Categories
ರಚನೆಗಳು

ಅಸೂರಿ ರಾಮಸ್ವಾಮಿ ಅಯ್ಯಂಗಾರರ ರಚನೆಗಳು

೧೫೧

ವೇಣುಗೋಪಾಲನಿಲಯೇ ವೀಣಾವಿನೋದವಲಯೇ ಪ
ವಾಣಿ ಗೌರಿನುತೆ ತಾಯೆ | ಪ್ರಾಣತ್ರಾಣದಾತೆ ಸದಯೆ ಅ.ಪ
ಬೃಂದಾವನ ವನವಾಸಿನಿ ಮಂದಾಕಿನಿ ಪ್ರಿತಮೋಹಿನಿ
ಮಂದಾತ್ಮಜ ಸಹಚಾರಿಣಿ ಬೃಂದಾರಕ ಸುಖವರ್ಧಿನಿ ೧
ಇಂದೀವರ ಸುಮಭೂಷಿಣಿ ವಂದೇ ಮಾಂಗಿರೀಶ ತೋಷಿಣಿ ೨

೧೫೨

ಹರಿಮನದಂಬೇ ಪರಮ ಕದಂಬೇ
ಸುರಪನುತೆ ಮಾಂಗಿರೀಶ ಸೌರಭೇ ಪ
ಸಿರಿಮಧುರಭಾಷಿಣೆ ಶ್ರೀಮಣಿ
ಸರಸಿಜನೇತ್ರರಮಣೀ ಸುವಾಣಿ
ವರ ಭೋಗೀಶವೇಣಿ ಸದ್ಗುಣಿ
ಸುರುಚಿರ ಸುಮಪಾಣಿ ಭಾಮಿನಿ ೧
ವನಜಭವ ಪೂಜಿತೇ ವಂದಿತೇ
ಮನಸಿಜಮಾತೆ ಮಹಿತೇ ವಿನೀತೇ
ವೈನತೇಯಾದಿ ಸಂತಾನಕೆ
ಜನಗಣನುತೆ | ರಂಗ ಮೋಹಿತೇ ೨

೧೫೩

ಶ್ರೀ ತುಳಸಿ ಸ್ತುತಿಗಳು
ಇಂದಿರೇಶನ ಅರ್ಧಾಂಗಿ ಬೃಂದೆ ಪಾಲಿಸು ಪ
ಸಿಂಧುಶಯನನೊಡನೆ ಬಂದು ಮಂದಹಾಸವನೀಡು ಅ.ಪ
ದೇವಿ ನಿನ್ನ ಕೃಪೆಯನೆಳಸಿಭಾವ ಭಕ್ತಿಯಿಂದ ಭಜಿಸಿ
ಪಾವನಾಂಘ್ರಿಗಳಿಗೆ ನಮಿಸಿ ಕಾವುದೆಂಬೆವು ತಾಯೆ ತುಳಸಿ ೧
ಕಾಮಿತಾರ್ಥದಾತೆ ಮಾತೆ ಪ್ರೇಮಪೂರ್ಣ ಜಗವಿಖ್ಯಾತೆ
ಸೋಮ ಸೂರ್ಯ ವಿನುತೆ ಚರಿತೆ ಭಾವೆ ಮಾಂಗಿರೀಶ ದಯಿತೆ ೨

೧೫೪

ತುಳಸಿ ನಿನ್ನ ಭಜಿಸುವೆ | ಬಳಸಿ ಬಳಸಿ ನಮಿಸುವೆ ಪ
ಕೊಳಲಬಾಲನರಸಿಯೇ | ನಳಿನವಿಸರಗಂಧಿಯೇ ಅ.ಪ
ಗಾನಕೊಲಿದು ನಲಿವಳೇ | ಎ್ಞÁನವಿತ್ತು ಕಾವಳೆ
ನಿನ್ನಕರುಣೆ ಕೃಷ್ಣನೊಲವು | ನಿನ್ನಸ್ಮರಣೆ ಪಾಪಹರವು ೧
ಮಂಗಳಾಂಗಿ ತುಳಸಿದೇವಿ ರಂಗಗಿರಿಯ ನೀವದೇವಿ
ಮಾಂಗಿರೀಶ ದಯಿತೆ ಮಹಿತೆ ಇಂಗಿತಾರ್ಥವೀವ ಮಾತೆ ೨
ಬೃಂದಾವನ ದಿವ್ಯಸದನೆ ಇಂದೀವರ ಭವ್ಯವದನೆ
ಕುಂದಾವಳಿ ಸದೃಶರದನೆ ನಂದಾತ್ಮಜ ಮನಮೋಹನೆ ೩
ಸರಸವಿರಸಭರಿತೆ ನಮಿತೆ ಪರಮಚತುರೆ ಸುರಸನ್ನುತೆ
ಮುರಳಿಗಾನಲಸಿತೆ ಮಾತೆ ವಂದೆ ಮಾಂಗಿರೀಶಸಹಿತೆ ೪

ಆಳ್ವಾರಾಚಾರ್ಯಸ್ತುತಿಗಳು
೧. ಶ್ರೀ ಆಂಜನೇಯ ಸ್ತುತಿಗಳು

೧೫೫

ನಮೋಸ್ತು ಹನುಮಾನ್ ನಮೋಸ್ತು ಹನುಮಾನ್
ನಮೋಸ್ತು ಹನುಮಾನ್ ನಮೋ ನಮೋ ಪ
ನಮೋಸ್ತು ಧೃತಿಮಾನ್ ನಮೋಸ್ತು ಧೃತಿಮಾನ್
ನಮೋಸ್ತು ಧೃತಿಮಾನ್ ನಮೋ ನಮೋ ಅ.ಪ
ನಮೋಸ್ತು ಶ್ರೀಮಾನ್ ನಮೋಸ್ತು ಧೀಮಾನ್
ನಮೋಸ್ತು ಮರುತಾತ್ಮಜ ಹನುಮಾನ್
ನಮೋಸ್ತು ಬಲವಾನ್ ನಮೋಸ್ತು ವೀರ್ಯವಾನ್
ನಮೋಸ್ತು ಪಂಚಾನನ ರೂಪಾ ೧
ನಮೋ ಸಮೀರಾಂಜನಾಕುಮಾರಾ
ನಮೋ ಬೃಹತ್ಶರೀರಾ ನಮೋ
ನಮೋ ದಿವಾಕರ ಭಯಂಕರಾ ವಿಧಿ
ವರಪ್ರಸಾದಿತ ನಮೋ ನಮೋ ೨
ನಮೋ ನಮೋ ವಾನರೇಂದ್ರ ಸಚಿವಾ ನಮೋ ಜಿತೇಂದ್ರಿಯ ಗದಾಧರಾ
ನಮೋ ನಮೋ ರಾಘವೇಂದ್ರ ಸನ್ನುತ ನಮೋಸ್ತು ಸಕಲಕಲಾಧರ ೩
ವಸುಂಧರಾಪ್ರಿಯ ತನೂಭವಾನ್ಯೇ
ವಸುಗಣೋತ್ಸುಕಾ ಶುಭದಾಯಕಾ
ಹಸನ್ಮುಖಾ ಶ್ರೀರಘೋತ್ತಮ ಪ್ರಿಯಾ
ಯ [ಸಖ] ಖಗೇಂದ್ರಸಮ ಕಪಿನಾಯಕಾ ೪
ಜನಕಸುತಾ ಸುದರ್ಶನ ಹರ್ಷಿತ ವನಭಂಗಕರಾಕರಣಧೀರಾ
ದನುಜನಿಷೂದನ ಚೂಡಾಮಣಿಕರ [ಘನ]
ಲಂಕಾನಗರ ಭಯಂಕರಾ ೫
ಸೀತಾರಾಮಾನಂದ ವರ್ಧಕಾ ಲಕ್ಷ್ಮಣ ಪ್ರತಾಪವಾನ್
ದೂತಕಾರ್ಯ ವಿಜಯೋತ್ಸುಕ ವಾನರ ಪತಿಸಂಪೂಜ್ಯ ಪ್ರದೀಪ್ತವಾನ್ ೬
ರಾಮಾಲಿಂಗಿತ ದಿವ್ಯಶರೀರಾ ರಾವಣದರ್ಪ ವಿನಾಶಕರಾ
ಭೀಮಪರಾಕ್ರಮ ಸಂಜೀವನಧರ ದಾನವತಿಮಿರ ವಿಭಾಕರ ೭
ಗಂಭೀರಶರಧಿ ವಿಲಂಘನಧೀರಾ ಮೈನಾಕಾರ್ಚಿತ ಪರಮೋದಾರಾ
ವಿಭೀಷಣ ಪ್ರಿಯ ಸಖಾಭಿವಂದಿತ ರಘುಪತಿಸೇವಾ ಧುರಂಧರಾ ೮
ತಾರಕ ಮಂತ್ರೋಪಾಸಕ ಹನುಮಾನ್ ಶೂರಭವಿಷ್ಯ ಚತುರ್ಮುಖಾ
ಧೀರೋದಾತ್ತ ಕೃಪಾಕರ ಮಾಂಗಿರಿರಂಗ ನೀಕೇತನ ಬಹಿರ್ಮುಖ ೯

