Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಮಲ್ಲೋಜ ಮಾಯಾಚಾರ್ಯ

ಸಾಂಪ್ರದಾಯಕ ಶಿಲ್ಪಕಲೆ ಅಭ್ಯಾಸ ಮಾಡಿ ಅದರಲ್ಲಿ ನವೀನ ಪದ್ಧತಿಯನ್ನು ಅಳವಡಿಸಿ ಹೊಸತನ ರೂಢಿಸಿದವರು ಶಿಲ್ಪಿ ಶ್ರೀ ಮಲ್ಲೋಜ ಮಾಯಾಚಾರ್ ಅವರು.
ಚಿಮ್ಮಲಿಗಿಯಲ್ಲಿ ಹುಟ್ಟಿ ಬಾಗಲಕೋಟೆಯಲ್ಲಿ ನೆಲೆಸಿರುವ ಶ್ರೀ ಮಲ್ಲೋಜ ಮಾಯಾಚಾರ್ ಅವರು ತಮ್ಮ ತಂದೆ ಭೀಮರಾಯರಿಂದ ಕಾಷ್ಠಶಿಲೆಯಲ್ಲಿ ಪರಿಣತಿ ಪಡೆದರು. ಕಾಷ್ಠ ಶಿಲ್ಪದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀ ಮಾಯಾಚಾರರು ಈವರಗೆ ೨೦ಕ್ಕೂ ಹೆಚ್ಚು ದೇವಾಲಯಗಳ ತೇರುಗಳನ್ನು ನಿರ್ಮಿಸಿದ್ದಾರೆ.
ಶಿಲಾಶಿಲ್ಪದಲ್ಲೂ ತಾಂತ್ರಿಕ ವಿಷಯದಲ್ಲೂ ಅನುಭವ ಪಡೆದ ಶ್ರೀ ಮಲ್ಲೋಜರು ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಂಡು ಹಲವಾರು ಪ್ರತಿಮೆಗಳನ್ನು ತಯಾರಿಸಿದ್ದಾರೆ.
ಬಾಗಲಕೋಟೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಶಿಲ್ಪಕಲಾ ಕೇಂದ್ರ ಸ್ಥಾಪಿಸಿ ಶಿಲ್ಪಕಲೆಗೆ ಹೊಸ ಆಯಾಮ ನೀಡಿರುವ ಸಾಧಕರು ಶ್ರೀ ಮಲ್ಲೋಜ ಮಾಯಾಚಾರರು.