Categories
ರಚನೆಗಳು

ಪುರಂದರದಾಸರು

ಪುರಾಣಗಳಲ್ಲಿ ಬರುವ ಎಣಿಕೆ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪೀಜನ ಪ್ರಿಯ ಗೋಪಾಲಗಲ್ಲದೆ ಪದೊರೆಯತನದಲಿ ನೋಡೆ ಧರಣಿದೇವಿಯ ರಮಣಸಿರಿಯತನದಲಿ ನೋಡೆ ಶ್ರೀಕಾಂತನು ||ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯಗುರುವುತನದಲಿ ನೋಡೆ ಜಗದಾದಿ ಗುರುವು ೧
ಪಾವನತ್ವದಿ ನೋಡೆ ಅಮರ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯ ||ಲಾವಣ್ಯದಲಿ ನೋಡೆ ಲೋಕ ಮೋಹಕನಯ್ಯಆವ ಧೈರ್ಯದಿ ನೋಡೆ ಅಸುರಾಂತಕ೨
ಗಗನದಲಿ ಸಂಚರಿಪ ಗರುಡದೇವನೆ ತುರಗಜಗತೀಧರ ಶೇಷ ಪರಿಯಂಕ ಶಯನ ||ನಿಗಮಗೋಚರ ಪುರಂದರ ವಿಠಲಗಲ್ಲದೆಮಿಗಿಲಾದ ದೈವಗಳಿಗೀ ಭಾಗ್ಯವುಂಟೇ * ೩

೧೨೦
ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |
ವಾಸುದೇವನ ನೆನೆದು ಸುಖಿಯಾಗು ಮನವೆ ಪ.
ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |
ಮೇಲೆ ಜವ್ವನ ಹೋಗಿ ಜರೆಯಾದಗಿತು ||
ಕಾಲ – ಕರ್ಮಾದಿಗಳು ಕೂಡಿದಾಕ್ಷಣದಲಿ |
ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ ೧
ದಂತಗಳು ಸಡಿಲಿದುವು ಧಾತುಗಳು ಕುಂದಿದುವು |
ಕಾಂತೆಯರು ಜರಿದು ಓಕರಿಸುವರು ||
ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |
ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ ೨
ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |
ಸಾರುತಿದೆ ನೀ ಮೆಚ್ಚಿ ಮರುಳಾಗದೆ ||
ಶ್ರೀರಮಣ ಪುರಂದರವಿಠಲನ ನೆನೆ ನೆನೆದು |
ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ ೩

೨೩೦
ಈ ಸಮಯಕಲ್ಲದಿನ್ನೆಲ್ಲಿ ಕಾಯೊ
ದೋಷರಹಿತ ವಸುದೇವ ನೀ ಕಾಯೊ ಕೃಷ್ಣ ಪ
ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೊ |
ಎನ್ನ ಸತಿ ಸುತರು ನಿನ್ನವರೆ ಕಾಯೊ ||
ನೀನಲ್ಲದನ್ಯರನು ಕಾಣೆ ಕವಳಿಯ ಕಾಯೊ |
ಮುನ್ನ ಸ್ಥಿರವಾಗಿ ನೀನೆಂಬೆ ಕಾಯೊ ೧
ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೊ |
ದುರಿತ ದುಷ್ಕರ್ಮ ಮುಂಚಿಲ್ಲ ಕಾಯೊ ||
ಕರೆಕರೆಯ ಸಂಸಾರಕಷ್ಟು ಕಡಲಿಯ ಕಾಯೊ |
ದುರಿತ ಭವ ಶರಧಿಗೆ ತಾರೆ ಕಾಯೊ ೨
ತ್ರಿವಿಧ ಪಾಪಂಗಳಿಗೆ ಪದವು ಉದ್ದಿನ ಕಾಯೊ|
ಭವಸಾಗರದೊಳೀಸೆಂಬೆ ಕಾಯೊ ||
ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೊ |
ನವ ಮುಕ್ತಿ ಪುರಂದರ ವಿಠಲ ನೀ ಬಿಡದೆ ಕಾಯೊ ೩

೧೧೯
ಈ ಸಿರಿಯ ನಂಬಿ ಹಿಗ್ಗಲಿ ಬೇಡ ಮನವೇ ಪ.
ವಾಸುದೇವನ ಭಜಿಸಿ ಸುಖಿಯಾಗು ಮನವೇ ಅಪ
ಮಡದಿ ಮಕ್ಕಳು ಎಂದು ವಡವೆ ವಸ್ತುಗಳೆಂದು
ಸಡಗರದಿ ತಾಕೊಂಡು ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾ ಎಂದು ಎಳೆವಾಗ
ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ ೧
ನೆಂಟರೊಳಗೆ ಪೋಗಿ ನಾಲ್ಕು ದಿನವಿದ್ದರೆ
ಎಂಟು ದಿನದಾಯಾಸ ಪೋಗುವಂತೆ
ಉಂಟು ಸೌಭಾಗ್ಯವೆಂತೆಂಬ ಧೈರ್ಯವ ಬಿಟ್ಟು
ವೈಕುಂಠನ ಭಜಿಸು ನೀ ಭ್ರಷ್ಟ ಮನವೆ ೨
ಉಂಟು ಆಶ್ರಯವೆಂದು ಬಡವನ ಕರೆತಂದು
ಕೊಟ್ಟು ಮಾಡಿದ ಧರ್ಮ ಫಲ ನನ್ನದು
ಇಷ್ಟಮೂರುತಿ ನಮ್ಮ ಪುರಂದರವಿಠಲನ
ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ* ೩

೧೬೨
ಈಗಲುಪ್ಪವಡಿಸಿದಳು ಇಂದಿರಾದೇವಿ
ಯೋಗರತಿ ನಿದ್ರೆ ತಿಳಿದು ಪ
ಕಡೆಗಣ್ಣ ಕಪ್ಪ ಅಂಗೈಯಿಂದಲೊರಸುತ
ಸಡಲಿದ ತುರುಬ ಬಿಗಿದು ಕಟ್ಟುತ ||
ನಡುವಿನೊಡ್ಯಾಣವ ನಟನೆಯಿಂ ತಿರುವುತ
ಕಡುಕ ಕಂಕಣ ಬಳೆ ಕರದಿ ಘಲ್ಲೆನುತ ೧
ಕೂರುಗುರ ಗಾಯವನು ಕೊನೆ ಬೆರಳಲೊತ್ತುತ
ಹಾರದ ತೊಡಕನು ಬಿಚ್ಚಿ ಹಾಕುತ ||
ಜಾರಿದ ಜಾಜಿದಂಡೆ ಸರವನೀಡಾಡುತ
ಮೋರೆಯ ಕಿರುಬೆವರ ಮುಂಜೆರಗಿಲೊರಸುತ೨
ರಕ್ಕಸ ಕುಚದೊಳಿರ್ದ ಕಸ್ತುರಿಯನೊರಸುತ
ಚಕ್ಕನೆ ಕನ್ನಡಿಯೊಳು ಮುಖ ನೋಡುತ ||
ಅಕ್ಕರದ ತಾಂಬೂಲ ಸರಸದಿಂದುಗುಳುತ
ಚೊಕ್ಕ ಪುರಂದರ ವಿಠಲ ನೋಡಿ ನಗುತ೩

೧೧೬
ಈಗಲೆ ಭಜಿಸಲೆ ಜಿಹ್ವೆ – ನೀ – |
ಜಾಗುಮಾಡದೆ ಶ್ರೀ ಹರಿಪಾದಾಂಬುಜವ ಪ.
ದೇಹದೇಹ ಸಂಬಂಧಿಗಳು – ಅವರು |
ಮೋಹಬದ್ಧರಾಗಿ ಕುಳಿತಿಹರು ||
ಆಹಾರ ಗುಹ್ಯೇಂದ್ರಿಯವೆಂಬ ಎರಡರ |
ಬೇಹಾರದಲಿ ನೀನು ಮುಳುಗಿಸದಲೆ ಮನ ೧
ಮರಣ ತೊಡಗಿ ನಾಲಗೆಯುಡುಗಿ – ನಿನ್ನ – |
ತರುಣಿ ಪುತ್ರ ಮಿತ್ರರಳುತಿರಲು ||
ಕೊರಳೊಳು ಗುರುಗುರು ಗುರುಗುಟ್ಟುವಾಗ ನರ – |
ಹರಿಯ ನಾಮವೆನ್ನಗೊಡದೆಲೊ ಪ್ರಾಣಿ ೨
ಅಸಿಪತ್ರವನದೊಳು ಹೊಗಿಸಿ – ನಿನ್ನ – |
ಬಸೆವಸೆಖಂಡ ಹೊರವೊಡಿಸಿ |
ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |
ಕುಸುಮನಾಭನ ನಾಮ ನೆನೆಯಗೊಡದು ಮನ ೩
ತಪ್ತಲೋಹದ ಮೋಲೊರಗಿಸಿ – ನಿನ್ನ – |
ಕತ್ತರಿಸಿದ ಖಂಡ ಬೇಯಿಸುವರು ||
ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |
ಚಿತ್ತಜನಯ್ಯನ ನೆನೆಯಗೊಡದು ಮನ ೪
ಕುಂಭಿಪಾಕದೊಳಗೆ ಕುದಿಸಿ – ನಿನ್ನ |
ಅಂಬುಮೊನೆಗಳಿಂದಿರಿಯಿಸಿ ||
ಅಂಬರಕೊಗೆಯ ಕಾಗೆಯು ಕಚ್ಚಿ ಕಡಿÁಗ |
ಅಂಬುಜಾಕ್ಷನ ನಾಮ ನೆನೆಯಗೊಡದು ಮನ ೫
ದುರುಳ ಯವದೂತರಾರ್ಭಟಿಸಿ – ನಿನ್ನ – |
ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||
ಪರಿಪರಿ ಭವದೊಳು ಬಳಲಿಸುತಿರುವಾಗ |
ಪುರುಷೋತ್ತಮನ ನಾಮ ನೆನೆಯಗೊಡದು ಮನ ೬
ದುರಿತಕೋಟಿಗಳ ಹರಿಸುವ – ನಿನ್ನ – |
ನರಕಬಾಧೆಗಳ ತಪ್ಪಿಸುವ ||
ಪರಮ ಪುರುಷ ನಮ್ಮ ಪುರಂದರವಿಠಲನ |
ನಿರುತದಿ ನೆನೆದು ನೀ ಸುಖಿಯೊಗೋ ಮನವೆ ೭

೧೧೮
ಈಸಬೇಕು ಇದ್ದು ಜಯಿಸಬೇಕು
ಹೇಸಿಕೆ ಸಂಸಾರದಲ್ಲಿ ಲೇಶ ಆಶೆ ಇಡದ ಹಾಗೆ ಪ.
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ೧
ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ೨
ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆ ಪಟ್ಟಪರಿಯೊಳು
ಮೋಸ ಹೋಗದೆ ಪುರಂದರವಿಠಲ ಜಗದೀಶನೆನುತಕೊಂಡಾಡುವರೆಲ್ಲ ೩

ಉದರವೈರಾಗ್ಯವಿದು – ನಮ್ಮ – |
ಪದುಮನಾಭನಲ್ಲಿ ಲೇಶಭಕುತಿ ಇಲ್ಲ ಪ.
ಉದಯಕಾಲದಲೆದ್ದು ಗಡಗಡ ನಡುಗುತ |
ನದಿಯಲಿ ಮಿಂದೆನೆಂದು ಹಿಗ್ಗುತಲಿ ||
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು |
ಬದಿಯಲಿದ್ದವರಿಗಾಶ್ಚರ್ಯದೋರುವುದು ೧
ಕರದಲಿ ಜಪಮಣಿ ಬಾಯಲಿ ಮಂತ್ರವು |
ಅರಿವೆಯ ಮುಸುಕನು ಮೋರೆಗೆ ಹಾರೆ ||
ಪರಸತಿಯರ ರೂಪ ಮನದಲಿ ಗುಣಿಸುತ |
ಪರಮವೈರಾಗ್ಯಶಾಲಿಯೆನಿಸುವುದು ೨
ಕಂಚುಗಾರನಾ ಬಿಡಾರದಿಂದಲಿ |
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ ||
ಮಿಂಚಬೇಕೆಂದು ಬಹುಜ್ಯೋತಿಗಳನೆ ಹಚ್ಚಿ
ವಂಚಕತನದಲಿ ಪೂಜೆಯ ಮಾಳ್ಪುದು ೩
ಬೂಟಕತನದಲಿ ಬಹಳ ಭಕುತಿ ಮಾಡಿ |
ಸಾಟಿಯಿಲ್ಲವು – ಎನಗೆಂದೆನಿಸಿ ||
ನಾಟಕ ಸ್ತ್ರೀಯಂತೆ ಬಯಲಡಂಬವ ತೋರಿ |
ಊಟಕೆ ಸಾಧನೆ ಮಾಡಿಕೊಂಬುದಿದು ೪
ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ |
ಏನಾದುದು ಹರಿ ಪ್ರೇರಣೆಯೆಂದು |
ಶ್ರೀ ನಿಧಿ ಪುರಂದರವಿಠಲರಾಯನನು |
ಕಾಣದೆ ಮಾಡಿದ ಕಾರ್ಯಗಳೆಲ್ಲ ೫

೧೨೧
ಉದರವೈರಾಗ್ಯವಿದು – ನಮ್ಮ – |
ಪದುಮನಾಭನಲ್ಲಿ ಲೇಶಭಕುತಿ ಇಲ್ಲ ಪ.
ಉದಯಕಾಲದಲೆದ್ದು ಗಡಗಡ ನಡುಗುತ |
ನದಿಯಲಿ ಮಿಂದೆನೆಂದು ಹಿಗ್ಗುತಲಿ ||
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು |
ಬದಿಯಲಿದ್ದವರಿಗಾಶ್ಚರ್ಯದೋರುವುದು ೧
ಕರದಲಿ ಜಪಮಣಿ ಬಾಯಲಿ ಮಂತ್ರವು |
ಅರಿವೆಯ ಮುಸುಕನು ಮೋರೆಗೆ ಹಾರೆ ||
ಪರಸತಿಯರ ರೂಪ ಮನದಲಿ ಗುಣಿಸುತ |
ಪರಮವೈರಾಗ್ಯಶಾಲಿಯೆನಿಸುವುದು ೨
ಕಂಚುಗಾರನಾ ಬಿಡಾರದಿಂದಲಿ |
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ ||
ಮಿಂಚಬೇಕೆಂದು ಬಹುಜ್ಯೋತಿಗಳನೆ ಹಚ್ಚಿ
ವಂಚಕತನದಲಿ ಪೂಜೆಯ ಮಾಳ್ಪುದು ೩
ಬೂಟಕತನದಲಿ ಬಹಳ ಭಕುತಿ ಮಾಡಿ |
ಸಾಟಿಯಿಲ್ಲವು – ಎನಗೆಂದೆನಿಸಿ ||
ನಾಟಕ ಸ್ತ್ರೀಯಂತೆ ಬಯಲಡಂಬವ ತೋರಿ |
ಊಟಕೆ ಸಾಧನೆ ಮಾಡಿಕೊಂಬುದಿದು ೪
ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ |
ಏನಾದುದು ಹರಿ ಪ್ರೇರಣೆಯೆಂದು |
ಶ್ರೀ ನಿಧಿ ಪುರಂದರವಿಠಲರಾಯನನು |
ಕಾಣದೆ ಮಾಡಿದ ಕಾರ್ಯಗಳೆಲ್ಲ ೫

೩೦೦
ಉಪ್ಪವಡಿಸಯ್ಯ ಹರಿಯೇ
ಏಳೈ ಹೃಷಿಕೇಶ ಏಳು ರವಿ – ಶಶಿ ನಯನ ಪ.
ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವ
ಏಳು ಸುರವಂದಿತನೆ ಏಳು ಭೂಸತಿರಮಣ
ಉಪ್ಪವಡಿಸಯ್ಯ ಹರಿಯೇ ಅಪ
ಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯು
ಬಿಚ್ಚು ಮಲ್ಲಿಗೆ ಜಾಜಿ ಸಂಪಿಗೆಯು ಪುನ್ನಾಗ
ಅಚ್ಚರಿಯ ಬಕುಲ ಕೆಂಜಾಜಿ ಕೇತಕಿ ಕುಸುಮ ಗುಚ್ಛಗಳ ಪಿಡಿದುಕೊಂಡು ||
ಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗು
ಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯ
ಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆ
ಉಪ್ಪವಡಿಸೊ ೧
ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರು
ಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನು
ರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳೈ ||
ಮನ್ನಣೆಯ ನಾರದರು ಮೊದಲಾದ ಮುನಿನಿಕರ
ನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯ
ಇನ್ನು ಏಳೇಳು ಉದಯದ ಸಮಯ ಸಿರಿಯರಸ
ಚೆನ್ನಿಗನೆ ಉಪ್ಪವಡಿಸೊ ೨
ದೇವ ದುಂದುಭಿ ಮೊಳಗೆ ದೇವಕನ್ನೆಯರೆಲ್ಲ
ದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯ
ದೇವ ದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||
ದೇವ ಪ್ರಹ್ಲಾದ ಬಲಿ ಮುಖ್ಯರನು ಕಾಯ್ದವನೆ
ದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆ
ದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲ
ಉಪ್ಪವಡಿಸೊ ೩

