ್ಮಿಷದಲ್ಲಿ,
ಕಪಿಲಸಿದ್ಧಮಲ್ಲಿಕಾರ್ಜುನಾ./1378
ಭಕ್ತರು ಭಕ್ತಿವಿಡಿದು ಆಚರಿಸಲಿ; ಅವು ಬಲ್ಲೆವಯ್ಯಾ.
ಆತನ ಭಕ್ತಿ ನೈಷ್ಠೆ ; ಆತ ನಡೆದುದು ಜಗತ್ಪಾವನ;
ಆತ ನಡೆಸಿದುದು ಜಗಜ್ಜನನ ನೋಡಾ.
ಇದು ಪುಸಿಯಾದಡೆ ಹಲ್ಲುದೋರಿ ಮೂಗ ಕೊಯ್ಯಿ,
ಕಪಿಲಸಿದ್ಧಮಲ್ಲಯ್ಯಾ./1379
ಭಕ್ತರೂಪು ಬಸವಣ್ಣ, ಕ್ಷಮಾರೂಪು ಬಸವಣ್ಣ;
ಗುರುಸ್ವರೂಪು ಚೆನ್ನಬಸವಣ್ಣ, ಪ್ರಸಾದಸ್ವರೂಪು ಚೆನ್ನಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಪ್ರಭುವಾಗಿ ಬಂದು,
ಬಸವಣ್ಣ ಚೆನ್ನಬಸವಣ್ಣನ ಒಕ್ಕುದಕೊಂಡು ಜಂಗಮವಾದನಯ್ಯಾ./1380
ಭಕ್ತಿಗೆ ಭಕ್ತ ಬಸವಣ್ಣನಯ್ಯಾ.
ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ.
ಮುಕ್ತಿಗೆ ಮುಕ್ತ ಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1381
ಭಕ್ತಿಯ ಕೂಟವಾಯಿತ್ತು ಬಸವಣ್ಣಂಗೆ.
ಶಕ್ತಿಯ ಕೂಟವಾಯಿತ್ತು ಶಿವದಾಸಣ್ಣಂಗೆ.
ಆಚಾರ ಕೂಟವಾಯಿತ್ತು ಏಲೇಶ್ವರದ ಕೇತಯ್ಯಂಗೆ.
ಅರ್ಪಿತ ಕೂಟವಾಯಿತ್ತು ಚೆನ್ನಬಸವಣ್ಣಂಗೆ.
ಐಕ್ಯ ಕೂಟವಾಯಿತ್ತು ಅನಿಮಿಷಂಗೆ.
ಪ್ರಾಣಲಿಂಗ ಕೂಟವಾಯಿತ್ತು ನಿಮಗೆ ಕಪಿಲಸಿದ್ಧಮಲ್ಲಿನಾಥಯ್ಯಾ./1382
ಭಕ್ತಿಯ ಬಯಸುವಡೆ ನಿತ್ಯನಿತ್ಯ ನೆನೆಯಾ,
ನಿಸ್ತಾರ ನಿಸ್ತಾರವೆಂದು ಮುಂದೆ ಬಂದಾಡೌ
ಆತ ಶುದ್ಧದೇವ ಎಲ್ಲರ ಪರಿಯಂತಲ್ಲ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನ./1383
ಭಕ್ತಿಯ ಬೆಳಸಿ ಹೇಳಿದೆನಲ್ಲದೆ,
ಭಕ್ತಿಯ ಮಾಡಿ ಬೆಳೆಯಲಿಲ್ಲ ನಾನು.
ಭಕ್ತಿಯ ಶಕ್ತಿ ಬಸವಣ್ಣಂಗಾಯಿತ್ತು.
ಜ್ಙಶನದ ಶಕ್ತಿ ಚೆನ್ನಬಸವಣ್ಣಂಗಾಯಿತ್ತು.
ಯೋಗದ ಶಕ್ತಿ ಚೆನ್ನಬಸವಣ್ಣಂಗಾಯಿತ್ತು,
ನಿಮ್ಮರಮನೆಯಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1384
ಭಕ್ತಿಯ ಭಾವದ ಬಯಕೆಯ ಬಯಸುವೆ, ಅವಧಾರಯ್ಯಾ.
ಎನ್ನ ಮನ ನಿಮ್ಮ ನೆನೆವಂತೆ ಮಾಡಯ್ಯಾ.
ಎನ್ನ ಮನ ನಿಮ್ಮ ಶ್ರೀಪಾದವನಗಲದಂತೆ ಮಾಡು,
ಶ್ರೀ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1385
ಭಕ್ತಿಯ ಮಾಡುವುದು ಮಲತ್ರಯದೊಳಗಲ್ಲ ಮಹೇಶನು.
ಮುಕ್ತಿಯ ಪಡೆವಡೆ ಜಡಜೀವಿಯಲ್ಲ ನೋಡಾ ಭಕ್ತನು.
ಭಕ್ತನಿಗೆ ಭಕ್ತಿಮುಕ್ತಿ ಎಂಬ ಯುಕ್ತಿ ಸೊಗಸದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1386
ಭಕ್ತಿಯಿಲ್ಲದ ಬೇಗೆಯಲ್ಲಿ ಬೆಂದೆನಯ್ಯಾ ತಂದೆ.
ನಿತ್ಯವಪ್ಪ ಭಕ್ತಿಪಥವ ಕುಡು ತಂದೆ!
ತತ್ತ್ವ ಕಾಮ್ಯಾರ್ಥವನೊಲ್ಲೆನಯ್ಯಾ, ಭಕ್ತಿಯೊಳಗಿರಿಸಯ್ಯಾ.
ನಿತ್ಯ ನಿಗಮಗೋಚರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಭಕ್ತರ ಸಂಗದೊಳಿರಿಸಯ್ಯಾ./1387
ಭಕ್ತಿಯುಕ್ತನುಮಲ್ಲ ಮುಕ್ತಿಗ್ರಾಹಕನಲ್ಲ
ಪಥದ ವೇದ್ಯನುವಲ್ಲದೆಂತೆಂತೋ?
ಕರ್ಮಕಾಯನಲ್ಲ ಕಾಲಾಗ್ನಿಯಲ್ಲ
ತನ್ನ್ಲ ತಾನೆ ಆಕಾರಂ ಬೊ
ಆಗಮವಾಯವೋನ್ನಮಃ ನಾ ದೇವದೇವ
ಲಿಂಗಾಯತ್ತಂ ಬೊ ಸ್ವತಂತ್ರಶೀಲ
ಕಪಿಲಸಿದ್ಧಮಲ್ಲಿನಾಥಾ,
ಆತನೆ ಅಚ್ಚಶರಣಂ ಬೊ./1388
ಭಕ್ತಿಯೆ ಲಿಂಗಪೂಜೆಯಾಗಿ ಅಳವಡಿಸಿಕೊಂಡ ಬಸವೇಶ.
ಜ್ಞಾನಕ್ರೀಯೆ ಲಿಂಗಪೂಜೆಯಾಗಿ ಅಳವಡಿಸಿಕೊಂಡ
ಚೆನ್ನಬಸವೇಶ.
ವೈರಾಗ್ಯವೆ ಲಿಂಗಪೂಜೆಯಾಗಿ ಅಳವಡಿಸಿಕೊಂಡ ಅಲ್ಲಮೇಶ.
ಅನುಭಾವವೆ ಲಿಂಗಪೂಜೆಯಾಗಿ ಅಳವಡಿಸಿಕೊಂಡ ನಿಮ್ಮ
ಬಾಲಕೇಶ,
ಕಪಿಲಸಿದ್ಧಮಲ್ಲೇಶ, ವ್ಯೋಮಕೇಶ, ನಾಶಪಾಶಾ./1389
ಭಕ್ತಿರೂಪನು ಬಸವ, ನಿತ್ಯರೂಪನು ಬಸವ,
ಮತ್ತಾನಂದಸ್ವರೂಪ ಬಸವಣ್ಣನು.
ಸತ್ತುರೂಪನು ಬಸವ, ಚಿತ್ತುರೂಪನು ಬಸವ;
ಎತ್ತೆತ್ತ ನೋಡಿದಡೆ ಅತ್ತತ್ತ ಪರಿಪೂರ್ಣನಾಗಿಪ್ಪ
ಬಸವಣ್ಣನಿಂ ನಿತ್ಯಸುಖಿಯಾಗಿರ್ದೆನೈ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1390
ಭಕ್ತಿವಿಡಿದು ಭಕ್ತನಾದ ಪ್ರಸಾದಿ.
ಮೋಕ್ಷವಿಡಿದು, ಧೈರ್ಯವಿಡಿದು
ಆ ಭಕ್ತಂಗೆ ಮಾಹೇಶ್ವರನಾದ ಪ್ರಸಾದಿ;
ಕಾರಣವಿಡಿದು ಅವಧಾನ ತಪ್ಪದ
ಆ ಭಕ್ತಂಗೆ ಪ್ರಸಾದಿಯಾದ ಪ್ರಸಾದಿ;
ಕರ್ಮರಹಿತನಾಗಿ ಕಾಲಕಲ್ಪಿತವಿಲ್ಲದ
ಆ ಭಕ್ತಂಗೆ ಪ್ರಾಣಲಿಂಗಿಯಾದ ಪ್ರಸಾದಿ.
ಪತಿಭಕತ್ತಿವಿಡಿದು ಧರ್ಮಾರ್ಥಕಾಮಮೋಕ್ಷಂಗಳಾಸೆಯ
ನಿವೃತ್ತಿಯಂ ಮಾಡಿದ
ಆ ಭಕ್ತಂಗೆ ಶರಣನಾದ ಪ್ರಸಾದಿ.
ಈ ಉಭಯ ಸಮರಸವೇಕವೆಂದು ತಿಳಿದು,
ಉಭಯಭಾವ ಉರಿಕರ್ಪೂರ ಸಂಯೋಗವಾದ
ಆ ಭಕ್ತಂಗೆ ಐಕ್ಯನಾದ ಪ್ರಸಾದಿ.
ನಮ್ಮ ಕಪಿಲಸಿದ್ದ ಮಲ್ಲಿನಾಥನಲ್ಲಿ,
ಸರ್ವಕ್ಕೆ ಚೈತನ್ಯವಾದ ನಮ್ಮ ಚೆನ್ನಬಸವಣ್ಣನೆಂಬ ಅಚ್ಚಪ್ರಸಾದಿ./1391
ಭಕ್ತಿಸ್ಥಲದ ವರ್ಮವನು
ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ ಬಸವಣ್ಣ.
ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ
ಎನ್ನ ಗುರು ಚೆನ್ನಬಸವಣ್ಣನು.
ಬಸವ, ಚೆನ್ನಬಸವನೆಂಬ ಮಹಾಸಮುದ್ರದೊಳಗೆ
ಹರುಷಿತನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ./1392
ಭಕ್ತೇಭ್ಯಸ್ತು ಚರಶ್ಯೆ ್ರಷ್ಠರೇಭ್ಯಸ್ತು [ಸ್ಯಾತ್] ಪರಾತ್ಪರಂ|
ವಸ್ತು ನೋ ಭಾತಿ ದೇವೇಶಿ ತಂ ತ್ಯಕ್ತ್ವಾಚಾಲ್ಲಮಪ್ರಭುಃ||’
ಎಂಬ ಮಕುಟಾಗಮ ವಾಕ್ಯ ವಿಚಾರಿಸಿದಲ್ಲಿಂದಚೊತಿಹುದಯ್ಯಾ
ಎನ್ನ ಮನಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ./1393
ಭಜಿಸುವೊಡೆ ನಾನೀಗ ಭಜಕನೇ?
