Categories
e-ದಿನ

ಮೇ-22

 

ಪ್ರಮುಖಘಟನಾವಳಿಗಳು:

1570: 70 ನಕ್ಷೆಗಳೊಂದಿಗೆ ಅಬ್ರಹಾಂ ಓರ್ಟೇಲಿಯಸ್ ಮೊದಲ ಅಟ್ಲಾಸ್ ಪ್ರಕಟಿಸಿದರು.ಇದು (ಥಿಯಟ್ರಮ್ ಆರ್ಬಿಸ್ ಟೆರಾರಮ್) ಥಿಯೇಟರ್ ಆಫ್ ದಿ ವರ್ಲ್ಡ್ ಪ್ರಕಟಣೆಯಾಯಿತು.

1761: ಮೊದಲ ಜೀವವಿಮಾ ಪಾಲಿಸಿಯನ್ನು ಉತ್ತರ ಅಮೇರಿಕಾದ ಫಿಲಾಡೆಲ್ಫಿಯದಲ್ಲಿ ಕೊಡಲಾಗಿತ್ತು.

1799: ಫ್ರಾನ್ಸ್ ದೇಶದ ಮಹಾರಾಜ ನಪೋಲಿಯನ್ ಯಾಹೂದಿಗಳಿಗೆ ಜೆರುಸಿಲಂ ಪರವಾಗಿಹೇಳಿಕೆ ನೀಡಿದರು.

1803: ಮೊದಲ ಸಾರ್ವಜನಿಕರ ಗ್ರಂಥಾಲಯ ಕಾರ್ಯಾರಂಭ ಮಾಡಿತು.

1807: ಮೊದಲ ಬಾರಿಗೆ ಹಣ್ಣಿನ ಸುವಾಸನೆಯ ಕಾರ್ಬೋನೇಟೆಡ್ ಪಾನೀಯವನ್ನು ಮಾರಾಟ ಮಾಡಲಾಗಿತ್ತು.

1849: ಅಮೇರಿಕಾದ ಅಧ್ಯಕ್ಷ ಅಬ್ರಹಾಮ್ ಲಿಂಕನ್ ಶೋಲ್ಸ್ ಮತ್ತು ಪ್ರತಿಬಂಧಕಗಳ ಮೇಲೆ ದೋಣಿ ಎತ್ತುವ ಸಾಧನಕ್ಕೆ ಪೇಟೆಂಟ್ ಪಡೆದರು.

1888: ಲೆರಾಯ್ ಬಫಿಂಗ್ಟನ್ ಗಗನ ಚುಂಬಿ ಕಟ್ಟಡಗಳನ್ನು ನಿರ್ಮಿಸಲು ಉಪಯೋಗಿಸುವ ಒಂದು ವ್ಯವಸ್ಥೆಯ ಪೇಟೆಂಟ್ ಪಡೆದರು.

1892: ಡಾ. ವಾಷಿಂಗ್ಟನ್ ಶೆಫ್ಫೀಲ್ಡ್ ಹಲ್ಲು ಉಜ್ಜಲು ಉಪಯೋಗಿಸುವ ಪೇಸ್ಟ್ ತುಂಬಿಸಲು ಉಪಯೋಗಿಸುವ ಟ್ಯೂಬ್ ತಯಾರಿಸಿದರು.

1900: ಎಡ್ವಿನ್ ಎಸ್ ವೋಟೆ ನ್ಯುಮಾಟಿಕ್ ಪಿಯಾನೋ ಪ್ಲೇಯರ್‌ಗೆ ಪೇಟೆಂಟ್ ಪಡೆದರು.

1905: ಡೆಲ್ಫ್ಟ್ ಹಾಲಾಂಡ್‌‌ನಲ್ಲಿದ್ದ ರಾಯಲ್ ಅಕಾಡೆಮಿಯು ತಾಂತ್ರಿಕ ಪ್ರೌಢಶಾಲೆಯಾಗಿ ಮಾರ್ಪಾಡಾಯಿತು.

1906: ರೈಟ್ ಬ್ರದರ್ಸ್ ವಿಮಾನದ ಪೇಟೆಂಟ್ ಪಡೆದರು.

1919: ಎ ಡೌಗ್ಲಾಸ್ ಪುರಾತನ ಮರದ ಮಾದರಿಗಳನ್ನು ಬಳಸಿ ಎರಡು ಪುರಾತತ್ವ ಶಾಸ್ತ್ರದ ಸೈಟ್‌ಗಳ ಸಂಭಂದಿತ ದಿನಾಂಕ-ಗಳನ್ನು ಗುರುತಿಸಿದರು.ಇದು ಮುಂದೆ ಒಂದು ಪ್ರಮುಖ ಹೆಜ್ಜೆಗುರುತಾಗಿ ಸ್ಥಾಪಿತಗೊಂಡಿತು.

1931: ಮೊಟ್ಟ ಮೊದಲ ಪೂರ್ವಸಿದ್ದಗೊಳಿಸಿದ್ದ ರಾಟೆಲ್ ಹಾವಿನ ಮಾಂಸ ಪ್ಲೋರಿಡಾದಲ್ಲಿ ಮಾರಾಟವಾಯಿತು.

1933: ಮೊದಲ ಬಾರಿ ವಿಶ್ವ ವಾಣಿಜ್ಯ ದಿನ/ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗಿತ್ತು.

1943: ಮೊದಲ ಬಾರಿಗೆ ಜೆಟ್ ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಯಿತು.

1946: ಅಂತರಿಕ್ಷದ ತುದಿಯನ್ನು ತಲುಪಿದ ಅಮೇರಿಕಾದ ಮೊದಲ ರಾಕೆಟ್ ಡಬ್ಲ್ಯೂ ಏ ಸಿ ಕಾರ್ಪಲ್‌ನನ್ನು ಹೊಸ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಕ್ಷಿಪಣಿ ಶ್ರೇಣಿಯಿಂದ ತೆಗೆದು ಹಾಕಲಾಯಿತು.

1947: ಅಮೇರಿಕಾದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತೆಗೆದು ಹಾಕಲಾಯಿತು.

1961: ಮೊದಲ ತಿರುಗುವ ಉಪಹಾರ ಗೃಹ ಸೀಯಟಲ್‌ನಲ್ಲಿ ಕಾರ್ಯಾರಂಭ ಮಾಡಿತು.

1962: ನೆದರ್ಲ್ಯಾಂಡ್ ದೂರವಾಣಿ ಜಾಲವು ಸಂಪೂರ್ಣವಾಗಿ ಸ್ವಯಂಚಾಲಿತವಾಗುತ್ತದೆ.

1962: ಕಾಂಟಿನೆಂಟಲ್ ವಿಮಾನ ಸಂಸ್ಥೆಯ ವಿಮಾನದಲ್ಲಿದ್ದ ಬಾಂಬ್ ಸಿಡಿದು ವಿಮಾನ ಕುಸಿದು ಬಿದ್ದಿತ್ತು.

1990: ಮೈಕ್ರೋಸಾಫ್ಟ್ ತನ್ನ ಹೊಸ ತಂತ್ರಾಂಶವಾಗಿ “ವಿಂಡೋಸ್ 3.0” ಬಿಡುಗಡೆಗೊಳಿಸಿತು.

1990: ಉತ್ತರ ಮತ್ತು ದಕ್ಷಿಣ ಯೆಮೆನ್ ಸೇರಿ ಯೆಮೆನ್ ಗಣ್ಯರಾಜ್ಯವಾಗಿ ಮಾರ್ಪಾಟಾಯಿತು.

1992: ಭಾರತವು ತನ್ನ “ಅಗ್ನಿ ರಾಕೆಟ್” ಅನ್ನು ಪರೀಕ್ಷಾರ್ಥ ಹಾರಿಸಿತು.

2002: ಕಳೆದು ಹೋಗಿದ್ದ “ಚಂದ್ರ ಲೇವಿ”ಯ ಉಳಿಕೆಗಳು ವಾಷಿಂಗ್ಟನ್ ಡಿ ಸಿಯ ರಾಕ್ ಕ್ರೀಕ್ ಪಾರ್ಕಿನಲ್ಲಿ ಪತ್ತೆಯಾಗುತ್ತದೆ.

2010: ಪಾಲಿಶ್ ಖಗೋಳಶಾಸ್ತ್ರಜ್ಞ ನಿಕೋಲಾಸ್ ಕಾಪರ್ನಿಕಸ್ ಅವರ ಉಳಿಕೆಗಳನ್ನು ಫ್ರೋಂಬಾರ್ಕ್ ಕ್ಯಾಥೆಡ್ರಲ್‌ನಲ್ಲಿ 200 ವರ್ಷಗಳ ನಂತರ ಮತ್ತೆ ಮರುಸಮಾಧಿ ಮಾಡಲಾಗಿತ್ತು.

ಪ್ರಮುಖಜನನ/ಮರಣ:

1927: ಪ್ರಸಿದ್ಧ ರಸಾಯನಶಾಸ್ತ್ರಜ್ಞ ಜಾರ್ಜ್ ಏ ಓಲ ಜನಿಸಿದರು.

1772:  ಭಾರತ ದೇಶದ ಸಮಾಜಸುಧಾರಕ ರಾಜಾರಾಮ್ ಮೋಹನ್ ರಾಯ್ ಜನಿಸಿದರು.

1987: ಸೈಬೀರಿಯಾದ ಟೆನ್ನಿಸ್ ಆಟಗಾರ ನೋವಾಕ್ ಡೋಕೋವಿಕ್ ಜನಿಸಿದರು.

 

Categories
e-ದಿನ

ಮೇ-21

ಪ್ರಮುಖಘಟನಾವಳಿಗಳು:

1502: ಪೋರ್ಚುಗೀಸ್ ಅಡ್ಮಿರಲ್ ಡಾ ನೋವಾ ಸೇಂಟ್ ಹೆಲೆನಾನನ್ನು ಕಂಡುಹಿಡಿದರು.

1792: ಜಪಾನಿನ ಶಿಮಬಾರ ಪೆನಿನ್ಸುಲಾದ ಮೌಂಟ್ ಉನ್ಜೆನ್ ಜ್ವಾಲಾಮುಖಿಯ ಸ್ಫೋಟದಿಂದ ಸುನಾಮಿಯಿಂದ 15,000 ಜನರು ಸತ್ತರು.

1819: ಅಮೇರಿಕಾದ ಮೊದಲ ಬೈಸಿಕಲ್ ನ್ಯೂಯಾರ್ಕಿನಲ್ಲಿ ಪರಿಚಯಿಸಲಾಗಿತ್ತು.

1846: ಮೊದಲ ಕಲ್ಲಿದ್ದಲಿನ ಇಂಧನದಲ್ಲಿ ಚಲಿಸುವ ಉಗಿ ಹಡಗು ಹವಾಯಿಗೆ ಆಗಮಿಸಿತ್ತು.

1864: ರಷ್ಯಾ ದೇಶವು ರಷ್ಯಾ ಮತ್ತು ಸರ್ಕಾಸಿಯನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಘೋಷಿಸುತ್ತದೆ.

1864 ಈ ದಿನವನ್ನು ಸರ್ಕಾಸಿಯನ್ಗಳ ಮೌರ್ನಿಂಗ್ ದಿನ ಎಂದು ಗುರುತಿಸಲಾಗುತ್ತದೆ.

1881: ಕ್ಲಾರಾ ಬಾರ್ಟನ್ ಅಮೇರಿಕಾದ “ರೆಡ್ ಕ್ರಾಸ್” ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

1881: ಅಮೇರಿಕಾದ ರಾಷ್ಟ್ರೀಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಆರಂಭವಾಯಿತು.

1904: ಪ್ಯಾರೀಸ್‌ನಲ್ಲಿ ಫೆಡರೇಷನ್ ಇಂಟರ್‌ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಷನ್ (ಫೀಫಾ) ರೂಪಗೊಂಡಿತು.

1906: ಲೂಯಿಸ್ ಹೆಚ್ ಪರ್ಲ್ಮಾನ್ ಕಾರುಗಳಿಗೆ ರಿಮ್ ಹೊಂದುವ ಡಿಮೌಂಟಬೆಲ್ ಟೈರುಗಳಿಗೆ ಹಕ್ಕುಸ್ವಾಮ್ಯ ಪಡೆದರು.

1908: ಚಿಕಾಗೊನಲ್ಲಿ ಪ್ರಥಮ ಬಾರಿಗೆ ಮೊದಲ ಹಾರರ್ ಚಲನಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು.

1916: ಬ್ರಿಟನ್ ದೇಶ ಬೇಸಿಗೆ ಸಮಯ (ಡೇ ಲೈಟ್ ಸೇವಿಂಗ್ ಟೈಮ್) ಆರಂಭಿಸಿತ್ತು.

1925: ಬೀಯರ್ ಮಾರಾಟ ಮಾಡಲು ಕೆನಡಿಯರಿಗೆ ಅನುಮತಿ ನೀಡಲಾಗಿತ್ತು.

1929: ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಸ್ವಯಂಚಾಲಿತ ವಿದ್ಯುತ್ ಸ್ಟಾಕ್ ಉದ್ಧರಣಾ ಸೂಚನೆ ಫಲಕವನ್ನು ಸ್ಥಾಪಿಸಲಾಯಿತು.

1932: ಅಮೀಲಿಯಾ ಇಯರ್ಹಾಟ್ ಮೊದಲ ಟ್ರಾನ್ಸ್ ಅಟ್ಲಾಂಟಿಕ್ ಏಕವ್ಯಕ್ತಿ ವಿಮಾನ ಹಾರಟವನ್ನು ಮಾಡಿದ ಮಹಿಳೆ.

1944: ಅಮೇರಿಕ ಮತ್ತು ಬ್ರಿಟಿಶ್ ಬಯೋತ್ಪಾದಕ ಪೈಲೆಟ್ಗಳ ಮೇಲೆ ಹಿಟ್ಲರ್ ದಾಳಿ ಮಾಡಿದ್ದರು.

1956: ಬಿಕಿನಿ ಅಟಾಲ್ ಮೇಲೆ ಅಮೇರಿಕಾದ ವಾಯುಗಾಮಿ ಹೌಡ್ರೋಜನ್ ಬಾಂಬ್ ಸ್ಪೋಟಿಸಿದ್ದವು.

1961: ಮಾಂಟ್ಗೋಮೇರಿಯಲ್ಲಿ ಗವರ್ನರ್ ಪ್ಯಾಟರ್ಸನ್ ಸಮರ ಕಾನೂನನ್ನು ಘೋಷಿಸಿದರು.

1964: ಚೆಸಾಪೀಕ್ ಬೇ ನಲ್ಲಿ ಮೊದಲ ಪರಮಾಣು ಚಾಲಿತ ಬೆಳಕಿನ ಮನೆಯ (ಲೈಟ್ ಹೌಸ್) ಕಾರ್ಯಾಚರಣೆ ಆರಂಭವಾಯಿತು.

1980: ಎನ್ಸೈನ್ ಜಿನ್ ಮೇರಿ ಬಟ್ಲರ್ ಅಮೇರಿಕಾದ ಸೇವಾ ಅಕಾಡೆಮಿಯಿಂದ ಪದವಿ ಪಡೆದ ಮೊದಲ ಮಹಿಳೆ.

1998: ಇಂಡೋನೇಷಿಯದ ಅಧ್ಯಕ್ಷರಾದ ಸುಹಾರ್ತೋ ಸತತ 31 ವರುಷಗಳ ಆಡಳಿತದ ನಂತರ ರಾಜಿನಾಮೆ ನೀಡಿದ್ದರು.

2004: ಶೆರ್ಪಾ ಪೆಂಬಾ ದಾರ್ಜಿಯವರು ಮೌಂಟ್ ಎವೆರೆಸ್ಟ್ ಅನ್ನು ಕೇವಲ 8 ಗಂಟೆ 10 ನಿಮಿಷದಲ್ಲಿ ಏರಿ ಶರ್ಪಾ ಲಕ್ಪಾ ಗೇಲು ಅವರ ದಾಖಲೆಯನ್ನು ಮುರಿದರು.

ಪ್ರಮುಖಜನನ/ಮರಣ:

1860: ಮೊದಲ ಪ್ರಾಯೋಗಿಕ ಎಲೆಕ್ಟ್ರೋಗ್ರಾಮ್ ಕಂಡುಹಿಡಿದ ಡಚ್ ದೇಶದ ಶರೀರಶಾಸ್ತ್ರಜ್ಞ ವಿಲಿಯಂ ಎನ್ಥೋವೆನ್ ಜನಿಸಿದರು.

1542: ಸ್ಪೇನ್ ದೇಶದ ಪರಿಶೋಧಕ ಹರ್ನಾಡೋ ಡೆ ಸೋಟೋ ಚಿನ್ನವನ್ನು ಹುಡುಕುತ್ತಿರುವಾಗ ಮಿಸ್ಸಿಸ್ಸಿಪಿ ನದಿಯ ಬಳಿ ನಿಧನರಾದರು.

1921: ಸೋವಿಯಟ್ ಅಣ್ವಸ್ತ್ರ ಬಾಂಬ್ ಪಿತಾಮಹ ಎಂದೇ ಖ್ಯಾತಿ ಪಡೆದ ರಷ್ಯಾ ದೇಶದ ಭೌತವಿಜ್ಞಾನಿ ಆಂಡ್ರೆ ಸಖಾರೋವ್ ಜನಿಸಿದರು

1960: ಭಾರತದ ಬಹುಭಾಷಾ ಚಲನಚಿತ್ರ ನಟರಾದ ಶ್ರೀ ಮೋಹನ್ ಲಾಲ್ ಅವರು ಜನಿಸಿದರು.

1878: ವಾಯುಯಾನ ಪ್ರವರ್ತಕ ಗ್ಲೆನ್ ಹ್ಯಾಮಂಡ್ ಕರ್ಟೀಸ್ ಜನಿಸಿದರು.

1964: ಯುವ ಮತ್ತು ಪ್ರತಿಭಾವಂತ ಸಂಗೀತ ಸ್ವರ ಸಂಯೋಜಕ ಜಿ.ವಿ.ಅತ್ರಿ ಅವರು ಜನಿಸಿದರು.

 

Categories
e-ದಿನ

ಮೇ-20

 

ಪ್ರಮುಖಘಟನಾವಳಿಗಳು:

1310: ಎಡ ಮತ್ತು ಬಲ ಎರಡೂ ಪಾದಗಳಿಗೆ ಬೇರೆ ವಿನ್ಯಾಸದ ಷೂಗಳನ್ನು ತಯಾರಿಸಲಾಗುತ್ತಿತ್ತು.

1498: ಪೋರ್ಚುಗೀಸಿನ ವಾಸ್ಕೊಡಗಾಮ ಭಾರತದ ಕ್ಯಾಲಿಕಟ್‌ಗೆ ಸಮುದ್ರದ ಮೂಲಕ ಆಗಮಿಸಿದ ಮೊದಲ ಯೂರೋಪಿಯನ್ ಆಗಿದ್ದರು.

1501: ಜೋವೊ ಡಾ ನೋವಾ ಕ್ಯಾಸ್ಟೆಲ್ “ಅಸೆನ್ಶನ್” ದ್ವೀಪಗಳನ್ನು ಕಂಡುಹಿಡಿದರು.

1609: ಷೇಕ್‌ಸ್ಪಿಯರ್ನ ‘ಸಾನೆಟ್ಸ್’ ಅನ್ನು ಮೊದಲು ಲಂಡನಿನಲ್ಲಿ ಬಹುಶಃ ಅಕ್ರಮವಾಗಿ ಪ್ರಕಾಶಕ ಥಾಮಸ್ ಥಾರ್ಪ್ ಪ್ರಕಟಿಸಿದ್ದರು.

1639: ಡಾರ್ಚೆಸ್ಟರ್ ಮಾಸ್ ಸ್ಥಳೀಯ ತೆರಿಗೆಗಳಿಂದ ಹಣ ಪಡೆಯುವ ಮೊದಲ ಶಾಲೆಯಾಗಿದೆ.

1704: ಎಲಿಯಾಸ್ ನೀವ್ ನ್ಯೂಯಾರ್ಕ್‌ನಲ್ಲಿನ ಗುಲಾಮರಿಗಾಗಿ ಶಾಲೆ ಆರಂಭಿಸಿದ್ದರು.

1830: ಮೊದಲ ಬಾರಿಗೆ ರೈಲು ದಿನಚರಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

1830: ಫೌನ್ಟೆನ್ ಪೆನ್ ಪೇಟೆಂಟ್ ಮಾಡಿಕೊಂಡವರು “ದಿ ಹೈಡ್”.

1845: ಹವಾಯಿಯ ಮೊದಲ ಶಾಸಕಾಂಗ ಸಭೆ ಕರೆಯಲಾಗಿತ್ತು.

1862: ಅಮೇರಿಕನ್ ಹೋಮ್ಸ್ಟಡ್ ಆಕ್ಟ್ ಅಮೇರಿಕನ್ ವೆಸ್ಟ್ ವಸಾಹತುಗಾಗಿ ಅಗ್ಗದ ಭೂಮಿ ಒದಗಿಸುವ ಕಾನೂನಾಗಿತ್ತು.

1867: ರಾಯಲ್ ಆಲ್ಬರ್ಟ್ ಹಾಲ್ ಆಫ್ ಆಟ್ಸ್ ಆಂಡ್ ಸೈನ್ಸಸ್‌ಗೆ ರಾಣಿ ವಿಕ್ಟೋರಿಯಾ ಅಡಿಪಾಯ ಹಾಕಿದರು.

1870: ಡಚ್ ಸಂಸತ್ತಿನ ಎರಡನೇ ಚೇಂಬರ್ ನೆದರ್ಲ್ಯಾಂಡ್‌ನಲ್ಲಿ ಮರಣದಂಡನೆಯನ್ನು ರದ್ದುಗೊಳಿಸಿತ್ತು.

1873: ಲೆವೀ ಸ್ಟ್ರಾಸ್ ಮತ್ತು ಜೇಕಬ್ ಡೇವಿಸ್ ತಾಮ್ರದ ರಿವೆಟ್ ಅಳವಡಿಸಿ ಮೊದಲ ನೀಲಿ ಬಣ್ಣದ ಜೀನ್ಸ್ ತಯಾರಿಸಿಅದನ್ನು ಪೇಟೆಂಟ್ ಪಡೆದರು.

1875: ಒಪ್ಪಂದದ ಮೇರೆಗೆ ತೂಕ ಮತ್ತು ಅಳತೆಗಳ ಅಂತರಾಷ್ಟ್ರೀಯ ಮಾನಕ ಬ್ಯೂರೋ ಆರಂಭವಾಯಿತು.

1895: ಮೊದಲ ವಾಣಿಜ್ಯ ಚಲನಚಿತ್ರ ಪ್ರದರ್ಶನವಾಯಿತು.

1926: ರೈಲ್ವೆ ಕಾರ್ಮಿಕ ಕಾಯ್ದೆ ಅಮೇರಿಕಾದಲ್ಲಿ ಕಾನೂನಾಗಿ ಮಾರ್ಪಟ್ಟಿತು.

1942: ಮೊದಲ ಬಾರಿಗೆ ಅಮೇರಿಕಾದ “ಕಪ್ಪು ಜನ”ರನ್ನು ಅಮೇರಿಕಾದ ನೌಕಾಪಡೆಯಲ್ಲಿ ನೇಮಿಸಲು ಅನುಮತಿನೀಡಲಾಯಿತು.

1955: ಅರ್ಜೆಂಟೈನಾದ ಸಂಸತ್ತು ಚರ್ಚ್ ಮತ್ತು ರಾಜ್ಯ ಆಡಳಿತದ ಪ್ರತ್ಯೇಕತೆಯನ್ನು ಸ್ವೀಕರಿಸುತ್ತದೆ.

1961: ಮಾರಿಟಾನಿಯವು ಸಂವಿಧಾನವನ್ನು ಅಳವಡಿಸುತ್ತದೆ.

1963: ಸುಕಾರ್ನೋ ಇಂಡೋನೇಷಿಯಾದ ಮೊದಲ ಅಧ್ಯಕ್ಷರಾಗಿ ನೇಮಕಗೊಂಡರು.

1965: ಪಾಕಿಸ್ತಾನದ ಬೋಯಿಂಗ್ ವಿಮಾನವು ಈಜಿಪ್ಟ್ ನ ಕಾರಿಯೋನಲ್ಲಿ ಕುಸಿದು 121 ಜನರು ಸಾವಿಗೀಡಾದರು.

1978: ಅಮೇರಿಕಾ ಪಯನೀರ್ ವೀನಸ್ 1 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಈ ಉಪಗ್ರಹ ಶುಕ್ರ ಗ್ರಹದ ಮೊದಲ ಜಾಗತಿಕ ರಡಾರ್ ನಕ್ಷೆಯನ್ನು ಉತ್ಪಾದಿಸಿತ್ತು.

1989: ಬೀಜಿಂಗ್ ನಲ್ಲಿ ಚೀನ ಯುದ್ಧ ಕಾನೂನನ್ನು ಘೋಷಿಸಿತ್ತು.

1989: 57 ವರ್ಷದ ವಾಲ್ಟರ್ ಮೆಕ್ಕಾನಲ್ ಮೌಂಟ್ ಎವೆರೆಸ್ಟ್ ಶಿಖರದ 27000 ಅಡಿ ಏರಿದ ಅತ್ಯಂತ ಹಿರಿಯ ವ್ಯಕ್ತಿ.

1991: ನಾಗರೀಕರು ವಿದೇಶ ಪ್ರಯಾಣ ಮಾಡಲು ಅನುಮತಿಸುವ ಕಾನೂನನ್ನು ಸೋವಿಯೆತ್ ಸಂಸತ್ತುಅನುಮೋದಿಸಿತು.

1992: ಭಾರತ ಸ್ವಂತವಾಗಿ ಬಾಹ್ಯಾಕಾಶಕ್ಕೆ ಉಪಗ್ರಹವನ್ನು ಮೊದಲ ಬಾರಿ ಹಾರಿಸಿತು.

ಪ್ರಮುಖಜನನ/ಮರಣ:

1806: ಜಾನ್ ಸ್ಟೂವರ್ಟ್ ಮಿಲ್, ಆಂಗ್ಲ ತತ್ವಜ್ಞಾನಿ, ರಾಜಕೀಯ ಅರ್ಥಶಾಸ್ತ್ರಜ್ಞ ಲಂಡನಿನಲ್ಲಿ ಜನಿಸಿದರು.

1851: ಗ್ರಾಮಫೋನ್ ಕಂಡುಹಿಡಿದ ವಿಜ್ಞಾನಿ ಎಮಿಲ್ ಬರ್ಲೀನರ್ ಅಮೇರಿಕಾದ ವಾಷಿಂಗ್ಟನ್ ನಲ್ಲಿ ಜನಿಸಿದರು.

1506: ಪರಿಶೋಧಕ ಕ್ರಿಸ್ಟೋಫರ್ ಕೊಲಂಬಸ್ ಸ್ಪೇನ್ ನಲ್ಲಿ ನಿಧನರಾದರು.

2002: ಅಮೇರಿಕಾದ ಪೇಲಿಯಂಟಾಲಜಿಸ್ಟ್ ಮತ್ತು ಜನಪ್ರಿಯ ವಿಜ್ಞಾನ ಬರಹಗಾರರಾದ ಸ್ಟೇಫಿನ್ ಜೆ ಗೌಲ್ಡ್ನಿಧನರಾದರು.

 

Categories
e-ದಿನ

ಮೇ-19

 

ಪ್ರಮುಖಘಟನಾವಳಿಗಳು:

1506: ಕ್ರಿಸ್ಟೋಫರ್ ಕೊಲಂಬಸ್ ತನ್ನ ಮಗನಾದ ಡಿಯಾಗೋನನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದರು.

1662: ಇಂಗ್ಲೆಂಡಿನ ಏಕರೂಪತೆಯ ಕಾರ್ಯವು ಜಾರಿಗೆ ಬಂದಿತು.

1848: ಮೊದಲ ಡಿಪಾರ್ಟ್ ಮೆಂಟಲ್ ಸ್ಟೋರ್ ಕಾರ್ಯಾರಂಭ ಮಾಡಿತು.

1857: ವಿಲಿಯಂ ಫ್ರಾನ್ಸಿಸ್ ಚಾನಿಂಗ್ ಮತ್ತು ಮೊಸೆಸ್ ಜಿ ಫಾರ್ಮರ್ ವಿದ್ಯುತ್ ಬೆಂಕಿ ಅಲಾರಾಂಗೆ ಪೇಟೆಂಟ್ ಪಡೆದರು.

1885: ಪಾದರಕ್ಷೆಗಳ ಸಾಮೂಹಿಕ ಉತ್ಪಾದನೆ ಆರಂಭಿಸಲಾಯಿತು.

1892: ಚಾರ್ಲ್ಸ್ ಬ್ರಾಡಿ ನ್ಯೂಮಾಟಿಕ್ ಸುತ್ತಿಗೆಯನ್ನು ಕಂಡುಹಿಡಿದರು.

1892: ಅಮೇರಿಕಾದ ವಸಾಹತು ಶಾಹಿ ಡೇಮ್ಸ್ ರಾಷ್ಟ್ರೀಯ ಸೊಸೈಟಿಯು ಸ್ಥಾಪನೆಯಾಯಿತು.

1896: ಕಾರ್ಲ್ ಬೆನ್ಜ್ ಕಂಡುಹಿಡಿದ ಮೊದಲ ಆಟೋ ನೆದರ್ಲ್ಯಾಂಡ್ ನಲ್ಲಿ ಚಾಲನೆಯಾಯಿತು.

1898: ಅಮೇರಿಕಾದ ಕಾಂಗ್ರೆಸ್ ಖಾಸಗೀ ಮೈಲಿಂಗ್ ಆಕ್ಟ್ ಅನ್ನು ರವಾನಿಸುತ್ತದೆ. ಈ ಕಾಯ್ದೆಯಲ್ಲಿ ಖಾಸಗೀ ಪ್ರಕಾಶಕರು ಮತ್ತು ಪ್ರಿಂಟರ್ ಗಳು ಈ ಪೋಸ್ಟ್ ಕಾರ್ಡ್‌ಗಳನ್ನು ತಯಾರಿಸಲು ಅನುವು ನೀಡುತ್ತದೆ.ಆದರೆ 1901ರವರೆಗೆ ಈ ಪೋಸ್ಟ್ ಕಾರ್ಡ್‌ಗಳ ಮೇಲೆ “ಖಾಸಗಿ ಅಂಚೆ ಕಾರ್ಡ್” ಮುದ್ರಿಸಬೇಕಿತ್ತು.ನಂತರ ಇದನ್ನು “ಸೌವೆನಿರ್ ಕಾರ್ಡ್” ಎಂದು ಬದಲಾಯಿಸಲಾಯಿತು.

1900: ವಿಶ್ವದ ಅತ್ಯಂತ ಉದ್ದವಾದ ರೈಲು ಸುರಂಗ ತರೆಯಲಾಯಿತು. ಈ ಸುರಂಗ ಇಟಲಿ ಮತ್ತು ಸ್ವಿಜರ್ಲ್ಯಾಂಡ್ ಸಂಪರ್ಕಿಸುತ್ತದೆ.

1910: ಹಾಲಿ ಕಾಮೆಟ್ ಬಾಲದ ಮೂಲಕ ಭೂವಿಯು ಹಾದು ಹೋಯಿತು.

1928: ಮೊದಲ ಕಪ್ಪೆ ಜಿಗಿತ ಮಹೋತ್ಸವದ ಮೊದಲ ವಾರ್ಷಿಕೋತ್ಸವದಲ್ಲಿ 51 ಕಪ್ಪೆಗಳು ಪಾಲ್ಗೊಂಡಿದ್ದವು.

1930: ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಮಹಿಳೆಯರು (ವೈಟ್ ವುಮೆನ್) ಮತದಾನದ ಹಕ್ಕನ್ನು ಪಡೆದರು.

1939: ಚರ್ಚಿಲ್ ಬ್ರಿಟಿಷ್-ರಷ್ಯಾ ನಾಝಿ ವಿರೋಧಿ ಒಪ್ಪಂದಕ್ಕೆ ಸಹಿ ಹಾಕಿದರು.

1940: ಆಂಸ್ಟರ್ ಡ್ಯಾಮ್ ಸಮಯವನ್ನು ಮಧ್ಯ ಯೂರೋಪಿನ ಸಮಯವೇ ಆಗಿ ಮಾನ್ಯ ಮಾಡಲಾಯಿತು.

1950: ನ್ಯೂಯಾರ್ಕ್ ಟೈಮ್ಸ್ ಪ್ರಪಂಚದ ಅತಿ ಚಿಕ್ಕ ಮತ್ತು ಮೂರ್ಖ ಯಾಂತ್ರಿಕ ಮೆದುಳಿನ ವರದಿ ಮಾಡಿತ್ತು.

1959: ಎರಡು ಪರಮಾಣು ರಿಯಾಕ್ಟರ್ ಹೊಂದಿದ್ದ ಮೊದಲ ಜಲಾಂತರ್ಗಾಮಿ “ಯು ಎಸ್ ಎಸ್ ಟ್ರಿಟಾನ್” ನಿರ್ಮಾಣ ಪೂರ್ಣವಾಯಿತು.

1964: ಯು ಎಸ್ ರಾಜತಾಂತ್ರಿಕರು ಮಾಸ್ಕೋ ದೂತಾವಾಸದಲ್ಲಿ ಗುಪ್ತಚಾರಿಕೆ ಉದ್ದೇಶದ ಕನಿಷ್ಠ 40 ರಹಸ್ಯ ಮೈಕ್ರೋಫೋನ್ ಗಳನ್ನು ಕಂಡುಹಿಡಿದರು.

1968: ಉತ್ತರ ಇಂಗ್ಲೆಂಡಿನಲ್ಲಿ ಮೊದಲ ಬಾರಿ ಪೈರೇಟ್ ರೇಡಿಯೋ ಕೇಳಿಸಿತು.

1971: ರಷ್ಯಾ “ಮಾರ್ಸ್ 2” ಮೊದಲ ಬಾಹ್ಯಾಕಾಶನೌಕೆ ಮಂಗಳ ಗ್ರಹದ ಮೇಲೆ ಕುಸಿಯಿತು.

1976: ಚಿನ್ನದ ಮಾಲೀಕತ್ವವನ್ನು ಆಸ್ಟ್ರೇಲಿಯಾದಲ್ಲಿ ಕಾನೂನುಬದ್ಧಗೊಳಿಸಲಾಯಿತು.

1983: ನಾಸಾ ಇಂಟೆಲ್ ಸಾಟ್ 5 ಉಪಗ್ರಹವನ್ನು ಹಾರಿಸಿತು.

1987: ಅಮೇರಿಕಾದ ಮೊದಲ ಹಾಸ್ಯ ಪ್ರಶಸ್ತಿಯನ್ನು ಜಾನಿ ಕಾರ್ಸನ್ ಮತ್ತು ಬೆಟ್ಟಿ ವೈಟ್‌ಗೆ ನೀಡಿತು.

ಪ್ರಮುಖಜನನ/ಮರಣ:

1839: ಟಾಟಾ ಸಂಸ್ಥೆಯ ಸಂಸ್ಥಾಪಕಾದ ಜಂಷೆಡ್ಟಾಟಾ ಜನಿಸಿದರು.

2008: ಭಾರತೀಯ ನಾಟಕಕಾರ ಮತ್ತು ಚಿತ್ರಕಥೆಗಾರ ವಿಜಯ್ ತೆಂಡುಲ್ಕರ್ ನಿಧನರಾದರು.

1910: ಗಾಂಧೀಜಿ ಹತ್ಯೆಗೈದ ನಾಥೂರಾಂ ಗೋಡ್ಸೆ ಜನಿಸಿದರು.

1938: ಹಿರಿಯರಂಗಕರ್ಮಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ ಅವರು ಜನಿಸಿದರು.

1947: ಹಿರಿಯ ಚಲನಚಿತ್ರ ನಟ ಲೋಕೇಶ್ ಅವರು ಜನಿಸಿದರು.

 

Categories
e-ದಿನ

ಮೇ-18

 

ಪ್ರಮುಖಘಟನಾವಳಿಗಳು:

1642: ಮೊಂಟ್ರೀಯಲ್, ಕೆನಡಾ ದೇಶಗಳನ್ನು ಕಂಡುಹಿಡಿಯಲಾಯಿತು.

1652: ರೋಡ್ ಐಲೆಂಡ್ ದೇಶ ಗುಲಾಮಗಿರಿಯನ್ನು ಅಕ್ರಮ ಎಂದು ಘೋಷಿಸುವ ಕಾನೂನನ್ನು ಜಾರಿಗೆ ತಂದಿತು.

1804: ನೆಪೋಲಿಯನ್ ನನ್ನು ಫ್ರಾನ್ಸ್ ದೇಶದ ಮಹಾರಾಜ ಎಂದು ಘೋಷಿಸಲಾಯಿತು.

1830: ಇಂಗ್ಲೆಂಡಿನ ಎಡ್ವಿನ್ ಬಡ್ಡಿಂಗ್ ತನ್ನ ಆವಿಷ್ಕಾರ ಲಾನ್ ಮೂವರ್ ನನ್ನು ಉತ್ಪಾದನೆ ಒಪ್ಪಂದಕ್ಕೆ ಸಹಿ ಮಾಡಿದರು.

1843: ಯುನೈಟೆಡ್ ಫ್ರೀ ಚರ್ಚ್ ಆಫ್ ಸ್ಕಾಟ್ಲ್ಯಾಂಡ್ ರೂಪುಗೊಂಡಿತು.

1848: ಮೊದಲ ಜರ್ಮನ್ ನ್ಯಾಷನಲ್ ಅಸೆಂಬ್ಲಿ ತೆರವುಗೊಂಡಿತು.

1852: ಮ್ಯಾಸಚೂಸೆಟ್ಸ್ ದೇಶದಲ್ಲಿ ಎಲ್ಲಾ ಶಾಲೆಯ ವಯಸ್ಸಿನ ಮಕ್ಕಳು ಶಾಲೆಗೆ ಹೋಗಬೇಕೆಂದು ಹೇಳಿತು.

1860: ರಿಪಬ್ಲಿಕನ್ ಪಕ್ಷ ಅಧ್ಯಕ್ಷರ ಸ್ಥಾನಕ್ಕೆ ಅಬ್ರಾಹಿಂ ಲಿಂಕನ್ ಅವರನ್ನು ನಾಮನಿರ್ದೇಶನ ಮಾಡಿತು.

1899: ವಿಶ್ವ ಗುಡ್ ವಿಲ್ ದಿನ- 26 ರಾಷ್ಟ್ರಗಳು ಮೊದಲನೇ ಹೇಗ್ ಪೀಸ್ ಕಾನ್ಫರೆನ್ಸ್ ನಲ್ಲಿ ಬೇಟಿಯಾಗುತ್ತವೆ.

1927: ರಿಟ್ಜ್ ಹೋಟೆಲ್ ಬಾಸ್ಟನ್ ನಲ್ಲಿ ತೆರವುಗೊಂಡಿತು.

1934: ಅಕಾಡೆಮಿಯ ಪ್ರಶಸ್ತಿಯನ್ನು ಆಸ್ಕರ್ ಎಂದು ಹೆಸರಿಸಿ ಮುದ್ರಿಸಲಾಯಿತು.

1949: ಆಂಟೀಕ್ವೇರಿಯನ್ ಬುಕ್ಸ್ ಸೆಲ್ಲರ್ಸ್ ಅಸೋಸಿಯೇಶನ್ ಆಫ್ ಅಮೇರಿಕ ಸಂಯೋಜನೆಯಾಗಿತ್ತು.

1964: ಮೂರು ವರ್ಷಕಿಂತ ಹೆಚ್ಚು ಸಮಯ ತವರು ದೇಶಕ್ಕೆ ತೆರಳಿದ ವಿದೇಶಿ ನಾಗರೀಕರಿಗೆ ಅಮೇರಿಕಾ ನಾಗರೀಕತೆಯನ್ನು ವಿಮುಕ್ತಗೊಳಿಸುವಂತೆ ಅಮೇರಿಕಾದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು.

1969: ಅಪೋಲೋ 10 ಉಪಗ್ರಹವನ್ನು ಚಂದ್ರನ ಕಕ್ಷೆಯ ಕಡೆಗೆ ಕಳುಹಿಸಲಾಯಿತು.

1971: ಬಲ್ಗೇರಿಯಾದಲ್ಲಿ ಸಂವಿಧಾನವು ಜಾರಿಗೆ ಬಂದಿತು.

1971: ರಕ್ತ ಪಿಶಾಚಿ ಅತ್ಯಾಚಾರಿಯಾದ ವೇಯ್ನ್ ಬೊಡೆನ್ ಅವರ ಕೊನೆಯ ಬಲಿಪಶುವನ್ನು ಕಂಡರು.

1974: ಪರಮಾಣು ಬಾಂಬ್ ಅನ್ನು ಸ್ಪೋಟಿಸಿದ ಆರನೇ ರಾಷ್ಟ್ರ ಭಾರತವಾಗಿತ್ತು.

1977: ಹವಾಮಾನ ಯುದ್ಧದಿಂದ ವ್ಯಾಪಕ, ಧೀರ್ಘಕಾಲಿನ ಮತ್ತು ತೀವ್ರ ಪರಿಣಾಮಗಳು ಉಂಟು ಮಾಡುವ ಯುದ್ಧಗಳನ್ನು ನಿಷೇದಿಸಲು ಅಮೇರಿಕಾ, ರಷ್ಯಾ ಮತ್ತು ಇತರೆ ರಾಷ್ಟ್ರಗಳು ಪರಿಸರ ಮಾರ್ಪಾಡು ಸಮ್ಮೇಳನದಲ್ಲಿಒಪ್ಪಂದಕ್ಕೆ ಸಹಿ ಮಾಡುತ್ತಾರೆ.

1978: ಇಟಲಿ ದೇಶ ಭ್ರೂಣ ಹತ್ಯೆಯನ್ನು ಕಾನೂನಾತ್ಮಕ ಮಾಡಿತ್ತು.

1980: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮೊದಲ ಖಂಡಾಂತರ ರಾಕೆಟ್ ಅನ್ನು ಹಾರಿಸುತ್ತದೆ.

1990: ಪೂರ್ವ ಮತ್ತು ಪಶ್ಚಿಮ ಜರ್ಮನಿಯು ವಿತ್ತೀಯ ಒಕ್ಕೂಟ ಒಪ್ಪಂದಕ್ಕೆ ಸಹಿ ಮಾಡುತ್ತದೆ.

1991: ರಷ್ಯಾ ಎಂಐಆರ್ ಬಾಹ್ಯಾಕಾಶದ ನಿಲ್ದಾಣಕ್ಕೆ 2 ಗಗನಯಾತ್ರಿಗಳನ್ನು ಕಳುಹಿಸುತ್ತದೆ.

1912: ಮೊದಲ ಭಾರತೀಯ ಚಲನಚಿತ್ರ “ಶ್ರೀ ಪುಂಡಲಿಕ್” ಬಿಡುಗಡೆಯಾಯಿತು.

1994: ಉಷ್ಣವಲಯದ ಚಿಟ್ಟೆಗಳ ಉದ್ಯಾನವನವನ್ನು ಕ್ಲೀವ್ಲ್ಯಾಂಡ್ ಮೆಟ್ರೋಪಾರ್ಕ್ ಮೃಗಾಲಯದಲ್ಲಿ ತೆರೆಯಲಾಯಿತು.

2006: ನೇಪಾಳವನ್ನು ಜಾತ್ಯಾತೀತ ರಾಷ್ಟ್ರವಾಗಿ ಘೋಷಿಸಿಕೊಳ್ಳುವ ಮಸೂದೆಯನ್ನು ಜಾರಿಗೆ ತರುತ್ತದೆ.

ಪ್ರಮುಖಜನನ/ಮರಣ:

1933: ಭಾರತೀಯ ಮಾಜಿ ಪ್ರಧಾನ ಮಂತ್ರಿಯಾದ ಶ್ರೀ ಹೆಚ್ ಡಿ ದೇವೇಗೌಡ ಅವರು ಜನಿಸಿದರು.

1934 : ಹಿರಿಯ ವೈದ್ಯಕೀಯ ಸಾಹಿತಿ ಡಾ|| ಅನುಪಮಾ ನಿರಂಜನ ಅವರು ಜನಿಸಿದರು.

 

Categories
e-ದಿನ

ಮೇ-17

 

ಪ್ರಮುಖಘಟನಾವಳಿಗಳು:

1540: ಕನೌಜ್ ನಗರಿಯಲ್ಲಿ ಅಫ್ಘಾನ್ ದೇಶದ ಮುಖ್ಯಸ್ಥ ಶೇರ್ ಖಾನ್ ಮುಘಲ್ ಅರಸನಾದ ಹುಮಾಯುನ್ನನನ್ನು ಸೋಲಿಸಿದನು.

1620: ಮೊಟ್ಟ ಮೊದಲ ತಿರುಗು ತೊಟ್ಟಿಲು (ಮೆರ್ರಿಗೊ ರೌಂಡ್) ಟರ್ಕಿಯಲ್ಲಿ ಒಂದು ಜಾತ್ರೆಯಲ್ಲಿ ಕಂಡಿತು

1630: ಇಟಲಿಯ ನಿಕ್ಕೋಲೋ ಜುಕ್ಕಿ ಜುಪಿಟರ್‍ ಗ್ರಹದ ಮೇಲ್ಮೈಯ ಮೇಲೆ ಮೊದಲ ಬಾರಿಗೆ 2 ನಡು ಕಟ್ಟು (ರಿಂಗ್ಸ್)ಇರುವುದನ್ನು ಗಮನಿಸಿದರು.

1792: ನ್ಯೂಯಾರ್ಕ್ ಶೇರು ಮಾರುಕಟ್ಟೆ (ಸ್ಟಾಕ್ ಎಕ್ಸ್ಚೇಂಜ್) 24 ದಲ್ಲಾಳಿಗಳೊಂದಿಗೆ ಆರಂಭವಾಯಿತು.

1803: ಜಾನ್ ಹಾಕಿಂಗ್ಸ್ ಹಾಗೂ ರಿಚರ್ಡ್ ಫ್ರೆಂಚ್ ಕಳೆ ಕೊಯ್ಯುವ ಯಂತ್ರದ ಪೇಟೆಂಟ್ ಪಡೆದರು.

1845: ರಬ್ಬರ್‍ ಬ್ಯಾಂಡ್‌ಗಳಿಗೆ ಪೇಟೆಂಟ್ ಪಡೆಯಲಾಯಿತು.

1846: ಆಂಟೋನಿ ಜೋಸೆಫ್ ಸಾಕ್ಸ್ ಎಂಬುವವರು ಸಾಕ್ಸೋಫೋನ್‌ನ ಪೇಟೆಂಟ್ ಪಡೆದರು.

1865: ಅಂತರಾಷ್ಟ್ರೀಯ ಟೆಲಿಗ್ರಾಫ್ ಸಂಘ ಸ್ಥಾಪಿಸಲಾಯಿತು.

1877: ಎಡ್ವಿನಿಟಿ ಹೋಮ್ಸ್ ಮೊದಲ ಟೆಲಿಫೋನ್ ಸ್ವಿಚ್ಬೋರ್ಡ್ ಬರ್ಗ್ಲರ್‍ ಅಲಾರ್ಮ ಅನ್ನು ಸ್ಥಾಪಿಸಿದರು.

1890: ಕಾಮಿಕ್ ಕಟ್ಸ್ ಎಂಬ ಸಾಪ್ತಾಹಿಕ ಕಾಮಿಕ್ ಪೇಪರ್‍ ಮೊದಲ ಬಾರಿ ಲಂಡನ್ನಲ್ಲಿ ಪ್ರಕಟವಾಯಿತು.

1899: ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತು ಸಂಗ್ರಹಾಲಯಕ್ಕೆ ಅಡಿಪಾಯ ಇಂಗ್ಲೆಂಡಿನಲ್ಲಿ ಹಾಕಲಾಯಿತು.

1902: ಗ್ರೀಕ್ ಪುರಾತತ್ವಶಾಸ್ತ್ರಜ್ಞ ವ್ಯಾಲೆರಿಯಸ್ ಸ್ಟೈಸ್ ಪುರಾತನ ಯಾಂತ್ರಿಕ ಅನಲಾಗ್ ಕಂಪ್ಯೂಟರ್ ಕಂಡುಹಿಡಿದರು.

1906: ಸ್ವಿಡ್ಜರ್‌ಲ್ಯಾಂಡ್ ಸಿಂಪಿಯನ್ ಸುರಂಗ ರೈಲು ಸಂಚಾರಕ್ಕೆ ತೆರೆಯಲಾಯಿತು.’

1916: ಬ್ರಿಟೀಷ್‌ ಬೇಸಿಗೆ ಸಮಯ (ಡೇ ಲೈಟ್ ಸೇವಿಂಗ್ಸ್)ನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1920: ಡಚ್ ಏರ್ ಲೈನ್ಸ್ ವಿಮಾನದ ಹಾರಾಟ ಆರಂಭವಾಯಿತು.

1920: ಮೊದಲ ಲಂಡನ್ನಿನ “ಡಿ ಹಾವಿಲ್ಯಾಂಡ್ ಡಬಲ್ ಡೆಕ್ಕರ್‍” ವಿಮಾನ ಸ್ಚಿಪೋಲ್‌ನಲ್ಲಿ ಭೂ ಸ್ಪರ್ಶ ಮಾಡಿತು.

1928: ಒಂಬತ್ತನೆಯ ಆಧುನಿಕ ಒಲಂಪಿಕ್ಸ್ ಆಟಗಳು ಆಮ್ಸ್ಟರ್ ಡ್ಯಾಮ್ ನಲ್ಲಿ ತೆರೆಯಲ್ಪಟ್ಟಿತು.

1958: ತುರ್ತು ಸ್ಥತಿ ಬಿಕ್ಕಟ್ಟು ಆಲ್ಜೀರಿಯಾದಲ್ಲಿ ಘೋಷಿಸಲ್ಪಟ್ಟಿತ್ತು.

1968: ಯುರೋಪಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ಮೊದಲ ಉಪಗೃಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು.

1971: ವಾಷಿಂಗ್ಟನ್ ರಾಜ್ಯ ಲಿಂಗ ಭೇದ (ತಾರತಮ್ಯ) ನಿಷೇಧಿಸಿತು.

1980: ಕುಮಾರ್ ಆನಂದನ್ ಸತತ 33 ಗಂಟೆಗಳ ಕಾಲ ಒಂದು ಕಾಲಿನ ಮೇಲೆ ನಿಂತು ದಾಖಲೆ ನಿರ್ಮಿಸಿದರು.

1989: ಅತೀ ದೀರ್ಘದ ಕ್ಯಾಬ್ ಸವಾರಿ 14,000 ಮೈಲಿಗೆ $16,000 ಹಣವನ್ನು ನೀಡಿದ್ದರು.

1990: ವಿಶ್ವ ಆರೋಗ್ಯ ಸಂಸ್ಥೆ ಮಾನಸಿಕ ಅಸ್ವಸ್ಥತೆಯ ಪಟ್ಟಿಯಿಂದ ಸಲಿಂಗಕಾಮವನ್ನು ತೆರವುಗೊಳಿಸಿತು.

1991: ಮೆಕ್ಸಿಕೋದ 23 ವರ್ಷದ ಲುಪೀಟ ಜೋನ್ಸ್ 40ನೇ ವಿಶ್ವ ಸುಂದರಿ ಎಂಬ ಕಿರೀಟ ಮುಡಿಗೇರಿಸಿಕೊಂಡರು.

1993: ಇಂಟೆಲ್ ಕಂಪನಿಯ ಹೊಸ ಪೆಂಟಿಯಂ ಪ್ರೊಸೆಸ್ಸರ್ ಅನಾವರಣಗೊಳಿಸಲಾಗಿತ್ತು.

2004: ಮ್ಯಾಸಾಚುಸೆಟ್ಸ್ ಸಲಿಂಗ ಮದುವೆಗಳನ್ನು ಕಾನೂನುಬದ್ದಗೊಳಿಸಿದ ಅಮೇರಿಕಾದ ಮೊದಲ ರಾಜ್ಯವಾಗಿತ್ತು.

ಪ್ರಮುಖಜನನ/ಮರಣ:

1749: ಎಡ್ವರ್ಡ್ ಜೆನ್ನರ್ ಇಂಗ್ಲೀಷ್ ವೈದ್ಯ, ಸಿಡುಬು ಲಸಿಕೆಗಳನ್ನು ಕಂಡುಹಿಡಿದವ ಬರ್ಕಿಯಲ್ಲಿ ಜನಿಸಿದರು.

1836: ಹೀಲಿಯಂ ಕಂಡುಹಿಡಿದ ವಿಜ್ಞಾನಿ, ಬ್ರಿಟನ್ ಖಗೋಳಶಾಸ್ತ್ರಜ್ಞ ಜೋಸೆಫ್ ನಾರ್ಮನ್ ಲಾಕ್ಯರ್ ಜನಿಸಿದರು.

1935: ವಿಶ್ವ ಪ್ರಸಿದ್ಧ ವಾಚ್ ತಯಾರಕ ಇವಾನ್ ಸ್ಲೋನ್ ಜನಿಸಿದರು.

1758: ಜಾನ್ ಸೇಂಟ್ ಔಬಿನ್, ಬ್ರಿಟಿಷ್ ಪಳೆಯುಳಿಕೆ ಸಂಗ್ರಾಹಕ ಜನಿಸಿದರು.

 

Categories
e-ದಿನ

ಮೇ-16

 

ಪ್ರಮುಖಘಟನಾವಳಿಗಳು:

1606: 2000 ವಿದೇಶಿಯರು ರಷ್ಯಾದಲ್ಲಿ ಕೊಲೆಯಾದರು.

1792: ಡೆನ್ಮಾರ್ಕ್‌ನಲ್ಲಿ ಗುಲಾಮರ ವ್ಯಾಪಾರ ಪದ್ದತಿಯನ್ನು ರದ್ದುಗೊಳಿಸಲಾಯಿತು.

1817: ಮಿಸ್ಸಿಸಿಪಿ ನದಿಯ ಉಗಿ ದೋಣಿ ಸೇವೆಯನ್ನು ಆರಂಭಿಸಲಾಯಿತು.

1862: ಜೀನ್ ಜೋಸೆಫ್ ಎಟಿಯೆನ್ನೆ ಲೆನೀರ್ ಮೊದಲ ವಾಹನವನ್ನು ನಿರ್ಮಿಸಿದರು.

1866: ಚಾರ್ಲ್ಸ್ ಎಲ್ಮರ್ ಹೈರ್ಸ್ ಬೇರಿನಿಂದ ಮಾಡುವ ಬಿಯರ್ ಕಂಡುಹಿಡಿದರು.

1872: ಮೆಟ್ರೊ ಪಾಲಿಟನ್ ಗ್ಯಾಸ್ ಕಂಪನಿಯ ದೀಪಗಳನ್ನು ಮೊದಲ ಬಾರಿ ಹಚ್ಚಲಾಯಿತು.

1875: ವೆನಿನ್ಸುಲಾ ಮತ್ತು ಕೊಲಂಬಿಯಾನಲ್ಲಿ ಭಾರೀ ಭೂಕಂಪದಿಂದ 16,000 ಜನ ಮೃತಪಟ್ಟಿದ್ದರು.

1881: ವಿಶ್ವದ ಪ್ರಥಮ ವಿದ್ಯುತ್ ಟ್ರಾಮ್ ಲಿಚ್ಟರ್ಫೆಲ್ಡರ್ನಲ್ಲಿ (ಬರ್ಲಿನ್ ಹತ್ತಿರ) ಆರಂಭವಾಯಿತು.

1894: ಬಾಸ್ಟನ್ ನಲ್ಲಿ ಬೆಂಕಿ ಅನಾಹುತದಿಂದ ಒಂದು ಬೇಸ್ ಬಾಲ್ ಸ್ಟೇಡಿಯಂ ಸಹಿತ ಸುತ್ತಮುತ್ತಲಿನ 170 ಕಟ್ಟಡಗಳನ್ನು ಧ್ವಂಸವಾಯಿತು.

1903: ಮೊದಲ ಖಂಡಾಂತರ ಮೋಟಾರ್ಸೈಕಲ್ ಪ್ರವಾಸ ಆರಂಭವಾಯಿತು.

1924: ಲೌಸಿಯಾನದಲ್ಲಿ ಪ್ರಹಾವ ಉಂಟಾಗಿ ಅನೇಕ ಪ್ರಾಣ ಮತ್ತು ಮನೆಗಳು ಹಾನಿಗೀಡಾಗಿದ್ದವು.

1929: ಮೊಟ್ಟಮೊದಲ ಅಕಾಡೆಮಿ ಮತ್ತು ವಿಜ್ಞಾನ ಪ್ರಶಸ್ತಿಗಳನ್ನು ಚಲನಚಿತ್ರ ಕ್ಷೇತ್ರದಲ್ಲಿ ನೀಡಲಾಯಿತು.

1936: ಬ್ರಿಟಿಶ್ ದೇಶದ ಮೊದಲ ಗಗನ ಸಖಿ ಫ್ರಾನ್ಸ್‌ಗೆ ವಿಮಾನ ಪ್ರಯಾಣ ಮಾಡಿದರು.

1938: ಮೊದಲ ಪ್ರಾಣಿ ಸಾಕಣೆ ಸಮಾಜವು ಆರಂಭವಾಯಿತು.

1939: ಆಹಾರದ ಅಂಚೆಚೀಟಿಗಳು ಮೊದಲ ಬಾರಿ ವಿತರಣೆಯಾಯಿತು.

1940: ನಾಜಿ ದೇಶದಲ್ಲಿ ವೃತ್ತಿಪರವಲ್ಲದ ಕಾರ್ಮಿಕರನ್ನು ನಿಷೇದಿಸಲಾಯಿತು.

1948: ಮೊದಲ ಬಾರಿ ಇಸ್ರೇಲ್‌‌ನಲ್ಲಿ ಅಂಚೆ ಚೀಟಿಗಳನ್ನು ವಿತರಿಸಲಾಗಿತ್ತು.

1956: ಗ್ರೇಟ್ ಬ್ರಿಟನ್ ದೇಶ ಆಸ್ಟ್ರೇಲಿಯಾದ ಮಾಂಟೆ ಬೆಲ್ಲೋನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸಿದೆ.

1974: ಏಳು ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ವಿಮಾನದಿಂದ ಬಾಂಬ್ ದಾಳಿ ಸ್ಪೋಟದಿಂದ27 ಜನ ಮೃತಪಟ್ಟರು.

1975: ಜಪಾನಿನ ಜಂಕೋ ಟೆಬಿಯ ಅವರು ಮೌಂಟ್ ಎವೆರೆಸ್ಟ್ ಶಿಖರವನ್ನು ತಲುಪಿದ ಮೊದಲ ಮಹಿಳೆ.

2010: ಜಪಾನಿನಲ್ಲಿ ಮೊದಲ ಬಾರಿ ಒಂದು ರೋಬಾಟ್ ನಿಂದ ದಂಪತಿಗಳು ಮದುವೆ ಮಾಡಿಸಿಕೊಂಡರು.

2013: ಮಾನವ ಕಾಂಡಕೋಶಗಳನ್ನು ಅಬೀಜ ಸಂತಾನದಿಂದ ಯಶಸ್ವಿಯಾಗಿಸಬಹುದು ಎಂದು ಸಾಬೀತು ಪಡಿಸಲಾಯಿತು.

ಪ್ರಮುಖಜನನ/ಮರಣ:

1916 : ಹಿರಿಯ ಪತ್ರಕರ್ತರಾದ ಶ್ರೀ ವೈ.ಎನ್.ಕೆ ಅವರು ಜನಿಸಿದರು.

1926 : ಹಿರಿಯ ರಂಗಕರ್ಮಿಗಳಾದ ಪ್ರೊ:: ಬಿ.ಚಂದ್ರಶೇಖರ್ ಅವರು ಜನಿಸಿದರು.

 

Categories
e-ದಿನ

ಮೇ-15

 

ಪ್ರಮುಖಘಟನಾವಳಿಗಳು:

1869: ಸುಸೆನ್ ಬಿ ಆಂಟೋನಿ ಮತ್ತು ಎಲಿಜಿಬತ್ ಕಾಡಿ ಸ್ಟಾಂಟನ್ ಸೇರಿ “ನ್ಯಾಷನಲ್ ವುಮನ್ ಸಫ್ರಿಜ್ ಅಸೋಸಿಯೇಷನ್” ಎಂಬ ಸಂಸ್ಥೆಯನ್ನು ನ್ಯೂಯಾರ್ಕ್‌ನಲ್ಲಿ ಪ್ರಾರಂಭಿಸಿದರು.

1940: ಮೆಕ್ ಡೋನಾಲ್ಡ್ ತನ್ನ ಮೊದಲ ಉಪಹಾರ ಗೃಹವನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಡಿನೋದಲ್ಲಿ ಆರಂಭವಾಯಿತು.

1602: ಇಂಗ್ಲೀಷ್ ನಾವಿಕ ಬಾರ್ತಲೋಮೀವ್ ಗೋಸ್ನಾಲ್ಡ್ ಕೇಪ್ ಕಾಡ್ ಕಂಡುಹಿಡಿದರು.

1940: ಅಮೇರಿಕಾದಲ್ಲಿ ನೈಲಾನ್ ಸಾಕ್ಸ್ ಮೊದಲ ಬಾರಿಗೆ ಸಾಮಾನ್ಯರಿಗೆ ಮಾರಾಟಕ್ಕಿಡಲಾಯಿತು.

1949: ಟೆಕ್ಸಾಸ್ ನಲ್ಲಿ ದೊಡ್ಡ ಸುಂಟರಗಾಳಿ ಅಬ್ಬರಿಸಿ 6 ಜನ ಮೃತ ಪಟ್ಟು 50ಕ್ಕೂ ಹೆಚ್ಚು ಮನೆಗಳು ಉರುಳಿಹೋದವು.

1957: ಬ್ರಿಟನ್ ಪೆಸಿಫಿಕ್ ಸಾಗರದಲ್ಲಿ ಕ್ರಿಸ್ಮಸ್ ದ್ವೀಪ ಪ್ರದೇಶದ ಮೇಲೆ ಮೊದಲ ಜಲಜನಕ ಬಾಂಬ್ ಪರೀಕ್ಷಿಸುತ್ತದೆ

1981: 20,000,000ನೇ ವೋಕ್ಸ್ವಾಗನ್ ಬೀಟಲ್ ಕಾರು ಮೆಕ್ಸಿಕೋದ ನಿರ್ಮಾಣ ಘಟಕದಿಂದ ಹೊರಬಂದಿತು.

2008: ಕ್ಯಾಲಿಫೋರ್ನಿಯಾದ ಸರ್ವೋಚ್ಛ ನ್ಯಾಯಾಲಯವು ಸಲಿಂಗಿಗಳ ಮದುವೆಯನ್ನು ಮಾನ್ಯ ಮಾಡಲಾಯಿತು.

2012: ವಿಶ್ವದ ಅತ್ಯಂತ ಹಳೆಯ ಮತ್ತು ಪ್ರಸಿದ್ದಿಯ ವಜ್ರಗಳಲೊಂದನ್ನು $9.7 ಮಿಲಿಯನ್‌ಗೆ ಹಾರಾಜಿನಲ್ಲಿ ಮಾರಾಟವಾಯಿತು.

1672: 1ನೇ ಹಕ್ಕುಸ್ವಾಮ್ಯವನ್ನು ಮೆಸಾಚೂಸೆಟ್ಸ್‌ನಲ್ಲಿ ಜಾರಿ ತರಲಾಯಿತು.

1718: ಜೇಮ್ಸ್ ಪಕಲ್ ವಿಶ್ವದ ಮೊದಲ ಮಶೀನ್ ಗನ್‌ಗೆ ಪೇಟೆಂಟ್ ಪಡೆದರು.

1817: ಅಮೇರಿಕಾದ ಮೊದಲ ಖಾಸಗಿ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು.

1856: 2ನೇ ಸೆಕ್ಯೂರಿಟಿ ಫೋರ್ಸ್ ವಿಜಿಲೆನ್ಸ್ ಕಮಿಟಿ ರಚಿಸಲಾಯಿತು.

1862: ಅಮೇರಿಕಾದ ಕೃಷಿ ಇಲಾಖೆಯನ್ನು ಆರಂಭಿಸಲಾಯಿತು.

1896: ಬಿರುಗಾಳಿಯಿಂದ 78 ಜನ ಮೃತ ಪಟ್ಟಿದ್ದರು.

1915: ಎಟಿ & ಟಿ 1 ಮಿಲಿಯನ್ ಸ್ಟಾಕ್ ಹೋಲ್ಡರ್ ಗಳನ್ನು ಹೊಂದಿದ ಮೊದಲ ನಿಗಮವಾಗಿ ರಚನೆಯಾಯಿತು.

1928: ಮಿಕ್ಕಿ ಮೌಸ್ ಮೊಟ್ಟ ಮೊದಲಾಗಿ ಕಾಣಿಸಿಕೊಂಡಿದ್ದು ಮೂಕಿ ಚಿತ್ರ “ಪ್ಲೇನ್ ಕ್ರೇಜಿ”ನಲ್ಲಿ ಪ್ರದರ್ಶಿತವಾಯಿತು.

1930: ಎಲೆನ್ ಚರ್ಚ್ ಮೊದಲ ಅಂತರರಾಷ್ಟ್ರೀಯ ವಿಮಾನಗಳ ಮಹಿಳಾ ಏರ್ಲೈನ್ ವ್ಯವಸ್ಥಾಪಕಿಯಾಗಿದ್ದರು.

1933: ಅಮೇರಿಕಾದ ಸೆನೆಟ್‌‌ನಲ್ಲಿ ಮೊದಲ ಧ್ವನಿವರ್ಧಕ ವ್ಯವಸ್ಥೆಯನ್ನು ಬಳಸಲಾಗಿತ್ತು.

1965: ಮಾಸ್ಕೋದ ಮೆಟ್ರೋನಲ್ಲಿ ಮೊದಲ ಬಾರಿ ಸಾರ್ವಜನಿಕರಿಗೆ ಉಪಯೋಗಿಸಲು ತೆರವು ಮಾಡಲಾಗಿತ್ತು.

1955: ಕೆ.ಜಿ.ಎಲ್.ಓ (ಈಗ ಕೆ.ಐ.ಎಂ.ಟಿ) ದೂರದರ್ಶನ ಚ್ಯಾನಲ್ ತನ್ನ ಮೊದಲ ಪ್ರಸಾರವನ್ನು ಮಾಡಿತು.

1955: ಅಮೇರಿಕಾ ನೆವಾಡ ಎಂಬ ಪರಿಕ್ಷಾ ಸ್ಥಳದಲ್ಲಿ ಮೊದಲ ಪರಮಾಣು ಪರೀಕ್ಷೆಯನ್ನು ನೆರವೇರಿಸಿತು.

1957: ಬ್ರಿಟಿಷ್‌ ದೇಶದವರ ಮೊದಲ ಹೈಡ್ರೋಜನ್ ಬಾಂಬ್ (ಕ್ರಿಸ್ಮಸ್ ಐಲ್ಯಾಂಡ್)ನಲ್ಲಿ ಸ್ಫೋಟವಾಯಿತು.

ಪ್ರಮುಖಜನನ/ಮರಣ:

1565: ಹೆನ್ರಿಕ್ ಡಿಕೈಸರ್ ಆಮ್ಸ್ಟರ್ ಡ್ಯಾಮ್ ನಿರ್ಮಿಸಿದ ವಾಸ್ತುಶಿಲ್ಪಿ ಜನಿಸಿದರು.

1720: ಮ್ಯಾಕ್ಸಿ ಮಿಲ್ಲನ್ ಹೆಲ್ ಸ್ಲೋವಾಕಿಯಾದ ಖಗೋಳಶಾಸ್ತ್ರಜ್ಞ ಜನಿಸಿದರು.

1621: ಹೆನ್ರಿಕ್ ಡಿಕೈಸರ್ ಆಮ್ಸ್ಟರ್ ಡ್ಯಾಮ್ ನಿರ್ಮಿಸಿದ ವಾಸ್ತುಶಿಲ್ಪಿ ಅಸುನೀಗಿದರು.

1937: ಹಿರಿಯ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರು ಜನಿಸಿದರು.

1991: ಜರ್ಮನ್ ದೇಶದ ಗಣಿತಜ್ಞ ಆನ್ಡ್ರಿಯಾಸ್ ಫ್ಲೋರ್ ಮರಣಹೊಂದಿದರು.

2006: ಇರಾಖ್ ನ ಸದ್ದಾಮ್ ಹುಸ್ಸೇನ್ನನ್ನು ಗಲ್ಲಿಗೆ ಏರಿಸಲಾಯಿತು.

 

Categories
e-ದಿನ

ಮೇ-14

 

ಪ್ರಮುಖಘಟನಾವಳಿಗಳು:

1796: ಇಂಗ್ಲೀಷ್ ವೈದ್ಯ ಎಡ್ವರ್ಡ್ ಜೆನ್ನರ್ ಮೊದಲ ಯಶಸ್ವಿ ಸಿಡುಬು ಲಸಿಕೆ ಕಂಡು ಹಿಡಿದರು.

1853: ಗೇಲ್ ಬೋರ್ಡೆನ್ ಮಂದಗೊಳಿಸಿದ ಹಾಲಿಗೆ ಒಂದು ಪೇಟೆಂಟ್ ಅರ್ಜಿ ಸಲ್ಲಿಸಿದರು.

1897: ಗುಗ್ಲಿಯೇಲ್ಮೋ ಮಾರ್ಕೋನಿ ಮೊದಲ ವೈರ್ಲೆಸ್ ಟೆಲಿಗ್ರಾಫ್ ಸಂದೇಶ ಕಳುಹಿಸುತ್ತಾರೆ.

1940: ಎರಡನೆಯ ವಿಶ್ವ ಮಹಾಯುದ್ಧದಲ್ಲಿ ಹಾಲ್ಲೆಂಡ್ ದೇಶವು ಜರ್ಮನಿ ದೇಶಕ್ಕೆ ಶರಣಾಗುತ್ತದೆ.

1973: ಅಮೇರಿಕಾ ದೇಶದ ಮೊದಲ ಬಾಹ್ಯಾಕಾಶದ ನಿಲ್ದಾಣ ಬಿಡುಗಡೆಯಾಯಿತು.

1702: ಇಂಗ್ಲೆಂಡ್ ಮತ್ತುನೆದರ್ ಲ್ಯಾಂಡ್ ದೇಶಗಳು ಫ್ರಾನ್ಸ್ ಮತ್ತು ಸ್ಪೇನ್ ದೇಶಗಳ ಮೇಲೆ ಯುದ್ಧ ಘೋಷಿಸಿತು.

1767: ಬ್ರಿಟಿಷ್ ಸರ್ಕಾರ ಅಮೇರಿಕದಿಂದ ತರಿಸುವ ಚಹಾ ಪುಡಿಯ ಮೇಲಿನ ಆಮದು ಶುಲ್ಕವನ್ನು ರದ್ದುಗೊಳಿಸಿತು.

1811: ಪ್ರೇಗ್ ದೇಶ ಸ್ಪೇನ್ ದೇಶದ ಆಳ್ವಿಕೆಯಿಂದ ಮುಕ್ತವಾಗಿ ಸ್ವತಂತ್ರ‍ವಾಯಿತು.

1842: ವಿಶ್ವದ ಮೊದಲ ಸಚಿತ್ರ ಸಾಪ್ತಾಹಿಕ ಪತ್ರಿಕೆಯ ಮುದ್ರಣ ಆರಂಭವಾಯಿತು.

1862: ಸ್ವಿಜರ್ಲ್ಯಾಂಡ್ ದೇಶದ ಅಡೋಲ್ಫ್ ನಿಕೋಲ್ ವರ್ಷಬಂಧ (ಕ್ರೊನೋಗ್ರಾಫಿ)ದ ಪೇಟೆಂಟ್ ಪಡೆದರು.

1878: ವ್ಯಾಸಲೀನ್‌ಗೆ ಪೇಟೆಂಟ್ ದೊರೆಯಿತು.

1884: ಏಕಸ್ವಾಮ್ಯ ವಿರೋಧಿ ಪಕ್ಷ ಅಮೇರಿಕಾದಲ್ಲಿ ಆರಂಭವಾಯಿತು.

1889: ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಲಂಡನ್ ನಲ್ಲಿ “ದಿ ನ್ಯಾಷನಲ್ ಸೊಸೈಟಿ ಫಾರ್‍ ದಿ ಪ್ರಿವೆಂಷನ್ ಆಫ್ಕ್ರುಯೆಲ್ಟಿ ಟು ಚಿಲ್ಡ್ರೆನ್” ಸ್ಥಾಪಿಸಲಾಯಿತು.

1894: ಬೋಸ್ಟನ್ ನಲ್ಲಿ ಬೆಂಕಿ ಅನಾಹುತವಾಗಿ ಅಕ್ಕ ಪಕ್ಕದ 170 ಕಟ್ಟಡಗಳು ನಾಶವಾಗಿತ್ತು.

1896: ಅಮೇರಿಕಾದಲ್ಲಿ ಮೇ ತಿಂಗಳ ಅತೀ ಕನಿಷ್ಟ ಉಷ್ಣಾಂಶ ದಾಖಲೆ (-10oC/-23oC)

1905: 2ನೇ ಅಧಿಕೃತ ಅಂತರ ರಾಷ್ಟ್ರೀಯ ಸಾಕರ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ನೆದರ್ಲ್ಯಾಂಡ್ 4-0 ಅಂತರದಲ್ಲಿ ಪಂದ್ಯ ಗೆದ್ದಿತ್ತು.

1908: ಮೊದಲ ಪ್ರಯಾಣಿಕರ ವಿಮಾನಯಾನ ಆರಂಭವಾಯಿತು.

1910: ಕೆನಡಾ ರಾಷ್ರ ಬೆಳ್ಳಿ ನಾಣ್ಯಗಳನ್ನು ವಿತರಿಸಲು ಅನುಮತಿಯನ್ನು ನೀಡಿತು.

1913: ಫ್ರಾನ್ಸ್ ಹ್ಯಾಲ್ಸ್ ವಸ್ತುಸಂಗ್ರಹಾಲಯ ಆರಂಭವಾಯಿತು.

1921: ಫ್ಲೋರೆನ್ಸ್ ಆಲ್ಲೆನ್ ಓಹಿಯೊ ದೇಶದಲ್ಲಿ ಒಬ್ಬ ಪುರುಷನನ್ನು ಗಲ್ಲು ಶಿಕ್ಷೆಗೆ ಗುರಿ ಮಾಡಿದ ಮೊದಲ ಮಹಿಳೆ ನ್ಯಾಯಧೀಶರಾದರು.

1931: ಸ್ವೀಡನ್ ನಲ್ಲಿ ಸೈನಿಕರು ಒಂದು ನಿರಾಯುಧರಾಗಿದ್ದ ಟ್ರೇಡ್ ಯೂನಿಯನ್ ಪ್ರದರ್ಶನದ ಮೇಲೆ ಗುಂಡು ಹಾರಿಸಿದರು.

1939: ಲೀನಾ ಮೆಡಿನಾ 5 ವರ್ಷದ ಬಾಲಕಿ ವೈದ್ಯಕೀಯ ಇತಿಹಾಸದಲ್ಲಿ ದೃಡೀಕೃತವಾದಂತೆ ಪ್ರಪಂಚದ ಅತಿ ಕಿರಿಯ ತಾಯಿಯಾಗಿದ್ದರು.

1948:ಬ್ರಿಟೀಶ್‌ ಆಡಳಿತದಡಿಯಿಂದ ಇಸ್ರೇಲ್ ದೇಶ ಸ್ವಾತಂತ್ರ್ಯ ಪಡೆಯಿತು.

1963: ಕುವೇಟ್ ರಾಷ್ಟ್ರವನ್ನು ಯುನೈಟೆಡ್ ನೇಷನ್ಸ್‌ಗೆ ಸೇರಿಸಿಕೊಳ್ಳಲಾಯಿತು.

ಪ್ರಮುಖಜನನ/ಮರಣ:

1347: ಪಚೋಮಿಯಸ್ ಈಜಿಪ್ಟ್ ಸನ್ಯಾಸಿಗಳ ವಿಹಾರ/ ತಂಗುಸ್ಥಾನಗಳ ಸಂಸ್ಥಾಪಕರು ನಿಧನರಾದರು.

1574: ಮೂರನೇ ಸಿಖ್ ಗುರು, ಗುರು ಅಮರ್ ದಾಸ್ ನಿಧನರಾದರು.

1686: ಥರ್ಮೋಮೀಟರ್‍ ಕಂಡು ಹಿಡಿದ ವಿಜ್ಙಾನಿ ಬ್ರಿಯಲ್ ಡೇನಿಯಲ್ ಫ್ಯಾರನ್ಹೀಟ್ ಜನಿಸಿದರು

 

Categories
e-ದಿನ

ಮೇ-13

 

ಪ್ರಮುಖಘಟನಾವಳಿಗಳು:

1648: ದೆಹೆಲಿಯ ಕೆಂಪು ಕೋಟೆಯ ನಿರ್ಮಾಣ ಪೂರ್ಣಗೊಂಡಿತು.

1835: ಮೊದಲ ವಿದೇಶಿ ರಾಯಬಾರ ಕಛೇರಿ ಹವಾಯಿಯಲ್ಲಿ ಆರಂಭವಾಯಿತು.

1848: ಫಿನ್ಲ್ಯಾಂಡ್ ರಾಷ್ಟ್ರಗೀತೆಯನ್ನು ಮೊದಲ ಬಾರಿಗೆ ಹಾಡಲಾಗಿತ್ತು.

1861: ಮಹಾ ಧೂಮಕೇತುವನ್ನು ಆಸ್ಟ್ರೇಲಿಯಾದ ಜಾನ್ ಟಿಬಟ್ ಕಂಡುಹಿಡಿದರು.

1884: ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸಂಸ್ಥೆ ನ್ಯೂಯಾರ್ಕ್‌ನಲ್ಲಿ ಆರಂಭವಾಯಿತು.

1888: ಬ್ರಜಿಲ್ ದೇಶದ ಯುವರಾಣಿ ಇಸಾಬೆಲ್ ಗುಲಾಮಗಿರಿಯನ್ನು ರದ್ದುಗೊಳಿಸುವುದಕ್ಕೆ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದರು.

1913: ಮೊದಲ ನಾಲ್ಕು-ಇಂಜಿನ್ ಹೊಂದಿದ್ದ ವಿಮಾನವನ್ನು ನಿರ್ಮಿಸಿ ಹಾರಿಸಲಾಗಿತ್ತು.

1916: ಮೊದಲ ಭಾರತೀಯ (ಸ್ಥಳಿಯ ಅಮೇರಿಕನ್) ದಿನವನ್ನು ಆಚರಿಸಲಾಗಿತ್ತು.

1918: ಅಮೇರಿಕಾದ ಮೊದಲ ಏರ್ ಮೇಲ್ ಅಂಚೆಚೀಟಿಗಳನ್ನು ಕೊಡಲಾಗಿತ್ತು.

1942: ಹೆಲಿಕಾಪ್ಟರ್ ಮೂಲಕ ಮೊದಲ ಅಂತರಾಷ್ಟ್ರೀಯ ಪ್ರಯಾಣ ಮಾಡಲಾಗಿತ್ತು.

1952: ಜವಹರಲಾಲ್ ನೆಹರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

1952: ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯು ತನ್ನ ಮೊದಲ ಅಧಿವೇಶನವನ್ನು ಆರಂಭಿಸಿತ್ತು.

1958: ವ್ಯಾಪಾರ ಗುರುತು “ವೆಲ್ಕ್ರೋ” ವನ್ನು ನೋಂದಾಯಿಸಲಾಗಿತ್ತು.

1982: ಬ್ರಾನಿಫ್ ವಿಮಾನ ಸಂಸ್ಥೆ ದಿವಾಳಿತನವನ್ನು ಘೋಷಿಸಿತು.

1991: ಆಪಲ್ ಸಂಸ್ಥೆಯು ಮ್ಯಾಕಿಂತೋಷ್ ಸಿಸ್ಟಮ್ 7.0 ಅನ್ನು ಬಿಡುಗಡೆ ಮಾಡಿತ್ತು.

1992: ಮೊದಲ ಬಾರಿಗೆ 3 ಗಗನಯಾತ್ರಿಗಳು ಏಕಕಾಲದಲ್ಲಿ ಬಾಹ್ಯಾಕಾಶದಲ್ಲಿ ನಡೆದರು.

2014: ಸಾಗರದ ಪುರಾತತ್ವಶಾಸ್ತ್ರಜ್ಞ ಬ್ಯಾರಿ ಕ್ಲಿಫೋರ್ಡ್ ಹೈಟಿ ಉತ್ತರ ಕರಾವಳಿಯಲ್ಲಿ ಗುರುತಿಲ್ಲದ ಧ್ವಂಸವಾಗಿರುವ ಹಡಗೊಂದನ್ನು ಕಂಡರು.

ಪ್ರಮುಖಜನನ/ಮರಣ:

1832: ಫ್ರೆಂಚ್ ನಿಸರ್ಗ ತಜ್ಞ ಮತ್ತು ಪ್ರಾಣಿಶಾಸ್ತ್ರಜ್ಞ ಜಾರ್ಜಸ್ ಕೂವೀರ್ ನಿಧನರಾದರು.

1884: ಯಾಂತ್ರಿಕವಾಗಿ ಕೋಯ್ಲು ಮಾಡುವ ಯಂತ್ರವನ್ನು ಕಂಡುಹಿಡಿದ ಸೈರಸ್ ಹಾಲ್ ಮೆಕಾರ್ಮಿಕ್ ನಿಧನರಾದರು.

2001: ಪ್ರಮುಖ ಭಾರತೀಯ ಬರಹಗಾರ ಆರ್ ಕೆ ನಾರಾಯಣ್ ನಿಧನರಾದರು.

 

Categories
e-ದಿನ

ಮೇ-12

ಪ್ರಮುಖಘಟನಾವಳಿಗಳು:

304: ರೋಮನ್ ಚಕ್ರವರ್ತಿ ಡಯೋಕ್ಲೆಟಿಯನ್ ಹದಿನಾಲ್ಕು ವರ್ಷದ ಪಂಕ್ರಾಸ್ ಎಂಬ ಬಾಲಕನನ್ನು ಕ್ರಿಶ್ಚಿಯನ್ ಮತಕ್ಕೆ ಸೇರಿದ್ದಕ್ಕಾಗಿ ಶಿರಃಚ್ಛೇದನ ಮಾಡಿಸಿದ.

1797: ಫ್ರಾನ್ಸಿನ ಮೊದಲನೆಯ ನೆಪೋಲಿನ್ ವೆನಿಸ್ ನಗರವನ್ನು ಗೆದ್ದನು.

1926: ಇಟಾಲಿಯನ್ ನಿರ್ಮಿತ ನೋರ್ಗೆ ಆಕಾಶನೌಕೆಯು ಉತ್ತರ ಧ್ರುವದ ಮೇಲೆ ಹಾರಿದ ಪ್ರಥಮ ನೌಕೆ ಎನಿಸಿತು.

1952: ಗಜ ಸಿಂಗ್ ಅವರು ಜೋಧಪುರದ ಮಹಾರಾಜರಾದರು.

1952: ಸ್ವತಂತ್ರ ಭಾರತದ ಮೊತ್ತ ಮೊದಲನೆಯ ಸಂಸತ್ ಅಧಿವೇಶನ ಆರಂಭವಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಮರುದಿನ ಸರ್ಕಾರವನ್ನು ರಚಿಸಿದರು. ಬಾಬು ರಾಜೇಂದ್ರ ಪ್ರಸಾದ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಕ್ರಮವಾಗಿ ಪ್ರಥಮ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದರು.

1965: ಸೋವಿಯತ್ ಬಾಹ್ಯಾಕಾಶ ನೌಕೆ ಲೂನಾ 5 ಚಂದ್ರನ ಮೇಲೆ ಕುಸಿಯಿತು.

1987: ಭಾರತದ ಎರಡನೆಯ ವಿಮಾನವಾಹಕ ನೌಕೆ ‘ಐ ಎನ್ ಎಸ್ ವಿರಾಟ್’ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು.

2006: ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿ ಅಗ್ರಹಾರ ಕೃಷ್ಣಮೂರ್ತಿ ಅವರ ಆಯ್ಕೆಯನ್ನು ಕೇಂದ್ರ ಸಂಸ್ಕೃತಿ ನಿರ್ದೇಶನಾಲಯ ಅನುಮೋದಿಸಿತು.

2006: ಕನ್ನಡದ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರು 2005ನೇ ಸಾಲಿನ ‘ಭಾಷಾ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆಯಾದರು.

2006: ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರು ದೋಹಾದಲ್ಲಿ ಐಎಎಎಫ್ ಸೂಪರ್ ಟೂರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಗಾಟ್ಲಿನ್ ಅವರು 100 ಮೀಟರ್ ದೂರವನ್ನು 9.76 ಸೆಕೆಂಡುಗಳಲ್ಲಿ ಕ್ರಮಿಸಿ ಈ ದಾಖಲೆ ಸ್ಥಾಪಿಸಿದರು. ಈ ಹಿಂದೆ ಜಮೈಕಾದ ಅಸಾಫಾ ಪೊವೆಲ್ 9.77 ಸೆಕೆಂಡುಗಳ ದಾಖಲೆ ನಿರ್ಮಿಸಿದ್ದರು.

2008: ಚೀನಾದ ಸಿಚುವಾನ್ ಎಂಬಲ್ಲಿ 8 ಪ್ರಮಾಣದ ಭೂಕಂಪನ ಉಂಟಾಗಿ 69,000 ಜನ ನಿಧನರಾದರು.

2008: ಜೆಸ್ಸಿಕಾಲಾಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಮನು ಶರ್ಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು.

2008: ಮಧ್ಯಪ್ರದೇಶದ ಮೊರೆನ ಜಿಲ್ಲೆಯ ಹಾರ್ ಹಳ್ಳಿಯಲ್ಲಿ ಎರಡು ದಿನಗಳಿಂದ ಬಿಸಿಲಿನ ಝಳಕ್ಕೆ ಆರಕ್ಕೂ ಅಧಿಕ ನವಿಲುಗಳು ಸತ್ತವು. ಹಿಂದಿನ ವರ್ಷ ಕೂಡ ಅತಿಯಾದ ಬಿಸಿಲಿಗೆ 61 ನವಿಲುಗಳು ಸತ್ತಿದ್ದವು. ಜಿಲ್ಲೆಯಲ್ಲಿ 72 ಸಾವಿರ ನವಿಲುಗಳಿವೆ ಎಂದು ಅಂದಾಜಿಸಲಾಗಿದೆ.

2016: ಭಾರತದ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷರಾದ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಂಡರು.

ಪ್ರಮುಖಜನನ/ಮರಣ:

1820: ಆಧುನಿಕ ದಾದಿ ಎಂದು ಪರಿಗಣಿತರಾಗಿರುವ ದಾದಿ, ಸಮಾಜ ಸೇವಾಕರ್ತೆ, ಸಂಖ್ಯಾಶಾಸ್ತ್ರಜ್ಞೆ, ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಫ್ಲಾರೆನ್ಸ್ ನಗರದಲ್ಲಿ ಜನಿಸಿದರು.

1895: ಕೆನಡಾದ ರಸಾಯನ ಶಾಸ್ತ್ರಜ್ಞ ವಿಲ್ಲಿಯಮ್ ಜಿಯಾಯುಕ್ಯು ಅವರು ಕೆನಡಾದ ನಯಾಗರ ಫಾಲ್ಸ್ ಬಳಿಯಲ್ಲಿ ಜನಿಸಿದರು. ಸೊನ್ನೆ ಡಿಗ್ರಿ ಉಷ್ಣಾಂಶದಲ್ಲಿ ವಸ್ತುವಿನ ಗುಣಗಳನ್ನು (ಪ್ರಾಪರ್ಟಿಸ ಆಫ್ ಮ್ಯಾಟರ್ ಇನ್ ಆಬ್ಸಲ್ಯೂಟ್ ಜೀರೋ) ನಿರೂಪಿಸಿದ ಇವರಿಗೆ 1949 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1895: ತತ್ವಜ್ಞಾನಿ, ಉಪನ್ಯಾಸಕ ಮತ್ತು ಬರಹಗಾರ ಜಿಡ್ಡು ಕೃಷ್ಣಮೂರ್ತಿ ಅವರು ಆಂಧ್ರಪ್ರದೇಶದ ಮದನಪಲ್ಲೆ ಎಂಬಲ್ಲಿ ಜನಿಸಿದರು. ಮಾನಸಿಕವಾಗಿ ಕ್ರಾಂತಿ, ಮನಸ್ಸಿನ ಪ್ರಕೃತಿ, ಧ್ಯಾನ, ಪ್ರಶ್ನಿಸಿಕೊಳ್ಳುವಿಕೆ, ಮನುಷ್ಯರ ನಡುವಿನ ಸಂಬಂಧಗಳು ಮತ್ತು ಸಮಾಜದಲ್ಲಿನ ಆಮೂಲಾಗ್ರ ಬದಲಾವಣೆ ಮುಂತಾದ ವಿಚಾರಗಳಲ್ಲಿ ಅವರ ಚಿಂತನೆಗಳು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿವೆ.

1899: ಮೂಗೂರು ಶೈಲಿಯ ಭರತ ನಾಟ್ಯಕ್ಕೆ ಒಂದು ವ್ಯವಸ್ಥೆ ನಿರ್ಮಿಸಿದ ಜೇಜಮ್ಮನವರು ಮೈಸೂರು ಜಿಲ್ಲೆಯ ಮೂಗೂರು ಎಂಬಲ್ಲಿ ಜನಿಸಿದರು. 1963ರ ವರ್ಷದಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿ ಗೌರವ ಇವರಿಗೆ ಸಂದಿತ್ತು.

1910: ಇಂಗ್ಲಿಷ್ ಜೈವಿಕ ವಿಜ್ಞಾನಿ ಡೊರೋತಿ ಹಾಡ್ಜ್ಕಿನ್ ಅವರು ಕೈರೋದಲ್ಲಿ ಜನಿಸಿದರು. ಪ್ರೋಟೀನ್ ಕ್ರಿಸ್ಟಲೋಗ್ರಫಿ ಕುರಿತಾದ ಸಂಶೋಧನೆಗಾಗಿ ಈಕೆಗೆ 1964ರ ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತ್ತು.

1970: ನೊಬೆಲ್ ಪುರಸ್ಕೃತ ಜರ್ಮನ್ ಕವಿ ಮತ್ತು ನಾಟಕಕಾರ ನೆಲ್ಲಿ ಸಾಚ್ಸ್ ಅವರು ಸ್ವೀಡನ್ನಿನ ಸ್ಟಾಕ್ಹೋಮ್ ನಗರದಲ್ಲಿ ನಿಧನರಾದರು.

1994: ‘ಟೆಫ್ಲಾನ್’ ಸಂಶೋಧಕ ರಾಯ್. ಜೆ. ಪ್ಲುಂಕೆಟ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಎರಡನೇ ವಿಶ್ವಸಮರದ ಸಂದರ್ಭದಲ್ಲಿ ಈ ಹೊಸ ಪ್ಲಾಸ್ಟಿಕ್ಕನ್ನು ಲೋಹದ ಉಪಕರಣಗಳ ಸಂರಕ್ಷಣೆಗಾಗಿ ಬಳಸಲಾಯಿತು. ರೇಡಿಯೋ ವಿಕಿರಣ (ರೇಡಿಯಾಕ್ಟಿವ್) ವಸ್ತುಗಳ ಉತ್ಪಾದನೆಯಲ್ಲೂ ಬಳಸಲಾಯಿತು. ಡ್ಯೂಪಾಂಟ್ ಸಂಸ್ಥೆಯು 1960ರಲ್ಲಿ ಟೆಫ್ಲಾನ್ ಬಳಿದ ನಾನ್ ಸ್ಟಿಕ್ ಅಡಿಗೆ ಸಲಕರಣೆಗಳನ್ನು ತನ್ನ ಟ್ರೇಡ್ ಮಾರ್ಕ್ ಹಾಕಿ ಬಿಡುಗಡೆ ಮಾಡಿತು.

2008: ಜಮ್ಮುವಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕೆಜಿಎಫ್ ಇಪ್ಪತ್ತೊಂಬತ್ತರ ಹರಯದ ಯೋಧ ರಘುನಾಥನ್ ಗುಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿದರು.

2009: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಖ್ಯಾತಿ ಪಡೆದಿದ್ದ ಸಖಾನ್ ದೊಸೊವ ತಮ್ಮ 130ನೇ ವಯಸ್ಸಿನಲ್ಲಿ ಲಂಡನ್ನಿನಲ್ಲಿ ನಿಧನರಾದರು. ಜನಗಣತಿಯಿಂದ ಬೆಳಕಿಗೆ ಬಂದ ಮಾಹಿತಿಯಂತೆ ದೊಸೊವ ಜನ್ಮ ದಿನಾಂಕ 27 ನೇ ಮಾರ್ಚ್ 1879 ಎಂದು ಅಧಿಕಾರಿಗಳು ದೃಢಪಡಿಸಿದ್ದಾಗಿ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿತು.

2016: ಜನಪ್ರಿಯ ವೀಕ್ಷಕವಿವರಣೆಗಾರ ಹಾಗೂ ಕ್ರೀಡಾ ಬರಹಗಾರ ಟೋನಿ ಕೋಜಿಯರ್ ತಮ್ಮ 75ನೇ ವಯಸ್ಸಿನಲ್ಲಿ ಬಾರ್ಬಡೋಸ್ ನಗರದಲ್ಲಿ ನಿಧನರಾದರು.

 

Categories
e-ದಿನ

ಮೇ-11

ಪ್ರಮುಖಘಟನಾವಳಿಗಳು:

ಕಿಸ್ತ ಪೂರ್ವ 330:ಬೈಝಾಂಟಿಯಮ್ ಅನ್ನು ನೊವಾ ರೋಮಾ ಎಂದು ಹೆಸರು ಬದಲಾಯಿಸಿ ಸಮಾರಂಭವನ್ನು ನಡೆಸಲಾಯಿತು. ಆದರೆ ಈ ಸ್ಥಳ ರೋಮನ್ ದೊರೆ ಕಾನ್ ಸ್ಟಾಂಟಿನ್ ಹೆಸರಿನಿಂದ ಕಾನ್ ಸ್ಟಾಂಟಿನೋಪಾಲ್ ಎಂದೇ ಹೆಚ್ಚು ಪ್ರಸಿದ್ಧಗೊಂಡಿತು.

868: ಡೈಮಂಡ್ ಸೂತ್ರ ಪ್ರತಿಯನ್ನು ಮುದ್ರಿಸಲಾಯಿತು. ಇದು ಮುದ್ರಿತಗೊಂಡ ಅತ್ಯಂತ ಪ್ರಾಚೀನ ಕೃತಿಯಾಗಿದೆ.

1820: ಎಚ್.ಎಮ್.ಎಸ್ ಬೀಗಲ್ ನೌಕೆಯು ತನ್ನ ಪಯಣವನ್ನಾರಂಭಿಸಿತು. ಚಾರ್ಲ್ಸ್ ಡಾರ್ವಿನ್ ಅವರು ಈ ನೌಕೆಯ ಮೂಲಕ ತಮ್ಮ ವಿಜ್ಞಾನ ಪರ್ಯಟನೆಯನ್ನು ಕೈಗೊಂಡರು.

1857: ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಬ್ರಿಟಿಷ್ ಅಧಿಕಾರಿಗಳನ್ನು ಕೊಂದ ಮೀರತ್ತಿನ ಸಿಪಾಯಿಗಳ ಒಂದು ದಂಡು ದೆಹಲಿಯನ್ನು ವಶಪಡಿಸಿಕೊಂಡು ಬಹದ್ದೂರ್ ಷಾ ಅವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿತು.

1927: ಅಕಾಡೆಮಿ ಆಫ್ ಮೋಷನ್ ಪಿಚ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸ್ಥಾಪನೆಗೊಂಡಿತು.

1996: ಮೌಂಟ್ ಎವರೆಸ್ಟ್ ಅಪಘಾತ: ಒಂದೇ ದಿನದಂದು ಎವರೆಸ್ಟ್ ಶಿಖರ ಆರೋಹಣ ಯತ್ನದಲ್ಲಿ ಎಂಟು ಪರ್ವತಾರೋಹಿಗಳು ಅಸುನೀಗಿದರು.

1997: ಡೀಪ್ ಬ್ಲೂ ಎಂಬ ಚೆಸ್ ಆಟವಾಡುವ ಸೂಪರ್ ಕಂಪ್ಯೂಟರ್, ಪ್ರಸಿದ್ಧ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರನ್ನು ಕಡೆಯ ಪಂದ್ಯದಲ್ಲಿ ಸೋಲಿಸಿತು.

1998: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ಮೂರು ಅಣ್ವಸ್ತ್ರಗಳ ಪರೀಕ್ಷಾ ಸ್ಫೋಟ ನಡೆಸಿತು. 1998ರ ಮೇ 13ರಂದು ಇನ್ನೆರಡು ಅಣ್ವಸ್ತ್ರಗಳನ್ನು ಸ್ಫೋಟಿಸಲಾಯಿತು.

2006: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸತತ ಏಳನೇ ಬಾರಿಗೆ ಗೆದ್ದು ಅಧಿಕಾರ ಪಡೆಯುವ ಮೂಲಕ ಎಡರಂಗವು ವಿಶ್ವದಾಖಲೆ ನಿರ್ಮಾಣ ಮಾಡಿತು.

2007: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಳಲ್ಲಿ ಮಾಯಾವತಿ ಅವರ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವು 403 ಬಲದ ವಿಧಾನಸಭೆಯಲ್ಲಿ 208 ಸ್ಥಾನ ಗೆದ್ದಿತು. ಸಮಾಜವಾದಿ ಪಕ್ಷಕ್ಕೆ 97, ಬಿಜೆಪಿಗೆ 50, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ 21 ಸ್ಥಾನಗಳು ಲಭಿಸಿದರೆ 26 ಸ್ಥಾನಗಳೂ ಪಕ್ಷೇತರರು ಮತ್ತಿತರರ ಪಾಲಾದವು.

2008: ಪರಿಸರ ಮಾಲಿನ್ಯ ತಡೆಗಟ್ಟಲು ಶ್ರಮಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು `ಸ್ವರ್ಣ ಮಯೂರ ಪ್ರಶಸ್ತಿ’ಗೆ ಆಯ್ಕೆಯಾದರು. ಕಾರ್ಖಾನೆಗಳಿಂದ ಆಗುವ ಪರಿಸರ ಹಾನಿಯನ್ನು ತಡೆಗಟ್ಟಲು ಮತ್ತು ಪಾಲಿಥೀನ್ ಚೀಲದ ಬಳಕೆಯನ್ನು ರದ್ದುಪಡಿಸಿ ಪರಿಸರ ಕಾಪಾಡಲು ಹಿಮಾಚಲ ಪ್ರದೇಶ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿತ್ತು. ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2016: ಇಸ್ಲಾಮಿಕ್ ನಾಯಕ ಮೊತಿಯುರ್ ರಹ್ಮಾನ್ ನಿಜಾಮಿಯನ್ನು ಬಾಂಗ್ಲಾದೇಶ ಈದಿನ ಡಾಕ್ಕಾದಲ್ಲಿ ನೇಣಿಗೇರಿಸಿತು. 1971ರ ಪಾಕಿಸ್ತಾನದವಿರುದ್ಧದ ಬಾಂಗ್ಲಾ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಡೆಸಿದ ಹಿಂಸಾಚಾರದ ಅಪರಾಧಕ್ಕಾಗಿ ಈತನಿಗೆ ಮರಣದಂಡನೆ ವಿಧಿಸಲಾಗಿತ್ತು.

ಪ್ರಮುಖಜನನ/ಮರಣ:

1916: ಸ್ಪ್ಯಾನಿಷ್ ಸಾಹಿತಿ ಕ್ಯಾಮಿಲೊ ಜೋಸ್ ಸೆಲ ಅವರು ಸ್ಪೇನ್ ದೇಶದ ಪ್ಯಾಡ್ರನ್ ಎಂಬಲ್ಲಿ ಜನಿಸಿದರು. ಇವರಿಗೆ 1989 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1918: ಅಮೆರಿಕದ ಭೌತವಿಜ್ಞಾನಿ ರಿಚರ್ಡ್ ಫೆಯ್ನ್ ಮ್ಯಾನ್ ನ್ಯೂಯಾರ್ಕಿನ ಕ್ವೀನ್ಸ್ ಎಂಬಲ್ಲಿ ಜನಿಸಿದರು. ಎಲೆಕ್ಟ್ರೋ ಡೈನಮಿಕ್ಸ್ ಕುರಿತಾದ ಕೊಡುಗೆಗಾಗಿ ಇವರಿಗೆ 1965ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1918: ನೃತ್ಯ ಕಲಾವಿದೆ ಮೃಣಾಲಿನಿ ಸಾರಾಬಾಯಿ ಕೇರಳದಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿದ್ದವು.

1924: ಬ್ರಿಟಿಷ್ ರೇಡಿಯೋ ಖಗೋಳ ಶಾಸ್ತ್ರಜ್ಞ ಆಂತೋನಿ ಹ್ಯೂಯಿಶ್ ಅವರು ಇಂಗ್ಲೆಂಡಿನ ಫೋವೆ ಎಂಬಲ್ಲಿ ಜನಿಸಿದರು. ಅಪೇರ್ಚರ್ ಸಿಂಥೆಸಿಸ್ ಅಂಡ್ ಇಟ್ಸ್ ರೋಲ್ ಇನ್ ದಿ ಡಿಸ್ಕವರಿ ಆಫ್ ಪಲ್ಸರ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1974 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1944:ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಜನಪ್ರಿಯರಾದ ಬಾಬು ಕೃಷ್ಣಮೂರ್ತಿ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಮಂಗಳ’ ಪತ್ರಿಕಾ ಸಂಪಾದಕರಾದ ಇವರ ನೇತೃತ್ವದಲ್ಲಿ ಬಾಲಮಂಗಳ, ಬಾಲ ಮಂಗಳ ಚಿತ್ರಕಥಾ, ಗಿಳಿವಿಂಡು ಪತ್ರಿಕೆಗಳು ಹೊರಬಂದವು. ಸ್ವಾತ್ರಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಕುರಿತು ಸಂಶೋಧನೆ ನಡೆಸಿ ರಚಿಸಿದ ‘ಅಜೇಯ’ ಕೃತಿ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಕರ್ಮವೀರ ಸಾಪ್ತಾಹಿಕದ ಸಂಪಾದಕರೂ ಆಗಿದ್ದ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

1963:ಅಮೆರಿಕದ ವೈದ್ಯಶಾಸ್ತ್ರಜ್ಞ ಹರ್ಬರ್ಟ್ ಸ್ಪೆನ್ಸರ್ ಗಾಸ್ಸೆರ್ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು. ‘ಆಕ್ಷನ್ ಪೊಟೆನ್ಶಿಯಲ್ಸ್ ಇನ್ ನರ್ವ್ ಫೈಬರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1944 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

2006: ನ್ಯೂಯಾರ್ಕ್ ಟೈಮ್ಸ್ ನಿರ್ವಾಹಕ ಸಂಪಾದಕ, ಪುಲಿಟ್ಜರ್ ಪ್ರಶಸ್ತಿ ವಿಜೇತ ವರದಿಗಾರ ಎ.ಎಂ. ರೋಸೆಂಥಾಲ್ ಅವರು ತಮ್ಮ 94ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು. ಅವರು ಭಾರತದಲ್ಲೂ ವಿದೇಶೀ ಬಾತ್ಮೀದಾರರಾಗಿ ದುಡಿದಿದ್ದರು.

2006: ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಫ್ಲಾಯ್ಡ್ ಪ್ಯಾಟರ್ಸನ್ ಅವರು ನ್ಯೂಯಾರ್ಕಿನ ನ್ಯೂಪಾಲ್ಟ್ಜಿನಲ್ಲಿ ನಿಧನರಾದರು. 1956ರಲ್ಲಿ ಆರ್ಕಿ ಮೂರೆ ಅವರನ್ನು ಪರಾಭವಗೊಳಿಸುವ ಮೂಲಕ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಡೆದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು.

