Categories
ರಚನೆಗಳು

ಪುರಂದರದಾಸರು

೮೩
ಸುಳಾದಿ
ಶ್ರೀನವವಿಧ ಭಕ್ತಿ ಸುಳಾದಿ
ಹರಿಯ ಒಂಬತ್ತು ಭಕ್ತಿಯ ಬಲ್ಲ ಧೀರ |
ಮರಳಿ ಸಂಸ್ರ‍ಕತಿಯ ದಾರಿಗೆ ಹುಟ್ಟಿ ಬಾರ |
ದುರಾಚಾರ ದುಷ್ರ‍ಕತಿಗಳನು ಕಂಡುಸೇರ |
ಹಿರಿಯರೊಳು ಬಿರುನುಡಿಯ ಜಿಹ್ವೆಗೆ ತಾರ |
ಪುರಂದರ ರಾಯನ ಉದಾರ – |
ಚರಣಾಬ್ಜನಿಷ್ಠೆ ಅಂಗಡಿ ಇಟ್ಟು ತೋರ ೧
ಶ್ರವಣ ಭಕ್ತಿ
ಹರಿಕಥಾಶ್ರವಣಕ್ಕೆ ಮನವಿಟ್ಟ ಪ್ರೌಢ |
ಅರುವತ್ತು ಗಳಿಗೆಗಳ ವ್ಯರ್ಥ ಹೋಗಾಡ |
ಪರಮ ಪದವಿಯನೈದುವನು ಅವನು ಗಾಢ |
ನರಕದಾಬಟ್ಟೆ ದೂರದಲೊಮ್ಮೆ ನೋಡ |
ಪುರಂದರವಿಠಲನಘ್ರಿಯನು ಗಾಢ-|
ತರಲಪ್ಪುವ ಮೈಯಮೆರೆದು ತಾನಾಡ ೨
ಕೀರ್ತನ ಭಕ್ತಿ
ಹರಿಯ ಕೀರ್ತನೆ ಭಕುತಿ ತುಂಬಿ ಪೇಳ್ವ |
ಚಿರಸ್ವಭಾವದಲಿ ಕಣ್ಣೊರೆತೆಯನೆ ತಾಳ್ವ |
ಹರಿಯಂತೆ ಕೂಗಿ ಸಜ್ಜನರೊಳಗೆ ಬಾಳ್ವ |
ದುರಿತಗಜಗಳ ಮಂಡೆಗಳನೇರಿ ಸೀಳ್ವ |
ಹರುಷಾಮೃತಾಬ್ದಿಯೊಳು ಇಳಿಮುಳುಗಿ ಏಳ್ವ |
ಪುರಂದರವಿಠಲರಾಯನ ಹೊಂದಿ ಬಾಳ್ವ ೩
ಸ್ಮರಣಭಕ್ತಿ
ಹರಿಯ ಸ್ಮರಣೆಗೆ ವಿಸ್ರ‍ಮತಿಯನಾವ ಜರೆದ |
ಚಿರಕಾಲದಘವನೊಮ್ಮಿಂದೊಮ್ಮೆ ತರೆ(ರಿ)ದ |
ಪರಮಭಾಗವತರ ಸಮ್ಮೇಳ(ನದಿ)ವನು ಬೆರೆದ |
ನೆರೆಹೊರೆಗೆ ಎಲ್ಲ ಮುಕುತಿಯನು ಕರೆದ |
ವರಬಿಂಬಕಾಂಬ ಕಂಗಳನು ತೆರೆದ |
ಪುರಂದರ ವಿಠಲರಾಯನ ಹೊಂದಿ ಬೆರೆದ ೪
ಪಾದಸೇವನ ಭಕ್ತಿ
ಹರಿಪಾದಸೇವನ ಧ್ಯಾನ ಬಲ್ಲಣ್ಣ |
ವರಟಕಿಟ್ಟ ಚಿನ್ನದ ಸುಖದ ಬಣ್ಣ |
ದುರುರುಚಿಯಿಂದ ದುರುವಿಷಯಕೆತ್ತೆ ಕಣ್ಣ |
ಹರಿಗುರುಗಳಿಗೆ ಅಲ್ಲದೆ ಶರಣೆನ್ನ |
ಪುರಂದರವಿಠಲ ಪತಿತಪಾವನ |
ಚರಣಾಬ್ಜರಸವೀಂಟಿ ಮೊಲೆವಾಲನುಣ್ಣ ೫
ಅರ್ಚನಾಭಕ್ತಿ
ಹರಿಯ ಅರ್ಚನೆಯ ಭಕ್ತಿಯ ಪ್ರವೀಣ |
ತೆರತೆರದಿ ಬರುವ ಎಡರನು ಒಮ್ಮೆ ಕಾಣ |
ಹರಿಗೆ ದೇಹೇಂದ್ರಿಯವರ್ಪಿಸಿ ಪ್ರಾಣ |
ಹರಿಪುರದೊಳಗೆ ಮಾಡಿದ ತನ್ನ ತಾಣ |
ಪುರಂದರವಿಠಲರಾಯನ ಪೂಜೆ ತಾಣ |
ವರಿತು ಕಾಯದೊಳಿಟ್ಟು ಪಡೆವ ನಿರ್ವಾಣ ೬
ವಂದನಾಭಕ್ತಿ
ಹರಿಮೂರ್ತಿಗಾಷ್ಟಂಗ ಪೊಡಮಟ್ಟು ನಿಚ್ಚ
ಉರುಪಾಪಾಟವಿಗೆ ಗಮ್ಮನೆ ಇಟ್ಟ ಕಿಚ್ಚ
ಸುರಲೋಕ ಮುಂತಾದ ಸಿರಿಗವ ಮೆಚ್ಚ
ನರರ ಸಂಪದವೆಲ್ಲ ಸ್ಥಿರವೆಂದು ನೆಚ್ಚ
ಪುರಂದರ ವಿಠಲನಂಘ್ರಿಯ ನಂಬಿದ ಹುಚ್ಚ
ನಿರಯದರಸನಿಗೆ ಬೆದರನು ಬೆಚ್ಚ ೭
ದಾಸ್ಯ ಭಕ್ತಿ
ಹರಿದಾಸರ ದಾಸತ್ವವ ಪಡೆದ |
ನರ ಜೀವನ್ಮುಕ್ತರೆನಿಸಿ ಕೀರ್ತಿ ಪಡೆದ |
ಹರಿನಾಮವನೆಂಬವನೆದೆಮೆಟ್ಟಿ ನೆಡೆದ |
ಹರಿಯ ಬಾಕುಳಿಗವೃತ್ತಿಯನೆ ಹಿಡಿದ |
ಪುರಂದರ ವಿಠಲರಾಯನ ಎಡದ |
ಚರಣ ನಿರ್ಜರತರ ಛಾಯೆಯ ಹಿಡಿದ ೮
ಸಖ್ಯ ಭಕ್ತಿ
ಹರಿಯಲ್ಲಿ ಭಕ್ತಿಯ ಗೆಳೆತನವಿಟ್ಟಾ |
ತರುಣಿ ಸಂಪದ ಪ್ರಜೆಗಳನೆಲ್ಲ ಬಿಟ್ಟಾ |
ಕರುಮತ್ರಯಂಗಳನಿವಹದಿ ಕೆಟ್ಟಾ |
ತಿರುಗಿ ಬರುವ ಉರುಬಟ್ಟೆಯ ಮೆಟ್ಟಾ |
ಪುರಂದರವಿಠಲನಲಿ ಚಿತ್ತವಿಟ್ಟಾ |
ನರಸಿಂಹನೊಲಿಸಿ ಲಿಂಗಾಂಗವ ಸುಟ್ಟಾ ೯
ಆತ್ಮನಿವೇದನ ಭಕ್ತಿ
ಹರಿಗೆ ತನ್ನಾತ್ಮನಿವೇದನದಿಂದ |
ಉರಿ-ಜಲ-ಮಣ್ಣು ಬಯಲು ಗಾಳಿ ಹೊಂದ |
ಸ್ವರೂಪವ ಹರಿಯಂಘ್ರಿಗರ್ಪಿಸಿ ನಿಂದ |
ಹರುಷವನುಂಬ ಉನ್ನಾಹಗಳಿಂದ |
ಪುರಂದರವಿಠಲರಾಯನ ದಯದಿಂದ |
ಸುರ ಋಷಿಯೊಲುಮೆಗೆಲ್ಲವು ನಿಜಾನಂದ ೧೦
ಉಪಸಂಹಾರ[ನವವಿಧಭಕ್ತಿ]
ಹರಿಕಥಾಶ್ರವಣವು ಹರಿನಾಮಕೀರ್ತನೆ |
ಹರಿಸ್ಮರಣೆ ಹರಿಪಾದಸೇವನೆ |
ಹರಿಪೂಜನ, ವಂದನ, ದಾಸ್ಯ, ಸಖ್ಯತ್ವ |
ಹರಿಗಾತ್ಮ, ಅಪರ್ಣ, ಮುಕ್ತಿಪಥತತ್ತ್ವ |
ಪುರಂದರ ವಿಠಲ ಪರಮಾತ್ಮ ಸಿದ್ಧ |
ಗುರು ಮಧ್ವಮತ ಶ್ರುತಿ ಸ್ರ‍ಮತಿಯೊಳು ಶುದ್ಧ ೧೧
ಶ್ಲೋಕ; ನವವಿಧಭಕ್ತಿ
೧. ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ |
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ |
ವಿಷ್ಣೋಸ್ತು ಶ್ರವಣೇ ಪರೀಕ್ಷಿದಭವತ್ ವೈಯಾಸಕಿಃಕೀರ್ತನೇ |
ಪ್ರಹ್ಲಾದಃ ಸ್ಮರಣೆ ತದಂಘ್ರಿಭಜನೇ ಲಕ್ಷ್ಮೀಪೃಥುಃ ಪೂಜನೇ |
ಅಕ್ರೂರಸ್ತ್ವಭಿವಂದನೇಚ ಹನುಮಾನ್ ದಾಸ್ಯೇಸಖ್ಯೇಚಾರ್ಜುನಃ |
ಸರ್ವಸ್ಯಾತ್ಮನಿವೇದನೇ ಬಲಿರಭೂತ್‍ಕೈವಲ್ಯಮೇಘಾಸಮಃ |

[ಪ್ರಸನ್ನ ವೆಂಕಟದಾಸರ ಅಂಕಿತದಲ್ಲಿಯೂ ಈ ಸುಳಾದಿಯು
ಪ್ರಚಲಿತಲ್ಲಿದೆ.]

