Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್.ಕೆ. ಸರೋಜ

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಮಹಿಳಾ ರೇಡಿಯಾಲಜಿಸ್ಟ್ ಎನಿಸಿಕೊಂಡ ಡಾ|| ಸರೋಜ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ನ್ಯೂಕ್ಲಿಯರ್ ಮೆಡಿಸನ್ಲ್ಲಿ ಉನ್ನತ ಪದವಿ ಪಡೆದ ಮೊದಲ ಮಹಿಳೆ. ಇವರು ಕರ್ನಾಟಕದ ಪ್ರಥಮ ನ್ಯೂಕ್ಲಿಯರ್ ಮೆಡಿಸನ್ ಉನ್ನತ ಶಿಕ್ಷಣ ಪಡೆದ ವೈದ್ಯರು.
ಮುಂಬೈನ ಬಾಬಾ ರಿಸಚ್ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಇವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂಕ್ಲಿಯ ವೈದ್ಯಕೀಯ ವಿಭಾಗವನ್ನು ಸ್ಥಾಪಿಸಿದರು. ನಮ್ಮ ರಾಜ್ಯದಲ್ಲಿ ನ್ಯೂಕ್ಲಿಯರ್ ವಿಭಾಗ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಇದು. ಗೌರಿಬಿದನೂರು ತಾಲ್ಲೂಕಿನ ಕುಗ್ರಾಮದಲ್ಲಿ ಜನಿಸಿ ಕಾಲೇಜು ದಿನಗಳಲ್ಲಿ ಎನ್ ಸಿಸಿ ಕೆಡೆಟ್ ಆಗಿದ್ದು ಭೂಕಂಪ ಮೊದಲಾದ ಪ್ರಾಕೃತಿಕ ದುರಂತಗಳ ಸಂದರ್ಭಗಳಲ್ಲಿ ಸೇವೆ ಸಲ್ಲಿಸಿದ ಡಾ|| ಸರೋಜ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನ ನ್ಯೂಕ್ಲಿಯ ಮೆಡಿಸನ್ ವಿಭಾಗದ ಮುಖ್ಯಸ್ಥೆಯಾಗಿದ್ದರು.
ಆರೋಗ್ಯ ರಕ್ಷಣೆಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಶಿಭಿರಗಳನ್ನು ಆಯೋಜಿಸಿದ್ದ ಡಾ|| ಆರ್. ಕೆ. ಸರೋಜರವರು ಮಾಧ್ಯಮಗಳ ಮೂಲಕ ಆರೋಗ್ಯ ರಕ್ಷಣೆ ಕುರಿತಂತೆ ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.