೫೨
ಊಟಕ್ಕೆ ಬಂದೆವು ನಾವು ನಿನ್ನ –
ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ಪ.
ಕತ್ತಲಕ್ಕುತಲಿವೆ ಕಣ್ಣು – ಬಲು –
ಬತ್ತಿ ಬರುತಲಿವೆ ಕೈಕಾಲ ಜುಮ್ಮ ||
ಹೊತ್ತು ಹೋಗಿಸಬೇಡವಮ್ಮ – ಒಂದು –
ತುತ್ತನಾದರು ಮಾಡಿ ಇಕ್ಕುವುದು ಧರ್ಮ ೧
ಒಡಲೊಳಗುಸಿರಿಲ್ಲವಮ್ಮ – ಗಳಿಗೆ –
ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||
ನುಡಿಯು ಚಿತ್ತಕೆ ಬರಲಮ್ಮ – ಒಂದು –
ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ……….. ೨
ಹೊನ್ನರಾಶಿಗಳನು ಸುರಿಯೆ – ಕೋಟಿ –
ಕನ್ನೆ ಧರಿತಿಯ ಧಾರೆಯನೆರೆಯೆ ||
ಅನ್ನದಾನಕೆ ಇನ್ನು ಸರಿಯೆ – ನಮ್ಮ –
ಚೆನ್ನ ಪುರಂದರವಿಠಲನೊಳ್ ಬೆರೆಯೆ……….. ೩

೨೩೧
ಊರಿಗೆ ಕೊರಳೊಳು ವನಮಾಲೆ ಧರಿಸಿದನೆ – ಕಿರು – |ಬಂದರೆ ದಾಸಯ್ಯ – ನಮ್ಮ |
ಕೇರಿಗೆ ಬಾ ಕಂಡೆ ದಾಸಯ್ಯ ಪ
ಕೇರಿಗೆ ಬಂದರೆ ದಾಸಯ್ಯ – ಗೊಲ್ಲ – |
ಕೇರಿಗೆ ಬಾ ಕಂಡೆ ದಾಸಯ್ಯ ಅ.ಪ
ಬೆರಳಲಿ ಗಿರಿಯನೆತ್ತಿದನೆ ||
ಇರುಳು – ಹಗಲು ಪೊಂಗೊಳಲೂದುವ ದಾಸಯ್ಯ ||ಇಲ್ಲದಲಿ ಹಿರಣ್ಯನ |
ಮರಣವ ಮಾಡಿದ ದಾಸಯ್ಯ ೧
ಮುಂಗೈ ಮುರಾರಿ ದಾಸಯ್ಯ – ಚೆಲುವ |
ಹಾಂಗೆ ಹೋಗದಿ೪
ಸಿಟ್ಟು ಮಾಡಬೇಡ ದಾಸಯ್ಯ – ತಾಳು – |
ರೊಟ್ಟಿ ಸುಡುವನಕ ದಾಸಯ್ಯ – ತಂ – |
ಬಿಟ್ಟನಾದರು ಮೆಲ್ಲೊ ದಾಸಯ್ಯ – ಪುರಂದರ – |
ವಿಠಲನೆಂಬ ದಾಸಯ್ಯ * ೫

೨೩೨
ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |
ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ ಪ
ಒಡಲಿನಾಸಗೆ ಪರರ ಕಡೆಯಿಂದ ಧನವನ್ನು |
ತಡೆಯದಲೆ ತಂದು ಸಂತೋಷ ಪಡುವೆ ||
ಕೊಡುವ ವೇಳೆಗೆ ಅವರ ಬಿರುನುಡಿಗಳನು ಕೇಳ್ವ |
ಕಡು ಪಾಪವನ್ನು ನೀ ಕಡೆಹಾಯಿಸಯ್ಯ ೧
ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |
ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||
ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |
ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ ೨
ಆಳಿದೊಡೆಯನ ಮಾತ ಕೇಳಿ ನಡೆಯಲು ಬಹುದು |
ಉಳಿಗವ ಮಾಡಿ ಮನದಣಿಯ ಬಹುದು ||
ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |
ಪೇಳಲಳವಲ್ಲ ಋಣದವಗೊಂದು ಸೊಲ್ಲ ೩
ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |
ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||
ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು |
(ಬೆರೆದು) ಸೇರಲು ಬಹುದು ವೈರಿಗಳ ಮನೆಯ ೪
ಹೆತ್ತ ಸೂತಕ ಹತ್ತುದಿನಕೆ ಪರಿಹಾರವು |
ಮೃತ್ಯು ಸೂತಕವು ಹನ್ನೆರಡು ದಿನವು ||
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |
ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ ೫
ಅವರ ದ್ರವ್ಯವ ದಾನ-ಧರ್ಮವನು ಮಾಡಿದರೆ |
ಅವರಿಗಲ್ಲದೆ ಪುಣ್ಯ ಇವರಿಗುಂಟೆ ||
ಅವರ ದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |
ಅವರ ಮನೆಬಾಡಿಗೆಯ ಎತ್ತಿನಂದದಲಿ ೬
ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |
ಕಂದಿ ಕುಂದಿದೆನಯ್ಯ ಕರುಣಾನಿಧೆ ||
ಇಂದಿರಾರಮಣ ಶ್ರೀ ಪುರಂದರವಿಠಲನೆ |
ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ ೭

ಹಯಗ್ರೀವನೆಂಬ ದೈತ್ಯನು
೬೫
ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |
ಹೊಂತಕಾರಿ ಬಲವಂತರಿಗಧಿಕನು ಪ
ತರಳನಂತಿಪ್ಪನು ತರಳೆಯರೊಡನಾಡುವ |
ಕಿರುಬೆರಳುಗುರಲಿ ಗಿರಿಯನೆತ್ತಿದವ ೧
ಕಾಳಿಯ ಸರ್ಪನ ಕಾಲಲ್ಲಿ ತುಳಿದವ |
ಪಲಾಯನ ಮಾಡಿ ಕಾಲಯವನನ ಸುಟ್ಟ ೨
ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |
ರಚ್ಚೆ ಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ ೩
ಬಾಯಿ ತೆರೆದನಲ್ಲೆ ನೀನಂಜುವಂದದಿ |
ಆಯಮಳಾರ್ಜುನರಾಯಾಸ ಬಿಡಿಸಿದ ೪
ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |
ಪುಟ್ಟ ಪುರಂದರವಿಠಲರಾಯನು ೫

೧೨೪
ಎಂತಹುದೊ ನಿನ್ನ ಭಕುತಿ ? |
ಸಂತತ ನಿನ್ನ ದಾಸರ ಸಂಗವಿರದೆನಗೆ ಪ.
ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |
ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||
ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ – ಕೃ – |
ಪಣ ಮನಕೆ ಎಂತಹದು ನಿನ್ನಯ ಭಕುತಿ೧
ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |
ಒಡಲ ತೋರಿಸಿದೆನೊ ಕಡುದೈನ್ಯದಿ ||
ಒಡೆಯ ನೀನಹುದೆಂದು ಮಡದಿ – ಮಕ್ಕಳಿಗೆ ಹೆಸ – |
ರಿಡುವ ಅವರಡಿಗೆ ಎರಗುವನ ಮನಕೆ ೨
ಹೋಗಿಬಾರೈ ಎಂದು ಅತಿಗಳೆದರು ತಲೆ – |
ಬಾಗಿ ನಿಂತು ಅಲ್ಲಿ ಮೌನವಾಗಿ ||
ಓಗರತೆ ಮನೆಮನೆ ತಪ್ಪದೆ ತಿರುಗುವ |
ಜೋಗಿಯ ಕೈಯಕೋಡಗದಂಥ ಮನಕೆ ೩
ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |
ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||
ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನ ಪರಿ – |
ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ ೪
ವಟುವಾಗಿ ಬಲಿಯ ದಾನವನು ಬೇಡಹೋದ |
ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||
ವಟಪತ್ರಶಾಯಿ ಶ್ರೀಫಣಿ ವರದ ಪುರಂದರ – |
ವಿಠಲ ನಿನ್ನ ದಾಸರ ಸಂಗಸುಖವಿರದೆ ೫

೨೩೩
ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ಪ
ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ಅ.ಪ
ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ |
ಪಾವನೆಯಾದ ಗಂಗೆ ಪಾದೋದ್ಭವೆ ||
ನವಕುಸುಮವ ಸಮರ್ಪಿಸುವೆನೆಂದರೆ ಉದು
ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ ೧
ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ
ದ್ವೀಪಂಗಳೆಲ್ಲವನು ಬೆಳೆಗುತಿಹವೋ ||
ಆಪೋಶನವನಾದರೀವೆನೆಂತೆಂಬೆನೆ
ಆಪೋಶನವಾಯ್ತು ಏಳು ಅಂಬುಧಿಯು ೨
ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ
ರಾಣಿವಾಸವು ಸಿರಿದೇವಿ ನಿನಗೆ ||
ಮಾಣದೆ ಮನದೊಳು ನಿನ್ನ ನಾಮಸ್ಮರಣೆ
ಧ್ಯಾನವನು ದಯೆ ಮಾಡೋ ಪುರಂದರವಿಠಲ ೩

ಸೋದೆಮಠದ ಶ್ರೀ ವಿಷ್ಣುತೀರ್ಥರ
೬೭
ಎಂಥ ಗಾಡಿಕಾರನೆ-ಕೃಷ್ಣಯ್ಯ ಇ – |
ನ್ನೆಂಥ ಗಾಡಿಕಾರನೆ? ಪ
ಕಂತುಪಿತನು ಬೇಲಾಪುರದ ಚೆನ್ನಿಗರಾಯ ಅ.ಪ
ಹಿಂಡು ಕೂಡಿರುವ ಮಕ್ಕಳನೆಲ್ಲ ಬಡಿವರೆ ಲಂಡನೇನೆ-ಅಮ್ಮ |
ಉಂಡು ಹಾಲು ಬೆಣ್ಣೆ ಬೆಕ್ಕಿಗಿಕ್ಕುವರೆ ಪ್ರಚಂಡನೇನೆ? ೧
ಹೆಚ್ಚು ಹೇಳುವುದೇನು ಬಿಚ್ಚಿ ಉರೋಜವ ತೋರುವನೆ-ಅಮ್ಮ |
ಮುಚ್ಚು ಮರೆಯೇತಕೆ ಮನೆಮನೆಗಳಲಿ ಪೋಗುವನೆ ೨
ವಸುಧೆಯೊಳಗೆ ನಂದಗೋಕುಲದೊಳಗೆ ತಾ ಬಂದ ಕಾಣೆ-ಅಮ್ಮ |
ಹಸು ಮಗನಾದ ನೀ ಪುರಂದರವಿಠಲರಾಯ ಕಾಣೆ ೩

ರುದ್ರದೇವರು
೨೦೮
ಎಂಥ ಚೆಲುವೆಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮ |
ಕಂತು ಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ ಪ
ಮನೆಯೆಂಬುದು ಸ್ಮಶಾನವು ನೋಡೇ
ಗಜಚರ್ಮಾಂಬರವಮ್ಮಮ್ಮ |
ಹಣವೊಂದೆಂಬುದು ಕೈಯೊಳಗಿಲ್ಲವು
ಕಪ್ಪರವಿದೆ ನೋಡಮ್ಮಮ್ಮ ೧
ಮೋರೆಗಳೈದು-ಮೂರು ಕಣ್ಣಗಳು
ವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆ ಉರಗ
ಭೂಷಣವನು ನೋಡಮ್ಮಮ್ಮ೨
ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳಕರವು
ಹರನ ನೋಡಮ್ಮಮ್ಮ ೩
ತಲೆಯೆಂಬುದು ನೋಡಿದರೆ ಜಡೆಯು
ಹೊಳೆಯುತಿದೆ ನೋಡಮ್ಮಮ್ಮ
ಹಲವು ಕಾಲದ ತಪಸಿ ರುದ್ರನ
ಮೈಬೂದಿಯು ನೋಡಮ್ಮಮ್ಮ ೪
ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ |
ಇಂದಿರೆರಮಣನ ಪುರಂದರವಿಠಲನ
ಹೊಂದಿದವನ ನೋಡಮ್ಮಮ್ಮ ೫

ದೇಹದಲ್ಲಿರುವ ಇಪ್ಪತ್ತೆರಡು ಸಾವಿರ ನಾಡಿಗಳಲ್ಲಿ
೬೮
ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆ ಗೋಪಿ |
ಇಂಥ ಮಗನ ಕಾಣೆವೆ ಪ
ಚಿಂತಿಸಿದರೂ ದೊರಕ ಚೆಲುವ ರಾಜಗೋಪಾಲ |
ಇಂತೀ ಮಾತುಗಳೆಲ್ಲವು – ಹುಸಿಯಲ್ಲವು ಅ.ಪ
ಸರಸಿಜನಾಭನ ಸುಮ್ಮನೆ ಕೊಂಡಾಡೆ |
ದುರಿತವೆಲ್ಲವು ಪೋಪುದೆ ||
ಸರಸದಿಂದಲಿ ಒಮ್ಮೆ ಸವಿಮಾತನಾಡಿದರೆ |
ಪರಿತೋಷ ಕೈಗೂಡುವುದೆ-ಯಶೋದೆ ೧
ಊರ ಒಳಗೆ ನಿಮ್ಮ ಅಂಜಿಕೆ ನೆರೆಹೊರೆ |
ದೂರಿಕೊಂಬುವರಲ್ಲವೆ? ||
ಅರಣ್ಯದಲಿ ನಾವು ಆಡಿದ ಆಟವು |
ಆರಿಗಾದರೂ ಉಂಟೇನೆ-ಇಂದುವದನೇ? ೨
ನಿನ್ನ ಮಗನ ಕರೆಯೆ ಎನ್ನ ಪ್ರಾಣದೊಡೆಯ |
ಪುಣ್ಯದ ಫಲವು ಕಾಣೆ ||
ಚೆನ್ನ ಶ್ರೀ ಪುರಂದರ ವಿಠಲರಾಯನ |
ನಿನ್ನಾಣೆ ಬಿಡಲಾರೆವೆ-ಪುಸಿಯಲ್ಲವೆ ೩

೧೭೧
ಎಂಥ ಬಲವಂತನೊ-ಕುಂತಿಯ ಸಂಜಾತನೋ |
ಭಾರತಿಗೆ ಕಾಂತನೊ-ನಿತ್ಯ ಶ್ರೀಮಂತನೋ ಪ
ರಾಮಚಂದ್ರನ ಪ್ರಾಣನೊ-ಅಸುರ ಹೃದಯ ಬಾಣನೊ |
ಖಳರ ಗಂಟಲ ಗಾಣನೊ-ಜಗದೊಳಗೆ ಪ್ರವೀಣನೊ ೧
ಬಂಡಿಯನ್ನವನುಂಡನೊ-ಬಕನ ಪ್ರಾಣವ ಕೊಂಡನೊ |
ಭೀಮಪ್ರಚಂಡನೊ-ದ್ರೌಪದಿಗೆ ಗಂಡನೊ ೨
ಕುಂತಿಯ ಕಂದನೊ ಸೌಗಂಧಿಕವ ತಂದನೋ |
ಕುರುಕ್ಷೇತ್ರಕೆ ಬಂದನೊ-ಕೌರವರ ಕೊಂದನೋ ೩
ವೈಷ್ಣವಾಗ್ರಗಣ್ಯನೋ-ಸಂಚಿತಾಗ್ರಪುಣ್ಯನೋ |
ದೇವವರೇಣ್ಯನೊ-ದೇವ ಶರಣ್ಯನೋ ೪
ಮಧ್ವಶಾಸ್ತ್ರವ ರಚಿಸಿದನೊ-ಸದ್ವೈಷ್ಣವರ ಸಲಹಿದನೊ |
ಉಡುಪಿ ಕೃಷ್ಣನ ನಿಲಿಸಿದನೊ-ಪುರಂದರ
ವಿಠಲನ ಒಲಿಸಿದನೊ ೫

೨೩೪
ಎಂದಪ್ಪಿಕೊಂಬೆ – ರಂಗಯ್ಯ ನಿನ್ನ |
ಎಂದಪ್ಪಿಕೊಂಬೆ……………………… ಪ
ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |
ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪ
ಅರಳೆಲೆಮಾಗಾಯಿ ಕೊರಳ ಪದಕ ಸರ |
ತರಳರನೊಡಗೂಡಿ ಬೆಣ್ಣೆಯ ಮೆಲುವನ…………… ೧
ಅಂದುಗೆ ಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |
ಚೆಂದದಿ ಕುಣಿವ ಮುಕುಂದನ ಚರಣವ……………. ೨
ಹೊನ್ನಿನ ಉಡುದಾರ ರನ್ನದ ಚೌಕುಳಿ |
ಚಿನ್ನದುಂಗುರವಿಟ್ಟ ಜಾಹ್ನವಿ ಜನಕನ…………………..೩
ಅಪ್ಪಣ್ಣ ಭಾಗವತನ ರೂಪವು ತಾನಾಗಿ |
ತುಪ್ಪದ ಬಿಂದಿಗೆ ತಂದ ವಿಠಲನ…………………. ೪
ಪರಿಪರಿ ಭಕುತರ ಮರೆಯದೆ ಸಲಹುವ |
ಪುರಂದರವಿಠಲನ ಸಿರಿಪಾದ ಪದುಮನ ೫


