Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮಲ್ಲಪ್ಪ ಮಳೆಯಪ್ಪ ಬಡಿಗೇರ

ಪರಂಪರಾನುಗತವಾಗಿ ಬಂದ ಕಾಷ್ಟಶಿಲ್ಪವನ್ನು ಮುಂದುವರೆಸಿರುವ ಮಲ್ಲಪ್ಪ ಮಳೆಯಪ್ಪ ಬಡಿಗೇರ ಅವರು ರಾಜ್ಯದ ಹೆಸರಾಂತ ರಥಶಿಲ್ಪಿಗಳಲ್ಲೊಬ್ಬರು. ದಕ್ಷಿಣ ಭಾರತದಾದ್ಯಂತ ವಿಭಿನ್ನ ಬಗೆಯ ಮತ್ತು ವಿವಿಧ ಅಳತೆಗಳ ರಥಗಳನ್ನು ಸೂಕ್ಷ್ಮ ಕುಸುರಿ ಕೆಲಸದೊಂದಿಗೆ ನಿರ್ಮಿಸಿಕೊಟ್ಟಿರುವ ಮಲ್ಲಪ್ಪ ರಥ ನಿರ್ಮಾಣದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತ
ಬಂದವರು.
ಅನೇಕ ವಿಶಿಷ್ಟ ಬಗೆಯ ವಿಭಿನ್ನ ವಿನ್ಯಾಸಗಳ ರಥಗಳನ್ನು ತಯಾರಿಸಿರುವ ಮಲ್ಲಪ್ಪ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದವರು. ಕಟ್ಟಿಗೆ ಕೆತ್ತನೆಯ ಕೆಲಸದಲ್ಲಿ ಹೆಚ್ಚು ಮಂದಿ ಆಸಕ್ತಿ ವಹಿಸಬೇಕೆಂಬ ಉದ್ದೇಶದಿಂದ ೨೫ಕ್ಕೂ ಹೆಚ್ಚು ಕೆತ್ತನೆಯ ಉಚಿತ ಶಿಬಿರಗಳನ್ನು ನಡೆಸಿಕೊಟ್ಟಿರುವ ಮಲ್ಲಪ್ಪನವರು ಶಿಷ್ಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.
ರಥಶಿಲ್ಪದಲ್ಲಿ ನೈಪುಣ್ಯತೆ ಪಡೆದಿರುವ ಮಲ್ಲಪ್ಪ ಬಡಿಗೇರ ವಿಗ್ರಹ ಹಾಗೂ ಕಲಾಮೂರ್ತಿಗಳನ್ನು ತಯಾರಿಸುವಲ್ಲಿಯೂ ಪ್ರತಿಭಾವಂತರು. ಅನೇಕ ಉತ್ಸವಮೂರ್ತಿಗಳನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆ ಅವರದು.