Categories
ರಚನೆಗಳು

ಪ್ರಸನ್ನವೆಂಕಟದಾಸರು

೨೭
ಸತ್ಯಭಾಮಾವಿಲಾಸ
ಶ್ಲೋಕ
ಶ್ರೀ ಬ್ರಹ್ಮೇಶ ಸುರೇಂದ್ರ ಪೋಷಕ ಹರಿ ದ್ವಾರಾವತೀಲ್ಬಾಳ್ದನುಶ್ರೀ ಭೈಷ್ಮೀವರ ಸತ್ಯಭಾಮೆಯ ಬಹು ಸಾಸ್ರಾಂಗನೇರಾಳ್ದನುಈ ಭೂಭಾರಹರಾವತಾರ ಯದುಪಂ ನರ್ಲೀಲೆಯಂ ತಾಳ್ದನುಸೌಭಾಗ್ಯಾಂಬುಧಿ ಕೃಷ್ಣನಯ್ಯ ಜನಕಾನಂದಾಬ್ಧಿಲಿಟ್ಟಾಳ್ದನು ೧
ಸೌಪರ್ಣಾಂಸದಲಿಟ್ಟು ದೇವ ತರುವ ಸತ್ಯ ಸಹಾ ಒಪ್ಪುವಆಪನ್ನಾನ್ವಯ ಕಾಮಧೇನೆನಿಸುವ ಅಧ್ಯಾತ್ಮ ಶ್ರೀ ಮಾಧವಈ ಪದ್ಯಂಗಳ ಪೇಳಿಸಿದನು ದಯಾಬ್ಧಿ ಪಾರಿಜಾತಾಖ್ಯವಗೋಪಾಲೇಶನ ಪಾದಪದ್ಮ ನೆನೆವೆ ಆನಂದವಂ ಬೇಡುವೆ ೨

ಪದ
ಶ್ರೀಕೃಷ್ಣ ದ್ವಾರಕಾನಗರದಿ ಪ್ರೇಮದಾನೀಕದಿ ರಾಜಿಸಲಾಗನಾಕದಲರು ಒಂದು ನಾರದ ತಂದಿರೆಶ್ರೀಕಾಂತನಿತ್ತ ರುಕ್ಮಿಣಿಗೆ ೩
ಒಂದು ಹೂವಿನ ಪರಿಮಳವು ನಗರ ತುಂಬಿಇಂದುವದನೆ ಸತ್ಯಭಾಮೆಇಂದು ಗೋವಿಂದ ರುಕ್ಮಿಣಿಗೆ ಕುಸುಮವಿತ್ತನೆಂದು ಕೇಳ್ದಳು ಸುಸ್ವಭಾವೆ ೪

ಶ್ಲೋಕ
ಅರ್ಧಾಂಗಿಯಲಿ ಸ್ನೇಹ ವೆಗ್ಗಳ ಕಣಾ ಮುದ್ದಿಸಿ ಹೂವಿತ್ತನುಇದ್ದೇನಿನ್ನು ವೃಥಾ ಭುವಿಯಲಿ ಸಖಿ ನಿರ್ದೇಹವಂ ಸಾರ್ವೆನುಕದ್ದು ಬೆಣ್ಣೆಯ ಮೆದ್ದು ಪುಂಶ್ಚಲಿಯರೊಳಿದ್ದಾತನ ಬುದ್ಧಿಯತಿದ್ದಿ ನೋಡಿದೆ ಸೋತೆ ಎನ್ನ ನಳಿತೋಳ್ಹೊದಿಸಿ ನಾ ಶೌರಿಯ ೫
ಸಾಕಿನ್ನಾತನ ಚಿತ್ತಪಲ್ಲಟ ಸಟೆ ಆ ಕಾಮಿನಿಪ್ರಿಯನನೂಕದಿನ್ನಿರೆ ಎನ್ನ ಮಂಚಕೆ ಬರಲ್ಪೋಕ ಸ್ಮರನಯ್ಯನಯಾಕಿನ್ನಾಭರಣಾಂಬರೋತ್ತರಿ ಸಖೀ ಏಕಾಗ್ರನೇಕಾಂಗನನೀಕಂಡ್ಹೇಳವಮಾನ ತಾಳಳು ಸಖಿ ಜೋಕಿನ್ನು ನಿನ್ಬಹುಮಾನ೬

ಪದ
ಕ್ರೋಧ ಕಳವಳಿಕೆ ಮುನಿಸಿನಿಂದಲಿ ಸತ್ಯವಾದಿ ಸತ್ರಾಜಿತ ಕನ್ಯೆಮೇದಿನಿ ಮೇಲೆ ಮಲಗಿದಳು ಧೊಪ್ಪನೆ ಮಂಚಕೈದದೆ ನಿತ್ಯಸುಖಿ ಧನ್ಯೆ ೭
ಬಿಸಿ ಬಿಸಿ ನಿಟ್ಟುಸಿರ್ಗರೆದು ಕೋಮಲ ಮುಖಶಶಿಯ ಕಸ್ತೂರಿ ಅಂಗಯ್ಯಲೊರೆಸಿಬಿಸಜಾಕ್ಷಿ ಕಂಬನಿದುಂಬೆ ಒರತೆಯಿಟ್ಟುಎಸೆವ ಕಜ್ಜಲ ಜಲ ಸೂಸಿ ೮

ಶ್ಲೋಕ
ವಕ್ಷೋಜಾತದ ಹೊನ್ನ ಕುಪ್ಪಸವನು ಅಕ್ಷೋದದಿಂ ತೋಯಿಸಲ್‍ಸಾಕ್ಷಾನ್ಮಂಗಳ ಮುತ್ತಿನ್ಹಾರ ಕಡಿದಳ್ ಲಕ್ಷಾಭರಣ್ಬಿಟ್ಟಳುತಾ ಕ್ಷೋಣಿಯನು ಹೊಂದಿ ಬಿದ್ದು ಬೆಮರ್ದಳ್ ಅಕ್ಷಯ ಸೌಗಂಧಿಯಳ್‍ಪಕ್ಷಿವಾಹನ ಮಾಡಿದ ಉಪಕಾರ ಲಕ್ಷಿಸಿ ಹಾಯೆಂದಳು ೯
ಹಾ ಹಾ ಕೈತವ ಮೀನ ಜೃಂಭ ಕಮಠ ಹಾ ಹೈಮದೃಘ್ಘಾತಕಹಾ ಹಾ ನಿಷ್ಕರುಣಾಂಗ ಶಿಕ್ಷಕ ಹರೆ ಹಾ ಹಾ ಬಲಿರ್ವಂಚಕಹಾ ಮಾತೃ ಮೃಗಾರ್ದ ಜಾರವ್ರತ ಹಾ ಹಾ ಹಾ ಕಲಿರ್ಮಾರಕಹಾ ಹಾ ಮದ್ರ‍ಗಹ ದೂರಕ ಪರಸಖ ಆಶಾಬ್ಧಿ ಸಂಶೋಷಕ೧೦

ಪದ
ತಾಳಿನ್ನು ತಾಳೆಂದು ತವಕದಿ ಸವತಿಯಮೇಲೆ ಕೋಪಿಸಿ ಸತ್ಯಭಾಮೆಜಾಲಕ ಮಾಲೆಯ ಹರಿದು ಚಿಮ್ಮಿದಳತ್ತಮೇಲೆಣ್ಣೆಗಂಟ ಹರಹಿದಳು ೧೧
ಮೂರ್ಛೆಯೊಳ್ಮೈಮರೆದಂತೆ ತೇಲ್ಗಣ್ಣ ಹಾಕಿದುಶ್ಚಿಹ್ನ ಲೀಲೆಯ ತೋರೆನಿಶ್ಚಲ ಭಾವೆಯನರಿತೆತ್ತಿ ಒಯ್ದರುಒಚ್ಚೇರೆಗಂಗಳೆಯರು ಬೆದರಿ೧೨

ಶ್ಲೋಕ
ಧೈರ್ಯಂಗೆಟ್ಟ ಮೃಗೇಂದ್ರ ನಾರಿಯಿವಳೊ ನ್ಯೆರಾಶ್ಯ ಬಳ್ಳ್ಯಿಹಳೊವೈಮಾನಿಕರ ದೇವತ್ಯಾಕೆ ಮುನಿದಳಯ್ಯಯ್ಯೊ ಸೌಜನ್ಯಳೊಮಯೂರಭ್ರಮುಡೇಳ್ ಮಹಾಪತಿವ್ರತೇಳ್ಮತ್ತೇಭ ಗಾಮಿನಿಯಳ್‍ಕೈವಲ್ಯಜ್ಞರು ಬಲ್ಲರೀಕೆಯ ಬಗೆ ಕಾಯಯ್ಯ ಕೃಷ್ಣಯ್ಯನೆ ೧೩
ಎತ್ತೊಯ್ದು ಮೃದು ತಲ್ಪ ಮಂಚಕವಳ ಮತ್ತಾಲವಟ್ಬೀಸಲುಫೂತ್ಕಾರಂ ಕಿವಿಯೊಳ್ಪೂರೈಸಿ ನುಡಿಸಲ್ಸತ್ಯಂಗನೆ ಸುಮ್ಮನೆಪ್ರತ್ಯುತ್ತರಗೊಡದಿರಲು ಬೆದರಿವರ್ಚಿತ್ತಜನೈಗ್ಹೇಳಿದರುಮುಕ್ತಕೇಶಿಯ ವಾರ್ತೆ ಕೇಳಿದು ಬಹು ಚಿತ್ರವಿಚಿತ್ರೆಂದನು ೧೪

ಪದ
ದೂತೇರ ನುಡಿಗ್ಯದುನಾಥನು ಮನ್ನಿಸಿಆತುರದಲಿ ನಡೆತಂದುಪ್ರೀತಿಗಗ್ಗಳೆ ಸತ್ರಾಜಿತ ಸಂಜಾತಳೆನೀತವೆ ನೀ ಮುನಿದಿಹುದು ೧೫
ಎಂದು ಮಂಚದಲಿ ಕುಳಿತು ಪ್ರಾಣನಾಥೆ ಬಾಇಂದುವದನೆ ಮಾತನಾಡೆಕಂದ ಕಂದರ್ಪನಾಣೆ ಕಪಟವಿಲ್ಲೆನ್ನಲ್ಲಿಕಣ್ಣೆರೆದಿತ್ತಲೊಮ್ಮೆ ನೋಡೆ ೧೬

ಶ್ಲೋಕ
ಕಸ್ತೂರಿ ತಿಲಕಿಲ್ಲ ನಿನ್ನ ಪಣೆಯೊಳ್ಮುತ್ತಿನ ಬೊಟ್ಟಿಲ್ಲವೆಮತ್ತೇನ್ಭೂಷಣವೇಣಿ ನಿನ್ನ ನೊಸಲೊಳ್ಮುತ್ತಿನ ಮಣಿ ಇಲ್ಲವೆರತ್ನಾಂಕಾಭರಣಿಲ್ಲ ನಿನ್ನ ಶ್ರುತಿಯೊಳ್ಮತ್ವಜ್ರದೋಲಿಲ್ಲವೆಹತ್ತೆಗಟ್ಟಿದ ನಿಷ್ಕಕಂಠ ಪದಕಿಲ್ಲ ಒತ್ತಾದ ಹಾರಿಲ್ಲವೆ ೧೭
ವ್ಯತ್ಯಸ್ತ ಸ್ತನಪಟ್ಟಿಕೆ ರುಚಿರ ಶ್ರೀ ಗಂಧಾನುಲೇಪಿಲ್ಲವೆಸ್ವಸ್ತಂಬ್ರ ಸ್ಮರಣಿಲ್ಲವೆ ಮಮಸಖಿ ಸ್ವಸ್ಥಾಗುಸುರ್ಭಾವೆ ನಂಬು ಸ್ತ್ರೈಣರ್ಬಗೆ ತೋರಿದೆ ಸ್ವಸುಖದಿ ತಾ ಸ್ತ್ರೈಣನಲ್ನಿಶ್ಚಯಹೇ ಸ್ತ್ರೀರತ್ನ ಶಿಖಾಮಣಿ ರಮಣಿ ಕೇಳ್ದುಶ್ಚಿತ್ತ ಮಾಣೆಂದನು ೧೮

ಪದ
ಈ ಪರಿ ಭಾವೆಯ ಚರಣದೆಡೆ ಕುಳಿತುಶ್ರೀಪತಿ ಪ್ರಾರ್ಥನೆ ಮಾಡೆತಾ ಪತಿಯೊಡನೊಂದು ಮಾತನಾಡಳು ಸತಿತಾಪ ದ್ವಿಗುಣಿಸಿತು ಕೇಳಿ ೧೯
ಮಾನಭಂಗವ ಮಾಡಿದ ಮೇಲೆಂತು ಬಹುಮಾನವನೊಲ್ಲದಿಹ ಸತಿಯ ತಾನೆತ್ತಿ ತೊಡೆ ಮೇಲೆ ಮಲಗಿಸಿಕೊಂಡು ದುಮ್ಮಾನವ ಬಿಡಿಸುವ ಹರಿಯು ೨೦

ಶ್ಲೋಕ
ಮಾನವ ಮನ್ನಿಸಿದಾಕೆಯ ಸ್ಥಿತಿಯನು ಶ್ರೀನಾಥ ಕಂಡೆಂದನುಏನೆ ಮಾನಿನಿ ನಿನ್ನ ಕೋಪ ಬಿಡದೆ ನಾ ನೋಡಿದೆ ಕಲ್ಲೆದೆಮನುಷ್ಯರೊಳು ದಾವ ಸ್ತ್ರೀಗೆ ಸಲಿಗೆ ತಾನಿತ್ತವಂಗೀ ಬಗೆತಾನೆ ತೋರಿದೆ ವಿಶ್ವ ಶಿಕ್ಷಿಕ ಗಡಾ ಏನಾಶ್ಚರ್ಯ ಗಡಾ ೨೧
ಎಚ್ಚೆತ್ತೆನ್ನೊಳು ಮಾತನಾಡೆ ಪ್ರವುಢೆ ಹುಚ್ಚಾಗದಿರೆಂದನುಸಚ್ಚಿನ್ಮೂರ್ತಿಯ ಮಾತಕೇಳಿ ಕುಳಿತಳ್ವಚ್ಚೆರೆಗಣ್ಮುರಿಯಲುಉಚ್ಚಾರಂ ಗದಗದ್ಗಿಸಿ ಸ್ಛುರಿತಾಧರೆಗಚ್ಚಗ ತಾನೆಂದನುಉಚ್ಚಾರದೊಳಗೊಂದು ನಿನ್ನ ಮನದ ಮಚ್ಚಾಟ ಬೇರೆಂದಳು ೨೨

ಪದ
ನಾರಿ ಪತಿಯ ಬಿಟ್ಟು ದೂರದಿ ಕುಳಿತಳುವಾರೆ ನೋಟದ ಬೆಡಗಿನಲಿ ಜಾರಿದ ಸೆರಗೆದೆಗೇರಿಸಿ ಹೊದ್ದು ಮುರಾರಿಗೆ ವಾರೆ ಮುಖದಿರುಹಿ ೨೩
ಕಪಟನಾಟಕ ನಿನ್ನ ಮಾಯವಗಾಧವುಕಪಟಗಿತ್ತಿಗೆ ದಿವ್ಯ ಕುಸುಮಅಪಮಾನ ಸತ್ಯಳಿಗೆ ಮಾನ ಬಂಗಾರಿಗೆಚಪಲತೆ ತಿಳಿಯದು ನಿನ್ನ ೨೪
ಶ್ಲೋಕ
ಕೇಳ್ನಾರೀಮಣಿ ನಾರದ ಕುಸುಮದ ಅರಳೊಂದು ಪಾದಾಬ್ಜಕೆನಲ್ವಿಂದರ್ಪಿಸಲಾಗ ಯೋಚಿಸಿದೆ ನಾ ಚೆಲ್ವ ಅಮರ್ಭೂರುಹಬಲ್ವಿಂದೀ ನಗರಕ್ಕೆ ನಿನ್ನ ಮನೆಯಂಗಳದೊಳು ಸ್ಥಾಪಿಸುವಉಲ್ಲಾಸಂ ಪಿಡಿದಿರ್ದೆ ನಾ ಕುಸುಮ ಜೇಷ್ಠಳ್ಗೀಯೆ ನೀ ಮುನಿವರೆ೨೫
ಹೂವೊಂದಾಕೆಗೆ ಕೊಟ್ಟೆ ಸಾಕು ತರುವ ನಿವಾರಿಸಿ ವಜ್ರಿಯಗರ್ವಿಂ ನಿನ್ನಿದಿರಲ್ಲಿ ಕೊಂಡು ಬಹೆ ನಾ ಭವ್ಯಾಂಗಿ ಕೇಳ್ಭಾಮಿನಿದಿವ್ಯಾಮೋದಮಯ ದ್ರುವಇಂ ಸುರರಿಗಂ ಸೇವ್ಯಾದುದ ನಿನ್ನಯಭವ್ಯಂಗಳದೊಳಗಿಟ್ಟು ಮೆಚ್ಚಿಸುವೆ ನಾ ನವ್ಯಾದ್ಭುತಂ ನೋಡು ನೀ೨೬
ಬಿನ್ನಣೆ ಮಾತಲ್ಲ ನಿನ್ನಾಣೆ ಭಾವಕಿಇನ್ನು ದುಮ್ಮಾನವೇಕೆನ್ನುತಾಚೆನ್ನಿಗರರಸನು ರಮಣಿಯ ನಳಿತೋಳಚೆನ್ನಾಗಿ ಸೆಳೆದಪ್ಪಿಕೊಳುತ ೨೭
ಎನ್ನ ಶಪಥವಿದು ನಿನ್ನೆತ್ತಿ ಖಗವೇರಿಕನ್ನೆ ಶಚಿಯ ಮನೋಹರನಮನೆಗೆ ಹೋಗಿ ವಿಜಯರವದಿ ತಂದುರನ್ನದ ತರು ನಿನಗೀವೆ ನಾ ೨೮

ಶ್ಲೋಕ
ಹೀಗೆಂದಾಕೆಯಮೆಚ್ಚಿಸಿದನುಆ ವಿಯೋಗಿಯಸಂಯೋಗಿಯಭೋಗ ಭಾಗಾಶೆಯ ನಿಯತಿ ಸುಖಿಯಾ ತ್ರೈಗೇಹ ಸಂಸ್ಥಾನಿಯಾಯೋಗೇಶೇಶ್ವರ ತನ್ನ ಪಾಶ್ರ್ವದಿ ದಿವಿಪ ನಾಗೇಶೈರ್ವಂದಿಯಾಶ್ರೀಗೋವಿಂದ ಮನುಷ್ಯರ ತೆರದಲಿ ಹೀಂಗಾಡಿದ ಲೀಲೆಯ ೨೯
ಬಾ ಸತ್ರಾಜಿತ ಗರ್ಭಸಿಂಧು ಸುಮಣಿ ಬಾ ಸೋಮಬಿಂಬಾನನೆ
ಬಾ ಸೌಂದರ್ಯದ ವಾರಿಧಿ ಪರಮೆ ಬಾ ಬಾ ಸತ್ಯಭಾಮೆ ರಮೆಬಾ ಸಂಧ್ಯಾರುಣದಂಬಕಿ ಸುಕಬರೆ ಬಾ ಸ್ವಚ್ಛ ಬಿಂಬಾಧರೆಬಾ ಸದ್ರತ್ನದ ಭೂಷಣೆ ಪ್ರಸನ್ನವಾಗೆ ಸರ್ವತೋಷಾಂಗನೆ ೩೦

ಪದ
ನಿನಗಾಗಿ ವೇದ ಕದ್ದವನ ಕೊಂದೆನಿನಗಾಗಿ ನನ್ನುದಧಿಯಲ್ಲಿ ನಿನ್ನ ತಂದೆನಿನ್ನ ಕದ್ದವನ ಕೊಂದೆ ನೀ ಬರಲೆತ್ತಿದೆನಿನ್ನ ಭಾಗ್ಯದ ಸಖಿ ಹಿಡಿದೆ ೩೧
ನಿನ್ನ ಭಾರವ ತೆಗೆದೆ ನಿನಗಾಗ್ಯಟವಿಯಲ್ಲಿದ್ದೆನಿನ್ನ ಮುನಿಸು ತಿಳಿಯ ಬಂದೆನಿನ್ನನೆ ಮೆಚ್ಚಿ ಅನ್ಯ ಕನ್ಯೇರ ವ್ರತವನಳಿದೆ ನಿನ್ನ ಪುಣ್ಯದ ಬೆಳಸ ಬೆಳೆದೆ ೩೨

ಶ್ಲೋಕ
ಶ್ರೀ ಶೌರಿ ಸರಸೋಕ್ತಿಯಿಂದ ಸತಿಯ ಲೇಸಾಗಿ ಸಂತೈಸುತಆಸ್ಯಾಬ್ಜಾಂಕಿತ ಸ್ವೇದವನ್ನು ಸುಮುಖವನೊತ್ತಿ ಆರೈದನುಕೇಶ ನೇವರಿಸುತ್ತ ತಾ ಚತುಷ್ಕಪರ್ದಾ ಸತ್ಯಭಾಮಿನಿಗೆಶ್ರೀಶ ಮಂಡಿಸಿ ವೇಣಿಯಲ್ಲಿ ಇಡುವ ಭೂಷಣಗಳನಿಟ್ಟನು ೩೩
ಕಸ್ತೂರಿ ತಿಲಕಿಟ್ಟ ನೇತ್ರಯುಗಕೆ ಮತ್ತಂಜನವಿಟ್ಟನುವೃತ್ತಾದ ಸುಕಪೋಲದೊಳ್ಮಕರಿಕಾ ಪತ್ರಂಗಳನಿಟ್ಟನುಮುಕ್ತಾಹಾರ ಪ್ರವಾಳ ನೀಲಮಣಿಗಳ್ವತ್ತಾದ ಸ್ವರ್ಣಮಾಲಿಕಾರತ್ನಾಂಕಾಭರಣಿಟ್ಟನು ಯದುಪತಿ ಸತ್ಯಂಗನಾಪ್ರಿಯನು ೩೪

ಪದ
ಮುಡಿಗೆ ಮಲ್ಲಿಗೆಯ ಮುಡಿಸಿದ ಮದನನಯ್ಯಮಡದಿಯೆದೆಗೆ ಮಲಯಜವಕಡು ನರ್ಮೋಕ್ತಿಗಳಲ್ಲಿ ಪೂಸಿದ ಘನಶ್ಯಾಮಬಿಡು ನಿನ್ನ ಖತಿಯೆಂದ ದೇವ ೩೫
ಕೋಟಿ ಚಂದ್ರಾರ್ಕ ಲಾವಣ್ಯನರ್ಧಾಂಗಿಗೆಕೋಟಿ ಕೋಟ್ಯಾಭರಣಿತ್ತನೋಟ ಬೇಟದಿ ಮನೋರಥವ ಪೂರೈಸಿದನಾಟಕ ಸೂತ್ರ ನಿರ್ಲಿಪ್ತ ೩೬

ಶ್ಲೋಕ
ಇತ್ಯಾದಿ ಬಹುಮನ್ನಿಸಿ ಗರುಡನ ಹತ್ತಿದ ಸ್ವಸ್ತ್ರೀ ಸಹನಿತ್ಯಾನಂದಮಯ ಸ್ವರೂಪ ಅಮರಾವತಿಗೆ ಪೋಪನ್ನಕಪೃಥ್ವೀಜಾತನು ಮತ್ತನಾಗಿ ಅಮರರ್ಮೊತ್ತವ ಬಾಧಿಸಲುಇತ್ತೀ ಕಾರ್ಯವ ಬಿಟ್ಟು ಮುಂಚೆ ನಡೆದ ಜೊೀತಿಷ್ಮತಿಸ್ಥಾನಕೆ ೩೭
ಹೋಗಿ ಆ ನರಕನ್ನ ಸೀಳಿ ಭೌಮಿಜಗಿತ್ತನು ಭಾಗ್ಯವಸೌಗಂಧಿಯರ ಷೋಡಶ ಸಹಸ್ರರ ಯೋಗಾರ್ಹರಂ ತಂದನುಶ್ರೀ ಗೋಪೀಜನ ಮೋಹನಾಘಹರಣ ಹೋಗ್ವಾಗ ಸ್ವರ್ಧಾಮಕೆಆಗಿತ್ತಾ ಕುಂಡಲ ಅದಿತಿಗೆ ಮ್ಯಾಗಿಂದ್ರನಿಂ ಸಂಪೂಜ್ಯನು ೩೮

ಪದ
ಶಚಿಯರಸನು ಪೂಜಿಸಿದ ಮೇಲೆ ರಾಣಿಯಉಚಿತಕೆ ಮಂದರ ತರುವಮುಚುಕುಂದವರದನು ತರುತಿರೆ ಅಮರರನಿಚಯ ಸಹಿತ ಕಾದಿದಿಂದ್ರ ೩೯
ಗರುಡನ ಗರಿಯ ಗಾಳಿಯಲೆಲ್ಲರೋಡಿಸಿಧರೆಗೆ ತಂದನು ದ್ವಾರಾವತಿಗೆಅರಸಿಯಂಗಳದೊಳು ನಿಲಿಸಿದ ತರುಮೂಲಸರಿ ಲೆತ್ತವಾಡುವ ಎಂದಳಾಗೆ ೪೦

ಶ್ಲೋಕ
ಪಾರಿಜಾತದ ಮೂಲ ಚೈತ್ಯದಲ್ಲಿನ ಶ್ರೀರಂಗ ರತ್ನಾಸನಸಾರಿ ಇಬ್ಬರು ಲೆತ್ತವಾಡುವ ಹರಿ ನಾರೇರ ಮುಂದೆನ್ನನುಭೂರಿ ಮಾನಿಯ ಮಾಡು ಸ್ವಾಮಿ ಎನಲು ಕಾರುಣ್ಯ ವಾರಿನಿಧಿಧಾರಿಣಿಯಲ್ಲಿ ಸ್ತ್ರೈಣನೆಂಬರು ಸಖಿ ಈ ರೀತಿ ಮಾಣೆಂದನು ೪೧
ನೀ ಲೆತ್ತವನು ವೃಕ್ಷ ಮೂಲದಲಿ ಎನ್ನೊಳಾಡ ಒಲ್ಲೆಂದರೆಮೇಲೀ ಅಂಬರ ಭೂಷಣೇಕೆ ವಿಭುವೆ ಮೇಲೀ ಶರೀರೇತಕೆಶ್ರೀಲೋಲ ಶರಣೇಚ್ಛದ ಎನಿಸುವ ನಿನ್ನ ಬಿರುದೇತಕೆಬಾಲೇರ್ಮುಂದಪಹಾಸ್ಯವಾಯಿತೆನುತ ಲೋಲಾಕ್ಷಿ ತಾ ಮುನಿದಳು೪೨

ಪದ
ಹಂಸದುಪ್ಪಳದ ಸುಪ್ಪತ್ತಿಗೆ ಮಂಚದಿ ರಾಜಹಂಸಗಮನೆ ಮುನಿದು ಮಲಗೆಮಾಂಶಳು ಕದವನಿಕ್ಕಿದಳು ೪೩
ನೀನೆಂದ ಮಾತ ನಡೆಸುವೆ ಮುನಿಯದಿರುಮಾನಿನಿರನ್ನೆ ಕದತೆರೆಯೆಶ್ರೀನಾಥ ಹೀಗೆ ಮನ್ನಿಸಿ ಕದತೆರೆಸಿದ ದಯಾನಿಧಿ ಪ್ರಸನ್ವೆಂಕಟೇಶ ೪೪

ಶ್ಲೋಕ
ಲಕ್ಷ್ಮೀ ಭೂರಮಣ ಭವಾಬ್ದಿಮಥನ ಪಕ್ಷೀಂದ್ರ ಸದ್ವಾಹನಮೋಕ್ಷಾಧೀಶ ವಿರಿಂಚಿ ವಾಯು ಫಣಿ ಭೂ ತ್ರ್ಯಕ್ಷೇಂದ್ರ ದೇವಾಯನವಕ್ಷೋಜಾವರ ಸುಂದರಾಗ್ರಣಿ ವರಲಕ್ಷ್ಮೀ ಮನೋನಾಯಕರಕ್ಷಿಸಿದನು ಸ್ವಸ್ತ್ರೀಯ ನೆರೆದನು ಸಾಕ್ಷಾತ್ ಪ್ರಸನ್ವೆಂಕಟ೪೫
ಅನಂತಾಬ್ಬ ಭವಾಂಡ ಹುಟ್ಟಿ [ಸಿ] ಸ[ಲಹು] ವತಾನೇ ಬಯಲ್ಮಾಡುವತಾ ನಿರ್ಲಿಪ್ತ ಸದಾಗಮೈಕ ಸುವಿಜಯಾನಂದ ಪೂರ್ಣಾತ್ಮನುಈ ನಾಟ್ಯವನು ತೋರಿದ ಸುಜನರಿಗಾನಂದ ವೃದ್ಧಿಕರತಾನಾಡಿದನು ಲೆತ್ತವ ಸತಿಗೂಡ ಜ್ಞಾನಿ ಪ್ರಸನ್ವೆಂಕಟ ೪೬

ಪದ
ಮಂಗಳಾತ್ಮಕ ವಿಶ್ವನಾಟಕವಾಡಿದ ಸತ್ಯಂಗನೆಯೊಳು ಲೆತ್ತದಾಟಅಂಗನೆ ಷೋಡಶ ಸಹಸ್ರರ ಸೋಲಿಸುವರಂಗ ಪ್ರಸನ್ನವೆಂಕಟೇಶ ೪೭
ಶ್ರೀ ಸುರವೃಕ್ಷತಳದಿ ರತ್ನಾಭರಣಮಯನೀ ಸೋತೆ ಸತ್ಯಭಾಮಿನಿಯೆಂದರೆ ಹರಿನೀ ಸೋತ್ಯೊ ಪ್ರಸನ್ನವೆಂಕಟೇಶ ೪೮
ಲೇಶ ಹಾಸದಿ ಜಗತ್ಪ್ಪ್ರಪಂಚವ ತೋರುತ್ತವಾಸುದೇವ ಪ್ರಕೃತಿ ಗೂಡಿ
ಈ ಶೋಭಿಸುವ ದ್ವಾರಕಾ ನಗರದಲಿದ್ದಪ್ರಸನ್ವೆಂಕಟೇಶನ ನೋಡಿ ೪೯
ಅನಂತದೇಶದಿ ಅನಂತ ಕಾಲದಿಅನಂತ ಸದ್ಗುಣ ಸಾಂದ್ರದೀನ ದಯಾನಿಧಿ ಪ್ರಸನ್ನಂಕಟ ಕೃಷ್ಣಮನುಷ್ಯಲೀಲೆಯ ತೋರಿದ ೫೦
ಈ ಸತ್ಯಭಾಮಾವಿಲಾಸದ ಪದ್ಯಪದಲೇಸಾಗಿ ನರನಾರಿಯರುತೋಷಭರಿತರಾಗಿ ಪಾಡಲು ಸುಖವೀವಶ್ರೀಶ ಪ್ರಸನ್ನವೆಂಕಟೇಶ ೫೧

(ನು. ೪) ಉಪೇಂದ್ರ
೪೪೩
ಶ್ರೀ ಮಂಗಳ ದೇವಿಗೆ ಜಯ ಜಯ
ಶ್ರೀ ಮಂಗಳ ದೇವಿಗೆ ಜಯ ಜಯ
ಸ್ವಾಮಿಗೆ ಜಯ ಸ್ವಾಮಿನಿಗೆ ಜಯ ಜಯವೆಂದು ಪಾಡಿ ಜಾನಕಿ
ರಾಮಗಾರತಿಯ ಬೆಳಗಿರೆ ಪ.
ಪದುಮಿಣಿಯರು ಪತಿವ್ರ್ರತಾಮಣಿಯರು
ವಿಧುಬಿಂಬದ ಮುಖಿಯರು ಸಖಿಯರು
ಪದುಮರಾಗದ ಹರಿವಾಣದಿ ಹರಿವಾಣದಿ ಹರಿಮಣಿದೀಪದ
ಕದಡಿನಾರತಿಯ ಬೆಳಗಿರೆ೧
ಉಲಿವಂದುಗೆಗಾಲಿನ ಮೇಲಿನ
ಕಲಧೌತದ ಇತ್ತರದುತ್ತರಿ
ಥಳಥಳಿಸುವ ಶಶಿರವಿ ಕೋಟಿಗಳ ಕೋಟಿಗಳ
ಗೆಲುವ ರವಿಕುಲ ತಿಲಕಗಾರತಿಯ ಬೆಳಗಿರೆ ೨
ಅಂಗದ ವಲಯಾಂಗುಲಿ ಮುದ್ರಿಕೆ
ರಂಗುಮಾಣಿಕ ಮುತ್ತಿನ ಸರ
ಬಂಗಾರದ ಮೇಲೆ ವೈಜಯಂತಿ ವೈಜಯಂತಿ ಪದಕವು ತುಳಸಿ
ಶೃಂಗಾರಗಾರತಿಯ ಬೆಳಗಿರೆ ೩
ಇಂದಿರೆ ಸೀತಾರ್ಪಿತಮಾಲಾ
ಕಂಧರ ಭುವನಾವಳಿಗಪ್ರತಿ
ಸುಂದರ ಸದ್ಗುಣ ಸಾಂದ್ರ ಉಪೇಂದ್ರ ಭೂಮಿ
ಜೆೀಂದ್ರ ಲಕ್ಷ್ಮಣಾಗ್ರಜ ರಾಮ ಚಂದ್ರಗಾರತಿಯ ಬೆಳಗಿರೆ೪
ಕುಂಡಲ ಮುಕುಟಾಂಕಿತ ಸನ್ಮುಖ ಸುಭ್ರೂಹಿತ
ಮಂಡಲ ಗಂಡದ
ಪುಂಡರೀಕಾಭಾನಯನದ ನಯನದ ಘನಶಾಮಲವರಕೋ
ದಂಡಗಾರತಿಯ ಬೆಳಗಿರೆ ೫
ಋಷಿಮಖವನು ಈಕ್ಷಿಸಿ ರಕ್ಷಿಸಿ ವಿಷಮಾಚರಿ ರಾಕ್ಷಸಿ ಶಿಕ್ಷಿಸಿ
ವಿಷಕಂಠನ ಧನುವ ಮುರಿಹೊಯಿದು ಮುರಿಹೊಯಿದು ವೈದೇಹಿ ಯ ಘನ
ತುಷಿಸಿದಗಾರತಿಯ ಬೆಳಗಿರೆ ೬
ಹನುಮನ ಕಂಠದ ಸನ್ಮಣಿಗೆ
ಪಣೆಗಣ್ಣನ ಶ್ರೀ ಜಪಮಣಿಗೆ
ನೆನೆವರ ಚಿಂತಾಮಣಿ ಸೀತಾಶಿರೋಮಣಿಗೆ ಶಿರೋಮಣಿಗೆ
ಪ್ರಸನ್ನವೆಂಕಟ ವನಜೋದ್ಭವಪಿತಗಾರತಿಯ ಬೆಳಗಿರೆ೭

೩೪೪
ಶ್ರೀ ರಮಣನ ಪಾದಸೇವನ ಮಾಡಿ ಬುಧರು ಪ.
ಈರಮತದವರನುದಿನ ಅ.ಪ.
ಮಹಾಲಕುಮಿ ಪಾದ ಸರೋ
ರುಹದ್ವಯವ ತೋಳಲಪ್ಪಿ
ಸ್ನೇಹವಾರ್ಧಿಯಲ್ಲಿ ಮುಳುಗಿ
ಗಹನದಿ ಭಜಿಸುತಲಿಪ್ಪ ೧
ವಿಧಿಯು ನೈಜ ಭುಕ್ತಿ ಭರಿತ
ಹೃದಯ ಸರೋವರದಲ್ಲಿಟ್ಟು
ಪದಸರೋಜಾವಧಿ ಇಲ್ಲದೆ
ಮುದದಿ ಭಜಿಸಿ ಸುಖಿಸುತಿಪ್ಪ ೨
ಮತ್ತೆ ತನ್ನ ಭಕ್ತಿಯಲ್ಲಿ
ಸತ್ಪದಾಬ್ಜಗಳನು ತೊಳೆದು
ಸತ್ತ್ರಿಪಥದ ಗಾಮಿನಿಯಳು
ಪೊತ್ತು ಪೂಜೆ ಮಾಡುತಿಪ್ಪ ೩
ಸಾಲಿಗ್ರಾಮವಾಗಿ ಭವನ
ಮೌಳಿತೀರ್ಥದಲ್ಲಿ ತೋಯಿಸಿ
ಮೇಲೆರಡೇಳ್ಜಗಗಳಘವ
ಪಾಳುಮಾಡಿ ಪೂಜೆಗೊಂಬ ೪
ಮುಕ್ತರಿಗೆ ವ್ಯಕ್ತಪಾದ
ಶ್ರೀಕರ ಪ್ರಸನ್ವೆಂಕಟವಲ್ಲಭ
ಸುಖಮುನೀಶಗೊಶನಾಗಿಪ್ಪ ೫

