Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ. ಎಸ್. ಸದಾಶಿವ

ರಾಜ್ಯಶಾಸ್ತ್ರ ಓದಿದರೂ ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರವೃತ್ತಿಯಿಂದ ಸಾಹಿತಿಯಾದವರು ಸಾಗರದ ಶ್ರೀ ಜಿ. ಎಸ್. ಸದಾಶಿವ ಅವರು.
ನಾಡಿನ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಮಯೂರಗಳಲ್ಲಿ ಕಾರ್ಯ ನಿರ್ವಹಿಸಿದ ಶ್ರೀ ಜಿ. ಎಸ್. ಸದಾಶಿವ ಈಗ ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರು.
ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸದಾಶಿವ ಹೊರತಂದಿರುವ ಸಣ್ಣ ಕಥೆಗಳ ಸಂಕಲನಗಳು ಮೂರು. ಬೇರೆ ಭಾಷೆಯ ಕಥೆಗಳನ್ನು ಅನುವಾದಿಸಿರುವ ಸದಾಶಿವ ಮಕ್ಕಳ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದು ಕೊಟ್ಟವರು.
ಚಲನಚಿತ್ರಗಳಿಗೆ ಸಂಭಾಷಣೆ (ಆಕ್ಸಿಡೆಂಟ್, ಮೂರು ದಾರಿಗಳು) ಚಿತ್ರಕಥೆ ಹಾಗೂ ಸಂಭಾಷಣೆ (ಆಕ್ರಮಣ) ಬರೆದಿರುವ ಸದಾಶಿವ ‘ಎಲ್ಲಿಂದಲೋ ಬಂದವರು’ ಚಿತ್ರದ ಚಿತ್ರಕಥೆಯನ್ನು ಪಿ. ಲಂಕೇಶರ ಜೊತೆ ರಚಿಸಿದರು.
ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಗಟ್ಟಿಸ್ಥಾನ ತಂದುಕೊಟ್ಟವರಲ್ಲಿ ಒಬ್ಬರಾದ ಜಿ. ಎಸ್. ಸದಾಶಿವ ಅವರಿಗೆ ಮಾಧ್ಯಮ ಅಕಾಡಮಿ, ಪದ್ದಣ್ಣ ನೇಪಥ್ಯ ಕಲಾ ಪ್ರಶಸ್ತಿ, ರಾಮಚಂದ್ರಾಪುರ ಮಠ ಪ್ರಶಸ್ತಿಗಳು ಸಂದಿವೆ.