2009: ಭಾರತೀಯ ನೌಕಾಪಡೆಯ ಅಡ್ಮಿರಲ್ ಆಗಿದ್ದ ಸರ್ದಾರಿಲಾಲ್ ಮಾತೃದಾಸ್ ನಂದ ತಮ್ಮ 93ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು. ಪದ್ಮವಿಭೂಷಣ, ಪರಮ ವಿಶಿಷ್ಟ ಸೇವಾ ಪದಕ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

 

Categories
e-ದಿನ

ಮೇ-10

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 28:ಹ್ಯಾನ್ ರಾಜವಂಶದ ಸಮಯದಲ್ಲಿದ್ದ ಚೀನಾದ ಖಗೋಳಶಾಸ್ತ್ರಜ್ಞರು ಸೂರ್ಯನ ಮೇಲೆ ಪ್ರಥಮ ಬಾರಿಗೆ ಕಲೆಗಳನ್ನು ಗುರುತಿಸಿದರು.

1497: ಅಮೆರಿಗೋ ವೆಸ್ಪುಸ್ಸಿ ಹೊಸ ಪ್ರಪಂಚದೆಡೆಗಿನ ಪಯಣಕ್ಕಾಗಿ ಸ್ಪೇನ್ ದೇಶದ ಕ್ಯಾಡಿಸ್ ಇಂದ ಪಯಣ ಹೊರಟರು.

1774: ಹದಿನಾರನೇ ಲೂಯಿ ಫ್ರಾನ್ಸಿನ ಸಿಂಹಾಸನ ಏರಿದ. ಆತನ ಆಡಳಿತಾವಧಿಯಲ್ಲಿ ಫ್ರೆಂಚ್ ಕ್ರಾಂತಿ ಆರಂಭವಾಯಿತು. 1793ರ ಜನವರಿ 21ರಂದು ಪ್ಯಾರಿಸ್ಸಿನಲ್ಲಿ ಆತನನ್ನು ಗಿಲೋಟಿನ್ ಯಂತ್ರದ ಮೂಲಕ ಕೊಲ್ಲಲಾಯಿತು.

1824: ಲಂಡನ್ನಿನ ‘ದಿ ನ್ಯಾಷನಲ್ ಗ್ಯಾಲರಿ’ ಸಾರ್ವಜನಿಕರಿಗೆ ತೆರೆಯಿತು.

1837: ನ್ಯೂಯಾರ್ಕ್ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿ ನಿರುದ್ಯೋಗ ವಿಪರೀತ ಉಲ್ಬಣಗೊಂಡು ಆರ್ಥಿಕ ದುಃಸ್ಥಿತಿಯನ್ನು ನಿರ್ಮಿಸಿತು.

1857: ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ತಿನಲ್ಲಿ ಆರಂಭಗೊಂಡಿತು. ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು.

1908: ಮೊಟ್ಟ ಮೊದಲಬಾರಿಗೆ ತಾಯಂದಿರ ದಿನವನ್ನು ಅಮೆರಿಕದ ವೆಸ್ಟ್ ವರ್ಜೀನಿಯಾದ ಗ್ರಾಫ್ಟನ್ ಎಂಬಲ್ಲಿ ಆಚರಿಸಲಾಯಿತು.

1924: ಜೆ. ಎಡ್ಗರ್ ಹೂವರ್ ಅವರು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರಾಗಿ ನೇಮಕಗೊಂಡರು. ಅವರು 1972ರ ವರ್ಷದಲ್ಲಿ ನಿಧನರಾಗುವವರೆಗೆ ಈ ಜವಾಬ್ಧಾರಿಯನ್ನು ನಿರ್ವಹಿಸಿದರು.

1933: ನಾಜಿಗಳು ಸೆನ್ಸಾರ್ಷಿಪ್ ನಿಟ್ಟಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಪುಸ್ತಕಗಳನ್ನು ಸುಟ್ಟುಹಾಕಿದರು.

1965: ನಲವತ್ತೈದನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕಡೆಂಗೋಡ್ಲು ಶಂಕರಭಟ್ಟರ ಸಮ್ಮೇಳನಾಧ್ಯಕ್ಷತೆಯಲ್ಲಿ ಕಾರವಾರದಲ್ಲಿ ಆರಂಭಗೊಂಡಿತು.

1975: ಸೋನಿ ಸಂಸ್ಥೆಯು ಬೆಟಾಮ್ಯಾಕ್ಸ್ ವಿಡಿಯೋಕ್ಯಾಸೆಟ್ ರೆಕಾರ್ಡರ್ ಅನ್ನು ಜಪಾನಿನಲ್ಲಿ ಬಿಡುಗಡೆ ಮಾಡಿತು.

1993: ಭಾರತದ ಸಂತೋಷ ಯಾದವ್ ಎವರೆಸ್ಟ್ ಪರ್ವತವನ್ನು ಎರಡು ಸಲ ಏರಿದ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಈ ಹಿಂದೆ 1992ರ ಮೇ 12ರಂದು ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದರು.

1994: ನೆಲ್ಸನ್ ಮಂಡೇಲ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಪ್ರಪ್ರಥಮ ಕರಿಯ ವ್ಯಕ್ತಿಯಾದರು.

1997: ಇರಾನಿನ ಖೊರಾಸನ್ ಪ್ರಾಂತ್ಯದಲ್ಲಿ 7.3 ಪ್ರಮಾಣದ ಖಯೇನ್ ಭೂಕಂಪ ಏರ್ಪಟ್ಟು.

1567: ಇರಾನಿನ ಖೊರಾಸನ್ ಪ್ರಾಂತ್ಯದಲ್ಲಿ 7.3 ಪ್ರಮಾಣದ ಖಯೇನ್ ಭೂಕಂಪ ಏರ್ಪಟ್ಟು 1567 ನಿಧನರಾಗಿ, 2,300ಜನ ಗಾಯಗೊಂಡು 50 ಸಾವಿರಕ್ಕೂ ಹೆಚ್ಚು ಜನ ನಿರ್ವಸಿತರಾದರು.

2002: ಎಫ್.ಬಿ.ಐ ಏಜೆಂಟ್ ರಾಬರ್ಟ್ ಹ್ಯಾನ್ಸೆನ್ ಎಂಬಾತ 1.4 ಮಿಲಿಯನ್ ಡಾಲರ್ ಮೌಲ್ಯದ ನಗದು ಮತ್ತು ವಜ್ರಗಳನ್ನು ರಷ್ಯಾದಿಂದ ಲಂಚವಾಗಿ ಸ್ವೀಕರಿಸಿ ಅಮೆರಿಕದ ಗುಟ್ಟುಗಳನ್ನು ಬಿಟ್ಟುಕೊಟ್ಟದ್ದಕ್ಕಾಗಿ, ಪೆರೋಲ್ ಸಾಧ್ಯತೆಯೇ ಇಲ್ಲದ ಹಾಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸ್ಮರಣಾರ್ಥ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮ್ಮಿಶ್ರ ಯುಗದಲ್ಲಿರುವ ಭಾರತದಲ್ಲಿ, ಸುಸ್ಥಿರವಾದ ದ್ವಿಪಕ್ಷ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹಾರೈಸಿದರು.

ಪ್ರಮುಖಜನನ/ಮರಣ:

1855: ಭಾರತೀಯ ಆಧ್ಯಾತ್ಮಿಕ ಗುರು ಯುಕ್ತೇಶ್ವರ ಗಿರಿ ಅವರು ಬಂಗಾಳದ ಸೇರಾಂಪುರ್ ಎಂಬಲ್ಲಿ ಜನಿಸಿದರು. ಪರಮಹಂಸ ಯೋಗಾನಂದರ ಗುರುಗಳಾದ ಇವರು ಕ್ರಿಯಾಯೋಗದ ಜನಕರೆಂದು ಪ್ರಸಿದ್ಧರಾಗಿದ್ದಾರೆ.

1878: ಜರ್ಮನಿಯ ರಾಜಕಾರಣಿ, ಪತ್ರಕರ್ತ ಗುಸ್ತಾವ್ ಸ್ಟ್ರೆಸೆಮನ್ ಅವರು ಬರ್ಲಿನ್ ನಗರದಲ್ಲಿ ಜನಿಸಿದರು. ಜರ್ಮನಿ ಮತ್ತು ಫ್ರಾನ್ಸ್ ನಡುವೆ ಶಾಂತಿ ಒಪ್ಪಂದಗಳನ್ನು ಸಾಧ್ಯವಾಗಿಸಿದ ಇವರಿಗೆ 1926 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1927: ಭಾರತೀಯ ಇಂಗ್ಲಿಷ್ ಬರಹಗಾರ್ತಿ ನಯನ್ ತಾರಾ ಸಹಗಲ್ ಅಲಹಾಬಾದಿನಲ್ಲಿ ಜನಿಸಿದರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಸಂದಿತ್ತು.

1930: ಅಮೆರಿಕದ ಭೌತವಿಜ್ಞಾನಿ ಜಾರ್ಜ್ ಇ. ಸ್ಮಿತ್ ಅವರು ನ್ಯೂಯಾರ್ಕಿನ ವೈಟ್ ಪ್ಲೈನ್ಸ್ ಎಂಬಲ್ಲಿ ಜನಿಸಿದರು. ಇಮೇಜಿಂಗ್ ಸೆಮಿ ಕಂಡಕ್ಟರ್ ಸರ್ಕ್ಯೂಟ್ ಸಂಶೋಧನೆಗಾಗಿ ಇವರಿಗೆ 2009 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1931: ವಿದ್ವಾಂಸ, ಇತಿಹಾಸಜ್ಞ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಚಿದಾನಂದಮೂರ್ತಿ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೊಗಲೂರು ಎಂಬಲ್ಲಿ ಜನಿಸಿದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1933: ಕರ್ನಾಟಕದ ಜಾನಪದ ಕಲೆಗಳಲ್ಲಿ ನಶಿಸಿ ಹೋಗಿದ್ದ ಸಲಾಕೆ ಗೊಂಬೆ ಕಲೆಗೆ ಮರುಹುಟ್ಟು ನೀಡಿದ ರಂಗನಾಥರಾವ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡ ಮುದಿಗೆರೆಯಲ್ಲಿ ಜನಿಸಿದರು.

1944: ರಂಗಭೂಮಿ ಮತ್ತು ಚಲನಚಿತ್ರ ನಟ ವಜ್ರಮುನಿ ಬೆಂಗಳೂರಿನ ಕನಕಪಾಳ್ಯದಲ್ಲಿ ಜನಿಸಿದರು. ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ಇವರು ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಲವು ಚಿತ್ರಗಳ ನಿರ್ಮಾಪಕರೂ ಆಗಿದ್ದ ವಜ್ರಮುನಿ ಅವರಿಗೆ ಉತ್ತಮ ಅಭಿನಯಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮತ್ತು ಉತ್ತಮ ಚಲನಚಿತ್ರ ಸಾಧಕರಿಗೆ ನೀಡುಲಾಗುತ್ತಿರುವ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ಸಂದಿದ್ದವು.

1957: ಕನ್ನಡ ರಂಗಭೂಮಿ, ಚಲನಚಿತ್ರಗಳಲ್ಲಿ ಜನಪ್ರಿಯರಾದ ಉಮಾಶ್ರೀ ಅವರು ರಾಜಕಾರಣಿಗಳಾಗಿ, ಮಂತ್ರಿಗಳಾಗಿ ಸಹಾ ಹೆಸರಾಗಿದ್ದಾರೆ. ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೊಳಗೊಂಡ ಅನೇಕ ಗೌರವಗಳು ಅವರದ್ದಾಗಿವೆ.

1992: ನಂಬರ್ ಥಿಯರಿಯಲ್ಲಿ’ ವಿಶ್ವಪ್ರಸಿದ್ಧರಾದ ಭಾರತೀಯ ಗಣಿತಜ್ಞ ಕೆ.ಜಿ. ರಾಮನಾಥನ್ ಮುಂಬೈನಲ್ಲಿ ನಿಧನರಾದರು. ಇವರಿಗೆ ಪದ್ಮಭೂಷಣ ಗೌರವವೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿದ್ದವು.

2002: ಉರ್ದು ಕವಿ ಕೈಫಿ ಅಜ್ಮಿ ಮುಂಬೈಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಇವರು ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ತಂದೆ. ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ರಾಷ್ಟ್ರೀಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

2008: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕ, ಕಿರಾಣಾ- ಘರಾಣಾ ಸಂಗೀತ ಪ್ರಕಾರದ ಗುರು ಪಂಡಿತ್ ಫಿರೋಜ್ ದಸ್ತೂರ್ ಅವರು ತಮ್ಮ 89ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಧ್ರುವತಾರೆ ಸವಾಯಿ ಗಂಧರ್ವ ಅವರ ಅನುಯಾಯಿಗಳಲ್ಲಿ ಹಿರಿಯರಾದ ಪಂಡಿತ್ ದಸ್ತೂರ್ ಅವರು ಘರಾಣಾ ಪ್ರಕಾರದಲ್ಲಿ ವಿಖ್ಯಾತಿ ಪಡೆದಿದ್ದರು. ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ಸೇನ್ ಪ್ರಶಸ್ತಿ, ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿಗಳು ಸಂದಿದ್ದವು.

 

 

Categories
e-ದಿನ

ಮೇ-09

ಪ್ರಮುಖಘಟನಾವಳಿಗಳು:

1662: ಮಿಸ್ಟರ್ ಪಂಚ್ ಎಂದು ಪ್ರಖ್ಯಾತಗೊಂಡ ಬೊಂಬೆ ರೂಪದ ಪ್ರದರ್ಶನವು ಮೊಟ್ಟ ಮೊದಲ ಬಾರಿಗೆ ಇಂಗ್ಲೆಂಡಿನಲ್ಲಿ ಜರುಗಿತು.

1873: ವಿಯೆನ್ನಾ ಶೇರುಮಾರುಕಟ್ಟೆಯಲ್ಲಿನ ಕುಸಿತು ಬಹು ದೀರ್ಘ ಕಾಲದ ಅರ್ಥಿಕ ಕುಸಿತಕ್ಕೆ ಮುನ್ನುಡಿ ಬರೆಯಿತು.

1874: ಕುದುರೆಗಳ ಮೂಲಕ ಚಲಿಸುವ ಬಸ್ ಪಯಣ ಎರಡು ಮಾರ್ಗಗಳಲ್ಲಿ ಮುಂಬೈನಲ್ಲಿ ಆರಂಭಗೊಂಡಿತು.

1942: ಹೋಲೋಕಾಸ್ಟ್ ಹತ್ಯಾಖಾಂಡದಲ್ಲಿ ಉಕ್ರೇನಿನ ಪೋಡೋಲಿಯನ್ ಪಟ್ಟಣದಲ್ಲಿ 588 ಜ್ಯೂ ಜನಾಂಗೀಯರನ್ನು ಹತ್ಯೆ ಮಾಡಲಾಯಿತು. ಬೆಲಾರಸ್ನಲ್ಲಿನ ಜೋಲುಡೆಕ್ ಘೆಟ್ಟೋ ಪಟ್ಟಣವನ್ನು ನಾಶಪಡಿಸಿ ಅಲ್ಲಿನ ಜನರೆಲ್ಲರನ್ನೂ ಹತ್ಯೆ ಇಲ್ಲವೇ ಗಡೀಪಾರು ಮಾಡಲಾಯಿತು.

1984: ಭಾರತದ ಫು ದೋರ್ಜಿ ಆಮ್ಲಜನಕ ಇಲ್ಲದೆಯೇ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯರೆನಿಸಿದರು.

2006: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-1′ ಯೋಜನೆಗಾಗಿ ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೋ’ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಒಪ್ಪಂದಕ್ಕೆ ಸಹಿ ಮಾಡಿದವು.

2007: ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

2008: ವಿಶ್ವ ಚೆಸ್ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ‘ಚೆಸ್ ಆಸ್ಕರ್’ ಪ್ರಶಸ್ತಿಯನ್ನು ಐದನೇ ಬಾರಿ ಪಡೆದರು. 2007ರಲ್ಲಿ ಆನಂದ್ ತೋರಿದ ಶ್ರೇಷ್ಠ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಆನಂದ್ ಈ ಮೊದಲು 1997, 1998, 2003 ಹಾಗೂ 2004ರಲ್ಲಿ ಸಹಾ ಈ ಗೌರವ ಪಡೆದಿದ್ದರು.

2009: ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು.

2015: ರಷ್ಯಾವು ತನ್ನ ವಿಶ್ವ ಮಹಾಯುದ್ಧದ ವಿಜಯದ 70ನೇ ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ಮಿಲಿಟರಿ ಕವಾಯತನ್ನು ನಡೆಸಿತು.

ಪ್ರಮುಖಜನನ/ಮರಣ:

1540: ಮೇವಾರದ ದೊರೆ ರಜಪೂತ ವಂಶಸ್ಥ ಮಹಾರಾಣಾ ಪ್ರತಾಪ್ ಸಿಂಗ್ ಸಿಸೋಡಿಯಾ ಅವರು ರಾಜಾಸ್ಥಾನ ಕುಂಭಾಲ್ಘರ್ ಕೋಟೆಯಲ್ಲಿ ಜನಿಸಿದರು.

1800: ಅಮೆರಿಕದ ಗುಲಾಮೀ ಪದ್ಧತಿ ವಿರೋಧಿ ಹೋರಾಟಗಾರ ಜಾನ್ ಬ್ರೌನ್ ಅವರು ಕನೆಕ್ಟಿಕಟ್ ಬಳಿಯ ಟಾರ್ರಿಂಗ್ ಟನ್ ಎಂಬಲ್ಲಿ ಜನಿಸಿದರು. ಗುಲಾಮೀ ಪದ್ಧತಿಯನ್ನು ಹೋಗಲಾಡಿಸಲು ಇವರು ನಡೆಸಿದ ಪ್ರಯತ್ನಗಳು ಅಮೆರಿಕದ ಅಂತರ್ಯುದ್ಧಕ್ಕೆ ಪ್ರಮುಖ ಕಾರಣಗಳಾದವು.

1866: ಸ್ವಾತಂತ್ರ್ಯ ಹೋರಾಟಗಾರ, ಅರ್ಥಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಗೋಖಲೆ ಅವರು ಬಾಂಬೆ ಪ್ರೆಸಿಡೆನ್ಸಿಯ ರತ್ನಗಿರಿ ಜಿಲ್ಲೆಯ ಕೊತ್ಲುಕ್ ಎಂಬಲ್ಲಿ ಜನಿಸಿದರು. ಭಾರತದ ರಾಷ್ಟ್ರೀಯ ನಾಯಕರಾದ ಇವರು ರಾಷ್ಟ್ರದ ಅತ್ಯಂತ ದುರ್ಬಲ ವರ್ಗದ ಜನರ ಏಳಿಗೆಗಾಗಿ ಸರ್ವೆಂಟ್ಸ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು. ಜೊತೆಗೆ ಪುಣೆಯಲ್ಲಿ ರಾನಡೆ ಇನ್ ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಸ್ಥಾಪಿಸಿದರು.

1908: ಕನ್ನಡದ ಸಾಹಿತಿ, ಹೋರಾಟಗಾರ, ಸಾಂಸ್ಕೃತಿಕ ರಾಯಭಾರಿ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ.ನ.ಕೃ) ಅವರು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜನಿಸಿದರು. 250 ವೈವಿಧ್ಯಮಯ ಕೃತಿಗಳನ್ನು ರಚಿಸಿದ ಇವರು ಕರ್ನಾಟಕದ ಸಾಂಸ್ಕೃತಿಕ ವರ್ಗದ ಎಲ್ಲ ರೀತಿಯ ಕಲಾವಿದರೊಂದಿಗೆ ಸಂಪರ್ಕ ಹೊಂದಿ ಕನ್ನಡ ನಾಡಿನ ಅಭಿವೃದ್ಧಿಗೆ ಮಹತ್ವದ ಕೆಲಸ ಮಾಡಿದರು. 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿತ್ತು.

1927: ಜರ್ಮನ್ ರಸಾಯನ ಶಾಸ್ತ್ರಜ್ಞರಾದ ಮ್ಯಾನ್ಫ್ರೆಡ್ ಎಲ್ಗೆನ್ ಅವರು ಬೋಖುಮ್ ಎಂಬಲ್ಲಿ ಜನಿಸಿದರು. ಶೀಘ್ರಗತಿಯ ರಾಸಾಯನಿಕ ಪ್ರತಿಕ್ರಿಯೆಗಳ ಕುರಿತಾದ ಸಂಶೋಧನೆಗಾಗಿ ಇವರಿಗೆ 1967 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತು.

1954: ನೃತ್ಯ ಕಲಾವಿದೆ, ಅಭಿನೇತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲ್ಲಿಕಾ ಸಾರಾಭಾಯಿ ಅವರು ಅಹಮದಾಬಾದಿನಲ್ಲಿ ಜನಿಸಿದರು. ಕುಚ್ಚಿಪುಡಿ ಮತ್ತು ಭರತನಾಟ್ಯ ಕಲಾವಿದರಾದ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಮತ್ತಿತರ ಗೌರವಗಳು ಸಂದಿವೆ.

1931: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಆಲ್ಬರ್ಟ್ ಅಬ್ರಹಾಂ ಮೈಖೇಲ್ ಸನ್ ಅವರು ಕ್ಯಾಲಿಫೋರ್ನಿಯಾದ ಪೆಸಡೆನ ಎಂಬಲ್ಲಿ ನಿಧನರಾದರು. ‘ಮೆಷರ್ಮೆಂಟ್ ಆಫ್ ಸ್ಪೀಡ್ ಆಫ್ ಲೈಟ್’ ಕುರಿತಾದ ಸಂಶೋಧನೆಗಾಗಿ ಇವರು 1907ರಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರಗಳಿಸಿ, ವಿಜ್ಞಾನಕ್ಕಾಗಿ ನೊಬೆಲ್ ಪುರಸ್ಕಾರ ಗಳಿಸಿದ ಪ್ರಥಮ ಅಮೆರಿಕದ ವಿಜ್ಞಾನಿ ಎನಿಸಿದರು.

1959: ಸಮಾಜದಲ್ಲಿ ಶಿಕ್ಷಣಕ್ರಾಂತಿಗಾಗಿ ಶ್ರಮಿಸಿ, ರಾಯತ್ ಎಡುಕೇಶನ್ ಸೊಸೈಟ್ ಪ್ರಾರಂಭಿಸಿದ ಕರ್ಮವೀರ್ ಬಾವುರಾವ್ ಪಾಟೀಲ್ ತಮ್ಮ 71ನೇ ವಯಸ್ಸಿನಲ್ಲಿ ಮಹಾರಾಷ್ಟ್ರದಲ್ಲಿ ನಿಧನರಾದರು. ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1986: ಮೊಟ್ಟಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಹಿಲೇರಿ-ತೇನ್ಸಿಂಗ್ ಜೋಡಿಯ ತೇನ್ಸಿಂಗ್ ನೋರ್ಗೆ ಅವರು ತಮ್ಮ 72ನೆಯ ವಯಸ್ಸಿನಲ್ಲಿ ಡಾರ್ಜಿಲಿಂಗಿನಲ್ಲಿ ನಿಧನರಾದರು.

1998: ಪ್ರಖ್ಯಾತ ಗಾಯಕ ಮತ್ತು ನಟ ತಲತ್ ಮಹಮೂದ್ ಅವರು ತಮ್ಮ 74ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

2014: ಆಂಧ್ರಪ್ರದೇಶದ 12ನೇ ಮುಖ್ಯಮಂತ್ರಿಗಳಾಗಿದ್ದ ನಡುರುಮಲ್ಲಿ ಜನಾರ್ಧನ ರೆಡ್ಡಿ ಅವರು ಹೈದರಾಬಾದಿನಲ್ಲಿ ನಿಧನರಾದರು.

Categories
e-ದಿನ

ಮೇ-08

ಪ್ರಮುಖಘಟನಾವಳಿಗಳು:

1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹರೆಂದು ಖ್ಯಾತರಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸಿಯರ್ ಅವರನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಮರಣ ದಂಡನೆಗೆ ಗುರಿಪಡಿಸಲಾಯಿತು.

1856: ಔಷಧ ಮಾರಾಟಗಾರರಾದ ಜಾನ್ ಪೆಂಬರ್ಟನ್ ಅವರು ಮೊದಲ ಬಾರಿಗೆ ಕೋಕಾ-ಕೋಲಾವನ್ನು ಪೇಟೆಂಟ್ ಪಡೆದ ಔಷಧವನ್ನಾಗಿ ಮಾರಿದರು.

1898: ಇಟಾಲಿಯನ್ ಫುಟ್ಬಾಲ್ ಲೀಗ್ ವ್ಯವಸ್ಥೆಯ ಪ್ರಥಮ ಪಂದ್ಯವನ್ನು ಆಡಲಾಯಿತು.

1912: ಪ್ಯಾರಮೌಂಟ್ ಪಿಕ್ಚರ್ಸ್ ಸ್ಥಾಪನೆಗೊಂಡಿತು.

1933: ಮಹಾತ್ಮ ಗಾಂಧೀಜಿ ಅವರು ಸ್ವಯಂ ಶುದ್ಧೀಕರಣಕ್ಕಾಗಿ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಜೊತೆಗೆ ಹರಿಜನ ಉದ್ಧಾರದ ಕಾರ್ಯಕ್ರಮಗಳನ್ನೂ ಆರಂಭಿಸಿದರು.

1962: ರಬೀಂದ್ರ ಭಾರತಿ ವಿಶ್ವವಿದ್ಯಾಲಯವು ಸ್ಥಾಪನೆಗೊಂಡಿತು.

1978: ರೀಯಿನ್ ಹೋಲ್ಡ್ ಮೆಸ್ಸೆನೆರ್ ಮತ್ತು ಪೀಟರ್ ಹಬೇಲೆರ್ ಅವರು ಮೊಟ್ಟ ಮೊದಲ ಬಾರಿಗೆ ಪೂರಕ ಆಮ್ಲಜನಕದ ಸಹಾಯವಿಲ್ಲದೆ ಮೌಂಟ್ ಎವರೆಸ್ಟ್ ಆರೋಹಣ ಮಾಡಿದರು.

1980: ವಿಶ್ವ ಆರೋಗ್ಯ ಸಂಸ್ಥೆಯು ಸಿಡುಬು ಕಾಹಿಲೆ ಸಂಪೂರ್ಣವಾಗಿ ನಿರ್ಮೂಲನೆಗೊಂಡಿರುವುದಾಗಿ ದೃಢೀಕರಿಸಿತು.

2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.

2008: ಬೀಜಿಂಗ್ ಒಲಿಂಪಿಕ್ ಜ್ಯೋತಿಯನ್ನು ಹೊತ್ತ 26 ಸದಸ್ಯರ ಪರ್ವತಾರೋಹಿಗಳ ಮೌಂಟ್ ಎವರೆಸ್ಟ್ ಆರೋಹಣ ಈ ದಿನ ಯಶಸ್ವಿಯಾಗಿ ನಡೆಯಿತು.

ಪ್ರಮುಖಜನನ/ಮರಣ:

1828: ಸ್ವಿಸ್ ಉದ್ಯಮಿ ಮತ್ತು ಕಾರ್ಯಕರ್ತ ಹಾಗೂ ರೆಡ್ ಕ್ರಾಸ್ ಸಂಸ್ಥಾಪಕ ಮತ್ತು ಪ್ರಪ್ರಥಮ ನೊಬೆಲ್ ಶಾಂತಿ ಪುರಸ್ಕೃತರಾದ ಹೆನ್ರಿ ಡ್ಯೂನಾಂಟ್ ಅವರು ಜಿನೀವಾದಲ್ಲಿ ಜನಿಸಿದರು. 1864ರ ಜಿನೀವಾ ಸಮ್ಮೇಳನವು ಡ್ಯೂನಾಂಟ್ ಅವರ ಚಿಂತನೆಯ ಫಲಫಾಗಿ ನಡೆಯಿತು.

1884: ಅಮೆರಿಕದ 33ನೇ ಅಧ್ಯಕ್ಷರಾಗಿದ್ದ ಹ್ಯಾರಿ ಎಸ್. ಟ್ರೂಮನ್ ಅವರು ಮಿಸ್ಸೌರಿ ಬಳಿಯ ಲಮಾರ್ ಎಂಬಲ್ಲಿ ಜನಿಸಿದರು.

1899: ಆಸ್ತ್ರಿಯನ್ ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ಹಯೇಕ್ ಅವರು ವಿಯೆನ್ನಾದಲ್ಲಿ ಜನಿಸಿದರು. ಇವರಿಗೆ 1974 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತು.

1902: ಫ್ರೆಂಚ್ ಸೂಕ್ಷ ಜೀವವಿಜ್ಞಾನಿ ಆಂಡ್ರೆ ಮಿಚೆಲ್ ಲ್ವಾಫ್ ಅವರು ಜನಿಸಿದರು. ಇವರಿಗೆ ಬ್ಯಾಕ್ಟೀರಿಯಾಗಳ ಮೇಲೆ ಪ್ರಭಾವ ಬೀರುವ ಕೆಲವೊಂದು ವೈರಸ್ ಕುರಿತಾದ ಸಂಶೋಧನೆಗಾಗಿ 1965 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತು.

1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂದು ಖ್ಯಾತರಾದ ಬಾಲಕೃಷ್ಣ ಮೆನನ್ ಅವರು ಕೇರಳದಲ್ಲಿ ಜನಿಸಿದರು. ಭಗವದ್ಗೀತಾ ಪ್ರವಚನಗಳಿಗೆ ವಿಶ್ವದಾದ್ಯಂತ ಹೆಸರಾದ ಇವರು ಚಿನ್ಮಯ ಮಿಷನ್ ಸ್ಥಾಪಿಸಿದರು. 1993ರಲ್ಲಿ ಚಿಕಾಗೋದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

1917: ಅಮೆರಿಕದ ಬಾಕ್ಸಿಂಗ್ ಪಟು ಚಾರ್ಲ್ಸ್ ‘ಸೋನ್ನಿ’ ಲಿಸ್ಟನ್ ಅವರು ಅರ್ಕನಾಸ್ ಬಳಿಯ ಸ್ಯಾಂಡ್ ಸ್ಲಫ್ ಎಂಬಲ್ಲಿ ಜನಿಸಿದರು. 1962ರಿಂದ 1964ರ ಅವಧಿಯಲ್ಲಿ ಜಾಗತಿಕ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಇವರನ್ನು 1964ರಲ್ಲಿ ಮುಹಮ್ಮದ್ ಅಲಿ ಸೋಲಿಸಿದರು.

1925: ಆಧುನಿಕ ಕನ್ನಡ ಸಾಹಿತ್ಯದ ವಿಮರ್ಶಕರಲ್ಲಿ ಪ್ರಮುಖರಾದ ಡಾ. ಗುರುರಾಜ ಶ್ಯಾಮಾಚಾರ್ಯ ಅಮೂರ್ ಅವರು ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಜನ್ಮ ತಾಳಿದರು. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿಗಳಂತಹ ಅನೇಕ ಗೌರವಗಳು ಸಂದಿವೆ.

1928: ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸ, ಕವಿ-ಕಾದಂಬರಿಕಾರ-ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಅವರು ಧಾರವಾಡದಲ್ಲಿ ಜನಿಸಿದರು. ‘ಅವಧೇಶ್ವರಿ’ ಕೃತಿಗಾಗಿ ಅವರಿಗೆ 1988ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಅವರ ಮತ್ತೊಂದು ಕಾದಂಬರಿ ‘ಗಂಗವ್ವ ಗಂಗಾಮಾಯಿ’ ಕೃತಿಯನ್ನು ಇತರ ಭಾಷೆಗಳಲ್ಲಿ ಅನುವಾದಿಸಲು ನ್ಯಾಷನಲ್ ಬುಕ್ ಟ್ರಸ್ಟ್ ಆಯ್ಕೆ ಮಾಡಿತು.

1947: ಅಮೆರಿಕದ ಜೀವವಿಜ್ಞಾನಿ ಎಚ್. ರಾಬರ್ಟ್ ಹೋರ್ವಿಟ್ಜ್ ಅವರು ಚಿಕಾಗೋದಲ್ಲಿ ಜನಿಸಿದರು. ‘ನೆಮಾಟೋಡ್’ ಕ್ರಿಮಿ ಕುರಿತಾದ ಸಂಶೋಧನೆಗಾಗಿ ಇವರಿಗೆ 2002 ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.

1953: ನಾರಾಯಣ ಹೃದಯಾಲಯ ಸ್ಥಾಪಿಸಿ ಮೈಕ್ರೋಚಿಪ್ ಕ್ಯಾಮೆರಾವನ್ನು ಉಪಯೋಗಿಸಿಕೊಂಡು ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ಮೂಲಕ ಹೃದಯದ ರಂದ್ರಕ್ಕೆ ತೇಪೆ ಹಾಕುವ ಶಸ್ತ್ರ ಚಿಕಿತ್ಸೆ ಮಾಡಿದ ಪೈಕಿ ಪ್ರಪಂಚದಲ್ಲೇ ಮೊದಲಿಗರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ದಕ್ಷಿಣ ಕನ್ನಡದ ಕಿನ್ನಿಗೋಳಿ ಎಂಬಲ್ಲಿ ಜನಿಸಿದರು. ಸಿ ಎನ್ ಎನ್ ಐ ಬಿ ಎನ್ ವಾಹಿನಿಯ ಶ್ರೇಷ್ಠ ಭಾರತೀಯರೆಂಬ ಗೌರವ, ಕರ್ನಾಟಕ ರತ್ನ, ಪದ್ಮವಿಭೂಷಣ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ರಷ್ಯಾ ಮೂಲದ ಹೆಲೆನಾ ಬ್ಲಾವಟ್ ಸ್ಕಿ ಅವರು ಲಂಡನ್ನಿನಲ್ಲಿ ನಿಧನರಾದರು.

1971: ‘ತಿರುಳ್ಗನ್ನಡದ ತಿರುಕ’ ಎಂದು ಕರೆಯಿಸಿಕೊಂಡ ‘ಸರ್ವಜ್ಞನ ವಚನ’ಗಳ ಸಂಪಾದನೆಗಾಗಿ ಖ್ಯಾತರಾದ ಉತ್ತಂಗಿ ಚನ್ನಪ್ಪನವರು ನಿಧನರಾದರು.

1972: ಭಾರತೀಯ ದರ್ಶನ ಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ಪಾಂಡುರಂಗ ವಾಮನ್ ಕಾನೆ ಅವರು ತಮ್ಮ 92ನೆಯ ವಯಸ್ಸಿನಲ್ಲಿ ನಿಧನರಾದರು. ಇವರಿಗೆ 1963 ವರ್ಷದಲ್ಲಿ ಭಾರತ ರತ್ನ ಪುರಸ್ಕಾರವಿತ್ತು ಗೌರವಿಸಲಾಗಿತ್ತು.

1984: ರೀಡರ್ಸ್ ಡೈಜೆಸ್ಟ್ ಸಹ ಸಂಸ್ಥಾಪಕಿ ಲೀಲಾ ಬೆಲ್ ವಾಲೇಸ್ ಅವರು ನ್ಯೂಯಾರ್ಕಿನ ಮೌಂಟ್ ಕಿಸ್ಕೋ ಎಂಬಲ್ಲಿ ನಿಧನರಾದರು.

2014: ಜಿಪಿಎಸ್ ಸಹ-ಸಂಶೋಧಕ ರೋಜರ್ ಎಲ್. ಈಸ್ಟನ್ ಅವರು ಅಮೆರಿಕದ ಹ್ಯಾನೋವರ್ ಎಂಬಲ್ಲಿ ನಿಧನರಾದರು.

 

Categories
e-ದಿನ

ಮೇ-07

ಪ್ರಮುಖಘಟನಾವಳಿಗಳು:

1846: ಅಮೆರಿಕದ ಬಹಳ ಕಾಲದಿಂದ ಉಳಿದಿರುವ ಪತ್ರಿಕೆಯಾದ ಕೇಂಬ್ರಿಡ್ಜ್ ಕ್ರಾನಿಕಲ್ ಪತ್ರಿಕೆಯು ಮೊಟ್ಟ ಮೊದಲ ಬಾರಿಗೆ ಪ್ರಕಟಗೊಂಡಿತು.

1888: ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದರು.

1895: ಅಲೆಗ್ಸಾಂಡರ್ ಸ್ಟೆಪಾನೋವಿಕ್ ಪೊಪೋವ್ ಅವರು ತಮ್ಮ ಲೈಟ್ನಿಂಗ್ ಡಿಟೆಕ್ಟರ್ ಅನ್ನು ಪ್ರದರ್ಶಿಸಿದರು. ಇದು ಪ್ರಾರಂಭಿಕ ಮಾದರಿಯ ರೇಡಿಯೋ ಡಿಟೆಕ್ಟರ್ ಆಗಿತ್ತು.

1945: ಎರಡನೇ ವಿಶ್ವಮಹಾಯುದ್ಧದಲ್ಲಿ ಜನರಲ್ ಆಲ್ಫ್ರೆಡ್ ಅವರು ಯಾವುದೇ ಷರತ್ತೂ ಇಲ್ಲದೆ ಜರ್ಮನಿಯ ಕಡೆಯ ಶರಣಾಗತಿ ಪತ್ರಕ್ಕೆ ಫ್ರಾನ್ಸ್ ದೇಶದ ರೀಮ್ಸ್ ಎಂಬಲ್ಲಿ ಸಹಿ ಮಾಡಿದರು.

1946: ಮುಂದೆ ಸೋನಿ ಎಂದು ಪ್ರಖ್ಯಾತಗೊಂಡ ‘ಟೋಕಿಯೋ ಟೆಲಿಕಮ್ಮ್ಯೂನಿಕೇಶನ್ಸ್’ ಸಂಸ್ಥೆಯು 20 ಜನ ಸಿಬ್ಬಂದಿಯೊಂದಿಗೆ ಆರಂಭಗೊಂಡಿತು.

1947: ಮೂವತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಸಿ.ಕೆ. ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ಆರಂಭಗೊಂಡಿತು.

1952: ಎಲ್ಲ ಆಧುನಿಕ ಕಂಪ್ಯೂಟರುಗಳಿಗೆ ಮೂಲವಾದ ಇಂಟಿಗ್ರೇಟೆಡ್ ಸರ್ಕ್ಯೂಟ್ ಚಿಂತನೆಯನ್ನು ಜೆಫರಿ ಡಮ್ಮರ್ ಅವರು ಮೊದಲ ಬಾರಿಗೆ ಪ್ರಕಟಿಸಿದರು.

1957: ಮೂವತ್ತೊಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಆರಂಭಗೊಂಡಿತು.

1976: ‘ಹೊಂಡಾ ಅಕ್ಕಾರ್ಡ್’ ಕಾರು ಬಿಡುಗಡೆಗೊಂಡಿತು.

1994: ಕಳುವುಗೊಂಡಿದ್ದ ಎಡ್ವರ್ಡ್ ಮುಂಚ್ ಅವರ ‘ದಿ ಸ್ಕ್ರೀಮ್’ ಎಂಬ ಪ್ರಸಿದ್ಧ ಚಿತ್ರವನ್ನು ಯಾವುದೇ ರೀತಿಯ ಹಾನಿಯೂ ಇಲ್ಲದಂತೆ ಪುನಃವಶಪಡಿಸಿಕೊಳ್ಳಲಾಯಿತು.

2000: ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷರಾದರು.

2007: ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವದ ಅಂಗವಾಗಿ ಮೀರತ್ತಿನಿಂದ ದೆಹಲಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೊರಟ 10,000ಕ್ಕೂ ಹೆಚ್ಚು ಯುವಕರ ‘ಯಾತ್ರೆ’ಗೆ ಮೀರತ್ತಿನಲ್ಲಿ ಚಾಲನೆ ನೀಡಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರು ಮೊದಲ ‘ವಿಶ್ವ ಆರ್ಥಿಕ ಪ್ರಶಸ್ತಿ’ಗೆ ಆಯ್ಕೆಯಾದರು. ಅರ್ಥ ವ್ಯವಸ್ಥೆ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿನ ಮೂಲಭೂತ ಸಮಸ್ಯೆಗಳ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜರ್ಮನ್ ಮಾಜಿ ಚಾನ್ಸಲರ್ ಹೆಲ್ಮಂಡ್ ಶ್ಮಿಂಡ್ ಅವರೊಂದಿಗೆ ಸೇನ್ ಅವರನ್ನು ಜಂಟಿಯಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ನಡೆಸಲಾಯಿತು.

2009: ಧಾರವಾಡದ ವ್ಯಂಗ್ಯಚಿತ್ರ ಕಲಾವಿದ ಪ್ರಭಾಕರ ರಾವ್ ಬೈಲ್ ಅವರಿಗೆ ಬೆಂಗಳೂರಿನ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ ನೀಡುವ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿತು.

ಪ್ರಮುಖಜನನ/ಮರಣ:

1861: ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ಶಿಕ್ಷಣ, ಆಧ್ಯಾತ್ಮ, ಮಾನವೀಯತೆ ಈ ಸಕಲತೆಗಳಲ್ಲೂ ಮೇಳೈಸಿದ ಅಪೂರ್ವ ವ್ಯಕ್ತಿ ನೊಬೆಲ್ ಸಾಹಿತ್ಯ ಪುರಸ್ಕೃತ, ಶಾಂತಿ ನಿಕೇತನ ಸ್ಥಾಪಕ ರಬೀಂದ್ರನಾಥ ಠಾಗೂರ್ ಅವರು ಕೋಲ್ಕತ್ತಾದಲ್ಲಿ ಜನಿಸಿದರು. ಇವರಿಗೆ 1913 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1867: ನೊಬೆಲ್ ಸಾಹಿತ್ಯ ಪುರಸ್ಕೃತ ಪೋಲೆಂಡ್ ದೇಶದ ಕವಿ ವ್ಲಾಡಿಸ್ಲಾವ್ ರೆಮೆಂಟ್ ಅವರು ಕೊಬಿಯೆಲೆ ವಿಯೇಲ್ಕಿ ಎಂಬಲ್ಲಿ ಜನಿಸಿದರು.

1871: ಸುಪ್ರಸಿದ್ಧ ವಿದ್ವಾಂಸರೂ, ತತ್ತ್ವಜ್ಞಾನಿಗಳೂ, ಪ್ರಾಧ್ಯಾಪಕರೂ ಆದ ಪ್ರೊ. ಎಂ. ಹಿರಿಯಣ್ಣನವರು ಮೈಸೂರಿನಲ್ಲಿ ಜನಿಸಿದರು. ಹಿರಿಯಣ್ಣನವರಿಗೆ ಹಲವಾರು ವಿದ್ವಾಂಸರ ಪರಿಷತ್ತುಗಳು ಮತ್ತು ಸಮ್ಮೇಳನಗಳು ಅಧ್ಯಕ್ಷ ಪದವಿಯನ್ನು ಸಲ್ಲಿಸಿ ಗೌರವ ತೋರಿ ಸನ್ಮಾನಿಸಿದ್ದವು. ಸಂಸ್ಕೃತ ಅಕಾಡಮಿಯಿಂದ ‘ಸಂಸ್ಕೃತ ಸೇವಾಧುರೀಣ’ ಎಂಬ ಪ್ರಶಂಸೆ ಸಂದಿತ್ತು.

1880: ಭಾರತೀಯ ದರ್ಶನ ಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ಪಾಂಡುರಂಗ ವಾಮನ್ ಕಾನೆ ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಜನಿಸಿದರು. ಇವರಿಗೆ 1963 ವರ್ಷದಲ್ಲಿ ಭಾರತ ರತ್ನ ಪುರಸ್ಕಾರವಿತ್ತು ಗೌರವಿಸಲಾಗಿತ್ತು.

1893: ‘ಹೊಯಿಸಳ’ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಅರಗ ಲಕ್ಷ್ಮಣರಾಯರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು.

1912: ಪ್ರಸಿದ್ಧ ಗುಜರಾತಿ ಸಾಹಿತಿ ಪನ್ನಾಲಾಲ್ ಪಟೇಲ್ ರಾಜಾಸ್ಥಾನದ ದುಂಗಾರ್ಪುರ್ ಎಂಬಲ್ಲಿ ಜನಿಸಿದರು. ಜ್ಞಾನಪೀಠ ಪುರಸ್ಕಾರ, ಸಾಹಿತ್ಯ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1939: ಕೆನಡ-ಅಮೆರಿಕದ ಜೀವವಿಜ್ಞಾನಿ ಸಿಡ್ನಿ ಆಲ್ಟ್ ಮ್ಯಾನ್ ಅವರು ಕೆನಡಾದ ಮಾಂಟ್ರಿಯಲ್ ಎಂಬಲ್ಲಿ ಜನಿಸಿದರು. ‘ಕ್ಯಾಟಾಲಿಕ್ ಪ್ರಾಪರ್ಟಿಸ್ ಆಫ್ ಆರ್.ಎನ್.ಎ’ ಸಂಶೋಧನೆಗಾಗಿ ಇವರಿಗೆ 1989 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

192: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟಿಷರಿಂದ ಅಮಾನುಷ ರೀತಿಯಲ್ಲಿ ಕೊಲ್ಲಲ್ಪಟ್ಟರು.

1971: ‘ಡಿ.ಎಲ್.ಎನ್’ ಎಂದೇ ಪ್ರಖ್ಯಾತರಾದ ವಿದ್ವಾಂಸ, ಸಂಶೋಧಕ, ಸಾಹಿತಿ ಪ್ರೊ. ಡಿ. ಎಲ್. ನರಸಿಂಹಾಚಾರ್ಯ ನಿಧನರಾದರು.

1998: ದಕ್ಷಿಣ ಆಫ್ರಿಕ-ಇಂಗ್ಲಿಷ್ ಭೌತವಿಜ್ಞಾನಿ ಅಲ್ಲನ್ ಮೆಕ್ಲಿಯಾಡ್ ಕಾರ್ಮ್ಯಾಕ್ ಅವರು ಅಮೆರಿಕದ ಮೆಸ್ಸಚುಸೆಟ್ಸ್ ಎಂಬಲ್ಲಿ ನಿಧನರಾದರು. ‘ಎಕ್ಸ್-ರೇ ಕಂಪ್ಯೂಟೆಡ್ ಟೊಮೋಗ್ರಫಿ’ ಕುರಿತಾದ ಸಂಶೋಧನೆಗೆ ಇವರಿಗೆ 1979 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2011: ಕೆನಡಾದ ಭೌತವಿಜ್ಞಾನಿ ವಿಲ್ಲರ್ಡ್ ಬೋಯ್ಲೆ ಅವರು ನೋವಾ ಸ್ಕೋಟಿಯಾ ಬಳಿಯ ವ್ಯಾಲೇಸ್ ಎಂಬಲ್ಲಿ ನಿಧನರಾದರು. ಇವರಿಗೆ ಇಮೆಜಿಂಗ್ ಸೆಮಿ ಕಂಡಕ್ಟರ್ ಸರ್ಕ್ಯೂಟ್ ಸಂಶೋಧನೆಗಾಗಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

 

Categories
e-ದಿನ

ಮೇ-06

ಪ್ರಮುಖಘಟನಾವಳಿಗಳು:

1542: ಫ್ರಾನ್ಸಿಸ್ ಗ್ಸೇವಿಯರ್ ಮೊತ್ತ ಮೊದಲ ಕ್ರೈಸ್ತ ಪ್ರಚಾರಕರಾಗಿ ಅಂದಿನ ದಿನಗಳಲ್ಲಿ ಪೋರ್ಚುಗೀಸ್ ನೆಲೆಯಾಗಿದ್ದ ಗೋವಾಕ್ಕೆ ಆಗಮಿಸಿದರು. ರೋಮನ್ ಕ್ಯಾಥೋಲಿಕ್ ಪ್ರಚಾರಕರಾದ ಈತ ಭಾರತ, ಮಲಯ ಹಾಗೂ ಜಪಾನ್ ದೇಶಗಳಲ್ಲಿ ಕ್ರೈಸಮತವನ್ನು ಪಸರಿಸಿದವರಲ್ಲಿ ಪ್ರಮುಖರೆನಿಸಿದ್ದಾರೆ.

1840: ಪೆನ್ನಿ ಬ್ಯಾಕ್ ಅಂಚೆ ಚೀಟಿಯು ಗ್ರೇಟ್ ಬ್ರಿಟನ್ ಮತ್ತು ಐರ್ಲ್ಯಾಂಡ್ಗಳಲ್ಲಿ ಚಲಾವಣೆಗೆ ಅಂಗೀಕೃತಗೊಂಡಿತು.

1857: ಮಂಗಲ್ ಪಾಂಡೆಯ ದಂಗೆಯಿಂದ ಪ್ರಾರಂಭಗೊಂಡ ಸಿಪಾಯಿ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಇಂಪನೆಯು ತನ್ನ ಬಂಗಾಳದ ಸೈನ್ಯ ತುಕಡಿ ವಿಭಾಗವಾದ 34ನೇ ರೆಜಿಮೆಂಟ್ ಅನ್ನು ವಿಸರ್ಜಿಸಿತು.

1889: ಐಫೆಲ್ ಗೋಪುರವು ಅಧಿಕೃತವಾಗಿ ಸಾರ್ವಜನಿಕರಿಗೆ ತೆರೆದುಕೊಂಡಿತು.

1916: ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವು ಎಚ್.ವಿ. ನಂಜುಂಡಯ್ಯನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿತು.

1919: ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕರ್ಪೂರ ಶ್ರೀನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ಹಾಸನದಲ್ಲಿ ಆರಂಭಗೊಂಡಿತು.

1940: ಜಾನ್ ಸ್ಟೀಯಿನ್ ಬೆಕ್ ಅವರಿಗೆ ‘ದಿ ಗ್ರೇಪ್ಸ್ ಆಫ್ ರ್ಯಾತ್’ ಕೃತಿಗೆ ಪುಲಿಟ್ಜರ್ ಬಹುಮಾನ ಸಂದಿತು.

1983: ದೊಡ್ಡ ರೀತಿಯಲ್ಲಿ ಸಂವೇದನೆ ಸೃಷ್ಟಿಸಿದ್ದ ‘ಹಿಟ್ಲರ್ ದಿನಚರಿಗಳು’, ಕೇವಲ ವಂಚನಾತ್ಮಕ ಬರಹವೆಂದು ತಜ್ಞರು ನಿರ್ಣಯಿಸಿದರು.

2006: ಹನ್ನೆರಡು ವರ್ಷಗಳ ಬಳಿಕ ಹಾಸನ- ಮಂಗಳೂರು ರೈಲ್ವೇ ಮಾರ್ಗವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು. ರೈಲ್ವೆ ಹಳಿಯನ್ನು ಮೀಟರ್ ಗೇಜ್ ನಿಂದ ನ್ಯಾರೋ ಗೇಜಿಗೆ

2008: ಪೌರಾಣಿಕ ಮಹತ್ವದ ರಾಮಸೇತುವಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ದೊರಕುತ್ತದೆ ಎಂದು ಸಂವಿಧಾನ ತಜ್ಞ ಹಾಗೂ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರು ಸುಪ್ರೀಂಕೋರ್ಟ್ ಮುಂದೆ ಹೇಳಿದರು.

ಪ್ರಮುಖಜನನ/ಮರಣ:

1856: ಪ್ರಪ್ರಥಮ ಬಾರಿಗೆ ಉತ್ತರ ಧ್ರುವವನ್ನು ತಲುಪಿದ ಅಮೆರಿಕದ ರಾಬರ್ಟ್ ಎಡ್ವಿನ್ ಪಿಯರೆ ಪೆನ್ಸಿಲ್ವೇನಿಯಾದ ಕ್ರೆಸ್ಸನ್ ಎಂಬಲ್ಲಿ ಜನಿಸಿದರು.

1861: ಸ್ವಾತಂತ್ರ್ಯ ಹೋರಾಟಗಾರ, ಕಾನೂನು ತಜ್ಞ, ಸ್ವರಾಜ್ ಪಕ್ಷದ ಸಹ ಸಂಸ್ಥಾಪಕ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೋತಿಲಾಲ್ ನೆಹರೂ ಆಗ್ರಾದಲ್ಲಿ ಜನಿಸಿದರು.

1871: ಫ್ರೆಂಚ್ ರಸಾಯನ ಶಾಸ್ತ್ರಜ್ಞ ವಿಕ್ಟರ್ ಗ್ರಿಗ್ನಾರ್ಡ್ ಅವರು ಫ್ರಾನ್ಸಿನ ಚೆರ್ಬೌರ್ಗ್ ಎಂಬಲ್ಲಿ ಜನಿಸಿದರು. ‘ಗ್ರಿಗ್ನಾರ್ಡ್ ರಿಯಾಕ್ಷನ್’ ಎಂಬ ತಮ್ಮ ಹೆಸರಿನ ಸಂಶೋಧನೆಗೆ ಹೆಸರಾಗಿರುವ ಇವರಿಗೆ 1912 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತ್ತು.

1904: ಸ್ವೀಡಿಷ್ ಸಾಹಿತಿ ಹ್ಯಾರಿ ಮಾರ್ಟಿನ್ಸನ್ ಅವರು ಸ್ವೀಡನ್ನಿನ ಜಮ್ಶೋಗ್ ಎಂಬಲ್ಲಿ ಜನಿಸಿದರು. ಇಪ್ಪತ್ತನೆಯ ಶತಮಾನದ ಸ್ವೀಡಿಷ್ ಕಾವ್ಯದಲ್ಲಿ ಮಹತ್ವದ ಸಾಧಕರೆಂದು ಪರಿಗಣಿತರಾಗಿದ್ದ ಇವರಿಗೆ 1974 ವರ್ಷದ ನೊಬೆಲ್ ಶ್ರೇಷ್ಠ ಸಾಹಿತ್ಯ ಪುರಸ್ಕಾರ ಸಂದಿತ್ತು.

1928: ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರು ಶಿವಮೊಗ್ಗದಲ್ಲಿ ಜನಿಸಿದರು. ಕತೆ, ಕಾದಂಬರಿ, ಚಲನಚಿತ್ರಗಳಿಗೆ ಚಿತ್ರಕತೆಗಳನ್ನು ಕೂಡಾ ಇವರು ರಚಿಸಿದ್ದರು.

1929: ಅಮೆರಿಕದ ರಸಾಯನ ಶಾಸ್ತ್ರಜ್ಞರಾದ ಪಾಲ್ ಲೌಟೆರ್ಬರ್ ಅವರು ಓಹಿಯೋ ಪ್ರಾಂತ್ಯದ ಸಿಡ್ನಿ ಎಂಬಲ್ಲಿ ಜನಿಸಿದರು. ಇವರಿಗೆ ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್ (MRI) ಸಂಶೋಧನೆಗಾಗಿ 2003 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1951: ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್ ಅವರು ಕೂನೂರಿನಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಗೌರವಗಳೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಇವರು ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷತೆ, ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷತೆ ಮತ್ತು ಕಲಾಕ್ಷೇತ್ರದ ನಿರ್ದೇಶಕತ್ವದ ಗೌರವಗಳನ್ನೂ ಗಳಿಸಿದ್ದಾರೆ.

1956: ಅರ್ಥಶಾಸ್ತ್ರದ ಪ್ರಾಧ್ಯಾಪನ ವೃತ್ತಿ ನಡೆಸಿದ ಇವರು ಸದಭಿರುಚಿಯ ಹಾಸ್ಯ ಬರಹಗಳಿಗೆ ಕನ್ನಡದಲ್ಲಿ ಹೆಸರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ‘ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ’ ಮುಂತಾದ ಅನೇಕ ಪ್ರಶಸ್ತಿಗಳನ್ನು ಅವರು ಗಳಿಸಿರುವುದರ ಜೊತೆ ಜೊತೆಗೆ ಏಷಿಯಾದ ಅಂತಾರಾಷ್ಟ್ರೀಯ ಸಾಧನಶೀಲ ಮಹಿಳೆಯರ ಕುರಿತಾದ ಪುಸ್ತಕ ‘ರೆಫರೆನ್ಸ್‌ ಏಷಿಯಾ’ದಲ್ಲಿ ಸೇರ್ಪಡೆಯಾಗಿದ್ದಾರೆ.

1946: ಖ್ಯಾತ ಭಾರತೀಯ ವಕೀಲ ಭುಲಾಭಾಯಿ ದೇಸಾಯಿ ಅವರು ತಮ್ಮ 68ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ನಿಧನರಾದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಾರತ ರಾಷ್ಟ್ರೀಯ ಸೇನೆಯ (ಐ ಎನ್ ಎ) ಅಧಿಕಾರಿಗಳನ್ನು ಬ್ರಿಟಿಷ್ ಸರ್ಕಾರ 1945ರಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಐ ಎನ್ ಎ ಅಧಿಕಾರಿಗಳ ಪರವಾಗಿ ವಾದಿಸುವ ಮೂಲಕ ದೇಸಾಯಿ ವ್ಯಾಪಕ ಪ್ರಸಿದ್ಧಿ ಪಡೆದರು.

1949: ನೊಬೆಲ್ ಪುರಸ್ಕೃತ ಬೆಲ್ಜಿಯನ್-ಫ್ರೆಂಚ್ ಕವಿ ಮತ್ತು ನಾಟಕಕಾರ ಮಾರೈಸ್ ಮೇಟರ್ಲಿಂಕ್ ಅವರು ಫ್ರಾನ್ಸಿನ ನೈಸ್ ಎಂಬಲ್ಲಿ ನಿಧನರಾದರು. ಇವರಿಗೆ 1911 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2006: ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ’ ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ ಅವರು ತಮ್ಮ 87ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

2007: ಸಂಗೀತ ವಿದುಷಿ, ಸಮಾಜ ಸೇವಕಿ ಚೊಕ್ಕಮ್ಮ ಎನ್. ಎನ್. ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಪಿಟೀಲು ಚೌಡಯ್ಯ ಮತ್ತು ವಿದ್ವಾನ್ ದೇವೇಂದ್ರಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಚೊಕ್ಕಮ್ಮ ಅನೇಕ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಚೊಕ್ಕಮ್ಮ ಅವರು ಹಿರಿಯ ಅಧಿಕಾರಿ ದಿವಂಗತ ಎನ್. ನರಸಿಂಹ ಅಯ್ಯಂಗಾರ್ ಅವರ ಪತ್ನಿ.

 

Categories
e-ದಿನ

ಮೇ-05

ಪ್ರಮುಖಘಟನಾವಳಿಗಳು:

1766: ಭಾರತದಲ್ಲಿ ಬ್ರಿಟಿಷರೊಡನೆ ನಡೆದ 7 ವರ್ಷಗಳ ಯುದ್ಧದಲ್ಲಿ ಶರಣಾಗತನಾದುದಕ್ಕಾಗಿ ಆಗ ಭಾರತದಲ್ಲಿ ಫ್ರೆಂಚ್ ಪಡೆಗಳ ನಾಯಕನಾಗಿದ್ದ ಜನರಲ್ ಕಾಮ್ಟೆ ಡೆ ಲಾಲ್ಲಿಗೆ ಪ್ಯಾರಿಸ್ಸಿನಲ್ಲಿ ಮರಣದಂಡನೆ ವಿಧಿಸಲಾಯಿತು.

1809: ಮೇರಿ ಕೀಸ್ ಅವರು ಅಮೆರಿಕದ ಪೇಟೆಂಟ್ ಪಡೆದ ಮೊದಲ ಮಹಿಳೆ ಎನಿಸಿದರು. ಅವರಿಗೆ ರೇಷ್ಮೆ ಮತ್ತು ದಾರವನ್ನು ಉಪಯೋಗಿಸಿ ನೇಯ್ಗೆ ಮಾಡುವ ತಂತ್ರಕ್ಕೆ ಪೇಟೆಂಟ್ ನೀಡಲಾಯಿತು.

1821: ಗಡೀಪಾರುಗೊಂಡಿದ್ದ ನೆಪೋಲಿಯನ್ ದಕ್ಷಿಣ ಅಟ್ಲಾಂಟಿಕ್ ಸಾಗರದ ಸೈಂಟ್ ಹೆಲೇನಾ ದ್ವೀಪದಲ್ಲಿ ನಿಧನರಾದರು.

1835: ಬ್ರಸೆಲ್ಸ್ ಮತ್ತು ಮೆಖೆಲೆನ್ ನಡುವೆ ಪ್ರಥಮ ಕಾಂಟಿನೆಂಟಲ್ ರೈಲು ಪಯಣ ಆರಂಭಗೊಂಡಿತು.

1912: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಮುಖವಾಣಿಯಾದ ‘ಪ್ರಾವ್ಡಾ’ ತನ್ನ ಪ್ರಕಟಣೆಯನ್ನು ಆರಂಭಿಸಿತು.

1961: ಅಲನ್ ಶೆಪರ್ಡ್ ಅವರು ಅಮೆರಿಕದ ಮೊಟ್ಟ ಮೊದಲ ಬಾಹ್ಯಾಕಾಶ ಯಾತ್ರಿಯಾದರು.

1963: ಸ್ವತಂತ್ರ ಭಾರತದ ಸೇನೆಯ ಮೂರನೆಯ ಮಹಾ ದಂಡನಾಯಕರಾಗಿದ್ದ ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ ಅವರು ಮೈಸೂರು ರಾಜ್ಯದ ಎರಡನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.

1981: 66 ದಿನಗಳವರೆಗೆ ಲಾಂಗ್ ಕೆಶ್ ಕಾರಾಗ್ರಹದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಐರಿಷ್ ರಿಪಬ್ಲಿಕನ್ ಆರ್ಮಿ ಕಾರ್ಯಕರ್ತ ಬಾಬ್ಬಿ ಸ್ಯಾಂಡ್ಸ್ ನಿಧನರಾದರು.

1992: ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆಂದೇ ಮೀಸಲಾದ ಉಪನಗರ ರೈಲ್ವೇ ಸೇವೆಯನ್ನು ಮುಂಬೈ ಪಶ್ಚಿಮ ರೈಲ್ವೇ ವಿಭಾಗ ಆರಂಭಿಸಿತು.

2016: ವೈಸ್ ಅಡ್ಮಿರಲ್ ಸುನಿಲ್ ಲಂಬಾ ಅವರನ್ನು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಲಾಯಿತು. ಲಂಬಾ ಅವರು ನೌಕಾಪಡೆಯ ಹಿಂದಿನ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಆರ್.ಕೆ. ಧವನ್ ಅವರ ನಿವೃತ್ತಿಯ ದಿನವಾದ ಮೇ 31ರಂದು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.

ಪ್ರಮುಖಜನನ/ಮರಣ:

1479: ಮೂರನೆಯ ಸಿಖ್ ಗುರು ಅಮರ ದಾಸ್ ಅವರು ಅಮೃತಸರದಲ್ಲಿ ಜನಿಸಿದರು.

1818: ಕಮ್ಯುನಿಸಂ ಚಿಂತನೆಯ ಮೂಲಪುರುಷರೆಂದು ಪರಿಗಣಿಸಲ್ಪಡುವ ಕಾರ್ಲ್ ಮಾರ್ಕ್ಸ್ ಅವರು ಜರ್ಮನಿಯ ಟ್ರಿಯರ್ ಎಂಬ ಪಟ್ಟಣದಲ್ಲಿ ಜನಿಸಿದರು. ತತ್ವಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಾಮಾಜಿಕಶಾಸ್ತ್ರಜ್ಞ, ಇತಿಹಾಸಜ್ಞ, ಪತ್ರಕರ್ತ ಹೀಗೆ ಹಲವು ಆಯಾಮಗಳು ಈ ಅಪೂರ್ವ ವ್ಯಕ್ತಿಯಲ್ಲಿ ಮೇಳೈಸಿದ್ದವು. ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಬಂಡೆದ್ದ ಇವರ ಚಿಂತನೆಗಳು ಕಮ್ಯೂನಿಸಮ್ ಎಂಬ ಹೊಸ ಪ್ರಪಂಚವನ್ನೇ ಸೃಷ್ಟಿಸಿತು.

1846: ನೊಬೆಲ್ ಸಾಹಿತ್ಯ ಪುರಸ್ಕೃತ ಹೆನ್ರಿಕ್ ಸಿಯೆನ್ಕೀವಿಕ್ಜ್ ಅವರು ಪೋಲೆಂಡ್ ದೇಶದ ವೋಲಾ ಓಕೃಸೆಜ್ಸ್ಕ್ ಎಂಬಲ್ಲಿ ಜನಿಸಿದರು.

1911: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ಪ್ರೀತಿಲತಾ ವಡ್ಡೇಧಾರ್ ಅವರು ಬಂಗಾಳದ ಚಿತ್ತಗಾಂಗ್ ಬಳಿಯ ಧಾಲ್ ಘಾಟ್ ಎಂಬಲ್ಲಿ ಜನಿಸಿದರು. ತತ್ವಜ್ಞಾನದಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದ ಇವರು ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ನಂತರದಲ್ಲಿ ಸೂರ್ಯಸೆನ್ ಆವರ ಕ್ರಾಂತಿಕಾರಿ ಗುಂಪಿಗೆ ಸೇರಿಕೊಂಡರು. 1932ರ ವರ್ಷದಲ್ಲಿ ಇವರು ಫಹರ್ತಲಿ ಯೂರೋಪಿಯನ್ ಕ್ಲಬ್ ಮೇಲಿನ ಹದಿನೈದು ಆಕ್ರಮಣಕಾರರ ಗುಂಪಿನ ನಾಯಕತ್ವ ವಹಿಸಿದರು. ಈ ಕ್ಲಬ್ನಲ್ಲಿ ಕೀಳು ಬ್ರಿಟಿಷ್ ಅಧಿಕಾರಿಗಳು ‘ಡಾಗ್ಸ್ ಅಂಡ್ ಇಂಡಿಯನ್ಸ್ ನಾಟ್ ಅಲೋಡ್’ ಎಂದು ಫಲಕ ಹಾಕಿದ್ದರಿಂದ ಕ್ರೋಧಿತರಾದ ಈ ಕ್ರಾಂತಿಕಾರಿ ಗುಂಪು ಅದಕ್ಕೆ ಬೆಂಕಿ ಹಚ್ಚಿದರು. ಸೇರೆಯಾಗಲಿಚ್ಚಿಸದ ಇವರು ಸಯನೈಡ್ ಸೇವಿಸಿ ಅಸುನೀಗಿದರು.

1916: ಭಾರತದ ಏಳನೇ ರಾಷ್ಟ್ರಪತಿಗಳಾಗಿದ್ದ ಜ್ಞಾನಿ ಜೈಲ್ ಸಿಂಗ್ ಅವರು ಪಂಜಾಬಿನ ಸಂಧ್ವಾನ್ ಎಂಬಲ್ಲಿ ಜನಿಸಿದರು.

1921: ಅಮೆರಿಕದ ಭೌತವಿಜ್ಞಾನಿ ಆರ್ಥರ್ ಲಿಯೋನಾರ್ಡ್ ಸ್ಕಾವ್ಲೋವ್ ಅವರು ನ್ಯೂಯಾರ್ಕಿನ ಮೌಂಟ್ ವೆರ್ನಾನ್ ಎಂಬಲ್ಲಿ ಜನಿಸಿದರು. ಲೇಸರ್ಸ್ ಕುರಿತಾದ ಮಹತ್ಕಾರ್ಯಕ್ಕಾಗಿ ಅವರಿಗೆ 1981 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1945: ಕಥೆ, ಕಾದಂಬರಿ, ನಾಟಕ, ಚಿತ್ರಕಥೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬರಹ ಮಾಡಿರುವ ಬಿ.ಎಲ್. ವೇಣು ಅವರು ಚಿತ್ರದುರ್ಗದಲ್ಲಿ ಜನಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಲನಚಿತ್ರಗಳ ಚಿತ್ರಕಥೆಗಾಗಿನ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1821: ಗಡೀಪಾರುಗೊಂಡಿದ್ದ ನೆಪೋಲಿಯನ್ ದಕ್ಷಿಣ ಅಟ್ಲಾಂಟಿಕ್ ಸಾಗರದ ಸೈಂಟ್ ಹೆಲೇನಾ ದ್ವೀಪದಲ್ಲಿ ನಿಧನರಾದರು.

1921: ಜರ್ಮನ್ ಪೀಸ್ ಮೂವ್ಮೆಂಟ್ ಸ್ಥಾಪಕ ಆಲ್ಫ್ರೆಡ್ ಹರ್ಮಾನ್ ಫ್ರೀಡ್ ಅವರು ವಿಯೆನ್ನಾದಲ್ಲಿ ನಿಧನರಾದರು. ಇವರಿಗೆ 1911 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1959: ನೊಬೆಲ್ ಶಾಂತಿ ಪುರಸ್ಕೃತ ಕಾರ್ಲೋಸ್ ಸವ್ವೇಡ್ರ ಲಾಮಾಸ್ ಅವರು ಅರ್ಜೆಂಟಿನಾದ ಬ್ಯೂನೋಸ್ ಏರ್ಸ್ ಎಂಬಲ್ಲಿ ನಿಧನರಾದರು. 1936ರಲ್ಲಿ ಇವರು ನೊಬೆಲ್ ಶಾಂತಿ ಪುರಸ್ಕಾರ ಸ್ವೀಕರಿಸಿದ ಪ್ರಥಮ ಲ್ಯಾಟಿನ್ ಅಮೆರಿಕದ ವ್ಯಕ್ತಿ ಎನಿಸಿದರು.

2006: ಸಂಗೀತ ನಿರ್ದೇಶಕ ನೌಷಾದ್ ಅಲಿ ಅವರು ತಮ್ಮ 86ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಅನೇಕ ಚಲನಚಿತ್ರಗಳಲ್ಲಿನ ಇವರ ಸಂಗೀತ ಪ್ರಖ್ಯಾತಿ ಹೊಂದಿದ್ದು ದಾದಾ ಸಾಹೇಬ್ ಫಾಲ್ಕೆ ಗೌರವ, ಸಂಗೀತ ನಾಟಕ ಅಕಾಡೆಮಿ ಗೌರವ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

 

 

Categories
e-ದಿನ

ಮೇ-04

ಪ್ರಮುಖಘಟನಾವಳಿಗಳು:

1494: ಕ್ರಿಸ್ಟೋಫರ್ ಕೊಲಂಬಸ್ ಜಮೈಕಾ ದ್ವೀಪವನ್ನು ಪತ್ತೆಹಚ್ಚಿದರು.

1555: ಕಾಲಜ್ಞಾನಿ ನಾಸ್ಟ್ರಡಾಮಸ್ ತಮ್ಮ `ಸೆಂಚುರೀಸ್’ ಕೃತಿಯನ್ನು ಪ್ರಕಟಿಸಿದರು.

1675: ಇಂಗ್ಲೆಂಡಿನ ಎರಡನೇ ಚಾರ್ಲ್ಸ್ ಅವರು ರಾಯಲ್ ಗ್ರೀನ್ವಿಚ್ ವೀಕ್ಷಣಾಲಯ ಸ್ಥಾಪನೆಯನ್ನು ಆದೇಶಿಸಿದರು.

1799: ನಾಲ್ಕನೇ ಆಂಗ್ಲ-ಮೈಸೂರು ಯುದ್ಧವಾದ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪು ಸುಲ್ತಾನ್ ನಿಧನರಾದರು. ಜನರಲ್ ಜಾರ್ಜ್ ಹ್ಯಾರಿಸ್ ಬ್ರಿಟಿಷ್ ಪಡೆಗಳ ನೇತೃತ್ವ ವಹಿಸಿದ್ದರು.

1854: ಭಾರತದ ಮೊತ್ತ ಮೊದಲ ಅಂಚೆ ಚೀಟಿಯನ್ನು ಕೋಲ್ಕತ್ತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅರ್ಧ ಆಣೆ ಬೆಲೆಯ ಈ ಅಂಚೆಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಅವರ ಚಿತ್ರವನ್ನು ಮುದ್ರಿಸಲಾಗಿತ್ತು.

1886: ಮೇ ದಿನಾಚರಣೆಗೆ ಮೂಲವಾದ ಹೇ ಮಾರ್ಕೆಟ್ ಘಟನೆ ಜರುಗಿತು. ಅಮೆರಿಕದ ಚಿಕಾಗೋದಲ್ಲಿ ಕಾರ್ಮಿಕರ ಪ್ರದರ್ಶನ ಮೆರವಣಿಗೆಯನ್ನು ಮುರಿಯಲೆತ್ನಿಸುತ್ತಿದ್ದ ಪೋಲೀಸರ ಮೇಲೆ ಬಾಂಬ್ ಒಂದನ್ನು ಎಸೆಯಲಾಯಿತು. ಇದರಿಂದ ಉದ್ರಿಕ್ತರಾದ ಪೊಲೀಸರು ಮೆರವಣಿಗೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ಗುಂಡಿನ ಮಳೆಗರೆದರು. ಒಟ್ಟಾರೆ ಈ ಘಟನೆಯಲ್ಲಿ 7 ಜನ ಪೋಲೀಸ್ ಅಧಿಕಾರಿಗಳು ಮತ್ತು 4 ಮಂದಿ ನಾಗರೀಕರು ನಿಧನರಾಗಿ ಬಹಳ ಮಂದಿ ಗಾಯಗೊಂಡರು.

1904: ಅಮೆರಿಕವು ಪನಾಮ ಕಾಲುವೆ ನಿರ್ಮಾಣವನ್ನು ಪ್ರಾರಂಭಿಸಿತು.

1953:ಅರ್ನೆಸ್ಟ್ ಹೆಮಿಂಗ್ಸ್ ವೇ ಅವರು ‘ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ’ ಕೃತಿಗೆ ಪುಲಿಟ್ಜರ್ ಬಹುಮಾನ ಪಡೆದರು.

1959: ಪ್ರಥಮ ‘ವಾರ್ಷಿಕ ಗ್ರಾಮಿ ಅವಾರ್ಡ್ಸ್’ ಸಮಾರಂಭ ನೆರವೇರಿತು.

1961: ಅಮೆರಿಕನ್ನರ ನಾಗರಿಕ ಹಕ್ಕುಗಳ ಚಳುವಳಿಯ ಅಂಗವಾಗಿ, ‘ಫ್ರೀಡಂ ರೈಡರ್ಸ್’ ತಂಡವು ದಕ್ಷಿಣದೆಡೆಗೆ ಬಸ್ ಪಯಣವನ್ನು ಆರಂಭಿಸಿತು.

1961: ಮಾಲ್ಕಂ ರಾಸ್ ಮತ್ತು ವಿಕ್ಟರ್ ಪ್ರಾಥರ್ ಬಲೂನಿನಲ್ಲಿ 113,740 ಅಡಿ (34.67 ಕಿಲೋ ಮೀಟರ್) ಎತ್ತರಕ್ಕೆ ಹಾರಿದ ದಾಖಲೆ ನಿರ್ಮಿಸಿದರು.

1972: ಕೆನಡಾದ ಪರಿಸರ ಸಂರಕ್ಷಣಾ ಸಂಘಟನೆಯಾದ ‘ಡೋಂಟ್ ಮೇಕ್ ಎ ವೇವ್ ಕಮಿಟಿ’ ತನ್ನ ಹೆಸರನ್ನು ಗ್ರೀನ್ ಪೀಸ್ ಫೌಂಡೇಶನ್ ಎಂದು ಬದಲಿಸಿಕೊಂಡಿತು.

1979: ಮಾರ್ಗರೇಟ್ ಥ್ಯಾಚರ್ ಅವರು ಯುನೈಟೆಡ್ ಕಿಂಗ್ಡಂನ ಪ್ರಥಮ ಮಹಿಳಾ ಪ್ರಧಾನ ಮಂತ್ರಿಗಳೆನಿಸಿದರು.

2006: ಭಾರತೀಯ ಮೂಲದ ಅಮೆರಿಕನ್ ಬಾಹ್ಯಾಕಾಶ ತಂತ್ರಜ್ಞೆ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಫ್ಲೈಟ್ ಎಂಜಿನಿಯರ್ ಆಗಿ ತಮ್ಮ ಪ್ರಥಮ ಪ್ರಯಾಣ ಮಾಡುವರು ಎಂದು ನಾಸಾ ಪ್ರಕಟಿಸಿತು.

2006: ಸಾನ್ ಸಾಲ್ವಡೋರಿನ ಹಣ್ಣು ಹಣ್ಣು ಮುದುಕಿ ಕ್ರೂಜ್ ಹೆರ್ನಾಂಡೆಸ್ ರಿವಾಸ್ ತಮ್ಮ 128ನೇ ಜನ್ಮದಿನವನ್ನು ಆಚರಿಸಿದರು.

2006: ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಕಸ್ಟಮ್ಸ್ ಇಲಾಖೆ ಅನುಮತಿ ನೀಡಿತು.

2007: ಕಾನ್ಸಾಸಿನ ಗ್ರೀನ್ ಬರ್ಗ್ ಪ್ರದೇಶವು ‘ಇ.ಎಫ್.5 ಟೊರ್ನಾಡೋ’’ ಎಂಬ ಭೀಕರ ಸುಂಟರಗಾಳಿಯಿಂದ ಬಹುತೇಕ ನಾಶಗೊಂಡಿತು.

2009: ಭಾರತ ರಾಷ್ಟ್ರೀಯ ವಿಮಾನಯಾನ ಕಂಪೆನಿ ಲಿಮಿಟೆಡ್ (ಎನ್‌ಎಸಿಐಎಲ್- ಏರ್‌ಇಂಡಿಯಾ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ನಾಟಕ ಕೇಡರ್ ಐ.ಎ.ಎಸ್ ಅಧಿಕಾರಿ ಅರವಿಂದ್ ಜಾಧವ್ ಅವರು ಅಧಿಕಾರ ವಹಿಸಿಕೊಂಡರು.

ಪ್ರಮುಖಜನನ/ಮರಣ:

1649: ಭಾರತೀಯ ಬುಂದೇಲ ರಜಪೂತ ವಂಶಸ್ಥ ಮಹಾರಾಜ ಚಾತ್ರಸಾಲ್ ಅವರು ಕಚಾರ್ ಕಚನೈ ಎಂಬಲ್ಲಿ ಜನಿಸಿದರು. ಇವರು ಮೊಘಲ್ ದೊರೆ ಔರಂಗ್ಜೇಬ್ ವಿರುದ್ಧ ಹೋರಾಡಿ ಬುಂದೇಲ್ ಖಾಂಡ್ ಎಂಬ ತಮ್ಮದೇ ರಾಜ್ಯವನ್ನು ಪ್ರತಿಷ್ಟಾಪಿಸಿ, ಪನ್ನಾ ರಾಜ್ಯ ನಿರ್ಮಾಣಕಾರರಾದರು.

1655: ಪ್ರಸಿದ್ಧ ವಾದ್ಯ ತಯಾರಕ ಹಾಗೂ ಪಿಯಾನೋ ವಾದ್ಯವನ್ನು ಕಂಡುಹಿಡಿದ ಬಾರ್ಟೋಲೋಮಿಯೋ ಕ್ರಿಸ್ಟೋಫೋರಿ ಇಟಲಿಯಲ್ಲಿ ಜನಿಸಿದರು.

1767: ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರರಾದ ಸಂತ ತ್ಯಾಗರಾಜರು ತಿರುವಾರೂರಿನಲ್ಲಿ ಜನಿಸಿದರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಇವರು ಸುಮಾರು ಏಳುನೂರು ಕೃತಿಗಳನ್ನು ರಚಿಸಿದ್ದಾರೆ.

1921: ಡಾ. ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದರು. ಅಧ್ಯಾಪನದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1943: ನೊಬೆಲ್ ಪುರಸ್ಕೃತ ಅಮಾರ್ತ್ಯ ಸೆನ್ ಅವರ ಶಿಷ್ಯರೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆದ ಪ್ರಶಾಂತ ಪಟ್ನಾಯಕ್ ಜನಿಸಿದರು.

1938: ನೊಬೆಲ್ ಶಾಂತಿ ಪುರಸ್ಕೃತ ಕಾರ್ಲ್ ವಾನ್ ಒಸ್ಸೀಟ್ಸ್ಕೈ ಅವರು ಜರ್ಮನಿಯ ಬರ್ಲಿನ್ ನಗರದಲ್ಲಿ ನಿಧನರಾದರು.

1972: ಅಮೆರಿಕದ ರಸಾಯನ ಶಾಸ್ತ್ರಜ್ಞ ಎಡ್ವರ್ಡ್ ಕ್ಯಾಲ್ವಿನ್ ಕೆಂಡಾಲ್ ಅವರು ಪ್ರಿನ್ಸ್ಟನ್ ಎಂಬಲ್ಲಿ ನಿಧನರಾದರು. ಹಾರ್ಮೋನ್ಸ್ ಆಫ್ ದಿ ಆಡ್ರಿನಾಲ್ ಗ್ಲ್ಯಾಂಡ್ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತು.

2013: ಇಂಗ್ಲಿಷ್-ಬೆಲ್ಜಿಯನ್ ವೈದ್ಯಶಾಸ್ತ್ರಜ್ಞ ಮತ್ತು ಜೈವಿಕ ವಿಜ್ಞಾನಿ ಕ್ರಿಶ್ಚಿಯನ್ ಡೆ ದುವೆ ಅವರು ಬೆಲ್ಜಿಯಂ ದೇಶದ ಗ್ರೆಸ್-ಡಾಯ್ಸಿಯು ಎಂಬಲ್ಲಿ ನಿಧನರಾದರು. ಇವರಿಗೆ ‘ಸ್ಟ್ರಕ್ಚರಲ್ ಅಂಡ್ ಫಂಕ್ಷನಲ್ ಆರ್ಗನೈಸೇಶನ್ ಆಫ್ ದಿ ಸೆಲ್’ ಕುರಿತಾದ ಸಂಶೋಧನೆಗಾಗಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

Categories
e-ದಿನ

ಮೇ-03

ಪ್ರಮುಖಘಟನಾವಳಿಗಳು:

1715: ಎಡ್ಮಂಡ್ ಹ್ಯಾಲಿ ಅವರ ಊಹೆಗೆ ಕೇವಲ ನಾಲ್ಕು ನಿಮಿಷಗಳ ವೆತ್ಯಾಸದಲ್ಲಿ ಪೂರ್ಣಸೂರ್ಯಗ್ರಹಣವು ಉತ್ತರ ಯೂರೋಪ್ ಮತ್ತು ಉತ್ತರ ಏಷ್ಯಾ ಪ್ರದೇಶಗಳಲ್ಲಿ ಗೋಚರಗೊಂಡಿತು.

1802: ವಾಷಿಂಗ್ಟನ್ ಡಿ. ಸಿ ನಗರವಾಗಿ ಸ್ಥಾಪಿತಗೊಂಡಿತು.

1901: ಫ್ಲೋರಿಡಾದ ಜಾಕ್ಸನ್ ವಿಲ್ಲೆ ಎಂಬಲ್ಲಿ ಭೀಕರ ಬೆಂಕಿ ಅನಾಹುತ ಮೊದಲುಗೊಂಡಿತು.

1913: ದಾದಾ ಸಾಹೇಬ್ ಫಾಲ್ಕೆ ಅವರ ಪೂರ್ಣ ಪ್ರಮಾಣದ ಚಲನಚಿತ್ರವಾದ ರಾಜಾ ಹರಿಶ್ಚಂದ್ರ ಬಿಡುಗಡೆಗೊಂಡು, ಭಾರತದಲ್ಲಿ ಚಲನಚಿತ್ರೋದ್ಯಮದ ಆರಂಭಕ್ಕೆ ನಾಂದಿಯಾಯಿತು.

1915: ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೆಳನವು ಬೆಂಗಳೂರಿನಲ್ಲಿ ಅಧಿವೇಶನಗೊಂಡು ಈಗ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದಿರುವ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂಬ ಸಂಸ್ಥೆಗೆ ಚಾಲನೆ ದೊರಕಿತು. ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಎಚ್. ವಿ. ನಂಜುಡಯ್ಯನವರು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಮೊಟ್ಟ ಮೊದಲ ಅಧ್ಯಕ್ಷರು ಎಂದೆನಿಸಿದರು.

1937: ಮಾರ್ಗರೆಟ್ ಮಿಚೆಲ್ ಅವರ ಗಾನ್ ವಿಥ್ ದಿ ವಿಂಡ್ ಕಾದಂಬರಿಯು ಕಾಲ್ಪನಿಕ ಕೃತಿಯಾಗಿ ಪುಲಿಟ್ಜರ್ ಬಹುಮಾನ ಗಳಿಸಿತು.

1939: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ‘ಅಖಿಲ ಭಾರತ ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು.

1973: ಚಿಕಾಗೊದಲ್ಲಿನ 108 ಅಂತಸ್ತುಗಳುಳ್ಳ 1451 ಅಡಿಗಳ ಎತ್ತರದ ಸಿಯರ್ಸ್ ಟವರ್ ಕಟ್ಟಡವು ಅಂದಿನವರೆಗಿನ ವಿಶ್ವದ ಅತಿ ದೊಡ್ಡ ಕಟ್ಟಡವಾಗಿ ನಿರ್ಮಾಣಗೊಂಡಿತು.

1978: ಪ್ರಪ್ರಥಮ ಅನಪೇಕ್ಷಿತ ಗ್ರೂಪ್ ಈಮೈಲ್ ಒಂದನ್ನು ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಸಂಸ್ಥೆ ಅಮೆರಿಕದ ಪೂರ್ವ ತೀರದ ಅರ್ಪಾನೆಟ್ ವಿಳಾಸ ಹೊಂದಿದ ಎಲ್ಲಾ ಬಳಕೆದಾರರಿಗೂ ಒಂದೇ ಬಾರಿಗೆ ಕಳುಹಿಸಿತ್ತು. ಇಂತಹ ಈಮೈಲ್ಗಳನ್ನು ಮುಂದಿನ ದಿನಗಳಲ್ಲಿ ಸ್ಪ್ಯಾಮ್ ಎಂದು ಪರಿಗಣಿಸಲಾಯಿತು.

2008: ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಗುಂಟೂರಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಫಸಲು ಸುಟ್ಟು ಭಸ್ಮವಾಯಿತು. ಮಾರುಕಟ್ಟೆಯಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ದಲ್ಲಾಳಿ ಅಂಗಡಿಗಳು, ಒಂದೂವರೆ ಲಕ್ಷ ಮೆಣಸಿನಕಾಯಿ ಚೀಲಗಳು ಭಸ್ಮವಾದವು.

ಪ್ರಮುಖಜನನ/ಮರಣ:

1892: ಇಂಗ್ಲಿಷ್ ಭೌತವಿಜ್ಞಾನಿ ಜಾರ್ಜ್ ಪೆಗೆಟ್ ಥಾಮ್ಸನ್ ಅವರು ಕೇಂಬ್ರಿಡ್ಜ್’ನಲ್ಲಿ ಜನಿಸಿದರು. ‘ಎಲೆಕ್ಟ್ರಾನ್ ಡಿಫ್ರಾಕ್ಶನ್’‘ ಕುರಿತಾದ ಸಂಶೋಧನೆಗಾಗಿ ಇವರಿಗೆ 1937 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1897: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಮತ್ತು ಭಾರತದ ರಕ್ಷಣಾ ಸಚಿವರಾಗಿದ್ದ ವಿ.ಕೆ. ಕೃಷ್ಣಮೆನನ್ ಕ್ಯಾಲಿಕಟ್ ಪಟ್ಟಣದಲ್ಲಿ ಜನಿಸಿದರು.

1902: ಜರ್ಮನ್-ಫ್ರೆಂಚ್ ಭೌತವಿಜ್ಞಾನಿ ಮತ್ತು ಕವಿ ಆಲ್ಫ್ರೆಡ್ ಕಾಸ್ಲರ್ ಅವರು ಜರ್ಮನ್ ಸಾಮ್ರಾಜ್ಯಕ್ಕೆ ಸೇರಿದ್ದ ಗುಯೇಬ್ ವಿಲ್ಲರ್ ಎಂಬಲ್ಲಿ ಜನಿಸಿದರು. ‘ಹೆರ್ಟ್ಸಿಯಾನ್ ರೆಸೊನಾನ್ಸಸ್ ಇನ್ ಆಟಮ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1966 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1933: ಅಮೆರಿಕದ ಭೌತವಿಜ್ಞಾನಿ ಸ್ಟೀವನ್ ವೀಯೆನ್ ಬರ್ಗ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ‘ಯೂನಿಫಿಕೇಶನ್ ಆಫ್ ದಿ ವೀಕ್ ಫೋರ್ಸ್ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಟರಾಕ್ಷನ್ ಬಿಟ್ವೀನ್ ಇಂಟರಾಕ್ಟೀವ್ ಪಾರ್ಟಿಕಲ್ಸ್’’ ಕುರಿತಾದ ಸಂಶೋಧನೆಗಾಗಿ ಇವರಿಗೆ 1979 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1969: ಭಾರತದ ಮೂರನೇ ಮಾಜಿ ರಾಷ್ಟ್ರಪತಿಗಳಾದ ಜಾಕಿರ್ ಹುಸೇನ್ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿತ್ತು.

1981: ಪ್ರಸಿದ್ಧ ಹಿಂದೀ ಚಲನಚಿತ್ರ ನಟಿ ನರ್ಗಿಸ್ ದತ್ ನಿಧನರಾದರು. ಅವರ ಮದರ್-ಇಂಡಿಯಾದಲ್ಲಿನ ಅಭಿನಯ ಅಕಾಡೆಮಿ ಪ್ರಶಸ್ತಿ ಗೌರವಕ್ಕೆ ನಾಮಾಂಕಣಗೊಂಡಿತ್ತು. ಪದ್ಮಶ್ರೀ ಗೌರವ ಸಂದ ಪ್ರಪ್ರಥಮ ನಟಿಯಾದ ಇವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲಂಫೇರ್ ಗೌರವಗಳು ಸಂದಿದ್ದವು. ಇವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಹಾ ನೀಡಲಾಗುತ್ತಿದೆ.

2006: ತಮ್ಮ ಸೋದರ ಪ್ರವೀಣ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು 12 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ ಅವರು ಇಂದು ತಮ್ಮ 56ನೆಯ ವಯಸ್ಸಿನಲ್ಲಿ ನಿಧನರಾದರು.

2008: ಕೊಂಕಣಿ ಲೇಖಕಿ ಗೋದೂಬಾಯಿ ಕೇಳ್ಕರ್ ಅವರು ತಮ್ಮ 83ನೆಯ ವಯಸ್ಸಿನಲ್ಲಿ ಪಣಜಿಯಲ್ಲಿ ನಿಧನರಾದರು.

2014: ಅಮೆರಿಕದ ಅರ್ಥಶಾಸ್ತ್ರಜ್ಞ ಗ್ಯಾರಿ ಬೆಕರ್ ಚಿಕಾಗೊದಲ್ಲಿ ನಿಧನರಾದರು. ಇವರಿಗೆ 1992 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

Categories
e-ದಿನ

ಮೇ- 02

ಪ್ರಮುಖಘಟನಾವಳಿಗಳು:

1933: ಅಡಾಲ್ಫ್ ಹಿಟ್ಲರ್ ಕಾರ್ಮಿಕ ಸಂಘಗಳನ್ನು ನಿಷೇಧಿಸಿದ.

1945: ಎರಡನೇ ಮಹಾಯುದ್ಧದಲ್ಲಿ ಬರ್ಲಿನ್ ಅನ್ನು ಆಕ್ರಮಿಸಿದ್ದಾಗಿ ಸೋವಿಯತ್ ಒಕ್ಕೂಟ ಪ್ರಕಟಿಸಿತು. ಸೋವಿಯತ್ ಸೈನಿಕರು ರೀಚ್ಸ್ಟಾಗ್ ಕಟ್ಟಡದ ಮೇಲೆ ತಮ್ಮ ಕೆಂಪು ಬಾವುಟವನ್ನು ಹಾರಿಸಿದರು.

1986: ಚೆರ್ನೋಬಿಲ್ ದುರಂತವಾದ ಆರು ದಿನಗಳಲ್ಲಿ ಚೆರ್ನೋಬಿಲ್ ಅನ್ನು ಸ್ಥಳಾಂತರಿಸಲಾಯಿತು.

2000: ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಜಿ.ಪಿ.ಅಸ್ ವ್ಯವಸ್ಥೆ, ಇನ್ನು ಮುಂದೆ ಕೇವಲ ಸೈನ್ಯದ ಉಪಯೋಗಕ್ಕೆ ಮಾತ್ರಾ ಸೀಮಿತವಲ್ಲ ಎಂದು ಪ್ರಕಟಿಸಿದರು.

2008: ಬರ್ಮಾದಲ್ಲಿ ಉಂಟಾದ ಸೈಕ್ಲೋನ್ ನರ್ಗಿಸ್ ಕಾರಣದಿಂದ, ಭೂಕುಸಿತ ಉಂಟಾಗಿ 1,38,000ಕ್ಕೂ ಹೆಚ್ಚು ನಿಧನರಾಗಿ ಹಲವು ದಶಲಕ್ಷ ಜನ ನಿರಾಶ್ರಿತರಾದರು.

2008: ಚೀನಾವು ಜಲಾಂತರ್ಗಾಮಿ ಪರಮಾಣು ಘಟಕವೊಂದನ್ನು ರಹಸ್ಯವಾಗಿ ಸ್ಥಾಪಿಸಿರುವುದು ಏಷ್ಯಾ ದೇಶಗಳಿಗೆ ಆತಂಕ ಉಂಟು ಮಾಡುವಂತಿದ್ದು, ಅಮೆರಿಕದ ಶಕ್ತಿಗೆ ಸಹಾ ಸವಾಲು ಒಡ್ಡುವಂತದ್ದಾಗಿದೆ ಆಗಿದೆ ಎಂದು ಲಂಡನ್ನಿನ ಮಾಧ್ಯಮಗಳು ವರದಿ ಮಾಡಿದವು.

2011: ಸೆಪ್ಟೆಂಬರ್ 11ರ ಅಮೆರಿಕದ ಮೇಲಿನ ಉಗ್ರರ ದಾಳಿಯ ಪ್ರಮುಖ ಸೂತ್ರಧಾರನೆಂದು ಶಂಕಿಸಲಾದ ಒಸಾಮಾ ಬಿನ್ ಲ್ಯಾಡೆನ್ ಅನ್ನು ಅಮೆರಿಕದ ವಿಶೇಷ ಕಾರ್ಯಪಡೆಗಳು ಪಾಕಿಸ್ತಾನದ ಅಬ್ಬೊಟ್ಟಬಾದ್ ಎಂಬಲ್ಲಿ ವಧೆ ಮಾಡಿತು.

2012: ನಾರ್ವೆಯನ್ ವರ್ಣಚಿತ್ರ ಕಲಾವಿದರಾದ ಎಡ್ವರ್ಡ್ ಮಂಚ್ ಅವರ ‘ದಿ ಸ್ಕ್ರೀಮ್’ ಎಂಬ ಪ್ಯಾಸ್ಟೆಲ್ ವರ್ಣಚಿತ್ರ ಕಲೆಯು 120 ಮಿಲಿಯನ್ ಡಾಲರ್ ಹಣಕ್ಕೆ ಹರಾಜುಗೊಂಡ ವಿಶ್ವದಾಖಲೆ ನಿರ್ಮಿಸಿತು.

ಪ್ರಮುಖಜನನ/ಮರಣ:

1913: ಕನ್ನಡದ ಬರಹಗಾರ್ತಿ ಮತ್ತು ಕತೆಗಾರ್ತಿ ಎಚ್. ವಿ. ಸಾವಿತ್ರಮ್ಮ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಸೋವಿಯತ್ ಲ್ಯಾಂಡ್ ನೆಹರು’ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ್ವರಲಿಪಿ ಪ್ರತಿಷ್ಠಾನದ ‘ಲಿಪಿ ಪ್ರಾಜ್ಞೆ’ ಗೌರವ ಮುಂತಾದ ಅನೇಕ ಪುರಸ್ಕಾರಗಳು ಸಂದಿದ್ದವು.

1920: ಹಿಂದೂಸ್ಥಾನಿ ಸಂಗೀತ ಗಾಯಕ ಮತ್ತು ಸಿತಾರ್ ವಾದಕ ವಸಂತರಾವ್ ದೇಶಪಾಂಡೆ ಮುರ್ತಿಜಾಪುರ್ ಎಂಬಲ್ಲಿ ಜನಿಸಿದರು. ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸಂದಿತ್ತು.

1921 : ನಿರ್ದೇಶಕ, ನಿರ್ಮಾಪಕ, ಚಿತ್ರಕತೆಗಾರ, ಸಂಗೀತ ಸಂಯೋಜಕ, ಕತೆಗಾರ ಮತ್ತು ಕಲಾ ವಿನ್ಯಾಸಕ – ಈ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆಎನಿಸಿದ್ದ ಸತ್ಯಜಿತ್ ರೇ ಅವರು ಕೋಲ್ಕತ್ತಾದಲ್ಲಿ ಜನಿಸಿದರು. 1978ರ ವರ್ಷದಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು. 1992ರ ವರ್ಷದಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು. ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ‘ಭಾರತರತ್ನ’ ಪ್ರಶಸ್ತಿಗಳು.

1922: ಭಾರತದ ಬಿಲಿಯರ್ಡ್ಸ್ ಆಟಗಾರ ವಿಲ್ಸನ್ ಜೋನ್ಸ್ ಅವರು ಪುಣೆಯಲ್ಲಿ ಜನಿಸಿದರು. ಇವರು 1958ರಲ್ಲಿ ಭಾರತದ ಪ್ರಪ್ರಥಮ ವೈಯಕ್ತಿಕ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೂರು ಅಮೆಚೂರ್ ಜಾಗತಿಕ ಪ್ರಶಸ್ತಿಗಳನ್ನು ಇವರು ಗೆದ್ದುಕೊಂಡರು.

1928: ಉತ್ತರ ಭಾರತದ ನೃತ್ಯ ಪ್ರಕಾರಗಳಲ್ಲಿ ಜನಪ್ರಿಯವಾದ ಕಥಕ್‌ ನೃತ್ಯವನ್ನು ಕರ್ನಾಟಕಕ್ಕೆ ತಂದ ಅಂತರರಾಷ್ಟ್ರೀಯ ಖ್ಯಾತಿಯ ಕಥಕ್ ಕಲಾವಿದೆ ಮತ್ತು ಗುರು ಡಾ. ಮಾಯಾ ರಾವ್‌ ಅವರು ಬೆಂಗಳೂರಿನಲ್ಲಿ ಜನಿಸಿದರು. ಹೆಲ್ಸಿಂಕಿಯಲ್ಲಿ ನಡೆದ ವರ್ಲ್ಡ್ ಥಿಯೇಟರ್ ಫೆಸ್ಟಿವಲ್ನಲ್ಲಿ ಚಿನ್ನದ ಪದಕ, ದೆಹಲಿಯ ಸಾಹಿತ್ಯ ಕಲಾ ಪರಿಷತ್‌ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 1989ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1519: ‘ಮೊನಾಲೀಸಾ’, ‘ಲಾಸ್ಟ್ ಸಪ್ಪರ್’ ಮುಂತಾದ ಮೇರು ಕೃತಿಗಳ ಸೃಷ್ಟಿಕರ್ತರಾದ ಲಿಯನಾರ್ಡೋ ಡ ವಿಂಚಿ ಅವರು ಫ್ರಾನ್ಸ್ ಸಾಮ್ರಾಜ್ಯದ ಅಂಬ್ರಾಯಿಸ್ ಎಂಬಲ್ಲಿ ನಿಧನರಾದರು. ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಅನೇಕ ರೀತಿಯಲ್ಲಿ ಪ್ರಸಿದ್ಧರಾಗಿದ್ದಾರೆ.

1997: ಆಸ್ಟ್ರೇಲಿಯನ್ ವೈದ್ಯವಿಜ್ಞಾನಿ ಜಾನ್ ಎಕ್ಲೆಸ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನೆರೋ-ಕಾಂಟ್ರಾ ಎಂಬಲ್ಲಿ ನಿಧನರಾದರು. ‘ಸಿನಾಪ್ಸೆ’ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

 

Categories
e-ದಿನ

ಮೇ-01

ದಿನಾಚರಣೆಗಳು: ಕಾರ್ಮಿಕರ ದಿನಾಚರಣೆ

‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಸಮಾಜವಾದಿ ಮತ್ತು ಕಮ್ಮ್ಯೂನಿಸ್ಟ್ ರಾಷ್ಟ್ರಗಳು ಹಾಗೂ ಸಂಘಟನೆಗಳು 19ನೇ ಶತಮಾನದಿಂದ ಆಚರಿಸಲು ಮೊದಲುಮಾಡಿವೆ. 1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿದೆ.

ಮಹಾರಾಷ್ಟ್ರ ದಿನ ಮತ್ತು ಗುಜರಾತ್ ದಿನ

1960ರ ವರ್ಷದಲ್ಲಿ ಮುಂಬೈ ಪ್ರಾಂತ್ಯವನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಪ್ರತ್ಯೇಕ ರಾಜ್ಯಗಳನ್ನಾಗಿ ಈ ದಿನದಂದು ಪರಿಗಣಿಸಿದ್ದರಿಂದ ಈ ಎರಡೂ ರಾಜ್ಯಗಳ ಜನರು ತಮ್ಮ ತಮ್ಮ ರಾಜ್ಯೋತ್ಸವ ಆಚರಣೆಯನ್ನು ನಡೆಸುತ್ತಾರೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 475: ರೋಮನ್ ರಾಯಭಾರಿಯಾದ ಪ್ಯುಬ್ಲಿಯಸ್ ವಲೇರಿಯಸ್ ಪೋಪ್ಲಿಕೋಲ ಎಂಬಾತ ವೆಲಿ ಮತ್ತು ಸಬೈನ್ಸ್ ಮೇಲೆ ವಿಜಯೋತ್ಸವವನ್ನು ಆಚರಿಸಿದ.

1851: ರಾಣಿ ವಿಕ್ಟೋರಿಯಾ ಅವರು ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ‘ಗ್ರೇಟ್ ಎಕ್ಸಿಭಿಷನ್’ ಎಂಬ ಎಲ್ಲ ರಾಷ್ಟ್ರಗಳ ಕೈಗಾರಿಕಾ ವಸ್ತುಗಳ ಬೃಹತ್ ಪ್ರದರ್ಶನವನ್ನು ಉದ್ಘಾಟಿಸಿದರು.

1884: ಅಮೆರಿಕದಲ್ಲಿ ದಿನಕ್ಕೆ 8 ಗಂಟೆಗಳ ಅವಧಿಯ ಕಾರ್ಮಿಕ ದಿನದ ಬೇಡಿಕೆಯು ಘೋಷಣೆಗೊಂಡಿತು.

1886: ಅಮೆರಿಕದ ಎಲ್ಲೆಡೆಗಳಲ್ಲಿ ಯಾವುದೇ ಸಂಭಳದ ಕಡಿತವಿಲ್ಲದೆ 8 ಗಂಟೆಗಳ ಅವಧಿಯ ಕಾರ್ಮಿಕ ದಿನದ ಬೇಡಿಕೆಯಿಂದ ಪ್ರತಿಭಟನೆಗಳು ನಡೆದವು. ಈ ಕಾವು ಕೆಲವು ದಿನಗಳವರೆಗೂ ಮುಂದುವರೆಯಿತು. ಇದೇ ನಿಟ್ಟಿನಲ್ಲಿ ಚಿಕಾಗೋದಲ್ಲಿನ ಹೇ ಮಾರ್ಕೆಟ್ ಪ್ರದೇಶದಲ್ಲಿ ದಮನಕಾರಿ ಘಟನೆಗಳು ನಡೆದು, ಹಲವು ದೇಶಗಳಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಗೆ ನಾಂದಿಯಾಯಿತು.

1897: ಸ್ವಾಮಿ ವಿವೇಕಾನಂದರು ಕೋಲ್ಕತದಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.

1925: ವಿಶ್ವದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಆಲ್-ಚೀನಾ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ಸ್ ಅಧಿಕೃತವಾಗಿ ಸ್ಥಾಪಿಸಲ್ಪಟ್ಟಿತು.

1930: ಕುಬ್ಜ ಗ್ರಹವಾದ ಪ್ಲೂಟೋವನ್ನು ಹೆಸರಿಸಲಾಯಿತು.

