Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಕಲ್ಪನಾಕರ್

ಆಳವಾದ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಧಿಸುವ ಛಲ ಜೊತೆಗೆ ಸೇವಾ ಪ್ರಜ್ಞೆಗಳಿಂದ ಸರ್ಕಾರ ಹಾಗೂ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳ ನಡುವೆ ಸಾಮರಸ್ಯ ತಂದು ಕೊಟ್ಟ ಸಾಹಿತಿ ಮಹಿಳೆ ಕಲ್ಪನಾಕರ್ ಅವರು.
ಬೆಂಗಳೂರು ಅಜೆಂತಾ ಟಾಸ್ಕ್ ಫೋರ್ (ಬಿಎಟಿಎಫ್) ಎನ್ನುವ ಹೆಸರಿನಲ್ಲಿ ಪರಿಸರ ಹಾಗೂ ಖಾಸಗಿ ಪಾಲುದಾರಿಕೆಯಲ್ಲಿ ಬೆಂಗಳೂರು ನಗರ ಸುಧಾರಣೆಗೆ ಹಗಲಿರುಳು ದುಡಿಯುತ್ತ ಯಶಸ್ಸು ಕಂಡವರು ಕಲ್ಪನಾಕರ್, ಇಂದು ಬೆಂಗಳೂರಿನಲ್ಲಿ ಬಿಎಟಿಎಫ್ ಒಂದು ಪ್ರಧಾನ ಶಕ್ತಿಯಾಗಿರಲು ಕಲ್ಪನಾಕರ್ ಕಾರಣ.
ಮುಂಬೈಯಲ್ಲಿ ಜನಿಸಿ, ನವದೆಹಲಿಯಲ್ಲಿ ಶಿಕ್ಷಣ ಪಡೆದು, ಯು.ಕೆ.ಯ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಇನ್‌ಲಾಕ್ಸ್ ವಿದ್ಯಾರ್ಥಿವೇತನ ಪಡೆದು ಎಂ.ಫಿಲ್. ಪದವಿ ಗಳಿಸಿದ ಕಲ್ಪನಾಕರ್ ಹದಿನೆಂಟು ವರ್ಷಗಳ ವೃತ್ತಿ ಜೀವನದಲ್ಲಿ ವ್ಯವಸ್ಥಾಪನಾ ಸಮಾಲೋಚನೆ, ಮಾರುಕಟ್ಟೆ ಹಾಗೂ ಸಂವಹನೆ, ಯೋಜನಾ ನಿರ್ವಹಣೆ ಮತ್ತು ಈಚೆಗೆ ಸಮುದಾಯ ಅರಿವು ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಗಳವರೆಗೆ ವಿಸ್ತಾರವಾದ ಆಸಕ್ತಿಯನ್ನು ತೋರಿದ್ದಾರೆ.
ಬಾಬಾ ಆಡಳಿತ ಸೇವೆಗೆ ಸೇರಿ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲ್ಪನಾಕರ್ ಕ್ಲಿಷ್ಟಕರವಾದ ಹಾಗೂ ದುಸ್ಸಾಧ್ಯವಾದ ಯೋಜನೆಗಳನ್ನು ಕೈಗೆತ್ತಿಕೊಂಡು ಜಯ ಗಳಿಸುವುದರಿಂದ ಸತತವಾಗಿ ಅಭಿವೃದ್ಧಿ ಹೊಂದಿದರು.
ಈ ನಡುವೆ ಕ್ಯಾನ್ಸರ್ ರೋಗಿಗಳಿಗೆ ನೆರವು ಸಂಸ್ಥೆಯನ್ನು ಸ್ಥಾಪಿಸಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನೆರವಾದರು.
ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸರ್ಕಾರದ ಏಜೆನ್ಸಿಗಳು ಹಾಗೂ ಖಾಸಗಿ ಸಂಸ್ಥೆಗಳ ನಡುವೆ ಸಂಪರ್ಕಕೊಂಡಿಯಾಗಿ ವ್ಯವಹರಿಸಿ ಅನೇಕ ಯೋಜನೆಗಳು ಜಾರಿಗೆ ತರಲು ಕಾರಣರಾದರು.
ಬಸ್ ತಂಗುದಾಣ, ನಿರ್ಮಲ ಬೆಂಗಳೂರು ಶೌಚಾಲಯಗಳು, ಬೆಂಗಳೂರು ಸಾರಿಗೆ ನಿರ್ವಹಣಾ ಯೋಜನೆ, ರಸ್ತೆ ಸುರಕ್ಷತಾ ಯೋಜನೆ, ಖಾತಾ ಸರಳೀಕರಣ, ಬೀದಿ ಕುರ್ಚಿ ಕಾರ್ಯಕ್ರಮ ಇತ್ಯಾದಿಗಳು ಕಲ್ಪನಾ ಅವರ ಸಾಧನೆಯ ಸಾಕ್ಷಿಗಳು.
ಬೆಂಗಳೂರಿಗೊಂದು ಹೊಸ ರೂಪ ಕೊಡುವಲ್ಲಿ ಶ್ರಮಿಸಿ ಯಶಸ್ವಿಯಾದ ಮಹಿಳೆ ಕಲ್ಪನಾಕರ್.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವಿಮಲಾ ರಂಗಾಚಾರ್

ರಂಗಭೂಮಿ, ನೃತ್ಯ ಸಂಗೀತ, ಕರಕುಶಲ ಕಲೆಗಳೊಂದಿಗೆ ದೀರ್ಘಕಾಲದ ನಂಟು ಬೆಳೆಸಿಕೊಂಡಿರುವ ಸಮಾಜ ಸೇವಾಕರ್ತರು ಶ್ರೀಮತಿ ವಿಮಲಾ ರಂಗಾಚಾರ್ ಅವರು.
ಸಿಂಹಳ, ರಷ್ಯಾ, ಇಂಗ್ಲೆಂಡ್, ಅಮೆರಿಕಾ, ಇಂಡೋನೇಷ್ಯಾಗಳಲ್ಲಿ ಸಂಚರಿಸಿ ಗಳಿಸಿಕೊಂಡ ವ್ಯಾಪಕ ಅನುಭವವನ್ನು ಆಸಕ್ತ ಕಲಾ ಪ್ರಕಾರಗಳಿಗೆ ಧಾರೆಯೆರೆದರು. ಪೂನಾದ ಭಾರತೀಯ ಮಹಿಳಾ ವಿಶ್ವವಿದ್ಯಾಲಯದ ಕಲಾ ಪದವಿಯನ್ನು ಪ್ರಥಮ ಬ್ಯಾಂಕ್‌ನೊಂದಿಗೆ ಗಳಿಸಿ ಕುಲಪತಿಗಳ ಬಹುಮಾನವನ್ನು ಪಡೆದರು. ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಅಧ್ಯಕ್ಷರಾಗಿ, ಎಂ.ಇ.ಎಸ್. ಕಾಲೇಜಿನ ಗೌರವ ಕಾವ್ಯದರ್ಶಿಯಾಗಿ, ನಾಟ್ಯ ಇನ್ಸ್‌ಟಿಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯೋಗ್ರಫಿಯ ಉಪಾಧ್ಯಕ್ಷರಾಗಿ, ಮಲ್ಲೇಶ್ವರಂ ಮಹಿಳಾ ಸಂಘದ ಅಧ್ಯಕ್ಷರಾಗಿ, ಸೇವಾಸದನದ ಗೌರವ ಕಾರ್ಯದರ್ಶಿಯಾಗಿ ಬಿಡುವಿಲ್ಲದ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೈಲಾಸಂ, ಶ್ರೀರಂಗ, ಪರ್ವತವಾಣಿಯವರ ನಾಟಕಗಳಲ್ಲಿ ಭಾವಪೂರ್ಣವಾಗಿ ಅಭಿನಯಿಸಿ ಜನ ಮೆಚ್ಚುಗೆಗೆ ಪಾತ್ರರಾದ ಶ್ರೀಮತಿ ವಿಮಲಾ ರಂಗಾಚಾರ್ ಅವರು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಅವುಗಳ ವೇಷಭೂಷಣ ವಿನ್ಯಾಸಕರಾಗಿಯೂ ಕಾರ್ ನಿರ್ವಹಿಸಿದವರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಕರಕುಶಲ ಕಲೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಶಿಶುಕಲ್ಯಾಣ ಮತ್ತು ಮನರಂಜನಾ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ, ಕೆನರಾ ಬ್ಯಾಂಕ್ ನಿರ್ದೆಶಕರಾಗಿ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ, ಭಾರತೀಯ ನಾಟ್ಯ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಸಂತೃಪ್ತಿಯನ್ನು ಕಂಡಿದ್ದಾರೆ.
