Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

೩೫೧

ಬೇಡಿಕೆಗೆ ಮಿತಿಯಿಲ್ಲ ಬೇಡಿಕೆಗೆ ಕೊನೆಯಿಲ್ಲ
ಬೇಡಿ ಬದುಕುವುದೊಂದು ರೋಗವಯ್ಯ ಪ
ರೂಢಿಗೊಡೆಯನ ದಿವ್ಯನಾಮಗಳ ಕೊಂಡಾಡಿ
ಹಾಡುವವಗೆ ರೋಗಭಯವಿಲ್ಲವಯ್ಯಾ ಅ.ಪ
ಬೇಡುವವ ಮನೆಮನೆಗೆ ಓಡೋಡಿ ನಿಲಬೇಕು
ನಾಡಿಗರ ನೋಡಿ ಕೈ ನೀಡಬೇಕು
ನೋಡಿದರೆ ಕಟ್ಟಾಳು ಬೇಡುವೆ ಹೋಗತ್ತ ದುಡಿ
ಗೇಡಿ ಎಂದಾಗ ಗೋಳಾಡಲೇಕಯ್ಯ ೧
ಕಂಡ ಕಂಡವರಿಗೆಲ್ಲ ಕೈಮುಗಿದು ಮಂಡೆಯ ಬಾಗಿ
ಭಂಡನೆಂದೆನಿಸುವುದು ಮಾನಭಂಗ
ಪುಂಡರೀಕಾಕ್ಷ ಗೋವಿಂದ ನಾಮವ ಹಾಡಿ
ಕೊಂಡಾಡಲೊದಗುವನು ಮಾಂಗಿರಿಯರಂಗ೨

೩೫೨

ಧ್ಯಾನಕೆ ಮನವಿಲ್ಲ ಸುರಪಾನಕೆ ಕೊನೆಯಿಲ್ಲ ಪ
ಮಾನ ವಇರ್ಯಾದೆಗೆ ಒಲವಿಲ್ಲ
ದಾನಧರ್ಮಕೆ ಕೈಯಿಲ್ಲ
ಹೀನರ ಸಂಗವು ಬೇಸರವಲ್ಲ
ಎ್ಞÁನದ ಸೊಲ್ಲಿಗೆ ಸ್ಥಳವಿಲ್ಲ ೧
ಮಾವೆಂದರಿತುದು ಬೇವಾಯ್ತಲ್ಲ
ಜೀವಕೆ ಅರಿವಿನ ಅರಿವಾಯ್ತಲ್ಲ
ಮಾವ ಭಾವವೆನ್ನುವರಿಲ್ಲ
ದೀವಿಗೆ ಆರಿ ಕತ್ತಲೆಯಹುದೆಲ್ಲ ೨
ಇಂತಾದುದು ಎನ್ನ ನಾಟಕ ರಂಗ
ಚಿಂತೆಯಿಂದ ತುಂಬಿತು ಸಕಲಾಂಗ
ಮುಂತೋರದು ಕಾಯೊ ಘನ ನೀಲಾಂಗ
ಸಂತವಿಸೋ ಎನ್ನ ಮಾಂಗಿರಿರಂಗ ೩

ಬೇಡುವಿಕೆಯ ಸುಂದರ ನಿರೂಪಣೆ

೩೫೩

ಮುಕುತಿಯ ಮಾರ್ಗವ ಹಿಡಿಯಲಿಬೇಕು
ಭಕುತಿಯು ಮನದಲಿ ಮಾಡಲಿಬೇಕು ಪ
ಭಕುತರು ತುಳಿವ ಕಲ್ಲಾಗಿರಬೇಕು
ಲಕುಮಿಯ ರಮಣನ ದಯೆ ಬರಬೇಕು ಅ.ಪ
ನೊಂದವರನು ಸಂತೈಸಲಿಬೇಕು
ತಂದೆ ತಾಯಿಯರ ವಂದಿಸಬೇಕು
ಬಂದುದ ಮೋದದಿ ಪಡೆಯಲಿಬೇಕು
ಇಂದಿರೆಯರಸನೇ ಗತಿಯೆನಬೇಕು ೧
ಸಂಗವು ಶರಣರದಾಗಿರಬೇಕು
ರಂಗನೊಳೇ ಮನ ತಂಗಿರಬೇಕು
ಭಂಗಿಸಿ ಕಾಮವ ವರ್ಜಿಸಬೇಕು
ಮಾಂಗಿರಿನಾಥನ ದಯೆ ಬರಬೇಕು ೨

೩೫೪

ಮುಮುಕ್ಷುಗಳನು ಉಪಚರಿಸುವವ ನೀನೆ ಹರಿಯೆ ಪ
ಅಪ್ಪಾ ಮಾಂಗಿರಿ ರಂಗ ಅಪರಾಜಿತ ನೀನೆಂಬುದ ತಿಳಿದೂ
[ಉಪಾಧಿಗೊಳಗಾದೆ ನಿನ್ನ ಮರೆತು] ಅ.ಪ
ಇನ್ನೆವರ ಒಮ್ಮನದಿ ಯೋಚಿಸಿದ ಫಲವಾಗಿ
ನಿನ್ನ ಮಹಿಮೆಯನರಿತೆ ಸಂಪೂರ್ಣವಾಗಿ ೧
ರನ್ನಹಾರಗಳನ್ನು ಕಟ್ಟಿರುವೆ ಸಾಲಾಗಿ
ನಿನ್ನ ಮೈಬಣ್ಣವನ್ನು ಮುಚ್ಚುವುದಕಾಗಿ ೨
ಸಕಲಾಂಗಗಳು ಹೊಳೆವ ಮುತ್ತು ಮಾಣಿಕ್ಯಗಳು
ಉಡಿಗೆಯಾಗಿರಲೇನು ಕಾಂಬುವಂಗಗಳು ೩
ಅದರಿಂದ ನಿನ್ನ ಮೈ ಮುಖವು ಕೈಕಾಲ್ಗಳು
ಕಪ್ಪು ಕಾಣಿಸದಿರದು ಹೇಳುವೆನು ಕೇಳಾ ೪
ನೂರಾರು ಯೋಜನದ ದೇಹ ನಿನ್ನದು ತಾಯೆ
ನಿನ್ನ ಕೆಲಸಗಳೆಲ್ಲಾ ಅತಿ ವಿಚಿತ್ರದ ಮಾಯೆ ೫
ಬೆಳಕ ಬಾಯೊಳಗಿಟ್ಟು ಮತ್ತು ಉಗುಳುವೆ ತಾಯೆ
ನಿನ್ನ ವಿಸ್ತೀರ್ಣವನು ನಾನಳೆಯಲರಿಯೆ ೬

೩೫೫

ರಾಗಿ ಬೆಳೆಯುವಾ ನಿರ್ಮ¯ರಾಗಿ ಬೆಳೆಯುವಾ ಪ
ಸೇವಕರಾಗಿ ಬೆಳೆಯುವಾ ಭಾವುಕರಾಗಿ ಬೆಳ
ಗೂವರಾಗಿಯಾದ ಮೇಲೆ ರಂಗನಪಾದವ ಪೂಜಿಪರಾಗಿ ಅ.ಪ
ಪರರ ಹಳಿಯದಿರುವರಾಗಿ ಪರರಸುಖಕೆ ನಲಿವರಾಗಿ
ಪರರ ಸೇವೆಗೈವರಾಗಿ ಪರಮಶಾಂತರಾಗಿ
ಹಿರಿಯರೆಡೆಯ ಕಿರಿಯರಾಗಿ ಕಿರಿಯರೆಡೆಯ ಗೆಳೆಯರಾಗಿ
ಹರಿಯನೆನೆವ ಮಾನಸರಾಗಿ ಪರಮಭಕ್ತಿಯಿಂದ ಜಾನಿಪರಾಗಿ೧
ವಿತ್ತದಾಸೆಯ ಹಳಿವರಾಗಿ ಚಿತ್ತಪಿತ್ತವ ತೊಡೆವರಾಗಿ
ಕುತ್ತವಿಲ್ಲದ ಪುಷ್ಟರಾಗಿ ನಿತ್ಯ ತೃಪ್ತರಾಗಿ
ಹೊತ್ತಿಗೊದಗಿ ಬರುವರಾಗಿ ಮತ್ತು ಭ್ರಮೆಗಳಿಲ್ಲದರಾಗಿ
ಚಿತ್ತಜಾತಜನಕ ಮಾಂಗಿರಿರಂಗನ
ಪಾದಯುಗಳಕೆರಗುವರಾಗಿ ೨

೩೫೬

ಸಕ್ಕರೆರುಚಿ ತಾಯಕ್ಕರೆ ಬಲುರುಚಿ
ಚಿಕ್ಕರಂಗನ ಉಕ್ಕುವ ರುಚಿಯು ಪ
ಸಕ್ಕರೆ ರಸನೆಗೆ ಅಕ್ಕರೆ ಮನಸಿಗೆ
ಚಿಕ್ಕರಂಗನ ನಗು ಸಿಕ್ಕದೆಲ್ಲರಿಗೆ ಅ.ಪ
ಜೇನು ಮಧುರ ಅಭಿಮಾನ ಮಧುರಬ್ರಹ್ಮ
ಎ್ಞÁನ ಮಧುರ ಕೃಷ್ಣಾ ಎನಲತಿಮಧುರ
ಜೇನು ಸಕ್ಕರೆಗಿಂತ ಮಾಂಗಿರಿರಂಗನ
ಎ್ಞÁನಾಮೃತಪಾನ ನಿರುಪಮಮಧುರ೧

