Categories
ರಚನೆಗಳು

ಪ್ರಸನ್ನವೆಂಕಟದಾಸರು

೨೨೮
* ತಪ್ಪುಗಳೆಲ್ಲ ಪರಿಹರಿಸುವ ನ
ಮ್ಮಪ್ಪನಲ್ಲವೆ ನೀನು
ಒಪ್ಪಿದ ಬಳಿಕವಗುಣ ನೋಡದ ತಿ
ಮ್ಮಪ್ಪನಲ್ಲವೆ ನೀನು ಪ.
ಬೆಳಗಿನ ಜಾವದಿ ಹರಿ ನಿನ್ನ ಸ್ಮರಣೆಗೆ
ಹಳವಿಗೆಗೊಳ್ಳದ ತಪ್ಪು
ಮಲಮೂತ್ರವಿಸರ್ಜನೆಯ ಮೃತ್ತಿಕೆಯಲಿ
ಮಲಿನವ ತೊಳೆಯದ ತಪ್ಪು
ತುಲಸಿ ವೃಂದಾವನ ಗೋಸೇವೆಗೆ
ಅಲಸಿಕೆ ಮಾಡುವ ತಪ್ಪು
ನಳಿನ ಸಖೋದಯಕಘ್ರ್ಯವ ನೀಡದ
ಕಲಿವ್ಯಾಸಂಗದ ತಪ್ಪು ೧
ದಿನದಿನ ಉದಯದಿ ಸ್ನಾನವ ಮಾಡದ
ತನುವಂಚನೆಯ ತಪ್ಪು
ಕ್ಷಣ ಶ್ರೀ ಹರಿಗುಣ ಜಿಜ್ಞಾಸಿಲ್ಲದ
ಮನವಂಚನೆಯ ತಪ್ಪು
ಮುನಿಸುರ ಭೂಸುರರಾರಾಧಿಸದ
ಧನ ವಂಚನೆಯ ತಪ್ಪು
ವನಜಾಕ್ಷನೆ ನಿನ್ನ ಪಾದ ವಿಮುಖ ದು
ರ್ಜನ ಸಂಸರ್ಗದ ತಪ್ಪು ೨
ಕಣ್ಣಲಿ ಕೃಷ್ಣಾಕೃತಿ ನೋಡದೆ ಪರ
ಹೆಣ್ಣಿನ ನೋಟದ ತಪ್ಪು
ನಿನ್ನ ಕಥಾಮೃತ ಒಲ್ಲದೆ ಹರಟೆಯ
ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದಲೆ ಹರುಷದಿ
ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಉನ್ಮತ್ತ
ರ ನಮಿಸುವ ತಲೆ ತಪ್ಪು ೩
ಶ್ರೀ ನಿರ್ಮಾಲ್ಯದ ವಿರಹಿತ ಸುರಭಿಯ
ಘ್ರಾಣಿಪ ನಾಸಿಕ ತಪ್ಪು
ಆನಂದದಿ ಸಂಕೀರ್ತನೆ ಮಾಡದ
ಹೀನವಿವಾದದ ಬಾಯ ತಪ್ಪು
ಶ್ರೀನಾಥಾರ್ಚನೆ ಇಲ್ಲದೂಳಿಗ
ಮಾಣದಿರುವ ಕೈ ತಪ್ಪು
ಶ್ರೀನಾರಾಯಣ ವೇಶ್ಮನಿಗೈದದ
ನಾನಾಟನ ಪಾದ ತಪ್ಪು ೪
ಯಜ್ಞಾತ್ಮಗೆ ಯಜ್ಞಾರ್ಪಿಸದೆ ಸುಖ
ಮಗ್ನಾದ ಮೇಢ್ರದ ತಪ್ಪು
ಅಗ್ರದ ಕರ್ಮವ ಶೌಚವ ಜರಿದ ಸ
ಮಗ್ರ ಗುಹ್ಯಕೃತ ತಪ್ಪು
ಅಜ್ಞಾನ ಜ್ಞಾನದಿ ಕ್ಷಣಲವಶತ
ವೆಗ್ಗಳಘ ಗಳಿಸುವ ತಪ್ಪು
ಯಜ್ಞೇಶ ಪ್ರಸನ್ವೆಂಕಟ ಕೃಷ್ಣ ನಾ
ಮಾಗ್ನಿಗೆ ತೃಣವೀ ತಪ್ಪು ೫


ತಲ್ಲಿಕಾರರು ನಿನ್ನ ಬಂಟರು ರಂಗ
ನಿಲ್ಲಲೀಸರು ಸಂಸಾರಿಗಳನು ಕೃಷ್ಣ ಪ.
ಮಳ್ಳಿದರಾಗಿ ಮಾತಾಡಿ ಬಲುಂಡುಟ್ಟು
ಇಲ್ಲದ ತಪ್ಪನೆಣಿಸಿ ಹೊರಿಸಿ
ಸುಳ್ಳುಕಳವು ಹಾದರದ ಪಾಪ ಭವ
ಬಳ್ಳಿಯ ಹರಿದು ಮೊಳೆಯನೊತ್ತಗೊಡರು ೧
ಕಾಂಚನವಿಡಿದು ಕಕ್ಕಸಬಟ್ಟು ಪೂರ್ವದ
ಸಂಚಿತದಿ ನರಪಶುಗ್ರಾಸದ
ಮುಂಚುವ ಬಣವೆಗೆ ಕಿಚ್ಚಿಕ್ಕಿ ಹುಡಿದೂರಿ
ಪಂಚಾನನಂತೆ ಖೋ ಇಟ್ಟು ಕೂಗುವರು ೨
ಇದಿರೆದ್ದು ಕರೆದು ಮನ್ನಿಸಿ ಪೂಜಿಸಿ
ಪಾದೋದಕ ಪ್ರೋಕ್ಷಿಸಿಕೊಂಡು ಮರೆಹೊಕ್ಕರೆ
ಬದಿಯ ಸಂಪದ ಬಂದ ಕಬ್ಬು ಬಾಳೆ ನೆಲ್ಲು
ಗದ್ದೆಯ ಸಂಹರಿಸುವರುಪಕಾರಿಗಳು ೩
ಛಲದಿ ಮಂದಿರ ಹೊಕ್ಕು ಹರಿಸೇವೆ ಗೊಂದಣ
ಗಳಲಿ ಬೇಡಿ ಚಾಮುಂಡೆರೋಡಿಸಿ
ಹೊಲ ಮನೆ ಮಧ್ಯದ ಪಾಮರರ ಹಿಡಿ ತಂದು
ಬಲು ಕಾಸಿಸಿ ಮುದ್ರೆಯೊತ್ತದೆ ಬಿಡರು ೪
ಈ ಪರಿ ಭವಸುಖ ಸೂರ್ಯಾಡಿ ಎಳೆದೊಯ್ದು
ಶ್ರೀಪದಪುರದಿ ಸೆರೆಯಿಕ್ಕುವರು
ಶ್ರೀಪ್ರಸನ್ವೆಂಕಟಪತಿ ಮುಖ್ಯ ಪ್ರಾಣೇಶ
ಈ ಪುಂಡರಿಗೆ ಹೇಳೊ ಇವರ ಸಾಕೆಂದು೫

೫೩
ತಾಂಡವಾಡಿದನಂದು ಯಶೋದೆಕಂದ ಪ.
ಅಂದದಿ ಬೆಣ್ಣೆಯ ಪಿಡಿದು ಶುದ್ಧಗತಿಗ
ಳಿಂದ ತಗಡಧಂ ಧಾಂ ಧಿಮಿಕಿಟ ಧಿಗಿ ಧಿಗಿ ಥೈಯೆಂದು ೧
ಕುಚಮಾಟದ ಗದ್ದಿಗೇಲಿ ಒಂದಡಿಯಿಟ್ಟ ತಾಳ
ನಿಚಯದಿ ತತ್ತಂ ತಾಹಂ ಥರಿಕುಟ ತಕುಂದ ಕಿಡಿಕಿಟಿಲೆಂದು ೨
ಕಂಕಣ ಕುಂಡಲಹಾರ ಪದಕ ದಾಮಾ
ಲಂಕೃತ ಕಿಂಕಿಣಿ ಕಿಣಿ ಝಣ ಎನೆ ವನಜನಯನನು ೩
ಅಜಭವಾದ್ಯರು ತಾಳ ವೀಣೆ ಆವುಜ ಮೃದು
ಋಜು ಧಳಂ ಧಳಂ ಝೈಂ ಝೈಂ ಝಕಿಂ ನುಡಿಸೆ ಜಡಿ
ಜಡಿದೊಡನೆ ೪
ಮಂದಹಾಸದಿ ನಂದವ್ರಜದ ಗೋವರ ಕೂಡ
ತಂದೆ ಪ್ರಸನ್ನವೆಂಕಟಗಿರಿತಟಸ್ಫುಟಿದ್ಧಾಟಕ ನಿಲಯ ೫

೧೭೩
ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ಪ.
ತಾರಾಪತಿಯಂತೆ ಕೀರ್ತಿ ಪ್ರಸರವಿ
ಸ್ತಾರದಿ ಬುಧ ಚಕೋರವೃಂದಕೆ ನೀನು ೧
ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳ
ನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ ೨
ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆ
ಮಾರುತಿಮತತತ್ವ ವಾರಿಧಿತರಂಗಕೆ ೩
ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯ
ಗರೆಯುತ ಹೃತ್ತಾಪ ಪರಿಹರಿಸುವಂಥ ೪
ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತ
ವಸುಧೆಯಾಚಕ ಕುಮುದ ಕುಸುಮ ಕೋರಕಕೆ ೫

೯೪
ತೊರವೆಪುರನಿವಾಸ ನರಸಿಂಹ ನೀ
ಹೊರೆಯೊ ಭಕ್ತರ ಭಯಗಜಸಿಂಹ
ಅರಿವರಾರಯ್ಯ ನಿನ್ನ ಮಹಿಮೆಯ
ಸರಸಿಜಭವ ಭವ ಸುರವರ ಅಹಿ ಕಿನ್ನರ
ವರ ಮುನಿವರ ನರವರವಂದ್ಯ ಪ.
ಹಿರಣ್ಯಕನೆಂಬ ದೈತ್ಯ ಮಹೀತಳದಿ ವಿಧಿ
ಹರವರದಲಿ ಬಲುಸೊಕ್ಕಿ ಅಂದು
ಪರಮ ಭಾಗವತ ಪ್ರಹ್ಲಾದನಿಗೆ
ಪರಿಪರಿದುರಿತವ ಮರಳಿ ಮರಳಿ ಭಯಂ
ಕರವನು ಚರಿಸಲು ನೆರೆಮೊರೆಯಿಡಲು ೧
ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲು
ಸರವಭೂತ ಭರಿತಾನಂತನೀಗ
ಅರಸಿದರೀ ಕಂಬದೊಳಿಹನೆನಲು
ಮೊರೆ ಮೊರೆದೇಳುತ ಸರಸರನೊದೆಯಲು
ಬೆರಬೆರ ದೋಷದಿ ವರನರಹರಿಯೆ ೨
ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರ
ಕಟಿಸಿ ದೈತ್ಯನುದರವನು ಸೀಳಿ
ತ್ರುಟಿಯೊಳು ಕರುಳಮಾಲೆಯ ಧರಿಸಿ
ಶಠನ ವಧಿಸಿ ನಿಜಭಟನ ಪೊರೆದ ಜಗ
ಜಠರ ಪ್ರಸನ್ನವೆಂಕಟ ನರಸಿಂಹ ೩

೨೩೦
ತೊಲ ತೊಲಗೆಲೊ ಕಲಿಯೆ ನಿಲ್ಲದಿಲ್ಲಿ ಪ.
ತೊಲ ತೊಲಗೆಲೊ ಕಲಿಯೆ ಸಲೆ
ಸಲುಗೆಯ ಬಿಡು ಸಲಿಲಜಾಕ್ಷನ ದಾಸರ ಅ.ಪ.
ರಮೆರಮಣನ ಸಿರಿರಮಣೀಯ ನಾಮವಿರೆ
ಯಮಗಿಮನಂಜಿಕೆ ಎಮಗುಂಟೆ
ತಮ ತಮ ಮಹೋತ್ತಮ ಕುಲಗಳು ಮಹೋ
ತ್ತ್ತಮತಮರೊಲುಮೆ ಮತ್ತವನ ಆಶ್ರಯವುಂಟು ೧
ಮನ ಮನೋಸಂಭವನ ಮನೆ ಹೊಕ್ಕರೆ ಸೈರಿಸ
ಘನಜ್ಞಾನಿ ಪೂರ್ಣಗುರು ಜ್ಞಾನಿರಾಯ
ತನು ತನಯಾಂಗನೇರು ತನ್ನವಸರಕಾರಿಲ್ಲ
ಈ ನಯನ ಹರಿನಾರಾಯಣನಲ್ಲಿ ತೊಡಗಿರೆ ೨
ಬಿಡಬಿಡ ಭಟನೆಂದು ಬೇಡಿದಂತಾಭಯವೀವ
ಪಡಿ ಪೊಡವಿಲಿ ಕೊಟ್ಟು ಪಿಡಿದ ಎನ್ನ
ಒಡಒಡನೆ ರಕ್ಷಿಪ ಒಡೆಯ ಪ್ರಸನ್ವೆಂಕಟೇಶಅಡಿಯೆಡೆ ಸೇರಿದೆ ಬಾರೊ ಅಡಗಡಗೆಲೆಲೊ ೩

೩೧೭
ತೋರುತಲೈದಾನೆ ಮುಕ್ತಿಯ ತೋರುತಲೈದಾನೆ
ಸಾರಿ ಶರಣರೆಂದು ಶ್ರೀನಿವಾಸದೇವ ಪ.
ಹುಲ್ಲು ಕಲ್ಲಿನ ಪೂಜೆಯ ಮಾಡಿ ಕೆಡದೆ
ಬೆಲ್ಲದಾಸೆಗೆಂಜಲು ತಿನ್ನದೆ ಸೊಲ್ಲು
ಸೊಲ್ಲಿಗೆ ಹರಿಸರ್ವೋತ್ತಮನೆಂದು
ಬಲ್ಲವರು ಭಕ್ತಿಲಿ ಭಜಿಸಿರೆಂದು ೧
ಭುವಿಯ ವೈಕುಂಠವು ನೋಡಿರಾನತರೆಂದು
ನವನವ ಉತ್ಸಾಹದೊಳಿಹನು
ಯುವತಿ ಲಕುಮಿ ಕೂಡ ಸ್ವಾಮಿ ಪುಷ್ಕರಕೂಲ
ಭವನದೊಳಗಿಪ್ಪ ಭಕ್ತ ಚಿಂತಾಮಣಿ ೨
ನೆಲೆಯೆ ಸಿಕ್ಕದ ಧರ್ಮಕರ್ಮದ ತೊಡರ ಬಿ
ಟ್ಟಲಸದೆ ತನ್ನಂಘ್ರಿಯಾತ್ರೆ ಮಾಡಿ
ಸುಲಭದಿ ಮೋಕ್ಷವ ಗಳಿಸಿಕೊಳ್ಳೆನುತಲಿಕಲಿಯುಗದೊಳಗೆ ಪ್ರಸನ್ನವೆಂಕಟಪತಿ ೩

ಮರೆಯದೆ ಕರೆದರರಿದಂಬರವ
೫೪
ತೋಳೆಂಬೆನು ತೋಳೆ ಲಕುಮಿಯಾಲಂಗಿಪ ತೋಳೆ
ಬಾಲರತ್ನ ತೋಳನ್ನಾಡೈ ಬಾಲಕೃಷ್ಣ ನಾಡೆ ಪ.
ಕಂದಿ ಕುಂದ್ಯಾಕ್ರಂದಿದ ನಾಗನ
ಬಂದೆತ್ತಿದ ತೋಳೆ
ನೊಂದ ಕಂದನೆಂದು ತೊಡೆಯಲಿ
ಹೊಂದಿಸಿಕೊಂಡ ತೋಳೆ ೧
ಹರಧನು ಜರಿದು ಮುರಿದ ವಿಕ್ರಮ
ಬಿರುದಾಂಕನ ತೋಳೆ
ಮರೆಯದೆ ಕರೆದರರಿದಂಬರವ
ವರಧಿಸ್ಯುಡಿಸಿದ ತೋಳೆ ೨
ದಾಸವಂಶ ವಿಪೋಷ ರಿಪುಜನ
ನಾಶಕಾರಣ ತೋಳೆ
ಶೇಷಗಿರೀಶ ಪ್ರಸನ್ವೆಂಕಟ
ವಾಸ ರಂಗನ ತೋಳೆ ೩

೨೩೧
ದಡ ಸೇರಿಸು ಭವದ ಕಡಲಿನ
ದಡ ಸೇರಿಸು ಹರಿಯೆ
ಕಡೆ ಮೊದಲಿಲ್ಲದ ಕ್ಲೇಶದ ವಾರಿಯ
ಕಡು ಕಾಂಕ್ಷದ ಬಲುತೆರೆಯ ಪ.
ಸಾಧು ಸಮಾಗಮ ಸಚ್ಛಾಸ್ತ್ರ ಶ್ರವ
ಣಾದಿಗಳಿಲ್ಲದೆ ಕೆಡುವೆ
ಮೇದಿನಿಯೊಳು ಮೂಢಾತ್ಮನು ನಾ ಶ್ರೀ
ಪಾದವ ಹೊಂದಿಸು ಹರಿಯೆ ೧
ಸಾಸಿರ ನಾಮದಿ ತುಲಸೀ ಕುಸುಮವ
ಶ್ರೀಶನಿಗರ್ಪಿಸಲಿಲ್ಲ
ಹೇಸದೆ ಬಾರದುದನ್ನೆ ಬಯಸುತ
ವಾಸುದೇವ ಕೆಟ್ಟೆನಲ್ಲ ೨
ಮನ ವಶವಾಗದು ತನು ಮಡಿಯಾಗದು
ಕನಸಲಿ ಧರ್ಮವನರಿಯೆ
ಒಣಮಾತಲಿ ದಿನ ಹೋದವು ಪರಗತಿ
ಗನುಕೂಲಲ್ಲದು ದೊರೆಯೆ ೩
ದುವ್ರ್ಯಸನಕೆ ಬೇಸರೆನೆಂದಿಗೆ ಘನ
ಗರ್ವಿಲಿ ವರ್ತಿಪೆನಲ್ಲ
ಪರ್ವತ ನೆಗಹುವ ನುಡಿಯನ್ನಾಡುವೆ
ನಿರ್ವಾಹ ಕಡ್ಡಿಯೊಳಿಲ್ಲ ೪
ನನ್ನ ಗುಣದ ನಂಬಿಕೆ ನನಗಿಲ್ಲ
ನಿನ್ನಯ ನಾಮವೆ ಗತಿಯು
ಇನ್ನಾದರು ಕಡೆಗಣ್ಣಲೆ ನೋಡು ಪ್ರ
ಸನ್ವೆಂಕಟ ಸಿರಿಪತಿಯೆ ೫

(ನು. ೫) ವ್ಯಾಧ: ಯಾದವರೆಲ್ಲ
೨೩೨
ದಯಮಾಡು ದಯಮಾಡು ಶ್ರೀನಿವಾಸ ಭವ
ಭಯ ನಿವಾರಣ ಭಜಕ ಭಕ್ತರಘನಾಶ ಪ.
ನೇಮವೆನ್ನಲಿಲ್ಲ ನಾಮದರಿಕೆಯಿಲ್ಲ
ನಾ ಮಹಾಪಾಪಿಯು ಸ್ವಾಮಿ ನೀನೊಲಿದು ಗಡ ೧
ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯಿಲ್ಲ
ಉದ್ಧರಿಸೆನ್ನನಿರುದ್ಧ ಹರಿ ಕರುಣಿ ೨
ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲ
ಭಕ್ತರಕ್ಷಕ ಪಾಪಮುಕ್ತ ದೇವರ ದೇವ ೩
ಅವಗುಣದೆಣಿಕೆಯ ವಿವರ ನೋಡದೆ ಅಯ್ಯ
ಜವನ ಬಲೆಯನು ತಪ್ಪಿಸುವ ಸರೀಸೃಪ ಶಯ್ಯ ೪
ಅಜಾಮಿಳ ವ್ಯಾಧ ಆ ಗಜ ಅಹಲ್ಯೋದ್ಧರ
ನಿಜ ಪ್ರಸನ್ವೆಂಕಟೇಶ ಸುಜನ ಪರಿಪೋಷ ೫

