Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೩೯೬
ಕರುಣಿಸೊ ಗುರು ತಾರಿಸೊ
ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ
¨Àವಜನ್ಮದಲಿ ಬಂದು ಬಹುಬಳಲಿದೆ ನಾನು
ಮೂವಿಧಿ ಬಲೆಯೊಳು ಸಿಲುಕಿ ಜೀವನವು
ಅವಿದ್ಯದಾಟಕೆ ಐವರು ಕೂಡಿ ತಾ
ಜೀವನ ಮುಕ್ತಿಗಾಣಿಸಗೊಡದಿಹರು ೧
ಮೂರೊಂದು ಮಂದಿಯು ಸೇರಗೊಡದೆ ಪಥ
ಆರುಮಂದಿಯ ಕೂಡಿ ಕಾಡುತಲಿ
ಆರು ಮತ್ತೆರಡುಮಂಡೆಯ ಕಾವಲಿಗೆ ನಾನು
ಆರೆನಯ್ಯ ಶ್ರೀಗುರುಶಿರೋಮಣಿಯೆ ೨
ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು
ಮುಕ್ತಿಗೈದುವ ಪಥ ನಡಲೀಸದೆ
ಇಂತಿವ ತಾರಿಸಿ ಮೂಢಸ್Àಮಹಿಪತಿಯ
ಸಂತತ ಸದ್ಗತಿಸುಖ ಈವುದೆನಗಿನ್ನು ೩

೩೯೭
ಕರುಣಿಸೊ ಗುರುವೆ ಚರಣ ಸ್ಮರಣೆಯು ನಿಮ್ಮ ಧ್ರುವ
ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ
ಅರಿತು ಮಾಡುವದು ದಯ ತರಣೋಪಾಯದ ೧
ಒಲಿಸಿಕೊಳ್ಳಲು ನಿಮ್ಮ ಫಲ್ಗುಣನಂಥವನಲ್ಲ
ಗೆಲಿಸುವದೊ ನೀ ಸುಪಥ ನೆಲೆನಿಭದೋರಿ ೨
ಮೊರೆ ಇಡಲು ನಾ ನಿಮ್ಮ ಕರಿರಾಜನÀಂಥವನಲ್ಲ
ಕರುಣಿಸುವದೊ ಎನಗೆ ಕರವಿಡಿತು ಪೂರ್ಣ ೩
ಶರಣ ಹೋಗಲು ನಿಮ್ಮ ಧೀರ ವಿಭೀಷಣನಲ್ಲ
ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ ೪
ಭಕ್ತಿ ಮಾಡಲು ನಿಮ್ಮ ಶಕ್ತಸಮಥನಲ್ಲ
ಯುಕ್ತಿದೋರುವದೊ ನಿಮ್ಮ ಮುಕ್ತಿಮಾರ್ಗದ ೫
ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ
ಗತಿಸುಖದೋರುದೆನಗೆ ಪತಿತಪಾವನ ೬
ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ
ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ ೭

*
ಕರುಣಿಸೋ ಗುರು ತಾರಿಸೋ
ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ
ಭವ ಜನ್ಮದಲಿ ಬಂದು ಬಹು ಬಳಲಿದೆ ನಾನು
ಮೂವಿಧ ಬಲೆಯಲಿ ಸಿಲುಕಿ ಜೀವನವು
ಅವಿದ್ಯ ದಾಟಕ ಐವರು ಕೂಡಿ ತಾಂ
ಜೀವನ ಮುಕ್ತಿಗಾಣಿಸಗುಡದಿಹರು ೧
ಮೂರೊಂದು ಮಂದಿಯ ಸೇರುಗುಡದೆ ಪಥ
ಅರುಮಂದಿಯು ಕೂಡಿ ಕಾಡುತಲಿ
ಆರುಮತ್ಯೆರಡು ಮಂದಿಯ ಕಾವಲಿಗೆ ನಾನು
ಆರಯ್ಯ ಶ್ರೀಗುರು ಶಿರೋಮಣಿಯ ೨
ಹತ್ತು ಹೊಳೆಯ ಸುತ್ತ ಅಡ್ಡಗಟ್ಟಿಹುದು
ಮುಕ್ತಿ ಗೈದುವ ಪಥ ನಡಲೀಸದೆ
ಇಂತವತಾರಿಸಿ ಮೂಢ ಮಹಿಪತಿಯ
ಸಂತತಸದ್ಗತಿ ಸುಖ ಈವ ಘನಗಿನ್ನು ೩

೪೫
ಕರುಣಿಸೋ ಸ್ವಾಮಿ ನೀಪೂರ್ಣ
ಸಾರಸದ್ಗತಿ ಭೂಷಣಾ
ತಾರಿಸೋ ಯನ್ನ ನೀ ಪ್ರಾಣಾ ಶ್ರೀ
ಹರಿ ಕಂಜಲೋಚನಾ ೧
ಸ್ವಾಮಿ ನೀ ಸರ್ವ ಸಾಕ್ಷಾತಾ
ಬ್ರಹ್ಮಾದಿದೇವ ವಂದಿತಾ
ಮನೋಹರ ಪ್ರಖ್ಯಾತಾ
ನೇಮ ನೀ ಕಾಮ ಪೂರಿತಾ ೨
ಹಸ್ತಿಗೊಲಿದ ಸುದಾತಾ
ವಸ್ತು ಶ್ರೀದೇವ ನಿಶ್ಚಿತಾ
ನಿಸ್ತರಿಸುವಾ ಶ್ರೀನಾಥಾ
ಕಸ್ತೂರಿರೇಖಾ ಶೋಭಿತಾ ೩
ನೀನೆ ನಮಸ್ತ ಕಾಧಾರಾ
ಶ್ರೀನಿಧಿ ಜ್ಞಾನ ಸಾಗರಾ
ದೀನ ಜನರ ಮಂದಾರಾ
ಪೂರ್ಣಾನಂದದಾಗರಾ ೪
ಮಹಿಪತಿ ಸ್ವಾಮಿ ಶ್ರೀಪತಿ
ಕಾಯೋ ನೀ ಲಕ್ಷ್ಮೀಪತಿ
ಶ್ರೀ ಹರಿ ದಿವ್ಯಸುಮೂರ್ತಿ
ದೋರೋ ನೀ ದಿವ್ಯಸಂಗತಿ ೫

೫೫೩
ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ
ನೋಡಕ್ಷಯದಲಿ ನೀಡನುದಿನ ದಯಮಾಡುವ
ಗುರು ಸಂರಕ್ಷ ಧ್ರುವ
ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ
ಒಳಿತಾಗುವ ಒಳಕೊಂಡೇನೆಂದು ಹಿಡಿಯದಿರು ನೀ ಕಾಂಕ್ಷೆ
ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ
ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ ೧
ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ
ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ
ಬೆಜ್ಜರವಿಡಿದು ಸಜ್ಜನರೊಡನಾಶ್ರಯಿಸಿ ನಿಜಲಕ್ಷ
ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ ೨
ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ
ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ
ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ
ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ ೩

೩೨೦
ಕಾಡುತಲಿಹ್ಯದು ಬೆಡಗಿನ ಕೋಡಗ
ಬಡವರಿಗಳವಲ್ಲ ಪೊಡವಿಯಲಿ ಧ್ರುವ
ಮಾಯದ ಮುಖವದು ಮೋಹದ ನಾಸಿಕ
ಮಾಯಮಕರ ಕಿವಿಕಣ್ಣುಗಳು
ಹ್ಯಾವ ಹೆಮ್ಮೆಯ ಹುಬ್ಬು ಕಪಿಕಣ್ಣಯೆವೆಗಳು
ಬಾಯಿ ನಾಲಿಗೆ ಹಲ್ಲು ಬಯಕಿಗಳು ೧
ಗರ್ವಗುಣ ಸಿರ ಗಾತ್ರ ಸರ್ವಾಂಗವು ದುರುಳ
ದುರ್ಬುದ್ಧಿಯ ಬೆರಳುಗಳು
ಎರಡು ತುಟಿಗಳೆಂಬ ನಿಂದೆ ದೂಷಣಗಳು
ಕೊರಳು ಕುತ್ತಿಗೆ ದುಷ್ಕರ್ಮಗಳು ೨
ಹಣಿಯು ದಾಡಿಯು ಗಲ್ಲ ಪ್ರಪಂಚ ಶೋಭಿತ
ಕಣ್ಣಭಾವಗಳಿವು ಚಂಚಲವು
ಬಣ್ಣಬಣ್ಣದಿ ಕುಣಿದಾಡುವ ಕಪಿ
ಗುಣ ಏನೆಂದ್ಹೇಳಲಿ ಕಪಿ ವಿವರಣ£ ೩
ಉದರಬೆನ್ನುಗಳಿವು ಸ್ವಾರ್ಥಬುದ್ಧಿಗಳು
ಮದಮತ್ಸರಗಳೆಂಬ ಕೈಗಳು
ಪಾದ ಕಾಲುಗಳಿವು ಕಾಮಕ್ರೋಧಗಳು
ಮೇದಿನಿಯೊಳು ಕುಣಿದಾಡುವದು ೪
ಆಶಿಯೇ ಪಂಜವು ವಾಸನೆ ಬಾಲವು
ಮೋಸಮೂಕರ ಗುಣಕೇಶಗಳು
ಏಸು ಮಂದಿಯ ಕಪಿ ಘಾಸಿಯ ಮಾಡಿತು
ಮೋಸಗೈಸಿತು ಭವಪಾಶದಲಿ ೫
ಅಶನ ವ್ಯವಸನ ತೃಷಿ ಕಪಿಗಿದು
ಭೂಷಣ ಮೀಸಲಾಗಿಡಿಸಿತು ಸುವಾಸದ
ಹಸಗೆಡಿಸುದು ಯತಿ ಮುನಿಗಳ ತಪಸವು
ಮುಸುಕಿತು ಮೋಸವು ಕಪಿಯಿಂದಲಿ ೬
ಕಂಡದ್ದು ಬೇಡುತಾ ಅಂಡಲಿಯುತಿಹುದು
ಮಂಡಲದೊಳು ತಾ ಕಾಡುತಲಿ
ಪಿಂಡ ಬ್ರಹ್ಮಾಂಡದಿ ಲಂಭಿಸುತಿಹದು
ಹಿಡದು ಬಿಡದು ಮುಷ್ಟಿಬಿರುದುಗಳು ೭
ಪಂಡತನದಿ ಬಲು ಪುಂಡನಾಗಿಹದು
ಹಂಡೀಗತನದಲಿ ಬಾಳುವದು
ಭಂಡಿನಾ ಅಟಿಗೆ ಗಂಡಾಗಿಹುದು
ಕಂಡಕಡಿಗೆ ಹರಿಡಾಡುತಲಿ ೮
ಮೂಢಮಹಿಪತಿಯ ಕಾಡುವ ಕಪಿಗಿನ್ನು
ಜಡಸೀದ ಗುರುಜ್ಞಾನ ಸಂಕೋಲಿಯು
ಕಾಡುವ ಕಪಿಕೈಯ ಬಿಡಿಸಿದ ಗುರು ಎನ್ನ
ಕಡೆಯ ಮಾಡಿದ ಬ್ರಾಹ್ಮಣ ಜನ್ಮಲಿ ೯

೩೯೯
ಕಾಣಬಹುದಕೆ ಕನ್ನಡಿಯಾಕೆ ಭಿನ್ನವಿಲ್ಲದೆ ನೋಡಿ
ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿಧ್ರುವ
ಕುಂಭಿನಿಯೊಳು ಘನಹೊಳೆಯುತ ತುಂಬಿತುಳುಕುತಲ್ಯಾದೆ
ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ
ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ
ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ ೧
ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯಾ ಚೆನ್ನಾಗಿ
ಒಳ ಹೊರಗಿದು ಭಾಸುತಿ ಹ್ಯ ದೆಲ್ಲಾ ಸುಳವು ಬಲ್ಲಾತ ಯೋಗಿ
ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ
ಹೊಳೆವುತಿಹ್ಯದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ ೨
ಇಲ್ಲೆವೆ ಎರಡು ಹಾದಿಯ ಕಟ್ಟಿಗುಲ್ಲುಮಾಡದೆ ನೋಡಿ
ಮ್ಯಾಲಿಹ್ಯ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ
ಅಲ್ಲಿಯೆ ಮನ ತಾಂ ಮನಿಕಟ್ಟಿ ಫÀುಲ್ಲನಾಭನ ಕೂಡಿ ೩

೪೦೦
ಕಾಣಬಾಹ ಸಾಧನ ಒಂದೇ ಮಾಡಿ
ಅಣುರೇಣುದೊಳಗಾನೆ ಗುರು ನೋಡಿ ಧ್ರುವ
ಖೂನ ಮಾಡಲಿಕ್ಯದ ಒಂದಭ್ಯಾಸ
ಅನುದಿನ ಸದ್ಗುರು ನಿಜಧ್ಯಾಸ
ಸುಜನರಿಗಿದೆ ತಾ ಉಲ್ಲಾಸಾ
ಜನುಮದೊಳಿದೆ ಸುಪ್ರಕಾಶ ೧
ಕೋಟಿಗೊಂದೆ ಸಾಧನವಿದೆ ಸಾಕು
ಅಟಾಆಟಬಡುವದ್ಯಾತಕೆ ಬೇಕು
ಘಟಮಠ ಎಂಬುವದೆಲ್ಲ ಹೋಕು
ನಿಟಿಲ ಭ್ರೂಮಧ್ಯ ನೋಡಿ ಥೋಕು ೨
ಸಾಧನವೆಂಬುದು ಗುರುದಯ
ಇದೆ ಪಡಕೊಂಡವಗೆ ವಿಜಯ
ಬೋಧಿಸಿದ ಭಾನು ಕೋಟಿ ಉದಯ
ಸದ್ಗೈಸಿದ ನೋಡಿ ಮಹಿಪತಿಯ ೩

೬೫೨
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ
ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ|
ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ
ಮುರುವಿಡದೆ ಸುರಿವುತಲ್ಯದೆ ಅಮೃತ ದುರುಳರಿಗಿದು ಅರಿಕಿಲ್ಲ
ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ
ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ ೧
ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ
ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ
ಹಸನಾಗುವ ಹೊಸಪರಿಯಲಿ ಸೇವಿಸಿ
ಋಷಿಮುನಿಗಳು ಸ್ವಹಿತ
ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ೨
ಕೈಗೊಟ್ಟಿತು ಕರಕೊಳ್ಳಲಿ ಅನುದಿನ ಮಹಿಪತಿಗಿದು ನಿಜ ನೋಡಿ
ಮಯಿ ಮರೆದನುಸಾರಾಯನ ಸೇವಿಸಿ
ಮಹಾಮಹಿಮೆಯ ಸವಿಗೂಡಿ
ದಯಮಾಡಿದ ಮಹಾಗುರು ಭಾಸ್ಕರಮುನಿ
ಶಿರದಲಭಯವ ನೀಡಿ
ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ ೩

೪೦೧
ಕಾಯಬೇಕೆನ್ನ ನೀ ಸದ್ಗುರು ರನ್ನಾ
ಕಾಯೋ ನಂಬಿದೆ ನಾನು ಪ
ಮರಹು ಮುನಿಯನು ಸೇರಿದೇ
ನಾ ನನ್ನೊಳಗ ಅರವಪಥಜರಿದೇ
ಕರುಣಾ ಸಾಗರ ನೆಂದು
ಮೊರೆಯ ಹೊಕ್ಕೆನುಬಂದು
ತರಣೋಪಾಯವೆನ್ನೊಳು ಸಾರಿ
ಉದಾರೀ ದಯ ಬೀರಿ ೧
ಆರರಿಗಳ ಕಾಟದೀ ಅವರಾಕೂಡೀ
ತೊರುವ ವಿಷಯದಾಟದೀ
ಮೀರಲಾರೆನೋ ನಾನು
ಪಾರ ವಶ್ಯನಾದೆನೋ
ಶ್ರೀರಮಣನ ದಯದೊಲವಾ
ನಿಶ್ಚಲವಾ ಕಳವಳವಾಗಳವಾ ೨
ಮೂರು ಮನೆಗಳಿಂದಲೀ
ಮೀರಿದ ತೂರ್ಯಾಗಾರವ ಸುಖದಿಂದಲಿ
ಸಾರುವಂದದಿ ಮತಿ
ಬೀರೊ ಶ್ರೀಮಹಿಪತಿ
ತಾರಿಸೋ ಕೊಟ್ಟು ನಿನ್ನೆಚ್ಚರವೆ
ಘನ ಬೆರುವೆ ನಿಜದರುವೇ ಸುರತರುವೆ ಗುರುವೆ ೩

೪೬
ಕಾಯಬೇಕೆನ್ನ ನೀನು ಶ್ರೀ ಗುರು ಎನ್ನ ಧ್ರುವ
ಪಕ್ಷ ಪಾಂಡವ ಪ್ರಿಯ ಅಕ್ಷಯಾಪದನಿಶ್ಚಯ
ಲಕ್ಷುಮಿ ಸುಹೃದಯ ರಕ್ಷಿಸೊ ನೀ ಎನ್ನಯ್ಯ ೧
ಪವಿತ್ರ ಪ್ರಣವರಿಸಿ ಸುವಿದ್ಯದೊಳು ಬೆರಸಿ
ಜೀವ ಪಾವನಗೈಸಿ ಭವ ಭಯವು ಹಿಂಗಿಸಿ ೨
ಸೋಹ್ಯ ಸೊನ್ನೆಯದೋರಿ ದಯಮಾಡೊ ಮುರಾರಿ
ಸಾಹ್ಯ ಮಾಡೊ ಸಹಕಾರಿ ಮಹಿಪತಿ ಸ್ವಾಮಿ ಶ್ರೀಹರಿ ೩

೧೦
ಕಾಯಬೇಕೆನ್ನ ಶ್ರೀ ದೇವಾಧಿದೇವಿಣಿ
ದಯವುಳ್ಳಸ್ವಾಮಿ ಸಹಕಾರಿ ನಾರಾಯಣಿ ಧ್ರುವ
ಕರುಣಾನಂದಗುಣ ಶರಣ ಸಂರಕ್ಷಣಿ
ದಾರಿದ್ರ್ಯ ಭಂಜಿನಿ ದುರಿತ ವಿಧ್ವಂಸಿನಿ ೧
ಘನಸುಖದಾಯಿಣಿ ದೀನ ಉದ್ಧಾರಣಿ
ಮುನಿಜನ ಶಿಖಾಮಣಿ ನೀನೆ ಶ್ರೀ ಲಕ್ಷುಮಿಣಿ ೨
ಬಾಹ್ಯಂತ್ರ ವ್ಯಾಪಿಣಿ ಮಹಾಗುರು ಸ್ವರೂಪಿಣಿ
ಸಾಹ್ಯದಲಿ ನೀ ಪೂರ್ಣ ಮಹಿಪತಿಯ ಸ್ವಾಮಿಣಿ ೩

