Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್. ಶಂಕರ ಶೆಟ್ಟಿ

ತಮ್ಮ ನಿಸ್ಪೃಹ ಸೇವೆಯಿಂದ ನೂರಾರು ಬಡಜನರ ಆರಾಧ್ಯದೈವವೆನಿಸಿರುವ ವೈದ್ಯಕೀಯ ಕ್ಷೇತ್ರದ ಹಿರಿಯ ಚೇತನ ಡಾ. ಎಚ್. ಶಂಕರ ಶೆಟ್ಟಿ ಅವರು.
೧೯೩೫ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಗ್ರಾಮ ಹರ್ಕೂರಿನಲ್ಲಿ ಜನಿಸಿದ ಇವರು ಮದರಾಸಿನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿ ಮುಂದೆ ವೈದ್ಯಕೀಯ ಶಿಕ್ಷಣದ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಹಿರಿಯ ಶಸ್ತ್ರಚಿಕಿತ್ಸಕರಾಗಿ, ಬೆಂಗಳೂರು ವೈದ್ಯಕೀಯ ವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಹೀಗೆ ರಾಜ್ಯದ ಬಹುಪಾಲು ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದು.
ಶ್ರೀಯುತ ಶಂಕರ ಶೆಟ್ಟಿ ಅವರ ವೈದ್ಯಕೀಯ ಸೇವೆಗೆ ಅಪಾರ ಜನಮನ್ನಣೆಯ ಜೊತೆಗೆ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನ ಪುರಸ್ಕಾರಗಳು ಸಂದಿವೆ.
ನಿವೃತ್ತಿಯ ನಂತರವೂ ವೈದ್ಯಕೀಯ ಕ್ಷೇತ್ರದಲ್ಲಿ ಬಡಜನರ ಸೇವೆ ಮುಂದುವರಿಸಿರುವ ಹಿರಿಯ ವೈದ್ಯರು ಶ್ರೀಯುತ ಡಾ. ಎಚ್. ಶಂಕರ ಶೆಟ್ಟಿ ಅವರು.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಬಿ. ಅಂಬಣ್ಣ

ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿರುವ ಡಾ. ಅಂಬಣ್ಣ, ತಮ್ಮ ಹುಟ್ಟೂರನ್ನು ಮರೆಯದೇ ಮರ೪ ೧೯೬೧ ರಲ್ಲಿ ಮರಿಯಮ್ಮನಹಳ್ಳಿಗೆ ಬರುವ ಮೂಲಕ ವೈದ್ಯರು ಹಳ್ಳಿಗಳಿಗೆ ಬರುವುದಿಲ್ಲ ಎಂಬ ಅಪವಾದವನ್ನು ಹುಸಿ ಮಾಡಿದವರು.

ಕಳೆದ ಐದು ದಶಕಗಳಿಂದ ನಿರಂತರವಾಗಿ ಮರಿಯಮ್ಮನ ಹಳ್ಳಿಯ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿ ಔಷಧೋಪಚಾರ ಮಾಡುವ ಡಾ.ಅಂಬಣ್ಣ ಅವರು ಜನರ ಡಾಕ್ಟರ್ ಎಂದೇ ಜನಪ್ರಿಯ. ಪ್ರತಿದಿನ ೧೫೦ ಮಂದಿಗೆ ಚಿಕಿತ್ಸೆ ನೀಡುವ ಇವರು, ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಗುಣಪಡಿಸಿದ್ದಾರೆ.

ವೈದ್ಯಕೀಯ ಸೇವೆಯ ಜೊತೆಗೆ ತರಳಬಾಳು ಹೈಸ್ಕೂಲ್, ಚಿಲಕನ ಹಟ್ಟಿಯ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಸೇವಾಮನೋಭಾವವನ್ನು ಗುರುತಿಸಿ,ಲೋಕಕಲ್ಯಾಣ ಪ್ರಶಸ್ತಿ ಪಡೆದುಕೊಂಡಿದ್ದು ಈಗಲೂ ತಮ್ಮ ಕಾಯಕ ಮುಂದುವರೆಸಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಶಿವನಗೌಡ ರುದ್ರಗೌಡ ರಾಮನಗೌಡ

ಹಳ್ಳಿಯ ಜನರು ಅರೋಗ್ಯ ಸೇವೆಯಿಂದ ವಂಚಿತರಾಗಿ ಕಷ್ಟಪಡುವುದನ್ನು ಕಂಡ ಗೌಡರು, ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಧಾರವಾಡದಲ್ಲಿ ಆಸ್ಪತ್ರೆಯನ್ನು ೧೯೬೦ ರಲ್ಲಿ ಪ್ರಾರಂಭ ಮಾಡಿದರು. ನಂತರ ಸ್ವಂತ ಕಟ್ಟಡ ನಿರ್ಮಿಸಿ ಸತತ ೪೦ ವರ್ಷಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿ ಹಳ್ಳಿಗರ ಪ್ರಾಣ ಉಳಿಸಿ ಬಡಜನರ ವೈದ್ಯರೆಂದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗಲೂ ಪ್ರತಿ ಭಾನುವಾರ ಹಳ್ಳಿಗಳಲ್ಲಿ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ. ಕೆ. ಸುದರ್ಶನ್

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ. ಎಂ. ಕೆ. ಸುದರ್ಶನ್ ಅವರು ಪ್ರಾಧ್ಯಾಪಕರಾಗಿ, ಡೀನ್ ಆಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತಂದವರು. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತ ಕೋವಿಡ್ ನಿಯಂತ್ರಣ ಮಾಡುವಲ್ಲಿ ಹೆಚ್ಚು ಶ್ರಮಿಸಿದ್ದಾರೆ. ಪ್ರಸ್ತುತ ಕಿಮ್ಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸುರೇಶ್ ರಾವ್

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಡಾ.ಸುರೇಶ್ ರಾವ್, ಹುಟ್ಟೂರು ಕಟೀಲು ಆದರೂ ಸಹ ಅವರ ಕರ್ಮಭೂಮಿ ಮುಂಬೈ. ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕೆಂದು ಬಯಸಿದ ಅವರು ೧೯೮೮ ರಲ್ಲಿ ‘ಸಂಜೀವಿನಿ’ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಸಮಾಜದಲ್ಲಿ ಕೆಳಸ್ತರದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಕಡಿಮೆ ವೆಚ್ಚದಲ್ಲಿ ಪ್ರತಿ ತಿಂಗಳು ೩೦೦ ಡಯಾಲಿಸಿಸ್‌ಗಳು ಇವರ ಆಸ್ಪತ್ರೆಯಲ್ಲಿ ನಡೆಯುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ. ಆರ್. ಪ್ರದೀಪ್

ಬೆಂಗಳೂರು ನಗರದ ದಂತ ವೈದ್ಯಕೀಯ ವಿಭಾಗದಲ್ಲಿ ಡಾ.ಎ.ಆರ್. ಪ್ರದೀಪ್ ಅವರ ಹೆಸರು ವಿಶಿಷ್ಟವಾದದ್ದು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನ ವಿಶ್ರಾಂತ ಕುಲಪತಿಗಳು ಹಾಗೂ ಎಮಿರಿಟಸ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಇವರು ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ವಿಚಾರ ಮಂಡನೆ ಮಾಡಿರುವ ಇವರು ಹೃದ್ರೋಗದ ಬಗ್ಗೆ ಹಲವು ಲೇಖನಗಳನ್ನು ರಚಿಸಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವೇದವ್ಯಾಸ ದೇಶಪಾಂಡೆ

ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡುವುದು ಅಪರೂಪವಾಗಿರುವ ಸಂದರ್ಭದಲ್ಲಿ ಡಾ. ವೇದವ್ಯಾಸ ದೇಶಪಾಂಡೆ ಅವರು ಕಳೆದ ೩೫ ವರ್ಷಗಳಿಂದ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಸುತ್ತಮುತ್ತಲಿನ ಸಮುದಾಯಕ್ಕೆ ವೈದ್ಯಕೀಯ ಸೇವೆ ನೀಡುವುದರ ಮೂಲಕ ಬಡವರ ಡಾಕ್ಟರ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

೧೯೭೮ ರಲ್ಲಿ ‘ಗ್ರಾಮೋತ್ಥಾನ’ ಎಂಬ ಪರಿಕಲ್ಪನೆಯಡಿಯಲ್ಲಿ ಆರಂಭಗೊಂಡ ವೈದ್ಯಕೀಯ ಶಿಬಿರಗಳಲ್ಲಿ ಪಾಲ್ಗೊಂಡ ಡಾ. ದೇಶಪಾಂಡೆ ಅವರು ಹಳ್ಳಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ನಿರ್ಧಾರ ಕೈಗೊಂಡು ಈಗಲೂ ತಮ್ಮ ಸೇವಾಕಾರ್ಯ ಮುಂದುವರೆಸಿದ್ದಾರೆ. ವೈದ್ಯರಾಗಿದ್ದರೂ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತೊಡಗಿಸಿಕೊಂಡು ಬಂದಿದ್ದಾರೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಹೆಚ್.ಎಂ. ವೆಂಕಟಪ್ಪ

ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಸಾರ್ಥಕತೆ ಕಂಡವರು ಡಾ|| ಹೆಚ್.ಎಂ. ವೆಂಕಟಪ್ಪ. ನಿಸ್ಪೃಹ ಸೇವೆ, ದಕ್ಷ ಆಡಳಿತ, ಅತ್ಯುತ್ತಮ ಪರಿಚಾರಿಕೆಗೆ ಹೆಸರಾದ ವೈದ್ಯಶಿರೋಮಣಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದವರಾದ ವೆಂಕಟಪ್ಪ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಬಿ.ಎಂ.ಸಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಸೇವೆ ಆರಂಭ, ಸತತ ೨೪ ವರ್ಷಗಳ ಕಾಲ ಹಳ್ಳಿಗರ ಜೀವರಕ್ಷಕರಾಗಿ ಸಾರ್ಥಕ ಸೇವೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿದ ವೈದ್ಯಾಧಿಕಾರಿ, ಬೆಂಗಳೂರಿನ ಕುಷ್ಟರೋಗಿಗಳ ಆಸ್ಪತ್ರೆಯಲ್ಲೂ ಮಾನವೀಯ ಸೇವೆ. ೧೯೯೪ರಲ್ಲಿ ಸ್ವಯಂ ನಿವೃತ್ತಿ, ಬೆಂಗಳೂರಿನ ಎರಡು ಕಡೆ ಅತ್ಯಾಧುನಿಕ ಉಪಕರಣಗಳುಳ್ಳ ಕಣ್ವ ಡಯಾಸ್ಪೋಸ್ಟಿಕ್ ಕೇಂದ್ರ’ ಸ್ಥಾಪನೆ. ಕಡಿಮೆ ದರದಲ್ಲಿ ವೈದ್ಯಕೀಯ ತಪಾಸಣೆ-ಪರಿಣಿತರಿಂದ ಮಾಹಿತಿ-ಮಾರ್ಗದರ್ಶನ ನೀಡುವ ಕಾಯಕದಲ್ಲಿ ಇದೀಗ ನಿರತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಎ. ನಾಗರತ್ನ

ವೈದ್ಯಲೋಕದಲ್ಲಿ ಮಾನವೀಯ ಸೇವೆ-ಅಂತಃಕರಣದ ನಡೆಗೆ ಹೆಸರಾದ
ಡಾ|| ಎ.ನಾಗರತ್ನ, ಗಣಿನಾಡು ಬಳ್ಳಾರಿಯ ಹಿರಿಯ ವೈದ್ಯೆ, ಹಿರಿಯ ನಾಗರಿಕರ ಆಶ್ರಯದಾತೆ. ಅಪರೂಪದ ವೈದ್ಯೆ ೭೦ರ ದಶಕದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದ ಡಾ. ನಾಗರತ್ನ ಮಣೆ ಮತ್ತು ಮುಂಬಯಿಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರ್ಣಗೊಳಿಸಿದರು. ವೃದ್ಧರನ್ನು ಕಾಡುವ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷ ಪರಿಣಿತಿ, ಬಳ್ಳಾರಿಯಲ್ಲಿ ಸ್ವಂತ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ನಡೆಸುವುದರ ಜೊತೆಗೆ ಕೇಂದ್ರ ಸರ್ಕಾರದ పెటుంబ ಯೋಜನಾ ಸಂಸ್ಥೆಯ ಸಹಭಾಗಿತ್ವದಲ್ಲಿ ನೂರಾರು ಲಸಿಕಾ ಶಿಬಿರಗಳ ಆಯೋಜನೆ. ತಂದೆಯ ಕನಸಿನಂತೆ ೧೯೯೮ರಲ್ಲಿ ಹಿರಿಯ ನಾಗರಿಕರಿಗಾಗಿಯೇ ‘ಕೃಷ್ಣ ಸನ್ನಿಧಿ’ ಆಶ್ರಮ ಸ್ಥಾಪಿಸಿ ಮಾನವೀಯ ಸೇವೆ. ೨೦೧೨ರಲ್ಲಿ ಬಳ್ಳಾರಿಯ ಹೊರವಲಯದ ಸಂಗನಕಲ್ಲುನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆಯಿರುವ ಬೃಹತ್ ವೃದ್ಧಾಶ್ರಮ ನಿರ್ಮಾಣ. ೮೦ ವೃದ್ಧರ ಆರೈಕೆಯಲ್ಲಿ ಅನವರತ ನಿರತರು. ವೃದ್ಧರ ಸೇವೆಯಲ್ಲೇ ಕೃಷ್ಣನ ಕಂಡ ಸೇವಾಸಿಂಧು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಎಸ್. ಶ್ರೀನಾಥ್

ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಸಾಧನೆ ಮತ್ತು ಸೇವೆಗೈದವರು ಡಾ|| ಬಿ.ಎಸ್. ಶ್ರೀನಾಥ್. ನಾಡಿನ ಅತ್ಯುತ್ತಮ ಶಸ್ತ್ರಚಿಕಿತ್ಸಕ, ದಕ್ಷ ಆಡಳಿತಗಾರ, ಕ್ಯಾನ್ಸರ್ ಪೀಡಿತರ ದಯಾಬಂಧು.
ವೈದ್ಯಲೋಕಕ್ಕೆ ಮಲೆನಾಡಿನ ಕೊಡುಗೆ ಡಾ|| ಬಿ.ಎಸ್. ಶ್ರೀನಾಥ್, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ೧೯೫೦ರಲ್ಲಿ ಜನಿಸಿದ ಶ್ರೀನಾಥ್ ಬಾಲ್ಯದಲ್ಲೇ ವೈದ್ಯರಾಗುವ ಕನಸು ಕಂಡವರು. ಮೈಸೂರಲ್ಲಿ ಎಂ.ಬಿ.ಬಿ.ಎಸ್, ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೆಂಡ್ನಲ್ಲಿ ವಿಶೇಷ ತರಬೇತಿ ಪಡೆದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ, ಪುದುಚೇರಿ, ಚಂಡೀಗಢ, ಕೇರಳ, ಇಂಗ್ಲೆಂಡ್, ಬೆಂಗಳೂರಿನ ಕಿದ್ವಾಯಿ, ಬೆಂಗಳೂರು ಕ್ಯಾನ್ಸರ್ ಸಂಸ್ಥೆ, ಎಚ್ಸಿಜಿ, ರಂಗದೊರೈ ಹಾಗೂ ಶಂಕರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಮಹತ್ವದ ಸೇವೆ. ಕ್ಯಾನ್ಸರ್ ರೋಗಿಗಳಿಗೆ ಹೊಸ ಬದುಕು ಕೊಟ್ಟ ಧನ್ವಂತರಿ, ಸದ್ಯ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ, ಹತ್ತಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ಶ್ರೀನಾಥ್ ರಾಜ್ಯದ ಹೆಮ್ಮೆಯ ವೈದ್ಯರಲ್ಲೊಬ್ಬರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೃಷ್ಣಪ್ರಸಾದ್. ಕೆ

ಕತ್ತಲೆಯಲ್ಲಿರುವವರ ಬಾಳು ಬೆಳಗಿದ ದೀಪವಾದವರು ಹೆಸರಾಂತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್.ಕೆ. ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಜಾಗೃತಿ ಮೂಡಿಸಲೆಂದೇ ಬದುಕು ಮೀಸಲಿಟ್ಟಿರುವ ವೈದ್ಯಶಿರೋಮಣಿ.
ಉಡುಪಿ ಜಿಲ್ಲೆಯವರಾದ ಕೃಷ್ಣಪ್ರಸಾದ್ ನೇತ್ರ ಚಿಕಿತ್ಸೆಯಲ್ಲಿ ಅದ್ವಿತೀಯ ಸಾಧನೆಗೈದವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಎಸ್. ಪೂರೈಸಿದವರು. ಅದೇ ಕಾಲೇಜಿನ ಪ್ರಾಧ್ಯಾಪಕ, ಉಡುಪಿ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ, ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಆಸ್ಪತ್ರೆಯ ಗೌರವ ಪ್ರಾಧ್ಯಾಪಕರಾಗಿ, ಸುಪ್ರಸಿದ್ಧ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ಕಣ್ಣಿನ ಚಿಕಿತ್ಸೆಯಲ್ಲಿ ಅಪೂರ್ವ ಸೇವೆ ಕೃಷ್ಣಪ್ರಸಾದ್‌ ಹಿರಿಮೆ. ೨೦ ಲಕ್ಷ ಜನರ ಕಣ್ಣಿನ ತಪಾಸಣೆ, ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಸೇವೆ, ೬೦ ಸಾವಿರಕ್ಕೂ ಮಿಗಿಲಾದ ಕಣ್ಣಿನ ಶಸ್ತ್ರಚಿಕಿತ್ಸೆ, ೩.೭೫ ಲಕ್ಷ ಜನರಿಗೆ ಉಚಿತ ಕನ್ನಡ ವಿತರಣೆ, ಉಚಿತ ನೇತ್ರ ತಪಾಸಣಾ ಶಿಬಿರಗಳು, ಕಣ್ಣಿನ ಆರೋಗ್ಯದ ಬಗ್ಗೆ ಜನಸಾಮಾನ್ಯರು-ಮಕ್ಕಳಲ್ಲಿ ಜಾಗೃತಿ ಮೂಡಿಸುವಿಕೆ ಮುಂತಾದವು ಕೃಷ್ಣಪ್ರಸಾದ್‌ ಸಾಧನೆಯ ಮೈಲಿಗಲ್ಲುಗಳು. ಹತ್ತಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸದ ಹೆಗ್ಗಳಿಕೆ.ರಾಜ್ಯ, ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಂದಲೂ ಭೂಷಿತರಾಗಿರುವ ಕೃಷ್ಣಪ್ರಸಾದ್ ವೈದ್ಯಲೋಕದ ನಕ್ಷತ್ರಗಳಲ್ಲಿ ಒಬ್ಬರೆಂಬುದಕ್ಕೆ ಅವರ ಸಾಧನೆಯೇ ಜ್ವಲಂತ ಸಾಕ್ಷಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಅಶೋಕ್ ಆರ್. ಸೊನ್ನದ್