ಅಯ್ಯಾ, ನಿಜ ನಿರ್ಮಲಾಂಗ ನೀ,
ಆನಂದದಾನತನದ ಕರುಣ ಕಾನನದೊಳಗೆ ಹೊಲಬುದಪ್ಪಿದ ಸೀಮೆ.
ತನುತ್ರಯವ ಮಲತ್ರಯವ ದಹನಮಾಡಿ,
ಮನದ ಮಧ್ಯದೊಳಗೆ ಪಂಚಮಾಳಾಪಕ್ಕೆ
ತನು ಸೃಷ್ಟಿ ಸಾಯುಜ್ಯಪದವೆಯ್ದಿತು.
ಅನುನಯದ ಪುರಾತ ಚರಿತವಂ ಹಾಡೀಗ ಹರುಷಿತನುವಾದೆನೈ.
ಸಕಲದೊಳಗೆ ಕರುಣಾಕರನೆ
ಎನ್ನ ಕರಣ ನಿರ್ಮಳತೆಯನು ಹರುಷಧಿಂ ಮಾಡಿದೈ.
ಭಕ್ತಿಯಿತ್ತು ಎರಡೆಂಟು ಗ್ರಾಮದೊಳು ಕಳೆಯನಿರಿಸಿದೆ.
ನಿಮ್ಮ ಮನದ ಮಧ್ಯದೊಳಗೆ ಮುಖವೈದನೂ ರಚಿಯಿಸಿದ
ಭೇದವನು ಹದುಳ ಮಾಡಿಯೆ ಅರಿತೆ.
ಒದವಿದೆನು ತತ್ವ ಮೂವತ್ತಾರನೂ
ತನುವೆ ಮಹಾತವಕ ಘನ ಪಾಶಂದತ್ತ
ಮನವ ಶುದ್ಧವ ಮಾಡಿದಯ್ಯಾ,
ಗುರುವೆ, ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರಾ,
ಶರಣದೇಹಿಕ ದೇವ ಶರಣು ತಂದೆ./1394
ಭವ ಭರ್ಗ ಭೀಮ ನೀಲಲೋಹಿತ ವಿರೂಪಾಕ್ಷ’ ಎನ್ನು
ಮನವೆ.
`ನೀಲಕಂಠ ಮಾಪತಿ ದಯಾಳು ದಯಾಸಾಗರ’ ಎನ್ನು
ಮನವೆ.
`ಉಗ್ರ ಪದರ್ಿ ಕೈಲಾಸವಾಸಿ ಸಿತಕಂಠ ಭಾಳಲೋಚನ’ ಎನ್ನು
ಮನವೆ.
`ಕಾಲಾರಿ ಕಾಮಾರಿ ತ್ರಿಪುರಾರಿ ಪಾಪಾರಿ
ಕಪಿಲಸಿದ್ಧಮಲ್ಲಿಕಾರ್ಜುನ’ ಎನ್ನು ಮನವೆ./1395
ಭವದ ಬೇರ ಹರಿಯಲ್ಕೆ ಪ್ರಭುವಾಗಿ ಬಂದ;
ಮಲತ್ರಯಂಗಳ ಕೆಡಿಸಲ್ಕೆ ಪ್ರಭುವಾಗಿ ಬಂದ;
ಅಜ್ಞಾನಿಗಳಿಗೆ ಸುಜ್ಞಾನವ ತೋರಲ್ಕೆ ಪ್ರಭುವಾಗಿ ಬಂದ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ಎನ್ನ ಭವದ ಬೇರ ಹರಿಯಲ್ಕೆ ಪ್ರಭುವಾಗಿ ಬಂದ./1396
ಭವಿಯೆಂದಡೆ ಲಿಂಗವಿಲ್ಲದವ ಭವಿಯೇ? ಅಲ್ಲಲ್ಲ.
ಭವಿಯೆಂದಡೆ ವೇದವೇದಾಂತರವನೋ,
ಅಂಗವ ಧರಿಸದವ ಭವಿಯೆ? ಅಲ್ಲಲ್ಲ.
ಅಂಗದ ಸ್ಥ್ಕಿಯನರಿದಡೇನಾಯಿತ್ತು?
ಗುಣ ್ಕಳಿದು ಂಗವ ಕೊಡುವ ಗುರುವಿಲ್ಲ.
ಬಹಿರಂಗದ್ಲ ಂಗವಿರಹಿತ, ಅಂತರಂಗದ್ಲ ಂಗಲೋಲುಪ್ತ.
ಹೊಲಬುಳ್ಳವನಾದಡೇನು, ್ಕಳಿಯದವರಿಲ್ಲದನ್ನಕ್ಕ?
ಸತ್ಕ್ರಿಯಾಸಾಮರಸ್ಯಕ್ಕೆ ಭವಿಯಲ್ಲದೆ
ಅನುಭವಗೋಷ್ಠಿಗೆ ಭವಿಯೆ? ಅಲ್ಲಲ್ಲ.
ಭವಿಯೆಂದಡೆ ಮದ್ಯಪಾನ ಮಾಂಸಭಕ್ಷಣ ಪರಸ್ತ್ರೀಸಂಗ
ಪರಧನಚೋರತ್ವ ನಿಜವಸ್ತು ಅಂತರತ್ವವಿದ್ದವನೆ ಭವಿಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1397
ಭಸಿತ ರುದ್ರಾಕ್ಷಿಯ, ಎಸೆವ ಪಂಚಾಕ್ಷರಿಯ,
ಅಸಮ ಶ್ರೀಗುರು ಲಿಂಗ ಜಂಗಮದ ನಿಜವ,
ಅತಿಶಯದ ಪಾದೋದಕ ಪ್ರಸಾದವನರುಹಿ ಸಲಹಿದಾತನು ಗುರುವು,
ಕಪಿಲಸಿದ್ಧಮಲ್ಲಿಕಾರ್ಜುನ./1398
ಭಸಿತ ರುದ್ರಾಕ್ಷಿಯನು ಧರಿಸಿ,
ಸಂಪ್ರೀತಿಯಲ್ಲಿ ಬಸವಾಕ್ಷರತ್ರಯವ ನೆನೆಯುತ್ತಿಪ್ಪ
ಶರಣರೇ ಇಹಲೋಕ ಪರಲೋಕ;
ಭ್ರಮೆಗೆಟ್ಟು ಇರುತಿಪ್ಪ ಇಹಲೋಕವೇ ರುದ್ರಲೋಕ ತಾನು.
ಕರುಣಾಕರ ಕಪಿಲಸಿದ್ಧಮಲ್ಲೇಶ್ವರನ
ಶರಣರು ಇರುತಿಪ್ಪುದೇ ರುದ್ರಲೋಕ ತಾನು./1399
ಭಸಿತವನಿಟ್ಟಿಹೆ, ರುದ್ರಾಕ್ಷಿಯ ಧರಿಸಿಹೆ,
ನೀನೊಲ್ಲೆ, ನೀನೊಲಿದೆ.
ನಿನ್ನೊಲುಮೆ ಏಕೆ ಎಲೆ ಅಯ್ಯಾ.
ನಿನ್ನವರೊಲ್ಲರು! ಆ ಒಲುಮೆ ತಾನೆನಗೇಕೆ? ಹೇಳಾ, ಎಲೆ ಅಯ್ಯಾ.
ಪುರುಷರಿಲ್ಲದ ಸ್ತ್ರೀಯರ ಶೃಂಗಾರದಂತೆ
ನಿನ್ನೊಲುಮೆ ಏಕೆ? ಹೇಳಾ!
ನಿಜಭಕ್ತಿಯಲ್ಲಿರಿಸಿ ಸದ್ಭಕ್ತನೆಂದೆನಿಸಿ
ಸದಾಚಾರಿಗಳ ಸಂಗಡ ಎನ್ನ ಹುದುವಿನಲ್ಲಿ ಕುಳ್ಳಿರಿಸಿ
ಓರಂತೆ ಮಾಡಾ, ಕಪಿಲಸಿದ್ಧಮಲ್ಲಿಕಾರ್ಜುನ,
ನೀನೊದುದಕ್ಕೆ ಇದು ಕುರುಹು.
ಅಲ್ಲರ್ದಡೆ ಇದು ವೈಶಿಕ!/1400
ಭಸ್ಮವ ಹೂಸಿದ್ಲ ಶರಣನೆ? ಅಲ್ಲಲ್ಲ ;
ಮಾಡುವ ಕ್ರಿಯೆ ಭಸ್ಮವಾದಡೆ ಶರಣ.
ನೋಡುವ ಕೃತ್ಯ ರುದ್ರಾಕ್ಷಿಯಾದಡೆ ಶರಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1401
ಭಾವ ಬದಲ್ಲಿ ಲಿಂಗವೆನಿಸಿತ್ತು ;
ಭಾವ ವಿಭಾವವಾದಲ್ಲಿ ಪಾಷಾಣವೆನಿಸಿತ್ತು;
ಭಾವ ನಿರ್ಭಾವವಾದಲ್ಲಿ ಏನೆಂದೆನಿಸದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1402
ಭಾವ ಬಲಿಸಬೇಕಲ್ಲದೆ ವಿಭಾವ ಮಾಡಲುಂಟೆ?
ಗುರುಭಕ್ತಿಯಲ್ಲಿ ಭಾವ ಬಲಿದುದೆ ಬ್ರಹ್ಮಜ್ಞಾನ;
ಗುರುಭಕ್ತಿಯ್ಲ ಭಾವ ನಿಂದುದೆ ಸಹಜಸ್ಥಿತಿ
ಗುರುಭಕ್ತಿ ಮರೆವ ಅರಿವ ಮರೆತುದೆ,
ಕಪಿಲಸಿದ್ಧಮಲ್ಲಿಕಾರ್ಜುನದೇವನ ಮಹಾಮನೆ;
ಇದು ಸತ್ಯ ಕೇಳಾ ಶಿವತಾಯಿಯೆ./1403
ಭಾವಕ್ಕಂತರ್ಯಾಮಿಯಲ್ಲದೆ,
ನಡೆವ ಆಚಾರಕ್ಕೆ ಅಂತರ್ಯಾಮಿಯೇನಯ್ಯಾ?
ಭಾವಕಿ ಹಾವಭಾವಕ್ಕನುಕೂಲೆಯಲ್ಲದೆ,
ನಿರ್ಭಾವಂಗನುಕೂಲೆಯೇನಯ್ಯಾ?
ಭಾವ ಭಕ್ತಿಯಲ್ಲಲ್ಲದೆ ವೀರಭಕ್ತಿಯಲ್ಲೇನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ?/1404
ಭಾವಲಿಂಗದಿಂದ ಇಷ್ಟಲಿಂಗವ ಧ್ಯಾನಿಸಹೋದಡೆ,
ಇಷ್ಟಲಿಂಗವೆ ಭಾವಲಿಂಗವಾಯಿತ್ತು.
ಭಾವಲಿಂಗದಿಂದ ತ್ರಿವಿಧವನರಿದೆಹೆನೆಂದಡೆ,
ಭಾವಲಿಂಗವನೆ ಮಹಾಲಿಂಗವಾಗಿ ಅಳವಡಿಸಿದನು,
ಎನ್ನ ಗುರು ಚೆನ್ನಬಸವಣ್ಣನು ಕಾಣಾ, ಕಪಿಲಸಿದ್ಧಮಲ್ಲೇಶಾ./1405
ಭಾವಿಸಿದರೆ ಹೆಂಗೂಸು
ನಡುವೆ ನಿಂದಿರೆ ಹೆಂಪುಳ್ಳ ಗಂಡುಗೂಸು!
