ಬಿ. ಕೃಷ್ಣ

೧೬..೧೯೦೭ ೧೯೨೦-೩೦ ರ ಸುಮಾರಿನಲ್ಲಿ ಸ್ತ್ರೀಪಾತ್ರಗಳನ್ನು ನಿರ್ವಹಿಸಿ ಅತ್ಯಂತ ಜನಪ್ರಿಯ ನಟರೆನಿಸಿಕೊಂಡಿದ್ದ ಕೃಷ್ಣರವರು ಹುಟ್ಟಿದ್ದು ಮೈಸೂರು. ಕಾಲೇಜು ಕಲಿಯುತ್ತಿದ್ದಾಗಲೇ ಲಲಿತಕಲಾ ಸಂಘದ ಕಾರ್ಯದರ್ಶಿಯಾಗಿ ಹಲವಾರು ನಾಟಕಗಳಲ್ಲಿ ಪ್ರಮುಖವಾಗಿ ಸ್ತ್ರೀ ಪಾತ್ರಗಳನ್ನು ವಹಿಸಿ ಬೆಂಗಳೂರು, ತುಮಕೂರು, ಚನ್ನಪಟ್ಟಣ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ನಾಟಕಗಳನ್ನಾಡಿ ಗಳಿಸಿದ ಜನ ಪ್ರಿಯತೆ. ಬಿಎಂಶ್ರೀಯವರ ಗದಾಯುದ್ಧ, ಮೂರ್ತಿರಾಯರ ಆಷಾಢಭೂತಿ, ವೆಂಕಟಾಚಾರ್ಯರ ಸಾವಿನ ಸಮಸ್ಯೆ ಮುಂತಾದ ನಾಟಕಗಳಲ್ಲಿ ವಹಿಸುತ್ತಿದ್ದ ಸ್ತ್ರೀ ಪಾತ್ರಗಳು. ಇವಲ್ಲದೆ ಪ್ರೊ ರಾಲೋ, ಮೆಕೆಂಟಿಷ್‌ರವರು ನಿರ್ದೇಶಿಸುತ್ತಿದ್ದ ಇಂಗ್ಲಿಷ್‌ ನಾಟಕಗಳಲ್ಲೂ ಪ್ರಧಾನ ಸ್ತ್ರೀಪಾತ್ರಧಾರಿ. ಜೂಲಿಯಸ್‌ ಸೀಸರ್ ಮತ್ತು ಮರ್ಚೆಂಟ್‌ ಆಫ್‌ ವೆನಿಸ್‌ ನಾಟಕದ ಪೋರ್ಷಿಯಾ, ಟ್ವೆಲ್ಫ್ರನೈಟ್‌ನಲ್ಲಿ ವಯೋಲ, ಮ್ಯಾಕ್‌ಬೆತ್‌ನಲ್ಲಿ ಲೇಡಿಮ್ಯಾಕ್‌ಜಿತ್‌, ಹ್ಯಾಮ್ಲೆಟ್‌ನಲ್ಲಿ, ಒಫೀಲಿಯಾ ಸ್ತ್ರೀಪಾತ್ರಗಳನ್ನು ವಹಿಸಿದರೆಂದರೆ ವಿದೇಶಿಯರೂ ಆಶ್ಚರ್ಯಪಡುವಂತಹ ನಟನೆ. ಗದಾಯುದ್ಧದ ದ್ರೌಪದಿ, ಆಷಾಢಭೂತಿಯ ಸರಸು, ಟೊಳ್ಳುಗಟ್ಟಿಯ ಪಾತು, ಹೋರೂಲ್‌ನ ವೆಂಕಮ್ಮ, ಪಾತುತವರುಮನೆಯ ಲಕ್ಷ್ಮೀದೇವಮ್ಮ, ನೆರೆಹೊರ್ಕೆಯ ಸೀತಮ್ಮ, ಹುತ್ತದಲ್ಲಿ ಹುತ್ತದ ಸರೋಜ, ಗಂಡುಗೊಡಲಿಯ ಭಾರ್ಗವಿ ಪಾತ್ರಗಳನ್ನು ನೋಡಿದ ಅಂದಿನ ಜನತೆಗೆ ಮರೆಯಲಾಗದ ಅನುಭವ. ಉದ್ಯೋಗಿಯಾಗಿ ೧೯೩೨ ರಲ್ಲಿ ವಿದ್ಯಾಇಲಾಖೆಗೆ ಸೇರಿ ಪ್ರಚಾರ ನಾಟಕಗಳಲ್ಲಿ ಭಾಗಿ, ೧೯೪೯-೫೨ ರ ಅವಧಿಯಲ್ಲಿ ರಾಷ್ಟ್ರೀಯ ನಾಟಕ ರಂಗ ಮೈಸೂರು ರಾಜ್ಯ ಶಾಖೆ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ. ಕುವೆಂಪು ರವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕುವೆಂಪುರವರ ೧೨ ನಾಟಕಗಳು ನಂತರ ಕೈಲಾಸಂ ನಾಟಕೋತ್ಸವಗಳ ರೂವಾರಿ. ಸ್ವತಃ ರಂಗಮಂಟಪ ಸಂಸ್ಥೆ ಸ್ಥಾಪಿಸಿ ಹಲವಾರು ನಾಟಕಗಳ ನಿರ್ದೇಶನ. ಮೂಕಿ ಚಿತ್ರದ ವಸಂತಸೇನೆ ನಂತರ ಕಂಕಣ, ಘಟಶ್ರಾದ್ಧ, ಕುದುರೆಮೊಟ್ಟೆ ಚಲನಚಿತ್ರಗಳ ಪ್ರಮುಖ ಪಾತ್ರಧಾರಿಯ, ಇಂದು ಶತಮಾನೋತ್ಸವದ ಹುಟ್ಟುಹಬ್ಬ.   ಇದೇ ದಿನ ಹುಟ್ಟಿದ ಕಲಾವಿದರು ಸುಗಣಾಚಂದಾವರಕರ್‌ – ೧೯೨೬ ಯಶವಂತ ಪಾಂಡುರಂಗ ಬೋಂದ್ರೆ – ೧೯೫೨ ಕಿಕ್ಕೇರಿ ವೀರನಾರಾಯಣ – ೧೯೫೪

* * *

ರಂ.ಶ್ರೀ. ಮುಗಳಿ

೧೫-೭-೧೯೦೬ ೨೦-೨-೧೯೯೩ ರಸಿಕರಂಗ ಎಂಬ ಕಾವ್ಯನಾಮದಿಂದ ಪರಿಚಿತರಾಗಿರುವ ರಂಗನಾಥ ಶ್ರೀನಿವಾಸ ಮುಗಳಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ. ತಂದೆ ಶ್ರೀನಿವಾಸರಾಯರು, ತಾಯಿ ಕಮಲಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಬಾಗಲಕೋಟೆ, ಬಿಜಾಪುರಗಳಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಸಂಸ್ಕೃತ ಆನರ್ಸ್), ಎಂ.ಎ. (ಕನ್ನಡ) ಪದವಿ. ಬಿ.ಟಿ. ಪರೀಕ್ಷೆಯಲ್ಲೂ ತೇರ್ಗಡೆ. ಉದ್ಯೋಗ ಪ್ರಾರಂಭಿಸಿದ್ದು ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ. ನಂತರ ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿ ಪ್ರಿನ್ಸಿಪಾಲರಾಗಿ ನಿವೃತ್ತಿ. ಕೆಲಕಾಲ ಕರ್ನಾಟಕ ಸರಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಜವಾಬ್ದಾರಿ. ೧೯೬೭-೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ. ರಚಿಸಿದ ಕೃತಿಗಳು ಹಲವಾರು. ಕಾದಂಬರಿ-ಅನ್ನ, ಬಾಳುರಿ, ಕಾರಣ ಪುರುಷ. ಕವನ ಸಂಕಲನ-ಬಾಸಿಗ, ಅಪಾರ ಕರುಣೆ, ಓಂ ಅಶಾಂತಿಃ, ನಾಟಕ-ಎತ್ತಿದ ಕೈ (ಹತ್ತು ಏಕಾಂಕಗಳ ಸಂಗ್ರಹ), ನಾಮಧಾರಿ, ಮನೋರಾಜ್ಯ, ಧನಂಜಯ (ದೊಡ್ಡ ನಾಟಕಗಳು). ವಿಮರ್ಶೆ-ರನ್ನನ ಕೃತಿರತ್ನ, ತವನಿ ಮತ್ತು ‘ಕನ್ನಡ ಸಾಹಿತ್ಯದ ಮೈಲಿಗಲ್ಲು’ ‘ಕನ್ನಡ ಸಾಹಿತ್ಯ ಚರಿತ್ರೆ.’ ಲಭಿಸಿದ ಸನ್ಮಾನಗಳು ಹಲವಾರು. ೧೯೪೧ರಲ್ಲಿ ಹೈದರಾಬಾದಿನಲ್ಲಿ. ಕನ್ನಡ ಸಾಹಿತ್ಯ ಸಮ್ಮೇಳನದ ನಾಟಕಗೋಷ್ಠಿ ಅಧ್ಯಕ್ಷತೆ, ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವಿಮರ್ಶಾಗೋಷ್ಠಿ ಅಧ್ಯಕ್ಷತೆ, ೧೯೬೩ರಲ್ಲಿ ತುಮಕೂರಿ(ಸಿದ್ಧಗಂಗಾ)ನಲ್ಲಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಪುಣೆ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ರಸಿಕರಂಗ’ ಮತ್ತು ‘ರಸಿಕ ರಂಗದರ್ಶನ.’   ಇದೇ ದಿನ ಹುಟ್ಟಿದ ಸಾಹಿತಿಗಳು : ರಾ.ಯ. ಧಾರವಾಡಕರ್ – ೧೯೧೯-೧೨.೪.೯೧ ಎಂ.ಎಸ್.ಕೆ. ಪ್ರಭು – ೧೯೩೮-೨೫.೧.೨೦೦೦ ಚಂದ್ರಶೇಖರ್. ಪ.ವಿ. – ೧೯೩೩ ಎಂ. ನಾಗರಾಜರಾವ್ – ೧೯೨೩ ಮನೋರಮಾ. ಎಂ. ಭಟ್ – ೧೯೩೨