ಪುರಂದರ ದಾಸರ ‘ರಾಗೀ ತಂದೀರಾ

೩೫೭

ಸ್ಥಿರವೆಂದು ನಂಬಿ ಕೆಡಬೇಡ ಮನುಜಾ ಧರಣಿ [ಬಾಳು]
ಕರುಣೆಯಿಹುದು ಮಾ[ಂಗಿರೀಶನ] [ನಂಬಿದರೆ] ಪ
ಕ್ಷೀರಾಬ್ಧಿಗೈದು ಮುದದಿ ಪೊರೆವನು ಸ್ತನ್ಯದಿಂ
ಹೀರಿ ತೇಲುತ ಬೆಳೆದು ತೋರಮುತ್ತುಗಳಾ
ಹಾರ ಪದಕಗಳಿಂದ ಚಾರುಭೂಷಣದಿಂದ
ಮಾರಸುಂದರನೆನಿಪ | ಮೂರು ದಿನದ ಬಾಲ ೧
ಬಾಲತನ ಪೋಗಲು ಮೇಲೆ ಯೌವನವೊದಗಿ
ಬಾಲೆಯೋರ್ವಳಕರವ ಘಳಿಲದೊಳು ಹಿಡಿದು
ಮೇಲಾದ ಸೌಭಾಗ್ಯವಲ್ಪಕಾಲವಿರುವಾಗ
ಕಾಲದೂತರು ಪಿಡಿಯಲೊಡನೆ ಬ[ರುವ]ವರಿಲ್ಲ ೨
ಉಕ್ಕುವ ಯೌವನದ ಸೊಕ್ಕಿಲ್ಲ ಮರುದಿನ
ಉಕ್ಕುಕ್ಕಿ ಬಸವಳಿದು ಶಕ್ತಿಗುಂದಿ
ಸುಕ್ಕು ಸುಕ್ಕಿನ ದೇಹ[ಭಾ]ವವಿಲ್ಲದ ಬಾಳ
ಭಕ್ತಿಗೆ ಮನಮರೆಯೆ ಭಕ್ತಗತಿಯದರಿಂದ ೩
ಧನವ ದಾಯಾದಿಗಳು ಮನವ ಕಾಮಾದಿಗಳು
ಸನುಮತ ಎ್ಞÁನವನ್ನು ದುರಿತಕಾರ್ಯ
ತನುಜ ತನುಜೆಯರೆಲ್ಲರವರವರ ಸೌಖ್ಯವನು
ಸನಿಹದಿಂ ಸೂರೆಗೈವರಿನ್ನೇತರಾಸೆ ೪
ಕುಂಟು ಜೀವವಿರುವನಕ ನೆಂಟರಿಷ್ಟರು ಹಣವ
ಗಂಟನುಂಗಲು ಬರುತಲೆಂಟೆಂಟುದಿನವಿಹರು
ಗಂಟು ತೀರಿದ ಬಳಿಕ ಪಾಪಪುಣ್ಯಗಳ ಹೊರತು [ಏ
ನುಂಟು ಈಭವದ ನಂಟಿನಲಿ ಯದರಿಂದ ೫
ಜೀವ ತಾ ಜನಿಪಂದು ರವೆಯಷ್ಟು ತರಲಿಲ್ಲ
ಅವನಿಯಾ ಬಿಡುವಂದು ಜವೆಯಷ್ಟ ಹೊರಲಿಲ್ಲ
ಭಾವಶುದ್ಧಿ ಬೇಕನಿಶ ಮಾವಿನಾಕೆರೆರಂಗನ
ಸೇವಿಸಿದೊಡಾ ರಂಗ ಭವವೆಲ್ಲ ಕಳೆವಾ ೬

೩೫೮

ಹಣವನರಸುವರೆಲ್ಲ ಗುಣವನರಸುವರೆ
ಮಣಿಯನರಸುವ ಕೆಲರು ಹಣಕೆ ಬಾಯ್ ಬಿಡರೆ ಪ
ನೀಡುವವನೊಬ್ಬನಿರೆ ಬೇಡವೆಂಬುವರಿಹರೆ
ನೀಡಲೊಲ್ಲದ ನರನ ನೋಡುವವರಿಹರೆ
ಬೀಡು ಹೆಚ್ಚಳಸಿರಿಯ ನೀಡೆನಗೆ ತನಗೆಂಬ
ನಾಡಿಗರ ಗಡಣವನು ಎಣಿಸಲಳವೇ ೧
ಕಲಿಯುಗದ ನೀತಿಯೋ ಬಲುದುರಾಸೆಯ ಬಲೆಯೋ
ಸಲೆ ಬೆಳೆದಸೂಯೆಯೋ ಕಲಿತ ದುರ್ನೀತಿಯೋ
ಜಲಜಾಕ್ಷನನೀ ದುಶ್ಶೀಲ ಪ್ರವಾಹದಲಿ
ಅಲೆಯಬಿಡಬೇಡಯ್ಯ ಮಾಂಗಿರಿಯ ರಂಗ ೨

೩೫೯

ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ
ತಿರುನಾಮದವರೆನಲು ನಂಬಬಹುದೇ ಪ
ಪರವಾಸುದೇವನನು ಮರೆತು ಸತಿಸುತರ
ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ
ಹರಿನಿವೇದನಕಾಗಿ ಕರದಿ ಫಲಪುಷ್ಪಗಳ
ತರುವವರು ದಕ್ಷಿಣೆಯ ಇರಿಸಿಹರೋ ಎಂದು
ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ
ದರಿತಾಗ ಕೋಪ ನಿಷ್ಠುರ ಗೈಯುವರು ೧
ಈಶಾಯನಮಃ ಓಂ ಶ್ರೀಶಾಯ ನಮಃ ಪ
ರೇಶಾಯ ನಮಃ ಎಂಬುದಕೆ ಬದಲು
ಆಶೋತ್ತರವನಾಂತು ಕ್ಲೇಶಪೂರಿತರಾಗಿ
ನಾಶವಾಗಲಿ ಕುಡದಜನರೆಂಬರಕಟಾ ೨
ಏನೊಂದನಾಶಿಸದೆ ಧ್ಯಾನ ಪೂಜೆಯಗೈವ
ಮಾನವೋತ್ತಮ ಮಾತ್ರ ತಿರುನಾಮಧಾರಿ
ಎ್ಞÁನಿ ಇಂಥವನಿಂದ ತೀರ್ಥವನು ಪಡೆದವರು
ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು೩

ಇದು ಹಣದ ಪ್ರಭಾವ

೩೬೦

ಹಳಿವವನೇ ನಮ್ಮ ನೆಂಟ
ಬಳಿಯೊಳು ಕುಳಿತು ಹೊಗಳುವಗಿಂತ ಪ
ಹುಳಿಯಾಗದೆ ಕಾಯಿಸಿಹಿದಹುದೇ ಮದ
ಅಳಿದಲ್ಲದೆ ಹರಿಯೊಲುಮೆಯು ಬಹುದೇ ಅ.ಪ
ಹಳಿವು ಮನದೊಳಿಹ ಕೊಳೆಯನು ಕಳೆವುದು
ಹಳಿವಿರದಿರೆ ಮದ ಮೊಳೆದೋರುವುದು
ಹಳಿವಿನ ಭಯದಿಂದ ಬೆಳೆವುದು ಶುದ್ಧತೆ
ಹಳಿವು ಸತ್ಕೀರ್ತಿಯ ಬೆಳಗುವ ದೀಪ ೧
ಮನದೊಳಸೂಯೆಯ ಕಳೆದು ನಾಲಗೆಯಲಿ
ಇನಿವಾತುಗಳ ಬಿನ್ನಾಣವ ಬೀರಿ
ನಿನಗೆ ಸಮಾನರಿನ್ನಿಲ್ಲಾ ಎಂಬ ಕ್ಷುಲ್ಲ
ಮನುಜನು ಸ್ವಾರ್ಥದಿ ಕೆಡಿಸುವನಯ್ಯ ೨
ಹಳಿವಿಂದಲೆ ಕೃಷ್ಣ ಮೂರು ರತ್ನವ ತಂದ
ಹಳಿವಿಂದಲಿ ಸೀತೆ ಕೀರ್ತಿ ಹೊಂದಿದಳು
ಹಳಿದಲ್ಲದೆ ಸತ್ಯ ಹೊರಹೊಮ್ಮದು ಯನ್ನ
ಹಳಿವರನೊದಗಿಸೋ ಮಾಂಗಿರಿರಂಗ ೩

ಅರ್ಚನಾವೃತ್ತಿಯ ವಿಡಂಬನೆಯ ತಾತ್ವಿಕ ಕೃತಿಗಳು

೩೬೧

ಅಂಥಾ ಕರುಣನೇ ನಮ್ಮ ರಂಗ ಅನಂತ ಶರಣನೇ ಪ
ಎಂಥ ಕರುಣ ನಮ್ಮ ರಂಗ ಅಂತರಾತ್ಮ ಪಾಂಡುರಂಗ
ಚಿಂತೆಗಳನು ದಹಿಪ ರಂಗ ಅಂತರಾ ಅಭ್ಯಂತರಂಗ ಅ.ಪ
ಮೂಡಲಾದ್ರಿಯ ವೆಂಕಟೇಶ ಆಡಬಂದನೇ
ನಾಡಿನೊಳಗೆ ಮೂಡಿ ನಿಂದನೇ
ಗಾಡಿಕಾರ ರಂಗಧಾಮ ಕೇಡುಗಳನು ಬಡಿವನಾಮ
ವಾಡಿಗೆಗಳಂತಿರುವ ಭಕ್ತ ಕೋಟಿಗೇ ವರವೀವ ಪ್ರೇಮ೧
ಹರನ ರೂಪವತಾಳಿ ನಿಂದ ಹರಿಮಾಧವ
ಒರಳಿನೊಳು ಮೆರೆಯುತಿರುವವ
ಹರಿಯುಹರನು ಬೇರೆಯಲ್ಲ | ನರರನೋಡಿ ನೋಡಿ ಸೊಲ್ಲ
ಬರಿದೆಭ್ರಾಂತಿ ಲೇಸದಲ್ಲ ಅರುಹುವನೆಂಬುವ ಗೊಲ್ಲ ೨
ಭಕ್ತವರ್ಗಕಾನಂದದಾತ ಶಕ್ತಿನಾಯಕ ವೇದಗಳೊಳುಕ್ತಮಾಗಿಹ
ಯುಕ್ತಿಯವರನ್ಯರಿಲ್ಲ ವಿ
ರಕ್ತನಾಗಿ ಗುಣವದಿಲ್ಲ ಭಕ್ತಗೊಲಿವ ಹರಿಯುಬಲ್ಲ
ಯುಕ್ತಿ ಇದಕೆ ಬೇರೆ ಇಲ್ಲ ೩
ತನಯನೋರ್ವನನೆ ಪಡೆಯಲೆಳಸಿವನಜನಾಭನ ಕರುಣದಿಂದ
ತನಯನುದಯಿಸಲು
ಧನಿಕ ಕೈಂಕರ್ಯವನು ಗೈದು ಧನವ ಗಣನೆಗೈಯಲದು
ಮನದಿ ಮರುಗಿ ಕೆಳಕ್ಕೈತಂದ| ವನಿತೆಯಿತ್ತ ಪೊಂಗಲ ಸವಿದ೪
ಕಾಮಜನಕನೇ ನಮ್ಮರಂಗ | ಕೋಮಲಾಂಗನೇ ಕರುಣಾಪಾಂಗ
ಭೀಮವಿಕ್ರಮನೇ ಭೂಮಿಜಾತೆಯ ರಸಭರಿತ
ಪ್ರೇವಇಸಾಗರ ದೀನಪಾಲ [ನಮ್ಮ ಮಾಂಗಿರಿಲೋಲ]
ರಾಮದಾಸವಿನುತಲೀಲ ವಾಸುದೇವನ ಹೋಲುವರಂಗ೫

೩೬೨

ಆದಿದೇವ ನಿನ್ನೊಲುಮೆಯೊಂದಾದರೆ
ಮೇದಿನಿ ವೈಕುಂಠ ಎನ್ನಿಸದೆ ಪ
ವೇದವೇದ್ಯ ನಿನ್ನಾದರವಿರದಲೆ
ಮೇದನಿ ಬೂದಿಯಾಗದಿಹುದೇ ಅ.ಪ
ಹೂವಿಗೆ ಗಂಧವ ಎರೆದವರಾರೋ
ಬೇವಿಗೆ ಕಹಿಯನು ಕೊಟ್ಟವರಾರೋ
ಜೀವಿಗಳೆಲ್ಲಾ ಸಲಹುವರಾರೋ
ಸಾವು ನೋವುಗಳ ಬಿಡಿಸುವನಾರೋ ೧
ದೇವರಿಗಮೃತವ ಕೊಟ್ಟವನಾರೋ
ಹಾವಿನ ಹಾಸನು ಪಡೆದವನಾರೋ
ಭಾವದನೆಲೆಯ ಮಾಂಗಿರಿಪತಿಯೆಲೆ
ಕಾವನು ಕೊಲ್ವನು ನೀನಲ್ಲದಾರೋ ೨