1931: ನ್ಯೂಯಾರ್ಕ್ ನಗರದ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಸಮರ್ಪಣೆಗೊಂಡಿತು.

1933:  ಇಂಗ್ಲೆಂಡ್ ಮತ್ತು ಭಾರತ ನಡುವಣ ದೂರವಾಣಿ ಸೇವೆ ಆರಂಭಗೊಂಡಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್ ಸ್ಯಾಮ್ಯುಯೆಲ್ ಹೋರ್ ಮತ್ತು ಮುಂಬೈಯ ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರ ಮಧ್ಯೆ ಮೊತ್ತ ಮೊದಲ ದೂರವಾಣಿ ಸಂಭಾಷಣೆ ನಡೆಯಿತು.

1956: ಜೋನಾಸ್ ಸಲ್ಕ್ ಅವರು ತಯಾರಿಸಿದ ಪೋಲಿಯೋ ಲಸಿಕೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಯಿತು.

1960: ಮುಂಬೈ ಪ್ರಾಂತ್ಯವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಂಗಡನೆಗೊಂಡಿತು.

1989: ಅಮೆರಿಕದ ಫ್ಲೋರಿಡಾದಲ್ಲಿನ ಆರ್ಲ್ಯಾಂಡೋ ಬಳಿಯಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ಸಂಸ್ಥೆಯು ತನ್ನ ಆವರಣದಲ್ಲಿ ಡಿಸ್ನಿ-ಎಂ.ಜಿ.ಎಂ. ಸ್ಟುಡಿಯೋ ಆರಂಭಿಸಿತು .

1998: ಸುಮಾರು 760 ಕಿ.ಮೀ. ಉದ್ದದ ಕೊಂಕಣ ರೈಲ್ವೇಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದಿನ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗವು ರತ್ನಗಿರಿಯಿಂದ ಮುಂದಕ್ಕೆ ವಿಸ್ತರಣೆಯಾಗಿದ್ದು, ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ನಿರ್ಮಾಣಗೊಂಡಿದೆ.

2002: ಓಪನ್ ಆಫೀಸ್ (OpenOffice.org) ತನ್ನ ಪ್ರಥಮ ಸುದೃಢ ಎನ್ನಬಹುದಾದ ಆವೃತ್ತಿ 1,0 ಅನ್ನು ಬಿಡುಗಡೆ ಮಾಡಿತು.

2003: ಅಮೆರಿಕ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ. ಬುಷ್ ಅವರು ‘ಗುರಿ ಸಾಧಿಸಿದ’ ಭಾಷಣ ಎಂದು ಬಣ್ಣಿತಗೊಂಡಿರುವ ಇರಾಖ್ ಮೇಲಿನ ಆಕ್ರಮಣದಲ್ಲಿನ ವಿಜಯವನ್ನು ಘೋಷಿಸಿದರು.

2008: ಚಲಿಸುವ ರೈಲನ್ನು ಹತ್ತುವ ಸಂದರ್ಭದಲ್ಲಿ ಮೃತರಾದ/ ಗಾಯಗೊಂಡ ವ್ಯಕ್ತಿಯ ಕುಟುಂಬವೂ ಪರಿಹಾರ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಹೇಳಿತು. ಚಲಿಸುವ ರೈಲನ್ನು ಹತ್ತುವ ಯತ್ನದಲ್ಲಿ ವ್ಯಕ್ತಿಯು ತನ್ನದೇ ತಪ್ಪಿನಿಂದ ರೈಲಿಗೆ ಸಿಲುಕಿದ್ದರೂ ಆತನ/ ಆಕೆಯ ಕುಟುಂಬ ಪರಿಹಾರ ಪಡೆಯಲು ಅರ್ಹ ಎಂದು ಕೋರ್ಟ್ ಸ್ಪಷ್ಟಪಡಿಸಿತು.

2008: ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ಅವರನ್ನು ನೇಮಕ ಮಾಡಲಾಯಿತು. ಮಧ್ಯಪ್ರದೇಶ ಕೇಡರಿನ 1966ರ ತಂಡದ ಐಎಎಸ್ ಅಧಿಕಾರಿಯಾದ ಭಟ್ನಾಗರ್ ಅವರು ಈ ಮೊದಲು ರಾಷ್ಟ್ರೀಯ ಸಲಹಾ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

2008: ಪ್ರಖ್ಯಾತ ಜಾದೂಗಾರ ಡೇವಿಡ್ ಬ್ಲೇನ್ ಅವರು 17 ನಿಮಿಷಗಳಿಗೂ ಹೆಚ್ಚುಕಾಲ ಉಸಿರಾಟ ಸ್ಥಗಿತಗೊಳಿಸಿಕೊಂಡು, ಬಳಿಕ ಆರಾಮ ಸ್ಥಿತಿಗೆ ಮರಳುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದರು.

2009: ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದ ಕೇಂದ್ರದ ‘ಹೊಸ ಪಿಂಚಣಿ ಯೋಜನೆ’ಯು (ಎನ್‌ಪಿಎಸ್) ಕಾರ್ಮಿಕ ದಿನವಾದ ಈದಿನ ದೇಶದಾದ್ಯಂತ ಜಾರಿಗೆ ಬಂದಿತು.

ಪ್ರಮುಖಜನನ/ಮರಣ:

1852: ಸ್ಪಾನಿಷ್ ನರವಿಜ್ಞಾನಿ ಮತ್ತು ವೈದ್ಯಶಾಸ್ತ್ರಜ್ಞರಾದ ಸಾಂಟಿಯಾಗೋ ರೇಮನ್ ವೈ ಕಜಾಲ್ ಅವರು ಸ್ಪೇನಿನ ಪೆಟಿಲ್ಲ ಡಿ ಅರಾಗನ್ ಎಂಬಲ್ಲಿ ಜನಿಸಿದರು. ನರವಿಜ್ಞಾನದ ಪಿತಾಮಹರೆಂದು ಇವರು ಪ್ರಸಿದ್ಧರಾಗಿದ್ದಾರೆ. ನರಮಂಡಲದ ವ್ಯವಸ್ಥೆಯ ಕುರಿತಾದ ಸಂಶೋಧನೆಗಾಗಿ ಇವರಿಗೆ 1906 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1919: ಮನ್ನಾಡೆ ಎಂದು ಪ್ರಸಿದ್ಧರಾದ ಭಾರತೀಯ ಚಿತ್ರರಂಗದ ಮಹಾನ್ ಹಿನ್ನಲೆಗಾಯಕರಾದ ಪ್ರಬೋಧ ಚಂದ್ರ ದೇ ಅವರು ಕಲಕತ್ತೆಯಲ್ಲಿ ಜನಿಸಿದರು. ಪ್ರಮುಖವಾಗಿ ಹಿಂದೀ ಮತ್ತು ಬಂಗಾಳಿಯಲ್ಲಿ ಹಾಡಿರುವ ಇವರು ಇತರ ಭಾರತೀಯ ಭಾಷೆಗಳಲ್ಲೂ ತಮ್ಮ ಧ್ವನಿ ನೀಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಗಳು ಇವರಿಗೆ ಸಂದಿವೆ.

1948: ಕವಯಿತ್ರಿ ಶಶಿಕಲಾರವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಮೇ 1, 1948ರಂದು ಜನಿಸಿದರು. ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಮುಂತಾದ ಹಲವಾರು ಗೌರವಗಳು ಶಶಿಕಲಾ ವೀರಯ್ಯಸ್ವಾಮಿಯವರಿಗೆ ಸಂದಿವೆ.

1955: ಭಾರತೀಯ ಉದ್ದಿಮೆಗಳಲ್ಲಿ ಪ್ರಮುಖವಾದ ‘ಮಹೇಂದ್ರ ವ್ಯವಹಾರ ಸಮೂಹ’ದ ಮುಖ್ಯಸ್ಥರಾದ ಆನಂದ ಮಹೇಂದ್ರ ಅವರು ಮುಂಬೈನಲ್ಲಿ ಜನಿಸಿದರು.

1968: ಪ್ರಸಿದ್ಧ ವ್ಯಂಗ್ಯಚಿತ್ರಕಾರರೂ, ಆಯುರ್ವೇದ ವೈದ್ಯರೂ ಆಗಿದ್ದ ಡಾ. ಸತೀಶ್ ಶೃಂಗೇರಿ ಜನಿಸಿದರು.

1700: ಇಂಗ್ಲಿಷ್ ಕವಿ, ನಾಟಕಕಾರ ಮತ್ತು ವಿಮರ್ಶಕ ಜಾನ್ ಡ್ರೈಡೆನ್ ನಿಧನರಾದರು. ಇವರು ಲಾರಿಯೇಟ್ ಹುದ್ದೆಗೆ ಅಧಿಕೃತವಾಗಿ ನೇಮಕಗೊಂಡ ಮೊಟ್ಟ ಮೊದಲ ಇಂಗ್ಲಿಷ್ ಕವಿ. ಆದರೆ ನೂತನ ದೊರೆ ಮೂರನೇ ವಿಲಿಯಂಗೆ ಪ್ರಮಾಣವಚನ ಬೋಧಿಸಲು ನಿರಾಕರಿಸಿದ್ದಕ್ಕಾಗಿ ಈ ಸ್ಥಾನವನ್ನು ಕಳೆದುಕೊಂಡರು.

2008: ಖ್ಯಾತ ಗಾಂಧಿವಾದಿ ಹಾಗೂ ರಾಜ್ಯಸಭಾ ಸದಸ್ಯೆ, ಪದ್ಮವಿಭೂಷಣ ಗೌರವಾನ್ವಿತರಾದ ನಿರ್ಮಲಾ ದೇಶಪಾಂಡೆ ಅವರು ತಮ್ಮ 79ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-30

ಪ್ರಮುಖಘಟನಾವಳಿಗಳು:

1789: ನ್ಯೂಯಾರ್ಕ್ ನಗರದ, ವಾಲ್ ಸ್ಟ್ರೀಟ್ನಲ್ಲಿರುವ ಫೆಡರಲ್ ಸಭಾಂಗಣದಲ್ಲಿ ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

1885: ನ್ಯೂಯಾರ್ಕಿನ ಗವರ್ನರ್ ಆದ ಡೇವಿಡ್ ಬಿ ಹಿಲ್ ಅವರು ನ್ಯೂಯಾರ್ಕ್ ನಗರದ ಮೊಟ್ಟ ಮೊದಲ ಉದ್ಯಾನವನ ಉದ್ದೇಶಿತ ‘ನಯಾಗರ ರಿಸರ್ವೇಶನ್’ ಶಾಸನಕ್ಕೆ ಸಹಿ ಮಾಡಿದರು. ಈ ಶಾಸನವು ನಯಾಗರ ಜಲಪಾತವನ್ನು ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ತಪ್ಪಿಸಿತು.

1897: ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಷನ್ನಿನಲ್ಲಿ ಜೆ.ಜೆ. ಥಾಮ್ಪನ್ ಅವರು ಸಬ್ ಆಟೋಮಿಕ್ ಪಾರ್ಟಿಕಲ್ ಭಾಗವಾದ ಎಲೆಕ್ಟ್ರಾನ್ ಸಂಶೋಧನೆಯನ್ನು ಘೋಷಿಸಿದರು. ಇದು ಪ್ರೋಟಾನಿಗಿಂತ 1800 ಪಟ್ಟು ಕಿರಿದಾದುದಾಗಿತ್ತು.

1925: ವಾಹನ ತಯಾರಿಕಾ ಸಂಸ್ಥೆಯಾದ ಡಾಡ್ಜ್ ಬ್ರದರ್ಸ್ ಇನ್ಕಾರ್ಪೋರೆಶನ್ ಅನ್ನು ದಿಲ್ಲಾನ್, ರೀಡ್ ಅಂಡ್ ಕಂಪೆನಿಗೆ 146 ಮಿಲ್ಲಿಯನ್ ಡಾಲರುಗಳಿಗೆ ಮತ್ತು 50 ಮಿಲಿಯನ್ ಡಾಲರ್ ಸಮಾಜಸೇವೆಗೆ ಎಂದು ಮಾರಲಾಯಿತು.
1938: ಕಾರ್ಟೂನ್ ಆನಿಮೇಶನ್ ಪಾತ್ರವಾದ “ಪೋರ್ಕಿ’ಸ್ ಹೇರ್” ಹಂಟ್ ಚಲಚಿತ್ರವಾಗಿ ಚಿತ್ರಮಂದಿರಗಳಿಗೆ ಬಂದು ‘ಹ್ಯಾಪಿ ರಾಬಿಟ್’ ಪರಿಚಿತಗೊಂಡಿತು
ಕಾರ್ಟೂನ್ ಆನಿಮೇಶನ್ ಪಾತ್ರವಾದ “ಪೋರ್ಕಿ’ಸ್ ಹೇರ್ ಹಂಟ್” ಚಲಚಿತ್ರವಾಗಿ ಚಿತ್ರಮಂದಿರಗಳಿಗೆ ಬಂದು ‘ಹ್ಯಾಪಿ ರಾಬಿಟ್’ ಪರಿಚಿತಗೊಂಡಿತು

1945: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಆತನ ಪತ್ನಿ ಇವಾ ಬ್ರೌನ್ ಬರ್ಲಿನ್ನಿನ ಚಾನ್ಸಲರಿ ಕಟ್ಟಡದ ತಳಭಾಗದ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

1993: ಮಹಿಳಾ ಟೆನಿಸ್ ಪಟು ಮೋನಿಕಾ ಸೆಲೆಸ್ ಅವರಿಗೆ ಜರ್ಮನಿಯ ಹ್ಯಾಂಬರ್ಗಿನಲ್ಲಿ ಟೆನಿಸ್ ಪಂದ್ಯ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಚೂರಿ ಹಾಕಿದ. ಮೋನಿಕಾ ವಿರುದ್ಧ ಸೆಣಸುತ್ತಿದ್ದ ಸ್ಟೆಫಿ ಗ್ರಾಫ್ ಅಭಿಮಾನಿ ತಾನೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ನಂತರ ದಂಡನೆಗೆ ಗುರಿಪಡಿಸಲಾಯಿತು.

1993: ವರ್ಲ್ಡ್ ವೈಡ್ ವೆಬ್ (www) ಪ್ರೋಟೋಕಾಲ್ ಅನ್ನು ಉಚಿತವಾಗಿ ಲಭ್ಯವೆಂದು ಸಿ ಇ ಆರ್ ಎನ್ (CERN) ಪ್ರಕಟಿಸಿತು.

1994: ಫಾರ್ಮ್ಯುಲಾ ಒನ್ ರೇಸಿಂಗ್ ಚಾಲಕರಾದ ರೋಲ್ಯಾಂಡ್ ರಟ್ಸೆನ್ ಬರ್ಗರ್ ಅವರು ಇಟಲಿಯ ಇಮೋಲಾ ಬಳಿಯಲ್ಲಿನ ಸ್ಯಾನ್ ಮರಿನೋ ಗ್ರಾಂಡ್ ಪ್ರಿಕ್ಸ್ ಅರ್ಹತಾ ಸುತ್ತಿನ ಪಂದ್ಯದ ಸಮಯದಲ್ಲಿ ಅಪಘಾತದಿಂದ ನಿಧನರಾದರು.

2007: ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ನೌಕರರನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿತು.

2009: ಕ್ರಿಸ್ಲರ್ ಸಂಸ್ಥೆಯು ಚಾಪ್ಟರ್ 11ರ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತು.

2009: ಇಂಧನ ಕೊರತೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಮಹಾರಾಷ್ಟ್ರದ 800 ಕಿ.ಮೀಗಳಷ್ಟು ದೂರದ ದಾಬೋಲ್‌ನಿಂದ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಮಹತ್ವದ ಯೋಜನೆಗೆ ಅಂಕಿತ ಬಿದ್ದಿತು.

2012: ಬ್ರಹ್ಮಪುತ್ರ ನದಿಯಲ್ಲಿ ದೋಣಿ ಜನರಿಂದ ತುಂಬಿ ತುಳುಕಿದ್ದ ದೋಣಿ ಮುಳುಗಿ 103 ಜನ ಮೃತರಾದರು.

ಪ್ರಮುಖಜನನ/ಮರಣ:

1870: ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರು ತ್ರಯಂಬಕೇಶ್ವರದಲ್ಲಿ ಜನಸಿದರು. ಪ್ರಸಿದ್ಧ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಪದವೀಧರರಾದ ಇವರು 1913ರಲ್ಲಿ ತಯಾರಿಸಿದ ಭಾರತದ ಪ್ರಪ್ರಥಮ ಪೂರ್ಣಪ್ರಮಾಣದ ಚಿತ್ರ ‘ರಾಜಾ ಹರಿಶ್ಚಂದ್ರ’ ಸೇರಿದಂತೆ ತಮ್ಮ 19 ವರ್ಷಗಳ ಚಿತ್ರ ಜೀವನದಲ್ಲಿ 95 ಚಲನಚಿತ್ರಗಳನ್ನೂ ಮತ್ತು 26 ಕಿರುಚಿತ್ರಗಳನ್ನೂ ನಿರ್ಮಿಸಿದ್ದರು. ಭಾರತದಲ್ಲಿ ಶ್ರೇಷ್ಠ ಚಲನಚಿತ್ರರಂಗದ ಸೇವೆ ಮಾಡಿದವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

1901: ಬೆಲರೂಸಿಯನ್ – ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಸೈಮನ್ ಕುಜ್ನೆಟ್ಸ್ ಅವರು ರಷ್ಯಾ ಸಾಮ್ರಾಜ್ಯಕ್ಕೆ ಸೇರಿದ್ದ ಪಿನ್ಸ್ಕ್ ಎಂಬಲ್ಲಿ ಜನಿಸಿದರು. ಇವರಿಗೆ 1971 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತು.

1921: ಜಿ.ಪಿ.ಎಸ್ ಸಹಸಂಶೋಧಕರಾದ ರೋಜರ್ ಎಲ್. ಈಸ್ಟನ್ ಅವರು ವೆರ್ಮಾಂಟಿನ ಕ್ರಾಫ್ತ್ಸ್ ಬರಿ ಎಂಬಲ್ಲಿ ಜನಿಸಿದರು.

1926: ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ / ನಿರ್ದೇಶಕ ಶ್ರೀನಿವಾಸ ಕಾಳೆ ಮುಂಬೈನಲ್ಲಿ ಜನಿಸಿದರು. ಪದ್ಮಭೂಷಣ, ಸುರಸಿಂಗಾರ್ ಗೌರವಗಳೂ ಒಳಗೊಂಡಂತೆ ಅವರಿಗೆ ಅನೇಕ ಗೌರವಗಳು ಸಂದಿದ್ದವು.

1927: ಭಾರತದ ಸುಪ್ರೀಂಕೋರ್ಟಿನ ಮೊಟ್ಟ ಮೊದಲ ಮಹಿಳಾ ನ್ಯಾಯಾಧೀಶರಾದ ಎಂ. ಫಾತಿಮಾ ಬೀವಿ ಅವರು ಟ್ರಾವಂಕೂರಿನ ಪಥಾನಮಿಥಿಟ್ಟ ಎಂಬಲ್ಲಿ ಜನಿಸಿದರು. ಅವರು ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

1944: ಭರತನಾಟ್ಯ ಮತ್ತು ಒಡಿಸ್ಸಿ ನಾಟ್ಯಕಲೆಯ ಹಿರಿಯ ಕಲಾವಿದರಾದ ಸೋನಾಲ್ ಮಾನ್ಸಿಂಗ್ ಅವರು ಮುಂಬೈನಲ್ಲಿ ಜನಿಸಿದರು. ವಿಶ್ವದೆಲ್ಲೆಡೆ ಪ್ರಸಿದ್ಧರಾದ ಇವರಿಗೆ ಪದ್ಮಭೂಷಣ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1951: ಪ್ರಸಿದ್ಧ ಕತೆ, ಕಾದಂಬರಿಗಾರ್ತಿ ಸಿ. ಎನ್. ಮುಕ್ತಾ ಚಿತ್ರದುರ್ಗದಲ್ಲಿ ಜನಿಸಿದರು. ಇವರ ಅನೇಕ ಕೃತಿಗಳು ಚಲನಚಿತ್ರ ಮತ್ತು ದೂರದರ್ಶನದ ಧಾರಾವಾಹಿಗಳಾಗಿಯೂ ಜನಪ್ರಿಯಗೊಂಡಿವೆ. ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1977: ಕರ್ನಾಟಕ ಸಂಗೀತದ ವಿದುಷಿ ಸುಧಾ ರಘುನಾಥನ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಸಂಗೀತ ಕ್ಷೇತ್ರದ ಮಹಾನ್ ಸಾಧಕರಾದ ಡಾ. ಎಂ. ಎಲ್. ವಸಂತಕುಮಾರಿ ಅವರ ಶಿಷ್ಯೆಯಾದ ಇವರು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು ತಮ್ಮ ಗುರುಗಳಂತೆಯೇ ಕನ್ನಡ ದಾಸ ಸಾಹಿತ್ಯವನ್ನೂ ಸಂಗೀತದಲ್ಲಿ ಹೆಚ್ಚು ಹೆಚ್ಚು ಪ್ರಸ್ತುತಪಡಿಸುತ್ತಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1987: ಪ್ರಸಿದ್ಧ ಭಾರತೀಯ ಕ್ರಿಕೆಟ್ ಪಟು ರೋಹಿತ್ ಶರ್ಮಾ ನಾಗಪುರದಲ್ಲಿ ಜನಿಸಿದರು.

2014: ಬಂಗಾಳದ ಪ್ರಸಿದ್ಧ ಕಲಾವಿದ ಮತ್ತು ರಂಗಕರ್ಮಿ ಖಾಲೆದ್ ಚೌಧುರಿ ಅವರು ತಮ್ಮ 94ನೆಯ ವಯಸ್ಸಿನಲ್ಲಿ ಕೋಲ್ಕತ್ತದಲ್ಲಿ ನಿಧನರಾದರು. ಪದ್ಮಭೂಷಣ, ಕಾಳಿದಾಸ ಸಮ್ಮಾನ್, ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿದ್ದವು.

2016: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ಹ್ಯಾರಿ ಕ್ರೋಟೋ ವಿಸ್ಬೆಕ್ ಎಂಬಲ್ಲಿ ನಿಧನರಾದರು. ‘ಫುಲ್ಲರೇನ್ಸ್’ ಕುರಿತಾದ ಸಂಶೋಧನೆಗಾಗಿ ಅವರಿಗೆ 1996 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

Categories
e-ದಿನ

ಏಪ್ರಿಲ್-29

ಪ್ರಮುಖಘಟನಾವಳಿಗಳು:

1910: ಯುನೈಟೆಡ್ ಕಿಂಗ್ಡಂನ ಪಾರ್ಲಿಮೆಂಟು ಬ್ರಿಟಿಷ್ ಇತಿಹಾಸದಲ್ಲೇ ಮೊದಲಬಾರಿಗೆ ಸಂಪತ್ತನ್ನು ಬ್ರಿಟಿಷ್ ಜನರಿಗೆ ಹಂಚುವ ಆಶಯವುಳ್ಳ ಜನಪರ ಬಜೆಟ್ ಮಂಡಿಸಿತು.

1953: ಅಮೆರಿಕದ ಪ್ರಥಮ 3 ಡಿ ಟೆಲಿವಿಷನ್ ಕಾರ್ಯಕ್ರಮವಾದ ‘ಸ್ಪೇಸ್ ಪೆಟ್ರೋಲ್’ ಪ್ರಸಾರಗೊಂಡಿತು.

1986: ಅಮೆರಿಕ ಮತ್ತು ಯೂರೋಪಿನ ಬೇಹುಗಾರಿಕೆ ಉಪಗ್ರಹಗಳು ಚೆರ್ನೋಬಿಲ್ ದುರಂತದಲ್ಲಿ ನಾಶಗೊಂಡ 4ನೇ ರಿಯಾಕ್ಟರಿನ ಅವಶೇಷಗಳನ್ನು ಸೆರೆಹಿಡಿದವು.

1991: ಬಾಂಗ್ಲಾದೇಶದ ಚಿಟ್ಟಗಾಂಗ್ನಲ್ಲಿ ಉಂಟಾದ ಗಂಟೆಗೆ 249 ಕಿಲೋಮೀಟರ್ ವೇಗದ ಭೀಕರ ಸೈಕ್ಲೋನಿನಲ್ಲಿ 1,38,000 ಜನ ಹತರಾಗಿ ಕೋಟಿ ಜನ ವಸತಿ ಕಳೆದುಕೊಂಡರು.

1993: ರಾಸಾಯನಿಕ ಶಸ್ತ್ರಾಸ್ತ್ರಗಳ 1993ನೇ ಅಧಿವೇಶನದ ನಿರ್ಣಯ ಜಾರಿಗೊಂಡು, ಆ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದು ಮತ್ತು ಪೇರಿಸಿಟ್ಟುಕೊಳ್ಳುವುದನ್ನು ಕಾನೂನು ಬಾಹಿರವನ್ನಾಗಿ ಮಾಡಲಾಯಿತು.

2001: ಅಮೆರಿಕದ ಕೋಟ್ಯಾಧಿಪತಿಯಾದ ಡೆನ್ನಿಸ್ ಟಿಟೋ ಅವರು ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎನಿಸಿದರು.

2008: ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.

2009: ಅಮೆರಿಕದ ಪ್ರತಿಷ್ಠಿತ ‘ಹೂವರ್’ ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಏಷ್ಯಾದ ಪ್ರಥಮ ವ್ಯಕ್ತಿ ಕಲಾಂ.

2009: ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಟಗಾರರ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರವುಗೊಳಿಸಿತು. ಆದರೆ ಮೇ 31ರೊಳಗೆ ಐಸಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅದು ಆಟಗಾರರಿಗೆ ಸೂಚಿಸಿತು.

2016: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈದಿನ ಚಾಲನೆ ನೀಡಿದರು.

ಪ್ರಮುಖಜನನ/ಮರಣ:

1848: ಪ್ರಸಿದ್ಧ ಕಲಾವಿದರಾದ ರಾಜಾ ರವಿವರ್ಮ ಅವರು ಟ್ರಾವನ್ಕೂರ್ ಸಂಸ್ಥಾನದ ಕಿಲಿಮನೂರ್ ಎಂಬಲ್ಲಿ ಜನಿಸಿದರು.

1856: ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರಾದ ದಿವಾನ್ ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರು ಬೆಂಗಳೂರಿನ ಕೃಷ್ಣರಾಜಪುರದಲ್ಲಿ ಜನಿಸಿದರು. ಇವರಿಗೆ ಮೈಸೂರು ಮಹಾರಾಜರ ‘ರಾಜ್ಯಸಭಾ ಭೂಷಣ’ ಪ್ರಶಸ್ತಿ, ಭಾರತ ಸರ್ಕಾರದ ‘ದಿವಾನ್ ಬಹದ್ದೂರ್’ ಪ್ರಶಸ್ತಿ, 1917ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು 1925ರ ವರ್ಷದಲ್ಲಿ ‘ಕೈಸರ್ ಹಿ ಹಿಂದ್’ ಪದಕ, ಬ್ರಿಟಿಷ್ ಸರ್ಕಾರದ ‘ಸರ್’ ಬಿರುದು ಸಂದಿದ್ದವು. 1921ರಲ್ಲಿ ನಡೆದ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1936ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.

1891: ತಮಿಳು ಕವಿ ಮತ್ತು ಸಾಮಾಜಿಕ ಹೋರಾಟಗಾರ ‘ಭಾರತೀದಾಸನ್’ ಕಾವ್ಯನಾಮದ ಕನಕಸಭಾಯ್ ಸುಬ್ಬುರತ್ನಂ ಅವರು ಪಾಂಡಿಚೇರಿಯಲ್ಲಿ ಜನಿಸಿದರು.

1893: ಅಮೆರಿಕದ ರಸಾಯನ ಶಾಸ್ತ್ರಜ್ಞ ಹೆರಾಲ್ಡ್ ಉರೆಯ್ ಅವರು ಇಂಡಿಯಾನದ ವಾಕರ್ಟನ್ ಎಂಬಲ್ಲಿ ಜನಿಸಿದರು. ‘ಡಿಯೋಟೆರಿಯಂ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1934 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1919: ತಬಲಾ ವಾದನದಲ್ಲಿ ಮಾಂತ್ರಿಕರೂ, ತಾಳ ವಾದ್ಯಕ್ಕೆ ವಿಶ್ವದಲ್ಲೇ ಪ್ರತಿಷ್ಟಿತ ಸ್ಥಾನವನ್ನು ತಂದುಕೊಟ್ಟ ಉಸ್ತಾದ್ ಅಲ್ಲಾ ರಖಾ ಅವರು ರತನ್ ಘರ್ ಎಂಬಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

1929: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿಸು ಸಂಗಮೇಶ ಎಂಬ ಕಾವ್ಯನಾಮದಿಂದ ಹೆಸರಾದ ಸಂಗಮೇಶ ಸಿದ್ದಾಮಪ್ಪನಗೊಂಡ ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಜನಿಸಿದರು. ಆದರ್ಶ ಶಿಕ್ಷಕ ಪ್ರಶಸ್ತಿ, ‘ನನ್ನ ಮನೆ’ ಮತ್ತು ‘ನನ್ನ ಗೆಳೆಯ ಜಪಾನದ ಟಾರೊ’ ಕೃತಿಗೆ ರಾಷ್ಟ್ರಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮಾವೇಶದ ಸರ್ವಾಧ್ಯಕ್ಷತೆ. ಭೂಪಾಲದಲ್ಲಿ ನಡೆದ ಅಖಿಲ ಭಾರತ ಭಾಷಾ ಸಮ್ಮೇಳನದ ‘ಭಾರತ ಭಾಷಾ ಭೂಷಣ ಪ್ರಶಸ್ತಿ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1936: ಪಾಶ್ಚಾತ್ಯ ಸಂಗೀತ ಸಾಧಕರಲ್ಲಿ ಪ್ರಮುಖ ಭಾರತೀಯರಾದ ಜುಬಿನ್ ಮೆಹ್ತಾ ಅವರು ಮುಂಬೈನಲ್ಲಿ ಜನಿಸಿದರು. ಇಸ್ರೇಲ್ ದೇಶದ ಗೌರವ, ಲಾರಿಯೇಟ್ ಆಫ್ ವುಲ್ಫ್ ಪ್ರೈಜ್ ಇನ್ ಆರ್ಟ್ಸ್ವ, ಯುಕ್ತ ರಾಷ್ಟ್ರಗಳ ಒಕ್ಕೂಟದ ‘ಶಾಂತಿ ಮತ್ತು ಸೌಹಾರ್ದತೆಯ ಜೀವಮಾನ ಸಾಧನೆಗಾಗಿನ ಗೌರವ’, ಭಾರತ ಸರ್ಕಾರದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಗೌರವಗಳು ಇವರಿಗೆ ಸಂದಿವೆ.

1958: ಭಾರತೀಯ ಇತಿಹಾಸಜ್ಞ ರಾಮಚಂದ್ರ ಗುಹಾ ಅವರು ಡೆಹ್ರಾಡೂನ್ ಪಟ್ಟಣದಲ್ಲಿ ಜನಿಸಿದರು. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಗಳಲ್ಲದೆ ಅನೇಕ ಅಂತರರಾಷ್ಟ್ರೀಯ ಗೌರವಗಳೂ ಇವರಿಗೆ ಸಂದಿವೆ.

1236: ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತರಾದರು. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.

1937: ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.

Categories
e-ದಿನ

ಏಪ್ರಿಲ್-28

ಪ್ರಮುಖಘಟನಾವಳಿಗಳು:

1503: ಸೆರಿಗ್ನೋಲ ಕದನವು ನಡೆಯಿತು. ಚರಿತ್ರೆಯಲ್ಲಿ ಸಿಡಿಮದ್ದು ಪುಡಿಯನ್ನು ಉಪಯೋಗಿಸಿ ಸಣ್ಣ ಸೈನ್ಯವು ಯುದ್ಧದಲ್ಲಿ ಜಯಗಳಿಸಿದ ಪ್ರಥಮ ಘಟನೆ ಎನ್ನಲಾಗಿದೆ.

1611: ಪಾಂಟಿಫಿಕಲ್ ಮತ್ತು ರಾಯಲ್ ಯೂನಿವರ್ಸಿಟಿ ಆಫ್ ಸ್ಯಾಂಟೋ ಥಾಮಸ್, ಫಿಲಿಫೈನ್ಸ್ ವಿಶ್ವವಿದ್ಯಾಲಯವು ಸ್ಥಾಪನೆಗೊಂಡಿತು. ಇದು ವಿಶ್ವದಲ್ಲಿನ ಅತ್ಯಂತ ದೊಡ್ಡ ಕ್ಯಾತೊಲಿಕ್ ವಿಶ್ವವಿದ್ಯಾಲಯವೆನಿಸಿದೆ.

1869: ಪ್ರಥಮ ಎರಡು ಖಂಡಗಳ ನಡುವಣ ರೈಲು ನಿರ್ಮಾಣಕ್ಕೆ ತೊಡಗಿದ್ದ ಸೆಂಟ್ರಲ್ ಪೆಸಿಫಿಕ್ ರೈಲ್ ರೋಡ್ನಲ್ಲಿ ಕಾರ್ಯನಿರ್ವಹಿಸಿದ ಚೀನಾ ಮತ್ತು ಐರಿಷ್ ಕಾರ್ಮಿಕರು ಒಂದೇ ದಿನದಲ್ಲಿ ಹತ್ತು ಕಿಲೋಮೀಟರ್ ದೂರದವರೆಗೆ ಕಂಬಿಗಳನ್ನು ಜೋಡಿಸಿದರು. ಇಂತಹ ಒಂದು ಸಾಧನೆ ಹಿಂದೆಯಾಗಲಿ ಮುಂದೆಯಾಗಲಿ ಸಂಭವಿಸಿಲ್ಲ.

1910: ಫ್ರಾನ್ಸಿನ ಲೂಯಿ ಪಾಲ್ಹನ್ ಅವರು ಲಂಡನ್ನಿನಿಂದ ಮ್ಯಾಂಚೆಸ್ಟರ್ವರೆಗೆ ಏರ್ಪಡಿಸಲಾಗಿದ್ದ ಪ್ರಥಮ ಹೆಚ್ಚು ದೂರದ ವಿಮಾನ ಹಾರಾಟ ಸ್ಪರ್ಧೆಯಲ್ಲಿ ಜಯಗಳಿಸಿದರು.

1932: ಮಾನವ ಕಾಮಾಲೆ ರೋಗಿಗಳ ಮೇಲೆ ಉಪಯೋಗಿಸಬಹುದಾದ ಲಸಿಕೆಯನ್ನು ಪ್ರಕಟಿಸಲಾಯಿತು.

1945: ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೊಲೋನಿ ಮತ್ತು ಆತನ ಪ್ರೇಯಸಿ ಕ್ಲಾರ ಪೆಟಾಸ್ಸಿ ಅವರನ್ನು ಇಟಲಿಯ ಪ್ರತಿಭಟನಾ ಚಳುವಳಿಗಾರರು ಕೊಂದುಹಾಕಿದರು.

1967: ವಿಯೆಟ್ನಾಮ್ ಯುದ್ಧದ ಸಂದರ್ಭದಲ್ಲಿ ಬಾಕ್ಸರ್ ಮುಹಮ್ಮದ್ ಅಲಿ ಅವರು ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಕರೆಯನ್ನು ತಿರಸ್ಕರಿಸಿದರು. ಹೀಗಾಗಿ ಅವರಿಗೆ ನೀಡಿದ್ದ ಚಾಂಪಿಯನ್ಶಿಪ್ ಮತ್ತು ಪರವಾನಗಿಯನ್ನು ರದ್ದುಗೊಳಿಸಲಾಯಿತು.

1978: ಆಫ್ಘಾನಿಸ್ತಾನದಲ್ಲಿ ದಂಗೆಯೆದ್ದ ಕಮ್ಮ್ಯೂನಿಸ್ಟ್ ಪರರಾದ ಬಂಡುಕೋರರು ಅಧ್ಯಕ್ಷರಾದ ಮೊಹಮ್ಮದ್ ದಾವೂದ್ ಖಾನ್ ಅವರನ್ನು ಸ್ಥಾನದಿಂದ ಹೊರದಬ್ಬಿ ಕೊಲೆಗೈದರು.

1986: ಚೆರ್ನೋಬಿಲ್ ಪರಮಾಣು ದುರಂತದಲ್ಲಿ ಅತ್ಯಧಿಕ ಮಟ್ಟದ ವಿಕಿರಣ ಹೊರಸೂಸಿದ್ದು ಸ್ವೀಡನ್ನಿನ ಪರಮಾಣು ಘಟಕದಲ್ಲಿ ಪತ್ತೆಗೊಂಡಿತು. ಹೀಗಾಗಿ ಸೋವಿಯೆತ್ ಅಧಿಕಾರಿಗಳಿಗೆ ಆಗಿದ್ದ ಅನಾಹುತವನ್ನು ಸಾರ್ವಜನಿಕವಾಗಿ ಘೋಷಿಸುವ ಅನಿವಾರ್ಯತೆ ಉಂಟಾಯಿತು.

1994: ಅಮೇರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿ ಮತ್ತು ವಿಶ್ಲೇಷಕಾರಾದ ಆಲ್ಡ್ ರೋಚ್ಜ್ ಅವರು ತಾವು ಅಮೆರಿಕದ ಗಹನವಾದ ಗುಟ್ಟುಗಳನ್ನು ರಷ್ಯಾಗೆ ಬಿಟ್ಟುಕೊಟ್ಟಿದ್ದಾಗಿ ತಪ್ಪೊಪ್ಪಿಗೆ ಸಲ್ಲಿಸಿದರು.

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ‘ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್’ ಕಾದಂಬರಿಗಾರ್ತಿ ಕಾವ್ಯಾ ವಿಶ್ವನಾಥನ್ ಅವರು ತಾವು ಕೃತಿಚೌರ್ಯ ಮಾಡಿದ್ದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಅವರ ಕಾದಂಬರಿಯನ್ನು ಪ್ರಕಟಿಸಿದ ‘ಲಿಟ್ಲ್ ಬ್ರೌನ್’ ಪ್ರಕಾಶನ ಸಂಸ್ಥೆಯು, ಆ ಕಾದಂಬರಿಯ ಎಲ್ಲ ಪ್ರತಿಗಳನ್ನೂ ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು.

2006: ಯೂತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದಕ್ಕಾಗಿ, ಗ್ರಾಹಕನಿಗೆ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2008: ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನಡೆಸಿದ ಹೋರಾಟಕ್ಕಾಗಿ ಮಾಜಿ ಪ್ರಧಾನಿ ದಿ. ಬೆನಜೀರ್ ಭುಟ್ಟೊ ಅವರಿಗೆ ಪ್ರತಿಷ್ಠಿತ ತಿಪ್ಪೆರರಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.

2008: ಮಲೇಷ್ಯಾದ ಸಂಸತ್ತಿಗೆ ಭಾರತೀಯ ಮೂಲದ 10 ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರಾಗಿ ಮಹಿಳೆಯೊಬ್ಬರು ಆಯ್ಕೆಯಾಗಿ ಅತಿ ಹೆಚ್ಚು ಭಾರತೀಯರ ಆಯ್ಕೆಗೊಂಡ ಹೊಸ ಇತಿಹಾಸ ನಿರ್ಮಿಸಿದರು.

2008: ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತ್ಯಗೊಳಿಸಿತು.

2008: ವೇಗಿ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಭಜನ್ ಸಿಂಗ್ ಅವರ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದ ಇಸ್ರೋದ ಪಿ ಎಸ್ ಎಲ್ ವಿ ರಾಕೆಟ್ಟು, ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಬಿಡುವ ಮೂಲಕ ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿತು.

2009: “2011ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಗಳು ಭಾರತದಲ್ಲಿ ನಡೆಯಲಿವೆ” ಎಂದು ಐಸಿಸಿ ತಿಳಿಸಿತು. ಇದೇ ವೇಳೆ ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಪಂದ್ಯಗಳನ್ನು ನಡೆಸದಿರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ, ಲಾಹೋರಿನಲ್ಲಿದ್ದ ಐ.ಸಿ.ಸಿ ಕಚೇರಿಯನ್ನು ಮುಚ್ಚಲು ತೀರ್ಮಾನಿಸಲಾಯಿತು.

2016: ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೆಯ ಮತ್ತು ಕೊನೆಯದಾದ ಐಆರ್ಎನ್ಎಸ್ಎಸ್-1ಜಿ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2016: ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಏಕೈಕ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್ಇಇಟಿ ನೀಟ್) ನಡೆಸಲು ಸುಪ್ರೀಂಕೋರ್ಟ್ ಮಾರ್ಗವನ್ನು ಮುಕ್ತಗೊಳಿಸಿತು. ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ‘ನೀಟ್’ ಮೂಲಕ ಎರಡು ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಸುವಂತೆ ಕೇಂದ್ರ ಮತ್ತು ಸಿಬಿಎಸ್ಇಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತು.

ಪ್ರಮುಖಜನನ/ಮರಣ:

1838: ನೊಬೆಲ್ ಶಾಂತಿ ಪುರಸ್ಕೃತ ಡಚ್ ನ್ಯಾಯವಾದಿ ಮತ್ತು ವಿದ್ವಾಂಸ ಟೋಬಿಯಾಸ್ ಅಸ್ಸೆರ್ ಅವರು ನೆದರ್ಲ್ಯಾಂಡ್ಸ್’ನ ಆಮ್ಸ್ಟರ್ಡ್ಯಾಮ್ ನಗರದಲ್ಲಿ ಜನಿಸಿದರು. ಇವರು ಪ್ರಥಮ ಹೇಗ್ ಸಮಾವೇಶದಲ್ಲಿ ಶಾಶ್ವತವಾಗಿ ಸಮಾಲೋಚನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಕೋರ್ಟ್ ಸ್ಥಾಪಿಸಲು ಕಾರಣರಾದರು.

1924: ಜಾಂಬಿಯಾಗೆ ಸ್ವಾತಂತ್ರ್ಯ ತಂದುಕೊಟ್ಟ ಕೆನ್ನೆತ್ ಕೌಂಡಾ ಅವರು ಉತ್ತರ ರೋಡೇಶಿಯಾದ ಚಿನ್ಸಾಲಿ ಎಂಬಲ್ಲಿ ಜನಿಸಿದರು. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇವರು 1991ರವರೆಗೂ ಅಲ್ಲಿನ ಅಧ್ಯಕ್ಷರಾಗಿದ್ದರು.

1928: ಆಮೆರಿಕದ ಖಗೋಳ ಭೌತವಿಜ್ಞಾನಿ ಇ.ಎಂ. ಶೂಮೇಕರ್ ಅವರು ಲಾಸೆಂಜಲಿಸ್ ನಗರದಲ್ಲಿ ಜನಿಸಿದರು. ಇವರು ತಮ್ಮ ಪತ್ನಿ ಕರೋಲಿನ್ ಎಸ್. ಶೂಮೇಕರ್ ಮತ್ತು ಡೇವಿಡ್ ಹೆಚ್. ಲೆವಿ ಅವರುಗಳೊಂದಿಗೆ ಸೇರಿ ಧೂಮಕೇತುವನ್ನು ಅನ್ವೇಷಿಸಿದರು. ಅದನ್ನು ಕಾಮೆಟ್ ಶೂಮೇಕರ್-ಲೆವಿ 9 ಎಂದು ಹೆಸರಿಸಲಾಗಿದೆ.

1929: ವಿದುಷಿ ರಾಜಮ್ಮ ಕೇಶವಮೂರ್ತಿ ಅವರು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ಜನಿಸಿದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1937: ಇರಾಕಿನ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ಅವರು ಇರಾಖಿನ ಅಲ್-ಅಜ್ವಾ ಎಂಬಲ್ಲಿ ಜನಿಸಿದರು.

1941: ಅಮೆರಿಕದ ರಸಾಯನ ಶಾಸ್ತ್ರಜ್ಞ ಕಾರ್ಲ್ ಬ್ಯಾರಿ ಶಾರ್ಪ್ಲೆಸ್ ಅವರು ಫಿಲೆಡೆಲ್ಫಿಯಾದಲ್ಲಿ ಜನಿಸಿದರು. ಸ್ಟೀರಿಯೋ ಸೆಲೆಕ್ಟಿವ್ ರಿಯಾಕ್ಷನ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 2001 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತು.

1946: ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ, ಜಾನಪದ ವಿದ್ವಾಂಸ, ಹರಿದಾಸ ಸಾಹಿತ್ಯ ಸಾಧಕರಾದ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1954: ಫ್ರಾನ್ಸಿನ ಕಾರ್ಮಿಕ ನಾಯಕ ನೊಬೆಲ್ ಶಾಂತಿ ಪುರಸ್ಕೃತ ಲಿಯಾನ್ ಜೌಹಾಕ್ಸ್ ಅವರು ಪ್ಯಾಂಟಿನ್ ಎಂಬಲ್ಲಿ ಜನಿಸಿದರು.

1740: ಮರಾಠ ಸಾಮ್ರಾಜ್ಯದ ಪೇಶ್ವ ಅಥವಾ ಪ್ರಧಾನಮಂತ್ರಿಯಾಗಿದ್ದ ಬಾಜಿರಾವ್ ಅವರು ರಾವೆರ್ ಖೇಡಿ ಎಂಬಲ್ಲಿ ನಿಧನರಾದರು.

1998: ಭಾರತೀಯ ಕ್ರಿಕೆಟ್ ಆಟಗಾರರಾಗಿದ್ದ ರಮಾಕಾಂತ್ ದೇಸಾಯಿ ಅವರು ಮುಂಬೈನಲ್ಲಿ ನಿಧನರಾದರು.

1999: ಅಮೆರಿಕದ ಭೌತವಿಜ್ಞಾನಿ ಆರ್ಥರ್ ಲಿಯೋನಾರ್ಡ್ ಸ್ಕಾವ್ಲೋವ್ ಅವರು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೊ ಎಂಬಲ್ಲಿ ನಿಧನರಾದರು. ಲೇಸರ್ಸ್ ಕುರಿತಾದ ಮಹತ್ಕಾರ್ಯಕ್ಕಾಗಿ ಅವರಿಗೆ 1981 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

2016: ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.

 

Categories
e-ದಿನ

ಏಪ್ರಿಲ್-27

ಪ್ರಮುಖಘಟನಾವಳಿಗಳು:

1667: ಕುರುಡುತನ ಮತ್ತ ಬಡತನದಿಂದ ಬಳಲಿದ್ದ ಜಾನ್ ಮಿಲ್ಟನ್ ತಮ್ಮ ಪ್ಯಾರಡೈಸ್ ಲಾಸ್ಟ್ ಕೃತಿಯ ಹಕ್ಕುಗಳನ್ನು ಕೇವಲ ಹತ್ತು ಪೌಂಡುಗಳಿಗೆ ಮಾರಾಟ ಮಾಡಿದರು.

1861: ಅಮೆರಿಕದ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಆವರು ‘ಹಬೀಯಾಸ್ ಕಾರ್ಪಸ್’ ವ್ಯಕ್ತಿಸ್ವಾತಂತ್ರ್ಯದ ಕಾನೂನಿನಲ್ಲಿ ದಾವೆ ಹೋಗುವ ಹಕ್ಕನ್ನು ಅಮಾನತುಗೊಳಿಸಿದರು.

1865: 2400 ಜನರನ್ನು ಕೊಂಡೊಯ್ಯುತ್ತಿದ್ದ ‘ಸುಲ್ತಾನ’ ಎಂಬ ಹಬೆದೋಣಿಯು ಮಿಸಿಸಿಪಿ ನದಿ ಯಾನದಲ್ಲಿ ಸ್ಪೋಟಕ್ಕೊಳಗಾಗಿ 1800 ಜನ ನಿಧನರಾದರು.

1981: ಜೆರಾಕ್ಸ್ ಪಾರ್ಕ್ ಅವರು ಕಂಪ್ಯೂಟರ್ ಮೌಸ್ ಅನ್ನು ಪರಿಚಯಿಸಿದರು.

1986: ಚೆರ್ನೋಬಿಲ್ ಪರಮಾಣು ದುರಂತದ ದೆಸೆಯಿಂದಾಗಿ ಪ್ರಿಪ್ಯಾಟ್ ನಗರ ಮತ್ತು ಸುತ್ತಲಿನ ಪ್ರದೇಶದ ಜನರನ್ನು ಸ್ಥಳಾಂತರಿಸಲಾಯಿತು.

1992: ಬ್ರಿಟಿಷ್ ಹೌಸ್ ಆಫ್ ಕಾಮನ್ಸಿನ 700 ವರ್ಷಗಳ ಇತಿಹಾಸದಲ್ಲಿ ಬೆಟ್ಟಿ ಬೂಥ್ ರಾಯ್ಡ್ ಅವರು ಮೊದಲ ಸ್ಪೀಕರ್ ಆಗಿ ಆಯ್ಕೆಗೊಂಡರು.

1993: ಸೆನೆಗಲ್ ರಾಷ್ಟ್ರದ ದಕಾರ್ ಎಂಬಲ್ಲಿಗೆ 1994ನೇ ವರ್ಷದ ಫಿಫಾ ವಿಶ್ವ ಕ್ಲಬ್ಬ್ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಹೊರಟಿದ್ದ ಜಾಂಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಎಲ್ಲಾ ಸದಸ್ಯರೂ ಗಬಾನಿನ ಲೈಬ್ರೆವಿಲ್ಲೆ ಹೊರವಲಯದಲ್ಲಿ ವಿಮಾನ ಅಪಘಾತಕ್ಕೆ ಸಿಲುಕಿ ತಮ್ಮ ಜೀವ ಕಳೆದುಕೊಂಡರು.

1996: ಲೆಬನಾನ್ ಯುದ್ಧ ಕೊನೆಗೊಂಡಿತು.

2006: ನ್ಯೂಯಾರ್ಕ್ ನಗರದಲ್ಲಿ ಫ್ರೀಡಂ ಟವರ್ ಅಥವಾ ವರ್ಲ್ಡ್ ಟ್ರೇಡ್ ಸೆಂಟರಿನ ನಿರ್ಮಾಣ ಕಾರ್ಯ ಆರಂಭಗೊಂಡಿತು.

ಪ್ರಮುಖಜನನ/ಮರಣ:

ಕ್ರಿಸ್ತಪೂರ್ವ 85: ರೋಮನ್ ಅಧಿಪತ್ಯದಲ್ಲಿನ ರಾಜಕಾರಣಿ ಡೆಸಿಮಸ್ ಜೂನಿಯಸ್ ಬ್ರೂಟಸ್ ಅಲ್ಬಿನಿಯಸ್ ಜನನ.

1857: ಆಧುನಿಕ ಸಂಖ್ಯಾಶಾಸ್ತ್ರದ ಹರಿಕಾರ ಎಂದೆನಿಸಿರುವ ಕಾರ್ಲ್ ಪಿಯರ್ಸನ್ ಅವರು ಲಂಡನ್ನಿನ ಇಸ್ಲಿಂಗ್ಟನ್ ಎಂಬಲ್ಲಿ ಜನಿಸಿದರು.

1896: ನೈಲಾನ್ ಕಂಡು ಹಿಡಿದ ವ್ಯಾಲೇಸ್ ಹ್ಯೂಮ್ ಕರೋದರ್ಸ್ ಅಮೆರಿಕದ ಲೋವಾ ಬಳಿಯ ಕರ್ಲಿಂಗ್ಟನ್ ಎಂಬಲ್ಲಿ ಜನಿಸಿದರು.

1895: ಸ್ವಾತಂತ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಹೋರಾಟಗಾರ, ಪತ್ರಿಕೋದ್ಯಮಿ, ಸಾಹಿತಿ ತಿರುಮಲೆ ತಾತಾಚಾರ್ಯ ಶರ್ಮ ಅವರು ಲಕ್ಷ್ಮೀಕುಮಾರ ಎಂಬ ಹೆಸರಿನಿಂದ ಜನಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಅವರು ಸೇವೆ ಸಲ್ಲಿಸಿದರು.

1912: ಚಲನಚಿತ್ರ ನಟಿ, ನೃತ್ಯ ಕಲಾವಿದೆ ಮತ್ತು ನೃತ್ಯ ಸಂಯೋಜಕಿ ಸೊಹ್ರಾ ಸೆಹಗಲ್ ಅವರು ಸಹ್ರಾನ್ ಪುರದಲ್ಲಿ ಜನಿಸಿದರು. 102 ವರ್ಷಗಳ ಕ್ರಿಯಾಶೀಲ ಬದುಕನ್ನು ನಡೆಸಿದ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಫೆಲೋಶಿಪ್, ಪದ್ಮಶ್ರೀ, ಪದ್ಮವಿಭೂಷಣ, ಕಾಳಿದಾಸ್ ಸಮ್ಮಾನ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1931: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಉಪ್ಪಿನಂಗಡಿ ಬಳಿಯ ರಾಮಕುಂಜ ಎಂಬಲ್ಲಿ ವೆಂಕಟರಾಮ ಎಂಬ ಹೆಸರಿನಿಂದ ಜನಿಸಿದರು. ಆಧ್ಯಾತ್ಮದ ಸಾಧನೆಗಳ ಜೊತೆಗೆ ಸಾಮಾಜಿಕ ಮತ್ತು ವಿದ್ಯಾಸೇವೆಗಳಲ್ಲಿ ಸಹಾ ಅವರ ಸೇವೆ ಸಲ್ಲುತ್ತಿದೆ.

1936: ಅಮೆರಿಕದ ಯುನೈಟೆಡ್ ಆಟೋ ವರ್ಕರ್ಸ್ ಸಂಘಟನೆಯು ಅಮೆರಿಕನ್ ಫೆಡರೇಶನ್ ಆಫ್ ಲೇಬರ್ ಇಂದ ಸ್ವಾಯತ್ತತೆ ಪಡೆದುಕೊಂಡಿತು.

1941: ಖ್ಯಾತ ಹಿನ್ನೆಲೆಗಾಯಕಿ ಮತ್ತು ಸುಗಮ ಸಂಗೀತಗಾರ್ತಿ ಬಿ.ಕೆ. ಸುಮಿತ್ರಾ ಅವರು ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ 3000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಇವರಿಗೆ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಹಂಪೆ ವಿಶ್ವವಿದ್ಯಾಲಯದ ನಾಡೋಜ ಗೌರವಗಳು ಸಂದಿವೆ.

1882: ಅಮೆರಿಕದ ತತ್ವಜ್ಞಾನಿ, ಕವಿ, ಪ್ರಬಂಧಕಾರರಾದ ರಾಲ್ಫ್ ವಾಲ್ಡೊ ಎಮರ್ಸನ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಮೆಸಾಚ್ಯುಸೆಟ್ಸಿನ ಕಾಂಕಾರ್ಡಿನಲ್ಲಿ ನಿಧನರಾದರು.

1989: ಜಪಾನಿನ ಉದ್ಯಮಿ ಪ್ಯಾನಸೋನಿಕ್ ಸಂಸ್ಥಾಪಕ ಕೊನೊಸುಕೆ ಮಟಸುಷಿತ ಅವರು ಒಸಾಕಾ ಬಳಿಯ ಮೊರಿಗುಚಿ ಎಂಬಲ್ಲಿ ನಿಧನರಾದರು.

2002: ಬಾರ್ಬಿ ಡಾಲ್ ಸೃಷ್ಟಿಸಿದ ಅಮೆರಿಕದ ಸಂಶೋಧಕಿ ಮತ್ತು ಉದ್ಯಮಿ ರುಥ್ ಹ್ಯಾಂಡ್ಲರ್ ಅವರು ಲಾಸ್ ಏಂಜೆಲಿಸ್ ನಗರದಲ್ಲಿ ನಿಧನರಾದರು.

2009: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಫಿರೋಜ್ ಖಾನ್ ತಮ್ಮ 70ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

2009: ತೆಂಕು ತಿಟ್ಟಿನ ಚಂಡೆ, ಮದ್ದಳೆ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಅವರು ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನವೊಂದನ್ನು ನೀಡಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ, ಕೇರಳ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

Categories
e-ದಿನ

ಏಪ್ರಿಲ್-26

ಪ್ರಮುಖಘಟನಾವಳಿಗಳು:

1721: ಭೀಕರ ಭೂಕಂಪನದಲ್ಲಿ ಇರಾನಿನ ಟಾಬ್ರಿಜ್ ನಗರ ನಾಶಗೊಂಡಿತು.

1933: ನಾಜಿ ಜರ್ಮನಿಯ ಗುಪ್ತಪೋಲೀಸ್ ದಳವಾದ ‘ಗೆಸ್ಟಾಪೋ’ ಸ್ಥಾಪನೆಗೊಂಡಿತು.

1958: ಅಮೆರಿಕದ ಬಾಲ್ಟಿಮೋರ್ನಿಂದ ಓಹಿಯೋಗೆ ಪಯಣಿಸುತ್ತಿದ್ದ ಮೊಟ್ಟಮೊದಲ ಎಲೆಕ್ಟ್ರಿಕ್ ರಸ್ತೆ ರೈಲಾದ ‘ರಾಯಲ್ ಬ್ಲೂ’ 68 ವರ್ಷಗಳ ನಂತರ ತನ್ನ ಕೊನೆಯ ಯಾನವನ್ನು ನಡೆಸಿತು.

1960: ಹನ್ನೆರಡು ವರ್ಷಗಳ ಸರ್ವಾಧಿಕಾರ ನಡೆಸಿದ ದಕ್ಷಿಣ ಕೊರಿಯಾದ ಅಧ್ಯಕ್ಷ ಸಿಂಗ್ಮ್ಯಾನ್ ರೀ ಅವರು ಏಪ್ರಿಲ್ ಕ್ರಾಂತಿಯ ಪರಿಣಾಮವಾಗಿ ತಮ್ಮ ಸ್ಥಾನದಿಂದ ಹೊರದಬ್ಬಲ್ಪಟ್ಟರು.

1962: ನಾಸಾದ ರೇಂಜರ್ 4 ಗಗನನೌಕೆಯು ಚಂದ್ರನ ಮೇಲೆ ಡಿಕ್ಕಿ ಹೊಡೆಯಿತು.

1970: ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿಯನ್ನು ಕಾಯ್ದುಕೊಳ್ಳುವ ಸಂಸ್ಥೆ (World Intellectual Property Organization) ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ದೊರಕಿತು.

1981: ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಡಾ. ಮೈಖೇಲ್ ಆರ್. ಹ್ಯಾರಿಸನ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೆಡಿಕಲ್ ಸೆಂಟರ್ನಲ್ಲಿ ಮೊಟ್ಟಮೊದಲ ಭ್ರೂಣ ಚಿಕಿತ್ಸೆಯನ್ನು ನಡೆಸಿದರು.

1986: ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ಪರಮಾಣು ವಿದ್ಯುತ್ ಘಟಕದಲ್ಲಿ ಸಂಭವಿಸಿದ ವಿಶ್ವದ ಅತಿ ಕೆಟ್ಟ ಪರಮಾಣು ದುರಂತದಲ್ಲಿ ಅತಿಭೀಕರ ಪರಮಾಣು ವಿಕಿರಣ ಸೋರಿಕೆ ಉಂಟಾಗಿ, ಪರಿಸರದಲ್ಲಿ ಭಯಂಕರ ಪರಿಣಾಮ ಉಂಟಾಗಿದ್ದೇ ಅಲ್ಲದೆ, ಕನಿಷ್ಠ 31 ಮಂದಿ ಕೆಲವೇ ಕ್ಷಣಗಳಲ್ಲಿ ಮೃತರಾದರು.

1989: ವಿಶ್ವದ ಚರಿತ್ರೆಯಲ್ಲೇ ಅತ್ಯಂತ ಭೀಕರವಾದ ಸುಂಟರಗಾಳಿಯು ಬಾಂಗ್ಲಾದೇಶದ ಕೇಂದ್ರವನ್ನು ಅಪ್ಪಳಿಸಿ 1,300 ಜನರನ್ನು ಬಲಿ ತೆಗೆದುಕೊಂಡು, 12,000 ಜನರನ್ನು ಗಾಯಗೊಳಿಸಿ 80,000ಕ್ಕೂ ಹೆಚ್ಚು ಜನರನ್ನು ನಿರ್ವಸತಿಗರನ್ನಾಗಿ ಮಾಡಿತು.

1989: ಪೀಪಲ್ಸ್ ಡೈಲಿ ಪತ್ರಿಕೆಯಲ್ಲಿ ಪ್ರಕಟಗೊಂಡ ಏಪ್ರಿಲ್ 26ರ ಸಂಪಾದಕೀಯವು ಟಿಯನಾನ್ಮೆನ್ ಸ್ಕ್ವೇರ್ ಪ್ರತಿಭಟನೆಗಳಿಗೆ ತೀವ್ರ ಕಾವು ತಂದುಕೊಟ್ಟವು.

2005: ಅಂತರರಾಷ್ಟ್ರೀಯ ಒತ್ತಾಯಗಳಿಂದಾಗಿ ಸಿರಿಯಾವು ತನ್ನ ಕೊನೆಯ 14,000 ಮಂದಿ ಸೈನಿಕರನ್ನು ಲೆಬಾನಾನ್ ದೇಶದಿಂದ ಹಿಂತೆಗೆದುಕೊಂಡಿತು. ಇದರಿಂದಾಗಿ ಲೆಬನಾನ್ ದೇಶದಲ್ಲಿ 29 ವರ್ಷಗಳ ಕಾಲ ಪ್ರಚಲಿತವಿದ್ಧ ಮಿಲಿಟರಿ ಹಸ್ತಕ್ಷೇಪ ಕೊನೆಗೊಂಡಂತಾಯಿತು.

2006: ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪಾರ್ಥಿ ಭಟೋಲ್ ಆಯ್ಕೆಯಾದರು. 33 ವರ್ಷಗಳಿಂದ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರು ಹಿಂದಿನ ತಿಂಗಳು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008: ಹಿರಿಯ ವೃತ್ತಿ ರಂಗ ಕಲಾವಿದೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕಿ ಬಳ್ಳಾರಿಯ ಸುಭದ್ರಮ್ಮ ಮನ್ಸೂರು ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಏಣಗಿ ಬಾಳಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸುಭದ್ರಮ್ಮ ಅವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತು.

ಪ್ರಮುಖಜನನ/ಮರಣ:

1564: ಮಹಾನ್ ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ ಅವರಿಗೆ ವಾರ್ವಿಕ್ಷೈರಿನ ಸ್ತ್ರಾಟ್ಫೋರ್ಡ್-ಅಪಾನ್-ಏವನ್ ಎಂಬಲ್ಲಿ ‘ಬ್ಯಾಪ್ಟೈಸ್’ ಸಂಸ್ಕಾರ ಅಥವ ನಾಮಕರಣವನ್ನು ನಡೆಸಲಾಯಿತು. ಅವರ ಹುಟ್ಟಿದ ದಿನ ಬಗ್ಗೆ ಮಾಹಿತಿ ಲಭ್ಯವಿಲ್ಲವಾಗಿದೆ.

1849: ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಂಶೋಧಿಸಿ ಪ್ರಕಟಿಸಿದ ಬ್ರಿಟಿಷ್ ವಿದ್ವಾಂಸ ಇ.ಪಿ. ರೈಸ್ ಅವರು ಇಂಗ್ಲೆಂಡಿನ ಹ್ಯಾರೋ ಎಂಬಲ್ಲಿ ಜನಿಸಿದರು. ಇವರು ‘ಎ ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್ ಅನ್ನು 1915ರಲ್ಲಿ ಪ್ರಕಟಿಸಿದರು.

1879: ಇಂಗ್ಲಿಷ್ ಭೌತವಿಜ್ಞಾನಿ ಓವೆನ್ ವಿಲಿಯನ್ಸ್ ರಿಚರ್ಡ್ಸನ್ ಅವರು ಇಂಗ್ಲೆಂಡಿನ ಯಾರ್ಕ್ ಷೈರ್ ಬಳಿಯ ಡ್ಯೂಯಿಸ್ ಬರಿ ಎಂಬಲ್ಲಿ ಜನಿಸಿದರು. ಥರ್ಮಿಯೋನಿಕ್ ಎಮಿಷನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1928ರ ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು. ಈ ಸಂಶೋಧನೆಯು ರಿಚರ್ಡ್ಸನ್ಸ್ ಲಾ ಎಂದೇ ಪ್ರಖ್ಯಾತಿ ಪಡೆದಿದೆ.

1887: ಪ್ರಸಿದ್ಧ ವೈಣಿಕರಾದ ವೀಣಾ ವೆಂಕಟಗಿರಿಯಪ್ಪ ಅವರು ಹೆಗ್ಗಡದೇವನ ಕೋಟೆಯಲ್ಲಿ ಜನಿಸಿದರು. ತಾತ ದೊಡ್ಡ ಸುಬ್ಬರಾಯರಿಂದಲೇ ವೀಣೆ ಪಾಠ ಆರಂಭಿಸಿದ ವೆಂಕಟರಾಮಯ್ಯ ಅವರು ಮುಂದೆ ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡು ಮಹಾರಾಜರ ಪ್ರೋತ್ಸಾಹದಿಂದ ಪಾಶ್ಚಾತ್ಯ ಸಂಗೀತ ವಾದ್ಯಗಳಾದ ಪಿಯಾನೋ, ಕೆರಮಿಮ್ ವಾದನವನ್ನೂ ಕಲಿತು ವೀಣೆಯೊಂದಿಗೆ ಅವುಗಳಲ್ಲೂ ಪ್ರವೀಣರಾದರು.

1898: ಸ್ಪ್ಯಾನಿಷ್ ಸಾಹಿತಿ ವಿಸೆಂಟೆ ಅಲೆಗ್ಸಿಯಾಂಡ್ರೆ ಅವರು ಸ್ಪೈನಿನ ಸೆವಿಲ್ಲೇ ಎಂಬಲ್ಲಿ ಜನಿಸಿದರು. ಇವರಿಗೆ 1977 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1917: ಚೀನಾ-ಅಮೆರಿಕದ ಕಟ್ಟಡ ವಿನ್ಯಾಸಕ, ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ ಮತ್ತು ಬ್ಯಾಂಕ್ ಆಫ್ ಚೀನಾ ಟವರ್ ಮುಂತಾದ ವಿನ್ಯಾಸಗಳಿಗೆ ಪ್ರಸಿದ್ಧರಾದ ಐ. ಎಂ. ಪೀ ಅವರು ಚೀನಾದ ಗುವಾಂಗ್ಜೌ ಎಂಬಲ್ಲಿ ಜನಿಸಿದರು.

1932: ಇಂಗ್ಲಿಷ್-ಕೆನಡಾ ಜೈವಿಕ ವಿಜ್ಞಾನಿ ಮತ್ತು ತಳಿತಜ್ಞ ಮೈಖೇಲ್ ಸ್ಮಿ ಅವರು ಇಂಗ್ಲೆಂಡಿನ ಬ್ಲ್ಯಾಕ್ ಪೂಲ್ ಎಂಬಲ್ಲಿ ಜನಿಸಿದರು. ‘ಸೈಟ್ ಜನರೇಟೆಡ್ ಮ್ಯುಟಾಜೆನೆಸಿಸ್ ಕುರಿತಾದ ಸಂಶೋಧನೆಗಾಗಿ’ ಇವರಿಗೆ 1933 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1933: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಅರ್ನೊ ಅಲ್ಲನ್ ಪೆನ್ಜಿಯಾಸ್ ಅವರು ಜರ್ಮನಿಯ ಮ್ಯೂನಿಚ್ ನಗರದಲ್ಲಿ ಜನಿಸಿದರು. ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ಗ್ರೌಂಡ್ ರೇಡಿಯೇಶನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1978 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1937: ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಸಾಹಿತಿ, ಪ್ರಾಧ್ಯಾಪಕ ಸೂರ್ಯನಾಥ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

1946: ಭಾರತೀಯ ಕ್ರಿಕೆಟ್ ತೀರ್ಪುಗಾರ ವಿ.ಕೆ. ರಾಮಸ್ವಾಮಿ ಅವರು ಚೆನ್ನೈನಲ್ಲಿ ಜನಿಸಿದರು.

1955: ಗಾಯನ, ಸಂಗೀತ ಸಂಯೋಜನೆ, ಧ್ವನಿ ಸುರುಳಿಗಳ ನಿರ್ಮಾಣ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾದ ಜಯಶ್ರೀ ಅರವಿಂದ್ ಅವರು ತಲಕಾಡಿನಲ್ಲಿ ಜನಿಸಿದರು.

1910: ನಾರ್ವೆ ದೇಶದ ಸಾಹಿತಿ ಜೋರನ್ಸ್ ಜೆರ್ನೆ ಜೋರನ್ಸನ್ ಅವರು ಫ್ರಾನ್ಸಿನ ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರಿಗೆ 1903 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1920: ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜಂ ಅವರು ತಮಿಳುನಾಡಿನ ಕುಂಭಕೋಣಂ ಪಟ್ಟಣದಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಕ್ಷಯ ರೋಗಕ್ಕೆ ತುತ್ತಾಗಿ ನಿಧನರಾದರು. ವಿಶ್ವದ ಶ್ರೇಷ್ಠ ಗಣಿತಜ್ಞರಲ್ಲೊಬ್ಬರೆಂದು ಪ್ರಖ್ಯಾತರಾಗಿರುವ ಇವರಿಗೆ ರಾಯಲ್ ಸೊಸೈಟಿಯ ಫೆಲೋ ಗೌರವ ಸಂದಿತ್ತು.

1940: ಜರ್ಮನಿಯ ರಸಾಯನತಜ್ಞ ಕಾರ್ಲ್ ಬೋಸ್ಚ್ ಅವರು ಹೀಡೆಲ್ ಬರ್ಗ್ ಎಂಬಲ್ಲಿ ನಿಧನರಾದರು. ಹೈ ಪ್ರೆಷರ್ ಇಂಡಸ್ಟ್ರಿಯಲ್ ಕೆಮಿಸ್ಟ್ರಿಯಲ್ಲಿ ಮಹಾನ್ ಪರಿಣತರೆಂದು ಪ್ರಖ್ಯಾತರಾದ ಇವರು ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ರಾಸಾಯನಿಕ ಉದ್ಯಮವಾದ ಐ.ಜಿ. ಫರ್ಬೆನ್ ಸ್ಥಾಪಿಸಿದರು. ‘ಹೇಬರ್ ಬೋಸ್ಚ್ ಪ್ರೋಸೆಸ್’ ಸಂಶೋಧನೆಗೆ ಪ್ರಸಿದ್ಧರಾದ ಇವರಿಗೆ 1931 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತ್ತು.

2006: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಪಿ. ವೆಂಕೋಬರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು.

2007: ‘ಭಾರತ ದರ್ಶನ’ ಉಪನ್ಯಾಸ ಮಾಲಿಕೆಯಿಂದ ಖ್ಯಾತರಾಗಿದ್ದ ವಿದ್ಯಾನಂದ ಶೆಣೈ ಅವರು ತಮ್ಮ 56ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಭಾರತ ದರ್ಶನ ಉಪನ್ಯಾಸ ಮಾಲಿಕೆಯ 1100ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದ ಇವರ ಉಪನ್ಯಾಸಗಳು ಧ್ವನಿಮುದ್ರಿಕೆಗಳಲ್ಲೂ ಪ್ರಖ್ಯಾತಿಗಳಿಸಿವೆ.

2008: ಖ್ಯಾತ ಇಸ್ಲಾಂ ವಿದ್ವಾಂಸ ಮೌಲಾನಾ ಅಂಜರ್ ಷಾ ಕಾಶ್ಮೀರಿ ಅವರು ತಮ್ಮ 81ನೆಯ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-25

ಪ್ರಮುಖಘಟನಾವಳಿಗಳು:

1859: ಸುಯೆಜ್ ಕಾಲುವೆಗಾಗಿ ಅದರ ಯೋಜಕ ಫರ್ಡಿನಾಂಡ್ ಡಿ ಲೆಸ್ಸೆಪ್ಸ್ ಮಾರ್ಗದರ್ಶನದಲ್ಲಿ ನೆಲ ಅಗೆಯಲು ಆರಂಭಿಸಲಾಯಿತು. ಸರಿಯಾಗಿ ಇದರ 100 ವರ್ಷಗಳ ನಂತರದಲ್ಲಿ 1959ರಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಗ್ರೇಟ್ ಲೇಕ್ಸ್ ಅನ್ನು ಸಂಪರ್ಕಿಸುವ ಸೇಂಟ್ ಲಾರೆನ್ಸ್ ಸಮುದ್ರಮಾರ್ಗವನ್ನು ರಾಣಿ ಎರಡನೇ ಎಲಿಜಬೆತ್ ಹಾಗೂ ಅಧ್ಯಕ್ಷ ಐಸೆನ್ ಹೂವರ್ ಅವರುಗಳು ಜಂಟಿಯಾಗಿ ಉದ್ಘಾಟಿಸಿದರು.

1901: ಅಮೆರಿಕದಲ್ಲೇ ಮೊದಲಬಾರಿಗೆ ವಾಹನಗಳಿಗೆ ಲೈಸೆನ್ಸ್ ಫಲಕಗಳನ್ನು ಹಾಕುವುದನ್ನು ನ್ಯೂಯಾರ್ಕ್ ನಗರದಲ್ಲಿ ಕಡ್ಡಾಯಗೊಳಿಸಲಾಯಿತು.

1945: ವಿಶ್ವ ಸಂಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿ 50 ದೇಶಗಳು ಒಟ್ಟುಗೂಡಿದವು.

1953: ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ವಾಟ್ಸನ್ ಅವರು ‘ಡಬ್ಬಲ್ ಹೆಲಿಕ್ಸ್ ಸ್ಟ್ರಕ್ಚರ್ ಆಫ್ ಡಿಎನ್.ಎ’ ಅನ್ನು ವಿವರಿಸುವ ‘ಮಾಲೆಕ್ಯುಲರ್ ಸ್ಟ್ರಕ್ಚರ್ ಆಫ್ ನ್ಯೂಕ್ಲಿಯಿಕ್ ಆಸಿಡ್ಸ್: ಎ ಸ್ಟ್ರಕ್ಚರ್ ಆಫ್ ದಿಯೋಕ್ಸಿರಿಬೋಸ್ ನ್ಯೂಕ್ಲಿಯಿಕ್ ಆಸಿಡ್’ ಅನ್ನು ಪ್ರಕಟಿಸಿದರು.

1954: ‘ಬೆಲ್ ಟೆಲಿಫೋನ್ ಲ್ಯಾಬೋರೇಟರಿ’ಯು ಪ್ರಥಮ ವಿಶ್ವಸನೀಯ ಸೋಲಾರ್ ಸೆಲ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತು.

1960: ಅಮೆರಿಕದ ನೌಕಾಪಡೆಯ ಜಲಾಂತರ್ಗಾಮಿಯಾದ ‘ಯು.ಎಸ್.ಎಸ್ ಟ್ರಿಟಾನ್’ ಪ್ರಥಮ ಅಂತರ್ಜಲ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರೈಸಿತು.

1961: ರಾಬರ್ಟ್ ನಾಯ್ಸೆ ಅವರಿಗೆ ‘ಇಂಟಿಗ್ರೇಟೆಡ್ ಸರ್ಕ್ಯೂಟಿ’ಗೆ ಪೇಟೆಂಟ್ ನೀಡಲಾಯಿತು.

1981: ಜಪಾನಿನ ತ್ಸುರುಗ ಪರಮಾಣು ವಿದ್ಯುತ್ ಘಟಕದಲ್ಲಿ ದುರಸ್ತಿ ಕೈಗೊಳ್ಳುವಾಗ ನೂರಕ್ಕೂ ಹೆಚ್ಚು ಜನರಿಗೆ ವಿಕಿರಣದ ಪರಿಣಾಮ ತಗುಲುವಂತಾಯಿತು.

ಸತ್ಯಜಿತ್ ರೇ ಅವರ ‘ಶತ್ ರಂಜ್ ಕಿ ಖಿಲಾಡಿ’ ಸಿನಿಮಾ ಪ್ರಸಾರದೊಂದಿಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವರ್ಣರಂಜಿತ ರಾಷ್ಟ್ರೀಯ ಪ್ರಸಾರ ಆರಂಭಗೊಂಡಿತು.

1983: ಅಮೆರಿಕದ ಶಾಲಾ ಬಾಲಕಿಯೊಬ್ಬಳು ಸೋವಿಯತ್ ನಾಯಕರಿಗೆ ಪತ್ರವೊಂದನ್ನು ಬರೆದು ಅಣ್ವಸ್ತ್ರ ಯುದ್ಧದ ಕುರಿತಾಗಿ ಭೀತಿ ವ್ಯಕ್ತಪಡಿಸಿದಳು. ಇದನ್ನು ಓದಿದ ಸೋವಿಯತ್ ಯೂನಿಯನ್ನಿನ ನಾಯಕರಾದ ಯೂರಿ ಆಂಡ್ರಪಾವ್ ಅವರು ಆ ಬಾಲಕಿಯನ್ನು ಸೋವಿಯತ್ ಯೂನಿಯನ್ನಿಗೆ ಭೇಟಿ ನೀಡಲು ಆಹ್ವಾನಿಸಿದರು.

1983: ಪಯನಿಯರ್ 10 ಪ್ಲೂಟೋ ಕಕ್ಷೆಯನ್ನೂ ಮೀರಿ ಪಯಣಿಸಿತು.

2008: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿ ಸಿ) ಅಧ್ಯಕ್ಷರನ್ನಾಗಿ ಹಿರಿಯ ನಟ ಓಂಪುರಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.

2008: ಹಿರಿಯ ಕಲಾವಿದ ಡಾ. ಶ್ರೀರಾಮ್ ಲಾಗೂ ಅವರಿಗೆ ಮುಂಬೈನಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರು ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.

2015: ನೇಪಾಳದಲ್ಲಿ ಉಂಟಾದ 7.8 ಪ್ರಮಾಣದ ಭೂಕಂಪನದಲ್ಲಿ ಸುಮಾರು 9100 ಜನ ಅಸುನೀಗಿದರು.

ಪ್ರಮುಖಜನನ/ಮರಣ:

1874: ಇಟಾಲಿಯನ್ ಉದ್ಯಮಿ, ಸಂಶೋಧಕ, ಭೌತವಿಜ್ಞಾನಿ ಗುಗ್ಲೈಲ್ಮೊ ಮಾರ್ಕೊನಿ ಅವರು ಬೋಲಾಗ್ನೋ ಎಂಬಲ್ಲಿ ಜನಿಸಿದರು. ದೂರವಾಹಕ ರೇಡಿಯೋ ಸಂಪರ್ಕ, ಮಾರ್ಕೊನಿ ಲಾ ಮತ್ತು ರೇಡಿಯೋ ಟೆಲಿಗ್ರಾಫ್ ಮುಂತಾದ ಸಂಶೋಧನೆಗಳಿಗೆ ಹೆಸರಾದ ಇವರಿಗೆ ವೈರ್ಲೆಸ್ ಟೆಲಿಗ್ರಫಿ ಕುರಿತಾದ ಮಹತ್ವದ ಕೊಡುಗೆಗಾಗಿ 1909 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1900: ಆಸ್ತ್ರಿಯನ್-ಸ್ವಿಸ್ ಭೌತವಿಜ್ಞಾನಿ ವುಲ್ಫ್ ಗ್ಯಾಂಗ್ ಪೌಲಿ ಅವರು ವಿಯೆನ್ನಾದಲ್ಲಿ ಜನಿಸಿದರು. ‘ದಿ ಎಕ್ಸ್ಕ್ಲೂಶನ್ ಪ್ರಿನ್ಸಿಪಲ್’ ಅಥವಾ ‘ಪೌಲಿ ಪ್ರಿನ್ಸಿಪಲ್’ ಎಂದು ಹೆಸರಾದ ಇವರ ಸಂಶೋಧನೆಗಾಗಿ 1945 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1916: ಗಮಕ ಗಂಧರ್ವರೆನಿಸಿದ್ದ ಬಿ. ಎಸ್. ಎಸ್. ಕೌಶಿಕ್ ಅವರು ಕೃಷ್ಣರಾಜಪೇಟೆ ತಾಲ್ಲೂಕಿನ ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು. 2017 ಜನವರಿ 19ರಂದು ನಿಧನರಾದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಗಮಕ ಸಮ್ಮೇಳನದ ಅಧ್ಯಕ್ಷತೆಯೇ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1955: ಅಂತರರಾಷ್ಟ್ರೀಯ ಮ್ಯಾನೇಜ್ಮೆಂಟ್ ಗುರು ಮತ್ತು ಆಧ್ಯಾತ್ಮಿಕ ಗುರು ಎಂದು ಪ್ರಸಿದ್ಧರಾದ ಸ್ವಾಮಿ ಸುಖಬೋಧಾನಂದ ಅವರು ಬೆಂಗಳೂರಿನಲ್ಲಿ ಜನಿಸಿದರು. 2005 ವರ್ಷದಲ್ಲಿ ಸ್ವಿಟ್ಜರ್ಲ್ಯಾಂಡ್ ದೇಶದ ಲಾವೋಸ್ ನಗರದಲ್ಲಿ ನಡೆದ ‘ವರ್ಲ್ಡ್ ಎಕನಾಮಿಕ್ ಫೋರಂ’ನಲ್ಲಿ ಇವರು ಹಿಂದೂ ಧರ್ಮದ ಪ್ರತಿನಿಧಿಗಳಾಗಿ ಆಹ್ವಾನಿತರಾಗಿದ್ದರು. ಅನೇಕ ಕೃತಿಗಳನ್ನು ರಚಿಸಿರುವ ಇವರ ‘ಮನಸೇ ರಿಲ್ಯಾಕ್ಸ್ ಪ್ಲೀಸ್’ ವಿಶ್ವದ ಅನೇಕ ಭಾಷೆಗಳಲ್ಲಿ ಮೂಡಿ ಪ್ರಸಿದ್ಧಿ ಪಡೆದಿದೆ.

1955: ಅಂತರರಾಷ್ಟ್ರೀಯ ಕಾಫಿ ಮಳಿಗೆಗೆ ಪ್ರಸಿದ್ಧವಾಗಿರುವ ‘ಸ್ಟಾರ್ ಬಕ್ಸ್’ ಸಹ ಸಂಸ್ಥಾಪಕ ಜೆವ್ ಸೀಗಲ್ ಅವರು ಕ್ಯಾಲಿಫೋರ್ನಿಯಾದ ಅಲ್ಮೇಡಾ ಎಂಬಲ್ಲಿ ಜನಿಸಿದರು.

1968: ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಕಾರರಾದ ಬಡೇ ಗುಲಾಂ ಅಲಿ ಅಲಿ ಖಾನ್ ಅವರು ಹೈದರಾಬಾದಿನಲ್ಲಿ ತಮ್ಮ 66ನೆಯ ವಯಸ್ಸಿನಲ್ಲಿ ನಿಧನರಾದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸಿದವರಲ್ಲಿ ಇವರು ಪ್ರಮುಖರೆನಿಸಿದ್ದಾರೆ. ಪದ್ಮಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಗೌರವಗಳನ್ನೂ ಒಳಗೊಂಡ ಅನೇಕ ಪುರಸ್ಕಾರಗಳು ಇವರಿಗೆ ಸಂದಿದ್ದವು.

2005: ಶ್ರೀ ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾಗಿದ್ದ ಸ್ವಾಮಿ ರಂಗನಾಥಾನಂದ ಅವರು ಬೇಲೂರು ಮಠದಲ್ಲಿ ಜನಿಸಿದರು.

2009: ಭಾರತೀಯ ಮೂಲದ ಅಮೆರಿಕ ಕಾದಂಬರಿಗಾರ್ತಿ, ಪತ್ರಕರ್ತೆ ಶಾಂತಾ ರಾಮರಾವು ಅವರು ತಮ್ಮ 86ನೆಯ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು. ಈಸ್ಟ್ ಆಫ್ ಹೋಮ್, ವೇ ಟು ದ ಸೌತ್ ಈಸ್ಟ್, ಮೈ ರಷ್ಯನ್ ಜರ್ನಿ ಇತ್ಯಾದಿ ಕೃತಿಗಳನ್ನು ನೀಡಿದ ಶಾಂತಾ ಅವರ ಆತ್ಮಕತೆ ‘ಗಿಫ್ಟ್ಸ್ ಆಫ್ ಪ್ಯಾಸೇಜ್’. ಇ ಎಂ ಫಾಸ್ಟರ್ ಅವರ ‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿಯನ್ನು ರಂಗಕ್ಕೆ ಅಳವಡಿಸಿದ ಕೀರ್ತಿ ಸಹಾ ಇವರದ್ದಾಗಿದೆ.

Categories
e-ದಿನ

ಏಪ್ರಿಲ್-24

ದಿನಾಚರಣೆಗಳು
ರಾಷ್ಟ್ರೀಯ ಪಂಚಾಯತ್ ರಾಜ್ ದಿನ
ಭಾರತದಲ್ಲಿ ಏಪ್ರಿಲ್ 24 ದಿನವನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ. 2010ರ ವರ್ಷದಲ್ಲಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಉದ್ಘಾಟಿಸಿದರು.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 1184: ಈ ದಿನದಂದು ಟ್ರೋಜನ್ ಯುದ್ಧದಲ್ಲಿ ಟ್ರಾಯ್ ನಗರದ ಮೇಲೆ ಗ್ರೀಕರು ಯುದ್ಧ ನಡೆಸಿದರು ಎಂದು ನಂಬಲಾಗಿದೆ

1704: ಬ್ರಿಟಿಷ್ ವಸಾಹತುವಾದ ಅಮೆರಿಕದಲ್ಲಿ ಮೊಟ್ಟ ಮೊದಲ ನಿರಂತರ ಪತ್ರಿಕೆಯಾದ ‘ದಿ ಬೋಸ್ಟನ್ ನ್ಯೂಸ್-ಲೆಟರ್’ ಪ್ರಕಟಗೊಂಡಿತು.

1800: ಅಮೆರಿಕದ ಅಧ್ಯಕ್ಷರಾದ ಜಾನ್ ಆಡಮ್ಸ್ ಅವರು ಕಾನೂನಿಗೆ ಅಗತ್ಯವಾದ ಪುಸ್ತಕಗಳನ್ನು ಕೊಳ್ಳಲು 5000 ಡಾಲರ್ ಎತ್ತಿರಿಸಬೇಕೆಂದು ಖಾಯಿದೆಗೆ ಸಹಿ ಮಾಡಿದರು. ಈ ಮೂಲಕ ವಿಶ್ವದ ಪ್ರತಿಷ್ಟಿತ ಗ್ರಂಥಾಲಯವೆನಿಸಿರುವ ‘ಲೈಬ್ರೆರಿ ಆಫ್ ಕಾಂಗ್ರೆಸ್’ ಸ್ಥಾಪನೆಗೊಂಡಿತು.

1895: ಇಡೀ ವಿಶ್ವವನ್ನು ಏಕಾಂಗಿಯಾಗಿ ಪಯಣಿಸಿದ ಜೋಷುವಾ ಸ್ಲೋಕಂ ಅವರು ಬೋಸ್ಟನ್ ಇಂದ ಪಯಣ ಆರಂಭಿಸಿದರು

1922: ಆಕ್ಸ್ಫರ್ಡ್ ಷೈರಿನ ಲೀಫೀಲ್ಡ್, ಇಂಗ್ಲೆಂಡ್ ಮತ್ತು ಈಜಿಪ್ಟಿನ ಕೈರೋ ನಡುವಣ ವೈರ್ಲೆಸ್ ಟೆಲಿಗ್ರಫಿ ಸೌಕರ್ಯ ಆರಂಭಗೊಂಡಿತು.

1923: ವಿಯೆನ್ನಾದಲ್ಲಿ ಸಿಗ್ಮಂಡ್ ಫ್ರಾಯ್ಡ್ ಅವರು ಇಚ್ ಉಂಡ್ ದಾಸ್ ಎಸ್’ (ದಿ ಇಗೋ ಅಂಡ್ ದಿ ಇದ್) ಪ್ರಕಟಗೊಂಡಿತು. ಇದ್, ಇಗೋ ಮತ್ತು ಸೂಪರ್-ಇಗೋ ಕುರಿತಾದ ಸಿದ್ಧಾಂತಗಳನ್ನು ಅವರು ತಿಳಿಸಿದ್ದಾರೆ.

1967: ಗಗನಯಾತ್ರಿ ವ್ಲಾಡಿಮಿರ್ ಕೊಮಾರೋವ್ ಅವರು ಸೋಯುಜ್ 1ರಲ್ಲಿ ಪ್ಯಾರಾಚೂಟ್ ಸಕಾಲಿಕವಾಗಿ ತೆರೆದುಕೊಳ್ಳದ ಕಾರಣದಿಂದ ನಿಧನರಾದರು.

1990: ಬಾಹ್ಯಾಕಾಶ ವಾಹನವಾದ ಡಿಸ್ಕವರಿಯಿಂದ ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಕಾರ್ಯಾರಂಭ ಮಾಡಿಸಲಾಯಿತು.

2013: ಬಾಂಗ್ಲಾದೇಶದ ಡಾಕ್ಕಾದಲ್ಲಿ ಕಟ್ಟಡವೊಂದು ಕುಸಿದು 1129 ಜನ ನಿಧನರಾಗಿ 2500ಕ್ಕೂ ಜನ ಗಾಯಗೊಂಡರು.

ಪ್ರಮುಖಜನನ/ಮರಣ:

1845; ಸ್ವಿಸ್ ಸಾಹಿತಿ ಕಾರ್ಲ್ ಸ್ಪಿಟ್ಟೆಲೆರ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಲೀಸ್ಟಲ್ ಎಂಬಲ್ಲಿ ಜನಿಸಿದರು.

1927: ಖ್ಯಾತ ಗಾಯಕಿ ಜಯವಂತಿದೇವಿ ಹಿರೇಬೆಟ್ಟು ಅವರು ಮಂಗಳೂರಿನಲ್ಲಿ ಜನಿಸಿದರು. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ ಪ್ರಶಸ್ತಿಯ ಪ್ರಥಮ ಪುರಸ್ಕೃತರಾದ ಈಕೆ ಮಹಾತ್ಮ ಗಾಂಧೀಜಿವರ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಹಾಡಿದ್ದರು. ತ್ಯಾಗಯ್ಯ, ಕಲ್ಪನಾ ಚಿತ್ರಗಳಲ್ಲೂ ಹಿನ್ನೆಲೆ ಗಾಯಕರಾಗಿ ಹಾಡಿದ್ದ ಇವರ ಗಾಯನ ಆಕಾಶವಾಣಿ ಮತ್ತು ಎಚ್ ಎಮ್ ವಿ ಧ್ವನಿಮುದ್ರಿಕೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

1929: ಕನ್ನಡ ಚಿತ್ರರಂಗದ ಮಹಾನ್ ನಟ, ಗಾಯಕ, ದಾದಾ ಸಾಹೇಬ್ ಫಾಲ್ಕೆ ವಿಜೇತ, ಪದ್ಮಭೂಷಣ ಪುರಸ್ಕೃತ ಡಾ. ರಾಜ್ ಕುಮಾರ್ ಅವರು ಗಾಜನೂರಿನಲ್ಲಿ ಜನಿಸಿದರು. ಕನ್ನಡ ರಂಗಭೂಮಿಯಿಂದ ಬಂದವರಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಿರಂತರವಾಗಿ ತಮ್ಮ ಶಿಸ್ತು, ಪ್ರತಿಭೆ, ತೇಜಸ್ಸಿನಿಂದ ಜನಪ್ರಿಯತೆಯ ಮುಂಚೂಣಿಯಲ್ಲಿದ್ದ ಡಾ. ರಾಜ್ ಕುಮಾರ್ ಅವರು ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ ಹಾಗೂ ಕನ್ನಡಪರ ಧ್ವನಿಯಾಗಿಯೂ ಪ್ರಸಿದ್ಧರಾಗಿದ್ದರು.

1934: ಪ್ರಸಿದ್ಧ ಸಾಹಿತಿ, ಪತ್ರಕರ್ತ, ಕಾರ್ಯಕರ್ತ, ಸಿನಿಮಾ ನಿರ್ದೇಶಕ ಮುಂತಾದ ವಿವಿಧಮುಖಿ ವಿದ್ವಾಂಸರಾದ ಜಯಕಾಂತನ್ ಅವರು ಕಡಲೂರಿನಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1947: ಅಮೆರಿಕದ ಜೈವಿಕ ವಿಜ್ಞಾನಿ ರೋಜರ್ ಡಿ ಕಾರನ್ಬರ್ಗ್ ಅವರು ಸೈಂಟ್ ಲೂಯಿ ಎಂಬಲ್ಲಿ ಜನಿಸಿದರು. ಇವರಿಗೆ ಯೂಕರ್ಯೋಟಿಕ್ ಟ್ರಾನ್ಸ್ಕ್ರಿಪ್ಶನ್ ಕುರಿತಾದ ಮಹತ್ವದ ಸಂಶೋಧನೆಗೆ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1973: ವಿಶ್ವದ ಮಹಾನ್ ಕ್ರಿಕೆಟ್ಟಿಗರಲ್ಲಿ ಪ್ರಮುಖ ಹೆಸರಾದ ಸಚಿನ್ ತೆಂಡುಲ್ಕರ್ ಮುಂಬೈನಲ್ಲಿ ಜನಿಸಿದರು. ಅತ್ಯಧಿಕ ಶತಕಗಳೂ ಸೇರಿದಂತೆ ಅಸಂಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿದ ಇವರಿಗೆ ಭಾರತರತ್ನ ಪ್ರಶಸ್ತಿಯೂ ಸೇರಿದಂತೆ ಅನೇಕ ಶ್ರೇಷ್ಠ ಗೌರವಗಳು ಸಂದಿವೆ.

1960: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಮ್ಯಾಕ್ಸ್ ವಾನ್ ಲಾಯೇ ಅವರು ಪಶ್ಚಿಮ ಬರ್ಲಿನ್ ನಗರದಲ್ಲಿ ನಿಧನರಾದರು. ಡಿಫ್ರಾಕ್ಷನ್ಸ್ ಆಫ್ ಎಕ್ಸ್-ರೇ ಕುರಿತಾದ ಸಂಶೋಧನೆಗಾಗಿ ಇವರಿಗೆ 1914 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

2007: ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದ ‘ಸೇವ್ ದಿ ಚಿಲ್ಡ್ರನ್ ಇಂಡಿಯಾ’ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವಿಪುಲ ಕದ್ರಿ ಅವರು ತಮ್ಮ 71ನೆಯ ವಯಸ್ಸಿನಲ್ಲಿ ಮುಂಬೈಯಲ್ಲಿ ನಿಧನರಾದರು.

2011: ಭಾರತೀಯ ಆಧ್ಯಾತ್ಮಿಕ ಗುರು ಸತ್ಯ ಸಾಯಿ ಬಾಬಾ ಅವರು ಪುಟ್ಟಪರ್ತಿಯಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-23

ದಿನಾಚರಣೆಗಳು:

ವಿಶ್ವ ಪುಸ್ತಕ ದಿನ.

ಏಪ್ರಿಲ್ 23 ದಿನವನ್ನು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಓದುವ ಹವ್ಯಾಸ, ಪ್ರಕಟಣೆ, ಕೃತಿ ಸ್ವಾಮ್ಯಗಳನ್ನು ವ್ಯಾಪಕಗೊಳಿಸುವ ಆಶಯದಿಂದ ಯುನೆಸ್ಕೋ ಕರೆಕೊಟ್ಟಿರುವ ಈ ಆಚರಣೆಯು ಮೊದಲ ಬಾರಿಗೆ 1955ರ ವರ್ಷದಲ್ಲಿ ಆಚರಣೆಗೊಂಡಿತು.

ಪ್ರಮುಖಘಟನಾವಳಿಗಳು:

1635: ಅಮೆರಿಕದ ಪ್ರಥಮ ಸಾರ್ವಜನಿಕ ಶಾಲೆಯಾದ ಬೋಸ್ಟನ್ ಲ್ಯಾಟಿನ್ ಸ್ಕೂಲ್ ಆರಂಭಗೊಂಡಿತು.

1914: ಮೊದಲ ಬೇಸ್ ಬಾಲ್ ಪಂದ್ಯವು ಚಿಕಾಗೋದ ರಿಗ್ಲಿ ಫೀಲ್ಡ್ ಎಂಬಲ್ಲಿ ನಡೆಯಿತು.

1967: ರಷ್ಯಾದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಯ ವಾಹನವಾದ ಸೋಯುಜ್ 1 ಉಡ್ಡಯನಗೊಂಡಿತು. ಸೋವಿಯತ್ ಗಗನಯಾತ್ರಿ ವ್ಲಾಡಿಮೀರ್ ಕೊಮಾರೋವ್ ಇದರ ಯಾತ್ರಿಯಾಗಿದ್ದರು.

1971: ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ಸೇನೆ ಮತ್ತು ರಜಾಕರುಗಳಿಂದ ಬಾಂಗ್ಲಾದೇಶದಲ್ಲಿದ್ದ ಸುಮಾರು 3000 ಹಿಂದೂ ವಲಸೆಗಾರರ ಹತ್ಯೆ.

1978: 50ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಜಿ.ಪಿ. ರಾಜರತ್ನಂ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆರಂಭಗೊಂಡಿತು.

1985: ಶಾ ಬಾನೊ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಬಡ, ಅನಕ್ಷರಸ್ಥ ಮುಸ್ಲಿಂ ಮಹಿಳೆ ಶಾ ಬಾನೊ ತನ್ನ ವಿಚ್ಛೇದಿತ ಪತಿ ಮಹಮ್ಮದ್ ಅಹ್ಮದನಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಳು. ಆಕೆಯ ಪರವಾಗಿ ತೀರ್ಪು ನೀಡಿದ ಮಧ್ಯಪ್ರದೇಶ ಹೈಕೋರ್ಟ್, ವಿಚ್ಛೇದಿತ ಮಹಿಳೆಗೆ ಬದುಕಿಗೆ ಯಾವುದೇ ಆದಾಯ ಇಲ್ಲದಿದ್ದರೆ ಆಕೆಯ ಮರುಮದುವೆ ಅಥವಾ ಮರಣದವರೆಗೆ ಯಾವುದೇ ಧರ್ಮದ ಭೇದವಿಲ್ಲದೆ ಜೀವನಾಂಶ ನೀಡಬೇಕು ಎಂದು ಹೇಳಿತ್ತು.

1985: ಕೊಕಾ-ಕೋಲ ಕಂಪೆನಿಯು ತನ್ನ ತಯಾರಿಕಾ ಸೂತ್ರವನ್ನು ಬದಲಿಸಿ ಹೊಸ ಕೋಕ್ ಬಿಡುಗಡೆ ಮಾಡಿತು. ಇದಕ್ಕೆ ಪ್ರತಿಕ್ರೆಯೆ ತೀವ್ರತರವಾಗಿ ನಕಾರಾತ್ಮಕವಾಗಿದಿದ್ದರಿಂದ ಕೇವಲ ಮೂರೇ ತಿಂಗಳುಗಳಲ್ಲಿ, ಅದು ತನ್ನ ಹಿಂದಿನ ಸೂತ್ರಕ್ಕೇ ಹಿಂದಿರುಗಿತು.

2007: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಗಸಕ್ಕೆ ಚಿಮ್ಮಿದ ಪಿ ಎಸ್ ಎಲ್ ವಿ-ಸಿ8 ಗಗನನೌಕೆಯು, ಇಟಲಿಯ ‘ಅಗೈಲ್’ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಪ್ರತಿಷ್ಟಾಪಿಸಿತು. ಇದು ಮೊದಲ ಬಾರಿಗೆ ವಾಣಿಜ್ಯಿಕ ಉದ್ದೇಶಕ್ಕಾಗಿ ಇಸ್ರೋ ಮಾಡಿದ ವಿದೇಶೀ ಉಪಗ್ರಹ ಉಡಾವಣೆಯಾಗಿದೆ.

ಪ್ರಮುಖಜನನ/ಮರಣ:

1858: ಜರ್ಮನ್ ಭೌತವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅವರು ಕೀಲ್ ಎಂಬಲ್ಲಿ ಜನಿಸಿದರು. ಎನರ್ಜಿ ಕ್ವಾಂಟಾ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1867: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ಜೋಹಾನೆಸ್ ಫಿಬಿಗರ್ ಅವರು ಡೆನ್ಮಾರ್ಕಿನ ಸಿಲ್ಕೆಬೋರ್ಗ್ ಎಂಬಲ್ಲಿ ಜನಿಸಿದರು. ಪೆಥಲಾಜಿಕಲ್ ಅನಾಟಮಿ ವಿಶೇಷಜ್ಞರಾದ ಅವರಿಗೆ 1926ರ ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು. ಅವರು ಇಲಿಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಜೀವಕಣಗಳನ್ನು ಗುರುತಿಸಿದ್ದರು.

1899: ಸ್ವೀಡಿಷ್ ಅರ್ಥಶಾಸ್ತ್ರಜ್ಞ ಬೆರ್ಟಿಲ್ ಒಹ್ಲಿನ್ ಅವರು ಸ್ಕೇನ್ ಕೌಂಟಿ ಬಳಿಯ ಕಿಪ್ಪನ್ ಎಂಬಲ್ಲಿ ಜನಿಸಿದರು. ಇವರಿಗೆ 1977 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1902: ಐಸ್ಲ್ಯಾಂಡ್ ದೇಶದ ಬರಹಗಾರ ಹಾಲ್ಡಾರ್ ಲ್ಯಾಕ್ಸ್ನೆಸ್ ಅವರು ರೈಕ್ ಜಾವೆಕ್ ಎಂಬಲ್ಲಿ ಜನಿಸಿದರು. ಇವರಿಗೆ 1955 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1913: ಸುಪ್ರಸಿದ್ಧ ಹಾಸ್ಯ ಬರಹಗಾರ ಬೀchi ಬಳ್ಳಾರಿ ಜಿಲ್ಲೆಯ ಹರಪನಹಳಿಯಲ್ಲಿ ಜನಿಸಿದರು. ವಿವಿಧ ರೀತಿಯ ಸಾಹಿತ್ಯಗಳಲ್ಲಿ ಕೈಯಾಡಿಸಿದ ಇವರ ಕೃತಿಗಳಲ್ಲಿ ಪ್ರಹಸನ ರೂಪದ ಹಾಸ್ಯದ ಹೊನಲು ತನ್ನ ನಿರಂತರ ಪ್ರವಹಿನಿಯನ್ನು ಹರಿಸಿದೆ. 1980ರಲ್ಲಿ ನಿಧನರಾದ ಇವರ ‘ತಿಂಮನ ತಲೆ’ ಕೃತಿಗೆ ಮದರಾಸು ಸರಕಾರದ ಪ್ರಶಸ್ತಿ ಮತ್ತು ‘ಚಿನ್ನದ ಕಸ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿದ್ದವು.

1938: ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು. ನಾಲ್ಕು ಬಾರಿ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒದಿಶಾ ರಾಜ್ಯದ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ಪದ್ಮ ಪ್ರಶಸ್ತಿಗಳ ವಿಚಾರದಲ್ಲಿ ಪ್ರಾದೇಶಿಕ ಅಸಮಾನತೆ ಇರುವುದನ್ನು ವಿರೋಧಿಸಿದ ಅವರು ತಮಗೆ ಸಂದ ಪದ್ಮಭೂಷಣ ಪ್ರಶಸ್ತಿಯನ್ನು ಒಪ್ಪಿಕೊಳಲಿಲ್ಲ.

1977: ಭಾರತೀಯ-ಅಮೇರಿಕನ್ ನಟ ‘ಕಲ್ ಪೆನ್’ ಎಂದು ಪ್ರಸಿದ್ಧರಾದ ಕಲ್ಪೇನ್ ಸುರೇಶ್ ಮೋದಿ ಅವರು ನ್ಯೂಜೆರ್ಸಿಯ ಮಾಂಟ್ ಕ್ಲೈರ್ ಎಂಬಲ್ಲಿ ಜನಿಸಿದರು.

