Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

ಇದು ಮಾಂಗಿರಿರಂಗನ

೧೦೧

ಗಿರಿಧರ ಗೋಪಾಲ | ಗಾನವಿಲೋಲ ಪ
ವರನೀಲೋತ್ಪಲ ಶ್ಯಾಮಲ ಕೋಮಲ
ಕರುಣಾಲವಾಲಾ ಗೋಪಾಲಬಾಲ ಅ.ಪ
ಸಕಲ ಚರಾಚರ ಭರಿತ ಸುಖಂಕರ
ಬಕಶಕಟಾಸುರನಿಕರ ಭಯಂಕರ
ಶುಕಮೌನೀಶ್ವರನುತ ಕರುಣಾಕರ
ಸುಕುಮಾರಾಂಗ ರಾಜಿತ ಮಾಂಗಿರಿವರ ೧

೧೦೨

ಗೋಕುಲ ಆನಂದ ಲೀಲಾ | ಘನ ಸುಂದರ ರುಕ್ಮಿಣಿಲೋಲ
ಶ್ರೀಕರ ಶುಭದಾಯಕ ವರ | ಗೋಪಾಲ ಬಾಲ ಪ
ಮಣಿರಂಜಿತ ಭೋಗರಾಗವಿಮಲ
ಶೃಂಗಾರಶೀಲ ಸುರಪಾಲ ಸಂಸೇವ್ಯ ಗಾನಲೋಲ ಅ.ಪ
ಪದ್ಮಲೋಚನ ಪರಿವೃತ ಶರಣವತ್ಸಲ
ಸರ್ವಜ್ಞ ಸುಭಾಷಿತ ಸದ್ಭಾವ ವಿನಯಾದಿ
ಭೂಷಿತ ಚಿತ್ರ ವಿಚಿತ್ರ ಕರ್ಷಿತ
ಸೂತ್ರಾ ಮನಸಿಜ ಗಾತ್ರಾ | ಸುವಿನೀತ ಗೋಪೀನಂದನ ೧
ಮಣಿಪೀಠ ಮಂಡಿತಾ | ಕಿರೀಟ ಮಣಿಮಯ
ರಾರಾಜಿತ | ಗೋಪಿಕಾನತ ಪಾಂಡವಪಕ್ಷ
ದನುಜವಿಪಕ್ಷ |ಕಮಲದಳಾಕ್ಷ ದಾನವಶಿಕ್ಷ
ಶ್ರೀವನಮಾಲಿಕಾವಕ್ಷ | ಮಾಂಗಿರಿನಾಥಾ ದೀನರಕ್ಷ ೨

೧೦೩

ಗೋಪಾಲ ಸಕಲಪಾಲ ಶ್ರೀಪಾಲ ಜಗಕೆ ಮೂಲ ಪ
ತಾರಾಧಿಪಾಶು ಜಾಲ ಶ್ರೀ | ಪಾವನ ಚರಣ ಮಾಲೋಲ ಅ.ಪ
ಗೋಪಿಕಾ ವನಸುಮ ಮಧುಕರ ಸುರುಚಿರ
ಸುಖಕರ ವಿಸರ ಅಘಕುಲಪರಿಹರ
ಸಮೀರಕುವರ ನುತಪದಮುಕುರ
ಮುರಳೀಧರಿತಕರ ನೀರಜಾಕ್ಷಶೃಂಗಾರ
ಮಂದಹಾಸ ಸುಂದರ ತರುಣಿ |
ನಿಕರ ಮಾಂಗಿರೀಶ ಭವನಾಶ
ರಾಮಭದ್ರ ಶುಭಕರ ವಿಧಿಶಿವ ಸುರನಿಕರ ೧

೧೦೪

ಗೋ ಪಾಲಾ ಶೃತಬಾಲಾ | ಮುನಿಕುಲಾನತಬಲ ಪ
ಶ್ರೀಪದುಮಾಯುತ ನಯನಾ | ವನಮಾಲ ಕೃಪಾಲವಾಲ ಅ.ಪ
ನೂಪುರ ಪಾಡಗಾದ್ಯಲಂಕೃತ ಕೋಮಲ
[ಶ್ರೀ]ಪಾದಾಂಬುಜಾತ ಪ್ರೀತಲೋಲ
ತಾಪಸವರ ಸತತ ವಂದಿತಾ ವೇದವಿದಿತ
[ಗೋಪೀಜನ] ವಿಮಲಚರಿತಾ ಶ್ರೀಯುತ ಅ.ಪ
ದೇವಾನತ ದೇವೇಶಾ ಮುರಳೀರವ ಲೋಲಾ |
ಗೋವರ್ಧನೋದ್ಧಾರ ಲೀಲಾ | ಶ್ರೀವರ ವನಮಾಲಾ |
ಪಾವನ ಪದಜಲಜಾಯುತ ಲೋಚನ | ಶ್ರೀ
ಗೋವಿಂದ ಮಾಂಗಿರೀಶ ಭಾವುಕಜನ ಚೈತನ್ಯ ೧

೧೦೫

ಜಯ ಜಯ ಮಾಧವ ಕೃಷ್ಣ ಮುರಾರೇ
ಜಯ ಜಯ ರಾಘವ ರಾಮ ಖರಾರೇ ಪ
ಜಯತು ಸೀತಾಧವ ಪಾವನ ಶೌರೇ ಅ.ಪ
ಜಯತು ಪೀತಾಂಬರಧರ ಶಕಟಾರಿ
ಜಯ ಕನಕಾಂಬರಧರ ವಿಕಟಾರಿ
ಜಯ ಜಯ ಮುರಳೀಧರ ಕಂಸಾರಿ
ಜಯ ಜಯ ಶರಧರ ದಶಶಿರವೈರಿ ೧
ಜಯತು ಗೋಪೀಜನಪ್ರಿಯ ಗೋಪಾಲ
ಜಯತು ತಪೋಬಲ ಮುನಿಜನಪಾಲ
ಜಯತು ಜಯತು ಕೌಸ್ತುಭಮಣಿಮಾಲ
ಜಯ ಜಯತು ಭೂಪಾಲ ಸುಶೀಲಾ ೨
ಜಯ ಕುರುವಂಶ ಮಹಾರ್ಣವ ಭೀಮ
ಜಯ ಜಯ ಪಾಂಡವ ಸನ್ನುತ ನಾಮ
ಜಯ ಜಯಾನತ ಮುನಿಜನ ಪ್ರೇಮಾ
ಜಯತು ಜಯತು ರಾಮ ಮಾಂಗಿರಿಧಾಮಾ ೩

೧೦೬

ಜೈಜಗಜ್ಜನಕ [ಮಾಂ] ಪಾಲಯಾ ಪ
ರಾಜಿತ ಮಣಿಕೋಟಿ [ರುಚಿ] ರ
ರಾಜರಾಜ ಸುರಭೂಜ ಕೃಪಾಕರ ಅ.ಪ
ಕಾರುಣ್ಯ ಮಂದಿರ ಲಾವಣ್ಯ ಚಂದಿರ
ತಾರುಣ್ಯ ಬಂಧುರ ಪಾಹಿ ಕೃಪಾಕರ
ತ್ರಿಲೋಕ ಮೋಹನ ತ್ರಿಲೋಕ ಪಾವನ
ತ್ರಿಲೋಕ ಜೀವನ ತ್ರಿಲೋಕ ರಂಜನ ೧
ಶರಣಾಗತ ಪಾಲ ಗೋಪಾಲ
ಮುರಳೀಧರ ತುಳಸಿ ವನಮಾಲ
ಸರಸೀರುಹ ನಯನ ಪೀತಾಂಬರ
ಕರುಣಾಕರ ಮಾಂಗಿರೀಶ ಶ್ರೀಕರ೨

೧೦೭

ಝಂಕೃತಿ ನಾಟ್ಯಕಲಾ ಬೃಂದಾವನ ಪ
ರಾಧಾಮಾಧವ ಗಾನ ಸದನ ಅ.ಪ
ಝಣ ಝಣನಾದ ವೇಣುನಿನಾದ
ಗಾನವಿನೋದ ನಂದನಾ೧
ನವಮಣಿರುಚಿರ ಭಾಮಾನಿಕರ
ಸುರುಚಿರ ಮಾಂಗಿರಿ ಶ್ರೀವರ ೨