ಇದು ಮಾಂಗಿರಿರಂಗನ ವಿವರಣೆಯ

೩೬೩

ಇದು ಹೊನ್ನು ಹೂವುಗಳ ತಾರತಮ್ಯ ಪ
ಇದು ಬಾಹ್ಯ ಅದು ಅಂತರಂಗಿಗೆ ರಮ್ಯ ಅ.ಪ
ಹೊನ್ನಿನಿಂದಾಗುವುದು ಹೂವಿನಿಂದಾಗುವುದು
ಹೊನ್ನು ಹೂವೆರಡಯ್ಯ ಬಣ್ಣ ಒಂದೇ
ಹೊನ್ನು ಹೂವೆರಡಕ್ಕು ಬಣ್ಣ ಒಂದಾಗವೋ
ನಿನ್ನ ಕೃಪೆಯೆಂಬ ರೇಕುಗಳಾಗಬೇಕೋ ೧
ಹೊನ್ನು ಭೂಲೋಕಕ್ಕೆ ಹೂವು ಪರಲೋಕಕ್ಕೆ
ಹೊನ್ನಿನಾ ಹೂವುಗಳು ಇಹಪರಕೆ ದಾನ
ಹೊನ್ನುಳ್ಳವರಿಗೆಲ್ಲ ಹೂ ಹೊನ್ನುವಿಲ್ಲ ತಾನಿಲ್ಲ
ಹೊನ್ನ ಹೊರುವುದಸಾಧ್ಯ ೨
ಹೊನ್ನ ಕಾವುದಸಾಧ್ಯ | ಹೊನ್ನುಳ್ಳ ನರರಿಗೆ [ಮ] ಗಳಿಲ್ಲ
ಹೊನ್ನುಳ್ಳ ಮನುಜ ಪಾತಕಗಳನು ಕಲಿಯುವ
ಹೊನ್ನಿಲ್ಲದಾತರಿಗೆ ಹೂವೊಂದು ದೊರಕಿದೊಡೆ
ಅನ್ನ ನಿದ್ರಾ ಪಾನ ಸೌಖ್ಯಂಗಳುಂಟಯ್ಯ ೩
[ಹೊನ್ನುಳ್ಳವಸದಾ ಹೊನ್ನಿ ನೊಡನೆಕಲ್ಳ್ವೆ]
ಹೊನ್ನಿಲ್ಲದಾತ ಶ್ರೀರಾಮಕೃಷ್ಣರ ಕಲೆವ
ಹೊನ್ನಿಂದ ಬೆಣ್ಣೆತಾಂ ಸುಣ್ಣವೆನಿಪುದು ಜಗದಿ
ಹೊನ್ನಿಲ್ಲದಾತಂಗೆ ಸುಣ್ಣವೇ ಬೆಣ್ಣೆ ೪
ಹೊನ್ನಕೇಳನು ನಮ್ಮ ಮಾಂಗಿರಿಪುರವಾಸ
ಹೊನ್ನಿಂಗೆ ಬದಲು ಭಕ್ತಿಯಹೂವ ಕೇಳ್ವುದು
ಹೊನ್ನ ದಾನವಮಾಡಿ ಹೂವ ಹರಿಗರ್ಪಿಸಿರಿ
ಇನ್ನಾವ ವರಗಳನ್ನು ಬೇಡ ಬೇಡಿ ೫

೩೬೪

ಈ ಕ್ಷಿತಿಯ ಸಾರತರ ವೃಕ್ಷವನು ಕಂಡೆ ಪ
ರಾಕ್ಷಸಾಂತಕ ದೇವ ನೀ ವಿರಚಿಸಿರುವ ಅ.ಪ
ಅಡವಿಯೊಳಗೀವೃಕ್ಷಕಡಿಯ ಪಾತಿಯಿದು
ದೃಢದ ಬೇರುಗಳು ಮೂರು ರಸವು ನಾಲ್ಕು
ಪೊಡವಿಗಿಳಿದಿರ್ಪೈದು ಬಿಳಿಲುಂಟು ಕೊನೆ ಮೂರು
ಎಡೆವ ಪರೆಯೇಳಾ ಕೊಂಬೆಗಳೆಂಟು ಫಲವೆರಡು ೧
ಮೂರು ಮುಮ್ಮಡಿ ರಂಧ್ರ ಐದರಿಮ್ಮಡಿ ಪರ್ಣ
ತೇರೈಸೆ ತೋರುವಾಕಾರ ಎರಡು
ಮೂರೆರಡರಿಂದೆಸೆವ ಸಾರಫಲಗಳನೆಲ್ಲ
ಓರಂತೆ ಭಕ್ಷಿಸುವ ಪಕ್ಷಿಯೊಂದುಂಟಯ್ಯ ೨
ವೃಕ್ಷದಾ ಫಲಗಳನು ಭಕ್ಷಿಪುದನೀಕ್ಷಿಸುವ
ಪಕ್ಷಿ ನೀನಾಗಿರಲು ಪರಮಕೃಪೆಯಾ
ಪಕ್ಷಿಗಿತ್ತಾಗಲೊಂದೇ ಪಕ್ಷಿಯೆಂದೆನ್ನಿಸಿ
ಕುಕ್ಷಿಯನ್ನುಳಿದೈದಲರಿದೇ ಮಾಂಗಿರಿಯ ರಂಗ ೩

೩೬೫

ಎನ್ನಳವೆ ಯೋಗದಭ್ಯಾಸ ಹರಿಯೇ
ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ
ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ
ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ
ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ
ಅವ್ಯಯಾನಂದ ಮಾಂಗಿರಿರಂಗ ವಿಠಲ ೧
ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು
ಕರ್ಮದೊಳಗುತ್ಸಾಹವಿರಲದೇ ಸುರಿನೀರು
ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ
ನಿರ್ಮಲತೆಯೇ ಫಲವು ಇದು ಕರ್ಮಯೋಗ ೨
ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು
ಭಕ್ತಜನರ ಸೇವೆಯೇ ಮೇಲೆರೆವ ನೀರು
ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ
ಮುಕ್ತಿಯೇ ಫಲಮಿದೆ ಭಕ್ತಿಯೋಗ೩
ಆಸನವೇ ಬೀಜ ಪ್ರಾಣಾಯಾಮವೇ ಬೇರು
ಆಸೆಯಿಂ ಗೈವ ದಿನಚರ್ಯೆಯೇ ನೀರು
ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ
ಭಾಸಿಪಾ ಫಲಮಿದೆ ಹಟಯೋಗವಯ್ಯ ೪
ಯಮನಿಯಮಗಳೆ ಬೀಜಧಾರಣವೆ ತಾಂಬೇರು
ಕ್ರಮಮಾದಘ್ರಣಿದಾನ ಮೇಲೆರೆವ ನೀರು
ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ
ಕ್ರಮಸಮಾಧಿಯೆ ಫಲವು ಇದು ರಾಜಯೋಗ ೫
ವರವಿವೇಕ ಬೀಜ ವೈರಾಗ್ಯವೇ ಬೇರು
ಗುರುಕರುಣಮೆಂಬುದೇ ಮೇಲೆರೆವ ನೀರು
ಪರಬ್ರಹ್ಮ ಎ್ಞÁನವೇ ಪರಿಮಳಿಸುವ ಪುಷ್ಪ
ವರಮೊಕ್ಷವೇ ಫಲವು ಇದು ಎ್ಞÁನಯೋಗ ೬
ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ
ತ್ಯಾಗ ಮಾಡುವ ನಿಯಮವೆನಗಸಾದ್ಯ
ಆಗಾಗ ನಿನ್ನ ನಾಮಂಗಳನು ಪೇಳ್ವುದೇ
ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ ೭

ಭೂಮಿಯಲ್ಲಿ ಶರೀರ

೩೬೬

ಎಲೆ ಮನವೆ ಚಲಿಸದಿರು ಕಂಡಕಡೆಗೆ
ನಿಲು ನೀನು ಸ್ಥಿರವಾಗಿ ಧ್ಯಾನ ಮಂಟಪದೊಳಗೆ ಪ
ಕಲುಷಪೂರಿತವಾದ ಬಲೆಯ ದೂರಕೆ ದೂಡು
ಒಲಿದು ರಕ್ಷಿಪುದೆಂದು ಜಲಜಾಕ್ಷನನು ಬೇಡು ಅ.ಪ
ಆರು ಮಂತ್ರಿಗಳುಂಟು ಮೂರು ದುರ್ಗಗಳುಂಟು
ಮೂರು ಮತ್ತೆರಡಶ್ವ ಸಹಿತ ನೀನು
ದೂರ ದೂರದ ಸಿರಿಯ ತರುವೆ ನಾನೆಂದೆನುವೆ
ಧೀರ ನೀನೇ ಎಂಬೆ ಮರುಳತನದಿಂದೆ ೧
ನಡೆಯೆ ಸತ್ಪಥವೆಂಬೆ ನುಡಿಧರ್ಮವೆಂದೆಂಬೆ
ಕುಡುಕನಂತತ್ತಿತ್ತ ಅಲೆಯುತಿರುವೆ
ಸಿಡಿಲು ಬಡಿವುದ ಮರೆತು ದುಡುಕಿ ನಿರ್ದಯವಾಂತು
ಕೆಡಬೇಡ ಮಾಂಗಿರಿಯ ಅಡಿವಿಡಿದು ಸುಖಿಯಾಗು೨

ದಿವ್ಯಯೋಗಗಳ ಸಾಧಕಮೂರ್ತಿಯನ್ನಾಗಿ

೩೬೭

ಒಂದಿಲ್ಲದ ಮೇಲೆರಡುಂಟೇ ಭಕ್ತಿ
ಒಂದಲ್ಲದೆ ಹರಿಯೊಲವುಟೇ ಪ
ಒಂದಲ್ಲದೆ ರುಚಿ ಔಷಧಿಯುಂಟೇ
ನೊಂದಲ್ಲದೆ ರಂಗಾ ಎಂಬುವುದುಂಟೇ ಅ.ಪ
ಗಿಡಮರವಾಗದೆ ಕೃಮಿಯಾಗುವೆನೇ
ಅಡವಿಯೊಳಿರದೆ ಗೋವಾಗುವೆನೇ
ಪಡೆಯದೆ ಪುಣ್ಯವ ನರನಾಗುವೆನೇ
ಮೃಡನ ಪೂಜಿಸದೇ ದ್ವಿಜನಾಗುವೆನೇ ೧
ಸುಗುಣವಿರದೆ ಮಾತಿನಿದಾಗುವುದೇ
ಸೊಗಮಿಲ್ಲದೆ ಬಾಯಿ ನಗೆದೋರುವುದೇ
ಸುಗುಣವಿಲ್ಲದೆ ನಿರ್ಗುಣಬಹುದೇ
ಮುಗಿಲಿಲ್ಲದೆ ಮಳೆ ಧರೆಗೆ ಬೀಳುವುದೇ ೨
ತಂಗಿದ್ದಲ್ಲದೆ ಭಾವ ಎಂಬೋದುಂಟೋ
ಹಂಗಿ[ಗ]ಲ್ಲದೆ ಮರೆ ಹಿತಕುಂಟೋ
ತಂಗಿನೋಡಲು ಭಾವ ಮರೆಯಹುದುಂಟೋ
ಮಾಂಗಿರಿರಂಗ ನೀನೆನ್ನಯ ನಂಟೋ ೩

