Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಡಾ. ಪಥಿಕೊಂಡ ವಿಶ್ವಂಬರನಾಥ್

ಅಂತರಾಷ್ಟ್ರೀಯ ಖ್ಯಾತಿಯ ವೈದ್ಯರಾಗಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಹಿರಿಮೆಯನ್ನು ಹೊರನಾಡಿನಲ್ಲಿ ಪ್ರಚುರಪಡಿಸುತ್ತಿರುವ ಅಪರೂಪದ ಗಣ್ಯ ವೈದ್ಯರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.
ವಿಶ್ವಂಬರನಾಥ್ ಅವರು ಕಿವಿ, ಮೂಗು, ಗಂಟಲು ಚಿಕಿತ್ಸೆಯಲ್ಲಿ ಕರ್ನಾಟಕದ ಹೊಸಪೇಟೆಯಲ್ಲಿ ೧೯೪೨ರಲ್ಲಿ ಜನಿಸಿದ ಶ್ರೀ ವಿಶೇಷ ಪರಿಣತಿಯನ್ನು ಪಡೆದಿರುವವರು. ಆಕ್ಯುಪ್ರೆಷರ್ ನಲ್ಲೂ ಸೇವೆಯಲ್ಲಿ ತೊಡಗಿದ್ದಾರೆ.
ಸಿದ್ಧಹಸ್ತರು. ಕಳೆದ ೨೭ ವರ್ಷಗಳಿಂದ ವೈದ್ಯಕೀಯ ವೃತ್ತಿಯ ಜೊತೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಮಹತ್ವವನ್ನು ವಿದೇಶಿಯರಿಗೆ ಅತ್ಯಂತ ಸಮರ್ಥವಾಗಿ ಅರುಹುವುದು ಇವರ ಪ್ರೀತಿಯ ಹವ್ಯಾಸ.
ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳ ನೃತ್ಯ ಪ್ರವಾಸವನ್ನು ವಿದೇಶದಲ್ಲಿ ಏರ್ಪಡಿಸಿದ ಹಿರಿಮೆ ಇವರದು. ‘ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಘ’ ಹಾಗೂ ‘ಸ್ಕೂಲ್ ಫಾರ್ ದಿ ಡೆಫ್ ಅಂಡ್ ಡೆಮ್’ಗೆ ಶಿಕ್ಷಣ ಪರಿಕರಗಳನ್ನು ಉಚಿತವಾಗಿ ಒದಗಿಸಿದ ಉದಾರಿಗಳು, ೧೯೮೨ರಲ್ಲಿ ಫಾಕ್‌ಲ್ಯಾಂಡ್ಸ್‌ನ ಗವರ್ನರ್ ಅವರ ಆಹ್ವಾನದ ಮೇರೆಗೆ ಅಲ್ಲಿನ ಮಕ್ಕಳಿಗೆ ಉಚಿದ ವೈದ್ಯಕೀಯ ನೆರವನ್ನು ನೀಡಿದ ಕರುಣಾಳು.
ಭಗವದ್ಗೀತೆಯ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ವಿಶೇಷವಾಗಿ ಅಭ್ಯಸಿಸಿ ತಮ್ಮ ಉಪನ್ಯಾಸಗಳಲ್ಲಿ ಅವನ್ನು ಉಲ್ಲೇಖಿಸುವ ಮೂಲಕ ಭಾರತೀಯ ಶ್ರೇಷ್ಠ ಅಧ್ಯಾತ್ಮ ಗ್ರಂಥವೊಂದರ ವಿಶಿಷ್ಟತೆಯನ್ನು ಪರಿಚಯಿಸುತ್ತಿರುವ ಶ್ರೀಯುತರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ತಾಯ್ನಾಡಿನಿಂದ ಬಹುದೂರವಿದ್ದೂ ತಾಯ್ನೆಲದ ಸಂಸ್ಕೃತಿ ಮತ್ತು ಅಧ್ಯಾತ್ಮದ ಸೊಗಡನ್ನು ವಿದೇಶಿ ನೆಲದಲ್ಲಿ ಬಿತ್ತುತ್ತಿರುವ ಅಭಿಮಾನಿ ಕನ್ನಡಿಗರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬಿ.ಜಿ. ಮೋಹನ್‌ದಾಸ್

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯ ಅನ್ವರ್ಥಕವಾಗಿರುವವರು ಬಿ.ಜಿ.ಮೋಹನ್‌ದಾಸ್. ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆಯ ಕನ್ನಡಿಗ.
ದಕ್ಷಿಣ ಕನ್ನಡದ ಅಪ್ಪಟ ಕನ್ನಡಾಭಿಮಾನಿ ಮೋಹನ್‌ದಾಸ್, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬಿಜೂರು ಹುಟ್ಟೂರು. ಹುಟ್ಟಿನಿಂದಲೇ ಕನ್ನಡವೆಂದರೆ ಪಂಚಪ್ರಾಣ. ಮಣಿಪಾಲದಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಅಲ್ಪಕಾಲದ ಸೇವೆ. ಜೇಸಿಸ್ ಸಂಸ್ಥೆಯಲ್ಲಿ ಪ್ರಧಾನಕಾರ್ಯದರ್ಶಿಯಾಗಿ ಸಂಘಟನಾನುಭವ ಗಳಿಕೆ. ಆನಂತರ ಬದುಕು ಅರಸಿ ದುಬೈಗೆ, ಪರದೇಶದಲ್ಲಿ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ದೃಢಸಂಕಲ್ಪ, ಕೊಲ್ಲಿಯಲ್ಲಿ ಕನ್ನಡಿಗರನ್ನು ಸಂಘಟಿಸಿ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಮತ್ತಿತರ ಚಟುವಟಿಕೆಗಳನ್ನು ಕೈಗೊಂಡು ಹೊರನಾಡ ಕನ್ನಡಿಗರ ಧ್ವನಿಯಾದವರು. ೧೯೮೫ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ೮೯ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರು, ಗಲ್ಫ್ ವಾರ್ತೆ ಡಾಟ್ ಕಾಂ, ಗಲ್ಫ್ ಕನ್ನಡಿಗ ಅಂತರ್ಜಾಲ ಸುದ್ದಿಪತ್ರಿಕೆಯ ಮೂಲಕ ಕೊಲ್ಲಿ ರಾಷ್ಟ್ರದ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಸ್ತುತ್ಯಾರ್ಹ ಕಾರ್ಯ. ವಿದೇಶಿ ನೆಲದಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಸಾರ್ಥಕ ಸೇವೆ. ಪ್ರತಿಷ್ಠಿತ ಮಯೂರ ಪ್ರಶಸ್ತಿ, ಮಣಿಪಾಲ ವಿವಿಯ ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಗೌರವಕ್ಕೆ ಪಾತ್ರವಾಗಿರುವ ಮೋಹನದಾಸ್ರ ಕನ್ನಡಸೇವೆ ಸರ್ವಕಾಲಕ್ಕೂ ಮಾದರಿಯೇ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಗಂಗಾಧರ ಬೇವಿನಕೊಪ್ಪ