1992: ನಿರ್ದೇಶಕ, ನಿರ್ಮಾಪಕ, ಚಿತ್ರಕತೆಗಾರ, ಸಂಗೀತ ಸಂಯೋಜಕ, ಕತೆಗಾರ ಮತ್ತು ಕಲಾ ವಿನ್ಯಾಸಕ – ಈ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆಎನಿಸಿದ್ದ ಸತ್ಯಜಿತ್ ರೇ ಕೋಲ್ಕತ್ತಾದಲ್ಲಿ ನಿಧನರಾದರು. 1978ರ ವರ್ಷದಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು. 1992ರ ವರ್ಷದಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು. ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ‘ಭಾರತರತ್ನ’ ಪ್ರಶಸ್ತಿಗಳು.

2007: ಸೋವಿಯತ್ ಒಕ್ಕೂಟದ ವಿಭಜನೆಯ ನಂತರದ ರಷ್ಯಾದ ಪ್ರಥಮ ಚುನಾಯಿತ ಅಧ್ಯಕ್ಷರಾಗಿದ್ದ ಬೋರಿಸ್ ಯೆಲ್ಸಿನ್ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-22

ದಿನಾಚರಣೆಗಳು:

ಭೂಮಿ ದಿನ

ಏಪ್ರಿಲ್ 22 ದಿನವನ್ನು ವಿಶ್ವದಾದ್ಯಂತ ಭೂಮಿ ದಿನವನ್ನಾಗಿ (Earth Day) ಆಚರಿಸಲಾಗುತ್ತಿದೆ. 1969ರ ವರ್ಷದಲ್ಲಿ ಯುನೆಸ್ಕೋದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕೊನೆಲ್ ಅವರು ಭೂಮಿಯನ್ನು ಗೌರವಿಸುವ ಇಂತಹ ಒಂದು ದಿನದ ಪ್ರಸಾಪವನ್ನು ಮಂಡಿಸಿದ್ದ ಮೇರೆಗೆ, ಮೊದಲ ಬಾರಿಗೆ 1970ರ ಏಪ್ರಿಲ್ 22ರಂದು ಭೂಮಿ ದಿನವನ್ನು ಆಚರಿಸಲಾಯಿತು. ಭೂಮಿ ದಿನ ಸಂಪರ್ಕಸೇತು ವ್ಯಾಪಿಸಿದಂತೆ 193 ದೇಶಗಳಲ್ಲಿ ಈ ಆಚರಣೆ ವ್ಯಾಪಿಸಿದೆ.

ಪ್ರಮುಖಘಟನಾವಳಿಗಳು:

1500: ಪೋರ್ಚುಗೀಸ್ ನಾವಿಕರಾದ ಪೆಡ್ರೋ ಅಲ್ವರೆಸ್ ಕಬ್ರಾಲ್ ಅವರು ಬ್ರೆಜಿಲ್ನಲ್ಲಿ ಪಾದಾರ್ಪಣ ಮಾಡಿದರು. ಅದಕ್ಕೆ ಅವರು ‘ಐಲ್ಯಾಂಡ್ ಆಫ್ ಟು ಕ್ರಾಸ್’ ಎಂದು ಹೆಸರಿಟ್ಟರು. ಕಾಲಕ್ರಮೇಣದಲ್ಲಿ ಅದು ‘ಹೋಲಿ ಕ್ರಾಸ್’, ನಂತರ ‘ಬ್ರೆಜಿಲ್’ ಎನಿಸಿತು. ಅಲ್ಲಿ ಸಿಗುವ ‘ಪೌ-ಬ್ರೆಜಿಲ್’ ಎಂಬ ಬಣ್ಣದ ಮರ ಈ ಹೆಸರಿಗೆ ಕಾರಣವೆನಿಸಿದೆ.

1864: ಅಮೆರಿಕದ ಕಾಂಗ್ರೆಸ್ಸು ನಾಣ್ಯಗಳ ಕುರಿತಾದ ಕಾನೂನನ್ನು ಜಾರಿಗೊಳಿಸಿ ಎಲ್ಲ ನಾಣ್ಯಗಳ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಲಿಖಿಸುವುದನ್ನು ಖಡ್ಡಾಯಗೊಳಿಸಿತು.

1889: ‘ಲ್ಯಾಂಡ್ ರಷ್ ಆಫ್ 1989’ ಎಂಬ ಘಟನೆಯಲ್ಲಿ ಈ ದಿನದ ಮಧ್ಯಾಹ್ನದ ವೇಳೆಗೆ ಸಹಸ್ರಾರು ಜನರು ಒಕ್ಲಹೋಮಾ ಮತ್ತು ಗುತ್ರೀ ನಗರಗಳಲ್ಲಿ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಓಡೋಡಿ ಬಂದರು. ಕೆಲವೇ ತಾಸುಗಳಲ್ಲಿ ಈ ನಗರಗಳಲ್ಲಿನ ಜನಸಂಖ್ಯೆ 10,000ವನ್ನು ದಾಟಿತು.

1915: ಮೊದಲನೇ ಮಹಾಯುದ್ಧದ, ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಅನಿಲವನ್ನು ರಾಸಾಯನಿಕ ಅಸ್ತ್ರವಾಗಿ ಪ್ರಯೋಗಿಸಿದಾಗ, ವಿಷಪೂರಿತ ಅನಿಲಗಳ ಬಳಕೆ ಮೇರೆ ಮೀರಿದ ವಾತಾವರಣ ಮೂಡಿಸಿತು.

1944: ಚೈನಾ ಬರ್ಮಾ ಇಂಡಿಯಾ ಥಿಯೇಟರಿನಲ್ಲಿ ಮೊದಲನೇ ಏರ್ ಕಮಾಂಡೋ ತಂಡವು ‘ಸಿಕ್ರೋಸ್ಕೈ ಆರ್-4’ ಹೆಲಿಕಾಪ್ಟರುಗಳನ್ನು ಬಳಸಿ ಯುದ್ಧದಲ್ಲಿನ ಹುಡುಕುವಿಕೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಅವುಗಳ ಬಳಸುವಿಕೆಯನ್ನು ಪ್ರದರ್ಶಿಸಿತು. ಇದು ಹೆಲಿಕಾಪ್ಟರುಗಳ ಮೊಟ್ಟ ಮೊದಲ ಬಳಕೆಯಾಗಿದೆ.

1945: ಸೋವಿಯತ್ ಪಡೆಗಳು ಎಬರ್ಸ್ ವಾಲ್ಡೆಯನ್ನು ಯಾವುದೇ ಹೋರಾಟವಿಲ್ಲದೆ ವಶಕ್ಕೆ ತೆಗೆದುಕೊಂಡುದನ್ನು ಅರಿತ ಹಿಟ್ಲರ್, ತನ್ನ ಸೋಲನ್ನು ಒಪ್ಪಿಕೊಂಡು, ಆತ್ಮಹತ್ಯೆಯೊಂದೇ ತನ್ನ ಮುಂದಿರುವ ಆಯ್ಕೆ ಎಂದು ತಿಳಿಸಿದ.

1970: ಅಮೆರಿಕವು ಮೊಟ್ಟ ಮೊದಲ ಬಾರಿಗೆ ‘ಅರ್ಥ್ ಡೇ’ ಆಚರಿಸಿತು.

1977: ಮೊಟ್ಟಮೊದಲ ಬಾರಿಗೆ ದೂರವಾಣಿ ಸಂಪರ್ಕಗಳಿಗೆ ಆಪ್ಟಿಕಲ್ ಫೈಬರ್ ಬಳಸಲಾಯಿತು.

2005: ಜಪಾನಿನ ಪ್ರಧಾನಿ ಜುನಿಚಿರೋ ಕೊಯ್ಜುಮಿ ಅವರು ಜಪಾನಿನ ಯುದ್ಧ ಚರಿತ್ರೆಗಳಿಗೆ ಕ್ಷಮೆ ಯಾಚಿಸಿದರು.

2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ ಮಹಾಜನ್ ಅವರ ಮೇಲೆ ಅವರ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗೆದ್ದು ಗುಂಡು ಹಾರಿಸಿದ.

2007: ಪ್ರಖ್ಯಾತ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ವಿದಾಯ ಹೇಳಿದರು.

2007: ಭಾರತ-ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದ ಕ್ಷಿಪಣಿ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
2008: ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಅವರ `ವೈಲ್ಡ್ ಡಾಗ್ ಡೈರಿಸ್’ಗೆ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ
ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಅವರ `ವೈಲ್ಡ್ ಡಾಗ್ ಡೈರಿಸ್’ಗೆ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ ಸಂದಿತು.

2016: ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಸಿಂಹಸ್ತ ಕುಂಭಮೇಳಕ್ಕೆ ಚಾಲನೆ ದೊರಕಿತು. ಒಂದು ತಿಂಗಳಿಡೀ ನಡೆದ ಈ ಕುಂಭಮೇಳದಲ್ಲಿ 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರೆಂದು ಹೇಳಲಾಗಿದೆ. ಉಜ್ಜೈನಿಯಲ್ಲಿರುವ ಮಹಾಕಾಲೇಶ್ವರ ಲಿಂಗವು ದೇಶಾದ್ಯಂತ ಇರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿತಗೊಂಡಿದೆ.

2016: ವಿಶ್ವಸಂಸ್ಥೆಯು ಹವಾಮಾನದಲ್ಲಿ ಉಂಟಾಗುತ್ತಿರುವ ಪ್ರತೀಕೂಲ ಬದಲಾವಣೆಗಳ ಬಗ್ಗೆ ಕಾಳಜಿ ವಹಿಸುವ ಪ್ಯಾರಿಸ್ ಒಡಂಭಡಿಕೆಗೆ ಸಹಿ ಮಾಡಿತು. ಇದು 195 ಸದಸ್ಯ ರಾಷ್ಟ್ರಗಳ ಒಮ್ಮತದಿಂದ ಏರ್ಪಟ್ಟಿತು.

ಪ್ರಮುಖಜನನ/ಮರಣ:

1854: ಬೆಲ್ಜಿಯನ್ ಬರಹಗಾರ ಮತ್ತು ಶಾಂತಿ ಕಾರ್ಯಕರ್ತ ಹೆನ್ರಿ ಲಾ ಫಾಂಟೈನ್ ಅವರು ಬ್ರಸ್ಸೆಲ್ಸ್ ನಗರದಲ್ಲಿ ಜನಿಸಿದರು. ಇವರಿಗೆ ಯೂರೋಪಿನಲ್ಲಿ ಶಾಂತಿ ಸ್ಥಾಪಿಸಲು ನಡೆಸಿದ ಮಹತ್ವದ ಪ್ರಯತ್ನಗಳಿಗಾಗಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1876:  ಆಸ್ಟ್ರಿಯನ್-ಸ್ವೀಡಿಷ್ ವೈದ್ಯಶಾಸ್ತ್ರಜ್ಞ ರಾಬರ್ಟ್ ಬರಾನಿ ಅವರು ವಿಯೆನ್ನಾದಲ್ಲಿ ಜನಿಸಿದರು. ‘ವೆಸ್ಟಿಬ್ಯುಲಾರ್ ಅಪಾರಟಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1914 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತು.

1904: ಖ್ಯಾತ ಪತ್ರಿಕೋದ್ಯಮಿ, ಇಂಡಿಯನ್ ಎಕ್ಸ್ಪ್ರೆಸ್ ಸಮೂಹ ಸ್ಥಾಪಕ ರಾಮನಾಥ ಗೋಯೆಂಕಾ ಅವರು ಬಿಹಾರದ ದರ್ಭಾಂಗ ಎಂಬಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿನ ಮಹತ್ಸಾಧಕಾರಿಗೆ ಇವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

1909: ಇಟಾಲಿಯನ್ ವೈದ್ಯಶಾಸ್ತ್ರಜ್ಞೆ ರೀಟಾ ಲೆವಿ-ಮೊಂಟಾಲ್ಸಿನಿ ಅವರು ಇಟಲಿಯ ಟ್ಯುರಿನ್ ಎಂಬಲ್ಲಿ ಜನಿಸಿದರು. ಇವರಿಗೆ ‘ನರ್ವ್ ಗ್ರೋಥ್ ಫ್ಯಾಕ್ಟರ್’ ಕುರಿತಾದ ಸಂಶೋಧನೆಗಾಗಿ 1986 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1914: ಪ್ರಖ್ಯಾತ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಬಲದೇವ್ ರಾಜ್ ಚೋಪ್ರಾ ಅವರು ಪಂಜಾಬಿನ ಲೂಧಿಯಾನದಲ್ಲಿ ಜನಿಸಿದರು. ಪ್ರಖ್ಯಾತ ಚಲನಚಿತ್ರಗಳಾದ ನಯಾ ದೌರ್, ಕಾನೂನ್, ಗುಮ್ರಾಹ್, ಹಮ್ರಾಜ್ ಮುಂತಾದವುಗಳಲ್ಲದೆ ದೂರದರ್ಶನದಲ್ಲಿ ಪ್ರಖ್ಯಾತಗೊಂಡ ಮಹಾಭಾರತ ಧಾರವಾಹಿಯನ್ನು ರೂಪಿಸಿದ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಮತ್ತು ಪದ್ಮಭೂಷಣ ಗೌರವಗಳು ಸಂದಿದ್ದವು.

1919: ಅಮೆರಿಕದ ರಸಾಯನ ಶಾಸ್ತ್ರಜ್ಞ ಡೊನಾಲ್ಡ್ ಜೆ ಕ್ರಾಮ್ ಅವರು ವೆರ್ಮೌಂಟ್ ಬಳಿಯ ಚೆಸ್ಟರ್ ಎಂಬಲ್ಲಿ ಜನಿಸಿದರು. ‘ಮೊಲೆಕ್ಯುಲ್ಸ್ ವಿಥ್ ಸ್ಟ್ರಕ್ಚರ್ ಸ್ಪೆಸಿಫಿಕ್ ಇಂಟರಾಕ್ಷನ್ಸ್ ಆಫ್ ಹೈ ಸೆಲೆಕ್ಟಿವಿಟಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1987 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1935: ಭಾರತೀಯ-ಅಮೆರಿಕನ್ ಗಣಿತಜ್ಞೆ ಭಾಮಾ ಶ್ರೀನಿವಾಸನ್ ಅವರು ಚೆನ್ನೈನಲ್ಲಿ ಜನಿಸಿದರು. ಇವರು ‘ರೆಪ್ರೆಸೆಂಟೇಶನ್ ಥಿಯರಿ ಆಫ್ ಫೈನೈಟ್ ಗ್ರೂಪ್ಸ್’ ಸಿದ್ಧಾಂತಕ್ಕೆ ಪ್ರಸಿದ್ಧರಾಗಿದ್ದು ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ.

1945: ಭಾರತೀಯ ಆಡಳಿತ ಸೇವೆಯ ಅಧಿಕಾರಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧೀ ಜನಿಸಿದರು. ಇವರು ತಂದೆಯ ಕಡೆಯಿಂದ ಮಹಾತ್ಮ ಗಾಂಧೀ ಅವರ ಮೊಮ್ಮಗ ಮತ್ತು ತಾಯಿಯ ಕಡೆಯಿಂದ ರಾಜಾಜಿ ಅವರ ಮೊಮ್ಮಗ.

1945: ಪ್ರಸಿದ್ಧ ಹಾಸ್ಯನಟರಾದ ಎಂ.ಎಸ್. ಉಮೇಶ್ ಅವರು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ರಂಗಪ್ರವೇಶಿಸಿ ಮುಂದೆ ಚಲನಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರಿಗೆ ಕಥಾ ಸಂಗಮ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಪ್ರಶಸ್ತಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಗೌರವಗಳು ಸಂದಿವೆ.

1974: ಪ್ರಖ್ಯಾತ ಇಂಗ್ಲಿಷ್ ಕತೆಗಾರ, ಪ್ರಕಾಶಕ ಮತ್ತು ಇಂಗ್ಲಿಷ್-ಹಿಂದೀ ಪತ್ರಿಕೆಗಳ ಅಂಕಣಕಾರ, ಮತ್ತು ಚಲನಚಿತ್ರ ಕತೆಗಾರರಾದ ಚೇತನ್ ಭಗತ್ ನವದೆಹಲಿಯಲ್ಲಿ ಜನಿಸಿದರು.

1933: ಐಶಾರಾಮಿ ಕಾರುಗಳ ನಿರ್ಮಾಣಕ್ಕೆ ಪ್ರಸಿದ್ಧವಾದ ರೋಲ್ಸ್ ರಾಯ್ಸ್ ಸಂಸ್ಥೆಯ ಸಹಸಂಸ್ಥಾಪಕ ಹೆನ್ರಿ ರಾಯ್ಸ್ ಅವರು, ಇಂಗ್ಲೆಂಡಿನ ಸಸ್ಸೆಕ್ಸ್ ಬಳಿಯ ವೆಸ್ಟ್ ವಿಟ್ಟರಿಂಗ್ ಎಂಬಲ್ಲಿ ನಿಧನರಾದರು.

1989: ಇಟಾಲಿಯನ್-ಅಮೆರಿಕನ್ ಭೌತಶಾಸ್ತ್ರಜ್ಞ ಎಮಿಲೋ ಜಿ. ಸೆಗ್ರೆ ಅವರು ಕ್ಯಾಲಿಫೋರ್ನಿಯಾ ಬಳಿಯ ಲಫಾಯೆಟ್ಟೆ ಎಂಬಲ್ಲಿ ನಿಧನರಾದರು. ಟೆಕ್ನೀಟಿಯಂ, ಅಸ್ಟಾಟೈನ್, ಆ್ಯಾಂಟಿ ಪ್ರೊಟಾನ್, ಸಬ್-ಆಟೋಮಿಕ್ ಪಾರ್ಟಿಕಲ್ ಮುಂತಾದವುಗಳನ್ನು ಕಂಡುಹಿಡಿದ ಇವರಿಗೆ 1959 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1994: ಅಮೆರಿಕದ 37ನೇ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಅವರು ತಮ್ಮ 81ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು.

2007: ಬುದ್ಧಿ ಮಾಂದ್ಯ ಮಕ್ಕಳ ಮಧುರಂ ನಾರಾಯಣನ್ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ ಅವರು ತಮ್ಮ 81ನೆಯ ವಯಸ್ಸಿನಲ್ಲಿ ಚೆನ್ನೈಯಲ್ಲಿ ನಿಧನರಾದರು. ಅವರು ತಮಿಳುನಾಡಿನ ವಾಯುಪಡೆ ಮತ್ತು ಹಿರಿಯರ ಸೇವಾ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಸ್ಥಾಪಿಸಿದ ಮಧುರಂ ನಾರಾಯಣನ್ ಕೇಂದ್ರಕ್ಕಾಗಿ 2004ರಲ್ಲಿ ಅವರನ್ನು ರಾಷ್ಟ್ರಪತಿಗಳು ಗೌರವಿಸಿದ್ದರು.

2009: ಕನ್ನಡದ ಹಿರಿಯ ಕವಿ, ಕತೆಗಾಗಾರ, ವಿಮರ್ಶಕ ‘ದೇಶ ಕುಲಕರ್ಣಿ’ ಎಂಬ ಕಾವ್ಯನಾಮದಿಂದ ಪ್ರಸಿದ್ದರಾದ ಡಿ.ಎಲ್.ಉಪೇಂದ್ರನಾಥ್ ಅವರು ಬೆಂಗಳೂರಿನಲ್ಲಿ ನಿಧನರಾದರು.

2011: ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕಾರ ಪಂಡಿತ್ ಮಾಧವ ಗುಡಿ ಅವರು ಧಾರವಾಡದಲ್ಲಿ ನಿಧನರಾದರು. ಪಂಡಿತ್ ಭೀಮಸೇನ ಜೋಶಿ ಅವರ ಆಪ್ತ ಶಿಷ್ಯರಾಗಿ ಮಹತ್ವದ ಸಾಧನೆ ಮಾಡಿದ ಇವರಿಗೆ ಕರ್ನಾಟಕ ಸಂಗೀತ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

2013: ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರಾದ ಜೆ.ಎಸ್. ವರ್ಮಾ ಅವರು ಹರ್ಯಾಣಾದ ಗುರ್ಗಾಂವ್ ಎಂಬಲ್ಲಿ ತಮ್ಮ 80ನೆಯ ವಯಸ್ಸಿನಲ್ಲಿ ನಿಧನರಾದರು.

2013: ಪ್ರಸಿದ್ಧ ಸಂಗೀತ ವಿದ್ವಾಂಸ ಮತ್ತು ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ ಅವರು ಚೆನ್ನೈನಲ್ಲಿ ತಮ್ಮ 82ನೆಯ ವಯಸ್ಸಿನಲ್ಲಿ ನಿಧನರಾದರು. ಪದ್ಮಭೂಷಣ, ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಶೃಂಗಾರಂ ಚಿತ್ರದ ಸಂಗೀತಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

2013: ‘99 ಸೆಂಟ್ಸ್ ಓನ್ಲಿ’ ಮಾರಾಟ ಮಳಿಗೆಗಳ ಸ್ಥಾಪಕ, ಅಮೆರಿಕದ ಉದ್ಯಮಿ ಡೇವ್ ಗೋಲ್ಡ್ ಅವರು ಲಾಸ್ ಏಂಜೆಲಿಸ್ ನಗರದಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-21

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 753: ರೊಮ್ಯುಲಸ್ ಅವರು ರೋಮ್ ಅನ್ನು ಪತ್ತೆ ಹಚ್ಚಿದರು.

ಕ್ರಿಸ್ತ ಪೂರ್ವ 43: ಮ್ಯೂಟಿನ ಕದನದಲ್ಲಿ ಮಾರ್ಕ್ ಆಂತೋನಿಗೆ ಔಲಸ್ ಹಿರಿಟಸ್ ಇಂದ ಮತ್ತೊಮ್ಮೆ ಸೋಲುಂಟಾಗಿ ಮ್ಯುಟಿನಾವನ್ನು ವಶಪಡಿಸಿಕೊಳ್ಳಲಾಗಲಿಲ್ಲ. ಆದರೆ ಹಿರಿಟಸ್ ಮತ್ತು ಬ್ರೂಟಸ್ ಕೊಲ್ಲಲ್ಪಟ್ಟರು.

900: ತಾಮ್ರದ ಮೇಲೆ ಕೆತ್ತಲಾದ ಅತ್ಯಂತ ಹಳೆಯದೆಂದು ಹೇಳಲಾಗಿರುವ ‘ಲಗುನಾ ಕಾಪರ್ ಪ್ಲೇಟ್ ಇನ್ಸ್ಕ್ರಿಪ್ಷನ್’ ಈಗಿನ ಫಿಲಿಪೈನ್ಸ್ ದೇಶದಲ್ಲಿ ಪತ್ತೆಗೊಂಡಿತು.

1506: 3 ದಿನಗಳ ಲಿಸ್ಬನ್ ಹತ್ಯಾಕಾಂಡವು ಕೊನೆಗೊಂಡಿತು. ಪೋರ್ಚುಗೀಸ್ ಕ್ಯಾಥೊಲಿಕ್ಕರು 1900ಕ್ಕೂ ಹೆಚ್ಚು ಜ್ಯೂ ಜನಾಂಗೀಯರನ್ನು ಹತ್ಯೆಗೈದರೆಂದು ಶಂಕಿಸಲಾಗಿದೆ.

1526: ಮೊದಲನೆಯ ಪಾಣಿಪತ್ ಯುದ್ಧದಲ್ಲಿ ಮೊಘಲ್ ದೊರೆ ಬಾಬರನು, ಲೋದಿ ವಂಶದ ಕಟ್ಟ ಕಡೆಯ ಆಡಳಿತಗಾರ ಇಬ್ರಾಹಿಮ್ ಲೋದಿಯನ್ನು ಸೋಲಿಸಿ ಕೊಲೆಗೈದನು.

1782: ಹಿಂದೆ ರತ್ತನಕೊಸಿನ್ ಎಂದು ಹೆಸರಾಗಿದ್ದ ಈಗಿನ ಬ್ಯಾಂಕಾಕ್ ಅನ್ನು, ಚಾವೋ ಫ್ರಯಾ ನದಿಯ ದಂಡೆಯ ಮೇಲೆ ರಾಜ ಬುದ್ಧ ಯೋದ್ಫ್ಹ ಚುಲಾಲೋಕೆ ಎಂಬಾತ ಪತ್ತೆ ಮಾಡಿದ.

1856: ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್ ಆಸುಪಾಸಿನಲ್ಲಿನ ಕಟ್ಟಡ ಕಟ್ಟುವ ಕಾರ್ಮಿಕರು 8 ಗಂಟೆಗಳ ದಿನವನ್ನು ಪಡೆಯುವುದಕ್ಕಾಗಿ ಮೆಲ್ಬೋರ್ನ್ ವಿಶ್ವವಿದ್ಯಾಲಯದಿಂದ ಪಾರ್ಲಿಮೆಂಟ್ ಭವನದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

2006: “ಪತಿ ಮೂರುಬಾರಿ ತಲಾಖ್ ಹೇಳಿದ ಮಾತ್ರಕ್ಕೆ ಗಂಡ- ಹೆಂಡತಿ ಬೇರೆ ಬೇರೆಯಾಗಿ ಬದುಕಬೇಕು ಎಂದು ಒತ್ತಾಯಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಒರಿಸ್ಸಾದ ಮುಸ್ಲಿಂ ಸಮುದಾಯವು ಷರಿಯತ್ ಹೆಸರಿನಲ್ಲಿ ತಮ್ಮ ಪತಿಯ ಜೊತೆ ಬದುಕಲು ತಮಗೆ ಅನುಮತಿ ನಿರಾಕರಿಸಿದ ಸಂಬಂಧ ನಜ್ಮಾ ಬೀವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಚಾರಣಾ ಪೀಠ ಈ ತೀರ್ಪು ನೀಡಿತು.

2006: ಕರ್ನಾಟಕ ಸರ್ಕಾರವು 2005 ವರ್ಷದ ಸಾಂಸ್ಕತಿಕ ಪ್ರಶಸ್ತಿಗಳನ್ನು ಪ್ರಕಟಿಸಿತು. ಟಿ.ಚೌಡಯ್ಯ ಪ್ರಶಸ್ತಿಗೆ ಹಿಂದೂಸ್ಥಾನಿ ತಬಲಾ ವಾದಕ ದತ್ತಾತ್ರೇಯ ಸದಾಶಿವ ಗರುಡ; ಕನಕ ಪುರಂದರ ಪ್ರಶಸ್ತಿಗೆ ಗಮಕ ಕ್ಷೇತ್ರದ ಬಿ. ಎಸ್. ಎಸ್. ಕೌಶಿಕ್; ದಾನಚಿಂತಾಮಣಿ ಪ್ರಶಸ್ತಿಗೆ ಲೇಖಕಿ ಡಾ. ವೀಣಾ ಶಾಂತೇಶ್ವರ; ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ವೃತ್ತಿ ರಂಗಭೂಮಿಯ ರೇಣುಕಮ್ಮ ಮುಳಗೋಡು; ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಗಾಯಕ ಈಶ್ವರ ಮಿಣಚಿ; ಜಕಣಾಚಾರಿ ಪ್ರಶಸ್ತಿಗೆ ಸಿದ್ದಲಿಂಗಯ್ಯ ಮತ್ತು ಶಾಂತಲಾ ನಾಟ್ಯ ಪ್ರಶಸ್ತಿಗೆ ಲೀಲಾ ರಾಮನಾಥನ್ ಅವರುಗಳನ್ನು ಆಯ್ಕೆಮಾಡಲಾಯಿತು.

2008: ತನ್ನ ಚೊಚ್ಚಲ ಯಾನ ಕಾಲದಲ್ಲೇ ಸಮುದ್ರದಲ್ಲಿ ಮುಳುಗಿ ಹೋದ ‘ಟೈಟಾನಿಕ್’’ ದುರಂತ ನೌಕೆಯ ಟಿಕೆಟ್ ಒಂದು, ಈದಿನ ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 33,000 ಪೌಂಡುಗಳಿಗೆ ಮಾರಾಟವಾಯಿತು.

2009: ಎನ್.ಗೋಪಾಲಸ್ವಾಮಿ ಅವರು ಹುದ್ದೆಯಿಂದ ನಿವೃತ್ತರಾದ ಬಳಿಕ ನವೀನ್ ಚಾವ್ಲಾ ಅವರು ಈದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ಪ್ರಮುಖಜನನ/ಮರಣ:

1619: ಡಚ್ ಸರ್ಜನ್ ಜಾನ್ ವ್ಯಾನ್ ರೀಬೀಕ್ ಜನಿಸಿದರು. ಇವರು 1652ರಲ್ಲಿ ಕೇಪ್ ಟೌನನ್ನು ಸ್ಥಾಪಿಸಿದರು.

1837: ಡ್ಯಾನಿಶ್ ಲೆಫ್ಟಿನೆಂಟ್ ಅಧಿಕಾರಿ, ಶಿಕ್ಷಕ, ಬರಹಗಾರ ಮತ್ತು ರಾಜಕಾರಣಿ ಹಾಗೂ ಸ್ವೀಡನ್ ಮತ್ತು ನಾರ್ವೆ ಪ್ರದೇಶದಲ್ಲಿ ಶಾಂತಿಗಾಗಿ ಕೆಲಸ ಮಾಡಿದ ಫ್ರೆಡ್ರಿಕ್ ಬಜೆರ್ ಅವರು ಜನಿಸಿದರು. ಇವರಿಗೆ 1908 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1882: ಅಮೆರಿಕದ ಭೌತ ವಿಜ್ಞಾನಿ ಪೆರ್ಸಿ ವಿಲ್ಲಿಯಮ್ಸ್ ಬ್ರಿಡ್ಗ್ ಮ್ಯಾನ್ ಅವರು ಕೇಂಬ್ರಿಡ್ಜಿನಲ್ಲಿ ಜನಿಸಿದರು. ‘ಫಿಸಿಕ್ಸ್ ಆಫ್ ಹೈ ಪ್ರೆಷರ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1946 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1889: ರಷ್ಯನ್-ಸ್ವಿಸ್ ಸಾವಯವ ರಸಾಯನ ಶಾಸ್ತ್ರಜ್ಞರಾದ ಪಾಲ್ ಕರ್ರೆರ್ ಅವರು ಮಾಸ್ಕೋದಲ್ಲಿ ಜನಿಸಿದರು. ವಿಟಮಿನ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1937 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪ್ರಶಸ್ತಿ ಸಂದಿತ್ತು.

1911: ಕ್ಲಿಯರ್ಸಿಲ್ ಕಂಡು ಹಿಡಿದ ಅಮೆರಿಕದ ಉದ್ಯಮಿ ಇವಾನ್ ಕೊಂಬೆಅವರು ಲೊವ ಬಳಿಯ ಫ್ರೆಮಾಂಟ್ ಎಂಬಲ್ಲಿ ಜನಿಸಿದರು.

1920: ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಚೇರಿಗಳ ಮೂಲಕ ಸಂಗೀತ ಮತ್ತು ಸುಗಮ ಸಂಗೀತಕ್ಕೆ ವಿಶಾಲ ವ್ಯಾಪ್ತಿಯನ್ನು ತಂದುಕೊಟ್ಟವರಲ್ಲಿ ಪ್ರಮುಖರಾದ ಪದ್ಮಚರಣ್ ಅವರು ಎ. ವಿ. ಕೃಷ್ಣಮಾಚಾರ್ ಎಂಬ ಹೆಸರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುತ್ತಿ ಎಂಬಲ್ಲಿ ಜನಿಸಿದರು. ಇವರು ಸಂಗೀತ ನೀಡಿದ ಬೇಲೂರು ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ಸೋಮನಾಥಪುರ ಸಾಕ್ಷ್ಯಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತವು. ಕರ್ನಾಟಕ ಸಂಗೀತ, ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1920: ಕನ್ನಡದ ಪ್ರಸಿದ್ಧ ಸಾಹಿತಿ ತ.ರಾ.ಸು ಅವರು ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು. ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯ ಚಳವಳಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿದ್ದ ತ.ರಾ. ಸುಬ್ಬರಾಯರ ‘ಹಂಸಗೀತೆ’ ಕೃತಿ ಹಿಂದಿಯಲ್ಲಿ ‘ಬಸಂತ ಬಹಾರ್’ ಮತ್ತು ಕನ್ನಡದಲ್ಲಿ ‘ಹಂಸ ಗೀತೆ’ಯಾಗಿ ಜಾಗತಿಕ ಮನ್ನಣೆ ಗಳಿಸಿದವು. ‘ನಾಗರಹಾವು’ ಪ್ರಸಿದ್ಧ ಚಲನಚಿತ್ರವಾಯಿತು. ‘ದುರ್ಗಾಸ್ತಮಾನಕ್ಕೆ ‘ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು.

1926: ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಲಂಡನ್ನಿನಲ್ಲಿ ಜನಿಸಿದರು.

1946: ಭಾರತದ ಕ್ರಿಕೆಟ್ ಆಟಗಾರ, ನಾಯಕ ಮತ್ತು ಪ್ರಸಿದ್ಧ ತೀರ್ಪುಗಾರ ಶ್ರೀನಿವಾಸರಾಘವನ್ ವೆಂಕಟರಾಘವನ್ ಅವರು ಚೆನ್ನೈನಲ್ಲಿ ಜನಿಸಿದರು. 1965ರಿಂದ 1983ರವರೆಗೆ ಹದಿನೆಂಟಕ್ಕೂ ಹೆಚ್ಚು ಸುದೀರ್ಘ ಅವಧಿಯವರೆಗೆ ಟೆಸ್ಟ್ ಕ್ರಿಕೆಟ್ ಆಡಿದ ದಾಖಲೆ ಹೊಂದಿರುವ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅಂಪೈರ್ ಎಂಬ ಕೀರ್ತಿ ಗಳಿಸಿದ್ದಾರೆ. ಇವರಿಗೆ ಪದ್ಮಶ್ರೀ ಗೌರವ ಸಂದಿದೆ.

1950: ರಂಗಭೂಮಿ ಮತ್ತು ದೂರದರ್ಶನದ ಧಾರವಾಹಿಗಳಲ್ಲಿ ಪ್ರಸಿದ್ಧರಾಗಿರುವ ಲಕ್ಷ್ಮೀ ಚಂದ್ರಶೇಖರ್ ಅವರು ಹಾಸನದಲ್ಲಿ ಜನಿಸಿದರು. ಲಕ್ಷ್ಮೀ ಚಂದ್ರಶೇಖರ್ ಅವರು ಅನೇಕ ರಾಷ್ಟ್ರಗಳಲ್ಲಿ ಸಹಾ ರಂಗಪ್ರದರ್ಶನಗಳನ್ನು ನೀಡಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.

1950: ಪ್ರಸಿದ್ಧ ಕಿರುತೆರೆ ಮತ್ತು ಸಿನಿಮಾ ನಟ ಶಿವಾಜಿ ಸತಂ ಅವರು ಜನಿಸಿದರು. ಹಿಂದೀ ಮತ್ತು ಮರಾಠಿ ಚಿತ್ರಗಳಲ್ಲಿ ಹಾಗೂ ಕಿರುತೆರೆಯ ಕಥಾನಕಗಳಲ್ಲಿ ಪ್ರಸಿದ್ಧರಾಗಿರುವ ಇವರಿಗೆ ಮಹಾರಾಷ್ಟ್ರ ಸರ್ಕಾರದ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1900: ಜೇತ್ವಾ ರಜಪೂತ್ ರಾಜವಂಶಕ್ಕೆ ಸೇರಿದ ಪೋರಬಂದರ್ ಸಂಸ್ಥಾನದ ರಾಜ ವಿಕ್ರಮತ್ಜಿ ಖಿಮೋಜಿರಾಜ್ ನಿಧನರಾದರು

1910: ಮಾರ್ಕ್ ಟ್ವೇನ್ ಎಂದೇ ಖ್ಯಾತರಾಗಿದ್ದ ಅಮೆರಿಕದ ಬರಹಗಾರ ಸ್ಯಾಮುಯೆಲ್ ಲಾಂಗ್ಹೋರ್ಮ್ ಕ್ಲೆಮೆನ್ಸ್ ಅವರು ಕನೆಕ್ಟಿಕಟ್ ಬಳಿಯ ರೆಡ್ಡಿಂಗ್ ಎಂಬಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1938: ಉರ್ದು ಮಹಾಕವಿ ಮುಹಮ್ಮದ್ ಇಕ್ಬಾಲ್ ಲಾಹೋರಿನಲ್ಲಿ ನಿಧನರಾದರು. ಇವರ ‘ಸಾರೆ ಜಹಾಂಸೆ ಅಚ್ಚಾ, ಹಿಂದೂಸ್ಥಾನ್ ಹಮಾರ’ ಗೀತೆ ಅತ್ಯಂತ ಪ್ರಸಿದ್ಧಿ ಪಡೆದಿದೆ.

1965: ಇಂಗ್ಲಿಷ್-ಸ್ಕಾಟಿಷ್ ವಿಜ್ಞಾನಿ ಎಡ್ವರ್ಡ್ ವಿಕ್ಟರ್ ಆಪಲ್ಟನ್ ಅವರು ಸ್ಕಾಟ್ಲ್ಯಾಂಡಿನ ಎಡಿನ್ಬರ್ಗ್ ಎಂಬಲ್ಲಿ ನಿಧನರಾದರು. ‘ಅಯಾನ್ ಸ್ಪಿಯರ್’ (ionsphere) ಕುರಿತಾದ ಸಂಶೋಧನೆಗಾಗಿ ಇವರಿಗೆ 1947 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

2006: ರಾಜಕಾರಣಿ, ಬರಹಗಾರ ಮತ್ತು ಕೇರಳದ ಅನೇಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಘಟನೆಗಳ ಸ್ಥಾಪಕ ಟಿ.ಕೆ. ರಾಮಕೃಷ್ಣನ್ ನಿಧನರಾದರು,

2013: ‘ಮಾನವ ಕಂಪ್ಯೂಟರ್‌’ ಎಂದು ವಿಶ್ವ ಖ್ಯಾತಿ ಗಳಿಸಿದ್ದ ಗಣಿತಜ್ಞೆ, ಜ್ಯೋತಿಷಿ ಮತ್ತು ಜಾದೂಗಾರ್ತಿ ಶಕುಂತಲಾದೇವಿ ಬೆಂಗಳೂರಿನಲ್ಲಿ ನಿಧನರಾದರು.

2015: ದೀರ್ಘಕಾಲ ಒದಿಶಾದ ಮುಖ್ಯಮಂತ್ರಿಗಳಾಗಿದ್ದ ಹಾಗೂ ಕೆಲಕಾಲ ಅಸ್ಸಾಂನ ರಾಜ್ಯಪಾಲರಾಗಿದ್ದ ಜೆ.ಬಿ. ಪಟ್ನಾಯಕ್ ತಿರುಪತಿಯಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-20

ಪ್ರಮುಖಘಟನಾವಳಿಗಳು:

1303: ಎಂಟನೇ ಪೋಪ್ ಬೋನಿ ಫೇಸ್ ಅವರು ಸಾಪಿಯೇನ್ಜಾ ಯೂನಿವರ್ಸಿಟಿ ಆಫ್ ರೋಮ್ ಸ್ಥಾಪಿಸಿದರು.

1882: ಲೂಯಿ ಪ್ಯಾಶ್ಚರ್ ಮತ್ತು ಕ್ಲಾರ್ಡ್ ಬರ್ನಾರ್ಡ್ ಅವರು ಪ್ಯಾಶ್ಚರೀಕರಣದ ಮೊದಲ ಪರೀಕ್ಷೆಯನ್ನು ಪೂರ್ಣಗೊಳಿಸಿದರು. 48 ದಿನಗಳ ಕಾಲ ಮುಚ್ಚಿಡಲಾಗಿದ್ದ ಬಾಟಲಿಗಳನ್ನು ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸಭೆಯೊಂದರಲ್ಲಿ ತೆರೆಯಲಾಯಿತು. ಆ ಬಾಟಲಿಗಳಲ್ಲಿ ನಾಯಿಯ ರಕ್ತ ಹಾಗೂ ಮೂತ್ರವನ್ನು ತುಂಬಿಸಿ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಇಡಲಾಗಿತ್ತು. ಈ ಅವಧಿಯಲ್ಲಿ ಅವು ಕೆಟ್ಟಿರಲಿಲ್ಲ. ಇದರಿಂದ ಸೂಕ್ಷ್ಮಜೀವಿಗಳು ಸಾಯುವಷ್ಟು ಉಷ್ಣತೆಯಲ್ಲಿ ಆಹಾರವನ್ನು ಇರಿಸಿ, ಕೆಡದಂತೆ ರಕ್ಷಿಸಿ ಇಡುವ ಸಾಧ್ಯತೆಗಳು ಗೋಚರಗೊಂಡವು.

1871: ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಕಾನೂನು ಜಾರಿಗೊಂಡಿತು.

1902: ಪಿಯೆರೆ ಮತ್ತು ಮೇರಿ ಕ್ಯೂರಿ ಅವರು ರೇಡಿಯಂ ಕ್ಲೋರೈಡ್ ಅನ್ನು ಸಂಸ್ಕರಿಸಿದರು.

1939: ಅಡಾಲ್ಫ್ ಹಿಟ್ಲರನ 50ನೇ ಜನ್ಮದಿನವನ್ನು ನಾಜಿಗಳ ಜರ್ಮನಿಯಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಯಿತು.

1946: ತನ್ನ ಬಹುತೇಕ ಅಧಿಕಾರವನ್ನು ವಿಶ್ವಸಂಸ್ಥೆಗೆ ನೀಡುವುದರ ಮೂಲಕ ಲೀಗ್ ಆಫ್ ನೇಶನ್ಸ್ ಅಧಿಕೃತವಾಗಿ ವಿಸರ್ಜನೆಗೊಂಡಿತು.

2006: ಭಾರತದ ಯುವ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ ಕೇವಲ 16 ತಿಂಗಳಲ್ಲಿಯೇ ಏಕದಿನ ಪಂದ್ಯಗಳಲ್ಲಿನ ವಿಶ್ವದ ಅಗ್ರಗಣ್ಯ ಬ್ಯಾಟುದಾರರೆನಿಸಿದರು.

2007: ಬಾಲಿವುಡ್ಡಿನ ಜನಪ್ರಿಯ ತಾರೆಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮುಂಬೈಯಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.

2008: ಇಂಡಿ ಜಪಾನ್ 300 ಸ್ಪರ್ಧೆಯಲ್ಲಿ ಜಯಗಳಿಸಿದ ಡೇನಿಕಾ ಪ್ಯಾಟ್ರಿಕ್ ಅವರು ವಿಶ್ವದಲ್ಲೇ ಇಂಡಿ ಕಾರ್ ರೇಸ್ ಗೆದ್ದ ಪ್ರಪ್ರಥಮ ಮಹಿಳೆ ಎನಿಸಿದರು.

2008: ಹೊಟ್ಟೆಪಾಡಿಗಾಗಿ ಹಾಗೂ ಔಷಧಿ ಖರ್ಚು ಭರಿಸುವ ಸಲುವಾಗಿ ಖ್ಯಾತ ಹಿಂದಿ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ 83 ವಯಸ್ಸಿನ ಅಮರ ಕಾಂತ್ ಅವರು 2007ರಲ್ಲಿ ದೊರೆತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ತಮಗೆ ಸಂದ ಪ್ರಶಸ್ತಿ ಪದಕಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು.

2009: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಸರ್ವಋತು ಬೇಹುಗಾರಿಕೆ ಅಧ್ಯಯನಶೀಲ ಉಪಗ್ರಹ ‘ರಿಸ್ಯಾಟ್-2’ ಹಾಗೂ ಶೈಕ್ಷಣಿಕ ಉದ್ದೇಶದ ‘ಅನುಸ್ಯಾಟ್’ ಉಪಗ್ರಹಗಳನ್ನು ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಿತು.

ಪ್ರಮುಖಜನನ/ಮರಣ:

1850: ಅಮೆರಿಕದ ಪ್ರಸಿದ್ಧ ಶಿಲ್ಪಿ ಡೇನಿಯಲ್ ಚೆಸ್ಟರ್ ಫ್ರೆಂಚ್ ಅವರು ನ್ಯೂ ಹ್ಯಾಂಪ್ ಶೈರಿನ ಏಕ್ಸೆಟರ್ ಎಂಬಲ್ಲಿ ಜನಿಸಿದರು. ಲಿಂಕನ್ ಪ್ರತಿಮೆಯನ್ನು ನಿರ್ಮಿಸಿದ ಕೀರ್ತಿ ಸಹಾ ಇವರದ್ದಾಗಿದೆ.

1889: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಆಸ್ಟ್ರಿಯಾ-ಹಂಗೇರಿ ಬ್ರೌನವ್ ಆಮ್ ಇನ್ ಎಂಬಲ್ಲಿ ಜನಿಸಿದ. ನಾಜಿ ಪಕ್ಷದ ನಾಯಕನಾಗಿ 1933ರಲ್ಲಿ ಜರ್ಮನ್ ಚಾನ್ಸೆಲರ್ ಆದ ಈತ 1934¬-45 ಅವಧಿಯಲ್ಲಿ ‘ಫುಹ್ರೆರ್’ ಅಂದರೆ ನಾಯಕ ಪದವಿಯನ್ನು ಅಲಂಕರಿಸಿದ್ದ. 1939ರಲ್ಲಿ ಪೋಲೆಂಡ್ ದೇಶವನ್ನು ಆಕ್ರಮಿಸುವುದರೊಂದಿಗೆ ಎರಡನೇ ಮಹಾಯುದ್ಧಕ್ಕೆ ತೀವ್ರತೆ ನೀಡಿದ ಈತ ಹೋಲೋಕಾಸ್ಟ್ ಹತ್ಯಾಕಾಂಡದ ಕೇಂದ್ರವಾಗಿದ್ದ.

1918: ಸ್ವೀಡಿಷ್ ಭೌತ ವಿಜ್ಞಾನಿ ಕೈ ಸೀಗ್ಬಾಹ್ನ್ ಅವರು ಸ್ವೀಡನ್ನಿನ ಲುಂಡ್ ಎಂಬಲ್ಲಿ ಜನಿಸಿದರು. ‘ಎಲೆಕ್ಟ್ರಾನ್ ಸ್ಪೆಕ್ಟ್ರೋಸ್ಕೊಪಿ ಫಾರ್ ಕೆಮಿಕಲ್ ಅನಾಲಿಸಿಸ್’ ಸಂಶೋಧನೆಗಾಗಿ ಇವರಿಗೆ 1981 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1927: ಸ್ವಿಸ್ ಭೌತವಿಜ್ಞಾನಿ ಕಾರ್ಲ್ ಅಲೆಕ್ಸ್ ಮ್ಯುಯೆಲರ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬಲ್ಲಿ ಜನಿಸಿದರು. ‘ಸೂಪರ್ ಕಂಡಕ್ಟಿವಿಟಿ ಇನ್ ಸೆರಾಮಿಕ್ ಮೆಟೀರಿಯಲ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1987 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1942: ದತ್ತಣ್ಣ ಎಂದೇ ಪ್ರಖ್ಯಾತರಾದ ಪ್ರಸಿದ್ಧ ಕಲಾವಿದ ಎಚ್. ಜಿ. ದತ್ತಾತ್ರೇಯ ಅವರು ಚಿತ್ರದುರ್ಗದಲ್ಲಿ ಜನಿಸಿದರು. ಭಾರತೀಯ ವಾಯು ಸೇನೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಪ್ರವೃತ್ತಿಯಿಂದ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕಲಾವಿದರಾಗಿ ತಮ್ಮ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿದ್ದಾರೆ.

1950: ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಚಂದ್ರಗಿರಿ ಬಳಿಯ ನರವಾರಿ ಪಲ್ಲೆ ಎಂಬಲ್ಲಿ ಜನಿಸಿದರು.

1873: ರಾಯಲ್ ಎಕ್ಸ್ಚೇಂಜ್ ವಿನ್ಯಾಸಗೊಳಿಸಿದ ಪ್ರಸಿದ್ಧ ಇಂಗ್ಲಿಷ್ ಕಟ್ಟಡ ವಿನ್ಯಾಸಕ ವಿಲಿಯಂ ಟೈಟ್ ಅವರು ಟೋರ್ಕ್ವೇ ಎಂಬಲ್ಲಿ ನಿಧನರಾದರು.

1918: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಕಾರ್ಲ್ ಫರ್ಡಿನೆಂಡ್ ಬ್ರೌನ್ ಅವರು ಬ್ರೂಕ್ಲಿನ್ ನಗರದಲ್ಲಿ ನಿಧನರಾದರು. ರೇಡಿಯೋ ಮತ್ತು ಟೆಲಿವಿಶನ್ ತಂತ್ರಜ್ಞಾನಕ್ಕೆ ಮಹತ್ವದ ಕೊಡುಗೆ ನೀಡಿರುವ ಇವರಿಗೆ 1909 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

2003: ಜರ್ಮನ್-ಇಂಗ್ಲಿಷ್ ಜೈವಿಕ ವಿಜ್ಞಾನಿ ಬರ್ನಾರ್ಡ್ ಕಟ್ಜ್ ಲಂಡನ್ನಿನಲ್ಲಿ ನಿಧನರಾದರು. ನರ್ವ್ ಬಯೋಕೆಮಿಸ್ಟ್ರಿ ಸಂಶೋಧನೆಗೆ ಪ್ರಸಿದ್ಧರಾದ ಇವರಿಗೆ 1970 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

2008: ಮರಾಠಿಯ ಪ್ರಸಿದ್ಧ ಜಾನಪದ ಮತ್ತು ಶಿಕ್ಷಣತಜ್ಞೆ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಡಾ. ಸರೋಜಿನಿ ಬಾಬರ್ ಅವರು ತಮ್ಮ 87ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-19

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 65: ಫ್ರೀಡ್ಮನ್ ಮಿಲಿಚಸ್ ಎಂಬಾತ ಪೀಸೋ ಯೋಜಿಸಿದ್ದ ಚಕ್ರವರ್ತಿ ನೀರೋನ ಕೊಲೆಯ ಸಂಚಿನ ಗುಟ್ಟನ್ನು ಬಿಟ್ಟುಕೊಟ್ಟ. ಹೀಗಾಗಿ ಕೊಲೆಯ ಸಂಚನ್ನು ಮಾಡಿದವರೆಲ್ಲಾ ಬಂಧಿತರಾದರು.

1845: ಭಾರತದಲ್ಲಿ ರೈಲ್ವೇ ಆರಂಭಿಸುವ ಬಗ್ಗೆ ಚರ್ಚಿಸುತ್ತಿದ್ದ ಮುಂಬೈಯ ಪ್ರಮುಖ ಗಣ್ಯರು ಇಂಡಿಯನ್ ರೈಲ್ವೇ ಅಸೋಸಿಯೇಷನ್ ಹುಟ್ಟು ಹಾಕಿದರು. ಭಾರತದಲ್ಲಿ ರೈಲ್ವೇ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಆಗಮಿಸಿದ್ದ ಇಂಗ್ಲೆಂಡಿನ ಎಂಜಿನಿಯರ್ ಜಿ.ಟಿ. ಕ್ಲಾರ್ಕ್ ನೀಡಿದ ಮುಂಬೈ- ಠಾಣೆ ರೈಲುಮಾರ್ಗ ಪ್ರಸ್ತಾವಕ್ಕೆ ಈ ಗಣ್ಯರು ಅನುಮೋದನೆ ನೀಡಿದರು.

1950: ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

1951: ಲಂಡನ್ನಿನ ಸ್ಟ್ರ್ಯಾಂಡ್ನ ಲೈಸಿಯಂ ಬಾಲ್ ರೂಮಿನಲ್ಲಿ ಮೊತ್ತ ಮೊದಲ ‘ಮಿಸ್ ವರ್ಲ್ಡ್ಡ್’ ಸ್ಪರ್ಧೆ ಏರ್ಪಟ್ಟಿತು. ಮಿಸ್ ಸ್ವೀಡನ್ ಕಿಕಿ ಹಾಕೋನ್ಸನ್ ಅವರು ಸ್ಪರ್ಧೆಯಲ್ಲಿ ವಿಜೇತರಾದರು.

1954: ಪಾಕಿಸ್ತಾನದ ಪಾರ್ಲಿಮೆಂಟು ಉರ್ದು ಮತ್ತು ಬೆಂಗಾಲಿಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿತು.

1960: ದಕ್ಷಿಣ ಕೊರಿಯಾದ ವಿದಾರ್ಥಿಗಳು ಪ್ರಜಾಪ್ರಭುತ್ವವನ್ನು ಬಯಸಿ ಅಧ್ಯಕ್ಷ ಸಿಂಗ್ಮ್ಯಾನ್ ರೀ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿ, ಆತನನ್ನು ರಾಜೀನಾಮೆ ಸಲ್ಲಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

2006: ಸಾಮಾಜಿಕ, ಶೈಕ್ಷಣಿಕ ಯೋಜನೆಗಳು ಮತ್ತು ದತ್ತಿ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ ಪ್ರಸಿದ್ಧ ಉದ್ಯಮಿ ಸ್ವರಾಜ್ ಪಾಲ್ ಅವರಿಗೆ ಬ್ರಿಟನ್ನಿನ ‘ಈಸ್ಟರ್ನ್ ಐ ಕಮ್ಯೂನಿಟಿ ಪ್ರಶಸ್ತಿ’ ಸಂದಿತು. ಬ್ರಿಟನ್ನಿನಲ್ಲಿ ‘ಈಸ್ಟರ್ನ್ ಐ’ ಎಂಬ ಏಷ್ಯಾದ ವೃತ್ತಪತ್ರಿಕೆಯು ಈ ಪ್ರಶಸ್ತಿಯನ್ನು ನೀಡುತ್ತಿದೆ.

2006: ಆಸ್ಟ್ರೇಲಿಯಾದ ಜೆಸನ್ ಗ್ಲಿಲೆಸ್ಪಿ ಅವರು ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗಿನಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನೈಟ್ ವಾಚ್ ಮನ್ ಆಗಿ ಬಂದು ಅಜೇಯ 201 ರನ್ ಗಳಿಸಿ, ತಮ್ಮದೇ ದೇಶದ ಟೋನಿಮನ್ ಅವರು 1977ರಲ್ಲಿ ಭಾರತದ ವಿರುದ್ಧ 105 ರನ್ ಗಳಿಸಿ ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿ ತಮ್ಮ ಸಾಧನೆಯನ್ನು ಪ್ರತಿಷ್ಟಾಪಿಸಿದರು.
2009: ಟಿಬೆಟ್‌ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು.
ಟಿಬೆಟ್‌ಗೆ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು.

ಪ್ರಮುಖಜನನ/ಮರಣ:

1832: ಸ್ಪಾನಿಷ್ ಸಾಹಿತಿ ಜೋಸ್ ಎಚೆಗರೈ ಸ್ಪೈನಿನ ಮಾಡ್ರಿಡ್ ಎಂಬಲ್ಲಿ ಜನಿಸಿದರು. ಇವರಿಗೆ 1904 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1912: ಅಮೆರಿಕದ ರಸಾಯನ ಶಾಸ್ತ್ರಜ್ಞ ಗ್ಲೆನ್ ಟಿ. ಸೀ ಬೋರ್ಗ್ ಅವರು ಮಿಚಿಗನ್ ಬಳಿಯ ಇಸ್ಫೆಮಿಂಗ್ ಎಂಬಲ್ಲಿ ಜನಿಸಿದರು. ‘ಆಕ್ಟಿನೈಡ್’ ಕಾನ್ಸೆಪ್ಟ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1951 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1944: ಅಮೆರಿಕದ ಅರ್ಥಶಾಸ್ತ್ರಜ್ಞ ಜೇಮ್ಸ್ ಹೆಕ್ಮ್ಯಾನ್ ಅವರು ಚಿಕಾಗೋದಲ್ಲಿ ಜನಿಸಿದರು. ಇವರಿಗೆ 2000ದ ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1957: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ಯೆಮೆನ್ ದೇಶದ ಏಡೆನ್ ಎಂಬಲ್ಲಿ ಜನಿಸಿದರು.

1968: ಪ್ರಸಿದ್ಧ ಚಲನಚಿತ್ರ ನಟ ಅರ್ಷದ್ ವರ್ಸಿ ಅವರು ಮುಂಬೈನಲ್ಲಿ ಜನಿಸಿದರು.

1973: ಪ್ರಸಿದ್ಧ ಸುಗಮ ಸಂಗೀತ ಗಾಯಕ ಮತ್ತು , ಸ್ವರ ಸಂಯೋಜಕ ರಾಜು ಅನಂತಸ್ವಾಮಿ ಅವರು, ಪ್ರಸಿದ್ಧ ಸುಗಮ ಸಂಗೀತ ಗಾಯಕ ಮತ್ತು ನಿರ್ದೇಶಕರಾದ ಮೈಸೂರು ಅನಂತಸ್ವಾಮಿ ಅವರ ಪುತ್ರರಾಗಿ ಜನಿಸಿದರು. ಕೆಲವೊಂದು ಚಲನಚಿತ್ರಗಳಲ್ಲೂ ನಟಿಸಿದ್ದ ಇವರು ತಮ್ಮ 36ರ ಹರೆಯದಲ್ಲೇ ನಿಧನರಾದರು.

1916: ಶೇ ಲೋಕೋಮೊಟೀವ್ ಸೃಷ್ಟಿಸಿದ ಎಫರೈಮ್ ಶೇ ಅವರು ಓಹಿಯೋ ಬಳಿಯ ಹ್ಯೂರೋನ್ ಕೌಂಟಿ ಎಂಬಲ್ಲಿ ಜನಿಸಿದರು.

1998: ಮೆಕ್ಸಿಕನ್ ಸಾಹಿತಿ ಮತ್ತು ತತ್ವಜ್ಞಾನಿ ಒಕ್ಟಾವಿಯೋ ಪಾಜ್ ಅವರು ಮೆಕ್ಸಿಕೋದಲ್ಲಿ ನಿಧನರಾದರು. ಇವರಿಗೆ 1990 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2004: ಗಿನ್ನೇಸ್ ವರ್ಲ್ಡ್ ರೆಕಾರ್ಡ್ಸ್ ಸಹ ಸಂಸ್ಥಾಪಕ ನೋರ್ರಿಸ್ ಮೆಕ್’ವಿರ್ಟರ್ ಅವರು ಕಿಂಗ್ಟನ್ ಲ್ಯಾಂಗ್ಲೀ ಎಂಬಲ್ಲಿ ನಿಧನರಾದರು.

2013: ಫ್ರೆಂಚ್ ಜೀವವಿಜ್ಞಾನಿ ಫ್ರಾಂಕೋಯಿಸ್ ಜಾಕಬ್ ಅವರು ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರು ಟ್ರಾನ್ಸ್ಕ್ರಿಪ್ಶನ್ ಮೂಲಕ ಕಣಗಳಲ್ಲಿ ಎನ್ಜೈಮ್ ನಿಯಂತ್ರಣದ ಚಿಂತನೆಯನ್ನು ಹುಟ್ಟು ಹಾಕಿದರು. 1965 ವರ್ಷದಲ್ಲಿ ಇವರಿಗೆ ನೊಬೆಲ್ ವೈದ್ಯ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

 

Categories
e-ದಿನ

ಏಪ್ರಿಲ್-18

ದಿನಾಚರಣೆಗಳು:

ವಿಶ್ವ ಪಾರಂಪರಿಕ ದಿನ

ಅಂತರರಾಷ್ತ್ರೀಯ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳ ವೈವಿಧ್ಯಮಯ ಸಂಸ್ಕೃತಿಗಳ ಕುರಿತಾಗಿ ಆಸಕ್ತಿ ಮತ್ತು ಅವುಗಳನ್ನು ಉಳಿಸಲು ಅಗತ್ಯವಾದ ಜಾಗೃತಿ ಮೂಡಿಸಲು ಏಪ್ರಿಲ್ 18 ದಿನಾಂಕವನ್ನು ವಿಶ್ವ ಪಾರಂಪರಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. 1982ರ ವರ್ಷದಲ್ಲಿ ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಮಾನ್ಯುಮೆಂಟ್ಸ್ ಮತ್ತು ಸೈಟ್ಸ್ ಸಂಸ್ಥೆಯು ಮುಂದಿಟ್ಟಿದ ಪ್ರಸ್ತಾವನೆಯನ್ನು ಯುನೆಸ್ಕೋ 1983 ವರ್ಷದ ತನ್ನ ಸಭೆಯಲ್ಲಿ ಅಂಗೀಕರಿಸಿತು.

ಪ್ರಮುಖಘಟನಾವಳಿಗಳು:

1521: ಮಾರ್ಟಿನ್ ಲೂಥರ್ ಅವರ ವಿಚಾರಣೆಯು ಆರಂಭಗೊಂಡಿತು. ತಮಗೆ ಬಹಿಷ್ಕಾರ ಹಾಕುವ ಸಾಧ್ಯತೆಗಳ ಕುರಿತು ವಿಚಲಿತರಾಗದ ಅವರು ತಮ್ಮ ಭೋಧನೆಗಳನ್ನು ತ್ಯಜಿಸಲು ನಿರಾಕರಿಸಿದರು.

1859: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಯೋಧರಾದ ತಾಂತ್ಯಾ ಟೋಪೆ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.

1898: ಭಾರತೀಯ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರನ್ನು ಬ್ರಿಟಿಷ್ ಆಡಳಿತವು ಗಲ್ಲಿಗೇರಿಸಿತು. 1897ರಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆಗೈದುದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಯಿತು.

1906: ಭೂಕಂಪ ಮತ್ತು ಬೆಂಕಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಗರವು ಬಹುತೇಕವಾಗಿ ನಾಶಗೊಂಡಿತು.

1912: ಆರ್.ಎಮ್.ಎಸ್. ಟೈಟಾನಿಕ್ ದುರಂತದಲ್ಲಿ ಬದುಕುಳಿದ 705 ಜನರನ್ನು ಕುನಾರ್ಡ್ ನೌಕೆಯಾದ ಆರ್.ಎಮ್.ಎಸ್. ಕರ್ಪಾಥಿಯಾದಲ್ಲಿ ನ್ಯೂಯಾರ್ಕ್ ನಗರಕ್ಕೆ ತರಲಾಯಿತು.

1930: ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ಭಾರತೀಯ ಕ್ರಾಂತಿಕಾರಿಗಳಿಂದ ದಾಳಿ ನಡೆಯಿತು. ಕ್ರಾಂತಿಕಾರಿ ಸೂರ್ಯ ಸೇನ್ ನೇತೃತದಲ್ಲಿ ಇಂಡಿಯನ್ ರಿಪಬ್ಲಿಕನ್ ಆರ್ಮಿಯ 62 ಮಂದಿ ಕ್ರಾಂತಿಕಾರಿಗಳು ಚಿತ್ತಗಾಂಗಿನಲ್ಲಿದ್ದ ಪೊಲೀಸ್ ಮತ್ತು ಬ್ರಿಟಿಷ್ ಪಡೆಗಳ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದರು.

2006: ಅಮೆರಿಕದ ಪಾನ್ ಆಮ್ ವಿಮಾನದಲ್ಲಿ ವಿಮಾನ ಅಪಹರಣಕಾರರ ವಿರುದ್ಧ ಸೆಣೆಸಿ ಮಡಿದ ಗಗನಸಖಿ ಚಂಡೀಗಢದ ನೀರಜಾ ಭಾನೋಟ್ ಅವರಿಗೆ ಅಮೆರಿಕದ ಅತ್ಯುಚ್ಛ ಶೌರ್ಯ ಪ್ರಶಸ್ತಿ ಘೋಷಿಸಲಾಯಿತು.

2007: ಕೈಮಗ್ಗ ಉತ್ಪನ್ನಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ವಿಶ್ವಸಂಸ್ಥೆಯ ಪ್ರತಿಷ್ಠಿತ `ವಿಮೆನ್ ಟುಗೆದರ್ ಅವಾರ್ಡ್ -2007′ ಗೌರವಕ್ಕೆ ಆಯ್ಕೆಯಾದರು.

2007: ಭಾರತದ ಮಹತ್ವಾಕಾಂಕ್ಷೆಯ ಹಗುರ ಸಾರಿಗೆ ವಿಮಾನ ‘ಸರಸ್’ ತನ್ನ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು. ಸ್ವದೇಶೀ ನಿರ್ಮಿತ ಮೊದಲ ನಾಗರಿಕ ವಿಮಾನವಾದ ಇದನ್ನು ರಾಷ್ಟ್ರೀಯ ವಿಮಾನಾಂತರಿಕ್ಷ ಪ್ರಯೋಗಾಲಯ (ಎನ್ ಎ ಎಲ್) ಅಭಿವೃದ್ಧಿ ಪಡಿಸಿತು.

2007: ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಚೀನಾದ ಬುಲೆಟ್ ರೈಲು ತನ್ನ ಮೊದಲ ಸಂಚಾರವನ್ನು ಬೀಜಿಂಗ್ ನಗರದಲ್ಲಿ ಆರಂಭಿಸಿತು.

2009: ಜಪಾನಿನ ಟೊಟ್ಟೊರಿ ಸಮುದ್ರ ತೀರದಲ್ಲಿ ಮರಳು ಕಲಾಕೃತಿಗಳ ಉತ್ಸವ ಆರಂಭವಾಯಿತು. ವಿಶ್ವದ ಕಾಲ್ಪನಿಕ ಕಥೆಗಳನ್ನು ವಸ್ತುವಾಗಿಟ್ಟುಕೊಂಡು 10 ದೇಶದ ಕಲಾವಿದರು ಈ ಮರಳು ಕಲಾಕೃತಿಗಳ ಉತ್ಸವದಲ್ಲಿ ಪಾಲ್ಗೊಂಡರು.

2008: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ (ಐಪಿಎಲ್) ಉದ್ಘಾಟನೆಗೊಂಡಿತು.

ಪ್ರಮುಖಜನನ/ಮರಣ:

1858: ಮಹರ್ಷಿ ಕರ್ವೆ ಎಂದೇ ಪ್ರಖ್ಯಾತರಾದ ಮಹಾನ್ ಸಮಾಜ ಸುಧಾರಕರಾದ ಮಹರ್ಷಿ ಧೊಂಡೋ ಕೇಶವ ಕರ್ವೆ ಅವರು ಮಹಾರಾಷ್ಟ್ರದ ಮುರುದ್ ಎಂಬಲ್ಲಿ ಜನಿಸಿದರು. ಮಹಿಳಾ ಶಿಕ್ಷಣ ಹಾಗೂ ಹಿಂದು ವಿಧವೆಯರ ಮರುವಿವಾಹಕ್ಕೆ ಬೆಂಬಲ ನೀಡಿದ ಇವರು ಈ ನಿಟ್ಟಿನಲ್ಲಿ ಅಪಾರ ಕೆಲಸ ಮಾಡಿದ್ದರು. 100ನೇ ಜನ್ಮದಿನದ ಸಂದರ್ಭದಲ್ಲಿ ಈ ಮಹನೀಯರನ್ನು ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1962ರಲ್ಲಿ ತಮ್ಮ 105ನೆಯ ವಯಸ್ಸಿನಲ್ಲಿ ನಿಧನರಾದರು.

1859: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಯೋಧರಾದ ತಾಂತ್ಯಾ ಟೋಪೆ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.

1898: ಭಾರತೀಯ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರನ್ನು ಬ್ರಿಟಿಷ್ ಆಡಳಿತವು ಗಲ್ಲಿಗೇರಿಸಿತು. 1897ರಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆಗೈದುದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಯಿತು.

1942: ಅಮೆರಿಕದ ಶಿಲ್ಪಿ, ಕಲಾ ವಸ್ತುಗಳ ಸಂಗ್ರಹಗಾರ್ತಿ ಮತ್ತು ವಿಟ್ನಿ ಮ್ಯೂಸಿಯಂ ಆಫ್ ಅಮೆರಿಕನ್ ಆರ್ಟ್ ಸ್ಥಾಪಕಿ ಗೆರ್ಟ್ರೂಡ್ ವಾಂಡರ್ಬಿಲ್ಟ್ ವಿಟ್ನಿ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು.

1945: ವ್ಯಾಕ್ಯೂಮ್ ಟ್ಯೂಬ್ ಸಂಶೋಧಿಸಿದ ಇಂಗ್ಲಿಷ್ ಬೌತವಿಜ್ಞಾನಿ ಜಾನ್ ಆಂಬ್ರೋಸ್ ಇಂಗ್ಲೆಂಡಿನ ಸಿಡ್ಮೌತ್ ಎಂಬಲ್ಲಿ ನಿಧನರಾದರು.

2006: ಹಿರಿಯ ಮರಾಠಿ ಚಲನಚಿತ್ರ ಮತ್ತು ರಂಗಭೂಮಿ ನಟ ಶರದ್ ಅಲಿಯಾಸ್ ದಲ್ ಜೇಮ್ ನೀಸ್ ಅವರು ತಮ್ಮ 72ನೆಯ ವಯಸ್ಸಿನಲ್ಲಿ ಕೊಲ್ಹಾಪುರದಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-17

ದಿನಾಚರಣೆಗಳು:

ವಿಶ್ವ ಹಿಮೋಫಿಲಿಯಾ ದಿನ.

ವಿಶ್ವ ಹಿಮೋಫಿಲಿಯಾ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 17ರಂದು ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಹಿಮೋಫಿಲಿಯಾ ಸಂಘಟನೆಯ(WFH) ಸಂಸ್ಥಾಪಕ ಫ್ರ್ಯಾಂಕ್ ಸ್ಖಾನ್ಬೆಲ್ ಅವರ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 1989ರಿಂದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತ ಸ್ರಾವ ರೋಗದ ಕುರಿತು ಜಾಗೃತಿ ಮೂಡಿಸಿ, ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಸಹ್ಯಗೊಳಿಸುವ ಆಶಯ ಈ ಆಚರಣೆಯಲ್ಲಿದೆ.

ಪ್ರಮುಖಘಟನಾವಳಿಗಳು:

1397: ಜೆಫ್ಫರೀ ಚೌಸರ್ ಅವರು ಮೊಟ್ಟಮೊದಲಬಾರಿಗೆ ‘ದಿ ಕ್ಯಾಂಟರ್ಬ್ಯುರಿ’ ಕಥೆಗಳನ್ನು ಎರಡನೆ ರಿಚರ್ಡ್ಸ್ ಅವರ ಆಸ್ಥಾನದಲ್ಲಿ ಹೇಳಿದರು. ಚೌಸರ್ ಪಂಡಿತರುಗಳು 1387ರ ವರ್ಷದ ಇದೇ ದಿನವನ್ನೇ ಪುಸ್ತಕದ ಕ್ಯಾಂಟರ್ಬರಿಯ ಯಾತ್ರೆಯ ಪ್ರಾರಂಭದ ದಿನವೆಂದು ಹೇಳುತ್ತಾರೆ.

1492: ಸ್ಪೈನಿನ ಕ್ಯಾಥೊಲಿಕ್ ಮೊನಾರ್ಚ್ಸ್ ಮತ್ತು ಕ್ರಿಸ್ತಫರ್ ಕೊಲಂಬಸ್ ನಡುವೆ ‘ಕ್ಯಾಪಿಟುಲೇಶನ್ಸ್ ಆಫ್ ಸಂತ ಫೆ’ ಏರ್ಪಟ್ಟಿತು. ಆತ ಏಷ್ಯಾ ಖಂಡಕ್ಕೆ ಪಯಣಿಸಿ ಸಂಬಾರ ಪದಾರ್ಥಗಳನ್ನು ತರುವುದರ ನಿಟ್ಟಿನಲ್ಲಿ ಆದ ಒಡಂಭಡಿಕೆ ಇದು.

1524: ಇಟಲಿಯ ನಾವಿಕ ಜಿಯೋವನ್ನಿ ಡ ವೆರ್ರಜ್ಜಾನೋ ನ್ಯೂಯಾರ್ಕ್ ಬಂದರನ್ನು ತಲುಪಿದರು.

1799: ಬ್ರಿಟಿಷ್ ಪಡೆಯು 4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪೂ ಸುಲ್ತಾನನ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿತು. ಮೇ 4ರಂದು ಟಿಪ್ಪು ಸುಲ್ತಾನ್ ಸಾವಿನೊಂದಿಗೆ ಈ ಮುತ್ತಿಗೆ ಕೊನೆಗೊಂಡಿತು.

1912: ಮುಷ್ಕರದಲ್ಲಿ ತೊಡಗಿದ್ದ ಈಶಾನ್ಯ ಸೈಬೀರಿಯಾದ ಚಿನ್ನದ ಗಣಿ ಕಾರ್ಮಿಕರ ಮೇಲೆ ರಷ್ಯನ್ ಸೇನೆ ಗುಂಡು ಹಾರಿಸಲಾಗಿ ಕಡೇಪಕ್ಷ 150 ಜನ ಸಾವಿಗೀಡಾದರು.

1951: ‘ಪೀಕ್ ಡಿಸ್ಟ್ರಿಕ್ಟ್’ ಎಂಬುದು ಯುನೈಟೆಡ್ ಕಿಂಗ್ಡಂನ ಮೊದಲ ನ್ಯಾಷನಲ್ ಪಾರ್ಕ್ ಎನಿಸಿತು.

1969: ರಾಬರ್ಟ್ ಎಫ್. ಕೆನಡಿ ಅವರ ಹತ್ಯೆಯ ಸಂಬಂಧದಲ್ಲಿ ಸಿರ್ಹಾನ್ ಸಿರ್ಹಾನ್ ಎಂಬುವನನ್ನು ಬಂಧಿಸಲಾಯಿತು.

1971: ಬಾಂಗ್ಲಾದೇಶದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ್ ಸ್ಥಾಪನೆಗೊಂಡಿತು.

2006: ದೇಶದ ಮೊದಲ ಬೃಹತ್ ಜೈವಿಕ ತಂತ್ರಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಯೋಕಾನ್ ಫಾರ್ಮಾಸ್ಯೂಟಿಕಲ್ಸ್ ಕೇಂದ್ರಕ್ಕೆ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಚಾಲನೆ ನೀಡಿದರು.

2006: ನರ್ಮದಾ ಅಣೆಕಟ್ಟೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪುನರ್ ವಸತಿ ಕಲ್ಪಿಸದೇ ಇದ್ದರೆ ಮೇ 1ರಿಂದ ಅಣೆಕಟ್ಟೆ ಕಾಮಗಾರಿ ನಿಲ್ಲಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ತಮ್ಮ 20 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

2006: ದೇಶದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಅವರನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು.

2014: ನಾಸಾದ ಕೆಪ್ಲರ್ ಅವರು ಮತ್ತೊಂದು ನಕ್ಷತ್ರದ ಆವರಣದಲ್ಲಿ ವಾಸಯೋಗ್ಯವಾದ ಭೂಮಿಯ ಗಾತ್ರದ ಗ್ರಹವೊಂದನ್ನು ಪತ್ತೆಹಚ್ಚಿರುವುದಾಗಿ ದೃಢೇಕರಿಸಿದರು.

ಪ್ರಮುಖಜನನ/ಮರಣ:

1756: ಪಾಳೆಯಗಾರರ ಯುದ್ಧದಲ್ಲಿ ಪ್ರಸಿದ್ಧರಾದ ಧೀರನ್ ಚಿನ್ನಾಮಲೈ ಅವರು ತಮಿಳುನಾಡಿನ ಈರೋಡ್ ಬಳಿಯ ಮೇಳಪಾಳಯಂ ಎಂಬಲ್ಲಿ ಜನಿಸಿದರು. ಟಿಪ್ಪು ಸುಲ್ತಾನ್ ಜೊತೆಯಲ್ಲಿ ಫ್ರೆಂಚ್ ಸೇನೆಯಿಂದ ತಯಾರಿ ಪಡೆದಿದ್ದ ಇವರು, ಬ್ರಿಟಿಷರನ್ನು ಹಲವು ಬಾರಿ ಸೋಲಿಸಿದ ಯುದ್ಧಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗೆರಿಲ್ಲಾ ಯುದ್ಧಗಳಲ್ಲಿ ಬ್ರಿಟಿಷರಿಗೆ ತಲೆನೋವಾಗಿದ್ದ ಇವರು ತಮ್ಮ ಅಡಿಗೆಯವನ ಮೋಸದಿಂದ ಬ್ರಿಟಿಷರಿಗೆ ಸೆರೆಸಿಕ್ಕು 1805 ವರ್ಷದಲ್ಲಿ ನೇಣಿಗೆ ತಲೆ ಒಡ್ಡಿದರು.

1897: ಮಾರುತಿ ಶಿವರಾಮ್ ಪ್ಯಾಂಟ್ ಕಂಬ್ಳಿ ಎಂಬ ಹೆಸರಿನಿಂದ, ಭಾರತೀಯ ತತ್ವಜ್ಞಾನಿ ನಿಸರ್ಗದತ್ತ ಮಹಾರಾಜ್ ಅವರು ಮುಂಬೈನಲ್ಲಿ ಜನಿಸಿದರು. ಇವರು ಮರಾಟಿಯಲ್ಲಿ ನೀಡಿದ ಉಪನ್ಯಾಸಗಳನ್ನೂ ‘I Am That’ ಎಂಬ ಹೆಸರಿನಲ್ಲಿ ಮಾರೈಸ್ ಫ್ರಿಡ್ಮ್ಯಾನ್ ಅವರು ಪ್ರಕಟಿಸಿದಾಗ ಇವರ ಕೀರ್ತಿ ವಿಶ್ವದಾದ್ಯಂತ ಹಬ್ಬಿತು.

1915: ವಿಶ್ವದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದ ಶ್ರೀಲಂಕಾದ ಆರನೇ ಪ್ರಧಾನಿ ಸಿರಿಮಾವೊ ಬಂಡಾರ ನಾಯಕೆ ಅವರು ಸಿಲೋನಿನಲ್ಲಿ ಜನಿಸಿದರು.

1961: ಭಾರತದ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಅವರು ನವದೆಹಲಿಯಲ್ಲಿ ಜನಿಸಿದರು. ಬಿಲಿಯರ್ಡ್ಸ್ ಆಟದಲ್ಲಿ ವೃತ್ತಿಪರರಾಗಿ ಆರು ಬಾರಿ ಮತ್ತು ಹವ್ಯಾಸಿಯಾಗಿ 3 ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿಗಳನ್ನು ಪಡೆದಿರುವ ಇವರು, 1985ರಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಸರು ಪಡೆದರು. ಇವರಿಗೆ ರಾಜೀವ್ ಖೇಲ್ ರತ್ನ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳು ಸಂದಿವೆ.

1965: ಪ್ರಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟ ರಂಗಾಯಣ ರಘು ಅವರು ಚಿಕ್ಕರಂಗಪ್ಪ ರಘುನಾಥ್ ಎಂಬ ಹೆಸರಿನಿಂದ ಕೊಟ್ಟೂರು ಎಂಬಲ್ಲಿ ಜನಿಸಿದರು. ಬಿ.ವಿ. ಕಾರಂತರ ನೇತೃತ್ವದ ರಂಗಾಯಣದಲ್ಲಿ ಪಾಲ್ಗೊಂಡು ರಂಗಾಯಣ ರಘು ಎಂದೇ ಖ್ಯಾತರಾಗಿರುವ ಇವರು ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1882: ಇಂಗ್ಲಿಷ್ ತಂತ್ರಜ್ಞ ಮತ್ತು ಕೊಳಾಯಿ ತಜ್ಞ, ಸಾರ್ವಜನಿಕ ಫ್ಲಶ್ ಶೌಚಾಲಯ ವ್ಯವಸ್ಥೆ ಅನ್ವೇಷಿಸಿದ ಜಾರ್ಜ್ ಜೆನ್ನಿಂಗ್ಸ್ ನಿಧನರಾದರು.

1942: ಫ್ರೆಂಚ್-ಅಮೆರಿಕನ್ ಭೌತ ವಿಜ್ಞಾನಿ ಮತ್ತು ರಸಾಯನ ವಿಜ್ಞಾನಿ ಜೀನ್ ಬಾಪ್ಟಿಸ್ಟ್ ಅವರು ನ್ಯೂಯಾರ್ಕ್ ನಗರದಲ್ಲಿ ನಿಧನರಾದರು. ಕ್ಯಾಥೋಡ್ ರೇಸ್, ಬ್ರೌನಿಯನ್ ಚಲನೆಯ ಕುರಿತಾದ ಸಂಶೋಧನೆಗಳಿಗೆ ಪ್ರಸಿದ್ಧರಾದ ಇವರಿಗೆ 1926 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1975: ಭಾರತದ ತತ್ವಜ್ಞಾನಿ, ವಿದ್ವಾಂಸ, ಶಿಕ್ಷಣ ತಜ್ಞ, ಎರಡನೇ ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5 ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.

1976: ಡ್ಯಾನಿಶ್ ಜೈವಿಕ ವಿಜ್ಞಾನಿ ಮತ್ತು ವೈದ್ಯ ವಿಜ್ಞಾನಿ ಹೆನ್ರಿಕ್ ಡ್ಯಾಮ್ ನಿಧನರಾದರು. ಕಾಗ್ಯುಲೆಶನ್ ವಿಟಮಿನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1943 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2012: ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಮತ್ತು ರಾಜಕಾರಣಿ ನಿತ್ಯಾನಂದ ಮೊಹಾಪಾತ್ರ ಅವರು ಒದಿಶಾದ ಭದ್ರಾಕ್ ಎಂಬಲ್ಲಿ ನಿಧನರಾದರು.

2013: ಕರ್ನಾಟಕದ 13ನೇ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಬೆಂಗಳೂರಿನಲ್ಲಿ ನಿಧನರಾದರು. 1990ರ ವರ್ಷದಲ್ಲಿನ ಕಿರು ಅವಧಿಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಆಯುಕ್ತರಾಗಿಯೂ ಇವರು ಕೆಲಸ ಮಾಡಿದ್ದರು.

1994: ಅಮೆರಿಕದ ವೈದ್ಯವಿಜ್ಞಾನಿ ರೋಜರ್ ವಾಲ್ಕಾಟ್ ಸ್ಪೆರ್ರಿ ಅವರು ಕ್ಯಾಲಿಫೋರ್ನಿಯಾದ ಪೆಸಡೆನ ಎಂಬಲ್ಲಿ ನಿಧನರಾದರು. ‘ಸ್ಪ್ಲಿಟ್ ಬ್ರೈನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1981 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

2014: ಕೊಲಂಬಿಯಾದ ಪತ್ರಕರ್ತ ಮತ್ತು ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮರ್ಕ್ವೆಜ್ ಅವರು ಮೆಕ್ಸಿಕೋದಲ್ಲಿ ನಿಧನರಾದರು. ಇವರಿಗೆ 1982 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

 

Categories
e-ದಿನ

ಏಪ್ರಿಲ್-16

ಪ್ರಮುಖಘಟನಾವಳಿಗಳು:

1853: ಮುಂಬೈನ ಬೋರೀ ಬಂದರಿನಿಂದ ಥಾಣೆವರೆಗಿನ 34 ಕಿಲೋಮೀಟರ್ ಹಳಿಯ ಮೇಲೆ 400 ಜನರನ್ನು ಹೊತ್ತ 14 ಬೋಗಿಗಳ ರೈಲು ಸಂಚರಿಸುವುದರೊಂದಿಗೆ ಭಾರತದಲ್ಲಿ ರೈಲು ಸಂಚಾರ ಆರಂಭಗೊಂಡಿತು.

1912: ಅಮೆರಿಕದ ವಿಮಾನಯಾನಿ ಹ್ಯಾರಿಯೆಟ್ ಕ್ವಿಂಬೆ ಅವರು ಇಂಗ್ಲಿಷ್ ಕಡಲ್ಗಾಲುವೆ ದಾಟಿದ ಮೊತ್ತ ಮೊದಲ ಮಹಿಳೆ ಎನಿಸಿದರು. 50 ಹಾರ್ಸ್ ಪವರ್ ಮಾನೋಪ್ಲೇನ್ ಮೂಲಕ 59 ನಿಮಿಷಗಳ ಹಾರಾಟದ ಬಳಿಕ ಕ್ವಿಂಬೆ ಅವರು ಫ್ರಾನ್ಸಿನ ಹಾರ್ಡೆಲೊಟ್ ಸಮೀಪ ಇಳಿದರು.

1917: ಸ್ವಿಟ್ಜರ್ಲ್ಯಾಂಡಿಗೆ ಗಡೀಪಾರುಗೊಂಡಿದ್ದ ವ್ಲಾಡಿಮಿರ್ ಲೆನಿನ್ ಅವರು ರಷ್ಯಾದ ಪೆಟ್ರೋಗ್ರಾಡ್ ಪ್ರದೇಶಕ್ಕೆ ಹಿಂದಿರುಗಿದರು.

1919: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಸಗಿದ ಬ್ರಿಟಿಷರ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಮಹಾತ್ಮ ಗಾಂಧೀಜಿ ಅವರು ಒಂದು ದಿನದ ಪ್ರಾರ್ಥನೆ ಮತ್ತು ಉಪವಾಸವನ್ನು ಆಯೋಜಿಸಿದರು.

1945: ಸೋವಿಯತ್ ಜಲಾಂತರ್ಗಾಮಿಯ ದಾಳಿಗೆ ಮುಳುಗಿದ ‘ಗೋಯಾ’ ಹಡಗಿನಲ್ಲಿದ್ದ 7000ಕ್ಕೂ ಹೆಚ್ಚು ಜರ್ಮನ್ ನಿರಾಶ್ರಿತರು ನೀರು ಪಾಲಾದರು.

1963: ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಜೈಲಿನಲ್ಲಿ ಬಂಧಿಯಾಗಿದ್ದಾಗ ‘ಲೆಟರ್ ಫ್ರಮ್ ಬರ್ಮಿಂಗ್ ಹ್ಯಾಮ್’ ಲಿಖಿಸಿದರು.

1982: ಅಶೋಕನಾಥ ಬ್ಯಾನರ್ಜಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಇವರು ಐ.ಎ.ಎಸ್. ಶ್ರೇಣಿಯ ಸರ್ಕಾರಿ ಅಧಿಕಾರಿಗಳಾಗಿದ್ದರು.

2007: ಖ್ಯಾತ ಹಿನ್ನೆಲೆ ಗಾಯಕರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ 2007ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಲು ಬಸವ ವೇದಿಕೆ ನಿರ್ಧರಿಸಿತು.

2008: ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ಪ್ರತಿಮೆ ನಿರ್ಮಿಸಲು ಸಮನ್ವಯ ಪರಿವಾರ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಗೆ ಲಂಡನ್ನಿನ ಲೀಸೆಸ್ಟರ್ ನಗರಸಭೆ ಅನುಮೋದನೆ ನೀಡಿತು.

2009: ಸತ್ಯಂ ಕಂಪ್ಯೂಟರ್ಸ್ ಅನ್ನು ಸ್ವಾಧೀನ ಪಡಿಸಿಕೊಳ್ಳಲು, ಟೆಕ್ ಮಹೀಂದ್ರಾ ನೀಡಿದ್ದ, ಷೇರಿಗೆ ತಲಾ ರೂ 58 ನೀಡುವ ಪ್ರಸ್ತಾಪವನ್ನು, ಆ ಕಂಪೆನಿಯ ಕಾನೂನು ಮಂಡಳಿ (ಸಿಎಲ್‌ಬಿ) ಅಂಗೀಕರಿಸಿತು.

ಪ್ರಮುಖಜನನ/ಮರಣ:

1813: ಟ್ರಾವಂಕೂರು ಪ್ರಾಂತ್ಯದ ಮಹಾರಾಜರಾದ ಸ್ವಾತಿ ತಿರುನಾಳ್ ರಾಮ ವರ್ಮ ಅವರು ಟ್ರಾವಂಕೂರಿನಲ್ಲಿ ಜನಿಸಿದರು. ಶ್ರೇಷ್ಠ ವಾಗ್ಗೇಯಕಾರರಾದ ಇವರು ಸುಮಾರು 400 ಶಾಸ್ತ್ರೀಯ ಕೃತಿಗಳನ್ನು ಕರ್ನಾಟಕ ಮತ್ತು ಹಿಂದೂಸ್ಥಾನಿಯ ಪದ್ಧತಿಗಳಲ್ಲಿ ರಚಿಸಿದ್ದಾರೆ ಎಂದು ಹೇಳಲಾಗಿದೆ. ಇವರು ಶಿಸ್ತುಬದ್ಧ ಆಡಳಿತಕ್ಕೂ ಹೆಸರಾಗಿದ್ದರು.

1844: ಫ್ರೆಂಚ್ ಪತ್ರಕರ್ತ ಮತ್ತು ಸಾಹಿತಿ ಅನಟೋಲೆ ಫ್ರಾನ್ಸ್ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು. ಇವರಿಗೆ 1921 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1848: ಸಮಾಜ ಸುಧಾರಕ ಮತ್ತು ಬರಹಗಾರರಾದ ಬಹಾದ್ದೂರ್ ಕಂಡುಕುರಿ ವೀರೇಶ ಲಿಂಗಂ ಪಂತುಲು ಅವರು ರಾಜಮಂಡ್ರಿಯಲ್ಲಿ ಜನಿಸಿದರು. ಮಹಿಳಾ ಶಿಕ್ಷಣ, ವಿಧವಾ ವಿವಾಹ, ವರದಕ್ಷಿಣೆ ವಿರೋಧ ಮುಂತಾದ ಸಮಾಜ ಸುಧಾರಣೆಗಳಲ್ಲಿ ಮುಖ್ಯ ಪಾತ್ರವಹಿಸಿದ್ದ ಇವರು ದೊವಲೈಸ್ವರಂ ಎಂಬಲ್ಲಿ ಶಾಲೆಯನ್ನೂ ನಿರ್ಮಿಸಿದ್ದರು. ಇವರು ರಚಿಸಿದ ‘ರಾಜಶೇಖರ ಚರಿತ್ರಮು’ ತೆಲುಗಿನ ಪ್ರಥಮ ಕಾದಂಬರಿ ಎನಿಸಿದ್ದು, ‘ಸ್ವೀಯ ಚರಿತ್ರಮು’ ಎಂಬುದು ಅವರ ಆತ್ಮಕಥನವಾಗಿದೆ.

1867: ಅಮೆರಿಕಾದ ಸಂಶೋಧಕ ಹಾಗೂ ಮುಂಚೂಣಿಯ ವಿಮಾನ ವಿಮಾನ ಚಾಲಕರಾದ ವಿಲ್ಬರ್ ರೈಟ್ ಅವರು ಮಿಲ್ವಿಲ್ಲೆ ಎಂಬಲ್ಲಿ ಜನಿಸಿದರು. ಇವರು ತಮ್ಮ ಸಹೋದರ ಓರ್ವಿಲ್ಲೆ ರೈಟ್ ಅವರೊಂದಿಗೆ ಮೊಟ್ಟ ಮೊದಲ ವಿಮಾನ ಹಾರಾಟ ನಡೆಸಿದರು.

1881: ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಇರ್ವಿನ್ ಎಂದು ಹೆಸರಾದ ಎಡ್ವರ್ಡ್ ಫ್ರೆಡ್ರಿಕ್ ಲಿಂಡ್ಲೈ ವುಡ್ ಅವರು ಇಂಗ್ಲೆಂಡಿನ ಪೌಡರ್ಹ್ಯಾಮ್ ಕ್ಯಾಸಲ್ ಎಂಬಲ್ಲಿ ಜನಿಸಿದರು. ಇವರು 1925-1931ರ ಅವಧಿಯಲ್ಲಿ ಭಾರತದ ವೈಸ್ ರಾಯ್ ಆಗಿದ್ದರು. ಭಾರತೀಯ ನಾಯಕತ್ವದೊಡನೆ ಮಾತುಕತೆಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಯತ್ನಿಸಿದ ಇವರ ಪ್ರಾಮಾಣಿಕತೆಯ ಬಗ್ಗೆ ಮಹಾತ್ಮ ಗಾಂಧೀಯವರಿಗೆ ಮೆಚ್ಚುಗೆ ಇತ್ತು.

1889: ಮಹಾನ್ ನಟ, ನಿರ್ಮಾಪಕ, ನಿರ್ದೇಶಕ, ಸಂಯೋಜಕ ಚಾರ್ಲಿ ಚಾಪ್ಲಿನ್ ಅವರು ದಕ್ಷಿಣ ಲಂಡನ್ನಿನ ವಾಲ್ವರ್ತ್ ಬಳಿಯ ಈಸ್ಟ್ ಸ್ಟ್ರೀಟ್ ಎಂಬಲ್ಲಿ ಜನಿಸಿದರು. ‘ದಿ ಟ್ರಾಪ್’ ಚಿತ್ರದಲ್ಲಿನ ತಮ್ಮ ಅಮೋಘ ತೆರೆಯ ಮೇಲಿನ ಅಭಿವ್ಯಕ್ತಿಯಿಂದ ಮೂಕಿ ಯುಗದ ಮಹಾನ್ ಕಲಾವಿದರಾಗಿ ಹೊರಹೊಮ್ಮಿದ ಇವರು ಚಿತ್ರರಂಗದಲ್ಲಿ ಸುಮಾರು 75 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1977ರ ವರ್ಷದಲ್ಲಿ ನಿಧನರಾದ ಇವರು 1972 ವರ್ಷದಲ್ಲಿ ಅಕಾಡೆಮಿ ಪ್ರಶಸ್ತಿ ಗೌರವವನ್ನು ಸ್ವೀಕರಿಸಿದರು.

1900: ‘ಆನಂದಕಂದ’ ಕಾವ್ಯ ನಾಮಾಂಕಿತ ಬೆಟಗೇರಿ ಕೃಷ್ಣಶರ್ಮ ಅವರು 1900ನೆಯ ಏಪ್ರಿಲ್ ತಿಂಗಳ 16ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು. ಎಲ್ಲ ವಿಧದ ಸಾಹಿತ್ಯಗಳಲ್ಲೂ ಮಹತ್ವದ ಸೇವೆ ಸಲ್ಲಿಸಿದ್ದ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿದ್ದವು.

1924: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ರಾಯಭಾರಿ, ಲೋಕೋಪಕಾರಿ ಮತ್ತು ಯುನೆಸ್ಕೋ ಅಧಿಕಾರಿಗಳಾಗಿದ್ದ ಮದನ್ಜೀತ್ ಸಿಂಗ್ ಅವರು ಲಾಹೋರಿನಲ್ಲಿ ಜನಿಸಿದರು. ಕೋಮು ಸೌಹಾರ್ಧತೆ, ಸಹಿಷ್ಣುತೆ, ಅಹಿಂಸೆ ಮತ್ತು ಶಾಂತಿ ಪಾಲನೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಇವರ ಗೌರವಾರ್ಥವಾಗಿ ಯುನೆಸ್ಕೋ 1995ರ ವರ್ಷದಲ್ಲಿ ‘ಯುನೆಸ್ಕೋ-ಮದನ್ಜೀತ್ ಸಿಂಗ್ ಪ್ರೈಜ್ ಫಾರ್ ದಿ ಪ್ರೊಮೋಷನ್ ಆಫ್ ಟಾಲರೆನ್ಸ್ ಅಂಡ್ ನಾನ್-ವಯಲೆನ್ಸ್’ ಪ್ರಶಸ್ತಿಯನ್ನು ಸ್ಥಾಪಿಸಿತು.

1951: ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ರಾಘವೇಂದ್ರ ಪಾಟೀಲ್ ಅವರು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು.ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿಗಳಾಗಿರುವ ಇವರಿಗೆ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿಯ ಅಕಾಡೆಮಿ ಪ್ರಶಸ್ತಿ, ಹಲವು ರಾಜ್ಯ ಸಾಹಿತ್ಯ ಅಕಾಡೆಮಿ ಗೌರವಗಳೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

1961: ಅರುಣಾಚಲ ಪ್ರದೇಶದ ಏಳನೇ ಮುಖ್ಯಮಂತ್ರಿಗಳಾದ ಜಾರ್ಬೋಂ ಗ್ಯಾಮ್ಲಿನ್ ಅವರು ಅಲಾಂಗ್ ಎಂಬಲ್ಲಿ ಜನಿಸಿದರು.

1972: ಜಪಾನೀ ಸಾಹಿತಿ ಯಸುನರಿ ಕವಬಟ ಅವರು ಜುಷಿ ಎಂಬಲ್ಲಿ ನಿಧನರಾದರು. ಇವರಿಗೆ 1968 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

Categories
e-ದಿನ

ಏಪ್ರಿಲ್-15

ಪ್ರಮುಖಘಟನಾವಳಿಗಳು:

1755: ಸ್ಯಾಮ್ಯುಯೆಲ್ ಜಾನ್ಸನ್ ಅವರ ‘ಎ ಡಿಕ್ಷನರೀ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್’ ಲಂಡನ್ನಿನಲ್ಲಿ ಪ್ರಕಟಗೊಂಡಿತು.

1817: ಥಾಮಸ್ ಹಾಪ್ ಕಿನ್ಸ್ ಗಲ್ಲಾವ್ ಡೆಟ್ ಮತ್ತು ಲಾರೆಂಟ್ ಕ್ಲರ್ಕ್ ಅವರು ಕನೆಕ್ಟಿಕಟ್ ಬಳಿಯ ಹಾರ್ಟ್ಫೋರ್ಡ್ ಎಂಬಲ್ಲಿ ಅಮೆರಿಕದ ಪ್ರಥಮ ಕಿವುಡರಿಗಾಗಿನ ಶಾಲೆ ಪ್ರಾರಂಭಿಸಿದರು

1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ್ದ.

1892: ದಿ ಜನರಲ್ ಎಲೆಕ್ಟ್ರಿಕ್ ಕಂಪೆನಿ ಸ್ಥಾಪನೆಗೊಂಡಿತು.

1896: ಅಥೆನ್ಸ್’ನಲ್ಲಿ ನಡೆದ ಮೊಟ್ಟ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಸಮಾರೋಪಗೊಂಡಿತು.

1912: ಅಮೆರಿಕದ ಐಷಾರಾಮಿ ನೌಕೆ ಟೈಟಾನಿಕ್ ನ್ಯೂ ಫೌಂಡ್ ಲ್ಯಾಂಡ್ ಬಳಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ನಲವತ್ತು ನಿಮಿಷಗಳಿಗೆ ಮುಂಚೆ ದೊಡ್ಡ ಹಿಮಗಡ್ಡೆಗೆ ಡಿಕ್ಕಿ ಹೊಡೆದ ಈ ಹಡಗು ಬೆಳಿಗ್ಗೆ 2.20ರ ವೇಳೆಗೆ ನೀರಿನಲ್ಲಿ ಮುಳುಗಿತು. ಪಯಣಿಸುತ್ತಿದ್ದ ಒಟ್ಟು 2227 ಪಯಣಿಗರಲ್ಲಿ ಕೇವಲ 710 ಜನ ಮಾತ್ರಾ ಬದುಕುಳಿದರು.

1923; ಡಯಾಬಿಟಿಸ್ ರೋಗಕ್ಕೆ ಔಷದವಾದ ಇನ್ಸುಲಿನ್ ಎಲ್ಲೆಡೆ ಸಾಮಾನ್ಯವಾಗಿ ದೊರಕುವಂತಹ ಔಷದವಾಯಿತು.

1924: ರಾಂಡ್ ಮೆಕ್ನಲ್ಲಿ ಅವರು ಪ್ರಥಮ ರಸ್ತೆ ಅಟ್ಲಾಸ್ ಅನ್ನು ಪ್ರಕಟಿಸಿದರು.

1955: ರೇ ಕ್ರಾಕ್ ಅವರು ಇಲಿನಾಯ್ಸಿನ ಡೆಸ್ ಪ್ಲೈನ್ಸ್ ಎಂಬಲ್ಲಿ ಮೆಕ್ ಡೊನಾಲ್ಡಿನ ಪ್ರಥಮ ಫ್ರಾಂಚೈಸ್ ಶಾಖೆಯನ್ನು ಆರಂಭಿಸಿದರು.

1986: ಅಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸಿನ ಪ್ರಸಿದ್ಧ ಆಟಗಾರ ವಿವಿಯನ್ ರಿಚರ್ಡ್ಸ್ಸ್ ಅವರು ಕೇವಲ 56 ಚೆಂಡುಗಳಲ್ಲಿ ಟೆಸ್ಟ್ ಶತಕ ಬಾರಿಸಿದರು.

2007: ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.

2008: ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರವಾದ ‘ಸಿಂಗಪುರ್ ಫ್ಲೈಯರ್’ ಸಿಂಗಪುರದಲ್ಲಿ ಚಾಲನೆಗೊಂಡಿತು.

2009; ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲ 350 ಕಿ.ಮೀ. ವ್ಯಾಪ್ತಿಯುಳ್ಳ ಸಂಪೂರ್ಣ ಸ್ವದೇಶಿ ನಿರ್ಮಿತವಾದ ‘ಪೃಥ್ವಿ-2’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಪ್ರಮುಖಜನನ/ಮರಣ:

1452: ‘ಮೊನಾಲೀಸಾ’, ‘ಲಾಸ್ಟ್ ಸಪ್ಪರ್’ ಮುಂತಾದ ಮೇರು ಕೃತಿಗಳ ಸೃಷ್ಟಿಕರ್ತರಾದ ಲಿಯನಾರ್ಡೋ ಡ ವಿಂಚಿ ಇಟಲಿಯ ವಿಂಚಿ ಎಂಬಲ್ಲಿ ಜನಿಸಿದರು. ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಅನೇಕ ರೀತಿಯಲ್ಲಿ ಪ್ರಸಿದ್ಧರಾಗಿದ್ದಾರೆ.

1469: ಪಂಜಾಬಿನ ಜನರಿಂದ “ನಾನಕ್, ಸತ್ಯದೇವರು, ಹಿಂದೂಗಳ ಗುರು, ಮುಸಲ್ಮಾನರ ಮೌಲ್ವಿ” ಎಂದು ಗುರುತಿಸಲ್ಪಡುವ, ಸಿಖ್ಖರ ಪ್ರಥಮ ಗುರುವರ್ಯರಾದ ಗುರುನಾನಕ್ ಅವರು ರಾವಿ ಮತ್ತು ಚೀನಾಬ್ ನದಿಯ ಮಧ್ಯದಲ್ಲಿರುವ ‘ತಳವಂಡಿ’ ಎಂಬಲ್ಲಿ ಜನಿಸಿದರು.

1874: ಜರ್ಮನ್ ಭೌತವಿಜ್ಞಾನಿ ಜೋಹಾನ್ನೆಸ್ ಸ್ಟಾರ್ಕ್ ಅವರು ಸ್ಕಿಕ್ಕೆನ್ ಹೊಫ್ ಎಂಬಲ್ಲಿ ಜನಿಸಿದರು. ‘ಡಾಪ್ಲರ್ ಎಫೆಕ್ಟ್ ಇನ್ ಕೆನಾಲ್ ರೇಸ್ ಅಂಡ್ ಸ್ಪ್ಲಿಟ್ಟಿಂಗ್ ಆಫ್ ಸ್ಪ್ಕೆಕ್ಟ್ರಲ್ ಲೈನ್ಸ್ ಇನ್ ಎಲೆಕ್ಟ್ರಿಕ್ ಫೀಲ್ಡ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1919 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1874: ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ನಿಕೊಲಾಯ್ ಸೆಮ್ಯೋನೌ ರಷ್ಯಾದ ಸರಟೋವ್ ಎಂಬಲ್ಲಿ ಜನಿಸಿದರು. ‘ಮೆಕಾನಿಸಮ್ ಆಫ್ ಕೆಮಿಕಲ್ ಟ್ರಾನ್ಸ್ಫಾರ್ಮೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1956 ವರ್ಷದ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತ್ತು.

1901: ಸ್ವಾತಂತ್ರ್ಯಯೋಧ ಮತ್ತು ಪಶ್ಚಿಮ ಬಂಗಾಳದ ನಾಲ್ಕನೆಯ ಮುಖ್ಯಮಂತ್ರಿಗಳಾದ ಅಜೋಯ್ ಮುಖರ್ಜಿ ಅವರು ಕೋಲ್ಕತ್ತದಲ್ಲಿ ಜನಿಸಿದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.