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಅನ್ವರ್ಥಕ ಡಾ|| ಅಶೋಕ್ ಆರ್. ಸೊನ್ನದ್. ನಾಡು ಕಂಡ ಅಪರೂಪದ ಅನುಭವಿ ವೈದ್ಯ, ಸೇವೆಗೆ ನಿಂತ ಸಂತ. ಲಕ್ಷಾಂತರ ಜನರ ಆರೋಗ್ಯ ರಕ್ಷಿಸಿದ ಸಂಜೀವಿನಿ.
ಬಾಗಲಕೋಟೆ ಜಿಲ್ಲೆ ಮುಧೋಳದವರಾದ ಅಶೋಕ್ ಸೊನ್ನದ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯ ಪದವಿ, ಗುಜರಾತ್ ಅಹಮದಾಬಾದ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಫಿಲೆಡಾಲ್ಪಿಯಾದಲ್ಲಿ ತರಬೇತಿಗೊಂಡವರು. ಅಮೆರಿಕಾದ ವಿವಿಧ ಆಸ್ಪತ್ರೆಗಳಲ್ಲಿ ೩೬ ವರ್ಷಗಳ ಸುದೀರ್ಘ ಸೇವೆ, ನೂರಾರು ಯಶಸ್ವಿ ಶಸ್ತ್ರಚಿಕಿತ್ಸೆ, ಅಪಾರ ಅನುಭವ-ಗೌರವ ಸಂಪಾದನೆ. ೨೦೧೦ರಲ್ಲಿ ವೈಭೋಗದ ಜೀವನ-ಕುಟುಂಬ ತೊರೆದು ಭಾರತಕ್ಕೆ ವಾಪಸ್, ಹುಟ್ಟೂರಿನಲ್ಲಿ ತಾಯಿಯ ಹೆಸರಿನಲ್ಲಿ ಮಧುಮೇಹ ತಪಾಸಣೆ ಹಾಗೂ ಸಂಶೋಧನೆ ಕೇಂದ್ರ ಸ್ಥಾಪನೆ, ದಶಕದ ಅವಧಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ಸೇವೆ, ಹೊಸ ಬದುಕು ನೀಡಿದ ಮಾನವೀಯ ಕಾರ್ಯ. ಜಿಲ್ಲೆಯಲ್ಲಿ ಆರೋಗ್ಯಕ್ರಾಂತಿಗೆ ಮುನ್ನುಡಿ ಬರೆದ ಧನ್ವಂತರಿ ಅಶೋಕ್ ಅವರ ಪಾಲಿಗೆ ಚಿಕಿತ್ಸೆಯೇ ಪ್ರಜೆ, ರೋಗಿಗಳೇ ದೇವರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜಿ.ಟಿ. ಸುಭಾಷ್

ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸೇವೆ-ಸಾಧನೆಗೈದ ಅಪರೂಪದ ಪ್ರತಿಭಾವಂತರು ಡಾ.ಜಿ.ಟಿ.ಸುಭಾಷ್. ವೈದ್ಯಕೀಯ, ಸಮಾಜಸೇವೆ, ಆಡಳಿತ, ಸಾಮಾಜಿಕ ಕ್ಷೇತ್ರದ ಸಾಧಕರು.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಗಂಜಿಗೆರೆಯವರಾದ ಸುಭಾಷ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಎ.ತಿಮ್ಮಪ್ಪಗೌಡರ ಸುಪುತ್ರರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಡಿ, ನಿಮ್ಹಾನ್ಸ್‌ನಲ್ಲಿ ಡಿ.ಎಂ.ಮಾಡಿದವರು. ಗ್ರಾಮೀಣ ವೈದ್ಯಕೀಯ ಸೇವೆಗಳ ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನರವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ಡೀನ್ – ನಿರ್ದೇಶಕರಾಗಿ ಸ್ಮರಣೀಯ ಸೇವೆ. ರಾಜೀವಗಾಂಧಿ ವಿವಿ ಹಣಕಾಸು ಸಮಿತಿಯ ಸೆನೆಟ್ ಸದಸ್ಯ, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ ಸದಸ್ಯ, ಯುಜಿಸಿಯ ಮೆಡಿಕಲ್ ಇನ್ಸ್‌ಪೆಕ್ಟರ್, ಪಿಎಂಎಸ್‌ ವೈನ ವಿಶೇಷ ಆಡಳಿತಾಧಿಕಾರಿ..ಹೀಗೆ ಬಹುಹುದ್ದೆಗಳಲ್ಲಿ ದುಡಿದವರು.ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ಬೀದಿ ನಾಟಕಗಳು, ಸಮ್ಮೇಳನಗಳು, ಪರಿಸರ ಸಂರಕ್ಷಣೆ-ಧೂಮಪಾನದ ವಿರುದ್ಧ ಜಾಗೃತಿ ಮೂಡಿಸುವಿಕೆ, ಪಾರ್ಶ್ವವಾಯು ಪೀಡಿತರಿಗೆ ಮಾಹಿತಿ-ಚಿಕಿತ್ಸೆ ಮುಂತಾದ ಸಾಮಾಜಿಕ ಕಾರ್ಯಗಳಿಂದಲೂ ಚಿರಪರಿಚಿತರು.ಡಾ. ಬಿ.ಸಿ.ರಾಯ್ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಫೆಲೋಶಿಪ್ ಮತ್ತಿತರ ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್. ನಾಗರತ್ನ

ವೈದ್ಯ ನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥಕವಾಗಿ ಬದುಕಿರುವವರು ಡಾ.ಆರ್.ನಾಗರತ್ನ, ಯೋಗ ಚಿಕಿತ್ಸಾ ವಿಧಾನದಲ್ಲಿ ಸಿದ್ಧಹಸ್ತರು, ಅನುಪಮ ಸೇವೆಯ ಮಾದರಿ ವೈದ್ಯರು.
ಬೆಂಗಳೂರಿನವರಾದ ಡಾ. ನಾಗರತ್ನ ವೈದ್ಯಕೀಯ ಸ್ನಾತಕೋತ್ತರ ಪದವೀಧರರು. ರಕ್ತದೊತ್ತಡ, ಮಧುಮೇಹ, ಅಸ್ತಮಾ, ಹೃದಯಸಂಬಂಧಿ ಕಾಯಿಲೆಗಳಿಗೆ ಯೋಗ ಚಿಕಿತ್ಸಾ ವಿಧಾನ ಅಭಿವೃದ್ಧಿ ಪಡಿಸಿ ಐದು ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಆರು ಪ್ರಾಯೋಜಿತ ಸಂಶೋಧನೆ ಪೂರ್ಣಗೊಳಿಸಿದ ಹಿರಿಮೆ, ಯೋಗ ಚಿಕಿತ್ಸಾ ವಿಧಾನದ ರಚನೆ, ವ್ಯಾಲಿಡೇಶನ್, ಪ್ರಮಾಣೀಕರಣ ಮತ್ತು ಪರೀಕ್ಷಾ ಪ್ರಮಾಣೀಕರಣದಲ್ಲಿ ಪರಿಣಿತಿ ಸಾಧಿಸಿದ ಗರಿಮೆ ಅವರದ್ದು. ಬೆಂಗಳೂರು ಆರೋಗ್ಯಧಾಮದ ಮುಖ್ಯ ಆರೋಗ್ಯಾಧಿಕಾರಿ, ವಾಣಿ ವಿಲಾಸ ಆಸ್ಪತ್ರೆಯ ಸಹಾಯಕ ಶಸ್ತ್ರಚಿಕಿತ್ಸಕರು, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು, ಮಡಿಕೇರಿಯ ಅಶ್ವಿನಿ ಆಸ್ಪತ್ರೆ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಅಮೆರಿಕದ ಆಸ್ಪತ್ರೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಮಾನವೀಯ ಸೇವೆ. ಹನ್ನೊಂದು ಕೃತಿಗಳ ರಚಿಸಿ ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡಿಸಿರುವ ಡಾ. ಆರ್.ನಾಗರತ್ನ ಅವರ ಸೇವೆಗೆ ಸಂದಿರುವ ಹತ್ತಾರು ಪ್ರಶಸ್ತಿಗಳ ಘನತೆಯೇ ಹೆಚ್ಚಿರುವುದು ಉತ್ಪಕ್ಷೆಯಲ್ಲದ ನಿಜದ ಮಾತು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಟಿ.ಹೆಚ್. ಅಂಜನಪ್ಪ

ವೈದ್ಯಕೀಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯ ಮೂಲಕ ಮಾದರಿಯಾಗಿರುವ ಸಾಧಕರು ಡಾ. ಟಿ.ಹೆಚ್. ಅಂಜನಪ್ಪ ಸಾವಿರಾರು ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಜೀವರಕ್ಷಿಸಿದ ಧನ್ವಂತರಿ,
ವೈದ್ಯಕೀಯ, ಸಮಾಜಸೇವೆ, ಉಪನ್ಯಾಸ, ಆರೋಗ್ಯ ಶಿಬಿರಗಳ ಸಂಘಟನೆಯ ಕಾರ್ಯದಲ್ಲಿ ಮೈಲಿಗಲ್ಲು ನಿರ್ಮಿಸಿರುವ ಅಪರೂಪದ ವೈದ್ಯರು ಡಾ.ಟಿ.ಹೆಚ್.ಅಂಜನಪ್ಪ, ಮೂರೂವರೆ ದಶಕಗಳಿಂದಲೂ ವೈದ್ಯಕೀಯ ಸೇವೆಯಲ್ಲಿ ಅನವರತ ನಿರತರಾಗಿರುವ ಡಾ.ಟಿ.ಹೆಚ್. ಅಂಜನಪ್ಪ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಪೇಗೌಡ ಆಸ್ಪತ್ರೆಗಳಲ್ಲಿ ರೋಗಿಗಳ ಜೀವರಕ್ಷಣೆಗೆ ದುಡಿದವರು. ೩೫ ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವಿಶಿಷ್ಟ ದಾಖಲೆ ಅವರದ್ದು. ಬಡರೋಗಿಳಿಗೆ ಉಚಿತ ಚಿಕಿತ್ಸೆ, ೭೦೦ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ೯೦೦ಕ್ಕೂ ಅಧಿಕ ಆರೋಗ್ಯದ ಕುರಿತ ಉಪನ್ಯಾಸ, ಕರ್ನಾಟಕ ಕ್ಯಾನ್ಸರ್ ಸಂಸ್ಥೆಯಿಂದ ನಿರಂತರ ಸಮಾಜಸೇವೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನೇಕ ಕಾಲೇಜು-ಸಂಘಸಂಸ್ಥೆಗಳಲ್ಲಿ ಅರ್ಬುದ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಡಾ.ಟಿ.ಹೆಚ್ ಅಂಜನಪ್ಪ ಅವರ ಬಹುಮುಖಿ ಸೇವೆ-ಸಾಧನೆಗೆ ಹಿಡಿದ ಕೈಗನ್ನಡಿ. ಹತ್ತಾರು ಪ್ರಶಸ್ತಿ-ಗೌರವಗಳಿಗೆ ಪಾತ್ರವಾಗಿರುವ ಅಂಜನಪ್ಪ ವೈದ್ಯರಂಗದ ವಿಶಿಷ್ಟ ಹಾಗೂ ಮಾದರಿ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹನುಮಂತರಾಯ ಪಂಡಿತ್‌

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರು ಡಾ. ಹನುಮಂತರಾಯ ಪಂಡಿತ್. ಜ್ಯೋತಿಷ್ಯ, ಹೋಮಿಯೋಪತಿ ಮತ್ತು ಆಯುರ್ವೇದದಲ್ಲಿ ಹೊಸ ಸಂಶೋಧನೆಗಳಿಂದ ಜನೋಪಕಾರಿಯಾದ‌ ಪಂಡಿತರು.
ತುಮಕೂರು ತಾಲ್ಲೂಕಿನ ರಾಮುಗನಹಳ್ಳಿ ಹನುಮಂತರಾಯರ ಹುಟ್ಟೂರು. ೧೯೨೯ರ ಮೇ.೨೫ರಂದು ಜನನ. – ಓದು, ಛಲ ಹುಟ್ಟುಗುಣ. ಬಡತನದಿಂದಾಗಿ ಪ್ರೌಢಶಾಲೆಯ ಮೆಟ್ಟಿಲೇರಲಾಗದಿದ್ದರೂ ಸಂಸ್ಕೃತ ಭಾಷಾ ಅಧ್ಯಯನದಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್‌ ಗಳಿಸಿದವರು. ಪರಿಶ್ರಮದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಅಧ್ಯಾಪಕ, ಉಪನ್ಯಾಸಕರಾಗಿ ಹುದ್ದೆಗೇರಿದವರು. ಎಸ್‌ಎಸ್‌ಎಲ್, ಕನ್ನಡಪಂಡಿತ ಪದವಿ, ಜ್ಯೋತಿಷ್ಯ, ಹೋಮಿಯೋಪಥಿ ಹಾಗೂ ಆಯುರ್ವೇದದ ಅಧ್ಯಯನವೆಲ್ಲವೂ ಛಲದ ಫಲವೇ. ಮಾಧ್ಯಮಿಕ ಶಾಲೆಯ ಉಪಪಠ್ಯವಾದ ನಾಲ್ಕು ಕಿರುಕಥೆಗಳು, ಹತ್ತನೇ ತರಗತಿ ಪಠ್ಯಪುಸ್ತಕವಾದ ಸಾಹಿತ್ಯಸಂಪುಟ ರಚಿಸಿದವರು. ವಿವಿಧ ಕಾಯಿಲೆಗಳ ನಿವಾರಣೆಗೆ ೨೦ ಸಂಶೋಧನೆಗಳು, ಆಯುರ್ವೇದ ಔಷಧಿಗಳ ನಿರ್ಮಾಣಗಾರದ ಸ್ಥಾಪನೆ, ಆಯುರ್ ಪಾರ್ಕ್ ಹೆಲ್ತ್‌ಕೇರ್ ಲಿಮಿಟೆಡ್‌ನ ನಿರ್ದೇಶಕತ್ವ ಸಾದು ಜನಾಂಗದ ಇತಿಹಾಸದ ಸಂಗ್ರಹ, ಸಹಕಾರ ಸಂಘ ಸ್ಥಾಪನೆ, ಸಾದರ ಸುದ್ದಿ ಪತ್ರಿಕೆ. ಎಲ್ಲವೂ ಸಾಧನೆಯ ಮೈಲಿಗಲ್ಲುಗಳೇ.೯೦ರ ಇಳಿವಯಸ್ಸಿನಲ್ಲೂ ಕ್ರಿಯಾಶೀಲವಾಗಿರುವ ಹಿರಿಯ ಜೀವ ಸಾಧಕರಿಗೆ ನಿಜಮಾದರಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಲೀಲಾವತಿ ದೇವದಾಸ್

ಹೈದರಾಬಾದ್ ಕರ್ನಾಟಕದಲ್ಲಿ ಹದಿನೈದು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಲೀಲಾವತಿ ದೇವದಾಸ್ ಅವರು ಗಾಂಧಿ ಸ್ಮಾರಕ ಕುಷ್ಠರೋಗ ನಿವಾರಣಾ ನಿಧಿಯಲ್ಲಿ ಸೇವೆ ಸಲ್ಲಿಸಿದವರು.

ಟಿ. ನರಸೀಪುರದಲ್ಲಿ ಕುಷ್ಠರೋಗ ನಿವಾರಣಾ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಆರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ವಿಶ್ರಾಂತ ಜೀವನದಲ್ಲಿಯೂ ಮೂರು ಮಿಷನ್ ಆಸ್ಪತ್ರೆಗಳಲ್ಲಿ ಸಲ್ಲಿಸುತ್ತಿರುವ ಲೀಲಾದೇವಿ ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಸೇವೆ ಅನುಕರಣೀಯ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಶಾಶ್ವತಿ ಸಂಸ್ಥೆಯ ಸದೋದಿತಾ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಡಾ|| ಲೀಲಾವತಿ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿಯೂ ಸಕ್ರಿಯರು.