ಒಬ್ಬ ತನಗೆಂಬ ಒಬ್ಬ ತನಗೆಂಬ
ಸ್ಕ್ತು ನೋಡಿ ಸುಯ್ವಳು ಹೋ!
ಎಮ್ಮಿಂದ ನಿಮಗೆ ವಿವಾಹ ಬೇಡಯ್ಯಾ,
ಎಮ್ಮ ಗಂಡ ಬಾಯಾಳು, ಕಪಿಲಸಿದ್ಧಮಲ್ಲಿನಾಥಾ./1406
ಭೂತ ಭವಿಷ್ಯದ್ವರ್ತಮಾನಗಳರಿವಿಕೆಯದು
ಭೂತಪ್ರಾಣಿಗಳಿಗೆ ರಂಜನೆಯಲ್ಲದೆ
ಭೂತೇಶನ ಮನೋರಂಜನೆಯಾಗದು ನೋಡಾ ಮನವೆ.
ನಿತ್ಯ ಲಿಂಗಾರ್ಚನೆ, ನಿತ್ಯಾನುಷ್ಠಾನ, ನಿತ್ಯ ಮಂತ್ರವಿಚಾರ,
ನಿತ್ಯ ಪಾದೋದಕ-ಪ್ರಸಾದ ಸ್ವೀಕಾರವದು
ಕಪಿಲಸಿದ್ಧಮಲ್ಲಿಕಾರ್ಜುನನ ಮನಃಕಿಂಜಲ್ಕ ವಿಕಸನ ನೋಡಾ,
ಮನೋಭ್ರಮರವೆ./1407
ಭೂಪ ಗೋಪನ ನೆನೆದಡೆ ಗೋಪನಾಗಬಲ್ಲನೆ?
ಅಂದಿನ ಗಣಂಗಳ ಕಂಡು, ಇಂದಿನ ಜೀವಿಗಳು ನೆನೆನೆನೆದು
ಧನ್ಯರಾದೆವೆಂಬ ಪರಿಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ/1408
ಭೂಪಾಲನ ಕುದುರೆಯ ಗೋಪಾಲನೇರಿದಡೆ,
ಮನ್ನಣೆಯಲ್ಲದೆ ಅಮನ್ನಣೆಯೇನಯ್ಯಾ?
ಗೋಪಾಲನ ಕುದುರೆಯ ಭೂಪಾಲನೇರಿದಡೆ
ಅಮನ್ನಣೆಯಲ್ಲದೆ ಮನ್ನಣೆಯೇನಯ್ಯಾ?
ಭೂಪನ ವೇಷ ಗೋಪಂಗಾದುದು,
ಗೋಪನ ವೇಷ ಭೂಪಂಗಾದುದು ಪಾಪದ ಕೇಡು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1409
ಭೂಪಾಲನ ಡೊಂಕು ಗೋಪಾಲಂಗಲ್ಲದೆ
ಗೋಪಾಳಿಗೆಲ್ಲಿಹುದಯ್ಯಾ?
ಗೋಕುಲದ ಡೊಂಕು ಗೋಪಾಲಂಗಲ್ಲದೆ
ಗೋಪಾಳಿಗೆಲ್ಲಿಹುದಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./1410
ಭೂಪಾಲನೇರುವ ಕುದುರೆಯ ಗೋಪಾಲನೇರಬಹುದೆ ಅಯ್ಯಾ?
ಗೋಪಾಲನೇರುವ ಕುದುರೆಯ ಭೂಪಾಲನೇರಬಹುದೆ ಅಯ್ಯಾ?
ಗೋಪಾಲಂಗೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ /1411
ಭೂಮಿ ಒಂದರೊಳಗೆ
ಒಂದು ನಾಮಸಾಮ್ಯ ವೃಕ್ಷ ಹುಟ್ಟಿ
ಮೂಲನಾಶವಪ್ಪ ಫಲ ಮೂರು
ಸೀಮೆಗೆಟ್ಟಿತು ಬ್ರಹ್ಮಾಂಡ.
ಅಪರಾಹ್ನದ ಆದಿಯಲ್ಲಿ
ಅಡಗಿದವು ಸಕಲ ಬ್ರಹ್ಮಾಂಡ,
ಕಪಿಲಸಿದ್ಧಮಲ್ಲಿಕಾರ್ಜುನ./1412
ಭೂಮಿ ಒಂದೆಂದಡೆ ಬೆಳೆವ ವೃಕ್ಷ ಹಲವು ತೆರನುಂಟು.
ಉದಕ ಒಂದೆಂದಡೆ ಸವಿಸಾರದ ಸಂಪದ ಬೇರುಂಟು.
ನಿನ್ನೊಳಗು ನಾನಾದಡೆ ತಾಮಸದ ರಾಗವಿರಾಗವಾಗದು.
ಕಪಿಲಸಿದ್ಧಮಲ್ಲಿಕಾರ್ಜುನಂಗವೆಂಬ ಪುರುಷರತಿ ಕೂಟಸ್ಥವಿಲ್ಲ./1413
ಭೂಷಣವುಳ್ಳ ಜಂಗಮವ ಭೂಪಾಲ ಪೂಜಿಸುವ;
ವೇಷವುಳ್ಳ ಜಂಗಮವ ವೇಶಿ ಪೂಜಿಸುವಳು;
ವೇಷಧಾರಿ ಜಂಗಮವ ಲೋಕವೆಲ್ಲ ಪೂಜಿಸುವುದು;
ಜ್ಞಾನವುಳ್ಳ ಜಂಗಮವನಾರು ಪೂಜಿಸರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1414
ಭೇದಾ ಭೇದವ ವಾಸುವವರ ನೋಡಿಸದಿರಯ್ಯಾ,
ಏಕೋದೇವನೆಂಬುವರ ಅನೇಕ ವಿಧದಿಂದ ತೋರಿಸಯ್ಯ.
ನಿರಾಕಾರವೆಂಬವರ ಸಂಗಕ್ಕೆಳಸದಂತೆ ಮಾಡಯ್ಯ.
ಏಕೋದೇವನೆಂಬವರ ಸಂಗದಲ್ಲಿರಿಸು ಎನ್ನ
ಕಪಿಲಸಿದ್ಧಮಲ್ಲಿಕಾರ್ಜುನ./1415
ಭೇದಿಸಬಾರದೆ ಇಪ್ಪ ಅಭೇದ್ಯ ಶಿವನೆ.
ನಿನ್ನ ಭೇದಿಸಿ ತಂದುಕೊಟ್ಟನೆನ್ನಯ ಶ್ರೀಗುರು.
ಇನ್ನು ನಾ ನಿನ್ನ ಬಿಡುವೆನೆ? ಬಿಡೆ ಬಿಡೆ.
ಮಚ್ಚಿದೆ ಪಾದೋದಕವ, ನಚ್ಚಿದೆ ಪ್ರಸಾದವ.
ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ./1416
ಭೋ ಜಗದಂಬಾ, ಭೋ ಜಗದಂಬಾ, `ಮಮಾಂಬಾ’
ಎಂದು ನಂಬಿದೆ.
ಭೋ ಸರ್ವಮಂಗಳಾ, `ಸರ್ವಮಂಗಳಾ’ ಎಂದು ನಂಬಿದೆ.
ಭೋ ಅಂಬಾ, `ಮಮಾಂಬಾ’ ಎಂದು ನಂಬಿದೆ.
ಭೋ ಕಪಿಲಸಿದ್ಧಮಲ್ಲಿಕಾರ್ಜುನಾ, ಭೋ,
ನಿಮ್ಮ ಶಕ್ತಿ ನಿಮಗಾಧಾರವೆಂದು ನಂಬಿದೆ./1417
ಭೋಗದ ಉಗುಮಿಗೆಯು/1418
ಭ್ರಮಣವಿಡಿದ ಭ್ರಮಿತರು
ಕಮಳದ ಎಸಳ ಅಕ್ಷರದ ವರ್ಣವ ಕಂಡೆಹೆನೆಂಬರಯ್ಯಾ.
ಕಾಬ ಕಾಣಿಕೆ ಯಾರಿಗೂ ಸಾಧ್ಯವಲ್ಲ,
ಕಂಡ ಕಂಡ ನಮ್ಮ ಕಪಿಲಸಿದ್ಧಮಲ್ಲಿನಾಥನಲ್ಲಿ ಚೆನ್ನಬಸವಣ್ಣ./1419
ಭ್ರೂಮಧ್ಯದಿಂ ಮೇಲೆ ಒಪ್ಪಿಪ್ಪ ಕನ್ನಿಕೆಯ
ನಿನ್ನ ಜ್ಯೋತಿರ್ಮಯದ ಬೆಳಗ ತೋರಾ.
ಆ ಬೆಳಗಿನ ಬಳಗಂಗಳು ಶುದ್ಧಸಿದ್ಧ ಪ್ರಸಿದ್ಧವ ಪ್ರವೇಶಿಸಿಪ್ಪವು.
ನಿನ್ನಾನಂದಸ್ಥಾನದ್ಲ ಅತಿಶಯವಪ್ಪ ಬೀಜಾಕ್ಷರದ್ವಯಂಗಳುಂಟು.
ಅದರ ಮಹಾಪ್ರಭೆಯಲ್ಲಿ ಒಪ್ಪಿಪ್ಪ ಅವ್ಯಯ
ವಾಙ್ಮನಕ್ಕಗೋಚರನಾಗಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ನೋಡಿಹೆನೆಂಬ ಭರವಸ ಘನ, ತೋರಾ ಎಲೆ ಅವ್ವಾ/1420
ಮಂಗಳದ ಮನೆಯಲ್ಲಿ ಸಂಗ ತನಗಾನಂದ
ಸಂಗವೆ ನೆಲೆಮನೆಯು,
ನಿತ್ಯವಾಗಿಪ್ಪ ಶ್ವೇತ ಜಲದಲಿಪ್ಪ
ರೀತಿ ಸಂಖ್ಯೆಯನರಿದು, ಧಾತುವನು ಅತಿಗಳೆದು,
ತೂಗಿ ತೂಗಿ ಆಡಿವೋದಾತನು ಮೀರಿ ಕಂಡನು.
ಒಂದ ತೋರಿದನು ಅತಿಶಯವ ಲೋಕಕೆಲ್ಲಾ,
ನಿಲರ್ೊಕ ನಿರ್ನಾಮ ನಿತ್ಯನು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತೋರಿದನು
ಸಾಯುಜ್ಯಪದವ ಮೀರಿ./1421
ಮಂಗಳದ ಸಂಗ ಅಂಗಕ್ಕೆ ಮಚ್ಚಿದುದ
ಹಿಂಗಿ ಹೇಳಲ್ಕಿದಕೆ ಜಿಹ್ವೆಯುಂಟೆ?
ಈರಾರು ಸುಖಗಳನು ಮೇಲಾದ ಮಧುರವನು
ಓರಂತೆ ಉಂಡುದಕೆ ಪ್ರಳಯವುಂಟೆ?