(ನು. ೬) ಈಷಣತ್ರಯ:
೩೧೮
ದಾಟು ಭವಾಟವಿಯನ್ನು ಮನುಜ ನೀ
ದಾಟು ಭವಾಟವಿಯನ್ನು
ಕೈಟಭಾಂತಕನಾಮಪಾತಕರೊಡಗೂಡಿ
ನೀಟಾಗದಂದದ ಪಾಟಿಯ ಕೇಳಿನ್ನು ಪ.
ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲು
ಪುಣ್ಯಮಾರ್ಗವ ನಡಿಗುಡವು
ಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿ
ಕಣ್ಣಲಿ ಕಂಡರೆ ಬಿಡವು
ಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥ
ಪೆಣ್ಣಿನ ನಾತಕೆ ಓಡ್ಯಾಡುವುವು
ಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅ
ರಣ್ಯದ ಖಳರೆಂಬ ಗಿಡವು೧
ಆರಿಂದ್ರಿಯ ಕಳ್ಳರೆಂಬ ಕಾಮವೆಂಬ
ಚೋರನಾಯಕನುಪಟಳವು
ಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲ
ಸೂರ್ಯಾಡಿ ಸುಲಕೊಂಬ ಹಯವು
ಮೂರು ಬಗೆಯಿಂದ ಸುಡುತ ಕಂಗೆಡಿಸುವ
ದಾರುಣತರ ದಾವಾನಳವು
ಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿ
ಸ್ಸಾರ ಘೂಕಗಳ ರವವು ೨
ಅಡ್ಡಡ್ಡ ಬಂದು ಅಜ್ಞಾನ ಕಾಳೋರಗ
ವೆಡ್ಡುಗೊಳಿಸಿ ಕಚ್ಚುತಿವೆ
ದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬ
ಗುಡ್ಡದೊಳಗೆ ಸುತ್ತುತಿವೆ
ಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿ
ಗಡ್ಡದ ಕಪಿ ಕಾಡುತಿವೆ ೩
ಜನ್ಮಮರಣ ಹಸು ತೃಷೆ ಜರಾವ್ಯಾಧಿಯೆಂ
ಬುಮ್ಮಳಿಕೆಯ ಪೊರೆಯುಂಟು
ಹಮ್ಮು ಮಮತೆ ಎಂಬ ತಲೆಹೊರೆ ಭಾರಾಗಿ
ಒಮ್ಮೆಗಿಳಿಯಲಿಲ್ಲ ಗಂಟು
ಸ್ವರ್ಮಂದಿರವೆ ಹೆಬ್ಬೆಟ್ಟ ನಾಯಕ ನರ್ಕ
ಕಮ್ಮರಿಗಳು ಇಪ್ಪತ್ತೆಂಟು
ಸನ್ಮಾನ ರಾಗಭೋಗಗಳೆಂಬ ಬಯಲಾಸೆ
ಯ ಮೃಗತೃಷ್ಣೆಯ ನಂಟು ೪
ಅಲ್ಲಿಗಲ್ಲಿಗೆ ಸುಖದು:ಖನೆಳಲು ಬಿಸ
ಲಲ್ಲಿಗಲ್ಲಿಗೆ ಪ್ರಿಯತರುವು
ಬಲ್ಲಿದರಿಂದಾಹ ಭಯದಂತೆ ಸೂಚಿಪ
ಕಲ್ಲುಕೊಳ್ಳಗಳ ನಿರ್ಝರವು
ಕೊಲ್ವಾರಿನೃಪದೂತರೆಂಬ ಸೂಕರಮೋಹ
ಹಲ್ಲೊಳಗಘಕೂಪದಿರವು
ಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲ
ಹೊಲ್ಲನಖಿಗಳ ಸಂಚರವು ೫
ಈಷಣತ್ರಯ ಯಂತ್ರ ಏಳು ಪ್ರಾಕಾರದಿ
ದ್ವೇಷಿಗಳಿದ್ದ ದುರ್ಗಗಳು
ದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರ
ದೋಷದ ಮಳೆ ಮಂಜುಗಳು
ನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕ
ಮೂಷಕಗಳಿಹ ಬಿಲಗಳು
ದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದ
ಘೋಷಣ ಭಯಂಕರಗಳು ೬
ಈ ರೀತಿ ಕಾಂತಾರ ದಾಟುವ ಧೀರಗೆ
ಮಾರುತಿ ಮತ ಪಕ್ಷ ಬೇಕು
ನಾರಾಯಣನೆ ಸರ್ವೋತ್ತಮನೆಂದೆಂಬ
ತೋರ ಗಧಾಯುಧ ಬೇಕು
ಘೋರಾದ್ವೈತ ಕಕ್ಷವ ಛೇದಿಸುವ ಸುಕು
ಠಾರ ತತ್ವಗಳಿರಬೇಕು
ಸಾರಜ್ಞಜನಪ್ರಭು ಪ್ರಸನ್ವೆಂಕಟಕೃಷ್ಣ
ನಾರಸಿಂಹನ ಸ್ರ‍ಮತಿ ಬೇಕು ೭

೩೧೯
ದಾಟುವೆನೆಂದರೆ ದಾಟು ಹೊಳೆಯು
ಕೈಟಭಾಂತಕ ಭಟರಿಗೆ ಭವಜಲವು ಪ.
ಪೂರ್ವಯಾಮದಿ ಹರಿಗುಣಕರ್ಮನಾಮ
ನಿರ್ವಚನದಿ ಕೀರ್ತನೆ ಮಾಡುವ ಮಹಿಮ
ಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರ
ಸಾರ್ವಭೌಮನ ಸೀತಾರಾಮನ ೧
ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದು
ತುಲಸಿ ಕುಸುಮ ಗಂಧ ಅಗ್ರದ ಜಲದಿ
ನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾ
ವಳಿಯಿಂದ ಧೂಪದೀಪಾರತಿ ಬೆಳಗಿ ೨
ಪರಮಾನು ಯೋಗಾವಾಹನೆ ವಿಸರ್ಜನೆಯು
ಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವು
ವರಗೀತಪಠಣೆ ಭಾಗವತಾ ಶ್ರವಣವು
ತ್ವರಿಯದಿ ಭೂತಕೃಪೆಯಲ್ಲಿ ಮನವು ೩
ಗುರುಪಾದಪದ್ಮದಿ ಬಲಿದು ವಿಶ್ವಾಸ
ಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷ
ಗುರು ಬೆನ್ನಟ್ಟಿದ ಕರಿಗಡ್ಡಹಾಸ ಹಾಸ
ಗುರುಗಳ ಮರೆದು ಕಳೆಯನೊಂದು ಶ್ವಾಸ ೪
ಈ ಪರಿ ಹರಿಪುರ ದಾರಿಯ ತೊಲಗಿ
ಕಾಪುರುಷರು ಭವ ಮಡುವಲಿ ಮುಳುಗಿ
ಆಪತ್ತು ಪಡುವರ ನೋಡಿ ಬೆರಗಾಗಿ
ಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ೫

೨೩೩
ದಾರು ದಾರಿಲ್ಲೆಲೆ ರಂಗ
ದಾರು ದಾರಿಲ್ಲ ಸಂಗ
ನೀರಜಾಕ್ಷ ನೀನೆ ಭವಸಾಗರ
ತಾರಿಸಿ ಕೀರ್ತಿ ಪಡೆಯೊ ದಾತಾರ ಪ.
ಮೀನವಾಮಿಷವುಂಡಂತೆ ಸುಖ
ಮಾನಿನಿಯರ ತಡಿಯು
ಧೇನು ಜರಿಯಾದಂತೆ ಏಳಿಲು
ಸೂನುಗಳ ಬಿರುನುಡಿಯು
ಏನು ಬಳಗಾಮೃಗ ದಗ್ಧ ವಿ
ಪಿನದ ಸ್ನೇಹದೆ ಕಡಿಯು
ಪ್ರಾಣ ಪಯಣಕೆ ಬುತ್ತಿಲ್ಲ ಭವ ಸಂ
ಧಾನ ಹರಿದರೆ ಆರಿಲ್ಲ ಒಡೆಯಾ ೧
ಏಸೋ ದಿನ ನೆಚ್ಚಿದ ಕಾಯ
ಹೇಸಿಕೆ ಘನವಾಯಿತು
ಆಸೆಬಟ್ಟಾರ್ಥ ವೃಥಾ ವ್ರಯ
ಕಾಸು ನಾಶಾಯಿತು
ಲೇಶ ಮಾತ್ರವು ಹಿತ ಹೊಂದದೆ ಮನ
ದ್ವೇಷಿ ತಾನಾಯಿತು ಆ
ಯುಷ್ಯ ಸೂತ್ರವು ಹರಿದರೆ ಭವರೋಗ
ಭೇಷಜರಿಲ್ಲದಂತಾಯಿತು ೨
ಕುನ್ನಿ ಸಂತೆಗೆ ಹೋದಂತೆ ಬಹು
ಜನ್ಮ ನೋವಾದವು
ಮಣ್ಣಿನೊಳು ಹಾಲ ಕೊಡ ಒಡೆದಂತೆ
ನನ್ನ ಧರ್ಮಕರ್ಮವು
ನನ್ನೆಚ್ಚರ ನನಗಿಲ್ಲವು
ನಿನ್ನೆಚ್ಚರವೆಲ್ಲಿಯದು ಪ್ರ
ಸನ್ನವೆಂಕಟ ನಿನ್ನ ಯಾತ್ರೆಗೆ ನೀನೆ
ಬೆನ್ನಾದರೆನಗೆಲ್ಲ ಗೆಲುವು ೩

೫೫
ದಾರೊ ನೀ ಚಿನ್ನ ದಾರೊ
ಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ಪ.
ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆ
ಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮ
ತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕ
ಮಕ್ಕಳಾಟವಿದಲ್ಲೊ ಚೆಲುವ ೧
ಆಗ ಗೋಪಾಲನಂತಿದ್ದೆ ನೀ
ಬೇಗ ಚಟುಲ ರೂಪನಾದೆ ಮ
ತ್ತೀಗೆಮ್ಮ ನಲ್ಲರಂತೈದೆ ಕೋಟಿ
ಪೂಗಣೇರ ಹೋಲುತೈದೆ ನೀ ಹೌದೆ ೨
ಸಪ್ಪಳಿಲ್ಲದೆ ಕೂಡು ಕಾಣೊ ಕೇಳಿ
ಬಪ್ಪರಿನ್ನಾರಾರು ಕಾಣೊ ಪ್ರಾಣ
ಕಪ್ಪವ ನಿನಗಿತ್ತೆ ಇನ್ನು ಕಾಯೊ
ಶ್ರೀಪ್ರಸನ್ವೆಂಕಟ ಜಾಣ ಪ್ರವೀಣ ೩

೩೨೦
ದಾಸರಿಗೆ ದುರಿತದೋರದು
ಶೇಷಾಧೀಶ ಶ್ರೀ ಶ್ರೀನಿವಾಸನ
ದ್ವೇಷಖಳ ಮೋಳಿಗೆಯ ನಿ:
ಶೇಷವೆನಿಸಿ ನಿಜಜನರ ವರ್ಧಿಪನ ಸುರಾಧಿಪನ ಸುಪ್ರತಾಪನ ಪ.
ಅವನಿಯ ಕೊಂಡಿಳಿದವನ ಕೊಂದವನಿ ತಂ
ದ ವನಜಭವ ಸನಕಾದ್ಯರಿಗೊಲಿದನ
ಕುವರ ತನ್ನವರಿದ್ದಾಟವಿಯಲಿದ್ದವನ ಭ
ಯವ ನಿವಾರಿಸಿ ಕುವರಗೆ ವರದನ ಪೊರೆದನ ಮೆರೆದನ೧
ವಿಧಿಪದಕರ್ತರ ಗುರುಸುಖತೀರ್ಥರ
ಹೃದಯ ಮಂಗಳ ಮಾನಸದ ಮರಾಳನ
ಪದಸೋಂಕಿಸಿ ಪಾರಾಕಿಯನು ತ್ವರಿಯದಿ
ಸುದತಿಯ ಮಾಡಿದುದರಿಯಾಘಹಾರಿಯ ಅರಿದಾರಿಯ
ಮುರಾರಿಯ ೨
ಕಿರುಗೆಜ್ಜೆ ನೂಪುರ ವರಜಾಂಬೂನದಾಂ
ಬರ ದಾಮ ಕೌಸ್ತುಭ ಸಿರಿವತ್ಸ ಕೇಯೂರ
ಹಾರ ಕರವಲಯ ಕುಂಡಲ ಮಣಿಮಕುಟಾ
ಭರಣ ಭೂಷಿತ ಘನಗಾತ್ರನಬ್ಜನೇತ್ರನ ಮಾಕಳತ್ರನ ಖಗಪತ್ರನ ೩
ಸಿರಿದೊರೆತಿರೆ ಬೆರೆತಿರದೆ ಆ ಹರಿಶರ
ಣರವೆರೆಸಿ ಗರ್ವಜರಿದು ಶ್ರೀಹರಿಯ
ಗುರು ನಿರೂಪದ ಪರಿ ಅರಿದೆಡರದರಿದು
ಅರಿ ಅರುವರಿಗಂಜದಿಹ ಅಳುಕದಿಹ ದೃಢದಲ್ಲಿಹ ಮುಕ್ತನಾಗಿಹ ೪
ಪಂಚಬೇಧ ವಿವರ ತಿಳಿದು ತತ್ವ ಜಪಿಸಿ
ಪಂಚರಾತ್ರಾಗಮ ತಂತ್ರಸಾರಾರ್ಥಗಳಿಂ
ಮಿಂಚುವ ಭಕ್ತಿ ಪಥದಲಿ ನಿಜಾಯುವ
ಹಿಂಚುಮಾಡುವ ಭವಾರ್ಣವವನೀಸಾಡುವ ಕಡೆಗೋಡುವ
ನಲಿದಾಡುವ ೫
ವೆಂಕಟೇಶನ ನಾಮ ಪಾಡಿಕೊಂಡಾಡುವ
ವೆಂಕಟೇಶನಾಕೃತಿ ನೋಡೊಲೆದಾಡುವ
ವೆಂಕಟೇಶನ ಕಥಾಮೃತ ಕೇಳಿ ಬಾಳುವ
ವೆಂಕಟೇಶನ ಚರಣವೆ ಶರಣೆನುವ ಕಾರಣೆನುವ ಪೂರಣೆನುವ ೬
ಮೊದಲೆ ಸ್ವಾಮಿ ಪುಷ್ಕರಣಿ ಶ್ರೀವರಾಹನ
ಸದಮಲ ಸುವಿಮಾನ ಶ್ರೀನಿವಾಸನ
ಇದೀಗೆ ಭೂವೈಕುಂಠವೆನಿಪಾನತ
ರಾದರ ಪ್ರಸನ್ವೆಂಕಟೇಶನ ಕಾಣುವ ಶಮಮಾಣುವ ಕೊಬ್ಬಿಕುಣಿವ ೭

೩೯೦
ದುಮ್ಮಿಸಾಲೆನ್ನಿರಣ್ಣ ದುಮ್ಮಿಸಾಲೆನ್ನಿರೊ
ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರುರೂಪ
ಕಮ್ಮಗೋಲನಳಿದನೊಡೆಯ ನಮ್ಮ ಗುರು ಬಳಗವೆಂದು ಪ.
ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರ
ಕಟ್ಟಿ ಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದ
ದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿ
ಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ ೧
ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿ ಕಾಯ
ಲೊರಗಿದರನುರುಹಿ ನಿಜರ ಹೊರಗೆ ಮಾಡಿದ
ಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆ ಹುರಿದಾ
ವರಗದಾಧರ ಭೀಮ ಸಾರ್ವಭೌಮನ ೨
ಧರೆಸಮಗ್ರರಾಜಕೆಂದು ಅರಸುಪದವಿಗಳು ಸೊಕ್ಕಿ
ಸರಸವಾಡಿ ಸರಿಯನುಡಿಯೆ ಹರುಷತೀರ್ಥರು
ವಿರಸ ಪೋಕರಳಿದು ಸರ್ವಹರಿ ಸಮರ್ಪಣೇಕಚಿತ್ತ
ವಿರಿಸಾ ಶ್ರೀ ಪ್ರಸನ್ನವೆಂಕಟರಸ ಸಮತೆನಾಡಿದ ೩

೨೩೪
ದುರಿತ ಪರಿಹರಿಸು ರಂಗಾ
ಪರಮ ಪಾತಕರು ಬಂದರು ನೆರೆದು ರಂಗಾ ಪ.
ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರು
ಮುತ್ತಿ ಕೊಲುವಂತೆ ಕಾಣಿಸುತದೆ ದಯಾಳು
ಕರ್ತ ನೀನಲ್ಲದಿನ್ನೊಬ್ಬ್ಬೊಡೆಯ ಕಾಲ
ಮೃತ್ಯು ವಿನಯದೆ ಶೂಲ ನರಪಂಚವದನ ೧
ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆ
ದೀನನಾಗುವುದುಚಿತೆ ಕರುಣಗುಣ ಖಣಿಯೆ
ಮಾನ ನಿನ್ನದು ಅವಮಾನ ನಿನ್ನದು ಪಾಂಡವ
ಮಾನಿನಿಯ ಸಮಯಕೊದಗಿದ ಭಕ್ತ ಬಂಧು ೨
ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇ
ಳಿರುವೆ ತಪ್ಪಿಸಿಕೊಳಲುಬೇಡ ಭುವನೇಶ
ಉರಗಗಿರಿವಾಸ ಪ್ರಸನ್ವೆಂಕಟೇಶ ಸಂ
ಹರಿಸು ಅಪಕಾರಿಗಳ ಸಲಹು ಸಜ್ಜನರ ೩

೯೫
ದೇವ ದೇವೇಶ ವೆಂಕಟೇಶ
ಶ್ರೀವಿಧಾತ ವಂದ್ಯ ಭೂವೈಕುಂಠೇಶ ಪ.
ಸಾಮಜಾರ್ಚಾರಿ ಶಿಕ್ಷ ಸ್ವಾಮಿ
ಸಾಮಗಾನಪ್ರಿಯ ಸತ್ಪಕ್ಷ
ಶ್ರೀ ಮಾವಧೂ ಮನೋರಮ ತ್ರಿಧಾಮ ಶ್ರೀ
ರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ ೧
ರಾಕೇಂದು ರವಿಕೋಟಿತೇಜ ಸ್ವಾಮಿ
ನಾಕಪಾರ್ಚಿತ ಪದಾಂಬೋಜ
ವ್ಯಾಕೀರ್ಣಾನೇಕಾಜಾಂಡಾಂಕಿತಾವ್ಯಾಕೃತ
ಶ್ರೀಕಾರ ಸಾಕಾರ ಲೋಕೇಶ ಪೂಜ್ಯ ೨
ಅನಂತಗುಣ ಪರಿಪೂರ್ಣ ಸ್ವಾಮಿ
ಆನತಜನ ಬುಧಭರ್ಣ
ಧೇನುಗಿರಿನಾಥ ದಾನಿ ಪ್ರಸನ್ವೆಂಕಟ
ಜ್ಞಾನಾನಂದ ನಿತ್ಯತೇ ನಮೋ ಕರುಣಿ ೩

೨೩೫
ದೇವ ನೀ ಗತಿಯಯ್ಯ ಶ್ರೀ ಮಾ
ಧವ ನೀ ಗತಿಯಯ್ಯ ಪ.
ಎಂಬತ್ತುನಾಲ್ಕು ಲಕ್ಷ ಯೋನಿಯ ತಿರುಗಿ
ಅಂಬರ ಪೈಶಾಚಿಯ ತೆರ ಮರುಗಿ
ಅಂಬುಧಿಶಾಯಿ ನಿನ್ನೆಡೆಯರುಹಿ(ರಿವಿ?)ಲ್ಲ
ಇಂಬುಗಾಣಿಸಿನ್ನಾದರೆ ಸಿರಿನಲ್ಲ ೧
ಏನೋ ಸುಕೃತದಿಂದ ಮಾನವನಾಗಿ
ನಾನಾ ವಿಷಯವುಂಡು ಅಂಧಕನಾಗಿ
ಹೀನ ನರ್ಕಕೆ ಸಂಚಕಾರವ ಕೊಟ್ಟೆ
ಜ್ಞಾನವಿಹೀನ ನರಪಶುಗೇನು ಬಟ್ಟೆ ೨
ಬುದ್ಧಿ ಇಲ್ಲದವನಾದರೆ ತನ್ನವನ
ತಿದ್ದಬೇಕಲ್ಲದೆ ಬಿಡುವರೆ ಜಾಣ
ಮದ್ದುಂಡಿಲಿಯ ಪರಿ ಬಳಲುವೆನೆನ್ನ
ಉದ್ಧರಿಸು ಪ್ರಸನ್ನವೆಂಕಟ ರನ್ನ ೩