೨೨೬
ಸುಳಾದಿ
ಧ್ರುವತಾಳ
ಶ್ರೀನಾರಾಯಣದೇವ ನೀನು
ಶ್ರೀ ಲಕುಮಿಯ ಕೂಡ ಸುಖಿಸುತಿದ್ದು |
ಶ್ರೀ ವಾಸುದೇವ ನೀ
ಮಾಯಾದೇವಿಯಲ್ಲಿ ಆ ಬೊಮ್ಮಕುವರನ ಪಡೆದೆಯಲ್ಲ |
ಶ್ರೀಪ್ರದ್ಯುಮ್ನ ನೀ
ಕೃತಿಯಲ್ಲಿ ವಾಣಿ-ಭಾರತಿಯರ ಪಡೆದೆಯಲ್ಲ |
ಶ್ರೀ ಸಂಕರ್ಷಣ ದೇವ ನೀ
ಜಯಾ ದೇವಿಯಲ್ಲಿ ವಾಯುಕುಮಾರನ ಪಡೆದೆಯಲ್ಲ |
ಆ ಕುವರರಿಗೆ ಆ ಕುವರಿಯರನು
ಮದುವೆ ಮಾಡಿದೆಯಲ್ಲ ಪುರಂದರ ವಿಠಲ ೧
ಮಟ್ಟತಾಳ
ವಸುದೇವ ಮಾಯಾದೇವಿ
ಪ್ರದ್ಯುಮ್ನ ದೇವ ಕೃತಿ ದೇವಿ |
ಸಂಕರ್ಷಣದೇವ ಜಯಾದೇವಿ
ನಿಮ್ಮೊಳು ನೀವೇ ಕೊಡು-ಕೊಳೆಯುಳ್ಳವರು |
ನಿಮ್ಮೊಳು ನೀವೇ ದಿಬ್ಬಣಿಗರು
ನಿಮ್ಮೊಳು ನೀವೇ ಬೀಗರಾದಿರಿ |
ಬಿದ್ದಿನವರಾದಿರಿ ಪುರಂದರ ವಿಠಲ ೨
ರೂಪಕ ತಾಳ
ಬೊಮ್ಮ- ಸರಸ್ವತಿ ಪಡೆದರಯ್ಯ ಶೇಷದೇವನ |
ಉಮ್ಮೇಶ ದೇವನ ವಾಯು ಭಾರತಿಯರು ಪಡೆದರಯ್ಯ |
ಶೇಷ-ಸುವರ್ಣ-ಗಿರೀಶ_ಮಹೇಂದ್ರರ |
ಪುತ್ರ ಪೌತ್ರ ಪರಂಪರೆಯಾಗಿ ಇಪ್ಪರು ಪುರಂದರ ವಿಠಲಾ ೩
ಝಂಪೆತಾಳ
ಆದಿಸೃಷ್ಟೀಯೊಳು ಆರಾರು ಮೊದಲುದಿಸಿದರು |
ಅವರ ನೆರೆ ಅಧಿಕ ಅವರ ನೋಡಯ್ಯ |
ಅವರನಂತರದಲ್ಲಿ ಕಾಲ -ಜಯಾದಿಗಳು ಉದಿಸಿದರು |
ಏನು ಆ ಮಹಂತರಾದವರ ಅಳವ ನೋಡಯ್ಯ |
ಅವರನಂತರ ತಾರತಮ್ಯ ಅನಾದಿಸಿದ್ಧವಾಗೆ |
ಪುರಂದರವಿಠಲನ ಸಂತತಿಯ ನೋಡಯ್ಯ ೪
ತ್ರಿವಿಡೆತಾಳ
ಸಿರಿ ಚತುರ್ಮುಖ ಪಂಚಮುಖಾದಿ |
ಸುರರು ಮನು ಮುನಿ ಮನುಜೋತ್ತಮ –
ಮರು ತಾರತಮ್ಯತಾಯುಕ್ತರು |
ಹರಿ ಭಕ್ತಿ ಹರಿ ಜ್ಞಾನದಿಂದ ತಾರತಮ್ಯದಿ |
ಸಿರಿ ಪುರಂದರ ವಿಠಲರಾಯನ |
ಚರಣ ಶರಣದೆ ಸದೈವಂಗಳು ೫
ಅಟತಾಳ
ನಿತ್ಯ ಪತ್ನೀಭಾವದೊಳಿಹ ಲಕುಮಿಗೆ |
ನಿತ್ಯ ಪುತ್ರ ಭಾವ ಬೊಮ್ಮ ಪ್ರಾಣರಿಗೆ |
ನಿತ್ಯ ಪೌತ್ರ ಭಾವ ವೈನತೇಯ ಶೇಷ ಗಿರೀಶ ದೇವರಿಗೆ |
ನಿತ್ಯ ನಪ್ರ‍ತ ಭಾವ ಇಂದ್ರ ಕಾಮರಿಗೆ |
ನಿತ್ಯ ಭೃತೃಭಾವ ಸುರಾದಿಗಳಿಗೆ |
ನಿತ್ಯ ಜಾರ ಭಾವ ಅಪ್ಸರಸರಿಗೆ |
ನಿತ್ಯ ಪುರಂದರ ವಿಠಲರಾಯ ೬
ಏಕತಾಳ
ಸತ್ಯ ಸ್ವರೂಪನೆ ಸತ್ಯ ಕರ್ಮಸಂಕಲ್ಪನೆ |
ಸತ್ಯ ಕಾಮನೆ ಸತ್ಯ ವರದನೆ |
ಸತ್ಯ ಜಗಜ್ಜನ್ಮಾದಿಕಾರಣನೆ |
ಸತ್ಯ ಭಾಷಣನೆ ಸತ್ಯ ಭೂಷಣನೆ |
ಸತ್ಯ ಜನೇಡ್ಯನೆ ಸತ್ಯ ಮಹಿಮನೆ |
ಸತ್ಯ ಪುರಂದರ ವಿಠಲರಾಯ ೭
ಜತೆ
ಮನ-ವಚನಗಳಲ್ಲಿ ಕಾಯ-ಕರಣಗಳಲ್ಲಿ |
ನೀನೆ ನೀನೇ ಪುರಂದರ ವಿಠಲಾ ೮

೨೯೦
ಸುಳಾದಿ
ಧ್ರುವತಾಳ
ಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು |
ಅಂತಾಫಲದಿ ಕೋಟಿ ಕೋಟಿ ಗುಣಿತ ತುಳಸೀ ದಳಕೆ |
ತಂತು ಮಾತ್ರ ಭಕ್ತಿಯಲಿ ತವಕದಿ ಪೂಜಿಸು ಶ್ರೀ-
ಮಂತ ಶ್ರೀ ಪುರಂದರ ವಿಠಲ ವೈಕುಂಠವ ನೀವ ೧
ಮಟ್ಟತಾಳ
ಆದಿವಾರದಿ ಸಂಜೆಯಲಿ ರಾತ್ರಿಯಲಿ |
ಅಂಗಾರಕ ಶುಕ್ರವಾರದಲ್ಲಿ |
ಆದಿತ್ಯ ಸೋಮಗ್ರಹಣ ಅಮವಾಸ್ಯೆ ಹುಣ್ಣಿವೆ |
ದ್ವಾದಶಿಯಲಿ ಸಾದರಾರ್ಚಿತ ಜಯಂತಿಗಳಲಿ |
ವೈಧೃತಿ ವ್ಯತಿಪಾತ ಸಂಕ್ರಾಂತಿಗಳಲಿ ಶ್ರೀ ಪು-
ರಂದರವಿಠಲ ಮುನಿವ ಶ್ರೀ ತುಲಸಿಯ ತೆಗೆದರೆ ೨
ತ್ರಿಪುಟಿ ತಾಳ
ಸಾರಂಗಧರನಿಗೆ ಸಂವತ್ಸರದ ತುಳಸಿ |
ಆರು ತಿಂಗಳ ಬಿಲ್ವ ಆಹೋದು ಆಚ್ಯುತನರ್ಚನೆಗೆ |
ಕಾರುಣ್ಯ ಮೂರುತಿಗೆ ಕಮಲ ಏಳು ದಿನವಹುದು |
ಪುರಂದರ ವಿಠಲನಿಗೆ ದಿನ ದಿನದಿ ಕಣಗಿಲ ಆಹೋದು ಸತತ ೩
ಅಟ್ಟತಾಳ
ಇಲ್ಲದಿದ್ದರೆ ಚಿಗುರು ತುಳಸಿ ಅದು |
ಇಲ್ಲದಿದ್ದರೆ ಮುಗುಳು ತೆನೆಯು ಅದು |
ಇಲ್ಲದಿದ್ದರೆ ತುಳಸಿ ಎಲೆಯು ಅದು |
ಇಲ್ಲದಿದ್ದರೆ ಒಣಗಿದ ಕಾಷ್ಟ ಅದು |
ಇಲ್ಲದಿದ್ದರೆ ತುಳಸಿಯ ಬುಡದ ಮಣ್ಣು ಅದು |
ಇಲ್ಲದಿದ್ದರೆ ತುಳಸಿ ತುಳಸಿ ಎಂದು ಕೂಗಿದರೆ |
ನಮ್ಮ ಪುರಂದರ ವಿಠಲ ಒಲಿವ ಕಾಣಿರೊ ೪
ಝಂಪೆತಾಳ
ಶ್ರೀರಮಣನು ತನ್ನ ಶ್ರೀಯನ್ನೆ ಕೂಡಿ |
ಶ್ರೀವತ್ಸ ಕೌಸ್ತುಭ ಮಾಲೆ ವೈಜಯಂತಿಹಾರ-ಏ-
ಕಾವಳಿಯನು ಒಲ್ಲೆ ತುಳಸಿ ಎನ್ನವಳೆಂದ ಪುರಂದರವಿಠಲ ೫
ಆದಿತಾಳ
ಒಂದೇ ಒಂದು ಬೆರಳ ಜಪ ಒಂದೇ ಐದು ಗೆರೆಯ ಜಪ |
ಒಂದೇ ಹತ್ತು ಪುತ್ರ ಜೀವಿಮಣಿಯ ಜಪ |
ಒಂದೇ ನೂರು ಶಂಖಮಣಿಯ ಜಪ |
ಒಂದೇ ಸಾವಿರ ಹವಳದ ಜಪ |
ಒಂದೇ ಹತ್ತು ಸಾವಿರÀ ಮುತ್ತಿನ ಮಣಿಯ ಜಪ |
ಒಂದೇ ಹತ್ತು ಲಕ್ಷ ಸುವರ್ಣ ಮಣಿಯ ಜಪ |
ಒಂದು ಕೋಟಿ ದರ್ಭೆ ಬೆಟ್ಟಿನ ಜಪ |
ಒಂದೇ ಅನಂತ ಶ್ರೀ ತುಲಸೀ ಮಣಿಯ ಜಪ- |
ವೆಂದು ಪುರಂದರ ವಿಠಲ ಪೇಳ್ದ | ೬
ಜತೆ
ಸ್ನಾನದಾನಕೆ ತುಳಸಿ ಪ್ರಯೋಜನ ತುಳಸಿ |
ಪುರಂದರವಿಠಲಗೆ ಅತಿ ಪ್ರಿಯೆ ತುಳಸಿ ||

೧೧೭
ಸುಳಾದಿ
ಧ್ರುವತಾಳ
ಸ್ಥಿರದಿ ಅಜ-ಭವಾದಿಗಳು ನಾರಾಯಣನ ಗುಣಗಳನೆಲ್ಲ |
ಅರಿಯಲಾರರು ಮಿಕ್ಕ ಸುರರಿನ್ನು ಬಲ್ಲರೇನು |
ಸರಸಿಜಾಕ್ಷಿ ಇಂದಿರಾದೇವಿ ತನ್ನ ಪತಿಯ ಪಾದಕಮಲ |
ಕಿರುಬೆರಳ ನಖತುದಿಯ ನೋಡಲಳವಲ್ಲದಂಥ |
ನರಹರಿಗೆ ಶರಣು ಶರಣೆನ್ನಿ ೧
ಮಟ್ಟತಾಳ
ಬಿಡು ಕಾಮ ಕ್ರೋಧ ಮದ ಮತ್ಸರಾದಿ ಷಡ್ವರ್ಗ|
ನುಡಿ ನುಡಿಗೆ ವಾಸುದೇವ ಎಂಬ ಶಬ್ದವ |
ನುಡಿಸಿ ಸುಡಿಸು ಸಂಚಿತ ಪಾಪಕರ್ಮಗಳನೆಲ್ಲ |
ಕೆಡಲಿ ಬೇಡಿ ಈ ದೇಹ ಸ್ಥಿರವಲ್ಲ |
ಒಡೆಯನಾದವಗೆ ನರಹರಿಗೆ ಶರಣು ಶರಣೆನ್ನಿ | ೨
ತ್ರಿವಿಡೆತಾಳ
ಅಗಣಿತ ಮಹಿಮನು ಸುಗುಣನು ನಗೆಮೊಗ|
ಜಗದಾಧಾರನ ಹಗಲಿರಳು |
ಪೊಗಳಲು ಶಕಟನ ಅಳಿದವನ |
ನಗಧರ ಖಗವಾಹನ ಕೈಪಿಡವ |
ಅಗಣಿತಮಹಿಮ ನಮ್ಮ ನರಹರಿಗೆ ಶರಣು ಶರಣೆನ್ನಿ ೩
ಅಟತಾಳ
ವಕ್ಷಸ್ಥಲದಲಿ ಶ್ರೀ ವತ್ಸ |
ಕುಕ್ಷಿಯಲಿ ಇಟ್ಟು ಮೂರು ಲೋಕವನು |
ರಕ್ಷಿಸುವನು ಭಕ್ಷಿಸ ಬಂದ ಸುರರ ಮಡುಹಿದ |
ಪಕ್ಷಿವಾಹನ ಅಕ್ಷಯವೆಂದು ಪಾಂಚಾಲಿಯ ಪೊರೆದ |
ನರಹರಿಗೆ ಶರಣು ಶರಣೆನ್ನಿ ೪
ಏಕತಾಳ
ಮಾನ ಅವಮಾನ ಜ್ಞಾನ ಅಜ್ಞಾನ |
ಜಾನಕೀಪತಿಯ ಧ್ಯಾನ |
ಸ್ನಾನ ಪೂಜಿತನಾಗಿ |
ತಾನು ಕೊಡಿಸುವ ಮುಕ್ತಿ |
ನಿತ್ಯಾನಂದದಲಿರುವ ನರಹರಿಗೆ ಶÀರಣು ಶರಣೆನ್ನಿ ೫
ಝಂಪೆತಾಳ
ದುಷ್ಟ ದುರ್ಯೋಧನ ದಶಮುಖ ಬಾಣಾಸುರರಂದದಿ |
ಶಿಷ್ಟರಾಗಿ ಶಿವನ ಪೂಜಿಸಿ ಗತಿಯೆಂದರೆ |
ಭ್ರಷ್ಟರಾಗಿ ಪುತ್ರ-ಮಿತ್ರ -ಕಳತ್ರವು |
ಅಷ್ಟು ಹತವಪ್ಪುದು |
ಶ್ರೇಷ್ಠ ರಾರಯ್ಯ ಹೇಳಿರಿಂದು ೬
ರೂಪಕತಾಳ
ಅಕ್ರೂರ ಪ್ರಹ್ಲಾದ ಅಂಬರೀಷ ಅಜಮಿಳ |
ನಕ್ರಪಿಡಿದ ಹಜೇಂದ್ರ ಕುಚೇಲ ಯಾವತ್ಪರಿವಾರ |
ಚಕ್ರಧಾರಿ ಕೃಷ್ಣನ ನಂಬಿದವರ |
ಅಕ್ಕರಿಂದಲಿ ಸಲಹಿದ ಪುರಂದರವಿಠಲ ೭
ಜತೆ
ನುಡಿವ ಮಾತುಗಳನ್ನು ಅಡಿಗಡಿಗೆ ಭೋಗಭಾಗ್ಯ |
ಸುಡಿಸುವ ದಾರಿದ್ರ್ಯದುಷ್ರ‍ಕತವ ನಡಿಸುವ ಸುಕೃತದ |
ಯೋಗ್ಯತೆ ಪಡೆಯಲಿ||