೪೭
ಕಾಯಯ್ಯ ಕಂಜಲೋಚನ
ದಯಲೆನ್ನ ಕರುಣಾ ದಯಲೆನ್ನ ಧ್ರುವ
ಅಕ್ಷಯಾನಂದ ನೀ ಪೂರ್ಣ ಲಕ್ಷುಮೀ ರಮಣ ಸಗುಣಾ
ಲಕ್ಷ್ಮೀರಮಣ ಪಕ್ಷಪಾಂಡವರ ಪ್ರಾಣ ರಕ್ಷಿಸೊ ನಾರಾಯಣ ೧
ಅಣುರೇಣು ವೊಳನುಕೂಲ ಮುನಿಜನಪಾಲ ಲೋಲಾ
ಘನಸುಖದ ಕಲ್ಲೋಳ ನೀನೆ ದೀನದಯಾಳಾ ೨
ಶರಣು ಜನರುದ್ದರಣ ಜ್ಞಾನಗುರು ನಿಧಾನಾ ಗುರು ನಿಧಾನಾ
ಕರುಣಾಸಾಗರ ಪೂರ್ಣ ಹೊರಿಯೊ ಮಹಿಪತಿಪ್ರಾಣ ೩

೪೯
ಕಾಯಯ್ಯ ರಘುರಾಮ ದೀನಜನೋದ್ದಾರಿ ರಘುರಾಮ ಧ್ರುವ
ಕೇವಲ ಪತಿಪಾಮರ ನಾನು
ಕೈವಲ್ಯಾವನ ಮೂರುತಿ ನೀನು
ಕೇವಲ ಘನ ಅಪರಾಧಿಯುನಾನು
ದೇವನೆ ಕರುಣಾಸಾಗರ ನೀನು ೧
ಭಾವ ಭಕುತಿಕೀಲವ ನಾನರಿಯೆ
ವಿವೇಕಾಮೃತ ನೀಡುವ ದೊರೆಯೆ
ಅವಾಗ ವಿಷಯಾಸಕ್ತನು ಹರಿಯೆ
ಕಾವ ದೈವ ನೀನೆ ಶ್ರೀ ಹರಿಯೆ ೨
ಚರಣವೆ ಗತಿಯೆಂದಾತನ ತಂದೆ
ತರಳನ ಕುಂದನಾರಿಸದಿರು ತಂದೆ
ತರಳ ಮಹಿಪತಿ ಪ್ರಭು ನಮೋ ಎಂದೆ
ಶರಣ ರಕ್ಷಕ ನೀನಿಹುದೆಂದೆ೩

೪೮
ಕಾಯಯ್ಯಾ ನೀ ಎನ್ನ ರನ್ನಾ |
ದಯದಲಿ ಸಂಪನ್ನಾ ಪ
ಮಂದರಧರ ದಶಕಂದರ ಹರಿ ಅತಿ- |
ಸುಂದರ ಸದ್ಗುಣ ಮಂದಿರ ಈಶಾ |
ಕುಂದರದನ ಕಂಬುಕಂದರ ಐದೊಂದು |
ಕಂದರ ಪಿತ ಸಖ ಇಂದಿರೆಯರಸಾ ೧
ತುಂಗ ವಿಕ್ರಮ ದನುಜಾಂತ ಮದಗಜಕ |
ಸಿಂಗದಂತೆ ಹರಣ ರಂಗ ನಿಸ್ಸೀಮಾ |
ಇಂಗಿತಜನ ಭವಭಂಗ ಕಮಲದಳ |
ಕಂಗಳಲೊಪ್ಪುವ ಮಂಗಳ ಮಹಿಮಾ ೨
ಅಂಬುಜ ಭವನುತ ಅಂಬುಧಿಜಾನನ |
ಅಂಬುಜ ಸುಚಕೋರಾಂಬುಜ ಚರಣ |
ಅಂಬುಧಿವಾಸ ವಿಶ್ವಂಭರ ಮಹಿಪತಿ- |
ನಂಬಿದ್ದವರಿಗಿಂಬಾಗಿಹೆ ಕೃಷ್ಣಾ ೩

೫೧
ಕಾಯೊ ಕರುಣಾಕರ ಕೃಪಾಲ ಶ್ರೀ ಗುರು ಎನ್ನ
ಕಾಯೊ ದಯದಿಂದೆನ್ನ ಪರಮಪಾವನ ಧ್ರುವ
ಹುಟ್ಟಿಸಿಹ್ಯ ಜೀವನ ಸೃಷ್ಟಿಯೊಳು ನಾ ನಿಮ್ಮ
ದೃಷ್ಟಿಸಿ ನೋಡಲು ಎನ್ನ ಕಷ್ಟಪರಿಹಾರ
ಶಿಷ್ಟಜನ ಪ್ರತಿಪಾಲ ದುಷ್ಟಜನ ಸಂಹಾರ
ಎಷ್ಟೆಂದು ಪೊಗಳಲಯ್ಯ ಕೃಷ್ಣಕೃಪಾಲ ೧
ಇನ್ನೊಂದು ಅರಿಯೆ ನಾ ಅನ್ಯಪಥÀವೆಂಬುದನು
ನಿನ್ನ ಚರಣಕೆ ಪೂರ್ಣ ನಂಬಿಹ್ಯನು
ಭಿನ್ನವಿಲ್ಲದೆ ಎನ್ನ ಚನ್ನಾಗಿ ಸಲಹಯ್ಯ
ಧನ್ಯಗೈಸೊ ಪ್ರಾಣ ಚಿನ್ಮಯನೆ ೨
ವಾಸನೆಯ ಪೂರಿಸೊ ವಿಶ್ವವ್ಯಾಪಕ ಎನ್ನ
ಭಾಸ್ಕರಕೋಟಿ ಪ್ರಕಾಶ ಪೂರ್ಣ
ಲೇಸು ಲೇಸಾದಿ ಪಾಲಿಸೊ ವಾಸುದೇವನೆ
ದಾಸಾನುದಾಸ ನಿಜದಾಸ ಮಹಿಪತಿಗೆ ೩

೪೦೨
ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ
ಕಾಯೊ ಕರುಣಿಸಿ ಎನ್ನ ಪೂರ್ಣ ನೀ
ಕಾಯೊ ಪರಮದಯಾನಿಧೆ ಧ್ರುವ
ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ
ದೃಢಗೊಳಿಸುವ ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ
ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ
ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ ೧
ಹುಟ್ಟು ಹೊಂದುವ ಬಟ್ಟೆ ಮುರಹಿಸಿ
ಕೊಟ್ಟು ಕಾಯೊ ಸತ್ಸಂಗವ
ಗುಟ್ಟಿನೊಳು ನಿಜಘಟ್ಟಗೊಳ್ಳಿಸಿ ನೀ
ಮುಟ್ಟಿಮುದ್ರಿಸೊದೃಷ್ಟಾಂತವ
ನಿಟಿಲನಯನ ಬ್ರೂಮಧ್ಯದೆರೆಸಿ ನೀ
ಸಟೆಯ ಮಾಡೊ ಅವಿದ್ಯವ
ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ ೨
ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ
ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ
ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ
ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ ೩

೪೦೩
ಕಾಯೊ ಕರುಣಾಬ್ಧಿ ಗುರು ಎನಗೆ
ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಧ್ರುವ
ಶಿರದಲಭಯವ ನೀಡಿ ಕರುಣದಯದಲಿ ನೋಡಿ
ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ
ಗುರುತ ನಿಜ ಮಾಡರಹು ನೀಡಿ
ಪರಮ ಗತಿ ಇದರಿಡಿ ವರಕೃಪೆಯ ಮಾಡಿ ೧
ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ
ಸಂದೇಹವನು ಕಳಿಸಿ ಕುಂದ ದೋಷವ ತೊಳಿಸಿ
ಒಂದರೊಳು ನಿಲಿಸಿ ನೆಲೆಗೊಳಿಸಿ
ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ ೨
ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ
ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ
ಸ್ಮರಣ ಸುಖ ಎದುರಿಡು ಬ್ಯಾಗೆ
ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ ೩

೫೨
ಕಾಯೊ ಕರುಣಾಭಯ ಕೃದ್ಭಯ ನಾಶನ ಧ್ರುವ
ಕಂದ ಪ್ರಲ್ಹಾದಗಾಗಿ ಸಂಧಿಸೊದಗಿನಿಂತು
ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ ೧
ಕರಿಯ ಮೊರೆಯ ಕೇಳಿ ನೆರಯ ಬಿಡಿಸಿದೆ ಎಂದು
ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು ೨
ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ
ಉಪಾಯದಲಿಗಾಯ್ದ ಅಪಾರ ಮಹಿಮ ೩
ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ
ಪರಿಪರಿಯಿಂದ್ಹೊರೆದೆ ವರಮುನಿಗಳ ೪
ಶರಣು ಹೊಕ್ಕೇನು ನಿಮ್ಮ ತರಳ ಮಹಿಪತಿ ಪ್ರಾಣ
ಹೊರೆದು ರಕ್ಷಿಸು ಎನ್ನ ಪರಮಪಾವನ ೫

೫೩
ಕಾಯೊ ಕಾಯೊ ಕರುಣಕಾರ ಗೋವಿಂದ
ಕಾಯೊ ನಮ್ಮ ಕೃಪಾಸಿಂಧು ಹರಿ ಮುಕುಂದ ಧ್ರುವ
ಬೊಮ್ಮನಾ ಪಡೆದ ಪರಾವರ ದೊರಿಯೆ
ಸಮ್ಯಜ್ಞಾನವಿತ್ತು ಕಾಯೊ ಮುರಾರಿಯೆ
ನಿಮ್ಮ ವಿನಾ ಅನ್ಯಪಥವ ನಾನರಿಯೆ
ನಮ್ಮ ದೈವ ನೀನಹುದೊ ನರಹರಿಯೆ ೧
ಭವಭಯ ದುರಿತ ಪರಿಹರಿಸೊ
ಭಾವ ಭಕ್ತಿಯೊಳೂ ಮನಪೂರ್ಣವಿರಿಸೊ
ಕಾವಕರುಣನೆ ನಿಮ್ಮ ದಯ ಬೀರಿಸೊ
ದಿವಾರಾತ್ರೆಯಲಿ ನಿಮ್ಮ ಸ್ಮರಣಿಲಿರಿಸೊ ೨
ಕಾಯೊ ಕಾಯೊ ಕೊಟ್ಟು ನಿಮ್ಮ ನಿಜಧ್ಯಾನವ
ಕಾಯೊ ಕರುಣಿಸಿ ಎನ್ನ ಜೀವನದ
ಕಾಯೊ ದಯದಿಂದ ಎನ್ನ ಅಭಿಮಾನ
ಕಾಯೊ ನಿಜ ದಾಸ ಮಹಿಪತಿ ಪ್ರಾಣವ ೩

೪೦೪
ಕಾಯೊ ಕಾಯೊ ಕಾಯೊ ಕಾಯೊ ದಯಾನಿಧಿ
ಕಾಯೊ ಕರುಣ ಕೃಪಾಳ
ಕಾಯೊ ದಯದಲೆನ್ನ ದೇವಾಧಿದೇವ ಶ್ರೀದೇವ
ಸದ್ಗುರು ಘನಲೋಲ ದ್ರುವ
ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ
ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ
ದಣ್ಣನೇ ದಣಿಯುತಿಹ್ಯರು ಬ್ರಹ್ಮಾದಿಗಳು
ಖೂನತಿಳಿಯಲು ನಿಮ್ಮ
ಎನ್ನದೊಂದಿದರೊಳುಗುಪಿತವೇನೊ ಹರಿ ನೀನೆ
ಕೃಪಾಸಿಂಧು ನಿಮ್ಮ ೧
ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ
ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ
ಸನಕ ಸನಂದನ ಮೊದಲಾದವರು ತಾವು
ತಿಳಿಯದೆಂಬರು ಗುಹ್ಯ ಅಗಾಧ
ಅನುಕೂಲಾಗಿಹ ನಿಮ್ಮ ಸತಿಯಂಬಳು ಪೂರ್ಣ
ತಿಳಿಯದು ಮಹಿಮ್ಯಂಗುಷ್ಠದ ೨
ನಾರದ ತುಂಬರರೆಲ್ಲ ಗಾಯನದಲ್ಲಿ
ಮಾಡುವರಾನಂದ ಘೋಷ
ಇರುಳು ಹಗಲೆ ನಿಮ್ಮ ಹೊರಳುವ ಹಾಸಿಕೆ
ದೋರುವ ಹರುಷ ತಾ ಶೇಷ
ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ
ಪರಿಣಿಸಲಾಗದು ಪರಿಪರಿಯಲಿ ನಿಮ್ಮ
ಸಿರಿಲೋಲ ನೀ ಸರ್ವೇಶ ೩
ಸಾಮಗಾಯನ ಪ್ರೀಯ ಸಾಮಜವರದಾತ
ಸಕಲಾಗಮ ಪೂಜಿತ
ಸಮಸ್ತ ಲೋಕಪಾಲಕ ನೀನಹುದೊ ಸ್ವಾಮಿ
ಸದ್ಗುರು ಶ್ರೀನಾಥ
ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ
ನಾಮಸ್ಮರಣಿ ಕಾಮ ನಿಮ್ಮ ಕಾಮಧೇನಾಗಿಹ ಭಕ್ತ
ಜನರಿಗೆ ಸಾಕ್ಷಾತ ೪
ವಾಲ್ಗೈಸಿಕೊಂಬುವ ಭಕ್ತಿ ಅರಿಯೆ ನಾನು
ಸಲಹುವದೋ ನೀ ಶ್ರೀಹರಿಯೆ
ಮೂಲದಲಿ ಮೂಢ ಮಂದಮತಿ ನಾನು ಪಾಲಿÉಸೊ
ನೀ ಎನ್ನ ಧೊರೆಯೆ
ಸಲೆ ಮೊರೆಹೊಕ್ಕಿಹ ನಿಮ್ಮ ಶ್ರೀಪಾದಕೆ ಸ್ವಾಮಿ ಸದ್ಗುರು
ಮುರ ಅರಿಯೆ
ಬಾಲಕ ಮಹಿಪತಿ ಕುಲಕೋಟಿ ಉದ್ಧರಿಸುವ ನೀನೆ
ಸಕಲಪೂರ್ಣಸಿರಿಯೆ ೫

೫೯೧
ಕಾಯೊ ಕಾಯೊ ಕಾಯೊ ಕಾಯೊ ಕೃಪಾನಿಧಿ
ಕಾಯೊ ಕೃಪಾಳು ಸದ್ಗುರು ದಯ ನೀ ಪಾಲಿಸಿ
ಸೋಹ್ಯಸೊನ್ನೆ ಸೂತ್ರಗುಹ್ಯ ಗೂಢದೋರಿ
ಸಾಹ್ಯಮಾಡೊ ಸ್ವಾಮಿ ಸಾಕ್ಷಾತ್ಕಾರ ನೀ ದೋರಿಸಿ
ನ್ಯಾಯದಲಿ ಮಿಥ್ಯಾಮಾಯ ಮೊನೆಮುರಿಸಿ
ತೋಯಜಾಕ್ಷ ನಿಮ್ಮ ಶ್ರಯ ಸುಖ ಬೀರಿ ಭವ
ಭಯ ಹರಿಸೊ ಗುರು ಕರುಣಿಸೊ ೧

ನಾನಾರು ಎಂದು ಸಾಖೂನ ತಿಳಿಯದೆ
ನಾನಾ ಯೋನಿಮುಖ ಜನಿಸಿ ಬಂದೆನಯ್ಯ ಜನುಮ
ಜ್ಞಾನಗಮ್ಯವಾದ ಸ್ಥಾನದೋರಿ ನಿಜ
ಧ್ಯಾನ ಮೌನದನುಭವ ಸುಖ ನೀಡೊ ನಿಮ್ಮ
ನ್ಯೂನ ಪೂರ್ಣ ಎನ್ನ ನೀ ನೋಡದೆ ಸ್ವಾಮಿ
ಸ್ವಾನುಭವದ ಸುಜ್ಞಾನ ದೀಪಲಿಡೊ ನಮ್ಮ
ಮನೋನ್ಮನವಾಗಿ ಘನ ಕೈಗೂಡುವಾ
ಸನ್ಮತ ನೋಡಿ ಸುವರ್ಮ ೨
ನೋಡದೆ ಗುಣದೋಷ ಮಾಡಿ ಉಪದೇಶ
ದೃಢಭಾವದ ಸುಪಥ ಒಡನೆ ಗೂಡಿಸೊ
ನೋಡಿ ದೃಷ್ಟಿಲೆನ್ನ ಒಡೆಯ ಸದ್ಗುರು ಪೂರ್ಣ
ಓಡಿಹೋಗುವಂತೆ ಭಕ್ತಿ ಜ್ಞಾನ ವೈರಾಗ್ಯವಿಡಿಸೊ
ನೀಡಿ ಅಭಯಕರುಣಕವಚವ ತೊಡಿಸೊ
ಪಿಡಿದು ಎನ್ನ ಕೈಯಾ ಮೂಢ ಮಹಿಪತಿಯ
ಬಿಡದೆ ಕಡೆಗಾಣಿಸೊ ೩

೪೦೫
ಕಾಯೊ ಕಾಯೊ ಗುರುನಾಥತ್ರಯಗುಣಾತೀತ ಧ್ರುವ
ದೀನದಯಾಳು ನಿಶ್ಚಯ ಮುನಿಜನಂಘ್ರಿಯ
ಭಾನುಕೋಟಿ ಸುಪ್ರಭೆಯ
ಅನುದಿನಕ್ಷಯ ಘನಮಹಿಮರ ಹೃದಯ ಆನಂದೋದಯ
ಅನಾಥರಿಗೆ ಆಶ್ರಯ ನೀನಹುದೊನÀಮ್ಮಯ ೧
ದೇಶಿಕÀರಿಗೆ ನೀ ದೇವ ಲೇಸಾಗಿ ಕಾವ ಋಷಿ ಮುನಿಗಳ ಸಂಜೀವ
ವಾಸವಾಗಿವ್ಹ ವಿಶ್ವಾತ್ಮನಹುದೊ ಶ್ರೀದೇವ
ಭಾಸುತಲಿವ್ಹ ಭಾಷೆಯ ಪಾಲಿಸುವ ಈಶ ನೀನೆ ಕೇಶವ ೨
ಬಾಹ್ಯಾಂತ್ರದಲಿನೀ ಸುಪಥ ತ್ರಾಹಿ ತ್ರಾಹಿ ಶ್ರೀಗುರುನಾಥ
ಬಾಹ್ಯಾಂತ್ರ ನೀ ಸದೋದಿತ
ಗುಹ್ಯಗುರುತು ಶ್ರೀಹರಿ ನೀನೆ ಸಾಕ್ಷಾತನಹುದೊ
ಸ್ವಹಿತ ಇಹಪರ ನೀನು ದಾತಮಹಿಪತಿ ಪ್ರಾಣನಾಥ ೩