(ಪ.) ಮುರಹರ : ಮುರ
೧೩೮
ಸಮಸ್ತ ನಾಮಮಣಿಗಣ ಷಟ್ಚರಣ ಪದ್ಯಮಾಲಾ
ಶ್ರೀ ರಮಾವರ ಶ್ರುತಿವಿನುತ ಸುಖ
ಸಾರಗೃಹಕೆ ಸರ್ವೇಶ ಸುರದ್ರುಮ
ವಾರಿಜಾಕ್ಷ ಮುಕುಂದ ಮುರಹರ ನಾರಸಿಂಹ ನಮೋ ಪ.
ಗರುಡಗಮನ ಗುಡಾಳಕಾಖಿಳ
ಶರಣಜನ ಸುರಧೇನು ಸುರಮಣಿ
ಕರುಣಸಾಗರ ಕಾಮಿತಾರ್ಥದ ದುರಿತ ಗಜಸಿಂಹಾ
ಸರಸಿಜಾಸನ ಸೇವ್ಯ ಮುಕ್ತಾ
ಭರಣ ನಮಿತ ಸುರೇಶ ನಿಶಾಚರ
ಹರಣಶೀಲ ಸದಾಗಮ ಜ್ಞೇಯಾದಿ ಪುರುಷ ನಮೋ ೧
ವಿಶ್ವಗರ್ಭ ವಿಚಿತ್ರಚರಿತ ಶು
ಭಾಶ್ವವದನ ವಿಶಾಲ ವಿಕ್ರಮ
ಶಶ್ವದೇಕ ಸುವ್ಯಾಪ್ತ ಜ್ಞಾನಾನಂದ ಬಲಪೂರ್ಣ
ನಶ್ವರೇಶ್ವರ ಸವಿತರೇಶ್ವರ
ಈಶ್ವರೇಶ್ವರ ವೇದಗೋಚರ
ಸುಸ್ವಭಾವ ನವಾಂಬುದಾಂಗ ಕೃಪಾಳು ಕೃಷ್ಣ ನಮೋ ೨
ಜನಪಮುನಿನುತ ತಾಟಕಾಂತಕ
ಜನಕಜಾವರ ಲಕ್ಷ್ಮಣಾಗ್ರಜ
ಜನಕ ವಾಗ್ವರ ಇಂದ್ರಪೂಜಿತ ಸೂರ್ಯಸುತಪಾಲ
ದಿನಪ ಕುಲಪತಿ ದೀನವತ್ಸಲ
ವನಧಿಬಂಧ ವಿಹಾರ ದಶಶಿರ
ಹನನ ಕಾರಣ ಭರತಪಾಲಕ ರಾಮರಾಜ ನಮೋ ೩
ಪೂತನಾಂತಕ ಶಕಟಮಾರಕ
ವಾತ ಚಕ್ರಾನಿಷ್ಟಹರ ನವ
ನೀತ ಪ್ರಿಯ ದಧಿಸಾರ ಭೋಜಕ ಗೋಪವಧುಲೋಲ
ಶೀತಕರ ಕುಲತಿಲಕ ಶ್ರುತಿವಿ
ಖ್ಯಾತ ಕರಿ ಚಾಣೂರ ಬಕಹರ
‘ಮಾತುಳಾಂತಕ ಪಾರ್ಥಸ್ಥಾಪಕ ಕೌರವಾಂತ ನಮೋ ೪
ಚಕ್ರ ಶಂಖ ಗದಾಬ್ಜಧರ ತ್ರಿ
ವಿಕ್ರಮಾಚ್ಯುತ ವರಹ ವಾಮನ
ನಕ್ರಶಿಕ್ಷಕ ನಾಗರಕ್ಷಕ ನಿತ್ಯತೃಪ್ತ ಹರೇ
ಶಕ್ರ ಗಿರಿಶಾರ್ಚಿತ ಪದಾಬ್ಜ ತ್ರಿ
ವಕ್ರವಧು ಸೌಂದರ್ಯದಾಯಕ
ಅಕ್ರುರಾಭೀಷ್ಟದ ವಿದುರ ಉದ್ಧವವರೇಣ್ಯ ನಮೋಮ ೫
ಮಧುಮಥನ ಕೈಟಭವಿದಾರಣ
ಕುಧರವರ ಆನಂತವರ್ಣಾ
ಭಿಧ ಜನಾರ್ದನ ಸಾಮಗಾಯನ ವೇದ್ಯ ಅನವದ್ಯ
ವಿಧಿ ನಿಷೇಧಾಲಿಪ್ತ ಸತತ ವಿ
ಬುಧ ನಿಯಾಮಕ ನಿರ್ಭಯಾತ್ಮ ತ್ರಿ
ವಿಧ ಜನಾಶ್ರಯ ಕುಶಶಯನ ಶಾರಙ್ಗಪಾಣಿ ನಮೋ ೬
ವಾಸುದೇವ ಕುಭಾರವಾಹಕ
ವಾಸವೇಯ ಕಪಿಲ ಋಷಭ ಮಹಿ
ದಾಸ ಯಜ್ಞಾದತ್ತ ನಾರಾಯಣ ನಿರಾಮಯ ಭೋ
ಶ್ರೀಸನಾತನ ಸಕಲಭುವನ ನಿ
ವಾಸ ಸಂಕರುಷಣ ಸದಾಸ್ಮಿತ
ಹಾಸ ದಿವಾಕರೇಕ್ಷಣ ಸ್ವಪ್ರಕಾಶ ನಮೋ ೭
ಶೇಷಶಯನ ಜಗಚ್ಚರಾಚರ
ಪೋಷಕಾಧಾರಕ ಸ್ವಜನ ಹೃದ್
ಭೂಷಣಾಪರಿಚ್ಛಿನ್ನ ಅಪ್ರಮೇಯಾದಿ ಶ್ರುತಿವಕ್ತ
ಘೋಷ ವರ್ಣ ಸುಪೂರ್ಣ ವಾಚ್ಯಾ
ಶೇಷ ದೋಷವಿದೂರ ಖಳಜನ
ಭೀಷಣಾಪ್ರಾಕೃತ ಅನುಪಮ ಪರಮಪುರುಷ ನಮೋ ೮
ಇಹದ್ಭಯ ಕ್ಷಯಕರ ಗುಣತ್ರಯ
ರಹಿತ ವೃದ್ಧಿ ಹ್ರಾಸವರ್ಜಿತ
ವಿಹಗ ತೈಜಸ ಪ್ರಾಜ್ಞ ವಿಶ್ವಾವಸ್ಥತ್ರಯದಾತಾ
ಅಹಿತನಾಶ ಪರೇಶ ಗಹನಾತ್
ಗಹನ ಅವ್ಯಯ ಅತಿಶಯಾದ್ಭುತ
ಬಹುಳ ಜೀವಾಂತರಿಯ ಅಂತರ್ಬಹಿಃಸ್ವತಂತ್ರ ನಮೋ ೯
ಪೂರ್ಣ ಕಾಮಾಂಬೋಧಿ ಶ್ರೀವಟ
ಪರ್ಣತಲ್ಪ ಪರಾತ್ಪರಾಪ್ರತಿ
ವರ್ಣ ನಿಗಮಾಗಮ ಅತಕ್ರ್ಯಾನಂತ ಸದ್ಗುಣ ಧೇ
ನಿರ್ಣಯಾತೀತಾನಿರುದ್ದ ಸು
ಖಾರ್ಣವಾಚ್ಯುತ ಸೌಖ್ಯಕರ ನವ
ಕೀರ್ಣ ವಿಗ್ರಹ ಪದ್ಮನಾಭ ಉದಾರಲೀಲ ನಮೋ ೧೦
ಮೋಕ್ಷವಲ್ಲಭ ಭವಮಲಘ್ನ ಮು
ಮುಕ್ಷುವರದ ಮುನೀಂದ್ರ ಸುಮನೋ
ಧ್ಯಕ್ಷ ದಾಮೋದರ ದಯಾಪರ ಜಿತದಿತಿಜ ಸಮರ
ಭಿಕ್ಷುಕಾನ್ವಯಪ್ರಿಯ ಸಮಾಧಿಕ
ಪಕ್ಷ ಸೃಷ್ಟ್ಯಾದ್ಯಷ್ಟ ಕಾರಣ
ದಕ್ಷಾಧ್ವರಹರ ಬ್ರಹ್ಮ ನಿವಹಾದ್ಭಿನ್ನರೂಪ ನಮೋ ೧೧
ಕಂಠ ಕೌಸ್ತುಭ ಭೂಷಣಾಂಶಾ
ಕುಂಠಿತಾತ್ಮೈಶ್ವರ್ಯ ಅಶುಭವಿ
ಲುಂಠಕಾಧೋಕ್ಷಜ ಉಪೇಂದ್ರನೆ ಶ್ರೀಶ ಅನಿರುದ್ಧ
ಕುಂಠಿತ ಜನನ ಮರಣ ಶಿರಿ ವೈ
ಕುಂಠಪಾಬ್ಜಾಮ್ಲಾನ ತುಲಸೀ
ಕಂಠಮಾಲಾನ್ವಿತ ಸುಗಂಧ ಜ್ಞಾನಕೋಶ ನಮೋ೧೨
ನಿರ್ಜರೇಷ್ಟದ ನೀತಫಲದನೆ
ದುರ್ಜನಾರ್ದಕ ದೂಷಣಾಂತಕ
ನಿರ್ಜಿತಾಖಿಳ ಸುಜನಪಾಲಕ ನಿಶಾಚರೌಘಹರ
ವರ್ಜಿತ ಕಲುಷ ನಿತ್ಯ ವಿಬುಧರ
ಊರ್ಜಿತರ ಚಾರಿತ್ರವಿಮಲ ಗು
ಣಾರ್ಜಿತೋದಧಿ ವಿಪದಧ್ವಜ ವೈರಾಗ್ಯ ಪುರುಷ ನಮೋ೧೩
ಅಪುಶಯನ ಆದ್ಯಾಪ್ತ ಇಷ್ಟಜ
ನ ಪರಗತಿಪ್ರದ ಈಶ ವರನುತ
ಉಪಮವಿರಹಿತ ಊಧ್ರ್ವಗಪ್ರಿಯ ಋಜು ಭೃನ್ರೂಪಧರ
ಲುಪತ ದುಷ್ರ‍ಕತ ಲೋಕ ಮೋದಕ
ಚಪಲ ಏಕಾನೇಕ ವಿಗ್ರಹ
ಸ್ವಪರ ಐಶ್ವರ್ಯೋಜ ಔದಾರ್ಯ ಸಹಸ್ರ ನಮೋ೧೪
ಕರುಣನಿಧಿ ಖಳಹರ ಗರಾದಪ
ಘರಘರಧಿ ಸಮ್ಯಙÁ್ನಮಕ ಸು
ಚರಿತ ಪ್ರಾಕೃತ ಛವಿರಹಿತ ಜನಪಾಲ ಝಷ ಋಷಭಾ
ಞುರು ಜಗತ್ಪರ್ಯಟನ ಕಮಠ ಡ
ಮರ ಧರೇಢ್ಯನೆ ಗೂಢ ಗುಣಚಿತ್
ಪರ ಕುಧರಧಿಕೋಚ್ಚರ ಜಾರಗ ಧನುಹನ್ ಧನದ ನಮೋ೧೫
ನರಸಖಾಮಿತ ಪಶುಪ ಫಣಿಮದ
ಹರ ಬಲಾನುಜಭರಿತ ವಿಕ್ರಮ
ಮರುತ ಕಾಂಗಯರುಘ್ನ ನೆರಲೇಶ್ವಶುರ ಲಕ್ಷ್ಮೀಶಾ
ವರದರಾಟ್ ಶಶಿವದನ ಷಕೃಸ
ನಿರುತ ಸರ್ವಭುಕ್ ಯಜ್ಞ ಹವ್ಯೇ
ಶ್ವರ ಸ್ವತೃಪ್ತ ಸ್ವಪೂರ್ಣಲಕ್ಷ್ಮೀಧರ ಯಜ್ಞಾಂಗ ನಮೋ೧೬
ಕಪಟನಾಟಕ ಕಾಲ ಕಿತವ ಭ
ಯಪರಿಹರ ಕೀಚಕರಿಪುಪ್ರಿಯ
ಕುಪುರುಷಾಂತಕ ಕೂಬಕೇಶನೆ ಕೈವಲ್ಯಕೀಶ
ವಿಪುಲಕೋಶನೆ ಕೌಶಿಕಮುನಿ ಮ
ಖ ಪರಿಪೋಷಕ ಕಂಬುಕಂಧರ
ತಪನ ಕೋಟಿಪ್ರಕಾಶ ಕಶ್ಯಪಸುತ ಸುರೇಂದ್ರ ನಮೋ ೧೭
ಖರವಿದಾರಕ ಖಾದಿ ಪಂಚಕ
ಭರಿತನಖಿಳ ವ್ರಜಸಖೀಮನೋ
ಹರ ಸುಖುರಪುಟ ಶೋಭಿತ ಖಡ್ಗ ಖೂಚ್ರ್ಛ ಇಷುಪಾಣಿ
ಸುರಸಖೇಳನ ಪರಸುಖೈಕ ಶ
ರಿರ ವಿಶಿಷ್ಟ ಸುಖೋದಯಾಂಕುರ
ವರ ಸುಖೌಘಾಖಂಡಪರಶೋ ದುಃಖಹರಣ ನಮೋ೧೮
ಗಗನನಾಭಾಗಾಧ ಚರಿತ ಗಿ
ರಿಗಣಸೇವ್ಯ ಸುಗೀತಪ್ರಿಯ ಗು
ಪ್ತಗುಣ ಗೂಢಧಿ ಗೇಹ್ಯತ್ರಯಯುತ ಗೈದಿಹನೆ ಗೋಪ್ತಾ
ಸ್ವಗತ ಗೌರವ ಗಂವ್ಹರಾಂಕಿತ
ಸುಗಃನೋತ್ತರ ಶುಭಸುಖಾಕರ
ಸುಗಮ ಸೂಕ್ಷ್ಮ್ಮ ಸುದುರ್ಗಮಾಲಯ ವಿಜಿತರೋಷ ನಮೋ ೧೯
ಘಟಶ್ರವಣ ಘಾತಕ ಲಘಿಮಯುಕ್
ಚಟುಲಗಾತ್ರಾ ಘೀಜನ ಹರಣ
ಪಟು ರಘುದ್ವಹ ಪಿಶಿತಭೋಜಕ ಘೂಕ ಖದ್ಯೋತ
ಕಠಿಣ ಘೇರಟ ಮಾನ ಖಳ ಸಂ
ಕಟ ನಿವಾರಕ ಘೋರ ಯೋಧಕ
ನಟಕಾಘೌಘ ವಿದಾರ ಘಂಟಾಚಾಪ ದೀರ್ಘ ನಮೋ೨೦
ಚಕ್ಷುಷಾಲಯ ಚಾರುಗುಣಚಿತ್
ಕುಕ್ಷ್ಷೆ ಚೀರದ್ವಯ ಚುತೇತರ
ರಕ್ಷ ಚೂಡಾಚೇಷ್ಟ ಚೈದ್ಯಹರಾದ್ಯ ಚೋರಾರೇ
ರಿಕ್ಷಜಾತಾವರ ಚೌರಾಶಿತಿ
ಲಕ್ಷ ಪ್ರತಿಮಾದ್ಯಕ್ಷ ಚಂದನ
ವಕ್ಷ ವನಸ್ರಗ್ಧರ ಋಚಃಸ್ವನ ಪ್ರೀಯಪುರುಷ ನಮೋ೨೧
ಛತ್ರಯುಕ್ ಛಾಯಘ್ನ ಛಿಧ್ವರ
ಕ್ಷುತೃಷಾರ್ದಕ ಛೇದವರ್ಜಿತ
* * * ಸ್ವೇಚ್ಚೈಕಚರ ಇಚ್ಛೋದ್ರೇಕ ಮಾಂದ್ಯಹರ
ಶತ್ರುಭಿತ್ಸಚ್ಛೌರ್ಯ ಭೂಷಿತ
ಸತ್ರಭುಕ ಛಂದೋಮಯಾತ್ಮಕ
ಪುತ್ರ ಪೌತ್ರ ಪ್ರಪೌತ್ರ ಶೋಭಿತ ಸ್ವಚ್ಛಃ ವರ್ಣ ನಮೋ೨೨
ಜಯತರಾನನ ಜಾಡ್ಯಹರಜಿತ
ಭಯನಿಚಯ ಜೀವೌಘರಕ್ಷಯ
ಜುರ್ಯಜಾಸುರ ಜೂಕನುತ ಸುರಜೇಷ್ಠ ಜೈನಧಿಹನ್
ಲಯ ಜಲಾಶ್ರಯ ಜೋತಿರ್ಮಯ ತನು
ವ್ಯಯ ವ್ರಜೌಕಸ ವಂದ್ಯ ಜಂಬುನಿ
ಲಯ ಕುವಲಯನಯನ ಅಜಸ್ರಾನಂದ ಬಲಗ ನಮೋ೨೩
ಝಡಿತಿಚರ ಝಂಝಾಮರುಚ್ಚರ
ಝಡುಪಚರ ಝಿಲ್ಲಿಕ ವನೇಚರ
ಜಡಧಿಚರ ಝೀರಿತ ಸುರ ಝುಂಟಾವಲಯ ಝೂಣಿಚರ (?)
ಒಡನೆ ಝೇಂಕರಿಸುತಲಿ ಝೈಡಿಯು
ದೃಢದಿ ಝೋಂಡಿಯೋಳ್ಚ್ಚರಿಸಿ ಝೌಂಕರಿ
ಸ್ಯೊಡಲಿನೊಳು ಝಂಕಾರಪೂರ್ಣನೆ ಝಷಪತಿಯೆ ನಮೋ೨೪
ಪಟಲಹೈಮ ಕಟಾಹ ಭಂಜಕ
ನಿಟಿಲ ದೃಕ್ ಟೀಕಾರ್ಥಸುಪ್ರಿಯ
ಕಟುಮತಿಘ್ನ ಭವೇಡ್ಯಾ ಟಂಕಾನ್ವಿತ ಕರಾಬ್ಜೇಕಾ
ಜಠರ ಜಡಹ ಕುಠಾರಧರಸತ್
ಕಠಿಣಕರ ಸುಕಠೋರ ಯೋಧ ಕ
ಮಠವಿಕಾರ ಶಠೌಘಸಂಹರ ನೃಹರೆ ಭೃಗುಜ ನಮೋ೨೫
ಕುಂಡಲೀಶ ಷಡಾಸ್ಯ ಸನ್ನುತ
ಪಂಡಿತಾರ್ಚಿತ ಪಾಂಡುರಾಂಬರ
ಮಂಡಲೇಶ ಬಿಡೌಜನುತ ನೃವಿಡಂಬನ ಚರಿತ್ರ
ಪಂಢರಾಪುರ ರಾಜವಿಠಲಾ
ಖಂಡಮತಿ ಪಾಖಂಡ ದೂಷಕ
ಖಂಡಮರಕ ಪ್ರಭುಘ್ನಮುನಿ ಪುಂಡರೀಕವರದ ನಮೋ೨೬
ಪ್ರಣತಪ್ರಿಯ ಪ್ರಣಾಯ್ಯಪ್ರಿಯ ವಿಪ
ಫಣಿಪಪ್ರಿಯ ವಾಣೀಧವಪ್ರಿಯ
ಅಣುಮಹದ್ರೇಣೂಸ್ಥಪ್ರಿಯ ಸುಗಣೇಶ ಪ್ರಿಯಕರನೇ
ಕ್ಷಣ ಕ್ಷಣೈಕ್ಯ ಸುವ್ಯಕ್ತಧಾರಣ
ಗುಣಗಣೋತ್ಪಾಟಣ ರಣೌಘಾಂ
ಗಣ ಭಯೋಚ್ಚಾಟಣ ಗುಣಾಂಕ ಶರಣ್ಯಸುಖದ ನಮೋ೨೭
ತಥ್ಯವ್ರತ ಸತ್ತಾತ್ವಿಕಾಗಮ
ಕಥ್ಯ ತಿಲಮಾತ್ರಾರ್ಪಕೇಷ್ಟದ
ಮಿಥ್ಯದೂಷಕ ತೀರ್ಥಶ್ರವ ತುರ್ಯಾತ್ಮಾತೂರ್ಣಪ್ರಿಯ
ನಿತ್ಯತೇಜಸ ತೈತ್ತಿರಿಯ ಶ್ರುತಿ
ಸ್ತುತ್ಯ ತೋಯಾಯನ ಧೃತೌಷಧ
ಪಥ್ಯ ತಾಂತ್ರಿಕ ಪರಮ ಚೇತಃಪರಮಕಾಲ ನಮೋ೨೮
ಪ್ರಥಮಪುರುಷ ಪೃಥಾತ್ಮಜಾನ್ವಗ
ಮಥಿತವೀರ್ಯ ರಥೀಂದ್ರ ಪರಿಚರ
ಪೃಥಿವಿ ಪೂಜಿತ ಸ್ಥೂಲಕೃತ್ಯಥೇಚ್ಛ ಸ್ಥೈರ್ಯಮತೇ
ಪಥಿಕಸದನ ಯಥೋಕ್ತ ಫಲದ ವಿ
ಪಥರಥೌಘಪ ಸುರಥಚರಣ ಕು
ಪಥಗ ದೂರಕ ಬ್ರಹ್ಮಸ್ತಂಭಾಂತಸ್ಥ ಸ್ವಸ್ಥಃ ನಮೋ೨೯
ದಹರ ವ್ಯೋಮಗ ದಾತೃ ದಾಂತ ಹೃದ್
ಗುಹಸದನ ಕರ್ತ ತುಹಿನಬಿಂಬಗ
ಅಹಿಪದೀಪ್ತ ಮಯೂಖ ದುರ್ಗಾವ್ಯಾಕೃತಾಂಬರಗಾ
ಅಹಿತದೂಷಕ ದೇವ ದೈತ್ಯರ
ದೋಹನ ಕಾರ್ಯಗ ದೌತ್ಯಕರ್ಮಗ
ದ್ರುಹಿಣದೇಹ್ಯಗ ದಂಡಕಾರಕ ದರ್ಪಕಸಹ ನಮೋ೩೦
ಧರ್ಮನಿಚಯಪ ಧಾತು ಸಮುಹಪ
ಕರ್ಮಧಿಷಣಪ ಧೀರಪ್ರಜ್ಞಪ
ನರ್ಮವಾಗ್ಮಿಪ ಧುನಿಕದಂಬಪ ಧೂರ್ಜಟಾಂಕಿತಪ
ಚರ್ಮಖಡ್ಗಪ ಧೇನು ವಿಪ್ರಪ
ಮರ್ಮ ಧೈರ್ಯಾಂಕಿತನಧೋಕ್ಷಜ
ನಿರ್ಮಲಾತ್ಮಕ ಧೌಮ್ಯಗರ್ಗಪ ಧನ್ಯಧನಪ ನಮೋ೩೧
ನಗವಿಧೃತಕರ ನಾಗಗರ್ವಹ
ನ್ನಿಗಮರಿಪುನಾಶಕ ನೀತಪ್ರಭು
ಸುಗುಣಸೇವ್ಯ ನುತಜನಮಂದಾರ ನೂತನಾಬ್ಜಾಂಘ್ರೀ
ಯುಗ ಯುಗಾಂತಕ ನೇಮನೈಷ್ಟಿಕ
ಸುಗುಣನೋದಧಿ ನೌಗ ನಂದಕ
ವಿಗತ ಸ್ನೇಹವಿನಷ್ಟ ಜಗದೋದ್ಧರಣಶೀಲ ನಮೋ೩೨
ಪವನ ಮತಿ ಪರಿಪಾಕ ಬಿಂಬ
ಸ್ತವನನಿರತ ಪಿನಾಕಿಮೋಹನ
ಸುವಧು ಪೀಯೂಷಧರ ಪುಷ್ಪವಿಹಾಸ ಪೂರ್ಣಪ್ರಭಾ
ಕವಿ ವರದ ಪೇಶಲ ಜಟಿಲ ಪೈ
ಲವಿನುತ ಶುಕವಿಪೋಷ ಪೌರಾ
ಣವಿರಚಕ ಪಂಚನಿಶಿ ಭಾರತ ಸೂತ್ರಕರ್ತ ನಮೋ೩೩
ಫಲಿತ ಸದ್ರಸ ಫಾಲಲೇಖಕ
ಲಲಿತ ಸ್ಫೀತಾತ್ಮಕ ಸ್ಫುಟಥಭೃ
ಜ್ವಲ ಮರುತ ಪಯಫೇನ ಭುಕ್ಷತ ಸ್ಫೋಟಾತಂಕಹಾ
ಬಲಬಲದ ಬಾಣಘ್ನ ಬಿಲಗಿರಿ
ನಿಲಯ ಮುನಿ ಹೃನ್ನಿಲಯ ಬುಧ ಮಂ
ಡಲ ವಿರಾಜಿತ ಬೋಧಯುತಕರ ಬಂಧಮೋಕ್ಷ ನಮೋ೩೪
ಭದ್ರಪದ ಭಾವಕ ಭಿಷಗ್ವರ
ರುದ್ರಭೀಕರ ಭುಕ್ತಿದಾ ದಾ
ರಿದ್ರ್ಯದೂರಕ ಭೂರಿಭೂತಿದ ಭೇದವಾದೀಶಾ
ಹೃದ್ರುಜಹನ್ ಭೈಷ್ಮೀಶ ಭೋಜೇ
ಶಾದ್ರಿ ಕುಲಿಶ ಕುಶಸ್ಥಳೋಕ ಸು
ಪದ್ರವಾರ್ದಕ ಭೌಮವರಪ್ರದ ಭಂಗರಹಿತ ನಮೋ೩೫
ಮಕರಧ್ವಜಜಿತ ಮಾಸಖಾಮಿತ
ಭುಕುಲಜೀವನ ಮೀನ ಮುರಲಿಧ
ರಕರ ಮೂಲಕವೀಂದ್ರ ಮೇಧ್ಯಚರಿತ್ರ ಮೈಥುಳಪಾ
ಸುಕರ ಮೋಹಕ ಮೌನಿಪೂಜಕ
ಚಕಿತಕರ ದನುಜೇಂದ್ರ ಕಷಣಾಂ
ಬಕ ಬಕಾಂತಕ ಮಂಜುಹಾಸ ಮಹಾಧಿರಾಜ ನಮೋ೩೬
ಯಜ್ಞ ಭಿಕ್ಷುಕ ಯಾಜ್ಞರತ ಯಿಂ
ದ್ರಾಜ್ಞ ದೂಷಕ ಯೀಷಣಾರ್ದಕ
ಸುಜ್ಞರಾಡ್ಯುಗ ಯೂಗಸಂಭವ ಯೂಥಪೋತ್ತಂಸ
ಅಜ್ಞಭಿದ್ಯೇಕೇಶ ಮೌನಿಗ
ಣಜ್ಞ ಯೌವನ ಪುಂಸಯಂತ್ರಾ
ರ್ಥಜ್ಞ ಪೋಷಕ ಕಿಂಕರೋಧೃತ ಕಾಮುಕಾಷ್ಟ ನಮೋ

೪೦೬
ಶ್ರೀ ವಧೂಧವಗೆ ನೈವೇದ್ಯಕೊಡುವೆ ಸತತ
ಭಾವಶುದ್ಧಿಯಲಿ ಮನೋವಾಕ್ಕಾಯದಿಂ ಪ.
ಪ್ರಥಮಾನ್ನ ಶ್ರೀಹರಿಯ ಭಕ್ತಿ ಕಾಮನ ದೀಕ್ಷೆ
ದ್ವಿತೀಯಾನ್ನ ಶ್ರೀಹರಿಯ ಸೇವಾಸಂಕಲ್ಪವು
ತೃತೀಯಾನ್ನ ಶ್ರೀಹರಿಯ ಮಹಿಮಾತಿಶಯಜ್ಞಾನ
ಚತುರ್ಥಾನ್ನ ಹರಿಗುಣಜ್ಞತೆಯಲಾಸ್ತಿಕ್ಯ ೧
ಐದನೇ ಅನ್ನ ಹರಿಸೇವೆಯಲಿ ಧೈರ್ಯ ಮ
ತ್ತಾದರದ ಭಗವದ್ಧರ್ಮ ಆರನೇ ಅನ್ನ
ಮಾಧವನ ಗುಣವಿವೇಕದಿ ತಿಳಿವುದೇಳನೇ
ಓದನವು ಅನ್ಯಧರ್ಮತ್ಯಾಗ ಮೃಷ್ಟಾನ್ನ ೨
ಹೀಗೆ ಮನೋರೂಪನ್ನ ಸರ್ವೇಷು ವಾಕ್ಯದಿ ಹರಿಗು
ಣೌಘಗಳ ಕವನ ನವಮಾನ್ನದಿಂದ
ಈ ಗೇಹ ದೇಹ ಪ್ರಾಣಾರ್ಪಣೆಯಲಿ ಉದಾರ
ನಾಗುವದೆ ಪ್ರಸನ್ವೆಂಕಟಕೃಷ್ಣಗೆ ದಶಾನ್ನ ೩

