Categories
ರಚನೆಗಳು

ಪುರಂದರದಾಸರು

೧೨೬
ಗೋರಂಟ್ಲ ಕೃಷ್ಣಸುಳಾದಿ
ಧ್ರುವತಾಳ
ಕ್ಷೀರಾಬುಧಯೊಳಿಹ ವಿಷ್ಣುವು ನೀನು |
ದೇವಕೀ ಜಠರದೊಳಿಹುದೇನಾಶ್ಚರ್ಯ |
ಅನಂತಾಸನದಲ್ಲಿ ಅನಂತನು ನೀನು |
ಅನಂತಾಸನದಲ್ಲಿ ಅನಂತನು ನೀನು |
ದೇವಕೀ ಜಠರದೊಳಿಹುದೇನಾಶ್ಚರ್ಯ |
ವಿಶ್ವವ್ಯಾಪಕ ನೀನು ವಿಷ್ಣುವೆ ನೀನು |
ಭಕ್ತರ ಪರಾಧೀನ ನೀನಾದೆಯಲ್ಲೊ |
ಗೋರಂಟ್ಲ ಚೆನ್ನರಾಯ ಪುರಂದರವಿಠಲ ೧
ಮಟ್ಟತಾಳ
ಅರಸೆ ಇದು ಅರಮನೆಯಂತೆ ನೋಡಾ |
ಹರಿ ನೀ ದೇವಕಿಯ ಜಠರದೊಳಿರ್ದೆಯೆಂದು |
ದೇವಕಿಯ ಜಠರ ವೈಕುಂಠ ನೋಡಾ |
ಗೋರಂಟ್ಲ ಚೆನ್ನರಾಯ ಪುರಂದರವಿಠಲ ೨
ತ್ರಿವುಡೆತಾಳ
ವಾಸುದೇವ ಗರ್ಭವಾಸವ ಮಾಡಿದ ನೋಡಾ |
ಹಾಸು ಮಂಚ ಶೇಷ, ಶ್ರೀಸತಿಯ ತೊಡೆಯಲ್ಲಿ |
ಈಶನಿಗೆ ಗುರುವಾದನೀತ |
ವಾಸವಾದಿಗಳು ಆಳುಗಳಯ್ಯ |
ವಾಸುದೇವ ಗರ್ಭವಾಸವ ಮಾಡಿದ ನೋಡಾ |
ಲೇಸು ಧಣಿ ಧಣಿ ಗೋರಂಟ್ಲ ಚಿನ್ನರಾಯ |
ಪುರಂದುವಿಠಲ – ೩
ಅಟತಾಳ
ಬೊಮ್ಮದಿ ದೇವುರಗಳು |
ಬೋಮ್ಮಾಂಡಲದಲಿದಿ ಚರಾಚರರು |
ಚಾರಿವರಿವುತ್ತಲಿರಲು |
ಬೊಮ್ಮಾಂಡವೊಂದೆ ಬೊಮ್ಮಸ್ವರೂಪ |
ಗೋರಂಟ್ಲ ಚೆನ್ನರಾಯ ಪುರಂದರವಿಠಲ || ೪
ಏಕತಾಳ
ಆನಂದವೆ (ಆನಂದವಾಗೆ) ಅರ್ಧಾಂಗಿಯಾಗಿ |
ಗೋರಂಟ್ಲಚೆನ್ನರಾಯ ಪುರಂದರವಿಠಲ ೫
ಜತೆ
ಗರ್ಭವಾಸಿ ಗೋರಂಟ್ಲ ಚೆನ್ನರಾಯ |
ಪುರಂದರವಿಠಲ ನಮೋ ನಮೋ ||

೨೧೬
ಸುಳಾದಿ
ಧ್ರುವತಾಳ
ಖಳರ ನೋಟವೆ ಹಾವಲ್ಲವೆ, ಹಾವ ಬೇರೆ ಇನ್ನರಸಲೇತಕೆ ? |
ಖಳರ ನೋಟವೆ ಹುಲಿಯಲ್ಲವೆ, ಹುಲಿಯ
ಬೇರೆ ಇನ್ನರಸಲೇತಕೆ? |
ಖಳರ ಕೂಟವೆ ವಿಷವಲ್ಲವೆ, ವಿಷವ ಬೇರೆ ಇನ್ನರಸಲೇತಕಯ್ಯ? |
ಖಳರೊಳಗೆನ್ನ ಹುಟ್ಟಿಸಿದೆ ಖಳರಿಗೊಪ್ಪಿಸಿ ಕೊಟ್ಟೆಯಲ್ಲ |
ಖಳರಖಂಡ ದಂಡೆಯ ಮುರಿವನೆ
ಖಳರ ನಿವಾರಣ ಪುರಂದರವಿಠಲ ೧
ಮಟ್ಟತಾಳ
ಖಳರೈಶ್ವರ್ಯ ಖಳರ ವಿಭೂತಿ |
ಖಳರಲಿ ದೌತ್ಯ ಖಳರಲಿ ವಿದ್ಯೆಗಳು |
ಖಳರ ತ್ಯಾಗ ಖಳರ ಕರ್ಮ|
ಖಳರ ಕಷ್ಟ-ನಿಷ್ಠುರಂಗಳು |
ಪುಂದರವಿಠಲನ ಪರಮಪ್ರಿಯರ |
ಅವಮನ್ನಡೆ-ಇವು ಸದಾ ಸರ್ವದಾ ನೊಡಾ ೨
ರೂಪಕತಾಳ
ಖಳರ ಕಷ್ಟ-ನಿಷ್ಟುರಂಗಳ ತಾಳಿದರಲಾ ಮನುಗಳು |
ತಾಳಿದರಲಾ ಮುನಿಗಳು |
ತಾಳಿದರಲಾ ಸಕಲ ದೇವತೆಗಳು? |
ತಾಳಿದರಲಾ ಪುರಂದುರವಿಠಲ ಒಲಿವನ್ನಕ್ಕ | ೩
ಅಟತಾಳ
ಪಾಷಂಡರ ಕೂಡೆ ಕಾಳೆಗ |
ವಿಷ್ಣು ದ್ವೇಷಿಗಳ ಕೂಡೆ ಕಾಳೆಗ |
ಕಾಳೆಗ ಕಾಳೆಗ ನಾಸ್ತಿಕರ ಕೂಡೆ |
ಕಾಳೆಗ ಹರಿಡಂಭಕರ ಕೂಡೆ |
ಪುರಂದರವಿಠಲನ ಮೆಚ್ಚಿ ಕಾದಿಸಿ ಕಾದಿಸಿ ನಮ್ಮನೆ ಗೆಲಿಸುವ ೪
ಏಕತಾಳ
ಅಸುರರ ಬದುಕಾ ಬಿಸಿಯರಿಸಿನವವ್ವ |
ಸುರರ ಬದಕು ಸುಸ್ಥಿರ ಕಾಣಿರೊ|
ಆವಾವ ಜಗ-ಜಗಂಗಳೊಳಗೆ ಸುರರ ಬದುಕು- |
ಪುರಂದರವಿಠಲನ ಕೋಪಪ್ರಸಾದದಿಂದ |
ಸುರರ ಬದುಕು ಸುಸ್ಥಿರ ಕಾಣಿರೋ ೬
ಜತೆ
ಖಳಕುಲತಿಮಿರ ದಿವಾಕರನರ್ತಿಯು |
ಖಳಕಮಲೇಂದು ಪುರಂದರ ವಿಠಲ ||

೨೫೩
ಸುಳಾದಿ
ಖಳ ಕೋಪ ಸುಳಾದಿ
ಧ್ರುವತಾಳ
ಖಳರ ನೋಟವೇ ಹಾವಲ್ಲದೆ ಹಾವ ಬೇರೆ ಇನ್ನರಸಲೇತಕೆ? |
ಖಳರ ನೋಟವೇ ಹುಲಿಯಲ್ಲದೆ ಹುಲಿಯ
ಬೇರೆ ಇನ್ನರಸಲೇತಕೆ? |
ಖಳರಕೂಟವೇ ವಿಷವಲ್ಲದೆ ವಿಷವ ಬೇರೆ ಇನ್ನರಸಲೇತಕಯ್ಯ? |
ಖಳರೊಳಗೆನ್ನ ಪುಟ್ಟಿಸಿದೆ ಖಳರಿಗೊಪ್ಪಿಸಿ ಕೊಟ್ಟೆಯಯ್ಯ |
ಖಳರ ಖಂಡದಿಂಡವ ಮುರಿವನೊ |
ಖಳರ ನಿವಾರಣ ಪುರಂದರ ವಿಠಲ ೧
ಮಟ್ಟತಾಳ
ಖಳರ ಐಶ್ವರ್ಯ ಖಳರ ವಿಭೂತಿ ಖಳರ ದೌತ್ಯ |
ಖಳರ ವಿದೈಗಳು ಖಳರ ತ್ಯಾಗ ಖಳರ ಕರ್ಮ |
ಖಳರ ಕಷ್ಟ-ನಿಷ್ಠುರಗಳು ಪುರಂದರ ವಿಠಲನ |
ಪರಮಪ್ರಿಯರ ಅವಮನ್ನಣೆ ಇವು |
ಸದಾ ಸರ್ವದಾ ನೋಡಾ ೨
ರೂಪಕ ತಾಳ
ಖಳರ ಕಷ್ಟ-ನಿಷ್ಠುರಗಳ ತಾಳಿದರಲಾ ಮನುಗಳು |
ತಾಳಿದರಲಾ ಮುನಿಗಳು ತಾಳಿದರಲಾ ಸಕಲ ದೇವತೆಗಳು |
ತಾಳಿದರಲಾ ಪುರಂದರ ವಿಠಲವೊಲಿವನ್ನಕ ? ೩
ಆಟತಾಳ
ಪಾಷಂಡರ ಕೂಡೆ ಕಾಳೆಗ ವಿಷ್ಣುದ್ವೇಷಿಗಳ ಕೂಡೆ ಕಾಳೆಗ |
ನಾಸ್ತಿಕರ ಕೂಡೆ ಕಾಳೆಗ ಹರಿಡಂಬಕರ ಕೂಡೆ ಕಾಳೆಗೆ |
ಪುರಂದರ ವಿಠಲ ಮೆಚ್ಚಿ ಕಾದಿಸಿ ಕಾದಿಸಿ |
ನಮ್ಮನೇ ಗೆಲಿಸುವ ೪
ಏಕತಾಳ
ಅಸುರರ ಬದುಕು ಆ ಬಿಸಿಯ ಅರಗಿನ ವೊಟ್ಟ (?) |
ಸುರರ ಬದುಕು ಸುಸ್ಥಿರ ಕಾಣಿರೊ |
ಅದಾವ ಜಗ-ಜಗಂಗಳೊಳಗೆ ಸುರರ
ಬದುಕು ಸುಸ್ಥಿರ ಕಾಣಿರೊ |
ಪುರಂದರ ವಿಠಲನ ಕೋಪ ಪ್ರಸಾದದಿಂದೆ ೫
ಜತೆ
ಖಳ ಕುಲತಿಮಿರ ದಿವಾಕರನರ್ಥಿಯು |
ಖಳಕಮೇಲೇಂದು ಪುರಂದರ ವಿಠಲ ||

೧೨೪
ಸುಳಾದಿ
ಧ್ರುವತಾಳ
ಗಂಗಾಜನಕನಿಗೆ ಹೊಂಗಲಶಗಳಿಂದ |
ಮಂಗಳ ಮಜ್ಜನ ಮಾಡಿಸುವಳು |
ಅಂಗನೆ ದ್ರೌಪದಿಗೆ ಅಕ್ಷಯಾಂಬರವಿತ್ತ |
ರಂಗಗೆ ಪೊಂಬಟ್ಟೆಯ ಉಡಿಸುವಳು |
ಅಂಗಜನಯ್ಯನ ಅನಘ್ರ್ಯ ರತ್ನಾಭರಣಂಗಳಿಂದಲಿ ಸಿಂಗರಿಪಳು |
ಇಂಗಡಲೊಡೆಯಗೆ ಕೆನೆವಾಲ ನೈವೇದ್ಯ |
ಸಂಗ್ರಾಮ ಭೀಮಗೆ ರಕ್ಷೆಬೊಟ್ಟು ಆ ಭೃಂಗ
ಗೋರಂಟ್ಲೆಯ ಚೆನ್ನರಾಯ |
ಶಾರಙ್ಗಧರ ಪುರಂದರವಿಠಲರಾಯ ೧
ಮಟ್ಟತಾಳ
ಬೊಮ್ಮಾಂಡ ಕೋಟಿಗಳ ಗೊಂಬೆಮನೆಯ ಮಾಡಿ |
ಬೊಮ್ಮ-ಭವಾದಿಗಳ ಗೊಂಬೆಗಳ ಮಾಡಿ |
ಒಮ್ಮೊಮ್ಮೆ ನಲಿಯುತ ಗೊಂಬೆಯಾಟ ವಾಡುವ |
ನಮ್ಮ ಗೋರಂಟ್ಲಿಯ ಚೆನ್ನರಾಯ ಶಾ-|
ರಙ್ಗಧರ ಪುರಂದರವಿಠಲ ೨
ತ್ರಿವಿಡೆ ತಾಳ
ಈತ ವಿರಿಂಚಿಯು ಈತನು ಭವನು |
ಈತ ಇಂದಿರನು ಈತ ಚೆಂದಿರನು |
ಈತನ ನೋಡಲು ಈತನ ನುಡಿಸಲು |
ಈತ ಗೋರಂಟ್ಲೆಯ ಚಿನ್ನರಾಯ |
ಪುರಂದರವಿಠಲ ಈತನ ಮಹಿಮೆ ಎಂತುಟೊ ೩
ಅಟತಾಳ
ಮಾನವರಿಗೆ ದೇವತೆಗಳು ಒಡೆಯರು |
ದೇವತೆಗಳಿಗೆಲ್ಲ ದೇವೇಂದ್ರ ಒಡೆಯ |
ದೇವೇಂದ್ರಗೊಡೆಯ ಮಹದೇವ ಮಹಾ-|
ದೇವಗೊಡೆಯ ಬೊಮ್ಮ,ಬೊವ್ಮಗೊಡತಿ ಲಕ್ಷ್ಮಿ |
ದೇವಿಗೊಡೆಯನು ಗೋರಂಟ್ಲೆ ಚಿನ್ನರಾಯ |
ಪುರಂದರವಿಠಲ ೪
ಏಕತಾಳ
ಉರುಮೂರುತಿ ಉರುಕೀರುತಿ-|
ಉರುಕರ್ಮ ಉರುಕಲ್ಲ್ಯಾಣ |
ಉರು ಮಹಾಮಹಿಮಗೋರಂಟ್ಲೆÉ ನಿಲಯ |
ಚೆನ್ನರಾಯ ಪುರಂದರವಿಠಲ ೫
ಜತೆ
ಇನ್ನು ಸರಿಯುಂಟೆ ಈ ಗೋರಂಟ್ಲೆಯ |
ಚೆನ್ನರಾಯ ಪುರಂದರವಿಠಲಗೆ ||

೮೯
ಸುಳಾದಿ
ಧ್ರುವತಾಳ
ಗರಭವಾಸ, ಗಿರಭವಾಸ. ಜನನ ಗಿನನ |
ಮರಣ ಗಿರಣ ಕಾಲ-ಗೀಲ, ಕರುಮ-ಗಿರುಮ |
ದಾರಿ-ಗೀರಿ, ದಃಖ-ಗಿಕ್ಖ, ಸಂಚಿತ-ಗಿಂಚಿತ |
ಪ್ರಾರಬ್ಧ-ಗೀರಬ್ಧ, ಆಗ್ರಾಮಿ-ಗೀಗಾಮಿ |
ಬಂಧಕ-ಗಿಂಧಕ, ಎಡರು-ಗಿಡರು |
ಭೀತಿ-ಗೀತಿ, ನರಕ-ಗಿರಕ, ಯಾತನೆ-ಗೀತನೆ |
ಪುರಂದರವಿಠಲನವರಿಗುಂಟೆ ?ಅವರ |
ತೊಂಡಗಿಂಡರಿಗುಂಟೆ? | ೧
ಮಟ್ಟತಾಳ
ಹರಿಯ ಅಭಿಮುಖರ ಬಡತನ-ಗಿಡತನ |
ಹರಿಯ ಅನಭಿಮುಖರ ದೊಡ್ಡತೆ ದೊರೆತನ-ಗಿರಿತನ |
ಸರಿಯೆನಬಹುದೆ? ಪ್ರತಿಯೆನಬಹುದೆ? ಈ-|
ಸುರತರುವಿನ ಮೊಳಕೆ ಎಲವದ ಮರಕೆ |
ಸರಿಯೆನಬಹುದೆ? ಪ್ರತಿಯೆನಬಹುದೆ? |
ಪುರಂದರವಿಠಲನ ಆಳುಗಳಿಗೆ ನೋಡಾ |
ಸ್ವರ್ಗ,ಮತ್ರ್ಯು, ಪಾತಾಳ ಲೋಕದಲಿ |
ಸರಿಯುಂಟೆ ? ಪ್ರತಿಯುಂಟೆ ? ೨
ಝಂಪೆ ತಾಳ
ಅಲರು ಮೋಹಿದೊಡೇನು, ಅಲಗು ಮೋಹಿದೊಡೇನು |
ಜಲರುಹಾಕ್ಷನ ಪಾದಜಲರುಹಕ್ಕಾಗಿ ಮುಳುಗಿ |
ಫಲಿಸದಿದ್ದರೆ ನಿಮ್ಮ ಚಿತ್ತ ಒಂದೆ ಅಯ್ಯ |
ಗಿರಿರಮಣ ಪುರಂದರವಿಠಲರಾಯ |
ಹಾವುಗೆಯಾಳರ ತಲೆಗೆ ಸಂದಿದೆ, ಸಂದೇಹವಿಲ್ಲ |
ಫಲಿಸದಿದ್ದರೆ ನಿಮ್ಮ ಚಿತ್ತ ಅಯ್ಯ | ೩
ತ್ರಿವಿಡೆ ತಾಳ
ಅಡಗಿ ನೋಡಿಕೊಂಡು ಕೂಡಿಕೊಂಬನು ತನ್ನ ಕಪಿಲೆಯೆಂದು |
ಕೂಡಿಕೊಂಬನು ತನ್ನ ಹಿಂಡಿನೊಳಗೆ |
ಒಡೆಯೊರೊಡೆಯ ನಮ್ಮ ಪುರಂದರವಿಠಲ |
ಕೂಡಿಕೊಂಬನು ೪
ಏಕತಾಳ
ಅರಳನ್ನರಳುವ ಕೈಯ ನಾರಾಯಣನಾಳ್ಗಳು |
ಇವರುಗಳಳವಲ್ಲವೆ ಅಯ್ಯ |
ನಾರಾಯಣ ಪುರಂದರವಿಠಲರಾಯನಲ್ಲದೆ |
ನಾರಾಯಣ ನಾಳ್ಗಳ ೫
ಜತೆ
ಪುರಂದರವಿಠಲಗೆ ಆತನ ಆಳುಗಳಿಗೆ |
ಶರಣು ಶರಣೆಂದು ಬದುಕುವೆ ನಾ ||