ಮನುಷ್ಯನ ‘ನಾನು’ ಎಂಬ

೩೬೮

ಕಾಣದ ವಸ್ತುವು ಕಾಣುವುದು ಕೇಳದದನಿಯು ಕೇಳುವುದು
ಇಂದಿನ ಕಾರ್ಯವು ನಾಳಿನ ಸಂಗತಿ ತಿಳಿಯುವುದು ಚಿರವಹುದು ಪ
[ಜೀವ]ಹೇಗಿದ್ದರೆ ಹೀಗಾಗುವುದು ನಾ ಮಾಡುವ ಕೈ ವಶವಹುದು
ಭಾವದಿ ಭಕ್ತಿಯು ತುಂಬಿರಬೇಕು
ಮನಸಿನ ಕಶ್ಮಲ ಕಳೆದಿರಬೇಕು ೧
ಆಶೆಯ ಪಾಶವು ಸುಟ್ಟಿರಬೇಕು ಸೋದರ ಭಾವವು ನೆಟ್ಟಿರಬೇಕು
ದ್ವೇಷಾಸೂಯೆಯ ಬಿಟ್ಟಿರಬೇಕು ಮಾಂಗಿರಿರಂಗ
ನೀ ಗತಿಯೆಂದರೆ ಸಾಕು ೨

೩೬೯

ಜಗಕ್ಕಿಂತ ಭಾರವೇನೊ ನಮ್ಮ ರಂಗ
ನಗಕ್ಕಿಂತ ಗಾತ್ರನೇನೋ ಪ
ಜಗಕ್ಕಿಂತ ಭಾರವೇನೋ | ಖಗಪೊತ್ತು ತಿರುಗಲೆ[ೀಕೆ]
ನಗಕ್ಕಿಂತ ಗಾತ್ರನೇನೋ | ನಗದ ಮೇಲೇ ಕುಳಿತಿಹ
ಜಗ[ನ]ಗಳದಾವ ಭಾರ ಹೇಳ ಅಳಿದವನೀನ ವನೆಯೇ ?
ಜಗಗಳ ಹೊರುತಲಿ ನಲಿವವನಿವನೇ
ನಗಗಳ ಬೆರಳಲಿ ಎತ್ತಿದನಿವನೇ
ಖಗಮೃಗಗಳಿಗೆ ಒಲಿದವನಿವನೇ೧
ತೃಣಕ್ಕಿಂತ ಹಗುರನೇನೋ ನಮ್ಮರಂಗ
ಮಣಿಗಿಂತ ಸಣ್ಣನೇನೋ
ತೃಣಕ್ಕಿಂತ ಹಗುರನೇನೋ ರಣದೆ ರಾವಣನ ಕೊಂದೆ
ಮಣಿಗಿಂತ ಸಣ್ಣನೇನೋ ಧರಣಿಯನಳೆದೈತಂದೆ
ಅಣುವಿಗೆ ಅಣು ರೂಪವಾಂತಿಹನು
ತೃಣಕ್ಕೆಲ್ಲಾ ತೃಣರೂಪಾಗಿಹನು
ಮಣಿಗೆಲ್ಲಾ ಶ್ರೀಮಣಿಯಾಗಿರುವ ಸ
ದ್ಗುಣಿಗಳಿಗೆ ಕರುಣಿಯು ಇವನು ೨
ಎಲ್ಲೆಲ್ಲು ಇರುವನೇನೋ ನಮ್ಮ ರಂಗ
ಎಲ್ಲೆಲ್ಲು ಇಲ್ಲವೇನೊ
ಎಲ್ಲಿಯೂ ಇರುವನೇನೇ ಅಲ್ಲಲ್ಲಿ ಇರುವ ರಂಗ
ಎಲ್ಲೆಲ್ಲು ಇಲ್ಲವೇನೇ ಅಲ್ಲಲ್ಲಿ ಅಂತರಂಗ ೭
ಬಲ್ಲಿದರೆಲ್ಲ ಬಲ್ಲರು ಇವನ ಕಲ್ಲೆಂಬುವರಿಗೆ ಇವನು
ಇಲ್ಲದ ತಾಣವೊಂದಿಲ್ಲವು ಭಕ್ತಿಯ
ಸೊಲ್ಲಿಗೆ ಸೋಲುವ ಮಾಂಗಿರಿರಂಗ ೮

೩೭೦

ಎ್ಞÁನವೆಂಬುದು ಇಲ್ಲವೋ ಈ ಚೇತನದಿ
ಏನೂ ಸಾರ್ಥಕವಿಲ್ಲವೋ ಪ
ಏನೂ ಸಾರ್ಥಕವಿಲ್ಲ ಎ್ಞÁನಮಾರ್ಗಗಳಿಲ್ಲ
ಮಾನಸ ಸ್ಥಿರವಿಲ್ಲ ಶ್ರೀನಾಥನಿದಬಲ್ಲ ಅ.ಪ
ಎರಡುಕಂಬದ ಮೇಲೆ ಇರುವ ಪಂಜರವಿದು
ಬರಿಯಡಂಭದ ಜಗವು ಸ್ಥಿರವೆಂಬ ತನುವಿನೊಳು ೧
ತೈಲವಿಲ್ಲದ ದೀಪ ಮಲಿನವಾಗುವ ತೆರದಿ
ಸುಲಭದೊಳಿಹ ಪ್ರಾಣ ತೊಲಗಿದ ಬಳಿಕಿನ್ನು ೨
ಸಂತೆಗೈದಿದ ಜನದಂತೆ ಪಂಚೇಂದ್ರಿಯವ
ನಾಂತ ದೇಹವು ವ್ಯರ್ಥ ಅಂತರಾತ್ಮನು ಹೋಗೆ ೩
ರಸನೆ ತೊದಲುವ ಮೊದಲು ಅಸುವು ಪೋಗುವ ಮೊದಲು
ಅಸುರಾರಿ ಎಂಬ ಮಧುವ ರಸನೆಯೊಳಿಡೋ ಮನುಜ೪
ದಿನದಿನ ಹರಿಕೃಷ್ಣ ವನಮಾಲಿಯ ನುತಿಸೋ
ತನುವ ಪ್ರಾಣವ ಬಿಡುವ ದಿನವನರಿಯೆ ನೀನು ೫
ದೇವದೇವನೆ ನಿನ್ನ ಸೇವಕನೆಂದೆನ್ನ
ಭಾವಿಸೋ ಮದನಾಂಗ ಮಾವಿನಕೆರೆರಂಗ೬

೩೭೧

ತನುವೆಂಬ ಭವನದಲಿ ಮನವೆಂಬ ಮಂಟಪದಿ
ವನರುಹಾಸನ ವಿಹುದು ನಿನಗಾಗಿ ಕೃಷ್ಣಾ ಪ
ಅನವರತ ಸ್ವಾಗತವ ಇನಿದಾಗಿ ಪೇಳುತಲಿ
ಸನುಮತದೊಳೀರೈದು ಮುನಿವರರು ನಿಂದಿಹರು ಅ.ಪ
ಎನಗೆ ತನಗೆಂದಿಬ್ಬರನುವಾಗಿ ಕಾದಿಹರು
ಘನ ಮೌನಿಯಂತೊಬ್ಬ ಮಣಿಯುತಿಹನು
ವನಜ ಸಂಭವ ಜನಕ ಮುನಿಯೊಡನೆ ನೀ ಬಂದು
ಕನಕಮಂಟಪವೇರು ಅವರಿಬ್ಬರೋಡುವರು ೧
ಕರಿಯ ಮೈಯವನೊಬ್ಬ ದುರದುರನೆ ನೊಡುವನು
ಪರಿವಾರದವರನ್ನು ತೋರುತಿಹನೊಬ್ಬ
ಕರದಿ ಸನ್ನೆಯ ಮಾಡುತಿಬ್ಬರೂ ಬರುತಿಹರು
ತರಿದವರ ಮಂಟಪವನೇರೊ ಮಾಂಗಿರಿರಂಗ ೨

೩೭೨

ನೀನಾರು ನಾನಾರು ನೀನೆನ್ನೊಳಿರಲು
ನಾನಾರು ನೀನಾರು ನಾನಿನ್ನೊಳಿರಲು ಪ
ನೀನೇನ ಮಾಡಿಸುವೆ ನಾನದನು ಮಾಡುವೆ
ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ
ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ
ನನ್ನದೇನುಂಟಯ್ಯ ಪನ್ನಗಾಧೀಶಾ
ನಿನ್ನವನು ನಾನಯ್ಯ ನನ್ನವನು ನೀನಾದೊ
ಡಿನ್ನೇನು ನಾನೀನು ಎನ್ನುವಂತಿಲ್ಲ ೧
ಇಂದಿರಾನಂದ ಗೋವಿಂದ ತವಪಾದಾರ
ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ
ಮುಂದೆನಗೆ ಜನ್ಮಂಗಳೊಂದಾದರೂ ಬೇಡ
ತಂದೆ ಮಾಂಗಿರಿರಂಗ ಬಂದುಕಾಯೋ೨

೩೭೩

ನೀನೆನ್ನೊಳಡಗಿದೆಯೊ ರಂಗಯ್ಯ ನಾನಿನ್ನೊಳಡಗಿಹೆನೆ ಪ
ನೀನೆನ್ನೊಳಡಗಿಹುದೇನೂ ಅಚ್ಚರಿಯಿಲ್ಲ
ನಾನಿನ್ನೊಳಡಗಿಹುದೆನೆ ಸಂದೇಹವಯ್ಯ ಅ.ಪ
ಆತ್ಮಾರಾಮನು ನೀನು ರಂಗ | ನಿಜಾತ್ಮಪ್ರಕೃತಿ ನಾನು
ಆತ್ಮಾವಲಂಬಯೆಂಬ ಅಂತರಾತ್ಮ ಪಾಲಿಪನಾನು
[ಆತ್ಮೋದ್ಧಾರಕ ನಿನ್ನಬಿಟ್ಟರಾನಿಲ್ಲವೋ ರಂಗ] ೧
ಒಬ್ಬಳೆಂಜಲ ತಿಂದೆ ರಂಗ ನೀನೊಬ್ಬಳಿಗಕ್ಷಯವಿತ್ತೆ
ಒಬ್ಬರೊಳು ಜನಿಸಿ ಮತ್ತೊಬ್ಬರೊಳು ಬೆಳೆದೆ
ಇನ್ನೊಬ್ಬನಾನೊಬ್ಬ ಇನ್ನೊಬ್ಬರಿಲ್ಲವೋ ರಂಗ ೨
ಕೊಡುವೆನೆನ್ನೊಳಗಿಹುದರಂಗಯ್ಯ ಹಿಡಿಯೆನ್ನ ಕರವ
ಪಡೆವೆನದನೆ ಅಯ್ಯ ಕೊಡಬೇಡ ಜನುಮವ
ತಡವೇಕೆ ಮಾಂಗಿರಿಯಯ್ಯ ನೀನೊಲಿದೆ ೩

