Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶಾರದಾ ರಾಜಣ್ಣ

ರಾಮನಗರ ಜಿಲ್ಲೆಯಲ್ಲಿ ಹುಟ್ಟಿ ಪ್ರಸ್ತುತ ಅಮೆರಿಕದಲ್ಲಿ ವಾಸವಾಗಿರುವ ಪದವೀಧರೆ ಶ್ರೀಮತಿ ಶಾರದಾ ರಾಜಣ್ಣ ಅವರು ವೃತ್ತಿಯಿಂದ ಕಂಪ್ಯೂಟರ್ ತಜ್ಞರು, ಅಮೆರಿಕದಲ್ಲಿ ಕೆ.ಆರ್.ಎಸ್. ಎಂಬ ಸಮಾಜಸೇವಾ ಸಂಸ್ಥೆಯನ್ನು ರಚಿಸಿಕೊಂಡು, ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದವರು.
ಕೆ.ಆರ್.ಎಸ್.ಸಂಸ್ಥೆಯ ಮೂಲಕ ಭಾರತದ ಗಾಮೀಣ ಭಾಗಗಳಲ್ಲಿ ಮೂಲಭೂತ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಆರೋಗ್ಯ, ಆಹಾರಗಳನ್ನು ಒದಗಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನು ಇವರು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕಾಗಿ ಅನೇಕ ಗ್ರಾಮಗಳನ್ನು ದತ್ತುಸ್ವೀಕಾರ ಮಾಡಿದ್ದಾರೆ. ಶಾಲಾ ಕಟ್ಟಡಗಳ ನಿರ್ಮಾಣ, ಆಸ್ಪತ್ರೆ ಮೂಲ ಸೌಕರ್ಯಗಳ ಅಭಿವೃದ್ಧಿ, ಮಹಿಳೆಯರಿಗೆ ಕಿರು ಸಾಲಗಳ ವಿತರಣೆ, ಗ್ರಂಥಾಲಯಗಳ ಸ್ಥಾಪನೆ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮೊದಲಾದ ಕಾರ್ಯಕ್ರಮಗಳನ್ನು ಶಾರದಾ ರಾಜಣ್ಣ ಅವರು ತಮ್ಮ ಟ್ರಸ್ಟ್ ಮೂಲಕ ನಿರ್ವಹಿಸುತ್ತಿದ್ದಾರೆ.
ಯುವ ಪೀಳಿಗೆಗೆ ಉತ್ತಮ ವಿದ್ಯಾಭ್ಯಾಸ ದೊರಕಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಇವರು ವಿದ್ಯಾರ್ಥಿ ನಿಲಯಗಳನ್ನು ಬೆಂಗಳೂರು, ತುಮಕೂರು, ಮೊದಲಾದ ಜಿಲ್ಲೆಗಳಲ್ಲಿ ಸ್ಥಾಪಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗಾಗಿಯೂ ಶ್ರಮಿಸಿರುವ ಅನಿವಾಸಿ ಭಾರತೀಯ ಶಾರದಾ ರಾಜಣ್ಣ ನೆರವು ನೀಡಿದ್ದಾರೆ.