೧೨೩
ಸುಳಾದಿ
ವೈಕುಂಠಸುಳಾದಿ
ಧ್ರುವತಾಳ
ಗಲಭೆ ಇದೇನೊ ಬೊಮ್ಮಾದಿಗಳ ||
ಉಲುಹು ಇದೇನೊ ರುದ್ರಾದಿಗಳ |
ಸುಳಿಸದಿರೆಲೊ ಗರುಡಾದಿಗಳ |
ನಿಲಹೇಳೊ ಇಂದ್ರ-ಚಂದ್ರಾದಿಗಳ |
ಸುಳಿದರೆ ಹೊಯ್ಯೊ ಅಸುರಾದಿಗಳ |
ತೊಲಗ ಹೇಳೆಲೊ ಸನಕಾದಿಗಳ |
ನಳಿನಪತ್ರೇಕ್ಷಣನ ಓಲಗಶಾಲೆಗೆ |
ಸಲುವರೆ ಲಿಂಗ ಶರೀರಿಗಳು? |
ಕಾಲಕಾಲದಿ ಲಕ್ಷ್ಮಿಯವೆರಸಿ |
ಸುಲಭನೊಪ್ಪಿದ ಪುರಂದರವಿಠಲ ೧
ಮಟ್ಟತಾಳ
ಮುಕುತವಿರಿಂಚಿ ವಿಹಂಗಪತಿಗಳ ಕೈಯ |
ಉಕುತಿಗಳಿಂದಲಿ ನೀನು ನುತಿಸಿಕೊಂಬುವುದೆತ್ತ |
ಆಕಳಕಾಯ್ವ ಗೋಪ ಗೊಲ್ಲತಿಯರ ಮಕ್ಕಳ ಕೈಯಿಂದ
ನೀ ಬೈಸಿಕೊಂಬವುದೆತ್ತ |
ಸಕಲ ಸುರರು ನಗರೆ ರಂಗಯ್ಯ ನಿನಗೆ? |
ತಕ್ಕುದನೆ ಮಾಡೊ ಪುರಂದರವಿಠಲ ೨
ತ್ರಿವಿಡೆತಾಳ
ಬದಿಯ ಬಲಿದು ಕಡಹದ ಮರನೇರಿ |
ಕಾಲಿಯ ಮಡುವ ಧುಮುಕಿ ಅವನ ಶಿರದಲ್ಲಿ ||
ಧಿಮಿ ಧಿಮಿ ಧಿಮಕೆಂದು ಕುಣಿಯಲು |
ದಂಧಣ ಧಣ ಎಂದು ಬೊಮ್ಮ ಮದ್ದಲೆ ಬಡಿಯೆ |
ತಂದನ್ನ ತಾ ಎಂದು ಹನುಮಂತ ಪಾಡೆ |
ನಂದಿ ವಾಹನ ತಾಳವ ಪಿಡಿದು ತತ್ಥೈ ಎನ್ನೆ |
ನಂದನಕಂದ ಆಡಿದ ಆನಂದವ |
ಎಂದವಗೊಲಿವ ಪುರಂದರವಿಠಲ ೩
ಅಟತಾಳ
ಪಂಕಜಲೋಚನ ಪಂಕಜಾನನ |
ಪಂಕಜಾಪತಿ ಪಂಕಜಾಮತಿ |
ಪಂಕಜಭವ ವಂದಿತಾಮಘ್ರಿಪಂಕಜ |
ಪಂಕಜಮಿತ್ರಾನಂತ ಕೋಟಿ ತೇಜ |
ಪಂಕಜನಾಭ ಪುರಂದುವಿಠಲ ೪
ಆದಿತಾಳ
ಚತುರಮೂರುತಿ ಚುತುರಕೀರುತಿ |
ಚುತುರಪಾಣಿ ಚುತುರಾಯುಧ |
ಚತುರವಿಧ ಮುಕುತಿದಾಯಕ |
ಚತುರ್ದಶ ಭುವನೇಶ ಪುರಂದರವಿಠಲ ೫
ಜತೆ
ಹಾರಲೊದೆಯೊ ಸಂಚಿತಾಗಾಮಿಗಳನು |
ತೋರೋ ನಿನ್ನ ಚರಣ ಪುರಂದರವಿಠಲ ||

೧೧೪
ಸುಳಾದಿ
ನಿಂದಾಸ್ತುತಿ ಸುಳಾದಿ
ಧ್ರುವತಾಳ
ಗೋಪಿದೇವಿಯಂತೆ ನಿನ್ನ ಒರಳಿಗೆ ಕಟ್ಟಿದೆ
ಬರಿದೆ ದೈನೈವ ಪಡುವೆ ನಾನಯ್ಯ |
ಭೃಗುಮುನಿಯಂತೆ ನಿನ್ನೆದೆಯಮೇಲೊದಯದೆ
ಬರಿದೆ ದೈನೈವ ಪಡುವೆ ನಾನಯ್ಯ |
ಭೀಷ್ಮನಂತೆ ನಿನ್ನ ಹಣೆಯನೊಡೆಯದೆ |
ಕೊಂಕಣದೆಮ್ಮೆಗೆ ಕೊಡತಿಯ ಮದ್ದು……………….
ಇವರೇ ನಿನಗೆ ಮದ್ದು (ಮುದ್ದ್ದು) ಪುರಂದರವಿಠಲ ೧
ಮಟ್ಟತಾಳ
ಕಾಳಿಂಗನಂತೆ ನಿನ್ನ ಕಟ್ಟಿ ಬಿಗಿಯಲು ಬೇಕು |
ಬಲಿಯಂತೆ ಬಾಗಿಲನು ಕಾಯಿಸಬೇಕು |
ಕುಬುಜೆಯಂತೆ ನಿನ್ನ ರಟ್ಟು ಭೂತವನೆ ಮಾಡಿ |
ಮುಂಜೆರಗ ಪಿಡಿದು ಗುಂಜೆ ಹಾಕಲು ಬೇಕು |
ಪುರಂದರ ವಿಠಲ ನಿನಗೆ ಅಂಜದಿರಬೇಕು ೨
ತ್ರಿವಿಡತಾಳ
ಪಾಂಡುತನಯನಂತೆ ಕರೆ ಕರೆದು ನಿನ್ನ |
ಅಟ್ಟುಮಣಿ ಅಡಿಮಣಿ ಇಕ್ಕಬೇಕು |
ಅರ್ಜುನನಂತೆ ಬಂಡಿಯ ಬೋವನ ಮಾಡಿ |
ಕುದುರೆಗಳ ವಾಘಿಸಬೇಕು |
ಅಂಬು ತಾ ಬಿಲ್ಲು ತಾ ಎನ್ನಲು ಬೇಕು |
ನಾ ನಿನ್ನ ಪೂಜಿಸಿ ಪೂಜಿಸಿ |
ಮೋಸ ಹೋದೆನಯ್ಯ ಪುರಂದರವಿಠಲ ೩
ಅಟ್ಟತಾಳ
ವಾಲಿಯಂತೆ ನಿನ್ನ ಮೂದಲಿಸಬೇಕು |
ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು |
ಅಟ್ಟು ಇಟ್ಟು ಸುಟ್ಟು ಕೊಟ್ಟು ಮುಟ್ಟಿ |
ಮೋಸ ಹೋದೆನಯ್ಯ ಪುರಂದರವಿಠಲ ೪
ಆದಿತಾಳ
ಇಂದ್ರನಂತೆ ನಿನ್ನ ಮಳೆಗರೆದು ಗೋಕುಲದಲ್ಲಿ |
ನಿಂದಿರಿಸಬೇಕು ಏಳು ದಿನ |
ಗೋವರ್ಧನ ಗಿರಿಯನೆ ಹೊರಿಸಲು ಬೇಕು |
ನಾ ನಿನ್ನ ಅನುದಿನ ಪೂಜಿಸಿ ಪೂಜಿಸಿದರೂ |
ನೀ ಯೆನ್ನ ತಿರಿತಿಂಬುವಂತೆ ಮಾಡಿದೆ |
ಪುರಂದರವಿಠಲ ಹುಟ್ಟಿದ ಊರಲ್ಲಿಯೆ |
ತಿರಿತಿಂಬುವಂತೆ ಮಾಡಿದೆ ೫
ಜತೆ
ಅಂಜುವರಿಗೆ ದೇವ ಬ್ರಹ್ಮರಾಕ್ಷಸನಂತೆ |
ಅಂಜೆನು ನಿನಗಿನ್ನು ಪುರಂದರವಿಠಲ |

೬೪
ಭಕ್ತಪಾಲಕ ಸುಳಾದಿ
ಧ್ರುವತಾಳ
ತಾಯಿ ಲಕುಮಿ ತಂದೆ ವಿಠಲ |
ದಾಯಿಗ ಚತುರಾನನ |
ವಾಯು ತನುಜನು ರಕ್ಷಕನು ಸ-|
ಹಾಯಿಗಳು ದೇವತೆಗಳು |
ಮಾಯಿ ಅವರ ಮನೆದೊತ್ತು ರಘು |
ರಾಯನ ಡಿಂಗರಿಗರಿಗೆ ಏನಯ್ಯ |
ಚತುರ್ದಶ ಭುವನಂಗಳಲ್ಲಿ |
ಪ್ರತಿಕಕ್ಷೆಗಳಲ್ಲಿವರಿಗೆ |
ಪುರಂದರವಿಠಲರಾಯನ ಶರಣರ ಭಾಗ್ಯವಿನ್ನೆಂತೊ ೧
ಮಟ್ಟತಾಳ
ಒಡಲೊಳು ಪೋಗುವನ್ನಕ |
ಎರೆವರೊ ನಾಮಸುಧೆಯ |
ಕೊಡುವರು ಮುಕುತಿಯ |
ತಡೆವರು ಭವ ಸಿಂಧುವ |
ಒಡೆಯ ಮುಕುಂದನ |
ಒಡನಾಡಿಸಿ ತೋರ್ಪರು |
ಕೊಡುವರು ಮುಕುತಿಯ |
ತಡೆವರು ಭವ ಸಿಂಧುವ |
ಮೃಡಸುಖಪುರಂದರ ವಿಠಲನ ದಾಸರು ||
ಕೊಡುವರು ಮುಕುತಿಯ |
ತಡೆವರು ಭವಸಿಂಧು ೨
ತ್ರಿವಿಡಿ ತಾಳ
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆ ರಂಗಯ್ಯ |
ನಿನ್ನ ಕಾಲಪಿಡಿವೆ ನಿನ್ನ ಹಾರಯಿಸುವೆ |
ನಿನ್ನ ತಂಬುಲಕೆ ಕೈಯಾನುವೆ ರಂಗಯ್ಯ |
ನಿನ್ನಂತೆ ಸಾಕಬಲ್ಲ ದೇವ ಉಂಟೆ ಸ್ವಾಮಿ |
ನಿನ್ನಾಣೆ ಪುರಂದರವಿಠಲರಾಯ ೩
ಅಟತಾಳ
ಅಚ್ಯುತನ ಭಕುತಿಗೆ ಆವನ ಮನ |
ಮೆಚ್ಚದು ,ಅವ ಪಾಪಿ ಅವನೊಳಾಡೆ
ನೋಡೆ ನುಡಿಸೆ |
ಮನುಜವೇಷದ ರಕ್ಕಸನವ |
ಅವನೊಳಾಡೆ ನೋಡೆ ನುಡಿಸೆ |
ಸಚ್ಚಿದಾನಂದ ಪುರಂದರವಿಠಲನ |
ತೊತ್ತಿನ ತೊತ್ತಿನ ಮಗನೆನ್ನದವನೊ- |
ಳಾಡೆ ನೋಡೆ ನುಡಿಸೆ ೪
ಆದಿತಾಳ
ನಿನ್ನಾಳೆಂದರೆ ಎನ್ನನು ಹರಿ |
ಇನೇನಿನ್ನೇನಿನ್ನೇನು |
ಎನ್ನ ಸಾಕದಿರಲು ಇನ್ನು ನಗರೆ |
ನಿನ್ನ ದಾಸರು ? |
ಎನ್ನಲಿದ್ದವ ನೀನಾದೆ-
ನಿನ್ನ ದಾಸನು ನಾನದೆ |
ಘನ್ನ ಮಹಿಮ ಪುರಂದರ ವಿಠಲ |
ಇನ್ನು ಸಾಕದಿಹರೆ? | ೫
ಜತೆ
ಲಕುಮಿಯ ರಮಣನೆ ಲಕುಮಿಯಾಭರಣನೆ |
ಲಕುಮಿಪರಾಯಣನೇ ಪುರಂದರವಿಠಲ ||

೧೨೧
ಸುಳಾದಿ
ಅನಂತ ಮೂರುತಿ ಸುಳಾದಿ
ಧ್ರುವ ತಾಳ
ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿ
ಪಶುವಾಹನನಾದದ್ದೊಂದು ಮೂರುತಿ |
ಕುಶಲದ ಜಪಮಣಿ ಮಾಲೆ ಚುತುರ್ಮುಖ |
ವಸುಧೆಯ ಸೃಜಿಸುವುದೊಂದೇಮೂರುತಿ |
ನೊಸಲಲ್ಲಿ ಸಿರಿನಾಮ ಶಂಖ-ಚಕ್ರ-ಗದೆ
ಬಿಸಜವ ಪಿಡಿದದ್ದೊಂದೇ ಮೂರುತಿ |
ಎಸೆವ ವೇದಾನಂತ ಕೋಟಿಯ ಭೇದಿಸಿ ಸಂ-
ತಸದಿ ನೋಡು ತಿಹುದೊಂದೇ ಮೂರುತಿ ೧
ಮಟ್ಟ ತಾಳ
ಸುಮ್ಮನಾದರೂ ಒಮ್ಮೆ ಸುಳಿವ ತೋರತ
ಬ್ರಹ್ಮಾಂಡದೊಳಾಡುತಿಹುದೊಂದೇ ಮೂರುತಿ |
ನಮ್ಮ ದೇವ ನಿಮ್ಮ ದೇವ ತಮ್ಮ ದೇವ ಎಂತೆಂಬ
ಹಮ್ಮಿಂದಲಾಡುತಿಹುದೊಂದೇ ಮೂರುತಿ |
ಒಮ್ಮೊಮ್ಮೆ ನಾ ಕುರಹ ಹಿಡಿವೆನೆಂದರೆ
ಅಮ್ಮದೆ ಪುರಂದರವಿಠಲನಾದದ್ದೊಂದೆ ಮೂರುತಿ ೨
ತ್ರಿವುಡೆ ತಾಳ
ಸತ್ತ್ವರಜಸ್ತಮೋ ಗುಣದ ಸಕಲ ಮೂರುತಿ |
ಭಕ್ತರಂಗ ಸಂಗದಲ್ಲಿ ನಲಿವ ಮೂರುತಿ |
ವಸ್ತು ನಿನ್ನ ವರದ ಚೆನ್ನ ಮೂರುತಿ |
ಕರ್ತೃ ಪುರಂದರವಿಠಲನಾದದ್ದೊಂದೆ ಮೂರುತಿ ೩
ಅಟತಾಳ
ಸಾಸಿರನಾಮಕ್ಕೆ ಸಾಸಿರ ಮೂರುತಿ |
ವಾಸುಕಿಶಯನನ ಅನಂತ ಮೂರುತಿ |
ಸಾಸಿರದಳದಲ್ಲಿ ಒಪ್ಪುವ ಮೂರುತಿ |
ಯಶೋದೆಯ ಮೊಲೆಯುಂಡ
ಪುರಂದರವಿಠಲನ ಮೂರುತಿ ೪
ಝಂಪೆ ತಾಳ
ಬೊಮ್ಮಗೆ ಸಿರಿರಂಗ ಮೂರುತಿ |
ರುದ್ರಂಗೆ ನರಸಿಂಹ ಮೂರುತಿ |
ಇಂದ್ರಂಗೆ ಉಪೇಂದ್ರ ಮೂರುತಿ |
ಚಂದ್ರಗೆ ದಧಿವಾಮನ ಮೂರುತಿ |
ಸೂರ್ಯಗೆ ನಾರಾಯಣ ಮೂರುತಿ |
ಅಗ್ನಿಗೆ ಪರಶುರಾಮÀ ಮೂರುತಿ |
ಈರೇಳು ಲೋಕಕ್ಕೆಲ್ಲ ಕಾಲ ಪುರುಷ ವಿಷ್ಣು ಮೂರುತಿ |
ಎನಗೆಂದೂ ಸಿರಿ ಬೊಮ್ಮ ಪರಿಪೂರ್ಣ
ಪುರಂದರವಿಠಲನೆ ಮೂರುತಿ ೫
ಏಕತಾಳ
ಅನಂತ ಕಿರೀಟ ಅನಂತಶಿರಸ ಅನಂತಕರಣ ಅನಂತ ಚಕ್ಷು
ಅನಂತ ನಾಶಿಕ ಅನಂತ ಜಿಹ್ವೆ ಅನಂತದಂತ ಅನಂತವದನ |
ಅನಂತ ಕಂಠ ಅನಂತ ಭುಜ ಅನಂತ ಹಸ್ತ
ಅನಂತ ಬೆರಳ ಅನಂತನಖಾದಿ |
ಅನಂತ ಶ್ರೀಗಂಧ ಶ್ರೀತುಲಸಿ ವೈಜಯಂತಿ
ಮಾಲೆಯಿಂದೊಪ್ಪುವ |
ಅನಂತ ವಕ್ಷ ಅನಂತಕುಕ್ಷಿ ಅನಂತನಾಭಿ |
ಅನಂತ ಕಟಿ ಅನಂತ ಜಾನು ಜಂಘೆ ಅನಂತ ಚರಣ |
ಅನಂತ ಪೆಂಡೆಯ ಅನಂತ ಜಗಂಗಳ ಒಳಗು ಹೊರಗು |
ನಮ್ಮ ಪುರಂದರವಿಠಲನೆ ಅನಂತ ೬
ರೂಪಕ ತಾಳ
ಅಣು ಮಹತ್ತಾಗಿ ತೋರುವ ಮೂರುತಿ |
ತೃಣಕಾಷ್ಠದಲ್ಲಿ ವ್ಯಾಪ್ತ ಮೂರುತಿ ||
ಮನುಜೋತ್ತಮರೆಂಬ ಮನುಜೋತ್ತಮರಿಗೆ |
ಮಿನುಗು ಮಿಂಚಿನಂತೆ ಥಳಥಳಿಸು ನಮ್ಮ ಪುರಂದರವಿಠಲ ೭
ಜತೆ
ಅನಂತ ಮೂರುತಿ ಅನಂತ ಕೀರುತಿ |
ಅನಂತ ನಾಮ ಪುರಂದರವಿಠಲ ||