೩೭೪

ಪರಮೌಷಧಿ ಸಿಕ್ಕಿತು ಪರಿಪರಿರೋಗ
ಪರಿಹಾರಕಿದು ದಕ್ಕಿತು ಪ
ಜ್ವರದ ಬೇಗೆಗೆ ದಾಹ ಕರುಳ ಕುಂದಿಸಿಯೆನ್ನ
ನರಳಿಸಿದಾಗ ಮಾಂಗಿರಿರಂಗಾ ಎಂದೆಂಬ ಅ.ಪ
ಸುರನರೋರಗ ಗರುಡ ಚರಣ
ಗುರು ದಿವಾಕರ ಕಿನ್ನರಾಪ್ಸರ
ಶರಣಜನ ಕರುಣಾಕರ ಶ್ರೀ
ಧರ ಸುಖಂಕರ ಶೌರಿಯೆಂಬಾ೧
ಪಿತ್ತವು ತಲೆಗೇರಿತು ಸುತ್ತಲು ಕಣ್ಗೆ
ಕತ್ತಲೆ ಮುಸುಕಿದ್ದಿತು
ಚಿತ್ತಪಲ್ಲಟಿವಾಗಿ ಮತ್ತನಾಗಿರಲಾಗ
ನೆತ್ತಿಯೊಡೆದ ಎನ್ನ ಕುತ್ತಿಗೋಂಕಾರ ೨
ಚಿತ್ತ ಮಸ್ತಕ ನೆತ್ತಿಗಳ ಬೆಂಬತ್ತಿ
ಮತ್ತತೆಯಿತ್ತ ಪತ್ತದ
ಕತ್ತಲೆಯನುತ್ತರಿಸಿದುತ್ತಮ
ಚಿತ್ತಜನಪೆತ್ತಚ್ಯುತಾ ಯೆಂಬ ೩
ರಸ ನಾಲಗೆಗೇರಿತು ಮಹದಾಸೆಯ
ಹಸಿವೊಂದು ಬಲವಾಯಿತು
ಬಸಿರೊಳಗ್ನಿಯು ಹುಟ್ಟಿ ಅಸುವು ಪೋಪಂತಾಗಿ
ಉಸಿರು ಉಗ್ಗಡಿಪಾಗ ವಸುದೇವ ಸುತಯೆಂಬ ೪
ರಸರಸಂಗಳೊಳೆಸೆದು ವಾಸಿಸಿ
ಉಸಿರು ಬಸಿರನು ವಸುವಿಲಾಸದೊಳೆಸೆದು
ಪೊಸ ಪೊಸ ಎಸಕದಿಂ ಸುಖ
ರಸವನೀಯುವ ರಾಮಯೆಂಬಾ ೫
ಕಿವಿ ಮೂಗು ಕರ ನೇತ್ರಗಳು ತಂಪಿಂಪಿನ
ಸವಿ ಬಲೆಯೊಳು ಬಿದ್ದುವು
ಭುವಿಯೆ ನರಕವಾಯ್ತು ಶವವಾದುದೀ ದೇಹ
ಜವ ನೇಣೆಸೆದಾಗ ಭವದೂರಹರಿ ಯೆಂಬ ೬
ಶಿವ ಭವಾಮರಪವನಪಾವಕ
ಜವ ಶಶಾಂಕವಾಕರಾನಕ
ಭುವನ ಮೋಹನ ಪಾವನಾ
ಶ್ರೀಧರ ಹರೇ ಭವದೂರನೆಂಬಾ ೭
ಲಕ್ಷನಾಮಗಳೆಲ್ಲ ಲಕ್ಷಣವಾದ [ತು
ರಕ್ಷೆಯೀಯುವಗುಳಿಗೆ] ಮಾತ್ರಾ
ಮೋಕ್ಷಸುಖವನಿತ್ತು ರಕ್ಷಿಪುದೆಂಬುದ
ದಕ್ಷಸುತೆಗೆ ಫಾಲಾಕ್ಷ ತಾಂ ಪೇಳಿದ ೮
ಅಕ್ಷಯಾತ್ರವಿಪಕ್ಷ ರಾಕ್ಷಸ
ಶಿಕ್ಷ ಸುಜನರಕ್ಷ ಪ್ರದವ ಅ
ಧ್ಯಕ್ಷ ನುತಕಮಲಾಕ್ಷ ಶರಣಕಟಾಕ್ಷ
ಲಕ್ಷ್ಮೀಪಕ್ಷ [ಮೂಂಗಿರಿರಂಗ] ಯೆಂಬಾ ೯

೩೭೫

ಬಡವನಾಗಿರುವನಕ ಭಯವಿಲ್ಲವಯ್ಯ ಪ
ಕೆಡುಕ ವಂಚಕ ಕಳ್ಳ ಬಳಿಬಾರನಯ್ಯ ಅ.ಪ
ಬಡವತಾನಡಿಗಡಿಗೆ ಕಡುದೈನ್ಯಭಾವದಲಿ
ದೃಢ ಭಕ್ತಿಯೊಳು ಹರಿಗೆ ಪೊಡಮಡುವನು
ಕಡವರವನಾಂತವನು ಕಡುನುಡಿಗಳನು ಕಲಿತು
ಪೊಡವಿಚನೆಂದೆನಿಸಿ ಕಡುಲೋಭಿಯಹನು ೧
ಗುಣ ಶಾಂತಿ ನಯ ವಿನಯ ಹಣವಂತಗಿರದಯ್ಯ
ಹಣವು ಕಪಿಯಂತವನ ಕುಣಿಸದಿರದು
ಉಣಿಸು ನಿದ್ರಾದಿಗಳು ಕ್ಷಣಮಾತ್ರವಿಲ್ಲವಗೆ
ಹಣದಾಸೆ ಎಳ್ಳಷ್ಟು ಬೇಡ ಮಾಂಗಿರಿರಂಗ೨

೩೭೬

ಬಾನ್ದಳದ ಬುಡವೆನಗೆ ಅತಿದೂರ ಬೆಳಕೇ
ಮನ್ದಿರವು ಶುದ್ಧವಿದೆ ಬಾ ಇದರತಳಕೆ ಪ
ಸುಂದರದ ಕಾಂತಿಯನು ಚೆಲ್ಲು ಈ ಮನೆಗೆ
ಇಂದು ಬಾ ನಾಳೆಯೆನಬೇಡ ನನ್ನೆಡೆಗೆ ಅ.ಪ
ಜನುಮದಂಚಿನ ಬೆಳಕು ನಿನ್ನದೇ ಗೊತ್ತು
ನಲಿದು ಬಂದಿಹೆನೊಳಗೆ ನಾ ನಿನ್ನ ಸೊತ್ತು
ನಿಲುಕದೆಡೆ ನಿಲಬೇಡ ಬಾ ನನ್ನ ಮುಪ್ಪೆ
ಬಲಯುತನ ಮಾಡೆನ್ನ ಸುಎ್ಞÁನಚಿತ್ತೆ ೧
ನೀ ಮಾತ್ರವಿತ್ತಲಿರೆ ನನ್ನೈದು ಗೆಳೆಯರು
ನೇಮಯುತರಾಗುವರು ಸೊಗಬಾಳ್ವರು
ನಾ ಮಾಳ್ಪುದೆಲ್ಲವೂ ನಿನ್ನದೇ ಆಗುವುದು
ರಾಮಕೃಷ್ಣರ ನೆನಪು ನನಗೆ ದೊರಕುವುದು ೨
ನೀನಿರದ ನನ್ನ ಮನೆ ಕಡುಕತ್ತಲೆಯ ಕೋಣೆ
ನೀನಿರದೆ ನಾನಿರಲು ಫಲವೇನು ಕಾಣೆ
ಕಾನನದ ಹೂವಿನಂತಿದ್ದೇನು ಫಲವಿಲ್ಲ
ಎ್ಞÁನ ಹೊಂಬೆಳಕೆ ಮಾಂಗಿರಿರಂಗ ನೋಡೆ ಭಯವಿಲ್ಲ೩

೩೭೭

ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ
ಬೇಡದಿರಲಾರೆ ಮಾಂಗಿರಿಯರಂಗ ಪ
ಬೇಡುವನ ಕೈ ಕೀಳು ನೀಡುವನ ಕೈ ಮೇಲು
ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ
ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ
ಎ್ಞÁನಕೆ ಸಿಗುವೆಯೋ ನಾನರಿಯೆನು
ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ
ಎ್ಞÁನಾನುಭವವಿಲ್ಲ ಆಧಾರವಿಲ್ಲ ೧
ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು
ನಾನಳುವೆನನವರತ ಶ್ವಾನದಂತೆ
ನಾನಳುವುದನು ಕಂಡು ಸೂನು ಬಾ ಬಾರೆಂದು
ಸಾನುರಾಗದಿ ರಮಾದೇವಿ ಸಂತೈಪಳು ೨
ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು
ಎನ್ನ ಕಳುಹುತ ನಿನಗೆ ಎನ್ನ ತೋರ್ದು
ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ
ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ ೩

ಯಶಸ್ವೀ ಶರಣಾಗತಿ ತತ್ವದ

೩೭೮

ಮನವು ಕರಗದೇನೋ ಸಿರಿಹರಿ ಮುನಿಸದೇಕೆ ಪೇಳೋ ಪ
ತನು ಮನ ಧನಗಳ ನಿನಗೊಪ್ಪಿಸುತ್ತಲಿ
ಮುನಿವರರೊಲು ನಿನ್ನ ನೆನೆಯಲಿಲ್ಲವುಯೆಂದು ಅ.ಪ
ಬಾಲತನದೆ ನಿನ್ನ ನೆನೆಯದೆ ಕಾಲಕಳೆದೆ ಯೌವನದೊಳು
ಲೋಲುಪನಾದೆನ್ನ ಕಾಲದೂತರು ಬಂದು ನೂಲಿಂದಚಿಳೆದರೂ ೧
ಜಗವು ಚಿರವೆಂದು ಸತತವು ಬಗೆದು ಭ್ರಾಂತನಾದೆನ
ಅಗಣಿತ ನೀಲಮಣಿ | ಖಗಪತಿವಾಹನ [ಪೊರೆಯಲಿನ್ನು] ೨
ಮಂಗಳಾಂಗ ಮಾಂಗಿರಿ ಪುರವಾಸ
ಗಂಗಾಧರ ರಂಗಾ ನೀನೆನ್ನಂತರಂಗದೆ ನಿಲಲಿನ್ನು೩