೨೩೬
ದೇವ ಬಾರೊ ಶ್ರೀನಿವಾಸದೆೀವನೆ ಬಾರೊ ನನ್ನ
ದಾವ ದಾವ ಪರಿಯ ತಪ್ಪ ಕಾವನೆ ಬಾರೊ ಪ.
ಜೀವನ ಪಾವನವ ಮಾಡುವನೆ ಬಾರೊ ನನ್ನ
ಭಾವದ ಬಯಕೆ ಪೂರೈಸುವನೆ ಬಾರೊ ೧
ಧ್ಯಾನಿಸಲೊಮ್ಮ್ಯಾರೆ ದಯದಿ ನೀ ನಿಲ್ಲಬಾರೊ ಅ
ಜ್ಞಾನ ನಾಶ ಮಾಡುವ ಕೃಪಾನಿಧಿ ಬಾರೊ ೨
ಹಡೆದ ತಾಯಿ ತಂದೆ ಗುರು ಒಡೆಯನೆ ಬಾರೊ ಎನ್ನ
ನಡೆ ನುಡಿ ವಿಷಮೆನ್ನದೆ ಕೈ ಪಿಡಿಯಲು ಬಾರೊ ೩
ತೆರೆ ತೆರೆ ಬಪ್ಪಾಸೆಯ ಚರಿಸಲು ಬಾರೊ ಆ
ತುರದ ಕಾಮಾದ್ಯರ ನೀನೊರೆಸಲು ಬಾರೊ ೪
ಕ್ಷುಲ್ಲನುದಾಸಿಸುದುಚಿತಲ್ಲವೊ ಬಾರೊ ಪ್ರಾಣ
ದೊಲ್ಲಭ ಬಿರುದು ನಿನ್ನದಲ್ಲೇನೋ ಬಾರೊ ೫
ಪಾಪಗಳು ಘನ್ನವಾದರೇನಯ್ಯ ಬಾರೊ
ಕೃಪಾಪಾಂಗದಲ್ಲವು ಉಳಿಯಲಾಪವೆ ಬಾರೊ೬
ಶ್ರೀರಮಣ ಎಂದಿಗಾಪ್ತರಾರಿಲ್ಲೊ ಬಾರೊ ಸುಖ
ತೀರಥೇಶ ಪ್ರಸನ್ವೆಂಕಟರಾಯ ಬಾರೊ೭

ಸಾವಿರಕೈಯವನಳಿದು
೯೬
ದೇವಿಯನೆತ್ತಿದನಾರೆಲಮ್ಮಾ ನಮ್ಮ
ದೇವ ಸಿರಿಪತಿ ಕಾಣೆಲಮ್ಮಾ
ದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.
ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟ
ಸಣ್ಣದೊಡ್ಡನಾಹನಾರೆಲಮ್ಮ
ಉನ್ಮತ್ತ ಖಳ ಸೋಮಕನ ವೈರಿ ಹೊಸ ಹೊನ್ನ
ಬಣ್ಣದ ಮಚ್ಛವತಾರಿ ಅಲ್ಲೇನಮ್ಮ ೧
ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನು
ತೋರಿ ಜಾರಿದವನಾರೆಲಮ್ಮ
ಆರಿಗು ಮೀರಿದ ಮಂದರ ಬೆನ್ನಲಿ
ಭಾರಾಂತ ಶ್ರೀಕೂರ್ಮನಲ್ಲೇನಮ್ಮ ೨
ಘರ್ಘರಿಸುತ ಕಾಲಕೆದರಿ ಜಗದಗಲ
ಭೋರ್ಗರೆವುತಲಿಹನಾರೆಲಮ್ಮ
ದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದ
ನಘ್ರ್ಯ ವರಾಹ ದೇವನಲ್ಲೇನಮ್ಮ ೩
ಕೂಗುತ ಕೊಲ್ಲುತ ಕಿಡಿಯನುಗುಳುತ
ಲಗುಬಗೆದವನಾರೆಲಮ್ಮ
ನೀಗಿ ದುಷ್ಟನ ಶರಣಾಗತ ಶಿಶುರಕ್ಷ
ಯೋಗಿ ನರಹರಿ ಅಲ್ಲೇನಮ್ಮ ೪
ಭೂಮಿ ಆಕಾಶಕೆ ಒಬ್ಬನೆ ಹಬ್ಬುತ
ಸೀಮೆಯ ಮುಚ್ಚುವನಾರೆಲಮ್ಮ
ಹೇಮ ಹೋಮದಿ ಮತ್ತ ಬಲಿಯನೊತ್ತ್ಯಾಳಿದ
ಸಾಮದ ವಾಮನನಲ್ಲೇನಮ್ಮ ೫
ಸಾವಿರ ಕೈಯ್ಯವನಳಿದು ಕಡಿದು ತಾನೆ
ಹೇವದಟ್ಟಿವನಾರೆಲಮ್ಮ
ಈ ವಸುಧೆಯ ಭಾರವಿಳುಹಿದ ವೀರ ಭೂ
ದೇವಕುಲದ ರಾಮನಲ್ಲೇನಮ್ಮ ೬
ಕರಡಿ ಕೋಡಗ ಕೊಂಡು ಕಡಲೊಳಗಾಡಿದ
ಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮ
ಸರಕುಮಾಡಿ ರಕ್ಕಸರನೊದ್ದ ಸಮೀರಜ
ವರದ ಸೀತಾರಾಮ ಅಲ್ಲೇನಮ್ಮ ೭
ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲ
ಹೆಂಡಿರೊಳಾಡುವನಾರೆಲಮ್ಮ
ಪಾಂಡವಪಾಲ ರುಕ್ಮಿಣಿ ವಿಜಯನು
ಬಂಡಿಕಾರ ಕೃಷ್ಣನಲ್ಲೇನಮ್ಮ ೮
ಉಡುಗೆಯನುಡದಂತರಾಟದಿ ಕದ(ತಪ?)ವಿದ್ದ
ಮಡದೇರ ಕೆಡಿಸಿದನಾರೆಲಮ್ಮ
ಮೃಡಸುರರುಬ್ಬಸಬಡಿಸುವ ಬೌದ್ಧರ
ಕೆಡಿಪ ಮೋಹನ ಬುದ್ಧನಲ್ಲೇನಮ್ಮ ೯
ವಾಜಿಯನೇರಿ ಠೇವಿಡಿದು ಗಡಬಡಿಸಿ
ಮೂಜಗ ಸುತ್ತುವನಾರೆಲಮ್ಮ
ಮಾಜಿದ ಪುಣ್ಯವನೆತ್ತಿ ಕಲಿಯ ಕೊಂದ
ಸೋಜಿಗದ ಕಲ್ಕಿ ಅಲ್ಲೇನಮ್ಮ ೧೦
ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದ
ರೆದ್ದೋಡಿ ಬಂದವನಾರೆಲಮ್ಮ
ಸಿದ್ಧಪುರುಷ ಪ್ರಸನ್ವೆಂಕಟಪತಿ
ಸಾಧಿಸಿ ಪಾಡಿದಲ್ಲಿದ್ದನಮ್ಮ ೧೧

೩೯೧
ದ್ವಂದ್ವವೆ ವಸಂತದ ಹಬ್ಬ
ದ್ವಂದ್ವವೆ ಇಹಪರದಲ್ಲಿ ಹಬ್ಬ ಪ.
ದ್ವಂದ್ವಾಮೃತ ಕ್ಷೇಮ ಅಭಯ ವಸಂತ
ದ್ವಂದ್ವ ಜೀವೇಶರ ತಿಳಿದವ ಶಾಂತ
ದ್ವಂದ್ವದ ನಡೆನುಡಿ ಬಲ್ಲವ ಸಂತ
ದ್ವಂದ್ವವರಿಯದನ ಗತಿಯೆ ವಸಂತ ೧
ದ್ವಂದ್ವ ಶೀತೋಷ್ಣ ಸಮಾನವ ಕಂಡು
ದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡು
ದ್ವಂದ್ವವ ಮಾನವ ಹಿಡಿದರೆ ಭಂಡು
ದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು ೨
ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆ
ಬಾಲಕರೆಲ್ಲ ನೆರೆವುದೊಂದು ಘಳಿಗೆ
ಹೋಳಿಯನಾಡುವ ಸಂಭ್ರಮದೊಳಗೆ
ಕಾಳಗ ಬೇಡಿರೊ ನಿಮ್ಮ ನಿಮ್ಮೊಳಗೆ ೩
ಅಜ್ಞೈಕ್ಯ ಪ್ರತಿಪದ ಹಿಂದಾದರಿಂದ
ಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರ
ಒಗ್ಗೂಡಿ ಗೆಳೆಯರೊಮ್ಮತದಿಂದ
ಲಗ್ಗೆಕಾರರು ಮುಂದೆ ನಡೆವುದೆ ಚಂದ೪
ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿ
ರಕ್ತಿ ರಂಹಸ ಬ್ರಹ್ಮದ್ಹಾದಿಯ ಐದಿ
ವ್ಯಕ್ತವಾಗುವ ವಸ್ತು ಓದಿಕೆ ಓದಿ
ರಿಕ್ತದ ನುಡಿಗಳು ತಮಸಿನ ಹಾದಿ೫
ದಿನಪತಿ ಅಡಗಿರೆ ಮಲಗದೆ ಎದ್ದು
ಮನೆಯವರನು ಎಚ್ಚರಿಸಬ್ಯಾಡಿ ಸದ್ದು
ನೆನೆವ ವಿಷಯಗೋಡೆ ಏರುತ್ತ ಬಿದ್ದು
ಮನೆ ಮನೋವಾರ್ತೆಯ ಕುರುಳನೆ ಕದ್ದು೬
ಹಾರುವರ ಕೇರಿಯ ಹೊಗಬ್ಯಾಡಿ ಕೇಳಿ
ಬೇರೂರವರ ಬಿಟ್ಟು ಬಿಡಿ ದೂರದಲ್ಲಿ
ದೂರುವರೊಡನಾಟ ದುರ್ದೆಶೆಫಲವು ವಸ್ತು
ದೋರುವ ಮನೆಯೇವೆ ಸರಸ ವೆಗ್ಗಳವು೭
ಧೂಳಿ ನೀರುರಿಗಾಳಿ ಬಯಲೊಳಗಾಡಿ
ಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿ
ಹಾಳು ತುರುಕರ ಕೇರಿಯೊಳು ನಿಷ್ಫಲವು
ಜಾಲಗಾರರ ಕೇರಿ ಹೊಕ್ಕರೆ ಫಲವು ೮
ಹಿಂಚಾದ ಹಿರಿಯರ ಮಾತಲೆ ನಡೆದು
ವಂಚಕ ಮೂವರ ಸಂಗವ ಕಡಿದು
ಮಿಂಚುವ ಮಾನ್ಯರ ಪ್ರೀತಿಯ ಪಡೆದು
ಸಂಚಿತ ಪ್ರಾರಬ್ಧಾಗಾಮಿಯ ಒಡೆದು ೯
ಮುಚ್ಚಿದ ಕದವೆರಡನು ಮುರಿಹೊಯ್ದು
ಇಚ್ಛೆ ಮೂರೆಂಬ ನಾಯಿಗಳ ಜಿಹ್ವೆ ಕೊಯ್ದು
ಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣ
ಸಚ್ಚಿದ ಗೋರಸ ಸೂರ್ಯಾಡಿರಣ್ಣ ೧೦
ಏಕಾಧಿಪತಿಯಾಜ್ಞ ಅಭಯವು ಬೇಕು
ನಾಕು ಝಾವಿನ ರಾತ್ರಿ ನಲವಿರಬೇಕು
ಪೋಕ ಕಳ್ಳಾರ್ವರ ಮೆಟ್ಟ್ಯಾಳಬೇಕು
ಭೂಕಾಂತಗೆ ಸೇವೆಯೊಪ್ಪಿಸಬೇಕು ೧೧
ರಮಣನೊಲ್ಲದ ಆರ್ವರ ಸಂಗವಿಡಿದು
ರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದು
ಅಮಿತ ವೈರಾಗ್ಯಹಗ್ಗದಿ ಕೈಯ ಕಟ್ಟಿ ಶ್ರೀ
ರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ೧೨
ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳು
ಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳು
ಎಲ್ಲೆಲ್ಲಿ ನಿರಯ ಕಮ್ಮರಿ ಮಿಟ್ಟೆಗಳು
ಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು೧೩
ವ್ಯಾಳ್ಯವರಿತು ತತ್ವಸಂಧಿಯ ಒಲಿದು
ಸೂಳಿ ಮದೆಂಟರ ಕೈಸೆರೆವಿಡಿದು
ಕಾಲಾಖ್ಯ ತಳವಾರನಾಳಿಗೆ ಕೊಟ್ಟು
ಮ್ಯಾಳದ ಗೆಳೆಯರು ಸಂತೋಷಪಟ್ಟು೧೪
ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತ
ಡೊಂಬಿಯಿಲ್ಲದೆ ಬಂದ ಬನ್ನವಬಡುತ
ಕುಂಭಿಣಿಸುರ ಕುಲ ಭೂಮಿಗೆ ಬಂದು
ದಂಭ ಮಾಡದಲೆ ಕುರುಳ ಒಯ್ಯಿರೆಂದು ೧೫
ರಾಗ ಮತ್ಸರಗೂಡಿದರ ಕುರುಳನೊಟ್ಟಿ
ಭೂಗಗನ ಹೊಗುವ ಕಾಮವ ಕಟ್ಟಿ
ಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿ
ಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ ೧೬
ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದು
ಲಾಭಕ್ಕೆ ಕುಣಿಯಲು ವೇತ್ರರು ಹೊಯ್ದು
ಶೋಭನ ರಸ ಬೊಬ್ಬೆಯ ಸಾಧು ಹಿಂಡು
ತ್ರಿಭುವನ ಪತಿ ಕಾಮನಯ್ಯನ ದಂಡು೧೭
ಸ್ವರ್ಧುನಿ ಜನಕನ ಗುಣಗಣಕೀರ್ತಿ
ಊಧ್ರ್ವಸ್ವರದಿ ಹಾಡಿ ಹೊಗಳುವ ಅರ್ಥಿ
ನಿರ್ಧೂಮ ಜ್ವಾಲೆಯ ಬೆಳಗಲಿ ಸುತ್ತಿ
ದುರ್ದೇಹಿಗಳ ಕಿವಿಧಾರೆಯ ಕಿತ್ತಿ ೧೮
ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟು
ಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟು
ಕೋವಿದರ ಚಾತುರ್ಯಕೆ ಒಡಂಬಟ್ಟು ಚಿ
ದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು ೧೯
ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂ
ಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದು
ರಂಗು ಮುತ್ತಿನ ಮೂಗುತಿ ಹೆಣ್ಣವಿಡಿದು
ಶೃಂಗಾರ ಚೇಷ್ಟೆಯ ಮಾಡಿರೊ ಜಡಿದು ೨೦
ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿ
ಗೆಳೆಯರು ನೆರೆವುದೊಂದೆ ತಾಣ ನೋಡಿ
ಜಲಜಾಕ್ಷನುದ್ಯಮದಂಗಡಿಯಲ್ಲಿ
ನಲಿವ ಸ್ವಾನಂದದೂಟವ ಬೇಡಿಕೊಳ್ಳಿ ೨೧
ತಿರುತಿರುಗಿ ಬಂದು ದಣಿದು ನೀವಿಂದು
ಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದು
ಥರ ಥರದ್ಹದಿನಾರು ವರ್ಣಗಳಿಂದ
ತರುಣ ತರಣಿಯಂತೆ ಹೊಳೆವುದು ಚಂದ ೨೨
ಆನಂದಮಯ ವಾಸುದೇವನ ಕಂಡು
ಆನಂದಪುರದಿ ಭಕ್ತಿಯ ನೆರೆಗೊಂಡು
ಆನಂದ ತೀರ್ಥಗುರು ಕೃಪೆಯಿಂದ
ಸ್ವಾನಂದದೋಕುಳಿಯಾಡುವ ಚಂದ ೨೩
ಈ ವಿಧ ಅಧ್ಯಾತ್ಮ ಹೋಳಿಯ ಭೇದ
ಭಾವುಕ ಜನರಿಗೆ ಪರಮಾಹ್ಲಾದ
ದೇವ ಋಷಿಕುಲದೈವ ಮುಕುಂದ
ಕಾವನು ಕರುಣಾಬ್ಧಿ ಕೇಳಿ ಗೋವಿಂದ೨೪
ವೇದನ ತಂದ ಹಯಾಸ್ಯನ ಹೋಳಿ
ಭೂಧರ ಧರಿಸಿದಮರ ಕಾರ್ಯ ಕೇಳಿ
ಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರ
ಹ್ಲಾದನಿಷ್ಠೆಗೆ ಹರಿ ಉದಿಸಿದ ಕೇಳಿ ೨೫
ನಾನೆಂಬೊ ದಾನವೇಂದ್ರನ ಮದ ಹೋಳಿ
ಹೀನರಿಗಾಗಿ ಕೊಡಲಿ ಹೊತ್ತ ಕೇಳಿ
ಜಾನಕಿ ತಂದ ದಶಾಸ್ಯನ ಹೋಳಿ
ಮಾನಿನಿಯರಾಳ್ದ ವಿಡಂಬನ ಕೇಳಿ ೨೬
ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿ
ಉನ್ಮತ್ತ ಕಲಿಯನರಸಿ ಕೊಂದ ಕೇಳಿ
ಚಿನ್ಮಯಮೂರ್ತಿ ಭೂಭಾರವ ಹೋಳಿ
ಜನ್ಮಿಸಿಬಹುದೆಲ್ಲ ಮೋಹನ ಕೇಳಿ ೨೭
ಅನಂತದುರಿತರಾಶಿಗಳನ್ನು ಹೋಳಿ
ಆನಂದ ಸುಖವೀವ ನೆನೆದರೆ ಕೇಳಿ
ಅನಂತ ಅನವದ್ಯಗುಣ ಪರಿಪೂರ್ಣ
ಅನಂತಾದ್ಭುತ ಕರ್ಮ ದೀನ ದಯಾರ್ಣ೨೮
ಈ ಪರಿ ವಿಜ್ಞಾನ ವಸಂತದಾಟ
ಚೌಪದಿ ರತ್ನಮಾಲಿಕೆ ಮಾಡಿ ಪಾಠ
ಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣ
ತಾ ಪರಿಪಾಲಿಪ ಪುರುಷವರಿಷ್ಠ ೨೯