ಐವತ್ತಕ್ಕೂ ಹೆಚ್ಚು ಆರೋಗ್ಯ ಸಂಬಂಧಿ ಕೃತಿಗಳನ್ನು ರಚಿಸಿರುವ ಇವರು ಅನೇಕ ಪತ್ರಿಕೆಗಳಲ್ಲಿ ಆರೋಗ್ಯ ವಿಷಯವಾಗಿ ಅಂಕಣಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ.ಜಿ. ಗೋಪಾಲ್

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡಿದವರು ಡಾ. ಎಂ.ಜಿ.ಗೋಪಾಲ್. ಪ್ರತಿಷ್ಠಿತ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರು.
೧೯೫೪ರ ನವೆಂಬರ್ ೧೮ರಂದು ಜನಿಸಿದ ಡಾ. ಎಂ.ಜಿ.ಗೋಪಾಲ್ ಅವರು ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದವರು. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮಶಾಸ್ತ್ರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಗಳಿಸಿದ ಅವರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಚರ್ಮಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ೩೪ ವರ್ಷಗಳ ಸೇವಾವಧಿಯಲ್ಲಿ ಕಿಮ್ಸ್ನ ಪ್ರಾಂಶುಪಾಲ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದವರು. ವೈದ್ಯಕೀಯ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ ತಮ್ಮ ಅನುಭವವನ್ನು ಧಾರೆಯೆರೆದಿರುವ ಡಾ. ಎಂ.ಜಿ.ಗೋಪಾಲ್ ಅವರ ಅನೇಕ ಪ್ರಶಸ್ತಿ- ಗೌರವಗಳಿಗೂ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಪಿ.ಮೋಹನರಾವ್

ವೈದ್ಯೋ ನಾರಾಯಣೋ ಹರಿ ಎಂಬ ಲೋಕನುಡಿಗೆ ಅನ್ವರ್ಥವಾಗಿರುವವರು ಡಾ.ಪಿ.ಮೋಹನ್ರಾವ್. ವೃತ್ತಿಪರ ವೈದ್ಯ, ವೈದ್ಯಾಧಿಕಾರಿ, ವೈದ್ಯಕೀಯ ಮಂಡಳಿಯ ಸಲಹೆಗಾರ ಮತ್ತು ಆಡಳಿತಗಾರರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಬಹುಮುಖಿ ಸೇವೆ ಸಲ್ಲಿಸಿದವರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆ ಡಾ. ಪಿ.ಮೋಹನರಾವ್, ಉಡುಪಿ ಮೂಲದವರಾದ ಪಿ.ಮೋಹನ್ರಾವ್ ಹುಟ್ಟಿದ್ದು ೧೯೪೦ರಲ್ಲಿ. ಚೆನ್ನೈನ ಕಿಲ್ ಪೌಕ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಮೋಹನ್ ರಾವ್ ಮಂಗಳೂರಿನ ಕಸ್ತೂರಿಬಾ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಶಿಕ್ಷಣ ಪೂರೈಸಿದರು. ಭಾರತೀಯ ಎಲೆಕ್ಟೋ ಕಾರ್ಡಿಯೋಲಜಿ ಸಂಸ್ಥೆಯಿಂದ ಫೆಲೋಶಿಪ್ ಪಡೆದವರು. ೧೯೬೪ರಲ್ಲಿ ಪೆರಂಬೂರಿನ ಭಾರತೀಯ ರೈಲ್ವೆ ಆಸ್ಪತ್ರೆಯ ವೈದ್ಯರಾಗಿ ವೃತ್ತಿಬದುಕು ಆರಂಭಿಸಿದ ಅವರು ಆನಂತರ ವಿಶೇಷ ವೈದ್ಯಾಧಿಕಾರಿಗಳಾದರು. ೧೯೮೫ರಿಂದ ೨೦೧೧ರವರೆಗೆ ಎಚ್ಎಎಲ್ನಲ್ಲಿ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಹೊಸಕೋಟೆಯಲ್ಲಿ ಎಂವಿಜೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಆರಂಭಕ್ಕೆ ಬುನಾದಿ ಹಾಗಿದ ಅವರು ಪ್ರಸ್ತುತ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸೀತಾರಾಮಭಟ್

ವೈದ್ಯಕೀಯ ಕ್ಷೇತ್ರದಲ್ಲಿ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರು ಡಾ.ಪಿ.ಎಸ್.ಸೀತಾರಾಮ ಭಟ್. ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ಹಲವರಿಗೆ ಜೀವದಾನ ಮಾಡಿದ ವೈದ್ಯರು.
ವೈದ್ಯಕೀಯ ಉಪನ್ಯಾಸಕ, ಆಡಳಿತಗಾರ ಮತ್ತು ಅತ್ಯುತ್ತಮ ಕೌಶಲ್ಯದ ಶಸ್ತ್ರಚಿಕಿತ್ಸಕರಾಗಿ ಹೆಸರುವಾಸಿಯಾಗಿರುವ ಸೀತಾರಾಮ ಭಟ್ ಅವರು ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾಡಿಯೋತೋರಿಕ್ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಸಂಸ್ಥೆಯಲ್ಲಿ ಎರಡು ದಶಕಕ್ಕೂ ಮೀರಿದ ಸೇವೆ ಅವರದ್ದು. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ೨೦೧೭ರಲ್ಲಿ ಮೊಟ್ಟಮೊದಲ ಬಾರಿಗೆ ಹೃದಯ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಸೀತಾರಾಮ ಭಟ್ಕದ್ದು. ಪ್ರತಿ ದಿನ ಸಂಸ್ಥೆಯಲ್ಲಿ ಮಕ್ಕಳೂ ಸೇರಿದಂತೆ ೧೫ ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದ್ದು ಆ ಕಾರ್ಯದಲ್ಲಿ ಸೀತಾರಾಮಭಟ್ಕದ್ದು ಪ್ರಮುಖ ಪಾತ್ರ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ರಾಜಸ್ತಾನ, ತಮಿಳುನಾಡು, ಕೇರಳ, ಉತ್ತರಪ್ರದೇಶ, ಒರಿಸ್ಸಾ, ಬಿಹಾರ ಮುಂತಾದೆಡೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿರುವ ಅವರು ಆರೋಗ್ಯ ಪ್ರವಾಸೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ವಿದೇಶಗಳ ರೋಗಿಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ನಾಡಿನ ಕೀರ್ತಿ ಬೆಳಗಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಠಲರಾವ್ ಗುರುರಾವ್ ನಾಡಗೌಡ

ಹುಬ್ಬಳ್ಳಿಯ ಡಾ. ವಿಠಲರಾವ್ ಗುರುರಾವ್ ನಾಡಗೌಡ ಅವರು ವೈದ್ಯಕೀಯ ವೃತ್ತಿಯಲ್ಲಿ ನಾಲ್ಕು ದಶಕಗಳಿಂದಲೂ ನಿರತರು. ರಕ್ತದೊತ್ತಡ ಮತ್ತು ಮಧುಮೇಹ ರೋಗಗಳಿಗೆ ಸಂಬಂಧಿಸಿದಂತೆ ನಿರಂತರ ಶಿಬಿರಗಳನ್ನು ನಡೆಸುತ್ತಿರುವ ವೈದ್ಯರು.
ಚರ್ಮರೋಗ, ನರರೋಗ, ಯಕೃತ್ ರೋಗ, ದಂತ, ಎಲುಬು ಕೀಲು ಹಾಗೂ ಫಿಸಿಯೋಥೆರಪಿ ವಿಭಾಗದಲ್ಲಿ ಸತತ ವೈದ್ಯಸೇವೆ ಇವರದ್ದು. ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಬೆಳಗಾಗಿ, ಕಾರವಾರ ಹಾಗೂ ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಬಡ ರೋಗಿಗಳಿಗಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸಿದವರು. ಆಂಧ್ರಪ್ರದೇಶದ ಮಂತ್ರಾಲಯ ಹಾಗೂ ಗೋವಾದಲ್ಲಿಯೂ ಶಿಬಿರ ನಡೆಸಿದ ಹೆಗ್ಗಳಿಕೆ. ೪೧ ವರ್ಷಗಳ ವೃತ್ತಿಜೀವನದಲ್ಲಿ ಐದು ಲಕ್ಷದವರೆಗೆ ಔಷಧಿಗಳನ್ನು ವಿತರಿಸಿದ ಹೆಚ್ಚುಗಾರಿಕೆ. ವೈದ್ಯಕೀಯ ಸಂಘಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಭಾರತೀಯ ವೈದ್ಯರ ಸಂಘದ ಕರ್ನಾಟಕ ಘಟಕದಿಂದ ಜೀವಮಾನ ಸಾಧನೆ ಪ್ರಶಸ್ತಿ, ಅಮೆರಿಕದ ‘ಟ್ರಯಲ್ಸ್ಟೇಜ’ ಗೌರವಕ್ಕೂ ಪಾತ್ರವಾಗಿರುವ ಅವರು ವೈದ್ಯಕೀಯ ಪ್ರಬಂಧಗಳ ಮಂಡನೆಯಲ್ಲೂ ಪ್ರವೀಣರು, ಬಂಗಾರದ ಪದಕಗಳ ವಿಜೇತರೂ ಸಹ,

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹೆನ್ರಿ ಸುಭಾಷ್ ಕೃಷ್ಣ ಬಲ್ಲಾಳ್

ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಪ್ರಸ್ತುತ ಸಹ ಕುಲಾಧಿಪತಿಗಳಾಗಿರುವ ಡಾ|| ಹೆಬ್ರಿ ಸುಭಾಷ್ ಕೃಷ್ಣ ಬಲ್ಲಾಳ್ ಅವರು ವಿದ್ಯೆ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಗಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ವಯಂಸೇವಾ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಬಲ್ಲಾಳ್ ಅವರು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬಡ ರೋಗಿಗಳ ವಿಮಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯರಾಗಿರುವ ಬಲ್ಲಾಳ್ ಅವರು ಎಫ್.ಕೆ.ಸಿ.ಸಿ.ಐ ಉನ್ನತ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ರಾಜೋತ್ಸವ ಪುರಸ್ಕೃತರೂ ಆಗಿರುವ ಹೆಬ್ರಿ ಸುಭಾಷ್ ಕೃಷ್ಣ ಬಲ್ಲಾಳ್ ಅವರು ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಸ್ಥೆಗಳ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಪಿ. ಸತೀಶ್ ಚಂದ್ರ

ಡಾ|| ಪಿ. ಸತೀಶಚಂದ್ರ ಅವರು ನ್ಯೂರಾಲಜಿ ವಿಭಾಗದ ಮುಖ್ಯಸ್ಥರಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರ ನಿಮ್ಹಾನ್ಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಪ್ರತಿಷ್ಟಿತ ಫೆಲೋಶಿಪ್‌ಗಳು ದೊರೆತಿವೆ. ಈವರೆಗೆ ೨೦೦ಕ್ಕೂ ಹೆಚ್ಚು ಪ್ರಕಟಣೆಗಳು, ೧೬೪ ಜರ್ನಲ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

HotWater Epilepsy ಕುರಿತಾದ ವಿಶೇಷ ಅಧ್ಯಯನ ಮಾಡಿರುವ ಡಾ|| ಪಿ. ಸತೀಶಚಂದ್ರ ಅವರಿಗೆ ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಬಿ.ಸಿ.ರಾಯ್ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ದೊರೆತಿವೆ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರತಿಭಾನ್ವಿತರಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಕರ್ನಾಟಕದ ಪ್ರಪ್ರಥಮ ಮಹಿಳಾ ಹೃದ್ರೋಗ ತಜ್ಞೆ ಶೈಕ್ಷಣಿಕ ವರ್ಷದುದ್ದಕ್ಕೂ ಚಿನ್ನದ ಪದಕಗಳನ್ನು ಸೂರೆಗೊಂಡವರು.
ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮುಚ್ಚಿದ ಖ್ಯಾತಿ ಇವರದು. “ವರ್ಲ್ಡ್ ಕಾಂಗ್ರೆಸ್”ನಲ್ಲಿ ಸತತವಾಗಿ ಎರಡುವರ್ಷ ಮಂಡಿಸಿದ ಸಂಶೋಧನಾತ್ಮಕ ಪ್ರಬಂಧಗಳಿಗೆ ‘ಬೆಸ್ಟ್ ಪೇಪರ್ ಅವಾರ್ಡ್’ ದೊರೆತಿದೆ.
ರಾಷ್ಟ್ರೀಯ ಸಿಎಫ್‌ಐ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಪ್ರಥಮ ಕನ್ನಡತಿ, ಕರ್ನಾಟಕದಲ್ಲಿ ಮಕ್ಕಳ ಹೃದ್ರೋಗ ಚಿಕಿತ್ಸಾಕೇಂದ್ರವನ್ನು ಪ್ರಪ್ರಥಮವಾಗಿ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಬೀದರ್‌ನಲ್ಲಿ ನಡೆದ ಅಖಿಲ ಭಾರತ ೭೨ನಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಏಕೈಕ ಹೃದ್ರೋಗ ತಜ್ಞೆ.
ಡಾ. ಬಿ.ಸಿ. ರಾಯ್ ಪ್ರಶಸ್ತಿ, ಫ.ಗು. ಹಳಕಟ್ಟಿ ಪುರಸ್ಕಾರ, ಅಮೇರಿಕಾದಲ್ಲಿ ಸಾರ್ವಜನಿಕ ಸನ್ಮಾನ, ಚಾಣಕ್ಯ, ಕೌಟಿಲ್ಯ ಗ್ಲೋಬಲ್ ಅವಾರ್ಡ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಮಧ್ಯಪಾನ, ಧೂಮಪಾನ ಚಟಗಳನ್ನು ಸಮಾಜದಿಂದ ತೊಲಗಿಸಲು ಉಪನ್ಯಾಸ, ವಿಚಾರಗೋಷ್ಠಿ, ಕರಪತ್ರ, ಪುಸ್ತಕ ಪ್ರಕಟಣೆ, ಬ್ಯಾಲಿ, ಪಾದಯಾತ್ರೆ ಮೊದಲಾದವುಗಳ ಮೂಲಕ ಜನಜಾಗೃತಿ ಉಂಟು ಮಾಡುತ್ತಿದ್ದಾರೆ.
ವೈದ್ಯ ವೃತ್ತಿ ಹಾಗೂ ಸಮಾಜಸೇವೆಗಳಿಂದ ಪೂರ್ಣವಾಗಿ ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡ ಅಪರೂಪದ ಗಣ್ಯವ್ಯಕ್ತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಕೆ. ಶ್ರೀನಿವಾಸಮೂರ್ತಿ

ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಸಹಸ್ರಾರು ಮಂದಿಯ ಆರೋಗ್ಯದ ಕಾಳಜಿ ವಹಿಸುತ್ತಿರುವ ಖ್ಯಾತ ಹೃದಯತಜ್ಞ ಡಾ|| ಬಿ.ಕೆ. ಶ್ರೀನಿವಾಸಮೂರ್ತಿ,
ಬಳ್ಳಾರಿಯವರಾದ ಶ್ರೀನಿವಾಸಮೂರ್ತಿ ಅವರು ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಪೂರೈಸಿ ಇಂಗ್ಲೆಂಡಿನ ರಾಯಲ್ ಕಾಲೇಜ್‌ ಆಫ್ ಫಿಜಿಷಿಯನ್ಸ್ ನಿಂದ ಎಂ.ಆರ್.ಸಿ.ಪಿ. ವೈದ್ಯ ಪದವಿ ಪಡೆದಿದ್ದಾರೆ. ಬಳ್ಳಾರಿಯ ಸರಕಾರಿ ವೈದ್ಯಕೀಯ ಕಾಲೇಜು, ಅಮೇರಿಕಾದ ಚೆಸ್ಟ್‌ನಟ್ ಹಿಲ್ ಹಾಸ್ಪಿಟಲ್, ಇಂಗ್ಲೆಂಡಿನ ಡಾನ್‌ಕಾಸ್ಟ‌ ರಾಯಲ್ ಇನ್‌ಫರರೀ ಮೊದಲಾದ ಕಡೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಜನಪ್ರಿಯರಾಗಿದ್ದಾರೆ.
ಹೃದಯ ಹಾಗೂ ಮಧುಮೇಹ ಕಾಯಿಲೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಡಾ|| ಮೂರ್ತಿ ಅವರು ಅನೇಕ ಪ್ರಬಂಧಗಳನ್ನು ರಾಷ್ಟ್ರಮಟ್ಟದ ವಿವಿಧ ವೈದ್ಯ ವೇದಿಕೆಗಳಲ್ಲಿ ಮಂಡಿಸಿದ್ದಾರೆ.
ಚೀನಾ, ಥಾಯ್‌ಲ್ಯಾಂಡ್ ಇಂಡೋನೇಷ್ಯಾ, ಈಜಿಪ್ಟ್, ದುಬೈ ಮೊದಲಾದ ಕಡೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಭಾರತ ಸರ್ಕಾರದ ಸ್ವಾಸ್ಥ್ಯ ಸಚಿವಾಲಯದ ಸೆಂಟ್ರಲ್‌ ಕೌನ್ಸಿಲ್‌ನ ಮೆಂಬರಾಗಿ ಸೇವೆ ಸಲ್ಲಿಸಿರುವರು.
ಎ.ಪಿ.ಐ. ಕರ್ನಾಟಕ ಚಾಪ್ಟರ್‌ನಿಂದ ಬಂಗಾರ ಪದಕ ಪಡೆದಿರುವುದಲ್ಲದೇ ಕಾರ್ಡಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನಿತರಾಗಿದ್ದಾರೆ. ಇನ್ನೂ ಅನೇಕ ಸಂಸ್ಥೆಗಳು ಇವರನ್ನು ಗೌರವಿಸಿವೆ. ಸದ್ಯ ಬಳ್ಳಾರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಡಾ|| ಬಿ.ಕೆ. ಶ್ರೀನಿವಾಸಮೂರ್ತಿ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವೆಂಕಟರಮಣ ನೀಲಂ

ನರವಿಜ್ಞಾನ ಕ್ಷೇತ್ರದ ಬಹುದೊಡ್ಡ ಹೆಸರು ಡಾ. ವೆಂಕಟರಮಣ ಕೆ. ನೀಲಂ,
ತಿರುಪತಿ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ. ಬಳಿಕ ನ್ಯೂರೋ ಸರ್ಜ ೯ರಿಯಲ್ಲಿ ಮಾಸ್ಟರ್ ಆಫ್ ಸರ್ಜರಿ ಮಾಡಿರುವ ಶ್ರೀಯುತರು ೧೯೮೬ರಲ್ಲಿ ನಿಮ್ಹಾನ್ಸ್‌ನ ಉತ್ತಮ ವೈದ್ಯ ವಿದ್ಯಾರ್ಥಿ ಎಂಬ ಹಿರಿಮೆಗೆ ಪಾತ್ರರು. ಜರ್ಮನಿಯಲ್ಲಿ ಮೈಕ್ರೋ ನ್ಯೂರೋ ಸರ್ಜರಿ ತರಬೇತಿ ಪಡೆದು ಕಳೆದ ೨೦ ವರ್ಷಗಳಿಂದ ನರವೈದ್ಯ ವಿಜ್ಞಾನ ರಂಗದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವ ನುರಿತ ವೈದ್ಯರಾಗಿ ಜನಪ್ರಿಯರು.
ಈವರೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ನರರೋಗ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿರುವರು. ನಿಮ್ಹಾನ್ಸ್ ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಕರಾಗಿ ಹಾಗೂ ನಿರ್ದೇಶಕರಾಗಿ, ಈಗ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಉಪಾಧ್ಯಕ್ಷರು ಮತ್ತು ನಿರ್ದೇಶಕರಾಗಿ ಶ್ರೀ ವೆಂಕಟರಮಣ ಕೆ.ನೀಲಂ ಅವರಿಂದ ಸೇವೆ ಸಲ್ಲಿಕೆ.
ನರವಿಜ್ಞಾನ ಕ್ಷೇತ್ರದಲ್ಲಿ ಅವರು ಪಡೆದಿರುವ ಅಪಾರ ಜ್ಞಾನ ಮತ್ತು ಅನುಭವ ರಾಷ್ಟ್ರ, ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್‌ಗಳಲ್ಲಿ ಲೇಖನಗಳಾಗಿ ಪ್ರಕಟ. ನ್ಯೂರೋ ಸರ್ಜರಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ, ಸಂಶೋಧನೆ ಕೈಗೊಂಡು ಹಲವು ಕೃತಿಗಳನ್ನೂ ಶ್ರೀಯುತರು ಬರೆದಿರುವರು.
ಭಾರತೀಯ ನ್ಯೂರೋಸರ್ಜಿಕಲ್ ಸೊಸೈಟಿಯ ಸದಸ್ಯತ್ವ ಸೇರಿದಂತೆ ಅನೇಕ ವೈದ್ಯಕೀಯ ಸಂಸ್ಥೆಗಳ ಸದಸ್ಯತ್ವಕ್ಕೆ ಶ್ರೀಯುತರು ಭಾಜನರು.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನ್ಯೂರೋ-ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಕೀರ್ತಿಗೆ ಭಾಜನರಾದವರು ಶ್ರೀ ಡಾ. ವೆಂಕಟರಮಣ ಕೆ.ನೀಲಂ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸುಬ್ರಾಯಪ್ಪ