೧೨೨
ಸುಳಾದಿ
ಅನಂತ ಮೂರುತಿ ಸುಳಾದಿ
ಧ್ರುವತಾಳ
ತ್ರಿಶೂಲ ಡವರುಗ ಭಸಿತ ರುದ್ರಾಕ್ಷಿ |
ಪಶುವಾಹನ ನಾಮದೊದು ಮೂರುತಿ |
ನೊಸಲೊಳು ಸಿರಿನಾಮ ಶಂಖ ಚಕ್ರ ಗದೆ |
ಬಿಸಜವ ಪಿಡಿದಿಹದೊಂದು ಮೂರುತಿ |
ಕುಶಲದಿ ಜಪಮಣಿಮಾಲೆ ಚತುರ್ಮುಖ |
ವಸುಧೆಯ ಸೃಜಿಸುವದೊಂದು ಮೂರುತಿ |
ಎಸೆವಂತ ಕೋಟೆ ವೇದವರ್ಣಿಸಲು ಸಂ
ತಸದಿ ನೋಡುತಿಹದೊಂದೆ ಮೂರುತಿ |
ಸನ್ಮೋಹನವೆÉ ಏಕಮೇವ ಶ್ರುತಿಯೆಂಬ |
ನಿರ್ಮಳವಾಗಿಹ ದೊಂದೆ ಮೂರುತಿ |
ಸುಮ್ಮನಸರಿಗೊಮ್ಮೆ ಸುಳುವು ತೋರುವ ಪರ |
ಬೊಮ್ಮನೆಂದು ಕರೆಸುವದೊಂದೆ ಮೂರುತಿ |
ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆಂತೆಂಬ |
ಹಮ್ಮಿಂದಲಾಡುತಿಹದೊಂದೆ ಮೂರುತಿ |
ಒಮ್ಮೊಮ್ಮೆನಾ ಕುರುಹು ಹಿಡೆವೆನೆಂದರೆ
ಅಮ್ಮದೆ ಪುರಂದರವಿಠಲನಾದೊಂದೆ ಮೂರುತಿ ೧
ಮಟ್ಟತಾಳ
ಸತ್ತ್ವರಜಸ್ತಮೋಗುಣದ ಸಕಲ ಮೂರತಿ |
ಭೃತ್ಯರಂಗ ಸಂಗದಲ್ಲಿ ನಲಿವ ಮೂರತಿ |
ತತ್ತ್ವ ಪತಿಗಳೊಡನೆ ಇಪ್ಪ ದಿವ್ಯ ಮೂರತಿ |
ಸತ್ಯ ಪುರಂದರವಿಠಲನು ಒಂದೇ ಮೂರುತಿ | ೨
ಝಂಪೆತಾಳ
ಸಾಸಿರ ನಾಮಕ್ಕೆ ಸಾಸಿರ ಮೂರುತಿ |
ವಾಸುಕಿಶಯನನಾದ ಅನಂತ ಮೂರುತಿ |
ಸಾಸಿರದಳದೊಳಡಗಿಹ ಮೂರುತಿ |
ಶಾಶ್ವತ ನೆನೆವರ ಸಲಹುವ ಮೂರುತಿ |
ಯಶೋದೆ ಮೊಲೆವುಂಡು ನಮ್ಮ ಪುರಂದರವಿಠಲ |
ಅಸಮ ಕಾರುಣ್ಯಸಾಗರ ಮೂರುತಿ ೩
ತ್ರಿವಿಡೆತಾಳ
ಅನಂತ ಮುಕುಟ ಅನಂತ ಶಿರಸ್ಸು ಅನಂತ ನಯನ |
ಅನಂತ ನಾಸಿಕ ಅನಂತ ಕರಣ ಅನಂತ ಕಂಬು |
ಅನಂತ ಓಷ್ಠ ಅನಂತ ವದನ ಅನಂತ ರದನ |
ಅನಂತ ಕಂಠ ಅನಂತ ಅನಂತ ಬಾಹು |
ಅನಂತ ವಕ್ಷ ಅನಂತ ಶ್ರೀ ತುಲಸಿ |
ವೈಜಯಂತಿ ಮಾಲೆಯಿಂದೊಪ್ಪುವ |
ಅನಂತ ನಾಭಿ ಅನಂತ ಉದರ ಅನಂತ ತ್ರಿವಳಿ |
ಅನಂತ ಕಟಿಯು ಅನಂತ ಜಘನ ಅನಂತ ಊರು |
ಅನಂತ ಜಾನು ಅನಂತ ಜಂಘೆ ಅನಂತ ಗಲ್ಫ ಅನಂತ ಪೆಂಡೆ |
ಅನಂತ ಚರಣಂ ಅನಂತ ನಖವು |
ಅನಂತ ಜಗಗಳ ಒಳಗೆ ಹೊರಗೆ ಇಪ್ಪ ಸಾನ್ನಿಧ್ಯ |
ಪುರಂದರವಿಠಲನೊಬ್ಬನೆ ಕಾಣಿರೊ ೪
ರೂಪಕತಾಳ
ಅಣು ಮಹತ್ತಾಗಿ ತೋರುವ ಮೂರುತಿ |
ತೃಣಕಾಷ್ಟಗಳಲ್ಲಿ ಪರಿಪೂರ್ಣಮೂರುತಿ |
ಗಣನೆ ಇಲ್ಲದ ಮೂರತಿ ಘನ ಗುರಡವಾಹನ ಮೂರುತಿ |
ಸನಕಾದಿಗಳಲ್ಲಿ ಸಾನ್ನಿಧ್ಯ ಮೂರುತಿ |
ಮನುಜೋತ್ತಮರಲ್ಲಿ ಮಿನುಗುವ ಮೂರುತಿ |
ಎನ್ನ ಸ್ವಾಮಿ ಪುರಂದರವಿಠಲ ಮೂರುತಿ ೫
ಅಟ್ಟತಾಳ
ಬಮ್ಮಗೆ ಸಿರಿರಂಗ ಮೂರುತಿ |
ರುದ್ರಗೆ ನರಸಿಂಗ ಮೂರುತಿ |
ಇಂದ್ರಗೆ ಉಪೇಂದ್ರ ಮೂರುತಿ |
ಚಂದ್ರಗೆ ದಧಿವಾಮನ ಮೂರುತಿ |
ಸೂರ್ಯಗೆ ನಾರಾಯಣ ಮೂರುತಿ |
ಅಗ್ನಿಗೆ ಪರಶುರಾಮ ಮೂರುತಿ |
ಈರೇಳು ಲೋಕಕ್ಕೆಲ್ಲ ಕಾಲಪುರುಷ |
ಶ್ರೀ ವಿಷ್ಣು ಮೂರುತಿ |
ಎಮಗೆ ಮೂರುತಿ ಪರಿಪೂರ್ಣಸಿರಿ |
ಪುರಂದರವಿಠಲ ಮೂರುತಿ ೬
ಆದಿತಾಳ
ಏಕಾನೇಕ ಮೂರತಿ ಲೋಕವೆಲ್ಲ ಈತನ ಮೂರುತಿ |
ಕಾಲದೇಶಗಳಿಗೆ ಅಪರಿಚ್ಛ್ಛಿನ್ನ ಮೂರುತಿ
ಲೋಕ ಲೋಕದೊಳಗೆಲ್ಲ ವ್ಯಾಪಕವಾದ ಮೂರುತಿ
ಏಕಮೇವ ಪುರಂದರವಿಠಲನೊಂಬೊ ಮೂರುತಿ ೭
ಜತೆ
ಅನಂತ ಮೂರುತಿ ಅನಂತ ಕೀರುತಿ
ಅನಂತ ನಾಮ ಪುರಂದರವಿಠಲ ಮೂರುತಿ

೫೪
ಸುಳಾದಿ
ಮಿಥ್ಯಾಭಕ್ತಿಸುಳಾದಿ
ಧ್ರುವ ತಾಳ
ನರಲೋಕದ ಸಿರಿ ಹೇಯವೆಂಬೋದುಗಡ |
ಸುರಲೋಕದ ಸಿರಿ ಹೇಯವೆಂಬೋದುಗಡ |
ಅತಳಲೋಕದ ಸಿರಿಯು ಹೇಯವೆಂಬೋದು ಗಡ |
ಸತ್ಯಲೋಕದ ಸಿರಿ ಹೇಮವೆಂಬೋದು ಗಡ |
ಯಕುತಿ ಪಾಥೇಯವದು ಹೇಮವೆಂಬೋದು ಗಡ |
ಯೋಗಪದ್ಧತಿಯಿನ್ನು ಹೇಯವೆಂಬರು ಗಡ |
ಪುರಂದರವಿಠಲನ ಶ್ರೀ ಪಾದಪದುಮದ |
ಬಂಡುಂಡು ಬದುಕುವ ಮಧುಕರರೆನಿಪರು ೧
ಮಟ್ಟ ತಾಳ
ಅಶಾಪಾಶಗಳುಳ್ಳ ಬದ್ಧ ಆರೋಹಣ ಭಕುತರಾವು |
ಕಾಸುವೀಸಕ್ಕಾಗಿ ಕಳ್ಳ ಭಕುತರಾವು |
ದೇಶ ದೇಶ ತಿರಗುವ ಕೇಳುಭಕುತರಾವು |
ರಾಯ ಮುಕುಂದನಲ್ಲಿ ಭಕುತಿ ರಹಿತರಾವು
ಪುರಂದರವಿಠಲನ ದಾಸರೆತ್ತ ನಾವೆತ್ತ ಬಣಗುಗಳು ೨
ತ್ರಿವಿಡೆ ತಾಳ
ಭಾಗವತನೆಂಬ ಪೆಸರು ಬಂದಿದೆ ಯೋಗ ಯೋಗ್ಯವೆ |
ಜಗದೊಳಗೆಲ್ಲ ಇದು ನಗೆಗೇಡಲ್ಲವೆ ಯೋಗ ಯೋಗ್ಯವೆ |
ಪುರಂದರವಿಠಲನ ದಾಸಾನುದಾಸರ ದಾಸನೆನಿಸದಲೆ |
ಭಾಗವತನೆಂದು ಕರೆಸಿಕೊಂಬುವ ಯೋಗ ಯೋಗ್ಯವೆ ೩
ಅಟ್ಟ ತಾಳ
ಎನಗೆ ಶ್ರೀಹರಿಯಲ್ಲಿ ಭಕುತಿಲ್ಲವೆಂಬದು ಇದೆ ಕುರಹು |
ಧನಧಾನ್ಯದಾಕಾಂಕ್ಷೆ ಇದೇ ಕುರುಹು |
ವನಿತೆ ಸುತರ ಭ್ರಾಂತಿ ಇದೆ ಕುರುಹು |
ಪುರಂದುರವಿಠಲನ ದಾಸನೆನಿಸಿಕೊಂಡು |
ಪರರಿಗಾಲ್ಪರಿವದೆ ಇದೇ ಕುರುಹು ೪
ಆದಿ ತಾಳ
ಬಾ ಎಂದೆನೆ ಹೋಗೆಂದೆನೆ |
ಅಯ್ಯ ಸಾಹಯ್ಯ ಜೀಯ್ಯ |
ಅವಧಾರೆಂದರೆ |
ರಾಯ ರಾಯ ರಾಯ ಪುರಂದರವಿಠಲನ |
ಬಾ ಎಂದೆನೆ ಹೋಗೆಂದೆನೆ ೫
ಜೊತೆ
ಕುಂಚ ವಿರಿಂಚನ ಕೈಯಲ್ಲಿ ಕಾಳಂಜಿ |
ಪಂಚಬಾಣದ ಪಿತ ಪುರಂದರವಿಠಲನಿಗೆ ||

೫೩
ಸುಳಾದಿ
ಮಿಥ್ಯಾಭಕ್ತಿ ಸುಳಾದಿ
ಧ್ರುವತಾಳ
ನರಲೋಕದ ಸುಖ ಹೇಯವೆಂಬರು ಗಡ |
ಸುರಲೋಕದ ಸುಖ ಹೇಯವೆಂಬರು ಗಡ
ಅತಲಲೋಕದ ಸಿರಿ ಹೇಯವೆಂಬರು ಗಡ |
ಸತ್ಯ ಲೋಕದ ಪದವಿ ಹೇಯವೆಂಬರು ಗಡ |
ಮುಕುತಿ ಪಥವನದು ಹೇಯವೆಂಬರು ಗಡ |
ಪರಂದರವಿಠಲನ ಸಿರಿಪಾದ ಪದುಮದಲುಂಡುಂಡು |
ಬದುಕುವ ಮಧುಕರರು ಆವಾಗಲು ೧
ಮಟ್ಟತಾಳ
ಅಶಾಪಾಶಗಳುಳ್ಳ ಅರೋಹಣ ಭಕುತರು- |
ಕಾಸುವೀಸಕ್ಕಾಗಿ ಕಳ್ಳ ಭಕುತರಾವು |
ದೇಶವ ತಿರುಗುವ ಕೀಳು ಭಕುತರಾವು |
ಶ್ರೀಶಮುಕುಂದನಲಿ ಭಕುತಿರಹಿತರಾವು |
ಪುರಂದರವಿಠಲನ ಭಕುತರೆತ್ತ ನಾವೆತ್ತ ಬಣಗುಗಳು ೨
ತ್ರಿವಿಡಿತಾಳ
ಭಾಗವತನೆಂದು ಕರಸಿ ಕೊಂಬುದೇ |
ಯೋಗಯೋಗ್ಯವೆ ಜಗದೊಳಗೆಲ್ಲ |
ಇದು ನನಗೇಡಲ್ಲದೆಯೋಗ ಯೋಗ್ಯವೆ ನಮ್ಮ – |
ಪುರಂದರವಿಠಲನ ದಾಸಾನುದಾಸರ ದಾಸನೆನಿಸದಲೆ |
ಭಾಗವತನೆಂದು ಕರಸಿಕೊಂಬುದು? ೩
ಅಟತಾಳ
ಎನಗೆ ಶ್ರೀಹರಿಯಲ್ಲಿ ಭಕುತಿ ಇಲ್ಲವು |
ಎಂಬುದಕೆ ಇದೆ ಕುರುಹು |
ವನಿತೆ ಸುತರ ಭ್ರಾಂತಿ ಇದೆ ಕುರುಹು |
ಪುರಂದರವಿಠಲನ ದಾಸನೆನಿಸಿಕೊಂಡು
ನರರಿಗಾಲ್ಪರಿವುದೆ ಜಗದೊಳು ಇದೆ ಕುರುಹು ೪
ಆದಿತಾಳ
ಬಾಎಂದೆನೆ ಹೋ ಎಂದೆನೆ ಅಯ್ಯಾಸಹಾಯಾ |
ಜೀಯಾ ಅವಧಾರು ಎಂದೆನೆ |
ರಾಯ ರಾಯ ರಾಯ ಪುರಂದರವಿಠಲನೆ
ಬಾ ಎಂದೆನೆ ಹೋ ಎಂದೆನೆ ? ೫
ಜತೆ
ಕೊಂಚೆಯೂರ ಚೆನ್ನ ಕೈಯಲ್ಲಿ ಕಾಳಂಜಿ |
ಪಂಚಬಾಣನ ಪಿತ ಪುರಂದರವಿಠಲ ||

ಸಂಕೀರ್ಣ
೨೧೮
ಸುಳಾದಿ:
ಸೃಷ್ಟಿ ಸುಳಾದಿ
ಧ್ರುವತಾಳ
ನಿನ್ನ ಬೊಮ್ಮ ಮೂರುತಿಗೆ ನಮೋ ನಮೋ |
ನಿನ್ನ ರುದ್ರ ಮೂರುತಿಗೆ ನಮೋ ನಮೋ |
ನಿನ್ನ ಇಂದ್ರ ಮೂರುತಿಗೆ ನಮೋ ನಮೋ |
ನಿನ್ನ ಚಂದ್ರ ಮೂರುತಿಗೆ ನಮೋ ನಮೋ |
ನಿನ್ನ ಸ್ಥಾವರ ಮೂರುತಿಗೆ ನಮೋ ನಮೋ |
ನಿನ್ನ ಜಂಗಮ ಮೂರುತಿಗೆ ನಮೋ ನಮೋ |
ನಿನ್ನ ಶ್ರೀ ಮೂರ್ತಿಗೆ ನಮೋ ಪುರಂದರ ವಿಠಲ ೧
ಮಟ್ಟತಾಳ
ಬ್ರಹ್ಮಾಂಡವೇ ಮಂಟಪ ಜ್ಯೋತಿಶ್ಚಕ್ರವೇ ದೀಪ |
ಮಹಾಮೇರು ಸಿಂಹಾಸನ ಮಂದಾಕಿನಿ ಮಜ್ಜನ |
ಮಹಾಲಕುಮಿ ಅಂಬರಾಭರಣ ಮಂದಾರ
ಪಾರಿಜಾತ ಮಾಲೆ |
ಮಹಾಮೇರು ಸಿಂಹಾಸನ ಶ್ರೀ ಪುರಂದರ ವಿಠಲಗೆ ೨
ತ್ರಿವಿಡೆತಾಳ
ಆಲಯವೆಂಬೊ ರಾಶಿಯಲ್ಲಿ ಆಲದೆಲೆ ಪೊಂದೊಟ್ಟಿಲು |
ಅಲಾ ಜೋಯೆಂದು ಪಾಡುವ ವೇದಾಂತ ದೇವಿಯರು |
ಆಲದೆಲೆಯ ಬಾಲಕ ಪುರಂದರ ವಿಠಲ ೩
ಅಟತಾಳ
ಜಗದುದರನಾಗಿದ್ದು ಜಗದೊಳಗಿಪ್ಪೆ |
ಜಗದ್ವ್ಯಾಪಿಯಾಗಿ ನೀ ಜಗವ ಪಾಲಿಸುವೇ |
ಜಗವ ನಲಿದಾಡಿಸುತಲಿಪ್ಪೆ ದೇವಾ |
ಜಗದನ್ಯ ಜಗನ್ನಾಥಪುರಂದರ
ವಿಠಲಮೋಹನ ಜಗದ್ವಂದ್ಯ ೪
ಏಕತಾಳ
ಬ್ರಹ್ಮಾಂಡ ಕಟಾಹವೇ ಪುಟಚಂಡು |
ಬ್ರಹ್ಮನ ಪ್ರಳಯವೆ ಎವೆನೋಟ |
ನಮ್ಮ ಪುರಂದರ ವಿಠಲರಾಯನಾಡುವ ಪುಟಚಂಡು | ೫
ಜತೆ
ಜಯಜಯ ಜನಾರ್ದನ ಜಯನಾಥ |
ಪುರಂದರ ವಿಠಲ ಮೋಹನ ಜಯಜಯ ||

೨೧೯
ಸುಳಾದಿ:
ಸೃಷ್ಟಿ ಸುಳಾದಿ
ಧ್ರುವತಾಳ
ನಿನ್ನ ಬೊಮ್ಮ ಮೂರುತಿಗೆ ನಮೋ ನಮೋ |
ನಿನ್ನ ರುದ್ರ ಮೂರುತಿಗೆ ನಮೋ ನಮೋ |
ನಿನ್ನ ಇಂದ್ರ ಮೂರುತಿಗೆ ನಮೋ ನಮೋ |
ನಿನ್ನ ಚಂದ್ರ ಮೂರುತಿಗೆ ನಮೋ ನಮೋ |
ನಿನ್ನ ಸೂರ್ಯ ಮೂರುತಿಗೆ ನಮೋ ನಮೋ |
ನಿನ್ನ ಅಗ್ನಿ ಮೂರುತಿಗೆ ನಮೋ ನಮೋ |
ನಿನ್ನ ಸ್ಥಾವರ ಮೂರುತಿಗೆ ನಮೋ ನಮೋ |
ನಿನ್ನ ಜಂಗಮ ಮೂರುತಿಗೆ ನಮೋ
ನಮೋಪುರಂದರ ವಿಠಲ |
ನಿನ್ನ ವಿಶ್ವ ಮೂರುತಿಗೆ ನಮೋ ನಮೋ ೧
ಮಟ್ಟತಾಳ
ಬೊಮ್ಮಾಂಡವೆ ಮಂಟಪ ಜ್ಯೋತಿಶ್ಚಕ್ರವೆ ದೀಪ |
ಮಹಾಮೇರು ಸಿಂಹಾಸನ ಮಂದಾಕಿನಿ ಮಜ್ಜನ |
ಮಂದರ ಪಾರಿಜಾತ ಮಾಲೆ |
ಪುರಂದರ ವಿಠಲಗೆ ಅಮೃತವೇ ನೈವೇದ್ಯ ೨
ತ್ರಿವಿಡೆತಾಳ
ಆಲಯವೆಂಬುವಾರಾಸಿಯಲ್ಲಿ ಆಲದೆಲೆ ಪೊಂದೊಟ್ಟಿಲು |
ಅಂಗುಟವೆ ಜೋಕಾಯಿ ಬಾಲ ಮುಕುಂದ |
ಶ್ರೀ ಪುರಂದರ ವಿಠಲಗೆ ೩
ಅಟ್ಟತಾಳ
ಜಗವ ಪುಟ್ಟಿಸಿ ನೀನು ಜಗದೊಳಗಿರುವೆ |
ಜಗದೊಳ ಹೊರಗೆ ನೀನೆ ಪೂರ್ಣ |
ಜಗದನ್ಯನಾಗಿ ಜಗವ ಸಂಹರಿಸುವಿ |
ಜಗದೊಳ ಹೊರಗೆ ನೀನೆ ಸ್ವಾತಂತ್ರ |
ಜಗದೇಕ ವಸ್ತು ಪುರಂದರ ವಿಠಲ ೪
[ಜಗದುದ್ಧಾರಕನೆಂದು ಜಗವ ಮೋಹಿಸುವೆ
ಜಗದನ್ಯನಾಗಿದ್ದು ಜಗವ ಪುಟ್ಟಿಸುವೆ
ಜಗದೊಳು ಹೊರಗಿದ್ದು ಜಗವ ಪಾಲಿಸುವೆ
ಜಗನ್ನಾಥ ಪುರಂದರ ವಿಠಲ ಮೋಹನ್ನ]
ಪಾಠಾಂತರ ;
ಆದಿತಾಳ
ಬೊಮ್ಮಾಂಡಕಟಹ ಪುಟಚೆಂಡೊ ಪುಟಚೆಂಡೊ |
ಪುರಂದರ ವಿಠಲಗೆ ಬೊಮ್ಮಾಡಕಟಹ || ೫
ಜೊತೆ
ಜಯಜಯ ಜನಾರ್ದನ ಪುರಂದರ ವಿಠಲ
ಜಯ ಜಯ ಜಯ ಬಾಢ ಮೋಹನ್ನ

