Categories
ರಚನೆಗಳು

ಪುರಂದರದಾಸರು

೩೦೩
ಉಗಾಭೋಗ
ಸಿರಿ ಚತುರ್ಮುಖ ಸುರರು
ಮನು ಮುನಿಗಳು
ಮನುಜೋತ್ತಮರು
ತಾರತಮ್ಯಯುಕ್ತರು
ಪುರಂದರ ವಿಠಲನ ಸದಾ ಶರಣರು.

೨೩೫
ಉಗಾಭೋಗ
ಸಿವಿರಿಂಚ್ಯಾದಿಗಳು ಅರಿಯದಂತಹ ಮಹಿಮೆ
ಅರಿತು ಪಾಡಲು ಜಗದಿ ಅರುಹಕಾರಯ್ಯ
ಅರವಿಂದದಳ ನಯನ ಶರಣೇಂದವರ ಕಾವ
ಕರುಣಾಸಾಗರ ನಮ್ಮ ಪುರಂದರ ವಿಠಲ.

೧೬೨
ಉಗಾಭೋಗ
ಸುಖಕೆ ತಾನಾರೊ ದುಃಖಕೆ ತಾನಾರೊ
ಸುಖ ದುಃಖವೆರಡೂ ಶ್ರೀಹರಿಯ ಅಧಿನವಲ್ಲದೆ
ಸಾಗರ ಸಡ್ಡೆಯ ಮಾಡಿ ಧರೆಯ ಕೂರಿಗೆ ಮಾಡಿ
ಶಿವ ಬ್ರಹ್ಮ ಎಂಬ ಎರಡೆತ್ತ ಹೂಡಿ
ಊಳುವಾತ ಇಂದ್ರನು ಬೆಳೆಸಿದ ಚಂದ್ರನು
ಕಳೆಯ ತೆಗೆಯುವವ ಯಮಧರ್ಮನು
ಬತ್ತಿದಾ ಬೆಳಸನು ಕೊಯ್ದು ತಾನೊಯ್ದನು
ದುಃಖವೇತಕೆ ಬಾರೊ ಪುರಂದರವಿಠಲ.

೨೧೫
ಉಗಾಭೋಗ
ಸುಖವಾದಡೆ ಎನ್ನಿಂದಾಯಿತೆಂಬರು
ದಃಖವಾದರೆ ದೈವ ಮಾಡಿತೆಂಬರು
ಸಖಕೆ ತಾನಾರೊ ದಃಖಕೆ ತಾನಾರೊ
ವಿಕಲನಾಗಿ ಕೆಡಬೇಡ ಮನುಜಾ
ರುಕುಮಿಣಿಯರಸು ಪುರಂದರ ತಾನೇ
ಸುಖ ದುಃಖವ ಮಾಡಿಸುವನು ಕಾಣಿರೋ.

೮೦
ಉಗಾಭೋಗ
ಸೂಸಲಾಸೆಗೆ ಹೋಗಿ ಬಡಿಗಲ್ಲಿನೊಳು ಸಿಕ್ಕಿದ
ಮೂಷಕನ ಪರಿಯಂತಾದೆನೊ ಎಲೆ ದೇವ
ಹೇಸಿ(ಕೆ) ವಿಷಯಂಗಳಿಗೆ ಎರಗುತಿದೆ ಎನ್ನ ಮನ
ಗಾಸಿಯಾದೆನೊ ಹೃಷಿಕೇಶ ನೀ ಸಲಹಯ್ಯ
ವಾಸವಾರ್ಚಿತ ಸಿರಿ ಪುರಂದರವಿಠಲ ನಿನ್ನ
ದಾಸರ ಸಂಗದಲಿ ಇರಿಸೆನ್ನ ಅನವರತ.
[ಕ್ಲೇಶವ ಕಳೆಯಯ್ಯಾ ದೊರೆಯೆ]

೧೩೩
ಉಗಾಭೋಗ
ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆಪುರುಷರಿಗೆ ಪುರುಷರು ಮೋಹಿಸುವುದುಂಟೆ?
ಪುರುಷ ಬ್ರಹ್ಮಾದಿಗಳು ನಿನ್ನನು ಮೋಹಿಸುವರುತಿರುವೆಂಗಳಪ್ಪ ಶ್ರೀಪುರಂದರ ವಿಠಲ.

೩೧೨
ಉಗಾಭೋಗ
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು
ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಸಿದರು
ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧವ ಬಿಡಿಸಿದರು
ಹಿದೆ ನಿಂದಿಸಿದವರೆ ಎನ್ನ ಬಂಧುಗಳು
ಬಾಯ ಬಡುಕರಿಂದ ನಾನು ಬದುಕಿದೆನು ಹರಿಯೆ
ಕಾಡಿ ಕಾಡಿ ಕೈವಲ್ಯಕ್ಕೆ ಪಥವಿತ್ತರು
ಕಾಸು ಹುಟ್ಟದಂತೆ ಪ್ರಾಯಶ್ಚಿತ್ತ ಮಾಡಿದರು
ಮೀಸಲು ಮಾಡಿದರು ಹರಿಯ ಒಡವೆಯೆಂದು
ಲೇಸು ಕೊಡೊ ನಮ್ಮಪ್ಪ ಪುರಂದರ ವಿಠಲ ನಿನ್ನ
ದಾಸರ ದಾಸರ ದಾಸನೆಂದೆನಿಸಯ್ಯ.

೩೨೧
ಉಗಾಭೋಗ
ಹಗಲು ನಾಲ್ಕು ಝಾವ ಹಸಿವನು ಕಳೆದೆನೊ
ಇರಳು ನಾಲ್ಕು ಝಾವ ವಿಷಯಕೆ ಕೂಡಿದೆನೊ
ವ್ಯರ್ಥವಾಯಿತಲ್ಲ ಈ ಸಂಸಾರ ಸುಖವೆಲ್ಲ
ಕೇಳಯ್ಯ ತಂದೆ ಶ್ರೀ ಪುರಂದರ ವಿಠಲ.

೨೦೧
ಉಗಾಭೋಗ
ಹತ್ತು ಗೋದಾನ ಸಮವು ಹರವಾಹನ ವೃಷೋತ್ಸರ್ಜನ
ಹತ್ತು ವೃಷಗಳಿಗೆ ಸಮ ಹಾರುವ ಕುದುರೆಯ ದಾನ ಕಾಣಿರೊ
ಹತ್ತು ಕುದುರೆಗಳಿಗೆ ಸಮ ಹಸ್ತಿಯದಾನ ಕಾಣಿರೊ
ಹತ್ತಾನೆಯ ಸಮ ಕ್ರತು
ಹತ್ತು ಕ್ರತುವಿಗೆ ಸಮ ಹರಿಭಕ್ತಗೆ ಕನ್ಯಾದಾನ
ಹತ್ತು ಕನ್ಯಾದಾನ ಸಮವು ಹಲವು ಜನಕೆ ಉದಕ ದಾನ
ಹತ್ತು ಉದಕ ದಾನಕೆ ಸಮ ಹಸಿದವಗೆ ಅನ್ನದಾನ
ನಿತ್ಯ ಪುರಂದರವಿಠಲನ ನೆನೆಯುತ ಪುಣ್ಯಕೆಣೆಯಿಲವಯ್ಯ.

೧೬೮
ಉಗಾಭೋಗ
ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು
ಚಿತ್ತಜನೈಯ್ಯನ ಚಿತ್ತದಿ ಧೇನಿಸಿ (ಧ್ಯಾನಿಸಿ)
ಅತ್ತಲುದಯಕ್ಕೆ ಗಳಿಗೆ ಎರಡರಲ್ಲಿ ಎದ್ದು
ನಿತ್ಯ ಸ್ನಾನವ ಮಾಡಿ ಆದಿತ್ಯಗಘ್ರ್ಯವನೀಯೆ
ಉತ್ತಮ ಜನಕೆಲ್ಲ ಮೆತ್ತಿದ ಪಾಪಗಳನ್ನು
ಉತ್ತರಿಸುವೆನೆಂದ ಪುರಂದರವಿಠಲ.

೨೬೫
ಉಗಾಭೋಗ
ಹರಿ ನಿನ್ನ ನಾಮವ ಸ್ಮರಿಸಲು
ದುರಿತ ಪೀಡಿಪುದುಂಟೆ |
ಅರಿತು ಭಜಿಪರಿಗೆಲ್ಲ ಕೈವಲ್ಯ ನಿನ್ನಯ
ಕರುಣವರಿತು ತನ್ನ ಮಗನ ಕೂಗಿದವಗೆ
ಮರಣ ಕಾಲದಿ ಒದಗಿದೆ ಶ್ರೀ ಪುರಂದರ ವಿಠಲ.

೪೪
ಉಗಾಭೋಗ
ಹರಿ ನಿನ್ನ ಭಕ್ತನೆನಿಸಿಕೊಂಡವ ಭಂಗ ಬಡಲುಬೇಕು
ಹರಿ ನಿನ್ನ ಭಕ್ತನೆನಸಿಕೊಂಡವ ದಿನ-ಪ್ರತಿದಿನದಲ್ಲಿ
ಅನ್ನ ಉದಕಗಳ ಕಾಣದಿರಬೇಕು
ಬೆನ್ನಟ್ಟಿರೋಗಗಳು ಹತ್ತಿಕೊಂಡಿರಬೇಕು
ತನ್ನವರ ಕೈಯಿಂದ ಚಿಹಿ ಎನಿಸಿಕೊಳಬೇಕು
ಎನ್ನ ಈ ಪರಿಯ ಮಾಡಿದ ಬಗೆ ಏನೋ ಪುರಂದರವಿಠಲ.

೨೭೪
ಉಗಾಭೋಗ
ಹರಿ ನೀ ಮುನಿದರೆ ಆರು ಬಂದೇನು ಮಾಡುವರು
ಹರಿ ನೀ ಒಲಿದರೆ ಆರು ಮುನಿದೇನ ಮಾಡುವರು
ಪುರಂದರ ವಿಠಲ.

೨೧
ಉಗಾಭೋಗ
ಹರಿ ನೀನೊಲಿವಂತೆ ಮಾಡು
ಒಲಿದರೆ ತಿರಿವಂತೆ ಮಾಡು
ತಿರಿದರೆ ಆರೂ ನೀಡಿದಂತೆ ಮಾಡು
ನೀಡಿದರೆ ಹೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು
ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು
ಇಂಬು ದೊರೆತರೆ ನಿನ್ನ ಪಾದಾರವಿಂದದಲಿ
ಇಂಬುದೋರೋ ಪುರಂದರವಿಠಲ.

೨೨
ಉಗಾಭೋಗ
ಹರಿ ನೀವೊಲಿವಂತೆ ಮಾಡು
ಒಲಿದರೆ ತಿರಿವಂತೆ ಮಾಡು
ತಿರಿದರೆ ದಾರು ನೀಡದಂತೆ ಮಾಡು
ದಾರು ನೀಡಿದರು ಹೊಟ್ಟೆ ತುಂಬದಂತೆ ಮಾಡು
ಹೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು
ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು
ಇಂಬು ದೊರೆಯದಿದ್ದರೆ ರಂಗ ನಿನ್ನ ಪಾದಾರವಿಂದದಲ್ಲಿ
ಇಂಬಿಟ್ಟು ಸಲಹೊ ಪರಂದರವಿಠಲ.

೨೯೮
ಉಗಾಭೋಗ
ಹರಿ ಸಿರಿ ಚರಣವಿರಲು ಮಿಕ್ಕ
ಭೂರಿ ದೈವಗಳೇಕೆ ಭಜಿಸುವೆ ಮರುಳೆ
ನೀರಡಿಸಿ ಜಾಹ್ನವಿಯ ತೀರದಲ್ಲಿದೆ
ಕೆರೆಯನೀರ ಕುಡಿವ ಮಾನವರುಂಟೆ
ತಾರುಣ್ಯವಿರಲು ವೈಕುಂಠ ವಿಠಲರೇಯನ
ತಿರುವೇಂಗಳಪ್ಪ ಸಿರಿ ಪುರಂದರ ವಿಠಲನ.

೧೨
ಉಗಾಭೋಗ
ಹರಿಕಥಾ ಶ್ರವಣಕ್ಕೆ ಮನವಿಟ್ಟ ಪ್ರೌಢ
ಅರವತ್ತು ಗಳಿಗೆಗಳ ವ್ಯರ್ಥ ಹೋಗಾಡ
ಪರಮ ಪದವಿಗೆ ಐದುವನವನೆ ಗಡ
ನರಕದ ಬಟ್ಟೆ ದೂರದಲೊಮ್ಮೆ ನೋಡ
ಪುರಂದರ ವಿಠಲನಂಘ್ರಿ ಗಾಢ-
ತರದಲಪ್ಪುವ ಮೈಮರೆದು ಮಾತಾಡ.

೪೩
ಉಗಾಭೋಗ
ಹರಿ-ಗುರುಗಳಿಗೆರಗದ ಹರಿಭಕ್ತಿಯೆಂತೆಹದಯ್ಯ
ಕೆರವತಿಂಬ ನಾಯಿಗೆ ತುಪ್ಪ-ಓಗರ ಸೊಗಸುವುದೆ
ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ
ನರಕಭಾಜನ ಪಾಮರರು ಕರಗುವರೆ
ಚಂದ್ರಕಿರಣಕೆ ಚಂದ್ರಕಾಂತಶಿಲೆ ಒಸರುವುದಲ್ಲದೆ
ಗೋರ್ಕಲ್ಲು ಒಸರುವುದೆ ಪುರಂದರವಿಠಲ.

೧೩
ಉಗಾಭೋಗ
ಹರಿನಾಮ ಕೀರ್ತನೆಯ ಭಕುತಿಯಿಂ ಕೇಳ್ವ
ಚಿರಸ್ವಭಾವದಲಿ ಕಣ್ಣೊರತೆಯ ತಾಳ್ವ
ಹರಿಯಂತೆ ಕೂಗಿ ಸುಜನರೊಳು ಬಾಳ್ವ
ದುರಿತ ಗಜಗಳ ಮಂಡೆಯನೇರಿ ಸೀಳ್ವ
ಹರುಷಾಮೃತಾಬ್ಧಿಯೊಳು ಇಳಿಮುಳಿಗೇಳ್ವ
ಪುರಂದರ ವಿಠಲೇಶನ ಹೊಂದಿ ತಾ ಬಾಳ್ವ.

೫೨
ಉಗಾಭೋಗ
ಹರಿನಿನ್ನ ಭಕ್ತನೆನಿಸಿಕೊಂಡವ ಭಂಗವ ಪಡಲು ಬೇಕೇ
ದಿನ-ಪ್ರತಿದಿನದಲ್ಲಿ ಅನ್ನ ವಸ್ತ್ರ ಉದಕಗಳ ಕಾಣದಿರಬೇಕೆ?
ಬೆನ್ನಟ್ಟಿ ರೋಗಗಳು ಹತ್ತಿರಬೇಕೇ?
ತನ್ನವರ ಕೈಯಿಂದ ಚಿಹಿ ಎನಸಿಕೇಳಬೇಕೆ?
ಎನ್ನ ಈಪವರಿಯಲಿ ಮಾಡಿದ ಬಗೆಯೇನೊ ಪುರಂದರವಿಠಲ.

೫೯
ಉಗಾಭೋಗ
ಹರಿಯ ಭಜಿಸಬೇಕು ಮನಮುಟ್ಟಿ
ಭಜಿಸಿದರೆ ತನ್ನ ಕಾರ್ಯವೆಲ್ಲವು ಗಟ್ಟಿ
ಇಲ್ಲದಿದ್ದರೆ ತಾಪತ್ರಯವು ಬೆನ್ನಟ್ಟಿ
ಯಮದೂತರೆಳೆವರು ಹೆಡೆಮುಡಿಗಟ್ಟಿ
ಪುರಂದರವಿಠಲನ ಕೋಪದ ದೃಷ್ಟಿ
ಹರಿಯ ಭಜಿಸಬೇಕು ಮನಮುಟ್ಟಿ.

೨೩೬
ಉಗಾಭೋಗ
ಹರಿಯೆಂಬುದೇ ಲಗ್ನ ಬಲವು
ಹರಿಯಂಬುದೇ ತಾರಾಬಲವು
ಹರಿಯಂಬುದೇ ದೈವ ಬಲವು
ಹರಿ ಶ್ರೀ ಲಕುಮಿ ಪತಿ ಪುರಂದರ ವಿಠಲನ
ಬಲವಯ್ಯ ನರರಿಗೆ.

೨೩೭
ಉಗಾಭೋಗ
ಹರಿಯೆಂಬೋದು ಲಗ್ನ ಬಲವು
ಹರಿಯೆಂಬೋದೆ ಸುದಿನ ಬಲವು
ಹರಿಯೆಂಬೋದೆ ತಾರಾ ಬಲವು
ಹರಿಯೆಂಬೋದೆ ಚಂದ್ರ ಬಲವು
ಹರಿಯೆಂಬೋದೆ ವಿದ್ಯಾ ಬಲವು
ಹರಿಯೆಂಬೋದೆ ದ್ರವ್ಯ ಬಲವು
ಹರಿಲಕ್ಷ್ಮೀಪತಿ ಪುರಂದರ ವಿಠಲನೆ
ಬಲವಯ್ಯ ಸರ್ವ ಸುಜನರಿಗೆ.

೯೫
ಉಗಾಭೋಗ
ಹರಿಶರಣು ಎನ್ನ ಮನೆಗೆ ಬಂದರೆ
ಮನೆ ಪಾವನವಪ್ಪದು
ಹರಿಶರಣರ ಎನ್ನ ಕೂಡೆ ಮಾತನಾಡಿದರೆ
ತನು ಪಾಪ ಹೋಹುದು
ಮನೆಯೊಳುಂಡರೆ ಎನ್ನ ಇಪ್ಪತ್ತೊಂದು ಕುಲ
ಪಾವನವಪ್ಪುದು
ಹರಿಶರಣರೆನಗೆ ಗತಿ ಹರಿಶರಣರೆನಗೆ ದೆಸೆ
ಎನ್ನ ಗದುಗಿನ ವೀರನಾರಾಯಣ ಪುರಂದರವಿಠಲ.

೨೩೮
ಉಗಾಭೋಗ
ಹರಿಸರ್ವೋತ್ತಮನೆಂಬ ಹಿರಿಯ ಪುತ್ರನಿರಲಿಕ್ಕೆ
ನರಪುತ್ರನಿಂದಾಗುವ ಗತಿ ಯಾವುದಯ್ಯ
ಸೃಷ್ಟಿಕರ್ತನೆಂಬ ಶ್ರೇಷ್ಠ ಪುತ್ರನಿರಲಿಕ್ಕೆ
ದುಷ್ಟ ಪುತ್ರನಿಂದ ಆಗುವ ಗತಿ ಯಾವುದಯ್ಯ
ನಾರಾಯಣನೆಂಬ ನಾಮ ಪುತ್ರನಿರಲಿಕ್ಕೆ
ಕಾಮಪುತ್ರನಿಂದ ಆಗುವ ಗತಿ ಯಾವುದಯ್ಯ
ಪುರಂದರ ವಿಠಲನೆಂಬ ಪುಣ್ಯ ಪುತ್ರ ನಿರಲಿಕ್ಕೆ
ಅನ್ಯ ಪುತ್ರರಿಂದ ಆಗುವ ಗತಿ ಯಾವುದಯ್ಯ.

೨೩೯
ಉಗಾಭೋಗ
ಹರಿಸರ್ವೋತ್ತಮನೆಂಬ ಹಿರಿಯ ಪುತ್ರನಿರಲಾಗಿ ಈ
ನರಪುತ್ರರಿಂದ ಆಹೋದೇನಯ್ಯ
ಪದ್ಮನಾಭನೆಂಬ ದೊಡ್ಡ ಪುತ್ರನಿರಲಾಗಿ
ಈ ದಡ್ಡ ಪುತ್ರರಿಂದಲಿ ಆಗುವ ಗತಿಯೇನಯ್ಯ
ಶ್ರೀ ಕೇಶವನೆಂಬ ಜೈೀಷ್ಠ ಪುತ್ರ ನಿರಲಾಗಿ
ಈ ನಷ್ಟ ಪುತ್ರರಿಂದಾಗುವ ಸ್ಥಿತಿಯೇನಯ್ಯ
ಪುರಂದರ ವಿಠಲನೆಂಬ ಪುಣ್ಯ ಪುತ್ರನಿರಲಾಗಿ
ಈ ಅನ್ಯ ಪುತ್ರರಿಂದಲಿ ಆಗುವ ಮತಿಯೇನಯ್ಯ.

