Categories
ವಚನಗಳು / Vachanagalu

ಶಿವಯೋಗಿ ಸಿದ್ಧರಾಮೇಶ್ವರ ವಚನಗಳು

ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ,
ಮತ್ತಾರ ಹಿತಕ್ಕಲ್ಲ ನೋಡಯ್ಯಾ.
ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ,
ಮತ್ತಾರ ಹಿತಕ್ಕಲ್ಲ ನೋಡಯ್ಯಾ,
ತನ್ನ ಬಿಟ್ಟನ್ಯಹಿತವ ನೋಡಿದಡೆ,
ಮೂಡಿಕೊಂಬ ನಮ್ಮ ಕಪಿಲಸಿದ್ಧಮಲ್ಲಯ್ಯನವರ./1501
ಮಾಡಿದೆನೆಂಬ ಪಾಪದ ಶುದ್ಧಿ ಸೂಕ್ಷ್ಮದಲ್ಲಿ ಹೇಳಿಹೆನಯ್ಯಾ:
ವ್ಯಾಸನು ಮನದ ಶಾಂತಿಗಾಗಿ ರೂಢಿಯಲ್ಲಿ ಮೈದೊಳೆದನೆಂಬ
ಗಾದೆಯಂತೆ,
ಮಾಡಿದ ಪಾಪವ ತೀರಿಸಲ್ಲ.
ಇನ್ನು ಮುಂದೆ ಮಾಡೆನೆಂಬುದಕ್ಕೆ ಗಂಗೆಯ ಸ್ನಾನ ಕೇಳಯ್ಯಾ.
ಕಪಿಲಸಿದ್ಧಮಲ್ಲಿಕಾರ್ಜುನ/1502
ಮಾಡಿಸಯ್ಯ ಎನಗೆ ನಿನ್ನವರ ಸಂಗವ,
ಮಾಡಿಸಯ್ಯ ಎನಗೆ ನಿನ್ನವರ ಆನಂದವ,
ಆಗಿಸಯ್ಯ ನಿನ್ನವರಾದಂತೆ,
ನೋಡಯ್ಯ, ನಿನ್ನವರ ಕೂಡೆ ಸಂಗವನು ಮಾಡಿಸಯ್ಯ,
ಎನಗೆ ಬಚ್ಚ ಬರಿಯ ಭಕ್ತಿಯನು ಕೊಡಿಸಯ್ಯ.
ಎನಗೆ ಪಾದೋದಕ ಪ್ರಸಾದವನೊಚ್ಚತ ಸಲಿಸಯ್ಯ.
ನಿನ್ನವರ ಕೂಡಿ ಸಲಿಕೆಗೆ
ಇರಿಸಯ್ಯ ನಿನ್ನವರ ಪಾದದ ಕೆಳಗೆ.
ನಿತ್ಯನಿತ್ಯನಾಗಿ ಬರಿಸರಯ್ಯ ಎನ್ನ ಭವಭವದಲ್ಲಿ,
ಬರಿಸಿ ಬರಿಸಿ ಕಾಲಕಾಮಂಗೆ ಗುರಿ ನಿಗ್ರಹಕ್ಕೆ.
ಕಪಿಲಸಿದ್ಧಮಲ್ಲಿಕಾರ್ಜುನಾ,
ಇನಿತನು ಇತ್ತು ಕೆಡಿಸಯ್ಯಾ ಎನ್ನ ಭವದ ಹುಟ್ಟ./1503
ಮಾಡಿಸಯ್ಯಾ, ಎನಗೆ ನಿಮ್ಮವರ ಸಂಗವ.
ಮಾಡಿಸಯ್ಯಾ, ಎನಗೆ ನಿಮ್ಮವರಾನಂದವ,
ಆಗಿಸಯ್ಯಾ, ನಿಮ್ಮವರಂತೆ.
ನೋಡಿಸಯ್ಯಾ, ನಿಮ್ಮವರ ಕೂಡೆ ಸಂಗವ ಮಾಡಿಸಯ್ಯಾ.
ಎನಗೆ ಬಚ್ಚಬರಿಯ ಭಕ್ತಿಯ ಕೂಡಿಸಯ್ಯಾ.
ಎನಗೆ ಪಾದೋದಕ ಪ್ರಸಾದವನೊಚ್ಚತವ ಸಲಿಸಯ್ಯಾ.
ನಿಮ್ಮವರ ಕೂಡೆ ಸಿಕ್ಕಿ ಇರಿಸಯ್ಯಾ.
ನಿಮ್ಮವರ ಪಾದವ ಕೆಳಗೆ ನಿತ್ಯವಾಗಿ ಬರಿಸಯ್ಯಾ, ಎನ್ನ
ಭವಭವದಲ್ಲಿ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀನಿಂತು ಕೆಡಿಸಯ್ಯಾ ಎನ್ನ ಭವಭವದ ಹುಟ್ಟು./1504
ಮಾಡುವ ಕ್ರಿಯಾಕ್ರಿಯೆಗಳು ಸುಖದುಃಖಗಳಿಗಲ್ಲದೆ,
ಭವವೀಡಾಡವು; ಮೃಡನ ಪದ ದೊರೆಯದು ನೋಡಾ.
ಮಾಡುವ ಕ್ರಿಯೆ ಮನೋಧರ್ಮ, ಮಾಡದ ಕ್ರಿಯೆ ಚಿತ್ತಿನ
ಧೈರ್ಯ,
ತಾನರಿದ ಮನೋತೀತ ಮಾಡುವನಲ್ಲ.
ಇದ್ದು ಬಿಡುವನಲ್ಲ, ಬಿಟ್ಟು ಭವಭಾರಿಯಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ./1505
ಮಾಡುವ ಮಹಿಮೆಗೆ ಇಂದ್ರಜಾಲವೆಂದಡೆ,
ಇಲ್ಲಿ ಅಪೂರ್ವದ ಬೋಧೆಯ ಲಕ್ಷಣ ತೋರ್ಪುದು.
ಮಹತ್ವಂದ ಶ್ರದ್ಧೆ, ಶ್ರದ್ಧೆಯಿಂದ ಮುಕ್ತಿ ಎಂಬುದು ಸತ್ಯ ಸತ್ಯ,
ಕಪಿಲಸಿದ್ಧಮಲ್ಲಿಕಾರ್ಜುನಾ./1506
ಮಾಡುವೆನಯ್ಯಾ ಪೂಜೆಗೆಂದು ದ್ರವ್ಯನಾಶವನು.
ನೋಡುವೆನಯ್ಯಾ ಲಿಂಗಸಂಭ್ರಮಕೆಂದು ಪೂದೋಟಗಳ.
ಹಾಡುವೆನಯ್ಯಾ ನಾಟ್ಯರಚನೆಗೆಂದು ಗಾನವ.
ಕೂಡೆವನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ ಇಷ್ಟಂಗದಲ್ಲಿ/1507
ಮಾತುಳ್ಳನ್ನಕ್ಕ ದೇಹ ಹಿಂಗದು;
ನೆನಹುಳ್ಳನ್ನಕ್ಕ ಪ್ರಾಣ ಸೂತಕ ಬಿಡದು;
ಕಾಯದ ಜೀವದ ಹೊಗೆಯ ಸಂದ ಬಿಚ್ಚಲರಿಯದು;
ಆನು ನಿರ್ದೆಹಿ ಎಂದಡೆ ನಗರೆ ನಿಮ್ಮ ಪ್ರಮಥರು?
ಎನ್ನ ಅಂತರಂಗದಲುಳ್ಳ ಅವಗುಣವ ಹಿಂಗಿಸಿ,
ನಿಮ್ಮಂತೆ ಮಾಡಿದಡಾನುಳಿವೆನಲ್ಲದೆ
ಬೇರೆ ಗತಿಯ ಕಾಣೆ ನೋಡಾ,
ಅಯ್ಯಾ, ಕಪಿಲಸಿದ್ಧಮಲ್ಲಿನಾಥಾ./1508
ಮಾದಾರನಲ್ಲಿ ಉಂಡ ಶಿವನು;
ನೀವೇಕೆ ಉಣ್ಣಿಸರಿ ಎಂದು ಕೇಳುದಡೆ,
ಮೊಡುವೆನುತ್ತರವ, ಕೇಳಿರೆಲೆ ಮೇದಾರನಲ್ಲಿಗೆ ಬಂದಲ್ಲಿ,
ರೂಪಳಿದು ರೂಪಾಗಿ ಬಾ ಎಂದನಲ್ಲದೆ, ಸಮರಸ
ಮಾಡಲಿಲ್ಲವು.
ಮೇದಾರನುಲ್ಲುಂಡು, ಮಾದಾರನ ಮನೆಗೆ ಬಂದಡೆ,
ರೂಪಳಿದು ರೂಪಾಗಿ ಬಾ ಎಂದನಂದು ಚೆನ್ನನು.
ಶಬ್ದಸೂತಕ ಶರಣರೊಗಲ್ಲದೆ ಸೂತಕರಿಗೆಲ್ಲಿಹದೋ
ಕಪಿಲಸಿದ್ಧಮಲ್ಲಕಾರ್ಜುನಾ./1509
ಮಾನವಿಲ್ಲದ ಭೋಜನವದು ಶ್ವಾನನ ಮಾಂಸವಯ್ಯಾ.
ಜ್ಞಾನವಿಲ್ಲದ ಕ್ರಿಯೆಯದು ಸ್ಧಿಗಳಿಗೀಡಯ್ಯಾ.
ಧ್ಯಾನವಿಲ್ಲದ ಪೂಜೆಯದು ಕಾನನ ಜ್ಯ್ಕೋಯಯ್ಯಾ.
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ,
ನೀನಿಲ್ಲದ ಭಕ್ತಿಯದು ಚಾಂಡಾಲ ಪಾಕವಯ್ಯಾ./1510
ಮಾನಸದ ಯೋಗಕ್ಕೆ ಏನೊಂದು ಉಪಮೆಯೆ
ತಾನು ತಾನೊಂದಾಗಿ ಮರುಹು ಮರಹನ್ನ್ಕತಿಗಳೆದು
ಕುರುಹುಯಿಲ್ಲದಿಪ್ಪುದು ನೋಡಾ ಅಯ್ಯಾ,
ನಾಮವೆಂಬ ಧೇಯದಲ್ಲಿ ಕಾಮ್ಯವೆಂಬ ಅಮೃತವನೆ ಕರೆದು
ನಿರ್ನಾಮಂಗೆ ಅರ್ಪಿಸುವೆನು.
ಸೋಮಪ್ರಭೆಯಲ್ಲಿ ಪಂತಿ ಪಸರವಾಗದ ಮುನ್ನ
ಆ ನಿಮ್ಮನೈದುವೆ ಕಂಡಾ.
ನಾಮ ನಿರ್ನಾಮವೆಂಬ ನಿಜವನತಿಗಳೆಯದ ಮುನ್ನ
ನಾ ನಿಮ್ಮನೈದುವೆ ಕಪಿಲಸಿದ್ಧಮಲ್ಲಿಕಾರ್ಜುನಾ/1511
ಮಾನಾಪಮಾನವೆಂಬುದು ಮನದ ಭ್ರಮೆ ನೋಡಯ್ಯಾ.
ಮೇಲಕ್ಕೆ ಕರೆದಡೆ ಮಾನವೆಂಬುದೀ ಲೋಕ;
ಮೂಗುವಟ್ಟಡೆ ಅಪಮಾನವೆಂಬುದೀ ಲೋಕ.
ತಿರುಗುವ ಭೂಮಿಯೆಲ್ಲ ನಕಾರ ಪ್ರಣವವಾಯಿತ್ತು.
ಏಕೈಕವಾದ ಭೂಮಿಯಲ್ಲಿ ಪೀಠವ ಕೊಟ್ಟು ಮನ್ನಿಸುವ
ಅಣ್ಣಗಳ ಬಾಯಲ್ಲಿ ಹುಡಿಮಣ್ಣ ಹೊಯ್ಯದೆ ಮಾಬನೆ ಕಪಿಲಸಿದ್ಧಮಲ್ಲಿಕಾರ್ಜುನಾ?/1512
ಮಾಮರದ ಮೇಲೆ ಹೂಗಳು ಹಲವಾಗಿ
ನಾನಾ ತುಂಬಿಗಳು ಬಂದು
ಅಯ್ಯ ಕಾಮಕ್ಕೆ ಇಚ್ಛೆ ಸುವಾ,
ಕ್ರೋಧಕ್ಕೆ ಇಚ್ಛೆ ಸುವಾ,
ಆಮಿಷಕ್ಕೆ ಇಚ್ಛೆ ಸುವಾ.
ತಾಮಸ ತನ್ನ ರೂಪಾಗಿ
ಈ ಸೋಮಶಿಖರದಲಿಪ್ಪ ನಾಮಾಮೃತವನುಂಡು
ತುಂಬಿಯ ತುಂಬಿಯ ತಗುಳುವೆಯಿಂ ಬಪ್ಪ
ಸರಯನೊಡಗೂಡುವೆ ಶಂಭುವೆ
ಕಪಿಲಸಿದ್ಧಮಲ್ಲಿಕಾರ್ಜುನದೇವ./1513
ಮಾಸಿಮಾಸಿದಂತೆ ತೊಳೆದಡೆ ಶುದ್ಧಮಾಡುವ ಗುಣ
ಉದಕವಯ್ಯಾ;
ಶ್ವಾಸಶ್ವಾಸಕ್ಕೆ ಶಾಂತಿಯ ಕೊಡುವ ಗುಣ ಉದಕವಯ್ಯಾ;
ಮಾಡಿದ ಪಾಪವ ಪರಿಹರಿಸುವದೆಂಬುದು ಶಶವಿಷಾಣ; ನಿಶ್ಚಯ
ನೋಡಯ್ಯಾ.
ಅದು ಕಾರಣ, ಇದು ಗಂಗೆಯಹುದು ಶುದ್ಧ ಶಾಂತಿಗೆ;
ಗಂಗೆಯಲ್ಲ ಕರ್ಮಶುದ್ಧಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ./1514
ಮಾಹೇಶ್ವರನಾದಾತ ಮರಣಕ್ಕೊಳಗಾಗ,
ಕರಣೇಂದ್ರಿಯಂಗಳಿಗೆ ಎಡೆಗುಡ.
ಕಾಲ ಕಲ್ಪಿತನಲ್ಲ, ಕರ್ಮಕ್ಕೆ ವಿರಹಿತ.
ಆತನು ತನು ಸಾಕ್ಷಾತ್ ಶಿವನ ತನು.
ಆತ ನಿತ್ಯ ಕೇವಲ ಮುಕ್ತ,
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಮಾಹೇಶ್ವರನು./1515
ಮೀರಿದ ಮಹಾಮಂತ್ರವಿದೆಂದು ಕೂಗುವ
ಅಷ್ಟಾದಶ ಪುರಾಣ ನೋಡಿ ನೀ ಕೂಗದಿರು ಮರುಳೆ!
ಕಡೆಯಕ್ಷರದ ಅರ್ಥವದು ಕಾರಣಾತೀತ ವಸ್ತು ನೋಡಾ
ಮರುಳೆ!
ಆ ವಸ್ತುವಿಗೆ ನೀನಾಗಬೇಕೆಂಬುವುದಕ್ಕೆ `ನಮಃ’ ಎನ್ನು ಮರುಳೆ!
ಕಪಿಲಸಿದ್ಧಮಲ್ಲಿಕಾರ್ಜುನ ಮಹಾಂಗದಲ್ಲಿ./1516
ಮುಂದಲೆವಿಡಿದು ಮೋಹಿಸುವ ಗಂಡನ ಕಾಣದೆ
ಬಾಯ್ಬಿಡುತ್ತಿದೇನೆ ಗುರುವೆ.
ಈ ಮಂದಮತಿಯ ಮುಂಡವ ಕೊಂಡೊಯ್ದು
ಸಂದೇಹವಿಲ್ಲದೆ ಎನ್ನ ಗಂಡನ ಎನಗೆ ತೋರಿದಡೆ,
ನೀನೆನ್ನ ತಂದೆ ಎಂಬೆನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1517
ಮುಕ್ತಿಯ ಕೂಟಕ್ಕೆ ಮೂಗ ನೀನೆ ಬಸವಾ.
ಭಕ್ತಿಯ ತನುಸಂಬಂಧಿ ನೀನೆ ಬಸವಾ.
ಎನಿತೆನಿತು ಜರಿದಡೂ `ಬಸವಾ’ ಎಂಬುದ ಮಾಣುವೆನೆ
ಅಯ್ಯಾ?
ಎನಿತೆನಿತು ಕಡಿದಡೂ `ಬಸವಾ’ ಎಂಬುದ ಮಾಣುವೆನೆ
ಅಯ್ಯಾ?
ಕಪಿಲಸಿದ್ಧಮಲ್ಲಿನಾಥಯ್ಯಾ./1518
ಮುಕ್ತಿಯ ಲಾಂಛನ ಮುಕ್ತಿಯ ರೂಪು ಕಾಣಾ ಬಸವ.
ಭಕ್ತಿಯ ಲಾಂಛನ ಭಕ್ತಿಯ ರೂಪು ಕಾಣಾ ಬಸವ.
ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯನ ರೂಪು ಕಾಣಾ ಬಸವ. /1519
ಮುಕ್ತ್ಯಂಗನೆಗೆ ಚಿತ್ತಶುದ್ಧಿಯಪ್ಪ ವೃಕ್ಷವ
ಚಿತ್ತದಲ್ಲಿ ಬಿತ್ತಿದನಲ್ಲಾ
ಆ ವೃಕ್ಷ ಆ ಫಲಕರ್ಮಕ್ಕೆ
ಆ ಫಲವಾಗುತ್ತೈದೂದೆ ನೋಡಾ.
ನಿಃಕರ್ಮಕ್ಕೆ ಸಫಲವಪ್ಪ ವೃಕ್ಷ ನೀನೆ ಅಯ್ಯಾ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ./1520
ಮುಕ್ತ್ಯಂಗನೆಯ ಸಂಯೋಗದಿಂದ
ಶುದ್ಧ ಮುಗ್ಧನಾದೆ.
ಭಕ್ತ್ಯಂಗನೆಯ ಸಂಯೋಗದಿಂದ
ಉರುತರ ನಿಷ್ಕಳವನೆಯ್ದಿದೆ.
ಜ್ಞಾನಾಂಗನೆಯ ಸಂಯೋಗದಿಂದ
ತತ್ವಾರ್ಥವನರಿದೆ.
ಕಪಿಲಸಿದ್ಧ ಮಲ್ಲಿಕಾರ್ಜುನನ ಸಂಯೋಗದಿಂದ
ತ್ವಮಸಿಯಾದೆ./1521
ಮುಖದಿಂದ ಹುಟ್ಟಿಪ್ಪ ಮೂರರ್ಪಿತೋದಕದ ಒಳಗೆ,
ಹುಟ್ಟಿತ್ತು ಶುದ್ಧ ಪ್ರಸಾದೋದಕ.
ಸದಮಲ ಜ್ಙಾನದಂಘ್ರಿಯಲ್ಲಿ ಹುಟ್ಟಿತ್ತೊಂದುದಕ.
ಅದನು ಒಯ್ದೆರೆದಲ್ಲಿ ಉದ್ಭವಿಸಿತ್ತು ತಾ
ಕರಣೇಂದ್ರಿಯವನತಿಗಳೆದು ಹತ್ತನೆಯ ಪಾದೋದಕ
ಕ್ರಮವಿಂತುಟಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1522
ಮುಖವನರಿಯದೆಂತರ್ಪಿಸುವೆನಯ್ಯಾ? ಅದು ಭವ ಹರಿಯದು.
ಅವಯವದ ಪರಿಯಾಣದಲ್ಲಿ ಅನಿಮಿಷವೆಂಬ ಓಗರವನಿಕ್ಕಿ,
ತನುತ್ರಯದಿಂ ಮೇಲಣ ಆನಂದ ಕೋಣೆಯಲ್ಲಿ,
ಅನಿಮಿಷಂಗಾರ್ಚನೆಯ ಮಾಡಬಲ್ಲಡೆ
ಆತನನುಪಮ ಲಿಂಗಾರ್ಚಕನೆಂಬೆ;
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನೆಂಬೆ./1523
ಮುಗ್ಧೆಯ ಸಂಯೋಗದಿಂದ ಮುಕ್ತಿವಡೆದೆನೆಂದು,
ಅಧರ್ೊದಯಗಿರಿಯಲ್ಲಿ ಆನಂದದಿಂದ
ಮುಗ್ಧೆಯ ಮೂಲಕೆ ಹೊದ್ದುವ ತತ್ವವನು
ನಾಮ ಮಧ್ಯದಲಿ ಕಂಡೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./1524
ಮುಟ್ಟದಂತೆ ಇರಿಸು; ಮರಳಿ ಹುಟ್ಟದಂತೆ ಮಾಡು.
ಹುಟ್ಟಿ ಹುಟ್ಟಿ ಹೊಂದುತಿರ್ದು ಕಷ್ಟವ ಬಿಡಿಸಯ್ಯಾ ತಂದೆ,
ನಿಮ್ಮ ನಂಬಿದೆನಯ್ಯಾ ನಾನು,
ಕಪಿಲಸಿದ್ಧಮಲ್ಲಿಕಾರ್ಜುನಾ./1525
ಮುಟ್ಟದಿರು ಮೂರುವನು ಮುಟ್ಟಿಸದಿರಾರುವನು
ಬಟ್ಟ ಬಯಲಾಗು ಗುರುಹಸ್ತದಿಂದ
ಮುಟ್ಟು ಮೂರರ ಅಸುವ ಬಿಟ್ಟು ಕಳೆ ಆರಲಿ ತತ್ವಕೆ
ತವಕಿಸದೆ ಗುರುವಾಗು ಕಪಿಲಸಿದ್ಧ ಮಲ್ಲಿಕಾರ್ಜುನಾ/1526
ಮುಟ್ಟಿ ಪೂಜಿಸುವೆನಯ್ಯಾ,
ಮುಟ್ಟಿದ ಬಳಿಕ ಇದು ನಷ್ಟವಾಗಬಹುದೆ?
ಈ ಹುಟ್ಟುವ ಹೊಂದುವವರ ಮುಟ್ಟಲೀಯದಾರಯ್ಯ.
ಮುಟ್ಟಿದ ಬಳಿಕ ಹುಟ್ಟುವ ಹೊಂದುವ
ಕಷ್ಟವ ಮಾಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./1527
ಮುಟ್ಟಿ ಮುಟ್ಟುವನಲ್ಲ
ಮುಟ್ಟದೆಯು ಮುಟ್ಟುವನು,
ಹುಟ್ಟು ಹೊಂದೆಂಬುದನು ಕಳೆದು,
ನಿಷ್ಠೆಯಿಂ ಗುರುವಿನ ಬಿಗಿದು ಹಿಡಿಯಲಿಕಾ ಗುರು,
ಹುಟ್ಟು ಹೊದಿಲ್ಲದೆ ಹೋಗೆಂದ
ಕಪಿಲಸಿದ್ಧಮಲ್ಲಿಕಾರ್ಜುನಾ./1528
ಮುಟ್ಟಿದರೆಂದು ಶಿರಮಟ್ಟ ನೀರು ಮುಟ್ಟಿದ ಬಳಿಕ
ಬಟ್ಟಬಯಲಾದೆಯೇನಯ್ಯಾ, ಮನವೆ?
ಮುಟ್ಟಬಾರದೆಂದು ಸಂಶಯ ತೋರ್ಪಡೆ,
ಮುಟ್ಟಿದ ಎಲ್ಲಾ ದುರ್ಮಲ ಭಾಂಡ, ಮನವೆ.
ಸಂಕಲ್ಪ ವಿಕಲ್ಪಂಗಳಳಿದು,
ಬೆಟ್ಟಜಾಪತಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ಬದುಕು, ಮನವೆ./1529
ಮುಟ್ಟಿಹರೆಂದು ಬಟ್ಟೆಯನ್ನುಲ್ಲಂಘಿಸುವರ ನೋಡಾ!
ನೋಡಿ ನೋಡಿ ನಾಚಿತ್ತಯ್ಯಾ ಎನ್ನ ಮನ.
ಮುಟ್ಟಿದ ಪರುಷ ಪಾಷಾಣವಾಗುವುದೆ ಅಯ್ಯಾ?
ಮಾಡಬಾರದೆಂದು ಸಂದೇಹವುಳ್ಳಡೆ ಮಹೇಶಸ್ಥಲವೆಂತಯ್ಯಾ?
ಮುಟ್ಟಬಾರದು ಮುಟ್ಟಬಾರದು ಮಲತ್ರಯಂಗಳ.
ಮುಟ್ಟದ ಬಟ್ಟಬಯಲು ಗಟ್ಟಿಗೊಂಡಚ್ಚ ಮಹೇಶನ ತೋರಾ,
ಕಪಿಲಸಿದ್ಧಮಲ್ಲಿಕಾರ್ಜುನ./1530
ಮುಟ್ಟೆನು ನಾನೇನ ಮುಟ್ಟಿದಡೆ ನಷ್ಟವೆ,
ಮುಟ್ಟುವ ಮೂರ್ತಿ ನಷ್ಟವಾದಡೆ
ಆ ಮುಟ್ಟಿ ಪೂಜಿಸುವ ಕಷ್ಟ ತಾನೆ
ಕಪಿಲಸಿದ್ಧಮಲ್ಲಿಕಾರ್ಜುನ./1531
ಮುನ್ನ ಮಾಡಿದ ದೇಹ ನಿರ್ವಯಲಾದಡೆ,
ಧರಿಸುವುದೇಕೋ ಕಲ್ಲು ಲಿಂಗವ, ಎಲೆ ಅಯ್ಯಾ?
ಅಂಗಗುಣ ಲಿಂಗಕ್ಕಾಯಿತ್ತು ; ಲಿಂಗಗುಣ ಅಂಗಕ್ಕಾಯಿತ್ತು.
ಇವೆಲ್ಲ ಭಾವಸಂಕಲ್ಪವಿಕಲ್ಪವು.
ಅಂಗ ಲಿಂಗವೆಂಬುದು ಪಳಮಾತು.
`ಲಿಂಗಮಧ್ಯೇ ಜಗತ್ಸರ್ವಂ’ ಎಂಬುದು ಅಖಂಡಲಿಂಗ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1532
ಮುನ್ನ ಮುನ್ನ-ಶಶಿರವಿಗಳಿಲ್ಲದ ಮುನ್ನ,
ಬ್ರಹ್ಮ-ವಿಷ್ಣಾದ್ವಿಗಳುದ್ಭವಿಸದ ಮುನ್ನ ಮುನ್ನ,
ಮೂರ್ತಿಗಳೆಂಟು ಒಂದಾಗದ ಮುನ್ನ,
ತನುಮಧ್ಯವಳಯದಲ್ಲಿ
ಸಕಲ ಬ್ರಹ್ಮಾಂಡ ಜಲಮಯವಾಗಿಲ್ಲಿ
ಭಕ್ತಿಕಾರಣ ಬಸವನವಗ್ರಹಿಸಿಪಲ್ಲಿ
ಅದೆತ್ತದ್ದೆ? ಅದ ನೀನೆ ಬಲ್ಲೆಯಯ್ಯಾ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕುರುಹುಗೆಟ್ಟ ನಿಶ್ಚಂತನು./1533
ಮುನ್ನ ಶಿರಂಗಳ ಕೊಯಿದಿಕ್ಕಿ
ನಿಮ್ಮ ಒಲವ ಕಾಣದೆ ಬೆರಗಾದುದು
ಬೆನ್ನಹುರಿ ನವಸಿರಂಗಳೆಲ್ಲವ ಕೊಯ್ದು ತಂತಿಯ ಮಾಡಿ
ಹಾಡಿದನಯ್ಯಾ.
ಗೀತದಿಂದ ಒಲಿದು ಕೃತಾರ್ಥನ ಮಾಡಿದೆಯಯ್ಯಾ,
ಎನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ./1534
ಮುನ್ನಲಾದಿಯಲಿ ತಂದು ಬಿತ್ತಿದ ಬೀಜ
ಚೆನ್ನನಾಗಿಪ್ಪರೈ ನಿನ್ನ ಪರಿಯಾ,
ಎನ್ನೊಡೆಯ ಕಪಿಲಸಿದ್ಧಮಲ್ಲಿಕಾರ್ಜುನ ತಂದೆ
ಇನ್ನಾ ಪದಕ್ಕಿನ್ನು ಏನು ಸರಿಯೈ./1535
ಮುನ್ನಲಿ ಕಂಡ ವಸ್ತು ಮುನ್ನವೆ ಅಡಗಿತ್ತು.
ಮನ್ನಣೆಯ ಶೂಲಕ್ಕೆ ಮುನ್ನವೆ ಹೋದರು.
ಚೆನ್ನಬಸವನೆಂಬ ಪರಿಪೂರ್ಣಜ್ಞಾನಿ ಪ್ರಭಾಸಂಪೂಜ್ಯನಾದ.
ಕನ್ನೆಯರ ಕೂಟವಳಿಯಿತ್ತು ಚೆನ್ನಬಸವಣ್ಣನಿಂದ
ಕಪಿಲಸಿದ್ಧಮಲ್ಲಿನಾಥಯ್ಯಾ./1536
ಮುನ್ನಾಥ ಫಲವನೂ ಇನ್ನು
ಸೀಮೆಕ್ಷೇತ್ರದ ಭಕ್ತಿ ಮುನ್ನಿನಂತೆ
ಫಲವಾಯಿತೊ ಅಯ್ಯ,
ಅಂದಾಯಲ್ಲಿ ಬಸವಣ್ಣ ತಂದಾನು
ಹಿಂದು ಮುಂದುಗೆಟ್ಟ ಫಲವಾ ಫಲವೂ
ಆ ಫಲವಾದರೆ ಸಫಲವಾಯಿತು ಸದ್ಭಕ್ತಿ
ಒಲವಿಂಗೆ ನೀ ಕಪಿಲಸಿದ್ಧಮಲ್ಲಿಕಾರ್ಜುನ./1537
ಮುನ್ನಾದಿಯ ಆದ ಸನ್ನುತದ ವಸ್ತುವನು
ಬಿನ್ನಾಣದಿಂದಲದ ತಂದುಕುಡಲೂ,
ಇನ್ನಿದನು ಇರಿಸಲ್ಕೆ ಠಾವಾವುದೆಂದು
ಮನ ತನ್ನಮಯ ಮಾಡಿದಾ ರಾಜನ ಶಿಷ್ಯ
ಕಪಿಲಸಿದ್ಧಮಲ್ಲಿಕಾರ್ಜುನ./1538
ಮುನ್ನಾದಿಯಲ್ಲದ ಸನ್ನುತದ ಶಿವಲಿಂಗ
ಇನ್ನು ವಾದಿಸಿದ ವಾದಂಗಳಿಂದ
ಎನ್ನ ಮನ ಕರವನರುಹದಲ್ಲಿ ತನ್ನ ಪದ ಬೆಳಗಿಸುವ
ಉನ್ನತೋನ್ನತ ಗುರು ಚೆನ್ನಬಸವಣ್ಣನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ/1539
ಮುನ್ನಾಯ ಮೂರು ಸನ್ನುತದ ಕಳೆ ಆರು
ಪನ್ನಗಾಂಗಗೆ ಭೀತಿ ಧಾತು ಹಲವು.
ಎನ್ನ ಪರಸ್ಥಾನದಲ್ಲಿರಿಸಿ ಸೊಲ್ಲನಿರಿಸಿದನವ
ಶ್ರೀ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಾ./1540
ಮುನ್ನಾಯಲ್ಲದ ಉನ್ನತ ಜ್ಞಾನವನು
ಇನ್ನು ಭೇಸುವವರಾರು ಹೇಳಾ ತಂದೆ.
ಎನ್ನ ಗುರುವೆ ನಿಮ್ಮ ಸೊಮ್ಮನರಿಯದಾತಂಗೆ
ಅರಿಯಲಾಯ್ತು ಕಪಿಲಸಿದ್ಧಮಲ್ಲಿಕಾರ್ಜುನದೇವಾ./1541
ಮುನ್ನಿನ ಭವದವರನರಸಿ ಹರಿವುದೆ ಹಾ! ಅಯ್ಯಾ!
ಸುಡು! ನಿನ್ನ ಭಾಷೆ ಹೋಗಲಿ.
ಕೊಟ್ಟ ಕರ್ತುವ ಬಿಟ್ಟು ಹರಿವುದೆ
ಜಗವೈದ್ಯನಾಥ ಕಪಿಲಸಿದ್ಧಮಲ್ಲಿನಾಥನ./1542
ಮುಳುಗುವಾತ ಮುಳುಗುವವನನೆತ್ತಬಲ್ಲನೆ?
ತಾ ಮಾಯೆಯೊಳಗಾಗಿ,
ಮಾಯಿಕರ ತನ್ನ ಪಾದಾಂಬುವಿಂ ಪರಿಹರಿಪೆನೆಂಬವ
ತೆಗೆದುಕೊಂಬವ
ಇವರಿರ್ವರೂ ಮುಳುಗಿ ಯಮಪಾಶಕ್ಕೊಳಗಾದರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1543
ಮುಳ್ಳು ಮೂರರ ಮೇಲೆ ಕಳ್ಳ ಮೂರುತಿ ತಿರುಗುತ್ತಿಹ ನೋಡಾ.
ಒಳ್ಳೆ ಗುಣಗಳ್ಳರಿಗೆ ತನ್ನ ತಳ್ಳಿ ತೋರಿಸುವ ನೋಡಾ.
ಜಳ್ಳು ಜೀವಗಳ್ಳರಿಗೆ ಸಾಧ್ಯವದು ಎಳ್ಳಿನಿತಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1544
ಮೂಗ ಕಂಡ ಕನಸಿನಂತಾಯಿತ್ತಯ್ಯಾ,
ಎನ್ನ ಭಕ್ತಿ ಹೇಳಲಾರಿಗೆ ಅರಿದು ಅಯ್ಯಾ,
ಮತ್ತೆ ತೋರಲಾರಿಗೆ ಅರಿದು ಅಯ್ಯಾ
ಶೂನ್ಯಕಾಯಕ್ಕೆ ಬಂದಡೆ
ಸರ್ವರಿಗೆ ಕರತಳಾಮಳಕ
ಕಪಿಲಸಿದ್ಧಮಲ್ಲಿಕಾರ್ಜುನ ಅಯಾ/1545
ಮೂರಕ್ಕೆ ಮುನ್ನೂರಕ್ಕೆ ಆರಕ್ಕೆ ಬೀಜವೈ,
ಬೀಜ ಮೂರೊಂದಾಗಿ ಪ್ರಸಾದದಾ ರೂಪು
ಪಂಚಬ್ರಹ್ಮ ಮೇಲೆ ಪ್ರಸನ್ನದ ಆಮೋದವಾದೆನೈ
ಬಸವಣ್ಣ, ನಿನ್ನ ಕರುಣವು ಇನ್ನು ಮುನ್ನಿನಂತಲ್ಲವೈ,
ಇನ್ನು ನಿನ್ನಂತಾದೆ ಕಪಿಲಸಿದ್ಧಮಲ್ಲಿಕಾರ್ಜುನಾ./1546
ಮೂರಕ್ಕೆ ಮೂರಾಗಿ ಮೂರು ತನ್ನಯ ಸೀಮೆ,
ಮೂರೊಂದಾದನೈ ಬಸವಣ್ಣನು.
ಆರು ಮನೆಯಲ್ಲಿದ್ದು ಆರಾರರಿಂ ಮೇಲೆ
ಮೀರಿಪ್ಪ ಭಕ್ತಿಯ ತೋರಿಪುದೀಗ ತನ್ನ ರೂಪು.
ರೂಪಾರೂಪು ಚೆನ್ನಬಸವಣ್ಣನಿಂದ ಆನು ನೀನಾದನೈ
ಕಪಿಲಸಿದ್ಧಮಲ್ಲಿಕಾರ್ಜುನಾ./1547
ಮೂರಕ್ಷರದಲ್ಲಿ ಏಳು ಭುವನ ಓಲಾಡುತ್ತಿದೆ.
ಮೂರಕ್ಷರದಲ್ಲೀರಾರು ಪ್ರಣವಂಗಳಾಡುತ್ತಿವೆ.
ಮೂರಕ್ಷರ ಮೂರು ಮೂರ್ತಿಯ ಕ್ರಿಯೆಯಾಚರಿಸುತ್ತಿದೆ.
ಮೂರಕ್ಷರದಲ್ಲಿ ಮಾರಹರ ಕಪಿಲಸಿದ್ಧಮಲ್ಲಿಕಾರ್ಜುನನ
ರೂಹು ತೋರುತ್ತದೆೆ./1548
ಮೂರನೆಯ ಬೀಜ ಐದನೆಯ ಬೀಜ ಒಂದೆ ನೋಡಯ್ಯಾ.
ಅದೇನು ಕಾರಣ ತಂದೆಯೆಂದಡೆ
ಅರಿಯದೆ ಬೆರೆಯದು ಉಭಯಕರ್ಮದಲ್ಲಿ ಇದರನುಭವ.
ಅರಿದು ಬೆರೆಯದವ ಬರಿಯ ಅರುಹಿನ ಕುರುಹು,
ಕಪಿಲಸಿದ್ಧಮಲ್ಲಿಕಾರ್ಜುನನೆಂದು ಕಾಂಬೆ./1549
ಮೂರರ ಫಲ ನೋಡಾ
ಆರರಲ್ಲಿ ಭವಿಸಿತ್ತು
ತೋರುತ್ತೈದೂದೆ ಶುದ್ಧಲೋಕದಲಿ.
ಆ ಲೋಕದವರೆಲ್ಲ ಆಲೋಕನವ ಮಾಡಿ
ಆಮಧ್ಯಾವಸಾನಂಗಳಲ್ಲಿ ಭೇದಿಸುವ ಅವ್ವೆಯನು
ನಾನೆಂಬ ಬಿಂದುವನು
ತಾನು ತನ್ನಲ್ಲೀಯ ಒಂದಂಗದಲಿ
ಅರಿತಿಹ ಭೇದವನು ಅರಿಯಲೀಯದೆ ಕೂಡಿ
ತೆರಹುಗೆಟ್ಟ ಕಪಿಲಸಿದ್ಧಮಲ್ಲೇಶ್ವರನು./1550
ಮೂರರ ಸೀಮೆಯಲ್ಲಿ ತೋರಿದಾತ ಗುರುವೆಂಬೆನಯ್ಯಾ.
ತೋರಿದುದೆ ವಿಸ್ತಾರವೆಂದ್ದಡಾತನನು
ಆರೂಢದೈಕ್ಯನೆಂಬೆ ಕಪಿಲಸಿದ್ಧಮಲ್ಲಿಕಾರ್ಜುನಾ./1551
ಮೂರರಿಂ ಮುನ್ನವೆ ತೋರಿಪ್ಪ ಸದ್ಭಕ್ತಿ
ಮೀರಿಪ್ಪ ಕ್ರೀಯದಕೆ ಶಾಖೆ ಮೂರು.
ಫಲವು ಹಲವಾಗಿ ಅಲ್ಲಿಪ್ಪ ಫಲವಾರು
ಸಲ್ಲದು ದುಷ್ಕರ್ಮಿಗಳ ಯೋಗಕ್ಕದು.
ಸ್ವಾತಂತ್ರ ಸೀಮೆಯನು ತೋರಿಪ್ಪ ತತ್ವದಾ
ಸೀಮೆ ತಾನು ಅನಾಹತನು ಸ್ವಾತಂತ್ರ ನಿಸ್ಸೀಮ
ಸ್ವಾತಂತ್ರಸದ್ಭಕ್ತಿಗೊಲಿವಾತನು./1552
ಮೂರರಿಂದ ಮುನ್ನಾದ,
ಮೂರು ಮತ್ತೆ ತಾನಾದ.
ಆರನ್ಕಗಳೆದ ತತ್ವ ಸೀಮೆಯಾದ,
ಆರು ತಾನಾಗಿ ಆರಾರುನತಿಗಳೆದ.
ಸಂಬಂಧದ ಮೇಲಣ ಕ್ರಿಯಾಳಾಪ ತವಕಿಸುವ ಸಂಯೋಗ
ಅದರೊಳಗೆ ವಿಯೋಗಿ ಕಪಿಲಸಿದ್ಧಮಲ್ಲೇಶ್ವರ./1553
ಮೂರರಿಂದಂ ಮುನ್ನ,
ಮೂರರಿಂದಂ ಹಿಂದೆ,
ತೋರಿಪ್ಪುದಾರರು ಅತ್ಯ್ಕತಿಷ್ಯ.
ಐದಾರು ಏಳೆಂಟತಿಗಳೆಯ ಬಲ್ಲಡೆ,
ತಾನು ಚಿದ್ರೂಪ ಕಪಿಲಸಿದ್ಧಮಲ್ಲಿಕಾರ್ಜುನಾ./1554
ಮೂರರಿಂದವೆ ಮುನ್ನ, ಮೂರು ನಿನ್ನಯ ಸೀಮೆ,
ಮೂರು ತಾನೊಂದಾಗಿ ಅತಿ ಪದದ,
ಆರು ಭಕ್ತಿಯು ತನಗೆ ಆರಾರು ತತ್ವದಿಂ
ಮೇಲಿಪ್ಪ ಸೀಮೆಗದು ನಿಚ್ಚಣಿಗೆಯೈ
ಆನತದ ಗುರು ಕರುಣದಾಜ್ಞೆಯನುವಿಡಿದು
ಆನೆಯ್ದೆನು ಗುರುವೆ ಶ್ರೀಕಪಿಲಸಿದ್ಧಮಲ್ಲಿಕಾರ್ಜುನಾ./1555
ಮೂರಳಿದು ಮೂರಳವಟ್ಟುವೆ ಭಕ್ತಸ್ಥಲ.
ಮೂರಳಿದು ಮೂರಳವಟ್ಟುದೆ ಜಂಗಮಸ್ಥಲ.
ಅಳಿದು ಎಂದಡೆ,
ಇದ್ದ ಮನ ಲಿಂಕ್ಕೆ ಕೊಟ್ಟಾಗಳೆ [ಹೆಣ್ಣ] ಳಿದುದು;
ಇದ್ದ ಧನ ಜಂಗಮಕ್ಕೆ ಕೊಟ್ಟಾಗಳೆ ಹೊಣ್ಣಳಿದುದು;
ಇದು ತನು ಗುರುವಿಂಗೆ ಕೊಟ್ಟಾಗಳೆ [ಮಣ್ಣ] ಳಿದುದು.
ಅವರವರಾಚರಣೆಯ ನೋಡಿ ಕೊಡುವುದಲ್ಲದೆ,
ಬೇಡಿದ ಪರಿಯಲ್ಲಿ ಕೊಡುವುದೇನೋ ಅಯ್ಯಾ ?
ಸಿಂಧುಬಲ್ಲಾಳ ತನ್ನ ವಧುವ ಕೊಟ್ಟನೆಂದು ಹೇಳಿದಲ್ಲಿ,
ತನ್ನ ಹೆಂಡತಿಯನೇನಾದಡೂ ಕೊಟ್ಟನೆ? ಇಲ್ಲಿಲ್ಲ.
ಹೆಣ್ಣು ಎಂದಡೆ ತಾನು,
ಶರಣಶತಿ ಲಿಂಗಪತಿ ಎಂಬ ಭಾವದಿಂದ
ಲಿಂಗಕ್ಕೆ ಮನ ಕೊಟ್ಟು ವಧುವಾದನಲ್ಲದೆ
ತನ್ನಂಗನೆಯ ಕೊಡಲಿಲ್ಲವು.
[ಹೊನ್ನ] ಎಂದಡೆ ಜಂಗಮಕ್ಕೆ ಧನವ ಕೊಟ್ಟು
ನಿಧಿ ನಿಧಾನ ಒಲ್ಲವಾದನಲ್ಲದೆ, ತನ್ನಂಗನೆಯ ಕೊಡಲಿಲ್ಲವು.
[ಮಣ್ಣು] ಎಂದಡೆ ತನ್ನ ತನುವ ಗುರುವಿಂಗೆ ಕೊಟ್ಟು
ಸ್ವಯಂಭುವಾದನಲ್ಲದೆ ತನ್ನಂಗನೆಯ ಕೊಡಲಿಲ್ಲವು.
ಹೆಣ್ಣು ಸಲ್ಲದು ಜಂಗಮಕ್ಕೆ ;
ಹೊನ್ನು ಸಲ್ಲದು ಲಿಂಗಕ್ಕೆ ;
ಮಣ್ಣು ಸಲ್ಲದು ಗುರುವಿಂಗೆ.
ಇದರ ಭೇದವನಂತವುಂಟು:ತಿಳಿವಡೆ ಬಹು ದುರ್ಲಭ;
ತಿಳಿದು ನೋಡಿದಡೆ ಭಕ್ತಿಗೆ ಬಹು ಸುಲಭ.
ತಿಳಿದು ಮಾಡಿ ಮೋಕ್ಷವ ಹಡೆದರಲ್ಲದೆ,
ತಿಳಿಯದೆ ಮಾಡವರೇನು ಮೇರುವಿನೊಳಗಿರುವ
ಭಂಗಾರವನಾಗಲಿ,/1556
ಮೂರಾರರೆಮ್ಮೇಲೆ ಆರೂಢದದು ಸಮಸತೆ,
ಆರು ಬಣ್ಣವ ಮೀರಿದದು ಅಚಳ ಸಮತೆ,
ತೋರಿಪ್ಪ ತಮಗಳನು ಮೀರಿಪ್ಪುದದು ಸಮತೆ,
ಗಾರು ಮಾಡದು ಸಮತೆ.
ಜ್ಞಾನಮೂಲದಿಂ ಮೀರಿಪ್ಪುದದು
ತತ್ವ ಮೂವತ್ತಾರರ ಮೇಲೆ ತೋರಿಪ್ಪುದದು
ನೀನು ಮೀರಿಪ್ಪ ಸಮತೆ ಸಂಯೋಗ
ಕಪಿಲಸಿದ್ಧಮಲ್ಲಿಕಾರ್ಜುನಾ/1557
ಮೂರು ಕಟ್ಟಿಗೆಯ ಮೂರರಲ್ಲಿರಿಸಿದನು.
ನಿರಾಳ ನಿಷ್ಪತ್ತಿಯಾದ ಲಿಂಗದಲ್ಲಿ
ಆರೂಢ ಅಂಗುಲದೊಳರುವೆರಳನಿರಿಸಿದನು
ಧೀರ ಮೋಳಿಗೆ ಮಾರ ಶರಣು ಶರಣು.
ಆರೂಢ ದಶಗಳ ಭೇದವನರಿದಂತೆ
ತೋರಿದ ಶರಣೆಂದೆನೈ, ಕಪಿಲಸಿದ್ಧಮಲ್ಲಿನಾಥಾ./1558
ಮೂರು ಗುಂಡಿನ ಒಲೆಯಲ್ಲಿ,
ಮಾರಾರಿ ಮೂರುತಿಯ ಪಾಕವ ಮಾಡುತ್ತಾನೆ ನೋಡಾ.
ಆ ಪಾಕ ಪಕ್ವವಾಗದು.
ಈ ವಿಚಿತ್ರವ ನೋಡಿ ನಿಬ್ಬೆರಗಾದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1559
ಮೂರು ಗುಣ ಮುರಿಮುರಿದು ಮೂರಕ್ಕೆ
ತಂದು ಮುರಿಟ್ಟಿತ್ತು ನೋಡಾ,
ಮಾರಹರ ಪಾದಪದ್ಮಭ್ರಮರ.
ಮೂರು ಗುಣದಂತಾಚರಿಸಬಾರದು;
ಮೂರು ಗುಣ ಬಿಡಬಾರದು ನೋಡಾ.
ಮೂರರಿಂದಾರು ಲಿಂಗವ ದಾಂಟಿ, ಮೂರರಲ್ಲಿ ಐಕ್ಯವ ನೋಡೆ
ಪುರಾರಿ ಪರಮಾತ್ಮ ಕಪಿಲಸಿದ್ಧಮಲ್ಲಿಕಾರ್ಜುನಾ
ತಾನೆ ನೋಡಾ, ಮಾರಯ್ಯಾ./1560
ಮೂರು ಬಲೆಯನು ಇಕ್ಕಿ ಜಾರಿ ಕೆಡಹುವ ಮಾಯೆ
ಆರೂಢರೆಂಬವರನೇಡಿಸುವುದು.
ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ
ಶರಣರಿಗೆ ಅಂಜಿ ನಿಂದಿತು ಮಾಯೆ./1561
ಮೂರು ಮಠ ಮೂವತ್ತು ಆರಾಗಿ ತೋರುತಿದೆ
ಮೀರಿಪ್ಪ ಬೊಮ್ಮ ತಾ ಹಮ್ಮಡರಿತು.
ಮಠವು ತಾನೊಂಬತ್ತು ಕುಟಿಲವು ಹಲವಾಗಿ
ನಿಟಿಲನೇತ್ರನ ರೂಪು ಅಜಲೋಕದಾ
ಸಾದಾಖ್ಯ ದೇಹವಾರಾರು ಹೊಗಲಿಲ್ಲೆಲ್ಲಿ
ಮೂವರಿಗೆ ತಾನು ಶಕ್ಯವಲ್ಲ.
ನಾದ ಬಿಂದು ಕಳಾತೀತ ಕಪಿಲಸಿದ್ಧಮಲ್ಲಿಕಾರ್ಜುನನ
ಆಧಿಕ್ಯವನರಿವ ಯೋಗಿ ಯಾರು?/1562
ಮೂರು ಮುಕ್ತಿಮೂಲಾಧಾರಕೆ
ಆರು ಶಕ್ತಿ ಅಂತ್ಯಕ್ಕೆ
ಮೇಲೆ ಇದ್ದಳವ್ವೆ ಒಬ್ಬಳು.
ಆಳಾಪವ ನಡೆಸಿ ಅವ್ವೆ,
ಕ್ರೀಯಂ ನಿಃಕ್ರೀಯಾಗುತ್ತಿದ್ದಳು.
ಶೂಲಹಸ್ತನೆಂಬ ಬಾಲಕನ ಜನನಿಯಾದಳು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅವ್ವೆ./1563
ಮೂರು ವೃಕ್ಷವು ಶುದ್ಧ, ಆರು ಫಲವೂ ಸಿದ್ಧ,
ಆರಾರು ಕೋಟಿಯದು ಪ್ರಸಿದ್ಧದಾ ತೆನೆಗಡದ ಸೀಮೆಯ,
ತನುವಿನ ಮಂಟಪದ ಘನ ಮಸ್ತಕದಲಿಪ್ಪ
ಹೊಂಗಳಸದಾ ಮೂರು ಮತ್ತೊಂದಾಗಿ
ಆರರಾಹುತಿಯಿಂದ ಆರಾರು ಕೋಟಿಯಿಂದತ್ತಲಾಗಿ
ಮೀರಿನಿಂದಾ ತ್ವಮಸಿ
ಕಪಿಲಸಿದ್ಧಮಲ್ಲಿನಾಥನ ಸಾರಹೃದಯನ ಭಕ್ತಿ ಫಲವಿಂತುಟು./1564
ಮೂರುಲಿಂಗಕ್ಕೆ ಮೂಲಮಂತ್ರವಾದಾತ ಗುರು
ಮೂರು ವಿದ್ಯೆಗೆ ವಿದ್ಯಾರೂಪವಾದಾತ ಗುರು.
ಹೊದ್ದಿದ ಪ್ರಪಂಚನತಿಗಳೆದು ರೂಪಿಯ ರೂಪಾದಾತ ಗುರು.
ಲೋಕತ್ರಯಕ್ಕೆ ಕಪಿಲಸಿದ್ಧಮಲ್ಲಿಕಾರ್ಜುನನೆ ಗುರು/1565
ಮೂರೂರ ಮಧ್ಯದಲ್ಲಿ ಆರು ವರ್ಣದ ಪದ್ಮ
ಬೇರೆ ಬೇರವಕೆ ಅಕ್ಷರಗಳಾರು.
ಏರಿ ಬಂದಪೆವೆಂಬ ಕರ್ಮಯೋಗಿಗಳೆಲ್ಲ ಗಾರಾಗಿ ಹೋದರು.
ಮೀರಿದ ಶಿವಯೋಗ ಗಾರಾದವರಿಗೆ ಸೂರೆಯೆ,
ಕಪಿಲಸಿದ್ಧಮಲ್ಲಿಕಾರ್ಜುನ?/1566
ಮೂರ್ಖತ್ವೇನ ಸಕ್ವೀಯಾನಿ ಕರ್ಮಾಣಿ ಚ ದಿನೇ ದಿನೇ||
ಯಃ ಕರೋತಿ ಸ ಮೂಢಸ್ತು ಶತಜನ್ಮವಿಮೋಚಕಃ||’
ಎಂಬವನು ಕರ್ಮಿಯಯ್ಯಾ.