೨೩೭
ಷಡ್ವರ್ಗ ಸುಳಾದಿ
ಝಂಪೆತಾಳ
ಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರ
ನೆನವಿನಲಿ ಜನುಮಗಳ ತಂದೀವ ಕಾಮ
ಕನಕಗಿರಿ ಕೈಸಾರ್ದಡಂ ಪರಸು ದೊರೆದಡಂ
ಇನಿತು ತೃಪುತಿಯೈದದೆನ್ನ ಮನೋಕಾಮ
ಜನಪರ ಸಿರಿಬಯಕೆ ಜಾಣೆಯರ ಸಂಗತಿಯ
ಕನಸಿನೊಳಗಾದಡಂ ಬಿಡದಿಹುದು ಕಾಮ
ತನಗಲ್ಲದ್ಹವಣದಿಹ ಕಾಮ ಕಾಮಿನಿ ಭೂತ
ಕೆನಿತಶನ ಸಾಲದಾಯಿತೈ ಪೂರ್ಣಕಾಮ
ಮುನಿನಾರಿಯಳ ಕಲ್ಲಮೈಯನೆತ್ತಿದ ಪಾದ
ವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನ
ಜ್ಞಾನ ಭಕುತಿ ವೈರಾಗ್ಯ ಕಾಮವನೀಯೊ
ದಿನಕರ ಕುಲೋದ್ದಾಮ ಪ್ರಸನ್ವೆಂಕಟ ರಾಮ ೧
ಮಠ್ಯತಾಳ
ಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧ
ಬರಿಯಹಂಕಾರದಿ ಬೆರತಘರಾಶಿಯ
ನೆರಹಿಸಿ ನಿರಯವನುಣಿಸುವ ಕ್ರೋಧ
ಮರುಳನ ದುರುಳನ ಮಾಡುವ ಕ್ರೋಧ
ಗುರುಹಿರಿಯರಿಗಂಜದೆ ಉರುಕೋಪದಲೆದ್ದ ಕಾ
ಳುರಗನ ಪೆಡೆದುಳಿದಾ ಸಿರಿಚರಣವ ಕ್ರೋಧಾಹಿ
ಶಿರದ ಮ್ಯಾಲಿಡು ಗಡ ಗರುಡಾದಿ ಪ್ರಸನ್ವೆಂಕಟ ತಾಂಡವ ಕೃಷ್ಣ೨
ರೂಪಕತಾಳ
ಹೀನ ಧರ್ಮನ ಮಾಡಿ ಸುರಋಷಿ ಪಿತೃ ಋಣ
ವೇನು ಕಳಿಯಲಿಲ್ಲವೆನ್ನ ಲೋಭ
ಜೇನನೊಣನ ವೋಲು ತಾನುಣ್ಣನೊದಗಿಸಿ
ನಾನಾಲಾಭದಲಿ ತುಂಬದು ಲೋಭ ಭಾಂಡ
ದಾನವ ಬೇಡಿಳೆಯಾಜಾಂಡವನೊಡೆದ
ಶ್ರೀನುತಾಂಘ್ರಿಯಲೊದ್ದು ಲೋಭದ ಕೋಶವನು
ನೀನೆ ಸೂರೆಯ ಮಾಡೊ ಪ್ರಸನ್ವೆಂಕಟ ವಾ
ಮನ್ನ ಉದಾರಿ ಶಿಖಾಮಣಿ ಭಾಗ್ರ್ವಾ ೩
ಪಂಚಘಾತ ಮಠ್ಯ
ಅನ್ನಕೆ ಉಬ್ಬಿ ಯೌವನ ರೂಪಕೆ ಕೊಬ್ಬಿ
ಧನ್ನಕೆ ಮೊಬ್ಬೇರಿಸಿತೆನ್ನ ಮದವು
ಎನ್ನ ಸವಿಸುವ ಪರಿವಾರ ಭುಜಬಲೆಂ
ಬುನ್ನತಿಯಿಂದುನ್ಮತ್ತನ ಮಾಳ್ಪ ಮದವು
ದಾನವೇಂದ್ರನ ಮೌಳಿಯನ್ನು ತುಳಿದ ಪದದಿ
ಎನ್ನ ಮದರಾಜನ ಮೆಟ್ಟಿಯಾಳೆಲೆ ದೇವ
ನಿನ್ನ ಧ್ಯಾನವಿರತಿ ಮದದಿಂದ ಕೊಬ್ಬಿಸು ಪ್ರ
ಸನ್ವೆಂಕಟ ಉರುಕ್ರಮ ಧನ್ಯರೊಡೆಯ ೪
ತ್ರಿವಿಡಿತಾಳ
ಉತ್ತಮರ ಅವಗುಣವೆಣಿಸುತ
ಹೊತ್ತು ಯಮಪುರಕೊಯ್ವ ಮತ್ಸರ
ಮತ್ತೆ ಪರಸೌಖ್ಯಕ್ಕೆ ಕುದಿಕುದಿಸಿತು ಮತ್ಸರವು
ಚಿತ್ತಜನ ಶರ ಮತ್ಸರಿಸುತಿರೆ
ಮೊತ್ತ ಗೋಪೇರ ಕುಚದ ಪೀಠದಿ
ಒತ್ತಿ ಸುಖವಿತ್ತ ಪದವೆನ್ನೆದೆಲಿಡು ಪ್ರಸನ್ವೆಂಕಟ ಕೃಷ್ಣ ೫
ಅಟ್ಟತಾಳ
ಇಂದುಮುಖಿಯರ ಕಂಡಂದಗೆಡಿಪ ಮೋಹ
ಕಂದಗಳಾಡಿಸಿ ಕರುಣ ಉಕ್ಕಿಪ ಮೋಹ
ತಂದೆ ತಾಯಿ ಬಂಧುವರ್ಗದ ಮೋಹ
ಮುಂದಣಗತಿಗೆ ಮೂರ್ಛೆಯನಿತ್ತ ಮೋಹ
ಕಂದರ್ಪನ ಗೆದ್ದ ಯೋಗಿ ಜನರ ಹೃದ
ಯಾಂಧಕಾರವ ಗೆದ್ದು ತವಪಾದನಖಪೂರ್ಣ
ಚಂದ್ರ ಚಂದ್ರಿಕೆದೋರಿ ಅಭಿಜ್ಞನ ಮಾಡೆನ್ನ ದಯಾ
ಸಿಂಧು ಪ್ರಸನ್ನವೆಂಕಟ ಮುನಿಜನವಂದ್ಯ ೬
ಏಕತಾಳ
ಎನ್ನ ಕಾಮವೆಂಬ ಗಿರಿಗ್ವಜ್ರಾಂಕಿತ ಪದ
ಎನ್ನ ಕ್ರೋಧವೆಂಬಾಹಿಗೆ ಧ್ವಜದಂಡಾನ್ವಿತ ಪದ
ಎನ್ನ ಮದವೆಂಬ ಗಜಕಂಕುಶಾಂಕಿತ ಪದ
ಎನ್ನ ಮತ್ಸರಾನ್ವಯಕೆ ಗಂಗಾನ್ವಿತ ಪದ
ಎನ್ನ ಲೋಭ ಗೆದ್ದ ಮನೋಳಿಗೆ ಅಬ್ಜಯುತ ಪದ
ಎನ್ನ ಮೋಹಧ್ವಾಂತ ಪೂರ್ಣೇಂದು ನಖದ ಪದ
ಎನ್ನ ಮನೋರಥ ಸಿದ್ಧಿಯನು ಕರೆದೀವ ಪ್ರ
ಸನ್ನವೆಂಕಟನ ದಿವ್ಯಪಾದಪಾಂಕಿತ ಪದ
ಜತೆ
ಇಂತು ಬಾಧಿಪ ಷಡ್ವರ್ಗದಂಬನೆ ಕಿತ್ತು ಸಂತತ ಶ್ರೀಚರಣ ಸ್ಮರಣೆ
ಮುಂತಾದೌಷಧವನಿತ್ತೆನ್ನ ರಕ್ಷಿಸು ಧನ್ವಂತರಿ ಪ್ರಸನ್ನವೆಂಕಟ ನರಹರಿಯೆ

೫೬
ಧನ್ಯ ಧನ್ಯ ನಂದಗೋಕುಲ ಪ.
ಆ ನಂದವ್ರಜದ ಪೂರ್ವಪುಣ್ಯವೇನೊ
ಆ ನಂದನಾ ಗೋಪಿಕಂದನಾ ಕಿಶೋರಾನಂದವೇನೊ
ಆನಂದಮುನಿವರದನಾನಂದವೇನೊ ಅ.ಪ.
ಗೋವರೆಳೆಯಮ್ರ್ಯಾಳ ನಿವಹದಲ್ಲಿ
ನಿಂತು ರಂಗ ಕೋಹುಕ್ಕಕೋಹೊ
ಹವಳಿ ಹಂಡಿ ಕಾಳಿ ಬಾ ಕೋಹುಕ್ಕ ಕೋಹೊ
ಧವಳಿ ಚಿಂಚಿ ಕಪಿಲೆ ಬಾ ಕೋಹುಕ್ಕ ಕೋಹೊ
ಗೌರಿ ಮೈಲಿ ನೀಲಿ ಬಾಯೆಂದು
ವಿವರಿಸಿ ಕರೆದು ತೃಣದ ಕವಳವನ್ನೀಡುವಾ
ಆವಿನ್ನಾವ ಸಂಚಿತೊ ಪಾವನೆಂತೊ ಪುಲ್ಲಿನಾ ೧
ಅಮ್ಮೆಶೋದೆ ಕಟ್ಟಿದ ನಿರ್ಮಲ ಕಲ್ಲಿಯ ಬುತ್ತಿ
ಡೋಹಕ್ಕಡೋಹೋ
ತಮ್ಮ ಬನ್ನಿರುಣ್ಣ ಬನ್ನಿ ಡೋಹಕ್ಕಡೋಹೊ
ನಮ್ಮ ಬುತ್ತಿ ನಿಮ್ಮ ಬುತ್ತಿ ಡೋಹಕ್ಕಡೋಹೊ
ನಮ್ಮ ನಿಮ್ಮುಪ್ಪಿನಕಾಯಿ ಡೋಹಕ್ಕಡೋಹೊ
ಕಮ್ಮಗಿಹುದೆಂದು ಕೊಡುವ ಒಮ್ಮೆ ಸೆಳೆದು ಮೆಲ್ಲುವಾ ಉ
ತ್ತಮ್ಮರಾವ ಜೀವರೊ ಧರ್ಮದೊದಗೆಂತುಟೊ೨
ಮಾಧವ ಮಂಜುಳ ಶಬ್ದದೂದುವ ಸುವರ್ಣವೇಣು
ನಾದಸ್ವಾದ ಲುಬ್ಧರಾದರಾ ಗೋಪಕನ್ಯೇರು
ನಾದಸ್ವಾದ ಲುಬ್ಧವಾದವಾ ಗೋವತ್ಸವು
ನಾದಸ್ವಾದ ಲುಬ್ಧವಾದವಲ್ಲಿ ವೃಕ್ಷವು
ಆದರಿಪ ನಾರಿಯರಗಾಧ ತಪವಲ್ಲವೆ
ಪಾದಪ ಪಶುಗಳೆಲ್ಲ ಆ ದೇವರ್ಕಳಲ್ಲವೆ ೩
ತುರುವ ಮೇಯಿಸಿ ವ್ರಜಕೆ ಮರಳಿಸಿ
ಗೋಪಾಲರೇಯ ಹೈಯಿ ಹೈಯೆಂದು
ತರುಬಿ ತಡೆಯಿರೆನ್ನುತ ಹೈಯಿ ಹೈಯೆಂಬ
ಸ್ವರದಿ ಕೊಳಲನೂದುತ ಹೈಯಿ ಹೈಯೆಂದು
ಭರದಿಚೆಂಡು ಚಿಮ್ಮುತ ಹೈಯಿಹೈಯೆಂದು
ಧರೆಯ ಮೇಲಿಂಬಾಡುವ ಕರದ ದಂಡಿಗೇರುವ
ತರಳರಾವ ಭಾಗ್ಯರೊ ಧರಣಿ ಯಾವ ಮಾನ್ಯಳೊ ೪
ಒಪ್ಪುವ ಗೋಧೂಳಿ ಮೈಯಲಿಪ್ಪ ಪೊಂದೊಡಿಗೆ ಚೆಲ್ವ
ಶಾಮಲಾಮಲಾಂಗ
ಗುಪ್ಪಾರತ್ಯೆತ್ತಿದರು ಶಾಮಲಾಮಲಾಂಗಗೆ
ಕುಪ್ಪಿರಿವ ಕರುಗಳ ಶಾಮಲಾಮಲಾಂಗ
ದರ್ಪಿನಾವ ರಂಬಿಸೆ ಶಾಮಲಾಮಲಾಂಗ
ಕ್ಷಿಪ್ರ ಪಾಲ್ಗರೆದು ನಂದ ಗೋಪಾಂಗನೆಯರೀವ ನ
ಮ್ಮಪ್ಪ ಪ್ರಸನ್ನವೆಂಕಟಾಧಿಪ್ಪನೆಂದು ಕಾಂಬೆನಾ ೫

ಶೇಷಶೀಷರ್ ನೃತ್ಯ
೫೭
ನಂದನ ಕಂದ ಗೋವಿಂದ ಮುಕುಂದ
ಇಂದಿರಜವಂದಿತ ಇಂದುಕುಲೇಂದ್ರ ಪ.
ಗೋರಸಚೋರ ಗೋಪೀರಮಣ ಧೀರ
ಗೋರಜಪೂರಿತ ಚಾರು ಅಲಂಕಾರ
ಗೋರಕ್ಷ ಕ್ರೂರಸಂಹಾರ ಉದಾರ
ವೀರ ಸುಯಮುನಾತೀರ ವಿಹಾರ ೧
ಶೇಷಶೀರ್ಷನೃತ್ಯ ಹಾಸ ವಿಲಾಸ
ವಾಸವ ಮದನಾಶ ವ್ರಜಪೋಷ ನಿರಾಶ
ರಾಸಕ್ರೀಡಾಸುಖಾಧೀಶ ರಮೇಶ
ದಾಸಾಕ್ರೂರಾಶ್ರಯ ಕಂಸವಿನಾಶ ೨
ಪುಣ್ಯಗುಣಾನ್ವಿತ ಸುವರ್ಣವೇಣುಗಾಯನ್ನ
ಚಿನ್ಮಯ ಪನ್ನಗ ನಾಗನಿಲಯ ಪೂರ್ಣ
ಮನ್ನಿಸು ನಿನ್ನ ಭೃತ್ಯನ್ನ ಪ್ರ
ಸನ್ವೆಂಕಟ ಧನ್ಯ ಇವ ನನ್ನವನೆನ್ನೆ ೩

೩೨೧
ನಂಬಿ ಚೊಕ್ಕಟಿಂಬು ಪಡೆಯಿರೈ ಪ.
ಇಂಬು ಪಡೆದು ಹರಿಯ ಚರಣ
ಅಂಬುಜ ಬಂಡುಂಡು ಮಿಕ್ಕ
ಹಂಬಲವ ಉಳಿದು ಭೂರಿ ಸಂಭ್ರ್ರಮಿಸುವವರ ಕೇಳಿ ಅ.ಪ.
ಹರಿವ ಮನವ ಕಟ್ಟಿ ವಿೂರಿ
ಬರುವ ದುರಿತಕಂಜದೆ ಸು
ತ್ತಿರುವ ಮಾಯಾಪಾಶ ಹರಿವ ಹರುವನಾಲಿಸಿ
ಗುರುವಿನಾಜ್ಞಾದಂತೆ ಪುಣ್ಯ
ದುರುಹು ಬಲ್ಲ ಪ್ರೇಕ್ಷಕಲ್ಪ
ತರುವ ಪಿಡಿದು ನಷ್ಟ ಕಳೇವರವು ತನ್ನದಲ್ಲವೆಂದು೧
ಆವಾಗೆ ಸಚ್ಛಾಸ್ತ್ರ ಶ್ರವಣ
ಭಾವಗುಟ್ಟು ಕೇಳಿ ಭಕುತಿ
ಠಾವುಗಂಡು ಹಸಿವು ತೃಷೆಯ ಕಾವ ಘಸಣೆಯ
ಸಾವಿಗ್ಹೊಂದದಂತೆ ಸಾಧು
ಸೇವ್ಯ ಗರುಡಗಮನನಂಘ್ರಿ
ಸೇವೆಗಧ್ಯಕ್ಷಿತರಾಗಿ ನೀವೀಗ ವೈರಾಗ್ಯ ಬಲಿದು ೨
ಕ್ಷುದ್ರ ಭೋಗ ಬಯಸದೆ ದಾ
ರಿದ್ರ ಭೀತನಾಗದೆ ಸ
ಮುದ್ರಭವನನೆಂದು ಶ್ರೀಮುದ್ರಾಭರಣದ
ಭದ್ರ ಭಾಗವತನು ಆ
ಭದ್ರ ಬುದ್ಧಿಯಲ್ಲಿ ಕೂಡಿ
ಚಿದ್ರೂಪ ಪ್ರಸನ್ನವೆಂಕಟಾದ್ರಿ ಭೋಗಶಯನನೆಂದು ೩

೩೨೨
ನಂಬು ನಂಬೆಲೊ ಮನುಜಾ ಹರಿಚರ
ಣಾಂಬುಜಯುಗಳ ಸಹಜ
ನಂಬಿದರೊಲಿವ ದಯಾಂಬುಧಿ ನಿಶ್ಚಯ ಪ.
ತಂದೆಯ ನುಡಿಗೇಳದೆ ತನ್ನ ಕೊಲ್ಲ
ಬಂದ ದುರಿತಕಂಜದೆ
ಇಂದಿರೇಶನೆ ಗತಿಯೆಂದೇಕ ನಿಷ್ಠೆಯ
ಹೊಂದಿದಸುರಜಗೆ ಬಂದ ನೃಹರಿಯ ೧
ಅಣ್ಣನಿಲ್ಲದೆ ರಾಜ್ಯವನೊಲ್ಲೆನೆಂ
ದುಣ್ಣದೆ ಭರತನಿರೆ
ಚಿನ್ಮಯ ಹನುಮನ ಮುಂದಟ್ಟಿ ಬಂದ ರಾ
ಮೆನ್ನಿಸಿ ಭರತಗೆ ತನ್ನಿತ್ತ ರಾಮನ ೨
ದ್ರೌಪದಿಯಳ ವಸನವ ಸಭೆಯೊಳು
ಪಾಪಿ ತಾ ಸೆಳೆಯುತಿರೆ
ಶ್ರೀ ಪ್ರಸನ್ವೆಂಕಟ ಭೂಪತಿ ಸಲಹೆನ್ನೆ
ಆಪತ್ತಿಗಾದ ಯದುಪತಿ ಕೃಷ್ಣನ್ನ ೩

೩೨೩
ನಂಬೊ ನಂಬೊ ಹರಿಪದವ ನಂಬೊ ಪ.
ಮಾತುಳನ ಚಂದನ ಪ್ರೀತಿಲಿ ಕೊಟ್ಟ ಮನ
ಸೋತವಳಂಗ ಪುನೀತ ಮಾಡಿದನಂಘ್ರಿಯ ೧
ಅಜಾಮಿಳ ಸಹಜ ತನುಜನ ಕರೆಯಲಾಗಿ
ನಿಜಭಟರಟ್ಟಿದ ಸುಜನೇಶನಂಘ್ರಿಯ ೨
ನಂಬಿದರವಗುಣ ಕುಂದ ನೋಡದೆ ಹೊರೆವ
ತಂದೆ ಪ್ರಸನ್ನವೆಂಕಟೇಶನಂಘ್ರಿಯ ೩

(ನು. ೩) ಸುಂದೋಪಸಂದ

ನಗಲುಬಹುದು ನಗಲುಬಹುದು
ನಗು ನಗು ರಂಗಯ್ಯ
ಜಗದ ಮಾತು ಅಘದ ಧಾತು
ಬಗೆಯನರಿತು ಮುಗಳುನಗೆಯ ಪ.
ಒರೆದು ಒರೆದು ಭಾರತದರ್ಥ
ಅರಿದು ಅರಿದು ವರಭಾಗವತ
ಪರಿಯ ಪರಿಯ ಪುರಾಣಶ್ರ್ರುತಿಯ
ಪಾರಾಯಣ ಮಾಡಿ ಕುರುಡ ಬಧಿರ
ನರರ ತೆರದಿ ಅರಹು ಮರಹು
ಬೆರೆತು ಬೆರೆತು ತರತಮಿಲ್ಲದೆ
ಹರಿಹರಜರು ಬೇರೆಬೇರಿಲ್ಲೆಂಬ
ಪರಮಪಾತಕರಿರವ ನೋಡಿ ೧
ಮಕ್ಕಳ ಮಡದೇರಕ್ಕರ ಬಡಿಸಿ
ರೊಕ್ಕದ ಮದದಿ ಸೊಕ್ಕಿ ಸಜ್ಜನರ
ಲೆಕ್ಕಿಸದವಗೆ ರಕ್ಕಸರಂತೆ
ನಿಕ್ಕರ ನುಡಿದು ಕಕ್ಕಸದಿಂದ
ಪುಕ್ಕಟೆ ಪುಣ್ಯದ ಲೆಕ್ಕವ ಕಳೆದು
ಘಕ್ಕನೆ ಜವನೋರಿಕ್ಕಿದ ಬಲೆಗೆ
ಸಿಕ್ಕಿ ಬಳಲುತ ನರ್ಕವನುಂಬ
ಮೂರ್ಖರ ತಾಮಸಮುಖ್ಯರ ನೋಡಿ ೨
ಸುಂದೋಪಸುಂದ ಜಲಂಧರ ಕೀಚಕ
ಕಂದರದಶಕ ಸೈಂಧವ ಜಟಾದ್ಯ
ರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿ
ಗುಂದಿ ಲಯವಾದರೆಂದು ಕೇಳಿ
ಇಂದುಮುಖಿಯರ ಚಂದಕೆ ಹುಚ್ಚಿಟ್ಟು
ಕಂದರ್ಪ ವಿಶಿಖವೃಂದ ವಶಾಗಿ ನೂ
ರೊಂದುಕುಲ ಯಮಮಂದಿರ ಹೊಂದಿಪ
ಮಂದರ ಮದೋನ್ಮತ್ತಾಂಧರ ನೋಡಿ ೩
ಸುರರ ಸಂಪದ ಪರಮಪದಕೆ
ಕಾರಣವಾಗಿರೆ ಸುರೇತರರೆಲ್ಲ
ಇರುಳೆ ಹಗಲೆ ಸೈರಿಸಲಾರದೆ
ಒರಗಿಹೋದ ವಿವರ ಕೇಳಿ
ದುರುಳ ಕೌರವರ್ವರ ಪಾಂಡವರ
ಸಿರಿ ತಮ್ಮದೆಂದ್ಹುರಿದು ಹೋಗಿರೆ
ಪರರ ದ್ರವ್ಯಕ್ಕೆ ಮರುಗಿ ಬಯಸಿ
ನರರು ಕೆಡುವ ಪರಿಯ ನೋಡಿ೪
ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್
ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವ
ಮತ ಮಹಿಮೆಯನತಿಕ್ರಮಿಸಿ ಕು
ತ್ಸಿತವೆನಿಸುವ ಪಥದಲಿ
ಪತಿತರಾಗಿ ಸದ್ಗತಿಯ ಕಾಣದ
ಚತುರ ಪರಿಯ ಅಮಿತ ಭಕ್ಷಕರ
ಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟ
ಪತಿಯೆ ನೀ ಮಂದಸ್ಮಿತದಲಿ ೫