೨೪೨
ಉಗಾಭೋಗ
ಹರಿಹರಿಯೆಂದು ಕರೆಯುವುದೇ ತಡ
ಕರೆದಲ್ಲಿಗೆ ಬರುವ ನರಹರಿಯೆಂದು
ಕರೆಯುವುದೆ ತಡ ಕರೆದಲ್ಲಿಗೆ ಬರುವ
ಸುರನರ ಲೋಕದಲ್ಲೆಲ್ಲಿದ್ದರೂ ಕರೆದಲ್ಲಿಗೆ ಬರುವ
ಪುರಂದರ ವಿಠಲನೆಂದು ಕರೆಯುವುದೆ ತಡ
ಕರೆದಲ್ಲಿಗೆ ಬರುವ.

೧೬೭
ಉಗಾಭೋಗ
ಹರೇ ಗೋವಿಂದಾ ಎಂದೇಳು ಹತ್ತವತಾರವ ಪೇಳು
ಮಾಡಲದೆನೆಗೆ ನಡೆ
ಗೋ-ವಿಪ್ರ-ತುಳಸಿಗೆ ಎರಗಿ ಬಂದು
ನೈಋತ್ಯ ದಲ್ಲಿ ತೃಣವನಿಟ್ಟು
ಮಲ ಮೂತ್ರಂಗಳ ಬಿಟ್ಟು (ಶೌಚಮಾಡು)
ಗುರುಪರಂಪರೆಯೆಂದು ಪುರಂದರವಿಠಲನೆನ್ನು.

೧೮೩
ಉಗಾಭೋಗ
ಹಲವು ಕರ್ಮಗಳಿಗೆ ಹವಣು ಎರಡಾಚಮನ
ಮಲ-ಮೂತ್ರ ವಿಸರ್ಜನಕ್ಕ ಮಾಡು ಮೂರು
ನಲಿದು ಉಂಡ ಮೇಲೆ ನಾಲ್ಕು
ಲಲನೆಯ ಸಂಗಕ್ಕೆ ಹನ್ನೆರಡು
ಅಲ್ಲಿಂದೊಲಿವನು ಪುರಂದರವಿಠಲ ಆಚಮನವನು ಮಾಡೆ.

೧೭೨
ಉಗಾಭೋಗ
ಹಲ್ಲು ಬೆಳಗುವಲ್ಲಿ ಜಂಬು-ಪ್ಲಕ್ಷಪತ್ರೆ
ನೆಲ್ಲ ನಿಲ್ಲು(?) ಮಹಾಲಯ ಪುಣ್ಯ ದಿವÀಸದಿ
ಬಲ್ಲಿದ ಏಕಾದಶಿ ಪರ್ವಣೆ ಅಮವಾಸ್ಯೆಯಲಿ
ರವಿ-ಶಶಿ ಗ್ರಹಣದಲಿ
ಸಲ್ಲದಯ್ಯ ದಂತಕಾಷ್ಠ ಮಲಿನಗಳಿಗೆ
ಗಲ್ಲಿಸಿ ನೀರಮುಕ್ಕುಳಿಸೆ ಹನ್ನೆರಡು
ಬಲ್ಲ ಬುಧರಿಗೆ ಪುರಂದರವಿಠಲ ಒಲಿವ
ಇದನಾಚರಿಸೆ.

೨೦೮
ಉಗಾಭೋಗ
ಹಸಿವಾಯಿತೇಳು ದೇವರ ತೊಳೆ ಎಂಬರು
ಹಸನಾಗಿ ಮನಮುಟ್ಟಿ ಪೂಜೆಯ ಮಾಡರು
ಹಾಸಿ ಹಾವಿನ ಬುಟ್ಟಿಯಂತೆ ಮುಂದಿಟ್ಟುಕೊಂಡು
ವಸುಧೆಯೊಳಗೆ ಉರಗಗಾರನ ಆಟವಾಡುವರಯ್ಯ
ಪರಧನ ಪರಸತಿ ಪರದ್ರವ್ಯಕ್ಕೆರಗುವರು
ತೊರೆಯದಿದ್ದರೆ ದುರಿತ ಪೋಗುವುದೆ?
ಸರುವವೆಲ್ಲವ ತೊರೆದು ಹರಿಯ ಧ್ಯಾನವ ಮಾಡಿದರೆ
ವರವ ಕೊಡುವ ನಮ್ಮ ಪುರಂದರವಿಠಲ.

೨೪೩
ಉಗಾಭೋಗ
ಹಾ ಕೃಷ್ಣ! ಹಾ ದ್ವಾರಕಾವಾಸಿ ! ಎಂದೆನಲು
ಶ್ರೀಪತಿ ಅಕ್ಷಯವಸ್ತ್ರವನಿತ್ತು
ದ್ರೌಪತಿಯ ಅಭಿಮಾನವ ಕಾಯ್ದ ನಮ್ಮ
ಆಪತ್ತಿಗೆ ಆಹೆನೆಂಬ ಶ್ರೀಪತಿ ಪುರಂದರ ವಿಠಲ
ಆ ಪಾರ್ಥನ ರಮಣಿಗೆ ಅಕ್ಷಯ ವಸ್ತ್ರವನಿತ್ತು ಕಾಯ್ದ.

೬೭
ಉಗಾಭೋಗ
ಹಾಡಿದರೆನ್ನೊಡೆಯನ ಹಾಡುವೆ
ಬೇಡಿದರೆನ್ನೊಡೆಯನ ಬೇಡುವೆ
ಒಡೆಯನಿಗೆ ಒಡಲನು ತೋರುತ ನನ್ನಯ
ಬಡತನ ಬಿನ್ನಹ ಮಾಡುವೆ ಕಾಡುವೆ
ಒಡೆಯ ಪುರಂದರ ವಿಠಲನ
ಅಡಿಗಳ ಸಾರೆ ಬದುಕುವೆನಯ್ಯ ಸಾರಿ ಬದುಕುವೆ.

೧೦೫
ಉಗಾಭೋಗ
ಹಿಂಸಕರ ಸಂಗದಿಂದ ಬಂದ ಪಾತಕಕ್ಕೆ
ಕಂಸಮರ್ದನನೆಂದರೆ ಸಾಲದೆ?
ಜಾರರ ಸಂಗದಿಂದ ಬಂದ ಪಾತಕಕ್ಕೆ
ಗೋಪೀಜನ ಜಾರನೆಂದರ ಸಾಲದೆ?
ಚೋರರ ಸಂಗದಿಂದ ಬಂದ ಪಾತಕಕ್ಕೆ
ನವನೀತಚೋರನೆಂದರೆ ಸಾಲದೆ?
ಜಾರ ಚೋರನಾದ ಅಜಮಿಳನನ್ನು
ವೈಕುಂಠಕ್ಕೇರಿಸಿದ ಪುರಂದರವಿಠಲಗೆ ನಮೊ ನಮೊ.

೨೦೩
ಉಗಾಭೋಗ
ಹಿರಿಯರ ದಿನದಲ್ಲಿ ಹೆಸರ ತೊವ್ವೆ ಅತೈಲ ಭಕ್ಷ್ಯ
ಗೋದಿ ಉದ್ದಿನಲ್ಲಿ ಮಾಡದಿರಲು
ಸಿರಿಯು ಕಾಗೆಯ ಮಾಂಸಕ್ಕೆಂದು ಶ್ರುತಿಸಾರುತಿದೆ ಜಗದೊಳು
ಪುರಂದರವಿಠಲನ ಆರಾರು ಎಲ್ಲ ಕೇಳಿ.

೨೬೬
ಉಗಾಭೋಗ
ಹೀನ ಮಾನವನ ಯೋನಿಯಲಿ ಜನಿಸದೆನೊ ನಾನು
ಏನಾದರೇನು ದೀನದಯಾಸಾಗರನೆ ಕು-
ಯೋನಿಯಲಿ ಎನ್ನ ದೇಹವೆನ್ನದಂತೆ ಮಾಡು
ಜ್ಞಾನವನು ಬೋಧಿಸಿ ಸಾನುರಾಗದಿ ಕಾಯೋ
ವೇಣುಧರ ವೇದಾಂತ ವೇದ್ಯ ನರಹರಿಯೆ
ಕಾನನದೊಳು ಕಣ್ಣು ಕಾಣದವ ಬಿದ್ದಂತೆ
ನಾನು ಬಿದ್ದಿಹೆ (ನೀ) ಕಾಯೊ ಪುರಂದರವಿಠಲ.

೫೧
ಉಗಾಭೋಗ
ಹುಟ್ಟುವ ಭೀತಿ ಹೊಂದುವ ಭೀತಿ
ವಿಠಲನಂಘ್ರಿಯ ನೆನೆಯದವರಿಗೆ
ಕಾಲನ ಭೀತಿ ಕರ್ಮದ ಭೀತಿ ಗೋ-
ಪಾಲನ ದಾಸನಾಗದವನಿಗೆ
ಅರಿಷಡ್ವರ್ಗದ ಮಹಾಭೀತಿ ಶ್ರೀ
ಹರಿನಾಮವನುಚ್ಚರಿಸದವಗೆ
ಚೆಲುವ ಪುರಂದರವಿಠಲನ್ನ ಪೂಜಿಸದವರಿಗೆ.

೨೬೭
ಉಗಾಭೋಗ
ಹೃದಯ ಕಮಲದಲ್ಲಿ ನಾನಿನ್ನ
ಪದ ಪದುಮನ ನೆನೆವಂತೆ ಮಾಡು
ಯದುರಾಜಾಧಿರಾಜ
ಸುದರುಶನಧರ ಯದುರಾಜಾಧಿರಾಜ
ಇದನೆ ಕೃಪೆ ಮಾಡೆನಗೆ ಮದನ ಪಿತ
ಪುರಂದರ ವಿಠಲ ಯದು ರಾಜಾಧಿರಾಜ.

೧೭೭
ಉಗಾಭೋಗ
ಹೃದಯದ ಮಲವನ್ನು ತೊಳೆಯಲರಿಯದೆ ತಾವು
ಉದಯದಲೆದ್ದು ಮಿಂದು ಗದಗದ ನಡಗುವರು
ಅವರಿಂದೇನು ಫಲ? ಅದಕ್ಕಿಂತ
ಉದಯಾಸ್ತಮಾನ ನೀರೊಳಗಿದ್ದ ಮುದಿಕಪ್ಪೆ ಮಾಡಿದ
ತಪ್ಪೇನಯ್ಯ?
ಪುರಂದರವಿಠಲನ ನಾಮವ ನೆನೆಯದೆ
ದಿನಕೆ ಇನ್ನಾರುಬಾರಿ ಮುಳುಗಿದರೇನಯ್ಯಫಲವು.

೨೬೮
ಉಗಾಭೋಗ
ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ
ಎತ್ತದೆ ಇಳಿಸದೆ ತಪ್ಪಿ ಹೋಗುವರೆ
ಮತ್ತೆ ನಿನ್ನ ದಾಸ ನಾನಙ್ಞನಾದರೆ
ಕರ್ತೃ ನೀ ಪೊರೆಯದಿರುವರೇನೊ ಪುರಂದರ ವಿಠಲ.

೧೪೪
ಉಗಾಭೋಗ
ಹೊಲೆಯ ಬಂದಾನೆಂದು ಒಳಗೆ ದೇವರಮಾಡಿ
ಗಣ ಗಣ ಗಂಟೆಯ ಬಾರಿಸುವದೇತಕಯ್ಯ
ತನುವಿನ ಕೋಪ ಹೊಲೆಯಲ್ಲವೆ?
ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟುಕೊಂಡು
ಇದಕೇನು ಮದ್ದು ಶ್ರೀಪುರಂದರವಿಠಲ.

೧೫೭
ಸುಳಾದಿ
ಉಡುಪಿ ಕೃಷ್ಣ ಸುಳಾದಿ
ಧ್ರುವತಾಳ
ಅಂಗುಟ ಮಾತುರವೆಂಬ ಮೂರುತಿ ಪರೀಕ್ಷಿಸಿತು |
ಕಂಡು ಕಂಡರÀಸಿಕೊಂಬ ಕಮನೀಯ ಮೂರುತಿಯು |
ಆತುಮ ಮೂರುತಿ ಅಂತರಾತುಮ ಮೂರುತಿಯು |
ಬಿಂಬ ಮೂರುತಿ ಜೀವದಾಕಾರ ಮೂರುತಿಯು |
ಅಣುರೇಣುವೆಂಬ ಚಿನ್ಮಯ ಮೂರತಿಯು |
ಮುನಿಗಳ ಹೃದಯದೊಳು ಮಿನುಗುವ ಮೂರುತಿಯು |
ಬೊಮ್ಮಗಾದಾ ಮೂರುತಿಯು ತಾನೆಲ್ಲಿಂದೆಲ್ಲಿ ಬಂದಿತು |
ಅಮರರಾಭರಣ ತಾನೆಲ್ಲಿಂದೆಲ್ಲಿಗೊದಗಿತೊ |
ಎನಗೆ ಪ್ರಸನ್ನನಾದ ಉಡುಪಿಯ ಕೃಷ್ಣ ಮೂರುತಿ |
ಪುರಂದರವಿಠಲನ ಒಲುಮೆಯೆಂತೊ | ೧
ಮಟ್ಟತಾಳ
ಮಂದಾರಮಲ್ಲಿಗೆ ತುರುಬಲಿ ದಿವ್ಯಾಂಬರವನ್ನುಟ್ಟು ಗೋ-|
ವಿಂದನಾಡಿದಾಟಗಳನು ಪ್ರಬಂಧಗೀತಗಳ ಮಾಡಿ |
ಚೆಂದ ಚೆಂದದಲಿ ಪಾಡಿದಳು ಮೊಸರ ಮಥನದಲಿ ತನ್ನ |
ಕಂದನ ಅದ್ವಿತೀಯ ಅಪ್ರಮೇಯಾಗಮ್ಯ ಗೋಚರನೆಂದು |
ನಂದವ್ರಜವೆತ್ತ ಉಡುಪಿಯ ಕೃಷ್ಣನ ಮಹಿಮೆ ಯೆತ್ತಲೆಂದು |
ವೃಂದಾರಕವಂದ್ಯ ಪುರಂದರವಿಠಲನೆ ಬಲ್ಲನೆನುತಿರೆ ೨
ತ್ರಿವಡೆ ತಾಳ
ಪೊಂಬಟ್ಟೆ ಪಾಲ್ಮೊಸರಿಂದಲಿ ತೋದಿದೆ |
ಕಂಬು ಕಂಧರ ಕೆನೆ-ಬೆಣ್ಣೆಯ ಲೊರೆದಿದೆ |
ಅಂಬುಜನಾಭ ನೀ ಎಲ್ಲೆಲ್ಲಿ ತುಡುತಿಂದೆ |
ಎಂಬ ಗೋಪಿಗೆ ಕೃಷ್ಣ ಅಂಜುತಿದ್ದುದ ಕಂಡೆ |
ಅಂಬುಜ ಭವ ಪಿತ ಈ ಉಡುಪಿಯ ಕೃಷ್ಣ |
ತಾಂ ಬಾಲಕನಾದ ಪುರಂದರವಿಠಲ ೩
ಅಟತಾಳ
ದೇವತರುವು ನಮ್ಮ ದೇವ ಕೊಳಲನೂದೆ |
ದೇವನಾರಿಯರುಟ್ಟ ದೇವಾಂಗದುಗುಲವ |
ಆವ ಸುಸ್ವರವೊ ಆವ ಸುಜಾತಿಯೊ |
ಆವ ಮೂಚ್ರ್ಛನವೊ ಆವ ಸುನಾದವೊ |
ದೇವ ಪುರಂದರವಿಠಲನಂಘ್ರಿಗಳಾಣೆ |
ಈ ಉಡುಪಿಯ ಕೃಷ್ಣನಾದಿ ಮೂರುತಿ ತಪ್ಪಾ ೪
ಆದಿತಾಳ
ಒಂದು ಕೈಯಲಿ ಕಡೆಗೋಲು ಮ |
ತ್ತೊಂದು ಕೈಯಲಿ ಕಡೆವ ನೇಣು |
ನಿಂದು ತಾಯ ಮೊಗವಾ ನೋಡಿ |
ಕಂದನ ಕಂದ ನಲಿದಾಡುತ ಧಿಂ ಧಿಂ ಧಿಂ |
ಧಿಂ ಧಿತ ಮುದ್ದು ಪುರಂದರವಿಠಲ |
ಉಡುಪಿಯ ಕೃಷ್ಣ ೫
ಜತೆ
ಉಡುಪಿಯ ಸಿರಿ ಕೃಷ್ಣ ಪುರಂದರವಿಠಲ |
ಬಿಡೆನೊ ಬಿಡೆನೊ ನಿನ್ನ ಚರಣಕಮಲವ ||

೧೨೮
ಸುಳಾದಿ
ನರಸಿಂಹ ಸುಳಾದಿ
ಧ್ರುವತಾಳ
ಅಂಜುವೆ ನಾನೀ ಸಿಂಹದ ಮೊಗದವ |
ಹುಂಕರಿಸುವೆ ಮೊರಿದೊಮ್ಮೊಮ್ಮೊ |
ಅಂಜುವೆ ನಾನೀ ಕೋಪಾಟೋಪದವ |
ಗುಡಗುಡಿಸುವೆ ಮೊರೆದೊಮ್ಮೊಮ್ಮೊ |
ಅಂಜುವೆ ನಾನೀ ಕಿವಿಯ ಮೇಳವಿಸಿ
ಮೆಲ್ಕವಿದೆರಗುವೆ ಮೊರದೊಮ್ಮೊಮ್ಮೊ |
ಅಂಜುವೆ ನಾನೀ ಕುಡುದಾಡೆಗಳ |
ಕಿಡಿ ಕಿಡಿ ಕಿಡಿಗೆದರಿಸುವೆ ಮೊರೆದೊಮ್ಮೊಮೊ |
ಅಂಜುವೆ ನಾನೀ ತೆರವಾಯ ತರೆಯುತ
ಗಹಗಹಿಸುವೆ ಮೊರೆದೊಮ್ಮೊಮ್ಮೊ |
ಅಂಜುವೆ ನಾನೀ ಸಿರಿಮುದ್ದು ನರಸಿಂಹ
ಪುರಂದರವಿಠಲ ನೀನು ಉರಿಮೋರೆ ದೈವವೆ ಅಂಜುವೆ ೧
ಮಟ್ಟತಾಳ
ಹಿರಣ್ಯಕಶಿಪುವಿನ ಉದರವ ಬಗಿದ ಬಳಿಕ |
ಕರುಳುಮಾಲೆಯ ಕಿತ್ತು ಕೊರಳಲಿಕ್ಕಿದ ಬಳಿಕ |
ಉರಿಯನುಗುಳಲೇತಕೆ ಸಿರಿಯ(ಸು)ನುಡಿಸಲೇತಕೆ |
ಹರ-ಬೊಮ್ಮಾದಿಗಳನ್ನು ಸರಕುಮಾಡಲೇತಕೆ |
ಸಿರಿಮುದ್ದು ನರಸಿಂಹ ಪುರಂದರವಿಠಲ
ಪ್ರಹ್ಲಾದದೇವ ಬಂದರೆ ಕರೆದು ಮುದ್ದಾಡಲೇತಕೆ ೨
ತ್ರಿವುಡೆ ತಾಳ
ಅಟ್ಟಹಾಸಕಬುಜಜಾಂಡ ಕಟ್ಟಾಹ ಪ್ರತಿಧ್ವನಿಗೊಡುತಲಿದೆ |
ಮೆಟ್ಟಿದಳೆ ತಲೆ ಕೆಳಗಾಗುತಲಿದೆ |
ಬೆಟ್ಟಗಳೈಸೂ ಉರುಳುರುಳಿ ಬೀಳುತಿವೆ |
ದಿಟ್ಟ ಮುದ್ದು ನರಸಿಂಹ ಪುರಂದರವಿಠಲನೆ
ಕಟ್ಟರಸು ಕಾಣಿರೊ ೩
ಅಟತಾಳ
ಉರಿಸಾಗರಗಳ ಸುರಿದು ನಾಲಗೆ ನೀಡೆ |
ಚರಾಚರಂಗಳು ಚಾರಿವರಿವುತಲಿತ್ತು |
ಬ್ರಹ್ಮಾಂಡವಂದೇ ಸಿಡಿದು ಹೋಗುತಿತ್ತು |
ಬ್ರಹ್ಮಪ್ರಳಯವಂದೇ ಆಗಿಹೋಗುತಿತ್ತು |
ಸಿರಿಮುದ್ದು ನರಸಿಂಹ ಪುರಂದರವಿಠಲ |
ಪ್ರಹ್ಲಾದದೇವ ಬಂದು ನಿಲಿಸದಿದ್ದರೆ |
ಬ್ರಹ್ಮಾಂಡವಂದೇ ಸಿಡಿದುಹೋಗುತಿತ್ತು ೪
ಏಕತಾಳ
ಹಿರಣ್ಯಕಶಿಪುವಿನುದರವ ಬಗಿದು ಉಗುರಲಿ |
ಸರಸವಾಡಿದಿರಾ ಮೈಮುಟ್ಟಿ ಸರಸವಾಡಿದಿರಾ |
ಸಿರಿಮುದ್ದು ನರಸಿಂಹ ಪುರಂದರವಿಠಲ |
ಸರಸವಾಡಿದಿರಾ? ೫
ಜತೆ
ಸಿರಿಮುದ್ದು ನರಸಿಂಹ ಪುರಂದರವಿಠಲ |
ಶರಣ ಪ್ರಹ್ಲಾದ ಸಂರಕ್ಷಕ ಜಯಜಯ ||