“ಜಗತ್ಸತ್ಯಂ ಮತ್ವಾ ಜಗ್ಕ ನಿರತಃ ಕರ್ಮಕುಶಲಃ|
ತೃತೀಯೇನ ಪ್ರಾಪ್ತಿಃ ಪರಮ ಸುಪದಂ ಶಾಂಕರಿ ಶಿವೇ||’
ಎಂಬವನು ಮುಮುಕ್ಷು ಕಂಡಯ್ಯಾ.
“ಪ್ರಪಂಚಂ ಸ್ವಪ್ನವನ್ಮತ್ವಾ ಧ್ಯಾನಕರ್ಮಪರಾಯಣಃ|
ದಿಜನ್ಮತಾಂ ಸ ಮೋಕ್ಷಂ ಚ ಪ್ರಯಾತಿ ಗಿರಿನಂದನೇ||’
ಎಂಬವನು ಅಭ್ಯಾಸಿ ಕಂಡಯ್ಯಾ.
“ವ್ಯವಹಾರಾನ್ಸಮಸ್ತಾಂಶ್ಚ ಉಪೇಕ್ಷ್ಯ ಪರಮೇಶ್ವರಿ|
ವಿವೇಕತತ್ಪರೋಭೂತ್ವಾ ಏಕಜನ್ಮವಿಮೋಚಕಃ||’
ಎಂಬವನು ಅನುಭಾವಿ ನೋಡಯ್ಯಾ.
“ಅದೃಷ್ಟಾ ್ಯ ವಿಶ್ವವಿಕೃತಿಂ ಸ್ವಾತ್ಮಜ್ಞಾನೇನ ಯೋ ನರಃ|
ಭಾತಿ ತಸ್ಯ ಮಹಾದೇವಿ ವಿದೇಹಂ ವಪುರೀರಿತಂ||’
ಎಂಬವನು ಆರೂಢ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1567
ಮೂರ್ತಿ ಮೂರರಲ್ಲಿ [ಅ]ಮೂರ್ತಿಯಲ್ಲಿ[ಲೆಂ]ದು
ಬಂದೆಯಲ್ಲಾ ಮಡಿವಾಳಾ.
ದೇಹ ಮೂರರಲ್ಲಿ ನಿರ್ದೆಹಿಯಾಗಿ ಬಂದಾಚರಿಸಿದೆಯಲ್ಲಾ
ಮಡಿವಾಳಾ.
ವಾಣಿ ನಾಲ್ಕರಲ್ಲಿ ಆನು ನಾನಲ್ಲೆಂಬ ಭಾವವಳಿದು ಶಬ್ದ
ಮುಗ್ಧವಾಗಿ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಚಿದಾಕಾಶವಾಗಿ
ಪೋದೆಯಲ್ಲಾ ಮಡಿವಾಳಾ./1568
ಮೂರ್ತಿ ಮೂಲಕ್ಕೆ ತಾನೆ ಮುಖ್ಯನಾದಾತ,
ಸಕಲಕ್ಕೆ ತಾನೆ ಕಾರಣಿಕನಾದಾತ,
ಸರ್ವವನೂ ತನ್ನೊಳಗಡಗಿಸಿ ಮೀರಲೀಯದಾತ.
ಆತನು ಅಜ್ಞಾತನೆಂಬೆ, ಆತನು ಶರಣನೆಂಬೆ,
ಆತನು ಸಕಲನಿಷ್ಕಲ ಪರಿಪೂರ್ಣನೆಂದೆಂಬೆ,
ಅಚ್ಚಂಗೈಕ್ಯನೆಂದೆಂಬೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಾನೆಂಬೆ./1569
ಮೂರ್ತಿಯ ಮೂಲಕ್ಕೆ ಬಸವನ ಭಕ್ತಿಯೆ ಕಾರಣ.
ಜ್ಞಾನದ ಸಂಬಂಧಕ್ಕೆ ಬಸವ ನೀ
ಕಪಿಲಸಿದ್ಧಮ್ಲನಾಥಯ್ಯ./1570
ಮೃತ್ತಿಕೆಯೊಂದರಲ್ಲಿ ಮಡಕೆಗಳು ನೂರಾರು.
ಮನವೊಂದರಲ್ಲಿ ಕ್ರಿಯಾಗಳು ನೂರಾರು.
ಜನಕನೊಬ್ಬನಲ್ಲಿ ಸಂತ್ಕಗಳು ನೂರಾರು.
ಘನಕ್ಕೆ ಘನವಾದ ಚಿನ್ಮಯ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ಜಗತ್ತುಗಳು ನೂರಾರು./1571
ಮೃದು ರುಚಿ ರೂಪು ಕೂಡಿ ಸಕ್ಕರೆಯಾಯಿತ್ತು.
ಗುರು ಲಿಂಗ ಜಂಗಮ ಕೂಡಿ ವಸ್ತುವಾಯಿತ್ತು.
ಮೃದುವಿನಂತೆ ಗುರು, ರುಚಿಯಂತೆ ಲಿಂಗ, ರೂಪಿನಂತೆ ಜಂಗಮ
ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1572
ಮೇಖಲಾ ಮೂರರೊಳು ಸಾಕಲ್ಯ ಪ್ರಸಾದ
ಏಕದಶವೂ ತಾನೊಪುತಿಹುದು.
ಆಕಾರ ಚತುಷ್ಟಯದ ಮೇಲಿಪ್ಪ
ಹತ್ತನೆಯ ನಿರಾಕಾರ ನಿರ್ಮಳದ ನಿತ್ಯ ತಾನು
ಕರಣ ನಿರ್ಮಳತೆಯನು ವಿಮಳದಾನಂದವನು ಕರುಣಿಸುತ್ತಿಪ್ಪವೈ.
ಜನನ ಮರಣ ದೂರವಾಗಿ
ಕರುಣಾಕರನು ಕಪಿಲಸಿದ್ಧ ಮಲ್ಲೇಶ್ವರನ
ಕರುಣವುಳ್ಳಂಗಲ್ಲದೆ ಇವು ಅರಿಯಲರಿದು./1573
ಮೇರುವಿನ ಮಧ್ಯದ ಓರಂತೆ ಸುಧೆವರಿದು
ಆರಾರು ಆರುವರೈ ಅತ್ಯ್ಕಶಿಷ್ಠ.
ಧಾರುಣಿಗೆವರಿಯದಾ ಮೇಲಪ್ಪ ಪಸರದ
ಮೂರು ಮಸ್ತಕದಲ್ಲಿ ಅರತು ಅರತ,
ಓರಂತೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಅಹೋರಾತ್ರಿಲಿಯ ಅರಸಿ ಕಂಡೆ ನಾನು./1574
ಮೇಲುಗೆಟ್ಟಾ ಸೀಮೆ, ತೆರಹುಗೆಟ್ಟಾ ಬ್ರಹ್ಮ ;
ಅಯ್ದಾರು ಕಣೆಯದಿಂ ಮೇಲೆ ದುರ್ಗ.
ಕಾಲಾಳು ನಾಯಕರು ಮೇಲೆ ರಥ ಪಾಯಕರು
ಆರೈದು ಓರಂತೆ ದುರ್ಗದಲ್ಲಿ.
ಧಾರುಣಿಯ ಕಳ್ಳರಿಗೆ ನಾನಂಜಿ ದುರ್ಗದೊಳು
ಓರಂತೆ ಅಡಗಿರ್ದ ಕಪಿಲಸಿದ್ಧಮಲ್ಲಿಕಾರ್ಜುನ./1575
ಮೇಲುಮಾಡಿದ ನುಡಿಯಂತೆ ನಡೆಯಬೇಹಡೆ,
ಮೃಡಭಾವವಡಗಿರಬೇಕು.
ಪ್ರಾಣದಲ್ಲಿ ಅಡಗಿದ ಭಾವ[ವ] ನಡಹಿಕೊಳಬೇಕಾದಡೆ,
ದೃಢಂಗಮೂರ್ತಿಯ ಧರಿಸಬಹುದೆ ದೇಹದಲ್ಲಿ?
ಅರಿದು ಧರಿಸದೆ, ಧರಿಸಿ ಅರಿಯದೆ ಇದ್ದವನ ಭಾವ
ಬಯಲಲ್ಲಿಹ ದೀಪದಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1576
ಮೊದಲಲ್ಲಿಯ ಪುಣ್ಯಪಾಪವದು
ಇದರಲ್ಲಿಯ ಜೀವಕ್ಕೆ ಸುಖದುಃಖ ನೋಡಾ ಎಂದೆನಲಾರೆ.
“ಸಂಗಾತ್ಸಂಜಾಯತೇ ಜ್ಞಾನಂ ಜ್ಞಾನಾತ್ಸಂಜಾಯತೇ [ಶಿವಃ]
ಶಿವತ್ಸಂಜಾಯತೇ ಮುಕ್ತಿಮರ್ುಕ್ತಿರನ್ಯತ್ರ ನಾಸ್ತಿ ವೈ’ ಎಂದ
ಬಳಿಕ,
ಸಂಗಂ ಸುಖದುಃಖವಲ್ಲದೆ, ಪೂರ್ವಾರ್ಜಿತ
ಪುಣ್ಯಪಾಪವೆಂಬವ
ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1577
ಮೊಮ್ಮಗನಾಗಿ ಮೊಮ್ಮಗಳಾಗಿ ಮೊಮ್ಮಗನಾಗಿ ನಿಂದೆ
ನೋಡವ್ವಾ, ಮಗನ ಕರುಣದಿಂದೆ.
ಮಗನಾಗಿ ಮಗನಾದೆ ನೋಡವ್ವಾ, ಮಗನ ಕರುಣದಿಂದೆ.
ಮಗನು ಹೋಗಿ ಮಹಾಲಿಂಗನಾದ ನೋಡವ್ವಾ ನಿನಗೆ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ./1578
ಮೋಹಿಸುವಲ್ಲಿ ಮೋಹಿಸದೆ ಇಪ್ಪಾತ
ಕಾಮಿಸುವಲ್ಲಿ ಕಾಮಿಸದೆ ಇಪ್ಪಾತ
ಆತನಿಪ್ಪೆಡೆಯಲ್ಲಿ ಇರದೆ ಇಪ್ಪಾತ
ಆತನು ವಾಙ್ಮನಕ್ಕಗೋಚರನೆಂಬೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀ ಸಾಕ್ಷಿಯಾಗಿ ನೀನೆಂಬೆ./1579
ಮ್ಕ್ತುನ ವರ್ಣ ಶಂಖಾದಡೇನೊ?
ಸಕ್ಕರೆಯ ವರ್ಣ ಉಪ್ಪಾದಡೇನೂ? ರುಚಿ ಬೇರೆ!
ನೀಲದ ವರ್ಣ ಮೇಲಾದಡೇನೂ?
ಅಂತರ ಮಹದಂತರ ಪಟ್ಟಂತರದ ಪರಿ ಬೇರೆ.
ನೀಲವರ್ಣ ಎಲ್ಲಾ ಎಲ್ಲಾ ವರ್ಣವು ನಿಮ್ಮೊಳಗೆಯು
ಆಗುರು ಕಪಿಲಸಿದ್ಧಮಲ್ಲಿಕಾರ್ಜುನದೇವಾ, ನೀನೇ ಬಲ್ಲೆ./1580
ಯಜಮಾನಂ ಸಾಜ ಜೋಯಿಸಕಾರ ತಾನೆಯಾಗಿ ಲಗುನವೆ?
ತಿಟ್ಟವಿಟ್ಟಂತೆ ಕುಂದದಿಕ್ಕಿ ಆಕಾಶ
ಆಕಾಶಲಿಂಗವಾಗುತ್ತಿಕ್ಕೆಲನ ಸಿಂಹಾಸನಗೊಂಡು
ನಡುವೆ ನಿಂದಾ ಪಶುರೂಪುಗೊಂಡು ಸಲಕ್ಷಣವಿಡಿದು
ಎಲ್ಲ ಲಿಂಗಮಯವಾಗಲು ಓಡಿ ನಡೆವೆ
ಕಪಿಲಸಿದ್ಧಮಲ್ಲಿನಾಥನಾದ!/1581
ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ
ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ.
ಸತ್ಯ! ವಚನ ತಪ್ಪುವುದೆ ಅಯ್ಯಾ!
ಕಪಿಲಸಿದ್ಧಮಲ್ಲಿನಾಥಾ,
ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು
ಇಂದೆನಗೆ ಅರಿಯಬಂದಿತ್ತಯ್ಯಾ./1582
ಯಥಾ ಬೀಜಸ್ತಥಾಂಕುರಃ’ ತಪ್ಪದು ನೋಡಾ!
ನಿನ್ನ ಮಕ್ಕಳು ಆರು ಬೇಡಿತನೀವರು.
ನಿನ್ನ ಮಕ್ಕಳು ನಿನ್ನಂತೆ ದಾನಶೀಲರು
ಕಪಿಲಸಿದ್ಧಮಲ್ಲಿನಾಥಯ್ಯಾ./1583
ಯಥಾ ಭಾವಸ್ತಥಾ ದೇವಃ’ ಎಂದ ಬಳಿಕ,
ದೇವರ ಬಯಲ ಭಾವ ತನ್ನ್ಲ ಇಂಬುಗೊಂಡಡೆ ಮುಕ್ತಿ.
ದೇವ ರೀತಿಯೊಂದು ತನ್ನ ರೀತಿಯೊಂದಾದ ಬಳಿಕ,
ಘಟಿಸದು ಕಪಿಲಸಿದ್ಧಮಲ್ಲಿಕಾರ್ಜುನನ ಐಕ್ಯವು./1584
ಯಥಾ ಷಡಕ್ಷರಂ ಮಂತ್ರಂ ದೇವ್ಯೆ ದೇವಸವಿೂರಿತಂ’ ಎಂದ ಬಳಿಕ
ಷಡಕ್ಷರವೆಂಬುದು ಶಿವಮಂತ್ರ; ಪಂಚಾಕ್ಷರವು ಶಕ್ತಿಮಂತ್ರ.
ಇದರಂತುವನರಿಯಬಲ್ಲಡೆ ಗುರುವಿನಿಂದಲ್ಲದೆ
ಪೆರ ನರರಿಂದಾಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ/1585
ಯದ್ದ ೃಷ್ಟಂ ತನ್ನಷ್ಟಂ’
ಎಂಬ ಶ್ರ್ಕುವಾಕ್ಯವ್ಲನ್ವನರ್ಥವ ಮಾಡಿ ಮುಳುಗರಾ,ಮನವೆ.
ಭೇದಬ್ಧುಯಿಂದರಿವುದದೆ ನಷ್ಟ ನೋಡಾ, ಮನವೆ.
ಭೇದವಳಿದು ಭವವಿರಹಿತಮ್ಕರ್ೂಯ
ಪಂಚತತ್ವವೆಂದು ನಂಬು ಕಂಡಾ, ಮನವೆ.
`ಸರ್ವಂ ಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್’ ಎಂಬುದು
ಪುಸಿಯೆ ಮನವೆ?/1586
ಯಮನಿಯಮಾಸನಧ್ಯಾನರೂಢ ಪ್ರಾಣಾಯಾಮ
ಪ್ರತ್ಯಾಹಾರವೆಂಬ ಪಂಚಸಮಾಧಿಯಿಂ ಸಿಕ್ಕಿ
ಅಜಲೋಕದ ಸುದ್ದಿಯನರಿವವರು ಎತ್ತಾನೊಬ್ಬರು.
ಸುಲಭವೆ ಎಲ್ಲರಿಗೆ ಶಿವಲಿಂಗಭಕ್ತಿ?
ಸುಲಭವೆ ಎಲ್ಲರಿಗೆ ಗುರುಚರಭಕ್ತಿ?
ಸುಲಭವೆ ಎಲ್ಲರಿಗೆ ಜೀವ ಜಂತುವಿನ ಮೇಲೆ ದಯವುಳ್ಳದು?
ಶಿವಂಗಾರ್ಚನೆಯ ಮಾಡಿ ಗುರುಚರಭಕ್ತಿ ಅಳವಟ್ಟ ಬಳಿಕ
ಸರ್ವವು ತಾನಾಗಿರಬೇಕು.
ಸದಾಚಾರ ಶಿವಾಚಾರ ನಿಹಿತಾಚಾರ ದಯಾಚಾರವುಳ್ಳವರಿಗೆ
ಸರ್ವಯೋಗವಪ್ಪುದು; ಅವ್ಯಯಂಗೆ ಯೋಗ್ಯರಪ್ಪರು
ನಿಮ್ಮ ಕೂಡಿ ದ್ವಯವಿಲ್ಲದೆ ಏಕವಪ್ಪರಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1587
ಯಾವನ ಗತಿಯವನ ಮತಿಯಾನಪ್ಪೆ
ಅವ ನಿಂದಲ್ಲಿ ನಿಲುವೆ, ಅವ ಬಿಟ್ಟಡೆ ಬಿಡುವೆ,
ಅವ ಹಿಡಿಯಿತ್ತ ಹಿಡಿವೆ, ಬೆನ್ನ ಬಳಿಯ ಸಲುವೆ.
ಪ್ರಾಣವ ಮೇಲಿಕ್ಕಿ ನೆರವೆ ಕಪಿಲಸಿದ್ಧಮಲ್ಲಿನಾಥಯ್ಯನ./1588
ಯಾವಾದರೂ ತೀರ್ಗಡೆಯಂತ್ಯದಲ್ಲಿ
ಜಪ ತಪ ಶಿವಾರಾಧನೆ ಫಲಪದವು.
ತೇರ್ಗಡೆಯಾ[ಗ]ದಲ್ಲಿ ಫಸದು ಫಸದು ಪುಣ್ಯಪಾಪಗಳವು.
ದೇಹಶುದ್ಧವಾದವಂಗೆ ರಸಸಿದ್ಧಿ
ರಸಸ್ಧಿಯಾದವಂಗೆ ದೇಹಶ್ಧುದ್ಧಿ
ದೇಹಶುದ್ಧವಿಲ್ಲದವಂಗೆ ರಸಸಿದ್ಧಿಯಾಗದು;
ರೋಗ ಪರಿಹಾರ[ವಾಗದು] ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1589
ಯುಗ ಜುಗ ಮಡಿವಂದು
ಧಗಿಲು ಭುಗಿಲೆಂದು ಮುಸುಕಿದ ಮಹಾಜ್ವಾಲೆ ಇದೇನೊ!
ಇಂದೆನ್ನ ಕಣ್ಗೆ ಗೋಚರವಾಯಿತ್ತೆಲೆ ಅಯ್ಯಾ!
ನೀವೆಂದರಿಯೆನಯ್ಯಾ.
ನಾನೆನ್ನ ಕಾಯದ ಕಳವಳದಲ್ಲಿದ್ದೆನಲ್ಲದೆ
ನೀವೆಂಬ ಬಗೆದೋರದೆ ಕೆಟ್ಟೆನೆಲೆ ಅಯ್ಯಾ.
ಆಳ್ದನೊಡನೆ ಆಳು ಮುನಿದಡೆ, ಆರು ಕೆಡುವರು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1590
ಯೋ ದೇಹಿರೂಪಃ ಪರಮಸ್ಸುಖೋಪಿ
ಯೋ ಭೂಷಭೂಷಃ ಪರಮಾತ್ಮಂಗಂ!
ಯೋ ಲೋಕನಾಥೋ ಮಮ ಲೋಕದಾಯೀ
ಯೋ ದೇಹಿದೇಹೋ ಮಮ ದೇಹಶೇಷಃ||’
ಎಂದೆನಿಸಿದ ಬಸವಾ.
ಎಲ್ಲ ಲೋಕತ್ರಯಪ್ರತಿಪಾತ ಶಬ್ದದಲ್ಲಿ ಘನಗಂಭೀರವಾದ
ಬಸವಾ.
ಬಕಾರಸಂಬಂಧ ಬಹುಧಾಮರೂಪ ಬಸವಾ, ನೀನೆಲ್ಲಡಗಿದೆಯೊ
ಬಸವಾ?
ಕಾಲಕಲ್ಪಿತನಷ್ಟವಾಗಿ ಕಾಲಕಲ್ಪಿತಂಗಳನರಿದೆಯೊ ಬಸವಾ,
ಅರಿದ ಮೂರ್ತಿಯ ನಿಮ್ಮ ಕುರುಹಿಟ್ಟುಕೊಂಡಿರೆ ಬಸವಾ.
ಇಷ್ಟ ಬ್ರಹ್ಮಾಂಡವ ಘಟ್ಟಿಗೊಳಿಸಿದಿರಿ ಬಸವಾ,
ಲಿಂಗದೃಷ್ಟಿಯ ರೂಪ ನಷ್ಟವ ಮಾಡಿದಿರಿ ತಂದೆ ಗುರುಬಸವಾ,
ಗುಣವೆಲ್ಲಡಗಿದವೊ ಬಸವ ಗುರುವೆ, ಮನವೆಲ್ಲಡಗಿತ್ತೊ
ಮಹಾಬಸವಾ?
ಕಾಯಗುಣ ಮನಸುಮನಂಗಳು ನಿಮ್ಮಲ್ಲಡಗಿದವೆ ಬಸವ ತಂದೆ?
ಎಲೆ ಬಸವಲಿಂಗವೆ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ,
ಬಸವಾ ಬಸವಾ ಬಸವಾ!/1591
ಯೋಗದ ನೆಲೆಯನರಿದೆನೆಂಬಾತ
ಲಿಂಗಾರ್ಚನೆಯ ಮಾಡಯ್ಯ.
ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು
ತನುತ್ರಯಂಗಳನೇಕೀಭವಿಸಿ
ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ
ಲಿಂಗಾರ್ಚನೆಯ ಮಾಡಯ್ಯಾ.
ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು
ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1592
ಯೋಗದ ಹೊಲಬ ನಾನೆತ್ತ ಬಲ್ಲೆನಯ್ಯಾ?
ಯೋಗ ಶಿವಶಕ್ತಿ ಸಂಪುಟವಾಗಿಪ್ಪುದಲ್ಲದೆ,
ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ.
ಹೃದಯಕಮಲದಲಿ ಇಪ್ಪಾತ ನೀನೆಯಲ್ಲದೆ,
ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ./1593
ಯೋಗಭೂಷಣ, ನಿಮ್ಮ ಆ ಅಕ್ಷರಭೇದ
ಆದಿಯಾಧಾರಂಗಳಿಲ್ಲದಂದು,
ಆನಂದಸ್ಥಾನದಲ್ಲಿಪ್ಪ ಗುರು ಬಸವಣ್ಣ,
ತಾನೆನ್ನ ಕರುಣಂ ನಿತ್ಯನೆನಿಸಿ;
ಯೋಗಸಿದ್ಧಾಂಗದಲ್ಲಾದ ಪಂಚಬ್ರಹ್ಮದಿಂ
ದಾಗಾದೆನೈ ಚೆನ್ನಬಸವ ತಂದೆ;
ಯೋಗಮೂರುತಿಯೆ ನೀನೆನ್ನ ಗುರುವಾಗಿ
ಶಿವಯೋಗಿಯಾನಾದೆನಯ್ಯಾ.
ನಿನ್ನವರ ಹೊರೆಗೈದೆ ಯೋಗಿಗುರು ಪ್ರಭುರಾಯ
ನಾ ನಿಮ್ಮ ಕರುಣಲ್ಲಿ
ಶಿವಯೋಗಮುದ್ರೆಯನೆ ನೆನೆದು ಸುಖಿಯಾದೆನೈ
ಆಗಮಕ್ಕೊಳಗಾದ ಆಗಮಕೆ ಹೊರಗಾದ
ಆನಂದಸ್ಥಾನದ ಸ್ವಯವಾದೆನೈ ದೇವ
ಯೋಗಜ್ಞಾನ ಕಪಿಲಸಿದ್ಧಮಲ್ಲಿನಾಥನ ಕರುಣ ನಿಮಗಾಯಿತ್ತು,
ಶ್ರೀಗುರು ಚೆನ್ನಬಸವಣ್ಣ ತಂದೆ./1594
ಯೋಗಭೂಷಣನೆ,
ನಿಮ್ಮ ನೆರೆಯಲು ಬೇಕು ಬೇಕೆಂಬ ಸದ್ಭಕ್ತರ
ಮನದ ಕೊನೆಯಲ್ಲಿ ತಿಳುಹುವೆ ಅಕ್ಷರವ.
ಬಸವ ಬಸವ ಬಸವ ಎಂಬ ಮಧುರಾಕ್ಷರತ್ರಯದೊಳಗೆ
ತಾನೆ ತೆಂಗ ಒಪ್ಪಿಕ್ಕು ಘನಗುರುವೆ ಬಸವಣ್ಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1595
ಯೋಗಮೂರುತಿ ಸಮತೆ,
ನಾದಬ್ರಹ್ಮದ ಸಮತೆ, ಆದಿಯಾಧಾರಕ್ಕೆ ಮಾತೆ ಸಮತೆ.
ಮೂದೇವರಿಗೆ ಕುಲಗುರು ತಾನು.
ಸಮತೆಯನು ಭೇದಿಸಿದ ಸಿದ್ಧ
ಸುಮತಿಯ ಸಂಗಮಾ ಆಯಕ್ಷರದಲ್ಲಿ
ಆಮೋದ ಬಿಂದುವಿನ ಆನಂದ ಧಾತು ತಾ ಸಮತೆರೂಪು.
ಸುಜ್ಞಾನಭರಿತನು ಕಪಿಲಸಿದ್ಧಮಲ್ಲೇಶ್ವರನ
ರೂಪು ಮಾಡಿದ ಗುರು ಸಮತೆ ರೂಪು./1596
ಯೋಗವ ಸಾಧಿಸಿದವನೊಬ್ಬ ನಿಜಗುಣ;
ಯೋಗವ ಸಾಧಿಸಿದವನೊಬ್ಬ ವೃಷಭಯೋಗೀಶ್ವರ;
ಯೋಗವ ಸಾಧಿಸಿದವನೊಬ್ಬ ಶಿವನಾಗಮಯ್ಯ;
ಯೋಗವ ಸಾಧಿಸಿದೆ ನಾನೊಬ್ಬ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಯೋಗವ./1597
ಯೋಗವನರಿದೆನೆಂಬೆ, ಯೋಗವನರಿದೆನೆಂಬೆ ;
ಯೋಗದ ನೆಲೆಯನಾರು ಬಲ್ಲರು?
ಯೋಗದ ನೆಲೆಯ ಹೇಳಿಹೆ ಕೇಳಾ-
ತಾತ್ಪರ್ಯಕಣರ್ಿಕೆಯ ಮಸ್ತಕದಲ್ಲಿದ್ದ ಕುಂಭದೊಳಗೆ ತೋರುತ್ತದೆೆ;
ಹಲವು ಬಿಂಬ ಹೋಗುತ್ತಿದೆ, ಹಲವು ರೂಪ ಒಪುತ್ತಿದೆ ;
ಏಕ ಏಕವಾಗಿ ಆನಂದಸ್ಥಾನದಲ್ಲಿ ಅನಿಮಿಷವಾಗುತ್ತಿದೆ ;
ಪೂರ್ವಾಪರ ಮಧ್ಯ ಶುದ್ಧ ಪಂಚಮವೆಂಬ ಸ್ಥಾನಂಗಳಲ್ಲಿ
ಪ್ರವೇಶಿಸುತ್ತಿದೆ ತಾನು ತಾನೆಯಾಗಿ.
ಅರಿಯಾ ಭೇದಂಗಳ-
ಬಿಂದು ಶ್ವೇತ ಪೂರ್ವಶುದ್ಧ ಆನಂದ ಧವಳ ಅನಿಮಿಷ ಸಂಗಮ
ಶುದ್ಧ ಸಿದ್ಧ ಪ್ರಸಿದ್ಧ ತತ್ವವೆಂಬ ಪರಮಸೀಮೆ ಮುಖಂಗಳಾಗಿ,
ಅಜಲೋಕದಲ್ಲಿ ಅದ್ವಯ, ನೆನಹಿನ ಕೊನೆಯ ಮೊನೆಯಲ್ಲಿ
ಒಪ್ಪಿ ತೋರುವ
ಧವಳತೆಯ ಬೆಳಗಿನ ರಂಜನ ಪ್ರವಾಹ ಮಿಗಿಲಾಗಿ,
`ತ್ವಂ’ ಪದವಾಯಿತ್ತು, ಮೀರಿ `ತ್ವಮಸಿ’ಯಾಯಿತ್ತು
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮವ ನುಂಗಿಲೀಯವಾಯಿತ್ತು./1598
ಯೋಗಿಗೆ ಕೋಪವೆ ಮಾಯೆ;
ರೋಗಿಗೆ ಅಪಥ್ಯವೆ ಮಾಯೆ;
ಜ್ಞಾನಿಗೆ ಮಿಥ್ಯವೆ ಮಾಯೆ;
ಅರಿದೆನೆಂಬವಂಗೆ ನಾನು ನೀನೆಂಬುದೆ ಮಾಯೆ,
ಕಪಿಲಸಿದ್ಧಮಲ್ಲಿಕಾರ್ಜುನ./1599
ಯೋಗಿನಾಥನ ಒಲುಮೆ ಯೋಗಿಯಾದವಂಗಲ್ಲದೆ,
ಭೋಗಿಯಾದಾತಂಗೆಲ್ಲಿಹುದಯ್ಯಾ?
ಪಂಚಮಸ್ವರದಾಯತ ಕೋಗಿಲೆಗಲ್ಲದೆ ಕಾಗೆಗೆಲ್ಲಿಹುದೊ?
ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ/1600
ಯೋಗಿಯ ಶರೀರ ವೃಥಾಯ ಹೋಗಲಾಗದಯ್ಯಾ.
ಪುಣ್ಯವ ಪುಣ್ಯವ ಮಾಡುವುದು ಲೋಕಕ್ಕೆ.
ಆಯ ಹಾಯ ಹತ್ತುವುದಯ್ಯಾ.
ಆ ಲೋಕಕ್ಕೆ ಸೋಪಾನವ ಕೊಡುವ
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು./1601
ಯೋಗಿಯ ಹೊಲಬು ಯೋಗಿಯಾದವಂಗಲ್ಲದೆ,
ಇತರ ನರರಿಂಗೆ ಸಾಧಿಸಬಾರದು ಕೇಳಯ್ಯಾ.
ಧಾತುವಾದವದು ರಸವಾದಿಯಾದವಂಗಲ್ಲದೆ,
ಇತರ ನರಂಗದು ಸಾಧಿಸಬಾರದು ಕೇಳಯ್ಯಾ.
ನೋಡಿ ಮಾಡುವುದಾದಡೆ ಭವವೆಲ್ಲಿಹುದು,
ದರಿದ್ರವೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಯ್ಯಾ./1602
ರಜತಗಿರಿಯ ಮೇಲೆ ಅಜಪಯೋಗದಲಿ ಭಜಿಸುವೊಡೆ
ಅದಕೆ ಹಲವು ಬೆಟ್ಟದಾ ಶೂಲಾಕೃತಿಯ ಮೇಲೆ
ಭಾಳಲೋಚನನಿಪ್ಪ ಭಾವದಲಿ
ಗಿರಿಗಳಾರೇಳೆಂಟರಾನೀಲ ಕಂಬುವಿನಲ್ಲಿ
ಬಾಲಕನು ನಿಂದೀಗ ಬಾಲ್ಯವನು ಕಳೆದು
ತನ್ನಯ ರೂಪಿನಾ ಭಾವದಾ ಬೆಳಗಿನಲಿ
ಗುರುವಿನಾ ಶುದ್ಧತೆಯ ಸಾಯುಜ್ಯವನು ಮೀರಿ
ಸಂಬಂಧವಾತನು ತಾನೊಂದಾಗಿ
ತವಕ ತವಕವ ಕೂಡಿ
ಕಪಿಲಸಿದ್ಧ ಮಲ್ಲಿಕಾರ್ಜುನನ ತದ್ರೂಪಾದ./1603
ರತ್ನಪರೀಕ್ಷೆಯ ಮಾಡುವ ಅಣ್ಣಗಳೆಲ್ಲ ದಿಮ್ಮಿದರಯ್ಯ.
ಬಲ್ಲಿದ ಬೆಲೆ ಎಂದೆಡೆ ಹುಲುಕಡ್ಡಿಯೊಳೈತೆ;
ಬೆಲೆ ಇಲ್ಲದುದೆಂದಡೆ ಬಲ್ಲವರ ಮುಂದುಗೆಡಿಸುತೈತೆ.
ಇದರ ಬೆಲೆಯ ಬಲ್ಲ ನಮ್ಮ ಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ/1604
ರಾಜಲಿಂಗವ ತಂದು ಪೂಜೆ ಕರದೊಳಗಿಟ್ಟು
ಭೇದಿಸ ಬಾರದದ ಆನಂದವ.
ಅಭೇದ್ಯಕರನಿತ್ಯವೆಂದಾ ಗುರುವ ಪಾಲಿಸಿದ
ಅಭೇದ್ಯ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನ./1605
ರಾಯ ಬಿನ್ನಾಣಿಯ ಮಣ್ಣ ಗೋವಿಂದನ
ಒಂದೆ ಗವಿಯ ಸಂಗತು
ಒಂದೆ ಬೆಡಗಿನ ಕೊಳದಲಿಕ್ಕಿದನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯ!
ಕೊಳವನೊಡಹೊಯ್ದರೆ
ಸಂಗತ ಲಿಂಗತವಾಯಿತ್ತಯ್ಯಾ./1606
ರುಚಿಯನತಿ ರುಚಿಸಿದಲ್ಲಿ ವಿಷವಾಯಿತ್ತು ;
ರುಚಿಯು ನಿಜಶಕ್ತಿಯಂತಿರಲು ಅಮೃತವಾಯಿತ್ತು.
ಇದು ಕಾರಣ, ಗುರುಭಕ್ತರಿಗೆ ಗುರುಕರುಣವೆ ಸಾಕು;
ಅನ್ಯರ ಅನುಭವ, ಅನ್ಯರ ಸಮರಸ
ಕಪಿಲಸಿದ್ಧಮಲ್ಲಿಕಾರ್ಜುನನ ಶರಣನಿಗನಿಷ್ಟ ಕೇಳಾ,
ಮಡಿವಾಳಯ್ಯಾ. /1607
ರುದ್ರಂಗೆ ಪಾರ್ವತಿಯು, ವಿಷ್ಣುವಿಂಗೆ ಲಕ್ಷಿ ್ಮಯು, ಬ್ರಹ್ಮಂಗೆ
ಸರಸ್ವತಿಯು
ಮತ್ತೆ ತೃಣದಶನದ ಫಲದ ಆಹಾರದವರ
ಸುತ್ತಿ ಮುತ್ತಿತ್ತು ನೋಡಾ ಮಾಯೆ;
ಸಪ್ತಧಾತುವ ಮೀರಿ ಪಂಚಭೂತವ ಜರಿದ
ಶರಣರಿಗೋಡಿತ್ತು ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನಾ./1608
ರೂಢಿಯರಿಯಲ್ಕೆ ಗಾಡಿಗನೆಂಬುದ
ನಾ ಬಲ್ಲೆ, ಎನ್ನವರು ಬಲ್ಲರು.
ನಿನ್ನನೇನ ಬೇಡಿಹರೆಲೆ ಅಯ್ಯಾ.
ನೀ ಕೂರ್ತು ಕೊಡುವ ಸ್ವರ್ಗವನೊಲ್ಲರು
ನಿನ್ನಲುಳ್ಳ ಫಲಪದಾಗಳನೆನ್ನವರೊಲ್ಲರು.
ಬೇಡಿ ಅರ್ಥಿಸುವುದಾದಡೆ ಹುಸಿ ;
ಕೊಡು ಕೊಡದೆ ಮಾಣು.
ಬೇಡುವ ಹೀನ ನಿನಗಲ್ಲದೆ ಎನ್ನವರಿಗುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ./1609
ರೂಪಾದನುಭವಃ’ ಎಂಬುದು ಸಟೆಯೇನಯ್ಯಾ?
`ಸಗುಣಂ ನಿರ್ಗುಣಾತ್ತನ್ನ’ ಎಂಬುದು ಸಟೆಯೆ?
ಕಪಿಲಸಿದ್ಧಮಲ್ಲಿಕಾರ್ಜುನಂಗವೆ./1610
ರೂಪಿಂಗೆ ರೂಪು, ಜ್ಙಾನಕ್ಕೆ ಸುಜ್ಙಾನ, ಪ್ರಾಣಕ್ಕೆ ಪ್ರಸಾದ
ಲಿಂಗತ್ರಯವ ವೇಧೆಯಿಂದವೆ ತಂದು
ಅವರವರ ಕರದಲ್ಲಿ ದೀಕ್ಷೆಯ ಮಾಡಿದನು ಚೆನ್ನಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನಾ./1611
ರೂಹಿಲ್ಲದ ನೆಲದಲ್ಲಿ ಸಸಿಯನೇಂ ಬೆಳೆವುದಯ್ಯಾ?
ಭಯವಿಲ್ಲದವನಲ್ಲಿ ಭಕ್ತಿಯನೇಂ ಬೆಳೆವುದಯ್ಯಾ?
ಭಯ ಕೆಟ್ಟಡೆ ಭಕ್ತಿ ಬಿಡುವುದು, ಮಹದೇವನೊಲ್ಲ
ಕಪಿಲಸಿದ್ಧಮಲ್ಲಿನಾಥನಾ ಹೋ! ಅಯ್ಯಾ!/1612
ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದುವು;
ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು;
ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು.
ಅಕ್ಷರದ್ಲಲ್ಲ, ಶಬ್ದದಲ್ಲಿ, ಗ್ರಂಥಾನ್ವಯದಲ್ಲಿ;
ಏನೆಂಬುದಿಲ್ಲ, ಮೊದಲೆ ಇಲ್ಲ.
ಇಲ್ಲೆಂಬುವ ಅಹುದೆಂಬುವ ಉಭಯ ಶಬ್ದಕ್ಕೆ ಲೋಪವಿಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಮಹಿಮನು./1613
ಲಗ್ನಕ್ಕೆ ವಿಘ್ನ ಬಾರದೆಂದು ಜ್ಯೋತಿಷ್ಯ ಕೇಳುವ ಅಣ್ಣಗಳಿರಾ,
ಕೇಳಿರಯ್ಯಾ: ಅಂದೇಕೆ ವೀರಭದ್ರನ ಸೆರಗು ಸುಟ್ಟಿತ್ತು?
ಅಂದೇಕೆ ಮಹಾದೇವಿಯರ ಬಲಭುಜ ಹಾರಿತ್ತು?
ಇಂದೇಕೆ ಎನ್ನ ವಾಮನೇತ್ರ ಚರಿಸಿತ್ತು?
ಕಪಿಲಸಿದ್ಧಮಲ್ಲಿಕಾರ್ಜುನಾ./1614
ಲಿಂಗ ಂಗವೆಂಬ ಸಂದೇಹ ಉಳ್ಳನ್ನಕ್ಕ
ಸಂದಳಿಯದೆಂಬರೈ ನಿನ್ನವರೆನ್ನ.
ಮನ್ನಣೆಯ ಕರಸ್ಥಲಕ್ಕೆ ಇನ್ನು ನೀ ಬಂದಡೆ
ಉನ್ನತೋನ್ನತನಪ್ಪೆ ಸಂದಿಲ್ಲದೆ
ನಾ ನಿಮ್ಮ ಸೊಮ್ಮಿನೊಳಗಾನೀಗ ಲೀಯ್ಯವಪ್ಪೆ
ಕಪಿಲಸಿದ್ಧಮಲ್ಲಿಕಾರ್ಜುನಾ./1615
ಲಿಂಗ ಘನವೆಂಬೆನೆ? ಕಲ್ಲಿನ ಮಗ;
ಪಾದೋದಕ ಘನವೆಂಬೆನೆ? ಇಂದ್ರನ ಮಗ;
ಪ್ರಸಾದ ಘನವೆಂಬೆನೆ? ಶೂದ್ರನ ಮಗ;
ವಿಭೂತಿಯ ಘನವೆಂಬೆನೆ? ಗೋವಿನ ಮಗಳು.
ಇವೆಲ್ಲ ಒಂದೊಂದರಿಂದ ಜನನವಾಯಿತ್ತು ;
ನೀವಾರಿಂದ ಜನನವಾದಿರಿ ನಿರೂಪಿಸಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1616
ಲಿಂಗ ಘನವೆಂಬೆನೆ? ಗುರುವಿಡಿದು ಕಂಡೆ.
ಗುರು ಘನವೆಂಬೆನೆ? ಸಾಕಾರವಿಡಿದು ಕಂಡೆ.
ಸಾಕಾರ ಘನವೆಂಬೆನೆ? ನಿರಾಕಾರವಿಡಿದು ಕಂಡೆ.
ನಿರಾಕಾರ ಘನವೆಂಬೆನೆ? ಜಂಗಮವಿಡಿದು ಕಂಡೆನಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ./1617
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು
ಜಂಗಮಕ್ಕೆ.
ಲಿಂಗಾರ್ಚನೆ ಬೇಕು ಭಕ್ತಂಗೆ.
ಲಿಂಗಾರ್ಚನೆ ವಿರಹಿತ ಭಕ್ತನ ಮುಖ ನೋಡಲಾಗದು,
ನುಡಿಸಲಾಗದು,
ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1618
ಲಿಂಗ ನೋಡುವಡೆ ಮೈಗೊಟ್ಟುದಯ್ಯಾ
ಷೋಡಶೋಪಚಾರಂಗಳಿಗೆ.
ಜಂಗಮ ನೋಡುವಡೆ, ಮೈಗೊಟ್ಟನಯ್ಯಾ ನಿರಾಕಾರಕ್ಕೆ.
ಗುರು ನೋಡುವಡೆ, ಭವದ ಬೇರು ಅಳಿಯಬೇಕೆಂದು
ಸಾಕಾರವಾಗಿ ನಿಂದ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1619
ಲಿಂಗ ಬಂದು ಲಿಂಗಗಳನಳಿಯಿತ್ತಯ್ಯ ಲಿಂಗವೆ.
ಲಿಂಗ ಬಂದು ಲಿಂಗಗಳನೀಡಾಡಿತ್ತಯ್ಯ ಲಿಂಗವೆ.
ಲಿಂಗ ಬಂದು ಲಿಂಗ ಉಳಿಯಿತ್ತಯ್ಯ.
ಲಿಂಗವೆ ಗುರು ಲಿಂಗವೆ ಜಂಗಮ ಲಿಂಗವೆ ನಾನು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1620
ಲಿಂಗ ಹೋದಡೇನು, ಗುರುವುಂಟೆಂಬ ಬಾಲಭಾಷೆಯ
ಕೇಳಲಾಗದು;
ಕೇಳಿದವನ ಸಂಗ ಸಿಂಗಿ ಕಾಳಕೂಟ ವಿಷವು;
ಆತನ ಸಂಗದ್ಲರಲು ಪಂಚಮಹಾಪಾತಕ ತಪ್ಪದು,
ಕಪಿಲಸಿದ್ಧಮಲ್ಲಿಕಾರ್ಜುನ/1621
ಲಿಂಗ ಹೋಯಿತ್ತೆಂದು ಅಂಗವ ಬಿಡುವವನ ನೋಡಿ,
ಎನ್ನಂಗ ನಡುಗಿತ್ತಯ್ಯಾ.
ಲಿಂಗ ಹೋದಡೆ ನಿನ್ನ ಪ್ರಾಣಂಗಳುಳಿವವೆ?
ಲಿಂಗಪ್ರಾಣಿ ಪ್ರಾಣಲಿಂಗಿ ಎಂಬುದದು ಹುಸಿಯೆ,
ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ?/1622
ಲಿಂಗತ್ರಯವಾವುದೆಂದಡೆ ಹೇಳುವೆ: ಅಪರಸ್ಥಾನದ್ಲಪ್ಪಾತ ಇಷ್ಟ,
ಮಧ್ಯಮಸ್ಥಾನದಲ್ಲಿಪ್ಪಾತ ಗುರು,
ಆನಂದಸ್ಥಾನದಲ್ಲಿಪ್ಪಾತ ಅಭೇದ್ಯ,
ಇದಕ್ಕೆ ಮೂಲಾಧಾರಂಗಳು,
ಸರ್ವಸತ್ವದಿಂದ ಕಾಬುದು ಗುರುವ,
ಕಂಡು ಮಚ್ಚೂದು ಲಿಂಗವ,
ಅವಿರಳವಿಲ್ಲದೆ ನಚ್ಚೂದು ಜಂಗಮವ
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡೂದು/1623
ಲಿಂಗದ ಅಂಗವದು ಅಳವಡಿರೆ
ಸಂಗವ ಮಾಡು ಪುರಾತರ, ಮನವೆ.
ಕಂಗಳವರಿಯರೆ ತಿಂಗಳಧರನ ಪೂಜಿಸು ಮನವೆ.
ಅಂಗಾಂಗ ಸಮರಸವಾಗದಿರೆ
ಗಂಗಾಧರ ಕಪಿಲಸಿದ್ಧಮಲ್ಲಿಕಾರ್ಜುನ ಎನ್ನು, ಮನವೆ./1624
ಲಿಂಗದಲ್ಲಿ ಬೆರೆದಲ್ಲಿ ಬಳಿಕ ಅಂಗದ್ಲ ಬೆರೆಯಲುಂಟೆ ದೇವಾ?
ಅಲ್ಲಲ್ಲ.
ಅಂಗದ್ಲ ಬೆರೆದ ಬಳಿಕ ಲಿಂಗ[ದಲ್ಲಿ] ಬೆರೆಯಲುಂಟೆ ದೇವಾ,
ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ಪೂಜಿಸಿದ ಫಲ ಪಕ್ವವಾಗದನ್ನಕ್ಕ?/1625
ಲಿಂಗದಲ್ಲಿ ಸಂಪನ್ನನಾಗಿ ಗುರುವಾದ ಬಸವಣ್ಣ.
ಗುರುವಿನಲ್ಲಿ ಸಂಪನ್ನನಾಗಿ ಜಂಗಮವಾದ ಬಸವಣ್ಣ.
ಜಂಗಮದಲ್ಲಿ ಸಂಪನ್ನನಾಗಿ ತ್ರೈವಿದ್ಯಕ್ಕೆ ವಿದ್ಯಾರೂಪವಾದ
ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಬಸವಣ್ಣ ಸಾಕ್ಷಾತ್
ಸಂಪನ್ನನಾದ./1626
ಲಿಂಗದಲ್ಲಿ ಸತ್ಕ್ರಿಯಾಚಾರವ ಮನಸೋಂಕಿ ಆಚರಿಸುವಲ್ಲಿ
ಮಾರ್ಗಕ್ರಿಯಾಭ್ಯಾಸಿ.
ಆ ಅಭ್ಯಾಸಕ್ರೀ ಬಲಿದು ಲಿಂಗದಲ್ಲಿ ನೆನಹು ನಿಂದು
ಲಿಂಗವ ಮನ ನೆಮ್ಮಿ ಆಚರಿಸುವಲ್ಲಿ ಮಾರ್ಗಕ್ರೀ.
ಮಾರ್ಗಕ್ರೀ ಒಲಿದು ಮನ ಲಿಂಗನಿಜವಾಗಿ ಆಚರಿಸುವಲ್ಲಿ ಮೀರೀದಕ್ರೀ.
ಆ ಮೀರಿದಕ್ರೀ ಬಲಿದು ಸರ್ವಾಚಾರಸಹಿತವಾಗಿ
ಮಹಾಘನವನಾಚರಿಸುವಲ್ಲಿ ಮೀರಿದ ಕ್ರಿಯಾನಿಷ್ಪತ್ತಿ.
ಈ ಚತುರ್ವಿಧ ಸ್ಥಲವನೊಳಕೊಂಡ ಘನ ಕೂಡಲಚೆನ್ನಸಂಗಯ್ಯನಲ್ಲಿ
ಈ ಕಾಯವೇ ಪ್ರಸಾದಕಾಯವಾಗಿತ್ತು./1627
ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ.
ಬ್ರಹ್ಮ ವಿಷ್ಣಾ ್ವದಿಗಳು ಲಿಂಗಾರ್ಚನೆಯ ಮಾಡಿ
ಭವಕ್ಕೆ ಬಂದುದನರಿಯಾ.
ಬಸವಣ್ಣ ಮೊದಲಾದ ಪುರಾತರೆಲ್ಲ
ಪ್ರಸಾದಲಿಂಗ ಗ್ರಹಿಸಿ ಸಂದಿಲ್ಲದ ಕೂಟವ ಮಾಡಿದ
ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1628
ಲಿಂಗಪೂಜೆ ಮಾಡಿ ಲಿಂಗದ ಕರುಣದ ಹಡೆಯಿರೆಂದು
ಹೇಳುವರಲ್ಲದೆ,
ನೀನಾ ಲಿಂಗವಾಗೆಂದು ಹೇಳುವರಲ್ಲದೆ,
ಲಿಂಗದ ಲೀಲೆಯ ಹೇಳುವರಿಲ್ಲ ನೋಡಯ್ಯಾ,
ಲಿಂಗದ ಲೀಲೆಯ ಹೇಳುವರಲ್ಲದೆ,
ಲಿಂಗ ತಾನಾದವರಿಲ್ಲ ನೋಡಯ್ಯಾ.
ಲಿಂಗ ತಾವಾದವರು ಇಹರಲ್ಲದೆ,
ಲಿಂಗ ಶಬ್ದಮುಗ್ಧವಾದವರು ಒಬ್ಬರೂ ಇಲ್ಲ,
ಕಪಿಲಸಿದ್ಧಮಲ್ಲಯ್ಯಾ./1629
ಲಿಂಗಪೂಜೆಯಿಂದೊಬ್ಬ ಜೀವನ್ಮುಕ್ತ,
ಜಲಪ್ರಭಾವಂದೊಬ್ಬ ಜೀವನ್ಮುಕ್ತ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1630
ಲಿಂಗಲೀಲೆ ಹೇಳುವಡೆನಗಸಾಧ್ಯ ನೋಡಾ, ಅಯ್ಯಾ.
ಭಕ್ತನ ಹಸ್ತದಲ್ಲಿ ಜಂಗಮವಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ;
ಜಂಗಮದ ಹಸ್ತದಲ್ಲಿ ಭಕ್ತನಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ.
ಜಂಗಮ ಪೂಜಿಸಿದ ಫಲ ಸಂಪದಾ ಮೋಕ್ಷ ಕೊಟ್ಟಿತ್ತು ಭಕ್ತಂಗೆ;
ಭಕ್ತ ಪೂಜಿಸಿದ ಫಲ ಜ್ಞಾನಸಂಪದಾ ವೈರಾಗ್ಯ ಕೊಟ್ಟಿತ್ತು
ಜಂಗಮಂಗೆ.
ಇಂತಪ್ಪ ಲಿಂಗಮೂರ್ತಿಯ ನೋಡಿ ನೋಡಿ,
ರೋಮಂಗಳೆಲ್ಲ ನಯನಂಗಳಾದವು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1631
ಲಿಂಗವ ಧರಿಸಿ ಭವಿಯಂಗನೆಯ ನೆರೆಯಬಲ್ಲಡೆ
ಷಟ್ಸ್ಥಲದವರೆಂಬೆನೆ?
ಲಿಂಗವ ಧರಿಸಿ ಅಂಗಜನ ಸ್ನೇಹವ ಕಟ್ಟಬಲ್ಲಡೆ,
ಜಂಗಮಮರ್ದಕ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವೆಂದು ಕಾಂಬೆ./1632
ಲಿಂಗವ ಪೂಜಿಸಹೋದಡೆ ಲಿಂಗರೂಪಾದೆನು.
ಜಂಗಮವ ಪೂಜಿಸಿಹೋದಡೆ ಪ್ರಭುವಾದೆನು.
ಗುರುವ ಪೂಜಿಸಿಹೋದಡೆ ಚೆನ್ನಬಸವಣ್ಣನಾದೆನು.
ಎನಗಾಜ್ಞೆಯಾದಡೆ ಬರಿಯ ಸಿದ್ಧರಾಮನಾಗಿ ನಿಂದೆನು ನೋಡಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರ ಸಮೂಹದಲ್ಲಿ./1633
ಲಿಂಗವ ಪೂಜಿಸಿ ಅಂಗವ ನಿರ್ವಯಲ ಮಾಡೆಹೆನೆಂಬವನ
ಮುಖವ ನೋಡಲಾಗದು.
ಕುರುಹಿಟ್ಟು ಪೂಜಿಸುವ ಂಗ ತಾನುಳಿವುದು ಭೂಮಿಯ್ಲ.
ಲಿಂಗವ ಧರಿಸಿದ ದೇಹ ನಿರ್ವಯಲಹುದು.
ಲಿಂಗಪೂಜೆಯಲ್ಲಿ ಹುರುಳಿಲ್ಲ, ಹುರುಳಿಲ್ಲ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1634
ಲಿಂಗವ ಪೂಜಿಸಿ ಪಡೆದರು ಫಲಪದವನೆಂದು ಹೇಳದಿರಾ.
ಅಂದಿನ ವೃತ್ತಾಂತವ ನೀನಿಂದರಿವಡೆ ಮಾಡಿ ಮಾಡಿ ನೋಡಾ,
ಲಿಂಗಾರ್ಚನೆಯ.