ತಾಂತ್ರಿಕ ತಜ್ಞ ಉದ್ಯಮಿ, ಚತುರ ಸಂಘಟನಾಕಾರರಾದ ಗಂಗಾಧರ ಬೇವಿನಕೊಪ್ಪ ಅವರು ‘ಗಾಂಧಿ’ ಎಂಬ ವಿಶೇಷ ನಾಮದಿಂದಲೇ ಚಿರಪರಿಚಿತರು. ವಿದೇಶದಲ್ಲಿ ನಾಡಿನ ಕೀರ್ತಿ, ಧೀಶಕ್ತಿಯನ್ನು ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ,
ಗಂಗಾಧರ ಬೇವಿನಕೊಪ್ಪ ಗಡಿನಾಡಿನ ಪ್ರತಿಭೆ, ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಬಳಿಯ ಕೆಂಗನೂರು ಹುಟ್ಟೂರು. ಬಾಲ್ಯದಿಂದಲೂ ಪ್ರಖರ ಬುದ್ಧಿವಂತಿಕೆ. ಆಸ್ಟ್ರೇಲಿಯಾದ ಡೇಕಿನ್ ವಿ.ವಿ ಯ ಬಿ.ಟೆಕ್ ಪದವೀಧರರು. ಟೂಲ್ ಅಂಡ್ ಡೈ ಮೇಕಿಂಗ್‌ನಲ್ಲಿ ಡಿಪ್ಲೋಮಾ ಪಡೆದವರು. ತಾಂತ್ರಿಕ ಪರಿಣಿತಿ-ಅನುಭವದ ಆಧಾರದ ಮೇರೆಗೆ ಆಸ್ಟ್ರೇಲಿಯಾದ ಮೇಲ್ಬರ್ನನಲ್ಲಿ ದುಡಿಮೆ, ೧೯೯೪ರಲ್ಲಿ ಸ್ವಂತ ಉದ್ದಿಮೆ ಕೊಪ್ಪ ಇಂಜಿನಿಯರಿಂಗ್‌ ಸಂಸ್ಥೆ ಸ್ಥಾಪನೆ-ಯಶಸ್ಸು. ಆನಂತರ ಮೌಲ್ಡಿಂಗ್ ವಸ್ತುಗಳನ್ನು ಉತ್ಪಾದಿಸುವ ಬೆವ್ ಪ್ಲಾಸ್ಟಿಕ್ಸ್ ಸ್ಥಾಪಿಸಿ ಉನ್ನತ ಸಾಧನೆ. ಅನಿವಾಸಿ ಭಾರತೀಯರು ನೆಲೆನಿಲ್ಲಲು ನೆರವಾದ ಸಹೃದಯಿ. ಮೇಲ್ಬರ್ನ್ ಕನ್ನಡ ಸಂಘ, ವಿವೇಕಾನಂದ ಯೋಗ ಕೇಂದ್ರ, ಬಸವ ಸಮಿತಿ, ರೋಟರಿ ಕ್ಲಬ್‌ ಮತ್ತಿತರ ಹಲವು ಸಾಮಾಜಿಕ, ವೃತ್ತಿಪರ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಂಘಟಕರಾಗಿ ಪರಿಶ್ರಮ-ಸಾರ್ಥಕ ಸೇವೆ ಸಲ್ಲಿಸಿದ ಅದಮ್ಯ ಉತ್ಸಾಹದ ಮಾದರಿ ತಂತ್ರಜ್ಞ ಉದ್ಯಮಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಂತ ಮುನ್ನೊಳ್ಳಿ

ವರ್ಣಚಿತ್ರಕಲೆಯಲ್ಲಿ ತಮ್ಮದೇ ಅಚ್ಚಳಿಯದ ಛಾಪು ಮೂಡಿಸಿದ ಕಲಾಕುಸುಮ ಜಯಂತ ಮುನ್ನೊಳ್ಳಿ. ವೈವಿಧ್ಯಮಯ ಕಲಾಪ್ರದರ್ಶನಗಳ ಮೂಲಕ ಕಲಾವಲಯದಲ್ಲಿ ಸಂಚಲನ ಮೂಡಿಸಿದ ಸಾಧಕ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮೂಲದವರಾದ ಜಯಂತ ಮುನ್ನೊಳ್ಳಿ ಬಹುಭಾಷಾ ಪ್ರವೀಣರು. ಆಫ್ರಿಕನ್ ಭಾಷೆಯನ್ನೂ ಬಲ್ಲವರು. ೧೯೪೦ರ ಡಿಸೆಂಬರ್ ೧೦ರಂದು ಜನಿಸಿದ ಮುನ್ನೊಳ್ಳಿ ೬೪ರಲ್ಲಿ ಮದ್ರಾಸ್ ರಾಜ್ಯದ ಸೇಲಂನಲ್ಲಿ ಹ್ಯಾಂಡ್‌ಲೂಮ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಕಲಿತವರು. ಪೂರ್ವ ಆಫ್ರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರು. ಕ್ರಿಯೇಟಿವ್ ಪೇಟಿಂಗ್ ಮತ್ತು ಆಯಿಲ್ ಪೇಟಿಂಗ್‌ನಲ್ಲಿ ವಿಶೇಷ ಪರಿಣಿತಿಯುಳ್ಳವರು. ಮುಂಬಯಿನ ಎಲಿಮೆಂಟ್ರಿ ಡ್ರಾಯಿಂಗ್ ಕಾಂಪಿಟೇಶನ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ ಪ್ರತಿಭಾವಂತರು. ಮುಂಬಯಿನ ಜಹಾಂಗೀರ ಆರ್ಟ್‌ ಗ್ಯಾಲರಿಯಲ್ಲಿ ಹತ್ತು ಬಾರಿ ಸೇರಿ ದೇಶದ ವಿವಿಧೆಡೆ ೫೦ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನದ ಹೆಗ್ಗಳಿಕೆ ಇವರದ್ದು. ಪ್ರತಿ ಪ್ರದರ್ಶನದಲ್ಲೂ ನವೀನ ಕಲಾಕೃತಿಗಳ ಮೂಲಕ ಕಲಾಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಕಲಾವಂತಿಕೆ ಜಯಂತ ಅವರ ವಿಶೇಷತೆ. ೮೦ರ ಆಸುಪಾಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವ ಅವರು ಕಲಾಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಬಂದಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನರು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ರೋನಾಲ್ಡ್ ಕೊಲಾಸೋ

ಮಂಗಳೂರಿನವರಾದ ರೋನಾಲ್ಡ್ ಕೊಲಾಸೋ ವಿದೇಶದಲ್ಲಿ ನೆಲೆಸಿ ಅನೇಕ ಉದ್ಯಮಗಳನ್ನು ಕಟ್ಟಿದವರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಸ್ವಂತ ಖರ್ಚಿನಿಂದ ಜಾರಿಗೊಳಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅನೇಕ ಪೋಲೀಸ್ ಕಚೇರಿಗಳನ್ನು ನವೀಕರಣಗೊಳಿಸುವುದರಲ್ಲಿ ಹಾಗು ತಾಲೂಕು ಪಂಚಾಯಿತಿ ಕಚೇರಿಗಳನ್ನು ನಿರ್ಮಾಣ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೊನಾಲ್ಡ್ ಕೊಲಾಸೋ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಸೌಹಾರ್ದತೆಗಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೊಲಾಸೋ, ಅನ್ನ ಆರೋಗ್ಯ ಒದಗಿಸುವಲ್ಲಿಯೂ ಯೋಜನೆ ಅನುಷ್ಠಾನಗೊಳಿಸಿದ್ದಾರೆ.

ರೊನಾಲ್ಡ್ ಕೊಲಾಸೋ ಅವರಿಗೆ ಪ್ರತಿಷ್ಠಿತ ಟೈಮ್ಸ್ ನೌ ಗ್ಲೋಬಲ್ ಏನ್.ಆರ್.ಐ ಪ್ರಶಸ್ತಿ, ಇಂಡಿಯನ್ ಬಹರೇನ್ ಸೆಂಟಿನರಿ ಅವಾರ್ಡ್, ವಿಶ್ವ ಕೊಂಕಣಿ ಸಮ್ಮೇಳನದ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಾ ಸುವರ್ಣ

ಜಯಾ ಸುವರ್ಣ ಅವರು ಮುಂಬಯಿಯಲ್ಲಿ ನೆಲೆನಿಂತು ಹೋಟೆಲ್ ಉದ್ಯಮಿಯಾಗಿ ವಲಸೆ ಬರುವ ಕರಾವಳಿಯ ಕನ್ನಡಿಗರಿಗೆ ಆಶ್ರಯದಾತರಾಗಿದ್ದಾರೆ. ಅತ್ಯುತ್ತಮ ಸಂಘಟನಕಾರರೂ ಆದ ಜಯಾ ಸುವರ್ಣ ರಾಷ್ಟ್ರೀಯ ಬಿಲ್ಲವ ಮಹಾಮಂಡಲವನ್ನು ರೂಪಿಸಿ ಎಲ್ಲ ಬಿಲ್ಲವರನ್ನೂ ಒಗ್ಗೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಪ್ರಾವೀಣ್ಯತೆ ತೋರಿರುವ ಜಯಾ ಸುವರ್ಣ ಅವರು ಭಾರತ್ ಕೋ-ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕನ್ನು ರೂ.೬.೩೨ಲಕ್ಷಗಳ ಬಂಡವಾಳದಿಂದ ೧೦೫ ಕೋಟಿ ರೂಗಳ ಲಾಭ ಗಳಿಸುವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಂಘಟನಾ ಚತುರತೆಯನ್ನು ತೋರಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬೆಜವಾಡ ಏಲ್ಲನ್