೧೫೬

ಭಜರೇ ಧೀಮಂತಂ ಮಾನಸ ಪ
ಭಜ ಹನುಮಂತಂ ನಿರುಪಮ ಶಾಂತಂ ಮ
ಹಿಜಾನಾಯಕ ಸೇವಾಸಕ್ತಂ ಅ.ಪ
ಪವನ ಕುಮಾರಂ ವಾನರವೀರಂ
ತವ ಭಯಂಕರಂ ಅಕ್ಷ ಸಂಹಾರಂ
ರಾವಣಗರ್ವವಿಭಂಜನ ಶೂರ ಅ
ಭವ ಸಹೋದರ ಪ್ರಾಣ ದಾತಾರಂ ೧
ಸಕಲ ಮಂತ್ರ ತಂತ್ರಾಗಮ ನಿಪುಣಂ
ಸಕಲ ಕಲಾ ಸದ್ಗುಣ ಗಣ ಪೂರ್ಣಂ
ರಾಮಾಯಣ ಮಹಾಮಾಲಾಭರಣಂ
ಶ್ರೀ ಮರಕತಮಕುಟ ವಿರಾಜಿತಕರಂ ೨
ಪಾಪವಿದೂರಂ ವಜ್ರಶರೀರಂ
ಸೀತಾ ಮಾನಸಾನಂದ ಸಮೀರಂ
ತಾರಕ ಮಂತ್ರೋಪಾಸನ ಚತುರಂ
ಮಾಂಗಿರಿರಂಗ ಸೇವಾಪರಮಮರಂ ೩

ಶ್ರೀ ಆಂಡಾಳ್ ಸ್ತುತಿಗಳು

೧೫೭

ತವ ಚರಣಂ ಶರಣಂ ಅಂಡಾಳ್ ಗೋದಾ ಪ
ತವಶುಭಚರಣಂ ಭವಭಯತರಣಂ
ಭುವನಾಭರಣಂ ಪಾತಕಹರಣಂ ಅ.ಪ
ವೇದಾಂತಾಂಬರೆ ಮಾಧವಮಂದಿರೆ
ನಾದಸುಧಾಕರೆ ಸಕಲಸುಖಂಕರೆ ೧
ಕೃಷ್ಣಕಥಾಮೃತ ಸಾಗರಮಂದಿರೆ
ವಿಷ್ಣುಚಿತ್ತಸುತೆ ಕೀರ್ತನಚತುರೇ ೨
ಪೂಮಾಲಾಧರೆ ಪಾಮಾಲಾಕರೆ
ಶ್ರೀಮಾಂಗಿರಿವರ ಶರಣಸುಖಂಕರೆ ೩

೧೫೮

ಪಾಲಯಾಂಶು ಭೂಮಿಸುತೇ ಪುಷ್ಪಮಾಲಾ ಶೋಭಿತೇ ಪ
ನೀಲ ಮೇಘಶ್ಯಾಮ ಮಹಿತೇ ಶ್ರೀಪ್ರಬಂಧ ವಿಲಸಿತೇ ಅ.ಪ
ವಿಷ್ಣುಚಿತ್ತ ಪರಿಪೋಷಿತೇ ಕೃಷ್ಣ ಸುಧಾಮೃತ [ವಿಸ್ತ]ರತೇ
ಕೃಷ್ಣಭಕ್ತ ಸ್ತುತಿಭಾಜಿತೇ ವಿಷ್ಣುಲೋಕದಾತೆ ಮಾತೇ ೧
ಮಂಗಳಾಂಗಿ ಸುಗುಣಭರಿತೇಇಂಗಿತಾರ್ಥದಾತೆ ಪ್ರೀತೆ
ರಂಗನಾಯಕೀ ಸಮೇತ ಮಾಂಗಿರೀಶ ದಯಿತೇ ಮಹಿತೇ ೨

೧೫೯

ವಿಷ್ಣುಚಿತ್ತ ಸುಕುಮಾರಿ
ಕೃಷ್ಣ ಕಥಾಂಬರ ಧಾರಿ ಪ
ಕೃಷ್ಣ ಸುಖಂಕರಿ ಕರುಣಾಲಹರಿ
ವಿಷ್ಣುಭಕ್ತ ಪಾತಕ ಪರಿಹಾರಿ ಅ.ಪ
[ಸೇವೆಗೆ ಕಟ್ಟಿದ ದೇವರ ಮಾಲೆಯಾ
ಕಾವೊಳೋ]ಪಾದಿ ಮುಡಿ[ದಿ]ತ್ತವಳೇ
ಭಾವೈಕ್ಯತೆಯೊಲು ಅರಂಗ ಮಣಿ ಪಾ
ದಾವನು ಚೆಂಗಳೆ ಸೇರಿದಳೇ ೧
ತವ ಪಾದಾಂಬುಜವೇ ಗತಿಯು
ತವ ವಚನಾಮೃತವೇ ಮತಿಯು
ತವ ಸಂಸ್ಮರಣವೆ ಪರಮಸುಖ
[ತವ] ಮಾಂಗಿರಿರಂಗೇಶ ಸನ್ನಿಧಿಯೂ ೨

೧೬೦

ಶ್ರೀರಾಮಾನುಜ ಸ್ತುತಿಗಳು
ಉದಾರಗುಣ ಶಾರದಾಮನೋಹರ
ಸದಾನಂದ ರಾಮಾನುಜಂ ಪ
ಮದೀಯ ಗುರುವರ ಸದಾ ಶ್ರಿತಾಕರ
ತ್ರಿದಂಡಧರ ರಾಮಾನುಜಂ ಅ.ಪ
ವಿಭೂತಿಯುಗ ಸತ್‍ಪ್ರಭಾವಿರಾಜಿತ
ಸುಭೂಜವರ ರಾಮಾನುಜಂ
ಶುಭಪ್ರದಂ ಸಾರಭೂತ ವೈಷ್ಣವ
ವಿಭುಂ ಭಜೇ ರಾಮಾನುಜಂ ೧
ಪಾತಕನಾಶನ ಭೂತವಿಮೋಚನ
ಪತಿತಪಾಲ ರಾಮಾನುಜಂ
ಭೀತಿವಿದಾರಣ ಭವಭಯಹರಣ
ಕರುಣಾಮಯ ರಾಮಾನುಜಂ ೨
ನರೋತ್ತಮಂ ಪಾಂಚರಾತ್ರನಿಗಮಾ
ಧರಾಂಬುಧರ ರಾಮಾನುಜಂ
ಪರಾತ್ಪರ ಮಾಂಗಿರೀಶ ಪದ
ಚಂಚರೀಕ ಮುನಿ ರಾಮಾನುಜಂ ೩