೧೮೨
ಶ್ರೀ ವಾದಿರಾಜ ಸಲಹೆನ್ನ ರಾಜ
ಸೇವಕರಿಗಮರ ಭೂಜ ರಾಜ ಪ.
ಪಾವನ ಸುಕೀರ್ತಿ ಚಂದ್ರಿಕೆಯಿಂದ ಥಳಥಳಿಸಿ
ಭೂವಲಯಕಾಹ್ಲಾದವನಿತ್ತೆ ರಾಜ ಅ.ಪ.
ಚತುರ ಹಯಗ್ರೀವ ವಹಿಸಿ ಹೊಳೆವ ದಶ
ಮತಿಶಾಸ್ತ್ರ್ತರಥವ ನಿರ್ಮಿಸಿ
ಶ್ರುತಿ ಪಂಚರಾತ್ರವನ್ನು ವಾಜಿಗೈದು
ಋತು ಭೇದಶರ ಒಗ್ಗೂಡಿಸಿನ್ನೆಸೆದು
ಕ್ಷಿತಿಯರ ದುರ್ವಾದಿಗಳ ಜೈಸಿದೆ ಅ
ಪ್ರತಿ ಮಹಾರಥಿಕನೆನಿಸುವ ಚಕ್ರವರ್ತಿ ರಾಜ ೧
ಬೇಕಾದ ಪುರುಷಾರ್ಥವ ಕೊಡುವ ಗುಣ
ಶಾಖೆಗಳ ಸೊಬಗುದೋರೆ
ಶ್ರೀಕರ ಗ್ರಂಥರಚನೆಗಳ ವನೇಕ ಪತ್ರದವುಗಳಿರೆ
ಆ ಕರುಣ ಲೋಚನ ಕುಸುಮರಸವನುಂಡು
ಝೇಂಕರಿಪ ಕವಿ ಮಧು ಮಕರಂದ ರಾಜಿಸುವ ರಾಜ೨
ಸಾರಾರ್ಥ ಚೋರ ಕುಲದಗಲ ಭೇದಿಸಿ ಸಂ
ಚಾರ ಧರೆಯೊಳಗಿಡಿಸಿ
ಈರಮತಸದ್ವನದಿಹ ಪಂಡಿತ ಚ
ಕೋರಗಳ ನಲಿನಲಿಸಿದೆ
ಧೀರ ವಾಗೀಶಕರವಾರಿಧಿಭವ ವಾದಿವಂದ್ಯ
ವಾರಿನಿಧಿ ನಂದಕರ ಪ್ರಸನ್ವೆಂಕಟಪ್ರಿಯ ೩

೨೮೦
ಶ್ರೀ ವಾಸುದೇವ ಕಾಯೊ
ಈ ವಿಷಯ ಬಾಧೆಗಳನೊದೆದು ಕಳೆದೆಮ್ಮ್ಮಯ್ಯನೆ ಪ.
ತಂದೆ ತಾಯಿಗಳಿಲ್ಲ ಬಂಧು ಬಳಗಿಲ್ಲ ಭವ
ದಂದುಗದಿ ಸಿಲುಕಿ ಬಲು ನೊಂದೆನಯ್ಯ
ಇಂದಿರೆರಮಣ ನೀನೆ ತಂದೆ ಬಾಲಕನ
ಕುಂದು ನೋಡದೆ ಘಕ್ಕನೆತ್ತಿಕೊಂಡು ೧
ಒಂದು ಘಳಿಗೆಯೊಳೊಮ್ಮೆ ಹರಿ ಕೃಷ್ಣ ಮುಕುಂದ
ಎಂದೆನ್ನ ಬಾಯಿಗೆ ಬರಲಿಲ್ಲವೊ
ಮಂದನರರೋಲೈಸಿ ಮಸಿವರ್ಣನಾದೆ ಸಿರಿ
ಕಂದರ್ಪಜನಕ ಕಡುಪಾಪಿ ನಾನಯ್ಯ ೨
ವೈಭವಯುತರ ಕಂಡು ವೈಮನಸಿಯಾಗಿ ವೃಥಾ
ಸುಯಿಗರೆದುಗರೆದು ಕಾಲವ ಕಳೆದೆನೊ
ಧೈರ್ಯವಿಡಿದೊಮ್ಮೆ ನಿನ್ನಯ ಮೂರುತಿಯ ಮುಂದೆ
ಮೈಗೆಡಹಿ ನಮಿಸಲೊಲ್ಲದ ಪಾಪಿಯ ೩
ನೀರ ತಡಿಯಲಿ ಕುಳಿತು ನಾನಾ ಕುವಚನಗಳ
ಪಾರವಿಲ್ಲದೆ ಬೊಗಳಿ ಬೇಸರುವೆನೊ
ಓರಂತೆ ನಿನ್ನ ಕಥೆ ಕೇಳಿ ಕರ್ಣಾಮೃತದ
ಸಾರ ಕೊಳದರ್ಭಕಗೆ ಸ್ಮರಣೆಯನಿತ್ತು೪
ಘನ್ನ ಪಾತಕಿಯು ನಾನಾದರೇನೊ ದಯಾ
ಪೂರ್ಣನೆಂಬೊ ಬಿರುದು ನಿನ್ನದಲ್ಲೆ
ಮುನ್ನಿನಪರಾಧಗಳ ಕ್ಷಮಿಸಯ್ಯ ತಂದೆ ಪ್ರ
ಸನ್ನ ವೆಂಕಟಾಚಲ ನಿವಾಸ ಕೃಷ್ಣ ೫

(ನು. ೧) ಶೀತಲವಾಯ್ತು ಹಾಲಾಹಲ ಹರಗೆ
೩೪೬
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗ
ಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗ
ಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘ
ಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.
ಶೀತಲವಾಯ್ತು ಹಾಲಾಹಲ ಹರಗೆ
ಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆ
ಪಾತಕಿ ಅಜಾಮಿಳನ ಪಾಪವು ಕರಗೆ
ಪೂತರಾಗ್ವರು ಸುಜನರು ಒಳಹೊರಗೆ ೧
ಸಿರಿ ಅರ್ಥ ಮಾಡಲಚ್ಚರವಾದ ಸ್ಮರಣೆ
ಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆ
ವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆ
ಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ ೨
ತ್ಯಾಗ ಭೋಗ ಯೋಗ ಛಿದ್ರ ಮುಚ್ಚುವುದು
ಭೂಗಗನಸ್ಥರ ಪುಣ್ಯ ಹೆಚ್ಚುವುದು
ಕೂಗ್ಯಾಡಿ ಕುಣಿವರಾನಂದ ಫಲವಿದು
ಶ್ರೀ ಗಂಗಾಜನಕನ ತಂದು ತೋರುವುದು ೩
ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅ
ಸಂಪ್ರಜ್ಞಾತಸ್ಥರಿಗೆ ಹರಿಗೋಲು
ಸುಪ್ರಾಪ್ತ ಮುಕ್ತರುಂಬಮೃತ ಕಣಗಳು
ಶ್ರೀ ಪ್ರಾಣನಾಥನ ನಾಮಾವಳಿಗಳು ೪
ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆ
ಮಧ್ವಶಾಸ್ತ್ರಜ್ಞರ ವಚನಾಗ್ನಿಗೆ ಅರಣಿ
ಅದ್ವೈತ ಮತಧ್ವಾಂತಕ್ಕುದಿತ ಸತ್ತರಣಿ ಶ್ರೀ
ಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ ೫

೩೪೫
ಶ್ರೀ ವಿಷ್ಣುಮಹಿಮೆ ಸಂಕೀರ್ತನೆ ಸರ್ವ
ದಾ ವಿಸ್ರ‍ಮತಿಯ ನೀಗಿ ಮಾಡಿ ವೈಷ್ಣವರು ಪ.
ಪುಣ್ಯಮಾರ್ಗವನರಿಯದ ಮೂಢರಿಗೆ
ಉನ್ನತಕುಟಿಲ ಪಾಮರ ಮನುಜರಿಗೆ
ಘನ್ನ ಸಾಧನವಿದೆ ಮತ್ತೊಂದು ಕಾಣೆ
ಪುಣ್ಯಶ್ಲೋಕನ ವಾರ್ತೆ ಕೀರ್ತನೆಯ ಪಠನೆ ೧
ಜನ್ಮ ಮರಣವಿಲ್ಲ ಅವ ಜೀವನ್ಮುಕ್ತ
ಧನ್ಯ ವಿಶುದ್ಧಾತ್ಮ ನಿಜ ಹರಿಭಕ್ತ
ಚಿನ್ಮಯಾಚ್ಯುತನ ಚಾರಿತ್ರ್ಯವಿಸ್ತರವ
ವರ್ಣವರ್ಣಂಗಳಿಂದೆ ಪಾಡಿ ನಲಿಯುತ೨
ಧರ್ಮ ಸುಮಾರ್ಗವರ್ಜಿತ ಕಲಿಯುಗದಿ
ನಿರ್ಮಲಮನ ಹೊಂದಲೀಸದ ಭವದಿ
ಧರ್ಮಪ್ರಭು ಶ್ರೀ ಹರಿಗುಣಕೀರ್ತನೆ
ಉಮ್ಮಯದಲಿ ಮಾಡುವುದು ಹರಿಪ್ರಾರ್ಥನೆ೩
ನಿರುತ ವಿಶುದ್ಧಾಂತರಾತ್ಮ ಶ್ರೀಹರಿಗೆ
ಗುರುಸುಖತೀರ್ಥರ ತೀರ್ಥಜೀವರಿಗೆ
ಹರಿ ಹರಿ ಹರಿ ಎಂದು ಕೂಗಿ ಬಾಳ್ವರಿಗೆ *೪
ಅಘೋರ ಯಮಮಾರ್ಗ ನರಕ ಶ್ರೀ
ಮದ್ಗರುಡಧ್ವಜ ನಾರಾಯಣಾಪವರ್ಗ
ರಾಮ ರಾಮ ರಾಮ ರಾಮ ರಾಮನೆಂಬ
ನಾಮಪಾಠಕರಿಗೆ ಸ್ವಪ್ನದಿ ವಜ್ರ್ಯ೫
ಹೃದಯದಿ ಹರಿರೂಪ ಮುಖದಿ ಸದ್ಗಾನ
ಉದರದಿ ನೈವೇದ್ಯ ಶಿರದಿ ನಿರ್ಮಾಲ್ಯ
ಸುದರ್ಶನಶಂಖಾಂಕಿತ ಭುಜದವರಿಗೆ
ಪದ್ಮನಾಭನ ನಾಮಕೀರ್ತನೆ ಕೈವಲ್ಯ ೬
ಶತಕೋಟಿ ರಾಮಾಯಣ ಕೀರ್ತನೆ ಹನುಮಂತ
ಯತಿ ಶುಕಾಚಾರ್ಯ ಭಾಗವತಶಾಸ್ತ್ರ
ಸತತ ನಾರದದೇವ ಮುನಿತತಿ ನೃಪರೆಲ್ಲ
ರತಿಪತಿಪಿತನ ಪೊಗಳಿ ಮುಕ್ತಾಗಿಹರು ೭
ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆ
ಲಲಿತಸಾಧನವೆನಿಪುದೀ ಕೀರ್ತನೆ
ಬಲು ಶ್ರುತಿ ಮಥಿತಾರ್ಥಸಾರವೆ ಕೀರ್ತನೆ
ಹುಲುಮಾನವರಿಗೆ ದೂರವು ಹರಿಕೀರ್ತನೆ ೮
ಭವರೋಗ ಭೇಷಜ ಹರಿನಾಮಕೀರ್ತನೆ
ಭವವಾರ್ಧಿಪೋತ ಭವಾಟವಾಗ್ನಿ
ಭವ ವಿಧಿಕೀರ್ತಿತಪದ ಪ್ರಸನ್ವೆಂಕಟ
ಭವನದಾಸರು ಸವಿದುಂಬಾಮೃತವು ೯

(ನು.೧) ದಾಶಾರ್ಹಹಿತಕರಣ
೪೦೭
ಶ್ರೀ ವೆಂಕಟೇಶ ಭುವನೇಶ್ವರೇಶ ಪಾಹಿ ವೇ
ದವೇದ್ಯ ಕರುಣಾಢ್ಯ ಗತಮೌಢ್ಯ ಪ.
ಸರ್ವಚೇತನ ಜಡನಿಚಯಪೂರ್ಣ ಹೇ ಸುಪೂರ್ಣ
ಶರ್ವೇಶ ವಿಧಿವಿನುತ ವಿಮಲಚರಣ
ಉರ್ವಿ ಭಾರಕಹರಣ ಶರಣಾನ್ವಯೋದ್ಧರಣ
ನಿರ್ವಾಣಪದಪ್ರದ ನಿತ್ಯಾಂತ:ಕರಣಾ
ನಿರ್ವಚನೀಯಾತಿಶಯಾನಾಥನಾಥ ಸುಗೀತ
ಸರ್ವಾಮರಾರ್ಥಿಸುದಾತ ತಾತ
ಸರ್ವಜ್ಞ ವಾರಣೇಂದ್ರಭರಣ ಹಿತಕರಣ ದಾ
ಶಾರ್ಹ ಹಿತಕರಣ ಸಂಸ್ರ‍ಕತಿ ವಾರ್ಧಿಕರಣ ೧
ಆತ್ಮಾಂತರಾತ್ಮ ಪರಮಾತ್ಮ ಜ್ಞಾನಾತ್ಮ ಪುರು
ಷೋತ್ಮಾನ್ನಮಯ ಪ್ರಾಣಮಯ ಮನೋಮಯಾ
ಧ್ಯಾತ್ಮಪ್ರಿಯ ಮಾಪ್ರಿಯ ವಿಬುಧಜನಸ್ವಪ್ರಿಯ
ಆತ್ಮವೈಭವಪ್ರಿಯ ಭಕ್ತಪ್ರಿಯ
ಆತ್ಮೀಯ ವೀರ್ಯ ಔದಾರ್ಯೋದ್ರ‍ಧತಟಂಕ
ಆತ್ಮ ಅನಂತ ನಿಕುರುಂಬ ಬಿಂಬ
ಆತ್ಮ ನಿವೇದನ ಬಲೀಂದ್ರ ನುತ ಉಪೇಂದ್ರ ನಿ
ತ್ಯಾತ್ಮ ಗುಣವೃಂದ ದಯಾಸಾಂದ್ರ ವಿಭೋ ಸಿಂಧೋ ೨
ಸೃಷ್ಟಿ ಸ್ಥಿತಿ ಲಯ ನಿಯಮ ಜ್ಞಾನಾಜ್ಞಾನ ಬಂಧ ಮೋಕ್ಷಾ
ದ್ಯಷ್ಟ ಕಾರಣ ಸದಾಸಾಧುಪಕ್ಷ
ದುಷ್ಟಹರ ದುರಿತತಮೋಭಾನು ಬುಧ ಸುರಧೇನು
ವಿಷ್ಣು ಜನರಕ್ಷ ಸದ್ದೀಕ್ಷ ದಕ್ಷ
ಶಿಷ್ಟಮೂಲ ಪ್ರಕೃತಿ ತುಷ್ಟಿದ ಜಡ ಪ್ರಕೃತಿ
ಪುಷ್ಟಿಕರ ಸುಲಲಿತ ಶ್ರೀವತ್ಸಪಕ್ಷ
ಸ್ಪಷ್ಟಲೀಲಾದಿ ನಾರಾಯಣ ನಿರಾಮಯ
ವೃಷ್ಣೀಶ ಸಾಷ್ಟ ಸಾಪರಾಗತಿ ೩
ಬುದ್ಧೀಂದ್ರಿಯ ಪ್ರಾಣವರ್ಧಕ ಕೃತೀಶ ಅನಿ
ರುದ್ಧ ಪಾಲನಪರ ಪ್ರದ್ಯುಮ್ನ ವಿಭೋ
ರುದ್ರ ನಿಯಂತಾರ ಹಂತಾರ ಸಂಕರ್ಷ
ಣಾದ್ಯ ವಾಸುದೇವ ಸನ್ಮೋಕ್ಷಪ್ರದ
ಸದ್ಧಾಮತ್ರಯಗ ಶ್ರೀಪದ್ಮನಾಭಾಚ್ಯುತ ಮು
ಕ್ತಿದಾತ ಗಾತ್ರ ಅತ್ಯದ್ಭುತಾರ್ಥ
ಶುದ್ಧಕರ ನಾಮಾಪ್ತ ಕಾಮಾಪ್ರಮೇಯ ಸ
ಮೃದ್ಧ ಸುಖಗಾತ್ರಾಬ್ಜನೇತ್ರ ಮಿತ್ರ ೪
ಸತ್ಯವ್ರತ ಪಾಲಾಬ್ಧಿ ಕೀಲನಸೃಕ್ಕೋಲ ಖಳ
ದೈತ್ಯಜಸುಶೀಲಪ್ರಿಯ ವಟು ನೃಪಕುಲ
ಹರ್ತ ದ್ವಿಜಕರ್ತ ದಶವಕ್ತ್ರ್ತಮಾರಕ ನಮಿತ
ಪಾರ್ಥಪದ ಶುದ್ಧೋದನ ಚಿತ್ತಹರಣ
ಮತ್ತ ಕಲಿಹರ ಧರ್ಮಸ್ಥಾಪಕ ಪರಾತ್ಪರ
ಸತ್ಯಸಂಕಲ್ಪ ಪ್ರಸನ್ನವೆಂಕಟಪರ ೫

೧೩೯
ಶ್ರೀ ವೆಂಕಟೇಶ ಸಲಹು ವೆಂಕಟೇಶ
ಭಾವಿಕ ಸೇವಕ ಭವಭಯನಾಶ ಪ.
ಸುರಾರಿ ಗಜಗಳೆಂಬ ಗಣಕೆ ಕಂಠೀರವ
ಕರಿರಾಜ ಸಂಕಟ ಛಿತ್ತ ದೇವ
ಪರಮ ಭಾಗವತರ ಸಮೂಹ ಸಂಜೀವನ
ಪುರಹರವರ ಮತ್ತ ವೃಕ(ಷ?) ಮಥನ ೧
ವನಜಭವ ಸವಿೂರರೊಡೆಯ ಶ್ರೀರಮಣ
ಮುನಿ ಹೃದಯಾಲಯ ಪರಿಪೂರ್ಣ
ಫಣಿವರಶಾಯಿ ಪರಾತ್ಪರ ಅಗಣಿತ
ಗುಣಗಂಭೀರ ಜಗದ ದಾತ೨
ಶುಕ ಶೌನಕ ಸನಕಾದಿ ದೇವಋಷಿ
ಸಕಳ ಸುರಭೂಸುರ ರಾಜಾಧೀಶ
ಭಕುತವತ್ಸಲ ಬಾದರಾಯಣ ಹರಿ ಹಯ
ಮುಖ ಪ್ರಸನ್ವೆಂಕಟ ಗಿರಿನಿಲಯ ೩

೩೪೭
ಶ್ರೀ ವೆಂಕಟೇಶನ ಬಿಡಬೇಡಿ ಪ.
ಹಲವು ದೈವಕೆ ಹಲ್ಲು ತೆರೆಯದೆ ಹೊಗಳದೆ
ಛಲದೆ ಮನದಣಿಯೆ ಕೊಂಡಾಡಿ ೧
ಸುರಭಿಯ ಬಿಟ್ಟು ಕಂಡಾವಿನ ಬೆಂಬತ್ತಿ
ತಿರುಗದೆ ಕಣ್ಣುದಣಿಯೆ ನೋಡಿ ೨
ಸ್ಥಿರವಲ್ಲ ಮಿಕ್ಕವರ ವರಂಗಳು ಚರಂಗಳು
ಪರಸನ್ನವೆಂಕಟಪತಿಯ ಬೇಡಿ ೩