ಆರ್.ಎನ್‌. ತ್ಯಾಗರಾಜನ್‌

೧೫.೭.೧೯೪೩ ಹಾಡುಗಾರಿಕೆಯಲ್ಲಿ ರುದ್ರಪಟ್ಟಣ ಸಹೋದರರೆಂದೇ ಪ್ರಖ್ಯಾತರಾಗಿರುವ ವಲ್ಲಿ ತ್ಯಾಗರಾಜನ್‌ರವರು ಹುಟ್ಟಿದ್ದು ಹಾಸನ. ತಂದೆ ಸಂಗೀತ ವಿದ್ವಾಂಸರಾದ ಆರ್.ಕೆ. ನಾರಾಯಣಸ್ವಾಮಿ, ತಾಯಿ ಸಾವಿತ್ರಮ್ಮ. ತಂದೆಯಿಂದಲೇ ಸಂಗೀತದ ಮೊದಲಪಾಠ. ಚಿಕ್ಕಪ್ಪಂದಿರಾದ ಆರ್.ಕೆ. ವೆಂಕಟರಮಣ ಶಾಸ್ತ್ರಿ, ಆರ್.ಕೆ. ಶ್ರೀಕಂಠನ್‌ ರವರಿಂದ ಮುಂದುವರೆದ ಶಿಕ್ಷಣ. ಸಂಗೀತ ವಿದ್ವಾಂಸರಾದ ರಾಮನಾಡ ಕೃಷ್ಣನ್‌, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆಲತ್ತೂರು ಸಹೋದರರು, ಜಿ.ಎನ್‌.ಬಿ. ಯವರ ಮಾರ್ಗದರ್ಶನ. ದೇಶಾದ್ಯಂತ ನೀಡಿದ ಸಂಗೀತ ಕಚೇರಿಗಳು. ಚೆನ್ನೈನ ಮ್ಯೂಸಿಕ್‌ ಅಕಾಡಮಿ, ಕೃಷ್ಣಗಾನಸಭಾ , ನಾರದಗಾನಸಭಾ, ತಿರುವನಂತಪುರದ ಸ್ವಾತಿ ತಿರುನಾಳ್‌ ಸಂಗೀತ ಸಭಾ, ನವರಾತ್ರಿ ಮಂಟಪ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಸಭಾ, ಮಲ್ಲೇಶ್ವರಂ ಸಂಗೀತ ಸಭಾ, ಮೈಸೂರಿನ ಅರಮನೆಯ ದರ್ಬಾರ್ ಹಾಲ್‌, ಆಕಾಶವಾಣಿ ಸಂಗೀತ ಸಮ್ಮೇಳನ, ದೂರದರ್ಶನದ ಕಾರ್ಯಕ್ರಮಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮಗಳು. ಹಲವಾರು ಬಾರಿ ವಿದೇಶಯಾತ್ರೆ. ಸಿಂಗಾಪುರ್, ಕೌಲಾಲಂಪುರ್, ಯು,ಎಸ್‌.ಎ. ಪಿಟ್ಸ್ ಬರ್ಗನ ವೆಂಕಟೇಶ್ವರ ದೇವಾಲಯ, ಅಮೆರಿಕಾದ ಮೆರಿಲ್ಯಾಂಡ್‌ನಲ್ಲಿ ಗಾಯನ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಲ್ಲಿ ಭಾಗಿ, ವಾಸುದೇವಾಚಾರ್ಯರ ಕೃತಿಗಳು, ಪುರಂದರದಾಸರ ಕೃತಿಗಳು, ಜಯಚಾಮರಾಜ ಒಡೆಯರ ಕೃತಿಗಳು, ಉತ್ತಕ್ಕಾಡ್‌ ವೆಂಕಟಸುಬ್ಬ ಅಯ್ಯರ್ ಮುಂತಾದವರ ಕೃತಿಗಳ ಸಿ.ಡಿ, ಕ್ಯಾಸೆಟ್‌ ಬಿಡುಗಡೆ. ಹಲವಾರು ನಿಯತ ಕಾಲಿಕೆಗಳಿಗೆ ಸಂಗೀತದ ಬಗ್ಗೆ ಬರೆದ ಲೇಖನಗಳು. ಆಕಾಶವಾಣಿ, ಚೆನ್ನೈನ ಕೃಷ್ಣಗಾನಸಭಾ, ಮ್ಯೂಸಿಕ್‌ ಅಕಾಡಮಿ ಬಹುಮಾನ; ಮುಸುರಿ ಸುಬ್ರಹ್ಮಣ್ಯ ಪ್ರಶಸ್ತಿ, ಪೊನ್ನಯ್ಯಪಿಳ್ಳೆ, ಸಬೇಶ್‌ ಅಯ್ಯರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಗಾನ ಸುಧಾಕರ, ಗಾನ ಕಲಾ ತಿಲಕ, ಸಂಗೀತ ಕಲಾ ತಪಸ್ವಿ ಮುಂತಾದ ಮುಖ್ಯವಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಾಗಲೂರು ಕೃಷ್ಣಮೂರ್ತಿ- ೧೯೧೨ ಚೆಲುವರಾಜ್‌.ಎನ್‌.ಎಲ್‌ – ೧೯೨೮ ಮೂರ್ತಿ ದೇತಾಜೆ – ೧೯೫೨ ಗಿರೀಶ್‌. ಎಚ್‌ – ೧೯೭೨

* * *

ಡಾ. ರಾ.ಯ. ಧಾರವಾಡಕರ್

೧೫..೧೯೧೯ ೧೨..೧೯೯೧ ಭಾಷಾಶಾಸ್ತ್ರ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜಕಾರಣ, ಕನ್ನಡಭಾಷೆ,ಸಾಹಿತ್ಯ ಹೀಗೆ ಅದೆಷ್ಟೋ ವಿಷಯಗಳನ್ನೂ ಅಧ್ಯಯನ ಮಾಡಿದ್ದಲ್ಲದೆ ವಿದ್ವತ್‌ ಸಂಪಾದಿಸಿದ್ದ ಧಾರವಾಡಕರರು ಹುಟ್ಟಿದ್ದು ೧೯೧೯ರ ಜುಲೈ ೧೫ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ. ತಂದೆ ಯಲಗುರ್ದರಾವ್‌ – ವಕೀಲಿ ವೃತ್ತಿಯಲ್ಲಿದ್ದವರು, ತಾಯಿ ಗಂಗಾಬಾಯಿ. ವಾಚಾಳಿತನ, ಅಧ್ಯಯನ ಪ್ರವೃತ್ತಿಗಳು ತಂದೆಯಿಂದ ಬಂದ ಬಳುವಳಿಯಾಗಿದ್ದರೆ ನಿರ್ಮಲ ಅಂತಃಕರಣ, ತಾಯಿಯ ಕಡೆಯಿಂದ ಬಂದುದಾಗಿತ್ತು.

ಎಂ.ಎಸ್.ಕೆ. ಪ್ರಭು

೧೫..೧೯೩೮ ೨೫..೨೦೦೦ ಗ್ರೀಕ್‌ ನಾಟಕಗಳಿಂದ ಭಾರತದ ಜಾನಪದ ಸಾಹಿತ್ಯದವರೆಗೆ, ವಿಜ್ಞಾನ ಲೇಖನಗಳಿಂದ ಉಪನಿಷತ್ತಿನವರೆಗೆ, ಅಸಂಗತ ನಾಟಕಗಳಿಂದ ನವೋದಯ ಕಾವ್ಯದವರೆಗೆ ಬಹುವಿಸ್ತಾರವಾದ ವ್ಯಾಸಂಗದಿಂದ ಬಹುಶ್ರುತರೆನಿಸಿದ್ದ ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು (ಎಂ.ಎಸ್‌.ಕೆ.ಪ್ರಭು)ರವರು ಹುಟ್ಟಿದ್ದು ೧೯೩೮ರ ಜುಲೈ ೧೫ರಂದು ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಎಂಬ ಗ್ರಾಮದಲ್ಲಿ. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ.

ಕೊಳಂಬೆ ಪುಟ್ಟಪ್ಪ ಗೌಡರು

೧೫.೦೭.೧೯೦೩ ೨೬.೦೧.೧೯೮೧ ಕವಿ, ಯಕ್ಷಗಾನ ಕಲೆಯು ಅರ್ಥಧಾರಿಯಾದ ಕೊಳಂಬೆ ಪುಟ್ಟಣ್ಣ ಗೌಡರು ಹುಟ್ಟಿದ್ದು ಸುಳ್ಯತಾಲ್ಲೂಕಿನ ಚೊಕ್ಕಾಡಿಯಲ್ಲಿ ೧೯೦೩ರ ಜುಲೈ ೧೫ರಂದು. ತಂದೆ ಸುಬ್ರಾಯಗೌಡ, ತಾಯಿ ಸುಬ್ಬಮ್ಮ. ಸುಳ್ಯದ ಬಳಿಯ ಅಮರ ಪಡ್ನೂರು ಗ್ರಾಮದ ಅಜ್ಜನಗದ್ದೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಶಿಕ್ಷಕರಾಗಿ ದೊರೆತಿದ್ದವರು ಮೇರ್ಕಜೆ ಪುಟ್ಟಣ್ಣನವರು. ನಾಲ್ಕನೆಯ ತರಗತಿಯ ‘ದರ್ಬಾರ’ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ ಬಹುಮಾನವನ್ನು ಗಳಿಸಿದ್ದರು.

