Categories
ರಚನೆಗಳು

ಪುರಂದರದಾಸರು

೨೬
ನೆಲೆಸೆನ್ನ ಹೃದಯ ಮಂದಿರದಿ – ಶ್ರೀ ಹರಿಯೆ ನೀ |
ಸಲಿಸೆಮ್ಮ ಮನದಿಷ್ಟ ಅನುದಿನ ದಯದಿ ಪ
ಸಿರಿಮಿಂಚಿ ಮರುತ್ಯುಪರ್ಣ ಪು – |
ರಾರಿವಂದಿತ ಚರಣ ಸರಸಿಜ ||
ಪರಮಭಕ್ತ ಪ್ರಹ್ಲಾದ ನಾರದ |
ವರಪರಾಶರ ಮುಖಸುಸನ್ನುತ ಅ.ಪ
ನಾರುವಿ ಭಾರವ ಪೊರುವಿ – ಬಲು – |
ಬೇರುಗಳನೆ ಕಿತ್ತು ಮೇಲುವಿ – ಕರಿ – |
ವೈರಿ ರೂಪಗೊಂಡ ಗರುವಿ – ಬ್ರಹ್ಮ – |
ಚಾರಿ ಖಳರ ಕತ್ತರಿಸುವಿ |
ವೀರದಶರಥಸುತ ಸುರಾರ್ಚಿತ |
ಜಾರತನದಲಿ ವ್ರತವ ಕೆಡಿಸುತ |
ತೋರಿ ಮೆರೆವನೆ ತರಳ ಬಲು ಗಂ – |
ಭೀರ ಕುದುರೆಯನೇರಿ ಮೆರೆವನೆ ೧
ಅನಿಮಿಷ ಮಂದರೋದ್ಧರಣ – ನೀನಾ – |
ವನಗಪಂಚಾನನವದನ – ವಾ – |
ಮನ ದಾನವರ ಕೊಯ್ವ ಕದನ – ಹೀನ – |
ದನುಜರಾವಣ ಸಂಹರಣ ||
ಧೇನುಕಾಸುರ ಶಕಟಮರ್ದನ |
ಜ್ಞಾನದಾನ ವಿಡಂಬನಾನಕ |
ಭಾನುಮಸ್ತಕ ನೀಲವರಕರ |
ದೀನಜನಸಂತ್ರಾಣ ನಿಪುಣನೆ ೨
ಮಚ್ಛಕಚ್ಛಪ ಸ್ವಚ್ಛಕಿರನೆ – ಬಲು – |
ಅಚ್ಚ ಶಿಶುಮೊರೆ ಕೇಳಿದವನೆ ||
ಸ್ವೇಚ್ಛೆಯ ವಟು ಪರಶುಕರನೆ – ರಾಮ – |
ವತ್ಸಾಸುರನ ವಧಿಸಿದವನೆ ||
ತುಚ್ಛ ಜನರಿಗೆ ಕಪಟಕಾರಣ |
ಹೆಚ್ಚಿನಶ್ವದ ಮೇಲೆ ಹೊಳೆವನೆ |
ಮೆಚ್ಚಿ ಪುರಂದರ ವಿಠಲನ ಪರ – |
ಮಾಚ್ಯುತದ ಪದವೀವ ದೇವನೆ ೩

೩೨೦
ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯ ಷಡುರಸಾನ್ನವನಿಟ್ಟೆನೊಪ.
ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯ
ಅಮೃತ ಕೂಡಿದ ದಿವ್ಯ ಪರಮಾನ್ನವು ||
ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕ
ಭೂಮಿ ಮೊದಲಾದ ದೇವಿಯರ ಸಹಿತ ತಾನು ೧
ಅರವತ್ತು ಶಾಕ ಲವಣ ಶಾಕ ಮೊದಲಾದ
ಸರಸ ಮೊಸರುಬುತ್ತಿ ಚಿತ್ರಾನ್ನವ
ಪರಮ ಮಂಗಳ ಅಪ್ಪಾಲು ಅತಿರಸಗಳ
ಹರುಷದಿಂದಲಿ ಇಟ್ಟ ಹೊಸ ತುಪ್ಪವ ೨
ವಡೆಯಂಬೋಡಿಯು ದಧಿವಡೆಯ ತಿಂಢಿಣಿ
ಒಡೆಯಸೆ ಬಡಿಸಿದೆ ಅಧಿಕವಾಗಿ ||
ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ ೩

೨೭
ನೋಡು ನೋಡು ನೋಡು ಕೃಷ್ಣಾ |
ಹೇಗೆ ಮಾಡುತಾನೆ |
ಬೇಡಿಕೊಂಡರೆ ಬಾರ ಕೃಷ್ಣ |
ಓಡಿ ಹೋಗುತಾನೆ ಪ
ಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ||
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ೧
ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |
ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ ||
ಹರಿಯುವ ವಾನರರ ಕೊಡ ಹಾರಾಡುತಾನೆ |
ಸಿರಿಕೃಷ್ಣ ಹಾಲು – ತುಪ್ಪ ಸೂರೆಮಾಡುತಾನೆ ೨
ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ |
ನೀಲಗುದುರೆಯನೇರಿ ಹಾರಿಸಾಡುತಾನೆ ||
ಬಾಲಕರ ಕೂಡಿಕೊಂಡು ಕುಣಿದಾಡುತಾನೆ |
ಲೋಲ ಪುರಂದರ ವಿಠಲ ತಾನು ಕುಣಿಯುತಾನೆ ೩

೨೧೩
ನೋಡುವ ಬನ್ನಿರಯ್ಯ ಪ
ಕಾವೇರಿಯ ಭವಹಾರಿಯ |
ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪ
ಮಾತೆಯ ನುತಜನಜಾತೆಯ ಹರಿಮನಃ |
ಪ್ರೀತೆಯ ಭುವನವಿಖ್ಯಾತೆಯ ||
ನೀತಿಯುನ್ನತಕರದಾತೆಯ ಶಿವನ ಸಂ-|
ಭೂತೆಯ ನೋಡುವ ಬನ್ನಿರಯ್ಯ ೧
ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|
ಲಂದು ನಾರದಮುನಿ ಪೊಗಳುತಿರೆ ||
ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|
ದೆಂದರೆ ಮುಳುಗಲದೇತಕಯ್ಯ? ೨
ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |
ಚಕ್ರತೀರ್ಥದೊಳಗೋಲಾಡಿ ||
ಗಕ್ಕನೆ ಸದ್ಗತಿಯಹುದೆಂದು ಮನೆಗಳ |
ಕಕ್ಕುಲತೆಯ ಬಿಟ್ಟು ನಡೆಯಿರಯ್ಯ ೩
ಕಂಡರೆ ಸಕಲ ಪಾತಕ ಪರಿಹಾರ, ಪಡೆ-|
ದುಂಡರೆ ದುರಿತ-ದುರ್ಜನ ದೂರವು ||
ಕೊಂಡಾಡಿದವರಿಗನಂತ ಫಲವು ನೀ-|
ರುಂಡರೆ ಭವಬಂಧ ಮೋಕ್ಷವಯ್ಯ ೪
ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|
ನಂಗಳಿಗಹುದು ಮುಕುತಿಯೆಂದಡೆ ||
ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|
ಪಂಗಳಿರದೋಡಿ ಪೋಪುವಯ್ಯ ೫
ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |
ಆಗಲೆ ತನುವ ಬಿಡಲು ಮುಕುತಿ |
ಭೋಗಿ ಶಯನನ ದಿನದಲಿ ಕಾವೇರಿಗೆ |
ಹೋಗಿ ಮಿಂದವರಿಗಿದೇ ಗತಿಯಯ್ಯ ೬
ಕಾವೇರಿಯ ಗಾಳಿ ಸೋಕಿದ ದೇಶದೊ-
ಳಾವಾವ ಮನುಜರು ಸುಕೃತಿಗಳೇ ||
ಕಾವೇರಿಯ ತೀರವಾಸಿಗಳಿಗೆ ಮಕ್ತಿ
ಆಹೋದು ಸಂದೇಃವಿಲ್ಲವಯ್ಯ೭
ಆವಾವ ಜನ್ಮಕರ್ಮಂಗಳು ಸವೆವರೆ
ಕಾವೇರಿಯ ಕಾಡು ಸುಖಬಾಳಿರೈ ||
ಶ್ರೀವರ ಸ್ವಾಮಿ ಶ್ರೀಪುರಂದರವಿಠಲನ
ಸೇವೆಯೊಳನುದಿನವಿಪ್ಪುದಯ್ಯ ೮

೧೧೫
ನೋಡುವುದೆ ಕಣ್ಣು, ಕೇಳುವುದೆ ಕಿವಿ |
ಪಾಡುವುದೇ ವದನ ಪ
ಗಾಡಿಕಾರ ಶ್ರೀ ವೇಣುಗೋಪಾಲನ |
ಕೂಡಿಕೊಂಡಾಡುವ ಸುಖದ ಸೊಬಗನು ಅ.ಪ
ಎಳೆದುಳಸಿಯ ವನಮಾಲೆಯಿಂದೊಪ್ಪುವ |
ಎಳೆಯ ಗೋವಳರೊಡನಾಡುವ |
ತಳಿತ ತರುವಿನ ನೆಳಲಲ್ಲಿ ನಲಿವನ |
ನಳಿನನಾಭನ ಮುದ್ದು ನಗೆಯ ಸೊಬಗನು ೧
ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |
ಮರಿಗೋಗಿಲೆಯಂತೆ ಕೂಗುವನ ||
ಎರಳೆಯಂತೆ ಜಿಗಿಜಿಗಿದಾಡುವ ತುಂಬಿ |
ಶಿರವ ತಗ್ಗಿಸುವಂತೆ ಝೇಂಕರಿಸುವನ ೨
ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |
ಚೆಲ್ವೆಯರಿಗೆ ಮುಡಿಸುವನ ||
ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |
ಚೆಲ್ಲೆಗಂಗಳ ಮುದ್ದು ಘುಲ್ಲನಯನನ ೩
ಪೊಂಗೊಳಲೂದುತ ಮೃಗಖಗ ಜಾತಿಯ |
ಸಂಗಡಿಸುತಲಿಪ್ಪನ ||
ಅಂಗವ ಮರೆತು ನೂರಂಗನೆಯರಲಿ ಬೆಳು-|
ದಿಂಗಳೊಳಗೆ ಕುಣಿದಾಡುವ ದೇವನ ೪
ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |
ಸೆರಗಪಿಡಿಸಿ ಕೊಂಬನ ||
ಕರುಣಾಕರ ಶ್ರೀ ಪುರಂದರವಿಠಲ |
ಶರಣಾಗತ ರಕ್ಷಕ ರಮೆಯರಸನ ೫

೧೧೬
ನೋಡೆ ಗೋಪೀ ಗೋಕುಲದೊಳು ಹರಿ |
ಮಾಡುವ ಲೀಲೆಗಳ ಪ್ರತಿಯಮ್ಮ ಪ
ರಂಗನೆತ್ತಿ ಸಂಭ್ರಮದಿಂದಲಿ |
ಅಂಗಣದೊಳಗೆ ನಿಂದಾಡಿಸಲು ||
ತಿಂಗಳ ಬಿಂಬವ ಕಂಡಾಕ್ಷಣ ತ-|
ನ್ನಂಗೈಯೊಳಗೇ ನಿಲಿಸಿಕೊಡೆಂಬ ೧
ಚಿನ್ನನು ನೋಡಲಿ ಎಂದಕ್ಕರದಲಿ |
ಕನ್ನಡಿಯನು ತಂದು ಕೈಯಲಿ ಕೊಡಲು ||
ತನ್ನ ಮುಖದ ಪ್ರತಿಬಿಂಬವ ಕಂಡು ಅ-|
ದನ್ನು ಕರೆದು ಬಳಿಯಿರಿಸಿರಿಯೆಂಬ ೨
ಅರಿಯದೆ ದೀಪವ ಕೆಂಪಗೆ ಕಂಡು |
ಸೆರಗಿನಲ್ಲಿ ಕೊಡು ಆಡುವೆನೆಂಬ ||
ಕರುವಿನಂತೆ ತನ್ನನು ಕೊಂಡೊಯ್ದು |
ತುರುಗಳ ಮೊಲೆಯನು ಉಣಿಸಿರಿಯೆಂಬ ೩
ಪರಿಪರಿಯಿಂದಲಿ ಗೋಡೆಯ ಮೇಲೆ |
ಬರೆದಿಹ ಚಿತ್ರದ ಗೊಂಬೆಯ ನೋಡಿ ||
ಕರವ ಪಿಡಿದು ಎಳೆತಂದು ತನ್ನಯ
ನೆರೆಯಲ್ಲಿಯೆ ನೀವಿರಿಸಿರಿಯೆಂಬ ೪
ತರುಣಿ ನಿನ್ನಯ ಸುಕೃತದ ಫಲವು |
ಹರುಷವೆಮಗೆ ಅಭಿವೃದ್ಧಿಯಾಗಿಹುದು ||
ಪುರಂದರವಿಠಲನ ಚರಿಯವ ನೋಡಲು |
ಧರೆಯೊಳಗಿನ ಬಾಲಕರಂತಲ್ಲವೆ ೫

೧೧೭
ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲ
ಸುಮ್ಮನೆ ಮುನಿದ ಗೋವಳನಂಮ್ಮ ಪ
ತೆಗೆದು ಕಟ್ಟಿನ ಖಿಲ್ಲ ಚೇವಡೆಗೈದು | ಮುಗುಳಂಬನೆ
ಶಿರದಲಿ ಮನೆಮಾಡಿ | ಅಗಲಿದವರ ಕಟ್ಟೆಸೆವೆನೆಂದು
ಹಗಲಿರಳೂ | ಸಾಗಿಸಿಕೊಂಡಿಹನೆ ೧
ನೀರೆಯರ ದೇಹದೊಡನೆ ಬಳುಕಿ ನೆರಹಿ ಕೋಗಿಲೆವಿಂಡ
ಚವರುಚನೆ ಮಾಡಿ | ತರಳ ಮಾವುತಗೆ ಶೇನಾದಿ ಪಟ್ಟವಗಟ್ಟಿ
ಚಾವಕೆ ಗುರಿಮಾಡಿದನಂಮ್ಮಾ ೨
ಅಂಗವಿಲ್ಲದವರ ಕಡವಿಯ ಕೇಳಿ | ದೆನೆನಿಸುತದೆ |
ಅವನ ಪುಶಕಾಸೂ ಅಂಗನೆ ತಾರೆಲೆ ಪುರಂದರವಿಠಲನಾ
ಹಿಂಗಿರಲಾರೆನೂ ಮುದ್ದು ಮೂರುತಿಯಾ ೩

೩೨೧
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ
ವೆಂಕಟರಮಣಗಾರತಿಯತ್ತಿರೆ ಪ.
ಮತ್ಸ್ಯಾವತಾರಗೆ ಮಂದರೋದ್ಧಾರಗೆ
ಉತ್ಸಾಹದಿ ಭೂಮಿ ತಂದವಗೆ ||
ವತ್ಸಗಾಗಿ ಕಂಬದಿಂದಲಿ ಬಂದ
ಉತ್ಸವ ನರಸಿಂಹಗಾರತಿಯೆತ್ತಿರೆ ೧
ವಾಮನ ರೂಪದಿ ದಾನ ಬೇಡಿದವಗೆ
ನೇಮದಿ ಕೊಡಲಿಯ ಪಿಡಿದವಗೆ ||
ರಾಮನಾಗಿ ದಶಶಿರನನು ಕೊಂದ
ಸ್ವಾಮಿ ಶ್ರೀ ಕೃಷ್ಣಗಾರತಿಯೆತ್ತಿರೆ೨
ಬತ್ತಲೆ ನಿಂತಗೆ ಬೌದ್ಧಾವತಾರಗೆ
ಉತ್ತಮ ಅಶ್ವವನೇರಿದಗೆ ||
ಭಕ್ತರ ಸಲಹುವ ಪುರಂದರವಿಠಲಗೆ
ಮುತ್ತೈದೆಯರಾರತಿಯೆತ್ತಿರೆ ೩

೨೦೯
ಪತಿಭಕುತಿಯಿಲ್ಲದಿಹ ಸತಿಯ ಸಂಗ
ವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಪ.
ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿ
ಕಂಡಾಡಿ ಏಕವಚನಂಗಳನಾಗ
ಅಂಡಲೆದು ಮಾರ್ಮಲೆಂದು ಕಾಡಿಬೇಡುವ – ಇಂಥ
ಭಂಡುದೊತ್ತಿನ ಕೂಟ ಏಳುನಾಗರ ಕಾಟ ೧
ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆ
ತಂದರೆ ಹತ್ತು ಮನೆಯೊಳಗೊಂದ ಮಾಡಿ
ಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದ
ದಿಂದ ಹೋಹಳು ನಾರಿ ಬಹು ದೊಡ್ಡ ಮಾರಿ ೨
ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲ
ಇಕ್ಕುವಡೆ ಬೆಳ್ಳಿ – ಬಂಗಾರವಿಲ್ಲ
ಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬ
ಮೂರ್ಖ ತೊತ್ತಿನ ಸಂಗ ಕುಲಕೆಲ್ಲ ಭಂಗ ೩
ತಾಯನು ಹೊರಡಿಸು ತಂದೆಯನು ತೆರಳಿಸು
ದಾಯಾದಿಯನು ಮನೆಯಲಿರಿಸಬೇಡ
ಬಾಯಿನ್ನು ಮನೆ ಕಟ್ಟಿ ಬೇರಿರುವ ನಾವೆಂಬ
ಮಾಯಾಕಾತಿಯ ಸಂಗ ಅಭಿಮಾನ ಭಂಗ ೪
ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದು
ಕಷ್ಟ ಸೆರೆಯೆನುವೆನೆ ಈ ಪರಿಯಲಿ
ಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀ ಪುರಂದರ
ವಿಠಲ ಪಶ್ಚಿಮದ ರಂಗಧಾಮ ೫

೨೧೦
ಪಥ ನಡೆಯದೈಯ ಪರಲೋಕಕೈದುವರೆ, ಮ ಪ.
ನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ಅ
ಗಿಳಿವಿಂಡು ಕೋಗಿಲೆ ವಸಂತ ಮಾರುತ ಭ್ರಮರ
ಬಲವೆರಸಿ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಟರು ಬಲು ಸನ್ಯಾಸಿ ಯೋಗಿಗಳು
ಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು ೧
ತನು ರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆಯೆ
ಘನ ಸಿಂಹ ಖಗ ಮೃಗಗಳಟ್ಟಿಣಿಸುವ
ವನಿತೆಯರ ಕಾಯಕಾಂತಾರದಲಿ ದುರ್ಗಮ
ಸ್ತನ ಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತಿರೆ ೨
ಕಾಳಗದೊಳಿದಿರಲ್ಲ ಸುರನರೋರಗರ ಕ
ಟ್ಟಾಳು ಮನ್ಮಥನ ಛಲದಂಕ ಬಿರುದು
ಪೇಳಲೆನ್ನಳವಲ್ಲ ಪುರಂದರವಿಠಲನ
ಆಳು ಸಂಗಡವಿದ್ದರವಗೆ ಭಯವಿಲ್ಲ * ೩