೩೭೯

ಮನವೆಂಬ ತುರಗವು ಪರಿದೋಡುತಲಿದೆ
ಸನಿಹದಲೆ ದೆಸೆದೆಸೆಗೆ ಪ
ಅನುದಿನ ಸ್ಪರ್ಶ ರೂಪ ರಸ ಗಂಧಗಳೆಂಬ
ಇನಿತುಪಾದಗಳಿಂದ ಅನಿಲನ ಸೋಲಿಸಿ ಅ.ಪ
ಕಾಮಕ್ರೋಧಗಳೆಂಬ ನೇತ್ರಗಳಿದಕಿದೆ
ವ್ಯಾಮೋಹ ಲೋಚನ ಎಂಬ ಕರ್ಣಂಗಳಿವೆ
ದುರ್ಮದವೆಂಬುವ ಪುಚ್ಚವೊಂದಿಹುದಯ್ಯ
ಈ ಮದಹಯಕೆ ಮಾತ್ಸರ್ಯ ನಾಸಿಕವಯ್ಯ೧
ಮೃಡನು ತಾ ಎಂಬುವ ಕಡಿವಾಣದ ಹಿಡಿ
ದೃಢಭಕ್ತಿಯೆಂಬ ಪಾಶ ಕೊರಳೊಳಗಿರಲಿ
ಎಡಗೈಯೊಳು ಹರಿಯೆಂಬ ಕೊಳಲನು ಹಿಡಿ
ತಡವೇಕೆ ಮನುಜ ಓಡಿ ಹಯವ ತಡಿ ೨
ಆಡಲು ನಿಲಬೇಡ ನೋಡಿ ನಲಿಯಬೇಡ
ಓಡಾಡಿ ತುರಗವ ಹಿಡಿ ಹಿಡಿ ಮನುಜ
ಓಡಿ ಹಯವ ಪಿಡಿದು ಬಂಧಿಸದಿದ್ದರೆ
ಕಾಡಿಗೈದಿ ದೊಡ್ಡ ಮಡುವ ಸೇರುವುದು ೩
ನರಹರಿಯೆಂಬ ಕುಣಿಕೆಯ ಗೈದು
ತ್ವರಿತದಿ ತುರಗದ ಕೊರಳಿಗೆ ಬಿಗಿದು
ಕರದೊಳಗಿರುವ ಕಡಿವಾಣ ಒಂದಿಡಿ
ನೆರೆ ಭಕ್ತಿಪಾಶದಿ ತುರಗವ ಸೆರೆಗೈ ೪
ನಾರಾಯಣಾ ಎಂಬ ನೀರ ಕುಡಿಸುತಲಿ
ಶ್ರೀರಮಣ ಎಂಬ ಹುರಳಿಯ ನಿಡುತೆ
ಮಾರ[ಮಣ] ಎಂಬ ತೃಣವನೆಣಿಸಿ ದಿವ್ಯಾ
ಕಾರದಿ ಮಾಂಗಿರಿರಂಗಗರ್ಪಿಸಿರೋ ೫

೩೮೦

ಕೃಷ್ಣ ಸ್ತುತಿ
ಮಾಂಗಿರಿಯೊಡೆಯ ಗೋಪಾಲನೇ ಮಧುರ ಪ
ಗೋಪಾಲನ ಮಾಂಗಿರಿಯೇ ಮಧುರ ಅ.ಪ
ಗೋಪಾಲನು ನಿಲ್ಲುವ ಪರಿ ಮಧುರ
ಗೋಪಾಲನ ಗಜಗಮನವು ಮಧುರ ೧
ಗೋಪಾಲನ ಮುರಳೀರವ ಮಧುರ
ಗೋಪಾಲನ ರಸಗಾನವೆ ಮಧುರ ೨
ಗೋಪಾಲನ ಸಸುನಗೆಯತಿ ಮಧುರ
ಗೋಪಾಲನ ಕಲಾನರ್ತನ ಮಧುರ ೩
ಗೋಪಾಲನ ಝಣ ಝಣರವ ಮಧುರ
ಗೋಪಾಲನ ಕೋಲಾಟವು ಮಧುರ ೪
ಗೋಪಾಲನ ನಡುಗೆಜ್ಜೆಯು ಮಧುರ
ಗೋಪಾಲನ ಕರದಭಯವು ಮಧುರ ೫

ಮನಸ್ಸನ್ನು ಕುದುರೆಗೆ

೩೮೧

ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ
ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ
ನಾರು ಬೇರಿದಕಿಲ್ಲ ಸಾರ ಪಾಕಗಳಿಲ್ಲ
ಊರೂರಿಗೊಯ್ವುದಕೆ ಭಾರವಲ್ಲ ಅ.ಪ
ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ
ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ ೧
ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ
ಮಂದರೋದ್ಧಾರನೆಂಬ ಸಿಂಧೂರಮಾತ್ರೆ ೨
ನಾರಾಯಣಾಯೆಂಬ ನೀರ ಬೆರಸಿರೋದಿದಕೆ
ಸಾರತರ ರಸಪಾಕ ತೋರುವಾ ಮಾತ್ರೆ೩
ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ
[ಮೂರೊತ್ತು ಸೇವಿಸೆ ಮನಕಹುದು ಹಿತ] ೪
ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ
ಶರಣಜನವರದನೆಂದೊರೆವರು ಸದಾ ೫
ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ
ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ ೬

ಅತ್ಯಂತ ಸರಳವಾಗಿ ಭಕ್ತಿಯ

೩೮೨

ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ಪ
ಚಿತ್ತಜಪಿತನೆಂಬ ರತ್ನ ನಮ್ಮ ನಿತ್ಯಮುಕ್ತರಂಗರತ್ನ ಅ.ಪ
ಭಕ್ತಪಾಲಕನೆಂಬ ರತ್ನ ಸತ್ಯಾಸಕ್ತ ವರದನೆಂಬ ರತ್ನ
ಮುಕ್ತಿದಾಯಕ ರಾಮರತ್ನ ನಮ್ಮ ಯುಕ್ತಿಭರಿತ ಕೃಷ್ಣರತ್ನ೧
ಗೋಪಾಲಕೃಷ್ಣನೆಂಬ ರತ್ನ ವರತಾಪಸವಿನುತ ಮಾರತ್ನ
ಶ್ರೀಪತಿಯೆಂಬ ಜೀವರತ್ನ ನಮ್ಮ ಪಾಪವಿನಾಶಕರತ್ನ ೨
ನಾರದ ಪೊಗಳುವ ರತ್ನ ಇದು ನಾರಿದ್ರೌಪದಿ ಕಂಡರತ್ನ
ಚಾರು ವೇದದೊಳಿಹ ರತ್ನ ನಮ್ಮಶ್ರೀರಮಣ ಎಂಬರತ್ನ ೩
ಕರಿರಾಜವರದ ಸುರತ್ನ ನಮ್ಮ ಕರುಣಾಕರಯೆಂಬ ರತ್ನ
ಶರಣ ಜನರ ಹಸ್ತರತ್ನ ನಮ್ಮ ತರಳಧ್ರುವನ ಕಾಯ್ದ ರತ್ನ ೪
ಪ್ರೇಮರಸಾನ್ವಿತ ರತ್ನ ಇದು ಶ್ರೀಮಾಂಗಿರಿರಂಗರತ್ನ
ನಮ್ಮ ರಾಮದಾಸಾರ್ಚಿತ ರತ್ನ೫

೩೮೩

ರಾಜಿಯಿದ್ದೋರೆಲ್ಲ ಕೇಳ್‍ಬಹುದಣ್ಣ
ಪೂಜೆ ಮಾಡೋ ಇದ ಹೇಳತೀನಣ್ಣ ಪ
ಆಜನ ಈಜನ ಮಾಡ್ಯವ್ರಣ್ಣ
ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ
ನೇಸರಿಗೂ ಮುಂಚೆ ಯೋಳಬೇಕಣ್ಣಾ
ಹಾಸಿಗೇಲಿ ತಿಂಡಿ ತಿನಬಾರ್ದಣ್ಣ
ಮೋಸದ ಯೋಚನೆ ಯಿರಬಾರ್ದಣ್ಣ
ಕಾಸಿಗೆ ಸುಳ್ಳ ಯೋಳ್ಬಾರದಣ್ಣ ೧
ಕೈ ಮೈ ಬಾಯ್ಮೊಕ ತೊಳಿಬೇಕಣ್ಣ
ನಾಮ ಇಬೂತಿಯ ಅಣೆಗಚ್ರಣ್ಣ
ಸೋಮಿಗೆ ಕೈಗಳ ಮುಗಿದೆರಗಣ್ಣ
ರಾಮಾ ನಿನ್ಪಾದ್ವೇಗತಿಯೆನ್ನಣ್ಣ ೨
ಎಣ್ಣುವೊನ್ನಾಸೆಯ ಸುಡಬೇಕಣ್ಣ
ಮಣ್ಣಿನ ಭೂಮಿಯ ನಂಬದಿರಣ್ಣ
ಕಣ್‍ಬಾಯ್ ಕಿವಿಗಳ ಮುಚ್ಚಬೇಕಣ್ಣ
ಸಣ್ಣ ಕೃಷ್ಣನೇ ಗತಿಯೆನ್ನಣ್ಣ ೩
ಓಡುವ ಮನವನು ಬಿಗಿಹಿಡಿಯಣ್ಣ
ನೋಡುವ ಕಣ್ಗಳ ಮನದಲಿಡಣ್ಣ
ಮಾಡೋಂಕಾರವ ಗೆರೆಯೊಳಗಣ್ಣ
ನೋಡದರಲಿ ಹೊಳೆ ಹೊಳೆವಾಬಣ್ಣ ೪
ಅದರಡಿ ತಾವರೆ ಹೂವೈತಣ್ಣ
ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ
ಮುದದಿ ಮನದಿ ತಲೆಬಾಗುತಿರಣ್ಣ
ಮದನ ಗೋಪಣ್ಣನು ಕಾಣುವನಣ್ಣ ೫
ಕಡಗೆಜ್ಜೆ ಸರಪಳಿಗಳ ನೋಡಣ್ಣ
ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ
ವೊಡಲ ಮುಚ್ಚಿದಾ ಸರಗಳ ನೋಡಣ್ಣ
ಹಿಡಿದೆತ್ತಿದ ಕೈಕೊಳಲನು ನೋಡು ೬
ಮುಡಿಯ ಕಿರೀಟದ ಹೊಳಪನು ನೋಡು
ನಡುಹಣೆಯ ನಿಡು ತಿಲಕವ ನೋಡು
ಬೆಡಗಿನ ಕಿರುನಗೆ ತುಟಿ ಬಾಯ್ನೋಡು
ಕಡೆನೋಟದ ಕಣ್ಮಿಂಚನು ನೋಡು ೭
ತುಂಬಿದ ಮುದ್ದಿನ ಕೆನ್ನೆಯ ನೋಡು
ಅಂಬರದಂತೆ ಸರೀರವ ನೋಡು
ಲಂಬವಾದವನ ಮಾಲೆಯ ನೋಡು
ನಂಬಿಕೆಯಲಿ ಸರಣಾರ್ತಿಯ ಮಾಡು ೮
ಆಗ ನಾನೆಂಬೋದ ಮರೆಯುವೆಯಣ್ಣ
ಬೋಗಾನಂದವ ಪಡಿತೀಯಣ್ಣ
ಯೋಗದ ಪೂಜೆಯ ಹಾದಿಯಿದಣ್ಣ
ಕೂಗಿಗೆ ಬರುವನು ಮಾಂಗಿರಿಯಣ್ಣ ೯

ಇದನ್ನು ಕೀರ್ತನಕಾರರು

೩೮೪

ಶಕ್ತಿಗೊಲಿವೆಯೋ ರಂಗ ಯುಕ್ತಿಗೊಲಿವೆಯೋ ಪ
ಶಕ್ತಿ ಯುಕ್ತಿಗೇ ಒಲಿವನಲ್ಲ ಭಕ್ತಿಯೆಂಬುದಿಲ್ಲದಿರಲು ಅ.ಪ
ಸಕಲ ಭುವನಗಳೊಳು ಹುಡುಕಿ ವಿಕಲನಾದನಂದು ಕಶಿಪು
ಭಕುತಿಯಲಿ ಪ್ರಹ್ಲಾದ ಕರೆಯೆ ಮರುಘಳಿಗೆಯೆ ಕಂಭದಿ ಬಂದೆ೧
ಸೆರೆಯೊಳರಿಯು ಜನಿಸಲಂದು ಬರಿಯಮಾಯೆಯ
ಸೆರೆಯೊಳಿರಿಸಿ ಭರದಿ ಗೋಕುಲಕೈದಿದೆಯಲ್ಲವೆ೨
ಕರೆದ ಕೌರವರಿಗೊಲಿಯಲಿಲ್ಲ ಕರೆಯದಾವಿದುರಗೊಲಿದೆ
ಅರಿಯಲರಿದು ಮಹಿಮೆಗಳ ಮಾಂಗಿರಿರಂಗ ಕರುಣಾಸಾಗರ ೩