ಉದಾತ್ತ ಕನಸುಗಳನ್ನು ಹೊಂದಿರುವ ಮೌಲ್ಯಾಧಾರಿತ ಜೀವನ ಶ್ರದ್ಧೆಯ ಪ್ರತೀಕವಾಗಿರುವವರು ಶ್ರೀಮತಿ ವಿಮಲಾ ರಂಗಾಚಾರ್ ಅವರು.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಡಾ|| ರಾಧಾ ಎಸ್. ಮೂರ್ತಿ

ವೈದ್ಯಕೀಯ ಶುಕ್ರೂಷಾ ಪರಿಚಾರಿಕೆಯಲ್ಲಿ ವಿನೂತನ ಯೋಜನೆಯನ್ನು ರೂಪಿಸಿ ವೃದ್ಧರು ಮತ್ತು ನಿರ್ಗತಿಕರಿಗೆ ಸದಾ ಸಹಾಯಹಸ್ತ ಚಾಚಿರುವ ಸಮಾಜ ಸೇವಕಿ ಡಾ|| ರಾಧಾ ಎಸ್‌. ಮೂರ್ತಿ ಅವರು.
ಬೆಂಗಳೂರಿನ ಸೇಂಟ್‌ ಜಾನ್ ಮೆಡಿಕಲ್ ಕಾಲೇಜಿನ ಪದವೀಧರರಾಗಿರುವ ಶ್ರೀಮತಿ ರಾಧಾ ಅವರು ಮೊದಲಿನಿಂದಲೂ ಕ್ರಿಯಾಶೀಲರಾದವರು. ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಅವಗಣನೆಗೆ ಗುರಿಯಾದ ಕ್ಷೇತ್ರವನ್ನು ಅರಸುತ್ತ ಅಲ್ಲಿ ತಮ್ಮ ಸೇವೆಯನ್ನು ನೀಡಬೇಕೆಂದು ಹಂಬಲಿಸುತ್ತಿರುವಾಗ ಅವರಿಗೆ ಗೋಚರಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ತಲುಪಲಾಗದ ಅಶಕ್ತರು ಹಾಗೂ ಬಡ ವೃದ್ದರು.