೧೭೯
ಪರಮ ಪದವಿಯ ನೀವ ಗುರುಮುಖ್ಯ ಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಪ
ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ
ಬಂದು ದಾಶರಥಿಯ ಪಾದಕೆರಗಿ ||
ಸಿಂಧುವನೆ ದಾಟಿ ಮುದ್ರಿಕೆಯಿಕ್ತು ದಾನವರ
ವೃಂದಪುರ ದಹಿಸಿ ಚೂಡಾಮಣಿಯ ತಂದವನ ೧
ದ್ಪಾಪರಯುಗದಲಿ ಭೀಮಸೇನ ನೆನಿಸಿ
ಶ್ರೀಪತಿಯ ಪಾದ ಕಡು ಭಜಕನಾಗಿ
ಕೋಪಾವೇಶದಲಿ ದುಃಶಾಸನನನು ಸೀಳಿ
ಭೂಪರ ಬಲದೊಳಗೆ ಜರೆಜರೆದು ಕರೆದವನ ೨
ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ
ಕಲುಷದ ಮಾಯಿಗಳನು ಸೋಲಿಸಿ
ಖಿಲವಾದ ಮಧ್ವಮತವನೆ ನಿಲಿಸಿ ಕಾಗೆ-
ನೆಲೆಯಾದಿ ಕೇಶವನ ಪರದೈವನೆಂದೆನಿಸುವನ * ೩

೩೦೮
ಪರಾಕು ಮಾಡದೆ ಪರಾಮರಿಸಿ ಎನ್ನ
ಪರಾಧಂಗಳ ಕ್ಷಮಿಸೋ ಪ
ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ ಅ.¥ À
ನರರೊಳಗೆ ಪಾಮರನು ನಾನಿಹ
ಪರಕೆ ಸಾಧನವರೀಯೆ ಶ್ರೀಹರಿ ||
ಚರಣ ಕಮಲಕೆ ಶರಣುಹೊಕ್ಕೆನು
ಕರುಣದಿಂದ ನಿನ್ನ ಸ್ಮರಣೆಯೆನಗಿತ್ತು ೧
ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳ ನಾನರಿಯೆ ||
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಹತವ ಮಾಡೋ ಅಪಾರಮಹಿಮನೇ ೨
ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆಯ ಲಾಲಿಸಿ ತರುಳಗೊಲಿದು ನೀ
ಸಿರಿರಮಣ ನಿನ್ನ ಸರಿಯಾರ ಕಾಣೆ
ಪುರಾರಿನುತ ಸಿರಿ ಪುರಂದರ ವಿಠಲ ೩

೨೧೧
ಪರಾನ್ನವೇತಕೆ ಬಂತಯ್ಯ – ಎನಗೆ ಇಂದು |
ಪರಾನ್ನವೇತಕೆ ಬಂತಯ್ಯ ? ಪ.
ಪರಾನ್ನವೇತಕೆ ಬಂತು ಪರಮೇಷ್ಟಿಜನಕನ |
ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪ
ಸ್ನಾನ ಮಾಡಿಕೊಂಡು – ಕುಳಿತು ಬಹು |
ಮೌನದಿಂದಿರಲೀಸದು ||
ಶ್ರೀನಿವಾಸನ ಧ್ಯಾನಮಾಡದೆ ಮವಿದು |
ತಾನೆ ಓಡುವದು ಶ್ವಾನನೋಪಾದಿಯಲಿ೧
ಜಪವ ಮಾಡುವ ಕಾಲದಿ – ಕರೆಯ ಬರೆ |
ವಿಪರೀತವಾಗುವುದು ||
ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |
ಸುಪಥವ ತಪ್ಪಿಸಿ ಅಪಗತಿ ಕೊಡುವಂಥ೨
ಪ್ರಸ್ಥದ ಮನೆಯೊಳಗೆ – ಕರೆಯದೆ ಪೋಗಿ |
ಸ್ವಸ್ಥದಿ ಕುಳಿತುಕೊಂಡು ||
ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |
ಶಸ್ತವಾಯಿತು ಎಂದು ಮುಸ್ತಕ ತಿರುವುವ ೩
ಯಜಮಾನನು ಮಾಡದ – ಪಾಪಂಗಳ |
ವ್ರಜವು ಅನ್ನದೊಳಿರಲು ||
ದ್ವಿಜರು ಭುಂಜಿಸಲಾಗಿ ಅವರ ಉದರದೊಳು ||
ನಿಜವಾಗಿ ಸೇರುವುದು ಸುಜನರು ಲಾಲಿಸಿ ೪
ಮಾಡಿದ ಮಹಾಪುಣ್ಯವು – ಓದನಕಾಗಿ – |
ಕಾಡಿಗೊಪ್ಪಿಸಿ ಕೊಡುತ |
ರೂಢಿಗಧಿಕನಾದ ಪುರಂದರವಿಠಲನ |
ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ೫

೨೮
ಪವಡಿಸು ಪರಮಾತ್ಮನೆ ಸ್ವಾಮಿ
ಭವರೋಗ ವೈದ್ಯನೆ ಭಕ್ತರ ಪ್ರಿಯನೆ ಪ
ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿ
ಇಂದ್ರನೀಲ ಮಣಿವಇಂಟಪದಿ ||
ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲು
ಸಿಂಧುಶಯನ ಆನಂದದಿಂದಲಿ ೧
ತೂಗುಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆಯ ಹೂವಿನ ಒರಗು ||
ಸಾಗರಸುತೆಯ ಸಮ್ಮೇಳದಲಿ ನಿಜ
ಭೋಗವ ಪಡುತ ಓಲಾಡುತಿರು ೨
ಸದ್ದಡಗಿತು ಗಡಿಯಾರ ಸಾರಿತು ಬೇಗ
ಮುದ್ರೆಗಳಾಗಿವೆ ಬಾಗಿಲಿಗೆ ||
ತಿದ್ದಿದ ಧವಳ ಶಂಖಗಳ ನಾದದಿಂದ
ಪದ್ಮನಾಭ ಶ್ರೀ ಪುರಂದರವಿಠಲ ೩

೨೧೩
ಪಾಪಿ ಬಲ್ಲನೆ ಪರರ ಸುಖ – ದುಃಖದಿಂಗಿತವ
ಕೋಪಿ ಬಲ್ಲನೆ ದಯಾದಾಕ್ಷಿಣ್ಯವ ಪ.
ಹೇನು ಬಲ್ಲುದೆ ಮುಡಿದ ಹೂವಿನಾ ಪರಿಮಳವ
ಶ್ವಾನ ಬಲ್ಲುದೆ ರಾಗಭೇದಂಗಳ
ಮೀನು ಬಲ್ಲುದೇ ನೀರು ಚವುಳು – ಸವಿಯೆಂಬುದನು
ಹೀನ ಬಲ್ಲನೆ ತನಗೆ ಉಪಕಾರ ಮಾಡಿದುದ? ೧
ಕತ್ತೆ ಬಲ್ಲುದೆ ತಾನು ಹೊತ್ತಿರುವ ನಿಧಿಯನ್ನು
ಮೃತ್ಯು ಬಲ್ಲುದೆ ದಯಾ – ದಾಕ್ಷಿಣ್ಯವ
ತೊತ್ತು ಬಲ್ಲಳೆ ಹೀನ – ಮಾನದಭಿಮಾನವನು
ಮತ್ತೆ ಬಲ್ಲುದೆ ಬೆಕ್ಕು ಮನೆಯ ಮೀಸಲನು? ೨
ಹೇಡಿ ತಾ ಬಲ್ಲನೇ ರಣರಂಗ ಧೀರವನು
ಕೋಡಗವು ಬಲ್ಲುದೇ ರತ್ನದಾಭರಣ
ಬೇಡದುದನೀವ ಪುರಂದರವಿಠಲನಲ್ಲದೆ
ನಾಡ ದೈವಗಲೆಲ್ಲ ಕೂಡಬಲ್ಲುದೇ? ೩

೨೧೨
ಪಾಪಿಗೇತಕೆ ಪರಮಾತ್ಮ ಬೋಧ
ಕೋಪಿಗೇತಕೆ ಸುಗುಣ – ಶಾಂತ ಬುದ್ಧಿ ಪ.
ಹಂದಿಗೆ ಗಂಧವೇಕೆ ಅಂಧಕೆ ಕನ್ನಡಿಯೇಕೆ
ಮಂದಮತಿ ಮನುಜರಿಗೆ ಮಂತ್ರವೇಕೆ
ತಂದೆ – ತಾಯಂದಿರಿಗೆ ಕುಂದು ತರುವ ಮಗಳೇಕೆ
ನಿಂದು ವಾದಿಸುವಂಥ ಸತಿಯು ತಾನೇಕೆ ೧
ಕತ್ತೆಗಮ್ರತವೇಕೆ ಎತ್ತಿಗೆ ಕರೆಹವೇಕೆ
ತೊತ್ತಿಗೆ ಛತ್ರದ ನೆರಳೇತಕೆ
ಕುತ್ತಿಗೆ ಕೊಯ್ಯುವನ ಸೊಗಸು ಮಾತುಗಳೇಕೆ
ಸತ್ಯವಿಲ್ಲದೆ ನುಡಿವ ಯೋಗಿಯೇಕೆ ೨
ಷಂಡಗೆ ಹೆಂಡತಿಯೇಕೆ ತೊಂಡಿರಿಗೆ ಖಂಡೆಯುವೇಕೆ
ಮುಂಡೆಮೋಳಿಗೆ ಮುತ್ತಿನ ದಂಡೆಯೇಕೆ
ಮಂಡಳದೊಳಗೆ ಶ್ರೀ ಪುರಂದರವಿಠಲನ
ಕಂಡು ಭಜಿಸದ ಮನುಜರಿದ್ದೇತಕೆ ೩

೬೩
ಪಾಪೋಸು ಹೋದುವಲ್ಲ – ಸ್ವಾಮಿ ಎನ್ನ –
ಪಾಪೋಸು ಹೋದುವಲ್ಲ………………. ಪ.
ಅಪಾರ ಜನುಮದಿ ಆರ್ಚನೆಯ ಮಾಡಿದ ………. ಅಪ
ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ |
ಪರಿ ಪರಿ ತೀರ್ಥ ಸ್ನಾನಗಳ ಮಾಡೆ ||
ಹರಿದಾಸರ ಕೊಡಿ ಶ್ರೀನಿವಾಸನ ಸಂ –
ದರುಶನದಲ್ಲಿ ಮೈಮರೆದಿದ್ದೆನೊ ಎನ್ನ ೧
ಪರಮ ಭಾಗವತರು ಹರಿಕಥೆ ಪೇಳಲು |
ಪರಮ ಭಕುತಿಯಲಿ ಕೇಳುತಿದ್ದೆ ||
ಪರಮ ಪಾಪಿಷ್ಠರ ಪಾಲಿಗೆ ಪೋದವು |
ಪರಮಾತ್ಮನ ಮನಸಿಗೆ ಬಂತು ಹೀಗೆ …………. ೨
ಮಾಯೆ ಒಲಿದು ಎನಗೆ ತಂದು ಕೊಟ್ಟದ್ದಳು |
ದಾಯಾದಿಗಳು ನೋಡಿ ಸಹಿಸಲಿಲ್ಲ ||
ಮಾಯಾ ರಮಣ ನೋಡಿ ಪುರಂದರವಿಠಲ
ಮಾಯೆಯಿಂದ ಮಟ್ಟಮಾಯವಾದವು ಈಗ೩

೨೦೨
ಪಾಲಿಸೆಮ್ಮ ಮುದ್ದು ಶಾರದೆ-ಎನ್ನ-
ನಾಲಗೆಯಲಿ ನಿಲ್ಲಬಾರದೆ ಪ
ಲೋಲಲೋಚನೆ ತಾಯೆ | ನಿರುತ ನಂಬಿದೆ ನಿನ್ನ ಅ.ಪ
ಅಕ್ಷರಕ್ಷರ ವಿವೇಕವ-ನಿಮ್ಮ ಕುಕ್ಷಿಯೊಳೀರೇಳು ಲೋಕವ |
ಸಾಕ್ಷಾದ್ರೂಪದಿಂದ ಒಳಿದು ರಕ್ಷಿಸು ತಾಯೆ ೧
ಶೃಂಗಾರಪುರ ನೆಲೆವಾಸಿನಿ-ದೇವಿ-ಸಂಗೀತ ಗಾನ ವಿಲಾಸಿನಿ |
ಭೃಂಗಕುಂತಳೆ ತಾಯೆ-ಭಳಿರೇ ಬ್ರಹ್ಮನ ರಾಣಿ ೨
ಸರ್ವಾಲಂಕಾರಮಯ ಮೂರುತಿ-ನಿನ್ನ
ಚರಣವ ಸ್ತುತಿಸುವೆ ಕೀರುತಿ |
ವರದ ಪುರಂದರ ವಿಠಲನ ಸ್ತುತಿಸುತ ೩

ಆಂಧ್ರಪ್ರದೇಶದ ಶೋಲಿಂಗರ
೨೦
ಪಾವನನವ ಪಾವನನವ ಪಾವನನವ ಜಗಕೆ |
ದೇವ ಶ್ರೀಹರಿಯ ಪಾದವು ಸೋಕಿದರೆ ಪಹರಿಯ ನೆನೆಯೆ ನಾಲಗೆ ಪಾವನ,
ಸಿರಿ ಮುದ್ರೆಯು ಭುಜಕೆ ಪಾವನ |
ಉರದಿ ನಾಭಿಗೆ ನಾಮವನಿಡೆ ಪಾವನವೊ ||
ಕೊರಳೊಳು ಶ್ರೀ ತುಳಸೀಮಣಿ ನಳಿನಾಕ್ಷವು ಇರೆ ಪಾವನ |
ಪರಮ ವೈಷ್ಣವರಿಗೆರಗಿದ ಶಿರ ಪಾವನವೊ ೧
ತುಲಸಿ ಹಿಡಿಯೆ ಕೈ ಪಾವನ, ದಲವನಿಡೆ ಕಿವಿ ಪಾವನ |
ಸ್ಥಲದ ಮೃತ್ತಿಕೆ ಇಡಲು ಆ ಪಣೆ ಪಾವನವೊ ||
ಬಳಲಿದ ವೃಂದಾವನವನು ಬೆಳೆಸಿ ಬಂದವ ಪಾವನನು |
ತುಲಸಿತೀರ್ಥವ ಕೊಂಡಾತನು ಪಾವನನಯ್ಯ ೨
ಏಕಾದಶಿಯ ವ್ರತ ಪಾವನ ಎಲ್ಲವ ತೊರೆದವ ಪಾವನ |
ನಾಕು ಜಾವದಿ ಜಾಗರವಿರೆ ಪಾವನವೊ ||
ಕಾಕು ನುಡಿಯದೆ ಕಾಮಿತ ಪ್ರದನೆಂಬ ಶ್ರೀಕಾಂತನ ಪಾದವ |
ಏಕಾಂತದಿ ನೆನೆವನು ಪಾವನನೊ ೩
[ಕೃತಿರಮಣನ ಕಥೆಯನೊಪ್ಪಿ] ಕೇಳಿದ ಕಿವಿ ಪಾವನ |
ಶತವೃಂದಾರಕರ ತಲೆಯ ನೆಲೆ ಪಾವನವೊ ||
ಮತಿ ಬೇಡಿದ ಅಜ ಪಾವನ ಯತಿ ಪಾವನ ವೈಷ್ಣವರ |
ಮತವಿಡಿದೋದಿದ ರಾಮನ ಕಥೆ ಪಾವನವೊ ೪
ಸಾಮವೇದ ಪಾವನವು – ಭೂಮಿಪತಿ ನೀ ಪಾವನ |
ನಾಮಧಾರಿಯು ಪಾವನ ನಾರಾಯಣನ ||
ತಾಮಸವಿಲ್ಲದೆ ಹರಿ ಸರ್ವೊತ್ತಮನೆಂಬ |
ಸೀಮೆಯು ಪಾವನ ಪುರಂದರವಿಠಲನ ೫

೬೪
ಪಿಂಡಾಂಡದೊಳಗಿನ ಗಂಡನ ಕಾಣದೆ |
ಮುಂಡೆಯರಾದರು ಪಂಡಿತರೆಲ್ಲ ……….. ಪ.
ಆಧಾರ ಮೊದಲಾದ ಆರು ಚಕ್ರಮೀರಿ |
ನಾದಬಿಂದು ಕಳೆಯಳಿದ ಬಳಿಕ ||
ಶೋಧಿಸಿ ಸುಧೆಯ ಪ್ರಸಾದವನುಣ್ಣದೆ |
ಓದುತ ಮನದೊಳು ಒಂದನು ತಿಳಿಯದೆ ೧
ನಾದದೊಳಗೆ ಸುನಾದ ಓಂಕಾರದಿ |
ಪದವ ಬಿತ್ತಿ ಪರಿಣಾಮಿಯಾಗದೆ ||
ವೇದಾಂತರೂಪ ತದ್ರೂಪ ನಾಲಗೆಯಲಿ |
ವಾದಿಸಿ ಮನದೊಳು ಒಂದನು ಅರಿಯದೆ…………. ೨
ನವನಾಳ ಮಧ್ಯದಿ ಪವನ ಸುತ್ತಿದ್ದು ಪಣಿ |
ಶಿವನ ತ್ರಿಪುಟ ಸ್ಥಿತಿ ಸ್ಥಿರವಾಗದೆ ||
ಭವರೋಗ ವೈದ್ಯನ ಧ್ಯಾನವ ಮಾಡದೆ |
ಶವುರಿ ಶ್ರೀ ಪುರಂದರ ವಿಠಲನ ಸ್ಮರಿಸದೆ ೩

೬೫
ಪುಟ್ಟಿದವೆರಡು ಜೀವನ |
ಬಟ್ಟ ಬಯಲು ಬೇಲಿಯ ನುಂಗುತಿದೆಕೋಪ.
ಆಸರ ಕಪ್ಪೆಯ ದೇಶವನುಂಗಿತಾ |
ಕಾಶವನೊಂದು ನೊಣ ನುಂಗಿತು ||
ದೇಶದ ಹಳ್ಳ ಕೆರೆಕಟ್ಟಿ ಭಾವಿಗಳನೆಲ್ಲಾ |
ಪೋಶನ ಮಾಡಿತು ಒಂದಿರುವೆ…………. ೧
ಹಲ್ಲಿ ನುಂಗಿತೊಂದು ಕಲ್ಲಮಡಕೆಯನು |
ಇಲಿ ನುಂಗಿತೀರೇಳು ಭುವನವನು ||
ಹಾರಿದ್ದ ಕೊಡನೊಂದ ಹಸುಗೂಸು ನುಂಗಿತು |
ಬಲ್ಲ ಮಹಾತ್ಮರು ಇದ ಪೇಳಿರಯ್ಯ ………….೨
ಕಾಷ್ಠವು ನುಂಗಿತು ಗಿರಿಪರ್ವತಂಗಳ |
ಕೃಷ್ಣನ ನುಂಗಿತು ಕಡಲೆಕಾಯಿ ಉಂ – |
ಗುಷ್ಟದಿಂದಲೆ ಸೀಳ್ದ ಸದ್ಗುರುರಾಯ ಅ
ದೃಷ್ಟ ಮೂರುತಿ ಶ್ರೀ ಪುರಂದರ ವಿಠಲ ೩