೩೮೫

ಸಿರಿಪತಿಯೇಗತಿ ಎನುವವಗೆ
ಮತ್ತೆದೊರಕುವುದೇ ಮುಕುತಿ ಪ
ಪರಮೇಶ್ವರನತಿ ಕರುಣಾಮಯನೆಂದು
ಅರಿಯದವನೇ ಕುಮತಿ ಅ.ಪ
ಸಾಸಿರನಾಮನು ಸಾಸಿರ ನೇತ್ರನು
ಸಾಸಿರ ಗಾತ್ರನು ಸುಂದರನು
ವಾಸುದೇವ ಮಾಂಗಿರಿಪತಿಯವನು
ದಾಸರ ಪೊರೆಯಲು ನಿಂದವನು ೧
ವೇದದೊಳಿರುವ ನಾದಹೇಳಿರುವ
ಆದರೂ ಕಾಣದ ಮಹಿಮನವ
ಮೋದದಿ ಭಜಿಸುವ ಸಾಧಕರಿಗೆ |
ಆದರಿಸಿ ಅಪಾರವ ತೋರುವ ಮಹದೇವ೨

೩೮೬

ಸುಮ್ಮನೇಕೆ ಕಾಲ ಕಳೆವೆ
ಹಮ್ಮದೇಕೆ ಮನವೇ ಪ
ಹಮ್ಮುಧನಗಳೆಲ್ಲ ನಶ್ವರ
ಪೆರ್ಮೆ ಸಲ್ಲದು ಭಜನೆಗೆ ಅ.ಪ
ನಿಲುವೆಡೆಯೊಳು ಕುಳಿತೆಡೆಯೊಳು
ಸಲಿಲದೊಳು ಸಲೆ ನಲಿಯುವೆಡೆಯೊಳು
ಒಲಿದು ಭೋಜನ ಗೈಯುವೆಡೆಯೊ
ಳೊಲಿದು ರಾಮರಾಮ ಯೆನ್ನದೇ ೧
ಮಲಗಿಪಾಡಲು ನಂದಕಂದ
ಕುಳಿತು ಲಾಲಿಪ ಪರಮಾನಂದ
ಕುಳಿತು ಪಾಡೆ ನಿಲುವ ಗೋವಿಂದ
ನಿಲಲು ನಲಿವನಾ ಮುಕುಂದ೨
ಕಾಲಪಾಶ ಎಳೆವ ಕಾಲದಿ ನಾಲಗೆಯೊಳಕೆಸೆಳೆವಕಾಲದಿ
ಮೇಲೆ ಬೆಳೆವ ಎ್ಞÁನಘಾತದಿ
ಬಾಲಗೋಪಾಲನ ಧ್ಯಾನಿಸಲಾರೆನೀ ೩
ಭಕ್ತವತ್ಸಲ ನಮ್ಮ ದೇವ
ಶಕ್ತಿಗೊಲಿವನಲ್ಲ ಮಾಧವ
ಭಕ್ತಿಯಿಂದ ನೆನೆಯಲು ದಿನ
ಮುಕ್ತಿಯೀವನಾ ರಮಾಧವಾ ೪
ಸಾವಿರಾರು ವರುಷಕಾಲ
ಜೀವಿಸಿರಲು ಫಲವದೇನು
ಮಾವಿನಾಕೆರೆಯರಸ ದಿವ್ಯ
ದೇವನ ನೆನೆದು ಸುಖಿಸದೀಪರಿ೫

ತತ್ವದರ್ಶನದಲ್ಲಿ ಮಂತ್ರಮಹಿಮೆ

೩೮೭

ಈ ಮಂತ್ರ ಜಪಗೈದು ಜನುಮವ
ಸ್ವಾಮಿಗರ್ಪಿಸೋ ಮಾನವಾ ಪ
ಕಾಮಿತಾರ್ಥವ ಬೇಡದೆ ಶತ
ನಾಮಗಳೊಳು ಹಿರಿಯದೆನಿಪ
ಹೋಮ ಯಾಗಕೆ ಮೂಲ ಮಂತ್ರ |
ಸಾಮಜಾಪತಿ ನೆನೆವ ಮಂತ್ರ ಅ.ಪ
ಧ್ರುವನು ಜಪವಗೈದ ಮಂತ್ರ |
ದಿವಿಜರನಿಶ ಪಠಿಪ ಮಂತ್ರ
ಶಿವನು ಗೌರಿಗೆ ಪೇಳಿದ ಮಂತ್ರ |
ಜವನ ಭಟರ ಸದೆದ ಮಂತ್ರ ೧
ಶಿಲೆಯು ಲಲನೆಯಾದ ಮಂತ್ರ
ಲಲನೆಪಾಂಚಾಲಿ ಹೇಳಿದ ಮಂತ್ರ
ಜಲದೊಳಕ್ರೂರಗೊಲಿದ ಮಂತ್ರ |
ಬಲಿಗೆ ವರವನಿತ್ತ ಮಂತ್ರ ೨
ನಾರದಮುನಿ ಪೇಳ್ವ ಮಂತ್ರ |
ಸಾರಸಭವನುಲಿದ ಮಂತ್ರ
ಘೋರದುರಿತನಾಶಕ ಮಂತ್ರ ಸಂ
ಸಾರಜಲಧಿ ದಾಟಿಪ ಮಂತ್ರ ೩
ಅಸುರರೆದೆಯ ಸೀಳುವ ಮಂತ್ರ
ವಸುಧೆಭಾರವ ಕಳೆವ ಮಂತ್ರ
ಅಸಮಬಲ ಶ್ರೀರಂಗ ಮಂತ್ರ
ಉಸುರಲಳವೆ ಪರಮ ಮಂತ್ರ ೪
ಗಿರಿಯ ತೇಲಿಸಿದೊಂದು ಮಂತ್ರ
ನರನ ಪಾಲಿಪೊಂದು ಮಂತ್ರ ೫
ತರಳ ಪ್ರಹ್ಲಾದಗೊಂದು ಮಂತ್ರ
ಸಿರಿಗೋವಿಂದನೆಂಬ ಮಂತ್ರ
ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ
ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ ೬

೩೮೮

ಒಂದೇ ಮಂತ್ರವು ಸಾಕೋ ಶ್ರೀರಾಮ ಎಂಬ ಪ
ಒಂದುಸಾಸಿರ ಮಂತ್ರಕೊಂದೇ ಸಾಟಿಯು ಎಂದು
ಇಂದುಶೇಖರ ಪೇಳ್ವ ಶ್ರೀರಾಮ ನಾಮವೆಂಬ ಅ.ಪ
ಮಾಹೇಶ್ವರ [ನುತ] ಮಂದರೋದ್ಧಾರ ಕೇಶವ
ಶ್ರೀಹರಿ ಭೂದೇವಿಯುತ ಮೃಗೇಂದ್ರ ವರದಾ
ರೋಹಿಣಿಪುತ್ರ ವೇಣುವಿಶಾರದ
ಬಾಧಾಪಹಾರಕ ಕೇಶವ ನಾಮಂಗಳೆಲ್ಲಕೆ ೧
ನಾರಾಯಣಾಚ್ಯುತ ಗೋವಿಂದ ಮಾಧವ
ನೀರೇಜಭವತಾತ ದಾಮೋದರ
ಕ್ಷೀರಾಬ್ಧಿ ಮಂದಿರ ಖಗೇಂದ್ರವಾಹನ
ಶ್ರೀರಂಗ ಮಾಂಗಿರಿಯ ಕೋದಂಡಧರನೆಂಬ ೨

೩೮೯

ಔಷಧದ ಬೇರೊಂದನು ನಾರದನು ತಂದ
ಪೋಷಣೆಗೆ ಸಕಲರೂ ಸವಿಯಲೆಂದ ಪ
ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು
ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು
ಉರಿ ವಾತ ರುಜೆಗಳಿಗೆ ಸಿರಿಲೋಲನೀ ಬೇರು
ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು ೧
ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ
ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ
ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ
ನಿತ್ಯಶೌರಿಯ ನಾಮ ಶಿವಬೇರು ೨
ನಾರದನು ಬೇರೂರೆ ನೀರೆರೆದ ಪ್ರಹ್ಲಾದ
ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ
ವೀರದಶಶಿರನನುಜನೆಚ್ಚರದೊಳಿದ ಕಾಯ್ದ
ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ ೩
ಅರಳಿದ ಸುಮಗಳನು ಅಕ್ರೂರ ಪೋಷಿಸಿದ
ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ
ನರರೆಲ್ಲರೀ ಫಲವ ದಿನದಿನವು ಮೆಲಲೆಂದು
ವರದ ಮಾಂಗಿರಿರಂಗ ಪೇಳುತಿಹನು ೪

೩೯೦

ಕೋಟಿನಾಮಗಳಲ್ಲಿ ಹಿರಿಯದಂತೆ
ಕಾಟದಾ ಶರನಿಧಿಯ ದಾಟಿಸುವುದಂತೆ ಪ
ಕೋಟಿನಾಮಂಗಳಿಗೂ ಕೋಟೆಯಾಗಿಹುದಂತೆ
ಸಾಟಿಯಿಲ್ಲದ ಮಂತ್ರ ಪಾಟವಿದಂತೆ ಅ.ಪ
ಭುವನ ಸುಂದರನಂತೆ ಭವವ ಕಳೆಯುವನಂತೆ
ಶಿವನಿಗೆ ಹಿತವಂತೆ ಭುವನೇಶನಂತೆ
ಅವನಿಸುತೆಗಾಗಿ ದಾನವರ ಹರಿಸಿದನಂತೆ
ಅವನೆ ಮಾಂಗಿರಿಯ ಮಾಧವ ರಾಮನಂತೆ ೧

೩೯೧

ಚಿಂತಯಾಮಿ ತಾರಕನಾಮಂ ಅಂತರಾತ್ಮ ರಘುರಾಮಂ ಪ
ಶಾಂತಿದಾಂತಭರಿತ ಹನುಮಂತ ಸೇವ್ಯ ಸೀತಾರಾಮಂ ಅ.ಪ.
ರಾಕ್ಷರ ರಹಿತಾಷ್ಟಾಕ್ಷರಿ ಶೂನ್ಯಂ
ಮಾಕ್ಷರ ಲೋಪ ಪಂಚಾಕ್ಷರಿ ಶೂನ್ಯಂ
ಸಾಕ್ಷರ ರಾಮಾದ್ವ್ಯಕ್ಷರಿ ಮಾನ್ಯಂ
ರಾಕ್ಷಸನಾಶ ರಾಮಾಕ್ಷರ ಮಾನ್ಯಂ ೧
ರವಿವಂಶಾಂಬುಧಿ ಚಂದ್ರಪ್ರದೀಪಂ
ಭುವನಮನೋಹರ ದಿವ್ಯಸ್ವರೂಪಂ
ಶಿವಧನುಭಂಜನ ವೀರಪ್ರತಾಪಂ
ಅವನಿಜಾಲೋಲ ವೈಭವಯುತ ಭೂಪಂ ೨
ಸತ್ಯಧರ್ಮ ಪರಾಯಣ ರಾಮಂ
ನಿತ್ಯಮುಕ್ತ ಸೇವಿತ ರಘುರಾಮಂ
ಸತ್ಯ ಪರಾಕ್ರಮ ಜಗದಭಿರಾಮಂ
ಸ್ತುತ್ಯಚರಿತ್ರ ಮಾಂಗಿರಿವರಧಾಮಂ ೩