ಆರ್ತಭಾವ
೩೦
ಸಾಧನವಿಚಾರಸುಳಾದಿ
ಧ್ರುವತಾಳ
ಸ್ವರ್ಗ ಮತ್ರ್ಯ ಪಾತಾಳಗಳಲ್ಲಿ ತಿರುತಿರುಗಿ ಬಳಲಿದೆನು |
ದೇಹಯೋಗ ವಿಯೋಗ ಹಮ್ಮು
ಮಮತೆಯಿಂದಲಿ ಬಳಲಿದೆನು |
ಯಮನ ಪಟ್ಟಣಕೆ ಎಂಬಂತೆಂಟುಸಾಸಿರ ಬಾರಿ |
ಹೋಗಿ ಬಂದು ಬಂದು ಬಳಲಿದೆನಯ್ಯ |
ಅಲ್ಲಿ ಯಮನಾಳ್ಗಳಿಂದ ನೊಂದೆನು ನಾನಲ್ಲಿ |
ವೈತರಣಿಯಿಂದ ಬಳಲಿದೆನು ನಾನಲ್ಲಿ |
ನರಕಭಾಜನನಾಗಿ ಹೋದೆನೊ ಪುರಂದರವಿಠಲ |
ಇನ್ನು ಆರೆ ಆರೆನಯ್ಯ ಕರುಣಿಸು ಕರುಣಿಸಯ್ಯ |
ಕರುಣಾಕರನೆ ದಮ್ಮಯ್ಯ ೧
ಮಟ್ಟತಾಳ
ಸಂಚಿತಕರ್ಮಗಳನಂತಕೋಟಿಗಳು |
ಪ್ರಾರಬ್ಧ ಕರ್ಮಗಳು ಕೋಟಿಕೋಟಿಗಳು |
ಆಗಾಮಿ ಕರ್ಮಗಳು ಕೋಟಿ ಕೋಟಿಗಳು
ಪುರಂದರವಿಠಲನ ಕಂಡಲ್ಲದೆ ಎಲ್ಲಿಯ ಮುಕುತಿ? ೨
ಝಂಪೆತಾಳ
ಜ್ಞಾನಭಕುತಿ ವೈರಾಗ್ಯವಿಲ್ಲದೆ |
ಮಾನವ ಜನ್ಮವದೇತಕೆ ಸುಡುಸುಡು |
ಆಹಾರ ಭಯ ನಿದ್ರೆಗÉ ಸ್ತ್ರೀಗೋಷ್ಠಿ ಎಂಬುವು |
ವಿಹಾರ ಪಶು-ಪಕ್ಷಿ-ಮೃಗಕೆ ದಕ್ಕಲು ಸರಿ |
ದೀನವತ್ಸಲ ಪುರಂದರವಿಠಲನ |
ನೆನೆವ ಕ್ರಿಮಿಕೀಟ ಜನುಮವೆ ಸಾಕು ೩
ರೂ¥ಮÀಕತಾಳ
ಕೃಛ್ರ ತಪದಿಂದೆ ಬರಿದೆ ಬಳಲುವರು ಗೋ |
ವತ್ಸ ಪಥದಂತೆ ಭವಸಾಗರವ ದಾಂಟಿ ಆ |
ಚಿತ್ಸುಖನೋಲಯಿಸ ಬಲ್ಲವರು ಗೋ |
ವತ್ಸ ಪದದಂತೆ ಭವಸಾಗರವ ದಾಂಟೆ ಶ್ರೀ |
ವತ್ಸ ಚಿಹ್ನಾಂಕಿತ ಪುರಂದರವಿಠಲನ ಸಾರುವರು ೪
ತ್ರಿಪುಟತಾಳ
ಚಂದ್ರನು ನಿನ್ನ ಕಿತ್ತೀಳೆಯ ಹಣ್ಣಿಂದ |
ಇಂದ್ರ ನಿನ್ನ ಪಾರಿಜಾತವ ತಂದ |
ಎಲೆ ದೇವತೆಗಳಿರ ಅಂಜಿ ಬೆಚ್ಚುತ್ತಲಿರಿ |
ಪುರಂದರವಿಠಲನೆ ಉದ್ದಂಡ ದೈವ ನೋಡಿ ೫
ಅಟತಾಳ
ವರುಣ ದೂತರು ಬಂದು ನಂದಗೋಪನ ಪಿಡಿದು |
ವರುಣಪಾಶದಿ ಕಟ್ಟಿ ಕೊಂಡೊಯ್ಯಲು |
ವರುಣಲೋಕಕ್ಕೆ ದಾಳಿಯನ್ನಿಟ್ಟು |
ವರುಣನ ಕೈಯಲಿ ಪೂಜೆ ಮಾಡಿಸಿಕೊಂಡ |
ಪುರಂದರವಿಠಲ ಈಶರಿಗೀಶ ೬
ಆದಿತಾಳ
ಸಾಸಿರಶಿರನೆ ಸಾಸಿರಲೋಚನನೆ |
ಸಾಸಿರಭುಜನೆ ಸಾಸಿರಕರನೆ |
ಸಾಸಿರ ಉದÀರನೆ ಸಾಸಿರಚರಣನೆ |
ಸಾಸಿರ ನಮೋ ನಮೋ ಪುರಂದರವಿಠಲ ೭
ಜತೆ
ಎಲ್ಲಿ ಕಂಡೆರಗುವೆ ಎಲ್ಲಿ ಕೊಂಡಾಡುವೆ |
ಫಾಲ್ಲಲೋಚನ ನಮ್ಮ ಪುರಂದರ ವಿಠಲನ ||


ಸುಳಾದಿ
ಹನುಮಂತ ಸುಳಾದಿ
ಧ್ರುವತಾಳ
ಹನುಮಂತನ ಬಲಗೊಂಡರೆ –
ಹರಿಪದಸೇವೆ ದೊರೆಕೊಂಬುದು|
ಹನುಮಂತನ ಬಲಗೊಂಡರೆ ನವವಿಧ
ಭಕುತಿಯು ದೊರಕೊಂಬುದು|
ಹನುಮಂತನ ಬಲಗೊಂಡರೆ ತಾರತಮ್ಯ ಪಂಚಭೇದ ಜ್ಞಾನ
ದೊರೆಕೊಂಬುದು
ಹನುಮಂತನ ಬಲಗೊಂಡರೆ ದಯದಿಂದ
ಪುರಂದರ ವಿಠಲ ತಾ ಕೈ ಪಿಡಿವ ೧
ಮಟ್ಟತಾಳ
ಹನುಮಂತನ ಕಾಣದೆ ವಾಲಿ ಬಳಲಿದ|
ಹನುಮಂತನ ಕಂಡು ಸುಗ್ರೀವ ಬದುಕಿದ |
ಹನುಮಂತನ ಪ್ರಿಯ ಪುರಂದರ ವಿಠಲ ೨
ಝಂಪೆ ತಾಳ
ಎಂದೆಂದೂ ತನ್ನ ಮನವಗಲದೆ ಇರು ಎಂದು |
ಅಂದೇ ಇತ್ತನು ಬೊಮ್ಮ ಪದವಿ ಹನುಮಂತಗೆ |
ತಂದೆ ಶ್ರೀ ರಾಮಚಂದ್ರÀ ಪುರಂದರ ವಿಠಲ |
ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ | ೩
ಅಟ್ಟ ತಾಳ೧
ಹಬ್ಬಿದರ್ಜುನನ ಧ್ವಜಾಗ್ರಕ್ಕೆ |
ಬೊಬ್ಬಿಟ್ಟು ಬಾಹ ಪರಬಲ ಬರಿದು ಮಾಡಿದ |
ಸಬ್ಬಲ ಸೂರೆಗೊಂಡನು ಹನುಮಂತ |
ಪುರಂದರ ವಿಠಲನ ಬಂಟ ಹನುಮಂತ | ೪
ಆದಿತಾಳ೨
ರೋಮಕೋಟಿಲಿಂಗ ಹೇಮಕುಂಡಲಧರ |
೩ಭೀಮ ಬೆಳೆದನು ಬ್ರಹ್ಮಾಂಡಕ್ಕೆ೩ |
೪ಸ್ವಾಮಿ ಪುರಂದರ ವಿಠಲರೇಯನ ಬಲುಬಂಟ ಹನುಮಂತ೪ ೫
ಜತೆ
ವಿಜಯೀಭವ ಹನುಮಂತ ವಿಜಯೀಭವ ಗುಣವಂತ |
ವಿಜಯೀಭವ ಪುರಂದರ ವಿಠಲನ ಬಲುಬಂಟ ಹನುಮಂತ ||