೩೦೯
ಪುಟ್ಟಿಸಬೇಡವೊ ದೇವ – ಎಂದಿಗು ಇಂಥ-|
ಕಷ್ಟಪಟ್ಟು ತಿರುಗುವ ಪಾಪಿ ಜೀವನವ ಪ
ನರರ ಸ್ತುತಿಸಿ ನಾಲಗೆ ಬರಡು ಮಾಡಿಕೊಂಡು |
ದರ ಪೋಷಣೆಗಾಗಿ ಅವರಿವರೆನದೆ ||
ಧರೆಯೊಳು ಲಜ್ಜೆ – ಮಾನಗಳೆಲ್ಲವೀಡಾಡಿ |
ಪರರ ಪೀಡಿಸಿ ತಿಂಬ ಪಾಪೀ ಜೀವನವ ೧
ಎಂಟುಗೇಣು ಶರೀರವ ಒಂದು ಗೇಣು ಮಾಡಿಕೊಂಡು|
ಪಂಟಿಸುತ್ತ ಮೆಲ್ಲಮೆಲ್ಲನೆ ಪೋಗಿ ||
ಗಂಟಲಸೆರೆಗಳುಬ್ಬಿ ಕೇಳುವ ಸಂಕಟ ವೈ-|
ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ ೨
ಲೆಕ್ಕದಲಿ ನೀ ಮೊದಲು ಮಾಡಿದಷ್ಟಲ್ಲದೆ |
ಸಖ್ಯಕೆ ವೆಗ್ಗಳ ಕೊಡುವರುಂಟೆ ||
ಕಕ್ಕುಲತೆ ಪಟ್ಟರಿಲ್ಲ ಕರುಣಾಳು ನಿನ್ನ ಮೊರೆ |
ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ ೩

೩೧೦
ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದ
ಉರ್ವಿಯೊಳು ಜನಿಸಿದೆನೊ ಕೃಷ್ಣ ಪ
ಕಾರುಣ್ಯನಿಧಿಯನ್ನ ಕಾಯಬೇಕಯ್ಯ ಹರಿ
ವಾರಿಜನಾಭನೇ ಮುದ್ದುಕೃಷ್ಣ ಅ.ಪ
ಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆ
ಕಷ್ಟನಾದೆನು ಕೇಳೊ ಕೃಷ್ಣ
ತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂ
ಗೆಟ್ಟು ಸೊರಗಿದೆನಯ್ಯ ಕೃಷ್ಣ
ಮುಟ್ಟಲಮ್ಮರು ಎನ್ನ ಸತಿ ಸುತರು ಬಾಂಧವರು
ಅಟ್ಟಿ ಎಳೆಯುತ್ತಿಹರೋ ಕೃಷ್ಣ
ಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು
ಮುಟ್ಟುವುದು ನಿನಗಯ್ಯ ಕೃಷ್ಣ ೧
ಕಾಶಿಯಾವಾಸವನು ಬಯಸಿ ಬಹುದಿನದಿಂದ
ಆಸೆಯೊಳಗಿದ್ದೆನಯ್ಯ ಕೃಷ್ಣ
ಗಾಸಿಯನು ಮಾಡದಲೆ ದೋಷವನು ಪರಿಹರಿಸೊ
ಸಾಸಿರನಾಮದ ಕೃಷ್ಣ
ಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯ
ಪಾಶದಿಂದಲಿ ಬಿಗಿದರೇ ಕೃಷ್ಣ
ಕಂಸಮರ್ದನನೆ ನೀ ಕಾಯಬೇಕಯ್ಯ ಹರಿ
ವಾಸುದೇವನೆ ಮುದ್ದು ಕೃಷ್ಣ ೨
ಲೋಕದೊಳಗೆನ್ನನು ಪೋಲ್ಪ ಪಾಪಿಗಳನ್ನು
ನೀ ಕಂಡು ಬಲ್ಲೆಯಾ ಕೃಷ್ಣ
ಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿ
ವೇಕಿಯನೆ ಮಾಡಯ್ಯ ಕೃಷ್ಣ
ರಾಕೇಂದುಮುಖಿ ದ್ರೌಪದಿಯ ಮಾನವ ಕಾಯ್ದೆ
ಆಕೆಗಕ್ಷಯವಿತ್ತೆ ಕೃಷ್ಣ ಪಿ
ನಾಕಿ ಸಖ ಪುರಂದರ ವಿಠಲನೆ ಉಡುಪಿಯ ವಾಸ
ಸಾಕಿ ಸಲಹೈ ಎನ್ನ ಕೃಷ್ಣ *

೧೧೮
ಪೇಳಲಳವೆ ನಿನ್ನ ಮಹಿಮೆಯ-ಶ್ರೀರಂಗ ಧಾಮ |
ಪೇಳಲಳವೆ ನಿನ್ನ ಮಹಿಮೆಯ ಪ
ನೀಲ ಮೇಘಶ್ಯಾಮ ನಿನ್ನ |
ಬಾಲಲೀಲೆಯಾಟವ ಅ.ಪ
ವಿಷದ ಮೊಲೆಯ ಪೂತನಿಯ |
ಅಸುವ ಹೀರಿದ ಶೂರನಾದೆ ||
|ಉಸಿರಲಳವೆ ನಿನ್ನ ಮಹಿಮೆ |
ಅಮ್ಮಮ್ಮಮ್ಮಮ್ಮಮ್ಮ ||
ಕೆಸರ ತಿನಬೇಡೆನುತ ತಾಯಿ |
ಶಿಶುವಿನ ವದನವ ನೋಡಿದಳಾಗ |
ದಶಚತುರ್ಭುವನವ ತೋರಿದ ಬಾಯೊಳ |
ಗಲ್ಲಲ್ಲಲಲ್ಲಲ್ಲಲ್ಲೇ ೧
ಬಾಲಲೀಲೆಯ ಬಂಡಿ |
ಕಾಲಿಲೊದ್ದು ಶಕಟಾಸುರನ ||
ಮೂಲನಾಶ ಮಾಡಿದೆ ನೀ |
ನಬ್ಬಬ್ಬಬ್ಬಬ್ಬಬ್ಬಬ್ಬ ||
ತಾಳಮರದ ನಡುವೆ ಒರಳ |
ಕಾಲಿಗೆ ಕಟ್ಟೆಳೆಯುತಿರಲು |
ಬಾಲ ಸತ್ತನೆಂದು ಗೋಪಿ ಅತ್ತ-|
ಳಯ್ಯಯ್ಯಯ್ಯಯ್ಯಯ್ಯಯ್ಯೊ ೨
ಸಣ್ಣವನಿವನಲ್ಲ ನಮ್ಮ |
ಬೆಣ್ಣೆ ಕದ್ದು ಗೊಲ್ಲರ ಮನೆಯ |
ಹೆಣ್ಣು ಮಕ್ಕಳನು ಹಿಡಿದ ಕಳ್ಳ |
ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||
ನಿನ್ನಾಣೆಯಿಲ್ಲೆಂಬ ರಂಗನ |
ಬಿನ್ನಾಣಕೆ ನಕ್ಕವರನು ಬಯ್ಯುತ |
ಎನ್ನ ಕಂದ ಹುಸಿಯನಾಡ |
ನೆಂದೆಂದೆಂದೆಂದೆಂದು ೩
ನಾರಿಯರೆಲ್ಲ ಬತ್ತಲೆಯಾಗಿ |
ನೀರಾಟವನಾಡುತಿರಲು |
ಸೀರೆಗಳೊಯ್ದು ಮರವನೇರಿದ |
ನತ್ತತ್ತತ್ತತ್ತತ್ತತ್ತ ||
ವಾರಿಜಮುಖಿಯರು ಲಜ್ಜೆಯ ದೊರೆದು |
ಸೀರೆಗಳನು ಬೇಡಲವರ
ಮೋರೆ ನೋಡಿ ರಂಗ ನಕ್ಕ |
ಅಬ್ಬಬ್ಬಬ್ಬಬ್ಬಬ್ಬಬ್ಬ ೪
ಕಾಡು ಕಿಚ್ಚು ಮುಸುಕಿ ಗೋವ-|
ವಾಡಿಯು ಬೆಂದದ್ದು ನೋಡಿ |
ಈಡಿಲ್ಲದ ಉರಿಯ ತೀಡಿದ |
ಅತ್ತತ್ತತ್ತತ್ತತ್ತತ್ತ ||
ಬೇಡಿದ ವರಗಳನೀವ |
ಪುರಂದರವಿಠಲನ ಲೀಲೆಯ |
ರೂಢಿಯೊಳೀಡನ ಸಮರು ಯಾರು
ಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ ೫

೧೧೯
ಪೋಗದಿರಲೊ ರಂಗ-ಬಾಗಿಲಿಂದಾಚೆಗೆ |
ಭಾಗವತರು ಕಂಡರೆತ್ತಿಕೊಂಡೊಯ್ವರೊ ಪ
ಸುರಮುನಿಗಳು ತಮ್ಮ ಹೃದಯಗಹ್ವರದಲಿ |
ಪರಮಾತ್ಮ ನಿನ್ನ ಕಾಣದರಸುವರೊ ||
ದೊರಕದ ವಸ್ತುವು ದೊರೆಕಿತು ತಮಗೆಂದು |
ಹರುಷದಿಂದ ನಿನ್ನ ಕೆರೆದೆತ್ತಿಕೊಂಬರೊ ೧
ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ |
ಹಗರಣ ಮಾಳ್ಪರೊ ಗೋಪಾಲನೆ ||
ಮಗುಗಳ ಮಾಣಿಕ್ಯ ತಗುಲಿತು ಕರೆತಂದು |
ಮಿಗಿಲು ವೇಗದಿ ಬಂದು ಬಿಗಿದಪ್ಪಿಕೊಂಬರೊ ೨
ದಿಟ್ಟ ನಾರಿಯರು ತಮ್ಮಿಷ್ಟವ ಸಲಿಸೆಂದು |
ಅಟ್ಟಟ್ಟಿ ಬೆಂಬತ್ತಿ ತಿರುಗುವರೊ ||
ಸೃಷ್ಟೀಶ ಪುರಂದರವಿಠಲ ರಾಯನೆ |
ಇಷ್ಟಿಷ್ಟು ಬೆಣ್ಣೆಯ ಕೊಡುವೆನೊ ರಂಗಯ್ಯ ೩

೬೬
ಪ್ರಾಚೀನ ಕರ್ಮವು ಬಿಡಲರಿಯದು
ಯೋಚನೆಯ ಮಾಡಿ ನೀ ಬಳಲಬೇಡ ಪ.
ಮುನ್ನಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು
ತನ್ನಿಂದ ತಾನೆ ತಿಳಿಯಲರಿಯದೆ
ಇನ್ನು ದೇಹವನು ಆಶ್ರಯಿಸಿ ಫಲವೇನು
ಉನ್ನತ ಹರುಷದಲಿ ಮನದಿ ಯೋಚಿಸುವ ೧
ಲೋಕಾದಿ ಲೋಕಗಳ ತಿರುಗುವ ರವಿ ರಥಕೆ
ಏಕಗಾಲಿಗೆ ಏಳು ಕುದುರೆ ಕಟ್ಟಿ
ಆಕಾಶ ಮಾರ್ಗದಲಿ ತಿರುಗುವ ಅರುಣನಿಗೆ
ಬೇಕಾದ ಚರಣಗಳ ಕೊಡಲಿಲ್ಲ ಹರಿಯು ೨
ಸೇತುವೆಯು ಕಟ್ಟಿ ಲಂಕೆಗೆ ಹಾರಿ ಹನುಮಂತ
ಖ್ಯಾತಿಯನೆ ಮಾಡಿ ರಾವಣನ ಗೆದ್ದು
ಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿ
ಪ್ರೀತಿಯಿಂ ಕೌಪೀನವ ಬಿಡಸಲಿಲ್ಲ ಹರಿಯು ೩
ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನು
ಹೊತ್ತುಕೊಂಡು ಇದ್ದ ಜಗವರಿಯಲು
ಅತ್ಯಂತ ಸೇವಕನೆಂದು ಮೂಗಿನ ಡೊಂಕು
ಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ ೪
ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದು
ಭ್ರಾಂತನಾಗದೆ ಬಯಕೆಗಳನು ಜರಿದು
ಶಾಂತ ಮೂರುತಿ ಸಿರಿ ಪುರಂದರವಿಠಲನ
ಸಂತತದಿ ಬಿಡದೆ ಭಜಿಸೆಲವೊ ಮನುಜ*೫

೩೨೨
ಫಲಹಾರವನೆ ಮಾಡೊ ಪರಮಪುರುಷನೆ |
ಲಲನೆ ಲಕ್ಷ್ಮೀಸಹ ಸಕಲ ಸುರರೊಡೆಯ……… ಪ.
ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ |
ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ||
ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು |
ಇಬ್ಬದಿಯಲಿ ಇಟ್ಟ ಶೇಷ ಫಲಂಗಳ…….. . ೧
ನೆನೆಗಡಲಿಬೇಳೆ ಲಡ್ಡಿಗೆ ಮೂಗದಾಳು |
ಪಾನಕ ಶುಂಠಿಬೆಲ್ಲ ಯಾಲಕ್ಕಿಯು ||
ಗೊನೆ ಬಾಳೆಹಣ್ಣು ಘೃತವು ನೊರೆಹಾಲು |
ಕನಕ ಪಾತ್ರೆಯೊಳಿಟ್ಟು ಸಕಲ ಪದಾರ್ಥವ….. ೨
ಧ್ಯಾನ ಪೂರ್ವಕದಿಂದ ಮಾನಸ ಪೂಜೆಯು |
ಪನ್ನೀರನೆ ಭಕುತ ವತ್ಸಲಗೆ ||
ಜಾನಕಿರಮಣಗೆ ಷೋಡಶೋಪಚಾರ |
ದಾನವಾಂತಕ ಸಿರಿ ಪುರಂದರವಿಠಲ ………… ೩

೩೨೩
ಫಲಾಹಾರವನು ಮಾಡೊ ಪರಮಪುರುಷ ಭೂ
ಲಲನೆ ಲಕ್ಷ್ಮೀ ಕಂದರ್ಪರ ಸಹಿತ ಪ.
ಕದಳಿ ಕೆಂಬಾಳೆ ಕಿತ್ತಳೆ ಕಂಚಿ ಫಲಗಳು
ಬದರಿ ಬೆಳುವಲ ಜಂಬೀರ ದ್ರಾಕ್ಷಿಗಳು ||
ಮಧುರದ ಮಾದಾಳ ಮಾವಿನ ಹಣ್ಗಳು
ತುದಿ ಮೊದಲಿಲ್ಲದ ಪರಿಪರಿ ಫಲಗಳ ೧
ಉತ್ತತಿ ಜಂಬು ನಾರಂಗ ದಾಳಿಂಬವು
ಮುತ್ತಾದೌದುಂಬರ ಕಾರಿಯು ಕವಳಿ ||
ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿ
ಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ ೨
ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯು
ಹಾಲು ರಸಾಯನ ಬೆಣ್ಣೆ ಸೀಯಾಳು ||
ಮೂಲೋಕದೊಡೆಯ ಶ್ರೀ ಪುರಂದರವಿಠಲನೆ
ಪಾಲಿಸೋ ನಿನ್ನಯ ಕರಕಂಜದಿಂದಲಿ ೩

೩೦
ಬಂದದೆಲ್ಲವೊ ಬರಲಿ – ಗೋ –
ವಿಂದನ ದಯೆ ನಮಗಿರಲಿ ಪ
ಮಂದರಧರ ಗೋವಿಂದ ಮುಕುಂದನ
ಸಂದರುಶನ ನಮಗೊಂದೇ ಸಾಲದೆ ? ಅ.ಪ
ಆರು ಅರಿಯದಿರಲೆನ್ನ – ಮುರಾರಿಯು ವರದ ಪ್ರಸನ್ನ
ತೋರುವ ದುರಿತದ ಬೆನ್ನ – ಭವಹಾರಿ ಕೃಪಾಂಬುಧಿ ಚೆನ್ನ ||
ಶ್ರೀರಮಣನ ಶ್ರೀ ಚರಣ ಸೇವಕರಿಗೆ
ಘೋರಯಮನು ಶರಣಾಗತನಲ್ಲವೆ ? ೧
ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದು
ದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||
ಹರಿಕೃಪೆಯವರಲ್ಲಿದ್ದ ಕಾರಣ
ದುರಿತವೆಲ್ಲ ಬಯಲಾದುದಲ್ಲವೆ ?೨
ಸಿಂಗನ ಪೆಗಲೇರಿದಗೆ – ಕರಿಭಂಗವೇಕೆ ಮತ್ತವಗೆ |
ರಂಗನ ದಯವುಳ್ಳವಗೆ – ಭವಭಂಗದ ಭೀತಿಯ ಹಂಗೆ ||
ವಇಂಗಳ ಮಹಿಮ ಶ್ರೀ ಪುರಂದರ ವಿಠಲನ
ಹಿಂಗದ ದಯೆವೊಂದಿದ್ದರೆ ಸಾಲದೆ ? ೩

೧೨೨
ಬಂದನೇನೆ-ರಂಗ-ಬಂದನೇನೆ-ಎನ್ನ |
ತಂದೆ ಬಾಲಕೃಷ್ಣ ನವನೀತಚೋರ ಪ
ಘಿಲುಘಿಲು ಘಿಲುರೆಂಬ ಪೊನ್ನಂದುಗೆ ಗೆಜ್ಜೆ |
ಹೊಳೆಹೊಳೆಯುವ ಪಾದ ಊರುತಲಿ ||
ನಲಿನಲಿದಾಡುವ ಉಂಗುರ ಅರಳೆಲೆ
ಥಳಥಳ ಹೊಳೆಯುತ ಶ್ರೀಕೃಷ್ಣ ೧
ಕಿಣಿಕಿಣಿಕಿಣಿಯೆಂಬ ಕರದ ಕಂಕಣ ಬಳೆ |
ಝಣಝಣಝಣರೆಂಬ ನಡುವಿನ ಗಂಟೆ ||
ಗಣಗಣಗಣಯೆಂಬ ಪಾದದ ತೊಡವಿನ |
ಕುಣಿಕುಣಿಕುಣಿದಾಡುತ ಶ್ರೀಕೃಷ್ಣ ೨
ಹಿಡಿಹಿಡಿಹಿಡಿಯೆಂದು ಪುರಂದರವಿಠಲನ |
ದುಡುದುಡುದುಡುದುಡು ಓಡುತ ||
ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು |
ಬಿಡಿಬಿಡಿ ದಮ್ಮಯ್ಯ ಎನ್ನತಲಿ ೩