೧೯೯೬ನೆಯ ಇಸವಿಯಲ್ಲಿ ‘ನೈಟಿಂಗೇಲ್ಸ್ ಹೋಂ ಹೆಲ್ತ್‌ ಸರ್ವಿಸಸ್’ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಉದಾತ್ತ ಆಶಯದಂತೆ ಮನೆ ಬಾಗಿಲಿಗೆ ತೆರಳಿ ಸಾಧ್ಯವಾದ ಎಲ್ಲ ರೀತಿಯ ವೈದ್ಯಕೀಯ ಆರೈಕೆ ಮಾಡತೊಡಗಿದರು. ಸೇವಾ ಕೈಂಕರ್ಯದಲ್ಲಿ ತೊಡಗಿ ವಯೋವೃದ್ಧರ ಅನೇಕ ಸಮಸ್ಯೆಗಳಿಗೆ ಸಹಾಯ ನೀಡುತ್ತಿದ್ದಾರೆ. ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಂಸ್ಥೆ ಸ್ಥಾಪಿಸಿ ತಮ್ಮ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಂಡ ಶ್ರೀಮತಿ ರಾಧಾ ಮೂರ್ತಿ ಅವರು. ನೈಟಿಂಗೇಲ್ಸ್ ಎಲ್ಲರ್ಸ್ ಎನ್‌ರಿಚ್‌ಮೆಂಟ್‌ ಸೆಂಟರ್, ನೈಟಿಂಗೇಲ್ಸ್ ಲೈಫ್ ಸೇವಿಂಗ್ ಸರ್ವಿಸಸ್, ನೈಟಿಂಗೇಲ್ಸ್ ಪ್ರಾಜೆಕ್ಟ್ ಫಾರ್ ದಿ ಅಂಡರ್ ಪ್ರಿವಿಲೇಜ್ ಎಲ್ಡರ್ಸ್, ಎಲ್ಡರ್ಸ್ ಹೆಲ್ತ್‌ಲೈನ್ ೧೦೯೦ ಮೊದಲಾದ ಉಪ ಸೇವಾ ವಿಭಾಗಗಳನ್ನು ತೆರೆದು ಸೇವಾ ನೀಡಿಕೆಯಲ್ಲಿ ಶಿಸ್ತು ಹಾಗೂ ನಿಖರ ಫಲಿತಾಂಶವನ್ನು ಸಾಧಿಸಿದರು.
‘ಎಲ್ಲರ್ ಟಾಸ್ಕ್ ಫೋರ್ಸ್‌’ನಲ್ಲಿ ಡಾ. ರಾಧಾ ಅವರು ಸದಸ್ಯರಾಗಿದ್ದಾರೆ. ವೃದ್ಧ ಸೇವಾ ಕೈಂಕರ್ಯದಲ್ಲಿ ಇನ್ನೂ ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸುತ್ತ ಸೇವೆಯಲ್ಲಿಯೇ ಸಂತೋಷವನ್ನು ಕಾಣುತ್ತ, ಸಮಾಜಕ್ಕಾಗಿಯೇ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು ಡಾ. ರಾಧಾ ಎಸ್‌. ಮೂರ್ತಿ ಅವರು.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿಜಯನಾಥ ಶೆಣೈ

ಪುರಾತನ ಕಲೆ, ಸಂಸ್ಕೃತಿಯನ್ನು ಮೂಲರೂಪದಲ್ಲಿ ಹಿಡಿದಿರಿಸಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಉದಾತ್ತ ಕಾಯಕದಲ್ಲಿ ತೊಡಗಿರುವ, ಕಸದಿಂದ ರಸ ಸೃಷ್ಟಿಸಬಲ್ಲ ಅಪರೂಪದ ರಚನಾತ್ಮಕ ಪ್ರತಿಭೆ ಶ್ರೀ ವಿಜಯನಾಥ ಶೆಣೈ ಅವರು.
ಉಡುಪಿಯಲ್ಲಿ ೧೯೩೪ ರಲ್ಲಿ ಜನಿಸಿರುವ ಶ್ರೀ ಶೆಣೈ ಅವರು ೧೯೬೧ರಲ್ಲಿ ‘ಸಂಗೀತ ಸಭಾ’ ಸಂಸ್ಥೆಯನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಸಂಗೀತದ ಬಗೆಗೆ ವಿಶೇಷ ಅಭಿರುಚಿಯನ್ನು ಮೂಡಿಸಿದರು.