೧೦೮

ಝಣ ಝಣ ಝಣರೆಂದು ಕುಣಿವುದ ನೋಡೆ
ಫಣಿಪತಿ ಶಯನನು ಕಾಣುವ ನೋಡೆ |ನಾಡೆ ಪ
ಕಿಣಿ ಕಿಣಿ ಕಿಂಕಿಣಿ ಕಿಣಿರವ ಕೇಳೇ
ಮಣಿ ಮಣಿದಾತನ ನಾಮವ ಪಾಡೇ ಅ.ಪ
ನೋಡುವ ನಲಿಯುವ ಹೊಂಗೊಳಲೂದುವ
ಪಾಡುವ ಕರೆಯುವ ನಗಿಸುವ ನಗುವಾ
ಮಾಡೆ ವಂದನೆಗಳ ಸಂತಸಗೊಳುವಾ
ಬೇಡುವರಿಷ್ಟವ ಕರುಣದಿ ಕೊಡುವಾ ೧
ಬೃಂದಾವನದಾನಂದದ ನೋಟಾ
ಮಂದಗಮನೆಯರ ನಲವಿನ ಕೂಟಾ
ಇಂದಿರೆಯರಸ ಮಾಂಗಿರಿಪತಿಯಾಟಾ
ಸಂದಪುದೆಮಗೆ ಬಾ ಕೃಷ್ಣನೊಳಾಟಾ ೨

೧೦೯

ತೋರಿಸು ಪಾದವ ವಾರಿಸು ದಾಹವ ಪ
ನೀರಜ ಸಂಭವಾರಾಧಿತ ಮಾಧವ
ಮಾರಜನಕ ಭವದೂರ ದಯಾರ್ಣವಾ ಅ.ಪ
ಗಾನವಿಲೋಲಾ ಗೋಕುಲ ಬಾಲಾ |
ದಾನವಕಾಲಾ ಶ್ರೀವನಮಾಲಾ ೧
ಘನತರ ಲೀಲಾ ಮುನಿಜನ ಪಾಲಾ |
ಕನಕದುಕೂಲ ಮಾಂಗಿರಿವರಬಾಲಾ೨

೧೧೦

ಜಯ ಜಯ ಸಕಲಾಧಾರಾ | ಕೃಷ್ಣ ಜಯ ಜಯ
ಭಕ್ತೋದ್ಧಾರಾ ಜಯಸಕಲಾಲಂಕಾರಾ | ಕೃಷ್ಣಾ ಯಮುನಾ
ವೇಗ ಸಂಹಾರಾ ಜಯ ಜಯ ನಂದಕುಮಾರಾ
ಕೃಷ್ಣ ಜಯ ಜೀಮೂತ ಶರೀರಾ ಪ
ದೇವಕೀಕುಮಾರಾ ನಿಗಮಗೋಚರಾ ಶಂಖಚಕ್ರಧರ
ಮಣಿಗಣನಿಕರಾ ಕೌಸ್ತುಭಹಾರಾ ಭವಬಂಧನಹರ
ವಸುದೇವಾನಂದಕರ ಸುರುಚಿರ ಪೀತಾಂಬರಧರ ೧
ನಯನ ಮನೋಹರ ಗೋಪೀ ಮಂದಿರ ಸರಸಿಜ
ಮಿಹಿರಾ ಘನತರ ಸುಂದರ ದುರುಳ ಭಯಂಕರ
ಸುಗದಾಕರ
ಶಕಟ ಬಕಾಂತಕ ಶೂರಾ ಕೃಷ್ಣ ಪೂತನಿ ಸಂಹಾರಾ
ಅಜ ಸುರ ಮುನಿ ಪರಿವಾರ೨
ಧೇನುಕ ದೈತ್ಯವಿದಾರಾ | ಕೃಷ್ಣ ಮರಕತ ಮಣಿಮಯ ಹಾರಾ
ತರುಣೀ ಮಣಿಗಣನಿಕರಾ | ಕೃಷ್ಣ ಸರಸಿಜಲಸದಾಕಾರಾ
ನವನೀತಕರಾ ಘನ ಮುರಳೀಧರ | ಕುಂಜವಿಹಾರಾ
ವಿಷಧರ ಭಯಹರ ಗೋವರ್ಧನಧರ | ಮುಷ್ಟಿಕ ಮಧುರಾ ೩
ವಿಹಾರಾ | ಕೃಷ್ಣ ನಾದಾನಂದ ಪ್ರಚಾರಾ
ಅಕ್ರೂರಾನತ ಚರಣಾ | ಕೃಷ್ಣ ಮುನಿಜನ ಹೃದಯಾಭರಣ
ಕುಬ್ಜಾವಂದಿತ ಚರಣ | ಕೃಷ್ಣ ಘನಮಹಿಮಾ ವಿಸ್ತರಣ
ಗೋಪೀಜನಗಣ ಮೌಢ್ಯನಿವಾರಣ ೪
ಭಕ್ತಕಾರಣಾ | ದುರುಳ ವಿದಾರಣ | ಭವಜನಕರುಣ
ಸದಮಲ ಗುಣಗಣ ಪಶುಪಾಲನ ಸತ್ಯೇವಾ ನಿಪುಣ
ಹಲಧರ ಭುಜಬಲ ಪ್ರಾಣಾ ಕೃಷ್ಣ
ಬೃಂದಾರಕಗಣ ಪ್ರಾಣ ೫
ಶಿಶುಪಾಲೋತ್ಸವ ಬಾಣಾ | ಕೃಷ್ಣ ರುಕ್ಮ ಲೋಭ ಮದ ಯಾಣಾ
ಅರಿಕುಲ ಸೈನ್ಯ ಕೃಪಾಣಾ | ಕೃಷ್ಣ ಚತುರೋಪಾಯ ಪ್ರವೀಣಾ
ರುಕ್ಮಿಣೀರಮಣ ಶುಭಕರಕಂಕಣ ಪಾಂಡವಪೋಷಣ
ಕುರುಕುಲ ಭೀಷಣ ಮುರಮದ ಹರಣ ಚಕ್ರವಿಭೂಷಣ೬
ದ್ರುಪದಸುತಾನತಚರಣಾ | ಕೃಷ್ಣ ಪರಮಾನಂದಾವರಣ
ವಿದುರಾನತ ನೀಲಾಂಗ | ಕೃಷ್ಣ ಕರಧೃತವ್ಯರಥಾಂಗ
ಕುರುಕುಲ ವನ ಸಾರಾಂಗಾ | ಕೃಷ್ಣ ಗೀತಾವನಜತರಂಗಾ
ಕಮಲಾ ಅಂಗ | ಸತ್ವ ತುರಂಗಾ | ಧರ್ಮವಿಹಂಗಾ ೭
ಅರಿಮದ ಭಂಗಾ ಪುರುಷೋತ್ತುಂಗಾ | ಪರಮಕೃಪಾಂಗಾ
ಮಾಂಗಿರಿ ರಂಗ ಸುಧಾಂಗಾ ಶುಭಾಂಗ | ಜಯ ಜಯ ಮಾಂಗಿರಿ
ರಂಗಾ | ಕೃಷ್ಣ ಜಯ ಜಯ ಗರುಡ ತುರಂಗಾ ೮

೧೧೧

ದೇವಕೀಕುವರ ನವಘನಸುಂದರ ಭಾವಜ ಜನಕ
ಮಾದೇವ ಕೃಪಾಕರ ಪಾವನ ಸುಕುಮಾರ ಹರೇ ಹರೇ ಪ
ನಿರುಪಮ ಚರಿತ ವರಗುಣ ಭರಿತೇ
ಮರಕತಮಣಿ ಮಾಲಾಹಾರ ಸಂಶೋಭಿತೇ
ಸುರಗಂಗಾಸುತ ರಾಜಿತಮೌನಿಯುತೇ
ವೈರಿಕುಲ ಭಂಜನ ಪಾಂಡವ ಮಿತ್ರೇ೧
ಶ್ರೀವನಮಾಲಾಧರ ಮುರಳೀಕರ ದೇವಸುಧಾಕರ
ಶ್ರೀ ಮಾಂಗಿರಿವರ ಭಾವಕಜನಪರಿವಾರ
ಶುಭಂಕರೇ ರೇವತೀರಮಣಾ ನಂದಕರೇ ೨