ಮಾಡದೆ ನೋಡದೆ ನೀಡಾಡದೆ ಅರಿಯಬಾರದು,
ಕಪಿಲಸಿದ್ಧಮಲ್ಲಿಕಾರ್ಜುನನ ಲೀಲೆಯ ಎಲೆ ಕಲ್ಲಯ್ಯಾ./1635
ಲಿಂಗವ ಪೂಜಿಸಿ ಫಲವೇನಯ್ಯಾ,
ಅಂಗನೆಯರೊಲುಮೆಯಾಗದನ್ನಕ್ಕ?
ಜಂಗಮವ ಪೂಜಿಸಿ ಫಲವೇನಯ್ಯಾ,
ಮೋಕ್ಷಾಂಗನೆ ಮೈಗೂಡದನ್ನಕ್ಕ?
ಅಂಗಜ ಬಂದು ಫಲವೇನಯ್ಯಾ,
ನಾ ಮನವೊದು ರತಿಗೊಯದನ್ನಕ್ಕ?
ಶರಣಸತಿ ಲಿಂಗಪತಿ ಎಂಬ ವೀರತ್ವ ಕೆಟ್ಟತೆನ್ನಲೆ
ಕಪಿಲಸಿದ್ಧಮಲ್ಲಿಕಾರ್ಜುನ./1636
ಲಿಂಗವ ಪೂಜಿಸಿದ ಫಲ ನೀಲಲೋಚನೆಗಾಯಿತ್ತು.
ಜಂಗಮವ ಪೂಜಿಸಿದ ಫಲ ಬಸವಣ್ಣಂಗಾಯಿತ್ತು.
ಮಂತ್ರವ ಪೂಜಿಸಿದ ಫಲ ಅಜಗಣ್ಣಂಗಾಯಿತ್ತು.
ಯೋಗವ ಪೂಜಿಸಿದ ಫಲ ಸಿದ್ಧರಾಮಂಗಾಯಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1637
ಲಿಂಗವ ಪೂಜಿಸಿದವರು ಹಲವರುಂಟು,
ಅಂಗದ ಪೂಜಿಸಿದವರು ಒಬ್ಬರೂ ಇಲ್ಲ;
ಕಾಮವ ತೊರೆದವರು ಹಲವರುಂಟು,
ನಿಃಕಾಮವನಳಿದವರು ಒಬ್ಬರೂ ಇಲ್ಲ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./1638
ಲಿಂಗವ ಪೂಜಿಸುವರ ಕಂಡಡೆ,
ಎನ್ನ ಮನ ಉಬ್ಬಿತ್ತು ನೋಡಯ್ಯಾ.
ಜಂಗಮವ ಪೂಜಿಸುವರ ಕಂಡಡೆ,
ಹೋದ ಪ್ರಾಣ ಬಂದಂತಾಯಿತ್ತಯ್ಯಾ.
ತನ್ನ ತಾನರಿವರ ಕಂಡಡೆ,
ಕಪಿಲಸಿದ್ಧಮಲ್ಲಯ್ಯನೀತನೆಂದು ನಂಬಿತ್ತು ನೋಡಯ್ಯಾ,/1639
ಲಿಂಗವ ಪೂಜಿಸುವವರನಂತರುಂಟು.
ಜಂಗಮವ ಪೂಜಿಸುವವರನಂತರುಂಟು.
ತನ್ನ ತಾನರಿದು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ
ಕೂಡುವವರೊಬ್ಬರೂ ಇಲ್ಲ./1640
ಲಿಂಗವ ಪೂಜಿಸುವೆ ಕ್ಷುಧೆ ನಿಮಿತ್ತ,
ಗುರುವ ಪೂಜಿಸುವೆ ಲಿಂಗವ ಕೊಟ್ಟ ಹಂಗಿಗೆ,
ಂಗಾರ್ಪಣೆಯ್ಲ ಆನೆ ತೃಪ್ತ,
ಗುರುವಾರ್ಪಣೆಯಲ್ಲಿ ಗುರು ಲಿಂಗತ್ರಯ ತೃಪ್ತ,
ಜಂಗಮಾರ್ಪಣೆಯಲ್ಲಿ ಹಿಂಗದೆ ತ್ರಿವಿಧವು ತೃಪ್ತ.
ಭವವಿಲ್ಲ ನಂಬು ಕಪಿಲಸಿದ್ಧ ಮ್ಲಕಾರ್ಜುನಯ್ಯನಾಣೆ./1641
ಲಿಂಗವಂತರು ತಾವಾದ ಬಳಿಕ,
ಅಂಗನೆಯರ ನಡೆನುಡಿಗೊಮ್ಮೆ
ಲಿಂಗದ ರಾಣಿಯರೆಂದು ಭಾವಿಸಬೇಕು.
ಲಿಂಗವಂತರು ತಾವಾದ ಬಳಿಕ,
ಅನುಭವ ವಚನಗಳ ಹಾಡಿ
ಸುಖದುಃಖಗಳಿಗಭೇದ್ಯವಾಗಿರಬೇಕು.
ಲಿಂಗವಂತರು ತಾವಾದ ಬಳಿಕ,
ಜಂಗಮವ ಪೂಜಿಸಿ ಸದಾ ಲಿಂಗೈಕ್ಯಸುಖಿಗಳಾಗಿರಬೇಕು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1642
ಲಿಂಗವಾದ ಬಳಿಕ ಪಂಚಸೂತ್ರ ಸಹವಾಗಿರಬೇಕು.
ಜಂಗಮವಾದ ಬಳಿಕ ಸದ್ಗುಣಸಹಿತವಾಗಿರಬೇಕು.
ತನ್ನ ತಾನರಿತವನಾದ ಬಳಿಕ ಮರೀಚಿಜಲದಂತಿರಬೇಕು,
ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ./1643
ಲಿಂಗವಾದ ಬಳಿಕ ಪೂಜಿಸಲಿಲ್ಲ;
ಜಂಗಮವಾದ ಬಳಿಕ ನೋಡಲಿಲ್ಲ;
ಪ್ರಸಾದಿಯಾದ ಬಳಿಕ ರುಚಿಸಲಿಲ್ಲ.
ಇಂತೀ ತ್ರಿವಿಧ ಒಂದಾದ ಬಳಿಕ,
ಕಪಿಲಸಿದ್ದಮಲ್ಲಯ್ಯಾ, ಬೇಢರೊಂದು ತಿಳಿಯಲಿಲ್ಲ./1644
ಲಿಂಗವಾದಡೆ ಚೆನ್ನಬಸವಣ್ಣನಂತಾಗಬೇಕಯ್ಯಾ;
ವೀರನಾದಡೆ ಮಡಿವಾಳಯ್ಯನಂತಾಗಬೇಕಯ್ಯ;
ನಿಗ್ರಹಿಯಾದಡೆ ಹೊಡೆಹುಲ್ಲ ಬಂಕಯ್ಯನಂತಾಗಬೇಕಯ್ಯ;
ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ;
ಲಿಂಗದಲ್ಲಿ ನಿರ್ವಯಲಾದಡೆ
ನೀಲಲೋಚನೆಯಮ್ಮನಂತಾಗಬೇಕಯ್ಯ.
ಈ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1645
ಲಿಂಗವಿಚಾರ, ಜಂಗಮವಿಚಾರ, ಪಾದೋದಕವಿಚಾರ
ಬಹು ಸೂಕ್ಷ ್ಮ ಕೇಳಯ್ಯಾ.
ಮೊದಲನೆಯ ಪಾದೋದಕ ಗುರುಸಂಬಂಧ;
ಎರಡನೆಯ ಪಾದೋದಕ ಲಿಂಗ ಸಂಬಂಧ;
ಮೂರನೆಯ ಪಾದೋದಕ ಜಂಗಮ ಸಂಬಂಧ.
ಈ ತ್ರಿವಿಧೋದಕ ಭಕ್ತನಲ್ಲಿ ಸಂಬಂಧ.
ಈ ತ್ರಿವಿಧೋದಕ ಗುರು-ಲಿಂಗ-ಜಂಗಮದಲ್ಲಿ ಸಂಬಂಧ.
ಅದು ಕಾರಣ, ಭಕ್ತ-ಮಹೇಶ-ಪಾದೋದಕ, ಪ್ರಸಾದದಲ್ಲಿ
ಭೇದವ ಮಾಡಿ ನಿಂದಡೆ,
ಅಘೋರನರಕದಲ್ಲಿಕ್ಕುವ ಕಪಿಲಸಿದ್ಧಮಲ್ಲಿಕಾರ್ಜುನ./1646
ಲಿಂಗಾಂಗ ಒಂದಾದುದಕ್ಕೆ ಇದೆ ಕುರುಹು ನೋಡಾ :
ಅಂಗಗುಣಂಗಳ ಬಿಟ್ಟು ಲಿಂಗಗುಣಂಗಳಾದಡೆ,
ಅದೆ ಲಿಂಗಾಂಗಸಾಮರಸ್ಯ.
ಲಿಂಗಗುಣಂಗಳ ಬಿಟ್ಟು ಅಂಗಗುಣಂಗಳಾದಡೆ,
ಅದೆ ಯಮಲೋಕಸಾದೃಶ್ಯ.
ಇದು ಪುಸಿಯಲ್ಲ, ಪುಸಿಯಲ್ಲ !
ಪುಸಿಯಾದಡೆ ನೀನೇಕೆ ಒಲಿಯಲಿಲ್ಲೆಮ್ಮಣ್ಣ ಬೊಮ್ಮಯ್ಯಂಗೆ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ ?/1647
ಲಿಂಗಾಂಗಿಗಳಿಗೆ ಪಾದೋದಕವಲ್ಲದೆ,
ಅಂಗಭವಿಗೆ ಪಾದೋದಕವೆಲ್ಲಿಹದೊ?
ಶರಣರಿಗೆ ಶಿವಾನುಭಾವಗೋಷ್ಠಿಯಲ್ಲದೆ?
ಶರ ತಾಗಿದವನಿಗೆ ಶಿವಾನುಭಾವಗಷ್ಠಿ ಎಲ್ಲಿಹದೊ?
ಲಿಂಗವಿರಹಿತರಿಗೆ ಪಾದೋದಕ ಸಲ್ಲದು, ಸಲ್ಲದು!
ಕೊಟ್ಟವಂಗೆ ಮುಕ್ತಿ ಮೊದಲೆ ಇಲ್ಲವು ಇಲ್ಲವು./1648
ಲಿಂಗಾಂಗಿಯಾದ ಬಳಿಕ ಭವಿಸಂಗ ಮಾಡಲಾಗದು,
ಭವಿಗೆ ದಾನವ ಕೊಡಲಾಗದು.
ಭವವಿರಹಿತ ಕಾರ್ಯವನೈ,
ಭವಬೀಜದ ನೆಲೆಯನಾಶ್ರಯಿಸಿದಡೆ,
ಭವ ತಪ್ಪದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./1649
ಲಿಂಗಾರ್ಚಕನಾದ ಬಳಿಕ,
ಲಿಂಗ ವಿಧಿವಿಧಾನಂಗಳನರಿದರಿದು ಮಾಡಬೇಕು.
ಲಿಂಗದೇಹಿ ತಾನಾದ ಬಳಿಕ,
ಅಂಗಿಗಳ ಸಂಗವಳಿದಿರಬೇಕು.
ಲಿಂಗಧ್ಯಾನಿ ತಾನಾದ ಬಳಿಕ,
ಅಂಗನೆಯರ ನೋಡದಿರಬೇಕು.
ಲಿಂಗೈಕ್ಯ ತಾನಾದ ಬಳಿಕ,
ಕರುಣಾಕರ ಅಭಯಕರ ಕಪಿಲಸಿದ್ಧಮಲ್ಲಿಕಾರ್ಜುನನ
ಕಾರ್ಯದಲ್ಲಿ ಅಭೇದವಿರಬೇಕು ಕಾಣಾ, ಕೇದಾರಯ್ಯಾ./1650
ಲಿಂಗಾರ್ಚನಾತ್ಪರಂ ಪೂಜ್ಯಂ’ ಎಂಬ ಶ್ರುತಿಶಾಖೆ
ಇಂದನುಭವಕ್ಕೆ ಬಂದಿತ್ತಯ್ಯಾ.
`ಲಿಂಗಾಂಗೀ ಪರಮಶುಚಿಃ’ ಎಂಬ
ಸಾಮವೇದ ಶಾಖೆ ಸಮನಿಸಿತ್ತಯ್ಯಾ.
ಮುನ್ನ ಮಾಡಿದ್ದೇ ಮಾಡಿದೆ,
ಹೋಮವನಿನ್ನು ಮಾಡಿದಡೆ ತಲೆದಂಡ,
ಕಪಿಲಸಿದ್ಧಮಲ್ಲಿಕಾರ್ಜುನಾ/1651
ಲಿಂಗಾರ್ಚನೆಯ ಮಾಡುವ, ಗುರುಪಾದವ ಪೂಜಿಪ,
ಜಂಗಮಕ್ಕೆ ಶರಣೆಂಬ, ಪ್ರಸಾದವ ಕೊಂಬ,
ಅನ್ಯಸತಿಯ ನೋಡ, ಪರನಿಂದೆಯ ಮಾಡ,
ಭಕ್ತರ ಕೊಂಡಾಡುವ, ಸತ್ಯ ನಡೆವ,
ಸದ್ಭಕ್ತರ ನೆನೆವುದೆ ಮಂತ್ರವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1652
ಲಿಂಗಿಗಳ ಸಂಗ ಸಲ್ಲದೆಂದಡೆ,
ಉದರದಲ್ಲಿಹ ಲಿಂಗ ಲಿಂಗವಲ್ಲವೆ, ಲಿಂಗಯ್ಯಾ?
ಅಂಗಿಗಳ ಭೋಜನ ಸಲ್ಲದೆಂದಡೆ,
ಪಶು ಪೃಥ್ವಿಗಳು ಅಂಗವಲ್ಲವೆ, ಲಿಂಗಯ್ಯಾ?
`ಲಿಂಗಮಧ್ಯೇ ಜಗತ್ ಸರ್ವಂ’ ಎಂದ ಬಳಿಕ ಲಿಂಗವಲ್ಲವೆ,
ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗಯ್ಯಾ?/1653
ಲೀಲೆಯದು ಪರಬೊಮ್ಮದ ಇಚ್ಚೆ.
ಇಚ್ಛೆಯದು ಸಕಲ ಜೀವಜಾಲೋತ್ಪ್ಕ್ತ.ತ್ತಿ
ಸಕಲ ಜೀವಜಾಲೋತ್ಪತ್ತಿಯದು ಜಗದ್ರಚನೆ.
ಜಗದ್ರಚನೆಯದು ಜಗತ್ಪ್ರಳಯ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1654
ಲೋಕ ತನ್ನೊಳಗಾದ ಬಳಿಕ, ಲೋಕದ ಸೊಮ್ಮು ತನಗೇಕಯ್ಯಾ?
ಪರುಷ ತಾನಾದ ಬಳಿಕ, ಸುವರ್ಣದ ಸೊಮ್ಮು ತನಗೇಕಯ್ಯಾ?
ಧೇನು ತಾನಾದ ಬಳಿಕ ಅನ್ಯಗೋವಿನ ಸೊಮ್ಮು ತನಗೇಕಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./1655
ಲೋಕ ಲೌಕಿಕಂಗಳೆಲ್ಲಾ ನೀವು ಕೇಳಿರೆ.
ಏಕೈಕ ರುದ್ರನ ಅವತಾರವನರಿದೆವೆಂಬಿರಿ.
ನೋಡಿ ನಚ್ಚಿರೆ ಶಿವನ.
ಶಿವನು ಬಸವಣ್ಣನಾದ ನೋಡಿರೆ;
ಬಸವಣ್ಣ ಗುರುವಾದ, ಬಸವಣ್ಣ ಲಿಂಗವಾದ,
ಬಸವಣ್ಣ ಜಂಗಮವಾದ;
ಬಸವಣ್ಣ ಪರಿಣಾಮ ಪ್ರಸನ್ನ ಪರವಾದ;
ಬಸವಣ್ಣ ಮೂಲತ್ರಯವಾದ;
ಬಸವಣ್ಣ ಭಕ್ತಿ ಎರಡು ತ್ರಯವಾದ;
ಬಸವಣ್ಣ ಆರಾರರಿಂ ಮೇಲೆ ತೋರಿದ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ
ಬದುಕಿದೆನು./1656
ಲೋಕ ಹದಿನಾಲ್ಕರ ಏಕೈಕ ಸಮತೆಯನು
ಠಾವರಿದು ಗ್ರಾಮವನು ನೋಡಿ ರಚಿಸಿ,
ಸೀಮೆ ಸಾಯುಜ್ಯದ ತರಳ ನದಿ ಹರಿವುತ್ತಿರೆ,
ತರುಣಿಯ ಮಸ್ತಕದ ನದಿಯು ಅರತು,
ಅತಿಶಯದ ಆನಂದಗಾಳಿ ಬೀಸಲು ತಂದ ಪರಿಮಳವು
ನೇತ್ರ ಊಧ್ರ್ವವಾಗಿ
ಅತಿಶಯದ ರೂಪ ಕಪಿಲಸಿದ್ಧಮಲ್ಲಿಕಾರ್ಜುನನ
ಅವಗ್ರಹಿಸಿದ ರೂಪು ಸಮತೆ ತಾನೆ./1657
ಲೋಕ ಹದಿನಾಲ್ಕರೊಳು ಹೋಗಿ ಅಡಗಿಹೆನೆಂದಡಾ
ಪರಿಯ ತಾಮಸವು ತನ್ಮಯವೆ?
ಅನೇಕ ಪರಿಯಲ್ಲಿ ಕೊಂದು ಕೂಗಿತ್ತು ಈ ಮಾಯೆ
ಕಾಯಯ್ಯ ಕಪಿಲಸಿದ್ಧಮಲ್ಲೇಶ್ವರಯ್ಯಾ./1658
ಲೋಕದ ಗಂಡರ ಮಹಾತ್ಮೆಯ ಹೆಂಡರರಿವರೆ?
ಹಾ ಹಾ! ಅಯ್ಯಾ!
ಶರೀರದೊಳಗೆ ಸಂದು ನಿಮ್ಮನಂತುಗಾಣಲಾರದಾದನು
ಬೇಟಗೊಂಡು ನಿಮ್ಮನೆ ಬೇಡುವೆನಯ್ಯ.
ಅಯ್ಯಾ ಎನ್ನನೆನಿಸು ಭವ ಬರಿಸಿದಡೆ
ನೀನೆ ಗಂಡ ನಾನೆ ಹೆಂಡತಿ,
ಕಪಿಲಸಿದ್ಧಮಲ್ಲೇಶ್ವರ, ದೇವರ ದೇವಯ್ಯ./1659
ಲೋಕದ ಲೋಕಿಗಳು ಏಕಯ್ಯಾ ನುಡಿವರು
ಲೋಕನಾಥನಿಪ್ಪ ಠಾವನರಿಯರು.
ಕಲ್ಲೊಳಗೆ ಹೇಮ, ಕಾಷ್ಠದೊಳಗಗ್ನಿ,
ತಿಲದೊಳು ತೈಲ, ಜಲದೊಳು ಮುತ್ತು,
ಹಾಲೊಳು ತುಪ್ಪ, ಸ್ಥಲದೊಳಗೆ ರತ್ನವಿಪ್ಪ ಪರಿಯಲ್ಲಿ
ನೀವಿಪ್ಪ ಭೇದವ ನರರೆತ್ತ ಬಲ್ಲರೈ,
ಕಪಿಲಸಿದ್ಧಮಲ್ಲಿಕಾರ್ಜುನಾ./1660
ಲೋಕದಲ್ಲಿ ಸಾರ್ವಭೌಮರು ತಮ್ಮ ರಾಣಿಯರಿಗೆ
ಮೈಗೊಟ್ಟರಲ್ಲದೆ
ಮೂಲೋಕದರಸ ಎನ್ನ ಕಪಿಲಸಿದ್ಧಮಲ್ಲೇಶನೆಂಬ
ಇಷ್ಟಲಿಂಗಕ್ಕೆ ಮೈಗೊಡದೆ ಭವಕ್ಕೀಡಾದರು,
ಮನವೆ, ತಿಳಿ ನೀನು ಕಂಡಾ./1661
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ
ನಾನು ಬೇಸರುಗೊಂಡೆನಯ್ಯಾ.
ವಿತ್ತಾಪಹಾರಿ ಗುರುಗಳು ನೂರಾರು;
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು;
ಮಂತ್ರತಂತ್ರದಿಂದುಭಯ ಲೋಕದಲ್ಲಿ
ಸುಖದುಃಖವೀವ ಗುರುಗಳು ನೂರಾರು;
ಸತ್ಕರ್ಮೊಪದೇಶವನರುಹಿ
ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು
ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ
ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ
ನಿರ್ಮಲಜ್ಞಾನವೀವ ಗುರುಗಳು ಪ್ರಮಥರು.
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ
ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು
ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1662
ಲೋಕದಲ್ಲಿಹ ವಿಟರೆಲ್ಲ ವಾರಂಗನೆಯ ನೋಡಿದರಲ್ಲದೆ,
ನಮ್ಮ ವಾರಾಂಗನನೊಬ್ಬರೂ ನೋಡಲಿಲ್ಲಯ್ಯಾ.
ಲೋಕದಲ್ಲಿಹ ಕುಶಲರೆಲ್ಲ ಜಂಗಮದೊಂಗೆ ನುಡಿದರಲ್ಲದೆ,
ಎಮ್ಮ ಲಿಂಗದೊದಿಂಗೊಬ್ಬರು ನುಡಿದವರಿಲ್ಲ ಕಂಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ, ನಾನೊಬ್ಬನೆ ಪ್ರಮಥರ ಮುಂದೆ./1663
ವಂಚನೆಯ ಮಾಡಿದೆ ನಾನಯ್ಯ ನಿನಗಾನು.
ನೀ ಬರಹೇಳಿದ ಹಾಂಗೆ ಬಂದೆ.
ನೀ ಇರಹೇಳಿದ ಹಾಂಗೆ ಇದ್ದೆ.
ನೀ ಮಾಡಹೇಳಿದ ಹಾಂಗೆ ಮಾಡಿದೆ.
ನೀ ಗುರುವಾಗಿ ಬಂದು ಪರಮಸೀಮೆ ಇದೆಂದು ತೋರಿದೆ.
ನಾನು ಅಲ್ಲಿಯೇ ಇದ್ದೆನು.
ಇನ್ನು ನೀನೊಯ್ದಲ್ಲಿಗೆ ಬಂದೆನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1664
ವಚನ ಪಾತಕಗಳಿಂದ ದೆಸೆಗೆಟ್ಟರು,
ಕೆಲಬರು ವಚನದಿಂದಲೈದುವರಯ್ಯ ಐಕ್ಯವನು.
ವಚನವೆ ನೆಲೆಯಾಗಿ ಚಿತ್ತ ದೊರಕೊಂಡಡೆ
ಭಜಿಸುವ ಹಂಗು ಹರಿವುದೈ
ಕಪಿಲಸಿದ್ಧಮಲ್ಲಿಕಾರ್ಜುನ./1665
ವಚನಾನುಭವ ವಾಗ್ರಚನೆಯಲ್ಲ ಮನವೆ,
ವಚನಾನುಭವ ವಾಗ್ರಚನೆಯಲ್ಲ.
`ವಚನಾನುಭವೋ ವಚೋ ನ’ ಎಂಬುದು ಶ್ರುತಿಸಿದ್ಧ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1666
ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ;
ವಚಿಸಿ ಅನುಭವಿಯಾದವ ಪಂಡಿತನಯ್ಯಾ.
ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ.
ಅವಿದ್ಯೆಯೆಂಬುದು ಸರ್ವರಲ್ಲಿ ವಶ.
ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ,
ಮಹಾಪಂಡಿತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1667
ವನವೊಂದರರಲ್ಲಿ ಘನಕಾಸಾರ ಬೆಳೆದುದ ಕಂಡೆ.
ಆ ಘನಕಾಸಾರದಲ್ಲಿ ಮೂರು ಹೂಗಳ ಕಂಡೆ.
ಆ ಮೂರು ಹೂಗಳ್ಲ ಮೂರು ಮೂರ್ತಿಗಳ ಕಂಡೆ.
ಆ ಮೂರು ಮೂರ್ತಿಗಳಲ್ಲಿ ಮೂಲೋಕದರಸ
ಕಪಿಲಸಿದ್ಧಮಲ್ಲಿಕಾರ್ಜುನನ ಕಂಡು ಕಣ್ದೆರೆದು ಕಂಡೆ ಕಂಡೆ,
ಕಂಡೆಯಾ ಕೇದಾರ ಗುರುವೆ./1668
ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು
ಹದುಳ ಪಟ್ಟಣಮಾಡಿ ಒಪ್ಪಿತೋರಿ
ಸಮತೆ ಅಧಿಕಾರದ ಸುಮತಿಯಾದುದು.
ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ.
ಆನಂದ ಪಾತ್ರೆಯ ಸಮತೆ ತೈಲವನೆರೆಯೆ
ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು,
ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ
ಎಯ್ದಿದ ಬೆಳಗು ಸಮತೆಯಾದೆ./1669
ವರ್ಣವಿಲ್ಲದ ಲಿಂಗಕ್ಕೆ ರೂಪು ಪ್ರತಿಷ್ಠೆಯ ಮಾಡುವ ಪರಿ
ಇನ್ನೆಂತೊ?
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವ ಪರಿ
ಇನ್ನೆಂತೊ?
ನೆನೆಯಬಾರದ ಲಿಂಗಕ್ಕೆ ಅನುಗ್ರಹವ ಮಾಡುವ ಪರಿ
ಇನ್ನೆಂತೊ?
ನುಡಿಯಬಾರದ ಲಿಂಗಕ್ಕೆ ಜಪಪೂಜೆಯದೆಂತೊ?
ಇಲ್ಲದ ಲಿಂಗವ ಧರಿಸುವ ಪರಿ ಇನ್ನೆಂತೊ?
ಮಹಾಮಹಿಮಲ್ಲಿಕಪಿಲಸಿದ್ಧ್ವಮ್ಲಕಾರ್ಜುನ,
ಇದರಂತುವ ನೀವೆ ಬಲ್ಲಿರಿ./1670
ವರ್ಮವನರಿತು ಅಯ್ಯಾ ನಿಮ್ಮ ಕಾಬವರು
ಸುಲಭವೆ ಲೋಕದಲ್ಲಿ
ಲಿಂಗಭಕ್ತಿ ಜಂಗಮಭಕ್ತಿ ಗುರುಭಕ್ತಿ ಸುಲಭವೆ?
ಲಿಂಗಭಕ್ತ ಪ್ರಭುದೇವರು,
ಜಂಗಮಭಕ್ತ ಬಸವಣ್ಣ,
ಗುರು ಮೊದಲಾದ ಪ್ರಸಾದ ಸರ್ವಕ್ಕೂ,
ಅನುಭವಿ ಚೆನ್ನಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ಇವರ ಪಾದಕ್ಕೆ ನಮೋ ನಮೋಯೆಂಬೆ./1671
ವರ್ಮವನರಿತು ನಿಮ್ಮ ಕಾಬವರು ಸುಲಭವೆ ಲೋಕದ್ಲ?
ಲಿಂಗಭಕ್ತಿ ಜಂಗಮಭಕ್ತಿ ಗುರುಭಕ್ತಿ ಸುಲಭವೆ?
ಲಿಂಗಭಕ್ತ ಪ್ರಭುದೇವ, ಜಂಗಮಭಕ್ತ ಬಸವಣ್ಣ.
ಗುರು ಮೊದಲಾದ ಪ್ರಸಾದವ ಸರ್ವಕ್ಕೆ ಅನುಭಾವಿ
ಚೆನ್ನಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಇಂತಿವರ ಪಾದಕ್ಕೆ ನಮೋ ನಮೋ ಎಂಬೆ./1672
ವಸ್ತು ಒಂದರಲ್ಲಿ ಕ್ಪತದ್ವಯವಾದುವು ನೋಡಾ.
ಹಗ್ಗವಲ್ಲ ಸರ್ಪವೆಂಬುದೆ ಅಧ್ಯಾರೋಪ;
ಸರ್ಪವಲ್ಲ ಹಗ್ಗವೆಂಬುದೆ ಅಪವಾದ.
ವಸ್ತುವಲ್ಲ ಮಾಯೆಯೆಂಬುದೆ ಅವಿದ್ಯೆ;
ಮಾಯೆಯಲ್ಲ ವಸ್ತುವೆಂಬುದೆ ವಿದ್ಯೆಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1673
ವಸ್ತು ನಿರಾಕಾರವೆಂದಡೆ ಆಕಾರಕ್ಕೆ ಬರುವುದೆ?
ವಸ್ತು ನಿರ್ವಿಕಾರವೆಂದಡೆ ವಿಕಾರಕ್ಕೆ ಬರುವುದೆ?
ವಸ್ತು ಉಭಯವೆಂದಡೆ ಉಭಯ ಸಂದೇಹತ್ವದಿಂಬಳಿವುದೆ?
ವಸ್ತುವಿನ ವ್ಯವಹಾರ ಆರಿಗೂ ಅರಿಯಬಾರದು.
ಕಪಿಲಸಿದ್ಧಮಲ್ಲಿಕಾರ್ಜುನಂಗ ಉಭಯಾತೀತ ನೋಡಾ, ಪ್ರಭುವೆ./1674
ವಾಕ್ಸಿದ್ಧಿಯಿಂದ ದೋಷವುಂಟು, ವಾಕ್ಸಿದ್ಧಿಯಿಂದ ಪುಣ್ಯವುಂಟು.
ದೋಷದಿಂದ ಭವಕ್ಕೆ ಬೀಜ, ಪುಣ್ಯದಿಂದ ಪದಕ್ಕೆ ಬೀಜ.
ಇವೆಲ್ಲ ಪ್ರಳಯದಲ್ಲಿ, ನಿತ್ಯನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ./1675
ವಾಕ್ಸಿದ್ಧಿಯುಳ್ಳವರು ಕೋಟ್ಯಾನುಕೋಟಿ;
ಮನೋರಥಸಿದ್ಧಿಯುಳ್ಳವರು ಕೋಟ್ಯಾನುಕೋಟಿ;
ಭಾವಸಿದ್ಧಿಯುಳ್ಳವರು ಕೋಟ್ಯಾನುಕೋಟಿ.
ನಿಮ್ಮ ಸ್ಥಿತಿಯುಳ್ಳವರು ಇಲ್ಲ ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1676
ವಾಗ್ರಚನೆಯೆಂಬುದು ಕರ್ಣಾಟವಯ್ಯಾ.
ಆದ್ಯರಾಜ್ಞೆ ಎಂಬುದು ಈಶ್ವರಗೆ ಜ್ಯೋತಿಯಯ್ಯಾ.
ಅಗಿದಗಿದು ನೋಡುವುದದು ಶುಕ ತೆಂಗು ತಿಂದಂತೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1677
ವಾಙ್ಮನಕ್ಕಗೋಚರ ವಸ್ತುವೆಂದರಿದ ಬಳಿಕ,
ವಾಕ್ಯದಿಂದಾಗದು, ಮನದಿಂದಾಗದು.
ಅರಿದ ಅರಿವಿನಿಂದ ನೆನೆದು,
ನಿರಾಕಾರ ನಿಜವಸ್ತು ನಿರ್ಮಲ ಶುದ್ಧ ಶಬಲಾಂಶ
ತಾನಾಗಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ/1678
ವಾಣಿ ನಾಲ್ಕರ ಮೇಲೆ ಮಾಣದೆ ನುಡಿವ
ನಿರ್ವಾಣಿಯ ಸಂಭಾಷಣೆಯ ಮಾಡಬಲ್ಲಡೆ ನಿರ್ವಾಣ.
ವರ್ಣವೇಳರೊಳಗೆ ಪರಿಪೂರ್ಣವಾಗಿಪ್ಪ
ಮಹಾವರ್ಣವ ತನ್ಮಯವ ಮಾಡಬಲ್ಲಡೆ ನಿರ್ವಾಣ.
ಸ್ಥಾನ ಹತ್ತರಲ್ಲಿ ಆನಂದ ಸಿಂಹಾಸನದ
ನಾನಾ ಬೆಳಗಿನ ಬೀಜದ ತಿರುಳನನುಭವಿಸಬಲ್ಲಡೆ
ಲಿಂಗಾನುಭಾವಿ.
ಪ್ರಣವ ಹತ್ತರಲ್ಲಿ ಧ್ಯಾನಚತುಷ್ಟಯ ಕೂಡಿದಲ್ಲಿಯ ಕೀಲಬಲ್ಲಡೆ
ಲಿಂಗೈಕ್ಯ.
ಇದು ಕಾರಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ
ಎನುತಿರ್ದೆನು./1679
ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ;
ಮಹತ್ವ ಸುಕೃತದ ಫಲ, ಮಹತ್ವ ಸಿದ್ಧಿಯ ಬಲ;
ಅರಿವು ಜ್ಞಾನದ ಬಲ, ಅರಿವು ಸಜ್ಜನಸಹವಾಸದ ಬಲ.
ಅರಿವು ಬಾಹ್ಯದಲ್ಲಿ ಇಷ್ಟಲಿಂಗ,
ಅರಿವು ಅಂತರಂಗದಲ್ಲಿ ಪ್ರಾಣಲಿಂಗ,
ಅರಿವು ಭಾವದಲ್ಲಿ ಆತ್ಮಲಿಂಗ.
ಇದು ಕಾರಣ,
ವಾಸಿದಲ್ಲಿ ಹುರುಳಿಲ್ಲ, ಮಹತ್ವ ಮಾಡುವಲ್ಲಿ ಹುರುಳಿಲ್ಲ.
ಲಿಂಗಜ್ಞಾನವೇ ಹುರುಳು, ಕಪಿಲಸಿದ್ಧಮಲ್ಲಿಕಾರ್ಜುನಾ.ನ/1680
ವಾಯದ ದೇಹವ ಮನೆಯ ಮಾಡಿ ಮಾಯದಲ್ಲಿಪ್ಪೆ ಕಂಡಾ.
ನೇತ್ರದ ಬಾಗಿಲ ತೆರೆದು ನೋಡುತ್ತಿಪ್ಪೆ ಕಂಡಾ.
ನಿನ್ನ ಇರವೊಂದು ವಿಪರೀತ
ಮಠವೊಂದಘಟಿತದೊಳಗೆ ಎನ್ನ ಮರೆದಿಪ್ಪೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1681
ವಾಯುಪುತ್ರನಾಗುವುದು ಲೇಸೆ? ಮನವೆ, ಬೇಡ ಬೇಡ!
ಹೋದ ಹೋದಲ್ಲಿ ವಸ್ತುರೂಪಾಗುವುದು ಲೇಸೆ? ಮನವೆ,
ಅಲ್ಲಲ್ಲ!
ವಾಯು ಬಿಟ್ಟು ವಾಯು ವೈರಿಯಾದಡೆ,
ಮನವೆ, ನಿನ್ನ ಸಾಹಸ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ/1682
ವಾಯುವ ನುಂಗಿದ ಬಣ್ಣ, ಬಣ್ಣವ ನುಂಗಿದ ಛಾಯೆ,
ಅಂಜನ ಪ್ರವೇಶಮಧ್ಯದಲ್ಲಿ ಲೀಯವಾದೆನಯ್ಯಾ ನಿನ್ನೊಡನೆ;
ಲೀಯವಾದೆನಯ್ಯಾ ಸಂಗಸಂಯೋಗ ಸ್ಥಾನದಲ್ಲಿ ನೀಸಹಿತ.
ಯೋಗಿಯಾದೆನಯ್ಯಾ ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರವೇಶಿಸಲೊಡನೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಸೀಮೆಯ ಮೀರಿ ಸಂಬಂಧಿಯಾದೆನು/1683
ವಾಯುವೆನ್ನುವನತಿ ಮದದಿಂದ
ಕಾಯಶೂನ್ಯವ ಮಾಡುವೆನೆನುತಿಹೆವಯ್ಯ.
ವಾಯದ ಕಾಯವು ಕೆಡದ ಮುನ್ನ
ನೇಮ ನಿಮ್ಮುವ ನೆನೆಯಲೀಯವು
ಅಯ್ಯೋ ಮಹಾದೇವ,
ಮನವೆ ನೀವಾಗಿ ಕೈಕೊಟ್ಟು ಕಾಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1684
ವಾರಾಸಿಯಿಂದತ್ತಲಾರು ಬಲ್ಲರು ದೇವಾ?
ಈರೇಳನತಿಗಳೆದ ನಿತ್ಯ ನಿತ್ಯ ಕಾರುಣ್ಯಭಾವದಲಿ
ಆ ಮರುಳುಗೊಂಡಡೆ ಆರು ಏವಿಧಿಯಾದಡೇನಯ್ಯ?
ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರಾ
ಓರಂತೆಯಾದ ಬಳಿಕಾನಂದನು./1685
ವಾಲ್ಮೀಕನ ಶೇಷಪ್ರಸಾದವೆಲ್ಲ ಸಂಸ್ಕೃತಮಯವಾಯಿತ್ತು ಮತ್ರ್ಯಕ್ಕೆ.
ದೂರ್ವಾಸನ ಉಪದೇಶವೆಲ್ಲ ಚಂಡಾಲರ ಮುನಿಗಳ ಮಾಡಿತ್ತು ಸ್ವರ್ಗಕ್ಕೆ
ಕುಲವೆಂದಡೆ ಮಲತ್ರಯವು ಬಿಡವು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1686
ವಾಸಿ ವಾಸಿ ಗುರುಕ್ರಿಯೆಯ ಹಿಡಿದಡೆಯೂ ವಾದ
ಮಾಣದು;
ಬಿಟ್ಟಡೆಯೂ ವಾದ, ಹಿಡಿದಡೆಯೂ ವಾದ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಟ
ಒಮ್ಮೆ ಕಾಲಕೂಟ, ಒಮ್ಮೆ ಅಮೃತದ ನೋಟ,
ಕೇಳಾ ಕಿನ್ನರಯ್ಯಾ./1687
ವಿಕಾರಿಣ್ಯಾಂ ತಸ್ಯಾಂ’ ಎಂಬ ಶ್ರುತಿ ಪ್ರಸಿದ್ಧವು.
ವಿಕಾರ ಪ್ರಕೃತಿಯಲ್ಲಲ್ಲದೆ ಪುರುಷನ್ಲಲ್ಲವಯ್ಯಾ.
ಪುರುಷನಿಲ್ಲರೆ ಪ್ರಕೃತಿಯ ಕರ್ಮ ನಡೆಯದಯ್ಯಾ.
ಸೂರ್ಯಕಿರಣಂದಾದ ಜಲದಲ್ಲಿ ಸೂರ್ಯಬಿಂಬವಿರೆ,
ನಿಜ ಸೂರ್ಯನ ರೂಹು ಕೆಡದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1688
ವಿಟ ಬಂದಾನೆಂದು ನಟನೆಗಾತರ್ರ್ಿ ತಾ ವಿಟಸಂಪನ್ನೆಯಾದಳವ್ವಾ.
ವಿಟ ಬಾರದಿದ್ದಡೆ, ತಾ ಸಿಡಿಮಿಡಿ [ಗೊಂಡ]ಬ್ಬರ ನೋಡವ್ವಾ,
ಇದರ ತೋಟಿಯ ಕಳೆಯಬಂದಡೆ ನಿನ್ನ ತೋಟಿ ಕೆಟ್ಟಿತ್ತೆಲಗವ್ವಾ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಜಾರನಲ್ಲಿ./1689
ವಿದ್ಯೆ ಎಂದಡೆ ಭಾರತ-ರಾಮಾಯಣವಲ್ಲ.
ಭಾರತವೆಂದಡೆ ಭರತದೇಶದಲ್ಲಿ ಜನಿಸಿ,
ಕಾಮಿನಿಯರ ಸೋಗುಹಾಕಿ, ಆ ದೇಶಕ್ಕಧಿಪ್ಕಯಾದ ಕಥೆಯೆ
ಭಾರತವಯ್ಯಾ.
ರಾಮಾಯಣವೆಂದಡೆ, ಆದಿನಾರಾಯಣನು ಪೃಥ್ವಿಯೊಳು
ಹುಟ್ಟಿ,
ರಾಮನೆಂಭಧಾನವ ಧರಿಸಿ, ಸರ್ವರಂತೆ ಪ್ರಪಂಚವ ಮಾಡಿ,
ರಾಕ್ಷಸರ ಗರ್ವವನಳಿದುದೆ ರಾಮಾಯಣ.
ಮಾಡಿ ಉದ್ಧಟವಾದಲ್ಲಿ ಕಾಲಾಂತರದಲಾದರೂ
ಕುರುಹಿನೊಳಗಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1690
ವಿದ್ಯೆಯನರಿಯದವ ಗುದ್ದಾಟಕ್ಕೊಳಗಾದ.
ಅವಿದ್ಯೆಯನರಿಯದವ ಪ್ರಪಂಚವ ಒದ್ದುಬಿಟ್ಟ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1691
ವಿಧಿ ನಿಷೇದಂಗಳಿಲ್ಲದನಾ ನೀ ನೋಡಯ್ಯಾ.
ಜಪ-ತಪವಿಲ್ಲದ ಮಹಾಮುನಿ ನೋಡಯ್ಯಾ.
ಇಹ-ಪರ ಸುಖ-ದುಃಖ್ಕಾತನಯ್ಯಾ ನಿಮ್ಮ ಶರಣ,
ಕಪಿಲಸಿದ್ಧಮಲ್ಲಿಕಾರ್ಜುನ./1692
ವಿವೇಕವೆಂಬುದು ಬೇರಿಲ್ಲ ಕಂಡಯ್ಯಾ,
ನವನಾಳದ ಸುಳುಹ ತೊಡೆದು ಸುನಾಳವ ಶುದ್ಧವ ಮಾಡುವೆ.
ಅಷ್ಟದಳ ಕಮಲವನು ಊಧ್ರ್ವಮುಖವಾಗಿ ನಿಜಪದದಲ್ಲಿ
ನಿಲ್ಲಿಸುವೆ.
ಐವತ್ತೆರಡಕ್ಷರವ ತಿಳಿದು ನೋಡಿ ಏಕಾಕ್ಷರದಲ್ಲಿ ನಿಲ್ಲಿಸುವೆ.
ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ವಿಚಾರದ ಹವಣ ನೀನೆ ಬಲ್ಲೆ./1693
ವಿಷ ಉಂಡು ದಣಿಯಲಾರದೆ,
ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ.
ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ,
ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ
[ಈ ದೇವ]
ಇದ್ದ ದೇವಾಲಯವಲ್ಲದೆ ಮತ್ತೆ
ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ,
ತಾನಾಖಂಡಮೂರ್ತಿಯ ರೂಪು ಧರಿಸದೆ,
ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ
ದೇವ,
ಕಪಿಲಸಿದ್ಧಮಲ್ಲಿಕಾರ್ಜುನದೇವ./1694
ವಿಷಮ ವಿಷಯ ಗಾಳಿಯಲ್ಲಿ ದೆಸೆಗೆಟ್ಟೆನಯ್ಯಾ ತಂದೆ.
ಆಮಿಷ ರೋಷಂಗಳೆನ್ನುವ ಕಾಡಿಹವು.
ಶಾಶ್ವತ ನಿತ್ಯ ನಿತ್ಯ ನೀನೆ ನಿಜಪದವನೀಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1695
ವೀರಧೀರರುಗಳೆಲ್ಲಾ ಕೈಲಾಸಪುರಕ್ಕೆ ದಾಳಿಯ ದಂಡು ಕಾಣಿರೆ.
ಸುತ್ತಿ ಮುತ್ತಿ ಪರಬ್ರಹ್ಮವೆಂಬ ಕೋಂಟೆಯ ಕೊಳ್ಳಿರೆ.
ಸಮತೆ ಸೈರಣೆ ಸಮಾಧಾನವೆಂಬ ಕೈದುವ ಕೊಳ್ಳಿರೆ.
ಅತಿರಥ ಮಹಾರಥರೆಲ್ಲರೂ ಆಯತವಾಗಿರೆ,
ನಮ್ಮ ಕಪಿಲಸಿದ್ಧಮಲ್ಲಿನಾಥನೆಂಬ
ಶಿವಲಿಂಗವನೊಡಗೂಡಿಕೊಳ್ಳಿರೆ./1696
ವೀರನಾದಡೆ ವೈರಿಗಳ ಕಾಟ ಬಹಳವಯ್ಯಾ,
ದಾನಶೂರನಾದಡೆ ಯಾಚಕರ ಗೋಳು ಬಹಳವಯ್ಯಾ.
ಅತಿರೂಪನಾದಡೆ ಅಂಗನೆಯರ ಕಾಟ ವಿಶೇಷವಯ್ಯಾ.
ಮೂರರಲ್ಲಿ ನಿಂತಡೆ ಮಲತ್ರಯಂಗಳ ಘೋರ ಹೆಚ್ಚಾಯಿತಯ್ಯಾ.
ಅಂಗದಲ್ಲಿ ಲಿಂಗಸಂಬಂಧವಾಗಬಾರದು;
ಆದ ಬಳಿಕ ವೀರನಾಗಿ ವಿಷಯಂಗಳನಳಿವುದು,
ಬಹುಘೋರವು ಬಹುಘೋರವು ನೋಡಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1697
ವೃಕ್ಷಛಾಯೆಯಲ್ಲಿಹಂಗೆ ನೀನು,
ಸಕಲರಿಗೆ ಸ್ವಾತಂತ್ರ ್ಯ ಪದವನೀವೆ, ನಿನಗಿಲ್ಲ.
ನೀನು ನಿಷ್ಕಲದಲ್ಲಿ ನಿಣರ್ೈಸಿ
ಸಕಲದ ಸ್ವಾತಂತ್ರಿಸಿ ಇಪ್ಪೆ.
ಆನಂದವೆಂಬ ಗತಿಯಲ್ಲಿ,
ಸಾನಂದವೆಂಬ ತಾಳವಿಡಿದು ಆಡಲಾಗಿ,
ಕೊಟ್ಟೆನೆಂಬ ಪದವ ಅವರೊಲ್ಲದಿದ್ದಡೆ
ನೀನೆ ಒಚ್ಚತ ಹೋಹೆ,
ಕಪಿಲಸಿದ್ಧಮಲ್ಲಿಕಾರ್ಜುನಾ ನಿನಗಿದು ಸಹಜ./1698
ವೃಕ್ಷ-ಬೀಜದಂತೆ ಇಪ್ಪೆ ನೀನು ಅಯ್ಯಾ,
ಅಯ್ಯಾ, ನಿರಾಕಾರದೊಳಗೆ ಮೂರ್ತಿ
ಮೂರ್ತಿಯೊಳಗೆ ನಿರಾಕಾರ ನೀನು.
ಅಯ್ಯಾ, ಮೂರ್ತಿ ಮೂರ್ತಿಗಳನೆ ತೋರಿ ಆಡಿ
ಬಯಲಲಿಪ್ಪೆಯೈ,
ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ./1699
ವೃತ್ತಿ ನಿವೃತ್ತಿ ಎಂಬುದು ಕಲ್ಪನಾರಚನೆ.
ವೃತ್ತಿಯಲ್ಲಿಯ ಸಾಕ್ಷಿ ವೃತ್ತಿಗೆ ಅಟ್ಟಿತ್ತು.
ನಿವೃತ್ತಿಯಲ್ಲಿಯ ಸಾಕ್ಷಿ ನಿವೃತ್ತಿಯಾಗದೆ ವೃತ್ತಿಗೈತಂದಿತ್ತಯ್ಯಾ.
ಕರ್ಮಸಾಕ್ಷಿ ಎಂಬ ವೇದಾಂತಿಯ ಪಳವಾಕ್ಯ ಸಮನಿಸದು
ನೋಡಾ,
ಕಪಿಲಸಿದ್ಧ ಮಲ್ಲಿಕಾರ್ಜುನಾ./1700
ವೇದ ನಾಲ್ಕರ ಮೇಲೆ ಆದ ಪಂಚಮವಾಕ್ಯ
ಆದ ಷಷ್ಠಮ ಬ್ರಹ್ಮವನು ಜಪಿಸುವ
ಆಮೋದವನು ಮೀರಿ ಹೋಯಿತೈ ಕೈವಲ್ಯದಾದಿಪದ ತಾನೆ
ನಿತ್ಯ.
ನಿತ್ಯ ಅನಾದಿ ಸಂಸಿದ್ಧ ಯೋಗಮೂರ್ತಿ ಗುರುಸ್ವಾಮಿ
ಮೂದೇವರಿಗೆ ದೀಕ್ಷೆಮಾಡಲೆಂದು,
ಕಪಿಲಸಿದ್ಧಮಲ್ಲಿಕಾರ್ಜುನಾ./1701
ವೇದ ಪಾಠಕರೆಲ್ಲಾ ಕೇಳಿಭೋ!
ವೇದ ಸ್ವಯಂಭು ಎನಲೊಡನೆ ಅಯ್ಯಾ
ಎನ್ನ ಎದೆ ರುುಲ್ಲೆಂದವಯ್ಯ.
ಎಲೆ ಅಜ್ಞಾನಿ ಕೇಳು,
ಕಪಿಲಸಿದ್ಧಮಲ್ಲಿಕಾರ್ಜುನ ಒಬ್ಬನೆ ಸ್ವಯಂಭು./1702
ವೇದ ವೇದಂಗಳೆಲ್ಲ ಶಿವನ ಹೊಗಳಿ ನಿರ್ಮಲವಾದವು ನೋಡಾ
`ಓಂ ನಮಃ ಸೋಮಾಯ ಚ ರುದ್ರಾಯ ಚ’ ಎಂದು
ವೇದವಾಕ್ಯ ನೋಡಾ.
`ನಮಸ್ತಾಮ್ರಾಯ ಚಾರುಣಾಯ ಚ’ ಎಂದು
ಪಂಡಿತಮುಖಪ್ರಸಿದ್ಧ ನೋಡಾ.
`ನಮಃ ಶೃಂಗಾಯ ಚ ಪಶುಪತಯೇ ಚ’ ಎಂದು
ವೇದಾಧ್ಯಾಯಿಗಳರಿಕೆ ನೋಡಾ.
`ನಮಃ ಶಿವಾಯ ಚ ಶಿವತರಾಯ ಚ’ ಎಂದು
ಕಪಿಲಸಿದ್ಧಮಲ್ಲಿಕಾರ್ಜುನನ ಪಂಚಮುಖದಲ್ಲಿ
ನಿತ್ಯ ನಿತ್ಯ ಘೋಷ ನೋಡಾ, ಕೇದಾರಯ್ಯಾ./1703
ವೇದ ವೇದಾಂತವನೋದಿದಡೇನು ಮನಸ್ಸೂತಕವಳಿಯದನ್ನಕ್ಕ?
ಸಿದ್ಧ ಸಿದ್ಧಾಂತವ ಶ್ರಮಬಟ್ಟಡೇನು
ಸಾಧಿಸಿ ಕೀರ್ತಿಯ ಪಡೆಯದನ್ನಕ ?
ಇವೆಲ್ಲ ಹೊರಗಣ ಮಾತು.
ಮಾತೊಂದೆ ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ
ಸದಾಚಾರ ಸನ್ಮಾರ್ಗವಯ್ಯಾ./1704
ವೇದ ವೇದಾಂತವನೋದಿದಡೇನು ಮನಸ್ಸೂತಲವಳಿಯದನ್ನಕ್ಕ ?
ಸಿದ್ಧ ಸಿದ್ಧಾಂತವ ಶ್ರಮಬಟ್ಟಡೇನು
ಸಾಧಿಸು ಕೀರ್ತಿಯ ಪಡೆಯದನ್ನಕ ?
ಇವೆಲ್ಲ ಹೊರಗಣ ಮಾತು.
ಮಾತೊಂದೆ ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ
ಸದಾಚಾರ ಸನ್ಮಾರ್ಗವಯ್ಯಾ./1705
ವೇದ ವೇದಾಂತವನೋದಿದವರೆಲ್ಲ ನಿರಂಜನರಾದಡೆ,
ಜನರಾರೊ ಈ ಲೋಕದಲ್ಲಿ?
ಸಿದ್ಧಂತವ ಸಾಧಿಸಿದವರೆಲ್ಲ ದೇವರಾದಡೆ,
ಸುರರಾರೋ ಸ್ವರ್ಗದಲ್ಲಿ?
ವೇದಾಂತವಳವಟ್ಟಿತ್ತು ಪ್ರಥಮರಿಗೆ,
ಸಿದ್ಧಾಂತವಳವಟ್ಟಿತ್ತು ಒಬ್ಬೊಬ್ಬರಿಗೆ,
ಈ ಎರಡರ ಕೀಲವಳವಟ್ಟತ್ತು ಎನ್ನ ಗುರು ಚೆನ್ನಬಸವಣ್ಣಂಗೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1706
ವೇದ ಹದಿನಾರುಸಾವಿರಂಗಳು ನಿನ್ನನರಸಿಯೊದರಿ
ಕಾಣದೆ ಹೋದವು.
ನಿನ್ನಾಧಿಕ್ಯವ ಬಲ್ಲವರಾರಯ್ಯ ನಿನ್ನವರಲ್ಲದೆ?
