Categories
ರಚನೆಗಳು

ರಾಮದಾಸರು

೧೦೫
ವಿಠಲ ನಮೋ ವಿಠಲ
ಮುಟ್ಟಿಭಜಿಪ ದೀನನಿಷ್ಟಾರ್ಥ ಪಾಲಿಸು ಪ
ಹೇಸಿಪ್ರಪಂಚದಿ ನಿಂದು ಮಹ
ಕ್ಲೇಶಪಂಚಕದಲಿ ಬೆಂದು ಕೆಟ್ಟ
ವಾಸನತ್ರಯದಿಂದ ನೊಂದು ಬಲು
ಘಾಸಿಯಾದೆ ದಯಾಸಿಂಧು ಆಹ
ದೋಷದೂರನೆ ಎನ್ನ ದೋಷನಾಶನ ಗೈದು
ಪೋಷಿಸು ಅನುಮೇಶ ದಾಸನೊಳ್ದಯವಾಗಿ ೧
ಹರಿಭಕ್ತ್ಯೆಂಬುವ ಕವಚ ಬಿಟ್ಟು ಮಾಯ
ಮರವೆಯೆಂಬುವ ಕವಚ ತೊಟ್ಟು ಬಲು
ದುರುಳತನಕೆ ಮನಗೊಟ್ಟು ಮಹ
ದರಿವಿನ ಅರಮನೆ ಸುಟ್ಟು ಆಹ
ಪರಮದುರಿತದಿ ಬಿದ್ದು ಮರುಳನಾಗಿ ನಿಮ್ಮ
ಚರಣಸರೋಜಕ್ಕೆ ಮರೆಹೊಕ್ಕೆ ಕರುಣಿಸು ೨
ಹೊಂದಿ ಭಜಿಪೆ ನಿನ್ನ ಬೇಡಿ ಎನ್ನ
ಮಂದಮತಿಯ ಕಡೆಮಾಡಿ ನಿಜಾ
ನಂದ ಸುಜ್ಞಾನಪದ ನೀಡಿ ಭವ
ಬಂಧ ಸಂಕೋಲೆ ಗಡ ಕಡಿ ಆಹ
ಸಿಂಧುನಿಲಯ ಬೇಗ ದಂದುಗ ಪರಿಹರಿಸಿ
ಕಂದನ್ನ ಉದ್ಧರಿಸು ತಂದೆ ಶ್ರೀರಾಮಯ್ಯ ೩

 

ಪೂರ್ವಕತೆ ತಿಳಿಯಲಿಲ್ಲ
೪೨
ವಿಠ್ಠಲ ದೇವರು
ನಮೋಯೆಂಬೆ ನಮೋಯೆಂಬೆ
ನಮ್ಮಯ ವಿಠಲಗೆ ಪ
ಕಾಷ್ಟಹಾರನ ಇಷ್ಟಮಿತ್ರನ
ದಿಟ್ಟಪುತ್ರನ ಮನದಿಷ್ಟವಿತ್ತವಗೆ ೧
ಉತ್ತರಿತ್ತರಿ ತಮ್ಮ ಕತ್ತಲಮನೆಯೊಳು
ನೆತ್ತಿ ಹೊಡೆಸಿದಸ್ತ್ರೀನೆತ್ತಿ ಸಲಹಿದಗೆ2
ಮಂಗಲಮುನಿಯಿಂದ ಭಂಗಪಟ್ಟವನ
ಅಂಗಜನಶ್ವ ಶೃಂಗಾರಧಿಡಿದಗೆ ೩
ಕುರುಪನನುಜೆಯ ಪರಪತಿಶಿವ
ತರಣಿಯಿದಿರಿನೋಳ್ ತರಿಸಿದ ಮಹಿಮಗೆ ೪
ಭಕ್ತವತ್ಸಲ ಮುಕ್ತಿದಾಯಕ
ಭಕ್ತರ ಇಷ್ಟವ ಪೂರ್ತಿಪ ಶ್ರೀರಾಮಗೆ ೫

 

೧೬೦
ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ
ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ ಪ
ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ
ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು
ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ
ಕುಂಭಿನಿಯೊಳ್ಹನುಮನಂಥ ಮತಿ ನೀಡಿ ಸಲಹು ೧
ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು
ಪಾಲಿಸು ಜಟಾಯುನಂಥ ಶೀಲಮತಿಯೆನಗೆ
ವಾಲಿಗೆ ನೀನಿತ್ತ ಜಾಳುಮತಿ ನೀಡದೆ
ಸುಗ್ರೀವಗಿತ್ತ ಮೇಲುಮತಿ ನೀಡು ೨
ಮೂಡಣಾಧಿಪನಂತೆ ಕೇಡುಮತಿ ನೀಡದೆ
ರೂಢಿಯೊಳ್ಕರಿಯಂಥ ಗಾಢಮತಿ ನೀಡು
ನೀಡದಿರು ಶಶಿಯಂಥ ಖೋಡಿ ದುರ್ಮತಿಯನು
ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ ೩
ದುರುಳ ಕೌರವನಂತೆ ಕಿರಿಮತಿಯ ಕೊಡಬೇಡ
ಪರಮ ಪಾಂಡವರಂಥ ಖರೆಮತಿಯ ನೀಡು
ಧರೆಯೊಳ್ಜಯದ್ರಥನಂತೆ ನರಿಮತಿಯ ಕೊಡದಿರು
ವರ ವಿದುರನಂತೆ ಬಲು ನಿರುತಮತಿ ನೀಡು ೪
ಮರುಳ ಮಾನವರಂತೆ ಮರವೆ ಮತಿ ಒಲ್ಲೆನೌ
ಹರಿಯ ನಿಜ ದಾಸರಂಥ ಸ್ಥಿರತಿಮತಿಯ ನೀಡು
ಹರಣ ಪೋದರು ಬಿಡದೆ ವರದ ಶ್ರೀರಾಮನಡಿ
ಅರಿವಿಟ್ಟು ಭಜಿಸುವಪಾರಮತಿ ನೀಡು ೫

 

೧೦೬
ವಿಮಲಮತಿಯ ಪಾಲಿಸಭವ
ಅಮಿತದಯಾರ್ಣವ ದೇವ ಪ
ದೀನಬಂಧು ಜ್ಞಾನಸಿಂಧು
ದೀನನೊಳು ನೀನೆ ನಿಂದು
ಹೀನಮತಿಯ ತರಿದು ತವ
ಧ್ಯಾನ ಸದಾನಂದದಿಡುವ ೧
ಆಶಾಪಾಶಗಳನು ತುಳಿದು
ದೋಷರಾಸಿಗಳನು ಕಡಿದು
ಶ್ರೀಶ ನಿಮ್ಮ ಸಾಸಿರನಾಮವ
ಧ್ಯಾಸಕಿತ್ತು ಜ್ಞಾನ ಕೊಡುವ ೨
ಸತ್ಯ ಶ್ರೀರಾಮ ನಿಮ್ಮ ಪಾದ
ಭಕ್ತಿಯಿಂದ ಬೇಡ್ವೆ ಸದಾ
ಚಿತ್ತ ಶುದ್ಧಿಗೈದು ಎನಗಾ
ನಿತ್ಯ ಮುಕ್ತಿ ನೀಡಿ ಬೇಗ ೩

 

೪೩೩
ವಿಮಲಮಹಿಮನೆ ದಾಸನಾಸೆಪೂರೈಸೊ
ಅಮಿತ ನಿಮ್ಮಯ ಬಿರುದು ಸತ್ಯವೆಂದೆನಿಸೊ ಪ
ಕಷ್ಟಹರ ನೀನಹುದೆ ದಿಟ್ಟತನ ಕೊಡುಯೆನಗೆ
ಶಿಷ್ಟರಕ್ಷ ನೀನಹುದೆ ದುಷ್ಟಗುಣ ಬಿಡಿಸೊ
ಶಿಷ್ಟರೊಡೆಯ ನೀನಹುದೆ ಗಟ್ಟಿಮನವ ಪಾಲಿಸು
ಇಷ್ಟಪೂರ್ಣ ನೀನಹುದೇ ಕೊಟ್ಟು ರಕ್ಷಿಸೆನ್ನ ೧
ದೀನರಾಸ್ಪದನಹುದೇ ಧ್ಯಾನ ದಯೆ ಪಾಲಿಸೈ
ಗಾನಲೋಲಹುದೆ ನೀ ಜ್ಞಾನವನು ನೀಡೊ
ಮಾನರಕ್ಷ ನೀನಹುದೇ ಅಭಿಮಾನಯೆನದಿರೆನ್ನ
ಧ್ಯಾನಿಕಧೇನಹುದೇ ಆನಂದ ನೀಡೊ ೨
ನ್ಯಾಯವಂತ ನೀನಹುದೇ ಮಾಯೆಮೋಹವನು ಬಿಡಿಸು
ಪಾವನಾತ್ಮ ನೀನಹುದೇ ಸಾವು ಹುಟ್ಟು ಗೆಲಿಸು
ಜಯವಂತ ನೀನಹುದೇ ದೇಹಿಯೆನಿಸದಿರಲ್ಪರಿಗೆ
ಕಾವದೇವ ನೀನಹುದೇ ಭಾವದ್ವಾಸಿಸೆನ್ನ ೩
ಪೃಥ್ವಿ ವ್ಯಾಪಕನಹುದೇ ಚಿತ್ತಶುದ್ಧಮಾಡೆನ್ನ ಸತ್
ಚಿತ್ತ ನೀನಹುದೇ ಸತ್ಸಂಗ ನೀಡೊ
ಭಕ್ತವತ್ಸಲನಹುದೇ ಅನಿತ್ಯಗುಣ ಬಿಡಿಸೆನ್ನ
ಕರ್ತನು ನೀನಹದೇ ಸತ್ಪಥದೆನ್ನಿರಿಸೊ ೪
ಅಸಮಕರುಣಹುದೇ ನೀ ಪುಸಿಗೊಲಿಸಿದಿರು ಎನ್ನ
ದೋಷಹರ ನೀನಹುದೇ ಹಸನೆನಿಸು ಎನ್ನ
ದಾಸರಭಿಮಾನ್ಯಹುದೇ ಪೋಷಿಸೆಲೊ ತವಪಾದ
ಧ್ಯಾನದಿರಿಸೆನ್ನ ಶ್ರೀಶ ಶ್ರೀರಾಮ ೫

 

೧೦೭
ವಿಶ್ವಧಾರನೋ ಶ್ರೀಶ ವಿಶ್ವಕಾರನೋ
ವಿಶ್ವ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ
ನಾದಭರಿತನೋ ಹರಿ ನಾದಾತೀತನೋ
ವೇದಾಧರನೋ ರಂಗ ವೇದ ಗೋಚರನೋ
ವೇದವೇದಾಂತ ಸ್ವಾದ ನಿಖಿಲ
ಬೋಧರೂಪ ಭೇದರಹಿತ
ಆದಿ ಅನಾದಿದಾತ ಸತತ
ಸಾಧುಸಜ್ಜನವಿನುತ ಅಮಿತ೧
ದೇವದೇವನೋ ಸ್ವಾಮಿ ದಿವ್ಯಚರಿತನೋ
ಕಾವ ಕರುಣನೋ ಭಕ್ತಿ ಭಾವಪೂರ್ಣನೋ
ಸಾವುಹುಟ್ಟು ಭಯವಿದೂರ
ಮಾಯಗೆಲಿದ ಮಹಪ್ರಕಾಶ
ಭಾವಜಜನಕ ಭವಭಂಗ
ಸೇವಕಜನರ ಜೀವದಾಪ್ತ ೨
ದೋಷನಾಶನೋ ಕೃಷ್ಣ ಮೀಸಲಾತ್ಮನೋ
ಭಾಸುರಂಗನೋ ಜಗದೀಶ ಗಮ್ಯನೋ
ವಾಸುಕಿಶಯನ ವಾಸುದೇವ
ಸಾಸಿರನಾಮದೊಡೆಯ ಇಂದಿ
ರೇಶ ಗೋವಿಂದ ಪೋಷಿಸೆನ್ನ
ಶ್ರೀಶ ಶ್ರೀರಾಮದಾಸಪ್ರಿಯ ೩

 

೫೮೦
ವೃಥಾಕಳೆದೆಯಲ್ಲ ಕಾಲ ಮೃತ್ಯು ಗೆಲಿಯಲಿಲ್ಲ
ವೃಥಾ ಕಳೆದೆ ಕಾಲ ಪ
ಪೃಥ್ವಿಯಮೇಲೆ ಕೃತಕೃತ್ಯನಾಗಲು ಬಂದ
ವೃತ್ತಾಂತ ತಿಳಿಯಲಿಲ್ಲಅ.ಪ
ನಂಬಿಕೊಂಡೆಯಲ್ಲ ಈ ಜಗ ಬೆಂಬಲ ಬರೋದಲ್ಲ
ಜಂಬಬಡುವಿ ಸುಳ್ಳೆ ಮನದ ಡಂಬವ ಬಿಡಲಿಲ್ಲ
ಕುಂಭಿನಿಸುಖದ ಹಂಬಲದಲಿ ದಿನ
ಶುಂಭತನದಿಗಳೆದಿಂಬಿಲ್ಲದ್ಹೋಗುವಿ ೧
ಕುಮತಿಯ ಬಿಡಲಿಲ್ಲ ಮಾಯಮಮತ ಕಡಿಯಲಿಲ್ಲ
ನಮಿಸಿ ಬಿಡದೆ ಸದಾ ಸುಮನಸರೊಳಗಾಡಿ
ಭ್ರಮೆಯನಳಯವಿಲ್ಲ ಬಂದ ಸಮಯ ತಿಳಿಯಲಿಲ್ಲ
ವಿಮಲಸುಖದನಿಜ ಕ್ರಮವ ತಿಳಿಯಲಿಲ್ಲ ೨
ಆಸೆ ನೀಗಲಿಲ್ಲ ವಿಷಯದ್ವಾಸನ್ಹಿಂಗಲಿಲ್ಲ
ಕ್ಲೇಶ ತೊಡೆಯಲಿಲ್ಲ ಲಂಪಟ ಮೋಸದಿಂದುಳಿಲಿಲ್ಲ
ಶೇಷಶಯನ ಮಮ ಶ್ರೀಶ ಶ್ರೀರಾಮನ
ದಾಸನಾಗಿ ಭವಪಾಶ ಗೆಲಿಯಲಿಲ್ಲ ೩

 

೧೭೯
ಶರಣ ನೀನೆಲೊ ನರಹರಿ
ಶರಣನೀನೆಲೊ ನರಹರಿ ಚರಣ ಪ
ಶರಣ ನೀನಿರ್ದು ಮರವೆಗೂಡಿ
ಜರಾಮರಣ ಪಡೆವರೇನೊ ಅ,ಪ
ಯೋಗಮಾರ್ಗ ವಹಿಸಿ ನಿಜವಾದ
ಭಾಗವತರ ಒಲಿಸಿ
ರಾಗರಹಿತನಾಗಿ ನೀಗದ ಸಂಸಾರ
ಭೋಗ ತ್ಯಜಿಸಿ ಭವರೋಗ ಗೆಲಿಯುವಂಥ ೧
ಮಿಥ್ಯೆ ಮಾಯ ನೀಗಿ ಸತತ ನೀ
ಸತ್ಯ ಜನಕೆ ಬಾಗಿ
ಸತ್ಯಸಂಧನಾಗಿ ಚಿತ್ತಜತಾತನ
ಭಕ್ತನೆನಿಸಿ ಯಮ ಮೃತ್ಯುಗೆಲಿಯುವಂಥ ೨
ಪಾಮರತ್ವ ತೊರೆದು ನಿಜವಾದ
ನೇಮನಿತ್ಯ ಪಿಡಿದು
ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ
ನಾಮ ಭಜಿಸಿ ಮುಕ್ತಿ ಸಾಮ್ರಾಜ್ಯಪಡೆಯೆಲೊ ೩

 

೧೦೯
ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ
ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ
ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ
ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ
ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ
ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ ೧
ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ
ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ
ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ
ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ ೨
ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ
ಸಿಂಧುಶಯನ ಆನಂದನ ಕಂದನೆ ವೆಂಕಟೇಶ
ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ
ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ ೩
ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ
ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ
ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ
ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ ೪
ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ
ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ
ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ
ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ ೫

 

೧೧೦
ಶರಣು ಸಹಜಭಾವ ಸಿರಿಯರ ಜೀವ
ಶರಣು ಶರಣು ದೇವ ದೇವ ಪ
ಶರಣು ನಿನ್ನ ಚರಣಸೇವೆ ಕರುಣಿಸೆನಗೆ
ನಿರುತದಭವ ಪರಮಪಾವನ ನಿಮ್ಮ
ಚರಿತ ಕರುಣಿಸೆನ್ರ‍ಹದಯಕ್ಕೆ ಸತತ
ಪೊರೆಯೊ ಪ್ರೇಮದಿ ದುರಿತಪರ್ವತ
ತರಿದು ತೊರೆಸಿ ಜಗದ ಮಮತೆ ಅ.ಪ
ಸಾರ ಸುರಸಮೂಹಸೇವಿತ ಮಾರಾರಿವಿನುತ
ಕ್ಷೀರವಾರಿಧಿ ಸುತೆಯ ಪ್ರಿಯನಾಥ ಸನಕಾದಿನಮಿತ
ಸೇರಿ ಭಕ್ತರಗಣದಲಿ ಗುಪ್ತ ನಲಿಯುವಿ ಮಮತೆ
ತೋರಿ ಎನ್ನನು ಮಾಡು ಪಾವನ
ಮೀರದ ಸಂಸಾರಬಂಧನವಾರಿಯ ದಾಂಟಿಸುಯೀಕ್ಷಣ
ಸೇರಿಸದೆ ಎನ್ನ ಮಾಯಾಜಾಲದಿಂ
ಸೇರಿಸು ನಿಜಜ್ಞಾನ ದಯದಿ ೧
ವೇದವೇದಂಗಳಿಗೆ ಅಗೋಚರ ವೇದಂಗಳಾಧಾರ
ವೇದವೇದ್ಯಮಳೈರ್ಕ ಪರತರ
ವೇದಗಳ್ಹಿತಕರ ವೇದವೇದಾಂಗ ಶ್ಯಾಮಸುಂದರ
ವೇದಾದಿ ಮನೋಹರ ವೇದವಿದ್ಯೆ ಬೋಧಿಸಯ್ಯ
ವೇದಸಾಧನ ತೋರಿಸಯ್ಯ ವೇದಮಂತ್ರ ಸಿದ್ಧಿಸಯ್ಯ
ವೇದವೇದಾಂತದೊಳು ಗೌಪ್ಯವಾದ ತತ್ವದ ಮೂಲ ತಿಳಹಿ
ವಾದಬುದ್ದಿಯ ನೀಗಿಸಿ ನಿಮ್ಮ ಪಾದಭಕ್ತಿಯ ಕರುಣಿಸಭವ ೨
ಭುವನತ್ರಯದ ಪರಮ ಸುಸೂತ್ರ ವಾರಿಜನೇತ್ರ
ಭುವನತ್ರಯದ ಪಾವನ ಸ್ತೋತ್ರ ಪರಮಪವಿತ್ರ
ಭುವನಜಾತೆಯ ಮೋಹದ ಮಿತ್ರ ವನರುಹ ಗಾತ್ರ
ಭುವನದ್ಹತ್ತವತಾರ ದೇವ ಭುವನವೀರೇಳು ಹೊತ್ತು ಆಳುವ
ಭುವನ ಭಾರವನಿಳುಹಿ ಕಾವ ಭುವನಯಾತ್ರದಿ
ಜಯವ ಪೊಂದಿಸಿ
ಭುವನಕೆ ತಿರುಗಟ್ಟದೆ ನನ್ನನು ಜವದಿ
ನಿಮ್ಮಯ ಕರುಣದೊರಕಿಸಿ
ದಯದಿ ಮುಕ್ತಿಯ ಕೊಡು ಶ್ರೀರಾಮ ೩