ಶ್ರೀ ಮಧ್ವಾಚಾರ್ಯರು ದ್ವೈತಮತ ಸಂಸ್ಥಾಪಕರು
೫೦
ಬಂದು ನಿಂದಿಹ ನೋಡಿ- ಭೂತಳದಿ ವೆಂಕಟಇಂದಿರೆಯನೊಡಗೂಡಿ-
ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ- ಆನಂದ ಬೇಡಿ ಪ
ವಂದಿಸುತ ಮನೆದೊಳಗೆ ಇವನಡಿ-ದ್ವಂದ್ವ ಭಜಿಸಲು ಬಂದ ಭಯಹರ |
ಇಂದುಧರ ಸುರವೃಂದನುತ ಗೋ-ವಿಂದ ಘನ ದಯಾಸಿಂಧು ಶ್ರೀಹರಿ ಅ.ಪ
ದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ-
ಸನಕಾದಿನುತ ಶೃಂ-ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ- ವಿಸ್ತಾರದಲ್ಲಿ ||
ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ-
ಧಾರಿ ಭುಜ ಕೇಯೂರ ಭೂಷಿತಮಾರಪಿತ ಗುಣ ಮೋಹನಾಂಗ ||
ಚಾರು ಪೀತಾಂಬರ ಕಟಿಯ ಕರ-
ವೀರ ಕಲ್ಹಾರಾದಿ ಹೂವಿನಹಾರ ಕೊರಳೊಳು ಎಸೆಯುತಿರೆ ವದ-|
ನಾರವಿಂದನು ನಗುತ ನಲಿಯುತ ೧
ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-ವಲ್ಯ ಸ್ಥಾನವ ಬಿಟ್ಟ-
ಶೇಷಾದ್ರಿ ಮಂದಿರದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದುರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||
ಚೆಲ್ವ ಪಣೆಯಲಿ ಶೋಭಿಸುವ ಸಿರಿ-ವಲ್ಲಭನ ಗುಣ ಪೊಗಳದಿಹ ಜಗ-
ಖುಲ್ಲರೆದೆದಲ್ಲಣ ಪರಾಕ್ರಮಮಲ್ಲಮರ್ದನ ಮಾತುಳಾಂತಕ ||
ಫಲ್ಗುಣನ ಸಖ ಪ್ರಕಟನಾಗಿಹದುರ್ಲಭನು ಅಘದೂರ ಬಹುಮಾಂಗಲ್ಯ
ಹೃಯಯವ ಮಾಡಿ ಸೃಷ್ಟಿಗೆಉಲ್ಲಾಸ ಕೊಡುತಲಿ ಚೆಂದದಿಂದಲಿ ೨
ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರಸುದರ್ಶನ-
ದರಧಾರ-ಸುಂದರ ಮನೋಹರಪದಯುಗದಿ ನೂಪುರ-
ಇಟ್ಟಿಹನು ಸನ್ಮುನಿಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||
ವಿಧಿ-ಭವಾದ್ಯರ ಪೊರೆವ ದಾತನುತುದಿ ಮೊದಲು ಮಧ್ಯವು ವಿರಹಿತನು
ಉದುಭವಾದಿಗಳೀವ ಕರ್ತನುತ್ರಿದಶಪೂಜೀತ ತ್ತಿಭುವನೇಶ ||
ಸದುನಲಾಸದಿ ಸ್ವಾಮಿ ತೀರ್ಥದಿಉದುಸುತಿರೆ ಸಿರಿ ಮಹಿಳೆ ಸಹಿತದಿ
ಪದುಮನಾಭ ಪುರಂದರ ವಿಠಲನುಮುದದಿ ಬ್ರಹ್ಮೋತ್ಸವದಿ ಮೆರೆಯುತ ೩

೩೧೨
ಬಂದೆಯಾ ಪರಿಣಾಮದಿ ನಿನ್ನ
ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ ಪ
ಸಂಚೀತ ಪ್ರಾರಬ್ಧ ಕರ್ಮಂಗಳನೆಲ್ಲ
ಕಿಂಚಿತು ಮಾಡಿ ಸಂಕೋಲೆಯ ಹಾಕಿ ||
ಮಿಂಚುವ ಧನ – ಪುತ್ರ ದಾರೇಷಣಂಗಳ
ವಂಚಿಸಿ ಕವಲು ದಾರಿಯ ಬಿಟ್ಟು ಮಾರ್ಗದಿ ೧
ಕಾಮವ ಖಂಡಿಸಿ ದ್ರೋಹವ ದಂಡಿಸಿ
ನಾಮರೂಪ ಕರ್ಮಂಗಳ ನಿಂದಿಸಿ ||
ತಾಮಸ ಕರ್ಮ ನಡತೆಯ ತಗ್ಗಿಸಿ ನಿರ್
ನಾಮ ಮಾಡಿ ಮದ-ಮತ್ಸರಂಗಳ ನೀಗಿ ೨
ಅಷ್ಟಭೋಗಂಗಳ ನಷ್ಟಂಗಳ ಮಾಡಿ
ಅಷ್ಟೈಶ್ಚರ್ಯವ ಮಟ್ಟು ಮಾಡಿ ||
ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಕಿ ಬಹಳ
ನಷ್ಟತುಷ್ಟಿಗಳಲ್ಲಿ ದೃಷ್ಟಿಯೇನಿಲ್ಲದೆ೩
ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲ
ಬೀಳುಗೆಡಹಿ ಪಂಚಭೂತಂಗಳ ||
ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳ
ಕೋಳಕೆ ತಗುಲಿಸಿ ಕೊನಬುಗಾರನಾಗಿ ೪
ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ
-ಡಲೆ ಸಾಗಿ ಬರುತಿಹ ದಾರಿಯೊಳು ||
ಒಲಿದು ಮುಕ್ತಿಯನೀವ ಪುರಂದರವಿಠಲನು
ಬಲವನಿತ್ತುದರಿಂದೆ ನಾನು ನೀನೆನ್ನದೆ ೫

೧೨೦
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |
ಜಗದ ಮೋಹಕನೆ ಪ
ಖಗವರಗಮನನೆ ಅಗಣಿತ ಮಹಿಮನೆ |
ಜಗದೊಳು ನೀ ಬಹು ಮಿಗಿಲಾಗಿ | ಪರಿ ಅ.ಪ
ಒಬ್ಬಳ ಬಸಿರಿಂದಲಿ ಬಂದು-ಮ-|
ತ್ತೊಬ್ಬಳ ಕೈಯಿಂದಲಿ ಬೆಳೆದು ||
ಕೊಬ್ಬಿದ ಭೂಭಾರವನಿಳುಹಲು ಇಂಥ |
ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ ೧
ಮಗುವಾಗಿ ಪೂತಣಿ ಮೊಲೆಯ-ಉಂಡು |
ನಗುತಲವಳ ಅಸುವನೆ ಕೊಂಡು |
ಅಘಹರ ನೀ ಗೋಪಿಯೊಳು ಜನಿಸಿ ಇಂಥ |
ಸೊಗಸಿನ ಆಟಗಳೆಲ್ಲಿ ಕಲಿತೆಯೊ ೨
ಲೋಕರಂತೆ ನೀ ಮಣ್ಣನು ತಿನಲು |
ತಾ ಕೋಪಿಸಿ ಜನನಿಯು ಬೇಗ ||
ಓಕರಿಸೆನ್ನಲು ಬಾಯೊಳು ಸಕಲ |
ಲೋಕವ ತೋರಿದುದೆಲ್ಲಿ ಕಲಿತೆಯೊ | ೩
ಮಡುವ ಧುಮುಕಿ ಕಾಳಿಂಗನ ಪಿಡಿದು |
ಪಡೆಯ ಮೇಲೆ ಕುಣಿದಾಡುತಿರೆ ||
ಮಡದಿಯರು ನಿನ್ನ ಬಿಡದೆ ಬೇಡಲು |
ಕಡುದಯೆದೋರಿದುದೆಲ್ಲಿ ಕಲಿತೆಯೊ | ೪
ಒಂದು ಪಾದ ಭೂಮಿಯಲಿ ವ್ಯಾಪಿಸಿ ಮ-|
ತ್ತೊಂದು ಪಾದ ಗಗನಕ್ಕಿಡಲು ||
ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |
ಬಂಧಿಸಿದಾಟಗಳೆಲ್ಲಿ ಕಲಿತೆಯೊ | ೫
ಭರದಿ ಭಸ್ಮಾಸುರ ವರವನು ಪಡೆದು |
ಹರನು ಶಿರದಿ ಕರವಿಡ ಬರಲು ||
ತರುಣಿರೂಪವ ತಾಳಿ ಉರಿಹಸ್ತದವನ |
ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | ೬
ಜಗಕೆ ಮೂಲನೆಂದು ನಾಗರಾಜ ಕರೆಯೆ |
ಖಗವಾಹನನಾಗದೆ ನೀ ಬಂದು ||
ನಗುತ ನಗುತ ಆ ವಿಗಡನಕ್ರನ ಕೊಂದ |
ಹಗರಣದಾಟಗಳೆಲ್ಲಿ ಕಲಿತೆಯೊ ೭
ವೇದಗಳರಸಿಯು ಕಾಣದ ಬ್ರಹ್ಮ ನೀ-|
ನಾದರದಲಿ ವಿದುರನ ಗೃಹದಿ ||
ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |
ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ ೮
ಡಂಬಕ ಹಿರಣ್ಯಕಶಿಪು ಪ್ರಹ್ಲಾದನ |
ಹಂಬಲವಿಲ್ಲದೆ ಶಿಕ್ಷಿಸಲು ||
ಸ್ತಂಭದಿ ಭಕ್ತಗೆ ರೂಪವ ತೋರಿ |
ಸಂಭ್ರಮವಿತ್ತುದನೆಲ್ಲಿ ಕಲಿತೆಯೊ೯
ಚಕ್ರಧರನೆ ಜರಾತನಯನೊಂದಿಗೆ ಕಾದಿ |
ಸಿಕ್ಕಿ ಓಡಿದವನಿವನೆಂದೆನಿಸಿ ||
ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |
ಠಕ್ಕಿನಾಟಗಳನೆಲ್ಲಿ ಕಲಿತೆಯೊ | ೧೦
ಆ ಶಿರವಾತನ ತಂದೆಯ ಕರದೊಳು |
ಸೂಸುತ ರಕ್ತವ ಬೀಳುತಿರೆ ||
ಸೋಸಿ ನೋಡದೆ ರುಂಡ ಬಿಸುಡಲವನ ಶಿರ |
ಸಾಸಿರ ಮಾಡಿದುದೆಲ್ಲಿ ಕಲಿತೆಯೊ೧೧
ಪ್ರಾಣ ಸೆಳೆವನೀ ದಿನವೆಂದರ್ಜುನ |
ಧೇನಿಸದಲೆ ಸೈಂಧವಗೆನಲು ||
ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |
ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ೧೨
ಸರ್ಪನ ಬಾಣವು ಉರಿಯುತ ಬರಲು ಕಂ-|
ದರ್ಪನ ಪಿತ ನೀ ಕರುಣದಲಿ ||
ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |
ತೋರ್ಪಡಿಸಿದಾಟವೆಲ್ಲಿ ಕಲಿತೆಯೊ೧೩
ದುರುಳದುಃಶಾಸನ ದ್ರೌಪದಿ ಸೀರೆಯ |
ಕರದಿಂದ ಸಭೆಯೊಳು ಸೆಳೆಯುತಿರೆ ||
ಹರಿ ಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |
ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ೧೪
ಕುರುಪತಿ ಸಭೆಯೊಳು ಗುರುವಿನಿಂದಿರುತ |
ಸಿರಿ ಕೃಷ್ಣನು ಬರೆ ವಂದಿಸದೆ ||
ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |
ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ |೧೫

ದುರಿಯೋಧನ ಪಾಂಡವರ ಶಿಕ್ಷಿಸಲು |
ಮೊರೆಯಿಡಲವನ ಮರುಳುಗೊಳಿಸಿ ||
ಧುರದೊಳು ಪಾರ್ಥಗೆ ಸಾರಥಿಯಾಗಿ ನೀ |
ಕುರುಕುಲವಳಿದುದನೆಲ್ಲಿ ಕಲಿತೆಯೊ |೧೬
ಪತಿಶಾಪದಿ ಶಿಲೆಯಾದ ಅಹಲ್ಯೆಯ |
ಹಿತದಿಂದವಳನು ಉದ್ಧರಿಸಿ ||
ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|
ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ೧೭
ಅಂಬರೀಷ ದ್ವಾದಶಿ ವ್ರತ ಸಾಧಿಸೆ |
ಡೊಂಬೆತನದಿ ದೂರ್ವಾಸ ಬರೆ ||
ಇಂದುಧರಾಂಶನು ರಾಜನ ಪೀಡಿಸ-|
ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ |೧೮
ಕುಲಛಲಗಳನಳಿದ ಅಜಮಿಳ ಸರಸದಿ |
ಹೊಲತಿಯ ಕೂಡಿರೆ ಮರಣ ಬರೆ ||
ಬಲು ಮೋಹದ ಸುತ ನಾರಗನೊದರಲು |
ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ ೧೯
ಬಡತನ ಪಾರ್ವನ ಬಿಡದೆ ಬಾಧಿಸಲು |
ಮಡದಿಯ ನುಡಿ ಕೇಳಿ ಆಕ್ಷಣದಿ ||
ಒಡೆಯ ನೀನವನೊಪ್ಪಿಡಿಯವಲನು ಕೊಂಡು |
ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | ೨೦
ಎಂದೆಂದು ನಿನ್ನ ಗುಣವೃಂದಗಳೆಣಿಸಲು |
ಇಂದಿರೆ ಬೊಮ್ಮನಿಗಸದಳವು ||
ಮಂದರಧರ ಸಿರೆಪುರಂದರವಿಠಲನೆ |
ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ೨೧

೨೧೪
ಬಡವಾ ನಿನಗೊಬ್ಬರ ಗೊಡವೆ ಏತಕೊ |
ಒಡವೆ ವಸ್ತು ತಾಯಿತಂದೆ ಒಡೆಯ ಕೃಷ್ಣನೆಂದು ನಂಬೋ ಪ.
ಒಪ್ಪತ್ತು ಭಿಕ್ಷವ ಬೇಡು, ಒಬ್ಬರಿಗೆ ಒಂದಿಷ್ಟು ನೀಡು |
ಅಪ್ಪನಾದಚ್ಯುತನ ನೋಡು, ಆನಂದದಲಿ ಪೂಜೆಮಾಡು ೧
ಮಡದಿ ಮಕ್ಕಳು ಹೆದರಿಸಿದರೆ ಮುಂಕೊಂಡು ನೀಹೋದಿಯೆ ಕಾಣೋ |
ಅಡಕೆಯ ಹೋಳಿಗೆ ಹೋದ ನಾಚಿಕೆ ಆನೆಯ ಕೊಟ್ಟರೆ ಬಾರದೊ ೨
ಬಲ್ಲೆ ನಿನ್ನ ಎಲ್ಲ ಮಾತು ಕ್ಷುಲ್ಲಕತನದ ಭ್ರಾಂತು |
ಎಲ್ಲರ ಮನೆಯ ದೋಸೆ ತೂತು ಅಲ್ಲವೇನು ನೋಡಿಕೊ ಈ ಮಾತ ೩
ವೇದ – ತರ್ಕವೆಲ್ಲವು ಭ್ರಾಂತಿ – ಆದಿದೇವನ ಕಾಣದನಕ |
ಬೂದಿಮುಟ್ಟಿದ ಕೆಂಡದಂತೆ ಬುದ್ಧಿಯಲಿರು ನಾ ಹೇಳೇನಂತೆ ೪
ದೊರೆತನವು ಏನು ಹೆಚ್ಚು – ಸಿರಿಯು ಏನು ಪಾವನ ಮೆಚ್ಚು |
ವರದ ಪುರಂದರವಿಠಲರಾಯನು ಪರಿಪಾಲಿಪನೆಂದು ನಚ್ಚು ೫