ಉರುತರ ಪರಮಜ್ಞಾನಿ ಘನತರದ ಸಂಯೋಗಿ
ನಿನ್ನ ಪ್ರಮಾಣವನರಿಯಲ್ಕೆ ಆರ ವಶವು ಹೇಳಾ.
ಸೀಮೆಯ ಮೀರಿದ ಸಂಬಂಧಿ, ಲೆಕ್ಕವ ಮೀರಿದ ಅಪ್ರಮಾಣ,
ಗುರುವಿನ ಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ. /1707
ವೇದಂಗಳು ದೈವವಾದಡೆ ಕುಕ್ಕುರ ಕುದುರೆಗಳಾಗಲೇಕೋ?
ಶಾಸ್ತ್ರಂಗಳು ದೈವವಾದಡೆ ಹೊರಜು ಕಣ್ಣಿಗಳಾಗಲೇಕೋ?
ಆಗಮಂಗಳು ದೈವವಾದಡೆ ಕೀಲುಗುಣಿಕೆಗಳಾಗಲೇಕೋ?
ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ?
ಚಂದ್ರಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ?
ಇವ ಹಿಡಿದಾಡಿ ಭಜಿಸಿ ಪೂಜೆಮಾಡಿದವರು ದೈವವಾದಡೆ,
ಪುಣ್ಯ-ಪಾಪಕ್ಕೀಡಾಗಲೇಕೋ?
ಇದು ಕಾರಣ, ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವಲ್ಲ,
ಆಗಮಂಗಳು ದೈವವಲ್ಲ, ಪುರಾಣಂಗಳು ದೈವವಲ್ಲ,
ಚಂದ್ರ ಸೂರ್ಯರು ದೈವವಲ್ಲ, ಆತ್ಮನು ದೈವವಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೊಬ್ಬನೇ ದೈವ/1708
ವೇದಪ್ರಿಯನಲ್ಲಯ್ಯಾ ನೀನು: ಶಾಸ್ತ್ರಪ್ರಿಯನಲ್ಲಯ್ಯಾ ನೀನು;
ನಾದಪ್ರಿಯನಲ್ಲಯ್ಯಾ ನೀನು;
ಸ್ತೋತ್ರಪ್ರಿಯನಲ್ಲಯ್ಯಾ ನೀನು;
ಮುಕ್ತಿಪ್ರಿಯನಲ್ಲಯ್ಯಾ ನೀನು;
ಭಕ್ತಿಪ್ರಿಯನೆಂದು ನಂಬಿದೆ, ಮರವೊಕ್ಕೆ
ಕಾಯಯ್ಯಾ ನೀನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1709
ವೇದಪ್ರಿಯನಾದಡೆ ಛಿದ್ರಿಸುವೆಯಾ ಬ್ರಹ್ಮನ ಮಸ್ತಕವ ?
ಶಾಸ್ತ್ರಪ್ರಿಯನಾದಡೆ ಒಳಗುಮಾಡುವೆಯಾ ಶಬ್ದಕ್ಕೆ?
ಮುಕ್ತಿಪ್ರಿಯನಾದಡೆ ಭವಕ್ಕೆ ತರುವೆಯಾ ಎನ್ನ?
ಭಕ್ತಿಪ್ರಿನಾದಲ್ಲಿ ಒಯ್ಯಲಿಲ್ಲವೆ ಬೇಡನ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ,/1710
ವೇದವನೋದಿ ವೇದಾಧ್ಯಯನವ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ?
ಬ್ರಹ್ಮವೇತ್ತುಗಳ ಶುಕ್ಲಶೋಣಿತಂದ ಜನಿಸಿದಡೇನು,
ಬ್ರಾಹ್ಮಣನಾಗಬಲ್ಲನೆ?
ಯಜನಾ[ದಿಇ] ಷ್ಟ ಷಟ್ಕರ್ಮಂಗಳ ಬಿಡದೆ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ?
`ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ’ ಎಂಬ ವೇದವಾಕ್ಯವನರಿದು,
ಬ್ರಹ್ಮಭೂತನಾದಾತನೆ ಬ್ರಾಹ್ಮಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1711
ವೇದ್ಯ ಸಾಧಿಸುವಲ್ಲಿ ನಾದಬ್ರಹ್ಮದ ಮುಂದೆ
ಆಯಾದಕ್ಷರದ ಆಮೋದದಾ
ನಾದ ಬಿಂದು ಕಳೆಯ ಭೇದಕ್ಕೆ ಆವ ದೂರ ಮುಕ್ತ್ಯಾಧಾರ
ಕಪಿಲಸಿದ್ಧಮಲ್ಲಿಕಾರ್ಜುನನು./1712
ವೇಶವ ಧರಿಸಿ ಫಲವೇನಯ್ಯಾ,
ವೇಷದಂತಾಚರಣೆ ಇಲ್ಲದನ್ನಕ್ಕ?
ವೇದಾಂತವನೋದಿ ಫಲವೇನಯ್ಯಾ,
ಬ್ರಹ್ಮ ತಾವಾಗದನ್ನಕ್ಕ?
ನಾನಾ ಕೆರೆಯ ತೋಡಿ ಫಲವೇನಯ್ಯಾ,
ಪುಣ್ಯತೀರ್ಥಂಗಳು ಬರದನ್ನಕ್ಕ?
ಕಪಿಲಸಿದ್ಧಮಲ್ಲಿನಾಥಾ./1713
ವೇಷದಲ್ಲಿ ಭಕ್ತನಾದಡೇನು, ವೇಷದಲ್ಲಿ ಮಹೇಶನಾದಡೇನು,
ಗುಣವಿಲ್ಲದನ್ನಕರ ?
ಕ್ಷಿರಕ್ಕೂ ತಕ್ರಕ್ಕೂ ಭೇದವೇನುಂಟು ?
ರುಚಿಯಿಂದಲ್ಲದೆ ರೂಪದಿಂದವೆ ? ಕಪಿಲಸಿದ್ಧಮಲ್ಲಿಕಾರ್ಜುನಾ./1714
ವೇಷಧಾರಿ ಜಂಗಮರನಂತರುಂಟು;
ವೇಷವಳಿದವರನೊಬ್ಬರನು ಕಾಣೆ.
ಬಿಂದುನಿಗ್ರಹದ ಜಂಗಮರನಂತರುಂಟು;
ಬಿಂದುರಹಿತ ಜಂಗಮರನೊಬ್ಬನು ಕಾಣೆ.
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ,
ಜಂಗಮವೆನ್ನಬೇಕು, ಪ್ರಭುವೇ ಜಂಗಮವೆನ್ನಬೇಕು.
ವೇಷಧಾರಿಯೆಂದು ಇನ್ನುಳಿದವರೊಪ್ಪಚ್ಚಿ ಅಳವಡೆಂದಡೆ,
ಅಳವಡದು ನೋಡಾ ನಿನ್ನ ಮುಂದೆ./1715
ವೇಷವ ಧರಿಸಿ ಫಲವೇನಯ್ಯಾ,
ವೇಷದಂತಾಚರಣೆ ಇಲ್ಲದನ್ನಕ್ಕ?
ವೇದಾಂತವನೋದಿ ಫಲವೇನಯ್ಯಾ,
ಬ್ರಹ್ಮ ತಾವಾಗನ್ನಕ್ಕ?
ನಾನಾ ಕೆರೆಯ ತೋಡಿ ಫಲವೇನಯ್ಯಾ,
ಪುಣ್ಯತೀರ್ಥಂಗಳು ಬರದನ್ನಕ್ಕ?
ಕಪಿಲಸಿದ್ಧಮಲ್ಲಿನಾಥಾ./1716
ವ್ಯಾಕರಣವನೋದ್ಲ ಶಬ್ದಶುದ್ಧಿಯಲ್ಲದೆ,
ಮನ ಶುದ್ಧವಾಗಿ ಜ್ಞಾನಶುದ್ಧಿಯಾಗದು.
ಛಂದಸ್ಸು ಸಾಧಿಸಿದಲ್ಲಿ ಕವಿತಾಶುದ್ಧಿಯಲ್ಲದೆ,
ಕವಿತೆಯ ಸಾಧಿಸಿ, ವ್ಯಾಸನಂತೆ ಚಿರಂಜೀವಿಯಾಗನು.
ಅಷ್ಟಾದಶಪುರಾಣವ ಸಾಧಿಸಿದಲ್ಲಿ ವಾಕ್ಶ್ಧುಯಲ್ಲದೆ,
ಕಪಿಲಸಿದ್ಧಮಲ್ಲಿಕಾರ್ಜುನ ಮಹಾದೇವಾ,
ದೇಹಸ್ವಭಾವ ಶುದ್ಧಯಾಗದು ನೋಡಾ,
ಮಡಿವಾಳ ಮಾಚಯ್ಯಾ/1717
ವ್ಯಾಘ್ರದಿಂ ದಿವಾರಾತ್ರಿಗಳಲ್ಲಿಯು ಕಾಣಬಹಾಂಗೆ
ಭೇರುಂಡನಾ ಭೂಮಿ ಆಕಾಶಂಗಳೆರಡರಲ್ಲಿಯೂ ಚರಿಸುವ
ಹಾಂಗೆ
ಶಿವಯೋಗಿಯಾ ಪ್ರಪಂಚ ಪರಮಾರ್ಥಂಗಳೆರಡರಲ್ಲಿಯೂ
ಕಂಡು
ಆಚರಿಸುವನೆಂಬುದು ತೋರಲ್ಪಡುತ್ತಿಹುದು.
ಶಿವಾಚಾರ ಸಂಪನ್ನರಾಗಿ ಶಿವಯೋಗದ ಹೊಲಬನರಿದವರು
ಲೌಕಿಕದತ್ತಲೂ ಚರಿಸುವರು, ಪರಮಾರ್ಥದತ್ತಲೂ ಚರಿಸುವರು,
ಕಪಿಲಸಿದ್ಧಮಲ್ಲಿನಾಥನೆಂಬ ಮಹಾಬಯಲು ಕೂಡಿರ್ಪರು./1718
ವ್ಯಾಧಿ ಹೋಗುವ ಪರ್ಯಂತರ ರಸರಸಾಯನದ ಹಂ[ಗ]ಯ್ಯಾ,
ಕ್ಷುತ್ಪಿಪಾಸೆಯಡಗುವ ಪರ್ಯಂತರ ಅನ್ನೋದಕ ಹಂ[ಗ]ಯ್ಯಾ.
ನಾ ಲಿಂಗಸಂಬಂಧಿಯಾಗುವ ಪರ್ಯಂತರ ನಿಮ್ಮ
ಹಂಗಿನವನಯ್ಯಾ,
ಎಲೆ ಕಪಿಲಸಿದ್ಧಮಲ್ಲಿನಾಥ./1719
ಶಬ್ದ ನೋಡುವಡೆ ನಪುಂಸಕ;
ಅದರ ಕಾರ್ಯ ನೋಡುವಡೆ,
ಹರಿಹರ ಬ್ರಹ್ಮಾದಿಗಲನ್ನಲ್ಲ ಮುರಿದಿಕ್ಕಿತ್ತು.
ಅದರಂತೆ ಹೋದಡೆ ತನ್ನ ಕಡೆ ಬರದು ನೋಡಾ,
ಕಪಿಲಸಿದ್ಧಮಲ್ಲಯ್ಯಾ./1720
ಶಮೆದಮೆಶಾಂತಿಯ ನಡುವೆ
ಜ್ಞಾನಾಗ್ನಿಯೊಡನೊಡನೆ ಬೆಳಗುತಿಪ್ಪುದಗ್ನಿ ತಾ.
ನುಡಿಯ ಬ್ರಹ್ಮದವರಿಗೆ ಬಿಡದೆ ಸುಟ್ಟಿತ್ತು ಅಗ್ನಿ,
ಮೃಡಕರುಣವುಳ್ಳವರಿಗೆ ಶಾಂತವಾಗಿ,
ಎನ್ನೊಡೆಯ ಕಪಿಲಸಿದ್ಧವಲ್ಲಿಕಾರ್ಜುನಯ್ಯನ
ಒಡಗೂಡಿದಾತಂಗೆ ಶಾಂತವಾಗಿ./1721
ಶರಣ ಎಂಬ ಶಬ್ದವಂ್ಕಂತಲ್ಲ.
[ನೋಣಃ] ಎಂಬ ಸೂತ್ರಂದ ಶರಣನೆನಿಸಿದನು.
ಶರ ಎಂದರೆ ಬಾಣ, ನ ಎಂದಡೆ ಅಂಥ ಮನ್ಮಥಬಾಣವಿಲ್ಲದವ.
[ಅವ್ವನೇ ಶರಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./1722
ಶರಣನ ಇರವ ನೆನೆನೆನೆದು ಶರಣನಾದೆನಯ್ಯಾ.
ಇನ್ನು ಮರೆದಡೆ ನಿಮ್ಮ ಶರಣ ಚೆನ್ನಬಸವಣ್ಣನಾಣೆ.
ಇನ್ನು ಈ ಭವಕ್ಕೆ ಬಂದೆನಾದಡೆ,
ಹಲ್ಲುದೋರೆ ಮೂಗ ಕೊಯ್ಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1723
ಶರಣನ ಕೂಡ ವಾದ ಸಲ್ಲದು ಸಲ್ಲದು ನೋಡಾ.
ಆತನ ನಡೆ ಬೇರೆ, ಆತನ ನುಡಿಗಡಣ ಬೇರೆ.
ಕ್ರಿಯೆವಿಡಿದು ಆಚರಿಸಿದಲ್ಲಿಜ್ಞಾನವಿಡಿದು ವಾದಿಸುವ;
ಜ್ಞಾನವಿಡಿದು ಆಚರಿಸಿದಲ್ಲಿ ಕ್ರಿಯೆವಿಡಿದು ವಾದಿಸುವ.
ನಿದ್ರ್ವಂದ್ವನಾಗಿ ನಿಂದಲ್ಲಿ ತೋರಿದ
ಕಪಿಲಸಿದ್ಧಮಲ್ಲಿಕಾರ್ಜುನನೆಂದು
ಡಂಗುರಹೊಯ್ದು ನಾಟ್ಯವಾಡುವ./1724
ಶರಣನ ಜಾಗ್ಕೃಯೆ ಶಿವರ್ಕ್ರಾ ಕಂಡಾ ಮನವೆ.
ಶರಣನ ನಿದ್ರೆಯೆ ಶಿವಯೋಗಸಮಾಧಿ ಕಂಡಾ ಮನವೆ.
ಶರಣನ ನುಡಿಯೆ ಶ್ರೀರುದ್ರ ಪಂಚಬ್ರಹ್ಮೋಪನಿಷತ್ತು ಕಂಡಾ
ಮನವೆ.
ಶರಣನ ನಡೆಯೆ ಮುಕ್ತಿಸೋಪಾನ ಕಂಡಾ ಮನವೆ.
ಶರಣನ ಭೋಜನವೆ ಕಪಿಲಸಿದ್ಧಮಲ್ಲಿಕಾರ್ಜುನನರ್ಪಣ
ಕಂಡಾ ಮನವೆ. /1725
ಶರಣನ ನಡೆ ಅಂತಿಂತೆನಬೇಡ.
ಶರಣ ಮಾದರ ಚೆನ್ನಯ್ಯನ ನಡೆ ಯಾವ ಆಗದಲ್ಲಿ ಹೇಳಿತ್ತು?
ಶರಣ ಡೋಹರ ಕಕ್ಕಯ್ಯನ ನಡೆ ಯಾವ ವೇದದಲ್ಲಿ ಹೇಳಿತ್ತು?
ನಡೆದ ಆಚರಣೆಯೆ ಸಚ್ಛೀಲ;
ನುಡಿದ ವಾಕ್ಯವೆ ನಡೆ ಮೋಕ್ಷಪ್ರದಾಯಕ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./1726
ಶರಣನ ನೋಟ ಭವಕ್ಕೆ ಓಟ ನೋಡಯ್ಯಾ.
ಶರಣನ ದೃಷ್ಟಿ ಶಿವದೃಷ್ಟಿ ನೋಡಯ್ಯಾ.
ಶರಣನ ದೇಹ ಶಿವದೇಹ ನೋಡಯ್ಯಾ.
ಶರಣನ ಪಾದುಕೆ ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಚಮ್ಮಾವುಗೆ
ನೋಡಾ, ಮಡಿವಾಳ ಮಾಚಣ್ಣಾ./1727
ಶರಣನ ಪೂಜೆಯದು ಮರಣದ ಕೇಡು ನೋಡಿರಯ್ಯಾ.
ಶರಣನ ಪೂಜೆಯದು ಶಿವನ ಕರುಣಾರಸ ನೋಡಿರಯ್ಯಾ.
ಶರಣನ ಪೂಜೆಯದು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆ
ನೋಡಿರಯ್ಯಾ. /1728
ಶರಣನ ಸಂಭ್ರಮ ಂಗಪೂಜೆ, ಜಂಗಮದಾಸೋಹ ನೋಡಯ್ಯಾ.
ಶರಣನ ಸಂಭ್ರಮ ಅನುಭವ ಓ ಭವ ಗೆಯುವುದು.
ಅದೆ ಸಂಭ್ರಮಕಾರ್ಯ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯಾ/1729
ಶರಣನಾದಡೆ ಸತಿಯಗೂಡಾಟವೇಕಯ್ಯಾ?
ಇಂದ್ರಿಯಂಗಳು ಹರಿಯಲೇಕೆ? ತಾನೆ ಸತಿ ಲಿಂಗವೆ ಪತಿಯಾದ
ಬಳಿಕ.
ಸರ್ವ ಸಂಯೋಗಕ್ಕೆ ಲಿಂಗವೆ ಪತಿ, ತಾನೆ ಸತಿಯಾದಾತ
ಅನ್ಯ ಸತಿಯರಿಗೆರಗ; ಕರಣಂಗಳ ಹರಿಯಲೀಯ;
ಕಾರ್ಪಣ್ಯಕ್ಕೊದಗ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಒಡಗೂಡಿದ ಶರಣ/1730
ಶರಣಸ್ಕ ಂಗಪ್ಕ ಎಂದ ಬಳಿಕ
ಂಗದ ರಾಣಿವಾಸ ನೋಡಾ ಅವರು.
ಎಮ್ಮಕ್ಕ ಮಹಾದೇವಿ, ಎಮ್ಮಕ್ಕ ಗಂಗಾದೇವಿ,
ಹಿರಿಯಕ್ಕ ಚಿಕ್ಕಕ್ಕ ಎಂದಡೆ ವಿರೋಧ.
ವಿರೋಧಿಸಿದಡೇನು?
ನಾನು ಚಿಕ್ಕಾಕೆ ಕಪಿಲಸಿದ್ಧಮಲ್ಲಿಕಾರ್ಜುನಂಗೆ./1731
ಶರಣಸ್ಥಲ ನೋಡುವಡೆ ಬಹು ಸುಲಭ ನೋಡಯ್ಯಾ.
ಶರಣನು ್ಕಳಿದು ್ಕಳಿದು ಆಚರಿಪನು,
ಮರೆದು ಮರೆದು ಆಚರಿಸನು.
ಜ್ಞಾನಂದ ಭೇದವಲ್ಲದೆ, ದೇಹಂದ ಭೇದವಿಲ್ಲ
ನೋಡಯ್ಯಾ.
ಶರಣ ತನ್ನ ದೇಹವನೆ ಹಕಾರ ಪ್ರಣವ ಮಾಡಿಟ್ಟ ;
ನರನು ತನ್ನ ದೇಹವನೆ ದೇಹವೆಂದು ಜಡವೆಂದು
ಪ್ರಳಯಕ್ಕೊಳಗು ಮಾಡಿಟ್ಟ.
ಶರಣನ ದೇಹವೆಲ್ಲ ಪಂಚಾಕ್ಷರಮಯ ನೋಡಾ: ನಕಾರವೆ ಅಸ್ಥಿ, ಮಕಾರವೆ ಮಾಂಸ, ಶಿಕಾರವೆ ತ್ವಕ್ಕು
ವಕಾರವೆ ನಾಡಿ, ಯಕಾರವೆ ರೋಮ.
ನಕಾರವೆ ರಸ, ಮಕಾರವೆ ರುಧಿರ, ಶಿಕಾರವೆ ಶುಕ್ಲ,
ವಕಾರವೆ ಪಿತ್ತ, ಯಕಾರವೆ ಶ್ಲೇಷ್ಮ.
ನಕಾರವೆ ಕ್ಷುಧೆ, ಮಕಾರವೆ ತೃಷ್ಣೆ, ಶಿಕಾರವೆ ನಿದ್ರೆ,
ವಕಾರವೆ ಆಲಸ್ಯ, ಯಕಾರವೆ ಸಂಗ.
ನಕಾರವೆ ಪರಿವ, ಮಕಾರವೆ ಪಾರುವ, ಶಿಕಾರವೆ ಸುಳಿವ,
ವಕಾರವೆ ಹಬ್ಬುವ, ಯಕಾರವೆ ಅಗಲುವ ್ಲಗುಣಂಗಳ್ವು.
ನಕಾರವೆ ರಾಗ, ಮಕಾರವೆ ದ್ವೇಷ, ಶಿಕಾರವೆ ಭಯ,
ವಕಾರವ ಲಜ್ಜೆ, ಯಕಾರವೆ ಮೋಹ.
ಕ್ಲಂ ಕ್ಲೀಂ ಎಂಬುದ ಎಚ್ಚು, ಕಠಿಣ ಮೃದುವಿಗೆ ಇಟ್ಟ ನೋಡಾ.
ಕ್ಲಂ ಕ್ಲೀಂ ಎಂಬುದ ಉಷ್ಣಚಲನೆಗೆ ಸೇರಿಸಿದ ನೋಡಾ.
ನಮಃ ಶಿವಾಯ ಎಂಬುದ
ಗಂಧ ರಸ ರೂಪು ಸ್ಪರ್ಶ ಶಬ್ದಕ್ಕೆ ಸಂಬಂಧಿಸಿದ ನೋಡಾ.
ನಮಃ ಶಿವಾಯ ಎಂಬುದ
ಪಾಯು ಗುಹ್ಯ ಪಾದ ಪಾಣಿ ವಾಕ್ಕಿಗೆ ಸಂಬಂಧಿಸಿದ ನೋಡಾ.
ನಮಃ ಶಿವಾಯ ಎಂಬುದ
ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರಕ್ಕೆ ಸಂಬಂಧಿಸಿದ ನೋಡಾ.
ನಮಃ ಶಿವಾಯ ಎಂಬುದ
ಪ್ರಾಣ ಅಪಾನ ವ್ಯಾನ ಉದಾನ ಸಮಾನಕ್ಕೆ ಸಂಬಂಧಿಸಿದ
ನೋಡಾ.
ನಮಃ ಶಿವಾಯ ಎಂಬುದ
ಚಿತ್ತ ಬ್ಧು ಅಹಂಕಾರ ಮನ ಜ್ಞಾನಕ್ಕೆ ಸಂಬಂಧಿಸಿದ ನೋಡಾ.
ಈ ರ್ಕೀಯಿಂದರಿದ ಶಿವತತ್ತ್ವ ತಾನಾಗಿ ನಿಂದ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1732
ಶರಣಾರ್ಥಿ ಶರಣಾರ್ಥಿ ಬಸವ ಬಸವಾ ಗುರುವೆ,
ಗುರುವೆ ಬಸವ ಬಸವ ಬಸವಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನನ್ನಂಗ ನಿನ್ನಂಗ ಬಸವಣ್ಣಂಗರ್ಪಿತವಯ್ಯಾ./1733
ಶಾಸ್ತ್ರದ ರಂಜನೆ ಲೋಕಕ್ಕಲ್ಲದೆ
ಲೋಕವಿರಹಿತಂಗೆಲ್ಲಿಹದೊ?
ವೇದ ವೇದಾಂತದ ರಂಜನೆ ಮುಮುಕ್ಷುಗಳಿಗಲಗಲದೆ
ಮೋಕ್ಷವಿರಹಿತಂಗೆಲ್ಲಿಯದೊ?
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಮಾಯಾಕೀಲವ ತಿಳಿವಡೆ,
ತಿಳಿವವರಿಗಲ್ಲದೆ ನಿಶ್ಯೂನ್ಯರಿಗೆಲ್ಲಿಹದೊ?/1734
ಶಾಸ್ತ್ರವ ಹೇಳುವವರೊಂದು ಕೋಟಿ,
ವೇದ ವೇದಾಂತವ ಹೇಳುವವರೊಂದು ಕೋಟಿ.
ನ್ಯಾಯಾನ್ಯಾಯವ ಹೇಳುವವರೊಂದು ಕೋಟಿ.
ಕಪಿಲಸಿದ್ಧಮಲ್ಲಿಕಾರ್ಜುನನ ಮಾಯಾಕೀಲವ
ಹೇಳುವವರೊಬ್ಬರೂ ಇಲ್ಲ ಎಲ್ಲಾದರೂ./1735
ಶಾಸ್ತ್ರವ ಹೇಳುವವರೊಂದು ಕೋಟಿ.
ವೇದ ವೇದಾಂತವ ಹೇಳುವವರೊಂದು ಕೋಟಿ.
ನ್ಯಾಯಾನ್ಯಾಯವ ಹೇಳುವವರೊಂದು ಕೋಟಿ.
ಕಪಿಲಸಿದ್ಧಮಲ್ಲಿಕಾರ್ಜುನನ ಮಾಯಾಕೀಲವ
ಹೇಳುವವರೊಬ್ಬರೂ ಇಲ್ಲ ಎಲ್ಲಾದರೂ./1736
ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ.
ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ.
ಪುರಾಣವೆಂಬುದು ಮೃತವಾದವರ ಗಿರಾಣವಯ್ಯಾ.
ತರ್ಕವೆಂಬುದು ಮರ್ಕಟಾಟವಯ್ಯಾ.
ಆಗಮವೆಂಬುದು ಯೋಗದ ಘೋರವಯ್ಯಾ.
ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ.
ಸ್ಮೃತಿಯೆಂಬುದು ಪಾಪಪುಣ್ಯವಿಚಾರವಯ್ಯಾ.
ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಕ್ಕೆ./1737
ಶಿಖರ ಶಿರಸದಂತ್ಯದಲ್ಲಿ ಕಳಸ ಕೆಲಸ ರಚಿಸಿದ
ಪರಿಯ ನೋಡು, ಎಲೆ ಕಮ್ಮಟ.
ತರುಣ ಬಂದು ಕೂಪಂಗಳ ತೆರಹಿಲ್ಲದ
ಬ್ರಹ್ಮಾಂಡ ತರುಣಿಯ ಮಸ್ತಕದಲೊಕ್ಕೆ,
ಅತಿವೃಷ್ಟಿ ಪ್ರವಾಹದ ಒಳಗೆ ಬಿದ್ದು
ಅದ್ದೆನೆಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ./1738
ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ
ಶಿವನಾಗಿ ಶಿವನ ಪೂಜಿಸು ಮನವೆ.
ಹರ ಹರಾ, ಹರ ಹರಾ, ಹರ ಹರಾ ಎಂದೊಮ್ಮೆ
ಹರನಾಗಿ ಪುರಹರನ ಪೂಜಿಸು ಮನವೆ.
ಲಿಂಗವೇ [ಲಿಂಗವೇ ಲಿಂಗವೇ] ಎಂದೊಮ್ಮೆ
ಕಪಿಲಸಿದ್ಧಮಲ್ಲಿಕಾರ್ಜುನಂಗವ ಪೂಜಿಸಿ ಲಿಂಗವಾಗು ಮನವೆ./1739
ಶಿವಂಗೆ ಪಂಚಮುಖವೆಂಬುದ ಮೂಲೋಕವೆಲ್ಲ ಬಲ್ಲುದು;
ನರಂಗೆ ಪಂಚಮುಖವೆಂಬುದ ಆರೂ ಅರಿಯರು.
ಮುಂಭಾಗವದು ಸದ್ಯೋಜಾತ, ಬಲಭಾಗವದು ತತ್ಪುರುಷ,
ಎಡಭಾಗವದು ಅಘೋರ, ಹಿಂಭಾಗವದು ವಾಮದೇವ,
ಮಧ್ಯಭಾಗವದು ಕಪಿಲಸಿದ್ಧಮಲ್ಲಿಕಾರ್ಜುನನ ಈಶಾನ್ಯಮುಖ
ನೋಡಾ, ಕಲ್ಲಯ್ಯಾ./1740
ಶಿವತತ್ವ ಐದು ಅವಾವೆಂದಡೆ;
ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ- ಇಂತು ಶಿವತತ್ವ
ಐದು.
ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ – ಇಂತು
ವಿದ್ಯಾತತ್ತ್ವ ಏಳು.
ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ – ಇವು ಕರಣತತ್ತ್ವ ನಾಲ್ಕು.
ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ – ಇಂತು
ಬುದ್ಧೀಂದ್ರಯಂಗಳು ಐದು.
ಇನ್ನು ಕರ್ಮೇಂದ್ರಿಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು – ಇಂತು
ಕರ್ಮೇಂದ್ರಿಯಂಗಳು ಐದು.
ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ ಗಂಧ – ಇಂತು ಜ್ಞಾನೇಂದ್ರಿಯ
ವಿಷಯ ಐದು.
ಇನ್ನು ಕರ್ಮೇಂದ್ರಿಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ
ಇಂತು ಕರ್ಮೇಂದ್ರಿಯ ವಿಷಯ ಐದು.
ಇನ್ನು ವಾಕ್ಕುಗಳಾವುವೆಂದಡೆ: ಪರಾ, ಪಶ್ಯಂತಿ, ಮಧ್ಯಮೆ, ವೈಖರಿ – ಇಂತು ವಾಕ್ಕು ನಾಲ್ಕು.
ಸಾತ್ಪಿ, ರಾಜಸ, ತಾಮಸ – ಇಂತು ಗುಣ ಮೂರು.
ರಾಜಸಹಂಕಾರ, ವೈಖರಿಯಹಂಕಾರ, ಭೂತಾಯಹಂಕಾರ
-ಇಂತು ಅಹಂಕಾರ ಮೂರು.
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ – ಇಂತು ಭೂತಂಗಳು
ಐದು.
ಭೂತಕಾರ್ಯ ಇಪ್ಪತ್ತೈದು – ಅವಾವೆಂದಡೆ: ಅಸ್ಥಿ, ಮಾಂಸ, ತ್ವಕ್, ನಾಡಿ, ರೋಮ – ಈ ಐದು
ಪೃಥ್ವೀಪಂಚಕ.
ಲಾಲಾ, ಮೂತ್ರ, ಸ್ವೇದ, ಶುಕ್ಲ, ಶೋಣಿಕ – ಈ ಐದು
ಅಪ್ಪುವಿನ ಪಂಚಕ.
ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸ್ತ್ರೀಸಂಗ – ಈ ಐದು
ಅಗ್ನಿಪಂಚಕ.
ಪರಿವ, ಪಾರುವ, ಸುಳಿವ, ನಿಲುವ, ಅಗಲುವ – ಈ ಐದು
ವಾಯುಪಂಚಕ.
ರಾಗ, ದ್ವೇಷ, ಭಯ, ಲಜ್ಜೆ, ಮೋಹ – ಈ ಐದು
ಆಕಾಶವಂಚಕ.
ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು.
ಇನ್ನು ದಶವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ,
ಕೃಕರ, ದೇವದತ್ತ, ಧನಂಜಯ – ಈ ಹತ್ತು ವಾಯುಗಳು,
ಇನ್ನು ದಶನಾಡಿಗಳು: ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿ, ಜಿಹ್ವೆ,
ಪುಷ್ಕರ, ಪಯಸ್ವಿನಿ, ಆಲಂಬು, ಲಕುಹ, ಶಂಕಿನಿ – ಇಂತೀ
ಹತ್ತು ನಾಡಿಗಳು.
ಇಂತು ತತ್ವ ತೊಂಬತ್ತಾರು ಕೂಡಿಕೊಂಡು
ಆತ್ಮನು ಭೂಮಧ್ಯದಲ್ಲಿರ್ದು ಅವಸ್ಥೆಬಡುವುದನು ಹೇಳಿಹೆನು.
ಅದೆಂತೆಂದಡೆ ಅವಸ್ಥೆಯ ಕ್ರಮ: ಪ್ರೇರಕಾವಸ್ಥೆ ಒಂದು, ಅಧೋವಸ್ಥೆ ಐದು, ಊಧ್ರ್ವಾವಸ್ಥೆ
ಐದು,
ಮಧ್ಯಾವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು,
ಶುದ್ಧಾವಸ್ಥೆ ಒಂದು, ನಿರ್ಮಲಾವಸ್ಥೆ ಐದು,
ಅಂತೂ ಅವಸ್ಥೆ ಇಪ್ಪತ್ತನಾಲ್ಕು,
ಅವರಲ್ಲಿ ಪ್ರೇರಕಾವಸ್ಥೆಯೆಂತೆಂದಡೆ:
ತತ್ತ್ವಸಮೂಹಂಗಳನು ಕೂಡಿಕೊಂಡು ಇರ್ದಲ್ಲಿ ಆ ಪುರುಷನು
ಪಂಚೇಂ್ರಯಂಗಳಲ್ಲಿ ವಿಷಯಂಗಳು ಅತಿ ಚಮತ್ಕಾರದಲ್ಲಿ
ಅರಿವವೇಳೆ ಪ್ರೇರಕಾವಸ್ಥೆಯೆಂದು.
ಅದಕ್ಕೆ ಪ್ರೇರಿಸುವ ತತ್ತ್ವಂಗಳಾವುವೆಂದಡೆ-
ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು,
ಭೂತಂಗಳಲ್ಲಿ ಒಂದು, ಇಂದ್ರಿಯಂಗಳಲ್ಲಿ ಒಂದು
-ಇಂತೀ ಹದಿನೆಂಟು ತತ್ವಂಗಳಲ್ಲಿ ವಿಷಯಂಗಳನರಿವನು.
ಅದು ಹೇಗೆಂದಡೆ – ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು,
ಕರಣಂಗಳು ನಾಲ್ಕು – ಇಂತು ಹದಿನಾರು ತತ್ತ್ವ.
ಆಕಾಶಭೂತವೂ ಶ್ರೋತ್ರೇಂದ್ರಿಯವೂ ಕೂಡಿ
ಹದಿನೆಂಟು ತತ್ತ್ವದಲ್ಲಿ ಶಬ್ದವನದಲ್ಲಿರಿವ;
ವಾಯುಭೂತವೂ ತ್ವಗೇಂದ್ರಿಯವೂ ಕೂಡಿ
ಹದಿನೆಂಟು ತತ್ತ್ವದಲ್ಲಿ ಶಬ್ದವನರಿವ;
ವಾಯುಭೂತವೂ ತ್ವಗೇಂದ್ರಿಯವೂ ಕೂಡಿ
ಹದಿನೆಂಟು ತತ್ತ್ವದಲ್ಲಿ ಸೋಂಕನರಿವ;
ತೇಜಭೂತವೂ ನಯನೇಂದ್ರಿಯವೂ ಕೂಡಿ
ಹದಿನೆಂಟು ತತ್ತ್ವದಲ್ಲಿ ರೂಪವನರಿವ;
ಅಪ್ಪುಭೂತವೂ ಜಿಹ್ವೇಂದ್ರಿಯವೂ ಕೂಡಿ
ಹದಿನೆಂಟು ತತ್ತ್ವದಲ್ಲಿ ರಸವನರಿವ;
ಪೃಥ್ವಿಭೂತವೂ ಪ್ರಾಣೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ
ಗಂಧವನರಿವ.
ಇಂತೀ ವಿಷಯಂಗಳನರಿವುದು.
ಇದು ಪ್ರೇರಕಾವಸ್ಥೆಯೆಂದೆನಿಸುವದು.
ಇನ್ನು ಅಧೋವಸ್ಥೆ ಐದಕ್ಕೆ ವಿವರ: ಪ್ರಥಮದಲ್ಲಿ ಜಾಗ್ರಾವಸ್ಥೆ ಅದಕ್ಕೆ ಪ್ರೇರಿಸುವ ತತ್ತ್ವಂಗಳು
ಬಿಟ್ಟಿಹವಾವುವೆಂದಡೆ: ಶಿವತತ್ತ್ವ ಐದು, ಮಾಯಾತತ್ತ್ವ ಒಂದು, ವಿದ್ಯಾತತ್ತ್ವ ಆರು,
ಭೂತಂಗಳು ಐದು ಇಂತು ಹದಿನೇಳು ಬಿಟ್ಟಿಹುದು.
ಇನ್ನು ಜಾಗ್ರಾವಸ್ಥೆಯಲ್ಲಿಹ ತತ್ತ್ವಗಳೆಷ್ಟೆಂದಡೆ:
ಕರಣ ನಾಲ್ಕು, ಬುದ್ಧೀಂದ್ರಿಯ ಐದು, ಕಮರ್ೆಂದ್ರಿಯ ಐದು,
ವಿಷಯ ಹತ್ತು, ವಾಯು ಹತ್ತು.
ಇಂತು ಮೂವತ್ತನಾಲ್ಕು ತತ್ತ್ವಂಗಳಲ್ಲಿ ಆ ತನು ಕೇಳದೆ ಕೇಳುವ,
ಮಾತಾಡದ ಹಾಂಗೆ ಆಲಸ್ಯದಲ್ಲಿ ಮಾತನಾಡುತ್ತಿಹನು,
ಇಂತು ಜಾಗ್ರಾವಸ್ಥೆ.
ಇನ್ನು ಸ್ವಪ್ನಾವಸ್ಥೆ. ಅದಕ್ಕೆ ಹತ್ತು ತತ್ತ್ವಂಗಳು ಬಿಟ್ಟಿಹವು.
ಅವಾವುವೆಂದಡೆ:ಬುದ್ಧೀಂ್ರಯ ಐದು, ಕಮರ್ೆಂದ್ರಿಯ
ಐದು.
ಲಲಾಟದಲ್ಲಿ ನಿಲುವು ಕಂಠಸ್ಥಾನದಲ್ಲಿ ಇಪ್ಪತ್ತೈದು ತತ್ತ್ವಂಗಳು
ಕೂಡಿಕೊಂಡಿಹುದು.
ಅದೆಂತೆಂದಡೆ:ಮಾಯೆ ಒಂದು, ವಾಯು ಹತ್ತು,
ವಿಷಯ ಹತ್ತು, ಕರಣ ನಾಲ್ಕು
ಇಂತು ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡು ಸ್ವಪ್ನಂಗಳ
ಕಾಣುತಿಹನು.
ಇದು ಸ್ವಪ್ನಾವಸ್ಥೆ.
ಇನ್ನು ಸುಷುಪ್ತಾವಸ್ಥೆಗೆ ಬಹಲ್ಲಿ
ಕಂಠಸ್ಥಾನದಲ್ಲಿ ನಿಂದ ತತ್ತ್ವಂಗಳಾವಾವವೆಂದಡೆ-
ಮಾಯೆ ಒಂದು, ವಾಯು ಒಂಬತ್ತು ವಿಷಯ ಹತ್ತು,
ಕರಣ ಮೂರು- ಇಂತು ಇಪ್ಪತ್ತಮೂರು ತತ್ತ್ವ.
ಇನ್ನು ಹೃದಯಸ್ಥಾನದಲ್ಲಿ ಕೂಡಿಹ ತತ್ತ್ವ ಆವಾವೆಂದಡೆ:
ಪ್ರಾಣವಾಯು ಒಂದು, ಪ್ರಕೃತಿ ಒಂದು, ಚಿತ್ತ ಒಂದು
-ಇಂತು ಸುಷುಪ್ತಾವಸ್ಥೆಯಲ್ಲಿ ತತ್ತ್ವ.
ಇನ್ನು ತೂರ್ಯಾವಸ್ಥೆಗೆ ಬಹಾಗ ಹೃದಯದಲ್ಲಿ ನಿಂದ ತತ್ತ್ವ ಚಿತ್ತ
ಒಂದು. ನಾಭಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿಹ ತತ್ತ್ವ
ಪ್ರಾಣವಾಯು ಒಂದು, ಪ್ರಕೃತಿ ಒಂದು.
ಅತೀತಾವಸ್ಥೆಗೆ ಹೋಹಾಗ ನಾಭಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿ
ಪ್ರಾಣವಾಯುವುಳಿದು ಅತೀತಾವಸ್ಥೆಯಲ್ಲಿ ಪ್ರಕೃತಿಗೂಡಿ
ಮೂಲಾಧಾರದಲ್ಲಿ ಆಣವಮಲಯುಕ್ತವಾಗಿ
ಏನೆಂದರಿಯದೆ ಇಹುದು, ಇಂತಿದು ಅಧೋವಸ್ಥೆ.
ಇನ್ನು ಊಧ್ರ್ವಾವಸ್ಥೆ, ಅತೀತದಲ್ಲಿ ಪ್ರಕೃತಿಕಾರ್ಯಂಗಳೆಲ್ಲವನೂ
ಬಿಟ್ಟು, ತತ್ತ್ವಂಗಳೊಂದೂ ಇಲ್ಲದೆ,
ಅಣವಮಲಸ್ವರೂಪವಾಗಿ ಮೂಲಾಧಾರದಲ್ಲಿ ಬ್ದಿರ್ದ ಆತ್ಮನಿಗೆ
ಪರಮೇಶ್ವರನ ಕರುಣದಿಂದ ಕ್ರಿಯಾಶಕ್ತಿ, ಶಕ್ತಿತತ್ತ್ವಮಂ
ಪ್ರೇರಿಸುವುದು.
ಆ ಶಕ್ತಿ ಕಲೆ, ಕಾಲ, ನಿಯತಿಗಳಂ ಪ್ರೇರಿಸುವುದು.
ಆ ವೇಳೆಯಲ್ಲಿ ಸೂಕ್ಷೆ ್ಮಯೆಂಬ ವಾಕ್ಕು ಕೂಡುವುದು.
ಇಂತು ಅತೀತದಲ್ಲಿ ಅರುಹಿಸುವ ತತ್ತ್ವಂಗಳು:
ಶಕ್ತಿತತ್ತ್ವ, ಕಲೆ, ಕಾಲ, ನಿಯತಿ, ಸೂಕ್ಷೆ ್ಮ ಇಂತು ತತ್ತ್ವಂಗಳು ಐದು.
ಇನ್ನು ತೂರ್ಯಾವಸ್ಥೆಗೆ ಬಹಾಗ
ಹಿಂದೆ ಹೇಳಿದ ತತ್ತ್ವ ಐದು, ಪಶ್ಯಂತಿಯೆಂಬ ವಾಕ್ಕು,
ಪ್ರಾಣವಾಯು ಕೂಡಿ
ತತ್ತ್ವ ಏಳು ತೂರ್ಯಾವಸ್ಥೆಯಲ್ಲಿ ಪ್ರೇರಿಸುವುದು: ಹಿಂದೆ ಹೇಳಿದ ತತ್ತ್ವ ಏಳು ಕೂಡಿ,
ಹೃದಯಸ್ಥಾನದಲ್ಲಿ ಮಧ್ಯಮೆ, ಚಿತ್ತ – ಎರಡು ಕೂಡುತ್ತಿಹವು.
ಆ ವೇಳೆಯಲ್ಲಿ ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಪ್ರೇರಿಸುವುದು.
ಆ ಶುದ್ಧವಿದ್ಯಾತತ್ತ್ವ ಆತ್ಮಂಗೆ ಅರಿವನೆಬ್ಬಿಸುವುದು.
ಇಚ್ಛಾಶಕ್ತಿ ಈಶ್ವರತತ್ತ್ವಮಂ ಪ್ರೇರಿಸುವುದು;
ಈಶ್ವರತತ್ತ್ವ ರಾಗತತ್ತ್ವಮಂ ಪ್ರೇರಿಸುವುದು;
ರಾಗತತ್ತ್ವ ಆತ್ಮಂಗೆ ಇಚ್ಛೆಯನೆಬ್ಬಿಸುವುದು.
ಆಶಕ್ತಿ ಸಾದಾಖ್ಯತತ್ತ್ವಮಂ ಪ್ರೇರಿಸುವುದು;
ಸಾದಾಖ್ಯತತ್ತ್ವ ಪ್ರಕ್ಕೃತಿತ್ತ್ವಮಂ ಪ್ರೇರಿಸುವುದು;
ಪರಾಶಕ್ತಿ ಶಿವತತ್ತ್ವಮಂ ಪ್ರೇರಿಸುವುದು;
ಶಿವತತ್ತ್ವ ಗುಣತತ್ತ್ವಮಂ ಪ್ರೇರಿಸುವುದು.
ಇಂತು ಹದಿನೆಂಟು ತತ್ತ್ವ ಆವಾವವೆಂದಡೆ:
ಪಂಚಶಕ್ತಿ ಹೊರಗಾಗಿ ಶಿವತತ್ತ್ವ ಐದು, ವಿದ್ಯಾತತ್ತ್ವ ಐದು,
ಪ್ರಾಣವಾಯು ಒಂದು, ಪ್ರಕೃತಿ ಒಂದು,
ಗುಣ ಮೂರು, ಚಿತ್ತ ಒಂದು, ಪುರುಷ ಒಂದು.
ಇಂತು ತತ್ತ್ವ ಹದಿನೇಳು ಸುಷುಪ್ತಾವಸ್ಥೆಯಲ್ಲಿ ಅರುಹಿಸುವುವು.
ಇನ್ನು ಸ್ವಪ್ನಾವಸ್ಥೆಯ ಕಂಠದಲ್ಲಿಹ ತತ್ತ್ವ:
ಜ್ಞಾನೇಂದ್ರಿಯ ವಿಷಯ ಹತ್ತು, ಕಮರ್ೆಂದ್ರಿಯ ವಿಷಯ ಹತ್ತು,
ಪ್ರಾಣವಾಯು ಉಳಿಯೆ, ವಾಯುಚಿತ್ತ ಉಳಿಯೆ,
ತ್ರಿಕರಣ ಅಹಂಕಾರ ಮೂರು, ವೈಖರಿಯ ವಾಕ್ಕು ಒಂದು
ಇಂತು ಇಪ್ಪತ್ತನಾಲ್ಕು ತತ್ತ್ವ.
ಸುಷುಪ್ತಾವಸ್ಥೆಯಲ್ಲಿ ಹಿಂದೆ ಹೇಳಿದ ತತ್ತ್ವ ಹದಿನೇಳು ಕೂಡಿ
ತತ್ತ್ವ ನಲವತ್ತೊಂದು ಸ್ವಪ್ನಾವಸ್ಥೆಯಲ್ಲಿ ಕೂಡಿಹವು.
ಆಗ ತನ್ನೊಳಗೆ ಅರುಹಿಸುವ ಪ್ರಕಾರವೆಂತೆಂದಡೆ:
ಚಿತ್ತ, ಬುದ್ಧಿ, ಅಹಂಕಾರ, ಮನ, ಹೃದಯ ಈ ಐದು.
ಚಿತ್ತವನು ಆಕಾರ ಪ್ರೇರಿಸುವುದು.
ಆ ಅಕಾರವನು ಬ್ರಹ್ಮ ಪ್ರೇರಿಸುವನು,
ಬುದ್ಧಿಯನು ಉಕಾರ ಪ್ರೇರಿಸುವುದು;
ಉಕಾರವನು ವಿಷ್ಣು ಪ್ರೇರಿಸುವನು,
ಅಹಂಕಾರವನು ಮಕಾರ ಪ್ರೇರಿಸುವುದು;
ಮಕಾರವನು ರುದ್ರ ಪ್ರೇರಿಸುವನು,
ಮನವನು ಬಿಂದು ಪ್ರೇರಿಸುವುದು;
ಬಿಂದುವನು ಈಶ್ವರ ಪ್ರೇರಿಸುವನು;
ಹೃದಯವನು ನಾದ ಪ್ರೇರಿಸುವುದು;
ನಾದವನು ಸದಾಶಿವ ಪ್ರೇರಿಸುವನು.
ಈ ಹದಿನೈದು ತನ್ನೊಳಗೆ ಸೂಕ್ಷ ್ಮಶರೀರದಲ್ಲಿಹುದು.
………..ಗೀ(?) ಅಷ್ಟತನುವಿನಿಂದ ಸ್ವರ್ಗನರಕವನರಿವನು.
ಮುಂದೆ ಜಾಗ್ರಾವಸ್ಥೆಯಲ್ಲಿ ಅರುಹಿಸುವ ತತ್ತ್ವ ಅವಾವವೆಂದಡೆ-
ಭೂತ ಐದು, ಉಭಯೇಂದ್ರಿಯ ಹತ್ತು,
ಭೂತಕಾರ್ಯ ಇಪ್ಪತ್ತೈದು,
ನಾಡಿ ಹತ್ತು, ಅಂತು ತತ್ತ್ವ ನಲವತ್ತೊಂದು.
ಅಂತು ಕೂಡಿ ತತ್ತ್ವ ತೊಂಬತ್ತೊಂದು. ಇಂತಿದು ಊಧ್ರ್ವಾವಸ್ಥೆ.
ಇನ್ನು ಸಕಲಾವಸ್ಥೆಯೆಂತೆಂದಡೆ:
ತೊಂಬತ್ತೊಂದು ತತ್ತ್ವ ಅವರಲ್ಲಿ ಪ್ರೇರಕತತ್ವವೊಂದು ಪ್ರೇರಿಸುವಲ್ಲಿ
ಸಕಲಾವಸ್ಥೆ.
ಅದು ಶಿವನನೂ ತನ್ನನೂ ಪಾಶಪಂಚಕವನು ಅರಿಯದೆ
ಎಲ್ಲ ವಿಷಯಂಗಳನು ಅರಿವುತ್ತಿಹುದು.
ಇನ್ನು ಮಧ್ಯಮಾವಸ್ಥೆಯೆಂತೆಂದಡೆ-
ಹಿಂದೆ ಕಂಡವನ ಈಗಲೆಂದು ಅರಿಯಹುದೀಗ ಜಾಗ್ರ ಅತೀತ.
ಹಿಂದೆ ಕಂಡವನ ಅರಿದ ಹಾಂಗಿಹುದೀಗ ಜಾಗ್ರ ತುರೀಯ.
ಹಿಂದೆ ಕಂಡವನ ಮೆಲ್ಲನೆಚ್ಚತ್ತು ಅರಿವುದು ಜಾಗ್ರದ ಸುಷುಪ್ತಿ.
ಹಿಂದೆ ಕಂಡವನ ಕಂಡಾಗಲೆ ಅರಿವುದು ಜಾಗ್ರದ ಸ್ವಪ್ನ.
ಹಿಂದೆ ಕಂಡವನ ಹೆಸರು, ಇದ್ದ ಸ್ಥಲ, ಅವನ ಕಾಯಕ
ಮುಂತಾಗಿ ಚೆನ್ನಾಗಿ ಅರಿವುದು ಜಾಗ್ರದ ಜಾಗ್ರ.
ಅದೆಂತೆಂದಡೆ, ಜಾಗ್ರದಲ್ಲಿ ಪುರುಷತತ್ತ್ವದಲ್ಲಿ
ಎಲ್ಲ ತತ್ತ್ವಗಳು ಕೂಡಿದ ಕಾರಣಂದ
ತಾನೇನ ನೆನೆದಿದ್ದುದನು ಮರೆವುದು ಜಾಗ್ರ ಅತೀತ.
ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಕೂಡಲು ನೆನೆದುದನು
ಹೇಳಿಹೆನೆಂದಡೆ ತೋರುವ ಹಾಂಗೆ ಇಹುದು ತೋರದಿಹುದು
ಜಾಗ್ರದ ತುರೀಯ.
ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಚಿತ್ತವು ಕೂಡಲು
ನೆನೆದುದನು ಮೆಲ್ಲನೆಚ್ಚತ್ತು ಅರಿದು ಹೇಳುವುದು ಜಾಗ್ರದ
ಸುಷುಪ್ತಿ,
ಆ ಪುರುಷತತ್ತ್ವದಲ್ಲಿ ಕರಣ ನಾಲ್ಕು, ಇಂದ್ರಿಯ ಹತ್ತು,
ವಾಯು ಹತ್ತು, ವಿಷಯ ಹತ್ತು
ಅಂತೂ ತತ್ತ್ವ ಮೂವತ್ತನಾಲ್ಕು ಕೂಡಲಾಗಿ,
ತಾ ನೆನೆದುದನು ಇದ್ದುದನು ಚೆನ್ನಾಗಿ ಅರಿದು ವಿವರದಿಂದ
ಹೇಳುವುದು ಇದು ಜಾಗ್ರದ ಜಾಗ್ರ. ಇಂತಿದು
ಮಾಧ್ಯಮಾವಸ್ಥೆ.
ಇನ್ನು ಕೇವಲಾವಸ್ಥೆಯೆಂತೆಂದಡೆ: ಶುದ್ಧತತ್ತ್ವ ವಿದ್ಯಾತತ್ತ್ವವನೆಲ್ಲವ ಬಿಟ್ಟು
ಆಣವಮಲದಲ್ಲಿ ಆಣವಸ್ವರೂಪಾಗಿ
ಕಣ್ಗತ್ತಲೆಯಲ್ಲಿ ಏನೂ ಕಾಣದ ಕಣ್ಣಿನ ಹಾಂಗೆ ಇದ್ದುದೀಗ
ಕೇವಲಾವಸ್ಥೆ.