ನಿಗಮಂಗಳರಿಯದಿಹ ಅಗಣಿತ ಮೆಟ್ಟದಾ
ಶ್ರುತಿಯ ತಪ್ಪಲಲಿರ್ದ ನಿತ್ಯತೃಪ್ತಾ
ಮೂರಾರು ಈರಾರು ತೋರಿರ್ಪ ನಿಶ್ಚಯದ
ಆರರಿಂದಂ ಮೇಲೆ ಸಂಯೋಗವು
ಸ್ವಾನುಭಾವದ ದೀಕ್ಷೆ ತಾನು ತನಗಳವಟ್ಟು
ಹೇಳದೆ ಹೋದನಾ ಇರ್ದ ಮನೆಗೆ
ಮೂರನು ಮುಟ್ಟದೆ ಆರನು ತಟ್ಟದೆ
ಮೀರಿ ಉರವಣಿಸಿದನು ಸಾಯುಜ್ಯದಾ
ಫಲಪದವನತಿಗಳೆದು ನಿಗಮಕ್ಕಭೇದ್ಯನ ಕಂಡೆ
ಕಪಿಲಸಿದ್ಧಮಲ್ಲಿಕಾರ್ಜುನ./1422
ಮಂಗಳಾಂಗನ ಬೆಳಗು ಹೊಂಗಹ ಭೇದವನು
ಜಂಗಮಸ್ಥಾವರದೊಳೇಕವೆಂದು
ಂಗ ಸಂಗದಲ್ಲಿದ್ದ ಮಂಗಳ ಪ್ರಸಾದ
ತೆಂಗ ಮೂಲನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./1423
ಮಂಗಳಾತ್ಮನೆ ನಿನ್ನ ಮಂಗಳದ ಮೂರ್ತಿಯ
ಕಂಗಳ ನೋಡುವ ಸುಕೃತವಿತ್ತು,
ಹಿಂಗಿ ಹಿಂಗದ ನಿತ್ಯ ಸಂಗಸುಖಕಾನಾದೆ
ಮಂಗಳಾತ್ಮನೆ ಕಪಿಲಸಿದ್ಧಮಲ್ಲೇಶ್ವರಾ./1424
ಮಂಚವೊಂದರಲ್ಲಿ ಕಂಚುಕಿ ಸಹ ಮೂರ್ತವ ಮಾಡಿದ್ದಾನೆ.
ಆ ಮೂರ್ತಿಯ ಹಂಚುಹಂಚಿನಲ್ಲಿ ಕಂಚುಕಿಯಾಗಿದ್ದಾನೆ.
ಆ ಮಂಚ, ಈ ಹಂಚು ಕಂಚುಕಿಯಲ್ಲಿರ್ವರಿಯಬಲ್ಲಡೆ,
ಸಂಚಿತತ್ರಯ ಒಡಕ ಹಂಚು ನೋಡಾ,
ಪ್ರಪಂಚಹರ ಪಂಚಮುಖ ಕಪಿಲಸಿದ್ಧಮಲ್ಲಿಕಾರ್ಜುನ./1425
ಮಂತ್ರ ಮೂರರಲ್ಲಿ ಮಂತ್ರವೆ ಮಂತ್ರ ನೋಡಾ.
ಶಕ್ತಿಯ ಮಂತ್ರದಲ್ಲಿ ಮಂತ್ರವೆ ಮಂತ್ರ ನೋಡಾ,
ಶಿವನ ಮಂತ್ರ ಮೂರರಲ್ಲಿ ಮಂತ್ರವೆ ಮಂತ್ರ ನೋಡಾ.
ನವಲಿಂಗದ ಮಂತ್ರ ಮೂರರಲ್ಲಿ ಮಂತ್ರವೆಂಬುದು
ತ್ರಿಲೋಕದಲ್ಲಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1426
ಮಂತ್ರಂಗಳ ಭೇದ ಬೃಹಸ್ಪತಿಯೋರ್ವಂಗಲ್ಲದೆ,
ಉಳಿದ ದೇವ ದೇವತೆಗಳಿಗದು ದುರ್ಘಟ ನೋಡಾ.
ಮಂತ್ರ ಮನ ಒಂದಾದಡೆ
ಮಂತ್ರಮೂರ್ತಿಯಪ್ಪ ಮಹಾದೇವಿಯರ ಅಷ್ಟೆ ಶ್ವರ್ಯಕ್ಕಧಿಕಾರಿ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1427
ಮಂತ್ರದೇಹಿ ತಾನಾದ ಬಳಿಕ
ಮಲತ್ರಯಕ್ಕೊಳಗಾಗಬಹುದೇನಯ್ಯಾ?
ಸರ್ವದೇಹಿ ಅಂತರ್ಯಾಮಿ ತಾನೆಂದರಿದ ಬಳಿಕ,
ಕೊಲ್ಲುವುದಕ್ಕೆ ಒಳಗಾಗಬಹುದೇನಯ್ಯಾ,
ಕೇದಾರ ಗುರುದೇವಯ್ಯಾ?/1428
ಮಂತ್ರವ ಜಪಿಸಿ ಫಲವೇನಯ್ಯಾ ಮಂತ್ರಮ್ಕರ್ೂ ಕಾಣದನ್ನಕ್ಕ?
ಯಂತ್ರವ ಧರಿಸಿ ಫಲವೇನಯ್ಯಾ
ಅಂತರ ರೋಗ ಪರಿಹಾರವಾಗದನ್ನಕ್ಕ?
ತಂತ್ರವನೋ ಫಲವೇನಯ್ಯಾ, ಅದರಂತರ ಮೈಗೂಡದನ್ನಕ್ಕ?
ಶರಣನಾಗಿ ಫಲವೇನಯ್ಯಾ,
ಂಗ ಜಂಗಮವ ಪೂಜಿಸಿ ಮೋಕ್ಷವಡೆಯದನ್ನಕ್ಕ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ./1429
ಮಗನ ಕೊಟ್ಟು ಮನೆಯ ಸೇರಿದೆನೆಂಬ ಬಿಂಕ ಬೇಡ ಬೇಡ.
ಸ್ತ್ರೀಯ ಕೊಟ್ಟು ತ್ರಿಣೇತ್ರನಾದೆನೆಂಬ ಬಿಂಕ ಬೇಡ ಬೇಡ.
ರುಂಡವ ಕೊಟ್ಟು ಬ್ರಹ್ಮಾಂಡಶೇಖರನಾದೆನೆಂಬ ಬಿಂಕ ಬೇಡ
`ಶಿವೋ ದಾತಾ ಶಿವೋ ಭೋಕ್ತಾ’ ಎಂಬ ಶ್ರುತಿವಾಕ್ಯವ
ನಂಬಿ ನಂಬಿ ನಡೆಯಿರಾ, ಕಪಿಲಸಿದ್ಧಮಲ್ಲಿಕಾರ್ಜುನನ
ಮದಿರದಲ್ಲಿ./1430
ಮಚ್ಚಿದೆ ಮಚ್ಚಿದೆ ನಲ್ಲನೆ, ಅಯ್ಯಾ;
ನಿನ್ನ ಮಚ್ಚಿ ನಾನು ಅಗಲಲಾರೆ.
ಮಚ್ಚಿದ ಮನಕಿನ್ನು ಮಂಗಳವನೀಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1431
ಮಜ್ಜನಕ್ಕೆರೆಯ ಹೇಳಿದಡೆ ನಾನೇನ ಮಜ್ಜನಕ್ಕೆರೆವೆನು?
ಒಳಗೊಂದು ಪ್ರಾಣಲಿಂಗವ ಕಂಡೆನಯ್ಯಾ.
ಹೊರಗಣ ಹೂವ ಕೊಯ್ದು, ಹೊರಗನೆ ಮಜ್ಜನಕ್ಕೆರೆವರು;
ಉಪಚಾರದ ನೇಮವ ನಾನೊಲ್ಲೆನಯ್ಯಾ.
ಸ್ವಾನುಭಾವವನರಿಯದವನೇತರ ಸುಖಿಯೊ?
ಕಪಿಲಸಿದ್ಧಮಲ್ಲಿನಾಥನವನನೊಲ್ಲನಯ್ಯಾ/1432
ಮಜ್ಜಿಗೆ ಹುಳಿ ಎಂದಡೆ ಅದು ಗೊಜ್ಜಿನ ಹಾದಿ ನೋಡಾ, ಮನವೆ.
ಸಜ್ಜಿಕ ಸ್ವಾದುವೆಂದಡೆ, ಕಜ್ಜಿಯ ತಿಂಡಿಯಂತೆ ಕಾಣಾ, ಮನವೆ.
ಸ್ವಾದ ಹುಳಿ ಶಿವಸ್ವರೂಪವೆಂದೆಡೆ ಮಹಾಪ್ರಸಾದವಾಯಿತ್ತು,
ಎನ್ನ ಗುರು ಚೆನ್ನಬಸವಣ್ಣಂಗೆ ಕಾಣಾ ಮನವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1433
ಮಠದೊಳಗೆ ಮೂವರು ಮಠದ ಹೊರಗೈವರು.
ಕುಟಿಲವನು ಬೆಳೆಸುತ್ತ ಅನುಪಮದಾನಿ
ನಿಟಿಲಾಕ್ಷ ಸೀಮೆಯನು ದಾರಿಯುಯೆಂದೀಗ
ಕುಟಿಲವೆ ತಮಗೊಂದು ಅಂಗವಾಗೆ
ಅಟಮಟವ ತೋರಿ ತಾನೆಯಗಲಿದ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನು./1434
ಮಡದಿಯರೈವರ ಗಂಡರ ಪಿಡಿದೊಯ್ದರು ಕಳ್ಳರು.
ಮಡದಿ ಮೊರೆಯಿಟ್ಟೆಹೆನೆಂದು ಅರಸಿನ ಗ್ರಾಮಕ್ಕೆ ಬರಲು,
ಅರಸು ಅಂತಃಪುರದೊಳಗೈದಾನೆ.
ಅರಸನ ಕೂಡೆ ಏಕಾಂತವ ಮಾಡುವ ಪ್ರಧಾನಿಯ ಕಂಡು
ಮೊರೆಯಿಟ್ಟಡೆ,
ಪ್ರಧಾನಿ ಪಾಲಿಸುತಿರ್ದ ಬಗೆಯ ನೋಡಾ,
ಕಪಿಲಸಿದ್ಧಮಲ್ಲಿನಾಥಯ್ಯಾ!/1435
ಮಡಿವಾಳಯ್ಯ ತನ್ನ ದೇಹವ ಕೊಟ್ಟು,
ಗಣಾಚಾರದ ಶಕ್ತಿ ಪ್ರಸಾದವ ಪಡೆದ.
ಘಟ್ಟಿವಾಳಯ್ಯ ತನ್ನ ಮಾಯೆಯ ಕೊಟ್ಟು,
ಮೂಲಪ್ರಸಾದವ ಪಡೆದ.
ಮರುಳಸಿದ್ಧಯ್ಯ ತನ್ನ ಮನವ ಕೊಟ್ಟು,
ಗಣಪ್ರಸಾದವ ಪಡೆದ.
ನಾನು ಕರಣಾದಿಗಳ ಕೊಟ್ಟು,
ಚೆನ್ನಬಸವಣ್ಣನ ಪ್ರಸಾದವ ಪಡೆದು,
ಭವವಿರಹಿತನಾದೆ ನೋಡಾ, ಕಪಿಲಸಿದ್ಧಮಲ್ಲಿನಾಥಾ./1436
ಮಣಿ ಮೂರರಲ್ಲಿ ಗುಣತ್ರಯಾತೀತನ ಕಂಡೆ.
ಗುಣತ್ರಯಾತೀತನಲ್ಲಿ ಹವಣಿಸಬಾರದ ಆನಂದಯೋಗವ ಕಂಡೆ.