೫೦
ಕಾಯೋ ಕರುಣ ಕೃಪೆಯಿಂದ ಹರಿ ಮುಕುಂದ ಧ್ರುವ
ಕರುಣಾನಂದದ ಸಾಗರ ಕರಿವರ
ಶರಣಾಗತಜನರ ಮಂದಾರ ಪರಮ ಉದ್ಧಾರ
ಸುರ ಸಂಸಾರಾಯದಾಗರ ಪರಾತ್ಪರ
ತರಣೋಪಾಯದಾಧಾರ ೧
ಅನಾಥ ಜನರಾಶ್ರಯ ನೀನೆ ನಿಶ್ಚಯ
ಅನುಭವಾನಂದಾ ಹೃದಯ ಘನಮಯ
ದಿನಕರಕೋಟಿ ಪ್ರಭೆಯೆ ಜನವನಲಿಹ್ಯ
ಮುನಿಜನರ ಹೃದಯ ಅನುದಿನದಲಕ್ಷಯ ೨
ವಿಹಿತವಿಚಾರದ ವಿವರ ಈಹ್ಯಶ್ರೀಧರ
ಸ್ವಹಿತ ಸುಖದ ಸುಸಾರ ಬಾಹ್ಯಾಂತರ
ಮಹಿಮೆ ನಿನ್ನದು ಅಪಾರ ಮಹೇಶ್ವರ
ಇಹ್ಯ ಪರದ ದಾತಾರ ಮಹಿಪತಿ ಸಹಕಾರ ೩

೫೪
ಕಾಲಕಾಲದಲಿ ಕೇಶವನೆನ್ನಿರೊ
ಬಾಲ ಮುಕುಂದ ಮಾಧವನೆನ್ನಿರೊ ಧ್ರುವ
ಉದಯಕಾಲದಲಿ ಅನಂತಮಹಿಮನೆನ್ನಿ
ಮಧ್ಯಾಹ್ನದಲಿ ಪದ್ಮನಾ¨ಸ್ನೆನ್ನಿ
ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ
ಸದಾ ಕಾಲದಲಿ ಶ್ರೀ ಹರಿಯೆನ್ನಿರೊ ೧
ಏಳುತ ಮಚ್ಛಾವತಾರ ಅಚ್ಯುತನೆನ್ನಿ
ಮಲಗುತ ಶೇಷಶಯನನೆನ್ನಿರೊ
ಹೇಳುತ ವಿಷ್ಣುವರಾಹವತಾರನೆನ್ನಿ
ಕೇಳುತ ಕೃಷ್ಣಾವತಾರನೆನ್ನಿ ೨
ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ
ನುಡಿಯುತ ನಾರಯಣನೆನ್ನಿರೊ
ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ
ಕೂಡುತ ಕೂರ್ಮಾವತಾರನೆನ್ನಿ೩
ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ
ಬೇಡುತ ಸ್ವಾಮಿ ವಾಮನನೆನ್ನಿರೊ
ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ
ಪಾಡುತ ಪರಮಾತ್ಮನೆನ್ನಿರೊ ೪
ಉದ್ಯೋಗದಲಿ ಸಹಕಾರನಿರುದ್ದನೆನ್ನಿ
ಉದರ ಕಾಯದಲಿ ಉಪೇಂದ್ರನೆನ್ನಿ
ಮೇದಿನೊಯೊಳು ಹರಿಮಧುಸೂದನನೆನ್ನಿ
ಆದಿ ಅಂತಿಮ ಅಧೋಕ್ಷಜನೆನ್ನಿರೊ ೫
ಹೃದಯಕಮಲದೊಳು ಹೃಷೀಕೇಶನು ಎನ್ನಿ
ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ
ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ
ಅದಿಅನಾದಿ ಗೋವಿಂದನೆನ್ನಿ ೬
ಅನುದಿನ ಮನದೊಳು ಘನಮಹಿಮನು ಎನ್ನಿ
ತನುವಿನೊಳು ಪುರುಷೋತ್ತಮ ನಾನೆನ್ನಿ
ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ
ಘನಭೂಷಣದಿ ಸಂಕರುಷಣನೆನ್ನಿ ೭
ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ
ಪತಿತಪಾವನ ಪರಬ್ರಹ್ಮನೆನ್ನಿ
ಭಕ್ತವತ್ಸಲ ನರಸಿಂಹಾವತಾರನೆನ್ನಿ
ಮುಕ್ತಿದಾಯಕ ದೇವೋತ್ತಮನೆನ್ನಿರೊ ೮
ಪಾವನಮೂರುತಿ ಪರಶುರಾಮನೆನ್ನಿ
ಜೀವಸಂಜೀವ ಶ್ರೀ ರಾಮನೆನ್ನಿ
ಭವಭಯನಾಶ ಕಲ್ಕ್ಯಾವತಾರನೆನ್ನಿ
ಮಹಿಪತಿಗುರು ವಾಸುದೇವನೆನ್ನಿ ೯

೫೫
ಕೂಸು ಕಂಡಿರ್ಯಾ ವಿಶ್ವದೊಳೊಂದು
ಕೂಸು ಕಂಡಿರ್ಯಾ ಧ್ರುವ
ವೇದವ ತಂದು ಉಳುಹಿತೀ ಕೂಸು
ಮೇದಿನಿ ಭಾರವ ತಾಳಿತೀ ಕೂಸು
ಸಾಧಿಸಿ ಧಾರುಣಿ ಗೆದ್ದಿತೀ ಕೂಸು
ಉದಿಸಿ ಸ್ತಂಭದೊಳು ಮೂಡಿತೀ ಕೂಸು ೧
ಭೂಮಿಯು ಮೂರಡಿ ಮಾಡಿತೀ ಕೂಸು
ನೇಮದಿ ಪರಶುವ ಹಿಡಿಯಿತೀಕೂಸು
ಸಮುದ್ರ ಸೇತುವೆ ಕಟ್ಟಿತೀ ಕೂಸು
ಕಾಮ ಪೂರಿಸಿತೀ ಕೂಸು ೨
ಬೆತ್ತಲೆ ತ್ರಿಪುರದಲಿ ಸುಳಿಯಿತೀಕೂಸು
ವಸ್ತಿ ಕುದುರೆ ನಾಳಿತೀ ಕೂಸು
ನಿತ್ಯಮಹಿಪತಿ ಮನದೊಳಗಾಡುವ ಕೂಸು
ಸತ್ಯಸನಾತನಾಗಿಹ್ಯ ಕೂಸು ೩

೫೬
ಕೃಪೆ ನಿಮ್ಮದಾಗಬೇಕು ಸ್ವಾಮಿ ನಿಮ್ಮರಿಯಲಿಕ್ಕೆ
ಅಪಾರ ಮಹಿಮೆ ನಿಮ್ಮ ಸುಂಪಾದ ತಿಳಿಯಲಿಕ್ಕೆ ಧ್ರುವ
ಭ್ರಾಂತಗೆಲ್ಲಿಹುದಯ್ಯ ಪೂರ್ಣನಿಂತ ನಿಲಕಡೆಜ್ಞಾನ |
ಎಂತುಹೇಳಿದರ ಖೂನ ಶಾಂತಹೊಂದದಯ್ಯಮನ |
ಪಂಥ ಪರಮ ಗುಹ್ಯಸ್ಥಾನ ತಂತುವಿಡಿಯಲು ನಿರ್ಗುಣ |
ಅಂತು ಇಂತು ಎಂಬುಂದೆ ನಾನಂತ ಗುನ ನಿಧಾನ ೧
ಖೂನ ತಿಳಿಯಲಿಕ್ಯಗಾಧಗುರು ನಿಮ್ಮಶ್ರೀಪಾದ |
ಏನು ಅರಿಯೆನು ನಿಮ್ಮ ಬೋಧ ನೀಡಬೇಕು ಸುಪ್ರಸಾದ |
ನೀನೆವೆ ನಿತ್ಯವಾದ ವಸ್ತು ಪರಿಪೂರ್ಣ ಸದಾ |
ದೀನ ಬಂಧು ದಯದಿಂದ ಖೂನದೋರೊ ಆಶ್ರಯದ ೨
ಮೂಢ ಮಂದ ಮತಿ ನಾನು ಭಕ್ತಿ ಮಾಡಲರಿಯೆನು
ಒಡಿಯನಹುದಯ್ಯ ನೀನುಮಹಿಪತಿಯ ಕಾಮಧೇನು
ಕೊಡಲಿಕ್ಕೆ ಪೂರ್ಣ ನೀನು ಸ್ವಾಮಿ ಕಾವ ಕರುಣನು
ಪಿಡಿದಿಹ್ಯ ನಿಮ್ಮ ನಾನು ದಿವ್ಯ ಪಾದಪದ್ಮವನು ೩

೫೭
ಕೃಷ್ಣ ಎಂಥಾದೊ ನಿನ್ನ ಕರುಣ
ಶಿಷ್ಯ ಜನರುದ್ದೇಶಬಂದ್ಯೊ ನೀ ಕರುಣ
ದುಷ್ಟಜನರ ಮಾಡಿದ್ಯೊ ನೀ ಮರ್ದನಿ
ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣೆ ೧
ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ
ದಿಟ್ಟತನದಲಿ ನಂದಗೋಕುಲದಿ ಬೆಳೆದ್ಯೊ
ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ
ಕುಟ್ಟಿ ಕಂಸಾಸುರನ ಪ್ರಾಣವೆಳೆದ್ಯೊ ೨
ಮೊಲಿಯನುಂಡು ಕೊಂಡಿ ಪೂತನಿ ಪ್ರಾಣ
ಕಾಲಿಲೊದ್ದು ಕೊಂದ್ಯೋ ಶಕಟಾಸುರನ
ಬಾಲತನದಲಿ ಕೆಡಹಿದ್ಯೊ ಮಾವನ
ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ೩
ತುರುಗಳ ಕಾಯ್ದ್ಯೊ ನೀ ಗೋವಿಂದ
ಬೆರಳೆಲೆತ್ತಿದ್ಯೊ ಹಿರಿಯ ಮುಕುಂದ
ಮರುಳು ಮಾಡಿದ್ಯೊ ಗೋಪಿಕೇರ ವೃಂದ
ಹರುಷಗೈಸಿದೆ ಅನೇಕ ಪರಿಯಿಂದ ೪
ಹಾಲು ಬೆಣ್ಣೆ ಕದ್ದು ತಿಂಬು ನಿನ್ನಾಟ
ಬಾಲಗೋಪಾಲರ ಕೂಡಿ ನಿನ್ನೂಟ
ಚಲುವ ನಾರೇರ ನೋಡುವ ನಿನ್ನೋಟ
ಒಲಿದು ಕುಬ್ಜಿಯ ಬೆನ್ನ ಮಾಡಿದ್ಯೊ ನೀಟ ೫
ಗುರುಮಗನ ತಂದುಕೊಟ್ಯೋ ನೀ ಪ್ರಾಣ
ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ
ಶರಣಾಗತರ ವಜ್ರಪಂಜರು ಪೂರ್ಣ
ವರಮುನಿಗಳಿಗಾಗಿಹೆ ನೀ ನಿಧಾನ ೬
ಒಲಿದು ಪಾಂಡವರಿ ಗಾದಿ ಸಹಕಾರಿ
ಬಲವ ಮುರಿದ್ಯೊ ನೀ ಕೌರವರ ಸಂಹಾರಿ
ಹಲವು ಪರಿ ಅಟ ನಿನ್ನದೊ ಶ್ರೀ ಹರಿ
ಸಲಹುತಿಹೆ ಮಹಿಪತಿಗನೇಕ ಪರಿ ೭

೫೮
ಕೃಷ್ಣ ಕೃಪಾಲ ಕರುಣಾದಾಯಕ ಕರುಣಾದಾಯಕ
ದುಷ್ಟಮರ್ದನ ಶಿಷ್ಟಜನಪಾಲಕ ಧ್ರುವ
ಮುಕುಂದ ಮಾಧವ ಮಧುಸೂದನ ಮಧುಸೂದನ
ಪಂಕಜನಾಭ ಪತಿತಪಾವನ
ಶಂಖಚಕ್ರಧರ ಸಂಕರುಷಣ ಸಂಕುರಷಣ
ರುಕ್ಮಿಣಿ ಪತಿ ರಾಜೀವನಯನ ೧
ಕಸ್ತೂರಿತಿಲಕ ಕೌಸ್ತುಭಭೂಷಣ ಕೌಸ್ತುಭಭೂಷಣ
ಮಸ್ತಕ ಮುಗುಟ ಮದನಮೋಹನ
ಭಕ್ತವತ್ಸಲ ಹರಿ ನಾರಾಯಣ ನಾರಾಯಣ
ವಸ್ತುಪರಾತ್ಪರ ನಿಜನಿರ್ಗುಣ ೨
ಗರುಡಗಮನ ಉರಗಶಯನ ಉರಗಶಯನ
ಸುರಬ್ರಹ್ಮಾದಿ ವಂದಿತಚರಣ
ಕರುಣಾನಂದ ಪರಿಪೂರಣ ಪರಿಪೂರಣ
ತರಳ ಮಹಿಪತಿ ಜೀವಜೀವನ ೩

೫೯
ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ
ತುಟ್ಟಿ ಮಿಸುಕಬಾರದು ನೋಡಬ್ಯಾಡ
ಗುಟ್ಟು ಒಡೆದ ಮ್ಯಾಲುಳಿಯದು ಗೂಢ
ಇಷ್ಟರಮೇಲೆ ತಿಳಿಯದ ನಾ ಮೂಢ ೧
ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ
ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ
ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ ೨
ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ
ನಿಜಪದಕ ಯೋಗ್ಯಳ ಮಾಡಲಿಲ್ಲಿ
ಅಜಮಿಳನೆಷ್ಟೆಂದು ಅರಿಯಲಿಲ್ಲಿ
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ ೩
ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು
ನಿಮ್ಮ ಮಾತು ಒಡಿಯದು ಉದ್ದಂಡು
ಇಮ್ಮನಾಗದಲ್ಲಿಂದ ಮನಗಂಡು
ಬ್ರಹ್ಮಾನಂದ ಕೊಂಡಾಡುವೆ ಘನನುಂಡು ೪
ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ
ಇಂದು ನಾ ಕೊಡುವದೇನು ಹೇಳಯ್ಯ
ಕಂದ ಮಹಿಪತಿ ನಾ ನಿಮ್ಮ ನಿಶ್ಚಯ
ಎಂದು ಬಿಡದೆ ಸಲಹೊ ನೀ ನಮ್ಮಯ್ಯ ೫

೫೫೪
ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ
ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಧ್ರುವ
ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ
ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ
ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ
ಮೊದಲಿಗೆÀ ಸಾಧಿಸಿ ಕೇಳಿ ನಡೆದರೆ ಸದ್ಗುರು
ಸುಬೋಧದಲಿ ಗೆದ್ದಿ ೧
ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ
ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ
ಅರಿತು ನಡಿಯೊಳು ಅರವ್ಹಿನ ಮನೆಯೊಳು
ದೋರುದು ತಾ ಹರುಷ
ಎರಡಿಲ್ಲದ ಕೇಳಿಕೊಂಡರ ಹರಿದ್ಹೋಗುದು ಭವ ಬಂಧಪಾಶ ೨
ಕರುಣಿಸಿ ಕರೆದು ಬೀರುವ ನಿಜನುಡಿ ದೋರುವ
ಗುರು ಘನಸೌಖ್ಯ
ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ
ತರಳ ಮಹಿಪತಿ ಮನವೆ ಕೇಳು ಗುರುರಾಯನ ಸುವಾಕ್ಯ
ಶರಣು ಜನರಿಗೆ ಗುರುತಾಗಿದು ತಾ ಪರ ಗೆಲಿಸುವದು ನಿಜಮುಖ್ಯ ೩

೨೧೭
ಕೇಳಿರೋ ಈ ಮಾತ ಈ ಮಾತ
ತಿಳಿದು ಕೋಳ್ಳಿರೊ ಸ್ವಹಿತ
ಹೇಳುತಿಹ್ಯದು ವೇದಾಂತ ವೇದಾಂತ
ಇಳಿಯೋಳಿದುವೆ ಸಿದ್ಧಾಂತ ಸಿದ್ಧಾಂತ ೧
ಹಿಡಿಯಬ್ಯಾಡಿರೊ ಕಾಮ ಕ್ರೋಧ ಕ್ರೋಧ
ಮಾಡಬ್ಯಾಡಿರೋ ಭೇದ ಭೇದಾ ಭೇದ
ಈ ಡ್ಯಾಡಿರೊ ವಿವೇದ ವಿವೇದ
ಪಡೆದುಕೊಳ್ಳಿರೊ ಗುರು ಬೋಧ ಸುಬೋಧ ೨
ದೋರುತದೆ ತಾ ಸುಪಥ ತಾ ಸುಪಥ
ಸುರ ಜನರ ಸನ್ಮತ ಸನ್ಮತ
ದೋರುತಿಹ್ಯ ಗುರುನಾಥ ಶ್ರೀ ಗುರುನಾಥ
ಪರಮಾನಂದ ಭರಿತ ಭರಿತ ೩
ನೋಡಿರೊ ಈ ಖೂನ ಈ ಖೂನ
ಮಾಡಿ ಸದ್ಗತಿ ಸಾಧನ ಸಾಧನ
ಗೂಢ ಗುಹ್ಯ ನಿಜಧನ ನಿಜಧನ
ದೃಢ ಭಕ್ತರ ಜೀವನ ಜೀವನ ೪
ಈಹ್ಯ ಪರಿಪೂರ್ಣ ಪರಿಪೂರ್ಣ
ಮಹಾಗುರು ಶ್ರೀ ಚರಣ ಶ್ರೀ ಚರಣ
ಸಾಹ್ಯದೋರುವ ಸುಗುಣ ಸುಗುಣಮಹಿಪತಿ ಜೀವ ಪ್ರಾಣ ಸುಪ್ರಾಣ ೫