೧೬೧

ಪ್ರಣಮಾಮಿ ಗುರುರಾಜ ಪಾದಾಬ್ಜಮನಿಶಂ
ಪೂರ್ಣಂ ಅಭಿಮಾನಂ ಶಿರಸಾ ಮನಸಾ ದಿಪ ಪ
ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಕಾವ್ಯಂ
ಗುಣಭೂಷಣ ಪಾತಕಸಂಹರಣ ಪರಮಾರ್ಥ ಚರಿತ ಅ.ಪ
ನಯನೀತಿ ವಿನಯಾದಿ ಸುಗುಣಾಕರ ಮೂರ್ತೇ
ಭಯನಾಶಕ ಭವಬಂಧನಸಂಹಾರಕ ಕೀರ್ತೇ
ಜಯದಾತ ಜಗದೀಶ ಪವನಾತ್ಮ ಅವತರಣ
ಪ್ರಿಯ ಭಾಷಣ ಮಾಂಗಿರಿರಂಗೇಶ್ವರ ಸೇವಾ ಚಾರುಕೀರ್ತಿಯುತೇ ೧

ಶ್ರೀವೈಷ್ಣವ ದರ್ಶನವನ್ನು

೧೬೨

ಯತಿರಾಜಂ ಭಜರೇ ಮಾನಸಪತಿತೋದ್ಧಾರಕ ಯದುಗಿರಿ ನಿಲಯ ಪ
ಶ್ರೀಮದ ದಾಶರಥೀನುತ ಚರಣಂಯಾಮುನಾ ಮುನಿ ಸಂಭಾವಿತ ಕರುಣಂ
ಶ್ರೀಮದನಂತಂ ಕರುಣಾಭರಣಂರಾಮಾಯಣ ಮೂಲತತ್ವ ವಿಸ್ತರಣಂ ೧
ಸಕಲವೇದ ಶಾಸ್ತ್ರಾಗಮ ನಿಪುಣಂವಕುಳಾಭರಣ ಪಾದಾಂಬುಜ ಭರಣಂ
ಮುಕುಳಿತ ವೈಷ್ಣವ ತತ್ವೋದ್ಧರಣಂ[ವಿಕಸಿತ ವಿಶಿಷ್ಟಾದ್ವೈತ ವಿಶೇಷಂ] ೨
ವ್ಯಾಸ ತತ್ವಸಾರಾಬ್ಧಿ ವಿಸ್ತರಣಂವಾಸುದೇವಕೃತ ಗೀತೋದ್ಧರಣಂ
ವಾಸವನುತ ಮಾಂಗಿರಿಹರಿ ಚರಣಂದಾಸದಾಸೀಜನ ಪಾತಕಹರಣಂ ೩

ಸರ್ವದೈವ ಸ್ತುತಿಗಳು
೧. ಶ್ರೀ ಗಣಪತಿ ಸ್ತುತಿಗಳು

೧೬೩

ಗಜಮುಖ ಗಣಪ ಪಾಹಿಮಾಂ ಪ
ತ್ರಿಜಗಾಧಿಪ ಸಂಪೂಜಿತ ಅಜವಂದಿತ ಏಕದಂತಂ ಅ.ಪ
ಗಿರಿಜಾಸುತ ಸುಖವರ್ಧನ | ಉರಗಾಧಿಪ ಕಟಿಬಂಧನ
ವರದಾ ಮೌಕ್ತಿಕ ರದನ [ವರಮಾಷಿಕವಾಹನಾ] ೧
ಗಂಗಾಧರ ಮನಮಂದಿರ ಇಂಗಿತೇಷ್ಟದಾತಾರ
ಮಂಗಳ ಪಾಶಾಂಕುಶಧರ ಮಾಂಗಿರೀಶ ಪ್ರಿಯಶಂಕರ ೨

೧೬೪

ಗಜಾನನಂ ಲೋಕನುತಂ | ಸ್ಮರಾಮಿ ಗೌರಿಕೃತ ಸುತಂ
ಅಜಾಮರೇಶ ನಿಕರನುತಂ | ಸನ್ನುತ ಭಕ್ತಾಶಯದಂ ಪ
ಸನಕಾದಿ ಸ್ತುತಂ ಹಿತಂ | ಶುಭಪ್ರದರತಂ ಮತಂ ಅ.ಪ
ಕಲ್ಪಭೂಜಂ ಸಾನುಜಂ | ಪಾಶಧರ ಸಾಮಜಂ
ಪ್ರಸನ್ನ ಚತುರ್ಭುಜಂ | ಕಾರ್ತಿಕೇಯ ಮಹಾಗ್ರಜಂ
ಪರಶಿವ ಕಾಮಿತ ತನುಜಂ | ಫಣಿಬಂಧಯುತಂ
ಸುಭುಜಂ ಪ್ರಮಂಧ ಸೇವ್ಯ ವನಜಂ |
ಮಹಾಗಣೇಶ ಪಿತರಜಂ ೧

೧೬೫

ಗಿರಿತನುಜಾ ತನಯಂ ವಂದೇತಂ ಪ
ಹರಿಹರ ವಿನುತಂ ಸುರಪತಿನಮಿತಂ
ಕರಧೃತ ಪಾಶಾಂಕುಶ ದಯಭರಿತಂ ಅ.ಪ
ಸಾಮಜವದನಂ ಮಣಿಮಯರದನಂ
ಹೇಮಾಂಬರಧರ ಕರುಣಾಸದನಂ
ಕಾಮಿತ ಫಲದಂ ಸರಸಿಜನಯನಂ
ಶ್ರೀಮಾಂಗಿರಿವರದಾ ಭಾವಿತಮದನಂ ೧

೧೬೬

ಪಾಲಿಸುಗಣನಾಯಕಾ ವಿನಾಯಕ ಪ
ಶೂಲಪಾಶಾಂಕುಶಧೃತ ವರದಾಯಕ ಅ.ಪ
ಲಂಬೋದರಾಂಕಿತ ಜಂಭಾರಿವಂದಿತ
ಕುಂಭೋದ್ಭವಾನತ ಅಂಬಾಸುತ
ಅಂಭೋಜ ಸಖನುತ ಗಂಭೀರ ಗುಣಯುತ
ಜಂಬೂ ಕಪಿತ್ಥಫಲ ಸಾರ ಸಂತೋಷಿತ ೧
ಆತಂಕಪರಿಹಾರ ಮಾತಂಗಮುಖವೀರ
ಶೀತಾಂಶುಶೃಂಗಾರ ಶ್ವೇತಾಂಬರ
ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ
ದಾತಾರ ಮಾಂಗಿರಿನಾಥಾ ಕೃಪಾಧರ ೨

ವಿವಿಧ ದೈವ ಸ್ತುತಿ

೧೬೭

ಜಲರುಹ ಮೋಹನ ವಿಶಾಲ ನೇತ್ರ ಪ
ಗಾನಾನಂದ ಲೋಲ ಬಂಧುರ ಗಾನಾನಂದ ಲೋಲಾ
ಗೋಪಾಲ ವನಮಾಲ ಗೋಕುಲ ಗೋಪಾಲ ವನಮಾಲ ಅ.ಪ
ದಶರಥ ನಂದನ ವಿಶಾಲಹೃದಯ
ಸತ್ಯಧರ್ಮಶೀಲ ರಾಘವ ಸತ್ಯಧರ್ಮಶೀಲ
ಖಲಾಳಿಕುಲಶೂಲ ರಾಘವ ಖಲಾಳಿಕುಲಶೂಲಾ ೧
ಪುರಹರ ಶಂಕರ ಕೃಪಾ ಸಮುದ್ರ
ನಾಟ್ಯನಾದ ಚತುರ ಶ್ರೀಕರ ನಾಟ್ಯನಾದ ಚತುರ
ಪಿನಾಕ ಶಶಿ ಶೇಖರ ಶಂಕರ ಪಿನಾಕ ಶಶಿಶೇಖರ ೨
[ಶ್ರೀರಾಮಪ್ರಿಯ ಭಕ್ತಾಗ್ರೇಸರ]
ಪವನಾತ್ಮಜ ಶೂರ ಹನುಮಾನ್ ಪವನಾತ್ಮಜ ಶೂರ
ಮರಕತ ಮಣಿಹಾರ ಮಾರುತಿ ಮರಕತ ಮಣಿಹಾರ ೩
ಶರಣ ಜನಾನುತ ಗಿರೀಶ ಸದೃಶ
ಸತ್ಯಸಾಯಿಬಾಬ ಪಾಲಯ ಸತ್ಯಸಾಯಿಬಾಬ
ಪರಮದಯಾಹೃದಯಾ ಸವಿನಯ ಪರಮದಯಾಹೃದಯ ೪