ಈಶ್ವರಚಂದ್ರ

೧೪-೭-೧೯೪೬ ಕಥೆಗಾರ ಈಶ್ವರಚಂದ್ರರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ. ತಂದೆ ಎಚ್.ಎನ್. ರಾಮರಾವ್, ತಾಯಿ ಪದ್ಮಾವತಮ್ಮ. ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಮುಗಿಸಿ ಉದ್ಯೋಗಕ್ಕೆ ಸೇರಿದ್ದು ಬೆಂಗಳೂರು ವಿಮಾನ ಕಾರ್ಖಾನೆ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರದಲ್ಲಿ. ೪೦ ವರ್ಷಗಳ ದೀರ್ಘಸೇವೆಯ ನಂತರ ನಿವೃತ್ತಿ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು. ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ. ಉದ್ಯೋಗದ ನಡುವೆಯೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪರೀಕ್ಷೆಯಲ್ಲಿ ಐದು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದು ಉತ್ತೀರ್ಣರಾದ ಹೆಗ್ಗಳಿಕೆ. ಹಲವಾರು ಸಣ್ಣಕಥೆ, ಪ್ರಬಂಧ, ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಇವರು ಬರೆದ ಮುನಿತಾಯಿ ಕಥೆಯಾಧರಿಸಿ ಪುಟ್ಟಣ್ಣ ಕಣಗಾಲ್‌ರವರು ತಯಾರಿಸಿದ ಸಿನಿಮಾ ‘ಕಥಾಸಂಗಮ.’ ಹಬ್ಬಿದಾಮಲೆ ಮಧ್ಯದೊಳಗೆ ಎಂಬ ಕಥೆ ‘ಕಾಡಿಗೆ ಹೋದವರು’ ಎಂಬ ಹೆಸರಿನಿಂದ ಚಲನಚಿತ್ರ. ಕಥಾಸಂಕಲನಗಳು-ರಾತ್ರಿರಾಣಿ, ತೀರ, ಗುಂಪಿನಲ್ಲಿ ಕಂಡ ಮುಖ, ಮುನಿತಾಯಿ, ಕತ್ತಲಗರ್ಭ. ಕಾದಂಬರಿ-ಒಂದೇ ಸೂರಿನ ಕೆಳಗೆ, ಸಿಮೆಂಟ್ ಮನುಷ್ಯರು. ಮಕ್ಕಳ ಸಾಹಿತ್ಯ-ಮಕ್ಕಳ ನರೇಂದ್ರ ವಿವೇಕಾನಂದ, ಭಗತ್‌ಸಿಂಗ್, ಮಾರ್ಕೊನಿ, ಜಾರ್ಜ್ ಸೈಮನ್ ಓಂ, ಅ.ನ.ಕೃಷ್ಣರಾವ್, ಸುಬೋಧ ರಾಮರಾವ್, ಕಲ್ಯಾಣಸ್ವಾಮಿ, ಬೆಂಗಳೂರು ಜಿಲ್ಲೆಯ ದರ್ಶನ, ಗೆಳೆತನ ಮುಂತಾದ ೧೫ ಕೃತಿಗಳು. ಬೆಂಗಳೂರು ನಗರ ದರ್ಶನ, ಕೆಂಪೇಗೌಡ ನಗರ ದರ್ಶನ, ಚೈತ್ರಪಲ್ಲವ, ಸುವರ್ಣಶಕ್ತಿ, ಎಚ್.ಎ.ಇ.ಎ. ಹೆಜ್ಜೆ ಗುರುತುಗಳು. ಅನುವಾದ-ಎಕ್ಕೋರಿಯ ಕನಸು, ನಮ್ಮ ಭೂ ಸೇನೆ, ಬ್ರಹ್ಮಾಂಡದ ಬಳುವಳಿ, ಕಿವುಡು ವನದೇವತೆ, ಅಕ್ಬರನಿಂದ ಔರಂಗಜೇಬ್‌ವರೆಗೆ, ಭೂಕಂಪ, ನಾಳೆ ಸಂಭವಿಸಿದ್ದು ಮೊದಲಾದ ೧೬ ಕೃತಿಗಳು. ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞೆ ಸಂಘಕ್ಕಾಗಿ ೧೩೦೦ ಪುಟಗಳ ಶ್ರೀಮದ್ ಭಾಗವತ, ೧೪೦೦ ಪುಟಗಳ ಶ್ರೀ ಚೈತನ್ಯ ಚರಿತಾಮೃತವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ. ಭಗತ್‌ಸಿಂಗ್ ಕೃತಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ; ಒಕೇ ಗೂಟಲೋ (ಒಂದೇ ಸೂರಿನ ಕೆಳಗೆ) ತೆಲುಗಿಗೆ ; ಸಿಮೆಂಟ್ ಮನಿತರ್ಗಳ್ ತಮಿಳಿಗೆ ; ‘ಮುನಿತಾಯಿ ವ ಇತರ ಕಥಾ’ ಮರಾಠಿ ಭಾಷೆಗೆ ; ಬಿಡಿ ಕಥೆಗಳು ತೆಲುಗು, ತಮಿಳು, ಮರಾಠಿ, ಉರ್ದು, ಮಲೆಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. ಸಂದ ಗೌರವ ಪ್ರಶಸ್ತಿಗಳು-‘ತೀರ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಕ್ಕಳ ನರೇಂದ್ರ ವಿವೇಕಾನಂದ ಕೃತಿಗೆ ಸಾಹಿತ್ಯ ಸ್ಪರ್ಧೆ ವಿಶೇಷ ಪ್ರಶಸ್ತಿ, ಮುನಿತಾಯಿ ಕಥಾಸಂಕಲನಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ, ಚಿತ್ರಪ್ರೇಮಿಗಳ ಸಂಘದ ಪ್ರಶಸ್ತಿ. ಹಲವಾರು ಸಂಘ ಸಂಸ್ಥೆಗಳಿಂದ ರಾಜ್ಯೋತ್ಸವ ಸನ್ಮಾನ. ಚೆನ್ನಗಿರಿ ತಾಲ್ಲೂಕು ಸಮ್ಮೇಳನ, ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೊತ್ತಲ ಮಹಾದೇವಪ್ಪ – ೧೯೪೪ ಕೆ.ಎಸ್. ಭಗವಾನ್ – ೧೯೪೫ ಕೆ.ವಿ. ಶಂಕರಗೌಡರು – ೧೯೧೫ ಚಿದಂಬರ ಕೃಷ್ಣರಾವ್ ದೀಕ್ಷಿತ – ೧೯೨೨

ಮಂಡ್ಯ ರಮೇಶ್‌

೧೪.೭.೧೯೬೪ ನಟ, ನಿರ್ದೇಶಕ, ಸಂಘಟಕರಾಗಿ ರಂಗಭೂಮಿಯ ಅತಿಪ್ರಮುಖ ವ್ಯಕ್ತಿ ಎನಿಸಿರುವ ಮಂಡ್ಯರಮೇಶ್ ರವರು ಹುಟ್ಟಿದ್ದು ನಾಗಮಂಗಲ. ತಂದೆ ಎನ್‌. ಸುಬ್ರಹ್ಮಣ್ಯ, ತಾಯಿ ನಾಗಲಕ್ಷ್ಮೀ. ಓದಿದ್ದು ಬಿ.ಎಸ್ಸಿ ಪದವಿ. ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ. ನಿನಾಸಂ ನಾಟಕಶಾಲೆಯಲ್ಲಿ ಪದವಿ, ರಂಗಾಯಣದ ಕಲಾವಿದರಾಗಿ ಪಡೆದ ಅನುಭವ. ಮಂಕ, ಮಂಡ್ಯದ ಗೆಳೆಯರ ಬಳಗ, ಮಾಂಡವ್ಯ ಕಲಾ ಸಂಘ, ವೇದಿಕೆ ಮುಂತಾದ ಹಲವಾರು ಸಂಘ ಸಂಸ್ಥೆಗಳೊಡನಾಟ, ಮೈಸೂರಿನ ನಟನ ನಾಟಕಶಾಲೆ, ಸಂಸ್ಥಾಪಕ, ಮುಖ್ಯಸ್ಥರಾಗಿ ಹೊತ್ತ ಜವಾಬ್ದಾರಿ. ದೇಸಿ ಶೈಲಿಯ ‘ನಟನರಂಗ ಮಂಟಪದ’ ರೂವಾರಿ. ನಿನಾಸಂ ತಿರುಗಾಟಯೋಜನೆ, ಕೊಡಗಿನ ಪ್ರಾದೇಶಿಕ ರೆಪರ್ಟರಿಯ ಸ್ಥಾಪಕ, ನಿರ್ದೇಶಕರಾಗಿ, ರಾಜ್ಯ, ಹೊರರಾಜ್ಯಗಳಾದ ಭೂಪಾಲ್‌, ದೆಹಲಿಯ ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ನಟರಾಗಿ, ತಂತ್ರಜ್ಞರಾಗಿ, ಮಂಡ್ಯದ ರಂಗಚಳುವಳಿಯ ನಟ, ನಿರ್ದೇಶಕ, ಸಂಘಟಿಕರಾಗಿ ಕಾರ್ಯನಿರ್ವಹಣೆ. ರಂಗಾಯಣ ತಂಡದೊಂದಿಗೆ ನ್ಯೂಯಾರ್ಕ್‌, ಜರ್ಮನಿ, ಆಸ್ಟ್ರಿಂಗಳಲ್ಲಿ ನಾಟಕ ಪ್ರದರ್ಶನ. ನಾಗಮಂಗಲ ಕನ್ನಡ ಸಂಘ ಮುಂತಾದುವುಗಳಿಗಾಗಿ ಮಣ್ಣಿನ ಗಾಡಿ, ಡಾ. ಸಿದ್ರಾಜು ಸಾಹೇಬರು ಬರುತ್ತಿದ್ದಾರೆ, ಅಗ್ನಿ ಮತ್ತು ಮಳೆ, ಮಾರನಾಯಕ, ಈ ಕೆಳಗಿನವರು ನಾಟಕಗಳ ಪ್ರದರ್ಶನ. ಜನುಮದ ಜೋಡಿ ಮೂಲಕ ಚಿತ್ರರಂಗ ಪ್ರವೇಶ. ೭೫ ಕ್ಕೂ ಹೆಚ್ಚು ಚಲನಚಿತ್ರಗಳು; ಜನನಿ, ಮನೆತನ, ಫೋಟೋಗ್ರಾಫರ್ ಪರಮೇಶಿ ಮುಂತಾದ ಧಾರಾವಾಹಿಗಳ ನಟ. ಉಡುಪಿಯ ರಂಗಭೂಮಿ ನಾಟಕಸ್ಪರ್ಧೆ (೩ ಬಾರಿ) ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಚಲನಚಿತ್ರ ಪ್ರೇಮಿಗಳ ಸಂಘದ ಉದಯೋನ್ಮುಖ ನಟ ಪ್ರಶಸ್ತಿ, ಉದಯ ಟಿ.ವಿ. ನಾಕೌಟ್‌ ಶ್ರೇಷ್ಠ ಪೋಷಕನಟ ಪ್ರಶಸ್ತಿ, ಈ ಟಿವಿ ಡಾಬರ್ ವಾಟಿಕ ಪ್ರಶಸ್ತಿ ಮುಂತಾದ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಾಬುರಾವ್‌ ಬಿ. ದೇಸಾಯಿ – ೧೯೧೬ ಮಂಜುಳ ಬಿ. ಜಾನೆ – ೧೯೬೦ ಅಕ್ಮಲ್‌ ಪಾಷಾ.- ೧೯೬೧ ವಿಶ್ವನಾಥ್‌ ನಾಕೋಡ್‌ – ೧೯೬೧

* * *

ಚಿದಂಬರ ಕೃಷ್ಣದೀಕ್ಷಿತ್

೧೪..೧೯೨೨ ೦೩.೧೦.೧೯೯೩ ಸೃಜನಶೀಲ ಸಾಹಿತ್ಯದಿಂದ, ಕನ್ನಡ ಪಾಂಡಿತ್ಯದಿಂದ ಹೆಸರುಗಳಿಸಿದ್ದ ಚಿದಂಬರ ಕೃಷ್ಣ ದೀಕ್ಷಿತರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ದೇವಿ ಹೊಸೂರಿನಲ್ಲಿ (ಈಗ ಹಾವೇರಿ ಜಿಲ್ಲೆಗೆ ಸೇರಿದೆ) ೧೯೨೨ರ ಜುಲೈ ೧೪ರಂದು. ತಂದೆ ಕೃಷ್ಣರಾಯರು, ತಾಯಿ ರುಕ್ಮಿಣಿಬಾಯಿ.