ಎಂದಿಗಾದರು ನಿನ್ನ ನಂಬಿದೆ – ಚೆಲ್ವ – |
ಮಂದರಧರ ಮದನಜನಕ |
ವೃಂದಾವನಪತಿ ಗೋವಿಂದ ಪ
ತರುಣಿಯ ಮಾನವನು ಕಾಯ್ದೆ – ಅಂದು – |
ದುರುಳ ತನ್ನ ಸುತನ ಕೊಲಲು ಒದಗಿ ಕಂಬದಿ ಬಂದೆ ||
ಕರುಣದಿ ಶಿಲೆಯನುದ್ಧರಿಸಿದೆ ತನ್ನ – |
ಮರಣಕಾಲಕೆ ನಾಗರನೆಂದರೆ ಮುದದಿ
ಮುಂದೆ ನಿಂದೆ ಗೋವಿಂದ ೧
ಧ್ರುವ – ವಿಭೀಷಣ – ರುಕ್ಮಾಂಗದರು ನಿನ್ನ ವರಿಸಲು |
ಆ ವ್ಯಾಸ ನಾರದ ಬಲಿ ಮುಖ್ಯ ಕಲಿಪಾರ್ಥನು ||
ಪವನಸುತನು ಅಂಬರೀಷನು – ತ್ರೈ – |
ಭುವನವರಿಯೆ ನಿನ್ನ ನೆನೆಯೆ ಪದವನಿತ್ತೆ ಗೋವಿಂದ೨
ದುರಿತ ವಿನಾಶ ದೋಷದೂರನೆ – ಜಗದ್ – |
ಭರಿತ ದೈತ್ಯದಳಸಂಹಾರ ಶರಣು ಚಾರುಚರಿತ್ರ ||
ಕರಿವರದ ಪುರಂದರವಿಠಲ ಕಾಯೊ |
ಶರಣಹೃದಯ ಸರಸಿಜ ಪರಮಪಾವನ ಗೋವಿಂದ ೩

೨೩೫
ಎಂದಿಗೆ ನಾನಿನ್ನು ಧನ್ಯನಹೆನೊ
ಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ ಪ
ಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷ
ಜಲ ಜೀವದೊಳಗೆ ಒಂಬತ್ತು ಲಕ್ಷ ||
ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿ
ತೊಳಲಿ ಬಳಲಿದೆನಂಡಜದೊಳು ದಶಲಕ್ಷ ೧
ಚರಣ ನಾಲ್ಕರಲಿ ಮೂವತ್ತು ಲಕ್ಷ ಜೀವಿಸಿ
ನರನಾಗಿ ಚರಿಸಿದೆನು ನಾಲ್ಕು ಲಕ್ಷ ||
ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನ
ಸರಸಿಜ ಸಂಭವನ ಕಲ್ಪದಲ್ಲಿ ೨
ಎಂಬತ್ತು ನಾಲುಕು ಲಕ್ಷಯೋನಿಗಳಲ್ಲಿ
ಅಂಬುಜನಾಭ ನಿನ್ನ ಲೀಲೆಗಾಗಿ ||
ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿ
ಕಂಬುಕಂಧರ ಸಿರಿ ಪುರಂದರ ವಿಠಲ ೩

೨೩೬
ಎಂದೆಂದಿಗೂ ನಿನ್ನ ಪಾದವೆ ಗತಿಯೋ ಗೋ
ವಿಂದ ಬಾರೈ ಎನ್ನ ಹೃದಯ ಮಂದಿರಕೆ ಪ
ಮೊದಲಿಲ್ಲಿ ಬರಬಾರದು ನಾ ಬಂದೆ
ತುದಿಮೊದಲಿಲ್ಲದ ಭವದಿಂದ ನೊಂದೆ ||
ಇದರಿಂದ ಗೆದ್ದು ಹೋಗುವುದೆಂತು ಮುಂದೆ
ಪದುಮನಾಭನೆ ತಪ್ಪು ಕ್ಷಮೆ ಮಾಡು ತಂದೆ ೧
ಹೆಣ್ಣು ಹೊನ್ನು ಮಣ್ಣಿನಾಶೆಗೆ ಬಿದ್ದು
ಪುಣ್ಯ ಪಾಪಂಗಳ ನಾನರಿತಿದ್ದು ||
ಅನ್ಯಾಯವಾಯಿತು ಇದಕೇನು ಮದ್ದು
ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು ೨
ಹಿಂದೆ ನಾ ಮಾಡಿದ ಪಾಪವ ಕಳೆದು
ಮುಂದೆನ್ನ ಜನ್ಮ ಸಫಲ ಮಾಡಿ ಪೊರೆದು ||
ತಂದೆ ಶ್ರೀ ಪುರಂದರ ವಿಠಲ ನೀನಿಂದು
ಬಂದು ಸಲಹೊ ನನ್ನ ಹೃದಯದಿ ನಿಂದು ೩

೧೨೨
ಎಚ್ಚರದಲಿ ನಡೆ ಮನವೆ – ನಡೆಮನವೆ – ಮುದ್ದು
ಅಚ್ಯುತನ ದಾಸರ ಒಡಗೂಡಿ ಬರುವೆ ಪ.
ಧರ್ಮವ ಮಾಡುವುದಿಲ್ಲಿ – ಇನ್ನು
ಬ್ರಹ್ಮನ ಸಭೆಯ ತೋರುವರು ಮುಂದಲ್ಲಿ
ಕರ್ಮಯೋಜನೆಗಳು ಇಲ್ಲಿ – ಬೆನ್ನ
ಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ ೧
ಅನ್ನದಾನವ ಮಾಳ್ಪುದಿಲ್ಲಿ – ಮೃ
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ
ಅನ್ಯಾಯ ನುಡಿಯುವುದಿಲ್ಲಿ – ಭಿನ್ನ
ಭಿನ್ನವ ಮಾಡಿ ತಿನ್ನಿಸುವರು ಅಲ್ಲಿ ೨
ಮೋಸವ ಮಾಡುವದಿಲ್ಲಿ – ಸೀಸ
ಕಾಸಿ ಬಾಯೊಳಗೆ ಹೊಯ್ಯುವರಲ್ಲಿ
ದಾಸರ ಪೂಜಿಪುದಿಲ್ಲಿ – ಉ
ರ್ವೀಶಾಧಿಪತಿ ಬಂದನೆಂಬರು ಅಲ್ಲಿ ೩
ವಂಚನೆ ಮಾಡುವದಿಲ್ಲಿ – ಕಾದ
ಹಂಚಿನ ಪುಡಿಯ ತಿನ್ನಿಸುವರು ಅಲ್ಲಿ
ಪಂಚಾಮೃತದ ಪೂಜೆ ಇಲ್ಲಿ ನಿನಗೆ
ಕಂಚು – ಕಾಳಾಂಜಿಯ ಪಿಡಿದಿಹರಲ್ಲಿ ೪
ಚಾಡಿಯ ನುಕಿವುದು ಇಲ್ಲಿ ಅದ –
ನಾಡಿದ ನಾಲಗೆ ಸೀಳುವರಲ್ಲಿ
ಬೇಡಬಂದರೆ ಬಯ್ವುದಿಲ್ಲಿ ನಿನ್ನ –
ಓಡಾಡುವ ಕಾಲು ಕತ್ತರಿಪರಲ್ಲಿ ೫
ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು –
ಹದ್ದು ಕಾಗೆಗಳಿಗೆ ಈಯುವರಲ್ಲಿ
ಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ –
ಗುದ್ದಲಿ ಬೆನ್ನೊಳು ಎಳೆಯುವರಲ್ಲಿ ೬
ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ –
ಕಟ್ಟಿ ಈಟಿಯಿಂದ ಇರಿಯುವರಲ್ಲಿ
ಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲು
ಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ ೭
ಆಲಯದಾನವು ಇಲ್ಲಿ ವಿ –
ಶಾಲ ವೈಕುಂಠನ ಮಂದಿರವಲ್ಲಿ
ಆಲಯ ಮುರಿಯುವುದಿಲ್ಲಿ ನಿನ್ನ –
ಶೂಲದ ಮೇಲೇರಿಸಿ ಕೊಲುವರಲ್ಲಿ ೮
ತಂದೆ ಮಾತನು ಮೀರುವುದಿಲ್ಲಿ ಹುಲ್ಲು –
ದೊಂದೆಯ ಕಟ್ಟಿ ಸುಡಿಸುವರಲ್ಲಿ
ತಂದೆ ತಾಯ್ಗಳ ಪೂಜೆ ಇಲ್ಲಿ ದೇ –
ವೇಂದ್ರನ ಸಭೆಯ ತೋರುವರು ಮುಂದಲ್ಲಿ ೯
ಗಂಡನ ಬೈಯ್ಯುವುದಿಲ್ಲಿ ಬೆಂಕೆ
ಕೆಂಡವ ತಂದು ಬಾಯಲಿ ತುಂಬುವರಲ್ಲಿ
ಕೊಂಡೆಯ ನಡಿಸುವುದಿಲ್ಲಿ ಬೆಂಕೆ
ಕುಂಡವ ತಂದು ತಲೆಯಲಿಡುವರಲ್ಲಿ ೧೦
ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನ
ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾದಾನವ ಮಾಳ್ಪುದಿಲ್ಲಿ ನಮ್ಮ
ಚಿನ್ನ ಪುರಂದರ ವಿಠಲನೊಲಿವನು ಅಲ್ಲಿ ೧೧

೧೨೩
ಎಚ್ಚರಿಕೆ ಎಚ್ಚರಿಕೆ ಮನವೆ – ನಮ್ಮ
ಅಚ್ಯುತನ ಪಾದಾರವಿಂದ ಧ್ಯಾನದಲಿ ಪ.
ಆಶಾಪಾಶದೊಳಗೆ ಸಿಲುಕಿ – ಬಹು
ಕ್ಲೇಶಪಟ್ಟು ತುಟ್ಟ ಸುಖದ ಮರುಳಿಕ್ಕಿ
ಹೇಸಿ ಸಂಸಾರದಲಿ ಸಿಲ್ಕಿ – ಮಾಯಾ
ಕ್ಲೇಶ ಅಂಬರ ಕೇಳಾಗೆ ಮೈಮರೆತು ಸೊಕ್ಕಿ ೧
ಹಣ – ಹೆಣ್ಣು – ಮಣ್ಣಾಸೆ ವ್ಯರ್ಥ – ಈ
ತನುವಿಗೆ ಯಮಪುರ ಪಯಣವೇ ನಿತ್ಯ
ಮೂರು ಶೃಂಗಾರಗಳು ಮಿಥ್ಯ – ಅಂತ
ಕನ ಯಾತನೆಗಳಿಗೆ ಹರಿನಾಮ ಪತ್ಯ ೨
ತೊಗಲ ಚೀಲ ಒಂಬತ್ತು ಹರುಕು – ನರ
ಬಿಗಿದು ಕಟ್ಟಿ ಒಳಗೆ ಎಲುವುಗಳ ಸಿಲುಕು
ಬಗೆರಕ್ತ – ಮಾಂಸದ ಹುಳುಕು – ಒ
ಳಗೆ ಮಲ – ಕಫ – ವಾತ – ಪಿತ್ತದ ಸರಕು ೩
ದುಷ್ಟರ ಸಹವಾಸ ಹೀನ – ಬಲು
ಇಷ್ಟ ಜನಸಂಗವು ಹರಕೆ ಬಹುಮಾನ
ಎಷ್ಟು ಓದಿದರಷ್ಟು ಜ್ಞಾನ – ಆದರ
ಲ್ಲಿಟ್ಟು ಭಕುತಿಯ ತಿಳಿಯಲೊ ಸಾವಧಾನ ೪
ನಾಲಿಗೆಯ ಹರಿಯ ಬೀಡಬೇಡ – ತಿಂಡಿ
ವಾಳರ ರುಚಿವಾತಗಳನೊರಿಸಬೇಡ
ಹಾಳು ಮಾತು ಗೊಡಬೇಡ -ಶ್ರೀ
ಲೋಲ ಪುರಂದರವಿಠಲನ ಬಿಡಬೇಡ ೫

ತಿರುಚಿನಾಪಳ್ಳಿಯಿಂದ ಎಂಟು ಮೈಲು ದೂರದಲ್ಲಿ
೬೬
ಎತ್ತಿಕೊಳ್ಳೆ ಗೋಪೀ ರಂಗನ |
ರಚ್ಚೆ ಮಾಧವರಾಯ ನಿಲುವನಲ್ಲ ||ಪ||
ಕರ್ಣದ ಮಾಗಾಯಿ ಕದಪಲಿ ಹೊಳೆಯುತ |
ಎಣ್ಣೆಮಣಿಯ ಕೊರಳಲಿ ಹುಲಿಯುಗುರು ||
ಚಿನ್ನದ ಬಾಯೊಳು ಅಮೃತವ ಸುರಿಯುತ್ತ |
ಬೆಣ್ಣೆ-ಹಾಲನುಂಬುವೆನೆಂದು ಬಂದ ೧
ಅಂಬೆಗಾಲಿಕ್ಕುತ ತುಂಬಿಯೊಲ್ ಮೊರೆಯುತ—|
[ಚೆಂದದ] ಅರಳೆಲೆ ನಲಿದಾಡುತ ||
ಬಂದು ಸರಳನಂದದಿ ಬಾಯ ಬಿಡುತ ಮು—|
ಕುಂದನು ಮೊಲೆಯನುಂಬುವೆನೆಂದು ಬಂದ ೨
ಬಿಗಿದ ಪಟ್ಟೆಯಲಿ ಬಾಯ್‍ತಲೆಯು ಹೊಳೆಯುತಿರೆ |
ಚಿಗುಟುತ ಎಡದ ಕೈಯಲಿ ಕುಚವ ||
ನಗುತ ನಾಚುತ ಗೋಪಿಯ ಮುಖ ನೋಡುತ |
ಮಿಗೆ ನಲಿನಲಿದುಂಡ ಪುರಂದರವಿಠಲ ೩

ಮೂರು ಬಗೆಯ ಕರ್ಮಗಳು
೬೯
ಎನಗೂ ಆಣೆ- ನಿನಗೂ ಆಣೆ |
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ಪ
ನಿನ್ನನು ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ-ರಂಗ |
ಎನ್ನನು ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ ೧
ತನು-ಮನ-ಧನದಲಿ ವಂಚಕನಾದರೆ ಎನಗೆ ಆಣೆ-ರಂಗ-|
ಮನಸು ನಿನ್ನೊಳು ನಿಲಿಸದಿದ್ದರೆ ನಿನಗೆಆಣೆ ೨
ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ-ರಂಗ-|
ಲೌಕಿಕವನ್ನು ಬಿಡಿಸದಿದ್ದರೆ ನಿನಗೆ ಆಣೆ ೩
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ-ರಂಗ-|
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ೪
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ-ರಂಗ-|
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ ೫

ವೈಷ್ಣವರಲ್ಲಿ ತಪ್ತ

ಎನಗೊಬ್ಬ ದೊರೆ ದೊರಕಿದನು|ವನಜಸಂಭವನಯ್ಯ ಹನುಮನಂತರ್ಯಾಮಿ ಪ
ಮಾತಾಪಿತನು ಆದ ಭ್ರಾತೃ ಬಾಂಧವನಾದ |ಪ್ರೀತಿಯಿಂದಲಿ ತಾನೇ ನಾಥನಾದ ||
ಖ್ಯಾತನು ತಾನಾದ ದಾತನು ತಾನಾದ |ಭೂತೇಶ ವಂದ್ಯ ವಿಭೂತಿಪ್ರದನಾದ೧
ಅಜರಾಮರಣನಾದ ಅಪ್ರಾಕೃತನಾದ |ವಿಜಯಗೊಲಿದು ನಿಜ ಸುತನಾದ ||
ಭುಜಗಶಯನನಾದ ತ್ರಿಜಗಹೃವಂದಿತನಾದ |ಅಜಮಿಳನಂತ್ಯಕತ್ಯಂತ ಸುಹೃದನಾದ೨
ಶಂಖ ಚಕ್ರಾಂಕಿತದ ಸಂಕರುಷಣನಾದ |ಬಿಂಕದ ಬಿರುದುಗಳ ಪೊತ್ತವನಾದ ||
ಪಂಕಜನಯ್ಯನ ಮೀನಾಂಕ ಜನಕನಾದ |ಓಂಕಾರ ಮೂರುತಿ ಪುರಂದರ ವಿಠಲನು ೩