 

೪೩೪
ಶಾಂತನಾಗು ಮನಸೆ ನೀ ಶಾಂತನಾಗು
ಕಂತುಪಿತನ ಅಂತರಂಗದಿ ಧ್ಯಾನಿಸುತ್ತ ಪ
ಪೊಡವಿಜನರ ನಡೆಯ ಕಂಡು
ಮಿಡುಕು ಗುಣವ ಕಲಿಯ ಬೇಡ
ಕೊಡುವ ಸ್ವಾಮಿ ಬಡವನಿಹನೆ
ದೃಢವಿಟ್ಟು ಅರಿದು ನೋಡು ೧
ಭೂಮಿಯವರು ಕೈಯ ಬಿಡಲು
ಸ್ವಾಮಿಕಾರ್ಯ ನಿಲ್ಲುತಿಹ್ಯದೆ
ಪಾಮರಾಗದೆ ಸ್ವಾಮಿಸೇವೆ
ನೇಮವಹಿಸಿ ಮಾಡು ಬಿಡದೆ ೨
ಪಾಪಿನರರ ಮಾತಿಗಾಗಿ
ಕೋಪಗೊಳ್ಳದೆ ಸತ್ಯನಾಗು
ಗೋಪಾಳ ಸಣ್ಣದಲ್ಲ ನಂಬು
ಭೂಪ ಶ್ರೀರಾಮನೊಲಿದು ಕೊಡುವ ೩

 

೧೧೧
ಶಾಂತಿನಿಲಯ ಸುಖದ ಪ
ಭ್ರಾಂತನಾದೆ ಪರಿಭವದ
ತಂತು ತಿಳಿಯದಕಟ ಶ್ರೀ
ಕಾಂತ ಕಾಯೊ ಪಿಡಿದು ಕರು
ಣಾಂತರಂಗ ಕುಸುಮನಾಭ ೧
ಉದಧಿಯಂದದುಕ್ಕಿಬರುವ
ಅಧಮನಕೆ ಕಲ್ಪನೆಗಳು
ಒದಗಿ ವಿಧ ವಿಧ ನೋಯಿಪು
ದಿದನು ಬೇಗ ಪರಿಹರಿಸು ೨
ನಂಬಿಭಜಿಪ ಭಕುತಜನರಿ
ಗಿಂಬು ನೀನೆ ಅಂಬುಜಾಕ್ಷ
ಕುಂಭಿಣೀಶ ವರ ಶ್ರೀರಾಮ
ಇಂಬುಗೊಟ್ಟು ಸಲಹು ಸದಾ ೩

 

೪೩೫
ಶಾಂತಿಯ ಕರುಣಿಸೊ ಈ ಮನಸಿಗೆ
ಶಾಂತಿಯ ಕರುಣಿಸೊ ಪ
ಶಾಂತಿಕರುಣಿಸಿ ನಿನ್ನಂತರಂಗದಿ ನಿಮ್ಮ
ಚಿಂತೆ ಇರಿಸು ಕರುಣಾಂತರಂಗ ಹರಿಅ.ಪ
ವಿಲಸಿತಮತಿ ಕೊಡೊ ಮನವು
ಚಲಿಸದಪದ ನೀಡೋ
ಸುಲಭದಿ ತವಪಾದ ಒಲಿಸಿ
ನಲಿಯುವ ದಾಸರೊಳಗೆ ಕೂಡಿಸಿ ಎನ್ನ
ನೊಲಿದು ರಕ್ಷಣೆಮಾಡೊ ೧
ಹಲುಬಾಟ ದೂರಮಾಡೊ ಎನ್ನಯ
ಪ್ರಳಯ ಗುಣೀಡ್ಯಾಡೊ
ಗಲಿಬಿಲಿ ಸಂಸಾರದೊಲಿಮಿಲಿ ಬಳಲುವ
ಹೊಲೆಮತಿ ಕಳೆದೆನ್ನ ಸಲಹೆಲೊ ಜ್ಞಾನದಿ ೨
ಮರೆಯ ಬೇಡ ಎನ್ನ ಕರುಣಾ
ಭರಣ ಭಕ್ತಪ್ರಾಣ
ಹರಿವ ಜಗದಿ ಎನ್ನ ಪರಿಪರಿ ನೋಯ್ಸದೆ
ಪರಮಮುಕ್ತಿಯನಿತ್ತು ಪೊರೆಯೊ ಶ್ರೀರಾಮ ೩

 

ಅಂಧ್ರರಾಜ್ಯದ ಕೃಷ್ಣಾ ಜಿಲ್ಲೆಯ
೧೬೧
ಶೈಲಜಾವರ ಕಾಲಭೈರವ ಕೈಲಾಸಾಧಿಪ ಭಜಿಸುವೆ
ಪಾಲನುತ ಶ್ರೀಶೈಲಮಂದಿರ ಮಲ್ಲಿಕಾರ್ಜುನ ರಕ್ಷಿಸು ಪ
ಏಳುಕೊಳ್ಳಗಳೇಳು ನೆಲೆಗಳ ಮೇಲೆ ತೋರ್ಪ ಲಿಂಗನೆ
ಕಾಲಕಾಲದಿ ಬಾಲನೆಂದೆನ್ನ ಮಲ್ಲಿಕಾರ್ಜುನ ರಕ್ಷಿಸು ೧
ಶೀಲ ಭಕುತರ ಪಾಲಿಸಲು ಪಾತಾಳಗಂಗೆಯ ನಿರ್ಮಿಸಿ
ಪಾಲಿಸಿದಿ ಬುವಿ ಪಾಲಿಸಿ ವರ ಮಲ್ಲಿಕಾರ್ಜುನ ರಕ್ಷಿಸು ೨
ವೀರಪತಿವ್ರತೆಯಪಾರ ಭಕ್ತಿಗೆ ತೋರಿ ಜ್ಯೋತಿರ್ಲಿಂಗವ
ಸಾರಸೌಖ್ಯ ನೀಡುದ್ಧಾರ ಮಾಡಿದ ಮಲ್ಲಿಕಾರ್ಜುನ ರಕ್ಷಿಸು ೩
ಅಂಗಜಹರ ಗಂಗಾಧರ ಗುರುಲಿಂಗಜಂಗಮಾತ್ಮಕ
ಭಂಗಿಸದೆ ಎನ್ನ ಹಿಂಗಿಸಿ ಭವ ಮಲ್ಲಿಕಾರ್ಜುನ ರಕ್ಷಿಸು ೪
ಕಾಲಕಾಲ ಕಾಲಕೇಶ್ವರ ಶೂಲಪಾಣಿಯೆ ನಂಬಿದೆ
ಕಾಲನ ಮಹದಾಳಿ ಗೆಲಿಸೆನ್ನ ಮಲ್ಲಿಕಾರ್ಜುನ ರಕ್ಷಿಸು ೫
ಕಳೆದೆ ದಿನಗಳ ಇಳೆಯ ಸುಖಮೆಚ್ಚಿ ತಿಳಿಯದೆ ತವಮಹಿಮೆಯ
ಒಲಿದು ಕ್ಷಮಿಸೆನ್ನ ಬಾಲನೆಂದೆತ್ತಿ ಮಲ್ಲಿಕಾರ್ಜುನ ರಕ್ಷಿಸು ೬
ಅಷ್ಟವರ್ಣ ವಿಶಿಷ್ಟಭಕ್ತಿಯ ಕೊಟ್ಟು ಕುರಣಾದೃಷ್ಟಿಯಿಂ
ಶಿಷ್ಟ ಸಂಗದೆನ್ನಿಟ್ಟು ಅನುದಿನ ಮಲ್ಲಿಕಾರ್ಜುನ ರಕ್ಷಿಸು ೭
ದುಷ್ಟಭವಕಿನ್ನು ಹುಟ್ಟಿಬರುವಂಥ ಕೆಟ್ಟ ಬವಣೆಯ ತಪ್ಪಿಸು
ಇಷ್ಟದಾಯಕ ಮುಟ್ಟಿಪೂಜಿಪೆ ಮಲ್ಲಿಕಾರ್ಜುನ ರಕ್ಷಿಸು ೮
ಪರಕೆ ಪರತರ ಪರಮಪ್ರಕಾಶ ವರದ ಶ್ರೀರಾಮಮಿತ್ರನೆ
ಮರೆಯ ಬಿದ್ದೆನು ಕರುಣಿಸಿ ಮುಕ್ತಿ ಮಲ್ಲಿಕಾರ್ಜುನ ರಕ್ಷಿಸು ೯

 

೫೮೧
ಶೋಧಿಸದೆ ನಿಜ ಬೋಧಿಪೆನೆಂಬ ಈ
ಹಾದಿಯೆಲ್ಲಿ ಕಲಿತಿರೆಲೊ ಎಲೋ
ಆಧರವರಿಯದ ವಾದಿಮೂರ್ಖರಿಗೆ
ಬೋಧ ಸಿದ್ಧಿಪುದೇನೆಲೋ ಎಲೋ ಪ
ಋತುಯಿಲ್ಲದವಳಲ್ಲಿ ರತಿಕಲಹ ಬೆಳೆಸಲು
ಸುತರ ಪಡೆವಳೇನೆಲೋ ಎಲೋ
ಅತಿಮಂದಮತಿಗಳಿಗಹಿತವ ಬೋಧಿಸೆ ಸು
ಗತಿಗೆ ಬಾಹರೇನೆಲೋ ಎಲೋ
ಕತ್ತೆಗೆ ಮುತ್ತಿನ ಕಂಟಲಿ ಹೇರಲು
ಅರ್ತೀತೆ ಬೆಲೆಯನು ಎಲೋ ಎಲೋ
ಕೃತ್ರಿಮರಿಗಾತ್ಮದ ಸ್ರ‍ಮತಿಯ ಬೋಧಿಸೆ ದು
ರ್ಗತಿಯು ತಪ್ಪೀತೇನೆಲೋ ಎಲೋ ೧
ಕೋಣನ ಮುಂದೆ ವೇಣುಬಾರಿಸಲು
ಅನಂದತಾಳೀತೇನೆಲೋ ಎಲೋ
ಶ್ವಾನನ ಮುಂದೆ ಸುಗಾನ ಮಾಡಲದು
ಧ್ಯಾನಕ್ಕೆ ತಂದೀತೇನೆಲೋ ಎಲೋ
ಹೀನಸಂಸಾರಿಗೆ ದಾನಿಗಾಂಭೀರ್ಯದ
ಖೂನ ತಿಳಿದೀತೇನೆಲೋ ಎಲೋ
ಜ್ಞಾನಬೋಧಾಮೃತ ಅಜ್ಞಾನಿಗೆ ಉಸುರಲು
ಹೀನಭವ ಬಿಟ್ಟೇತೇನೆಲೋ ಎಲೋ ೨
ಆಸೆಗಾರಗೆ ಮಹ ಶಾಶ್ವತ ಪೇಳಲು
ಲೇಸಾಗಿ ತೋರೀತೇನಲೋ ಎಲೋ
ದಾಸರ ದೂಷಿಪ ನಾಶಮತಿಗೆ ಯಮ
ಪಾಶವು ತೊಲಗೀತೇನೆಲೋ ಎಲೋ
ಈಶನೊಲಿಮಿಲ್ಲದೆ ನಿಜಬೋಧಲಂಬಿಸಿ ಮುಕ್ತಿ
ಅಸನ ಸಿಕ್ಕೀತೇನೆಲೋ ಎಲೋ
ಹೇಸಿಜನರಿಗೆಲ್ಲ ಶ್ರೀಶ ಶ್ರೀರಾಮನ
ದಾಸತ್ವ ದೊರಕಿತೇನೆಲೋ ಎಲೋ ೩

 

೪೩೬
ಶ್ರೀಕೃಷ್ಣ ಪ್ರಭೂಜೀ ತೇರಾ
ಆ ಗೋಷ್‍ಮೇ ಲೇ ಮುಝ್‍ಕೋ ಪ
ಅಜ್ಞಾನ ಅಂಧಕಾರ್‍ಪರದೇ ಉಡಾದೇ
ಮೇರಾ ನಾಶನ್ಕೇ ಸಂಸಾರ ಪ್ಯಾರಾ ಜಲ್ದೀಸೇ ಕರದೇ ದೂರ ೧
ರಹಮತ್ಕೇ ದರವಾಜ ಖುಲ್ಲಾ ಕರದೇ ದೀನದಯಾಲ
ತೂಹೀ ಜಗತ್‍ಪಾಲಾ ದಾಸೌಂಕೇ ಪ್ರೇಮಮಾಲಾ೨
ಸಂತಾಂಕೇ ಸಂಗತ ದಿಲಾ ಧ್ಯಾನಕೇ ಅಮೃತ ಪಿಲಾ
ಶ್ರೀರಾಮಚರಣಕಮಲ ಭಜನ್ಮೇ ಮುಝ್‍ಕು ಮಿಲಾ ೩

 

೪೩೭
ಶ್ರೀಶ ತೇರೇ ಪಾದಕುಸುಮ
ದಾಸ ಕಹಿಲಾ ಮುಝೇ ಪ್ರೇಮ ಸೇ ಪ
ಜಗ ಮಾಯ ಮೋಹ ಮಿಟಾ
ಜಲ್ದೀಸೇ ಭವಮೂಲ ಕಟಾ
ಜರ ಮರಣ ಸಂಕಟ ಛುಟಾ
ದುರಿತಕೂಪಸೇ ಕರುಣದುರಾ ೧
ನೀ ಸ್ತ್ರೀತನ್ಕೇ ಪೇಮಪಾಶ
ನಾಶಕರ್ಕೇ ಮೇರಾ ಮಾನಸ
ಕಿಲ್ಮಿಷುಡಾದೇ ನತ ಪೋಷ
ನುತಿಪೆ ಸತತ ಪೊರೆ ಪ್ರಕಾಶ ೨
ತೂಹೀ ಪ್ರಭು ಭಕುತಾಧಾರ
ನಹೀ ಶಿವಾ ತೇರ
ಪಾಲ ತ್ರಿಜಗ ಸೂತ್ರಧಾರ
ಶ್ರೀರಾಮ ಪಂಚಪ್ರಾಣ ಮೇರಾ ೩

 

೧೧೨
ಶ್ರೀಶ ಶ್ರೀನಿವಾಸ ಎನ್ನ ಧ್ಯಾಸದಿ ನೀ ವಾಸಿಸೈ ಪ
ಹಸನ ಮಾಡೆನ್ನ ಮಸಣ ಮತಿಯ
ಪುಸಿಯು ಎನಿಸದ ಅಸಮ ನಿಮ್ಮ
ಎಸೆವ ಪಾದಕುಸುಮ ಎನ್ನ
ರಸನೆ ಮೇಲ್ಪ್ರಕಾಶಿಸಿ ೧
ಭೃತ್ಯನ ಸಚ್ಚಿತ್ತವೆಂಬ ತಖ್ತ
ತೃಪ್ತಿಯಿಂದ್ಹತ್ತಿ ನಿಮ್ಮ
ಸತ್ಯಚರಿತ ಉತ್ತರಿಸಭವ
ಭಕ್ತ ಪ್ರಾಣದಾಪ್ತ ಬಂಧೋ ೨
ಭೂಮಿತ್ರಯದ ಪ್ರೇಮನಿಲಯ
ಸೀಮೆಯಿಲ್ಲದ ನಾಮಮಹಿಮ
ಸ್ವಾಮಿ ನಿಮ್ಮ ಪ್ರೇಮದಾಸರ
ಕ್ಷೇಮನಿಧಿ ಶ್ರೀರಾಮ ಪ್ರಭೋ ೩

 

೪೩೯
ಶ್ರೀಶ ಸಿರಿ ಇಂದಿರೇಶ ದಾಸಜನಪೋಷ
ದಾಸನಾಶೋತ್ತರಕೆ ಬೇಸರಿಯಬೇಡ ಪ
ಭೇದಭಾವನೆ ಬಿಡಿಸು ವಾದಮತಿ ಪರಿಹರಿಸು
ಸಾಧುಸಜ್ಜನರ ಸುಬೋಧನುಡಿಗಲಿಸು
ಕ್ರೋಧ ತಾಮಸ ಕಡಿಸು ವೇದವಾಕ್ಯವ ತಿಳಿಸು
ಸಾಧನದಿ ಪರಲೋಕ ಹಾದಿಯೊಳು ನಡೆಸು ೧
ಶಾಂತಿ ಸದ್ಗುಣ ಕಲಿಸು ಶಾಂತಿನುಡಿಗಳು ನುಡಿಸು
ಶಾಂತಿ ಮಂತ್ರವ ಬೋಧಿಸು ಶಾಂತಿಸ್ಥಿರಗೊಳಿಸು
ಶಾಂತರೊಡನಾಟವಿರಿಸು ಶಾಂತಿಸುಖ ಕರುಣಿಸು
ಶಾಂತಜನಪ್ರಭುವೆ ವೇದಾಂತ ಎನಗೊಲಿಸು ೨
ಕಾಸಿನಾಸೆಯು ಬಿಡಿಸು ಹೇಸಿ ಬವಣೆಯ ಗೆಲಿಸು
ಮೋಸಮಯಪಹರಿಸು ದೋಷದೂರೆನಿಸು
ದೋಷನಾಶನ ಜಗದೀಶ ಶ್ರೀರಾಮ ನಿನ್ನ
ಸಾಸಿರ ನಾಮ ಎನ್ನ ಧ್ಯಾಸದೊಳು ನಿಲಿಸು ೩

 