1907: ಡಚ್-ಇಂಗ್ಲಿಷ್ ವೈದ್ಯ ಶಾಸ್ತ್ರಜ್ಞ ನಿಕೋಲಾಸ್ ಟಿನ್ ಬೆರ್ಗೆನ್ ಅವರು ನೆದರ್ ಲ್ಯಾಂಡಿನ ‘ದಿ ಹೇಗ್’ ಎಂಬಲ್ಲಿ ಜನಿಸಿದರು. ‘ಆರ್ಗನೈಸೆಶನ್ ಅಂಡ್ ಎಲಿಸಿಟೇಶನ್ ಆಫ್ ಇಂಡಿವಿಜುಯಲ್ ಅಂಡ್ ಸೋಷಿಯಲ್ ಬಿಹೇವಿಯರ್ ಪ್ಯಾಟರ್ನ್ಸ್ ಆಫ್ ಅನಿಮಲ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1973 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1922: ಸುಗಮ ಸಂಗೀತ ಕಲಾವಿದ ಎಂ. ಪ್ರಭಾಕರ್ ಭಟ್ಕಳದಲ್ಲಿ ಜನಿಸಿದರು. ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ಸುಗಮ ಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್‌ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1922: ಪ್ರಸಿದ್ಧ ಹಿಂದೀ ಮತ್ತು ಉರ್ದು ಕವಿ ಹಾಗೂ ಚಲನಚಿತ್ರ ಗೀತರಚನಕಾರ ಹಸರತ್ ಜೈಪುರಿ ಅವರು ಜೈಪುರದಲ್ಲಿ ಜನಿಸಿದರು.

1931: ಸ್ವೀಡಿಷ್ ಕವಿ, ಅನುವಾದಕ ಮತ್ತು ಮನಃಶಾಸ್ತ್ರಜ್ಞರಾದ ಥಾಮಸ್ ಟ್ರಾನ್ಸ್ ಟ್ರೋಮರ್ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ಇವರಿಗೆ 2011 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತು.

1932: ಮರಾಠಿ ಕವಿ ಮತ್ತು ಗೀತರಚನಕಾರ ಸುರೇಶ ಭಟ್ ಅವರು ಮಹಾರಾಷ್ಟ್ರದ ಅಮರಾವತಿ ಎಂಬಲ್ಲಿ ಜನಿಸಿದರು. ಇವರು ಗಝಲ್ ರೂಪದ ರಚನೆಗಳಿಗೆ ಪ್ರಸಿದ್ಧಿ ಪಡೆದಿದ್ದರು.

1935: ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲಿ ಒಬ್ಬರಾದ ರಾಜೇಶ್ ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಧಾರವಾಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

1943: ಅಮೆರಿಕದ ವೈದ್ಯಶಾಸ್ತ್ರಜ್ಞ ಮತ್ತು ಜೈವಿಕ ವಿಜ್ಞಾನಿ ರಾಬರ್ಟ್ ಲೆಫ್ಕೋವಿಟ್ಜ್ ಅವರು ನ್ಯೂಯಾರ್ಕಿನಲ್ಲಿ ಜನಿಸಿದರು. ‘ಜಿ ಪ್ರೊಟೀನ್-ಕಪಲ್ಡ್ ರಿಸೆಪ್ಟರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2012 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1977: ಮರಳಿನಲ್ಲಿ ಶಿಲ್ಪ ಮೂಡಿಸುವ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯಲ್ಲಿ ಜನಿಸಿದರು. ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರಿಗೆ ಪದ್ಮಶ್ರೀ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ್ದ. ಮಾರ್ಚ್ 1861ರಿಂದ ಎಪ್ರಿಲ್ 1865ರಲ್ಲಿ ಹತ್ಯೆಯಾಗುವವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವರು ದೇಶದ ಆಂತರಿಕ ಕ್ರಾಂತಿಯ ಪರೀಕ್ಷೆಯ ಕಾಲದಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಗುಲಾಮಗಿರಿಯನ್ನು ಹೋಗಲಾಡಿಸಿ, ದೇಶದ ಗಣರಾಜ್ಯ ಸ್ವರೂಪವನ್ನು ಹೆಚ್ಚು ಶಕ್ತಿಯುತಗೊಳಿಸಿ, ಆರ್ಥಿಕ ಸ್ಥಿತಿಯನ್ನು ಆಧುನಿಕಗೊಳಿಸಿದರು.

1980: ಫ್ರೆಂಚ್ ದಾರ್ಶನಿಕ ಜೀನ್-ಪೌಲ್ ಸಾರ್ತ್ರೆ ಪ್ಯಾರಿಸ್ನಲ್ಲಿ ನಿಧನರಾದರು. 1964ರ ವರ್ಷದಲ್ಲಿ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ, ಅವರು “ತಾವು ಯಾವುದೇ ಗೌರವಗಳನ್ನು ಸ್ವೀಕರಿಸಲು ಇಚ್ಚಿಸುವುದಿಲ್ಲ, ಬರಹಗಾರನೊಬ್ಬ ಸಂಸ್ಥೆಯಾಗಿ ಬಿಡಬಾರದು ಎಂಬುದು ನನ್ನ ಅನಿಸಿಕೆ” ಎಂದು ಪ್ರಶಸ್ತಿಗಳೆಲ್ಲವನ್ನೂ ನಿರಾಕರಿಸಿದರು.

Categories
e-ದಿನ

ಏಪ್ರಿಲ್-14

ದಿನಾಚರಣೆಗಳು:

ಸೌರಮಾನ ಯುಗಾದಿ ಅಥವಾ ಸೌರಮಾನ ಹೊಸವರ್ಷಾರಂಭ

ಸೌರಮಾನ ಪಂಚಾಗವನ್ನು ಅಳವಡಿಸಿಕೊಂಡಿರುವ ಭಾರತೀಯ ಜನಾಂಗಗಳು ಇಂದು ‘ಯುಗಾದಿ’ – ನವ ವರ್ಷಾರಂಭವನ್ನು ಆಚರಿಸುತ್ತಾರೆ. ಅಸ್ಸಾಮಿಯರು ಇದನ್ನು ಬಿಹು ಎಂದು; ಬಂಗಾಳಿ ಜನಾಂಗೀಯರು ಫೊಹಿಲಾ ಬೋಯಿಶಕ್ ಎಂದು; ಬರ್ಮೀಯರು ತಿಂಗ್ಯಾನ್ ಎಂದು; ಉತ್ತರ ಭಾರತೀಯ ಮತ್ತು ಸಿಖ್ಖರು ವೈಶಾಖಿ ಎಂದು; ಕಾಂಬೋಡಿಯಾದವರು ಖ್ಮೇರ್ ಅಥವಾ ಚೋಲ್ ಚ್ನಮ್ ಎಂದು; ಲಾವೋಸ್ ಜನಾಂಗದವರು ಲಾವೋ ಹೊಸ ವರ್ಷ ಅಥವಾ ಸೊಂಗ್ಕನ್ ಎಂದು; ಮಾಲ್ಡೀವ್ಸ್, ಲಕ್ಷದ್ವೀಪ್ ಮತ್ತು ಕೇರಳ ರಾಜ್ಯದ ಕೆಲವರು ಮಹ್ಲ್ ಹೊಸ ವರ್ಷ ಎಂದು; ಮಿಥಿಲಾ ಪ್ರಾಂತ್ಯದವರು ಮೈಥಿಲಿ ಹೊಸ ವರ್ಷ ಎಂದು; ಮಲಯಾಳಂ ಭಾಷಿಗರು ಮಲಯಾಳಿ ಹೊಸ ವರ್ಷ ಅಥವಾ ವಿಶು ಎಂದು; ನೇಪಾಳದವರು ನೇಪಾಳಿ ಹೊಸ ವರ್ಷ ಅಥವಾ ನವಬರ್ಷಾ ಅಥವಾ ಬೈಶಾಕ್ ಎಂದು; ಓದಿಷಾ ರಾಜ್ಯದವರು ಒರಿಯಾ ಅಥವಾ ಒಡಿಯಾ ಹೊಸ ವರ್ಷ ಅಥವಾ ಪನ ಸಂಕ್ರಾಂತಿ ಎಂದು; ಸಿಂಹಳೀಯರು ಸಿಂಹಲೀಸ್ ಹೊಸ ವರ್ಷ ಅಥವಾ ಅಲುಥ್ ಅವುರುಧು ಎಂದು; ತಮಿಳು ನಾಡಿನವರು ತಮಿಳ್ ಹೊಸ ವರ್ಷ ಅಥವಾ ಪುಥಾಂಡು ಎಂದು; ಥೈಲ್ಯಾಂಡ್ ದೇಶೀಯರು ಥೈ ಹೊಸ ವರ್ಷ ಅಥವಾ ಸೊಂಗ್ಕ್ರಾನ್ ಎಂದು ಮತ್ತು ಕರ್ನಾಟಕದ ತುಳುವರು ತುಳುವ ಹೊಸ ವರ್ಷ ಅಥವಾ ಬಿಸು ಎಂದು; ಸೌರಮಾನ ಪಂಚಾಂಗವನ್ನು ಅನುಸರಿಸುವ ಕನ್ನಡಿಗರಿಗೆ ಸೌರಮಾನ ಯುಗಾದಿ ಎಂದು ಹೀಗೆ ವಿವಿಧ ಜನಾಂಗೀಯರಿಗೆ ಇದು ವಿಶಿಷ್ಟ ದಿನವಾಗಿದೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 43: ಮ್ಯೂಟಿನಾ ಎಂಬಲ್ಲಿ ಮಾರ್ಕ್ ಆಂತೋನಿಯು, ಜೂಲಿಯಸ್ ಸೀಸರನ ಹತ್ಯೆಗೆ ಕಾರಣನಾದ ಡೆಸಿಮಸ್ ಬ್ರೂಟಸ್ ಅನ್ನು ಮುತ್ತಿಗೆ ಹಾಕಿ ಪನ್ಸಾ ಎಂಬ ರಾಯಭಾರಿಯ ಸೈನ್ಯವನ್ನು ಸೋಲಿಸಿದ. ಆದರೆ, ತಕ್ಷಣವೇ ಮತ್ತೊಬ್ಬ ರಾಯಭಾರಿ ಔಲಸ್ ಹಿರಿಟಿಯಸ್ ನೇತೃತ್ವದ ಸೈನ್ಯದಿಂದ ಸೋಲುಂಡನು.

1699: ನಾನಕ್ ಶಾಹಿ ಪಂಚಾಗಕ್ಕೆ ಅನುಗುಣವಾಗಿ ಗುರು ಗೋವಿಂದ ಸಿಂಗ್ ಅವರಿಂದ ಸಿಖ್ ಧರ್ಮವು ‘ಯೋಧ ಸಂತರ’ ಭ್ರಾತೃತ್ವದ ಸಂಘಟನೆಯಾದ ‘ಖಲ್ಸಾ’ ಪಂಥವಾಗಿ ಹೊರಹೊಮ್ಮಿತು.

1775: ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಬೆಂಜಮಿನ್ ರಶ್ ನೇತೃತ್ವದಲ್ಲಿ ಉತ್ತರ ಅಮೆರಿಕದಲ್ಲಿ ‘ದಿ ಸೊಸೈಟಿ ಫಾರ್ ದಿ ರಿಲೀಫ್ ಆಫ್ ಫ್ರೀ ನೀಗ್ರೋಸ್ ಅನ್ಲಾಫುಲಿ ಹೆಲ್ಡ್ ಇನ್ ಬಾಂಡೇಜ್’ ಎಂಬ ಪ್ರಥಮ ಗುಲಾಮ ವಿಮೋಚನಾ ಸಂಘಟನೆಯು ಸ್ಥಾಪನೆಗೊಂಡಿತು.

1816: ಬ್ರಿಟಿಷ್ ಆಡಳಿತದಲ್ಲಿನ ಬಾರ್ಬಡೋಸ್ನಲ್ಲಿ ಬುಸ್ಸಾ ಎಂಬಾತ ದಂಗೆಯೊಂದರ ನೇತೃತ್ವ ವಹಿಸಿ ಕೊಲ್ಲಲ್ಪಟ್ಟ. ಹೀಗೆ ಆತ ಬಾರ್ಬಡೋಸ್ ಪ್ರದೇಶದ ರಾಷ್ಟ್ರೀಯ ನಾಯಕನೆನಿಸಿದ.

1828: ನೋಹ್ ವೆಬ್ಸ್ಟರ್ ತಮ್ಮ ನಿಘಂಟಿನ ಪ್ರಥಮ ಆವೃತ್ತಿಯನ್ನು ಹಕ್ಕುಸ್ವಾಮ್ಯಗಳಿಗೆ ಒಳಪಡಿಸಿದರು.

1865: ಜಾನ್ ವಿಲ್ಕೆಸ್ ಬೂಥ್ ಎಂಬಾತ ಫೋರ್ಡ್ಸ್ ಥಿಯೇಟರಿನಲ್ಲಿ ಅಬ್ರಹಾಂ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ. ಅಬ್ರಹಾಂ ಲಿಂಕನ್ ಅವರು ಒಂದು ದಿನದ ನಂತರದಲ್ಲಿ ನಿಧನರಾದರು.

1894: ಮೊಟ್ಟ ಮೊದಲ ವಾಣಿಜ್ಯ ಚಲನಚಿತ್ರ ಮಂದಿರವು ನ್ಯೂಯಾರ್ಕ್ ನಗರದಲ್ಲಿ ಆರಂಭಗೊಂಡಿತು. ಇಲ್ಲಿ ಚಿತ್ರ ವೀಕ್ಷಣೆಗಾಗಿ ಹತ್ತು ಕಿನೆಟೋಸ್ಕೋಪ್ಗಳನ್ನು ಬಳಸಲಾಗಿತ್ತು.

1912: ಬ್ರಿಟಿಷ್ ಜನಸಾಗಣೆಯ ಆರ್.ಎಮ್.ಎಸ್. ಟೈಟಾನಿಕ್ ಹಡಗು ಉತ್ತರ ಅಟ್ಲಾಂಟಿಕ್ನಲ್ಲಿ ಬೃಹತ್ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತಕ್ಕೀಡಾಯಿತು. (ಮಾರನೆಯ ದಿನ ಬೆಳಿಗ್ಗೆ ಏಪ್ರಿಲ್ 15ರಂದು ನೀರಿನಲ್ಲಿ ಮುಳುಗಿತು).

1927: ಸ್ವೀಡನ್ನಿನ ಗೊಥೆನ್ ಬರ್ಗ್ ಎಂಬಲ್ಲಿ ಮೊಟ್ಟ ಮೊದಲ ವೋಲ್ವೋ ಕಾರು ಬಿಡುಗಡೆಗೊಂಡಿತು.

1928: ಜರ್ಮನಿಯ ಜಂಕರ್ಸ್ ಡಬ್ಲ್ಯೂ 33 ಮಾಧರಿಯ ‘ಬ್ರೆಮೆನ್’ ವಿಮಾನವು ಕೆನಡಾದ ಗ್ರೀನ್ಲಿ ದ್ವೀಪವನ್ನು ತಲುಪಿತು. ಇದು ಪೂರ್ವದಿಂದ ಪಶ್ಚಿಮ ಖಂಡಕ್ಕೆ ತಲುಪಿದ ಪ್ರಪ್ರಥಮ ವಿಮಾನವೆನಿಸಿದೆ.

1944: ಮುಂಬೈ ಬಂದರಿನಲ್ಲಿ ಉಂಟಾದ ಸ್ಪೋಟದಲ್ಲಿ 300 ಜನ ಅಸುನೀಗಿದರಲ್ಲದೆ 20 ಮಿಲಿಯನ್ ಪೌಂಡ್ ಅಷ್ಟು ಮೌಲ್ಯದ ಆರ್ಥಿಕ ನಷ್ಟ ಏರ್ಪಟ್ಟಿತು.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂಫಾಲಿನಿಂದ 45 ಕಿ.ಮೀ. ದೂರದ ಮೊಯಿರಂಗ್ ಎಂಬ ಈ ಸ್ಥಳದಲ್ಲಿ ಈಗ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಮಾರಕ ಸಭಾಂಗಣ ಮತ್ತು ಯುದ್ಧ ನೆನಪಿನ ಸಂಗ್ರಹಾಲಯವಿದೆ.

1951: ದಕ್ಷಿಣ ಭಾರತದಲ್ಲಿ ರೈಲ್ವೇ ಸ್ಥಾಪನೆಗೊಂಡಿತು. ಇದು ಮೊತ್ತ ಮೊದಲ ವಲಯ ರೈಲ್ವೇ (ಝೋನಲ್ ರೈಲ್ವೇ) ಆಗಿದ್ದು, ಮದ್ರಾಸ್, ದಕ್ಷಿಣ ಮರಾಠಾ, ದಕ್ಷಿಣ ಭಾರತ ಮತ್ತು ಮೈಸೂರು ರಾಜ್ಯ ರೈಲ್ವೇಗಳನ್ನು ವಿಲೀನಗೊಳಿಸಿ ಈ ರೈಲ್ವೇ ವಲಯವನ್ನು ಸ್ಥಾಪಿಸಲಾಯಿತು.

1958: ತನ್ನ 162ದಿನಗಳ ಕಾರ್ಯವನ್ನು ಪೂರೈಸಿದ ರಷ್ಯಾದ ‘ಸ್ಪುಟ್ನಿಕ್ 2’ ಉಪಗ್ರಹವು ಕಕ್ಷೆಯಿಂದ ಉರುಳಿ ಬಿತ್ತು. ಈ ಉಪಗ್ರಹದಲ್ಲಿ ಹೆಣ್ಣು ನಾಯಿಯಾದ ಲೈಕಾ ಕೂಡಾ ಪಯಣಿಸಿತ್ತು. ಅದು ಕಕ್ಷೆಯಲ್ಲಿ ಕೆಲವೊಂದು ಗಂಟೆಗಳು ಮಾತ್ರಾ ಬದುಕಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

1986: ದಾಖಲಾಗಿರುವ ಅತೀದೊಡ್ಡ ಆಲಿಕಲ್ಲುಗಳು ಬಿದ್ದು ಬಾಂಗ್ಲಾದೇಶದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ 92 ಜನ ಮೃತರಾದರು. ಇವುಗಳ ತೂಕ ಸುಮಾರು ಒಂದು ಕೆ.ಜಿ ಇದ್ದವೆಂದು ಹೇಳಲಾಗಿದೆ.

2008: ಸುಮಾರು ನಾಲ್ಕು ದಶಕಗಳ ನಂತರ ಕೋಲ್ಕತಾ-ಢಾಕಾ ನಡುವಿನ ರೈಲು ಸೇವೆ ಪುನರಾರಂಭವಾಯಿತು.

ಪ್ರಮುಖಜನನ/ಮರಣ:

1866: ಕುರುಡಿ, ಕಿವುಡಿ ಮತ್ತು ಮೂಕರಾಗಿದ್ದ ಹೆಲೆನ್ ಕೆಲ್ಲರ್ ಅವರನ್ನು ಅದ್ಭುತ ರೀತಿಯಲ್ಲಿ ಮಾರ್ಗದರ್ಶಿಸಿದ ಆನ್ ಸುಲ್ಲಿವಾನ್ ಮ್ಯಾಕೆ ಅವರು ಮೆಸ್ಸಚುಸೆಟ್ಸ್ ಬಳಿಯ ಫೀಡಿಂಗ್ ಹಿಲ್ಸ್ ಎಂಬಲ್ಲಿ ಜನಿಸಿದರು.

1872: ಭಾರತೀಯ ಇಂಗ್ಲಿಷ್ ಬರಹಗಾರ ಅಬ್ದುಲ್ಲಾ ಯೂಸುಫ್ ಅಲಿ ಮುಂಬೈನಲ್ಲಿ ಜನಿಸಿದರು.

1891: ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮಾಹೊವ್ ಗ್ರಾಮದಲ್ಲಿ ಜನಿಸಿದರು. ಅಸ್ಪೃಶ್ಯತೆ, ಮೂಢನಂಬಿಕೆ ಮತ್ತು ಜಾತಿ ಪದ್ಧತಿಗಳು ತುಂಬಿ ತುಳುಕಿದ್ದ ಸಮಾಜದಲ್ಲಿ ತಾವೇ ಅವುಗಳ ಬಿಸಿಯನ್ನು ಅನುಭವಿಸಿ ತಮ್ಮ ಪ್ರತಿಭೆ, ಛಲ, ಸಾಹಸಗಳಿಂದ ಮೇಲೆ ಬಂದು, ತಮ್ಮಂತೆ ನೊಂದವರ ಬದುಕು ಹಸನುಗೊಳಿಸಲು ತಮ್ಮ ಜೀವನ ಪರ್ಯಂತ ಪ್ರಯತ್ನಿಸಿದ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಗಳಾಗಿ ಸಹಾ ಪ್ರಸಿದ್ಧರಾಗಿದ್ದಾರೆ.

1889: ಇಂಗ್ಲಿಷ್ ಇತಿಹಾಸಕಾರ ಆರ್ನಾಲ್ಡ್ ಜೋಸೆಫ್ ಟಾಯ್ನಬಿ ಲಂಡನ್ನಿನಲ್ಲಿ ಜನಿಸಿದರು. ಅವರ ‘ಎ ಸ್ಟಡಿ ಆಫ್ ಹಿಸ್ಟರಿ’ ಗ್ರಂಥ ಪ್ರಸಿದ್ಧವಾಗಿದೆ.

1919: ಪ್ರಖ್ಯಾತ ಹಿನ್ನೆಲೆ ಗಾಯಕಿ ಶಂಶದ್ ಬೇಗಂ ಅವರು ಬ್ರಿಟಿಷ್ ಭಾರತದ ಲಾಹೋರಿನಲ್ಲಿ ಜನಿಸಿದರು. ವಿವಿಧ ಭಾರತೀಯ ಭಾಷೆಗಳ ಸುಮಾರು 6000 ಗೀತೆಗಳಿಗೆ ಧ್ವನಿಯಾಗಿದ್ದ ಅವರಿಗೆ ಪದ್ಮಭೂಷಣ ಮತ್ತಿತರ ಗೌರವಗಳು ಸಂದಿದ್ದವು. 2013 ವರ್ಷದ ಏಪ್ರಿಲ್ 23ರಂದು ತಮ್ಮ 94ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು.

1919: ಪ್ರಸಿದ್ಧ ಕತೆಗಾರ್ತಿ ಕೆ. ಸರಸ್ವತಿ ಅಮ್ಮ ಜನಿಸಿದರು. ಮಲಯಾಳಂನಲ್ಲಿ ರಚಿಸಿದ ಅವರ ಮಹಿಳಾ ಧ್ವನಿಯ ಕೃತಿಗಳು ಇಂಗ್ಲಿಷ್ ಭಾಷೆಯಲ್ಲೂ ಪ್ರಖ್ಯಾಂತಗೊಂಡಿವೆ.

1921: ಅಮೆರಿಕದ ಅರ್ಥಶಾಸ್ತ್ರಜ್ಞ ಥಾಮಸ್ ಸ್ಕೆಲ್ಲಿಂಗ್ ಅವರು ಓಕ್ಲ್ಯಾಂಡ್ನಲ್ಲಿ ಜನಿಸಿದರು. ಅವರಿಗೆ 2005 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1927: ನ್ಯೂಜಿಲ್ಯಾಂಡಿನ ರಸಾಯನ ಶಾಸ್ತ್ರಜ್ಞ ಅಲನ್ ಮ್ಯಾಕ್ ಡಿಯಾರ್ಮಿಡ್ ಅವರು ಮಾಸ್ಟರ್ ಟನ್ ಎಂಬಲ್ಲಿ ಜನಿಸಿದರು. ಅವರಿಗೆ 2000 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತ್ತು.

1928: ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಮ್ಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಶಂಕರಗೌಡ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಜನಿಸಿದರು. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಸಾಧನೆ ಮಾಡಿದ್ದ ಇವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1950: ಆಧ್ಯಾತ್ಮ ಋಷಿವರ್ಯರೆಂದು ಪ್ರಸಿದ್ಧರಾದ ರಮಣ ಮಹರ್ಷಿ ಅವರು ತಿರುವಣ್ಣಾಮಲೈನಲ್ಲಿರುವ ತಮ್ಮ ಆಶ್ರಮದಲ್ಲಿ ಈ ಲೋಕವನ್ನಗಲಿದರು.

1962: ಮಹಾನ್ ತಂತ್ರಜ್ಞ, ರಾಜರ ಆಳ್ವಿಕೆಯ ಕಾಲದ ಮೈಸೂರು ಪ್ರಾಂತ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾದ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ 102 ನೆಯ ವಯಸ್ಸಿನಲ್ಲಿ ನಿಧನರಾದರು.

1963: ಹಿಂದೀ ಭಾಷಾ ಶಾಸ್ತ್ರಜ್ಞ, ಸಾಹಿತಿ ಮಹಾಪಂಡಿತ್ ರಾಹುಲ್ ಸಂಕ್ರಿತ್ಯಯಾನ್ ಡಾರ್ಜಿಲಿಂಗ್ನಲ್ಲಿ ನಿಧನರಾದರು. ಹಿಂದೀ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯದ ಜನಕರೆಂದು ಪ್ರಖ್ಯಾತರಾಗಿರುವ ಇವರಿಗೆ ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವಗಳು ಸಂದಿದ್ದವು.

2000: ಅಮೆರಿಕದ ಕಂಪ್ಯೂಟರ್ ಪ್ರೋಗ್ರಾಮರ್, ಕಂಪ್ಯೂಟರ್ ಯುಗದಲ್ಲಿ ‘ಜಿಪ್ ಫೈಲ್ ಫಾರ್ಮಾಟ್’ (Zip File Format) ಸೃಷ್ಟಿಕರ್ತ ಫಿಲ್ ಕಾಟ್ಜ್ ಅವರು ವಿಲ್ಕಾನ್ಸಿನ್ ಬಳಿಯ ಮಿಲ್ವವ್ಕೆ ಎಂಬಲ್ಲಿ ನಿಧನರಾದರು. ‘ಪಿಕೆಜಿಪ್’ ಅಂತಹ ಉತ್ತಮ ಸೃಷ್ಟಿಗಳನ್ನು ಮಾಡಿದ್ದ ಇವರು ಕುಡಿತದ ಹವ್ಯಾಸಕ್ಕೆ ಬಲಿಯಾಗಿ ಇನ್ನೂ 37ರ ಹರೆಯದಲ್ಲೇ ನಿಧನರಾದರು.

2006: ಇಂದಿರಾ ಗಾಂಧೀ ಮತ್ತು ರಾಜೀವ್ ಗಾಂಧೀ ಮಂತ್ರಿಮಂಡಲಗಳಲ್ಲಿ ರೈಲ್ವೆ ಸಚಿವರಾಗಿದ್ದ ಘನೀಖಾನ್ ಚೌಧರಿ ಕೋಲ್ಕತ್ತದಲ್ಲಿ ನಿಧನರಾದರು. ಇವರು ಕೋಲ್ಕತ್ತಾದ ಮೆಟ್ರೋ ರೈಲು ಮತ್ತು ಸರ್ಕ್ಯುಲರ್ ವ್ಯವಸ್ಥೆ ನಿರ್ಮಾಣಗಳಲ್ಲಿ ಪಾತ್ರ ನಿರ್ವಹಿಸಿದ್ದರು.

2013: ಭಾರತೀಯ ಉದ್ಯಮಿ ಆರ್.ಪಿ.ಜಿ ಸಮೂಹ ಸಂಸ್ಥೆಗಳ ಸ್ಥಾಪಕ ಆರ್. ಪಿ. ಗೋಯೆಂಕಾ ಕೋಲ್ಕತ್ತಾದಲ್ಲಿ ನಿಧನರಾದರು.

Categories
e-ದಿನ

ಏಪ್ರಿಲ್-13

ಪ್ರಮುಖಘಟನಾವಳಿಗಳು:

1699: ಸಿಖ್ಖರ ಹತ್ತನೇ ಗುರುಗಳಾದ ಗುರು ಗೋವಿಂದ ಸಿಂಗ್ ಅವರು ಈ ದಿನದಂದು ಪಂಜಾಬಿನ ಆನಂದಪುರ್ ಸಾಹಿಬ್ನಲ್ಲಿ ಖಲ್ಸಾವನ್ನು ಸ್ಥಾಪಿಸಿದರು.

1772: ಬ್ರಿಟಿಷ್ ಆಡಳಿತವು ವಾರನ್ ಹೇಸ್ಟಿಂಗ್ ಅವರನ್ನು ಬಂಗಾಳದ ಗವರನರ್ ಆಗಿ ನೇಮಿಸಿತು.

1880: ನ್ಯೂಯಾರ್ಕಿನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಸ್ಥಾಪನೆಗೊಂಡಿತು.

1919: ಇದು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನವಾಗಿದೆ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ಎಂಬ ನೀಚನ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಈ ಹತ್ಯಾಕಾಂಡದಲ್ಲಿ ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ತೀವ್ರಗೊಳಿಸಿತು.

1945: ಜರ್ಮನಿಯ ಸೇನಾಪಡೆ ಗಾರ್ಡೆಲೆಗಾನ್ ಎಂಬಲ್ಲಿ 1000ಕ್ಕೂ ಹೆಚ್ಚು ರಾಜಕೀಯ ಮತ್ತು ಸೇನಾ ಸೆರೆಯಾಳುಗಳನ್ನು ಹತ್ಯೆಮಾಡಿತು.

1964: ಅಕಾಡೆಮಿ ಪ್ರಶಸ್ತಿಗಳಲ್ಲಿ ಸಿಡ್ನಿ ಪಾಯಿಟಿಯರ್ ಅವರು ಶ್ರೇಷ್ಠ ನಟ ಪ್ರಶಸ್ತಿ ಗೆದ್ದ ಮೊಟ್ಟ ಮೊದಲ ಆಫ್ರಿಕನ್-ಅಮೇರಿಕನ್ ಪುರುಷನೆನಿಸಿದರು. ಅವರಿಗೆ ಈ ಪ್ರಶಸ್ತಿ ‘ಲಿಲ್ಲೀಸ್ ಆಫ್ ದಿ ಫೀಲ್ಡ್’ ಚಿತ್ರಕ್ಕೆ ಸಂದಿತು.

1970: ಅಪೋಲೋ 13 ಬಾಹ್ಯಾಕಾಶ ನೌಕೆಯಲ್ಲಿ ಆಮ್ಲಜನಕದ ತೊಟ್ಟಿಯೊಂದು ಸಿಡಿದು, ಅದರಲ್ಲಿದ್ದ ಪ್ರಯಾಣಿಕರಿಗೆ ಕಷ್ಟಗಳುಂಟಾಗಿ ಅದು ಚಂದ್ರನಲ್ಲಿಗೆ ಹೊತ್ತೊಯ್ಯುತ್ತಿದ್ದ ಉಪಗ್ರಹಕ್ಕೆ ತೀವ್ರ ಹಾನಿಯಾಯಿತು.

1997: ಟೈಗರ್ ಉಡ್ಸ್ ಅವರು ಗಾಲ್ಫ್ ಆಟದಲ್ಲಿ ಮಾಸ್ಟರ್ಸ್ ಪಂದ್ಯಾವಳಿ ಗೆದ್ದ ಅತ್ಯಂತ ಕಿರಿಯರೆನಿಸಿದರು.

2006: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗಾಗಿ ಮೊದಲ ಬಾರಿ ಜಾರಿಗೆ ತರಲಾಗಿರುವ ಸೂಕ್ಷ್ಮ ಪಿಂಚಣಿ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಉದ್ಘಾಟಿಸಿದರು. ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕ್ ತನ್ನ ಎಂಟು ಲಕ್ಷ ಸದಸ್ಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಸಂಸ್ಥಾಪಕಿ ಇಳಾ ಭಟ್ ಅವರ ಚಿಂತನೆಯ ಮೂಸೆಯಲ್ಲಿ ರೂಪುಗೊಂಡ ಈ ಯೋಜನೆಗೆ ಆರಂಭದ ದಿನವೇ 25,025 ಮಹಿಳೆಯರು ಸದಸ್ಯರಾದರು.

2008: ನೇಪಾಳದಲ್ಲಿ ಸಿಪಿಎನ್-ಮಾವೋ ಪಕ್ಷವು ಅಧಿಕಾರಕ್ಕೆ ಬಂದು 240 ವರ್ಷಗಳ ರಾಜ ಮನೆತನದ ಪಾರಂಪರಿಕ ಆಡಳಿತಕ್ಕೆ ಕೊನೆಯುಂಟಾಯಿತು

ಪ್ರಮುಖಜನನ/ಮರಣ:

1743: ಅಮೆರಿಕದ 3ನೇ ಅಧ್ಯಕ್ಷರಾದ ಥಾಮಸ್ ಜೆಫರ್ಸನ್ ಅವರು ವರ್ಜೀನಿಯಾ ಬಳಿಯ ಶಾಡ್ವೆಲ್ ಎಂಬಲ್ಲಿ ಜನಿಸಿದರು.

1769: ಪ್ರಸಿದ್ಧ ಇಂಗ್ಲಿಷ್ ಕಲಾಕಾರ ಥಾಮಸ್ ಲಾರೆನ್ಸ್ ಬ್ರಿಸ್ಟಲ್ ಎಂಬಲ್ಲಿ ಜನಿಸಿದರು.

1906: ಐರಿಷ್ ಸಾಹಿತಿ ಸಾಮ್ಯುಯೆಲ್ ಬೆಕ್ಕೆಟ್ ಅವರು ಡಬ್ಲಿನ್ ಬಳಿಯ ಫಾಕ್ಸ್ ರಾಕ್ ಎಂಬಲ್ಲಿ ಜನಿಸಿದರು. ಇವರಿಗೆ 1969 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1930: ‘ಸುಜನಾ’ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಎಸ್. ನಾರಾಯಣಶೆಟ್ಟಿ ಅವರು ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲುವಿನಲ್ಲಿ ಜನಿಸಿದರು. ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ ಪ್ರಸಿದ್ಧರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

1963: ವಿಶ್ವದ ಮಹಾನ್ ಚೆಸ್ ಆಟಗಾರರಾದ ಗ್ಯಾರಿ ಕಾಸ್ಪರೋವ್ ಅವರು ಸೋವಿಯತ್ ಯೂನಿಯನ್ನಿನ ಬಾಕು ಎಂಬಲ್ಲಿ ಜನಿಸಿದರು. 1986ರಿಂದ ಮೊದಲುಗೊಂಡಂತೆ ಅವರು ನಿವೃತ್ತರಾದ 2005 ವರ್ಷದವರೆಗಿನ 228 ತಿಂಗಳುಗಳಲ್ಲಿ 225 ತಿಂಗಳುಗಳ ಕಾಲ ನಂಬರ್ ಒಂದು ಆಟಗಾರರಾಗಿದ್ದ ಅದ್ಭುತ ಸಾಧನೆ ಇವರದ್ದಾಗಿದೆ.

1939: ಐರಿಷ್ ಸಾಹಿತಿ ಸೀಮಸ್ ಹೀನೈ ಅವರು ಉತ್ತರ ಐರ್ಲ್ಯಾಂಡಿನ ಕ್ಯಾಸಲ್ ಡಾಸನ್ ಎಂಬಲ್ಲಿ ಜನಿಸಿದರು. ಇವರಿಗೆ 1995 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1940: ಫ್ರೆಂಚ್ ಸಾಹಿತಿ ಜೆ.ಎಂ.ಜಿ. ಲೇ ಕ್ಲೆಜಿಯೋ ಅವರು ಫ್ರಾನ್ಸಿನ ನೈಸ್ ಎಂಬಲ್ಲಿ ಜನಿಸಿದರು. ಇವರಿಗೆ 2008 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1941: ಅಮೆರಿಕದ ತಳಿ ವಿಜ್ಞಾನಿ ಮೈಖೇಲ್ ಸ್ಟುವರ್ಟ್ ಬ್ರೌನ್ ಅವರು ನ್ಯೂಯಾರ್ಕಿನ ಬ್ರೂಕ್ಲಿನ್ ನಗರದಲ್ಲಿ ಜನಿಸಿದರು. ಕೊಲೆಸ್ಟರಾಲ್ ಮೆಟಬಾಲಿಸಮ್ ಕುರಿತಾದ ಮಹತ್ವದ ಸಂಶೋಧನೆಗಾಗಿ ಇವರಿಗೆ 1985 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

2008: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಹೋರಾಟಗಾರರಾದ ಶಾಂತರಸ ಅವರು ತಮ್ಮ 85ನೆಯ ವಯಸ್ಸಿನಲ್ಲಿ ಕಲಬುರ್ಗಿಯಲ್ಲಿ ನಿಧನರಾದರು. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

2015: ಜರ್ಮನ್ ಸಾಹಿತಿ ಗುಂಟೆರ್ ಗ್ರಾಸ್ ಲ್ಯುಬೆಕ್ ಎಂಬಲ್ಲಿ ನಿಧನರಾದರು. ಅವರಿಗೆ 1999 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

Categories
e-ದಿನ

ಏಪ್ರಿಲ್-12

ಪ್ರಮುಖಘಟನಾವಳಿಗಳು:

1606: ಯೂನಿಯನ್ ಧ್ವಜವನ್ನು ಇಂಗ್ಲಿಷ್ ಮತ್ತು ಸ್ಕಾಟಿಷ್ ನೌಕೆಗಳ ಧ್ವಜವನ್ನಾಗಿ ಅಂಗೀಕರಿಸಲಾಯಿತು.

1801: ರಣಜಿತ್ ಸಿಂಗ್ ತನ್ನನ್ನು ಪಂಜಾಬಿನ ಮಹಾರಾಜ ಎಂದು ಘೋಷಿಸಿಕೊಂಡ. ಆತ ಸಿಖ್ ಗುರುಗಳ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸಿದ್ದಲ್ಲದೆ ಸಿಖ್ ಕಾಮನ್ ವೆಲ್ತ್ ಎಂಬ ಹೆಸರಿನಲ್ಲಿ ತನ್ನ ಆಡಳಿತವನ್ನು ಮುಂದುವರೆಸಿದ.

1888: ಫ್ರೆಂಚ್ ವೃತ್ತಪತ್ರಿಕೆಯೊಂದು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಮೃತರಾದ ಸುದ್ದಿ ಪ್ರಕಟಿಸಿತು. ಜನರ ಜೀವ ತೆಗೆಯುವ ಸ್ಫೋಟಕಗಳನ್ನು ಶೋಧಿಸಿದ್ದಕ್ಕೆ ಅವರನ್ನು ಪತ್ರಿಕೆ ‘ಸಾವಿನ ವರ್ತಕನ ನಿಧನ’ ಎಂದು ವರ್ಣಿಸಿ ಈ ಸುದ್ದಿ ಪ್ರಕಟಿಸಿತ್ತು. ಆದರೆ ನಿಜವಾಗಿ ಸತ್ತದ್ದು ಆಲ್ ಫ್ರೆಡ್ ಸಹೋದರ ಲುಡ್ವಿಗ್ ನೊಬೆಲ್. ಪತ್ರಿಕೆ ತಮ್ಮ ಬಗ್ಗೆ ಬರೆದ ಈ ವರದಿಯಿಂದ ವಿಚಲಿತರಾದ ಆಲ್ಫ್ರೆಡ್ ತಮ್ಮ ಬಗ್ಗೆ ಉಂಟಾದ ಸಾರ್ವಜನಿಕ ಅಭಿಪ್ರಾಯ ಬದಲಿಸಲು ಇಚ್ಛಿಸಿದರು. ಈ ಚಿಂತನ ಮಂಥನದಲ್ಲಿ ‘ನೊಬೆಲ್ ಪ್ರಶಸ್ತಿ’ ಸೃಷ್ಟಿಗೊಂಡಿತು.

1945: ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ನಿಧನರಾದದ್ದರಿಂದ ಉಪಾಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಅವರು ಅಧ್ಯಕ್ಷರಾದರು.

1948: ಪಂಡಿತ್ ಜವಾಹರಲಾಲ್ ನೆಹರೂ ಅವರು ಒರಿಸ್ಸಾದ ನೂತನ ರಾಜಧಾನಿ ಭುವನೇಶ್ವರದಲ್ಲಿ ಹಿರಾಕುಡ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿದರು.

1955: ಡಾ. ಜೋನಾಸ್ ಸಲ್ಕ್ ಅವರು ಸಿದ್ಧಪಡಿಸಿದ ಪೋಲಿಯೋ ಲಸಿಕೆಯನ್ನು ಕ್ಷೇಮಕರ ಮತ್ತು ಪರಿಣಾಮಕಾರಿ ಎಂದು ಘೋಷಿಸಲಾಯಿತು.

1961: ರಷ್ಯದ ಯೂರಿ ಗಗಾರಿನ್ ಹೊರ ಆಗಸಕ್ಕೆ ಪಯಣಿಸಿದ ಪ್ರಪ್ರಥಮ ಮಾನವರೆನಿಸಿದರು. ‘ವೋಸ್ಟೋಕ್ 1’ ಮೂಲಕ ಪಯಣಿಸಿದ್ದ ಅವರು 108 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ತೇಲಾಡಿದರು.

1981: ಅಮೆರಿಕದ ಎಸ್.ಟಿ.ಎಸ್-1 ಗಗನ ವಾಹನವಾದ ‘ಕೊಲಂಬಿಯಾ’ ಉಡ್ಡಯನಗೊಂಡಿತು.

1990: ಜಿಮ್ಮಿ ಗ್ಯಾರಿ ಅವರ ‘20ನೇ ಶತಮಾನದ ಡೈನಾಸರಸ್’ ಪ್ರದರ್ಶನವು ವಾಷಿಂಗ್ಟನ್ ನಗರದ ‘ಸ್ಮಿತ್ಸೋನಿಯನ್ ನ್ಯಾಶನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ’ ಆಶ್ರಯದಲ್ಲಿ ನಡೆಯಿತು. ಇವರು ಅಲ್ಲಿ ಆಹ್ವಾನಿತಗೊಂಡು ಏಕವ್ಯಕ್ತಿಪ್ರದರ್ಶನ ನೀಡಿದ ಏಕಮಾತ್ರ ಶಿಲ್ಪಿ ಎನಿಸಿದ್ದಾರೆ.

1992: ಯೂರೋ ಡಿಸ್ನಿ ರೆಸಾರ್ಟ್ ಅಧಿಕೃತವಾಗಿ ‘ಯೂರೋ ಡಿಸ್ನಿಲ್ಯಾಂಡ್’ ಎಂ ಥೀಮ್ ಪಾರ್ಕ್ ಆಗಿ ಪ್ರಾರಂಭಗೊಂಡಿತು. ಮುಂದೆ ಅದು ಡಿಸ್ನಿಲ್ಯಾಂಡ್ ಪ್ಯಾರಿಸ್ ಎಂದು ಹೆಸರು ಬದಲಿಸಿಕೊಂಡಿತು.

2006: ಕರ್ನಾಟಕ ಸರ್ಕಾರವು 2006ನೇ ಸಾಲಿನ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರನ್ನು ಆಯ್ಕೆ ಮಾಡಿತು.

2007: ಸ್ವದೇಶೀ ನಿರ್ಮಿತ ‘ಅಗ್ನಿ- 3′ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಒರಿಸ್ಸಾ ಕರಾವಳಿಯ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನೆರವೇರಿತು. ‘ಅಗ್ನಿ’ ಸರಣಿಯಲ್ಲೇ ಅತ್ಯಂತ ಶಕ್ತಿಶಾಲಿಯಾಗಿರುವ ಈ ಅಣ್ವಸ್ತ್ರ ವಾಹಕ ಕ್ಷಿಪಣಿಯು 3500 ಕಿ.ಮೀ. ದೂರದಲ್ಲಿರುವ ವೈರಿ ನೆಲೆಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

ಪ್ರಮುಖಜನನ/ಮರಣ:

1884: ಜರ್ಮನಿಯ ವೈದ್ಯವಿಜ್ಞಾನಿ ಮತ್ತು ಜೈವಿಕವಿಜ್ಞಾನಿ ಒಟ್ಟೋ ಮೆಯೇರ್ಹಾಫ್ ಅವರು ಪ್ರಸ್ಸಿಯಾ ಸಾಮ್ರಾಜ್ಯಕ್ಕೆ ಸೇರಿದ್ದ ಹ್ಯಾನ್ನೋವರ್ ಎಂಬಲ್ಲಿ ಜನಿಸಿದರು. ‘ಗ್ಲೈಕೋಲಿಸಿಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1922 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1903: ಡಚ್ ಅರ್ಥಶಾಸ್ತ್ರಜ್ಞರಾದ ಜಾನ್ ಟಿನ್ಬೆರ್ಗೆನ್ ಅವರು ನೆದರ್ಲ್ಯಾಂಡ್ಸ್ ದೇಶದ ‘ದಿ ಹೇಗ್’ ಎಂಬಲ್ಲಿ ಜನಿಸಿದರು. ಇವರಿಗೆ 1969 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತು.

1917: ಪ್ರಸಿದ್ಧ ಭಾರತೀಯ ಕ್ರಿಕೆಟ್ ಆಟಗಾರ್ ಮುಲವಂತರಾಯ್ ಹಿಮ್ಮತ್ ಲಾಲ್ ವಿನೂ ಮಂಕಡ್ ಅವರು ಜಾಮ್ ನಗರದಲ್ಲಿ ಜನಿಸಿದರು. ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಕೆಯೊಂದಿಗೆ ಶತಕವನ್ನೂ ಸಿಡಿಸಿದ ಮೊದಲ ಭಾರತೀಯ ಆಟಗಾರರಲ್ಲದೆ, ಪಂಕಜ್ ರಾಯ್ ಅವರೊಂದಿಗೆ ಪ್ರಥಮ ವಿಕೆಟ್ಟಿಗೆ 413 ರನ್ನುಗಳ ಬೃಹತ್ ದಾಖಲೆ ಸ್ಥಾಪಿಸಿದ ಆಟಗಾರರೂ ಆಗಿದ್ದಾರೆ. ಈ ದಾಖಲೆ 52 ವರ್ಷಗಳ ಕಾಲ ಭೇದಿತಗೊಳ್ಳದೆ ಉಳಿದಿತ್ತು.

1922: ನಾಟಕರಂಗದ ಆತ್ಮೀಯರಲ್ಲಿ ‘ಐನೋರು’ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ರಂಗಭೂಮಿ ನಟ ಎಸ್. ಎಂ. ವೀರಭದ್ರಪ್ಪ ಅವರು ಚಿತ್ರದುರ್ಗ ಜಿಲ್ಲೆಯ ಮಾರನಾಯಕನ ಹಳ್ಳಿಯಲ್ಲಿ ಜನಿಸಿದರು. ಹಲವಾರು ಪ್ರಸಿದ್ಧ ವೃತ್ತಿ ರಂಗಭೂಮಿಗಳಲ್ಲಿ ಪ್ರಮುಖ ಹೆಸರಾಗಿದ್ದ ಇವರು 1966ರ ವರ್ಷದಲ್ಲಿ ನಿಧನರಾದರು.

1943: ಹದಿನಾರನೆಯ ಲೋಕಸಭಾಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಮಹಾಜನ್ ಅವರು ಮಹಾರಾಷ್ಟ್ರದ ಚಿಪ್ಲುನ್ ಎಂಬಲ್ಲಿ ಜನಿಸಿದರು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾದ ಸಾಧನೆ ಮಾಡಿರುವ ಮೂವರು ಗಣ್ಯರಲ್ಲಿ ಒಬ್ಬರೆನಿಸಿರುವ ಇವರು ಲೋಕಸಭೆಯನ್ನು ಅತ್ಯಧಿಕ ಕಾಲಗಳವರೆಗೆ ಪ್ರತಿನಿಧಿಸಿರುವ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

1948: ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ತಮ್ಮ ಧ್ವನಿ ಮತ್ತು ಹಾವಭಾವ ವೈವಿಧ್ಯಗಳಿಂದ ಪ್ರಸಿದ್ಧಿ ಪಡೆದ ಧೀರೇಂದ್ರ ಗೋಪಾಲ್ ಅವರು ಹೊಳೆನರಸೀಪುರದ ಜೋಡಿಗುಬ್ಬಿ ಗ್ರಾಮದಲ್ಲಿ ಜನಿಸಿದರು. ಡಿಸೆಂಬರ್ 25, 2000ವರ್ಷದಂದು ಈ ಲೋಕವನ್ನಗಲಿದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು.

1952: ಪ್ರಸಿದ್ಧ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದೆ, ವಿನ್ಯಾಸಕಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಗುಲ್ಬರ್ಗದಲ್ಲಿ ಜನಿಸಿದರು. ಹಯವದನ ಅಭಿನಯಕ್ಕಾಗಿ ಅಖಿಲ ಭಾರತ ವಿಮರ್ಶಕ ಒಕ್ಕೂಟದಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ರಂಗನಟಿ ಪ್ರಶಸ್ತಿ, ಆಕ್ರಮಣದ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ಆಕ್ರಮಣದ ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿ, ತಾಯಿ ಸಾಹೇಬದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ, ಕ್ಷಮಯಾ ಧರಿತ್ರಿ ಟಿ ವಿ ಧಾರಾವಾಹಿಗಾಗಿ ರಾಷ್ಟ್ರಮಟ್ಟದ ಪ್ರಶಂಸಾ ಪತ್ರ, ರಾಜ್ಯ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಇವರು 2010, ಸೆಪ್ಟೆಂಬರ್ 27ರಂದು ನಿಧನರಾದರು.

1906: ಪ್ರಸಿದ್ಧ ಸಂಸ್ಕೃತ ಮತ್ತು ಬಂಗಾಳಿ ವಿದ್ವಾಂಸ ಮಹೇಶ್ ಚಂದ್ರ ನ್ಯಾಯರತ್ನ ಭಟ್ಟಾಚಾರ್ಯ ಅವರು ನಿಧನರಾದರು.

1912: ಅಮೆರಿಕನ್ ರೆಡ್ ಕ್ರಾಸ್ ಸ್ಥಾಪಕಿ, ಮಾನವತಾ ಹೃದಯಿ, ದಾದಿ ಕ್ಲಾರಾ ಬಾರ್ಟನ್ ಅವರು ಬಳಿಯ ಗ್ಲೆನ್ ಏಕೋ ಎಂಬಲ್ಲಿ ಜನಿಸಿದರು.

1945: ಅಮೆರಿಕದಲ್ಲಿ ಸತತವಾಗಿ ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ 1933ರಿಂದ 1945ರ ಈದಿನದವರೆವಿಗೂ ಅಧಿಕಾರದಲ್ಲಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅವರು ಜಾರ್ಜಿಯಾದ ವಾರ್ಮ್ ಸ್ಪ್ರಿಂಗ್ಸ್ ಎಂಬಲ್ಲಿ ನಿಧನರಾದರು.

1997: ಅಮೆರಿಕದ ವೈದ್ಯವಿಜ್ಞಾನಿ ಜಾರ್ಜ್ ವಾಲ್ಡ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ‘ಪಿಗ್ಮೆಂಟ್ಸ್ ಇನ್ ದಿ ರೆಟಿನ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1967 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2001: ನಗೆಮೊಗವಾದ ‘ಸ್ಮೈಲಿ’ ರೂಪಿಸಿದ ಅಮೆರಿಕದ ವಾಣಿಜ್ಯ ಕಲೆಗಾರ ಹಾರ್ವೆ ಬಾಲ್ ಜನಿಸಿದರು.

2006: ಕನ್ನಡ ಚಿತ್ರರಂಗದ ಮಹಾನ್ ನಟ, ಗಾಯಕ, ದಾದಾ ಸಾಹೇಬ್ ಫಾಲ್ಕೆ ವಿಜೇತ, ಪದ್ಮಭೂಷಣ ಪುರಸ್ಕೃತ ಡಾ. ರಾಜ್ ಕುಮಾರ್ ಇಂದು ತಮ್ಮ 77ನೆಯ ವಯಸ್ಸಿನಲ್ಲಿ ನಿಧನರಾದರು. ಕನ್ನಡ ರಂಗಭೂಮಿಯಿಂದ ಬಂದವರಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಿರಂತರವಾಗಿ ತಮ್ಮ ಶಿಸ್ತು, ಪ್ರತಿಭೆ, ತೇಜಸ್ಸಿನಿಂದ ಜನಪ್ರಿಯತೆಯ ಮುಂಚೂಣಿಯಲ್ಲಿದ್ದ ಡಾ. ರಾಜ್ ಕುಮಾರ್ ಅವರು ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ ಹಾಗೂ ಕನ್ನಡ ಪರಧ್ವನಿಯಾಗಿಯೂ ಪ್ರಸಿದ್ಧರಾಗಿದ್ದರು.

2009: ಭಾರತ ಅಥ್ಲೆಟಿಕ್ ಫೆಡರೇಷನ್‌ ಅಧ್ಯಕ್ಷ ಪದ್ಮಭೂಷಣ ಸರ್ದಾರ್ ಉಮ್ರಾವೊ ಸಿಂಗ್ (89) ಅವರು ಜಲಂಧರ್ ಪಟ್ಟಣದಲ್ಲಿ ನಿಧನರಾದರು. ಐಎಎಎಫ್ ಕೌನ್ಸಿಲ್ ಸದಸ್ಯರು, ಏಷ್ಯನ್ ಅಥೆಟ್ಲಿಕ್ ಫೆಡರೇಷನ್‌ನ ಸಂಸ್ಥಾಪಕ ಅಧ್ಯಕ್ಷ, ಭಾರತ ಒಲಿಂಪಿಕ್ ಸಂಸ್ಥೆಯ ಹಿರಿಯ ಸದಸ್ಯರೂ ಆಗಿದ್ದ ಸಿಂಗ್ ಅವರಿಗೆ 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ತೋರಿದ ಸಾಧನೆಗಾಗಿ ಭಾರತ ಸರ್ಕಾರದ ಪದ್ಮಭೂಷಣ ಗೌರವ ಸಂದಿತ್ತು.

2012: ಪ್ರಸಿದ್ಧ ಬಂಗಾಳಿ ಕವಿ, ನಾಟಕಕಾರ, ರಂಗಕರ್ಮಿ, ಚಲನಚಿತ್ರ ಸಾಹಿತಿ ಮೋಹಿತ್ ಚಟ್ಟೋಪಾಧ್ಯಾಯ ನಿಧನರಾದರು.

Categories
e-ದಿನ

ಏಪ್ರಿಲ್-11

ಪ್ರಮುಖಘಟನಾವಳಿಗಳು:

1689: ಮೂರನೆಯ ವಿಲಿಯಂ ಮತ್ತು ಎರಡನೇ ಮೇರಿ ಅವರನ್ನು ಜಂಟಿಯಾಗಿ ಗ್ರೇಟ್ ಬ್ರಿಟನ್ನಿನ ಸಾಮ್ರಾಜ್ಯಾಧಿಪತಿಗಳನ್ನಾಗಿಸಲಾಯಿತು.

1919: ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಸ್ಥಾಪಿಸಲಾಯಿತು.

1957: ಯುನೈಟೆಡ್ ಕಿಂಗ್ಡಂ ಸಿಂಗಪೂರಿನ ಸ್ವಯಂ ಆಡಳಿತಕ್ಕೆ ಒಪ್ಪಿಗೆ ನೀಡಿತು.

1968: ಅಮೆರಿಕದ ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ ಅವರು ಮಾರಾಟ, ಬಾಡಿಗೆ ಮತ್ತು ಗೃಹ ಸಾಲಗಳಿಗೆ ಭೇದಭಾವಗಳನ್ನು ನಿಷೇದಿಸುವ ‘ಸಿವಿಲ್ ರೈಟ್ಸ್ ಕಾಯದೆ’ಗೆ ಸಹಿ ಮಾಡಿದರು.

1976: ಆಪಲ್ ಸಂಸ್ಥೆಯ ಮೊದಲ ಕಂಪ್ಯೂಟರ್ ‘ಆಪಲ್ ಕಂಪ್ಯೂಟರ್ 1’ ಅಥವಾ ‘ಆಪಲ್ I’ ಸೃಷ್ಟಿಗೊಂಡಿತು.

1982: ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರು 1981ರ ಸಾಲಿನ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಪ್ರೀತಂ ಅವರ ‘ಕಾಗಜ್ ತೆ ಕನ್ವಾಸ್’ ಕವನ ಸಂಕಲನಕ್ಕೆ ಈ ಗೌರವವನ್ನು ಪ್ರಕಟಿಸಲಾಯಿತು.

2006: ಇರಾನ್ ಯುರೇನಿಯಮ್ ಶ್ರೀಮಂತಿಕೆಯನ್ನು ಸ್ವಯಂ ಗಳಿಸಿಕೊಂಡಿದೆ ಎಂದು ಇರಾನಿನ ಅಧ್ಯಕ್ಷರಾದ ಮಹಮದ್ ಅಹಮದಿನೆಜಾದ್ ಘೋಷಿಸಿದರು.

2007: ವೆಸ್ಟ್ ಇಂಡೀಸಿನ ಪ್ರಸಿದ್ಧ ಕ್ರಿಕೆಟ್ ಆಟಗಾರ ಬ್ರಿಯನ್ ಲಾರಾ ಅವರು, ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಟಿಗೆ ವಿದಾಯ ಹೇಳುವುದಾಗಿ ಪ್ರಕಟಿಸಿದರು.

2008: ಪ್ರೇಮದ ಸಂಕೇತ ಎನಿಸಿಕೊಂಡಿರುವ ತಾಜಮಹಲಿನ ರೂವಾರಿ ಶಹಜಹಾನ್ ಬಳಸುತ್ತಿದ್ದ ಚಿನ್ನದ ಲೇಪವಿರುವ ಕಠಾರಿಯನ್ನು ಲಂಡನ್ನಿನಲ್ಲಿ ಹರಾಜು ಹಾಕಿದಾಗ 15ಲಕ್ಷ ಪೌಂಡುಗಳಿಗೆ ಹರಾಜಾಯಿತು.

ಪ್ರಮುಖಜನನ/ಮರಣ:

1755: ಇಂಗ್ಲಿಷ್ ವೈದ್ಯ ಜೇಮ್ಸ್ ಪಾರ್ಕಿನ್ಸನ್ ಇಂಗ್ಲೆಂಡಿನ ಶೋರ್ಡಿಚ್ ಎಂಬಲ್ಲಿ ಜನಿಸಿದರು. ಈತ ಕೈ ನಡುಕದ ರೋಗವನ್ನು ಮೊತ್ತ ಮೊದಲಿಗೆ ವಿವರಿಸಿದ. ಈತನ ಹೆಸರನ್ನೇ ಈ ರೋಗಕ್ಕೆ (ಪಾರ್ಕಿನ್ಸನ್ ಕಾಯಿಲೆ ಎಂದು) ಇಡಲಾಯಿತು.

1827: ಭಾರತೀಯ ವಿದ್ವಾಂಸ, ಸಮಾಜ ಸುಧಾರಕ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಜ್ಯೋತಿರಾವ್ ಗೋವಿಂದರಾವ್ ಫುಲೆ ಪುಣೆಯಲ್ಲಿ ಜನಿಸಿದರು. ಇವರು ಅಸ್ಪೃಶ್ಯತೆ, ಜಾತಿ ಪದ್ಧತಿಗಳ ವಿರುದ್ಧ ಹೋರಾಟ, ಸ್ತ್ರೀ ವಿಮೋಚನೆ, ಸ್ತ್ರೀ ಶಿಕ್ಷಣ, ಸ್ತ್ರೀಯರಿಗೆ ಮತ್ತು ಬಡ ಜನರಿಗೆ ಶಾಲಾ ನಿರ್ಮಾಣ ಮುಂತಾದವುಗಳ ಬಗ್ಗೆ ಬಹಳಷ್ಟು ಕೆಲಸ ಮಾಡಿದರು. ಅವರು ಮತ್ತು ಅವರ ಶ್ರೀಮತಿ ಸಾವಿತ್ರಿ ಭಾಯಿ ಫುಲೆ ಅವರು ಶಿಕ್ಷಣ ಕ್ರಾಂತಿಗಾಗಿ ಕೆಲಸ ಮಾಡಿದ ಮಹತ್ವದ ವ್ಯಕ್ತಿಗಳೆನಿಸಿದ್ದಾರೆ.

1869: ತಮ್ಮ ಪತಿ ಮಹಾತ್ಮ ಗಾಂಧಿಯವರೊಂದಿಗೆ ನಿರಂತರವಾಗಿದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಹೋರಾಟಗಾರ್ತಿಯಾಗಿ, ಸಮಾಜ ಸೇವಕಿಯಾಗಿ ಅನನ್ಯ ಸೇವೆ ಸಲ್ಲಿಸಿದ ಕಸ್ತೂರಬಾ ಗಾಂಧಿ ಅವರು ಗುಜರಾತಿನ ಪೋರ್ಬಂದರಿನಲ್ಲಿ ಜನಿಸಿದರು

1869: ನಾರ್ವೆಯ ಶಿಲ್ಪಿ, ನೊಬೆಲ್ ಶಾಂತಿ ಪದಕದ ವಿನ್ಯಾಸಕ ಗುಸ್ತಾವ್ ವಿಗೆಲ್ಯಾಂಡ್ ಅವರು ನಾರ್ವೆ ದೇಶದ ಹಾಲ್ಸೆ ಓಗ್ ಹರ್ಕ್ ಮಾರ್ಕ್ ಬಳಿಯಲ್ಲಿ ಜನಿಸಿದರು.

1908: ಅಕಿಯೋ ಮೊರಿಟಾ ಅವರೊಂದಿಗೆ ಸೇರಿ ಪ್ರಸಿದ್ಧ ಸೋನಿ ಉದ್ಯಮವನ್ನು ಹುಟ್ಟುಹಾಕಿದ ಮಸರು ಇಬುಕ ಅವರು ಜಪಾನಿನ ನಿಕ್ಕೋ ನಗರದಲ್ಲಿ ಜನಿಸಿದರು.

1887: ಪ್ರಸಿದ್ಧ ಕಲಾವಿದ ಜಾಮಿನಿ ರಾಯ್ ಪಶ್ಚಿಮ ಬಂಗಾಳದ ಬೆಲಿಯತೋರ್ ಎಂಬಲ್ಲಿ ಜನಿಸಿದರು. ಅಭನೀಂದ್ರನಾಥರ ಶಿಷ್ಯರಾದ ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1931: ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ನಟ ರತ್ನಾಕರ್ ಅವರು ಕೊಲ್ಲೂರಿನಲ್ಲಿ ಜನಿಸಿದರು. 300ಕ್ಕೂ ಚಲನಚಿತ್ರಗಳಲ್ಲಿ ನಟಿಸಿದ್ದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

1937: ಭಾರತದ ಖ್ಯಾತ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ನಾಗರ್ ಕೋಯಿಲ್ ಜಿಲ್ಲೆಯ ಭೂತಪಾಂಡಿ ಗ್ರಾಮದಲ್ಲಿ ಜನಿಸಿದರು. 1960 ಮತ್ತು 1961ರಲ್ಲಿ ವಿಂಬಲ್ಡನ್ನಿನಲ್ಲಿ ಸೆಮಿಫೈನಲ್ಸ್ ಆಟಗಾರರಾಗಿ ಇವರು ಪ್ರಸಿದ್ಧಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಅರ್ಜುನ ಪ್ರಶಸ್ತಿಗಳು ಇವರಿಗೆ ಸಂದಿವೆ.

1977: ಪ್ರಸಿದ್ಧ ಹಿಂದೀ ಸಾಹಿತಿ ಫನೀಶ್ವರ್ ನಾಥ್ ನಿಧನರಾದರು. ಭಾರತ ಮತ್ತು ನೇಪಾಳ ಸ್ವಾತಂತ್ರ್ಯ ಹೋರಾಟಗಳಲ್ಲಿ ಇವರು ಪಾಲ್ಗೊಂಡಿದ್ದರು.

2003: ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸ್ಥಾಪಕ ಸೆಸಿಲ್ ಹೊವಾರ್ಡ್ ಗ್ರೀನ್ ನಿಧನರಾದರು.

2009: ಗಾಂಧಿವಾದಿ, ಮಾಜಿ ಶಾಸಕ, ಹಿರಿಯ ಸಾಹಿತಿ ಬಿ.ಎಂ.ಇದಿನಬ್ಬ ಅವರು ತಮ್ಮ 90ನೇ ವಯಸ್ಸಿನಲ್ಲಿ ಉಳ್ಳಾಲದಲ್ಲಿ ನಿಧನರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಚೊಚ್ಚಲ ಅಖಿಲ ಭಾರತ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

2009: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ 86ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

2009: ಪ್ರಸಿದ್ಧ ಹಿಂದೀ ಸಾಹಿತಿ ವಿಷ್ಣು ಪ್ರಭಾಕರ್ ಅವರು ನವದೆಹಲಿಯಲ್ಲಿ ನಿಧನರಾದರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಸಂದಿದ್ದವು.

2015: ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್, ಮಹಾವೀರ ಚಕ್ರ ಪುರಸ್ಕೃತ ಹನುತ್ ಸಿಂಗ್ ರಾಥೋರ್ ನಿಧನರಾದರು.

Categories
e-ದಿನ

ಏಪ್ರಿಲ್-10

ದಿನಾಚರಣೆಗಳು:

ವಿಶ್ವ ಹೋಮಿಯೋಪಥಿ ದಿನ

ಹೋಮಿಯೋಪಥಿ ವೈದ್ಯ ಪದ್ಧತಿಯನ್ನು ಕಂಡು ಹಿಡಿದ ಜರ್ಮನ್ ಸಂಜಾತ ಫ್ರೆಂಚ್ ವೈದ್ಯರಾದ ಸ್ಯಾಮ್ಯುಯೆಲ್ ಹಹ್ನೇಮನ್ ಅವರ ಜನ್ಮದಿನಾಚರಣೆಯ ಈ ದಿನವನ್ನು ವಿಶ್ವ ಹೋಮಿಯೋಪಥಿ ದಿನ ಎಂದು ಆಚರಿಸಲಾಗುತ್ತಿದೆ.

ಸಿಬ್ಲಿಂಗ್ಸ್ ಡೇ – ಒಡಹುಟ್ಟಿದವರ ದಿನ
ವಿಶ್ವದ ಹಲವಾರು ದೇಶಗಳಲ್ಲಿ ಈ ದಿನವನ್ನು ‘ಸಿಬ್ಲಿಂಗ್ಸ್ ಡೇ’ ಅಥವಾ ‘ಒಡಹುಟ್ಟಿದವರ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

837: ಹ್ಯಾಲಿ ಧೂಮಕೇತುವು ಭೂಮಿಗೆ 5.1 ದಶಲಕ್ಷ ಕಿಲೋಮೀಟರುಗಳ ಸಮೀಪದಲ್ಲಿತ್ತು. ಇದು ಹ್ಯಾಲಿ ಧೂಮಕೇತು ಮತ್ತು ಭೂಮಿಯ ನಡುವಣ ಅತ್ಯಂತ ಸಾಮೀಪ್ಯವಾಗಿದೆ.

1710: ‘ಸ್ಟಾಚ್ಯೂಟ್ ಆಫ್ ಆನ್’, ಕೃತಿಸ್ವಾಮ್ಯದ ರಕ್ಷಣೆಗಾಗಿ ಗ್ರೇಟ್ ಬ್ರಿಟನ್ನಿನ್ನಲ್ಲಿ ಮೂಡಿಬಂದ ಪ್ರಥಮ ಕಾನೂನು ಎನಿಸಿತು.

1815: 71,000 ಜನರನ್ನು ಬಲಿ ತೆಗೆದುಕೊಂಡ ತಂಬೋರ ಪರ್ವತದ ಮೂರು ತಿಂಗಳವರೆಗಿನ ಸುದೀರ್ಘ ಜ್ವಾಲಾಮುಖಿಯು ಈ ದಿನದಂದು ಆರಂಭಗೊಂಡಿತು. ಅಷ್ಟೊಂದು ಜನರ ಸಾವಿಗೆ ಕಾರಣವಾಗಿದ್ದರ ಜೊತೆಗೆ, ಈ ಜ್ವಾಲಾಮುಖಿಯ ದೆಸೆಯಿಂದ ಮುಂದಿನ ಎರಡು ವರ್ಷಗಳಲ್ಲಿ ಭೂಮಿಯ ವಾತಾವರಣವೇ ಕ್ಷುಬ್ರಗೊಂಡಿತ್ತು.

1826: ಟರ್ಕಿ ಜನಾಂಗೀಯರ ಆಕ್ರಮಣದಿಂದಾಗಿ 10,500 ಮೂಲ ಗ್ರೀಕ್ ನಿವಾಸಿಗಳು ಮಿಸ್ಸೋಲಾಂಘಿ ಪಟ್ಟಣವನ್ನು ತೊರೆಯಲಾರಂಭಿಸಿದರು. ಅವರಲ್ಲಿ ಅತ್ಯಲ್ಪ ಜನಮಾತ್ರ ಬದುಕುಳಿದರು.

1849: ವಾಲ್ಟೇರ್ ಹಂಟ್ ಅವರಿಗೆ ‘ಸೇಫ್ಟಿ ಪಿನ್’ಗೆ ಪೇಟೆಂಟ್ ಲಭಿಸಿತು.
1858: ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲಿನಲ್ಲಿ ಜಗದ್ವಿಖ್ಯಾತ ಗಂಟೆ 13.76 ಟನ್ ತೂಕದ ‘ಬಿಗ್ ಬೆನ್’ ಅನ್ನು ಎರಕಹೊಯ್ಯಲಾಯಿತು.
ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲಿನಲ್ಲಿ ಜಗತ್ತಿನ ಖ್ಯಾತ ಗಂಟೆ 13.76 ಟನ್ ತೂಕದ ‘ಬಿಗ್ ಬೆನ್’ ಅನ್ನು ಎರಕಹೊಯ್ಯಲಾಯಿತು. ಮೊದಲಿಗೆ ಸ್ಥಾಪಿಸಲಾದ 14.5 ಟನ್ ತೂಕದ ಗಂಟೆಯಲ್ಲಿ ಬಿರುಕು ಕಂಡ ಕಾರಣ ಅದನ್ನು 13.76 ತೂಕಕ್ಕೆ ಪುನರ್ ಎರಕಹೊಯ್ಯಲಾಯಿತು.

1866: ‘ಅಮೆರಿಕನ್ ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್’ – ಪ್ರಾಣಿ ದಯಾ ಸಂಘವನ್ನು ಹೆನ್ರಿ ಬರ್ಗ್ ಅವರು ನ್ಯೂಯಾರ್ಕ್ ನಗರದಲ್ಲಿ ಸ್ಥಾಪಿಸಿದರು.

1875: ಸ್ವಾಮಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೊದಲ ಶಾಖೆಯನ್ನು ಮುಂಬೈಯಲ್ಲಿ ಸ್ಥಾಪಿಸಿದರು. ವೇದಗಳನ್ನು ಹಿಂದೂ ನಂಬಿಕೆ ಹಾಗೂ ಆಚರಣೆಗಳ ಆಧಾರವಾಗಿ ಪುನಃಸ್ಥಾಪನೆ ಮಾಡುವ ಉದ್ದೇಶ ಇದಕ್ಕಿತ್ತು. ವೇದಗಳ ಜೊತೆಗೆ ಶಿಕ್ಷಣಕ್ಕೂ ಮಹತ್ವ ನೀಡುವ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜವು ಮಹತ್ವದ ಪಾತ್ರ ವಹಿಸಿತು.

1904: ಅಲೆಯಿಸ್ಟರ ಕ್ರೌಲೆಯ್ ಅವರು ತಮ್ಮ ‘ದಿ ಬುಕ್ ಆಫ್ ದಿ ಲಾ’ ಗ್ರಂಥದ ಮೂರನೆಯ ಮತ್ತು ಕೊನೆಯ ಅಧ್ಯಾಯವನ್ನು ಲಿಪ್ಯಂತರಗೊಳಿಸಿದರು.

1912: ಆರ್.ಎಮ್.ಎಸ್. ಟೈಟನಿಕ್ ಹಡಗು ಸೌತಾಂಪ್ಟನ್ ಇಂದ ತನ್ನ ಪ್ರಥಮ ಮತ್ತು ಏಕೈಕ ಯಾನವನ್ನು ಪ್ರಾರಂಭಿಸಿತು.

1916: ಅಮೆರಿಕನ್ ವೃತಿಪರ ಗಾಲ್ಫ್ ಆಟಗಾರರ ಸಂಘವಾದ ‘PGA’ ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಗೊಂಡಿತು.

1919: ಮೊರೆಲೋಸ್ ಎಂಬಲ್ಲಿ, ಮೆಕ್ಸಿಕನ್ ಕ್ರಾಂತಿಕಾರಿ ನಾಯಕ ಎಮಿಲಿಯಾನೋ ಸಪಾಟ ಅವರನ್ನು ಸರ್ಕಾರಿ ಪಡೆಗಳು ಗುಂಡಿಟ್ಟು ಕೊಂದವು.

1925: ಎಫ್. ಸ್ಕಾಟ್ ಫಿಟ್ಜ್ ಗೆರಾಲ್ಡ್ ಅವರ ‘ದಿ ಗ್ರೇಟ್ ಗ್ಯಾಟ್ಸ್ಬಿ’ ಕೃತಿಯನ್ನು ಚಾರ್ಲ್ಸ್ ಸ್ಕ್ರಿಬ್ನರ್ಸ್ ಸನ್ಸ್ ಸಂಸ್ಥೆಯು ಮೊದಲಿಗೆ ನ್ಯೂಯಾರ್ಕ್ ನಗರದಲ್ಲಿ ಪ್ರಕಟಿಸಿತು.

1957: ಮೂರು ತಿಂಗಳು ಮುಚ್ಚಿದ್ದ ಈಜಿಪ್ಟಿನ ಸ್ಯೂಯಜ್ ಕಾಲುವೆಯು ಪುನಃ ನೌಕಾಯಾನಕ್ಕೆ ಮುಕ್ತಗೊಂಡಿತು.

1972: ಚೀನಾದ ಶಾಂಡಾಂಗ್ ಎಂಬಲ್ಲಿ ಕಟ್ಟಡದ ಕಾರ್ಮಿಕರು ಅಕಸ್ಮಾತ್ತಾಗಿ ಅಮೂಲ್ಯವಸ್ತುಗಳಿದ್ದ ಸಮಾಧಿಗಳನ್ನು ಪತ್ತೆಹಚ್ಚಿದರು. ಇವುಗಳಲ್ಲಿ ಬಿದಿರಿನ ಎಳೆಗಳಲ್ಲಿ ಮೂಡಿಸಲ್ಪಟ್ಟ ‘ಸನ್ ಟ್ಸು’ ಅವರ ‘ಯುದ್ಧ ಕಲೆ’ ಮತ್ತು ‘ಸನ್ ಬಿನ್’ ಅವರ ಕಳೆದು ಹೋಗಿದ್ದ ‘ಮಿಲಿಟರಿ ಶಾಸ್ತ್ರಗ್ರಂಥ’ ಮುಂತಾದ ಅಮೂಲ್ಯ ಕೃತಿಗಳಿದ್ದವು.

1972: ಎಪ್ಪತ್ತನಾಲ್ಕು ದೇಶಗಳು ಜೈವಿಕ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಬಹಿಷ್ಕರಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

1982: 1988: ಪಾಕಿಸ್ಥಾನದ ಓಜ್ಹಿರಿ ಕ್ಯಾಂಪ್ ದುರಂತದಲ್ಲಿ, ರಾಕೆಟ್ಟುಗಳು ಮತ್ತು ಯುದ್ಧಸಾಮಾಗ್ರಿಗಳು ಸ್ಪೋಟಗೊಂಡು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದಿನ 1000ಕ್ಕೂ ಹೆಚ್ಚು ಜನ ಸಾವಿಗೀಡಾದರು.
2000: ಜುಂಪಾ ಲಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.
ಭಾರತೀಯ ಬಂಗಾಳಿ ಕುಟುಂಬದಲ್ಲಿ ಜನಿಸಿದ ಅಮೆರಿಕನ ಪ್ರಜೆ ಜುಂಪಾ ಲಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.

2006: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಖಾಯಂ ಉದ್ಯೋಗ ಪಡೆಯುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2008: ಭಾರತದ ಇನ್ಸಾಟ್-1ಎ ಉಪಗ್ರಹವನ್ನು ಅಮೆರಿಕದ ಡೆಲ್ಟಾ ರಾಕೆಟ್ ಬಾಹ್ಯಾಕಾಶಕ್ಕೆ ಹಾರಿಸಿತು. ಇದು ಜಗತ್ತಿನ ಮೊತ್ತ ಮೊದಲ ಹವಾಮಾನ ಮತ್ತು ಸಂಪರ್ಕ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1988: ಪಾಕಿಸ್ಥಾನದ ಓಜ್ಹಿರಿ ಕ್ಯಾಂಪ್ ದುರಂತದಲ್ಲಿ, ರಾಕೆಟ್ಟುಗಳು ಮತ್ತು ಯುದ್ಧಸಾಮಾಗ್ರಿಗಳು ಸ್ಪೋಟಗೊಂಡು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದಿನ 1000ಕ್ಕೂ ಹೆಚ್ಚು ಜನ ಸಾವಿಗೀಡಾದರು.
2000: ಜುಂಪಾ ಲಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.
ಭಾರತೀಯ ಬಂಗಾಳಿ ಕುಟುಂಬದಲ್ಲಿ ಜನಿಸಿದ ಅಮೆರಿಕನ ಪ್ರಜೆ ಜುಂಪಾ ಲಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.

2006: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಖಾಯಂ ಉದ್ಯೋಗ ಪಡೆಯುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2008: ಐಐಟಿ, ಐಐಎಂ, ಎಐಐಎಂಎಸ್ ಮತ್ತಿತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ(ಓಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೆ ಈ ಮೀಸಲಾತಿ ಸೌಲಭ್ಯದಿಂದ ಕೆನೆಪದರವನ್ನು ಹೊರಗಿಟ್ಟಿದ್ದು ವಾರ್ಷಿಕ ರೂ 2.5 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದಿದ ಕುಟುಂಬಗಳನ್ನು ಕೆನೆಪದರ ವರ್ಗಕ್ಕೆ ಸೇರಿಸಿತು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಮೀಸಲಾತಿಯನ್ನು ಮರುವಿಮರ್ಶೆಗೆ ಒಳಪಡಿಸಬೇಕೆಂದೂ ನ್ಯಾಯಪೀಠ ಸೂಚಿಸಿತು.

2009: ಅನುಭವಿ ಶೂಟರ್ ಗಗನ್ ನಾರಂಗ್ ಅವರು ದಕ್ಷಿಣ ಕೊರಿಯಾದ ಚಾಂಗ್‌ವಾನ್‌ನಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ ಶಿಪ್ಪಿನ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಚಾಂಪಿಯನ್‌ ಶಿಪ್ಪಿನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

2016: ವಿಷು ಹಬ್ಬದ ಸಂದರ್ಭದಲ್ಲಿ ಪರವುರ್ ಭದ್ರಕಾಳಿ ದೇಗುಲದಲ್ಲಿ ಪೇರಿಸಿಟ್ಟಿದ್ದ ಪಟಾಕಿಗಳು ಸಿಡಿದು ನೂರಕ್ಕೂ ಹೆಚ್ಚು ಜನ ಸಾವಿಗೀಡಾದರು.

ಪ್ರಮುಖಜನನ/ಮರಣ:

1755: ಹೋಮಿಯೋಪಥಿ ಔಷದ ಪದ್ಧತಿಯನ್ನು ಕಂಡುಹಿಡಿದ ಜರ್ಮನ್ ವೈದ್ಯರಾದ ಕ್ರಿಶ್ಚಿಯನ್ ಫ್ರೆಡ್ರಿಕ್ ಸ್ಯಾಮ್ಯುಯೆಲ್ ಹಹ್ನೇಮನ್ ಅವರು ಡ್ರೆಸ್ಡೆನ್ ಬಳಿಯ ಮೀಸ್ಸೆನ್ ಎಂಬಲ್ಲಿ ಜನಿಸಿದರು.

1847: ಅಮೆರಿಕದ ಪ್ರಸಿದ್ಧ ಪತ್ರಿಕಾ ಸಂಪಾದಕರೂ, ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಸ್ಥಾಪಕರೂ ಆದ ಜೋಸೆಫ್ ಪುಲಿಟ್ಜರ್ ಅವರು ಆಸ್ಟ್ರಿಯಾ ಆಡಳಿತದಲ್ಲಿದ ಹಂಗೆರಿಯ ಮಾಕೋ ಎಂಬಲ್ಲಿ ಜನಿಸಿದರು.

1887: ಅರ್ಜೆಂಟಿನಾದ ವೈದ್ಯವಿಜ್ಞಾನಿ ಬರ್ನಾರ್ಡೋ ಹೌಸ್ಸೇ ಅವರು ಬ್ಯೂನೆಸ್ ಏರ್ಸ್ ಎಂಬಲ್ಲಿ ಜನಿಸಿದರು. ‘ಗ್ಲೂಕೋಸ್ ಇನ್ ಕಾರ್ಬೋ ಹೈಡ್ರೇಟ್ ಮೆಟಬಾಲಿಸಮ್ ಕುರಿತಾದ ಸಂಶೋಧನೆಗೆ’ ಪ್ರಸಿದ್ಧರಾದ ಇವರಿಗೆ 1947 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1994: ಜಿ. ಡಿ. ಬಿರ್ಲಾ ಎಂದೇ ಪ್ರಖ್ಯಾತರಾದ, ಭಾರತದ ಕೈಗಾರಿಕ ಕ್ಷೇತ್ರ, ಸ್ವಾತಂತ್ರ್ಯ ಹೋರಾಟ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಘನಶ್ಯಾಮ ದಾಸ ಬಿರ್ಲಾ ಅವರು ರಾಜಾಸ್ಥಾನದ ಮರುಭೂಮಿಯ ಮಧ್ಯದಲ್ಲಿನ ಪಿಲಾನಿ ಎಂಬಲ್ಲಿ ಜನಿಸಿದರು. ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.

1917: ಖ್ಯಾತ ಪಿಟೀಲು ವಿದ್ವಾಂಸ ಬಿ.ಆರ್. ಗೋವಿಂದಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಮೈಸೂರು ಸಂಸ್ಥಾನದಲ್ಲಷ್ಟೇ ಅಲ್ಲದೆ, ಭಾರತದಾದ್ಯಂತ ಇವರ ಪಿಟೀಲು ವಾದನ ಕೀರ್ತಿಗಳಿಸಿತ್ತು.

1897: ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಪ್ರಫುಲ್ಲ ಚಂದ್ರ ಸೆನ್ ಅವರು ಖುಲ್ನ ಜಿಲ್ಲೆಯ ಸೆನ್ಹಟಿ ಎಂಬಲ್ಲಿ ಜನಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಇವರು ಪಶ್ಚಿಮ ಬಂಗಾಳದ ಮೂರನೇ ಮುಖ್ಯಮಂತ್ರಿಗಳಾಗಿದ್ದರು.

1917: ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಾಬರ್ಟ್ ಬರ್ನ್ಸ್ ವುಡ್ವರ್ಡ್ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಕೆಮಿಕಲ್ ರಿಯಾಕ್ಷನ್ಸ್ ಕುರಿತಾದ ಸೈದ್ಧಾಂತಿಕ ಅಧ್ಯಯನಗಳಿಗೆ ಪ್ರಸಿದ್ಧರಾದ ಇವರಿಗೆ 1965 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1927: ಅಮೆರಿಕದ ಜೈವಿಕ ವಿಜ್ಞಾನಿ ಮಾರ್ಷಲ್ ವಾರ್ರೆನ್ ನಿರೇನ್ ಬರ್ಗ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ಜೆನೆಟಿಕ್ ಕೋಡ್ ಕುರಿತಾದ ಇವರ ಸಂಶೋಧನೆಗಳಿಗಾಗಿ 1968 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1932: ಹಿಂದೂಸ್ಥಾನಿ ಸಂಗೀತ ಗಾಯನದ ಮೇರುಶಿಖರರಲ್ಲೊಬ್ಬರಾದ ಕಿಶೋರಿ ಅಮೋನ್ಕರ್ ಮುಂಬೈನಲ್ಲಿ ಜನಿಸಿದರು. ಇವರು ಖಯಾಲ್ ಶಾಸ್ತ್ರೀಯ ಸಂಗೀತ ಹಾಗೂ ಸಂಗೀತದ ಸುಗಮ ಶಾಸ್ತ್ರೀಯ ಸ್ವರೂಪಗಳಾದ ತುಮ್ರಿ ಮತ್ತು ಭಜನ ಸಂಗೀತಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ ಮತ್ತು ಕೇಂದ್ರ ಸಂಗೀತ ಅಕಾಡೆಮಿ ಗೌರವಗಳು ಇವರಿಗೆ ಸಂದಿವೆ.

1938: ಖ್ಯಾತ ಶಿಕ್ಷಣ ತಜ್ಞೆ, ಸ್ತ್ರೀವಾದಿ, ಬರಹಗಾರ್ತಿ ಚಿ.ನ. ಮಂಗಳಾ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿವಿಧ ರೀತಿಯ ಬರಹಗಳನ್ನು ಮಾಡಿದ್ದ ಇವರು ತಿರುಮಲಾಂಬ ಅವರ ನೆನಪಿಗಾಗಿ ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.

1972: ಎಸ್ಟೋನಿಯದ ಕಂಪ್ಯೂಟರ್ ತಜ್ಞ, ಸ್ಕೈಪ್ ಸಹ ಸಂಸ್ಥಾಪಕ ಪ್ರಿಟ್ ಕಸೆಸಲು ಜನಿಸಿದರು.

2013: ಇಂಗ್ಲಿಷ್ ವೈದ್ಯವಿಜ್ಞಾನಿ ರಾಬರ್ಟ್ ಎಡ್ವರ್ಡ್ಸ್ ಅವರು ಕೇಂಬ್ರಿಡ್ಜ್ ಬಳಿಯಲ್ಲಿ ಜನಿಸಿದರು. ‘ವಿಟ್ರೋ ಫರ್ಟಿಲೈಸೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2010 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1995: ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಂಬೈನಲ್ಲಿ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾದರು. ನೈತಿಕ ವ್ಯಕ್ತಿತ್ವ, ಶಿಸ್ತು, ಸಂಯಮ, ವಿದ್ವತ್ತು, ನಿಷ್ಠುರವಾದಿತ್ವ, ನೂರರ ವಯಸ್ಸಿನಲ್ಲೂ ಚಟುವಟಿಕೆಯಿಂದಿದ್ದ ಆರೋಗ್ಯವಂತ, ಆಡಳಿತದಲ್ಲಿ ಚುರುಕು ಮೂಡಿಸಿದಾತ, ದೇಶಸೇವೆಗಾಗಿ ಲಾಭದಾಯಕ ಹುದ್ದೆ ತೊರೆದು ಹಲವಾರು ಬಾರಿ ಸೆರೆವಾಸ ಅನುಭವಿಸಿದ ರಾಷ್ಟ್ರಭಕ್ತ, ಅಪ್ರತಿಮ ಗಾಂಧೀವಾದಿ, ಸಮಾಜ ಸೇವಕ ಮತ್ತು ಸುಧಾರಕ, ಕಾಂಗ್ರೆಸ್ಸೇತರ ಪ್ರಥಮ ಪ್ರಧಾನಿ ಹೀಗೆ ಇವರು ಹಲವಾರು ವಿಶಿಷ್ಟತೆಗಳಿಂದ ಹೆಸರಾಗಿದ್ದರು.

Categories
e-ದಿನ

ಏಪ್ರಿಲ್-09

ಪ್ರಮುಖಘಟನಾವಳಿಗಳು:

190: ಡಾಂಗ್ ಜುವೋ ತನ್ನ ಪಡೆಯನ್ನು ರಾಜಧಾನಿ ಲುವಾಂಗೋದಿಂದ ತೆರವುಗೊಳಿಸಿ ಅದನ್ನು ಪೂರ್ತಿ ಸುಟ್ಟುಹಾಕಿದ.

1511: ಲೇಡಿ ಮಾರ್ಗರೇಟ್ ಬಿಯೋಫೋರ್ಟ್ ಅವರು ಕೇಂಬ್ರಿಡ್ಜಿನ ಸೈಂಟ್ ಜಾನ್ಸ್ ಕಾಲೇಜನ್ನು ಸ್ಥಾಪಿಸಿದರು.

1682: ರಾಬರ್ಟ್ ಕಾವೆಲಿಯರ್ ಡಿ ಲಾ ಸಲ್ಲೆ ಅವರು ಮಿಸ್ಸಿಸಿಪಿ ನದಿಯ ಬಾಯಿಯನ್ನು ಅನ್ವೇಷಿಸಿ, ಅದಕ್ಕೆ ಲೌಯೀಸಿಯಾನ ಎಂದು ಹೆಸರಿಟ್ಟು, ಅದು ಫ್ರಾನ್ಸಿಗೆ ಸೇರಬೇಕು ಎಂದು ಪ್ರತಿಪಾದಿಸಿದರು.

1756: ಬಂಗಾಳದ ನವಾಬ ಅಲಿವರ್ಧಿ ಖಾನ್ ನಿಧನರಾಗಿ ಅವರ ಕಿರಿಯ ಪುತ್ರ ಸಿರಾಜ್ ಉದ್-ದೌಲ್ ಉತ್ತರಾಧಿಕಾರಿಯಾದರು. ಈತ ಮುಂದೆ ಬ್ರಿಟಿಷರನ್ನು ಪ್ರಸಿದ್ಧ ಪ್ಲಾಸಿ ಕದನದಲ್ಲಿ ಎದುರಿಸಿದರು.

1860: ಎಡ್ವರ್ಡ್-ಲಿಯಾನ್ ಸ್ಕಾಟ್ ಡಿ ಮಾರ್ಟಿನ್ವಿಲ್ಲೆ ಅವರು ತಾವು ಕಂಡುಹಿಡಿದ ‘ಫೋನ್ ಆಟೋಗ್ರಾಫ್’ ಮೂಲಕ ಮಾನವ ಧ್ವನಿಯನ್ನು ಧ್ವನಿಮುದ್ರಿಸಿದರು. ಇದು ಮೊಟ್ಟಮೊದಲನೆಯದಾಗಿ ಗುರುತಿಸಲ್ಪಟ್ಟಿರುವ ಅತ್ಯಂತ ಹಳೆಯ ಧ್ವನಿಮುದ್ರಿತ ಮಾನವ ಧ್ವನಿಯಾಗಿದೆ.

1945: ಯುನೈಟೆಡ್ ಸ್ಟೇಟ್ಸ್ ಆಟೋಮಿಕ್ ಎನರ್ಜಿ ಕಮಿಷನ್ ರೂಪುಗೊಂಡಿತು.

1961: ಒಂದು ಕಾಲದಲ್ಲಿ ವಿಶ್ವದ ಅತ್ಯಂತ ದೊಡ್ಡ ವಿದ್ಯುತ್ ರೈಲ್ವೆ ಎನಿಸಿದ್ದ ಲಾಸ್ ಎಂಜೆಲಿಸಿನ ಪೆಸಿಫಿಕ್ ಎಲೆಕ್ಟ್ರಿಕ್ ರೈಲ್ವೆ ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸಿತು.

1965: ಅಸ್ಟ್ರಾಡೋಮ್ ಪ್ರಾರಂಭಗೊಂಡು ಪ್ರಥಮ ಒಳಾಂಗಣ ಬೇಸ್ ಬಾಲ್ ಆಟ ಏರ್ಪಟ್ಟಿತು.

1980: ಸದ್ಧಾಂ ಹುಸೇನ್ ಆಡಳಿತವು ತತ್ವಜ್ಞಾನಿ ಮುಹಮ್ಮದ್ ಬಕಿರ್ ಅಲ್-ಸದರ್ ಮತ್ತು ಆತನ ಸಹೋದರಿ ಬಿಂಟ್-ಅಲ್-ಹುದಾ ಅವರುಗಳಿಗೆ ಮೂರು ವರ್ಷಗಳ ಕಾಲ ಚಿತ್ರಹಿಂಸೆ ನೀಡಿದ ನಂತರದಲ್ಲಿ ಕೊಂದುಹಾಕಿತು.

2006: ಮೆಲ್ಬೋರ್ನ್ ಕಾಮನ್ ವೆಲ್ತ್ ಕೂಟದ ಅವಧಿಯಲ್ಲಿ ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿದ ಭಾರತದ ವೇಯ್ಟ್ ಲಿಫ್ಟರುಗಳಾದ ತೇಜೀಂದರ್ ಸಿಂಗ್ ಮತ್ತು ಎಡ್ವಿನ್ ರಾಜು ಅವರಿಗೆ ಜೀವಮಾನದ ನಿಷೇಧ ಹೇರಲಾಗಿದೆ ಎಂದು ಭಾರತೀಯ ವೇಯ್ಟ್ ಲಿಫ್ಟಿಂಗ್ ಒಕ್ಕೂಟ ಪ್ರಕಟಿಸಿತು.

2007: ಬಾಲಮುರಳಿ ಕೃಷ್ಣ, ಆಶಾ ಬೋಂಸ್ಲೆ, ಇಳಯರಾಜಾ, ಗಿರಿಜಾದೇವಿ ಅವರುಗಳಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರತಿಷ್ಠಿತ ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗೆ ಆಯ್ಕೆಯಾಗಿದ್ದ ಸರೋದ್ ಮಾಂತ್ರಿಕ ಅಲಿ ಅಕ್ಬರ್ ಖಾನ್ ಅವರು ಅನಾರೋಗ್ಯದ ಕಾರಣ ಸಮಾರಂಭಕ್ಕೆ ಆಗಮಿಸಿರಲಿಲ್ಲ.

2008: ಕೇವಲ ಬೀದಿಗಳಲ್ಲಿ ಪಡ್ಡೆ ಹುಡುಗರ ನಡುವೆ ಇದ್ದ ‘ರಾಕ್ ಎನ್ ರೋಲ್’ ಸಂಗೀತವನ್ನು ಸಭಾಂಗಣಗಳಲ್ಲೂ ರಿಂಗಣಿಸುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಗೀತರಚನಾಕಾರ ಬಾಬ್ ದೈಲನ್ ಅವರು ನ್ಯೂಯಾರ್ಕಿನಲ್ಲಿ ಪ್ರತಿಷ್ಠಿತ `ಪುಲಿಟ್ಜರ್ ಪ್ರಶಸ್ತಿ’ ಸ್ವೀಕರಿಸಿದರು.

2008: ಈ ದಿನದನು ‘ಉತ್ತರ ಧ್ರುವ’ವನ್ನು ತಲುಪಿದ ಸಾಧನೆ ಮಾಡಿದ ಭಾರತೀಯ ನೌಕಾಪಡೆಯು ನೌಕಾಪಡೆಯು ಜಗತ್ತಿನ ಎಲ್ಲಾ ಮೂರು ಧ್ರುವಗಳನ್ನು (ಉತ್ತರ ಧ್ರುವ, ದಕ್ಷಿಣ ಧ್ರುವ ಮತ್ತು ಶಿಖರ ಧ್ರುವವೆಂದು ಹೆಸರಾದ ಮೌಂಟ್ ಎವರೆಸ್ಟ್) ಮುಟ್ಟಿದ ಭಾರತದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಕಮಾಂಡರ್ ಸತ್ಯವ್ರತಧಾಮ್ ಅವರು ಈ ತಂಡದ ನೇತೃತ್ವ ವಹಿಸಿದ್ದರು.

ಪ್ರಮುಖಜನನ/ಮರಣ:

1861: ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಮತ್ತು ಸಾಹಿತಿಗಳಾಗಿ ಹೆಸರಾದ ಆರ್. ನರಸಿಂಹಾಚಾರ್ ಅವರು ಮಂಡ್ಯದ ಕೊಪ್ಪಲುವಿನಲ್ಲಿ ಜನಿಸಿದರು. ಪ್ರಾಕ್ತನ ವಿಮರ್ಶನ ವಿಚಕ್ಷಣ, ರಾವ್ ಬಹದ್ದೂರ್ ಗೌರವಾನ್ವಿತರಾದ ಇವರು 1918ರಲ್ಲಿ 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1907ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

1893: ಹಿಂದೀ ಭಾಷಾ ಶಾಸ್ತ್ರಜ್ಞ, ಸಾಹಿತಿ ಮಹಾಪಂಡಿತ್ ರಾಹುಲ್ ಸಂಕ್ರಿತ್ಯಯಾನ್ ಉತ್ತರಪ್ರದೇಶದ ಪಾಂಡಹ ಎಂಬಲ್ಲಿ ಜನಿಸಿದರು. ಹಿಂದೀ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯದ ಜನಕರೆಂದು ಪ್ರಖ್ಯಾತರಾಗಿರುವ ಇವರಿಗೆ ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವಗಳು ಸಂದಿದ್ದವು.

1918: ಡೇನಿಶ್ ಕಟ್ಟಡ ವಿನ್ಯಾಸಕ, ಸಿಡ್ನಿ ಒಪೆರಾ ಹೌಸ್ ವಿನ್ಯಾಸಕ್ಕೆ ಖ್ಯಾತರಾದ ಜಾರ್ನ್ ಉಟ್ಜೋನ್ ಅವರು ಡೆನ್ಮಾರ್ಕಿನ ಕೋಪನ್ ಹ್ಯಾಗನ್ ನಗರದಲ್ಲಿ ಜನಿಸಿದರು.

1919: ಅಮೆರಿಕದ ತಂತ್ರಜ್ಞ ಜೆ. ಪ್ರೆಸ್ಪರ್ ಎಕ್ಕರ್ಟ್ ಅವರು ಫಿಲೆಡೆಲ್ಫಿಯಾ ನಗರದಲ್ಲಿ ಜನಿಸಿದರು.

1929: ಖ್ಯಾತ ಸರೋದ್ ವಾದಕಿ ಶರನ್ ರಾಣಿ ಬಾಕ್ಲಿವಾಲ್ ಅವರು ದೆಹಲಿಯಲ್ಲಿ ಜನಿಸಿದರು. ಸಂಗೀತ ವಿದ್ವಾಂಸರರಾಗಿ, ವಿಶೇಷವಾಗಿ ಸರೋದ್ ವಾದನದಲ್ಲಿ ಪ್ರಖ್ಯಾತರಾಗಿದ್ದ ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು.

1926: ಹಗ್ ಹೆಫ್ನರ್ ಅವರು ಚಿಕಾಗೋದಲ್ಲಿ ಜನಿಸಿದರು. ಪ್ರಸಿದ್ಧವಾದ `ಪ್ಲೇಬಾಯ್’ ಮ್ಯಾಗಜಿನ್ ಪ್ರಕಾಶಕರಾದ ಇವರು, ಮ್ಯಾಗಜಿನ್ ವಿಫಲಗೊಳ್ಳಬಹುದೆಂಬ ಹೆದರಿಕೆಯಿಂದ ಮೊದಲ ಸಂಚಿಕೆಯಲ್ಲಿ ತಮ್ಮ ಹೆಸರು ಹಾಕಿಕೊಂಡಿರಲಿಲ್ಲ. ಹಣಕಾಸು ತೊಂದರೆ ಪರಿಣಾಮವಾಗಿ ಎರಡನೇ ಸಂಚಿಕೆ ಪ್ರಕಟಗೊಳ್ಳುವುದರ ಬಗ್ಗೆಯೇ ಇವರಿಗೆ ಭೀತಿ ಇತ್ತಂತೆ!

1932: ಪ್ರಸಿದ್ಧ ನಟಿ ಪ್ರತಿಮಾ ದೇವಿ ಜನಿಸಿದರು. ಪ್ರಸಿದ್ಧ ನಿರ್ಮಾಪಕ, ನಿರ್ದೇಶಕ, ಮಹಾತ್ಮ ಪಿಕ್ಚರ್ ಸ್ಥಾಪಕ ಶಂಕರ್ ಸಿಂಗ್ ಅವರ ಪತ್ನಿಯಾದ ಇವರು 1947 ರ ವರ್ಷದಲ್ಲಿ ಪ್ರಸಿದ್ಧ ಕೃಷ್ಣಲೀಲಾ ಚಿತ್ರದಲ್ಲಿ ಚಿತ್ರರಂಗಕ್ಕೆ ಬಂದು ಅರವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1951ರಲ್ಲಿ ಇವರು ಪ್ರಧಾನ ಪಾತ್ರದಲ್ಲಿದ್ದ ‘ಜಗನ್ಮೋಹಿನಿ’ ಶತದಿನೋತ್ಸವ ಆಚರಿಸಿದ ಪ್ರಥಮ ಕನ್ನಡ ಚಿತ್ರವೆನಿಸಿದೆ.

1948: ಪ್ರಸಿದ್ಧ ಅಭಿನೇತ್ರಿ ಜಯ ಬಚ್ಚನ್ ಅವರು ಜಯಾ ಬಾಧುರಿ ಎಂಬ ಹೆಸರಿನಿಂದ ಜಬ್ಬಲ್ ಪುರ್ ಪಟ್ಟಣದಲ್ಲಿ ಜನಿಸಿದರು. ಸತ್ಯಜಿತ್‌ ರಾಯ್ ಅವರ ಬಂಗಾಳಿ ಚಲನಚಿತ್ರ ‘ಮಹಾನಗರ್’ನಲ್ಲಿ ಬಾಲನಟಿಯಾಗಿ ಬಂದ ಇವರು ಕೆಲವೊಂದು ಬಂಗಾಳಿ ಚಿತ್ರಗಳು ಮತ್ತು ಅನೇಕ ಹಿಂದೀ ಚಿತ್ರಗಳಲ್ಲಿ ಅಭಿನಯಿಸಿ ಪದ್ಮಶ್ರೀ ಪ್ರಶಸ್ತಿಯೂ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

ಕ್ರಿಸ್ತಪೂರ್ವ 585: ಜಪಾನಿನ ಪ್ರಥಮ ಚಕ್ರವರ್ತಿ ಜಿಮ್ಮು ನಿಧನರಾದರು.

2007: ಖ್ಯಾತ ವ್ಯಂಗ್ಯಚಿತ್ರಕಾರ ಜಾಹ್ನಿ ಹರ್ಟ್ ನಿಧನರಾದರು. ಅವರ ಪ್ರಶಸ್ತಿ ವಿಜೇತ ವ್ಯಂಗ್ಯಚಿತ್ರ ಸರಣಿ ‘ಬಿ.ಸಿ.’ ವಿಶ್ವದಾದ್ಯಂತ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅವರು ‘ಬಿ.ಸಿ.’ ಕಾರ್ಟೂನ್ ಸ್ಟ್ರಿಪ್ ಅನ್ನು 1958ರಲ್ಲಿ ಆರಂಭಿಸಿದರು.

Categories
e-ದಿನ

ಏಪ್ರಿಲ್-08

ಪ್ರಮುಖಘಟನಾವಳಿಗಳು:

1911: ಡಚ್ ಭೌತ ವಿಜ್ಞಾನಿಯಾದ ಹೀಕೆ ಕಾಮೆರ್ಲಿಂಗ್ಹ್ ಒನ್ನೆಸ್ ಅವರು ಸೂಪರ್ ಕಂಡಕ್ಟಿವಿಟಿಯನ್ನು ಅನ್ವೇಷಿಸಿದರು.

1929: ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಕೇಂದ್ರೀಯ ಶಾಸನಸಭೆಯಲ್ಲಿ ಬಾಂಬ್ ಸ್ಫೋಟಿಸಿದರು. ಭಾರತೀಯ ಪ್ರಜೆಗಳ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಸಾರ್ವಜನಿಕ ಸುರಕ್ಷತೆ ಮತ್ತು ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರತಿಭಟಿಸಿ ಅವರು ಈ ಕೃತ್ಯ ಎಸಗಿದರು.

1945: ಪ್ರಸ್ಸಿಯಾದ ಹ್ಯಾನೊವರ್ ಬಳಿ ನಾಸಿ ಕಾನ್ಸೆನ್ಟ್ರೇಶನ್ನಿಗೆ ಬಂಧಿಗಳನ್ನಾಗಿ ಒಯ್ಯುತ್ತಿದ್ದ 4000 ಜನರಿದ್ದ ರೈಲು ಅಕಸ್ಮಾತ್ತಾಗಿ ವಿಮಾನ ಆಕ್ರಮಣಕ್ಕೆ ಒಳಗಾಗಿ ನಾಶಗೊಂಡಿತು. ಅಪಘಾತದಲ್ಲಿ ಉಳಿದವರನ್ನು ನಾಜಿಗಳು ಹತ್ಯೆ ಮಾಡಿದರು.