ವೈದ್ಯಕೀಯ ವೃತ್ತಿಯನ್ನು ಒಂದು ಸಾಮಾಜಿಕ ಸೇವೆ ಎಂದೇ ಭಾವಿಸಿ ದುಡಿಯುತ್ತಿರುವ ಅಪರೂಪದ ಪ್ರತಿಭೆ ಡಾ. ಸುಬ್ರಾಯಪ್ಪ ಅವರು.
ಕಳೆದ ೨೫ ವರ್ಷಗಳಿಂದ ವೈದ್ಯ ಕ್ಷೇತ್ರದಲ್ಲಿ ದುಡಿಯುತ್ತಾ ರೋಗಿಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತ ತಮ್ಮ ಮಾತಿನಿಂದಲೇ ಮನಗೆಲ್ಲುತ್ತಿರುವ ಕಾಯಕಜೀವಿ ಇವರು.
ವಿದ್ಯಾರ್ಥಿದೆಸೆಯಲ್ಲಿಯೇ ಅವಿರತ ಶ್ರಮ ಮತ್ತು ಶಿಸ್ತಿನ ಅಧ್ಯಯನಕ್ಕೆ ಹೆಸರಾದ ಸುಬ್ರಾಯಪ್ಪ ಅವರು ಯಾವುದೇ ರೋಗವನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ಅತ್ಯಂತ ಖಚಿತವಾದ ಶುಶೂಷೆ ನೀಡುವುದರಲ್ಲಿ ಸಿದ್ಧಹಸ್ತರು. ಮನೆಯಲ್ಲಿರಲಿ, ಆಸ್ಪತ್ರೆಯಲ್ಲಿರಲಿ ಹಗಲಿರುಳೆನ್ನದೆ ರೋಗಿಗಳ ಸೇವೆಗಾಗಿ ತಮ್ಮೆಲ್ಲ ಸಮಯವನ್ನು, ಸೇವೆಯನ್ನು ಮುಡುಪಾಗಿಟ್ಟವರು ಡಾ. ಸುಬ್ರಾಯಪ್ಪ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಡಿ. ನಾಗರಾಜ್

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯನ್ನು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸ್ಥೆಯಾಗಿ
ರೂಪಿಸಿರುವ ಕೀರ್ತಿ ಡಾ.ಡಿ. ನಾಗರಾಜ ಅವರದು.
ನಿಮ್ಹಾನ್ಸ್‌ನ ನರವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ೧೯೭೯-೮೦ರಲ್ಲಿ ಸೇರಿದ ಅವರು, ೨೦೦೨ರಿಂದ ಸಂಸ್ಥೆಯ ನಿರ್ದೇಶಕ-ಉಪಕುಲಪತಿ ಜವಾಬ್ದಾರಿ ಹೊತ್ತಿರುವರು.
ಹೋರಾಡಿ
ಸಂಸ್ಥೆಗೆ ಸೇರಿದ ಹತ್ತು ಎಕರೆ ಜಾಗ ಒತ್ತುವರಿಯಿಂದಾಗಿ ಕೈತಪ್ಪುವುದರಲ್ಲಿದ್ದಾಗ ಒತ್ತುವರಿದಾರರ ವಿರುದ್ಧ ಆ ಜಾಗವನ್ನು ಮರಳಿ ಪಡೆಯುವ ಮೂಲಕ ವೃತ್ತಿಧರ್ಮ ಎತ್ತಿಹಿಡಿದವರು ಶ್ರೀಯುತರು. ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ದೇಶದ ಎರಡು ಕೋಟಿಗೂ ಹೆಚ್ಚಿನ ಜನರ ಆರೋಗ್ಯ ಸುಧಾರಿಸಲು ಅಲ್ಪಾವಧಿಯ ಕೋರ್ಸ್‌ಗಳನ್ನು ಆರಂಭಿಸಿ ಸಿಬ್ಬಂದಿ ರೂಪಿಸುವ ಯೋಜನೆಯ ಹಿಂದೆ ಡಾ. ನಾಗರಾಜ ಅವರ ಪರಿಶ್ರಮ ಅಪಾರ.
ಶ್ರೀಯುತರ ೨೧೦ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಲೇಖನಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟ. ನರವಿಜ್ಞಾನ ಕ್ಷೇತ್ರದ ಆವಿಷ್ಕಾರಗಳ ಕುರಿತು ಅಪಾರ ಜ್ಞಾನ ಹೊಂದಿರುವ ಅವರು ಆ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲರು.
ಡಾ. ನಾಗರಾಜ ಅವರು ನ್ಯೂರಾಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್‌ನ ಆಜೀವ ಸದಸ್ಯರು.
ವೃತ್ತಿ ಗೌರವ ಮತ್ತು ಕಳಕಳಿಯ ಮೂಲಕ ಸಮಾಜ ಸೇವೆಗೆ ಕಟಿಬದ್ಧರಾದವರು ಡಾ. ನಾಗರಾಜ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್.ವಿ. ಕೊಟ್ಟೂರೇಶ್

ಶಿವಮೊಗ್ಗದಲ್ಲಿ ನವಜಾತ ಶಿಶು ಚಿಕಿತ್ಸೆಗೆ ಸಂಬಂಧಿಸಿದಂತೆ ಹೆಸರು ಮಾಡಿದ ಪ್ರಸಿದ್ಧ ಮಕ್ಕಳ ತಜ್ಞ ಡಾ. ಕೊಟ್ಟೂರೇಶ್
ಅವರು.
ಅಲ್ಲಿನ ಕೊಟ್ಟೂರೇಶ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಾಪಕರು. ಬೆಳಗಾವಿಯಲ್ಲಿ ಜವಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದವರು.
ನವಜಾತ ಶಿಶುವಿನ ಆರೈಕೆ, ಚಿಕಿತ್ಸೆ ಕುರಿತಂತೆ ಮಣಿಪಾಲದ ಕೆ.ಎಂ.ಸಿ. ಅಲ್ಲದೆ ಮಹಾರಾಷ್ಟ್ರ, ಕೇರಳ ಮತ್ತಿತರ ಕಡೆ ವಿಷಯ ಮಂಡಿಸಿ ಜಾಗೃತಿ ಮೂಡಿಸಿದ್ದಾರೆ.
ಅವಧಿ ಪೂರ್ವ ಜನಿಸುವ ಕಡಿಮೆ ತೂಕವುಳ್ಳ ಮಗು, ಆರೈಕೆಗೆ ಹೆಚ್ಚಿನ ಕಾಳಜಿ ನೀಡಬೇಕಾದ ಶಿಶುಗಳ ಬಗೆಗೆ ಹೆಚ್ಚಿನ ಕಾಳಜಿ ವಹಿಸುವ ವೈದ್ಯರು. ೭೫೦, ೯೦೦ ಗ್ರಾಂ ತೂಕ ಹೊಂದಿ ಜನಿಸಿದ ಶಿಶು ಕೂಡಾ ಉತ್ತಮವಾಗಿ ಚೇತರಿಸಿಕೊಂಡಿವೆ ಎಂಬುದು ಆಸ್ಪತ್ರೆಯಲ್ಲಿ ಸಿಗುವ ಗುಣಮಟ್ಟದ ಚಿಕಿತ್ಸೆ ಮತ್ತು ನವಜಾತ ಶಿಶುಗಳ ಆರೈಕೆ ಕುರಿತು ಇವರಿಗಿರುವ ಕಾಳಜಿಯ ದ್ಯೋತಕ.
ವೈದ್ಯಕೀಯ ರಂಗದಲ್ಲಿ ಶ್ರೀಯುತರ ಸೇವೆಯನ್ನು ಪರಿಗಣಿಸಿ ಶಿವಮೊಗ್ಗ ಮತ್ತು ಆಸುಪಾಸಿನ ಜಿಲ್ಲೆಗಳ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಮಕ್ಕಳ ಆರೋಗ್ಯ ಮತ್ತು ಪಾಲನೆಯ ಬಗೆಗೆ ವಿಶೇಷ ಗಮನ ನೀಡುವ ಕರ್ನಾಟಕದ ಖ್ಯಾತ ವೈದ್ಯರು ಡಾ. ಎಚ್.ವಿ. ಕೊಟ್ಟೂರೇಶ್.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್.ಕೆ. ಸರೋಜ

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಮಹಿಳಾ ರೇಡಿಯಾಲಜಿಸ್ಟ್ ಎನಿಸಿಕೊಂಡ ಡಾ|| ಸರೋಜ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ನ್ಯೂಕ್ಲಿಯರ್ ಮೆಡಿಸನ್ಲ್ಲಿ ಉನ್ನತ ಪದವಿ ಪಡೆದ ಮೊದಲ ಮಹಿಳೆ. ಇವರು ಕರ್ನಾಟಕದ ಪ್ರಥಮ ನ್ಯೂಕ್ಲಿಯರ್ ಮೆಡಿಸನ್ ಉನ್ನತ ಶಿಕ್ಷಣ ಪಡೆದ ವೈದ್ಯರು.
ಮುಂಬೈನ ಬಾಬಾ ರಿಸಚ್ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಇವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂಕ್ಲಿಯ ವೈದ್ಯಕೀಯ ವಿಭಾಗವನ್ನು ಸ್ಥಾಪಿಸಿದರು. ನಮ್ಮ ರಾಜ್ಯದಲ್ಲಿ ನ್ಯೂಕ್ಲಿಯರ್ ವಿಭಾಗ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಇದು. ಗೌರಿಬಿದನೂರು ತಾಲ್ಲೂಕಿನ ಕುಗ್ರಾಮದಲ್ಲಿ ಜನಿಸಿ ಕಾಲೇಜು ದಿನಗಳಲ್ಲಿ ಎನ್ ಸಿಸಿ ಕೆಡೆಟ್ ಆಗಿದ್ದು ಭೂಕಂಪ ಮೊದಲಾದ ಪ್ರಾಕೃತಿಕ ದುರಂತಗಳ ಸಂದರ್ಭಗಳಲ್ಲಿ ಸೇವೆ ಸಲ್ಲಿಸಿದ ಡಾ|| ಸರೋಜ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನ ನ್ಯೂಕ್ಲಿಯ ಮೆಡಿಸನ್ ವಿಭಾಗದ ಮುಖ್ಯಸ್ಥೆಯಾಗಿದ್ದರು.
ಆರೋಗ್ಯ ರಕ್ಷಣೆಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಶಿಭಿರಗಳನ್ನು ಆಯೋಜಿಸಿದ್ದ ಡಾ|| ಆರ್. ಕೆ. ಸರೋಜರವರು ಮಾಧ್ಯಮಗಳ ಮೂಲಕ ಆರೋಗ್ಯ ರಕ್ಷಣೆ ಕುರಿತಂತೆ ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್‌.ಎಸ್. ಮೋಹನ್

ನೇತ್ರತಜ್ಞ, ಲೇಖಕ, ಅಂಕಣಕಾರ, ಸಂಶೋಧಕ, ಪತ್ರಿಕಾಸಂಪಾದಕ, ಸಮಾಜಸೇವಕ, ಸಂಘಟಕರಾದ ಡಾ. ಎಚ್‌.ಎಸ್. ಮೋಹನ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸಾಧನೆಗೈದ ಬಹುಮುಖ ಪ್ರತಿಭೆ.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ೧೯೫೫ರಲ್ಲಿ ಜನಿಸಿದ ಡಾ. ಮೋಹನ್ ಮಲೆನಾಡಿನ ಜನಪ್ರಿಯ ನೇತ್ರಚಿಕಿತ್ಸಾ ತಜ್ಞರು. ನಾಲ್ಕು ದಶಕಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದವರು. ೩೨ ಸಾವಿರ ಮಕ್ಕಳಿಗೆ ಉಚಿತ ನೇತ್ರ ಚಿಕಿತ್ಸೆ, ತಪಾಸಣೆಗೈದವರು. ವಿಜಯ ಸೇವಾಟ್ರಸ್ಟ್ ಮೂಲಕ ಹಳ್ಳಿಗಾಡಿನ ಅಶಕ್ತರಿಗಾಗಿ ಐವತ್ತಕ್ಕೂ ಹೆಚ್ಚು ನೇತ್ರ ಚಿಕಿತ್ಸಾ ಶಿಖರ, ಕಾರ್ಯಾಗಾರ, ವಿಚಾರಸಂಕಿರಣಗಳ ಆಯೋಜನೆ. ಕನ್ನಡದ ಎಲ್ಲಾ ದಿನಪತ್ರಿಕೆಗಳಲ್ಲಿ ಒಟ್ಟು ೩೫೦೦ ಲೇಖನಗಳು, ಇಂಗ್ಲೀಷ್‌ನಲ್ಲಿ ೧೫೦೦ ಲೇಖನಗಳ ಪ್ರಕಟ, ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ೨೪ ವೈದ್ಯಕೀಯ ಕೃತಿಗಳ ರಚನೆ, ಗ್ಲುಕೋಮಾ ರೋಗ ಪತ್ತೆ ಹಚ್ಚಿದ ಹಿರಿಮೆ, ಕರ್ನಾಟಕ ನೇತ್ರತಜ್ಞರ ಸೊಸೈಟಿಯ ಚಾಕ್ಷು ನಿಯತಕಾಲಿಕದ ಸಂಪಾದಕ, ಜನಪ್ರಿಯ “ವೈದ್ಯವೈವಿಧ್ಯ”

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ರಾಜನ್ ದೇಶಪಾಂಡೆ

ಮಕ್ಕಆಗಾಗಿಯೇ ವಿಶೇಷ ಚಿಕಿತ್ಸಾಲಯವನ್ನು ಧಾರವಾಡದಲ್ಲಿ ಸ್ಥಾಪಿಸಿ ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ತೋಲಿಸುತ್ತಿರುವ ಪ್ರಸಿದ್ಧ ಮಕ್ಕಳ ತಜ್ಞ
ಡಾ. ರಾಜನ್ ದೇಶಪಾಂಡೆ ಅವರು.
ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮೂರು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಡಾ. ರಾಜನ್ ದೇಶಪಾಂಡೆ ಅವರ ಜನನ ೧೯೫೨ರಲ್ಲಿ. ಕರ್ನಾಟಕ ಮೆಡಿಕಲ್ ಕಾಲೇಜ್ನಿಂದ ಎಂ.ಬಿ.ಬಿ.ಎಸ್., ಎಂ.ಡಿ. ಪದವಿ ಪಡೆದು ಹುಬ್ಬಳ್ಳಿ, ನವದೆಹಲಿ, ಚೆನ್ನೈ ಹಾಗೂ ಅಮೆಲಕಾಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಪ್ರಸ್ತುತ ಧಾರವಾಡದಲ್ಲೇ ನೆಲೆಸಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ತೋಲಿಸುತ್ತಾ ಮಕ್ಕಳಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ವೈದ್ಯರು.
ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿರುವ ಡಾ. ರಾಜನ್ ಐವತ್ತು ಸಾವಿರಕ್ಕೂ ಹೆಚ್ಚು ಮಕ್ಕಳಗೆ ಉಚಿತ ರೋಗ ಪ್ರತಿಬಂಧಕ ಲಸಿಕೆ ಹಾಕಿದ್ದಾರೆ. ಕೊಳಚೆ ಪ್ರದೇಶಗಳ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿಶೇಷ ಪ್ರಯತ್ನ ನಡೆಸಿರುವ ಇವರು ೧೦೦ಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ರಕ್ಷಣೆ ಕುಲತು ತಿಳುವಳಿಕೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿಯೇ ಮಕ್ಕಳಿಗೆ ಉಪಯುಕ್ತವಾದಂತಹ ಗ್ರಂಥಾಲಯವನ್ನು ಆರಂಭಿಸಿರುವ ಡಾ. ರಾಜನ್ ದೇಶಪಾಂಡೆ ಅವರು ನವಜಾತ ಶಿಶುಗಳ ತೀವ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದವರು. ಪೂರ್ವ ಆಫ್ರಿಕಾದಲ್ಲಿ ಮಕ್ಕಳ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಅಲತುಕೊಳ್ಳಲು ಭೇಟಿ ನೀಡಿದ್ದ ಭಾರತೀಯ ತಂಡದ ನೇತೃತ್ವ ವಹಿಸಿದ್ದ ಡಾ. ರಾಜನ್ ಅವರ ತಂಡ ಉಗಾಂಡದಲ್ಲಿ ೫೦೦ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಹೆಗ್ಗಆಕೆಗೆ ಪಾತ್ರವಾಗಿದೆ. ಆಫ್ರಿಕಾ ಜನರ ದುಃಖ ದುಮ್ಮಾನಗಳನ್ನು ನಿವಾಲಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸೇವೆ ಸಲ್ಲಿಸಿರುವ ಡಾ. ರಾಜನ್ ದೇಶಪಾಂಡೆ ಅವರು ಮಕ್ಕಳ ಅಕಾಡೆಮಿಯನ್ನು ಧಾರವಾಡದಲ್ಲಿ ಆರಂಭಿಸಿ ಮಕ್ಕಳ ಆರೋಗ್ಯ ಜಾಗೃತಿ ಶಿರಗಳನ್ನು ನಿಯತವಾಗಿ ಏರ್ಪಡಿಸುತ್ತಾ ಬಂದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಹಾಗೂ ಮಕ್ಕಳ ವೈದ್ಯಕೀಯ ಸಂಘದ ಪದಾಧಿಕಾಲಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜನ್ ದೇಶಪಾಂಡೆ ಅವರು ಅಮೆಲಕಾ, ಇಂಗ್ಲೆಂಡ್ ಮೊದಲಾದ ದೇಶಗಳ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಹಾಗೂ ಬಡಮಕ್ಕಳ ಬಗ್ಗೆ ಕಳಕಆಯುಳ್ಳ ಸೇವಾಮನೋಭಾವದ ಮಕ್ಕಳ ತಜ್ಞರು ಡಾ. ರಾಜನ್ ದೇಶಪಾಂಡೆ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೆ.ವಿ. ದೇವಾಡಿಗ