೫೮
ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನ
ತುಡುಗ ಬುದ್ಧಿಯನೆಲ್ಲ ಬಿಡಿಸುವೆ ಕಳ್ಳ ನಡೆ ಗಡ ಪ.
ಏನೆಲೆ ಠಕ್ಕ ನಯನವೆ ಇಕ್ಕೆ
ನಿನ್ನ ಮೈ ಹುದುಗಿಸಿದೆ ಬಾಯಿ ಜೊಲ್ಸುರಿಸಿದೆ ೧
ಕಂಬವಾಶ್ರೈಸಿದೆ ನಂಬೆ ವಂಚಿಸಿದೆ
ದಂಭಪರಳಿದೆ ಕುಂಭಿಣಿಜಳ ಕೂಡ್ದೆ ೨
ಕೆನೆ ಮೊಸರು ಕದ್ದೆ ವಿನೀತೆರೊಂಚಿಸಿದೆ
ಕೊನೆಗೋಡಿ ಹೋಗ್ವೆ ಪ್ರಸನ್ನವೆಂಕಟ ಕೃಷ್ಣ ೩

೨೩೮
ನನಗೆ ಮನಕೆ ಬಡಿದಾಟೆಳೆದಾಟ ಶ್ರೀ
ಸನಕಾದಿವಂದ್ಯ ಬಿಡಿಸಿ ಕಾಯೊ ದಾತ ಪ.
ಸಲಿಲ ಸ್ನಾನವ ಮಾಡಿ ಊಧ್ರ್ವ ತಿಲಕವನಿಟ್ಟು
ನಳಿನಾಕ್ಷ ನಿನ್ನಂಘ್ರಿ ಜಪಿಸೆಂದರೆ
ಛಲದಿಂದ ವಿಹಿತವಲ್ಲದ ದಾರಿಗೊಯ್ದೆನ್ನ
ತೊಳಲಿಸಿ ನೆಲೆಗಾಣಿಸದೆ ಛಲವಿಡಿದಿದೆ೧
ಬೇಡಿಕೊಂಡರೆ ಕೇಳದಾಡಿಕೊಂಡರೆ ಕೇಳ
ದೀಡಾಡಿ ‘ಬಿಸುಟೆನ್ನ ದಣಿಸುತಿದೆ
ನೋಡು ನಾನಾಕ್ರೋಶ ಮಾಡಿದರಂಜದು
ಬಾಡಿ ಬಳಲಿದೆನೆನ್ನ ಕರುಣಿಲ್ಲವಿದಕೆ ೨
ಮನಪಶುಕಟ್ಟಲು ಜ್ಞಾನಧಂಗಡವಿಲ್ಲ
ಘನ ವೈರಾಗ್ಯದ ಕಟ್ಟು ದೃಢವಿಲ್ಲವು
ಮಿನುಗುವ ಭಕುತ್ಯೆಂಬ ಎಳೆಹುಲ್ಲಿನಾಸಿಲ್ಲ
ನೀನೆ ವಶಮಾಡಿಕೊ ಪ್ರಸನ್ವೆಂಕಟೇಶ ೩

೩೯೨
ನನ್ನಯ್ಯ ನೀನೊಬ್ಬನೆ ಮಾರುತಿವರದ ಪ.
ಉನ್ಮತ್ತ ತಂದೆ ಕೊಲ್ಲಲು ಒಯ್ಯಲು ತಾಯಿ
ಚಿನ್ನನ್ನುಳಿಸಿಕೊಂಡಳೆ ಬನ್ನವನುಣ್ಣುತ
ನಿನ್ನಿಚ್ಛೆಯೆನ್ನಲು ವಹ್ನಿವಿಷಾನ್ನವ ತಣ್ಣಸ
ವೆನ್ನಿಪೆ ತನ್ನವರಿನ್ನ್ಯಾಕೊ ನರಹರಿಯೆ ೧
ಉತ್ತಾನಪಾದಿ ಮುನಿದು ಅಡವಿಯ ದಾರಿ
ಹತ್ತಿ ನಿರಾಲಂಬದಿ ಉತ್ತಮ ಮಂತ್ರ ನಾರ
ದಿತ್ತರೆ ಭಕ್ತಿಂದ ಅತ್ತಿತ್ತಾಗದ ಚಿತ್ತಕೆ ಒಲಿದೆ
ಹೆತ್ತವರೊತ್ತಾದರೆ ವಾಸುದೇವ ೨
ಅಗ್ರಜಾವಜ್ಞ ಮಾಡಲು ವಿಭೀಷಣ
ಶೀಘ್ರ ಪಾದಾಬ್ಜಕೆರಗಲು ವ್ಯಗ್ರಪ್ಲವ
ಗಗ್ರರು ಉಗ್ರದಿ ನಿಗ್ರಹಿಸೆ ಆಗ್ರಹಿಸಿದೆ ಭ
ಕ್ತಾಗ್ರಣಿ ಹನುಮ ಮತಾಗ್ರದಿ ಪ್ರಸನ್ವೆಂಕಟ೩

ಕೃಷ್ಣವೇಣಿ : ಹೆಳವನಕಟ್ಟೆಗಿರಿಯಮ್ಮ
ಕೃಷ್ಣವೇಣಿ
೧೬೪
ನಮೋ ನಮೋ ಕೃಷ್ಣವೇಣಿ
ನಮೋ ನಮೋ ಕೃಷ್ಣವೇಣಿ ಕಲ್ಯಾಣಿ ಪ.
ಈ ಜನ್ಮದಘವು ನಾನಾ ಜನ್ಮಕೃತದೋಷ
ಆರ್ಜಿತವಾದ ಪಂಚ ಮಹಾಪಾಪವು
ತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆ
ರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ ೧
ವಿಪ್ರಮುನಿ ಸುರನರರು ಕನ್ಯಕ್ಕೆ ಗುರು ಬರಲು
ಕ್ಷಿಪ್ರ ನೆರೆದರು ಉಭಯತೀರವಿಡಿದು
ಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯ
ನೆ ಪ್ರಸನ್ನೀಕರಿಸಿಕೊಳ್ಳುವರಮ್ಮ ೨
ನಿರ್ಮಳಾತ್ಮಕ ಗಂಗೆ ಸಂಗೆ ಗುಣೋತ್ತುಂಗೆ
ಹಿಂಗಿಸು ಭವವ ಪಾವನತರಂಗೆ
ಜಂಗಮ ಜಡಾತ್ಮರನುದ್ಧರಿಸುತಿಹೆ ಸದಾ
ಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ ೩

೨೩೯
ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ಕೋಟಿ
ಬೊಮ್ಮಾಂಡ ನಾಯಕ ಅಚಿಂತ್ಯ ಮಹಿಮನಿಗೆ ಪ.
ಒಂದು ನಾಮೋಚ್ಚರಣೆಯಲಿ ಪರಗತಿ ಪಡೆದ
ರೊಂದು ಗುಣ ಪಿಡಿದು ಕಡೆಗಾಣರ್ಯಾರು
ಮಂದಮತಿಯಲಿ ಭಜಿಸಿ ಮಹಾಪಾಪ ನೂಕುವರು
ಇಂದಿರಾರಾಧ್ಯಪದ ಭಕ್ತವತ್ಸಲನೆ ೧
ನಾರಾಯಣನೆ ನಿನ್ನ ಮಗಳ ಮೈಗಾಳಿಯಲಿ
ಮೂರುಲೋಕದ ಪುಣ್ಯ ಬೆಳೆವುದು
ಸೂರ್ಯನ ಮಗನವರು ನಿನ್ನ ಬಂಟರಿಗಂಜಿ
ಜಾರುವರೆಲೆ ಶ್ರೀ ಜಾನಕಿರಮಣ ರಾಮ ೨
ಶಿಶುಗಳಪರಾಧಕ್ಕೆ ನಯನದಂಜಿಕೆ ಶಿಕ್ಷೆ
ಪಶುವಿರಕಳಿಗೆ ಕಂಠಕಾಷ್ಠವೆ ಶಿಕ್ಷೆ
ವಿಷಮ ಹಿಂಸೆಯು ಸಲ್ಲ ಪ್ರಸನ್ನವೆಂಕಟರಮಣ
ವಿಷಯಾಸೆ ಭವಶಿಕ್ಷೆ ಸಾಕೆನಗೆ ತಂದೆ ೩

(ನು. ೩) ಹದಿನಾಲು ಭುವನ:
೨೪೦
ನರರ ಪಾಡಲು ಬೇಡ ನಾಯಿ ಮನವೆ
ಮುರಹರನ ಭಕುತಿನೆಲೆ ಹೊಂದು ಮನವೆ ಪ.
ದಾರಿದ್ರ್ಯ ವ್ಯಸನದೊಳು ಮುಳುಗಿ ನರಧನಿಕರನು
ಆರಾಧನೆಯ ಮಾಡಿ ಬರಿದೆ ಕೆಡುವೆ
ಘೋರನರಕದ ಭಯಗಳನು ನೋಡೈ ತಿಳಿದು
ನಾರಸಿಂಹನ ನಂಬು ದೃಢದಿ ಮನವೆ ೧
ಬಲ್ಲಿದರ ಬಳಿವಿಡಿದು ಪೋಗಿ ಭ್ರಮೆಗೊಳ್ಳದಿರು
ಭುಲ್ಲೈಸಿ ಬಳಲಿ ಮೃಗ ತೃಷೆಯಂದದಿ
ಫುಲ್ಲಲೋಚನ ಹರಿಯ ದಾಸರನು ಅನುಸರಿಸಿ
ಸೊಲ್ಲು ಸೊಲ್ಲಿಗೆ ಸುಧೆಯ ಸವಿದುಣ್ಣು ಮನವೆ ೨
ಮದದಿ ಮತ್ಸರದಿ ಪ್ರಜ್ವಲಿಸುತಿಹ ದೇಹದಲಿ
ಕುದಿಯದಿರು ತ್ರಿವಿಧ ತಾಪದಲಿ ಉಕ್ಕಿ
ಹದಿನಾಲ್ಕು ಭುವನದೊಡೆಯನ ನಂಬಿದರೆ ನಿನಗೆ
ಪದವಿತ್ತು ಪೊರೆಯನೆ ಪೇಳು ಮನವೆ ೩
ಮಂದಮತಿಯಾಗಿ ಬಹುವಿಷಯ ಭ್ರಾಂತಿಯಲಿ ಮ
ದಾಂಧರನೋಲೈಸಿ ಕೃಶವಾದರೆ
ಮುಂದುಗಾಣದೆ ಖಳರು ನೋಯಿಸಿ ನುಡಿದರೆ
ಕಂದಿ ಕುಂದಿ ಬಳಲುವೆಯಲಾ ಮರುಳು ಮನವೆ ೪
ಮುನ್ನ ಸಂಚಿತ ಸುಕೃತವೆಂತುಟೊ ತಂದೆ ಪ್ರ
ಸನ್ನವೆಂಕಟಪತಿಯ ಒಲುಮ್ಯಾಯಿತು
ಇನ್ನಾದರೆಚ್ಚರಿತು ವಿವಿಧ ಭಕುತಿಯ ಗಳಿಸಿ
ಧನ್ಯ ನೀನೆನಿಸಿ ಸಾರ್ಥಕವಾಗು ಮನವೆ ೫

ನಾರದರ ಮುಖದಿಂದ ನರಕಸ್ಥರೆಬ್ಬಿಸಿದೆ
೯೭
ನಾರಾಯಣ ಪಂಜರ
ನಾರಾಯಣಾಯ ನಮೊ ನಾರಾಯಣಾಯ ನಮೊ
ನಾರಾಯಣಾಯ ನಮೊ ನಾರಾಯಣ
ನಾರದರ ಮುಖದಿಂದ ನರಕಸ್ಥರೆಬ್ಬಿಸಿದೆ
ನಾರಾಯಣಾಯ ನಮೊ ನಾರಾಯಣ ಪ.
ಮತ್ತ ಕರಿಯವಸಾನಕಂಜಿ ಹರಿಯೆ ನೀ ಕಾಯ್ದೆ *
ಭಕ್ತ ಪ್ರಹ್ಲಾದನೇಕಾಂಗ ನಿಷ್ಠೆಗೆ ಒಲಿದೆ ೧
ಪೃಥುವಿಗಳ್ಳನನಿರಿದು ಸತಿಯನುದ್ಧರಿಸಿದೆ
ಪೃಥು ಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ ೨
ಶೂಲಿಯನು ಬೆಂಬತ್ತಿ ಸುಡುವೆನೆಂಬನ ಸುಟ್ಟೆ
ಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ ೩
ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆ
ಮುಖದಿ ಶ್ರುತಿ ಪಿಡಿತಂದು ವಾರಿಜಾಸನಗಿತ್ತೆ ೪
ಪುರುಹೂತಗಖಿಳ ಪರಮಾರ್ಥವನು ಅರುಹಿದೆ
ಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತ್ತ್ತೆ ೫
ಮಹಾಪಾಪನಿರತ ಅಜಾಮಿಳನಿಷ್ಟ ಕರಿಸಿದೆ
ಮಹಿದಾಸನಾಗಿ ತಾಯಿಗೆ ತತ್ವವನು ಪೇಳ್ದೆ ೬
ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರುಣಾನಿಧಿ
ಮುನಿವೆಂಗಳರೆಯಾಗೆ ಪದಸೋಂಕಿಸ್ಯೆತ್ತಿದೆಯೊ ೭
ಮಖವ ರಕ್ಷಿಸಿ ರಾಜಋಷಿಗಭೀಷ್ಟೆಯನಿತ್ತೆ
ಮಕರ ಧ್ವಜಾರಿ ಧನು ಮುರಿದವನಿಜೇಶ ೮
ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆ
ಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ ೯
ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆ
ಶರದಿ ರಾವಣನರಿದು ಸುರರ ಸಂಕಟ ಹರಿದೆ ೧೦
ಅನುಜನಗ್ನಿಗೆ ಧುಮುಕಲವಧಿ ಮೀರದೆ ಪೊರೆದೆ
ಅನಿಮಿಷರ ನಿಕರಕತಿ ಆಹ್ಲಾದ ಬೆಳೆಯಿಸಿದೆ ೧೧
ಉರಿನುಂಗಿ ಗಿರಿನೆಗಹಿ ವ್ರಜವ ಪಾಲನೆ ಮಾಡ್ಡೆ
ಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ ೧೨
ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆ
ಕ್ರತು ಭೋಕ್ರ‍ತ ಕ್ರತುಗಾತ್ರ ಕ್ರತುಪಾಲ ಕ್ರತುಶೀಲ ೧೩
ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗ
ಗೋಪೀ ಜನಜಾರ ನವನೀತ ದಧಿಚೋರ ೧೪
ವಂಶಗಾಯನ ಪ್ರಿಯ ವಿಧುಕುಲೋದ್ಭವ ಕೃಷ್ಣ
ವಂಶವರ್ಧಕ ಸುಜನ ವಂಶಮರ್ದಕ ಕುಜನ ೧೫
ಅಕ್ರೂರವಂದ್ಯ ಕಂಸಾರಿ ಕುಬ್ಜಾರಮಣ
ಆಕ್ರಂದಿಸಿದ ತಂದೆ ತಾಯಿಯರ ಭಯವಳಿದೆ ೧೬
ಅದಿತಿ ಕುಂಡಲದಾತ ಭಗದತ್ತವರದನೆ
ಅಧಿಪತಿಗಳಧಿಪತಿಯೆ ಭೈಷ್ಮಿ ಸತ್ಯಾರಮಣ ೧೭
ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯ
ಶಂಬರಾರಿಯ ಜನಕ ಯಜ್ಞಪೂಜಾಗ್ರಣಿಯೆ ೧೮
ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆ
ಪೌಂಡ್ರಕ ಶೃಗಾಲ ಕೌರವ ಭೂಮಿ ಭಾರಹರ ೧೯
ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊ
ಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ ೨೦
ಗರುಡ ಗಂಧರ್ವ ಕಿನ್ನರ ಗೀತ ಸಂಪ್ರೀತ
ಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ ೨೧
ಶಂಖ ಚಕ್ರ ಗದಾಬ್ಜ ಶ್ರೀವತ್ಸ ಶೋಭಿತನೆ
ಸಂಖ್ಯೆರಹಿತಾಭರಣ ಭೂಷಣಾವ್ಯಾಕೃತನೆ ೨೨
ಮೀನ ಕಶ್ಯಪ ಪೋತ್ರಿ ನೃಹರಿ ವಾಮನ ಭಾರ್ಗ್ವ
ಮಾನವಪ ಕೃಷ್ಣ ಬುದ್ಧ ಕಲ್ಕಿ ಕಪಿಲಾತ್ರೇಯ ೨೩
ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತ
ಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ ೨೪
ಷಟ್ಕೋಟಿ ತೀರ್ಥಯುತಚರಣ ಶ್ರೀಭೂರಮಣ
ಷಟ್ಕಮಲನಿಲಯ ಚಿನ್ಮಯ ಚಿದ್ಗುಣಾರ್ಣವನೆ ೨೫
ಭಕ್ತಾಭಿಮಾನಿ ಭವದೂರ ಭಕ್ತರ ಪ್ರಭುವೆ
ಭಕ್ತವತ್ಸಲ ಕೃಪಾಂಬುಧಿ ಪರಾತ್ಪರ ಕೃಷ್ಣ ೨೬
ವಸುಧೆ ವೈಕುಂಠ ಮಂದಿರವಾಸ ಶ್ರೀನಿವಾಸ
ವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ ೨೭
ಆದಿನಾಥಪ್ರಮೇಯಾದಿ ಪುರುಷೋತ್ತಮನೆ
ಆದಿಮಧ್ಯಾಂತ ರಹಿತಾದ್ಯಮೂರುತಿ ವಿಷ್ಣು ೨೮
ಬದುಕಿಪ್ಯಾದರೆ ನಿನ್ನ ಹೊಗಳಿಕೆಲಿ ಬದುಕಿಸೈ
ಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ ೨೯
ಕಿವಿಯಲ್ಲಿ ಮುಖದಲ್ಲಿ ನಾಮಾಮೃತವ ತುಂಬು
ಕವಲಾಗದೆ ಮನೋಳಿ ಮಿಗೆ ಪದಾಬ್ಜವ ತೋರು ೩೦
ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆ
ಭವ ವಿರಿಂಚ್ಯಾದಿ ಕರಿಗಭಯದನೆ ನೀ ಸಲಹು ೩೧
ನೀ ತಾಯಿ ನೀ ತಂದೆ ನೀ ಬಂಧು ನೀ ಬಳಗ
ನೀತಿಗಳನರಿಯೆ ನಿನ್ನಯ ನಾಮವೆ ಗತಿಯು ೩೨
ತನು ನೆಚ್ಚಿಕಿಲ್ಲ ಚಿತ್ತದ ಗತಿಯು ನೀಟಿಲ್ಲ
ತನಯ ತರುಣಿ ಕೊನೆಯ ಸಂಗತಿಗೆ ಆರಿಲ್ಲ ೩೩
ದೋಷಗಳನರಸದೆನ್ನನು ಸಾಕು ಸಾಕಯ್ಯ
ದಾಸಪಾಲಕ ದೇವ ಡಿಂಗರರ ಸಂಜೀವ ೩೪
ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿ
ನಿನ್ನ ಬಿಂಬವನೆಂದು ಕಂಡು ಕೊಂಡಾಡುವೆನೊ ೩೫
ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿ
ನಿನ್ನವ ನಾ ನಿನ್ನವರ ಕೈಲಿ ಕೊಡು ಗಡಗಡ ೩೬
ವಾರಿಯಲಿ ಸ್ಥಳದಲ್ಲಿ ಅಡವಿಲೆಲ್ಲೆಲ್ಲಿ ಕಾಯೊ
ವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ ೩೭
ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲ
ಸತ್ಕರ್ಮಗಳಿಗೆ ಬಹಿಷ್ರ‍ಕತನಾಗಿ ಬಾಳುತಿಹೆ ೩೮
ಒಂದು ಜಾವದ ತಪ್ಪನೆಂದೆಂದಿಗುಣಲಾರೆ
ವಂದಿಸುವೆ ಸಾಷ್ಟಾಂಗ ತ್ರಾಹಿ ತ್ರಾಹಿ ಪಾಹಿ ತ್ರಾಹಿ೩೯
ಮಧ್ವೇಶ ಮಧ್ವಪ್ರಿಯ ಮಧ್ವಮತ ಪ್ರತಿಪಾಲ
ಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜ ಹರಿ ೪೦
ಏನರಿಯೆನೇನರಿಯೆ ನೀನೆ ನೀಗೆಲೆಲೆ
ಎನ್ನಘವ್ರಜ ಪ್ರಸನ್ನವೆಂಕಟ ಕೃಷ್ಣ ೪೧