೧೬೮

ನಾಟ್ಯಕಲಾವಿದ ಶಿವನೋ ಕೇಶವನೋ
ನಾಟ್ಯಕೆ ನಲಿವನಾ ಭವನೋ ಮಾಧವನೋ ಪ
ನಾಟ್ಯಾಪ್ಸರಗಣವೇಷ್ಟಿತನಿವನು
ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ
ಝಣ ಝಣ ಝಣರವ ರಣಿಪನಿವನು
ಕಿಣಿ ಕಿಣಿ ಕಿಣಿರವ ಚೆಲ್ಲುವನವನು
ಗಣ ಗಣ ನಾದದಿ ವರ್ತಿಪನಿವನು
ಮಣಿಗಣನಾದದಿ ನರ್ತಿಪನವನು ೧
ಮುರಳಿಯಗಾನವ ಪಾಡುವನಿವನು
ನಿರುಪಮ ದಿವಿಜಾ ನರ್ತಕನವನು
ಭರತನಾಟ್ಯ ಕಲಾ ಕೋವಿದನಿವನು
[ವರ ನಾಟ್ಯ ನಟನಾ ನಿಪುಣನವನು] ೨
ಭೇರಿನಗಾರೀ ತುತ್ತೂರಿ ಡಮರುಗ
ಕರಿಮುಖ ಷಣ್ಮುಖಯುತ ಭಸಿತಾಂಗ
ನಾರದ ತುಂಬುರ ವೀಣೆ ಮೃದಂಗ
ಸಾರಗಾನಯುತ ಮಾಂಗಿರಿರಂಗ ೩

೧೬೯

ಕಾವೇರಿ ಕನ್ಯಾರ್ಚಿತ ಸುಚರಿತ
ದಿವಾಕರಾನತ ಸುರೇಶ ವಿನಮಿತ ಪ
ಭವಾಬ್ಧಿ ವಿರಹಿತ ಸಮೀರಸುತನುತ
ಶಿವಾ ನೃಹರಿ ಮಾಧವಾ ಕೃಪಾಯುತ ಅ.ಪ
ರಮೇಶ ಧರಣಿಪ ಕುಮಾರ ಶಿರಧರ
ಸುಮಾನ ವಿರಹಿತ ಪರಾತ್ಪರಾ
ಶಮಾ ದಮಯು ತಕ್ಷಮಾ ಸುಧಾಕರ
ನಮಾಮಿಶಂಕರ ವಿಮಾನಮಂದಿರ ೧

(೩) ಶಿವಸ್ತುತಿಗಳು

೧೭೦

ನಮೋ ಗಿರೀಶ್ವರ ನಮೋ ಸುರೇಶ್ವರ
ನಮೋ ಧರೇಶ್ವರ ಗಂಗಾಧರಾ ಪ
ರಮಾರಮಣ ಹರ ಕುಮಾರ ಪಿತಹರ
ನಮಾಮಿ ಶಂಕರ ಗಂಗಾಧರಾ ಅ.ಪ
ಬಾಲಾರ್ಕ ಸುರುಚಿರ ಬಾಲೇಂದುಶೇಖರ
ಬಾಲಾಂಬಿಕಾ ವರಗಂಗಾಧರಾ ೧
ಮಹಾಜಟಾಧರ ಮಹಾನಟೇಶ್ವರ
ಮಹಾ ಮಹೇಶ್ವರ ಗಂಗಾಧರ ೨
ಮಹಾ ಮಹಿಮರ ಮಹಾಚತುರ ಹರ
ಮಹಾ ಮುನೀಶ್ವರ ಗಂಗಾಧರ ೩
ಪರೇಶ ನಿರುಪಮ ಪರಾಕ್ರಮಾ ಹಿಮ
ಗಿರೀಂದ್ರ ಧಾಮಾ ಗಂಗಾಧರ ೪
ಸುರಾಸುರೋತ್ತಮ ಕರಾರ್ಚಿತಾ ಮಾಂ
ಗಿರೀಶ ನಾಮಾ ಗಂಗಾಧರಾ ೫

೧೭೧

ಪರಮೇಶ್ವರಾ ಕರುಣಾಕರಾ
ಗಿರಿಜಾಪ್ರಿಯ ಸೋಮಶೇಖರಾ ಪ
ಪರಮ ವೇದ ಸಾರ ಶರನಿಧಿ ಗಂಭೀರ
ಸ್ಮರಹರಾ ಉದಾರ, ಪಾಹಿಶಂಕರ ಅ.ಪ
ಕಮಲಾಕ್ಷ ಮಿತ್ರ ಕಮನೀಯಗಾತ್ರ
ಅಮರಾರಿ ವೇತ್ರ ವಿಮಲಾ ತ್ರೀನೇತ್ರಾ
ರಮಣೀಯ ಚಾರಿತ್ರ ಹಿಮಶೈಲಜಾಪಾತ್ರ
ಅಮರೇಂದ್ರನುತ ಗೋತ್ರ ಶರಣಾತಪತ್ರ ೧
ಉರಗ ವಿಭೂಷಣ ಪರಿಜನ ತೋಷಣ
ಸುರನದಿ ರಮಣಾ ಭವಭಯ ಭೀಷಣ
ದುರಿತ ನಿವಾರಣ ಪರಮ ಕೃಪಾಗುಣ
ಪರಶಿವ ಮಾಂಗಿರಿಶೃಂಗಾಭರಣಾ ೨

೧೭೨

ಪರಮೇಶ್ವರಾ ಸೋಮಶೇಖರಾ ಪ
ಗಿರಿಜಾವರಾ ಕರುಣಾಕರಾ ಅ.ಪ
ಆದಿಮೂಲಾ ದೇವಾದಿದೇವಾ ಶಿವ
ನಾದರೂಪ ಜೀವಾದಿಜೀವ ಶಿವ
ವೇದವಿದಿತ ವೇದಾಂತರೂಪ ಶಿವ
ವಾದವಾಕ್ಯ ಮಹಾಹ್ಲಾದ ವೈಭವಾ ೧
ಅಂಗಜಾರಿ ಚರ್ಮಾಂಬರಧಾರಿ
ರಂಗನಾಥ ಮಾಂಗಿರಿ ಸಂಚಾರಿ
ಮಂಗಳಾಂಗ ಪಾತಕ ಪರಿಹಾರಿ
ಲಿಂಗರೂಪ ಶುಭಕಾರಕ ಶೌರಿ೨

೧೭೩

ಪರೇಶ ಸರ್ವೇಶ ಗಂಗಾಧರಾ
ಗಿರೀಶ ಗೌರೀಶ ಕೃಪಾಕರಾ ಪ
ಸುರೇಶ ಸುಖಕರ ಬಾಲೇಂದುಧರ ಹರ
ಧರೇಶ ಶುಭಕರ ಭವಾಭ್ದಿ ಪರಿಹರ ಅ.ಪ
ಉಮಾಮಹೇಶ್ವರ ಕುಮಾರಪಿತ ಹರ
ನಮಾಮಿ ಶಂಕರ ಪರಾತ್ಪರಾ ೧
ಪಿನಾಕಧರಕರ ಪುರಾರಿ ಸ್ಮರಹರ
ತ್ರಿನೇತ್ರ ಹರ ಮಾಂಗಿರೀಶ ಸಹಚರ೨