೨೭
ಜೋಗುಳಸುಳಾದಿ
ಸುಳಾದಿ
ಧ್ರುವ ತಾಳ
ಅಂಬುಧಿ ತೊಟ್ಟಲಾಗೆ ಆಲದೆಲೆಯಾಗಿ |
ಅನಂತ ಮೃದುಹಾಸಿಗೆಯಾಗಿ ಅಯ್ಯ |
ವೇದ ನೇಣುಗಳಾ ವೇದಾಂತದೇವಿಯರು |
ಪಾಡಿ ಮುದ್ದಾಡಿ ತೂಗುವರಾಗಿ |
ಆನಂದ ಗೋಪಿಯರು ಇನ್ನೆಂಥ
ಪರಮಾನಂದವನುಂಬರೊ |
ಪುರಂದರವಿಠಲ ಬಲ್ಲನಯ್ಯ | ೧
ಮಟ್ಟ ತಾಳ
ಜೋ ಜೋ ಜೋ ಎನ್ನ ಸಿರಿಹರಿ ಮೂರುತಿ |
ಜೋ ಜೋ ಜೋ ಎನ್ನ ಬೊಮ್ಮದ ಮರಿಯೆ |
ಜೋ ಜೋ ಜೋ ಎನ್ನ ಪುರಂದರವಿಠಲ |
ಜೋ ಜೋ ಜೋ ಎನ್ನ ಎನ್ನ ತಮ್ಮ ದಮ್ಮಯ್ಯ
ಜೋ ಜೋ ಜೋ ಎನ್ನ ಎನ್ನ ಕಂದ ಗೋವಿಂದ ೨
ತ್ರಿವಿಡೆ ತಾಳ
ಅಷ್ಟಮಹಿಷಿಯರು ಇಟ್ಟು ಗುಟ್ಟಲಿ ಅಯ್ಯ |
ಸೋಳ ಸಾಸಿರ ಮಂದಿ ಆಳು ಮಾಡುವರೆನ್ನ |
ಸೋಳಸಾಸಿರ ಮಂದಿ ಬೀಳು ಮಾಡುವರೆನ್ನ |
ಪುರಂದರವಿಠಲನ್ನ ಕಂಡಲ್ಲೆ ಬಿಡುವೆನೆ |
ಮೇಲೆ ಬಂದದ್ದು ಮತ್ತೆ ನೋಡಿಕೊಂಬೆ ಅಯ್ಯ ಅಯ್ಯಾ ೩
ಅಟ್ಟ ತಾಳ
ಮಂಥನ ಮಾಡಲು ಮಾಧವ ಮೊಸರೆ ಮೀಸಲು |
ಇಂಥಾದ್ದುಂಟೆ ಬಿಡು ಬಿಡು ಕರದಲ್ಲಿ ಕಡೆಗೋಲು |
ಎಂಥವನೊ ನೀನಂಜದೆ ಎನ್ನಾಳಿದೆ |
ಪುರಂದರವಿಠಲ ಇಂಥಾದ್ದುಂಟೆ ಬಿಡು ಕರದಲ್ಲಿ ಕಡಗೋಲು ೪
ಆದಿ ತಾಳ
ದೇಹವ ಮಾಡಿದೆÉ ದೇಹವ ಕೂಡಿದೆ |
ದೇಹವು ತಾನೆಂಬ ಭ್ರಮೆಯ ಬಿಡಿಸಿದೆ |
ದೇಹಿ ನಾನಾದೆನೊ ದೇವ ನೀನಾದೆಯೋ |
ಶ್ರೀವರನಾಥ ಪುರಂದರವಿಠಲ ೫
ಜೊತೆ
ಅನಂತಮೂರತಿ ಅನಂತಕೀರುತಿ
ಅನಂತನಾಭ ಪುರಂದರವಿಠಲ

೨೬
ಜೋ ಜೋ ಸುಳಾದಿ
ಸುಳಾದಿ
ಧ್ರುವತಾಳ
ಅಂಬುಧಿ ತೊಟ್ಟಿಲಾಗಿ ಆಲದೆಲೆಯಾಗಿ |
ಅನಂತ ಮೃದುಹಾಸಿಗೆಯಾಗಿ ಅಯ್ಯಾ |
ವೇದ ನೇಣುಗಳಾಗಿ ವೇದಾಂತದೇವಿಯರು |
ಪಾಡಿ ಮುದ್ದಾಡಿ ತೂಗುವರಾಗಿ
ಆದಿಪುರುಷನಾತ ಅಜಾತ ಅಜನಪಿತ ಅಂಬುಧಿ ತೊಟ್ಟಿಲಾಗಿ
ಅಗಮ್ಯ ಅಗೋಚರನೆ ಶಿಶುವು ಆಗಿ ಅಯ್ಯಾ |
ಆ ನಂದನರು ಗೋಪಾಲರು |
ಆ ಯೊಶೋದಾದಿ ಗೋಪಿಯರು |
ಇನ್ನೆಂಥ ಪರಮಾನಂದವನುಂಬರೋ |
ಪುರಂದರವಿಠಲನೊಬ್ಬನೆ ಬಲ್ಲನವ | ೧
ಮಟ್ಟಿತಾಳ
ಜೋ ಜೋ ಜೋ ಎನ್ನ ಸಿರಿಹರಿಮೂರುತಿ |
ಜೋ ಜೋ ಜೋ ಎನ್ನ ಕಂದ ಗೋವಿಂದ |
ಜೋ ಜೋ ಜೋ ಎನ್ನ ತಮ್ಮ ದಮ್ಮಯ್ಯ |
ಜೋ ಜೋ ಜೋ ಎನ್ನ ಹೊನ್ನುರನ್ನವೇ |
ಜೋ ಜೋ ಜೋ ಎನ್ನ ಮರಿಯೆ ಬೊಮ್ಮದ ಮರಿಯೇ |
ಜೋ ಜೋ ಜೋ ಎನ್ನ ಸಿರಿಯೆ ಸುರರ ಸಿರಿಯೆ |
ಜೋ ಜೋ ಜೋ ಎನ್ನ ಸ್ವಾಮಿ ಸುರರಂತರ್ಯಾಮಿ |
ಜೋ ಜೋ ಜೋ ಎನ್ನ ಪುರಂದರವಿಠಲ | ೨
ತ್ರಿವಿಡಿತಾಳ
ಮಂಥನ ಮಾಡಲೀಯೆ ಮಾಧವ ಮೊಸರು ಮೀಸಲು |
ಇಂಥದುಂಟೇ ರಂಗ ಬಿಡು ಬಿಡುಕಂಡೆಯಾ ಕಡೆಗೋಲು |
ಎಂಥವನೋ ನೀನು ಏಳುತ್ತಾಗಳೆ ಜಗಳ |
ಇಂಥದುಂಟೇ ರಂಗ ಬಿಡು ಬಿಡು ಕಂಡೆಯಾ ಕಡೆಗೋಲು |
ಎಂಥವನೋ ನೀನಂಜದೆ ಎನ್ನಾಳಿದ ಪುರಂದರವಿಠಲ |
ಇಂತದುಂಟೇ ಬಿಡು ರಂಗಾ ಬಿಡು ಬಿಡು
ಕಂಡೆಯಾ ಕಡೆಗೋಲು ೩
ಅಟ್ಟತಾಳ
ಅಷ್ಟಮಹಿಷಿಯರು ಸಿಟ್ಟುಗುಟ್ಟಲಿ ಎನ್ನ |
ಗೋಪಾಂಗನೆಯರು ನೂಕಿಸಲಿ ಎನ್ನ |
ಸೋಳಸಾಸಿರ ಮಂದಿ ಅಳು ಮಾದಲೆ ಎನ್ನ |
ಸೋಳಸಾಸೆರ ಮಂದಿ ಕೀಳು ಮಾಡಲಿ ಎನ್ನ |
ಪುರಂದರವಿಠಲನ್ನ ಕಂಡಲ್ಲಿ ಬಿಡುವೆನೆ |
ಮೇಲೆ ಬಂದುದು ಮತ್ತು ನೋಡಿಕೊಂಬೆನು ನಾನು
ಸೋಳಸಾಸಿರ ಮಂದಿ ೪
ಆದಿತಾಳ
ದೇಹವ ಮಾಡಿದೆ ದೇಹಿಯ ಮಾಡಿದೆ |
ದೇಹ ಸಂಬಂಧವ ಮಾಡಿದೆ ಕೂಡಿದೆ |
ದೇಹವು ತಾನೆಂಬ ಭ್ರಮೆಯನು ಮಾಡಿದೆ |
ಶ್ರೀ ಹರಿ ವೃಥಾಪ್ರಲಾಪ |
ದೇವನೀನಾದೆಯೆಲೊ ದೇಹಿ ನಾನಾದೆನು |
ಶ್ರೀಧರನಾಮಕ ಪುರಂದರವಿಠಲ | ೫
ಜತೆ
ಅನಂತ ಮೂರುತಿ ಅನಂತ ಕೀರುತಿ
ಅನಂತ ನಾಮಕ ಪುರಂದರವಿಠಲ

೧೦೧
ಸುಳಾದಿ
ಮಹಿಮಾಸುಳಾದಿ
ಧ್ರುವತಾಳ
ಅಕಿಂಚನಗೆ ಅನಘ್ರ್ಯವಾದಂತೆ |
ಅರತಂಗೆ ಆರತವಾದಂತೆ |
ಅಂಧಕಂಗೆ ಅಕ್ಷಿಯಾದಂತೆ |
ಅರವಿಂದಕಾದಿತ್ಯನಾದಂತೆ |
ಅಳಿಗೆ ಅಮರಾಂಘ್ರಿಪವಾದಂತೆ |
(ಆ) ಅಪುಣ್ಯಕ್ಕೆ ಅಮೃತವಾದಂತೆ |
ಅಯ್ಯ ಅಕಿಂಚನಗೆ ಅನಘ್ರ್ಯವಾದಂತೆ |
ಅಪಾರ ಸಂಸಾರ ಭಯಭೇದ |
ಅನೇಕದ ಅದಿಪತಿಯಾದ |
ಪುರಂದರವಿಠಲರಾಯ |
ಎನಗೆ ನಿನ್ನ ಸಿರಿ ನಾಮ ದೊರಕಿಸು ದೇವಾ ೧
ಮಟ್ಟತಾಳ
ಅಕಳಂಕ ಚರಿತ ನಮೋ ನಮೋ |
ಸಕಲ ಸ್ವರೂಪ ನಮೋ ನಮೋ |
ಭಕುತವತ್ಸಲ ನಮೋ ನಮೋ |
ಬಕವಿದಾರಣ ನಮೋ ನಮೋ |
ಅಕುತೋಭಯ ನಮೋ ನಮೋ |
ರುಕುಮಿಣೀಪತಿ ಪುರಂದರವಿಠಲ ನಮೋ ನಮೋ ೨
ಏಕತಾಳ
ಹೃದಯಕಮಲದಲ್ಲಿ ನಾ ನಿನ್ನ ಪಾದ- |
ಪದುಮವ ನೆನೆವಂತೆ ಮಾಡು |
ಯದುರಾಜಾಧಿರಾಜ ಸುದರುಶನಧರ |
ಇದನೆ ಕೃಪೆ ಮಾಡೆನಗೆ |
ಮದನಪಿತ ಪುರಂದರವಿಠಲರಾಯ ೩
ಅಟ್ಟತಾಳ
ಮನೆಯಾಕೆ ಮನ್ನಣೆಗೆಡೆಸುತಲಿದೆಯೆನ್ನ- |
ಮನೆ ಮನೆವಾರತೆಯಾಶೆ ಬಲು ಬಾಧಿಸುತಿದೆ |
ಧನದಾಶೆ ದೈನ್ಯ ಬಡಿಸುತಿದೆ |
ವನಿತೆಯರಾಶೆ ಒಡಲ ಸುಡುತಿದೆ |
ಇನಿತಾಶೆಯ ಬಿಡಿಸು ಬುದ್ಧಯಲಿ ನಿನ್ನ |
ನೆನೆವಂತೆ ಮಾಡೆನ್ನ ಪುರಂದರವಿಠಲ ೪
ಝಂಪೆತಾಳ
ಮೊರೆಹೊಕ್ಕವರ ಕಾವ ಮಾರಾಂತರನಿರಿವ |
ದೇವ ನಿನಗಿಲ್ಲದುಂಟೆ ಸಚರಾಚರದೊಳು |
ನಿನಗಲ್ಲದುದುಂಟೆ ನಾ ನಿನ್ನ ಮೊರೆ ಹೊಕ್ಕೆನಯ್ಯ |
ನೀ ಎನ್ನ ಕಾಯ್ದುಕೋ ಪುರಂದರವಿಠಲ ರಾಮ. ೫
ಜತೆ
ನಿತ್ಯಾನಿತ್ಯಸುವಸ್ತುಗಳೊಳಗೆ |
ನಿತ್ಯ ಸುನಿತ್ಯ ಪುರಂದರ ವಿಠಲ ||

೧೧೫
ಸುಳಾದಿ
ಉಮ್ಮತ್ತೂರ ಸುಳಾದಿ
ಧ್ರುವತಾಳ
ಅಚ್ಯುತ ಸುಳಿದ ಎನ್ನ ಕಣ್ಣ ಮುಂದೆ ಅವ್ವ |
ಅನಂತ ಸುಳಿದ ಎನ್ನ ಕಣ್ಣ ಮುಂದೆÀ ಅವ್ವ |
ಕಸ್ತೂರಿಮೃಗದಂತೆ ಘಮ ಘಮಿಸುತ |
ನಗುತ ನೋಡುತ ನುಡಿಯುತ ನುಡಿಸುತ |
ಏನೆಂಬೆನವ್ವ ಸೆರೆಗೊಂಡ ಸೂರೆಗೊಂಡ |
ಉಮ್ಮತ್ತೂರ ಚನ್ನಯ ಪುರಂದರವಿಟಲ ೧
ಮಟ್ಟತಾಳ
ಮಧುರಾಪಟ್ಟಣದ ರಾಜಬೀದಿಯಲಿ |
ಧಾಮ-ಸುಧಾಮರೆಲ್ಲ ಕೈಹೊಡೆದು ನಗಲು |
ಕುಬುಜೆಯ ಕೂಡ ತನ್ನ ಕಾಕುಪೋಕಿತನ ಮಾತು |
ಸನ್ನೆ-ಸನ್ನೆಯ ನೋಟ ನೂಕುತಾಕಿನಾಟ |
ಉಮ್ಮತ್ತೂರ ಚೆನ್ನಯ ಪುರಂದರ ವಿಠಲ ೩
ತ್ರಿವಿಡೆತಾಳ
ಸುಳಿದರೆ ಸುಂಕವ ಕೊಂಬ ಪುಂಡಗಾರ |
ಹರಿಯಲ್ಲದಾರು ಹೇಳೆಲೆ ಅವ್ವ |
ಯಶೋದೆ ರಂಗನಲ್ಲದೆ ಗೋಪಮ್ಮ |
ಕೃಷ್ಣನಲ್ಲದೆ ಅದಾರು ಹೇಳೆ |
ಉಮ್ಮತ್ತೂರ ಚೆನ್ನಯ ಪುರಂದರವಿಠಲ | ೪
ಅಟ್ಟತಾಳ
ಕೊಂಬುಕೊಳಲು ತುತ್ತುರಿ ಮೌರಿಯಗಳು |
ಭುಂ ಭುಂ ಭುಂ ಭುಂ ಭೋರಿಡುತ |
ಸರಿಗಮಪಧನಿಸ ಸನಿದಪಮಗರಿಸ |
ತು ತ್ತು ತ್ತು ರು ರು ರು ಎನುತ ಮಧುರೆಯೊಳು |
ಕೊಳಲನು ಪಿಡಿಯುತ ಝಣ ಝಣ ಸಣ ಸಣ |
ಗೆಜ್ಜೆಯ ಕುಣಿಸುತ ಉಮ್ಮತ್ತೂರ ಚೆನ್ನಯ |
ಪುರಂದರವಿಠಲ ೪
ಆದಿತಾಳ
ಆರಮುಡಿಯನ್ನುಟ್ಟೆ ಆರಗಂಧವನ್ನಿಟ್ಟೆ? |
ಆರ ಪೂಗಳ ಮುಡಿದೆ ಆರ ರಾಜ್ಯ ವ- |
ನಾರಿಗಿತ್ತು ಮೆರೆದೆ ದೇವ? |
ಬಲ್ಲಿದರಿಗೆ ಬಟ್ಟಿ ಸಸಾರವೆಂಬಂತೆ |
ಉಮ್ಮತ್ತೂರ ಪುರಂದರ ವಿಠಲ ೫
ಜತೆ
ಅಸುರರ ಸಂಹರಿಸೆ ಸುರರ ಪಾಲಿಪ ನಮ್ಮ |
ಉಮ್ಮತ್ತೂರ ಪುರಂದರವಿಠಲ ||