೨೨೦
ಸುಳಾದಿ
ಹರಿಕರ್ತೃತ್ವ ಸುಳಾದಿ
ಧ್ರುವತಾಳ
ಹರಿ ನಡೆಯದಿರಲು ನಡೆಯಲಿಲ್ಲೀ ಜಗವು |
ಹರಿ ನುಡಿಯದಿರಲು ನುಡಿಯಲಿಲ್ಲೀ ಜಗವು |
ಹರಿ ನೋಡದಿರಲು ನೋಡಲಿಲ್ಲೀ ಜಗವು |
ಹರಿ ಮಾಡದಿರಲು ಮಾಡಲಿಲ್ಲೀ ಜಗವು |
ಹರಿ ಎವಯಿಕ್ಕದಿರಲು ಎವೆಯಿಕ್ಕದೀ ಜಗವು |
ಹರಿ ಉಸಿರಿಕ್ಕದಿರೆ ಉಸಿರಿಕ್ಕದೀ ಜಗವು |
ಹರಿ ಸರ್ವಚೇಷ್ಟಕ ಹರಿ ಪುರಂದರ ವಿಠಲ |
ಹರಿ ಆಡಿಸಿದಂತೆ ಆಡಿಸುತಿಪ್ಪುದೀ ಜಗವು ೧
ಮಟ್ಟತಾಳ
ಸಿರಿವತ್ಸ ಸಿರಿಧರ ಸುರಗಣ ಮುಕುಟ ಮಂಡಿತ |
ಚರಣಾರವಿಂದ ಪುರುಷೋತ್ತಮ ವಾಮನ ವಾಸುದೇವ |
ಹರಿದೇವೋತ್ತಮ ದೇವಕೀ ನಂದನ
ಭೂವಲ್ಲಭ ಗೋವರ್ಧನೋದ್ಧಾರ |
ಪುರುಷೋತ್ತಮ ವಾಮನ ವಾಸುದೇವ ಪರಮೇಶ್ವರ |
ಪರಂತಪ ಪುರಂದರ ವಿಠಲರಾಯ ಪುಂಡಲೀಕ- |
ವರದ ಪುರುಷೋತ್ತಮ ವಾಮನ ವಾಸುದೇವ ೨
ತ್ರಿವಿಡೆತಾಳ
ಮುಂದೆ ನೃಕಂಠೀರವ ಕಂಬಿಕಾರನಾಗಿ |
ನಂದಗೋಪನಂದನನಹನು ಹಿಂದಿನ ಕಾಲಾಳು |
ಅಂಜದಿರೆಲೆ ಜೀವ ರಾಮ-ಲಕ್ಷ್ಮಣರು
ಧನುರ್ಧರರಾಗಿ ಎಡಬಲದಲ್ಲಿ ||
ತಂದೆ ತಾಯಿ ಶಿಶುವ ನೋಡುವ ಅಂದದಲಯ್ದಾರು |
ಅಂಜದಿರೆಲೊ ಜೀವ ಅನಿಮಿತ್ತ ಬಂಧು ಕಾಣೋ ತನುಸಂ- |
ಬಂಧಿಯಂತಲ್ಲ ಅನವರತ ಪುರಂದರ
ವಿಠಲನ ಕಾಪು ಘನವೊ ೩
ಝಂಪೆತಾಳ
ನೀನನಂತ ಮಹಿಮನೆಂದರಿತರಿತು ಮ |
ತ್ತೇನ ಶಂಕೆ ಆತಂಕವಿಲ್ಲದೆಯೆ ನಡೆಗೊಮ್ಮೆ ಕರೆವೆ |
ನಿನ್ನನಯ್ಯ ನಾನಿನ್ನನಯ್ಯ ಆನು ನುಡಿಗೊಮ್ಮೆ ಕರೆವೆ |
ಅಡಿಗಡಿಗೆ ಕರೆವೆ ನಿನ್ನನಯ್ಯಾ ನುಡಿಗೊಮ್ಮೆ ಕರೆವೆ |
ಈ ಅಪರಾಧಕ್ಕೆ ನನ್ನ ತೊತ್ತ ತೊಂಡರವನಾಗಿ |
ತೋರುತಿಹೆನೈ ಪುರಂದರ ವಿಠಲ ೪
ರೂಪಕ ತಾಳ
ನಿನ್ನಂಥವನು ನಾನಾಗಬೇಕು ಎಂದು ಎಂದೂ ಕಾಮಿಸೆ |
ನಿನ್ನಂಥವರಿಲ್ಲವಾಗಿ ನೀನೇ ಅವತರಿಸಿ |
ಮುನ್ನಿಹನ ಮುನಿಗಳಿಗೆ ಮನುಗಳಿಗೆ ಮತ್ತವರುಗಳಿಗೆ |
ನಿನ್ನಂಥವರಿಲ್ಲವಾಗಿ ನೀನೇ ಸಿರಿ ಪುರಂದರ ವಿಠಲ ೫
ಆಟತಾಳ
ಆಂಜನೇಯನ ಕೂಡಿಕೊಂಡು |
ಭುಂಜಿಸಬೇಕೆಂದು ರಾಮ ಕರೆಯಲು |
ಎಂಜಲ ಹರಿವಾಣವನ್ನೆತ್ತಿಕೊಂಡು ಬಂದು |
ಎಂಜಲವುಂಡುಣ್ಣ ಕಲಿಸಿದ ಹನುಮಂತ |
ಕಂಜಾಕ್ಷ ಪುರಂದರ ವಿಠಲನ |
ಎಂಜಲನುಂಡರು ಸಕಲ ದೇವತೆಗಳು | ೬
ಏಕತಾಳ
ಅಂದು ಇಂದು ಹರಿ ಹರಿ |
ಎಂದೆಂದು ನೀನೇ ಗತಿ ಮತಿ ಇ-|
ನ್ನಿಂದಿರೇಶ ಹರಿ ನಂದ ನಂದನನೇ ರಾಗದಿ |
ಇಂದಿರೇಶ ಒಂದೇ ಮಾತು ಪುರಂದರ ವಿಠಲ ತಪ್ಪದು | ೭
ಜತೆ
ನಿತ್ಯಾನಿತ್ಯ ವಸ್ತುಗಳೊಳಗೆ |
ನಿತ್ಯತೃಪ್ತ ಪುರಂದರ ವಿಠಲ ||

೧೭೩
ಉಗಾಭೋಗ
ಹಲ್ಲು ಬೆಳಗುಮಲ್ಲಿ ಬಿಂಬ
ಪ್ಲಕ್ಷಪತ್ರೆ ನೆಲ್ಲು ನಿಲ್ಲು
ಮಹಾಲಯ ಪುಣ್ಯದಿವಸದಿ
ಬಲ್ಲಿದೇಕಾದಶಿ ಪಾರ್ವಣ
ಅಮವಾಸ್ಯೆ ಇಟ್ಟ ಶಶಿ ರವಿ ಗ್ರಹಣದಲ್ಲಿ
ಅಲ್ಲದೆಯ್ಯ ದಂತ ಕಾಷ್ಠ ಮಲಿನಗಳಿಗೆ
ಝಲ್ಲಿಸಿ ನೀರು ಮುಕ್ಕಳಿಸಿ ಹನ್ನೆರಡು
ಬಲ್ಲ ಬುಧರಿಗೆ ಪುರಂದರವಿಠಲ
ಇಲ್ಲಿ ಒಲಿವ ಇದ ಚರಿಸೆ.

೧೫೫
ಗೋಪಿಗೀತ ಸುಳಾದಿ
ಧ್ರುವತಾಳ
ಹಸುಗಳ ಕರೆವ ಧ್ವನಿ ಕರುಗಳ ಪಿಡಿದು ಬಿಡುವ ಧ್ವನಿ |
ರಶನೆ-ಕಂಕಣಗಳನಿಟ್ಟ ಯಶೋದೆ ಮೊಸರ ಕಡೆವ ಧ್ವನಿ |
ಪಯೋಬ್ಧಿಶಯನನ [ಒಸೆÉದು] ಪಾಡುವ ಧ್ವನಿ |
ಸೆಳೆಮಂಚದ ಮೇಲೆ ಯೋಗನಿದ್ರೆಯೊಳಿಪ್ಪ |
ಕುಸುಮಾಕ್ಷನು ಉಪ್ಪವಡಿಸಲು ಮೈಮುರಿದೆದ್ದು |
ಬಂದು ಗೋಪಿಯ ನಿರಿಯ ಪಿಡಿದುಕೊಂಡು |
ಮೊಲೆಯ ಕೊಡು ಹಸಿದೆನೆಂದೆಂಬ ಹರಿಯನೆತ್ತಿಕೊಂಡು |
ತೊಡೆÀಯ ಮೇಲಿಟ್ಟು ಹನಿವ ಮೊಲೆಯೂಡಲು |
ಆಡುವ ಕೃಷ್ಣರಾಯ ಬಿಡದೆ ಭಕುತಜನರ ಸಲಹುವ |
ಸುಕುಮಾರಕ ಪುರಂದರವಿಠಲ ೧
ಅಟ್ಟತಾಳ
ಪೊಂಬಣ್ಣ ದಂಬರವನುಟ್ಟು ಕಂಬಳಿಯ ಹೊದ್ದಿರೆ |
ಅಂಬುಜ ಸಂಭವ ಆಗಮ ಉಚ್ವರಿಸೆ |
ಕೊಂಬು-ಕೊಳಲು ತುತ್ತೂರಿಗಳು ಊದುತಿರೆ |
ಅಂಬುಜ ಸಂಭವ ಎಂಬವನರಿಯೆ ನೀನು |
ಪುರಂದರವಿಠಲ ೨
ಅಟತಾಳ
ಕೋಗಿಲೆಯಂತೆ ಕೂಗುವೆಯೊಮ್ಮೆ |
ಗಿಳಿಯಂತೆ ಮಾತನಾಡುವೆಯೊಮ್ಮೆ |
ತುಂಬಿಯಂತೆ (ನಲಿದು), ಪಾಡುವೆಯೊಮ್ಮೆ |
ನವಿಲಿನಂತೆ ನಲಿದಾಡುವೆಯೊಮ್ಮೆ |
ಒಮ್ಮೆ ಕೊಕ್ಕರನಂತೆ ಕೊಕ್ಕಿ ಒಮ್ಮೆ ಗೂಳಿಯಂತೆ ಗುಟುರಿ |
ಒಮ್ಮೆ ಗೋವಳನಂತೆ ಗೋಲಿಯಾಡುವೆ |
ಆವ ಲೀಲೆಯೊ ಪುರಂದರವಿಠಲ ೩
ರೂಪಕತಾಳ
ಕಂಡೆವು ನಿನ್ನನೆಲೆ ಕೃಷ್ಣ ಮೊಸರ-ಬಿಸಳಿಗೆ |
ಬೆಣ್ಣೆಯ ಗುಂಡಿಗೆವೆರಸಿ ಒಲುಮೆಯಿಂದ |
ಕುಶಲವಾಡಿ ಮೀಸಲಳಿವೆ ಕಾಂಬಕಾಂಬವರಿಗೆ ಬೀರುವೆ |
ಅಂಜುವೆವೆ ಪಾಂಡುರಂಗ ಪುರಂದರವಿಠಲ |
ದೇವತೆಗಳ ಮಾನಿ ೪
ಝಂಪೆತಾಳ
ವಿತ್ತದಹಂಕಾರ-ಮಮಕಾರ (ಗಳಿಂದ) ದಿಂದ |
ಸುತ್ತಿಸುತ್ತಿ ಸುಣ್ಣವಾರೆ ಕಂಡು |
ಇತ್ತ ಬಾ ಇತ್ತ ಬಾ ಎಂದು |
ಉತ್ತರಿಸುವೆ ಸಂಸಾರ ಸಾಗರವ |
ಭೃತ್ಯನಪ್ಪೆ ಪುರಂದರವಿಠಲ |
ಇತ್ತ ಬಾ
ಆದಿತಾಳ
ಆವ ತೀರಥದಲಿ ಮುಳುಗಿದೆನೊ ನಾ- |
ನಾವ ಕ್ಷೇತುರಗಳ ಮೆಟ್ಟಿದೆನೊ ನಾ-|
ನಾವ ಕ್ರತುವ ನೆರೆ ಮಾಡಿದೆನೊ ನಾ-|
ನಾವ ದೇವತೆÉಗಳ ಭಜಿಸಿದೆನೊ |
ದೇವ ಪುರಂದರವಿಠಲನ |
ಪಾವನ ಮೂರ್ತಿಯ ಕಂಡೆ ನಾನು ೬
ಏಕತಾಳ
ಉಪಾಧಿಯಿಂದ ನಿನ್ನ ಭಜಿಸುವೆ ನಿ-|
ರುಪಾಧಿ ನೀನು ಶಿವನ ನಾನರಿಯದ ಕಾರಣ |
ಅಪಾರಮಹಿಮನೆ ಉಪಾಧಿಯಳಿದು ನಿ-|
ರುಪಾಧಿಸೆ ಶಿವನ ಭಜಿಪಂತೆ ಮಾಡಯ್ಯ |
ಅಪವರ್ಗವಿಪದನೀಯೆ ಜಗದೇಕಪಾಲ
ಪುರಂದರವಿಠಲರಾಯ ೭
ಜತೆ
ಎನ್ನ ತನುಮನ ಧನವಿಂದು ಪಾವನವೈಯ (ಸಾರ್ಥಕವಯ್ಯಾ) |
ನಿನ್ನ ಸಾರಿದೆ ಪುರಂದರವಿಠಲ ||

೪೯
ಭವಾಂಭುದಿ ಸುಳಾದಿ
ಸುಳಾದಿ
ಧ್ರುವತಾಳ
ಹುಟ್ಟುವ ಭೀತಿ ಹೊಂದುವ ಭೀತಿ
ವಿಠಲನಂಘ್ರಿಯ ನೆನೆಯದವಗೆ |
ಕಾಲನ ಭೀತಿ ಕರ್ಮದಭೀತಿ ಗೋಪಾಲನದಾಸನಾಗದವಗೆ
ಅರಿಷಡ್ವರ್ಗದ ಮಹಾಭೀತಿ ಹರಿನಾಮ ಉಚ್ಚರಿಸದವಗೆ |
ಹಲವು ಮಾತಿನಲೇನು ಹಲವು ಭೀತಿ ನಮ್ಮ ಪುರಂದರ
ವಿಠಲನ ಪೂಜಿಸದವನಿಗೆ ೧
ಮಟ್ಟ ತಾಳ
ನಿನ್ನ ದಿವ್ಯನಾಮ ಸುಧಾಂಬುಧಿಯಲ್ಲಿ
ಮನ ಮುಳುಗಿಪ್ಪ ಮಹಾಮಹಂತರ
ನಿನ್ನ ದಿವ್ಯ ಚಿನ್ಮಾತ್ರ ಮೂರುತಿಯ
ಅನುಭವಿಸುವಾನಂದಭರಿತರ |
ಅನುದಿನವು ಅವರೊಳಿರಿಸೆನ್ನ
ಘನ ಮಹಿಮ ಶ್ರೀಪುರಂದುವಿಠಲವಿಭುವೆ | ೨
ತ್ರಿಪುಟತಾಳ
ನೀಲ ಘನಶ್ಯಾಮ ಕೋಮಲಾಂಗನಕಂಡು |
ಅವ್ವಾ ಅವ್ವಾ ಎಂತು ನಿಲ್ಲಬಹುದೇ|
ಇನ್ನೆಂತು ಸೈರಿಪೆನೆ ಆರಾದಡೆ ಏನಾದಡೆ
ಎನ್ನ ಚಿನ್ನನು ಪುರಂದರವಿಠಲ
ಆತನನಪ್ಪಿದೆನವ್ವಾ ೩
ಅಟ್ಟತಾಳ
ಮಂಗಲಮಯ ವಿಷ್ಣುವಾಮನ |
ಗಂಗಾಪಿತ ಹರಿಯೆ ಎನಲೆನ್ನ |
ಕಂಗಳಲ್ಲಿ ಜಲವು ಉಕ್ಕವುದು |
ಅಂಗ ಪುಳಕಾಂಕವೆಂದಪ್ಪುದು-ಎನ್ನ-|
ಕಂಗಳಲ್ಲಿ ಜಲವೆಂದು ಉಕ್ಕುವುದು?
ಪುರಾದರ ವಿಠಲನಂಘ್ರಿ ಭಜಕನೆಂದು |
ಕಂಗಳಲ್ಲಿ ಜಲವೆಂದು ಉಕ್ಕವುದು? ೪
ಆದಿತಾಳ
ಮಂದರಧರನ ಮೊರೆಹೊಕ್ಕು ಬದುಕುವೆನು |
ಇಂದು ನಾಳೆ ನಾಡಿದ್ದೆಂಬ |
ಮಂದಮತಿಗಿನ್ನೇನೆಂಬೆ |
ಹಿಂದೆ ಮುಂದೆ ಸುತ್ತಿ ಬಪ್ಪ ಮೃತ್ಯು ವಿಚಾರಿಸದೆ |
ತಂದು ತಂದು ಕೆಡಹುತಲಿದೆ ಭವಾಂಬುಧಿಯಲ್ಲಿ |
ತಂದೆ ನಿಂದು ಪರಿಯಂತ ಈ ಬೆಂದ ಮನ ದೀಪ್ತಿಯ |
ತಂದೆ ಕರುಣಿಸೆಲೆ ಪುರಂದರವಿಠಲ ವಿಭವೆ ೫
ಜತೆ
ಮಾರಮಣ ಭೂರಮಣ ಪುರಂದರವಿಠಲ
ಸಾರ್ವಭೌಮ ರಮಾರಮಣ ||