ಮಂಜುಳಾ ಬಿ. ಜಾನೆ

೧೪.೭.೧೯೬೦ ಪ್ರಸಿದ್ಧ ಚಿತ್ರಕಲಾವಿದೆ, ಕಲಾ ಶಿಕ್ಷಕಿಯಾಗಿರುವ ಮಂಜುಳಾರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ, ತಂದೆ ರಂಗಣ್ಣ, ತಾಯಿ ರಂಗಮ್ಮ. ಗೋದೂಬಾಯಿ ಕಾಲೇಜಿನಿಂದ ಬಿ.ಎ. ಪದವಿ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಗುಲಬರ್ಗಾದ ‘ದಿ ಐಡಿಯಲ್‌ ಫೈನ್‌ ಆರ್ಟ್ಸ್‌’ ಇನ್‌ಸ್ಟಿಟ್ಯೂಟಿನಿಂದ ಡಿಪ್ಲೋಮ. ಎ.ಎಮ್‌ ಮತ್ತು ಬಿ.ಎಫ್‌..ಎ. ಪದವಿಗಳು. ಕರ್ನಾಟಕ ಲಲಿತ ಕಲಾ ಅಕಾಡಮಿಯಿಂದ ದೊರೆತ ವಿದ್ಯಾರ್ಥಿವೇತನ. ಗುಲಬರ್ಗಾದ ಶರಣಬಸವೇಶ್ವರ ರೆಸಿಡೆನ್ಸಿ ಶಾಲೆಯಲ್ಲಿ ಕೆಲಕಾಲ, ಇದೀಗ ಸಂತ ಜೋಸೆಫರ ಕಾನ್ವೆಂಟ್‌ (ಬಾಲಕಿ) ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿ. ಬೆಂಗಳೂರು, ತುಮಕೂರು, ಮುಂಬಯಿ, ಪೂನಾ ಹಾಗೂ ಗುಲಬರ್ಗಾದಲ್ಲಿ ಭಾಗವಹಿಸಿದ ಪ್ರಮುಖ ಸಾಂಘಿಕ ಪ್ರದರ್ಶನಗಳು. ಗುಲಬರ್ಗಾದ ಎಚ್‌.ಕೆ. ಇ. ಸೊಸೈಟಿ ಕಲಾ ಮಹೋತ್ಸವ ಮೈಸೂರು ದಸರಾ ಉತ್ಸವ, ಗುಲಬರ್ಗಾದಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಮುಖ ಪ್ರದರ್ಶನಗಳು ಹಂಪಿಯಲ್ಲಿ ನಡೆದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿ ಶಿಬಿರ, ಬೀದರ್, ಕರ್ನಾಟಕ ಸಂಸ್ಕೃತಿ ಇಲಾಖೆ, ರಾಜಶ್ರೀ ಸಿಮೆಂಟ್‌ – ಮಳಖೇಡ ಮುಂತಾದೆಡೆಗಳಲ್ಲಿ ನಿಯೋಜಿಸಿದ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ. ಮಹಿಳಾ ಕಲಾ ಶಿಬಿರ-ಬೀದರ, ಭಾಲ್ಕಿ, ಹಂಪಿಯ ಕಲಾ ಶಿಬಿರ, ಗುಲಬರ್ಗಾದಲ್ಲಿ ನಡೆದ ಕಾವ್ಯ-ಕುಂಚ ಅಪೂರ್ವ ಕಾರ್ಯಕ್ರಮದಲ್ಲಿ ಪ್ರಮುಖ ಕೃತಿಗಳ ರಚನೆ, ಪಡೆದ ಜನ ಮೆಚ್ಚುಗೆ. ಗುಲಬರ್ಗಾ ವಿಭಾಗದ ಉತ್ತಮ ಚಿತ್ರಕಲಾ ಶಿಕ್ಷಕರ ಪ್ರಶಸ್ತಿ, ಮೈಸೂರು ದಸರಾ ಮಹೋತ್ಸವ ಪ್ರಶಸ್ತಿ, ಐಡಿಯಲ್‌ ಫೈನ್‌ ಆರ್ಟ್ಸ್ ಸಂಸ್ಥೆಯಿಂದ ಉತ್ತಮ ಕೃತಿ ಪ್ರಶಸ್ತಿ ಪ್ರಮುಖವಾದವುಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಾಬೂರಾವ್‌  ಬಿ. ದೇಸಾಯಿ – ೧೯೧೬ ಅಕ್ಮಲ್‌ ಪಾಷಾ – ೧೯೬೧ ವಿಶ್ವನಾಥ್‌ ನಾಕೋಡ್‌ – ೧೯೬೧

ಸತೀಶ ಕುಲಕರ್ಣಿ

೧೩.೭.೧೯೫೧ ನಟ- ನಾಟಕಕಾರ, ಕವಿ – ಕಲಾವಿದ ಸತೀಶ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡ. ತಂದೆ ನೀಲಕಂಠರಾವ್‌ ಕುಲಕರ್ಣಿ, ತಾಯಿ ಲೀಲಾಬಾಯಿ. ಚಿಕ್ಕಂದಿನಿಂದಲೂ ನಾಟಕದ ಬಗ್ಗೆ ಬೆಳೆದ ಅಭಿರುಚಿ. ಹಲವಾರು ನಾಟಕಗಳ ಅಭಿನಯ ಮತ್ತು ನಿರ್ದೇಶನ. ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದವುಗಳಲ್ಲಿ ಅಭಿನಯ ಮತ್ತು ನಿರ್ದೇಶನ. ದೂರದರ್ಶನ ಧಾರಾವಾಹಿಗಳಲ್ಲೂ ನಟನೆ, ಭಾಗ್ಯಶ್ರೀ, ಸ್ವಾತಂತ್ಯ್ರ ಸಂಗ್ರಾಮದ ಪುಟಗಳು, ಮೂಡಲಮನೆ ಪ್ರಮುಖವಾದುವುಗಳು. ಆಕಾಶವಾಣಿಯ ಹಲವಾರು ನಾಟಕ, ಕವಿಗೋಷ್ಠಿಗಳಲ್ಲಿ ಭಾಗಿ. ಬೆಂಕಿಬೇರು, ನೆಲದ ನೆರಳು, ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್‌ ಮುಂತಾದ ಕವನ ಸಂಕಲನಗಳು ಪ್ರಕಟಿತ. ಕರ್ನಾಟಕ ಸಾಹಿತ್ಯ ಅಕಾಡಮಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಹಾವನೂರು ಪ್ರತಿಷ್ಠಾನ, ಕಡಕೋಳ ಪ್ರತಿಷ್ಠಾನ, ವಾಯುವ್ಯ ಕರ್ನಾಟಕ ಸಾರಿಗೆ ಕನ್ನಡ ಕ್ರಿಯಾ ಸಮಿತಿ, ಹಾವೇರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ಸಮಿತಿ, ಕರ್ನಾಟಕ ನಾಟಕ ಅಕಾಡಮಿ ಜಿಲ್ಲಾ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ವಹಿಸುತ್ತಿರುವ ಪ್ರಮುಖ ಪಾತ್ರ. ಯುವರಂಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಂಗಾರಕೊಡ ನಾಟಕಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ, ಜೋಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ, ಕತೆಯಾದ ಕಾಳ ನಾಟಕಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆಯಲ್ಲಿ ಸಾಹೇಬರ ನಾಯಿ ನಾಟಕಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಮುಂತಾದ ರಂಗಭೂಮಿ ಚಟುವಟಿಕೆಗಳಿಗೆ ಸಂದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಎನ್‌. ರಾಮದಾಸ ಕಾಮತ್‌ – ೧೯೨೨ ಸೋಮಶೇಖರಯ್ಯ ಎಂ.ಎಂ. – ೧೯೬೦ ಸುಪ್ರಿಯಾ ವರ್ಮಾ – ೧೯೭೮