೧೧೬
ಸುಳಾದಿ
ಉಮ್ಮತ್ತೂರು ಸುಳಾದಿ
ಧ್ರುವ
ಅಚ್ಯುತ ಸುಳಿದೆ ಎನ್ನ ಕಣಣ ಮುಂದೆ ಯವ್ವ |
ಕಸ್ತೂರಿ ಮೃಗದಂತೆ ಘಮ ಘಮಿಸುತ್ತ |
ಅನಂತ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ |
ಮೇರೆದಪ್ಪುತ ಏನೆಂಬೆ ಎನ್ನಪ್ಪುತ |
ಗೋವಿಂದ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ |
ನಗುತ ನೋಡುತ ನುಡಿಯುತ ಎನ್ನಪ್ಪುತ |
ಮಾಧವ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ |
ಮನ್ಮಥಕೋಟಿ ಲಾವಣ್ಯನಂತೆ ಮೆರೆವ |
ಗೋಪಾಲ ಸುಳಿದ ಎನ್ನಕಣ್ಣಮುಂದೆ ಯವ್ವಾ |
ದಿನಕರಕೋಟಿ ತೇಜನಂತೆ ಹೊಳೆಯುತ |
ಎನ್ನ ಮನದುತ್ಸಾಹ ಸೂರೆಗೊಂಡನವ್ವ |
ಉಮ್ಮತ್ತೂರ ಅಜನಯ್ಯ ಪುರಂದರವಿಠಲ ೧
ಮಟ್ಟತಾಳ
ಸುಳಿದರೆ ಸುಂಕವ ಕೊಂಬ ಪುಂಡಗಾರ |
ಹರಿಯಲ್ಲದಾರು ಹೇಳಲೆ ಎಲೆ ಗೆಳತಿ |
ಉಮ್ಮತ್ತೂರ ಜನಯ್ಯ ಪುರಂದರವಿಠಲ ಹರಿ ೨
ತ್ರಿವಿಡೆತಾಳ
ಮಧುರಪಟ್ಟಣರಾಯಾ ಬೀದಿಯಲ್ಲಿ ಇದ್ದ |
ದಾಮ ಸುದಾಮರು ಕೈ ಹೊಯ್ದು ನಗಲು |
ಚದುರೆಯ ಮಾಡಿ ಕುಬುಜೆಯ ಕೂಡಿದ ನಕ್ಕ |
ಚದುರ ಸನ್ನೆ ನೋಟದಿ ನಗುತ ಆಕೆಯ ಬಿಟ್ಟ |
ಉಮ್ಮತ್ತೂರಜನಯ್ಯ ಪುರಂದರವಿಠಲ ೩
ಅಟ್ಟತಾಳ
ಆರ ಮಡೆಯನುಟ್ಟೆ ಆರ ಗಂಧವನಿಟ್ಟೆ |
ಆರ ಪೂಗಳ ಮುಡಿದೆ ಆರ ರಾಜ್ಯವ |
ನಾರಿಗಿತ್ತು ಮೆರೆದೆ ದೇವ ಆರ ಪೂಗಳ ಮುಡಿದೆ |
ಬಲ್ಲಿದರಿಗೆ ಬಟ್ಟಿಸೆ ಸಾರವೆಂಬತೆ ಉಮ್ಮ |
ತ್ತೂರ ಅಜನಯ್ಯ ಪುಇರಂದರವಿಠಲ ೪
ಆದಿತಾಳ
ಕೊಂಬು ಕೊಳುಲ ತಿತ್ತ್ತಿರಿ ಮವುರಿಗಳು |
ಭೊಂ ಭೊಂ ಭೊಂ ಭೊಂ ಭೋರೆನುತ |
ಸರಿಗಮಧನಿಸ ತುತ್ತುರೆ ಎನುತ |
ಝಂ ಝಂ ಝಂ ಝಂ ಝಣಿಲೆನುತ |
ಮಧುರೆಯೊಳಗೆ ಕೋಲಾಹಲ ಮಾಡಿ ಮುಸುಕಲು |
ಭೊಂ ಭೊಂ ಭೊಂ ಭೊಂ ಭೋರೆನುತ |
ಉಮ್ಮತ್ತೂರು ಅಜನಯ್ಯನೆ ಪುರಂದರವಿಠಲ |
ಝಂ ಝಂ ಝಂ ಝಂ ಝಣರೆನುತ ೫
ಜೊತೆ
ಅಸುರರ ಸಂಹರಿಸಿ ಸುರರ ಪಾಲಿಪ ನಮ್ಮ |
ಉಮ್ಮತ್ತೂರ ಅಜನಯ್ಯ ಪುರಂದರವಿಠಲ ೫

೧೩೦
ಸುಳಾದಿ
ಧ್ರುವತಾಳ
ಅಚ್ಯುತಾನಂತಗೋವಿಂದ ಮುಕುಂದ |
ವಾಮನ ವಾಸುದೇವ ನಾರಾಯಣ ಹರಿ |
ಸಚ್ಚದಾನಂದ ಸ್ವರೂಪ ಗೋಪಾಲ ಪುರುಷೋತ್ತಮ |
ಪರಂಧಾಮ ನಾರಾಯಣ |
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ |
ಭಾರ್ಗವ ರಾಮ ಶ್ರೀಕೃಷ್ಣ ಬೌದ್ಧ ಕಲ್ಕಿ |
ಅವತಾರ ಅನಂತಾವತಾರ ನಾರಾಯಣ |
ಹರಿ ಅಚ್ಯುತಾನಂತ ಗೋವಿಂದ |
ಅಪಾರ ಮಹಿಮ ಶ್ರೀ ನಾರಾಯಣ ಅಹೋ |
ಸರ್ಪಶಯನನೆ ನಾರಾಯಣ |
ಶ್ರೀ ಪುರಂದರವಿಠಲ ವಿಭುವೆ ತಿರುವೆಂಗಳಪ್ಪ |
ಎನ್ನಪ್ಪ ನೀ ನಾರಾಯಣ ೧
ಮಟ್ಟತಾಳ
ಮಂಗಳಂಗ ನಿನ್ನಂಗವಟ್ಟದಲ್ಲಿ ಸಂಗಸಖಳಿಪ್ಪಳವ್ವೆ ನಿ- |
ನ್ನಂಗನೆಯು ಲಚುಮವ್ವೆ ಕೆಂಬರಳಾಗಿಪ್ಪಳವ್ವೆ |
ಬಂಗಾರವಾಗಿಪ್ಪಳವ್ವೆ ಶೃಂಗಾರವಾಗಿಪ್ಪಳವ್ವೆ |
ರಂಗ ಶ್ರೀಪುರಂದರವಿಠಲ ನಿನ್ನೊಲಿದು ೩
ತ್ರಿವುಡೆ ತಾಳ
ಉಟ್ಟದಟ್ಟಿ ಕಟ್ಟಿದ ಕಠಾರಿ ತೊಟ್ಟಂಬು ತೋರಗದೆ ತೋಮರÀ |
ಮೆಟ್ಟಿದ ತಡಿಕೆರವಿನ ಹೆಜ್ಜೆ ಕಟ್ಟಿದ ಕಾಲುಗೆಜ್ಜೆ ಶ್ರೀ ವತ್ಸ |
ಸೃಷ್ಟಿರಕ್ಷಕ ಪುರಂದರವಿಠಲ ಬೆಟ್ಟದ ತಿರುವೆಂಗಳಪ್ಪಗೆ
ನಮೋ ನಮೋ ೩
ಅಟತಾಳ
ಇದೆ ದನುಜಮರ್ದನ ಚಕ್ರಹಸ್ತ – ಮ- |
ತ್ತಿದೆ ವೇದನುತ ಶಂಖಹಸ್ತ |
ಇದೆ ಈರೇಳು ಜಗವನೊಲಿದಿಂಬಿಟ್ಟು ಮೆರೆವ ಹಸ್ತ |
ಇದೆ ಇದೆ ವೈಕುಂಠವೆಂದು ತೋರುವ ಹಸ್ತ |
ಇದೆ ಪುರದರವಿಠಲನಿದ್ದಿರವು ಮತ್ತಿದೆ |
ತಿರುವೆಂಗಳಪ್ಪನ ಮೂರುತಿ ಇದೆ ೪
ಆದಿತಾಳ
ಕಿರೀಟ ಕುಂಡಲಧರನ ಕಂಡೆ
ಹಾರಮಣಿ ಭೂಷಣನ ಕಂಡೆ |
ಸಿರಿಯಿಪ್ಪ ವಕ್ಷಸ್ಥಳವ ನಾಕಂಡೆ |
ವರಾಂಬರನ ಕಂಡೆ ವರದೇಶನ ಕಂಡೆ |
ತಿರುಮಲಗಿರಿಯಲಿ ಸಿರಿ ಪುರಂದರವಿಠಲನ |
ಇರುವ ನಾಕಂಡೆ ಚೆಲುವನ ನಾಕಂಡೆ ೫
ಜತೆ
ತಿರುವೆಂಗಳಪ್ಪ ಪುರಂದರವಿಠಲ |
ನೆರೆ ನಂಬಿದೆನೊ ನಿನ್ನ ಚರಣಕವಲವ ||

೧೨೯
ಮಹಾತ್ಮ್ಯಸುಳಾದಿ
ಧ್ರುವತಾಳ
ಅಣುವಾಗಬಲ್ಲ ಮಹತ್ತಾಗಬಲ್ಲ |
ಅಣುಮಹತ್ತೆರಡೊಂದಾಗ ಬಲ್ಲ
ರೂಪವಾಗಬಲ್ಲ ಅಪರೂಪವಾಗ ಬಲ್ಲ
ರೂಪ-ಅಪರೂಪವೆರಡೊಂದಾಗಬಲ್ಲ |
ವ್ಯಕ್ತನಾಗಬಲ್ಲ ಅವ್ಯಕ್ತನಾಗಬಲ್ಲ
ವ್ಯಕ್ತ ಅವ್ಯಕ್ತ ಎರಡೊಂದಾಗ ಬಲ್ಲ |
ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ |
ಸುಗುಣ ನಿರ್ಗುಣ ಎರಡೊಂದಾಗಬಲ್ಲ |
ಅಘಟಿತ ಘಟಿತ ಅಚಿಂತ್ಯಾದ್ಭುತ ಮಹಿಮ |
ಸ್ವಗತ ಭೇದವಿವರ್ಜಿತ ಪುರಂದರವಿಠಲ ೧
ಮಟ್ಟತಾಳ
ಕಣ್ಣಲಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ರಸನದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಸ್ಪರುಶದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಶ್ರವಣದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಘ್ರಾಣದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಲೋಕ ವಿಲಕ್ಷಣ ದಿವ್ಯ ಕರಣ ಲೋಕಕೆ
ಆಶ್ಚರ್ಯ ಪುರಂದರವಿಠಲ ೨
ತ್ರಿವಿಡಿತಾಳ
ಆವಾವ ಯುಗದಲ್ಲಿ ವಿಷ್ಣು ವ್ಯಾಪಕನಾಗಿ
ಆ ವಿಷ್ಣುವಿಂದಲೆ ವಿಷ್ಣುಲೋಕ ತಾನಿಪ್ಪುದಾಗಿ |
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ |
ಸಾರಿಷ್ಣ ಎಂಬುದು ವಿಷ್ಣುವಿನಲಿಪ್ಪುದಾಗಿ |
ನಮ್ಮ ಪುರಂದರವಿಠಲ ಬೊಮ್ಮ ಭರಿತ |
ಪಂಚವಿಧ ಮುಕುತಿದಾಯಕನು ೩
ಅಟತಾಳ
ಮೋದ ದಕ್ಷಿಣಪಕ್ಷ ಪ್ರಮೋದ ಉತ್ತರಪಕ್ಷ |
ಆನಂದ ಆತುಮ ಆನಖ ಆಪಾದ |
ಅಪ್ರಾಕೃತವಿಗ್ರಹ ನಮ್ಮ ಪುರಂದರವಿಠಲ ೪
ಏಕತಾಳ (ಆದಿತಾಳ)
ನಾರಾಯಣ ಪರಬ್ರಹ್ಮ ಶ್ವೇತತನೂರುಹ ಬಲಭದ್ರ ಗಡ |
ಕೃಷ್ಣತನೂರುಹ ಕೃಷ್ಣ ಗಡ |
ವಾಸುದೇವ ಸಂಕರ್ಷಣ ಪ್ರದ್ಯಮ್ನ ಅನಿರದ್ಧ ನಾರಾಯಣ ಹರೇ
ಶ್ವೇತ ತನೂರುಹ ಪುರಂದರ ವಿಠಲ ೫
ಜತೆ
ನಮೋ ನಮೋ ವಾಗೀಶಾ ಈಶ ಸರ್ವೇಶ |
ನಮೋ ನಮೋ ಪುರಂದರವಿಠಲ ಶೇಷಶಯ್ಯ ||

೨೫೨
ಸುಳಾದಿ
ಕಲಿಕಾಲ ಸುಳಾದಿ
ಧ್ರುವತಾಳ
ಅತಿ ಮೀರಿತು ಶ್ರೀಹರಿ ಹರಿ ಅನ್ಯಾಯ |
ಕಲಿಕಾಲ ದುಷ್ಕಾಲ ಅತಿ ಅತಿ ಮೀರಿತು |
ಅಕರ್ಮ ಕುಕರ್ಮ ಅತಿ ಅತಿ ಮೀರಿತು |
ಪತಿಕರಿಸೆನ್ನ ಪುರಂದರ ವಿಠಲರಾಯ ೧
ಮಟ್ಟತಾಳ
ಇನ್ನೆಂತೀ ಕಲಿಕಾಲವ ಕಳೆವೆ |
ಎನ್ನೆಂತೀ ಪರಸುಖ ಗತಿ ಪಡೆವೆ |
ಆನೆಂತು ನಿನ್ನ ಕಾಂಬುವೆ ಪುರಂದರ ವಿಠಲ? ೨
ರೂಪಕ ತಾಳ
ಈ ಕಲಿಯುಗದಲಿ ಒಂದಡಕಲಗಡಿಗೆ |
ದೇಹ ಬಂಧನ ಬಿಟ್ಟು ಕಾಯುತಹರೆ |
ತನು-ಪ್ರಾಣಂಗಳ ಬಿಟ್ಟು ಕಾಯುತಹರೆ |
ತನ್ನವರೆಲ್ಲ ಮರೆದು ಕಾಯುತಹರೆ |
ಆನೆಂತು ಜೀವಿಪೆ ಪುರಂದರ ವಿಠಲ | ೩
ಆದಿತಾಳ
ಎಂತೀ ಪಾಪವ ಕಳೆವೆ ಆಗಲಿ |
ಎಂತು ಆ ಕರ್ಮವ ಕಳೆವೆ ಆಗಲಿ |
ಎಂತಹ ನಾಯಕ ನರಕವೆ ಆಗಲಿ |
ಎಂತಹನಾಢ್ಯ ಪುರಂದರ ವಿಠಲ? ೪
ಏಕತಾಳ
ಶ್ರೀಮನ್ನಾರಾಯಣ ಹರಿಪಾರಾಯಣರು |
ಅಂಜುವರೆ ಭಯಕೆ ಅಂಜುವರೆ ಭಯಕೆ? |
ಪುರಂದರ ವಿಠಲ ಹರಿ ಪಾರಾಯಣರು? | ೫
ಜತೆ
ಒಂದೆ ನಾಮವೆ ಸಾಕು ಮುಕುತಿಗೆ |
ಪುರಂದರ ವಿಠಲರಾಯ ಮಿಕ್ಕ ನಾಮಕೆ ಋಣಿ ||

೨೯೨
ಸುಳಾದಿ
ಸುಂದರ ಕಾಂಡ ಸುಳಾದಿ
ಧ್ರುವ ತಾಳ
ಅಯ್ಯಯ್ಯ! ಕೈಕೆ ಮುನಿದರೆ ಏನವ್ವ ! |
ದೀವೌಕಸರನಾಳುವ ನಿನ್ನ ಅದ್ವೈತತನವು |
ಅಚಿಂತ್ಯ ಶಕ್ತಿ ಹೋಹುದೆ ಪ್ರಭುವೆ |
ಅಯ್ಯ ಮಂಥರೆ ಜರಿದರೆ ಪಂತಿದೇರ ನಾಳುವ |
ನಿನ್ನ ಲೋಕತಿಂತಿಣಿಯ ಗೆಲುವ ಶೀಲ ಬಹುದೆ |
ವಿಭುವೆ ಅಯ್ಯ ತಂದೆಯಿಲ್ಲದಿರೆ |
ತರುಲತೆಗೆ ಪಶು ಪಕ್ಷಿಗೆ ಚೇತನ ವೃಂದಕೆ |
ಮುಕುತಿಯನಿತ್ತ ಮಹಿಮೆ ಹೋಹುದೆ ಅಯ್ಯ |
ಆರುಮುನಿದರೆ ಆರು ಜರೆದರೆ ಆರೊಲ್ಲದಿದ್ದರೆ |
ಹೀನವುಂಟೆ? ತಾರಕ ಬ್ರಹ್ಮದ್ವಿರೂಪನೆ ನಿನಗೆ ಅಯ್ಯ |
ಜಾನಕಿ ವಲ್ಲಭ ಲಕ್ಷಣಾಗ್ರಜ ಹನುಮನನಾಳ್ದ |
ರಾಮ ರಾಯ ಪುರಂದರ ವಿಠಲ ಅಯ್ಯ ೧
ಮುಟ್ಟತಾಳ
ತುಂಗ ವಕ್ಷ ತುರೀಯ ಮೂರುತಿಯ |
ರಥಾಂಗ ಪಾಣಿಯ ತಂಗಿ, ತಾರೆ |
ಪರಮ ಪುರುಷ ಹರಿಯ ತರಣಿ ತೇಜನ |
ಅಂಗನೆಯರ ಮನವ ಸೊರೆಗೊಂಬನ ತಂಗಿ, ತಾರೆ |
ತರಣಿತೇಜನ ತಂಗಲೇಕೆ ತಗರಲೇಕೆ |
ಸಾರಂಗದಾಮನೊಲೆದಿರನದೇಕೆ ತಂಗಿ, ತಾರೆ, ತರಣಿತೇಜನ |
ರಂಗೇಶ ಪುರಂದರ ವಿಠಲನ ಮಂಗಳಾಂಗ |
ಒಲೆದಿರನದೇಕೆ ತಂಗಿ, ತಾರೆ, ತರಣಿತೇಜನ ೨
ರೂಪಕ ತಾಳ
ಅರಿದನೊಬ್ಬ ನಾಸಿಕವ ನಿನ್ನನುಜೆಯ |
ಪುರವನುರುಪಿ ದಾನವರ ಗೆದ್ದನೊಬ್ಬ |
ಶರನಿಧಿಯ ದಾಂಟಿದನೊಬ್ಬ |
ಸಿರಿ ಮುಡಿಯ ಮುಕುಟವ ಕಿತ್ತಿಟ್ಟನೊಬ್ಬ |
ಪುರಂದರವಿಠಲರಾಯನ ತೋಟಿ ಬೇಡ |
ಶರಣು ಪೊಕ್ಕು ಬದುಕುವ ಬಾರೆಲೊ ಅಣ್ಣಣ್ಣ | ೩
ಆದಿ ತಾಳ (ಅಟ್ಟತಾಳ?)
ರಾಮರಾಮ ಎನುತ ಅಂಬುಧಿಯ ದಾಂಟಿದೆ |
ರಾಮ ರಾಮೆನುತ ಅಸುರರ ಗೆಲಿದೆ |
ರಾಮ ರಾಮ ಎನುತ ಭೂಮಿ ಸುತೆಯ ಪಾದವ ಕಂಡು |
ರಾಮ ರಾಮ ಎನುತ ರಾಮ ಪುರಂದರವಿಠಲನ |
ಉಂಗುರವಿತ್ತ ರಾಮನರ್ಧಾಂಗಿ ದೇವಿ ಚಿತ್ತೈಸು ಎನುತ ೪
ಏಕತಾಳ
ರಾಮನೊಳು ಹನುಮನು ಸೇರುವನೆಂದರಿಯಿರೊ |
ರಾಮನಿಂದ ಹತವಾಯ್ತು ರಾವಣನ ಕಟಕವೆಂದರಿಯರೊ |
ರಾಮನ ಪ್ರಸಾದದ ದೊರೆಗಳ ಕೆಣಕದಿರಿರೊ |
ರಾಮಬಾಣಕಿದಿರಾಗದಿರಿರೊ, ದನುಜರೆಲ್ಲ |
ರಾಮ ನಿಮ್ಮ ರಾವಣನ ಶಿರವ ಚೆಂಡಾಡುವನು |
ರಾಮ ಪುರಂದರವಿಠಲನ ಪೊಂದಿ ಬದುಕಿರೊ ೫
ಜತೆ
ಸಹಸ್ರ ನಾಮ ಸಮ ರಾಮನಾಮ |
ಮಹಾ ಮಹಿಮೆಯ ಪುರಂದರ ವಿಠಲ ರಾಮ ||