೨೩೭
ಎನ್ನ ಕಡೆಹಾಯಿಸುವುದು ನಿನ್ನ ಭಾರ |
ನಿನ್ನ ಸ್ಮರಣೆ ಮಾಡುವುದು ಎನ್ನ ವ್ಯಾಪಾರ ಪ
ಎನ್ನ ಸತಿ ಸುತರಿಗೆ ನೀನೆ ಗತಿ |
ನಿನ್ನವರು ಎಂಬುದೇ ಎನ್ನ ನೀತಿ ೧
ಎನ್ನ ನಿತ್ಯ ಸಾಕುವುದು ನಿನ್ನ ಧರ್ಮ |
ನಿನ್ನ ಮರೆತು ಬದುಕುವುದು ಎನ್ನ ಕರ್ಮ ೨
ಎನ್ನ ತಪ್ಪ ಎಣಿಸುವುದು ನಿನಗೆ ಸಲ್ಲ |
ನಿನ್ನ ಮರೆತು ತಿರುಗುವುದು ಎನ್ನದಲ್ಲ ೩
ಎನಗೆ ಪಡಿಯಿಕ್ಕುವುದು ನಿನ್ನ ಮಾನ |
ನಿನ್ನ ಮರೆತು ತಿರುಗುವುದು ಎನ್ನ ಅಪಮಾನ ೪
ನೀನಲ್ಲದೆ ಇನ್ನಾರಿಗೆ ಮೊರೆ ಇಡುವೆ |
ಎನ್ನ ಪುರಂದರವಿಠಲ ನಿನಗೆ ಪೇಳುವೆ ೫

೨೩೮
ಎನ್ನ ಮನದ ಡೊಂಕ ತಿದ್ದಿ-
ಚರಣದಲ್ಲಿ ಸೇರಿಸೋ |
ನಿನ್ನ ಸೇವಕನಾದ ಮೇಲೆ
ಇನ್ನು ಸಂಶಯವೇಕೆ ಕೃಷ್ಣ ಪ
ಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |
ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||
ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |
ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ ೧
ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |
ಹರಿಯ ಸ್ಮರಣೆಗೆ ವಿಮುಖನಾದೆ – ನರರಸ್ತುತಿಯ ನಾ ಮಾಡಿದೆ ||
ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |
ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ ೨
ಅಗಣಿತ ಸುಖ ಬಂದರೆ ನಾನು –
ಅಗಣಿತ ದುಃಖಕೆ ಹರಿಯೆನ್ನುವೆನು |
ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||
ಮಿಗೆ ಹಾನಿಗೆ ಹರಿಯನು ದೂಷಿಸಿ
ನೆಗೆದು ಪತಂಗವು ಕಿಚ್ಚಲಿ ಬೀಳುವ |
ಬಗೆ ನಾನಾದೆನು ಪುರಂದರ ವಿಠಲನ ಖಗರಾಜ
ಸುವಾಹನ ಶ್ರೀ ಕೃಷ್ಣ ೩

೨೩೯
ಎನ್ನ ರಕ್ಷಿಸೊ ನೀನು – ದೇವರ ದೇವ ಪ
ಎನ್ನ ರಕ್ಷಿಸೊ ನೀನು ಯಾದವ ಕುಲಮಣಿ
ಮುನ್ನ ದ್ರೌಪದಿಯಭಿಮಾನ ಕಾಯ್ದ ಕೃಷ್ಣ ಅ.ಪ.
ಬಾಲನ ಮೊರೆಯನು ಕೇಳಿ ಕೃಪೆಯಿಂದ
ಪಾಲಿಸಿದೆಯೊ ನರಸಿಂಹ ರೂಪದಿಂದ ೧
ಪಾಷಾಣ ಚರಣದಿ ಯೋಷಿದ್ರೂಪವ ಗೈದೆ
ದೋಷ ಸಂಹಾರ ನಿರ್ದೋಷಗುಣಪೂರ್ಣನೆ ೨
ಇನಕುಲಾಂಬುಧಿ ಚಂದ್ರ ಘನಶುಭಗುಣಸಾಂದ್ರಸನಕಾದಿ ಮುನಿವಂದ್ಯ ಪುರಂದರ ವಿಠಲ ೩

೧೨೯
ಎಲೆ ಮನವೆ ನೀ ತಿಳಿ ಹರಿ ಸರ್ವೋತ್ತಮನೆಂದು |
ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ಪ.
ಇಕ್ಷುದಂಡಗಳಿರಲು ಇಂಧನವ ಮೇಲೇಕೆ |
ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |
ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |
ಪಕ್ಷಿವಾಹನನಿರಲು ಪರದೈವವೇಕೆ ೧
ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |
ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||
ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |
ಮುರಹರನ ಪೂಜಿಸದೆ ಮುಂದುಗೆಡಲೇಕೇ ೨
ಭಾವಶುದ್ಧಿಗಳಿರಲು ಬಯಲಡಂಬರವೇಕೆ |
ದೇವತಾ ಸ್ತುತಿಯಿರದ ದೇಹವೇಕೆ ||
ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |
ದೇವ ಪುರಂದರವಿಠಲನಿರಲು ಭಯವೇಕೆ ೩

೧೨೮
ಎಲೆ ಮನವೇ ಕೇಳು ಕೇಶವನ ನಾಮವ ನುಡಿಸು |
ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |
ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |
ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ ೧
ಎಲೆ ನೇತ್ರಗಳಿರ ಶ್ರೀ ಕೃಷ್ಣಮೂರ್ತಿಯ ನೋಡಿ |
ಎಲೆ ಪಾದಗಳಿರ ಹರಿಯಾತ್ರೆಯನು ಮಾಡಿ ||
ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |
ತುಳಸೀ ಪರಿಮಳವನಾಘ್ರಾಣಿಸನುದಿನವು ೨
ಎಲೆ ಶಿರವೆ ನೀನಧೋಕ್ಷಜನ ಶ್ರೀ ಚರಣದ |
ಜಲರುಹದೊಳಗಳಿಯುಂಟೆ ಲೋಲಾಡು |
ಎಲೆ ತನುವೆ ನೀನು ಶ್ರೀ ಪುರಂದರವಿಠಲನ |
ಸಲೆ ಭಕುತ ಜನರಂಗ ಸಂಗತಿಯಲಿ ಬಾಳು ೩

೧೨೫
ಎಲ್ಲವನು ಬಲ್ಲೆನೆನ್ನುವಿರಲ್ಲ
ಸಲ್ಲದ ಗುಣ ಬಿಡಲಿಲ್ಲ ಪ.
ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಗಳ ನುಡಿಯುವಿರಲ್ಲ ಅಪ
ಕಾವಿಯನುಟ್ಟು ತಿರುಗುವಿರಲ್ಲ
ಕಾಮವ ಬಿಡಲಿಲ್ಲ
ನೇಮ – ನಿಷ್ಠೆಗಳ ಮಾಡವಿರಲ್ಲ
ತಾಮಸ ಬಿಡಲಿಲ್ಲ
ತಾವೊಂದರಿಯದೆ ಪರರಲಿ ತಿಳಿಯದೆ
ಕೀವದ ಕುಳಿಯಲಿ ಬೀಳುವಿರಲ್ಲ ೧
ಗುರುಗಳ ಸೇವೆಯ ಮಾಡಿದಿರಲ್ಲ
ಗುರುತಾಗಲೆ ಇಲ್ಲ
ಪರಿಪರಿ ದೇಶವ ತಿರಿಗಿದಿರಲ್ಲ
ಪೊರೆಯುವರಿನ್ನಿಲ್ಲ
ಅರಿವೊಂದರಿಯದೆ ಆಗಮ ತಿಳಿಯದೆ
ನರಕಕೂಪದಲಿ ಬೀಳುವಿರಲ್ಲ ೨
ಬ್ರಹ್ಮಜ್ಞಾನಿಗಳೆನಿಸುವಿರಲ್ಲ
ಹಮ್ಮನು ಬಿಡಲಿಲ್ಲ
ಸುಮ್ಮನೆ ಯಾಗವ ಮಾಡುವಿರಲ್ಲ
ಹೆಮ್ಮೆಯ ಬಿಡಲಿಲ್ಲ
ಗಮ್ಮನೆ ಪುರಂದರವಿಠಲನ ಪಾದಕೆ
ಒಮ್ಮೆಯಾದರು ನೀವೆರಗಲೆ ಇಲ್ಲ ೩

೧೨೬
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.
ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆ
ಬೋಧನೆಯ ಮಾಡವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೧
ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದು
ಖಂಡ ತುಂಡು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೨
ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿ
ಭಂಗಬಿದ್ದು ಗಳಿಸುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೩
ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿ
ರೆಂಟೆ ಹೊಡೆದು ಬೆಳೆಸುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೪
ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿ
ಸುಳ್ಳು ಬೊಗಳಿ ತಿಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೫
ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು
ಕಷ್ಟಮಾಡಿ ತಿಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೬
ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡು
ಸೂಳೆಯಂತೆ ಕುಣಿಯುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೭
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿ
ನಾನಾ ವೇಷ ಹಾಕುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೮
ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡು
ಕಳ್ಳತನವ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೯
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೧೦
ಉನ್ನಂತ ಪುರಂದರ ರಾಯನ ಧ್ಯಾನವನು
ಮನಮುಟ್ಟಿ ಮಾಡುವುದು
ಮುಕ್ತಿಗಾಗಿ ಆನಂದಕಾಗಿ* ೧೧

ಕೌಶ್ಯಕುಲದ ಬ್ರಾಹ್ಮಣ
೭೦
ಎಲ್ಲಿ ಬೆಣ್ಣೆಯ ಬಚ್ಚಿಡುವೆನಾ-ಈ |
ಕಳ್ಳ ಕೃಷ್ಣನ ಹಾವಳಿ ಘನವಾಯಿತು ಪ
ನೆಲುವು ನಿಲುಕದೆಂದಿಡುವೆನೆ-ನೋಡೆ |
ಬೆಳೆಯಬಲ್ಲನಿವ ಬ್ರಹ್ಮಾಂಡಕೆ ||
ತಿಳಿಸದೆ ಕತ್ತಲೊರೆಳಿಡುವೆನೆ-ಅಕ್ಕ |
ಬೆಳಕೆಲ್ಲವೀತನ ಕಂಗಳ ಢಾಳ ೧
ಎವೆಯಿಕ್ಕದಲ್ಲಿ ಕಾದಿಡುವೆನೆ-ನೋಡೆ |
ದಿವಿಜರೆಲ್ಲ ಈತನ ಮಾಯೆ ||
ಅವರ ಬಳಿಗೆ ಮೊರೆಯಿಡುವೆನೆ-ಅಕ್ಕ |
ಇವನಿಟ್ಟ ಬಂಟರಿಂದ್ರಾದಿಗಳೆಲ್ಲರು ೨
ಈಗಲೆ ಇಂತು ಮಾಡುವನು-ಮುಂದೆ |
ಅಗಲಿಸುವನು ನಮ್ಮ ಒಗೆತನವಮ್ಮ ||
ಕೂಗಿ ಹೇಳಲು ಮತ್ತೆ ಕೇಡಮ್ಮ-ಮುಂದೆ |
ಹೇಗೆ ಪುರಂದರವಿಠಲನಟ್ಟುಳಿಗೆ? ೩

ತುಳಸಿ
೨೦೫
ಎಲ್ಲಿ ಶ್ರೀ ತುಳಸಿಯ ವನವು |
ಅಲ್ಲೊಪ್ಪುವರು ಸಿರಿ-ನಾರಾಯಣರು ಪ
ಗಂಗೆ ಯಮುನೆ ಗೋದಾವರಿ ಕಾವೇರಿ |
ಕಂಗೊಳಿಸುವ ಮಣಿಕರ್ಣಿಕೆಯು ||
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |
ಸಂಗಡಿಸುತ ವೃಕ್ಷಮೂಲದಲ್ಲಿರುವುವು ೧
ಸರಸಿಜಭವ ಭವ ಸುರಪ ಪಾವಕ ಚಂ-|
ದಿರ ಸೂರ್ಯ ಮೊದಲಾದವರು ||
ಸಿರಿರಮಣನ ಆಜ್ಞೆಯಲಿ ಅಗಲದಂತೆ |
ತರುಮಧ್ಯದೊಳು ನಿತ್ಯ ನೆಲಸಿಪ್ಪರು ೨
ಋಗ್ವೇದ ಯಜುರ್ವೇದ ಸಾಮ ಅಥರ್ವಣ |
ಅಗ್ಗಳಿಸಿದ ವೇದಘೋಷಗಳು ||
ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ |
ಶ್ರೀಘ್ರದಿ ಒಲಿವ ಶ್ರೀ ಪುರಂದರ ವಿಠಲ ೩

ತಿರುಪತಿ ವೆಂಕಟರಮಣನ ಗುಡಿಯ
೭೧
ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |
ಎಲ್ಲಿಯ ಸೋದರಮಾವನೆ ಪ
ಎಲ್ಲಿಯ ಮಲ್ಲರಸಂಗ | ಖುಲ್ಲ ಕಂಸನು ನಮಗೆ |
ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪ
ವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |
ಒಂದೊಂದು ಫಲದಿಂದಲಿ ಸಂದಣಿತವೆ ||
ಕುಂದಕುಸುಮದಲಿರುವ ಮಂದಿರದಲಿ ಚಕೋರ |
ಒಂದೊಂದು ಸುಖಭರಿತವೆ ||
ಅಂದು ಮಾಧವ ನಮ್ಮ ಹೊಂದಿ ಕರವಿಡಿದ |
ನಂದನ ಕಂದನ ಚರಿತವೆ ಸಖಿಯೆ ೧
ಅಕ್ರೂರ ತಾನೆಲ್ಲ ಅಚ್ಯುತಗೆ ಎಡೆ ಮಾಡಿ |
ಆ ಕ್ರೂರನೆನಿಸಿದನೆ |
ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |
ಚಕ್ರಧರನಗಲಿಸಿದನೆ ||
ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|
ಜಾಕ್ಷಿಗೆ ತಂದಿತ್ತನೆ-ಸಖಿಯೆ ೨
ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |
ನಾರಿಯರಿಗೆ ಚಲ್ಲಿದನೆ ||
ಮೋರೆ ಮೋರೆ ನೋಡಿ ಅಧರಾಮೃತಗಳ |
ಸಾರಿ ಸಾರಿ ಸವಿದುಂಬನೆ ||
ದ್ವಾರಕಾಪುರವಾಸ ಪುರಂದರವಿಠಲ |
ಸೇರಿ ನಮ್ಮನು ಸಲಹುವನೆ-ಸಖಿಯೆ ೩

೧೨೭
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |
ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.
ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |
ಬರೆದೋದಲವನ ಪಿತ ಕೋಪದಿಂದ ||
ಸ್ಥಿರವಾದೊಡೀ ಕಂಬದಲಿ ತೋರು – ತೋರೆನಲು |
ಭರದಿ ಬರಲಾಗ ವೈಕುಂಠವಲ್ಲಿಹುದೊ ? ೧
ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |
ತರುಣಿ ಹಾ ಕೃಷ್ಣ ಎಂದೊದರೆ ಕೇಳಿ ||
ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |
ಪುರವು ದ್ವಾರಾವತಿಗೆ ಕೂಗಳತೆಯೆ ೨
ಕರಿರಾಜನನು ನೆಗಳು ನುಂಗುತಿರೆ ಭಯದಿಂದ |
ಹರಿಯೆ ಕಾಯೆಂದು ಮೊರೆಯಿಡಲು ಕೇಳಿ ||
ಕರುಣದಿಂ ಬಂಧನವ ಬಿಡಿಸಲಾ ಗಜರಾಜ – |
ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ ೩
ಪಾಪಕರ್ಮವ ಮಾಡಿದಜಮಿಳನ ಯಮಭಟರು ||
ಕೋಪದಿಂದಲಿ ಸೆಳೆಯೆ ಭೀತಿಯಿಂದ ||
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸಿ ಶ್ವೇತ –
ದೀಪವೀ ಧರೆಗೆ ಸಮೀಪವಾಗಿಹುದೆ ? ೪
ಅಣು – ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |
ಎಣೆಯಿಲ್ಲದ ಮಹಾಗುಣಪೂರ್ಣನು ||
ಘನಮಹಿಮನಾದ ಶ್ರೀ ಪುರಂದರವಿಠಲನು |
ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು ೫

೨೪೦
ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ
ಬೆಳ್ಳಕ್ಕಿಯಂತೆ ನಿನ್ನ ಧ್ಯಾನವ ಮಾಡುವೆನಯ್ಯಾ ಪ
ಗಂಡು ಮುಳುಗಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ
ಮಂಡೆ ಶೂಲೆಯಲ್ಲದೆ ಗತಿಯು ಇಲ್ಲ
ಮಂಡೆ ಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ ೧
ಗಾಣದೆತ್ತಿನಂತೆ ಕಣ್ಣಕಟ್ಟಿ ಪ್ರದಕ್ಷಿಣೆ ಮಾಡಿ
ಕಾಣದೆ ನಾ ತಿರುಗಿದೆ ಕಂಡುದಿಲ್ಲ
ಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿ
ಆಣಿಕಾರಿಕೆ ಮಾಡಿದಂಥ ಈ ಕುಯುಕ್ತಿಯು ೨
ಇಕ್ಕಳವ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆ
ಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲ
ಪೊಕ್ಕಳ ಪೂವಿನ ಶ್ರೀ ಪುರಂದರವಿಠಲನೆ
ಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ * ೩