೬೫೨
ಶ್ರೀಶನ ಚರಣದಾಸನಾಗಿರ್ದರೆ
ಆಶಾಪಾಶ ನೀಗಿರಬೇಕು ಪ
ಈಶನರಿತ ಗುರು ಶಿಷ್ಯನಾಗಿರ್ದರೆ
ದೂಷಣ ಭೂಷಣ್ಹೋಗಿರಬೇಕು ಅ.ಪ
ಹರಿಸರ್ಮಣಾಮೃತ ಸುರಿವನಾಗಿರ್ದರೆ
ಧರೆಯ ಭೋಗ ಮೀರಿರಬೇಕು
ಪರತತ್ತ್ವದ ಮೂಲರಿತವನಾದರೆ
ಮರವೆ ಮಾಯ ಹಾರಿರಬೇಕು ೧
ವೇದ ವೇದಾಂತವ ಸಾಧಕನಾದರೆ
ವಾದ ವಾಂಛಲ್ಯವ ತೊಡೆದಿರಬೇಕು
ಬೋಧ ಪಡೆದು ನಿಜ ಸಾಧುವಾದರೆ
ನಾದಶಬ್ದವಡಗಿರಬೇಕು ೨
ಮಾನಸಪೂಜೆಯ ಖೂನ ಬಲ್ಲ್ಯಾದರೆ
ತಾನು ತನ್ನನು ಅರಿತಿರಬೇಕು
ಧ್ಯಾನವಿಡಿದು ನಿಜಜ್ಞಾನಿಯಾದರೆ
ಮಾನಭಿಮಾನಕ್ಹೊರತಿರಬೇಕು ೩
ಬೋಗದ್ವಾಸನ್ಹಿಂಗಿ ಭಾಗವತನಾದರೆ
ಕೂಗಿನ ನೆಲೆ ತಿಳಿದಿರಬೇಕು
ಯೋಗ ಬಲಿಸಿ ಮಹಯೋಗಿಯಾದರೆ
ರಾಗರಹಿತನಾಗಿರಬೇಕು ೪
ಲಿಂಗವ ಧರಿಸಿ ಜಂಗಮನಾದರೆ
ಸಂಗರಹಿತನಾಗಿರಬೇಕು
ಅಂಗ ಮೂರು ನೀಗಿ ಲಿಂಗ ತಾನಾದರೆ
ಲಿಂಗಾಂಗ ಸಮರಸ ತೋರಬೇಕು ೫
ಸತ್ಯವರಿತು ಸತ್ಪುರುಷನಾದರೆ
ಸತ್ತಂತೆ ಜಗದೊಳಿರಬೇಕು
ಮೃತ್ಯುಗೆಲಿದು ಪರಮಾರ್ಥಿಕನಾದರೆ
ಮತ್ರ್ಯರ ಗುಣ ಮರ್ತಿರಬೇಕು ೬
ಘೋರ ಭವಾಂಬುಧಿ ಪಾರುಗಂಡಿರ್ದರೆ
ಪಾರ ಹಾರೈಕೆ ಅಳೆದಿರಬೇಕು
ಸಾರಮೋಕ್ಷ ತನ್ನ ಸೇರಬೇಕಾದರೆ
ಧೀರ ಶ್ರೀರಾಮನೊಲಿಸಿರಬೇಕು ೭

 

೪೩೮
ಶ್ರೀಶನು ತನ್ನಯ ದಾಸತ್ವ ಕೊಟ್ಟೆನ್ನ
ಧ್ಯಾಸದಿ ಬಂದು ಸ್ಥಿರಮಾದ ಪ
ಧ್ಯಾಸದೊಳಗೆ ಬಂದು ಸ್ಥಿರವಾಗಿ ನಿಂತಿನ್ನು
ನಾಶನ ಜಗದಾಸೆ ಎನಗೇನೆ ಅ.ಪ
ಸುಂದರಮಾದ ಸುಸಂಧಿಯೆನಗೆ ಫಲಿಸಿತು
ಹಿಂದಿನ ಸುಕೃತ ಫಲದಿಂದೆ
ಹಿಂದಿನ ಸುಕೃತ ಫಲದಿಂದ ಎನ್ನಗೆ
ತಂದೆ ಗೋವಿಂದ ತಾನೆ ಗೋವಿಂದ ೧
ಕೆಟ್ಟ ಬವಣೆಯಿಂದ ಕೆಟ್ಟು ಹೋಗುತಲಿರ್ದೆ
ಸೃಷ್ಟೀಶ ದಯದಿ ನೋಡಿದ
ಸೃಷ್ಟೀಶ ದಯದಿಂದ ನೋಡಿ ಮುಂದಕೆ ಕರೆದು
ನೆಟ್ಟನ ಮಾರ್ಗಕೆ ಹಚ್ಚಿದ ೨
ಸಾಧ್ಯವಲ್ಲಾರಿಗೀತಸಾಧ್ಯಮಾಗಿ ತಾನೆ
ಸಾಧ್ಯವಿಲ್ಲದ ಸುದ್ದಿ ತಿಳಿಸಿದ
ಸಾಧ್ಯವಿಲ್ಲದ ನಿಜ ಸುದ್ದಿ ತಿಳಿಸಿ ಪರಿ
ಶುದ್ಧನ್ನ ಮಾಡಿ ನಿಲಿಸಿದ ೩
ಮೂಲೆಗೆ ಬಿದ್ದ್ವೊಸ್ತು ಮೇಲಕ್ಕೆ ಎತ್ತಿ ತವ
ಲೀಲೆ ನಾಲಗೆಮೇಲೆ ಬರೆದನೆ
ಲೀಲೆ ನಾಲಗೆಮೇಲೆ ಬರೆದೆನ್ನಜ್ಞಾನ
ಕಾಳೆಂಬ ಕತ್ತಲ ಕಳೆದನೆ ೪
ಮಂತ್ರಮೂಲನು ಸರ್ವಾಂತರ್ಯಾಮಿಯು ಸ್ವ
ತಂತ್ರ ತಾನೆಂಬ ನಿಜ ತಿಳಿಸಿದ ಸ್ವ
ತಂತ್ರ ತಾನೆಂಬ ನಿಜ ತಿಳಿಸಿ ಎನಗನ್ಯ
ಚಿಂತೆ ಭ್ರಾಂತಿಗಳೆಲ್ಲ ಬಿಡಿಸಿದ ೫
ಮರವೆಯ ಹಾರಿಸಿ ಕರುಣಿಸಿ ಸ್ಥಿರಜ್ಞಾನ
ಪರಿಭವ ದು:ಖ ಪರಿಹರಿಸಿದ
ಪರಿಭವ ದು:ಖ ಪರಿಹರಿಸೆನಗೆ
ಸ್ಥಿರವಾದ ಪರಲೋಕದರಿವು ನಿಲಿಸಿದ ೬
ಆಶದಿ ಬಿದ್ದು ನಾ ದೇಶದೇಶವ ತಿರುಗಿ
ಬೇಸತ್ತು ಬಾಯ ಬಿಡುತಿರ್ದೆ
ಬೇಸತ್ತು ಬಾಯ ಬಿಡುತಿರ್ದೆ ಕಂಡೆನ್ನಯ್ಯ
ಲೇಸಾದ ಪದವಿ ತೋರಿಸಿದ ೭
ಜಗಸುಖಕೊಲತಿದ್ದೆ ಜಗದಾತ್ಮನು ಈಗ
ಜಗದ್ಹಗರಣ ತೋರಿಸ ನಗಿಸಿದ
ಹಗರಣ ತೋರಿಸಿ ನಗಿಸಿದಚಲಸೌಖ್ಯ
ಬಗೆ ತೋರಿ ಜಗಸುಖ ಮರೆಸಿದ ೮
ಏನೆಂದು ಪೇಳಲಿ ಸಾನಂದನುತ ಮಹ
ದಾನಂದದಾಲಯ ಪೊಗಿಸಿದ
ಆನಂದದಾಲಯ ಪೊಗಿಸೆನ್ನ ವದನದಿ
ತಾ ನಿಂದು ನಿಖಿಲ ನುಡಿಸಿದ ೯
ಭವಭಯಹರಿಸುವ ಸವಿನುಡಿಗಲಿಸಿದ
ಭವರೋಗದ್ವೈದ್ಯ ಮಮಪಿತ
ಭವರೋಗದ್ವೈದ್ಯ ಮಮಪಿತ ಮುಂದಿನ್ನು
ಸಾವ್ಹುಟ್ಟೋಭೀತಿ ಎನಗಿಲ್ಲ ೧೦
ಕರ್ತು ಸರ್ವೋತ್ತಮ ನಿತ್ಯನಿರ್ಮಲ ಎನ್ನ
ಮತ್ರ್ಯದ ಗುಣವ ತೊಡೆದೆನ
ಮತ್ರ್ಯದ ಗುಣ ತೊಡೆದು ಸತ್ಯ ಶ್ರೀರಾಮ ಎನ್ನ
ಮುಕ್ತಿ ಸಾಮ್ರಾಜ್ಯ ತಖ್ತೆ ಏರಿಸಿದ ೧೧

 

೧೧೩
್ರೀಶಾಯ ನಮ:ಓಂ ರಮೇಶಾಯ ನಮ
ಈಶಾಯ ನಮ:ಜಗದೀಶಾಯ ನಮ:
ಸುರೇಶಾಯ ನಮ: ಪ
ಭೂಧವ ನಮ:ಓಂ ಯಾದವ ನಮ:
ಮಾಧವ ನಮ:ಮಧುಸೂದನ ನಮ:ಭವಭೇದ ನಮ: ೧
ಅಚ್ಯುತ ನಮ:ಓಂ ಸಚ್ಚಿತ್ತ ನಮ:
ಅಚ್ಯುತಾನಂತ ನಮ:ಮತ್ಸ್ಯಾವತರ ನಮ:ಇಚ್ಛಜಪಿತ ನಮ: ೨
ತನುಶೀಲ ನಮ:ಓಂ ವನಮಾಲ ನಮ:
ಘನಲೀಲ ನಮ:ಸುಜನಪಾಲ ನಮ:ಕುಜನಕಾಲ ನಮ: ೩
ನರಹರಿ ನಮ:ಓಂ ಸಿರಿದೊರಿ ನಮ:
ಮುರವೈರಿ ನಮ:ತ್ರಿಪುರಾರಿ ನಮ:ಅಘಹರ ಶೌರಿ ನಮ: ೪
ನುತಪ್ರೇಮ ನಮ:ಓಂ ಪಿತಕಾಮ ನಮ:
ಸುಖಧಾಮ ನಮ:ಭಕ್ತ ಮುಕ್ತಿ ಸೋಮ ನಮ:
ಓಂ ಶ್ರೀರಾಮ ನಮ: ೫

 

೧೮೦
ಶ್ರೀಹರಿಶರಣರು ನಮ್ಮವರು ಭವ
ಶರಧಿಯ ಜಿಗಿದರು ನಮ್ಮವರು ಪ
ಪರಮನ ಚರಣದಿ ಅರಿವಿಟ್ಟುರತರ
ದುರಿತದಿಂದುಳಿದರು ನಮ್ಮವರು ಅ.ಪ
ನಿತ್ಯತೃಪ್ತರು ನಮ್ಮವರು ಜಗ
ಮಿಥ್ಯೆಂದರಿತರು ನಮ್ಮವರು
ನಿತ್ಯ ನಿತ್ಯ ಸರ್ವೋತ್ತಮ ಹರಿಯೆಂಬ
ವೃತ್ತಿ ಬಲಿಸಿದರು ನಮ್ಮವರು ೧
ಸತ್ತು ಚಿತ್ತರು ನಮ್ಮವರು ಮಹ
ನಿತ್ಯ ಮುಕ್ತರು ನಮ್ಮವರು
ಮುಕ್ತಿದಾಯಕನಂ ಗುರ್ತಿಟ್ಟರಿಯುವ
ಸತ್ವ ಕಾಲಗಳು ನಮ್ಮವರು ೨
ನಿರ್ಮಲಾತ್ಮಕರು ನಮ್ಮವರು ನಿಜ
ಧರ್ಮ ನಿರತರೈ ನಮ್ಮವರು
ಬೊಮ್ಮನಯ್ಯನ ಮರ್ಮ ತಿಳಿದು ದು
ಷ್ಕರ್ಮವ ಗೆಲಿದರು ನಮ್ಮವರು ೩
ದೋಷದೂರರು ನಮ್ಮವರು ನಿ
ರಾಸೆ ತಾರರು ನಮ್ಮವರು
ಹೇಸಿದೈವಗಳ ಆಶಿಸಿ ಬೇಡದ
ಕೇಶವನ ದಾಸರು ನಮ್ಮವರು ೪
ಭಜನಾನಂದರು ನಮ್ಮವರು ಸ್ಥಿರ
ನಿಜ ಪದವರಿದರು ನಮ್ಮವರು
ಕುಜನ ಕುಹಕಿಗಳ ಗಜಿಬಿಜಿಗಳುಕದೆ
ಸುಜನರೆನಿಸಿದರು ನಮ್ಮವರು ೫
ಭೂರಿ ಶೀಲರು ನಮ್ಮವರು ದುಷ್ಟ
ಕೇರಿಯ ಮೆಟ್ಟರು ನಮ್ಮವರು
ಸಾರಸಾಕ್ಷನ ಸವಿಸಾರವರಿದು ಪಾದ
ಸೇರಿಕೊಂಡಿರುವರು ನಮ್ಮವರು ೬
ಸದಮಲಾನಂದರು ನಮ್ಮವರು ದು
ರ್ಮದವ ನೂಕಿದರು ನಮ್ಮವರು
ಅಧಮತನದಲಿಂದೊದರುವ ಹೊಲೆಯರ
ಎದೆಯ ತುಳಿವರೈ ನಮ್ಮವರು ೭
ಮೋಸಕೆ ಸಿಲ್ಕರು ನಮ್ಮವರು ಯಮ
ಪಾಶವ ಗೆಲಿದರು ನಮ್ಮವರು
ನಾಶನ ಸಂಸಾರದ್ವಾಸನವಳುಕಿಸಿ
ಈಶನ ತಿಳಿದರು ನಮ್ಮವರು ೮
ಸುಗಣ ಸಂತರು ನಮ್ಮವರು ಮಹ
ಭಗವದ್ಭಕ್ತರು ನಮ್ಮವರು
ರಘು ಶ್ರೀರಾಮ ಜಗಸರ್ವೋತ್ತಮೆಂದು
ಪೊಗಳುತ ನಲಿವರು ನಮ್ಮವರು ೯

 

೪೬೧
ಸಂಗತ ತುಝೇ ಕೋಯೀ ನಹೀ ಸಬ್ಹೀ ಮಾಯ ಹೈ ಪ
ಆತಾ ಅಕೇಲಸ್ ಜಾತಾ ಅಕೇಲಸ್
ಮಾತಾಪಿತ ಭಾರ್ಯ ಬಂಧು
ಜಾತೇ ಕೋಯೀ ಆತೇ ನಹೀ ಸಬ್ಹೀ ಮಾಯ ಹೈ ೧
ಪಾಯಾಹುವೇ ಸುಂದರ ಜನುಮ
ಖೋಯೇ ಜಾಯೇ ಮಿಲ್ತಾನಹೀ
ಜೀವ ದುನಿಯಸ್ ಧನದೌಲತ್ತ ಸಬ್ಹೀ ಮಾಯಸ್ ಹೈ ೨
ಮಾನೋ ಮನ ತೇ ಜ್ಞಾನ ಬಚನ್
ಹಾನಿ ನ ಪಾವ ದೀನಜನಾಭಿ
ಮಾನಿ ಶ್ರೀರಾಮಧ್ಯಾನ ಕÀಮಾವ ಸಬ್ಹೀ ಝೂಟ ಹೈ ೩

 

೧೮೧
ಶ್ರೀರಾಘವೇಂದ್ರರು
ಸಂತಜನರ ಪ್ರಿಯ ಸಂತತಕರುಣಿಸು
ಮಂತ್ರಾಲಯ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ಪ
ಬಾಗಿವಂದಿಪೆ ದಯಾಸಾಗರ ನಿಜಯತಿ
ರಾಘವೇಂದ್ರ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೧
ಜ್ಞಾನಕವಚ ತೊಟ್ಟು ಕ್ಷೋಣಿಯೊಳ್ ಅವತರಿಸಿದಿ
ಜ್ಞಾನಶರಧಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೨
ಮೇದಿನ್ಯುದ್ಧರಿಸಿದಿ ವೇದವೇದಾಂತದ
ಸ್ವಾದವರಿದು ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೩
ವಾದಿಮತರ ಕುವಾದ ಮುರಿದು ಸು
ಬೋಧವರಿದಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೪
ಜಗದೊಳಗನುಪಮ ಭಗವದ್ಭಕ್ತಿ ಘನ
ಮಿಗಿಲೆನಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೫
ನಿತ್ಯ ನೆನಿಪ ನಿಜ ತತ್ತ್ವದಾದಿ ಜಗ
ಕುತ್ತರಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೬
ಸತ್ಯವಾದ ಪರಮಾರ್ಥಪಥದಿ ನಿಂತು
ನಿತ್ಯದಾಡಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೭
ಪೃಥ್ವಿಯೊಳು ನಿಮ್ಮ ಭಕ್ತಜನರ ಬಿಡ
ದೆತ್ತಿ ಪೊರೆದಿ ಸುಖದಾತ ನಮೋ ಮಂತ್ರಮೂರ್ತಿ
ಗುರುನಾಥ ೮
ಕೂಡಿಸಿ ದ್ವಿಜವೃಂದಾಡುತಲನುದಿನ
ನೋಡಿದಿ ಲೀಲೆ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೯
ನಿರುತ ಭೂಸುರಗಣಕ್ಹರುಷವಿತ್ತು ಸದಾ
ಪೊರೆದಿ ಪ್ರೇಮದಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೦
ಬೇಡಿದವರಿಗೆ ಬೇಡಿದ ವರಗಳ
ನೀಡಿದಮಿತ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೧
ಗಾಢಮಹಿಮೆ ತೋರಿ ರೂಢಿಜನರ ಕಾ
ಪಾಡ್ಹಿದ್ಹಿತದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ೧೨
ಧರೆಯೊಳು ನರಹರಿ ಶರಣಜನರ ಕೂಡಿ
ಹರುಷದಾಡಿದಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೩
ಮುಳುಗಿರ್ದ ಪುಣ್ಯಮಯದಿಳೆಯನು ನಿಮ್ಮೊಳು
ತಿಳಿದು ತೆಗೆದಿ ಸುಖದಾತ ನಮೋ ಮಂತ್ರಮೂರ್ತಿ
ಗುರುನಾಥ ೧೪
ಧರ್ಮಗೆಟ್ಟಿಳಗೆ ಸದ್ಧರ್ಮ ಬಿತ್ತಿದಿ ಸ್ಥಿರ
ನಿರ್ಮಲಾನಂದ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೫
ಸಾಧಿಸಿ ಮಹ ತಪದಾದಿ ಮೂರ್ತಿಯಿಂ
ಶೋಧಿಸ್ಹಿಡಿದಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೬
ನಿಗಮಾತೀತನೊಳ್ ಬಗೆಬಗೆಯಾಟವ
ಸೊಗಸಿಲಾಡಿದಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೭
ಮಂಗಳಮೂರ್ತಿಯ ಕಂಗಳಿಂದ ಕಂಡು
ಹಿಂಗಿದ ಭವ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೮
ತುಂಗನಿವಾಸ ಮಹ ಮಂಗಳಾಂಗ ಸುಜ
ನಾಂಗ ಪ್ರೀತಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೧೯
ನಿತ್ಯ ನಿಮ್ಮಪಾದ ಭಕ್ತಿಯಿಂ ಭಜಿಸಲು
ಮುಕ್ತಿ ಕೊಡುವ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೨೦
ಮುಕ್ತಿದಾಯಕ ಜಗದಾಪ್ತ ಶ್ರೀರಾಮನಂ
ಗುಪ್ತದರಿದಿ ಸುಖದಾತ ನಮೋ
ಮಂತ್ರಮೂರ್ತಿ ಗುರುನಾಥ ೨೧

 

೪೬೨
ಸಂತಸ ಕೊಡು ದೇವ ಈ ಮನಕೆ
ಕಂತುಪಿತ ನಿಮ್ಮ ಧ್ಯಾನೆನ್ನಂತರಂಗಕ್ಕೆ ಇತ್ತು ಪ
ಪರಮಪುರುಷ ತವ ಚರಣಸೇವೆಯ ನೀಡಿ
ಪರಿಭವ ದು:ಖವ ಪರಿಹರಿಸಭವ೧
ಶರಧಿಸಂಸಾರ ಸ್ಥಿರಮಾಯಕಾರ
ತ್ವರಿದದಿಂದೆನ್ನೊಳು ಕರುಣವ ತೋರೊ ೨
ದೋಷದೂರನೆ ಎನ್ನ ದೋಷ ವಿನಾಶಿನಿ
ಶ್ರೀಶ ಶ್ರೀರಾಮ ನಿನ್ನ ದಾಸನೆನಿಸೊ ಎನ್ನ ೩