೧೧೨

ನಂದಕುಮಾರ ಗೋವಿಂದಾ ನಮೋ ನಮೋ
ಮಂದರಧರ ಸಾನಂದಾನವೇ ನಮೋ ನಮೋ ಪ
ಮಂದಾಕಿನಿ ಪದದ್ವಂದ್ವಾ ನಮೋ ನಮೋ
ಸಿಂಧುಶಯನ ಅರವಿಂದನಯನ ನಮೋ ನಮೋ ಅ.ಪ
ವೇದೋದ್ಧರ ನಮೋ ಮಾಧವತೇ ನಮೋ ನಾದರೂಪಾ ನಮೋ
ಭೂವರ ತೇ ನಮೋ ಯಾದವ ಮುರಳಿನಾದ ನಮೋ
ಮೇದಿನಿಪಾಲ ಮಾಂಗಿರಿನಿಲಯಾ ನಮೋ ೧

೧೧೩

ನಂದಕುಮಾರಾ ಮುಕುಂದಾ ಜನಾರ್ದನ ಮಂದರಧರ ಗೋವಿಂದ ಹರೇ ಪ
ಸುಂದರ ಗೋಪಿ ವೃಂದ ಶುಭಾನನ ಬೃಂದಾವನ ಸಾನಂದ ಹರೇ ಹರೇ ಅ.ಪ
ವಾಮನ ಮಾಧವ ಕೇಶವಪತೇ ನಮೋ
ಸಾಮಜಪಾಲನ ನಾಮಾ ನಮೋ
ಭೂಮಿ ಸುತಾನ್ವಿತ ರಾಮಾ ನಮೋ ನಮೋ
ಕಾಮಿತದಾತಾ ಪರೇಶಾ ನಮೋ ನಮೋ ೧
ಅಕ್ಷಯಾತ್ಮ ಸುರಪಕ್ಷಾ ನಮೋ ನಮೋ
ಪಕ್ಷಿಗಮನ ಪದುಮಾಕ್ಷಾ ನಮೋ ನಮೋ
ಲಕ್ಷರೂಪ ಖಳಶಿಕ್ಷಾ ನಮೋ ನಮೋ [ರಕ್ಷಕ ಪಾಂಡವ ಪಕ್ಷ ನಮೋ] ೨
ತುಂಗ ಕೃಪಾಂಬಕ ರಾಮಾ ನಮೋ ನಮೋ
[ಮಂಗಳದಾಯಕ ಕೃಷ್ಣನಮೋ]
ಅಂಗಜಾತ ಪಿತ ರಂಗ ನಮೋ ನಮೋ
ಮಾಂಗಿರಿವಾಸ ಕೃಪಾಂಗಾ ನಮೋ ನಮೋ ೩

೧೧೪

ನಂದಕುಮಾರ ಸಕಲಾಧಾರಾ ಪ
ಇಂದೀವರಯುಗಚರಣ ಮನೋಹರ ಕುಂದವದನ ನಿಗಮಾಂತ ಸಂಚಾರಾ ಅ.ಪ
ಉಡಿಗೆ ತೊಡಿಗೆಗಳ ಉಡಿಸುವೆ ತೊಡಿಸುವೆ ಮುಡಿಗೆ ಮಲ್ಲಿಗೆ ಮಲ್ಲೆಯಳವಡಿಪೆ |
ರಂಗ ಉಡುಪತಿ ಫಾಲಕೆ ತಿಲಕವನಿಡುವೆ ಅಡಿಗಂದುಗೆ ಗೆಜ್ಜೆ ಪಾಡಗವಿಡುವೆ | ರಂಗ ೧
ಕಿವಿಗಳಿಗೆ ಮುತ್ತು ಹವಳದಾಭರಣವ ಹವಣಿಸಿ ಸಿಂಗಾರಗೈವೆನೋ |
ರಂಗ ನವಮಣಿಮಾಲೆಯ ಕೊರಳಿಗೆ ಧರಿಸುವೆ ದಿವಿಯ ಪೀತಾಂಬರವಳವಡಿಪೇ | ರಂಗಾ ೨
ಬೆರಳಿಗುಂಗುರಗಳ ಹರುಷದೊಳಿಡುವೆ ಕರದೊಳಿಡುವೆ ನಿನ್ನ ಮುರಳಿಯನು |
ರಂಗ ಚರಣಯುಗಕೆ ನಿನ್ನ ಸಕಲವನರ್ಪಿಪೆ ಕರುಣದಿ ಬಾರೊ ಮಾಂಗಿರಿಯೊಡೆಯಾ | ರಂಗ೩

೧೧೫

ನಂದನ ಕಂದ ಬಂದ ಗೋವಿಂದ ಇಂದಿರಾನಂದ ರಾಧೆ ಮುಕುಂದ ಪ
ವೃಂದಿತ ಬೃಂದಾರಕ ಖಗವೃಂದ ಸುಂದರ ಮುರಳೀ ನಾದಾನಂದ ಅ.ಪ
ಘಣಿಮಣಿ ಭೂಷಣ ಮುನಿತೋಷಣ ಗಣಿಕಾಗಣ
ಮನಮೋಹನ ತರುಣ ಝಣ ಝಂಝಣರವ ಕಿಣಿಕಿಣಿಚರಣ
ಕುಣಿ ಕುಣಿವನು ಮಾಂಗಿರಿರಂಗ ಕರುಣ ೧

೧೧೬

ನಾದಾನಂದ ಗೋಪೀ ವೃಂದಾ |
ಮಾಧವ ಗೋವಿಂದ ಪ
ವೇದಸುಧಾನಂದ ನಂದಗೋಪಿಕಂದ
ವಂದಿತ ಮುಚುಕುಂದ ಅ.ಪ
ನೀರದ ಗಾತ್ರನೆ ವಾರಿಜನೇತ್ರನೆ |
ಮೂರು ಲೋಕಗಳ ಪಾಲಿಪನೆ
ನಾರದನುತನೆ ಕರುಣಾಯುತನೆ |
ಬಾರೊ ಮಾಂಗಿರಿವರ ವಾಸನೆ ೧

೧೧೭

ಪರಾತ್ಪರಾ ಪ್ರಭುವರ ನೀ
ಕರುಣವಾರಿಧಿಯಲಾ ವಿಶ್ವರೂಪ ಪ
ಸುರೇಶ ಮಾವರ ಮೋಹಕರಾ
ಸಾರಸಾಕ್ಷ ನವನೀತಚೋರಾ ಅ.ಪ
ಮುನಿಪುಂಗವಾನತಪದಕಮಲ |
ಘನಗುಣ ಮಣಿಗಣ ರಂಜಿತ ವಿಮಲ ೧
ದನುಜಕುಲೋತ್ಪಾಟನ ಭವತರಣ |
ದಾನವರಿಪು ಮಾಲೋಲ ಮಾಂಗಿರೀಶಾ ೨

೧೧೮

ಪಾಲಯ ದನುಜಾರೆ ನೃಹರೆ ಪ
ಮದನಜನಕ ಮಾಧವ ಗಿರಿಧಾರಿ
ಮಧುರಾಪುರ ಪರಿಪಾಲಕ ಶೌರೀ ೧
ನಂದ ಕಿಶೋರ ಗೋಪಾಲ ಮುಕುಂದ
ಬೃಂದಾವನಾ ಸಾನಂದ ಗೋವಿಂದ ೨
ಸನಕಸನಂದನ ವಿನಮಿತ ಚರಣಾ
ವನಜನಯನ ಗೋಪೀಜನ ಕರುಣಾ ೩
ಮಂಗಳಭಾಸಾ ಮುನಿಗಣತೋಷಾ
ಮಾಂಗಿರಿವಾಸಾ ಮಣಿಗಣಭೂಷಾ ೪