ಅಂತರರಾಷ್ಟ್ರೀಯ ಖ್ಯಾತಿಯ, ನಾಡಿನ ಪ್ರಸಿದ್ಧ ನರರೋಗ ತಜ್ಞರಲ್ಲಿ ಒಬ್ಬರು ಡಾ. ಕೆ.ವಿ. ದೇವಾಡಿಗ ಅವರು.
೧೯೩೬ರಲ್ಲಿ ಜನನ. ಮದರಾಸಿನಲ್ಲಿ ವೈದ್ಯಕೀಯ ಪದವಿ ಪಡೆದು ದೆಹ ಹಾಗೂ ವೆಲ್ಲೂರುಗಳಲ್ಲಿ ಉನ್ನತ ಪದವಿಗಳನ್ನು ಪಡೆದ ಡಾ. ಕೆ.ವಿ. ದೇವಾಡಿಗ ಅವರು ಹೆಚ್ಚಿನ ತರಬೇತಿ ಪಡೆದಿದ್ದು ಇಂಗ್ಲೆಂಡ್ ಹಾಗೂ ಅಮೆಲಕ ದೇಶಗಳಲ್ಲ. ದೆಹಲಿಯ ಗೋವಿಂದ ವಲ್ಲಭಪಂತ್ ಆಸ್ಪತ್ರೆಯ ನರರೋಗ ವಿಜ್ಞಾನ ವಿಭಾಗದ ಅಜಸ್ಟಾರ್ ಆಗಿ ಕಾರ್ಯನಿರ್ವಹಿಸಿರುವ ಡಾ. ಕೆ.ವಿ. ದೇವಾಡಿಗ ಅವರು ವೆಲ್ಲೂಲಿನ ಸಿ.ಎಂ.ಸಿ. ಆಸ್ಪತ್ರೆ, ಮಣಿಪಾಲದ ಕಸ್ತೂಲಬಾ ಆಸ್ಪತ್ರೆ ಹಾಗೂ ಮಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನರರೋಗ ವಿಭಾಗದ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ದೇಶ ಹಾಗೂ ವಿದೇಶಗಳ ಹಲವಾರು ವೈದ್ಯಕೀಯ ನಿಯತಕಾಅಕೆಗಳಲ್ಲಿ ೮೦ಕ್ಕೂ ಹೆಚ್ಚು ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಡಾ. ಕೆ.ವಿ. ದೇವಾಡಿಗ ಅಮೆಲಕ ಕಾಲೇಜ್ ಆಫ್ ಸರ್ಜನ್, ರಾಯಲ್ ಸೊಸೈಟಿ ಆಫ್ ಮೆಡಿಸನ್ ಸಂಸ್ಥೆ (ಲಂಡನ್)ಯ ಫೆಲೋ, ಅಂತರಾಷ್ಟ್ರೀಯ ಸರ್ಜನ್ ಕಾಲೇಜಿನ ಫೆಲೋ ಹೀಗೆ ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಫೆಲೋ ಆಗಿ ಕಾರ್ಯನಿರ್ವಹಿಸಿದ್ದು ಅಮೆಲಕಾದ ನರರೋಗ ತಜ್ಞರ ಕಾಂಗ್ರೆಸ್ನ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆಯ ಮಂಗಳೂರು ಶಾಖೆಯ ಅಧ್ಯಕ್ಷರಾಗಿದ್ದ ಡಾ. ದೇವಾಡಿಗ ಕರ್ನಾಟಕ ನರರೋಗ ಸೊಸೈಟಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಕಾಲೇಜು ದಿನಗಳಲ್ಲಿ ಕ್ರಿಕೆಟ್, ಗಾಲ್ಫ್, ಬ್ಯಾಸ್ಕೆಟ್ ಬಾಲ್ಗಳಲ್ಲೂ ಸಕ್ರಿಯವಾಗಿದ್ದ ಡಾ. ಕೆ.ವಿ. ದೇವಾಡಿಗ ಅವರು ಪ್ರಸ್ತುತ ಮಂಗಳೂಲಿನಲ್ಲಿ ನರರೋಗ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ಹೆಸರಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡುತ್ತಿರುವ ಪ್ರಸಿದ್ಧ ನರರೋಗ ತಜ್ಞರು ಡಾ. ಕೆ.ವಿ. ದೇವಾಡಿಗ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

– ಡಾ. ಶರಣ್ ಶಿವರಾಜ್ ಪಾಟೀಲ್

ಮಕ್ಕಳ ಮೂಳೆ ತೊಂದರೆ ಕುಲಿತಂತೆ ವಿಶೇಷ ಅಧ್ಯಯನ ನಡೆಸಿ, ಮೂಳೆಶಾಸ್ತ್ರದಲ್ಲಿ
ವಿಶೇಷ ಪಲಣತಿ ಪಡೆದವರು ಡಾ. ಶರಣ್ ಶಿವರಾಜ್ ಪಾಟೀಲ್ ಅವರು.
ರಾಯಚೂಲಿನ ಮಲಾಂದ್ಕಲ್ ಗ್ರಾಮಕ್ಕೆ ಸೇರಿದವರಾದ ಡಾ. ಶರಣ್ ಶಿವರಾಜ್ ಪಾಟೀಲ್ ಪ್ರಸ್ತುತ ಬೆಂಗಳೂಲಿನ ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷರು.
೧೯೬೫ರಲ್ಲಿ ಜನನ. ಗುಲ್ಬರ್ಗಾದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ ಡಾ. ಶರಣ್ ಮಣಿಪಾಲದ ಕಸ್ತೂಲಬಾ ವೈದ್ಯಕೀಯ ಕಾಲೇಜಿನಲ್ಲಿ ಮೂಳೆಶಾಸ್ತ್ರದಲ್ಲಿ ವಿಶೇಷ ತರಬೇತಿ ಪಡೆದವರಲ್ಲದೆ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.
ಬೆಂಗಳೂಲಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಡಾ. ಶರಣ್ ಬ್ರಿಟನ್ಗೆ ತೆರಳಿ ಅಲ್ಲಿಯ ಅನೇಕ ಆಸ್ಪತ್ರೆಗಳಲ್ಲಿ ಅನುಭವ ಪಡೆದರು.
ಮತ್ತೆ ಸ್ವದೇಶಕ್ಕೆ ವಾಪಸ್ಸಾದ ಡಾ. ಶರಣ್ ಮಕ್ಕಳ ಮೂಳೆ ಸಮಸ್ಯೆ ಕುಲತಂತೆ ವಿಶೇಷ ತಜ್ಞರೆಂದು ಹೆಸರು ಮಾಡಿ ರಾಜ್ಯ ಹಾಗೂ ರಾಷ್ಟ್ರದ ಸುಮಾರು ೫,೦೦೦ಕ್ಕೂ ಹೆಚ್ಚು ಮೂಳೆ ಚಿಕಿತ್ಸೆಗಳನ್ನು ನಡೆಸಿ ಹೆಸರಾದವರು. ಮೂಳೆಶಾಸ್ತ್ರಕ್ಕೆ ಪ್ರತ್ಯೇಕವಾದ ಸುಸಜ್ಜಿತ ಆಸ್ಪತ್ರೆಯೊಂದನ್ನು ಆರಂಭಿಸಬೇಕೆಂಬ ಡಾ. ಶರಣ್ ಶಿವರಾಜ್ ಪಾಟೀಲ್ ಅವರ ಇಚ್ಛೆ ೨೦೦೬ರಲ್ಲಿ ಪೂರೈಸಿತು. ನಾರಾಯಣ ಹೆಲ್ತ್ ಸಿಟಿಯಲ್ಲಿ ಡಾ. ಶರಣ್ ನೇತೃತ್ವದ ಸ್ಪರ್ಶ್ ಆಸ್ಪತ್ರೆ ಆರಂಭವಾಗಿದ್ದು, ಮೂಳೆ ರೋಗಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆ ಇದಾಗಿದೆ. ಕೀಲುನೋವು, ಬೆನ್ನುಹುಲಿ ತೊಂದರೆ, ಮೂಳೆಗಳ ಸಮಸ್ಯೆ, ಮಂಡಿಚಿಪ್ಟಿನ ನೋವು ಮೊದಲಾದ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಡಾ. ಶರಣ್ ಅವರ ಸ್ಪರ್ಶ್ ಆಸ್ಪತ್ರೆ ಗ್ರಾಮೀಣ ಪ್ರದೇಶಗಳಲ್ಲಿ ಕೀಲುನೋವು ಚಿಕಿತ್ಸಾ ಶಿರಗಳನ್ನು ಏರ್ಪಡಿಸುತ್ತಿದೆ.
ವೈದ್ಯಕೀಯ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಅನುಭವ ಪಡೆದಿರುವ ಡಾ. ಶರಣ್ ದೇಶವಿದೇಶಗಳ ಅನೇಕ ಸಮ್ಮೇಳನಗಳಲ್ಲಿ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಜನರು ಅತ್ಯುತ್ತಮ ಚಿಕಿತ್ಸೆ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಡಾ. ಶರಣ್ ಅವರು ಅನೇಕ ವೈದ್ಯಕೀಯ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಯುವ ವೈದ್ಯರಾಗಿ ಅನೇಕ ಸಾಧನೆಗಳನ್ನು ಮಾಡಿರುವ ಡಾ. ಶರಣ್ ಶಿವರಾಜ್ ಪಾಟೀಲ್ ಅವಲಗೆ ಭಾರತೀಯ ವೈದ್ಯಕೀಯ ಸಂಸ್ಥೆಯ ಪ್ರೊ ಗೋಪಾಲಕೃಷ್ಣ ಸ್ಮಾರಕ ಬಹುಮಾನವು ಸೇಲದಂತೆ ಅನೇಕ ಗೌರವ, ಸನ್ಮಾನಗಳು ಸಂದಿವೆ. ನಾಡಿನ ಪ್ರಸಿದ್ಧ ಮೂಳೆ ತಜ್ಞರು ಡಾ. ಶರಣ್ ಶಿವರಾಜ್ ಪಾಟೀಲ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹೆಚ್. ನಾಗರಾಜ್

ಹಳ್ಳಿಗಾಡಿನಿಂದ ನಗರಕ್ಕೆ ಬಂದು ವೈದ್ಯಕೀಯ ವ್ಯಾಸಂಗ ನಡೆಸಿ, ಗ್ರಾಮೀಣ ಭಾಗದ ಆರೋಗ್ಯ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಹಲವಾರು ಕಾರ್ಯಕ್ರಮಗಳನ್ನು
ಹಾಕಿಕೊಂಡ ವೈದ್ಯರು ಡಾ. ಹೆಚ್.ಕೆ. ನಾಗರಾಜು ಅವರು.
೧೯೪೫ರಲ್ಲಿ ಜನನ. ಬೆಂಗಳೂರು ವೈದ್ಯಕೀಯ ವಿದ್ಯಾಲಯದಿಂದ ಎಂಬಿಬಿಎಸ್ ಪದವಿ, ಎಂ.ಎಸ್ (ಜನರಲ್ ಸರ್ಜಲಿ), ಎಂ.ಸಿಹೆಚ್. (ಯುರಾಲಜಿ), ಎಫ್.ಐ.ಸಿ.ಎಸ್. ಪದವಿಗಳನ್ನು ಪಡೆದವರು. ನಾಡಿನ ಮೂತ್ರಶಾಸ್ತ್ರ ವೈದ್ಯರಲ್ಲಿ ಹೆಸರು ಮಾಡಿರುವ ಡಾ. ಹೆಚ್.ಕೆ. ನಾಗರಾಜು ಅವರು ಪ್ರಸ್ತುತ ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಮೂತ್ರಕೋಶ ತಜ್ಞರು.
ವಿದ್ಯಾರ್ಥಿ ದೆಸೆಯಿಂದಲೂ ಹಳ್ಳಿಗಾಡಿನ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಬಗ್ಗೆ ಹಲವಾರು ಶಿಖರಗಳನ್ನು ಏರ್ಪಡಿಸುತ್ತಾ ಬಂದಿರುವ ಡಾ. ನಾಗರಾಜು ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸುವ ಯಂತ್ರಗಳನ್ನು ತಮ್ಮ ಧರ್ಮಾರ್ಥ ಸಂಸ್ಥೆಯಲ್ಲಿ ಸ್ಥಾಪಿಸಿ ಚಿಕಿತ್ಸೆ ನೀಡುವ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮೂತ್ರಪಿಂಡಗಳಲ್ಲಿ ಕಲ್ಲು ಇರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ತಮ್ಮ ಸಂಸ್ಥೆಯ ಸಂಚಾಲ ಆಸ್ಪತ್ರೆಯನ್ನು ನಿಗಱತ ಅವಧಿಯಲ್ಲಿ ಕೊಂಡೊಯ್ದು ಶಿರಗಳನ್ನು ನಡೆಸಿ ಅಗತ್ಯ ಚಿಕಿತ್ಸೆಗಳನ್ನು ಡಾ. ನಾಗರಾಜ್ ಅವರು ನೀಡುತ್ತಿದ್ದಾರೆ. ತಮ್ಮ ವೃತ್ತಿ ಕೌಶಲ್ಯಕ್ಕಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ವಿವಿಧ ವೈದ್ಯಕೀಯ ಸಂಸ್ಥೆಗಳಿಂದ ಏಳು ಚಿನ್ನದ ಪದಕಗಳನ್ನು ಪಡೆದಿರುವ ಡಾ. ನಾಗರಾಜ್ ಅವರು ದೇಶವಿದೇಶಗಳ ಅನೇಕ ವೈದ್ಯಕೀಯ ಸಂಸ್ಥೆ ಹಾಗೂ ವೈದ್ಯಕೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ವೈದ್ಯಕೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಯುರಾಲಜಿ ಬಗ್ಗೆ ಹೆಚ್ಚಿನ ತರಬೇತಿಯನ್ನು ಪಡೆದಿರುವ, ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಿದ್ದು ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದವರು ಡಾ. ಹೆಚ್.ಕೆ. ನಾಗರಾಜ್ ಅವರು

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್

ಅಲೆಮಾಲ ರಾಜಗೊಂಡ ಬುಡಕಟ್ಟಿನ ಮಹಾನ್ ಚೇತನ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ಅವರು.
ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ತಮ್ಮ ಜೀವಿತಾವಧಿಯಲ್ಲಿ ಬಹುತೇಕ ಎಲ್ಲ ರಾಜ್ಯಗಳಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶಗಳ ಬೆಟ್ಟಗುಡ್ಡಗಳನ್ನು ಸುತ್ತಾಡಿ, ವನಸ್ಪತಿಗಳಿಂದ ಸಂಗ್ರಹಿಸಿದ ಔಷಧಿಗಳನ್ನು ತಯಾರು ಮಾಡಿ ದೇಸೀ ವೈದ್ಯಪದ್ಧತಿಗೆ ನೀಡಿರುವ ಕೊಡುಗೆ ಬಹುಪ್ರಮುಖವಾದುದು. ಅವರ ಈಲನ ನೆಲೆ ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಗ್ರಾಮ.
ಸುಮಾರು ೧೩೦ ವರ್ಷ ವಯಸ್ಸಿನ ಈ ಹಿಲಯಜ್ಜಿ ತಯಾರು ಮಾಡಿ ಕೊಡುತ್ತಿರುವ ದೇಸಿ ಔಷಧಿಗಳ ಪಟ್ಟಿ ಬಹುದೊಡ್ಡದು. ಅನೇಕ ರೋಗಗಳಿಗೆ ಸಮರ್ಥವಾದ ಔಷಧಿ ನೀಡುವ ಅಪರೂಪದ ಈ ವಯೋವೃದ್ಧೆ 2 . ಆಡುಭಾಷೆಯಲ್ಲಿ ನಾಟಿವೈದ್ಯೆ.
ಅನೇಕಲಂದ ಪರೀಕ್ಷಿಸಲ್ಪಟ್ಟು ಸಕರಾತ್ಮಕವಾದ ಫತಾಂಶ ಕಂಡಿರುವ ಈ ಹಿಲಯಜ್ಜಿಯ ಔಷಧೋಪಚಾರಕ್ಕೆ ಮನಸೋತು ಇವರ ರಾಜಗೊಂಡ ಅಲೆಮಾಲ ಕುಟುಂಬಗಳಿಗೆ ಹಲಹರ ತಾಲೂಕಿನ ಹಳ್ಳಿಯೊಂದರಲ್ಲಿ ನೆಲೆ ಒದಗಿಸಲು ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.
ಅಲೆಮಾಲ ಕುಟುಂಬಗಳ ಹಿತರಕ್ಷಣೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ನಡೆದಾಡುವ ಜನಪದ ವೈದ್ಯೆ ತಮ್ಮ ಕುಟುಂಬ ಹಾಗೂ ನೆಂಟಲಷ್ಟರೊಂದಿಗೆ ಈಗ ಒಂದೆಡೆ ನೆಲೆನಿಂತು ತಮ್ಮ ಪಾರಂಪಲಕ ವೈದ್ಯಪದ್ಧತಿಯಿಂದ ಈಗಲೂ ಸ್ಥಳೀಯ ಜನರ ಖಾಯಿಲೆ ಕಸಾಲೆಗಳನ್ನು ಹೋಗಲಾಡಿಸುತ್ತಿರುವ ಈ ಸಿಲಯಣ್ಣ ನಾಡು ಕಂಡ ಅಪರೂಪದ ಪ್ರತಿಭೆ.
ಬುಡಕಟ್ಟು ಜನಾಂಗದ ಜೀವಂತಿಕೆಗೆ ಸಾಕ್ಷಿಯಾಗಿರುವ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ಅವರ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿದ್ದು ಗೊಂಡ ಬುಡಕಟ್ಟನ ಪತ್ರಿಕೆ ಗೊಂಡಾವನಾ ದರ್ಶನದಲ್ಲಿ ಸವಿವರವಾದ ಲೇಖನವೊಂದು ೧೩೦ ವರ್ಷದ ಈಕೆಯ ದೀರ್ಘ ವಯಸ್ಸಿನ ಜೀವನ ಸಾಧನೆಯನ್ನು ಸುದೀರ್ಘವಾಗಿ ಪ್ರಕಟಿಸಿದೆ.
ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ತಮ್ಮ ಪಲಭ್ರಮದಿಂದ ರೂಢಿಸಿಕೊಂಡು ಬಂದಿರುವ ದೇಸಿ ವೈದ್ಯಪದ್ಧತಿಯನ್ನು ಮುಂದಿನ ಪೀಳಿಗೆಯ ಉಪಯೋಗಕ್ಕೂ ಸಿದ್ಧಮಾಡಿಕೊಟ್ಟರುವ ಇವಯಸ್ಸಿನ ನಡೆದಾಡುವ ಜಾನಪದ ಸಿಲ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ಅವರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಶಿಷ್ಠ