೨೭೨
ಸುಳಾದಿ
ಜೀವಪಾರತಂತ್ರ್ಯ ಸುಳಾದಿ
ಧ್ರುವತಾಳ
ನಿನ್ನಾಧೀನ ಎನ್ನ ತನು-ಮನ |
ನಿನ್ನಾಧೀನ ಎನ್ನ ಧನ_ಧಾನ್ಯ |
ಎನ್ನ ವಸ್ತು-ವಾಹನ ನಿನ್ನಾಧೀನ |
ಎನ್ನ ಪುತ್ರ-ಮಿತ್ರ-ಕಳತ್ರರು ನಿನ್ನಾಧೀನ |
ಎನ್ನ ಅನ್ನೋದಕ ನಿನ್ನಾಧೀನ |
ಎನ್ನ ಆಧೀನ ಆವುದುಂಟು ನೀನೆ ನೋಡಾ |
ಎನ್ನ ಇಚ್ಛೆಯೆ ಪುರಂದರ ವಿಠಲ ೧
ಮಟ್ಟತಾಳ
ತೇನವಿನಾ ತೃಣಮಪಿ ನ ಚಲತಿ ಎಂದು ಪ್ರಮಾಣ |
ಅಣೋರಣೀಯಾನ್ ಮಹತೋಮಹಿಯಾನ್ |
ಮಣಿಗಣಕಾಧಾರ ಗುಣವು ಇದ್ದಂತೆ |
ಗುಣಗಣಭರಿತ ಶ್ರೀ ಪುರಂದರ ವಿಠಲ |
ಅನೋರಣೀಯಾನ್ ಜಗಕೆ ನಿನ್ನಾಧಾರ | ೨
ರೂಪಕ ತಾಳ
ನಿನ್ನವನೆಂದೆನ್ನ ಕೈಯ ಪಿಡಿಯಲು |
ನಿನ್ನ ಸೇವೆಯ ಸಾಧನಕೆ ಯತ್ನವ ಮಾಳ್ಪೆ |
ಎನ್ನ ಯತ್ನಕ್ಕೆ ನಿನ್ನ ಸಹಾಯವು |
ನಿನ್ನ ಯತ್ನವು ನಿನ್ನ ಸ್ವಾಧೀನ |
ನಿನ್ನ ಯತ್ನಕೆ ನಿನ್ನ ಸಹಾಯವು |
ನಿನ್ನಾಧೀನ ಸರ್ವವು ಪುರಂದರ ವಿಠಲ ೩
ಝಂಪೆತಾಳ
ಸ್ರ‍ಮತಿಯೇ ಪಥಗತಿಯೇ ನಿನ್ನ ತಿಳಿಸುವ |
ಮತಿಹೀನ ಕರ್ಮಠರು ಬಲ್ಲರೆ ಜಗದ |
ಪತಿಯೇ ನಿನ್ನಯ ಸ್ಥಿತಿಯ ಜಗದ |
ಉತುಪತ್ತಿ ಸ್ಥಿತಿಗಳಿಗೆ ನೀನೆ ಕಾರಣನೆಂದು |
ಮತಿವಂತರೆಲ್ಲ ಬಲ್ಲರಯ್ಯ ಪುರಂದರ ವಿಠಲ ೪
ತ್ರಿವಿಡೆತಾಳ
ಶ್ರುತಿ ಉಪನಿಷತ್ತುಗಳಲ್ಲಿ |
ಸ್ರ‍ಮತಿ ಪುರಾಣಗಳಲ್ಲಿ |
ಇತಿಹಾಸ ಪಂಚರಾತ್ರಾಗಮಗಳಲ್ಲಿ |
ಪ್ರತಿಪಾದ್ಯನು ನೀನೆ ಅತಿಶಯರಿಗತಿಶಯ |
ಚತುರ್ಮುಖ ಪಂಚಮುಖ ದೇವತೆಗಳಿಗೆಲ್ಲ |
ಗತಿ ನೀನೆ ಪುರಂದರವಿಠಲ ದೇವ | ೫
ಅಟ್ಟತಾಳ
ವೇದಗಳೆಂಬ ದಾವಣಿಗಳಲ್ಲಿ |
ನಾಮಗಳೆಂಬ ಮೂಗುನೇಣುಗಳಿಂದ |
ಜೀವರುಗಳೆಂಬ ಎತ್ತುಗಳನೆ ಕಟ್ಟಿ |
ಭಕುತಿರಸವೆಂಬ ಮುಟ್ಟುಗಳನೆ ಹಾಕಿ |
ಕರ್ಮವೆಂಬ ಭಾರವನು ಹೇರಿ |
ಆಡವನೊಬ್ಬ ಪುರಂದರ ವಿಠಲನೆಂಬ |
ದೊಡ್ಡ ಬೇಹಾರಿಗ ಕಾಣಿರೊ | ೬
ಆದಿತಾಳ
ಸಚರಾಚರ ಪ್ರೇರಿಸುವವರ ಆರಯ್ಯ |
ಸ್ವತಂತ್ರರಾರಯ್ಯ ಯಂತ್ರ ವಾಹಕನಾರೊ |
ಪುರಂದರವಿಠಲರಾಯ ನೀನಲ್ಲದೆ ಇನ್ನಾರಯ್ಯ | ೭
ಜತೆ
ನಿನ್ನನೆ ನಿನ್ನನೆ ನಿನ್ನನೆ ಮೊರೆ ಹೊಕ್ಕೆ |
ಮನ್ನಿಸಿ ಕಾಯಯ್ಯ ಪುರಂದರ ವಿಠಲಯ್ಯ ||

೨೨೭
ಸುಳಾದಿ
ಹರಿಸ್ವಾತಂತ್ರ್ಯ ಸುಳಾದಿ
ಧ್ರುವತಾಳ
ನೀನೇ ಕಾರಣ ಅಕಾರಣರು ಬೊಮ್ಮಾದಿಗಳು |
ನೀನೇ ಕರ್ತೃ ಅಕರ್ತೃಗಳವರು |
ಸರ್ವತಂತ್ರ ಸ್ವತಂತ್ರ ನೀನು ಅಸ್ವತಂತ್ರರವರು |
ಮೂಲ ನೀನು ಮಧ್ಯಮರವರು |
ನಿತ್ಯ ಎಂದೆನಿಪೆ ಲಯಕ್ಕಾಗುವರವರು |
ಭೋಕ್ರ‍ರ ಎಂದೆನಿಪೆ ಸರ್ವಾಂತರಾತ್ಮಕನಾಗಿ |
ಸ್ವೀಕರಿಸುವ ಶಕ್ತಿ ನಿನ್ನಧೀನವಯ್ಯ |
ಅನಾದಿಕಾಲ-ಕರ್ಮ ಗುಣಗಳನನುಸರಿಸಿ |
ಫಲಗಳನುಣಿಸುವೆ ಪುರಂದರ ವಿಠಲ ೧
ಮಟ್ಟತಾಳ
ತನ್ನಿಂದೊಂದೆರಡು ಜ್ಞಾನಗುಣಾಧಿಕರ
ಮೊದಲು ಮಾಡಿಕೊಂಡು |
ಬೊಮ್ಮನ ಪರಿಯಂತ ತಾರತಮ್ಯ
ಪಂಚಭೇದ ಮಾರ್ಗವರಿತು |
ನವವಿಧ ಸದ್ಭಕ್ತಿ ಯುಕ್ತನಾಗಿ |
ನಿತ್ಯ ಜನನ-ಮರಣ ದೂರ ಪುರಂದರ ವಿಠಲನ್ನ
ಗುಣ ರೂಪ ಕ್ರಿಯೆಯನ್ನು ತಿಳಿಯಬೇಕು ೨
ತ್ರಿವಿಡೆ ತಾಳ
ಪುರುಷ ಸೂಕ್ತವೇ ಮೊದಲಾದ ವೇದಗಳಿಂದ |
ಮತ್ತೆ ಕೆಲವು ಉಪನಿಷದ್ ವೇದ್ಯನು ನೀನು |
ಮಹಾಭಾರತ ಪುರಾಣಗಳಲಿದ್ದ ರೂಪ ಗುಣಕ್ರಿಯೆಗಳನ್ನು |
ಸಾರ್ವಭೌಮ ಬೊಮ್ಮ ಬಲ್ಲ |
ಆತ ನಿಂದಲಿ ವಾಣಿ – ಭಾರತಿಯರು ಬಲ್ಲರು |
ವಾಣಿಯಿಂದಲಿ ಮಹಾದೇವ ತಾ-ಬಲ್ಲನು |
ರುದ್ರನಿಂದಲಿ ಉಮಾದೇವಿಯು ಬಲ್ಲಳು |
ಉಮೆಯಿಂದ ಇಂದ್ರ-ಕಾಮರು ಬಲ್ಲರು |
ಸಕಲ ದೇವತೆಗಳು ಪುರಂದರ ವಿಠಲನ |
ಬಲ್ಲರು ಅರಿಯರು ಸಾಕಲ್ಯದಿಂದ ೩
ಅಟತಾಳ
ಓಂಕಾರ ಪ್ರತಿಪಾದ್ಯ ವ್ಯಾಹೃತಿ ಯೊಳಗಿದ್ದು |
ಗಾಯತ್ರಿಯೆನಿಸುವೆ ಪುರುಷಸೂಕ್ತಮೇಯ |
ಏಕೋತ್ತರ ಪಂಚಾಶದ್ವರ್ಣಗಳಲ್ಲಿ |
ವರ್ಣಾಭಿಮಾನಿಗಳಿಂದ ವರಣೀಯನಾಗಿಪ್ಪೆ |
ವರಕಲ್ಪ ಕಲ್ಪಕ್ಕೂ ವರದೇಶ ವರದ ಪುರಂದರ ವಿಠಲ |
ವ್ಯಾಹೃತಿಯೊಳಗಿದ್ದು ಗಾಯತ್ರಿಯೆನಿಸುವೆ ೪
ಆದಿತಾಳ
ಓಂ ಅಶೇಷ ಗುಣಾಧಾರ ಇತಿ ನಾರಾಯಣೋಪ್ಯಸೌ|
ಪೂರ್ಣೋ ಭೂತಿವರೋಸ್ನಂತ ಗುಣೋ |
ಸುಖೋ ಯದ್ ವ್ಯಾಹೃತೀರಿತಃ |
ಗುಣೈಸ್ತತಃ ಪ್ರಸವಿತಾ ವರಣೀಯಾನ್ ಗುಣೋನ್ನತೇ |
ಭಾರತೀ ಜ್ಞಾನ ರೂಪ ತ್ವಾತ್ ಭರ್ಗೋಧೇಯೋಸ್ ಖಿಲೈರ್ಜನೈಃ |
ಪ್ರೇರಕಃ ಶೇಷ ಬುದ್ಧೀನಾಂ ಸ ಗಾಯಯತ್ರ್ಯರ್ಥ ಈರಿತಃ |
ಪುರಂದರ ವಿಠಲ ಸರ್ವೋತ್ತಮ ಕಾಣಿರೊ ೫
ಜತೆ
ನಿನ್ನ ಮಹಿಮೆಗಳ ನೀ ಬಲ್ಲೆಯಲ್ಲದೆ |
ಅನ್ಯರು ಬಲ್ಲರೆ ಪುರಂದರ ವಿಠಲ ||

೧೨೦
ಸುಳಾದಿ
ಕಾಣಾಚಿ ಸುಳಾದಿ
ಧ್ರುವತಾಳ
ಪರಿಪೂರ್ಣನು ನೀನು ಬೊಮ್ಮಾಂಡಕೋಟಿಗಳಿಗೆ
ಎಂತೆಡೆಗೊಟ್ಟೆ ಹೇಳಾ? |
ಪರಿಪೂರ್ಣನು ನೀನು ಲಕುಮಿದೇವಿಯರಿಗೆ
ಎಂತೆಡೆಗೊಟ್ಟೆ ಹೇಳಾ |
ಪರಿಪೂರ್ಣನು ನೀನು ಬೊಮ್ಮಾದಿ ಸುರರಿಗೆ
ಎಂತೆಡೆಗೊಟ್ಟೆ ಹೇಳಾ? ||
ಪರಿಪೂರ್ಣನು ನೀನು ಅವ್ಯಾಕೃತಾಕಾಶಕ್ಕೆ
ಎಂತೆಡೆಗೊಟ್ಟೆ ಹೇಳಾ? |
ಪರಿಪೂರ್ಣನು ನೀನು ಪುರಂದರವಿಠÀಲ
ಎಂತೆಡೆಗೊಟ್ಟೆ ಹೇಳಾ ೧
ಮಟ್ಟತಾಳ
ಅಣುವಿಂಗಣುವಿಂಗೆ
ಅಣುವಿಂಗಣುವಿಂಗಣುವು ಗಡಾ |
ಮಹತ್ತು ಮಹತ್ತು ಮಹತ್ತು ಮಹತ್ತಿಗೆ |
ಮಹತ್ತು ಮಹತ್ತು ಮಹತ್ತು ಗಡಾ |
ಮಹತ್ತಾದ ಅಪರಿಮಿತ ಗಡಾ|
ಅಣೋರಣಿಯಾನ ಮಹತೋ ಮಹೀಯಾನ್ |
ಗುಣ ಗುಣಣಭರಿತ ಪುರಂದರವಿಠಲ ೨
ಅಟತಾಳ
ಕಾಣಾಚಿ ನಿನ್ನುರವು ಲಕುಮಿದೇವಿಯರಿಗೆ |
ಕಾಣಾಚಿ ನಿನ್ನ ಸರ್ವಾಂಗ (ಕಾಣಾಚಿ ನನ್ನ)
ಭವೇಂದ್ರಾದಿ ಸುರರಿಗೆ |
ಕಾಣಾಚಿ ನಿನ್ನಸರ್ವಾಂಗ (ಕಾಣಾಚಿ) ಎನಗೆ
(ನೀ) ಪುರಂದರವಿಠಲ ೩
ಝಂಪೆತಾಳ
ಅಗ್ನಿಯೊಳಗಿದ್ದು ದಾಹಕ ಶಕುತಿಯನೀವೆ |
ವಾಯುವಿನಲ್ಲಿದ್ದು ಶೋಷಕ ಶಕುತಿಯ ನೀವೆ |
ವರುಣನಲ್ಲಿದ್ದು ಕ್ಲೇದಕ ಶಕುತಿಯನೀವೆ |
ನಾನಾವಸ್ತುವಿನಲ್ಲಿದ್ದು ಇಂತು ನಾನಾ ಶಕುತಿಯನೀವೆ |
ಆರು ನಿನ್ನಂತೆ ಘನಮಹಿಮರೊ ನೀನೆ ಘನ-ಪುರಂದರವಿಠಲ ೪
ಏಕತಾಳ
ಕಂಡೆ ಕಂಡೆ ಕಮಲಾರಮಣನ |
ಕಂಡೆ ಕಂಡೆ ಕಮಲಜನಯ್ಯನ |
ಕಂಡೆ ಕಂಡೆ ಕೌಕ್ತುಭಧರನ |
ಕಂಡೆ ಕಂಡೆ ವೈಜಯಂತೀಧರನ |
ಕಂಡೆ ಕಂಡೆ ಚಕ್ರಪಾಣಿಯ |
ಕಂಡೆ ಕಂಡೆ ಶಂಖಧಾರಿಯ |
ಕಂಡೆ ಕಂಡೆ ಕರುಣಾಳು ಪುರಂದರವಿಠಲನ ೫
ಜತೆ
ಎನಿತು ಕಾರಣಮನಿತು ನೀನೆ |
ನಿನಗೂ ಎನಗೂ ಪುರಂದರವಿಠಲ ||

೨೪
ಸುಳಾದಿ
ಧ್ರುವತಾಳ
ಪಾದ ನಖ ಪರಿಪೂರ್ಣ ಜಾನು ಜಂಘೆ ಪರಿಪೂರ್ಣ |
ಊರು ಕಟಿ ಪರಿಪೂರ್ಣ ಜಘನ ಪರಿಪೂರ್ಣ |
ಉದರ ತ್ರಿವಳಿ ವಕ್ಷ ಬಾಹು ಪರಿಪೂರ್ಣ |
ಪದುಮ ಗದೆ ಚಕ್ರ ಶಂಖ ಪರಿಪೂರ್ಣ |
ವದನ ಪರಿಪೂರ್ಣಕಂಬಕಂಠ ಪರಿಪೂರ್ಣ |
ಸರ್ವಾಂಗ ಪರಿಪೂರ್ಣ ಪುರಂದರವಿಠಲನ |
ಸರ್ವಾಂಗ ಪರಿಪೂರ್ಣ | ೧
ಮಟ್ಟಿತಾಳ
ಹಮ್ಮು ಪರಿಪೂರ್ಣ ಮನ್ಯು ಪರಿಪೂರ್ಣ |
ಸುಮ್ಮನ ಪರಿಪೂರ್ಣಬುದ್ಧಿ ಪರಿಪೂರ್ಣ |
ಚಿತ್ಸುಖ ಪರಿಪೂರ್ಣ ಪುರಂದರವಿಠಲನ |
ಹಮ್ಮುಪರಿಪೂರ್ಣ ೨
ಝಂಪೆತಾಳ
ಅನಂತಬಾಹುವಾಗಿ ಅನಂತಚಕ್ಷುವಾಗಿ |
ಅನಂತಕಲ್ಪದಲ್ಲಿ ಅನಂತನಾಮ ಶ್ರೀಪುರಂದರವಿಠಲನ |
ಅನಂತ ಅವತಾರಗಳು ಪರಿಪೂರ್ಣ |
ಅನಂತ ಅವತಾರಗಳು ಪರಿಪೂರ್ಣ | ೩
ಅಟ್ಟತಾಳ
ಶ್ರೋತುರ ನೇತುರ ಘ್ರಾಣ ತ್ವಗ್ರಸನವು
ಪಾಣಿ ಪಾದ ಪಾಯೂಪಸ್ಥಾದಿ ಈರೈದು
ಮಾತÀರಿಶ್ವಪ್ರಿಯ ಪುರಂದರವಿಠಲನ
ಜ್ಞಾನ-ಕರ್ಮೇಂದ್ರಿಯಗಳು ಪರಿಪೂರ್ಣ ೪
ಏಕತಾಳ
ಆವಾವ ಕಾಲದಲ್ಲಿ ಆವಾವ ದೇಶದಲ್ಲಿ |
ಆವಾವ ಜೀವರಲಿ ಶ್ರೀವಲ್ಲಭ ಪರಿಪೂರ್ಣ |
ಭೂವಲ್ಲಭ ಪರಿಪೂರ್ಣ ಸಕಲ ಲೋಕದೊಲೊಬ್ಬ |
ಪುರಂದರವಿಠಲನು ಪೂರ್ಣ ಪಾದನಖ ಪರಿಪೂರ್ಣ | ೫
ಜತೆ
ಪರಿಪೂರ್ಣ ಜ್ಞಾನಪೂರ್ಣ ಆನಂದಪರಿಪೂರ್ಣ
ಪುರಂದರವಿಠಲವಿಭುವೆ ಪಾದನಖ ಪರಿಪೂರ್ಣ ||

೨೫
ಪರಿಪೂರ್ಣಸುಳಾದಿ
ಸುಳಾದಿ
ಧ್ರುವ ತಾಳ
ಪಾದ ನಖ ಪರಿಪೂರ್ಣ ಜಾನು ಜಂಘ ಪರಿಪೂರ್ಣ |
ಊರು ಕಟಿ ಪರಿಪೂರ್ಣ ಜಘನ ಪರಿಪೂರ್ಣ |
ಉದರ ತ್ರಿವಳಿ ವಕ್ಷಬಾಹು ಪರಿಪೂರ್ಣ |
ಸರ್ವಾಂಗ ಪರಿಪೂರ್ಣ ಪರಂದರವಿಠಲನ
ಸರ್ವಾಂಗ ಪರಿಪೂರ್ಣ ೧
ಮಟ್ಟ ತಾಳ
ಮನ ಪರಿಪೂರ್ಣ ಬುದ್ಧಿ ಪರಿಪೂರ್ಣ |
ಚಿತ್ತಪರಿಪೂರ್ಣ ಹಮ್ಮು ಪರಿಪೂರ್ಣ |
ಆತುಮ ಪರಿಪೂರ್ಣ ಪುರಂದರವಿಠಲನು ಪರಿಪೂರ್ಣ |
ಮಾರುತಿ ಮನದಲಿ ಪರಿಪೂರ್ಣ ಕಾಣಿರೊ | ೨
ತ್ರಿವಿಡೆ ತಾಳ
ವಿಶ್ವತೋಮುಖನಾಗಿ ವಿಶ್ವತೋಬಾಹುವಾಗಿ |
ವಿಶ್ವತೋಚಕ್ಷುವಾಗಿ ಪುರಂದರವಿಠಲನು |
ತಾನಿಹ ಕಾಣಿಗೆ ವಿಶ್ವತೋಚಕ್ಷುವಾಗಿ |
[ಅನಂತ ಬಾಹುವಾಗಿ ಅನಂತ ಚಕ್ಷುವಾಗಿ |
ಅನಂತ ಫ್ಲ್ಪದಲ್ಲಿ ಅನಂತನಾಮ ಶ್ರೀಪರಂದರವಿಠಲನ |
ಅನಂತ ಅವತಾರಗಳು ಪರಿಪೂರ್ಣ] ೩
ಅಟ್ಟ
ಶ್ರೋತ್ರ ನೇತ್ರ ಪರಿಪೂರ್ಣ ಘ್ರಾಣತ್ವಗ್ರಸನ |
ಪಾಣಿಪಾದವಾಯು ಉಪಸ್ಥಾದಿ ಈ ರೈದು |
ಮಾತÀರಿಶ್ವ ಪ್ರಿಯ ಪರುಂದರವಿವಠಲನ |
ಜ್ಞಾನ ಕರ್ಮೇಂದ್ರಿಯಗಳ ಪರಿಪೂರ್ಣ | ೪
ಆದಿ
ಆವಾವ ಕಾಲದಲ್ಲಿ ಅವಾವ ದೇಶದಲ್ಲಿ |
ಆವಾವ ಜೀವರಲಿ ಶ್ರೀವಲ್ಲಭ ಪರಿಪೂರ್ಣ |
ಭೂವಲ್ಲಭ ಪರಿಪೂರ್ಣ ಸಕಲ ಲೋಕದೊಳೊಬ್ಬ |
ಪುರಂದರವಿಠಲನು ಪೂರ್ಣ | ೫
ಜೊತೆ
ಪರಿಪೂರ್ಣ ಜ್ಞಾನಪೂರ್ಣಾನಂದ
ಪರಿಪೂರ್ಣ ಪುರಂದರವಿಠಲ ವಿಭುವೆ
[ಅರಸಿ ಇಂದಿರೆ ಪರಿಪೂರ್ಣ ಪುರಂದರವಿಠಲ
ಸರಸಿಜೋದ್ಭವ ಶರ್ವಾದಿಗಳೆಲ್ಲ ಅಪೂರ್ಣರು]