೧೧೯

ಪಾಲಿಸೆನ್ನ ಲೋಲಲೋಚನ ಬಾಲಗೋಪಾಲ ಪ
ಕಾಲಕಾಲ ಶೌರಿ ಶ್ರೀವನಮಾಲಿ ಶ್ರೀಲೋಲ ಅ.ಪ
ನಿನ್ನ ಧ್ಯಾನವೆ ಮಧುರ ಪಾದ ಎನ್ನ ತನುವಿಗೆ
ನಿನ್ನ ಭಾವನ | ಸಂಜೀವನ
ರನ್ನಪಾದವ ನುತಿಸಿದವರ ಮನದೊಳಿರುವೆ
ಪತಿತರಾ ಪೊರೆವೆ ೧
ಸತತ ನಿನ್ನ ಚರಣದಿ ಬೇಡುವೆ
ಹಿತದೊಳೆರಗುವೆ ಮಾಂಗಿರೀಶ ಕಲುಷನಾಶ
ನುತಮಂಗಳ ವೇಷಾ ಶೃಂಗಾರಾಂತರಂಗ ಭಾಸ
ರಂಗ ಸುಪ್ರಕಾಶ ೨

೧೨೦

ಪಾಲಿಸೋ ವನಮಾಲಾ | ಗೋಪಾಲಬಾಲಾ ಪ
ಮುರಾರಿ ಪೂಜಿತ | ಸಾರಸಭವನುತ
ನಾರದಮುನಿ ವಿದಿತಾ | ನೀರಜನೇತ್ರ ೧
ನೀಲ ನೀರದಕಾಯ | ಪಾಲಿತ ಮುನಿಗೇಯ
ಮಾಲಕುಮಿಪ್ರಿಯಾ | ಲೀಲಾಮಯ ೨
ಶೃಂಗಾರರಾಜಿತ ಮಂಗಳವೇಷಿತ
ಮಾಂಗಿರಿಚರಣಾದಿತ | ಗಂಗಾನತ ೩

೧೨೧

ಪ್ರಭು ತವ ಚರಣಾ ಭವೋತ್ತಾರಣ
ವಿಭವ ಪ್ರಪೂರಣ | ಮಾಂಗಿರಿಮೋಹನಾ ಪ
ವಿಭುದಾನತಪಾವನಾ ಸ್ವಾಮಿ
ದಾನವಕುಲಭೀಷಣಾ ಕೃಪಾಕರಾ ಅ.ಪ
ನಿರುಪಮ ಶುಭಗೀತ ವಿಧಿನುತ ವಿಖ್ಯಾತ
ಪರತರ ಸುಖದಾತ ಸುಜನಗಣನುತ
ಕಾಮಿತ ಸಂದಾತ ಪಾರ್ಥಿವ ರಥಸೂತ
ಭೂಮಿತ್ರಯ ನೇತಾ ಮನ್ಮಥತಾತಾ
ಸುರಪತಿ ವಂದಿತಾ ದೇವ ರಮಾಕಾಂತಾ
ವರದಸ್ವಯಂಜಾತಾ ಶರಣ ಸಂಪ್ರೀತಾ ೧
ಗಿರಿಧರ ಗೋವಿಂದ ಶರಣಜನಾನಂದ
ಮುರಹರ ಮುಚುಕುಂದ ಭಯಹರ ವರದಾ
ಶ್ರೀಮುಖ ಸಾನಂದ ಗೋಕುಲ ಮಕರಂದ
ಸುರಮುನಿ ಬೃಂದ ನಂದನ ಕಂದ
ಸುರುಚಿರ ಕೋವಿದಾ | ಮುರಳೀ ಬೃಹನ್ನಾದ
ಪಾಂಡುಸುತಾನಂದ | ಮಾಂಗಿರಿವರದಾ ೨

೧೨೨

ಬಾರೋ ನಿತ್ಯಾನಂದಲೀಲಾ | ಗೋಪಾಲ ಬಾಲ ಪ
ಬಾರೋ ವನಜಮಾಲಾ ಬಾರೋ | ಗಾನಲೋಲಾ ಅ.ಪ
ನಿನ್ನ ಕರುಣೆ ಎನ್ನೊಳಿರಲಿ ನಿನ್ನ ಚರಣ ಎನಗೆ ಸಿಗಲಿ
ನಿನ್ನ ಧ್ಯಾನ ಮನದೊಳಿರಲಿ ನಿನ್ನ ನಾಮ ರಸನೆಯೊಳಿರಲಿ ೧
ಮುರಳೀಧರ ಲೋಕೇಶ ಧರಣೀಧರ ವೆಂಕಟೇಶ
ಶರಣಾಗತ ಕ್ಲೇಶನಾಶ ವರದಾಯಕ ಮಾಂಗಿರೀಶ ೨

೧೨೩

ಬಾರೋ ಭಜಕಾವಳಿ ನಿತ್ಯಾನಂದ |
ಮಾರಮಣಾ ಹರಿ ಗೋವಿಂದಾ
ಬಾರೋ ಕೊಂಡಾಡಿ ಪಡೆವೆನಾನಂದ ಪ
ಸಾರಸಾಕ್ಷ ಶಿವನುತ ಸಾನಂದಾ |
ನಾರದಾದಿ ಮುನಿ ಬೃಂದಾನಂದ
ನೀರದಾ ನವಗೋಪೀವೃಂದಾ |
ಬಾರೋ ಭಕ್ತಕುಮುದೇಂದು ಮುಕುಂದಾ ಅ.ಪ
ನಾನಾ ಜನುಮಗಳೊಳಗುದಿಸಿದೆವಯ್ಯ
ಎನ್ನಯ ಜನುಮಗಳಾ ಪರಿಯಾ |
ಏನೆಂದು ಪೇಳಲಿ ನಿನಗೆ ಜೀಯ
ನೀನೆನಗಿತ್ತಾ ತನುಗಳನಳೆಯಲು ಏನಪೇಳಲೈ ಭೂಮಿಗೆ ನಾಲ್ಮಡಿ
ಸಾನುರಾಗದಿ ಜನನಿಯಿತ್ತಾ ಘೃತ
ಪಾನಕ್ಷೀರ ವಾರಿಧಿಗಿಮ್ಮಡಿಯೋಳ್ ಬಾ ೧
ನೋಡಿ | ಮನಕರಗದೆ ರುಕುಮಿಣಿ ರಮಣಾ
ಮೃಡ ವಂದಿತ ಸರಸಿಜ ಚರಣಾ ಪಾಡೀ ಕೊಂಡಾಡುತಿರ
ದೇಕೆ ನಿಷ್ಕರುಣಾ ಬೇಡಿದರ್ಗೆ ಕೈನೀಡುತೆ ದಾನವ
ಮಾಡಲಿಲ್ಲವದರಿಂದ ದರಿದ್ರತೆ ಪೀಡಿಸವೈ ನಾ
[ಮಾಡಿದ] ಪಾತಕವಾರ್ಜಿಸಿ ಜನುಮಂಗಳ ಪಡೆದೆನೊ ಬಾ ೨
ರಾಮ ಜಗದಭಿರಾಮ ಸುನಾಮ | ಸುಪ್ರೇಮ
ನಮಿಸುವೆ ಸುಗುಣ ವಿರಾಮ
ನಾಮ ಸ್ಮರಣೆಯ ಪರಲೋಕದ ಧಾಮಾ
ಕಾಮಿತಾರ್ಥಗಳನೀಮನ ಬಯಸದೋ
ರಾಮದಾಸ ಸನ್ನುತ ವರಮಾಧವ ಕೋಮಲಾಂಗ
ಸೋಮಶೇಖರಾಧಿಪ ಸುಮಚರಣವ ನೋಳ್ಪೆನೋ ಬಾ ೩

೧೨೪

ಬಾರೋ ಮುರವೈರಿ ದುರಿತಾರಿ ನೃಹರಿ ಪ
ದನುಜೇಭ ಕೇಸರಿ ಶರಣಾಗತೈಸಿರಿ ಅ.ಪ
ಚರಣಸೇವಾಭಾವ ವರವೀಯೋ ದೇವ
ಧರಣಿಯನುರೆ ಕಾವ ಹರಿ ಜೀವ ಜೀವ ೧
ಜಲಜನೇತ್ರಾನಂದ ಕಲುಷಹರ ಗೋವಿಂದ
ಕಲಿಮಥನ ನೀಲಕಾಯಾ ವರದ ೨
ಗಂಗೆಯ ಪೆತ್ತವನೆ ಮಾಂಗಿರಿಯ ನಾಯಕನೆ
ಅಂಗಜನ ಪ್ರಿಯಪಿತನೆ ಗಂಗಾಧರ ಪ್ರಿಯನೆ ೩

