Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಪಿ.ಕೆ. ಶೆಟ್ಟಿ

ಹಲವಾರು ವರ್ಷಗಳಿಂದ ಕೃಷಿ ವಿಜ್ಞಾನಿ ಹಾಗೂ ಪಲಸರ ವಿಜ್ಞಾನಿಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಮ್ಮನ್ನು ಸಂಶೋಧನೆ ಹಾಗೂ ಬೋಧನೆಯಲ್ಲಿ ತೊಡಲಿಸಿಕೊಂಡವರು ಪ್ರೊ. ಪಿ.ಕೆ. ಶೆಟ್ಟಿ ಅವರು. ಸಂಶೋಧನೆಯ ಜೊತೆಗೆ ವಿಜ್ಞಾನ ತಂತ್ರಜ್ಞಾನದಲ್ಲಿ ಆಗುತ್ತಿರುವ ತಲತಗತಿಯ ಬೆಳವಣಿಗೆಗಳ ಬಗ್ಗೆ ಅಲವು ಮತ್ತು ಆಸಕ್ತಿ ಮೂಡಿಸಲು ಪಲಿಸರ ಸ್ನೇಹಿ ಕೃಷಿ ಪದ್ಧತಿ ಬಳಕೆಯ ಬಗ್ಗೆ ಬೆಳಕು ಚೆಲ್ಲಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಪಲಸರ ಸಂರಕ್ಷಣೆಯ ಬಗ್ಗೆ ಜನತೆಗೆ ಅಲವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಪಲಸರಕ್ಕೆ ಹಾನಿಕಾರಕವಾದ ಮತ್ತು ಪಲಸರದಲ್ಲಿ ಬಹುಸಮಯ ಇರಬಹುದಾದ ಒಂದು ರಾಸಾಯನಿಕ ಕೀಟನಾಶಕವನ್ನು ಸೂಕ್ಷ್ಮಜೀವಿಯ ಸಹಾಯದಿಂದ ಬೇರ್ಪಡಿಸಿ ಪಲಸರ ಪೂರಕವಾದ ರಾಸಾಯನಿಕವಾಗಿ ಮಾರ್ಪಾಟು ಮಾಡಲು ಪ್ರಯತ್ನಿಸಿ ಯಶಸ್ವಿಯಾಗಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಭಾರತದ ಕೃಷಿ ಬೆಳೆಗಳ ಸಂರಕ್ಷಣೆ ಕುಲಿತಂತೆ ಹನ್ನೆರಡು ರಾಜ್ಯಗಳಲ್ಲಿ ಆಳವಾದ ಅಧ್ಯಯನ ಕೈಗೊಂಡು ಸಮಗ್ರ ಕೃಷಿ ವಿವರಗಳು ಒಂದೇ ಕಡೆ ಸಿಗುವಂತಹ ಸಾಪ್ಟವೇರ್ ಅಭಿವೃದ್ಧಿ ಪಡಿಸಿದ್ದಾರೆ
ದೇಶ-ವಿದೇಶದ ಸಂಶೋಧನಾ ನಿಯತಕಾಅಕೆಗಳಲ್ಲಿ ಹಲವಾರು ವೈಜ್ಞಾನಿಕ ಲೇಖನಗಳನ್ನು, ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಪ್ರೊ. ಪಿ.ಕೆ. ಶೆಟ್ಟಿ ಅವರು ಪ್ರಸ್ತುತ ಬೆಂಗಳೂಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಂಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಯೋಗಶಾಅ ಸಂಶೋಧನಾತ್ಮಕ ವಿಜ್ಞಾನಿ ಪ್ರೊ. ಪಿ.ಕೆ. ಶೆಟ್ಟಿ ಅವರು.