1950: ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಲಿಯಾಖತ್ ಅಲಿ ಖಾನ್ ನಡುವೆ ಒಪ್ಪಂದಕ್ಕೆ ಸಹಿಯಾಯಿತು.

1959: ಗ್ರೇಸ್ ಹಾಪರ್ ಅವರ ನೇತೃತ್ವದ ತಂಡವು ಕಂಪ್ಯೂಟರ್ ತಯಾರಕರು, ಗ್ರಾಹಕರು ಮತ್ತು ವಿಶ್ವವಿದ್ಯಾಲಯದ ಜನರೊಂದಿಗೆ ಸಭೆ ಸೇರಿ ಒಂದು ಉಪಯುಕ್ತ ‘ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್’ ಸೃಷ್ಟಿಯ ಬಗ್ಗೆ ಚರ್ಚೆ ನಡೆಸಿತು. ಮುಂದೆ ಅದು ‘ಕೋಬಾಲ್’ (COBOL) ಎಂದು ಪ್ರಸಿದ್ಧಿಗೊಂಡಿತು.

1992: ನಿವೃತ್ತ ಟೆನಿಸ್ ಆಟಗಾರ ಆರ್ಥರ್ ಆಶ್ ಅವರು ತಮಗೆ ‘ಏಡ್ಸ್’ ಕಾಹಿಲೆ ಇರುವುದಾಗಿ ಪ್ರಕಟಿಸಿ, ಈ ಕಾಹಿಲೆಯು ತಮಗೆ ಎರಡು ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ ನೀಡಲಾದ ರಕ್ತ ವರ್ಗಾವಣೆ ಸಂದರ್ಭದಲ್ಲಿ ಉಂಟಾಗಿದೆ ಎಂದು ಹೇಳಿದರು.

2001: ಜಾರ್ಜಿಯಾದ ಆಗಸ್ಟಾದಲ್ಲಿ `ಆಗಸ್ಟಾ ಮಾಸ್ಟರ್ಸ್’ ಗೆಲ್ಲುವ ಮೂಲಕ ಟೈಗರ್ ವುಡ್ಸ್ ಅವರು ಏಕ ಕಾಲಕ್ಕೆ ಎಲ್ಲ ನಾಲ್ಕು ಪ್ರಮುಖ ಚಾಂಪಿಯನ್ ಶಿಪ್ಪುಗಳನ್ನು ಗೆದ್ದ ಮೊದಲ ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿದರು.

2009: ಜವಹರಲಾಲ್ ನೆಹರು ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಪ್ರೊ. ಸಿ.ಎನ್.ಆರ್.ರಾವ್ ಅವರು ರಷ್ಯಾದ ಪ್ರತಿಷ್ಠಿತ ‘ಆರ್ಡರ್ ಆಫ್ ಫ್ರೆಂಡ್‌ಶಿಪ್’ ಗೌರವಕ್ಕೆ ಪಾತ್ರರಾದರು.

ಪ್ರಮುಖಜನನ/ಮರಣ:

1541: ಇಟಲಿಯ ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ಪ್ರಾಕ್ತನ ತಜ್ಞ ಮಿಚೆಲಿ ಮರ್ಕಾಟಿ ಜನಿಸಿದರು.

1832: ಫೆರ್ಡಿನೆಂಡ್ ಕಿಟೆಲರು ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಲ್ಲಿ ಜನಿಸಿದರು. ಜರ್ಮನಿಯ ಬಾಸೆಲ್ ಮಿಶನ್ ಮೂಲಕ ಕರ್ನಾಟಕಕ್ಕೆ ಕನ್ನಡ ಭಾಷೆಯಲ್ಲಿ ಮಹತ್ತರವಾದ ಸಾಧನೆಗೈದರು. ಇವರ ‘ಕನ್ನಡ –ಇಂಗ್ಲಿಷ್ ನಿಘಂಟಿಗೆ’ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ಕನ್ನಡದ ಕಾರ್ಯಕ್ಕೆ ಸಂದ ಪ್ರಪ್ರಥಮ ಡಾಕ್ಟರೇಟ್ ಗೌರವವಾಗಿದೆ.

1904: ಇಂಗ್ಲಿಷ್ ಅರ್ಥಶಾಸ್ತ್ರಜ್ಞರಾದ ಜಾನ್ ಹಿಕ್ಸ್ ಅವರು ಇಂಗ್ಲೆಂಡಿನ ವಾರ್ವಿಕ್ ಎಂಬಲ್ಲಿ ಜನಿಸಿದರು. ಇವರಿಗೆ 1972 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತು.

1911: ಅಮೆರಿಕದ ಜೈವಿಕ ವಿಜ್ಞಾನಿ ಮೆಲ್ವಿನ್ ಕ್ಯಾಲ್ವಿನ್ ಅವರು ಮಿನ್ನೇಸೋಟಾದ ಸೈಂಟ್ ಪಾಲ್ ಎಂಬಲ್ಲಿ ಜನಿಸಿದರು. ಜೀವ ರಸಾಯನಶಾಸ್ತ್ರ, ದ್ಯುತಿ ಸಂಶ್ಲೇಷಣಾ ಕ್ರಿಯೆಗಳಲ್ಲಿನ ಜೈವಿಕ ಸಂಶ್ಲೇಷಣೆಗಳನ್ನು ಸ್ಪುಟಗೊಳಿಸಿದವರೆಂದು ಪ್ರಸಿದ್ಧಿ ಪಡೆದಿರುವ ಇವರಿಗೆ 1911 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1924: ಹಿಂದೂಸ್ಥಾನಿ ಸಂಗೀತದ ಅದ್ಭುತ ಸಾಧಕರಾದ ಕುಮಾರ ಗಂಧರ್ವ ಅವರು ಬೆಳಗಾವಿ ಜಿಲ್ಲೆಯ ಸೂಳೆಭಾವಿಯಲ್ಲಿ ಜನಿಸಿದರು. ಜನ್ಮಜಾತ ಪ್ರತಿಭೆಯಾಗಿದ್ದ ಕುಮಾರ ಗಂಧರ್ವರು, ಗಾಯಕರಾಗಿ ಉನ್ನತಿಗೇರಿದ್ದರ ಜೊತೆಗೆ ಹನ್ನೆರಡು ರಾಗಗಳನ್ನೂ ಸೃಷ್ಟಿಸಿದ್ದರು. ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಾಳಿದಾಸ ಸಮ್ಮಾನ, ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1939: ಸಿಪಿಕೆ ಎಂದೇ ಖ್ಯಾತರಾಗಿರುವ ಪ್ರೊ.ಸಿ.ಪಿ. ಕೃಷ್ಣಕುಮಾರ್ ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಇವರು ವಿವಿಧ ಪ್ರಕಾರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1861: ಓಟಿಸ್ ಎಲಿವೇಟರ್ ಕಂಪೆನಿ ಸ್ಥಾಪಕ ಎಲಿಷಾ ಓಟಿಸ್ ನ್ಯೂಯಾರ್ಕಿನ ಯಾಂಕರ್ಸ್ ಎಂಬಲ್ಲಿ ನಿಧನರಾದರು.

1894: ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದ ಬಂಗಾಳಿ ಸಾಹಿತಿ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಕೋಲ್ಕತ್ತಾದಲ್ಲಿ ನಿಧನರಾದರು. ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು.

1931: ಸ್ವೀಡಿಷ್ ಕವಿ ಎರಿಕ್ ಆಕ್ಸೇಲ್ ಕಾರ್ಲ್ ಫೆಲ್ಡ್ಟ್ ಅವರು ಸ್ಟಾಕ್ ಹೋಮ್ ನಗರದಲ್ಲಿ ನಿಧನರಾದರು. ಇವರಿಗೆ 1931 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1973: ಜಗತ್ತಿನ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಪಾಬ್ಲೋ ಪಿಕಾಸೋ ಫ್ರಾನ್ಸಿನ ಮೌಗಿನ್ಸಿನಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. 20ನೇ ಶತಮಾನದ ಆಧುನಿಕ ಕಲೆಗೆ ಇವರು ಮಹತ್ವದ ಕಾಣಿಕೆ ಸಲ್ಲಿಸಿದ್ದಾರೆ.

1984: ರಷ್ಯಾದ ಭೌತವಿಜ್ಞಾನಿ ಪ್ಯೋಟ್ರ್ ಕಪಿಟ್ಸಾ ಅವರು ಮಾಸ್ಕೋದಲ್ಲಿ ನಿಧನರಾದರು. ‘ಕಡಿಮೆ ಉಷ್ಣಾಂಶದ ಭೌತಶಾಸ್ತ್ರ’ಕ್ಕೆ ಪ್ರಸಿದ್ಧರಾದ ಇವರಿಗೆ 1978 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

2008: ಖ್ಯಾತ ಸರೋದ್ ವಾದಕಿ ಶರನ್ ರಾಣಿ ಬಾಕ್ಲಿವಾಲ್ ಅವರು ದೆಹಲಿಯಲ್ಲಿ ನಿಧನರಾದರು. ಸಂಗೀತ ವಿದ್ವಾಂಸರರಾಗಿ ವಿಶೇಷವಾಗಿ ಸರೋದ್ ವಾದನದಲ್ಲಿ ಪ್ರಖ್ಯಾತರಾಗಿದ್ದ ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು.

2015: ಪ್ರಸಿದ್ಧ ಸಾಹಿತಿ, ಪತ್ರಕರ್ತ, ಕಾರ್ಯಕರ್ತ, ಸಿನಿಮಾ ನಿರ್ದೇಶನ ಮುಂತಾದ ವಿವಿಧ ಮುಖಿ ವಿದ್ವಾಂಸರಾದ ಜಯಕಾಂತನ್ ಅವರು ಚೆನ್ನೈ ನಗರದಲ್ಲಿ ನಿಧನರಾದರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

Categories
e-ದಿನ

ಏಪ್ರಿಲ್-07

ದಿನಾಚರಣೆಗಳು:

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ಸಂಸ್ಥೆಯಾದ ‘ವರ್ಲ್ಡ್ ಹೆಲ್ತ್ ಆರ್ಗನೈಸೇಶನ್’ ಜಿನೀವಾದಲ್ಲಿ ಆರಂಭವಾದ ಏಪ್ರಿಲ್ 7 ದಿನದಂದು ವಿಶ್ವದಾದ್ಯಂತ ವಿಶ್ವ ಆರೋಗ್ಯ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. 1948ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭೆಯಲ್ಲಿ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. 1950ರಿಂದ ವಿಶ್ವ ಆರೋಗ್ಯ ದಿನದ ಆಚರಣೆ ಜಾರಿಗೆ ಬಂತು.

ಪ್ರಮುಖಘಟನಾವಳಿಗಳು:

529: ನ್ಯಾಯಶಾಸ್ತ್ರದ ಕುರಿತಾದ ‘ಕಾರ್ಪಸ್ ಜ್ಯುರಿಸ್ ಸಿವಿಲಿಸ್’ ಕರಡು ಪ್ರತಿಯನ್ನು ಪೂರ್ವ ರೋಮನ್ ಚಕ್ರವರ್ತಿ ಮೊದಲನೇ ಜಸ್ಟೀನಿಯನ್ ಹೊರಡಿಸಿದರು.

1141: ಚಕ್ರವರ್ತಿನಿ ಮಟಿಲ್ಡಾ ‘ಲೇಡಿ ಆಫ್ ಇಂಗ್ಲಿಷ್’ ಬಿರುದಾಂಕಿತರಾಗಿ ಇಂಗ್ಲೆಂಡಿನ ಪ್ರಥಮ ರಾಜ್ಯಾಧಿಕಾರಿಣಿಯಾದರು.

1348: ಪ್ರೇಗ್ನಲ್ಲಿ ಚಾರ್ಲ್ಸ್ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು.

1827: ಜಾನ್ ವಾಲ್ಕರ್ ತಾವು ಹಿಂದಿನ ವರ್ಷ ಕಂಡುಹಿಡಿದಿದ್ದ ವಿಶ್ವದ ಪ್ರಥಮ ‘ಬೆಂಕಿಕಡ್ಡಿ’ (ಮ್ಯಾಚ್ ಸ್ಟಿಕ್) ಅನ್ನು ಮಾರಾಟ ಮಾಡಿದರು.

1940: ಬೂಕರ್ ಟಿ. ವಾಷಿಂಗ್ಟನ್ ಅವರು ಅಮೆರಿಕದ ಅಂಚೆ ಚೀಟಿಯ ಮೇಲೆ ಮೂಡಿಬಂದ ಪ್ರಪ್ರಥಮ ಅಮೆರಿಕನ್ ಆಫ್ರಿಕನ್ ಎನಿಸಿದರು.

1943: ಹೋಲೋಕಾಸ್ಟ್ ಚಿತ್ರ ಹಿಂಸೆಯ ಘಟನೆಯೊಂದರಲ್ಲಿ ಜರ್ಮನ್ನರು 1,100 ಜ್ಯೂಸ್ ಜನಾಂಗೀಯರನ್ನು ಕೇವಲ ತಮ್ಮ ಒಳ ಉಡುಪುಗಳೊಂದಿಗೆ ಉಕ್ರೇನಿನ ಟೆರೆಬೋವಿಲಾ ನಗರದಲ್ಲಿ ಮೆರವಣಿಗೆಯಲ್ಲಿ ಸಾಗುವಂತೆ ಮಾಡಿ, ನಂತರದಲ್ಲಿ ಪ್ಲೆಬಾನಿವ್ಕ ಎಂಬ ಹಳ್ಳಿಯಲ್ಲಿ ಗುಂಡಿಟ್ಟು ಕೊಂದು ಹಳ್ಳದಲ್ಲಿ ಹೂತುಹಾಕಿದರು.

1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ಅಮೆರಿಕದ ವಿಮಾನಗಳು ಜಪಾನಿನ ಅತ್ಯಂತ ಬೃಹತ್ ಯುದ್ದ ನೌಕೆಯಾದ ‘ಯಮಾಟೋ’ವನ್ನು ಮುಳುಗಿಸಿದವು. ಈ ನೌಕೆಯು ಆತ್ಯಹತ್ಯಾ ಪಡೆಯಾಗಿ ಆಪರೇಷನ್ ಟೆನ್-ಗೋ ಎಂಬ ವಿಧ್ವಂಸಕ ಉದ್ದೇಶಕ್ಕೆ ಹೊರಟಿತ್ತು ಎಂದು ಹೇಳಲಾಗಿದೆ.

1946: ಸಿರಿಯಾವು ಫ್ರಾನ್ಸ್ ಆಡಳಿತದಿಂದ ಅಧಿಕೃತವಾಗಿ ಸ್ವಾತಂತ್ರ್ಯ ಗಳಿಸಿತು.

1948: ವಿಶ್ವಸಂಸ್ಥೆಯು ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಾದ ‘ವರ್ಲ್ಡ್ ಹೆಲ್ತ್ ಆರ್ಗನೈಸೇಶನ್’ ಅನ್ನು ಸ್ಥಾಪಿಸಿತು.

1949: ರೋಜರ್ಸ್ ಮತ್ತು ಹ್ಯಾಮರ್ಸ್ಟೀನ್ ಸಂಗೀತ ತಂಡವಾದ ‘ಸೌತ್ ಪೆಸಿಫಿಕ್’ ಬ್ರಾಡ್ವೇನಲ್ಲಿ ಆರಂಭಗೊಂಡಿತು. ಇದು 1925 ಕಾರ್ಯಕ್ರಮಗಳನ್ನು ನೀಡಿ 10 ಟೋನಿ ಪ್ರಶಸ್ತಿಗಳನ್ನು ಗಳಿಸಿತು.

1953: ಡ್ಯಾಗ್ ಹ್ಯಾಮ್ಮರ್ ಷೀಲ್ಡ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1954: ಅಮೆರಿಕ ಅಧ್ಯಕ್ಷ ಡ್ವೈಟ್ ಡಿ. ಈಸೆನ್ಹೂವರ್ ಅವರು ತಮ್ಮ ‘ಡಾಮಿನೋ ಥಿಯರಿ’ ಕುರಿತಾಗಿ ಭಾಷಣವನ್ನು ಪತ್ರಿಕಾ ಗೋಷ್ಠಿಯಲ್ಲಿ ಮಾಡಿದರು. 1955: ಯುನೈಟೆಡ್ ಕಿಂಗ್ಡಂ ಪ್ರಧಾನಿಗಳಾದ ವಿನ್ಸ್ಟನ್ ಚರ್ಚಿಲ್ ಅವರು ಅನಾರೋಗ್ಯದ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸಿದರು ಯುನೈಟೆಡ್ ಕಿಂಗ್ಡಂ ಪ್ರಧಾನಿಗಳಾದ ವಿನ್ಸ್ಟನ್ ಚರ್ಚಿಲ್ ಅವರು ಅನಾರೋಗ್ಯದ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸಿದರು.

1964: ಐಬಿಎಮ್ ಸಿಸ್ಟಮ್/360 ಅನ್ನು ಘೋಷಿಸಿತು.

1967: ಚಲನಚಿತ್ರ ವಿಮರ್ಶಕ ರೋಜರ್ ಎಬರ್ಟ್ ಅವರು ತಮ್ಮ ಪ್ರಥಮ ಚಲನಚಿತ್ರ ವಿಮರ್ಶೆಯನ್ನು ಚಿಕಾಗೋ-ಸನ್-ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದರು.

1968: ಮೋಟಾರ್ ರೇಸ್ ಚಾಂಪಿಯನ್ ಜಿಮ್ ಕ್ಲಾರ್ಕ್ ಅವರು ಹಾಕೆನ್ಹೀಮ್ ಫಾರ್ಮ್ಯುಲಾ 2 ರೇಸ್ ಸಂದರ್ಭದಲ್ಲಿ ಉಂಟಾದ ಅಪಘಾತದಲ್ಲಿ ನಿಧನರಾದರು.

1969: ಆರ್.ಎಫ್.ಸಿ. 1 ಪ್ರಕಟಣೆಗೊಂಡು, ಈ ದಿನವು ಅಂತರ್ಜಾಲದ (ಇಂಟರ್ನೆಟ್ಟಿನ) ಸಾಂಕೇತಿಕವಾದ ಹುಟ್ಟಿದ ದಿನವಾಗಿದೆ.

1978: ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ನ್ಯೂಟ್ರಾನ್ ಬಾಂಬ್ ತಯಾರಿಕೆಯನ್ನು ರದ್ಧುಗೊಳಿಸಿದರು.

1983: ಎಸ್.ಟಿ.ಎಸ್-6 ಬಾಹ್ಯಾಕಾಶ ಯೋಜನೆಯ ಸಂದರ್ಭದಲ್ಲಿ ಸ್ಟೋರಿ ಮುಸ್ಗ್ರೇವ್ ,ಮತ್ತು ಡಾನ್ ಪೀಟರ್ಸನ್ ಅವರು ಪ್ರಥಮ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡರು.

1985: ಸೋವಿಯತ್ ಅಧ್ಯಕ್ಷರಾದ ಮಿಖೈಲ್ ಗೋರ್ಬೆಚೆವ್ ಅವರು ಯೂರೋಪಿನಲ್ಲಿ ಮಧ್ಯಮ-ಶ್ರೇಣಿಯ ಕ್ಷಿಪಣಿಗಳ ನಿಯೋಜನೆಯನ್ನು ನಿಷೇದಿಸಲು ಕರೆಕೊಟ್ಟರು.

1991: ಮಾರ್ಸ್ ಒಡಿಸ್ಸಿ (ಮಂಗಳ ಗ್ರಹದ ಯಾತ್ರೆಯ ಒಡಿಸ್ಸಿ) ಎಂಬ ಮಂಗಳಗ್ರಹದಲ್ಲಿನ ರೋಬೋಟ್ ರೂಪದ ಯಾಂತ್ರಿಕ ಸಮೀಕ್ಷೆ ಆರಂಭಗೊಂಡಿತು.

2003: ಅಮೆರಿಕದ ಪಡೆಗಳು ಬಾಗ್ದಾದ್ ಅನ್ನು ಆಕ್ರಮಿಸಿದವು. ಎರಡು ದಿನಗಳ ನಂತರದಲ್ಲಿ ಸದ್ದಾಮ್ ಹುಸೇನ್ ಅಧಿಪತ್ಯವು ಅಂತ್ಯಗೊಂಡಿತು.

2006: ಸುಮಾರು 1700 ವರ್ಷಗಳಿಂದ ಕಾಣೆಯಾಗಿತ್ತು ಎನ್ನಲಾದ ‘ಗಾಸ್ಪೆಲ್ ಆಫ್ ಜುದಾಸ್’ ಹಸ್ತಪ್ರತಿ ವಾಷಿಂಗ್ಟನ್ನಲ್ಲಿ ಪತ್ತೆಯಾಯಿತು. ಮೂರು ಅಥವಾ ನಾಲ್ಕನೇ ಶತಮಾನಕ್ಕೆ ಸೇರಿದ ಈ ಹಸ್ತಪ್ರತಿಯ ಅಧಿಕೃತ, ಅನುವಾದಿತ ಪ್ರತಿಯನ್ನು ವಾಷಿಂಗ್ಟನ್ನಿನಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಏಸು ಕ್ರಿಸ್ತ ಹಾಗೂ ಜುದಾಸ್ ಬಗ್ಗೆ ಈ ಕೃತಿ ಹೊಸ ಭಾಷ್ಯ ಬರೆದಿದೆ. ಬೈಬಲ್ಲಿನಲ್ಲಿ ಕೆಟ್ಟ ವ್ಯಕ್ತಿ ಎಂದು ಬಿಂಬಿತನಾಗಿರುವ ಜುದಾಸ್, ಕ್ರಿಸ್ತನಿಗೆ ದ್ರೋಹ ಎಸಗಿಲ್ಲ, ಆದರೆ ಕ್ರಿಸ್ತನೇ ಖುದ್ದಾಗಿ ತನ್ನನ್ನು ಶಿಲುಬೆಗೆ ಏರಿಸುವವರಿಗೆ ಒಪ್ಪಿಸುವಂತೆ ತನ್ನ ಶಿಷ್ಯ ಜುದಾಸನಿಗೆ ಸೂಚಿಸಿದ್ದುದಾಗಿಯೂ, ಇದರಿಂದ ಜುದಾಸನಿಗೆ ಬಹಳ ವ್ಯಥೆಯಾಯಿತು ಎಂದೂ ಈ ಕೃತಿ ಹೇಳಿದೆ.

2006: ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಮೆಟ್ರೊ ರೈಲು ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿತು.

2007: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಅರಂಭವಾದ ಕದಂಬೋತ್ಸವದಲ್ಲಿ 2006ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ಅವರಿಗೆ ಪ್ರದಾನ ಮಾಡಲಾಯಿತು.

2007: ಕಾಂಚೀಪುರಂಗೆ ಸಮೀಪದ ಮಾಮಲ್ಲಾಪುರಂನಲ್ಲಿ 1800 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವಾಲಯ ಒಂದರ ಅವಶೇಷಗಳನ್ನು ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2009: ನಲವತ್ತೊಂದು ವರ್ಷಗಳ ನಂತರದಲ್ಲಿ ನ್ಯೂಜಿಲೆಂಡಿನ ನೆಲದಲ್ಲಿ ಭಾರತವು ಕ್ರಿಕೆಟ್ ಟೆಸ್ಟ್ ಸರಣಿಯನ್ನು ಗೆದ್ದಿತು. 1967-68ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿ ಜಯಿಸಿದ್ದ ಭಾರತವು ನಾಲ್ಕು ದಶಕಗಳ ನಂತರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಈ ಸಾಧನೆಯನ್ನು ಮಾಡಿತು.

ಪ್ರಮುಖಜನನ/ಮರಣ:

1506: ಫ್ರಾನ್ಸಿಸ್ ಝೇವಿಯರ್ ಅವರು ಈಗಿನ ಸ್ಪೇನ್ ದೇಶವಾದ ಕಿಂಗ್ಡಂ ಆಫ್ ನವ್ವಾರೆಯ ಜೇವಿಯರ್ ಎಂಬಲ್ಲಿ ಜನಿಸಿದರು. ಆಧುನಿಕ ಕಾಲದ ಖ್ಯಾತ ರೋಮನ್ ಕ್ಯಾಥೋಲಿಕ್ ಪ್ರಚಾರಕರಾದ ಇವರು ಭಾರತ, ಜಪಾನ್, ಚೀನಾ ಮತ್ತಿತರ ರಾಷ್ಟಗಳಲ್ಲಿ ಕ್ರೈಸ್ತಧರ್ಮ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.

1770: ಮಹಾನ್ ಕವಿ ವಿಲಿಯಂ ವರ್ಡ್ಸ್ ವರ್ತ್ ಇಂಗ್ಲೆಂಡಿನ ಲೇಕ್ ಜಿಲ್ಲೆಯ ಕಾಕರ್ ಮೌತ್ ಎಂಬಲ್ಲಿ ಜನಿಸಿದರು. ಇಂಗ್ಲಿಷ್ ರೊಮಾಂಟಿಕ್ ಕಾವ್ಯ ಯುಗದ ಪ್ರವರ್ತಕರಲ್ಲಿ ಪ್ರಮುರೆನಿಸಿದ ಇವರು ಸಾಮ್ಯುಯಲ್ ಟೇಲರ್ ಕೊಲೆರಿಡ್ಜ್ ಅವರ ಸಹಯೋಗದಲ್ಲಿ 1798ರಲ್ಲಿ ಪ್ರಕಟಿಸಿದ ‘ಲಿರಿಕಲ್ ಬಲ್ಲಾಡ್ಸ್’ ಕೃತಿ ರೊಮಾಂಟಿಕ್ ಯುಗಕ್ಕೆ ಪ್ರಾರಂಭ ನೀಡಿದ ಕೃತಿಗಳಲ್ಲೊಂದು.

1860: ಕೆಲ್ಲಾಗ್ ಸಂಸ್ಥೆಯ ಸಹ ಸಂಸ್ತಾಪಕ ವಿಲ್ ಕೀತ್ ಕೆಲ್ಲಾಗ್ ಮಿಚಿಗನ್ನಿನ ಬ್ಯಾಟಲ್ ಕ್ರೀಕ್ ಎಂಬಲ್ಲಿ ಜನಿಸಿದರು.

1889: ನೊಬೆಲ್ ಪುರಸ್ಕ್ಸೃತ ಕವಯತ್ರಿ ಮತ್ತು ಶಿಕ್ಷಣ ತಜ್ಞೆ ಗೆಬ್ರಿಲಾ ಮಿಸ್ತ್ರಾಲ್ ಅವರು ಚಿಲಿ ದೇಶದ ವಿಕುನಾ ಎಂಬಲ್ಲಿ ಜನಿಸಿದರು. 1945ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಗಳಿಸಿದ ಇವರು, ಲ್ಯಾಟಿನ್ ಅಮೆರಿಕಾದಲ್ಲೇ ನೊಬೆಲ್ ಪ್ರಶಸ್ತಿ ಗಳಿಸಿದ ಪ್ರಥಮ ವ್ಯಕ್ತಿ ಎನಿಸಿದರು.

1891: ಪ್ರಖ್ಯಾತ ಆಟಿಕೆಗಳ ಉದ್ಯಮವಾದ ‘ದಿ ಲೆಗೋ ಗ್ರೂಪ್’ ಸಂಸ್ಥಾಪಕ ಒಲೆ ಕಿರ್ಕ್ ಕ್ರಿಶ್ಚಿಯಾನ್ಸೆನ್ ಅವರು ಡೆನ್ಮಾರ್ಕಿನ ಫ್ಲಿಸ್ಕೋವ್ ಎಂಬಲ್ಲಿ ಜನಿಸಿದರು.

1893: ಭಾರತೀಯ ಉದ್ಯಮಿ ‘ದಾಲ್ಮಿಯಾ ಸಮೂಹದ’ ಸ್ಥಾಪಕರಾದ ರಾಮಕೃಷ್ಣ ದಾಲ್ಮಿಯಾ ಅವರು ರಾಜಾಸ್ಥಾನದ ಚಿರಾವಾ ಎಂಬಲ್ಲಿ ಜನಿಸಿದರು. ಇವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ದಿ ಟೈಮ್ಸ್ ಗ್ರೂಪ್ ಉದ್ಯಮಗಳಲ್ಲೂ ನಿರ್ಣಾಯಕವಾದ ಪಾಲುದಾರಿಕೆ ಒಡೆತನವನ್ನು ಹೊಂದಿದ್ದರು.

1918: ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗ ಕರ್ತೃ, ಮೇಳದ ಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮರಾಗಿದ್ದ ಗೋಪಾಲಕೃಷ್ಣ ಭಟ್ಟರು ಕಾಸರಗೋಡು ತಾಲ್ಲೂಕಿನ ಕುಂಬಳೆಯ ಎಡನಾಡುಗ್ರಾಮದಲ್ಲಿ ಜನಿಸಿದರು. ಕರ್ನಾಟಕ, ಕೇರಳ, ಎರಡು ರಾಜ್ಯಗಳಿಂದಲೂ ರಾಜ್ಯಪ್ರಶಸ್ತಿ ಗಳಿಸಿದ ಯಕ್ಷಗಾನ ಕಲಾವಿದರೆಂಬ ಹೆಗ್ಗಳಿಕೆಯ ಜೊತೆಗೆ ಕ್ಯಾಸೆಟ್ ಲೋಕದಲ್ಲಿ ಅವರ ಅನೇಕ ಕ್ಯಾಸೆಟ್ಟುಗಳು ದಾಖಲೆಯ ಮಾರಾಟವಾದವು. ಮಂಗಳೂರು ವಿಶ್ವವಿದ್ಯಾಲಯವು ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಡಾಕ್ಟರೇಟ್ ಗೌರವವನ್ನಿತ್ತು ಗೌರವಿಸಿತು.

1920: ಪೂರ್ವ ಪಶ್ಚಿಮಗಳೆರಡನ್ನೂ ಸಂಗೀತದಲ್ಲಿ ಸಮ್ಮಿಲನಗೊಳಿಸಿದ ಸಿತಾರ್ ವಾದಕ ಪಂಡಿತ್ ರವಿಶಂಕರರು ಬನಾರಸ್ ಪಟ್ಟಣದಲ್ಲಿ ಜನಿಸಿದರು. ಸಿತಾರ್ ವಾದನವಷ್ಟೇ ಅಲ್ಲದೆ ಯೆಹೂದಿ ಮೆನನ್ ಅವರಿಂದ ಮೊದಲ್ಗೊಂಡು ವಿಶ್ವದ ಪ್ರಸಿದ್ಧರೊಂದಿಗೆ ಜುಗಲ್ಬಂದಿ, ಬ್ಯಾಲೆಟ್ ರಂಗ ಪ್ರಯೋಗಗಳು, ಸಿನಿಮಾ ಸಂಗೀತ ಹೀಗೆ ಎಲ್ಲೆಡೆ ಅವರ ಸಂಗೀತ ಹರಿದಿದ್ದು, ಭಾರತರತ್ನದ ವರೆಗಿನ ಭಾರತದ ಪ್ರಶಸ್ತಿಗಳು ಮತ್ತು ಅನೇಕ ಅಂತರ್ರಾಷ್ಟ್ರೀಯ ಗೌರವಗಳು ಅವರಿಗೆ ಸಂದಿವೆ.

1924: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಹೋರಾಟಗಾರರಾದ ಶಾಂತರಸ ಅವರು ರಾಯಚೂರು ಜಿಲ್ಲೆಯ ಹೆಂಬೇರಾಳ ಎಂಬ ಹಳ್ಳಿಯಲ್ಲಿ ಜನಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1925: ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ನಾಯಕ, ಕಮ್ಮ್ಯೂನಿಸ್ಟ್ ನಾಯಕ, ಕೇಂದ್ರ ಮಂತ್ರಿ ಚತುರಾನನ್ ಮಿಶ್ರಾ ಅವರು ಬಿಹಾರಿನ ನಹಾರ್ ಎಂಬಲ್ಲಿ ಜನಿಸಿದರು. ಇವರು ಕೇಂದ್ರದಲ್ಲಿ ಕೃಷಿ ಮತ್ತಿತರ ಖಾತೆಗಳ ಮಂತ್ರಿಗಳಾಗಿದ್ದರು.

1942: ಚಲನಚಿತ್ರ ನಟ, ನಿರ್ಮಾಪಕ ಜಿತೇಂದ್ರ ಅವರು ರವಿ ಕಪೂರ್ ಎಂಬ ಹೆಸರಿನಿಂದ ಅಮೃತಸಾರದಲ್ಲಿ ಜನಿಸಿದರು. ಇವರಿಗೆ 2014 ವರ್ಷದ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸಂದಿದೆ.

1947: ಅಮೆರಿಕದ ಪ್ರಸಿದ್ಧ ವಾಹನ ಉದ್ಯಮಿ ಫೋರ್ಡ್ ಮೋಟಾರ್ ಸಂಸ್ಥೆಯ ಸ್ಥಾಪಕ ಹೆನ್ರಿ ಫೋರ್ಡ್ ಅವರು 83ನೆಯ ವಯಸ್ಸಿನಲ್ಲಿ ಮಿಚಿಗನ್ನಿನ ಫೇರ್ ಲೇನ್ ಎಂಬಲ್ಲಿ ನಿಧನರಾದರು. ಇವರು ತಮ್ಮ ಬಹುತೇಕ ಆಸ್ತಿಯನ್ನು ಫೋರ್ಡ್ ಫೌಂಡೇಶನ್ನಿಗೆ ನೀಡಿ ಶಿಕ್ಷಣ ಮತ್ತು ಜನಹಿತ ಕಾರ್ಯಕ್ರಮಗಳಿಗೆ ಬಳಸಲು ಅನುವು ಮಾಡಿಕೊಟ್ಟಿದ್ದಾರೆ.

1968: ಕುರುಡರ ಶ್ರೇಯೋಭಿವೃದ್ಧಿಗಾಗಿ ಕೆನಡಿಯನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ (CNIB) ಸ್ಥಾಪಿಸಿದ ಎಡ್ವಿನ್ ಬೇಕರ್ ನಿಧನರಾದರು.

2007: ಖ್ಯಾತ ಜಾನಪದ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ದೇವೇಂದ್ರ ಕುಮಾರ ಸಿ. ಹಕಾರಿ ಅವರು ಅವರು ತಮ್ಮ 78ಮೇ ವಯಸ್ಸಿನಲ್ಲಿ ಧಾರವಾಡದಲ್ಲಿ ನಿಧನರಾದರು.

2014: ಚಲನಚಿತ್ರರಂಗದಲ್ಲಿ ಶ್ರೇಷ್ಠ ಛಾಯಾಗ್ರಾಹಕರೆಂದು ಹೆಸರಾಗಿದ್ದ ದಾದಾ ಫಾಲ್ಕೆ ಪುರಸ್ಕೃತ ವಿ.ಕೆ. ಮೂರ್ತಿ ಬೆಂಗಳೂರಿನಲ್ಲಿ ನಿಧನರಾದರು. ಭಾರತದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ ‘ಕಾಗಜ್ ಕಿ ಫೂಲ್’ ಮತ್ತು ‘ಸಾಹಿಬ್, ಬೀಬಿ ಔರ್ ಗುಲಾಂ’ ಚಿತ್ರದ ಛಾಯಾಗ್ರಹಣಕ್ಕಾಗಿ ಮೂರ್ತಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆವಾಸ ಅನುಭವಿಸಿದ್ದ ಇವರು ರಂಗ ಪ್ರಯೋಗಗಳಲ್ಲಿ ಸಹಾ ಪಾಲ್ಗೊಂಡಿದ್ದರು.

Categories
e-ದಿನ

ಏಪ್ರಿಲ್-06

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 46: ಥಾಪ್ಸಸ್ ಕದನದಲ್ಲಿ ಜೂಲಿಯಸ್ ಸೀಸರನು ಕ್ಯಾಸಿಲಿಯಸ್ ಮೆಟೆಲ್ಲಸ್ ಸ್ಕಿಪಿಯೋ ಮತ್ತು ಮಾರ್ಕಸ್ ಪೋರ್ಷಿಯಸ್ ಕ್ಯಾಟೋ ಅವರನ್ನು ಸೋಲಿಸಿದ.

1808: ಜಾಕಬ್ ಆಸ್ಟರ್ ‘ಅಮೆರಿಕನ್ ಫರ್ ಸಂಸ್ಥೆ’ ಸ್ಥಾಪಿಸಿದರು. ಈ ತುಪ್ಪಳದ ಉದ್ಯಮದ ಯಶಸ್ಸಿನ ಮುಖೇನ ಇವರು ಅಮೆರಿಕದ ಪ್ರಪ್ರಥಮ ಮಿಲಿಯನೇರ್ ಎನಿಸಿದರು.

1861: ಪ್ರಖ್ಯಾತ ಸಂಗೀತ ಸಂಯೋಜಕ ಆರ್ಥರ್ ಸುಲ್ಲಿವಾನ್ ಅವರ ಚೊಚ್ಚಲ ಸಂಯೋಜನೆ ‘ದಿ ಟೆಂಪೆಸ್ಟ್’ ನೆರವೇರಿತು. ಮುಂದೆ ಇವರ ಗಿಲ್ಬರ್ಟ್ ಅಂಡ್ ಸುಲ್ಲಿವಾನ್ ಒಪೇರಾ ಬಹಳ ಜನಪ್ರಿಯಗೊಂಡಿತು.

1869: ಸೆಲ್ಯೂಲಾಯ್ಡಿಗೆ ಪೇಟೆಂಟ್ ನೀಡಲಾಯಿತು

1895: ಆಸ್ಕರ್ ವೈಲ್ಡ್ ಅವರು ಮಾರ್ಕೆಸ್ ಆಫ್ ಕ್ವೀನ್ಬೆರ್ರಿ ಅವರ ವಿರುದ್ಧ ಕಾನೂನು ಸಮರದಲ್ಲಿ ಹಿನ್ನೆಡೆ ಅನುಭವಿಸಿ ಕಾಡೋಗನ್ ಹೋಟೆಲಿನಲ್ಲಿ ಬಂಧಿತರಾದರು.

1896: ಆಧುನಿಕ ಕಾಲದ ಮೊತ್ತ ಮೊದಲ ಒಲಿಂಪಿಕ್ಸ್ ಕ್ರೀಡೆಗಳು ಅಥೆನ್ಸಿನಲ್ಲಿ ಆರಂಭಗೊಂಡವು. 1572 ವರ್ಷಗಳ ಹಿಂದೆ ರೋಮನ್ ಚಕ್ರವರ್ತಿ ಥಿಯೋಡಿಯಸ್ ಒಲಿಂಪಿಕ್ಸ್ ಕ್ರೀಡೆಗಳ ಮೇಲೆ ನಿಷೇದ ಹೇರಿದ ನಂತರದಲ್ಲಿ ಇದೇ ಪ್ರಥಮ ಬಾರಿಗೆ ಈ ಕ್ರೀಡೆಗಳು ಆರಂಭಗೊಂಡವು. ಅಮೆರಿಕದ ಜೇಮ್ಸ್ ಕೊನ್ನೋಲಿ ಮೊದಲ ಒಲಿಂಪಿಕ್ಸ್ ಚಾಂಪಿಯನ್ ಎನ್ನಿಸಿಕೊಂಡರು.

1909:ಅಮೆರಿಕನ್ ಅನ್ವೇಷಕರಾದ ರಾಬರ್ಟ್ ಪೀರಿ ಮತ್ತು ಮ್ಯಾಥ್ಯೂ ಹೆನ್ಸನ್ ಉತ್ತರ ಧ್ರುವವನ್ನು ತಲುಪಿದರು.

1917: ಅಮೆರಿಕವು ಜರ್ಮನಿಯ ವಿರುದ್ಧ ಯುದ್ಧವನ್ನು ಸಾರುವುದರೊಂದಿಗೆ ಮೊದಲನೆಯ ವಿಶ್ವ ಮಹಾಯುದ್ಧಕ್ಕೆ ಪ್ರಾರಂಭ ದೊರಕಿದಂತಾಯಿತು.

1919: ಮಹಾತ್ಮಾ ಗಾಂಧಿಯವರು ಸಾರ್ವಜನಿಕ ಮುಷ್ಕರಕ್ಕೆ ಕರೆಕೊಟ್ಟರು.

1930: ಬ್ರಿಟಿಷ್ ಸರ್ಕಾರವು ಉಪ್ಪಿನ ಮೇಲೆ ಕರ ವಿಧಿಸಿದ್ದನ್ನು ಪ್ರತಿಭಟಿಸಿ ಬೆಳಿಗ್ಗೆ 8.30ರ ವೇಳೆಗೆ ಮಹಾತ್ಮಾ ಗಾಂಧೀಜಿಯವರು ದಂಡಿ ಸಮುದ್ರತೀರದಲ್ಲಿ ಸಾಂಕೇತಿಕವಾಗಿ ಉಪ್ಪು ತಯಾರಿಸಿದರು. ಅಹಮದಾಬಾದಿನ ಸಾಬರಮತಿ ಆಶ್ರಮದಿಂದ ತಮ್ಮ 79 ಮಂದಿ ಅನುಯಾಯಿಗಳೊಂದಿಗೆ ಮಾರ್ಚ್ 12ರಿಂದ ಪಾದಯಾತ್ರೆ ನಡೆಸಿ ಅವರು ಇಲ್ಲಿಗೆ ಆಗಮಿಸಿದರು. ಒಂದು ಹಿಡಿ ಮಣ್ಣು ಮತ್ತು ಉಪ್ಪನ್ನು ಕೈಯಲ್ಲಿ ತೆಗೆದುಕೊಂಡು ಮೇಲೆತ್ತಿದ ಅವರು “ಇದರೊಂದಿಗೆ ನಾನು ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ಅಲುಗಾಡಿಸುತ್ತಿದ್ದೇನೆ” ಎಂದು ಘೋಷಿಸಿದರು.

1980: ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಥಾಪನೆಗೊಂಡಿತು.

2001: ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೆಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಮ್ಮ 100ನೇ ವಿಕೆಟ್ ಗಳಿಸಿದ್ದಲ್ಲದೆ, 10,000 ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾದ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತು ಮಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಕ್ಕೆ ತಿದ್ದುಪಡಿ ತರಲಾಯಿತು.

2008: ಮಹಿಳೆಯರನ್ನು ಅವರ ಬಣ್ಣದ ಆಧಾರದಲ್ಲಿ ‘ಕಪ್ಪು ಮಹಿಳೆ’ ಎಂದು ಜರಿದರೆ, ಅಥವಾ ‘ಕುರೂಪಿ’ ಎಂದು ಹಳಿದರೆ, ಅದು ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಯಾಗುತ್ತದೆ. ಇಂತಹ ವರ್ತನೆ ಶಿಕ್ಷಾರ್ಹ ಅಪರಾಧ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತು.

2009: ರಾಹುಲ್ ದ್ರಾವಿಡ್ ಅವರು ವೆಲಿಂಗ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 182ನೇ ಕ್ಯಾಚ್ ಹಿಡಿಯುವುದರ ಮೂಲಕ, ಆಸ್ಟ್ರೇಲಿಯಾದ ಮಾರ್ಕ್ ವಾ ಅವರ ಹೆಸರಿನಲ್ಲಿದ್ದ 181 ಟೆಸ್ಟ್ ಕ್ಯಾಚ್‌ಗಳ ವಿಶ್ವ ದಾಖಲೆಯನ್ನು ಮುರಿದರು.

ಪ್ರಮುಖಜನನ/ಮರಣ:

1911: ಜರ್ಮನ್ ಜೈವಿಕ ವಿಜ್ಞಾನಿ ಫಿಯೋಡೋರ್ ಫೆಲಿಕ್ಸ್ ಲಿನೆನ್ ಮ್ಯೂನಿಚ್ ನಗರದಲ್ಲಿ ಜನಿಸಿದರು. ಕೊಲೆಸ್ಟೆರೋಲ್ ಮತ್ತು ಫ್ಯಾಟಿ ಆಸಿಡ್ ಮೆಟಬಾಲಿಸಮ್ ಕುರಿತಾದ ಸಂಶೋಧನೆ ಮತ್ತು ನಿಯಂತ್ರಣಗಳಿಗಾಗಿ ಇವರಿಗೆ 1964 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

1911: ಸ್ವಿಸ್ ಜೈವಿಕ ವಿಜ್ಞಾನಿ ಎಡ್ಮಂಡ್ ಹೆಚ್ ಫಿಷರ್ ಚೀನಾದ ಶಾಂಘೈ ನಗರದಲ್ಲಿ ಜನಿಸಿದರು. ಪ್ಹಾಸ್ಫೋರಿಲೇಶನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1992 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

1928: ಅಮೆರಿಕದ ಜೀವವಿಜ್ಞಾನಿ ಜೇಮ್ಸ್ ಡೆವಿ ವಾಟ್ಸನ್ ಅವರು ಚಿಕಾಗೋ ನಗರದಲ್ಲಿ ಜನಿಸಿದರು. ನ್ಯೂಕ್ಲಿಯಿಕ್ ಆಸಿಡ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1962 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

1949: ಜರ್ಮನಿಯ ಭೌತವಿಜ್ಞಾನಿ ಹೊರ್ಸ್ಟ್ ಲುಡ್ವಿಗ್ ಸ್ಟಾರ್ಮರ್ ಅವರು ಫ್ರಾಂಕ್ ಫ಼ರ್ಟ್ ನಗರದಲ್ಲಿ ಜನಿಸಿದರು. ನೂತನ ಕ್ವಾಂಟಮ್ ಫ್ಲ್ಯೂಯಿಡ್ಸ್ ಸಂಶೋಧನೆಗಾಗಿ ಇವರಿಗೆ 1998 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

1956: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್, ಕೋಚ್ ಮತ್ತು ಆಯ್ಕೆದಾರರಾಗಿದ್ದ ದಿಲೀಪ್ ವೆಂಗ್ಸರ್ಕರ್ ಅವರು ಮಹಾರಾಷ್ಟ್ರದ ರಾಜ್ಪುರ್ ಎಂಬಲ್ಲಿ ಜನಿಸಿದರು.

1961: ಬೆಲ್ಜಿಯನ್ ವೈದ್ಯವಿಜ್ಞಾನಿ ಜೂಲ್ಸ್ ಬಾರ್ಡೆಟ್ ಬ್ರಸ್ಸೆಲ್ಸ್ ನಗರದಲ್ಲಿ ನಿಧನರಾದರು. ಇಮ್ಯ್ಯೂನಿಟಿ ಕುರಿತಾದ ಇವರ ಸಂಶೋಧನೆಗೆ 1919 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1983: 1962-66 ಅವಧಿಯಲ್ಲಿ ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜಯಂತೋ ನಾಥ್ ಚೌಧುರಿ ನಿಧನರಾದರು. ಇವರಿಗೆ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಮತ್ತು ಭಾರತ ಸರ್ಕಾರದ ಪದ್ಮಭೂಷಣ ಗೌ: ಮಹಾನಟ ಚಾರ್ಲಟನ್ ಹೆಸ್ಟನ್ ಅವರು ಲಾಸ್ ಏಂಜಲಿಸ್ ನಗರದಲ್ಲಿ ತಮ್ಮ 84ನೆಯ ವಯಸ್ಸಿನಲ್ಲಿ ನಿಧನರಾದರು. ಟೆನ್ ಕಮಾಂಡ್ಮೆಂಟ್ಸ್ ಚಿತ್ರದಲ್ಲಿ ಇವರ ಮೊಸೆಸ್ ಪಾತ್ರ ಪ್ರಖ್ಯಾತಿ ಪಡೆದಿತ್ತು. ಇದಲ್ಲದೆ 1950ರ ದಶಕದಲ್ಲಿ ತೆರೆಗೆ ಬಂದ ಬೆನ್ಹರ್ ಚಿತ್ರದಲ್ಲಿ ನೀಡಿದ ಇವರ ಅಭಿನಯಕ್ಕೆ ಆಸ್ಕರ್ ಗೌರವ ಸಂದಿತ್ತು.ರವಗಳು ಸಂದಿದ್ದವು.

2008: ಮಹಾನಟ ಚಾರ್ಲಟನ್ ಹೆಸ್ಟನ್ ಅವರು ಲಾಸ್ ಏಂಜಲಿಸ್ ನಗರದಲ್ಲಿ ತಮ್ಮ 84ನೆಯ ವಯಸ್ಸಿನಲ್ಲಿ ನಿಧನರಾದರು. ಟೆನ್ ಕಮಾಂಡ್ಮೆಂಟ್ಸ್ ಚಿತ್ರದಲ್ಲಿ ಇವರ ಮೊಸೆಸ್ ಪಾತ್ರ ಪ್ರಖ್ಯಾತಿ ಪಡೆದಿತ್ತು. ಇದಲ್ಲದೆ 1950ರ ದಶಕದಲ್ಲಿ ತೆರೆಗೆ ಬಂದ ಬೆನ್ಹರ್ ಚಿತ್ರದಲ್ಲಿ ನೀಡಿದ ಇವರ ಅಭಿನಯಕ್ಕೆ ಆಸ್ಕರ್ ಗೌರವ ಸಂದಿತ್ತು.

Categories
e-ದಿನ

ಏಪ್ರಿಲ್-05

ಪ್ರಮುಖಘಟನಾವಳಿಗಳು:

1900: ಪುರಾತತ್ವಶಾಸ್ತ್ರಜ್ಞರಾದ ನಾಸ್ ಮತ್ತು ಕ್ರೇಟ್ ಅವರು ಹೀರೋಗ್ಲಿಫಿಕ್ ಬರಹಗಳಿದ್ದ ಬೃಹತ್ ಗಾತ್ರದ ಮಣ್ಣಿನ ಫಲಕಗಳನ್ನು ಅನ್ವೇಷಿಸಿದರು. ಮುಂದೆ ಇದರಲ್ಲಿದ್ದ ಲಿಪಿಯನ್ನು ಅವರು ‘ಲಿನಿಯರ್ ಬಿ’ ಎಂದು ಕರೆದರು.

1915: ಕ್ಯೂಬಾದ ಹವಾನಾದಲ್ಲಿ ಅಮೆರಿಕದ ಬಾಕ್ಸರ್ ಜೆಸ್ ವಿಲ್ಲರ್ಡ್ ಅವರು ತಮ್ಮ ದೇಶದವರೇ ಆದ ಜಾಕ್ ಜಾನ್ಸನ್ ಅವರನ್ನು ಸೋಲಿಸಿ ವಿಶ್ವ ಹೆವಿ ವೈಟ್ ಚಾಂಪಿಯನ್ ಆದರು.

1942: ಎರಡನೇ ವಿಶ್ವಮಹಾಯುದ್ಧದಲ್ಲಿ ಇಂಪೀರಿಯಲ್ ಜಪಾನೀ ನೌಕಾದಳವು, ಸಿಲೋನಿನ ಕೊಲಂಬೋ ಬಳಿಯ ಹಿಂದೂ ಮಹಾಸಾಗರದ ನೆಲೆಯಲ್ಲಿ ದಾಳಿ ನಡೆಸಿ, ಅಲ್ಲಿನ ಬಂದರು ಮತ್ತು ಸಾವರ್ಜನಿಕ ವ್ಯವಸ್ಥೆಗಳಿಗೆ ಹಾಳುಗೆಡವಿ, ರಾಯಲ್ ನೆವಿ ಕ್ರೂಯಿಸರ್ಸ್ ಎಚ್.ಎಮ್.ಎಸ್. ಕಾರ್ನಿವಾಲ್ ಮತ್ತು ಎಚ್.ಎಮ್.ಎಸ್. ಡೊರೆಟ್ ಶೈರ್ ನೌಕೆಗಳನ್ನು ಮುಳುಗಿಸಿತು.

1949: ಬಾಲಕರ ಸ್ಕೌಟ್ಸ್ ಮತ್ತು ಬಾಲಕಿಯರ ಗೈಡ್ಸ್ ಗಳನ್ನು ಒಂದುಗೂಡಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಲಾಯಿತು.

1956: ಶ್ರೀಲಂಕಾದಲ್ಲಿ ಮಹಾಜನ್ ಏಕ್ಸಾಥ್ ಪೆರಾಮುನಾ ಪಕ್ಷವು ಚುನಾವಣೆಗಳಲ್ಲಿ ಜಯಗಳಿಸಿ, ಎಸ್.ಡಬ್ಲ್ಯೂ.ಆರ್. ಡಿ. ಬಂಡಾರನಾಯ್ಕೆ ಅವರು ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

1957: ಕೇರಳ ರಾಜ್ಯದಲ್ಲಿನ ಪ್ರಥಮ ಚುನಾವಣೆಗಳಲ್ಲಿ ಕಮ್ಯೂನಿಸ್ಟ್ ಪಕ್ಷವು ಅಧಿಕಾರಕ್ಕೆ ಬಂದು, ಇ.ಎಮ್.ಎಸ್. ನಂಬೂದರಿಪಾದ್ ಅವರು ಪ್ರಥಮ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು

1985: ಬೀದರಿನಲ್ಲಿ ಡಾ. ಹಾ.ಮಾ. ನಾಯಕ್ ಅವರ ಸಮ್ಮೆಳನಾಧ್ಯಕ್ಷತೆಯಲ್ಲಿ 57ನೇ ಕನ್ನಡ ಸಾಹಿತ್ಯ ಸಮ್ಮೇಳನವು ಆರಂಭಗೊಂಡಿತು.

1998: ವಿಶ್ವದ ಅತಿದೊಡ್ಡ ಸಸ್ಪೆನ್ಷನ್ ಸೇತುವೆಯಾದ ಜಪಾನಿನ ‘ಆಕಾಶಿ ಕೈಕ್ಯೋ’ ಸಂಚಾರಕ್ಕೆ ತೆರೆದುಕೊಂಡಿತು.

2006: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಶೇಕಡಾ 50 ಮೀಸಲಾತಿ ಕಲ್ಪಿಸುವ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತು.

2008: ಚಾಮರಾಜಪೇಟೆಯ ರಾಮಸೇವಾ ಮಂಡಲಿಯ ಎಸ್. ವಿ. ನಾರಾಯಣ ಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಪಿಟೀಲು ವಿದ್ವಾಂಸ ಟಿ.ಎನ್. ಕೃಷ್ಣನ್ ಅವರು ಆಯ್ಕೆಯಾದರು.

2009: ರಾಜಧಾನಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಅಲ್ಲಿನ ಐತಿಹಾಸಿಕ ‘ಕಾಫಿ ಹೌಸ್’ ಇಂದು ನೇಪಥ್ಯಕ್ಕೆ ಸರಿಯಿತು. ‘ಕಾಫಿ ಹೌಸ್’ ಶಾಖೆಗಳು ನಗರದ ಇತರೆಡೆಗಳಲ್ಲಿವೆ.

ಪ್ರಮುಖಜನನ/ಮರಣ:

1649: ಇಂಗ್ಲಿಷ್ ವರ್ತಕ ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಯಾಗಿದ್ದ ಎಲಿಹು ಯಾಲೆ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಇವರು ಮದ್ರಾಸಿನಲ್ಲಿ ಫೋರ್ಟ್ ಸೇಂಟ್ ಜಾರ್ಜಿನ ಗವರ್ನರ್ ಆಗಿದ್ದರು. ಇವರ ನೆರವಿನಿಂದ ಕಾಲೇಜಿಯೇಟ್ ಶಾಲೆ ಆರಂಭಗೊಂಡಿತು. ಮುಂದೆ ಇವರ ಗೌರವಾರ್ಥ ಇದರ ಹೆಸರನ್ನು ಯಾಲೆ ಕಾಲೇಜು ಎಂದು ಹೆಸರಿಸಲಾಯಿತು.

1827: ಬ್ರಿಟಿಷ್ ಸರ್ಜನ್ ಹಾಗೂ ವೈದ್ಯಕೀಯ ವಿಜ್ಞಾನಿ ಸರ್ ಜೋಸೆಫ್ ಲಿಸ್ಟರ್ ಇಂಗ್ಲೆಂಡಿನ ಉಪ್ಟನ್ ಹೌಸ್ ಎಂಬಲ್ಲಿ ಜನಿಸಿದರು. ಇವರು ನಂಜು ನಿರೋಧಕ (ಆಂಟಿಸೆಪ್ಟಿಕ್) ಔಷಧಿಯನ್ನು ಕಂಡು ಹಿಡಿದರು.

1908: ಸ್ವಾತಂತ್ರ್ಯ ಪೂರ್ವದಿಂದಲೇ ಹಿಂದುಳಿದ ವರ್ಗಗಳ ನಾಯಕರಾಗಿ ರೂಪುಗೊಂಡು ಉಪಪ್ರಧಾನಿ ಸ್ಥಾನದವರೆಗೆ ಏರಿದ ಬಾಬು ಜಗಜೀವನ್ ರಾಮ್ ಅವರು ಬಿಹಾರದ ಚಾಂದ್ವಾ ಎಂಬಲ್ಲಿ ಜನಿಸಿದರು.

1929: ನಾರ್ವೆಯನ್-ಅಮೆರಿಕನ್ ಭೌತಶಾಸ್ತ್ರಜ್ಞ ಇವಾರ್ ಗಿಯೇವರ್ ಅವರು ನಾರ್ವೆಯ ಬೆರ್ಗೆನ್ ಎಂಬಲ್ಲಿ ಜನಿಸಿದರು. ‘ಟನೆಲಿಂಗ್ ಫಿನಾಮಿನ ಇನ್ ಫ್ಲೂಯಿಡ್ಸ್ ಕುರಿತಾದ’ ಅನ್ವೇಷಣೆಗಾಗಿ ಇವರಿಗೆ 1973 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1951: ಕನ್ನಡದ ಜನಪ್ರಿಯ ಚಲನಚಿತ್ರ ನಟಿ ಮಂಜುಳಾ ಅವರು ತುಮಕೂರಿನಲ್ಲಿ ಜನಿಸಿದರು. ನಾಯಕ ನಟರಿಗೆ ಪ್ರಾಧಾನ್ಯತೆಗಳಿರುವ ಚಿತ್ರರಂಗದಲ್ಲಿ ಅದಕ್ಕೆ ಸರಿ ಸಮಾನವಾಗಿ ಜೊತೆ ಜೊತೆಯಾದ ಪಾತ್ರಗಳನ್ನು ಅಷ್ಟೇ ಸಮ ಮಹತ್ವದಲ್ಲಿ ನಟಿಸಿದ ಅಪರೂಪದ ನಟಿ ಎಂದು ಮಂಜುಳ ಖ್ಯಾತರಾಗಿದ್ದರು.

1940: ಇಂಗ್ಲಿಷ್ ಭಾರತೀಯ ಮಿಷಿನರಿ, ಶಿಕ್ಷಣ ತಜ್ಞ ಮತ್ತು ಗಾಂಧೀಜಿ ಆಪ್ತರಾದ ಚಾರ್ಲ್ಸ್ ಫ್ರೀರ್ ಆಂಡ್ರೂಸ್ ಕೋಲ್ಕತ್ತದಲ್ಲಿ ನಿಧನರಾದರು. ಮಹಾತ್ಮ ಗಾಂಧೀ ಅವರನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವಂತೆ ಮನವೊಲಿಸಿದವರಲ್ಲಿ ಇವರು ಪ್ರಮುಖರಾಗಿದ್ದರು.

1967: ಅಮೆರಿಕದ ವೈದ್ಯ ವಿಜ್ಞಾನಿ ಹೆರ್ಮಾನ್ ಜೋಸೆಫ್ ಮುಲ್ಲರ್ ಅವರು ಇಂಡಿಯಾನಾ ಪೊಲಿಸ್ ಎಂಬಲ್ಲಿ ನಿಧನರಾದರು. ‘ಭೌತಿಕವಾಗಿ ಹಾಗೂ ಅನುವಂಶೀಯಕವಾಗಿ ರೇಡಿಯೇಶನ್ ಇಂದ ಆಗುವ ಪರಿಣಾಮಗಳ ಕುರಿತಾಗಿ’ ನೀಡಿದ ಸಂಶೋಧನಾತ್ಮಕ ವಿವರಗಳಿಗಾಗಿ ಇವರಿಗೆ 1946ರ ವರ್ಷದಲ್ಲಿ ನೊಬೆಲ್ ವೈದ್ಯ ಪುರಸ್ಕಾರ ಸಂದಿತ್ತು.

1993: ಚಲನಚಿತ್ರ ನಟಿ ದಿವ್ಯಾ ಭಾರತಿ ಅವರು ಮುಂಬೈನಲ್ಲಿ ತಾವಿದ್ದ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವಿಗೀಡಾದರು.

2005: ಕೆನಡಾ-ಅಮೆರಿಕದ ಸಾಹಿತಿ ಸಾವ್ಲ್ ಬೆಲ್ಲೋ ಬ್ರೂಕ್ಲಿನ್ ನಗರದಲ್ಲಿ ನಿಧನರಾದರು. ಇವರಿಗೆ 1976ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತ್ತು.

2007: ತಮ್ಮ ವಿಶಿಷ್ಟ ಕಥೆ, ಕಾದಂಬರಿ ಹಾಗೂ ವೈಜ್ಞಾನಿಕ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟರಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಚಿಕ್ಕಮಗಳೂರು ಜಿಲ್ಲೆಯ ಹಳೆ ಮೂಡಿಗೆರೆ ನಿಂಬೆಮೂಲೆಯಲ್ಲಿನ ತಮ್ಮ ಸ್ವಗೃಹ ‘ನಿರುತ್ತರ’ದಲ್ಲಿ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಇವರು ಪಾತ್ರರಾಗಿದ್ದರು. ಅವರ ತಬರನ ಕಥೆ, ಅಬಚೂರಿನ ಪೋಸ್ಟಾಫೀಸ್, ಕುಬಿ ಮತ್ತು ಇಯಾಲ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಮುಖ ಸಾಧನೆಗಳನ್ನು ಮಾಡಿದ್ದವು.

2007: ಬಂಗಾಳಿ ಲೇಖಕಿ ಲೀಲಾ ಮಜುಂದಾರ್ ಕೋಲ್ಕತ್ತದಲ್ಲಿ ನಿಧನರಾದರು. ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರದ ಪುರಸ್ಕಾರ, ರಬೀಂದ್ರ ಪುರಸ್ಕಾರ, ದೇಶಿಕೊತ್ತಮ ಪುರಸ್ಕಾರಗಳು ಸಂದಿದ್ದವು.

2013: ಭಾರತೀಯ ಇತಿಹಾಸಜ್ಞ ಮತ್ತು ಶಿಕ್ಷಣ ತಜ್ಞ ಮೊಹಮ್ಮದ್ ಇಷಾಕ್ ಖಾನ್ ನಿಧನರಾದರು. ಇವರ ಬರಹಗಳು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಇತಿಹಾಸಜ್ಞರ ಗೌರವಕ್ಕೆ ಪಾತ್ರವಾಗಿದ್ದವು.

Categories
e-ದಿನ

ಏಪ್ರಿಲ್-04

ಪ್ರಮುಖಘಟನಾವಳಿಗಳು:

1147: ಚರಿತ್ರೆಯಲ್ಲಿ ಮಾಸ್ಕೋದ ಕುರಿತು ಪ್ರಥಮ ಮಾಹಿತಿ ಈ ದಿನದಲ್ಲಿ ದಾಖಲಾಗಿದೆ.

1721: ಸರ್ ರಾಬರ್ಟ್ ವಾಲ್ ಪೋಲ್ ಅವರು ಯುನೈಟೆಡ್ ಕಿಂಗ್ಡಂನ ಪ್ರಥಮ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು

1768: ಲಂಡನ್ನಿನಲ್ಲಿ ಫಿಲಿಪ್ ಆಸ್ಲೆ ಅವರು ಪ್ರಥಮ ಆಧುನಿಕ ಸರ್ಕಸ್ ಪ್ರದರ್ಶನ ನೀಡಿದರು

1814: ನೆಪೋಲಿಯನ್ ಪ್ರಥಮ ಬಾರಿಗೆ ಸಿಂಹಾಸನ ತ್ಯಾಗಮಾಡಿ ತನ್ನ ಮಗ ಎರಡನೆ ನೆಪೋಲಿಯನ್ ಅನ್ನು ಫ್ರೆಂಚ್ ಚಕ್ರವರ್ತಿಯಾಗಿ ಹೆಸರಿಸಿದ.

1818: ಅಮೆರಿಕದ ಧ್ವಜವು 13 ಕೆಂಪು ಮತ್ತು ಬಿಳಿ ಪಟ್ಟಿಗಳನ್ನು ಹಾಗೂ ಪ್ರತಿ ಹೊಸ ರಾಜ್ಯಕ್ಕೆ ಒಂದು ನಕ್ಷತ್ರವನ್ನು ಹೊಂದಿರಬೇಕು (ಅಂದರೆ ಒಟ್ಟು 20 ನಕ್ಷತ್ರಗಳನ್ನು ಹೊಂದಿರಬೇಕು) ಎಂದು ಅಮೆರಿಕ ಕಾಂಗ್ರೆಸ್ ನಿರ್ಧರಿಸಿತು.

1905: ಭಾರತದ ಕಾಂಗ್ರಾ ಕಣಿವೆಯಲ್ಲಿ ಭೂಕಂಪ ಉಂಟಾಗಿ 20,000 ಜನ ಸಾವಿಗೀಡಾಗಿ, ಕಾಂಗ್ರಾ, ಮೆಕ್ ಲಿಯೋಡ್ ಗಂಜ್ ಮತ್ತು ಧರ್ಮಶಾಲಾಗಳಲ್ಲಿನ ಬಹುತೇಕ ಕಟ್ಟಡಗಳು ನಾಶಗೊಂಡವು.

1957: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಮೈಸೂರು ಸರ್ಕಾರವು ತೀರ್ಮಾನಿಸಿತು.

1958: ಲಂಡನ್ನಿನಲ್ಲಿ ಪರಮಾಣು ನಿಶ್ಯಸ್ತ್ರೀಕರಣ ಪ್ರಚಾರದ (CND) ಶಾಂತಿ ಚಿಹ್ನೆಯನ್ನು ಪ್ರಪ್ರಥಮವಾಗಿ ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು.

1967: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ‘ಬಿಯಾಂಡ್ ವಿಯೆಟ್ನಾಮ್: ಎ ಟೈಮ್ ಟು ಬ್ರೇಕ್ ಸೈಲೆನ್ಸ್’ ಭಾಷಣವನ್ನು ನ್ಯೂಯಾರ್ಕಿನ ರಿವರ್ ಸೈಡ್ ಚರ್ಚಿನಲ್ಲಿ ಮಾಡಿದರು

1968: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಜೇಮ್ಸ್ ಅರ್ಲ್ ರೇ ಟೆನ್ನೆಸ್ಸೀಯ ಮೆಂಫಿಸ್ ನಲ್ಲಿ ಹತ್ಯೆ ಮಾಡಿದ.

1969: ಡಾ. ಡೆಂಟನ್ ಕೂಲೈ ಅವರು ಪ್ರಥಮ ಕೃತಕ ಹೃದಯವನ್ನು ಅಳವಡಿಸಿದರು

1973: ವರ್ಲ್ಡ್ ಟ್ರೇಡ್ ಸೆಂಟರ್ ಅಧಿಕೃತವಾಗಿ ನ್ಯೂಯಾರ್ಕ್ ನಗರದಲ್ಲಿ ಅರ್ಪಣೆಗೊಂಡಿತು.

1975: ಮೈಕ್ರೋಸಾಫ್ಟ್ ಸಂಸ್ಥೆಯು ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ ಅವರ ಪಾಲುದಾರಿಕೆಯಲ್ಲಿ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ ನಗರದಲ್ಲಿ ಪ್ರಾರಂಭಗೊಂಡಿತು.

1979: ಪಾಕಿಸ್ಥಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ರಾವಲ್ಪಿಂಡಿಯಲ್ಲಿ ಗಲ್ಲಿಗೇರಿಸಲಾಯಿತು.

1983: ಬಾಹ್ಯಾಕಾಶ ನೌಕೆ ಚಾಲೆಂಜರ್ ತನ್ನ ಪ್ರಥಮ ಗಗನಯಾನವನ್ನು ಕೈಗೊಂಡಿತು.

2006: ಬೆಂಗಳೂರಿನ ಚಿತ್ರಾ ಮಾಗಿಮೈರಾಜ್ ಅವರು ಇಂಗ್ಲೆಂಡಿನ ಕೇಂಬ್ರಿಜ್ನಲ್ಲಿ ನಡೆದ ವಿಶ್ವ ಮಹಿಳೆಯರ ಬಿಲಿಯರ್ಡ್ಸ್ ಪಂದ್ಯದಲ್ಲಿ ಇಂಗ್ಲೆಂಡಿನ ಎಮ್ಮಾ ಬಾನ್ನಿ ಅವರನ್ನು 193-164 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಕಿರೀಟ ಗೆದ್ದುಕೊಂಡರು.

2007: ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ. ಮಾಲತಮ್ಮ ಅವರು ಕರ್ನಾಟಕ ರಾಜ್ಯ ಸರ್ಕಾರವು ನೀಡುವ ‘ಗುಬ್ಬಿ ವೀರಣ್ಣ’ ಪ್ರಶಸ್ತಿಗೆ ಆಯ್ಕೆಯಾದರು.

2007: ಲೀಗ್ ಹಂತದಲ್ಲಿಯೇ ವಿಶ್ವಕಪ್ ಕ್ರಿಕೆಟಿನಿಂದ ಭಾರತವು ನಿರ್ಗಮಿಸಿದ ನಂತರ ಭುಗಿಲೆದ್ದ ವಿವಾದಗಳ ಹಿನ್ನೆಲೆಯಲ್ಲಿ ಕೋಚ್ ಗ್ರೆಗ್ ಚಾಪೆಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2013: ಮಹಾರಾಷ್ಟ್ರದ ಥಾನೆಯಲ್ಲಿ ಕಟ್ಟಡವೊಂದು ಕುಸಿದು 70 ಜನ ಮೃತರಾದರು.

ಪ್ರಮುಖಜನನ/ಮರಣ:

1826: ಪ್ರಸಿದ್ಧ ಎಲೆಕ್ಟ್ರಿಕಲ್ ತಂತ್ರಜ್ಞ ಜೆನೋಬ್ ಗ್ರಾಮ್ಮೆ ಅವರು ಬೆಲ್ಜಿಯಂ ದೇಶದ ಜೆಹಾಯ್-ಬೊಡೆಜ್ಞೆ ಎಂಬಲ್ಲಿ ಜನಿಸಿದರು. ಅವರು ಎಲೆಕ್ಟ್ರಿಕ್ ವ್ಯವಸ್ಥೆಗೆ ಪರ್ಯಾಯವಾಗಿ ತಾತ್ಕಾಲಿಕ ವಿದ್ಯುತ್ ಒದಗಿಸುವ ಡೈನಮೋದಂತಹ ಗ್ರಾಮ್ಮೆ ಯಂತ್ರವನ್ನು ಸೃಷ್ಟಿಸಿದ್ದರು. ಈ ಯಂತ್ರ ಅಂದಿನ ದಿನಗಳವರೆಗೆ ಇದ್ದ ಡೈನಮೋಗಳಿಗಿಂತ ಸುಗಮವಾಗಿ ಹೆಚ್ಚಿನ ವೋಲ್ಟೇಜ್ ಹರಿಸುವಂತಹ ಸಾಮರ್ಥ್ಯ ಹೊಂದಿತ್ತು.

1869: ಕಟ್ಟಡಗಳ ನಿರ್ಮಾಣದಲ್ಲಿ ಮಹಿಳೆಯರು ಅಪರೂಪವಾಗಿದ್ದ ಕಾಲದಲ್ಲಿ ಪ್ರಸಿದ್ಧ ಕಟ್ಟಡ ವಿನ್ಯಾಸಕಾರರಾಗಿದ್ದ ಮೇರಿ ಎಲಿಜಬೆತ್ ಕೊಲ್ಟರ್ ಅವರು ಅಮೆರಿಕದ ಪಿಟ್ಸ್ ಬರ್ಗ್ ನಗರದಲ್ಲಿ ಜನಿಸಿದರು. ಗ್ರಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್, ಹೋಪಿ ಹೌಸ್, ಹರ್ಮಿಟ್ಸ್ ರೆಸ್ಟ್, ಲುಕ್ ಔಟ್ ಸ್ಟುಡಿಯೋ, ಡೆಸರ್ಟ್ ವ್ಯೂ ವಾಚ್ ಟವರ್ ಮುಂತಾದ ಅನೇಕ ಪ್ರಸಿದ್ಧ ವಿನ್ಯಾಸಗಳಿಗೆ ಇವರು ಹೆಸರಾಗಿದ್ದಾರೆ.

1889: ಭಾರತೀಯ ಸ್ವಾತಂತ್ಯ್ರ ಹೋರಾಟಗಾರ, ಕವಿ, ನಾಟಕಕಾರ ಮತ್ತು ಪತ್ರಕರ್ತ ಮಖನಲಾಲ್ ಚತುರ್ವೇದಿ ಅವರು ಮಧ್ಯಪ್ರದೇಶದ ಬಾಬೈ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರು ಹಿಂದೀ ಭಾಷೆಯ ಛಾಯಾವಾದ್ ಪರಂಪರೆಯ ಮಹತ್ವದ ಬರಹಗಾರರೆನಿಸಿದವರು. 1968 ವರ್ಷದಲ್ಲಿ ನಿಧನರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1936: ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಬರಹಗಾರರಾದ ಶ್ರೀನಿವಾಸ ವೈದ್ಯರು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು. ಇವರ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ 2004ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, 2008ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1938: ಭಾರತೀಯ ಸಂಜಾತ ಅಮೇರಿಕನ್ ವಿಜ್ಞಾನಿ ಆನಂದ ಮೋಹನ್ ಚಕ್ರವರ್ತಿ ಅವರು ಪಶ್ಚಿಮ ಬಂಗಾಳದ ಸೈನ್ಥಿಯಾ ಎಂಬಲ್ಲಿ ಜನಿಸಿದರು. ಇವರು ಪ್ಲಾಸ್ಮಿಡ್ ಬಳಕೆಯ ಮೂಲಕ ಕೃತಕ ಸೂಕ್ಷ್ಮ ಜೀವಿಯನ್ನು ಅಭಿವೃದ್ಧಿ ಪಡಿಸಿ ಪೇಟೆಂಟ್ ಪಡೆಯುವಲ್ಲಿ ಯಶಸ್ವಿಯಾದರು.

1945: ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪರಿಚಿತರಾದ ಲಲಿತಾ ನಾಯಕ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯ ಎಂಬಲ್ಲಿ ಜನಿಸಿದರು. ಬರಹಗಾರ್ತಿಯಾದ ಇವರು ಹಲವು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಕಾರ್ಯನಿರ್ವಹಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಇವರಿಗೆ ಸಂದಿವೆ.

397: ಆರ್ಚ್ ಬಿಷಪ್ ಮತ್ತು ಸಂತರಾದ ಅಂಬ್ರೋಸ್ ಅವರು ರೋಮ್ ಸಾಮ್ರಾಜ್ಯದ ಇಟಲಿಯಲ್ಲಿ ನಿಧನರಾದರು.

1929: ಮರ್ಸಿಡಿಸ್ ಬೆಂಜ್ ಸಂಸ್ಥಾಪಕ ಕಾರ್ಲ್ ಬೆನ್ಸ್ ಜರ್ಮನಿಯ ಲಾಡೆನ್ ಬರ್ಗ್ ಎಂಬಲ್ಲಿ ನಿಧನರಾದರು.

1968: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಜೇಮ್ಸ್ ಅರ್ಲ್ ರೇ ಟೆನ್ನೆಸ್ಸೀಯ ಎಂಬಾತ ಮೆಂಫಿಸ್ ನಲ್ಲಿ ಹತ್ಯೆ ಮಾಡಿದ.

1987: ಸಚ್ಚಿದಾನಂದ ಹೀರಾನಂದ ವಾತ್ಸಾಯನ ಅವರು ನವದೆಹಲಿಯಲ್ಲಿ ನಿಧನರಾದರು. ‘ನಯೀ ಕವಿತಾ’ ಮತ್ತು ‘ಪ್ರಯೋಗ್’ಗಳಿಗೆ ಹೆಸರಾದ ‘ಅಜ್ನೇಯಾ’ ಕಾವ್ಯನಾಮದ ಖ್ಯಾತ ಹಿಂದಿ ಕವಿಗಳಾದ ಇವರಿಗೆ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಗೋಲ್ಡನ್ ರೀತ್ ಅವಾರ್ಡ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

2007: ಬೆಂಗಳೂರಿನ ಪ್ರತಿಷ್ಠಿತ ಗಂಗಾರಾಮ್ಸ್ ಪುಸ್ತಕ ಮಳಿಗೆಯ ಮಾಲೀಕ ಎನ್. ಗಂಗಾರಾಮ್ ನಿಧನರಾದರು.

2009: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರು ತಮ್ಮ 86ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲುವಾಸ ಅನುಭವಿಸಿದ್ದರು ಇವರು ಕರ್ನಾಟಕ ಏಕೀಕರಣ ಚಳವಳಿ ಮುಖಂಡರಲ್ಲಿ ಒಬ್ಬರಾಗಿದ್ದು, ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಂಸದೀಯ ವ್ಯವಹಾರ ಹಾಗೂ ಮುಜರಾಯಿ ಸಚಿವರಾಗಿದ್ದರು ಹಾಗೂ 2000-2001ರಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

Categories
e-ದಿನ

ಏಪ್ರಿಲ್-03

ಪ್ರಮುಖಘಟನಾವಳಿಗಳು:

1885: ಗೊಟ್ಟಿಲೆಬ್ ಡೈಮ್ಲರ್ ಅವರಿಗೆ ಇಂಜಿನ್ ವಿನ್ಯಾಸಕ್ಕಾಗಿ ಪೇಟೆಂಟ್ ಸಂದಿತು

1922: ಜೋಸೆಫ್ ಸ್ಟಾಲಿನ್ ಅವರು ಸೋವಿಯತ್ ಯೂನಿಯನ್ನಿನ ಕಮ್ಮ್ಯೂನಿಸ್ಟ್ ಪಕ್ಷದ ಪ್ರಥಮ ಪ್ರಧಾನ ಕಾರ್ಯದರ್ಶಿಗಳಾದರು.

1933: ಮಾರ್ಕಿಸ್ ಕ್ಲೈಡೆಸ್ ಡೇಲ್ ಅವರು ಎವರೆಸ್ಟ್ ಶಿಖರದ ಮೇಲೆ ಪ್ರಪ್ರಥಮ ವಿಮಾನ ಹಾರಾಟ ನಡೆಸಿದರು. ಅವರ ಈ ಸಾಹಸಕ್ಕೆ ಲೂಸಿ ಲೇಡಿ ಹೌಸ್ಟನ್ ಅವರು ಆರ್ಥಿಕ ಸಹಕಾರ ನೀಡಿದರು.

1948: ಅಮೆರಿಕದ ಅಧ್ಯಕ್ಷರಾದ ಹ್ಯಾರಿ ಎಸ್. ಟ್ರೂಮನ್ ಅವರು 16 ರಾಷ್ಟ್ರಗಳಿಗೆ ಆರ್ಥಿಕ ಸಹಾಯ ನೀಡುವ ಮಾರ್ಷಲ್ ಯೋಜನೆಗೆ ಸಹಿ ಮಾಡಿದರು.

1948: ದಕ್ಷಿಣ ಕೊರಿಯಾದ ಜೆಜು ಪ್ರಾಂತ್ಯದಲ್ಲಿ ಮಾನವೀಯ ಹಕ್ಕುಗಳ ಮೇಲೆ ಅತಿಕ್ರಮಣ ನಡೆದು ಅಂತರ್ಯುದ್ಧದ ವಾತಾವರಣ ನಿರ್ಮಾಣಗೊಂಡಿತು.

1968: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ‘ನಾನು ಪರ್ವತದ ತುದಿಗೆ ಹೋಗಿದ್ದೆ’ (I’ve Been to the Mountaintop) ಎಂಬ ಭಾಷಣವನ್ನು ಮಾಡಿದರು.

1973: ಮೋಟರಾಲ ಸಂಸ್ಥೆಯ ಮಾರ್ಟಿನ್ ಕೂಪರ್ ಅವರು ಮೊಟ್ಟಮೊದಲ ಅಂಗೈನಲ್ಲಿನ ಮೊಬೈಲ್ ಮೂಲಕದ ಕರೆಯನ್ನು ಬೆಲ್ ಲ್ಯಾಬ್ಸ್ ಸಂಸ್ಥೆಯ ಜೋಯೆಲ್ ಏಂಜೆಲ್ ಅವರಿಗೆ ಮಾಡಿದರು

1975: ಬಾಬಿ ಫಿಷರ್ ಅವರು ರಷ್ಯದ ಅನಾತೊಲಿ ಕಾರ್ಪೊವ್ ಅವರ ವಿರುದ್ಧ ಆಡುವುದಕ್ಕೆ ಅಸಮ್ಮತಿ ಸೂಚಿಸಿದ ಕಾರಣ, ಅನಾತೊಲಿ ಕಾರ್ಪೊವ್ ಅವರನ್ನು ಜಾಗತಿಕ ಚೆಸ್ ಚಾಂಪಿಯನ್ ಎಂದು ಘೋಷಿಸಲಾಯಿತು.

1981: ಎಲ್ಲಿಂದೆಲ್ಲಿಗೆ ಒಯ್ಯಬಹುದಾದ ಪ್ರಪ್ರಥಮ ಯಶಸ್ವೀ ಕಂಪ್ಯೂಟರ್ ಆದ ‘ಒಸ್ಬೋರ್ನೆ’ ಅನ್ನು ಸ್ಯಾನ್ ಫ್ರಾನ್ಸಿಸ್ಕೋದ ವೆಸ್ಟ್ ಕೋಸ್ಟ್ ಕಂಪ್ಯೂಟರ್ ಫೇರ್ನಲ್ಲಿ ಬಿಡುಗಡೆ ಮಾಡಲಾಯಿತು

1984: ರಷ್ಯದ ಸೋಯುಜ್ ಟಿ-11 ಗಗನನೌಕೆಯ ಮೂಲಕ ಬಾಹ್ಯಾಕಾಶ ಯಾತ್ರೆಯಲ್ಲಿ ಪಾಲ್ಗೊಂಡ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮ ಅವರು ಭಾರತದ ಮೊತ್ತ ಮೊದಲ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೂರದರ್ಶನದ ಮೂಲಕ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಅವರು ಪ್ರಶ್ನಿಸಿದಾಗ ‘ಸಾರೇ ಜಹಾಂಸೆ ಅಚ್ಛಾ’ ಎಂದು ಶರ್ಮ ಉತ್ತರಿಸಿದರು.

2000: ಅಮೆರಿಕ ಸರ್ಕಾರ ಮತ್ತು ಮೈಕ್ರೋಸಾಫ್ಟ್ ಸಂಸ್ಥೆ ನಡುವಣ ಕಾನೂನು ವ್ಯಾಜ್ಯದಲ್ಲಿ, ಮೈಕ್ರೋ ಸಾಫ್ಟ್ ಸಂಸ್ಥೆಯು ಅಮೆರಿಕದ ಆಂಟಿಟ್ರಸ್ಟ್ ಕಾನೂನನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯವು ತೀರ್ಪಿತ್ತಿತು. ಮೈಕ್ರೋಸಾಫ್ಟ್ ಪ್ರತಿಸ್ಪರ್ಧಿಗಳನ್ನು ಅದುಮಿ ಹಾಕುವ ಹೆಬ್ಬೆಟ್ಟಿನ ನೀತಿಯನ್ನು ಅನುಸರಿಸುತ್ತಿದ್ದು ಇದು ಕಾನೂನಿನ ನೀತಿಗಳನ್ನು ಉಲ್ಲಂಘಿಸುವಂತದ್ದಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿತು.

2007: ಗಂಟೆಗೆ 574.8 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಪ್ರಾನ್ಸಿನ ಗ್ರಾಂಡೇ ವಿಟೆಸ್ಸೇ ರೈಲು ನೂತನ ದಾಖಲೆ ನಿರ್ಮಿಸಿತು. ಈ ಹಿಂದೆ 1990ರಲ್ಲಿ ಫ್ರಾನ್ಸಿನ ರೈಲೊಂದು ಗಂಟೆಗೆ 515.3 ಕಿ.ಮೀ. ವೇಗದಲ್ಲಿ ಚಲಿಸಿದ್ದು ಹಿಂದಿನ ವಿಶ್ವದಾಖಲೆಯಾಗಿತ್ತು.

2009: ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಹುಲಿ ತಲೆಯ ರತ್ನಖಚಿತ ಶಿಖರಾಲಂಕಾರವು ಲಂಡನ್ನಿನಲ್ಲಿ 3,89,600 ಪೌಂಡುಗಳಿಗೆ ಹರಾಜಾಯಿತು. 18ನೇ ಶತಮಾನದ ಅಮೂಲ್ಯವಾದ ಈ ಶಿಖರಾಲಂಕಾರವನ್ನು ಅನಾಮಧೇಯ ವ್ಯಕ್ತಿಯೊಬ್ಬರು ಖರೀದಿಸಿದರು.

2009: ಶತಮಾನಗಳಿಂದ ಬಂದಿದ್ದ ಶಿಷ್ಟಾಚಾರವನ್ನು ಬದಿಗೊತ್ತಿ ಬ್ರಿಟನ್ ರಾಣಿ ಎಲಿಜಬೆತ್ ಅವರು ಅಮೆರಿಕದ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರಿಗೆ ಆತ್ಮೀಯ ಆಲಿಂಗನ ನೀಡಲು ಮುಂದಾದರು.

2010: ಆಪಲ್ ಸಂಸ್ಥೆಯು ಮೊದಲ ಪೀಳಿಗೆಯ ಟ್ಯಾಬ್ಲೆಟ್ ಕಂಪ್ಯೂಟರ್ ಆದ ಐಪ್ಯಾಡ್ ಅನ್ನು ಬಿಡುಗಡೆ ಮಾಡಿತು.

ಪ್ರಮುಖಜನನ/ಮರಣ:

1781: ಧಾರ್ಮಿಕ ಗುರು ಸ್ವಾಮಿ ನಾರಾಯಣ ಅವರು ಘನಶ್ಯಾಮ ಪಾಂಡೆ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದ ಚ್ಚಯಾಯಿಯ ಎಂಬಲ್ಲಿ ಜನಿಸಿದರು. ಹಲವು ವರ್ಷಗಳ ಭಾರತೀಯ ಯಾತ್ರೆಯ ನಂತರದಲ್ಲಿ ಇವರು ಗುಜರಾತಿನಲ್ಲಿ ನೆಲೆಸಿದ್ದರು.

1876: ಬಹುಭಾಷಾ ಕೋವಿದರೂ, ಸಾಹಿತಿಗಳೂ ಆಗಿದ್ದ ಬೆನಗಲ್ ರಾಮರಾಯರು ಮಂಗಳೂರಿನಲ್ಲಿ ಜನಿಸಿದರು. ಇವರು 1925ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1943ರ ಮೇ 8ರಂದು ನಿಧನರಾದರು.

1876: ಜೆಕೋಸ್ಲವೇಕಿಯಾದ ಉದ್ಯಮಿ ಬಾಟಾ ಶೂಸ್ ಸಂಸ್ಥೆಯ ಸ್ಥಾಪಕ ತೋಮಸ್ ಬಾಟಾ ಅವರು ಜನಿಸಿದರು.

1898: ಚೀನೀ-ಅಮೆರಿಕನ್ ಪ್ರಕಾಶಕ ಮತ್ತು ಟೈಮ್ ಮ್ಯಾಗಜೈನ್ ಪತ್ರಿಕೆಯ ಸಹ ಸಂಸ್ಥಾಪಕ ಹೆನ್ರಿ ಲ್ಯೂಸ್ ಅಮೆರಿಕದ ತೆಂಗ್ ಚೌ ಎಂಬಲ್ಲಿ ಜನಿಸಿದರು.

1903: ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಮಂಗಳೂರಿನಲ್ಲಿ ಜನಿಸಿದರು. ಸ್ವಾತಂತ್ಯ ಹೋರಾಟದಲ್ಲಿ ಅನೇಕ ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಇವರು ಸಂಗೀತ ನಾಟಕ ಆಕಾಡೆಮಿ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಕರಕುಶಲ ಅಭಿವೃದ್ಧಿ ನಿಗಮ ಮುಂತಾದ ಅನೇಕ ಸಂಸ್ಥೆಗಳ ಸ್ಥಾಪನೆಗೆ ಪ್ರೇರಕರಾದರು. ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್, ಪದ್ಮಭೂಷಣ, ಪದ್ಮವಿಭೂಷಣ, ಮ್ಯಾಗ್ಸೆಸೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1914: ಭಾರತದ ಸೇನಾ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರು ಅಮೃತಸಾರದಲ್ಲಿ ಜನಿಸಿದರು. 1971ರಲ್ಲಿ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಭಾರತ – ಪಾಕ್ ನಡುವಿನ ಯುದ್ಧದಲ್ಲಿ ಭಾರತದ ವಿಜಯದ ರೂವಾರಿಯಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ, ಎರಡನೇ ವಿಶ್ವಮಹಾಯುದ್ಧದಲ್ಲಿ ಹೋರಾಡಿ ಶೌರ್ಯ ಪಶಸ್ತಿಗೆ ಭಾಜನರಾಗಿದ್ದವರು. ಸ್ಯಾಮ್ ಬಹಾದೂರ್ ಎಂದೇ ಆದರಪೂರ್ವಕವಾಗಿ ಕರೆಸಿಕೊಂಡ ಮಾಣಿಕ್ ಶಾ ಎರಡನೇ ವಿಶ್ವ ಮಹಾಯುದ್ಧದಲ್ಲಿ ಬರ್ಮಾದಲ್ಲಿ ಹೋರಾಟ ನಡೆಸಿದ ವೇಳೆ ತೀವ್ರವಾಗಿ ಗಾಯಗೊಂಡು ಬದುಕುಳಿದ ಅದೃಷ್ಟಶಾಲಿ. ಭಾರತ ಸೇನೆಯ ಅತ್ಯುನ್ನತ ಹುದ್ದೆ ಫೀಲ್ಡ್ ಮಾರ್ಷಲ್ ಗೌರವ ಪಡೆದ ಪ್ರಥಮರಿವರು.

1930: ಏಕೀಕೃತ ಜರ್ಮನಿಯ ಮೊತ್ತ ಮೊದಲ ಚಾನ್ಸಲರ್ ಹೆಲ್ಮಟ್ ಕೊಹ್ಲ್ ಅವರು ಲುಡ್ವಿಗ್ ಶಫೇನ್ ಎಂಬಲ್ಲಿ ಜನಿಸಿದರು.

1947: ಶ್ರೀಕೃಷ್ಣ ಆಲನಹಳ್ಳಿ ಅವರು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಅವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಗೀಜಗನ ಗೂಡು’, ‘ಫೀನಿಕ್ಸ್’, ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಗಳು ಪ್ರಸಿದ್ಧ ಚಿತ್ರಗಳಾಗಿದ್ದವು. ಕಾದಂಬರಿಗಳಲ್ಲದೆ, ಕವಿತೆ, ಸಣ್ಣ ಕಥೆಗಳು ಮತ್ತು ಸಂಪಾದನೆಯನ್ನೂ ಮಾಡಿದ್ದ ಇವರು ತಮ್ಮ 42ರ ಕಿರುವಯಸ್ಸಿನಲ್ಲಿಯೇ ನಿಧನರಾದರು.

1958: ಭಾರತೀಯ ಚಿತ್ರರಂಗದಲ್ಲಿ ವಿವಿಧ ಭಾಷಾ ಚಿತ್ರಗಳಲ್ಲಿ ಯಶಸ್ಸು ಗಳಿಸಿ, ಪ್ರಸಿದ್ಧರಾದ ಸೌಂಧರ್ಯವತಿ ಜಯಪ್ರದ ಅವರು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು. ಅಂದಿನ ಅವರ ಹೆಸರು ಲಲಿತಾ ರಾಣಿ.

1955: ಶಾಸ್ರೀಯ ಸಂಗೀತ, ಸಿನಿಮಾ ಸಂಗೀತ, ಘಜಲ್ ಮತ್ತು ಫ್ಯೂಷನ್ ಸಂಗೀತಗಳಲ್ಲಿ ಪ್ರಮುಖ ಹೆಸರಾದ ಹರಿಹರನ್ ಅವರು ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಸಿನಿಮಾ ಗಾಯನಕ್ಕೆ ಹಲವು ರಾಷ್ಟ್ರೀಯ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1973: ನಟ, ನರ್ತಕ, ನೃತ್ಯಸಂಯೋಜಕ, ನಿರ್ಮಾಪಕ, ನಿರ್ದೇಶಕ ಪ್ರಭುದೇವ ಮೈಸೂರಿನಲ್ಲಿ ಜನಿಸಿದರು. ಇವರ ನೃತ್ಯ ಸಂಯೋಜನೆಗಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವುದಲ್ಲದೆ ಅಪಾರ ಜನಪ್ರಿಯತೆ ಗಳಿಸಿವೆ.

Categories
e-ದಿನ

ಏಪ್ರಿಲ್-02

ಪ್ರಮುಖಘಟನಾವಳಿಗಳು:

1679: ಮೊಘಲ್ ದೊರೆ ಔರಂಗಜೇಬನು ಮುಸ್ಲಿಮೇತರರ ಮೇಲೆ ‘ಜೆಜಿಯಾ’ ತೆರಿಗೆಯನ್ನು ಮತ್ತೆ ಜಾರಿಗೊಳಿಸಿದನು. ಸುಮಾರು ನೂರು ವರ್ಷಕ್ಕೆ ಮೊದಲು ಈ ತೆರಿಗೆಯನ್ನು ಅಕ್ಬರ್ ರದ್ದುಗೊಳಿಸಿದ್ದರು.

1755: ಕಾಮಡೋರ್ ವಿಲಿಯಂ ಜೇಮ್ಸನು ಮರಾಠರ ಸುವರ್ಣದುರ್ಗ ಕೋಟೆಯನ್ನು ವಶಪಡಿಸಿಕೊಂಡನು.

1792:ಅಮೆರಿಕದಲ್ಲಿ ‘ದಿ ಕಾಯಿನೇಜ್ ಆಕ್ಟ್’ ಜಾರಿಗೆ ಬಂದು ಅಮೆರಿಕದ ‘ಮಿಂಟ್’ ಚಲಾವಣೆಗೆ ಬಂತು.

1800: ಲುಡ್ವಿಗ್ ವಾನ್ ಬಿಥೋವೆನ್ ಅವರು ತಮ್ಮ ಪ್ರಥಮ ಸಿಂಪೋನಿ ಕಾರ್ಯಕ್ರಮವನ್ನು ವಿಯೆನ್ನಾದಲ್ಲಿ ನೀಡಿದರು

1851: ನಾಲ್ಕನೇ ರಾಮ ಥಾಯ್ಲೆಂಡಿನ ರಾಜನಾದ

1902: ಅಮೆರಿಕದ ಪ್ರಥಮ ಚಲನಚಿತ್ರ ಮಂದಿರವಾದ ‘ಎಲೆಕ್ಟ್ರಿಕ್ ಥಿಯೇಟರ್’ ಲಾಸ್ ಏಂಜೆಲಿಸ್ ನಗರದಲ್ಲಿ ಆರಂಭಗೊಂಡಿತು.

1917: ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅವರು ಅಮೆರಿಕದ ಕಾಂಗ್ರೆಸ್ ಮುಂದೆ ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಲು ಕೋರಿದರು

1965: ವಿ.ವಿ. ಗಿರಿ ಅವರು ಕರ್ನಾಟಕದ ಮೂರನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.

1972: 1950ರ ದಶಕದ ಪ್ರಾರಂಭದಲ್ಲಿ ‘ರೆಡ್ ಸ್ಕೇರ್’ ಘಟನೆಯ ಸಂದರ್ಭದಲ್ಲಿ ಕಮ್ಯೂನಿಸ್ಟ್ ಎಂದು ಹಣೆಪಟ್ಟಿ ಕಟ್ಟಿಸಿಕೊಂಡ ನಂತರದಲ್ಲಿ ಇದೇ ಮೊದಲಬಾರಿಗೆ ಚಾರ್ಲಿ ಚಾಪ್ಲಿನ್ ಅವರು ಅಮೆರಿಕಕ್ಕೆ ಹಿಂದಿರುಗಿದರು.

1973: ಕಂಪ್ಯೂಟರೀಕೃತ ಕಾನೂನು ಸಂಶೋಧನಾ ಸೇವೆಯಾದ ಲೆಕ್ಸಿನೆಕ್ಸಿಸ್ ಆರಂಭಗೊಂಡಿತು

2008: ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಚುನಾವಣೆಗಳನ್ನು ಘೋಷಿಸಲಾಯಿತು. ಕ್ಷೇತ್ರ ಮರುವಿಂಗಡಣೆಯ ನಂತರದಲ್ಲಿ ಚುನಾವಣೆ ಘೋಷಿತಗೊಂಡ ಪ್ರಥಮ ರಾಜ್ಯವೆನಿಸಿತು.

2009: ಪ್ರಧಾನಿ ಮನಮೋಹನ ಸಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನಡುವೆ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಲಂಡನ್ನಿನಲ್ಲಿ ಜಿ 20 ಶೃಂಗಸಭೆ ಮುಕ್ತಾಯಗೊಂಡ ಕೂಡಲೇ ಆರಂಭವಾದ ಈ ಸಭೆಯಲ್ಲಿ, ಭಯೋತ್ಪಾದನೆ ಹಾಗೂ ಹವಾಮಾನ ವೈಪರೀತ್ಯದ ವಿರುದ್ಧ ಜಂಟಿಯಾಗಿ ಹೋರಾಡಲು ಇರುವ ಹೊಸ ಮಾರ್ಗೋಪಾಯಗಳ ಬಗ್ಗೆ ಉಭಯ ನಾಯಕರೂ ಚರ್ಚಿಸಿದರು.

2009: ಆರ್ಥಿಕ ಬಿಕ್ಕಟ್ಟು ಹಾಗೂ ಜನರ ಅಭಿರುಚಿ ಬದಲಾದದ್ದರಿಂದ 72 ವರ್ಷಗಳಿಂದ ಪ್ರಸಾರವಾಗುತ್ತಿದ್ದ ಗೈಡಿಂಗ್ ಲೈಟ್ ಧಾರಾವಾಹಿಗೆ ತಡೆ ಹಾಕಲು ಅಮೆರಿಕದ ಸಿ.ಬಿ.ಎಸ್ ವಾಹಿನಿ ನಿರ್ಧರಿಸಿತು.

2011: ಭಾರತವು ಮಹೇಂದ್ರ ಸಿಂಗ್ ಧೋನಿ ಅವರ ನೇತೃತ್ವದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಜಯಿಸಿತು. ಮುಂಬೈನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಭಾರತ ತಂಡವು ಶ್ರೀಲಂಕಾ ತಂಡವನ್ನು 6 ವಿಕೆಟ್ಟುಗಳಿಂದ ಸೋಲಿಸಿ, ವಿಶ್ವಕಪ್ ಕ್ರಿಕೆಟ್ ಅನ್ನು ತನ್ನದೇ ನೆಲದಲ್ಲಿ ಗೆದ್ದ ಪ್ರಥಮ ರಾಷ್ಟ್ರವೆನಿಸಿತು.

ಪ್ರಮುಖಜನನ/ಮರಣ:

1805: ಪ್ರಸಿದ್ಧ ಡ್ಯಾನಿಶ್ ಕಥೆಗಾರ ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರು ಡೆನ್ಮಾರ್ಕಿನ ಒಡೆನ್ಸ್ ಎಂಬಲ್ಲಿ ಜನಿಸಿದರು.

1862: ಅಮೆರಿಕನ್ ತತ್ವಜ್ಞಾನಿ, ಕೊಲಂಬಿಯಾ ವಿಶ್ವ ವಿದ್ಯಾಲಯದ ಅಧ್ಯಕ್ಷ ಮತ್ತು ಕಾರ್ನಿಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್ ಅಧ್ಯಕ್ಷರಾದ ನಿಕೊಲಸ್ ಮುರ್ರೆ ಬಟ್ಲರ್ ಅವರು ನ್ಯೂ ಜೆರ್ಸಿಯ ಎಲಿಜಬೆತ್ ಎಂಬಲ್ಲಿ ಜನಿಸಿದರು. ಇವರಿಗೆ 1931 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1891: ಭಾರತೀಯ ರಾಷ್ಟ್ರೀಯವಾದಿ ಮತ್ತು ಗೋವಾದಲ್ಲಿನ ವಿದೇಶಿ ವಸಾಹತುಗಳ ವಿರುದ್ಧದ ಹೋರಾಟಗಾರ ತ್ರಿಸ್ತಾವ್ ಬ್ರಗಾಂಕಾ ಕುನ್ಹಾ ಅವರು ಗೋವಾದ ಚಂದೋರ್ ಎಂಬಲ್ಲಿ ಜನಿಸಿದರು.

1898: ಭಾರತೀಯ ಕವಿ, ನಟ ಮತ್ತು ರಾಜಕಾರಣಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರು ಹೈದರಾಬಾದಿನಲ್ಲಿ ಜನಿಸಿದರು. ಇವರು ಸರೋಜಿನಿ ನಾಯ್ಡು ಅವರ ಕಿರಿಯ ಸಹೋದರರಾಗಿದ್ದು, ಮತ್ತೋರ್ವ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಮಾಜ ಸುಧಾರಕಿ ಕರ್ನಾಟಕದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪತಿ. ಇವರಿಗೆ ಪದ್ಮಭೂಷಣ ಗೌರವ ಸಂದಿತ್ತು.

1902: ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಕಾರರಾದ ಬಡೇ ಗುಲಾಂ ಅಲಿ ಅಲಿ ಖಾನ್ ಅವರು ಪಂಜಾಬಿನ ಕಸೂರ್ ಎಂಬಲ್ಲಿ ಜನಿಸಿದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸಿದವರಲ್ಲಿ ಇವರು ಪ್ರಮುಖರೆನಿಸಿದ್ದಾರೆ. ಪದ್ಮಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಗೌರವಗಳನ್ನೂ ಒಳಗೊಂಡ ಅನೇಕ ಪುರಸ್ಕಾರಗಳು ಇವರಿಗೆ ಸಂದಿದ್ದವು.

1911: ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ ಮಾನ್ವಿ ನರಸಿಂಗರಾವ್ ಅವರು ರಾಯಚೂರಿನಲ್ಲಿ ಜನಿಸಿದರು. ಭಾರತ ಸರ್ಕಾರದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಇವರಿಗೆ ಅನೇಕ ಗೌರವಗಳು ಸಂದಿದ್ದವು.

1942: ಭಾರತೀಯ ಇಂಗ್ಲಿಷ್ ನಟ ರೋಶನ್ ಸೇಥ್ ಪಾಟ್ನಾದಲ್ಲಿ ಜನಿಸಿದರು. ಇವರು ‘ಗಾಂಧೀ’, ‘ಇಂಡಿಯಾನಾ ಜೋನ್ಸ್’ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲೂ, ‘ಭಾರತ್ ಏಕ್ ಖೋಜ್’ ಧಾರಾವಾಹಿಯಲ್ಲೂ ಅಭಿನಯಿಸಿ ಪ್ರಸಿದ್ಧರಾಗಿದ್ದಾರೆ.

1943: ಸುಲಭ್ ಶೌಚಾಲಯಗಳ ಮೂಲಕ ಸ್ವಚ್ಚತೆ ಹಾಗೂ ಜನರು ಮಲ ಎತ್ತಬೇಕಾದ ಅಮಾನವೀಯ ಪರಿಸ್ಥಿತಿಗೆ ಕ್ರಾಂತಿ ತಂದ ಬಿಂದೇಶ್ವರ ಪಾಠಕ್ ಅವರು ಬಿಹಾರದ ರಾಂಪುರದಲ್ಲಿ ಜನಿಸಿದರು. ಪದ್ಮಭೂಷಣ ಪ್ರಶಸ್ತಿಯೇ ಅಲ್ಲದೆ ವಿಶ್ವದ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1969: ಹಿಂದೀ ಚಲನಚಿತ್ರ ನಟ ಅಜಯ್ ದೇವಗನ್ ನವದೆಹಲಿಯಲ್ಲಿ ಜನಿಸಿದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಉತ್ತಮ ನಟ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳೇ ಅಲ್ಲದೆ ಇನ್ನಿತರ ಅನೇಕ ಗೌರವಗಳೂ ಇವರಿಗೆ ಸಂದಿವೆ.