೧೭೪

ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ
ಬಾಲಸೂರ್ಯ ಸದೃಶ ವದನ ಕಾಲಕಾಲ ಮೌನಿ ಸದನ ಅ.ಪ
ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ
ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು ೧
ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ
ಮ ದೇವ ಮಾಂಗಿರಿರಂಗ ಚರಣಯುಗವ ತೋರಿ೨

೧೭೫

ಮಾಂ ಪಾಲಯಾಶು ಗಂಗಾಧರ
ಚಂದ್ರಶೇಖರ ಗೌರೀವರ ಪ
ನೀಲಾಂಬರ ಕೇಶಪಾಶಹರ
ಶಿವಶಂಕರ ಕರುಣಾಕರ ಅ.ಪ
ಚರ್ಮಾಂಬರ ಪರಮೇಶ್ವರಾ
ದಾನವೇಶ್ವರಕುಲಕುಠಾರ ಧೀರ
ದಿವಿಜೋಪಕಾರ ಶರಚಾಪಧರ
ಮನಸಿಜಸಂಹಾರ ಮಾಂಗಿರೀ ವಿಹಾರಾ ೧

೧೭೬

ರಜತಗಿರೀಶ್ವರ ಮಹಾನುಭಾವ
ಗಜಚರ್ಮಾಂಬರ ನಮೋ ನಮೋ ಪ
ವಿಜಯರಾಮಾರ್ಚಿತ ಪದಕಮಲ
ಅಜಸುತ ಸೇವಿತ ನಮೋ ನಮೋ ಅ.ಪ
ವಾರಣಾಸಿ ಸುಕ್ಷೇತ್ರ ನಿವಾಸ
ಪರಮೋಲ್ಲಾಸ ನಮೋ ನಮೋ
ಭೂರಿ ವೈಭವಾನಂದ ವಿಲಾಸ
ರವಿಶತಭಾಸಾ ನಮೋ ನಮೋ ೧
ನಾದಾಲಂಕೃತ ವರದಾತಾ ಶ್ರೀ
ಗೌರಿಯುತ ನಮೋ ನಮೋ
ಭಾಗೀರಥೀಪ್ರಿಯ ಲೋಕನುತ
ದೇವೇಂದ್ರಾತ ನಮೋ ನಮೋ೨
ಮಂಗಳದಾಯಕ ಶಶಿಶಿಖರ
ಸಂಗವಿದೂರಾ ನಮೋ ನಮೋ
ಮಾಂಗಿರಿ ಶೃಂಗವಿರಾಜಿತಶಂಕರ
ಶರಣಶುಭಂಕರ ನಮೋ ನಮೋ ೩

೧೭೭

ಶಿವ ಶಿವ ಶಂಕರ ಮಹಾದೇವ
ಭವ ಭಯಹರ ನಮೋ ಸದಾಶಿವ ಪ
ಕಮನೀಯಾನನ ಸುಮನಸಪಾಲನ
ಉಮೆಯ ರಮಣ ಘನಸುಮಶರದಹನ
ವಿಮಲವಿಲೋಚನ ಶಮಾ ದಮಾ ಭವನ
ಪ್ರಮಥಗಣಾನನ ಪಾವನಸದನಾ ೧
[ಬಾಲ ಗಣಪಪಿತ ಸರ್ವೇಶ್ವರಾ]
ನೀಲಕಂಠ ಸೋಮಶೇಖರಾ
ಶೂಲಪಾಶಕರ ಫಾಲಾಂಬಕಹರ
ಕಾಲಕಾಲ ಕರುಣಾಲವಾಲ ಹರ ೨
ಸಕಲ ಸುಗುಣಗಣ ಪಾತಕಹರಣ
ಸಕಲಲೋಕ ಸನ್ನುತ ಪಾವನಚರಣ
ಸಕಲ ದನುಜಗಣ ಜೀವನಹರಣ
ಸಕಲಾನತ ಮಾಂಗಿರಿಪತಿ ಕರುಣ ೩

೧೭೮

ಸಾಂಬಶಿವಾ ಭಕ್ತಿಮಾರ್ಗದಿ ನಡೆಸೋ
ಅಂಬುಜಾಕ್ಷನ ದಿವ್ಯನಾಮವ ನುಡಿಸೋ ಪ
ನಂಬಿದ ಭಕ್ತನ ಕೊರತೆಯ ಬಿಡಿಸೋ
ಶಂಬರಾರಿಯ ಪಿತನ ಚರಣವ ಹಿಡಿಸೋ ಅ.ಪ
ಮಾನವರಿಷ್ಟವ ಸಲ್ಲಿಸುವೆಯಂತೆ
ದೀನರೊಳನುಕಂಪ ನಿನಗುಂಟಂತೆ
ಎ್ಞÁನ ವೈರಾಗ್ಯ ನಿಧಿ ನೀನಂತೆ
ದೀನಗೊಲಿದು ವರವೀಯುವೆಯಂತೆ ೧
ಕಾಮಿತವೆನ್ನದು ಒಂದೇ ಅಯ್ಯ
ಆ ಮಾಂಗಿರಿಪತಿ ಕರುಣೆ ಅದಯ್ಯ
ರಾಮತಾರಕನಾಮ ಎನಗಿರಲಯ್ಯ
ನೀ ಮನಮಾಡೆ ಕೃತಾರ್ಥ ನಾನಯ್ಯ ೨

ದಶಾವತಾರದ ವರ್ಣನೆ

೧೭೯

ಶ್ರೀ ಪಾರ್ವತಿ ಸ್ತುತಿಗಳು
ಅಂಬಾ ಮನೋನಾಯಕಾ
ಶಂಭೋಮಹಾನಂದ ಸಂದಾಯಕ ಪ
ಕುಂಭೋದ್ಭವಾನತ ಜಂಭಾರಿವಂದಿತ
ಅಂಭೋಜ ಭವನುತ ತ್ರಿಲೋಚನಾ ಜಗದಂಬಾ ಅ.ಪ
ಈಶ ಪರೇಶ ಗಿರೀಶ ಮಹೇಶಾ
ಕ್ಲೇಶವಿನಾಶಾ ದಿನೇಶಪ್ರಕಾಶಾ
ಪಾಶ ತ್ರಿಶೂಲಾಲಂಕಾರ ಕಲುಶವಿನಾಶಾ
ನಮಿಪೆ ಮಾಂಗಿರೀಶ ಶಿವ ಜಗದಂಬಾ ೧

೧೮೦

ಓಂಕಾರ ರೂಪಿಣಿ ಭದ್ರಾಣಿ ಕಲ್ಯಾಣಿ
ಪಂಕೇಜದಳಲೋಚನೀ ಅಂಬಾ ಪ
ಶಂಕರ ಪ್ರಿಯರಾಣಿ ಗೀರ್ವಾಣೆ ರುದ್ರಾಣಿ | ಸ
ರ್ವ ಮಂಗಳವಾಣಿ | ಕರುಣಿ ಶುಶ್ರೋಣಿ ಅ.ಪ
ಹೈಮವತೀ ಮಾತೆ | ಹಿಮಗಿರಿ ತನುಜಾತೆ
ಭಾಮೆ ಸ್ವಯಂಜಾತೆ | ಸುರಮೌನಿಗೀತೆ
ಪ್ರೇಮ ರಸಾನ್ವಿತೇ | ರಾಮಾಭಿನಂದಯುತೆ
ಶ್ರೀಮಾಂಗಿರೀಶ | ರಂಗಸಹಜಾತೆ ೧