ಆ ಆನಂದಯೋಗವ ಸಾಧಿಸಬಾರದು, ಸಾಧಿಸಬಾರದು,
ಮತ್ತೆ ಭವಭವದ ದಾವಾನಲ, ಕಪಿಲಸಿದ್ಧಮಲ್ಲಿಕಾರ್ಜುನಾ./1437
ಮಣಿಗಳಿಗೆ ಎಜ್ಜ ಹಿಡಿಯುವರಲ್ಲದೆ,
ಮನಕ್ಕೆ ಎಜ್ಜ ಹಿಡಿಯುವರಾರೂ ಇಲ್ಲ.
ವ್ಯಾಧಿಗೆ ಔಷಧವ ಕೊಡುವವರಲ್ಲದೆ,
ಮರಣಕ್ಕೆ ಔಷಧವ ಕೊಡುವವರಾರೂ ಇಲ್ಲ.
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಗರ್ಭದೊಳು
ಪ್ರಮಥ ಚಿಂತಾಮಣಿ ಚೆನ್ನಬಸವಣ್ಣನಲ್ಲದೆ ಮತ್ತಾರೂ ಇಲ್ಲ./1438
ಮಣ್ಣ ಕೊಟ್ಟು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ.
ಮಣ್ಣಿನ ಪುಣ್ಯ ಮುಕ್ಕಣ್ಣನ ಮುಖಕ್ಕೆ ಬಂತ್ತು.
ನೀರನೆರೆದು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ.
ನೀರಿನ ಪುಣ್ಯ ನಿರಂಜನನ ಮುಖಕ್ಕೆ ನಿಮಿರಿತ್ತು.
ಜ್ಯೋತಿಯ ಬೆಳಗಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ
ಹೊಲ್ಲ.
[ಜೋತಿಯ ಪುಣ್ಯ…. ದೀಪದ…. ಮುಖಕ್ಕೆ ಹೊಯಿತ್ತು.]
[ಚಾಮರವ ಬೀಸಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ
ಹೊಲ್ಲ.]
ಚಾಮರದ ಪುಣ್ಯ ಚಾಮರಾಧೀಶನ ಮುಖಕ್ಕೆ ಅಮರಗೊಂಡಿತ್ತು.
ದೇವಾಲಯವ ಕಟ್ಟಿ ದೇವತ್ವವ ಪಡೆವೆನೆಂಬವನ ಭಾಷೆ ಹೊಲ್ಲ
ಹೊಲ್ಲ.
ದೇವಾಲಯದ ಪುಣ್ಯ ಅಧೋಮುಖಂಗೆ ಸೇರಿತ್ತು.
ಕೊಟ್ಟ ಭಕ್ತನಾರನೂ ಕಾಣೆ, ಕೈಕೊಂಡ ಜಂಗಮನಾದರೂ ಕಾಣೆ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1439
ಮಣ್ಣೆಲ್ಲ ಮಾಹಾದೇವನ ಸದ್ಯೋಜಾತಮುಖ ನೋಡಾ.
ನೀರೆಲ್ಲ ಮಹಾದೇವನ ವಾಮದೇವಮುಖ ನೋಡಾ.
ಪ್ರಳಯಾಗ್ನಿಯೆಲ್ಲ ಮಹಾದೇವನ ಅಘೋರಮುಖ ನೋಡಾ.
ಮಾರುತವೆಲ್ಲ ಮಹಾದೇವನ ತತ್ಪುರುಷಮುಖ ನೋಡಾ.
ತಿಆಕಾಶವೆಲ್ಲ ಮಹಾದೇವನ ಈಶಾನಮುಖ ನೋಡ್ವಾ.
ಆತ್ಮವೆಲ್ಲ ಮಹಾದೇವನ ಗೋಪ್ಯಮುಖ ನೋಡಾ.
`ಸರ್ವಂ ಶಿವಮಯಂ ಜಗತ್ತೆಂ’ಬ ಶ್ರ್ಕುಶಾಖೆ ಪುಸಿಯಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./1440
ಮತ್ತೆ ಮತ್ತೆ ತನ್ನ ಚಿತ್ತ ಮುಟ್ಟಿದಲ್ಲಿಗೆ
ಹೊತ್ತು ಹೊತ್ತು ತೊಳಲುತಿರ್ದಳವ್ವೆ.
ಚಿತ್ತ ಪರಿಪಕ್ವವಾದಡೆ, ಅವನ ಅಂಗದಲ್ಲಿ ಭೇಸಿಹೆನೆಂದು
ಅಂಗ ಅನ್ಯಂಗವಾಗದ ಮುನ್ನ,
ಲಿಂಗ ನೀನೆಯಾದಳು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನನವ್ವೆ./1441
ಮಥನಕ್ಕೆ ಮೋಹಿಸುವ ಮನೆಯ ಸುಟ್ಟಾ ಪರಿಯ
ಹದುಳದಿಂ ಬಲ್ಲವರು ಆರು ಹೇಳಾ.
ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ
ಕರುಣವುಳ್ಳವರಿಗಲ್ಲದೈಕ್ಯವಿಲ್ಲ./1442
ಮದನಂಗೆ ಮೋಹಿಸುವ ಮನವ ಸುಟ್ಟ ಪರಿಯ
ಪದುಳಂ ಬಲ್ಲವರಾರು ಹೇಳಾ.
ಕರುಣಾಕರನೆ, ಕಪಿಲಸಿದ್ಧಮಲ್ಲೇಶ
ನೀ ಕರುಣಿಸಿದವರಿಗಲ್ಲದೇ ಇಲ್ಲವೈ.
ಪರಮಪಾವನರವರು ಪರಮ ಮಾಹೇಶ್ವರರು,
ಪರುಕಿಸೆ ನೀನೆಂಬೆ ಕಾಣಾ, ಎನ್ನ ತಂದೆ./1443
ಮದಹಸ್ತಿ ಮದಹಸ್ತಿಯ ಹಿಡಿವುದಲ್ಲದೆ,
ಮತ್ತೊಂದು ರೂಪ ಹಿಡಿವುದೆ?
ಆ ರೂಪಿಂಗಾ ರೂಪು ಹಿಡಿವುದಲ್ಲದೆ,
ಮತ್ತೊಂದು ರೂಪ ಹಿಡಿವುದೆ?
ರೂಪಿಲ್ಲದಾತನ ರೂಪಿಸಿ ಹಿಡಿವೆನು,
ಕಪಿಲಸಿದ್ಧಮಲ್ಲಿನಾಥಯ್ಯನಾ./1444
ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು
ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಂಗಕ್ಕೆ./1445
ಮಧ್ಯದ ಮಧ್ಯದಲಿ ವೇದಾಮೂನಿ
ಆದಿಯ ಸಂತಕ್ಕೆ ಆದಿಯಾಗಿಪ್ಪಳು.
ಐದೇಳನಡರಿದಡೆ ಮೈದೋರದಿಪ್ಪಳು.
ಪತಿಗೆ ಪತಿಯಾಗಿಪ್ಪಳು ಸತಿಗೆ ಬುದ್ಧಿಯಾಗಿಪ್ಪಳು.
ತನ್ನ ನೋಡಲೆಂದು ಹೋದಡೆ ಚಂದ್ರ ಸೂರ್ಯರ ನುಂಗಿ
ಕಣ್ಗಾಣದೆ ಹೋಗಿ ಅತ್ತೆಯ ಕೈವಿಡಿಯಲು,
ಈ ಮುವ್ವರಿಗೆರಹುಟ್ಟಿಗೆ ತಾನೆಯಾದಳು.
ತಾಯ ಕೈವಿಡಿದನೆಂದು ನಾನಂಜಿ ಸತಿಯಾದೆನೆನಗೆ ಪತಿಯಾದೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿನ್ನ ಕೂಡಿದ ಕೂಟ ನೀನರಿದಡರಿವೆ, ಮರದಡೆ ಮರವೆ./1446
ಮಧ್ಯನದಿಯ ನಾವು ಒಡೆದಡೆ ದುಃಖಂದೇನು?
ಜನಕ ಮರಣಹೊಂದಿದಡೆ ಮಾಡಿದ ದುಃಖಂದೇನು?
ಧೂಪನಾಗರ ಮುಟ್ಟಿಂದ ಮಾಡಿದ ದುಃಖದಿಂದೇನು?
ನಾಗರನಂಗ ಗರುಡನ ಬಾಯಿಗೆ ಬಿದ್ದಂತಾಯಿತ್ತು
ಕಪಿಲಸಿದ್ಧಮಲ್ಲಿಕಾರ್ಜುನಾ./1447
ಮಧ್ಯಮದ ಸುಖವನು ಹೊದ್ದುವ ತತ್ವವನು
ಅರ್ಧಬಿಂಬಂಗಳ ಕಿರಣಂಗಳ
ಈ ಹೊದ್ದದ ಪ್ರಪಂಚಿಕವ ನಿತ್ಯದ ತತ್ವವನು
ಮಧ್ಯಮದ ಕಂಡೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1448
ಮನ ನಿಲುಕದು, ಭಾವ ಭಾವಿಸದು
ಅರಿವು ಕುರುಹಿಡಿದು
ಉಪಮೆ ಸ್ಥಳವಿಡಲರಿಯದು.
ಮಂತ್ರತಂತ್ರಗಳಿಗೆಂತೂ ಸಿಲುಕದು.
ಜಪ ತಪ ಧ್ಯಾನ ಮೌನಂಗಳಿಗೆ ಅಳವಲ್ಲದ ಘನವದು!
ಕಪಿಲಸಿದ್ಧಮಲ್ಲಿಕಾರ್ಜುನನ ನಿಲುವನು ಅಂತಿಂತೆನಬಹುದೆ?/1449
ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ
ಪಂಚಕರಣಂಗಳಿರವ ಹೇಳಿಹೆ ಕೇಳಿರಯ್ಯಾ.
ಮನವೆಂಬುದು ಸಂಕಲ್ಪ ವಿಕಲ್ಪಕ್ಕೊಳಗಾಯಿತ್ತು.
ಇಲ್ಲದುದ ಕಲ್ಪಿಸುವುದೆ ಸಂಕಲ್ಪ.
ಇದ್ದುದನರಿಯದುದೆ ವಿಕಲ್ಪ.
ಕಲ್ಪಿಸಿ ರಚಿಸುವುದೆ ಬ್ಧುಯಯ್ಯಾ.
ಕಲ್ಪಿಸಿ ಮಾಡುವುದದು ಚಿತ್ತವಯ್ಯಾ.
ಮಾಡಿದುದಕ್ಕೆ ನಾನೆಂಬುದು ಅಹಂಕಾರವಯ್ಯಾ.
ಮಾಡುವ ನೀಡುವ ಭಾವ ಶಿವಕೃತ್ಯವೆಂದಡೆ
ಜ್ಞಾನ ವೈರಾಗ್ಯವಯ್ಯಾ.
ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1450
ಮನ ಮಹಾಮಂಗಳವನೈದಿ, ಹಿಂದು ಮುಂದು ಅರತು,
ಬಂದ ಬಟ್ಟೆಯ ಮುಚ್ಚಿ ಬಾರದಂತೆ ಹೋದರಯ್ಯಾ ನಿಮ್ಮವರು.
ನೀನು ಸಟೆಕಾರ, ನಿನ್ನಿಂದ ಊರು ಹಾಳಾಯಿತ್ತು.
ಎನ್ನ ನಿನ್ನವರಂತೆ ಮಾಡಿ, ಅವರ ಸಂಗದೊಳಗೆನ್ನನಿರಿಸಯ್ಯಾ,
ಇರಿಸದ್ದಡೆ ನಿನ್ನ ಬಯ್ಯುವುದೆ ಸತ್ಯ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ!/1451
ಮನ ಮುಂದಿಟ್ಟು ಮಹಾದೇವಾ ಒಲಿದನೆಂಬುದು ಪುಸಿಯಯ್ಯಾ.