೫೫೫
ಕೇಳು ಕಂಡ್ಯಾ ಒಂದು ಮನವೇ | ಕೇಳು ಕಂಡ್ಯಾ ಪ
ಕೇಳು ಕಂಡ್ಯಾ ವಂದ | ಪ್ರೇಮ ಭಾವದಿಂದ
ಬಾಳು ದೀಪರಿಂದ ನಿನಗೆ ಬಂದಕೀದೆ ಛಂದ ೧
ವಿಡಿದು ಗುರುಪಾದಾ ಪಡಿಯೋ ನಿಜಬೋಧಾ |
ಕಡಿದು ಕಾಮ ಕ್ರೋಧ | ನೀಗು ವ್ಯವಾಧಾ ೨
ಅನ್ಯ ಮಾರ್ಗ ನೋಡಾದಿರುವ ಬಲಿದೃಢಾ |
ಘನಗುರು ಗೂಢಾ | ವಿದ್ಯೆ ಸಾಧಿಸೆಲೋ ಮೂಢ ೩
ದೊಡ್ಡವ ನಾನೆಂಬ ದೋರದೆ ನೀಡಂಭ |
ಜಡ್ಡಾಗದೇ ಗುಂಭಿ | ನಿಜ ನೋಡಿ ನಿರಾಲಂಬ ೪
ಮಹಿಪತಿ ಜನಸೊಲ್ಲ ಹಾದಿಯಂತಿದಲ್ಲ
ಮಹಿಮನೇ ಬಲ್ಲನಿದರ ಸವಿಸುಖವೆಲ್ಲ ೫

೨೧೮
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ |
ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ
ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ
ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ
ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ
ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ ೧
ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ |
ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ
ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ
ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ ೨
ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ
ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ
ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ
ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ ೩

೫೫೭
ಕೇಳು ಮನವೇ ನೀನು | ಅನವರತಾ |
ಬಾಳು ಹಿರಿಯ ನಂಬಿರು ತಾ ಪ
ಸದ್ಗುರು ದಯ ಪಡೆದು | ಭವದಲಿ
ಸದ್ಗತಿ ಪಡಿ ಭಾಗ್ಯದಲಿ ೧
ಹಲವು ಹಂಬಲ ತ್ಯಜಿಸಿ | ದೃಢದಿಂದ |
ಬಲಗೊಳ್ಳುಗುರು ಪದದ್ವಂದ್ವ ೨
ಉದರ ಕುದಿಯಗಾಗಿ | ಕಂಡವನಾ |
ವದಕೆರಗಲು ಬಹದೇನಾ ೩
ಇಂದು ಸುಖಿಸು ಹೊಂದಿ ಕೃಷ್ಣಯ್ಯನ |
ಸನ್ನುತ ಮಹಿಪತಿ ಚರಣಾ ೪

೫೫೬
ಕೇಳೆನ್ನ ಚಿನ್ನಾ ಮನವೇ ಪ
ಮನವೇ ಮೈಮರೆವದು ಗುಣವೇ |
ಮತ್ತು ಬಹ ಈ ದಿನವೇ |
ವ್ಯರ್ಥದ ಗುಣವಾದನುವೇ ೧
ಭ್ರಾಂತರ ಪರಿನಾನಾ | ಮಾ |
ರ್ಗಾಂತರಾ ಸೇರಿ ಹೋಗದೆ |
ಸಿಂತರ ಬ್ಯಾಗ ಕೂಡಲೋ ಸಂತರಾ ೨
ಕುದಿವ ತಾಪವಳಿದು ಮೃದು |
ವಾದಾ ಮಹಿಪತಿ ಪದವಾ |
ವಿಡಿದು ಪಡಿ ಮುದವಾ ೩

೨೨೧
ಕೊಂಡಿರ್ಯಾ ನೀವು ಕೊಂಡಿರ್ಯಾ
ಮಂಡಲದೊಳು ವಸ್ತು ಕೊಂಡಿರ್ಯಾ ಧ್ರುವ
ಕೊಳಬೇಕಾದರ ನೀವು ತಿಳಿದುಕೊಂಡು ಬನ್ನಿ ೧
ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ೨
ಬೆಲೆಯು ಹೇಳುವದಲ್ಲ ನೆಲೆಯ ತಿಳಿಯುವದಲ್ಲ ೩
ಅಳೆದು ಕೂಡುವುದಲ್ಲ ಕೊಳಗ ಎಣಿಸುವುದಲ್ಲ೪
ತೂಕ ಮಾಡುವುದಲ್ಲ ಲೆಕ್ಕ ಇಡುವುದಲ್ಲ ೫
ಇಟ್ಟು ಮಾರುವದಲ್ಲ ಕೊಟ್ಟರ್ಹೋಗುವುದಲ್ಲ ೬
ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ೭
ಹೇಳಿದ ನಾ ನಿಮಗೊಂದು ಸುಲಭವಾಗಿಂದು ೮
ಒಮ್ಮನವಾದರ ಸುಮ್ಮನೆಬಾಹುದು ೯
ಸಾಧುಸಜ್ಜನರಿಗೆ ಸಾಧ್ಯವಾಗುದಿದು ೧೦
ಸಾರಿ ಚೆಲ್ಲೇದ ಮಹಿಪತಿ ವಸ್ತುಮಯಮಿದು೧೧

೨೧೯
ಕೊಟ್ಟು ಕೊಂಡಾಡ ಬೇಕು ಘಟ್ಟಿಕೊಂಡು ಗುರುಭಕ್ತಿ
ಗುಟ್ಟಿನೊಳು ನೋಡ ಬೇಕು ಇಟ್ಟು ದೋರುತದ ಮುಕ್ತಿ ಧ್ರುವ
ಕೊಟ್ಟು ಗುರುವಿಗೆ ಮನಕೊಳ್ಳಬೇಕು ನಿಜಘನ
ಇಟ್ಟಾದೆ ನಿಜಧನ ಪಡಿಬೇಕು ಸಾಧನ
ಕೊಟ್ಟಾಂಗ ಕೊಂಬು ಖೂನ ಹೇಳಿ ಕೊಡುವ ಗುರು ಜ್ಞಾನ
ಮುಟ್ಟಿ ಭಜಿಸುದು ಪೂರ್ಣ ಸ್ವಾಮಿ ಶ್ರೀನಾಥಾರ್ಪಣ ೧
ಕೊಟ್ಟು ಕೊಂಡು ನೋಡಿ ನೇಮ ಸೃಷ್ಟಿಯೊಳು ಸುಧಾಮ
ಮುಷ್ಟಿ ಅವಲಕ್ಕಿ ಧರ್ಮ ಪಡೆದು ಕೊಂಡ ದಿವ್ಯಗ್ರಾಮ
ಕೊಟ್ಟು ಶ್ಯಾಖದಳವಮ್ಮ ದ್ರೋಪದ್ಯಾದಳು ಸಂಭ್ರಮ
ಕೃಷ್ಣಗಿದೆ ಅತಿ ಪ್ರೇಮ ಶಿಷ್ಟ ಜನರ ಸುಕ್ರಮ ೨
ಮುಕ್ತಿಗಿದೇ ಮೇಲು ಭಕ್ತಿನೋಡಿ ಸಜ್ಜನರ ಯುಕ್ತಿ
ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವ ಭಕ್ತಿ
ಮುಕ್ತ ಜನರಿಗಿದೇ ಗತಿ ಕೊಟ್ಟು ಕೊಂಡಾಡುವ ಶಕ್ತಿ
ಅರ್ತು ಇದೇ ಮಹಿಪತಿ ಕೊಂಡಾಡೋ ಗುರುಸ್ತುತಿ ೩

೧೯೭
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ
ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ
ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ
ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ
ಮ್ಯಾಲೆ ಮಂದಿರದೊಳು ಬಾಲಮುಕುಂದತಾನು
ಲೋಲ್ಯಾಡುತ ಒಳಗಿದ್ದಾನೆ ಕೋಲೆ ೧
ಆದಿಗಿಂತಲ್ಯದೆ ಹಾದಿ ಅನಾದಿಯು
ಸಾಧಿಸ ಬನ್ನಿ ಒದಗಿನ್ನು ಕೋಲೆ
ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ
ಭೇದಿಸಿ ನೋಡಿ ಮನದಲಿ ಕೋಲೆ ೨
ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ
ಜಾಣ್ಯೇರು ನೀವು ತಿಳಕೊಳ್ಳಿಕೋಲೆ
ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ
ಜಾಣ್ರಿಸುತ್ಹಾನೆ ಸದ್ಗುರು ಕೋಲೆ ೩
ಸದ್ಗುರುಪಾದಕೆ ಸದ್ಭಾವವಿಟ್ಟು ನೀವು
ಸದ್ಭೋಧ ಕೇಳಿ ಸಾಧಿಸಿ ಕೋಲೆ
ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ
ಚದುರತನದಲಿ ಅತಿ ಬ್ಯಾಗೆ ಕೋಲೆ ೪
ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ
ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ
ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ
ಬಡವನಾ ಧಾರಿ ಬಲಗೊಂಬೆ ಕೋಲೆ೫
ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು
ವಲವ್ಹಾಂಗ ತಾನೆ ಶ್ರೀಹರಿ ಕೋಲೆ
ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ
ಸಾಹ್ಯಮಾಡುವ ಇಹಪರಕೆ ಕೋಲೆ ೬
ಇಹಪರಕೆ ದಾತ ಮಹಿಪತಿಸ್ವಾಮಿ
ಸಹಕಾರನೊಬ್ಬ ಶ್ರೀಪತಿಕೋಲೆ
ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ
ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ ೭

೩೨೧
ಕೌತುಕವು ನೋಡಿ ಮಹಾ ಗುರುನಾಮಮಹಿಮೆಯು
ಬಯಲು ವಿದ್ಯವು ಕೇಳಿ ಭಾವಿಕರೆಲ್ಲ ಧ್ರುವ
ಶೂನ್ಯ ಮಂಡಲದಿ ನಿಶ್ಯೂನ್ಯ ಬೀಜದ ವೃಕ್ಷ
ಮಾನ್ಯಮೋನದಲಿ ಬೆಳೆಯುತಿಹ ವೃಕ್ಷ ನೋಡಿ ೧
ಬಯಲು ಭಾವದ ಪುಷ್ಪ ನಿರ್ಬೈಲ ಸಾಫಲವು
ಸುವಾಸನೆಯ ಗೊಂಚಲವು ಜಡಿವೃತ
ದಿವ್ಯಾಮೃತ ಫಲವು ಸವಿಯು ಸೇವಿಸುವದಕೆ
ಹೊಯಲುವಾದರು ಮಹಾಮಹಿಮರಿದು ನೋಡಿ೨
ತಾಯಿ ಇಲ್ಲದ ಶಿಶುವು ಕಾಯವಿಲ್ಲದೆ ಬಂದು
ಕೈಯವಿಲ್ಲದೆ ಕೊಂಡು ಸೇವಿಸುವದು
ಬಾಯಿ ಇಲ್ಲದ ನುಂಗವದು ಕಂಡು ಮಹಿಪತಿಯು
ಕೈಯ ಮುಗಿದನು ಗುರುವಿಗೆ ತ್ರಾಹಿಯೆಂದು ೩

೨೨೨
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ
ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ
ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ
ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ
ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ
ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ ೧
ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ
ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ
ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ
ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ ೨
ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ
ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ
ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ
ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ ೩
ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ
ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ
ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ
ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ ೪
ಕಳೆಯಬೇಕು ನೋಡಿ ಭವ ಬಂಧವಾದ ದುಸ್ತರ
ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ
ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ
ಕೇಳಬೇಕು ಒಂದೆ ನೋಡಿ ಜ್ಞಾನ ಬೋಧ ಶ್ಯಾಸ್ತರ ೫
ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು
ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು
ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು
ಏಕವಾಗಿ ನೋಡಲು ದೈಥಯ್ಯಗೊಟ್ಟಿತು ೬
ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ
ಇಹಪರಸುಖ ಸೂರ್ಯಾಡಿ ನಲಿದಾಡಿರೊ
ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊ
ತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ ೭

೨೨೩
ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ
ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ ೧
ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ
ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ ೨
ವಿಷಯದಾಶಿವಳಗ ವಶವನೀಗೊಂಡಲಗ
ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ ೩
ಏನ ನೀನಾದರ ಜ್ಞಾನಹೀನನಾದರೆ
ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ ೪
ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ
ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ೫

೪೦೬
ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ
ಗಳಿಸಿದಾಗಳಿಗೆ ಅಂತಃಕರಣದೊಳಗೆ ಧ್ರುವ
ಗಳಿಸಿದೆನು ಗುರುಕರುಣ ಗಳಿಸಿದೆನು ಗುರುಚರಣ
ಗಳಿಸಿದೆನು ಗುರುಸ್ಮರಣ ಚಿಂತನಿಯನು ೧
ಗಳಿಸಿದೆನು ಗುರುಜ್ಞಾನ ಗಳಿಸಿದೆನು ಗುರುಮೋನ
ಗಳಿಸಿದೆನು ಗುರುಜ್ಞಾನ ಧಾರಣವನು ೨
ಗಳಿಸಿದೆನು ಇಳಯೊಳು ಮಹಿಪತಿ ಇಹ್ಯ ಪರದೊಳು
ಸಾಯುಜ್ಯ ಸದ್ಗತಿಯ ಮುಕ್ತಿಗಳು ೩


ಗುಣಾತೀತ ಸದ್ಗುರು ಗಣನಾಥ
ಘನಸುಖದಾಯಕ ಸದೋದಿತ ಧ್ರುವ
ಅನುದಿನ ಮಾಡುವೆ ಮನೋಹರ
ಅಣುರೇಣುದೊಳು ನೀ ಸಾಕ್ಷಾತ್ಕಾರ
ಮುನಿಜನರಿಗಾಗುವಿ ಸಹಕಾರ
ನೀನಹುದೋಭಕ್ತರ ವಿಘ್ನಹರ ೧
ನಿಮ್ಮ ಭೋಧಗುಣವೆ ಸರಸ್ವತಿ
ಸಮ್ಯಜ್ಞಾನ ಬೀರುವ ನಿಜಸ್ಥಿತಿ
ಬ್ರಹ್ಮಾದಿಗಳೊಂದಿತ ನಿಜಖ್ಯಾತಿ
ಬ್ರಹ್ಮಾನಂದ ದೋರುವ ಫಲಶ್ರುತಿ ೨
ಬೇಡಿಕೊಂಬೆ ನಿಮಗೆ ಅನುದಿನ
ಕುಡುವವರಿಗೆ ನೀ ನಿಧಾನ
ಮೂಢ ಮಹಿಪತಿ ಒಡೆಯ ನೀ ಪೂರ್ಣ
ಮಾಡುತಿಹ ನಿತ್ಯವು ನಾ ನಮನ ೩

೪೧೪
ಗುರು ನಿಮ್ಮ ದಯವೆನಗಾನಂದೋದಯ
ಸರಿಸೌಖ್ಯಕರನೀವÀ ಮಹದಾಶ್ರಯ ಧ್ರುವ
ಗುರುನಿಮ್ಮ ಕೃಪೆನೋಟ ಎನಗನುಭವದೂಟ
ಸುರಸಯೋಗದ ಆಟ ಪರಮನೀಟ
ಗುರು ಸುಬೋಧದ ಕೂಡಿ ಎನಗೆ ನಿಜ ಘನ ಪ್ರಗಟ
ಕರಕಮಲ ಭಯದಮಾಟ ವರಮುಗುಟ ೧
ಗುರುನಿಮ್ಮ ದಯಕರುಣ ಎನಗೆ ಸಕಲಾಭರಣ
ವರ ಪ್ರತಾಪದೆ ವಿಜಯಾನಂದಘನ
ಗುರು ನಿಮ್ಮ ಶ್ರೀ ಚರಣ ಎನಗೆ ಬಳಗವು ಪೂರ್ಣ
ಹರುಷಗತಿ ಸಾಧನ ಪರಮಘನ ೨
ಗುರು ನಿಮ್ಮ ಬಲವೆ ಬಲ ಎನಗನುದಿನ ದೆಲ್ಯಚಲ
ಹೊರುಹುತಿಹ ನಾಮನಿಜ ಸರ್ವಕಾಲ
ತರಳ ಮಹಿಪತಿಗೆ ನೀಮಾಡುತಿಹ್ಯ ಪ್ರತಿಪಾಲ
ಗುರು ಭಾನುಕೋಟಿತೇಜನೆ ಕೃಪಾಲ ೩

೪೧೩
ಗುರು ನಿಮ್ಮ ಬಾಲಕ ನಾನು ನಮ್ಮ ಪಾಲಕ ನೀನು ಧ್ರುವ|
ತಂದಿ ತಾಯಿ ಬಂಧು ಬಳಗವೆ ನೀನು
ಕಂದನಹುದೋ ನಿಮ್ಮ ನಾನು
ಎಂದೆಂದಿಗೆ ಒಂದಾಗಿಹ ನೀನು
ಸಂದಿಸ್ಯಾಡುವ ಮಗ ನಾನು ೧
ಬೇಡಿದ್ದು ಕೊಡುವೆ ಎನ್ನೊಡೆಯ ನೀನು
ಕಡೆಹುಟ್ಟಿದವ ನಾನು
ಬಿಡದೆ ಸಲಹುತಿಹ ಎನ್ನೊಡೆಯನೆ ನೀನು
ಪಿಡಿದಿಹೆ ಪಾದವ ನಾನು ೨
ಪತಿತ ಪಾವನನೆಂಬುದು ಖರೆ ನೀನು
ಅತಿ ದೀನನು ನಿಮ್ಮ ನಾನು
ಸಥೆಯ ನಡಿಸುವೆ ಮಹಿಪತಿಯ ನೀನು
ಹಿತ ಪಾತ್ರನು ನಿಮ್ಮ ನಾನು ೩


ಗುರು ಮಧ್ವಮುನಿರನ್ನ ಮೂರುಪರಿಯ ದೋರಿದೆ ನಿನ್ನ
ಹರಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ
ಸ್ಮರಣೆಯಲಿಹೆ ರಾಮನ ಪರಮಪಾವನ್ನ ೧
ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ
ಪ್ರಥಮಲ್ಯಾದೆ ಹನುಮ ದ್ವಿತಿಯಲ್ಯಾದೆ ಭೀಮ
ತೃತಿಯಲ್ಲಿ ಪೂರ್ಣ ಪ್ರಜ್ಞನೆನಿಸಿದೆ ನಿಸ್ಸೀಮ ೨
ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ
ಶ್ರೀ ಹರಿ ಸಾನ್ನಿಧ್ಯ ಪೂರ್ಣ ಇಹ ಸಕಲ ನಿಪುಣ
ಮಹಿಪತಿ ಮುಖ್ಯಪ್ರಾಣ ಸ್ವಹಿತ ಸಾಧನ ೩