೨೯
ಬಣ್ಣಿಸಲಳವೇ ನಿನ್ನ ಪ
ಬಣ್ಣಿಸಲಳವಲ್ಲ ಭಕುತವತ್ಸಲ ದೇವ
ಪನ್ನಗ ಶಯನ ಪಾಲ್ಗಡಲೊಡೆಯನೆ ರಂಗ ಅ.ಪ
ಅಸಮ ಪರಾಕ್ರಮಿ ತಮನೆಂಬ ದೈತ್ಯನು
ಶಶಿಧರನ ವರದಿ ಶಕ್ರಾದ್ಯರಿಗಳುಕದೆ
ಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದು
ವಿಷಧಿಯೊಳಡಗಿರಲ್ ಒದಗಿ ಬಂದಮರರು
ವಸುಧೀಶ ಕಾಯಬೇಕೆಂದೆನಲವನ ಮ –
ರ್ದಿಸಿ ವೇದಾವಳಿಯ ತಂದು ಮೆರೆದ ದಶ
ದಿಸೆಯೊಳು ಬೊಮ್ಮಗಂದು ವೇದವ ಕರು
ಣಿಸದೆ ಕಂಜಾಕ್ಷ ಕೇಶವ ದಯಾಸಿಂಧು ೧
ಇಂದ್ರಾದಿ ಸಕಲ ದೇವತೆಗಳೆಲ್ಲರು ದೈತ್ಯ
ವೃಂದವೊಂದಾಗಿ ಮತ್ಸರವ ಮರೆದು ಕೂಡಿ
ಬಂದು ನೆರೆದು ಮುರಹರ ನಿನ್ನ ಮತದಿಂದ
ಮಂದರಾದ್ರಿಯ ಕಡೆಗೋಲ ಗೈಯ್ದತುಳ ಫ
ಣೀಂದ್ರನ ತನು ನೇಣಿನಂದದಿ ಬಂಧಿಸಿ ||
ಸಿಂಧು ಮಥಿಸುತಿರಲು ಘನಾಚಲ
ವಂದು ಮುಳುಗಿ ಪೋಗಲು ಬೆನ್ನಾಂತು ಮು
ಕುಂದ ನೆಗಹಿದೆ ಸುರರು ಜಯ ಜಯವೆನಲು೨
ಖಳಶಿರೋಮಣಿ ಕನಕಾಕ್ಷನೆಂಬಸುರ ನಿ
ನ್ನೊಳು ಸೆಣಸುವೆನೆಂಬ ಗರುವದಿಂದಲಿ ಬಹು
ಬಲದಿಂದುದ್ಧಟನಾಗಿ ದಿವಿಜರನಂಜಿಸಿ
ಇಳೆಯ ಕದ್ದು ರಸಾತಳದೊಳಗಿರೆ ನಿನ್ನ
ಪೊಳೆವ ಕೋರೆಗಳಿಂದ ತಿವಿದು ರಕ್ಕಸನ ಅ ||
ಪ್ಪಳಿಸಿ ಕೊಂದವನ ದಿಂಡು ಗೆಡಹಿ ಮಹೀ
ಲಲನೆಯೊಡನೆ ಕೈಕೊಂಡು ಪಾಲಿಸಿದೆ ಪೂ
ಮಳೆಗರೆದರು ಅಮರರು ನೆಲೆಗೊಂಡು ೩
ಹಗಲಿರುಳಳಿವಿಲ್ಲದಸುರ ಕಶಿಪು ತನ್ನ
ಮಗನ ಹರಿಯ ತೋರೆಂದಧಿಕ ಬಾಧಿಸುತಿರೆ
ಬಗಿದು ಕಂಬವನೊಡೆದಧಿಕ ರೋಷಾಗ್ನಿ ಕಾ
ರ್ಬೊಗೆ ಸೂಸಿ ಗಗನಮಂಡಲ ಧಗ – ಧಗಧಗ
ಧಗಿಪ ಪ್ರಜ್ವಾಲೆಯನುಗುಳಿ ಹಿರಣ್ಯಕನ ಕು
ರುಗುರಿಂದೊಡಲ ಸೀಳಿ ಕರುಳಮಾಲೆ
ತೆಗೆದು ಕಂಠದಲಿ ತಾಳಿ ಒಪ್ಪಿದೆ ನರ
ಮೃಗರೂಪೀ ತ್ರಾಹಿಯೆನಲು ಶಶಿಮೌಳಿ ೪
ಕುಲಿಶಧರನ ಗೆದ್ದು ಕುವಲಯದೊಳು ಭುಜ
ಬಲವಿಕ್ರಮದಲಿ ಸೌಭಾಗ್ಯದುನ್ನತಿಯಿಂದ
ಬಲಿ ವಾಜಿಮೇಧ ಗೆಯ್ಯಲು ವಟುವೇಷದಿಂ
ದಿಳಿದು ತ್ರಿಪಾದ ಭೂಮಿಯ ದಾನವ ಬೇಡಿ
ಬಲುಹಮ್ಮ ಮುರಿಯಬೇಕೆಂದವನ ಶಿರಮೆಟ್ಟಿ ||
ನೆಲನ ಈರಡಿಮಾಡಿದೆ ಚರಣವಿಟ್ಟು
ಜಲಜಜಾಂಡವನೊಡೆದೆ ಅಂಗುಷ್ಟದಿ
ಸುಲಲಿತ ಸುಮನಸ ನದಿಯ ನೀ ಪಡೆದೆ ೫
ಪೊಡವಿಪತಿಗಳೊಳಗಧಿಕ ಕಾರ್ತವೀರ್ಯ
ಕಡುಧೀರ ದೇವ ದೈತ್ಯರಿಗಂಜದವನ ಬೆಂ
ಬಿಡದೆ ಸಂಗ್ರಾಮದೊಳಧಿಕ ಸಮರ್ಥನ
ಹೊಡೆದು ತೋಳ್ಗಳ ಕುಟ್ಟಿ ಕೆಡಹಿ ಆಗಸದೊಳು
ಮೃಢಮುಖ್ಯ ದೇವಸಂತತಿ ನೋಡೆ ಕ್ಷತ್ರಿಯರ
ಪಡೆಯನೆಲ್ಲವ ಸವರಿ ಮಾತೆಯ ಶಿರ
ಕಡಿದು ತತ್ಪತಿಗೆ ತೋರಿ ಪಿಡಿದೆ ಗಂಡು
ಗೊಡಲಿಯ ಕರದಿ ಬಲ್ಲಿದ ದನುಜಾರಿ೬
ದಶರಥರಾಯ ಕೌಸಲ್ಯಾನಂದನನಾಗಿ
ಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿ ಘನ
ವಿಷಕಂಠಧನುವ ಖಂಡಿಸಿ ಜಾನಕಿಯ ತಂದು
ತ್ರಿಶಿರದೂಷಣ ಖರರಳಿದು ವಾಲಿಯನಂದು
ನಿತಿ ಶಾಸ್ತ್ರದಿಂದ ಸಂಹರಿಸಿ ಸಾಗರವ ಬಂ
ಧಿಸಿ ರಾವಣನ ಶಿರವ ಕತ್ತರಿಸಿ ರಂ
ಜಿಸುವ ಲಂಕಾಪುರವ ವಿಭೀಷಣಗೆ
ಎಸೆವ ಪಟ್ಟವ ಕಟ್ಟಿದೆಲೆ ದೇವಗರುವ ೭
ದೇವಕಿ ವಸುದೇವರಲ್ಲಿ ಜನಿಸಿ ಲೋಕ
ಪಾವನಗೆಯ್ದು ಪನ್ನಗನ ಪೆಡೆಯ ಮೆಟ್ಟಿ
ಗೋವಳನಾಗಿ ಗೋವರ್ಧನ ಗಿರಿಯೆತ್ತಿ
ಮಾವ ಮಲ್ಲರ ಕೊಂದು ಪಾರಿಜಾತವ ತಂದು
ಆ ವಿಪ್ರನಲಿ ಓದಿ ಪೋದಪತ್ಯವನಿತ್ತ ||
ತಾವರೆದಳಸುನೇತ್ರ ತ್ರಿಭುವನ ಸಂ
ಜೀವ ಪರಮ ಪವಿತ್ರ ಶ್ರೀ ರುಕ್ಮಿಣಿ
ದೇವಿ ಮನೋಹರ ಶುಭನೀಲಗಾತ್ರ ೮
ಸರಸಿಜಾಸನ ಭವ ಇಂದ್ರಾದಿಗಳುಕದೆ
ದುರುಳ ದಾನವರಿರಲಂದು ಖೇಚರದೊಳು
ನಿರುಪಮ ನೀನೆ ಒಂದೊಂದು ರೂಪಗಳಿಂದ
ಹರಗೆ ಸಹಾಯವಾಗಿ ದನುಜಸ್ತ್ರೀಯರ ವ್ರತ
ಪರಿಹಾರ ಮಾಡಿ ಆಯಾಸವಿಲ್ಲದಲೆ ಮು
ಪ್ಪುರವ ಅಳಿದ ನಿಸ್ಸೀಮ ಅಖಿಳಶ್ರುತಿ
ಯರಸೆ ಕಾಣದ ಮಹಿಮ ಹೇ ಸಾಮಜ
ವರದ ಸುಪರ್ಣವಾಹನ ಸಾರ್ವಭೌಮ ೯
ಮಣಿಮಯ ಯುಕ್ತ ಆಭರಣದಿಂದೆಸೆವ ಲ
ಕ್ಷಣವುಳ್ಳ ದಿವ್ಯ ವಾಜಿಯನೇರಿ ಧುರದೊಳು
ಕುಣಿವ ಮೀಸೆಯ ಘೋರವದನ ಖಡ್ಗ ಚರ್ಮ
ವನು ಕೊಂಡು ದ್ರುಹಿಣಾದಿಗಳು ಪೊಗಳಲು ಕಲಿ
ದನುಜರೆಲ್ಲರನೊಂದೆ ದಿನದೊಳು ಸವರಿದ ||
ರಣಭಯಂಕರ ಪ್ರಜಂಡ ಮೂಜಗದೊಳು
ಎಣೆಗಾಣಿನೆಲೊ ಉದ್ದಂಡ ಕಲ್ಕಿ ದಿನ
ಮಣಿ ಕೋಟಿ ತೇಜ ದುಷ್ರ‍ಕತ ಕುಲ ಖಂಡ ೧೦
ಚಿತ್ತಜನಯ್ಯನೆ ಚಿನ್ಮಯ ಗಾತ್ರನೆ
ಉತ್ತಮ ದರ ಚಕ್ರ ಗದೆ ಜಲಜಾಂಕನೆ
ಸುತ್ತಲು ಅರಸಲು ನಿನಗೆಲ್ಲಿ ಸರಿಕಾಣೆ
ಹೊತ್ತು ಹೊತ್ತಿಗಾದಿತ್ಯರ ಬಿನ್ನಪ ಕೇಳಿ
ಹತ್ತವತಾರದಿ ಅಸುರರ ಮಡುಹಿದೆ
ನಿತ್ಯ ತ್ರಿಸ್ಥಾನವಾಸ ವಾಗಿಹ ಸರ್ವ
ಭಕ್ತರ ಮನೋವಿಲಾಸ ಸಲಹೋ ಪುರು
ಷೋತ್ತಮ ಪುರಂದರ ವಿಠಲ ತಿರುಮಲೇಶ ೧೧

೧೨೧
ಬಣ್ಣಿಸಿ ಗೋಪಿ ತಾ ಹರಿಸಿದಳು |
ಎಣ್ಣೆಯನೂಡುತ ಯದುಕುಲ ತಿಲಕನ ಪ
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಾಯಾವಿ ಖಳರ ಮರ್ದನ ನಾಗು ||
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯುಸುತಗೆ ನೀ ಒಡೆಯನಾಗೆನುತಲಿ ೧
ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು ||
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ೨
ಆನಂದ ನೀನಾಗು ಅಚ್ಯುತ ನೀನಾಗು |
ದಾನವಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀಧರ ನೀನಾಗು |ಜ್ಞಾನಿ ಪುರಂದರವಿಠಲನಾಗೆನುತಲಿ ೩

೩೧೧
ಬದುಕಿದೆನು ಬದುಕಿದೆನು ಭವದುರಿತ ಹಿಂಗಿತು
ಪದುಮನಾಭನ ಪಾದದೊಲಿಮೆ ಎನಗಾಯಿತು ಪ
ಹರಿಯ ತೀರ್ಥ ಪ್ರಸಾದವು ಎನಗೆ ದೊರೆಕಿತು |
ಹರಿಕಥಾಮೃತವೆನ್ನ ಕಿವಿಗೊದಗಿತು ||
ಹರಿದಾಸರುಗಳೆನ್ನ ಬಂಧು ಬಳಗವಾದರು |
ಹರಿಯ ಶ್ರೀ ಮುದ್ರೆಯೆನಗೆ ಆಭರಣವಾಯ್ತು ೧
ಮುಕ್ತರಾದರು ಎನ್ನ ನೂರೊಂದು ಕುಲದವರು |
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ||
ಸುಕೃತಿ ದೇಹಕ್ಕೆನ್ನ ಮನವು ತಾನೆಳಸಿತ್ತು |
ಅಕಳಂಕ ಹರಿನಾಮ ದಿವ್ಯಕೊದಗಿತ್ತು ೨
ಇಂದೆನ್ನ ಸಂತತಿಗೆ ಸಕಲ ಸಂಪದವಾಯ್ತು |
ಮುಂದೆನ್ನ ಜನ್ನ ಸಾಫಲ್ಯವಾಯ್ತು ||
ತಂದೆ ಶ್ರೀ ಹರಿ ಪುರಂದರವಿಠಲ ರಾಯನೇ |
ಬಂದೆನ್ನ ಹೃದಯದೊಳು ನೆಲೆಯಾಗಿ ನಿಂತ * ೩

೬೭
ಬಯಲಭಾವಿಯ ನೀರಿಗೆ ಬಂದಳೊಬ್ಬಳು ಬಾಲೆ |
ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿತು ಪ.
ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದೆ ಸಸಿಹುಟ್ಟಿ
ಹೂವಿಲ್ಲದೆ ಕಾಯಿಲ್ಲದೆ ಅದು ಫಲಕೆ ಬಂದು ||
ಕರವಿಲ್ಲದೆ ಕಾಲಿಲ್ಲದೆ ಕೊಯ್ವರಯ್ವರು ಆ ಹಣ್ಣನು |
ಮರುಳಾಯಿತು ಮೂವತ್ತು ಸಾವಿರ ಮಂದಿ ೧
ಕುರುಡ ಕಂಡನು ಸರ್ಪನಡುವಿರುಳು ಬಾಹುದನು |
ಮೂಕ ಕಂಡನು ಕನಸ ಕಿವುಡನು ಕೇಳಿದ ||
ಇರವು ಹಾರಿತು ಗಗನಕೆ ಮರವು ಮುರಿಯಿತು ನೋಡಿ |
ವಿಧಿ ತನ್ನ ಬೇಟಿಗೆ ಹೋಗುವ ಸಡಗರ ನೋಡಿ೨
ಕಿಚ್ಚಿನ ಕೊಡದವಳೆ ನೀ ಬಂದೆ ತೋರಣಗಟ್ಟಿ |
ರಚ್ಚಿಗೆ ಬಾಹೋರು ನಾಲುವರೊಳಗೆ
ಉಚ್ಚರಿಸಲೂ ಸಲ್ಲ ಕೇಳು ಪುರುಷನ ಸೊಲ್ಲ
ಅಚ್ಚಪುರಂದರವಿಠಲ ತಾನೆ ಬಲ್ಲ ೩

೩೧೩
ಬರಬೇಕೋ ರಂಗಯ್ಯ ನೀ – ಬರಬೇಕೊ ಪ
ಬರಬೇಕೊ ಬಂದು ಒದಗಬೇಕೊ ಮಮಗುರು |
ನರಹರಿ ನಾರಾಯಣ ನೀನಾ ಸಮಯಕೆ ಅ.ಪ
ಕಂಠಕೆ ಪ್ರಾಣ ಬಂದಾಗ – ಎನ್ನ |
ನಂಟರಿಷ್ಟರು ಬಂದಳುವಾಗ ||
ಗಂಟು ಹುಟ್ಟಿನ ಕಾಲಬಂಟರು ಕವಿದೆನ್ನ |
ಗಂಟಲೌಕುವಾಗ ವೈಕುಂಠನಾರಾಯಣ ೧
ನಾರಿಯು ಪುತ್ರ ಮಿತ್ರರು -ಬಂಧುಗಳು |
ಆರೆನ್ನ ಸಂಗಡ ಬಾರರು ||
ಆರಿಗಾರಿಲ್ಲ ಯಮನಾರುಭಟಕೆ ಅಸು-|
ರಾರಿ ಮೈಮರೆದಾಗ ನೀರೇರುಹನಾಭ ೨
ಕರಿ ಪ್ರಹಲ್ಲಾದಾದಿ ಭಕ್ತರ – ಪತಿ |
ಕರಿಸಲು ಒದಗಿದೆ ಶ್ರೀಧರ ||
ನೆರೆ ಹೀನನೆನ್ನ ಉದ್ಧರಿಸಿ ಅಚ್ಯುತ ನಿನ್ನ |
ಚರಣದೊಳಿಂಬಿಡೊ ಪುರಂದರವಿಠಲ ೩

೨೧೫
ಬರಿದೆ ಬಯಸದಿರಿಹಲೋಕಸುಖವೆಂಬ ಬರಗಿನ ಪಾಯಸವ |
ಶರಿಧಿಶಯನನ ಬೇಡೊ ಪರಲೋಕಸುಖವೆಂಬಸೇವಗೆ ಪಾಯಸವ ಪ.
ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |
ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||
ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |
ಸಂದೇಹಿಸದೆ ಪರಾತ್ಪರ ವಸ್ತು ಮುಕುಂದನಂಘ್ರಿಯ ತಟ್ಟು ೧
ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |
ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||
ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |
ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು ೨
ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವ
ಹರಿಕಥೆಯ – ಬಿಟ್ಟು |
ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||
ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |
ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ೩

೩೧೪
ಬರಿದೆ ಹೋಯಿತು ಹೊತ್ತು – ಹರಿಯೆ |
ಶರೀರವೆ ಸ್ಥಿರವೆಂದು ಮರೆತು ನಾನಿದ್ದೆನೆ ಪ
ಆಸೆಯೆಂಬುದು ಎನ್ನ ಕ್ಲೇಶಪಡಿಸುತಿದೆ |
ಗಾಸಿಯಾದೆನೊ ಹರಿಯೆ ||
ಶೇಷಶಯನನು ನೀನು ನಿನ್ನ ನಂಬಿದೆ ನಾನು |
ನಾಶವಾಯಿತು ದಿನ ಮೋಸ ಹೋದೆನಯ್ಯ ೧
ಸತಿಸುತರೆಂದೆಂಬ ಅತಿ ಭ್ರಾಂತಿಗೊಳಗಾದೆ |
ಮತಿಹೀನ ನಾನಾದೆನೊ ||
ಸತತ ನಿರಂತರ ಜಡದೇಹ ನಾನಾದೆ |
ರತಿಗೆಳೆಯುತಿದೆ ಮನಸು ಹರಿಸರ್ವೋತ್ತಮನೆ ೨
ಪರರ ಸೇವೆಯ ಮಾಡಿ ಪರರನೆ ಕೊಂಡಾಡಿ |
ಮರೆತೆನೊ ನಿನ್ನ ಧ್ಯಾನ |
ಕರುಣದಿಂದಲಿ ಎನ್ನ ಕಾಯ್ದು ನೀ ಸಲಹಯ್ಯ |
ಪುರಂದರ ವಿಠಲ ನಿನ್ನನೆ ನಂಬಿದೆ ನಾನು ೩

೩೧
ಬಲಿಯ ದಾನವಬೇಡಿ | ಚೆಲುವಕಾರವಾಗಿದೆ |
ನೆಲನಾ ನಿರಡಿಯಾ ಮಾಡಿದಾಡೆ ನಾನಾ|ಲಲಾನೆ ಮಾಡಿಯಾಲಿಟ್ಟು
ಶಿರಾ ವಾನೊರಾಸೂಕ್ತ | ಮೊಲೆಯಾನೂಡುವಾ ಪುಣ್ಯ ಹೀಗೆ
ಪಡೆದಾಳೋ | ಮಗಾನೆಂದೂ ಪ
ಮಗಾನೆಂದಾಡಿಸುವಾಳು | ಮೊಗಾನೊಡಿನಗೂವಾಳು |
ಮಿಗೆ ಹರೂಪದಾಲಿ ಲೊಲಾಡುವಾಳೂ |
ಜಗಾದೂರಂಗಾಗಿ | ಮೊಗ ಬಂದು ರಕ್ಷಕ |
ಬಿಗಿದಪ್ಪೊ ಪುಂಣ್ಯ ಹೇಗೆ ಪಾಡದಾಳೊ ೧
ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |
ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ |
ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯ
ಹೇಗೆ ಪಡದಾಳೊ ೨
ಸಾಗಾರಾ ಸುತಿಯಾರು | ಭೋಗಿ ಯನಾನಾ |
ಯೋಗಾನಿದ್ರೆಯೊಳದ್ಯ ದೇವನಾ |
ಆಗಾಮಾ ಶೃತಿಗಾಳು | ಆರಾರೆ ಕಾಣದ ವಾಸ್ತುವ |
ಕೂಗಿದಾಳೆ ಪುಂಣ್ಯ ಹೇಗೆ ಪಾಡದಳೋ ೩
ಕಾಲಲಂದ್ಹುಗೆ ಕಿಂಕಿಣಿ ಹೊಂನ್ನು ಕಿರೂಗೆಜ್ಜೆ |
ಹಾರಾಸಾರದಾ ಕೊರಾಳಾ ಪಾದಾಕಾ | ಬಾಲದೊಡಿಗೆಸಮ್ಮ
ಬಾಲಾನಾಯತ್ತಿಕೊಂಡು | ಹಾಲಾಕೂಡಿಸುವಾ ಪುಂಣ್ಯ
ಹೇಗೆ ಪಾಡಾದಾಳೊ ೪
ತೋಳಂನಾಡೆಲೊ ಕೃಷ್ಣ ಕೊಳಂನಾಡಿಸುಕಾಲಿ |
ಭಾಮೆರೂಕಮಿಣಿ ಬಿಗಿದಪ್ಪುವಾ |
ಭಾಮರೂಕೂಮಿಣಿ ಬಿಗಿದಾಪ್ಪುವಾ ನೆಲನಾ ತೊಳಂನಾಡಿಸುವ
ಪುಣ್ಯ ಹೇಗೆ ಪಾಡದಾಳೊ ೫
ಆನೆಯೊಡೆಲೊ ಕೃಷ್ಣ | ಆನೆಯೊಡೆನೂಲಾಲಿ
ರಾಯರಾಯರೂಗಾಗೆಲಿದಂತ | ರಾಯಾ ರಾಯಾ
ಕೂ ಗಾಲಾ ಪಟ್ಟದಾನೆಯಾಡಿಸುವ ಪುಂಣ್ಯ
ಹೇಗೆ ಪಡದಾಳೋ ೬