* * *

ರಂ.ಶಾ. ಲೋಕಾಪುರ

೧೩-೭-೧೯೩೨ ಕನ್ನಡ ಸಾಹಿತ್ಯ ಲೋಕದಲ್ಲಿ ರಂ.ಶಾ.ರೆಂದೇ ಪ್ರಸಿದ್ಧರಾಗಿರುವ ರಂಗನಾಥ ಶಾಮಾಚಾರ‍್ಯ ಲೋಕಾಪುರರವರು ಹುಟ್ಟಿದ್ದು ಜಮಖಂಡಿ ತಾಲ್ಲೂಕಿನ ಹುನ್ನೂರಿನಲ್ಲಿ. ತಂದೆ ಶಾಮಾಚಾರ‍್ಯರು, ತಾಯಿ ಇಂದಿರಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಳಗಾವಿಯಲ್ಲಿ. ತಂದೆ ಹಳಗನ್ನಡ, ಛಂದಸ್ಸುಗಳಲ್ಲಿ ಅಪಾರ ಪರಿಶ್ರಮ ಪಡೆದಿದ್ದುರ ಫಲವಾಗಿ ಬಾಲ್ಯದಿಂದಲೇ ರಂ.ಶಾ. ಮೇಲೂ ಪ್ರಭಾವ ಬೀರಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿತು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ರಂ.ಶಾ.ರವರಿಗೆ ಕನ್ನಡ, ಸಂಸ್ಕೃತದಲ್ಲಿ ಬೆಳೆದ ಆಸಕ್ತಿ. ಪ್ರ.ಗೋ.ಕುಲಕರ್ಣಿಯವರಿಂದ ಹಳೆಗನ್ನಡ ಪಾಠ. ಹಿಂದಿ ಭಾಷೆ ಕಲಿತು ಹಿಂದಿ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಲ್ಲದೆ ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದ. ಬೆಳಗಾವಿಯಲ್ಲಿ ಇಂಟರ್ ಮೀಡಿಯೆಟ್ ಕಾಲೇಜು, ಕೊಲ್ಹಾಪುರದ ರಾಜಾರಾಂ ಕಾಲೇಜಿನಿಂದ ಬಿ.ಎಸ್ಸಿ ಪದವಿ. ಪ್ರಾಚಾರ‍್ಯರಾಗಿದ್ದ ವಿ.ಕೃ. ಗೋಕಾಕರ ಸಂಪರ್ಕ. ಇಂಗ್ಲಿಷ್ ಸಾಹಿತ್ಯದ ಪರಿಚಯ. ಉದ್ಯೋಗಕ್ಕಾಗಿ ಸೇರಿದ್ದು ಮುಂಬೈನ ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ ನೌಕರನಾಗಿ. ಬದುಕಿನುದ್ದಕ್ಕೂ ಕಚೇರಿ, ಹುದ್ದೆ, ಬಡ್ತಿ ಈ ಜಂಜಾಟದಲ್ಲೇ ಕಳೆದ ಬದುಕು. ಪಿ.ಜಿ. ವುಡ್‌ಹೌಸರ ಪುಸ್ತಕಗಳನ್ನೋದಿ ಪ್ರಭಾವಿತರಾಗಿ ಸುಧಾ, ಮಯೂರ ಪತ್ರಿಕೆಗೆ ಬರೆದ ಹಾಸ್ಯ ಲೇಖನಗಳು. ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಇವರ ‘ಸಾವಿತ್ರಿ’ ಕಾದಂಬರಿಗೆ ಮೊದಲ ಬಹುಮಾನ. ಟಿ.ಎಸ್. ರಂಗಾ ಇದೇ ಹೆಸರಿನಿಂದ ತೆಗೆದ ಚಲನಚಿತ್ರ. ಎರಡನೆಯ ಕಾದಂಬರಿ ‘ತಾಯಿ ಸಾಹೇಬ.’ ಇದೇ ಹೆಸರಿನಿಂದ ಗಿರೀಶ್ ಕಾಸರವಳ್ಳಿಯವರು ಮಾಡಿದ ಚಲನಚಿತ್ರ. ಹಲವಾರು ಸಣ್ಣಕಥೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿತ. ಸಣ್ಣಕಥೆಗಳು-ಕಥಾಸಂಕಲನ ಪ್ರಕಟಿತ. ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಮರಾಠಿಗೆ ಅನುವಾದ. ‘ಹೋರಪಳ’ ಮರಾಠಿ ಲೇಖಕರಾದ ವಿ.ಗ. ಕಾನಿಟಕರರ ಕಾದಂಬರಿ. ‘ಅಗ್ನಿದಿವ್ಯ’ ಹೆಸರಿನಿಂದ ಕನ್ನಡಕ್ಕೆ ತಂದ ಕೀರ್ತಿ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಮರಾಠಿಗೆ ಅನುವಾದ. ಇವರ ಮೂರನೆಯ ಕಾದಂಬರಿ ‘ನೂರು ತಲೆ ಹತ್ತು ಕಾಲು’ ಪ್ರಕಟಿತ. ಜೊತೆಗೆ ಇವರು ನಡೆಸಿದ್ದು ಕನ್ನಡ-ಮರಾಠಿ ಭಾಷೆಗಳ ತೌಲನಿಕ ಅಧ್ಯಯನ. ಇದರ ಫಲ ಸಂಶೋಧನಾ ಪ್ರಬಂಧ ‘ಹಳೆಗನ್ನಡ ಮತ್ತು ಮರಾಠಿ’ (ಕನ್ನಡ ವಿಶ್ವವಿದ್ಯಾಲಯ ಹಂಪಿ) ೧೯೯೪ರಲ್ಲಿ ಪ್ರಕಟಿತ. ಇದೇ ಪುನರ್‌ಲೇಖನಗೊಂಡು ಮರಾಠಿ ಭಾಷೆಯಲ್ಲಿ “ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೇವಾರ ಕನ್ನಡ ಪ್ರಭಾವ” ೩ ಸಂಪುಟಗಳಲ್ಲಿ ಸ್ವಂತ ಖರ್ಚಿನಲ್ಲಿ ಪ್ರಕಟಿತ. ಮಹಾರಾಷ್ಟ್ರದ ಗ್ರಂಥೋತ್ತೇಜಕ ಸಂಸ್ಥೆಯಿಂದ ಈ ಕೃತಿಗೆ ಪುರಸ್ಕಾರ. ಬ್ರೆಕ್ಟ್‌ನ ನಾಟಕ ಗುಡ್ ಪರ್ಸನ್ ಆಫ್ ಶೆಜುವಾನ್ ‘ಸಂಕಾನ್ತೇಯ ಚಂದ್ರಿ’ ಎಂಬ ಹೆಸರಿನಿಂದ ಅನುವಾದ. ಇದೀಗ ಫೆಲೊಶಿಪ್ ಪಡೆದು ನಾಥ್ ಸಂಪ್ರದಾಯದ ಬಗ್ಗೆ ಸಂಶೋಧನಾ ಗ್ರಂಥ ರಚನೆಯಲ್ಲಿ ಮಗ್ನರು.   ಇದೇ ದಿನ ಹುಟ್ಟಿದ ಸಾಹಿತಿ : ಕಡಿದಾಳ್ ಮಂಜಪ್ಪ – ೧೯೦೭

ಎಸ್.ಎಂ. ಶಂಕರಾಚಾರ್ಯ

೧೨.೭.೧೯೨೧ ಕೋಲಾರ ಜಿಲ್ಲೆಯ ಶಿವಾರ ಪಟ್ಟಣ ಶಿಲ್ಪಕಲೆಗೆ ತವರೂರು. ಹಲವಾರು ಶಿಲ್ಪಕಲಾ ಪರಿಣತರು ಕರ್ನಾಟಕದಾದ್ಯಂತ ಹಂಚಿ ಹೋಗಿ ತಮ್ಮ ಕಲಾವಂತಿಕೆಯ ಜಾಣ್ಮೆತೋರಿಸಿದ್ದಾರೆ. ಶಂಕರಾಚಾರ್ಯರು ಹುಟ್ಟಿದ್ದು ಶಿವಾರಪಟ್ಟಣದಲ್ಲಿ. ಓದಿಗಿಂತ ಶಿಲ್ಪಕಲೆಯಲ್ಲಿ ಪಡೆದ ಪರಿಣತಿ, ಅಮರಕೋಶ, ಸಂಸ್ಕೃತ, ಶಿಲ್ಪಕಲೆ, ಚಿತ್ರಕಲೆ, ಶಿಲ್ಪಾಗಮದಲ್ಲಿ ಪಡೆದ ಪ್ರಾವೀಣ್ಯತೆ. ತಂದೆ ಮಾಳಿಗಾಚಾರ್ಯರಿಂದ ಶಿಲ್ಪಕಲೆಯ ಪ್ರಾರಂಭಿಕ ಶಿಕ್ಷಣ. ನಂತರ ಹೆಸರಾಂತ ಶಿಲ್ಪಿಗಳಾದ ಚನ್ನಪ್ಪಚಾರ್ಯರಲ್ಲಿ ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ ಗಳಿಸಿದ ಹೆಚ್ಚಿನ ಶಿಕ್ಷಣ. ಅನೇಕ ವಿದ್ಯಾರ್ಥಿಗಳಿಗೆ ಇವರು ನೀಡಿದ ಆಗಮಶಾಸ್ತ್ರದ ತರಬೇತಿ. ಶಿವಾರಪಟ್ಟಣದಲ್ಲಿರುವ ‘ಶಿಲ್ಪಕಲಾ ಸಹಕಾರ ಸಂಘದ’ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಸೇವೆ. ಮಧುಗಿರಿಯ ಸರಕಾರಿ ಕಾಲೇಜಿಗೆ ವೀಣಾ ಸರಸ್ವತಿ, ಚಿಕ್ಕಬಳ್ಳಾಪುರದ ವಿದ್ಯುತ್‌ ಇಲಾಖೆಗೆ ಚಾಮುಂಡೇಶ್ವರಿ, ಬೆಂಗಳೂರಿನ ಶಂಕರ ಮಠಕ್ಕೆ ಕೋದಂಡರಾಮ ಶಿಲಾ ಸಂಪುಟ, ಲಿಂಗರಾಜಪುರಂನ ಶಂಕರ ಮಠಕ್ಕೆ ರಾಜಗೋಪುರ, ಹಿತ್ತಾಳೆ ಕಳಸಗಳು, ಬಂಗಾರುಪೇಟೆಯ ಬಸವೇಶ್ವರ ದೇವಾಲಯಕ್ಕೆ ವಜ್ರಾಂಗಿ ಮತ್ತು ಬಾಗಿಲುವಾಡ, ಹೀಗೆ ಕರ್ನಾಟಕ, ಆಂಧ್ರ, ತಮಿಳುನಾಡು, ಒರಿಸ್ಸಾ ರಾಜ್ಯಗಳ ದೇವಸ್ಥಾನಗಳಿಗೆ ಮೂರ್ತಿಗಳು, ಅಲ್ಲದೆ ಬರ್ಹಾಂಪುರ, ವಿಶಾಖ ಪಟ್ಟಣ, ಒರಿಸ್ಸಾ, ಹೃಷಿಕೇಶಗಳಿಗೆ ವಿಷ್ಣುಸಂಪುಟ ಮತ್ತು ದೇವಿ ಸಂಪುಟ, ಶಿಲಾವಿಗ್ರಹಗಳ ರಚನೆ. ಅನೇಕ ಖಾಸಗಿ ದೇವಾಲಯಗಳಲ್ಲಿ ಶಿಲ್ಪಾಗಮ ರೀತ್ಯಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯ. ೧೯೫೭ ರಲ್ಲಿ ಅಖಿಲ ಭಾರತ ಕರಕುಶಲ ಸಾಪ್ತಾಹದಲ್ಲಿ ವೇಣುಗೋಪಾಲಸ್ವಾಮಿ ವಿಗ್ರಹಕ್ಕೆ ಬೆಳ್ಳಿ ಪದಕ, ಪ್ರಶಸ್ತಿ, ಕೈಗಾರಿಕಾವಾಣಿಜ್ಯ ಇಲಾಖೆಯ ಕೃಷ್ಣ ವಿಗ್ರಹಕ್ಕೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ; ಕೈಗಾರಿಕಾ ವಾಣಿಜ್ಯ ಇಲಾಖೆಯ ಕೃಷ್ಣ ವಿಗ್ರಹಕ್ಕೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ; ಚತುರ್ಭುಜ ಲಕ್ಷ್ಮೀ ವಿಗ್ರಹಕ್ಕೆ ಬೆಳ್ಳಿ ಪದಕ, ಪ್ರಶಸ್ತಿಗಳಲ್ಲದೆ ಕರ್ನಾಟಕ ಶಿಲ್ಪಕಲಾ ಅಕಾಡಮಿಯಿಂದ ೨೦೦೩ ನೇ ಸಾಲಿನಲ್ಲಿ ದೊರೆತ ಪ್ರಶಸ್ತಿ ಗೌರವ. ಇದೇ ದಿನ ಹುಟ್ಟಿದ ಕಲಾವಿದರು ಜಿ.ಎಸ್‌. ರಾಜಲಕ್ಷ್ಮೀ – ೧೯೪೯ ರಾಜಕುಮಾರ್ ಆರ್ – ೧೯೬೨ ಕಮಲ್‌ ಅಹ್ಮದ್‌ – ೧೯೬೫ ಚಂಪಾಶೆಟ್ಟಿ – ೧೯೭೪ ಹಿತಯಷಿ ಬಿ.ಎಸ್‌ – ೧೯೮೦