(ನು. ೩) ಧೇನುಕಹರ
೪೪೪
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿ
ದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿ ಭಾರತಿ
ದೇವಿಯರು ಸರ ಋಷಿ ಭಾವೆಯರು ಸಂಗೀತ
ಕೋವಿದೆಯರು ಹಸೆಗಿಬ್ಬರನು ಕರೆದರು ಪ.
ಅಗಣಿತ ಬ್ರಹ್ಮಾಂಡವ ರಚಿಸಿ
ನಗುತಲೆ ನುಂಗೇಕಾಕಿಯಲಿ
ಮಗುವೆನಿಸಿ ವಟಪತ್ರದಲಿ ಮಲಗಿದೆ
ಮಲಗಿದಪ್ರಾಕೃತ ನಂದನ
ಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿ
ಯುಗನೆ ಬಾರೆಂದು ಹಸೆಗೆ ಕರೆದರು ೧
ಕಡೆಗಣ್ಣಿನ ನೋಟದಿ ಕಮಲಜ
ಮೃಡಮುಖ್ಯರ ಪಾಲಿಸುವೆ ಪಾ
ಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆ
ಜಗದಂಬೆ ಮೋಹನ ಮಾಯದ
ಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದ
ಕಡೆಗೆ ಬಾರೆಂದು ಹಸೆಗೆ ಕರೆದರು ೨
ಪೂತನಿ ಶಕಟಾಂತಕನೆ ಬಾ ಚಕ್ರ
ವಾತನ ಘಾತಿಸಿದವನೆ ಬಾ
ಪಾತಕಿ ಬಕಧೇನುಕಹರ ನವನೀತಚೋರ ನವ
ನೀತಚೋರ ಭುವನಕಪ್ರತಿ
ಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನ
ತಾತನೆ ಬಾರೆಂದು ಹಸೆಗೆ ಕರೆದರು ೩
ಯಮಳಾರ್ಜುನ ಭಂಜನ ಬಾ ಸಂ
ಯಮಿ ಕುಲ ಮನರಂಜನ ಬಾ
ರಮಣಕಪತಿ ಮದಹರ ಶುಭ ಯಮುನಾವಿಹಾರ
ಯಮುನಾವಿಹಾರ ಗೋಪವಧೂಟೀರ
ರಮಣ ಬಾ ಖಳಕುಲದಮನ ಬಾ ಖಗವರ
ಗಮನ ಬಾರೆಂದು ಹಸೆಗೆ ಕರೆದರು ೪
ಹೆಂಗಳ ಪಣೆಮಣಿಯೆ ಬಾ ಮನ
ಮಂಗಳ ಗುಣಮಣಿಯೆ ಬಾ ಭುವ
ನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದ
ನಗೆಮೊಗದ ನೈದಿಲೆ
ಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನ
ಹೊಂಗಿಳಿಬಾರೆಂದು ಹಸೆಗೆ ಕರೆದರು ೫
ಸ್ವರ್ಧುನಿಯಳ ಜನಕನೆ ಬಾ ಭವ
ಕರ್ದಮ ಶೋಷಕನೆ ಬಾ ಸುರ
ಶಾರ್ದೂಲ ಸದ್ಗುಣಜಾಲ ಸಂಗೀತಲೋಲ
ಸಂಗೀತಲೋಲ ಗೋಪಾಲಕ
ವರ್ಧನ ಬಾ ರಿಪುಚಯ ಮರ್ದನ ಬಾ ಧೃತ ಗೋ
ವರ್ಧನ ಬಾರೆಂದು ಹಸೆಗೆ ಕರೆದರು ೬
ಅಂಬುಜಮಾಲಿನಿಯೆ ಬಾ ಮ
ತ್ತಂಬುಜಜ ಜನನಿಯೆ ಬಾ ಹೇ
ಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆ
ಬಿಂಬಾಧರೆ ಬಹಳ ಉದಾರಿಗ
ಳಿಂಬೆ ಬಾ ಜಗದ ವಿಡಂಬೆ ಬಾ ಕುಂದಣ
ಬೊಂಬೆ ಬಾರೆಂದು ಹಸೆಗೆ ಕರೆದರು ೭
ರಾಜನಗಜ ಮಡುಹಿದನೆ ಬಾ ಮತ್ತ
ಭೋಜೇಂದ್ರನ ಕೆಡಹಿದನೆ ಬಾ
ಈ ಜನನೀ ಜನಕರ ಬಂಧನ ನಿವಾರಣ
ನಿವಾರಣ ಕಾರಣ ಪೂರಣ
ತೇಜ ಬಾ ರಾಜಾಧಿರಾಜ ಬಾ ದ್ವಿಜಸುರ
ಭೋಜ ಬಾರೆಂದು ಹಸೆಗೆ ಕರೆದರು ೮
ವೈದರ್ಭ ಗರ್ಭಜಾ ತೇಜಾ ಅಲ
ರೈದಂಬನ ಮಾತೆ ಬಾ
ವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆ
ಸ್ವಯಂಜ್ಯೋತೆ ದಾತೆ ನಿತ್ಯಮು
ತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನ
ಮೋದೆ ಬಾರೆಂದು ಹಸೆಗೆ ಕರೆದರು ೯
ಪಾಂಡವ ಸ್ಥಾಪಕನೆ ಬಾ ಮಹಾ
ಖಾಂಡವವನ ದಾಹಕನೆ ಬಾ
ಹೆಂಡರು ಹದಿನಾರು ಸಾವಿರದ ನೂರೆಂಟು
ನೂರೆಂಟರನಾಳುವ ಕದನ ಪ್ರ
ಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರ
ಗಂಡ ಬಾರೆಂದು ಹಸೆಗೆ ಕರೆದರು ೧೦
ಮುತ್ತಿನ ಸೂಸಕಳೆ ಬಾ ನವ
ರತ್ನದ ಭೂಷಕಳೆ ಬಾ
ಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆ
ಅಳಿಕುಂತಳೆಯೆ ಮದವಳಿಗನ
ಚಿತ್ತೆ ಬಾ ನಿಜಪತಿವ್ರತ್ತೆ ಬಾ ಸುಪ್ಪಾಣಿ
ಮುತ್ತೆ ಬಾರೆಂದು ಹಸೆಗೆ ಕರೆದರು ೧೧
ತುರಗಾಸ್ಯನ ಹೂಳಿದನೆ ಬಾ ಮಂ
ದರ ಬೆನ್ನಲಿ ತಾಳಿದನೆ ಬಾ
ವರಹ ನರಹರಿ ವಾಮನ ಭಾರ್ಗವ ರಾಮ
ರಾಮರ ರಾಮ ಕೃಷ್ಣ ಯೋಗಿ
ವರನೆ ಬಾ ಕಲಿಮಲಹರನೆ ಬಾ ಶಾಮಸುಂ
ದರನೆ ಬಾರೆಂದು ಹಸೆಗೆ ಕರೆದರು೧೨
ಶಂಕಿಣಿ ಪದ್ಮಿಣಿಯರು ರುಕ್ಮಿಣಿ
ಪಂಕಜನಾಭನ ಪೂಜಿಸಿ ರ
ತ್ನಾಂಕಿತ ಹರಿವಾಣದಲಿ ಆರತಿಯೆತ್ತಿ
ಆರತಿಯೆತ್ತಿ ಪಾಡಿದರು ಅಕ
ಳಂಕನ ಅಹಿಪರಿಯಂಕನ ಪ್ರಸನ್ನ
ವೆಂಕಟರಮಣಗೆ ವಿಜಯವ ಹರಸಿದರು ೧೩

(ಪ.) ಅಂಜನೆಯ ಪುತ್ರ:
೧೫೬
ಶ್ರೀಕರ ಚರಿತ್ರ ಅಂಜನೆಯ ಪುತ್ರ
ಸಕಲ ಲೋಕೇಶ ಸಲಹಯ್ಯ ಬಾಲ ಹನುಮಯ್ಯ ಪ.
ಸಿದ್ಧ ಮುನಿಸೇವ್ಯ ಸೀತಾಶೋಧಕಾಭಯ
ಶುದ್ಧ ವಿಜ್ಞಾನನಿಧೆ ಅಪ್ರಮೇಯ
ಉದ್ಧಟ ದಶಾಸ್ಯಮದಹರಣ ಬುಧಜನಪ್ರಾಣ
ಖದ್ಯೋತ ಕೋಟಿ ತೇಜಾತ್ಮಾಂತರಾತ್ಮ ಶ್ರೀ ೧
ಲಂಕಾ ಭಯಕಾರ ರಘುರಾಮಂಘ್ರ್ರಿ ಕಂಜಭ್ರಮರ
ಶಂಕರಹಿತ ನಿಶಾಚರ ಭೀಕರ
ಪಂಕಜಪ್ರಿಯ ಬಾಲಯತಿ ಕಾರ್ಯಪಾರಶೀಲ
ಸಂಖ್ಯಾವಿರಹಿತವೀರ್ಯ ಸುರವರಾರ್ಯ ೨
ಶತಕೋಟಿ ರಾಮಾಯಣಗಾನ ಪ್ರವೀಣ
ಸೀತಾಸುಖಪದಗ ಸೋಮಕುಲಲಲಾಮ
ಯತಿರೂಪ ತತ್ವಪ್ರದೀಪ ಪೂರ್ಣ ಪ್ರತಾಪ
ಸತತ ಪ್ರಸನ್ನವೆಂಕಟ ಸ್ಮರಣಕರ ೩

೧೩೬
ಶ್ರೀನಾಥ ನಿನ್ನ ನಂಬಿದರಿಗೆ ಭವಭಯ
ಮೇಣುಂಟೆ ಭಕ್ತರ ಪ್ರಾಣ ವೆಂಕಟರನ್ನ ಪ.
ಅರಸು ಒಲಿದ ಮೇಲೆ ಪಿಸುಣರ ಭಯವುಂಟೆ
ಕರಿಗಂಜಿ ಹರಿ ಗುಹೆಯ ಪೊಗುವುದುಂಟೆ
———————-
———————- ೧
ಖಗಮಂತ್ರವಿರಲಹಿಯ ವಿಷ ತಾನುಂಟೆ
ಮಗುಳೆ ಚಂಪಕರಸವ ಅಳಿ¬ೂಂಟಿ ಉಳಿವುಂಟೆ
ನೆಗಳು ಕರಿಯನು ಹಿಡಿದು ತಾನುಳಿಯಲುಂಟೆ
ಜಗದೀಶ ನಿನ್ನ ನೆನೆದವಗೆ ಯಮನಪುರ ಉಂಟೆ ೨
ಘನ್ನ ಪರಸು ಕೈಸೇರಿದಗೆ ದಾರಿದ್ರ್ಯ ಉಂಟೆ
ಉನ್ನತ ವ್ಯಾಘ್ರ ಕೇಸರಿಗಳ ಸೆಣೆಸುವುದುಂಟೆ
ಪನ್ನಗಾದ್ರಿವರದ ಪ್ರಸನ್ವೆಂಕಟೇಶೋಪಾಸ
ಕನ್ನಿಗೆ ಸಂಚಿತ ಪಾಪಾಂಕುರದೋರುವುದುಂಟೆ ೩

೨೭೯
ಶ್ರೀನಿವಾಸನಿಮೇಷ ಮುನಿಶುಭನಾಗಪ್ರಿಯ ಹರೆ
ದೀನನಾಥ ನೀ ಎನ್ನ ಪಾಲಿಸೊ ಪ್ರಾಣಪತಿಬಿಡದೆ ದೇವ ಪ.
ಭೂರಿದುರಿತವು ಬೆನ್ನಬಿಡದಿರಲಾರಿಗುಸುರುವೆನೊ
ಘೋರ ಭವ ಬವಣೆಯ ಅನುಭವವಾರಿಗೊಪ್ಪಿಪೆನೊ
ಮೀರಿ ದಹಿಸುವ ಮೂರುತಾಪದದಾರುಕ್ಕುರೇನೊ
ಸಾರಸೇವಕಮಾನಿ ನರಹರಿ ಸಾರಿದೆನೊ ನಿನ್ನ ದೇವ ೧
ಪೋಕಮನುಜರ ಅನುಸರಣಿಗಳಿಂದಾ ಕಾನನ ಗೆಲುವು
ಸಾಕು ಸಾಕಲ್ಪರ ಸಖತ್ವವು ಸೇವೆಗತ ಸುಖವು
ಯಾಕಿನಿತು ಕ್ಲೇಶವು ನನಗೆ ನೀ ಸಾಕು ನೂಕುಳುಹು
ಶ್ರೀ ಕಮಲಲೋಚನ ಕರುಣಿ ನಿನ್ನ ಬೇಕು ಊಳಿಗವು ದೇವ ೨
ನೀಚ ಸಂಗವನೊಲ್ಲೆ ಬಲುದುರ್ವಾಚ್ಯದಲಿ ನೊಂದೆ
ನಾಚಿಕಿಲ್ಲದೆ ವಿಷಯದಲಿ ಸಂಕೋಚ ನಡೆ ತಂದೆ
ಸೂಚಿಸಿನ್ನಾದರೆ ತವಾಂಘ್ರಿ ಗುಣಾಚರಣೆಯಿಂದ
ಯಾಚಕರೊಡೆಯ ಪ್ರಸನ್ವೆಂಕಟಗೋಚರನೆ ತಂದೆ ದೇವ ೩

(ನು. ೩) ಕಪಿಲ :
೧೩೭
ಶ್ರೀಪತಿ ಪರಾಕು ಮಹೀಪತಿ ಪರಾಕು ಪ.
ಅಂಜನಗಿರಿತಟನಿಲಯ ಪರಾಕು
ಕಂಜನಯನ ಖಳಪ್ರಳಯ ಪರಾಕು
ಅಂಜನೆತನಯ ಸುಸೇವ್ಯಪರಾಕು
ಮಂಜುಳಗಾತ್ರ ಮುಕುಂದ ಪರಾಕು೧
ಕನಕೋದರನ ಪಡೆದನೆ ಪರಾಕು
ಸನಕಾಧಿಕಋಷಿಪ್ರಿಯ ಪರಾಕು
ಮಣಿಖಚಿತಾಭರಣತನು ಪರಾಕು
ವಿನಿರ್ಜಿತ ಮಾಯಕೋಟಿ ಪರಾಕು ೨
ಅನಸೂಯ ತನುರತ್ನ ಪರಾಕು
ಅನಪೇಕ್ಷಿತ ನಿರ್ಯತ್ನ ಪರಾಕು
ಮನುಕನ್ಯಾತ್ಮಜ ಕಪಿಲ ಪರಾಕು
ಚಿನ್ಮಯ ಚಿದ್ಗುಣವಿಪುಲ ಪರಾಕು ೩
ಗುಹ್ಯಾತ್ಗುಹ್ಯ ಸ್ವರೂಪ ಪರಾಕು ಅ
ಸಹ್ಯ ನಿರ್ಲೇಪ ಸುರೇಶ ಪರಾಕು
ಸಿಂಹನರರೂಪ ಹರಿಯೆ ಪರಾಕು
ದಹ್ಯದನುಜಕುಲವೈರಿ ಪರಾಕು ೪
ಭಕ್ತಾಭೀಷ್ಟ ಪ್ರದಾತ ಪರಾಕು
ಮುಕ್ತಾಮುಕ್ತರಿಂ ಸೇವ್ಯ ಪರಾಕು
ನಕ್ತಂಚರ ಕುಲನಾಶ ಪರಾಕು
ಭೋಕ್ರ‍ತ ಪ್ರಸನ್ವೆಂಕಟೇಶ ಪರಾಕು೫

೨೮೧
ಸಂಗವಿಡಿಸು ರಂಗಾ ವಿಬುಧರ
ಹಿಂಗದೆ ನಿನ್ನಯ ನಾಮ ಪಾಡ್ವ ಭಕುತರ ಪ.
ಸಂಗವಿಡಿಯೆ ಭವ ಹಿಂಗುವ ಲೆಕ್ಕದ
ಅಂಗವಣೆಯನರಿತಂಗವಿವೇಕದಿ
ಲಿಂಗವಪುವಿಭಂಗ ವಿಚಾರಕೆ
ರಂಗಿ ವಿಷಯಭಯ ನುಂಗುವರ ೧
ಹರಿದಿನ ನಿಶಿಜಾಗರದ್ಯಶನಂಗಳ
ಮರೆದಂಬುಜಾಕ್ಷನ ಬಿರುದೊಕ್ಕಣಿಸುತ
ಮರುದಂಶರ ಮತವರಿದಿತರಾಗಮ
ಜರಿದು ವಿರತಿಯಲಿ ಪಿರಿದಪ್ಪರ ೨
ಬೆನ್ನಬಿಡದೆ ಊರು ಬನ್ನವಬಡಿಸಲು
ತನ್ನ ವಿಮಲಮತಿಯನ್ನು ಬಿಸಾಡದೆ
ಅನ್ಯವಧುವಿಗೆ ಬಿನ್ನವಿಸದೆ ಪಾ
ವನ್ನವ ಮಾಳ್ಪ ಮಾನವರ ೩
ಸರಿಸ ಸಮನಿಹ ಹರುಷಪಡೆನುತಲಿ
ಸುರಸಂಪದಕೆ ಮನವಿರಿಸಿ ಪರಂಪರಾ
ಅರಸಪದವಿ ಓಕರಿಸಿ ಪರೇಶನ
ಸ್ಮರಿಸಿ ಪದಾಬ್ಜವ ಸ್ಮರಿಸಿಪ್ಪರ ೪
ಅರಿಸಖರೊಳು ಸಮವೆರಸಿ ನೋಡುತ ಹರಿ
ಯಿರಿಸಿದೊಲಂಗೀಕರಿಸಿ ನಿರಂತರ
ಪರಸನ್ನ ವೆಂಕಟಗಿರೀಶ ನಾಮಾಸ್ತ್ರವ
ಧರಿಸಿ ಸಂಸಾರವ ಉತ್ತರಿಸುವರ ೫

(ನು.೩) ಕಂತುವೈರಿಯ ಭಕ್ತ
೧೪೦
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆ
ಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.
ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟು
ಅಂತ್ಯವಸಾನದೊಳೊಯ್ಯ ಬಂದ
ಅಂತಕನವರ್ಗಂಜಿ ಅಣುಗ ನಾರಾಯಣ
ನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ ೧
ಕಾಂತಾರ ತಿರುಗಿ ಕ್ರೀಡೆಗೆ ಜಲದೊಳು ಪೊಕ್ಕ
ದಂತಿ ಅಂಘ್ರಿಯ ನಕ್ರ ನುಂಗೆಳೆಯೆ
ಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲ
ನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ ೨
ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆ
ಕಾಂತ ನಿಮ್ಮಡಿಗೆ ಬಿನ್ನಹ ಕಳುಹೆ
ಕುಂತಿಯ ತನುಜನಿಂದವನ ಕೊಲ್ಲಿಸಿ ಭೂ
ಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ ೩

ಶ್ರೀಸುಬ್ರಹ್ಮಣ್ಯ : ಇವನಿಗೆ
ಸುಬ್ರಹ್ಮಣ್ಯ
೧೬೩
ಸಂತತಂ ತೋಷಂ ದೇಹಿ ತ್ವಂ ದೇಹಿ
ಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ಪ.
ದೇಹಿ ದೇಹಿ ತವ ಸ್ನೇಹ ಸುಖ ವಚಂ
ಬ್ರೂಹಿ ಸುವಚನಂ ಗಹನ ಜ್ಞಾನಂ ೧
ಅಭ್ರೋಡುಪ ನಿಭ ಶುಭ್ರಶರೀರಾ
ದಭ್ರ ದಯಾನಿಧೆ ವಿಭ್ರಾಜಿತಶಂ ೨
ವಾಸವ ಸೇನಾಧೀಶ ಖಳಾನ್ವಯ
ನಾಶ ಸ್ವಜನ ಪರಿಪೋಷ ಸುತೋಷಂ ೩
ಭೂರಿ ಫಲದ ಭಯದೂರ ಕುಮಾರ ಕು
ಮಾರ ಸುಧಾರಾತೀರಗ ಸುಮತಿಂ ೪
ಪನ್ನಗ ನೃಪ ಸುಪನ್ನಗನಗಪ ಪ್ರ
ಸನ್ನವೆಂಕಟಪತಿ ಚಿನ್ಮಯ ಭಕ್ತಿಂ ೫

೪೦೯
ಸಂತರವರೆ ನೋಡಿರೈ ಕೈವಲ್ಯದ
ಸಂತರವರೆ ನೋಡಿರೈ ಪ.
ಸತ್ಯ ರಮೇಶನ ಸೃಷ್ಟಿಯೆ ಸತ್ಯ
ಹತ್ತೆರಡೈದು ತತ್ವವೆ ಸತ್ಯ
ಸತ್ಯಾತ್ಮೇಶರ ಭೇದವೆ ಸತ್ಯ
ಸತ್ಯಾತ್ಮಕನ ಪದ ಸತ್ಯೆನುವ ೧
ಹರಿಭಕ್ತರ ಕಂಡಪ್ಪುತ ನಿರುತ
ಹರಿಸಲ್ಲಾಪ ಕಥಾಶ್ರಯ ಬಲಿದ
ಹರಿ ಭೃತ್ಯರಿಗನ್ನೋದಕನೀವರು
ಹರಿ ಸಂಕೀರ್ತನೆ ಮನಮನೆಯವರು ೨
ಆನಂದಕೆ ಕವಲಿಲ್ಲದ ಸುಖದು:
ಖಾನಂದವನನುಭವಿಸಿ ಬಿಡುವರು
ಆನಂದಮುನಿಯ ಮತಪ್ರಿಯ ನಿತ್ಯ
ಆನಂದ ಪ್ರಸನ್ವೆಂಕಟಪತಿಯವರು೩

೩೪೮
ಸಂತರೆ ಭವದೂರರು ಹಿತಕಾರ್ಯರು ಪ.
ಸಂತರ ಸೇವೆ ಶ್ರೀಹರಿ ಸೇವೆ
ಸಂತರ ಮತವೆ ಹರಿಸಮ್ಮತವು
ಸಂತರ ಮತಿಯೆ ಮುಕುತಿಯ ಗತಿಯು
ಸಂತರ ಪಾದ ಚಿಂತನೆಗಾಹ್ಲಾದ ೧
ಸಂತರ ಗಾತ್ರ ಭುವನ ಪವಿತ್ರ
ಸಂತರ ನೋಟ ಪಾಪಗಳೋಟ
ಸಂತರ ವಚನ ಧರ್ಮವಿರಚನ
ಸಂತರ ಸಂಗ ತೋಷತರಂಗ ೨
ಸಂತರಿಂದೈಹಿಕಾಮುಷ್ಮಿಕ ಸೌಖ್ಯ
ಸಂತರ ಅಭಯವಿರಲಾವ ಭವ
ಸಂತರ ಕಂಡವ ನಿಜ ಸುಖ ಕಂಡ
ಸಂತ ವಿಯೋಗ ತಮಸಿನ ಭೋಗ ೩
ಸಂತರ ಖೇದ ವಂಶ ವಿಚ್ಛೇದ
ಸಂತರ ಪ್ರೀತಿ ಶುಭಪದ ಪ್ರಾಪ್ತಿ
ಸಂತರ ವಾರ್ತಾಖಿಳ ಪುರುಷಾರ್ಥ
ಸಂತರ ಮಹಿಮಿ ಹೊಗಳ್ವಾತ ಪ್ರೇಮಿ ೪
ಸಂತರ ಊರೆ ಎನ್ನ ತವರೂರು
ಸಂತರ ಗತಿಗೋತ್ರರು ಎನಗಾಗಿ
ಸಂತರ ಪದವನಪ್ಪಿದರೊಲಿವ
ಸಂತರಿಗರಸ ಪ್ರಸನ್ವೆಂಕಟೇಶ ೫

೪೧೦
ಸಂದು ತೀರದಿರಲಿ ಆನಂದಭಕುತಿ ಕೃಷ್ಣ
ಹೊಂದಿ ಬಿಡಲಾರೆನೊ ಮುಕುಂದ ನಿನ್ನಂಘ್ರಿ ನಿಷ್ಠೆಯ ಪ.
ಸಿರಿ ಭಾಗವತ ಶಾಸ್ತ್ರ ವರ ಪಂಚರಾತ್ರಾಗಮ
ಪರಮಭಾರತದ ತಾತ್ಪರ್ಯಾರ್ಥದ
ಪರಿಚಯವ ಮಾಡು ಹರಿ ಮಹೋದಾರಿ ಕೃಷ್ಣ
ಗುರು ಮಧ್ವ ನಿರೂಪದ ತರತಮ ಭಾವಾರ್ಥದ ೧
ಜಯರಾಯ ಗುರುಗಳ ವಿಜಯವಾಕ್ಯವ ಕೇಳಿಸು
ನಯ ತಂತ್ರಸಾರ ಮಂತ್ರಾಶ್ರಯ ಬಲಿಸು
ದ್ವಯಸಪ್ತ ಭಕ್ತಿಯಿಂದ ಆಯುಷ್ಯ ಸಾಗಿಸು ತತ್ವ
ಚಯ ಜ್ಞಾನವೆಂಬ ದಿವ್ಯ ಪೀಯೂಷವುಣಿಸುವ ಸವಿ ೨
ಲಲಿತ ಶ್ರೀಮುದ್ರೆ ಊಧ್ರ್ವತಿಲಕ ತಪ್ತಲಾಂಛನ
ಹೊಳೆವ ದ್ವಾದಶನಾಮ ತುಲಸಿದಂಡೆ
ಕಳಧೌತ ಮೀರ್ವಾಂಗಾರ ನಳಿನಾಕ್ಷ ಧಾತ್ರಿಸರ
ಗಳದೊಳೊಪ್ಪುವ ಶ್ಲಾಘ್ಯ ಬಲುವೈರಾಗ್ಯ ಭಾಗ್ಯದ ೩
ಅಹರ್ನಿಶಾತ್ಮಜ ಸವಿ ಸ್ನೇಹವೆ ಶ್ರೀಪಾದದಲ್ಲಿ
ದೇಹ ಧನ ಮನ ಒಪ್ಪಿಸಿಹೊ ವೃತ್ತಿಲಿ
ಬಹಿರಂತಕ್ಷಣಕೆ ರೂಹುದೋರ್ವ ಭಾಷ್ಪ ತನು
ರುಹ ತೋಷಾಬ್ದಿಯೊಳು ಮಗ್ನರಹ ಮಹಿಮರ ಸಂಗ ೪
ಎಸೆವ ಹರಿದಿನ ಅನಿಮಿಷ ಜಾಗರದ ಕೀತ್ರ್ನೆ
ಲಸತ್ತಿರುಳಿನಾಪರವಶನರ್ತನ ಕುಶತಲ್ಪ ಪ್ರಸನ್ವೆಂಕ
ಟೇಶನಂಘ್ರಿ ಲಂಪಟ ನಿಯಮೇರ ತಾಳ ಮೇಳ
ಸುಸುಖ ಸುಬ್ಬಾನ ಸೂರೆ ೫