೬೮
ಬಲ್ಲವನಾದರೆ ಈ ತಳ್ಳಿಬೇಡ |
ಅಲ್ಲದ ಪಥ ಇದರಾಸೆಯ ಬಿಡು ನೀನು ಪ.
ಸರ್ಪನ ಪಣೆಯೊಳು ಜೇನು ತುಪ್ಪವ ಕಂಡು |
ಅಪ್ಪನೆ ತಾರೆಂದು ಅಳುತಿರಲು ||
ತುಪ್ಪದ ಸವಿಯನು ಜನರುಂಡುತೀರಲು |
ಮುಪ್ಪಾಗಿ ಇರುವುದ ಕಂಡು ಮೂದಲಿಸುವ ೧
ನಂಬಿದ ಮನುಜರ ಹಂಬಲ ಮರೆವುದು |
ಡೊಂಬಿಯವರು ಕಂಡು ತಡೆಯಲಾಗಿ ||
ಕುಂಭದ ರೊಕ್ಕದ ಲಂಚವನಿತ್ತಲ್ಲಿ |
ಅಂಬರವನು ಕಂಡು ನಗುತಿಪ್ಪ ಮನುಜನ ೨
ಅಂಬರವಡಗಿಯೆ ಕುಂಭಿನಿ ಜಾರಿಯೆ |
ನಂಬಿದ ಮನುಜರು ನಡೆವಡೆಯೆ ||
ಕುಂಭದ ನೀರನು ಚೆಲ್ಲುತ ಮಗುಳಲ್ಲಿ
ಕಂಬದ ಹಾಗೆಯೆ ನಿಂತಿಹ ನರನು ೩
ಇಟ್ಟಿಹ ಬಾಗಿಲ ಕಾಣದೆ ತಾ ಬಂದು |
ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ||
ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ |
ದುಷ್ಟನೊಬ್ಬನು ಬಂದು ನಿಂತಿಹನು೪
ಕಡಹದ ಪಲ್ಲಕ್ಕಿ ಬೆಡಗನು ಕಾಣುತ |
ಅಡವಿಯ ಮೃಗ ಬಂದು ಕುಳಿತಿರ್ದುದ ||
ಒಡನೆ ಕಟ್ಟಿದ ವಾಹಕರು ಹದಿನಾರು ಮಂದಿ |
ಕಡಮೆಯ ಸಂಬಳ ತಡವಿಡುವವರನು ೫
ಅಕ್ಕಿಯ ರಾಶಿಯು ತೀರಲು ಕೊಳಗವು |
ಬೆಕ್ಕಸ ಬೆರಗಾಗಿ ಕುಳಿತಿಪ್ಪದು ||
ಬಿಕ್ಕಿದ ಅಕ್ಕಿದ ಹಕ್ಕಿಯು ಹಕ್ಕಿಯೆ |
ಗಕ್ಕನೆ ಹಾರವ ಪಕ್ಷಿಯ ನೋಡುತ ೬
ಇರುತಿರೆ ಗಣಿತದಿ ರವಿ ಶಶಿ ಒಂದಾಗಿ |
ಧರೆಯೊಳು ಸಾವಿರ ಎಲೆ ಬೀಳ್ವುದು ||
ಎರವಿನಾಭರಣವ ಅವರವರೊಯ್ಯಲು |
ಪುರಂದರವಿಠಲನ ಮೊರೆಬೀಳು ಕಂಡೆಯ ೭

೨೧೬
ಬಲ್ಲಿದ ನೀನೆಂದು ಬಡವರ ಬಾಯನು ಬಡಿಯದಿರೆಚ್ಚರಿಕೆ
ಎಳ್ಳಷ್ಟು ತಪ್ಪಿದರೆ ಯಮನವರೆಳೆದೊಯ್ವರು ಎಚ್ಚರಿಕೆಚ್ಚರಿಕೆ ಪ.
ಮಾಡು ದಾನ – ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ
ಕೇಡ ನೆಣಿಸಬೇಡ ನಂಬಿದ ಠಾವಿಗೆ ಕೆಡುವೆ ಮತ್ತೆಚ್ಚರಿಕೆ
ಮೂಢರ ಒಡನಾಡಿ ಮುಂದರಿಯದೆ ನೀನು ಮುನಿಯದಿರೆಚ್ಚರಿಕೆ
ನೋಡಿ ನಡೆವ ಸುಗುಣರ ನೋಡಿ ನಡೆಯೊ
ನೀ ನಟನೆ ಬೇಡಚ್ಚರಿಕೆ ೧
ಹೊನ್ನ – ಹೆಣ್ಣು – ಮಣ್ಣು ತನ್ನನೆ
ಅಣಕಿಸಿ ಹೋಹುವು ಎಚ್ಚರಿಕೆ
ಮುನ್ನ ಮಾಡಿದ ಫಲದಿಂದಲಿ ಬಂದೆಯೊ ಮುಂದೆ ಇನ್ನಚ್ಚರಿಕೆ
ಚೆನ್ನಾಗಿ ತಾ ಬಾಳಿ ಬದುಕುವೆನೆಂತೆಂಬ ಚೇಷ್ಟೆ ಬೇಡೆಚ್ಚರಿಕೆ
ಬೆನ್ನನು ಬಡಿಯದೆ ಬಿಡುವರೆ ಯಮನವರು ಮರೆಯದಿರೆಚ್ಚರಿಕೆ ೨
ಬಾಳಿ ಬದುಕಿ ಸಿರಿವಾಹಗೆ ಟವಳಿಯ ಬಣಗು ಬೇಡದೆಚ್ಚರಿಕೆ
ಹಾಳು ಬದುಕಿಗಾಗಿ ಹಲವರ ಕೂಡಣ ಹಗಣ ಬೇಡಚ್ಚರಿಕೆ
ಕಾಲನವರು ಬಂದು ಆವಾಗ ಕರೆವರೊ ಕಾಣದು ಎಚ್ಚರಿಕೆ
ಶ್ರೀಲೋಲ ಪುರಂದರವಿಠಲರಾಯನ ಮರೆಯದಿರೆಚ್ಚರಿಕೆ ೩

೨೧೭
ಬಾತೆಗೆ ಬಾರದ ವಸ್ತು ಬಹಳಿದ್ದರೇನು
ಹೋತಿನ ಕೊರಳೊಳಗೆ ಮಾಲೆಯಿದ್ದರೇನು ? ಪ.
ತಾನು ಉಣ್ಣದ ದ್ರವ್ಯ ತಾಳೆಯುದ್ದ ಇದ್ದರೇನು?
ದಾನವಿಲ್ಲದ ಮನೆಯು ದೊಡ್ಡದಾದರೇನು ?
ಹೀನ ಕುಲದವಂಗೆ ಹಿರಿತದ ಬಂದರೇನು
ಶ್ವಾನನ ಮೊಲೆಯೊಳು ಹಾಲಿದ್ದರೇನು ೧
ವಾದಿಸುವ ಮಗನು ಒಯ್ಯಾರದಲಿದ್ದರೇನು
ಕಾದುವ ಸತಿ ಕೆಲದೊಳಿದ್ದರೇನು ?
ಕ್ರೋಧವನು ಅಳಿಯದ ಸೋದರನು ಇದ್ದರೇನು
ಮಾದಿಗರ ಮನೆಯಲಿ ಮದುವೆ ಆದರೇನು ೨
ಹೋಗದೂರಿನ ಹಾದಿ ಕೇಳಿ ಮಾಡುವುದೇನು
ಮೂಗನ ಕಾಡ ಏಕಾಂತವಿನ್ನೇನು ?
ಯೋಗಿ ಶ್ರೀ ಪುರಂದರವಿಠಲನ ನೆನೆಯದವ
ಯೋಗಿಯಾದರೆ ಏನು ಜೋಗಿಯಾದರೆ ಏನು ? ೩

೩೧೬
ಬಾಯ್ಬಡಿಕರಿಂದ ನಾನು ಬದುಕಿದೆನು – ಅವರು -|
ಮಾಡಿದುಪಕಾರವ ಮರೆಯೆ ಶ್ರೀ ಹರಿಯೆ ಪ
ಹಂಗಿಸಿ ಹಂಗಿಸಿ ಮನವ ಹರಿಯಲಿ ನಿಲಿಸಿದರು |
ಭಂಗಿಸಿ ಭಂಗಿಸಿ ಬಯಲಾಸೆ ಕೆಡೆಸಿದರು ||
ಕಂಗೆಡಿಸಿ ಕಂಗೆಡಿಸಿ ಕಾಮ ಕ್ರೋಧ ಬಿಡಿಸಿದರು |
ಹಂಗಿಸಿದವರೆನ್ನ ಪರಮ ಬಂಧುಗಳು ೧
ಜಾಡಿಸಿ ಜಾಡಿಸಿ ಎನ್ನ ಜನ್ಮಗಳ ಕಳೆದರು |
ಹೂಡಿಸಿ ಹೂಡಿಸಿ ಹುಟ್ಟು ಹೊಂದುಗೊಳಿಸಿದರು ||
ಪೀಡಿಸಿ ಪೀಡಿಸಿ ಎನ್ನ ಪ್ರಯತ್ನವ ಕಳೆದರು |
ಕಾಡಿ ಕಾಡಿ ಕೈವಲ್ಯ ಪದವಿ ತೋರಿದರು ೨
ಕಾಸು ಮುಟ್ಟಿದಾಗ ಕಾಯ ಪ್ರಾಯಶ್ಚಿತ್ತಕಿಕ್ಕಿದರು |
ದೂಷಿಸಿ ದೂಷಿಸಿ ನಿರ್ದೋಷ ಮಾಡಿದರು ||
ಲೇಸನು ಕೊಡು ನಮ್ಮ ಪುರಂದರ ವಿಠಲನೆ ||
ದಾಸನೆಂದೆನಿಸುವರನುದಿನದಲಿ ಎನ್ನ ೩

ಮಧುವೆಂಬ ರಾಕ್ಷಸನನ್ನು ಕೊಂದವನು
೫೧
ಬಾರಯ್ಯ ವೆಂಕಟರಮಣ ಪಬಾರಯ್ಯ ವೆಂಕಟರಮಣನೆ ನೀನೆನಗೆಧಾರಿಣಿಯೊಳು ನಿನ್ನ ಮೂರುತಿ ತೋರುತ ಅ.ಪಮನವೆಂಬ ಮಂಟಪ ನಿನಗೆ ಹಾಕಿ ಎನ್ನತನುವನೊಪ್ಪಿಸಿ ಕೈಯ ಮುಗಿವೆನಯ್ಯ ||ವನಜಜ-ಭವ ಸುರಮುನಿಗಳು ಭಜಿಸುವಘನ ಮಹಿಮನೆ ಪಾದಕೆರಗಲೆನ್ನ ಶಿರ ೧
ಲಿಂಗದೇಹವೆಂಬ ಪವಳಿ ಶೃಂಗರಿಸಿಅಂಗವ ನಿನಗೆ ಕಾಣಿಕೆಯ ನೀಡುವೆ ||ಮಂಗಳಮೂರುತಿ ಅಂಗನೆ ಸಹಿತ- ಭುಜಂಗಶಯನ ಎನ್ನ ಕಂಗಳುತ್ವವವೀಯೋ ೨
ಕಡಗ ಕಿರುಗೆಜ್ಜೆ ಪೆಂಡೆಗಳಿಂದಲೊಪ್ಪುವಉಡುಗೆ ಪೀತಾಂಬರ ತರಳ ಕೌಸ್ತುಭ ||ಪಿಡಿದ ಶಂಖ ಚಕ್ರ ಕರ್ಣಕುಂಡಲದಿಂದಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ ೩
ಒಡೆಯ ನೀನೆನಗೆ ಅನಾದಿ ಕಾಲದಿಂದಬಡವನು ನಾನಿನ್ನ ದಾಸನಯ್ಯ ||ಕಡುಕರುಣದಿಂದ ದಾಸತ್ವ ನೀಡು ಗ-ರುಡಗಮನನೆ ವೆಂಕಟೇಶ ಎನ್ನ ಮನಕೆ ೪
ಬರಿಮನೆಯಲ್ಲವು ಪರಿವಾರವು ಉಂಟುಪರಮ ಪುರುಷ ನಿನ್ನ ರೂಪಗಳುಂಟು ||ಸಿರಿದೇವಿ ಸಹಿತದಿ ಪುರಂದರ ವಿಠಲನೆಕರುಣದಿಂದಲಿ ಮನ್ಮಂದಿರದೊಳಗೆ ೫

ಕಂಸನು ಬಲರಾಮ
೫೨
ಬಾರಯ್ಯ ವೆಂಕಟರಮಣ ಭಕ್ತರ ನಿಧಿಯೆಬಾರೋ ವಿಶ್ವಂಭರಣ ಪತೋರೋ ನಿನ್ನಯ ದಯೆ ತೋಯಜಾಂಬಕನೆ ಅ.ಪವೇದ ಗೋಚರ ಬಾರೋ ಆದಿಕಚ್ಛಪ ಬಾರೋಮೋದ ಸೂಕರ ಬಾರೋ ಸದಯ ನರಸಿಂಹ ಬಾರೋ ೧
ವಾಮನ ಭಾರ್ಗವ ಬಾರೋ ರಾಮಕೃಷ್ಣನೆ ಬಾರೋಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿಯೆ ಬಾರೋ ೨
ಅರವಿಂದ ನಾಭ ಬಾರೋ ಸುರರ ಪ್ರಭುವೆ ಬಾರೋಪುರುಹೂತವಂದ್ಯ ಬಾರೋ ಪುರಂದರ ವಿಠಲ ಬಾರೋ೩

೧೨೩
ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ |
ಬಾರೇ ಗೋಪಮ್ಮ – ನಾವ್ ||
ಆರೂ ತೂಗಿದರೂ ಮಲಗನು ಮುರವೈರಿ
ಬಾರೇ ಗೋಪಮ್ಮ ಪ
ನೀರೊಳಗಾಡಿ ಮೈಯೊರಸೆಂದು ಅಳುತಾನೆ_ಬಾರೆ-|
ಮೇರುವ ಹೊತ್ತು ಮೈಭಾರವೆಂದಳು ತಾನೆ-ಬಾರೆ-||
ಧರೆಯ ನೆಗಹಿ ತನ್ನದಾಡೆನೊಂದಳು ತಾನೆ-ಬಾರೆ-|
ದುರುಳ ರಕ್ಕಸನ ಕರುಳ ಕಂಡಳು ತಾನೆ-ಬಾರೆ- ೧
ನೆಲವನಳೆದು ಪುಟ್ಟ ಚರಣನೊಂದಳು ತಾನೆ-ಬಾರೆ-|
ಛಲದಿಂದ ಕೊಡಲಿಯ ಪಿಡಿವೆನೆಂದಳು ತಾನೆ-ಬಾರೆ-||
ಬಲುಕಪಿಗಳ ಕಂಡಂಜಿಕೊಂಡಳು ತಾನೆ-ಬಾರೆ-|
ನೆಲುವಿನ ಬೆಣ್ಣೆ ಕೈ ನಿಲುಕದೆಂದುಳು ತಾನೆ-ಬಾರೆ- ೨
ಬಟ್ಟ ಬತ್ತಲೆ ನಿಂತು ಎತ್ತಿಕೊ ಯೆಂದಳು ತಾನೆ-ಬಾರೆ-|
ಶ್ರೇಷ್ಠ ತೇಜಿಯನ್ನು ಹತ್ತಿಸೆಂದಳು ತಾನೆ-ಬಾರೆ-||
ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ-ಬಾರೆ-|
ಸೃಷ್ಟಿಯೊಳು ಪುರಂದರವಿಠಲ ಕರೆಯುತಾನೆ-ಬಾರೆ ೩

೧೨೪
ಬಾರೊ ಮುನಿಸೇತಕೆ ಭಾವಜನಯ್ಯ ಪ
ಮಾವನಳಿಯನೆ ಬಾರೊ ಭಾವತನಯನೆ ಬಾರೊ |
ಮಾವನ ಮಡದಿಯ ಮಗಳ ಸೊಸೆಯ ಗಂಡ ೧
ಅತ್ತಿಗೆ ಮೈದುನನೆ ಬಾರೊ ಅತ್ತಿಗೆಯ ಮಗಳ ಗಂಡ |
ಮತ್ತೆ ಮೇಲೆ ಅತ್ತಿಗೆಯ ಪುತ್ರಿಯ ಮುದ್ದಾಡುತ ೨
ಅಂಬುಜನಯನನೆ ಬಾರೊ ಆದಿಮೂಲನೆ ಬಾರೊ |
ಕಂಬದಿಂದೊಡೆದು ಬಂದ ಪುರಂದರವಿಠಲಯ್ಯ ೩

೧೨೫
ಬಾರೋ ಬ್ರಹ್ಮಾದಿವಂದ್ಯಾ
ಬಾರೋ ವಸುದೇವ ಕಂದ ಪ
ಧಿಗಿಧಿಗಿ ನೀ ಕುಣಿದಾಡುತ ಬಾರೋ
ದೀನ ರಕ್ಷಕನೇ
ಜಗದೀಶಾ ಕುಣಿದಾಡುತ ಬಾರೋ
ಚನ್ನಕೇಶವನೇ ೧
ಗೊಲ್ಲರ ಮನೆಗೆ ಪೊಗಲು ಬೇಡ
ಗೋವಿಂದಾ ಕೇಳೋ
ಹಾಲು ಬೆಣ್ಣೆ ಮೊಸರಿಕ್ಕುವೆ
ನೀನುಣ್ಣ ಬಾರೋ ೨
ದೊಡ್ಡ ದೊಡ್ಡ ಮುತ್ತಿನ ಹಾರವ ಹಾಕಿ
ನೋಡುವೆ ಬಾರೋ
ದೊಡ್ಡ ಪುರದ ದ್ವಾರಕಿವಾಸ
ಪುರಂದರ ವಿಠಲ ೩

ಬಿಡೆ ನಿನ್ನ ಪಾದವ ಬಿಂಕವಿದೇಕೋ
ಕೊಡುವುದೊ ಅಭೀಷ್ಟವ ಕೋಪವಿದೇಕೋ ಪ
ನೀರೊಳು ಪೊಕ್ಕರು ನಿನ್ನನು ಬಿಡೆ ಬೆನ್ನ
ಭಾರವ ಪೊತ್ತಿಹೆನೆಂದರು ಬಿಡೆನೋ ||
ಕೋರೆಯ ತೋರಿಸಿ ಕೊಸರಿಕೊಂಡರು ಬಿಡೆ
ಘೋರ ರೂಪವ ತೋರಿ ಘುಡುಘುಡಿಸಲು ಬಿಡೆ ೧
ತಿರುಕನೆಂದರು ಬಿಡೆ ತರೆದ ತಾಯ್ಕೊರಳ
ಕೊರೆಕನೆಂದರು ಬಿಡೆ ಅವನಿಯೊಳು ||
ಕರಕರೆಗಾರದೆ ಕಾಡ ಸೇರಲು ಬಿಡೆ
ದುರಳ ಮಡುವಿನಲ್ಲಿ ಧುಮುಕಿದರೂ ಬಿಡೆ ೨
ಕಡು ಬತ್ತಲೆ ಕೈಲಿ ಕಾಸಿಲ್ಲೆಂದರು ಬಿಡೆ
ಒಡನೆ ತೇಜಿಯನೇರಿ ಓಡಲು ಬಿಡೆನೋ ||
ಒಡೆಯ ಪುರಂದರ ವಿಠಲನೇ ಎನ್ನ
ಕಡಹಾಯ್ಸುವ ಭಾರ ಕರ್ತನು ನೀನೆಂಞ್ು ೩