೨೯೧
ಸುಳಾದಿ
ಧ್ರುವ ತಾಳ
ಹೆಜ್ಜೆಗೆ ಹೆಜ್ಜೆಗೆ ಸಾವಿರ ಸಾವಿರ ಹೊನ್ನೀವರಾಯ
ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಪರಸಮಯವ ಮೆಟ್ಟಿ ನಡೆವ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಸೂಳೆಯರುಡಿ ಮುಡಿ ಮೊಲೆ ನೋಡಿ |
ನಲಿದೋಡುವ ಹಾರುವರ ಪರಿಹಾಸಕ್ಕೆ ನಗುವ
ವಿನೋದಿರಾಯ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಕಡೆಯಾ ಹೆಣ್ಣ ಗಂಡ ಮಾಡುವ
ರಾಯ ರಾವುತರಾಯ |
ಹೆಜ್ಜೆಗೆ ಹೆಜ್ಜೆಗೆ ತಾಳಮೇಳಕೆ ತಲೆ ದೂಗುವ
ರಾಯ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಮಾಲಕುಮಿಯ ಕುರುಳ ಅಳಿಕುಂತಳ
ಮಾತಿದ್ದುವ ಕಂಚಿಯ ವರದರಾಜ |
ಪುರಂದರವಿಠಲರಾಯ ರಾವುತರಾಯ ೧
ಮಟ್ಟತಾಳ
ರಾಯರಾವುತನೆಂಬೀಬಿರುದ ತಡೆಯಬಂದ |
ರಾಯಜೀಯಗಳನೆಲ್ಲ ಬೀಳುಕೊಳ್ಳುತ್ತಿರೆ |
ರಾಜಜೀಯರು ಎಲ್ಲ ಜಯ ಜಯವೆನ್ನುತಿರೆ |
ರಾಯ ರಾಯನೆ ಹಯರೇವಂತ ರಾಯ |
ಹಯವೇರಿ ಬೀದಿ ಬೀದಿಯಲಿ ರಾಯ ರಾಯನರ
ನೂಕಿ ಹಾಕಿ ಮೆರೆದೆ ರಾಯ |
ರಾಯ ವರದ ರಾಜ ಪುರಂದರವಿಠಲರಾಯ
ರಾವುತನೆಂಬ ಬಿರುದು ಸಲ್ಲಿಸಿದೆ | ೨
(ಜಾವಡಿತಾಳ)-ರೂಪಕತಾಳ
ನಾನಾದೇವತೆಗಳೆಲ್ಲರು ನಾನಾ ನಾಮಗಳಿಂದ |
ನೀನೇ ಕೃತುಮಯನೆಂದು ನೀನೇ ಕರ್ತೃಭೋಕ್ರ‍ತಯೆಂದು |
ವಾಣೀಪತಿ-ಪಿತ ಏನು ಘನವೊ ವರದರಾಜ |
ನೀನೆ ಪುರಂದರ ವಿಠಲ ೩
ಆಟ್ಟತಾಳ
ಪುಣ್ಯ ಕೋಟಿ ಆವ ಕ್ಷೇತುರ ಅದಾವುದು |
ಪುಣ್ಯಕೋಟಿ ಆವತೀರಥ ಅದಾವುದು |
ಪುಣ್ಯಕೋಟಿ ನಮ್ಮ ಹರಿಯಲ್ಲದೆ |
ಪುಣ್ಯಕೋಟಿ ಆವ ದೇವರು ಅದಾರು |
ಪುಣ್ಯಕೋಟಿ ಕಂಚಿ ವರದ ರಾಜ |
ಪುಣ್ಯಕೋಟಿ ನಮ್ಮ ಪುರಂದರವಿಠಲ | ೪
ಏಕ ತಾಳ
ಹಸ್ತಿ ಗಿರೀಶನೆ ಶಂಖ ಚಕ್ರ |
ಹಸ್ತನೆ ಗದೆಯ ಭಯ |
ಹಸ್ತ ಉತ್ತರದೇರಿಯ ಆವರಿಸಿದವನೆ |
ಚಿತ್ತಜಾನಂದದ ಪುತ್ಥಳಿಯೆ |
ರತ್ನ ಮುಕುಟ ಕುಂಡಲಧರ |
ಕೌಸ್ತುಭ ಪೀತಾಂಬರಧರನೆ |
ವಸ್ತು ವರದ ರಾಜ ಪುರಂದರ ವಿಠಲ |
ಈತನ ನಂಬಿ ಬದುಕಿರೊ | ೫
ಜತೆ
ಆರನಾಸರಿಸ ಆರನಾವರಿಸ ಕಂಚಿಯ |
ವರದರಾಜ ಪುರಂದರ ವಿಠಲ ||

೧೫೧
ಸುಳಾದಿ
ಗೋಪಾಲಕೃಷ್ಣಸುಳಾದಿ
ಧ್ರುವತಾಳ
ಹೊಡೆಮರಳ ಕಲಿತ ಶ್ರೀಕೃಷ್ಣ ನಾಗರ |
ಹೆಡೆಯಂತೆ ತಲೆಯೆತ್ತಲು ಕಲಿತ ಕೃಷ್ಣ |
ನುಡಿಯ ಕಲಿತ ಉಗ್ಗು ಉಗ್ಗು ಎಂದು ಕೃಷ್ಣ |
ಉಡಿಗಂಟೆ ಹುಲಿಯುಗುರರಳೆಲೆ ಮಾಗಾಯಿ |
ಕಡಗ-ಕಂಕಣದಿಂದ ಮುದ್ದು ಮೆರೆವ ಕೃಷ್ಣ |
ಮಡದಿಯರೆತ್ತಿ ಮುದ್ದಾಡಿಸಲವರ ಓ-|
ರುಡೆಯ ಮೇಲೆದ್ದು ಕುಣಿವನು ಕೃಷ್ಣ |
ಹಿಡಿ ಹೊನ್ನು ಗುಬ್ಬಿ ತಾ ಹೊನ್ನ ಗುಬ್ಬಿಯ ನಾಡಿ |
ಜಡಿದು ಚಪ್ಪಾಳೆಯಿಕ್ಕುವನು ಕೃಷ್ಣ |
ಮೃಡಮುಖ್ಯ ಸುರರು ಅಂಬರದಲಿ ನೋಡಿ ನೋಡಿ |
ಕಡುವೊಪ್ಪಿ ತುತಿಸಿ ಹಾರೈಸುತಿರೆ |
ಕಡೆಗಣ್ಣಿನಿಂದವರ ನೋಡಿ ನಲಿವ ನಮ್ಮ |
ಒಡನಾಡಿ ಪುರಂದರವಿಠಲ ಗೋಪಾಲಕೃಷ್ಣ ೧
ಮಟ್ಟತಾಳ
ಗಂಡಸ್ಥಳದಲ್ಲಿ ಮಣಿಯ ಕೆಚ್ಚಿದ ಮಕರ- |
ಕುಂಡಲಗಳು ತೂಗೆ ಪ್ರತಿ ಬಿಂಬಿಸುತಿರಲು |
ಪುಂಡರೀಕಾಕ್ಷನ ಉತ್ತಮಾಂಗದಲ್ಲಿ ರವಿ- |
ಮಂಡಲಗಳ ಪ್ರಭೆಯ ಮಸಳಿಸುತಿರೆ ಮುಕುಟ |
ಹಿಂಡು ಗೋಪಿಯರೊಡನೆ ಆಟವನಾಡುವ ಉ- |
ದ್ದಂಡ ಬಾಲಕ ಪುರಂದರವಿಠಲ ಗೋಪಾಲಕೃಷ್ಣ ೨
ರೂಪಕತಾಳ
ಕನ್ನಡಿಯಂತೆ ಕೋರೈಸುತಿಹ |
ರನ್ನದಾಕರದ ರಾಜಾಂಗಣದಲ್ಲಿ |
ಘನ್ನ ಮಹಿಮ ಅಂಬೆಗಾಲಿಕ್ಕುತ ಬರುತ |
ತನ್ನ ರೂಹನು ಕಂಡು ಸನ್ನೆ ಮಾಡುವ ನಗುವ
ಚೆನ್ನವಾಡಲು ನಗುತ ಜೋಯೆಂದಮ್ಮ |
ಚಿನ್ನಾಟವಾಡುವ ಹೋಯೆಂದು ಪಾಡುವ |
ಎನ್ನ ಮುದ್ದು ಪುರಂದರವಿಠಲರಾಯ |
ಚೆನ್ನಿಗ ಚೆಲುವ ಗೋಪಾಲಕೃಷ್ಣ ೩
ಝಂಪೆತಾಳ
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |
ತುಂಬಿಗುರುಳರಳೆಲೆಯ ನೊಸಲಲೊಲೊಯುತ |
ರಂಭೆ ಗೋಪಿಯಿದ್ದೆಡೆಗೆ ಬಂದು |
ಉಂಬೆನಾನಮ್ಮೆಯನು ಎನುತಚ್ಯುತ|
ತುಂಬಿದೊಳಗಣ್ಣ ಜಗಂಗಳ ಹೊಟ್ಟೆಯ |
ತುಂಬುವನ ತಾತ ನಗುತ ನಲಿಯುತ |
ನಂಬಿದವರ ಪೊರೆವ ಭಕುತರ ಕು |
ಟುಂಬ ಪುರಂದರವಿಠಲ ಗೋಪಾಲಕೃಷ್ಣ ೪
ತ್ರಿವಿಡೆತಾಳ
ಬಲಗೈಯಿಂದಲಿ ತೆಗೆದು ಎಡಗೈ ಬೆಣ್ಣೆ ಮುದ್ದೆಯ |
ಮೆಲುವ ಕೃಷ್ಣ ಗೆಳೆಯ ಗೋಪಾಲರಿಗೆಲ್ಲ |
ಮೆಲಿಸುತ್ತ ಬಲಭದ್ರ ರಾಮಗೆ ಸಮೀಪದೊಳಿರುತ |
ಇಳೆಯಯ್ಯನಯ್ಯ ಬಾಲಕನಾದ ಪುರಂದರವಿಠಲ ಗೋಪಾಲಕೃಷ್ಣ ೫
ಅಟತಾಳ
ವಟಪತ್ರದೊಳಡಗಿದ್ದು ಪ್ರಳಯದಲ್ಲಿ |
ಪುಟ್ಟ ಪುಟ್ಟ ಕೈಯಲಿ ಪುಟ್ಟ ಪುಟ್ಟ ಪಾದ ದುಂ- |
ಗುಟವ ಪಿಡಿದು ಪೀರುವ ಶಿಶುವೀತನು |
ಪುಟ್ಟ ಪುಟ್ಟ ಸೃಷ್ಠೀಶ ಪುರಂದರವಿಠಲ ಗೋಪಾಲಕೃಷ್ಣ ೬
ಏಕತಾಳ
ಮಂದಗಿರಿಯ ಕಡೆದ ತೋಳೊ-ಕೃಷ್ಣ |
ಸಿಂಧುವನಂಬಿನ ಮನೆಗೆ ತಂದ ತೋಳೊ-ಕೃಷ್ಣ |
ಬಂದಿ ಬಾಹು ಬಳೆಯನಿಟ್ಟ ತೋಳೊ-ಕೃಷ್ಣ |
ಇಂದ್ರಾದಿಗಳಾಶ್ರಯಿಸುವ ತೋಳೊ-ಕೃಷ್ಣ |
ಚಂದನ ಕುಂಕುಮ ಕಸ್ತೂರಿ ಇಟ್ಟ ತೋಳೊ-ಕೃಷ್ಣ |
ಇಂದಿರಾದೇವಿಯನಪ್ಪುವ ತೋಳು ತೋಳು ತೋಳು |
ಕಂದ ಹರಿ ತೋಳನ್ನಾಡೈ ಇಂ- |
ತೆಂದು ಗೋಪೀದೇವಿ ತೋಳನ್ನಾಡಿಸೆ ಪು- |
ರಂದರವಿಠಲ ಗೋಪಾಲಕೃಷ್ಣ ಆಡಿದ ೭
ಜತೆ
ಬಾಲಕ ಲೀಲಾಲೋಲ ಗೋಪಾಲನು |
ಮೂಲ ಪುರಂದರವಿಠಲ ಗೋಪಾಲಕೃಷ್ಣ ||