೪೨೫
ಗುರು ಸದ್ಗುರು ಆರೆಂದು ನೋಡೊ
ಗುರುತಿಟ್ಟು ಮನವೆ ಸೇವೆ ಮಾಡೊ ಧ್ರುವ|
ಗುರುಗಳುಂಟು ಮನೆಮನೆ ಬಹಳ
ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ
ದೋರುತಿಹರು ಮೋಹಿಸುವ ವಾಗ್ಜಾಲ
ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ ೧
ಎಲ್ಲ ಬಲ್ಲತನದಭಿಮಾನ
ಅಲ್ಲೆ ಕೊಂಬುದೇನುಪದೇಶ ಜ್ಞಾನ
ಸೊಲ್ಲಿಲ್ಹೇಳಿ ಕೇಳಿದರಾಹುದೇನ
ಸಲ್ಲದರಲಿಹುದೆನೊಡೆತನ ೨
ಸರ್ವಸಮ್ಮ ತಾಗುವ ಸುಜ್ಞಾನ
ಗರ್ವಾಭಿಮಾನಗೆಲ್ಲಿಹುದು ಖೂನ
ಪೂರ್ವಾಪರ ಸದ್ಗುರು ನಿಜಧ್ಯಾನ
ದೋರ್ವದು ತಾಂ ಪಡೆದವಗ ಪೂರ್ಣ೩
ವಿರಳಾಗತ ಎಲ್ಲಿಗೊಬ್ಬ ಮಹಿಮ
ಶರಣ ಹೊಕ್ಕವಗೆ ಪೂಜ್ಯಪರಮ
ಕರತಳಾಮಲಕವಾಗುವ ನಿಜವರ್ಮ
ಗುರುಮಾರ್ಗದಾಗೆನಬೇಕು ನೇಮ ೪
ಗುರುವರ ಶಿರೋಮಣಿ ಭಾನುಕೋಟಿ
ಗುರುತಾದ್ಯೆನ್ನ ಮನದೊಳು ನಾಟಿ
ಪರಬ್ರಹ್ಮನಹುದೊ ಜಗಜೇಟಿ
ತರಳ ಮಹಿಪತಿ ಮನವಸೋಘಟಿ(?) ೫

೪೨೬
ಗುರು ಸ್ವರೂಪದರಹು ಗುರುತದೋರುವ ಕುರುಹು
ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಧ್ರುವ|
ಅರವಿನಾಗ್ರದಲಿಹ ಕುರುಹುದೋರುವ ಖೂನ
ಗುರುತವಾಗುದೆ ಗುರುಕೃಪೆಯ ಜ್ಞಾನ
ಮರವಿನ ಮೂಲವನು ಮರೆದು ಬಿಡುವಸ್ಥಾನ
ಅರವೆ ಅರವಾಗಿದೋರುವ ನಿಜ ನಿಧಾನ ೧
ಅರಹು ಮರವನೆ ದಾಟಿ ಮೀರಿ ದೋರುವ ಕುರುಹು
ಅರಿತು ಕೊಂಬುದೆ ತತ್ವದರವ್ಹಿನರಹು
ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು
ಬೆರೆದು ಕೊಡುವದೆ ಗುರುಜ್ಞಾನಾನಂದ ಕುರುಹು ೨
ಕರೆದು ಕರುಣಿಸಿ ದಯವು ಬೀರಿದನುಭವ ಸುಖವು
ಗುರುಭಾನುಕೋಟಿ ಪ್ರಕಾಶ ಎನಗೆ
ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ
ತರಳ ಮಹಿಪತಿಗೆ ಘನ ಬೆಳಗೆ ಬೆಳಕು ೩

೪೦೭
ಗುರುಕೃಪೆಯಿಂದಲಿ ಪರಬ್ರಹ್ಮ ನೋಡೆಂದು
ಹೊಯ್ಯಂದ ಡಂಗುರವ
ಪರಂಜ್ಯೋತಿ ಪ್ರಭೆಯ ಭಾಸಿಸುವದು ನೋಡಿ ಹೊ
ಅರವ್ಹೆ ಅಂಜನವಾಗಿ ದೋರುತಲದಕೊ ಹೊ
ಪರಮ ಪ್ರಕಾಶವು ಪರಿಣಾಮಿಸಿ ನೋಡಿ ಹೊ ೧
ಅನಿಮಿಷನೇತ್ರವು ಬಾಗಿಸುವದು ನೋಡಿ ಹೊ
ಮನವಿಗೆ ಆರುವಾಗಿ ದೋರುತಲದಕೊಹೊ
ನೆನವ ಘನವಾಗಿ ಸೂಸೂತಲಿದಕೊ ಹೊ
ಕನಸು ಕಥೆ ಅಲ್ಲ ಕಣ್ಣಾರ ಕಾಂಬೋದು ಹೊ ೨
ನಿದ್ರಸ್ಯಕರ್ಣದ ಸಾದ್ಯಶ್ಯ ನೋಡೆಂದು ಹೊ
ದ್ವಾದಶ ನಾದವು ಸಾಧಿಸಿ ಕೇಳುದು ಹೊ
ಗಾದೆಯ ಮಾತಲ್ಲ ಭೇದಿಸಿ ತಿಳಿಯುದು ಹೊ
ಓದುವ ಒಂಕಾರ ನಾದವು ತಿಳಿವದು ಹೊ ೩
ಪ್ರಣಮ್ಯ ಮಂತ್ರದ ಪ್ರಚೀದಿನೋಡೆಂದು ಹೊ
ಹನ್ನೊಂದು ಹತ್ತುಸಾವಿರದ ನೂರೆಂದು ಹೊ
ಕಣ್ಣು ಮುಚ್ಚು ಕುಳಿತು ಮಣಿಯೆಣಿಸುವದಲ್ಲ ಹೊ
ಪುಣ್ಯಗತಿಗೈದಿಸುವ ಜಪವಿದು ಹೊ ೪
ವಿಶ್ವಹೊಳಗಲ್ಲ ಭಾಸ್ಕರ ಗುರುತಾನೆ ಹೊ
ಆಶಿಗೈವವಗಿನ್ನು ಭಾಸಿಸಲರಿಯನು ಹೊ
ಮೋಸ ಮುಕುರವಲ್ಲ ಭಾಸಿವ ಪಲ್ಲಟವಲ್ಲ ಹೊ
ಲೇಸಾಗಿ ಮಹಿಪತಿ ವಸ್ತು ಬೆರದನೋಡಿ
ಹೊಯ್ಯೆಂದ ಡಂಗುರವ ೫

೪೦೮
ಗುರುಜ್ಞಾನದ ಕೀಲು ಬ್ಯಾರ್ಯಾದ ನೋಡಿ ಬಲು ಮೇಲು ಧ್ರುವ
ಮೇಲಾಗಿ ಸ್ವಸುಖ ಸಾಧನ ಚಾಲ್ವರುತದ್ಯಾತಕ ತಾ ಜನ
ತಿಳಕೋಬಾರದ ಈ ನಿಜಖೂನ ಸುಲಲಿತ ನಿಜಧನ ೧
ಕೀಲು ತಿಳಿದವನ ಗುರುದಯಪಾತ್ರೆ
ಮೂಲೊಕದಲ್ಯವ ಪೂರ್ಣಪವಿತ್ರ
ನೆಲೆಗೊಂಡಿ ಹ್ಯ ಘನ ಚರಿತ್ರ ಬಲದಿಹ್ಯ ಬಾಹ್ಯಾಂತ್ರ ೨
ಮೌನದಲ್ಹೇಳುವ ಜ್ಞಾನುಪದೇಶ
ದೀನಮಹಿಪತಿ ಗುರುದೇವದೇವೇಶ
ಖೂನವಿಡವದು ಬಲುಸಾಯಾಸ ಮುನಿಜನರುಲ್ಹಾಸ ೩

೪೦೯
ಗುರುಜ್ಞಾನದ ಗುಟ್ಟು ಬ್ಯಾರದೆ ಕೇಳಿ ಕಿವಿಗೊಟ್ಟು ಧ್ರುವ
ಕೇಳಿಕಿಗ್ಯಾಗಲು ಕೇಳುವ ಧ್ಯಾನ ಕೇಳಿಸುವದು
ತನ್ನೊಳು ಪರಿಪೂರ್ಣ
ಒಳಹೊರಗಾನಂದ ಘನ ಹೊಳವದು ಗುರುಕರುಣ೧
ಕಾಣಿದಕಾಗಲು ಕಾಂಬುವ ಖೂನ ಪ್ರಾಣಕ
ಪ್ರೀಯಾಗುದು ಸಾಧನ
ಅನುಭವಕಿದೆ ನಿಧಾನ ಜ್ಞಾನದ ಸುಜ್ಞಾನ ೨
ಎಡಬಲಕೆ ನೋಡದೆ ನೀ ಪೂರ್ಣವಿಡಿಯೊ
ಮಹಿಪತಿ ಸದ್ಗುರು ಚರಣ
ಪಡಿಯೊ ಸುದಯ ಕರುಣ ಬಿಡುವಂತೆ ಮನ ೩

೪೧೦
ಗುರುತ ಕೇಳುವ ಬನ್ನಿ ಗುರುವಿನ ಕೈಯ
ಅರವ್ಹಿಸಿ ಕೊಡುವ ಸದ್ಗುರು ನಮ್ಮಯ್ಯ ದ್ರುವ
ಕೇಳದೆ ಹೇಳುವ ಕೇಳದ ಮಾತು
ತಿಳಿದುಕೊಳ್ಳಿರೊ ನಿಜ ಗೂಢವರಿತು ೧
ತಿಳಿದೇನಂದರ ತಿಳಿಯದು ಯೋಗ
ಹೂಳೆಯುತಲ್ಯದ ಮನದೊಳು ಅತಿಬ್ಯಾಗ ೨
ಗುರ್ತು ಹೇಳಿದ ಮಹಿಪತಿ ಗುರುಮೂರ್ತಿ
ಆರ್ಥಿಯಾಗದ ಯೋಗದ ಮನಮೂರ್ತಿ ೩

೪೧೧
ಗುರುದೈವದೊಲವೆÀನಗೆ ಬಲವೆ ಬಲವು
ಏರಿ ಬಿನಗು ದೈವದ ಬಲವು ಯಾತಕೆ ಹಲವು ದ್ರುವ
ಗುರುನಯನದೊಲವೆನಗೆ ನವನಿಧಾನದ ಬಲವು
ಗುರುಅಭಯದೊಲುವೆ ನವಗ್ರಹದ ಒಲವು
ಗುರು ಅನುಗ್ರಹದೊಲವು ಎನಗೆ ಅನುದಿನ ಬಲವು
ಗುರು ಒಲುಮೆ ಎನಗೆ ಸಿರಿ ಸಕಲಬಲವು ೧
ಗುರು ದಯದೊಲವೆನಗೆ ತಾಯಿ ತಂದೆಯ ಬಲವು
ಗುರು ಕರುಣದೊಲವೆನಗೆ ಬಾಹುಬಲವು
ಗುರು ಬೋಧದೊಲವೆನಗೆ ಬಂಧುಗಳಗದ ಬಲವು
ಗುರು ಧವರ್ಇದೊಲವೆನಗೆ ಸರ್ವ ಬಲವು ೨
ಗುರು ಪ್ರಭೆದೊಲವೆನಗೆ ಅನುಭವಾಶ್ರಯ ಬಲವು
ಗುರು ಜ್ಞಾನದೊಲವು ಘನÀ ದೈವ ಬಲವು
ಗುರುನಾಮದೊಲವೆನಗೆ ಪಕ್ಷವಾಗಿ ಹ್ಯ ಬಲವು
ತರಳ ಮಹಿಪತಿ ಸ್ವಾಮಿ ಬಲವೇ ಬಲವು ೩

೪೧೨
ಗುರುನಾಮ ಸ್ಮರಿಸಿರೊ ಶ್ರೀಗುರುನಾಮ
ಸುರುಮುನಿಜರ ಪ್ರಿಯವಾದ ನಾಮ ದ್ರುವ
ಬ್ರಹ್ಮ ವಿಷ್ಣುರುದ್ರರಿಗಿದೆ ನಿಜನಾಮ
ಪ್ರೇಮದಿಂದ ಸ್ಮರಿಸುವರು ಇದೆ ನಾಮ
ಸಮಸ್ತ ಲೋಕಕ್ಕೆ ಸಾರವಾದ ನಾಮ
ನೇಮದಿಂದ ತಾರಿಸುವ ದಿವ್ಯನಾಮ ೧
ಸಕಲಾಗಮ ಪೂಜಿತರಿದೆ ನಾಮ
ಏಕೋಮಯವಾಗಿ ದೋರುವದಿದೆನಾಮ
ಶುಕವಾಮ ದೇವರಿಗಿದೆ ನಿಜ ನಾಮ
ಸುಖ ಸರ್ವರಿಗೆ ದೋರುವ ಗುರುನಾಮ ೨
ಕರ್ಮಬಂಧನ ಛೇದಿಸುವದಿದೆ ನಾಮ
ಕರ್ಮದೋರಿ ಕೊಡುವದೀ ಗುರುನಾಮ
ಬ್ರಹ್ಮಾನಂದ ಸುಖದೊರುವಾನಂದ ನಾಮ
ಧರ್ಮ ಜಾಗಿಸಿಕೊಡುವದೀ ಗುರುನಾಮ ೩
ಅಜಮಿಳಗೆ ತಾರಿಸಿದಿದೇ ನಾಮ
ಗಜಭಯ ಪರಿಹರಿಸಿದಿದೆ ನಾಮ
ಸುಜನರಿಗೆ ಸುಪ್ರಸನ್ನವಾದ ನಾಮ
ಮೂಜಗಕೆ ತಾಮುಖ್ಯವಾದ ಗುರುನಾಮ ೪
ಅಹಲ್ಯ ಉದ್ಧರಣ ಮಾಡಿದುದಿದೆ ನಾಮ
ಪ್ರಲ್ಹಾದÀನ ಪ್ರಾಣಗಾಯಿದಿದೆ ನಾಮ
ಫಲುಗುಣ ತಾ ಪಕ್ಷವಾದದುದಿದೆ ನಾಮ
ಒಲಿದು ಧ್ರುವಗಥಳವಿತ್ತ ಗುರುನಾಮ ೫
ಅಗಣಿತ ಗುಣ ಪರಿಪೂರ್ಣವಾದ ನಾಮ
ಸುಗಮ ಸುಪಥಸಾಧನ ಇದೆ ನಾಮ
ಯೋಜನ ಸೇವಿಸುವ ನಿಜನಾಮ
ನಿರ್ಗುಣಾನಂದವಾಗಿಹ್ಯ ಗುರುನಾಮ೬
ಸೂರ್ಯಚಂದ್ರ ಸಮಸ್ತವಂದ್ಯ ಇದೆ ನಾಮ
ಕಾರ್ಯಕಾರಣವಾಗಿಹ್ಯ ವಿದೆ ನಾಮ
ತೂರ್ಯಾವಸ್ಥೆ ಯೊಳಗೆ ಸೂರಿಗೊಂಬು ನಾಮ
ತರಳಮಹಿಪತಿ ತಾರಕ ಗುರುನಾಮ ೭

೪೧೫
ಗುರುಪಾದಕೆ ಮನಮಗ್ನವಾಗುವದೆ ಖೂನ ಧ್ರುವ|
ಗುರು ತನ್ನೊಳಗದೆ ಗುರ್ತು ನರದೇಹ್ಯದ ಭಾವನೆತಾಮರ್ತು
ಅರಿಯಲಿಕ್ಕೆ ಘನ ಬೆರ್ತು ಧರೆಯೊಳು ನಿಜನಿರ್ತ ೧
ಗುರುಶಿಷ್ಯತ್ವದ ನಿಜಖೂನ ಮರಜನಗಳಿದು ಬಲ್ಲವೇ
ವಿರಳಾಗತ ವಿಹ್ಯದೀ ಜ್ಞಾನ ಸುರಜನ ಪಾವನ ೨
ಭಾವದೊಳ ನಿಜಗುರು ಸಧ್ಬಕ್ತಿ ಠಾವಿಲಿರಬೇಕಿದು ಸಂಗತಿ
ಸೇವಿಸಿಕೊ ನಿಚ್ಚ ಮಹಿಪತಿ ಭವಹರ ಗುರುಮೂರ್ತಿ ೩

೪೧೬
ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು
ಅರತು ಸದ್ಭಾವದಲಿ ದೃಢಗೊಳ್ಳಬೇಕು ಧ್ರುವ|
ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು
ನಿಶ್ಚಿಂತದಲಿ ನಿಜಸುಖ ಪಡೆಯಬೇಕು ೧
ನಂಬಿನಡಿಯಬೇಕು ಡಂಭಕವ ಬಿಡಬೇಕು
ಹಂಬಲಿಸಿ ಅಂಬುಜಾಕ್ಷನ ನೋಡಬೇಕು ೨
ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು
ವಿಶ್ವವ್ಯಾಪಕನ ವಿಶ್ವದಿ ನೋಡಬೇಕು ೩
ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು
ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು ೪
ಆರು ಜರಿಯಬೇಕು ಮೂರು ಹರಿಯಬೇಕು
ಅರಿತು ಗುರುಪಾದ ಮಹಿಪತಿಬೆರೆಯಬೇಕು ೫

೪೧೭
ಗುರುಭಕ್ತನೆ ಭಕ್ತ ಮೂರುಗುಣಕೆ ತಾ ವಿರಕ್ತ ಧ್ರುವ|
ನಾದಬಿಂದು ಕಳೆಯು ಭೇದಿಸಿದವಗ್ಯಾತರ ಚಳಿಯು
ಆದಿತತ್ವದ ಕಳೆಯು ಎದುರಿಟ್ಟು ದಾವನ ಬಳೆಯು ೧
ಆಶಾಪಾಶಕೆ ಸಿಲ್ಕಿ ಮೋಸಹೋಗನು ಎಂದಿಗೆ ಹೋಕ
ವಾಸುದೇವನ ಸಖ ಭಾಸುತಿಹುದು ಆವಾಗನೇಕ ೨
ಅಲ್ಪನಲ್ಲವೆ ತಾನು ಕಲ್ಪತರು ಕಾಮಧೇನು
ಕಲ್ಪನೇಕರಹಿತನು ನಿಲುಕಡೆ ಕಂಡಿಹ್ಯ ನೆಲೆನಿಭನು ೩
ಮನ ಬಲದಿಹ ಯೋಗಿ ನಾ ನೀನೆಂಬುದು ನುಡಿಯಲಿ ತ್ಯಾಗಿ
ಸ್ವಾನುಭವದ ಭೋಗಿ ಜನನ ಮರಣ ಕಳೆದಿಹ ನೀಗಿ೪
ಕುಡುವ ಅಮೃತ ಸ್ವಾದ ನೀಡುವ ಭಯ ನಿಜವಾದ
ಪಡೆಯೊ ಮಹಿಪತಿ ಬೋಧ ಕೊಡೊ
ಸದ್ಗುರು ಮೂರ್ತಿಯ ಪಾದ ೫