೩೪೯
ಸಂಸಾರದೊಳು ಸಾರದಾವುದು ಸಾರದಾವುದಯ್ಯ ಸುಖ
ತೀರಥ ಗುರು ಸಾರಿದ ಮತಸೇರಿ ತತ್ವ ವಿಚಾರಿಸದೆ ಪ.
ದಾವ ಕಾಲಕೆ ದಾವ ಧರ್ಮವು
ಈ ವಿಚಾರದಿ ಜೀವಿಸುತ ಮ
ತ್ತಾವ ತರತಮ ಭಾವದಲಿ ರಾ
ಜೀವನೇತ್ರನ ಭಾವಿಸದೆ ೧
ಇಂದಿರಾಧವಗೆಂದು ಆತ್ಮಗೆ
ಹೊಂದಿಸದೆ ಸ್ವಾನಂದ ಬಯಕೆಗೆ
ಇಂದು ನಾಳೆಗೆ ಎಂದು ಅಲಸದೆ
ತಂದೆ ಕೃಷ್ಣಗೆ ವಂದಿಸದೆ೨
ತನ್ನ ಗುರು ಮತಿ ಸನ್ಮತದಿ ತಾ
ಧನ್ಯನಾಗಿ ಚಿನ್ಮಯ ಪ್ರ
ಸನ್ನವೆಂಕಟ ಎನ್ನ
ಯ್ಯನ ವರ ಪೀಯೂಷವುಣ್ಣದ ೩

೧೮೩
ಸಕ್ಕರೆ ಸವಿ ಸಮ ತತ್ವರಸಿಕ
ಸುಖತೀರ್ಥರಲ್ಲದೆ ಶು
ನಿಕುತರ್ಕ ಪರ್ಣಾಶನ ನರಗುರಿ ಬಲ್ಲವೆ
ಮುಕ್ತಿಪಥದ ಹವಣ ಪ.
ಪಯಸ ಪಯವ ನಿರ್ಣೈಸಿ ಸೇವಿಪ ಹಂಸ
ಚಯವಲ್ಲದೆ ಮಲವ
ಬಯಸಿ ಮೆಲ್ಲುವ ವೃದ್ಧ ವಾಯಸ ತಾ ಬಲ್ಲದೆ
ನಯ ರುಚಿ ಹೇಳಾ ೧
ದ್ವಿಪಶಿರ ಪೀಯೂಷವ ಸಾಮಭೇದಜ್ಞ ಮೃಗಾ
ಧಿಪ ಬಲ್ಲಾಮೇಧ್ಯ ಆಮಿಷ
ಚಪ್ಪರಿದುಂಬೊ ಶೃಗಾಲ ಶ್ವಾನ ತಾವು ಬಲ್ಲವೆ
ಆ ಪರವಿಡಿಯ ಸುಖವ ೨
ಮಂಗಳಾಂಬುಜ ಮಕರಂದ ಭೋಜಕ ಶುಭ
ಭೃಂಗವಲ್ಲದೆ ಅಶುಭ
ಗುಂಗಿ ತಾ ಬಲ್ಲದೆ ಸುರಭಿ ಅಸುರಭಿ ಗು
ಣಂಗಳ ಬಗೆಗಳನು ೩
ಸುರತರುವಿಂಧನ ಸುರಭಿ ಪಶು ಪಾ
ಮರಗೆ ಮಣಿಯೆ ಕಲ್ಲು
ವರ ಪೇಯ ವಿಷ ಗುರು ಗುರುಕೃಪೆ ಹಿತ
ದುರುಳನಿಗಪಕಾರ೪
ಸಲ್ಲ ಕರುಧಿ(ಗಿ?)ರುಣೆ ಪಾಲ್ಗರಿದುಣ್ಣಲು
ಬಲ್ಲ ಪೂರಣಬೋಧರು
ಫುಲ್ಲನಾಭ ಪ್ರಸನ್ನವೆಂಕಟಪತಿಯ
ಆಹ್ಲಾದ ಕಾರಣರು ೫

೪೧೧
ಸಖ್ಯವಿರಬೇಕು ಹರಿಭಕ್ತಜನಕೆ
ಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ಪ.
ಅನಾದ್ಯನಂತ ಕಾಲಕ್ಕು ಸಾಯುಜ್ಯಸಖ
ಅನಂತಜೀವರಿಗೆ ಬಿಂಬರೂಪ
ತಾನೆ ಜೀವರಿಗನ್ನಪಾನಿತ್ತು ಪಾಲಿಸುವ
ಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ ೧
ಶ್ರೇಯಸವನೀವ ಪ್ರತಿ ಶ್ರೇಯಸದ ಬಯಕಿಲ್ಲಗೀ
ಶ್ರೇಯಸವನೀವ ಔದಾರ್ಯಗುಣದಿ
ಮಾಯ ದಾರಿದ್ರಾದ್ಯವಿದ್ಯತಮೋ ಭಾನು
ವಾಯುಸಖ ಜ್ಞಾನಿಜನಪ್ರಿಯ ಸಖನೊಳು ೨
ಕ್ಷುತ್ರ‍ತಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್
ಶತ್ರು ಸಂಹಾರಿ ಪರಾತ್ಪರ ಸಖ
ವೇತ್ರ‍ತಜನಧೇನು ವೇದೋಪನಿಷದ್ವೇದ್ಯ
ಮಿತ್ರೇಂದು ಕೋಟಿ ಭ್ರಾಜಿತಗಾತ್ರ ಹರಿಯ ೩
ಕರುಣಾರ್ಣವನು ಶರಣು ಸುರವೃಕ್ಷ ಸುಖವಾರ್ಧಿ
ದುರಿತ ಭವದೂರ ನಿರ್ದೋಷಗುಣದಿ
ಸುರಮುನಿನಿಕರ ಸೇವ್ಯ ಶಾಶ್ವದೇಕೋಭವ್ಯ
ವರ ಸಹಸ್ರಾನಂತ ವಿಗ್ರಹನೊಳು ೪
ಪಾರ್ಥಸಖ ಗೋಪವಧೂಗೋತ್ರಸಖ ಸ್ತ್ರೀಪುತ್ರ
ಮಿತ್ರ ದೇಹೇಂದ್ರಿಯಾತ್ಪ್ರಿಯ ಕೃಷ್ಣ
ಮಿತ್ರವರನೊಬ್ಬ ಸರ್ವತ್ರ ನಾರಾಯಣಾ
ನ್ಯತ್ರ ಸ್ನೇಹವ ತ್ಯಜಿಸಿ ಶ್ರೀ ಪ್ರಸನ್ವೆಂಕಟನ ೫

೩೫೦
ಸತತ ಕಲ್ಯಾಣ ಅಚ್ಯುತ ಭಟರಿಗೆ
ರತಿಪತಿಪಿತನಂಘ್ರಿರತ ಮಹಾತ್ಮರಿಗೆ ಪ.
ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲ
ಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲ
ಖೇದ ಮನಕಿಲ್ಲ ಖಿನ್ನತೆಯು ಮುಖಕಿಲ್ಲ
ಶ್ರೀಧವನ ನವ ಭಕುತಿಶೀಲ ಜೀವರಿಗೆ ೧
ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕು
ಉರಗ ಪೂಮಾಲೆಯಕ್ಕು ಉರಿ ತಣ್ಣಗಕ್ಕು
ಶರಧಿ ಗೋಷ್ಪದವಕ್ಕು ಶರಘಾತ ಬೆಂಡಕ್ಕು
ನರಹರಿಯ ನಾಮವನು ನಂಬಿ ತುತಿಪರಿಗೆ ೨
ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟ
ಆಪತ್ತುಗಳಿಗೋಟ ಆಲಸ್ಯಕೋಟ
ಕೋಪದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟ
ಶ್ರೀ ಪ್ರಸನ್ವೆಂಕಟನ ಭಜಿಪ ಭಕ್ತರಿಗೆ ೩

೧೮೪
ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು ಪ.
ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ
ಭೂಮ ಕವೀಂದ್ರ ವಾಗೀಶರ ೧
ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ ಮಾ
ರನ ಗೆಲಿದ ರಘುವರ್ಯ ರಘೂತ್ತಮ ವೇದವ್ಯಾಸ
ಘನ ವಿದ್ಯಾಧೀಶ ವಿದ್ಯಾನಿಧಿಗಳ ೨
ಸತ್ಯವ್ರತ ದಯಾನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ ಗುರುಕರಪದ್ಮಜ ನಮ್ಮ ಗುರು
ಸತ್ಯಪೂರ್ಣ ಪ್ರಸನ್ವೆಂಕಟ ಪ್ರಿಯರ ೩

೧೮೫
ಸತ್ಯಪ್ರಜ್ಞರಾಯರಂಘ್ರಿಗಳ ಸಂತತ
ಹೃತ್ಪದ್ಮದಲಿ ನೆನೆಯಿರಯ್ಯ ಪುನರಪಿಭವ…..
ತ್ವತಿಯಂ ತೋರಿ ಸಾಪ್ರಾಯ ಪದ್ಧತಿಯ ವಿ
ಪ್ರತಿಯಂ ತೋರುವ ಹೊರೆವ ಪ.
ಸೂತ್ರಾರ್ಥಸ್ತೇಯ ದಾನವರಿಳೆಗೆ ಭಾರಾಗಿ
ವೇತ್ರ‍ತಜನಗಳ ಮತಿಗೆಡಿಸಿ ಬಾಧಿಸುತಿರಲು
ಗೋತ್ರಧರನಾಜ್ಞದಿಂ ಶ್ರೀ ಮಾರುತನು ತನ್ನ
ಯ ತೃತೀಯಾವತಾರದಿಂ
ದ್ವಾತ್ರಿಂಶತ್ ಲಕ್ಷಣಾನ್ವಿತನಾಗಿ ಋಜುಗಣದ
ಗೋತ್ರದಲ್ಲೆಸೆದು ನಿಜಜನನಿಗ್ಹರುಷವನಿತ್ತು
ಧಾತ್ರಿಗೆ ಭೂಷಣದ ಮಣಿಯಂತೆ ಹೊಳೆ ಹೊಳೆವ
ಸುತ್ರಾಮಾಶೇಷವರದ ಅಭಯದ ೧
ವಿಶ್ವವೆಲ್ಲ ಮಿಥ್ಯಪ್ರತಿಷ್ಠಿತವು ಅಲ್ಲವು ನಿ
ರೀಶ್ವರ ಭುವನವೆಂಬ ಕುಮತಿಘಟಿಗಳ ಮಾತ
ರಿಶ್ವ ಕಂಠೀರವ ನೀ ಯತಿ ರೂಪದಲಿ ಸದೆದು
ಸುಸ್ವಭಾವದಲ್ಲಿ ಒಪ್ಪುತ ಸು
ಶಶ್ವದೇಕ ಶ್ರೀ ಹರಿಯು ಜೀವ ಜಗದೊಡೆಯ
ನಶ್ವರಾನಶ್ವರಾರ್ಥೇತರ ಮುಕುಂದೆನ್ನುತ
ತಾ ಸ್ವಕೀಯರಿಗೆಲ್ಲ ಶ್ರುತಿ ಸ್ರ‍ಮತಿ ಸುವಾಕ್ಯದಿಂ
ವಿಶ್ವಾಸವಂ ಬಲಿಸಿದ ಸುಬೋಧ ೨
ಮತ್ರ್ಯದ ಬುಧರು ಬುದ್ಧಿಭ್ರಂಶದಲಿ ಮಾಯಿಮತ
ಗರ್ತದಲಿ ಬಿದ್ದಿರಲು ಕಂಡು ಕರುಣದಲಿ ಸುಖ
ತೀರ್ಥ ಮಧ್ವಾನಂದ ದಶಪ್ರಮತಿಯೆಂಬ ವೇ
ದಾರ್ಥ ನಾಮದಲಿ ಮೆರೆದು
ಧೂರ್ತ ದುರ್ಭಾಷ್ಯಾಂಧಕಾರವಂ ಬಿಡಿಸಿ ವಿ
ದ್ಯಾರ್ಥಿಗಳಿಗೊಲಿದು ಸದ್ಭಾಷ್ಯಗಳ ರಚಿಸಿ ಪರ
ಮಾರ್ಥ ವ್ಯಾಖ್ಯಾನಗಳ ಪೇಳಿ ಉದ್ಧರಿಸಿದ ಸ
ಮರ್ಥ ಮಾರ್ತಾಂಡನಾದ ಸುಖದ ೩
ಮಬ್ಬು ಮುಸುಕಿದ ಪರೆಯ ತೆರೆದ ಸುಜನರ ಹೊರೆದ
ಕೊಬ್ಬಿದ ಕುತರ್ಕಿಗಳ ತರಿದ ಇಂದುವ ಜರಿದ
ಸಭ್ಯರಿಗೆ ತತ್ವಸುಧೆಯೆರೆದ ಮಂತ್ರವನೊರೆದ
ನಬ್ಬ ಗುರು ಪೂರ್ಣ ಬೋಧ
ದುಬ್ಬಿ ತಮಸಿನೊಳು ಮಿಥ್ಯಾತ್ಮಕ ದುರಾತ್ಮರಿಳೆ
ಗುಬ್ಬಸದ ದರ್ಶನಗಳೊರೆಸಿ ಸತ್ಯವ ಮೆರೆಸಿ
ಅಬ್ಬರದ ತಪ್ತ ಮುದ್ರೆಯನಿತ್ತಘವ ಕಿತ್ತು
ನಿರ್ಭಯವ ಪದವನೀವ ಕಾವ ೪
ಇಂಥ ಸಂಕರ್ಷಣನ ಪ್ರೀತಿಯ ಕುವರ ಅಮಲ
ವಾತ ನಿಖಿಳ ಪ್ರಾಣನಾಥ ರಘುಪತಿಯ ಸೇವ್ಯ
ತ್ರೇತೆಯಲಿ ಮೂಡಿ ಪ್ರಖ್ಯಾತಾಕ್ಷಯ ಪ್ರಮುಖ
ಭೂತಳದ ಭಾರರೊದೆದ
ಪೂತನಾರಿಯ ಪಕ್ಷಪಾತದಿಂ ಬಕ ಜರಾ
ಜಾತ ಗಾಂಧಾರ್ಯರಂ ಘಾತಿಸಿದ ಶ್ರೀಸ
ವಿತನಯನಾಜ್ಞದಲಿ ಪಾತಕಿಗಳೊರಸಿದಾ
ದ್ವೈತ ಮತ ಕಾಲನೆನಿಪ್ಪ೫
ಹತ್ತುಪನಿಷದ್ಭಾಷ್ಯ ಸೂತ್ರ ಗೀತಾಭಾಷ್ಯ
ಮತ್ತೆ ಅಣುಭಾಷ್ಯ ಋಗ್ಭಾಷ್ಯ ಭಾಗವತ
ತಾತ್ಪರ್ಯ ವಿಷ್ಣುಸ್ತೋತ್ರದ್ವಯಂ ಕಲ್ಪದ್ವಯಂ
ಹತ್ತು ಪ್ರಕರಣವು ಕೃತಿಯು
ತಂತ್ರಸಾರ ಕೃಷ್ಣಾಮೃತಾಬ್ಧಿಯ ಮಹಾಭಾ
ರತಾನ್ವಯ ವಿವರ್ಣನವೆಂಬ ಸದ್ಗ್ರಂಥ ಮೂ
ವತ್ತೇಳು ರಚಿಸಿ ಮೋಕ್ಷೋಪಾಯವರುಹಿದ ವಿ
ಧಾತ್ರ ಪದಕರ್ತನೀತ ತಾತ ೬
ಭಾಟ್ಟ ಪ್ರಭಾತ ಛೆರಾನಾಯತ (?) ಪ್ರತ್ಯಕ್ಷ ಮತಿ
…………… ಚಾರ್ವಾಕ………………..ಚೌದ್ಧನೆ
…………ಶಂಕರನೆ ಕಡೆಯಾಗಿಪ್ಪತ್ತೊಂದು
ನಷ್ಟ ಭಾಷ್ಯವನಂಘ್ರಿಯಲಿ
ಮೆಟ್ಟಿ ಸದ್ಗುಣ ಶರಧಿ ಹರಿಯು ಭುವನಂಗಳನು
ಹುಟ್ಟಿಸೆತ್ತಿಳಿದಾಡಿ ಮುಕುತಿಯ ನಿಜರ್ಗಿತ್ತು
ಕಷ್ಟವ ಖಳರ್ಗೀವನೆಂದು ಡಂಗುರಿದ
ದಿಟ್ಟಾಲವಬೋಧ ರಾಜತೇಜ೭
ಶ್ರುತಿ ವೇದನಿಕರ ಚಕ್ರವ ಪಿಡಿದು ಬ್ರಹ್ಮತ
ರ್ಕಾವಳಿಯ ಶಂಖದ ಭೀಕರ ಘೋಷದಿಂದ ಜಗ
ತ್ಪ್ಪಾವನನ ಪುರಾಣಗದೆ ಇತಿಹಾಸ ಪಂಚರಾತ್ರ
ಭಾವ ಶಾಙ್ರ್ಗವಿಡಿದು
ಜೀವೇಶ ಭೇದಶರಪಂಚಕದಿ ಬ್ರಹ್ಮಸೂ
ತ್ರಾವಳಿಯಿಂಬಿನ ನಂದಕವ ಧರಿಸಿ ಬೆಂಬತ್ತಿ
ದೇವರಿಪುದುರ್ಮತವ ಓಡಿಸಿದ
ಮಧ್ವನಾರಾಯಣ ಪಾರಾಯಣ ಯತಿ ಸುಮತಿ೮
ತರುಣರವಿ ತೇಜ ಸುಸ್ಮಿತ ಸುಂದರ ನಾನಾ ಸು
ವರ್ಣಕಾಪಿನ ಭ್ರಾತ ಪ್ರಬೋಧ ಮುದ್ರಾಭಯ
ಕರ ಸರೋರುಹದಿಂದ ಮೆರೆವ ವಿಧಿಪನ
ಶರಣಜನ ಮಂದಾರನ
ಪರಮನವರತ್ನದ ಪದ್ಮದ ಮಾಲೆಯಿದು ಪುಣ್ಯ
ಕರವು ವೈಷ್ಣವರ್ಗೆ ಅಘದೋಟ ಮುಕ್ತಿಯ ಕೂಟ
ಗುರುಮೂರ್ತಿಯ ಕೀರ್ತಿ ಪ್ರಸನ್ನವೆಂಕಟಪತಿಯ
ವರ ಪ್ರಧಾನಾಂಗ ಮೂರ್ತಿಯ ವಾರ್ತಿ ೯