ಇನ್ನು ಶುದ್ಧಾವಸ್ಥೆಯೆಂತೆಂದಡೆ: ಕರ್ಮಸಮಾನದಲ್ಲಿ ಶಕ್ತಿಪಾತವಾಗಿ,ತ್ರಿಪದಾರ್ಥಜ್ಞಾನವಾಗಿ,
ದಿಟವೆಂಬಂತೆ ತೋರುತ್ತಿಹ ದೇಹಾಪ್ರಪಂಚುವನು ಸಟೆಯೆಂದು
ಕಸವ ಕಳೆವ ಹಾಂಗೆ ಕಳೆದು,
ತತ್ತ್ವಂಗಳೊಳಗೆ ಇದ್ದು ತತ್ತ್ವಂಗಳಿಗೆ ಅನ್ಯವಾಗಿ,
ಆ ತತ್ತ್ವಂಗಳನು ಅರಿದ ಸಕಲಾವಸ್ಥೆಯೆಂಬ ಕೇವಲಾವಸ್ಥೆಯೆಂಬ
ಈ ಎರಡು ಅವಸ್ಥೆಗಳೂ
ತನ್ನನು ಶಿವನನು ಅರಿವುದಕ್ಕೆ ಪ್ರಯೋಜನವಲ್ಲವೆಂದು
ಎರಡವಸ್ಥೆಯನೂ ಬಿಟ್ಟು ಸಕಲವನೂ ಹೊದ್ದದೆ ಕೇವಲವನೂ
ಹೊದ್ದದೆ ತ್ರಾಸಿನ ಮುಳ್ಳು ನಿಂದ ಹಾಂಗೆ ನಿಂದುದು ಶುದ್ಧಾವಸ್ಥೆ.
ಇದು ಶಿವನ ಶರಣರಿಗಲ್ಲದೆ ಇಲ್ಲ.
ಇನ್ನು ನಿರ್ಮಲಾವಸ್ಥೆ ಎಂತೆಂದಡೆ-
ಶಿವಜ್ಞಾನದಲ್ಲಿ ಬೋಧವನಳಿದು ಜ್ಞೇಯದೊಳು ಕೂಡಿಹ
ಜೀವನ್ಮುಕ್ತರಿಗೆ ಪಂಚಾವಸ್ಥೆಗಳು.
ಆ ಅವಸ್ಥೆಗಳಲ್ಲಿ ತತ್ತ್ವಗಳಾವಾವೆಂದಡೆ: ಶಿವತತ್ತ್ವ, ಶಕ್ತಿತತ್ತ್ವ, ಸಾದಾಖ್ಯತತ್ತ್ವ, ಈಶ್ವರತತ್ತ್ವ,
ಶುದ್ಧ ವಿದ್ಯಾತತ್ತ್ವ ಈ ಐದು ಮೊದಲಾಗಿ
ಪರಾ, ಆದಿ, ಇಚ್ಛೆ, ಜ್ಞಾನ, ಕ್ರಿಯೆಯೆಂಬ ಶಕ್ತಿ ಪಂಚಕಗಳು
ಉಸುರಾಗಿ ಜಾಗ್ರಾವಸ್ಥೆಯಲ್ಲಿ ಅರಿವುತ್ತಿಹನು.
ಕ್ರಿಯಾಶಕ್ತಿ ಶಕ್ತಿತತ್ತ್ವಮಂ ಬಿಟ್ಟು ಉಳಿದ ಶಕ್ತಿ ನಾಲ್ಕು
ಒಡಲುಸುರಾಗಿ ಅರಿಯೆ ಸ್ವಪ್ನಾವಸ್ಥೆ.
ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಬಿಟ್ಟು ಕಳೆದು
ಉಳಿದ ಶಕ್ತಿ ಮೂರರಲ್ಲಿ ಅರಿಯೆ ಸುಷುಪ್ತಾವಸ್ಥೆ.
ಇಚ್ಛಾಶಕ್ತಿ ಈಶ್ವರತತ್ತ್ವಮಂ ಬಿಟ್ಟು ಕಳೆದು
ಉಳಿದ ಶಕ್ತಿ ಎರಡರಲ್ಲಿ ಅರಿವುದು ತೂರ್ಯಾವಸ್ಥೆ.
ಆಶಕ್ತಿ ಸಾದಾಖ್ಯತತ್ತ್ವವೂ ಬಿಟ್ಟು ಕಳೆದು
ಉಳಿದ ಪರಾಶಕ್ತಿ ಒಂದು ಶಿವತತ್ತ್ವ ಒಂದರಲ್ಲಿ ಅರಿಯೆ
ನಿರ್ಮಲದ ಅತೀತಾವಸ್ಥೆ.
ಇನ್ನು ಈ ಶಕ್ತಿ ಶಿವತತ್ತ್ವಂಗಳೆ ಒಡಲುಸುರಾಗಿ ಇದ್ದಲ್ಲಿ
ಶಿವನಲ್ಲದೆ ಮತ್ತೊಂದು ಏನೂ ತೋರದು.
ಅಂಥ ಜೀವನ್ಮುಕ್ತರು ನಿರ್ಮಲಜಾಗ್ರದಲ್ಲಿ
ಎಂತು ಅರಿವುತ್ತಿಪ್ಪರೆಂದಡೆ
ಆ ಪರಮಾವಸ್ಥೆಯನೂ ಅನುಭವದಲ್ಲಿ ಅರಿವುದು,
ಮಲಪಂಚಕಗಳನು ಅರುಹಿಸುವ ಸದಮಲ ಶಿವಜ್ಞಾನ
ಪರೆ ಮೊದಲಾದ ಪೂರ್ಣ ಬೋಧದಲ್ಲಿ ಕೂಡಿ
ತಾನು ಇಲ್ಲದಿರುವಂಧು
ಏನೂ ತೋರದ ಪೂರ್ಣ ಬೋಧವಾಗಿ ನಿಂದುದು
ನಿರ್ಮಲಜಾಗ್ರ.
ಇನ್ನು ಪರಾಶಕ್ತಿಯನೂ ಶಿವತತ್ತ್ವವನೂ ಮೀರಿ,
ಪರದಲಿ ಬೆರೆದು,
ಅದ್ವೆ ತವೂ ಅಲ್ಲದೆ, ದ್ವೆ ತವೂ ಅಲ್ಲದೆ, ದ್ವೆ ತಾದ್ವೆ ತವೂ ಅಲ್ಲದೆ
ಇನತೇಜದಲ್ಲಿ ಕಣ್ಣು ತೇಜ ಕೂಡಿದ ಹಾಂಗೆ
ಆಣವದ ಅಣುವಿನ ಹಾಂಗೆ ತಾನು ಇಲ್ಲದೆ ಇಹನು.
ಇದು ಶಿವಾದ್ವೆ ತ.
ಇಂತಲ್ಲದೆ ಆತ್ಮ ಆತ್ಮ ಕೆಟ್ಟಡೆ, ಆತ್ಮವರ್ಗ ಮುಕ್ತಿಸುಖವಿಲ್ಲ,
ಅಳಿದ ಠಾವಿನಲ್ಲಿ ಹುಟ್ಟುವುದಾಗಿ,
ಶಿವ ತಾನೆ ಆತ್ಮನಾಗಿ ಹುಟ್ಟುವನಹುದು: ಶಿವನಲ್ಲಿ ಹುಟ್ಟಿ ಮಲ ಉಳ್ಳದಹುಲ್ಲ.
ಶಿವ ತಾನೆ ಹುಟ್ಟಿಸಿ ನರಕ – ಸ್ವರ್ಗದ ಮಾನವನಹನು,
ಪಕ್ಷಪ್ಕಾಯಹನು, ನಿಃಕರುಣಿಯಹನು, ವಿಕಾರಿಯಹನು.
ಶಿವನ್ಲ ಕೂಡದೆ ಬೇರಾಗಿ ಇಹನೆಂದಡೆ,
ಮುಕ್ತಿಯೆಂಬ ಮಾತು ಇಲ್ಲವಹುದು.
ಪಂಚಕೃತ್ಯವ ಮಾಡಲು ಕಾರಣವಿಲ್ಲ ಒಂದಾಗೆ!
ಎರಡಾಗದೆ ಭೇದಾಭೇದವಾಗಿಹನೆಂದಡೆ
ಶಿವಭಕ್ತಿಯನೂ ಶಿವಕ್ರಿಯೆಗಳನೂ ಮಾಡಿ
ಶಿವನ ಕೂಡಿಹನೆಂದೆನ್ನಬೇಡ!
ಮುನ್ನವೆ ಒಂದಾಗಿ ಇದ್ದನಾಗಿ,
ಈ ಭೇದವ ತಿಳಿಯಬಲ್ಲಡೆ ಆತನೆ ಶರಣ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1741
ಶಿವನ ಕೀರ್ತಿ ಬಸವಣ್ಣನ ಧರ್ಮವಯ್ಯಾ,
ಶಿವನ ಸ್ತೋತ್ರ ಬಸವಣ್ಣನ ಧರ್ಮವಯ್ಯಾ,
ಶಿವನ ಮಂತ್ರೋಚ್ಚಾರಣೆ ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1742
ಶಿವನಿರ್ಮಿತ ಮಂತ್ರಂಗಳು ಕೋಟಾನುಕೋಟಿ.
ಶಿವನಿರ್ಮಿತ ಯಂತ್ರಂಗಳು ಕೋಟಾನುಕೋಟಿ.
ಶಿವನಿರ್ಮಿತ ಮಹಾಮೂಲಿಕೆಗಳು ಕೋಟಾನುಕೋಟಿ.
ಶಿವನಿರ್ಮಿತ ವಿದ್ಯಾದಿಗಳು ಕೋಟಾನುಕೋಟಿ.
ಇದರಂದವನರಿಯಬೇಕೆಂಬವರು ಕೋಟಾನುಕೋಟಿ.
ಸಿದ್ಧಿಯ ಹೊಂ ಪ್ರಸಿದ್ಧಿಗೆ ಬಂದವರು,
ಕೋಟಾನುಕೋಟಿಯೊಳಗೆ ಕೋಟಿಯಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ./1743
ಶಿವನು ಚೆನ್ನನು ಮನೆಯಲ್ಲಿ ಅಂಬಲಿಯನುಂಡನೆಂದಡೆ,
ನಮ್ಮ ಗಣಂಗಳು ನಗುವರಯ್ಯಾ,
ಕೈಬಡೆದು ಕೈಬಡೆದು ನಗುವರಯ್ಯಾ.
ಶಿವನಾಚರಣೆ ಶಿವನಿಗಿರಲಿ, ನಮಗೇಕೆಂದರು.
ಶಿವನು ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತನು;
ನಾವು ಉತ್ಪತ್ತಿ ಸ್ಥಿತಿ ಲಯಂಗಳನಳಿಯಬೇಕೆಂದು ಬಂದೆವಲ್ಲದೆ,
ಅವರಲ್ಲಿ ವಾಕ್ಸಾಮರಸ್ಯವಲ್ಲದೆ, ಕಾಯಸಾಮರಸ್ಯವಿಲ್ಲವು.
ಶಬ್ದವಿರಹಿತನಾಗಬೇಕೆಂಬವರಿಗೆ ಶಬ್ದಸೂತಕವೇಕಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ ?/1744
ಶಿವನೆ, ನಿಮ್ಮನಲ್ಲದೆ ಮತ್ತೊಂದ ನಾನರಿಯೆನಯ್ಯಾ.
ಶಿವನೆ, ನಿಮ್ಮ ಸೇವೆಯನಲ್ಲದೆ,
ಮತ್ತೊಂದಕ್ಕೆ ಮನ ಹಾರೈಸದಂತೆ ಮಾಡಯ್ಯಾ,
ಕಪಿಲಸಿದ್ಧಮ್ಲನಾಥಯ್ಯಾ./1745
ಶಿವನೇ ಶಿವನೇ ಎಂದು ಒರಲುವೆನಯ್ಯಾ.
ಭವನೇ ಭವನೇ ಎಂದು ಬಾಯ ಬಿಡುವೆನಯ್ಯಾ.
ಎನ್ನ ಬಾಯಿಗೆ ನಿಮ್ಮ ಪ್ರಸಾದವನಿಕ್ಕೆ,
ಎನ್ನ ತನು ನಿಮಗಾಯಿತ್ತು, ಕಪಿಲಸಿದ್ಧಮಲ್ಲಿನಾಥಯ್ಯಾ/1746
ಶಿವಪೂಜೆಯನು ಮಾಡುವ ಕಾಲಕ್ಕೆ
ಅವಿತಥವಿಲ್ಲದೆ ಬಯಸದೀ ಮನವು,
ಇನ್ನೇವೆ ಇನ್ನೇವೆನಯ್ಯಾ.
ಕಾಮಕಿಚ್ಛೆ ಸೂದು ಕ್ರೋಧಕಿಚ್ಛೆ ಸೂದು
ಇನ್ನೇವೆ, ಇನ್ನೇವೆನಯ್ಯಾ.
ನಿನ್ನ ಮನದಲು ಇರಲೀಯದು
ತನ್ನ ಮಯವ ಮಾಡೂದು.
ಈ ಮಾಯದ ಮನಕ್ಕಂಜುವೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1747
ಶಿವಾ ಭವಾನೀ ರುದ್ರಾಣೀ ಶಿವೋ ಮಹೇಶ್ವರಃ ಶಂಭುಃ’
ಎಂಬಲ್ಲಿ,
ನಮ್ಮಮ್ಮನ ಶಿವನ ನಾಮ ಒಂದೆ ನೋಡಾ.
ವಿವೇಕದೃಷ್ಟಿಯಿಂದ ನೋಡಿದಡೆ,
ಅದು ಶಿವನ ಶಕ್ತಿಮಂತ್ರವಾಗಿ ಅರಿಯಬಂದಿತ್ತು ನೋಡಾ.
`ಓಂ ನಮಃ ಶಿವಾಯ, ನಮಃ ಶಿವಾಯೈ’
ಎಂಬುಭಯ ಮಂತ್ರ ಒಂದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1748
ಶಿವಾಂಶಿಕಭಕ್ತನ ಸೊಮ್ಮು ಶಿವಜಂಗಮರಿಗೆ ಸಲ್ಲುವುದಲ್ಲದೆ,
ಶಿವ ಬಸವೆಯರೆಂಬ ವಾರಾಂಗನೆಯರಿಗೆ ಸಲ್ಲುವುದೆ, ಅಯ್ಯಾ?
ಡಾಂಭಿಕ ಭಕ್ತನ ಸೊಮ್ಮು ಡಾಂಭಿಕಯ್ಯಗಳಿಗೆ ಸಲ್ಲುವುದಲ್ಲದೆ.
ಡಂಭವಿರಹಿತಂಗೆ ಸಲ್ಲುವುದೆ, ಅಯ್ಯಾ?
ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಷಟ್ಸ್ಥಲಬ್ರಹ್ಮಿ
ಚೆನ್ನಬಸವನ ಜಿಹ್ವಾಶೇಷದ ಸೊಮ್ಮು ಎನಗೆ ಸಲ್ಲುವುದಲ್ಲದೆ,
ಜಗದ ಭಂಡಯ್ಯಗಳಿಗೆ ಸಲ್ಲುವುದೇನಯ್ಯಾ?/1749
ಶಿವಾಚಾರ ಸಂಪನ್ನರಾಗಿ ಯೋಗ ನಿಲವ ನಿಂದವರು,
ಇತ್ತಲನುಸರಿಸುವರು ಅತ್ತಲಾಚರಿಸುವರು ಪರಮಾರ್ಥವನು.
ಕಪಿಲಸಿದ್ಧಮಲ್ಲಿನಾಥನೆಂಬ ಮಹಾಬಯಲ ಮಾಡಿಪ್ಪರು/1750
ಶಿವಾಚಾರಸಂಪನ್ನರೆಂಬ ಮಹಾಯೋಗ್ಯರು ಜಡಾವಸ್ಥೆಯಲು
ಇರಲು
ಉದಯದೂಧ್ರ್ವ ಶಿಖರಂಗಳುರಿದು,
ಶಿರಮಸ್ತಕದಲ್ಲಿರ್ದ ಅಮೃತ ಕರಗಿ ಸುರಿದು,
ತಗ್ಗಿ ನೆಲೆಗೊಂಡವರ ಹೃದಯಂಗಳೂ ಮಹಾಯೋಗ್ಯರು
ತಮ್ಮ ಉದಯಸ್ತಮಾನಂಗಳ ನೆನೆಯೆಂಬೆ
ಕಪಿಲಸಿದ್ಧಮಲ್ಲೇಶ್ವರಾ. /1751
ಶಿಶು ಕಂಡ ಕನಸು ತಾ ಪಸರಿ ಪರ್ಬಿತು,
ಮೂರು ದೆಸೆದೆಸೆಯ ಬಣ್ಣಗಳು ಹಲವಾಗಿ
ಆ ಬೆಳಕನೆ ನುಂಗಿ, ಆಲಿಸುತ ಕಂಬನಿಯ
ಲೋಲನ್ನ ಕಂಡು ತಾ ಮುಗ್ಧೆಯಿಂದೂ
ಸಾನುವಿನ ಕೊಡನ ಹೊತ್ತಾನತದ ಲೋಕದೊಳು
ತಾನು ತಾನಾಗಿ,
ತತ್ತ್ವದ ತುಯ ಹಮ್ಮಡಗಿದಕ್ಷರದ ಸೊಮ್ಮ ಮೀರಿದ
ಬ್ರಹ್ಮಕರ್ಮಿಗಳಿಗದು ತಾನು ವಶವಲ್ಲದೆ
ಇನ್ನು ಕಪಿಲಸಿದ್ಧಮಲ್ಲಿನಾಥನೆಂದೆಂಬ
ಸೊಮ್ಮಿನ ಬ್ರಹ್ಮಕ್ಕೆ ಸೇರಿತ್ತಯ್ಯ./1752
ಶಿಶುವಿನ ಕ್ರೀಡೆಯದು ತಾಯಿಗಲ್ಲದೆ ಅನ್ಯರಿಗುಂಟೆ?
ಪಶುವಿನ ತಪ್ಪು ಪಶುಪತಿಯಾದವಂಗಲ್ಲದೆ ಅನ್ಯರಿಗುಂಟೆ?
ಎನ್ನಹಂಕಾರ ನಿಮಗಲ್ಲದೆ ಜಗದ ಜಡರಿಗುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ./1753
ಶಿಷ್ಯನಿಲ್ಲದಡೆ ಗುರು ಎಲ್ಲಿಹನಯ್ಯಾ?
ಪೂಜಕನಿಲ್ಲದಡೆ ಲಿಂಗವೆಲ್ಲಹುದಯ್ಯಾ?
ಭಕ್ತನಿಲ್ಲದಡೆ ಜಂಗಮವ್ಲೆಹನಯ್ಯಾ?
ಜಲವಿಲ್ಲದಡೆ ಪಾದೋದಕವೆಲ್ಲಹುದಯ್ಯಾ?
ಧೇನುವಿಲ್ಲದಡೆ ಭೂತಿಯೆಹುದಯ್ಯಾ?
ತ್ರೈಪುರವಿಲ್ಲದಡೆ ರುದ್ರಾಕ್ಷಿಗಳೆಲ್ಲಿಹವಯ್ಯಾ?
ವರ್ಣಂಗಳಿಲ್ಲದಡೆ ಮಂತ್ರಂಗಳೆಲ್ಲಿಹವಯ್ಯಾ?
ನಾನಿಲ್ಲದಡೆ ನೀನೆಲ್ಲಿಯವನಯ್ಯಾ?
ಇವೆಲ್ಲ ಭಾವಭ್ರಮೆಯಲ್ಲದೆ,
ನಿರ್ಭಾವ ನಿಜಾನಂದ ತೂರ್ಯಾತೀತ ಪರವಸ್ತುವಿನ ಕೂಟದಲ್ಲಿ
ಆನು ನೀನೆಂಬುಭಯ ಭಾವ ಇದ್ದಡೆ ತೋರ ಬಾರಾ,
ಮಾರಹರ ಧೀರ ಗಂಭೀರ ಕಪಿಲಸಿದ್ಧಮಲ್ಲಿಕಾರ್ಜುನವೀರ./1754
ಶಿಷ್ಯನೆಂಬ ವನಕ್ಕೆ ವಸಂತ ನೋಡಾ ಗುರು.
ಶಿಷ್ಯನೆಂಬ ಮಿರಕ್ಕೆ ಜ್ಯೋತಿ ನೋಡಾ ಗುರು.
ಶಿಷ್ಯನೆಂಬ ರಾತ್ರಿಗೆ ಸೂರ್ಯ ನೋಡಾ ಗುರು.
ಶಿಷ್ಯನೆಂಬ ನನಗೆ ಪ್ರಕೃಷ್ಟ ಪ್ರಮಥ ಚಿಂತಾಮಣಿ
ಚೆನ್ನಬಸವ ಗುರು, ಕಪಿಲಸಿದ್ಧಮಲ್ಲಿಕಾರ್ಜುನಾ./1755
ಶುದ್ಧ ಕಾನನದೊಳಗೆ ಶುದ್ಧವಾಯುವು ಬೀಸಿ
ಪ್ರಸಿದ್ಧ ಕಮಲದಲ್ಲಿ ಬಹು ಛಾಯದ
ಹಲವು ಪರಿಯಲ್ಲಿ ಎಸೆವ ತೆರಹಿಲ್ಲಹ ಗಮನ
ಕುರುಹಿಂಗೆ ಬಾರಹ ಶೂನ್ಯಾಂಗನ
ಸ್ವಾನುಭಾವದ ಮನೆಯ ನಾನೊಡನೆ ಓಲಾಡಿ
ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರಾ./1756
ಶುದ್ಧ ತತ್ವದೊಳಗೆ ಸಿದ್ಧ ಬ್ರಹ್ಮದೊಳಗೆ
ಪ್ರಸಿದ್ಧವೂ ತನುಮನ ತವಕದಲ್ಲಿ.
ಶುದ್ಧ ಸಿದ್ಧ ಭೇದ ಪ್ರಸಿದ್ಧದನುಮತವು ನಿದರ್ೈವರಿಗುಂಟೆ?
ಕಪಿಲಸಿದ್ಧಮಲ್ಲೇಶ್ವರಾ./1757
ಶುದ್ಧ ದೀಕ್ಷೆಯೊಳಾನು ಸಿದ್ಧನಾದೆನು ಬಸವ ತಂದೆ,
ಸಿದ್ಧ ದೀಕ್ಷೆಯೊಳಾನು ಸ್ವಯವಾದೆನೈ.
ಶುದ್ಧಸಿದ್ಧವು ಕೂಡಿ ಪ್ರಸಿದ್ಧ ದೀಕ್ಷೆಯೊಳು
ಹೊದ್ದಿ ನಡೆವೆನು ಬಸವಣ್ಣ, ನಿನ್ನವರ ಹೊಲಬಿಗನಾಗಿ.
ಮತ್ತೆ ಪ್ರಸಾದವನು ಐದಾರನೇ ಗ್ರಹಿಸಿ,
ಮತ್ತೆ ಪಾದೋದಕವನೀರೈದ ಧರಿಸಿಯಾನು
ಹುಟ್ಟುಗೆಟ್ಟೆನು ಬಸವಣ್ಣಾ ನಿಮ್ಮ ಕರುಣದಿಂದ.
ಆನಂದಗುರು ಕಪಿಲಸಿದ್ಧಮಲ್ಲೇಶ್ವರನ
ಕಾರಣದ ಶರಣರಿಗೆ ಶಿಶುವಾದೆನು./1758
ಶುದ್ಧ ಪದ್ಮಾಸನದೊಳು ಕುಳ್ಳಿರ್ದು
ಅಧರ್ೊದಯವನೆತ್ತುತೈದಾನೆ,
ಹ್ದೊರ್ದ ಪ್ರಪಂಚುಗಳನೆಲ್ಲವ ಸುಟ್ಟು
ಅಧರ್ೊದಯವನೆತ್ತುತ್ತೈದಾನೆ,
ಅಧರ್ೊದಯಾಗ್ನಿ ಶುಚಿ ತನ್ನ ಪ್ರವೇಶಿಸಲು
ಮುಗ್ಧತ್ವ ಹೋಯಿತ್ತು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ./1759
ಶುದ್ಧ ಸಂಯೋಗದಲ್ಲಿ ನಿನ್ನ[ನೆ] ನೆರೆವೆ;
ಸಿದ್ಧ ಸಂಯೋಗದಲ್ಲಿ ನಿನ್ನನೆ ಸಂಯೋಗಿಸುವೆ;
ಪ್ರಸಿದ್ಧ ಸಂಯೋಗದಲ್ಲಿ ನಿನ್ನನೆ ಕೂಡುವೆ;
ತಾತ್ಪರ್ಯದಿಂದ ನಿನ್ನ ನೆರೆವೆ,
ಕಪಿಲಸಿದ್ಧಮಲ್ಲಿಕಾರ್ಜುನ./1760
ಶುದ್ಧ ಸಿದ್ಧ ಪ್ರಸಿದ್ಧ ಪಂಚಮಹಾವಾಕ್ಯಂಗಳನರಿದೆನೆಂಬ
ಯೋಗಿ ಕೇಳಾ ನೀನು.
ಶುದ್ಧವಾವುದು? ಸಿದ್ಧವಾವುದು? ಪ್ರಸಿದ್ಧವಾವುದು?
ಹೇಳಿರೇ ಬಲ್ಲರೆ.
ಪ್ರಾಣಾಯಾಮದಲಿ ಪ್ರವೇಶಿಸಬಲ್ಲಡೆ ಅದು ಶುದ್ಧ,
ಪ್ರತ್ಯಾಹಾರದಲಿ ಪ್ರಕಟಿಸಬಲ್ಲಡೆ ಸಿದ್ಧ.
ಪಂಚಬ್ರಹ್ಮದಲಿ ಪ್ರವೇಶಿಸಬಲ್ಲಡೆ ಪ್ರಸಿದ್ಧ.
ಕೋಹಂ ತತ್ವಾರ್ಥವಂ ಮೀರಿದ,
ಆಜ್ಞಾಸೀಮೆಯ ಸಮನಿಸಿದ,
ಪ್ರಸಿದ್ಧಬ್ರಹ್ಮವನು ಮೀರಿದ,
ಅನಾಹತವನಾನಂದವ ಮಾಡಿದ,
ಆಶಕ್ತಿಯ ಸಂಯೋಗವಂ ಮಾಡಿದ,
ಉರುತರ ಪರಮಸೀಮೆಯಂ ದಾಂಟಿದ.
ಮಾತೆಯಿಲ್ಲದ ಜಾತನ,
ಗಮನವಿಲ್ಲದ ಗಮ್ಯನ,
ಆ ಯಾರೂ ಅರಿಯದ ಅನಾಥನ,
ಹಮ್ಮಿನ ಸೊಮ್ಮಳಿದ ನಿತ್ಯನ,
ಅನಂತ ಬ್ರಹ್ಮಾಂಡವಳಿವಲ್ಲಿ ಏನೆಂದರಿಯದ ಸತ್ಯನ,
ಸಕಳ ನಿಷ್ಕಳಾತ್ಮಕದ ಪೂರ್ಣನಪ್ಪ ಮುಕ್ತನ,
ಬ್ರಹ್ಮಯೋಗವನರಿವರನೇಡಿಸುವ ಶಕ್ತನ,
ಅವ್ವೆಯ ಮನದ ಕೊನೆಯ ಮೊನೆಯ ಮೇಲೆ
ನಿತ್ಯನಾಗಿಪ್ಪ ಒಡೆಯನ,
ಪ್ರಾಣಶೂನ್ಯನಪ್ಪ ಭಕ್ತಂಗೆ ಪ್ರಾಣನಾಗಿಪ್ಪ ಲಿಂಗನ,
ಷಡ್ವಿಧ ಭಕ್ತಿಯಲ್ಲಿ ಸಂಯೋಗವ ಮಾಡುವ ಶರಣನ,
ಇಹಪರ ಏಕವಾಗಿಪ್ಪಾತನ ತೋರಿದನೆನ್ನ ಗುರು
ಬಸವಣ್ಣನ ಕಂಡೆನಾತನ ಕೊಂಡೆ,
ಆತನ ಪಾದೋದಕ ಪ್ರಸಾದವ
ಹಿಂದೆ ಉಂಡ ಹಂಗೆ ಇನ್ನು ಉಂಡೆನಾಯಿತ್ತಾದೊಡೆ,
ಹಿಂದೆ ಬಂದ ಹಂಗೆ ಇನ್ನು ಬಂದೆನಾಯಿತ್ತಾದೊಡೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮಾಣೆ./1761
ಶುದ್ಧಗುರು ಬಸವಣ್ಣ, ಸಿದ್ಧಗುರು ಚೆನ್ನಬಸವಣ್ಣ,
ಪ್ರಸಿದ್ಧಗುರು ಪ್ರಭುರಾಯನು.
ತನುತ್ರಯ ಮಲತ್ರಯ ಆರನತಿಗಳೆದು,
ಲಿಂಗತ್ರಯ ಪ್ರಸಾದ ಮೂರನು ಪರಿಭವಿಸಿ ವಶಮಾಡಿ
ಎನ್ನ ರಕ್ಷಿಸಿದ ಬಸವ, ಚೆನ್ನಬಸವ, ಪ್ರಭು ಶರಣೆಂದು
ಬದುಕಿದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1762
ಶುದ್ಧದಲ್ಲಿ ಪ್ರವೇಶಿಸಿ, ಸಿದ್ಧದಲ್ಲಿ ಪ್ರಕಟಿಸಿ,
ಪ್ರಸಿದ್ಧದಲ್ಲಿ ಭೇದಿಸಿಯಿಪ್ಪ ಸಜ್ಜನ ಶುದ್ಧಶಿವಾಚಾರಂಗೆ
ನಿತ್ಯ ಲಿಂಗಾರ್ಚನೆ,
ನಿತ್ಯ ಜಂಗಮಾರ್ಚನೆ,
ನಿತ್ಯ ಕೊಂಬುದು ಪಾದೋದಕ,
ನಿತ್ಯ ಕೊಂಬುದು ಪ್ರಸಾದ.
ತಾಂ ನಿತ್ಯನಾಗಿ ಅನ್ಯದೈವಕ್ಕೆರಗ,
ಅನನ್ಯತವ ಬಗೆಯ,
ಪಾದೋದಕಕ್ಕಲ್ಲದೆ ಬಾಯ್ದೆರೆಯ,
ಪ್ರಸಾದವನಲ್ಲದೆ ಗ್ರಹಿಸ,
ಪಾದೋದಕ ಪ್ರಸಾದವಲ್ಲದೆ ಕೊಂಡಡೆ ಅನಾಚಾರ
ಹೊದ್ದೀತೆಂದು ಕಪಿಲಸಿದ್ಧಮಲ್ಲಿಕಾರ್ಜುನನ ಏಕೀಭವಿಸಿದ
ಲಿಂಗತ್ರಯದಲ್ಲಿ ನಿತ್ಯ ಪ್ರಸಾದಿ/1763
ಶುದ್ಧದಿಂದ ಸಿದ್ಧವನರಿತೆ,
ಸಿದ್ಧದಿಂದ ಪ್ರಸಿದ್ಧವನರಿತೆ,
ಒಂದರಿಂದ ಒಂದನರಿದೆ,
ಎರಡರಿಂದ ಮತ್ತೊಂದನರಿದೆ.
ಆ ಒಂದರೊಳಗೆ ಎರಡೆನ್ನದ್ದಡೆ
ನಿಮ್ಮಾಜ್ಞೆಗೆ ದೂರ ಕಪಿಲಸಿದ್ಧಮಲ್ಲಿಕಾರ್ಜುನ./1764
ಶುದ್ಧಲಿಂಗವನು ಪ್ರಸಿದ್ಧ ಕರದಲಿ ಇಟ್ಟು
ಶುದ್ಧ ಸಿದ್ಧ ಪ್ರಸಿದ್ಧ ಪಾವನಾಂಗನ ಮಾಡಿ
ಹೊದ್ದಿದ ಪ್ರಪಂಚುವ ಕಳೆದು ನಿತ್ಯನೆನಿಸಿ
ಸದ್ಯೋನ್ಮುಕ್ತನ ಮಾಡಿ ಕೈವಲ್ಯಪದವಿದೆಂದು
ಆನಂದವ ಕರದಲ್ಲಿಟ್ಟು ಅರುಪಿದನಿದ ವಿಸ್ತಾರವೆಂದು
ಎನ್ನ ಜನ್ಮ ಕರ್ಮ ನಿರ್ವರ್ತನೆಯ ಮಾಡಿದ
ಗುರು ಚೆನ್ನಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1765
ಶುದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದ;
ಸಿದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂಂದ;
ಪ್ರಸಿದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಂದೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಚೆನ್ನಬಸವಣ್ಣ ಗುರುವಾಗಿ ಬಂದು
ಎನ್ನ ಜನ್ಮಕರ್ಮವ ನಿವೃತ್ತಿ ಮಾಡಿದನಯ್ಯಾ/1766
ಶುದ್ಧವೆ ತದ್ರೂಪವಾಗಿ ಬಾರನೆ ಅಂದು
ಅನಾಹತನೆಂಬ ಗಣೇಶ್ವರನು ಬಂದೆನ್ನ ಜರಿಯನೆ?
ಜರಿದರೆ ನೀನು ಕೊಟ್ಟ ತಲೆಯ ಹುಣ್ಣ
ಕಣ್ಣೆಂದು ತೆರೆದು ಲಜ್ಜೆಗೆಡನೆ ಆನಾ ಗಣೇಶ್ವರನ ಕೈಯಲ್ಲಿ?
ಶುದ್ಧಕಾತನೊಡೆಯ, ಸಿದ್ಧಕಾತನೊಡೆಯ, ಪ್ರಸಿದ್ಧಕಾತನೊಡೆಯ!
ಒಪ್ಪಿಪ್ಪಾರು ಆತನ ಸೀಮೆ.
ಮೂವತ್ತಾರರ ಮೇಲಿಂದಾತನ ಸಂಯೋಗ.
ಇಂತಪ್ಪಾತನ ನೀನೆನ್ನಲರಿಯದೆ ನೊಂದೆ ಕೆಲವು ದಿನ.
ಈ ನೋವ ಮಾಣಿಸಿದಾತನೂ ಆತನೆ,
ಎನ್ನ ಭವವ ತಪ್ಪಿಸಿದಾತನೂ ಆತನೆ,
ಆತನಿಂದ ಉರುತರ ಕೈವಲ್ಯಕ್ಕೆ ಕಾರಣಿಕನಾದೆ!
ಆತನ ಪ್ರಸಾದದಿಂದ ನಿನ್ನವರ ಪಾದೋದಕ ಪ್ರಸಾದಕ್ಕೆ
ಯೋಗ್ಯನಾದೆ.
ಫಲಪದಕ್ಕೆ ದೂರವಾದೆ
ಕಪಿಲಸಿದ್ಧಮಲ್ಲಿಕಾರ್ಜುನ, ಬಸವಣ್ಣನಿಂದ!/1767
ಶುದ್ಧಸಂಗಮದಲ್ಲಿ ಸಂಯೋಗವಾದಳವ್ವೆ,
ಸಿದ್ಧ ಗುರುವಿನಲ್ಲಿ ನಿತ್ಯಳಾದಳವ್ವೆ,
ಪ್ರಸಿದ್ಧ ಜಂಗಮದಲ್ಲಿ ಪ್ರಾಣಸಂಯೋಗವಾದಳೆವ್ವೆ.
ಶುದ್ಧಸಿದ್ಧಪ್ರಸಿದ್ಧವ ಕೂಡಿದ
ಪ್ರಕಟಿತ ಸಂಯೋಗದಲ್ಲಿ ಸಮನಿಸಿದಳವ್ವೆ.
ಆಧಾರಮೂಲಪಂಚಿಕ ತೊಡಗಿ
ಬಹುವಿಧ ನಾಳಂಗಳಿಗೆ ಸಹಸ್ರ ಮುಚ್ಚಳಂ ಮುಚ್ಚಿದಳವ್ವೆ.
ಅಜ್ಞಾನವೆಂಬ ಬಿದ್ದಿನ ಬಂದಡೆ
ಇಕ್ಕಲಿಲ್ಲದಚ್ಚಿಗಂಬಟ್ಟು ಉದಾಸೀನಂ ಮಾಡಿದವಳವ್ವೆ.
ಸುಜ್ಞಾನವೆಂಬ ಆತಂಗೆ
ನಿರ್ಮಳದಲೊಮ್ಮನವನಟ್ಟು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯರ್ಪಿತವಂ ಮಾಡಿ,
ಪ್ರಸಾದವ ಸ್ವೀಕಾರವಂ ಮಾಡಿ ನಿತ್ಯಮುಕ್ತಳಾದಳವ್ವೆ./1768
ಶುದ್ಧಾತ್ಮನು ಮಾಡಿ ಪರಿಭವವ ತಪ್ಪಿಸಿದ
ಹೊದ್ದಲೀಯ್ಯದೆನ್ನತ್ತ ಸುಖದುಃಖವ
ಸದ್ಯೋನ್ಮುಕ್ತಿಯನ್ನಿತ್ತು ನಿನ್ನ ಪದದೋರಿಸಿದ
ಅತ್ಯಧಿಕ ನಿರ್ಮಳ ಶ್ರೀಗುರು ಚೆನ್ನಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1769
ಶುಭಕ್ಕೆ ವಿಘ್ನವಲ್ಲದೆ ಅಶುಭಕ್ಕೆ ವಿಘ್ನವೆ ಅಯ್ಯಾ?
ಅಭಿಮಾನಿಗೆ ಅಂಜಿಕೆಯಲ್ಲದೆ ಅಪಮಾನಿಗೆ ಅಂಜಿಕೆಯೆ ಅಯ್ಯಾ?
ಶುಭಾಶುಭ ಶಿವಾರ್ಪಣವೆಂದು ನಂಬು ಮನವೆ,
ಕಪಿಲಸಿದ್ಧಮಲ್ಲೇಂದ್ರನಾಲಯದಲ್ಲಿ. ಜ್ಯೋತಿಷ್ಯವದು ಜ್ಯೋತಿಯಂತಯ್ಯಾ:
ಕೂಡುವ ಕಾಲಕ್ಕೆ ಪ್ರಕಾಶಮಯವು: ಕೂಡದ ಕಾಲಕ್ಕೆ ದಗ್ಧಮಯವು.
ಇದರಂತುವನರಿದವ ವರರುಚಿಯಲ್ಲದೆ,
ಮತ್ತೊರ್ವನ ಕಾಣೆ, ಕಪಿಲಸಿದ್ಧಮಲ್ಲಿಕಾರ್ಜುನ./1770
ಶೇಷವ ಫಣಿಯಲ್ಲಾಡುವುದು ಲೇಸು ಕಂಡಯ್ಯಾ,
ಮೃತ್ಯುವಿನ ಬಾಯೊಳಗಿರುವುದು ಬಹು ಲೇಸು ಕಂಡಯ್ಯಾ.
ನಮ್ಮ ಕಪಿಲಸಿದ್ಧಮಲ್ಲಿನಾಥನ ನಡೆದ ದಾರಿಯಲ್ಲಿ
ನಡೆವುದು ಲೇಸು ಕಂಡಯ್ಯಾ./1771
ಶ್ರೀಕರ ಬ್ರಹ್ಮಾದಿಗಳೇನು ಕಾರಣ
ಯೋನಿ, ನಾನಾ ಭವಂಗಳಲಿ ಬಂದರಯ್ಯ.
ಧ್ಯಾನ ಮೌನ ಸಮಾಧಿಕಾರಣದ ಸಮತೆಯನು
ಭೇದಿಸಲು ಅರಿಯದೆ, ನಾನಾ ಭವಂಗಳ ಮಗ್ನವಾಗಿ,
ಅನಾದಿ ಸಂಸಿದ್ಧ ಕಪಿಲಸಿದ್ಧಮಲ್ಲಿಕಾರ್ಜುನ
ಆದಿಯಕ್ಷರ ಸಮತೆ ಸಮಗೂಡದು/1772
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮಾಯೆ.
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮರವೆ.
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಪ್ರಪಂಚು.
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಎನ್ನ ಸುತ್ತಿರ್ದ
ಮಾಯಾಪಾಶ.
ಅದೆಂತೆಂದಡೆ: “ಗುಶಬ್ದಸ್ತ್ವಂಧಕಾರಃ ಸ್ಯಾತ್ ರುಶಬ್ದಸ್ತು ನಿರೋಧಕಃ
ಅಂಧಕಾರನಿರೋಧತ್ವಾತ್ ಗುರುರಿತ್ಯ್ಕಭಿಧೀಯತೇ||’
ಎಂದುದಾಗಿ, ಇದನರಿದು,
ಕಣ್ಣಿಂಗೆ ಸತ್ತ್ವ ರಜ ತಮವೆಂಬ ತಿಮಿರ ಕವಿದು
ಅಜ್ಞಾನವಶನಾದಲ್ಲಿ
ಸದ್ಗುರುವನುಪಧಾವಿಸಿ ಕಣ್ಗೆ ಔಷಧಿಯ ಬೇಡಲೊಡನೆ
“ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೆ ಶ್ರೀಗುರುವೇ ನಮಃ’
ಎಂದುದಾಗಿ, ಶಿವಜ್ಞಾನವೆಂಬ ಅಂಜನವನೆಚ್ಚಿ,
ಎನ್ನ ಕಣ್ಣ ಮುಸುಂಕಿದ ಅಜ್ಞಾನ ಕಾಳಿಕೆಯ ಬೇರ್ಪಡಿಸಿ
ತನ್ನ ಶ್ರೀಪಾದವನರುಹಿಸಿಕೊಂಡನಯ್ಯಾ,
ಕಪಿಲಸಿದ್ಧಮಲ್ಲಿನಾಥಾ./1773
ಶ್ರೀಗುರುವೆ ದಿವ್ಯಮಹಾಮುನಿಯೆ,
ಶ್ರೀಗುರುವೆ ಲೋಕವೀರೇಳ ಹೆತ್ತ
ಆನಂದಮಯ ಚಿನ್ಮಯ ಮಹಾಗುರುವೆ, ದೇವಾ ,
ಶಿಷ್ಯಕಾರಣ ನೀವು ಪರಶಿವಮೂರ್ತಿಯಾದಿರಯ್ಯಾ,
ನಿತ್ಯಪ್ರಸಾದದಲ್ಲಿ ಮುಕ್ತನನು ಮಾಡಿದ
ನಿತ್ಯ ಜ್ಯೋತಿರ್ಮಯ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ,/1774
ಶ್ರೀಗುರುವೆ ಬಸವಯ್ಯ, ಶ್ರೀಚರವೆ ಬಸವಯ್ಯ.
ಶ್ರೀಮಹಾ ಇಷ್ಟಲಿಂಗ ಬಸವಣ್ಣನು.
ಆರೈದು ಎನ್ನುವನು ಓರಂತೆ ಸಲಹಿದಾ
ಕಾರುಣ್ಯಸುರತರುವೆ ಬಸವಲಿಂಗ
ಭಾವಿಸಿ ಎನ್ನುವನು ಅಜಾತನ ಮಾಡಿದಾತ ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1775
ಶ್ರೀಯಾದಡೆ ಉತ್ಸಾಹದಿಂದ ಉಬ್ಬದೆ,
ಕೆಟ್ಟಡೆ ಮನನೊಂದು ಖಿನ್ನವಾಗದಂತೆ ಇರಬೇಡಾ
ಹಿರಿಯರ ಮನ ಮನವಿಚ್ಛಂದವಾಗದೆ
ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತೆಯ ಗುಣ
ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ/1776
ಶ್ರೀವಿಭೂತಿ ರುದ್ರಾಕ್ಷಿಯನು
ಧಾತಪ್ಪ ಬಸವಾಕ್ಷರತ್ರಯವನಾರಯ್ಯ
ಅರಿದು ಉಚ್ಚರಿಸುವರು
ಅವರಂಘ್ರಿಯಂಬುಜದಾಮೋದಭ್ರಮ ಆನಯ್ಯ.
ಅವರು ಆ ನಾದಬ್ರಹ್ಮವು ತಾವಾಗಿಪ್ಪರಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1777
ಶ್ರೀಶೈಲದ ಮಹಿಮೆಯದು ಕರ್ಣಾಭರಣ.
ಶ್ರೀಶೈಲದ ಮಹಿಮೆಯದು ಸಾಧಿಸುವಡೆ ಬಹುವೈವಣ್ರ್ಯ,
ಶ್ರೀಶೈಲದ ಮಹಿಮೆಯದು ಶ್ರೀಶೈಲದಲ್ಲಿ.
ನಿಮ್ಮ ಮಹಿಮೆ ಮೂಲೋಕವೆಲ್ಲ ಇಂಬುಗೊಂಡಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1778
ಶ್ರುತಿ ಸ್ಮೃತಿ ಪುರಾಣಗಮೋಪನಿಷದ್ವಾಕ್ಯಂಗಳನರಿವರಲ್ಲದೆ,
ಶ್ರುತ್ಯತೀತಮೂರ್ತಿಯನರಿದವರು ಒಬ್ಬರೂ ಇಲ್ಲ ನೋಡಯ್ಯಾ,
`ಸರ್ವಂ ಖಲ್ವಿದಂ ಬ್ರಹ್ಮ’ ಎಂದರಿದು
ಮತ್ತೇನನರಿಯದೆ ಹೋದೆನಯ್ಯಾ,
ನಿಮ್ಮ ಮಹಾಬಯಲಲ್ಲದೆ ಕಪಿಲಸಿದ್ಧಮಲ್ಲಿಕಾರ್ಜುನಾ./1779
ಶ್ರ್ಕುಯ್ಲ ಕೂಗಿಡುವುದದು ಪರಾತ್ಪರ ಪಂಚಾಕ್ಷರ ಎಂಬುದಾಲಿಸಯ್ಯಾ.
ಎನ್ನ ಮತಿಯಲ್ಲಿ ತೋರುವುದದು ಪರಾತ್ಪರ ಪದಮಾಷ್ಟವರ್ಣಂ:
`ಓಂ ಚೆನ್ನಬಸವಾಯ ನಮಃ’ ಎಂಬುದಾಲಿಸಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1780
ಶ್ವಾನನ ಗುಣ ನೋಡದು ನೋಡಾ ಮದಗಜವು.
ಕಾನನದ ಗುಣ ನೋಡದು ನೋಡಾ ಮಹದಗ್ನಿಯು.
ಕಾವಳದ ಗುಣ ನೋಡದು ನೋಡಾ ಮಹತ್ಪ್ರಕಾಶವು.
ಜನನದ ಗುಣ ನೋಡದು ನೋಡಾ ಶಿವಾನುಭಾವಜ್ಞಾನವು.
ಎನ್ನ ಗುಣ ನೋಡದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿದ ಫಲವು./1781
ಷಟ್ಸ್ಥಲವೆಂಬ ಷಣ್ಮುಖಮುದ್ರೆಯೊಳು,
ನವವಿಧಭಕ್ತಿ ಎಂಬ ನವನಾದ ಕೇಳದವ ಶರಣನೆ ಅಯ್ಯಾ?
ಷಟ್ಸ್ಥಲವೆಂಬ ಷಣ್ಮುಖಮುದ್ರೆಯೊಳು,
ಷಡಕ್ಷರವೆಂಬ ಮಂತ್ರವ ಜಪಿಸಿ,
ಷಡ್ವಿಧಂಗವ ಪೂಜಿಸದವ ಶರಣನೆ ಅಯ್ಯಾ?
ಷಟ್ಸ್ಥಲವೆಂಬ ಷಣ್ಮುಖಮುದ್ರೆಯೊಳು,
ಬೀಜಾಕ್ಷರತ್ರಯಂಗಳನೋ ಷಡಕ್ಷರಂಗಳ ಸಾಧಿಸಿ,
ಷಣ್ಮುಖಶಿವನಾಗದವ ನಿಮ್ಮ ಶರಣನೆ ಅಯ್ಯಾ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ./1782
ಷಡಾಧಾರದಲ್ಲಿ ಅಡಿಗದ್ದಿ ಹೋದವರ ಕಂಡೆ.
ತತ್ತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋದವರ ಕಂಡೆ.
ಮಾತಿನ ಮಾಲೆಯನಾಡಿ ವಸ್ತುವನರಿಯದೆ
ಭ್ರಾಂತರಾಗಿ ಕೆಟ್ಟವರ ಕಂಡೆ.
ಅಷ್ಟಾಂಗಯೋಗವ ಮಾಡಿಹೆನೆಂದು
ಘಟಕೆಟ್ಟು ನಷ್ಟವಾದವರ ಕಂಡೆ.
ಇಂತಿದನರಿದು ಕರ್ಮಯೋಗವ ಮಾಡದೆ
ಮರ್ಮಜ್ಞನಾಗಿ ಸರ್ವಗುಣಸಂಪನ್ನನಾಗಿ ನಿಜವನರಿದಾತಂಗೆ
ತನಗೇನು ಅನ್ಯ್ಕಭಿನ್ನವಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ./1783
ಷಡುಸ್ಥಳ ಸಮನಿಸದಯ್ಯಾ ಎಲ್ಲರಿಗೆ.
ಷಡುವ್ರತ ಸಮನಿಸದಯ್ಯಾ ಎಲ್ಲರಿಗೆ.
ಅರಿದರಿದು ಗುರುಭಕ್ತಿ, ಅರಿದರಿದು ಲಿಂಗಭಕ್ತಿ
ಅರಿದರಿದು ಜಂಗಮಭಕ್ತಿ.
ಅರಿದಯ್ಯಾ, ಸುಲಭವೆ ಎಲ್ಲರಿಗೆ?
ಅವ್ಯಯ ಕರುಣ ಅಳವಟ್ಟವರಿಗಲ್ಲದೆ
ಗುರು-ಚರ-ಇಷ್ಟತ್ರಯ ಅಳವಡದು.
ವ್ರತವಾರರ್ಲ ನಿಪುಣತೆಯಯ್ಯಾ.
ನಿನ್ನ ಕೃಪೆ ಎತ್ತಾನೊಬ್ಬರಿಗಲ್ಲವೆ,
ಕಪಿಲಸಿದ್ಧಮಲ್ಲಿಕಾರ್ಜುನ./1784
ಷಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು ಮಾತೆ
ಹೆತ್ತು ಹೆಸರಿಟ್ಟುದೈ ಅಕ್ಷರಾಂಕ.
ಆರುವನು ಐದುವನು ಮೇಲಿಪ್ಪ ಮೂರುವನು ಕೂಡಿ
ಹದಿನಾಲ್ಕರೊಳು ಲೋಕವಾಗಿ,
ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ
ಅನೇಕ ಪರಿಯಿಂ ಮಾತೆ ಬಸವಾಕ್ಷರ.
ನೀನಾದಿಮುಖ ಶೂನ್ಯನಾಗಿಪ್ಪ್ಲ
ನಿನ್ನುವನು ಖ್ಯ್ಕಾಮಾಡಿದ ಬಸವ
ಕಪಿಲಸಿದ್ಧಮಲ್ಲಿಕಾರ್ಜುನಾ/1785
ಸಂಗದವರ ಕಂಡು ಅಂಜಿ ನಿಸ್ಸಂಗನಾದೆ,
ಕಾಮಿಗಳ ಕಂಡು ಅಂಜಿ ನಿಃಕಾಮಿಯಾದೆ.
ಕಾರುಣ್ಯಸಿಂಧುವೆ ಕೇಳಯ್ಯಾ,
ಅನಾದಿಯಾಧಾರಕ್ಕೆ ಮೂಲ ನೀನೆ ಕಾಣಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ಮಾತುಗಾರರ ಕಂಡು ಮೌನಿಯಾದೆ./1786
ಸಂಗವ ಮಾಡುವೆ ನಿನ್ನವರಲ್ಲಿ
ಸ್ನೇಹವ ಮಾಡುವೆ ನಿನ್ನವರಲ್ಲಿ
ನಿನ್ನವರಲ್ಲದ ಅನ್ಯಕ್ಕೊಡಂಬಡದೆನ್ನ ಮನಸು.
ನಿನ್ನವರಲ್ಲದೆ ಅನ್ಯರ ಸಂಗವ ಮಾಡಿದರೆ
ನರಕ ತಪ್ಪದೈ, ಕಪಿಲಸಿದ್ಧಮಲ್ಲಿಕಾರ್ಜುನ/1787
ಸಂಗಸುಖದದಲ್ಲಿ ಸಂಗಿಯೂ ಅಲ್ಲಪ್ಪೆ ;
ನಿಸ್ಸಂಗ ಸುಖದಲ್ಲಿ ಸುಖವೆಂದೆಂಬೆ.