೩೧೮
ಬಿನ್ನಹಕೆ ಬಾಯಿಲ್ಲ ಎನಗೆ ಅದರಿಂದ |
ನಿನ್ನ ಮರೆದೆನೊ ಸ್ವಾಮಿ ಎನ್ನ ಕಾಯಯ್ಯ ಪ
ಅನ್ನಮದ ಅರ್ಥಮದ ಅಖಿಳ ವೈಭವದ ಮದ |
ಮುನ್ನ ಪ್ರಾಯದ ಮದವು ರೂಪ ಮದವು ||
ತನ್ನ ಸತ್ವದ ಮದ ಧರಿತ್ರಿ ವಶವಾದ ಮದ |
ಇನ್ನು ಎನಗಿದಿರಿಲ್ಲವೆಂಬ ಮದದಿ ೧
ಶಶಿವದನೆಯರ ಮೋಹ ಜನನಿ – ಜನಕರ ಮೋಹ |
ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ ||
ಪಶು ಮೋಹ ಶಿಶುಮೋಹ ಬಂಧುವರ್ಗದ ಮೋಹ |
ಹಸನುಳ್ಳ ವಸ್ತ್ರ ಆಭರಣಗಳ ಮದದಿ೨
ಇಷ್ಟ ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |
ಅಷ್ಟು ದೊರಕಿದರೆ ಮತ್ತಷ್ಟರಾಸೆ ||
ಕಷ್ಟ ಜೀವನದಾಸೆ ಕಾಣಾಚಿ ಕೊಂಬಾಸೆನಷ್ಟ ಜೀವನ ಬಿಡಿಸೆ ಪುರಂದರ ವಿಠಲ ೩

೨೧೮
ಬುತ್ತಿಯ ಕಟ್ಟೊ – ಮನುಜಾ ||
ಬುತ್ತಿಯ ಕಟ್ಟೊ ಪ.
ಬುತ್ತಿಯನ್ನು ಕಟ್ಟಿದರೆ |
ಎತ್ತಲಾದರುಣ್ಣಬಹುದುಅಪ
ಧರ್ಮವೆಂಬ ಮಡಿಕೆಯಲ್ಲಿ |
ನಿರ್ಮಲ ಗಂಗೆಯನು ತುಂಬಿ ||
ಸುಮ್ಮಾನದಿಂದಲಿ ಬೇಗ |
ಒಮ್ಮನಕ್ಕಿಯ ಅನ್ನಬಾಗಿ೧
ಅರಿವು ಎಂಬ ಅರಿವೆಯ ಹಾಸಿ |
ಗರಿಮೆ ಹಾಲ – ಮೊಸರ ತಳಿದು ||
ಪರಮವೈರಾಗ್ಯದಿಂದ |
ಸಿರಿಹರಿಗರ್ಪಿತವೆಂದು ೨
ಕರ್ತು ಪುರಂದರವಿಠಲನ |
ತತ್ತ್ವವೆಂಬ ಬುತ್ತಿಯನ್ನು ||
ಹತ್ತಿರ ತಂದಿಟ್ಟುಕೊಂಡು |
ನಿತ್ಯವುಂಡು ತೃಪ್ತಿಪಡೆಯೊ ೩

೧೨೬
ಬೂಚಿ ಬಂದಿದೆ-ರಂಗ-ಬೂಚಿ ಬಂದಿದೆ ಪ
ಚಾಚಿ ಕುಡಿದು ಸುಮ್ಮನೆ ನೀ
ಪಾಚಿಕೊಳ್ಳೊ ಕೃಷ್ಣಯ್ಯ ಅ.ಪ
ನಾಕು ಮುಖದ ಬೂಚಿಯೊಂದು |
ಗೋಕುಲಕ್ಕೆ ಓಡಿ ಬಂದು ||
ತೋಕರನ್ನು ಎಳೆದುಕೊಂಡು |
ಕಾಕುಮಾಡಿ ಒಯ್ಯುವುದಕೆ ೧
ಮೂರು ಕಣ್ಣಿನ ಬೂಚಿಯೊಂದು |
ಊರು ಊರು ಸುತ್ತಿ ಬಂದು ||
ದ್ವಾರದಲ್ಲಿ ನಿಂದಿದೆ ನೋಡೊ |
ಪೋರರನ್ನು ಒಯ್ಯುವುದಕೆ ೨
ಅಂಗವೆಲ್ಲ ಕಂಗಳುಳ್ಳ |
ಶೃಂಗಾರ ಮುಖದ ಬೂಚಿ ||
ಬಂಗಾರದ ಮಕ್ಕಳನೆಲ್ಲ |
ಕೆಂಗೆಡಿಸಿ ಒಯ್ಯುವುದಕೆ ೩
ಆರು ಮುಖದ ಬೂಚಿಯೊಂದು |
ಈರಾರು ಕಂಗಳದಕೆ ||
ಬಾರಿ ಬಾರಿ ಅಳುವ ಮಕ್ಕಳ |
ದೂರ ಸೆಳೆದು ಒಯ್ಯುವುದಕೆ ೪
ಮರದ ಮೇಲೆ ಇರುವುದೊಂದು |
ಕರಿಕರಾಳದ ಮುಖದ ಬೂಚಿ ||
ತರಳರನ್ನು ಎಳೆದುಕೊಂಡು |
ಪುರಂದರವಿಠಲಗೊಪ್ಪಿಸಲಿಕ್ಕೆ ೫

೧೨೭
ಬೇಡವೆನ್ನೆ ನೀನು ಗೋಪಮ್ಮ ಪ
ಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪ
ಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |
ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||
ಬೆನ್ನು ಒರಸಲು ಬಂದ-ಬೆದರೇಳ್ವರ |
ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |
ಚಿಣ್ಣ ಸಿರಿಗೇಡಿಯು ಎನ್ನ ನಾಚಿಕೆಗೊಂಡ ೧
ನೆಲುವಿಗೆ ಹಾಲ ಏರಿಸುವಳ ಕೈವಿಡಿದು |
ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||
ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |
ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |
ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ ೨
ಮನೆಮನೆಯೊಳು ದಂಪತಿಗಳಿದ್ದ ಮಂಚ-|
ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||
ಮನು ಮಥನಯ್ಯ ಕಾಣೆ-ಈತನು ಮಹಾ |
ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |
ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ ೩

೨೧೯
ಬೇವ ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ ? ಪ.
ಕುಟಿಲವ ಬಿಡದಲೆ ಕುಜನರು ಮಂತ್ರವ
ಪಠನೆಯ ಮಾಡಿದರೇನು ಫಲ?
ಸಟೆಯನ್ನಾಡುವ ಮನುಜರು ಮನದಲಿ
ವಿಠಲನ ನೆನೆದರೆ ಏನು ಫಲ ? ೧
ಮಾತಾ – ಷತೃಗಳ ಬಳಲಿಸುವಾತನು
ಯಾತ್ರೆಯ ಮಾಡಿದರೇನು ಫಲ ?
ಘಾತಕತನವನು ಬಿಡದೆ ನಿರಂತರ
ನೀತಿಯನೋದಿದರೇನು ಫಲ ? ೨
ಕಪಟತನದಲಿ – ಕಾಡುವರೆಲ್ಲರು
ಜಪಗಳ ಮಾಡಿದರೇನು ಫಲ ?
ಕುಪಿತ ಬುದ್ಧಿಯನು ಬಿಡದೆ ನಿರಂತರ
ಉಪವಾಸ ಮಾಡಿದರೇನು ಫಲ ? ೩
ಪತಿಗಳ ನಿಂದಿಸಿ ಬೊಗಳುವ ಸತಿಯರು
ವ್ರತಗಳ ಮಾಡಿದರೇನು ಫಲ ?
ಅತಿಥಿಗಳೆಯಡೆಯಲಿ ಭೇದವ ಮಾಡಿ ಸ
ದ್ಗತಿಯನು ಬಯಸಿದರೇನು ಫಲ ? ೪
ಹೀನ ಗುಣಂಗಳ ಬಿಡದೆ ನದಿಯೊಳು
ಸ್ನಾನವ ಮಾಡಿದರೇನು ಫಲ ?
ಜ್ಞಾನಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ? ೫

೩೧೯
ಭಂಡನಾದೆನು ನಾನು ಸಂಸಾರದಿ |
ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆಪ
ಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |
ದಿಂಢೆಗಾರರ ಮನೆಗೆ ಬಲು ತಿರುಗಿದೆ ||
ಶುಂಡಾಲನಂತೆನ್ನ ಮತಿ ಮಂದವಾಯಿತೈ |
ಪುಂಡರೀಕಾಕ್ಷ ನೀ ಕರುಣಿಸೈ ಬೇಗ ೧
ನಾನಾವ್ರತಂಗಳನು ನಾ ಮಾಡಿ ಬಳಲಿದೆನು |
ಏನಾದರೂ ಎನಗೆ ಫಲವಿಲ್ಲವು ||
ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |
ನೀನಾದರೂ ಕೃಪೆಯನಿಡು ಬೇಗ ಹರಿಯೇ ೨
ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ |
ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||
ಮಧ್ವನುತ ಸಿರಿ ಪುರಂದರವಿಠಲ ತತ್ವದ |
ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ ೩

ಭಕುತ ಜನ ಮುಂದೆ ನೀನವರ ಹಿಂದೆ – ಇದಕೆ |
ಯುಕುತಿ ಕೈಕೊಳದಯ್ಯ ಗಯಾಗದಾಧರನೆ ಪ
ಕಟ್ಟೆರಡು ಕೂಡಿ ತಾ ನದಿಸೂಸಿ ಹರಿವಾಗ |
ಕಟ್ಟುಕ್ಕಿದಾಗ ಹರಿಗೋಲ ಹಾಕೆ ||
ನೆಟ್ಟನೆ ಜಿಗಿಜಿಗಿದು ದಾಟಿ ತಾ ಪೋಪಾಗ |
ಹುಟ್ಟು ಮುಂದಲ್ಲದಲೆ ಹರಿಗೋಲು ಮುಂದೆ? ೧
ಕಾಳೆ ಹೆಗ್ಗಾಳೆ ದುಂದುಭಿ ನಾನಾ ವಾದ್ಯದಿಂ |
ಓಲಗದಿಂದೈದೆ ಅರಸು ತಾ ಬರುವಾಗ ||
ಸಾಲಾಗಿ ಬಳಿವಿಡಿದು ಸಂಭ್ರಮದಿ ಇರುವಾಗ |
ಆಳು ಮುಂದಲ್ಲದೆ ಅರಸು ತಾ ಮುಂದೆ ೨
ಉತ್ಸವ ಮೂರುತಿಯು ಬೀದಿ ಮೆರೆಯುತ ಬರಲು |
ಸತ್ಸಂಗತಿಗೆ ಹರಿದಾಸರೆಲ್ಲ ||
ಅಚ್ಚ ಸಿರಿಯರಸು ಸಿರಿಪುರಂದರ ವಿಠಲನೆ |
ವತ್ಸ ಮುಂದಲ್ಲದೆ ಧೇನು ತಾ ಮುಂದೆ? * ೩

೩೨
ಭಯ ನಿವಾರಣವು ಶ್ರೀ ಹರಿಯ ನಾಮ |
ಜಯಪಾಂಡುರಂಗವಿಠಲ ನಿನ್ನ ನಾಮ ಪ
ಧಾರಿಣೀದೇವಿಗಾಧಾರವಾಗಿಹ ನಾಮ |
ನಾರದರು ನಲಿನಲಿದು ನೆನೆವ ನಾಮ |
ಘೋರಪಾತಕಿ ಅಜಾಮಿಳನ ಸಲಹಿದ ನಾಮ |
ತಾರಕವು ಬ್ರಹ್ಮ – ಭವರಿಗೆ ನಿನ್ನ ನಾಮ ೧
ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |
ಕರುಣದಿಂ ದ್ರೌಪದಿಯ ಕಾಯ್ದ ನಾಮ |
ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |
ಪರತತ್ತ್ವ ಇಹಕಲ್ಲವೇ ನಿನ್ನ ನಾಮ೨
ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |
ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |
ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |
ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ ೩
ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||
ಬಂದಾ ವಿಭೀಷಣನ ಪಾಲಿಸಿದ ನಾಮ |
ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |
(ಸಂದ ಪಾಂಡಪಕ್ಷ ಪಾವನವು ನಾಮ ) ೪
ಅಖಿಳವೇದಪುರಾಣ ಅರಸಿಕಾಣದ ನಾಮ |
ಸಕಲ ಯೋಗಿ – ಜನಕೆ ಸೌಖ್ಯ ನಾಮ ||
ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |
ರುಕುಮಿಣೀಯರಸ ವಿಠಲ ನಿನ್ನ ನಾಮ ೫
ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |
ಮುಕ್ತಿ ಮಾರ್ಗಕೆ ಯೋಗ್ಯ ಹರಿ ನಿನ್ನ ನಾಮ |
ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |
ಚಿತ್ತಜನ ಪೆತ್ತ ಶ್ರೀ ಹರಿಯ ನಾಮ ೬
ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ – |
ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||
ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |
ನಾರಾಯಣಾ ಕೃಷ್ಣ ಹರಿ ನಿನ್ನ ನಾಮ ೭
ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |
ತಂದು ಅಮೃತವ ಸುರರಿಗೆರೆದ ನಾಮ ||
ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |
ತಂದೆ ಪುರಂದರವಿಠಲ ಹರಿ ನಿನ್ನ ನಾಮ ೮

ದೇವದೇವತೆಗಳ ಸ್ತುತಿತಾರತಮ್ಯೋಕ್ತ ಪದಗಳು
೧೫೮
ಭಳಿಭಳಿರೆ ಎನ್ನ ಸುಖವೆಂಬುದೇ ಸುಖವು
ಹಲಕಾಲಕಿದೆ ಇರಲಿ ಕಾವೇರಿ ರಂಗ ಪ
ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ
ಮಂದಹಾಸನನೆನಗೆ ಹಿರಿಯಣ್ಣನು ||
ಇಂದು ಶ್ರೀ ಸರಸ್ವತೀದೇವಿ ಅತ್ತಿಗೆಯು
ಎಂದೆಂದಿಗೂ ವಾಯುದೇವರೇ ಗುರುವು ೧
ಗುರುಪತ್ನಿ ಶ್ರೀಭಾರತಿಯು ನೋಡೆ ಮೇಲಾಗಿ
ಗರುಡಾಹಿ ರುದ್ರರಣ್ಣನ ಮಕ್ಕಳು ||
ಸುರರು ಸನಕದಿಗಳು ಪರಮಬಾಂಧವರೆನಗೆ
ಸ್ಥಿರವಾದ ವೈಕುಂಠವೆನಗೆ ಮಂದಿರವು ೨
ನಿನ್ನ ಪಾದಾಂಬುಜವ ಭಜಿಸುವುದೆ ಸೌಭಾಗ್ಯ
ನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ ||
ನಿನ್ನ ಕಥೆ ಕೇಳುವುದೆ ಮಂಗಳಸುವಾದ್ಯಗಳು
ನಿನ್ನಂಥ ಅರಸೆನಗೆ ಪುರಂದರವಿಠಲ ೩

೨೧೪
ಭಾಗೀರಥೀದೇವಿ ಭಯನಿವಾರಣೆ ಗಂಗೆ |
ಸಾಗರನ ನಿಜರಾಣಿ ಸಕಲಕಲ್ಯಾಣಿ ಪ
ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |
ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||
ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |
ಬೊಮ್ಮಾಂಡವನು ಪಾವನಮಾಡ ಬಂದೆ ೧
ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |
ದೇವತೆಗಳಿಗೆಲ್ಲ ಅಧಿಕವಾದೆ ||
ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|
ದೇವನ ಶಿರದಿಂದ ಧರೆಗಿಳಿದು ಬಂದೆ ೨
ಜಹ್ನವಿನುದರದಿ ಪೂಕ್ಕ ಕಾರಣದಿಂದ |
ಜಾಹ್ನವಿಯೆಂದು ನೀನೆನಿನೆಕೊಂಡೆ ||
ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |
ವನ್ನು ಪಾವನಮಾಡಿ ಪೊರೆಯಲು ಬಂದೆ ೩
ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |
ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||
ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |
ಸುಟ್ಟು ಹೋಹುದು ಸಾಸಿರಜನ್ಮ ಪಾಪ ೪
ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|
ದೊಳಗೆ ಸಿಲುಕಿ ಕಡುನೊಂದೆ ನಾನು ||
ಹಲವು ಮಾತೇಕೆ ಶ್ರೀ ಪುರಂದರವಿಠಲನ |
ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ ೫

೧೬೫
ಭಾಗ್ಯದ ಲಕ್ಷ್ಮೀ ಬಾರಮ್ಮಾ – ನಮ್ಮಮ್ಮಾ ನೀ ಸೌ-
ಭಾಗ್ಯದ ಲಕ್ಷ್ಮೀ ಬಾರಮ್ಮಾ ಪ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |
ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||
ಸಜ್ಜನ ಸಾಧು ಪೂಜೆಯ ವೇಳೆಗೆ |
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ೧
ಕನಕವೃಷ್ಟಿಯ ಕರೆಯುತ ಬಾರೆ |
ಮನಕೆ ಮತಿಯ ಸಿದ್ದಿಯ ತೋರೆ ||
ದಿನಕರ ಕೋಟಿ ತೇಜದಿ ಹೊಳೆಯುತ |
ಜನಕರಾಜನ ಕುಮಾರಿ ಸೀತೆ ೨
ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |
ಕಂಕಣ ಕೈಯಾ ತಿರುವುತ ಬಾರೆ ||
ಕುಂಕುಮಾಂಕಿತೇ ಪಂಕಜಲೋಚನೆ |
ವೆಂಕಟರಾಯನ ಮೋಹದ ರಾಣಿ ೩
ಅತ್ತಿತ್ತಗಲದೆ ಭಕ್ತರ ಮನೆಯಲಿ |
ನಿತ್ಯಮಂಗಲವು ನಿತ್ಯ ಮಹೋತ್ಸವ ||
ಸತ್ಯವ ತೋರುವ ಸಜ್ಜನರಿಗೆ ನೀ |
ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ ೪
ಸಕ್ಕರೆ ತುಪ್ಪದ ಕಾಲವೆ ಹರಿಸಿ |
ಶುಕ್ರವಾರದ ಪೂಜೆಯ ಕೊಂಬೆ ||
ಆಕ್ಕರವುಳ್ಳ ಅಳಗಿರಿ ರಂಗನ
ಶಕ್ತ ಪುರಂದರ ವಿಠಲನ ರಾಣಿ ೫

೨೨೦
ಭಾಷೆ ಹೀನರ ಆಸೆ ಪ್ರಾಣ ಗಾಸಿ |
ಬೇಸತ್ತು ಬೇಲಿ ಮೇಲೊರಗಿದಂತೆ ಪ.
ಚಳಿಗೆ ನಡುಗುತ ಹೋಗಿ ಜಲದೊಳಗೆ ಪೊಕ್ಕಂತೆ |
ಮಳೆಯ ರಭಸಕೆ ಮರವನೇರಿ ಕುಳಿತಂತೆ |
ಹುಳುವನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ |
ಎಳೆನರಿಯು ಒಂಟೆಯಾ ತುಟಿಗೆ ಜೋತಂತೆ ೧
ಹಸಿವೆಗಾರದೆ ಬೆಕ್ಕು ಹತ್ತಿಯನು ತಿಂದಂತೆ |
ತೃಷೆಗಾರದವ ತೆವರ ತೋಡಿದಂತೆ ||
ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ |
ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ ೨
ಹುಸಿಯನಾಡುವರಾಸೆ ಪುರುಷ ನಾರಿಯ ವೇಷ
ಬಿಸಿಲುಗುದಿರೆಯ ಭಾವ ಒಂದೆ ಕಾಣೊ ||
ಬಿಸಜಾಕ್ಷ ವರದ ಶ್ರೀ ಪುರಂದರವಿಠಲನ |
ಎಸೆವ ಪಾದದ ಸೇವೆ ಪರಮಸುಖ ಮನುಜಾ ೩