 

೬೫೩
ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು
ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ
ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ
ನೀನೆ ಆಡಿಸಲಾಡ್ವೆ ಕಾಣುವ ಸೂತ್ರ ಬೊಂಬ್ಯಂತೆ
ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ
ದೀನಜನ ಭಂಧುವೆ ನೀನೆ ನೀಖಿಲೇಶ ೧
ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ
ಕಡುಕ್ಷೇತ್ರ
ಮೊದಲಾದ ಇಡಿ ಬ್ರಹ್ಮಾಂಡಗಳ
ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ
ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ ೨
ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು
ಎನ್ನನು ಈ ಪರಿ ಬನ್ನ ಬಡಿಸುವುದು
ಇನ್ನಿದು ತರವಲ್ಲ ಪನ್ನಂಗಶಯನನೆ
ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ ೩

 

೪೪೦
ಸಕಲಲೋಕಪಾಲಕ ರಕ್ಷಿಸೈ ನಿಖಿಲವ್ಯಾಪಕ ಪ
ಚರಣದಾಸನ ಮೊರೆಯ ಪಾಲಿಸಿ ಕರುಣವಂ ಬೆರೆಸಿ
ಪೊರೆಯೊ ಶರಣಜನ ಪ್ರಿಯಕರನೆ ಮರೆಯ ಹೊಕ್ಕೆನು ೧
ಇಂದೊದಗಿಬಂದ ದುರಿತವನು ತಂದೆ ನೀಬಂದು ಪರಿಹರಿಸೊ
ಮುಂದಿನ್ನು ಬಂಧನದ ಬಲೆಯಚಿಂದಿಸಿ ಚಂದದಿಂ ಕಾಯೊ ೨
ಕಾಯಜಪಿತನೆ ನಿನ್ನ್ಹೊರತು ಕಾಯುವ ಹಿತರು ಇಲ್ಲಯ್ಯ
ದೂರದ ಸುತನ ಮೊರೆ ಕೇಳೊ ಕ್ಷಿತಿಜಪತಿಯೆ ಶ್ರೀರಾಮ ೩

 

೬೫೬
ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ
ಸತ್ಯಾತ್ಮ ಸರ್ವೋತ್ತಮ ಪ
ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ
ಪೊತ್ತು ಆಳ್ವ ಸೂತ್ರಧಾರಿ ಶೌರಿ ಅ.ಪ
ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ
ರಾಬ್ಧಿ ಕನ್ನಿಕಾರಮಣ
ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ
ನುದ್ಧರಿಸು ದಯಭೂಷಣ
ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ
ಶುದ್ಧನೆಂದೆನಿಸೆನ್ನ
ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು
ಶುದ್ಧಚೈತನ್ಯರೂಪ ಭೂಪ ೧
ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ
ಕೃಪೆಮಾಡು ಭಕ್ತಲೋಲ
ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು
ಅಪರಿಮಿತ ಮಹಿಮ ಜಾಲ
ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು
ಸ್ಥಾಪಿಸೈ ಭಜಕಜನಪಾಲ
ಕಪಿವರದ ವನಮಾಲ ಕಪಟಗಳಕುಲಕಾಲ
ಕೃಪಾದೃಷ್ಟಿನೀಡೆನ್ನೊಳು ಕೇಳು ೨
ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ
ಮುಟ್ಟಿಭಜಿಪೆ ತವಪಾದವ
ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ
ಕೆಟ್ಟ ಬವಣೆ ಕಳಿಯಭವ
ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ
ಕಟ್ಟುಮಾಡು ಹೇ ಮಾಧವ
ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ
ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ ೩

 

೬೫೫
ಸತ್ಯ ಸರ್ವೋತ್ತಮಸ್ವಾಮಿ ನಿತ್ಯ ನಿರುಪಮ
ನಿತ್ಯಾನಂದ ನಿಮ್ಮ ನೆನವು ನಿತ್ಯ ಎನ್ನ ಚಿತ್ತದಿ ನಿಲಿಸು ಪ
ಮರವೆ ಮಾಯದೆ ಕೆಟ್ಟ ಪರದೆಯೋಳ್ಸದಾ
ಬೆರೆದು ಶ್ವಾನಸೂಕರನಂತೆ
ಚರಿಸಿದೆ ಧರೆಭೋಗ ನೆಚ್ಚಿ
ನರಜನ್ಮ ವಿವರಿಸಿ ನೋಡದೆ
ಮರುಳತನದಿ ನರಕಿಯಾದೆ ೧
ಮೃತ್ಯುಗೀಡಾದೆ ತವಭೃತ್ಯನೆನಿಸದೆ
ಸುತ್ತಿ ಸುತ್ತಿ ಇಹ್ಯಕೆ ಪರಕೆ
ಕತ್ತೆಯಂತೆ ತಿರುಗಿ ತಿರುಗಿ
ಮರ್ತು ನಿನ್ನ ಚರಣ ಮತ್ರ್ಯದಿ
ನಿತ್ಯಸುಖವ ಪಡೆಯದ್ಹೋದೆ ೨
ಭೇದ ನೀಗದೆ ಭವಬಾಧೆಗೊಳಗಾದೆ
ಆದದ್ಹಾಗಿಹೋಯಿತಭವ
ವೇದಾಗಮ್ಯ ಪದುಮನಾಭ
ಪಾದನಂಬಿದೆ ಪಾಲಿಸಿನ್ನು
ಮೋದದೆನ್ನನೆತ್ತಿ ಶ್ರೀರಾಮ ೩

 

೬೫೪
ಸತ್ಯವೋ ಏನು ಮಿಥ್ಯವೋ ಚಿತ್ತಜಪಿತ
ಭಕ್ತವತ್ಸಲನೆಂಬೋಕ್ತಿ ಪ
ಕಷ್ಟನಿವಾರ ಭಕ್ತರಿಷ್ಟದಾಯಕನೆಂದು
ಅಟ್ಟಹಾಸದಿ ವೇದ ಕಟ್ಟಳಿಲ್ಲದೆ ಕೂಗ್ವುದು ೧
ಧಾತ್ರಿತ್ರಯಕೆ ತಾನೆ ಸೂತ್ರಧಾರಕನೆಂದು
ಸ್ತೋತ್ರ ಪೊಗಳಿದು ಮನು ಗೋತ್ರರ್ವಚನಂಗಳು ೨
ಭಕ್ತವತ್ಸಲ ನೀನು ಸತ್ಯವಾಗಿರ್ದೊಡೆ
ಭೃತ್ಯನ ಮನಕೀಗ ಪ್ರತ್ರ್ಯಕ್ಷಾಗಲಿ ರಾಮ ೩

 

೫೮೨
ಸದಮಲಾನಂದ ಪಡಿರೋ ನಮ್ಮವರೇ
ಮಾಹಾನುಭಾವರೇ ಪ
ಸದಮಲಾನಂದ ಪಡಿರೋ ನಮ್ಮವರೇ
ಮೊದಲು ವಂದನೆ ಹರಿಗೆ ಅರ್ಪಿಸಿ ಅ.ಪ
ಪದುಮನಾಭನ ಸದಮಲಂಘ್ರಿಯ
ಅಧಿಕ ನಿಖಿಳದೇವರೊಳಗೆಂದು
ಕದಲಗೊಡದಂತೆ ಮನವ ನಿಲ್ಲಿಸಿ
ವದನದಿಂ ವಿಧವಿಧದಿ ಪೊಗಳುತ ೧
ಆದಿ ಅಂತ್ಯಿಲ್ಲದಾದಿವಸ್ತು
ಸಾಧುಸಜ್ಜನಪ್ರೇಮಪೂರ್ಣೇಂದು
ವೇದ ವೇದಾಗಮ್ಯ ಮಹ
ದಾದಿ ಮಹಿಮನ ಪಾದ ಮೇಲೆಂದು ೨
ನಿಗಮ ಆಗಮಗಳಿಗೆ ನಿಲುಕದ
ಸುಗುಣಸಂತರ ಕರುಣಮಂದಿರ
ಬಗೆದು ಭಕುತರ ಭಾವ ನೀಡಲು
ರಘು ಶ್ರೀರಾಮಗೆ ಸಾಟಿಯಿಲ್ಲೆಂದು ೩

 

೧೬೩
ಸರಸ್ವತಿಮಾತೆ ಪರತರಚರಿತೆ
ವರ ಪುಣ್ಯನಾಮಳೆ ಪ
ಕರುಣಿಸಿವರವ ಕರುಣಾಕರಳೆ
ಕರುಣದಿ ಕಾಯೆ ಅ.ಪ
ಪದುಮಾಸನನ ಸುವದನ ನಿವಾಸೇ
ತ್ರಿಭುವನಾರ್ಚಿತೆ
ಸತತವಾಗಿ ಸುದಯೆ ಹೃದಯೆ ಸ್ಥಿರ
ಸದುಮತಿ ಪಾಲಿಸೆ ಪರಮದಯದಿ ಪದುಳಂಗೆ ದಯದಿ ೧
ವೀಣಾಧರಿ ಸುವಾಣಿ ಕಲ್ಯಾಣಿ ಮಾನಿನಿ
ಬ್ರಹ್ಮನ ಜನನಿಯೆ
ಜಗದಜಾಣೆ ಸುತ್ರಾಣೆ ನಿಜ
ಜ್ಞಾನಾಧಿಕಾರಿ ಜ್ಞಾನವ ನೀಡೆ ಮಾಣದೆ ಎನಗೆ ೨
ಪಾಮರತನ ನಿವಾರಣೆಗೊಳಿಸೆ
ಪ್ರೇಮದೆನಗೆ ಸುಜಾಣೆ
ನುಡಿಗಲಿಸಿ ವಿಮಲೆ ಅಮಲಸುಖ
ಗಮಕದಿ ನೀಡ್ವೆ ಭುವಿಜಪತಿ ಶ್ರೀರಾಮನ ಸೊಸೆಯೆ ೩

 

೧೬೨
ಸರಿಯೇನು ನಿನಗಿದು ಸರಸಿಜನಯನನೆ
ಚರಣ ಭಜಿಪರೊಳು ಕರುಣಿಸದಿರುವಿ ಪ
ದೀನಜನರ ಬಂಧು ನೀನೆ ನಿರ್ದಯನಾದರಿ
ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ
ಧ್ಯಾನಿಪ ಭಕ್ತರ ಮಾನ ನೀ ಕಾಯದಿರೆ
ಹೀನ ನಿನಗಲ್ಲೇನೈ ಗಾನವಿಲೋಲ ೧
ಇಂದಿರೇಶಾನಾಥಬಂಧುವೇ ನೀ ದಯಾ
ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ
ಬಂದ ಸಂಕಟದೊಳಗಿಂದ ಸಲಹದಿರೆ
ಕುಂದು ನಿನಗಲ್ಲೇನೈ ಮಂದರನಿಲಯ ೨
ನಂಬಿದ ಭಕ್ತರ ಇಂಬುದಾಯಕನು ನೀ
ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ
ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ
ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ ೩

 

೬೫೭
ಸರ್ವಾಂತರ್ಯಾಮಿ ಸರ್ವೇಶ ಬಾರೊ
ಸರ್ವಸ್ವತಂತ್ರನೆ ಸರ್ವಭಯನಾಶ ಪ
ಸರ್ವತಂತ್ರನೆ ಸರ್ವವೇದದಿ
ಸರ್ವತತ್ತ್ವದಿ ಸರ್ವಸಾಕ್ಷಿ ನೀ
ಸರ್ವವ್ಯಾಪಕ ಸರ್ವದೇವರ ಸಾರ್ವಭೌಮ ಅ.ಪ
ಜಡಬೊಂಬೆ ನಾಟಕರಚಿಸಿ
ಎಡಬಿಡದೆ ಕುಣಿಸ್ಯಾಡುವಿ ಕಡುಮೋಹಗೊಳಿಸಿ
ಕಡುಗೌಪ್ಯದದರೊಳು ನೆಲೆಸಿ ನೀನೆ
ನುಡಿಸುವಿ ಅಗಣಿತ ಕಲ್ಪನೆವೆರಸಿ
ಜಡಕೆ ಜಡವಾದ ತೊಡರಿನಾಟದ
ಕೆಡಕು ತಪ್ಪಿಸಿ ಪಿಡಿದು ಎನ್ನನು
ಒಡೆಯ ನಿನ್ನಡಿ ಭಕ್ತರಾವಾಸ
ದಿಡು ಎಂದೆರಗುವೆ ಪಾಲಿಸಭಯ ೧
ನಾನಾವಿಧದ ಸೃಷ್ಟಿಗಳ ಸೃಜಿಸಿ
ಪೋಣಿಸಿ ಮಾಡಿಟ್ಟ ಭವವೆಂಬ ಮಾಲೆ
ಏಳು ಮೋಹವ ತುಂಬಿದೆಲ ಪುಸಿ
ಕಾಣದಂತೊಗೆದಿ ಮಹಾಮಾಯದ ಜಾಲ
ನಾನು ನೀನೆಂಬ ಜಾಣರೆಲ್ಲ ಬಿದ್ದು
ಏನುಕಾಣದೆ ತ್ರಾಣಗೆಟ್ಟರು
ಹೀನಮತಿ ನಾನೇನು ಬಲ್ಲೆನು
ನೀನೆ ಸಲಹೆನ್ನ ದೀನರಕ್ಷಕ ೨
ಪಾವನ ಪರಮಪ್ರಕಾಶ ದೇವ
ಭಾವಜನಯ್ಯ ನಿಜಭಾವಿಗಳರಸ
ಕೇವಲಸುಗುಣಾಂತರ್ವಾಸ ನಿನ್ನ
ಸೇವಕನೆನಿಸೆನ್ನ ಕಾಯೊ ನುತಪೋಷ
ಜೀವಜೀವರಜೀವ ಚೈತ್ಯನದೇವ
ದೇವರ ದೇವ ನಂಬಿದೆ ಜಾವ
ಜಾವಕೆ ಒದಗುತಿಹ್ಯ ಮಹ
ನೋವು ಗೆಲಿಸೆನ್ನಯ್ಯ ಶ್ರೀರಾಮ ೩

 

೪೪೨
ಸಾಕು ವಿಷಯ ಸುಖ ಲೋಕೇಶ ಜಗ
ದೇಕನಾಥ ಕೊಡು ತವಧ್ಯಾಸ ಪ
ಬೇಕು ನಿನ್ನಪಾದ ಭಯನಾಶ ಭವ
ವಾಕರಿಸಿತು ಕಡಿ ನತ ಪೋಷಅ.ಪ
ಮಸಣ ಬುದ್ಧಿ ಬೇಗ ಪರಿಹರಿಸು ಜವ
ನಶಿಸಿ ಪೋಗುವ ಮಾಯ ಮೋಹ ಬಿಡಿಸು
ಅಸಮ ಸತ್ಯಪಥದೆನ್ನ ನಡೆಸು ಎನ್ನ
ರಸನೆಯಿಂದ ನಿನ್ನ ನಾಮ ನುಡಿಸು
ಒಸೆದು ನಿನ್ನವರೊಳಗೆನ್ನಾಡಿಸು ನಿನ್ನ
ವಶಿಕಪತ್ರ ಬೇಗ ದಯಪಾಲಿಸು ೧
ಚಿತ್ತವಗಲದಂತೆ ಸ್ಥಿರಮಾಡು ನಿಜ
ಭಕ್ತಿ ಕದಲದಂಥ ದೃಢ ನೀಡು
ಸತ್ಯಸಮಾಗಮ ಸತತ ಕೊಡು ದೇವ
ನಿತ್ಯ ನಿರ್ಮಲಮನ ದಯಮಾಡು
ಹತ್ತಿದ ಪಾಪರಾಸಿ ಕಡೆಮಾಡು ನಿನ್ನ
ಭೃತ್ಯನೆಂದೆನ್ನನು ಕಾಪಾಡು೨
ನಿನ್ನ ಮರೆಯ ಬಿದ್ದು ಭಜಿಸುವೆನು ನಾ
ನನ್ಯ ದೇವರ ಗುರುತರಿಯೆನು
ನಿನ್ನವನೆಂದೆನಿಸೆನ್ನನು ಕಳಿ
ಬೆನ್ನ್ಹತ್ತಿ ಕಾಡ್ವ ಭವ ರೋಗವನು
ಎನ್ನಯ್ಯ ಶ್ರೀರಾಮ ನಿನ್ನ ನಂಬಿದೆನು ನೀಡು
ಉನ್ನತ ಮುಕ್ತಿ ಸಾಮ್ರಾಜ್ಯವನು ೩

 

೪೪೫
ಸಾಕು ಸಂಸಾರದ ವ್ಯಾಕುಲ ತೀರಿಸಿ
ಲೋಕೇಶ ಸುಖ ಕರುಣಿಸೊ ಪ
ಸಾಕು ಸಜ್ಜಾಗಿಲ್ಲ ಸಂಸಾರ
ಶೋಕದಬ್ಧಿಲಿ ಬಿದ್ದು ಬಲುಬಲು
ನೂಕುನುಗ್ಗಾಗಿ ಖೋಡಿಯೆನಿಪ
ಲೌಕಿಕದ ಘನತಾಪದಿರುವ ಅ.ಪ
ಮೂಢಮತಿಯಿಂದತಿ ರೂಢಿಸಂಪದ ನೆಚ್ಚಿ
ನೋಡಿನೋಡಸೂಯೆ ಪಡುತ
ಆಡಬಾರದ ನಾಡಮಾತುಗ
ಳಾಡಿ ಮುಖವನು ಬಾಡಿ ಪರರನು
ಹೇಡಿತನದಿಂ ಮಾಡಿಸ್ತೋತ್ರವ
ಬೇಡಿಬದುಕುವ ಖೋಡಿದುರ್ಭವ ೧
ಏನು ಎನ್ನುವರೆಂದು ಗೋಣುಮೇಲೆತ್ತದೆ
ಪ್ರಾಣ ಕರದಲ್ಲಿ ಪಿಡಿದು
ಹೀನ ಸ್ಥಿತಿಯಿಂ ನೀನೆ ಗತಿ ಎನ್ನ
ಮಾನವುಳಿಸೆಂದು ನಾನಾ ಪರಿಯಲಿ
ದೀನಸ್ವರದಿಂ ತ್ರಾಣಗುಂದಿ
ದೈನ್ಯಬಡುವಂಥ ಹೀನಬವಣೆ ೨
ಕಾನನಸಂಸಾರದ್ಹಾನಿಮಾಡದೆ ಎನ್ನ
ಜ್ಞಾನಬೆಳಗಿನನೊಳಾಡಿಸೊ
ಜ್ಞಾನಮೂರುತಿ ದೀನದಯಾಳು
ಭಾನುಕೋಟಿಪ್ರಭೆ ಜಾನಕೀಶ
ನಾನಾಲೋಕವ ನೀನೆ ಒಳಗೊಂಡು
ಮಾಣದಿಹಿ ಮಮಪ್ರಾಣ ಶ್ರೀರಾಮ ೩

 