೫೯
ನಿದ್ರೆಯ ಬಿಟ್ಟೇಳಿ ದಧಿ ಮಥಿಸುವೇಳಿ ಬಲ
ಭದ್ರ ಬಾಲಕೃಷ್ಣರುಲುಹು ಕೇಳಬರುತಿದೆ ಗಡಾ ಪ.
ಗೊಲ್ಲರೆಳೆಯರ ಕೂಡಿ ಗೋಪಿಯ ಕುಮಾರರೀಗೆ
ಚೆಲ್ಲಿಯಾಡಿ ಸೂರೆ ಮಾಡುತಾರೆ ಮೊಸರ
ಚೆಲ್ಲೆಗಂಗಳೆಯರೊಳು ಸರಸವಾಡುತಲಿಹರೆ
ಮೆಲ್ಲಗೆ ಸಪ್ಪಳಿಲ್ಲದೆ ಮನೆಯ ಪೊಗುವರಮ್ಮ ೧
ಕೇರಿ ಕೇರಿಯೊಳು ಹುಯ್ಯಲಿಡುತ ಬಂದರದಕೊ
ಚೀರುತೈದಾರೆ ಬೆನ್ನಟ್ಟಿ ನಾರಿಯರಕೊ
ಆರಿಗೆ ವಶವಾಗರು ದೂರುತಾರೆ ಬಾಲೆಯರು
ಧೀರ ಚೋರರಲ್ಲುದಾರ ಗೋರಸ ಉಣ್ಣುತಾರವ್ವ ೨
ಪೊಸಬೆಣ್ಣೆಯ ಕಂಡರೆ ಬಿಡರು ನಮ್ಮ ದೇವರ
ಮೀಸಲಂಜಿಕೆಯಿಲ್ಲ ದುರುಳ ಮಕ್ಕಳಿಗೆ
ಶಿಶುಗಳಟ್ಟುಳಿಯಾಗದ ಮುನ್ನೆಚ್ಚರವಮ್ಮ
ಪ್ರಸನ್ನವೆಂಕಟಕೃಷ್ಣ ಬರುವ ನೋಡಿರಮ್ಮ ೩

೬೦
ನಿನಗೆ ನಾ ಬಯ್ಯಲಿಲ್ಲೊ ಕೃಷ್ಣಯ್ಯ
ಅಣುಗರು ಹುಯ್ಯಲಿಡುವರನು ಬಯ್ದೆ ಪ.
ಮರುಳು ಮಗನೆ ನಿನಗೆ ಗೋಗಾಯ್ವ
ದುರುಳರ ಸಂಗ ಸೊಬಗೆ
ತರಳ ನಿನಗೆ ಕಳ್ಳ ಹರಳಿಗನೆಂದರೆ
ಬೆರಳಿಟ್ಟೆ ಕಿವಿಯೊಳಗೆ ಹರಿಹರಿ ೧
ಠವಳಿಕಾರರು ನಾರೇರು ನಿನ್ನೊಳು ಕಂದ
ಹವ್ವಳಿಸುತಿಹ ಜಾರೇರು
ಗೋವಳರಾಯನೆ ನಿನಗವರ ಸಂಗತಿ ಹೀನ
ಪವಳ ಚೆಂದುಟಿಯ ಕೂಸೆ ಹರಿಹರಿ ೨
ಹುಸಿನುಡಿದರು ತಾರೊ ನನ್ನ ಕಂದ
ಕೃಶನಾದೆ ಮುದ್ದು ತಾರೊ
ನಸುನಗೆಯಲಿ ಮುನಿಯದೆ ಮನೆಯೊಳಗಿರೊ
ಪ್ರಸನ್ವೆಂಕಟ ಕೃಷ್ಣಯ್ಯ ಹರಿಹರಿ ೩

೬೧
ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮ
ಚಿನ್ನನೆಂದಾಡಿಸಮ್ಮ
ಬಣ್ಣದ ಬಾಲೇರ ಭೋಗಿಪ ಚದುರತೆ
ಸಣ್ಣವರ ಸರಸೇನಮ್ಮ ಪ.
ತಾಳಬೇಕೆಷ್ಟೆಂದು ಗಾಡಿಕಾರನ ಮಾತ
ಹೇಳಲಂಜುವೆವಮ್ಮ ನ
ಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆ
ಹಾಳುಮಾಡಿ ಹೋದನೆ ೧
ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆ
ದಟ್ಟಿಸಿ ಕೊಲುವೆವಮ್ಮ ಈ
ದೃಷ್ಟಿ ಮಾಯದ ಜಾಲ ನೋಡೆ ನಂದನರಾಣಿ
ಸೃಷ್ಟೀಶರಿಗೆ ತೀರದು ೨
ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿ
ನಿನ್ನೆಡೆಗೆ ತರುತಿದ್ದೆವೆ
ಕಣ್ಣಿಯ ಕೊರಳಿನ ಕರುವೆಂದು ಜನವಾಡೆ
ಖಿನ್ನರಾಗಿ ಹೋದೆವೆ ೩
ಆವಾವ ಕೇರೀಲಿ ಜಾರ ಚೋರನ ಮಾತು
ಆವಾವ ಮನೆಗಳಲ್ಲಿ
ಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವ
ಜಾವಕಂಜಿಸಿಕೊಂಬನೆ ೪
ನಾವು ಮಾಡಿದ ಸುಕೃತವೆಂತೊ ಗೋಪಾಲರೇಯ
ಭಾವಕೆ ಮೆಚ್ಚಿದನೆ
ದೇವರ ದೇವ ಪ್ರಸನ್ವೆಂಕಟೇಶ
ಜೀವಕೆ ಹೊಣೆಯಾದನೆ ೫

ನಿಜರಾಣಿಗಂಘ್ರಿನಖನಿಜವು
೯೮
ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ ವರದ
ಚಿನ್ಮಯ ಗರುಡಗಿರಿಯ ಮಾನ್ಯ ತಿಮ್ಮ್ಮಯ್ಯ ಪ.
ನಿಜರಾಣಿಗಂಘ್ರಿನಖನಿಜವು ತಿಳಿಯದ ಮಹಿಮೆ
ವ್ರಜದಿ ವದನದಿ ತಾಯ್ಗೆ ತ್ರಿಜಗ ತೋರಿದ ಮಹಿಮೆ
ಅಜ ಫಣಿಗಳುಗ್ಘಡಿಪ ಮಹಿಮೆ ಮಂದ
ಅಜಮಿಳ ಬೆದರ್ಯೊದರೆ ಭಜಕನಾದ ಮಹಿಮೆ ೧
ನಿಲ್ಲದಾ ಮುನಿಮನದಿ ಚೆಲ್ವ ಚರಣದ ಮಹಿಮೆ
ಬಲ್ವಿಂದ ಉಂಗುಟದಿ ತಳ್ವೆಂಗದ ಮಹಿಮೆ
ದುರ್ಲಭ ಮಮರಿಗೆ ನೋಟ ಮಹಿಮೆ ಆ
ಗೊಲ್ವೆಂಗಳೇರ ನೋಡಿ ಭುಲ್ಲೈಪ ಮಹಿಮೆ ೨
ವೈಕುಂಠ ಮಂದಿರದಿ ಮುಕುತರೊಂದಿತ ಮಹಿಮೆ
ಗೋಕುಲದಿ ಗೊಲ್ಲರೊಳು ಆಕಳ ಕಾಯುವ ಮಹಿಮೆ ಅ
ನೇಕಜಾಂಡದಿ ಪೂರ್ಣ ಮಹಿಮೆ ಪ್ರಸನ್ವೆಂಕಟಾದ್ರಿಯ ಮೇಲೆ ಏಕೈಕ ಮಹಿಮೆ ೩

(ನು. ೩) ನಾಗಹರಸಖ
೩೯೩
ನಿನ್ನ ಮಹಿಮೆಯನಾರು ಬಲ್ಲರು
ಚಿನ್ಮಯಾತ್ಮಕನಂತರೂಪನೆ
ಮುನ್ನೆ ಕಮಲಜ ನಿನ್ನ ನಾಭಿಯೊಳುನ್ನತೋನ್ನತದಿ
ಘನ್ನ ತಪವಂಗೈದು ಕಾಣನು
ಇನ್ನು ಶ್ರುತಿಸ್ರ‍ಮತಿ ಅರಸಿ ಅರಿಯವು
ಪನ್ನಗೇಂದ್ರನು ಪೊಗಳಲರಿಯ ಪ್ರಸನ್ವೆಂಕಟನೆ ೧
ಹರಿಯೆ ತ್ರಿದಶರ ದೊರೆಯೆ ಭಕುತರ
ಸಿರಿಯೆ ದಿತಿಜರರಿಯೆ ಅನವರತ
ಮರೆಯದಿಹ ಅಜಹರಯತೀಶ್ವರರರಿಯರಿನ್ನುಳಿದ
ಇರವು ಮನುಜ ನಾನರಿಯಲಾಪೆನೆ
ಪೊರೆಯೊ ಬಿಡದೆ ಪ್ರಸನ್ವೆಂಕಟ
ಗಿರಿಯರಸ ಜಗದೆರೆಯ ಸುರವರವರಿಯ ಮಾಸಹನೆ೨
ನಾಗರಿಪುಗಮನಾಗಭೃತ ಶುಭ
ನಾಗಪಾಕ್ಷಘನಾಗಮನಿಗಮ
ನಾಗಪತಿ ವದನೈಕಸ್ತುತ ಸುಗುಣ ಗುಣಾರ್ಣವನೆ
ನಾಗಹರಸಖ ನಾಗಘನಮಣಿ
ನಾಗಗ್ರಸಿತಭಾ ನಾಗದ್ವಿಟಮುಖ
ನಾಗಧರನುತ ನಾಗಮದಹ ಪ್ರಸನ್ವೆಂಕಟೇಶ೩

೨೪೧
ನಿನ್ನರಮನೆ ಕಾಯ್ವ ಪಶುದೇಹಧಾರಿಯ ಮಾಡು ಕಂಡ್ಯ ಕೃಷ್ಣ
ನಿನ್ನವನಲ್ಲದ ಮಾನವ ಜನುಮೆಂದು ಬ್ಯಾಡ ಕಂಡ್ಯ ಪ.
ಅಚ್ಯುತ ಚಿತ್‍ಸ್ವರೂಪೋಚ್ಚಾರಿಪ ಗಿಣಿ ಮಾಡು ಕಂಡ್ಯ ಕೃಷ್ಣ
ನಿಚ್ಚಾರಿ ನಿಶಾಚರಹರನೆಂಬ ಜಾಣ್ವಕ್ಕಿ ಮಾಡು ಕಂಡ್ಯ ೧
ಅಹೋ ಮಾಉಮೇಶವಿಧಿಪನೆಂಬ ನವಿಲು ಮಾಡು
ಕಂಡ್ಯ ಕೃಷ್ಣ
ಕುಹಕ ಕುವ್ರತ ವೈರಿ ಅವರಿಗೆಂಬ ಪಿಕನ ಮಾಡು ಕಂಡ್ಯ ೨
ಹರಿಯವಯವಗಳೆಂಬ ಪುಷ್ಪದಿ ಚರಿಪಾಳಿಯ ಮಾಡು
ಕಂಡ್ಯ ಕೃಷ್ಣ
ಪರಮ ಮುಕ್ತಾಹಾರದ ಪರಮಹಂಸನ ಮಾಡು ಕಂಡ್ಯ ೩
ಭುಲ್ಲಿಪ ವೈಕುಂಠ ಸಿರಿಯ ನಿಟ್ಟಿಪ ಹುಲ್ಲೆ ಮಾಡು ಕಂಡ್ಯ ಕೃಷ್ಣ
ಎಲ್ಲ ಪ್ರಕಾರದ ಸಾರಿ ಕೂಗುವ ನರಿಯ ಮಾಡು ಕಂಡ್ಯ ೪
ಸ್ವರೂಪ ಬಿಂಬವ ನೋಡಿ ನರ್ತಿಪ ಕುದುರೆಯ ಮಾಡು
ಕಂಡ್ಯ ಕೃಷ್ಣ
ವರಮುಕ್ತರರಮನೆಭಾರ ಹೊರುವ ಗೂಳಿ ಮಾಡು ಕಂಡ್ಯ ೫
ನವೀನ ಮುಕ್ತರಿಗೊದಗುವ ಬಾಗಿಲ ಕುನ್ನಿ ಮಾಡು ಕಂಡ್ಯ ಕೃಷ್ಣ
ಗೋವಿಂದ ಗೋವಿಂದೆಂದು ಬೀದಿಲೊದರುವ ಕತ್ತೆ
ಮಾಡು ಕಂಡ್ಯ ೬
ಹರಿ ನಿರ್ಮಾಲ್ಯ ಕಸ್ತೂರಿ ಕರ್ದಮದ ಪತ್ರಿ ಮಾಡು ಕಂಡ್ಯ ಕೃಷ್ಣ
ಸ್ವರ್ಗಾಮೃತ ತಟವಾಪಿಯ ಮೀನವ ಮಾಡು ಕಂಡ್ಯ ೭
ಬಾಡಿ ಕೆಡದ ಪುಷ್ಪಲತೆ ತರುಗುಲ್ಮವ ಮಾಡು ಕಂಡ್ಯ ಕೃಷ್ಣ
ನೋಡಿ ಸ್ವಾನಂದದಿ ಜಿಗಿದಾಡುವ ಕಪಿಯ ಮಾಡು ಕಂಡ್ಯ ೮
ನಾಕಕೈವರ ಸಂಗತಿ ಬಿಟ್ಟಗಲದಂತೆ ಮಾಡು ಕಂಡ್ಯ ಕೃಷ್ಣ
ಆಕಾಂಕ್ಷವಿಲ್ಲದುಗ್ಗಡಿಪ ಭಟನನ್ನೆ ಮಾಡು ಕಂಡ್ಯ ೯
ಮಣಿಮಯ ಭಿತ್ತಿ ಸೋಪಾನ ವಿತಾನವ ಮಾಡು ಕಂಡ್ಯ ಕೃಷ್ಣ
ತೃಣ ಮುಕ್ತಾದವರೊಳಗೊಂದಾರೆ ಜಾತಿಯ ಮಾಡು ಕಂಡ್ಯ ೧೦
ಜ್ಞಾನಾನಂದಗಳ ಯೋಗ್ಯತೆ ನೋಡಿ ಕೂಡುವಂತೆ ಮಾಡು
ಕಂಡ್ಯ ನೀ
ದಾನಕ್ಕೆ ಮೊಗದೋರಿ ಕೈವಲ್ಯ ಪುರಾಗಾರ ಮಾಡು ಕಂಡ್ಯ ೧೧
ಈ ಪರಿ ಬಿನ್ನಹವಾಲಿಸಿ ಭವದೂರ ಮಾಡು ಕಂಡ್ಯ ಕೃಷ್ಣ
ಶ್ರೀ ಪ್ರಸನ್ವೆಂಕಟಪತಿ ಬಿಂಬಾತ್ಮಕ ಕೃಪೆ ಮಾಡು ಕಂಡ್ಯ ೧೨

೨೪೨
ನಿನ್ನವ ನಾನಲ್ಲೇನೊ ರಂಗ ನಿರ್ಜರೋತ್ತುಂಗ ಪ.
ಹುಚ್ಚ ಮಗನ ತಾಯಿತಂದೆ ಹಚ್ಚ ಬಲ್ಲರೆ ಸಾಕದೆ
ನಿಚ್ಚ ನಿನ್ನ ನಾಮ ಕಾಯೋ ನಿಶ್ಚಯಬುದ್ಧಿ ನೀಡೀಗೆ ೧
ಹಣವಳ್ಹೇವಲ್ಲದಿರೆ ಹೀನೈಸಿ ಚೆಲ್ಲುವರೆ ಜನಿತ ದು
ರ್ಗುಣರಾಶಿ ಜನಕ ನೀ ನಿವಾರಿಸೊ ೨
ಶರಣು ಹೊಕ್ಕವರವಸರಕೊದಗುವ ದೇವ
ಸೇರಿದೆ ಶ್ರೀ ಪಾದಾಬ್ಜವ ಸಿರಿ ಪ್ರಸನ್ವೆಂಕಟದೇವ೩

೬೨
ನಿರುತ ನಿನ್ನಯ ಲೀಲೆಯನೆ ಹಾರೈಸುವೆ ಮುದ್ದುತಾರೊ ಕಂದ
ಕಿರುಗುರುಳಿನ ಚೆಲ್ವ ಬಾಲಕರನ್ನನೆ ಮುದ್ದು ತಾರೊ ಪ.
ನಿದ್ರೆ ಪೂರಿತವಿಲ್ಲದೆ ನಡೆಯುತ ಬಂದು ಮುದ್ದು ತಾರೊ ಕಂದ
ಮೆದ್ದು ಕಾಯಿ ಕಳಲೆ ಕಿರುನಗೆ ಜೊಲ್ವಾಯ ಮುದ್ದು ತಾರೊ ೧
ಧುಡುಮೆಂಬ ಕಡೆವ ದನಿಗೆ ದುಡು ದುಡು ಬಂದು
ಮುದ್ದು ತಾರೊ ಕಂದ
ಉಡುಗೆ ಜಗ್ಗುತ ತೊದಲ್ನುಡಿದು ಮೊಗವ ನೋಡಿ ಮುದ್ದು ತಾರೊ ೨
ನವನೀತ ನೀಡಲು ಆಯೆಂಬ ಪುಟ್ಬಾಯ ಮುದ್ದು ತಾರೊ ಕಂದ
ಹವಣಾದ ಸಣ್ಹಲ್ಲು ಎಳೆದುಟಿ ಸೊಂಪಿನ ಮುದ್ದು ತಾರೊ ೩
ಅಂಬೆಗಾಲಿಕ್ಕುತೆನ್ನನು ಕಂಡು ಕರವೆತ್ತಿ ಮುದ್ದು ತಾರೊ ಕಂದ
ಕಂಬುಕಂದರ ನಿನ್ನ ಮನದಣಿಯಪ್ಪುವೆ ಮುದ್ದು ತಾರೊ ೪
ಚಿನ್ನರ ಬಡಿದು ನಾನಲ್ಲೆಂದು ಬಾಯಾರ್ವ ಮುದ್ದು ತಾರೊ ಪ್ರ
ಸನ್ನವೆಂಕಟಾಚಲವಾಸವಿಲಾಸನೆ ಮುದ್ದು ತಾರೊ ೫