೧೨೫

ಭಾಮಾರಮಣನೆ | ಶ್ಯಾಮಸುಂದರನೆ
ಓ ಮಹಾಮಹಿಮ ಕೇಶವನೆ ಪ
ಪ್ರೇಮಾನಂದ ಸುಧಾಮಾರ್ಚಿತ ಪದ
ಶ್ರೀಮಹಿಜಾ | ಮಹಿಜಾ ಸಂಜೀವನೇ ಅ.ಪ
ಸತ್ಯಸುಧಾಕರ ನಿತ್ಯಸುಖಂಕರ
ದೈತ್ಯಭಯಂಕರ ಮುನಿನಿಕರಾ
ಸ್ತುತ್ಯದಿವಾಕರ ಭಕ್ತನಿಶಾಕರ
ಮೌಕ್ತಿಕರುಚಿರಾ ಅಭಯಕರಾ ೧
ಸುರಮುನಿಪಾಲಾ ಕರುಣಾಲವಾಲಾ
ಮುರಳೀಲೋಲಾ ವನಮಾಲಾ
ಮುರ ಬಕಕಾಲಾ ಹೃದಯವಿಶಾಲ
ವರಮಾಂಗಿರಿಬಾಲಾ ಗೊಪಾಲಾ ೨

೧೨೬

ಬೃಂದಾವನಾನಂದ ಬಾ | ಬೃಂದಾರಕಾನಂದ ಬಾ ಪ
ಮಂದಾಕಿನೀಪಾದ ಗೋಪೀಜನಾನಂದ
ನಂದಾತ್ಮ ಗೋವಿಂದ ಬಾ ಅ.ಪ
ನಂದನ ವನದಲ್ಲಿ ಬೆಳೆದ ಮಂದಾರಾ
ಸುಂದರಿಯ ತಲೆಯ ಜಡೆಯ ಬಂಗಾರ
ಮಂದಮಾರುತನಿಂದ ನಲಿವು ಶೃಂಗಾರ
ಮಂದಿರದೊಳಗೆಲ್ಲ ವಿಸರದ ಸಾರ ೧
ಕತ್ತಲೆಯಲಿ ಹೊಳೆವ ರನ್ನದ ದೀಪ
ಮತ್ತಗಾಮಿನಿಯರ ಸರಸ ಸಲ್ಲಾಪ
ಎತ್ತೆತ್ತ ಸಡಗರ ಸೊಗದ ಪ್ರತಾಪ
ಇತ್ತಿತ್ತ ಬಂದರೆ ಮರೆವುದ ತಾಪ ೨
ಗೋಪಾಲ ಘನಲೀಲ ಬಾ ಮುರಹರ
ಶ್ರೀಪದ್ಮಜಾಲೋಲ ಬಾ
ತಾಪತ್ರಯಕಾಲ ಬಾ ಪರಂಧಾಮ
ದಿತಿಸುತಭೀಮಾ ಆಪತ್ಸಖಾ ಭಕ್ತಪಾಲಾ ಮಾಂಗಿರಿನಾಥ೩

೧೨೭

ಭಜ ಭಜ ಮಾನಸ ಅಜಸುರ ನಮಿತಂ
ಭಜ ಶಯನಂ ತ್ರಿಜಗನ್ನಾಥಂ ಪ
ಸುಜನಾಕರ್ಷಿತ ಪಾದ ಸರೋಜಂ
ಭಜನಾರಾಧನ ನಂದಿತ ಭೂಜಂ ಅ.ಪ
ವೇಣು ವಿನೋದಂ ಪ್ರಣವಾಕಾರಂ
ಭ್ರೂಣಪಾಲನ ತ್ರಾಣಸಮೀರಂ ೧
ವೀಣಾರವ ಸಂಪ್ರೀತಮುದಾರಂ
ವಾಣಿವಿನುತ ಮಾಂಗಿರಿರಂಗಾಖ್ಯಂ ೨

೧೨೮

ಮಂದರಧರ ಗೋವಿಂದ ಜಯ
ನಂದನ ಕಂದ ಬಾಲಕುಲದಾಸಾನಂದ ಪ
ಬೃಂದಾವನ ಗೋಪೀಜನ ವೃಂದ
ಸುಂದರ ಮುರಳೀ ಗೀತಾನಂದ ಅ.ಪ
ಶ್ರೀವತ್ಸಾಂಕಿತ ಪಾವನಚರಣ
ದೇವ ದೇವಾನತ ದೇವಕಿತರುಣ
ಭಾವ ಸಂಭವಪಿತ ರಾಧಾರಮಣ
ಭಾವುಕ ಸೇವಿತ ಕರುಣಾಭರಣ೧
ಮಂಗಳನಾಮಾ ಯದುಕುಲಸೋಮಾ
ಸಂಗರಭೀಮ ಜಗದಭಿರಾಮ
ಭೃಂಗಕುಂತಳ ಮಾಲಿಂಗನಿಸ್ಸೀಮ
ರಂಗರಥಾಂಗ ಮಾಂಗಿರಿವರಧಾಮ ೨

೧೨೯

ಮನಮೋಹಮಂದಿರಾ ಶ್ರೀವರ
ಘನಮಣಿ ತಾ ಹಾರಾ ಪ
ಮಾಂಗಿರಿಧಾಮಾ ಮಂಗಳನಾಮಾ
ಶರಣಾಗತ ಪ್ರೇಮಾ ಅ.ಪ
ದಿವಿಜನಿಕರ ಪರಿವಾರಾ ದಯಾಪೂರಾ
ಭುವನೇಶ್ವರ ಶೂರಾ
ಆನಂದಲೀಲಾ ಆಗಮಮೂಲಾ
ತುಳಸೀದಳ ವನಮಾಲಾ ೧
ಭಾಗವತಪ್ರಿಯ ಸಾಗರತನಯಾ
ಮನರಂಜನ ಸದಯಾ
ಮುರಳೀಧೃತಕರ ಕುಂಜವಿಹಾರಾ
ರಾಧಾಮನ ಮಣಿಹಾರಾ ೨
ನಂದನ ಕಂದಾ ಜಗದಾನಂದ
ಬೃಂದಾವನಾನಂದ
ಗೋಪಿಕಾ ಜಾಲ | ಪ್ರೇಮಿತ ಬಾಲಾ
ಬೃಂದಾವನ ಲೋಲಾ ೩

೧೩೦

ಮುರಹರ ಬಾರೋ ವನಮಾಲಾ
ಚರಣವ ತೋರೋ ಗೋಪಾಲಾ ಪ
ಮೊರೆಯ ಕೇಳಿದರೂ ಕರುಣೆಯು ಬರಲಿಲ್ಲ
ಶರಣನ ಮರೆವುದು ತರವಲ್ಲಾ ಅ.ಪ
ಶರನಿಧಿಗಳಿವೆ ಗಿರಿಯ ಧರಿಸಿದೆ ಧರಣಿಯನೆತ್ತಿದೆ
ತರಳನ ಪೊರೆದೆ ವರವಟುವಾದೆ
ಅರಸರ ತರಿದೆ ನರಪಕೃಷ್ಣ ಬುದ್ಧ ಕಲ್ಕಿ ನೀನಾದೆ ೧
ನಿಗಮೋದ್ಧಾರಾ ನಗಧರ ಭೂವರಾ
ಮೃಗಮುಖ ವಾಮನ ಪರಶುಧವಾ
ಜಗಪತಿ ಮುರಳೀಲೋಲಾ ಪುರಹರಾ
ಖಗವಾಹನ ಕಲ್ಕಿ ವಿವಿಧಾವತಾರಾ೨
ಗಂಗೆಯ ಜನಕಾ ಶರಣರ ಕನಕಾ
ಮಂಗಳದಾಯಕಾ ಅಸುರಾಂತಕಾ
ತುಂಗವಿಕ್ರಮ ಶ್ರೀಮಾಂಗಿರಿನಾಯಕಾ
ಅಂಗಜಜನಕಾ ಲೋಕಮೋಹಕಾ ೩