* * *

ಆಲೂರು ವೆಂಕಟರಾವ್

೧೨-೭-೧೮೮೦ ೨೫-೨-೧೯೬೪ ಪತ್ರಿಕೋದ್ಯಮಿ, ಸಾಹಿತಿ, ಕರ್ನಾಟಕ ಕುಲಪುರೋಹಿತ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ವೆಂಕಟರಾಯರು ಹುಟ್ಟಿದ್ದು ಬಿಜಾಪುರದಲ್ಲಿ. ಇವರ ವಂಶಜರು ಧಾರವಾಡದ ಬಳಿಯ ಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು ಶಿರಸ್ತೇದಾರರು, ತಾಯಿ ಭಾಗೀರಥಿಬಾಯಿ. ಪ್ರಾರಂಭಿಕ ಶಿಕ್ಷಣ ಧಾರವಾಡದಲ್ಲಿ. ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ. ಧಾರವಾಡದಲ್ಲಿ ವಕೀಲಿ ವೃತ್ತಿ ಪ್ರಾರಂಭ. ಆನೆಗೊಂದಿ, ಹಂಪಿಗೆ ಭೇಟಿ. ಕರ್ನಾಟಕದ ಪ್ರಾಚೀನ ವೈಭವವನ್ನು ಕಲ್ಪನೆಗೆ ತಂದುಕೊಂಡು, ಕರ್ನಾಟಕದ ಏಕೀಕರಣಕ್ಕೆ ದುಡಿಯಲು ತೀರ‍್ಮಾನ. ಕರ್ನಾಟಕದ ವೀರರತ್ನಗಳು. ಕರ್ನಾಟಕದ ಸೂತ್ರಗಳು, ಕರ್ನಾಟಕತ್ವದ ವಿಕಾಸ. ನಾಡಿಗ ಸಂಬಂಸಿದ ಇತರ ಗ್ರಂಥಗಳ ಪ್ರಕಟಣೆ. ಇದಲ್ಲದೆ ವಿದ್ಯಾರಣ್ಯ ಚರಿತ್ರೆ, ಕನ್ನಡಿಗರ ಭ್ರಮನಿರಸನ ನಾಟಕ ಪ್ರಕಟಿತ. ಬಾಲಗಂಗಾಧರ ತಿಲಕರ ಗೀತಾರಹಸ್ಯವನ್ನು ಅದೇ ಹೆಸರಿನಿಂದ ಕನ್ನಡಕ್ಕೆ ಅನುವಾದ. ಗೀತಾಪ್ರಕಾಶ, ಗೀತಾಪರಿಮಳ, ಗೀತಾ ಸಂದೇಶ ಗ್ರಂಥಗಳು ಪ್ರಕಟ. ಶ್ರೀಮಧ್ವಾಚಾರ‍್ಯರ ಪೂರ್ಣ ಬ್ರಹ್ಮವಾದ ಗ್ರಂಥ ಪ್ರಕಾಶನ. ಧಾರವಾಡದ ಗ್ರಂಥ ಪ್ರಕಟಣಾ ಮಂದಿರ, ಕರ್ನಾಟಕ ಇತಿಹಾಸ ಮಂಡಳಿ, ಕರ್ನಾಟಕ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಶ್ವವಿದ್ಯಾಲಯ ಮುಂತಾದುವುಗಳನ್ನು ಸ್ಥಾಪಿಸಲು ಪಟ್ಟ ಶ್ರಮ. ಪತ್ರಿಕಾರಂಗದಲ್ಲೂ ಸೇವೆ. ‘ವಾಗ್ಭೂಷಣ’, ‘ಜಯಕರ್ನಾಟಕ’ ಪತ್ರಿಕೆ ಮತ್ತು ಕರ್ಮವೀರ ಪತ್ರಿಕೆ ಸಂಪಾದಕತ್ವ. ಇವರ ನಾಡುನುಡಿಯ ಸೇವೆಗೆ ಸಂದ ಹಲವಾರು ಗೌರವಗಳು. ಹೈದರಾಬಾದ್ ಕನ್ನಡಿಗರಿಂದ ‘ಕರ್ನಾಟಕ ಕುಲಪುರೋಹಿತ’ ಬಿರುದು. ಬೆಂಗಳೂರು ನಗರ ಸಭೆಯಿಂದ ಸನ್ಮಾನ. ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ. ೧೯೫೬ರ ರಾಜ್ಯೋದಯದ ಹಂಪಿ ಭುವನೇಶ್ವರಿ ಪೂಜೆಯ ಪೌರೋಹಿತ್ಯ. ಕನ್ನಡ ನಾಡು ನುಡಿಯ ಮೇಲ್ಮೈಗಾಗಿ ಶ್ರಮಿಸುತ್ತಿದ್ದ ಆಲೂರರು ನಿಧನರಾದದ್ದು ಫೆ. ೨೫ರ ೧೯೬೪ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸೀತಾಸುತ – ೧೯೩೭ ಶ್ರೀಧರ ರಾಯಸಂ – ೧೯೪೬ ಮೀನಾಕ್ಷಿರಾವ್ – ೧೯೪೩ ಬಸುಬೇವಿನಗಿಡದ – ೧೯೬೪

ನೀಲಮ್ಮ ಕಡಾಂಬಿ

೧೧..೧೯೧೧ ೧೪.೧೨. ೧೯೯೮ ವೀಣೆ ಹಾಗೂ ಹಾಡುಗಾರಿಕೆಯಲ್ಲಿ ಪ್ರಸಿದ್ಧರಾಗಿದ್ದ ನೀಲಮ್ಮ ಕಡಾಂಬಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮೇಲುಕೋಟೆ. ತಂದೆ ವೀಣೆ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು, ಪ್ರಾರಂಭಿಕ ಸಂಗೀತ ಪಾಠ ಅಣ್ಣನವರಾದ ಎಂ.ವಿ. ಶ್ರೀನಿವಾಸ ಅಯ್ಯಂಗಾರ್ಯರಿಂದ. ನಂತರ ವೀಣೆ ವೆಂಕಟಗಿರಿಯಪ್ಪನವರಲ್ಲಿ ವೀಣೆ ಪಾಠ, ಹಾಡುಗಾರಿಕೆಯ ಶಿಕ್ಷಣ ಮೈಸೂರು ವಾಸುದೇವಾಚಾರ್ಯರು, ಟಿ. ಚೌಡಯ್ಯ, ವಿ. ರಾಮರತ್ನಂ ರವರಲ್ಲಿ. ೧೯೫೪ ರಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಜವಹರಲಾಲ್‌ ನೆಹರು ಮತ್ತು ಎಸ್‌. ರಾಧಾಕೃಷ್ಣನ್‌ ರವರ ಸಮ್ಮುಖದಲ್ಲಿ ನಡೆಸಿಕೊಟ್ಟ ವೀಣಾ ವಾದನ ಕಚೇರಿ. ಬೆಂಗಳೂರು, ಧಾರವಾಡ, ಆಕಾಶವಾಣಿ ನಿಲಯದಿಂದ ಹಲವಾರು ಬಾರಿ ಕಾರ್ಯಕ್ರಮ ಬಿತ್ತರ. ಹೊರರಾಜ್ಯದ ವಿಜಯವಾಡ, ಕಾಕಿನಾಡ, ರಾಜಮಹೇಂದ್ರಿ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್‌, ಮಲ್ಲೇಶ್ವರಂ ಸಂಗೀತ ಸಭಾ, ಮದರಾಸಿನ ರಸಿಕರಂಜನಿ ಸಭಾ, ಪಾರ್ಥಸಾರಥಿ ಸಂಗೀತ ಸಭಾ, ಮುಂಬಯಿ, ದೆಹಲಿ, ನಾಗಪುರ ಮುಂತಾದೆಡೆಗಳಲ್ಲಿ ಯಶಸ್ವಿ ವೀಣಾವಾದನ ಕಚೇರಿ. ಕೊಲಂಬಿಯ ಕಂಪನಿಯಿಂದ ಗಾನ ಮುದ್ರಿಕೆಗಳ ಮುದ್ರಣ. ತುಳಸಿ ಎಂಬ ಚಲನಚಿತ್ರದಲ್ಲಿ ವೀಣಾ ಕಚೇರಿ ದೃಶ್ಯ. ಬೆಂಗಳೂರಿನ ಗಾನಕಲಾ ಪರಿಷತ್ತಿನ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ, ಗಾನಕಲಾ ಭೂಷಣ ಬಿರುದು. ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ. ಮೈಸೂರು ಅರಮನೆಯಿಂದ ಗಂಡ ಭೇರುಂಡ ಲಾಂಛನದ ಚಿನ್ನದ ಸರ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಪ್ರಶಸ್ತಿ, ಸನ್ಮಾನ. ತಂಜಾವೂರಿನ ಸಂಗೀತೋತ್ಸವದಲ್ಲಿ ಬಾಲಕೇಸರಿ ಬಿರುದು, ಚೆನ್ನೈನ ಟಿ.ವಿ.ಎಸ್‌ ಗ್ರೂಪ್‌ ವತಿಯಿಂದ ಕುಸುರಿಕೆತ್ತನೆಯ ಬೆಳ್ಳಿ ವೀಣೆ ಪ್ರದಾನ, ಈ ಬೆಳ್ಳಿ ವೀಣೆ ವಿಶೇಷತೆ ತಾಂಬೂಲ ಚವರ್ಣಕ್ಕೆ ಎಲೆ, ಅಡಿಕೆ, ಏಲಕ್ಕಿ, ಲವಂಗ, ಸುಣ್ಣ ಇಡಲು ಕರಂಡಿಕೆ, ಇದಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, ರಜತಪದಕ.   ಇದೇ ದಿನ ಹುಟ್ಟಿದ ಕಲಾವಿದ ಚಂದ್ರಮೌಳಿ ಬಿ.ಎನ್‌ – ೧೯೫೧