೩೦೧
ಏಕಾರತಿಯನೆತ್ತುವ ಬನ್ನಿ ನಮ್ಮ
ಲೋಕನಾಥನ ಸಿರಿ ಪಾದವ ಬೆಳಗುವ ಪ.
ತುಪ್ಪದೊಳ್ಬೆರಸಿದ ಮೂರು ಬತ್ತಿಯನಿಟ್ಟು
ಒಪ್ಪುವ ದೀಪಕ್ಕೆ ದೀಪ ಹಚ್ಚಿ ||
ತಪ್ಪದೆ ಸಕಲ ಪಾಪಂಗಳ ಹರಿಸುವ
ಅಪ್ಪ ವಿಠಲನ ಪದಾಬ್ಜವ ಬೆಳಗುವ ೧
ಹರುಷದಿ ಏಕಾರತಿ ಬೆಳಗಿದ ಫಲ
ನರಕದಿಂದುದ್ಧಾರ ಮಾಡುವುದು ||
ಪರಮ ಭಕುತಿಯಿಂದ ಬೆಳಗುವ ನರರನು
ಹರಿ ತನ್ನ ಹೃದಯದಿ ಧರಿಸುವನಯ್ಯ ೨
ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮ
ತ್ತನ್ಯ ದೇವರನು ಸ್ಮರಿಸದೆ ಅ ||
ನನ್ಯವಾಗಿ ಶ್ರೀ ಪುರಂದರವಿಠಲನ
ಪುಣ್ಯನಾಮಗಳ ಧ್ಯಾನಿಸುತ ೩

೧೩೦
ಏಕೆ ಕಕುಲಾತಿ ಪಡುವೆ – ಎಲೆ ಮನವೆ ಪ
ಲೋಕವನೆ ಸಲಹುವ ಶ್ರೀನಿವಾಸನು ನಮ್ಮ |
ಸಾಕಲಾರದೆ ಬಿಡುವನೇ – ಮನವೆ ಅಪ
ಆನೆಗಳಿಗೆಯ್ದಾರು ಮಣವಿನಾಹಾರ
ವನು ಅಲ್ಲಿ ತಂದಿತ್ತವರದಾರೊ |
ಜೇನುನೊಣ ಮೊದಲಾದ ಕ್ರಿಮಿ – ಕೀಟಗಳಿಗೆಲ್ಲ |
ತಾನುಣಿಸದಲೆ ಬಿಡುವನೇ – ಮರುಳೆ ೧
ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನು
ಅಲ್ಲಿ ತಂದಿತ್ತವರದಾರೊ |
ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |
ಅಲ್ಲಿ ನಡಸದೆ ಬಿಡುವನೇ – ಮರುಳೆ ೨
ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲ
ಒಡೆಯನಾರುಂಟು ಪೇಳೊ |
ಗಿಡದಿಂದ ಗಿಡಕೆ ಹಾರುವ ಪಕ್ಷಿಗಳಿಗಲ್ಲಿ |
ಪಡಿಯ ನಡೆಸದೆ ಬಿಡುವನೇ – ಮರುಳೆ ೩
ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆ
ಮಂಡೆ ದಡ್ಡಾಯಿತಲ್ಲ |
ಭಂಡ ಮನವೇ ನೀನು ಕಂಡವರಿಗೆರಗದಿರು
ಕೊಂಡಾಡಿ ಹರಿಯ ಭಜಿಸೋ – ಮರುಳೆ ೪
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನು
ಬೆಂಬಿಡದೆ ಸಲುಹುತಿಹನು |
ನಂಬು ಶ್ರೀ ಪುರಂದರವಿಠಲನ ಪಾದವನು
ನಂಬಿದರೆ ಸಲಹದಲೆ ಬಿಡುವನೇ – ಮರುಳೆ ೫

೨೪೧
ಏಕೆ ಕಡೆಗಣ್ಣಿಂದ ನೋಡುವೆ – ಕೃಷ್ಣ |
ನೀ ಕರುಣಾಕರನಲ್ಲವೆ ? ಪ
ಭಕ್ತ ವತ್ಸಲ ನೀನಲ್ಲವೆ -ಕೃಷ್ಣ |
ಚಿತ್ಸುಖದಾತ ನೀನಲ್ಲವೆ ? ||
ಅತ್ಯಂತ ಅಪರಾಧಿ ನಾನಾದಡೇನಯ್ಯ|
ಇತ್ತಿತ್ತ ಬಾ ಎನ್ನಬಾರದೆ ರಂಗ ೧
ಇಂದಿರೆಯರಸ ನೀನಲ್ಲವೆ – ಬಹು
ಸೌಂದರ್ಯನಿಧಿ ನೀನಲ್ಲವೆ ? ||
ಮಂದಮತಿ ನಾನಾದಡೇನು ಕೃಪಾ-
ಸಿಂಧು ನೀ ರಕ್ಷಿಸಬಾರದೆ ರಂಗ ೨
ದೋಷಿಯು ನಾನಾದಡೇನಯ್ಯ – ಸರ್ವ –
ದೋಷರಹಿತ ನೀನಲ್ಲವೆ ? ||
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |
ಶೇಷಶಾಯಿ ಶ್ರೀ ಪುರಂದರ ವಿಠಲ ೩

೨೪೨
ಏಕೆ ಗೋಪಾಲ ಕರೆಯುತಾನೆ – ಎಲೆ ಸಖಿಯೆ ಎನ್ನ |
ಏಕೆ ಗೋಪಾಲ ಕರೆಯುತಾನೆ ? ಪ
ಕಣ್ಣ ಸನ್ನೆ ಮಾಡುತಾನೆ – ಮತ್ತೆ ಬಗೆ ಬಗೆ |
ಹಣ್ಣ ಕೈಯಲಿ ತೋರುತಾನೆ – ಎನ್ನ ಚೆಲುವಿಕೆ ||
ಬಣ್ಣಿಸುತಲಿ ತಿರುಗುತಾನೆ – ಇವನೇನೆ |
ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ೧
ಹವಳ ಸರವ ತೋರುತಾನೆ – ದುಂಡು ಮುತ್ತಿನ – |
ಧವಳ ಹಾರವ ನೀಡುತಾನೆ – ಹಾಸಿಗೆಯ ಮೇಲೆ ||
ಪವಡಿಸಬೇಕೆನುತಾನೆ – ಇವನೊಡನಿರಲು ನ-|
ಮ್ಮವರು ಸುಮ್ಮನೆ ಇಹರೇನೆ – ಎಲೆ ಸಖಿಯೆ ೨
ಬಟ್ಟಲ ಪಿಡಿದು ಬರುತಾನೆ – ಹಗಲೆ ಬಾ ಎಂದು -|
ಬಟ್ಟ ಬಯಲೊಳು ಕರೆಯುತಾನೆ – ಎನ್ನ ಮನದೊಳು ||
ದಟ್ಟು ಧಿಗಿಲು ಎನ್ನದೇನೆ – ಪುರಂದರವಿಠಲ – |
ಇಟ್ಟು ಕೊರಳಾಣೆ ಈಗ ಬಾ ಎಂಬುವನೆ – ಎಲೆ ಸಖಿಯೆ ೩

೨೪೩
ಏಕೆ ಚಿಂತಿಪೆ ಬರಿದೆ ನೀ – ವಿಧಿ ಬರೆದ – |
ವಾಕು ತಪ್ಪದು ಪಣೆಯೊಳು ಪ
ಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು |
ಇಟ್ಟಿದ್ದೆಯೊ ಪಾಲನು ||
ತೊಟ್ಟಿಲೊಳಿರುವಾಗಲೆ – ಗಳಿಸಿ ತಂ – |
ದಿಟ್ಟು ಕೊಂಡುಣುತಿದ್ದೀಯಾ ೧
ಉರಗ ವೃಶ್ಚಿಕ ಪಾವಕ – ಕರಿ ಸಿಂಹ |
ಅರಸು ಹುಲಿ ಚೋರ ಭಯವು ||
ಹರಿಯಾಜ್ಞೆಯಿಂದಲ್ಲದೆ – ಇವು ಏಳು – |
ಶರಧಿ ಪೊಕ್ಕರು ಬಿಡವೊ- ಮರುಳೆ ೨
ಇಂತು ಸುಖ – ದುಃಖದೊಳ್ಸಿಲುಕಿ – ಮರುಗಿ ನೀನು – |
ಭ್ರಾಂತನಾಗಿ ಕೆಡಬೇಡವೊ ||
ಸಂತೋಷದಿಂದ ಅರ್ಚಿಸಿ – ಭಜಿಸೋ ನೀ – |
ಸಂತತ ಪುರಂದರ ವಿಠಲನ – ಮರುಳೆ೩

೧೩೧
ಏಕೆ ಚಿಂತಿಸುತಿರುವೆ ಕೋತಿಮನವೆ |
ಶ್ರೀ ಕೃಷ್ಣರಾಯನನು ಸ್ತುತಿಸಲೊಲ್ಲದಲೆ ಪ.
ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |
ಕಟ್ಟಕಡೆಯಲಿ ಲಯಕೆ ಏನು ಚಿಂತೆ ? ||
ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ ? |
ಕಟ್ಟಕಡೆಯಲಿ ಮೂರು ಬಟ್ಟೆ ತಾನಲ್ಲವೆ ? ೧
ನವಿಲಿಂಗೆ ಚಿತ್ರಪತ್ರವನಾರು ಬರೆದವರು ? |
ಪವಳಜಾತಿಗೆ ಕೆಂಪನಾರಿತ್ತರು ? ||
ಸವಿಮಾತಿನರಗಿಳಿಗೆ ಹಸಿರಾರು ಬರೆದವರು ? |
ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ? ೨
ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |
ವಸುಧೆಯನು ಬಸಿರೊಳಗೆ ಹೆತ್ತರಾರು ?
ವಸುದೇವಸುತ ನಮ್ಮ ಪುರಂದರವಿಠಲನ |
ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ ೩

೨೪೪
ಏಕೆ ದಯಮಾಡಲೊಲ್ಲೆ – ಎಲೊ ಹರಿಯೆ |
ಮೂಕನಾಗುವರೆ ಹೀಗೆ ಪ
ಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |
ವಾಕುಮೊರೆಗಳ ಕೇಳಿ ಒಲಿದು ದಯಮಾಡಯ್ಯ ಅ.ಪ
ಅರ್ಥವಿಲ್ಲದ ಬಾಳ್ವೆಯು – ಇರುವುದಿದು|
ವ್ಯರ್ಥವಾಗಿದೆ ಶ್ರೀಪತಿ ||
ಕರ್ತು ನಿನ್ನೊಳು ನಾನು ಕಾಡಿ ಬೇಡುವನಲ್ಲ|
ಸತ್ವರದಿ ದಯಮಾಡೊ ತುಳಸೀದಳಪ್ರಿಯ ೧
ಮನದೊಳಗಿನ ಬಯಕೆ – ಎಲೈಸ್ವಾಮಿ |
ನಿನಗೆ ಪೇಳುವೆನು ನಾನು ||
ಬಿನುಗು ದೇವತೆಗಳಿಗೆ ಪೇಳಲಾರೆವೊ ಹರಿಯೆ|
ತನುಮನ ನಿನ್ನ ಕೂಡ ಇಹವು ದಯಮಾಡೊ ೨
ಮೂರು ಲೋಕವ ಪಾಲಿಪ – ಎನ್ನಯ ಸ್ವಾಮಿ |
ಭಾರವೆ ನಿನಗೆ ನಾನು ||
ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ – |
ದಾರಾ ಮನೋಹರ ಸಾಕಾರ ದಯವಾಗೊ ೩

೧೩೨
ಏಕೆ ದೇಹವನು ದಂಡಿಸುವೆ ವೃಥಾ – ಬಿಡ – |
ದೇಕ ಚಿತ್ತದಿ ಲಕ್ಷ್ಮೀಕಾಂತ ಹರಿ ಎನ್ನದೆ ಪ.
ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ – |
ಮೌನವನು ಪಿಡಿದು ಬಕಪಕ್ಷಿಯಂತೆ |
ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||
ದಾನವಾಂತಕನ ನಾಮಕೆ ಮೌನವುಂಟೆ ? ೧
ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |
ಗುಪಿತದಿಂದಲಿ ನೀನು ಕುಳಿತು ಫಲವೇನು ||
ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||
ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ ೨
ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |
ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |
ಸಂದೇಹವೇಕೆ ನೀನೊಂದು ಕ್ಷಣವಗಲದೆ |
ತಂದೆ ಶ್ರೀ ಪುರಂದರವಿಠಲ ನೆನೆಮನವೆ ೩

೨೪೫
ಏಕೆ ನಿರ್ದಯನಾದೆ ಎಲೋ ದೇವನೇ
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪ
ಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||
ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ ೧
ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆ
ಗರುಡನ ಮೇಲೆ ಗಮನವಾಗದೆ ||
ಭರದಿಂದ ನೀ ಬಂದು ಕರಿಯನುದ್ದರಿಸಿದೆ
ಕರಿರಾಜನೇನು ಕೊಟ್ಟನು ಹೇಳು ಹರಿಯೇ ೨
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ
ನಿಜದಿ ರುಕ್ಮಾಂಗದ ಮೊಮ್ಮಗನೆ ||
ಭಜನೆಗೈವರೆ ಹಿತರೆ ನಾ ನಿನಗನ್ಯನೆ
ತ್ರಿಜಗಪತಿ ಸಲಹೆನ್ನ ಪುರಂದರ ವಿಠಲ ೩

೧೩೩
ಏಕೆ ಮುರ್ಖನಾದೆ – ಮನುಜಾ
ಏಕೆ ಮುರ್ಖನಾದೆ ? ಪ.
ಏಕೆ ಮೂರ್ಖನಾದೆ ನೀನು
ಕಾಕು ಬುದ್ಧಿಗಳನು ಬಿಟ್ಟು
ಲೋಕನಾಥನ ನೆನೆಯೊ ಮನುಜಾ ಅಪ
ಮಕ್ಕಳು ಹೆಂಡರು ತನ್ನವರೆಂದು
ರೊಕ್ಕವನು ಗಳಿಸಿಕೊಂಡು
ಸೊಕ್ಕಿಂದ ತಿರುಗುವರೇನೊ ಹೇ ಮನುಜಾ ೧
ಕಕ್ಕಸದ ಯಮದೂತರು ಬಂದು
ಲೆಕ್ಕವಾಯಿತು ನಡೆಯೆಂದರೆ
ಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ ೨
ಅರಿಷಡ್ವರ್ಗದ ಆಟವ ಬಿಟ್ಟು
ಪುರಂದರವಿಠಲನ ಹೊಂದಲುಬೇಕು
ಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ ೩

೨೪೭
ಏಕೆ ಮೈ ಮರೆದೆ ನೀನು – ಜೀವನವೇ – |
ಏಕೆ ಮೈಮರೆದೆ ನೀನು ಪ
ಏಕೆ ಮೈಮರೆದೆ ನೀ – ಲೋಕಾರಾಧ್ಯನ ಪಾದ|
ಬೇಕೆಂದು ಭಜಿಸು ಕಾಣೋ – ಜೀವನವೇ ಅ.ಪ.
ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |
ಎದ್ದು ಕುಳ್ಳಿರಬಾರದೆ – ಜೀವನವೇ ||
ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |
ಒದ್ದು ಬಿಸಾಡು ಕಣೊ – ಜೀವನವೇ ೧
ಕಂದರ್ಪನೆಂಬವ ಕಾದುತ ಬರುವಾಗ |
ನಿಂದಿಸುತಿರಬಾರದೆ – ಜೀವನವೇ ||
ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |
ಕೊಂದು ಬೀಸಾಡು ಕಾಣೊ – ಜೀವನವೇ ೨
ವಿಷಯದಿ ಸುಖಕಾಣೆ ಪಶುಜನರೊಳು ದೇಹ |
ಹಸನುಗಳೆಯಲು ಬೇಡವೋ – ಜೀವನವೇ||
ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|
ರಸದಿ ಲೋಲಾಡು ಕಾಣೋ – ಜೀವನವೇ ೩