೧೩೧

ಮುರಳೀ ಲೋಲನ ಪ್ರೇರಿಸುವಳು ರಾಧೆ ಪ
ಒಲಿವಲಿ ನಲಿವಲಿ ಉಲಿವಲಿ ನಿಲುವಲಿ
ಮಲಿನವ ಕಳೆವಲಿ ಲೀಲೆಗಳಲಿ ರಾಧೆ ಅ.ಪ
ಕಂಗಳ ನೋಟದಿ ಸಂಗರದಾಟದಿ
ಅಂಗ ಸೌಂದರ್ಯದಿ ಮಂಗಳ ವೇಷದಿ ೧
ಮುರಳಿಯ ರವದಲಿ | ಕೊರಳಿನ ಸರದಲಿ
ಕರುಣೆಯ ಮನದಲಿ | ಪರಿಮಳ ಭರದಲಿ೨
ಮಾಂಗಿರಿ ಶೃಂಗದಿ | ರಂಗನ ವೇಷದಿ
ಮಂಗಳನಾದದಿ | ಹೊಂಗೊಳಲೂದಿ ೩

೧೩೨

ಯಮುನಾತೀರವಿಹಾರಿ ಶೌರಿ
ವಿಮಲಾಂಬರಧರ ಪಾಹಿ ಮುರಾರಿ ಪ
ಕಮನೀಯಾವನ ಕುಂಜವಿಹಾರಿ
ಸುಮನಸನುತ ಪದದನುಜ ಸಂಹಾರಿ ಅ.ಪ
ಸರಸಿಜಲೋಚನ ಶರಣಸಂಜೀವನ
ಸುರಮುನಿಸೇವನ ಕರುಣಾಸದನ
ಅರವಿಂದಾನನ ವರಮಣಿರದನ
ದುರಿತವಿಮೋಚನ ನಿರುಪಮ ಗಾನ ೧
ಪುರಹರ ವಿನಮಿತ ಪಾವನಚರಿತ
ಧರಣಿರಮಾಯುತ ಸುರಮುನಿವಿನುತ
ಸುರಪತಿಸೇವಿತ ಫಣಿ ಫಣಿಭೂಷಿತ
ಮುರಳೀಧರ ಮಾಂಗಿರಿ ಶೃಂಗಸ್ಥಿತ೨

೧೩೩

ವಾಸುಕಿಶಯನನ ನೋಡೆ | ತಂಗಿ
ಸಾಸಿರ ನಾಮವ ಹಾಡೆ | ತಂಗಿ ಪ
ದಾಸರು ಬಂದರೆ ಕೈ ಜೋಡಿಸಿ ವಂದಿಸೆ
ತೋಷದಿ ವರಗಳ ಸೀಡುವರಮ್ಮ ಅ.ಪ
ಪರಿಮಳ ಭರದಲಿ ಮೆರೆಯುವ ಹೂಗಳ
ಅರಸಿ ತಂದಿರುವಳು ನೀನಲ್ಲವೇ
ಪರಮ ಮಂಗಳಕರ ಸರಸಿಜಪಾದಕೆ
ಹರುಷದೊಳರ್ಪಿಸೆ ಮರೆಯದಿರಮ್ಮ ೧
ಮಂದರಧರ ಗೋವಿಂದನು ಮನದಲಿ
ನಿಂದಿರುವನು ತಾನೆಂದೆಣಿಸಮ್ಮ
ಬಂಧಿಸಿ ಪಂಚೇಂದ್ರಿಯಗಳನೆಲ್ಲ
ವಂದಿಸಿ ಕೈಪಿಡಿ ಎಂದು ಬೇಡಮ್ಮ ೨
ಅಂಗನೆಯರ ಭಾವಭಂಗಿಗೆ ನಲಿಯುವ
ಮಾಂಗಿರಿಯರಸನು ನಿಜವಮ್ಮ
ಇಂಗಿತವರಿತು ಗೋಪಾಂಗನೆಯರಿಗಾ-
ಲಿಂಗನವಿತ್ತವನಿವನಮ್ಮ ೩
ಇವನಮ್ಮ ಮನದೈವ ಗೋಪಾಲನು
ಇವನಮ್ಮ ಪರದೈವ ನೀಲಾಂಗನು
ಭವದೂರ ಸುಕುಮಾರ ಸಿರಿಲೋಲನು
ನವನೀತ ದಧಿಚೋರ ಸುವಿಲಾಸನು ೪
ಪರಮಾರ್ಥ ಚರಿತಾರ್ಥ ವರದಾತನು
ಪರತತ್ವ ಚಿರತತ್ವ ಗುರುವೀತನು
ದುರಿತಾರಿ ಉಪಕಾರಿ ಪರಮಾತ್ಮನು
ಸಿರಿರಂಗ ಮಾಂಗಿರಿಯ ದೊರೆಯೀತನು ೫

೧೩೪

ವೈಜಯಂತಿ ಮಾಲಾ ಗೋಪಾಲಾ
ಶ್ರೀ | ಜಯ ಹರಿ ವಿಠಲಾ ಪ
ರಾಜರಾಜ ಗೋಪೀಜನ ಲೋಲಾ |
ರಾಜವದನ ಕರುಣಾಲವಾಲಾ ಅ.ಪ
ಪೀತಾಂಬರಧರ ಪಾತಕ ಪರಿಹಾರ
ಗೀತ ಸುಧಾಕರ ಭೀತಿವಿದೂರ
ಖ್ಯಾತಿಯ ತಾನರಸುತ ವೇಣುಂಕರ
ನೇತಾ ಸಕಲವರದಾತಾ ಮಾಂಗಿರಿವರ ೧

೧೩೫

ಶ್ರೀಧರ ಮುರಹರ ಮಾರಮಣೀಕರ
ಸೇವಿತ ಜಯ ಜಯ ಗೋಪಾಲಾ ಪ
ಭೂಧರಾ ಪರಮೇಶ್ವರಾ ಕರಿವರ ಸುಖಕರ
ಪರಮ ದಯಾಕರ ಗೋಪಾಲಾ ಅ.ಪ
ಪಾಂಡವ ರಕ್ಷಕ ಕೌರವ ಶಿಕ್ಷಕ
ಪಕ್ಷಿಗಮನ ಹರಿ ಗೋಪಾಲಾ
ಚಂಡಕರಾಕ್ಷ ವಿಲಕ್ಷಣ ಲಕ್ಷಿತ
ಲಕ್ಷ್ಮೀನಾಯಕ ಗೋಪಾಲಾ ೧
ಗಂಗಾಜನಕ ವಿಹಂಗಗಮನ
ಮಾತಂಗವರದ ಹರಿ ಗೋಪಾಲಾ
ಸಂಗರಭೀಮ ಕೃಪಾಂಗ ಮನೋಹರ
ಮಾಂಗಿರಿನಾಯಕ ಗೋಪಾಲಾ ೨

೧೩೬

ಶ್ರೀಮುರಳೀಧರ ಕೃಪಾಕರ ಜೀಮೂತನೀಲಾಂಗ ಶೃಂಗಾರ ಪ
ಸಾಮಜಭಯಪರಿಹಾರ ಕಾಮಿತ ಫಲದಾತಾರ
ಸಾಮದಾನಾದಿ ಚತುರ ಪರಾತ್ಪರಾ ಶುಭಂಕರಾ ಅ.ಪ
ಶಾಂತಿ ಸುಗುಣ ಪೂರಣ ಭವತರಣ
ಆಂತರ್ಯ ಸಂಚಾರಣ ಭಯಹರಣ
ಪೂತನೀ ಪ್ರಾಣಹರಣ ಪಾಂಡುಪುತ್ರಸಮೀಕ್ಷಣ
ನೀತಿ ನಿಯಮ ಸಂತ್ರಾಣ ಮಾಂಗಿರೀಶ ಚರಣ ವಿಹರಣ ೧

೧೩೭

ಶ್ರೀಶ ಮುಕುಂದಾ ಜಗದಾನಂದಾ ಪ
ಸುರಮುನಿ ಬೃಂದಾ ನಾದಾನಂದಾ ಅ.ಪ
ನೀರಜನೇತ್ರಾ | ಸುರನುತಿಪಾತ್ರಾ
ದಾನವವೇತ್ರಾ | ನೀರದಗಾತ್ರಾ
ತ್ರಿಭುವನಸೂತ್ರಾ | ಪುಣ್ಯಚರಿತ್ರಾ
ಧರಣಿಕಳತ್ರಾ ಶ್ರೀಗೋತ್ರಾ ಜಯಾ ೧
ಮನಿಜನಪ್ರೇಮ ಅಗಣಿತನಾಮ
ದಾನವ ಭೀಮಾ ಶ್ರೀ ರಘುರಾಮಾ
ಕುವಲಯಶ್ಯಾಮ ಜಗದಭಿರಾಮ
ಮಾಂಗಿರಿಧಾಮಾ ಶ್ರೀರಾಮ ಜಯ ೨