೬೩
ನಿಲ್ಲು ರಂಗ ನಿಲ್ಲು ರಂಗ ನಿಲ್ಲೆಲೊ ರಂಗ
ನಿಲ್ಲು ಮಜ್ಜಿಗೆಯನೆಲ್ಲ ಚೆಲ್ಲಿ ಬೆಣ್ಣೆ ಮೆದ್ದ ಕಳ್ಳ ಪ.
ಜಾವ ಜಾವಕೆ ಕಾಡುವೆ ನಾವು ಕಟ್ಟಿದರೋಡುವೆ
ಹಾವಳಿಗಾರೆವೊ ನಿನ್ನ ದೇವಕಿ ಚಿನ್ನ
ಗೋವಳೆಗಾರ್ತಿರ ಚಿತ್ತವ ಆವಾಗೆ ಗೆದ್ಯೊ ಮಾಧವ
ದೇವಿ ಗೋಪಿಗೆ ಹೇಳುತೈದೆವೊ ನಡೆ ಯಾಕೊ ಪಿಂತೆ ೧
ಬಾಲ ಬಾಲ ಬಾಲನೆಂದು ತಾಳಬೇಕೆಷ್ಟು ದಿನೆಂದು
ಮೇಲೆ ಬಲ್ಲಿದರ ಮಗ ನೀಲಮೇಘಾಂಗ
ಕಾಲಿಗೆರಗುವೆವಿನ್ನು ಪಾಲಿಸೊ ನಮ್ಮನು ನೀನು
ನಾಲಿಗೇಲಿ ನಿಮ್ಮ ಗುಣಂಗಳ ಹೇಳೋದು ಕಠಿಣ ೨
ಬಿಟ್ಟು ಕೆಟ್ಟೆವೊ ಪಾದವ ಕಟ್ಟೆವೊ ಬಾರೊ ದೇವ
ಸಿಟ್ಟಲಿ ಯಶೋದೆ ಮೇಲೆ ಅಟ್ಟಿ ಬಿಡಲು
ಗಟ್ಟಿ ಮೊಸರು ಹಾಲನು ಅಷ್ಟು ಕುಡಿದಧಿಕನೊ
ದಿಟ್ಟ ಪ್ರಸನ್ನವೆಂಕಟ ಕೃಷ್ಣ ನಿಮ್ಮಮ್ಮನಾಣಿಟ್ಟೆ ೩

ಅನಿರುದ್ಧ: ಶ್ರೀಹರಿ
೯೯
ನೀ ಎನ್ನ ಸಲಹೋ ದಾತ ಶ್ರೀನಾಥ ಪ.
ಅಣುರೇಣು ತೃಣ ವ್ಯಾಪ್ತ ಅಕಳಂಕ ನಿರ್ಲಿಪ್ತ
ವನರುಹಾಸನ ಪ್ರೀತ ವೈಕುಂಠ ಕರ್ತ ೧
ತಾಪಸಜನ ಪೂಜ್ಯ ತರಣಿಕೋಟಿ ತೇಜ
ಶ್ರೀಪರಮೋತ್ತಮ ಸಕಲಾಂತರಾತ್ಮ ೨
ಬ್ರಹ್ಮಾಂಡಸಂರಕ್ಷ ಭಾಗವತರ ಪಕ್ಷ
ಹಮ್ಮಿನ ಖಳರೊದ್ದ ಹರಿ ಅನಿರುದ್ಧ ೩
ಸ್ವರ್ಣಮುಖರೀ ತೀರ ಸನ್ನಿಧಿ ಮಂದಿರ
ಪೂರ್ಣಮಹಿಮ ವಟಪರ್ಣಾಶ್ರಯ ಕೃಷ್ಣ ೪
ಸ್ವಾಮಿ ಪುಷ್ಕರವಾಸ ಶುಭ ಮಂದಸ್ಮಿತಹಾಸ
ಪ್ರೇಮಾಬ್ಧಿ ಅಹರ್ನಿಶಿ ಪ್ರಸನ್ವೆಂಕಟೇಶ ೫

೨೪೩
ನೀ ಕರುಣಿಸೊ ವಿಠಲ ನಮ್ಮ
ಸಾಕೊ ಪಂಡರಿ ವಿಠಲ ಪ.
ದೋಷಿಗಳೊಳಗೆ ಹಿರಿಯನು ನಾ ನಿ
ರ್ದೋಷಿಗಳರಸನೆ ವಿಠಲ
ಸಾಸಿವೆಯಷ್ಟು ಭಕುತಿಯನರಿಯೆನು
ಶೇಷಶಯನ ಶ್ರೀ ವಿಠಲ ೧
ಭವಸಾಗರದೊಳು ಮುಳುಗುವೆ ಸುಮ್ಮನೆ
ಅವಲೋಕಿಸುವರೆ ವಿಠಲ
ನವ ನವ ವಿಷಯಕೆ ಮುಗ್ಗುತಲಿಹ ಮನ
ದವಸರ ಕಾಯೊ ವಿಠಲ ೨
ತನುಸಂಬಂಧಿಗಳತಿ ಕಾರ್ಯಾರ್ಥಿಗಳ್
ಎನಗಾರಿಲ್ಲೊ ವಿಠಲಾ
ಬಿನಗು ಮಾನವರನುಸರಣೆಯಲಿ
ದಣಿಸದಿರಯ್ಯ ವಿಠಲ ೩
ನಿಶಿದಿನ ಅಶನ ವಸನಕೆ ಹೆಣಗುವೆ
ಹುಸಿ ಸಂಗ್ರಹಿಸಿದೆ ವಿಠಲ
ನಿಶಿದ್ಧಗಳಂಜಿಕೆ ಇಲ್ಲವು ನರಕದ
ಗಸಣೆಗೆ ಅಂಜುವೆ ವಿಠಲ ೪
ಜಾವಕೆ ಮಾಡುವೆ ಸಾವಿರ ತಪ್ಪನು
ಕಾವ ದಯಾಂಬುಧಿ ವಿಠಲ
ನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿ
ಜೀವಕೆ ಹೊಣೆ ನೀ ವಿಠಲ ೫

೨೪೪
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆ
ಏಕಮತಿ ಎನ್ನೊಳಿಲ್ಲ
ಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯ
ಬೇಕೆಂದು ಸಾಕುತಿಹೆ ಹರಿಯೆ ಪ.
ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆ
ಸಾಧನ ಸುಮಾರ್ಗವರಿಯೆ
ಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆ
ಮಾಧವ ಮುರಾರಿ ಕೃಷ್ಣಾ ತುಷ್ಟಾ ೧
ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬ
ವನಕೆ ಮೆಚ್ಚಿದೆ ನೋಡಯ್ಯ
ವನಚರತ್ವವ ನೀಗಿ ಕ್ಷಣವಾರೆ ತವಚರಣ
ವನಜರಸವುಣ್ಣದಲ್ಲೈ ರಂಗಯ್ಯ ೨
ಜನುಮ ಜನುಮದ ತಾಯಿ ತಂದೆ ಗುರು ಬಂಧು
ನನ್ನನು ಗತಿಗಾಣಿಪ ದಾತನೆ
ಎನ್ನ ಭವ ತಪ್ಪುಗಳನರಸದಿರು ಅರಸಿದರೆ
ನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ ೩

೨೪೯
ನೀ ಸಾಕದಿದ್ದರೆ ಸಾಕುವರಾರೊ
ದಾಸಾಭಿಮಾನಿ ನೀನಲ್ಲದಾರೊ ಕೃಷ್ಣಾ ಪ.
ನಿನ್ನವರನು ಬಾಧಿಸ ಬಂದ ಮೂರ್ಖರು
ಮುನ್ನೆ ದುರ್ಭಾಗ್ಯರಾಗಿ ಹೋದರು
ಕುನ್ನಿ ಕಚ್ಚಿದರಾನೆ ಅಳುಕುವುದೆ ರಂಗ
ಎನ್ನ ನಂಬಿಕೆಯ ಮೂರುತಿ ಶ್ರೀನಿವಾಸ ೧
ಹಸಿದು ಮಳಲ ಮೆದ್ದವನಂತೆ ಕಂಗೆಟ್ಟು
ತೃಷೆಯಾಗಿ ಬಿಸಿಲ್ದೊರೆಗೋಡುವನಂತೆ
ವಿಷಮ ಮಾನಿಸರನುಸರಿಸುವುದುಚಿತಲ್ಲ
ಬಿಸಜದೇವಿಯರಸ ಸುದಾಮಘ ಭಂಗ ೨
ಬಂಟರ ಮಾತ ಕೇಳದೆ ಭಾರ ತಾಳದೇ
ನುಂಟು ಕಾರ್ಯವು ನಿನಗೆಲೆ ದಯಾಳು
ಕಂಟಕ ಜನಕಪಕಾರಿ ದೀನೇಶ ವೈ
ಕುಂಠವಲ್ಲಭ ಪ್ರಸನ್ವೆಂಕಟ ಬಂಧು ೩

೨೪೫
ನೀನೆ ಕರ್ತ ಎನ್ನ ಕರ್ತ ನಾ ನಿನ್ನ ಭೃತ್ಯ ಹಿತ
ಮಾನಹಾನಿ ನಿನ್ನದಯ್ಯ ಕೊನೇರಿ ತಿಮ್ಮ ನಮ್ಮ್ಮಯ್ಯ ಪ.
ತನುಧನ ನೆಚ್ಚಿಕಿಲ್ಲ ಮಾನಿನಿ ತನ್ನವಳಲ್ಲ
ಸೂನು ಬಂಧುಗಳೆಲ್ಲ ಕ್ಷಣದವರಲ್ಲ
ನಾನಾ ಜನ್ಮದಲಿ ಎನ್ನ ಪ್ರಾಣ ಕಿತ್ತೈಯ್ಯ ಚೈತನ್ಯ
ದಾನವಾರಾತಿ ಕೃಷ್ಣಯ್ಯ ದೀನನ ಬಿಡದಿರಯ್ಯ ೧
ಭವಾಂಧಕಾರದೊಳನುಭವಿಸಿ ಬೆಂಡಾಗುವೆನು
ವಿವರಿಸಿ ನಿತ್ಯ ಹಿತವ ಕಾಣೆನು
ಜಾವ ಒಂದದರೊಳರ್ಧ ದಾರಿಯಲಿ ಶ್ರೀಪಾದ
ಭಾವಿಸಲೊಲ್ಲೆ ನೋಡಲವಗುಣಾಂಕಿತ ಮೂಢ ೨
ಸ್ವಾಮಿ ನಿನ್ನ ಮುದ್ರಾಂಕನ ಮಾಡಿನ್ನನುಮಾನ್ಯಾಕೆ
ಶ್ರೀಮಂತ ಭಾಗವತರ ಪ್ರೇಮಾನ್ವಿತರ
ಶ್ರೀ ಮಧ್ವರಾಯರ ಸಿಕ್ಷಾನೇಮರಾಚರಣಾಧ್ಯಕ್ಷ
ಸಾಮೀಪ್ಯ ಮುಕ್ತಿಯನೀಯೊ ನನ್ನ ಪ್ರಸನ್ವೆಂಕಟಯ್ಯ ೩

೨೪೬
ನೀನೆ ಗತಿ ಕೃಷ್ಣ ಎನಗೆ ನೀನೆ ಗತಿ ಕೃಷ್ಣ ಪ.
ನೀನೆ ಗತಿಯೆಂದಾನತನಾಗಿ
ಮಾನಾಪಮಾನವ ನಿನಗೊಪ್ಪಿಸಿದೆ
ಜ್ಞಾನವಿಹೀನನ ಪಾವನ ಮಾಡಿ
ಶ್ರೀನರಹರಿ ಕರುಣಿಸು ನಮ್ಮ್ಮಯ್ಯನೆ ೧
ತನುವಸ್ಥಿರ ಮನವತಿಚರ ಒದಗಿದ
ಧನ ನಶ್ವರ ನಿನ್ನಯ ಪಾದಾಬ್ಜದ
ನೆನವಿಗೆಯೊಂದನೆ ಕೊಡು ಕಡೆ ಮೊದಲಿಗೆ
ಜನನವಸಾನದ ಬಳ್ಳಿಯ ಕಡಿಯಲು ೨
ಶರಣಾಗತ ಶರಣರ ಕರವಿಡಿವ
ಬಿರುದಿನ ದೊರೆಗಿನ್ನನುಮಾನ್ಯಾಕೆ
ಪರಮಪತಿತನ ಪೂತನ ಮಾಡ್ಯು
ದ್ಧರಿಸುವ ಸಿರಿ ಪ್ರಸನ್ನವೆಂಕಟಕೃಷ್ಣ ೩

೨೪೭
ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನ
ಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ ೧
ನಾನಾ ದುಷ್ರ‍ಕತಫಲವ ಉಂಡೆ ಇನ್ನಾರೆ ಶ್ರೀನಿವಾಸ
ಎಂದೂ ದುರ್ವಿಷಯಕೆ
ಮನ ಎರಗದಂತೆ ಮಾಡೊ ಶ್ರೀನಿವಾಸ ೨
ಸತ್ಕಥಾ ಶ್ರವಣ ಭಾಗ್ಯವ ಕೊಡು ಅನುದಿನ ಶ್ರೀನಿವಾಸ ಎನ್ನ
ಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ ೩
ಪುತ್ರ ಕಳತ್ರ ಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ರ‍ಭತ್ಯ
ಭೃತ್ಯರ ಪರಿಚಾರಕ ನಾನು ಶ್ರೀನಿವಾಸ ೪
ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸ ನಿತ್ಯ
ದೀನೋದ್ಧಾರ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ ೫

೨೪೮
ನೀನೋಡುವುದುಚಿತಲ್ಲೊ ಕೃಷ್ಣಯ್ಯ
ನಾನಾ ದುಃಖವನುಂಡು ದಣಿದೆ ನಮ್ಮಯ್ಯ ಪ.
ಮಜ್ಜ ಮಾಂಸ ರುಧಿರ ಮಲಮೂತ್ರ
ಮಜ್ಜನ ಮಾಡುತ ಬಸಿರೊಳಗೆ
ಜರ್ಜರಿತನಾದೆ ಲೆಕ್ಕವಿಲ್ಲದಕೆ ಪಾ
ದಾಬ್ಜವನೆಂದು ತೋರಿಸುವಿಯೊ ರಂಗ ೧
ಎರವು ತಂದಿರುವ ಸಂಸಾರದ ಸುಖದೊಳು
ಉರಿ ಮೂರು ಬೆರಸಾಡಿ ದಹಿಸುತಿದೆ
ತರಳ ಯೌವನ ಮುಪ್ಪಿಲ್ಯಾರೊಮ್ಮೆ ಚಿತ್ತವು
ಸ್ಥಿರವಾಗದಿನ್ನೇನು ಗತಿ ಚಿಂತಿಸೈದೆ ೨

ಯಮಭಂಟರುಪಟಳ ನಿನ್ನವರಾದರೆ
ಕ್ರಮವಲ್ಲ ಆನತ ಜನರ ದಾತಾರ
ಭ್ರಮಿಸಲಾರೆನು ಕರುಣಿಸು ಕರುಣಾಂಬುಧಿ
ರಮೆಯ ರಮಣ ಪ್ರಸನ್ವೆಂಕಟ ಧೀರ ೩

೪೩೨
ನೀರಾಜನವನೆತ್ತಿರೊ ತಿಮ್ಮಯ್ಯಗೆ
ವಾರಿಜೋದ್ಭವ ಕಾಮರಯ್ಯಗೆ ಪ.
ಆನಕ ದುಂದುಭಿ ಕೂಡೆ ಬಂದ
ಧೇನು ಕಾವರ ಪಳ್ಳಿಲಿ ನಿಂದ
ನಾನಾ ಕೃತ್ರಿಮಗೈದಾಳರಿಗೆ
ಪಾನಕೆ ಗೋರಸ ಅಪಹಾರಿಗೆ ೧
ಆವು ಕಾವ ದಾವಾಗ್ನಿಯ ನುಂಗಿ
ಗೋವಕ್ಕಳ ಸಖರ ಸುಸಂಗಿ
ಪಾವನು ಕಾಲಿನಿಂದ ತುಳಿದಗೆ
ಭಾವಕಿಯರ ಭಾವಕೊಲಿದಗೆ ೨
ಕೋಪವಿಲ್ಲದನ ಕೂಡಿ ಹೋಗಿ
ಪಾಪವೆಲ್ಲಳಿದು ಮಾವನ ನೀಗಿ
ತಾಪವಾರಿಸಿದ ತಂದೆ ತಾಯಿಗೆ
ಭೂಪ ಉಗ್ರಸೇನಾಶ್ರಯಗೆ ೩
ಶ್ರೀರುಕ್ಮಿಣಿ ಸತ್ಯೆಯರಾಳಿ
ನರಕಾಸುರನ ತಲೆಹೋಳಿ
ಭೂರಿ ಕನ್ನೇರ ಕೈವಿಡಿದಗೆ
ದ್ವಾರಕ ನಗರದರಸಗೆ ೪
ಕುಂತಿ ಪುತ್ರರ ಸುಖ ಬೆಳೆಸಿ
ಕಾಂತೆ ಪಾಂಚಾಲಿ ಲಜ್ಜಾ ಉಳಿಸಿ
ಭ್ರಾಂತ ಪಾಪಿ ಕೌರವನಾಶಗೆ
ಕಾಂತ ಪ್ರಸನ್ವೆಂಕಟಾದ್ರೀಶಗೆ ೫

(ನು. ೧) ಐದು ಪಾವಕ :
೩೬೮
ನುಹುಡಿಯ ಹೊರಳ್ಯೇನು ಬಡಕೊಂಡರೇ
ಕಡಲಶಯನನೊಳು ದೃಢ ಭಕ್ತಿ ಇರದೆ ಪ.
ಐದು ಪಾವಕನೊಳು ಮೈ ದಹಿಸಿದರೇನು
ಒಯ್ದು ಶ್ವಾಸವ ನೆತ್ತಿಲಿಟ್ಟರೇನು
ತೊಯ್ದುಟ್ಟರಿವೆ ತುದಿಗಾಲಲಿ ನಿಂತೇನು
ಮೈದುನಸಖನಂಘ್ರಿ ಪೂಜಿಸದನಕ ೧
ತೊಪ್ಪಲ ಮೆದ್ದಗ ತಪ್ಪಲ ಸೇರೇನು
ಉಪ್ಪವಾಸನಿಲವ ನುಂಗಲೇಸು
ಒಪ್ಪುವ ಇಳೆಯ ಸುತ್ತಾಡಿ ದಣಿದರೇನು
ದರ್ಪಕನಯ್ಯನ ಒಲುಮಿಲ್ಲದನಕ ೨
ಮಧ್ವಸರೋವರ ಮೀಯದ ಜನುಮೇನು
ಮುದ್ದುಕೃಷ್ಣನ ನೋಡದಕ್ಷಿಯೇನು
ಮಧ್ವೇಶ ಪ್ರಸನ್ವೆಂಕಟೇಶನೊಪ್ಪಿರದವ
ನಿದ್ದೇನು ಇಲ್ಲದೇನೀಧರೆಗೆ೩

೩೨೪
ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ಗಡ
ಅಚ್ಯುತಾನಂತನ ಪಾದದಿಂಬು ಬೇಡಿರೊ ಪ.
ದಿನಪನುದಯದಲೆದ್ದು ನಿತ್ಯಕರ್ಮವ ಜರಿದು
ದೀನ ವೃತ್ತಿಯಲಿ ಧನವನೊದಗಿಸಿದಿರೊ
ವಿನಯವಿಲ್ಲದೆ ವೈವಸ್ವತನ ಭಟರೊಯ್ವಾಗ
ಮನಸಿನ ಹವಣು ಸಂಗಡ ಬಾಹದೆ ೧
ಅರಿಯಾರು ವರ್ಗಾಳಿಗೊಳಗಾಗಿ ಸತಿಸುತರ
ಪರಕಿಂದಧಿಕರೆಂದು ಬಗೆವರೇನೊ
ಕರುಣವಿಲ್ಲದೆ ಯಾತನೆಗೆ ಪೊಗಿಸಿ ಬಡಿವಾಗ
ತರುಣಿ ಸಂಪದವಾಗ ಸಹಾಯವಾಹದೆ ೨
ಮುನ್ನೇಸು ಜನ್ಮಗಳ ವೃಥಾ ಕಳೆದೆಯಲ್ಲದೆ ಪ್ರ
ಸನ್ನವೆಂಕಟನ ಪದವಿಡಿಯಲಿಲ್ಲ
ಚೆನ್ನಾಗಿ ಮರುತಮತವಿಡಿದು ನಡೆದರೆ ನಿಮ್ಮ
ಮನ್ನಿಸಿ ಗತಿಗೊಡದಿಹನೆ ರಂಗ ನೋಡಿ ೩

೩೨೫
ನೆನೆ ಮನವೆ ದಾನವಾರಿಯ
ಹಿತಕಾರಿಯಾಶ್ರಿತ ದೊರೆಯ ಪ.
ಹೀನ ಪಾಪಾಖ್ಯ ವಿಪಿನದಾವಕೃಶಾನು
ಸನಾತನ ನಾರಾಯಣ ಶ್ರೀನಾಥನ ೧
ಘೋರ ನಿರಯ ವಿದೂರ ಕರುಣಾಪಾರ
ವಾರಿಜಾಸನ ವಂದ್ಯ ಸುರಶ್ರೇಷ್ಠನ ೨
ತನ್ನವರಿಗೆ ಪ್ರಸನ್ನವೆಂಕಟಕೃಷ್ಣ
ಮನ್ಯ ಸದ್ಭಕ್ತರ ಪಾವನ್ನ ನಾಮನ೩