* * *

ಡಾ. ಸುನೀತಿ ಉದ್ಯಾವರ

೧೧-೭-೧೯೩೭ ಕಥೆಗಾರ್ತಿ, ಕಾದಂಬರಿಗಾರ್ತಿ, ಸಂಘಟಕಿ ಸುನೀತಿ ಉದ್ಯಾವರರವರು ಹುಟ್ಟಿದ್ದು ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಮನೆತನದಲ್ಲಿ. ತಂದೆ ಶಾಂತಾರಾಮರಾವ್, ತಾಯಿ ಸೀತಾಬಾಯಿ. ಪ್ರೌಢಶಾಲೆಯವರೆವಿಗೂ ಮಂಗಳೂರಿನಲ್ಲಿ. ಮುಂಬಯಿಯ ಖಾಲ್ಸಾ ಕಾಲೇಜಿನಲ್ಲಿ ಬಿ.ಎ. ಪದವಿ. ಊರ್ವದ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕಿ ತರಬೇತಿ ಪಡೆದ ನಂತರ ಗಣಪತಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭ. ನಂತರ ಮುಂಬಯಿಯ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ-ವಡಾಲಾದಲ್ಲಿ ಶಿಕ್ಷಕಿಯಾಗಿ ೩೪ ವರ್ಷಗಳ ಸೇವೆಯ ನಂತರ ನಿವೃತ್ತಿ. ಅಧ್ಯಾಪನದೊಂದಿಗೆ ಓದುವ ಹುಚ್ಚು. ಮುಂಬಯಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂ.ಎ. ಪ್ರಥಮ ದರ್ಜೆ, ವರದರಾಜ ಆದ್ಯ ಸ್ವರ್ಣಪದಕ ವಿಜೇತೆ. ಮುಂಬಯಿ ವಿಶ್ವವಿದ್ಯಾಲಯಕ್ಕೆ “ಕಡೆಂಗೋಡ್ಲು ಶಂಕರಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಕನ್ನಡ ವಿಭಾಗದಿಂದ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ. ಎಳೆವೆಯಿಂದಲೇ ಕವನ ಬರೆಯುವ ಹವ್ಯಾಸ. ೧೫ರ ವಯಸ್ಸಿನಲ್ಲಿಯೇ ಸಾಹಿತ್ಯ ಎಲ್ಲಾ ಪ್ರಕಾರಗಳನ್ನು ಸೇರಿಸಿ, ಛಾಯ, ಪುಷ್ಪಾಂಜಲಿ, ನವೋದಯ ಕೃತಿ ರಚನೆ. ೧೯ರ ವಯಸ್ಸಿನಲ್ಲಿಯೇ ಕಾದಂಬರಿ ರಚನೆ. ಕಾದಂಬರಿಗಳು-ಸ್ನೇಹ ಸ್ಮಾರಕ, ತಂಗಿಯ ಕಾಣಿಕೆ, ಕ್ಷಮಾಶೀಲೆ, ಋಣೋನ್ಮುಕ್ತಿ, ಆಶ್ವಾಸನೆ ಪ್ರಕಟಿತ. ಕವನ ಸಂಕಲನ-ಮೊಗ್ಗು, ಗೊಂಚಲು. ಶಿಶುಗೀತೆಗಳ ಸಂಕಲನ-ಕಿಂಕಿಣಿ. ಮುಂಬಯಿ ಕರ್ನಾಟಕ ಸಂಘದ ಕಲಿಕಾವರ್ಗಕ್ಕೆ ಪಠ್ಯಪುಸ್ತಕ. ನಾಲ್ಕು ಗೀತರೂಪಕಗಳ ಸಂಕಲನ-ರೂಪಕ ವಲ್ಲರಿ. ಮಹಾಪ್ರಬಂಧ-ವಾಙ್ಞಯ ಆರಾಧಕ ಕಡೆಂಗೋಡ್ಲು, ಶ್ರೇಷ್ಠ ಸಂಶೋಧನಾ ಕೃತಿಯಾಗಿ ಆಯ್ಕೆ. ಕನ್ನಡ, ಮರಾಠಿ, ತುಳು, ಕೊಂಕಣಿ, ಇಂಗ್ಲಿಷ್, ಹಿಂದಿಯಲ್ಲಿ ಕವನ, ನಾಟಕ, ಬೀದಿನಾಟಕಗಳ ರಚನೆ. ಅಂಕಣ ಬರಹಗಾರ್ತಿಯಾಗಿ ‘ಶ್ರೀಸತ್ಯ’ ಪತ್ರಿಕೆಗಾಗಿ ‘ನಾರಿ ನಡೆದು ಬಂದ ದಾರಿ’ ಅಂಕಣಬರಹ. ಧ್ವನಿಸುರಳಿ-ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ‘ಸಾಯಿದರ್ಶನ’ ಭಜನೆಗಳು. ಹಲವಾರು ಸಮಿತಿ, ಸಂಘ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ. ಮಹಾರಾಷ್ಟ್ರ ರಾಜ್ಯಪುಸ್ತಕ ಮಂಡಳಿಯ ಕನ್ನಡ ಭಾಷಾ ಸಮಿತಿಯ ಸದಸ್ಯೆಯಾಗಿ, ಪುಣೆಯ ಪಠ್ಯಪುಸ್ತಕ ಸಮಿತಿ ಮಂಡಲ ಕನ್ನಡ ಭಾಷಾ ಸಮಿತಿಯಲ್ಲಿ ಸದಸ್ಯೆಯಾಗಿ, ಗೋರೆ ಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಸ್ಥಾಪಕರಲ್ಲೊಬ್ಬರಾಗಿ, ಕಾರ‍್ಯದರ್ಶಿ, ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿ ಸೇವೆ. ಹಲವಾರು ಸಂಕಿರಣ, ಕವಿಗಷ್ಠಿಗಳಲ್ಲಿ ಭಾಷಣಕಾರ್ತಿಯಾಗಿ, ಸಿಂಗಾಪುರ, ಹಾಂಗ್‌ಕಾಂಗ್, ಪಟ್ಟಾಯ, ಬ್ಯಾಂಕಾಕ್, ನೇಪಾಳಗಳಲ್ಲಿ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣಕಾರ್ತಿಯಾಗಿ ಭಾಗಿ. ಮುಂಬಯಿ ವಿ.ವಿ.ದ ವರದರಾಜ ಆದ್ಯ ಸ್ವರ್ಣಪದಕ, ಮುಂಬಯಿ ಕರ್ನಾಟಕ ಸಂಘದ ಕವಿತಾ ಕೈಲಾಜೆ ಪ್ರಶಸ್ತಿ, ‘ವಾಙ್ಞಯ ಆರಾಧಕ ಕಡೆಂಗೋಡ್ಲು’ ಕೃತಿಗೆ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಚ್.ಎ. ರಾಮಕೃಷ್ಣ – ೧೯೩೨ ಮಿತ್ರಾ ವೆಂಕಟ್ರಾಜ್ – ೧೯೪೮

ಸಿ. ಹಯವದನರಾವ್

೧೦-೭-೧೮೬೫ ೧೯೪೬ ಇತಿಹಾಸ ತಜ್ಞ, ಗೆಜೆಟಿಯರ್, ಪ್ರಸಿದ್ಧ ವಿದ್ವಾಂಸರೂ ಆಗಿದ್ದ ಹಯವದನ ರಾವ್‌ರವರು ಹುಟ್ಟಿದ್ದು ತಮಿಳು ನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ. ತಂದೆ ರಾಜಾರಾವ್. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಹೈಸ್ಕೂಲಿಗೆ ಸೇರಿದ್ದು ಮದರಾಸಿನ ಹಿಂದೂ ಹೈಸ್ಕೂಲು. ಮದರಾಸಿನ ಪ್ರೆಸಿಡೆನ್ಸಿ ಮತ್ತು ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಮತ್ತು ಬಿ.ಎಲ್. ಪದವಿ. ವಿದ್ಯಾರ್ಥಿ ದೆಸೆಯಲ್ಲಿಯೇ ಪತ್ರಿಕೋದ್ಯಮದಲ್ಲಿ ಆಸಕ್ತಿ. ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿದ್ದು ಮದರಾಸಿನ ವಸ್ತು ಸಂಗ್ರಹಾಲಯದಲ್ಲಿ ಕ್ಯೂರೇಟರಾಗಿ ಕೆಲಕಾಲ. ನಂತರ ‘ಮದರಾಸ್ ಟೈಮ್ಸ್’ ಪತ್ರಿಕೆಯ ಸಂಪಾದಕತ್ವ. ಅಲ್ಲಿಂದ ಅಲಹಾಬಾದಿಗೆ ತೆರಳಿ ‘ದಿ ಲೀಡರ್’ ಪತ್ರಿಕೆಯಲ್ಲಿ ಗಳಿಸಿದ ಪ್ರಸಿದ್ಧಿ. ಸರ್. ಎಂ. ವಿಶ್ವೇಶ್ವರಯ್ಯನವರು ಮೈಸೂರಿಗೆ ಆಹ್ವಾನಿಸಿ ವಹಿಸಿದ್ದು ‘ದಿ ಮೈಸೂರು ಎಕನಾಮಿಕಲ್ ಜರ್ನಲ್’ ಸಂಪಾದಕತ್ವ. ಜೀವಿತರ ಕೊನೆಯವರೆವಿಗೂ ಆ ಪತ್ರಿಕೆಯೊಡನೆ ಸಂಪರ್ಕ. ಬಹುಭಾಷಾ ವಿದ್ವಾಂಸರಾಗಿದ್ದ ಇವರಿಗೆ ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಸಂಸ್ಕೃತ, ಕನ್ನಡ, ತೆಲುಗು, ಮರಾಠಿ, ತಮಿಳು ಭಾಷೆಗಳಲ್ಲಿ ಪಾಂಡಿತ್ಯ-ಪರಿಶ್ರಮ. ಅನೇಕ ವರ್ಷಕಾಲ ಮೈಸೂರು ವಿಶ್ವವಿದ್ಯಾಲಯದಲ್ಲಿ ತೆಲುಗುಭಾಷೆಯ ಪರೀಕ್ಷಕರ ಜವಾಬ್ದಾರಿ. ಹಲವಾರು ಸಂಘ ಸಂಸ್ಥೆಗಳ ಸದಸ್ಯತ್ವ. ಬೆಂಗಳೂರು ಪುರಸಭೆಯ ಚುನಾಯಿತ ಪ್ರತಿನಿಯಾಗಿ, ಮೈಸೂರು ನ್ಯಾಯ ವಿಧಾಯಕ ಸಭೆ ಸದಸ್ಯನಾಗಿ (೧೯೩೪-೪೦), ಮೈಸೂರು ವಿ.ವಿ.ದ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಸದಸ್ಯರಾಗಿ ಸಲ್ಲಿಸಿದ ಸೇವೆ. ಇತಿಹಾಸ ತತ್ತ್ವಗಳನ್ನರಗಿಸಿಕೊಂಡು ಕರ್ನಾಟಕ ಇತಿಹಾಸ ರಚನೆಯಲ್ಲಿ ಮಹತ್ತರ ಪಾತ್ರ. ಇವರು ಸಂಪಾದಿಸಿದ ಗೆಜೆಟಿಯರ್ಸ್‌ ಪ್ರಮಾಣಪೂರ್ವಕ ಗ್ರಂಥಗಳು. ಏಳು ಸಂಪುಟಗಳಲ್ಲಿ ಮೈಸೂರು ಗೆಜೆಟಿಯರ್ಸ್‌ ಪ್ರಕಟಣೆ. ಮೈಸೂರು ರಾಜ ಒಡೆಯರ ವಂಶಕ್ಕೆ ಸೇರಿದ ೩ ಸಂಪುಟಗಳ ‘ಹಿಸ್ಟರಿ ಆಫ್ ಮೈಸೂರು’ ರಚಿಸಿ ಪ್ರಕಟಣೆ. ಹಲವಾರು ಸಂಘ ಸಂಸ್ಥೆ, ಸರಕಾರದಿಂದ ಸಂದ ಗೌರವ-೧೯೧೧ರಲ್ಲಿ ಬ್ರಿಟಿಷ್ ಸರಕಾರದಿಂದ ‘ರಾವ ಸಾಹೇಬ್’, ಲಾರ್ಡ್ ಲಿನ್‌ಲಿತ್‌ಗೋ ನೀಡಿದ ‘ರಾವ್ ಬಹದ್ದೂರ್’ ನಾಲ್ವಡಿ ಕೃಷ್ಣರಾಜ ಒಡೆಯರು ನೀಡಿದ ‘ರಾಜ ಚರಿತ ವಿಶಾರದ’ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಾರದಾ ಆರ್. ರಾವ್ – ೧೯೪೦ ಲೀಲಾವತಿ. ಎಸ್. ರಾವ್ – ೧೯೪೩ ಸಕಲವಾರ ಕಾವೇರಪ್ಪ – ೧೯೬೨ ಜೆ.ವಿ.ಬಿ. ನಾಯ್ಡು – ೧೯೨೦