ಮಲ ಹೊರುವ ಕುಲಕಸುಬಾಗಿದ್ದ ಕುಟುಂಬದಿಂದ ಬೆಳೆದು ಬಂದ ಕೆ.ಜಿ.ಎಫ್.ನ ಬೆಜವಾಡ ವಿಲ್ಸನ್ ಇಂತಹ ಅಮಾನವೀಯ ಪದ್ಧತಿಯ ನಿಷೇಧಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ನಡೆಸಿ ಒಣ ಶೌಚಾಲಯಗಳ ನಿಷೇಧಕ್ಕೆ ಶ್ರಮಿಸಿದವರು.
೧೯೯೩ರಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶ ಅನುಷ್ಠಾನಕ್ಕೆ ೨೦೦೩ರಲ್ಲಿ ಸರ್ಮೋಚ್ಛ ನ್ಯಾಯಾಲಯದಲ್ಲಿ ಹೋರಾಡಿ ಮಲ ಹೊರುವ ಪದ್ಧತಿಗೆ ಶಾಶ್ವತ ವಿಮೋಚನೆ ಒದಗಿಸಿದವರು. ಇವರ ಮಾನವೀಯ ಹೋರಾಟವನ್ನು ಗುರುತಿಸಿ ಪ್ರತಿಷ್ಠಿತ ರೇಮನ್ ಮ್ಯಾಗೆಸೆಸ್ಸೆ ಪ್ರಶಸ್ತಿ ಗೌರವವನ್ನು ನೀಡಿ ಗೌರವಿಸಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶಾರದಾ ರಾಜಣ್ಣ

ರಾಮನಗರ ಜಿಲ್ಲೆಯಲ್ಲಿ ಹುಟ್ಟಿ ಪ್ರಸ್ತುತ ಅಮೆರಿಕದಲ್ಲಿ ವಾಸವಾಗಿರುವ ಪದವೀಧರೆ ಶ್ರೀಮತಿ ಶಾರದಾ ರಾಜಣ್ಣ ಅವರು ವೃತ್ತಿಯಿಂದ ಕಂಪ್ಯೂಟರ್ ತಜ್ಞರು, ಅಮೆರಿಕದಲ್ಲಿ ಕೆ.ಆರ್.ಎಸ್. ಎಂಬ ಸಮಾಜಸೇವಾ ಸಂಸ್ಥೆಯನ್ನು ರಚಿಸಿಕೊಂಡು, ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದವರು.
ಕೆ.ಆರ್.ಎಸ್.ಸಂಸ್ಥೆಯ ಮೂಲಕ ಭಾರತದ ಗಾಮೀಣ ಭಾಗಗಳಲ್ಲಿ ಮೂಲಭೂತ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಆರೋಗ್ಯ, ಆಹಾರಗಳನ್ನು ಒದಗಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನು ಇವರು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕಾಗಿ ಅನೇಕ ಗ್ರಾಮಗಳನ್ನು ದತ್ತುಸ್ವೀಕಾರ ಮಾಡಿದ್ದಾರೆ. ಶಾಲಾ ಕಟ್ಟಡಗಳ ನಿರ್ಮಾಣ, ಆಸ್ಪತ್ರೆ ಮೂಲ ಸೌಕರ್ಯಗಳ ಅಭಿವೃದ್ಧಿ, ಮಹಿಳೆಯರಿಗೆ ಕಿರು ಸಾಲಗಳ ವಿತರಣೆ, ಗ್ರಂಥಾಲಯಗಳ ಸ್ಥಾಪನೆ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮೊದಲಾದ ಕಾರ್ಯಕ್ರಮಗಳನ್ನು ಶಾರದಾ ರಾಜಣ್ಣ ಅವರು ತಮ್ಮ ಟ್ರಸ್ಟ್ ಮೂಲಕ ನಿರ್ವಹಿಸುತ್ತಿದ್ದಾರೆ.
ಯುವ ಪೀಳಿಗೆಗೆ ಉತ್ತಮ ವಿದ್ಯಾಭ್ಯಾಸ ದೊರಕಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಇವರು ವಿದ್ಯಾರ್ಥಿ ನಿಲಯಗಳನ್ನು ಬೆಂಗಳೂರು, ತುಮಕೂರು, ಮೊದಲಾದ ಜಿಲ್ಲೆಗಳಲ್ಲಿ ಸ್ಥಾಪಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗಾಗಿಯೂ ಶ್ರಮಿಸಿರುವ ಅನಿವಾಸಿ ಭಾರತೀಯ ಶಾರದಾ ರಾಜಣ್ಣ ನೆರವು ನೀಡಿದ್ದಾರೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕೃಷ್ಣಮೂರ್ತಿ ಮಂಜ

ಹೋಟೆಲ್ ಉದ್ಯಮದಲ್ಲಿ ಯಶಸ್ಸಿನ ಹೊಸ ಅಧ್ಯಾಯವನ್ನೇ ಬರೆದ ಯಶಸ್ವಿ ಉದ್ಯಮಿ ಕೃಷ್ಣಮೂರ್ತಿ ಮಂಜ. ಹಲವು ಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸಮಾಜಸೇವಕರು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮಾರಣಕಟ್ಟೆಯಲ್ಲಿ ಜನಿಸಿದ ಕೃಷ್ಣಮೂರ್ತಿ ಅವರದ್ದು ಅಪ್ಪಟ ಅರ್ಚಕ ಕುಟುಂಬ. ತಂದೆ ಸುಬ್ರಹ್ಮಣ್ಯ ಮಾರಣಕಟ್ಟೆ ದೇವಾಲಯದ ಪ್ರಮುಖ ಅರ್ಚಕರು. ಎಸ್.ಎಸ್.ಎಲ್.ಸಿವರೆಗೂ ವಿದ್ಯಾಭ್ಯಾಸ ಮಾಡಿದ ಕೃಷ್ಣಮೂರ್ತಿ ಮಂಜ ಅವರು ಬದುಕು ಅರಸಿ ಹೈದರಾಬಾದ್‌ಗೆ ಗುಳೆ ಹೋದವರು. ಕಡುಕಷ್ಟದ ದಿನಗಳನ್ನು ಕಳೆದ ಮೇಲೆ ಸಣ್ಣದಾಗಿ ಹೈದರಾಬಾದ್‌ನಲ್ಲಿ ಹೋಟೆಲ್ ಅನ್ನು ಸ್ಥಾಪಿಸಿದರು. ಸತತ ಪರಿಶ್ರಮದಿಂದಾಗಿ ಹಂತಹಂತವಾಗಿ ಯಶಸ್ಸು ಕಂಡವರು. ಮೂವತ್ತಾರು ವರ್ಷಗಳ ಸುದೀರ್ಘ ಪಯಣದಲ್ಲಿ ಸುಪ್ರಭಾತ ಹೋಟೆಲ್ ಅನ್ನು ಜನಪ್ರಿಯ ಹೋಟೆಲ್ ಆಗಿ ರೂಪಿಸಿದ ಕೀರ್ತಿ ಅವರದ್ದು. ಅಪ್ಪಟ ಸಸ್ಯಹಾರಿ ತಿನಿಸುಗಳು, ಸ್ವಚ್ಛತೆ ಮತ್ತು ಶುದ್ಧ ಪರಿಸರದಿಂದ ಗ್ರಾಹಕರ ಪಾಲಿಗೆ ಸುಪ್ರಭಾತ ನೆಚ್ಚಿನ ಹೋಟೆಲ್ ಆಗಿರುವುದು ವಿಶೇಷ, ಹೈದರಾಬಾದ್‌ನ ಕರಾವಳಿ ಮೈತ್ರಿ ಸಂಘ, ಭಾಗ್ಯನಗರ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾಗಿ, ಕನ್ನಡ ನಾಟ್ಯಸಂಘ, ತೆಲಂಗಾಣ ಹೋಟೆಲ್ ಅಸೋಸಿಯೇಶನ್‌ ಉಪಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದವರು. ತಂದೆ ಸುಬ್ರಹ್ಮಣ್ಯ ಮಂಜ ಅವರ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಿರುವ, ಅನೇಕ ಪ್ರಶಸ್ತಿ-ಗೌರವಗಳಿಂದ ಭೂಷಿತರಾಗಿರುವ ಸೇವಾಬಂಧು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕೆ. ಶೇಖರ ಬಾಬುಶೆಟ್ಟಿ