೮೪
ಸುಳಾದಿ
ಧ್ರುವತಾಳ
ಅವರು ನಡೆದದ್ದೆ ರಾಜಪಥ ನಾರಾಯಣ |
ಅವರು ನುಡಿದದ್ದೆ ವೇದಾರ್ಥ ನಾರಾಯಣ |
ಅವರು ಮಾಡಿದ್ದೆ ಮರ್ಯಾದೆ ನಾರಾಯಣ |
ಅವರು ನಿಂತಿದ್ದೆ ಕ್ಷೇತ್ರವೈ ನಾರಾಯಣ |
ಅವರು ಮಿಂದದ್ದೆ ಸುರಗಂಗೆ ನಾರಾಯಣ |
ಅವರು ರಾಜಾಧಿರಾಜರು ಅವರೆ ಕಾಣಿರೋ |
ಅವರು ರಾಜಪರಮೇಶ್ವರರು ಅವರೆ ಕಾಣಿರೋ |
ಅವರ ದಾಸ ಜಗದೇಕನಾಥ |
ಅವರು ನಮ್ಮ ಪುರಂದರ ವಿಠಲನ ಆಳುಗಳು ಕಾಣಿರೊ ೧
ಮಟ್ಟ ತಾಳ
ಹಸ್ತಿನಾಪಟ್ಟಣವ ನೇಗಿಲಲೆತ್ತಿದನೊಬ್ವ |
ಅಸ್ತಮಿಸಿದ ಇನಮಂಡಲಕೆ ಉದಯವಿತ್ತನೊಬ್ಬ |
ಪೃಥ್ವಿಯ ಅಂಬಿನಲಿ ಹರಗಿದನೊಬ್ಬ |
ವಸ್ತು ಪುರಂದರವಿಠಲಾ ನೀನಿತ್ತ ಸಲುಗೆ ಎಂತೊ ೨
ತ್ರಿವಿಡೆ ತಾಳ
ಅಯ್ವತ್ತು ಸಾವಿರ ಯೋಜನವು ಎತ್ತ, ಸಂಜೀವಿನಿ ಎತ್ತ |
ಲಂಕಾಪಟ್ಟಣ ತಾನೆತ್ತ,ಹನುಮ ಕಿತ್ತೆತ್ತಿ ತಾಹೋದೆತ್ತ
ಇಲ್ಲಿಂದಲ್ಲಿಗೆ ಈಡಾಡುವುದೆತ್ತ, ಹನುಮಕಿತ್ತೆತ್ತಿ ತಾಹೋದೆತ್ತ |
ಪುರಂದರವಿಠಲಾ ನಿನ್ನ ಮಹಿಮೆ ಎಂತೊ ೩
ಆಟ ತಾಳ
ಸ್ವರ್ಗದ ಮುಕ್ತಿತಿಯ ಅಂಬಿನಲಿ ಇಸುವರು |
ಮಾರ್ಗಣದಿಂದೆರೆವರು ಪಾತಾಳದ ಉದಕವನು |
ನೀರ್ಗೆಯ್ಸಿ ಭೂಮಿಯ ಮೇಲಿಟ್ಟು ಮೆರೆವರು |
ಅಗ್ರಣಿ ಪುರಂದರವಿಠಲನ ಆಳುಗಳು ಕಾಣಿರೋ ೪
ಏಕತಾಳ
ಭಾಗೀರಥಿಯ ನೀಂಟಿದರುಂಟೆ |
ಸಾಗರವ ಆಪೋಶನವ ಕೊಂಡವರುಂಟೆ |
ನಾಗಾಭರಣವ ಮಾಡಿದರುಂಟೆ |
ಭಾಗವತೋತ್ತಮರುತ್ತಮರಲ್ಲದೆ |
ನಾಗಾಭರಣವ ಮಾಡಿದರುಂಟೆ |
ಪುರಂದರವಿಠಲನೆ ನಿನ್ನ ಕರುಣೆವೆಂತುಟೋ ೫
ಜತೆ
ಹರಿಶರಣರಿಗಿನ್ನು ಸರಿಗಾಣೆ ಜಗದೊಳು |
ಪುರಂದರವಿಠಲ ಸ್ವಾಮಿ ನೀನಿರಲಾಗಿ |

೧೨೭
ಸುಳಾದಿ
ಆನಂದ ಸುಳಾದಿ
ಧ್ರುವತಾಳ
ಆಪಾದವಾನಂದ ಆನಖವಾನಂದ |
ಆಜಾನು ಆಜಂಘೆ ಆನಂದಮಯಮಯ್ಯ |
ಆ ಊರು ಆನಂದ ಆ ಕಟಿ ಆನಂದ |
ಆನಾಭಿ ಆ ಕುಕ್ಷಿ ಆನಂದಮಯವಯ್ಯ |
ಆ ಉರ ಆನಂದ ಆ ಭುಜವಾನಂದ |
ಆ ಕಂಬುಗ್ರೀವ-ಮುಖ ಆನಂದಮಯವಯ್ಯ |
ಆಶಿರೋರುಹಗಳು ಆನಂದಮಯವಯ್ಯ |
ಅಸಂಖ್ಯ ಆನಮದ ಪುರಂದರವಿಠಲ ೧
ಮಟ್ಟತಾಳ
ಪಾವಕ-ಕೋಟಿ ಸೂರ್ಯರ ಪ್ರಭೆಯ ಸೋಲಿಸುವ |
ದೇವನಂಗಕಾಂತಿ ಆನಂದಮಯವಯ್ಯ |
ದೇವರಾಟ್ ಶ್ರೀಪುರಂದರವಿಠಲ | ೨
ತ್ರಿವಿಡೆತಾಳ
ದಶಮಾತುರಗಳು ಆನಂದಮಯವಯ್ಯ |
ಹೃಷೀಕೇಶನ ಏಕಾದಶ ಹೃಷೀಕ ಆನಂದಮಯವಯ್ಯ |
ಮಹಾಭಾವ ಭೂವಿಲಾಸ ದೇವನಂಗ ಕಾಂತಿ
ಆನಂದಮಯವಯ್ಯ| |
ದೇವರಾಟ್ ಸಿರಿ ಪುರಂದರವಿಠಲ ೩
ಅಟತಾಳ
ಬೊಮ್ಮ ಬೊಮ್ಮ ಬೊಮ್ಮ ಶ್ರೀಹರಿಯ |
ಕರ್ಮವಾನಂದ ಕರಣಗಳಾನಂದ |
ಹಮ್ಮು ಆನಂದ ಹಾಸ್ಯವಾನಂದ |
ಕಂಗಳಾನಂದ ನಮ್ಮ ಪುರಂದರ ವಿಠಲರಯನ |
ದಿವ್ಯ ಕೋಪವಾನಂದ ೪
ಏಕತಾಳ
ಅನಂದವರ್ಧಾಂಗಿ ಆನಂದನ ಕುಮಾರ |
ಆನಂದ ಮೂರುತಿಯ ಅಗಲದೆ ಇರಿ |
ಆನಂದ ಆನಂದ ಪರಮಾನಂದ |
ಪರಮಾನಂದ ಪುರಂದರವಿಠಲ ೫
ಜತೆ
ಜ್ಞಾನ ವಿಜ್ಞಾನ ಸುಗಂಧ ಸುಖದೇಹ |
ಅನಂದಮಯವಯ್ಯ ಪುರಂದರವಿಠಲನ ಅವಯವಗಳೆಲ್ಲ ||

೨೨೯
ಸುಳಾದಿ
ರೂಪಕ ತಾಳ
ಆಳುಗಳ ಪರಿಯ ಆಳಿದನೆ ಬಲ್ಲ |
ಆಳಿದನ ಪರಿಯ ಆಳುಗಳೆ ಬಲ್ಲರು |
ಆಳುಗಳ ಪರಿಯ ಆಳಿದನೆ ಪರಿಯ |
ಆರೇನನೆಂದರೂ ಆರೇನ ಮಾಡುವರಯ್ಯ |
ಆರ ಕೊಂಡೆಮಗೆ ಏನ ಮಾಡುವುದಯ್ಯ |
ಆರುಮುನಿದೆಮ್ಮನು ಏನು ಮಾಡುವರಯ್ಯ |
ಸಿರಿ ಪುರಂದರ ವಿಠಲಗೆ ನಮಗೆ |
ಇಂದೆ ಬಂದಿತೆ ಸ್ವಾಮಿ-ಭೃತ್ಯ ಸಂಬಂಧ? ೧
ಮಟ್ಟತಾಳ
ಮಧುರೆಯೊಳಗೆ ನಿನ್ನ ತುಂಟಾಟಿಕೆಗಳ ನೋಡ |
ಉದ್ಧವನೆತ್ತ, ಕುಬುಜೆಯ ಮನೆಯೆತ್ತ |
ನೀ ಮಾಡಿದ ಮರ್ಯಾದೆ ಪುರಂದರ ವಿಠಲ |
ಉದ್ಭವನೆತ್ತ || ೨
ಧ್ರುವತಾಳ
ಉಳ್ಳವರುಂಡಾರು ಮರೆಯ ಮರೆಯ |
ಬಲ್ಲಿರ್ದನಾಳುಗಳು ತಲೆಯಲಿ ನುಡಿದರೇನೆಂಬೆ |
ಬಲ್ಲಿರ್ದನಾಳುಗಳು ದಟ್ಟಿಯಲಿ ನಡೆದರೇನೆಂಬೆ |
ಬಲ್ಲಿರ್ದ ಪುರಂದರ ವಿಠಲನಾಳುಗಳು ೩
ಅಟ್ಟತಾಳ
ಬೆಟ್ಟತಂದಾ ದೈವವು ಹೊಂದಿದ್ದ |
ಕಟ್ಟಾ ಸಮುದ್ರದ ನಂಟನಾಗಿ ಉಪ್ಪಿನ ಬರ ಕಂಡ |
ಅರಸಿನ ಮಗ ತಿರುತಿನುತಿಹದ ಕಂಡ |
ನಿನ್ನ ತೊಂಡನು ನಿನ್ನ ತೊಂಡನು ನಿನ್ನ ತೊಂಡನಾಳುವ |
ನೀನಾಳುವೆ ನಿನ್ನ ತೊಂಡ ನಾನು ಬರಿಯ ಮಾತಲ್ಲ |
ವಿಠಲ ನಿನ್ನಾಣೆ ನಿನ್ನ ತೊಂಡ ನಾನು ಪುರಂದರ ವಿಠಲ ೪
ಜತೆ
ನಿತ್ಯಾನಿತ್ಯ ಸುವಸ್ತುಗಳೊಳಗೆ |
ನಿತ್ಯ ಸುನಿತ್ಯ ಪುರಂದರ ವಿಠಲ ||

೮೭
ಸುಳಾದಿ
ಆಪದ್ರಕ್ಷಕ ಸುಳಾದಿ
ಧ್ರುವತಾಳ
ಇದನು ಬಿಟ್ಟು ಇನ್ನಿಲ್ಲೆಂಬ ಮಹಾಬಾಧೆ ಬರಲಿ – ಮತ್ತೆ |
ಇದನು ಬಿಟ್ಟು ಇನ್ನಿಲ್ಲೆಂಬ ಮಹಾಭೀತಿ ಬರಲಿ – ಮತ್ತೆ |
ಇದನು ಬಿಟ್ಟು ಇನ್ನಿಲ್ಲೆಂಬ ಮಹಾ ಅಪಾಯ ಬರಲಿ – ಮತ್ತೆ |
ಅದಕ್ಕೊಂದು ಇದಕ್ಕೊಂದು ಯೋಚಿಸಬೇಡಿ ಕಾಣಿರೊ |
ಪುರಂದರವಿಠಲ ತನ್ನ ನಂಬಿದವರ ಹಿಂದಿಕ್ಕಿಕೊಂಬ ಕಾಣಿರೊ ೧
ಮಟ್ಟತಾಳ
ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೆ |
ಹರಿದಾಸರು ತೋರಿಸಿಕೊಟ್ಟ ಉಪಾಯ ಒಂದೆ |
ಅಪಾಯ ಕೋಟಿ-ಕೋಟಿಗಳಿಗೆ ಉಪಾಯ ಒಂದೆ |
ಪುರಂದರವಿಠಲನೆಂದು ಬಾಯ್ಬಿಟ್ಟು ಕರೆವ
ಉಪಾಯ ಒಂದೆ ಕಾಣಿರೊ ೨
ತ್ರಿವಿಡೆ ತಾಳ
ಅಜಾಮಿಳನ ಯಮದೂತರು ಎಳೆಯಲು |
ಆಗಲಲ್ಲಿಗೆ ಬಂದರಚ್ಯುತನ ದೂತರು |
ಯಮದಂಡವ ಖಂಡಿಸಿ ತುಂಡಿಸಲಾಕ್ಷಣ |
ಆಗಲ್ಲಲ್ಲಿಗೆ ಬಂದರಚ್ಯುತನ ದೂತರು |
ನಾರಾಯಣ ಎಂದು ಚೀರುವ ಧ್ವನಿ ಕೇಳಿ |
ಆಗಲ್ಲಲ್ಲಿಗೆ ಬಂದರಚ್ಯುತನ ದೂತರು |
ಪುರಂದರವಿಠಲ ಕರುಣಿಪನಾಗಿ | ೩
ಅಟ್ಟತಾಳ
ಹಾ ಕೃಷ್ಣ ದ್ವಾರಕಾವಾಸಿ ಎಂಬುದ ಕೇಳಿ |
ದ್ರೌಪದಿಯ ಮಾನವ ಕಾಯ್ದ ಬೇಕೆನುತಲಿ |
ಶ್ರೀಪತಿ ಅಕ್ಷಯವಸ್ತ್ರವರವನಿತ್ತು |
ದ್ರೌಪದಿಯ ಮಾನವ ಕಾಯ್ದ ಬೇಕೆನುತಲಿ |
ಆಪತ್ತಿಗೆ ನಂಟ ಪುರಂದರವಿಠಲ |
ದ್ರೌಪದಿಯಭಿಮಾನ ಕಾಯ್ದನಾತ | ೪
ಆದಿ ತಾಳ
ಹರಿಹರಿ ಎಂದು ಕರೆವುದೆ ತಡ |
ಕರೆದಲ್ಲಿಗೆ ಬಾಹ-ಕರೆವಲ್ಲಿಗೆ ಬಾಹ |
ಸುರ-ನರ-ಉರಗ ಲೋಕದಲ್ಲಿದ್ದರೂ ಸರಿ – ನೀ |
ಕರೆದಲ್ಲಿಗೆ ಬಾಹ-ಕರೆವಲ್ಲಿಗೆ ಬಾಹ |
ಪುರಂದರವಿಠಲನೆಂದೊಮ್ಮೆ ಕರೆಯಲು |
ಕರೆದಲ್ಲಿಗ ಬಾಹ ೫
ಜತೆ
ತನ್ನ ಡಿಂಗರಿಗರ ತಾನೆತ್ತಿಕೊಂಬಲ್ಲಿ |
ಸನ್ನದ್ಧ ಸರ್ವದಾ ಪುರಂದರವಿಠಲ ||

೧೩೧
ಉಗಾಭೋಗ
ಇದೇ ಮುನಿಗಳ ಮನದ ಕೊನೆಯ ಠಾವು |
ಇದೇ ಬ್ರಹ್ಮಾದಿಗಳ ಹೃತ್ಕಮಲಪೀಠ |
ಇದೇ ದ್ವಾರಕೆ ಇದೇ ಷೀರಾಂಬುಧಿ
ಇದೇ ಅರಿದ ಸುಜ್ಞಾನಿಗೆ ವೈಕುಂಠ
ಇದೇ ಪುರಂದರವಿಠಲನ ಮಂದಿರ.

೨೨೮
ಸುಳಾದಿ
ಧ್ರುವತಾಳ
ಈ ಮತ್ರ್ಯದೊಳಗಿಲ್ಲ ಅರಸಿ ನೋಡಲು ದೇವ |
ಅರಸು ಮೆಚ್ಚಲು ಪ್ರಜೆ ದ್ವೇಷಿಸುವರು |
ಆಳುಗಳು ಒಲಿದಲ್ಲಿ ಅರಸು ಮೆಚ್ಚನು ಒಮ್ಮೆ |
ಈ ಮತ್ರ್ಯ ಜನರ ಚರಿತವು ಎಲೊ ರಂಗ |
ಮೂಲೋಕದರಸು ನೀ ನಿನ್ನಯ ಭಕ್ತ ಜನರುಗಳು |
ನೀ ಕರುಣಿಸಲು ತಾವು ಕರುಣಿಸುವರು |
ನೀನೊಲಿಯದಿರೆ ಒಮ್ಮೆಯೂ ತಿರುಗಿ ನೋಡರು ಹರಿಯೆ |
ಈ ಪರಿಯ ನಿನ್ನ ಆಜ್ಞೆಯಲಿ ಈ ಮಹಾವಿಭವದೊಳು |
ಆರು ಮೊರೆಯಾಗುವರು ಆರು ರಕ್ಷಿಪರೆನ್ನ |
ಆರಂಜದಿರೆಂದು ಅಭಯವನೀವರ ಕಾಣೆ |
ಶ್ರೀನಾಥ ಅನಿಮಿತ್ತ ದಯಾಸಿಂಧೂ |
ನಿನ್ನ ದಾಸರ ಒಲುಮೆಯ ಪಾಲಿಸೊ ಗುಣನಿಧೆ |
ನಿನ್ನ ಚರಿತಾಮೃತವ ತೋರಿ ಸಲಹಯ್ಯ |
ಪ್ರಸನ್ನ ಮೂರುತಿ ಅಹೋಬಲ ನಿಲಯ
ಪುರಂದರ ವಿಠಲರಾಯ ೧
ಮಟ್ಟತಾಳ
ಜಯ ಜಯ ಬದರಿಕಾಶ್ರಮ ನಾರಾಯಣ |
ಜಯ ಜಯ ಬಾದರಾಯಣ ಪ್ರವೀಣ |
ಜಯ ಜಯ ಪ್ರಯಾಗದಲಿಪ್ಪ ನಾರಾಯಣ |
ಜಯ ಜಯ ಕಾಶೀ ಬಿಂದು ಮಾಧವನೇ |
ಜಯ ಜಯ ಜಗನ್ನಾಥ ಸಿಂಹಾದ್ರಿ |
ಜಯ ಜಯ ಆಹೋಬಲ ನಾರಸಿಂಹ |
ಜಯ ಜಯ ತಿರುಮಲರಾಯ ಜಯ ಕಂಚೀವರದ |
ಜಯ ಜಯ ರಂಗನಾಥ ಶ್ರುತಿ ಗೀತ |
ಜಯ ಸೇತುರಾಮ ಜಯ ಪದ್ಮನಾಭ |
ಜಯ ಜಯ ಜಯಾ ಮುದ್ದು ಉಡುಪಿ ಕೃಷ್ಣ |
ಜಯ ಜಯ ಪುಂಡರೀಕ ಮುನಿವರದ ಪುರಂದರ ವಿಠಲ ೨
ತ್ರಿವಿಡೆ ತಾಳ
ಜಯ ಗದಾಧರ ಜಯ ಜಯ ಜಗದೀಶ |
ಜಯ ಸೇತುವಿನಲಿ ರಾಮ |
ಜಯ ಸೋದೆಯಲಿ ನೆಲಸಿ ಮೆರೆವ ತ್ರಿವಿಕ್ರಮರಾಯ |
ದ್ವಾರಾವತಿಯ ಗೋವಿಂದ ಜಯ
ವಾದಿರಾಜ ಪ್ರಿಯ ಹಯವದನ
ಜಗದ್ದೇವನೇ ಜಯಮಧ್ವ ಗುರುವರದನೇ |
ಜಯ ಜಯ ಕರುಣಾಕರ ಜಯ ಜಯ ಕಮಲನಾಭ |
ಜಯ ಜಯ ಕಂಬುಕಂಠ ಕೌಸ್ತುಭಧರನೇ |
ಜಯ ಜಯ ಮರಕತ ಮಕರ ಕುಂಡಲಧರನೆ |
ಅನಂತಾನಂತ ಗುಣ ನಿಲಯ ಅನಂತಾನಂತ ರವಿಶತತೇಜ |
ಅನಂತಾನಂತ ಪುರಂದರ ವಿಠಲ ನಮೋ ನಮೋ ೩
ಅಟ್ಟತಾಳ
ಕ್ಷೀರ ಸಾಗರಕೆ ಶ್ರೀ ಹರಿಯು ಬಂದಂತೆ |
ಪ್ರಹ್ಲಾದನಲ್ಲಿಗೆ ನರಸಿಂಹ ಬಂದಂತೆ |
ಬಲಿಯ ಮನೆಗೆ ವಾಮನ ಬಂದಂತೆ |
ಅಕ್ರೂರನ ಮನಗೆ ಶ್ರೀ ಅಚ್ಯುತ ಬಂದಂತೆ |
ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ |
ಗೋಪಿಯರ ಮನೆಗೆ ಗೋಪಾಲ ಬಂದಂತೆ |
ಲಕ್ಷ್ಮೀಪತಿ ಪುರಂದರ ವಿಠಲ ದಿವ್ಯನಾಮವು |
ಎನ್ನ ನಾಲಗೆಗೆ ಬಂದು ನೆರೆದಿತು ೪
ಏಕತಾಳ
ಕೃಷ್ಣಾ ಕೃಷ್ಣಾ ಎಂಬುದಕೆ |
ಅಂತ್ಯ ಕಾಲದಿ ಮೊದಲಾ ಶಬ್ದಕೆ |
ನಾಮವು ಮುದದಿ ಮುಕ್ತಿಯ ತೋರಿತು |
ಇದು ಎನ್ನ ಮನಸಿನ ಮಾಯೆಯೇನೂ ಇಲ್ಲದೆ |
ನಾಚಿಕೆ ಎನ್ನ ಪ್ರತೀಕ್ಷಿಸದಯ್ಯಾ ಪುರಂದರ ವಿಠಲ |
ನಿಮ್ಮ ತ್ರಾಣಿಯಾದವನ ೫
ಜತೆ
ಹೊಕ್ಕುಳಲಿ ಗಂಡು ಪೆತ್ತವರುಂಟೆ |
ಉಂಗುಷ್ಟದಲಿ ಪೆಣ್ಣ ಪೆತ್ತವರುಂಟೆ |
ಮಿಕ್ಕಲಾದ ದೇವರಿಗೆ ಈ ಸೌಭಾಗ್ಯವುಂಟೆ |
ಮೊರೆ ಹೊಕ್ಕೆ ಮೊರೆ ಹೊಕ್ಕೆ ಪುರಂದರ ವಿಠಲ ||