೩೫೧
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದು
ನೆಚ್ಚಿ ಅರ್ಚಿಸು ಗಡ ಮನುಜ ಪ.
ವಿರಹ ಶಬ್ದಗಳ ಮೈಯ್ಯೊಲಿದೊಲಿದು ಕೇಳಿ ಸತಿ
ಯರ ಧ್ವನಿಗೆ ಮಗುಳೆ ಮೋಹಿಸುತ
ಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರು
ಹರಿ ಕಥೆಯ ಕೇಳಿ ಬಾಳು ೧
ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆ
ಪರಸ್ತ್ರೀಯ ಸರಸಕೊಳಗಾಗಿ
ನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜ
ಸ್ಪರುಶ ದೊರಕುವುದೆಂತೊ ನಿನಗೆ ೨
ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸ
ಲ್ಲಾಪವು ಪರಸತಿಯರೊಡನೆ
ಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿ
ಪಾಪ ಬುದ್ಧಿಗಳನ್ನು ಜರಿದು ೩
ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತ
ಮ ಸ್ತ್ರೀಯರಧರ ಸುಧೆ ಬಯಸಿ
ಚಿತ್ತವ್ಯಸ್ತವ ಮಾಣದೊಮ್ಮೆಗಾದರೆ ಹರಿ
ಭಕ್ತಿರಸವೀಂಟಿ ಸುಖಿಯಾಗು ೪
ವನಜವನವಂ ಬಿಟ್ಟು ಅಳಿವೃಂದ ಚಂಪಕದ
ನನೆಗೈದಿ ಪ್ರಾಣ ಬಿಡುವಂತೆ
ವನಿತೆಯರ ವಾಸನೆಯೆ ನಿರಯದೌತಣವೆಂದು
ವನಜಾಕ್ಷ ನಿರ್ಮಾಲ್ಯ ಸೂಡು ೫
ಇಂತೆಂಬ ಪಂಚಭೌತಿಕದೇಹದಾಸೆಯೊಳು
ಸಂತತದಿ ಲಂಪಟ ನೀನಾಗಿ
ಅಂತ್ಯದೊಳು ಜರೆ ಕಾಡುವಾಗ ಕಫ ವಾತವೆ
ಮುಂತಾದ ವ್ಯಥೆ ಬೆನ್ನ ಬಿಡವು ೬
ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿ
ವಿಸ್ಮರಣೆ ಬೇಡ ಹರಿಪದಕೆ
ಕಶ್ಮಲಾನ್ವಿತವಾದ ಯೋನಿಗಳ ಬರವರಿತು
ವಿಸ್ಮರಣೆ ಬೇಡ ಹರಿಪದಕೆ ೭
ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬ
ಕ್ಷುಲ್ಲಕರ ನುಡಿಯನಾಡದಿರು
ಎಲ್ಲಿ ಭಾಗವತರ ನಿಕೇತನಾಜ್ಞೆಯ ಕೇಳೆ
ಅಲ್ಲಿ ಮಧುಕರ ವೃತ್ತಿ ತಾಳು ೮
ಹರಿದಾಸರ ವಿಲಾಸವೆ ಎನ್ನ ಸಿರಿಯೆಂದು
ಹರಿದಾಸರಡಿಗೆ ಮಗುಳೆರಗಿ
ಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದು
ಹರುಷ ಪುಳಕಿತನಾಗಿ ಬಾಳು ೯
ದಶಇಂದ್ರಿಯಂಗಳಿಗೆ ವಶವಾಗದಿರು ಏಕಾ
ದಶಿ ವ್ರತಕೆ ವಿಮುಖವಾಗದಿರು
ದಶಶಿರಾರಿಯ ನಾಮದಶನವೆ ಭುಂಜಿಸು
ದಿಶೆಯರಿತೂ ಕಾಣನಾಗದಿರು ೧೦
ಪದ್ಮನಾಭನ ಪಾದಪದ್ಮವೆ ಗತಿಯೆಂದು
ಪದ್ಮಜನ ಪದಕೆ ಪೋಗುವನ
ಪದ್ಧತಿಯವಿಡಿದು ವರ ಪದ್ಮಪತಿ ವಾಸ ತ್ರೈ
ಸದ್ಮನಿಗೆ ಉದ್ಯೋಗ ಮಾಡು ೧೧
ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳು
ಕಡಿಮಿಲ್ಲವೆಂಬ ಪಾಶವನು
ಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲು
ಕಡೆಹಾಯಿಸಬಲ್ಲದಿದು ನಿನಗೆ ೧೨
ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದು
ಜೀವೋತ್ತಮನೆ ವಾಯುವೆಂದು
ಭಾವಶುದ್ಧಿಗಳಿಂದ ಬಯಲು ಡಂಬಕ ಬಿಟ್ಟು
ಜೀವಿಸಲು ಸ್ವರೂಪ ಸುಖವಾಹುದು ೧೩
ವರ ಊಧ್ರ್ವಪುಂಡ್ರ ಹರಿ ಮುದ್ರೆಯನಲಂಕರಿಸು
ಶಿರಿ ತುಲಸಿ ಪದ್ಮಸರ ಧರಿಸು
ಸ್ಮರನ ಶರಕಂಜದರಿಯಾರುವರ್ಗವನೊದೆದು
ಹರಿದು ಬಹ ದುರಿತಗಳ ಸದೆದು ೧೪
ಏಸು ಜನ್ಮದಿ ಬಂದು ನೊಂದೆ ಭವಾಟವಿಯೊಳು
ಮೋಸ ಹೋಗದಿರಿನ್ನು ತಿಳಿದು
ಬೇಸರದೆ ಉರಗಾದ್ರಿವರದ ಪ್ರಸನ್ವೆಂಕ
ಟೇಶನಂಘ್ರಿಯ ಬಿಡದೆ ಭಜಿಸು ೧೫

೩೫೨
ಸರಿಸರಿದೋಡುತಿವೆ ಲವ ತ್ರುಟಿಗಳು
ತಿರುಗದಲಿಟ್ಟಡಿಯ
ಹರಿಗುರು ಪ್ರೀತಿಯ ದೊರಕಿಸು ಪ್ರಾಣಿ
ಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.
ಪರದಾರ ಪರಸಿರಿ ಪರನಿಂದೆ ನಿರುತದಿ
ಚಿರರತಿ ಬೆರತ್ಯಲ್ಲೊ
ಪರಉಪಕಾರ ದಾರಿಯರಿಯದೆ ಬರಿ ಒಣ
ಗರುವಿನಲಿರುವ್ಯಲ್ಲೊ
ನರಹರಿ ಚರಣವಾದರಿಸದೆ ಸ್ಮರಿಸದೆ
ನರರನುಸರಿಪ್ಯಲ್ಲೊ
ಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿ
ನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ ೧
ಸುಖಗಳ ಕಕುಲತೆಗಖಿಳ ಸಾಧಕನಾದೆ
ಭಕುತಿಗಳಿಕೆ ತೊರೆದು
ಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿ
ರಕ್ತಿ ಸರಕುದೋರೈ
ಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕ
ಸುಖತೀರ್ಥ ವಾಕುದೋರೈ
ಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆ
ಮುಕುತಿ ಹೊಂದಿಕೆ ತೋರೈ ಪ್ರಾಣಿ ೨
ಅಶನ ದುವ್ರ್ಯಸನಕೆ ನಿಶಿದಿನ ವಶನಾದೆ
ಶ್ರೀಶ ಭೃತ್ಯೆನಿಸಿಕೊಳ್ಳೊ
ಹುಸಿ ಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆ
ದಶವ ವರಿಸಿಕೊಳ್ಳೈ
ವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀ
ನ್ಯಶಸ ಕೂಡಿಸಿಕೊಳ್ಳೈ
ಹಸಿ ತೃಷೆ ಗಸಣೆಗೆ ಬೇಸರದೆ ಪ್ರಸನ್ವೆಂಕ
ಟೇಶನ ಒಲಿಸಿಕೊಳ್ಳೈ ಪ್ರಾಣಿ ೩

೨೮೨
ಸಲಹಯ್ಯ ಸ್ಮರ ಬೊಮ್ಮ್ಮರಯ್ಯ
ವ್ಯಾಳಶಯ್ಯ ಪಿಡಿಕೈಯ
ನೀಲಮೈಯ ನೀರಜಪ್ರಿಯ ಪ.
ಭವಾರಣ್ಯದಿ ಬಲುತೊಳಲಿ ನಾ ಮಾ
ನವನಾಗಿ ಮದಾಂಧಕನಾಗಿ
ಹೇವಗೆಟ್ಟೆನಯ್ಯ ಹೇಯಬಿಟ್ಟೆನಯ್ಯ
ತವ ಪಾದವ ತೋರೊ ಮಾಧವ ೧
ಎನ್ನ ಭಕ್ತಿ ಗಹನ ವಿರಕ್ತಿ ನಿ
ಧಾನ ತತ್ವನಿರ್ಣಯದ ಸತ್ವ
ಹೀನ ಹೃದಯ ನಾ ಹಿತವನರಿಯೆ ನಾ
ನೀನೆ ಕರುಣಿಸೊ ನಿಜರೊಳಿರಿಸೊ ೨
ನೆನೆವರ ನೆನಪಿನ ಚದುರ
ದೀನತಮ ದಿನಕರ ರಾಮ ಶುಭಾ
ನನ ಶರಣೆಂಬೆ ನಾ ಪ್ರ
ಸನ್ನವೆಂಕಟೇಶ ಶ್ರೀ ಶ್ರೀನಿವಾಸ ೩

೧೪೧
ಸಲಹು ವೆಂಕಟರಮಣ ದಯಾಂಬುಧಿ
ಸಲಹು ವೆಂಕಟರಮಣ ಪ.
ಮಸ್ತಕದೊಳೊಪ್ಪುವ ಮಾಣಿಕ ಮಕುಟದ
ಕಸ್ತೂರಿನಾಮದ ಚೆಲುವ
ವಿಸ್ತರ ಕದಪಿಲಿ ಹೊಳೆವ ಕುಂಡಲ ಪ್ರ
ಶಸ್ತ ವದನ ಜಗಜೀವ ೧
ಎಳೆನಗೆ ತಿಂಗಳ ಕಾಂತಿಲಿ ಹೃತ್ತಾಪ
ಕಳೆವ ಕರುಣಿ ಸಿರಿಕಾಂತ
ಗಳದೊಳು ವನಮಾಲೆ ವೈಜಯಂತಿ ಪದಕ
ಗಳೊಲೆವ ಮಂಗಳಮೂರ್ತಿಮಂತ ೨
ಮುತ್ತಿನ ಸರ ಸರಪಳಿ ಭುಜಕೀರ್ತಿಯು
ಎತ್ತಿದ ಶಂಖಾರಿಪಾಣೆ
ರತ್ತುನ ಮೇಲೊಡ್ಯಾಣ ಕಂಕಣ ಮುದ್ರೆ
ಒತ್ತೆ ಅಭಯವರದನೆ ೩
ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವ
ದುಷ್ಟರ ರಣಜಿತವೀರ
ಇಟ್ಟ ವಜ್ರದ ಕಾಲಂದಿಗೆ ಪಾವುಗೆ
ಮೆಟ್ಟಿದ ಸುರರ ಮಂದಾರ ೪
ಅಗರು ಚಂದನ ಕಪ್ಪುರ ಕೇಶರ ಸುರ
ಭಿಗಳಿಗೆ ಅತಿಪ್ರಿಯ ಅಂಗ
ಮಘಮಘಿಸುವ ಮಲ್ಲಿಗೆ ಸಂಪಿಗೆಯ ಮಾ
ಲೆಗಳ ಪ್ರಸನ್ವೆಂಕಟ ರಂಗ ೫

೧೮೬
ಸಲಹು ಸಲಹು ಗುರುರಾಯನೆ ನ
ನ್ನಾಲಸದೆ ಪಾವನ್ನಕಾಯನೆ ನಾನು
ಹಲವು ದಿವಸ ನಿನ್ನ ನಂಬಿರೆ ದ್ವಿಜ
ಕುಲಮಣಿ ಜನಾರ್ದನಾಚಾರ್ಯನೆ ಪ.
ನಿನ್ನ ಶರಣು ಹೊಕ್ಕ ಭೃತ್ಯರು ತತ್ವ
ಪೂರ್ಣರಾದರು ಪೂತರಾದರು
ನನ್ನ ಮನ್ನಿಸಲಾಗದೆ ದಾತನೆ ವಿ
ದ್ಯೋನ್ನತ ವಿಶ್ವಕೆ ಪ್ರೀತನೆ ೧
ಆ ಬಾಲ್ಯದೊಳು ರಘುಪತಿ ಪಾದ
ಭಜನಾದರ ನಿನಗುಂಟು ಕೋವಿದ
ಈ ಮೇದಿನಿಯಲಿ ಸುಧಾಸುರಸದ
ಬಹು ಸ್ವಾದವ ಬಲ್ಲ ಇಷ್ಟಾರ್ಥದ ೨
ಅಜ್ಞಾನ ಕತ್ತಲೆ ಕವಿದಿದೆ ಅ
ಭಿಜ್ಞನ ಮಾಡಲಿ ಬಾರದೆ ನಿನ್ನ
ಪ್ರಜ್ಞತನದ ಪ್ರಸವ ನಿತ್ಯ
ಆಜ್ಞಾಧಾರಕಗೀಯೊ ಜ್ಞಾನವ ೩
ಭಕ್ತಿ ವೈರಾಗ್ಯ ಸುಜ್ಞಾನ ಸಂ
ಯುಕ್ತ ಮಂಗಳ ಗುಣಾಲಂಕೃತ
ಯುಕ್ತಿ ಸಾಲದು ಹರಿಸೇವೆಗೆ ಸ್ವಪ್ನ
ವ್ಯಕ್ತ ಬೋಧಿಸೆನಗೆ ೪
ತಂದೆ ತಾಯಿ ಆಪ್ತಮಿತ್ರ ನೀ ಗತಿ
ಹೊಂದಿಪ ದುರಿತಘಹರ್ತ ನೀ ಗೋ
ವಿಂದ ಪ್ರಸನ್ವೆಂಕಟೇಶನ ಹೃದಯ
ಮಂದಿರದೊಳು ಪೂಜಾಶೀಲನೆ ೫

(ನು. ೩) ಪ್ರಸನ್ವೆಂಕಟಪತಿ ಪೌತ್ರ
೧೬೦
ಸಲಹು ಸಲಹು ನನ್ನಯ್ಯನೆ
ಸಲಹು ಸಲಹು ಪ.
ಶ್ರೀಗಿರಿವಾಸ ನಾಗವಿಭೂಷ
ಯೋಗಿಜನೇಶಾಘೌಘವಿನಾಶ ೧
ಗಜದ ಸುಚೈಲಿ ಅಜನ ಕಪಾಲಿ
ದ್ವಿಜ ಮೌಳಿ ಅಂಗಜಹರ ಶೂಲಿ ೨
ಸ್ಫಟಿಕ ಸುಗಾತ್ರ ಪಟೂಜ್ವಲ ನೇತ್ರ
ಕುಟಿಲ ಪ್ರಸನ್ವೆಂಕಟಪತಿ ಪೌತ್ರ ೩

(ನು. ೩) ಯೋಗೀಂದ್ರರು
೧೮೭
ಸಲಹು ಸುಖತೀರ್ಥಮತ ಜಲಧಿಚಂದ್ರ
ನಳಿನೀಶಾರ್ಚಕ ಇಂದ್ರ ಇಳೆಗೆ ಸುಮುನೀಂದ್ರ (ಮತೀಂ) ಸಲಹು ಪ.
ಅತುಳ ತತ್ವಾರ್ಥ ಗೋಪ್ರತತಿ ಸಂಪೂರ್ಣ ದು
ರ್ಮತಿ ಮಾಯಿಮತತಮ ವಿಶದಗುಣ
ಸತತ ವಿದ್ವತ ಕುಮುದ ಪ್ರತಿಪಾಲಕನೆ ಕರುಣಾ
ಮೃತ ಭರಿತವದನ ಖಚಿತ ಯಶೋಭರಣ೧
ಸುಜ್ಞಾನ ಸುರಭಿಯುತ ಅಜ್ಞ ಜಂಭಾರಿ ಭಳಿ ವೈ
ರಾಗ್ಯ ಭಕುತ್ಯಾದಿ ವಸುಭಾಗ್ಯಶಾಲಿ
ಯಜ್ಞೇನ(?)ಶುಕನ ಮತವಜ್ಞನ ದಂಭೋಳಿ
ವಾಗ್ರತ್ನಮಾಲಿ ಮುನಿವರ್ಗ ಶುಭ ಮೌಳಿ ೨
ಧೀರ ಯೋಗೀಂದ್ರಕರ ವಾರಿಜೋದ್ಭವ ಯೋಗಿ
ಸೂರೀಂದ್ರ ಭವಕಲ್ಪಭೂರುಹ ಸುತ್ಯಾಗಿ
ಧಾರುಣಿಗೆ ಪ್ರಸನ್ನವೆಂಕಟ ರಾಮ ಪ್ರಿಯವಾಗಿ
ಈರಮತ ಸ್ಥಾಪಿಸಿದೆ ಮೀರಿ ಚೆನ್ನಾಗಿ೩

೪೧೨
ಸಾಧ್ಯವಲ್ಲವು ಮುಕುತಿ ಸಾಧ್ಯವಲ್ಲವು
ಶುದ್ಧ ಸಾತ್ವಿಕನಾಗಿ ತತ್ವಸಿದ್ಧ ಶೀಲರವೆರಸದಿರಲು ಪ.
ಇಷುಭೇದವ ತಾನರಿತು ಸಂತತ
ವಿಷ್ವಕ್ಸೇನನ ಅಂಕವಿಧದೊ
ಳೆಸೆವ ಶ್ರದ್ಧೆಯ ತೋರಿ ಋತುಗಳ
ಗಸಣೆಗಂಜದೆ ಶಶಿಮತನಾಗದೆ ೧
ಕಕುಭಬದ್ಧನೆನಿಸಿ ಹರಿವಿನಾ
ನಿಖಿಳ ವಿಷಯಂಗಳ ಮನ್ನಿಸ
ದಖಿಳ ರಾಮಕರ ತತ್ವವ ಜಪಿಸಿ
ಅಕಳಂಕಮತ ಗುಣಧಿಯ ನಂ¨ದೆ ೨
ಪರನಾರಿಯರಿಗೊಮ್ಮೆ ಮನಸೋ
ತಿರದೆ ಚಿತ್ತದ ಹರಿಯಂ ಮುರಿದು
ಗುರು ಪೂರ್ಣಜ್ಞಾಜ್ಞದಿ ಪ್ರಸನ್ನವೆಂಕಟ
ಅರಸನ ಚರಣವ ಸ್ಮರಿಸದೆ ಬರಿದೆ ೩

೨೮
ಸಾಮಜಗಮನೆ ಕೇಳೀ ಮನ ನಿಲ್ಲದು
ಸ್ವಾಮಿಯ ಕರೆತಾರೆ ನೀರೆ ಪ.
ಯಾತರ ಜನುಮ ಇನ್ಯಾತರ ಬಾಳುವೆ
ಪ್ರೀತಿಯಿಲ್ಲವೆ ಎನ್ನಲ್ಲಿ ಅಗಲಿ
ಧಾತುಗುಂದಿಹ್ಯದು ಮತ್ಯಾತಕೆ ಸಲ್ಲವಮ್ಮ
ನಾಥನಿದಿರಿನಲ್ಲಾಸೆ ಉದಿಸೆ ೧
ಕಣ್ಣ ಕಜ್ಜಲ ನಿಲ್ಲದಿನ್ನೇನು ತರವಮ್ಮ
ರನ್ನದುಡುಗೆ ಭಾರ ತೋರ
ಪನ್ನಗವಾದವು ಎನ್ನ ಹೂವಿನಹಾರ
ಮನ್ನಿಸಿ ಬರಲೊಲ್ಲನೆ ಎನ್ನೊಲ್ಲನೆ ೨
ಕೂಡಿದವಳ ಹೀಗೆ ಕಾಡಬಹುದೇನಕ್ಕ
ಬ್ಯಾಡ ಕಠಿಣ ಮನಸು ಮುನಿಸು
ನೋಡೆ ಪ್ರಸನ್ನವೆಂಕಟ ಗಾಡಿಕಾರನು ನೆರದು
ಆಡಿದನೆ ಕಾಂತೆ ಏಕಾಂತ ೩

೧೪೨
ಸಿಂಧುಶಯನನೆ ಬಾರೊ ಇಂದಿರಾರಾಧ್ಯನೆ ಬಾರೊ
ಮಂದಿರಜನಯ್ಯನೆ ಬಾರೊ ಇಂದೆನ್ನ ಮನಮನೆಗೆ ಪ.
ಬಾರೊ ಭಕ್ತರ ಪಾಲಕ ವೆಂಕಟರನ್ನ ಬಾರೊ ಅ.ಪ.
ರಾತ್ರಿನಾಮನರಿಯೆ ಬಾ ಗೋತ್ರಧರ ಬಾರೊ ಹೇಮ
ನೇತ್ರನ ಸದೆದು ಧರಿತ್ರಿ ತಂದೆ ಪೋತ್ರಿ ರೂಪ ಬಾರೊ ೧
ಹರಿಮೊಗದವ ಬಾರೊ ಹರಿಯನುಜನೆ ಬಾರೊ
ಕರಜರ ಸವರಿದ ಹರಿಕುಲೋತ್ತಮರನ್ನ ಬಾರೊ೨
ಚೆನ್ನನಾಗಿ ಮೆರೆದೆ ಬಾ ಚೆನ್ನೆವಾಸ ಜರಿದೆ ಬಾ
ಉನ್ನತ ಹಯವೇರಿ ಪ್ರಸನ್ನವೆಂಕಟಾದ್ರಿವಾಸ ಬಾರೊ ೩

೭೮
ಸಿಕ್ಕಿದನೆ ಹರಿ ಅಕ್ಕಕ್ಕ ಸುಖ
ದಕ್ಕಿಸಿ ಕೊಳಬನ್ನ್ಯಕ್ಕಕ್ಕ
ಚಿಕ್ಕವನಿವನಲ್ಲಮ್ಮಮ್ಮ ಬಿಡೆ
ಪುಕ್ಕಟೆ ಜಾರುವನಮ್ಮಮ್ಮ ಪ.
ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್
ಚಲ್ಲಣ ತೊಯಿದಿದೆ ನೋಡವ್ವೆ
ಅಳ್ಳೆದೆಗಾರನು ಅಳುಕುವನೆ ಹಗ
ಲ್ಗಳ್ಳನ ಮಾಟವ ನೋಡವ್ವೆ ೧
ಮುಂಗುರುಳಿಗೆ ಮೆತ್ತಿದೆ ಕೆನೆಮೊಸರು
ಕಂಗಳು ತುಪ್ಪಾಗಿದೆ ತಂಗಿ ರತ್ನ
ದುಂಗುರ ಬೆರಳು ಮುಂಗೈಯ ಮ
ತ್ತಂಗೈ ಬೆಣ್ಣ್ಯಾಗಿದೆ ತಂಗಿ ೨
ಪಡಗೊಡಿದು ಬಿಸಳಿಗೆ ನುಗ್ಗಲ್ಲೆ
ಅಡಗ್ಯಡಗ್ಯಾಡುವನಿವನಂತೆ
ಬಡಗಣ ಮೂಡಣ ಪಡು ತೆಂಕಣದಿ
ತುಡುಗನ ಹುಯ್ಯಲು ಘನವಂತೆ ೩
ಗೋಡೆಯನೇರುವ ಧುಮುಕುವ ತಾ ಸಿಡಿ
ದೋಡುವನಂಜದೆ ಅಲ್ಲಲ್ಲೆ
ನೋಡಲು ಬಾಲಕ ಬಾಲೆಯರ ಪಿಡಿ
ದಾಡ್ಯಾಲಂಗಿಪನಲ್ಲಲ್ಲೆ ೪
ಈಗಲೆ ಕಟ್ಟುವ ಬಿಟ್ಟರೆ ಇನ್ನಾ
ವಾಗಲಿ ಸಿಕ್ಕುವನೆ ಬಾಲೆ
ಹ್ಯಾಗಾದರೆ ಪ್ರಸನ್ವೆಂಕಟಗಿರಿ
ಭೋಗಿಯ ಹೊಂದುವ ಬಾಲೆ ೫