ಬಹುಮಂದಿಯನ್ನು ಬಾಧಿಸುವ ಕಾಲು ಕೀಲು ನೋವಿಗೆ ಶಮನಕಾರಿ ಚಿಕಿತ್ಸೆ ಕಂಡುಹಿಡಿದ ಹೆಸರಾಂತ ವೈದ್ಯರು ಡಾ. ವಶಿಷ್ಠ ಅವರು.
ಹಾಸನ ಜಿಲ್ಲೆಯವರಾದ ಡಾ. ವಶಿಷ್ಠ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಪ್ರಸ್ತುತ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಮೂಳೆತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಡಾ. ವಶಿಷ್ಠ ಅವರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜೆ. ಜಿ. ದೇವಧರ

ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗಳಲ್ಲಿ ಹೊಸ ಸಾಧನೆ ಮಾಡಿದವರು ಹಾವೇರಿಯ ದೇವಧರ ಆಸ್ಪತ್ರೆಯ ಡಾ. ಜೆ. ಜಿ. ದೇವಧರ ಅವರು.
ವೈದ್ಯಕೀಯ ಸ್ನಾತಕೋತ್ತರ ಪದವೀಧರರಾದ ಡಾ. ದೇವಧರ ಅವರು ಮೊದಲಿಗೆ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವ ಉದ್ದೇಶದೊಡನೆ ಕುಟುಂಬದ ಡಾ. ಜಿ.ಎಸ್. ದೇವಧರ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಸೇವೆಗೆ ಇಳಿದವರು.
ಇಂಗ್ಲೆಂಡಿನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದುಡಿದು, ಸಿಂಗಪುರ, ಜರ್ಮನಿ, ಫ್ರಾನ್ಸ್‌ಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಂಡ ಡಾ. ದೇವಿಧರ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬಳ್ಳಾರಿ, ಹಾವೇರಿ, ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳ ೨೫ಕ್ಕೂ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿರುವ ಸಂತಾನಹರಣ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಸುಮಾರು ೨ ಲಕ್ಷ.
ಲ್ಯಾಪ್ರೋಸ್ಕೋಪಿಕ್ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಕರ್ನಾಟಕ ಸರ್ಕಾರ, ಭಾರತೀಯ ವೈದ್ಯಕೀಯ ಸಂಸ್ಥೆ ಮೊದಲಾದವುಗಳಿಂದ ಪ್ರಶಸ್ತಿ ಪುರಸ್ಕಾರ ಗಳಿಸಿರುವ ಡಾ. ದೇವಧರ ‘ಪರಿಸರ’ ಸಂರಕ್ಷಣೆಯಲ್ಲೂ ಸಕ್ರಿಯರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಬಿ.ಟಿ. ಚಿದಾನಂದಮೂರ್ತಿ

ಪ್ರಕೃತಿ ಮತ್ತು ಯೋಗ ಚಿಕಿತ್ಸಕರಾಗಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಡಾ. ಬಿ.ಟಿ ಚಿದಾನಂದ ಮೂರ್ತಿಯವರು ತುಮಕೂರು ಜಿಲ್ಲೆ ಬೈತರ ಹೊಸಹಳ್ಳಿಯವರು.
ಕರ್ನಾಟಕದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರ, ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಡಾ. ಬಿ.ಟಿ ಚಿದಾನಂದಮೂರ್ತಿ ಪ್ರಸ್ತುತ ನವದೆಹಲಿಯ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ನಿರ್ದೆಶಕರು.
ಪ್ರತಿಷ್ಟಿತ ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕರಾಗಿ, ಹುಬ್ಬಳ್ಳಿಯ ಪ್ರಕೃತಿ ಚಿಕಿತ್ಸಾಲಯದ ಸಂಸ್ಥಾಪಕ ನಿರ್ದೆಶಕರಾಗಿ ಸೇವೆ ಸಲ್ಲಿಸಿರುವ ಡಾ. ಬಿ.ಟಿ ಚಿದಾನಂದ ಮೂರ್ತಿ ಯವರು ರಾಜಸ್ಥಾನ, ಹರಿಯಾಣ, ದೆಹಲಿಗಳಲ್ಲಿ ಕೆಲಸ ಮಾಡಿರುವುದಲ್ಲದೆ ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಮ್ಮೇಳನ, ಶಿಬಿರಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಅನೇಕ ಕಾಯಿಲೆ ಕುರಿತು ಸಂಶೋಧನೆ ನಡೆಸಿ ಪ್ರಕೃತಿ ಹಾಗೂ ಯೋಗ ಚಿಕಿತ್ಸೆಯಿಂದ ಅವುಗಳನ್ನು ಹೇಗೆ ಗುಣಪಡಿಸಬಹುದೆಂದು ಸೂಚಿಸಿರುವ ಡಾ. ಬಿ.ಟಿ ಚಿದಾನಂದಮೂರ್ತಿ ಅವರು ಜನಸಾಮಾನ್ಯರಿಗೆ ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಬಗ್ಗೆ ಸರಳವಾದ ಸಲಹೆಗಳನ್ನು ನೀಡುತ್ತಿದ್ದಾರೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ. ಬಸವಂತಪ್ಪ

ವೈದ್ಯೋನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥವಾಗಿ ಬಾಳಿದ ವೈದ್ಯರು ಡಾ. ಎಂ.ಬಸವಂತಪ್ಪ, ಉಚಿತ-ಮಾನವೀಯ ಸೇವೆಗೆ ಹೆಸರಾದ ವೈದ್ಯರು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ೧೯೫೧ರಲ್ಲಿ ಜನಿಸಿದ ಬಸವಂತಪ್ಪ ಬಡತನದ ಬೇಗೆಯಲ್ಲಿ ಅರಳಿದ ಸಾಧಕರು. ಸಿರಿಗೆರೆ ಮತ್ತು ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ, ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗುವ ಕನಸು ನನಸಾಗಿಸಿಕೊಂಡ ಛಲಗಾರ, ಹುಟ್ಟೂರಿನಲ್ಲಿ ವೈದ್ಯವೃತ್ತಿ ಆರಂಭಿಸಿದ ಬಸವಂತಪ್ಪ ಮೂರೂವರೆ ದಶಕಗಳಿಗೂ ಅಧಿಕ ಕಾಲ ಹಗಲಿರುಳೆನ್ನದೇ ರೋಗಿಗಳಿಗೆ ಚಿಕಿತ್ಸಾ ಸೇವೆ ಒದಗಿಸಿದವರು. ೨ ರೂ. ವೈದ್ಯರೆಂದೇ ಹೆಸರಾದ ಅವರು ೨೦ ವರ್ಷಗಳ ಬಳಿಕ ೫ ರೂಪಾಯಿ ಪಡೆಯಲಾರಂಭಿಸಿದ್ದು ವಿಶೇಷ, ಬಡರೋಗಿಗಳಿಗೆ ಹಣಪಡೆಯದೇ ಉಚಿತ ಸೇವೆ ಒದಗಿಸುವ ಮಾನವೀಯ ವ್ಯಕ್ತಿ, ಕೊರೊನಾ ಸಂದರ್ಭದಲ್ಲಿ ಅರೆದಿನವೂ ಕ್ಲಿನಿಕ್ ಮುಚ್ಚದೇ ಜನಸಾಮಾನ್ಯರ ಅನಾರೋಗ್ಯದ ಸಂಕಟಗಳನ್ನು ನಿವಾರಿಸಿದ ಪುಣ್ಯಾತ್ಮರು. ಹಳ್ಳಿಗಾಡಿನಲ್ಲಿ ಹೆಸರುವಾಸಿಯಾಗಿರುವ ಡಾ. ಬಸವಂತಪ್ಪ ಅವರ ಕೈಗುಣಕ್ಕೆ ವಾಸಿಯಾಗದ ರೋಗಿ ಬಲು ವಿರಳ, ಅಂತಃಕರಣ, ಮಾನವೀಯತೆ ಮತ್ತು ವೃತ್ತಿ ಬದ್ಧತೆಯಿಂದ ರೋಗಿಗಳ ಮೊಗದಲ್ಲಿ ನಗುಚಿಮ್ಮಿಸಿದ ಆದರ್ಶ ಧನ್ವಂತರಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಶರತ್ ತಂಗಾ

ಆರೋಗ್ಯ ಅರಿವು, ಅವರಲ್ಲಿ ಏಡ್ಸ್ ಸೂಕ್ಷ್ಮತೆ, ಕ್ಯಾನ್ಸರ್ ಶಿಕ್ಷಣ ಮತ್ತು ಪೋಲಿಯೋ ನಿರ್ಮೂಲನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವವರು ಕ್ಯಾನ್ಸರ್ ಮತ್ತು ಲ್ಯಾಪ್ರೋಸ್ಕೋಪಿ ತಂತ್ರಜ್ಞ ಡಾ. ಶರದ್ ಎಂ. ತಂಗಾ ಅವರು.
ಡಾ. ಶರದ್ ಎಂ. ತಂಗಾ ಅವರು ಎಂಬಿಬಿಎಸ್, ಎಂಎಸ್ಎಫ್ಐಸಿಎಸ್ ಪದವಿ ಪಡೆದು ಗುಲ್ಬರ್ಗಾ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ. ಶೈಕ್ಷಣಿಕದಿಂದ ಸಾಮಾಜಿಕ ಚಟುವಟಿಕೆಗಳವರೆಗೆ ವಿಕೃತವಾಗಿದೆ ಶ್ರೀಯುತರ ಕಾರ್ಯಕ್ಷೇತ್ರ
ಆರೋಗ್ಯದ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ವೈದ್ಯಕೀಯ ಶಿಕ್ಷಣ ತರಬೇತಿ ಶಾಖೆಯಲ್ಲಿ ಫ್ಯಾಕಲ್ಟಿ ಸದಸ್ಯರಾಗಿ ನೇಮಕವಾಗಿರುವ ಶ್ರೀಯುತರು ಹೊಸದಾಗಿ ಬರುವ ವೈದ್ಯಕೀಯ ಅಧ್ಯಾಪಕರಿಗೆ ಕಲಿಸುವ ಸೂಕ್ಷ್ಮತೆಗಳನ್ನು ತಿಳಿಸಲಾಗುತ್ತದೆ.
ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸೆ ರಾಜ್ಯದ ಸಂಘದ ಕಾರ್ಯದರ್ಶಿ, ನವದೆಹಲಿಯ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘ ಹಾಗೂ ಕರ್ನಾಟಕ ಏಡ್ಸ್ ನಿಯಂತ್ರಣ ಸಂಘದ ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾಗಿ, ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾಗಿ, ಫ್ರೀಲಾನ್ಸ್ ಬರಹಗಾರರಾಗಿ ಪ್ರಸಿದ್ಧರಾದವರು ಶ್ರೀ ಶರದ್ ಎಂ. ತಂಗಾ ಅವರು. ——- ವೃತ್ತಿಯಲ್ಲಿ ಶಸ್ತ್ರತಜ್ಞ ಚಟುವಟಿಕೆಗಳಲ್ಲಿ ಅನುರಕ್ತ ಮತ್ತು ಆಯ್ಕೆಯಿಂದ ಬರಹಗಾರ’ ಡಾ. ಶರದ್ ಎಂ. ತಂಗಾ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎನ್.ಎಂ. ಪ್ರಭು

ಶಸ್ತ್ರಚಿಕಿತ್ಸಾ ತಜ್ಞ ಮತ್ತು ವೈದ್ಯಕೀಯದಲ್ಲಿ ಸಮಾಜ ಸೇವಾ ಧುರೀಣರು ಡಾ. ಎನ್.ಎಂ. ಪ್ರಭು ಅವರು.
೧೯೩೨ ರಲ್ಲಿ ಜನಿಸಿದ ಡಾ. ಎನ್.ಎಂ. ಪ್ರಭು ಅವರು ಎಂ.ಬಿ.ಬಿ.ಎಸ್. ಹಾಗೂ ಎಡಿನ್ಬರ್ಗ್ ಮತ್ತು ಇಂಗ್ಲೆಂಡ್ನಲ್ಲಿ ಎಫ್.ಆರ್.ಸಿ.ಎಸ್. ಪದವಿ ಪಡೆದಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಸರ್ಜರಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಸಂಬಂಧಪಟ್ಟ ರಾಜ್ಯ ಮಟ್ಟದ ರಾಷ್ಟ್ರಮಟ್ಟದ ಮತ್ತು ಅಂತರ ರಾಷ್ಟ್ರೀಯ ಮಟ್ಟದ ವಿವಿಧ ವೈದ್ಯಕೀಯ ಸಮ್ಮೇಳನಗಳಲ್ಲಿ ವಿವಿಧ ಶಸ್ತ್ರಚಿಕಿತ್ಸಾ ವಿಷಯಗಳ ಬಗ್ಗೆ ಲೇಖನಗಳನ್ನು ಮಂಡಿಸಿದ್ದಾರೆ. ಎಫ್.ಐ.ಎ.ಎಮ್.ಎಸ್, ಎಫ್.ಎ.ಐ.ಎಸ್.ನ ಸ್ಥಾಪಕ ಫೆಲೋ ಆಗಿದ್ದಾರೆ.
“ಕರ್ನಾಟಕ ನರ್ಸಿಂಗ್ ಹೋಂ’ ಎಂಬ ತಮ್ಮದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವ ಶ್ರೀ ಎನ್.ಎಂ. ಪ್ರಭು ಅವರು ಉತ್ತರ ಕರ್ನಾಟಕದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗ್ಯಾಸ್ಟೋಸ್ಕೋಪನ್ನು ಪ್ರಾರಂಭಿಸಿದ ಮೊದಲ ವೈದ್ಯರು ಮತ್ತು ಸಮಗ್ರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ಟೋಸ್ಕೋಪಿ ನಡೆಸಿದ ಮೊದಲ ವೈದ್ಯರು.
ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಚಟುವಟಿಕೆಗಳನ್ನು ನಡೆಸಲು ರುಕ್ಷ್ಮಿಣಿ ಮುಕುಂದ ಪ್ರಭು ಚಾರಿಟಿಸ್, ಕೆನರಾ ಚಾರಿಟಬಲ್ ಸೊಸೈಟಿ, ಲಯನ್ಸ್ ಯೋಗ ಸೊಸೈಟಿ. ಮುಂತಾದ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಶ್ರೀಯುತರದು.
ಸಾಯಿ ಸಂದೇಶ ಪ್ರದೇಶ ಪ್ರಸಾರ ಸಂಘ, ಮಹರ್ಷಿ ಮಹೇಶ ಯೋಗ ವೇದ ವಿಜ್ಞಾನ ಭವನದ ಹುಬ್ಬಳ್ಳಿ ಶಾಖೆ ಮುಂತಾದ ಧಾರ್ಮಿಕ ಸಂಸ್ಥೆಯನ್ನು ಪ್ರಾರಂಭಿಸಿದವರು.
ಸಹಸ್ರಮೇವ ವೈದ್ಯ ಪ್ರಶಸ್ತಿ, ಉತ್ತಮ ಗ್ಯಾಸ್ಟೋಎಂಟ್ರೋಲಜಿ ಪ್ರಶಸ್ತಿ, ಕರುಣಾಸಾಗರ ಸನ್ಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ವೈದ್ಯರಾಗಿ ಉತ್ತರ ಕರ್ನಾಟಕದ ಜನರ ಆರೋಗ್ಯವನ್ನು ಕಾಪಾಡುತ್ತಿರುವವರು ಡಾ. ಎನ್.ಎಂ. ಪ್ರಭು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ರಮಾಕಾಂತ್ ವೆನ್ನನ್

ಹಲ್ಲಿನ ರಕ್ಷಣೆಯನ್ನು ಕುರಿತು ಜನಸಾಮಾನ್ಯರಿಗೆ ತಿಳಿವು ಮೂಡಿಸುತ್ತಿರುವ ಪ್ರಸಿದ್ಧ ದಂತವೈದ್ಯರು ಡಾ. ರಮಾಕಾಂತ ವೆನ್ಸನ್ ಅವರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ದಂತ ವೈದ್ಯಶಾಸ್ತ್ರದ ಬಗ್ಗೆ ಪದವಿಯನ್ನು ಪಡೆದು, ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಲಂಡನ್ನಿನ ರಾಯಲ್ ಸೊಸೈಟಿ ಆಫ್ ಹೆಲ್ತ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಇಂಟರ್ ನ್ಯಾಷನಲ್ ಕಾಲೇಜ್ ಆಫ್ ಡೆಂಟಿಸ್ಟ್ ಹಾಗೂ ಅಕಾಡೆಮಿ ಡೆಂಟಿಸ್ಟಿ ಇಂಟರ್ ನ್ಯಾಷನಲ್ ಮುಂತಾದವುಗಳಿಂದ ಫೆಲೊ ಪಡೆದಿದ್ದಾರೆ. ಭಾರತೀಯ ದಂತ ವೈದ್ಯ ಸಂಸ್ಥೆಯ ಉಪಾಧ್ಯಕ್ಷರಾಗಿ, ಭಾರತೀಯ ದಂತ ವೈದ್ಯ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾಗಿ, ಭಾರತೀಯ ದಂತ ವೈದ್ಯ ಸೇವಾ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷರಾಗಿ ಹಾಗೂ ದಂತವೈದ್ಯಕ್ಕೆ ಸಂಬಂಧಪಟ್ಟ ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಪದವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜಪಾನ್ನ ಒಸಾಕದಲ್ಲಿ ನಡೆದ ಎಕ್ಸ್ಪೋ-೭೦ರಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಕೌಲಾಲಾಂಪುರದ ಕಾಮನ್ವೆಲ್ತ್ ಡೆಂಟಲ್ ಅಸೋಸಿಯೇಷನ್ನ ಉದ್ಘಾಟನೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಹಲವಾರು ದಂತ ವೈದ್ಯ ಕುರಿತ ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
ಭಾರತೀಯ ದಂತವೈದ್ಯ ಸಂಘವು ಏರ್ಪಡಿಸಿದ್ದ ದಂತ ವೈದ್ಯ ಸಮಾವೇಶದಲ್ಲಿ ದಂತ ವೈದ್ಯಶಾಸ್ತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಜೀವಮಾನ ಸಾಧನೆಯ ಪ್ರಶಸ್ತಿ ಪಡೆದಿದ್ದಾರೆ. ವಿದೇಶಗಳಲ್ಲಿ ಪ್ರವಾಸ ಮಾಡಿರುವ ಶ್ರೀಯುತರು ಬೆಂಗಳೂರಿನಲ್ಲಿ ನಡೆದ ಶೂಟಿಂಗ್ ಚಾಂಪಿಯನ್ ನಲ್ಲಿ ಬೆಳ್ಳಿಪದಕ ಪಡೆದಿದ್ದಾರೆ.
ಕ್ರೀಡೆಯಲ್ಲಿಯೂ ಸಾಧನೆ ಮಾಡಿರುವ ಪ್ರತಿಭಾವಂತ ದಂತ ಚಿಕಿತ್ಸಾ ತಜ್ಞರು ಡಾ. ರಮಾಕಾಂತ ವೆನ್ಸನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಮಹದೇವ್ ಡಿ. ದೀಕ್ಷಿತ್

ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಕುರಿತು ವಿಶೇಷ ಕಾಳಜಿ ಹೊಂದಿರುವ ಪ್ರಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.
ಹಾಸನ ಜಿಲ್ಲೆಯಲ್ಲಿ ವಿಚಾರ ವೇದಿಕೆ, ನವ ನಿರ್ಮಾಣ ಸಮಿತಿ, ರೈತ ಸಂಘ, ದಲಿತ ಸಂಘಟನೆಗಳ ಬೆಳವಣಿಗೆಗೆ ಪೂರಕವಾಗಿದ್ದವರು. ಸಮಾಜದ ಪರವಾಗಿ ಸದಾ ಚಿಂತನೆ ಮೂಡುವ ಅವರು, ನಗರದಲ್ಲಿ ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸಹಕಾರ ನೀಡಿದ್ದಾರೆ.
ಪ್ರಗತಿ ಪರ ಚಿಂತಕರು, ಸಾಮಾಜಿಕ ಕಳಕಳಿ ಉಳ್ಳವರು, ವಿಚಾರವಾದಿಗಳು, ಪ್ರಾಮಾಣಿಕರೂ ಆದ ಹಾಸನದ ಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಮುನಿವೆಂಕಟೇಗೌಡ

ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಕುರಿತು ವಿಶೇಷ ಕಾಳಜಿ ಹೊಂದಿರುವ ಪ್ರಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.
ಹಾಸನ ಜಿಲ್ಲೆಯಲ್ಲಿ ವಿಚಾರ ವೇದಿಕೆ, ನವ ನಿರ್ಮಾಣ ಸಮಿತಿ, ರೈತ ಸಂಘ, ದಲಿತ ಸಂಘಟನೆಗಳ ಬೆಳವಣಿಗೆಗೆ ಪೂರಕವಾಗಿದ್ದವರು. ಸಮಾಜದ ಪರವಾಗಿ ಸದಾ ಚಿಂತನೆ ಮೂಡುವ ಅವರು, ನಗರದಲ್ಲಿ ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸಹಕಾರ ನೀಡಿದ್ದಾರೆ.
ಪ್ರಗತಿ ಪರ ಚಿಂತಕರು, ಸಾಮಾಜಿಕ ಕಳಕಳಿ ಉಳ್ಳವರು, ವಿಚಾರವಾದಿಗಳು, ಪ್ರಾಮಾಣಿಕರೂ ಆದ ಹಾಸನದ ಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಸ್.ಜಿ. ರಾಮನಾರಾಯಣ್ರಾವ್

ನೇತ್ರ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮೋದಿಯವರ ನಂತರ ಚಿರಪರಿಚಿತವಾದ ಮತ್ತೊಂದು ಹೆಸರೇ ಡಾ. ಎಸ್.ಜಿ. ರಾಮನಾರಾಯಣ್ ರಾವ್ ಅವರು.
ನೇತ್ರ ವೈದ್ಯಕೀಯದಲ್ಲಿ ಇಂಗ್ಲೆಂಡ್ನ ರಾಯಲ್ ಕಾಲೇಜ್ ಆಫ್ ಸರ್ಜನ್ನಿಂದ ಫೆಲೋಶಿಪ್ ಪಡೆದ ನಾಡಿನ ಮೊದಲಿಗರಿವರು. ಮಾಡರ್ನ್ ಕಣ್ಣಿನ ಆಸ್ಪತ್ರೆ ನಿರ್ದೇಶಕರಾಗಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಸೇಂಟ್ ಮಾರ್ಥಾಸ್ ಆಸ್ಪತ್ರೆಗಳಲ್ಲಿ ಮುಖ್ಯ ನೇತ್ರತಜ್ಞರಾಗಿ, ಲಯನ್ಸ್ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾಗಿ ನೂರಾರು ಜನ ಅಂಧರನ್ನು ಬೆಳಕಿನ ಲೋಕಕ್ಕೆ ಕರೆತಂದ ವೈದ್ಯ ಬ್ರಹ್ಮರಿವರು. ವೈದ್ಯವಿಜ್ಞಾನದ ಅಭ್ಯಾಸದ ಜೊತೆಗೆ ಅಂಧ ಜನರಲ್ಲಿ ವೈದ್ಯ ಲೋಕದ ತಿಳುವಳಿಕೆ ಮೂಡಿಸುವ ಇವರ ಸೇವೆ ಅಪ್ರತಿಮವಾದುದು. ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಬಡಜನರಿಗೆ ಶಸ್ತ್ರಚಿಕಿತ್ಸೆ ಮಾಡಿರುವ ಇವರು ವೃತ್ತಿಯನ್ನು ಒಂದು ಸೇವೆಯಾಗಿ ಬಡಜನರ ಸೇವೆಯನ್ನೇ ಒಂದು ಸವಾಲಾಗಿ ಸ್ವೀಕರಿಸಿದ ಅಪರೂಪದ ವೈದ್ಯರು.
ನೇತ್ರ ವೈದ್ಯಕೀಯ ಕ್ಷೇತ್ರದಲ್ಲಿ ನಾಡು ಹೆಮ್ಮೆಪಡುವಂಥ ಸಾಧನೆ ಮಾಡಿದ ಅಪರೂಪದ ನೇತ್ರತಜ್ಞ ಡಾ. ಎಸ್.ಜಿ. ರಾಮನಾರಾಯಣ್ ರಾವ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಮುರಳೀಧರರಾವ್

ಮುಂದುವರಿದ ಹೃದಯ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರು ಮತ್ತು ಪ್ರಾಧ್ಯಾಪಕರು ಡಾ. ಮುರಳೀಧರ್ ಎಸ್. ರಾವ್.
ಈ ಮುನ್ನ ಗುಲ್ಬರ್ಗದ ಎಚ್. ಕೆ. ಇ.ಎಸ್. ಬಸವೇಶ್ವರ ಕಾಲೇಜು ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿಯೂ ಎಂ. ಆರ್. ವೈದ್ಯಕೀಯ ಕಾಲೇಜಿನಲ್ಲಿ ಔಷಧ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಪುಸ್ತುತ ಅಲ್ಲೇ ಎಮಿರಿಟಸ್ ಪ್ರಾಧ್ಯಾಪಕ ಹಾಗೂ ಸಲಹೆಗಾರರಾಗಿ ಕಾರನಿರ್ವಹಿಸುತ್ತಿರುವ ಮುರಳೀಧರ್ ರಾವ್ ಅವರದು ೩೫ ವರ್ಷಗಳಷ್ಟು ಸುದೀರ್ಘ ಬೋಧನಾನುಭವ. ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ ಹಾಗೂ ಲಂಡನ್ನ ಬ್ರಾಂಪ್ಟನ್ ಆಸ್ಪತ್ರೆಗಳಲ್ಲಿ ‘ಎಕೋಕಾರ್ಡಿಯೋಗ್ರಫಿ’ ಕುರಿತು ಪಡೆದ ತರಬೇತಿಯಿಂದ ಆ ಕ್ಷೇತ್ರದಲ್ಲಿ ಪರಿಪಕ್ವತೆಯನ್ನು ರೂಢಿಸಿಕೊಂಡಿದ್ದಾರೆ.
ಶೈಕ್ಷಣಿಕ ಶಿಸ್ತು ಮತ್ತು ಕ್ರಿಯಾಶೀಲತೆಗಳು ಎದ್ದು ಕಾಣುವ ಮುರಳೀಧರರಾವ್ ಅವರ ವೈಜ್ಞಾನಿಕ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕೆಗಳಲ್ಲಿ ಪ್ರಕಟವಾಗಿ ವಿದ್ವಾಂಸರ ಸಂಶೋಧಕರ ಪ್ರಶಂಸೆಗೆ ಪಾತ್ರವಾಗಿವೆ. ಕಳೆದ ೨೫ ವರ್ಷಗಳಿಂದ ಸಿ.ಎಂ.ಇ. ಕಾಠ್ಯಕ್ರಮಗಳಲ್ಲೂ ರಾಜ್ಯದ ಎ.ಪಿ.ಐ. ಮತ್ತು ಸಿ.ಎಸ್.ಐ. ಸಮ್ಮೇಳನಗಳಲ್ಲೂ ಪಾಲ್ಗೊಳ್ಳುತ್ತ ಬಂದಿರುವುದಲ್ಲದೆ ವೈದ್ಯಕೀಯ ಕ್ಷೇತ್ರಕ್ಕೆ ಅತಿ ಮಹತ್ವದ ಕೊಡುಗೆ ನೀಡುವಂಥ ಸಮ್ಮೇಳನಗಳನ್ನು ಗುಲ್ಬರ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.
ಸಿ.ಎಸ್.ಐ. ಮತ್ತು ಎ.ಪಿ.ಐ. ಗಳ ಅಭಿನಂದನೆ ಹಾಗೂ ಸನ್ಮಾನಕ್ಕೂ ಪಾತ್ರರಾಗಿರುವ ಡಾ. ಮುರಳೀಧರ್ ಎಸ್. ರಾವ್ ಪರಿಣತ ಹಿರಿಯ ವೈದ್ಯರಾಗಿ ಹೆಸರು ಮಾಡಿದವರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ.ಜಿ. ರವಿ ಕಿಶೋರ್

ಸುಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಎ.ಜಿ. ರವಿಕಿಶೋರ್ ಅವರು ಜನಿಸಿದ್ದು ೧೯೫೯ರಲ್ಲಿ. ಬೆಂಗಳೂರಿನಲ್ಲಿ ವೈದ್ಯಕೀಯ ಪದವಿ ಮುಗಿಸಿದ ಶ್ರೀಯುತರು, ಚಂಡೀಫ, ದೆಹಲಿ ಹಾಗೂ ಲಂಡನ್ ನಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿದರು.
ಪ್ರಸ್ತುತ ನಾರಾಯಣ ಹೃದಯಾಲಯ ಹಾಗೂ ರಾಜೀವ್ ಗಾಂಧಿ ವೈದ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯವಾಗಿ ತಮ್ಮ ಹದಿನಾರು ಲೇಖನಗಳನ್ನು ಪ್ರತಿಷ್ಠಿತ ನಿಯತ ಕಾಲಿಕೆಗಳಲ್ಲಿ ಪ್ರಕಟಿಸಿರುವುದರೊಂದಿಗೆ ಅಂತರರಾಷ್ಟ್ರೀಯ ಸಮಾವೇಶಗಳಲ್ಲಿ ಅತಿಥಿ ಉಪನ್ಯಾಸಗಳು ಹಾಗೂ ಪ್ರಬಂಧಗಳನ್ನು ಮಂಡಿಸಿದ್ದಾರೆ.
ವೈದ್ಯಕೀಯ ಪಠ್ಯಗಳಲ್ಲಿ ಕೂಡ ಡಾ. ಎ.ಜಿ. ರವಿಕಿಶೋರ್ ಅವರ ಬರಹಗಳು ಸೇರಿಸಲ್ಪಟ್ಟಿವೆಯೆಂಬುದು ಶ್ರೀಯುತರಿಗೆ ಸಂದಿರುವ ಶ್ರೇಷ್ಟ ಅಂತರರಾಷ್ಟ್ರೀಯ ಮನ್ನಣೆಯಾಗಿದೆ.
ಹೃದ್ರೋಗ ಸಂಬಂಧಿತ ವೈದ್ಯಕೀಯ ಕ್ಷೇತ್ರದ ಅನೇಕ ಪ್ರಥಮಗಳ ಸಾಧನೆ ಡಾ. ರವಿಕಿಶೋರ್ ಅವರ ಬೆನ್ನಿಗಿದ್ದು, ದೇಶದಲ್ಲೇ ಅತ್ಯಂತ ನುರಿತ ಹಾಗೂ ಅವಿರತ ಚಟುವಟಿಕೆಗಳ ಎಲೆಕ್ಟೋಫಿಸಿಯಾಲಜಿಸ್ಟ್ ಎಂಬ ಹೆಮ್ಮೆ ಇವರದು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಜಯಲಕ್ಷ್ಮಿ ದೇಶಮಾನೆ

ಸುಮಾರು ಎರಡು ದಶಕಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗನಿವಾರಣೆಗಾಗಿ ಶ್ರಮಿಸುತ್ತಿರುವವರು ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು.
ಗುಲ್ಬರ್ಗಾ ಜಿಲ್ಲೆಯಲ್ಲಿ ಜನಿಸಿದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ). ಎಫ್.ಎ.ಐ.ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
ಶ್ರೀಮತಿ ವಿಜಯಲಕ್ಷ್ಮಿ ದೇಶಮಾನೆ ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಹಲವು ಸಂಸ್ಥೆಗಳು ಕಲಶ ಪ್ರಶಸ್ತಿ, ರಾಷ್ಟ್ರೀಯ ರತ್ನ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, ೧೯೯೯ರ ವರ್ಷದ ಮಹಿಳಾ ಪ್ರಶಸ್ತಿಯನ್ನು ಇತ್ತು ಗೌರವಿಸಿವೆ. ಇಂಟರ್ನ್ಯಾಷನಲ್ ಸ್ಟಡಿ ಸರ್ಕಲ್ ೨೦೦೩ ಹಾಗೂ ೨೦೦೪ರಲ್ಲಿ ಚಿನ್ನದ ಪದಕ ನೀಡಿ ಗೌರವಿಸಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು, ಕ್ಯಾನ್ಸರ್ ರೋಗಕ್ಕೆ ತುತ್ತಾದ ದುರ್ದೈವಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ವೈದ್ಯೆ ಶ್ರೀಮತಿ ವಿಜಯಲಕ್ಷ್ಮಿ ಮಾನೆ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿವೇಕ್ ಜವಳಿ

ಅಂತರರಾಷ್ಟ್ರೀಯ ಖ್ಯಾತಿಯ ಹೃದಯರೋಗ ತಜ್ಞ ಡಾ. ವಿವೇಕ್ ಜವಳಿ ಅವರು. ಗುಲ್ಬರ್ಗಾ ಜಿಲ್ಲೆಯವರಾದ ಡಾ. ವಿವೇಕ್ ಜವಳಿ ಅವರು ಎಂ.ಬಿ.ಬಿ.ಎಸ್. ಪದವಿಯಲ್ಲಿ ಸುವರ್ಣಪದಕ ಪಡೆದು ತೇರ್ಗಡೆಯಾದರು. ರೋಗಿಗಳಿಗೆ ಪ್ರಜ್ಞೆ ಇರುವಂತೆಯೆ ಬೈಪಾಸ್ ಶಸ್ತ್ರ ಚಿಕಿತ್ಸೆ ಮತ್ತು ತೆರೆದ ಹೃದಯ ಶಸ್ತ್ರಚಿಕಿತ್ಸೆ ನೀಡಬಲ್ಲ ತಜ್ಞರು ಈವರೆಗೆ ೧೫,೦೦೦ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮತ್ತು ಅನೇಕ ವೈಜ್ಞಾನಿಕ ಲೇಖನಗಳನ್ನು ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೇರೆ ಬೇರೆ ದೇಶಗಳಲ್ಲಿಯೂ ಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿ ಡಾ. ವಿವೇಕ ಜವಳಿ ಅವರದು.
ಬೆಂಗಳೂರು ನಗರದ ಎರಡು ಪ್ರಮುಖ ಆಸ್ಪತ್ರೆಗಳೆನಿಸಿದ ಜಯದೇವ ಹೃದ್ರೋಗ ಸಂಸ್ಥೆ ಮತ್ತು ವೋಕ್ಲಾರ್ಟ್ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರೂವಾರಿಗಳು
ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಹಾಗೂ ಅತ್ಯಂತ ಸಮರ್ಪಣಾ ಭಾವದಿಂದ ದುಡಿಯುತ್ತಿರುವ ತಜ್ಞವೈದ್ಯರು ಡಾ. ವಿವೇಕ್ ಜವಳಿ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೆ ಜಿ ದಾಸ್

ಸಮರ್ಪಣಾಭಾವದ ವೈದ್ಯರು, ಪ್ರತಿಭಾವಂತ ಪ್ರಾಧ್ಯಾಪಕರು, ಬಡವರ ಬಂಧು ಆಗಿರುವ ಕರ್ನಾಟಕದ ಗಣ್ಯ ವೈದ್ಯರು ಡಾ. ಕುತ್ತುಪಡಿ ಗೋವಿಂದದಾಸ್ ಅವರು.

ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ವಿಶೇಷ ಪರಿಶ್ರಮ ಇವರದು. ಅಮೆರಿಕೆಯ ಫ್ಲೋರಿಡಾ, ಹೂಸ್ಟನ್, ಇಂಗ್ಲೆಂಡ್ ಮೊದಲಾದ ಸ್ಥಳಗಳ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿರುವ ತಜ್ಞರು.