೧೮೧

ದೇವಿ ವಿಶಾಲಾಕ್ಷಿ ತಾಯೆ ಪಾವನೆ ಜಲಜಾಕ್ಷಿ ಕಾಯೆ ಪ
ಪಾವಕ ನೇತ್ರ ಪ್ರಿಯೆ ಕಾಮಾಕ್ಷಿ ಅ.ಪ
ಅನ್ನಪೂರ್ಣೇಶ್ವರಿ ಶಿವಕಾಮೇಶ್ವರಿ
ಸನ್ನುತ ಶುಭಕರಿ ಪನ್ನಗ ಕಬರಿ
ರನ್ನೆ ತಳೋದರಿ ಕರುಣಾಲಹರೀ
ಮನ್ನಿಸು ಮಾಂಗಿರಿರಂಗ ಸಹೋದರಿ ೧

೧೮೨

ಪಾಲಯ ಗಂಗಾಧರಪ್ರಿಯ ರಮಣಿ
ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ
ಶ್ರೀಲಲಿತೆ ವರದಾಯಕ ಮಹಿತೆ
ಬಾಲಗೋಪಾಲ ಸೋದರಿ ಶುಭಚರಿತೆ ೧
ದೇವಿ ಭವಾನಿ ಶಿವೆ ಕಾತ್ಯಾಯಿನಿ
ಪಾವನಿ ಭಾಮಿನಿ ತ್ರಿಜಗನ್ಮೋಹಿನಿ ೨
ಮಂಗಳದಾಯಕಿ ಶಂಕರನಾಯಕಿ
ಮಾಂಗಿರಿರಂಗ ಕೃಪಾಂಬರದಾಯಕಿ ೩

೧೮೩

ಪಾಲಿಸು ಪರಮೇಶ್ವರಿ ಅಂಬಾ ಪ
ಶ್ರೀಲಲಿತೇ ಗೌರಿ ಶೌರಿಸಹೋದರಿ
ಫಾಲಾಕ್ಷಸಹಚರಿ ಬಾಲೇಂದುಶೇಖರಿ ಅ.ಪ
ಭ್ರಮರಾಂಬೆ ದುರಿತಾರಿ ಹಿಮವಂತ ಸುಕುಮಾರಿ
ಹೇಮಾಂಬರಧಾರಿ ಜಗದೀಶ್ವರೀ
ಸೋಮಾರ್ಕ ಜಂಭಾರಿ ವಿನುತೆ ಮಾಹೇಶ್ವರಿ
ಶ್ರೀಮಾಂಗಿರೀನಾಥ ಪ್ರೇಮಾಂಬುಲಹರೀ ೧

೧೮೪

ಶಾಂಭವಿ ಸುಖದಾಯಿನಿ
ಅಂಬಾ ಮಹೇಶ್ವರ ಮನಮೋಹಿನಿ ಪ
ಉಮಾವಇಹೇಶ್ವರಿ ಭವಾನಿಗೌರೀ |
ರಮಾವಿನುತ ಹರಿಸಹೋದರೀ
ಶಮಾ ಶುಭಂಕರಿ ಶಾಕಾಂಬರೀ
ನಮಾಮಿ ಶಂಕರೀ ಲೋಕೇಶ್ವರೀ ೧
ಮಾರವೈರಿರಾಣಿ ನೀರಜಾತಪಾಣಿ
ಶಾರದೇ ಶರ್ವಾಣಿ ಗೌರಿ ಕಲ್ಯಾಣಿ
ಸಾರ ಮಧುರವಾಣಿ ನಾರಿ ಭುಜಗವೇಣಿ
ಘೋರದೈತ್ಯ ಸಂಹಾರಿಣಿ ದೇವಿ ರುದ್ರಾಣಿ ೨
ಈಶ ಮನೋಹರೆ ಪಾಶಾಂಕುಶಧರೇ
ಶ್ರೀಶಿತಿಕಂಠ ವಿಲಾಸ ವಿಹಾರೆ
ಕ್ಲೇಶನಾಶಕರೇ ಭಾಸುರ ಮುಕುರೇ
ಶ್ರೀಶ ಮಾಂಗಿರಿವಾಸ ತೋಷಣಚತುರೆ ೩

೧೮೫

ಶಿವ ಮೋಹಿನಿ ವನಮಾಲಿನಿ ಲಲನಾಮಣೀ ಜನನೀ ಪ
ಭವನಾಶಿನಿ ರವಿರಂಜಿನಿ ಕಾತ್ಯಾಯನೀ
ಜಯತು ಜಯತು ಜಯತು ಅ.ಪ
ಅಂಬಾ ಶಶಿಬಿಂಬಾ ಜಗದಂಬಾ ಮೃದುಳಾಂಬಾ
ಲಂಬೋನ್ನತ ಕುಂಭಸ್ಥಲೇ ಶುಂಭಾಸುರ ಡಿಂಬಾ ೧
ಸ್ವರ್ಣಾಂಬಿಕೆ ಸ್ವರ್ಣೇಶ್ವರಿ ಸ್ವರ್ಣೋಪಮವದನೆ
ಸ್ವರ್ಣಗೌರಿ ಸ್ವರ್ಣಶಿವೆ ಸ್ವರ್ಣಪ್ರಿಯೆ ದಯಾಕರೆ೨
ಗಂಗಾಧರ ಅಂಗಸ್ಥಿತೇ ಗಂಗಾರ್ಚಿತೆ ಮಹಿತೇ
ಮಂಗಳಕರ ಮಾಂಗಿರೀಶ ರಂಗಾನುಜೆ ಲಲಿತೇ ೩

೧೮೬

ಶಾರದಾಸ್ತುತಿ

ದಯಮಾಡು ದಯಮಾಡು ಶಾರದಾಂಬೇ
ನಯ ನೀತಿ ಕಲೆ ಭಾಗ್ಯ ಘನ ಕುಟುಂಬೇ ಪ
ಜಯ ವಿಜಯ ಯಶಭೋಗ ಶ್ರೀಕರಾಂಬೇ
ಭಯ ಭೀತಿ ಪರಿಹಾರೆ ವರಕದಂಬೆ ಅ.ಪ
ಸರಸಿಜಾಸನರಾಣಿ ವೇಣಿ ಫಣಿ ಕಲ್ಯಾಣಿ
ಸರಸಗುಣಿ ಗೀರ್ವಾಣಿ ವೀಣಾಪಾಣಿ ೧
ಸಾರತರ ಶುಕವಾಣಿ ನೀರೇಜ ಮೃದುಪಾಣಿ
ಭೂರಿದಯೆ ಸುಶ್ರೋಣಿ ದೇವಿ ಶುಭವಾಣಿ ೨
ಸಕಲ ಲೋಕಖ್ಯಾತೆ ಸಕಲ ಜಗಸನ್ನುತೇ
ಸಕಲ ಜಗವಂದಿತೇ ಸಕಲ ಶುಭಗೀತೇ
ಸಕಲ ವೈಭವದಾತೇ ಸಕಲ ಸದ್ಗುಣ ಲಸಿತೇ
ಸಕಲ ಸನ್ನುತೇ ಮಾಂಗಿರೀಶ ವಿನುತೇ ೩

೧೮೭

ಸಾರಸಭವ ಮೋಹಿತೆ ದೇವಿ ಜಗನ್ಮಾತೆ ಪ
ಚಾರುಕೀರ್ತಿ ಪರಿಶೋಭಿತೆ ಲಾವಣ್ಯಾಂಬರಭೂಷಿತೆ ಅ.ಪ
ಸುರನುತೆ ಶಾರದೆ ಬುಧಗಣಸೇವಿತೆ ಮಯೂರರಂಜಿತೆ
ವರ ಮಾಂಗಿರಿವರ ಭಾವಿತೆ ಪಾಹಿಮಾಂ ಲೋಕವಂದಿತೆ ೧