೧೫೨
ಸುಳಾದಿ
ಗೋಪಾಲಕೃಷ್ಣಸುಳಾದಿ
ಧ್ರುವತಾಳ
ಹೊಡೆಮರಳಲು ಕಲಿತ ಶ್ರೀಕೃಷ್ಣನಾಗರ |
ಹೆಡೆಯಂತೆ ತಲೆಯೆತ್ತಲು ಕಲಿತ ಕೃಷ್ಣ |
ಕಡು ಮುದ್ದು ಸುರಿವಂತೆ ನಗಲು ಕಲಿತ ಕೃಷ್ಣ
ನುಡಿಯಲು ಕಲಿತ ಉಗ್ಗು ಉಗ್ಗು ಎಂದು ಕೃಷ್ಣ |
ಉಡಿಘಂಟೆ ಹುಲಿಯುಗರಳೆಲೆ ಮಾಗಾಯಿ |
ಕೊರಳ ಪದಕ ಮುದ್ರೆ ಮೆರೆವ ಕೃಷ್ಣ |
ಕಡಗ ಕಂಕಣದಿಂದ ಮೆರೆವ ಕೃಷ್ಣ |
ಮಡದಿಯರೆತ್ತಿ ಮುದ್ದಾಡಿಸಲವರ ಓ |
ರುಡಿಯ ಮೇಲೆದ್ದು ಕುಣಿವನು ಕೃಷ್ಣ |
ಹಿಡಿಹೊನ್ನು ತಾ ಹೊನ್ನು ಗುಬ್ಬಿಯಂದದಿ ಹೆ- |
ಜ್ಜೆ ಹಿಡಿದು ಚಪ್ಪಳೆಯಿಕ್ಕುವನು ಕೃಷ್ಣ |
ಮೃಡ ಮುಖ್ಯ ಸುರರು ಅಂಬರದಲಿ ನೋಡಿ ನೋಡಿ |
ಕಡುವೊಪ್ಪಿ ತುತಿಸಿ ಹಾರೈಸುತಿರೆ
ಕಡೆಗಣ್ಣಿನಿಂದ ಅವರನು ನೋಡಿ ನಲಿವ ನಮ್ಮ |
ಒಡನಾಡುವ ಪುರಂದರವಿಠಲ ಗೋಪಾಲಕೃಷ್ಣ ೧
ಮಟ್ಟತಾಳ
ಗಂಡಸ್ಥಳದಲ್ಲಿ ಮಣಿಮುಕುಟ ಮುತ್ತಿನ ಮಕರ |
ಕುಂಡಲಗಳ ಪ್ರಭೆಯು ಪ್ರತಿಫಲಿಸುತ ತೂಗಿ |
ಪುಂಡರಿಕಾಕ್ಷನ ಉತ್ತಮಾಂಗದ ರವಿ |
ಮಂಡಲಗಳ ಪ್ರಭೆ ಮಸುಳಿಸುತಿರೆ ಮುಕುಟ |
ಹಿಂಡು ಗೋಪಿಯರೊಡನೆ ಆಟವನಾಡುವ ಉ |
ದ್ದಂಡ ಬಾಲಕ ಪುರಂದರವಿಠಲ ಗೋಪಾಲಕೃಷ್ಣ ೨
ರೂಪಕತಾಳ
ಕನ್ನಡಿಯಂತೆ ಕೋರೈಸುತಿಹ |
ರನ್ನದಾಕಾರ ರಾಜಾಂಗಣದಲ್ಲಿ |
ಘನ್ನ ಮಹಿಮ ಅಂಬೆಗಾಲನಿಕ್ಕುತ ಬರುವ |
ತನ್ನರೂಹವ ಕಂಡು ಸನ್ನೆ |
ಮಾಡುವ ಮತ್ತೆ ನಗುವ |
ಚೆನ್ನವಾಡಲು ನಗತ ಜೋ ಎಂದಮ್ಮ |
ಚೆನ್ನಾಟನಾಡುವ ಹೋಯೆಂದು ಪಾಡುವ |
ಎನ್ನ ಮುದ್ದು ಪುರಂದರವಿಠಲರೇಯಾ
ಚೆನ್ನಿಗ ಚೆಲುವ ಗೋಪಾಲಕೃಸ್ಣ ೩
ಝಂಪೆತಾಳ
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |
ದುಂಬಿಗುರುಳರಳೆಲೆಯ ನೊಸಲೊಲಿವುತ |
ಉಂಬೆ ಇನ್ನೊಮ್ಮೆ ಎಂದೆನುತಚ್ಯುತ |
ತುಂಬಿದೊಳಗಿನ ಜಗಂಗಳುವೊಲಿವುತ |
ನಕ್ಕರೆ ನಗುವ ನಂಬಿದವರ ಪೊರೆವ |
ಭಕ್ತ ಕುಟುಂಬಿ ಪುರಂದರವಿಠಲ ಗೋಪಲಕೃಷ್ಣ ೪
ತ್ರಿವೆಡೆತಾಳ
ಬಲಗೈಯಿಂದಲಿ ತೆಗೆದು ಎಡಗೈ ಬೆಣ್ಣೆ ಮುದ್ದೆಯ |
ಮೆಲುವ ಕೃಷ್ಣ ಗೆಳೆಯ ಗೋವಳಿರಿಗೆಲ್ಲ |
ಮೆಲಿಸುತ್ತ ಬಲಭದ್ರರಾಮಗೆ ಸವಿದೋರುತ್ತ |
ಜಗದಯ್ಯ ಪುರಂದರವಿಠಲ ಗೋಪಲಕೃಷ್ಣ ೫
ಅಟ್ಟತಾಳ
ವಟ ಪತ್ರದಲ್ಲೊರಗಿ ಪ್ರಳಯದಲ್ಲಿ |
ಪುಟ್ಟ ಪುಟ್ಟ ಕೈಯಲಿ ಪುಟ್ಟ ಪುಟ್ಟ ಪಾದ ಅಂ- |
ಗುಟ ಚಪ್ಪರಿಸುತ ಆಡುವ ಶಿಶುವೀತನ |
ಸೃಷ್ಟೀಶ ಪುರಂದರವಿಠಲ ಗೋಪಾಲಕೃಷ್ಣ ೬
ಆದಿತಾಳ
ಮಂದರಗಿರಿಯನೆತ್ತಿದ ತೋಳನ್ನಾಡೈ ತೋಳು ತೋಳು ಕೃಷ್ಣ |
ಕೃಷ್ಣ ಸಿಂಧುವಿನಂಬಿನ ಮನೆಗೆ ತಂದ ತೋಳು ಕೃಷ್ಣ |
ಬಂದಿಬಾಹು ಬಳೆಯನಿಟ್ಟ ತೋಳು ತೋಳು ತೋಳು ಕೃಷ್ಣ |
ಚಂದನ ಕುಂಕುಮ ಗಂಧವನಿಟ್ಟ ತೋಳು ಕೃಷ್ಣ |
ಇಂದಿರೆ ದೇವಿಯನಪ್ಪುವ ತೋಳು ತೋಳು ಕೃಷ್ಣ ಇ- |
ತ್ತೆಂದು ಮಗನ್ನ ತೋಳನಾಡಿಸೆ |
ಪುರಂದರವಿಠಲ ನೀ ತೋಳನ್ನಾಡೈ ೭
ಜೊತೆ
ಬಾಲಕ ರೂಪಗೆ ಮೂಲ ರೂಪ |
ಮೂಲ ರೂಪವೆ ಬಾಲ ಪುರಂದರವಿಠಲ ||

೧೧೯
ಸಂಭ್ರಮ ಸುಳಾದಿ
ಧ್ರುವತಾಳ
ಮಣಿ ಮೌಳಿ ಮೊಲ್ಲೆ ಮಲ್ಲಿಗೆಯ ದಂಡೆ
ಪಿಂಛೆದೊಂಗಲ ಉತ್ತಮಾಂಗ |
ಮೆರೆವ ಕರ್ಣಕುಂಡಲ ಕೌಸ್ತುಭ ಕಮಲಮಾಲೆ ಕಂಬುಕಂಠ |
ಸಿರಿಗಂಧ ಸಿರಿವತ್ಸ ಸಿರಿತುಲಸಿ ಸಿರಿವಕ್ಷ ಸ್ಥಳ |
ಮರಕತಮಣಿಯ ಕಡಗ ಕಂಕಣ
ಕಡೆಯ ತೊಡೆಯ ಸಮಚರಣ |
ಹೇಮವಸನ ಶ್ಯಾಮಲ ಕೋಮಲಾಂಗ |
ಅಹೋ ಗೋಪಿಯರ ಮೋಹಿಸುತಿದೆ (ಕೃಷ್ಣ)
ಅಹೋ ಜಗಜ್ಜನರ ಪಾಲಿಸುತಿದೆ |
ಅಹೋ ಪುರಂದರವಿಠಲನ ಬಾಲಲೀಲೆ ೧
ಮಟ್ಟತಾಳ
ಪೊಂಬಟ್ಟೆಯ ಮೇಲೆ ಕಾಂಚೀದಾಮದ
ಒಲ್ಲಿಯ ಉಡಿಸುತ್ತಿ |
ಜಂಬು-(ನೀಲ) ಚೂತಗಳ ಎಳದಳಿರಮುಕುಟದ
ಮೇಲೆಸುತ್ತಿಕೊಂಡು |
ಕೊಂಬು ಕೊಳಲು ತುತ್ತುರಿ-ಮೌರಿಯಗಳು |
ಭಂವ್ ಭಂವ್ ಭಂವ್ ಝಂ ಝಂ ಝಮ್ಮೆಂಬ |
ರಾಮಕೃಷ್ಣ ಗೋವಳರ ಸಂಭ್ರವವು ಸುರರನೊಲಿಸಿತು |
ಜಂಭಭೇದಿ ಶಂಭು ಅಂಬುಜಸಂಭವನುತ |
ಕಂಬುಗ್ರೀವ ತಿರುವಿಂಗಳಪ್ಪ ಪುರಂದರವಿಠಲ ೨
ತ್ರಿವಿಡೆತಾಳ
ಜಯ ಜಯ ಶ್ರೀನರಸಿಂಹ ಮಹಾಭಯ ನಿವಾರಣ |
ಜಯ ಜಯ ಶ್ರೀ ದಿವ್ಯಸಿಂಹ ಘೋರದ(ದುರಿತ) ನಿವಾರಣ |
ಪ್ರಹ್ಲಾದವರದ ಶ್ರೀ ಪುರಂದರವಿಠಲರಾಯ ೩
ಅಟತಾಳ
ಅಹಂಕಾರ ಮಮಕಾರವಳಿಯದೆ ವಿಹಂಗಗಮನನು |
ಸಿಲುಕುವನೆ ಮರುಳೆ |
ಕಾಮ ಕ್ರೋಧವಬಿಡದನ್ನಕ್ಕ ಪರಬೊಮ್ಮನೊಲುಮೆ-
ಯೆತ್ತ ನೀನೆತ್ತ ಮರುಳೆ |
ಆ ಹರಿದಾಸ ಚರಣಾಬ್ಜಕೆ ಎರಗದೆ ಪುರಂದರವಿಠಲನು
ಸುಲಭನೆ ಮರುಳೆ? | ೪
ಆದಿತಾಳ
ವಾಮನ ವಾಸುದೇವ ಪದ್ಮನಾಭ ಹರೆ |
ದಾಮೋದರ ಪ್ರದ್ಯಮ್ನ ಸಂಕರ್ಷಣ ವಾಸುದೇವ |
ಅನಿರುದ್ಧ ಪುರಂದರವಿಠಲರಾಯ ಪುರೋಷತ್ತಮ ಹರೆ ೫
ಜತೆ
ಮನೋವಚನಗಳಲ್ಲಿ ಕಾಯಕರ್ಮಗಳಲ್ಲಿ |
ಕೊಲ್ಲೊ ಕಾಯೊ ನಂಬಿದೆ ಪುರಂದರವಿಠಲ ||