೪೧೮
ಗುರುಭಕ್ತಿ ಮನವೆ ನೀ ಮಾಡು ಸ್ಥಿರ
ಗುರುತಿಟ್ಟು ಬಾಹುದು ಪರಾತ್ಪರ
ಸರಿಗಾಣೆನೊ ಪುಣ್ಯಕೆ ನೋಡಿದರ
ಕರಕೊಂಬುದಿದೆ ಸುಖ ಸಜ್ಜನರ ೧
ಹಿಡಿಬೇಕು ಸದಾ ಗುರುಭಾವದೃಢ
ಕಡದ್ಹೋಗುದು ವಿದ್ಯಾ ಉಪಾಧಿ ಜಡ
ಪಡಕೊಂಬುದು ಮಾಡಬಾರದು ತಡ
ಒಡಲ ಹೊಕ್ಕರ ಸದ್ಗುರು ಕೈಯಬಿಡ ೨

ಗುರುನಾಮ ನಿಧಾನ ನೆನಿಯೊ ಸದ
ಸುರಲೋಕಕೆ ಪಾವನ ಮಾಡುವದ
ಪರತತ್ವಕೆ ಪಾರನೆದೋರುವದ
ಸ್ಮರಿಸಿನ್ನು ಮಹಿಪತಿ ಮುಖ್ಯವಿದ ೩

೪೧೯
ಗುರುಮಾರ್ಗ ಧನ್ಯಧನ್ಯವೆನ್ನಿ ಕರುಮುಗಿದು ಅನ್ನಿ ಧ್ರುವ
ಮರೆವ ಗರ್ವವ ಮುರಿವ ಹರಿವ ಮೂರೆರಡಂಕುರವ
ತೋರುವ ದೋರುವ ಯರ್ಹ ಪಜರುವ ಹೊಡೆವ
ಮರುವ್ಹ ಅರುವ ಗುರುವಿನ ಕರುವ್ಹ ಬೆರುವ ಪರಾತ್ಪರವ
ಇರುವ ಹರುಷದಿ ಸ್ಥಿರುವ ಕರೆವ ಸಾರಾಯ ಸುರೆವ ೧
ತೊಳೆವ ಮಾಯದ ಮಲದ ಕಳೆವ ಕಾಯ ಕಳವಳವ
ಅಳೆವ ಚಿತ್ತ ಚಂಚಲವ ಗಳುವ ಭಾವದುಶ್ಚಲವ
ಉಳುವ ಉಪಾಯಲಳಿವ ನಲುವ ನೋಡಿ ನಿಶ್ಚಲವ
ಬಲಿವ ಭಕ್ತಿ ಅಚಲವ ತಿಳುವ ಸದ್ವಸ್ತುದ ಹೊಳೆವ ೨
ಕೆಡುವ ಬುದ್ದಿಯ ಬಿಡುವ ಕಡೆವ ಸಂದೇಹ ದೃಢವ
ನುಡಿವ ಶ್ರುತಿಯಂತೆ ನಡುವ ಜಡೆವ ಸದ್ಬಕ್ತಿವಿಡುವ
ಕುಡುವ ಗುರುವಿಗೆ ಮನ ಇಡುವ
ತುಡುವ ವೈರಾಗ್ಯನೆ ಮುಡುವ
ಹಿಡುವ ಮಹಿಪತಿ ನಿಜದೃಢವ ಕುಡುವ
ಸದ್ಗತಿ ಸದ್ಗುರುಗತಿಪಡೆವ ೩

೪೨೦
ಗುರುರಾಯಾ ಎನ್ನ ಪಾಲಿಸಯ್ಯಾ
ಕರುಣದಿ ಭವಾರ್ಣವದಿಂದಾ ದಾಟಿಸುವುದು ಜೀಯಾ ಪ
ಸೂಸಿದೆನೋ ನಾನಾ ಯೋನಿ ಮುಖದಿ |
ಘಾಶಿಯಾದೆನೋ ವಿಷಯಾಭಿಲಾಷದಿ |
ಸೋಸಿದೆನೋ ದು:ಖ ತಾಪವ ಮಾರದೀ |
ಈಶ ನಿಮ್ಮ ಚರಣ ಸ್ಮರಣೆ ತೋರದೆ ಮಾಯಾ ಮೋಹದಿ ೧
ಧ್ಯಾನ ಮೌನವೆಂಬ ಸಾಧನವನು |
ಈ ನಿಯಮ ಯಮ ಯೋಗವನು |
ಜ್ಞಾನ ಭಕುತಿ ವೈರಾಗ್ಯವನು |
ಏನು ಇಂತರಿಯದ ಮಹಾಪತಿತನು ೨
ಮುನ್ನ ಮಾಡಿದೆಲ್ಲ ಪರಾಧ ಕ್ಷಮಿಸಿ |
ಇನ್ನು ಅಭಯಕರ ಸಿರಸಲಿರಿಸಿ |
ಎನ್ನ ಹೃದಯಾಲಂದಃ ಕಾರಹರಿಸಿ |
ಸನ್ನುತ ಮಹಿಪತಿ ಎನ್ನ ಭಕ್ತನೆನಿಸಿ ೩

೪೨೧
ಗುರುವಿನ ದಯವಾಗಬೇಕು | ತನ್ನ |
ಸದ್ಗತಿಗೆ ಅನ್ಯ ಸಾಧನ ಹೋಕು ಪ
ಕನ್ನಡಿಯ ಕಿಲುಬು ಹತ್ತಿ ಮುನ್ನ |
ಮಾಸಿರಲು ಮತ್ತ | ದನ್ನೆ |
ಜಾಣ ಬಂದು ಬೆಳಗಲಾಗಿರುಹು |
ತನ್ನ ತೋರುವಂತೆ ನಿಜವಾಗಿ |
ಮನಸ್ಸಿನ ಕದಡುಗಳಿಸುವನು ಯೋಗಿ೧
ಸಾಧಿಸಿ ಬಯಲಗಂಬಾರನಲಿ |
ಮುತ್ತುವಿದ್ದರೇನು ಯಙ್ಞವಾಗದಲ್ಲಿ |
ಅದಕ ಸಾದು ಜೋಹರೆನೆವೆ ಬುದ್ಧಿಯಲ್ಲಿ ೨
ಗರಡಿಯಲಿಟ್ಟು ಹುಳವ ತನ್ನ |
ಗುರುತು ತೋರುವುದು ಭೃಂಗೀ |
ಅರಿಯದೇನು ಜನ ಗಾದಿಯಲ್ಲಾ |
ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ |
ಇದ ಸಾರಿದನು ಮಹಿಪತಿ ಸೊಲ್ಲಾ ೩

೪೨೨
ಗುರುವಿನರಿಯದಾರಂಭ
ತೋರುವುದ್ಯಾತಕೆ ಡಂಭ
ಸುರಮುನಿಗಳಿಗಿದು ಗುಂಭ
ಗುರುಮಾರ್ಗವಾಗಿರಾಲಂಬ ೧
ಹೃದಯದೊಳಿರಲಜ್ಞಾನ
ತುದಿನಾಲಗಿಲ್ಯಾತಕ ಜ್ಞಾನ
ಇದು ನಿಜ ಮೋಹಿಸು ಖೂನ
ಸಾಧಿಸುದಲ್ಲ ನಿಧಾನ ೨
ಅಳಿಯದೆ ಕಾಮಕ್ರೋಧ
ಹೊಳುವದ್ಯಾತಕೆ ಬೋಧ
ತಿಳಿಯದೆ ಶ್ರೀಗುರುಪಾದ
ಬೆಳಿಸುವದ್ಯಾತಕೆ ವಿವಾದ ೩
ತತ್ವನರಿಯದ ಕವಿತ್ವ
ಯಾತಕಿದು ಅಹಮತ್ವ
ಸತ್ವದೊಳಾಗದೆ ಕವಿತ್ವ
ಮಿಥ್ಯವಿದ್ಯಾತಕೆ ಮಹತ್ವ ೪
ಆಶಿಯನಳಿದರೆ ಸಾಕು
ವೇಷದೋರುದ್ಯಾತಕೆ ಬೇಕು
ಹಸನಾದರ ರಸಬೇಕು
ಭಾಸುದು ಮಹಿಪತಿ ಘನಥೋಕು ೫

೪೨೩
ಗುರುವಿನರಿಯದೆ ಮರುಳಲೋಕ ಒಂದೊಂದು ಪರಿ
ಗುರುಮಾಡಿಕೊಂಡುದರ ಹೊರವುತಿದೆ
ಧರೆಯೊಳು ಬರಿದೆ ಭ್ರಮೆಗೊಂಡಿಹ್ಯದು
ಪರಗತಿಯ ಜರೆದು ಶ್ರೀ ಗುರುಪಾದವನ್ನರಿಯದೆ ೧
ಸತ್ವಧಾತುದ ನೆಲೆಯು ತತ್ವ ಮೋಹಲಾದನು
ಮತ್ತೈದು ಮುದ್ರೆಗಳ ವ್ಯಾಪಿಸಿಹ ಪ್ರಾಣವನು
ಚಿತ್ತ ಮನಬುದ್ಧಿ ಅಂತ:ಕರಣ ಮುಟ್ಟಿ
ಮುದ್ರಿಸಿದಾತ ಪರಮಗುರುವು ೨
ಸತ್ವ ರಜ ತಮವು ಮೊದಲಾದ ಗು-
ಣತ್ವಗಳು ಪಂಚಭೂತಾತ್ಮದ
ವಸ್ತಿ ವಿವರಣಗಳು ವಿಸ್ತಾರಗತಿಗಳನು
ವಿಸ್ತರಿಸಿ ತೋರಿಸಿದಾತ ಸಾಕ್ಷಾತ ಗುರುವು ೩
ಸ್ವಪ್ನ ಸುಷುಪ್ತಿ ಜಾಗ್ರತಿ ತ್ರಯವಸ್ಥಿತಿಗಳು
ಪ್ರಾಣಪ್ರಣಮ್ಯ ಪ್ರವೃತ್ತಿ ನಿವೃತ್ತಿಗಳು
ಶಕ್ತಿ ಉನ್ಮನಿಯ ಉದ್ಬವ ಗತಿಯು
ತೋರಿಸಿದಾತ ಸಾಕ್ಷಾತ ಗುರುವು ೪
ಹತ್ತು ಮತ್ತೆರಡು ಧ್ವನಿ ವತ್ತಿಗ್ಹೇಳೆನಿಸುವದ
ರತ್ನ ಮೂರರ ಪ್ರಭೆಯ ದಾಟಿ ಸಂಜೀವನಿಯ
ಸತ್ರಾವಿ ಜೀವನ ಕಳಾ
ಮೃತವದೋರಿಸಿದಾತ ಸಾಕ್ಷಾತ ಗುರುವು ೫
ಒತ್ತಿ ಆಧಾರ ಬಲದೆತ್ತಿ ಕುಂಡಲಣಿಯ
ಕೆತ್ತಿ ಸರ್ಪೆತ್ತಿ ಮುಖ ಮಾಡಿ ಊಧ್ರ್ವ
ಗತಿಯು ಮತ್ತೆ ಷಡಚಕ್ರಗಳ
ಗತಿಗಳನು ದೋರಿದಾತ ಸಾಕ್ಷಾತ ಗುರುವು೬
ಪತಿತ ಮಹಿಪತಿಯ ಪಾವನ್ನಗೈಸುತ್ತಮದಿ
ಉತ್ಪತ್ತಿ ಸ್ಥಿತಿ ಲಯವು ತಾರಿಸಿ ಸ-
ದ್ಗತಿಯು ನಿತ್ತಿಹ್ಯಾನಂದ ಘನ ಸತ್ಯ ಸದ್ಗುರು
ಮೂರ್ತಿ ಸಾಕ್ಷಾತ ಪರಮಗುರುವು | ೭

೪೨೪
ಗುರುವೆಂದರವಗೆ ಪರಮಸುಖ
ಹರೆದು ಹೋಗುವುದು ಭವಾರ್ಣವ ದುಃಖ ಧ್ರುವ
ಗುರು ಎಂದ್ಹಾಂಗ ಬಾಯಿಲಿ
ಅರಿಯಬೇಕು ಮನದಲಿ
ದೋರುವದಾನಂದ ಲೀಲಿ
ಗುರು ಕೃಪೆಯಲಿ ೧
ಅರ್ತರೊಂದೆ ಸಾಕು ಪೂರ್ಣ
ಕರ್ತು ಸದ್ಗುರು ಚರಣ
ಮತ್ರ್ಯದೊಳಿದೆ ನಿಧಾನ
ಸಾರ್ಥಕಗುಣ ೨
ನರನೆಂದು ಮರೆದೀಗ
ಗುರು ನಿಜಾಗುವ ಬ್ಯಾಗ
ಸೆರಗು ಮಹಿಪತಿಗೆ
ದೋರಿತು ಈಗ ೩

೪೨೮
ಘನ ಗುರು ನೀನೆನೋ ಎನಗೆ ಸಾಕ್ಷಾತವೋ
ಮನಕಾದನಕೂಲವೋ ಧ್ರುವ|
ಕಣ್ಣಿಲೆ ಕಂಡೆವೋ ಚನ್ನಾಗ್ಹಿಡಿದೆವೋ
ಇನ್ನೆಲ್ಲಿಗ್ಹೋದೆಲವೋ ಮುನ್ನಿನ ಪುಣ್ಯವೋ
ನಿನ್ನ ನೋಡಿದೆವೋ ಧನ್ಯ ಧನ್ಯವಾದೆವೋ ೧
ಸಾಧಿಸಿ ಬಿಡೆವೋ ಭೇದನ ಮಾಡೆವೋ
ಸದಮಲ ಸುಖಗೂಡುವೆವೋ ಸಾಧನ ಮಾಡುವೆವೋ
ಭೇದಿಸಿ ನೋಡುವೆವೋ ಸದೋದಿತ ಬೆರದಾಡುವೆವೋ ೨
ಗುಹ್ಯ ಗುರುತವೋ ಧ್ಯಾನಿಸುವೆವೋ
ದಂಇÀಇಮಾಡಬೇಕೆಲವೋ ಇಹಪರ ನೀನೆವೋ
ಮಹಿಪತಿ ನಿಜವೋ ತಾಯಿತಂದೆ ನೀನೆವೋ ೩

೨೨೪
ಘನ ಲಂಪಟಗೆಲ್ಲಿಹುದು ಗುರುಕೃಪೆ ಜ್ಞಾನ
ತನು ಲಂಪಟಗೆಲ್ಲಿಹುದು ತನ್ನೊಳು ಖೂನ ಧ್ರುವ
ವಿಷಯ ಲಂಪಟಗೆಲ್ಲಿಹುದು ತಾ ವಿರಕ್ತಿಯು
ದೆಸೆಗೆಟ್ಟವಗೆಲ್ಲಿಹುದು ಯುಕ್ತಿಯು
ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು
ಹುಸಿಯಾಡುವಂಗೆಲ್ಲಿಹುದು ಋಷಿ ಭಕ್ತಿಯು ೧
ಮರುಳಗುಂಟೆ ಅರುಹ ರಾಜಸನ್ಮಾನದ
ತರಳಗುಂಟೆ ಭಯವು ಘಟಸರ್ಪದ
ಎರಳೆಗುಂಟೆ ಖೂನ ಮೃಗ ಜಲವೆಂಬುವದ
ಸೂರಿಗೆ ಉಂಟೆ ಮಾತು ಚಾತುರ್ಯದ ೨
ಕನಸ ಕಾಂಬುವಗೆಲ್ಲಿಹುದು ತಾನಿರುವ ಸ್ಥಾನ
ಮನದಿಚ್ಛೆಲಿದ್ದವಗೆಲ್ಲಿಯ ಧ್ಯಾನ
ದೀನ ಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ
ಅನುಭವಿಸಿಕೊಳ್ಳದೆ ಜನ್ಮಕ ಬಂದದ್ದೇನ ೩

೪೨೭
ಘನಗುರು ನೀನೇವೆ ಘನಗುರು ನೀನೇವೆ
ಅನುಭವ ಸ್ವಸಿದ್ಧವೊ
ಅನುದಿನ ಶ್ರುತಿ ಖೂನ ಹೇಳುವ ಜ್ಞಾನವು ಧ್ರುವ
ಗುಣಗುಣಕ್ಕೆ ಅಣುರೇಣು ವ್ಯಾಪಕ್ಕೆ
ಜನವನ ಸ್ಥಾನ ಸುಸ್ಥಾನಕ್ಕೆ
ಮನೋನ್ಮನಕ್ಕೆ ಜ್ಞಾನ ವಿಜ್ಞಾನಕ್ಕೆ
ತಾನೆ ತಾನಾಗಿಹ್ಯದಕ್ಕೆ ೧
ಅಖಿಳ ಭುವನಕ್ಕೆ ಸಕಲ ಸನ್ಮತಕ್ಕೆ
ಪ್ರಕಟಗುಚಿತ ಪ್ರತ್ಯಕ್ಷಕ್ಕೆ
ಶುಕಾದಿ ಮುನಿಗಳ ಮುಗುಟಮಣಿಯಾಗುದಕ್ಕೆ
ಭಕ್ತವತ್ಸಲಾಗಿಹುದಕ್ಕೆ ೨
ಇಹಪರ ಸಾಧನಕ್ಕೆ
ಬಾಹ್ಯಾಂತರ ದೊರೆವುದಕ್ಕೆ
ಸಾಹ್ಯಮಾಡುವ ಸಹಕಾರಕ್ಕೆ ಮಹಿಪತ್ಯುದ್ದೇಶಕ್ಕೆ
ಸ್ವಹಿತ ಸುಪಥಕೆ ಶ್ರೇಯ ಸುಖದೋರುವಾಶ್ರಯಕ್ಕೆ ೩

೨೨೬
ಜ್ಞಾನಕಿದೆ ಖೂನ ಸ್ವಾನುಭವ ಸ್ಥಾನ
ನಾನು ನೀನೆಂಬುದಕಾಗುವದಿದೆ ಉದಯಮಾನ ಧ್ರುವ
ಅರಹು ನಿನ್ನೊಳರಿಯಾ ಅರುವ್ಹಿನೊಳು ಬೆರಿಯಾ
ಅರಹು ಅರಿಯಲಿಕ್ಕೆ ಗುರುಕುರುಹು ನಿಜವರಿಯಾ ೧
ಮರೆಸುವದರ ಅರಿಯಾ ಅರಿಸುವದರ ಜರಿಯಾ
ಅರಸಿ ಮರಿಸಗುಡದರನುಭವದ ನಿಜಪರಿಯಾ ೨
ಅರುವಿಲಹ ಖೂನ ಗುರುಕೃಪ ಜ್ಞಾನ
ತರಳ ಮಹಿಪತಿ ಅರಿಯೊ ಪರಮ ಸುನಿಧಾನ ೩