೧೩೬
ಸುಳಾದಿ
ಮುಕ್ತಿಸಾಧನ ಸುಳಾದಿ
ಧ್ರುವತಾಳ
ಎಂಬತ್ತು ನಾಲ್ಕು ಲಕ್ಷ ಯೋನಿ ಮುಖಂಗಳಲ್ಲಿ ಪುಟ್ಟಿ ಪುಟ್ಟಿ |
ಪೊಂದಿ ಪೊಂದಿ ಬಳಲಿದೆನಯ್ಯ ನಾನು |
ಸುಕೃತ-ದುಷ್ರ‍ಕತವೆಂಬ ಉಭಯ ಕರ್ಮಗಳಲ್ಲಿ |
ತಾಪತ್ರಯದಲ್ಲಿ ಇರೆ ಉರೆ ಕಡು ನೊಂದೆನಯ್ಯ ನಾನು |
ಇಪ್ಪತ್ತೊಂದು ಕೋಟಿ ನಾಯಕ ನರಕದಲ್ಲಿ ಕಾಲನವರಿಗೆ ಸಿಲುಕಿ |
ಕಡುನೊಂದೆನಯ್ಯ ನಾನು |
ಇನ್ನೇತಕೆ ಮಾನಿಸ ಜನ್ಮ ದೊರೆಕೊಂಬೆ |
ಇನ್ನೇತಕೆ ನಿನ್ನವರಂಘ್ರಿ ದೊರೆಕೊಂಬೆ |
ಇನ್ನು ನಿನ್ನ ಬಿಟ್ಟು ಬಾಳಲಾರೆನಯ್ಯ ನಾನು |
ಮೊರೆ ಹೊಕ್ಕೆ ಪುರಂದರವಿಠಲ ಕಾಯ್ದುಕೊ ದಮ್ಮಯ್ಯ ೧
ಮಟ್ಟತಾಳ
ಅನಂತಾನಂತ ಜನ್ಮವೈದಾವೆ |
ಅನಂತಾನಂತ ಕರ್ಮವೈದಾವೆ |
ಅನಂತಾನಂತ ಪರಿಯಲಿ ಆಡಿಸಿ ನೋಡಬಾರದೆ
ಅನಂತಾನಂತ ಪರಿಯಲಿ |
ಎನ್ನನೊಬ್ಬನ ಸಂಸಾರಿಯಮಾಡದಿದ್ದರೆ |
ಇನ್ನು ನಿನಗೆ ಕಡಮೆಯೆ ಪುರಂದರವಿಠಲ? ೨
ಅಟತಾಳ
ಕಂಸಾರಿಗೆ ಮನಸೋತ ಮಾಧವಿಯರು |
ಸಂಸಾರವ ಸಂತೈಸಿದರೆ ಹೇಳಿರಯ್ಯ |
ಕಂಸಾರಿಗೆ ಮನಮೆಚ್ಚಾದ ಹೆಣ್ಣು |
ಸಂಸಾರವ ದಂತವಿಟ್ಟಾಳೆ ಹೇಳಿರಯ್ಯ |
ಹಂಸಮೂರುತಿ ಪುರಂದರವಿಠಲನಲ್ಲಿ |
ಹಂಸಿ ಹತ್ತಿದ ಬಳಿಕ ಅನ್ಯವನರಿವಳೇನಯ್ಯ ೩
ಝಂಪೆ ತಾಳ
ಹರಿಭಕುತಿಯೆಂಬ ಸುಧೆಯ ಸಾಗರವಿರೆ |
ಅರಿವರೆ ವಿಷವೆಂಬ ಎಳೆ ಕೊಳಚೆಯನೀರ? |
ಎಲೆ ಎಲೆ ಮನವೆ ಜಲರುಹಾಕ್ಷನ ನೆನೆ |
ಎಲೆ ಎಲೆ ಮನವೆ ಬಿಸರುಹಾಕ್ಷನ ನೆನೆ ಮರಳಿ ಮರಳಿ |
ಸಂಸಾರವನೈದುವರೆ ಪುರಂದರವಿಠಲ ವಿಶ್ವೇಶ್ವರನೆಂದು
ನೆನೆ ಎಲೆ ಎಲೆ ಮನವೆ ೪
ಏಕತಾಳ
ದುಷ್ಟದೈವವೆಂಬವು ಸಾವಿರಮಂದಿ ಚಿರವಾದಿಗಳ ಕಾಲಪಿಡಿ|
ಇದರಿಂದೆ ವಿಠಲನೆಂಬುವನು ಕಾಣ |
ಸೃಷ್ಟಿಸ್ಥಿತಿಲಯಕೆ ಪುರಂದರವಿಠಲನೊಬ್ಬನೆ ಕಾಣಿರೊ | ೫
ಜತೆ
ಅಹಂಕಾರ ಮಮಕಾರಗಳಳಿದು |
ಧಿಂ ಧಿಧಿಂ ಪುರಂದರವಿಠಲ||

೧೩೭
ಸುಳಾದಿ
ಹರಿಸ್ಮರಣ ಸುಳಾದಿ
ಧ್ರುವತಾಳ
ಎನ್ನ ಹೃದಯದಲ್ಲಿ ಎಲ್ಲಿ ಅನುವನೀಯಲೊ ಹರಿಯೆ? |
ಎನ್ನಭಾವದಲ್ಲಿ ಎಲ್ಲಿ ಅನುವನೀಯಲೊ ಹರಿಯೆ? |
ಬರಿದೆ ಸುಕೃತದ-ದುಷ್ರ‍ಕತದ ಬನ್ನ ಬಡಿಸಿ ನೀ ನೋಡುತಿಹರೆ ! |
ಎನ್ನ ಅವಗುಣಗಳೆಣಿಸುವರೆ ಕಡೆಯುಂಟೆ? |
ನಿನ್ನ ಘನತೆಯ ನೋಡಿ ಪಾಲಿಸೆಲೊ ಹರಿಯೆ |
ಎನಗನ್ಯಥಾ ಗತಿಯಿಲ್ಲ ಅನಾಥ ನಾನಯ್ಯ |
ಅನಾಥ ಬಂಧು ಪುರುಂದರವಿಠಲರಾಯ
ನಿನ್ನ ಡಿಂಗರಿಗನೆನಿಸೊ ಕೃಪಾಂಬುಧಿಯೆ ೧
ಮಟ್ಟತಾಳ
ಮನವೇಕೇಳು ಮಾಮನೋಹರನ |
ಮನಸಿಜಪಿತನ ನಾನನುದಿನದಲಿ ಅಗಲದಿಪ್ಪೆ |
ಘನಮಹಿಮ ದೇವರನನು ನೆನೆವುದೇನು
ನೇಹಮಾಡಿದವನ |
ಮನವನೀಯೆ ತನ್ನ ನೀವನು ಆ- |
ದÀನುಜ ಮನುಜ ದಿವಿಜರೊಡೆಯಗೆ |
ತನುವ ಪ್ರಾಣ ವೊಪ್ಪಸುವನನು |
ಅನುದಿನದಲಿ ಪೊರೆವನು ಪುರಂದರವಿಠಲ|
ನೆನೆವುದೇನು ನೇಹ ಮಾಡಿದವನ ೨
ತ್ರಿವಿಡೆತಾಳ
ತಟ್ಟುವದೆ ಕೌರವ ಅನಂತವನು |
ಮುಟ್ಟುವುದೆ ಗೂಗೆ ಭಾನುಮಂಡಲವನು |
ಸೃಷ್ಟಿ ಸಂಹಾರ ಕಾರಣ ಮೂರುತಿಗಳನು |
ಮೆಟ್ಟಿ ಆಳುವವ ಕೇಶವನೆಂದರಿಯದೆ |
ಸೃಷ್ಟಿ ಸಂಹಾರ ಕಾರಣ ಮೂರುತಿಯನು |
ಕಟ್ಟಿದಳೊ ಗೋಪಿದಾಮದಲಿ ಪುರಂದರ
ವಿಠಲರಾಯ ಯಮಳಾರ್ಜುನ ಭಂಜನ ೩
ಅಟತಾಳ
ಅಂತಿಂತೊಂದು ಕ್ಷಣ ಅನಂತನಿಲ್ಲದೆ |
ಚಿಂತಿಸುತಿದೆ ಎನ್ನ ಮನ ಚಿಂತಿಸುತಿದೆ |
ಕಂತು ಪಿತನ ಬರವ ಬಯಸಿ |
ಚಿಂತಿಸುತಿದೆ ಎನ್ನ ಮನ ಚಿಂತಿಸುತಿದೆ |
ಸಂತತ ಪುರಂದರವಿಠಲನ ನೆನೆವ ಭಾಗ್ಯವು |
ದೊರಕಬೇಕೆಂದು ಚಿಂತಿಸುತಿದೆ ಎನ್ನ ಮನ ೪
ಆದಿತಾಳ
ರಂಗ ನಮೋ ರಘು ನಂದನ ನಮೋ ನಮೋ |
ಕೃಷ್ಣ ನಮೋ ಕೃಪಾಳುವೆ ನಮೋ ನಮೋ |
ದೇವ ನಮೋ ದೇವರಾಯ ನಮೋ ನಮೋ |
ಈವ ನಮೋ ಕಾವಕರುಣಾಕರ ನಮೋ ನಮೋ |
ಪುಂಡರೀಕ ಮನಃ ಪ್ರಿಯನೆ ನಮೋ ನಮೋ |
ಪಂಢರಿರಾಯ ಪುರಂದರವಿಠಲದೇವ ನಮೋ ನಮೋ ೫
ಜತೆ
ಹರಿಯ ನೆನೆವೆ ನರಹರಿಯ ನೆನೆವೆ ಮುರ- |
ಹರನ ನೆನೆವೆನೊ ಪುರಂದರವಿಠಲ ||

೧೪೯
ಬಾಲಲೀಲಾಸುಳಾದಿ
ಧ್ರುವತಾಳ
ಎಲೆ ಎಲೆ ಸಿಡಿಲು ಮಿಂಚೆ ಗರ್ಜಿಸದಿರಿ ನೀವು
ಎಲೆ ಎಲೆ ಮೇಘರಾಜ ಮಳೆಗರೆಯದಿರು |
ಎಲೆ ಎಲೆ ಭೂದೇವಿ ನವರತುನಗಳಿಂದ |
ನೆಲೆ ಕಟ್ಟಿ ಕಟ್ಟಿಕೊಂಡು ಥಳಿಥಳಿಸುತಲಿರು |
ಹುಲಿಯುಗುರು ಅರಳೆಲೆ ಮಾಗಾಯಿ ಕಂಕಣ |
ಘಲು ಘಲು ಘುಲುಕೆಂಬೊ ಕಾಲಪೆಂಡೆಯನಿಟ್ಟು |
ಬಲರಾಮ ಪುರಂದರವಿಠಲ ಗೋಪಾಲಕೃಷ್ಣ |
ನಲಿಯುತ ಅಂಬೆಗಾಲನಿಕ್ಕಿ ಬರುತಾರೆ ೧
ಮಟ್ಟತಾಳ
ಬೆಣ್ಣೆ ಬಲದೊಡೆಯ ಮೇಲಿಟ್ಟುಕೊಂಡು |
ಅಣ್ಣ ಬಲರಾಮನ ಕೂಡಿಕೊಂಡು |
ಚಿನ್ನಾಗಿ ಡೊಗ್ಗಾಲೂರಿ ಮೆಲುವ ಕೃಷ್ಣ |
ಅಣ್ಣನ ಒಡಗೂಡಿ ಬರುತಾನೆ ಹಸುಮಗನಂತೆ |
ನಿನ್ನ ಮಗನೆ ಇವನು ಕೇಳಲೆ ಗೋಪಿದೇವಿ |
ಸಣ್ಣವನಿವನೇನೆ ಕಣ್ಣು ಬಿಡುವನೆ ಪುರಂದರವಿಠಲ ೨
ತ್ರಿವಿಡೆ
ಇದೆ ಇದೆ ಕೈ ಬೆಣ್ಣೆ ಇದೆ ಅಂಗ ಸಿಲುಕಿತ್ತು |
ಇದೆ ಇದೆ ಕಟಬಾಯಿಯಿಕ್ಕಿ ಸುರವ ಬೆಣ್ಣೆ |
ಇದೆ ಇದೆ ಗೋಪಿದೇವಿ ನಿನ್ನ ಮಗ ಕಳ್ಳನೇ |
ಇದೆ ಇದೆ ಹಿಡಿದು ತಂದೆವು ನೋಡೆ ನೋಡೆ |
ಹದುಳದಿಂದಿಡೆ ಲೇಸು ಇಲ್ಲದಿದ್ದರೆ ನಿನ್ನ |
ತದುವೆ ತದುವೆನಯ್ಯ ಪುರಂದರವಿಠಲ ೩
ಆದಿತಾಳ
ನೀಲ ಮೇಘಶ್ಯಾಮ ಕೋಮಲನೆ |
ಹಾಲು ಕುಡಿಯಲು ಬಾರೊ ಹಸಿದೆಯೋ ರಂಗಯ್ಯ |
ಹಾಲು ಮೊಸರು ಬೆಣ್ಣೆ ಹಾವಳಿಗಾರನೋ ಶ್ರೀ |
ಲೋಲ ಪುರಂದರವಿಠಲ ಗೋಪಾಲಕೃಷ್ಣ ೪
ಅಟ್ಟತಾಳ
ಮಲ್ಲಿಗೆ ಮೊಗ್ಗುಗಳಂತೆ |
ಹಲ್ಲು ಬಂದಿದೆ ರಂಗಯ್ಯಗೆ |
ಹಲ್ಲು ಬಂದಿದೆ ಕೃಷ್ಣಯ್ಯಗೆ |
ಎಲ್ಲೋ ಎಲ್ಲೋ ಬಾಯಿದೆರೆಯೆನೆ |
ಎಲ್ಲ ಬೊಮ್ಮಾಂಡಗಳನೆ ತೋರಿದ |
ಎಲ್ಲರಂತೆ ಕಂದನಲ್ಲಿವ |
ಬಲ್ಲವರಿಗೆ ಪುರಂದರವಿಠಲನು ೫
ಜತೆ
ಅನವರತ ಭಕುತಯಲಿ ನಿನ್ನ ಬಾಲಲೀಲೆ |
ನೆನೆವಂತೆ ಮಾಡೊ ಶ್ರೀಪುರಂದರವಿಠಲ ||

೧೪೮
ಸುಳಾದಿ
ಬಾಲಲೀಲಾಸುಳಾದಿ
ಧ್ರುವತಾಳ
ಎಲೆ ಎಲೆ ಸಿಡಿಲೆ ಮಿಂಚೆ ಗರ್ಜಿಸದಿರಿ ನೀವು |
ಎಲೆ ಎಲೆ ಮೇಘರಾಜಾ, ಮಳೆಗರೆಯದಿರು |
ಎಲೆ ಎಲೆ ಭೂದೇವಿ, ನವರತುನಗಳಿಂದ |
ನೆಲೆ ಕಟ್ಟಿ ಕಟ್ಟಿಕೊಂಡು ಥಳಥಳಿಸುತಲಿರು |
ಹುಲಿಯುಗುರ ಅರಳೆಲೆ ಮಾಗಾಯಿ ಕಂಕಣ |
ಘಲು ಘಲು ಘಲುಕೆಂಬ ಕಾಲಪೆಂಡೆಯನಿಟ್ಟು |
ಬಲರಾಮ ಪುರಂದರವಿಠಲ ಗೋಪಾಲಕೃಷ್ಣ |
ನಲಿಯುತ ಅಂಬೆಗಾಲನಿಕ್ಕುತ ಬರುತಾರೆ ೧
ಮಟ್ಟತಾಳ
ಮಲ್ಲಿಗೆ ಮೊಗ್ಗೆಗಳಂತೆ ಹಲ್ಲು ಬಂದಿವೆ ಸಿರಿಕೃಷ್ಣಯ್ಯಗೆ |
ಎಲ್ಲಿ ಎಲ್ಲಿ ಬಾಯ ತೆರೆಯೊ ಎನೆ |
ಎಲ್ಲ ಬೊಮ್ಮಾಂಡವ ಕಂಡೆ |
ಎಲ್ಲರಂಥ ಕಂದನಲ್ಲಿವ |
ಬಲ್ಲವರಿಗೆ ಪುರಂದರವಿಠಲನು |
ಜಗದ ಪಾಲಕನು,,,,,,,,ಹಲ್ಲು ಬಂದಿವೆ ೨
ತ್ರಿವಿಡೆತಾಳ
ಬೆಣ್ಣೆಯ ಬಟ್ಟಲವ ತೊಡಿಯಮೇಲಿಟ್ಟುಕೊಂಡು |
ಅಣ್ಣ ಬಲರಾಮನ ಕೂಡಿಕೊಂಡು |
ಚೆನ್ನಾಗಿ ಡೊಗ್ಗಾಲೂರಿ ಮೆಲ್ಲುವ ಕೃಷ್ಣ |
ಕಣ್ಣು ಬಿಡುವನೇನೆ ಕೇಳೆ ಗೋಪಿದೇವಿ |
ಸಣ್ಣವನೇನೆ ಪುರಂದುವಿಠಲ ೩
ಆದಿತಾಳ
ಇದೆ ಇದೆ ಕೈಬೆಣ್ಣೆ, ಇದೊ ಅಂಗೈ ಸಿಕ್ಕಿತು |
ಇದೆ ಇದೆ ಕಟಬಾಯಿ ಇದೇ ಸುರಿಯು ಬೆಣ್ಣೆ |
ಇದೆ ಇದೆ ಗೋಪೀದೇವಿ ನಿನ್ನ ಮಗನು ಕಳ್ಳ |
ಇದೆ ಇದೆ ಹಿಡಿದು ತಂದೆವು ನೋಡೇ |
ಹದುಳದಿಂದಿಡೆ ಲೇಸು ಇಲ್ಲದಿದ್ದರೆ ನಿನ್ನ |
ತದುಕಿ ಬಿಡುವೆನಯ್ಯ ಪುರಂದರವಿಠಲ ೪
ರೂಪಕತಾಳ
ನೀಲಮೇಘಶ್ಯಾಮ ಕೋಮಲನೆ |
ಹಾಲು ಕುಡಿಯ ಬಾರೊ ಹಸಿದೆಯಾ ರಂಗಯ್ಯ |
ಹಾಲು ಮೊಸರು ಬೆಣ್ಣೆ ಹಾವಳಿಗಾರೆನೊ |
ಶ್ರೀಲೋಲಪುರಂದರ ಗೋಪಲಕೃಷ್ಣ ೫
ಜತೆ
ಅನುದಿನ ಬಾಲಗೋಪಾಲಕೃಷ್ಣನೇ ನಿನ್ನ |
ನೆನೆವಂತೆ ಮಾಡೆನ್ನ ಪುರಂದರವಿಠಲ ||