೩೨೭
ಸುಳಾದಿ
ಸೃಷ್ಟಿ ಪ್ರಕರಣ ಸುಳಾದಿ
ಧ್ರುವತಾಳ
ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದ ಕಾಲದಲ್ಲಿ |
ಶ್ರೀದೇವಿಯರು ಶ್ರೀ ಭೂ ದುರ್ಗಾ ರೂಪದಿ ನಿಂದು |
ದಕ್ಷಿಣಾ ಯಙ್ಞ ನಾಮದಿಂದ ವೇದಂಗಳಿಂದ |
ಕೊಂಡಾಡುವ ಮುಖ್ಯಾಭಿಮಾನಿಯಾಗಿ |
ವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದ |
ತುತಿಸುವಳು ಆ ಆ ಆ ತ್ರಿ ಪ್ರಕಾರ |
ಮಿತಿಯೆಂದು ಬೊಮ್ಮನ ನೂರರೊಳೆಂಟು ಭಾಗ |
ದೊಳೊಂದು ಭಾಗ ವೀ ಲಕುಮಿ ದೇವಿಗೆ |
ತಾ ಪ್ರೇರಿಸಲಾಗಿ |
ತುತಿಸುವಂದದಿ ಪ್ರೇರಕನಾಗಿ ಪ್ರಾರ್ಥನೆ ಕೈಕೊಂಡು |
ತಮ್ಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿ |
ನಿರೂಪಿಸಿದನು ಪುರಂದರ ವಿಠಲ ೧
ಮಟ್ಟತಾಳ
ನೂರು ವರುಷವು ಇಂದಾಯಿತೆನಲು |
ಉದಯಕಾಲದಿ ಚತುರ್ದಶ ಭುವನಾತ್ಮಕವಾದ
ಚತುರ್ಮುಖ |
ಬೊಮ್ಮನ ಪಡೆದೆ ನೀನು |
ಒಮ್ಮೆ ಬಂದು ನಿನ್ನ ಪ್ರಳಯೋದಕವನು |
ತೆರೆಗಳ ನೋಡಿ ಏನು ಕಾಣದೆ ಪೊಕ್ಕು ನಾಳದಲ್ಲಿ |
ಮತ್ತೊಮ್ಮೆ ಬರಲು ನಿನ್ನ ಘೋರವಾದ |
ನಿನ್ನ ರೂಪವ ಕಂಡು ಅಂಜಿ ಮತ್ತೆ |
ನ್ನ ಮನವೇನೆಂದು ಬಂದದು ಕಂಡು ಉದರ ಪ್ರವೇಶವಾದ |
ಒಂದು ಭಯವು ಎರಡು ಅಜ್ಞಾನವು |
ನಿನ್ನ ವಿಷಯದಲ್ಲಿ ಉಂಟಾದಡಾಗಲಿ |
ಕಂತು ಜನಕ ನೀನೆ ತಪತಪವೆನಲಾಗ |
ತಪವನು ಮಾಡಿದ ಪುರಂದರ ವಿಠಲನ್ನ |
ಒಲಿಸಿ ಸೃಷ್ಟಿಯ ಮಾಡಿದ ಸರಸಿಜ ಸಂಭವನು ೨
ರೂಪಕತಾಳ
ಸೂಕ್ಷ್ಮ ರೂಪವಾದ ಇಪ್ಪತ್ತುನಾಲ್ಕು ತತ್ತ್ವಗಳ ಹೊರಗೆ |
ಪಂಚಭೂತಗಳಿಗಭಿಮನಿಯಾದ |
ಗಣೇಶ ಮೊದಲಾದ ಪಂಚಭೂತಗಳ ಸೃಜಿಸಿದನಾಗ |
ಒಂದೊಂದಾವರಣದ ಅಭಿಮಾನಿಗಳಿಂದ |
ಮಹತ್ತತ್ತ್ವಕೀಶ-ಅಹಂಕಾರಾಧೀಶನೆಂದು |
ಬೊಮ್ಮಾಂಡವ ನಿರ್ಮಾಣವ ಮಾಡಿ |
ಪೂರ್ವದಂತೆ ಆ ದೇವತೆಗಳ ಸೃಜಿಸಿ |
ಬೊಮ್ಮಂಡವಾಧಾರವಾಗಿ ತನ್ನಾದೇಹವ |
ಬೆಳಸಿದ ಚತುರ್ಮುಖನಾಗ |
ಮೂಲ ರೂಪದಿಂದ ಪುರಂದರವಿಠಲ |
ವಿರಾಟದಲ್ಲಿ ವಾಸವಾಗಿ ನಿಂದ ಜಗದಾಧಾರ ೩
ಝಂಪೆತಾಳ
ಹಳೆಯ ಬೊಮ್ಮಗೆ ಅಂದು ಅವ್ಯಾಕೃತದಲ್ಲಿ |
ವಿರಜೆಯಲಿ ಮುಳಿಗಿಸಿ ಉದುರದಲಿ ಪ್ರವೇಶ |
ಬೊಮ್ಮಾದಿಗಳು ಇರಲು ಕೆಲವು ಲೋಕಂಗಳು ಸೃಷ್ಟಿಯಾದ |
ಬಳಿಕ ಶ್ವೇತ ದೀಪದಲ್ಲಿದ್ದ ಮೂರುತಿಯ |
ದರುಶನದಿ ಮುಕುತರೆನಿಸಿಕೊಂಡು |
ಐದಿದರು ಪುರಂದರವಿಠಲನ ಚರಣ ಕಮಲವ ೪
ತ್ರಿವಿಡೆತಾಳ
ಗಣನೆ ಇಲ್ಲದ ಅಪಾರ ರೂಪಂಗಳಲ್ಲಿ |
ಒಂದು ರೂಪದಿ ಚತುರ್ಮುಖನಿಗೆ |
ಸರ್ವಾಂಗ ಸಾಯುಜ್ಯವಿತ್ತ |
ಮಂಗಳಾಂಗನು ಸಾಯುಜ್ಯವಿತ್ತ |
ಪುರಂದರ ವಿಠಲ ಭಕುತರೊಡೆಯ ನೀನು |
ಭಕುತರಧಿಪ ನೀನು ಸಾಯುಜ್ಯವಿತ್ತ ೫
ಅಟ್ಟತಾಳ
ಶ್ವೇತ ದ್ವೀಪವು ಸುತ್ತಿದ ಉದಕವು |
ಬಯಲಾದ ಮೇಲೆ ಅಂಧಂ ತಮಸು |
ಏಳುಕೋಟೆ ಪರಿಮಿತವಾದ ನರಕವು |
ಶುಕ್ಲ ಶೋಣಿತ ಮೂತ್ರ ಅಶುದ್ಧದಿಂದ |
ಮಿಶ್ರವಾದ ತಮಸಿನೊಳು ಪೂರ್ಣ ಸಾಧನವನು |
ಮಾಡಿದ ಜನರಿಗೆ ಹರಿದ್ವೇಷ ಭಕ್ತರಲ್ಲಿ |
ಅನಾದಿ ಕಾಲದಿ ಮಾಡಿ ದುಃಖಭಾಜನರಾದ |
ಪಾಪಿ ಜೀವರನು ವಾಯುಭ್ಯತ್ಯರಿಂದ ಪ್ರೇರಿಸಲಾಗಿ |
ಲಿಂಗ ಶರೀರವ ಹೋಳು ಮಾಡಿ |
ಕೆಡಹಿತು ಅಂಧಂ ತಮಸಿನೊಳು |
ಕ್ರಿಮಿ ಪಕ್ಷಿಗಳಿಂದ ಬಾಧೆಯಲ್ಲದೆ ಮೇಲೆ |
ಪರ್ವತಂಗಳ ತಂದು ಬಿಸುಡುವರು |
ಭೀಮನ ದೂತರಿಂದ ನೊಂದು |
ದುಃಖಭಾಜನರಾದ ಪಾಪಿ ಜೀವರಿಗೆ |
ಎಂತು ಮಾಡಿದರೆ ಅದರಂತೆ ಫಲವೀವ |
ಕಂತು ಜನಕ ಪುರಂದರವಿಠಲರೇಯ ೬
ಆದಿತಾಳ
ಇಂತು ಪ್ರಕೃತಿ ಸಂಬಂಧವಾದಡೆ |
ಬೊಮ್ಮರುದ್ರ ಇಂದ್ರ ದಿಕ್ಪಾಲಕರು ಮತ್ತೆ |
ದೇವತೆಗಳು ಮನು ಮುನಿಗಳು |
ಶರೀರದಲಿ ವಾಸವಾಗಿ ಪುರಂದರವಿಠಲ |
ಸೃಷ್ಟಿ ಸ್ಥಿತಿ ಲಯಕೆ ಕಾರಣ ೭
ಜತೆ
ಕರ್ಮಜಾಂಡಗಳ ಮರ್ಮಗಳ ತಿಳಿದು ಫಲವೀವ |
ನಿರ್ಮಲ ಚರಿತ್ರ ಪುರಂದರ ವಿಠಲ ||

೮೬
ಭಕ್ತವತ್ಸಲ ಸುಳಾದಿ
ಧ್ರುವತಾಳ
ಭಕುತರಿಗಾಗಿ ಬಾಳುವೆಯಯ್ಯ ನೀನು |
ಭಕುತರಿಗಾಗಿ ಬದುಕೆವೆಯಯ್ಯ ನೀನು |
ಭಕುತರಿಗಾಗಿ ಗಳಿಸುವೆಯಯ್ಯ ನೀನು |
ಭಕುತರಿಗಾಗಿ ಉಳಿಸುವೆಯಯ್ಯ ನೀನು |
ಸಕಲೇಶ್ವರ ನಿನಗೊಂದೂ ಕಾರಣವಿಲ್ಲ |
ಮುಕುತೇಶ್ವರ ನಿನಗೊಂದೂ ಕಥನವಿಲ್ಲ |
ಭಕುತರಿಗಾಗಿ ನಿನ್ನ ಜೀವನವಯ್ಯ |
ಭಕ್ತವತ್ಸಲ ನಮ್ಮ ಪುರಂದರವಿಠಲ |
ಭಕುತರಿಗಾಗಿ ನಿನ್ನ ಬಾಳುವೆಯ್ಯ ೧
ಮಟ್ಟತಾಳ
ಬೊಮ್ಮನ ಪಡೆದೆ ಬೊಮ್ಮನ ಪದದಲ್ಲಿ ನಿಲಿಸಿದೆ |
ರುದ್ರನ ಪಡೆದೆ, ರುದ್ರನ ಪದದಲಿ ನಿಲಿಸಿದೆ |
ಇಂದ್ರನ ಪಡೆದೆ, ಇಂದ್ರನ ಪದದಲಿ ನಿಲಿಸಿದೆ |
ಚಂದ್ರನ ಪಡೆದೆ, ಚಂದ್ರನ ಪದದಲಿ ನಿಲಿಸಿದೆ |
ಎಲ್ಲ ದೇವರ್ಕಳ ಪಡೆದೆ, ಎಲ್ಲದೇವರ್ಕಳ ಪಥದಲಿ ನಿಲಿಸಿದೆ |
ಭಕುತರುಂಡದ್ದೆ ಉಂಬುದು |
ಭಕುತರುಟ್ಟದ್ದೆ ಉಟ್ಟುದು |
ಭಕುತರೊಡೆಯ ನೀನು ಭಕುತರಧೀನ ನೀನು |
ಭಕುತವತ್ಸಲ ನಮ್ಮ ಪುರಂದರವಿಠಲ |
ಭಕುತರೊಡೆಯ ನೀನು, ಭಕುತ ವತ್ಸಲ ನೀನು ೨
ರೂಪಕತಾಳ
ಗಾಳಿ ಬೀಸಲು ಪೊಂದದಂತೆ ನೀನು |
ಶೀಲಚಕ್ರವಟ್ಟಿ ಭಕುತರ ಕಾಯಿದೆ |
ಭಕುತವತ್ಸಲ ನಮ್ಮ ಪುರಂದರವಿಠಲ |
ಆಸೆ ಚಕ್ರವನಟ್ಟಿ ಭಕುತರ ಕಾಯಿದೆ ೩
ಝಂಪ ತಾಳ
ಭಕುತರೆಂದರ ನಿನ್ನ ತೇಯುತಿಹೆಯಯ್ಯ |
ಭಕುತರೆಂದರೆ ಅರಗಿನಂತೆ (ಕರಗಿ) ಕರುಗುತಿಹೆಯಯ್ಯ |
ಭಕುತರಿಚ್ಛೆಯ ನೀನು ನೆಡೆಸುತಿಹೆಯಯ್ಯ |
ಭಕುತರವಸರಕೆ ಒದಗುವೆಯಯ್ಯ |
ಭಕುತವತ್ಸಲ ನಮ್ಮ ಪುರಂದರವಿಠಲ |
ಭಕುತರಿಚ್ಛೆಯ ನೀನು ನೆಡೆಸುತಹೆಯಯ್ಯ ೪
ತ್ರಿವಿಡೆ ತಾಳ
ಮೇರುಮಂದಾರಾದಿ ಗಿರಿಗುಹೆಗಳಲ್ಲಿ |
ಸಪುತಾಂಬುಧಿಗಳಲ್ಲಿ ಸಪುತದ್ವೀಪಗಳಲ್ಲಿ |
ಮನಸಿಗೆ ಬಂದಂತೆ ಭಕುತರುಂಡದ್ದುಣುವಂತೆ |
ನಿನ್ನ ಲಲನೆಯೆಂತೊ ಪುರಂದರವಿಠಲ |
ನಿನ್ನ ಲಲನೆಯಂತೊ ೫
ಅಟ್ಟತಾಳ
ಭಕುತರಿಚ್ಛೆಯ ಮಾತ್ರದಲಿ ಇದ್ದುದನು |
ಕಂಡು ಕೇಳಿ ಉಣಬಲ್ಲೆನಯ್ಯ ನಾನು |
ಅನವರತ ಅನುಭವಿಸಬಲ್ಲೆನಯ್ಯ ನಾನು |
ನಮ್ಮ ಪುರಂದರವಿಠಲನ ಶೀಲಸ್ವಭಾವವ |
ಅನವರತ ಅನುಭವಿಸಬಲ್ಲೆ ನಾನು | ೬
ಏಕತಾಳ
ಭಕುತರಿಗಾಗಿ ನಡೆವೆ ನುಡಿವೆ ನೀನು |
ಭಕುತರಿಗಾಗಿ ಕೊಡುವೆ ಕೊಳ್ಳುವೆ ನೀನು |
ಭಕುತರಿಗಾಗಿ ಬರುವೆ ಹೋಗುವೆ ನೀನು |
ಭಕುತರ ಪ್ರಭು ನೀನು ಭಕುತರಧೀನ ನೀನು |
ಭಕುತವತ್ಸಲ ನಮ್ಮ ಪುರಂದರವಿಠಲ ೭
ಜತೆ
ಬಂಟ ಬದಿಗನಾದೆ ಬಂಡಿಯ ಬೋವನಾದೆ |
ಬಂಟರಿಗೆ ಬಂಟನಾದೆ ಪುರಂದರವಿಠಲ ||

೩೨೮
ಸುಳಾದಿ
ವೇಂಕಟೇಶ ಸುಳಾದಿ
ಧ್ರುವತಾಳ
ಮಂಗಳಾಂಗ ನಿನ್ನಂಗವಟ್ಟದಲ್ಲಿ ಸಂಗ ಸುಖ ವಿತ್ತಳವ್ವೆ |
ಅಂಗನೆ ಲಕುಮೆವ್ವ ಕೆಂಬರಳಾಗಿಪ್ಪಳೆವ್ವೆ |
ಶೃಂಗಾರವಾದಳವ್ವೆ ಬಂಗಾರವಾದಳವ್ವೆ |
ರಂಗ ಶ್ರೀ ಪುರಂದರವಿಠಲ ನಿನ್ನನೊಲಿದು ೧
ಮಟ್ಟತಾಳ
ಉಟ್ಟ ದಟ್ಟಿ ಕಟ್ಟಿದ ಕಠಾರಿ |
ತೊಟ್ಟಂಬು ತೊಡರು ತೋಮರ |
ಮೆಟ್ಟಿದ ತಡಿಕೆರವಿನ ಹೆಜ್ಜೆ ಹೊನ್ನ ಗಜ್ಜೆ |
ಸೃಷ್ಟಿ ರಕ್ಷಕ ಪುರಂದರವಿಠಲ ತಿರುವೆಂಗಳಪ್ಪಗೆ ನಮೋ ೨
ಅಟ್ಟತಾಳ
ಅಚ್ಯುತಾನಂತ ಗೋವಿಂದ ಮುಕುಂದ |
ವಾಮನ ವಾಸುದೇವ ನಾರಾಯಣ ಹರಿ |
ಸಚ್ಚಿದಾನಂದ ಸ್ವರೂಪ ಗೋಪಾಲ ಪುರುಷೋತ್ತಮ |
ಪರಂಧಾಮ ನಾರಾಯಣ |
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ |
ಭಾರ್ಗವ ರಾಘವ ಕೃಷ್ಣ ಬುದ್ಧ ಕಲ್ಕಿ-|
ಯವತಾರ ಅನಂತಾವತಾರ ನಾರಾಯಣ |
ಅಪಾರ ಮಹಿಮ ಶ್ರೀ ನಾರಾಯಣ ಸರ್ಪಶಯನ |
ಶ್ರೀ ಪುರಂದರ ವಿಠಲ ವಿಬುಧೇಶ ತಿರುವೇಂಗಳಪ್ಪ |
ಎನ್ನಪ್ಪನೆ ನಾರಾಯಣ ೩
ಝಂಪೆತಾಳ
ಇದೆ ದನುಜಮರ್ದನ ಚಕ್ರ ಹಸ್ತ ಮ |
ತ್ತಿದೆ ವೇದಮಯ ಶಂಖ ಹಸ್ತ |
ಇದೆ ಈರೇಳು ಜಗವನೊಲಿದಿಂಬಿಟ್ಟು ಮೆರೆವ ಹಸ್ತ |
ಇದೆ ಇದೆ ವೈಕುಂಠವೆಂದು ತೋರುವ ಹಸ್ತ |
ಇದೇ ಪುರಂದರ ವಿಠ್ಠಲನ್ನ ಮೂರುತಿ |
ಇದೇ ತಿರುವೇಂಗಳಪ್ಪನ ಇರವು ೪
ಏಕತಾಳ
ಕರೀಠ ಕುಂಡಲಧರನ ಕಂಡೆ |
ಹಾರಮಣಿ ಭೂಷಣನ ಕಂಡೆ |
ಸಿರಿಯಿಪ್ಪ ವಕ್ಷಸ್ಥಳವ ನಾ ಕಂಡೆ |
ವರಾಂಬರನ ಕಂಡೆ ವರದೇಶನ ಕಂಡೆ |
ತಿರುಮಲ ಗಿರಿಯಲಿ ಸಿರಿ ಪುರಂದರವಿಠಲನ |
ಇರವ ನಾ ಕಂಡೆ ಚೆಲುವನ ನಾ ಕಂಡೆ ೫
ಜತೆ
ತಿರುವೇಂಗಳಪ್ಪ ಪುರಂದರ ವಿಠಲ |
ನೆರೆ ನಂಬಿದೆನೊ ನಿನ್ನ ಚರಣ ಕಮಲವ ||