ಮನವಿಲ್ಲದಿರೆ ಮಹಿಮನ ಒಲುಮೆ ನೋಡಯ್ಯಾ.
ಮನದ್ಲಹ ಮಹಾದೇವನ ಮುಂಟ್ಟು ತೋರುವ
ಉಭಯಭ್ರಷ್ಟರ ಮೆಚ್ಚುವನೆ,
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ?/1452
ಮನದ ಮಂಟಪದೊಳಗೆ ಅವ ಬಂದು ಕುಳ್ಳಿರಲು,
ಮನದಿಂದಲಾನಂದಕರವು ಹುಟ್ಟಿ
ಒಲಿದು ಅರ್ಚಿಸುವಾಗ ಫಲ ಪದವ ಬೇಡದೆ
ಛಲಿಯಪ್ಪನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ./1453
ಮನದ ಮನವನು ಕಳೆಯಾ ಅಯ್ಯಾ,
ಮನವೇ ಶುದ್ಧನಾಗು, ಮನವೇ ಸಿದ್ಧನಾಗು,
ಮನವೆ ಪ್ರಸಿದ್ಧನಾಗಯ್ಯಾ,
ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥಾ
ಮನದ ಸರ್ವಾಂಗ ನೀನಾಗಯ್ಯಾ./1454
ಮನದ ಮುಂದಣ ಮಾಯಕ್ಕೆ ಒಡೆಯ ನೀನೆಯಯ್ಯಾ.
ಆವ ಪರಿಯ್ಲ ಎನ್ನ ನಡೆಸಿಕೊಂಡೆ?
ನಿನ್ನ ಮನಬಂದಂತೆ ನಡೆಸಿಕೊಳ್ಳಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1455
ಮನದಲ್ಲಿ ಸಂಕಲ್ಪ-ವಿಕಲ್ಪಂಗಳು ನೋಡಯ್ಯಾ.
ಮನಸಿನ ಕಾರ್ಯವೆ ಪುಣ್ಯ-ಪಾಪ ನೋಡಯ್ಯಾ.
`ಮನಃ ಕಾರ್ಯಂ ಜಗದ್ಭೇದಂ’ ಎಂಬುದು ಹುಸಿಯಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1456
ಮನದಲ್ಲಿಯ ಘನವ ನೆನೆಯಬಾರದು.ಲ್ಲ
ತೀರಲದು ಮಾಯಾಜಾಲವೆನಬಾರದು.
ಎಂದರದು ಕಪಿಲಸಿದ್ಧಮಲ್ಲಿಕಾರ್ಜುನನ ಮುಟ್ಟಲು ಬಾರದು./1457
ಮನದ್ಲ ಭೇದವಲ್ಲದೆ ವಸ್ತುವಿನಲ್ಲಿ ಭೇದವಿಲ್ಲವಯ್ಯಾ,
ಕ್ರಿಯಾಕ್ರಿಯೆಯಲ್ಲಿ ಭೇದವಲ್ಲದೆ ಜ್ಞಾನದಲ್ಲಿ ಭೇದವಿಲ್ಲವಯ್ಯಾ;
ರೂಪಾರೂಪದಲ್ಲಿ ಭೇದವಲ್ಲದೆ ಚೈತನ್ಯದಲ್ಲಿ ಭೇದವಿಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1458
ಮನದ್ಲಲ್ಲದ ಮಹಾಂತರು ಮನದಲ್ಲಿ ಘನಗೊಳಿಸಬಾರದ ಅಂಗನೆಯರ್ಲ!
ಮನದ್ಲಲ್ಲದ ಕಾಯದ್ಲಲ್ಲದ ಮಹಾಂತರ ಕಂಡಡೆ,
ಎನ್ನ ಮನ ಮನೋಹರವಾಯಿತ್ತಯ್ಯಾ,
ಮಹಾದೇವ ಮದನಮರ್ದನ ಮಹಾಂತ ಮಹಿಮಾಶಾ ಕಪಿಲಸಿದ್ಧಮಲ್ಲಿಕಾರ್ಜುನ./1459
ಮನನ ಮಾಡಿದ ಮಂತ್ರ ಮಹಾಪದವಿಯ ಕೊಟ್ಟಿತ್ತಯ್ಯಾ.
ಮನನವರಿಯದ ಮಂತ್ರ ಮಂತ್ರದಲ್ಲಿಯ ವಸ್ತುವ ಕೊಟ್ಟಿತ್ತಯ್ಯಾ.
ಮಂತ್ರವೇನು ಮನವೆ? ಕಪಿಲಸಿದ್ಧಮಲ್ಲಿಕಾರ್ಜುನನ ಫಲವೇನು?
ವಿಚಾರದಿಂದ, ವಿಶ್ವಾಸದಿಂದಗಣಿತ ಫಲವ ಕೊಟ್ಟಿತ್ತಯ್ಯಾ./1460
ಮನನತ್ರಾಣರೂಪವಾದ ಚಿತ್ತೇ, ಮಂತ್ರವಲ್ಲದೆ
ಬೇರೆ ಮಂತ್ರಗಳುಂಟೆ ಅಯ್ಯಾ?
ಸರ್ವಮಂತ್ರಮಾತೆ ಪಂಚಾಕ್ಷರಿಯೆ ತಾನಾಗಿ,
ಕಪಿಲಸಿದ್ಧಮಲ್ಲಿಕಾರ್ಜುನಂಗೆ ಅಂಗವಾದ ಚಿತ್ತೆ,
ಪ್ರಣಯಮೂಲವಾದ ಮಂತ್ರವಯ್ಯಾ./1461
ಮನಮಗ್ನಯೋಗವೆಂದಡೇನು ಕೊರತೆ?
ಹೇಳಾ, ಎಲೆ ಅಯ್ಯಾ.
ಮನವಿಲ್ಲದ ಬಚ್ಚಬರಿಯ ಬೊಮ್ಮವೆಂದಡೇನು?
ಹೇಳಾ, ಎಲೆ ಅಯ್ಯಾ.
ನುಡಿದ ಮಾತಿನಲ್ಲಿ ವಿವರ ತೋರುತ್ತಿದೆ ಎಂದಡೆ
ತಾತ್ಪರ್ಯವಂತಪ್ಪುದೆ, ಕಪಿಲಸಿದ್ಧಮಲ್ಲಿಕಾರ್ಜುನ?/1462
ಮನವಿದ್ದ್ಲ ಮಹಾದೇವನಿಪ್ಪ.
ಮನವಿದ್ದ್ಲ ಮಹಾದೇವನಿಲ್ಲವೋ ಅಯ್ಯಾ?
ಯಾತ್ರಾರ್ಥವಾಗಿ ಬಂದವರು
ಬಯಲ್ಲ ಬಯಲ ಬಿಟ್ಟು ಬಯಲಾರಿಸುವಂತೆ-
ಮನೋವ್ಯಾಪಾರಕ್ಕದರಂತೆ ಇಪ್ಪ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1463
ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜ್ಞಾನಜ್ಯೋತಿಯ
ಬೆಳಗನಿಟ್ಟು
ಘನಪುರುಷ ಪವಡಿಸೈದಾನೆ, ಎಲೆ ಅವ್ವಾ.
ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ
ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ.
ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ,
ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು./1464
ಮನವೆಂಬ ಸಂಕಲ್ಪವನರಿಯೆನು- ಸಂಕಲ್ಪ ಸಿದ್ಧಿಯಾಯಿತ್ತಾಗಿ.
ಸಂಕಲ್ಪವೆಂಬ ಸಂಬಂಧವನರಿಯೆನು
ನಿಮ್ಮ ವಿಚಾರವೆಡೆಗೊಂಡಿತ್ತಾಗಿ.
ನಿಮ್ಮ ವಿಚಾರವೆ ಅಂತರಂಗದೊಳಗೆ ತುಂಬಿತ್ತಾಗಿ,
ಎನ್ನ ಮನದ ಮುಂದೆಲ್ಲಾ ನೀನೆಯಾಗಿರ್ದೆಯಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1465
ಮನವೆಂಬುದು ಬೇರಿಲ್ಲ ;
ಮಹಾದೇವನ ಮಹಾ ಅರುಹು ನೋಡಾ.
ಸಂಕಲ್ಪ ವಿಕಲ್ಪಂಗಳ ಧರಿಸಿದಲ್ಲಿ ಮನವೆನಿಸಿತ್ತು ;
ಅದು ಅಳಿದಲ್ಲಿ ಮಹಾಜ್ಞಾನವೆನಿಸಿತ್ತು ;
ಅಳಿದ ಭಾವ ತಲೆದೋರಿದಲ್ಲಿ
ಕಪಿಲಸಿದ್ಧಮಲ್ಲಿಕಾರ್ಜುನನೆನಿಸಿತ್ತು./1466
ಮನಸ್ ಶಬ್ದ ನಪುಂಸಂಕ ಎಂಬ ನ್ಯಾಯಜ್ಙನ ಮಾತು
ಪುಸುಯಲ್ಲ ನೋಡಯ್ಯಾ,
ಶಬ್ದ ನಪುಸಂಕವಾಗಿ ಕಾರ್ಯ ಪುಲ್ಲಿಂಗವಾದಡೆ,
ಆ ಶಬ್ದ ಪಾಣಿನಿಗೆ ತಿಳಿಯದೆ ಹೋಯಿತ್ತೇನಯ್ಯಾ?
ಕಪಿಲಸಿದ್ಧಮಲ್ಲಯ್ಯಾ./1467
ಮನುಜರ ಮನ್ನಣೆಯದು ಮಸೆದಲಗಿನ ಗಾಯ ನೋಡಾ.
ಮನುಜರ ಮನ್ನಣೆಯದು ಪರಿಮಳಪುಷ್ಪದ ಸೋಂಕು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1468
ಮನೆ ನೋಡಿ ಮರೆದೆನಯ್ಯಾ ಮಹತ್ವಗಳ;
ಮನೆ ನೋಡಿ ಮರದೆನಯ್ಯಾ ಎನ್ನ ಮನೆಯ;
ಮನ ನೋಡಿ ಮರೆದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ,
ನಡೆಸಿದ ಹೋಮನೇಮ ಕೆರೆದೋಟ ಕೆಲಸಂಗಳ./1469
ಮನೆಮನೆಯ ಮುಂದೆ ಹರಿಹರಿದು ಹಲವು
ಕ್ಷುಧೆಯೆಂಬವಳ ಪರಿಯಿಂದ
ತಾನಾ ಪರಿ ವಿಪರೀತನಾದ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಮೂವರಿಂದ ಮೂಲನಾದೆ./1470
ಮನೆಯ ನೋಡಿ ಮನ ಹೊಗುವಂತಾಗಬೇಕು,
ಜನ ನೋಡಿದಡೆ ಕೀರ್ತಿವಂತರಾಗಬೇಕು.
ನಮ್ಮ ಸಂಗನ ಮನೆ ಹೊಕ್ಕಡೆ,
ಮನವಳಿದು ಮನೋರಥ ಬಸವಣ್ಣನಂತಾಗಬೇಕು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ/1471
ಮರದೆಲೆಯ ತಂದು,
ಕುರುಹಿಡಬಾರದ ಪರಮ ಅರುಹ ಪೂಜಿಸಿದ
ಮರುಳರ ನೋಡಿ ಬೆರಗಾದೆನಯ್ಯಾ.