೮೫
ಹರಿಭಕ್ತಮಹಿಮಾ ಸುಳಾದಿ
ಸುಳಾದಿ
ಐವರು ನಡೆವ ಪಥ ರಾಜಪಥ |
ಐವರು ನುಡಿದುದೆ ವೇದಾರ್ಥ |
ಐವರು ಮಿಂದುದೇ ಗಂಗೆ ತೀರ್ಥ |
ಐªರು ಮಾಡಿದುದೇ ನಾರಾಯಣ |
ಐವರು ರಾಜಾಧಿರಾಜರುಗಳು ಕಾಣಿರೋ |
ಐವರು ರಾಜಪರಮೇಶ್ವರರು ಕಾಣಿರೊ |
ಐವರ ಗೋಷ್ಠಿಯಲ್ಲಿ ಪುರಂದರವಿಠಲನಿಪ್ಪ ೧
ಮಟ್ಟ ತಾಳ
ಹಸ್ತಿನ ಪಟ್ಟನವ ನೇಗಿಲಲಿ ಎತ್ತಿದನೊಬ್ಬ |
ಅಸ್ತಮಿಸಿ ದಿನಮಂಡಲ ಉದಯವಿತ್ತನೊಬ್ಬ |
ಪೃಥ್ವಿಯ ಬಿಲ್ಲಿಂದ ಹರಹಿ ಇತ್ತವನೊಬ್ಬ |
ಪೃಥ್ವಿಯಂ ಗೋವಿನಂತೆ ಕರೆದು ಕೊಟ್ಟವನೊಬ್ಬ |
ವಸ್ತು ಪುರಂದರವಿಠಲನಿತ್ತ ಸಲಿಗೆಯಂತೊ ೨
ತ್ರಿವಿಡೆ ತಾಳ
ಐವತ್ತು ಸಾವಿರ ಯೋಜನವೆತ್ತ
ಲಂಕಾಪಟ್ಟಣವೆತ್ತ ಸಂಜೀವನವುವೆತ್ತ
ಇದನಿಲ್ಲಿಂದಿಲ್ಲಿಗೀ ಡಾಡುವುದೆತ್ತ
ಪುರಂದರವಿಠಲನವರ ಪ್ರತಿಮರಕಾಣಿರೋ ೩
ಅಟ್ಟ ತಾಳ
ಸ್ವರ್ಗದ ಮುತ್ತಿಗೆಯನು ಬಿಡಿಸುವರು |
ಮಾರ್ಗಣದಿಂದೆಚ್ಚೆತ್ತು ಪಾತಾಳದುದಕವ |
ವಿಗ್ರಹಭೂಮಿಯಲ್ಲಿಟ್ಟು ಮೆರೆವರು |
ಆಗ್ರಣಿ ಪುರಂದರವಿಠಲನಾಳುಗಳು ೪
ಆದಿ ತಾಳ
ಭಾಗೀರಥಿಯನೀಂಟಿದವರುಂಟೆ |
ಸಾಗರವಾಪೋಶನ ಕೊಂಡವರುಂಟೆ |
ನಾಗಾಭರಣವ ಮಾಡಿದವರುಂಟೆ |
ಪುರಂದರವಿಠಲನ ದಾಸರಲ್ಲದಲೆ ೫
ಜೊತೆ
ಹರಿದಾಸರಿಗಿನ್ನು ಏನು ತೀರದಯ್ಯ |
ಪುರಂದರವಿಠಲನ ಓವಿ ಕಾವುತಲಿದೆ ||

೩೩
ಸುಳಾದಿ
ಧ್ರುವತಾಳ
ಒಂದಪರಾಧವೆ ಹರಿಹರಿ, ಎರಡಪರಾಧವೆ ಹರಿಹರಿ
ಒಂದೊಂದು ಪರ್ವತದಂತಹದೋ ದೇವಾ ಒಂದನಂತ
ಸಾಸಿರಲಕ್ಷ ಕೋಟಿ ಅಪರಾಧ
ಒಂದಾಗಿ ನೋಡದೆ ಹರಿ ನೀ ಹಿಂದಿಕ್ಕಿಕೊಂಡು ಕಾದೆ
ಎಂದೆಂದೂ ನಿನಗೆ ನಾ ಸಲೆ ದೂರದೂರ ಹೋದೆÉ ಪು-
ರಂದರವಿಠಲ ಕೃಪಾಸಿಂಧುವೆ ನೀನಲ್ಲದುಂಟೆ ೧
ಮಟ್ಟಿ ತಾಳ
ಆನೆಂತಾಡುವೆ ಆನೆಂತು ಪಾಡುವೆ |
ಆನೆಂತಂತು ಮನಬಂದಂತೆ ನಡೆವೆ ನುಡಿವೆ |
ಒಡನಾಡಿಯಾಗಿರ್ಪ ಒಡನಿರ್ದು ಆಡಿಸುತಿಪ್ಪ; |
ಪುರಂದರವಿಠಲನೊಬ್ಬನೆ ಕಾಣಿರೊ ೨
ತ್ರಿಪುಟ ತಾಳ
ಶ್ರುತಿಗಳಿವೆ ಸ್ರ‍ಮತಿಗಳಿವೆ |
ಯತಿತಲೆ ಪರಕೋಟಿಗಳ ಮಂತ್ರಂಗಳಿವೆ |
ಇದೇನಯ್ಯ ಅತಕ್ರ್ಯನ ಪ್ರಮೇಯವಾಣಿ |
ಇದೇನಯ್ಯ ಪುರಂದರವಿಠಲ |
ಒಲಿದವರಿಗಳವಡುವೆಯಲ್ಲವೆ ೩
ಅಟ್ಟ ತಾಳ
ಉತ್ತುಂಗಸತ್ತ್ವ ಉತ್ತುಂಗನಾಮ ಉತ್ತುಂಗಮಹಿಮ |
ತುರಿಯಾತುರಿಯ ತುರಿಯಾತೀತ |
ಉತ್ತುಂಗ ಪಾಂಡುರಂಗ |
ಉತ್ತುಂಗ ಪುರಂದರವಿಠಲರಾಯ ೪
ರೂಪಕತಾಳ
ಹಿರಿಯರಿಗೆ ಗುರುಗಳಿಗೆ ದೈವಙ್ಞರುಗಳಿಗೆ |
ಶರಣೆನ್ನದೆ ಅನ್ಯಥಾ ಹರಿಭಕುತಿ ಪುಟ್ಟುವುದೆ |
ಪುರಂದರವಿಠಲ ಹಿರಿಯರ ಕೈಪಿಡಿದವನಯ್ಯ ೫
ಆದಿತಾಳ
ಸಾತ್ತ್ವಿಕರ ದೈವವೆ ನಿನ್ನ |
ಸಾತ್ತ್ವಿಕ ಭಕುತಿದೊರೆಕೊಂಬುದಲ್ಲವೇ |
ಸಾತ್ತ್ವಿಕ ಪ್ರಿಯ ಪುರಂದರವಿಠಲರಾಯ ೬
ಏಕತಾಳ
ಸನಕ ಸನಂದನ ಸನತ್ಕುಮಾರ ಸನತ್ಸುಜಾತ |
ಹನುಮಂತ ತುಂಬುರ ನಾರದಾದಿಗಳು |
ಅನೇಕಾನೇಕ ವಿಧದಲಿ ಪಾಡುತಿರೆ |
ಅನರ್ಘರತುನಾದಿಗಳು ಪಾದಾ |
ರ್ಚನೆಗೈಸಿರಿ ಬರೆ ನೋಡೆ ನುಡಿಸಿ |
ಅನೇಕ ವಿಧದಲಿ ಪಾಡುತಿರೆ |
ಇದೇನು ಮಹಿಮೆ ಇದೇನು ಘನತೆಯೊ |
ನೀನೆ ಬಲ್ಲೆ ಪುರಂದರವಿಠಲ ೭
ಜತೆ
ವೈಕುಂಠಪುರದಲ್ಲಿ ಯೋಗಿಹೃದಯದಲ್ಲಿ
ವೈಕುಂಠಪ್ರಿಯ ಪರುಂದರವಿಠಲ ನೀನಿಪ್ಪೆ ಕಾಣೊ ಸೂರ್ಯನಲ್ಲಿ

೮೮
ಸುಳಾದಿ
ಒಡೆಯ ಸುಳಾದಿ
ಧ್ರುವತಾಳ
ಒಡೆಯ ಹಾವುಗೆ ಮೆಟ್ಟ ಹಾವುಗೆಯವ ನಾನು |
ಒಡೆಯ ಮೆಲ್ಲಡಿಯಿಡಲು ಕಟ್ಟಿಗೆಯವ ನಾನು |
ಒಡೆಯ ತಾಂಬೂಲವ ಉಗುಳುವ ವೇಳೆಯಲಿ |
ಪಡಿಗ-ಕಾಳಂಜಿಯ ಪಿಡಿವವ ನಾನು |
ಒಡೆಯನೊಡ್ಡೋಗಲಗದಿ ಚಿತ್ತೈಸಿರೆ |
ಪಿಡಿವವ ಛತ್ರ ಛಾಮರವ ಕನ್ನಡಿಯ-ನಾನು |
ಒಡೆಯ ಪುರಂದರವಿಠಲರಾಯನ |
ಉಗುರು ಬಿದ್ದಲ್ಲಿ ಎನ್ನ ಶಿರವ ಕೊಡುವೆ ನಾನು ೧
ಮಟ್ಟತಾಳ
ಹರಿಯನೋಲೈಸುವೆಂಬಣ್ಣಗಳಿರಾ ಕೇಳಿ |
ಶರಧಿಯ ಕಟ್ಟಬೇಕು, ಲಂಕೆಯ ಮುತ್ತಬೇಕು |
ರಾವಣಾದಿಗಳ ಕೂಡ ಇರಿದಾಡುತಿರಬೇಕು |
ಪುರಂದರವಿಠಲನ ಊಳಿಗ ಘನ-ಶರಧಿಯ ಕಟ್ಟಬೇಕು | ೨
ತ್ರಿವಿಡೆ ತಾಳ
ಚೆಂದಿರನಿಗೆ ಇಂದು ನಿಂದಿರೆ ತೆರಪಿಲ್ಲ |
ಸೂರ್ಯನಿಗೆ ಇಂದು ಕುಳ್ಳಿರೆ ಹೊತ್ತಿಲ್ಲ |
ಇಂದ್ರಾದಿಗಳೆಲ್ಲ ಹರಿ ಹರಿ ಎಂದು
ತಲೆಯನ್ನು ತುರಿಸ ಹೊತ್ತಿಲ್ಲ |
ಬೊಮ್ಮಾದಿಗಳಿಗೂ ಒಮ್ಮೆಯೂ ತೆರಹಿಲ್ಲ |
ಈ ದೇವರನೆಲ್ಲ ಮೆಟ್ಟಿ ಆಳುವ ನಮ್ಮ ಪುರಂದರವಿಠಲನ
ಕಟ್ಟಾಳು ಕಾಣಿರೊ ೩
ಅಟ್ಟತಾಳ
ಶ್ರೀಕೃಷ್ಣನರಮನೆಯ ಗಾಯಕರಾವು |
ನಟರಾವು, ಬಿಜಾವಂತರಾವು |
ಸೂತ ಮಾಗಧ ವಂದಿಗಳಾವು, ಭಟ್ಟರಾವು |
ಪುರಂದರವಿಠಲನ ಸೇವಕರಾವು
ಭಟರಾವು ವಿದ್ಯಾವಂತರಾವು | ೪
ಏಕತಾಳ
ತಿರೆಯಂಜುತಲಿದೆ, ಗಿರಿಯಂಜುತಲಿದೆ |
ಮರಬಳ್ಳಿಗಳಂಜಿ ಫಲವನೀವುತಲಿವೆ |
ಸರಿತು ಸಮುದ್ರಗಳಂಜಿ ಬೆಚ್ಚುತಲಿವೆ |
ಆ ಸಚರಾಚರವಂಜುತಲಿದೆ |
ಪುರಂದರವಿಠಲ ನೀನೆಂಥ ಅರಸನೊ | ೫
ಜತೆ
ನಾ ಘನ, ನೀ ಘನ, ತಾ ಘನ ಎನಬೇಡ |
ಪುರಂದರವಿಠಲನೊಬ್ಬನೆ ಘನ ಘನ ||

೨೯೩
ಸುಳಾದಿ
ಧ್ರುವತಾಳ
ಒಬ್ಬ ಆಚಾರ್ಯನು ದೈವವೇ ಇಲ್ಲವೆಂಬ |
ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ |
ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು-
ತಾನೆ ದೈವವೆಂಬ |
ಇವರೊಬ್ಬರೂ ವೇದಾರ್ಥವರಿತೂ ಅರಿಯರು |
ಇವರೊಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು |
ಒಬ್ಬ ಮಧ್ವಾಚಾರ್ಯರೆ ಪುರಂದರ ವಿಠಲನೊಬ್ಬನೆ
ಎಂದು ತೋರಿ ಕೊಟ್ಟವರಾಗಿ ೧
ಮಟ್ಟ ತಾಳ
ಹರಿಪರ ದೇವತೆ ಎಂಬ ಜ್ಞಾನವೇ ಜ್ಞಾನ |
ಹರಿಯಡಿಗಳನೈದುವ ಮುಕುತಿಯೇ ಮುಕುತಿ |
ಹರಿ ವಿರಹಿತ ಜ್ಞಾನ ಮಿಥ್ಯಾ ಜ್ಞಾನ |
ಹರಿ ವಿರಹಿತ ಮುಕುತಿ ಮಾತಿನ ಮುಕುತಿ |
ಹರಿಪರ ಸಿರಿ ಮಧ್ವಾಚಾರ್ಯರೇ ಗುರುಗಳು |
ತ್ರೈಲೋಕ್ಯಕೆ ಪುರಂದರ ವಿಠಲನೇ ದೈವವು ೨
ರೂಪಕತಾಳ
ಸುರತರುವಿರುತಿರೆ ಎಲವದಫಲ ಗಿಳಿ ಬಯಸಿಪ್ಪಂತೆ |
ಹಿರಯರಾದರು ನೋಡ ಹರಿಪರದೈವೆಂದರಿಯದೆ |
ಗುರುಗಳಾದರು ನೋಡ ಹರಿ ಪರದೈವೆಂದರಿಯದೆ |
ಸಿರಿವಿರಿಂಚಿ ಭವಾದಿಗಳೆಲ್ಲ ಹರಿಯ ಡಿಂಗರಿಗರೆಂದರಿಯದೆ |
ಹಿರಿಯರಾದರು ನೋಡು ಗುರುಗಳಾದರು ನೋಡ |
ಸಿರಿ ಪುರಂದರ ವಿಠಲನ ತೋರಿದ
ಸಿರಿ ಮಧ್ವಾಚಾರ್ಯರಿರುತಿರೆ
ಗುರುಗಳಾದರು ನೋಡ | ೩
ತ್ರಿವುಡೆ ತಾಳ
ಸೋಹಂ ಎಂದು ಲೋಕವ ಮೋಹಿಸುವರ |
ನಿರಾಕರಿಸಿ ದಾಸೋಹಂ ರಹಸ್ಯವನರುಹಿದ |
ಸೋಹಂ ಎಂಬ ಸಿರಿ ಪುರಂದರ ವಿಠಲ ನಾಳು |
ಮಧ್ವ ಮುನಿ ದಾಸೋಹಂ ಎಂಬ ೪
ಆದಿತಾಳ
ವೈದಿಕ ಮತದಲಿ ನಡೆದೆವೆಂದು ತಾವು
ವೈಷ್ಣವವಂಬಿಟ್ಟು ಕೊಟ್ಟರು ಕೆಲವರು |
ವೈಷ್ಣವ ಮತದಲ್ಲಿ ನಡದೆವೆಂದು
ವೈದಿಕವಂ ಬಿಟ್ಟುಕೊಟ್ಟರು ಕೆಲವರು |
ವೈದಿಕ ವೈಷ್ಣವ ಒಂದೇ ಎಂದು ಮಧ್ವಮತ ಮುನಿ
ಪ್ರತಿಪಾದಿಸಿದ ಪುರಂದರ ವಿಠಲ ಮೆಚ್ಚ ೫
ಝಂಪೆತಾಳ
ಏಕ ವಿಂಶತಿ ಕುಭಾಷ್ಯ ದೂಷಕನೆಂಬ
ಬಿರುದು ನಮ್ಮಯ ಗುರುರಾಯಗಲ್ಲದುಂಟೆ |
ಪುರಂದರವಿಠಲ ಸರ್ವೋತ್ತಮನೆಂಬ
ಸಿದ್ಧಾಂತವು ನಮ್ಮ ಗುರು ರಾಯರಗಲ್ಲದುಂಟೆ ? | ೬
ಅಟ್ಟತಾಳ
ಹರಿಯೆ ಪರಮ ಗುರು ಪರಮೇಷ್ಠಿ ಗುರು ಸುರ |
ಗುರಮಧ್ವಾಚಾರ್ಯ ಚಕ್ರವರ್ತಿ ಎಂ-
ದರಿತಿರೆ ಭಕುತಿ ಮುಕುತಿಯುಂಟು |
ಪುರಂದರ ವಿಠಲನೆ ದೈವಾಧಿ ದೈವ |
ಸುರ ಗುರು ಮಧ್ವಾಚಾರ್ಯರೆ ಚಕ್ರವರ್ತಿ ೭
ಜತೆ
ಶರಣು ಗಿರಿ ಮಧ್ವಾಚಾರ್ಯರಿಗೆ ಪುರಂದರ ವಿಠಲಗೆ |
ಶರಣು ಶರಣೆಂಬೆ ನಾನನವರತ ||