ಆಚಾರವಿಲ್ಲದ ನಾಲಿಗೆ
೧೦೦
ಆಚಾರವಿಲ್ಲದ ನಾಲಿಗೆನೀಚಬುದ್ದಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಪುದಕ್ಕೆಚಾಚಿಕೊಡಿರುವಂತ ನಾಲಿಗೆ
ಪ್ರಾರ್ಥಕಾಲದೊಳೆದ್ದು ನಾಲಿಗೆಸಿರಿಪತಿ ಎನ್ನ ಬಾರದೆ ನಾಲಿಗೆ
ಪತಿತ ಪಾವನ ನಮ್ಮ ರತಿಪತಿ ಜನಕನ ಸತತವು ನುಡಿಕಂಡ್ಯ ನಾಲಿಗೆ| ೧ |
ಚಾಡಿ ಹೇಳಲಿ ಬೇಡ ನಾಲಿಗೆ ನಿನ್ನಬೇಡಿಕೊಂಬುವೆನು ನಾಲಿಗೆ
ರೂಢಿಗೊಡೆಯ ಶ್ರೀರಾಮನ ನಾಮವಪಾಡುತಲಿರು ಕಂಡ್ಯ ನಾಲಿಗೆ| ೨ |
ಹರಿಯ ಸ್ಮರಣಿ ಮಾಡೊ ನಾಲಿಗೆನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠಲರಾಯನಚರಣ ಕಮಲವ ನೆನೆ ನಾಲಿಗೆ| ೩ |

ಹಾಡಿನ ಹೆಸರು :ಆಚಾರವಿಲ್ಲದ ನಾಲಿಗೆ
ಹಾಡಿದವರ ಹೆಸರು :ವಿಜಯ ಹಾವನೂರ
ರಾಗ :ಪಹಾಡಿ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಇನ್ನೂ ದಯ ಬಾರದೇ
೨೨೫
ಇನ್ನೂ ದಯ ಬಾರದೇ-ದಾಸನ ಮೇಲೆ-
ಇನ್ನೂ ದಯ ಬಾರದೇ ಪ
ಮುನ್ನ ಮಾಡಿದ ದುಷ್ಕರ್ಮಗಳೆಲ್ಲವ
ಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪ
ನಾನಾ ಜನ್ಮಗಳಲಿ ನಾನಾ ಜಾತಿಗಳಲಿ
ನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||
ನಾನು ನನ್ನದು ಎಂದು ನರಕದೊಳಗೆ ಬಿದ್ದು
ನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ ೧
ಕಾಮಾದಿ ಷಡುವರ್ಗ ಗಾಢಾಂಧಕಾರದಿ
ಪಾಮರನಾಗಿ ಇದ್ದಂಥ ಪಾತಕನ ||
ರಮಾಮನೋಹರ ಹರಿ ನೀನೇ ಗತಿಯೆಂದು
ನಾಮಾಮೃತವನು ಪಾನ ಮಾಡಿದ ಮೇಲೆ ೨
ಏನ ಓದಿದರೇನು ಏನ ಕೇಳಿದರೇನು
ಈ ನಾಮ ಸ್ಮರಣೆಗೆ ಸರಿಬಾರದು ||
ಜ್ಞಾನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರ ಪುರಂದರ ವಿಠಲನೆ ೩

ಹಾಡಿನ ಹೆಸರು :ಇನ್ನೂ ದಯ ಬಾರದೇ
ಹಾಡಿದವರ ಹೆಸರು : ಸುಮನಾ ವೇದಾಂತ್, ಮುಕ್ತಾ ಮುರಳಿ, ನಾಗಲಕ್ಷ್ಮಿ, ಅನ್ನಪೂರ್ಣ ಕೆ. ಮೂರ್ತಿ
ರಾಗ :ಬಿಂದುಮಾಲಿನಿ
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ಸುಕನ್ಯಾ ಪ್ರಭಾಕರ್
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

ಈಸಬೇಕು ಇದ್ದು ಜಯಿಸಬೇಕು
೧೧೮
ಈಸಬೇಕು ಇದ್ದು ಜಯಿಸಬೇಕು
ಹೇಸಿಕೆ ಸಂಸಾರದಲ್ಲಿ ಲೇಶ ಆಶೆ ಇಡದ ಹಾಗೆ ಪ.
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ೧
ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ೨
ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆ ಪಟ್ಟಪರಿಯೊಳು
ಮೋಸ ಹೋಗದೆ ಪುರಂದರವಿಠಲ ಜಗದೀಶನೆನುತಕೊಂಡಾಡುವರೆಲ್ಲ ೩

ಹಾಡಿನ ಹೆಸರು :ಈಸಬೇಕು ಇದ್ದು ಜಯಿಸಬೇಕು
ಹಾಡಿದವರ ಹೆಸರು :ಸುಮನಾ ವೇದಾಂತ್, ಮುಕ್ತಾ ಮುರಳಿ, ನಾಗಲಕ್ಷ್ಮಿ, ಅನ್ನಪೂರ್ಣ ಕೆ. ಮೂರ್ತಿ
ರಾಗ :ಬೃಂದಾವನಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಸುಕನ್ಯಾ ಪ್ರಭಾಕರ್
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

ಏನು ಮಾಡಿದರೇನು ಭವದಿಂದಲು
ಏನು ಮಾಡಿದರೇನು
ಏನು ಮಾಡಿದರೇನು
ಏನು ಮಾಡಿದರೇನು

ಹಾಡಿನ ಹೆಸರು :ಏನು ಮಾಡಿದರೇನು ಭವದಿಂದಲು
ಹಾಡಿದವರ ಹೆಸರು :ಶಂಕರ ಶಾನುಭೋಗ್
ರಾಗ : ನರ್ತಕಿ
ಸಂಗೀತ ನಿರ್ದೇಶಕರು :ಪ್ರಸಾದ್ ಎನ್.ಎಸ್.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏಳು ನಾರಾಯಣ ಏಳು ಲಕ್ಷ್ಮೀರಮಣ
೧೦
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಶ್ರೀಗಿರಿಯೊಡಯ ಶ್ರೀವೆಂಕಟೇಶ ಪ
ಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟುಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ ೧
ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿವಿಧಿಭವಾದಿಗಳೊಡೆಯಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ೨
ದಾಸರೆಲ್ಲರು ಬಂದು ಧೂಳಿದರ್ಶನಕೊಂಡುಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶ ಪುರಂದರ ವಿಠಲರಾಯ ನಿಮ್ಮ ಪಾದವನು ಲೇಸಾಗಿ ಪೊಗಳುವರು ಹರಿಯೇ * ೩

ಹಾಡಿನ ಹೆಸರು :ಏಳು ನಾರಾಯಣ ಏಳು ಲಕ್ಷ್ಮೀರಮಣ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣ
೨೫೬
ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣ
ಪುಂಡರೀಕಾಕ್ಷ ಪುರುಷೋತ್ತಮ ಹರೇ ಪ
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನಯ್ಯ ನೀರಜಾಕ್ಷ ||
ತಂದೆ ತಾಯಿಯು ನೀನೇ ಬಂಧು ಬಳಗವು ನೀನೇ
ಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣಾ ೧
ಕ್ಷಣವೊಂದು ಯುಗವಾಗಿ ತೃಣವು ಪರ್ವತವಾಗಿ
ಎಣಿಸಲಳವಲ್ಲ ಈ ಭವದ ವ್ಯಥೆಯ ||
ಸನಕಾದಿ ಮುನಿವಂದ್ಯ ವನಜಸಂಭವನಯ್ಯ
ಫಣಿಶಾಯಿ ಪ್ರಹ್ಲಾದಗೊಲಿದ ನರಹರಿಯೆ ೨
ಭಕ್ತ ವತ್ಸಲನೆಂಬ ಬಿರುದು ಬೇಕಾದರೆ
ಭಕ್ತರ ಅಧೀನನಾಗಿ ಇರಬೇಡವೆ ||
ಮುಕ್ತಿದಾಯಕ ದೇವ ಹೊನ್ನೂರ ಪುರವಾಸ
ಶಕ್ತ ಪುರಂದರ ವಿಠಲ ಶ್ರೀ ಕೃಷ್ಣಾ ೩

ಹಾಡಿನ ಹೆಸರು :ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣ
ಹಾಡಿದವರ ಹೆಸರು :ವಾಣಿ ಹರೀಶ್
ರಾಗ :ಸಿಂಧು ಭ್ಯೆರವಿ
ತಾಳ :ಆದಿ
ಸಂಗೀತ ನಿರ್ದೇಶಕರು :ಹೆಮಂತ

ನಿರ್ಗಮನ

ಚಂದ್ರಚೂಡ ಶಿವಶಂಕರ
೨೧೦
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣಾ
ನಿನಗೆ ನಮೋ ನಮೋ ಪ
ಸುಂದರ ಮೃಗಧರ ಪಿನಾಕಧರ ಹರ |
ಗಂಗಾಧರ ಗಜ ಚರ್ಮಾಂಬರಧರ ಅ.ಪ
ನಂದಿವಾಹನಾನಂದದಿಂದ ಮೂಜಗದಿ ಮೆರೆವನು ನೀನೆ |
ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ ||
ಅಂದು ಅಮೃತ ಘಟದಿಂದುದಿಸಿದ ವಿಷತಂದು
ಭುಂಜಿಸಿದವನು ನೀನೆ |
ಬಂದು ಚೆಂದದಿ ಇಂದಿರೇಶ ಶ್ರೀ ರಾಮನ ಪೊಂದಿ
ಪೊಗಳುವವ ನೀನೆ ೧
ಬಾಲಮೃಕಂಡನ ಕಾಲನು ಎಳೆವಾಗ
ಪಾಲಿಸಿದಾತನು ನೀನೆ |
ನೀಲಕಂಠ ಕಾಲಕೂಟ ವಿಷವ ಮೆದ್ದ
ಶೂಲಪಾಣಿಯು ನೀನೆ |
ವಾಲಾಯದಿ ಕಪಾಲವ ಪಿಡಿದು ಭಿಕ್ಷೆ
ಕೇಳುವ ದಿಗಂಬರ ನೀನೆ |
ಜಾಲ ಮಾಡುವ ಗೋಪಾಲನೆಂಬ
ಪೆಣ್ಣಿಗೆ ಮರುಳಾದವ ನೀನೆ ೨
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ |
ಕರದಲಿ ವೀಣೆಯ ನುಡಿಸುವ ನಮ್ಮ
ಉರಗಭೂಷಣನು ನೀನೆ ||
ಕೊರಳಲಿ ಭಸ್ಮ ರುದ್ರಾಕ್ಷಿಯ ಧರಿಸಿದ
ಪರಮ ವೈಷ್ಣವನು ನೀನೆ |
ಗರುಡ ಗಮನ ಶ್ರೀ ಪುರಂದರ
ವಿಠಲನ ಪ್ರಾಣ ಪ್ರಿಯನು ನೀನೆ ೩

ಹಾಡಿನ ಹೆಸರು :ಚಂದ್ರಚೂಡ ಶಿವಶಂಕರ
ಸಂಗೀತ ನಿರ್ದೇಶಕರು :ಹೇಮಂತ್ ಬಿ.ಆರ್.
ಸ್ಟುಡಿಯೋ :ಗಣೇಶ್ ಕುಟೀರ, ಬೆಂಗಳೂರು