೪೪೩
ಸಾಕು ಸಾಕು ವಿಮಲಾಂಗ ಕಾಕುಮನುಜರ ಸಂಗ ಪ
ಬೇಕು ನಿಮ್ಮಯ ಚರಣದಾಸಜನರ ಸಂಗ
ಲೋಕೇಶ ಕರುಣಿಸಿ ನೂಕು ಕುಜನಸಂಗ ೧
ವಾಕರಿಸುತ್ವಮನ ಲೋಕರ ಗೆಳೆತನ
ಶೋಕಾಬ್ದಿ ಕಡೆತನ ಲೌಕಿಕ ಬಲು ಹೀನ ೨
ತಡೆಯದೆ ಈ ಕೇಡು ದೃಢದಿ ಬೇಡುವೆ ನಾ
ಜಡಜಾಕ್ಷ ಶ್ರೀರಾಮ ಬಿಡಿಸು ಜನನ ಮರಣ ೩

 

೪೪೪
ಸಾಕು ಸ್ವಾಮಿ ಲೋಕವಾಸವು ಪ
ಬೇಕು ನಿಮ್ಮ ಚರಣಸೇವೆ
ಲೋಕದಿಂದ ಪಾರು ಮಾಡೆನ್ನ ಅ.ಪ
ಕಷ್ಟದಿಂದಿನ್ನು ಜೀವಿಸಲು ನಾ
ನೆಷ್ಟು ಪಾಪವ ಮಾಡುವೆನೊ
ಇಷ್ಟೆ ಸಾಕಯ್ಯ ಕಷ್ಟನಿವಾರ
ಸೃಷ್ಟಿಯಿಂದೆನ್ನ ಪಾರುಮಾಡೊ ೧
ಹಲವು ಭ್ರಾಂತಿಗಳಲಿ ನಾನು
ತೊಳಲಿಬಳಲಿ ಚಲನೆಗೆಡುತ
ಗಳಿಸಲಾರೆನು ದುರಿತ ಸಾಕೈ
ಇಳೆಯಿಂದೆನ್ನನು ಗೆಲಿಸು ದೇವ ೨
ಸಕಲವಿಧದಿ ದು:ಖರೂಪ
ಕಾಕುಸಂಸಾರ ಬಲು ತಾಪ
ಭಕುತಜನಪ್ರಿಯ ಮುಕ್ತಿಸೋಮ
ಮುಕುತಿ ಕರುಣಿಸು ನಿರುತ ಶ್ರೀರಾಮ ೩

 

೪೪೧
ಸಾಕುಮಾಡಿಸಭವ ಕಾಕುಜನರ ಸಂಗವ
ಬೇಕು ನಿಮ್ಮ ಚರಣಧ್ಯಾನ ಲೋಕದವರ ಗೊಡವಿನ್ನೊಲ್ಲೆ ಪ
ಖ್ಯಾತಿವಂತರೆಂದು ಬರಿದೆ ಮಾತಿನಿಂದ ಪೇಳುತಿನಿತು
ನೀತಿಮಾರ್ಗವರಿಯಧಮ ಜಾತೀಹೀನರ ಜತೆ ಜನ್ಮಕೆ ೧
ಕೆಟ್ಟಗುಣದ ರಾಶಿ ಮೊಟ್ಟೆ ಹೊಟ್ಟೆಯೊಳಗೆ ಇಟ್ಟುಕೊಂಡು
ಶ್ರೇಷ್ಠರಂತೆ ನಟಿಸಿ ಪರರಿಗರಿಷ್ಟವರಿಪದುಷ್ಟರ ಗೋಷ್ಠಿ ೨
ನಿತ್ಯನಿರ್ಮಲ ನಿಮ್ಮ ಚರಣಭಕ್ತಜನರಸಂಗಸುಖವ
ನಿತ್ತು ಕಾಯೋ ಕರುಣದೆನ್ನ ಮುಕ್ತಿದಾತೆನ್ನಯ್ಯ ರಾಮ ೩

 

೪೪೬
ಸಾಗಿಬಾರಯ್ಯ ನಾಗಶಯನ ಪ
ಭೋಗದಾಸೆ ನೀಗಿಸೆನ್ನು
ಬೇಗ ರಕ್ಷಿಸು ಬಾಗಿ ಬೇಡ್ವೆ ಅ.ಪ
ದುಷ್ಟಭವದರಿಷ್ಟದಲಿ ಇ
ನ್ನೆಷ್ಟುದಿನ ನಾ ಕಷ್ಟಬಡಲಿ
ದೃಷ್ಟಭ್ರಷ್ಟತೆ ನಷ್ಟಗೊಳಿಸಿ
ಶಿಷ್ಟಸಂಗದೊಳಿಟ್ಟು ಸಲಹೊ ೧
ಜನನ ಮರಣವ ನೆನೆಸಿಕೊಳ್ಳದೆ
ಬಿನಗುತನದಲಿ ದಿನವಗಳೆದೆ
ಅಣುಗನ ಘನತಪ್ಪು ಗಣಿಸದೆ
ಘನ ಘನ ನಿಮ್ಮ ನೆನಹ ಪಾಲಿಸು ೨
ಸ್ವಾಮಿಯೆನ್ನಯ ನೇಮವಿಲ್ಲದ
ಕಾಮಿತಂಗಳ ದೂರಮಾಡಿ
ಪ್ರೇಮದೆನ್ನಗೆ ಕ್ಷೇಮಕೊಡು ಶ್ರೀ
ರಾಮ ಮೂಜಗ ಸಾರ್ವಭೌಮ ೩

 

೫೮೩
ಸಾಧಿಸಿ ಪಡೆದಿದ್ದೀ ನರಜನುಮ ಸಂ
ಪಾದಿಸಿ ಕೊಳ್ಳೆಲೆ ಹರಿನಾಮ ಪ
ಪೋದಬಳಿಕ ಇಂಥ ಮಹಜನುಮ ಮತ್ತೆ
ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ
ಮಡದಿಮಕ್ಕಳೆಂಬ ಒಣಭ್ರಾಂತಿ ನಿನ
ಗ್ಹಿಡಿದಿದೆ ಮಾಯದ ಘನಚಿಂತಿ
ಒಡೆದು ತೋರುವ ಜಗಕ್ಷಣ ಸಂತಿ ಇದು
ಕಡೆಗೆ ಒಂದು ಇಲ್ಲ ನಿನ್ನ ಸಂಗತಿ೧
ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ
ಸತ್ತುಹುಟ್ಟುತ ಬಹು ಬಳಲುವ್ಯಲೇ
ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ
ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ ೨
ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ
ತಾಳುತ ಪಡೆದಿದ್ದಿ ಬಲುಶಿಕ್ಷೆ
ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ
ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ ೩

 

೪೪೭
ಸಾಧಿಸು ಪರಲೋಕ ಮನವೆ ನೀ
ಸಾಧಿಸು ಪರಲೋಕ ಪ
ಮಾಧವನ ಮಹ ಪಾದದಾಸರಿಂದ
ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ
ಭೇದಬುದ್ಧಿ ಬಿಡೋ ಸುಜನರಿಂ
ವಾದಿಸಿ ಕೆಡಬೇಡೋ
ಆದರದಿಂದಲಿ ಸಾಧು ಸಂತರ ಸು
ಬೋಧ ವಾಕ್ಯಗಳ ಮೋದದಿಂ ಕೇಳುತ ೧
ರಾಗರಹಿತನಾಗೋ ಸಂಸಾರ
ಭೋಗದಾಸೆ ನೀಗೋ
ಯೋಗಿಗಳಿಗೆ ತಲೆವಾಗಿ ದಿಟದಿ ನೀ
ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ ೨
ಕಾಮಿತಂಗಳ ಅಳಿಯೋ ತನುಧನ
ಪ್ರೇಮಮೋಹ ಕಳೆಯೋ
ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ
ರಾಮನಾಮಬೆಂಬ ವಿಮಾನವೇರಿ ೩

 

೪೪೮
ಸಾರಸಾಕ್ಷ ಘೋರದುರಿತ ದೂರಮಾಡೈ ಪ
ಮಾರಜನಕಪಾರ ಮಹಿಮ
ದೂರ ನೋಡದೆ ಬಾರೊ ಬೇಗ
ಬಾರಿಬಾರಿಗೆ ನಿನ್ನ ನಂಬಿ
ಸಾರಿಕೂಗಿ ಬೇಡುವೆನು ೧
ಮೂಢತನದಿ ನಾಡ ತಿರುಗಿ
ಖೋಡಿಯಾದೆ ಗಾಢಭಕುತಿಲಿ
ಗಾಢ ನಿಮ್ಮ ಪಾವನ ಚರಿತ
ರೂಢಿಯೊಳು ಧನ್ಯವಾಗದೆ ೨
ಸಿರಿಯರಮಣ ಚರಣನಳಿನ
ಮರೆಯಹೊಕ್ಕೆ ಕರುಣದೆನ್ನ
ಮೊರೆಯ ಕೇಳಿ ದುರಿತದಿಂದ
ಸೆರೆಯ ಬಿಡಿಸೆನ್ನ ಸಿರಿಯರಾಮ ೩

 

೫೮೪
ಸಾರಿ ಧ್ಯಾನ ಒಂದಿದ್ದರೆ ಸಾಕೆಲೊ ಸಂ
ಸಾರ ತ್ಯಜಿಸುವುದ್ಯಾಕೊ ಪ
ಹಿಂಸೆಗುಣಗಳನ್ನು ತ್ಯಜಿಸಿ ಸತತ ಅ
ಹಿಂಸೆಯೆಂಬ ಧರ್ಮ ಗಳಿಸಿದರಾಯ್ತೆಲೊ ಅ.ಪ
ಜಡಭವತೊಡರನು ಕಡಿದುರುಳಿಸುತ
ದೃಢದೆ ಬಿಡದೆ ಕಡುಸತ್ಯ ನುಡಿಯುತ
ಅಡಿಗಡಿಗೊಡಲೊಳು ಜಡಜನಾಭ ಜಗ
ದೊಡೆಯನಡಿಯ ಧ್ಯಾನಿವಿದ್ದರದೊಂದೆ ಸಾಕೊ ೧
ಮೋಸ ಠಕ್ಕು ಕ್ಲೇಶಗುಣ ಕಳೆದು ಭವ
ಮೋಸದ ಫಾಸಿಯ ಮೂಲವ ತುಳಿದು
ಆಸೆನೀಗಿ ಮನ ಬೆರಿಯದೆ ಜಗ
ದೀಶನ ಸಾಸಿರನಾಮ ಧ್ಯಾಸದಿರೆ ೨
ಶುನಕನ ಕನಸಿನ ಪರಿಭವನೆನುತ
ತನುಮನಧನವೀಡ್ಯಾಡುತ ಅನುದಿನ
ಮನಸಿಜನ ಶ್ರೀರಾಮನ ಚರಣವ
ಘನತರಭಕುತಿಲಿ ನೆನೆಯುತ ಕುಣಿಯಲು ೩

 

೫೮೫
ಸಾಲವನು ಕೊಳುವಾಗ ಸಡಗರದ ಸಿರಿಯೋ
ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ
ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು
ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ
ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು
ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ ೧
ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ
ವನಿತೆಯೊಳೆನುತಿಹ್ಯನು ನನಗಾರು ಸರಿಯೆ
ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು
ಹೆಣಇರುವ ಮನೆಗಿಂತ ಘನದು:ಖಕೇಳೊ ೨
ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು
ತೊಡುವಾಗ ನೋಡವನ ಬಡಿವಾರ ಬಿಂಕ
ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ
ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ ೩
ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ
ಗಿಕ್ಕುವಾಗ ನೋಡವನವಕ್ಕರಂಗಳನು
ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು
ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ ೪
ಮನೆಮುರಿದು ಹೋಗಲಿ ವನಿತೆಯರು ಜರಿಯಲಿ
ಎನಗೆಡರು ಬಂದೊದಗಿ ಅನ್ನ ಸಿಗದಿರಲಿ
ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ
ಋಣದ ಬಾಳುವೆ ಬೇಡ ಜನಮಜನುಮಗಳಲಿ ೫

 

೪೪೯
ಸಾಸಿರ ಮಾತುಗಳ್ಯಾಕೊ ಎಲೆಮನ
ಕೇವಲ ಹರಿನಾಮವೊಂದೆ ಸಾಕೊ ಪ
ಸ್ನಾನವುಯಾಕೊ ಮೌನವುಯಾಕೊ
ದಾನವಾರಿಯಧ್ಯಾನವೊಂದೆ ಸಾಕೊ ೧
ಮಂತ್ರವುಯಾಕೊ ತಂತ್ರವುಯಾಕೊ
ಮಂತ್ರಮೂರ್ತಿ ಚಿಂತೆಯೊಂದೆ ಸಾಕೊ ೨
ಹೋಮವುಯಾಕೊ ನೇಮವುಯಾಕೊ
ಸ್ವಾಮಿ ಶ್ರೀರಾಮನ ಭಕ್ತಿಯೊಂದೆ ಸಾಕೊ ೩

 

೪೬೩
ಸಿಂಧುಶಯನನೆ ಸರ್ವಬಂಧುಬಳಗ ನೀನೆ
ತಂದೆ ನೀ ಬಿಟ್ಟರೆ ಬಂಧುಗಳ್ಯಾರಿಲ್ಲ ಪ
ಒಂದು ವೃಕ್ಷದಿ ಬಂದು ಪಕ್ಷಿಗ
ಳ್ರ‍ವಂದ ಗೂಡಗಲ್ಹೋಗುವಂದದಿ
ಒಂದಕೊಂದು ಸಂಬಂಧವಿಲ್ಲದ
ಬಂಧುವೆಂಬುವರೆಲ್ಲ ಪುಸಿಯು ಅ.ಪ
ಕೊಳದಿ ಮಕರಿಗೆ ಸಿಲ್ಕಿ ಬಳಲುತಿರುವ ಕÀರಿಯ
ಬಲವಾಗುಳಿಸಿದರಾರು ಬಳಗ ಹಿಂಡುಗಳಿರ್ದು
ನಳಿನಲೋಚನ ನೀನೆ ಗತಿಯೆನೆ
ಒಲದು ಆ ಕ್ಷಣ ಕರಿಯನುಳುಹಿದಿ
ತಿಳಿದು ಭಜಿಸುವ ದಾಸಜನಕತಿ
ಸುಲಭನೆಲೊ ನೀ ಜಲಜನಾಭ ೧
ಕುರುಪತಿಸಭೆಯೊಳು ಇರುತಿರೈವರು ಪರಿ
ವರಸತಿ ಮಾನವನು ದುರುಳ ಕೊಳ್ಳುತಲಿರೆ
ನೆರೆದ ಪತಿಗಳು ಸುಮ್ಮನಿರುತಿರೆ
ಹರಿಯೆ ಗತಿಯೆಂದು ತರುಣಿ ಮೊರೆಯಿಡೆ
ಕರುಣದಿಂ ಬಂದು ಮಾನವ ಕಾಯ್ದಿ
ಚರಣಭಕ್ತರ ನಿರುತರಸುರಧೇನು ೨
ದೃಢದಿ ಶ್ರೀಹರಿಯೆಂದು ನುಡಿಯುವ ಬಾಲಗೆ
ಪಡೆದಪಿತ ಹಿರಣ್ಯ ಕಡುವೈರಿಯಾಗಿ
ಗಡನೆ ತೋರ್ಹರಿ ಮೂಢ ಎಲ್ಲೆನೆ
ಒಡನೆ ಕಂಬದಿ ಮೂಡಿ ದುರುಳನ
ಒಡಲ ಬಗಿದು ಪಿಡಿದು ಭಕ್ತನ
ಬಿಡದೆ ಸಲಹಿದಿ ಕಡುದಯಾನಿಧೆ ೩
ಇಳೆಪತಿ ಪಿತನಿದಿರೊಳ್ ಮಲತಾಯಿಕೃತಿಯಿಂದ
ಬಲುನೊಂದು ಧ್ರುವರಾಜ ಕಳವಳಗೊಂಡು
ಜಲಜನಾಭನ ಮೊರೆಯನಿಟ್ಟು
ಚಲಿಸದೆ ಮನಮುಟ್ಟಿ ತಪಿಸಲು
ಒಲಿದು ಧ್ರುವಪದವಿತ್ತಿ ಭಕ್ತರ
ಕಲ್ಪಿತವನೀವ ಕಲ್ಪತರು ನೀನು ೪
ಪ್ರಾಣೇಶ ಶ್ರೀರಾಮ ಧ್ಯಾನಿಪರಿಗೆ ಸತ್ಯ
ನಾನಾದೈವದ ಬಲವು ನೀನೆಯಾಗಿರುವಿ
ಕಾನನದಿ ಕಲ್ಲನ್ನು ತುಳಿದು
ದಾನ ಕೊಟ್ಟೆಯ ಜೀವ ಸುದತಿಗೆ
ಜ್ಞಾನವಿಲ್ಲದಧಮ ಎನಗೇನು ಶಕ್ಯ
ನಿನ್ನ ಮಹಿಮೆ ಪೊಗಳಲು ೫

 

೪೫೦
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ
ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ
ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ
ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ
ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು
ಬಾಳುವೆ ಧನಸಿರಿ ನಿನಗಿಲ್ಲ
ನಾಳೆ ಬಂದೊದಗಲು ಯಮಶೂಲ ಹಿಂ
ಬಾಲಿಸಿ ನಿನಗೊಂದು ಬರೋದಿಲ್ಲ ೧
ಬಂಧುರ ಬುವಿಯಧಿಕಾರ ನಿಖಿಲ ಮಹ
ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ
ತಂದೆ ತಾಯಿ ಬಂಧು ಬಳಗೆಲ್ಲ ನಿನ
ಗೊಂದುಕೊಂದು ಸಂಬಂಧವಿಲ್ಲ ೨
ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ
ಮತಿಗೆಟ್ಟು ಪೊಂದದಿರತಿ ದು:ಖ
ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ
ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ ೩
ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ
ಆನೆ ಕುದುರೆ ಒಂಟೆ ನಿನ್ನದಲ್ಲ
ಕಾಣುವುದೆಲ್ಲ ಮಾಯಭವಜಾಲ ಮತ್ತು
ಮನುಷ್ಯಜನುಮ ಸೀಗೋದಲ್ಲ ೪
ನಾನು ನೀನೆಂಬುವ ದುಷ್ಟಮದ ಸುಟ್ಟು
ಜ್ಞಾನದೊಡನೆ ಗೆಲಿ ಭವಬಾಧೆ
ಧ್ಯಾನದಾಯಕ ಶ್ರೀರಾಮಪಾದ ನಿಜ
ಧ್ಯಾನವಿಡಿದು ಪಿಡಿ ಮುಕ್ತಿಪದ ೫

 

೫೮೬
ಸಿಕ್ಕೀ ಸಮಯದಿ ಧರ್ಮಗಳಿಸಿರೋ ಮತ್ತೀ ಸಮಯ
ಬಿಕ್ಕಿ ಅತ್ತರೆ ಸಿಗದು ಕಾಣಿರೊ ಪ
ಭಿನ್ನವಿಲ್ಲದೆ ಅನ್ನದಾನ ಕನ್ಯಾದಾನ ಗೋವುದಾನವನ್ನು ಮಾಡಿ
ಪನ್ನಂಗಶಾಯಿ ನಿನ್ನದೆಂದು ಸಂಪದವಿ ಪಡೆಯಿರೊ ೧
ಭೂಮೀಸೀಮೋಸ್ತ್ರೋದಕನಕದಾನವು ಹೇಮಾಭರಣ
ಧನ ಧಾನ್ಯ ದಾನವು
ನೇಮದರಿತು ದಾನಮಾಡಿ ಸ್ವಾಮಿಗರ್ಪಿಸಿ ಕ್ಷೇಮ
ಪಡೆಯಿರೊ ೨
ಹರಿಯು ಕೊಟ್ಟರೆ ದಾನಮಾಡಿರೊ ಹರಿಯು
ಕೊಡದಿರೆ ಧ್ಯಾನಮಾಡಿರೊ
ಪರೋಪಕಾರದ ಶರೀರವಿದು ಸಿರಿರಾಮಗರ್ಪಿಸಿ
ಮುಕ್ತಿ ಪಡೆಯಿರೊ ೩