ತುಂಬಾ ಸುವಾಸನೆಯುಳ್ಳ ಈ ಹೂವನ್ನು
೭೨
ಏಕೆ ವೃಂದಾವನವು ಸಾಕು ಗೋಕುಲವಾಸ |
ಏಕೆ ಬಂದೆಯೊ ಉದ್ಧವಾ? ಪ
ಸಾಕು ಸ್ನೇಹದ ಮಾತನೇಕ ಮಹಿಮನು ತಾನು |
ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪ
ಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |
ಇಲ್ಲದಂತಾಯಿತಲ್ಲ ||
ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |
ವಲ್ಲಭನ ಒಯ್ದನಲ್ಲ ||
ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |
ಘಲ್ಲನಾಭನ ತಂದು ತೋರೈ-ಉದ್ಧವಾ ೧
ಅನುದಿನೊಳಾದರಿಸಿ ಅಧರಾಮೃತವನಿತ್ತು |
ಇನಿದಾದ ಮಾತುಗಳಲಿ ||
ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |
ಮನಸಿಜನ ಕೇಳಿಯಲ್ಲಿ ||
ಕನಸಿನಲಿ ಕಂಡ ತೆರನಾಯಿತಾತನ ಕಾಂಬು |
ವನಕ ಬದುಕುವ ಭರವಸೆ ಹೇಳು-ಉದ್ಧವಾ ೨
ಕರುಣನಿಧಿಯೆಂಬುವರು ಕಪಟನಾಟಕದರಸು |
ಸರಸ ವಿರಸವ ಮಾಡಿದ ||
ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |
ಮರೆದು ಮಧುರೆಯ ಸೇರಿದ ||
ಪರಮಭಕ್ತರ ಪ್ರಿಯ ಪುರಂದರವಿಠಲನ |
ನೆರೆಗೂಡಿಸೈ ಕೋವಿದ-ಉದ್ಧವಾ ೩

೨೪೬
ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ
ಕಾಕಮಾಡದೆ ಕಾಯೊ ಸಂಗದೊಳು ಬಳಲಿದೆನು ಪ
ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ
ಮಂದ ಮತಿಯಿಂದ ನಾ ಮರುಳಾದೆನೋ ||
ಸಂದಿತೈ ಯೌವನವು ಬುದ್ದಿ ಬಂದಿತು ಈಗ
ಸಂದೇಹಪಡದೆ ನೀ ಕರುಣಿಸೈ ಎನ್ನ ೧
ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ತಿನ್ನುತಿಹರು ||
ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆ
ಪುಂಡರೀಕಾಕ್ಷ ನೀ ಪಾಲಿಸೈ ಎನ್ನ ೨
ಅಟ್ಟಮೇಲೊಲೆಯುರಿಯುವಂತೆ ಹರಿ ಎನಗೀಗ
ಕೆಟ್ಟ ಮೇಲರಿವು ತಾ ಬಂದಿತಯ್ಯ ||
ನೆಟ್ಟನೇ ಪುರಂದರ ವಿಠಲನೆ ಕೈ ಬಿಡದೆ
ದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ ೩

ಸುಮೇರಾ ದೇಶದ ರಾಜನಾದ ಕೇಸರಿ

ಏತರ ಚೆಲುವು-ರಂಗಯ್ಯ ಪಏತರ ಚೆಲುವ ರಂಗಯ್ಯ ಶ್ರೀಹರಿಯೆಂಬ |ಮಾತಿಗೆ ಬರಿದೆ ಮರುಳಾದೆನಲ್ಲದೆ ಅ.ಪದೇಶವಾಸಗಳುಳ್ಳೊಡೆ-ತಾ ಕ್ಷೀರವಾ |ರಾಶಿಯೊಳಗೆ ಮನೆ ಕಟ್ಟುವನೆ? ||
ಹಾಸುವ ಮಂಚವುಳ್ಳೊಡೆ-ಶ್ರುತಿಹೀನ |ಶೇಷನ ಮೇಲೆ ಮಲಗುವೆನೆ? ೧
ಹಡೆದ ತಾಯಿ ತನಗುಳ್ಳೊಡೆ-ರಂಗ |ಹೊಡೆದು ಕರು-ತುರುಗೊಂಡು ಬಾಳುವನೆ? ||
ಮಡದಿಯರುಳ್ಳೊಡೆ ಅಡವಿಯೊಳಾಡುವ |ಹುಡುಗಿಯರ ಸಂಗ ಮಾಡುವನೆ? ೨
ಬುದ್ದಿ ಪೇಳುವ ಪಿತನುಳ್ಳೊಡೆ-ರಂಗ |ಕದ್ದು ಬೆಣ್ಣೆ ದಧಿ ಮೆಲ್ಲುವನೆ ? ||
ನಿರ್ಧಾರ ವಾಹನವುಳ್ಳೊಡೆ-ಹಾರುವ |ಹದ್ದಿನ ಹೆಗಲೇರಿ ಬಾಹನೆ?-ರಂಗ ೩
ಸಿರಿಯುಳ್ಳೊಡೆ ತಾನು ಬಲಿಯ ಮನೆಗೆ ಪೋಗಿ |ಧರೆಯ ದಾನಕ್ಕೆ ಕೈಯನೊಡ್ಡುವನೆ? ||
ಗರುವ ತಾನಾದರೆ ಪಾಂಡುಕುಮಾರನ |ಧುರದ ಬಂಡಿಯ ಬೋವನಾಗುವನೆ? ೪
ಮದನ ಜನಕ ನಿಚ್ಚ ಚೆಲುವನೆಂತೆಂಬೆನೆ | ಮದದಿಂದ ಕುಜ್ಜೆಯ ಕೂಡುವನೆ? ||
ಪದುಮನಾಭ ಸಿರಿ ಪುರಂದರವಿಠಲ |ಗದುಗಿನ ವೀರನಾರಾಯಣ-ರಂಗ ೫

ವೈಷ್ಣವರು ವಿಷ್ಣುವಿನ ಹೆಸರಿನಿಂದ
೭೩
ಏನ ಮಾಡಲಿ ಮಗನೆ ಏಕೆ ಬೆಳಗಾಯಿತು |
ಮಾನಿನಿಯರು ಬಂದು ಮಾನ ಕಳೆಯುವರು ಪ
ಹಾಲು, ಮೊಸರು, ಬೆಣ್ಣೆ, ಕದ್ದನೆಂತೆಂಬುವರು |
ಮೇಲಿಟ್ಟ ಕೆನೆಯನು ಮೆದ್ದನೆಂಬುವರು ||
ಬಾಲರನೆಲ್ಲರ ಬಡಿದನೆಂಬರು ಎಂಥ |
ಕಾಳು ಹೆಂಗಸು ಇವನ ಹಡೆದಳೆಂಬುವರೊ ೧
ಕಟ್ಟಿದ ಕರುಗಳ ಬಿಟ್ಟನೆಂತೆಂಬರೊ |
ಮೆಟ್ಟಿ ಸರ್ಪನ ಮೇಲೆ ತುಳಿದನೆಂಬುವರೊ ||
ಪುಟ್ಟ ಬಾಲೆಯರ ಮೋಹಿಸಿದನೆಂಬುವರೊ ಎಂಥ |
ಕೆಟ್ಟ ಹೆಂಗಸು ಇವನ ಹಡೆದಳೆಂಬುವರೊ ೨
ಗಂಗಾಜನಕ ನಿನ್ನ ಜಾರನೆಂತೆಂಬರೊ |
ಶೃಂಗಾರ ಮುಖ ನಿನ್ನ ಬರಿದೆ ದೂರುವರೊ ||
ಮಂಗಳಮಹಿಮ ಶ್ರೀ ಪುರಂದರವಿಠಲ |
ಹಿಂಗದೆ ಎಮ್ಮನು ಸಲಹೆಂತೆಂಬುವರೊ ೩

೨೪೮
ಏನ ಮಾಡಲಿ ಶ್ರೀ ಹರಿ – ಇಂಥ |
ಮಾನವಜನ್ಮ ನಚ್ಚಿಸಬಹುದೆ? ಪ
ಮಾತನಾಡದೆ ಮೌನದೊಳಿದ್ದರೆ-ಮೂಕ-|
ನೀತನೆಂದು ಧಿಕ್ಕರಿಸುವರು ||
ಚಾತುರ್ಯದಿಂದಲಿ ಮಾತುಗಳಾಡಲು |
ಈತನು ಬಲು ಬಾಯ್ಬಡಿಕನೆಂಬುವರಯ್ಯ ೧
ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |
ಬಡಿವಾರದವನೆಂದಾಡುವರು ||
ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |
ನಡತೆ ಹೀನನೆಂದು ಬಲು ನಿಂದಿಸುವರಯ್ಯ೨
ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |
ನಿಷ್ಟೆಯೇನು ಸುಟ್ಟಿತೆಂಬರು |
ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |
ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ೩
ಒಲಪಿನೊಳ್ಚೆನ್ನಿಗತನವನು ಮಾಡಲು |
ಬಲು ಹೆಮ್ಮೆಗಾರನೆಂದಾಡುವರು ||
ಸುಲಭತನದಿ ತಾ ನಿಗರ್ವಿಯಾಗಿದ್ದರೆ |
ಕಲಿಯುಗದಲಿ ಮಂದಮತಿಯೆಂಬುವರಯ್ಯ ೪
ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |
ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||
ಧರೆಯೊಳಗಿಹ ಪರಿಯಂತರ ಸಲಹೆನ್ನ |
ಕರುಣವಾರಿಧಿ ಶ್ರೀ ಪುರಂದರ ವಿಠಲ೫

೨೫೦
ಏನನಿತ್ತು ಮೆಚ್ಚಿಸುವೆನು ಏನೋ ವಿಠಲ ಪ
ಮಾನಿನಿಯರಸ ನಿನ್ನ
ನಾಮವೆನ್ನ ನೆನೆವೆನಯ್ಯ ಅ.ಪ
ಓದಿ ನಿನ್ನ ಮೆಚ್ಚಿಸುವೆನೆ ವೇದವನ್ನು ಅಜನಿಗಿತ್ತೆ
ವಾದಿಸಿ ನಿನ್ನ ಮೆಚ್ಚಿಸುವೆನೆ ಆದಿಶೇಷಶಯನನೆ ೧
ಆಡಿ ನಿನ್ನ ಮೆಚ್ಚಿಸುವೆನೆ ಮೃಡನಯ್ಯನಯ್ಯನೆ
ಪಾಡಿ ನಿನ್ನ ಮೆಚ್ಚಿಸುವೆನೆ ಪವನಜನೊಡೆಯನೆ ೨
ಚಿನ್ನವಿತ್ತು ಮೆಚ್ಚಿಸುವೆನೆ ಸಿರಿದೇವಿಯ ರಮಣನೆಪೂರ್ಣಾನಂದ ಜ್ಞಾನಿ ನೀನೆ ಪುರಂದರ ವಿಠಲಯ್ಯ ೩

೨೪೯
ಏನಮಾಡಿದರೆನ್ನ ಭವಹಿಂಗದು |
ದಾನವಾಂತಕ ನಿನ್ನ ದಯವಾಗದನಕ ಪ
ಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |
ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||
ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |
ಹರಿ ನಿನ್ನ ಕರುಣಾ ಕಟಾಕ್ಷವಿರದನಕ ೧
ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |
ಅತಿ ಶೀಲಗಳನೆಲ್ಲ ಮಾಡಿ ದಣಿದೆ ||
ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |
ರತಿಪತಿಯ ಪಿತ ನಿನ್ನ ದಯವಾಗದನಕ ೨
ದಾನವನು ಮಾಡಿದೆನು ಮೌನವನು ತಾಳಿದೆನು |
ಜ್ಞಾನ ಪುರುಷಾರ್ಥಕ್ಕೆ ಮನವೀಯದೆ ||
ಶ್ರೀನಾಥ ದಯಪೂರ್ಣ ಪುರಂದರವಿಠಲನ |
ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ ೩

೧೦
ಏನಯ್ಯ ನಿನ್ನ ಸಂಗದ ಪರಿ – |
ಮಾನಿನಿಯ ಮರುಳು ಮಾಡಿ ನೋಡಿದವಗೆ ಪ
ಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |
ಕರವ ಗಲ್ಲದೊಳಿಟ್ಟು ಕಡುಸುಯ್ವಳು ||
ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |
ಬರವ ಕಾಣದೆ ಕಂದಿ ಕುಂದಿ ಬಡವಾದಳೈ ೧
ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |
ಹಂಬಲಿಸುವಳು ಕಂಡ ಕಾಂತೆಯರೊಳು ||
ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |
ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ ೨
ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |
ಘನತಾಪದಿಂದ ಗೋಚರವಾಗಿದೆ ||’
ಅನುತಾಪದಿಂದ ಸಲೆ ಬಳಲಿದ ಮಾನಿನಿಯ |
ವನಜಾಕ್ಷ ಪುರಂದರ ವಿಠಲ ಬಂದು ಸಂತಯಿಸೊ ೩

೫೩
ಏನಾದರೂ ಒಂದಾಗಲಿ – ನಮ್ಮ –
ಮನೆತುಂಬ ದೇವರು ಮರತುಂಡು ಕಲ್ಲು ಪ
ಅತ್ತೆಯ ಕಣ್ಣೊಂದು ಹರಿಯಲಿ |
ಮತ್ತೆ ಮಾವನ ಕಾಲು ಮುರಿಯಲಿ ||
ಹಿತ್ತಲಗೋಡೆಯು ಬಿರಿಯಲಿ – ಕಾ –
ಳ್ಗತ್ತಲೆಯಾದರೂ ಕವಿಯಲಿ ಹರಿಯೆ ೧
ಮನೆಯ ಗಂಡ ಮಾಯವಾಗಲಿ |
ಉಣಬಂದ ಮೈದುನ ಒರಗಲಿ – ಸಿರಿ –
ಮನೆಯು ಹಾಳು ಹಾಳಾಗಲಿ – ನಾ –
ದಿನಿ ಅತ್ತಿಗೆಯರು ಸಾಯಲಿ ಹರಿಯೆ……….. ೨
ಕಂದನ ಕಣ್ಣೊಂದು ಮುಚ್ಚಲಿ | ಆ
ಚಂದ್ರಂಗೆ ಹಾವು ಕಚ್ಚಲಿ ||
ದ್ವಂದ್ವಾರ್ಥವನು ಬಿಚ್ಚಲಿ ಪು –
ರಂದರವಿಠಲ ಮೆಚ್ಚಲಿ ಹರಿಯೆ………… ೩

೧೩೪
ಏನಾಯಿತೀ ಜನಕೆ ಮೌನವದು ಕವಿದಂತೆ |
ಮಾನುಷ್ಯರಾಗಿ ಮರೆತರು ಹರಿಯನು ಪ.
ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |
ಬಾಲತನದಲಿ ಭೂತ ಹೊಡೆಯಿತೆ – ಕೆಳಗು – |
ಮೇಲಿನ ತುಟಿ ಎರಡು ಒಂದಾಯಿತೇ – ಅವರ – |
ಕಾಲಮೃತ್ಯು ಬಂದು ಕಂಗೆಡಿಸಿತೆ ? ೧
ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |
ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||
ಹಟ ಹಿಡಿದ ಹೊಲೆಮನಸು ಹರಿ ಎನ್ನಲಾರದೆ |
ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? ೨
ಹರಿಯೆಂದರವರ ಶಿರ ಹರಿದು ಬೀಳುವುದೆ |
ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||
ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |
ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? ೩

ಈತ ಕಿಮ್ಮಿರನ ಒಡಹುಟ್ಟಿದವ
೭೪
ಏನಾಯಿತು ರಂಗನೆ ನೋಡಿರಮ್ಮ-ನಿ-|
ಧಾನಿಸಿ ಎನಗೊಂದು ಪೇಳಿರಮ್ಮ ಪ
ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |
ಎಷ್ಟಾದರೂ ಮೊಲೆಯುಣ್ಣನಮ್ಮ ||
ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |
ಎಷ್ಟು ಹೇಳಲಿ ಬಾಯ ಮುಚ್ಚನಮ್ಮ ೧
ಕಾಯ ಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ |
ತಾಯಿಯ ಬಲವಿಲ್ಲದಾಯಿತಮ್ಮ ||
ನೋಯೆ ನೋಟಕೆ ಅಬ್ಧಿ ಬತ್ತಿತಮ್ಮ-ಅವನ |
ಬಾಯಿಯೊಳಗೆ ವಿಶ್ವ ತೋರಿತಮ್ಮ ೨
ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ |
ಸತ್ಯವು ಕುದುರೆಯನೇರುವನಮ್ಮ ||
ನಿತ್ಯ ನಿರ್ದೋಷ ಪುರಂದರವಿಠಲ ತನ್ನ-|
ಭಕ್ತರ ಸಲಹುವದೇವನಮ್ಮ ೩

೧೩೫
ಏನು ಇರದ ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ.
ಹಸಿದು ಬಂದವರಿಗೆ ಅಶನವೀಯಲು ಬೇಕು
ಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕು
ಹಸನಾದ ಭೂಮಿಯನು ಧಾರೆಯರೆಯಲು ಬೇಕು
ಪುಸಿಯಾಡದಲೆ ಭಾಷೆ ನಡೆಸಲೇಬೇಕು ೧
ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡ
ಕುಳ್ಳಿರ್ದ ಸಭೆಯೊಳಗೆ ಕುಟಿಲ ನಡಿಸಲು ಬೇಡ
ಒಳ್ಳೆಯವ ನಾನೆಂದು ಬಲು ಹೆಮ್ಮಲಿರಬೇಡ
ಬಾಳ್ವೆ ಸ್ಥಿರವೆಂದು ನೀನಂಬಿ ಕೆಡಬೇಡ ೨
ದೊರೆ ತನವು ಬಂದಾಗ ಕೆಟ್ಟ ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮರೆಯಬೇಡ
ಸಿರಿವಂತನಾದರೆ ಪುರಂದರವಿಠಲನ
ಚರಣ ಕಮಲವ ಸೇರಿ ಸುಖಿಯಾಗು ಮನುಜ* ೩