ಅರಬ್ ರಾಷ್ಟ್ರಗಳಲ್ಲಿ ಹೊಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವರು ಕರ್ನಾಟಕದ ಕೆ. ಶೇಖರ ಬಾಬುಶೆಟ್ಟಿ ಅವರು.
ಉಡುಪಿ ತಾಲೂಕಿನ ಕಳತ್ತೂರು ಹತ್ತಿರ ಎಲ್ಲೂಲನಲ್ಲಿ ಜನಿಸಿದ ಕೆ. ಶೇಖರ ಬಾಬುಶೆಟ್ಟಿ ಮಧ್ಯಪೂರ್ವದ ಮರಳುಗಾಡಿನಲ್ಲಿ ಸ್ಥಾಪಿಸಿದ ಅರಬ್ ಉಡುಪಿ ರೆಸ್ಟೋರೆಂಟ್ ಇಂದು ಅತ್ಯಂತ ಬೃಹತ್ ಸಂಸ್ಥೆ.
ಅಬೂದಾಚಿಯ ಯಶೋಗಾಥೆಯ ನಂತರ ಕೆ. ಶೇಖರ ಬಾಬುಶೆಟ್ಟಿ ಅವರು ದುಬಾಯ್, ಶಾರ್ಜಾ, ಅಲೈನ್ಗಳಲ್ಲೂ ಉಡುಪಿ ಹೊಟೆಲ್ಗಳನ್ನು ಸ್ಥಾಪಿಸಿ ಶುಚಿ ಹಾಗೂ ರುಚಿಯ ತಿಂಡಿ-ತಿನಿಸು ಆಹಾರಕ್ಕೆ ಹೆಸರುವಾಸಿಯಾಗಿದ್ದಾರೆ.
ಹೊಟೆಲ್ ಉದ್ಯಮವನ್ನು ಬೇರೆ ಬೇರೆ ಕಡೆ ಸ್ಥಾಪಿಸುವುದಲ್ಲದೆ ಅರಬ್ ರಾಷ್ಟ್ರಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ತಿಂಡಿ-ತಿನಿಸುಗಳನ್ನು ಮಾರಾಟಕ್ಕಿಡುವ ಕೆ. ಶೇಖರ ಬಾಬುಶೆಟ್ಟಿ ಅವರು ಪ್ರಯತ್ನ ಯಶಸ್ಸು ಕಂಡಿದ್ದು ಮಾರಾಟ ಸಂಕೀರ್ಣಗಳಲ್ಲಿ, ಶಾಲೆಗಳಲ್ಲಿ ಇಂದು ಅರಬ್ ರಾಷ್ಟ್ರಗಳಲ್ಲಿ ಉಡುಪಿ ರೆಸ್ಟೋರೆಂಟ್ನ ತಿಂಡಿ-ತಿನಿಸುಗಳು ಬಹಳ ಜನಪ್ರಿಯ.
ಪ್ರಸಿದ್ಧ ಉದ್ಯಮಗಳ ಕ್ಯಾಂಟನ್ಗಳಲ್ಲಿ ತಿಂಡಿ-ತಿನಿಸುಗಳ ಮಟಿಗೆಗಳಲ್ಲಿ ತಮ್ಮ ಹೊಟೆಲ್ ತೆರೆದಿರುವ ಕೆ. ಶೇಖರ ಬಾಬುಶೆಟ್ಟಿ ಅವರು ಮನೆಗಳಿಗೆ ತಿಂಡಿ-ತಿನಿಸು ಮುಟ್ಟಿಸುವ ಪ್ರಯತ್ನದಲ್ಲೂ ಯಶ ಪಡೆದುಕೊಂಡಿದ್ದಾರೆ. ಯಶಸ್ವಿ ಉದ್ಯಮಿ ಅನಿಸಿಕೊಂಡ ಕೆ. ಶೇಖರ ಬಾಬುಶೆಟ್ಟಿ ತಮ್ಮೂಲನಲ್ಲಿ ರಂಗಮಂದಿರ, ಬಾಲಭವನ, ಬಸ್ನಿಲ್ದಾಣ ಕಟ್ಟಿಸಿಕೊಟ್ಟಿದ್ದಾರಲ್ಲದೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವು ನೀಡುತ್ತಾ ಬಂದಿದ್ದಾರೆ. ಅನಿವಾಸಿ ಭಾರತೀಯರ ಸಂಘಟನೆಯಲ್ಲೂ ಸಕ್ರಿಯರಾಗಿರುವ ಕೆ. ಶೇಖರ ಬಾಬುಶೆಟ್ಟಿ ಕಾಶ್ಮೀರ ಸರ್ಕಾರದ ಭಾರತ್ ಗೌರವ್ ಸೇಲದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಉದ್ಯಮಿ.
ತಮ್ಮ ಹೊಟೆಲ್ ಉದ್ಯಮದಲ್ಲಿ ಹೆಚ್ಚಾಗಿ ಕರ್ನಾಟಕದವರಿಗೆ ಉದ್ಯೋಗ ನೀಡುವ ಪಲಪಾಠ ಬೆಳೆಸಿಕೊಂಡ ಕೆ. ಶೇಖರ ಬಾಬುಶೆಟ್ಟಿ ಅವರು ಸುಮಾರು ೩೦೦ ಮಂದಿಗೆ ಉದ್ಯೋಗಾವಕಾಶಗಳನ್ನು ನೀಡಿದ್ದಾರೆ. ಅಬೂದಾಱಯ ಕರ್ನಾಟಕ ಸಂಘದ ಸಕ್ರಿಯ ಸದಸ್ಯರಾಲರುವ ಇವರು ಅನೇಕ ಸಂಘ-ಸಂಸ್ಥೆಗಳ ಒಡನಾಟದಲ್ಲಿದ್ದಾರೆ.
ಹೊರನಾಡಿನಲ್ಲಿ ಕನ್ನಡನಾಡಿನ ವಿಶಿಷ್ಟ ತಿಂಡಿ ತಿನಿಸುಗಳನ್ನು ಪಲಚಂಸುವ ಮೂಲಕ ದೇಸೀ ತಿನಿಸುಗಳನ್ನು ಉಣಬಡಿಸುತ್ತಿರುವವರು ಶ್ರೀ ಶೇಖರ ಬಾಬು ಶೆಟ್ಟಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಡಾ. ಎಚ್.ವೈ. ರಾಜಗೋಪಾಲ್