 

೪೫೧
ಸಿಟ್ಟು ತ್ಯಜಿಸಲೆ ಖೊಟ್ಟಿ ಮನವೆ ಎಷ್ಟು ಪೇಳಲಿ ನಿನಗೆ
ಸಿಟ್ಟಿನಿಂದಲಿ ಎಷ್ಟೋ ಜನರು ಕೆಟ್ಟು ಪೋದದ್ದರಿಯಲೊ ಪ
ಸಿಟ್ಟಿನಿಂದ ಹಿರಣ್ಯಕನ ಎಷ್ಟು ವರಬಲ ಕೆಟ್ಟಿತ್ತೊ
ಸಿಟ್ಟಿನಿಂದಲೆ ರಾಣವನ ಆರುಕೋಟಿ ಆಯುಷ್ಯ ಅಳಿಯಿತೊ ೧
ಸಿಟ್ಟಿನಿಂದಲೆ ಮುಪ್ಪುರಂಗಳ ಅಷ್ಟಭೋಗವು ತೀರಿತೋ
ಸಿಟ್ಟಿನಿಂದಲೆ ಕುರುಪನ ಕುಲ ನಷ್ಟವಾಗಿಪೋಯಿತೊ೨
ದುಷ್ಟ ಕಂಸನು ಸಿಟ್ಟಿನಿಂದ ನಷ್ಟ ಪೊಂದಿದ್ದರಿಯೆಲೊ
ಸಿಟ್ಟಿನಿಂದಲೆ ಸೇರಿದರು ಯಮ ಪಟ್ಟಣವ ದಿಟ್ಟರೆಂಬರೆಲ್ಲರು ೩
ಸಿಟ್ಟಿಗೆದ್ದ ವಿಶ್ವಾಮಿತ್ರನ ಎಷ್ಟು ತಪವೇನಾಯಿತು
ಸಿಟ್ಟಿಗೆ ಮನಗೊಟ್ಟ ಬಳಿಕ ನಷ್ಟ ತಪ್ಪದು ಕಾಣೆಲೊ ೪
ಅಷ್ಟು ಯಾತಕೆ ನೀನೆ ಯೋಚಿಸು ಸಿಟ್ಟಿನಿಂದ ನೀನೇನಾದಿ
ಶಿಷ್ಟ ಶ್ರೀರಾಮನಡಿಗೆ ಪೊಂದಿ ಸಿಟ್ಟನಳಿದು ಬದುಕೆಲೊ ೫

 

ಎಂಟೆರಡುವಾಯು:
೫೮೭
ಸಿದ್ದಮಾಡಿಕೊ ಹರಿನಾಮ ಬದ್ಧನಾಗದಲೆ
ಶುದ್ಧಬುದ್ಧಿಯು ನಿನ್ನೊಳಿದ್ದ ಸಮಯದಲ್ಲೇ ಪ
ಕಿತ್ತಿ ಅರ್ಭಟಿಸುತ ಸುತ್ತಿದ ಮಹ ಧನುರ್ವಾಯ
ಪಿತ್ತ ಕಫ ಮೇಲಕ್ಕೆ ಒತ್ತಿಕೊಂಡೊಯ್ದು
ಕುತ್ತಿಗೆ ಅಡರಿಕೊಂಡೆತ್ತೆತ್ತ ಬೊಗಳಿಸುವ
ಹೊತ್ತಿಗ್ಗೆ ಹರಿನಾಮ ಮತ್ತಾಗಿ ಬರದು ೧
ನಾಲಗೆ ಸೆಳೆಯುವುದು ಆಲಿಗಳು ತಿರುಗುವುವು
ಮೇಲಕ್ಕ್ಹರಿವುವು ನಯನ ನೀಲಗೊಂಬೆಗಳು
ಕಾಲಚಕ್ರನಿಗಂಜಿ ಮಲ ಒಸರುತಿರುವಾಗ
ನೀಲಶ್ಯಾಮನ ನಾಮ ನಾಲಗ್ಗೆ ಬರದು ೨
ಎಂಟೆರಡು ವಾಯುಗಳ ಕಂಠನಾಳಕೆ ಸೇರಿ
ಸುಂಟರಗಾಳ್ಯಂತೆ ಅಂಟಿ ಸುಳಿಸುತ್ತೆ
ಮೀಂಟಿ ಕರ್ಣದಿ ಒದರಿ ಹೊಂಟೋಗ್ವ ಸಮಯ ದ್ವೈ
ಕುಂಠ ನಾಮವು ತಂಟೆಗೆ ಬರದು ೩
ಅಡವು ಬಂದು ಅವಯವ ಕೂಡಿಕೊಳ್ಳಲು ಸೊನ್ನೆ
ಬಾಡಿಬೀಳ್ವುದು ಕಾಯ ನಾಡಿಗಳು ಕುಂದಿ
ನೋಡಿ ಸತಿಸುತರಂ ಮಾತಾಡೇನೆಂದೆನಲಾಗ
ರೂಢಿಗೀಶನ ಧ್ಯಾನ ಕೂಡಿ ಬರದಯ್ಯ ೪
ಮೂಳನಾಗಿ ಸಮಯ ಹಾಳುಮಾಡಿಕೊಳ್ಳದೆ
ಕಾಲನಾಳಿನ ಮಹ ಧಾಳಿಯನು ಗೆಲಿಯೊ
ಕಾಲಿಮರ್ದನ ಜಗತ್ಪಾಲ ಶ್ರೀರಾಮನಡಿ
ಕಾಲತ್ರದಲಿ ದೃಢದಿ ಮೇಲಾಗಿ ಭಜಿಸಿ ೫

 

ಪಂಚಮಹಾಪಾತಕ
೫೮೮
ಸಿದ್ದವಾಗಿದೆ ನರಕ ಪಾಪಿಗಳ ದೆಸೆಗೆ ಬೃ
ಹದ್ದೇಹಿ ಭಟರಿಂದ ಯಮನಾಜ್ಞೆಯಂತೆ ಪ
ಶರಣಜನನಿಂದಕಗೆ ಪರಮಕುಂಭೀಪಾಕ
ಪರಮಭೀಕರಜ್ವಾಲೆ ಕರುಣಶೂನ್ಯರಿಗೆ
ಪರನಾರಿಗಳುಕುವಗೆ ಮೂತ್ರ ರಕ್ತಾಮೇಧ್ಯ
ಉರುಬಾಧೆ ಕರ್ಮದುರ್ಗಾ ಪರಮ ನೀಚರಿಗೆ ೧
ಮಾತಾಪಿತದೂಷಕಗೆ ಪ್ರೇತಕ್ರಿಮಿಕುಂತ ಭಯ
ಪಾತಕಗೆ ರಾಕ್ಷಸರ ಭೂತಕ್ರಮಿದೀರ್ಘ
ಘಾತಕಗೆ ಉಗ್ರತರ ವ್ಯಾಘ್ರಮುಖ ಭಟ ಶಿಕ್ಷೆ
ರೋತು ಮಲತ ಮಜ್ಜ ನೀತಿಬಾಹಿರಗೆ ೨
ವಂಚಕಗೆ ಗರಗಸದಂತ ಕುಂಟಣಿಗೆ ಚಕ್ರದಂಷ್ಟ್ರ
ಕಂಚಿನ್ವಾಯಸ ನರಕ ಕೇಳಾ ಕಪಟರಿಗೆ
ಪಂಚಮಹಾಪಾತಕರಿಗುಳಿವಿನ ಉರುನರಕ
ಲಂಚಗಾರಗೆ ಮೂತ್ರಮಲನಾರ್ವ ಕೂಪ ೩
ಕಾದ ಉಕ್ಕಿನ ಪ್ರತಿಮೆ ಕಾಮಾಂಧ ಮೂಢರಿಗೆ
ಕಾದು ಉರಿವರಗಿನೂಟ ಕಡುಲೋಭಿಗಳಿಗೆ
ಕಾದ ಸೀಸದ ಮಡುವು ಮನೆಮುರುಕ ತುಂಟರಿಗೆ
ಕಾದೆಣ್ಣೆಕೊಪ್ಪರಿಗೆ ಕುಟಿಲ ಕುಹಕರಿಗೆ ೪
ಪರದ್ರವ್ಯಪಹಾರಿಗೆ ಭೇದಿ ಭೈರವಕೂಪ
ನೆರೆನಂಬಿ ಕೊಲ್ಲವಗೆ ಮಸೆದಲಗುಕೊಡಲಿ
ಪರರೊಗತನರಿದಗೆ ನರಕ ಚಂದ್ರಾರ್ಕಪರಿ
ಗುರು ಹಿರಿಯರ್ಹಳಿದರಿಗೆ ಉರಿಸರಳ ಮಂಚ ೫
ಕಾಲಯಮಪಾಶವು ತುಳಸಿದಳ ತುಳಿದವರಿಗೆ
ಕಾಲಭೈರವ ಮೃತ್ಯು ಮಾಯಮೋಹಿಗಳಿಗೆ
ಕಾಲಕರ ಶೂಲ ಕೊಂಡಿ ಚಾಂಡಾಲಗೆ
ಸೂಳೆಯರ ಸೇವಕಗೆ ಕಾಲಯಮದಂಡ ೬
ಸಂತ ಸಜ್ಜದಾನಸಂಗರಿಯದಧಮರಿಗೆ
ಇಂತು ಎಂಬತ್ತು ಕೋಟಿ ನರಕಯಾತನವು
ಅಂತಕಾರಿ ನಿನ್ನಾಜ್ಞೆಯಂತೆ ನಡೆಯುತಿವೆ ಎನ್ನ
ಅಂತರದಿ ನಿಂತಿದನು ಗೆಲಿಸು ಶ್ರೀರಾಮ ೭

 

ಗೌರಿಶಂಕರ್ವಿವಾದ ನಿವಾರಿಸಿದ ಮಹಚದುರನೆ

ಸಿದ್ಧಿ ಗಣವರ ಬುದ್ಧಿ ನೀಡೆನ್ನನುದ್ಧಾರಮಾಡು ಬೇಗನೆ
ಬದ್ಧಗುಣಗಳ ತಿದ್ದಿ ಎನಗೆ ಶುದ್ಧಮತಿ ನೀಡು ಬೇಗನೆ ಪ
ವಿಮಲಮನ ಸನಮಿತ ತವಪಾದಕಮಲ ಭಜಿಸುವೆನಭನೆ
ವಿಮಲವಿದ್ಯವ ಕ್ರಮದಿಂ ಪಾಲಿಸು ಹಿಮಜೆಸುತ ಕರಿವರದನೆ ೧
ಸೋಮಶೇಖರ ಪ್ರೇಮದ ಸುಕುಮಾರ ಸುಮನಸಚಂದ್ರನೆ
ಕಾಮಿತಜನ ಶಾಮಪೂರಿತ ಕೋಮಲಗುಣಸಾಂದ್ರನೆ ೨
ಕೋಮಲಾಂಗನೆ ಕರ್ಣಕುಂಡಲ ಹೇಮಕಂಕಣಧಾರನೆ
ತಾಮಸದಿ ಗಹಗಹಿಸಿದಾ ಮಹ ಸೋಮನಿಗೆ ಶಾಪವಿತ್ತನೆ ೩
ಪಾರ ಬುಧ್ಧಿಲಿ ಸಾರವಿದ್ಯದಧಿಕಾರ ಕುಶಲದಿ ಪಡೆದನೆ
ಗೌರಿಶಂಕರರ್ವಾದ ನಿವಾರಿಸಿದ ಮಹಚದುರನೆ ೪
ತ್ರಿಕ್ಷೆಯರೊಡಗೂಡಿ ಭುವನ ರಥಮಾಡಿ
ಮಣಿಯಧೋಗ್ವುದು ಕಂಡನೆ
ಘನ ಕೋಪಾಗ್ರಾದಿ ರಥವನಿಲ್ಲಿಸಿ ತ್ರಿಣಯರಿಂ ಪೂಜೆಗೊಂಡನೆ ೫
ವಿಘ್ನನಾಯಕ ಪ್ರಾಜ್ಞಮೂರುತಿ ಸೂಜ್ಞ ಜನರಾರಾಧನೆ
ಸಂಜ್ಞೆಧೊಗಳುರ್ವಿಘ್ನ ಛೇದಿಸಿ ಪ್ರಾಜ್ಞ ಪದವೀವ ಪ್ರೌಢನೆ ೬
ವರುಷಕೊಂದು ಮಾಸ ಧರೆಯೊಳಿಳಿಯುತ
ಪರಮಪೂಜೆಯ ಕೈಕೊಂಬನೆ
ನರರ ದುರ್ಮತಿ ತರಿದು ಸುಗತಿಯ ನಿರುತ
ಪಥದೋರ್ವ ಧುರೀಣನೆ ೭
ತಂದೆ ನಿನ್ನನು ಹೊಂದಿ ಭಜಿಪರ ಮಂದಮತಿನಿವಾರನೆ
ಬಂದ ದುರ್ಭವದಂದುಗಂಗಳ ಚಂದದಿಂ ಪರಿಹಾರನೆ ೮
ಶರಣು ಶರಣು ಶರಣು ಗಣವರ ಶರಣುಕರುಣಾಭರಣನೆ
ಸಿರಿಯರಾಮನ ಚರಿತಪೊಗಳುವ ಪರಮಮತಿ
ದೇ ಗಣಾರ್ಯನೆ 9

 

೪೫೨
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ
ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ
ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ
ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ
ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ
ಪರಮಪ್ರಹ್ಲಾದರಿಗೆ ನಿರುತ ಶರಣೆಂದು ೧
ಪನ್ನಂಗಶಯನ ಉನ್ನತ ಮಹಿಮೆಗಳ
ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ
ಗನ್ನಗತಕನಾದ ಅಣ್ಣನಿಗೆ ಮಹ ನೀತಿ
ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು ೨
ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ
ವನಜನಾಭನ ಸೇವೆ ಮನುಮುಟ್ಟಿ ಗೈದು
ಜನನಮರಣವ ಗೆಲಿದು ಘನಪದವಿ ಗಳಿಸಿದ
ಹನುಮರಾಯರ ಪದಕೆ ಮಣಿದು ಶರಣೆಂದು ೩
ತರಳತನದಲಿ ನಿಖಿಲ ಧರೆಭೋಗಗಳ ತೊರೆದು
ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ
ವರಧ್ರುವ ಕರಿಕುಸುಮ ಹರಿಗೆ ಅರ್ಪಿಸಿ ಬಂದ
ಪರಮಕಂಟಕ ಗೆಲಿದವರಿಗರಿತು ಶರಣೆಂದು ೪
ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ
ಭಕ್ತರೆನಿಸಿದ ಮಹ ನಿತ್ಯಾತ್ಮರ
ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ
ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು ೫

 

೪೫೩
ಸಿರಿವರನೆ ಮರೆಬಿದ್ದೆ ಶರಣಾಗತಪ್ರೇಮಿ
ಪರಿಭವದ ಕಿರಿಕಿರಿಯ ಪರಿಹರಿಸು ಸ್ವಾಮಿ ಪ
ಅಡಿಗಡಿಗೆ ರಿಣಕೊಟ್ಟ ಒಡೆಯರತಿಕಿರಿಕಿರಿಯು
ಇಡತೊಡಲಿಕ್ಕಿಲ್ಲೆಂಬ ಮಡದಿಕಿರಿಕಿರಿಯು
ಎಡಬಿಡದೆ ಹಸೆತೃಷೆಯ ಕಡುತರದಕಿರಿಕಿರಿಯು
ಕಡೆಹಾಯ್ಸು ಕಡುಬೇಗ ತಡೀಲಾರೆನಭವ ೧
ಮಾಡುಣಲು ಕಿರಿಕಿರಿಯು ಬೇಡುಣಲು ಕಿರಿಕಿರಿಯು
ನಾಡ ನಾಡ ತಿರುಗಲು ಕಡುಕಿರಿಕಿರಿಯು
ಗೂಢದೊತ್ತಟ್ಟಿರಲು ಬಡತನದ ಕಿರಿಕಿರಿಯು
ಖೋಡಿ ಕಿರಿಕಿರಿ ಬೇಡ ದೂರಮಾಡಭವ ೨
ಕಿರಿಕಿರಿಲ್ಲದ ನಿನ್ನ ಚರಣದಾಸರ ನೆರೆಯು
ಕರುಣಿಸಿ ನಿರುತದಿಂ ಪರಿಪಾಲಿಸಭವ
ಶಿರಬಾಗ್ವೆ ಚರಣಕ್ಕೆ ನೀನೆ ಪರದೈವೆನಗೆ
ತರಳನರಕೆಯ ಕೇಳು ವರದ ಶ್ರೀರಾಮ ೩

 

೬೫೮
ಸುಜ್ಞಾನಿ ನಡೆ ಬೇರೆ ಅಜ್ಞಾನಿ ನಡೆ ಬೇರೆ
ಜ್ಞಾನದಿಂದ ಪ್ರಮಾಣಿಸಿ ನೋಡಲು ಪ
ಸುಜ್ಞಾನಿ ನುಡಿಯದರ ಕಡೆತನಕ
ಅಜ್ಞಾನಿ ನುಡಿ ಸದಕ
ಸುಜ್ಞಾನಿಯನುಡಿ ಒಂದೆ ನಿರ್ಧಾರ
ಅಜ್ಞಾನಿಯ ನುಡಿ ಪದರುದರ ೧
ಸುಜ್ಞಾನಿ ಬಾಳು ಭವಲೂಟಿ ಕಡೆತನ
ಅಜ್ಞಾನಿ ಬಾಳು ಸುಳ್ಳು ಮುಷ್ಟಿ
ಸುಜ್ಞಾನಿಯ ವರ್ತನೇ ವಜ್ರದಗಟ್ಟಿ
ಅಜ್ಞಾನಿವರ್ತನೆ ಗಾಳಿಯ ಮೊಟ್ಟೆಮೊಟ್ಟೆ ೨
ಸುಜ್ಞಾನಿಗೆ ಮುಕ್ತಿಪಟ್ಟ ಕಡೆತನ
ಅಜ್ಞಾನಿಗೆ ಮೃತ್ಯುಕಾಟ
ಅಜ್ಞಾನಿಕಾಣುವ ಯಮನಗೂಟ
ಸುಜ್ಞಾನಿ ಕಾಣುವ ಶ್ರೀರಾಮನಾಟ ಆಟ ೩

 

೧೧೫
ಸುದಯನೆ ಮಲಗಿದ್ಯಾ ತಂದೆ ಗೋವಿಂದ
ಇದು ಏನು ಮಾಡಿದ್ಯೋ ಭಕುತರಾನಂದ ಪ
ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು
ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು ೧
ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ
ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ ೨
ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ
ಸುತರೊಳು ದಯತಪ್ಪಿ ಅತಿ ಆನಂದದಲಿ ೩
ಬೇಡಿದವರ ಇಷ್ಟ ನೀಡದೆ ನೀ ಕಡೆಮಾ
ರೂಢಿಯ ಮೇಲೆ ಗಾಢನಿದ್ರೆಯೊಳು ೪
ಕಾಮಿತಜನರ ಸುರಕಾಮಧೇನಲ್ಲವೆ ನೀನು
ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ ೫