೨೫೧
ಏನು ಕೌತಕ ಕೃಷ್ಣ ತಾನೆ ಕನಸಿನೊಳು |
ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪ
ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |
ಮುಂದೆ ಅದರಂದವನು ಎಲ್ಲ ತಾಪೇಳ್ದ ||
ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |
ತಿಂದ ಮೀಸಲಕೊಡೆನು ಎಂದು ಹೇಳಿದೆನು ೧
ಮೋಸಹೋದೆನು ನಾನು ದೋಸೆಯನು ಹರಿಗೆ-ಆ-
ಪೋಶನವನಿಕ್ಕದೇ ಪೋಷಿಸಿದೆನು ||
ಮಿಸಲಾದರು ಅಹುದು ದೋಷವಿಲ್ಲೆಂದೆನುತ |
ಆಸುರದ ಮಾತುಗಳ ವಾಸಿತೋರಿಸಿದನು ೨
ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |
ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||
ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |
ತೊಳಕೊಂಡು ಒಳಯಿಂಕೆ ಬಂದುದನು ಕಂಡೆ ೩
ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |
ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||
ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |
ಏರಿ ಬಂದುದು ಶುಭದ ವಾರಿಧಿಯು ಮುಂದೆ……………….. ೪
ಈ ಮಹಾಮೂರ್ತಿಯನು ಜಾವಪರ್ಯಂತರದಿ |
ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||
ಆ ಮಹಾ ಹರಿಯು ಪರಧಾಮವನು ಕೈಕೊಂಡು |
ಭೂಮಿಪತಿಯಾಗಿರ್ದ ಪುರಂದರವಿಠಲ……………………… ೫

೧೬೩
ಏನು ಧನ್ಯಳೋ – ಲಕುಮಿ – ಎಂಥ ಮಾನ್ಯಳೋ ಪ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೊ ಅ.ಪ
ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಪೂರ್ಣಗುಣಳು ಸರ್ವಕಾಲ ಮಾಡುತಿಹಳು ೧
ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು |
ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ೨
ಸರುವಸ್ಥಳದಿ ವ್ಯಾಪ್ತನಾದ | ಸರುವದೋಷರಹಿತನಾದ |
ಗರುಡಗಮನನಾದ ಪುರಂದರವಿಠಲನ ಸೇವಿಸುವಳೋ ೩

೨೫೨
ಏನು, ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |
ಮಾನವನು ತೊರೆದು ಪರರನು ಪೀಡಿಸುವುದ ಪ
ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ ||
ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |
ಅಲ್ಲವನೆ ತಿಂದ ಇಲಿಯಂತೆ ಬಳಲುವುದ ೧
ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|
ಬಾಣ ಸಮರೂಪ ನೀನೆಂದು ಪೊಗಳೆ ||
ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |
ಗಾಣ ತಿರುಗುವ ಎತ್ತಿನಂತೆ ಬಳಲುವುದ ೨
ಹಿಂದೆ ಬರೆದಾ ಬರೆಹ ಏನಾದರಾಗಲಿ |
ಮುಂದೆನ್ನ ವಂಶದಲಿ ಪುಟ್ಟುವರಿಗೆ ||
ಸಂದೇಹ ಬೇಡ ಶ್ರೀ ಪುರಂದರ ವಿಠಲನೇ |
ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ ೩

೧೧
ಏನು ಬೇಡಲಿ ನಿನ್ನ ಹರಿಯೆ ಪ
ಏನ ಬೇಡಲಿ ನಿನ್ನ ಚಂಚಲ ಕಠಿಣನ |
ಮಾನದಿಂದ ಮೋರೆ ಓರೆಮಾಡುವನ ಅ.ಪ
ಕರುಳಹರಕನ – ಏನ ಬೇಡಲಿ |
ತಿರಿದು ತಿಂಬುವನ ||
ಕೊರಳಗೊಯ್ಕ ಅರಣ್ಯ ತಿರುಗವನ ಮೊ – |
ಸರು ಬೆಣ್ಣೆ ಕದ್ದು ತಿಂಬವನ೧
ವಾಸಶೂನ್ಯನ – ಬೇಡಲೇನು ಕತ್ತಿ – |
ಬೀಸಿ ಸವರುವನ ||
ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು |
ಕೇಸಕ್ಕಿ ಉಂಡುಂಡು ವಾಸಿಸುವನ ೨
ಬೇಡಿದರೆ ಕೊಡನ – ಮೋರೆನೋಡಿ |
ಭಿಡೆಯ ಹಿಡಿಯದವನ |
ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ |
ಒಡೆಯ ಪುರಂದರವಿಠಲದೊರೆಯ ೩

ಭಾರತಿ
೨೦೪
ಏನು ಮರುಳಾದೆಯೇ ಎಲೆ ಭಾರತೀ ಪ
ವಾನರ ಕುಲದೊಳಗೆ ಶ್ರೇಷ್ಠನಾದವಗೆ ಅ.ಪ
ಕಣ್ಣಿಲ್ಲದವಳ ಗರ್ಭದಲಿ ಜನಿಸಿ ಬಂದು
ನಿನ್ನ ತೊರೆದು ಬ್ರಹ್ಮಚಾರಿಯಾದ ||
ಹೆಣ್ಣಿಗಾಗಿ ಪೋಗಿ ವನವ ಕಿತ್ತಾಡಿ |
ಉಣ್ಣ ಕರೆದರೆ ಎಂಜಲೆಡೆಯನೊಯ್ದವಗೆ ೧
ಹುಟ್ಟಿದನು ಗುರುತಲ್ವಗಾಮಿಯಾ ವಂಶದಲಿ |
ನಟ್ಟಿರುಳೊಳೊಬ್ಬ ಅಸುರಿಯ ಕೂಡಿದ ||
ಹೊಟ್ಟೆಗೆಂತಲೆ ಹೋಗಿ ಭಿಕ್ಷದನ್ನವನುಂಡು |
ಅಟ್ಟ ಹಾಕುವನಾಗಿ ದಿನವ ಕಳೆದವಗೆ ೨
ಮಂಡೆ ಬೋಳಾಗಿ ಭೂಮಂಡಲವ ತಿರುಗಿದ |
ಕಂಡವರು ಯಾರು ಈತನ ಗುಣಗಳ ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |
ಕೊಂಡಾಡುತಲಿ ಬೋರೆ ಮರದ ಕೆಳಗಿದ್ದವಗೆ ೩

ಪರೋಪಾಸನೆಯಲ್ಲಿ ಶ್ವಾಸದ
೭೫
ಏನು ಮರುಳಾದೆಯೇ ಎಲೆ ರುಕ್ಮಿಣಿ |
ಹೀನಕುಲ ಗೊಲ್ಲ ಶ್ರೀ ಗೋಪಾಲಗೆ ಪ
ಹಾಸಿಕಿಲ್ಲದೆ ಪೋಗಿ ಹಾವಿನೊಳು ಪವಡಿಸಿದ |
ಹೇಸಿಕಿಲ್ಲದೆ ಕರಡಿಯನು ಕೂಡಿದ ||
ಗ್ರಾಸಕಿಲ್ಲದೆ ಪೋಗಿ ದಾಸನ ಮನೆಯಲುಂಡ |
ದೋಷಕಂಜದೆ ಮಾನವ ಶಿರವ ತರಿದವಗೆ ೧
ಕುಂಡಗೋಳಕರ ಮನೆ ಕುಲದೈವವೆನಿಸಿದನು |
ಮಂಡೆಬೋಳಾದವರ ಮನೆದೈವವು ||
ಹಿಂಡು ಗೋವಳರೊಳಗೆ ಹಿರಿಯ ಗೋವಳನೀತ |
ಭಂಡಾಟಗಾರನಿವ ಭುವನದೊಳಗೆಲ್ಲ ೨
ಒಬ್ಬರಲಿ ಪುಟ್ಟಿದನು ಒಬ್ಬರಲಿ ಬೆಳೆದನು |
ಒಬ್ಬರಿಗೆ ಮಗನಲ್ಲ ಭುವನದೊಳಗೆ ||
ಅಬ್ಬರದ ದೈವಸಿರಿ ಪುರಂದರವಿಠಲನ |
ಉಬ್ಬುಬ್ಬಿ ಮರುಳಾದೆ ಉತ್ಸಾಹದಿಂದ ೩

ಏನು ಮಾಡಿದರೇನು
೭೬
ಏನು ಮೆಚ್ಚಿದೆ ಎಲೆ ಹೆಣ್ಣೆ-ಏನು ಮರುಳಾದೆಯೆ |
ಏನು ಮೆಚ್ಚಿದೆಯೆಲೆ ಹೆಣ್ಣೆ ಪ
ನೋಟದಿ ಚೆಲುವನೆಂಬೆನೆ ಚಂಚಲ ರೂಪ |
ಮಾಟದಿ ಚೆಲುವನೆ ಬೆನ್ನಲಿ ಬುಗುಟಿ ||
ಗೂಟದಂತೆ ಹಲ್ಲು ಮೊಳದುದ್ದ ಮೋರೆಯು |
ಬೂಟಕತನದಲ್ಲಿ ಬಾಯ ತೆರೆವನಿಗೆ ೧
ಅಣುರೂಪದವನಿವ ನಿಲುವು ಉಳ್ಳವನಲ್ಲ |
ಬನವ ತವರಿವವನಂತೆ ಕೈಯಲಿ ಕೊಡಲಿ ||
ಅನುಜರ ಬಿಟ್ಟು ಕಪಿಗಳ ಕೂಡಿ ಆಡುವ |
ಮನೆಮನೆಗಳ ಪೊಕ್ಕು ಕದ್ದು ತಿಂಬವನಿಗೆ ೨
ಗಂಭೀರ ಪುರುಷನೆಂಬೆನೆ ದಿಗಂಬರನಿವ |
ಅಂಬರದಲಿ ಕುದುರೆ ಕುಣಿಸುವನು ||
ಅಂಬುಜಾಕ್ಷ ನಮ್ಮ ಪುರಂದರವಿಠಲಗೆ |
ಸಂಭ್ರಮದಿಂದಲಿ ಮರುಳಾದೆ ಹೆಣ್ಣೆ ೩

೧೨
ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ – ಎನ್ನೊಳಿಲ್ಲ ಗುಣ |
ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪ
ತರಳ ಪ್ರಹ್ಲಾದನಂದದಿ ನಿನ್ನಯ ರೂಪ ಕೆಡಿಸಲಿಲ್ಲ
ನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||
ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲ
ದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ ೧
ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |
ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||
ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲ
ಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ೨
ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲ
ಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||
ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲ
ಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ ೩
ಸನಕಾದಿ ಮುನಿಯಂತೆ ಅನುದಿನ ಮನದೊಳು ಸ್ಮರಿಸಲಿಲ್ಲ
ಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||
ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲ
ಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ ೪
ವರ ಶೌನಕನಂತೆ ನಿತ್ಯ ಸೂತನ ಕಥೆ ಕೇಳಲಿಲ್ಲ
ಪಿರಿದು ತುಂಬುರುನಂತೆ ನಾಟ್ಯ – ಸಂಗೀತವ ಪೇಳಲಿಲ್ಲ ||
ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲ
ಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ ೫
ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲ
ಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||
ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲ
ಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ ೬
ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲ
ಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||
ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವ
ಇವರಂತೆ ಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ ೭
(ಈ ಕೀರ್ತನೆಯ ಮೊದಲಿನ ನಾಲ್ಕು ನುಡಿಗಳು ಕನಕದಾಸರಅಂಕಿತದಲ್ಲೂ ಇವೆ.)

೨೫೩
ಏನೆಂದರೇನು ನೀನೆನ್ನ ಕಾಯೊ-|
ನೀನೆ ನನಗೆಂದೆಂದು ತಂದೆ-ತಾಯೊ………………….. ಪ
ಆಪತ್ತು ಕಾಲಕ್ಕೆ ಅನಂತ ನೀ ಕಾಯೊ |
ತಾಪಜ್ವರಕೆ ತ್ರಿವಿಕ್ರಮನೆ ಕಾಯೋ ||
ಭೂಪತಿಯು ಮುನಿದರೆ ಶ್ರೀಪತಿಯೆ ನೀ ಕಾಯೊ |
ವ್ಯಾಪಾರ ಧರ್ಮವನು ಯದುಪತಿಯೆ ನೀ ಕಾಯೊ………….. ೧
ಸರುಪ ಸುತ್ತಿದರೆ ಸರ್ವೋತ್ತಮನೆ ನೀ ಕಾಯೊ |
ಪರಿಪರಿಯ ದೋಷಗಳ ಪದ್ಮನಾಭ ಕಾಯೊ ||
ಹರಕು ಸಂಸಾರವನು ಹರಿ ಬಂದು ನೀ ಕಾಯೊ |
ದೊರಕದೀ ವೇಳೆಯಲಿ ದೊರೆ ನೀನೆ ಕಾಯೊ………………….. ೨
ನರರು ಮುನಿದಿರಲು ನಾರಾಯಣನೆ ನೀ ಕಾಯೊ |
ಪುರ ಬೆನ್ನುಗೊಳಲು ಪುರುಷೋತ್ತಮನೆ ನೀ ಕಾಯೊ |
ಅರಿಯು ಅಡ್ಡಾದರೆ ಅಚ್ಯುತನೆ ನೀ ಕಾಯೊ ||
ಕರಕರೆಯ ಸಂಸಾರ ಕೃಷ್ಣ ನೀ ಕಾಯೊ………………….. ೩
ಮದಮತ್ಸರವನು ಮಧುಸೂದನನೆ ನೀ ಕಾಯೊ |
ಮದಬಂದ ವೇಳೆಯಲಿ ಮಾಧವನೆ ಕಾಯೊ ||
ಹೃದಯದಾ ಕಪಟವ ಹೃಷಿಕೇಶ ನೀ ಕಾಯೊ |
ಒದಗಿದ ಕಲ್ಮಷವ ವಾಸದೇವ ಕಾಯೊ………………….. ೪
ಕಾರ್ಪಣ್ಯ ದೋಷವ ಸರ್ಪಶಯನನೆ ಕಾಯೊ |
ಒಪ್ಪುವ ಪ್ರಕಾಶವ ಕೇಶವನೆ ಕಾಯೊ |
ಅಪ್ಪ ತಿರುಮಲರಾಯ ಪುರಂದರವಿಠಲನೆ |
ಒಪ್ಪಿ ಅನವರತ ನಿಶ್ಚಿಂತೆಯನು ಕಾಯೊ………………….. * ೫

೧೬೪
ಏನೆಂದಳಯ್ಯ ಸೀತೆ |
ನಿನಗೇನ ಮಾಡಿದಳೊ ಪ್ರೀತೆ ಪ
ದಾನವನ ಪುರದೊಳಗೆ ದಾರಿಯನು ನೋಡುತಲೆ |
ಧ್ಯಾನವನು ಮಾಡುತಿಹಳೊ ಹನುಮಾ ಅ.ಪ
ಎಲ್ಲಿಂದ ಬಂದೆ ಹನುಮಾ – ನೀಯೆನ್ನ –
ಕೇಳುಸೊಲ್ಲೆನ್ನ ಪ್ರೇಮ ||
ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆ
ನಿಲ್ಲಲಾರೆನು ಎಂದಳೊ ಹನುಮಾ ೧
ದೇವರಾಯನ ಪಾದವ – ಎಲೆ ಕಪಿಯೆ –
ದಾವಪರಿಯಲಿ ಕಾಂಬೆನೊ ||
ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |
ಹವನವಮಾಡಿಸು ಎಂದಳೊ ಹನುಮಾ || ೨
ಅಂಜನಾತನಯ ಕೇಳೊ – ನೀ ಹೋಗಿ –
ಕಂಜನಾಭನಿಗೆ ಪೇಳೊ ||
ಕುಂಜರವಕಾಯ್ದು ಶ್ರೀಪುರಂದರವಿಠಲನ |
ಪಂಜರದ ಗಿಣಿಯೆಂದಳೊ ಹನುಮಾ ೩