ಹೊರನಾಡಿನಲ್ಲಿ ಕನ್ನಡ ನಾಡು-ನುಡಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹೊರನಾಡ ಕನ್ನಡಿಗ ಡಾ. ಎಚ್.ವೈ. ರಾಜಗೋಪಾಲ್ ಅವರು. ಬೆಂಗಳೂಲಿನಲ್ಲಿ ಜನಿಸಿ ಎಂಜಿನಿಯಲಿಂಗ್ ಸ್ನಾತಕ ಪದವಿ ಪಡೆದು ಅಮೆಲಕದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಡಾ. ಎಚ್.ವೈ. ರಾಜಗೋಪಾಲ್ ಅವರು ಅಮೆಲಕದ ಫಿಅಡೆಸ್ಟ್ರಿಯಾ ಹಾಗೂ ನ್ಯೂಜೆರ್ಸಿಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಸಂಬಂಧದಲ್ಲಿ ವಿಶೇಷವಾಗಿ ಶ್ರಮಿಸಿರುವ ರಾಜಗೋಪಾಲ್ ಅವರು ಪ್ರಸ್ತಾಪ ಹಾಗೂ ಕನ್ನಡ ಸಾಹಿತ್ಯರಂಗ ಎಂಬೆರಡು ಸಂಸ್ಥೆಗಳನ್ನು ಹುಟ್ಟುಹಾಕಿ ಅಮೆಲಕದ ಉದ್ದಗಲಕ್ಕೂ ಕನ್ನಡ ಕಾರ್ಯಕ್ರಮಗಳನ್ನು
ನಿರಂತರವಾಗಿ ನಡೆಸಿಕೊಂಡು ಬಂದವರು.
ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾಗಿ ಎಚ್.ವೈ. ರಾಜಗೋಪಾಲ್ ಫಿಅಡೆಸ್ಟ್ರಿಯಾ, ಲಾಸ್ ಏಂಜಲೀಸ್ ಹಾಗೂ ಚಿಕಾಗೋಗಳಲ್ಲಿ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಕುವೆಂಪು ಸಾಹಿತ್ಯ ಸಮೀಕ್ಷೆ, ಆಚೀಚೆಯ ಕಥೆಗಳು, ನಗೆಗನ್ನಡಂ ಗೆಲೆ, ಕನ್ನಡ ಸಾಹಿತಿಗಳ ಭಾಷಣ ಮಾಲೆಗಳನ್ನು ತಮ್ಮ ಸಂಸ್ಥೆಗಳ ಮೂಲಕ ಪ್ರಕಟಿಸಿದ ಹೆಗ್ಗಆಕೆ ಶ್ರೀಯುತರದು.
ಅಂತರ್ಜಾಲದಲ್ಲಿ ಕನ್ನಡ ಕಅಸುವ ಎರಡು ಕಾರ್ಯಕ್ರಮಗಳನ್ನು ಸಿದ್ಧಗೊಳಿಸಿರುವ (ಕನ್ನಡ ದನಿ-ಕನ್ನಡ ಪಲಚಯ) ಡಾ|| ರಾಜಗೋಪಾಲ್ ಅಮೆಲಕದ ಒಂಬತ್ತು ಪ್ರಾಂತ್ಯಗಳಲ್ಲಿ ಕನ್ನಡ ಸಾಹಿತ್ಯ ಶಿಬಿರಗಳನ್ನು ವ್ಯವಸ್ಥೆ ಮಾಡಿರುವುದಲ್ಲದೆ ಕನ್ನಡ ಜನಪದ ಗೀತೆಗಳ ಧ್ವನಿಮುದ್ರಿಕೆಗಳ ನಿರ್ಮಾಣವನ್ನು ಕೈಗೊಂಡವರು. ಎಂಜನಿಯಲಂಗ್ ಬೋಧನೆಯ ಜೊತೆಗೆ ನಿರಂತರವಾಗಿ ಪತ್ರಿಕೆ, ನಿಯತಕಾಲಿಕೆಗಳಿಗೆ ಲೇಖನ ಬರೆಯುತ್ತಿರುವ ಡಾ| ರಾಜ್ಗೋಪಾಲ್ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನಾಟ್ಯಕಲೆಗೆ ಸಂಬಂಧಿಸಿದಂತೆ ನಿಪುಣ
ಬರಹಗಾರರು.
ಕರ್ನಾಟಕದಿಂದ ಹಲವಾರು ಕನ್ನಡ ಕವಿ ಸಾಹಿತಿಗಳನ್ನು ಅಮೆಲಕಕ್ಕೆ ಆಹ್ವಾನಿಸಿ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿರುವ ಕನ್ನಡಾಭಿಮಾನಿ ಡಾ|| ರಾಜಗೋಪಾಲ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕೂದವಳ್ಳಿ ಶಿವಸ್ವಾಮಿ ಚಂದ್ರಶೇಖರ್

* ಚಲನಚಿತ್ರ ರಂಗದಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ಹಾಗೂ ಖಳನಾಯಕನಾಗಿ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಕನ್ನಡ ಜನಮನದಲ್ಲಿ ನೆಲೆನಿಂತವರು ಶ್ರೀ ಕೂದುವಳ್ಳಿ ಚಂದ್ರಶೇಖರ್ ಅವರು.
ಶ್ರೀ ಚಂದ್ರಶೇಖರ್ ಅವರ ಮೊದಲ ಒಲವು ನಾಟಕಗಳು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿದ ಶ್ರೀಯುತರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಹಯವದನ ಮೀಸೆ ಬಂದೋರು ಶ್ರೀಯುತರು ಅಭಿನಯಿಸಿದ ಯಶಸ್ವೀ ನಾಟಕಗಳು. ೧೯೭೦ರಲ್ಲಿ ಸಿನಿಮಾರಂಗಕ್ಕೆ ಪ್ರವೇಶಿಸಿದ ಶ್ರೀ ಚಂದ್ರಶೇಖರ್ ಅವರು ನಮ್ಮ ಮಕ್ಕಳು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದರು. ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತರ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ ವಂಶವೃಕ್ಷದಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು. ಪುಟ್ಟಣ್ಣ ಕಣಗಾಲ್ ಅವರ ಪ್ರಶಸ್ತಿ ಪುರಸ್ಕೃತ ಚಿತ್ರ ಎಡಕಲ್ಲು ಗುಡ್ಡದ ಮೇಲೆ, ನಾಯಕನ ಪಾತ್ರದಿಂದ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ ಖ್ಯಾತರಾದರು. ಸುಮಾರು ೬೫ ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಹೃದಯಂಗಮವಾಗಿ ಅಭಿನಯಿಸಿ ಚಿತ್ರರಸಿಕರ ಮನದಲ್ಲಿ ನೆಲೆನಿಂತವರು ಶ್ರೀ ಚಂದ್ರಶೇಖರ್.
‘ತ್ರಿಭಂಗ’ ದೂರದರ್ಶನ ಧಾರಾವಾಹಿ ನಿರ್ಮಾಣ ಹಾಗೂ ‘ಸಂಸ್ಮರಣೆ’ ದೂರ ದರ್ಶನ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ ಶ್ರೀ ಚಂದ್ರಶೇಖರ್ ಇತ್ತೀಚೆಗೆ ನಿರ್ಮಿಸಿದ ಶ್ರೀಮತಿ ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರ ಪೂರ್ವಾಪರ ಸದಭಿರುಚಿಯ ಚಿತ್ರವೆಂದು ಜನಮನ್ನಣೆ ಪಡೆದಿದೆ. ಈ ಚಿತ್ರದಲ್ಲಿ ಶ್ರೀಯುತರ ಅಭಿನಯ ಹಾಗೂ ನಿರ್ದೇಶನ ಎರಡನ್ನೂ ಮಾಡಿದ್ದಾರೆ.
ಕೆನಡಾಕ್ಕೆ ವಲಸೆ ಹೋದ ಶ್ರೀ ಚಂದ್ರಶೇಖರ್ ಕೆನಡಾ ಮತ್ತು ಅಮೆರಿಕಾ ದೇಶಗಳಲ್ಲಿ ಕನ್ನಡ ನಾಟಕಗಳು ಹಾಗೂ ಚಲನಚಿತ್ರಗಳನ್ನು ಜನಪ್ರಿಯಗೊಳಿಸಲು ಶ್ರಮಿಸಿದ್ದಾರೆ. ಶ್ರೀ ಚಂದ್ರಶೇಖರ್ ಬೆಂಗಳೂರಿನ ರಂಗ ತಂಡವೊಂದರೊಂದಿಗೆ ಗುರುತಿಸಿಕೊಂಡು ಉತ್ತರ ಅಮೆರಿಕದಲ್ಲಿ ಹಲವಾರು ಕನ್ನಡ ನಾಟಕಗಳನ್ನು ನಿರ್ದೆಶಿಸಿದ್ದಾರೆ.
ಹೊರದೇಶದಲ್ಲಿದ್ದರೂ ತಾಯ್ತಾಡನ್ನು ಮರೆಯದೆ ಕನ್ನಡ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಹಾಗೂ ಕನ್ನಡದ ಕಂಪನ್ನು ಹೊರನಾಡಿನಲ್ಲಿ ಬಿತ್ತರಿಸುತ್ತಿರುವ ಅಪರೂಪದ ಹೊರನಾಡ ಕನ್ನಡಿಗ ಶ್ರೀ ಚಂದ್ರಶೇಖರ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ದಯಾನಂದ ನಾಯಕ್