‘ಕರ್ನಾಟಕ ಸಂಘ’ ವನ್ನು ಸ್ಥಾಪನೆ ಮಾಡಿ ಸಾಹಿತ್ಯ, ಸಂಸ್ಕೃತಿಯನ್ನು ಕುರಿತು ಅನೇಕ ಗೋಷ್ಠಿ, ಚರ್ಚೆ, ಸಮಾವೇಶಗಳನ್ನು ಸಂಘಟಿಸಿ, ಬರಹಗಾರರ ಒಕ್ಕೂಟವನ್ನು ರಚಿಸಿ ಕಿರಿಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕಾರ ಕೈಗೊಂಡರು.
ಯಕ್ಷಮಂಡಲ ಚಿತ್ರ ಕಲಾಮಹೋತ್ಸವ, ಮೊದಲಾದ ಕಾಠ್ಯಕ್ರಮಗಳ ಮೂಲಕ ಸಾಂಪ್ರದಾಯಿಕ ಪುರಾತನ ಕಲೆಯ ಪ್ರದರ್ಶನಕ್ಕೆ ನೆರವು ಒದಗಿಸಿದರು. ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಹಳೆಯ ಮನೆಗಳನ್ನು ಕೆಡವಿದಾಗ ಅಲ್ಲಿಗೆ ಹೋಗಿ ಕಲಾತ್ಮಕ, ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಮೌಲಿಕ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನೇ ಬಳಸಿ ಇವರು ಸ್ವತಃ ನಿಮ್ಮಿಸಿದ ಮನೆ ಸಾವಿರಾರು ಸಂಸ್ಕೃತಿ ಪ್ರೇಮಿಗಳನ್ನು ಸೆಳೆಯುತ್ತಿದೆ. ‘ಹಸ್ತಶಿಲ್ಪ’ ಎಂಬ ಹೆಸರನ್ನಿಟ್ಟು ಈ ಮನೆಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿಟ್ಟಿದ್ದಾರೆ.
ಮಣಿಪಾಲದ ಸಮೀಪ ಇವರು ನಿಮ್ಮಿಸಿರುವ ‘ಸಂಸ್ಕೃತಿ ಗ್ರಾಮ’ ಅನೇಕ ದೃಷ್ಟಿಗಳಿಂದ ಅಪೂರ್ವವಾಗಿದೆ. ಹಿಂದಿನ ಕಾಲದಲ್ಲಿ ವಾಸಿಸುತ್ತಿದ್ದವರ ಜೀವನ ಶೈಲಿ ಕಣ್ಣಿಗೆ ಕಟ್ಟುವಂತೆ ಈ ಗ್ರಾಮವನ್ನು ನಿಮ್ಮಿಸಿದ ವೈಖರಿ ಬೆರಗುಗೊಳಿಸುವಂತಿದೆ. ಹಳ್ಳಿ ಹಾದಿಯ ಹಳೆ ಮೈಲಿಕಲ್ಲುಗಳು, ಸೀಮೆಎಣ್ಣೆಯ ದೀಪ, ಕಂಬಗಳು, ಚಕ್ಕಡಿಗಳು, ಹೀಗೆ ಕಣ್ಮರೆಯಾಗುತ್ತಿರುವ ಸಂಸ್ಕೃತಿಯ ಜೀವಂತ ಚಿತ್ರವೇ ಇಲ್ಲಿ ರೂಪು ತಳೆದಿದೆ.
ಸಾಹಿತ್ಯ, ಸಂಗೀತ, ಯಕ್ಷಗಾನ, ನೃತ್ಯ, ಜಾನಪದ, ಚಿತ್ರ, ಶಿಲ್ಪ, ನಾಟಕ ಹೀಗೆ ವಿಶೇಷವಾಗಿ ಸಂಸ್ಕೃತಿಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ನಾಡಿನ ಹೆಮ್ಮೆಯ ವ್ಯಕ್ತಿ ಶ್ರೀ ವಿಜಯನಾಥ ಶೆಣೈ ಅವರು.