೧೩೮

ಅಕ್ಷಯಾತ್ಮ ಹರಿ ಜೈ ಜೈ ರಂಗ
ಪಕ್ಷಿವಾಹನಾ ಮಾಂಗಿರಿರಂಗ ಪ
ಅಕ್ಷಯ ಸುಖಕರ ಜೈ ಜೈ ರಂಗ
ಲಕ್ಷರೂಪ ಸಿರಿ ಮಾಂಗಿರಿರಂಗ ಅ.ಪ
ಉರಗಶಯನ ಹರಿ ಜೈ ಜೈ ರಂಗ
ಸರಸಿಜಲೋಚನ ಮಾಂಗಿರಿರಂಗ
ಉರುತರ ಮಹಿಮಾ ಜೈ ಜೈ ರಂಗ
ಸುರಮುನಿ ಸನ್ನುತ ಮಾಂಗಿರಿರಂಗ ೧
ಮಧುಮೃದು ವಚನಾ ಜೈ ಜೈ ರಂಗ
ಬುಧಜನರಂಜನ ಮಾಂಗಿರಿರಂಗ
ಮಧುರನಾಯಕ ಜೈ ಜೈ ರಂಗ
ಮಧುದೈತ್ಯಾಂತಕ ಮಾಂಗಿರಿರಂಗ ೨
ಓಂ ನಮೋ ಕೇಶವ ಜೈ ಜೈ ರಂಗ
ದೀನದಯಾಪರ ಮಾಂಗಿರರಂಗ
ಶ್ರೀನಾರಾಯಣ ಜೈ ಜೈ ರಂಗ
ಎ್ಞÁನದಾತ ಸಿರಿ ಮಾಂಗಿರಿರಂಗ ೩

೧೩೯

ಬಾರೈ ನಂದನ ಕಂದನೆ ನೀರಜನೇತ್ರ ಪ
ನೀಲಮಣಿ ಮಂಟಪದ ಮೇಲೆ ಮಾಣಿಕ್ಯಕಲಶ
ಜಾಲು ಜಲ್ಲರಿ ರತ್ನ ನೀಲಪೀಠಕೆ ನೀ ೧
ಮುತ್ತಿನಾಕ್ಷತೆಗಳ ನೆತ್ತಿಯಲಿಡುವೋಲು
ಸುತ್ತಭೂಸುರರೆಲ್ಲರಸುತ್ತ ಬಾರೆನ್ನುವರು ೨
ಶೃಂಗಾರಶೀಲನೆ ಸಂಗೀತಲೋಲನೆ
ರಂಗನಾಯಕಿಸಹಿತ ತುಂಗಪೀಠಕೆ ನೀ ೩
ಅಂಗನೆಯರು ಕೂಡಿ ಮಂಗಳಗಾನ ಪಾಡಿ
ರಂಗ ಬಾರೆನ್ನುವರು ಮಾಂಗಿರಿನಿಲಯ೪

೧೪೦

ಪರೇಶ ಜಗದೀಶ ಸುರನರ ಪೋಷಾ ಪ
ಶ್ರೀರಮಾರಮಣ ವೈಜಯಂತೀ ಭೂಷಾ
ಶ್ರೀರಂಗಾಧೀಶಾ ಪರಮೇಶ ಅ.ಪ
ಗಿರೀಶವಂದಿತ ಕಮಲಾಸನನುತ ಪರಾತ್ಪರಾ ರವಿಶತನಯನ
ಧರಾಧರಾರ್ಚಿತ ಮೌನಿಸೇವಿತ ಶೌರೀ ರಮಾವಿನಮಿತ ರಾಮಾ ೧
ಗಾನಲೋಲ ಕೃಪಾಲವಾಲ ಸುಶೀಲ ಸದಮಲ ಸಕಲಕಲಾ ಸುವಿಶಾಲ
ಮಾನಸ ನಂದ ಗೋಕುಲಬಾಲ ಶ್ರೀವನಮಾಲಾ ಕೋಮಲ ೨
ದೀನಪಾಲ ಕುಚೇಲವರದ | ಸುಶೀಲ ವಿಮಲಾ
ಸಕಲಬಲ ಸುರಜಾಲಪಾಲ ಖರಕಾಲ
ಘನತರಲೀಲ ಮಾಂಗಿರಿರಂಗವಿಠಲ ೩

೧೪೧

ಮಂಗಳನಾಮಾ ನಮೋ ನಮೋ ಪ
ಮಾಂಗಿರಿಧಾಮಾ ನಮೋ ನಮೋ ಅ.ಪ
ಅಂಗಜಾತ ಪಿತ ಸುರಪತಿವಿನುತಾ
ತುಂಗ ಕೃಪಾಂಬಕ ನಮೊ ನಮೋ ೧
ರಂಗನಾಥ ನೀಲಾಂಗ ಮಹಾದ್ಭುತ
ಸಿಂ[ಗಾನ]ನ ಹರೇ ನಮೋ ನಮೋ ೨
ನಾಗಾಲಂಕೃತ ಸರೋಜ ಭೂಷಿತ
ಕಮಲಭವಾನತ ನಮೋ ನಮೋ ೩
ತಾರಕ ನಾಮ ನಮೋ ನಮೋ
ರಘುರಾಮಾ ನಮೋ ನಮೋ ೪
ಸುರಮುನಿ ನಾರದ ಗೌತಮ ಪ್ರೇಮಾ
ಧರೆಗಭಿರಾವೂ ನಮೋ ನಮೋ ೫
ಗಿರಿಜಾಧವನುತ ಗುಣ ಮಣಿಧಾಮಾ
ರಾಕ್ಷಸ ಭೀಮಾ ನಮೋ ನಮೋ ೬
ರಾಮಾ ರಘುರಾಮ ಕ್ಷೀರಾಬ್ಧಿಶಾಯಿ
ಸೋಮಾ ಮಾಂಗಿರಿವರ ನಮೋ ನಮೋ೭

೧೪೨

ರಂಗನ ನೋಡುವಾ ಶ್ರೀರಂಗನ ಪಾಡುವಾ ಪ
ರಂಗನ ನೋಡಿ ರಥಾಂಗ ಸುಧಾಂಗನು ಅ.ಪ
ಇಂದಿರೆಯರಸ ಮುಕುಂದ ಜನಾರ್ದನ
ಮಂದರಧರ ಗೋವಿಂದನ ಕೇಶವನ ೧
ರಾಮನ ಜಾನಕಿರಾಮನ ರವಿಕುಲ
ಸೋಮನ ಮಾಂಗಿರಿಧಾಮನ ಭೀಮನ೨

೧೪೩

ರಂಗನಾಥಾ ಅಂಗಜಾಪಿತಾ [ಮಾ] ವಂದಿತ ಪ
ಜಗದಾದಿ ಮೂಲಕಾರಣ ನಗಧರಾಘ ನಿವಾರಣ
ಖಗನುತಾ ಭಕ್ತಕಂಕಣ ೧
ದೀನಪಾಲ ಸ್ವರ್ಣಮೇಖಲಾ | ಗಾನಲೋಲಾನುಪಮಲೀಲಾ
ದಾನಶೀ¯ ಕರುಣಾಲವಾಲ ೨
ತಾಮಸನಿಕರಮಾನಿತಾ ಶ್ಯಾಮಲಾಂಗಾ ಪೊರೆ ಶ್ರೀಯುತಾ
ರಾಮದಾಸಾರ್ಚಿತ [ಮಾಂಗಿರೀಶ] ೩