ಮತ್ತೆ ಸಂಗಕ್ಕೆ ಕಾರಣವಪ್ಪೆ ;
ಕಪಿಲಸಿದ್ಧಮಲ್ಲಿಕಾರ್ಜುನ, ನಿನ್ನ ಅಂಗ ಅನಂಗ./1788
ಸಂಗಸುಖದಿಂದಲದು ಸಂಗವಾಗದು ನೋಡ
ಮಂಗಳಾಂಗನ ಬೆಳಗು ಚಿತ್ರತರವೈ
ಆಕಾಶವಡೆಯೆಂದಡದ ಹಿಡಿದನಾಜ್ಞೆಯಿಂ
ಸಾಹಸಿಗನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ/1789
ಸಂಚಿತಾದಿ ಕರ್ಮತ್ರಯಂಗಳು
ಜೀವನಿಗಲ್ಲದೆ ಶಿವಸ್ವರೂಪನಿಗೆಲ್ಲಿಹವೂ?
ಆಡುವ ಗೊಂಬೆಯನು ಆಡಿಸುವಾತಂಗಲ್ಲದೆ,
ಆಡುವ ಗೊಂಬೆಗೆಲ್ಲಿಹದೊ ಸ್ವತಂತ್ರತೆ?
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಇದರಿರವು ಸ್ವತಂತ್ರನಿಗಲ್ಲದೆ ಅಸ್ವತಂತ್ರನಿಗೆಲ್ಲಿಹದೊ ?/1790
ಸಂತವಿಸು ಸಂತವಿಸಲಾರೆ ನನ್ನ ಮನವ.
ಮುನ್ನಿನವರು ಮಾಡಿ ಕೂಡಿದ ಪರಿಯ ನೆನೆದು ನಾನು
ಬೇಯದ ಬೇಗೆಯ[ಲಿ] ಬೆಂದೆನಯ್ಯಾ,
ಇಂತಲ್ಲದೆ, ಮರ ಕಿಚ್ಚು ಹತ್ತಿದಂತಾದೆ,
ಕಪಿಲಸಿದ್ಧಮಲ್ಲಿಕಾರ್ಜುನ./1791
ಸಂತೆಯೊಳಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ?
ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ
ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ?
ಅಂತಕಾಂತಕ ಶ್ರೀಗುರುಮೂರ್ತಿ ತನ್ನರುಹಿನ ರೂಪವಿಂತೆಂದು
ತೋರಿದ ಕಲ್ಲೇ ನಿಜಂಗ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1792
ಸಂದು ಸವೆಯಿತ್ತು, ಹಂಗು ಹರಿಯಿತ್ತು.
ಆಜ್ಞಾದೀಕ್ಷೆ ಪ್ರಬಲವಾಯಿತ್ತು.
ಸ್ವಾನುಭಾವದೀಕ್ಷೆ ಸಂಬಂಧಿಸಿತ್ತು.
ಬೋಧಾದೀಕ್ಷೆ ಭೇದಿಸಿತ್ತು.
ಅಯ್ಯಾ, ನಿಮ್ಮ ಸಾಧಿಸಿತ್ತು ಒಳಗುಮಾಡಿತ್ತು.
ಅರಿದೂ ಇನ್ನೊಂದೂ ಇಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನ./1793
ಸಂಪಿಗೆಗಂಧವ ಸೇವಿಸಿದ್ಲ ಭ್ರಮರ ಜನ್ಮ ಈಡಾಡಿತ್ತು.
ಕೇಸರಿ ತನ್ನ ಗಂಧಕ್ಕಾಗಿ ತನ್ನ ಜನ್ಮ ಈಡಾಡಿತ್ತು.
ಶರಣನ ಬೋಧೆ ಸೇವಿಸಿದ್ಲ ಎನ್ನ ಜನ್ಮ ಈಡಾಡಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1794
ಸಂಭ್ರಮದ ಶರಧಿಯೊಳಿಂಬಿನಲ್ಲಿ ಪರಿತಪ್ಪಾಗ
ಗಂಭೀರ ಉಳ್ಳುದನೊಂದನು ಕಾಣೆ,
ಎನ್ನ ಬಿಡು ತನ್ನ ಬಿಡೆಂಬುದು ತನುಗುಣ ಸಂಬಂಧ.
ಎನ್ನ ಬಿಡು ತನ್ನ ಬಿಡೆಂಬುದು ಕಾಯವಿಕಾರ.
ದೆಸೆದೆಸೆವರಿದು ಪಸರಿಸುವ ಮನವನು
ನಿಮ್ಮ ವಶಕ್ಕೆ ತಂದಿರಿಸಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ./1795
ಸಂಯೋಗದಲ್ಲಿ ವಿಯೋಗಿಯಾದೆ.
ವಿಯೋಗದಲ್ಲಿ ಸಂಯೋಗಿಯಾದೆ.
ವಿಯೋಗ ಸಂಯೋಗವ ಕೂಡಿದ
ಶುದ್ಧ ತಾತ್ಪರ್ಯವಾದೆ.
ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಮಹಾಸುಖವ ನಚ್ಚಿ ಶುದ್ಧ ಮರುಳಾದೆನು./1796
ಸಂಯೋಗವೆಂಬುದು ಪರಮೇಶ್ವರನ ಲೀಲೆಯದು
ಅಲ್ಲ ಅಲ್ಲವೆಂದಡೆ, ಆ ಸಂಯೋಗದಿಂದವೆ ಜಗದುತ್ಪನ್ನ.
ಉತ್ಪತ್ತಿನಾಶನಕ್ಕೆಯೂ ಸಂಯೋಗವೇ ಬೇಕು.
ಆ ಸಂಯೋಗ ಸರಿಯೆ ಪ್ರಾರಬ್ಧವಳಿಯಿತ್ತೆಂಬರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1797
ಸಂಸಾರ ತೆಪ್ಪದೊಳಗೆ ಆನೀಗ
ಅದ್ದಿ ಅಳಲುತ್ತ ಬಳಲುತಿಪ್ಪೆನಯ್ಯಾ,
ಬೇಗ ಬಾರಾ ಬಾರಾ ಅಯ್ಯಾ,
ವಜ್ರಲೇಪದಲಿ ಬಿದ್ದಿದ್ದೇನೆ
ಬೇಗ ಬಂದೆತ್ತಯ್ಯಾ, ಹೆತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ/1798
ಸಂಸಾರ ನಿಸ್ಸಾರವೆಂಬ ವಿಂಧ್ಯದೊಳಗೆ ಅಯ್ಯಾ,
ಕಾಮನೆಂಬ ಕಳ್ಳನ ತೋರಿ ಬೆಚ್ಚಿ ಬೆದರಿಸುವೆ ಅಯ್ಯಾ.
ಕಾಮನ ಕರೆದು ಎನ್ನವನೆಂದೆನ್ನಯ್ಯಾ
ಎನ್ನ ಕಪಿಲಸಿದ್ಧಮಲ್ಲೇಶ್ವರದೇವ ನೀನಯ್ಯಾ./1799
ಸಂಸಾರ ಭ್ರಮೆಯಿಂದಾಯಿತ್ತು ಅಜ್ಞಾನ,
ಅಜ್ಞಾನದಿಂದಾಯಿತ್ತು ಅಹಂಮಮತೆ,
ಅಹಂಮಮತೆಯಿಂದಾಯಿತ್ತು ಭವಬಂಧನ.
ಈ ಭವಬಂಧನದ ಲಹರಿವಿಡಿದು,
ಹರಿಸುರಬ್ರಹ್ಮಾದಿಗಳು ಜ್ಞಾನರತ್ನವ ನೀಗಿ,
ಪ್ರಳಯಕ್ಕೊಳಗಾದರು, ಕಪಿಲಸಿದ್ಧಮಲ್ಲಿಕಾರ್ಜುನಾ./1800
ಸಂಸಾರದ ಅಣಲೊಳಗೆ ಇದ್ದೆನಯ್ಯಾ,
ಅಯ್ಯಾ, ಎನ್ನನಾವಾಗ ನುಂಗಿಹಿತೆಂದೆರಿಯೆನಯ್ಯಾ,
ಅಯ್ಯಾ, ಎನ್ನನಾವಾಗ ಮೆಲಿದೂಂತೆಂದರಿಯೆನು.
ಅದರ ಬಾಯೊಳಗಣಿಂದ ತೆಗೆದು ಎನ್ನ ಕಾಯಿ
ಕಪಿಲಸಿದ್ಧಮಲ್ಲಿನಾಥಯ್ಯಾ./1801
ಸಂಸಾರದ ವ್ಯಾಧಿಗೆ ಗುರು ಹೇಳಿದ ಔಷಧಂಗಳ ಮನದ್ಲಕ್ಕಿ,
ಮೂದಲಿಸಿ ಹೋಗಲೀಯದೆ ವಿಚಾರಿಸಿ ನೋಡುತಿದ್ದೆನು.
ಸಂಸಾರಂಗಳು ಮುಟ್ಟಲಮ್ಮದೆ ಹೆರಹಿಂಗಿ ತೇರ್ಗಟ್ಟಿದಂತೆ ನಿಂದು,
ಕಪಿಲಸಿದ್ಧಮಲ್ಲೇಶ್ವರದೇವರ ಶ್ರೀಪಾದಕ್ಕೆ ಬಟ್ಟೆಗೊಟ್ಟು
ಭಯಂಗೊಂಡು ನಿಂದು ಪೋಗಯ್ಯಾ ಪೋಗಯ್ಯಾ ಎನ್ನುತ್ತಂ ಬರವೆ? /1802
ಸಂಸಾರರವನು ಹೊಸೆದು ಬಿಟ್ಟೆ ತಂದೆ
ವಶಮಾಡಿಕೊಟ್ಟೆಯೈ ತ್ರೈಲಿಂಗ ಮೂಲಮತವ.
ಜಗಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ಭವದೂರನಪ್ಪನೈ ಇಹಪರವೆಲ್ಲರಲ್ಲಿ./1803
ಸಂಸಾರವನು ಹೊಸೆದುಬಿಟ್ಟೆ ತಂದೆ
ವಶಮಾಡಿ ಕೊಟ್ಟೆಯಯ್ಯಾ ತ್ರಯಿಲಿಂಗ ಮೂಲಮತವ.
ಜಗಶನನು [ಅ]ವಗಹಿಸಿ ಕೊಟ್ಟ ಗುರು ಚೆನ್ನಬಸವಣ್ಣನಯ್ಯಾ.
ಭವದೂರನಪ್ಪೆ ನಾನಿಹಪರವೆಲ್ಲರಲ್ಲಿ,
ಕಪಿಲಸಿದ್ಧಮಲ್ಲಿಕಾರ್ಜುನ./1804
ಸಂಸಾರವೆಂಬ ಅರಣ್ಯದೊಳಗೆ ಅಸುರವೊ, ಬಿಡದಿರೆನ್ನ.
ಬೊಪ್ಪ, ಬೆನ್ನ್ಲಲಿದ್ದು ಸಲುಹುದೆನ್ನ,
ಪಂಚೇಂ್ರಯವೆಂಬ ಐದು ನಾಯ ಬಿಟ್ಟು
ಕಾಮನೆಂಬ ಬೇಟೆಗಾರನ ಬಾರಿಗೊಪ್ಪಿಸರು,
ಕಪಿಲಸಿದ್ಧಮಲ್ಲಿಕಾರ್ಜುನ./1805
ಸಂಸಾರವೆಂಬ ಘೋರ ಕಾಂತಾರದೊಳಗೆನ್ನನಾಸುರ ಬಿಡದಿರಾ
ಬೊಪ್ಪ.
ಎನ್ನ ಬೆಂಬಳಿಯೊಳಿರ್ದು ಸಾಕಾ ಬೊಪ್ಪ.
ಎನ್ನ ಹೊರೆಯೊಳಿರ್ದು ಸಾಕಾ ಬೊಪ್ಪ.
ಈ ಪ್ರಿಯ ನಾಯಿ ತೋಡಿ ತಿನ್ನುತ್ತಿದೆ,
ಕಾಮನೆಂಬ ವೈರಿಗೊಪ್ಪಿಸರೆನ್ನ ಬೊಪ್ಪ.
ಅವ್ವೆಯ ಮನೋನಾಥಾ, ನಿರಂಜನ ನಿರ್ಮಾಯ ನಿರವಯ,
ನಿಶ್ಶೂನ್ಯ ನಿರಾಲಂಬ ನಿರಾಭಾರಿ ನಿವ್ರ್ಯಸನಿ.
ಮುಕ್ತಿಸಾಮ್ರಾಜ್ಯಕ್ಕೊಡೆಯ ನೀನೆಯಯ್ಯಾ.
ನಿನ್ನನಗಲದಂತೆ ನಿನ್ನ ಶ್ರೀಪಾದದೊಳಿಂಬಿಡಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1806
ಸಂಸಾರವೆಂಬ ರಾಹುವಿನ ಅಣಲೊಳಗೆ ಇದ್ದೆನಯ್ಯಾ;
ಆವಾಗ ನುಂಗೀತೆಂದರಿಯೆ, ಆವಾಗ ಉಗುಳೀತೆಂದರಿಯೆನಯ್ಯಾ.
ಅದರ ಬಾಯಿಂದೆನ್ನ ತೆಗೆದು ಕಾಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1807
ಸಂಸಾರವೆಂಬ ವಿಂಧ್ಯದೊಳಗೆ ಕಾಮನೆಂಬ ಕಳ್ಳನ ಕಂಡು
ಬೆಚ್ಚಿ ಬೆದರುತಿದ್ದೇನಯ್ಯಾ.
ಆ ಕಾಮನ ಕರೆದು ಎನ್ನ ನಿನ್ನವನೆಂದು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನ./1808
ಸಂಸಾರವೆಂಬ ವಿಪರೀತ ರೂಪು ಕಾಡಿತಯ್ಯಾ
ಎನ್ನ ಭವ ಭವದಲ್ಲಿ ಕಾರ್ಪಣ್ಯದಿಂದ.
ನೆನೆಯಲರಿಯದೆ ಕಾಮುಕನಾಗಿ ಕರ್ಮಕ್ಕೊಳಗಾದೆನಯ್ಯಾ.
ಗುರುಕರುಣವಿಡಿದು ಇವ ಕಳಿದುಳಿವೆನು,
ಕಪಿಲಸಿದ್ಧಮಲ್ಲಿಕಾರ್ಜುನಾ./1809
ಸಂಸಾರವೆಂಬ ಸಾಗರಕ್ಕೆ ಒಡಲೆಂಬುದೊಂದು ಭೈತ್ರ ಕಂಡಾ.
ಪುಣ್ಯಪಾಪವೆಂಬ ಭಂಡವನೆ ತುಂಬಿ
ಪಂಚ ಪಂಚೈವರು ಏರಿದರು.
ಜ್ಞಾನವೆಂಬ ಕೂಕಂಬೆಯ
ಲಿಂಗವೆಂಬ ತಾರಾಮಂಡಲವ ನೋಡಿ ನಡಸೂದು.
ಜವನ ಕಳ್ಳಾಳು ಕರ ಹಿರಿದು ಕಂಡಾ.
ಪುಣ್ಯಪಾಪವೆಂಬ ಭಂಡವ ಸಮಜೋಗವೆಂಬ ನೇಣ
ನವನಾಳದಲಿ ಕಟ್ಟಿ,
ಮನವೆಂಬ ಉಪಾಯವನು ವಾಹಿಕೊಳಲಿ
ನಿಧಿಯೆಂಬ ನಡುಗಡಲ ಸುಖದುಃಖದೊಳಗೆ
ತೆರೆಯ ಹೊಯಿಲು ಕರ ಹಿರಿದು ಕಂಡಾ.
ಉದುಮದವೆಂಬಾ ಸುಳಿಯಲ್ಲಿತಿರುಗದೆ
ಗುರುವೆಂಬ ಬೆಂಗುಂಡ ಹಿಡಿ ಕಂಡಾ.
ಇಹಲೋಕ ಪರಲೋಕ ವಿಘ್ನಗಳ ಕಳೆದು
ಕಪಿಲಸಿದ್ಧಮ್ಲನಾಥನ ಕಾಬೆ ಕಂಡಾ./1810
ಸಕಲ ನಿಃಕಲದಲ್ಲಿ , ಬ್ರಹ್ಮಾಂಡತತ್ತ್ವದಲ್ಲಿ
ಕರ್ಮದ ಸೊಮ್ಮಿನ ಸೀಮೆಯನತಿಗಲೆದು
ಅದ ಲಿಂಗವೆಂದು ತೋರಬಲ್ಲಾತ ಗುರು.
ತನುಗುಣ ಸಂಬಂಧವ ತಾನೆಂದು ತೋರಲೀಯದೆ,
ನಿಶ್ಚಯವ ಮಾಡಿ ತಾತ್ಪರ್ಯಕಲೆಯನಿರಿಸಿ,
ಸಕಲದಲ್ಲಿ ನಿಃಕಲದಲ್ಲಿ , ರೂಪಿನಲ್ಲಿ ಅರೂಪಿನಲ್ಲಿ ,
ಭಾವದಲ್ಲಿ ನಿಭಾವದಲ್ಲಿ ಅವೆ ಅವಾಗಿ ತೋರಬಲ್ಲಾತ ಗುರು .
ಈ ಪರಿಯಲ್ಲಿ ಎನ್ನ ಭವವ ತಪ್ಪಿಸಿದ
ಕಪಿಲಸಿದ್ಧಮಲ್ಲಕಾರ್ಜುನಯ್ಯನೆಂಬ ಪರಮಗುರು./1811
ಸಕಲ ನಿಃಕಲವ ಪೂಜಿಸಿಹೆನೆಂದೆಂಬೆ,
ಸಕಲವಾವುದು ನಿಃಕಲವಾವುದು ಹೇಳಾ.
ಸ್ವಾತಂತ್ರ ್ಯವ ಮೀರಿಪುದೀಗ ಸಕಲ;
ಪರಬ್ರಹ್ಮದ ಸೊಮ್ಮಾಗಿಪುದೀಗ ಶಿವಯೋಗ!
ಈ ಪೂಜಾದ್ವಯವನರಿತ ಬಳಿಕ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವೆ ಸಂದಿಲ್ಲದೆ./1812
ಸಕಲ ನಿಷ್ಕಲಕೆಲ್ಲ ಬಸವನಾಮಾಕ್ಷರದ
ದೆಸೆ ತಾನು ತೆಂಗ ಮೂಲವಾಗಿ
ಬಸವನನುಮಿಷಗಂದು ಗುರುವಾದ ಸಂಬಂಧ
ದೆಸೆಯೆನಗೆ ಆಯಿತೈ ಕಪಿಲಸಿದ್ಧಮಲ್ಲಿಕಾರ್ಜುನ./1813
ಸಕಲ ನಿಷ್ಕಲದೊಳಗೆ ಮುಖಲಿಂಗ ಮೂರರ
ಕುರುಹುಗೆಟ್ಟಿಪ್ಪುದದು ಸಕಲದಲ್ಲಿ.
ಅಖಿಳಲೋಕಾರಾಧ್ಯ ಗುರುಕರುಣದಿಂದಲಾ
ತೆಂಗವೊಂದಾದೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಗುರುವಿನಾನಂದದಿಂ./1814
ಸಕಲ ಪರಿಪೂರ್ಣನಾದುದರಿಂದ ಬಾಲಕನಂತೆ ತೋರುವನಯ್ಯಾ.
ವಿಧಿ-ನಿಷೇಧಂಗಳಿಲ್ಲದರಿಂದ ಉನ್ಮತ್ತನಂತೆ ತೋರುವನಯ್ಯಾ.
ಜನರಂಜನ ಲಾಂಛನವಿಲ್ಲದರಿಂದ ಪೈಶಾಚಿಯಂತೆ ತೋರುವನಯ್ಯಾ.
ನಿಶ್ಶಬ್ದಬ್ರಹ್ಮ ವೇದ್ಯನಾದುದರಿಂದ ಮೂಕನಂತೆ ತೋರುವನಯ್ಯಾ.
ಸಕಲಾಗಮದ ಮೂರ್ತಿ ತಾನಾದುದರಿಂದ
ವಿದ್ವಾಂಸರೊಳ್ ಬೆರಸುವ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಮೂರ್ತಿ ಜಂಗಮನು./1815
ಸಕಲ ಶ್ರುತಿಗಳು ನಿನ್ನ ಅನುಮಿಸಿದ ವಾಸನೆಗೆ
ಮುಸುಕಲಮ್ಮದೆ ತೊಲಗಿ ಹೊಗಳುತ್ತಿರಲು,
ನಾನೆ ಅಭೇದ್ಯಯೆಂದು ಹೊಗಳುವ ವೇದ
ಸಮತೆ ಸಾಯುಜ್ಯದ ದೀಕ್ಷೆಯವಕೆ.
ದೃಷ್ಟವಪ್ಪವ ನೀನು ಶ್ರುತವೆಂದು ಹೇಳುವೆ,
ಅತಿಶಯದ ಶ್ರುತ ದೃಷ್ಟಕೆ ಒಡೆಯನಾದವನೆ
ಹದುಳದಿಂದರ್ಚಿಸಾ ಸಮತೆ ಪದವಾ.
ಸಮತೆ ಸಜ್ಜನರೊಂದು ನೆನಹಿನ ಮೂರ್ತಿಯೈ,
ಕರುಣ ವಾರುಧಿಗಳದರ ಕೆಲಬಲದಲಿ.
ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು
ಸಮತೆ ಸಂಯೋಗದಲಿ ಸುಖಿಯಾದನು./1816
ಸಕಲ ಸಾದಾಖ್ಯದಲಿ ಮುಖದಿಂಗವೆಂದಿರಿಸಿ
ಸಕಲಲಿಂಗಕ್ಕೆ ಸನುಮತವಾದನು.
ಮುಖಲಿಂಗ ತ್ರೈಲಿಂಗವೆಂದು ಅರ್ಚಿಸಿದಾತ
ಭವದೂರ ಶಿಷ್ಯನ್ಯೆ ಕಪಿಲಸಿದ್ಧಮಲ್ಲಿಕಾರ್ಜುನ./1817
ಸಕಲಲಿಂಗವ ಹಿಡಿದು ಅಗಲದೆ ನಡೆ ಎಂದಿರಾಗಿ
ನಡೆವುತಿರ್ದೆನು.
ಲಿಂಗಪ್ರತಿಷ್ಠೆಯ ಮಾಡೆಂದು ಎನಗೆ ನಿರೂಪಿಸುತ್ತಿರ್ದ ಕಾರಣ,
ಮಾಡ್ಕ್ತುರ್ದೆನಲ್ಲದೆ ಎನಗೆ ಬೇರೆ ಸ್ವತಂತ್ರವುಂಟೆ?
ಹಿಂದೆ ನೀವು ಕೊಟ್ಟ ನಿರೂಪು ಹುಸಿಯಾದಡೆ
ಇನ್ನು ಮುಂದೆ ಸ್ವಯವಪ್ಪಂತೆ ನಡೆಸಾ,
ಕಪಿಲಸಿದ್ಧಮಲ್ಲಿನಾಥಯ್ಯಾ./1818
ಸಕಲಾಗಮಸಾರ ನುಡಿಯಲ್ಲಿ
ನಿಸ್ಸಾರ ಶಂಕೆ ಸಂಭವ ಎನ್ನ ದುರಾತ್ಮನಲ್ಲಿ;
ಅದೇನೆಂದಡೆ ಪಾಪದ ಬಲೆಯಿಂದಾಗ ಮತ್ತಾವ
ನಿಮಿತ್ತಂದಾಗಲಿ,
ಘ್ರಾಣವಿಲ್ಲದವರ ಲಕ್ಷ ್ಯವೆಂತು ಕಪಿಲಸಿದ್ಧಮಲ್ಲಿಕಾರ್ಜುನ ತಂದೆ?/1819
ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ?
ಬೆಣ್ಣೆಯ ಬಿಟ್ಟು ಘೃತವ ತೆಗೆಯಬಹುದೆ?
ಭೂಮಿಯ ಬಿಟ್ಟು ಜಗವ ಮಾಡಬಹುದೆ?
ಜಂಗಮವಿರಹಿತ ಲಿಂಗವಿಲ್ಲ, ಲಿಂಗವಿರಹಿತ ಜಂಗಮವಿಲ್ಲ
ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1820
ಸಕ್ಕರೆಯು ಆಕಾರ, ರುಚಿಯು ನಿರಾಕಾರ;
ಲಿಂಗವಾಕಾರ, ಜಂಗಮ ನಿರಾಕಾರ;
ಬೆಣ್ಣೆ ಆಕಾರ, ಘೃತ ನಿರಾಕಾರ.
ಆಕಾರ ಬಿಟ್ಟು ನಿರಾಕಾರವಿಲ್ಲ, ನಿರಾಕಾರ ಬಿಟ್ಟು ಆಕಾರವಿಲ್ಲ.
ಲಿಂಗ ಜಂಗಮವೆಂಬುಭಯ ಶಬ್ದ ಒಂದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1821
ಸಜ್ಜನ ನಾನು ಎನ್ನ ಗಂಡನೆ ನೀನು
ಮತ್ತನ್ಯಕ್ಕೆಳಸಲಾಪೆನೆ ಅಯ್ಯಾ.
ಕಾಮ ಕ್ರೋಧ ಲೋಭ ಮೋಹವು
ಎನ್ನ ಆಮಿಷ ತಾಮಸ ವಿಕಾರಂಗಳು ಅನಂತವಾಗಿ
ಎನ್ನ ತಮ್ಮ ಪ್ರಭೆಯನೆಯ್ದದ ಮುನ್ನ
ನಿನ್ನ ನಿಜರೂಪನೀಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1822
ಸಜ್ಜನದಲ್ಲಿ ಸದಾಚಾರ ಸಮನಿಸಬೇಕಾಯಿತ್ತಾದರೆ
ಲಿಂಗತ್ರಯದ ನೆಲೆಯನರಿ,
ಪಾದೋದಕ ಬ್ರಹ್ಮದ ಪ್ರಮಾಣವನರಿ,
ಮಜ್ಜನಕ್ಕೆರೆವ ಭೇದವನರಿ,
ಅಲ್ಲದ್ದಡೆ ನಿನಗನುಮಿಷತ್ವವನರಿ.
ಅರಿಯದ್ದರೆ ಅಭ್ಯಾಸದಲ್ಲಿ ಎಲ್ಲರಂತಪ್ಪೆ,
ಕಪಿಲಸಿದ್ಧಮಲ್ಲಿಕಾರ್ಜುನನಿಪ್ಪಿರವ ಕಾಣೆ./1823
ಸಜ್ಜನವಾಳವೆ ತಾನಿನಿತೆಂಬೆ
ಆಲಸಿದಡೆ ಹರಿವುದೆ ಅಯ್ಯ ಐಕ್ಯಪದವು?
ಐನಾನಾಕ್ಷರದ ಅಂತಪೂರ್ವವನರಿದಡೆ
ಐಕ್ಯನಿನಗರಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ./1824
ಸಜ್ಜನವಾಳುತ್ತಾಗಿ ಹಿಂದೆಂಬ ತೊಂಡುತನವೆ?
ಮಿಂಡಾ ನಿನ್ನನೆಂತು ನಂಬುವೆ?
ಆಹಾ, ತಾಯಿ ತಂದೆಯರು ನಿನ್ನ ನಡೆಸಿಹರೆಂಬೆನೆ?
ಆಹಾ, ತಾಯಿ ತಂದೆಯರಮ್ಮ, ನಿಮ್ಮ ನುಡಿಸಿಹರೆಂಬೆನೆ?
ಆಹಾ, ಎಲ್ಲರ ಬಿಟ್ಟು ಪೊದ್ದಿದವನೆ ನಂಬುಗೆ ಮಾಡಾ ಆ ಆ ಆ./1825
ಸತ್ಕುಲ ದುಷ್ಕುಲವೆಂಬುದದು ಜಗತ್ಪ್ರಸಿದ್ಧವಯ್ಯಾ.
ಕುಲ ಸತ್ಕುಲ ನಡೆ ವಿಪರೀತವಾದಡೆ ದುಷ್ಕುಲ ನೋಡಯ್ಯಾ.
ಮಧು ಮಕ್ಷಿಕ ಎಂಜಲು ಕುಲ ರುಚಿಯಾದ[ಲ್ಲಿಯೆ],
ಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನ
ತನ್ನ ಪೂಜೆಗೆಂದು ನೇಮಿಸಿದ ಬೊಮ್ಮಣ್ಣ./1826
ಸತ್ಯಕ್ಕೆ ಸಾಕ್ಷಿಯಲ್ಲದೆ ಮಿಥ್ಯಕ್ಕೆ ಸಾಕ್ಷಿಯೆ ಅಯ್ಯಾ
`ಸತ್ಪಾತ್ರೇಷ್ವಪಿ ಯಃ ಸಾಕ್ಷೀ ಸ ನರೋಟಿಹಂ ಸದಾಶಿವೇ’
ಎಂಬ ನಿನ್ನ ವಾಕ್ಯ ಹುಸಿಯಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1827
ಸತ್ಯವ ನುಡಿದೆವೆಂದೆಂಬಿರಿ
ಸತ್ಯ ನಿಮಗೆಲ್ಲರಿಗೆ ಸುಲಭವೆ?
ಅದೇನು ಕಾರಣ ಸುಲಭವಲ್ಲ? ಸತ್ತಿಹಿರಾಗಿ,
ಸತ್ಯವ ನುಡಿದವರಿಗೆ ಸಾವುಂಟೆ?
ಸತ್ಯವ ನುಡಿವಲ್ಲಿ ಸಂದಿಲ್ಲದಿಪ್ಪ
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಹುಸಿಗೆ ಹುರುಡಿಗನು./1828
ಸದಮದ ಚಿದ್ರೂಪ ಒದವಿಪ್ಪ ಪ್ರಾಪಂಚ
ಮಥನಕ್ಕೆ ಮಂಗಳದ ಸಂಗವೆರಡ
ಮೀರಿಪ್ಪ ಸಂಬಂಧ ಆರರಿಂದಂ ಮೇಲೆ
ಅತ್ಯ್ಕತಿಷ್ಠ ಸೀಮೆಯನು
ಸಂಬಂಧ ಹೊಲಬನಾರಯ್ಯ ಬಂದ
ನಿಸ್ಸೀಮ ಕಪಿಲಸಿದ್ಧ ಮ್ಲಕಾರ್ಜುನಾ./1829
ಸನಕ ಸಾನಂದ ಮುನಿಜನಂಗಳು ಅರಿಯರಯ್ಯಾ ನಿಮ್ಮಂತುವನು.
ಒಂದರಲ್ಲಿ ಹಲವಾಗಿ, ಹಲವರಲ್ಲಿ ಒಂದಾಗಿ,
ಸಾಕಾರ ನಿರಾಕಾರವಾಗಿಪ್ಪ್ಲ ಏಕವಾಗಿಪ್ಪೆ
ಕಪಿಲಸಿದ್ಧಮಲ್ಲಿನಾಥ ನೀನೆಯಾಗಿ./1830
ಸಮತೆಯೆ ಭಕ್ತಿ, ಸತ್ಯವೆ ಲಿಂಗ
ಅಸತ್ಯವೆ ಅನ್ಯದೈವ,[/ದಿ]ರೋಷವಿಲಿಹುದೆ ಪೂಜೆ
ಆಸೆಯಿಲ್ಲಹುದೆ ಪ್ರಸಾದ.
ಇಷ್ಟಂಗದಲ್ಲಿ ನಿರತನಾಗಿದ್ದಡೆ
ಕಪಿಲಸಿದ್ಧಮಲ್ಲೇಶ್ವರ ದೇವರದೇವ!/1831
ಸಮತೆಯೆಂಬ ಕಂಥೆಯ ಧರಿಸಿಪ್ಪ ನೋಡಾ ಜಂಗಮನು.
ಅಮಿತವೆಂಬ ಭಸ್ಮವ ಧರಿಸಿಪ್ಪ ನೋಡಾ ಜಂಗಮನು.
ಲಿಂಗವೆಂಬ ಕರ್ಪರವ ಕರಸ್ಥಲದಲ್ಲಿ ಧರಿಸಿಪ್ಪ ನೋಡಾ ಜಂಗಮನು.
ಸರ್ವಜೀವ ದಯಾಪಾರಿಯೆಂಬ ವಿಮಲ ರುದ್ರಾಕ್ಷಿಯ ಧರಿಸಿಪ್ಪ
ನೋಡಾ ಜಂಗಮನು.
ನಿರ್ಮೊಹವೆಂಬ ಕೌಪೀನವ ಧರಿಸಿಪ್ಪ ನೋಡಾ ಜಂಗಮನು.
ನಿಸ್ಸಂಗವೆಂಬ ಮೇಖಲಾಪರಿಪೂರ್ಣ ನೋಡಾ ಜಂಗಮನು.
ಸುಮ್ಮಾನವೆ ಕಿರೀಟವಾಗಿ, ಶುದ್ಧ ಜ್ಞಪ್ತಿಯೆ ಮುಕುಟವಾಗಿ,
ನಿರಹಂಕಾರವೆ ಬಹಿರ್ವಾಸವಾಗಿ,
ದುವ್ರ್ಯಸನ ದುಭ್ರ್ರಮೆ ಹೃಷೀಕೋತ್ಪಾತವಿಜಯ
ಶಿವಯೋಗವಾಗಿ,
ಚರಿಸುವನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಮಹಾಜಂಗಮನು. /1832
ಸಮದೃಷ್ಟಿಯಾಗದವನ ಭಕ್ತನೆಂತೆಂಬೆ?
ವಿಷಯಂಗಳಳಿಯದವನ ಮಹೇಶನೆಣತೆಂಬೆ?
ಶಿವಕರುಣವಿಡಿಯದನಕ್ಕ ಪ್ರಸಾದಿ ಎಂತೆಂಬೆ?
ಅಂಗೇಂದ್ರಿಯಂಗಳಳಿಯದವನ ಪ್ರಾಣಲಿಂಗಿ ಎಂತೆಂಬೆ?
ಸಂಕಲ್ಪ ಹರಿಯದನಕ್ಕ ಶರಣನೆಂತೆಂಬೆ?
ನಮ್ಮ ಕಪಿಲಸಿದ್ಧಮಲ್ಲೇಶನ ಕೂಟವನರಿಯದವನ
ಐಕ್ಯನೆಂತೆಂಬೇ?/1833
ಸಮನಿಸದಯ್ಯ ಭಕ್ತಿ,
ಸೀಮೆಯ ಮೀರಿದ ಸಂಬಂಧಿಗಲ್ಲದೆ.
ಸಮನಿಸದಯ್ಯ ಐಕ್ಯವು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ನಿನ್ನ ಭಕ್ತಿ ನಿಧಾನ ಎಲ್ಲರಿಗೆ ಸುಲಭವೆ?/1834
ಸಮನಿಸದಯ್ಯಾ ಭವಿಸಂಗ ಭಕ್ತಂಗೆ.
ಸಮನಿಸದಯ್ಯಾ ಲಿಂಗಪ್ರಾಣಿಗೆ ಅನರ್ಪಿತ.
ಸಮನಿಸದಯ್ಯಾ ಪ್ರಾಣಲಿಂಗಸಂಬಂಧಿಗೆ ಬಹುಲಿಂಗಪ್ರಸಾದ.
ಇಂತೀ ಮೂರಕ್ಕಳುಕತಿದ್ದೆನಾದಡೆ, ನಾಯಕನರಕದಲ್ಲಿಕ್ಕುವ
ಕಪಿಲಸಿದ್ಧಮಲ್ಲಿಕಾರ್ಜುನ./1835
ಸಮನಿಸುವ ಸುಖಕಿನ್ನು ಸಮನಿಸುವುದಾವುದಯ್ಯಾ?
ಕರಣ ಕಾನನದೊಳಗೆ ಹೊಲಬುದಪ್ಪುವೆನಯ್ಯಾ.
ದೆಸೆಗೆಟ್ಟವ ನಾನಯ್ಯಾ:ಎನ್ನ ನಿಮ್ಮಂತೆ ಮಾಡಯ್ಯಾ.
ಮೂರರಿಂದ ಮುಕ್ತಿಯಾದ ಆರೂಢದ ಬೇಟನೀಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1836
ಸಮಯ ಸಮಯೋಚಿತ ಭಾವ ಭಾವನಷ್ಟವಾಗಿ
ಕಾಲಕರ್ಮವಿಲ್ಲದೆ ಹೋಯಿತ್ತು;
ತತ್ವಜ್ಞಾನ ಪ್ರಕಾಶಿಕೆಯಡಗಿತ್ತು;
ಆಧಾರಾಧೇಯವಡಗಿತ್ತಯ್ಯಾ;
ನಿರಾಧಾರ ಸಮಯವಾಯಿತ್ತಯ್ಯಾ.
ಬಸವ ಬಸವಾ ಬಸವಾ ಎಂಬ ಅನುಭಾವ ಬಯಲಾಯಿತ್ತಯ್ಯಾ.
ಎಸಳೆಂಟರ ಹಸನಳಿಯಿತ್ತಯ್ಯಾ ಬಸವಾ ನಿಮ್ಮಲ್ಲಿ
ನಿಜಯೋಗ ಸಮಾಧಿಯಾಯಿತ್ತಯ್ಯಾ ಬಸವಾ ನಿಮ್ಮಲ್ಲಿ,
ಕಪಿಲಸಿದ್ಧಮಲ್ಲಿನಾಥಯ್ಯಾ, ಬದುಕಿದೆನು ನಾನಿಂದು./1837
ಸರ್ಪನ ಮೇಲೆ ಪೃಥ್ವಿ ರಚಿಸದಂದು,
ಸಮುದ್ರಂಗಳೇಳು ಹಾಸದಂದು,
ಅಷ್ಟದಿಗುದಂತಿಗಳು ಹುಟ್ಟದಂದು,
ಶಂಖು ಶಲಾಕೆಯಿಲ್ಲದಂದು,
ಗಂಗೆ ಗೌರೀವಲ್ಲಭರಿಲ್ಲದಂದು,
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐವರೂ
ಹುಟ್ಟದಂದು,
ಈ ಐವರ ತಾಯಿತಂದೆ ಇಲ್ಲದಂದು
ನಿಜಗುರು ಕಪಿಲಸಿದ್ಧಮಲ್ಲೇಶ್ವರಾ, ನಿಮ್ಮ ಹೆಸರೇನಯ್ಯಾ?/1838
ಸರ್ಬರಾದಿ ಅಂತ್ಯದಲ್ಲಿ ಒಬ್ಬನೆ ಇದ್ದೆಯಯ್ಯಾ,
ಸರ್ವಗತ ನೀನೆ ಕಂಡಯ್ಯಾ,
ಒಂದೊಂದು ಪರಿಯಲ್ಲಿ ಆಡುವ ಆನಂದಗುಣವ ನೋಡಯ್ಯಾ.
ಶೂನ್ಯಶೂನ್ಯ! ಕಾಯದ ಕರಸ್ಥಲಕ್ಕೆ ದೇವನಾದೆ
ಕಪಿಲಸಿದ್ಧಮಲ್ಲಿಕಾರ್ಜುನಾ./1839
ಸರ್ವಂ ಖಲ್ವಿದಂ ಬ್ರಹ್ಮ’ ಎಂಬುದ ಅರಿದ ಬಳಿಕ,
ಲಿಂಗದಲ್ಲಿ ಶಿಲೆಯ ಭಾವವನರಸಲುಂಟೆ?
`ಸರ್ವಂ ಖಲ್ವಿದಂ ಬ್ರಹ್ಮ’ ಎಂದರಿದ ಬಳಿಕ,
ಗುರುವಿನಲ್ಲಿ ನರನ ಭಾವವನರಸಲುಂಟೆ?
`ಸರ್ವಂ ಖಲ್ವಿದಂ ಬ್ರಹ್ಮ’ ಎಂದರಿದ ಬಳಿಕ
ಮಾಯಾಮಯ ಸಂಸಾರವೆಂದರಸಲುಂಟೆ?
`ಸರ್ವಂ ಖಲ್ವಿದಂ ಬ್ರಹ್ಮ’ ಎಂದರಿದ ಬಳಿಕ,
ನಾನು ಜೀವಿ, ನಾನು ಜಡ, ನಾನು ಬದ್ಧನೆಂದರಸಲುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಾ./1840
ಸರ್ವಂ ಶಿವಮಯಂ ಜಗತ್’ ಎಂದ ಬಳಿಕ,
ತನ್ನ ದೇಹ ನಿರ್ಮಲಕ್ಕಿಕ್ಕಬಹುದೆ ಅಯ್ಯಾ?
`ಸರ್ವಂ ಖ್ವದಂ ಬ್ರಹ್ಮ’ ಎಂದ ಬಳಿಕ,
ಕರಣಗಳಾವರಣಕ್ಕೆ ಸ್ಕಿಸಬಹುದೆ,
ಕಪಿಲಸಿದ್ಧಮಲ್ಲಿಕಾರ್ಜುನ?/1841
ಸರ್ವಂ ಶಿವಮಯಂ ಜಗತ್’ ಎಂಬ ವಾಕ್ಯವನರಿಯದೆ
ಹೋಗರಾ, ಮನವೆ.
`ಪಂಚತತ್ವರೂಪಾಯ’ ಎಂಬ ಶ್ರ್ಕುವಾಕ್ಯವ
ಮರೆದೆಯಲ್ಲಾ, ಮನವೆ.
`ಂಗಮದ್ಯೇ ಜಗತ್ಸರ್ವಂ’ ಎಂಬ ಮಹಾವಾಕ್ಯವ
ಮರೆದೆಯಲ್ಲಾ, ಮನವೆ.
ರಜ್ಜು ಸರ್ಪ ನ್ಯಾಯ-ರಜ್ಜುವ ಸರ್ಪವೆಂದು ನಂಬಿ,
ಕಪಿಲಸಿದ್ಧಮಲ್ಲಿಕಾರ್ಜುನಂಗೆ ಬೇರೆಯಾದೆಯಲ್ಲಾ, ಮನವೆ/1842
ಸರ್ವಂ ಶಿವಮಯಂ ಜಗತ್’ ಎಂಬುದ ತಿಳಿಯದೆ
ನುಡಿದವರ ನುಡಿಯಂತೆ ನಡೆಯದಿರಾ ಮನವೆ.
`ಸರ್ವಂ ಶಿವಮಯಂ ಜಗತ್’ ಎಂದು ತಿಳಿದು ತಿಳಿದು
ಸುಖಿಯಾಗು ಮನವೆ.
ಪಿಂಡ ಬ್ರಹ್ಮಾಂಡಕ್ಕೆ
`ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ’
ಎಂಬುದು ಪುಸಿಯಲ್ಲ ನೋಡಾ ಮನವೆ.
ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು.
ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ,
ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ.
ತನ್ನ ತಾನರಿದು ನೋಡಿದಡೆ,
`ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್’
ಎಂದರಿದು ಬಂದಿತ್ತು ನೋಡಾ ಮನವೆ./1843
ಸರ್ವರು ಜ್ಞಾನದಿಂದಲ್ಲದೆ,
ಗೋತ್ರ್ಕಾಭಿಮಾನದಿಂದ ಮೋಕ್ಷವಂತರಲ್ಲ ಕೇಳಾ.
“ತಪಸಾ ಬ್ರಾಹ್ಮಣೋ ಜಾತೋ ವಿಶ್ವಾಮಿತ್ರೋ ಮಹಾಮುನಿಃ|
ತಪಸಾ ಬ್ರಾಹ್ಮಣೋ ಜಾತೋ ನಾರದೋ ಹಿ ಮಹಾಮುನಿಃ||
ತಪಸಾ ಬ್ರಾಹ್ಮಣೋ ಜಾತಿಶ್ಚಾಗಸ್ತ್ಯೋ ಮುನಿಪುಂಗವಃ|
ತಪಸಾ ಬ್ರಾಹ್ಮಣೋ ಜಾತಃ ಪರಶರಮಹಾಮುನಿಃ||
ತಪಸಾ ಬ್ರಾಹ್ಮಣೋ ಜಾತೋ ದೂರ್ವಾಸಸ್ತು ಮಹಾಮುನಿಃ|
ತಪಸಾ ಬ್ರಾಹ್ಮಣೋ ಜಾತೋ ಭೃಗುವ್ರ್ಯಾಸಶ್ಚ ಮಾಂಡವಃ||’
ಎಂಬುದು ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ/1844
ಸರ್ವರು ಲಿಂಗವಂತರೆಂದು ಮನದಲ್ಲಿ ಭಾವಿಸಿ
ನಡೆಯಬೇಕಲ್ಲದೆ,
ನಡೆನುಡಿಯಲ್ಲಿ ಭಾವಿಸಿ ನಡೆಯಬಾರದು ನೋಡಯ್ಯಾ.
ಸರ್ವರು ಲಿಂಗವಂತರೆಂದು ಭಾವಿಸಿದಲ್ಲಿ ಪೂರೈಸಿಕೊಳ್ಳಬೇಕಲ್ಲದೆ,
ಪುರಹರ ಕಪಿಲಸಿದ್ಧಮಲ್ಲಿಕಾರ್ಜುನನ ಮಂರವಾಸಿಗಳೆಂದು
ಭಾವಿಸಬಾರದು ನೋಡಯ್ಯಾ./1845
ಸರ್ವರೂ ದ್ರವ್ಯವಂತರು; ಅವರು ಅವರಲ್ಲಿ ಆಸೆಯೆ ಅಯ್ಯಾ?
ಮಾಯಾವಿರಹಿತ, ಮಾಯಾಕೋಲಾಹಲ
ಪಾದವಿತ್ತುದಕವೆ ಪಾದೋದಕ, ಮೋಕ್ಷದಾಯಕ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1846
ಸರ್ವವನೂ ಕಂಡು ಕಂಠಣಿಸದೆ ಓಸರಿಸದೆ
ಒಳಕೊಂಡಿಪ್ಪುದದಕೆ ಎಂತಿರಬೇಡಾ ಹಿರಿಯರ ಮನ?
ಮನವಿಚ್ಛಂದವಾಗದದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಹೊದ್ದಿಪ್ಪುದು
ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1847
ಸರ್ವಾತ್ಮ ನೀನೆನ್ನ ಸರ್ವನನು ಮಾಡಿದೆ
ಉರ್ವಿಯೊಳಗಣ ಶುದ್ಧಿಯ ಮೆರೆಸಿರಿ ನಿಮ್ಮ
ನಿರ್ವಾಣಪದವಿತ್ತ ಗುರು ಬಸವಣ್ಣನೈ
ಕಪಿಲಸಿದ್ಧಮಲ್ಲಿಕಾರ್ಜುನಾ./1848
ಸಲ್ಲ ದುರಾಗತವು, ಅಯ್ಯಾ.
ನೀನೇಕೆ ಬಾರೆ? ಒಲ್ಲೆಯೇಕೆ? ಹೇಳಾ ಅಯ್ಯಾ,
ನೀ ಬಾರಯ್ಯ,
ಬಂದೆನ್ನ ಹೃದಯ ಮನಸಾಸನಮಾಡಿ ನಿಲ್ಲಯ್ಯ.
ಅಯ್ಯಾ ನೀ ಬಾರಾ, ಬಾರಾ ನಿನ್ನ ಧರ್ಮ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ./1849
ಸಾಂಬನಾಗಲಿ, ಶಿವನೆ ತಾನಾಗಲಿ,
ಪಂಚಭೌತಿಕಕ್ಕೆ ಬಂದ ಬಳಿಕ ಕೇಡೆಂಬುದು ನಿಶ್ಚಯ.
ಭೌತಿಕದಲ್ಲಿ ಕೇಡು ನಿಶ್ಚಯವಲ್ಲದೆ, ಮಹಾ ಅರುಹಿನಲ್ಲಿ ಕೇಡಿಲ್ಲ.
`ತತ್ತ್ವಾತ್ಮಕಂ ವಪುರ್ದೆವಿ ನಾಶಾರ್ಥಂ ಕಾರಣಂ ದೃಢಂ’
ಎಂಬುದು ಪುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./1850
ಸಾಕಾರದ ಲಕ್ಷ ್ಯವದು ನಿರಾಕಾರದಲ್ಲಿ ಲೀನವಲ್ಲದೆ,
ಸಾಕಾರದಲ್ಲಿ ಲೀನವಾಗಬಾರದು.
ಕೀಟ-ಭ್ರಮರ ನ್ಯಾಯದಂತೆ ಚರಿಸಬಲ್ಲಡವನೆ
ನಿರ್ದೆಹ ಜೀವನ್ಮುಕ್ತನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1851
ಸಾಕುವವರು ತಾವಾದ ಬಳಿಕ
ನೂಕುವವರು ತಾವಾಗಬಾರದಯ್ಯಾ.
ಹೇಳಿದವರು ತಾವಾದ ಬಳಿಕ
ಈ ಪ್ರಪಂಚದಲ್ಲೆನ್ನ ಗೋಳಿಡಿಸಬಾರದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./1852
ಸಾಕ್ಷಿ ತಾನಾಗುವಡೆ ಕರಣಾದಿಗಳ ಮಿತ್ರತ್ವವೇನಯ್ಯಾ?
ಆವರ ಮಿತ್ರತ್ವವೆಂಬುದು ಜನ್ಮತರುಲವಿತ್ರವೆ?
ಆಗಬಾರದು, ಆಗಬಾರದು, ಆಗಬಾರದು!
ಸಾಕ್ಷಿಯು ಆಗಬೇಕು ಮಾಡೆನೆಂಬುವುದಕ್ಕೆ,
ಕಪಿಲಸಿದ್ಧಮಲ್ಲಿಕಾರ್ಜುನಾ/1853
ಸಾಕ್ಷಿ ತಾನೆಂದಡೆ ಶಮನ ಕಾರ್ಯಕ್ಕೆ ಶುಭದವಾಯಿತ್ತಯ್ಯಾ.
ಸಾಕ್ಷಿ ತಾನಲ್ಲೆಂದಡೆ ಯಮನ ಕಾರ್ಯ ಬೀಳಾಯಿತ್ತಯ್ಯಾ.
ಸಾಕ್ಷಿಯೆಂಬುದು ವೃತ್ತಿಯಲ್ಲಿ ಒಲ್ಲರೀ ಮಹಿಮರು!
ನಿವೃತ್ತಿಯಲ್ಲದೆಂತಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ?/1854
ಸಾಕ್ಷಿಯೆಂಬುದೆಲ್ಲ ವೃತ್ತಿಯಲ್ಲಲ್ಲದೆ,
ನಿವೃತ್ತಿಯಲ್ಲಿಹುದೇನಯ್ಯಾ?
ರುಚಿಯೆಂಬುದದು ಪದಾರ್ಥದಲ್ಲಲ್ಲದೆ,
ನಿಷ್ಪದಾರ್ಥದಲ್ಲಿಹುದೆ ಅಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1855
ಸಾಗರ ಸತ್ಯವ್ವೆ, ಹಲಬರ ಮುಖಪ್ರಭಾಳೆ, ನೀ ಬಾರವ್ವಾ,
ಕಂಗಳ ಕೋಮಳೆ ಕಿವಿಗಳ ಸಂಬಂಧಿಯೆ, ನೀ ಬಾರವ್ವಾ.
ಆತನ ಕಂಗಳ, ಕಿವಿಗಳ ಪರಿಯಾಣಕ್ಕೆ
ಚೊಕ್ಕ ಸರದೋಗರನೆತ್ತುವೆ, ನೀ ಬಾರವ್ವಾ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯಂಗೆ./1856
ಸಾಗರದ ಮಧ್ಯದ ಸಾಧಿಸುವ ಬಹಿರಂಗ
ಆಗಮಂಗಳಿಗದು ಹೊರಗು ತಾನು.
ಯೋಗಕ್ಕೆ ಮೂಲವದು, ಯೋಗಕ್ಕೆ ಸಿದ್ಧವದು,
ಯೋಗಕ್ಕೆ ಅತ್ಯಂತ ಪರಮಸೀಮೆ.
ಸಾದಾಖ್ಯ ತತ್ವದ ಸಂದು ಸವದರಿಗಿಲ್ಲ,
ಅದ್ಯಕ್ಷರದ್ವಯದ ಪರಿಯಿಂತುಟು.
ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ
ಭೇದಿಸುವ ಯೋಗಿಯನು ಕಂಡು ನಗುವೆ./1857
ಸಾದಾಖ್ಯ ದೇಹದ ಆದ್ಯಂತ ಶೂನ್ಯದ
ಆಮೋದದಕ್ಷರವು ಕಂಗಳಾಗಿ
ಆನಂದ ರೂಪು ಕಪಿಲಸಿದ್ಧಮಲ್ಲಿಕಾರ್ಜುನನ
ನೇಮಾಕ್ಷರದ ರೂಪಕಳೆಯ ಪೇಳುವೆನಯಾ/1858
ಸಾದಾಖ್ಯ ದೇಹದಲಿ ಭೇದಿಸೇನೆಂದೆಂಬೆ
ಆ ಅಕ್ಷರದ್ವಯದ ಪರಿಯಿಂತುಟು.
ಮೋದವಾಮೋದದ ಆನಂದದತಿಶಯದ ಸಂಗವಿಂತು,
ನಾದಬಿಂದುಕಳಾತೀತ
ಕಪಿಲಸಿದ್ಧಮಲ್ಲಿಕಾರ್ಜುನನ
ಭೇದ ಭೇದಿಗೆ ಅಲ್ಲದೆ ವೇದ್ಯವಲ್ಲ./1859
ಸಾಧಿಸಲಸಾಧ್ಯ ನೋಡಾ, ಸಾಧಿಸಬಾರದ ವಸ್ತುವ.