ಕುರುಹ ಪೂಜೆ ಅರುಹು ಆದಾಗಲೆ ಮರಹಿನ ಕೇಡು.
ಮರವೆಯ ಮುಂದಿಟ್ಟಡೆ ಸಿರಿಗರ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1472
ಮರುಳುತನದಲಿ ಭ್ರಮಿಸಿ ಫಲಪದಕ್ಕೊಳಗಪ್ಪವನ
ಎತ್ತಿದ ಗುರು ಬಸವಣ್ಣ.
ಆಜ್ಞಾಸಿದ್ಧನನರ್ಚಿಸುವ ಪರಿಯಾಯವಿದೆಂದು
ತೋರಿದ ಗುರು ಬಸವಣ್ಣ.
ಸರ್ವಸ್ವವನೊಪ್ಪಿಸೆ ಎನ್ನ ತನ್ನಂತೆ ಮಾಡಿದ
ಕಪಿಲಸಿದ್ಧಮಲ್ಲಿಕಾರ್ಜುನ./1473
ಮಲತ್ರಯಂಗಳಲ್ಲಿ ಕುದಿಯಲೀಯದೆ,
ಮನಸಿಜನ ಬಾಣಕ್ಕೆ ಗುರಿಯಾಗಲೀಯದೆ,
ಎನ್ನ ತನ್ನಂತೆ ಮಾಡಿದನಯದನಯ್ಯಾ ಶ್ರೀಗುರು.
ಪದ ನಾಲ್ಕು ಮೀರಿ ಭವಕ್ಕೆ ಹೇತುವಾಗಲೀಯದೆ,
ಕರುಣಿಸಿ ಮುಕ್ತನ ಮಾಡಿದೆಯಯ್ಯಾ,
ಶ್ರೀಗುರುವೆ, ಪರಮಗುರುವೆ.
ಪರಿಭವಕ್ಕೆ ಬರಲೀಯದಂತೆ,
ಎನ್ನ ನಿಮ್ಮವರೊಳಗೊಬ್ಬನೆಣದೆನಿದೆಯಲ್ಲಾ,
ಗುರುವೆ, ಪರಮಗುರುವೆ,
ಕಾಲನ ಕಮ್ಮಟಕ್ಕೆ ಗುರಿಯಹ ಎನ್ನನು ತೆಗೆದು,
ಗುರು ಲಿಂಗ ಜಂಗಮ ತ್ರೈಲಿಂಗಕ್ಕೆ ಕಾರಣಿಕನ ಮಾಡಿದೆ.
ಇನ್ನು ಭವಕ್ಕೆ ಬಾರೆನು; ನಿನ್ನವರಾದಂತೆ ಅಪ್ಪೆನು.
ಕಪಿಲಸಿದ್ಧಮಲ್ಲಿಕಾರ್ಜುನಾ ,
ಎನ್ನ ಮೀರಿದ ಪರ ಒಂದೂ ಇಲ್ಲ./1474
ಮಲತ್ರಯದ ಕೆಸರಿನೊಳಗೆ ಒಸೆದು ಬಿದ್ದವ ನಾನು,
ವಸುಧೆಪತಿ ನೀ ಎನ್ನ ತಡಿಗೆ ಚಾಚ.
ಮದೀಶನೆ, ಕರುಣಕಾನನದೊಳಗೆ ಸಂತಸವಿರಿಸ,
ಕಪಿಲಸಿದ್ಧಮಲ್ಲಿಕಾರ್ಜುನ./1475
ಮಲತ್ರಯವತಿಗಳೆದು ಮದವಿದಾರಣರಪ್ಪವರ ಎನಗೆ ತೋರಾ;
ಶುದ್ಧದಲ್ಲಿ ಪ್ರವೇಶಿಸಿ, ಸಿದ್ಧದಲ್ಲಿ ಪ್ರಕಟಿಸಿ,
ಶುದ್ಧ ಸಿದ್ಧಪ್ರಸಿದ್ಧ್ಲ ಪರಿಣಾಮದವರ ಎನಗೆ ತೋರಾ;
ನೆನಹೆ ಮನೆಯಾಗಿ, ಆ ಮನೆಯೆ ತಮಗೆ ಮಾತೆಯಾಗಿ
ಆ ಮಾತೆಯೆ ಮಹಾಬೆಳಗಿನ ಕೂಟವಾಗಿ ಇಪ್ಪವರ ಎನಗೆ ತೋರಾ.
ಆನಂದವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಾ./1476
ಮಹವನೊಡಗೂಡಿದ ತನು ನಿನ್ನಕ್ಷರತ್ರಯವು ಬಸವಣ್ಣಾ ;
ಕರುಣಾಮೃತಸಹಿತ ಇರುತಿಪ್ಪವಯ್ಯಾ ;
ಕರಣ ಕಾನನದೊಳಗೆ ಬೆಳಗುತಿಹವಯ್ಯಾ ;
ಸಮತೆ ಸಾಯುಜ್ಯದ ಅನಿಮಿಷಾಕ್ಷರದಿಂದ
ಬಸವಾಕ್ಷರತ್ರಯ ಮಧುರ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1477
ಮಹವನೊಡಗೂಡಿಹೆವೆಂದೆಂಬೆರಿ:
ಮಹವೇನುತ್ತಮದಲ್ಲಿಪ್ಪುದೊ, ಮಧ್ಯಮದಲ್ಲಿಪ್ಪುದೊ,
ಅಧಮದಲ್ಲಿಪ್ಪುದೊ?
ಇಪ್ಪುದಿಪ್ಪುದು ಉತ್ತಮದಲ್ಲಿ,
ಇಪ್ಪುದಿಪ್ಪುದು ಮಧ್ಯಮದಲ್ಲಿ,
ಇಪ್ಪುದಿಪ್ಪುದು ಅಧಮದಲ್ಲಿ,
ಮಹಾಪ್ರಸಾದಸಂಪನ್ನರಾದವರಿಗೆ ಮಹವು
ಸರ್ವಾಂಗದಲ್ಲಿಪ್ಪುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1478
ಮಹಾಜ್ಯೋತಿಯನೊಡಗೂಡಿಪ್ಪ
ಉರುತರ ಪರಮಜ್ಞಾನಿ ಘನತರದ ಸಂಯೋಗಿ
ಬ್ರಹ್ಮಾಂಡಂಗಳು ನಿನ್ನ ಮರೆಸಲರಿಯವು.
ಸಕಲ ಬ್ರಹ್ಮಾಂಡಂಗಳನೊಳಗು ಮಾಡಿ
ಮೇಲೆ ತೊಳಗಿ ಬೆಳಗುತಿಪ್ಪೆ
ಎಮ್ಮ ಶರಣರ ಕರಸ್ಥಲದಲ್ಲಿ ಸಿಕ್ಕಿ.
ಮಹಾದೀಪ್ತಿಯನಿಂಬುಗೊಂಡಿತ್ತಾ ಕರಸ್ಥಲವು.
ಆ ಕರಸ್ಥಲಕ್ಕೆ ಆವ ಬ್ರಹ್ಮಾಂಡಂಗಳ ಸರಿಯೆಂಬೆ?
ನಿಮ್ಮ ಶರಣರ ಕರಸ್ಥಲವೆ ಪ್ರಮಾಣವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1479
ಮಹಾದೇವ ದೇವಂಗೇರಿಸುವೆ,
ಆರ ಹಸ್ತ ಮುಟ್ಟದ,
ಆರ ದೃಷ್ಟಿ ಮುಟ್ಟದ,
ಮನಪುಷ್ಪದಿಂದ ಪೂಜಿಸುವೆನೆನ್ನ
ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವನಾ./1480
ಮಹಾಬೆಳಗಿನಲ್ಲಿ ಭವಿಸಿದಳವ್ವೆ,
ಮಹಾಬೆಳಗಿನಲ್ಲಿ ಪ್ರಬಲವಾಗಿ
ಮಹಾಬೆಳಗಿನಲ್ಲಿ ಬೆಳಗೆ ಭಕ್ತರಲ್ಲಿಯೆ ತೋರಿ
ಮಹಾಬೆಳಗಿನ ಬೆಳಗು ಕಪಿಲಸಿದ್ಧಮಲ್ಲಿಕಾರ್ಜುನ./1481
ಮಹಾಭಕ್ತರ ಹೃದಯದಲ್ಲಿ
ದೇವರ ದೇವ ಬೈಸಣಿಗೆಯಾಗಿಪ್ಪ.
ಭಕ್ತರ ವಚನಂಗಳು ಗಂಗಾನದಿಯಾಗಿ,
ಎದೆ ಕರ್ಣಂಗಳು ತುಂಬಲೊಡನೆ
ವಿರಕ್ತಿ ವೇಧೆಯಾಗಿ ಭಕ್ತಿಯಾಮೋದವಾಗಿ
ನಿಮ್ಮ ಶ್ರೀಪಾದವ ಸುತ್ತುಗೆ ಕಪಿಲಸಿದ್ಧಮಲ್ಲಿನಾಥಯ್ಯಾ/1482
ಮಹಾವಿಂಧ್ಯಪರ್ವತದಲ್ಲಿ ಜ್ಯ್ಕೋರ್ಮಯವೆಂಬ
ಪ್ರಜ್ವಲ ಸ್ಫಟಿಕ ಘಟದಲ್ಲಿ
ಒಪ್ಪಿ ತೋರುವ ಜ್ಯೋತಿರ್ಮಯ ಲಿಂಗವೇ ನೀನು, ಸೂಕ್ಷ ್ಮವೇ
ನೀನು.
ಉರುತರ ಸಕಲ ಬ್ರಹ್ಮಾಂಡಂಗಳೆಲ್ಲ ನಿನ್ನ
ರೋಮಕೂಪದ ಕೊನೆಯ ಮೊನೆಯ ಮೇಲೆ.
ಸಕಲ ವ್ಯಾಪಿಯಡಗಿಪ್ಪಂಥ ಬ್ರಹ್ಮಾಂಡಂಗಳನ್ನು ಧರಿಸಿಪ್ಪ ನಿನ್ನ
ಅನಂತ ವೇದಂಗಳೆಲ್ಲವು ನಿನ್ನೊಳಗೆ.
ನೀನು ಸರ್ವವ್ಯಾಪ್ತಿಗೆ ಒಳಗಾದುದಿಲ್ಲ.
ನಿನ್ನ ಮೀರಿದ ಆಧಿಕ್ಯ ಒಂದೂ ಇಲ್ಲ.
ಘನತರಲಿಂಗವೆ ಗುರುಕರುಣದಿಂದ
ಎನ್ನ ಕರಸ್ಥಲಕ್ಕೆ ಬಂದು ಸೂಕ್ಷ ್ಮವಾದೆಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1483
ಮಹಿಮೆಯದತಿಶಯ ನಿಮಿತ್ತ ನಿಮ್ಮ ಇಷ್ಟಧಾರಣಾರ್ಹವಲ್ಲದೆ,
ಅನುಭವ ತೊಡಕಿನ ಖಂಡನೆಯಿಂದಲ್ಲ; ಆದರಾಗಬಹುದು.
ಂಗವಂತನು ಪುರಾತನ ಮೆಚ್ಚುಗೆಯಲ್ಲದೆ ಪರಬ್ರಹ್ಮದ ಮೆಚ್ಚಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಾ/1484
ಮಹೇಶನಾದೆನೆಂಬ ಬಿಂಕವು ಮನದರುಹಿನಲ್ಲಿ ಅಡಗಿರಬೇಕು.