ಆರ್.ಎಸ್‌. ರಾಜಾರಾಂ

೧೦.೦೭.೧೯೩೮ ರಂಗಭೂಮಿಯ ಪ್ರಖ್ಯಾತ ಕಲಾವಿದರಾದ ರಾಜಾರಾಂ ರವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ನಲ್ಲಿ. ತಂದೆ ಜಿ.ಎಸ್‌. ರಘುನಾಥರಾವ್‌, ತಾಯಿ ಶಾರದಾಬಾಯಿ. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ. ಮಲ್ಲೇಶ್ವರದ ಸ್ನೇಹಿತರೊಡನೆ ಸೇರಿ ಕಟ್ಟಿದ ‘ರಸಿಕ ರಂಜನಿ ಕಲಾವಿದರು’ ಸಂಸ್ಥಾಪಕರಲ್ಲೊಬ್ಬರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದ, ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣನವರ ನಾಟಕಗಳಲ್ಲಿ ಅಭಿನಯ. ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ಒಡನಾಟ. ೧೯೬೪ ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ ಸ್ಥಾಪಿಸಿದ್ದು ಸಚಿವಾಲಯ ಸಾಂಸ್ಕೃತಿಕ ಸಂಘ. ಕೋಲ್ಕತ್ತದಲ್ಲಿ ನಡೆದ ಸಚಿವಾಲಯ ಕ್ಲಬ್‌ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗಿ, ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳ ನಟ. ೧೯೭೨ರಿಂದ ನಟರಂಗ ಮತ್ತು ೧೯೮೩ರಿಂದ ವೇದಿಕೆಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ, ರವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪಡೆದ ಖ್ಯಾತಿ. ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಇವರ ನಿರ್ದೇಶನದ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ. ಹೈದರಾಬಾದ್‌, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ ಮುಂಬಯಿ, ಚಂಡಿಗರ್ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿ. ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮಯೂರ ಕಲಾರಂಗ, ಕರ್ನಾಟಕ ನಾಟಕ ಅಕಾಡೆಮಿ ಮುಂತಾದುವುಗಳಿಂದ ಸಂದ ಗೌರವ ಪ್ರಶಸ್ತಿ.   ಇದೇ ದಿನ ಹುಟ್ಟಿದ ಕಲಾವಿದರು ಎಸ್‌. ವೆಂಕಟಾಚಲಂ – ೧೯೩೫ ಪ್ರಕಾಶ್‌. ಎಸ್‌ – ೧೯೬೨ ಸೊಲಗಿ ನಿಂ . ಗು – ೧೯೬೮ ವೆಂಕಟೇಶ್‌ . ಓ – ೧೯೬೯

* * *

ಟಿ. ಗುರುರಾಜಪ್ಪ

..೧೯೦೫ ೨೨..೧೯೭೨ ಪಿಟೀಲು ವಿದ್ವಾಂಸರಾಗಿದ್ದ ಮೈಸೂರು ಟಿ. ಚೌಡಯ್ಯನವರ ತಮ್ಮಂದಿರಾದ ಟಿ. ಗುರುರಾಜಪ್ಪನವರು ಹುಟ್ಟಿದ್ದು ತಿರುವ ಕೂಡಲು ನರಸೀಪುರ. ತಂದೆ ಅಗಸ್ತೇಗೌಡರು, ತಾಯಿ ಸುಂದರಮ್ಮ. ಸಂಗೀತಗಾರರ ಮನೆತನದಲ್ಲಿ ಬೆಳೆದ ಗುರುರಾಜಪ್ಪನವರಿಗೂ ಸಂಗೀತದತ್ತ ಬೆಳೆದ ಆಸಕ್ತಿ. ಎಸ್‌.ಎಸ್‌. ಎಲ್‌.ಸಿ.ಯ ನಂತರ ಬಿಡಾರಂ ಕೃಷ್ಣಪ್ಪನವರ ಬಳಿ ಪಿಟೀಲು ಕಲಿಕೆ. ಅನೇಕ ಕಚೇರಿಗಳಲ್ಲಿ ಬಿಡಾರಂ ಕೃಷ್ಣಪ್ಪನವರಿಗೆ ನೀಡಿದ ಪಿಟೀಲು ಸಹಕಾರ. ಟಿ. ಚೌಡಯ್ಯನವರೊಡನೆ ದೇಶಾದ್ಯಂತ ನಡೆಸಿಕೊಟ್ಟ ದ್ವಂದ್ವ ಪಿಟೀಲು ವಾದನ ಕಚೇರಿ. ೧೯೩೯ ರಲ್ಲಿ ತಿರುಚನಾಪಳ್ಳಿ ಆಕಾಶವಾಣಿಯಲ್ಲಿ ‘ಎ’ ದರ್ಜೆ ಕಲಾವಿದರಾಗಿ ನೇಮಕ. ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಪಿಟೀಲು ವಾದನ. ಜಿ.ಎನ್‌.ಬಿ., ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈವೈದ್ಯನಾಥಭಾಗವತರ್, ಆಲತ್ತೂರು ಸಹೋದರರು ಮುಂತಾದವರ ಕಚೇರಿಗಳಿಗೆ ಪಿಟೀಲಿನ ಪಕ್ಕವಾದ್ಯ. ತಮಿಳುನಾಡಿನ ಹಲವಾರು ಗಣ್ಯ ಸಂಗೀತಗಾರರ ಎದುರಿನಲ್ಲಿ ವಜ್ರದ ಕಾಪುತೊಡಿಸಿ ನೀಡಿದ ಸನ್ಮಾನ. ತಮಿಳುನಾಡಿನಾದ್ಯಂತ ಸಂಗೀತ ಕಚೇರಿಗಳು. ದೇಶವಿದೇಶಗಳಿಂದ ಬಂದ ಆಹ್ವಾನ. ಸಿಲೋನ್‌, ಸಿಂಗಪೂರ್, ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿ ಹೆಸರಾಂತ ಚಿತ್ರನಟ, ಸಂಗೀತಗಾರ ತ್ಯಾಗರಾಜ ಭಾಗವತರೊಡನೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ. ೧೯೫೩ ರಲ್ಲಿ ಮೈಸೂರು ಆಕಾಶವಾಣಿ ಕಲಾವಿದರಾಗಿ ಸೇರ್ಪಡೆ. ತಮಿಳುನಾಡಿನ ಸಂಗೀತ ಪ್ರೇಮಿಗಳಿಂದದು ಬೆರಳಿಗೂ ತೊಡಿಸಿದ ವಜ್ರದುಂಗುರ, ಬೀಳ್ಕೊಡುಗೆ. ೧೯೫೭ ರಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ‘ಎ’ ದರ್ಜೆ ಕಲಾವಿದರಾಗಿ ನೇಮಕ. ಮನೆಯಲ್ಲೇ ಗುರುಕುಲ ಪದ್ಧತಿಯಲ್ಲಿ ಶಿಷ್ಯರಿಗೆ ಸಂಗೀತ ಶಿಕ್ಷಣ.. ಮಧುರೆ ವೇಣುಗೋಪಾಲ್‌, ಕಿಳಿನಲ್ಲೂರು ರಂಗಸ್ವಾಮಿ, ನಟರಾಜನ್‌, ವೈದ್ಯನಾಥನ್‌ ಮುಂತಾದ ಶಿಷ್ಯರಿಂದ ದೇಶದ ನಾನಾಕಡೆ ಸಲ್ಲುತ್ತಿರುವ ಸಂಗೀತ ಸೇವೆ. ಟಿ. ಗುರುರಾಜಪ್ಪನವರು ಸೃಷ್ಟಿಸಿದ ವಯೊಲಿನ್‌ ಮಾಧುರ್ಯ ಮಕ್ಕಳಿಂದ ಮುಂದುವರಿಕೆ.   ಇದೇ ದಿನ ಹುಟ್ಟಿದ ಕಲಾವಿದರು ಕೆ. ವೆಂಕಟಪ್ಪ – ೧೮೮೬ ಸಿದ್ದೇಶ್‌ ಕುಮಾರ್ – ೧೯೨೫ ವಿಮಲಾ ರಂಗಾಚಾರ್ – ೧೯೨೯ ಸೂರ್ಯಪ್ರಭ. ಡಿ – ೧೯೩೬ ಲಕ್ಷ್ಮೀನಾರಾಯಣ ಗೂಬಿ – ೧೯೪೨ ನಾಗವಲ್ಲಿ ನಾಗರಾಜ್‌ – ೧೯೫೯

* * *

ಪ್ರೊ. ಎಸ್. ಆರ್. ಮಳಗಿ

..೧೯೧೦ ಕನ್ನಡ ಸಾರಸ್ವತ ಲೋಕದಲ್ಲಿ ವಿಮರ್ಶಕ, ಭಾಷಾಶಾಸ್ತ್ರಜ್ಞ, ಛಂದಸ್‌ಶಾಸ್ತ್ರಕಾರ, ಅನುವಾದಕ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದಿಂದ ಸಾಹಿತ್ಯಪ್ರಿಯರಿಗೆ ಚಿರಪರಿಚಿತರಾಗಿರುವ ಸೇತುರಾಮ ರಾಘವೇಂದ್ರ ಮಳಗಿಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಎಂಬ ಹಳ್ಳಿಯಲ್ಲಿ. ೧೯೧೦ರ ಜುಲೈ ೮ರಂದು.