1972: ದೃಶ್ಯ ಸಂಯೋಜಕ ಮತ್ತು ನರ್ತಕ ರೇಮೋ ಡಿಸೌಜಾ ಕೇರಳದ ಒಲವಕ್ಕೋಡ್ ಎಂಬಲ್ಲಿ ಜನಿಸಿದರು. ಗೀತದೃಶ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಒಳಗೊಂಡಹಾಗೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1914: ಜರ್ಮನಿಯ ನೊಬೆಲ್ ಸಾಹಿತ್ಯ ಪುರಸ್ಕೃತ ಪಾಲ್ ಹೆಯ್ಸೆ ಮ್ಯೂನಿಚ್ ನಗರದಲ್ಲಿ ನಿಧನರಾದರು.

1928: ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕನ್ನರಾದ ವಿಲಿಯಮ್ ರಿಚರ್ಡ್ಸ್ ಅವರು ಕೇಂಬ್ರಿಡ್ಜ್ ನಗರದಲ್ಲಿ ನಿಧನರಾದರು. ಕೆಮಿಕಲ್ ಎಲಿಮೆಂಟ್ಸ್ ಗಳಲ್ಲಿ ಇರುವ ಆಟೋಮಿಕ್ ತೂಕವನ್ನು ಖಚಿತವಾಗಿ ಹೇಳುವ ಮಾದರಿಯನ್ನು ಇವರು ಪ್ರಸ್ತುತಪಡಿಸಿದರು.

1933: ಭಾರತದ ಶ್ರೇಷ್ಠ ಕ್ರಿಕೆಟ್ ಪಟುಗಳಲ್ಲಿ ಒಬ್ಬರ, ನವನಗರದ ಮಹಾರಾಜರೂ ಆದ ಜಾಮ್ ಸಾಹಿಬ್ ರಣಜಿತ್ ಸಿನ್ಹಜಿ ವಿಭಾಜಿ ಅವರು ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದರು. 1899ರಲ್ಲಿ ಇವರು ಒಂದೇ ಋತುವಿನಲ್ಲಿ 3000ಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದರು. ಇವರ ನೆನಪಿಗಾಗಿ 1934ರಲ್ಲಿ ರಣಜಿ ಟ್ರೋಫಿಯನ್ನು ಆರಂಭಿಸಲಾಯಿತು.

2009: ಸಹಸ್ರಾರು ಜಾನಪದ ಗೀತೆಗಳನ್ನು ಸರಾಗವಾಗಿ, ತಮ್ಮ ಅದ್ಭುತ ನೆನಪಿನ ಶಕ್ತಿ ಮಾತ್ರದಿಂದ ಹಾಡಿ ಮಹಾನ್ ವಿದ್ವಾಂಸರೆಲ್ಲರನ್ನೂ ಅಚ್ಚರಿಗೊಳಿಸಿ ಗೌರವಾನ್ವಿತರಾಗಿದ್ದ ಶತಾಯುಷಿ, ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಅವರು ಚಳ್ಳಕೆರೆ ಸಮೀಪದ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ನಿಧನರಾದರು. ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿಯೇ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

Categories
e-ದಿನ

ಏಪ್ರಿಲ್-01

 

ದಿನಾಚರಣೆಗಳು:

ಅಧಿಕೃತ ಆರ್ಥಿಕ ವರ್ಷಾರಂಭದ ದಿನ” ಭಾರತವನ್ನೊಳಗೊಂಡಂತೆ ಅನೇಕ ದೇಶಗಳಲ್ಲಿ ಸರ್ಕಾರದ ವಿಭಾಗಗಳು ಮತ್ತು ಉದ್ಯಮಗಳು ಆರ್ಥಿಕ ವ್ಯವಹಾರಗಳ ವರ್ಷದ ಪ್ರಾರಂಭದ ದಿನವೆಂದು ಈ ದಿನವನ್ನು ಪರಿಗಣಿಸಿವೆ.

ಏಪ್ರಿಲ್ ಮೂರ್ಖರ ದಿನಾಚರಣೆ ಜೆಫ್ಫರಿ ಚೌಸರ್ ಎಂಬಾತ 1392ರಲ್ಲಿ ಪ್ರಕಟಿಸಿದ ತಮ್ಮ ‘ದಿ ಕ್ಯಾಂಟರ್ಬರಿ ಕಥೆಗಳಲ್ಲಿ’ ಏಪ್ರಿಲ್ 1 ಮತ್ತು ಮೂರ್ಖರ ದಿನಕ್ಕೆ ಪ್ರಥಮ ಸಂಬಂಧ ಬೆಸಿದಿದ್ದಾರೆ. ಹೀಗೆ ನಿಜವೇ ಇರಬಹುದೇನೋ ಎಂಬಂತಹ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ, ಹಾಸ್ಯವಾಗಿ ಇತರರನ್ನು ಬೇಸ್ತುಬೀಳಿಸುವ ದಿನವಾಗಿ ಏಪ್ರಿಲ್ 1 ದಿನವನ್ನು ಮೂರ್ಖರ ದಿನಾಚರಣೆಯನ್ನಾಗಿ ಆಚರಿಸುವ ಪರಿಪಾಠ ಬೆಳೆದಿದೆ. ಇಂತಹ ಪರಿಪಾಠಗಳಿಗೆ ಹಲವಾರು ಪ್ರಸಿದ್ಧ ಪತ್ರಿಕೆಗಳೂ ಸಹ ಪುಷ್ಟಿ ನೀಡುವಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಮಾರನೆಯ ದಿನ ಇದನ್ನು ಹಾಸ್ಯಕ್ಕೆ ಮಾಡಲಾಯ್ತು ಎಂದು ಪ್ರಕಟಿಸಿದ್ದಿದೆ.

ಪ್ರಮುಖಘಟನಾವಳಿಗಳು:

286: ಚಕ್ರವರ್ತಿ ಡಿಯೋಕ್ಲೆಟಿಯನ್ ತಮ್ಮ ಸೇನಾಧಿಕಾರಿಯಾದ ಮಾಕ್ಸಿಮಿಯಾನ್ ಅವರನ್ನು ಅಗಸ್ಟಸ್ ಸ್ಥಾನದ ಮೂಲಕ ಸಹ-ಚಕ್ರವರ್ತಿ ಸ್ಥಾನಕ್ಕೇರಿಸಿ ರೋಮನ್ ಚಕ್ರಾಧಿಪತ್ಯದ ಪಶ್ಚಿಮ ಪ್ರದೇಶದ ಅಧಿಪತ್ಯವನ್ನು ವಹಿಸಿಕೊಟ್ಟರು.

1545: ಅಪಾರ ಬೆಳ್ಳಿಯ ನಿಕ್ಷೇಪಗಳನ್ನು ಹೊಂದಿರುವ ಬೊಲಿವಿಯಾದ ಪಟೌಸಿಯನ್ನು ಅನ್ವೇಷಿಸಲಾಯಿತು

1826: ಸಾಮ್ಯುಯೆಲ್ ಮೊರಿ ಅವರು ಕಂಪ್ರೆಶನ್ ರಹಿತವಾದ ಗ್ಯಾಸ್ ಅಥವಾ ವೇಪರ್ ಎಂಜಿನ್ ಕಂಡುಹಿಡಿದರು.

1854: ಚಾರ್ಲ್ಸ್ ಡಿಕನ್ಸ್ ಅವರ ‘ಹಾರ್ಡ್ ಟೈಮ್ಸ್’ ಕೃತಿಯು ‘ಹೌಸ್ ಹೋಲ್ಡ್ ವರ್ಡ್ಸ್’ ನಿಯತಕಾಲಿಕದಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳಲಾರಂಭಿಸಿತು.

1887: ಮುಂಬೈ ಅಗ್ನಿಶಾಮಕ ದಳವನ್ನು ಸ್ಥಾಪಿಸಲಾಯಿತು

1895: ಭಾರತದ ಸೇನೆಯಾದ ‘ಇಂಡಿಯನ್ ಆರ್ಮಿ’ ಸ್ಥಾಪನೆಗೊಂಡಿತು.

1924: ಅಡಾಲ್ಫ್ ಹಿಟ್ಲರನಿಗೆ ‘ಬೀರ್ ಹಾಳ್ ಪುಟ್ಸ್ಚ್’ನಲ್ಲಿ ಭಾಗವಹಿಸಿದ್ದಕ್ಕೆ 5 ವರ್ಷಗಳ ಜೈಲು ವಿಧಿಸಲಾಯಿತು. ಆದರೆ ಆತ ಸೇರೆಯಲ್ಲಿದ್ದದ್ದು 9 ತಿಂಗಳು ಮಾತ್ರ. ಈ ಅವಧಿಯಲ್ಲಿ ಆತ ‘ಮೆಯಿನ್ ಕಂಪ್ಫ್’ ರಚಿಸಿದ

1935: ಭಾರತದ ಕೇಂದ್ರೀಯ ಬ್ಯಾಂಕ್ ಆದ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಸ್ಥಾಪನೆಗೊಂಡಿತು.

1936: ಬಿಹಾರಿನಿಂದ ಬೇರ್ಪಟ್ಟು ಒರಿಸ್ಸಾ ಭಾರತದ ಪ್ರತ್ಯೇಕ ರಾಜ್ಯವಾಯಿತು.

1954: ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಭಾರತದ ಪ್ರಥಮ ವಾಯುಪಡೆ ಮುಖ್ಯಸ್ಥರಾದರು.

1955: ಜನರಲ್ ರಾಜೇಂದ್ರ ಸಿನ್ಹಜಿ ಭಾರತದ ಪ್ರಥಮ ಸೇನಾ ದಂಡ ನಾಯಕರಾದರು.

1960: ‘ಟಿರೋಸ್-1’ ಉಪಗ್ರಹವು ಬಾಹ್ಯಾಕಾಶದಿಂದ ಮೊಟ್ಟ ಮೊದಲ ಚಿತ್ರವನ್ನು ಪ್ರಸಾರಮಾಡಿತು.

1971: ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನ ಸೇನೆಯು ಬಾಂಗ್ಲಾದೇಶದ ಕೆರಾನಿಗಂಜ್ ಉಪಾಜಿಲಾ ಎಂಬಲ್ಲಿ 1000 ಜನರನ್ನು ಹತ್ಯೆಮಾಡಿತು

1973: ಪ್ರಾಜೆಕ್ಟ್ ಟೈಗರ್ ಎಂಬ ಹುಲಿ ಸಂರಕ್ಷಣಾ ಯೋಜನೆಯನ್ನು ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಆರಂಭಿಸಲಾಯಿತು.

1976: ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಇನ್ಕಾರ್ಪೋರೇಶನ್ ಸಂಸ್ಥೆಯನ್ನು ಸ್ಥಾಪಿಸಿದರು.

1979: ಶೇಕಡಾ 99ರಷ್ಟು ಮತಗಳಿಂದ ಇರಾನ್ ದೇಶವು ಇಸ್ಲಾಮಿಕ್ ಗಣರಾಜ್ಯವಾಗಿ ರೂಪುಗೊಂಡು, ಅಧಿಕೃತವಾಗಿ ಅಲ್ಲಿ ಷಾ ಆಡಳಿತವು ಕೊನೆಗೊಂಡಿತು.

2004: ಗೂಗಲ್ ಸಂಸ್ಥೆ ಸಾರ್ವಜನಿಕರಿಗೆ ‘ಜಿಮೈಲ್’ ವ್ಯವಸ್ಥೆಯನ್ನು ಘೋಷಿಸಿತು.

2007: ಭಾರಿ ಒತ್ತಡಕ್ಕೆ ಮಣಿದ ಫಿಡೆ (ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್) ಕೊನೆಗೂ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಟ್ಟಿತು. ಭಾರತದ ವಿಶ್ವನಾಥನ್ ಆನಂದ್ ಅವರು ವಿಶ್ವ ಚೆಸ್ ಕ್ರೀಡೆಯ ನಂಬರ್ 1 ಆಟಗಾರ ಎಂದು ಫಿಡೆ ಶ್ರೇಯಾಂಕ ನಿರ್ಣಯ ಸಮಿತಿಯ ಅಧ್ಯಕ್ಷ ಕ್ಯಾಸ್ಟ್ರೊ ಅಂಬುಡೊ ಖಚಿತಪಡಿಸಿದರು.

2007: ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅವರ ಜನ್ಮದಿನವಾದ ಈದಿನದಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

2007: ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೆನ್ ಮೆಗ್ರಾತ್ ಅವರು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ತಮ್ಮ 33ನೇ ವಿಶ್ವಕಪ್ ಪಂದ್ಯದಲ್ಲಿ 56ಕ್ಕೆ ವಿಕೆಟ್ ಗಳಿಸಿದ ಮೆಗ್ರಾತ್ ಅವರು ಪಾಕಿಸ್ಥಾನದ ವಾಸಿಂ ಅಕ್ರಂ ಅವರ ಹೆಸರಿನಲ್ಲಿದ್ದ 38 ಪಂದ್ಯಗಳಿಂದ ಗಳಿಸಿದ್ದ 55 ವಿಕೆಟ್ ದಾಖಲೆಯನ್ನು ಮೀರಿ ಮುಂದುವರೆದರು.

2007: ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೆನ್ ಮೆಗ್ರಾತ್ ಅವರು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ತಮ್ಮ 33ನೇ ವಿಶ್ವಕಪ್ ಪಂದ್ಯದಲ್ಲಿ 56ಕ್ಕೆ ವಿಕೆಟ್ ಗಳಿಸಿದ ಮೆಗ್ರಾತ್ ಅವರು ಪಾಕಿಸ್ಥಾನದ ವಾಸಿಂ ಅಕ್ರಂ ಅವರ ಹೆಸರಿನಲ್ಲಿದ್ದ 38 ಪಂದ್ಯಗಳಿಂದ ಗಳಿಸಿದ್ದ 55 ವಿಕೆಟ್ ದಾಖಲೆಯನ್ನು ಮೀರಿ ಮುಂದುವರೆದರು.

2008: ಕಾಮನ್ವೆಲ್ತ್ ಮಹಾಪ್ರಧಾನ ಕಾರ್ಯದರ್ಶಿಯಾಗಿ ಭಾರತೀಯ ರಾಜತಂತ್ರಜ್ಞ ಕಮಲೇಶ್ ಶರ್ಮಾ ಅವರು ಲಂಡನ್ನಿನಲ್ಲಿ ಅಧಿಕಾರ ವಹಿಸಿಕೊಂಡರು.

2008: ಫಾಹ್ಮೀದಾ ಮಿರ್ಜಾ ಅವರು ಪಾಕಿಸ್ಥಾನ ಸಂಸತ್ತಿನಲ್ಲಿ ಮಹಿಳಾ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಪ್ರಥಮ ಮಹಿಳೆ ಎನಿಸಿದರು.

2008: ಪಾಕಿಸ್ಥಾನದ ಕ್ರಿಕೆಟ್ಟಿಗ ಶೋಯಬ್ ಅಖ್ತರ್ ಅವರ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಲಾಯಿತು. ಅಖ್ತರ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಹಾಗೂ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು ಈ ನಿರ್ಧಾರ ಕೈಗೊಂಡಿತು.

2008: ಮಹಾರಾಷ್ಟ್ರ ಸರ್ಕಾರವು 2010ರೊಳಗಾಗಿ ಬೃಹನ್ಮುಂಬೈ ಮಹಾನಗರದಲ್ಲಿ ಮಾನೊ ರೈಲು ಆರಂಭಿಸುವ ಯೋಜನೆ ಕೈಗೆತ್ತಿಕೊಂಡಿತು.

2009: ಅತ್ಯಾಧುನಿಕ ಹಾಗೂ ಅತ್ಯಂತ ಸುರಕ್ಷಿತ ಎನ್ನಲಾದ ಬೋಯಿಂಗ್ ಬಿಸಿನೆಸ್ ಜೆಟ್‌ ಅನ್ನು ರಾಷ್ಟ್ರಪತಿಗಳು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಹಸ್ತಾಂತರಿಸಿದರು.
ಅತ್ಯಾಧುನಿಕ ಹಾಗೂ ಅತ್ಯಂತ ಸುರಕ್ಷಿತ ಎನ್ನಲಾದ ಬೋಯಿಂಗ್ ಬಿಸಿನೆಸ್ ಜೆಟ್‌ ಅನ್ನು ರಾಷ್ಟ್ರಪತಿಗಳು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಹಸ್ತಾಂತರಿಸಿದರು.

ಪ್ರಮುಖಜನನ/ಮರಣ:

1578: ಇಂಗ್ಲಿಷ್ ವೈದ್ಯ ವಿಜ್ಞಾನಿ ವಿಲಿಯಂ ಹಾರ್ವೆ ಜನಿಸಿದರು. ಹೃದಯವು ಪಂಪಿನಂತೆ ಕಾರ್ಯನಿರ್ವಹಿಸುತ್ತ ರಕ್ತಸಂಚಾರಕ್ಕೆ ನೆರವಾಗುತ್ತದೆ ಎಂಬುದನ್ನು ಅವರು ನಿರೂಪಿಸಿದರು.

1865: ಆಸ್ತ್ರಿಯನ್-ಜರ್ಮನ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಿಚರ್ಡ್ ಅಡಾಲ್ಫ್ ಸಿಗ್ಮಂಡಿ ಅವರು ವಿಯೆನ್ನಾದಲ್ಲಿ ಜನಿಸಿದರು. ಇವರು ‘ಕೊಲ್ಲಾಯ್ಡ್ಸ್’ ಕುರಿತಾದ ಸಂಶೋಧನೆಗೆ ಹೆಸರಾಗಿದ್ದು, 1925ರ ವರ್ಷದಲ್ಲಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರ ಪ್ರಶಸ್ತಿ ನೀಡಲಾಯಿತು. ಚಂದ್ರನ ಮೇಲಿನ ‘ಕುಳಿ’ಗೆ ‘ಕ್ರೇಟರ್ ಸಿಗ್ಮಂಡಿ’ ಎಂದು ಇವರ ಹೆಸರಿರಿಸಿ ಗೌರವಿಸಲಾಗಿದೆ.

1856: ಭಾರತೀಯ ವೈದ್ಯ ಅಕಾಸಿಯೋ ಗೇಬ್ರಿಯಲ್ ವೇಗಾಸ್ ಅವರು ಗೋವಾದ ಅರ್ಪೊರಾ ಎಂಬಲ್ಲಿ ಜನಿಸಿದರು. 1896ರ ವರ್ಷದಲ್ಲಿ ಇವರು ಮುಂಬೈನಲ್ಲಿ ಬ್ಯುಬಾನಿಕ್ ಪ್ಲೇಗ್ ಹರಡಿದ್ದನ್ನು ಗುರುತಿಸಿದರು. ಇವರ ಈ ಗುರುತಿಸುವಿಕೆಯಿಂದ ಅನೇಕ ಜೀವಗಳು ಉಳಿದವಲ್ಲದೆ, ಇವರು 18,000ಕ್ಕೂ ಹೆಚ್ಚು ಮಂದಿಗೆ ಇನಾಕ್ಯುಲೇಶನ್ ಸಹಾ ನೀಡಿದರು. ಇವರು ಬಾಂಬೆ ಮುನಿಸಿಪಲ್ ಕಾರ್ಪೊರೇಶನ್ನಿನ ಅಧ್ಯಕ್ಷರೂ ಆಗಿದ್ದರು.

1883: ಮೂಕಿ ಯುಗದ ಪ್ರಖ್ಯಾತ ಅಮೆರಿಕನ್ ನಟ ಲೋನ್ ಚಾನೆಯ್ ಅವರು ಕೊಲರಾಡೋದಲ್ಲಿ ಜನಿಸಿದರು. ಇವರನ್ನು ‘ಸಹಸ್ರ ಮುಖಗಳ ಮನುಷ್ಯ’ (ಮ್ಯಾನ್ ಆಫ್ ಥೌಸಂಡ್ ಫೇಸಸ್) ಎಂದು ಕರೆಯಲಾಗುತ್ತಿತ್ತು.

1889: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಬೋಧನ್ ಎಂಬಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರು ಮತ್ತು ಅರವಿಂದರ ಬೋಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಆದರ್ಶಗಳಾಗಬೇಕು ಎಂದು ಇವರು ಕನಸು ಕಂಡರು.

1908: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮಾಗಡಿ ತಾಲ್ಲೂಕಿನ ವೀರಪುರದಲ್ಲಿ ಜನಿಸಿದರು. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಪಾರಂಗತರಾದ ಸ್ವಾಮೀಜಿಯವರು ವಿರಕ್ತಾಶ್ರಮಕ್ಕೆ ಬಂದದ್ದು 1930ರಲ್ಲಿ. ಇಂದು ಬೆಳೆದು ನಿಂತಿರುವ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ವಾಮೀಜಿಯವರ ಶ್ರಮದ ಪ್ರತಿಫಲ. ಇದಲ್ಲದೆ ಸಿದ್ಧಗಂಗಾಮಠದ ಗುರುಕುಲದಲ್ಲಿ 5 ವರ್ಷದಿಂದ 16 ವರ್ಷದವರೆಗಿನ ಸುಮಾರು 8500 ಮಕ್ಕಳು ಆಶ್ರಯಪಡೆದಿದ್ದಾರೆ.

1919: ಅಮೆರಿಕದ ಮತ್ತು ಸೇನಾನಿ ಜೋಸೆಫ್ ಮುರ್ರೆ ಅವರು ಮಸಚುಸೆಟ್ಸಿನ ಮಿಲ್ಫೋರ್ಡ್ ಎಂಬಲ್ಲಿ ಜನಿಸಿದರು. ‘ಮನುಷ್ಯನಿಗೆ ಚಿಕಿತ್ಸೆ ನೀಡುವಿಕೆಯಲ್ಲಿ ದೇಹದ ಭಾಗಗಳು ಮತ್ತು ಕಣಗಳ ಕಸಿಮಾಡುವಿಕೆ’ಯನ್ನು ಬಳಕೆಗೆ ತಂದ ಇವರಿಗೆ 1990 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1921: ರಾಜಕಾರಣಿ ಮತ್ತು ಕ್ರಿಕೆಟ್ ಆಡಳಿತಗಾರ ಎನ್.ಕೆ.ಪಿ. ಸಾಲ್ವೆ ಅವರು ಮಧ್ಯಪ್ರದೇಶದ ಚಿಂದ್ವಾರ ಎಂಬಲ್ಲಿ ಜನಿಸಿದರು. ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಇವರು ವಿಶ್ವಕಪ್ ಕ್ರಿಕೆಟ್ ಅನ್ನು ಇಂಗ್ಲೆಂಡ್ ಮಾತ್ರವೇ ಅಲ್ಲದೆ ಇತರೆಡೆಗಳಲ್ಲೂ ನಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1933: ಅಲ್ಜೀರಿಯನ್-ಫ್ರೆಂಚ್ ಭೌತವಿಜ್ಞಾನಿ ಕ್ಲಾಡ್ ಕೋಹೆನ್-ತನ್ನೌಡ್ಜಿ ಅವರು ಫ್ರೆಂಚ್ ಅಲ್ಜೀರಿಯಾಗೆ ಸೇರಿದ್ದ ಕಾನ್ಸ್ಟಾನ್ಟೈನ್ ಎಂಬಲ್ಲಿ ಜನಿಸಿದರು. ಲೇಸರ್ ಕೂಲಿಂಗ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1997 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1936: ಅಸ್ಸಾಂನ ಮುಖ್ಯಮಂತ್ರಿಗಳಾಗಿದ್ದ ತರುಣ್ ಗಗೊಯ್ ಅವರು ಈಗಿನ ಜೋರ್ಹಾಟ್ ಜಿಲ್ಲೆಗೆ ಸೇರಿದ ತಾಜ್-ಅಹೋಮ್ ಎಂಬಲ್ಲಿ ಜನಿಸಿದರು.

1940: ಕೀನ್ಯಾದ ಪರಿಸರವಾದಿ ಮತ್ತು ರಾಜಕಾರಣಿ ಮಹಿಳೆ ವಂಗಾರಿ ಮಾಥೈ ಅವರು ಕೀನ್ಯಾದ ಲ್ಲ್ಹಿತೆ ಎಂಬಲ್ಲಿ ಜನಿಸಿದರು. ‘ಗ್ರೀನ್ ಬೆಲ್ಟ್ ಮೂವ್ಮೆಂಟ್’ ಸ್ಥಾಪಿಸಿದ ಈಕೆಗೆ 2004 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1941:ಭಾರತದ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದ ಅಜಿತ್ ವಾಡೇಕರ್ ಮುಂಬೈನಲ್ಲಿ ಜನಿಸಿದರು. 1971ರಲ್ಲಿ ಇಂಗ್ಲೆಂಡಿನಲ್ಲಿ ಆ ದೇಶದ ವಿರುದ್ಧ ನಡೆದ ಪಂದ್ಯಗಳಲ್ಲಿ ಭಾರತಕ್ಕೆ ಮೊದಲ ಸರಣಿ ಜಯ ತಂದು ಕೊಟ್ಟ ಕ್ರಿಕೆಟ್ ಕ್ಯಾಪ್ಟನ್ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

1968: ರಷ್ಯಾದ ಭೌತವಿಜ್ಞಾನಿ ಲೆವ್ ಲಾಂಡಾವ್ ಅವರು ಮಾಸ್ಕೋದಲ್ಲಿ ನಿಧನರಾದರು. ಇವರಿಗೆ ಸೂಪರ್ ಫ್ಲೂಯಿಡಿಟಿ ಕುರಿತಾದ ಸಂಶೋಧನೆಗಾಗಿ 1962 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

2007: ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ತಂತ್ರಜ್ಞಾನದ ಅನ್ವೇಷಕ ಎಲ್. ಬೇಕರ್ ಅವರು ತಮ್ಮ 90ನೇ ವಯಸ್ಸಿನಲ್ಲಿ ತಿರುವನಂತಪುರದಲ್ಲಿ ನಿಧನರಾದರು. 1945ರಲ್ಲಿ ಭಾರತಕ್ಕೆ ಬಂದ ಇವರು ಇಲ್ಲಿಯೇ ನೆಲೆಸಿ 1989ರಲ್ಲಿ ಈ ದೇಶದ ಪೌರತ್ವ ಪಡೆದಿದ್ದರು.

Categories
e-ದಿನ

ಮಾರ್ಚ್-31

ಪ್ರಮುಖಘಟನಾವಳಿಗಳು:

627: ಟ್ರೆಂಚ್ ಕದನದಲ್ಲಿ ಅಬು ಸುಫ್ಯಾನನ ಬೃಹತ್ ಪಡೆ ಮದೀನಾದಲ್ಲಿ ಮುಹಮ್ಮದ್ ಅವರ ಪಡೆಗಳ ಮೇಲೆ ಮುತ್ತಿಗೆ ಹಾಕಿದವು. ಮುಹಮ್ಮದರ ಜಾಣ್ಮೆಯಿಂದ ವಿರೋಧಿಗಳ ಈ ಮುತ್ತಿಗೆ ಸಫಲವಾಗಲಿಲ್ಲ.

1889: ಪ್ಯಾರಿಸ್ಸಿನಲ್ಲಿ ಐಫೆಲ್ ಗೋಪುರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಗೋಪುರದ ವಿನ್ಯಾಸಕಾರ ಗಸ್ಟಾವ್ ಐಫೆಲ್ ಅವರು ಗೋಪುರದ ಶಿಖರದಲ್ಲಿ ಫ್ರೆಂಚ್ ಧ್ವಜವನ್ನು ಹಾರಿಸಿದರು.

1918: ಅಮೆರಿಕದಲ್ಲಿ ಪ್ರಪ್ರಥಮ ಬಾರಿಗೆ ‘ಡೇ ಲೈಟ್ ಸೇವಿಂಗ್ ಟೈಮ್’ ಅನ್ನು ಜಾರಿಗೊಳಿಸಲಾಯಿತು. ಈ ಪ್ರಕಾರವಾಗಿ ಬೇಸಿಗೆ ಕಾಲದಲ್ಲಿ ಸಾಯಂಕಾಲಗಳು ಒಂದು ತಾಸು ಹೆಚ್ಚಿರಲಿ ಎಂದು ‘ದಿನವನ್ನು ಒಂದು ಗಂಟೆ ಮುಂಚಿತವಾಗಿ ಆರಂಭವಾಗುವಂತೆ’ ಗಡಿಯಾರಗಳಲ್ಲಿನ ಸಮಯವನ್ನು ಬದಲಿಸಿಕೊಳ್ಳುತ್ತಾರೆ. ಮತ್ತು ಬೇಸಿಗೆ ಕಳೆದ ನಂತರದಲ್ಲಿ ಪುನಃ ಗಡಿಯಾರಗಳನ್ನು ಸರಿಯಾದ ಸಮಯಕ್ಕೆ ಅಳವಡಿಸಿಕೊಳ್ಳುತ್ತಾರೆ.

1930: ಅಮೆರಿಕದಲ್ಲಿ ‘ಮೋಶನ್ ಪಿಕ್ಚರ್ ಪ್ರೊಡಕ್ಷನ್ ಕೋಡ್’ ಅಂದರೆ ಚಲನಚಿತ್ರಗಳ ನೀತಿ ಸಂಹಿತೆಯ ಅಳವಡಿಕೆಯನ್ನು ರೂಪಿಸಲಾಯಿತು. ಈ ಮೂಲಕವಾಗಿ ಅಲ್ಲಿ ಮುಂದಿನ 38 ವರ್ಷಗಳ ಕಾಲ ಲೈಂಗಿಕತೆ, ಅಪರಾಧ, ಧರ್ಮ ಮತ್ತು ಹಿಂಸೆಗಳನ್ನು ಬಿಂಬಿಸುವ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗುತ್ತಿತ್ತು.

1959: ಹದಿನಾಲ್ಕನೇ ದಲೈಲಾಮಾ ಅವರು ಗಡಿದಾಟಿ ಭಾರತದಲ್ಲಿ ರಾಜಕೀಯ ರಕ್ಷಣೆ ಪಡೆದರು.

1966: ಸೋವಿಯತ್ ಯೂನಿಯನ್ ‘ಲೂನಾ 10’ ಬಾಹ್ಯಾಕಾಶ ಅನ್ವೇಷಣಾ ಉಪಗ್ರಹವನ್ನು ಕಳುಹಿತು. ಇದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಪ್ರಥಮ ಉಪಗ್ರಹವೆನಿಸಿತು.

1970: ‘ಎಕ್ಸ್’ಪ್ಲೋರರ್-1’ ತನ್ನ ಹನ್ನೆರಡು ವರ್ಷಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಹಿಂದಿರುಗಿತು.

1981: ಭಾರತೀಯ ಸಂಜಾತ ಅಮೆರಿಕನ್ ವಿಜ್ಞಾನಿ ಆನಂದ ಚಕ್ರವರ್ತಿ ಅವರು ಪ್ಲಾಸ್ಮಿಡ್ ಉಪಯೋಗಿಸಿ ಕೃತಕವಾಗಿ ಜೀವಿ ಸೃಷ್ಟಿಸಿದ್ದಕ್ಕಾಗಿ ಪೇಟೆಂಟ್ ಪಡೆದರು. ಒಂದು ಜೀವಂತ ಕಣಕ್ಕೆ ಸಿಕ್ಕಿದ ಮೊದಲ ಪೇಟೆಂಟ್ ಇದು.

1998: ನೆಟ್ಸ್ಕೇಪ್ ಸಂಸ್ಥೆಯು ‘ಮೊಜಿಲ್ಲಾ’ವನ್ನು ಪರವಾನಗಿ ಮುಕ್ತ ಸೋರ್ಸ್ ಕೋಡ್ ರೂಪದಲ್ಲಿ ಬಿಡುಗಡೆ ಮಾಡಿತು.

2001: ಸಚಿನ್ ತೆಂಡುಲ್ಕರ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 10,000 ರನ್ನುಗಳ ಸಾಧನೆ ಮಾಡಿದ ಪ್ರಥಮ ಕ್ರಿಕೆಟ್ ಆಟಗಾರ ಎನಿಸಿದರು.

2009: ವಿಶ್ವದ ಏಳು ಅಚ್ಚರಿಗಳಂತೆಯೇ ಭಾರತ ದೇಶದ ಏಳು ಅದ್ಭುತಗಳು ಪ್ರಕಟಗೊಂಡವು. ಇವುಗಳಲ್ಲಿ ತಾಜ್‌ಮಹಲ್‌ ಪ್ರಥಮ ಸ್ಥಾನ ಪಡೆದಿದ್ದು ಇತರ ಆರು ಸ್ಥಾನಗಳಲ್ಲಿ ಕೊನಾರ್ಕ್ ಸೂರ್ಯದೇಗುಲ, ಮಧುರೆ ಮೀನಾಕ್ಷಿ ದೇವಸ್ಥಾನ, ಖಜುರಾಹೋ, ಕೆಂಪು ಕೋಟೆ, ಜೈಸಲ್ಮೇರ್ ಅರಮನೆ, ನಲಂದಾ ವಿಶ್ವವಿದ್ಯಾಲಯ ಹಾಗೂ ಗುಜರಾತಿನ ಕಛ್ ಜಿಲ್ಲೆಯ ದೇಶದ ಅತಿದೊಡ್ಡ ಪ್ರಾಚ್ಯವಸ್ತು ತಾಣ ಧೊಲವಿರಾ ಸೇರಿವೆ. ದೇಶದ ವಾಸ್ತುಶಿಲ್ಪ ಪರಂಪರೆ ಗುರುತಿಸುವ ಉದ್ದೇಶದಿಂದ ಎನ್‌ಡಿಟಿವಿ ಸುದ್ದಿ ವಾಹಿನಿಯು ಈ ಅಭಿಯಾನ ನಡೆಸಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯ ಪಯಣಕ್ಕೆ ಚಾಲನೆ ದೊರಕಿತು. ಚೀನಾದ ಅಧ್ಯಕ್ಷ ಹು ಜಿಂಟಾವೊ ಅವರು ಬೀಜಿಂಗಿನ ತಿಯಾನನ್ಮೆನ್ ಚೌಕದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜ್ಯೋತಿಯ ಜಾಗತಿಕ ರಿಲೇಗೆ ಚಾಲನೆ ನೀಡಿದರು.

1878: ಜಾಗತಿಕ ಹೆವಿ ವೈಟ್ ಬಾಕ್ಸಿಂಗ್ ಚಾಂಪಿಯನ್ ಆದ ಪ್ರಥಮ ಕರಿಯ ವ್ಯಕ್ತಿಯಾದ ಜಾನ್ ಆರ್ಥರ್ ‘ಜಾಕ್ ಜಾನ್ಸನ್’ ಅವರು ಟೆಕ್ಸಾಸಿನ ಗಾಲ್ವೆಸ್ಟನ್ ಎಂಬಲ್ಲಿ ಜನಿಸಿದರು.

1890: ಆಸ್ಟ್ರೇಲಿಯನ್-ಇಂಗ್ಲಿಷ್ ಭೌತಶಾಸ್ತ್ರಜ್ಞ ವಿಲಿಯಂ ಲಾರೆನ್ಸ್ ಬ್ರಾಗ್ ಅವರು ಆಸ್ಟ್ರೇಲಿಯಾದ ಅಡಿಲೈಡ್ ನಗರದಲ್ಲಿ ಜನಿಸಿದರು. ‘ಅನಾಲಿಸಿಸ್ ಆಫ್ ಕ್ರಿಸ್ಟಲ್ ಸ್ಟ್ರಕ್ಚರ್ಸ್ ಬೈ ಮೀನ್ಸ್ ಆಫ್ ಎಕ್ಸ್-ರೇ’ ಕುರಿತಾದ ಇವರ ಕಾರ್ಯಕ್ಕೆ 1915 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1906: ಜಪಾನಿನ ಭೌತವಿಜ್ಞಾನಿ ಸಿನ್-ಇಟಿರೋ ತೊಮೊನಗ ಅವರು ಟೋಕಿಯೋದಲ್ಲಿ ಜನಿಸಿದರು. ಇವರಿಗೆ ‘ಕ್ವಾಂಟಮ್ ಎಲೆಕ್ಟ್ರೋ ಡೈನಮಿಕ್ಸ್’ ಕುರಿತಾದ ಸಂಶೋಧನೆಗಾಗಿ 1965 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1914: ಸಾಹಿತಿ ಓಕ್ಟಾವಿಯೋ ಪಾಜ್ ಅವರು ಮೆಕ್ಸಿಕೋ ನಗರದಲ್ಲಿ ಜನಿಸಿದರು. ಅವರಿಗೆ 1990ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1934: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಕಾರ್ಲೋ ರಬ್ಬಿಯಾ ಅವರು ಇಟಲಿಯ ಗೊರಿಸಿಯಾ ಎಂಬಲ್ಲಿ ಜನಿಸಿದರು. ಇವರಿಗೆ ‘W and Z particles at CERN’ ಕುರಿತಾದ ಸಂಶೋಧನೆಗೆ 1958 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1938: ಹದಿನೈದು ವರ್ಷಗಳ ಕಾಲ ದೆಹಲಿಯ ಮುಖ್ಯಮಂತ್ರಿಗಳಾಗಿದ್ದ ಶೀಲಾ ದೀಕ್ಷಿತ್ ಪಂಜಾಬಿನ ಕಪುರ್ತಲ ಎಂಬಲ್ಲಿ ಜನಿಸಿದರು.

1972: ಟ್ವಿಟ್ಟರ್ ಮತ್ತು ಪೈರಾ ಲ್ಯಾಬ್ಸ್ ಸಹ-ಸಂಸ್ಥಾಪಕ ಇವಾನ್ ವಿಲಿಯಮ್ಸ್ ಅವರು ಅಮೆರಿಕದ ಕ್ಲಾರ್ಕ್ಸ್ ಎಂಬಲ್ಲಿ ಜನಿಸಿದರು.

ಪ್ರಮುಖಜನನ/ಮರಣ:

1917: ಜರ್ಮನಿಯ ವೈದ್ಯ ವಿಜ್ಞಾನಿ ಎಮಿಲ್ ವಾನ್ ಬೆಹ್ರಿಂಗ್ ಅವರು ಮಾರ್ಬರ್ಗ್ ಎಂಬಲ್ಲಿ ನಿಧನರಾದರು. ಡಿಫ್ತೀರಿಯಾ ರೋಗಕ್ಕೆ ಔಷದ ಕಂಡುಹಿಡಿದ ಇವರು ‘ಮಕ್ಕಳ ಸಂರಕ್ಷರೆಂಬ’ ಕೀರ್ತಿಗೆ ಪಾತ್ರರಾಗಿ 1901 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಪಡೆದರು.

1945: ಜರ್ಮನಿಯ ರಸಾಯನ ಶಾಸ್ತ್ರಜ್ಞ ಹಾನ್ಸ್ ಫಿಷರ್ ಅವರು ವಿಶ್ವಮಹಾಯುದ್ಧದ ಕೊನೆಯ ದಿನಗಳಲ್ಲಿ ತಮ್ಮ ಸಂಸ್ಥೆ ಮತ್ತು ಮಾಡಿದ ಕೆಲಸಗಳು ಧ್ವಂಸಗೊಂಡಿದ್ದರಿಂದ ನೋವಿನಿಂದ ಮ್ಯೂನಿಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ‘ಹೆಮಿನ್ ಮತ್ತು ಕ್ಲೋರೋಫಿಲ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1930 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2001: ಪುರಸ್ಕೃತ ಭೌತಶಾಸ್ತ್ರಜ್ಞ ಕ್ಲಿಫ್ಫರ್ಡ್ ಷುಲ್ ಅವರು ಮೆಸ್ಸಚುಸೆಟ್ಸ್ ಪ್ರದೇಶದ ಮೆಡ್ಫೋರ್ಡ್ ಎಂಬಲ್ಲಿ ನಿಧನರಾದರು. ಇವರಿಗೆ ‘ನ್ಯೂಟ್ರಾನ್ ಸ್ಕಾಟರಿಂಗ್’ ಕುರಿತಾದ ಸಂಶೋಧನೆಗಾಗಿ 1994 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2007: ಸಂಗೀತ ಕಲಾವಿದ ಎಸ್. ಜಿ. ರಘುರಾಂ ಅವರು ತಮ್ಮ 76ನೆಯ ವಯಸ್ಸಿನಲ್ಲಿ ಮೈಸೂರಿನಲ್ಲಿ ನಿಧನರಾದರು. 1983ರಲ್ಲಿ ಅಮೆರಿಕದಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾವಗೀತೆ ಹಾಡಿದ ಮೊದಲ ಕನ್ನಡಿಗರು ಎಂಬ ಕೀರ್ತಿಗೆ ರಘುರಾಂ ಭಾಜನರಾಗಿದ್ದರು. ಇವರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸಂದಿತ್ತು.

2016: ಹಂಗೇರಿಯ ಸಾಹಿತಿ ನೊಬೆಲ್ ಪುರಸ್ಕೃತ ಇಮ್ರೆ ಕೆರ್ಟೆಸ್ ಅವರು ಬುಡಾಪೆಸ್ಟ್ ಎಂಬಲ್ಲಿ ನಿಧನರಾದರು.

Categories
e-ದಿನ

ಮಾರ್ಚ್-30

ಪ್ರಮುಖಘಟನಾವಳಿಗಳು:

1699: ಗುರುಗೋಬಿಂದ್ ಸಿಂಗ್ ಅವರು ಪಂಜಾಬಿನ ಆನಂದಪುರ ಸಮೀಪದ ಕೇಶ್ ಗಢಸಾಹಿಬ್ ನಲ್ಲಿ `ಖಾಲ್ಸಾ ಪಂಥ’ ಹುಟ್ಟು ಹಾಕಿದರು. ‘ಗುರುಗ್ರಂಥ ಸಾಹಿಬ್’ ಅನ್ನು ಸಿಖ್ ಪಂಥದ ಪವಿತ್ರ ಗ್ರಂಥ ಎಂದು ಘೋಷಿಸಲಾಯಿತು.

1841: ಅಥೆನ್ಸ್ ನಗರದಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಗ್ರೀಸ್ ಪ್ರಾರಂಭಗೊಂಡಿತು.

1842: ಅಮೆರಿಕದ ಶಸ್ತ್ರಚಿಕಿತ್ಸಕರಾದ ಡಾ. ಕ್ರಾಫರ್ಡ್ ಲಾಂಗ್ ಅವರು ಪ್ರಥಮ ಬಾರಿಗೆ ಈಥರ್ ಅನೇಸ್ತೇಶಿಯಾವನ್ನು ಶಸ್ತ್ರ ಚಿಕಿತ್ಸೆಯೊಂದಕ್ಕೆ ಬಳಸಿದರು.

1867: ಅಮೆರಿಕವು ಅಲಾಸ್ಕಾವನ್ನು ರಷ್ಯಾದಿಂದ 7.2 ಮಿಲಿಯನ್ ಡಾಲರಿಗೆ ಕೊಂಡುಕೊಂಡಿತು.

1949: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜೈಪುರದಲ್ಲಿ ‘ಯೂನಿಯನ್ ಆಫ್ ಗ್ರೇಟರ್ ರಾಜಸ್ಥಾನ’ವನ್ನು ಉದ್ಘಾಟಿಸಿದರು.

1952: ಕೆಂಗಲ್ ಹನುಮಂತಯ್ಯನವರು ಕರ್ನಾಟಕದ ಎರಡನೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.

1981: ಜಾನ್ ಹಿಂಕ್ಲೈ ಎಂಬಾತ ರೋನಾಲ್ಡ್ ರೀಗನ್ ಅವರ ಮೇಲೆ ಗುಂಡು ಹಾರಿಸಿದ. ಈ ಗುಂಡು ರೀಗನ್ ಅವರ ಎದೆಗೆ ಪೆಟ್ಟು ನೀಡಿತಲ್ಲದೆ, ಈ ಘಟನೆಯಲ್ಲಿ ಇನ್ನೂ ಮೂವರಿಗೆ ಗಾಯಗಳಾದವು.

2007: ಹಡಗಿನಿಂದ ಹಡಗಿಗೆ 150 ಕಿಲೋ ಮೀಟರಿನವರೆಗೆ ಗುರಿ ಇಡಬಲ್ಲ ‘ಧನುಷ್ ಕ್ಷಿಪಣಿ’ಯ ಪರೀಕ್ಷಣಾ ಉಡಾವಣೆಯನ್ನು ಬಂಗಾಳಕೊಲ್ಲಿಯ ಪಾರಾದೀಪ್ ಬಂದರಿನ ಸಮೀಪದಲ್ಲಿ ಲಂಗರು ಹಾಕಿದ್ದ ನೌಕಾದಳದ ಹಡಗಿನಿಂದ ಯಶಸ್ವಿಯಾಗಿ ನಡೆಸಲಾಯಿತು.

2007: ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದರು. ಅವರು 271 ಪಂದ್ಯಗಳಲ್ಲಿ 337 ವಿಕೆಟ್ ಉರುಳಿಸಿದ್ದರು.

2008: ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ‘ಬಿಎಂಟಿಸಿ’ಯು ‘ವಾಯು ವಜ್ರ’ ಬಸ್ ಸೇವೆಯನ್ನು ಆರಂಭಿಸಿತು. ಜೊತೆಗೆ ನಗರದ ಒಳಭಾಗದಲ್ಲಿ ಹೆಚ್ಚಿನ ಜನಸಂದಣಿಯ ಅವಧಿಯಲ್ಲಿ ಸಂಚರಿಸಲಿರುವ ‘ಸುವರ್ಣ ಪೀಕ್ ಹವರ್’ ಬಸ್ ಸೇವೆಯನ್ನೂ ಆರಂಭಿಸಿತು.

2009: ಪಾಕಿಸ್ಥಾನದ ವಾಘಾ ಗಡಿ ಪ್ರದೇಶದಲ್ಲಿರುವ ಮನಾವನ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಯಲ್ಲಿ ಹನ್ನೊಂದು ಅಧಿಕಾರಿಗಳು ಸೇರಿ 27 ಪೊಲೀಸರು, ಎಂಟು ಉಗ್ರರ ಸಹಿತ ಒಟ್ಟು 35 ಜನ ಹತರಾಗಿ, 100ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ಆರು ಉಗ್ರರನ್ನು ಜೀವಂತ ಸೆರೆ ಹಿಡಿಯುವಲ್ಲಿ ಸೇನಾ ಪಡೆ ಯಶಸ್ವಿಯಾಯಿತು.

2009: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಪುನಃ ಕನ್ನಡಿಗರಿಗೆ ದಕ್ಕಿದವು. ಈದಿನ ನಡೆದ ಚುನಾವಣೆಯಲ್ಲಿ ಮಹಾಪೌರರಾಗಿ ಯಲ್ಲಪ್ಪ ಕುರ್ಗರ ಹಾಗೂ ಉಪಮಹಾಪೌರರಾಗಿ ಜ್ಯೋತಿ ಭಾವಿಕಟ್ಟಿ ಆಯ್ಕೆಯಾದರು.

2009: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಯಸುವರಿಗೆ ಸಮರ್ಪಕ ಮಾಹಿತಿ ನೀಡಲು ನಿರಾಕರಿಸಿದರೆ ಅವರಿಗೆ ದಂಡ ವಿಧಿಸಬಹುದಾಗಿ ಎಂದು ಕೇಂದ್ರ ಮಾಹಿತಿ ಆಯೋಗ ತಿಳಿಸಿತು.

ಪ್ರಮುಖಜನನ/ಮರಣ:

1899: ಬಂಗಾಳಿ ಸಾಹಿತಿ ಮತ್ತು ಚಲನಚಿತ್ರ ಸಾಹಿತ್ಯಕಾರ ಶರದಿಂದು ಬಂದ್ಯೋಪಾಧ್ಯಾಯಾಯ್ ಅವರು ಬ್ರಿಟಿಷ್ ಭಾರತದ ಜೌನ್ ಪುರ್ ಎಂಬಲ್ಲಿ ಜನಿಸಿದರು. ‘ಬ್ಯೋಮಕೇಶ ಬಕ್ಷಿ ಕತೆಗಳು ಅವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.

1906: ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಮಡಿಕೇರಿಯಲ್ಲಿ ಜನಿಸಿದರು. ಇವರು 1957ರಿಂದ 1961ರವರೆಗೆ ಭಾರತದ ಭೂಸೇನಾ ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾಗಿದ್ದ ತಿಮ್ಮಯ್ಯನವರು ಯುದ್ಧ ಖೈದಿಗಳ ಸ್ವದೇಶಗಳಲ್ಲಿ, ಅವರುಗಳಿಗೆ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು. ಹೀಗೆ ತಿಮ್ಮಯ್ಯನವರ ಸಾಧನೆಗಳು ವೈವಿಧ್ಯಪೂರ್ಣವಾದದ್ದು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

1926: ಪ್ರಸಿದ್ಧ ಅಂತರರಾಷ್ಟ್ರೀಯ ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳ ಮಳಿಗೆ ‘ಐಕಿಯಾ’(IKEA) ಸ್ಥಾಪಕ ಸ್ವೀಡನ್ನಿನ ಉದ್ಯಮಿ ಇಂಗ್ವಾರ್ ಕಂಪರಾಡ್ ಅವರು ಪ್ಜಟ್ಟಿರಿಡ್ ಎಂಬಲ್ಲಿ ಜನಿಸಿದರು.

1908: ಚಲನಚಿತ್ರ ಅಭಿನೇತ್ರಿ, ನಿರ್ಮಾಪಕಿ, ಮೊಟ್ಟ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ದೇವಕಿ ರಾಣಿ ಅವರು ವಿಶಾಕಪಟ್ಟಣದಲ್ಲಿ ಜನಸಿದರು. ಇವರು ಭಾರತೀಯ ಚಿತ್ರಲೋಕದ ಪ್ರಥಮ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಪದ್ಮಶ್ರೀ, ಪ್ರಥಮ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ನೆಹರೂ ಲ್ಯಾಂಡ್ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

1938: ಜರ್ಮನಿಯ ಅರ್ಥಶಾಸ್ತ್ರಜ್ಞ ಮತ್ತು ತಂತ್ರಜ್ಞ ಹಾಗೂ ವಿಶ್ವ ಆರ್ಥಿಕ ಸಮುದಾಯ(ವರ್ಲ್ಡ್ ಎಕನಾಮಿಕ್ ಫೋರಂ) ಸ್ಥಾಪಕರಾದ ಕ್ಲಾಸ್ ಸ್ಕ್ವಾಬ್ ಅವರು ರೇವನ್ಸ್ ಬರ್ಗ್ ಎಂಬಲ್ಲಿ ಜನಿಸಿದರು.

1949: ಜರ್ಮನ್ ರಸಾಯನ ಶಾಸ್ತ್ರಜ್ಞ ಫ್ರೆಡ್ರಿಕ್ ಬೆರ್ಗಿಯಸ್ ಅವರು ಬ್ಯೂನೋಸ್ ಏರೆಸ್ ಎಂಬಲ್ಲಿ ನಿಧನರಾದರು. ‘ಕೆಮಿಕಲ್ ಹೈ ಪ್ರೇಷರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1931 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತು.

1949: ಅಮೆರಿಕದ ವೈದ್ಯಶಾಸ್ತ್ರಜ್ಞ ಫಿಲಿಪ್ ಷೋ ಆಲ್ಟರ್ ಹೆಂಚ್ ಜಮೈಕಾ ಬಳಿಯ ಓಚೋ ರಿಯೋಸ್ ಎಂಬಲ್ಲಿ ನಿಧನರಾದರು. ಹಾರ್ಮೋನ್ಸ್ ಆಫ್ ದಿ ಆಡ್ರೆನಾಲ್ ಕಾರ್ಟೆಕ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1950 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1981: ರೀಡರ್ಸ್ ಡೈಜೆಸ್ಟ್ ಪತ್ರಿಕೆಯ ಸಹ ಸಂಸ್ಥಾಪಕ ಡಿವಿಟ್ ವಾಲ್ಲೇಸ್ ನಿಧನರಾದರು.

1916: ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಸ್ ಎಂ ಪಂಡಿತ್‌ ಅವರು ನಿಧನರಾದರು. ಪೌರಾಣಿಕ ಪತ್ರಗಳಿಂದ ಸಿನಿಮಾ ಚಲನಚಿತ್ರ ನಟನಟಿಯರ ಚಿತ್ರಣ, ಹಾಗೂ ವಿದೇಶಗಳಲ್ಲಿನ ಅಂತರರಾಷ್ಟ್ರೀಯ ಪ್ರದರ್ಶನಗಳವರೆಗೆ ಇವರ ಕೀರ್ತಿ ವ್ಯಾಪಿಸಿತ್ತು. ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಇವರಿಗೆ ಸಂದಿದ್ದವು.

2005: ಪ್ರಸಿದ್ಧ ಸಾಹಿತಿ, ವ್ಯಂಗ್ಯಚಿತ್ರಕಾರ ಮತ್ತು ಚಿತ್ರಕಥೆಗಾರ ಓ.ವಿ. ವಿಜಯನ್ ಅವರು ಹೈದರಾಬಾದಿನಲ್ಲಿ ನಿಧನರಾದರು. ಮಲಯಾಳದಲ್ಲಿ ಹೆಚ್ಚು ಬರೆದಿದ್ದ ಇವರು ಅವುಗಳನ್ನು ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದ್ದರು. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

2006: ಖ್ಯಾತ ಹಿಂದಿ ಸಾಹಿತಿ, ಹಿರಿಯ ಪತ್ರಕರ್ತ ಮನೋಹರ್ ಶ್ಯಾಮ್ ಜೋಶಿ ಅವರು ತಮ್ಮ 73ನೇ ವಯಸ್ಸಿನಲ್ಲಿ ದೆಹಲಿಯಲ್ಲಿ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಇವರು ‘ಹಿಂದೂಸ್ಥಾನ್’ ಹಿಂದಿ ವಾರಪತ್ರಿಕೆಯ ಸಂಪಾದಕರಾಗಿದ್ದರು. ‘ಹಮ್ ಲೋಗ್’ ಸೇರಿದಂತೆ ಅನೇಕ ಪ್ರಸಿದ್ಧ ಧಾರಾವಾಹಿಗಳನ್ನು ಬರೆದಿದ್ದರು.

2007: ಹಿರಿಯ ನಾಟ್ಯ ಕಲಾವಿದೆ ಮತ್ತು ನೃತ್ಯಗುರು ನರ್ಮದಾ ಅವರು ಬೆಂಗಳೂರಿನಲ್ಲಿ ನಿಧನರಾದರು. ಅನೇಕ ಖ್ಯಾತ ನೃತ್ಯ ಪಟುಗಳಿಗೆ ಇವರು ಗುರುವಾಗಿದ್ದರು. ಇವರಿಗೆ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದ ಶಾಂತಲಾ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.

Categories
e-ದಿನ

ಮಾರ್ಚ್-29

ಪ್ರಮುಖಘಟನಾವಳಿಗಳು:

1849: ಲಾರ್ಡ್ ಡಾಲ್ ಹೌಸಿಯು ಪಂಜಾಬನ್ನು ವಶಪಡಿಸಿಕೊಂಡ. ಹೀಗೆ ಅದು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಯಿತು.

1857: ಯುವ ಸೈನಿಕ ಮಂಗಲಪಾಂಡೆ ಬ್ರಿಟಿಷ್ ಸೇನಾಡಳಿತದ ವಿರುದ್ಧ ಬಂಡೆದ್ದು, ‘ಸಿಪಾಯಿ ದಂಗೆ’ಗೆ ಪ್ರಾರಂಭ ನೀಡಿದರು. ಅವರು ತಮ್ಮ ತುಕಡಿಯ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿದರು. ಮುಂದೆ ಪಾಂಡೆಯನ್ನು ನಿರಾಯುಧರನ್ನಾಗಿ ಮಾಡಿ ಗಲ್ಲಿಗೇರಿಸಲಾಯಿತು. ಈ ಘಟನೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಕವಾಯಿತು.

1871: ರಾಣಿ ವಿಕ್ಟೋರಿಯಾ ರಾಯಲ್ ಆಲ್ಬರ್ಟ್ ಹಾಲ್ ಅನ್ನು ಉದ್ಘಾಟಿಸಿದರು.

1886: ಜಾನ್ ಪೆಂಬರ್ಟನ್ ಅವರು ಅಟ್ಲಾಂಟಾದಲ್ಲಿನ ಒಂದು ಹಿತ್ತಲಿನಲ್ಲಿ ಕೋಕಾ-ಕೋಲಾ ತಯಾರಿಕೆಯನ್ನು ಆರಂಭಿಸಿದರು. ಆಗ ಅವರಿಗೆ ಅದನ್ನು ಪೇಟೆಂಟ್ ಔಷದವನ್ನು ಮಾಡುವ ಉದ್ದೇಶ ಇತ್ತು.

1914: ಮದರ್ ಆಫ್ ಅರೋವಿಲ್ಲೆ ಎಂದೇ ಖ್ಯಾತರಾದ ಮೀರಾ ಅಲ್ಫಾಸಾ ಅವರು ಪುದುಚೆರಿಯಲ್ಲಿ ಅರವಿಂದರನ್ನು ಮೊಟ್ಟ ಮೊದಲ ಬಾರಿಗೆ ಭೇಟಿಯಾದರು.

1957: ನೂತನ ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯರಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಸರ್ವಾನುಮತದಿಂದ ಆಯ್ಕೆಯಾದರು.

1957: ನ್ಯೂಯಾರ್ಕಿನ ಒಂಟಾರಿಯೋ ಮತ್ತು ಪಶ್ಚಿಮ ರಸ್ತೆ ರೈಲ್ವೆಯನ್ನು ಇಂದಿನ ಕೊನೆಯ ಯಾನದೊಂದಿಗೆ ಪೂರ್ಣವಾಗಿ ರದ್ಧುಗೊಳಿಸಲಾಯಿತು. ಈ ರೀತಿಯಾಗಿ ಪೂರ್ಣವಾಗಿ ರದ್ಧುಗೊಂಡ ಅಮೆರಿಕದ ಪ್ರಮುಖ ರಸ್ತೆ ರೈಲು ಯೋಜನೆಗಳಲ್ಲಿ ಇದು ಪ್ರಥಮದ್ದಾಗಿದೆ.

1974: ನಾಸಾದ ಮೆರಿನರ್ 10 ಬಾಹ್ಯಾಕಾಶ ಅನ್ವೇಷಣಾ ಯೋಜನೆಯು (ಸ್ಪೇಸ್ ಪ್ರೋಬ್) ಮರ್ಕ್ಯುರಿಯ ಸಮೀಪ ಸಂಚರಿಸಿದ ಪ್ರಥಮ ಬಾಹ್ಯಾಕಾಶ ವ್ವವಸ್ಥೆ ಎನಿಸಿತು.

1982: ತೆಲುಗು ಚಲನಚಿತ್ರ ನಟ ಎನ್.ಟಿ. ರಾಮರಾವ್ ಅವರ ಪ್ರಾದೇಶಿಕ ಪಕ್ಷ ‘ತೆಲುಗುದೇಶಂ’ ಹೈದರಾಬಾದಿನಲ್ಲಿ ಉದಯವಾಯಿತು.

1990: ಉತ್ತರ ಪ್ರದೇಶದ ಚಮೊಲಿಯಲ್ಲಿ 6.8 ಪ್ರಮಾಣದ ಭೂಕಂಪನದಲ್ಲಿ 103 ಮಂದಿ ನಿಧನರಾದರು

2006: ದೇಶದಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಮತ್ತು ತರುಣ್ ಚಟರ್ಜಿ ಅವರನ್ನು ಒಳಗೊಂಡ ಪೀಠವು ನಿರಾಕರಿಸಿತು.

2007: ಬಾಲಸೋರ್ ಜಿಲ್ಲೆಯ ಚಂಡಿಪುರ ಬಳಿ ಅತ್ಯಾಧುನಿಕ ‘ಅಸ್ತ್ರ’ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ದೇಶಿ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾಪಡೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವು (ಡಿ ಆರ್ ಡಿ ಎಲ್) ನಿರ್ಮಿಸಿದ್ದು, ಇದು 80.ಕಿಮಿ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟಿನ ನಾಲ್ಕನೇ ದಿನವಾದ ಈ ದಿನದಂದು, ರಾಹುಲ್ ದ್ರಾವಿಡ್ ಅವರು ಹತ್ತು ಸಾವಿರ ರನ್ ಪೂರೈಸಿ, 25ನೇ ಶತಕ ದಾಖಲಿಸಿದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಿನಲ್ಲಿ 627 ರನ್ ಗಳಿಸಿತು.

2008: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪಟ್ಟ ಹಳ್ಳಿಯಲ್ಲಿ ನಡೆಸಿದ ಉತ್ಖನನದಲ್ಲಿ 20 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳನ್ನು ಪತ್ತೆ ಮಾಡಿತು.

2009: ಆಸ್ಟ್ರೇಲಿಯಾದ ಕೈರ್ನ್ಸ್‌ನಲ್ಲಿ ಸಾವಿರಾರು ವಿಷಪೂರಿತ ನೆಲಗಪ್ಪೆಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಇವುಗಳ ಕಳೇಬರಗಳ ಗೊಬ್ಬರವನ್ನು ಕೃಷಿಗೆ ಬಳಸುವ ಪದ್ಧತಿ ಇಲ್ಲಿ ಪ್ರತಿ ವರ್ಷ ಬಳಕೆಯಲ್ಲಿ ಇದೆ.

2009: ದುಬೈ ನ್ಯಾಯಾಲಯದಲ್ಲಿ ಎಬ್ಟಿಸಂ ಅಲಿ ರಷೀದ್ ಬಿದ್ವಾಯಿ ಅವರು ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡರು.

2014: ಪ್ರಥಮ ಸಲಿಂಗ ಮದುವೆಗಳನ್ನು ಇಂಗ್ಲೆಂಡ್ ಮತ್ತು ವೇಲ್ಸ್ಗಳಲ್ಲಿ ನಡೆಸಲಾಯಿತು.

ಪ್ರಮುಖಜನನ/ಮರಣ:

1815: ಸರ್ ಹೆನ್ರಿ ಬಾರ್ಟಲ್ ಫ್ರೇರ್ ಜನಸಿದರು. ಇವರು ಭಾರತದಲ್ಲಿ ಬ್ರಿಟಿಷ್ ವಸಾಹತಿನ ಆಡಳಿತಗಾರರಾಗಿದ್ದು ಐದು ವರ್ಷಗಳ ಕಾಲ ಬಾಂಬೆಯ ಗವರ್ನರ್ ಆಗಿದ್ದರು.

1869: ಇಂಗ್ಲಿಷ್ ಕಟ್ಟಡ ವಿನ್ಯಾಸಕಾರ ಸರ್ ಎಡ್ವಿನ್ ಲ್ಯುಟಿಯೆನ್ಸ್ ಅವರು ಲಂಡನ್ನಿನಲ್ಲಿ ಜನಿಸಿದರು. ಇವವರು ನವದೆಹಲಿಯ ಯೋಜನಾ ಭವನ ಹಾಗೂ ಮೊದಲಿಗೆ ವೈಸ್ ರಾಯ್ ಹೌಸ್ ಆಗಿದ್ದ ಈಗಿನ ರಾಷ್ಟ್ರಪತಿ ಭವನದ ವಿನ್ಯಾಸಕ್ಕಾಗಿ ಖ್ಯಾತರಾಗಿದ್ದಾರೆ.

1892: ನಮ್ಮ ನಾಡಿನ ಮಹಾನ್ ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಹುಲ್ಲೂರು ಶ್ರೀನಿವಾಸ ಜೋಯಿಸರು ಜನಿಸಿದರು. ಶ್ರೀನಿವಾಸ ಜೋಯಿಸರಿಗೆ ‘ಇತಿಹಾಸ ಸಂಶೋಧನಾ ಪ್ರಸಕ್ತ’, ‘ಐತಿಹ್ಯ ವಿಮರ್ಶನ ವಿಚಕ್ಷಣ’ ಮುಂತಾದ ಬಿರುದು ಗೌರವಗಳು ಅರ್ಪಿತವಾಗಿದ್ದವು. 2000 ವರ್ಷದಷ್ಟು ದೀರ್ಘ ಇತಿಹಾಸ ದಾಖಲಿಸಿರುವ ಹುಲ್ಲೂರು ಶ್ರೀನಿವಾಸ ಜೋಯಿಸರು, ತಾವೇ ಸ್ಥಾಪಿಸಿದ ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯದ ಗೌರವ ಕ್ಯೂರೇಟರಾಗಿಯೂ ಸೇವೆ ಸಲ್ಲಿಸಿದ್ದರು.

1912: ಜರ್ಮನಿಯ ಖ್ಯಾತ ವಿಮಾನ ಹಾರಾಟಗಾರ್ತಿ ಹನ್ನಾ ರೀಟ್ಸ್ಷ್ ಈಗಿನ ಪೋಲೆಂಡ್ ಭಾಗವಾದ ಹಿರ್ಶ್ ಬರ್ಗ್ ಎಂಬಲ್ಲಿ ಜನಿಸಿದರು. ಆಲ್ಫ್ ಪರ್ವತ ಶ್ರೇಣಿಯ ಮೇಲಿನಿಂದ ಗ್ಲೈಡರ್ ಹಾರಿಸಿದ ಪ್ರಥಮ ವ್ಯಕ್ತಿ ಈಕೆ. ಬರ್ಲಿನ್ನಿನ ಭೂಗತ ಬಂಕರಿನಲ್ಲಿ ಹಿಟ್ಲರನನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು.

1914: ಇಂಗ್ಲಿಷ್ ಇತಿಹಾಸಜ್ಞ, ಪತ್ರಕರ್ತ ಮತ್ತು ಬರಹಗಾರ ಚಾಪ್ಮಾನ್ ಪಿಂಚರ್ ಭಾರತದ ಅಂಬಾಲದಲ್ಲಿ ಜನಿಸಿದರು.

1927: ಇಂಗ್ಲಿಷ್ ವೈದ್ಯ ವಿಜ್ಞಾನಿ ಜಾನ್ ವೇನ್ ಅವರು ವರ್ಸೆಸ್ಟೈರ್ ಶೈರಿನ ಟಾರ್ಡೆಬಿಗ್ಗೆ ಎಂಬಲ್ಲಿ ಜನಿಸಿದರು. ಇವರಿಗೆ ‘ಪ್ರೋಸ್ಟಾಗ್ಲಾಂಡಿನ್ಸ್’ ಕುರಿತಾದ ಸಂಶೋಧನೆಗೆ 1982 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತು. ಆಸ್ಪಿರಿನ್ ಕುರಿತಾದ ಮಹತ್ವದ ಸಂಶೋಧನೆಗಳು ಕೂಡಾ ಇವರದ್ದಾಗಿದೆ.

1929: ಮಹಾನ್ ರಂಗಕರ್ಮಿ, ಚಲನಚಿತ್ರ ಮತ್ತು ಕಿರುತೆರೆಯ ಜನಪ್ರಿಯ ನಟ ಉತ್ಪಲ್ ದತ್ ಅವರು ಪೂರ್ವ ಬಂಗಾಳದ ಬರಿಸಾಲ್ ಎಂಬಲ್ಲಿ ಜನಿಸಿದರು. ಭುವನ್ ಶೋಮೆ ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಮತ್ತು ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಅಂತಹ ಮಹತ್ವದ ಗೌರವಗಳ ಜೊತೆಗೆ ಅನೇಕ ಜನಪ್ರಿಯ ಪ್ರಶಸ್ತಿಗಳೂ ಅವರಿಗೆ ಸಂದಿದ್ದವು.

1941: ಅಮೆರಿಕದ ಖಗೋಳ ಭೌತವಿಜ್ಞಾನಿ ಜೋಸೆಫ್ ಹೂಟನ್ ಟೇಲರ್ ಜ್ಯೂನಿಯರ್ ಅವರು ಫಿಲೆಡೆಲ್ಫಿಯಾದಲ್ಲಿ ಜನಿಸಿದರು. ಇವರಿಗೆ ಪಲ್ಸರ್ಸ್ ಕುರಿತಾದ ಸಂಶೋಧನೆಗೆ 1993 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1943: ಬ್ರಿಟನ್ನಿನ ಬ್ಯಾಂಕರ್ ಮತ್ತು ಪ್ರಧಾನ ಮಂತ್ರಿಗಳಗಿದ್ದ ಜಾನ್ ಮೇಜರ್ ಅವರು ಇಂಗ್ಲೆಂಡಿನ ಸುಟ್ಟಾನ್ ಎಂಬಲ್ಲಿ ಜನಿಸಿದರು.

1965: ಸಂಗೀತ ಹಾಗೂ ಮೃದಂಗದಲ್ಲಿ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮ ಅವರು ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಕರ್ನಾಟಕ ಸರ್ಕಾರದ ಗಾನಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

Categories
e-ದಿನ

ಮಾರ್ಚ್-28

ಪ್ರಮುಖಘಟನಾವಳಿಗಳು:

1933: ಲಿವರ್ ಪೂಲ್ ನಗರದಲ್ಲಿ ಇಂಪೀರಿಯಲ್ ಏರ್’ವೇಸ್ ಸಂಸ್ಥೆಗೆ ಸೇರಿದ ವಿಮಾನವೊಂದು ಯಾತ್ರಿಕನೊಬ್ಬ ಬೆಂಕಿ ಹಚ್ಚಿದ ಪರಿಣಾಮವಾಗಿ ನಾಶಗೊಂಡಿತು. ಇದು ವಿಮಾನವೊಂದು ಪ್ರಪ್ರಥಮ ಬಾರಿಗೆ ವಿಧ್ವಂಸಕ ಕೃತ್ಯವೊಂದರಲ್ಲಿ ನಾಶವಾದ ಘಟನೆ ಎನಿಸಿದೆ.

1955: ಆಕ್ಲೆಂಡಿನ ಈಡನ್ ಪಾರ್ಕಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನ್ಯೂಜಿಲ್ಯಾಂಡ್, ಕೇವಲ 26 ರನ್ನುಗಳಿಗೆ ತನ್ನ ಎಲ್ಲಾ ವಿಕೆಟ್ಟುಗಳನ್ನು ಕಳೆದುಕೊಂಡಿತು. ಇದು ಟೆಸ್ಟ್ ಕ್ರಿಕೆಟಿನ ಇನ್ನಿಂಗ್ಸ್ ಒಂದರಲ್ಲಿನ ಅತ್ಯಂತ ಕಡಿಮೆ ಓಟಗಳ ಗಳಿಕೆ ಎನಿಸಿದೆ.

1979: ಅಮೆರಿಕದ ಪೆನ್ಸಿಲ್ವೇನಿಯಾದ ಥ್ರೀ ಮೈಲ್ ದ್ವೀಪದ ಎರಡನೇ ಘಟಕದ ರಿಯಾಕ್ಟರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸಿತು. ಇದು ಅತ್ಯಂತ ಹೆಚ್ಚಿನ ತಾಪಮಾನ ಮತ್ತು ಗಣನೀಯವಾದ ಹಿಮ ಕರಗುವಿಕೆಗೆ ಕಾರಣವಾಯಿತು.

2006: ಫ್ರಾನ್ಸ್ ದೇಶದಲ್ಲಿ ಕಡೇಪಕ್ಷ ಒಂದು ದಶಲಕ್ಷ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳ ಸದಸ್ಯರು ಮತ್ತು ನಿರುದ್ಯೋಗಿಗಳು ಸರ್ಕಾರ ಉದ್ದೇಶಿಸಿದ ‘ಫಸ್ಟ್ ಎಂಪ್ಲಾಯ್ಮೆಂಟ್ ಕಾಂಟ್ರಾಕ್ಟ್’ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಕಾನೂನು ಪ್ರಕಾರ 26 ವಯಸ್ಸಿಗಿಂತ ಕಡಿಮೆ ವಯೋಮಾನದವರಿಗೆ ಕೆಲಸದ ಕಾಂಟ್ರಾಕ್ಟ್ ಲಭ್ಯವಾಗುವಂತೆ ಮಾಡಿ, ಉದ್ಯಮಿಗಳು ಯಾವುದೇ ಕಾರಣಗಳನ್ನೂ ನೀಡದೆ ಎರಡು ವರ್ಷದ ಒಳಗೆ ಒಂದಷ್ಟು ಹಣ ನೀಡಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಬಿಡುವಂತಹ ಅಂಶಗಳನ್ನು ಒಳಗೊಂಡಿತ್ತು.

2007: ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯದ ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ ಎಂದು ಫ್ರೆಂಚ್ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧರಿಸಿ ಬಹಿರಂಗ ಪಡಿಸಿದರು. ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು ವಾರ್ಷಿಕ 8ರಿಂದ 10 ಮೀಟರಿನಷ್ಟು ನೀರ್ಗಲ್ಲುಗಳು ಕರಗುತ್ತಿವೆ ಎಂದು ಪ್ರಕಟಿಸಿದರು.

2007: ಪತಿಯೊಡನೆ ವಾಸಿಸಲು ನಿರಾಕರಣೆ ಮತ್ತು ಮಗು ಬೇಡ ಎಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪತ್ನಿಯ ವರ್ತನೆ ಮಾನಸಿಕ ಹಿಂಸೆ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪತಿ ವಿಚ್ಛೇದನ ಕೇಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

2008: ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯಿರುವ ಪ್ರಧಾನ ಮಂತ್ರಿಗಳ ಕಚೇರಿಯ ಹೊರಭಾಗದಲ್ಲಿ ಸಂಭವಿಸಿದ ಗುಂಡು ಹಾರಾಟದಲ್ಲಿ ದೆಹಲಿ ಪೊಲೀಸ್ ಕಮಾಂಡೋ ಸಂಜಯ್ ಅವರಿಗೆ ಗಾಯವಾಯಿತು.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಕೇವಲ 278 ಎಸೆತಗಳಲ್ಲಿ ಅತಿ ವೇಗದ ತ್ರಿಶತಕ ದಾಖಲಿಸಿದ ವೀರೇಂದ್ರ ಸೆಹ್ವಾಗ್ ಅವರು ಎರಡು ಬಾರಿ ತ್ರಿಶತಕ ಗಳಿಸಿದ ಡಾನ್ ಬ್ರಾಡ್ಮನ್ ಅವರನ್ನೊಳಗೊಂಡ ಪಟ್ಟಿಯಲ್ಲಿ ಸ್ಥಾನ ಗಳಿಸಿದರು. ಎರಡು ಬಾರಿ ತ್ರಿಶತಕ ಗಳಿಸಿದ ಸಾಧನೆ ಮಾಡಿರುವ ಈ ಪಟ್ಟಿಯಲ್ಲಿ ಸೆಹ್ವಾಗ್ ಅವರು ವೆಸ್ಟ್ ಇಂಡೀಸಿನ ಬ್ರಿಯನ್ ಲಾರಾ ಅವರಿಗಿಂತ ಮೇಲಿದ್ದು ಡಾನ್ ಬ್ರಾಡ್ಮನ್ ಅವರ ನಂತರದ ಎರಡನೇ ಸ್ಥಾನವನ್ನಲಂಕರಿಸಿದ್ದಾರೆ.

2009: ‘ನಾವಿಕ’- ನಾರ್ತ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಶನ್ ಎಂಬ ಹೆಸರಿನ ಕನ್ನಡಪರ ಸಂಸ್ಥೆ ಅಮೆರಿಕದ ಫ್ಲೋರಿಡಾ ನಗರದಲ್ಲಿ ಸ್ಥಾಪನೆಯಾಯಿತು.

2009: ಮದರ್ ತೆರೆಸಾ ನಂತರ ‘ಸುಪೀರಿಯರ್ ಜನರಲ್’ ಜವಾಬ್ದಾರಿ ವಹಿಸಿಕೊಂಡಿದ್ದ ಸಿಸ್ಟರ್ ನಿರ್ಮಲ ಅವರು ಅನಾರೋಗ್ಯದ ಕಾರಣದಿಂದ ತಮ್ಮ ಹನ್ನೆರಡು ವರ್ಷಗಳ ಸೇವೆಗೆ ವಿದಾಯ ಹೇಳಿ ತಮ್ಮ ನಂತರದ ಸ್ಥಾನದಲ್ಲಿದ್ದ ಸಿಸ್ಟರ್ ಪ್ರೇಮಾ ಅವರಿಗೆ ಕೋಲ್ಕತದಲ್ಲಿ ‘ಸುಪರೀಯರ್ ಜನರಲ್’ ಪದವಿಯನ್ನು ಹಸ್ತಾಂತರಿಸಿದರು.

ಪ್ರಮುಖಜನನ/ಮರಣ:

1862: ಹನ್ನೊಂದು ಬಾರಿ ಫ್ರಾನ್ಸಿನ ಪ್ರಧಾನಿಯಾದ ಅರಿಸ್ಟೈಡ್ ಬ್ರಿಯಾಂಡ್ ಜನಿಸಿದರು. ‘ಲೀಗ್ ಆಫ್ ನೇಷನ್ಸ್’ ಸ್ಥಾಪಿಸಿ ವಿಶ್ವಶಾಂತಿಗಾಗಿ ತೀವ್ರವಾಗಿ ಶ್ರಮಿಸಿದ ಇವರಿಗೆ 1926ರ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಸಂದಿತು.

1892: ಬೆಲ್ಜಿಯಂ ದೇಶದ ವೈದ್ಯವಿಜ್ಞಾನಿ ಕಾರ್ನೀಲ್ಲೆ ಹೇಯ್ಮನ್ಸ್ ಅವರು ಘೆಂಟ್ ಎಂಬಲ್ಲಿ ಜನಿಸಿದರು. ಇವರು ದೇಹವು ಹೇಗೆ ರಕ್ತದೊತ್ತಡ ಮತ್ತು ರಕ್ತದಲ್ಲಿರುವ ಆಮ್ಲಜನಕದ ತೂಕವನ್ನು ನಿಷ್ಕರ್ಷಿಸಿ ಮೆದುಳಿಗೆ ರವಾನಿಸುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಈ ಸಾಧನೆಗಾಗಿ ಇವರಿಗೆ 1938ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1916: ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬವೊಂದರಲ್ಲಿ ಜನಿಸಿದರು.

1919: ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ಸಾಧಕಿ ದಿವಂಗತ ಡಿ.ಕೆ. ಪಟ್ಟಮ್ಮಾಳ್ ಅವರು ಕಾಂಚೀಪುರದಲ್ಲಿ ಜನಿಸಿದರು. ಸಿನಿಮಾ ಕ್ಷೇತ್ರದಲ್ಲಿ ಪ್ರಣಯ ಗೀತೆಗಳನ್ನು ಹಾಡಲು ಒಪ್ಪದಿದ್ದರೂ ನೂರಾರು ಚಿತ್ರಗಳಲ್ಲಿ ಹಾಡಿದ್ದಾರೆ. 2009ರಲ್ಲಿ ನಿಧನರಾದ ಇವರಿಗೆ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಸಂದಿದ್ದವು.

1926: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಪಾಲಿ ಉಮ್ರಿಗಾರ್ ಸೋಲಾಪುರದಲ್ಲಿ ಜನಿಸಿದರು. ಇವರು ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಭಾರಿಸಿದ ಮೊಟ್ಟ ಮೊದಲ ಭಾರತೀಯರೆನಿಸಿದ್ದು ಒಟ್ಟು 12 ಬಾರಿ ಶತಕಗಳಿಸಿದ್ದರು.

1930: ಅಮೆರಿಕದ ಭೌತಶಾಸ್ತ್ರಜ್ಞ ಜೆರೋಮ್ ಐಸಾಕ್ ಫ್ರೀಡ್ಮ್ಯಾನ್ ಅವರು ಚಿಕಾಗೊದಲ್ಲಿ ಜನಿಸಿದರು. ಮುಂದೆ ಕ್ವಾರ್ಕ್ಸ್ ಎಂದು ಹೆಸರಾದ ಪ್ರೋಟಾನ್ಗಳ ಒಳ ರಚನೆಯನ್ನು ತೋರಿಸಿಕೊಟ್ಟ ಇವರಿಗೆ 1990 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1936: ಪೆರು ದೇಶದ ಕಾದಂಬರಿಗಾರ, ನಾಟಕಕಾರ ಮತ್ತು ಪ್ರಬಂಧಕಾರ ಮಾರಿಯೋ ವರ್ಗಾಸ್ ಲ್ಲೋಸಾ ಅವರು ಆ ದೇಶದ ಅರೆಕ್ವಿಪ ಎಂಬಲ್ಲಿ ಜನಿಸಿದರು. ಇವರಿಗೆ 2010 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1953: ಭಾರತದ ಕ್ರಿಕೆಟ್ ಟೆಸ್ಟ್ ಆಟಗಾರರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಬ್ರಿಜೇಶ್ ಪಟೇಲ್ ಜನಿಸಿದರು. ದೇಶದ ಪರವಾಗಿ 21 ಟೆಸ್ಟ್ ಪಂದ್ಯಗಳನ್ನಾಡಿದ ಅವರು ಕರ್ನಾಟಕದ ಪರವಾಗಿ ಪ್ರಥಮ ದರ್ಜೆ ಪಂದ್ಯಗಳಲ್ಲಿ 11000ಕ್ಕೂ ಹೆಚ್ಚು ರನ್ ಗಳಿಸಿದ್ದರು.

1968: ಕ್ರಿಕೆಟ್ ಆಟಗಾರ ನಾಸೆರ್ ಹುಸ್ಸೇನ್ ಚೆನ್ನೈನಲ್ಲಿ ಜನಿಸಿದರು. ಇವರು ಇಂಗ್ಲೆಂಡ್ ತಂಡದ ನಾಯಕರಾಗಿ ಸಹಾ ಸೇವೆ ಸಲ್ಲಿಸಿದ್ದಾರೆ.

1941: ಬ್ರಿಟಿಷ್ ಆಡಳಿತದಲ್ಲಿ ಡೆಪ್ಯೂಟಿ ಕಮಿಷನರ್ ಆಫ್ ಪೋಲೀಸ್ ಹುದ್ದೆಗೇರಿದ ಪ್ರಥಮ ಭಾರತೀಯರಾದ ಕವಾಸ್ಜಿ ಜೆಮ್ಶೆಡ್ಜಿ ಪೆಟಿಯಾಗರ ಅವರು ಸೂರತ್ನಲ್ಲಿ ನಿಧನರಾದರು. ಇವರು 1928ರ ವರ್ಷದಲ್ಲಿ ಮುಂಬೈನ ಡೆಪ್ಯೂಟಿ ಕಮಿಷನರ್ ಆಫ್ ಪೋಲೀಸ್ ಆಗಿ ಅಧಿಕಾರ ವಹಿಸಿಕೊಡು ಬ್ರಿಟಿಷ್ ಸರ್ಕಾರದಿಂದ ಉನ್ನತ ಶ್ರೇಣಿಯ ಗೌರವಗಳನ್ನು ಸ್ವೀಕರಿಸಿದ್ದರು.

1982: ಕೆನಡಾದ ರಸಾಯನ ಶಾಸ್ತ್ರ ವಿಜ್ಞಾನಿ ವಿಲ್ಲಿಯಮ್ ಜಿಯಾಕ್ಯೂ ಅವರು ಕ್ಯಾಲಿಫೋರ್ನಿಯಾದ ಬರ್ಕ್ಲೀ ಎಂಬಲ್ಲಿ ನಿಧನರಾದರು. ಸೊನ್ನೆ ಡಿಗ್ರಿ ಉಷ್ಣಾಂಶದಲ್ಲಿ ವಸ್ತುವಿನ ಗುಣಗಳನ್ನು (ಪ್ರಾಪರ್ಟಿಸ ಆಫ್ ಮ್ಯಾಟರ್ ಇನ್ ಆಬ್ಸಲ್ಯೂಟ್ ಜೀರೋ) ನಿರೂಪಿಸಿದ ಇವರಿಗೆ 1949 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

2006: ಟೆಂಪಲ್ ಆಫ್ ಕಾನ್ಷಿಯಸ್ ಮುಖ್ಯಸ್ಥ ಆಧ್ಯಾತ್ಮಿಕ ಗುರು ವೇಥಾಥಿರಿ ಮಹರ್ಷಿ ತಮ್ಮ 96ನೆಯ ವಯಸ್ಸಿನಲ್ಲಿ ಕೊಯ್ಮತ್ತೂರಿನಲ್ಲಿ ನಿಧನರಾದರು.

2006: ನಾಲ್ಕು ಬಾರಿ ಹರ್ಯಾಣದ ಮುಖ್ಯಮಂತ್ರಿಗಳಾಗಿದ್ದ ಬನ್ಸಿಲಾಲ್ ಅವರು ನವದೆಹಲಿಯಲ್ಲಿ ನಿಧನರಾದರು.

Categories
e-ದಿನ

ಮಾರ್ಚ್-27

ವಿಶ್ವ ರಂಗಭೂಮಿ ದಿನ
ರಂಗಭೂಮಿ ಚಟುವಟಿಕೆಗಳಲ್ಲಿನ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ದೆಸೆಯಲ್ಲಿ ಮಾರ್ಚ್ 27ರ ದಿನವನ್ನು, 1962ರ ವರ್ಷದಿಂದ ಮೊದಲ್ಗೊಂಡಂತೆ ‘ವಿಶ್ವರಂಗಭೂಮಿ ದಿನ’ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ರಂಗಸಂಸ್ಥೆಯು, ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ‘ವಿಶ್ವರಂಗಭೂಮಿ ದಿನ’ದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು.

ಪ್ರಮುಖಘಟನಾವಳಿಗಳು:

1625: ಮೊದಲನೆಯ ಚಾರ್ಲ್ಸ್ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲ್ಯಾಂಡ್ ದೇಶಗಳ ರಾಜನಾಗುವುದರ ಜೊತೆಗೆ ಫ್ರಾನ್ಸಿನ ರಾಜತ್ವದ ಹಕ್ಕೂ ತನ್ನದೆಂದು ಪ್ರತಿಪಾದಿಸಿದ

1836: ಟೆಕ್ಸಾಸ್ ಕ್ರಾಂತಿಯ ಗೊಲ್ಲಿಯಾಡ್ ಹತ್ಯಾಕಾಂಡದಲ್ಲಿ ಲೋಪೆಸ್ ಡಿ ಸಂತಾ ಅನ್ನಾ ಎಂಬ ಜನರಲ್ ಆಜ್ಞೆಯ ಮೇರೆಗೆ ಮೆಕ್ಸಿಕನ್ ಸೇನಾ ಪಡೆಯು 342 ಯುದ್ಧಖೈದಿಗಳನ್ನು ಹತ್ಯೆ ಮಾಡಿತು.

1871: ಪ್ರಥಮ ಅಂತರರಾಷ್ಟ್ರೀಯ ರಗ್ಬಿ ಫುಟ್ಬಾಲ್ ಪಂದ್ಯವು ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಎಡಿನ್ಬರ್ಗ್ ನಗರದ ರೇಬರ್ನ್ ಪ್ಲೇಸ್ನಲ್ಲಿ ನಡೆಯಿತು

1884: ಓಹಿಯೋದ ಸಿನ್ಸಿನ್ನಾಟಿಯಲ್ಲಿ, ಒಂದು ಕೊಲೆಯಾದ ಘಟನೆಯನ್ನು ಸಾಧಾರಣ ಶಿಕ್ಷೆಗೆ ಅನುವಾಗುವಂತೆ ನರಹತ್ಯೆ ಎಂದು ತಿರುಚಿ ನ್ಯಾಯ ನೀಡಿದ ನ್ಯಾಯಾಲಯದ ವಿರುದ್ಧ ರೊಚ್ಚಿಗೆದ್ದ ಜನ, ನ್ಯಾಯಾಧೀಶರೊಬ್ಬರ ಮೇಲೆ ಆಕ್ರಮಣ ನಡೆಸಿದರು. ಮುಂದಿನ ಕೆಲವು ದಿನಗಳಲ್ಲಿ ಈ ಹೋರಾಟ ವಿಪರೀತಕ್ಕೆ ತಿರುಗಿ, ಜನ ಇಡೀ ನ್ಯಾಯಾಲಯವನ್ನೇ ಧ್ವಂಸಗೊಳಿಸಿದರು.

1958: ನಿಖಿತ ಕ್ರುಶ್ಚೇವ್ ಅವರು ಕಮ್ಯೂನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿ ಮತ್ತು ಸೋವಿಯತ್ ಪ್ರಧಾನಿಯಾಗಿ ಆಯ್ಕೆಗೊಂಡರು.

1977: ಕ್ಯಾನರಿ ದ್ವೀಪದ ಟೆನೆರಿ ವಿಮಾನ ನಿಲ್ದಾಣದಲ್ಲಿ ಎರಡು ಬೋಯಿಂಗ್ 747 ವಿಮಾನಗಳು, ಮಂಜುತುಂಬಿದ ಓಟದ ಹಾದಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡೂ ವಿಮಾನಗಳಲ್ಲಿದ್ದ 583 ಮಂದಿ ನಿಧನರಾದರು. ಇವುಗಳಲ್ಲಿ ಒಂದು ವಿಮಾನದಲ್ಲಿದ್ದ 61 ಜನ ಬದುಕುಳಿದರು.

1998: ‘ವಯಾಗರ’ ಔಷದಕ್ಕೆ ಅಮೆರಿಕದ ಆಹಾರ ಮತ್ತು ಔಷದ ನಿಯಂತ್ರಣ ಮಂಡಳಿಯು ಪರವಾನಗಿ ನೀಡಿತು.

2006: ಭಾರತದ ಗಗನ್ ನಾರಂಗ್ ಅವರು ಚೀನಾದ ‘ಗುವಾಂಗ್ ಜೋ’ನಲ್ಲಿ ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದು, 2008ರ ಬೀಜಿಂಗ್ ಒಲಿಂಪಿಕ್ ಕೂಟಕ್ಕೆ ನೇರ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರಿಗೆ ಬ್ಯಾಂಕಾಕ್ ಮೂಲದ ಏಷ್ಯಾ ಮತ್ತು ಶಾಂತ ಸಾಗರ ವಲಯಕ್ಕಾಗಿ ರಚಿಸಲಾದ, ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗವು (ಯುನೆಸ್ಕ್ಯಾಪ್) ‘ಯುನೆಸ್ಕ್ಯಾಪ್’ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿತು. ಆಯೋಗವು ತನ್ನ ಅರವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಾಕಿನಲ್ಲಿ ನಡೆದ ಸಮಾರಂಭದಲ್ಲಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಬಗ್ಗೆ ತನ್ನ ಬಳಿ ಇರುವ ದಾಖಲೆಗಳಲ್ಲಿ ಯಾವ ಮಾಹಿತಿಯೂ ಇಲ್ಲ ಎಂಬ ವಿಚಾರವನ್ನು ಭಾರತ ಸರ್ಕಾರ ಬಹಿರಂಗಗೊಳಿಸಿತು.

2008: ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ದಾಖಲೆಯ ಪ್ರಯೋಗಗಳಿಗೆ ಎಡೆಮಾಡಿಕೊಟ್ಟ ‘ಎಂಡೀವರ್’ ಗಗನ ನೌಕೆ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿತು. ಈ ಎರಡು ವಾರಗಳ ಅವಧಿಯಲ್ಲಿ ವ್ಯೋಮಯಾನಿಗಳು 5 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ ದಾಖಲೆ ಸೃಷ್ಟಿಸಿದರಲ್ಲದೆ, ಜಪಾನಿನ ಒಂದು ಪ್ರಯೋಗಾಲಯ ಮತ್ತು ಕೆನಡಾದ ರೋಬೋಟ್ ಒಂದನ್ನು ಸಜ್ಜುಗೊಳಿಸುವಲ್ಲಿ ಸಹಾ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

ಪ್ರಮುಖಜನನ/ಮರಣ:

1845: ಜರ್ಮನಿಯ ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ವಿಲ್ಹೆಲ್ಮ್ ರೋಂಟ್ಗೆನ್ ಜರ್ಮನಿಯ ಲೆನ್ನೆಪ್ ಎಂಬಲ್ಲಿ ಜನಿಸಿದರು. ಎಕ್ಸ್-ರೇ ಅಥವಾ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಕಂಡುಹಿಡಿದ ಇವರಿಗೆ 1901 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1847: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಓಟ್ಟೋ ವಲ್ಲಾಚ್ ಅವರು ಪ್ರಸ್ಸಿಯಾದ ಕೊನಿಗ್ಸ್ ಬರ್ಗ್ ಎಂಬಲ್ಲಿ ಜನಿಸಿದರು. ‘ಅಲಿಸೈಕ್ಲಿಕ್ ಕಾಂಪೌಂಡ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1910 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1863: ಲಕ್ಷುರಿ ಕಾರು ಮತ್ತು ವಿಮಾನ ಎಂಜಿನ್ ತಯಾರಕ ಸಂಸ್ಥೆ ರೋಲ್ಸ್- ರಾಯ್ಸ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರಾದ ಸರ್ ಫ್ರೆಡರಿಕ್ ಹೆನ್ರಿ ರಾಯ್ಸ್ ಅವರು ಇಂಗ್ಲೆಂಡಿನಲ್ಲಿ ಜನಿಸಿದರು.

1886: ಜರ್ಮನ್-ಅಮೇರಿಕನ್ ಕಟ್ಟಡಗಳ ವಿನ್ಯಾಸಕ, ಪ್ರಸಿದ್ಧ ಐಬಿಎಮ್ ಪ್ಲಾಜಾ ಮತ್ತು ಸೀಗ್ರಾಮ್ ಕಟ್ಟಡಗಳಿಗೆ ವಿನ್ಯಾಸ ನೀಡಿದ ಲುಡ್ವಿಗ್ ಮೈಲ್ಸ್ ವ್ಯಾನ್ ಡೆರ್ ರೋಹೆ ಅವರು ಪ್ರಸ್ಸಿಯಾದ ಆಚೆನ್ ಎಂಬಲ್ಲಿ ಜನಿಸಿದರು.

1901: ಜಪಾನಿನಲ್ಲಿ ಬಹು ದೀರ್ಘಕಾಲ ಪ್ರಧಾನ ಮಂತ್ರಿಗಳಾಗಿದ್ದ ನೊಬೆಲ್ ಶಾಂತಿ ಪುರಸ್ಕೃತ ಈಸಾಕು ಸಟೋ ಅವರು ಜಪಾನಿನ ಟಬ್ಯೂಸ್ ಎಂಬಲ್ಲಿ ಜನಿಸಿದರು.

1932: ಪ್ರಖ್ಯಾತ ವಿದ್ವಾಂಸ, ಪ್ರಾಧ್ಯಾಪಕ, ಸಂಶೋಧಕ, ಪತ್ರಿಕಾ ಸಂಪಾದಕ, ಬರಹಗಾರ, ಪ್ರವಾಸಿ ಡಾ. ಎಸ್. ರಾಮಸ್ವಾಮಿ ಬೆಂಗಳೂರಿನಲ್ಲಿ ಜನಿಸಿದರು.

1942: ಇಂಗ್ಲಿಷ್ ಜೀವವಿಜ್ಞಾನಿ ಮತ್ತು ವೈದ್ಯಶಾಸ್ತ್ರಜ್ಞರಾದ ಜಾನ್ ಸುಲ್ಸ್‘ಟನ್ ಅವರು ಕೇಂಬ್ರಿಡ್ಜ್ನಲ್ಲಿ ಜನಿಸಿದರು. ‘ಸೆಲ್ ಲಿನಿಯೇಜ್ ಅಂಡ್ ಜೇನೊಂ ಆಫ್ ದಿ ನೆಮಟೋಡ್ ಕೆನೋರ್ಹ್ಯಾಬ್ಡಿಟಿಸ್ ಎಲಿಗಾನ್ಸ್’ ಕುರಿತಾದ ಸಂಶೋಧನಾ ಕಾರ್ಯಕ್ಕಾಗಿ ಇವರಿಗೆ 2002 ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.

1898: ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಸಯ್ಯದ್ ಅಹಮದ್ ಖಾನ್ ಅವರು ಆಲಿಘರ್ ಪಟ್ಟಣದಲ್ಲಿ ನಿಧನರಾದರು. ‘ಮುಸ್ಲಿಮರು ಅಳವಡಿಸಿಕೊಂಡ ಪಾಶ್ಚಾತ್ಯ ನೀತಿಗಳು’ ಇವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.

1900: ಕ್ಯಾಂಪ್ಬೆಲ್ ಸೂಪ್ ಕಂಪೆನಿಯ ಸ್ಥಾಪಕ ಜೋಸೆಫ್ ಎ. ಕ್ಯಾಂಪ್ಬೆಲ್ ಅವರು ನ್ಯೂ ಜೆರ್ಸಿಯ ರಿವರ್ ಟನ್ ಎಂಬಲ್ಲಿ ನಿಧನರಾದರು.

1967: ಜೆಕೊಸ್ಲವಾಕಿಯಾದ ರಸಾಯನ ಶಾಸ್ತ್ರಜ್ಞರಾದ ಜಾರೋಸ್ಲಾವ್ ಹೇರೋವಸ್ಕೈ ಅವರು ಪ್ರೇಗ್ ನಗರದಲ್ಲಿ ನಿಧನರಾದರು. ಇವರಿಗೆ ಎಲೆಕ್ಟ್ರೋ ಅನಲಿಟಿಕಲ್ ಮೆಥಡ್ ಸಂಶೋಧನಾತ್ಮಕ ಕೊಡುಗೆಗಾಗಿ 1959 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1968: ವಿಶ್ವದ ಪ್ರಪ್ರಥಮ ಗಗನಯಾತ್ರಿ ಯೂರಿಗಗಾರಿನ್ ಅವರು ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

2007: ಅಮೆರಿಕದ ರಸಾಯನ ಶಾಸ್ತ್ರಜ್ಞರಾದ ಪಾಲ್ ಲೌಟೆರ್ಬರ್ ಇಲಿನಾಯ್ಸಿನ ಉರ್ಬಾನಾದಲ್ಲಿ ನಿಧನರಾದರು. ಇವರಿಗೆ ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್ (MRI) ಸಂಶೋಧನೆಗಾಗಿ 2003 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2015: ಭಾರತೀಯ ಸೈನ್ಯದ ಬ್ರಿಗೇಡಿಯರ್ ಮತ್ತು ಮಿಜೋರಾಮ್ ಮುಖ್ಯಮಂತ್ರಿಗಳಾದ ಟಿ. ಸಾಲಿಯೋ ಐಸ್ವಾಲ್ನಲ್ಲಿ ನಿಧನರಾದರು. ಇವರು ಮಿಸೋರಾಮ್ ಪೀಪಲ್ಸ್ ಕಾನ್ಫರೆನ್ಸ್ ಸ್ಥಾಪಿಸಿದರು. ಸೈನ್ಯದಲ್ಲಿನ ಇವರ ಮಾನವೀಯ ಸೇವೆಗಳಿಗಾಗಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಪದ್ಮಶ್ರೀ ಪ್ರಶಸ್ತಿ ಸಂದಿತ್ತು.

Categories
e-ದಿನ

ಮಾರ್ಚ್-26

ಪ್ರಮುಖಘಟನಾವಳಿಗಳು:

1484: ವಿಲಿಯಂ ಕಾಕ್ಸ್ ಟನ್ ಅವರು ತಮ್ಮ ಈಸೋಪನ ಕಥೆಗಳ ಅನುವಾದವನ್ನು ಮುದ್ರಿಸಿದರು

1552: ಗುರು ಅಮರ ದಾಸ್ ಅವರು ಸಿಖ್ಖರ ಮೂರನೇ ಗುರುವಾದರು

1812: ಬೋಸ್ಟನ್ ಗೆಜೆಟ್ ಪತ್ರಿಕೆಯಲ್ಲಿನ ವ್ಯಂಗ್ಯಚಿತ್ರವು ‘ಜೆರ್ರಿಮ್ಯಾಂಡರ್’ ಎಂಬ ಪದವನ್ನು ಹುಟ್ಟುಹಾಕಿತು. ಅಧಿಕಾರದಲ್ಲಿರುವವರು ತಮಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಅನುಕೂಲವಾಗುವ ಹಾಗೆ, ಚುನಾವಣಾ ಕ್ಷೇತ್ರಗಳನ್ನು ಅಡ್ಡಾದಿಡ್ಡಿಯಾಗಿ ಸೃಷ್ಟಿಸಿರುವುದನ್ನು ವ್ಯಂಗ್ಯವಾಗಿ ನಿರೂಪಿಸಲು ಈ ಪದವನ್ನು ಬಳಸಲಾಗಿತ್ತು.

1934: ಯುನೈಟೆಡ್ ಕಿಂಗ್ಡಂನಲ್ಲಿ ಚಾಲನಾ ಪರೀಕ್ಷೆ(ಡ್ರೈವಿಂಗ್ ಟೆಸ್ಟ್)ಯನ್ನು ಜಾರಿಗೆ ತರಲಾಯಿತು

1959: ಲಾಹೋರಿನಲ್ಲಿ ನಡೆದ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಪಾಕಿಸ್ಥಾನದ ಪರವಾಗಿ ಆಟವಾಡಿದ ಮುಷ್ತಾಖ್ ಮಹಮ್ಮದ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಟೆಸ್ಟ್ ಆಟಗಾರ ಎನ್ನಿಸಿದರು. ಆಗ ಅವರ ವಯಸ್ಸು 15 ವರ್ಷ 124 ದಿನಗಳು.

1971: ಪೂರ್ವ ಪಾಕಿಸ್ಥಾನವು ತನ್ನ ಸ್ವಾತಂತ್ರ್ಯವನ್ನು ಘೋಷಿಸಿ ಪ್ರತ್ಯೇಕ ರಾಷ್ಟ್ರವಾಗಲು ಹೊರಟಿತು. ಇದರಿಂದ ಬಾಂಗ್ಲಾದೇಶದ ವಿಮೋಚನೆಯ ಯುದ್ಧ ಪ್ರಾರಂಭಗೊಂಡಿತು.

2005: ಬಿ.ಬಿ.ಸಿ. ತಾನು 1989ರಲ್ಲಿ ರದ್ಧುಗೊಳಿಸಿದ್ದ ‘ಡಾಕ್ಟರ್ who’ ಕಾರ್ಯಕ್ರಮ ಸರಣಿಯ ಪುನರಾರಂಭದ ಮೊದಲ ಕಂತು ‘ರೋಸ್’ ಅನ್ನು ಭಿತ್ತರಗೊಳಿಸಿತು. ಇದರಲ್ಲಿ ಕ್ರಿಸ್ಟೋಫರ್ ಎಕ್ಸೆಲ್ಸ್ಟನ್ ಅವರು ಪಾತ್ರವಹಿಸಿದ್ದರು. ಇದು ಈಗ ವಿಶ್ವದ ಅತಿ ದೊಡ್ಡ ವಿಜ್ಞಾನ ಕಾಲ್ಪನಿಕ ಕಾರ್ಯಕ್ರಮವಾಗಿ ಮುಂದುವರೆಯುತ್ತಿದೆ.

2006: ಮೆಲ್ಬೋರ್ನಿನ ಯಾರಾ ನದಿಯ ದಡದಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟವು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅಂತ್ಯಗೊಂಡಿತು. ಕ್ರೀಡಾಕೂಟದಲ್ಲಿ 22 ಸ್ವರ್ಣ ಸೇರಿ ಐವತ್ತು ಪದಕ ಪಡೆದ ಭಾರತವು , ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು.

2006: ಖ್ಯಾತ ರಂಗ ಕಲಾವಿದ ಏಣಗಿ ಬಾಳಪ್ಪ ಅವರಿಗೆ ಹೊನ್ನಾವರ ತಾಲ್ಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ‘ಶಿವರಾಮ ಹೆಗಡೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಂಭುಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2007: ಸಿದ್ದಗಂಗಾಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ‘ಕರ್ನಾಟಕ ರತ್ನ’ ಮತ್ತು ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರಿಗೆ ‘ಪಂಪ ಪ್ರಶಸ್ತಿ’ ಘೋಷಿಸಲಾಯಿತು. ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಹಿರಿಯ ಕಲಾವಿದರಾದ ಬಿ.ಕೆ. ಹುಬಳಿ, ಜಕಣಾಚಾರಿ ಪ್ರಶಸ್ತಿಗೆ ಶಿಲ್ಪಿ ಬಿ.ಎನ್. ಚನ್ನಪ್ಪಾಚಾರ್ಯ, ಜಾನಪದ ಶ್ರೀ ಪ್ರಶಸ್ತಿಗೆ ಈಶ್ವರಪ್ಪ ಗುರಪ್ಪ ಅಂಗಡಿ, ಕನಕ ಪುರಂದರ ಪ್ರಶಸ್ತಿಗೆ ವಿ. ರಾಮರತ್ನಂ, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸಿ.ಕೆ. ತಾರಾ ಅವರುಗಳು ಆಯ್ಕೆಯಾದರು.