೫೫
ದಾಸಸುಳಾದಿ
ಧ್ರುವತಾಳ
ಮನವೆ ಆಲಿಸಿಕೇಳೊ, ಬಿನ್ನಯಿಸುವೆನು ನಿನಗೆ |
ಚಿನುಮಯ ಮೂರುತಿಯ ಗುಣ ರೂಪ ನಾಮ ಕೀ-|
ರ್ತನೆ ಮಾಳ್ಪ ಬಗೆಯ ನಿನಗೆ ತಿಳಿಸುವೆನು |
ಘನವಾದ ಸುಸಾಧನವೆಂದು ತ್ರಿಕರಣಪೂರ್ವಕವಾಗಿ |
ಘನಮಹಿಮ ನಾರಾಯಣನ ಅಚಿಂತ್ಯಾದ್ಭುತ ಶಕ್ತಿ |
ಅನುಭವಕೆ ತಂದುಕೊಂಡು ಸುಖಿಸುವುದು |
ಮನ ಮೊದಲದ ಸರ್ವಇಂದ್ರಿಯಂಗಳ ಅ-|
ವನ ಪಾದದಲ್ಲಿ ಇಟ್ಟು ಕೀರ್ತನೆ ಗೈಯೊ |
ನಿನಗಿದೆ ಮುಖ್ಯ ಗತಿ ಸಾಧನವೆಂದು ಸಾರಿದೆ |
ಅನುಮಾನ ಮಾಡಸಲ್ಲ ಎಂದೆಂದಿಗೂ |
ಬಿನುಗುದೈವಂಗಳ ಕಾಲಿಲೊದೆದು ಮಧ್ವ-|
ಮುನಿಮತದಲಿ ದೀಕ್ಷಾಬದ್ಧನಾಗೊ |
ಕುನರರ ನೆರಹಿಕೊಂಡು ಕುಚೇಷ್ಟೆ ಕಥೆಯ ಪೇಳಿ |
ಘನ ಅಂಧಂತಮಸಿನೊಳು ಬೀಳದಿರು ||
ವನಜಭವಾಂಡದೊಳು ಹರಿದಾಸರ ದೀಕ್ಷೆ
ಬಲುಕಷ್ಟಕಾಣೊ |
ಮನುಜಾಧಮರಿಗೆ ಅದು ಸುಲಭವಲ್ಲವು ಕೇಳು |
ಇನಿತು ಇದರೊಳು ತ್ರಿವಿಧ ಬಗೆಯುಂಟು |
ಗುಣವಂತನಾಗಿ ನೀನು ಕಾಲಕ್ರಮಣ ಮಾಡೋ |
ಅನುದಿನದಲ್ಲಿ ಹರಿಸೇವೆಗೆ ವಿಮುಖನಾಗದೆ |
ಮನಮುಟ್ಟೆ ಒಬ್ಬನೆ ಏಕಾಂತದಲಿ ಕುಳಿತು |
ತನುರೋಮಗಳು ಉಬ್ಬಿ ಆನಂದಾಶ್ರುಗಳಿಂದ
ಗಾನವ ಮಾಡೊ ||
ಘನಜ್ಞಾನ ಪುಟ್ಟುವುದು ಅನಿಮಿಷರೀಶನ
ದಯಕೆ ಪಾತ್ರನಪ್ಪೆ ||
ದಿನದಿನಕೆ ಜ್ಞಾನವೆಗ್ಗಳವಹುದು |
ನಿನಗೊಂದೆ ಪೀಳಿದೆ ಶುದ್ಧಸತ್ತ್ವದಾಶೆ_|
ಗುಣವನು ಮನಸಿಗೆ ತಂದುಕೊಂಡು ನೀ|
ಅನುಮಾನಬಿಟ್ಟು ನಿಶ್ಚಯವಾಗಿ ನಂಬೊ ಹರಿಯ|
ಗುಣಗಣಾಂಬುಧಿ ನಮ್ಮ ಪುರಂದರವಿಠಲನು |
ಅನುಸಾರಿಯಗಿ ನಿನ್ನ ಹಿಂದೆ ಮುಂದಿಹ ಕಾಣೊ ೧
ಮಟ್ಟತಾಳ
ಉದಯಕಾಲದಲೆದ್ದು ಮುದದಿಂದ ಹರಿನಾಮ |
ಒದಗಿ ಆರತನಾಗಿ ವದನದಿ ಕೊಂಡಾಡಿ |
ವಿಧಿ ಪೂರ್ವಕ ಸ್ನಾನವ ಮಾಡಿ ಕರ್ಮವಮುಗಿಸಿ ನಿತ್ಯ |
ಬುಧರಲ್ಲಿಗೆ ಪೋಗಿ ಸತ್ಕಥಾಶ್ರವಣವನು |
ಹೃದಯದೊಳಗೆ ನಿಲಿಸಿ ಉದರಕೋಸುಗವಾಗಿ |
ಸಾಧುಗಳ ಮನೆಯಲಿ ಶುದ್ಧವೃತ್ತಿಯ ಮಾಡಿ |
ಇದ್ದನಿತರೊಳು ಸಾಕ್ಷೀಭೂತದಿಂದ ಮೆದ್ದು |
ಸತಿಸುತರೊಡನೆ ಮಮತಾರಹಿತನಾಗಿ ಇದ್ದು |
ಸತುಕಾಲವನು ಕಳೆಯಬೇಕು ಹೀಗೆ ಪ-|
ದ್ಧತಿ ತಪ್ಪದಂತೆ ಧರೆಯೊಳು ಸತತ ಚರಿಸಲು |
ಮುದ್ದು-ಮೋಹನ ರಂಗ ಪುರಂದರವಿಠಲನ |
ಗದ್ದುಗೆ ಬಳಿಯಲಿರುವ ಮುದ್ದು ದಾಸನು ಒಯ್ವನು ೨
ತ್ರಿವಿಡಿತಾಳ
ಯಾಮ ರಾತ್ರಿಯೊಳಗೆ ನೀ ಸತ್ಕರ್ಮದ |
ನೇಮವ ಮುಗಿಸಿ ಬಲು ಭಕುತಿಯಿಂದ |
ಶ್ರೀಮುಕುಂದನಿಗೆ ಅರ್ಪಣವನು ಮಾಡಿ |
ವಾಮಭಾಗದಿ ತನ್ನ ಸತಿಯಿಂದ ಒಡಗೂಡಿ |
ಶ್ರೀಮನೋಹರನ ಸ್ತುತಿಸಿಕೊಳುತಲಿ |
ಪ್ರೇಮದಿಂದಲಿ ಕಳೆದು ನಿತ್ಯದಲಿ |
ಕಾಮಿನಿಯಳ ಬಿಟ್ಟು ಪೃಥಕುಶಯನನಾಗೆ |
ಭೂಮಿಯೊಳಗೆ ಅವನೇ ಪಾವನನು |
ಯಾಮವು ಮೀರಿದ ಮೇಲೆ ಮಾಡಿದ ಪುಣ್ಯ |
ಆ ಮಹಾದೈತ್ಯರು ಸೆಳೆದುಕೊಂಬರು ಕಾಣೊ |
ಮಾಮನೋಹರನ ದಿನದಲ್ಲಿ ಮಾತ್ರ ಅವರ |
ಸ್ವಾಮಿತ್ವ ನಡೆವುದಿಲ್ಲ ಹರಿ ಆಜ್ಞೆಯಲಿ |
ಭೂಮಿಜಾಪತಿ ತನ್ನ ಚಕ್ರವ ತಿರುಗಿಸುವ |
ಕಾಮುಕ ದೈತ್ಯರ ಅಳಿವುದಕೆ |
ಪಾಮರ ಮನುಜನು ದಾಸ ವೇಷವ ಧರಿಸಿ |
ನೇಮನಿತ್ಯಗಳೆಲ್ಲ ಲೋಪವಿಡಿಸಿ |
ಕಾಮಾಚಾರಿಗಳಾಗಿ ಕಂಡಲ್ಲಿ ಸಂಚರಿಸಿ |
ಮಾಮನೋಹರನ (ಸ್ತುತಿ) ಪೇಳಿದರೇನು |
ತಾಮಸ ದಾಸನೆಂದು ತಿಳಿಯೇ ಈಗ ಘೋರ |
ತಾಮಸ ಅಹುದೋ ಅವರಿಗೆ ಸಂದೇಹವಿಲ್ಲ |
ಈ ಮಹಿಯೊಳಗೆ ಮೃಷ್ಟಾನ್ನಭೋಜನ ವಸನದಿಂ |
ದೇ ಮಹಾಫಲವೆಂದು ಹಿಗ್ಗಿಕೊಳ್ಳುವನಯ್ಯ |
ಕಾಮಿತಫಲ ದೇವ ಅಂಥಾದ್ದೆ ಆವನಿಗೆ |
ನೇಮಿಸಿ ಇಪ್ಪನು ಅವನ ಯೋಗ್ಯತೆಯಂತೆ |
ಸ್ವಾಮಿ ತನ್ನ ನಿಜದಾಸರೆಂಬವರಿಗೆ |
ನಾಮಸುಧೆಯನುಣಿಸಿ ಸಲಹುತ್ತಿಪ್ಪ |
ಈ ಮಹಾಭಾಗ್ಯಕ್ಕೆ ಎಣೆಗಾಣೆ ಎಣೆಗಾಣೆ |
ಭ್ರಾಮಕನಾಗಿ ನೀ ಕೆಡಬೇಡವೋ |
ಕಾಮಜನಕ ನಮ್ಮ ಪುರಂದರವಿಠಲನ |
ಸುಮ್ಮನವೆಂತೆಂಬ ಧಾಮದೊಳಗೆ ನಿತ್ಯ |
ಪೂಜೆ ಮಾಡಿ ನಲಿದಾಡೊ ೩
ಅಟ್ಟತಾಳ
ನಿರುಪಾಧಿಕವಾಗಿ ಹರಿಸೇವೆ ಮಾಳ್ಪುದಕೆ- |
ನರರ ನಿರೀಕ್ಷಿಸಿಕೊಂಡು ಕುಳ್ಳಿರುವ-ಪಾ- |
ಮರ ಹರಿದಾಸನು ಅವನಲ್ಲ |
ನರವಾನರ ಕಾಣೊ ಪರಮ ಭಕುತಿಯಿಂದ |
ನರಹರಿಯ ಚರಿತೆಯ ವರಸುಧಾರಸ ಸುಖ |
ಸುರಿಯಬೇಕೋ ತನ್ನೊಳುತಾನೆ ಗುಪ್ತದಿ |
ಇರಬೇಕು ತನ್ನ ಸ್ವರೂಪ ತೋರಗೋಡದೆ |
ದುರುಳಜನಕೆ ದುರಾಚರಿಯೆಂಬ ಹಾಗಾ- |
ಚರಿಸಬೇಕು ಅವರ ಪೋಗಾಡುವಂದದಲಿ |
ಅರಜಾಣನಾದವ ಹಗಲು ಇರುಳು ತಾನು |
ಹರಿದಾಸರ ಚರಣರಜವನು ಧರಿಸುವ |
ಶಿರಬಾಗಿ ಪರಮಯೋಗ್ಯನಾಗಿ ಭಕುತಿಕೈಕೊಂಬನು |
ವರಕಲಿಯುಗದಲಿಂಥವರೇ ದುರ್ಲಬರು |
ಕರುಣಾಕರ ಸಿರಿಪುರಂದರವಿಠಲಗೆ
ಪರಮಪ್ರಿಯರಿವರೇ ಹರಿದಾಸರು ಕಾಣೋ ೪
ಆದಿತಾಳ
ಒಂದು ಪಾಡುತ ಅದನು ಹಿಂದುಗಳೆದು ಮ-|
ತ್ತೊಂದು ಪಾಡಲು ನೊಂದುಕೊಂಬರು ವರ್ಣಾಭಿಮಾನಿಗಳು |
ಸಂದೇಹ ಜ್ಞಾನವುಳ್ಳ ಹರಿದಾಸನಿವ ಕಾಣೊ |
ಒಂದು ಎರಡು ಸ್ಥಳದಿಂದ ತಿರುಗಿ ತಿರುಗಿ |
ಬಂದು ಪುಟ್ಟುವನೊ ನಾನಾ ಬಗೆಯ ಸುಖ |
ಇಂದಿರೇಶ ಇವಗೆ ಇದೆ ಕ್ಲಪ್ತ ಮಾಡಿಪ್ಪ |
ಮಂದಮಾನವ ಕೇಳೋ ಮರುಳನಾಗಿ ನೀನು ನಾ-|
ನೆಂದ ವಚನ ಮನಕೆ ತಾರದೆ ನಮ್ಮ |
ಕಂದರ್ಪಜನಕಗೆ ದೂರನಾದೆ ಕಾಣೋ |
ವಂದಿಸಿ ನಾನಿನಗೆ ಬೇಡಿಕೊಂಬೆನು ಹೀಗೆ |
ಮಂದರಧರ ಸಿರಿ ಪುರಂದರವಿಠಲನ |
ಪೊಂದಿ ಸಂಸಾರದಿಂದ ಮುಕುತನಾಗೊ ೫
ಜತೆ
ಜ್ಞಾನ ಭಕುತಿ ವೈರಾಗ್ಯ ಭಾಗ್ಯವನ್ನು
ನೀನೆ ಪಡೆಯೋ ನಮ್ಮ ಪುರಂದರವಿಠಲನಿಂದ ||

೫೬
ಸುಳಾದಿ
ದಾಸಸುಳಾದಿ
ಧ್ರುವತಾಳ
ಮನವೇ ಆಲೈಸಿಕೇಳು ಬಿನ್ನೈಸುವೆನು ನಿನಗೆ |
ಚಿನುಮಯ ಮೂರ್ತಿಯ ಘನಗುಣನಾಮ ಕೀ |
ರ್ತನ ಮಾಳ್ಪ ಬಗೆಯನು ನಿನಗೆ ತಿಳಿಸುವೆನು |
ಘನ ಮಹಿಮ ನಾರಾಯಣನ ಅಮಿತ ಅದ್ಭುತಶಕ್ತಿ |
ಅನುಭವಕೆ ತಂದುಕೊಂಡು ಸ್ತುತಿಸುವುದು |
ಮನ ಮೊದಲಾದ ಸರ್ವೇಂದ್ರಿಯಂಗಳ ಅ |
ವನ ಪಾದದಲ್ಲಿಟ್ಟು ಕೀರ್ತನೆಗೈಯ್ಯೊ ಮನವೆ |
ನಿನಗೆ ಮುಖ್ಯಗತಿಗೆ ಸಾಧನವೆಂದು ಸಾರಿದೆ |
ಅನುಮಾನಮಾಡೆ ಸಲ್ಲ ಎಂದೆಂದಿಗೂ |
ಬಿನುಗು ದೈವಂಗಳ ಕಾಲಿಲಿ ಒದ್ದು ಮಧ್ವ |
ಮುನಿ ಮತದಲ್ಲಿ ಬದ್ಧ ದೀಕ್ಷಿತನಾಗು ಕು |
ಜನರ ನೆರಹಿಕೊಂಡು ಕುಚೇಷ್ಟೆ ಕತೆ ಪೇಳಿ |
ಘನ ಅಂಧಂತಮಸಿನೊಳು ಬೀಳದಿರು |
ವನಜಭವಾಂಡದೊಳು ಹರಿದಾಸತ್ವ ದೀಕ್ಷೆ |
ಯನು ಬಲು ಬಲು ಕಷ್ಟ ಕಷ್ಟವೆಂದು ಕಾಣೊ |
ಮನುಜಾಧಮಗಿದು ಸುಲಭವಲ್ಲವೊ ಪ್ರಾಣಿ ಇನಿತು |
ಇದರೊಳಗೆ ತ್ರಿವಿಧಬಗೆಯುಂಟು |
ಗುಣವಂತನಾಗಿ ನೀನು ಕಾಲಕ್ರಮಣ ಮಾಡು |
ಅನುದಿನದಲ್ಲಿ ಹರಿಸೇವೆಗೆ ವಿಮುಖನಾಗದೆ |
ತನುವುಬ್ಬಿ ರೋಮಾಂಚನಾನಂದ ಬಾಷ್ಪದಿ ಗಾನ |
ವನು ಮಾಡು ಘನಜ್ಞಾನ ಪುಟ್ಟುವದು ಅನಿಮಿಷೇ
ಶನ ಪ್ರೀತಿ ದಿನದಿನಕೆ ವೆಗ್ಗಳವಾಗುವುದು |
ನಿನಗೆ ಪೇಳಿದ ಶುದ್ಧ ದಾಸಭಾವವಿದನು |
ಮನಸಿಗೆ ತಂದುಕೊಂಡು ಜ್ಞಾನಿಯಾಗೊ ಗುಣ |
ಗಣಾಂಬುಧಿ ನಮ್ಮ ಪುರಂದರವಿಠಲ |
ಅನುಸಾರಿಯಾಗಿ ತಾನು ಹಿಂದೆ ತಿರುಗುತ್ತಿಪ್ಪ ೧
ಮಟ್ಟತಾಳ
ಉದಯಕಾಲದಲೆದ್ದು ಮುದದಿಂದ ಹರಿನಾಮ |
ಒದಗಿ ಆರತನಾಗಿ ವದನದಿ ಕೊಂಡಾಡಿ |
ವಿಧಿಪೂರ್ವಕವಾಗಿ ಸ್ನಾನಾದಿಕರ್ಮ ಮುಗಿಸಿ |
ಬುಧರಲ್ಲಿಗೆ ಪೋಗಿ ಕಥಾಶ್ರವಣ ಮಾಡಿ |
ಅದರ ತರುವಾಯ ಉದರಕೆ ಸಲುವಾಗಿ |
ಸಾಧುಗಳ ಶುದ್ಧವೃತ್ತಿಯ ಮಾಡಿ |
ಇದ್ದನಿತರೊಳು ಸಾಕ್ಷಿಭೂತನಾಗಿ |
ಮೆದ್ದು ಸತ್ಕಾಲವನ್ನು ಕಳೆಯಬೇಕು |
ಪದ್ಧತಿ ತಪ್ಪದಂತೆ ಈ ಧರೆಯೊಳಗೆ ಹೀ |
ಗಿದ್ದವನೇ ನಿಜದಾಸನು ಕಾಣೊ |
ಮುದ್ದು ಮೋಹನರಂಗ ಪುರಂದರವಿಠಲಗೆ
ಮುದ್ದಾಗುವವನೇ ನಿಜದಾಸನು ಸಿದ್ಧ ೨
ತ್ರಿವಿಡತಾಳ
ಯಾಮರಾತ್ರಿಯೊಳು ನೀ ಸತ್ಕರ್ಮದ |
ನೇಮವ ಮುಗಿಸಿ ಬಲು ಭಕುತಿಯಿಂದ |
ಶ್ರೀಮುಕುಂದನಿಗೆ ಅರ್ಪಣವನು ಮಾಡಿ |
ವಾಮಭಾಗದಿ ತನ್ನ ಸತಿಯಿಂದಲೊಡಗೂಡಿ |
ಶ್ರಿಮನೋಹರನ ಸ್ತುತಿಸಿಕೊಳುತ |
ಪ್ರೇಮದಿಂದಲಿ ನಿದ್ರೆಕಳೆದು ನಿತ್ಯ |
ಕಾಮಿನಿಯಳ ಬಿಟ್ಟು ಪೃಥಕುಶಯನನಾಗೆ |
ಭೂಮಿಯೊಳವನೇ ಪಾವನನೋ |
ಯಾಮವ ಮೀರಿ ಮಾಡಿದ ಸಾಧನ |
ಆ ಮಹಾದೈತ್ಯರು ಸೆಳೆದುಕೊಂಬರು |
ಮಾಮನೋಹರನ ದಿನದಲ್ಲಿ ಅವರ |
ಸ್ವಾಮಿತ್ವ ನೆಡೆವುದಿಲ್ಲ ಕಾಣಿರೋ |
ಭೂಮಿಜಾಪತಿ ತನ್ನ ಚಕ್ರವ ತಿರುಗಿಸುವ ಕಾಮಕೆ |
ದೈತ್ಯರ ಅಳಿವುದಕ್ಕೆ |
ಪಾಮರ ಮನುಜರು ದಾಸವೇಷವ ಧರಿಸಿ |
ನೇಮ ನಿತ್ಯಗಳೆಲ್ಲ ಪೋಗಾಡಿಸಿ |
ಕಾಮಾಚಾರಿಗಳಾಗಿ ಕಂಡಲ್ಲಿ ಸಂಚರಿಸಿ |
ಮಾಮನೋಹರನ ಲೀಲೆಯ ಪೇಳಿದರೇನೊ |
ತಾಮಸದಾಸನೆಂದು ತಿಳಿಯೋ ಘೋರ |
ತಮಸು ಅವಗಾಗುವದು ಸಂದೇಹವಿಲ್ಲ |
ಈ ಮಹಿಯೊಳು ಮೃಷ್ಟಾನ್ನ ಭೋಜನ ವಸನ |
ವೇ ಮಹಾಫಲವೆಂದು ಹಿಗ್ಗಿ ಕೆಟ್ಟು ಹೋಗುವನು |
ಕಾಮಿತಪ್ರದದೇವ ಅಂಥಾದ್ದೆ ಅವನಿಗೆ |
ನೇಮಿಸಿಪ್ಪನು ಅವನ ಯೋಗ್ಯತೆಯಂತೆ |
ಸ್ವಾಮಿ ತನ್ನ ನಿಜದಾಸನಾದವನಿಗೆ ನಾಮಸುಧೆಯನುಣಿಸಿ |
ಸಲಹುತಿಪ್ಪ |
ಈ ಮಹಾಭಾಗ್ಯಕ್ಕೆ ಎಣೆಗಾಣೆ ಎಣಿಗಾಣೆ |
ಭ್ರಾಮಕನಾಗಿ ನೀ ಕೆಡಬೇಡವೋ |
ಕಾಮಜನಕ ನಮ್ಮ ಪುರಂದರವಿಠಲನ್ನ |
ಈ ಮನವೆಂಬ ಧಾಮದೊಳಗೆ ನಿಲ್ಲಿಸಿ |
ಪೂಜೆಯ ಮಾಡುವುದು ಸುಖಕಾಣೊ ೩
ಅಟ್ಟತಾಳ
ಒಂದು ಪದವ ಪಾಡುತಲದನು |
ಹಿಂದು ಕಳೆದು ಮತ್ತೊಂದು ಪಾಡಲು |
ನೊಂದಕೊಂಬರು ವರ್ಣಾಭಿಮಾನಿಗಳು |
ಸಂದೇಹ ಜ್ಞಾನವುಳ್ಳ ಹರಿದಾಸ ಕಾಣೊ |
ಒಂದೆರಡು ಸ್ಥಳದಿಂದ ತಿರುಗಿ ಪುಟ್ಟಿಸುವ |
ಬಂದು ಉಂಟನು ಸಕಲ ಸೌಖ್ಯಂಗಳ |
ಇಂದಿರೇಶನು ಇವಗೆ ಇದೇ ಕ್ಲುಪ್ತ ಮಾಡಿಪ್ಪ |
ಮಂದಮನವೇ ಕೇಳು ಮದಡನಾಗಿ ನಾ |
ನಂದ ಮಾತುಗಳೆಲ್ಲ ತಾರದೆ ನಮ್ಮ |
ಕಂದರ್ಪನಯ್ಯಗೆ ದೂರನಾದೀ ಕಂಡ್ಯ |
ವಂದಿಸಿ ನಿನಗೆ ಬೇಡಿಕೊಂಬೆನು |
ಮಂದರಧರ ಶ್ರೀ ಪುರಂದರವಿಠಲನ |
ಹೊಂದಿ ಸಂಸಾರ ದುಃಖಕಳೆದು ಮುಕ್ತನಾಗೊ ೪
ಆದಿತಾಳ
ನಿರುಪಾಧಿಕವಾಗಿ ಹರಿಸೇವೆ ಮಾಡಿದ್ಹಾಂಗೆ |
ನರರ ನೀಕ್ಷಿಸಿಕೊಂಡು ಕುಳ್ಳಿರುವನು ಪಾ |
ಮರನೊ ಹರಿದಾಸನಲ್ಲ ನರರೊಳು ವಾ |
ನರನೊ ಪರಮಭಕುತಿಯಿಂದ ನರಹರಿ |
ಚರಿತ್ರೆಯ ವರ ಸುಧಾಧಾರೆಯ |
ಸುರಿಯಬೇಕು ತನ್ನ ಸ್ವರೂಪ ತೋರಗೊಡದೆ |
ದುರುಳ ಜನಕೆ ದುರಾಚಾರಿಯಂತೆ ತೋರಬೇಕು ಅ |
ವರು ಹೊಗಳುವಂದದಿ ಪೊಗಳುತ್ತಲೆ |
ನರ ಜಾಣನಾದವ ಹಗಲು ಇರುಳು |
ಹರಿದಾಸರ ಚರಣರಜವನ್ನು ಧರಿಸುವ |
ಶಿರಬಾಗಿ ಪರಮಯೋಗ್ಯನಾಗಿ |
ಪರಮ ಭಕುತಿಯಲಿ ಕೈಗೊಂಡು ಎಲೆ |
ಮನವೆ ಇದು ಕಲಿಯುಗದೊಳು ಈ ಭಾಗ್ಯ ದುರ್ಲಭ |
ಕರುಣಾಕರ ರಂಗ ಪುರಂದರವಿಠಲನೆ |
ಪರಮಪ್ರಿಯನು ಇವನೇ ಹರಿದಾಸನು ಕಾಣೊ ೫
ಜೊತೆ
ಜ್ಞಾನ ಭಕ್ತಿ ವೈರಾಗ್ಯ ನೀನು ಪಡೆಯೋ ಮನವೇ |
ಶ್ರೀನಿಧಿ ಪುರಂದರವಿಠಲನ ದಯೆಯಿಂದ ||