 

ಬಾಹ್ಯ, ಅನನ್ಯ, ಏಕಾಂತ ಭಕ್ತಿ
೪೫೫
ಸುಬೊಧ ಬೋಧಿಸೆದುನಾಥ
ಸುದಾತ ಸಜನಸಂಪ್ರೀತ ಪ
ಮೋಹಗಳ ಬಿಡಿಸಿ ತ್ರಿವಿಧ ಉಪಟಳವ ಕೆಡಿಸಿ
ತ್ರಿವಿಧ ಭಕ್ತಿ ಕರುಣಿಸಿ ತ್ರಿಕಾಲಜ್ಞಾನ ನಿಲ್ಲಿಸಿ ೧
ವಿಷಮಪಂಚಕ್ಲೇಶಕೆಳಿಸೆ ವ್ಯಸನಸಪ್ತನಿಧಿ ಗೆಲಿಸಿ
ಒಸೆದು ದಾಸರೊಲಿಮಿರಿಸಿ ಅಸಮಧ್ಯಾನ ಸ್ಥಿರಪಡಿಸಿ ೨
ದುಷ್ಕಾಮಗಳನು ಪರಿಹರಿಸಿ ಸುನಾಮ ಜಿಹ್ವೆಯೊಳಿರಿಸಿ
ನಿಸ್ಸೀಮದಾಸನುಹುದೆನಿಸಿ ಶ್ರೀರಾಮಗುರುವೆ ಕರುಣಿಸಿ ೩

 

೫೮೯
ಸುಮ್ಮನೆ ತೊಲಗು ಕಂಡೆಲೆ ಮಾಯಿ ನೀನು
ನಮ್ಮಯ್ಯ ಬಂದರೆ ಉಳಿಲಾರಿ ಇನ್ನು ಪ
ಉರಗ ತಾ ಬೆನ್ನ್ಹತ್ತಿ ಗರುವದಿಂ ಬಂದು ಮಹ
ಗರುಡನಂ ಕಂಡಕ್ಷಣದ್ಹರಣ ತೊರೆವಂತೆ
ಹರಿದಾಸರೆನ್ನದೆ ಪರಿಪರಿ ಕಾಡಿ ನೀ
ಶರಣಜನಪ್ರಿಯನ ಕಂಡುರಿದ್ಹೋಗಬೇಡ ೧
ಲಕ್ಷಿಸೆ ಮಂಡೂಕ ಮಕ್ಷಕನ ಬೆನ್ನ್ಹತ್ತಿ
ತಕ್ಷಕಗೆ ಸಿಕ್ಕು ತಾ ಭಕ್ಷವಾದಂತೆ
ಲಕ್ಷ್ಮೀಪತಿದಾಸರ ಲಕ್ಷಿಸದೆ ಕಾಡಿ ಭಕ್ತ
ಪಕ್ಷಕನ ಕರಕೆ ಸಿಕ್ಕು ಶಿಕ್ಷೆಪಡಬೇಡ ೨
ರಾಮದಾಸರ ನೆರೆಗೆ ತಾಮಸದಿಂದ್ಹೋಗದೆ
ಕ್ಷೇಮದಿಂ ದೂರಿರೋ ಹೇ ಮಾಯಿ ನೀನು
ಸ್ವಾಮಿ ತನ್ನಯ ಭಕ್ತರೊಳು ಕಂಡರೆ ನಿನ್ನ
ನಾಮವೇ ಉಳಿಸನೀ ಭೂಮಿಯ ಮೇಲೆ ೩

 

೬೫೯
ಸುಮ್ಮನೆ ಹೊಗಳಿದರ್ಯಾತಕೀತನ ಪರ
ಬ್ರಹ್ಮ ಪರಮಾತ್ಮೆಲ್ಲ್ಹಾನ ಪ
ರಮ್ಮೆ ಮಾಡಿ ಬಲುಜಮ್ಮಾಸಿ ಮನುಗಳು
ದಿಮ್ಮಾಕಿನಿಂದ ವೇದಸ್ರ‍ಮತಿಯನ್ನು ಅ.ಪ
ಎಲ್ಲಿ ಕರೆಯಲಿಲ್ಲ್ಯಾನಂತೆ ಸುಳ್ಳೆ
ಸಲ್ಲದ ಮಾತ್ಹೇಳಿಹ್ಯರಿಂತೆ
ಸೊಲ್ಲು ಸೊಲ್ಲಿಗೆ ನಾನೆಲ್ಲೆಲ್ಲಿಕೂಗಲು
ಕಲ್ಲಿಗು ಕಡೆಯಾಗಿರುವ ಪುಲ್ಲನಾಭ ೧
ಭಕ್ತ ರಕ್ಷಕನೆಂಬ ಬಿರುದಂತೆ ಇವ
ಹೊತ್ತುಕೊಂಡು ಇರುತಿಹ್ಯನಂತೆ
ಅರ್ತುಕೊಂಡು ನಾ ನಿರ್ಕಾಗಿ ಭಜಿಸಲು
ಸಾರ್ಥಕಮಾಡವಲ್ಲ ಕರ್ತನೆಂಬಂಥವ ೨
ಮೊರೆಯಿಟ್ಟು ಭಕ್ತರಪ್ರಿಯಬಂಧು ಮಹ
ಕರುಣಾಳು ಶ್ರೀರಾಮನೆ ಎಂದು
ಪರಿಪರಿಯಲಿ ಈ ಪರಿ ಸ್ಥಿರವಾಕ್ಯವೇ
ನರಿತು ಪೊಗಳಿದರು ಪರಮ ಪಾವನರು ೩

 

೫೯೦
ಸುಮ್ಮನೆ ಹೋಗುತಾದಲ್ಲೋ ಇಷ್ಟಾರ್ಥಪಡಿದೇ
ಸುಮ್ಮನೆ ಹೋಗುತಾದಲ್ಲೋ ಪ
ಸುಮ್ಮನೆ ಹೋಗುತಾದೆ ಹೆಮ್ಮಾರಿಗೀಡಾಗಿ
ಮರ್ಮವರಿತು ಪರಬ್ರಹ್ಮನ ಕೂಡದೆ ಅ.ಪ
ಎಷ್ಟೋ ಸುಕೃತವಡೆದು ಈ ನರಜನ್ಮ
ತೊಟ್ಟು ಸೃಷ್ಟಿಗೆ ಇಳಿದು
ಹುಟ್ಟಿ ಬಂದಂಥ ಕಾರ್ಯ ಬಿಟ್ಟು ಮರವೆಗೂಡಿ
ಕೆಟ್ಟು ಹೋಗ್ಯಾದೋ ವಯ ಕೃಷ್ಣಾರ್ಪಣೆನದೆ ಸುಟ್ಟು ೧
ವಯವೆಂಬ ಧನ ಪಡೆದು ಈ ಮಹದನು
ಭವದ ಸಂತೆಗೆ ಇಳಿದು ಭವದ
ಜಯೆಂಬ ಅನುಭವದ ವ್ಯಾಪಾರ ಮಾಡಿ
ಭವಹರನ ಕಾಣದೆ ಜವನಗೀಡಾಗಿ ತಾನು ೨
ಅರಿವಿನಾಲಯ ಪೊಕ್ಕು ಸಂಸಾರವೆಂಬ
ಮರೆವಿನ ಬಲೆಯೊಳ್ ಸಿಕ್ಕು
ಪರಮಪುರುಷ ಸಿರಿಯರಸ ಶ್ರೀರಾಮನ
ಚರಣಕಮಲಕ್ಕೆ ಸಲ್ವ ವರಮೋಕ್ಷ ಪಡೆಯದೆ ಲ

 

೪೫೬
ಸುಮ್ಮನ್ಯಾತಕೆ ಕಾಲಕಳೆಯುವಿಯೋ ಹೇ
ಚುಮ್ಮಮನಸೇ
ಸುಮ್ಮನ್ಯಾತಕೆ ಕಾಲಕಳಯುವಿ ಪ
ಬ್ರಹ್ಮನಯ್ಯನ ವಿಮಲ ಚರಣ
ಒಮ್ಮನದಿಂ ಪೊಗಳುತನುದಿನ
ನಿರ್ಮಲಪದವಿ ಸಂಪಾದಿಸದೆ ನೀ ಅ.ಪ
ಮತ್ತು ನಿನ್ನಗೆ ಹತ್ತಿ ಬರುವುದೆ
ನಿತ್ಯ ವೆನಿಪತ್ಯಧಿಕ ಸಮಯವು
ಸತ್ಯ ಸರ್ವೋತ್ತಮನ ಪಾದವ
ನಿತ್ಯ ಪಾಡುತ ಸಾರ್ಥಕ್ಹೊಂದದೆ ೧
ಮೃತ್ಯುಬಾಧೆಯ ಗೆಲಿಸಿ ನಿನ್ನ ಪ
ವಿತ್ರನೆನಿಪ ಮಹ ಮೃತ್ಯುಲೋಕದಿ
ಉತ್ಪತ್ತಿಯಾಗಿ ರಿಕ್ತಹಸ್ತದ್ಹೋಗ್ವತಿ
ಚಿತ್ತಜಪಿತನ್ನರ್ತು ಭಜಿಸದೆ ೨
ಭಕ್ತಜನರು ಕೈಯೆತ್ತಿ ಪೇಳಿದ
ಸತ್ಯದೋಕ್ತಗಳ್ನಿತ್ಯವೆಂದು
ಭಕ್ತವತ್ಸಲ ಸಿರಿಯರಾಮನ
ಚಿತ್ತದರಿತು ಮುಕ್ತಿ ಪಡೆಯದೆ ೩

 

೫೯೧
ಸುಳ್ಳಿನೊಳಗೆ ನಾ ಬಲು ಸುಳ್ಳ ನನ್ನ
ಸುಳ್ಳೆ ನನಗೊಳುಪಿಲ್ಲ ಪ
ಸುಳ್ಳು ಹೇಳುವೆನು ಅಳತಿಲ್ಲ ಇದು
ಎಳ್ಳಷ್ಟಾದರು ಸುಳ್ಳಲ್ಲ ಅ.ಪ
ಸೂಜಿಗಡತರ್ಹೊಗೆಯೇಳ್ವುದ ಕಂಡೆ ಅಗ್ನಿ
ಮೂಜಗಡರಿ ಸುಡುವುದು ಕಂಡೆ
ಸೋಜಿಗ ಕಂಡೆನು ಉರಿಯೊಳು ಮತ್ತೊಂದು
ಬೀಜ ಮೊಳೆತು ತೆನೆಯಾದದ್ದ ಕಂಡೆ ೧
ಸಾಸಿವೆಕಾಳಷ್ಟು ಬಟ್ಟಲ ಕಂಡೆ ಇಡೀ
ದೇಶ ಅದರೊಳಗಿಟ್ಟಿದ್ದ್ದು ಕಂಡೆ
ಹಾಸ್ಯದ ಮಾತಲ್ಲ ತಿರುಗಿ ನೋಡಿ ನಾ
ದೇಶದೊಳಗೆ ಆ ಬಟ್ಟಲ ಕಂಡೆ ೨
ಮೈಯೆಲ್ಲ ತೂತಿನ ತಿದಿಯ ಕಂಡೆ ಅದು
ವಾಯುತುಂಬಿ ಬಾತದ್ದು ಕಂಡೆ
ದೀವಿಗೆಯಿಲ್ಲದೆ ಬೆಳಗದುಕಂಡೆ ಮತ್ತು
ಕಿವುಡ ಮೂಕರ ಏಕಾಂತ ಕಂಡೆ ೩
ಉರಿವುದ ಕಂಡೆನು ಬೆಂಕಿಲ್ಲದೆ ಅದು
ಆರಿದ್ದಕಂಡೆನು ನೀರಿಲ್ಲದೆ
ಹೊರುವುದ ಕಂಡೆನು ಕೂಲಿಲ್ಲದೆ ಮತ್ತು
ಇರಿದುಕೊಲ್ವದು ಕಂಡೆ ಕತ್ತಿಲ್ಲದೆ ೪
ಮೇಲಕೆ ಬೇರಿಳಿದ್ರ‍ವಕ್ಷ ಕಂಡೆನಲ್ಲಿ ಟೊಂಗೆ
ನೆಲಕೆ ಬೆಳೆದದ್ದು ಕಂಡೆ ಕಣ್ಣಿಲಿ
ಚಲಿಪದು ಕಂಡೆನು ಎಲ್ಲಿಗೆ ಬೇಕಲ್ಲಿ ಇದರ
ಕೀಲಿಕಂಡೆ ಶ್ರೀರಾಮನ ಬಲ್ಲಿ ೫

 

೫೯೨
ಸುಳ್ಳು ಸುಳ್ಳು ಸುಳ್ಳು
ಪೊಳ್ಳು ಜಗ ತಿಳಿಯಲೆ ಮಳ್ಳು ಮರುಳು ಪ
ಸುಳ್ಳು ಬಂಗಾಲಿ ಕಂಡು
ಮಳ್ಳಾಗ ಬೇಡೆಲೆ ಲೊಳ್ಳಟ್ಟಿಯಿದೆಲ್ಲ ಅ.ಪ
ಕಾಜಿನ ಬುರುಡೆಯೊಳ್ ತೇಜಿಪದೀಪಕ್ಕೆ
ಸೋಜಿಗಗಂಡು ಮತಿಮಾಜುವುದರಲವ
ಮೋಜಿನ ಆಟಕ್ಕೆ ೧
ನಾಶವಾಗುವುದೊಂದೇ ತಾಸು ತೋರೆಲ್ಲನು
ಈಷಣ ಸಂಸಾರದಾಸೆಗೆ ಸಿಗದಿರು
ಮೋಸವಿದೆಲ್ಲವು ೨
ಮೋಹದಾಕಾರಕ್ಕೆ ಮೋಹಿಸಿ ಕೆಡದೆ ನೀ
ಮೋಹಿಸಿ ಸ್ಥಿರಸುಖದೇಹವ ನೀಡೆಲೊ
ಮಹ ಶ್ರೀರಾಮನೆ ೩

 

೪೫೭
ಸುಳ್ಳೆಭ್ರಮಿಸಿ ಕೆಡಬೇಡವೋ ಹೇ ಮುಳ್ಳುಮನುಜ
ಎಲ್ಲ ಮಿಥ್ಯೆಜಗದ ಬಾಳವ್ಯೋ ಪ
ನಿಲ್ಲದಳಿಕೆ ಪೋಗ್ವುದಿದು ಜಲದಮೇಲಿನ ಲಿಖಿತತೆರದಿ
ಪುಲ್ಲನಾಭನ ಪಾದ ನಂಬಿ ಗೆಲ್ಲು ಈ
ದುರ್ಭವದ ಭಂಗವೋ ಅ.ಪ
ಬಂಧುಬಳಗರೆಂಬರೆಲ್ಲರು ನಿನ್ನೊಳಿರುವತನಕ
ತಿಂದು ಉಂಡು ಸೇವೆ ಮಾಳ್ಪರು ನೀನುಹೋಗುವಕಾಲ
ಸಂದಿಸಲಾಗ ಆರುಬಾರರು ಹಿಂದೆ ಉಳಿವರು
ಮಂದಗಮನೆ ಸತಿಯು ತನ್ನ ಮುಂದಿನ ಗತಿಗೆ ಅತ್ತುಕರೆದು
ಮಿಂದು ಮುಟ್ಟುಚಟ್ಟು ತೊಳೆದು
ಚಂದದ್ಹೋಳಿಗೆ ತುಪ್ಪ ಉಂಬಳು ೧
ಜನರಗೋಣು ಮುರಿದು ಹಲವು ಹಂಚಿಕ್ಹಾಕಿ ಬಿಡದೆ
ಬಿನುಗುಯೋಚನದನುದಿನವು ಶೋಧಮಾಡಿ
ನಾನಾರೀತಿಯಲಿ ಗಳಿಸಿದ ಧನವು ನಿನಗೆ ಎರವು
ಕನಿಕರಿಲ್ಲದೆ ಜವನದೂತರು ಹಣಿದು ಎಳೆದಾಡೊದೆಯುವಾಗ
ಮನೆಯೊಳ್ಹೊಳಿದಳದೆ ಧನವು ಬಂದು
ನಿನಗೆ ಸಹಾಯ ಮಾಳ್ಪುದೇನೋ ೨
ಭೂಮಿಸೀಮೆ ತನ್ನದೆನುತ ಶಾಸನವ ಬರೆಸಿ
ನೇಮವಿಲ್ಲದೆ ಕಷ್ಟಬಡುತ ನಿಜಸುಖವ ಮರೆದು
ತಾಮಸದೊಳಗೆ ಮುಳುಗಿ ಕೆಡುತ ಪ್ರೇಮದೊರಲುತ
ಭೂಮಿಗಧಿಕ ಭಕ್ತಜನರ ಪ್ರೇಮಮಂದಿರ
ಸ್ವಾಮಿ ಶ್ರೀರಾಮ ಮುನಿದು ನೋಡಲಾಗ
ಭೂಮಿ ಸೀಮೆ ಕಾಯ್ವುದೇನೋ ೩

 

೬೬೦
ಸೂತ್ರಧಾರಿ ಶೌರಿ ಸುರಸೇವ್ಯ ಸುಜನಾತ್ಮ
ಸತ್ಯ ಆನಂದ ತವಸೇವೆ ನೀಡೆನಗೆ ಪ
ಕೊಡು ಎನ್ನ ಕರ್ಣಕ್ಕೆ ದೃಢಮಾಡು ವಚಶ್ರವಣ
ಬಿಡದೆನ್ನ ನಯನಕ್ಕೆ ಇಡು ನಿನ್ನ ದರ್ಶನವ
ನುಡಿಸೆನ್ನ ವದನದಿಂ ಕಡು ಸತ್ಯವಚನವನು
ಎಡಬಿಡದೆ ಜಿಹ್ವೆಕ್ಕೆ ನೀಡು ತವಧ್ಯಾನ ೧
ಒದಗಿಸೈ ಕೈಗೆ ತವಪಾದಪದುಮ ಸೇವಾ
ಹೃದಯಕ್ಕೆ ಕರುಣಿಸು ಸದಮಲ ಸುಶಾಂತಿ
ಸದಯಾತ್ರ ನೀಡೆನ್ನ ಪಾದಕ್ಕೆ ಪುಣ್ಯಸ್ಥಳ
ವಿಧವಿಧದಿ ಬೇಡ್ವೆ ನೀನು ದಯನಾಗೆನ್ನೊಳಗೆ ೨
ಚಿತ್ತಕ್ಕೆ ಸ್ಥಿರನೀಡು ಸ್ವಸ್ಥತೆ ಕೊಡು ಮನಕೆ
ಸತ್ಯರಿಗೆ ಮಣಿಸೆನ್ನ ಮಸ್ತಕವ ಸತತ
ನಿತ್ಯ ಪರಿಪೂರ್ಣ ಮಮ ಕರ್ತ ಶ್ರೀರಾಮ ನಿನ್ನ
ಭಕ್ತನೆಂದೆನಿಸೆನ್ನ ಮುಕ್ತಿ ಪಥಕ್ಹಚ್ಚು ೩

 