೧೮೮

ನಿನ್ನ ನಂಬಿದೆ ಓ ಶಾರದೇ ಪ
ಸನ್ನುತಾಂಗಿ ಇನ್ನೂ ಕರುಣ ಬಾರದೆ ಅ.ಪ
ಸಕಲಕಳಾಧರೆ ಸಕಲಕಲಾಧರೆ
ವಿಕಸಿತ ಸುಮಹಾರೆ ಎ್ಞÁನಸಮೀರೆ
ಪ್ರಕಟಿತ ಮಧುರ ಜಪಮಾಲಾಕರೆ
ಶಿಖಿ ವೀಣಾಧರೆ ಮೃದುತನುರುಚಿರೆ ೧
ಧಾತಾ ಮನೋನ್ಮಣಿ ಧ್ವಾಂತ ಸಂಹಾರಿಣಿ
ಪಾತಕವಾರಿಣಿ ಮಾತೆ ಕಲ್ಯಾಣಿ
ಭೂತಲ ಕಣ್ಮಣಿ ರಾಗತರಂಗಿಣಿ
ಖ್ಯಾತಚರಿತ ಮಾಂಗಿರಿವರತೋಷಿಣಿ ೨

೧೮೯

ತುಳಸೀ ಸ್ತುತಿ
ಶ್ರೀ ತುಳಸೀ ಮಾಧವ ಹೃದಯೆ ಪ
ಸೀತಕರಾರ್ಚಿತೆ ಪಾವನನಿಲಯೆ
ಪೀತಾಂಬರಧರ ಶ್ರೀಹರಿಜಾಯೆ ಅ.ಪ
ಚಂದಿರವದನೆ ಮರಕತರದನೆ
[ಸುಂದರ] ಮಣಿಮಯಸದನೆ ಪರಮಪಾವನೆ
ನಂದ ತನುಜ ಮನಮೋಹನ ಲಲನೆ
ಇಂದೀವರದಳ ಕೋಮಲನಯನೆ ೧
ಕಾಮಿತದಾತೆ ಸುರಗುರುನಮಿತೆ
ಪ್ರೇಮರಸಾನ್ವಿತೆ ಗುಣಭರಿತೇ
ಭೂಮಿದೇವಿಸುತೆ ಬೃಂದಾವನ ಲಸಿತೇ
ಶ್ರೀಮಾಂಗಿರಿವರ ರಂಗಮಹಿತೇ೨

೧೯೦

ಶ್ರೀ ಸುಬ್ರಹ್ಮಣ್ಯಸ್ತುತಿ
ಮಾಮವ ಸುಬ್ರಹ್ಮಣ್ಯ ಹೈವಇವತಿಸುತ ಘನಕಾರುಣ್ಯ ಪ
ಕಾಮಿತದಾಯಕ ಭೀಮಪರಾಕ್ರಮ
ಸಾಮಗಾನಪ್ರಿಯ ಕೋಮಲಕಾಯ ಅ.ಪ
ವೇಲಾಯುಧ ಸಂಭ್ರಾಜಿತ ವರದಾ
ನೀಲಕಂಠವಾಹನ ಚಿರಸುಖದಾ
ಶ್ರೀಲಲಿತಾ ಮನಾಕರ್ಷಿತ ನಾದ
[ಬಾಲ]ಕೇರಳಪುರವಾಸ ವಿನೋದ ೧
ಭವಭಯನಾಶನ ಪವನ ಷಡಾನನ
ರವಿಸಮಲೋಚನ ನವಮಣಿಸದನಾ
ಭುವನಮನೋಹರ ಸಾಸಿರವದನಾ
ಶಿವಪ್ರಿಯನಂದನ ತಾರಕದಮನಾ ೨
ಸಂತನಾನತ ಶಾಂತವಿನೀತ
ಸಂತತ ಮಾತಾ ಲಲಿತಾ ಸಹಿತಾ
ಚಿಂತಿತಾರ್ಥದಾತಾರಾ ಕೃಪಾಯುತ
ಅಂತರಾತ್ಮ ಮಾಂಗಿರಿಪತಿ ಶೋಭಿತ೩

೧೯೧

ಶಂಕರನಂದನ ನಮೋ ನಮೋ
ಕಿಂಕರಪಾಲಕ ನಮೋ ನಮೋ ಪ
ಪಂಕಜಭವನುತ ನಮೋ ನಮೋ
ಸಂಕಟ ಪರಿಹರ ನಮೋ ನಮೋ ಅ.ಪ
ಅಂಕುಶ ಪಾಶಾಯುಧ ಶೋಭಿತಕರ
ಓಂಕಾರಪ್ರಿಯ ದಿವ್ಯಶರೀರಾ
ಶಂಕರ ಸುಖಕರ ಭವಪರಿಹಾರ
ಅಂಕನಾಥ ಸರ್ವೇಶ ಮನೋಹರ ೧
ಗಿರಿಜಾನಂದ ಕುಮಾರ ಶರಣಾಗತ ಪರಿವಾರ
ವರಕೈಲಾಸ ವಿಹಾರ | ಸುರುಚಿರ ವಜ್ರಶರೀರಾ
ಶರವಣಭವ ಭುಜಗೇಶ | ಕರುಣಾಕರ ಜಗದೀಶ
ಹರಿಪರ್ಯಂಕ ಪರೇಶ ಮುದಗಾಂಕಿತ ಧೃತಕೋಶ ೨
ಸಂತನಾಪ್ರಿಯಧಾಮ ಶಾಂತರೂಪ ಗುಹನಾಮ
ಚಿಂತಾ ಜಲನಿಧಿ ಭೀಮ | ಸಂತ ಶರಣಜನ ಪ್ರೇಮ
ಚಿಂತಿತಾರ್ಥದಾಯಕ ನಿಸ್ಸೀಮ
ಅಂತರ ಭಯಹರ ಜಗದಭಿರಾಮ
ಭ್ರಾಂತಿವಿನಾಶಕ ಅನಂತನಾಮ
ಸಂತಸದಾಯಕ ಮಾಂಗಿರಿಧಾಮ ೩

ಶ್ರೀ ರಾಘವೇಂದ್ರಸ್ತುತಿಗಳು

೧೯೨

ಏಕಯ್ಯ ಎನ್ನ ಮರೆತಿರುವೆ ಓ ರಾಘವೇಂದ್ರ ಪ
ಯಾಕೀ ಪ್ರಕೋಪ ಇನ್ನೆಗಮಾಂ ಗೈದುದೇನು ಅ.ಪ
ನೀನೆ ಶ್ರೀವೆಂಕಟಾರ್ಯಗೊಲಿದೆ ಪತಿತನ್ನ ಪೊರೆದೆ
ದೀನಪಾಲಕ ಎ್ಞÁನಪರಿಪೂರ್ಣ ಮಾಂಗಿರೀಶ ಕೃಪಾರ್ಣ ೧

೧೯೩

ರಾಘವೇಂದ್ರ ಜಯತು ಗುರುವರಗೌತಮ ಗೋತ್ರಜ ಪ
ರಾಗರಹಿತಾಂತರಂಗ ಭಕ್ತಾವಳಿ ಸಂಗ ಶೃಂಗ ಅ.ಪ
ಗಂಭೀರ ಗುಣಾಭರಣ ಕರುಣಾರುಣ ತೇಜಸಾ
ಅಂಬಾಸುತ ಪರಿಪೂಜಿತ ಪಾದವ ತೋರೈ ವಂದಿಪೆ ೧
ನಿರುತನಿನ್ನ ಪಾದಪದ್ಮವ ನಮಿಸುವಂಥ ಮನವ ಕೊಡೈ
ಪರಮವೈದಿಕನ ಅರಿಯುವ ಶಕ್ತಿಯ ನೀಡು ರಾಘವೇಂದ್ರ೨
ತರಳ ಸರಳ ಮೃದುವಚನಪೂರಣ ಸಾಧು ಪೂರ್ಣಸದನ
ಶರಣಸುಜನ ವಾಂಚಿತಾರ್ಥದಾತ ಮಾಂಗಿರೀಶ ಪ್ರೀತ೩