ಸಾಧಿಸಲಸಾಧ್ಯ ನೋಡಾ, ಸಾಧಿಸಬಾರದ ಮಹಾಜ್ಞಾನವ
ಸಾಧಿಸಲಸಾಧ್ಯ ನೋಡಾ,
ಸಾಧಿಸಬಾರದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ನಿರ್ವಂಚಕತ್ವವ./1860
ಸಾರಗ್ರಾಹಿಗಳಿಬ್ಬರು ಕೇಳಿರಯ್ಯಾ.
ಕೊಡನೆಂಬನ ಬಳಿಬಳಿಯಲ್ಲಿ
ಕೊಟ್ಟಾರ ಬರುತ್ತಿಪ್ಪುದೇಕೆಯಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ,
ಕಟ್ಟಿತ ಕಳೆಯಲಾರದೆ
ಇಟ್ಟುದನೋಸರಿಸಲಾರದೆ ಬಪ್ಪರಯ್ಯಾ/1861
ಸಾರಧಿಯ ಮುಳ್ಳು ಕೊನೆಯಲ್ಲಿ ಸಾಗರವಡಗುವುದೆಂತಯ್ಯ?
ಬಾವಿಗೆ ಸೊಲ್ಲಗೆಯೊಳಗೆ ಲೋಕವಡಗುವುದೆಂತಯ್ಯ?
ಈ ಪರಿಗಳ ಈ ಭಕ್ತರ ಹೃದಯದಲ್ಲಿಪ್ಪ
ಕಪಿಲಸಿದ್ಧಮ್ಲನಾಥಯ್ಯ./1862
ಸಾಲೋಕ್ಯ ಪದ ಮೀರಿ ಸಾಮೀಪ್ಯ ಪದ ಮೀರಿ
ಸಾಯುಜ್ಯ ಪದವೀವ ಆತನನು
ವಶಮಾಡಿ ತಂದೆನ್ನ ಕರದೊಳಿತ್ತಾ ಗುರು
ಕಪಿಲಸಿದ್ಧಮಲ್ಲಿಕಾರ್ಜುನಾ./1863
ಸಾಲೋಕ್ಯದಲ್ಲಿಪ್ಪರು ಕೋಟ್ಯನುಕೋಟಿ;
ಸಾಮೀಪ್ಯದಲ್ಲಿಪ್ಪರು ಕೋಟ್ಯನುಕೋಟಿ;
ಸಾರೂಪ್ಯದಲ್ಲಿಪ್ಪರು ಕೋಟ್ಯನುಕೋಟಿ;
ಸಾಯುಜ್ಯದಲ್ಲಿಪ್ಪರು ಕೋಟ್ಯನುಕೋಟಿ;
ನಂದಿವಾಹನರನೇಕ, ಗೌರೀರಮಣರನೇಕ;
ಸಿಂಧುಜೂಟರನೇಕ, ಚಂದ್ರಮೌಳಿಗಳನೇಕ.
ಇಂತಪ್ಪ ಗಣಂಗಳ ರೋಮದಲ್ಲಿ ಅನೇಕ ಬ್ರಹ್ಮಾಂಡಗಳು.
ಇಂತಪ್ಪ ಗಣಂಗಳು-
ವೀರಭದ್ರದೇವರ ಜೆಡೆಮುಡಿಕೇಶಂಗಳಲ್ಲಿ ಅನಂತಗಣಂಗಳುದಯ
ವಿಸ್ತಾರವು.
ಇದೇನು, ನಿಮ್ಮಿರವಿಗೆ ದುರ್ಲಭ ಮಹತ್ವವೆಂಬೆನೆ?
ಕಪಿಲಸಿದ್ಧಮಲ್ಲಿಕಾರ್ಜುನಾ./1864
ಸಿಂಬಿಗೆ ರಂಭೆತನವುಂಟೆ?
ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ?
ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ?
ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ ನೀ
ಬಂದೆಯಲ್ಲಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ
ಪ್ರಭುದೇವರ ಕಾರುಣ್ಯದಿಂದ ಬದುಕಿದೆ./1865
ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ,
ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ?
ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ,
ಪಂಜರದಲ್ಲಿ ಹಾರದು ನೋಡಯ್ಯಾ.
ನಮ್ಮ ಕಪಿಲಸಿದ್ಧಮಲ್ಲೇಶನನರಿವವರು
ಜ್ಙಾನದ ಮೇಲೆ ಹಾರುವರಲ್ಲದೆ ಅಜ್ಙಾನದಲ್ಲಿ ಹಾರರು./1866
ಸಿದ್ಧಸಿದ್ಧರುಗಳೆಲ್ಲ ರಸವಾದವ ಕಲಿತು ಬಂಧನಕ್ಕೆ ಗುರಿಯಾದರು.
ಅಮೃತವ ಸೇವಿಸಿದ ಸುರರೆಲ್ಲ ಪ್ರಳಯಕ್ಕೆ ಗುರಿಯಾದರು.
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಅರಿದವರೆಲ್ಲ
ಬಯಲಿಗೆ ಬಯಲಾದರು./1867
ಸಿದ್ಧಾಂತಿಯ ಜ್ಞಾನ ಸಾಧನೆಯಲ್ಲಿ ಹೋಯಿತ್ತು.
ವೇದಾಂತಿಯ ಜ್ಞಾನ ವಾದದಲ್ಲಿ ಹೋಯಿತ್ತು.
ಕ್ರಿಯಾವಂತನ ಜ್ಞಾನ ನುಡಿಯಲ್ಲಿ ಹೋಯಿತ್ತು.
ವ್ಯರಹಾರಿಕನ ಜ್ಞಾನ ದ್ರವ್ಯಾರ್ಜನೆಯಲ್ಲಿ ಹೋಯಿತ್ತು.
ಇವೆಲ್ಲ ಭವಕ್ಕೆ ಕಾರಣವಲ್ಲದೆ,
ಭವರಹಿತ ಜ್ಞಾನವು ಸಾಧ್ಯವಾಗುವುದದು ದುರ್ಲಭವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1868
ಸಿರಿಯಾಯಿತ್ತೆಂದು ಉತ್ಸಾಹದಿಂದುಬ್ಬದೆ
ಕೆಟ್ಟಿತ್ತೆಂದು ಮನನೊಂದು ಖಿನ್ನವಾಗದಂತೆ
ಇರಬೇಡಾ, ಹಿರಿಯರ ಮನ?
ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಗುಣ ಎನ್ನನೆಂದು ಹೊದದಿಪ್ಪುದು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1869
ಸೀಮೆ ಸಂಗಮದಲ್ಲಿ ಲೀಯವಪ್ಪಾತ ಗುರು.
ಆರೂಢದೈಕ್ಯದಲಿ ಲೀಯವಾಗಿ
ಆರಾರನತಿಗಳೆದ ಆನಂದಮೂರ್ತಿಯನು
ತೋರಬಲ್ಲಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ./1870
ಸೀಮೆ ಸಂಬಂಧಗಳ ಮೀರಿಪ್ಪ ಮಂತ್ರಕ್ಕೆ
ರಾಜಮಂತ್ರನು ತಾನು ಪಂಚಾಕ್ಷರಿ.
ಪಂಚಾಕ್ಷರಿಯ ಗುಣದ ಬಸವಾಕ್ಷರತ್ರಯದ
ಧ್ಯಾನ ಮೌನದ ಗುಣದ ಸತ್ವವಿಡಿದು,
ಆನಂದ ತ್ರೈಲಿಂಗ ಮೂಲಮಂತ್ರಕ್ಕೀಗ
ಬಸವಾಕ್ಷರವು ಮಾತೆ ಕಪಿಲಸಿದ್ಧಮಲ್ಲಿಕಾರ್ಜುನಾ./1871
ಸೀಮೆ ಸಂಬಂಧಗಳ ಮೀರಿಪ್ಪ ಮಂತ್ರಕ್ಕೆ
ರಾಜಮಂತ್ರವು ತಾನು ಪಂಚಾಕ್ಷರಿ.
ಪಂಚಾಕ್ಷರಿಯ ಗುಣದ, ಬಸವಾಕ್ಷರತ್ರಯದ,
ಧ್ಯಾನಮೌನದ ಗುಣದ ಸತ್ವವಿಡಿದು,
ಆನಂದ ತೆಂಗ ಮೂಲಮಂತ್ರಕ್ಕೀಗ
ಬಸವಾಕ್ಷರತ್ರಯವು ಮಾತೆಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1872
ಸೀಮೆ ಸಂಬಂಧವನು ಮೀರಿಪ್ಪ ಎನ್ನುವನು,
ಕಾಮ್ಯಾರ್ಥದಿಂದಲೊಲಿದು ಅರ್ಚಿಸದಿರಾ.
ನಿಷ್ಕಾಮ್ಯ ಆರೂಢ ಕಪಿಲಸಿದ್ಧಮಲ್ಲಿಕಾರ್ಜುನ
ನಿಷ್ಪಹತಿಗಿವರನ್ನ ಪದವ./1873
ಸೀಮೆಗೆಟ್ಟ ಸಂಬಂಧಸ್ಥಾನದಲ್ಲಿ
ಆನು ನೀನಾದ ಪರಿ ತಾನೆಂತುಟೊ?
ಇಷ್ಟಂಗದ ಪೂಜೆ ಮತ್ತೆ ಭವದಾಗರಕೆ
ತಂದಿಳುಹಿತ್ತು ನೋಡು ನೋಡಾ.
ಮತ್ತೆ ಚರಲಿಂಗ ಪೂಜೆಯ ಮಾಡಲಿಕ್ಕಾನು
ಮುತ್ತೆರಡು ಆದೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1874
ಸೀಮೆಗೆಟ್ಟಾ ಬ್ರಹ್ಮದಾನತದ ಸಂಬಂಧ,
ಆ ಅಕ್ಷರವೈದ ಮುಖವ ಮಾಡಿ,
ಭಾವ ಮನ ಕರಣದ ಹೊರಗಿಟ್ಟು ಸರ್ವಾಂಗವನು
ವೇಧಿಸಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ./1875
ಸೀಮೆಯ ಮೀರಿದ ಸಂಬಂಧನೆ,
ಸಂಬಂಧದಲ್ಲಿ ಸಮನಿಸದ ಸಂಯೋಗನೆ,
ಎನ್ನ ಸಲಹುವ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದಕ್ಕೆ
ಅರ್ಹನ ಮಾಡಿದೆ.
ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀ ಬಸವನಾಗಿ ಬಂದು ನಿನ್ನವರಿಗೆ ಯೋಗ್ಯನ ಮಾಡಿ,
ಭವವ ತಪ್ಪಿಸಿದೆ./1876
ಸೀಮೆಯ ಮೀರಿದ ಸಂಬಂಧಿಯ,
ಗ್ರಾಮವ ಮೀರಿದ ಅನಾಮಿಕನ,
ಆದ್ಯಕ್ಷರದ ಭೇದ ತಾನಾದ ಅನ್ಯಯಕಾರಿಯ,
ನಾದದೊಳಗಣ ಬಿಂದು,
ಬಿಂದುವಿನೊಳಗಣ ಭೇದ,
ಭೇದದೊಳಗಣ ಕಳೆ,
ಕಳೆಯೊಳಗಣ ಸಂಯೋಗ,
ಸಂಯೋಗದಲ್ಲಿ ಸಂಬಂಧಿ, ವಿಯೋಗದಲ್ಲಿ ನಿತ್ಯ.
ತಾತ್ಪರ್ಯವರ್ಮ ಕಳೆಗಳನರಿದಂಥ ಮುಕ್ತ
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ
ಉರುತರ ತಾತ್ಪರ್ಯ./1877
ಸೀಮೆಯ ಮೀರಿದ ಸಿರಿವಂತನೆ,
ಪದವ ಮೀರಿದ ಬಹುರೂಪನೆ,
ಆನಂದ ಆನಂದವಾದ ನಿತ್ಯ ಸಾನಂದನೆ,
ಸುಗುಣದಲ್ಲಿ ಬೆಳಗುತಿಹ ನಿತ್ಯ ಸಾನಂದನೆಲೆ ಅಯ್ಯಾ,
ನಿನ್ನಾನಂದವನಾರು ಬಲ್ಲರು?
ನೀನು ಲಿಂಗತ್ರಯದೊಳಗೆ,
ಎರಡೈದು ಪಾದೋದಕದ,
ಐದಾರು ಕೂಡಿದ ಪ್ರಸಾದದಲ್ಲಿ,
ನಿತ್ಯಸುಖಿಯೆಂಬುದ ಸತ್ಯಶುಚಿಯೆಂಬುದ ನಿನ್ನವರೆ ಬಲ್ಲರು.
ಜಡವಿಡಿದು ನುಡಿವ ಅಜ್ಞಾನಿ ಹೊರಸುಗಳು ಬಲ್ಲರೆ?
ಕಪಿಲಸಿದ್ಧಮಲ್ಲಿಕಾರ್ಜುನಾ./1878
ಸೀಮೆಯನು ದಾಟಿಪ್ಪ ಸಂಬಂಧಿ ತಾನಲ್ಲ
ಆನತದೊಳಗೆ ತನು ಬ್ರಹ್ಮ ತಲ್ಲೀಯ.
ಶುದ್ಧ ಸಾನಂದ ತಾನೆ
ಕಪಿಲಸಿದ್ಧಮಲ್ಲಿಕಾರ್ಜುನಾ./1879
ಸೀಮೆಯುಳ್ಳನ್ನಬರ ತಾನು ತನ್ನಂಗವಾಗಿರಬೇಕು,
ಅನ್ಯಂಗವಾಗದೆ.
ಅನ್ಯಂಗ ಅನ್ಯಂಗವೆ?
ಗುರುಕರುಣಂದ ತನ್ನಂಗ ಅನ್ಯಂಗವಾದಡೆ
ಸೀಮೆಯ ಸಂಬಂಧಿ ತಾನಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಅಚ್ಚ ಶರಣನು./1880
ಸುಖಕ್ಕೆ ದೈವವೆಂದು, ಸುಖಕ್ಕೆ ವಿಧಿಲಿಪಿಯೆಂದು,
ಸುಖಕ್ಕೆ ಪುಣ್ಯವೆಂದು, ಸುಖಕ್ಕೆ ಪ್ರಾರಬ್ಧವೆಂದು,
ನುಡಿವರಯ್ಯಾ ಸಿದ್ಧಾಂತಿಗಳು.
ಸುಖವೆ ದೈವವೆನಲಾಗಿ ಮಾಡುವ ಕ್ರಿಯೆಯಲ್ಲರಿಯಬಂದಿತ್ತು.
ಸುಖವು ದೈವವಲ್ಲ;
ದೈವವದು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಕೂಟವು./1881
ಸುಖಮುಖವಾಗಿ ಸುಖಾಸೀನವಾಗಿ
ಆಧಾರಜ್ಞಾಲೆಯನೆತ್ತಿ ಕುಂಡಲಿಯ ಭುಜಗನ ಹೊಡೆದೆಬ್ಬಿಸಿ
ದಂಡನಾಳದ ತುದಿಯ ಮುಂದಣ ಮುಂಬಾಗಿಲ ಕಳೆದು
ನೋಡಲು
ತ್ರಿಕೂಗಿರಿಯಗ್ರದಲ್ಲಿಮೇಲೆ ಸಿಂಹಸನವಿಕ್ಕಿ
ನಿಸ್ಸೀಮ ಕುಳ್ಳಿರ್ದನಯ್ಯಾ ನಮ್ಮ ನಿಜಗುರು ಸ್ವತಂತ್ರ
ಕಪಿಲಸಿದ್ಧಮಲ್ಲಿಕಾರ್ಜುನ ದೇವರದೇವನು./1882
ಸುಖವ ಹಡೆದೆನೆಂದು ಹಡೆದಡೆ,
ನಿಬ್ಬೆರಗಂದ ಕೈಕೊಂಬುದೀ ದುಃಖವ.
ದುಃಖಕ್ಕೆ ಎಡೆಯಿಲ್ಲ;
ಸಂಸಾರದೊಳಗಣ ಸುಖವಿಂತುಟು.
ಮತ್ತಂ ಕಡುದುಃಖವಪ್ಪುದು.
ಈ ದುಃಖವನೆಂದಿಂಗೆ ನೀಗಿ, ಎಂದು ನಿಮ್ಮೊಡಗೂಡಿ
ಬೇರಾಗದೆಂದಿಪ್ಪೆನೊ, ಕಪಿಲಸಿದ್ಧಮಲ್ಲಿಕಾರ್ಜುನಾ./1883
ಸುಗಂಧ ಎಣ್ಣೆ ನೀರಡಿಕೆಗೆ ಕುಡಿಯಬಹುದೆ?
ಬಂಗಾರದ ಸಲಾಕೆ ಎದೆಯಲ್ಲಿ ಒತ್ತಬಹುದೆ?
ವಜ್ರದ ತುಂಡು ತಿನ್ನಬಹುದೆ?
ಗುರುಭಕ್ತಿಯಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಶರಣನ
ನುಡಿಯ ಕೇಳಿ ಸುಮ್ಮನಿರಬಹುದೆ?/1884
ಸುಗತಿಯೆಂಬ ಪಟ್ಟಣದಲ್ಲಿ ನಿತ್ಯವೆಂಬ ತಾಳತ್ರಯದೊಳಗೆ
ಆರರ ಗೀತವ ತಪ್ಪದೆ ಹಾಡುತ್ತಲಿ,
ಮೂವತ್ತಾರು ರೂಪುಗಳೆಂಬವನೆ ಮೀರಿ,
ಈ ಮೂವತ್ತಾರರಲ್ಲಿ ಜವನಿಕೆಯುಡುಗೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀ ಕೊಡುವುದಕ್ಕೆ ಏನೂ ಇಲ್ಲದಿರೆ ನಿನ್ನನೆ ಒಚ್ಚತಗೊಟ್ಟಡೆ
ನಾ ಕರ ಬೆರಗಾದೆನು./1885
ಸುಗುಣಮಣಿಮಾಲೆಗಳಗಣಿತ ಮಹಿಮನ ಹೊಂದಲಶಕ್ಯವಲ್ಲ.
ಕುಗುಣಿಗಳಂತರಂಗ ಶಿವನಲ್ಲಿ ಬೆರೆಯಲುದಯವಾದಡೆ,
ಅಲ್ಲಿ ಉಪಾಯವೆಂತು ಕಪಿಲಸಿದ್ಧಮಲ್ಲಿಕಾರ್ಜುನಾ? /1886
ಸುಚಿತ ಕರದಲಿ ಗುರುವ ಪ್ರಾಣಾಂತದ ಚರವ
ಭೇದಾದಿ ಭೇದದಲಿ ಶುದ್ಧಂಗವ ಮಾಡಿ
ಏಕಏಕವೆಂದು ಅರ್ಚಿಸಿ ಪ್ರಸನ್ನ ಪ್ರಸಾದವ ಕೊಂಡು
ಗುರುವಿನ ಪೂರ್ವಾಶ್ರಮವ ಕಳೆದ ಶಿಷ್ಯ
ಕಪಿಲಸಿದ್ಧಮಲ್ಲಿಕಾರ್ಜುನಾ./1887
ಸುಜನ ಸಂಗತಿಯೊಳಗೆ ಅವ್ಯಯನು ತಾನೀಗ
ಭಜಿಸಿ ಅರಸುವವರಿಗೆ ತಾನು ಸಿಕ್ಕ.
ತನುವನ್ನು ಬೇಡದೆ ಅನ್ಯವನು ರಕ್ಷಿಸಿದೆ
ಉನ್ನತವು ಸದ್ಭಕ್ತಿ ಸೊಮ್ಮದಾತ
ಕರ್ಮವನು ಮೀರಿದನು ಕೇಳ.
ಅತಿಶಯದ ಭಕ್ತಿಯಲ್ಲಿ ದಿಟಘಟಿತ ಸಂಪನ್ನ
ನಿತ್ಯ ಭಕ್ತಿ ಸನ್ನಿಹಿತ ನಿಟಿಲಾಕ್ಷನು
ಕುಟಿಲಗಳೆದಾನೀಗ ಕಂಡು ಸುಖಿಯೈ
ಕಪಿಲಸಿದ್ಧಮಲ್ಲಿಕಾರ್ಜುನಾ./1888
ಸುರಭಿಮಧ್ಯದಲಿಪ್ಪ ವಿರಳಕೂಪವ ನೋಡೆ
ಅರಿದಯ್ಯ ಅರಿದಯ್ಯ ಭಕ್ತಿಪಥವು.
ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರಾ,
ತೆರಹಿಲ್ಲದಭವನೆ ಕುರುಹುಗೆಡಿಸಾ./1889
ಸುರುಚಿರ ಸ್ಥಾನದಲ್ಲಿ ಮೂರು ಗುಂಡನಿಟ್ಟು ಸುಡುತೈದಾರೆ
ಕಾಯ ಕರಣೇಂದ್ರಿಯ ಗುಣಂಗಳ ಹುಳ್ಳಿಯ ಮಾಡಿ.
ಕಾಯ ಕರಣೇಂ್ರಯಗಳ ಹುಳ್ಳಿ ಸವೆದು ಅಜಲೋಕವ ತಾಗಿ,
ಅಲ್ಲಿರ್ದ ಶ್ವೇತಜಲ ಪ್ರವಾಹವಾಗೆ, ಅದನುಂಡು,
ನಿತ್ಯಮಹೋತ್ಸಾಹನಾದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ./1890
ಸುವರ್ಣಕ್ಕೆ ಅಲಂಕಾರಕ್ಕೆ ಭೇದವುಂಟೆ ಅಯ್ಯಾ?
ಜ್ಯೋತಿಗೆ ಪ್ರಕಾಶಕ್ಕೆ ಭೇದವುಂಟೆ ಅಯ್ಯಾ?
ನೂಲಿಂಗೆ ಪಟಕ್ಕೆ ಭೇದವುಂಟೆ ಅಯ್ಯಾ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ,
ಚೆನ್ನಬಸವಣ್ಣಂಗೆ ನನಗೆ ಭೇದವುಂಟೆ ಅಯ್ಯಾ?
ಇಲ್ಲ ನೋಡಾ ಪ್ರಭುವೆ./1891
ಸೂಕ್ಷ ್ಮಕರದಲ್ಲಿ ಶುದ್ಧಸಿಂಹಾಸನವನಿಕ್ಕಿ
ಆಕಾರವನರ್ಚಿಸಿ
ಆನಂದವನೆಯ್ದಿಪ್ಪವರನೆನಗೆ ತೋರ!
ನೆನಹೆ ಮನೆಯಾಗಿ, ಆ ಮನೆಯೆ ಮತಿಯಾಗಿ,
ಆ ಮತಿಯೆ ಮಹಾಬೆಳಗಿನ ಕೂಟವಾಗಿ ಇಪ್ಪವರ ಎನಗೆ
ತೋರಾ,
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಾ./1892
ಸೂಕ್ಷ ್ಮನೈ ನೀನು.
ಲೋಕವೀರೇಳರ ಧಾರಣೆ ರೋಮಾಂತ್ಯದಲ್ಲಿ
ಬಹಳವಪ್ಪನ ಅಯ್ಯ ನಿಮ್ಮ
ಸೂಕ್ಷ ್ಮಮಂ ಮಾಡಿ ಇತ್ತ ಗುರು ಚೆನ್ನಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1893
ಸೂಕ್ಷ್ಮವದು ಮೊದಲಲ್ಲೆ ನಿರ್ವಯಲವಯ್ಯಾ.
ಸ್ಥೂಲವದು ಅಂದಂಂಗೆ ನಿರ್ಮಲ ನೋಡಯ್ಯಾ.
ಅರವೇಷಿ ್ಕರುಗುವ ಊರ ತೊಳೆಯಲೆ ಬೇಕು.
ಅಂತರಂಗ ಬಹಿರಂಗದ್ಲ ನಿರ್ಮಲ ಸದಾಚರಣೆಯೆ ಬೇಕು
ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ./1894
ಸೂತಕ ಪಾತಕ ವಿರಹಿತವಾದಡೆ,
ಆತನ ತನು ಸಾಕ್ಷಾತ್ ಶಿವನ ತನು;
ಆತ ನಿತ್ಯ ಕೇವಲ ಮುಕ್ತ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ,
ಶಿವಲಿಂಗವಿಡಿದ ಮಾಹೇಶ್ವರನು./1895
ಸೂತ್ರವ ಬಿಟ್ಟಿತೆಂದು ಸಂದೇಹಗೊಳ್ಳದಿರಾ, ಮನುಜರಿರಾ.
ಸೂತ್ರವಿದ್ದ ನಿಮ್ಮಂಗಕ್ಕೆ ಸೂತ್ರವಾದನಯ್ಯಾ ಲಿಂಗಮೂರ್ತಿ.
ಸೂತ್ರ ತಪ್ಪಿತ್ತೆಂಬಲ್ಲಿ ಸೂತ್ರ ತಪ್ಪಿಲ್ಲ,
ನಿಮ್ಮ ಮನಸ್ಸೂತ್ರವೆ ತಿನ್ನವಾಯಿತ್ತಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ./1896
ಸೇವ್ಯನಾಗಿ ಸ್ವಯವಾದೆ, ಸಂಗಿಯಾದೆ ನಿಸ್ಸಂಗಿಯಾದೆ.
ಆನಂದನಾಗಿ ಅನಾಮಯನಾದೆ.
ಸರ್ವದೊಳಗಾಡಿ ಸಾದಾಖ್ಯತತ್ವವ ಮೀರಿದೆ.
ಕಪಿಲಸಿದ್ಧಮಲ್ಲಿಕಾರ್ಜುನಲಿಂಗಾ,
ನಿಜಸ್ವರೂಪವನರುಹಿ ಎನಗೆ ಚುಳುಕಾದೆ./1897
ಸೊಲ್ಲಡಗಿ ಅಲ್ಲ್ಲಲ್ಲಿ ಹದುಳಿಗನಾಗಿದ್ದೆನೆಲೆಯಯ್ಯ.
ಎಲ್ಲಾ ಠಾವಿನಲ್ಲಿ ನೀನಿಪ್ಪನೆಂದು ತೊಳಲಿ ಬಳಲಿ ಬಂದೆ.
ಸಲ್ಲಿತ ಗುರುವೆ,
ಎನಗೆ ಸೊಲ್ಲನರುಹಿ ಬ್ರಹ್ಮವಿಪ್ಪ ನೆಲೆಯ ತೋರಿದ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1898
ಸೊಲ್ಲಿಗೆ ಒಂದು ಖಂಡುಗ ನವಣೆ ನುಂಗಿತ್ತಯ್ಯಾ.
ಆ ನವಣೆಯ ಹೊಯ್ದಳೆಯಬೇಕೆಂದಡೆ ಸ್ಥಲ ಸಾಲದಯ್ಯಾ-
ಹಲಬರು ಛಲವಿಡಿದುವಿಡಿದು ಹೊಲಬುಗೇಡಿಯಾದರು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./1899
ಸೋಂಕಿನ ಸುಖ ಮೊದಲಾದವನೆಲ್ಲವನು ಚರಂಗಕ್ಕರ್ಪಿಸುವೆ.
ಆ ಅರ್ಪಿತಮುಖದಲ್ಲಿ ಇಷ್ಟಲಿಂಗವನರಿಯದೆ
ಚರಲಿಂಗಕ್ಕರ್ಪಿಸುವೆ.
ಆ ಚರಂಗಕ್ಕರ್ಪಿಸಿ ಮಿಕ್ಕ ಶೇಷವನು ಇಷ್ಟಲಿಂಗಕ್ಕೆ ಓಗರವಾಗಿ
ನೀಡಿ,
ಪ್ರಸಾದವಾಗಿ ಕೈಕೊಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ./1900
ಸೋಹಂ’ ಎಂಬುದದು ಅಂತರಂಗದ ಮದ ನೋಡಯ್ಯಾ.
`ಶಿವೋಹಂ’ ಎಂಬುದದು ಬಹಿರಂಗದ ಮದ ನೋಡಯ್ಯಾ.
ಈ ದ್ವಂದ್ವವನಳಿದು `ದಾಸೋಹಂ’ ಎಂದೆನಿಸಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ./1901
ಸೋಹಂ’ ನೀನೆ ಎಲೆ ಅಯ್ಯಾ;
`ಕೋಹಂ’ ತತ್ವತೂರ್ಯಾರ್ಥವೂ ನೀನೆ ಅಯ್ಯಾ.
`ನಾಹಂ ನಾಹಂ’ ನೀನೆ ಅಯ್ಯಾ.
ಆನೆಂಬುದೊಂದು ಭ್ರಾಂತುಂಟೆ?
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಗುರುವಿನ ಕೈಯಲು ಆನು ಸತ್ತು ಹುಟ್ಟಿದ ಬಳಿಕ
ಆನು ನೀನೆಂಬ ಸಂದನಳಿದೆ./1902
ಸೋಹಂ ಪದಾಜ್ಞೆಯ ಆನತವನರುಹಿಸದೆ
ದಾಸೋಹಮಿತಿ ಸಂಗಮದೊಳತಿಭಕ್ತಿಯಿಂ
ಆನಂದ ಬ್ರಹ್ಮಲೋಕವ ಲೋಕಿಸಿದಿರೆನ್ನ ಚೇತನವು ಸಕಲಕ್ಕೆ ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ./1903
ಸ್ತೋತ್ರವೆಂಬುದು ನೀನು ಮಾಡಲಾದವು ಕಂಡಯ್ಯಾ.
ಮೂರ್ತಿಯೆಂಬುದು ನೀನು ನೆನೆಡಾದುದು ಕಂಡಯ್ಯಾ.
ಆ ಮೂರ್ತಿಯೆಂಬುದು ನಿನ್ನ ಸ್ವಭಾವವು ಕಂದಯ್ಯಾ.
ಎನ್ನ ಹೃತ್ಕಮಲದೊಳಗೆ ಹುಟ್ಟುವ ಸ್ಮರಣೆ
ನಿನ್ನ ಗತಿ ನೋಡಯ್ಯಾ.
ಕಪಿಲಸಿದ್ಧಮಲ್ಲನಾಥಯ್ಯಾ,
ಬಾಣ ಮಯೂರ ಹಲಾಯುಧರಿಗೆಂತೊಲಿದೆ ಹೇಳಯ್ಯಾ./1904
ಸ್ತ್ರೀಯರ ಮೂವರ ಮುಂದುಗೆಡಿಸಿತ್ತು ಮೋಹ,
ಅರಿಯರವ್ವಾ, ತಾವೊಂದು ದೇಹವುಂಟೆಂದೆಂಬುದ.
ಅರಿಯರವ್ವಾ ತಾವೊಂದು ರೂಪುಂಟೆಂದೆಂಬುದ.
ತ್ರಿಗುಣಾತ್ಮಕವೇ ರೂಪಾಗಿ, ರೂಪು ಅರೂಪಾದಡೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆರೆವ ನೆನಹಿನಲ್ಲಿಲೀಯವಾದರು./1905
ಸ್ಥಲ ಹದಿನಾಲ್ಕಕ್ಕೆ ಜಲಂಗಳೇಳಾಗಿ
ಪರಿವೇಷ್ಟಿಸಿಕೊಂಡಿಪ್ಪುದು.
ಆ ಸ್ಥಲ ಜಲಾದಿಗಳಿಪ್ಪವು ಒಂದು ವಟವೃಕ್ಷದ ಪತ್ರದಲ್ಲಿ.
ಇಂಥ ವಟವೃಕ್ಷಂಗಳು ಹದಿನಾಲ್ಕನು
ಅವಗ್ರಹಿಸಿಕೊಂಡಿ[ಪ್ಪ]ನಿನ್ನಯ ಸೀಮೆ
ಸರ್ವಾಂಗವನವಗ್ರಹಿಸಿಕೊಂಡಿಪ್ಪುದು
ಎಮ್ಮ ಶರಣರ ಕರಸ್ಥಲವಾವುದ
ಘನವೆಂಬೆವಾವುದ ಕಿರಿದೆಂಬೆನೆಲೆಯಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಾ./1906
ಸ್ಥಲವಿಡಿದಾಚರಿಸಬೇಕೆಂಬನ ಭಾಷೆ ಬಾಲಭಾಷೆ.
ಭಕ್ತನಾಗಿ, ಭಕ್ತಸ್ಥಲವಾವರಿಸುವುದದು ಯೋಗ್ಯವಯ್ಯಾ.
ಭಕ್ತನಾಗಿ, ಮಹೇಶಸ್ಥಲ ಅಳವಡಬಾರದೇನಯ್ಯಾ?
ಭಕ್ತನಾಗಿ, ಮಹೇಶ ಪ್ರಸಾ ಪ್ರಾಣಂಗಿ ಶರಣ ಐಕ್ಯಸ್ಥಲ
ಅಳವಡಬಾರದೇನಯ್ಯಾ?
ಮನೆಯ್ಲದ್ದ ಲೆತ್ತಗಳು ಮನೆಯ ಮೀರಿ ಮೀರಿ
ಹಾರಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./1907
ಸ್ಥಳವೊಂದರಲ್ಲಿ ಕೂಪಂಗಳು ಹಲವಾಗಿ ಭವಿಸುತ್ತೈದಾವೆ.
ಮೊದಲಲ್ಲ್ಲಿ ಮೂರು, ಅಂತರದಲ್ಲಿ ಆರು,
ಪರಸ್ಥಾನದಲ್ಲಿ ಒಂಬತ್ತು.
ವೈನೈಯೆಂಬ ಅಕ್ಷರದ ಮೊದಲ ಬಹುಶ್ರುತವಪ್ಪ ಕಮಲ
ವಿಚಿತ್ರಾಂದೋಳನೆಂಬ ಭ್ರಮರ
ಪರಿಮಳವ ಸೂಸಿ ಬೀಸರವೋಗಲೀಯದೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ
ಸರ್ವಸ್ವವನರ್ಪಿಸಿ ಸುಖಿಯಾಯಿತು./1908
ಸ್ಥೂಲ ಸೂಕ್ಷ ್ಮ ಕಾರಣನೆಂದೆಂಬರಲ್ಲಾ ನಿನ್ನನು.
ಅದರ ಹಿಂದು ಮುಂದನರಿಯರು:ಬಂದ ಹಾಂಗೆ ನುಡಿವರು.
ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ.
ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು;
ಅದು ಸ್ಥೂಲವೆ? ಅಲ್ಲ, ಹಾಂಗಿರಲಿ.
ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು
ಕೊಟ್ಟ ಲಿಂಗವೀಗ ಸ್ಥೂಲ.
ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ
ಕಾರಣ ಸೂಕ್ಷ ್ಮವಾದ.
ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ.
ಎಲೆ ಗುರುವೆ, ಲಿಂಗವೆ, ಜಂಗಮವೆ,
ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು?
ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು. /1909
ಸ್ಥೂಲ ಸೂಕ್ಷ ್ಮ ಕಾರಣವೆಂಬ ತನುಗಳ ಭೇದಂಗಳ
ಭೇದಿಸುವ ಪರಿಯನರಿದೆನಯ್ಯಾ ನಿಮ್ಮಲ್ಲಿ.
ನೀ ಕಾರಣತನುವಾಗಿಪ್ಪಲ್ಲಿ ಅರಿದೆ.
ಮಹಾಕಾರಣವ ಅರಿದು ಅನಾಮಯನಾದೆ.
ಸ್ಥೂಲದಲಿ ಶುದ್ಧನಾದೆ, ಸೂಕ್ಷ ್ಮದಲಿ ಸಿದ್ಧನಾದೆ, ಕಾರಣದಲಿ
ಪ್ರಸಿದ್ಧನಾದೆ.
ನಿಮ್ಮ ಕರುಣಕಾನನದಲಿ ಕಂಗೆಟ್ಟೆ,
ಕಪಿಲಸಿದ್ಧಮಲ್ಲಿಕಾರ್ಜುನಾ/1910
ಸ್ಥೂಲದೇಹ ತೊಳೆದಡೇನು, ಸೂಕ್ಕ್ಷ್ಮದೇಹ ಶುದ್ಧವಾದಡೇನು.
ಕಾರಣಾತೀತನಾಗದನ್ನಕ್ಕ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನಾ ಯೋಗಿಯಾದಡೇನು
ಮನವೊಲಿದು ಚೆನ್ನಬಸವಣ್ಣ ಲಿಂಗವ ಕೊಡದನ್ನಕ್ಕ ?/1911
ಸ್ಥೂಲವಾದಡೇನು ಸೂಕ್ಷ್ಮವಿಲ್ಲದನ್ನಕ್ಕರ?
ಕಳೆಯುಳ್ಳವನಾದಡೇನು ಕುಲವಿಲ್ಲದನ್ನಕ್ಕರ?
ಜಲವಾದಡೇನು ಸ್ಥಲಯೋಗ್ಯವಿಲ್ಲದನ್ನಕ್ಕರ?
ಆ ಕಲಿ ಮಹಿಮನಾದಡೇನು,
ಕಲಾಮೂರ್ತಿ ಇಷ್ಟಲಿಂಗವಿಲ್ಲದನ್ನಕ್ಕರ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./1912
ಸ್ಫಟಿಕದ ಘಟದಲ್ಲಿ ಭೇದಿಸುವ ಮಹಾಪ್ರಭೆಯ ಸಾರೋನ್ನ್ಕತಿ
ಹೇಗೆಂದಡೆ: ಇತ್ತೆರನಾಗಿ ಇಬ್ಬರಲ್ಲಿ ಭವಿಸಿ
ಇಹಪರವೆಂಬ ಇದ್ದೆಸೆಗಿದ್ದೆಸೆಯಾಗಿ ಇಪ್ಪೆ ಎಲೆಯಯ್ಯಾ.
ನಿನ್ನ ಪರಿಯನು ಅರಿಯಬಹುದೆ? ಮಲಭಾಂಡದೇಹಿಗಳಿಗೆ.
ಸಂಗಸುಖದಲ್ಲಿ ಸಂಗಿಸುವ ಕ್ರೀಯನರಿಯದೆ ರುಚಿಸುವ
ಅಜ್ಞಾನ ಜಡರುಗಳಿಗೆ ಎಂತಪ್ಪುದಯ್ಯಾ.
ಅಜ್ಞಾನಜಡರಿಗೆ ನಿಜಶಕ್ತಿ ನಿಜಜಂಗಮ ನಿಜಪ್ರಸಾದ?
ಮಹಾನುಭಾವರಿಗಲ್ಲದೆ ನಿಮ್ಮ ಸಂಗ ಸಮನಿಸದು,
ಕಪಿಲಸಿದ್ಧಮಲ್ಲಿಕಾರ್ಜುನಾ./1913
ಸ್ಫಟಿಕದ ಘಟದಲ್ಲಿ ಶಿಶು ಪ್ರಾಣವನು ಹಡೆಯೆ
ನಿಟಿಲಾಕ್ಷ ನೋಡಿ ತಾ ನಗುತಿರ್ದನು.
ಘಟ ಭಿನ್ನವಾಗದೆ ಅಕ್ಷರದ್ವಯದಲ್ಲಿ
ತನು ತಾನೆ ಕಪಿಲಸಿದ್ಧಮಲ್ಲಿಕಾರ್ಜುನಾ./1914
ಸ್ಫಟಿಕದ ಫಟದೊಳಗೀಗ ನಿಟಿಲಾಕ್ಷನನುಮಾಟ
ಸ್ಫಟಿಕದ ಲೀಪ್ತಿಸಿತ್ತಯ್ಯ ದೆಸೆಯು.
ದೆಸೆಗಾಗಿಯೂ ಶಿಶುವಿನ ಮಸ್ತಕದಲ್ಲಿ
ಒಸರುತ್ತಿದ್ದುದು ಭಕ್ತಿ ದೆಸೆದೆಸೆಯಲಿ
ಬಸವ ಚೆನ್ನಬಸವ ಪ್ರಭು ಶರಣೆಂದು
ಇದ್ದೆಸೆಗೆಟ್ಟೆ ನಾನೀಗ ಕಪಿಲಸಿದ್ಧಮಲ್ಲಿಕಾರ್ಜುನಾ./1915
ಸ್ವಪ್ನದಲ್ಲಿ ಪಾಶಬದ್ಧತ್ವಕ್ಕೆ
ಸ್ವಪ್ನದಲ್ಲಿ ಬೇರ್ಪಡಿಸು ಕಂಡಾ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ./1916
ಸ್ವರ್ಗವೆಂದಡೆ ಸುಖಕ್ಕೆ ನಾಮ, ನರಕವೆಂದಡೆ ಬಾಧೆಗೆ ನಾಮ.
ಸುಖವೆಂದಡೆ ಪುಣ್ಯ ನೋವೆಂದಡೆ ದುಃಖ.
ಸುಖವಿಯೋಗವಾದಲ್ಲಿ ದುಃಖವೆನಿಸಿತ್ತು,
ದುಃಖವಿಯೋಗವಾದಲ್ಲಿ ಸುಖವೆನಿಸಿತ್ತು.
ಸುಖಾಸುಖವೆಂದರಿಯಬಾರದು,
ಮೊದಲ ಹಿಡಿದ ಸಂಗತಿಯಿಂದ;
ಸುಖಸಂಗದಿಂದ ದುಃಖ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ/1917
ಸ್ವಸ್ಥಿರವೆಂಬ ಭೂಮಿಯಲ್ಲಿ
ಸ್ತಂಭಂಗಳು ಮೂರಾಗಿ, ಫಲಂಗಳಾರಾದವು.
ಆ ಫಲ ಮೀರಿತ್ತು,
ಮೇಲಣ ಮೂವತ್ತಾರ ಮೀರಿ, ಅವ್ವೆಗೆ ಯೋಗ್ಯವಾಗಿ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ
ತತ್ವವಿದೆಂದರಿತು ತತ್ವಮಸಿಯಾದಳವ್ವೆ./1918
ಸ್ವಾಧಿಷ್ಠಸ್ಥಾನದಲ್ಲಿ ಆದಿ ಅಕ್ಷರ ರೂಪು
ನಾದ ಬಿಂದುವಿನಲ್ಲಿ ದಳೆಯಗೊಟ್ಟು
ಭೇದಿಸುವಭೇದ್ಯ ಪ್ರಣವಕ್ಷೆ ತಾನಾನಂದ
ಸಾನಂದ ದೀಕ್ಷೆಯಲ್ಲಿ ತಾನು ತಾನೊಂದಾಗಿ
ನೀನಪ್ಪುದೇನರಿದು ಕಪಿಲಸಿದ್ಧಮಲ್ಲಿಕಾರ್ಜುನಾ./1919
ಸ್ವಾಮಿ ಸ್ವಾಮಿ ಅಂಗ ಲಿಂಗ ಸಮರಸವ
ಅರಿದರಿದು ಅರಿಯದಂತಿರ್ಪೆ ನಾನು;
ಕರುಣಿಸಯ್ಯಾ, ಅಯ್ಯಾ ದಮ್ಮಯ್ಯಾ.
ನೀ ಲಿಂಗಾಂಗ ಸಮರಸದ ವಿಚಾರನಿಮಿತ್ತೆನ್ನ ತಂದುದ ಬಲ್ಲೆ.
ಂಗಾಂಗ ಸಮರಸ ನಿಮಿತ್ತ ತ್ರಿಕರಣಶುದ್ಧವಾಗಿ ನಾ ಬಂದುದ
ಬಲ್ಲೆ.
ಎನ್ನ ಬೋಧಿಸಿ ಭವಕ್ಕೆ ಬಾರದನ ಮಾಡಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಾ./1920
ಸ್ವಾಮಿ ಸ್ವಾಮಿ, ಗುರುಕರಜಾತ
ಗುರುಕರಜಾತನಪ್ಪುದೆಂದು ನುಡಿವರಯ್ಯಾ,
ಅನಾದಿ ಹರ ಪುರಾತನ ಗಣಂಗಳು.
ಗುರುವೆಂದಡೇನು, ಕರವೆಂದಡೇನು. ಜಾತವೆಂದಡೇನು?
ಇದನರುಹಿ ಪಾವನ ಮಾಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1921
ಹಡಗನೇರಿದವರ ಮುಂದೆ ಕಳುಹಿ
ಮರಳಿ ಹೋದೆಹೆನೆಂದರೆ ಹಡಗುಂಟೆ?
ಮಚ್ಚಿದಲ್ಲಿ ಮಹೋತ್ಸವವನೆಯ್ದು ಮನವೆ
ಬಳಿಕ ಅರಸಿದರುಂಟೆ?
ಅಯ್ಯನ ಸಂಗ ಅನಾದಿ ಸಂಸಿದ್ಧ ಯೋಗಮೂರ್ತಿ
ಗುರು ಸಿಕ್ಕಿದಲ್ಲಿ ಕೂಡು ಮನವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1922
ಹಡೆದ ಹೆಣ್ಣಿಗಾಗಲಿ, ಹಡೆದ ಗಂಡಿಗಾಗಲಿ,
ಗುರುಪಾದೋದಕಸ್ನಾನವೆ ಶುದ್ಧ ಕಾಣಾ.
ವನದ ಭೋಜನವಾಗಲಿ, ಮನೆಯ ಭೋಜನವಾಗಲಿ,
ಗುರುಪಾದೋದಕ ಪ್ರೋಕ್ಷಣೆಯೆ ಶುದ್ಧ ಕಾಣಾ.
ಮದುವೆಯ ಸಂಭ್ರಮವಾಗಲಿ, ಮರಣದ ದುಃಖವಾಗಲಿ,
ಗುರುಪಾದೋಕವೆ ಸಂಜೀವನ ಕಾಣಾ.
ಆಗುವ ದೀಕ್ಷೆಯೆ ಆಗಲಿ, ಭೋಗಿಪ ಶಿಕ್ಷೆಯೆ ಆಗ,
ಗುರುಪಾದೋದಕವರ್ತನವೆ ಅಮರಗಣ ನಡಾವಳಿ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1923
ಹಣ್ಣ ಹಿಡಿದ ಬಾಲಕಂಗೆ ಬೆಲ್ಲವ ಕೊಟ್ಟೇನು ಹಣ್ಣ ತಾ ಎಂಬಂತೆ,
ಮಣ್ಣು ಮೂರನು ಹಿಡಿದ ಭಕ್ತಂಗೆ
ಮುಕ್ಕಣ್ಣನ ಪದವಿ ಕೊಟ್ಟೇವೆಂಬ ತೆರನಂತೆ,
ಗುರು-ಲಿಂಗ-ಜಂಗಮರು ಬೇಡುವರಲ್ಲದೆ,
ತಮ್ಮಿಚ್ಛೆಗೆ ಕೈಯಾನುವರೆ ಕಪಿಲಸಿದ್ಧಮಲ್ಲಿಕಾರ್ಜುನಾ?/1924
ಹದಿನಾರು ಅಕ್ಷರದ ಹವಣ ಬಲ್ಲವರಾರು
ಅಜಲೋಕದಿಂ ಕೆಳಗೆ ತಾನೆ.
ಅರಸೂಸದ ಮದದ ಹದಿನಾರು ಕಳೆಯ
ಮತ್ತೆರಡೆಂಟು ಉಳಿಯಬಲ್ಲಡೆ
ಆತ ಬ್ರಹ್ಮನಾದಾ ನಾದಬಿಂದುವಿನಲ್ಲಿ,
ಸಾಧಿಸಿದ ಸುಧೆಯದು.
ಅದ ಹರಿವಿಷ್ಣುಗಳಿಗಳವಲ್ಲದು
ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ
ಭೇದಿಸಿದ ಭಕ್ತಂಗೆ ಪಥ್ಯ ತಾನು./1925
ಹದಿನಾಲ್ಕು ರತ್ನವೆಂಬುದ ಸುರಾಸುರರೆಲ್ಲರು ಬಲ್ಲರು
ಮೂರಾರು ರತ್ನವನಾರು ಅರಿಯರಯ್ಯಾ;
ಮೂರಾರು ರತ್ನವೆಂಬುದ ಬಲ್ಲರು ದಿವ್ಯಮುನಿಗಳು.
ಮೂರೆರಡು ರತ್ನವನರಿಯರು ತ್ರಿಲೋಕದವರು;
ಮೂರೆರಡು ರತ್ನವ ಬಲ್ಲರು ಮಹಾಪ್ರಮಥರು.
ಒಂದು ರತ್ನವನಾರು ಅರಿಯರು;
ಒಂದು ರತ್ನವ ಬಲ್ಲವ ನಿಮ್ಮ ಶರಣ ಮಹಾಂಗಮೂರ್ತಿ
ಚೆನ್ನಬಸವಣ್ಣ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./1926
ಹಬ್ಬಗಳೆಲ್ಲ ಉಬ್ಬುಬ್ಬಿ ಲಿಂಗದ ಹಬ್ಬಕ್ಕೆ ಬಂದಬ್ಬರವ ನೋಡಾ!
ಲಿಂಗದ ಹಬ್ಬ ನಿಮ್ಮ ಬಾಯಿಗೆ ಒಬ್ಬಿಯಲ್ಲದೆ
ನಿಮ್ಮ ಜನನಕ್ಕೆ ಹಬ್ಬವೇನೊ, ಕಬ್ಬಿಲ ಮಬ್ಬುಳ್ಳ ಕೊಬ್ಬಿಗರಿರಾ,
ಕಪಿಲಸಿದ್ಧಮಲ್ಲಿಕಾರ್ಜುನನೊಬ್ಬನರಿಯರ್ದಡೆ?/1927
ಹರನೆಂಬ ನಲ್ಲನಾಗದನ್ನಕ್ಕ ಆರಿಗಾದಡೂ ಪ್ರಿಯವಲ್ಲ.
ಹರನೆಂಬ ನಲ್ಲನಾದ ಬಳಿಕ ಆರಿಗಾದಡೂ ಪ್ರಿಯವಯ್ಯ.
ಹರ ನಿರಾಮಯ ಕಪಿಲಸಿದ್ಧಮಲ್ಲಿನಾಥ! ಹಾ! ಅಯ್ಯಾ!/1928
ಹರಬಸವಾಯ ನಮಃ’ ಎಂದು ಪಾಪದೂರನಾದೆ.
`ಗುರುಬಸವಾಯ ನಮಃ’ ಎಂದು ಭವದೂರನಾದೆ.
`ಲಿಂಗಬಸವಾಯ ನಮಃ’ ಎಂದು ಲಿಂಗಾಂಕಿತನಾದೆ.
`ಜಂಗಮ ಬಸವಾಯ ನಮಃ’ ಎಂದು
ನಿಮ್ಮ ಪಾದಕಮಲದಲ್ಲಿ ಭ್ರಮರನಾದೆ.
ಏಳಾ ಸಂಗನ ಬಸವ ಗುರು ಕಪಿಲಸಿದ್ಧ
ಮಲ್ಲಿಕಾರ್ಜುನಸ್ವಾಮಿಯೆ /1929
ಹರಬೀಜ ನಾನಾದಡೆ ಹದನವರಿಯದಿರ್ಪೆನೆ ಗುರುವೆ?
ಪರಮ ಭೃತ್ಯ ನಾನಾದಡೆ ಪ್ರಾಣದಿಂದಿರ್ಪೆನೆ ಗುರುವೆ?
ನರಬೀಜ ನಾನಾದೆ, ಗುರುದ್ರೋಹಿ ನಾನಾದೆ,
ಇನ್ನೆಂತು ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ?/1930
ಹರಿ ನಾನೆಂದಲ್ಲಿ ಭವಮದಗಜಕ್ಕೆ ಹರಿಯಲ್ಲದೆ,
ದಶಾವತಾರದ ಹರಿಯಲ್ಲ ನೋಡಾ.
ಹರ ನಾನೆಂದಲ್ಲಿ ಸರ್ವಭಾವನಾವಿರಹಿತ ನಾನಲ್ಲದೆ,
ಪಂಚಕೃತ್ಯಾಧಿಕಾರಿ ಹರನಲ್ಲ ನೋಡಾ.
ನರ ನಾನೆಂದಲ್ಲಿ ಉತ್ಪತ್ತಿವಿರಹಿತ ನಾನಲ್ಲದೆ,
ಉತ್ಪತ್ತ್ಯಧಿಕಾರಿ ನರ ನಾನಲ್ಲ ನೋಡಾ.
ತೋರುವ ಸಚರಾಚರ ನಾನೆಂದಲ್ಲಿ ಜಡಾಜಡ ನಾನಲ್ಲದೆ,
ಜನನ ಮರಣ ಪೊದ್ದಿ ಸಚರಾಚರ ನಾನಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1931
ಹರಿ ಬ್ರಹ್ಮ ಧರೆ ಆಕಾಶವಿಲ್ಲದ ಭಸ್ಮಕ್ಕೆ
ಸ್ಥಲವದು ಆದಿ ನೋಡಯ್ಯಾ.
ಭಸ್ಮವನೆ ಮಸುಳಿಸಿ, ಲೋಕಂಗಳನೆ ಹಡೆದು,
ಸಕಲ ಜೀವರನಿಂತು ಮಾಡಿದರೊಳರೆ?