೧೪೪

ರಂಗ ನಿನ್ನ ನಂಬಿದೆ ಮಾಂಗಿರಿ
ಶೃಂಗಾರಪೂರ್ಣ ಶುಭಾಂಗ ಶ್ರೀಕಾವೇರಿ ಪ
ಮಂಗಳ ಮದನಾಂಗ ಗಿರಿಧರ
ಶೃಂಗನಿವಾಸ ರಥಾಂಗ ಕೃಪಾಂಗ ಅ.ಪ
ಬಾಲದಿವಾಕರ ತೇಜೋಲ್ಲಾಸ
ಶೀಲ ಸುಗುಣಾ ಸಂಭೂಷಿತ ವೇಷ ೧
ನೀಲ ನೀರದ ತಾರ ಸರೋರುಹ
ಲೋಲ ಬಂಧುರ ನಯನಯುಗ ೨
ಮೂಲಾಧಾರ ವೈಕುಂಠಪುರೀಶ
ಹಾಲಾಹಲಧರ ಮಾಂಗಿರಿ ಪರೇಶ ೩

ಶ್ರೀ ಲಕ್ಷ್ಮೀಸ್ತುತಿ

೧೪೫

ಅಪರೋಕ್ಷಎ್ಞÁನ ಸಂಚಯೇ ಶ್ರೀಪದ್ಮನಾಭ ನಿಲಯೇ ಪ
ತಪಯೋಗ ಭಕ್ತಿನಿಧಿಯೆ ಅಪಾರಮಹಿಮಾವಲಯೇ ಅ.ಪ
ಕಮಲಾ ಕಮಲಸದನೆ | ಕಮಲನಯನೆ ಕಮಲವದನೆ
ಕಮಲಾಂಬರೆ ಕುಂದರದನೆ | ಕಮಲಾಂಬಿಕೆ ಮನಮೋಹನೆ ೧
ಮರಕತಾಂಗಿ ಲೋಕಮಾತೆ | ಶರಣಜನಾಭೀಷ್ಟದಾತೆ
ಸರಸೀರುಹಜಾತನಮಿತೆ | ವರ ಮಾಂಗಿರಿರಂಗಪ್ರೀತೆ೨

ಇದು ಶ್ರೀವೈಷ್ಣವ ದೇವತಾ

೧೪೬

ಕ್ಷೀರ ಸಾಗರ ಕುವರಿ | ಗೌರೀ ಮನೋಹರಿ
ಬಾರಮ್ಮ ಇಂದಿರಮ್ಮ ಪ
ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ
ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ
ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ
ಭಾವಶುದ್ಧಿಯಲಿ ಪೂಜೆಗೈವೆನಮ್ಮ
ಓವರಿಗೆ ದಯಮಾಡು ದೇವಗಂಗಾ ಜಲದಿ
ಪಾವನ ಪಾದಾಂಬುಜವ ತೊಳೆವೆನಮ್ಮಾ ೧
ತವದಿವ್ಯ ಭೂಷಣವ ನವರತ್ನ ಹಾರಗಳ
ಸುವಿಲಾಸದಿಂದಿತ್ತು ಮಣಿವೆನಮ್ಮ
ಪವಳಪದುಮಾಸನ ವಿಶ್ರಾಂತಳಾಗಮ್ಮ
ನವಪುಷ್ಪ ಕುಂಜಗಳ ಧರಿಪೆನಮ್ಮ ೨
ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ
ಬಗೆಬಗೆಯ ದೀಪಗಳ ನೀಡುವೆನಮ್ಮಾ
ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ
ನಗುನಗುತ ಸ್ವೀಕರಿಸಿ ಪಾಲಿಸಮ್ಮ೩
ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ
ದೇವಿ ತವಕರುಣೆಯನು ಬೇಡುತಿಹರು
ಶ್ರೀವನಿತೆ ನಾನೀವ ತಾಂಬೂಲವನು ಸವಿದು
ಜೀವಕೋಟಿಗೆ ಸುಖವನೀವುದಮ್ಮಾ ೪
ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು
ಎಡೆಬಿಡದೆ ಹರಿಪಾದ ಸೇವೆಗೈದು
ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು
ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ ೫

೧೪೭

ಕ್ಷೀರಾಂಬುಧಿ ಸಂಭವೆ ಅಮ್ಮ
ನಾರಾಯಣಾಂತರ್ಯ ಭಾವೇ ಸ್ವಭಾವೇ ಪ
ಶ್ರೀರಂಗ ಧಾಮೆ | ಕೈವಲ್ಯನಾವೆ ಅ.ಪ
ರಾಕೇಂದು ಸಹಜಾತೆ ಸಾಕಾರ ಹರಿಪ್ರೀತೆ
ಲೋಕೇಶ್ವರಿ ಮಾತೆ ಸೌಭಾಗ್ಯದಾತೆ
ಅಕಳಂಕ ಸುಖಗೀತೆ ಏಕೈಕ ದೇವತೆ
ಸಾಕೇತ ರಾಜಿತೆ ಪ್ರೇಮಾನ್ವಿತೇ ೧
ಗಂಗಾಪಿತಾನಂದ ಸಂದಾತೆ ಸುರಗೀತೆ
ಸಂಗೀತ ಸಾಹಿತ್ಯ ಪೂರ್ಣೇ ವಿಖ್ಯಾತೆ
ಗಂಗಾಧರಾದಿತ್ಯ ರಾಕೇಂದ್ರ ವಿನುತೆ
ಶೃಂಗಾರ ಸದನೆ ಮಾಂಗಿರೀಂದ್ರ ಸಹಿತೇ ೨

೧೪೮

ಚಂದಿರವದನೆಯ ತವ ಸನ್ನಿಧಿಗೂ
ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ
ಮಂದಮತಿಯುಗೈವ ಕುಂದುಗಳೆಣಿಸದೇ
ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ
ನನ್ನ ಕರೆಗೆ ಓ ಎನ್ನುವರಿಲ್ಲ
ನನ್ನಲ್ಲಿ ಕನಿಕರ ತೋರುವರಿಲ್ಲ
ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ
ಸನ್ನೆಯ ಮಾಡಿ ಹೋಗೆನ್ನುವನಮ್ಮಾ ೧
ಅಪ್ಪನು ನಿನ್ನ ಮಾತೊಪ್ಪುವನಮ್ಮ
ತಪ್ಪನು ಮನ್ನಿಸಲೊಪ್ಪುವನಮ್ಮಾ
ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ
ನಪ್ಪಣೆಗೊಡಿಸು ರಂಗಪ್ಪನನೊಲಿಸು೨
ಶೌರಿಯ ಕೃಪೆಯವತಾರೆ ನೀನೆಂಬುದ
ನಾರದನೆಲ್ಲೆಡೆ ಸಾರುತಲಿಹನು
ಮಾರಜನಕ ಮಾಂಗಿರಿರಂಗನು ನಿನ್ನ
ಕೋರಿಕೆಗನುಮತಿ ತೋರುವನಮ್ಮಾ ೩

೧೪೯

ಜಗನುತೆ ಮಾಮಾತೆ ಪ್ರೀತೇ ಪ
ಸಾಗರ ಜಾತೆ ತ್ರಿಜಗ ವಿಖ್ಯಾತೆ | ನಾಗಾಲಂಕೃತೆ ಮಾತೆ ವಿನೀತೆ ಅ.ಪ
ಕೋಮಲಪಾಣಿ ಪನ್ನಗವೇಣಿ |
ದಿವ್ಯಾಂಬುಜ ಮಣಿ | ಸರಸಿಜ ಪಾಣಿ೧
ಮಾಂಗಿರಿ ಮಂದಿರೆ ದೀನ ಕೃಪಾಕರೆ |
ಪೀತಾಂಬರಧರೆ ಪ್ರಣವಾಕಾರೇ೨

೧೫೦

ಮನಸಿಜಜಾತ ತಾತಮೋಹಿನಿಭಾಮಿನೀ ಶ್ರೀಮಣಿ ಪ
ವನಜಾಸನೆ ಘನಸುಗುಣೀ | ಮುನಿಮಾನಸ ತೋಷಿಣಿ ಅ.ಪ
ನರೋತ್ತುಂಗ ಪ್ರಮೋದಿನೇ | ಚಿನ್ಮಯೆ ಸುಮಭಾವನೆ
ದರಹಾಸ ಸುಮಾನಿನೆ ಭಾಗ್ಯಾಲಂಕಾರೆ ಪಂಕಜಾಸನೇ ೧
ವರ ಸುಖಾಭ್ಯಂಜನೇ ಮೋಹನೇ ಮಣಿಗಣರದನೇ | ಗಜಗಮನೇ
ಸಿರಿ ಮಾಂಗಿರಿಪುರ ಭೃಂಗ ಚತುರೆ ನಿರುತ ನಿರಂಜನಿ ಕೋಮಲೇ ೨