೧೬೦
ಸುಳಾದಿ
ಕೃಷ್ಣ ಮಹಿಮಾಸುಳಾದಿ
ಧ್ರುವತಾಳ
ರತಿ ಪತಿ ಪಿತನೆಂತೆಂಬ ಚೆಲುವ ನೀನುಳಿದು |
ಕ್ಷಿತಿಯಲಿ ವರಾಹರೂಪ ಧರಿಸುವರೇನೊ ಹರಿಯೆ |
ಸಿರಿ-ಭೂದೇವಿಯರು ಸತಿಯರಾಗಿರಲು |
ಅಡವಿಯೊಡಾಳುವ(ಅಡವಿಯೊಳಾಡುವ)
ಕರಡಿಯಮಗಳನುಮೆಚ್ಚುವರೆ?|
ಪುರಾಣ ಪುರಷೋತ್ತಮನೆ ನೀನಮೃತಕೆ |
ನಾರಾಯಣಿಯಾಗಿ ವೋಹಿಪರೆ? |
ಜಗಕಾಶ್ಚರ್ಯ ಚಾರಿತ್ರ್ಯವುಂಟೆ, ಎಲೆ ದೇವ |
ಪುರಂದರವಿಠಲ ದೇವರ ದೇವ |
ಶರಣಾಭರಣವೆ ನಿನಗೆ ನಾನು ನಮೋ ಎಂಬೆ ೧
ಮಟ್ಟಿತಾಳ
ಜ್ಞಾನ ಭಕುತಿ ಏನು ಇಲ್ಲದ ಹೀನನಾದ ಕರಣ |
ನಾನು ನನ್ನದೆಂಬ ಹಮ್ಮು ಮಮತೆಗಳು |
ಏನ ಮಾಡಲು ಬೆನ್ನ ಬಿಡವು ||
ನೀನೇ ಸ್ವತ್ವಂತ್ರನು ನಿನ್ನ ದಾಸನು ನಾನು |
ಎನಿಸೆನು ಪುರಂದರವಿಠಲ ೨
ತ್ರಿವಿಡೆತಾಳ
(ಆ)ನಾನೊಬ್ಬನೆ ನಿನ್ನ ದಾಸನಾದೆನು ದೇವ |
ನೀನೊಬ್ಬನೆ ಎನ್ನ ಸ್ವಾಮಿಯಾದೆಯೊ ದೇವ |
ಏನೆಂದಾಡುವೆ ಅಳವಡುವೆ ಪಾಡುವೆ |
ದೀನನೆನ್ನುತ ಕಾಯೊ ಹೊದ್ದಿದೆನು ನಿನ್ನ |
ಮಾಣೊ ಛಲವ ಪುರಂದರವಿಠಲ ೩
ಅಟತಾಳ
ಬಿಲ್ಲು ಮುರಿಯೊ ದನುಜರ ಹೊಯ್ಯೊ, ಕೃಷ್ಣ |
ಮಲ್ಲ ಬಂದನು ಕಾಣೊ ಮಧುರಿಗೆ |
ಹುಲ್ಲ ಮಲ್ಲರ ತಿವಿಯೊ |
ಖುಲ್ಲ ಮಾನವರ ಕೊಲ್ಲೊ, ರಂಗ |
ಮಲ್ಲ ಬಂದನು ಕಾಣೊ ಮಧುರಿಗೆ |
ಬಲ್ಲಿದ ನಮ್ಮ ಪುರಂದರವಿಠಲ |
ಬಲ್ಲಿದ ಕಾಣೊ, ಊರ್ಜಿತ ಕಾಣೊ ಮಲ್ಲ ಕೃಷ್ಣ ೪
ಏಕತಾಳ
ಗಜವನಟ್ಟಿ ರಜಕರನ ಮುರಿದೊಟ್ಟಿ |
ಮಾವನ ಮು(ಮ)ಡಿಯುಟ್ಟು ಕುಬುಜೆ ತಂದ ದಿವ್ಯ |
ಗಂಧವ ಪೂಸಿ (ಮಾವನಮುಡಿ ಉಟ್ಟು) ದಾಮುಸುದಾಮರ
ಪೂಗಳ ಮುಡಿದು |
ಮಾವನ ಮಡುಹಿದೆ ಪುರಂದರವಿಠಲ |
ಬಿಡದೆ ಎನ್ನ ಮನದಲಿ ೫
ಜತೆ
ಜ್ಞಾನಂ ದೇಹಿ ಭಕುತೆ ವಿರಕುತಿ-ಅ- |
ನ್ಯೂನಂ ದೇಹಿ ಪುರಂದರವಿಠಲ ||

೧೧೩
ಸುಳಾದಿ
ಕ್ಷೇತ್ರಸುಳಾದಿ
ಧ್ರುವತಾಳ
ವರಗಿರಿಯಿಂದ ತಿಮ್ಮಪ್ಪ ಬಂದ ಹಸ್ತಿ |
ಗಿರಿಯಿಂದ ವರದರಾಜ ಬಂದ ಯದು |
ಗಿರಿ ಶ್ರೀ ನಾರಾಯಣ ಬಂದ ಕಾವೇರಿ |
ಶ್ರೀ ರಂಗನಾಥ ಬಂದ ಶ್ರೀಮುಷ್ಣದಿಂದ ಶ್ವೇತ |
ವರಾಹ ಬಂದ ಪಂಢರಪುರದಿಂದ ಎನ್ನ ಮನೆಗೆ ಮನ್ನಿಸಿ |
ಪುರಂದರವಿಠಲರಾಯ ಬಂದ | ೧
ಮಟ್ಟತಾಳ
ಬದರಿಕಾಶ್ರಮದಿಂದ ಬಾದರಾಯಣ ಬಂದ |
ಕಿಂ ಪುರುಷಖಂಡದಿಂದ ಹನುಮನೊಡೆಯ ರಾಮ |
ಚಂದ್ರ ಬಂದ ಕ್ಷೀರವಾರಿಧಿಯಿಂದ ಶ್ರೀಮಂತ ಪು |
ರಂದರ ವಿಠಲರಾಯಬಂದ ೨
ತ್ರಿವಿಡೆತಾಳ
ಶ್ರೀಮದನನಂತ ಶಯನದಿಂದ |
ಶ್ರೀಮದನಂತಶಯನ ಬಂದ |
ಶ್ರೀಮಧ್ವಾಚಾರ್ಯರ ಮನೆದೈವ |
ಶ್ರೀಮದ್ದ್ವ್ವಾರಾವತಿಯಿಂದ ಬಂದ |
ಶ್ರೀಮದುಡುಪಿ ಕೃಷ್ಣರಾಯ ಬಂದ |
ಶ್ರೀಪತಿಪುರಂದರ ವಿಠಲರಾಯ ಬಂದ ೩
ಅಟ್ಟತಾಳ
ಪ್ರಯಾಗ ಮಾದವ ಕಾ-|
ಶಿಯಾದಿಕೇಶವ ಕ್ಲೇಶನಾಶನ ಬಂದ |
ಗಯಾ ಗದಾಧರ ದಾಸರಿಗೊಲಿದು
ಪುರಂದರವಿಠಲರಾಯ ಬಂದ ೪
ಆದಿತಾಳ
ಅತಳವಿತಳದಿಂದ ಸುತಳ ತಳಾತಳ ರ-|
ಸಾತಳ ಮಹಾತಳ ಪಾತಳದಿಂದ |
ಭೂತಳ ನಭಸ್ಥಳದಿಂದಾನು ವಿಜನ ಮಹರ್ಲೋಕ |
ಸತ್ಯಲೋಕದಿಂದ ಪರಮಪದವೀವ ಪರಿಪೂರ್ಣ |
ಪುರಂದರವಿಠಲರಾಯ ಬಂದ ೫
ಜತೆ
ಲೋಕಸಂರಕ್ಷಣ ಅಸುರರ ಸಂಹರಣ |
ಲೋಕೇಶ ಪುರಂದರವಿಠಲರಾಯ ಬಂದ ||

೧೧೨
ಸುಳಾದಿ
ಕ್ಷೇತ್ರ ಸುಳಾದಿ
ಧ್ರುವತಾಳ
ವರಗಿರಿಯಿಂದ ತಿಮ್ಮಯ್ಯ ಬಂದ |
ಸಿಂಹಗಿರಿಯಿಂದ ನರಸಿಂಹ ಬಂದ |
ಹಸ್ತಿಗಿರಿಯಿಂದ ವರದರಾಜನು ಬಂದ |
ಯದುಗಿರಿಯಿಂದ ನಾರಾಯಣ ಬಂದ |
ಕಾವೇರಿಯಿಂದ ರಂಗನಾಥನು ಬಂದ |
ಪುರುಷೋತ್ತಮದಿಂದ ಜಗನ್ನಾಥ ಬಂದ |
ಪಾಂಡುರಂಗದಿಂದ ಎನ್ನ ಮನ್ನಿಸಿ |
ಮನೆಗೆ ಪುರಂದರ ವಿಠಲರಾಯ ಬಂದ ೧
ಮಟ್ಟತಾಳ
ಬದರಿಕಾಶ್ರಮದಿಂದ ಬಾದರಾಯಣ ಬಂದ |
ಕಿಂಪುರಕ್ಷಖಂಡದಿಂದ ಹನುಮನೊಡೆಯ
ರಾಮಚಂದ್ರ ಬಂದ |
ಕ್ಷೀರವಾರಿಧಿವಾಸಿ ಪುರಂದರವಿಠಲರಾಯ ಬಂದ ೨
ತ್ರಿವಿಡಿತಾಳ
ಶ್ರೀಮದನಂತಶಯನದಿಂದ ಶ್ರೀಮದನಂತ ಪದ್ಮನಾಭ ಬಂದ |
ಶ್ರೀಮದಾಚಾರ್ಯರಿಗೊಲಿದ ಶ್ರೀಮದುಡುಪಿಯ ಕೃಷ್ಣ ಬಂದ |
ಶ್ರೀಮದ್ವಾರಣಾಸಿಯಿಂದ ಶ್ರೀಮಹಾವಿಷ್ಣುವೇ ಬಂದ |
ಅಹಾ ಅಹಾ ಪುರಂದರವಿಠಲನೇ ಮನೆಗೆ ಬಂದ ೩
ಅಟ್ಟತಾಳ
ಪ್ರಯಾಗದಿಂದ ಪ್ರಯಾಗಮಾಧವ ಬಂದ
ಗಯೆಯಿಂದ ಗದಾಧರ ಬಂದ
ಆಯಾಸವಿಲ್ಲದೆ ಆದಿಕೇಶವ ಬಂದ |
ಕೈವಲ್ಯ ಪುರಂದರ ವಿಠಲ ಮನೆಗೆ ಬಂದ ೪
ಆದಿತಾಳ
ಅತಳ ವಿತಳ ಸುತಳ ಮಹಾತಾಳ |
ತಳಾತಳ ರಸಾತಳ ಪಾತಾಳದಿಂದ |
ಭೂಭುವಸ್ವಃ ಮಹಾಜನ ತಪಃಸತ್ಯ ಲೋಕದಿಂದ |
ಪರಮಪದವೀವ ಪರಿಪೂರ್ಣ ಪರಬ್ರಹ್ಮ |
ಪುರಂದರವಿಠಲ ಬಂದ ೫
ಝಂಪೆತಾಳ
ಮೇಲುಗಿರಿಯಿಂದ ಮಹಾಲಕ್ಷ್ಮೀವರನು ಬಂದ |
ಆಲುಮೇಲು ಮಂಗದಿಂದ ಭೂರಮಣ ಬಂದ |
ಕಾಲಿಂದಿಯಿಂದ ಕಾಳಿಂಗಮರ್ದನ ಬಂದ |
ಲೀಲಾವಿನೋದಿ ಪುರಂದರವಿಠಲ ಬಂದ ೬
ಜತೆ
ಲೋಕ ಸಂರಕ್ಷಕ ಅಸುರ ಸಂಹಾರಕ |
ಲೋಕೇಶ ಪುರಂದರವಿಠಲ ಬಂದ ||

೨೯೪
ಸುಳಾದಿ
ತಿರುವೆಂಗಳ ಸುಳಾದಿ
ಧ್ರುವ ತಾಳ
ವರಮಣಿಗಳ ಕೆತ್ತಿಸಿದ ಮುಕುಟದ ಚಾರು |
ತಿರುಮಲಗಿರಿಯ ತಿಮ್ಮರಾಯನ ಕಂಡೆನಾ |
ಪರೆಯ ನೊಸಲ ತಿಲಕದ ದಿವ್ಯ ಮಧುಕರ |
ಕರುಳು ಭ್ರೂಲತೆಯ ಶ್ರೀಕಾರದ ಕರ್ಣಯುಗಳ |
ಅರಳಿದ ಅರುಣ ಕಮಲದ ಅರಳನಯನದ |
ವರದಂತ ಪಂಕ್ತಿಯೆಸೆವ ಅಧರ ಚುಬುಕಾಗ್ರ |
ಸ್ಫುರಿತ ಕಂಬು ಕಂಠ ತ್ರಿರೇಖೆ ಚತುರ್ಭುಜ |
ಅರಶಂಖಕಟಿ ಶೊಭಾಭಯ ಹಸ್ತವ ಕಂಡೆ |
ತರಣಿಯನಂತ ಕಿರಣ ಜಾನುಜಂಘೆಯ |
ಕಿರುಗೆಜ್ಜೆ ಎರಡು ಪಾದಾಂಗುಳಿಯ ನಖದ |
ವರ ವಜ್ರಾಂಕುಶ ಧ್ವಜರೇಖೆಯಿಂದೊಪ್ಪುವ |
ಚರಣ ಮಾಂದಳಿರ ಕಂಡೆ ಒಲವಿಂದ |
ಪರಮ ಪುರುಷ ಗುಣಾತ್ಮ ನೀಲಮೇಘ ಶ್ಯಾಮ |
ಸಿರಿಯರಸು ಪುರಂದರ ವಿಠಲ ರಾಯನ ಕಂಡೆ | ೧
ಮಟ್ಟತಾಳ
ಅಂದುಗೆ ಕಡೆಯ ಪೆಂಡೆಯವು ಮೆರೆವ |
ಹೊಂದಿದ ಕಾಂಚೀಧಾಮವ ಕಂಡೆ ನಾ |
ಕಂಡು ಪೇಳಲೇನು ಜಾಂಬುನದ ಸಟ |
ಪೊಂದಿದ ಚಿನ್ನದ ಸೂತ್ರವ ಕಂಡೆ ನಾ |
ಕುಂದದೆ ಹೊಳೆವ ಕೌಸ್ತುಭ ವೈಜಯಂತಿಯನ್ನು ಕಂಡೆ ನಾ |
ಇಂದು ವಿನಂದದಿ ಮೆರೆವ ಕುಂಡಲ |
ಬಂಧುರ ಮಹಿಮ ಭಾವುರಿ ಕೀರ್ತಿಯಾ-|
ನಂದದಿ ನಿರುಪಮ ತಿರುವೆಂಗಳಪ್ಪ ಪು-
ರಂದರ ವಿಠಲ ರಾಯನ ಕಂಡೆ ನಾ ೨
ತ್ರಿವಿಡೆತಾಳ
ತಮನ ಕೊಂದವನೀತ ಮಂದರೋದ್ಧರನೀತ |
ಭೂಮಿಯ ನೆಗಹಿ ತಂದವನೀತ |
ಕುಮತಿ ರಕ್ಕಸರನು ಸೀಳೆ ಬಲಿಯ ಬೇಡಿದ ನೀತ |
ಜಮದಗ್ನಿ ಭವ ಪರಶುನಾಥನೀತ |
ಸುಮನಸೇಂದ್ರನ ತನೂಭವ ಸಖನೀತ |
ಚಮತ್ರ‍ಕತಿಯಿಂದ ಮೂರೂರು ಗೆಲಿದನೀತ |
ಅಮಲ ಕಲ್ಕಿ ಮೊದಲಾದ ಅನಂತಾವತಾರ ನೀತ |
ಕಮಲೇಶ ಪುರಂದರ ವಿಠಲ ನೀತ | ೩
ಅಟ್ಟತಾಳ
ಮಡುವಿನೊಳಗೆ ಗಜರಾಜ ಕಾಯ್ದನೀತ |
ಮಡದಿ ದ್ರೌಪದಿಯಭಿಮಾನ ರಕ್ಷಕನೀತ |
ಮಿಡುಕುವಜಾಮಿಳನ ಪಾಶ ಪರಿಹರಿಸಿ |
ಕಡು ಮೆಚ್ಚಿ ಧ್ರುವಗೆ ಉನ್ನತ ಪದವಿತ್ತನೀತ |
ಕಡಲಶಯನ ನೀತ ಕರುಣಾಂಬುಧಿಯೀತ |
ಸಡಗರದ ಪುರಂದರ ವಿಠಲ ನೀತ | ೪
ಆದಿತಾಳ
ಶರಣು ಸಕಲ ಜಗತ್ಪಾಲಕ ದೇವ |
ಶರಣು ವಿರಿಂಚ್ಯಾದಿ ವಂದಿತ ಪಾದ |
ಶರಣು ಮುನಿ ಹೃತ್ಕುಮುದ ಚಂದ್ರ |
ಪರಿಪೂರ್ಣ ಗುಣ ನಿಧಿ ಪರಮಾನಂದ |
ಪುರಂದರ ವಿಠಲ ಪೂರ್ಣಕಾಮ ೫
ಜತೆ
ಸಿರಿಗಿದೆ ವೈಕುಂಠವೆಂದು ತೋರುವ ಹಸ್ತ |
ತಿರುವೆಂಗಳಪ್ಪ ಶ್ರೀ ಪುರಂದರ ವಿಠಲ ||