೧೯೪

ಗುರುಪಾದವೇ ಗತೀ ಮತೀ
[ವರ]ಭಕ್ತಿ ಮಾರ್ಗಮೊಳ್ಳಿತೆಲೈ ಮನುಜ ಪ
ಗುರುರಾಜ ಶ್ರೀ ರಾಘವೇಂದ್ರನಾ
ಸ್ಮರಣಾಮೃತಂ ಹಿರಿದಪ್ಪುದೈ ಅ.ಪ
ದ್ವೈತ ತತ್ವ ಸಾರಾಂಬುಧಿ ಚಂದ್ರಮಂ
ಶ್ವೇತರೋಗ ಭಾವ ಹರಿಚಂದನಂ
ಭೂತ ಪ್ರೇತ ಭೇತಾಳ ಭಂಜನಂ
ಪ್ರೀತ ಮಾಂಗಿರೀಶ ನಿತ್ಯಸೇವನಂ ೧

೧೯೫

ಗುರುವರಾ ಪರರ ಕಾಣೆ ಪಾತಕಹರಣ ಗೈವರಾ ಪ
ಮರುಕದಿಂದ ಕಾಯೆನ್ನ ಶ್ರೀಪಾದವನಾಲಿಂಗಿಪೆ ಅ.ಪ
ಶಾರದಾ ವಿಶಾರದಾ ಚಿರಸೌಖ್ಯದಾ
ಚಾರುಕೀರ್ತಿ ಭರಿತ ಬೃಂದಾವನಮು
ದಾರನಮಿತ | ಮಾಂಗಿರೀಶ ಕೃಪಾದಾತ ೧

೧೯೬

ಎ್ಞÁನಗಮ್ಯ ಶ್ರೀರಾಘವೇಂದ್ರ
ದೀನಪಾಲ ಶರಣ ಶರಣ್ಯ ಯೋಗ ಪ
ದಾನವೇಶ್ವರಾಂತಕ ವಂಶೋದ್ಭವಾ
ಪೂರ್ಣಾವತಾರಾ ವ್ಯಾಸರಾಯರೂಪಾ ಅ.ಪ
ಭವಬಂಧನಾಶ | ಕಮನೀಯವೇಷ
ಸರ್ವಜನ ಹಾಸ | ಬೃಂದಾವನ ನಿವಾಸ
ಭುವನೈಕ ನೇತ್ರಾ | ಸಕಲಾರ್ಥದಾತ
ತವಚರಣಂ ಮಾಂಗಿರೀಶ ಪ್ರೀತ ೧

೧೯೭

ತುಂಗಾತೀರ ಪ್ರಭಾಕರ ಶೃಂಗಾರ ಶ್ರೀ
ರಾಘವೇಂದ್ರ ಪ್ರಭು [ಮಾ ಮಂದಾರ] ಪ
ತುಂಗ ಕೃಪಾಕರ ಕಾಮಿತದಾತ
[ಸಂಗ]ವೆಂಕಟೇಶ ನಿರಂತರ ಮೋದಿತ ಅ.ಪ
ಯೋಗದಂಡಧರ [ವರ] ಸಂಭಾವಿತ
ತ್ಯಾಗಾದಿ ಸುಗುಣ ನಿರುಪಮ ಶಾಂತ
ಮಾರ್ಗ ದ್ವೈತ ನಿರೂಪಣ ಮಹಾನಂದ
[ಶ್ರೀ]ಗುಣೋಲ್ಲಾಸಿತ ವಿರಾಜಿತ ೧
ಆಗಮಾದಿ ವಿಧಿಸೂತ್ರ ವಿಚಾರಿತ
ರಾಗ ರಾಗಾಂಗರಾಗಭೂಷಿತ
ಯಾಗ ಯಜ್ಞ ಭೇದ ನಿರೂಪಿತ
ಮಾಂಗಿರೀಶ ಹರಿಪದ ಪ್ರಪೂಜಿತ ೨

೧೯೮

ಬಾ ಬಾ ಬೃಂದಾವನಾಲಯಸೋಮ ಶರಣಾವಲಯ
ಬಾ ಬಾ ಪರಿಮಳ ಆಚಾರ್ಯ ಸತತಯೋಗಾನಂದ ಪ
ಶೋಭಾಲಂಕರಣವಾರಿಧಿ ವೇಣುವಿನೋದ ನರೋತ್ತಮ
ಶ್ರೀ ಭೂಮಿನಿಲಯ ಪರಮಸುರುಚಿರ ರಘುವರಾ ಪ್ರಪೂಜಕ ಅ.ಪ
ನೀನೇ ದೀನಶರಣಕರುಣನು ಜಾನಿಸುವರ ಸುರತರು
ವೆನ್ನಿಪೆ ದ್ವೈತಾಗಮಸರಸಿಜಭಾನು ವೇದಾಂತ ವೈಷ್ಣವಚತುರ ೧
ಗಾನಲೋಲ ಮರಕತಮಣಿರಂಜಿತ
ಪ್ರಣವರೂಪ ನಿರುತ ಸುಖಕರಸದನ
[ನೀನೆ]ಪಾವನಾ ಪರಮಪುಣ್ಯಕರಾ ಸುಜನಪಾಲ ಶ್ರೀ ಮಾಂಗಿರೀಶ ೨

೧೯೯

ಪಾಹಿ ಗುರುವರೇಣ್ಯ ಜಗದಾನಂದ
ದೀನ ಪರಿವಾರ ಪಾಹಿ ದಾತಾರ ಮಾಂ
ದೇಹಿಮೇ ಚರಣಸೇವಾಂ ಪ
ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ
ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ
ಸರ್ವೇಶ ವೆಂಕಟೇಶ ಗುರುವರ ಸುಖಧಾಮ
ಸುರರಂಜನ ಅಖಿಲ ಬೃಂದಾಳಿಭೀಮ
[ನಿರುತ]ಮತ್‍ಸಂಕಟ ಹರಿಪ ನಾಮಾ
ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ ೧
ಮೌನಿ ರಾಜೇಂದ್ರ ಧೀಮಂತ ಸದಯ
ಪ್ರಾಣೇಶಸುತ ಭಜನ ಸತತ ವಿರಾಜ ಪರಿ
ಪೂರ್ಣದರ್ಶನ ನಿರಂತರದಾಯಕ
ಮುನಿಪುಂಗವ ಹರಿಣ ಸಾರಾಂಗ ೨
ಮಂಗಳ ಚರಣ ತುರಂಗ
ಗಂಗಾಮೃತ ಪೂರ್ಣತೀರ್ಥ
[ತುಂಗಾತೀರ ನಿವಾಸಿನೀಂ]
ಮಾಂಗಿರಿರಂಗ ಸಂಪ್ರೀತ ಮಾಂ ೩

೨೦೦

ಬೃಂದಾವನವಿದೆಕೊ ಯತಿವರ ಪ
ನಂದ ನಂದನ ಗೋವಿಂದನ ಪಾದಾರ
ವಿಂದವ ಪೂಜಿಪ ಶ್ರೀರಾಘವೇಂದ್ರನ ಅ.ಪ
ಮಂತ್ರಾಲಯದಿ ಸ್ವತಂತ್ರ ಭೂಮಿಕೆಯಲ್ಲಿ
ಯಂತ್ರ ಸ್ಥಾಪನೆಗೈದು ಸಂತೃಪ್ತಿಯಾಂತು
ಮಂತ್ರಾರ್ಥ ತತ್ವಗಳನುಪದೇಶ ಗೈಯುವ
ಮಂತ್ರ ಸ್ವರೂಪನು ಸೇವಿಪ್ಪ ಪುಣ್ಯದ೧
ಗುರುರಾಜರಾಜನು ಕರುಣಾಪಯೋಧಿಯು
ನಿರುತ ಭಕ್ತರಿಗೆಲ್ಲ ವರವೀವ ದೊರೆಯು
ಸರಸೀರುಹಾಕ್ಷ ಮಾಂಗಿರಿವಾಸ ರಂಗನ
ಚರಣವ ತೋರುವ ಕೃಪೆಮಾಡುವಾತನ ೨