ನಿಷ್ಕಳಂಕ ಮತ್ತು ದಿಟ್ಟತನದ ಸೇವೆಯ ಮೂಲಕ ಪ್ರಖ್ಯಾತರಾಗಿರುವ ಹೊರನಾಡ ಕನ್ನಡಿಗ ಶ್ರೀ ದಯಾನಂದ ನಾಯಕ್ ಅವರು. ೧೯೬೭ರಲ್ಲಿ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಜನನ, ಬಿ.ಕಾಂ. ಪದವಿ ಪಡೆದ ಬಳಿಕ ೧೯೯೪ರ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ. ಪೊಲೀಸ್ ಇಲಾಖಾ ದೈಹಿಕ ಪರೀಕ್ಷೆಯಲ್ಲಿ ೨೦೦ಕ್ಕೆ ೧೯೮ ಅಂಕಗಳ ಸಾರ್ವಕಾಲಿಕ ದಾಖಲೆ.
೧೯೯೬ರಲ್ಲಿ ಮುಂಬಯಿನ ಜುಹು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ. ೧೯೯೬ರಿಂದ ೨೦೦೪ರ ವರೆಗೆ ಕುಖ್ಯಾತ ರೌಡಿಗಳನ್ನು ಬಲಿಹಾಕುವುದರ ಜೊತೆಗೆ ಜುಹು ಬೀಚ್ನಲ್ಲಿ ಇಬ್ಬರು ದರೋಡೆಕೋರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದು ತನ್ಮೂಲಕ ನೂರಾರು ಸಾರ್ವಜನಿಕರನ್ನು ರಕ್ಷಿಸಿದ್ದಾರೆ. ವಿವಿಧ ಎನ್ಕೌಂಟರ್ಗಳಲ್ಲಿ ದುಷ್ಕರ್ಮಿಗಳ ಬಲಿತೆಗೆದುಕೊಳ್ಳುವ ಮೂಲಕ ಸಮಾಜದ ವಿವಿಧ ವ್ಯಕ್ತಿಗಳನ್ನು ಹಾಗೂ ಶಾಂತಿ ಭದ್ರತೆಗಳನ್ನು ಸಂರಕ್ಷಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ, ಕರ್ನಾಟಕ ಸರ್ಕಾರದಿಂದ ಮತ್ತು ಪೊಲೀಸ್ ಇಲಾಖೆಗಳಿಂದ ನಿರಂತರ ಪ್ರಶಂಸೆ ಮತ್ತು ಅಭಿನಂದನೆಯ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪದಕ ಪಡೆದವರು. ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ವಲಯದಲ್ಲೂ ತಮ್ಮ ಛಾಪನ್ನು ಒತ್ತಿರುವ ಹೊರನಾಡ ಕನ್ನಡಿಗ ಶ್ರೀ ದಯಾನಂದ ನಾಯಕ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀಮತಿ ಕಲ್ಪನಾ ಶರ್ಮ

ಮುಂಬೈ ಆವೃತ್ತಿಯ ‘ದಿ ಹಿಂದೂ’ ಆಂಗ್ಲ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಪತ್ರಿಕೋದ್ಯಮಿ ಶ್ರೀಮತಿ ಕಲ್ಪನಾ ಶರ್ಮ ಅವರು.
೧೯೪೭ರಲ್ಲಿ ಜನಿಸಿದ ಶ್ರೀಮತಿ ಕಲ್ಪನಾ ಶರ್ಮ ೩೩ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಪಾದಕೀಯ, ವಿಶೇಷ ವರದಿಗಳು ಹಾಗೂ ಮಹಿಳಾ ಕೇಂದ್ರೀಕೃತ ಭಾನುವಾರದ ‘ದಿ ಅದರ್ ಹಾಫ್’ ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿರುವವರು ಶ್ರೀಮತಿ ಕಲ್ಪನಾ ಶರ್ಮ.
ಮುಂಬೈ ಆವೃತ್ತಿಯ ದಿ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯಲ್ಲಿ ಹಿರಿಯ ಸಹಾಯಕ ಸಂಪಾದಕಿಯಾಗಿ, ದೆಹಲಿ ಹಾಗೂ ಮುಂಬೈ ಆವೃತ್ತಿಗಳಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯ ಸಹಾಯಕ ಸಂಪಾದಕರಾಗಿ ಹಾಗೂ ಹಿಮ್ಮತ್ ವೀಕ್ಲಿ ಆಂಗ್ಲ ವಾರಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲಕ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದಿಂದ ವೃತ್ತಿಪತ್ರಿಕೋದ್ಯಮದ ಫೆಲೋಶಿಪ್ ಪಡೆದಿರುವ ಶ್ರೀಮತಿ ಕಲ್ಪನಾ ಶರ್ಮ ಅವರು ಹಲವಾರು ಸಂಘ ಸಂಸ್ಥೆಗಳ ಸಲಹಾ ಸದಸ್ಯರಾಗಿ, ಪ್ರವರ್ತಕಿಯಾಗಿ, ಕೌನ್ಸಿಲರಾಗಿ, ಕಾರ್ಯನಿರ್ವಾಹಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಉತ್ತಮ ವರದಿಗಳನ್ನು ನೀಡಿ ಸಮಾಜದ ಅನ್ಯಾಯಗಳನ್ನು ಬಯಲಿಗೆಳೆಯುತ್ತಿರುವ ಪತ್ರಿಕೋದ್ಯಮಿ ಶ್ರೀಮತಿ ಕಲ್ಪನಾ ಶರ್ಮ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಬಿ.ಜೆ. ಅರುಣ್

ಅಮೆರಿಕದ ಪ್ರತಿಷ್ಠಿತ ಸಿಲಿಕಾನ್ ವ್ಯಾಲಿಯಲ್ಲಿ ಕಳೆದ ಒಂದೂವರೆ ದಶಕದಿಂದ ನೆಲೆಸಿ ಅಮೆರಿಕದ ಕಂಪ್ಯೂಟರ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಥಂಡರ್ ಅನ್ನುವ ಅತಿ ಹೆಚ್ಚು ವೇಗದ ಸೂಪರ್ ಕಂಪ್ಯೂಟರನ್ನು ಕಂಡುಹಿಡಿದ ಅನಿವಾಸಿ ಭಾರತೀಯ ಶ್ರೀ ಬಿ.ಜೆ. ಅರುಣ್ ಅವರು.
ಬೆಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದಿರುವ ಶ್ರೀಯುತರು ತಾಂತ್ರಿಕ ಕಂಪ್ಯೂಟರ್ ಉದ್ದಿಮೆಯಲ್ಲಿ ೨೦ ವರ್ಷಗಳ ಅನುಭವ ಹೊಂದಿದ್ದಾರೆ. ಕ್ಯಾಲಿಫೋರ್ನಿಯಾ ಡಿಜಿಟಲ್ನಲ್ಲಿ ಸಹಸ್ಥಾಪಕರಾಗಿ ಕಂಪನಿಯನ್ನು ಲಾಭದಾಯಕವಾಗಿ ಮುನ್ನಡೆಸಿದವರು. ಬೈನ್ ಚಾರ್ಟರ್ ಸದಸ್ಯರಾಗಿರುವ ಶ್ರೀ ಬಿ.ಜೆ.ಅರುಣ್ ಪ್ರಸಕ್ತ ಇಚಿಡೆಲ್ ಕಾರ್ಪೊರೇಷನ್ಸ್ನ ಪ್ರೀಮಿಯರ್ ಪ್ರೊವೈಡರ್ ನ ಸಲಹಾ ಮಂಡಳಿಯ ಸದಸ್ಯರು.
ಶ್ರೀ ಬಿ.ಜೆ. ಅರುಣ್ ಅವರ ಸಾಧನೆಯನ್ನು ಅಮೆರಿಕದ ಪತ್ರಿಕೆಗಳು ಮುಕ್ತಕಂಠದಿಂದ ಪ್ರಶಂಸಿಸಿವೆ. ಅನಿವಾಸಿ ಭಾರತೀಯನೊಬ್ಬನು ಎರಡನೆಯ ಅತಿ ವೇಗದ ಕಂಪ್ಯೂಟರನ್ನು ಅಭಿವೃದ್ಧಿಪಡಿಸಿರುವುದು ವಿಶ್ವದ ತಾಂತ್ರಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆಯಾಗಿದ್ದು, ಇದು ಕರ್ನಾಟಕದ ಹೆಮ್ಮೆಯಾಗಿದೆ. ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟವರು ಶ್ರೀ ಬಿ.ಜೆ. ಅರುಣ್ ಅವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ದೇವಿದಾಸ ಶೆಟ್ಟಿ