ನಿನ್ನಿಚ್ಛೆ ನಿನಗೆ:ಸ್ವಯಂಭು ನೀನೆಯಾಗಿರ್ದೆಯಯ್ಯಾ,
ಕಪಿಲಸಿದ್ಧಮ್ಲನಾಥಯ್ಯಾ./1932
ಹರಿ ಹತ್ತು ಭವ ಬಂದ; ಸಿರಿಯಾಗಿ ತೊಳಲಿತೈ
ಉರಗ ಖೇಚರರನ್ನು ಒರಸಿತಯ್ಯಾ!
ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ
ಶರಣರಿಗೆ ಅಂಜಿ ಓಡಿದುದು ಮಾಯೆ./1933
ಹರಿದು ಹತ್ತುವೆನವನ,
ಹತ್ತಿ ಮನವ ಮುಟ್ಟಿ ಹಿಡಿವೆನವನ.
ಮಹಾಪ್ರಚಂಡ ಮನದಿಂದ
ಕಪಿಲಸಿದ್ಧಮಲ್ಲಿಕಾರ್ಜುನನ ಹಿಡಿವೆನು./1934
ಹರಿಬ್ರಹ್ಮರಿಬ್ಬರೂ ಸ್ತ್ರೀಯರಯ್ಯಾ,
ತಮ್ಮನೊಲಿದರೆ ಹಂಗಿಹರು, ಹೆಂಪೆ ಹೇಳಯ್ಯಾ.
ಎನ್ನ ಹರಿಬತನಕ್ಕೆ ಹಾನಿ ಹೊದ್ದಿತೆಂದು
ನಿಮ್ಮನಗಲಲಾರೆ, ಕಪಿಲಸಿದ್ಧಮಲ್ಲೇಶ್ವರಾ, ದೇವರ ದೇವಯ್ಯ./1935
ಹರಿಬ್ರಹ್ಮರು ಕಾವುದೊಂದು ಧರೆಯ ಹಿರಿಯ ಕೊಠಾರವಯ್ಯಾ.
ಬಾರದವರೆಲ್ಲರ ಬಂಧನಕ್ಕೆ ತಂದು
ಇಕ್ಕು ಬೀಯವನಿಕ್ಕುವರಯ್ಯಾ.
ಈ ಬೆಬ್ಬನೆ ಬೆರೆವ ಹಿರಿಯರೆಲ್ಲರ ಒಳಗು ಮಾಡಿದೆ,
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ./1936
ಹರಿಯಾಣದೊಳಗಣ ಓಗರವ
ಹರಿಯವರು ಹರಿಹರಿದುಂಡರಯ್ಯಾ.
ಪರ ವಧು ಬಂದು ಬೆರಸಲು ಆ ಹರಿ ಪರಹರಿಯಾದ.
ಉಣಬಂದ ಹರಿಯ ಶಿರವ ಮೆಟ್ಟಿ ನಿಂದಳು ನಿಮ್ಮ ಹೆಣ್ಣು.
ಇದ ಕಂಡು ನಾ ಬೆರಗಾದೆನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ/1937
ಹರಿಯೆಂಬಾತ ನಿಮ್ಮ ಚರಣವನರಿಯ;
ಬ್ರಹ್ಮನೆಂಬಾತ ನಿಮ್ಮ ಮುಕುಟವನರಿಯ;
ಯತಿ ವ್ರತಿ ಋಷಿಗಲೆಂಬವರು ನಿಮ್ಮ ಒಳಗನರಿಯರು;
ಸಮಸ್ತ ದೇವರ್ಕಳು ನಿಮ್ಮ ರೋಮದ ಪ್ರಮಾಣವನರಿಯರು;
ಶತಕೋಟಿ ಸೂರ್ಯರು ನಿಮ್ಮ ಬೆಳಗೆ ಕಾಣಲರಿಯರು.
ಕಪಿಲಸಿದ್ಧಮಲ್ಲಿಕಾರ್ಜುನಾ,
ನಾ ನಿಮ್ಮನರಿಯಬಲ್ಲವನೇ ಅಯ್ಯಾ ?/1938
ಹರುಣಿ ಹರುಣನನೆ ಜರೆದು ಮರೆವಂತೆ
ಎನ್ನಯ ಕರಣ ನಿಮ್ಮನೆ ನೆನೆದು ನೀವಾದವೈ.
ಈ ಪರವಶದ ಕೂಟಕ್ಕೆ ಉರವಣಿಸಲಾನೀಗ
ಕರಣೇಂದ್ರಿಯವರತ ಭೂಮಿ
ಕಪಿಲಸಿದ್ಧಮಲ್ಲಿಕಾರ್ಜುನಾ./1939
ಹಲಬರಿಗೆಳೆಯ ನೀನು, ಮೂವರಿಗೆ ಮುಗ್ಧ ನೀನು,
ನಿನ್ನನರ್ಚಿಸುವ ಪರಿಯೆಂತಯ್ಯಾ?
ಅಳಿದುಳುಕದಾ ಕಮಳ ಘನತರದಲಳವಟ್ಟು
ತನು ನಿನಗೆ ನೈವೇದ್ಯ ಕಪಿಲಸಿದ್ಧಮಲ್ಲಿಕಾರ್ಜುನಾ./1940
ಹಲವರಿಪ್ಪರು ನೋಡಾ ಮೂಲೋಕದಲ್ಲಿ ಲಿಂಗಭಕ್ತರು.
ಕೆಲವರಿಪ್ಪರು ನೋಡಾ ಮೂಲೋಕದಲ್ಲಿ ಸ್ಥಾವರಭಕ್ತರು.
ಸಲುಗೆಯುಳ್ಳವರಿಪ್ಪರು ನೋಡಾ ಅನೇಕ ಕೋಟಿ ಭಕ್ತರು.
ಒಬ್ಬರೂ ಇಲ್ಲಿ ನೋಡಾ ಅಜಾಂಡಕಾಂಡದಲ್ಲಿ ಜಂಗಮಭಕ್ತರು,
ಕಪಿಲಸಿದ್ಧಮಲ್ಲಿಕಾರ್ಜುನಾ./1941
ಹಲವು ಕಾಲದ ಹುಣ್ಣಿಂಗೆ ಹಿರಿದು ಧಾವತಿಗೊಂಡೆ ನಾನು.
ತಲೆಯ ಭಾಗದಲು ಹುಣ್ಣುವ ಕಳದಂತೆ
ಎಲ್ಲವ ಸಂಧಿಸುವನ್ನ ತಾರ, ವಿಚಿತ್ರಮೂಲ
ಕಪಿಲಸಿದ್ಧಮಲ್ಲಿಕಾರ್ಜುನದೇವ/1942
ಹಲವು ದಳವ ಮೆಟ್ಟಿ ಪರೀಕ್ಷಿಸುವ
ಪ್ರಭಾಕರನ ಪರಿಯ ನೋಡಾ!
ಅಜ್ಞಾನಕ್ಕೆ ತಾನೆ ಹೊಲಬಿಗನಾಗಿ
ಕಿರಿಕಿರಿದರಲ್ಲಿ ಹಿರಿಹಿರಿದಾಗಿ
ನೀನೆರವ ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ವಿಚಿತ್ರ ವಿನೋದಿ./1943
ಹಲವು ಪರಿಯಲೆನ್ನ ದಲವ ಸಾಧಿಸೇನೆಂದಡೆ
ಬದನಾ ನಿನಗೆ ಕಂಡಾ ಅವ್ವ.
ಕುಲವನುಳಿದೆ ದಲವನುಳಿದೆ
ಗುರುವಿನ ಬಲು ನೆಲೆಮನೆಯಾಯಿತ್ತು.
ದಲವ ಸಾಧಿಸುವೆ ಇಷ್ಟು ಗುರು ಚರ ತ್ರಯದಲ್ಲಿ
ಕಪಿಲಸಿದ್ಧಮಲ್ಲಿನಾಥನ ಕೂಡುವೆ ಅವ್ವಾ./1944
ಹಸಿವು ತೃಷೆಯಳಿದಡೇನು, ಭಕ್ತನಪ್ಪನೆ? ಅಲ್ಲಲ್ಲ.
ಅಷ್ಟಮಹಾಸಿದ್ಧಿಯುಳ್ಳಡೇನು, ಭಕ್ತನಪ್ಪನೆ? ಅಲ್ಲಲ್ಲ.
ತನು ಬಯಲಾಗಿ ಚತುರ್ವಿಧ ಪದಸ್ಥನಾಗಿ
ಕೈಲಾಸದಲ್ಲಿದ್ದಡೇನು, ಭಕ್ತನಪ್ಪನೆ? ಅಲ್ಲಲ್ಲ.
ಗಿಡಗಳ ತಿಂದ ಬಳಿಕ ಹಸಿವು ತೃಷೆ ತೋರದು.
ಯೋಗವಂಗವಾದ ಬಳಿಕ ಸ್ವೇಚ್ಛಾಚಾರ ಬಿಡದು.
ಅಘೋರತಪವ ಮಾಡಿದ ಬಳಿಕ ಮಹಾಸಿದ್ಧಿಗಳು ಬಿಡವು.
ಒಂದೊಂದರಿಂದೊಂದೊಂದು ಸಿದ್ಧಿ.
ಅಂಗ ಮೂರರಲ್ಲಿ ಲಿಂಗ ಸಂಬಂಧವಾಗಿ,
ಲಿಂಗ ಮೂರರಲ್ಲಿ ವಸ್ತುತ್ರಯವ ಪೂಜಿಸಿ,
ತತ್ಪ್ರಸಾದಗ್ರಾಹಕ ಭಕ್ತನಲ್ಲದೆ, ಬಾಲಬ್ರಹ್ಮಿಗೆ
ಭಕ್ತನೆನಬಹುದೇನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ?/1945
ಹಸಿವುದೋರದ ಮುನ್ನ, ತೃಷೆದೋರದ ಮುನ್ನ,
ವ್ಯಾಧಿವಿಪತ್ತುಗಳು ಬಂದಡಸದ ಮುನ್ನ,
ಕಪಿಲಸಿದ್ಧಮಲ್ಲಿಕಾರ್ಜುನಂಗವ ಪೂಜಿಸೋ ಮುನ್ನ ಮುನ್ನ!/1946
ಹಸ್ತವದು ಬಸವಣ್ಣ, ಜಿಹ್ವೆಯದು ಚೆನ್ನಬಸವಣ್ಣ,
ಉದರ ತೃಪ್ತಿಯದು ಅಲ್ಲಮ ನೋಡಾ,
ಎನ್ನ ನಲ್ಲ ಕಪಿಲಸಿದ್ಧಮಲ್ಲೇಶನೆ./1947
ಹಾಡ, ಎಂದಡೆ ಇಂದೆಂತುಟಾದಡಾಗಲಿ
ನೀ ಕೇಳುವಂತೆ ಹಾಡಿದೆನು ಕಂಡಯ್ಯಾ.
ಎಲೆ ಅಯ್ಯಾ, ಅಯ್ಯಾ, ಮಾ!
ನಿಮ್ಮ ಹಾಡುವ ಹಾಡ ಚಿತ್ತೈಸುವುದಯ್ಯಾ.
ನಿಮ್ಮ ಧ್ಯಾನಗಳನವಧರಿಸು, ಕೇಳು ಕೇಳಯ್ಯಾ,
ಎನ್ನ ಕಪಿಲಸಿದ್ಧಮಲ್ಲೇಶ್ವರ ದೇವರ ದೇವಯ್ಯ./1948
ಹಾಡಿ ಹಂಬಲಿಸಿದೆನಯ್ಯಾ,
ಅಯ್ಯಾ, ನಿಮ್ಮ ಬೇಡಿ ಬೇಡಿ ಬಾಯಿ ಬೋಡಾದೆನಯ್ಯಾ.
ನುಡಿಗೆಟ್ಟ ಬ್ರಹ್ಮದಲ್ಲಿ ನಡೆದೆನೆಂದರೆ
ಎನ್ನ ಒಡಲ ಆಮಿಷ ಕಾಡುತ್ತದೆ.
ಮೃಡನೇ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಬೇಕು ಬೇಡೆಂಬುದ ಕಳೆಯಯ್ಯಾ./1949
ಹಾಡಿದರಿವರನು ಬೇಡಿದರಿವರನು.
ಕೇಡಿಲ್ಲದಭವನ ನೆನೆಯಾ ಮನವೆ.
ಕಣ್ಣಿಗೆ ತಿಮಿರ ಕವಿದು ಕವಿದು
ಕರ್ಮದ ಬಲೆಗಳ ಸಿಲುಕದ ಮುನ್ನ
ಸಕಲ ಜೀವಂಗಳಿಗೆ ಪ್ರಾಣನಿಸ್ತಾರಕ
ಕಪಿಲಸಿದ್ಧಮಲ್ಲಿನಾಥಾ, ನೀ ಕೊಟ್ಟುದನರಿಯಾ./1950
ಹಾಡುವೆ, ಹೊಗಳುವೆ, ಬೇಡುವೆ ಸೆರಗೊಡ್ಡಿ ಆನು.
ಕಾಡುವೆ ನಿಮ್ಮವರ ಸಂಗವನೆ ಕರುಣಿಸಯ್ಯಾ;
ಅಯ್ಯಾ, ನಿಮ್ಮ ಬೇಡುವ ಪದವಿಂತುಟಯ್ಯಾ;
ಕರುಣಾಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಕೃಪೆಮಾಡಾ ಧರ್ಮಿ!/1951
ಹಾರವನಿಕ್ಕಿದ ಮಣಿಯ ಕಂಠಮಾಲೆ
ಮೂವತ್ತು ಮೂರುಕೋಟಿ.
ವೆಜ್ಜದಲ್ಲಿ ಉರಿ ಹತ್ತಿತ್ತು ಪ್ರಸಾದಿಯ,
ಕಪಿಲಸಿದ್ಧಮಲ್ಲಿನಾಥಯ್ಯಾ./1952
ಹಾರುವೆ ಹಾರುವೆನಯ್ಯಾ ಮೂರರ ಮನೆಯ.
ನೋಡುವೆ ನೋಡುವೆನಯ್ಯಾ ಆರರ ಮನೆಯ.
ಕೂಡುವೆ ಕೂಡುವೆನಯ್ಯಾ ಈರಾರರ ಮನೆಯ.
ಆಡುವೆ ಆಡುವೆನಯ್ಯಾ,
ಕಪಿಲಸಿದ್ಧಮಲ್ಲಯ್ಯಾ, ಮತ್ತೂ ಮೂರರಲ್ಲೆ./1953
ಹಿಂದು ಮುಂದು ಸಂದಳಿದ ಬಳಿಕ
ಆನು ನೀನೆಂಬ ಭೇದವೇತಕಯ್ಯ?
ಆನಂದ ಅಪರಸ್ಥಾನದಲ್ಲಿ ಶುದ್ಧ ಸಂಯೋಗವಾದ ಬಳಿಕ
ದಳ ಪ್ರತಿಷ್ಠೆಯ ಮಾಡಿನೆಂದು ಏನೆಂಬೆನಯ್ಯ?
ಪೂರ್ವದಳದಲ್ಲಿ ಲಕ್ಷವು ಇಪ್ಪತ್ನಾಲ್ಕುಸಾವಿರ ಎಸಳು,
ಅಪರದಳದಲ್ಲಿ ಹದಿನಾಲ್ಕುಸಾವಿರ ಎಸಳು,
ನಾನಾ ವರ್ಣ ಆನಂದನೆಂಬ ಅಧಿದೇವತೆ ಮಧ್ಯಮಸ್ಥಾನದಲ್ಲಿ,
ಸಿದ್ಧ ಸಂಯೋಗವೆಂಬ ಸರೋವರದಲ್ಲಿ,
ವೈನೈಯೆಂಬ ಕೊಳಂಗಳು
ಹನಾರೆಸಳಿನ ಕಮಳ ಬೀಜಾಕ್ಷರಂಗಳೆಂಟು,
ಅಧಿದೇವತೆ ಸಚ್ಚಿದಾನಂದನೆಂಬ ಗಣೇಶ್ವರ
ಆನಂದ ಬ್ರಹ್ಮಲೋಕದಲ್ಲಿ ಗುರುವೆಂಬ ಸರೋವರದಲ್ಲಿ
ನಿತ್ಯವೆಂಬ ಕೊಳ.
ಶುದ್ಥಶ್ವೇತನೆಂಬ ಅಮೃತ ಪ್ರವಾಹ,
ದಳವೊಂದು, ಮೂಲ ಮೂರು, ಫಲವಾರು
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅಧಿದೇವತೆ./1954
ಹಿಂದೆ ಪರೀಕ್ಷಿಸಿ ತಿಳಿದು ನೋಡುವಡೆ,
ಪರಿಯಾಯ ಪರಿಯಾಯದಿಂದ ಬಂದಂಗವ ನೀ ಬಲ್ಲೆ
ಬಸವಣ್ಣಾ.
ನಾ ನೊಂದ ನೋವನು ನೀ ಬಲ್ಲೆ ಬಸವಣ್ಣಾ.
ನಾನಂದು ಕಾಲನ ಕಮ್ಮಟಕ್ಕೆ ಗುರಿಯಾಗಿ ಇಪ್ಪಂದು
ನೀನು ಶೂನ್ಯರುದ್ರನು ಬಸವಣ್ಣಾ.
ನಾನಂದು ಹಲವು ಪರಿಯ ಬಹುರೂಪನಾಡುವಲ್ಲಿ
ನೀನು ವಿಚಿತ್ರವಿನೋದನೆಂಬ ಗಣೇಶ್ವರನು ಬಸವಣ್ಣಾ,
ಎನ್ನಾದ್ಯಂತವ ನೀ ಬಲ್ಲೆ.
ಬಲ್ಲ ಕಾರಣ ಎನ್ನ ಪಾಲಿಸಿದೆ ಬಸವಣ್ಣಾ.
ನೀ ಪಾಲಿಸಿದ ಗುಣದಿಂದ ಪಾವನನಾದೆನು ಬಸವಣ್ಣಾ;
ಶುದ್ಧ ಸಿದ್ಧ ಪ್ರಸಿದ್ಧವನರಿದೆ ಬಸವಣ್ಣಾ.
ಎಲೆ ಗುರುವೆ ಬಸವಣ್ಣಾ,
ನೀ ಪಾಸಿದ ಗುಣದಿಂದ ಜೀವನ್ಮುಕ್ತನಾದೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ,
ನಿನ್ನವರಿಗೆಯೂ ನಿನಗೆಯೂ ಯೋಗ್ಯನಾದೆ ಬಸವಣ್ಣಾ./1955
ಹಿಂದೆ ಬಂದುದನರಿದುದಿಲ್ಲಾಗಿ
ಮುಂದೆ ಬಹುದಕ್ಕೆ ಚಿಂತಿಸಲೇಕೆ?
ಇಂದಿಂಗೆಂಬುದು ಲಿಂಗದೊಲವು ಶಿವಭಕ್ತಂಗೆ;
ನಾಳಿಂಗೆಂಬುದು ಬದ್ಧಭವಿತನ.
ಎನ್ನಾಗುರು ಕಪಿಲಸಿದ್ಧ ಮಲ್ಲಿಕಾರ್ಜುನದೇವಾ,
ನೀವಂದಂಗೆ ಕೊಟ್ಟ ಪಡಿ ತಪ್ಪದಯ್ಯಾ
ಮತ್ತಾರನೂ ಬಳಿವಿಡಿಯಲ್ಲವಯ್ಯಾ, ಎನ್ನ ತಂದೆ./1956
ಹಿಂದೆ ಬಯಸಿದೆ ಕಾಳುತನದಲ್ಲಿ,
ಎನ್ನ ಮಂದಮತಿಯ ನೋಡದಿರಯ್ಯಾ!
ಕೆರೆ ಬಾವಿ ಹೂದೋ ಚೌಕ ಛತ್ರಂಗಳ ಮಾಡಿ,
ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನ ದಾನಿಯೆಂಬರು,
ಆನು ದಾನಿಯಲ್ಲವಯ್ಯಾ, ನೀ ಹೇಳಿದಂತೆ ನಾ ಮಾಡಿದೆನು.
ನೀ ಬರಹೇಳಿದಲ್ಲಿ ಬಂದೆನು; ನೀ ಇರಿಸಿದಂತೆ ಇದ್ದೆನು.
ನಿನ್ನ ಇಚ್ಛಾಮತ್ರವ ಮೀರಿದೆನಾಯಿತ್ತಾದಡೆ
ಫಲ ಪದ ಜನನವ ಬಯಸಿದೆನಾದಡೆ ನಿಮ್ಮಾಣೆ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ! /1957
ಹಿಂದೆ ಹಲವು ಯುಗಂಗಳು ತಿರುಗಿ ಬಪ್ಪಾಗ
ಅವನ್ನು ನೀ ಮಾಡಿದೆಯಲ್ಲದೆ ತಮ್ಮಾಜ್ಞೆಯಲಿ ಬಂದುಲ್ಲ.
ಅಯ್ಯ, ನಿನ್ನಾಜ್ಞೆಯಲಿ ಬಂದ ಯುಗಂಗಳು
ಭವಭವದಲ್ಲಿ ಎನ್ನನೆ ಕಾಡಿದುವು,
ಸಂಸಾರವಾಗಿ ಎನ್ನನೆ ಕಾಡಿದುವು,
ಹೊನ್ನು ಹೆಣ್ಣು ಮಣ್ಣು ತ್ರಿವಿಧವಾಗಿ
ಎನ್ನನೆ ಕಾಡಿದುವು,
ಆಶಾಪಾಶಂಗಳಾಗಿ ಗುರುವೆ ಬಸವಣ್ಣ
ಅವೆಲ್ಲಾ ನಿಮ್ಮ ಅಧೀನದವು ಮಾಡಿದಡಾದವು,
ಬೇಡಾಯೆಂದಡೆ ಮಾದವು.
ಅವಕ್ಕೆ ಎನ್ನನೊಪ್ಪಿಸದೆ, ನಿನ್ನವ ನಿನ್ನವನೆನಿಸಾ
ಕಪಿಲಸಿದ್ಧಮಲ್ಲಿಕಾರ್ಜುನನ ತೋರಿದ
ಗುರು ಬಸವಣ್ಣಾ./1958
ಹಿಡಿಗಟ್ಟಿಗೊಳಗಾದನೆಂಬ ಸುದ್ದಿಯ ಗುರು ಕೇಳಿದ.
ಕೇಳಿ ಸೈರಿಸಲಾರದೆ ಕಂಡು ಕಂಡು,
ಇರಿಸುವ ಠಾವಂ ತೋರಿದ.
ಅಲ್ಲ್ಲಲ್ಲಿಯಿದ್ದಡೆ ಎಲ್ಲಿಯೂ ಇರನೆಂದು
ಅಜಲೋಕಕ್ಕೆ ಕಳುಹಿದ.
ಅಜಲೋಕದಲ್ಲಿ ಆನಂದವೆಂಬ ಮನೆಯಲ್ಲಿ,
ಭಕ್ತಿಯೆಂಬ ಬಂಧನವಂ ಮಾಡಿ,
ಜ್ಞಾನವೆಂಬ ಕಾವಲಂ ಕೊಟ್ಟಿರಲಾಗಿ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಇನಿತು ಬಂಧನಕ್ಕೊಳಗಾದೆ./1959
ಹಿಡಿತಂದು ಮಣ್ಣ ಮಾಳಿಗೆಯೊಳಗೆ ಇರಿಸಿದಡೆ
ಹೋಲುವುದರಿದು ಕಂಡಾ!
ಆ ಭಾವದಿಂದ ಭರಿತನಾಗಿ ಜೀವಿಸ್ಕ್ತುಪ್ಪಡೆ
ನಿಜಭಾವದಿಂದ ಭರಿತನಾಗಿ ಜೀವಿಸುವಡೆ
ಕಪಿಲಸಿದ್ಧಮಲ್ಲಿನಾಥ ಹೋತು ಕೂಡುವರು!/1960
ಹಿರಣ್ಯಚ್ಛೆಯ ಹೆಚ್ಚಿ ನುಡಿವರು ನಿನ್ನಂಗವಪ್ಪರೆ ಅಯ್ಯಾ?
ಅಪ್ಪರಪ್ಪರು ಹೊನ್ನು ಹೆಣ್ಣು ಮಣ್ಣು ತ್ರಿವಿಧವ ಬಿಟ್ಟವರು.
ಅಪ್ಪರಪ್ಪರು ಸತ್ಪಾತ್ರ-ಅಪಾತ್ರವೆಂದರಿದವರು.
ಅಪ್ಪರಪ್ಪರು ಸದಾಚಾರ, ನಿಹಿತಾಚಾರ, ಗುರುಚರಭಕ್ತಿ,
ಸ್ವಾನುಭಾವದೀಕ್ಷೆ ಸಮನಿಸಿದವರು.
ನಿನ್ನಂಗ ಎಲ್ಲರಂತಲ್ಲ ಹೊಸ ಪರಿ ಎಲೆ ಅಯ್ಯಾ.
ಮಸ್ತಕದಲ್ಲಿ ಪೂಜೆಯ ಮಾಡಿ
ಅದ ನಿರ್ಮಾಲ್ಯವೆಂದು ತ್ಯಜಿಸಿ,
ಮರಳಿ ಪಡೆದು ನಿನಗೆ ಪಾತ್ರವಾದರು.
ಅಪ್ಪುದಕ್ಕನುಮಾನವೆ? ಕಪಿಲಸಿದ್ಧಮಲ್ಲಿಕಾರ್ಜುನಾ./1961
ಹಿರಣ್ಯವೆಂದು ಮನ ವೇಧಿಸಿ ಕೈಯಾಂತರೆ ಅಯ್ಯಾ ನಿಮ್ಮಾಣೆ,
ನಿಮ್ಮ ಪ್ರಸಾದಕಲ್ಲದೆ ಕೈಯಾನೆನಯ್ಯಾ.
ಅಯ್ಯಾ, ನಿಮ್ಮ ಪಾದೋದಕವಲ್ಲದೆ ಬೇರೆ ಕೊಳ್ಳೆನಯ್ಯಾ.
ನಿಮ್ಮಾಳು ಹೆರರ ಹಾರಿದರೆ ಕರೆದು ಬಾ ಎನ್ನಾ
ಕಪಿಲಸಿದ್ಧಮ್ಲನಾಥಾ ನಿನ್ನ./1962
ಹಿರಿದಪ್ಪ ಶರಧಿಯ ಮಡುವಿನೊಳಗೆನ್ನ
ಕಡಲ ಕಾನನವಾದುದವ್ವಾ.
ಕಡಲು ಅಮೃತವಾಗಿ ಹರಿಯೆ
ಅವ್ವ, ನಾನು ದೆಸೆಗೆಟ್ಟು ಲೀಯವದರೊಳು.
ಮೃಡನೆ ನಿನ್ನುವಾನೊಡಗೂಡಿದ
ಕಡಲಿಂಗೆಡೆವಿಡದೆ ನಮೋಯೆಂಬೆ
ಕಪಿಲಸಿದ್ಧಮ್ಲನಾಥಯ್ಯ./1963
ಹಿರಿದು ಆಗ್ರಹದಿಂದೆ ನೀನೆನ್ನ ಮೇಲಿಕ್ಕಿ
ಒಲ್ಲೆ ಸಾರೆಂದು ಹೋಹೆ ಕಾಣಯ್ಯಾ,
ಕೈಯ ಹಿಡಿದಡೆ ಅಂತು ಮುರುಚುವೆ;
ಎನ್ನ ಉರದಲಪ್ಪಿ ಹಿಡಿದಡೆಂತು ಮುರುಚುವೆ?
ನೀನಿಂತು ಹೋಹ ಪರಿಗಳ ನಿಲಿಸುವೆನು ಕೇಳು ಗಡಾ!
ಸೂಕ್ಷ್ಮತನುವಿನಲ್ಲಿ ಹಿಡಿದಡೆ ಎಂತು ಮುರುಚುವೆ ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1964
ಹುಟ್ಟಿ ಹುಟ್ಟಿ ಹೋಗುವದದು ಬಹುಕಷ್ಟವಯ್ಯಾ ;
ಕೆಟ್ಟು ಕೆಟ್ಟು ಹೋಗುವದದು ಬೆಟ್ಟದ ಸಾಮಥ್ರ್ಯವಯ್ಯಾ.
ಹುಟ್ಟಿ ಹೋದವರು ಕೋಟಾನುಕೋಟಿ,
ಕೆಟ್ಟು ಹೋದವರು ಒಬ್ಬರೂ ಇಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಾ./1965
ಹುಟ್ಟಿದ ಕಲ್ಲು ಲಿಂಗವಾಯಿತ್ತು;
ಹುಟ್ಟಿದ ಕಲ್ಲು ದೇವಾಲಯವಾಯಿತ್ತು;
ಹುಟ್ಟಿದ ಪಶು ಹೊಲಕ್ಕೆ ಬಂದಿತ್ತು;
ಹುಟ್ಟಿದ ಮರ ಕಟ್ಟಳೆಯಾದವು.
ಹುಟ್ಟಿ ಕೀರ್ತಿಯ ಮೆಟ್ಟಿದವ ಇಟ್ಟ ಇಟ್ಟ ಹುಳಿಯನ್ನದಂತೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1966
ಹುಟ್ಟಿದ ಬೆಟ್ಟಂಗಳು ಬಟ್ಟಬರಿಯ ಲಿಂಗವಾದವಲ್ಲಾ.
ನಿಜವರಿತವರೆನ್ನವರು,
ಕುಬುದ್ಧಿಯೆಲ್ಲವ ಕೊಂಡು ಮುಳುಗಿತ್ತು ನೋಡಾ.
ಕುಬುದ್ಧಿಯನರಿಯದ ನರದ್ರೋಹಿಗಳಿಗೆಲ್ಲಾ ಹಬ್ಬ ಬಂತ್ತಲ್ಲಾ.
ನರರೆಂಬ ಕೊಬ್ಬಿದ ಕುರಿಗಳಿಗೆಲ್ಲಾ ಹಬ್ಬ ಬಂತ್ತಲ್ಲಾ.
ನಿಸ್ಸೀಮ ನಿಜಗುಣ ಕಪಿಲಸಿದ್ಧಮಲ್ಲಿನಾಥಾ
ನರರೆಂಬ ಪ್ರಾಣಿಗಳಿಗೆ ಹಬ್ಬ ಬಂತ್ತಲ್ಲಾ/1967
ಹುಟ್ಟಿದ ಮಗನ ರಚನೆ ಹುಟ್ಟಲಿಕ್ಕೆ ಯೋಗ್ಯವಾದಂತೆ
ಹುಟ್ಟಿದ ಮಾಯೆ ಬೆಟ್ಟಜನ ಅರಿವ ಪರಿಯಂತೆ
ನೀನಿಪ್ಪೆ ಜೀವಭಾವದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಾ./1968
ಹುಟ್ಟು ಮೆಟ್ಟೆಂಬುದು ನಿಮಗಿಲ್ಲವಯ್ಯಾ;
ನಿಮ್ಮಿಂದ ನೀವೆ ಸ್ವಯಂಭುವಯ್ಯಾ.
ಇಂತಾರಯ್ಯಾ, ಹರುಷದಿಂದ ನೀವಿಂತಾದಿರಯ್ಯಾ.
ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಯ್ಯಾ,
ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನಾ./1969
ಹುಣಚಿಯ ಮರದಲ್ಲೊಂದು ಹಣಚಿಯ ಬೆರಳಿಟ್ಟು ಹೋದಲ್ಲಿ,
ಆ ಹುಣಚಿಯ ಮರ ಹಣಚಿಯ ಮರವಾಗಿ ತಾ ಕಣಚಿ
ಹೋದುದ ಕಂಡೆ.
ಈ ಹುಣಚಿಯ ಹಣಚಿಯ ಹವಣವ ತಿಳಿದು ಅರಿಯಬಲ್ಲಡೆ,
ಹಣೆಯ ಕಣ್ಣಿನ ಶರಣನೆಂಬೆ ನೋಡಾ,
ತ್ರಿಣಯನ ಕಪಿಲಸಿದ್ಧಮಲ್ಲಿಕಾರ್ಜುನಾ./1970
ಹೂವರಳೆಯ ಹಾಸಿನ ಮೇಲಿಪ್ಪನು.
ಗಳಗಳನೆ ಹೋಹನು, ಆತುರವೇರಿ ನಿಂದನು ಆತ.
ಅತ್ತಲೂ ಹೋಗಲರಿಯದೆ ಇತ್ತಲೂ ಬರಲರಿಯದೆ
ಅಲ್ಲಿಯೆ ನಿಂದಾತನ ಬರವ ಹಾರುತ್ತಿರ್ದೆನವ್ವಾ!
ಅದೆಂತೆಂದಡೆ: ಎನ್ನ ಮನಕ್ಕೆ ಬಂದು, ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು
ಕೂಡಿದನೆನ್ನ ಕಪಿಲಸಿದ್ಧಮಲ್ಲಿನಾಥಯ್ಯನವ್ವಾ./1971
ಹೂಸಲಿಲ್ಲದ ಗೋಡೆ, ಲೇಸಿಲ್ಲದವನ ಮಾಟ,
ಕಂಗಳ ಸೂತಕ ಹರಿಯದವನ ಅಂಗದ ಕೂಟ,
ಅದೆಂದಿಗೆ ನಿಜವಪ್ಪುದು.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ
ಪ್ರಭುವೆ ನೀನೆ ಬಲ್ಲೆ./1972
ಹೃದಯಕಮಲದ ಅಷ್ಟದಳದ
ದ್ವಾತ್ರಿಂಶತ್ಕುಸುಮ ಮಧ್ಯದಲ್ಲಿಪ್ಪನಾ ಸೂರ್ಯ.
ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರ
ಆ ಚಂದ್ರನ ಮಧ್ಯದಲ್ಲಿಪ್ಪನಾ ಅಗ್ನಿ
ಆ ಅಗ್ನಿಯ ಮಧ್ಯದಲ್ಲಿಪ್ಪುದಾ ಕಾಂ್ಕ.
ಆ ಕಾಂ್ಕಯ ಮಧ್ಯದಲ್ಲಿಪ್ಪುದಾ ಸುಜ್ಞಾನ.
ಆ ಸುಜ್ಞಾನದ ಮಧ್ಯದಲ್ಲಿಪ್ಪುದಾ ಚಿದಾತ್ಮ.
ಆ ಚಿದಾತ್ಮನ ಮಧ್ಯದಲ್ಲಿಪ್ಪನಾ ಚಿತ್ಪ್ರಕಾಶರೂಪನಪ್ಪ ಪರಶಿವನು.
ಇಂತಪ್ಪ ಪರಶಿವನ-
ಎನ್ನ ಸುಜ್ಞಾನಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ,
ಮನ ಭಾವ ಕರಣೇಂದ್ರಿಯಂಗಳಂ ಸ್ವರೂಪೀಕರಿಸಿ,
ದೃಷ್ಟಿಗೆ ತೋರಿ,
ಕೈಯಲ್ಲಿ ಲಿಂಗವ ಕೊಟ್ಟ ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ./1973
ಹೃದಯಕಮಲದಲ್ಲಿ ವಾಸವಾಗಿರುವಾತನೊಬ್ಬನು.
ಮನದ ಕೊನೆಯಲ್ಲಿ ಇರುವಾತನೊಬ್ಬನು,
ಚಿದಾಕಾಶದಲ್ಲಿರುವಾತನೊಬ್ಬನು.
ಇವರೆಲ್ಲರಲ್ಲಿ ಇರುವಾತನೊಬ್ಬನು,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು./1974
ಹೆಣ್ಣ ಹಿಡಿದು ಹೆಣ್ಣ ಭೋಗಿಸಬಾರದು;
ಮಣ್ಣ ಹಿಡಿದು ಮಣ್ಣ ಭೋಗಿಸಬಾರದು;
ಹೊನ್ನ ಹಿಡಿದು ಹೊನ್ನ ಭೋಗಿಸಬಾರದು;
ಈ ಅಣಕದ ಭೇದವನಾರೂ ಅರಿಯರು.
ಅದೆಂತು ಭಕ್ತಿಸ್ಥಲವಳವಡುವುದು?
ಕಪಿಲಸಿದ್ಧಮಲ್ಲಿಕಾರ್ಜುನಾ./1975
ಹೆಣ್ಣನೊಲ್ಲೆನು ಎಂದಡೆನಗೆ ಹೆಣ್ಣಾಯಿತ್ತು,
ಮನ್ನಣೆಯ ದಾನಕ್ಕೆ ಗುರಿಯಾದೆನು.
ಎನ್ನನಿತ್ತೆನು ಎನ್ನನೊಲ್ಲೆನು ಎಂದೆಂಬವನ
ಇನ್ನು ಭವಕೆ ತಂದೆನೆಂದೆನುತಿದೆ ಮಾಯೆ
ಕಪಿಲಸಿದ್ಧಮಲ್ಲಿಕಾರ್ಜುನಾ./1976
ಹೆಣ್ಣಳಿದ ಬಳಿಕ ಮಣ್ಣಿನ ಹಂಗೇಕಯ್ಯಾ?
ಮಣ್ಣಳಿದ ಬಳಿಕ ಹೊನ್ನಿನ ಹಂಗೇಕಯ್ಯಾ?
ಮುಕ್ಕಣ್ಣನಾದ ಬಳಿಕ ಮೂರರ ಹಂಗೇಕಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ./1977
ಹೆತ್ತ ತಾಯಿ ನೀನೆ ಅವ್ವಾ;
ನನ್ನ ಹತ್ತಿರ ಬಂದಾಕೆ ನೀನೆ ಅವ್ವಾ;
ಲಿಂಗದ ಮೊತ್ತವಾದಾಕೆ ನೀನೆ ಅವ್ವಾ;
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ರಾಣಿ ನೀನೆ ಅವ್ವಾ.
ಇದರನುಭಾವವ ತಿಳಿದಾತನೆ ಜಂಗಮ;
ಇದರನುಭಾವವ ಕೇಳಿದಾತನೆ ಭಕ್ತ ನೋಡವ್ವಾ;
ಆತ ಪ್ರಾಣಲಿಂಗಿಯವ್ವಾ./1978
ಹೆತ್ತಳವ್ವೆ ಸಕಲ ಬ್ರಹ್ಮಾಂಡಗಳ,
ಅವ್ವೆ ಹೆತ್ತು ಹೆಸರಿಡಲರಿಯಳು.
ಅವ್ವೆ ಚಿತ್ತ ವಿಚಿತ್ತವಾಗಿ
ಅವ್ವೆ ಮತ್ತೆ ತನ್ನ ಹೆಸರಿಟ್ಟಳು.
ಚಿತ್ತದಾ ಕಥನದಿಂದ ಮತ್ತೆ ಶುದ್ಧವಾಗೆಂದಳು
ಕಪಿಲಸಿದ್ಧಮ್ಲನಾಥನವ್ವೆ./1979
ಹೆಸರಿಡಕಳವಲ್ಲ, ಹೆಸರುಗೆಟ್ಟಾ ಸೀಮೆ
ಪಸರಿಸುತಿಕ್ಕು ಮತ್ತಾನಂದದಾ
ಹೆಸರಿಡುವ ಸೀಮೆಯನು ಗುರುವಾಗಿ ಪಸರಿಸಲು
ವಸುಧೆ ಕಂಡಿತು ಒಂದು ಲಿಂಗರೂಪ.
ಆನಂದರೂಪ ಕಪಿಲಸಿದ್ಧಮಲ್ಲಿಕಾರ್ಜುನ
ಸೀಮೆಯೊಳಗಡಗಿಪ್ಪುದು ಅನಂತ ಬ್ರಹ್ಮಾಂಡವು/1980
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು
ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ.
ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ
ಕೇಳಯ್ಯಾ.
ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ
ಐದಕ್ಷರವೆ ಆತನ ಪ್ರಣವನಾಮ.
ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ.
ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ
ಆಚಾರ್ಯನಾಮ.
ಎಂತೀ ನಾಮತ್ರಯಂಗಳನರಿದು
ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು.
ಈ ಬಸವಣ್ಣ ಮೊದಲಾದ ಪುರಾತರು
ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ
ನಿತ್ಯ ನಿಜನಿವಾಸಿಗಲಾದರು.
ಆ ಶರಣರ ಅನುಮತದರಿವಿನ ಉಪದೇಶವ ಕೇಳಿ,
ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು./1981
ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು,
ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು,
`ಅತ್ಯ್ಕತಿಷ್ಠದ್ದಶಾಂಗುಲಂ’ ಎಂಬ ಲಿಂಗವ ಚಿತ್ತಕ್ಕೆ ತಂದು,
ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ;
ಚಿತ್ತಶುದ್ಧನ ಮಾಡಿದ ಬಸವಣ್ಣ.
ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ,
ಮುಕ್ತನ ಮಾಡಿದ ಗುರು ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ./1982
ಹೆಸರಿಡಬಾರದ ಭವಗೇಡಿ,
ನಿನ್ನ ಕೂಡಿದವರು ನಿನ್ನಂತೆ ಹೆಸರುಗೆಡುವರಲ್ಲದೆ
ಮರಳಿ ಹೆಸರುಂಟೆ?
ಎಲೆ, ಭವಗೇಡಿ ಹರನೆ,
ನಿನ್ನನರ್ಚಿಸಿದವರು ನಿನ್ನಂತೆ ಭವಗೆಡುವರಲ್ಲದೆ
ಮರಳಿ ಭವವುಂಟೆ?
ಅನಾದಿ ಸಂಸಿದ್ಧಯೋಗಮೂರ್ತಿ
ಕಪಿಲಸಿದ್ಧಮಲ್ಲಿಕಾರ್ಜುನ
ಇದ್ದೆಸಗೇಡಿ ನೀನು,
ನಿನ್ನವರು ನಿನ್ನಂತೆ ಇದ್ದೆಸೆಗೆಟ್ಟರಯ್ಯಾ./1983
ಹೆಸರಿಡಬಾರದ ಲಿಂಗವ
ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು.
ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು.
ಕಂಜಕನ್ನಿಕೆಯ ಹಣೆಯಲ್ಲಿ ವಿಧಿವಶವೆಂದು ಬರೆದ
ಐದಕ್ಷರವೆ ಆತನ ಪರಮನಾಮ.
ಅವ್ವೆಯ ಕರಂಗಳೊಪ್ಪಿಪ್ಪ
ಅಕ್ಷರಂಗಳಾರೆ ದ್ವಿತೀಯ ನಾಮ.
ಅವ್ವೆಯ ಆನಂದ ಮನ್ಮಸ್ತಕದಲ್ಲಿ
ಒಪ್ಪಿಪ್ಪ ಅಕ್ಷರದ್ವಯವೆ ಆತನ ಆಚಾರ್ಯನಾಮ.
ಇಂತು ನಾಮತ್ರಯಂಗಳನರಿದು ಧ್ಯಾನಾರೂಢನಾಗಿ
ಲಿಂಗಾರ್ಚನೆಯ ಮಾಡುವರೆತ್ತಾನೊಬ್ಬರು.
ಬಸವಣ್ಣ ಮೊದಲಾದ ಸಕಲ ಪುರಾತರು,
ಅವ್ವೆಯ ಅನುಮತದಿಂದ
ಶುದ್ಧ ಸಿದ್ಧ ಪ್ರಸಿದ್ಧ ಲಿಂಗಾರ್ಚನೆಯಂ ಮಾಡಿ ನೀನಾದರು.
ಎನಗಿನ್ನಾವುದು ಹದನೈ
ಕಪಿಲಸಿದ್ಧಮಲ್ಲಿಕಾರ್ಜುನಾ./1984
ಹೆಸರಿಡಬಾರದ ಸುಖದ ಸಾಯುಜ್ಯದಲ್ಲಿ
ಅರ್ಪಿತಾವಧಾನ ಮುಖಂಗಳ ಭೇದಂಗಳ ಭೇದಿಸುವೆ.
ಇಡಾ ಪಿಂಗಳಾ ಸುಷುಮ್ನಾನಾಳಂಗಳ ಭೇದಂಗಳ ಭೇದಿಸುವೆ,
`ಏಕ ಏವ ರುದ್ರೋನ ದ್ವಿತೀಯಃ’ ಎಂಬ ಭೇದವ ಭೇದಿಸುವೆ,
ನಿತ್ಯಪ್ರಸಾದದಲ್ಲಿ ನಿಪುಣನಪ್ಪೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವೆ./1985
ಹೇಮಾಭಿಧಾನವದು ಮಂದರಾದ್ರಿಯಯ್ಯಾ.
ಸಿದ್ಧರವರು ಪರಿಚಾರಕರಯ್ಯಾ.
ನಿಮ್ಮ ರಾಣಿವಾಸದ ಜನನವಯ್ಯಾ ಈತ ಲೋಕದಲ್ಲಿ.
ಅಂಗಯ್ಯಾ ಸಮಾಧಿಯ ಬಿಡುಗಡೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ./1986
ಹೇಳಯ್ಯಾ, ಹೇಳಯ್ಯಾ, ಆ ಕಾಲದಲಿ ಮಾಡುವಿರಿ
ಲಗುನವೆಂತಹುದಯ್ಯ?
ಕೇಳಯ್ಯಾ, ಆ ಕಾಲವೆ ಸುಕಾಲವಾಗಿ
ಲಗುನವಿಂತಹುದು.
ಭಕ್ತರು ಕಪಿಲಸಿದ್ಧಮಲ್ಲಿನಾಥನ
ಮನಮನದ ಚಿತ್ತದಲ್ಲಿ ಮುಂದಿಟ್ಟು ನಡೆವರಾಗಿ
ಅಂತಹುದಯ್ಯಾ, ಅಂತಹುದಯ್ಯಾ./1987
ಹೇಳಿದ ಬೋಧ ಶಿಲಾಪಿಯಂತಾದಡೆ,
ಶಿಲಾಸದೃಶ ನೋಡಾ ಭವಕ್ಕೆ.
ಹೇಳಿದ ಬೋಧೆ ಜಲಪಿಯಾದಡೆ,
ಜಲಸದೃಶ ನೋಡಾ ಭವಕ್ಕೆ.
ಹೇಳಿದ ಬೋಧೆ ಗಟ್ಟಿಗೊಂಡಡೆ,
ಆಳುವುದೆತ್ತ ನಿನ್ನ ಮಾಯಾಜಾಲವ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ./1988
ಹೇಳುವಡೆ ಬಹು ಸುಲಭ,
ಆಳುವಡೆ ಅದು ಬಹು ದುರ್ಘಟ ನೋಡಯ್ಯಾ.
ಆಳಿದ ಹಂಗೇಕಯ್ಯಾ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನ ತಂದೆ?/1989
ಹೊಗಳಿತೆಗೆ ಎನ್ನ ದೇಹ ಉರಸದಯ್ಯಾ
ಹೊಗಳಿತೆಯ ಹೊಗಳುವಾಗ ನೆಲನ ಬಗಿದು
ಹೋಗುವಂತಹುದಯ್ಯಾ.
ಅದು ನನ್ನ ದೇಹದ ಗುಣವಯ್ಯಾ.
ದೂಷಣೆ ಪಥ್ಯವಾದಲ್ಲದೆ ಈಸರನ ಕಾಣಬಾರದು
ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ/1990
ಹೊದ್ದಿಯೂ ಹೊದ್ದದಂತಿಪ್ಪವನ ಹೊದ್ದಿ
ಸಂಯೋಗವ ಮಾಡುವ ಪರಿಯೆಂತಯ್ಯಾ?
ಇಬ್ಬಟ್ಟೆಯಾಗಿಪ್ಪ ನೀಲಕಂಧರ!
ಮಸ್ತಕದಲ್ಲಿ ಲೀಲೆಯಿಂದಿಪ್ಪವನ ಸಂಯೋಗವ ಮಾಡುವ
ಪರಿಯೆಂತಯ್ಯಾ?
ಎಲೆ ಗುರುವೆ, ನೀನು ಸರ್ವಾಂಗವ ಪ್ರವೇಶಿಸುವಲ್ಲಿ,
ಎನ್ನೊಡನೆ ಪ್ರವೇಶಿಸಿದ ಕಾರಣ,
ಆನು ಸಂಯೋಗವ ಮಾಡಿದೆನೆಲೆ ಎಂದಡೆ,
ಮಿಕ್ಕಿನವರಿಗೆ ಸಮನಿಸುವುದೆ ಅಯ್ಯಾ, ಬಡವರಿಗೆ,
ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಲಿಂಗ
ನಿನ್ನ ಕರುಣವುಳ್ಳವರಿಗಲ್ಲದೆ?/1991
ಹೊನ್ನು ಬಿಡದನ್ನಕ್ಕ ಗುರುಪಾದೋದಕ ಸಲ್ಲದು.
ಮಣ್ಣು ಬಿಡದನ್ನಕ್ಕ ಲಿಂಗಪಾದೋದಕ ಸಲ್ಲದು.
ಹೆಣ್ಣು ಬಿಡದನ್ನಕ್ಕ ಜಂಗಮಪಾದೋದಕ ಸಲ್ಲದು.
ಈ ಸರ್ವವು ಅಳಿಯದನ್ನಕ್ಕ,
ಕಪಿಲಸಿದ್ಧಮಲ್ಲಿಕಾರ್ಜುನನಿಂಬುಗೊಡನು ಮಹಾಬಯಲಲ್ಲಿ,
ಕಲ್ಲಯ್ಯಾ. /1992
ಹೊರಗಾಡಿ ಬಂದನೆಂದು ನುಡಿಸಲೊಲ್ಲದೆ ಸುಮ್ಮನೆ ಇದ್ದೆನು.
ಎನ್ನ ಮನ ನೊಂದು ತಾನಿದ್ದಡೆ ನಿಮ್ಮತ್ತ ಮುಂತಾದೆನು.
ಬಿಕ್ಕುತ್ತ ಒದರುತ್ತ ಕಾಲಮೇಲೆ ಬಿದ್ದತ್ತಡೆ
ಕಂಗಳುದಕ ಮಜ್ಜನಕ್ಕೆರದಂತಾಯಿತ್ತು.
ಅಂತಿದ್ದಡೆ ಕಂಡು ನೆಗಹಿದನು ನಮ್ಮ ಕಪಿಲಸಿದ್ಧಮಲ್ಲಿನಾಥನು./1993
ಹೊರಮನ ಹೊರತಾಗಿದ್ದವಳಾನಯ್ಯ.
ಸುತ್ತಿ ಮುತ್ತಿ ಆತನ ಸೆರಗಿನ ಬಳಿಗಳ ಹಿಡಿದು ಹಿರಿದು
ಕಂಗಳ ಕಣ್ಣಲಿ ಗೆಲಿದೆನವ್ವ, ಅವ್ವಾ!
ಇಂತಹ ಮಾಯೆಯ ಬೆಡಗ ಬಲ್ಲ
ಕಪಿಲಸಿದ್ಧಮಲ್ಲಿನಾಥನವ್ವ, ಅವ್ವಾ!/1994
ಹೊಲಬು ಸೀಮೆಯೊಳಗೆ ಹೊಲಬ ಮೀರಿದ ಅಸೀಮ
ಕುಲಗೆಟ್ಟ ಸಮತೆ ಸೀಮೆಯ ಸೀಮೆಯಾ.
ಈ ದೆಸೆಗೇಡಿ ಸೀಮೆಯನು ವಶಮಾಡಬಲ್ಲಡೆ
ಸಮತೆಗಲ್ಲದೆ ಮತ್ತೆ ವೇದ್ಯವಲ್ಲ.
ಆನಂದಸ್ಥಾನದಲ್ಲಿ ಸಮತೆ ಸುಮತಿಯ ಭೇದ
ಆರೂಢ ಕೂಟ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ
ಆನಂದ ದಾರಿ ತಾ ಸಮತೆ ರೂಪ./1995
ಹೊಲಮೇರೆಯಿಂ ಮೇರೆ ಹೊಲಬುದಪ್ಪಿದ ನಾದ ಕಳೆಗಳ
ಮೀರಿರ್ದ ತುರ್ಯಂಗಳ,
ಗುರುವಿನ ಕರುಣದ ಅನಿಮಿಷದ ಮನೆಯಲ್ಲಿ
ಹೊಲಬುದಪ್ಪಿದ ಕಂಡೆ ಮಧ್ಯಮವನು.
ಆನಂದಸ್ಧಾನದ ಆಂದೋಳವಾಗಿಪ್ಪ
ಮೂರರಕಳೆಗಳ ಭೇದಂಗಳ
ಮೀಲಿಲೀಯದ ಬ್ರಹ್ಮ, ತೋರಲೀಯದ ಸತ್ವ
ನೀನಾದೆನೈ ಕಪಿಲಸಿದ್ಧಮಲ್ಲೇಶ್ವರಾ./1996
ಹೋ ಹೋ!
ಇದೇನು ಮುಕ್ತಿಯ ತೊಡಕು!
ಇದೇನು ನುಡಿವ ನುಡಿಗೆ ಆತಂಕವು!
ಇದೇನು ಜ್ಞಾನಜ್ಯೋತಿಗೆ ಮಾಯಾಪವನ ಪಟುತರವು!
ಇದೇನು, ಕಪಿಲಸಿದ್ಧಮಲ್ಲಿಕಾರ್ಜುನ ಮಾಡಿ ತಂದಿಟ್ಟ
ಭೊಗದ ಉಗುಮಿಗೆಯು!/1997