ನಿರ್ಗಮನ

ಜ್ಞಾನವೊಂದೇ ಸಾಕು
೨೯೫
ಜ್ಞಾನವೊಂದೇ ಸಾಕು ಮುಕ್ತಿಗೆ – ಇ – |
ನ್ನೇನು ಬೇಕು ಹುಚ್ಚುಮರುಳು ಮಾನವನೆ ಪ.
ಪಿತ ಮಾತೆ ಸತಿ ಸುತರನಗಲಿರಬೇಡ |
ಯತಿಯಾಗಿ ಆರಣ್ಯ ಚರಿಸಲು ಬೇಡ ||
ವ್ರತ – ನೇಮವ ಮಾಡಿ ದಣಿಯಲು ಬೇಡ |
ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ ೧
ಜಪತಪವನೆ ಮಾಡಿ ಸೊರಗಲುಬೇಡ |
ಕಪಿಯಂತೆ ಅಡಿಗಡಿಗೆ ಹಾರಲುಬೇಡ ||
(ಉಪವಾಸಪಾಶಕ್ಕೆ) ಸಿಕ್ಕಲುಬೇಡ |
ಚಪಲತನದಲೇನು ಫಲವಿಲ್ಲೋ ಮೂಢ ೨
ಜಾಗರದಲಿ ನಿದ್ರೆ ಕೆಡಿಸಲು ಬೇಡ |
ಓಗರವನು ಬಿಟ್ಟು ಒಣಗಲು ಬೇಡ ||
ಸೋಗುಮಾಡಿ ಹೊತ್ತು ಕಳಿಯಲು ಬೇಡ |
ಗೊಗೆ ಹಾಗೆ ಕಣ್ಣು ತಿರುಗಿಸಬೇಡ ೩
ಹೊನ್ನು – ಹೆಣ್ಣು – ಮಣ್ಣು ಜರೆದಿರಬೇಡ |
ಅನ್ನ – ವಸ್ತ್ರಗಳನ್ನು ತೊರೆದಿರಬೇಡ ||
ಬಣ್ಣದ ದೇಹವ ನೆಚ್ಚಲುಬೇಡ |
ತಣ್ಣೀರೊಳಗೆ ಮುಳುಗಿ ನಡುಗಲು ಬೇಡ ೪
ಮಹಾವಿಷ್ಣುಮೂರ್ತಿಯ ಮರೆತಿರಬೇಡ |
ಸಾಹಸದಿಂದಲಿ ಶ್ರಮ ಪಡಬೇಡ ||
ಕುಹಕ ಬುದ್ಧಿಯಲಿ ಕುಣಿದಾಡಬೇಡ |
ಮಹಿಮ ಪುರಂದರವಿಠಲನ ಮರೆಯದಿರೊ ಮೂಢ ೫

ಹಾಡಿನ ಹೆಸರು :ಜ್ಞಾನವೊಂದೇ ಸಾಕು
ಹಾಡಿದವರ ಹೆಸರು :ಪಂಚಮ್ ಹಳಿಬಂಡಿ
ರಾಗ :ಧೇನುಕ
ಸಂಗೀತ ನಿರ್ದೇಶಕರು :ಪ್ರಸಾದ್ ಎನ್.ಎಸ್.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ತಾರಮ್ಮಯ್ಯ
೧೦೧
ತಾರಮ್ಮಯ್ಯ-ಯದುಕುಲ-
ವಾರಿಧಿ ಚಂದ್ರಮನ ಪ
ಮಾರಜನಕನ-ಮೋಹನಾಂಗನ-|
ಸೇರಿ ಸುಖಿಸೆ ಹಾರೈಸಿ ಬಂದೆವು ಅ.ಪ
ಬಿಲ್ಲು ಹಬ್ಬಗಳಂತೆ_ಅಲ್ಲಿ ಬೀದಿ ಶೃಂಗಾರವಂತೆ ||
ಮಲ್ಲಕಾಳಗೆ ಮದ್ದಾನೆಗಳಂತೆ |
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ೧
ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ ||
ಒದಗಿದ ಮದಗಜ ತುರಗ ಸಾಲಿನಲಿ |
ಮದನಮೋಹನ ಕೃಷ್ಣ ಮಧುರೆಗೆ ತೆರಳಿದ ೨
ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ ||
ಭಕ್ತವತ್ಸಲನ ಬಹು ನಂಬಿದ್ದೆವು |
ಉತ್ಸಾಹ ಭಂಗವ ಮಾಡಿದನಮ್ಮ ೩
ರಂಗನ ನೆರೆನಂಬಿ-ಬಂದೆವು-ಸಂಗ ಸುಖವ ಬಯಸಿ ||
ಭಂಗಿಸಿ ನಮ್ಮನು ಹಾಗೆ ಪೋದನಮ್ಮ |
ಮಂಗಳ ಮೂರುತಿ ಮದನ ಗೋಪಾಲನು ೪
ಶೇಷಗಿರಿಯ ಮೇಲೆ-ಹರಿ ತಾ-ವಾಸವಾಗಿಹ ಕಾಣೆ ||
ಸಾಸಿರನಾಮದ ಒಡೆಯನೆಂದೆನಿಸಿದ |
ಶ್ರೀ ಪುರಂದರವಿಠಲರಾಯನ ೫

ಹಾಡಿನ ಹೆಸರು :ತಾರಮ್ಮಯ್ಯ
ಹಾಡಿದವರ ಹೆಸರು :ಮೇದಿನಿ
ರಾಗ :ಸಿಂಧುಭೈರವಿ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಧರ್ಮಕ್ಕೆ ಕೈಬಾರದೀ ಕಾಲ
೧೮೫
ಧರ್ಮಕ್ಕೆ ಕೈಬಾರದೀ ಕಾಲ – ಪಾಪ – |
ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.
ದಂಡದೋಷಕೆ ಉಂಟು ಪುಂಡುಪೋಕರಿಗುಂಟು |
ಹೆಂಡಿರು – ಮಕ್ಕಳಿಗಿಲ್ಲವೀ ಕಲಿಗಾಲ ||
ಭಂಡೆಯರಿಗುಂಟು ದಿಂಡೆಯರಿಗುಂಟು – ಬೇಡಿ – |
ಕೊಂಡಿವರಿಗಿಲ್ಲವು ಈ ಕಲಿಕಾಲ ೧
ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |
ಹೆತ್ತತಾಯಿಗಿಲ್ಲ ಈ ಕಲಿಕಾಲ ||
ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |
ಉತ್ತಮರಿಗೆ ಇಲ್ಲವೀ ಕಲಿಕಾಲ ೨
ಹುಸಿದಿಟವಾಯಿತು ರಸ – ಕಸವಾಯಿತು |
ಮಸಿ ಮಾಣಿಕವಾಯಿತೀ ಕಾಲ ||
ವಸುಧೆಯೊಳಗೆ ನಮ್ಮ ಪುರಂದರವಿಠಲನ |
ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ ೩

ಹಾಡಿನ ಹೆಸರು :ಧರ್ಮಕ್ಕೆ ಕೈಬಾರದೀ ಕಾಲ
ಹಾಡಿದವರ ಹೆಸರು :ಯಶವಂತ್ ಹಳಿಬಂಡಿ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.

ನಿರ್ಗಮನ

ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ |
ಮಣ್ಣಿಂದ ಸಕಲ ವಸ್ತುಗಳೆಲ್ಲ ||ಪ||
ಮಣ್ಣ ಬಿಟ್ಟವರಿಗಾಧಾರವಿಲ್ಲ|
ಅಣ್ಣಗಳೆಲ್ಲರು ಕೇಳಿರಯ್ಯ ||ಅ||ಪ||
ಅನ್ನ ಉದಕ ಊಟವೀಯುದು ಮಣ್ಣು |
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು |
ಉನ್ನತವಾದ ಪರ್ವತವೆಲ್ಲ ಮಣ್ಣು |
ಕಣ್ಣು ಮೂರುಳ್ಳನ ಕೈಲಾಸ ಮಣ್ಣು ||೧||
ದೇವರಗುಡಿ ಮಠ ಮನೆಯೆಲ್ಲ ಮಣ್ಣು |
ಆವಾಗ ಆಡುವ ಮಡಕೆಯು ತಾ ಮಣ್ಣು |
ಕೋವಿದರಸರ ಕೊಡೆಗಳೆಲ್ಲ ಮಣ್ಣು |
ಪಾವನಗಂಗೆಯ ತಡೆಯೆಲ್ಲ ಮಣ್ಣು ||೨||
ಭಕ್ತ ಭರಣ ಧಾನ್ಯ ಬೆಳೆವುದೇ ಮಣ್ಣು |
ಸತ್ತವರನು ಹೂಳಿಸಿಡುವುದೇ ಮಣ್ಣು |
ಉತ್ತಮವಾದ ವೈಕುಂಠವೇ ಮಣ್ಣು |
ಪುರಂದರವಿಠಲನ ಪುರವೆಲ್ಲ ಮಣ್ಣು||೩||

ಹಾಡಿನ ಹೆಸರು :ಮಣ್ಣಿಂದ ಕಾಯ ಮಣ್ಣಿಂದ
ಹಾಡಿದವರ ಹೆಸರು :ನಾರಾಯಣ್ ಹೆಚ್. ಕೆ.
ಸಂಗೀತ ನಿರ್ದೇಶಕರು : ನಾರಾಯಣ್ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮಾನವಜನ್ಮ ದೊಡ್ಡದು
೨೩೪
ಮಾನವಜನ್ಮ ದೊಡ್ಡದು – ಇದ |
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.
ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |
ಮಣ್ಣುಮುಕ್ಕಿ ಮರುಳಾಗುವರೆ ||
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |
ಉಣ್ಣದೆ ಉಪವಾಸವಿರುವರೇನೋ ೧
ಕಾಲನವರು ಬಂದು ಕರಪಿಡಿದೆಳೆವಾಗ |
ತಾಳು ತಾಳೆಂದರೆ ಕೇಳುವರೆ ? ||
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ೨
ಏನು ಕಾರಣ ಯದುಪತಿಯನು ಮರೆತಿರಿ |
ಧ್ಯಾನ್ಯ – ಧನ – ಸತಿ – ಸುತರಿವು ನಿತ್ಯವೆ? ||
ಇನ್ನಾದರು ಶ್ರೀ ಪುರಂದರವಿಠಲನ |
ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ ೩

ಹಾಡಿನ ಹೆಸರು :ಮಾನವಜನ್ಮ ದೊಡ್ಡದು
ಹಾಡಿದವರ ಹೆಸರು :ಶಿವಮೊಗ್ಗ ಸುಬ್ಬಣ್ಣ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.

ನಿರ್ಗಮನ

ರೊಕ್ಕ ಎರಡಕ್ಕೂ ದುಃಖ
೨೪೬
ರೊಕ್ಕ ಎರಡಕ್ಕೆ ದುಃಖ
ಗಕ್ಕನೆ ಹೋದರೆ ಘಾತ ಕಾಣಕ್ಕ ಪ.
ಚಿಕ್ಕತನಕೆ ತಂದು ಕೆಡಿಸುವುದು ರೊಕ್ಕ
ಮಕ್ಕಳ ಮರಿಗಳ ಮಾಳ್ಪದು ರೊಕ್ಕ
ಸಕ್ಕರೆ ತುಪ್ಪದ ಸಲಿಸುವುದು ರೊಕ್ಕ
ಕಕ್ಕುಲಾತಿಗೆ ತಂದು ಕೆಡಿಸುವುದು ರೊಕ್ಕ ೧
ಕುಂಟರ ಕುರುಡರ ಕುಣಿಸುವುದು ರೊಕ್ಕ
ಗಂಟು ಮಾಡಲಿಕ್ಕೆ ಕಲಿಸುವುದು ರೊಕ್ಕ
ಬಂಟರನೆಲ್ಲ ವಶ ಮಾಡುವುದು ರೊಕ್ಕ
ತುಂಟತನಕೆ ತಂದು ನಿಲಿಸುವುದು ರೊಕ್ಕ ೨
ಇಲ್ಲದ ಗುಣಗಳ ಕಲಿಸುವುದು ರೊಕ್ಕ
ಸಲ್ಲದ ನಾಣ್ಯವ ಸಲಿಸುವುದು ರೊಕ್ಕ
ಬೆಲ್ಲದಹಿಕ್ಕಿಂತಲೂ ಸವಿಯಾದ ರೊಕ್ಕ
ಕೊಲ್ಲಲಿಕ್ಕೆ ಕಾರಣವಾಯಿತು ರೊಕ್ಕ ೩
ಉಂಟಾದ ಗುಣಗಳ ಬಿಡಿಸುವುದು ರೊಕ್ಕ
ನಂಟರ ಇಷ್ಟರ ಮಾಡುವುದು ರೊಕ್ಕ
ಒಂಟೆ – ಆನೆ -ಕುದುರೆ ತರಿಸುವುದು ರೊಕ್ಕ
ಕಂಟಕಗಳನೆಲ್ಲ ಬಿಡಿಸುವುದು ರೊಕ್ಕ ೪
ವಿದ್ವಜ್ಜನರ ವಶ ಮಾಡುವುದು ರೊಕ್ಕ
ಹೊದ್ದಿದವರನು ಹೊರೆವುದು ರೊಕ್ಕ
ಮುದ್ದು ಪುರಂದರವಿಠಲನ ಮರೆಸುವ
ಬಿದ್ದು ಹೋಗುವ ರೊಕ್ಕ ಸುಡು ನೀನಕ್ಕ ೫

ಹಾಡಿನ ಹೆಸರು :ರೊಕ್ಕ ಎರಡಕ್ಕೂ ದುಃಖ
ಹಾಡಿದವರ ಹೆಸರು :ಶಿವಮೊಗ್ಗ ಸುಬ್ಬಣ್ಣ
ಸಂಗೀತ ನಿರ್ದೇಶಕರು :ನಾರಾಯಣ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