೩೩೧
ಮಂಗಳ ಮಾರಮಣಗೆ ಮಂಗಳ ಜಯ
ಮಂಗಳ ಭೂರಮಣಗೆ ಮಂಗಳ ಪ.
ಮುಕುಟಕೆ ಮಂಗಳ ಮತ್ಸ್ಯಾವಾತಾರಗೆ
ಮುಖಕೆ ಮಂಗಳ ಮುದ್ದು ಕೂರ್ಮನಿಗೆ ||
ಸುಕಂಠಕೆ ಮಂಗಳ ಸೂಕರರೂಪಗೆ
ನಖಕೆ ಮಂಗಳ ಮುದ್ದು ನರಸಿಂಹಗೆ ೧
ವಕ್ಷಕೆ ಮಂಗಳ ವಟವಾಮನನಿಗೆ
ಪಕ್ಷಕೆ ಮಂಗಳ ಭಾರ್ಗವಗೆ ||
ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆ
ಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ ೨
ಉರುಗಳಿಗೆ ಮಂಗಳ ಉತ್ತಮ ಬುದ್ಧಗೆ
ಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||
ಪರಿಪರಿ ರೂಪಗೆ ಪರಮ ಮಂಗಳ
ಪುರಂದರವಿಠಲಗೆ ಶುಭಮಂಗಳ ೩

೩೩೨
ಮಂಗಳಂಮಾರಣಮಣಗೆಮಂಗಳಂ ಪ.
ನೀರೊಳು ಮುಳಗಿ ನಿಗಮ ತಂದವಗೆ
ಘೋರರೂಪದಿ ಕಂಬದೋಳ್ ಬಂದವಗೆ ೧
ಪೊಡವಿಯನೀರಡಿ ಮಾಡಿದ ದೇವಗೆ
ಕೊಡರಿಯ ಕರನಾಗಿ ಜನಿಸಿದವಗೆ
ಮಡದಿ ಸಹಿತ ವನವಾಸದೊಳಿದ್ದವಗೆ
ಬಿಡದೆ ಪಾಂಡವ ಭೃತ್ಯನಾದವಗೆ ೨
ಭರದಲಿ ಸತಿಯರ ವ್ರತಗೆಡಿಸಿದವಗೆ
ಧುರದಲಿ ತುರಗವನೇರಿದವಗೆ
ಗಿರಿಜಾಪುರದೊಳು ವಾಸವಿದ್ದವಗೆ
ವರದ ಶ್ರೀ ಪುರಂದರವಿಠಲಗೆ ೩

ಮಂಗಳಂಜಯಮಂಗಳಂ ಪ.
ಜಯ ಜಯ ಮಂಗಳ ಹರಿಗೆ
ಜಯ ಜಯ ಮಂಗಳ ಸಿರಿಗೆ
ಜಯ ಜಯ ವರದ ಪುರಂದರವಿಠಲಗೆ ೧
ಜಯ ವಾಸುದೇವನ ಸುತಗೆ
ಜಯ ಜಯ ಭೀಷ್ಮಕ ಸುತೆಗೆ
ಜಯ ಜಯ ದಂಪತಿ ವರದ ಪುರಂದರವಿಠಲಗೆ ೨
ಜಯ ಜಯ ದಶರಥ ಸುತಗೆ
ಜಯ ಜಯ ಜನಕನ ಸುತೆಗೆ
ಜಯ ಜಯ ದಂಪತಿ ವರದ ಪುರಂದರವಿಠಲಗೆ ೩
ಪರಮಾನಂದವು ಹರಿಗೆ
ಪರಮಾನಂದವು ಸಿರಿಗೆ
ಪರಮಾನಂದವು ವರದ ಪುರಂದರವಿಠಲಗೆ ೪
ಶುಭವಿದು ಶೋಭನ ಹರಿಗೆ
ಶುಭವಿದು ಶೋಭನ ಸಿರಿಗೆ
ಶುಭವಿದು ಶೋಭನ ವರದ ಪುರಂದರವಿಠಲಗೆ ೫

ಮಂಗಳಂಜಯಮಂಗಳಂ ಪ.
ನಿಗಮವ ತಂದಾ ಮತ್ಸ್ಯನಿಗೆ
ನಗವ ಬೆನ್ನಲಿ ಪೊತ್ತ ಕೂರ್ಮನಿಗೆ ||
ಜಗವನುದ್ಧರಿಸಿದ ವರಹಾವತಾರಗೆ
ಮಗುವನು ಕಾಯ್ದ ಮುದ್ದು ನರಸಿಂಹಗೆ ೧
ಭೂಮಿಯ ದಾನವ ಬೇಡಿದಗೆ
ಆ ಮಹಾಕ್ಷತ್ರಿಯರ ಗೆಲಿದವಗೆ ||
ರಾಮಚಂದ್ರನಾದ ಸ್ವಾಮಿಗೆ ಸತ್ಯ
ಭಾಮೆಯರಸ ಗೋಪಾಲಕೃಷ್ಣಗೆ ೨
ಬತ್ತಲೆ ನಿಂತಿಹ ಬುದ್ಧನಿಗೆ
ಉತ್ತಮ ಹಯವೇರಿದ ಕಲ್ಕಿಗೆ |
ಹತ್ತವತಾರದಿ ಭಕ್ತರ ಸಲಹುವ
ಸತ್ಯ ಶ್ರೀ ಪುರಂದರವಿಠಲನಿಗೆ ೩

ಮಂಗಳಂಜಯಮಂಗಳಂ ಪ.
ವಾತಸುತ ಹನುಮನ ಒಡೆಯಗೆ ಮಂಗಳ
ದಾತ ಶ್ರೀ ರಘುಪತಿಗೆ ಮಂಗಳ ||
ಸೇತುವೆಗಟ್ಟಿದ ರಾಯಗೆ ಮಂಗಳ
ಸೀತಾರಮಣಗೆ ಶುಭ ಮಂಗಳ ೧
ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರ
ಹಲ್ಲ ಮುರಿದವಗೆ ಮಂಗಳ |
ಕಲ್ಲಾದಹಲ್ಯೆಯನುದ್ಧಾರ ಮಾಡಿದ
ಬಲ್ಲಿದ ದಾಶರಥಿಗೆ ಮಂಗಳ ೨
ಹರಧನು ಮುರಿದ ವಿನೋದಿಗೆ ಮಂಗಳ
ವರದ ತಿಮ್ಮಪ್ಪಗೆ ಮಂಗಳ ||
ಪುರಂದರವಿಠಲರಾಯಗೆ ಮಂಗಳ
ಸರುವೋತ್ತಮನಿಗೆ ಶುಭಮಂಗಳ ೩

೩೨೦
ಮಂತ್ರ ದೊರಕಿತು ನಾಮ ಮಂತ್ರ ದೊರಕಿತು |
ಯಂತ್ರವಾಹಕ ನಾರಾಯಣನ ಪ
ಅಂತರಂಗದಿ ಜಪಿಸುವಂಥ ಅ.ಪ
ಆಶೆಯಲ್ಲಿ ಬೀಳಲಿಲ್ಲ ಕ್ಲೇಶಪಟ್ಟು ಬಳಲಲಿಲ್ಲ |
ವಾಸುದೇವ ಕೃಷ್ಣನೆಂಬ ಶಾಶ್ವತದೀ ದಿವ್ಯ ನಾಮ ೧
ಅರ್ಥ ವೆಚ್ಚವಾಗಲಿಲ್ಲ, ಕಷ್ಟಪಟ್ಟು ಬಳಲಲಿಲ್ಲ |
ಭಕ್ತಿಯಿಂದ ಭಜಿಸಿ ಮಹಾಮುಕ್ತಿ ಪದವಸೇರುವಂಥ ೨
ಹೊದ್ದಿದ ಪಾಪವೆಲ್ಲ ಕಳೆದು, ಉದ್ಧಾರವಾಯಿತು –
ಕುಲಕೋಟಿಯು |
ಮುದ್ದು ಕೃಷ್ಣನ ದಿವ್ಯನಾಮ ವಜ್ರಕವಚ ಹೃದಯದಲ್ಲಿ ೩
ಹಾಸಬಹುದು ಹೊದೆಯಬಹುದು, ಸೂಸಿ
ಒಡಲ ತುಂಬಬಹುದು |
ದಾಸರನ್ನು ಬಿಡೆದೆ ಪೊರೆವ ಶ್ರೀಶನೆಂಬ ದಿವ್ಯ ನಾಮ ೪
ಒಂದು ಬಾರಿ ಸ್ತುತಿಸಿದರೆ ಒಂದು ಕೋಟಿ ಜಪದಫಲವು |
ಇಂದಿರೇಶ ಶ್ರೀ ಪುರಂದರ ವಿಠಲನೆಂಬ ದಿವ್ಯನಾಮ ೫

೧೩೦
ಮಂದಗಮನೆ, ಇವನಾರೆ ಪೇಳಮ್ಮ |
ಮಂದರಧರ ಗೋವಿಂದ ಕಾಣಮ್ಮ ಪ
ಕೆಂದಳಿದ ನಖ ಶಶಿಬಿಂಬ ಪಾದಪದ್ಮ |
ಅಂದುಗೆಯಿಟ್ಟವನಾರು ಪೇಳಮ್ಮ ||
ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |
ನಂದನ ಕಂದ ಮುಕುಂದ ಕಾಣಮ್ಮ ೧
ಉಡುಗೆ ಪೀತಾಂಬರ ನಡುವೀಣೆ ಉಡುದಾರ |
ಕಡಗ-ಕಂಕಣವಿಟ್ಟವನಾರಮ್ಮ ||
ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |
ಒಡನೆ ತೋರಿದ ಜಗದೊಡೆಯ ಕಾಣಮ್ಮ೨
ನೀರದ ನೀಲದಂತೆಸೆವ ವಕ್ಷದಿ ಕೇ-|
ಯೂರ-ಹಾರಗಳನಿಟ್ಟವನಾರಮ್ಮ ||
ನೀರೆ ಕೇಳು ನಿರ್ಜರರಾದವರಿಗೆ |
ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ ೩
ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|
ಲಂಕೃತನಹನೀತನಾರಮ್ಮ ||
ಪಂಕಜಮುಖಿ ಶ್ರೀಭೂದೇವಿಯರರಸನು |
ಶಂಕೆ ಇಲ್ಲದೆ ಗೋಪೀತನಯ ಕಾಣಮ್ಮ ೪
ಕಂಬುಕಂಧರ ಕರ್ಣಾಲಂಬಿತ ಕುಂಡಲ |
ಅಂಬುಜ ಮುಖದವನಾರೆ ಪೇಳಮ್ಮ ||
ರಂಭೆ ಕೇಳೀತ ಪುರಂದರವಿಠಲ |
ನಂಬಿದ ಭಕ್ತಕುಟುಂಬಿ ಕೇಳಮ್ಮ ೫

೩೨೧
ಮಂದಮತಿಯೈ ನಾನು ಮದನ ಜನಕನು ನೀನು
ಕುಂದುಗಳನೆಣಿಸದಲೆ ದಯೆ ಮಾಡಿ ಸಲಹೋ ಪ
ಪಾಪಕರ್ತನು ನಾನು ಪಾಪನಾಶಕ ನೀನು
ಕೋಪ ಮದ ಮತ್ಸರದಿ ಸುಳಿವೆ ನಾನು ||
ತಾಪವನು ತರೆದು ನಿರ್ಭಯವ ಮಾಡುವೆ ನೀನು
ರೂಪಛಾಯಕೆ ಮರುಳುಗೊಂಬೆನೈ ನಾನು ೧
ಶರಣ ಶಿಕ್ಷಕ ನೀನು ಪರಮ ಪಾತಕಿ ನಾನು
ದುರಿತ ಪರ್ವತವ ಪರಿಹರಿಪೆ ನೀನು ||
ಮರುಳುಗೊಂಬನು ನಾನು ಅರಿತು ರಕ್ಷಿಪೆ ನೀನು
ಗರುವಮತಿಯೈ ನಾನಗಮ್ಯ ನೀನು ೨
ಮಂದಭಾಗ್ಯನು ನಾನು ಇಂದಿರಾಪತಿ ನೀನು
ಹಿಂದು ಮುಂದಿನ ಸುದ್ದಿ ಅರಿಯದವ ನಾನು ||
ತಂದೆ ಶ್ರೀ ಪುರಂದರವಿಠಲ ರಾಯನೆ ದೇವ
ಎಂದೆಂದು ಭಕ್ತರನು ಸಲಹುವೆಯೋ ನೀನು ೩

೩೩
ಮಂದರಧರ ದೇವ ಮೊರೆಹೊಕ್ಕವರ ಕಾಯ್ವ ಪ
ಮಂದಾಕಿನಿಯ ಪಿತ ಮಾವ ಕಂಸನ ಹೃತ |
ಸುಂದರ ಶಶಿವದನ ರಂಗಯ್ಯ ಅ.ಪ
ಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |
ಹೆಣ್ಣ ಮೊರೆಯ ಕೇಳಿ ಹಿರಣ್ಯನುದರ ಸೀಳಿ ||
ಮಣ್ಣು ಬೇಡಿ ಬೆಳೆದೆ – ಕೃಷ್ಣಯ್ಯ ||
ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |
ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |
ಚೆನ್ನರಾವುತನಾದೆಯೊ – ರಂಗಯ್ಯ ೧
ಗೋಚರನಂದದಲಿ – ಗಿರಿಯ ತಾಳಿದೆ ಬೆನ್ನಿನಲಿ |
ಭೂಚೋರನ ಕೊಂದು ಬಾಲ ಕರೆಯಲು ಬಂದು |
ಯಾಚಕ ನೀನಾದೆ – ರಂಗಯ್ಯ ||
ಸೂಚತನ ಸುತಗೊಲಿದು ಶರಧಿಯ ಕಟ್ಟಿ ಮೆರೆದೆ |
ಕೀಚಕಹತಪೋಷ ಖೇಚರಪುರವಾಸ |
ನೀಚಜನರ ತರಿದೆ – ರಂಗಯ್ಯ ೨
ವನವನಲೆದು ಬಂದ – ವನಿತೆರತ್ನವ ತಂದ |
ಘನಕಂಭದಿಂದ ಬಂದು ಗರುವ ಮುರಿದು ಬಲಿಯ |
ಜನನಿಯ ಶಿರವರಿದೆ – ರಂಗಯ್ಯ ||
ಹನುಮವಂದಿತಪಾದ ಹರುಷ ಪಾಂಡುವವರದ |
ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |
ಘನಪುರಂದರ ವಿಠಲ – ರಂಗಯ್ಯ ೩

೭೩
ಮಂದಿಯಗೊಡವೆ ಇನ್ನೇನು ಮಗಳೆ |
ಮುಂದೆ ನೋಡಿ ಹಂಜಿ ನೂಲವ್ವ………… ಪ.
ಕಣ್ಣ ಮುಂದಿನ ಕಸವನು ತೆಗೆದು |
ಸಣ್ಣಗೆ ನೀ ನೂಲವ್ವ…………… ಅಪ
ವಸುಧೆಯ ದೊಡ್ಡ ಮಣೆಯಮಾಡಿ |
ಶಶಿರವಿಗಳೆರಡು ಕಂಬವ ಹೂಡಿ ||
ಆ ಸಿರಿರಂಗರ ಎರಡು ಚಕ್ರವ ಮಾಡಿ |
ದರ್ಶನವೆಂಬುವ ನುಲಿಯನು ಬಿಗಿದು ೧
ಪರಬ್ರಹ್ಮನ ಅಳವು ಮಾಡಿ |
ಕುರುಡು ನಾಶಿಕ ಬೆನಕದಿ ತಿಕ್ಕಿ ||
ಹರಿ ನೀನೆ ಎಂಬ ದಾರವ ಕಟ್ಟಿ |
ವಿರತಿ ವಿಚಾರದ ಬೆಲ್ಲಗಳಿಕ್ಕಿ ೨
ಜ್ಞಾನವೆಂಬುವ ಕದರನ್ನಿಕ್ಕಿ |
ಮಾನಮದವೆಂಬ ಹಂಜಿಯ ಹಿಡಿದು ||
ಧ್ಯಾನವೆಂಬ ಎಳೆಯನು ತೆಗೆದು |
ಮೌನದಿಂದಲಿ ನೂಲವ್ವ ೩
ಕಕ್ಕುಲಾತಿ ಕಾಂಕ್ಷೆಗಳೆಂಬ |
ಸಿಕ್ಕುದೊಡಕುಗಳನೆ ಬಿಡಿಸಿ ||
ಒಕ್ಕುಡಿತೆಯ ಮಾಡಿದ ಮನದಿ |
ಕುಕ್ಕಡಿನೂಲು ಕೂಡಿ ಹಾಕಮ್ಮ ೪
ಇಪ್ಪತ್ತೊಂದು ಸಾವಿರದ ಮೇ –
ಲಿಪ್ಪ ನೂರು ಎಳೆಯನು ಹೊಡೆದು ||
ತಪ್ಪದೆ ಹುಂಜವ ಕಟ್ಟಿ ನೀನು |
ಒಪ್ಪದಿ ಸೀಳು ಇಳುವಮ್ಮ ೫
ಸದ್ಯದಿ ನೀ ಜಾಡರಲ್ಲಿ |
ಸಿದ್ಧ ಬದ್ಧ ಸೀಳುಗಳ ಹಾಕಿ ||
ವಿದ್ಯೆಯೆಂಬುವ ಹಚ್ಚಡವನ್ನು |
ಬುದ್ಧಿಯಿಂದಲಿ ನೇಯಿಸಮ್ಮ ೬
ಒಪ್ಪುವಾತ್ಮ ಪರಮಾತ್ಮನೆಂಬ |
ಒಪ್ಪ ಎರಡು ಹೋಳುಗಳ ಹಚ್ಚಿ ||
ತಪ್ಪದೆ ಪುರಂದರವಿಠಲನ ಪಾದಕೆ |
ಒಪ್ಪಿಸಿ ಕಾಲವ ಕಳೆಯಮ್ಮ ೭

೧೨೮
ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ-|
ರಕ್ಕಸ ಶಕಟನ ತುಳಿದು ದೀಪಾದವೆ ಪ
ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿ |
ಜಲಧಿಯ ಪಡೆದದ್ದು ಈ ಪಾದವೆ ||
ಹಲವು ಕಾಲಗಳಿಂದ ಶಿಲೆ ಶಾಪವಡೆದಿರಲು |
ಫಲಕಾಲಕ್ಕೊದಗಿದುದೀ ಪಾದವೆ ೧
ಕಡುಕೋಪದಿ ಕಾಳಿಂಗನ ಮಡುವ ಕಲಕಿ |
ಹೆಡೆಯನು ತುಳಿದುದು ಈ ಪಾದವೆ ||
ಸಡಗರದಿಂದ ಕೌರವನ ಸಿಂಹಾಸನವ |
ಹೊಡೆಮಗುಚಿ ಕೆಡಹಿದುದೀ ಪಾದವೆ ೨
ಶೃಂಗಾರದಿಂದ ಹೆಂಗಳು ಲಕ್ಷುಮಿಯ ಸಹಿತ |
ಅಂಗನೆಯರೊತ್ತುವುದೀ ಪಾದವೆ ||
ಸಂಗಸುಖದಿಂದ ಶ್ರೀ ಪುರಂದರವಿಠಲನ |
ಅಂಗದೊಳಡಗಿದ್ದುದೀ ಪಾದವೆ ೩