೧೧೮
ಸುಳಾದಿ
ಶರಣು ಸುಳಾದಿ
ಧ್ರುವತಾಳ
ವಿಶ್ವನೆನಿಸಿ ವಿಶ್ವಜಾಗರವ ಪ್ರೇರಿಸುವೆ ದೇವ |
ತೈಜಸನೆನಿಸಿ ಲೋಕದ ಸ್ವಾಪನವ ಸೃಜಿಸುವೆ ದೇವ |
ಪ್ರಾಜ್ಞನೆನಿಸಿ ಜನರಿಗೆ ಸುಬುದ್ಧಿಯನೀವೆ |
ತುರೀಯನೆನಿಸಿ ಚೇತರಿಗೆ ಪರಗತಿಯ ನೀವೆ |
ಆತುಮ ಅಂತರಾತುಮನೆನಿಸಿ ನೀನೆ
ಶುಭಸಾರವ ಭೋಗಿಪೆ ದೇವ ||
ಅನಿರುದ್ಧನೆನಿಸಿ ಲೋಕವನಾದಿಯಲೆ ಸೃಜಿಸುವೆ ದೇವ |
ಪ್ರದ್ಯಾಮ್ನ ನೆನಿಸಿ ಲೋಕವನವರತ ಪಾಲಿಸುವೆ ದೇವ |
ಸಂಕರುಷಣನೆನಿಸಿ ಲೋಕವ ನಿನ್ನೊಳಗಿಡುವೆ |
ವಾಸುದೇವನೆನಿಸೆ ಕೈವಲ್ಯವ ನೀವೆ |
ಸರ್ವವ್ಯಾಪಾರಕೆ ಕಾರಣ ನೀನೆಯಲಾ ಪುರಂದರವಿಠಲ
ವಿಭುವೆ ದೇವ ೧
ಮಟ್ಟತಾಳ
ಒಂದೊಂದವತಾರದೊಳನಂತ ಮಹಿಮೆ |
ಒಂದೊದವಯವದೊಳನಂತ ಮಹಿಮೆ |
ಒಂದೊಂದು ರೋಮಾದಿಗಳಲಿ ಅಜಭವಾದಿ ಕಾರ್ಯ |
ಪುರಂದರವಿಠಲ ನೀನೆ ಸಮರ್ಥ ೨
ಆದಿತಾಳ
ಉಗುರು ಬೊಮ್ಮಾಂಡದ ಖರ್ಪರವನೊಡೆಯಿತು |
ಉಂಗುಟವು ದುರ್ಯೋಧನನ ಕೆಡಹಿತು |
ಪಾದ ಶÀಕಟನ ನುಗ್ಗೊತ್ತಿತು |
ಬಾಹು ಕೇಶಿಯನೆತ್ತಿ ಕೆಡಹಿ ಬೀಸಾಡಿತು |
ದೃಷ್ಟಿ ಕುರುಸೈನ್ಯವ ಅಸುಗುಂದಿಸಿತು |
ಜಗಜಟ್ಟಿ ಪುರಂದರವಿಠಲಗಿದಿರುಂಟೆ ೩
ಅಟತಾಳ
ರಂಗನ ಚರಣಗಳನ್ನು ಹಿಂಗದೆ ನೀ ನೆನೆ ಮನವೆ |
ಗಂಗಾ ಜನಕನ ಶರಣರ ಸಂಗದೊಳಿರಿಸೆಲೆ ಮನವೆ |
ಹಿಂಗದೆ ಹಿಂಗದೆ ಹಿಗ್ಗುವವನ ನಂಬು ಪಾಂಡುರಂಗ
ಪುರಂದರವಿಠಲನ-ಹಿಂಗದೆ ೪|
ಝಂಪೆತಾಳ
ಸಂಸಾರಸಾಗರದ ತಡಿಗಳ ತೆರೆಗಳ |
ಏಳುತ ಮುಳುಗುತಲೈದೇನೆ ದೇವ |
ಕಡೆಗೈದುವೆನೆಂದು ಆಡುತ ಪಾಡುತಲೈದೇನೊ ದೇವ |
ಪುರಂದರವಿಠಲನಾಮದಿ ಲೋಲಾಡುತ
ಪಾಡುತ ಲೈದೇನೋ ದೇವ ೫
ಜತೆ
ನಮೋ ನಮೋ ನಾರಾಯಣ ನಾರಾಯಣ |
ತ್ವಮೇವ ಶರಣಂ ಪುರಂದರವಿಠಲ ||


ಗುರುಸ್ತೋತ್ರ
ಸುಳಾದಿ
ಧ್ರುವತಾಳ
ವ್ಯಾಸರಾಯರ ಚರಣ ಕಮಲ ದರ್ಶನವೆನ-
ಗೇಸು ಜನ್ಮದ ಸುಕೃತ ಫಲದಿ ದೊರಕಿತೊ, ಎನ್ನ
ಸಾಸಿರ ಕುಲಕೋಟಿ ಪಾವನವಾಯಿತು-
ಶ್ರೀಶನ ಭಜಿಸುವುದಕಧಿಕಾರಿ ನಾನಾದೆ
ದೋಷರಹಿತನಾದ ಪುರಂದರವಿಠಲನ
ದಾಸರ ಕರುಣವು ಎನ್ನ ಮೇಲೆ ಇರಲಾಗಿ ೧
ಮಟ್ಟತಾಳ
ಗುರು ಉಪದೇಶವಿಲ್ಲದ ಜ್ಞಾನವು
ಗುರು ಉಪದೇಶವಿಲ್ಲದ ಸ್ನಾನವು
ಗುರು ಉಪದೇಶವಿಲ್ಲದ ಧ್ಯಾನವು
ಗುರು ಉಪದೇಶವಿಲ್ಲದ ಜಪವು
ಗುರು ಉಪದೇಶವಿಲ್ಲದ ತಪವು
ಗುರು ಉಪದೇಶವಿಲ್ಲದ ಮಂತ್ರ
ಗುರು ಉಪದೇಶವಿಲ್ಲದ ತಂತ್ರ
ಉರಗನ ಉಪವಾಸದಂತೆ ಕಾಣಿರೋ,
ಗುರು ವ್ಯಾಸರಾಯರೆ ಕರುಣದಿಂದಲಿ ಎನಗೆ
ಪುರಂದರ ವಿಠಲನೇ ಪರನೆಂದರುಹಿ
ದುರಿತಭಯವನೆಲ್ಲ ಪರಿಹರಿಸಿದರಾಗಿ
ವರ ಮಹಾಮಂತ್ರ ಉಪದೇಶಿಸಿದರಾಗಿ ೨
ರೂಪಕ ತಾಳ
ಅಂಕಿತವಿಲ್ಲದ ದೇಹ ನಿಷೇಧ
ಅಂಕಿತವಿಲ್ಲದ ಕಾವ್ಯ ಶೋಭಿಸದು
ಅಂಕಿತವಿಲ್ಲದೆ ಇರಬಾರದೆಂದು ಚ-
ಕ್ರಾಂಕಿತವನು ಮಾಡಿ ಎನ್ನಂಗಕೆ –
ಪಂಕಜ ನಾಭ ಶ್ರೀ ಪುರಂದರ ವಿಠಲನ
ಅಂಕಿತವೆನಗಿತ್ತ ಗುರವ್ಯಾಸ ಮುನಿ ರಾಯ ೩
ಝಂಪೆ ತಾಳ
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ
ನ್ಯಾಯ ಗ್ರಂಥವ ರಚಿಸಿ ತನ್ನ ಭಕ್ತರಿಗಿತ್ತು
ಮಾಯಾವಾದಿ ಮೊದಲಾದಿಪ್ಪತ್ತೊಂದು ಕುಭಾಷ್ಯರ
ಬಾಯ ಮುದ್ರಿಸಿದೆ ಮಧ್ವರಾಯ ಕರುಣದಿಂದ
ಶ್ರೀಯರಸ ಪುರಂದರ ವಿಠಲನ ದಾಸರೊಳು
ನಾಯಕನೆಂದೆನಿಸಿದೆ ಗುರುವ್ಯಾಸ ಮುನಿರಾಯ ೪
ತ್ರಿವಿಡ ತಾಳ
ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ
ವ್ಯಾಸರಾಯನೆಂಬ ಪೆಸರು ನಿನಗೆಂದಂತೆ
ದೇಶಾಧಿಪಗೆ ಬಂದ ಕುಹುಯೋಗವನು ನೂಕಿ-
ನೀ ಸಿಂಹಾಸನವೇರಿ ಮೆರೆದೆ ಜಗವರಿಯೆ:
ವ್ಯಾಸಾಬ್ಧಿಯನು ಬಲಿಸಿ ಕಾಶೀದೇಶದೊಳೆಲ್ಲ
ಭಾಸುರ ಕೀರ್ತಿಯನು ಪಡೆದೆ ನೀ ಗುರು ರಾಯ
ವಾಸುದೇವ ಪುರಂದರ ವಿಠಲನ ದಾಸರೊಳು
ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ೫
ಧ್ರುವ ತಾಳ
ಸಿರಿ ನಾರಾಯಣ ಯೋಗಿ ಶ್ರೀ ಪಾದರಾಯರಲ್ಲಿ
ವರವಿದ್ಯಾಭ್ಯಾಸವ ಮಾಡಿದೆ ನೀನು
ಧರೆಯೊಳು ವಿಜಯೀಂದ್ರ-ವಾದಿರಾಜರೆಂಬ
ಪರಮಶಿಷ್ಯರ ಪಡೆದು ಮೆರೆದ ಕೀರುತಿಯ:
ಸುರೇಂದ್ರರು ಪುತ್ರ ಭಿಕ್ಷೆ ಬೇಡೆ ವಿಜಯೀಂದ್ರನ
ಕರುಣಿಸಿ ಮಠವನುದ್ಧರಿಸಿದ ಕಾರಣ
ಗುರುವ್ಯಾಸರಾಯರೆ ಪರಮ ಗುರುಗಳು
ಪುರಂದರ ವಿಠಲ ಪರದೈವ ಜಗಕೆ ಕಾಣಿರೊ ೬
ತ್ರಿವಿಡಿ ತಾಳ
ವರಮಧ್ವಮತವೆಂಬ ಸಾಗರದೊಳು ಅವ-
ತರಿಸಿದೆ ಪೂರ್ಣ ಚಂದ್ರಮನಂತೆ ನೀನು
ದರೆಯೊಳು ಬ್ರಹ್ಮಣ್ಯರ ಕುವರನೆಂದೆನಿಸಿದೆ ನೀನು
ಪುರಂದರ ವಿಠಲನ ಕರುಣವ ಪಡೆದೆ
ಕರುಣಾಕರನವ ಪರನೆಂದು ಅರುಹಲು
ದುರಿತಗಳೆಲ್ಲವ ಪರಿಹರಿಸಿಕೊಂಡೆ ನಾನು ೭
ಅಟ್ಟ ತಾಳ
ಈಸು ಮುನಿಗಳಿದ್ದರೇನ ಮಾಡಿದರಯ್ಯ
ವ್ಯಾಸರಾಯ ಮಧ್ವಮತವನುದ್ಧರಿಸಿದ
ಕಾಶೀ ಗದಾಧರ ಮಿಶ್ರನ ಸೋಲಿಸಿ
ದಾಸನ್ನ ಮಾಡಿಕೊಂಡ ಧಾರುಣಿಯೊಳಗೆ
ಕಾಶೀ ಮಿಶ್ರ ಪಕ್ಷದರ ವಾಜಪೇಯ ನಾ-
ರಸಿಂಹ ಲಿಂಗಣ್ಣ ಮಿಶ್ರ ಮೊದಲಾದ ವಿ-
ದ್ವಾಂಸರು ನೂರೆಂಟು ಮಂದಿ ಬರಲು
ಜೈಸಿದೆ ಜಯಪತ್ರವ ಕೊಂಡು ಮೆರೆದೆ-
ವಾಸುದೇವ ಗೋಪಾಲ ಕೃಷ್ಣನಿಗೆ ವಿ-
ಭೂಷಣವನು ಮಾಡಿ ಹಾಕಿಸಿದೆ-
ಶ್ರೀಶ ಶ್ರೀ ಪುರಂದರ ವಿಠಲರಾಯನನು
ಈಶ ಬೊಮ್ಮ ಇಂದ್ರಾದಿಗಳಿಗೆ
ಈಶನೆಂದು ಡಂಗುರ ಪೊಯಿಸಿ ಮೆರೆದೆ ಜಗವರಿಯೆ
ದಾಸರೊಳು ನೀ ಸಮರ್ಥನು ಸಂನ್ಯಾಸಿ ಶಿರೋಮಣಿ ೮
ಆದಿ ತಾಳ
ಮಾನಸ ಪೂಜೆಯನ್ನು ನೀ ಮಾಡೆ
ದಾನವಾಂತಕ ರಂಗನು ಮೆಚ್ಚಿ
ತಾನೆ ಬಂದ ಗೋಪಾಲ ಕೃಷ್ಣ
ಜ್ಞಾನಿಗಳರಸನೆ ಗುರು ವ್ಯಾಸರಾಯ
ಏನೆಂಬೆನು ನಿನ್ನ ಮಹಿಮೆಯನು
ಶ್ರೀನಿವಾಸ ಪುರಂದರ ವಿಠಲನ
ಗಾನವ ಮಾಡುತ ಆಡುತ ಪಾಡುತ
ಏನೆಂಬೆ ನಿಮ್ಮ ಮಹಿಮೆಯನಾವ ಬಲ್ಲನು? ೯
ಜತೆ
ಗುರ ವ್ಯಾಸರಾಯ ಚರಣವೆನಗೆ ಗತಿ
ಪುರಂದರ ವಿಠಲನ ಅರಿತೆ ಇವರಿಂದ

೧೯೬
ಉಗಾಭೋಗ
ಶತ್ರುವಾಗಲಿ ಚೋರ -ಚಾಂಡಾಲನಾಗಲಿ
ಪಿತೃ ಘಾತಕಿಯಾಗಲಿ ಪ್ರೀತಿಮಾಡಲು ಬೇಕು
ಅತಿಥಿಯಾಗಿ ಮಧ್ಯಾಹ್ನ ಕಾಲದಿÀ ಅವ ಬಂದು ಉಂಡರೆ
ಸ್ವರ್ಗವೀವ ಪುರಂದರವಿಠಲ
ವೈಕುಂಠವನೀವ.

೨೮೯
ಸುಳಾದಿ
ಧ್ರುವ ತಾಳ
ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ |
ಶಿವನೆ ಅಶ್ವತ್ಥಾಮ ಕಾಣಿರೊ |
ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ |
ಶಿವನಾದಿಯಲ್ಲಿ ಬೊಮ್ಮನ ಸುತ |
ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ |
ಪುರಂದರವಿಠಲನೊಬ್ಬನೆ ಅಜಾತನಾಗಿಯೂ
ಜಾತನಾಗಿ ಇರುತಿಪ್ಪ ೧
ಮಟ್ಟತಾಳ
ಹರಿಶಂಕರರೊಳಗೆ ಉತ್ತಮರಾರೆಂದು |
ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ |
ಸರಸಿಜ ಸಂಭವ ಸುರಪತಿಯಾದಿ ಸುರರು |
ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು |
ಹರಿ ಸಾರಂಗವನೆತ್ತಿದ ಏರಿಸಿದ ಶಂ-
ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ |
ಹರಿಯಾಡಿಸಲಾಡುವರಜ ಭವಾದಿಗಳು
ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ೨
ರೂಪಕತಾಳ
ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು |
ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ |
ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು |
ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು | ೩
ಅಟ್ಟತಾಳ
ಬಾಣಾಸುರನ ಭಕುತಿಗೊಲಿದು ಬಂದು |
ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು |
ಬಾಹು ಸಹಸ್ರವ ಕಡಿಯುವಾಗ |
ಬೇಕು ಬೇಡೊಂದೊಮ್ಮೆ ಎಂದನೆ ಶಿವನು |
ಪುರಂದರವಿಠಲ ಪರದೈವವೆಂದರಿತ ಕಾರಣ |
ಒಪ್ಪಿಸಿಯೇ ಕೊಟ್ಟಾ ಶಿವನು ೪
ತ್ರಿವುಡೆತಾಳ
ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ |
ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ |
ವಿಷ್ಣು ಪುರಂದರವಿಠಲ ರಾಯನ
ಅತ್ಯಧಿಕ ಪ್ರಿಯನು ಉಮೇಶನು ೫
ಝಂಪೆತಾಳ
ರಾಮ ವಿಶ್ವರೂಪವ ಕಂಡು ಶಂಕರ |
ರಾಮನೇ ಪರದೈವ ರಾಮನೇ ಪರದೈವ |
ರಾಮನೆ ಎಂದು ಸ್ತುತಿಸಿದ ಕಾರಣ |
ರಾಮನೇ ಪರದೈವ ರಾಮಚಂದ್ರ ಸಿರಿ ಪುರಂದರವಿಠಲ ೬
ಏಕತಾಳ
ಮಣಿಕರ್ಣಿಕೆ ತೀರಥದಲ್ಲಿ ಮುಮುಕ್ಷುಗಳಿಗೆ ಉಪದೇಶಿಸುವ |
ತಾರಕ ಬ್ರಹ್ಮ ಸ್ವರೂಪ ಆ ರಾಮನೆ ಕಾಣಿರೊ |
ರಾಮನಾಮ ಮಂತ್ರವ ಪುರಂದರ ವಿಠಲರಾಯಗೆ |
ಬಲ್ಲರಿಯ ಸದಾಶಿವ ೭
ಜತೆ
ಜಗಕೆ ಶ್ರೀ ಅಜಭವಾದಿಗಳು ಗುರುಗಳು |
ಜಗಕೆ ಶ್ರೀ ಪುರಂದರ ವಿಠಲನೆ ದೈವ ||