೨೨೮
ಜ್ಞಾನಗುರು ಶುದ್ಧ ಮಡಿವಾಳ
ಮನ ಮೈಲಿ ತೊಳೆವ ನಿರ್ಮಳ ಧ್ರುವ
ದೃಢ ಮಾಡುವ ಬಂಡೆಗಲ್ಲು
ತೊಡೆವ ಸುಭೋಧ ಸಬಕಾರ ಮೇಲು
ಹಿಡಿದು ಹಿಂಡುವ ಮನ ಮೈಲು
ಕುಡುವ ವೈರಾಗ್ಯದ ಬಿಸಿಲು ೧
ಉದ್ದಿ ಒರಸುವ ಸಬಕಾರ ಕೈಯ
ಎದ್ದಿ ವಿವೇಕ ಉದರ ನಿಶ್ಚಯ
ಶುದ್ಧದೋರಿಸಿ ಸಾಂಪ್ರದಾಯ
ಸಿದ್ಧ ಮಾಡುವ ಗುರು ನಮ್ಮೈಯ್ಯ ೨
ಸೆಳೆದು ಒಗೆವ ವ್ಯಾಳೆವ್ಯಾಳಗಯ್ಯ
ತೊಳೆದು ಅಹಂಭಾವದ ಕಲೆಯ
ಕೊಳ್ಳದೆ ಒಗೆವಾ ತಾ ಕೂಲಿಯ
ಬಿಳಿದು ಮಾಡುವ ಮೂಳೆ ಕಳಿಯ ೩
ಆಶಿ ಎಂಬುದ ಹಾಸಿ ಒಣಗಿಸಿ
ಹಸನಾಗಿ ಘಳಿಗೆ ಕೂಡಿಸಿ
ಭಾಸಿ ಕೊಡುವ ತಾ ಘಟ್ಟಿಸಿ
ಲೇಸು ಲೇಸಾಗಿ ಅನುಭವಿಸಿ ೪
ಶುದ್ಧ ಮಾಡಿದ ಮನ ನಿಶ್ಚಯ
ಸಿದ್ಧ ಸಾಕ್ಷಾತ್ಕಾರ ನಮ್ಮಯ್ಯ
ಸದ್ಬೋಧಿಸಿದ ಜ್ಞಾನೋದಯಸದ್ಗೈಸಿದ ಮಹಿಪತಿಯ ೫

೨೨೯
ಜ್ಞಾನವಿಲ್ಲದೆ ಬಾಳೂದೊಂದು ಸಾಧನವೆ
ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ ಧ್ರುವ
ತನ್ನ ನÀರಿಯಲಿಲ್ಲ ಬನ್ನವಳಿಯಲಿಲ್ಲ
ಕಣ್ಣದೆರೆದು ಖೂನಗಾಣಲಿಲ್ಲ
ಸಣ್ಣದೊಡ್ಡರೋಳೆನೆಂದು ತಿಳಿಯಲಿಲ್ಲ
ಬಣ್ಣ ಬಣ್ಣದ ಶ್ರಮ ಬಿಡುವದುಚಿತವಲ್ಲ ೧
ಶಮದಮಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ
ಸಮದೃಷ್ಟಿಯಲಿ ಜನವರಿಯಲಿಲ್ಲ
ಸಮರಸವಾಗಿ ಸದ್ಛನವ ನೋಡಲಿಲ್ಲ
ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ೨
ಗುರು ಕೃಪೆ ಇಲ್ಲದೆ ಗುರುತಾಗುವದಲ್ಲ
ಗುರುತಿಟ್ಟು ನೋಡಿಕೊಂಡವನೇ ಬಲ್ಲ
ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ
ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ ೩

೧೮೫
ಜಯ ಜಯ ಕರುಣಾಕರ ಕೃಪಾಲ
ಜಯ ಜಯ ಗುರುಮುನಿಜನ ಪ್ರತಿಪಾಲ ಧ್ರುವ
ರಾಜತೇಜೋನಿಧಿ ರಾಜ ರಾಜೇಂದ್ರ
ರಾಜಿಸುತಿಹ ಮುಕಟ ಮಣಿ ಸುರೇಂದ್ರ
ಸುಜನ ಹೃದಯ ಸದ್ಗುಣ ಮಣಿ ಸಾಂದ್ರ
ಅಜಸುರ ಸೇವಿತ ಸುಜ್ಞಾನ ಸುಮೋದ ೧
ಅಗಣಿತ ಗುಣ ಅಗಾಧ ಅಪಾರ
ನಿಗಮಗೋಚರ ನಿರುಪಮ ನಿರ್ಧಾರ
ಸಗುಣ ನಿರ್ಗುಣನಹುದೊ ಸಾಕ್ಷಾತ್ಕಾರ
ಭಕ್ತವತ್ಸಲ ಮುನಿಜನ ಮಂದಾರ ೨
ಧೀರ ಉದಾರ ದಯಾನಿಧಿ ಪೂರ್ಣ
ತಾರಕ ಸ್ವಾಮಿ ಸದ್ಗುರು ನಿಧಾನ
ತರಳ ಮಹಿಪತಿ ಜನ್ಮೋದ್ಧರಣ
ಚರಣ ಸ್ಮರಣಿ ನಿಮ್ಮ ಸಕಲಾಭರಣ ೩

೧೮೬
ಜಯ ಜಯ ಕರುಣಾಕರ ಗುರುದೇವ
ದಯಗುಣದಲಿ ನೀ ಪೂರ್ಣ ಶ್ರೀ ವಾಸುದೇವ ಧ್ರುವ
ಮುನಿಜನ ಪಾಲಕ ದೀನ ದಯಾಳ
ಅನಾಥ ಬಂಧು ಶರಣಾಗತ ವತ್ಸಲ
ಸನಕಾದಿಗಳೊಂದಿತ ಸಿರಿಸುಖಲೋಲ
ಅನುದಿನ ಅಣುರೇಣುಕ ನೀನೆ ಸುಕಾಲ ೧
ಪತಿತ ಪಾವನ ಪರಮ ಉದಾರ
ಭಕ್ತವತ್ಸಲ ಮಾಮನೋಹರ
ಅತಿಶಯಾನಂದ ಸುಜ್ಞಾನಸಾಗರ
ಚತುರ್ದಶ ಭುವನಕೆ ನೀ ಸಹಕಾರ ೨
ದೇಶಿಕರಿಗೆ ದೇವ ನೀನೇ ನಿಧಾನ
ವಿಶ್ವಪಾಲಕ ಸ್ವಾಮಿ ನೀ ಸುಗುಣ
ಭಾಸ್ಕರ ಕೋಟಿ ತೇಜ ನೀನೇ ಪೂರ್ಣ
ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ೩

೧೮೭
ಜಯ ಜಯ ಗುರುನಾಥ
ದಯ ಗುಣದಲಿ ಅಖಂಡಿತ ಧ್ರುವ
ಅನುಗ್ರಹದಲಿ ಸಮರ್ಥ
ಜನವನದೋರುವೆ ಪರಮಾರ್ಥ
ನೀನೆ ಸಕಲಾರ್ಥ
ಅಣು ರೇಣುಕ ಸುಹಿತಾರ್ಥ ೧
ಬಡವರಿಗಾಧಾರಿ
ನೀಡುವುದರಲಿ ಘನ ಉದಾರಿ
ಕುಡುವೆ ನಿಜದೋರಿ
ಕಡೆಗಾಣಿಸುವೆ ಸಹಕಾರಿ ೨
ಪಿಡಿದವರ ಕೈಯ
ಬಿಡ ಎಂದೆಂದಿಗೆ ನಿಶ್ಚಯ
ಒಡೆಯನಹುದಯ್ಯ
ಮೂಢ ಮಹಿಪತಿ ಮಹದಾಶ್ರಯ ೩

೫೨೬
ಜಯ ಜಯ ಜ್ಯೋತಿರ್ಮಯಾನಂದ ಶ್ರೀನಾಥಗೆ
ಜಯ ಜಯಾನಂದ ಸದೋದಿತಗೆ ಧ್ರುವ
ಸದ್ಭಾವನೆ ಭೋಕ್ತ ಸದ್ಗುರುನಾಥಗೆ
ಸದ್ಗೈಸುವ ಸದಾ ಸುಶ್ಯಾಂತಿಗೆ ೧
ಸದ್ಗೈಸುವ ಸದಾ ಶ್ಯಾಂತ ಶ್ರೀನಿಧಿಗೆ
ಸದ್ಭಕ್ತಿಲಿ ಎನ್ನಿ ಸನ್ನಿಧಿಗೆ ೨
ಸ್ವಾನುಭವದ ಕಂದ ಅನಂದೋ ಬ್ರಹ್ಮಗೆ
ಜ್ಞಾನÀ ಜ್ಞಾನಕನುಪಮಗೆ ೩
ಜ್ಞಾನ ವಿಜ್ಞಾನÀಕನುಪಮಾಗಿಹಗೆ
ಜಯ ಜಯವೆನ್ನಿ ಶ್ರೀ ಮಹಿಪತಿಸ್ವಾಮಿಗೆ ೪

೫೨೯
ಜಯ ಜಯ ಮಂಗಳ ಮಹಿಮ ಸುದಾತ
ಜಯ ಜಯ ಸ್ವಾಮಿ ಶ್ರೀಗುರು ಅವಧೂತ ಧ್ರುವ
ನೀನಹುದೊ ಮುನಿಜನ ಪ್ರತಿಪಾಲ
ಅನಾಥ ಬಂಧು ದೀನದಯಾಳ ೧
ಪತಿತಪಾವನ ಯತಿಜನಪ್ರಿಯ
ಅತಿಶಯಾನಂದ ನೀನಹುದೊ ನಮ್ಮಯ್ಯ ೨
ಭಾವಿಕರಿಗೆ ನೀ ಜೀವಕೆ ಜೀವ
ಅವಗೆ ಮಹಿಪತಿ ಕಾವ ನೀ ದೈವ ೩

೧೮೮
ಜಯ ಜಯ ಮಂಗಳ ಮುನಿಜನ ಪಾಲ
ಜಯ ಜಯ ಸ್ವಾಮಿ ಸದ್ಗುರು ಕೃಪಾಲ ಧ್ರುವ
ತೇಜ:ಪುಂಜವು ನಿಮ್ಮ ಘನಸುಖಸಾಂಧ್ರ
ರಾಜ ತೇಜೋನಿಧಿ ರಾಜ ರಾಜೇಂದ್ರ
ಸುಜನರ ಹೃದಯ ಸುಜ್ಞಾನ ಸಮುದ್ರ
ಅಜಸುರವಂದ್ಯ ಶ್ರೀ ದೇವದೇವೇಂದ್ರ ೧
ಪತಿತ ಪಾವನ ಪೂರ್ಣ ಅತಿಶಯಾನಂದ
ಯತಿ ಮುನಿಗಳಿಗೆ ನೀ ದೋರುವೆ ಚಂದ
ಪಿತಾಮಹನ ಪಿತನಹುದೊ ಮುಕುಂದ
ಸತತ ಸುಪಥದಾಯಕ ನೀ ಗೋವಿಂದ ೨
ದೇಶಿಕರಿಗೆ ದೇವ ನಿಮ್ಮ ಸ್ವಭಾವ
ಋಷಿ ಮುನಿಗಳಿಗೆ ನೀ ಜೀವಕೆ ಜೀವ
ದಾಸ ಮಹಿಪತಿಗೇನಹುದೊ ಮನದೈವ
ಲೇಸಾಗೆನ್ನೊಳಗಿರೊ ಶ್ರೀ ವಾಸುದೇವ ೩

೫೨೮
ಜಯ ಜಯ ಶ್ರೀ ಸದ್ಗುರುನಾಥ
ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಧ್ರುವ
ಸ್ವಯಂಭು ಸ್ವತಂತ್ರ ಸ್ವಪ್ರಕಾಶ
ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ
ದ್ವೈತಾದ್ವೈತಕೆ ಸಹಿತ ಸ್ವವಿಲಾಸ
ಶ್ರೇಯ ಸುಖದಾಯಕನಹುದೋ ನೀ ಪರೇಶ ೧
ಸ್ವಭಾವ ಸ್ವಸಿದ್ಧ ಸರ್ವಾಧಾರ
ಸ್ವಭಾಸ ಸ್ವತೇಜ ಸಹಜ ನಿರ್ಧಾರ
ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ
ಸ್ವಭಕ್ತಜನರಿಗೆ ನೀನೆ ಸಹಕಾರ ೨
ಸ್ವಾನಂದ ಸದೋದಿತ ಸ್ವಯಂ ಭಾನು
ಸ್ವಾನಭವಲಾದಯ್ಯ ತಾನೆ ತಾನು
ಅನುದಿನ ಭೋರ್ಗರೆವ ನೀ ಕಾಮಧೇನು
ದೀನಮಹಿಪತಿ ಸ್ವಾಮಿ ನೀನೆ ನೀನು ೩


ಜಯ ಜಯ ಸ್ವರಸತಿ ಜಯವರ ಪೂರಣಮತಿ
ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ಧ್ರುವ
ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ
ಬುದ್ಧಿ ಪ್ರಕಾಶಿನಿ ಸದ್ಭೂಷಿಣಿ ೧
ಕರಕಮಲದಲಿ ವೀಣೆ ಸುರಸ ಅಮೃತವಾಣಿ
ವರವಿದ್ಯದಲಿ ದಾನಿ ಸುಪ್ರವೀಣೆ ೨
ಪ್ರಸನ್ನವದನಿ ವಿಶ್ವದಲಿ ನೀ ಪೂರ್ಣೆ
ಹಂಸವಾಹಿನಿ ಪೂರ್ಣಿ ಸ್ವಸಿದ್ಧಿಣಿ ೩
ಸದಾ ಸದ್ಗುರುಸ್ತುತಿ ಒದುಗುವ್ಹಾಂಗ ಸ್ಫೂರ್ತಿ
ಇದೇ ಮಹಿಪತಿ ಕುರ್ತಿ ಬೋಧಿಸುವ ಮತಿ೪

೧೮೯
ಜಯ ಜಯವೆನ್ನಿ ಕೈಯ ಮುಗುಬನ್ನಿ
ದಯವುಳ್ಳ ಮಹಿಮಗಾರುತಿ ಮಾಡುವ ಬನ್ನಿ ಧ್ರುವ
ಮನವೆ ಬತ್ತಿ ತನುವಾರತಿ ಘನಕೆ ಮಾಡವ ಬನ್ನಿ
ನೆನವು ತುಪ್ಪ ಜ್ಞಾನದೀಪವನ್ನು ಬೆಳಗುವ ಬನ್ನಿ ೧
ಭಾವಗುಟ್ಟು ಠಾವಿಲಿಟ್ಟು ದೈವ ನೋಡು ಬನ್ನಿ
ಮಾವಮಕರಗುಣ ಬಿಟ್ಟು ಸೇವೆಮಾಡು ಬನ್ನಿ ೨
ಮಹಿಪತಿಸ್ವಾಮಿಗಿನ್ನು ಜಯಜಯವೆನ್ನಿ
ಬಾಹ್ಯಾಂತ್ರ ಬೆಳಗಿ ಪೂರ್ಣ ಧನ್ಯವಾಗು ಬನ್ನಿ ೩

೫೩೦
ಜಯ ಜಯವೆನ್ನಿ ಗುರು ಜಗದೀಶಗೆ
ಜಯ ಜಯ ಜಗತ್ರಯ ಪಾವನಗೆ ಧ್ರುವ
ಆನಂದೊ ಬ್ರಹ್ಮ ಆನಂದ ಕಂದಗೆ
ಅನುದಿನ ಜಯ ಜಯ ಅನುಪಮಗೆ
ಸನಕ ಸನಂದನ ವಂದಿತಗೆ
ಮುನಿಜನ ಹೃದಯ ನಿವಾಸಗೆ ೧
ನಿಗಮಗೋಚರ ನಿತ್ಯ ನಿರ್ಗುಣಗೆ
ಅಗಣಿತಗುಣ ಪರಿಪೂರ್ಣಗೆ
ಝಗಿಝಗಿಸುವ ಜಗನ್ಮೋಹನಗೆ
ಜಗಜ್ಜೀವ ಜಗದಾತ್ಮಗೆ ೨
ಜಯ ಜಯ ಮಂಗಳ ಮಹಾಮುನಿಗೆ
ಮಹಿಮಾನಂದ ಗುರುಮೂರ್ತಿಗೆ
ಮಹಿಪತಿ ಸ್ವಾಮಿ ಸರ್ವೋತ್ತಮಗೆ
ಜಯ ಜಯವೆನ್ನಿರೊ ಜಗದೊಳಗೆ ೩

೧೯೦
ಜಯ ಜಯವೆನ್ನಿ ಸ್ವಾಮಿ ಶ್ರೀಹರಿಗೆ
ದಯೆಯುಳ್ಳ ಮಹಿಮ ಶ್ರೀಮುಕುಂದ ಮುರಾರಿಗೆ ಧ್ರುವ
ಭಾವಿಸಿ ನಿಮ್ಮೊಳಗೆ ದೇವಾಧಿ ಶ್ರೀದೇವಿಗೆ ೧
ಅನುಭವಿಸುವ್ಹಾಂಗೆಂದೆಂದು ಮನೋಮಂದಿರಕೆ ತಂದು ೨
ಕಾಣುವನ ಕಂಡು ನೋಡಿ ಕಾಣಿಸಿಕೊಂಬ್ಹಾಂಗೆ ಮಾಡಿ ೩
ಪಾವನಗೈಸುವ ದೇವಗೆ ಕಾವ ಕರುಣನಿಧಿಗೆ ೪
ವರ ಕೃಪಾಳಿಗೆ ಸಿರಿ ಸುಖಲೋಲಗೆ ೫
ಅಂತರಾತ್ಮಲಿಹಗೆ ಸಂತತ ಸದೋದಿತಗೆ ೬
ಭಾನುಕೋಟಿ ತೇಜಗೆ ದೀನಮಹಿಪತಿ ಸ್ವಾಮಿಗೆ ೭