೩೯೨

ಎ್ಞÁನಾನಂದಮಯಂ ಭಜೇಹಂ ಪ
ಧ್ಯಾನಾಮೃತಸಾಗರ ಶಾಂತಕರಂ
ಶ್ರೀನಿವಾಸ ಕರುಣಾರಸಪೂರಂ ಅ.ಪ
ಸಕಲ ಕಲಾಕೃತಿ ಪೂರ್ಣಮನಂತಂ
ಸಕಲ ವರಪ್ರದಮನುಪಮ ಶಾಂತಂ
ವಿಕಸಿತ ಕಮಲೋಪಮ ಶಂಭುಚಿತ್ತಂ
ಶ್ರೀಕರಮಮಿತ ಕೃಪಾಗುಣ ಸಹಿತಂ೧
ಮೂಲಮಂತ್ರ ಸಕಲಾರ್ಥಸಮೀರಂ
ಮೂಲತತ್ವ ನಿರ್ಧಾರಕಮಮರಂ
ಗಾಲವ ನಾರದ ಮುನಿಜನನಿಕರಂ
ಸಾಲಂಕೃತ ಮಾಂಗಿರಿವರಮಿಹಿರಂ ೨

ಓಂನಮೋನಾರಾಯಣಾಯ

೩೯೩

ನಾರದನುತ ಪಾವನನಾಮಾ
ನೀರಜಭವಪಿತ ರಣಭೀಮಾ ೧
ಸಾರಸಲೋಚನ ಜಗದಭಿರಾಮಾ
ಸೂರಿಗಣನುತ ರವಿಕುಲ ಸೋಮಾ ೨
ದಶರಥನಂದನ ಮುನಿಮುಖಚಂದನ
ನಿಶಿಚರಬಂಧನ ಕಪಿವರಸೇನಾ
ದಶಮುಖಭಂಜನ ಬಂಧವಿಮೋಚನ
ಪಶುಪತಿಮೋಹನ ಮಾಂಗಿರಿಸದನ ೩

೩೯೪

ನಾರದ ನುತಿಸುವನಾಮ ನಾರಾಯಣ ಹರಿನಾಮ ಪ
ಮಾರವೈರಿಯ ಜಪನಾಮ ನೀರಜನಾಭನ ನಾಮ ಅ.ಪ
ತಾಪಸನರಸಿಯ ಶಾಪವನಳಿಸುತೆ
ಆ ಪರಮೇಶನ ಚಾಪವ ಮುರಿದು
ಭೂಪತಿಯಣುಗಿ ಶ್ರೀರೂಪಿಯ ವ್ಯಾಎ್ಯದಿ
ಪಾಪಿ ರಾವಣನನು ಛೇದಿಸುವಾ ನಾಮ ೧
ನಂದ ಯಶೋದ ಕಂದನೆನಿಸಿ ಬಹು
ಮಂದಿ ರಕ್ಕಸರ ಕೊಂದು ಗೋಪಿಯರ
ವೃಂದದಿ ಮುರಳಿಯಾನಂದವ ನೀಡಿದ
ಸುಂದರ ಮಾಂಗಿರಿ ರಂಗನ ನಾಮ ೨

೩೯೫

ನಾರಾಯಣಾಯ ನಿಗಮೋದರಾಯ
ಶ್ರೀರಾಘವಾಯ ನಮೋ ಸಮಸ್ತೆ ಪ
ನೀರೇಜನಾಭಾಯ ನೀಲಾಂಬುದಾಭಯ
ನೀರೇಜ ನಿಲಯಾಯ ನಮೋನಮಸ್ತೆ ಅ.ಪ
ನಾಗೇಶ ಶಯನಾಯ ವಾಗೀಶ ವಿನುತಾಯ
ಯೋಗೀಶ ನಮಿತಾಯ ನಮೋ ನಮೋ
ಶ್ರೀಗೋತ್ರ ಸಹಿತಾಯ ರಾಗಾಂಬು ಭರಿತಾಯ
ಶ್ರೀಮಾಂಗಿರೀಶಾಯ ನಮೋ ನಮಸ್ತೇ ೧

ಭಾಗವತಶ್ರೇಷ್ಠ ನಾರದನಿಂದ

೩೯೬

ಭೂಷಣವಿದು ಭೂಷಣ ಕೇಶವಧ್ಯಾನ ಪ
ಭೂಷಣವದನಾ ವಿಭೀಷಣ ಧರಿಸುತೆನಾಶರಹಿತ
ಪೌರುಷವಾಂತ ಧರಣಿಯೊಳು ಅ.ಪ
ಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣ
ಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ೧
ಕರಯುಗಗಳ ಭೂಷಣ ಹರಿಪೂಜೆಯು
ಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣ
ವರಕ್ಷೇತ್ರಸಂಚಾರ ಚರಣಕೆ ಭೂಷಣ ೨
ಹರಿಯ ಚರಿತೆಯು ಕರ್ಣಭೂಷಣ
ಹರಿತುಳಸಿ ನಾಸಿಕಕೆ ಭೂಷಣ
ಹರಿಯ ಕೊಂಡಾಡುವುದೆ ರಸನೆಗೆ ಭೂಷಣ
ಹರಿಯ ಭಜನೆಯು [ಜಿಹ್ವಾಭೂಷಣ] ೩
ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾ
ಸಿರಿರಮಣನಾಮ ಕಿರೀಟವಯ್ಯ
ವರದನೆಂಬುವನಾಮ ವರಕರ್ಣಾಭರಣವು ೪
ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾ
ರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು
ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ ೫

೩೯೭

ಯಾರು ಗತಿಯೋ ರಂಗಯ್ಯಘೋರ
ದುರಿತ ಸಂಸಾರವೇರುವವಗೆ ಪ
ಕಾಯಿ ನಿನ್ನದು ಕುಡುಗೋಲು ನಿನ್ನದೆ ಸ್ವಾ
ಮಿಕಾಯುವೆಯೋ ದೇವ ಗಾಯಪಡಿಸುವೆಯೋ
ನ್ಯಾಯ ಅನ್ಯಾಯವಾದಾಯ ನಷ್ಟಗಳೆಲ್ಲ
ಜೀಯ ನಿನ್ನದೇ ಅಪ್ರಮೇಯ ವಿನುತ ಎನ್ನ ೧
ಕಾಲಕರ್ಮಂಗಳ ಜಾಲಕೆ ಸಿಲುಕಿದಕೀಲು
ಮುರಿದ ತೇರಂತೆ ನಾ ಬಳಲಿ
ಮೂಲಮಂತ್ರವ ಬಿಟ್ಟು ಲೋಲಮಾನವ ನಾನು
ಪಾಲಿಸುವರು ಬೇರಿಲ್ಲ ಮಾಂಗಿರಿರಂಗ ೨

ದಶಾವತಾರದಲ್ಲಿ ನಿಂದಾ ಸ್ತುತಿ

೩೯೮

ರಸನೆಗೆ ರಸವಿದು ತಾರಕನಾಮಾ
ಅಸುವಿಗಸುವು ವಾಸುದೇವನ ನಾಮಾ ಪ
ರಾವಣಾರಿಯ ನಾಮ ಭಾವದಿವ್ಯಾಮೃತ
ಗೋವಳನಾಮವು ಜೀವಜೀವಾಮೃತ೧
ಶಬರಿಗೊಲಿದ ನಾಮ ಅಭಯವೀಯುವ ನಾಮ
ಕುಬುಜೆಗೊಲಿದ ನಾಮಾ ವಿಭವದ ನಾಮಾ ೨
ಅಕ್ಷಯಪದ ನಾಮ ಪಕ್ಷಿವಾಹನ ನಾಮಾರಕ್ಷಕ ಮಾಂಗಿರಿರಂಗನ ನಾಮಾ ೩

೩೯೯

ರಾಮತಾರಕ ಒಂದೆ ಮೂಲಸೂತ್ರ
ಕಾಮವೈರಿಯು ತೋರ್ಪ ಮೋಕ್ಷದಪಾತ್ರ ಪ
ಶ್ರೀಮಹಿಜಾಪ್ರಿಯ ದಿವ್ಯಮಂತ್ರವು ಮಾತ್ರ
ಕಾಮಿತ ಪಡೆಯಲು ಭಕ್ತಿಮಾಡುವ ತಂತ್ರ ಅ.ಪ
ತಾಪಸ ಮಡದಿಯ ಶಾಪವನಳಿಸಿತು
ಪಾಪಿ ದೈತೇಯಳ ಕೋಪವನುರುಬಿತು
ಪರಮೇಶನ ಚಾಪವ ಮುರಿಯಿತು
ಭೂಪತಿ ತನುಜೆಯ ಪಾಪವ ಹರಿಸಿತು ೧
ಅಂಗನೆಗೊಲಿಯಿತು ಮುನಿಗಳ ಸಲಹಿತು
ಹಿಂಗದೆ ರಾವಣಸೋದರಗೊಲಿಯಿತು
ಭಂಗಿಸುವ ದಶಕಂಠನ ವಧಿಸಿತು
ಮಾಂಗಿರೀಶನ ಪಾದವೆಗತಿ ಯೆಮಗೆನಿಸಿತು ೨

೪೦೦

ರಾಮಮಂತ್ರದ ನೆನಪು ಮನಕಂಟಬೇಕು
ರಾಮನಾಮದಿ ರಸನೆ ನಲಿಯುತಲಿರಬೇಕು ಪ
ರಾಮಮೂರ್ತಿಯ ಕಣ್ಣು ಕಾಣುತಲಿರಬೇಕು
ರಾಮಕಥೆಯ ಕಿವಿ ಕೇಳುತಲಿರಬೇಕು ಅ.ಪ
ರಾಮಪಾದದ ತೀರ್ಥ ಕಂಠಕಿಳಿಯಬೇಕು
ರಾಮ ಪ್ರಸಾದವು ತುಳಸಿಯಾಗಿರಬೇಕು
ರಾಮನ ನಿಲಯವೇ ಕ್ಷೇತ್ರವೆನಿಸಬೇಕು
ರಾಮನ ಭಜನೆಯೆ ದಿನಚರಿಯಾಗಬೇಕು ೧
ರಾಮನಯೋಧ್ಯೆಯೆ ಹೃದಯವಾಗಲಿಬೇಕು
ರಾಮಮಂತ್ರದ ಜಪ ಚಿತ್ತದಿ ನಿಲಬೇಕು
ರಾಮನೇ ಮಾಂಗಿರಿರಂಗನೆನಲಿಬೇಕು
ರಾಮಗೆ ಸಕಲವ ಅರ್ಪಿಸಬೇಕು೨