೧೫೮
ಸುಳಾದಿ
ಧ್ರುವತಾಳ
ಕಡಗ ಕಂಕಣ ಕಟಿಯ ತೊಡರ ಸಮಚರಣದ |
ಹೇಮವರ್ಣಶ್ಯಾಮ ಕೋಮಲಾಂಗ |
ಅಹೋ ಗೋಪಿಯರ ಮೋಹಿಸುತ್ತಿದೆ |
ಅಹೋ ಜಗಜ್ಜನರ ಪಾಲಿಸುತ್ತಿದೆ |
ಪುರಂದರವಿಠಲನ ಬಾಲಲೀಲೆ ೧
ಮಟ್ಟತಾಳ
ಪೊಂಬಟ್ಟೆಯ ಮೇಲೆ ಕಂಚಿಯ ದಾಮ ಗುಡಿಗಟ್ಟಿ |
ಜಂಬು-ಚೂತದೆಳದಳಿರುಗಳ ಮುಕುಟ ವೇಲೆ ಕಟ್ಟಿ |
ಕೊಂಬು ಕೊಳಲು ತುತ್ತೂರಿ ಮೌರ್ಯಗಳು |
ಭುಂ ಭುಂ ಭುಂ ಭುಂ ಝಂ ಝಂ ಝಂ ಝಂ ||
ಎಂಬ ರಾಮಕೃಷ್ಣ ಗೋಪರುಗಳ |
ಸಂಭ್ರಮ ಸುರರ ಸೋಲಿಸಿತು ಜಂಭ ಭೆüೀದಿ ಸ್ವ |
ಯಂಭುವ ಮುಖ್ಯ ಸುರವಂದಿತ ತಿರು- |
ವೆಂಗಳಪ್ಪ ಪುರಂದರವಿಠಲರಾಯ | ೨
ತ್ರಿವಿಡೆತಾಳ
ಜಯ ಜಯ ಸಿರಿನಾರಸಿಂಹ ದುರಿತಭಯ ನಿವಾರಣ |
ಜಯ ಜಯ ಸಿರಿದಿವ್ಯ ಸಿಂಹ ಪುರಂದುರವಿಠಲರಾಯ ೩
ಅಟತಾಳ
ಅಹಂಕಾರ ಮಮಕಾರವಳಯದೆ |
ವಿಹಂಗಗಮನ ಸಿಕ್ಕುವನೆ ಮರುಳೆ? |
ಕಾಮಕ್ರೋಧವ ಬಿಡದನಕ |
ಪುರಂದರವಿಠಲನು ಸುಲಭನೆ ಮರುಳೆ? | ೪
ಆದಿತಾಳ
ವಾಮನ ವಾಸುದೇವ ಪದುಮನಾಭ ಹರಿ |
ದಾಮೋದರ ನರಹರಿ ಮಾಧವ ಸಿರಿಧರ |
ನಾರಾಯಣ ಹರಿ ಸಿರಿ ವತ್ಸಾಂಕಿತ |
ವಾರಿಜದಳಲೋಚನ ಭೂರಮಣ |
ಅಚ್ಯುತಾನಂತ ಗೋವಿಂದ ಮುಕುಂದ ಪುರು |
ಷೋತ್ತಮ ಶ್ರೀ ಹರಿ ನಾರಾಯಣ |
ಪ್ರದ್ಯುಮ್ನ ಸಂಕುರಷಣದೇವ ಅನಿ-|
ರುದ್ಧ ಪುರಂದರವಿಠಲ ಸರ್ವೋತ್ತಮ ೫
ಜತೆ
ಕಾಯ ಕರಣಗಳಿಂದ ಜೀಯ ಕಾಯ ಬೇಕೆನ್ನ |
ಕಾಯ್ದು ಕೊಳ್ಳೊ ಪುರಂದರವಿಠಲ ನೀಯೆನ್ನ
ಕಾಯ್ದು ಕೊಳ್ಳೆನ್ನ ||

೧೫೩
ಸುಳಾದಿ
ಧ್ರುವತಾಳ
ಕಿನ್ನರ ಕಿಂಪುರುಷರು ನಭದಲಿ ಸುರ |
ಕನ್ನೆಯರೊಡನಾಡಿ ಪಾಡುತಿರೆ |
ನಿನ್ನಾಳಾಗಿ ಗೋಪರು ಕೊಂಬು-ಕೊಳಲನೂದಿ |
ಕಿನ್ನರ ಮೌರಿಯ ತುತ್ತೂರಿ ಧ್ವನಿಗೆಯ್ಯೆ |
ರನ್ನದ ರತುನದಂದುಗೆ ಗೆಜ್ಜೆ ಘಿಲಿ ಘಿಲಿ |
ನಿನ್ನ ಮೂರುತಿ ನಿನ್ನ ಬಾಲಲೀಲೆ |
ಚೆನ್ನ ಮೂರುತಿ ಚೆನ್ನ ಕೀರುತಿ |
ಎನ್ನಾಳಿದ ಪುರಂದರವಿಠಲಜೀಯ ೧
ಮಟ್ಟತಾಳ
ಕೌಸ್ತುಭವಿಪ್ಪ ಕೊರಳಲಿ ಕಲ್ಲಿ-ಕಂಬಳಿಯನಿಡುವೆ |
ಕಂಜುನಾಭಿಯಲ್ಲಿ ಕಲ್ಲಿಯ ಕಟ್ಟಿ ಮೆರೆವೆ |
ಕಂಜನಾಭ ಕಮಲೆಯ ನೂಪೂರಗತಿಕ್ರಮಗಳಲೊಪ್ಪುವೆ |
ಕಂಜನಾಭ ಬಾಲಲೀಲೆಯು ನಿನಗೆ |
ಏನು ಪ್ರಿಯವೊ ಪುರಂದರವಿಠಲ ೨
ಆದಿತಾಳ
ನೀಲ ಮುತ್ತಿನ ದಂಡೆ ನೀಲಗುಂಜಿಯ ದಂಡೆ |
ಮೇಲು ಮಂದಾರ ತುಲಸಿಯ ಪೂವಿನ ದಂಡೆ |
ಬಾಲಕ ರೊಡನಾಡುವ ದಂಡೆ |
ಮೇಲು-ಮೇಲ್ವಾಯ್ದು ಬಪ್ಪ ಖಳರ ಮುಖಗಳ ದಂಡೆ |
ಭಾಳಲೋಚನ ಪುರಂದರ ವಿನುತರಾಯ |
ಮೇಳದ ಕಂದರ ಬಾಲಶಿಬಿರದಲೊಪ್ಪಿರು |
ಸ್ವತೋ ಮಹೀಯಾನ್ ಗುಣಭರಿತ |
ಪುರಂದರವಿಠಲರಾಯ ಅಣೋರಣೀಯಾನ್ ೩
ರೂಪಕತಾಳ
ನಿನ್ನವನೆಂಬೆ ನೀ ಕೈವಿಡಿಯದೆ |
ತನ್ನಯ ತನ್ನ ಸಾಧನ ಸಾಧಿಸದೆ |
ನಿನ್ನಾಳತನ ಸಿರಿ ಪುರಂದರವಿಠಲರಾಯ |
ನಿನ್ನಾಳುತನ ೪
ತ್ರಿವಿಡೆ ತಾಳ
ಶ್ರುತಿಯ ತತಿಯ ಗತಿಯ ಗರುವನ ನೆಲೆಯ |
ಕಂಡ ಕರ್ಮಠರುಗಳು ಬಲ್ಲರೆ ಜಗತ್ಪತಿಯ ನೆಲೆಯ ?|
ಯತಿಯ ತತಿಯಾ ಪುರಂದರವಿಠಲರಾಯನ |
ಕಂಡ ಕರ್ಮಠರುಗಳು ಬಲ್ಲರೆ ?| ೫
ಝಂಪೆತಾಳ
ಶ್ರುತಿ ಉಪನಿಷತ್ತುಗಳಲ್ಲಿ ಸ್ರ‍ಮತಿ ಪುರಾಣಾಗಮಗಳಲ್ಲಿ |
ರತಿಪತಿಪಿತ ನಾರಾಯಣ ಚತುರ್ಮುಖ
ಮುಖ್ಯ ದೇವತೆಯರಿಗೆ |
ಗತಿ ಪುರಂದರವಿಠಲರಾಯ || ೬
ಅಟತಾಳ
ವೇದಗಳೆಂಬ ದಾವಣಿಯಲ್ಲಿ
ನಾಮಗಳೆಂಬ ಮೂಗುನೇಣುಗಳಿಂದ |
ಜೀವರುಗಳೆಂಬ ಎತ್ತುಗಳನೆ ಕಟ್ಟಿ ಕರ್ಮವೆಂಬ ಹೇರಹೇರಿಸಿ |
ಆಡುವನು ಪುರಂದರವಿಠಲರಾಯ |
ಇವನೊಬ್ಬನೆ ದೊಡ್ಡ ವ್ಯವಹಾರಿ ಕಾಣಿರೊ ೭
ಏಕತಾಳ
ಸಚರಾಚರವ ಪ್ರೇರಿಸುವರಾರಯ್ಯ |
ಜಗದ್‍ಯಂತ್ರ ವಾಹಕರಾರಯ್ಯ |
ಪುರಂದರವಿಠಲರಾಯನಲ್ಲದೆ ಸ್ವತಂತ್ರರಾರಯ್ಯ ೮
ಜತೆ
ನಿನ್ನನೆ ನಂಬಿದೆ ಮನ್ನಿಸಯ್ಯ |
ಪುರಂದರವಿಠಲರಾಯ ನಿನ್ನನೆ ನಂಬಿದೆ ||

೧೫೯
ಸುಳಾದಿ
ಹರಿಸುಲಭಸುಳಾದಿ
ಧ್ರುವತಾಳ
ಕೆಲವರು ಕೆಂದಾವರೆ ಹಾಸಿ ಪವಡಿಸೆನೆ ಪವಡಿಸುವೆ |
ಕೆಲವರುಪಬರ್ಹಣವ ಈಯಲು ನೀನಾನುವೆಯೊ |
ಕೆಲವರು ಕೇತಕಿ ಚಾಮರ ಬೀಸಲು ನೀನಲಿವೆ |
ಕೆಲವರು ಪಾದಪದುಮಗಳ ಒತ್ತಲು ನೀನೊಲಿವೆ |
ಕೆಲವರು ತೋಳ್ದೊಡೆ ಮೈಮೊಗವೆರಸಿ ಅಪ್ಪಲು
ಮರಳಿ ಅಪ್ಪುವೆ |
ಕೆಲವರು ಕೊಂಬು ಕೊಳಲು ತುತ್ತೂರಿ ಮೌರ್ಯಗಳ
ಬಾರಿಸೆ ನೀನೊಲಿವೆ |
ಕೆಲವರು ಮಂದ್ರ ಮಧ್ಯಮ ತಾರದಿ ಅನೇಕ ರಾಗಗಳ ಪಾಡೆ |
ಝಣ ಝಣ ಝಣರೆಂದುಗ್ಗಡಿಸೆ ಕೆಲವರು |
ಧಿಮ್ ಧಿಮ್ ಧಿಮ್ ಧಿಮಿಕೆನುತಲಿ ಕೆಲವರು
ನೃತ್ಯವಾಡೆ ಸುಖಿಸುವೆ |
ಜಲಜಾಕ್ಷ ಏನಿನ್ನಿವರ ಪುಣ್ಯವೆಂತು ಬಣ್ಣಿಪೆ |
ಹಲಧರನು ನಿನ್ನೊಡನೆ ನಿನ್ನೊಳಾಡುವ
ಗೋಪ ಗೋಪಿ ಗೋ-|
ಗೋಕುಲಿಕೆ ನಮೋ ಪುರಂದರವಿಠಲ || ೧
ಮಟ್ಟತಾಳ
ನಖದ ಬೆರಳು ಚಂದ್ರ ಸೂರ್ಯರ ಸೋಲಿಸಿ
ಮೆರೆಯುತಿದೆ ನೋಡು |
ಮುಖದಧಿಪತಿಯೆ ನಿನ್ನ ಸರ್ವಾಂಗದ ಕಾಂತಿ
ಲಾವಣ್ಯಗಳನೆ ಕಂಡು |
ಸುಖಿಸಿದರಂತವರು ನಿನ್ನೊಡನೆ ಇದ |
ನಿಖಿಳ ಜಗತ್ಕಾರಣ ನೀನೆ ಬಲ್ಲೆ |
ಮಕರಕುಂಡಲಾಭರಣವೆಸೆಯೆ |
ವಿಖನಸಾರ್ಚಿತ ಶ್ರೀ ಪುರಂದರವಿಠಲರಾಯ ೨
ತ್ರಿವಿಡೆತಾಳ
ರತ್ನಮುಕುಟವು ರತ್ನಮುಕುಟದಂತೆ |
ರತ್ನಮುಕುಟಕ್ಕೆ ತುಂಬೆಯೆರಗಲು |
ಕತ್ತಾವರೆ ವೀರೆಯ ದÀಂಡೆ ಮೆರೆಯೆ |
ಪೀತಾಂಬರ ಕಾಂಚೀದಾಮಾದಿ ಶೋಭಿತ |
ಚತ್ತವಲ್ಲಭ ಪುರಂದರವಿಠಲನೊಳು |
ಉತ್ತರೋತ್ತರದ ಶೃಂಗಾರವವ್ವ | ೩
ಅಟತಾಳ
ಅನಂತವೇದ ಸಮೂಹಗಳಿಂದಲಿ |
ಅಜಾದಿಸುರರು ಅರಸಲೇತಕ್ಕಿನ್ನು? |
ಆನಂದ ಯಶೋದೆಯರ ಮನೆಯಲ್ಲಿ |
ವೃಂದಾವನದಿ ಕಾಣಿಸಿಕೊಂಡನವ್ವ |
ನಂದ-ನಂದನ ಕಂದ ಪುರಂದರವಿಠಲ |
ಪರದೇವತೆ ಈತನಲ್ಲವೇನವ್ವ ೪
ಆದಿತಾಳ
ಬೆಣ್ಣೆಯ ಬಟ್ಟಲ ಕಂಡು ಒರಳ ಮೇಲೇರಿ ಕೊಂಡು |
ಚಿಣ್ಣರಿಗೆ ತುತ್ತೀವ ಠಕ್ಕುತನವೇನೆಂದು |
ಕಣ್ಣ ಝೇಂಕರಿಸುತ್ತ ಕಂಜಾಕ್ಷ ಎಂದು ಗೋಪಿ |
ದೊಣ್ಣೆಯ ಕೊಂಡಟ್ಟಿದಳಪ್ರತಿಮ ಪ್ರಭಾವನ್ನ |
ಹೆಣ್ಣೇನು ನೋಂತಳು ಪುರಂದರವಿಠಲನ |
ಕಣ್ಣಿಯಲ್ಲಿ ಕಟ್ಟಿ ಆಳಿದಳು ವಿಶ್ವ ಕಾಯನ ೫
ಜತೆ
ನಂದ ದಾಮವ ಬಿಟ್ಟು ಕಂದನ ಬಿಗಿದಪ್ಪಿ |
ಅಂದು ವಂದಿಸಿದನು ಪುರಂದರವಿಠಲನ||

೧೨೫
ಸುಳಾದಿ
ಜೀವ ಬಿಂಬ ಸುಳಾದಿ
ಧ್ರುವತಾಳ
ಕ್ಷೀರಸಾಗರದಲಿ ಹಾವಿನ ಹಾಸಿಗೆ ಓಜೆಯೊಳ್
ಒರಗಿಪ್ಪ ಎನ್ನೊಡೆಯ |
ಹಾರಮುಕುಟ ಕುಂಡಲ ಪೀತಾಂಬರಧಾರಿಯಾಗಿಹ ಎನ್ನೊಡೆಯ |
ನಾರದ ಗರುಡ ಗಂಧರ್ವರ ಗಾನದಿ
ಓರಂತೆ ಸುಖಿಸು ಎನ್ನೊಡೆಯ |
ಮಾರ ಚಾಮರಗಳ ಢಾಳಿಸುತಿರಲು |
ಮಾರುತಿ ಕಂಬಿವಿಡಿದು ನಿಲ್ಲಲು |
ನೀರ ಜಾಲಿಯ ತಾನಡಿಗಳನೊತ್ತಲು ಉ-|
ದಾರ ದೇವರ ದೇವನೊಲುಮೆಯಿಂದ |
ಕಾರುಣ್ಯ ಸುಧೆಯನು ಸುರಿಯೆ ಭಕ್ತರಮೇಲೆ |
ಭೂರಮಣನೆ ಪುರಂದರ ವಿಠಲರಾಯ ೧
ಮಟ್ಟತಾಳ
ಇಂದ್ರ ನೀಲಾಚಲದಲಿ ಇಂದ್ರಚಾಪ ಮೂಡಿದಂತೆ |
ಕುಂದ ಕುಸುಮನಂಗದಲ್ಲಿ ಚಂದ್ರಕಾಂತಿಗಳೆಸೆಯೆ |
ತುಲಸೀಮಾಲೆಗಳೆಸೆಯೆ |
ಕುಂದಕುಸುಮನಂಗದಲ್ಲಿ…………….
ಮಂದಗಮನ ಗರುವರೇಯ ಉಪೇಂದ್ರ ಪುರಂದರವಿಠಲ ೨
ತ್ರಿವಿಡೆತಾಳ
ನೀಲಮೇಘಶ್ಯಾಮ ನಿನ್ನ ಬಾಲಭಾಸ್ಕರ ವರ್ಣ ಉಡು- |
ಪಾಲಯ ಕೋಟಿ ಪ್ರಕಾಶವೊ ದೇವಾ |
ಕೇಳ್ಗ (ಳಿ) ಬಲ್ಲೆ ಅನೇಕ ವರ್ಣದಿಂದ ಓಲಗಿಪ
ಪುರಂದರವಿಠಲದೇವ ಕೇಳಬಲ್ಲೆ ೩
ಅಟತಾಳ
ನಿಚ್ಚಮಂಗಳ (ನಿಚ್ಚ) ನಿಧಿನೀನೆಂದು |
ಸಚ್ಚದಾನಂದ ಸ್ವರೂಪ ನೀನೆಂದು |
ಅಚ್ಯುತಾನಂತ ಗೋವಿಂದ ನೀನೆಂದು |
ಮೆಚ್ಚಿದೆ ನಾನಿನ್ನ ಚರಣವ ಇಂದು |
ಅಚ್ಚ ಸಕಲ ಲೋಕಕ್ಕಧಿದೈವ ನೀನೆಂದು
ಲಚ್ಚುಮೀಪತಿ ಪುರಂದರವಿಠಲ ನೀನೆಂದು ೪
ರೂಪಕತಾಳ
ಲೋಕದ ಮಾನವರೆಲ್ಲ ನಿರಾಕಾರನೆನೆಂದೆನಲು ನಮ- |
ಗೇಕೊ ವಾದ ವಿವಾದ ಬರಿದೆ ಕಾಕರ ಕಣದೊಳಗೆ |
ಸಾಕಾರನನನರಿಯದ ಮೂಢಾಕಾರರ ಕೂಡೆ ನಮ- |
ಗೇಕೊವಾದ ನಮಗಿದೇಕೊ ವಾದ |
ಏಕೋ ವಿಷ್ಣುವೆಂಬ ಪುರಂದರವಿಠಲ ನೀನಿರಲು
ನಮಗಿನ್ನೇಕೊ ವಾದ …………….. ೫
ಆದಿತಾಳ
ಎನಗೊಬ್ಬ ಒಡೆಯ ದೊರಕಿದ ದೊರಕಿದ |
ಸಿಧ್ಧಾಯವನೀವ ಕಟ್ಟಳೆ ಕಂದಾಯವನೀವ |
ಬೇಡಿದ ಉಚಿತವ ನಮಗವನೀವ |
ಎನಗೊಬ್ಬ ಒಡೆಯ ದೊರಕಿದ |
ಕಷ್ಟ ನಷ್ಟಗಳಿಲ್ಲ ಒದೆ-ಜಡಿತಗಳಿಲ್ಲ |
ಎನ್ನ ಮನಬಂದಂತೆ ಓಲೈಸುವೆನು |
ಎನ್ನಮನಬಂದಾಗ ಓಲೈಸಿಕೊಂಬ |
ಕೇಡಿಲ್ಲದೊಡೆಯ ಪುರಂದರವಿಠಲ
ಎನಗೊಬ್ಬ ಒಡೆಯ ದೊರಕಿದ ೬
ಝಂಪೆತಾಳ (ಏಕತಾಳ)
ದೇವದೇವಕಿನಂದ ದೇವೋತ್ತಮ ಗೋವಿಂದ |
ಗೋವರ್ಧನಗಿರಿಧರ ಧರಣೀಧರ |
ಜೀವಬಿಂನ ಪುರಂದರವಿಠಲ ಓವು ನನ್ನಯ್ಯ ದೇವ ೭
ಜತೆ
ಮನವಚನ ಕಾಯಕದಿಂದ ನಿನ್ನನೆ ನೋಡಿ |
ಅನುದಿನ ನೆನೆವೆ ನಾನು ಪುರಂದರವಿಠಲ ||