ಸಹಸ್ರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿರುವ ಡಾ. ದಾಸ್ ಅವರು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳುವ ಅಪರೂಪದ ಉಪಾಧ್ಯಾಯರು ಅಷ್ಟೇ ಅಲ್ಲ ವೈದ್ಯಕೀಯ ಕ್ಷೇತ್ರದ ಅನೇಕ ಸಮಸ್ಯೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ ಕ್ರಿಯಾಶೀಲರು. ಇವರು ರಚಿಸಿರುವ ಅನೇಕ ವಿದ್ವತ್ ಪೂರ್ಣ ಪ್ರಬಂಧಗಳು ಜಗತ್ತಿನ ವೈದ್ಯಕೀಯ ಕ್ಷೇತ್ರದ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿವೆ. ಇವರ ಅನೇಕ ಪುಸ್ತಕಗಳು ಪಠ್ಯಪುಸ್ತಕಗಳಾಗಿ

ಅಂಗೀಕಾರವಾಗಿವೆ.

ಡಾ. ದಾಸ್ ಅವರು ಸಹಸ್ರಾರು ಮಂದಿ ಕಡುಬಡ ರೋಗಿಗಳಿಗೆ ಉಚಿತವಾದ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದ ಕರುಣಾಮಯಿ. ಮೈಸೂರು ಮಹಾರಾಜರಿಂದ ‘ರಾಜಸೇವಾಸಕ್ತ’ ಎಂಬು ಬಿರುದನ್ನು, ಉಡುಪಿಯ ಕೃಷ್ಣಮಠದಿಂದ ತಮ್ಮ ಮಾನವೀಯ ಸಮಾಜಸೇವೆಗಾಗಿ ಸನ್ಮಾನಗಳನ್ನು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನಿನ ‘ಡಾಕ್ಟರ್ ಡೇ’ ಪ್ರಶಸ್ತಿಯನ್ನು ಪಡೆದಿರುವ ತಜ್ಞ ವೈದ್ಯ ಡಾ. ಕೆ.ಜಿ. ದಾಸ್ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಬಿ ಆರ್ ಇನಾಂದಾರ್.

ಕರೆದಲ್ಲಿಗೆ ಹೋಗಿ ಚಿಕಿತ್ಸೆ ನೀಡಿ ಜನತಾ ಸೇವೆಯೇ ಜನಾರ್ದನ ಸೇವೆ ಎಂದು ನಂಬಿ ನಡೆಯುತ್ತಿರುವವರು ಧನ್ವಂತರಿ

ಡಾ. ಬಿ ಆರ್ ಇನಾಂದಾರ್.

ನಗರಕೇಂದ್ರಿತ ವೈದ್ಯಕೀಯ ವ್ಯವಸ್ಥೆಗೆ ಭಿನ್ನವಾಗಿ ಹಳ್ಳಿಗಾಡಿನ ಜನರಿಗೆ ಅಗತ್ಯ ಸೇವಾ ಸೌಲಭ್ಯಗಳನ್ನು ಒದಗಿಸುವ ವ್ಯಕ್ತಿಗಳು- ಸಂಸ್ಥೆಗಳು ಪ್ರೋತ್ಸಾಹಕ್ಕೆ ಸದಾ ಅರ್ಹರಾಗಿರುತ್ತಾರೆ. ಅದರಲ್ಲೂ ಕರೆದಲ್ಲಿಗೆ ಬಂದು ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡಿ ಸಾಂತ್ವನ ನೀಡುವ ಸೇವಾ ಮನೋಧರ್ಮ ಅಪರೂಪವಾದುದು. ಈ ಮಾದರಿಯ ವೈದ್ಯಕೀಯ ಸೇವೆಯನ್ನು ಜೀವನದ ಮುಖ್ಯ ಧೈಯವೆಂದು ಭಾವಿಸಿ ದುಡಿಯುತ್ತಿದ್ದಾರೆ ಡಾ. ಬಿ ಆರ್ ಇನಾಂದಾರ ಅವರು.

ಮೂಲತಃ ಗದಗ ಜಿಲ್ಲೆಯವರಾದ ಡಾ. ಬಿ ಆರ್ ಇನಾಂದಾರ ಅವರು ಮೈಸೂರಿನ ಆಯುರ್ವೇದ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಸಾಮಾಜಿಕ ಬದುಕಿನಲ್ಲಿ ಸೇವಾ ಮೌಲ್ಯವನ್ನು ಸ್ಥಾಪಿಸಬೇಕೆಂಬ ಸದುದ್ದೇಶದಿಂದ ವೈದ್ಯಕೀಯ ಜ್ಞಾನವನ್ನು ಹಳ್ಳಿಗಾಡಿನ ಬಡವರಿಗಾಗಿ ಮುಡುಪಾಗಿಟ್ಟ ಇವರು ವೈದ್ಯರೂ ಹೌದು, ಸಮಾಜ ಸೇವಕರೂ ಹೌದು, ಕೃತಿಕಾರರೂ ಹೌದು.

ಪಾರ್ಶ್ವವಾಯು ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿ ಅಸಂಖ್ಯಾತ ರೋಗಿಗಳನ್ನು ಗುಣಪಡಿಸಿದ ಡಾ. ಬಿ ಆರ್ ಇನಾಂದಾರ ಅವರು ‘ಧನ್ವಂತರಿ’ ಎಂದೇ ಜನಪ್ರಿಯರಾಗಿದ್ದಾರೆ. ದೇಶ ವಿದೇಶಗಳ ಪ್ರವಾಸದಿಂದ ಪಡೆದ ಅನುಭವವನ್ನು ಸ್ಥಳೀಯರಿಗಾಗಿ ವಿನಿಯೋಗಿಸುತ್ತ ಬಂದಿದ್ದಾರೆ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ನರಪತ್‌ಚಂದ್ ಸೋಲಂಕಿ

ದೃಷ್ಟಿಹೀನರ ಚಿಕಿತ್ಸೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡು ಹತಭಾಗ್ಯ ಬಡಜನತೆಯ ಸೇವೆಯಲ್ಲಿ ಧನ್ಯತೆಯನ್ನು ಕಾಣುತ್ತಿರುವ ಸಮಾಜಸೇವಕ ನೇತ್ರವೈದ್ಯ ಡಾ|| ನರಪತ್‌ಚಂದ
ಸೋಲಂಕಿ ಅವರು.
ಮಹಾವೀರ ನೇತ್ರ ಚಿಕಿತ್ಸಾಲಯದಲ್ಲಿ ೧೯೮೭ರಲ್ಲಿ ಪ್ರಧಾನ ಸರ್ಜನ್ ಆಗಿ ಸೇವೆ ಪ್ರಾರಂಭಿಸಿದ ಶ್ರೀ ಸೋಲಂಕಿ ಅವರು ಬೆಂಗಳೂರಿನ ಅನೇಕ ಚಿಕಿತ್ಸಾಲಯಗಳಲ್ಲಿ ತಮ್ಮ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ವ್ಯಾಸಂಗ ಮಾಡುತ್ತಿದ್ದಾಗಲೇ ಹಿರಿಯ ವೈದ್ಯರೊಡಗೂಡಿ ನೂರಾರು ನೇತ್ರ ಚಿಕಿತ್ಸಾ ಶಿಬಿರಗಳಲ್ಲಿ ಪಾಲ್ಗೊಂಡು ಅನುಭವ ಗಳಿಸಿಕೊಂಡ ಶ್ರೀಯುತರು ೧೯೯೦ನೇ ಇಸವಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಪ್ರಾರಂಭಿಸಿ ಎಂಟು ವರ್ಷಗಳ ಅವಧಿಯಲ್ಲಿ ೪೦ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದಾರೆ.
‘ಪ್ರಾಜೆಕ್ಟ್ ದೃಷ್ಟಿ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ಜಾತಿ ಮತ, ವರ್ಗಗಳ ಭೇದವಿಲ್ಲದೇ ಕಡು ಬಡವರಿಗೆ, ಉಚಿತ ನೇತ್ರ ಚಿಕಿತ್ಸೆಯನ್ನು ಪ್ರಾರಂಭಿಸಿ ಈವರೆಗೆ ೪೦ ಸಾವಿರ ಮಂದಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಶ್ರೀಯುತರದು.
ಪ್ರತಿ ತಿಂಗಳೂ ಇಬ್ಬರು ಕಿರಿಯ ವೈದ್ಯರಿಗೆ ವಿಶೇಷವಾದ ತರಬೇತಿಯನ್ನು ನೀಡುವ ಮೂಲಕ ದೃಷ್ಟಿದಾನ ಚಳುವಳಿಯಲ್ಲಿ ತಮ್ಮೊಡನೆ ನೂರಾರು ಕೈಗಳೂ ಸೇರಿಕೊಳ್ಳಲೆಂಬ ಉದಾತ್ತ ಧೈಯವನ್ನು ಹೊಂದಿರುವ ಶ್ರೀ ಸೋಲಂಕಿಯವರಿಗೆ ಸೇವಾ ಶಿರೋಮಣಿ, ಕರ್ನಾಟಕ ಜ್ಯೋತಿ ಪ್ರಶಸ್ತಿ, ಸಮಾಜ ಭೂಷಣ ಮೊದಲಾದ ಪುರಸ್ಕಾರಗಳು ಸಂದಾಯವಾಗಿವೆ.
“ನೋಡುವ ಹಕ್ಕು ಪ್ರತಿ ವ್ಯಕ್ತಿಗೂ ಇದೆ’ ಎಂಬ ಧೈಯ ವಾಕ್ಯವನ್ನು ಘೋಷಿಸಿ ಅಂತಹ ಉನ್ನತ ಗುರಿಯನ್ನು ಸಾಧಿಸುವೆಡೆ ತಮ್ಮ ಜೀವನವನ್ನು ಮುಡಿಪಾಗಿರಿಸಿರುವ ಮಾನವೀಯ ಅಂತಃ ಕರಣದ ಅಪರೂಪದ ನೇತ್ರವೈದ್ಯ ಡಾ|| ನರಪತ್‌ಚಂದ ಸೋಳಂಕಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಯು.ಎಸ್. ಕೃಷ್ಣಾ ನಾಯಕ್

ನಾಡಿನ ವೈದ್ಯಕೀಯ ಕ್ಷೇತ್ರಕ್ಕೆ ಬಹುಮುಖ ಸೇವೆಯನ್ನು ಸಲ್ಲಿಸುತ್ತಿರುವ ಪ್ರತಿಭಾವಂತ ದಂತ ವೈದ್ಯರು ಪ್ರೊ. ಯು.ಎಸ್. ಕೃಷ್ಣಾ ನಾಯಕ್ ಅವರು.
೧೯೬೧ರಲ್ಲಿ ಜನಿಸಿದ ಶ್ರೀ ಕೃಷ್ಣಾನಾಯಕ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿ ಮಣಿಪಾಲದ ಕರ್ನಾಟಕ ವೈದ್ಯಕೀಯ ಕಾಲೇಜಿನಿಂದ ಬಿ.ಡಿ.ಎಸ್. ಪದವಿ, ಎಂ.ಡಿ.ಎಸ್. ಪದವಿ ಪಡೆದರು.
ಮಂಗಳೂರಿನ ಎಂ.ಬಿ. ಶೆಟ್ಟಿ ಸ್ಮಾರಕ ದಂತವಿಜ್ಞಾನ ಸಂಸ್ಥೆಯಲ್ಲಿ ಆರ್ಥೋಡಾಂಟಿಕ್ಸ್ ಮತ್ತು ಡೆಂಟೋ ಫಿಸಿಯಲ್ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಅಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀಯುತರು ಪ್ರಸಕ್ತ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ ಡೀನಾಗಿ, ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಮತ್ತು ಶೈಕ್ಷಣಿಕ ಪರಿಷತ್ತಿಗೆ ಎರಡು ಬಾರಿ ಸದಸ್ಯರಾಗಿ, ಪ್ರಸಕ್ತ ಮಂಗಳೂರಿನ ದಂತ ಶಸ್ತ್ರಚಿಕಿತ್ಸಾ ಅಧ್ಯಯನಗಳ ಮಂಡಳಿ ಸದಸ್ಯರಾಗಿ, ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಮತ್ತು ಯೂನಿವರ್ಸಿಟಿ ಆಫ್ ಹೆಲ್ತ್‌ ಅಂಡ್‌ ಸೈನ್ಸಸ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರು, ಬೆಂಗಳೂರು, ಮೈಸೂರು, ಕರ್ನಾಟಕ, ಗೋವಾ ಮೊದಲಾದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗೆ ಪರೀಕ್ಷಕರಾಗಿರುವ ಶ್ರೀಯುತರು ದಂತವೈದ್ಯಕ್ಕೆ ಸಂಬಂಧಪಟ್ಟ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಫೆಲೋ ಆಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಶ್ರೀಯುತರ ಹಲವಾರು ಲೇಖನಗಳು ಪ್ರಕಟವಾಗಿವೆ. ಭಾರತೀಯ ದಂತ ವೈದ್ಯ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ, ಭಾರತದ ಉತ್ತಮ ನಾಗರಿಕ ಪ್ರಶಸ್ತಿ ಮುಂತಾದವು ಶ್ರೀಯುತರ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು. ‘ಹೆತ್ತಿ ಟೀತ್ ಫಾರ್ ಹೆಲ್ತ್‌ ಲೈಫ್’ ಪುಸ್ತಕವನ್ನು ಪ್ರಕಟಿಸಿರುವ ಶ್ರೀಯುತರು ಸಕ್ರಿಯ ರೊಟೇರಿಯನ್ನಾಗಿ ಹಲವಾರು ದಂತ ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದಾರೆ.
ದಂತ ಸುರಕ್ಷತೆ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರತಿಭಾವಂತ ದಂತ ಚಿಕಿತ್ಸಾ ತಜ್ಞ ಶ್ರೀ ಕೃಷ್ಣಾ ನಾಯಕ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ.ಎಸ್. ಹೆಗಡೆ

ನರವಿಜ್ಞಾನ ವೈದ್ಯಕೀಯ ರಂಗದಲ್ಲಿ ಅಪೂರ್ವ ಸಾಧನೆ ಮಾಡಿ, ಹದಿನೈದು ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯ ಮೂಲಕ ಜನರಿಗೆ ಜೀವದಾನ ಮಾಡಿದ ಮಹಾನ್ ವೈದ್ಯ ಡಾ|| ಅಲಂಗಾ‌ ಸತ್ಯರಂಜನದಾಸ ಹೆಗ್ಡೆ,
ಕರ್ನಾಟಕದ ಪೆರ್ಡೂರಿನಲ್ಲಿ ೧೯೫೨ರಲ್ಲಿ ಜನಿಸಿದ ಅಲಂಗಾರ್ ಸತ್ಯರಂಜನದಾಸ್ ಹೆಗ್ಡೆ ಬಾಲ್ಯದ ಶಿಕ್ಷಣದ ನಂತರ ವೈದ್ಯಕೀಯ ಪದವಿಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ವೈದ್ಯಕೀಯ ಸಂಸ್ಥೆ ಸೇರಿದರು. ನಂತರ ನಿಮ್ಹಾನ್ಸ್‌ನಲ್ಲಿ ನರ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿಯನ್ನು ಪಡೆದು, ಜಪಾನಿನ ಶಿಂಶು ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ. ಪದವಿ ಗಳಿಸಿದರು. ಜಪಾನ್ ಸರ್ಕಾರದಿಂದ ‘ಮೊನ್‌ಬುಷೋ’ ವಿದ್ಯಾರ್ಥಿ ವೇತನ ಪಡೆದು ವಿಶೇಷ ತರಬೇತಿಗಾಗಿ ಕೆನಡಾದ ಪ್ರಸಿದ್ಧ ವಿಶ್ವವಿದ್ಯಾನಿಲಯ ಸೇರಿದರು.
ದೇಶವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ನಂತರ ಬೆಂಗಳೂರಿನ ಮಣಿಪಾಲ್ ನರರೋಗ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಪ್ರಸಕ್ತ ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವಾರು ಆಸ್ಪತ್ರೆಗಳಲ್ಲಿ ನರವಿಜ್ಞಾನ ವಿಭಾಗ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿರುವ ಡಾ|| ಎ. ಎಸ್. ಹೆಗ್ಡೆ ಅವರು ಅನೇಕ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳನ್ನು ಕಂಡುಹಿಡಿದಿದ್ದಾರೆ. ಮಿದುಳು ರಕ್ಷಣೆ ಹಾಗೂ ಮಿದುಳಿನ ಶಸ್ತ್ರ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನರ ರೋಗದಿಂದ ಬಳಲುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲು ಹಾಗೂ ಆ ಬಗ್ಗೆ ಇತರರಿಗೂ ಅರಿವು ಮೂಡಿಸಲು ಶಿರ ಸುಭದ್ರ ಫೌಂಡೇಷನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅಂಗವಿಕಲ ಮಕ್ಕಳಿಗೆ ಉಚಿತ ನರಪರೀಕ್ಷೆ ನೀಡುವುದು, ಬಡ ರೋಗಿಗಳಿಗೆ ಸಹಾಯಧನ ನೀಡುವುದು, ಉಚಿತ ನರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದು, ಮಿದುಳು ಗಡ್ಡೆ, ಮಿದುಳು ರಕ್ತಸ್ರಾವ ಕುರಿತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸುವುದು ಇತ್ಯಾದಿ ಸಾಮಾಜಿಕ ಹಿತಾಸಕ್ತಿಯ ಕಾರ್ಯಗಳಲ್ಲಿ ತೊಡಗಿದ್ದಾರೆ. ದೇಶ ವಿದೇಶಗಳ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಸದಸ್ಯರು, ಗೌರವ ಸದಸ್ಯರೂ ಆಗಿ ನೇಮಕಗೊಂಡಿರುವ ಶ್ರೀಯುತರು ಮಿದುಳು, ನರರೋಗ, ಪಾರ್ಶ್ವವಾಯು, ನರ ಕ್ಯಾನ್ಸರ್ ಇತ್ಯಾದಿ ವಿಷಯಗಳಲ್ಲಿ ವ್ಯಾಪಕ ಸಂಶೋಧನೆ ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಮಿದುಳು ಆಘಾತದ ನಂತರದ ಸ್ಥಿತಿ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಾರೆ.
ನರ ವಿಜ್ಞಾನಕ್ಕೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿ, ನರರೋಗಿಗಳ ಚಿಕಿತ್ಸಾ ವಿಧಾನದಲ್ಲಿ ಸಂಶೋಧನೆಗಳನ್ನು ಮಾಡಿರುವ ನರರೋಗತಜ್ಞ ಡಾ. ಎ.ಎಸ್. ಹೆಗ್ಡೆ ಅವರು.