೭೯
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನ
ಚೊಕ್ಕ ಸಹಸಾ ಜರಿವವಳಲ್ಲ
ಭಕುತೀಲೆ ಕಟ್ಟುವೆ ಈರಡಿಯ ನಡೆ
ಅಕ್ಕ ಗೋಪಮ್ಮನಿದ್ದೆಡೆಯ ಪ.
ಮುನ್ನಿನಪರಾಧಗಳ ತಾಳ್ದೆ ನಾ
ನಿನ್ನ ದಿಟ್ಟತನ ಬಲವರಿದೆ
ಚಿನ್ನನೆನಬಹುದೇನೊ ನಿನಗೆ ದಿಟ್ಟ
ಗಣ್ಣವ್ಹರಿದೆಮ್ಮಯ ಮೊಲೆಗೆ
ಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆ
ಘನ್ನ ಪಾಲು ಮೊಸರ ಗೋಪರೊಡನೆ ಸವಿದೆ
ಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತ
ಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ ೧
ಹರಿಮಧ್ಯದಬಲೆಯರೆಳೆದೆ ಪಂಚ
ಶರನ ಭರಕೆ ಮತಿಗಳೆದೆ
ಹರವಿ ತುಪ್ಪಾದರೆ ನೆಗೆದೆ ಈಗ
ಕರೆದರೆ ಬರಲೊಲ್ಲೆ ನಗದೆ
ಚೋರತನವೇಕೆ ಗಂಭೀರತನವೇಕೆ
ಪರಿಪರಿಹಲವಂಗವೇಕೆ ವರಕರುಣೇಕೆ
ಸಿರಿಕಾಂತನಹದೆತ್ತ ದುರುಳತನಗಳೆತ್ತ
ಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ ೨
ತೊಂಡಮಕ್ಕಳ ಬಲವ ನೋಡಿದೆ ಬಲು
ಪುಂಡನಂತೆ ಕದನವನಾಡಿದೆ
ಭಂಡತನದಲೊಬ್ಬನ ಬಡಿದೆ ದೊಡ್ಡ
ಗಂಡಸಿನಂದದಿ ಮೇಲೋಡಿದೆ
ಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರ
ಚಂಡತನದಿ ಮಿಂಡವೆಣ್ಣುಗಳ ಪಿಡಿದೆ
ತಂಡ ತಂಡದೊಳು ಮುದ್ದುಕೊಡಲೀಸದಿರರು ಬೊ
ಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ ೩
ಉತ್ತಮ ಮರ ನೆರಳ ನೋಡಿದೆ ಮರ
ಹತ್ತುತಲೆ ಚಂಡನೀಡಾಡಿದೆ
ಸುತ್ತಲಿಹ ಗೋವರ ಬೇಡಿದೆ ಅವ
ರೆತ್ತಿ ಕೊಡದಿರೆ ಹಗೆವಿಡಿದೆ
ಮತ್ತ ಮಾವನ್ನೊತ್ತಿ ಮುದುಮುತ್ತನ ಕೈವಿಡಿದೆ
ಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆ
ಎತ್ತಣ ವೈಕುಂಠ ನಿನಗೆತ್ತಣನಂತಾಸನವೊ
ಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ ೪
ಪೊಂದೊಡಿಗೆ ತೊಡದೆ ನಡುವಿರುಳೆ ಬರೆ
ಕುಂದದೆ ವ್ರತಗೆಟ್ಟ ತರಳೆ
ಛಂದವೇನೊ ನಿನಗೀವಾಜರೆಲೆ ಗೋ
ವಿಂದೆರಡು ಕೈಕಟ್ಟಿ ತೋರಲೆ
ಒಂದೊಂದುಸುರಲಿ ನಿನ್ನ ಗುಣಮಾಣಿಕದ ಖಣಿ
ಅಂಧರಿಗರಿವುದೆ ಪ್ರಸನ್ವೆಂಕಟೇಶ
ಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದು
ಇಂದಿರೆಯರಸನೆ ದಾಸವೃಂದವನು ಪೊರೆಯೊ ೫

೧೪೩
ಸಿರಿ ಅರಸಂಗೆ ನಮೋ
ಗುರುಮಧ್ವವರಿಯ ವರಸ್ತುತಿ ಪ್ರಿಯ ಪ.
ನಿಗಮಾಗಮಾಗಣಿತ ಸುವಿದಿತ ಸುಗುಣ ವಿ
ಹಗಗಮನಘರಿಪು ಉರಗಶಯನ ೧
ಅಜನುತ ರಾಜರವಿ ವಿಜಿತ ಪ್ರತೇಜ ಕುಜ
ರಜನೀಚರ ಹನನ ಮೂಜಗಜೀವನ ೨
ತನ್ನ ವಂದಿಪರನ್ನು ಹೊರೆವನ್ಯಭಯವನ್ನೋಡಿಪ
ಎನ್ನಯ್ಯ ಪ್ರಸನ್ನವೆಂಕಟನಾಥ ದಾತಾರ ೩

೧೪೪
ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ ಪ.
ಅರಿದರಧರಕರ ವರಾಭಯಕರ ಶಿರಾ
ಭರಣ ಸಿರಿವತ್ಸ ಕೇಯೂರ ಕೌಸ್ತುಭೋರು ಹರೆ ಹರೆ ನಮೋ ೧
ಖಗಾಸನ ಪನ್ನಗಾಸನ ದಿಗೇಶನುತಗಣಿತ
ದ್ಯುಗಸನ್ನಿಭ ಸುಗಾತ್ರ ಸಾಮಗ ಘೋಷಿತ ಪಾಹಿ ಪಾಹಿ ೨
ಪರಾತ್ಪರ ಪಾರಾವಾರ ವರ ಹೇಮಾಂಬರ ಚಾರು
ಚಿರ ಪ್ರಸನ್ನವೆಂಕಟರಮಣ ಕರುಣಾಳು ತ್ರಾಹಿ ತ್ರಾಹಿ ೩

೩೫೪
ಸಿರಿಸೊಕ್ಕಿ ಮರೆಯದೆ ಮುರವೈರಿಯ
ಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.
ಶರೀರವು ಸೆರೆಮನೆ ಸರಿಕಾಣ ಜೀವಕ್ಕೆ
ಸಿರಿ ಪಂಚಶರನವಸರಕೆ ಮೆಚ್ಚಿ
ಸಿರಿಪತಿ ಶರಣಾನುಸರಣೆ ಭಕುತಿಜ್ಞಾನ
ಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು ೧
ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿ
ಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗ
ಸತಿ ಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲ ವೈವ
ಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ ೨
ಪುಸಿನುಡಿ ಪಿಸುಣರ ಪೆಸರಿಸದಲೆ ನಿತ್ಯ
ಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆ
ಪೊಸತಾಪೋಪಶಮನ ಪ್ರಸನ್ನವೆಂಕಟಪತಿಯ
ಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ ೩

(ನು.೧) ತಾಳಸಪ್ತಾಘಹನ
೧೪೫
ಸೀತಾಪತೆ ಸ್ವಾಮಿ ಸೀತಾಪತೆ
ವಾತಜನುತ ಭೂತನಾಥಪತೆ ರಾಮ ಪ.
ಗುಪ್ತ ಗುಣ ತಾಳ ಸಪ್ತಾಘಹನ
ದೀಪ್ತಕಾಯ ಕುಶಸುಪ್ತಜಯ ರಾಮ ೧
ತಾಟಕಾರಿ ರಘುರಾಮ ಹರಿ
ಹಾಟಕಪುರಪ ನಿಶಾಟಹರ ರಾಮ ೨
ಭರ್ತ ನೇಮ ಪರಿಪೂರ್ತ ನಮೋ
ಕರ್ತ ಪ್ರಸನ್ವೆಂಕಟಾರ್ತಾಶ್ರಯ ಪಾಹಿ ೩

೩೫೫
ಸುಕಾಲಕೆ ಧರ್ಮವ ಮಾಡುವುದೆ ಲೇಸು
ದುಷ್ಕಾಲಕೆ ಮಾಡಗೊಡದಲ್ಪಾಯು ಪ.
ಯೌವನವೆಂಬ ಸುಕಾಲಕೆ ಸುರಮುನಿ
ಸೇವ್ಯನ ಭಾಗವತರ ಮೆಚ್ಚಿಪ
ದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕು
ಹವ್ಯಾಸ ನಡೆಯದು ಮುಪ್ಪು ದುಷ್ಕಾಲ ೧
ಧನದಾಗಮದ ಸುಕಾಲಕೆ ಸತ್ಪಾತ್ರ
ರನು ಕರೆದರ್ಚಿಸಿ ಉಣಿಸಿ ಕೃಷ್ಣಾ
ರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕು
ತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ ೨
ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವ
ಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮ
ಸಾರ್ಥಕ ಮಾಡಿ ಸಂತೋಷದಲ್ಲಿರಬೇಕು
ತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ ೩
ಸಂಸಾರಾವಸ್ಥೆಯವರಿಗೀ ಸುಕಾಲಕೆ
ಹಂಸವಾಹನ ಪಿತನಂಘ್ರಿ ಪದುಮ
ಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿ
ಸಂಶಯ ಭಕ್ತಿಯವನಿಗೆ ದುಷ್ಕಾಲ ೪
ಮುಕ್ತ ಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿ
ರಕ್ತಿಯೆ ಭಾಗ್ಯ ವಿಜಯ
ಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾ
ಸಕ್ತಿಲ್ಲದವಗಾವಕಾಲ ದುಷ್ಕಾಲ ೫

೨೮೩
ಸುರ ಮುನಿಜನನುತ ಪಾದ ನಿನ್ನ
ಶರಣು ಪೊಕ್ಕೆನೊ ಗೋವಿಂದ ನೀ
ಚರ ಕೈಯಲಿ ಕೊಡದಿರೊ ಎನ್ನ ಮೇ
ಲ್ಗಿರಿ ಶ್ರೀನಿವಾಸ ಪಾವನ್ನ ಪ.
ದುಷ್ಟದೂಷಕ ಸಂಗದಿಂದೆ ನನ್ನ
ನಿಷ್ಠೆ ಜಾರುತಲಿದೆ ತಂದೆ ಸಲೆ
ಭ್ರಷ್ಟನಾಗುವುದೇನು ಚಂದೆ ಬಲು
ಕಷ್ಟಿಸಿ ಭವದಲಿ ನೊಂದೆ ೧
ಅಮಿತ ದುರ್ಗುಣ ದೋಷಹಾರಿ ಶುಭ
ಅಮಲ ಮುಕ್ತಿದಾತ ಉದಾರಿ ಎನ್ನ
ಭ್ರಮಣ ನೀಗಿಸು ಹೊರೆ ಸ್ವಾಮಿ ಹೃ
ತ್ಕಮಲದಿ ಪ್ರಕಟಿಸು ಪ್ರೇಮಿ ೨
ಅರಿಯೆನರಿಯೆ ಅನ್ಯಮರೆಯೆ ನಿನ್ನ
ಸ್ಮರಣೆಗೆಚ್ಚರವಿತ್ತು ಹೊರೆಯೊ
ಸಿರಿಗುರು ಆನಂದಮುನಿ ದೊರೆಯೆ ನಿತ್ಯ
ಪರಸನ್ನ ವೆಂಕಟ ಭಕ್ತರ ಸಿರಿಯೆ ೩

೪೧೩
ಸುರನರರ ಸಹಸಕ್ಹರಿ ಸಹಾಯ ಬೇಕು
ನರಹರಿಯು ಕೊಡದನಕ ದೊರೆವುದೇನು ಪ.
ಹರಿ ಕೊಡದೆ ಅಜಭವರಿಗರಸುತನವೆಲ್ಲಿಯದು
ಹರಿ ಕೊಡದೆ ಸಿರಿಸಂಪದೆರವು ತನಗೆ
ಹರಿ ಕೊಡದೆ ಸಕಳ ಜೀವರಿಗಶನ ದುರ್ಲಭವು
ಹರಿಕೊಡುವನಿರಲು ಅನ್ಯರಿಗೆ ಸ್ವಾತಂತ್ರ್ಯಿಲ್ಲ ೧
ಹರಿಯೆ ಜಡಚೇತನರ ಹೊರೆದುದ್ಭವಿಸಿ ಅಳಿವ
ಹರಿ ಯಾವ ಕಾರ್ಯಕ್ಕೆ ಬೆರೆದು ಬರುವ
ಹರಿ ಅಂತರ್ಬಹಿರದೊಳು ಭರಿತನಾಗಿಹ ತತ್ವ
ಹರಿಯಿಲ್ಲದಾವ ತಾಣಿಲ್ಲ ನಂಬು ಹರಿಯ ೨
ಹರಿ ನುಡಿಯದಾರಿಗುತ್ತರಗುಡಲು ಬಲವಿಲ್ಲ
ಹರಿ ನುಡಿಯನಾಲಿಪರು ಸಿರಿದಿವಿಜರು
ಹರಿ ನುಡಿಯೆ ಗತಿಮತಿಯು ಹರಿಯೆನ್ನ ದಾತಾರ
ಹರಿ ಪ್ರಸನ್ವೆಂಕಟಪ ನಿರುತ ಬಿಡನೆನ್ನ ೩

(ನು.೫) ಪಶುಪತಿ ವಿಷಹರ:
೨೮೪
ಸುರರಾಜ ಪೂಜಿತರಾಜ ಪಂಕೇಜಸಖ ಶತತೇಜ ಪ.
ಶ್ರೀನುತ ಶ್ರೀನಿಧಿ ದೀನ ದಯಾನಿಧಿ
ಜ್ಞಾನವಿಹೀನನ ನೀನೆ ಪೊರೆ ೧
ಜೀಮೂತ ಶಾಮಲ ರಾಮ ಶುಭಾಮಲ
ನಾಮನೆ ಸಾಮಜಸ್ವಾಮಿ ಸಲಹು೨
ದೋಷವಿನಾಶ ಪರೇಶಾಮರೇಶನೆ
ಶೇಷವರಾಸನ ಕೇಶವನೆ ನಮೊ ೩
ದೂಷಕ ಭೀಷಣ ದಾಸ ವಿಪೋಷಕ
ತೋಷ ವಿಕಾಸ ವಿಹಾಸ ಜಯತು೪
ಪಶುಪತಿ ವಿಷಹರ ಶಶಿನಿಭದಶನ
ಪ್ರಸನ್ನವೆಂಕಟೇಶ ಕರುಣಾಶರಧಿ ಹರಿ೫

೩೫೭
ಸುಲಭಲ್ಲ ಹರಿಭಕುತಿ ಗುರುಕೃಪೆ ಇಲ್ಲದಿಲ್ಲ ಪ.
ಸಿದ್ಧಿ ಸೊಲ್ಲುವ ಗುರುಗಳುಂಟು ಧರೆಯೊಳಲ್ಲಿ
ಗಲ್ಲಿ ಅವರೆಲ್ಲ ಹಿತಕಾರಿಗಳೆಂದಿಗಲ್ಲ
ಸಲ್ಲ ಕೈವಲ್ಯದ ಮಾರ್ಗವ ಬಲ್ಲ
ಬಲ್ಲಿದ ಭಾರತಿನಲ್ಲಗೆ ಸಲ್ಲಲಿ
ಬಲ್ಮತದಲ್ಲಿರಿರ್ಯೆಲ್ಲ ೧
ಭವಸಾಗರ ವೈರಾಗ್ಯದ ನಾವೆಲಿ ನೀಗಿ ಸಾಗಿ ಜ್ಞಾ
ನಾಗರದಾಗಮವ ಕೇಳಿ ವೇಗ
ದೀಗ ನಿರಯಾಗಾರ ತಪ್ಪಿಸದೆ ಶ್ರೀರಂಗ ಬ್ಯಾಗೊ
ದಗ ಸುಜ್ಞನಾಗಿರದೆಮಗೆ ಮ್ಯಾಗೆ ಲೋಗ
ರೋಗರಕಾಗಿ ರಹಿತಧರ್ಮರಾಗಿರೆ ತಾಗೂದು ರೋಗ ೨
ನಾ ನನ್ನದು ಸಂಪದೆಂಬಭಿಮಾನಿ ನೀಚನು
ನೀ ನಿನ್ನದು ಕೃಷ್ಣನೆಂಬ ಮತಿವಂತನೆ ಧನ್ಯ ಬಹು
ಪುಣ್ಯಶ್ಲೋಕರ ವೈಭವವಾಯಿತನ್ಯೋನ್ಯ ನನ
ಗಿನ್ನ್ಯಾತರ ನೆಚ್ಚಿಕ್ಯಣ್ಣ ಪ್ರಸನ್ವೆಂಕಟರನ್ನನ
ಪುಣ್ಯದ್ವಾರನ್ನಾಂತ ಸನ್ನುಮತಿಗನ್ಯದೆ ಏನಣ್ಣ೩

(ನು.೨) ಅಲರಗೆದ್ದ
೧೪೬
ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿ
ಸುವ್ವಿ ಮಲ್ಲ ಮುಷ್ಟಿಕರ ವೈರಿ ಶ್ರೀ ಕೃಷ್ಣನ್ನ
ಸುವ್ವೆಂದು ಪಾಡಿ ರಕ್ಷಿಪ ಸುವ್ವಿ ಪ.
ವಿಶ್ವಬೀಜವ ಪೊತ್ತ ಗಿರಿ ಪೊತ್ತ ಧರೆ ಪೊತ್ತ
ಶಿಶು ಕೃಷ್ಣಾಜಿನ ಪರಶು ಧನು ಪೊತ್ತ
ಶಿಶು ಕೃಷ್ಣಾಜಿನ ಪರಶುಧನು ಪೊತ್ತಗವ ಪೊತ್ತ ದಿ
ಗ್ವಸನ ಇಟ್ಟಿಯ ಪೊತ್ತ ೧
ಶ್ರುತಿ ಗೆದ್ದವನ ಗೆದ್ದಾಮೃತ ಗೆದ್ದ ಸತಿ ಗೆದ್ದ
ದಿತಿಜ ಬಲಿ ಕ್ಷತ್ರಿಯರಾಕ್ಷಸರ ಗೆದ್ದ
ದಿತಿಜ ಬಲಿ ಕ್ಷತ್ರಿಯ ರಾಕ್ಷಸರ ಗೆದ್ದ ಅಲರ ಗೆದ್ದ
ಪತಿವ್ರತೆ ಅಧರ್ಮಿಗಳ ಗೆದ್ದ ೨
ಎವೆ ಇಲ್ಲ ಮೃದು ಇಲ್ಲ ಜವದೊಳೆಡಬಲವಿಲ್ಲ
ಕುವರೇಂದ್ರ ವಿಪ್ರಮಾರ್ಗೆಡರಿಲ್ಲ
ಕುವರೇಂದ್ರ ವಿಪ್ರಮಾರ್ಗೆಡರಿಲ್ಲ ಕೃಷ್ಣ ಪ್ರ
ಸನ್ವೆಂಕಟ ಯೋಗಿ ಕೃಪೆಗೆ ಕಡೆಯಿಲ್ಲ ೩

೨೯
ಸುಳಿದನ್ಯಾರೆ ಈಗ ಸುಳಿದನ್ಯಾರೆ
ಕೆಳದಿ ಎನ್ನುಪ್ಪರಿಗೆಯ ಮುಂದೆ
ಹೊಳೆವ ಹೊಂಬಕ್ಕಿಯ ಮೇಲೆ
ಥಳಥಳಿಪ ಮಿಂಚಿನಂತೆ ಪ.
ಎಸೆವ ಮಣಿ ಕನಕಾಭರಣಿಟ್ಟು
ನಸುನಗೆ ಬೆಳಗ ವೈಸರಿಸಿ
ಬಿಸಜಾಕ್ಷಿಯಳೋರ್ವಳ ಕೂಡ
ಹೊಸ ಪರಿ ಸರಸವಾಡುತಲಿ ೧
ಮುಂದುಗ್ಗಡಿಪ ಸುರಸಂದೋಹ
ಹಿಂದಕ್ಕೆಳದಿ ಮುನಿಸಮ್ಮೋಹ
ಅಂದದಿ ಮುಂಗಡಿರುವ ವಾದ್ಯ
ಸಂದಣಿಯ ಸೊಬಗಿನಲ್ಲಿ ೨
ಎನ್ನ ಮನದಿ ನೇಹವ ಬೀರಿ
ಇನ್ನ್ಯಾಕೆ ದೂರ ನೋಡಿದನೆ
ಮನ್ನಿಸ್ಯವನ ತಾರೆ ಶ್ರೀ ಪ್ರ
ಸನ್ನವೆಂಕಟವರದನ ಬೇಗ ೩

೩೦
ಸುಳಿದವನಾರಮ್ಮಯ್ಯ ಬೆಟ್ಟದಮೇಲೆ
ಹಳುವದೊಳಿಹ ತಿಮ್ಮಣ್ಣ ಪ.
ವಾರೆದುರುಬಿಗೆ ಸಂಪಿಗೆಗೂಡಿ ವಿಹಗವ
ನೇರಿ ಬರುವನಕ್ಕ
ವಾರಿಜಾನನ ವಜ್ರ ಮಣಿದಂಥಾನಗೆ ಸೊಬ
ಗೇರಿದ ಹರಿ ಕಾಣಕ್ಕ ೧
ಅಡಿಗೊಮ್ಮೆ ಜೀಯಾ ಪರಾಕೆಂಬ ಸುರಮುನಿ
ಗಡಣದ ವೀರನಾರಮ್ಮ
ನುಡಿದರೆ ನುಡಿವ ನುಡಿಯದಿದ್ದರೊಲ್ಲದ
ಬೆಡಗಿನ ಮಹಿಮ ನೀರೆ ೨
ಮಕರಕುಂಡಲ ಶಂಖ ಚಕ್ರ ಕೌಸ್ತುಭ ಶಿರಿ
ಯುಕುತ ವಕ್ಷದವನಾವನೆ
ಅಖಿಳ ಜಗವ ತನ್ನ ಬಸುರಲಿ ಬಚ್ಚಿಟ್ಟ
ಸಖ ಶ್ರೀನಿವಾಸದೇವನೆ ೩
ಸಾಮಗಾನವನಾದರಿಪ ಶಾಮಲಾಂಗದ
ಕೋಮಲ ದಾರು ಹೇಳೆ
ವ್ಯೋಮಕಚಾಜಾದಿ ವಂದಿತಾನತಜನ
ಪ್ರೇಮವಾರಿಧಿ ನೋಡೆಲೆ ೪
ಸಿರಿ ಅಂಜನಾದ್ರಿಯೊಳಾವಾಗ ಮಂಗಳ
ಚರಿತನು ದಾರೆ ತಂಗಿ
ಮರೆಹೊಕ್ಕವರ ಕಾವ ಪರಸನ್ನವೆಂಕಟ
ವರದನ ನಂಬು ಬೇಗ೫