೫೯೩
ಸೂಳಿನ್ನ ಪೊಗುವವ ಏನಾದೆಂತಾ
ಹಾಳಾದಬಳಿಕ ಪುಣ್ಯ ಮೂಳನಾಯಾದ ಪ
ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ
ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ
ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ
ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ೧
ಸುಲಭದಿಂ ತನ್ನಯ ಕುಲನಾಶಗೆ ಅನ್ಯ
ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು
ಕುಲ ವಿಧವಿಧ ಭಕ್ತಿಗಳನಗಲಿ
ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ ೨
ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ
ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ
ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ
ನಿತ್ಯ ಮೈಲಿಗೆಹೊರುವ ಕತ್ತೆಯಂತಾದ ೩
ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ
ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ
ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ
ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ ೪
ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ
ಧನವನಿತು ಅವಳ ಅಧೀನದಲ್ಲಿರಿಸಿ
ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ
ಜನಕ ಶ್ರೀರಾಮನಡಿ ಕನಿಕರಕ್ಹೊರತಾದ ೫

 

ಮುನಿಶಾಪದಿಂ ನೃಪನ ಕನಿಕರದಿ
೪೫೮
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ
ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ
ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ
ತರುಣಿಯನುದ್ಧರಿಸಿ ಪರಿಶುದ್ಧಗೈದಿ
ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು
ನರಕಿಯಾಗ್ವುದನರಿತು ಅರಿಯದಂತಿರುವಿ ೧
ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ
ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ
ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ
ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ ೨
ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ
ತನುದಿನದಿ ಬಾಗಿಲವ ಘನವಾಗಿ ಕಾಯ್ದಿ
ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು
ಘನಪಾಪಿಯಾಗ್ವುದನು ಮನಕೆ ತರದಿರುವಿ ೩
ವನವಾಸಗೈದಯ್ಯಾ ವಾನರನ ಸಲಹಿದಿ
ದನುಜನನು ಸಂಹರಿಸಿ ದನುಜನನುಜಂಗೆ
ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ
ಎನಗ್ಯಾಕೀದುರ್ಬವಣೆ ದೂರಮಾಡದಿರುವಿ ೪
ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು
ನಿನಗವರೆ ದಾಸರೆ ನಾನಲ್ಲವೇನು
ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ
ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ ೫

 

೪೫೯
ಸೃಷ್ಟೀಶ ದಯಮಾಡೊ ಕಷ್ಟನಿವಾರ
ಇಷ್ಟದಾಯಕ ನಿನ್ನ ನಿಷ್ಠೆಯಿಂ ಬೇಡ್ವೆ ಪ
ಇಷ್ಟಭಕ್ತರು ಬೇಡಿದಿಷ್ಟಾರ್ಥಗಳ ಬೇಗ
ಕೊಟ್ಟು ಸಲಹುವ ದೊರೆಯೆ ಬಿಟ್ಟಗಲದೆನ್ನ
ಇಷ್ಟವನು ಪೂರೈಸಿ ಸೃಷ್ಟಿವ್ಯಾಪಾರದಿಂ
ದಟ್ಟಹಾಸದಿ ಗೆಲಿಸು ಶಿಷ್ಟಜನಪಾಲ ೧
ರೂಢಿಯೊಳು ಬಲು ಬೇಡಿದಣಿದೆನಯ್ಯ
ನಾಡದೈವಂಗಳನು ಕಾಡಿ ಕಾಡಿ ಪಾಡಿ
ಬೇಡುವೆ ನಿನ್ನ ಗಾಢ ಮಹಿಮೆಗಳರಿತು
ಕಾಡದೀ ದಾಸಗೆ ನೀಡು ಜಯ ವರವ ೨
ಇನ್ನು ಈ ಜಗದೊಳಗೆ ಅನ್ಯರಾಸೆನಗಿಲ್ಲ
ನಿನ್ನನ್ನೆ ಕಾಡುವೆನು ನಿನ್ನನ್ನೆ ಬೇಡ್ವೆ
ಅನ್ಯರಿಗೆ ಬಾಗಿಸದೆ ಮನ್ನಿಸಿ ಸಲಹಯ್ಯ
ನಿನ್ನ ಕೃಪೆಯ ಗೈದು ಎನ್ನಯ್ಯ ರಾಮ ೩

 

೪೬೦
ಸೇವಕಗೆ ದಯಮಾಡಲೊ ಹರಿ ದೇವ ನಿಮ್ಮ
ಪಾವನಪಾದ ಭಾವದಿಂ ನಮಿಸಿ ಪಾವನನಾಗ್ವೆ ಪ
ಕಲ್ಲನು ನಲ್ಲೆಯ ಮಾಡಿದ ಪಾದ
ಕಳ್ಳನ ರಿಸಿಯೆಂದೆನಿಸಿದ ಪಾದ
ನಲ್ಲೆಯ ಬೆಂಬಲ ನಿಂತಿರ್ದ ಪಾದ
ಖುಲ್ಲ ಪೂತನಿಯ ಮೆಟ್ಟಿದ ಪಾದ೧
ಮಂಕು ಕಾಳಿಂಗನ ತುಳಿದ ಪಾದ
ಶಂಖಾಸುರನ ಒದೆದ ಪಾದ
ಜಿಂಕೆಯನು ಹಿಂಬಾಲಿಸಿದ ಪಾದ
ಪಂಕಜಾಸನ ಪೊಗಳುವ ಪಾದ ೨
ಭೂಮಿ ಓರಡಿ ಮಾಡಿದ ಪಾದ
ಭಾಮೆ ದೃಢದಿ ಪೂಜಿಸಿದ ಪಾದ
ಪ್ರೇಮದಿಂ ಭಕುತರನುದ್ಧರಿಪ ಪಾದ
ಸ್ವಾಮಿ ಶ್ರೀರಾಮ ತವ ಕೋಮಲಪಾದ ೩

 

ಮಾತುಮಾತಿಗ್ವಾದಿಸಿ
೫೯೪
ಸೋತುಹೋಗಣ್ಣ ಮಾತುಬಂದಲ್ಲಿ ಜಾಣನಾಗಿ
ಸೋತುಹೋಗಣ್ಣ ಮಾತುಬಂದಲ್ಲಿ ಪ
ಸೋತುಹೋಗದೆ ಮಾತುಮಾತಿಗೆ ವಾದಿಸಲ್ಕೆ
ಘಾತಕತನದ್ವಿಧಿಯು ಬಂದು
ಆತುಕೊಂಡು ಕೂತುಕೊಳ್ವುದು ಅ.ಪ
ಸೋತೆನೆನ್ನಲು ನಾಚಬೇಡಣ್ಣ ದೇವರು ಕೊಟ್ಟಿಹ್ಯ
ಖ್ಯಾತಿಯೇನು ಹೋಗೋದಿಲ್ಲಣ್ಣ ಸುಳ್ಳಲ್ಲವಣ್ಣ
ಸೋತೆನೆಂಬುದು ಜಯದ ಮಾತಣ್ಣ ಸತ್ಯ ತಿಳಿಯಣ್ಣ
ನೀತಿಗಡಕರ ಮಾತಿನ ತಳ್ಳಿಗೋತ ಕುಣಿಯೊಳೆಳೆವ ಬಳ್ಳ್ಯೆಂದು
ಮಾತನಾಡದೆ ಸುಮ್ಮನ್ಹೋಗಲು ನೀತಿವಂತರು ಮೆಚ್ಚುತಾರ ೧
ಕೆಡುಕುಜನಜತೆ ತೊಡಕು ಬೇಡಣ್ಣ ಮಂದಮತಿಗಳ
ದುಡುಕುಮಾತಿಗೆ ಮಿಡುಕಬೇಡಣ್ಣ ಸತ್ಯದ್ಹೇಳುವ
ದೃಢತರ್ವಚನದ ಅಡಕು ತಿಳಿಯಣ್ಣ ಪಡಕೊ ಸುಖವಣ್ಣ
ಜಡಕೆ ಜಡವಾದ ಜಡರು ತಾರೆ ತೊಡಕಿನೊಳು
ನೀ ತೊಡರಿಕೊಂಡರೆ
ಬಿಡಿಕಿ ಯಮನ ದೂತರು ಮಹಕೆಡಕು
ತಪ್ಪದು ಕಡೆಯತನಕ ೨
ಸೋತೆನೆನದ್ಹತ್ತುವದನಂದೇನಾಯ್ತು ಸೋತು ಓಡಿದ
ನೀತಿವಂತ ವಿಭೀಷಣಂದೇನಾಯ್ತು ಮತ್ತು ನಳರಾಜ
ಸೋತ ರಾಜ್ಯ ಭಂಡಾರೆಲ್ಲ ಮುಳುಗಿತು ತಿಳಿ ನೀತಿ ಅರಿತು
ಮಾತುಮಾತಿಗ್ವಾದಿಸಿ ಕುಲಘಾತಕ್ಕಾದನು ಕೌರವೇಂದ್ರನು
ಸೋತೆನೆಂಬುದು ಮೂಲಮಂತ್ರವು
ಸೋತಜನರಭಿಮಾನಿ ಶ್ರೀರಾಮ ೩

 

೪೫೪
ಸ್ಥಿರ ನೀಡೆನ್ನ್ವದನಾಬ್ಜದಿ ಪರಮ
ಪುರುಷ ನಿನ್ನ ಸ್ಮರಣೆ ಪ
ಸೌಖ್ಯ ಸುಭೋಗದಿರಲಿ
ಬೇನಿಯಿಂದ ಒರಲುತಿರಲಿ
ತ್ರಾಣಗುಂದಿ ತೊಳಲುತಿರಲಿ
ದಾನವಾಂತಕ ನಿನ್ನ ಧ್ಯಾನ ೧
ಭೂಮಿಪರು ಸನ್ಮಾನ ಕೊಡಲಿ
ಪಾಮರೆಂದು ಒದೆದು ನೂಕಲಿ
ಭೂಮಿಜನರಪಹಾಸ್ಯ ಗೈಯಲಿ
ಸ್ವಾಮಿ ನಿಮ್ಮ ಭಜನಾನಂದ ೨
ಚಿಂತೆಯಿರಲಿ ಶ್ರೀಮಂತಿಕಿರಲಿ
ಸಂತಸೆಂಬುದು ಸಿಗದ್ಹೋಗಲಿ
ಅಂತಕಾರಿ ಶ್ರೀರಾಮ ನಿನ್ನ
ಚಿಂತನೆ ಎನ್ನ ಅಂತ್ಯಕಾಲದಿ ೩

 

೪೬೪
ಸ್ಮರಿಸುವ ದಾಸರ ಮೊರೆ ಕೇಳದಿರೆ ಹರಿ
ಕರುಣಾಳು ನೀನೆಂಬ ಭರವಸಿನ್ಹ್ಯಾಗೆ ಪ
ಕರಿಧ್ರುವ ಬಲಿ ಪಾಂಚಾಲಿಯ ಪೊರೆದಂತೆ
ಸ್ಮರಿಪರ ಬಿಟ್ಟರೆಘಳಿಗಿರಲಾರಂತೆ
ಅರಿತು ವಿಚಾರಿಸು ನೋಡಿದವರಿಗಿದು
ಸರಿಬರುವುದೆ ನರಹರಿಯೆ ನೀನರಿಯೆ ೧
ಕರುಣಾಕರನು ನೀ ನಿಜವಾಗಿರ್ದರೆ
ತ್ವರಿತದಿ ಬಂದೆನ್ನ ಮೊರೆ ಪಾಲಿಸೆಲೊ
ದುರಿತಭಯನಿವಾರ ನೀನಾದರೆ
ದುರಿತರಾಶಿ ಗಡ ಪರಿಹರಿಸಭವ ೨
ಧರೆವರ ಧರ್ಮಗರಣ್ಯದಿ ಮುಗಿದ
ಪರುಷದನ್ನವನಿತ್ತು ನೀ ರಕ್ಷಿಸಿದೆ
ವರ ಬಿರುದು ನಿನಗಿರಬೇಕಾದರೆ
ತ್ವರಿತದಿ ಸಲಹೊ ಶ್ರೀಗುರು ರಾಮ ೩

 

೧೧೪
ಸ್ವಾಮಿ ಕ್ಷೇಮೇಂದ್ರರ ಪ್ರೇಮ ಭಜಕ
ಶ್ಯಾಮಸುಂದರ ಪ
ಅಷ್ಟಭೋಗ ಪಟ್ಟಾರೋಹಣ
ನಿಷ್ಟಜನರ ಕಷ್ಟಹರಣ
ಸೃಷ್ಟಿ ಈರೇಳು ಇಟ್ಟು ಹೃದಯದಿ
ಮುಟ್ಟಿರಕ್ಷಿಪ ಅಷ್ಟಮೂರುತಿ ೧
ಕಮಲನಾಭ ಕಮಲವದನ
ಕಮಲಪಾಣಿ ವಿಮಲಚರಿತ
ಕಮಲಪೀಠನಯ್ಯ ಸುದಯ
ಕಮಲನೇತ್ರ ಕಮಲಪ್ರಿಯಾ೨
ಭಕ್ತಜನರ ಪ್ರಾಣಧವ
ನಿತ್ಯ ನಿರ್ಮಲ ಮುಕ್ತಿಪದವ
ಭಕ್ತಗಿತ್ತು ನೀಡು ಕ್ಷೇಮ
ನಿತ್ಯ ನಿರ್ಮಲಾತ್ಮ ಶ್ರೀರಾಮ ೩

 

೫೯೫
ಸ್ವಾಮಿಯ ನೆನೆಯೋ ಪಾಮರ ಮನಸೆ ನೀ
ತಾಮಸವನು ನೀಗಿ ಪ
ಕಾಮಾದಿಗಳ ಜೈಸಾಮಹಿಮ ಸತ್ಯ
ಭಾಮೇಶಗತಿಯೆಂದು
ನೇಮವಹಿಸಿ ಬಿಡದೆ ನಾಮ ಪೊಗಳುವರ
ಕಾಮಿತಗಳನಿತ್ತು ಪ್ರೇಮದಿಂ ಕಾಯ್ವಂಥ ೧
ಗೋಪ ಗೋಪತಿ ನಮಿತ ಗೋಪಿಯ ಪ್ರಿಯಬಾಲ
ಪಾಪನಿವಾರಣ
ಆ ಪರಬ್ರಹ್ಮನ ಶ್ರೀಪಾದ ಪೊಗಳಲು
ತಾಪತ್ರಯಂಗಳ ಲೋಪಮಾಡುವಂಥ ೨
ಪರಮ ಶ್ರೀಗುರು ಎಂದು ಪರಮಾತ್ಮ ಶ್ರೀರಾಮ
ಚರಣಸಾನ್ನಿಧ್ಯಕ್ಹೊಂದು
ನರಕಯಾತನೆ ಗೆಲಿಸಿ ಬರುತಿರ್ಪ ಕಷ್ಟಗಳ
ಪರಿಹರಿಸಿ ಕರಪಿಡಿದು ಕರುಣದಿ ಸಲಹುವ ೩

 

ಉದ್ಧರಿಸೆಂದು ಮರೆಬಿದ್ದಭಕ್ತನಂ
೧೬೪
ಹನುಮ ಮಧ್ವಾಧಿಪತೇ ನಮೋ ನಮೋ ಪ
ಹನುಮ ಮಧ್ವಾಧಿಪತೇ ಘನಶ್ರೇ
ಷ್ಠನುಪಮಮುನಿವರನೆನಿಸಿದ ಅ.ಪ
ಉದ್ಧರಿಸೆಂದು ಮರೆಬಿದ್ದ ಭಕ್ತನಂ
ಮುದ್ದಿಟ್ಟೆತ್ತೆ ನಿರ್ಧಾರದಭಯವಿತ್ತು
ಪದ್ಮನಾಭ ನಿಂದುದ್ಧರಿಸಿದಿ ಪರಿ
ಶುದ್ಧಮೂರುತಿ ಪ್ರಸಿದ್ಧನೆನಿಸಿದಂಥ ೧
ಶಕ್ತಿಯಿತ್ತ ಮಹ ಮೌಕ್ತಿಕ ಮಾಲೆಯ
ಸುತ್ತಿ ಶಿಲೆಯ ಮೇಲೆತ್ತಿ ಹೊಡೆದು ಘನ
ಭಕ್ತಿತೋರಿ ಹರಿಚಿತ್ತ ತೃಪ್ತಿಬಡಿಸ
ತ್ಯುತ್ತಮ ನಿಜಭೃತ್ಯನೆನಿಸಿದಂಥ ೨
ಸುದತಿ ಸೀತೆ ತನ್ನ ಸದಯನ ನೆನೆಯಲು
ಎದೆಸೀಳಿ ತೋರಿಸಿ ಸದಮಲನಂಘ್ರಿಯ
ಸದಮಲಾಂಗಿ ವ್ರತ ಮುದದಿ ತೀರಿಸಿ ನಿಜ
ಸದಮಲ ಭಕ್ತ ನೀನಹುದುಹುದೆನಿಸಿದ ೩
ಶ್ರೀಕರನಪ್ಪಣೆ ಪಡೆದು ಅಸಮಬಲ
ದೇಕ ಕಾಲದ್ಹಾರಿ ಹುಡುಕಿ ಕಾಶಿಯಿಂ
ಏಕಾಗ್ರಚಿತ್ತದಿ ತಂದು ಲಿಂಗ ಮೂ
ಲೋಕ ಮೋಹನನಿಂ ಲೋಕಪೂಜ್ಯೆನಿಸಿದ ೪
ಮೀರಿದ ಗರುಡನಪಾರ ಗರುವಮಂ
ಸೂರಗೈದು ದ್ವಾಪರ ಯುಗದಿಅ
ಪಾರ ಮಹಿಮ ಶ್ರೀ ಧೀರ ಶ್ರೀರಾಮನ
ಚಾರುಚರಣ ಕಂಡು ನಿರುತನೆನಿಸಿದಂಥ ೫

 

೧೬೫
ಹನುಮ ಸದ್ಭಕ್ತರ ಪ್ರೇಮ ನೆನೆವರ
ಮನದಿಷ್ಟ ಕನಿಕರದಿಂ ಕೊಡುವ ಪ
ಕುಂತಿಗರ್ಭಜ ಬಲವಂತನೆನಿಸಿದ್ಯೊ ಭೀಮ
ಪಂಥದಿಂ ಕರುಪನ ಸ್ವಂತು ಜೈಸಿದ್ಯೊ ವೀರ ೧
ಮಧ್ವಕುಲದಿ ಜನಿಸಿ ಮಧ್ವಮುನಿಯೆನಿಸಿದಿಯೊ ತಿದ್ದಿ
ಮಧ್ವಾಂತಗ್ರಂಥ ಸಿದ್ಧಾಂತಪಡಿಸಿದ್ಯೊ ೨
ಅಂಜನ್ಯುದರದಿ ಬಂದು ಭಂಜಿಸಿ ಲಂಕೆಯ
ಕಂಜಾಕ್ಷಿಯುಳ್ರ‍ವತ್ತಾಂತ ಕಂಜನಾಭನಿಗಿತ್ಯೊ ೩
ಮಂಗಳಾಂಗನೆ ರಣರಂಗಮಧ್ಯದಿ ನೀ
ಪಿಂಗದಸುರರ ಸದೆದು ಭಂಗಪಡಿಸಿದ್ಯೊ ಖಳರ ೪
ಸೀತಾದೇವಿಯ ತಂದು ನಾಥ ಶ್ರೀರಾಮನಿಗಿತ್ತ ವಿ
ಖ್ಯಾತ ಮಾರುತಿ ಎನ್ನ ಪ್ರೀತಿಲಿ ಸಲಹಯ್ಯ ೫