ಮುಂಬಯಿ ನೆಲದಲ್ಲಿ ಕನ್ನಡದ ಪ್ರತಿಭಾಶಕ್ತಿಯನ್ನು ಬೆಳಗಿದವರು ದೇವಿದಾಸ ಶೆಟ್ಟಿ, ಚಿತ್ತಕಲಾವಿದ, ಮುಖಪುಟ ವಿನ್ಯಾಸಕ, ಬರಹಗಾರ, ಮ್ಯೂರಲ್ ಕಲಾವಿದರಾಗಿ ಹೆಜ್ಜೆಗುರುತು ಮೂಡಿಸಿರುವ ಪ್ರತಿಭಾಶಾಲಿ. ಮುಂಬಯಿನಲ್ಲೇ ಹುಟ್ಟಿ ಬೆಳೆದ ದೇವಿದಾಸ ಶೆಟ್ಟಿ ಅವರು ಕನ್ನಡದಲ್ಲೇ ವಿದ್ಯಾಭ್ಯಾಸ ಕಲಿತವರು. ಬಾಲ್ಯದಲ್ಲೇ ಸೆಳೆದ ಚಿತ್ರಕಲೆಗೆ ಬದುಕು ಸಮರ್ಪಿಸಿಕೊಂಡವರು. ರೇಖಾಚಿತ್ರ, ಮ್ಯೂರಲ್ ಕಲಾಭಿವ್ಯಕ್ತಿ ಹಾಗೂ ಮುಖಪುಟ ವಿನ್ಯಾಸದಲ್ಲಿ ಕೈಚಳಕ ತೋರಿದ ಕಲಾವಿದರು. ದೇಶ-ವಿದೇಶಗಳಲ್ಲಿ ೭೮ ಏಕವ್ಯಕ್ತಿ ಪ್ರದರ್ಶನ, ೪೫ ಸಾಮೂಹಿಕ ಕಲಾಪ್ರದರ್ಶನದ ಜತೆಗೆ ೨೪೦ ಕಲಾಶಿಖರಗಳಲ್ಲಿ ಭಾಗಿಯಾದ ಹೆಗ್ಗಳಿಕೆ. ಕನ್ನಡ, ಇಂಗ್ಲೀಷ್, ಹಿಂದಿ, ಬಂಗಾಳಿ, ಮರಾಠಿಯ ೨೫೦ ಪುಸ್ತಕಗಳಿಗೆ ಮುಖಪುಟ ವಿನ್ಯಾಸ. ದೇವ್‌ಮಾಣಿಸ್ ಎಂದೇ ಜನಜನಿತರು. ಅತಿದೊಡ್ಡ ಲೋಹದ ಮ್ಯೂರಲ್ ಆರ್ಟ್, ಅತಿಎತ್ತರದ ಗಣೇಶ ಮ್ಯೂರಲ್ ಆರ್ಟ್ ಸೇರಿ ಹಲವು ವಿಭಿನ್ನ ಕಲಾಕೃತಿಗಳಿಂದ ಜನಪ್ರಿಯರು, ಬದುಕು ಬಿಡಿಸಿದ ಚಿತ್ರಗಳು, ಅರಳಿದ ಹೂವುಗಳು, ರೇಖೆಯಲ್ಲಿ ಜೀವನ ಪಯಣ ಮುಂತಾದ ೮ ಕೃತಿಗಳ ರಚನಾಕಾರರು. ೫೦೦೦ಕ್ಕೂ ಅಧಿಕ ರೇಖಾಚಿತ್ರಗಳನ್ನು ರಚಿಸಿರುವ ದೇವಿದಾಸ್ ಶೆಟ್ಟಿ ಬಾಂಬೆ ಆರ್ಟ್ ಸೊಸೈಟಿ, ಆರ್ಟ್ ಸೊಸೈಟಿ ಆಫ್ ಇಂಡಿಯಾದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರು. ರಾಮಾಯಣ-ಮಹಾಭಾರತದ ರೇಖಾಚಿತ್ರಗಳಲ್ಲಿ ನಿರತರಾಗಿರುವ ಅವರು ೫೫ ವರ್ಷಗಳ ಹಿರಿತನವುಳ್ಳ ಕಲಾಚೇತನ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕುಮಾರ್ ಮಳವಳ್ಳಿ

ಅಂತರರಾಷ್ಟ್ರೀಯ ಖ್ಯಾತಿಯ ಮಾನವತಾವಾದಿ, ಆದರ್ಶ ಉದ್ಯಮಿ, ಕಂಪ್ಯೂಟರ್ ಸ್ಮರಣಜಾಲದಲ್ಲಿ ಮಹಾನ್ ದಾರ್ಶನಿಕ, ಫೈಬರ್ ಛಾನಲ್ ತಂತ್ರಜ್ಞಾನದ ಬೆನ್ನೆಲುಬು ಹಾಗೂ ಅಮೆರಿಕಾದ ಸಿಲಿಕಾನ್ ವ್ಯಾಲಿಯ ಅನೇಕ ಸಂಸ್ಥೆಗಳ ಪಿತಾಮಹ ಎಂಬ ವರ್ಣನೆಗೆ ಪಾತ್ರರಾದ ಹೊರನಾಡ ಕನ್ನಡಿಗ ಶ್ರೀ ಕುಮಾರ್ ಮಳವಳ್ಳಿ ಅವರು.
ಮಳವಳ್ಳಿಯಲ್ಲಿ ೧೯೪೬ರಲ್ಲಿ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಕುಮಾರ್‌ ಮೈಸೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಲಿತು ಜರ್ಮನಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಕೆನಡಾಗೆ ಸಾಗಿ ಯಶಸ್ಸಿನ ಅಲೆಯೇರಿ ಅಮೆರಿಕ ಪ್ರವೇಶಿಸಿದರು. ಸ್ವತಃ ಬಿಲ್ ಕ್ಲಿಂಟನ್ ಆತ್ಮೀಯವಾದ ಪತ್ರ ಬರೆದು ಅಮೆರಿಕದಲ್ಲಿ ನೆಲೆಸಿದರೂ ತಾಯ್ಯಾಡಿನಲ್ಲಿ ಮೊಟ್ಟ ಮೊದಲ ಎಐಎಫ್ ಡಿಜಿಟಲ್ ಈಕ್ವಲೈಸರ್್ರ ಕೇಂದ್ರ ಸ್ಥಾಪಿಸಿದ್ದಕ್ಕೆ ಹೊಗಳಿದ್ದಾರೆ. ವಿಶ್ವಮಾರುಕಟ್ಟೆ ತಂತ್ರ ಯೋಜಕರಾಗಿ ಆಧುನಿಕ ತಂತ್ರಜ್ಞಾನದ ರೂವಾರಿಯಾಗಿ ಹತ್ತು ವರ್ಷಗಳಿಂದ ಸಿಲಿಕಾನ್ ವ್ಯಾಲಿಯಲ್ಲಿ ಸ್ಮರಣಜಾಲ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ಅಮೆರಿಕಾದ ತಂತ್ರಜ್ಞಾನ ಹಾಗೂ ಪ್ರಮಾಣ ಸಮಿತಿಯ ಅಧ್ಯಕ್ಷತೆ ವಹಿಸಿ ಐಬಿಎಂ, ಎಚ್‌ಪಿ ಮತ್ತು ಸನ್ ಮೈಕ್ರೋಸಿಸ್ಟಮ್ಸ್ ಎನ್ನುವ ಮೂರು ಬೃಹತ್ ಪ್ರಧಾನ ಸಂಸ್ಥೆಗಳ ಒಕ್ಕೂಟವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಇವರ ಉನ್ನತ ತಂತ್ರಜ್ಞಾನ ಸ್ಮರಣಜಾಲದ ಪರಿಣಾಮವಾಗಿ ಸೆಪ್ಟೆಂಬರ್ ೧೧, ೨೦೦೧ರಂದು ನಡೆದ ವಿಶ್ವ ವಾಣಿಜ್ಯ ಕೇಂದ್ರದ ನಿರ್ನಾಮದ ನಂತರವೂ ಅಲ್ಲಿಯ ಸಂಸ್ಥೆಗಳ ದಾಖಲೆಗಳು ನಾಶವಾಗದೇ ಉಳಿದು ಅವು ಅನಾಯಾಸವಾಗಿ ಕಾರ್ಯ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಯಿತು.
ಕುಮಾರ್ ಮಳವಳ್ಳಿಯವರ ಸಾಧನೆಯನ್ನು ಗುರುತಿಸಿ ಅಮೆರಿಕಾದ ಸಿಲಿಕಾನ್ ವ್ಯಾಲಿ ಕ್ಯಾಪಿಟಲ್ ಕ್ಲಬ್ “ಹಾಲ್ ಆಫ್ ಫೇಮ್” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಭಾರತದ ಕುಗ್ರಾಮಗಳಲ್ಲೂ, ಶಾಲೆಗಳ ಡಿಜಿಟಲ್ ಈಕ್ವಲೈಸರ್ ಕೇಂದ್ರಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮಾಂತರ ಜನರ ನಡುವಿನ ಅಂತರ ಕಡಿಮೆ ಮಾಡುವುದಲ್ಲದೆ ಜೊತೆಗೆ ಅನೇಕ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.
ಭಾರತವು ಭವಿಷ್ಯದ ಸ್ಮರಣಜಾಲ ವಿನ್ಯಾಸದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನಂಬಿರುವ ಕುಮಾರ್ ಮಳವಳ್ಳಿ ಅವರು ಅಮೆರಿಕಾದ ಸಂಸ್ಥೆಗಳಿಗೆ ಭಾರತದ ಬಗ್ಗೆ ತಿಳುವಳಿಕೆ ಮೂಡಿಸಿ ಅಲ್ಲಿಯ ಸಂಸ್ಥೆಗಳ ಜೊತೆಗೆ ಸಹಯೋಗ ಹೊಂದಲು ಕಾರಣಕರ್ತರಾಗಿದ್ದಾರೆ.
ಕರ್ನಾಟಕ ಹೆಮ್ಮೆಯ ಪುತ್ರ ಹೊರನಾಡಿನಲ್ಲಿ ಸಾಧಕನಾಗಿ ಭವಿಷ್ಯದ ತಂತ್ರಜ್ಞಾನದ ರೂವಾರಿಯಾಗಿ ಮೆರೆದವರು ಕುಮಾರ್ ಮಳವಳ್ಳಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಸಿಡ್ನಿ ಕನ್ನಡ ಕೂಟ

ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸುಮಾರು ಎರಡು ದಶಕಗಳಿಂದ ಕನ್ನಡ ಡಿಂಡಿಮವನ್ನು ಮೊಳಗಿಸುತ್ತಿರುವ ಹೊರನಾಡ ಕನ್ನಡ ಸಂಘ ಸಿಡ್ನಿ ಕನ್ನಡ ಕೂಟ.
೧೯೮೨ ರಲ್ಲಿ ಪ್ರಾರಂಭವಾದ ಸಿಡ್ನಿ ಕನ್ನಡ ಕೂಟವು ಸಿಡ್ನಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಸಿಡ್ನಿ ಕನ್ನಡ ಕೂಟವು ‘ಸುಗಮ ಕನ್ನಡ ಶಾಲೆ’ಯನ್ನು ಪ್ರಾರಂಭಿಸಿರುವುದು ಒಂದು ಪ್ರಮುಖ ಮೈಲಿಗಲ್ಲು. ಪ್ರಾರಂಭದಲ್ಲಿ ಮನೆಗಳಲ್ಲಿ ಸೇರುತ್ತಿದ್ದ ಕನ್ನಡ ಕಲಾವಿದರು ಈಗ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಯಲ್ಲಿ ಒಗ್ಗೂಡಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಿಡ್ನಿಯಲ್ಲಿ ಬೆಳೆಯುತ್ತಿರುವ ಕನ್ನಡಿಗರ ಸಂಖ್ಯೆಯನ್ನು ಗಮನಿಸಿ, ಕನ್ನಡ ಕ್ರಿಕೆಟ್ ಕ್ಲಬ್, ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿರುವ ಸಿಡ್ನಿ ಕನ್ನಡ ಕೂಟವು ಪರಭಾಷಾ ವಲಯಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದು ಹೊರನಾಡಿನಲ್ಲಿ ಪರಿಚಯಿಸುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ.
೨೦೦೩ರ ಜೂನ್ ತಿಂಗಳಲ್ಲಿ ೨೦ನೇ ವಾರ್ಷಿಕೋತ್ಸವವನ್ನು ಆಚರಿಸಿ, ಈ ಸಂದರ್ಭದಲ್ಲಿ ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿ ಕನ್ನಡದ ಕಹಳೆಯನ್ನು ಹೊರನಾಡಿನಲ್ಲಿ ಮೊಳಗಿಸುತ್ತಿರುವ ಅನನ್ಯ ಸಂಸ್ಥೆ ಸಿಡ್ನಿ ಕನ್ನಡ ಕೂಟ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಅರವಿಂದ ಪಾಟೀಲ್

ಕೊಲ್ಲಿ ರಾಷ್ಟ್ರದಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡಿದ ಸಮಾಜಮುಖಿ ಅರವಿಂದ ಪಾಟೀಲ್, ಕನ್ನಡ ಪರಿಚಾರಕರು, ಸಂಸ್ಕೃತಿ ಚಿಂತಕರು. ೧೯೫೮ರಲ್ಲಿ ಜನಿಸಿದ ಅರವಿಂದ ಶಿವಮೂರ್ತಿ ಪಾಟೀಲ್ ಸಿವಿಲ್ ಇಂಜಿನಿಯಲಿಂಗ್‌ ಪದವೀಧರರು. ಪರಿಸರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ. ೧೯೯೩ರಲ್ಲಿ ಕೊಲ್ಲಿ ರಾಷ್ಟ್ರದ ಕತಾರ್‌ನಲ್ಲಿ ಇಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿದ ಅರವಿಂದ ಪಾಟೀಲ್ ಕತಾರ್‌ನಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರು ಅನುಭವಿಸುತ್ತಿದ್ದ ಸಂಕಟಗಳಿಗೆ ಮರುಗಿದವರು. ಕಾರ್ಮಿಕರ ದನಿಯಾಗಿ ದುಡಿದವರು. ೨೦ ವರ್ಷಕ್ಕೂ ಮಿಗಿಲು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ಹೆಗ್ಗಳಿಕೆ, ಕರ್ನಾಟಕ ಮತ್ತು ಕತಾರ್ ದೇಶದ ನಡುವಿನ ಸಾಂಸ್ಕೃತಿಕ ಕೊಂಡಿ. ಕತಾರ್ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡದ ಕಾಯಕ. ವಿಶ್ವ ಕನ್ನಡ ಸಾಂಸ್ಕೃತಿಕ ಸಮಾವೇಶದ ಸಂಚಾಲಕ, ಇಂಡಿಯನ್ ಸೊಸೈಟಿ ಆಫ್ ದುಖಾನ್ ಅಧ್ಯಕ್ಷರಾಗಿ ಭಾರತೀಯ ಸಾಹಿತ್ಯ-ಸಂಸ್ಕೃತಿಯನ್ನು ಪಸರಿಸುವ ಸ್ತುತ್ಯಾರ್ಹ ಕಾರ್ಯ. ಬಡಮಕ್ಕಳಿಗೆ ಆರ್ಥಿಕ ನೆರವು, ಕಾರ್ಮಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವಲ್ಲಿ ಮಾನವೀಯ ಸೇವೆ, ಕಾರ್ಮಿಕರಿಗಾಗಿಯೇ ೨೫ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ, ಆಹಾರ-ಬಟ್ಟೆಗಳ ದಾನ ಮುಂತಾದ ಹಲವು ಸೇವಾಕಾರ್ಯಗಳನ್ನು ಕೈಗೊಂಡ ಹೃದಯವಂತ, ನಿವೃತ್ತಿಯ ನಂತರ ಕರ್ನಾಟಕದಲ್ಲೂ ಅನೇಕ ಬಗೆಯ ಸೇವಾಕೈಂಕರ್ಯದಲ್ಲಿ ತೊಡಗಿರುವ, ಹತ್ತಾರು ಪ್ರಶಸ್ತಿ-ಗೌರವಗಳಿಗೂ ಪಾತ್ರವಾಗಿರುವ ವಿರಳ ಸೇವಾಕರ್ತರು.