ಭಕ್ತನಾದೆನೆಂಬ ಬಿಂಕವು ಸೈರಣೆಯ ರೂಹಿನಲ್ಲಿ
ಮನೆಮಾಡಿಕೊಂಡಿರಬೇಕು.
ಮಹೇಶನಾದವ ಒಬ್ಬನು ತೋರಲಿಲ್ಲ;
ಭಕ್ತನಾದವನ ಅಂದಂದಿಗೆ ನೋಡಲಿಲ್ಲ ಕಂಡೆಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1485
ಮಹೇಶ್ವರ ಸ್ಥಲ
ನೀ ಮುನಿದಡೆ ಮುನಿ:ನಾನೆನ್ನುವೆನಯ್ಯಾ ಮೀರಿದ ವಚನವ.
ನೀ ಮಾಡಲಾದವು:ನಾನೇನು ಹೇಳಿದೆನೆ ಅಯ್ಯಾ? ಇಲ್ಲಿಲ್ಲವು!
ಬಹು ದುರ್ಲಭ, ಬಹು ದುರ್ಲಭ ನಿನ್ನ ಸ್ಥಳವಳವಡುವುದು,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1486
ಮಾಡದವನ ಹೆಸರು ಮಣ್ಣಿನಲ್ಲಿ;
ಮಣ್ಣು ಮಾಡಿದವನ ಹೆಸರು ಮೂಲೋಕದಲ್ಲಿ.
ಮಾಡಿದನೆಂಬುದು ಮನದ ಗುಣ;
ಮಾಡಿದವನವನೆಂಬುದು, ಮಹಾದೇವ
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವ ಗುಣ,
ಮಡಿವಾಳಯ್ಯ ಸಾಕ್ಷಿಯಾಗಿ./1487
ಮಾಡದುದ ಮಾಡಲು ದೈವಬಲವೆಂಬುದೀ ಲೋಕ.
ಎಲೆ ಕಪಿಲಸಿದ್ಧಮಲ್ಲಯ್ಯಾ,
ಏಲೇಶಂಗೆ ಪ್ರಾಣವ ಕೊಟ್ಟುದಾವ ಬಲ ಹೇಳಾ,
ಸೆರಗೊಡ್ಡಿ ಬೇಡುವೆ./1488
ಮಾಡದೆ ಮೋಕ್ಷವ ಹಡೆದು ಹೋದರೆಂಬ
ವಾರ್ತೆಯ ಕೇಳಿಹಿರೇನಯ್ಯಾ? ಇಲ್ಲ ಇಲ್ಲವು.
ಮಾಡಿದಡೆ ತಪ್ಪದು; ಮಾಡಲೊಲ್ಲದೆ ಹೋದಡೆ
ಬರುವುದು ದೂರಾಗದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1489
ಮಾಡಬಾರದ ನೇಮವ ಮಾಡಿ ಕೆಡದಿರಾ, ಮನವೆ.
ಮಾಡುವ ನೇಮ, ಮಾಡಬಾರದ ನೇಮಂಗಳವು,
ಭೂತ ಭವಿಷ್ಯ ವರ್ತಮಾನಂಗಳವು.
ಮಾಡುವ ನೇಮಂಗಳು: ನಿತ್ಯ ಲಿಂಗಾರ್ಚನೆ ಜಂಗಮದಾಸೋಹವೆಂದು
ಕಪಿಲಸಿದ್ಧಮಲ್ಲಿಕಾರ್ಜುನನ ವಚನ, ಮನವೆ./1490
ಮಾಡಬಾರದು ಮಾಡಬಾರದು ಪರಸ್ತ್ರೀಸಂಗವ.
ನೋಡಬಾರದು ನೋಡಬಾರದು ದೃಷ್ಟಿಯನ್ನೆತ್ತಿ ಪರದ್ರವ್ಯವ.
ಕೂಡಬಾರದು ಕೂಡಬಾರದು ಕುಲವಿಲ್ಲದವನ್ನಲ್ಲಿ.
ಆಡಬಾರದು ಆಡಬಾರದು ದುರ್ವಿಷಯಗಳಲ್ಲಿ.
ಮಾಡಿ ನೋಡಿ ಕೂಡಿ ಆಡಿದಡೆ ಈಡು ನೋಡಾ,
ಯಮ ಮಾಡಿದ ಪುಳುಗೊಂಡಕ್ಕೆ, ಎಲೆ ಬಿಲ್ಲೇಶಾ,
ಕಪಿಲಸಿದ್ಧಮಲ್ಲಿಕಾರ್ಜುನರ್ಯನ ಸಾನ್ನಿಧ್ಯದಲ್ಲಿ ಕೇದಾರ ಗುರು ಸಾಕ್ಷಿಯಾಗಿ. /1491
ಮಾಡಬೇಕು ಮಾಡಬೇಕು ಮನವೊದು ಲಿಂಗಪೂಜೆಯ.
ನೋಡಬೇಕು ನೋಡಬೇಕು ಮನವೊದು ಲಿಂಗ ಸಂಭ್ರಮವ.
ಹಾಡಬೇಕು ಹಾಡಬೇಕು ಮನವೊದು ಲಿಂಗಸ್ತೋತ್ರವ.
ಕೂಡಬೇಕು ಕೂಡಬೇಕು ಕಪಿಲಸಿದ್ಧಮಲ್ಲಿಕಾರ್ಜುನಾ,
ಎನ್ನ ಗುರು ಚೆನ್ನಬಸವಣ್ಣ ಕೊಟ್ಟ ಇಷ್ಟಲಿಂಗದಡಿಯಲ್ಲಿ./1492
ಮಾಡಬೇಕು, ಮಾಡಬೇಕು, ಮಹಾನುಭಾವರ ಸಂಗವ
ನೋಡಬೇಕು ನೋಡಬೇಕು, ಸಿದ್ಧಾಂತವೇದಾಂತಂಗಳ.
ಹಾಡಬೇಕು ಹಾಡಬೇಕು, ಪರಶಿವಲಿಂಗವ.
ಕೂಡಬೇಕು ಕೂಡಬೇಕು, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ./1493
ಮಾಡಿ ಮಾಡದವ ಭಕ್ತನೆ ಅಯ್ಯಾ.
ಮುಟ್ಟಿ ಮುಟ್ಟದವ ಮಹೇಶನೆ ಅಯ್ಯಾ.
ಗೆಲವು ಸೋಲು ಒಂದು ವೇಳೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1494
ಮಾಡಿ ಮಾಡಿ ನಿತ್ಯ ಲಿಂಗಾರ್ಚನೆಯ,
ಮಾಡಿ ಮಾಡಿ ನಿತ್ಯ ಜಂಗಮಾರ್ಚನೆಯ,
ಮಾಡಿ ಮಾಡಿ ವಿಸ್ತಾರವೆಂದು ಮಾಡಿ ಕೂಡಿದವರೆಲ್ಲ
ನಿತ್ಯರಾದರು.
ಮಾಡದೆ ಕೂಡದೆ ಯೋಗವೆಂದು, ಆತ್ಮಬೋಧೆಯೆಂದು,
ಯೋಗಿಗಳ ಅನುಮತವೆಂದು,
ಅಧ್ಯಾತ್ಮವ ನುಡಿದು ಶಿವಪೂಜೆಗೆ ದೂರವಾಗಬೇಡ.
ಅಲ್ಲದೆ, ಕೆಲವರೊಳಗೆ ಆಡಿ ಕಪಿಲಸಿದ್ಧಮಲ್ಲಿಕಾರ್ಜುನನ
ಚಿತ್ತಕ್ಕೆ ದೂರವಾಗದೆ
ಶಿವಾರ್ಚನೆಯ ಮಾಡಿದಡೆ ದಿವ್ಯಯೋಗಿಯಪ್ಪೆ./1495
ಮಾಡಿ ಮಾಡಿ ಹೋದರು ಕೆಲಬರು,
ನೋಡಿ ನೋಡಿ ಹೋದರು ಹಲಬರು.
ನೀಡಿ ನೀಡಿ ಹೋದರು ಕೆಬರು,
ನೀಡದೆ ನೋಡದೆ ಮಾಡದೆ ಹೋದವರಾರನೂ ಕಾಣೆ,
ನಿಮ್ಮ ಹೃದಯದೊಳು [ಕಪಿಲಸಿದ್ಧ]ಮಲ್ಲಯ್ಯಾ,/1496
ಮಾಡಿ ಮಾಡಿ ಹೋದವರಿಗೆ ಪದವಿಯಾದಡೆ,
ಅದು ನ್ಯಾಯವಾಯಿತು ದೇವರಲ್ಲಿ.
ಮಾಡಿ ಮಾಡದೆ ಹೋದವರಿಗೆ ಪದವಿಯಾದಡೆ,
ಅದು ನ್ಯಾಯವೆ ದೇವರಲ್ಲಿ.
ಮಾಡಿ ಶುದ್ಧನಾದೆನೆಂಬುದು ಮನದ ಭ್ರಮೆ,
ಮಾಡದೆ ಶುದ್ಧನಾದೆನೆಂಬುದೂ ಮನದ ಭ್ರಮೆಯದು.
ಗಂಗೆಯ ಮುಳುಗಿದವರೆಲ್ಲಾ ಶುದ್ಧ ; ಇದು ಸತ್ಯ, ಇದು ಅಸತ್ಯ,
ಕಪಿಲಸಿದ್ಧಮಲ್ಲಿಕಾರ್ಜುನಾ/1497
ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು.
ಮಾಡಿದ ಕಾರ್ಯದಿಂದ ಸತ್ಪುರುಷರ ಹರ್ಷ ನಿರ್ಭರವಾಗಬೇಕು.
ಮಾಡಿದ ಕಾರ್ಯದಿಂದ ಪ್ರಮಥರು ಅಹುದಹುದೆನಬೇಕು.
ಅದು ಕಾರಣ, ಮಾಡಿಸಿ ಜ್ಞಾನಪ್ರಾಪ್ತಿಯಾಗಲಿಲ್ಲ ;
ಮಾಡಿಸಿ ಪ್ರಮಥರ ಮನೋಲ್ಹಾದವಾಗಲಿಲ್ಲ ;
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಸಾಕ್ಷಾತ್ಕಾರವಾಗಲಿಲ್ಲ ;
ಕೇಳಾ ಕೇದಾರಯ್ಯಾ./1498
ಮಾಡಿದ ಪೂಜೆಯದು ಮಹಾದೇವಂಗಲ್ಲದೆ,
ಅನ್ಯ ದೇವತವೆಂಬುದು ಹೊಲ್ಲ ನೋಡಾ.
ಬೇಡುವ ಕಾಟವದು ದಾನಶೂರಂಗಲ್ಲದೆ
ಅನ್ಯ ಲೋಭಿಗದು ಹೊಲ್ಲ ನೋಡಾ.
ನೋಡುವ ನೋಟವದು [ತನ್ನ ಸ್ತ್ರೀಯಲ್ಲಲ್ಲದೆ
ಪರಸ್ತ್ರಿಯಲ್ಲಿ ಹೊಲ್ಲ] ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1499
ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ,
ಮತ್ತಾರ ಹಿತಕ್ಕಲ್ಲ ನೋಡಯ್ಯಾ,
ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ,
ಮತ್ತಾರ ಹಿತಕ್ಕಲ್ಲ ನೋಡಯ್ಯಾ.
ತನ್ನ ಬಿಟ್ಟನ್ಯಹಿತವ ನೋಡಿದಡೆ,
ಕೂಡಿಕೊಂಬ ನಮ್ಮ ಕಪಿಲಸಿದ್ಧಮಲ್ಲಯ್ಯನವರ./1500