೨೫೦
ನೋಡಬಾರದೆ ಕೃಷ್ಣಾ ಕರುಣದಿ
ನೋಡಬಾರದೆ ಕೃಷ್ಣ
ಹಾಡಿ ಹರಸಿ ನಿನ್ನನೆ ಹೊಗಳುವ ಪರಿ
ಮಾಡಬಾರದೆ ಹರಿಯೆ ಪ.
ಹಾನಿ ಹಿತಗಳನರಿಯೆ ಸು
ಜ್ಞಾನ ಭಕುತಿಗಳರಿಯೆ
ದೀನ ದೇಶಿಗನುದ್ಧರಿಸೆಲೆ ದೇವ
ಸಾನುರಾಗದಿ ದೇವ ೧
ಏಸು ಜನ್ಮದಿ ಬಂದೆ ನಾ
ಘಾಸಿಯಾದೆನೊ ತಂದೆ
ದಾಸರೊಳು ಆವಕಾಲಭಿ
ಲಾಷೆಯುಳ್ಳ ಶ್ರೀಲೋಲ ೨
ಏನು ಹೇಳಲಿ ಮನವು ನಿನ್ನ
ಧ್ಯಾನಕೊದಗದು ಕ್ಷಣವು
ತಾನೆ ಹರಿದಡೆ ಕೇಡು ಅದರಿಂದ
ಪ್ರಾಣನಾಥ ಮುಕುಂದ ೩
ಕುಂಬಳವು ಕೈಗತ್ತಿ ಕ
ರಾಂಬುಜಕೆ ನಿನಗಿತ್ತೆ
ನಂಬಿದವಗಿನ್ನೇನಾರೆ ಮಾಡಯ್ಯ
ಅಂಬುಜಜ ಸ್ಮರರಯ್ಯ ೪
ಕಿಂಕರೌಘದೊಳಿಡೊ ನಿ
ಶ್ಶಂಕನೆ ದಯಮಾಡೊ
ಪಂಕಜಾಕ್ಷ ಮುರಾರಿ ಪ್ರಸನ್ನ
ವೆಂಕಟಾದ್ರಿ ಪಾವನ್ನ ೫

೨೫೧
ನೋಡು ನೋಡು ದಯಮಾಡು ಮಾಡಿನ್ನ ಪ.
ನೋಡು ವೈರಾಗ್ಯಭಾಗ್ಯವಿಹೀನನ
ಕಾಡುತಿದೆ ಮನ ಕರುಣಾಸಂಪನ್ನ ಅ.ಪ.
ಸ್ನಾನ ಸಂಧ್ಯಾವಂದನೆ ಸಚೇಲದಿ
ಧ್ಯಾನ ಮೌನವ ಹಿಡಿಸಿ
ಜ್ಞಾನ ಭಕ್ತಿ ವಿರಕ್ತಿ ಮಾತಿನ
ನಾಣ್ನುಡಿಯಂತೆ ನುಡಿಸಿ
ದಾನ ಧರ್ಮ ಕೈವಲ್ಯದಾರ್ಯೆಂದು ನಿ
ದಾನ ತುಷ್ಟಿಯ ಬಡಿಸಿ
ತಾನರೆಕ್ಷಣ ಸ್ವಸ್ಥವಿರದೆಲ್ಲ
ಹಾನಿ ಮಾಡಿತೆನ್ನ ಚಿತ್ತವ ಕೆಡಿಸಿ ೧
ಸಾಲಂಕೃತ ಬಾಲನೊಯ್ದಡವಿಯಲಿ ಕೊಲ್ವ
ಆಲಯದ ಕಳ್ಳನಂತೆ
ಬಾಲೆಯನ್ನಾಳದೆ ಷಂಡ ಘನ ಕೂಪ
ದೊಳು ನೂಕಿಸುವಂತೆ
ಪೇಳಲೇನು ದುರ್ಬಲರನು ಅರಸ ತಾ
ಶೂಲಕಿಕ್ಕಿಸುವಂತೆ
ಮೇಲೆ ಮೇಲೆ ದುರ್ವಿಷಯಾಟವಿಯೊಳು
ಕಾಲ ಕಟ್ಟ್ಯೆನ್ನ ಕೆಡಹುತಿದೆ ೨
ಕನ್ನಿಕೆಗೆ ವರನೊಪ್ಪಿದರೆ ತೆತ್ತಿ
ಗನ್ನ ಪ್ರತಿಕೂಲವೇನು
ಪುಣ್ಯಶ್ಲೋಕನ ಅಭಯವಿರಲು ಸುಖಿ
ಗನ್ಯ ತೊಡರ್ಯಾಕಿನ್ನ
ಮನ್ನೆಯನ ಪಾದವಿಡಿದಿಹ ಮಡದಿಗೆ
ಅನ್ಯರಾತಂಕವೇನು ಪ್ರ
ಸನ್ನವೆಂಕಟಸ್ವಾಮಿ ನೀ ಒಲಿದರೆ
ಕುನ್ನಿ ಮನ ಕಾಡಿ ಮಾಡುವದೇನು ೩

೬೪
ನೋಡೆ ಅಮ್ಮ ಯಶೋದಮ್ಮ
ಆಡಬಾರದಾಟವಾಡುವನಮ್ಮ
ಕಾಡುವ ನಿನ್ನ ಮಗನಮ್ಮ ಪ.
ಬುದ್ಧಿ ಹೇಳೆ ತಿದ್ದಿ ಹೇಳೆ ನಮ್ಮ
ಮುದ್ದು ಮಕ್ಕಳನೆಲ್ಲ ಗುದ್ದಿ ಅಂಜಿಸಿ ಕಾಲಿ
ಲೊದ್ದೋಡಿ ಬರುತಾನೆ ಕೇಳೆ ೧
ಕ್ಷೀರ ಕೊಡವ ಸುರುವಿ ಬಿಡುವ
ಸಾರಿ ಸಾರಿಗೆ ಬೆಣ್ಣೆ ಬಿಸಳಿಗೆನೊಡೆವ ಮಂ
ದಿರದೊಳಗೆ ಕುಣಿದಾಡುವ ೨
ಹರಿದು ಬರುವ ಚಾರುವರಿವ ಎಳೆ
ಗರುವ ನೋಡುವೆನೆಂದು ಅಳುತಲುಸುರುವ
ಹರವಿ ಮೊಸರು ಕೆನೆ ಸುರಿವ ೩
ಲೀಲೆ ನೋಡಲಳವಲ್ಲ ನಿನ್ನ
ಬಾಲಕನಲೌಕಿಕ ಹೊಲ್ಲ ನಮ್ಮೆಲ್ಲರ
ಆಲಯದಿ ನಿಲ್ಲಗೊಡ ಸಿರಿನಲ್ಲ ೪
ಗುಣಹೇಳಲೆಣಿಕಿಲ್ಲ ಚಿನ್ಮಯ ಪ್ರ
ಸನ್ವೆಂಕಟೇಶ ತಾ ನಂಬದರ್ಗಿಲ್ಲ
ಬಿನಗು ಮಾತಿಗೆ ಸಿಗನಲ್ಲ ೫

೨೫೨
ನೋಡೆನ್ನೊಳು ಮೂಡಣಾದ್ರಿ ಪ್ರೌಢ ಕೃಷ್ಣ ಕೃಪೆ
ಮಾಡು ಚಿತ್ತ ಕಾಡಿತಭಯ ನೀಡು ಕೃಷ್ಣ ಪ.
ಬಾಯೆಂಬರಿಲ್ಲೊ ಎಂಬರಿಲ್ಲ ಕಾಯೊ ಕೃಷ್ಣ ಫುಲ್ಲ
ಸಾಯಕನ ಗಾಯ ತಪ್ಪಿಸಯ್ಯ ಕೃಷ್ಣ೧
ಭೂರಿ ಜನ್ಮದ ಧಾರೆಯಳಿಯೊ ಶೌರಿ ಕೃಷ್ಣ ಭವ
ವಾರಿಧಿಯ ತಾರಿಸೊ ಉದಾರಿ ಕೃಷ್ಣ ೨
ದುಷ್ಟಸಂಗ ನಷ್ಟವಾಗಲಿಷ್ಟು ಕೃಷ್ಣಾಮಿತ
ತುಷ್ಟಿ ನನ್ನ ಕಷ್ಟ ಬಡಿದಟ್ಟು ಕೃಷ್ಣ ೩
ಎಂದು ನಿನ್ನ ಹೊಂದುವೆನೊ ತಂದೆ ಕೃಷ್ಣ ಭದ್ರ
ಮಂದಿರನೆ ಇಂದಿರೇಶ ನಂದ ಕೃಷ್ಣ ೪
ದಾಸ ದಾಸ ದಾಸನಾ ನಿರ್ದೋಷಿ ಕೃಷ್ಣ ನೀನೆ
ಪೋಷಿಸಯ್ಯ ಪ್ರಸನ್ವೆಂಕಟೇಶ ಕೃಷ್ಣ ೫

೨೫೩
ನೋಡೊ ನೋಡೊ ರಂಗ ತನ್ನ
ಖೋಡಿತನ ಬಿಡದೋಡು ಚಿತ್ತವು ಪ.
ಎಳೆ ಎಳೆದು ನಾನೆ ಬಳಲಿದೆ ತಾ ತನ್ನ
ತಿಳಿದ ಕಡೆಯಲಿ ಸುಳಿದಾಡಿತು
ಒಲಿದು ಭಕುತಿಯ ಬಲಿದಿರೆಂದರೆ
ಛಲದಿ ಶುಭಮಾರ್ಗ ಕೊಳದು ದಾತಾರ ೧
ಕ್ಷಣದೊಳಾರೆ ನಾರಾಯಣ ದಾಮೋದರ
ಮುನಿಧ್ಯೇಯನೆ ನಿನ್ನ ನೆನೆದಾಡದೆ
ಹಣಿದಾಡೆನ್ನೊಳು ಒಣ ಧ್ಯಾನಿಸುತಿದೆ
ಜನದೂಷಣದೊಳು ದಣಿದಾಡುತಿದೆ ೨
ಇನ್ನಾವಗೆ ಪೇಳಲೆನ್ನ ಒಡಲ ಮಾತ
ಎನ್ನ ಒಡೆಯ ಪಾವನ್ನಕಾಯ ಪ್ರ
ಸನ್ನ ವೆಂಕಟರನ್ನ ಒಲಿಯೊ ನೀ
ಅನ್ಯ ವಿಷಯಕೆ ದೈನ್ಯವಾಗಿದೆ ೩

೬೫
ಪಟ್ಟಸಾಲೆ ಮೇಲೆ ರಂಗಮ್ಮ ನಕ್ಕು ನಲಿದು
ದಟ್ಟಸಾಲಿಕ್ಕಲಿ ಕಲಿತ ಪ.
ಕೈಯವಿಡಿದು ಗೋಪಿ ಮುಂಗೈಯ ಮುರಾರಿ ಮಗನ
ಥೈಯ ಥೈಯಯೆಂದು ಕಂದನ ಹಣೆಗೆ ಹಣೆಯೊತ್ತಿ
ಪ್ರಿಯದಿ ಹೊಂಗೆಜ್ಜೆಕಾಲ ಒಯ್ಯನಡಿಯಿಡಿಸೆ ನೀಲ
ಮೈಯನಜನಯ್ಯನ ಮುದ್ದಿಸಲು ಬಂಗಾರದ ೧
ಬಾಯ ಜೊಲ್ಲುಂಗುರುಗುರುಳೆಳೆಯ ಪಲ್ಲ್ವಾಧರ ಮದ್ದಿ
ಕಾಯಿ ಅರಳೆಲೆ ಮಾಗಾಯಂದುಗೆ ಒಪ್ಪೆ
ಮಾಯಾರಸವನ್ನೆಶೋದೆ ತಾಯಿಗುಣಿಸುವ ಬಾಲ
ನಾಯಕ ವೃಂದಾರಕಪಾಲಕ ರತ್ನಮಯದ ೨
ಬಾಳೆಯಂತೆ ಬಳುಕಿ ನಡೆವ ಬಾಲಕೃಷ್ಣ ಬಳಲ್ದನೆಂದು
ಆಲಂಗಿಸಲೊಲ್ಲದಂಬೆಗಾಲನಿಕ್ಕುವ
ಮೇಲೆ ಪ್ರಸನ್ವೆಂಕಟೇಶನ ಲೀಲೆಗೆ ಸುರರು ಮೆಚ್ಚೆ
ಲಾಲಿಸಿ ನಂದನನ ನಿವಾಳಿಸಿಕೊಂಡಳು ನಿವರ್ಇಳ ೩

೧೦೦
ಪಾಲಯ ಸೀತಾರಾಮ ಭೌಮ ಪ.
ದಶರಥನಂದನ ದಶಮುಖಭಂಜನ ತ್ರಿ
ದಶಭಯಶಮನ ಸುಸ್ಮಿತವದನ೧
ವಾತಜನುತ ಪಾತಕಹರ ವಿಧಿತಾತ ಪು
ನೀತಪದ ಭೂತಪವರದ ೨
ಇನಕುಲರಕ್ಷ ದೀನಜನರಕ್ಷ
ಮುನಿಜನತೋಷ ಪ್ರಸನ್ವೆಂಕಟೇಶ೩

೧೦೧
ಪಾಲಯಾಲ್ಮೇಲಮಂಗಪ್ರಿಯ ಪರಮಗೇಹ ಖಳ
ಜಾಲ ಕೋಲಾಹಲಗೋಕುಲ ಗೋಪಾಲ
ಬಾಲಲೀಲಾಲೋಲ ಲೋಲ ಚೆನ್ನ ಪ.
ಆದಿಪೋತ್ರಾವತಾರ ಅಮಿತ ಸುಗುಣೋದಾರ
ಭೂಧರ ಭೂಪವೈರಿ ಭ್ರಾತ ಶೌರಿ
ಕುದಶಾಸ್ಯವಿದಾರ ದಯೋದಧಿ ಶ್ರೀ
ಪಾದಾರಾಧಕಾಧಾರಮರ ಪಾದಪಾಧಿಪಾಧಿಪ ೧
ಆನತಘ ವಿದಾರ ಅಂಬುಧರಸುಂದರ
ಏಣಾಂಕರವಿಕಾಶ ಯದುಕುಲೇಶ
ವನಜನಯನ ಮಾಮನೋಹರ ಮುನಿಧ್ಯಾನ
ಮೌನಗಾನ ಲೀನ ಮಾನುಷಮೃಗ ನಮೋ ೨
ಪನ್ನಗರಾರಾತಿಗಮ್ಮ ಪಾರಾವಾರ ಮಹಿಮ
ಘನ್ನಜೀವಾತಿದೂರ ಗೋಸಂಗೋಚರ
ಮನ್ಮಥ ಗಣ್ಯಲಾವಣ್ಯ ಕಾರುಣ್ಯಧಿ ಸ್ವರ್ಣವರ್ಣ
ಚಿನ್ಮಯ ಪ್ರಸನ್ನವೆಂಕಟೇಶ ಮಾಂ ೩

ದರ್ಭಶಾಯಿ: ಹನುಮಂತ
೧೦೨
ಪಾಲಿಸಂಬುಧಿಶಾಯಿ ವ್ಯಾಳಕಶಿಪುಶಾಯಿ
ಪಾಲಿಸು ವಾರಿಧಿüಕೂಲದಿ ದರ್ಭಶಾಯಿ ಮೂಲ ವಟಪತ್ರಶಾಯಿ ಪ.
ವೇದೋದ್ಧಾರ ದಯಾಳು ಭೂಧರಧರ ದಯಾಳು
ಮೇದಿನಿ ಅಂತರ್ಮಾಲಾದಂಡ ಶುಭ ಕುಠಾರಧಾರಿಯೆ ದಯಾಳು
ಕೋದಂಡಧರ ದಯಾಳು ಸ್ವಾದ ವೇಣುಧರ ದಯಾಳು ಸ
ಮಾಧಿ ವ್ರತಧರ ಧರ್ಮಾಧರ ವಿಶ್ವಾಧರ ಮಾಧವ ನಿತ್ಯದಯಾಳು ೧
ಪಂಚಜನನ ವೈರಿ ವಂಚಕಾಸುರ ವೈರಿ
ಕಾಂಚನನೇತ್ರಕ ಯದುಪತಿ ಬಲಿಮದಚಂಚಲ ಖಳವೈರಿ
ಪಂಚದ್ವಯಾಸ್ಯನ ವೈರಿ ಪಂಚಪಾರ್ಥಾರಿತ ವೈರಿ
ಪಂಚಬಾಣಾರಿವೈರಿ ಪಂಚಪಾತಕವೈರಿ ಸಂಚಿತಘಕೆ ವೈರಿ ೨
ಸರನಿಕೇತನಿವಾಸ ಗಿರಿತಳ ಸನ್ನಿವಾಸ ವರಸ್ವಾಮಿಪುಷ್ಕರ
ಸಿರಿ ಅಹೋಬಲ ನೃಪಾಗರ ತ್ರಿಜಗನಿವಾಸ
ಸರಯೂತೀರ ನಿವಾಸ ಶರಧಿಮಂದಿರವಾಸಸುರವಿರೋಧಿಸದನ ಪರಮ ಶಂಬಲವಾಸ ಪರಸನ್ನವೆಂಕಟವಾಸ ೩

ಸನ್ಮುನಿಜನ್ನ ಭಾರ್ಯಾನ್ನವನುಣ್ಣುವ
೬೬
ಪಾಲಿಸು ಬಾಲಗೋಪಾಲ ಕೃಪಾಳು ನೀ
ಪಾಲಿಸು ಬಾಲಗೋಪಾಲ ಬಾಲಕಲೀಲಾ ವಿ
ಶಾಲ ಮಾಲೋಲಜ ಲಲಿತ ಬಾಲಗೋಪಾಲ ಪ.
ರಂಗು ರನ್ನುಂಗುರದಂಗುಲಿ ಸಂಜ್ಞದಿ
ಪೊಂಗೊಳಲ ಸಂಗೀತ ರಂಗ
ಮಂಗಳ ಭಾಂಗ ತ್ರಿಭಂಗ ಗೋಜಂಗುಳಿ
ಸಂಗವ ಹಿಂಗದ ರಂಗ
ಅಂಗಜ ತಿಂಗಳ್ಪತಂಗ ರೂಪಂ ಗೆಲ್ವ
ತುಂಗೋಜ್ವಲಾಂಗ ಶ್ರೀರಂಗ
ಮಂಗಳಪಾಂಗ ಗುಣಂಗಳ್ತರಂಗ ಆ
ಸಂಗಿ ಜಗಂಗಳ್ಗೆ ರಂಗ ೧
ಕೆಂದಾವರ್ಯಂದದಿ ಸುಂದರ ದ್ವಂದ್ವಾಂಘ್ರಿ
ಚೆಂದುಳ್ಳ ತಂದೆ ಗೋವಿಂದ
ಬಂದಿ ಕಾಲಂದುಗೆ ಪೊಂದುಡುಗಿಂದೆಸೆವ
ನಂದನ ಕಂದ ಗೋವಿಂದ
ನಂದವ್ರಜ ಹೊಂದಿದ ವೃಂದಾರಕೇಂದ್ರ ಗೋ
ವೃಂದದಿ ನಿಂದ ಗೋವಿಂದ
ಇಂದಿರಜ ಇಂದುಮೌಳೀಂದ್ರ ಮುನೀಂದ್ರಾದಿ
ವಂದಿತ ನಂದ ಗೋವಿಂದ ೨
ಉನ್ನತ ಪುಣ್ಯ ಗೋಗನ್ನೇರ ಮನ್ನಿಪ
ಚೆನ್ನಿಗ ಚಿನ್ನ ಪಾವನ್ನ
ಪನ್ನಗ ಔನ್ನತ್ಯ ಭಿನ್ನ ದಯಾರ್ಣವ ಜ
ಗನ್ನ ಮೋಹನ್ನ ಪಾವನ್ನ
ಸನ್ಮುನಿಜನ್ನ ಭಾರ್ಯಾನ್ನವನುಣ್ಣುವ
ಚಿನ್ಮಯ ಪುಣ್ಯ ಪಾವನ್ನ
ಸ್ವರ್ಣಗಿರಿ ನಿಕೇತನ್ನ ನೀ ಧನ್ಯ ಪ್ರ
ಸನ್ನವೆಂಕಟರನ್ನ ಪಾವನ್ನ ೩