೧೩೬
ಏನೇನ ದಾನವ ಮಾಡಲು – ಹರಿಯ |
ಧ್ಯಾನಕೆ ಸಮವಾದ ದಾನಂಗಳುಂಟೆ ? ಪ.
ದಿನಕೊಂದು ಲಕ್ಷ ಗೋದಾನವ ಮಾಡಲು |
ಅನುದಿನ ಉದಕದಾನವ ಮಾಡಲು ||
ಮನಶುದ್ಧವಾದ ಭೂದಾನವ ಮಾಡಲು |
ವನಜನಾಭನ ಧ್ಯಾನಕೆ ಸಮವುಂಟೆ ? ೧
ಉತ್ತಮವಾದ ವಸ್ತ್ರವ ದಾನಮಾಡಲು |
ಮುತ್ತು ಮಾಣಿಕವ ದಾನವ ಮಾಡಲು ||
ಅತ್ಯಂತ ವಿದ್ಯಾ ಪ್ರದಾನವ ಮಾಡಲು |
ಚಿತ್ತಜಪಿತನ ಧ್ಯಾನಕೆ ಸಮವುಂಟೆ ? ೨
ಶತಕೋಟಿ ಕನ್ಯಾಪ್ರದಾನವ ಮಾಡಲು |
ಶತಶತ ಸುವರ್ಣ ದಾನವ ಮಾಡಲು ||
ಮಿತಿಯಿಲ್ಲದೆ ಅನ್ನದಾನವ ಮಾಡಲು |
ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? ೩
ನಾನಾ ತೀರ್ಥದಲಿ ಸ್ನಾನವ ಮಾಡಲು |
ಕಾನನದೊಳಗೆ ತಪವ ಮಾಡಲು |
ಜ್ಞಾನಿಯಾಗಿ ಕಾಶೀಯಾತ್ರೆಯ ಮಾಡಲು |
ಜಾನಕೀಪತಿಯ ಧ್ಯಾನಕೆ ಸಮವುಂಟೆ ? ೪
ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |
ಹರುಷದಿ ವಿಷ್ಣುಪಂಚಕ ಮಾಡಲು ||
ಪರಮ ಕಠಿಣ ಚಾಂದ್ರಾಯಣ ಮಾಡಲು |
ಪುರಂದರವಿಠಲನ ಧ್ಯಾನಕೆ ಸಮವುಂಟೆ ? ೫

೧೩೭
ಏನೇನ ಮಾಡಿದರೇನು ಫಲವಯ್ಯ
ಭಾನುಕೋಟಿ ತೇಜ ಶ್ರೀನಿವಾಸನ ಭಜಿಸದೆ ಪ.
ಹಲವು ಓದಿದರೇನು ಹಲವು ಕೇಳಿದರೇನು
ಜಲದೊಳ ಮುಳುಗಿ ಕುಳಿತಿದ್ದರೇನು
ಛಲದಿಂದ ಮುಸುಕಿಟ್ಟು ಬೆರಳನೆಣಿಸಿದರೇನು
ಚೆಲುವ ದೇವನೊಳು ಎರತವಿಲ್ಲದಾತನ ೧
ಅನ್ನ ಜರೆದು ಅರಣ್ಯ ಚರಿಸದರೇನು
ಉನ್ನತ ವ್ರತಗಳಾಚಾರಿಸಿದರೇನು
ಚೆನ್ನಗಾತಿಯ ಸಂಗ ಬಿಟ್ಟು ಇದ್ದರೇನು
ಗಾನ ಲೋಲುನಲಿ ಎರಕವಿಲ್ಲದನಕ ೨
ಬತ್ತಲೆ ತಿರುಗಿ ಅವಧೂತನೆನಿಸಿದರೇನು
ತತ್ವ ವಾಕ್ಯಂಗಳ ಪೇಳಿದರೇನು
ಚಿತ್ತಜನಯ್ಯ ಶ್ರೀ ಪುರಂದರವಿಠಲನ
ಚಿತ್ತದೊಳಿರಿಸಿ ಒಲಿಸಿಕೊಳ್ಳದನಕ ೩

೩೦೨
ಏಳಯ್ಯ ಬೆಳಗಾಯಿತು ಪ.
ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ
ಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರು
ತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ
ಸೆಳೆಮಂಚದಿಂದಲೇಳು ಅಪ
ವೇದವನು ತರಲೇಳು ಮಂದರವ ಹೊರಲೇಳು
ಛೇದಿಸುತ ಅಸುರರನು ಭೂಮಿಯ ತರಲೇಳು
ಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದು ಬಲಿ
ಬಾಗಿಲೊಳಗೆ ||
ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳು
ಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳು
ಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳು
ನಂದಗೋಪನ ಉದರದಿ ೧
ಪುರಮೂರ ಗೆಲಬೇಕು ಅರಿವೆಯನು ಕಳೆದೇಳು
ದುರುಳರನು ಕೊಲಬೇಕು ತುರಗವಾಹನನಾಗು
ಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||
ಉರಿಗೈಯನಟ್ಟಿದರೆ ಹರನೋಡಿ ಬಂದಿಹನು
ಗಿರಿಜೆ ವರವನು ಬೇಡಬೇಕೆಂದು ನಿಂದಿಹಳು
ಸುರಪಾರಿಜಾತವನು ಕೊಂಡು ಸುರರಾಜ
ಬಂದಿರುವನೇಳಯ್ಯ ಹರಿಯೆ ೨
ಆಲದೆಲೆಯಿಂದೇಳು ಮಾಲಕುಮಿ ಬಂದಿಹಳು
ಹಾಲುಗಡಲಿಂದೇಳು ಶ್ರೀದೇವಿನಿಂದಿಹಳು
ಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||
ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳು
ಮತಿವಂತ ನೀನೇಳು ಜಾಂಬವತಿ ಬಂದಿಹಳು
ಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯ
ಮಾಡಲು ೩
ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನು
ಗಂಭೀರ ಗಾಯನದ ನಾರದನು ನಿಂದಿಹನು
ರಂಭೆ ಮೇನಕೆ ಮೊದಲು ನರ್ತನಕೆ
ಐದಿಹರು ಶಂಬರಾರಿಪಿತನೆ ಏಳು||
ರಾಜಸೂಯವಕೊಳಲು ವಾಯುಸುತ ಬಂದಿಹನು
ತೇಜಿಯಾಟಕೆ ಅರ್ಜುನನು ಕರೆದು ಬಂದಿಹನು
ಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನು
ಪಿಡಿದುಕೊಂಡು ೪
ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದು
ಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿ
ಸಾವಧಾನದಿ ಯಮುನೆ ತುಂಗಾ ಸರಸ್ವತೀ
ಭೀಮರಥಿ ನೇತ್ರಾವತಿ ||
ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿ
ದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆ
ದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊ

ಶ್ರೀ ಪುರಂದರವಿಠಲನೆ ೫
೩೦೩
ಏಳಯ್ಯ ಶ್ರೀಹರಿ ಬೆಳಗಾಯಿತು ಪ.
ಏಳು ದೇವಕಿತನಯ ನಂದನಕಂದ
ಏಳು ಗೋವರ್ಧನ ಗೋವಳರಾಯ ||
ಏಳು ಮಂದರಧರ ಗೋವಿಂದ ಫಣಿಶಾಯಿ
ಏಳಯ್ಯ ನಲಿದು ಉಪ್ಪವಡಿಸಯ್ಯ ೧
ಕ್ಷಿರಸಾಗರವಾಸ ಬೆಳಗಾಯಿತು ಏಳು
ಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||
ವಾರಿಜನಾಭನೆ ದೇವ ದೇವೇಶನೆ
ಈರೇಳು ಲೋಕಕಾಧಾರ ಶ್ರೀ ಹರಿಯೇ ೨
ಸುರರು ದೇವತೆಗಳು ಅವಧಾನ ಎನುತಿರೆ
ಸುರವನಿತೆಯರೆಲ್ಲ ಆರತಿ ಪಿಡಿದರೆ ||
ನೆರೆದು ಊರ್ವಶಿ ಭರದಿ ನಾಟ್ಯವಾಡಲು
ಕರುಣಿಸೊ ಪುರಂದರವಿಠಲ ನೀನೇಳೋ ೩

೧೩೮
ಏಳಲವ ಮಾಡಿದಿರಿ ಏನ ಕೊಟ್ಟರು ಬೇಡ
ಕಾಲ ಮನುಜರ ಸಂಗ ಸಾವಿರ ಕೊಟ್ಟರು ಬೇಡ ಪ.
ಆದಿ ತಪ್ಪುವನವನ ಆಶೆಮಾಡಲು ಬೇಡ
ಕೂಡಿ ನಡಿಯುವಲ್ಲಿ ಕಪಟ ಬೇಡ
ಮೂಢ ಹೆಣ್ಣಿನ ಸಂಘ ಮಮತೆ ಇದ್ದರೂ ಬೇಡ
ಮಾಡಿದಪುಕಾರವನ್ನು ಮರೆಯಬೇಡ೧
ಬಂಧುವರ್ಗದಿ ಬಲು ನಿಂದು ವಾದಿಸಬೇಡ
ಮಂದಮತಿಯ ಕೂಡಾ ಮಾತು ಬೇಡ
ಬರದ ತಿಥಿಗಳಲಿ ಬರಿದೆ ಕೋಪಿಸಬೇಡ
ಇಂದಿರೇಶನ ಮರೆದು ಜಡವಾಗಬೇಡ ೨
ಹವಣರಿಯದೆ ಹಗೆಗಳ ಹತ್ತಿರಗೆಯಬೇಡ
ಜವನ ಭೂಮಿಯಲಿದ್ದು ಜೊತೆ ಬೇಡ
ಭುವನೀಶ ಪುರಂದರವಿಠಲನ ನೆನೆಯದೆ
ಅವಮತಿಯಾಗಿ ನೀ ಕೆಡಲುಬೇಡ ೩

೭೭
ಏಳಿ ಮೊಸರ ಕಡೆಯಿರೇಳಿ-ಗೋ-|
ಪಾಲ ಚೂಡಾಮಣಿ ಏಳದ ಮುನ್ನ ಪ
ಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|
ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||
ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|
ಕುಂದನ ಪಾಡುತ ಚದುರೆಯರೆಲ್ಲ ೧
ಹೊಂಗೊಡ ಬೆಳಗಿಟ್ಟು ಪೊಸಮೊಸರನೆ ತುಂಬಿ |
ರಂಗನೀಲದ ಕಡೆಗೋಲನಿಟ್ಟು ||
ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |
ರಂಗನ ಪಾಡುತ ಚದುರೆಯರೆಲ್ಲ ೨
ಬಡನಡು ಬಳುಕುತ ಕುಚಗಳಲ್ಲಾಡುತ |
ಕಡಗ-ಕಂಕಣ ಝಣಝಣರೆನ್ನುತ ||
ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|
ಲ್ಗಡಲೊಡೆಯನ ಪಾಡುತ ಚದುರೆಯರು ೩
ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |
ಹಸಿದು ಆಕಳಿಸಿ ಬಾಯಾರುತಲಿ ||
ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |
ಶಶಿವದನನಿಗೆ ಬೆಣ್ಣೆಯ ನೀಡಲೋಸುಗ ೪
ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |
ಪ್ರಾಣಪದಕ ಕೃಷ್ಣನಿಗೆ ಕೊಡಲು ||
ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||
ಜಾಣ ಪುರಂದರವಿಠಲನಪ್ಪಲು ಗೋಪಿ ೫
ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |
ತಟ್ಟೆಯೊಳಾರತಿಗಳ ಬೆಳಗಿ ||
ಥಟ್ಟನೆ ಉಪ್ಪು-ಬೇವುಗಳ ನಿವಾಳಿಸಿ |
ತೊಟ್ಟಿಲೊಳಿಟ್ಟು ಮುದ್ದಾಡುವಳೊ ೬
ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |
ಗುಮ್ಮ ಬಂದಿದೆ ಸುಮ್ಮನಿರು ಎನುತ ||
ಅಮ್ಮಿಯನೀಯುತ ಅಮರರನಾಳ್ದನ |
ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ ೭
ಏಸೊ ಬೊಮ್ಮಾಂಡವ ರೋಮದೊಳಿರಿಸಿದ |
ವಾಸುದೇವನನೆತ್ತಿ ಕೊಂಬುವಳೊ ||
ನಾಶರಹಿತನಾಯುಷ್ಯ ಹೆಚ್ಚಲೆಂದು |
ರಾಶಿದೈವಕೆ ತಾ ಬೇಡಿಕೊಂಬುವಳೊ ೮
ಮಾಧವ ಬಾ ಮದುಸೂದನ ಬಾ ಬ್ರ-|
ಹ್ಮಾದಿವಂದಿತ ಹರಿ ಬಾ ಯೆನುತ ||
ಆದಿ ಮೂರುತಿ ಶ್ರೀ ಪುರಂದರವಿಠಲನ |
ಆದರದಲಿ ಮುದ್ದಾಡುವಳೊ ೯

ಕೃಷ್ಣನ ಬಾಲಲೀಲೆಗಳಲ್ಲಿ ಒಂದು
೧೦
ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿಯೊಡಯ ಶ್ರೀವೆಂಕಟೇಶ ಪ
ಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟುಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ ೧
ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿವಿಧಿಭವಾದಿಗಳೊಡೆಯಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ೨
ದಾಸರೆಲ್ಲರು ಬಂದು ಧೂಳಿದರ್ಶನಕೊಂಡುಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶ ಪುರಂದರ ವಿಠಲರಾಯ ನಿಮ್ಮ ಪಾದವನು ಲೇಸಾಗಿ ಪೊಗಳುವರು ಹರಿಯೇ * ೩

ಸರಸ್ವತಿ
೧೯೯
ಒಂದೆ ಮನದಲಿ ಭಜಿಸು ವಾಗ್ದೇವಿಯ |
ಇಂದು ಮತಿಕೊಡುವಳು ಶ್ರೀಹರಿಯ ಧ್ಯಾನದೊಳು ಪ
ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |
ಬಂದು ಆರಂಭಿಸಲು ಹರಿ ವಿಶ್ವಮಯನೆಂದು ||
ಬಂದ ವಿಪ್ಲವ ಕಳೆದು ಭಾವಶುದ್ಧಿಯನಿತ್ತು |
ಹೊಂದಿಸಿದಳು ಶ್ರೀ ಹರಿಯ ಚರಣವನು || ೧
ಅಂದು ದಶಮುಖನನುಜ ವಂದಿಸದೆ ವಾಣಿಯನು |
ಬಂದು ತಪವನು ಗೈಯೆ ಬಹುಕಾಲಕೆ ||
ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |
ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ೨
ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|
ಉರುತರವಾದ ವಾಕ್ ಶುದ್ಧಿಯನಿತ್ತು ||
ನಿರುತ ಶ್ರೀ ಪುರಂದರ ವಿಠಲನ ಸೇವೆಯೊಳು |
ಪರತತ್ತ್ವದ ಕಥಾಮೃತವನುಣಿಸಿದಳು ೩

೧೩
ಒಂದೇ ಕೂಗಳತೆ ಭೂವೈಕುಂಠ
ಸಂದೇಹವಿಲ್ಲವು ಸಾಧು ಸಜ್ಜನರಿಗೆ ಪ
ಅಂಬರೀಷನು ದ್ವಾದಶಿವ್ರತ ಮಾಡಲು
ಡೊಂಬೆಯ ಮಾಡಿದ ದುರ್ವಾಸನು ||
ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆ
ಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು ೧
ಕರಿರಾಜ ವನದಲಿ ಉಳುಹೆಂದು ಕೂಗಲು
ತ್ವರಿತದಿಂದಲಿ ಬಂದು ಕಾಯ್ದ ತಾನು ||
ಕರುಣ ಸಾಗರ ಕೃಷ್ಣ ಕಾಯಬೇಕೆನುತಲೆ
ತರಳ ಪ್ರಹ್ಲಾದನ ಕಂಬದಿ ಬಂದುದು ೨
ದ್ರುಪದರಾಯನ ಪುತ್ರಿಗಾಪತ್ತು ಬರಲು
ಕೃಪೆಯಿಂದಲಕ್ಷಯವಿತ್ತನು ||
ಕಪಟ ನಾಟಕ ಕೃಷ್ಣ ಪುರಂದರ ವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠ ೩

೧೪
ಒಂದೇ ನಾಮದೊಳಡಗಿದುವೊ ಆ –
ನಂದದಿಂದುಸುರುವ ಅಖಿಳ ವೇದಗಳು ಪ
ಒಂದೇ ನಾಮವು ಪ್ರಹ್ಲಾದನ ಕಾಯ್ತು – ಮ –
ತ್ತೊಂದೆ ನಾಮವೆ ಅಜಮಿಳನ ಸಲಹಿತು ||
ತಂದೆ ತಾಯಿಯ ಬಿಟ್ಟ ಕಂದ ಧ್ರುವರಾಯಗಾ –
ನಂದಪದವನಿತ್ತ ಅದ್ಭುತಗುಣವೆಲ್ಲ ೧
ಮಚ್ಛ್ಯಾದ್ಯಾನಂತಾವತಾರ ಅಷ್ಟಾದಶ
ಸ್ವಚ್ಛ ಪುರಾಣಗಳಮೃತದ ಸಾರ ||
ಕಚ್ಛಪನಾಗಿ ತ್ರೈಜಗಕೆ ಆಧಾರ ತ –
ನ್ನಿಚ್ಛೆಯಿಂದಲಿ ತಾನು ಮಾಳ್ಪ ವ್ಯಾಪಾರ ೨
ಒಬ್ಬರೀತಗೆ ಸಮರಿಲ್ಲ ತ –
ನ್ನಬ್ಬರದಿಂದಲಿ ಸಲಹುವನೆಲ್ಲ ||
ಕಬ್ಬು ಬಿಲ್ಲನ ಪಿತ ಪುರಂದರ ವಿಠಲ ವೈ
ದರ್ಭಿಯ ರಮಣನ ವರಸುಗುಣಗಳೆಲ್ಲ ೩