೫೩೧
ಜಯ ಜಯವೆನ್ನಿರೊ ಶ್ರೀ ಗುರುವಿಗೆ
ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ
ಗುಹ್ಯಗುರುತ ದೋರುವ ಗುರುಮಣಿಗೆ
ಮಾಯರಹಿತ ನಿರಾಳ ನಿರ್ವಾಣೆಗೆ
ತ್ರೈಲೋಕ್ಯವಂದಿತ ವರಮುನಿಗೆ
ದಯಯುಳ್ಳ ಶ್ರೀ ದೇವಶಿಖಾಮಣಿಗೆ ೧
ತ್ರಿಗುಣಾತೀತ ತಾರಕ ನಿರಂಜನಗೆ
ಝಗಿ ಝಗಿಸುವ ಜಗನ್ಮೋಹನಗೆ
ಜಾಗಿಸುವ ಜಗತ್ರಯ ಜೀವನಿಗೆ
ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ ೨
ಜಯ ಜಯವೆನ್ನಿರೊ ಗುರುಮೂರ್ತಿಗೆ
ಇಹಪರ ಪೂರ್ಣ ಪರಂಜ್ಯೋತಿಗೆ
ಬಾಹ್ಯಾಂತ್ರ ಭಾಸುವ ಶ್ರೀಪತಿಗೆ
ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ ೩

೫೩೨
ಜಯ ಜಯಾನಂದ ಕಂದ ಜಯ ನಿರ್ಗುಣ ನಿದ್ರ್ವಂದ್ವ ಧ್ರುವ
ಒಳಗೆ ಹೊರಗೆ ನೀನೆ ಪೂರ್ಣ ಬೆಳಗಿ ಬೆಳಗಾಗಿಹುದ
ಥಳಥಳಿಸುವ ಗುಣ ಹೊಳವು ಸುಳವು ಪಾವನ ೧
ದೇವಾಧಿದೇವ ದೇವ ಭುವನತ್ರಯಕೆ ಜೀವ
ಭಾವಿಕರಿಗೆ ಕಾವ ಭವನಾಶಗೈಸುವ ೨
ತೇಜೋಮಯ ಪೂರ್ಣಸಾಂದ್ರ ಅಜ ಸುರವರ ಮುನೀಂದ್ರ
ನಿಜಘನಸುಖಮುದ್ರ ರಾಜ ರಾಜರಾಜೇಂದ್ರ ೩
ಮುನಿಜನರ ಪ್ರಾಣಪದಕ ಅನುಭವದ ನಿಜಸುಖ
ಖೂನ ವಿಶ್ವತೋಮುಖ ಅಣುರೇಣು ವ್ಯಾಪಕ ೪
ಮೂರು ಗುಣಕೆ ರಹಿತ ಗುರುಮೂರ್ತಿ ಸಾಕ್ಷಾತ
ತರಳ ಮಹಿಪತಿದಾತ ಹೊರಿಯೊ ನೀ ಸದೋದಿತ ೫

೫೩೩
ಜಯ ದೇವ ಜಯ ದೇವ ಜಯ ಗುರು ನಾಗೇಶ
ದಯಗುಣದಲಿ ನೀ ಮಾಡೊ ಭವತಾಪ ನಾಶ ದ್ರುವ
ಜನ್ಮ ಮರಣಗಳೆಂಬ ಖಚ್ಚಿಖವಡಿಗಳು
ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು
ಬ್ರಹ್ಮಾನಂದದ ಸುಖ ಭಾಸುದು ಮನದೊಳು
ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು ೧
ತಾಪತ್ರಯವೆಂಬುದು ಬಲು ಪೀಡಿಯ ಗುಣ
ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ
ಕೋಪತಾಪವೆಂಬುದು ತದ್ದುದುರೀಯ ಗುಣ
ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ ೨
ದುರಿತ ಸಂಹಾರ ಸುರಜನ ಸಹಕಾರ
ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ
ತರಳ ಮಹಿಪತಿಸ್ವಾಮಿ ಘನ ಕೃಪಾಕರ
ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ ೩

೫೩೪
ಜಯ ದೇವ ಜಯ ದೇವ ಜಯ ಗುರು ಮೈಲಾರಿ
ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ಧ್ರುವ
ಖಡ್ಗವ ಕರದಲಿ ಪಿಡಿದು ಖಂಡಿಸಿದಜ್ಞಾನ
ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ
ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ
ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ ೧
ಮಲಹರಣ ಮಾಡಲು ಧರಿಸಿ ಅವತಾರ
ಮೂಲೋಕ ಪಾವನಮಾಡುವ ಸಹಕಾರ
ಸಲಹುವೆ ಭಕ್ತಜನರಿಗೆ ನೀ ಘನ ಮಂದಾರ
ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿಶೂರ ೨
ಮಹಿಗೆ ಪತಿ ಅಹದು ಶ್ರೀಗುರು ಭೂಪತಿ
ಬಾಹ್ಯಾಂತ್ರಿ ಬೆಳಗುವೆ ಶ್ರೀಪಾದಕೆ ಆರ್ತಿ
ಇಹಪರಕೆ ದಾತನಹುದೊ ಶ್ರೀಪತಿ
ಜಯಜಯವೆಂದು ಬೆಳಗುವೆ ದಾಸ ಮಹಿಪತಿ ೩

೫೩೭
ಜಯ ದೇವ ಜಯ ದೇವ ಜಯ ಬ್ರಹ್ಮಾನಂದ
ಜಯ ಜಯವೆಂದು ಬೆಳಗುವೆ ಬೆಳಗಿಲಿ ನಿಮ್ಮಿಂದ ಧ್ರುವ
ಅರುವಿಗೆ ನಿಮ್ಮರುವುದೋರಿತು ಘನದರುವು
ಅರುವೆ ಅರುವಾಗಿದೋರಿತು ಅರುವೆ ಘನ ಅರುಹು
ತಿರುಹುಮುರವ್ಹಿನ ಕುರುವುದೋರಿತು ಘನದರುವು
ಕುರುವ್ಹೆ ಕುರುವ್ಹಾಗಿದೋರಿತು ಘನ ಪರಾತ್ಪರವು ೧
ಬೆಳಗಿನ ಘನ ಬೆಳಗು ಹೊಳೆವದು ಥಳಥಳವು
ಹೇಳೇನಂದರೆ ಬಾರದು ತಿಳವ್ಹಿಗೆ ನಿಜಸುಳಹು
ಕಳೆ ಮೊಳೆಗಳ ಉಳಹು ತುಳಕುತ ಘನದೊಲವು
ಭಳಭಳ ಭಾಸುವ ನಿಮ್ಮ ಬೆಳಗೆ ನಿರ್ಮಳವು ೨
ಅನುಭವದಾರತಿ ಸ್ವಾನುಭವದ ಪ್ರೀತಿ
ಅನುದಿನ ಬೆಳಗುವದು ತಾ ಘನಗುರು ನಿಜಪ್ರೀತಿ
ತಾನೆತಾನಾಗಿಹ ಜ್ಞಾನಸಾಗರ ಮೂರ್ತಿ
ದೀನಮಹಿಪತಿ ಬೆಳಗುವೆ ಮನ ಮಂಗಳಾರ್ತಿ ೩

೫೩೫
ಜಯ ದೇವ ಜಯ ದೇವ ಜಯ ಜಗಜೀವನ
ಜಯ ಕರುಣಾಕರಮೂರ್ತಿ ಅನುಸೂಯ ಕರ ರತ್ನ ಧ್ರುವ
ತೇಜೋನ್ಮಯ ಪರಿಪೂರ್ಣ ಅಜ ಸುರ ಮುನಿ ಪ್ರಾಣ
ರಾಜ ತೇಜೋನಿಧಿ ರಾಜೀವ ನಯನ
ನಿಜ ನಿರ್ಮಳ ನಿರ್ಗುಣ ಸುಜನ ಸುಭೂಷಣ
ಭಜಕ ಭಯಹರ ಪೂರ್ಣ ತ್ರಿಜಗ ಪಾವನ ೧
ಭಕ್ತ ಜನ ಉದ್ಧಾರ ಘನಗುರು ದಾತಾರ
ಪತಿತಪಾವನಮೂರ್ತಿ ಮುನಿಜನ ಮಂದಾರ
ಅತಿಶಯಾನಂದ ಅನುಪಮ ವ್ಯಾಪಕ ನಿರ್ಧಾರ
ಸತತ ಸುಪಥ ಸದ್ಗುರು ಸಹಕಾರ ೨
ಸಹ್ಯಾದ್ರಿ ಗಿರಿವಾಸ ಶ್ರೀಗುರು ಸರ್ವೇಶ
ಬಾಹ್ಯಾಂತ್ರ ಪರಿಪೂರ್ಣ ಜಗದೀಶ
ಮಹಿಪತಿಸ್ವಾಮಿ ಶ್ರೀ ದೇವದೇವೇಶ
ಇಹಪರ ದಾತ ಭಾಸ್ಕರಕೋಟಿ ಪ್ರಕಾಶ ೩

೧೯೧
ಜಯ ದೇವ ಜಯ ದೇವ ಜಯ ಜಗನ್ನಾಥ
ದಯಗುಣದಲಿ ಪರಿಪೂರ್ಣ ಶ್ರೀಗುರು ಮನ್ನಾಥ ಧ್ರುವ
ಅಂದಿಗಿಂದಿಗೆ ನೀನೆ ನಿತ್ಯನುಭವದಿಂದ
ತಂದಿ ತಾಯಿ ನೀನೆ ಶ್ರೀಹರಿ ಮುಕುಂದ
ಬಂಧುಬಳಗ ನೀನೆ ಕುಲಕೋಟಿಗಳಿಂದ
ಎಂದೆಂದೆನಗೆ ನೀನೆ ಫಲದೊಲವಿಂದ ೧
ಸೃಷ್ಟಿ ಜನ ಪಾಲಕ ನೀನೆ ಸದ್ಗುರು ರನ್ನ
ಸೃಷ್ಟಿಯಲಿ ಪೊಗಳುತಲಿ ಶ್ರುತಿಸ್ರ‍ಮತಿಗಳು ನಿನ್ನ
ಇಷ್ಟ ಕುಲದೈವಗಳೆಂಬುದು ನೀ ಎನ್ನ
ದೃಷ್ಟಿಸಿ ಮಾಡುವ ಭಕ್ತಜನರಿಗೆ ಪಾವನ್ನ ೨
ಮನೋಹರ ಮಾಡುವ ಮಂಗಳಕರಮೂರ್ತಿ
ಘನ ಸುಖದಾಯಕ ನೀನೆ ಜ್ಞಾನದ ನಿಜಸ್ಫೂರ್ತಿ
ಭಾನುಕೋಟಿತೇಜ ನೀನೆ ಸಕಲಸಾರ್ಥಿ
ಅನುದಿನ ಮಾಡೊ ಮಹಿಪತಿ ಶ್ರೀಪಾದಕೆ ಆರ್ತಿ ೩

೫೩೬
ಜಯ ದೇವ ಜಯ ದೇವ ಜಯ ನಿರಂಜನ
ಭವ ಭಂಜನ ಗುರು ತಾರಕ ಋಷಿಮುನಿ ಜೀವನ ಧ್ರುವ
ಅನಂತ ಗುಣ ಪರಿಪೂರ್ಣ ಅನಂದಮಯ ಘನ
ಸ್ವಾನಂದ ಸದೋದಿತ ಸದ್ಗುರು ನಿಧಾನ
ಅನಾದಿ ಮಹಿಮಾನಂದ ಸುಜ್ಞಾನಾಂಜನ
ಅನೇಕ ಸಕಲಾಗುಮಪೂಜಿತ ಸೇವಿತ ತ್ರಿಭುವನ ೧
ಕಲ್ಪತರು ಚಿಂತಾಯಕ ಅನಾಥ ರಕ್ಷಣ
ಭಕ್ತಜನ ಸಹಕಾರ ತ್ರಿಜಗ ಜೀವನ
ಅವ್ಯಕ್ತ ಅವಿನಾಶ ಅತೀತ ಸುಜ್ಞಾನ
ಭಕ್ತ ಕೃಪಾನಿಧಿ ವಿಶ್ವವಂದನ ೨
ಸಜ್ಜನ ಸಂಜೀವನ ಸದ್ಗುರು ಚಿದ್ಫನ
ಸಗುಣ ನಿರ್ಗುಣ ಸಹಕಾರ ಸುರಮುನಿ ರಂಜನ
ಮಹಿಪತಿ ತಾರಕ ಗುರು ಪತಿತಪಾವನ
ಸದ್ಬ್ರಹ್ಮಾನಂದ ಸದೋದಿತ ಸದ್ಗತಿ ಸಾಧನ ೩

೫೩೮
ಜಯ ದೇವ ಜಯ ದೇವ ಜಯ ಮಂಗಳ ಮಹಿಮ
ದಯಗುಣದಲಿ ನಿಸ್ಸೀಮ ಜಯಗುರು ನಿರುಪಮ ಧ್ರುವ
ಅನುಭವಕಾಗುವ ಚಂದ ಸ್ವಾನುಭವದ ಕಂದ
ಜ್ಞಾನ ವಿಜ್ಞಾನಂದ ಘನಮಯ ನಿದ್ರ್ವಂದ್ವ
ದ್ವಂದ್ವನಿರ್ದೂಂದ್ವ ತಾನೆ ತನ್ನಿಂದ
ಎಂದೆಂದಿಗೆ ಬ್ಯಾರಿಲ್ಲ ದೋರುದು ನಿನ್ನಿಂದ ೧
ದ್ವೈತಾದ್ವೈತಕೆ ರಹಿತಾಶ್ರಯಗುರು ನಿಜದಾತ
ತ್ರೈಗುಣಾತೀತ ಶಾಂತ ನಿರ್ಗುಣ ನಿಶ್ಚಿಂತಾ
ನಂತಾನಂತಕೆ ಸಂತತ ನೀನೆ ಏಕಾಂತ
ಪಂಥ ಪರಮಗುಹ್ಯಾನಿಹ ಶ್ರೀ ಅವಧೂತ ೨
ಸ್ವಸಂವೇದ್ಯ ನೀ ಪೂರ್ಣಋಷಿಮುನಿಗಳ ಧ್ಯಾನ
ಲೇಸುಲೇಸಾಗಿಹ ಆತ್ಮನುಭವ ಖೂನ
ಈಶ ನೀನೊಬ್ಬನಾಗಿಹ ಅನುದಿನ
ದಾಸ ಮಹಿಪತಿ ಪ್ರಾಣ ಭಾಸ್ಕರ ಘನಕರುಣ ೩

೫೩೯
ಜಯ ದೇವ ಜಯ ದೇವ ಜಯ ವರ ಗುರುಮೂರ್ತಿ
ಜಯ ಜಯವೆಂದು ಬೆಳಗುವೆ ಬೆಳಗುವೆ ಮನದಾರ್ತಿ ಧ್ರುವ
ಜ್ಯೋತಿಗೆ ಸ್ವಜ್ಯೋತಿ ಘನಪರಂಜ್ಯೋತಿ
ನೇತಿ ನೇತಿಯೆಂಬುದು ನೋಡಲು ಘನಶ್ರುತಿ
ಶ್ರುತಿಸ್ರ‍ಮತಿಗೆ ತಿಳಿಯ ನೀ ಅಪ್ರತಿ
ಅತಿಸೂಕ್ಷ್ಮ ನಿನ್ನರಿವುದು ಸದ್ಗುರು ದಯಕೀರ್ತಿ ೧
ರಾಜಿಸುತಿಹ ನಿಜ ವಿಶ್ವದ ನೀ ಬೀಜ
ರಾಜತೇಜೋನಿಧಿ ಸಹಜೆ ಸಹಜ
ಅಜ ಸುರವಂದ್ಯ ಸುಜನರಾತ್ಮದ ನೀಗ್ರೂಜ
ರಾಜಮಹಾರಾಜ ಸದ್ಗುರು ಸುಭೋಜ ೨
ಮನೋನ್ಮನದ ಮಗುಟ ಸ್ವಾನುಭವಕೆ ನೀಟ
ಜ್ಞಾನರಹಿತ ಕೂಟ ಘನ ದಯನೋಟ
ಅನುವಾಗಿದೋರಿತು ನೀಟಕೆ ನಿಜನೀಟ
ದೀನಮಹಿಪತಿಸ್ವಾಮಿ ನೀನೆ ಘನಪ್ರಗಟ ೩

೫೪೦
ಜಯ ಸದ್ಗುರು ಮೂತಿ ದಯವುಳ್ಳ ನಿಮ್ಮ ದಯ ಕೀರ್ತಿ ಧ್ರುವ
ದಯಗುಣದಲಿ ಬಲು ಉದಾರ ತ್ರೈಲೋಕ್ಯಕೆ ನೀನೆ ಆಧಾರ
ಜಯ ಸದ್ಗುರು ಮಾಮನೋಹರ ಇಹಪರ ಸಹಕಾರ ೧
ಮುನಿಜನರಿಗೆ ನೀ ಪ್ರತಿಪಾಲ ಸ್ವಾನುಭವದ ಸುಖದ ಕಲ್ಲೋಳ
ಘನಗುರು ನೀನೆ ಕೃಪಾಲ ದೀನದಯಾಳ ೨
ಕರುಣಾಸಾಗರದಲಿ ನೀ ಪೂರ್ಣ ತರಳಮಹಿಪತಿ
ಜೀವದ ಸುಪ್ರಾಣ
ಪರಮಾಮೃತದ ನಿಧಾನ ಹೊರಿಯೊ ನೀ ಕರುಣ ೩

೫೨೭
ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ
ಜಯಜಯವೆನ್ನಿರೊ ದಯವುಳ್ಳ ಮಹಿಮೆಗೆ
ಜಯಜಯವೆನ್ನಿರೊ ಧ್ರುವ
ಕಂಗಳದೆರಸಿ ಅಂತರಂಗದೋರಿದವಗೆ
ಮುಂಗಡÀಲೆ ಇದ್ದು ಸುಸಂಗದೋರಿದವಗೆ
ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ
ಮಂಗಳಾತ್ಮಕನ ಸಂಗಸುಖ ಬೀರಿದವಗೆ ೧
ಆರು ಅರಿಯದ ವಸ್ತು ಸಾರಿದೋರಿದವಗೆ
ಶಿರದಲಿ ಕರವಿಟ್ಟು ಕರುಣಿಸಿದವಗೆ
ಮೂರುಗುಣಕೆ ಮೀರಿದ ತಾರಕ ಗುರುವಿಗೆ
ಸಾರವಾಡದಲಿ ನಿಂದು ಪಾರದೋರಿದವಗೆ ೨
ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ
ಗುಹ್ಯ ಗುರುತ ತೋರಿದ ಗುರುಮೂರ್ತಿಗೆ
ಅಯ್ಯನಾಗಿ ಮೈಯೊಳಗುಪಾಯದೋರಿದವಗೆ
ಕೈಪಿಡಿದು ಮಹಿಪತಿಗೆ ದಯಮಾಡಿದವಗೆ ೩

Leave a Reply

Your email address will not be published. Required fields are marked *