2008: ‘ಗ್ರೀನ್ ಪೀಸ್’ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕಳೆದ ಒಂದು ಶತಮಾನದಲ್ಲಿ ಭೂಮಿಯ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಏರಿದೆ. ಈ ಶತಮಾನದ ಅಂತ್ಯದ ವೇಳೆಗೆ ತೈಲ ಇಂಧನ ಬಳಕೆ ಹಾಗೂ ಭೂಮಿಯ ಅತಿಯಾದ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಅನಿಲ ಹೊರಸೂಸುವಿಕೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ಭೂ ತಾಪಮಾನ 5-6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಹೆಚ್ಚಲಿದೆ ಎಂದು ‘ಗ್ರೀನ್ ಪೀಸ್’ ಸಂಸ್ಥೆ ಹೇಳಿತು. ಉಷ್ಣಾಂಶದಲ್ಲಿ ಕೇವಲ 2 ಡಿಗ್ರಿ ಹೆಚ್ಚಾದರೂ ಭೂಮಿಯ ಬಹುತೇಕ ಭಾಗಗಳು ಮಾನವರು ವಾಸಿಸಲು ಅನರ್ಹವಾಗುತ್ತದೆ. ಹಲವು ಸಸ್ಯ, ಪ್ರಾಣಿ ಸಂಕುಲಗಳು ಭೂಮಿಯಿಂದ ಕಣ್ಮರೆಯಾಗುತ್ತವೆ ಎಂದು ಈ ವರದಿ ಹೇಳಿತು. ಮುಂದಿನ 50 ವರ್ಷಗಳಲ್ಲಿ ಬಿಸಿಗಾಳಿ ಬೀಸುವುದು ಹೆಚ್ಚಾಗಲಿದೆ. ಬೇಸಿಗೆಯಲ್ಲಿ ಇನ್ನಷ್ಟು ಉರಿ ಉಂಟಾಗಲಿದೆ.

2008: ಭಾರತದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್, ಈಗ ಪ್ರತಿಷ್ಠಿತ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) ಸ್ವಾಧೀನಪಡಿಸಿಕೊಂಡು ಜಾಗತಿಕ ಆಟೊಮೊಬೈಲ್ ರಂಗದಲ್ಲಿ ಹೊಸ ಇತಿಹಾಸ ಬರೆಯಿತು.

ಪ್ರಮುಖಜನನ/ಮರಣ:

1874: ಅಮೆರಿಕದ ಮಹಾನ್ ಕವಿ ಮತ್ತು ನಾಟಕಕಾರ ರಾಬರ್ಟ್ ಫ್ರಾಸ್ಟ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಿಸಿದರು. 1963ರಲ್ಲಿ ನಿಧನರಾದ ಮಹಾನ್ ಸಾಹಿತಿಗಳಾದ ಇವರಿಗೆ 1961ರಲ್ಲಿ ‘ಪೊಯೆಟ್ ಲಾರಿಯೇಟ್ ಆಫ್ ವೆರ್ಮಾಂಟ್’ ಎಂಬ ಸರ್ವೋತ್ಕೃಷ್ಟ ಗೌರವ ನೀಡಲಾಯಿತು.

1879: ಸ್ವಿಸ್-ಅಮೇರಿಕನ್ ಸೇತುವೆಗಳ ತಂತ್ರಜ್ಞ, ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್ ಮತ್ತು ವೆರ್ರಾಸಾನೋ-ನ್ಯಾರೋಸ್ ಬ್ರಿಡ್ಜ್ ಮುಂತಾದವುಗಳನ್ನು ರೂಪಿಸಿದ ಓಥ್ಮಾರ್ ಅಮ್ಮಾನ್ನ್ ಅವರು ಸ್ವಿಡ್ಜರ್ಲ್ಯಾಂಡ್ ದೇಶದ ಫ್ಯೂರೆತಲೇನ್ ಎಂಬಲ್ಲಿ ಜನಿಸಿದರು.

1906: ವರ್ಣಚಿತ್ರ ಮತ್ತು ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬಲ್ಲಿ ಜನಿಸಿದರು. ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಸ್ವಾಮಿಯವರು ಡಿಸೆಂಬರ್ 27, 1969ರಲ್ಲಿ ಚಾಮುಂಡೇಶ್ವರಿ ಶಿಲಾ ವಿಗ್ರಹವನ್ನು ಕಡೆಯುತ್ತಿದ್ದಾಗ ಆ ಜಗನ್ಮಾತೆಯಲ್ಲೇ ಲೀನವಾದರೋ ಎಂಬಂತೆ ಈ ಲೋಕವನ್ನಗಲಿದರು.

1909: ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದ ವೀಣಾ ರಾಜಾರಾವ್ ಅವರು ಮೈಸೂರಿನಲ್ಲಿ ಜನಿಸಿದರು. ಮೈಸೂರು ವಾಸುದೇವಾಚಾರ್ಯರ ಶಿಷ್ಯರಾಗಿದ್ದ ಇವರು ಯುವವಯಸ್ಸಿನಲ್ಲೇ ಅವರೊಂದಿಗೆ ವಿನಿಕೆ ಮಾಡುವಷ್ಟು ಶ್ರೆಷ್ಟತೆ ಗಳಿಸಿದ್ದರು. ಕರ್ನಾಟಕ ಗಾನ ಕಲಾ ಪರಿಷತ್ ಮತ್ತು ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ನಡೆಸಿದ ಎರಡು ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಿಗೆ ವೀಣೆ ರಾಜಾರಾಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

1991: ಜರ್ಮನ್-ಇಂಗ್ಲಿಷ್ ಜೀವಭೌತ ವಿಜ್ಞಾನಿಗಳಾಗಿದ್ದ ಬರ್ನಾರ್ಡ್ ಕಾಟ್ಜ್ ಜರ್ಮನಿಯ ಲೀಪ್ಸಿಗ್ ಎಂಬಲ್ಲಿ ಜನಿಸಿದರು. ‘ನರ್ವ್ ಬಯೋ ಕೆಮಿಸ್ಟ್ರಿ’ ಕುರಿತಾದ ಸಂಶೋಧನೆಗೆ ಇವರಿಗೆ 1970ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1916: ಅಮೆರಿಕದ ಜೈವಿಕ ವಿಜ್ಞಾನಿ ಕ್ರಿಶ್ಚಿಯನ್ ಬಿ. ಅನ್ಫಿನ್ಸೆನ್ ಅವರು ಪೆನ್ಸಿಲ್ವೇನಿಯಾದ ಮೊನೆಸ್ಸೆನ್ ಎಂಬಲ್ಲಿ ಜನಿಸಿದರು. ‘ಅಮಿನೋ ಆಸಿಡ್ ಸೀಕ್ವೆನ್ಸ್ ಪ್ರತಿಕ್ರಿಯೆಗಳ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1972 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1929: ಅಮೇರಿಕದ ಉದ್ಯಮಿ ‘ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆ’ಯ ಸಹ ಸ್ಥಾಪಕ ಎಡ್ವಿನ್ ಟರ್ನಿ ಅವರು ಬ್ರೂಕ್ಲಿನ್ ನಗರದಲ್ಲಿ ಜನಿಸಿದರು.

1938: ಇಂಗ್ಲಿಷ್-ಅಮೇರಿಕನ್ ಭೌತಶಾಸ್ತ್ರಜ್ಞ ಆಂತೋನಿ ಜೇಮ್ಸ್ ಲೆಗ್ಗೆಟ್ ಅವರು ಲಂಡನ್ನಿನ ಕೇಂಬರ್ವೆಲ್ ಎಂಬಲ್ಲಿ ಜನಿಸಿದರು. ‘ಲೋ ಟೆಂಪರೇಚರ್ ಫಿಸಿಕ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ಭೌತ ವಿಜ್ಞಾನ ಪ್ರಶಸ್ತಿ ಸಂದಿತು.

1951: ಅಮೇರಿಕನ್ ಭೌತಶಾಸ್ತ್ರಜ್ಞ ಕಾರ್ಲ್ ವೀಮ್ಯಾನ್ ಅವರು ಒರೆಗಾನಿನ ಕಾರ್ವಲ್ಲಿಸ್ ಎಂಬಲ್ಲಿ ಜನಿಸಿದರು. ಇವರು ಮತ್ತೊಬ್ಬ ವಿಜ್ಞಾನಿ ಎರಿಕ್ ಅಲ್ಲಿನ್ ಕಾರ್ನೆಲ್ ಅವರ ಜೊತೆಗೂಡಿ ಸತ್ಯೇಂದ್ರನಾಥ್ ಬೋಸ್ ಮತ್ತು ಐನ್ ಸ್ಟೀನ್ ಅವರು ಸಾಧ್ಯ ಎಂದು ಊಹಿಸಿದ್ದ, ಪ್ರಥಮ ವಾಸ್ತವದ ‘ಬೋಸ್-ಐನ್ ಸ್ಟೀನ್ ಕಂಡೆನ್ಸೇಟ್’ ಅನ್ನು ಉತ್ಪಾದಿಸಿದರು. ಈ ಮಹಾನ್ ಕಾರ್ಯಕ್ಕೆ ಈ ಜೋಡಿಗೆ 2001 ವರ್ಷದಲ್ಲಿ ನೊಬೆಲ್ ಭೌತ ವಿಜ್ಞಾನ ಪ್ರಶಸ್ತಿ ಸಂದಿತು.

1965: ಪ್ರಖ್ಯಾತ ಭಾರತೀಯ ಚಲನಚಿತ್ರ ನಟ, ಕನ್ನಡಿಗರಾದ ಪ್ರಕಾಶ್ ರೈ ಬೆಂಗಳೂರಿನಲ್ಲಿ ಜನಿಸಿದರು. ಚಲನಚಿತ್ರರಂಗದಲ್ಲಿ ಪ್ರಕಾಶ್ ರಾಜ್ ಎಂದು ಪ್ರಖ್ಯಾತರಾಗಿರುವ ಇವರು ಬಹುಭಾಷಾ ಚಲನಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟರಾಗಿ, ನಿರ್ಮಾಪಕರಾಗಿ ಮತ್ತು ಕೆಲವೊಂದು ಚಿತ್ರಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ನಟನೆ ಹಾಗೂ ನಿರ್ಮಾಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಲ್ಲುತ್ತಿವೆ.

1973: ಅಮೆರಿಕದ ಕಪ್ಯೂಟರ್ ವಿಜ್ಞಾನಿ, ಉದ್ಯಮಿ ಹಾಗೂ ಗೂಗಲ್ ಸಂಸ್ಥೆಯ ಸಹಸ್ಥಾಪಕರಾದ ಲ್ಯಾರಿ ಪೇಜ್ ಅವರು ಮಿಚಿಗನ್ನಿನ ಈಸ್ಟ್ ಲ್ಯಾನ್ಸಿಂಗ್ ಎಂಬಲ್ಲಿ ಜನಿಸಿದರು.

922: ಪರ್ಷಿಯನ್ ಕವಿ ಮತ್ತು ಅತೀಂದ್ರಿಯ ಸಾಧಕ ಮನ್ಸೂರ್ ಅಲ್-ಹಲ್ಲಾಜ್ ಬಾಗ್ದಾದ್ ನಗರದಲ್ಲಿ ನಿಧನರಾದರು.

1885: ಅಮೆರಿಕದ ಪ್ರಸಿದ್ಧ ಹಣಕಾಸು ಸಂಸ್ಥೆ ‘ವೆಸ್ಟರ್ನ್ ಯೂನಿಯನ್’ ಸಹ ಸ್ಥಾಪಕ ಆನ್ಸನ್ ಸ್ಟೇಜರ್ ಚಿಕಾಗೋದಲ್ಲಿ ನಿಧನರಾದರು.

1892: ಅಮೆರಿಕಾದ ಖ್ಯಾತ ಪ್ರಬಂಧಕಾರ ಹಾಗೂ ಕವಿ ವಾಲ್ಟ್ ವಿಟ್ ಮ್ಯಾನ್ ಅವರು ನ್ಯೂಜೆರ್ಸಿಯ ಕ್ಯಾಮ್ಡೆನ್ ಎಂಬಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. ಇವರ ‘ಲೀವ್ಸ್ ಆಫ್ ಗ್ರಾಸ್’ ಅಮೆರಿಕದ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಪ್ರಸಿದ್ಧಿ ಪಡೆದಿದೆ.

1902: ಈಗಿನ ಜಿಂಬಾಬ್ವೆಗೆ ರೊಡೇಷಿಯಾ ಎಂಬ ಹೆಸರು ಬರಲು ಕಾರಣರಾದ ಸಿಸಿಲ್ ರೋಡ್ಸ್ ತಮ್ಮ 48ನೇ ವಯಸ್ಸಿನಲ್ಲಿ ಈಗಿನ ದಕ್ಷಿಣ ಆಫ್ರಿಕಾದ ಮ್ಯೂಸೆನ್ ಬರ್ಗ್ ಎಂಬಲ್ಲಿ ನಿಧನರಾದರು. ಇವರು ತಮ್ಮ ವಜ್ರದ ಗಣಿಯಿಂದ ಲಭಿಸಿದ ಸಂಪತ್ತನ್ನು ವಿನಿಯೋಗಿಸಿ ಆಕ್ಸ್ ಫರ್ಡಿನಲ್ಲಿ ರ್ಹೋಡ್ಸ್ ಸ್ಕಾಲರ್ ಶಿಪ್ ಸ್ಥಾಪಿಸಿದರು.

1996: ಪ್ರಸಿದ್ಧ ಹೆವ್ಲೆಟ್-ಪ್ಯಾಕರ್ಡ್ ಸಂಸ್ಥೆಯ ಸಹಸ್ಥಾಪಕ ಡೇವಿಡ್ ಪ್ಯಾಕರ್ಡ್ ಸ್ಟ್ಯಾನ್ ಫೋರ್ಡ್ ನಗರದಲ್ಲಿ ನಿಧನರಾದರು.

2015: ಸ್ವೀಡಿಷ್ ಕವಿ, ಅನುವಾದಕ, ಮನಃಶಾಸ್ತ್ರಜ್ಞ ಥಾಮಸ್ ಟ್ರಾನ್ಸ್ಟ್ರೋಮರ್ ಸ್ಟಾಲ್ಕ್ ಹೋಮ್ ನಗರದಲ್ಲಿ ನಿಧನರಾದರು. ಇವರಿಗೆ 2011ರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

Categories
e-ದಿನ

ಮಾರ್ಚ್-25

ಪ್ರಮುಖಘಟನಾವಳಿಗಳು:

1655: ಕ್ರಿಶ್ಚಿಯಾನ್ ಹ್ಯೂಗೆನ್ಸ್ ಅವರು ಶನಿ ಗ್ರಹದ ದೊಡ್ಡ ಚಂದ್ರನಾದ ‘ಟೈಟನ್’ ಅನ್ನು ಪತ್ತೆ ಹಚ್ಚಿದರು

1807: ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗುಲಾಮರನ್ನು ಮಾರಾಟ ಮಾಡುವುದನ್ನು ನಿಷೇದಿಸುವ ‘ಸ್ಲೇವ್ ಟ್ರೇಡ್ ಆಕ್ಟ್’ ಖಾಯಿದೆಯನ್ನು ಜಾರಿಗೊಳಿಸಲಾಯಿತು.

1807: ವಿಶ್ವದ ಪ್ರಪ್ರಥಮ ಪ್ರಯಾಣಿಕರ ರೈಲ್ವೇ ವ್ಯವಸ್ಥೆಯಾದ ಓವೈಸ್ಟೆರ್ ಮೌತ್ ರೇಲ್ವೆ ಆರಂಭಗೊಂಡಿತು. ಮುಂದೆ ಇದು ‘ಸ್ವಾನ್ಸಿಯಾ ಅಂಡ್ ಮಂಬಲ್ಸ್ ರೈಲ್ವೇ’ ಎಂದು ಹೆಸರಾಯಿತು.

1811: ‘ದಿ ನೆಸೆಸಿಟಿ ಆಫ್ ಅಥೇಯಿಸಮ್’(ನಾಸ್ತಿಕವಾದದ ಅಗತ್ಯತೆ) ಎಂಬ ಕರಪತ್ರ ಪ್ರಕಟಿಸಿದ ಪೆರ್ಸಿ ಬೈಶ್ಷೆ ಶೆಲ್ಲಿ ಅವರನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಉಚ್ಛಾಟಿಸಲಾಯಿತು.

1949: ಬೃಹತ್ ಪ್ರಮಾಣದ ಗಡೀಪಾರುಗಳ ‘ಮಾರ್ಚ್ ಡೆಪೋರ್ಟೇಶನ್’ ಘಟನೆಯಲ್ಲಿ 92,000 ಜನರನ್ನು ಸಂಕಷ್ಟಕ್ಕೆ ಗುರಿಪಡಿಸಲಾಯಿತು. ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾಗಳಲ್ಲಿ ಜನರನ್ನು ಬೆದರಿಸಿ ಬಾಲ್ಟಿಕ್ಸ್ ಪ್ರದೇಶದಿಂದ ಸೋವಿಯತ್ ಯೂನಿಯನ್ನಿನ ದೂರದ ಪ್ರದೇಶಗಳಿಗೆ ಗಡೀಪಾರು ಮಾಡಲಾಯಿತು.

1957: ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಮುದಾಯವು (ಯೋರೋಪಿಯನ್ ಎಕನಾಮಿಕ್ ಕಮ್ಮ್ಯೂನಿಟಿ) ಸ್ಥಾಪನೆಗೊಂಡಿತು. ಪಶ್ಚಿಮ ಜರ್ಮನಿ, ಫ್ರಾನ್ಸ್, ಇಟಲಿ, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಲುಕ್ಸೆಂಬೋರ್ಗ್ ದೇಶಗಳು ಈ ಸಮುದಾಯದ ಪ್ರಾರಂಭಿಕ ಸದಸ್ಯ ದೇಶಗಳಾದವು.

1965: ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ನೇತೃತ್ವದ ಸೇಲ್ಮಾದಿಂದ ಅಲಬಾಮಾದ ರಾಜಧಾನಿ ಮಾಂಟಗೋಮೇರಿವರೆಗಿನ ನಾಲ್ಕು ದಿನಗಳ 50 ಕಿಲೋಮೀಟರ್ ಪಾದಯಾತ್ರೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

1971: ಬಾಂಗ್ಲಾದೇಶ ವಿಮೋಚನಾ ಚಳುವಳಿಯನ್ನು ಹತ್ತಿಕ್ಕಲು ಪಾಕಿಸ್ತಾನಿ ಸಶಸ್ತ್ರ ಪಡೆಗಳು ‘ಆಪರೇಷನ್ ಸರ್ಚ್ಲೈಟ್’ ಕಾರ್ಯಾಚರಣೆ ಆರಂಭಗೊಳಿಸಿತು. ಈ ಕಾರ್ಯಾಚರಣೆಯಲ್ಲಿ ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ನಾಗರೀಕ ಸಮುದಾಯದ ಮೇಲೆ ದಾಳಿ ನಡೆಸಿ ನೂರಾರು ಯುವಕರು ಹತರಾದರು.

1975: ಸೌದಿ ಅರೇಬಿಯಾದ ದೊರೆ ಫೈಸಲ್ ಅವರನ್ನು ರಿಯಾದಿನ ಅರಮನೆಯಲ್ಲಿ ಅವರ ಸೋದರಳಿಯ ರಾಜಕುಮಾರ ಮುಸೀದ್ ಗುಂಡಿಟ್ಟು ಕೊಂದ. ಮಾನಸಿಕ ರೋಗಿಯೆಂದು ಹೇಳಲಾದ ಮುಸೀದ್ ಅನ್ನು ಜೂನ್ ತಿಂಗಳಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.

1995: ವಿಶ್ವದ ಪ್ರಥಮ ‘ವಿಕಿ’ ಎನಿಸಿದ ಹಾಗೂ ಪೋರ್ಟ್ ಲ್ಯಾಂಡ್ ಪ್ಯಾಟರನ್ ರೆಪಾಸಿಟರಿಯ ಭಾಗವಾದ ‘ವಿಕಿವಿಕಿವೆಬ್’ (WikiWikiWeb) ಅನ್ನು ವಾರ್ಡ್ ಕನ್ನಿಂಗ್ಹ್ಯಾಮ್ ಅವರು ಸಾರ್ವತ್ರಿಕಗೊಳಿಸಿದರು.

1995: ವಿಶ್ವದ ಪ್ರಥಮ ‘ವಿಕಿ’ ಎನಿಸಿದ ಹಾಗೂ ಪೋರ್ಟ್ ಲ್ಯಾಂಡ್ ಪ್ಯಾಟರನ್ ರೆಪಾಸಿಟರಿಯ ಭಾಗವಾದ ‘ವಿಕಿವಿಕಿವೆಬ್’ (WikiWikiWeb) ಅನ್ನು ವಾರ್ಡ್ ಕನ್ನಿಂಗ್ಹ್ಯಾಮ್ ಅವರು ಸಾರ್ವತ್ರಿಕಗೊಳಿಸಿದರು.

2007: ಭಾರತದ ಸ್ವದೇಶೀ ನಿರ್ಮಿತ ‘ಅಸ್ತ್ರ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರ ಪರೀಕ್ಷಾ ವಲಯದಲ್ಲಿ ಯಶಸ್ವಿಯಾಗಿ ನೆರವೇರಿತು.

2008: ಭೂತಾನಿನಲ್ಲಿ ನಡೆದ ಮೊತ್ತಮೊದಲ ಸಂಸದೀಯ ಚುನಾವಣೆಯಲ್ಲಿ ಭೂತಾನ್ ಪೀಸ್ ಅಂಡ್ ಪ್ರಾಸ್ಪರಿಟಿ ಪಕ್ಷವು ಗೆಲುವು ಸಾಧಿಸಿತು. ಒಟ್ಟು 47 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಪಡೆಯಿತು. ಚುನಾವಣೆಯಲ್ಲಿ ಮತದಾರರು ದೊರೆಯ ಸಂಬಂಧಿಗಳನ್ನು ತಿರಸ್ಕರಿಸಿದರು. ಉಳಿದ ಮೂರು ಸ್ಥಾನಗಳಲ್ಲಿ ಮಾತ್ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಗೆದ್ದಿತು.

2008: ಪಾಕಿಸ್ಥಾನದ 25ನೇ ಪ್ರಧಾನಿಯಾಗಿ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಯೂಸಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು.

2009: ಸುಲಭ್ ಆರೋಗ್ಯ ಸಮುದಾಯ ಆಂದೋಲನದ ಸ್ಥಾಪಕ ಡಾ. ಬಿಂದೇಶ್ವರ್ ಪಾಠಕ್ ಅವರು ‘200ರ ಸ್ಟಾಕ್ ಹೋಮ್’ ವಾಟರ್ ಪ್ರಶಸ್ತಿಗೆ ಆಯ್ಕೆಯಾದರು.

ಪ್ರಮುಖಜನನ/ಮರಣ:

1908: ಕನ್ನಡ ಹೋರಾಟಗಾರ, ಬರಹಗಾರ, ಪತ್ರಕರ್ತ ಮತ್ತು ಚಿತ್ರಸಾಹಿತಿ ನಾಡಿಗೇರ ಕೃಷ್ಣರಾಯ ಅವರು ಹರಿಹರದಲ್ಲಿ ಜನಿಸಿದರು. ಅನೇಕ ಕೃತಿ ರಚಿಸಿದ್ದ ಇವರು ಅ.ನ. ಕೃಷ್ಣರಾಯರ ನೇತೃತ್ವದ ಕನ್ನಡ ಚಳುವಳಿಯಲ್ಲಿ ಪಾಲ್ಗೊಂಡಿದ್ದರು ಹಾಗೂ ಕೆಲವೊಂದು ಚಲನಚಿತ್ರಗಳಿಗೆ ಸಂಭಾಷಣೆ ಮತ್ತು ಗೀತರಚನೆ ಸಹಾ ಮಾಡಿದ್ದರು.

1914: ಹಸಿರು ಕ್ರಾಂತಿಯ ಹರಿಕಾರ, ಅಮೆರಿಕದ ಕೃಷಿ ವಿಜ್ಞಾನಿ ನಾರ್ಮನ್ ಅರ್ನೆಸ್ಟ್ ಬೊರ್ಲಾಗ್ ಅವರು ಅಮೆರಿಕದ ಲೋವಾ ಬಳಿಯ ಕ್ರೆಸ್ಕೋ ಎಂಬಲ್ಲಿ ಜನಿಸಿದರು. ಇವರಿಗೆ 1970 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1916: ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಸ್ ಎಂ ಪಂಡಿತ್‌ ಅವರು ಕಲ್ಬುರ್ಗಿಯಲ್ಲಿ ಜನಿಸಿದರು. ಪೌರಾಣಿಕ ಪತ್ರಗಳಿಂದ ಸಿನಿಮಾ ಚಲನಚಿತ್ರ ನಟನಟಿಯರ ಚಿತ್ರಣ, ಹಾಗೂ ವಿದೇಶಗಳಲ್ಲಿನ ಅಂತರರಾಷ್ಟ್ರೀಯ ಪ್ರದರ್ಶನಗಳವರೆಗೆ ಇವರ ಕೀರ್ತಿ ವ್ಯಾಪಿಸಿತ್ತು. ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಇವರಿಗೆ ಸಂದಿದ್ದವು.

1937: ಡಾಮಿನೋಸ್ ಪಿಜ್ಜಾ ಸ್ಥಾಪಕರಾದ ಟಾಮ್ ಮೊನಘನ್ ಅವರು ಅಮೆರಿಕದ ಮಿಚಿಗನ್ ಪ್ರದೇಶದ ಆನ್ ಹಾರ್ಬರ್ ಎಂಬಲ್ಲಿ ಜನಿಸಿದರು.

1942: ಡಾ. ಗೀತಾ ನಾಗಭೂಷಣ ಅವರು ಕಲ್ಬುರ್ಗಿ ಜಿಲ್ಲೆಯ ಸವಳಗಿ ಗ್ರಾಮದಲ್ಲಿ ಜನಿಸಿದರು. ತಮ್ಮ ಶಿಕ್ಷಕ ವೃತ್ತಿ ಮತ್ತು ಬರಹ ಪ್ರವೃತ್ತಿಗಳಿಂದ ಪ್ರಸಿದ್ಧರಾದ ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1979: ಭಾರತದ ಪ್ರಥಮ ಮಹಿಳಾ ಚೆಸ್ ಗ್ರ್ಯಾಂಡ್ ಮಾಸ್ಟರ ಎಸ್. ವಿಜಯಲಕ್ಷ್ಮೀ ಅವರು ಚೆನ್ನೈನಲ್ಲಿ ಜನಿಸಿದರು.

1914: ಫ್ರೆಂಚ್ ಲೆಕ್ಸಿಕೋಗ್ರಾಫರ್ ಮತ್ತು ಕವಿ ಫ್ರೆಡೆರಿಕ್ ಮಿಸ್ತ್ರಾಲ್ ಅವರು ಫ್ರಾನ್ಸಿನ ಮೈಲ್ಲಾನೆ ಎಂಬಲ್ಲಿ ನಿಧನರಾದರು. ಇವರಿಗೆ 1904ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1931: ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಮತ್ತು ಪತ್ರಕರ್ತ ಗಣೇಶ್ ಶಂಕರ್ ವಿದ್ಯಾರ್ಥಿ ಅವರು ಕಾನ್ಪುರದಲ್ಲಿ ನಿಧನರಾದರು. ದೇಶಕ್ಕೋಸ್ಕರ ಹಲವಾರು ಬಾರಿ ಸೆರೆವಾಸ ಅನುಭವಿಸಿದ ಇವರು 1931ರ ವರ್ಷದಲ್ಲಿ ಉಂಟಾದ ಮತೀಯ ಗಲಭೆಗಳಲ್ಲಿ ಹಲವಾರು ಅಮಾಯಕರನ್ನು ರಕ್ಷಿಸಹೋಗಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದರು.

Categories
e-ದಿನ

ಮಾರ್ಚ್-24

ಪ್ರಮುಖಘಟನಾವಳಿಗಳು:

1882: ಜರ್ಮನ್ ವಿಜ್ಞಾನಿ ರಾಬರ್ಟ್ ಕೋಚ್ ಅವರು ಕ್ಷಯರೋಗಕ್ಕೆ ಕಾರಣವಾದ ‘ಮೈಕೊಬ್ಯಾಕ್ಟೀರಿಯಮ್ ಟ್ಯೂಬರ್ ಕುಲೋಸಿಸ್’ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚಿರುವುದಾಗಿ ಪ್ರಕಟಿಸಿದರು

1896: ಎ.ಎಸ್. ಪೊಪೋವ್ ಅವರು ಪ್ರಪ್ರಥಮ ರೇಡಿಯೋ ಸಿಗ್ನಲ್ ಪ್ರಸರಣವನ್ನು ಮಾಡಿದರು

1921: ಮೊಟ್ಟ ಮೊದಲ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಕೂಟವಾದ ‘1921 ವುಮೆನ್ಸ್ ಒಲಿಂಪಿಯಾಡ್’ ಪ್ರಾರಂಭಗೊಂಡಿತು.

1946: ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯಕ್ಕಾಗಿ ಮಾತುಕತೆ ನಡೆಸಿ, ಹಸ್ತಾಂತರದ ಯೋಜನೆಗಳನ್ನು ರೂಪಿಸಲು ಬ್ರಿಟಿಷ್ ಕ್ಯಾಬಿನೆಟ್ ತಂಡವು ಭಾರತಕ್ಕೆ ಆಗಮಿಸಿತು. ಲಾರ್ಡ್ ಪೆಥಿಕ್-ಲಾರೆನ್ಸ್, ಸರ್ ಸ್ಟಾಫರ್ಡ್ ಕ್ರಿಪ್ಸ್ ಮತ್ತು ಎ.ವಿ. ಅಲೆಗ್ಸಾಂಡರ್ ಅವರು ಈ ತಂಡದ ಪ್ರಮುಖರಾಗಿದ್ದರು.

1977: ಮೊರಾರ್ಜಿ ದೇಸಾಯಿ ಅವರು ಭಾರತದ ನಾಲ್ಕನೆಯ ಪ್ರಧಾನ ಮಂತ್ರಿಗಳಾದರು. ಭಾರತದಲ್ಲಿ ಮೊಟ್ಟ ಮೊದಲಿಗೆ ಕಾಂಗ್ರೆಸ್ಸೇತರ ಸರ್ಕಾರವಾದ ‘ಜನತಾ ಪಕ್ಷ’ದ ಸರ್ಕಾರ ಅಧಿಕಾರಕ್ಕೆ ಬಂತು. ತಮ್ಮ 81ನೆಯ ವಯಸ್ಸಿನಲ್ಲಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ ಅವರು ಅತ್ಯಂತ ಹಿರಿಯ ವಯಸ್ಸಿನ ಪ್ರಧಾನಿ ಎನಿಸಿದರು.

1993: ಷೋ ಮೇಕರ್ ಧೂಮಕೇತು ಪತ್ತೆಗೊಂಡಿತು.

1998: ಪಶ್ಚಿಮ ಬಂಗಾಳದ ಡಂಟನ್ ಎಂಬಲ್ಲಿ ಉಂಟಾದ ಸುಂಟರಗಾಳಿ(tornado)ಯಿಂದ 250 ಜನ ಮೃತರಾಗಿ 3000 ಮಂದಿ ಗಾಯಗೊಂಡರು.

1998: ಮೊಟ್ಟ ಮೊದಲ ಕಂಪ್ಯೂಟರ್ ಬೆಂಬಲದೊಂದಿಗಿನ ಮೂಳೆಗಳ ಪರಿಧಿಯಲ್ಲಿನ ಸಂಚಲನೆಯನ್ನು (ಬೋನ್ ಸೆಗ್ಮೆಂಟ್ ನ್ಯಾವಿಗೇಶನ್ ಅನ್ನು ) ಜರ್ಮನಿಯ ರೆಗೆನ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ನೆರವೇರಿಸಲಾಯಿತು

2006: ಹ್ಯಾನ್ ಮೈಂಗ್ ಸೂಕ್ ಅವರು ದಕ್ಷಿಣ ಕೊರಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಗೊಂಡರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಮತ್ತು ಅಭಿನವ್ ಬಿಂದ್ರಾಗೆ ಮೊದಲ ಎರಡು ಸ್ಥಾನಗಳು ಲಭಿಸಿದವು.

2007: ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿತು.

2008: ಮೊಟ್ಟಮೊದಲ ಸಂಸದೀಯ ಚುನಾವಣೆ ಮೂಲಕ ಅಧಿಕೃತವಾಗಿ ಪ್ರಜಾಪ್ರಭುತ್ವಕ್ಕೆ ಕಾಲಿಟ್ಟ ಭೂತಾನಿನಲ್ಲಿ ಜನರು ಸಂಭ್ರಮೋತ್ಸಾಹಗಳೊಂದಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್ ಅವರು ಸ್ವಯಂ ತಾವೇ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾದರು.

2008: ಬೀಜಿಂಗ್ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿಯನ್ನು ಗ್ರೀಕಿನ ಪ್ರಾಚೀನ ನಗರಿ ಒಲಿಂಪಿಯಾದಲ್ಲಿ ಬೆಳಗಿಸಲಾಯಿತು. ಇದರೊಂದಿಗೆ 2008ರ ಒಲಿಂಪಿಕ್ ಕ್ಷಣಗಣನೆ ಆರಂಭವಾಯಿತು.

2008: ತುಮಕೂರು ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವದಲ್ಲಿ ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಶೇಖ್ ಅಲಿ ಹಾಗೂ ಕನ್ನಡದ ಹೆಸರಾಂತ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಶಿಕ್ಷಣ ಪ್ರೇಮಿಗಳಾದ ಎಚ್.ಎಂ. ಗಂಗಾಧರಯ್ಯ ಮತ್ತು ಎಂ.ಎಸ್. ರಾಮಯ್ಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು.

ಪ್ರಮುಖಜನನ/ಮರಣ:

1693: ಇಂಗ್ಲಿಷ್ ಬಡಗಿ, ಗಡಿಯಾರ ಮತ್ತು ಮೆರಿನ್ ಕ್ರೋನೋಮೀಟರ್ಗಳನ್ನು ಸಂಶೋಧಿಸಿದ ಜಾನ್ ಹ್ಯಾರಿಸನ್ ಅವರು ಫೌಲ್ಬಿ ಎಂಬಲ್ಲಿ ಜನಿಸಿದರು.

1733: ಹದಿನೆಂಟನೇ ಶತಮಾನದ ಪ್ರಸಿದ್ಧ ತತ್ವಜ್ಞಾನಿ, ವ್ಯಾಕರಣ ಶಾಸ್ತ್ರಜ್ಞ, ಮುಕ್ತ ರಾಜಕೀಯ ವ್ಯಾಖ್ಯಾನಕಾರ ಮತ್ತು ವಿಜ್ಞಾನಿ ಜೋಸೆಫ್ ಪ್ರೀಸ್ಟ್ಲಿ ಅವರು ಬ್ರಿಸ್ಟಲ್ ಎಂಬಲ್ಲಿ ಜನಿಸಿದರು. ಇವರು ವಿವಿಧ ವಿಷಯಗಳಲ್ಲಿ 150ಕ್ಕೂ ಹೆಚ್ಚು ಪ್ರಾಜ್ಞ ಗ್ರಂಥಗಳನ್ನು ರಚಿಸಿದ್ದರು. ಇವರು ‘ಆಮ್ಲಜನಕವನ್ನು’ ಅನಿಲರೂಪದಲ್ಲಿ ಪ್ರತ್ಯೇಕವಾಗಿ ನಿಷ್ಕರ್ಷಿಸಿದ್ದಕ್ಕಾಗಿ ಹೆಸರಾಗಿದ್ದರೂ ಅದೇ ಸಾಧನೆಯನ್ನು ‘ನಾವು ಮಾಡಿದ್ದೇವೆಂದು’ ಕಾರ್ಲ್ ವಿಲ್ಹೆಮ್ ಸ್ಕೀಲಿ ಮತ್ತು ಆಂಟೋಯನ್ ಲೇವೋಯ್ಸರ್ ಅವರುಗಳು ಸಹಾ ಧ್ವನಿ ಎತ್ತಿದ್ದರು.

1775: ಸಂಗೀತದ ಮಹಾನ್ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ತಮಿಳುನಾಡಿನ ತಿರುವಾರೂರಿನಲ್ಲಿ ಜನಿಸಿದರು. ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿದ್ದು, ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ಅವರ ಎಲ್ಲ ಕೃತಿಗಳಲ್ಲಿ ಕಂಡುಬರುವ ಪ್ರಧಾನ ಅಂಶವಾಗಿದೆ.

1834: ಇಂಗ್ಲಿಷ್ ವಿನ್ಯಾಸಕಾರ, ಕುಶಲಕರ್ಮಿ, ಕತೆಗಾರ, ಸಮಾಜ ಸೇವಕ ವಿಲಿಯಂ ಮೋರಿಸ್ ಅವರು ಎಸ್ಸೆಕ್ಸ್ ಬಳಿ’ಯ ವಾಲ್ಥಾಮ್ ಸ್ಟೌ ಎಂಬಲ್ಲಿ ಜನಿಸಿದರು. ಇವರು ನಿರ್ಮಿಸಿದ ಪೀಠೋಪಕರಣಗಳು, ಬಟ್ಟೆಗಳು, ವಾಲ್ ಪೇಪರ್ ಮತ್ತು ಇನ್ನಿತರ ಅಲಂಕಾರಿಕ ವಸ್ತುಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟುಹಾಕಿತು.

1874: ಹಂಗೇರಿ-ಅಮೆರಿಕನ್ ಐಂದ್ರಜಾಲಿಕರಾಗಿ ‘ಹ್ಯಾರಿ ಹೌಡಿನಿ’ ಎಂದೇ ಖ್ಯಾತರಾದ ಎರಿಕ್ ವೀಸ್ ಅವರು ಆಸ್ಟ್ರಿಯಾ-ಹಂಗೆರಿಗೆ ಸೇರಿದ್ದ ಬುಡಾಪೆಸ್ಟ್ ಎಂಬಲ್ಲಿ ಜನಿಸಿದರು.

1884: ಡಚ್-ಅಮೆರಿಕನ್ ರಸಾಯನ ಶಾಸ್ತ್ರಜ್ಞ ಪೀಟರ್ ಡೆಬೈ ಅವರು ನೆದರ್ಲ್ಯಾಂಡಿನ ಮಾಸ್ಟ್ರಿಕ್ಟ್ ಎಂಬಲ್ಲಿ ಜನಿಸಿದರು. ‘ಡೆಬೈ ಮಾಡೆಲ್, ಡೆಬೈ ರಿಲಾಕ್ಸೇಷನ್, ಡೆಬೈ ಟೆಂಪರೇಚರ್’ ಮುಂತಾದವುಗಳ ಸಂಶೋಧನೆಗಳಲ್ಲಿ ಹೆಸರಾಗಿರುವ ಇವರಿಗೆ 1936ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1901: ಅನಿಮೇಶನ್ ತಜ್ಞ, ನಿರ್ದೇಶಕ, ನಿರ್ಮಾಪಕ ಮಿಕ್ಕಿ ಮೌಸ್ ಸಹ ಸೃಷ್ಟಿಕರ್ತ ಉಬ್ ಲ್ವೆರ್ಕ್ಸ್ ಅವರು ಅಮೇರಿಕದ ಮಿಸ್ಸೌರಿ ಬಳಿಯ ಕನ್ಸಾಸ್ ಸಿಟಿ ಎಂಬಲ್ಲಿ ಜನಿಸಿದರು.

1903: ಜರ್ಮನಿಯ ಜೈವಿಕ ವಿಜ್ಞಾನಿ ಅಡಾಲ್ಫ್ ಬುಟೆನಾನ್ಡ್ಟ್ ಅವರು ಲೆಹೆ ಎಂಬಲ್ಲಿ ಜನಿಸಿದರು. ‘ಲೈಂಗಿಕ ಹಾರ್ಮೋನ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1939 ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿತು.

1917: ಇಂಗ್ಲಿಷ್ ಜೈವಿಕ ವಿಜ್ಞಾನಿ ಮತ್ತು ಕ್ರಿಸ್ಟಲೋಗ್ರಾಫರ್ ಜಾನ್ ಕೆಂಡ್ರ್ಯೂ ಅವರು ಆಕ್ಸ್ಫರ್ಡ್ನಲ್ಲಿ ಜನಿಸಿದರು. ‘ಸ್ಟ್ರಕ್ಚರ್ ಆಫ್ ಹೆಮೆ ಕಂಟೈನಿಂಗ್ ಪ್ರೊಟೀನ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1962 ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿತು.

1926: ಇಟಲಿಯ ನಾಟಕಕಾರ, ನಿರ್ದೇಶಕ, ಸಂಯೋಜಕರಾದ ಡಾರಿಯೋ ಫೋ ಆವರು ಇಟಲಿಯ ವೆರೇಸೆ ಬಳಿಯ ಲೆಗ್ವಿನೋ ಸಂಗಿಯಾನೋ ಎಂಬಲ್ಲಿ ಜನಿಸಿದರು. ಇವರಿಗೆ 1997 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1943: ಪ್ರಸಿದ್ಧ ನೃತ್ಯ ಕಲಾವಿದರಾದ ಲಲಿತಾ ಶ್ರೀನಿವಾಸನ್ ಶಿವನಸಮುದ್ರದಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಪ್ರಸಿದ್ಧವಾದ ‘ನೂಪುರ ಭ್ರಮರಿ’ ನಾಟ್ಯ ಶಾಲೆಯನ್ನು ನಡೆಸುತ್ತಿದ್ದು, ವಿಶ್ವದೆಲ್ಲೆಡೆ ತಮ್ಮ ನಾಟ್ಯಕಲೆಯಿಂದ ಪ್ರಸಿದ್ಧರಾದ ಇವರಿಗೆ ಶಾಂತಲಾ ನಾಟ್ಯರಾಣಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1984: ಭಾರತದ ರಾಷ್ಟ್ರೀಯ ಹಾಕಿ ಆಟಗಾರ ಆಡ್ರಿಯಾನ್ ಡಿಸೋಜಾ ಮುಂಬೈನಲ್ಲಿ ಜನಿಸಿದರು. ಮಧ್ಯ ಆಟಗಾರರಾಗಿ ಮತ್ತು ಗೋಲ್ ಕೀಪರ್ ಆಗಿ ಇವರಿಗೆ ಪರಿಣತಿ ಇದೆ.

1932: ಕ್ರಿಕೆಟ್ ಕ್ರೀಡೆಯ ಪ್ರಮುಖ ಉತ್ತೇಜಕರಆದ ಲಾರ್ಡ್ ಹ್ಯಾರಿಸ್ ತಮ್ಮ 81ನೇ ವಯಸ್ಸಿನಲ್ಲಿ ಮೃತರಾದರು. ಇವರು ಮುಂಬೈಯ ಗವರ್ನರ್ ಆಗಿದ್ದ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟನ್ನು ಬೆಳೆಸಲು ಪ್ರೋತ್ಸಾಹ ನೀಡಿ, ಐರೋಪ್ಯ ಮತ್ತು ಭಾರತೀಯ ತಂಡಗಳ ನಡುವೆ ವಾರ್ಷಿಕ ದೇಶೀ ಕ್ರಿಕೆಟ್ ಪಂದ್ಯಗಳನ್ನು ಪ್ರಾರಂಭಿಸಿದರು.

1944: ಭಾರತದಲ್ಲಿ ಜನಿಸಿದ ಬ್ರಿಟಿಷ್ ಸೈನ್ಯಾಧಿಕಾರಿ ಆರ್ಡೆ ವಿನ್ಗೇಟ್ ಮಣಿಪುರದ ಬಳಿಯ ಭೀಷ್ನಾಪುರ್ ಎಂಬಲ್ಲಿ ನಿಧನರಾದರು. ಇವರು ಎರಡನೇ ವಿಶ್ವಮಹಾಯುದ್ಧಗಲ್ಲಿ ಜಪಾನ್ ಆಕ್ರಮಣದ ಬರ್ಮಾ ವಲಯದಲ್ಲಿ ಭೀಕರ ಹೋರಾಟಗಳಲ್ಲಿ ಪಾಲ್ಗೊಂಡಿದ್ದು, ಯುದ್ಧದ ಸಂದರ್ಭದಲ್ಲಿಯೇ ವಿಮಾನ ಅಪಘಾತದಲ್ಲಿ ನಿಧನರಾದರು.

2002: ಅರ್ಜೆಂಟೈನ-ಇಂಗ್ಲಿಷ್ ಜೈವಿಕ ವಿಜ್ಞಾನಿ ಸೀಸರ್ ಮಿಲ್ಸ್ಟೀನ್ ಅವರು ಇಂಗ್ಲೆಂಡಿನ ಕೇಂಬ್ರಿಡ್ಜಿನಲ್ಲಿ ನಿಧನರಾದರು. ‘ಆ್ಯಾಂಟಿಬಾಡಿ’ ಸಂಶೋಧನೆಗಳಲ್ಲಿನ ಮಹತ್ವದ ಕೊಡುಗೆಗಳಿಗಾಗಿ ಇವರಿಗೆ 1984 ವರ್ಷದಲ್ಲಿ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

Categories
e-ದಿನ

ಮಾರ್ಚ್-23

ಪ್ರಮುಖಘಟನಾವಳಿಗಳು:

1857: ಎಲಿಷಾ ಓಟಿಸ್ ಅವರ ಪ್ರಥಮ ಎಲಿವೇಟರ್ ನ್ಯೂಯಾರ್ಕಿನ ಬ್ರಾಡ್ವೇಯಲ್ಲಿ ಅಳವಡಿತಗೊಂಡಿತು

1888: ವಿಶ್ವದ ಅತೀ ಹಳೆಯ ವೃತ್ತಿ ಫುಟ್ಬಾಲ್ ಸಂಘಟನೆಯಾದ ‘ದಿ ಫುಟ್ಬಾಲ್ ಲೀಗ್’ ತನ್ನ ಪ್ರಥಮ ಸಭೆ ನಡೆಸಿತು

1931: ಬ್ರಿಟಿಷ್ ಸರ್ಕಾರವು ಭಾರತದ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರುಗಳನ್ನು ಗಲ್ಲಿಗೇರಿಸಿತು. ಲಾಲಾ ಲಜಪತರಾಯ್ ಅವರ ಸಾವಿಗೆ ಕಾರಣವಾದ ಬ್ರಿಟಿಷ್ ದಬ್ಬಾಳಿಕೆಯ ಸೇಡು ತೀರಿಸಲು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸಾಂಡರ್ಸ್ ಎಂಬಾತನ ಹತ್ಯೆಗೆ ಕಾರಣರೆಂದು ಈ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರ ಮರಣದಂಡನೆ ನೀಡಿತು.

1933: ಜರ್ಮನಿಯ ರೀಚ್ ಸ್ಟಾಗ್ ‘ಎನೇಬ್ಲಿಂಗ್ ಆಕ್ಟ್ 1933’ ಜಾರಿಗೊಳಿಸಿ ಅಡೋಲ್ಫ್ ಹಿಟ್ಲರನನ್ನು ಸರ್ವಾಧಿಕಾರಿಯನ್ನಾಗಿಸಿತು

1940: ಆಲ್-ಇಂಡಿಯಾ ಮುಸ್ಲಿಂ ಲೀಗ್ ತನ್ನ ವಾರ್ಷಿಕ ಅಧಿವೇಶನದಲ್ಲಿ ‘ಲಾಹೋರ್ ನಿರ್ಣಯವನ್ನು’ ಅಂಗೀಕರಿಸಿತು

1956: ಪಾಕಿಸ್ತಾನವು ಮೊಟ್ಟ ಮೊದಲ ಇಸ್ಲಾಮಿಕ್ ಗಣತಂತ್ರವಾಯಿತು

1965: ನಾಸಾವು ಇಬ್ಬರು ಗಗನಯಾತ್ರಿಗಳನ್ನು ಒಳಗೊಂಡ ‘ಜೆಮಿನಿ 3’ನ್ನು ಉಡ್ಡಯನ ಮಾಡಿತು. ಗಸ್ ಗ್ರಿಸ್ಸಮ್ ಮತ್ತು ಜಾನ್ ಯಂಗ್ ಅವರು ಇದರ ಯಾತ್ರಿಕರಾಗಿದ್ದರು.

1980: ಕರ್ನಾಟಕದ ಪ್ರಕಾಶ್ ಪಡುಕೋಣೆ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಗೆದ್ದ ಪ್ರಥಮ ಭಾರತೀಯರೆನಿಸಿದರು. ಇವರು ಅಂತಿಮ ಪಂದ್ಯದಲ್ಲಿ ಇಂಡೋನೇಶಿಯಾದ ಲೀಮ್ ಸ್ವೀ ಕಿಂಗ್ ಅವರನ್ನು ಸೋಲಿಸಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

2001: ರಷ್ಯಾದ ಬಾಹ್ಯಾಕಾಶದಲ್ಲಿನ ಪ್ರಯೋಗಾಲಯವಾದ ‘ಮೀರ್’ ಅನ್ನು ಮೂರು ಹಂತಗಳಲ್ಲಿ ವಿಭಜಿಸಿ ಕಕ್ಷೆಯಿಂದ ಹೊರತಂದು ಫಿಜಿ ದ್ವೀಪದ ಬಳಿಯಲ್ಲಿ ಪೆಸಿಫಿಕ್ ಸಾಗರದಲ್ಲಿ ಬೀಳುವಂತೆ ಮಾಡಲಾಯಿತು. ಇದು ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಬಾಹ್ಯಾಕಾಶ ನಿಲ್ದಾಣವಾಗಿ ಕಾರ್ಯನಿರ್ವಹಿಸಿತ್ತು.

2006: ಲಾಭದಾಯಕ ಹುದ್ದೆಯ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತಮ್ಮ ಲೋಕಸಭಾ ಸದಸ್ಯತ್ವ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸೋನಿಯಾ ಗಾಂಧೀ ಅವರ ದಾರಿಯನ್ನೇ ಅನುಸರಿಸಿದ ಕಾಂಗ್ರೆಸ್ ಸಂಸದ ಕರಣ್ ಸಿಂಗ್ ಅವರೂ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯ ಮಹಿಳೆಯರ 50 ಮೀ. ರೈಫಲ್ ವಿಭಾಗದಲ್ಲಿ ಭಾರತದ ಅನುಜಾ ಜಂಗ್ ಸ್ವರ್ಣ ಪದಕ ಗೆದ್ದುಕೊಂಡರು.

2007: ಇರಾಕಿನಲ್ಲಿ ಇರುವ ಅಮೆರಿಕದ ಪಡೆಗಳ ವಾಪಸಾತಿಯನ್ನು ನಾಲ್ಕು ತಿಂಗಳಲ್ಲಿ ಆರಂಭಿಸಲು ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಅವಕಾಶ ಒದಗಿಸುವ ಡೆಮಾಕ್ರಾಟಿಕ್ ಯೋಜನೆಗೆ ಸೆನೆಟ್ ಸಮಿತಿಯ ಅನುಮೋದನೆ ಲಭಿಸಿತು.

2008: 700 ರಿಂದ 900 ಕಿ.ಮೀ. ದೂರದವರೆಗೆ ಕ್ರಮಿಸಬಲ್ಲ ಘನ ಇಂಧನ ಚಾಲಿತ ‘ಅಗ್ನಿ-1′ ಕ್ಷಿಪಣಿಯ ಪರೀಕ್ಷೆಯನ್ನು ಒರಿಸ್ಸಾದ ಬಾಲಸೋರಿಗೆ ಸಮೀಪದ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

2008: ಹೂಳು ತುಂಬಿ, ಮಲಿನಗೊಂಡಿದ್ದ ಶತಮಾನದಷ್ಟು ಹಳೆಯದಾದ ಕಲ್ಯಾಣಿಯ ಹೂಳು ತೆಗೆಯುವ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮಸ್ಥರು ಮಹತ್ವದ ಕಾರ್ಯ ಕೈಗೊಂಡರು. ನೂರಕ್ಕೂ ಹೆಚ್ಚು ಮಂದಿಯ ತಂಡಗಳು ಮೂರು ದಿನಗಳಿಂದ ಎಡೆ ಬಿಡದೆ ಕಲ್ಯಾಣಿ ಬದಿ ಎತ್ತುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು.

2008: ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು ‘ಗಿಳಿವಿಂಡು’ ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2009: ಮುಂಬೈನಲ್ಲಿ ವಿಶ್ವದ ಅತ್ಯಂತ ಅಗ್ಗದ ಕಾರಾದ ‘ನ್ಯಾನೋ’ ಬಿಡುಗಡೆಗೊಂಡಿತು

ಪ್ರಮುಖಜನನ/ಮರಣ:

1858: ಜರ್ಮನಿಯ ಕಾರ್ಯಕರ್ತ ಮತ್ತು ರಾಜಕಾರಣಿ ಲುಡ್ವಿಗ್ ಕ್ವಿಡ್ಡೆ ಅವರು ಬ್ರೆಮೆನ್ ಎಂಬಲ್ಲಿ ಜನಿಸಿದರು. 1927ರ ವರ್ಷದಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1881: ಫ್ರೆಂಚ್ ಕಾದಂಬರಿಕಾರ ಮಟ್ಟ ಪೇಲಿಯೋಗ್ರೇಫರ್ ರೋಜರ್ ಮಾರ್ಟಿನ್ ಡ್ಯು ಗಾರ್ಡ್ ಜನಿಸಿದರು. ಇವರಿಗೆ 1937ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1881: ಜರ್ಮನ್ ರಸಾಯನ ಶಾಸ್ತ್ರ ವಿಜ್ಞಾನಿ ಹೆರ್ಮಾನ್ ಸ್ಟೌಡಿಂಗರ್ ಅವರು ವೋರ್ಮ್ಸ್ ಎಂಬಲ್ಲಿ ಜನಿಸಿದರು. ‘ಪಾಲಿಮರ್ ಕೆಮಿಸ್ಟ್ರಿ’ಯಲ್ಲಿನ ಕೊಡುಗೆಗಾಗಿ ಇವರಿಗೆ 1953 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1883: ಕನ್ನಡದ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಮಂಜೇಶ್ವರದಲ್ಲಿ ಜನಿಸಿದರು. ಸುಪ್ರಸಿದ್ಧ ಸಂಶೋಧಕರೂ, ಕವಿಗಳೂ ಆದ ಇವರು ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, ಗೊಲ್ಗೊಥಾ ವೈಶಾಖಿ, ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾಶ್ರ್ವನಾಥ ತೀರ್ಥಂಕರ ಚರಿತೆ ಮುಂತಾದ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದರು. ಮದ್ರಾಸ್ ಸರ್ಕಾರದ ರಾಷ್ಟ್ರಕವಿ ಗೌರವ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿದ್ದವು.

1893: ‘ಭಾರತದ ಎಡಿಸನ್’ ಎಂಬ ಖ್ಯಾತಿಗೆ ಪಾತ್ರರಾದ ಗೋಪಾಲಸ್ವಾಮಿ ದೊರೆಸ್ವಾಮಿ ನಾಯ್ಡು ಅವರು ಕೊಯಮತ್ತೂರು ಬಳಿಯ ಕಾಲಂಗಳ್ ಎಂಬಲ್ಲಿ ಜನಿಸಿದರು. ಭಾರತದಲ್ಲಿ ಪ್ರಥಮ ಎಲೆಕ್ಟ್ರಿಕ್ ಮೋಟಾರ್ ಕಂಡುಹಿಡಿದ ಕೀರ್ತಿ ಇವರದ್ದಾಗಿದೆ.

1899: ಗೋವಾವನ್ನು ಪೋರ್ಚುಗೀಸ್ ಆಡಳಿತದಿಂದ ಮುಕ್ತಗೊಳಿಸುವ ಸಲುವಾಗಿ ಹೋರಾಡಿದ ಭಾರತೀಯ ಪತ್ರಕರ್ತ, ಕವಿ, ಸ್ವಾತಂತ್ರ್ಯ ಹೋರಾಟಗಾರ ಟೆಲೋ ಡಿ ಮಸ್ಕರೇಙಸ್ ಜನಿಸಿದರು. ಇವರು ಪೋರ್ಚುಗೀಸ್ ಭಾಷೆಯಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

1901: ಭಾರತೀಯ ವೈಷ್ಣವ ಪರಂಪರೆಯ ಗೌಡಿಯಾ ಮಠದ ಗುರು ಬಾನ್ ಮಹಾರಾಜ್ ಅವರು ಅಂದಿನ ಬ್ರಿಟಿಷ್ ಬಂಗಾಳದ ಆಡಳಿತ ಕ್ಷೇತ್ರದಲ್ಲಿದ್ದ ಬಹಾರ್ ಎಂಬಲ್ಲಿ ಜನಿಸಿದರು. ವೃಂದಾವನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಓರಿಯಂಟಲ್ ಫಿಲಾಸಫಿ ಸ್ಥಾಪಿಸಿದರು.

1907: ಸ್ವಿಸ್-ಇಟಾಲಿಯನ್ ವೈದ್ಯ ವಿಜ್ಞಾನಿಗಳಾದ ಡೇನಿಯಲ್ ಬೋವೆಟ್ ಸ್ವಿಟ್ಜರ್ಲ್ಯಾಂಡ್ ದೇಶದ ಫ್ಲ್ಯೂರಿಯರ್ ಎಂಬಲ್ಲಿ ಜನಿಸಿದರು. ‘ನ್ಯೂರೋ ಟ್ರಾನ್ಸ್ಮಿಟರ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1957 ವರ್ಷದ ವೈದ್ಯಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

1910: ಜಪಾನಿನ ಮಹಾನ್ ಚಿತ್ರ ನಿರ್ದೇಶಕರಾದ ಅಕಿರಾ ಕುರೊಸಾವಾ ಟೋಕಿಯೋ ಬಳಿಯ ಶಿನಗಾವಾ ಎಂಬಲ್ಲಿ ಜನಿಸಿದರು. ಮೂವತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ ಇವರ ಇಕಿರು, ರಾಶೊಮನ್, ಸೆವೆನ್ ಸಮುರಾಯ್ ಮುಂತಾದ ಅನೇಕ ಚಿತ್ರಗಳು ಶ್ರೇಷ್ಠತೆಗೆ ಪ್ರಸಿದ್ಧಿ ಪಡೆದಿವೆ. ಇವರಿಗೆ ಅಕಾಡೆಮಿಯ ಹಲವಾರು ಪ್ರಶಸ್ತಿಗಳಲ್ಲದೆ ಜೀವಮಾನ ಸಾಧನೆ ಪ್ರಶಸ್ತಿ ಸಹಾ ಸಂದಿತ್ತು. ಇವರನ್ನು ಏಷ್ಯನ್ ಆಫ್ ದಿ ಸೆಂಚುರಿ ಎಂದು ಸಹಾ ಮರಣೋತ್ತರವಾಗಿ ಹೆಸರಿಸಲಾಯಿತು.

1910: ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಪಕ್ಷದ ಸ್ಥಾಪಕ, ಕಾರ್ಮಿಕ ಪರ ಹಾಗೂ ಶೋಷಣೆಯ ವಿರುದ್ಧದ ಹೋರಾಟಗಾರ ರಾಮ್ ಮನೋಹರ್ ಲೋಹಿಯಾ ಉತ್ತರ ಪ್ರದೇಶದ ಅಕ್ಬರಪುರ್ ಎಂಬಲ್ಲಿ ಜನಿಸಿದರು.

1951: ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿ ಜನಿಸಿದರು. ‘ಸಮುದಾಯ’ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಲ್ಲದೆ, ಸಮುದಾಯ ವಾರ್ತಾಪತ್ರ ಸ್ಥಾಪನೆ, ರಂಗಾಯಣ ನಿರ್ವಹಣೆ, ಕವಿ-ಕಾವ್ಯ ಟ್ರಸ್ಟ್ ಸ್ಥಾಪನೆ, ಋಜುವಾತು ಪತ್ರಿಕೆಗೆ ಹೊಸರೂಪ, ದೇಸಿ ಅಂಗಡಿ ಸ್ಥಾಪನೆ ಮುಂತಾದ ಅನೇಕ ಬಹುರೂಪಿ ಸಾಧನೆಗಳನ್ನು ಇವರು ಮಾಡಿದ್ದಾರೆ. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

1953: ಬಯೋಕಾನ್ ಸಂಸ್ಥೆಯನ್ನು ಸ್ಥಾಪಿಸಿ ವಿಶ್ವದೆಲ್ಲೆಡೆ ಪ್ರಸಿದ್ಧರಾಗಿರುವ ಕಿರಣ್ ಮಜುಮ್ದಾರ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಓತ್ಮರ್ ಅಂತರರಾಷ್ಟ್ರೀಯ ಚಿನ್ನದ ಪದಕ, ಪದ್ಮಭೂಷಣ ಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1976: ನಟಿ, ನಿರ್ಮಾಪಕಿ, ರಾಜಕಾರಣಿ, ಕೇಂದ್ರ ಮಂತ್ರಿಗಳಾದ ಸ್ಮೃತಿ ಇರಾನಿ ದೆಹಲಿಯಲ್ಲಿ ಜನಿಸಿದರು.

1931: ಬ್ರಿಟಿಷ್ ಸರ್ಕಾರವು ಭಾರತದ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರುಗಳನ್ನು ಗಲ್ಲಿಗೇರಿಸಿತು. ಲಾಲಾ ಲಜಪತರಾಯ್ ಅವರ ಸಾವಿಗೆ ಕಾರಣವಾದ ಬ್ರಿಟಿಷ್ ದಬ್ಬಾಳಿಕೆಯ ಸೇಡು ತೀರಿಸಲು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸಾಂಡರ್ಸ್ ಎಂಬಾತನ ಹತ್ಯೆಗೆ ಕಾರಣರೆಂದು ಈ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರ ಮರಣದಂಡನೆ ನೀಡಿತು.

1991: ಎರಡನೇ ಮಹಾಯುದ್ಧದ ಸಮಯದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಕ್ಕಾಗಿ ಅತ್ಯುನ್ನತ ಬ್ರಿಟಿಷ್ ಸೇನಾ ಗೌರವವಾದ ವಿಕ್ಟೋರಿಯಾ ಕ್ರಾಸ್ ಪಡೆದ ಸೇನಾನಿ ಪರಕಾಶ್ ಸಿಂಗ್ ಅವರು ಲಂಡನ್ನಿನ ಈಲಿಂಗ್ ಎಂಬಲ್ಲಿ ನಿಧನರಾದರು.

1992: ಆಸ್ಟ್ರಿಯಾ-ಜರ್ಮನಿಗಳ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಫ್ರೆಡ್ರಿಕ್ ಹಯೆಕ್ ಜರ್ಮನಿಯ ವುಟ್ಟೆಂಬರ್ಗ್ ಎಂಬಲ್ಲಿ ನಿಧನರಾದರು. ಅವರಿಗೆ 1974 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತ್ತು.

Categories
e-ದಿನ

ಮಾರ್ಚ್-22

ದಿನಾಚರಣೆಗಳು
ವಿಶ್ವ ನೀರಿನ ದಿನ
ಮಾರ್ಚ್ 22 ದಿನವನ್ನು ವಿಶ್ವ ನೀರಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಶುದ್ಧ ನೀರಿನ ಮಹತ್ವವನ್ನು ಬಿಂಬಿಸುವುದರ ಜೊತೆಗೆ, ನೀರನ್ನು ವ್ಯರ್ಥವಾಗಿ ಪೋಲು ಮಾಡದೆ, ಶುದ್ಧ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಿ, ಯೋಗ್ಯ ರೀತಿಯಲ್ಲಿ ನಿರ್ವಹಿಸುವುದರ ಕಡೆಗೆ ಗಮನ ಸೆಳೆಯುವುದು ಈ ಆಚರಣೆಯ ಉದ್ಧೇಶವಾಗಿದೆ.

ಪ್ರಮುಖಘಟನಾವಳಿಗಳು:

1739: ದೆಹಲಿಯನ್ನಾಕ್ರಮಿಸಿದ ನಾದೆರ್ ಷಾ ಅಲ್ಲಿನ ವೈಭವೋಪೇತ ಸಿಂಹಾಸನದೊಂದಿಗೆ ನಗರವನ್ನು ಲೂಟಿಗೈದ. ಆತ ಲೂಟಿಗೈದ ಸಂಪತ್ತು ಎಪ್ಪತ್ತು ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಆತ ತನ್ನ ದೇಶಕ್ಕೆ ಹಿಂದಿರುಗಿದಾಗ ಮೂರು ವರ್ಷಗಳ ಕಾಲ ತೆರಿಗೆಯನ್ನೇ ವಸೂಲು ಮಾಡಲಿಲ್ಲವಂತೆ!

1784: ಎಮೆರಾಲ್ಡ್ ಬುದ್ಧ ವಿಗ್ರಹವನ್ನು ಈಗಿರುವ ಥೈಲ್ಯಾಂಡಿನ ವಾಟ್ ಫ್ರಾ ಕಯೆವ್ ಎಂಬಲ್ಲಿಗೆ ಸಕಲ ವೈಭವಗಳೊಂದಿಗೆ ತರಲಾಯಿತು.

1912: ಬಿಹಾರ್ ರಾಜ್ಯವನ್ನು ಬಂಗಾಳದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯವನ್ನಾಗಿಸಲಾಯಿತು

1942: ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವ ರಾಜಕೀಯ ಸೂತ್ರ ರೂಪಿಸುವ ಸಲುವಾಗಿ ಸರ್ ಸ್ಟಾಫರ್ಡ್ ಕ್ಲಿಫ್ ಆಯೋಗ ಭಾರತಕ್ಕೆ ಆಗಮಿಸಿತು. ಈ ಯತ್ನ ವಿಫಲಗೊಂಡು ಕೆಲವು ತಿಂಗಳ ಬಳಿಕ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಯಿತು.

1945: ಕೈರೋದಲ್ಲಿ ಮಧ್ಯಪ್ರಾಚ್ಯ ದೇಶಗಳ ‘ಅರಬ್ ಲೀಗ್’ ಸ್ಥಾಪನೆಗೊಂಡಿತು.

1957: ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ರಾಜ್ಯಾಂಗದ ಭಾಗವಾಗಿ ರಾಷ್ಟ್ರೀಯ ಪಂಚಾಂಗದ ಅಗತ್ಯತೆ ಉಂಟಾಯಿತು. ಹಾಗಾಗಿ ಕ್ರಿ.ಶ. 1952ರ ನವೆಂಬರ್ ನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಪಂಚಾಂಗದ ರಚನೆಗಾಗಿ ಸಮಿತಿಯೊಂದನ್ನು ನೇಮಿಸಿತು. ಅದು ಕ್ರಿ.ಶ. 1957 ಮಾರ್ಚಿ 22ನೆಯ ತಾರೀಖಿನಿಂದ ಜಾರಿಗೆ ಬರುವಂತೆ ‘ರಾಷ್ಟ್ರೀಯ ಪಂಚಾಂಗ’ವನ್ನು ಪ್ರಕಟಿಸಿತು. ಇದು ಶುದ್ಧ ಸೌರ ಪಂಚಾಂಗವಾಗಿದ್ದು ಋತುಮಾನಕ್ಕೆ ಅನುಗುಣವಾಗಿದೆ. ಭಾರತದ ಗೆಜೆಟ್ನಲ್ಲಿ ಇದನ್ನು ಗ್ರೆಗೋರಿಯನ್ ಕ್ಯಾಲೆಂಡರಿನ ಜೊತೆ ಜೊತೆಯಾಗಿ ಬಳಸಲಾಗಿದೆ.

1960: ಆರ್ಥರ್‌ ಅಮೇರಿಕಾದ ಲಿಯೋನಾರ್ಡ್ ಸ್ಕಾವ್ಲೋವ್ ಮತ್ತು ಚಾರ್ಲ್ಸ್ ಹಾರ್ಡ್ ಟೌನೆಸ್ ಅವರು ಲೇಸರ್ಗಾಗಿ ಪ್ರಥಮ ಪೇಟೆಂಟ್ ಪಡೆದರು.

1993: ಇಂಟೆಲ್ ಕಾರ್ಪೊರೇಷನ್ ಸಂಸ್ಥೆಯು ಪ್ರಥಮ ಪೆಂಟಿಯಮ್ ಚಿಪ್ (8೦586) ಅನ್ನು ಮಾರಕಟ್ಟೆಗೆ ರವಾನೆ ಮಾಡಿತು. ಇದು 60 ಎಂ.ಹೆಚ್.ಸೆಡ್ ಕ್ಲಾಕ್ ಸ್ಪೀಡ್, 100+ ಎಂ.ಐ.ಪಿ.ಎಸ್ ಮತ್ತು 64 ಬಿಟ್ ಡಾಟಾ ಪಾತ್ ಸಾಮರ್ಥ್ಯ ಉಳ್ಳದ್ದಾಗಿತ್ತು.

1995: ಬಾಹ್ಯಾಕಾಶ ಯಾತ್ರಿ ವಲೇರಿ ಪಾಲಿಯಾಕೊವ್ ಅವರು 438 ದಿನಗಳ ಬಾಹ್ಯಾಕಾಶದಲ್ಲಿನ ವಾಸ್ತವ್ಯದಿಂದ ಭುವಿಗೆ ಹಿಂದಿರುಗಿದರು.

1997: ಕೇವಲ 14 ವರ್ಷ 10 ತಿಂಗಳ ಬಾಲಕಿ ತಾರಾ ಲಿಪಿನ್ಸ್ಕಿ ಅವರು ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್ ಆದ ಆತ್ಯಂತ ಕಿರಿಯ ವ್ಯಕ್ತಿ ಎನಿಸಿದರು.

1997: ಹಾಲೆ-ಬಾಪ್ ಧೂಮಕೇತುವು ಭೂಮಿಗೆ ಅತ್ಯಂತ ಸನಿಹದಲ್ಲಿ ಆಗಮಿಸಿತ್ತು.

2001: ಆಸ್ಟ್ರೇಲಿಯಾದ ವಿರುದ್ಧ ಮುಗಿದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಹರ ಭಜನ್ ಸಿಂಗ್ ಅವರು 3 ಕ್ರಿಕೆಟ್ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಟ್ಟು 32 ವಿಕೆಟ್ ಗಳಿಸಿದ ದಾಖಲೆ ನಿರ್ಮಿಸಿದರು. ಈ ಹಿಂದೆ 23 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಹೆಸರಿನಲ್ಲಿ ಈ ದಾಖಲೆಯಿತ್ತು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಐದನೆಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಸಮರೇಶ್ ಜಂಗ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಗೆ ಪಾತ್ರರಾದರು. 10 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸಮರೇಶ್ ಜಂಗ್ ದಾಖಲೆಯ 685.4 ಅಂಕ ಗಳಿಸಿ, ಎಂಟು ವರ್ಷಗಳ ಹಿಂದೆ ಇಂಗ್ಲೆಂಡಿನ ಮೈಕೆಲ್ ಗಾಲ್ಫ್ ಸೃಷ್ಟಿಸಿದ್ದ 679.9 ಅಂಕಗಳ ದಾಖಲೆಯನ್ನು ಅಳಿಸಿ ಹಾಕಿದರು.

2006: ಕೇರಳದಲ್ಲಿ ಜಲ ಸಂರಕ್ಷಣೆ ಪ್ರಾಮುಖ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನಗಳಿಗಾಗಿ `ಮಲಯಾಳಂ ಮನೋರಮಾ’ ಪತ್ರಿಕೆಗೆ ‘ಯುನೆಸ್ಕೊ’ ಪ್ರಶಸ್ತಿ ಲಭಿಸಿತು.

2007: ಭಾರತೀಯ ಸಂಜಾತ ಅಮೆರಿಕನ್ ಗಣಿತಜ್ಞ ಶ್ರೀನಿವಾಸ ಎಸ್. ಆರ್. ವರದನ್ ಅವರು, ಗಣಿತ ಕ್ಷೇತ್ರಕ್ಕೆ ನೀಡಲಾಗುವ 8.50 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ನಾರ್ವೆ ದೇಶದ ಪ್ರತಿಷ್ಠಿತ ‘ಅಬೆಲ್ ಪ್ರಶಸ್ತಿ’ಗೆ ಪಾತ್ರರಾದರು.

2007: ಪಾಕಿಸ್ಥಾನವು ಸುಮಾರು 700 ಕಿ.ಮೀ. ದೂರ ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ `ಬಾಬರ್’ (ಹಾಟ್ಫ್-7) ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು.

ಪ್ರಮುಖಜನನ/ಮರಣ:

1720: ಫ್ರೆಂಚ್ ಕಟ್ಟಡ ವಿನ್ಯಾಸಕಾರ ನಿಕೊಲಸ್-ಹೆನ್ರಿ ಜಾರ್ಡಿನ್ ಸೈಂಟ್ ಜರ್ಮನ್ ಡೆಸ್ ನೋಯರ್ಸ್ ಎಂಬಲ್ಲಿ ಜನಿಸಿದರು. ಅವರು ಯೆಲ್ಲೋ ಪ್ಯಾಲೇಸ್ ಮತ್ತು ಬರ್ನ್ಸ್ಟೋರ್ಫ್ ಪ್ಯಾಲೇಸ್ ವಿನ್ಯಾಸಗಳಿಗೆ ಪ್ರಸಿದ್ಧರಾಗಿದ್ದಾರೆ.

1814: ಅಮೆರಿಕದ ‘ಸ್ಟಾಚು ಆಫ್ ಫ್ರೀಡಮ್’ ಶಿಲ್ಪಿ ಥಾಮಸ್ ಕ್ರಾಫರ್ಡ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.

1868: ಅಮೆರಿಕದ ಭೌತವಿಜ್ಞಾನಿ ರಾಬರ್ಟ್ ಆ್ಯಂಡ್ರೂಸ್ ಮಿಲ್ಲಿಕಾನ್ ಇಲಿನಾಯ್ಸ್ ನಗರದಲ್ಲಿ ಜನಿಸಿದರು. ‘ಫೋಟೋ ಎಲೆಕ್ಟ್ರಿಕ್ ಎಫೆಕ್ಟ್ ಮತ್ತು ಎಲೆಮೆಂಟರಿ ಎಲೆಕ್ಟ್ರಾನಿಕ್ ಚಾರ್ಜ್’ ಕುರಿತಾದ ಸಂಶೋಧನೆಗಳಿಗಾಗಿ ಇವರಿಗೆ 1923 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1893: ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ಪ್ರಸಿದ್ಧರಾದ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ ಅವರು ಚಿಟ್ಟಗಾಂಗ್ನಲ್ಲಿ ಜನಿಸಿದರು. ಮೂಲತಃ ಶಿಕ್ಷಕರಾಗಿದ್ದ ಅವರನ್ನು ಜನ ಪ್ರೀತಿಯಿಂದ ಮಾಸ್ಟರ್ ದಾ ಎಂದು ಸಂಬೋಧಿಸುತ್ತಿದ್ದರು. ಬ್ರಿಟಿಷ್ ಸರ್ಕಾರ ಇವರನ್ನು 1934 ಜನವರಿ 12ರಂದು ನೇಣುಗಂಬಕ್ಕೇರಿಸಿತು.

1922: ಯೂನಿವಾಕ್ಸ್ ವಾದಕರಾಗಿ ಸಂಗೀತಲೋಕದಲ್ಲಿ, ಹಾಗೂ ಕಲಾವಿದರಾಗಿ ರಂಗಭೂಮಿಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಪ್ರಸಿದ್ಧರಾದ ಬಿ. ಹನುಮಂತಾಚಾರ್ ಅವರು ಬಳ್ಳಾರಿಯಲ್ಲಿ ಜನಿಸಿದರು. ಅನೇಕ ಭಕ್ತಿ ಗೀತೆಗಳ ಸಂಗೀತ ನಿರ್ದೇಶಕರಾಗಿ ಸಹಾ ಪ್ರಖ್ಯಾತರಾದ ಇವರ ಸಂಗೀತ ನಿರ್ದೇಶನದಲ್ಲಿ ಡಾ. ರಾಜ್ ಕುಮಾರ್ ಅವರನ್ನೂ ಒಳಗೊಂಡಂತೆ ಅನೇಕ ಪ್ರಸಿದ್ಧ ಕಲಾವಿದರು ಹಾಡಿದ್ದಾರೆ.

1931: ಅಮೆರಿಕದ ಭೌತವಿಜ್ಞಾನಿ ಬರ್ಟನ್ ರಿಚ್ಟರ್ ಅವರು ಬ್ರೂಕ್ಲಿನ್ ನಗರದಲ್ಲಿ ಜನಿಸಿದರು. ‘J/ψ meson’ ಕುರಿತಾದ ಸಂಶೋಧನೆಗಾಗಿ ಅವರಿಗೆ 1976 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1948: ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅನೇಕ ಗ್ರಂಥಗಳು, ಧ್ವನಿ ಸುರುಳಿಗಳು ಮತ್ತು ಉಪನ್ಯಾಸಗಳಿಂದ ಪ್ರಸಿದ್ಧರಾಗಿರುವ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಗೌರವಗಳು ಸಂದಿವೆ.

1977: ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಮ್ಮ್ಯೂನಿಸ್ಟ್ ರಾಜಕಾರಣಿ ಎ.ಕೆ. ಗೋಪಾಲನ್ ತಿರುವನಂತಪುರದಲ್ಲಿ ನಿಧನರಾದರು. ಸತ್ಯಾಗ್ರಹಿಯಾಗಿ ಜೈಲುವಾಸ ಅನುಭವಿಸಿದ್ದ ಇವರು ಕಮ್ಮ್ಯೂನಿಸ್ಟ್ ಸಿದ್ಧಾಂತಕ್ಕೆ ಒಲಿದು ಕಮ್ಯೂನಿಸ್ಟ್ ಪಕ್ಷದ ಮುಖೇನ ರಾಜಕಾರಣದಲ್ಲಿದ್ದರು. ಕಾಫಿ ಬೋರ್ಡ್ ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

2001: ಅನಿಮೇಷನ್ ಪಾತ್ರಗಳಾದ ‘ಯೋಗಿ ಬೀಯರ್’ ‘ಸ್ಕೂಬಿ ಡೂ’, ‘ಫ್ಲಿನ್ ಸ್ಟೋನ್ಸ್’ ಇತ್ಯಾದಿಗಳನ್ನು ಸೃಷ್ಟಿಸಿದ ವಿಲಿಯಂ ಹೆನ್ನಾ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಜೋಸೆಫ್ ಬಾರ್ಬೇರಾ ಅವರ ಜೊತೆ ಸೇರಿ ಈ ಅನಿಮೇಷನ್ ಪಾತ್ರಗಳನ್ನು ಅವರು ಸೃಷ್ಟಿಸಿದ್ದರು.

2007: ಯು. ಜಿ. ಕೃಷ್ಣಮೂರ್ತಿ ಎಂದು ಪರಿಚಿತರಾಗಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ ಅವರು ಇಟಲಿಯ ವಲ್ಲೆ ಕ್ರೋಸಿಯಾ ಎಂಬಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಜ್ಞಾನೋದಯ ಪಡೆದವರೆಂದು ಪ್ರಸಿದ್ಧಿ ಪಡೆದವರಾಗಿದ್ದರೂ, “ಅದು ಜ್ಞಾನೋದಯವಲ್ಲ, ನನ್ನ ಸಹಜ ಸ್ಥಿತಿ” ಎನ್ನುತ್ತಿದ್ದ ಇವರು ಜ್ಞಾನೋದಯ ಮತ್ತು ಸತ್ಯದ ಅರಿವಿನ ದೃಷ್ಟಿಯಲ್ಲಿ ಚಿಂತನೆಗಳನ್ನು ಅಲ್ಲಗೆಳೆಯುತ್ತಿದ್ದರು.

2010: ಸ್ಕಾಟ್ಲ್ಯಾಂಡಿನ ಜೀವವಿಜ್ಞಾನಿ ಮತ್ತು ವೈದ್ಯವಿಜ್ಞಾನಿ ಜೇಮ್ಸ್ ಬ್ಲ್ಯಾಕ್ ಲಂಡನ್ನಿನಲ್ಲಿ ನಿಧನರಾದರು. ಅನೇಕ ಔಷದಗಳನ್ನು ಕಂಡುಹಿಡಿದ ಮತ್ತು ಪ್ರೋಪ್ರನೋಲಾಲ್ ಮತ್ತು ಸಿಮೆಟಿಡ್ಲೈನ್ ಮುಂತಾದವುಗಳಿಗೆ ಅನುವು ಮಾಡಿಕೊಟ್ಟ ಸಂಶೋಧನೆಗಳಿಗಾಗಿ ಇವರಿಗೆ 1988 ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.

2014: ಕನ್ನಡದ ಪ್ರಸಿದ್ಧ ಕತೆ, ಕಾದಂಬರಿಕಾರ ಯಶವಂತ ಚಿತ್ತಾಲ ಅವರು ಮುಂಬೈನಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಇವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ, ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪಶಸ್ತಿಗಳೂ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.

Categories
e-ದಿನ

ಮಾರ್ಚ್-21

ಪ್ರಮುಖಘಟನಾವಳಿಗಳು:

1788: ನ್ಯೂ ಆರ್ಲಿಯಾನ್ಸ್ ಪಟ್ಟಣವು ಬೆಂಕಿಗೆ ಸಿಲುಕಿ ಬಹುತೇಕ ಪಟ್ಟಣವು ಅವಶೇಷವಾಗುಳಿಯಿತು

1791: ಲಾರ್ಡ್ ಕಾರ್ನವಾಲಿಸ್ ಬೆಂಗಳೂರನ್ನು ವಶಪಡಿಸಿಕೊಂಡ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ ಈ ಘಟನೆ ಸಂಭವಿಸಿತು.

1844: ಬಹಾಯ್ ಕ್ಯಾಲೆಂಡರ್ ಪ್ರಾರಂಭಗೊಂಡು, ಈ ದಿನವು ಆ ಕ್ಯಾಲೆಂಡರಿನ ಪ್ರಥಮ ದಿನವೆನಿಸಿತು

1861: ಅಲೆಗ್ಸಾಂಡರ್ ಸ್ತೀಫನ್ಸ್ ಅವರು ಜಾರ್ಜಿಯಾದ ಸವನ್ನಾದಲ್ಲಿ ‘ಕಾರ್ನರ್ಸ್ಟೋನ್ ಸ್ಪೀಚ್’ ಎಂದು ಪ್ರಸಿದ್ಧವಾಗಿರುವ ಭಾಷಣವನ್ನು ಮಾಡಿದರು.

1946: ಆಫ್ರಿಕನ್–ಅಮೇರಿಕನ್ ಆಟಗಾರ ಕೆನ್ನಿ ವಾಷಿಂಗ್ಟನ್ ಅವರನ್ನು ಲಾಸ್ ಎಂಜೆಲಿಸ್ ರಾಮ್ಸ್ ತಂಡವು ತನ್ನ ಪರವಾಗಿ ಆಡಲು ಕರಾರು ಮಾಡಿಕೊಂಡಿತು. ಇವರು ಅಮೆರಿಕದ ಫುಟ್ಬಾಲ್ ಕ್ರೀಡೆಯ ಇತಿಹಾಸದಲ್ಲಿ 1933ರಿಂದೀಚೆಗೆ ಆಡಿದ ಪ್ರಥಮ ಆಫ್ರಿಕನ್-ಅಮೇರಿಕನ್ ಕ್ರೀಡಾಳುವಾಗಿದ್ದಾರೆ.

1965: ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ತಮ್ಮ ಮೂರನೆಯ ಮತ್ತು ಕೊನೆಯ ಯಶಸ್ವೀ ನಾಗರಿಕ ಹಕ್ಕುಗಳ ಹೋರಾಟದ ಮೆರವಣಿಯನ್ನು ಸೆಲ್ಮಾದಿಂದ ಅಲಬಾಮಾದ ಮಾಂಟಗೋಮೇರಿ ವರೆಗೆ ನಡೆಸಿದರು. ಇದರಲ್ಲಿ 3,200 ಜನರು ಭಾಗವಹಿಸಿದ್ದರು.

1980: ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಸೋವಿಯತ್ ಯೂನಿಯನ್ನಿನ ಆಫ್ಘನ್ ಯುದ್ಧಕ್ಕೆ ಪ್ರತಿಭಟನೆಯಾಗಿ 1980ರ ಮಾಸ್ಕೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಮ್ಮ ದೇಶದ ಬಹಿಷ್ಕಾರವನ್ನು ಪ್ರಕಟಿಸಿದರು.

1986: ಡೆಬಿ ಥಾಮಸ್ ಅವರು ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್ಷಿಪ್ ಗೆದ್ದ ಪ್ರಥಮ ಆಫ್ರಿಕನ್ ಅಮೆರಿಕನ್ ಎನಿಸಿದರು

2006: ಅಂತರಜಾಲ ಸಾಮಾಜಿಕ ಮಾಧ್ಯಮವಾದ ‘ಟ್ವಿಟ್ಟರ್’ ಸ್ಥಾಪನೆಗೊಂಡಿತು

2007: ವೃದ್ಧರು ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪಾಲಕರ ರಕ್ಷಣೆಗಾಗಿ ಲೋಕಸಭೆಯಲ್ಲಿ ‘ಹಿರಿಯ ನಾಗರಿಕರ ಮಸೂದೆ-2007’ನ್ನು ಸರ್ಕಾರ ಮಂಡಿಸಿತು. ಇದರ ಪ್ರಕಾರ 60 ವರ್ಷಕ್ಕೂ ಮೇಲ್ಪಟ್ಟ ತಂದೆ-ತಾಯಿಗಳನ್ನು ಕಡೆಗಣಿಸುವವರಿಗೆ 5000 ರೂಪಾಯಿ ದಂಡ ಅಥವಾ ಮೂರು ತಿಂಗಳು ಸೆರೆಮನೆವಾಸ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

2008: ಖ್ಯಾತ ಕಲಾವಿದ ಎಂ. ಎಫ್. ಹುಸೇನ್ ಅವರು ರಚಿಸಿದ ಸಮಕಾಲೀನ ಭಾರತದ ಕಲಾಕೃತಿಯು ನ್ಯೂಯಾರ್ಕಿನಲ್ಲಿ 1.6 ದಶಲಕ್ಷ ಅಮೆರಿಕ ಡಾಲರಿಗೆ ಹರಾಜಾಗುವುದರೊಂದಿಗೆ ದಾಖಲೆ ಬೆಲೆ ಕಂಡಿತು. ಹುಸೇನ್ ಅವರ ವಿವಾದಾತ್ಮಕ ಕೃತಿಗಳ ಬಗ್ಗೆ ಹರಾಜು ನಡೆದ ಕಟ್ಟಡದ ಹೊರ ಭಾಗದಲ್ಲಿ ಭಾರಿ ಪ್ರತಿಭಟನೆಯೂ ನಡೆಯಿತಾದರೂ ಅನಾಮಧೇಯ ವ್ಯಕ್ತಿಯೊಬ್ಬರು ‘ಬ್ಯಾಟಲ್ ಆಫ್ ಗಂಗಾ ಆಂಡ್ ಜಮುನಾ; ಮಹಾಭಾರತ 12′ ಕೃತಿಯನ್ನು 1.6 ದಶಲಕ್ಷ ಡಾಲರಿಗೆ ಖರೀದಿಸಿದರು.

2009: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಮುಖ್ಯಸ್ಥರಾಗಿ ಮೋಹನ್ ಭಾಗವತ್ ಆಯ್ಕೆಯಾದರು. ಈವರೆಗೆ ಮುಖ್ಯಸ್ಥರಾಗಿದ್ದ ಕೆ.ಎಸ್.ಸುದರ್ಶನ್ ಅವರು ನಾಗಪುರದಲ್ಲಿ ನಡೆದ ಆರ್‌ಎಸ್‌ಎಸ್ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತಿ ಘೋಷಿಸಿದ ನಂತರ ಈ ಆಯ್ಕೆ ನಡೆಯಿತು.

ಪ್ರಮುಖಜನನ/ಮರಣ:

1887: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಭಾರತೀಯ ಕಮ್ಮ್ಯೂನಿಸ್ಟ್ ಪಕ್ಷದ ಸ್ಥಾಪಕ ಎಂ.ಎನ್. ರಾಯ್ ಬಂಗಾಳದ ಚಂಗ್ರಿಪೋಟ ಎಂಬಲ್ಲಿ ಜನಿಸಿದರು.

1916: ಮಹಾನ್ ಶಹನಾಯ್ ವಾದಕ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರು ಬಿಹಾರದ ದುಮ್ರೋನ್ ಎಂಬಲ್ಲಿ ಜನಿಸಿದರು. ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತರತ್ನ’ವನ್ನೂ ಒಳಗೊಂಡಂತೆ ಅನೇಕ ಗೌರವಗಳು ಸಂದಿವೆ.

1924: ಖ್ಯಾತ ಸಂಗೀತ ವಿದ್ವಾಂಸ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿ ಅವರು ದಾವಣಗೆರೆಯಲ್ಲಿ ಜನಿಸಿದರು. ‘ಗಾಯನ ಗಂಗಾ’ ಸಂಗೀತ ಮಾಸಪತ್ರಿಕೆ ನಡೆಸಿ, ‘ಉರುಗಾಚಲ’ ಅಂಕಿತದಲ್ಲಿ ಕೃತಿಗಳ ರಚನೆ ಮಾಡಿದ್ದಲ್ಲದೆ, 500ಕ್ಕೂ ಹೆಚ್ಚು ಭಕ್ತಿಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ಸಂಗೀತ ಕಚೇರಿಗಳನ್ನು ನಡೆಸಿದ ಇವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

1923: ಧಾರ್ಮಿಕ ನಾಯಕಿ, ‘ಸಹಜ ಯೋಗ’ ಪದ್ಧತಿಯ ಪ್ರವರ್ತಕಿ ನಿರ್ಮಲ ಶ್ರೀವಾಸ್ತವ ಅವರು ಮಧ್ಯಪ್ರದೇಶದ ಚಿಂದ್ವಾರ ಎಂಬಲ್ಲಿ ಜನಿಸಿದರು.

1932: ಅಮೆರಿಕದ ರಸಾಯನ ಶಾಸ್ತ್ರ ವಿಜ್ಞಾನಿ ವಾಲ್ಟರ್ ಗಿಲ್ಬರ್ಟ್ ಬೋಸ್ಟನ್ ನಗರದಲ್ಲಿ ಜನಿಸಿದರು. ನ್ಯೂಕ್ಲಿಯೋಟೈಡ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತು.

1942: ಭಾರತದ ಪ್ರಸಿದ್ಧ ಲೋಹ ಶಾಸ್ತ್ರಜ್ಞ ಪಚ್ಚ ರಾಮಚಂದ್ರ ರಾವ್ ಅವರು ಆಂಧ್ರಪ್ರದೇಶದ ಕವುಟಾವರಂ ಎಂಬಲ್ಲಿ ಜನಿಸಿದರು. ಇವರಿಗೆ ಶಾಂತಿ ಸ್ವರೂಪ್ ಭಟ್ನಾಗರ್ ಗೌರವವೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.

1966: ಪ್ರಸಿದ್ಧ ನೃತ್ಯ ಕಲಾವಿದೆ ಮತ್ತು ಚಲನಚಿತ್ರ ನಟಿ ಶೋಭನಾ ತಿರುವನಂತಪುರದಲ್ಲಿ ಜನಿಸಿದರು. ಪದ್ಮಶ್ರೀ ಗೌರವ, ಎರಡು ಚಿತ್ರಗಳ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

1980: ಪ್ರಸಿದ್ಧ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ರೋನಾಲ್ಡಿನ್ಹೋ ಪೋರ್ಟೊ ಅಲೆಗ್ರೆ ಎಂಬಲ್ಲಿ ಜನಿಸಿದರು. ‘FIFA ವರ್ಲ್ಡ್ ಪ್ಲೇಯರ್ ಆಫ್ ದಿ ಯಿಯರ್’ ಪ್ರಶಸ್ತಿಯನ್ನು ಇವರು 2004 ಮತ್ತು 2005 ವರ್ಷಗಳಲ್ಲಿ ತಮ್ಮದಾಗಿಸಿಕೊಂಡಿದ್ದರು.

1985: ಇಂಗ್ಲಿಷ್ ರಂಗಭೂಮಿ ಹಾಗೂ ಸಿನಿಮಾ ನಟ ಮೈಕೆಲ್ ರೆಡ್ ಗ್ರೇವ್ ತಮ್ಮ 77ನೇ ಹುಟ್ಟುಹಬ್ಬದ ಒಂದು ದಿನದ ಬಳಿಕ ಈದಿನ ಮೃತರಾದರು.

2003: ಪ್ರಸಿದ್ಧ ಹಿಂದೀ ಕಾದಂಬರಿಗಾರ್ತಿ ಶಿವಾನಿ ನವದೆಹಲಿಯಲ್ಲಿ ನಿಧನರಾದರು. ಇವರಿಗೆ ವರ್ಷದಲ್ಲಿ ಪದ್ಮಶ್ರೀ ಗೌರವ ಸಂದಿತ್ತು.

Categories
e-ದಿನ

ಮಾರ್ಚ್-20

ವಿಶ್ವ ಗುಬ್ಬಚ್ಚಿಗಳ ದಿನ:
ಮನೆಯಂಗಣದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿಯ ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆಗೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ.

ಪ್ರಮುಖಘಟನಾವಳಿಗಳು:

235: ಮ್ಯಾಕಿಮಿನಸ್ ತ್ರಾಕ್ಸ್ ರೋಮನ್ ಸಿಂಹಾಸನವನ್ನೆರಿದ ಪ್ರಥಮ ವಿದೇಶಿಯನೆನಿಸಿದ. ಈತ ಮೊಷಿಯಾ ಮೂಲದವನೆಂದು ಹೇಳಲಾಗಿದೆ.

1602: ಡಚ್ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಗೊಂಡಿತು. ಇದು ಪ್ರಪಂಚದ ಮೊಟ್ಟ ಮೊದಲ ವಹಿವಾಟಿನ ಕಾರ್ಪೊರೇಷನ್ ಎನಿಸಿದೆಯಲ್ಲದೆ, ಸಾರ್ವಜನಿಕರಿಂದ ಷೇರು ಬಂಡವಾಳ ಮತ್ತು ಬಾಂಡ್ ರೂಪದಲ್ಲಿ ಸಂಪನ್ಮೂಲ ರೂಪಿಸಿಕೊಂಡ ಪ್ರಥಮ ಸಂಸ್ಥೆಯೆಂದೂ ಹೇಳಲಾಗಿದೆ.

1616: ಸರ್ ವಾಲ್ಟರ್ ರಾಲೀಹ್ ಅವರು 13 ವರ್ಷಗಳ ಟವರ್ ಆಫ್ ಲಂಡನ್ ಸೆರೆಯಿಂದ ಬಿಡುಗಡೆ ಪಡೆದರು

1760: ಬೋಸ್ಟನ್ ನಗರದಲ್ಲಿನ ಬೆಂಕಿಯಲ್ಲಿ 349 ಕಟ್ಟಡಗಳು ಭಸ್ಮಗೊಂಡವು

1815: ಎಲ್ಬಾದಿಂದ ತಪ್ಪಿಸಿಕೊಂಡು ಬಂದ ಮೇಲೆ ನೆಪೋಲಿಯನ್ನರು ತಮ್ಮ ಎಂದಿನ 1,40,000 ಸೈನ್ಯ ಮತ್ತು ಸ್ವಯಂ ಇಚ್ಛೆಯ 2 ಲಕ್ಷ ಜನರ ಬೆಂಬಲದಿಂದ ತಮ್ಮ ನೂರು ದಿನಗಳ ರಾಜ್ಯಭಾರವನ್ನು ಪ್ರಾರಂಭಿಸಿದರು.

1852: ಹ್ಯಾರ್ರಿಯೇಟ್ ಬೀಚರ್ ಸ್ಟೋವ್ ಅವರ ‘ಅಂಕಲ್ ಟಾಮ್ಸ್’ ಕ್ಯಾಬಿನ್ ಪ್ರಕಟಗೊಂಡಿತು.

1861: ಭೂಕಂಪದಲ್ಲಿ ಅರ್ಜೆಂಟಿನಾದ ಮೆಂಡೋಜಾ ಪೂರ್ಣ ನಾಶಗೊಂಡಿತು.

1915: ಆಲ್ಬರ್ಟ್ ಐನ್ ಸ್ಟೀನ್ ಅವರು ತಮ್ಮ ‘ಜನರಲ್ ಥಿಯರಿ ಆಫ್ ರಿಲೆಟಿವಿಟಿ’ ಪ್ರಕಟಿಸಿದರು

1923: ಚಿಕಾಗೋದಲ್ಲಿನ ಆರ್ಟ್ಸ್ ಕ್ಲಬ್ ಸಂಸ್ಥೆಯು, ಪಾಬ್ಲೋ ಪಿಕಾಸ್ಸೋ ಅವರ ಮೊದಲ ಚಿತ್ರ ಪ್ರದರ್ಶನವನ್ನು ತನ್ನ ಆಶ್ರಯದಲ್ಲಿ ನಡೆಸಿತು. ಇದು ಆಧುನಿಕ ಕಲಾ ಪ್ರದರ್ಶನಕ್ಕೆ ಅಮೆರಿಕದಲ್ಲಿ ಸಿಕ್ಕ ಪ್ರಮುಖ ಪ್ರಾರಂಭವೆನಿಸಿದೆ.

1933: ಫ್ರಾಂಕ್ಲಿನ್ ರೂಸ್ವೆಲ್ಟ್ ಅವರನ್ನು ಹತ್ಯೆ ಮಾಡಿದ ಜಿಯುಸೆಪ್ಪೆ ಜಂಗಾರಾನನ್ನು ಫ್ಲೋರಿಡಾದಲ್ಲಿ ವಿದ್ಯುತ್ ಕುರ್ಚಿಯಲ್ಲಿ ಕೂರಿಸಿ ಮರಣ ದಂಡನೆ ನಡೆಸಲಾಯಿತು.

1962: ಭಾರತದ ಕ್ರಿಕೆಟ್ ನಾಯಕರಾದ ನಾರಿ ಕಾಂಟ್ರಾಕ್ಟರ್ ಅವರು ಬಾರ್ಬಡೋಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್ ಚಾರ್ಲಿ ಗ್ರಿಫಿತ್ ಚೆಂಡಿನ (ಬಾಲ್) ಏಟಿನಿಂದ ತೀವ್ರವಾಗಿ ಗಾಯಗೊಂಡರು. ಭಾರತದ ಪರ ಎಡಗೈ ಪ್ರಾರಂಭಿಕ ಬ್ಯಾಟುದಾರರಾಗಿದ್ದ ಇವರು ತುರ್ತು ಶಸ್ತ್ರಚಿಕಿತ್ಸೆ ನಡೆದು ಬದುಕುಳಿದರಾದರೂ ಇವರ ಟೆಸ್ಟ್ ಕ್ರಿಕೆಟ್ ಜೀವನ ಇಲ್ಲಿಗೇ ಮುಕ್ತಾಯಗೊಂಡಿತು.

1971: ಡಿ. ದೇವರಾಜ ಅರಸ್ ಅವರು ಕರ್ನಾಟಕದ ಎಂಟನೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.

1987: ಏಡ್ಸ್ ರೋಗಕ್ಕೆ ಪರಿಹಾರವಾದ ‘AZT’ ಔಷದಕ್ಕೆ ಆಹಾರ ಮತ್ತು ಔಷದಗಳ ಆಡಳಿತ ಸಮಿತಿಯು ಅನುಮತಿ ನೀಡಿತು.

2003: ಅಮೆರಿಕ, ಯುನೈಟೆಡ್ ಕಿಂಗ್ಡಂ, ಆಸ್ಟ್ರೇಲಿಯಾ ಮತ್ತು ಪೋಲೆಂಡ್ ದೇಶಗಳ ಒಕ್ಕೂಟವು ಈ ದಿನ ಬೆಳಕು ಹರಿಯುವ ಮುಂಚೆಯಿಂದ ಇರಾಕ್ ಮೇಲೆ ತಮ್ಮ ದಾಳಿಯನ್ನು ಆರಂಭಿಸಿದವು.

2006: ಖ್ಯಾತ ಚಿತ್ರ ನಿರ್ಮಾಪಕ ಅಡೂರು ಗೋಪಾಲಕೃಷ್ಣನ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಇನ್ಫೋಸಿಸ್ ಸಿಇಒ ನಂದನ್ ನೀಲೇಕಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರಿಗೆ 2006ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

2006: ಕ್ಷೀರಕ್ರಾಂತಿಯ ನೇತೃತ್ವ ವಹಿಸಿ ಭಾರತೀಯ ಕ್ಷೀರ ಉದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿದ್ದ ವರ್ಗೀಸ್ ಕುರಿಯನ್ ಅವರು ತಾವು ಬೆಳೆಸಿದ ಗುಜರಾತ್ ಹಾಲು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 34 ವರ್ಷಗಳಿಂದ ಅಧ್ಯಕ್ಷರಾಗಿದ್ದ 85ರ ಹಿರಿಯರಾದ ಇವರು ತಮ್ಮ ವಿರುದ್ಧ ಮೂಡಿದ ಅವಿಶ್ವಾಸ ನಿರ್ಣಯ ಮಂಡನೆಯಿಂದ ಮನನೊಂದು ಈ ಕ್ರಮ ಕೈಗೊಂಡರು.

2006: ಮೆಲ್ಬೋರ್ನಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸಿನಲ್ಲಿ ಭಾರತದ ಪುರುಷರ ತಂಡಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನ ಮತ್ತು ಮಹಿಳೆಯರಿಗೆ ಕಂಚು ಪದಕಗಳು ಪ್ರಾಪ್ತಿಯಾದವು.

2007: ಭಾರತೀಯ ವಾಯುಪಡೆಯ ಮಿಗ್-23 ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು. ಕಳೆದ 25 ವರ್ಷಗಳಿಂದ ಸಮರ ಸನ್ನದ್ಧವಾಗಿದ್ದ ಮಿಗ್-23 ವಿಮಾನಗಳು ಜಾಮ್ ನಗರದಲ್ಲಿ ಸಾಂಪ್ರದಾಯಿಕ ಹಾರಾಟ ನಡೆಸಿದ ನಂತರ ತೆರೆಮರೆಗೆ ಸರಿದವು.

2009: ವೈಸ್ ಚೀಫ್ ಪ್ರದೀಪ್ ವಸಂತ್ ನಾಯ್ಕಾ ಅವರನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಏರ್ ಚೀಫ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಅವರು ಮೇ 31ರಂದು ನಿವೃತ್ತಿ ಹೊಂದಿದಾಗ ನಾಯ್ಕಾ ಅಧಿಕಾರ ವಹಿಸಿಕೊಂಡರು.

2009: ದೆಹಲಿ ಮೆಟ್ರೊ, ಸೌರ ಶಕ್ತಿ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಆಗಿದ್ದು, ಇದರಿಂದ ವಾತಾವರಣಕ್ಕೆ ಪ್ರತಿ ವರ್ಷ ಬಿಡುತ್ತಿದ್ದ 2.35 ಲಕ್ಷ ಟನ್ ಹಸಿರು ಮನೆ ತ್ಯಾಜ್ಯ ತಡೆಯುವಂತಾಯಿತು. ಕನ್ನಾಟ್ ಪ್ಲೇಸ್‌ನಲ್ಲಿಯ ಮೆಟ್ರೊ ಪ್ರಧಾನ ಕಚೇರಿಯಲ್ಲಿ ಐದು ಕಿ.ವಾ.ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗಿದ್ದು, ವಿಶ್ವದಲ್ಲಿಯೇ ಹಸಿರು ಮನೆ ತ್ಯಾಜ್ಯ ನಿಲ್ಲಿಸಿದ ಪ್ರಥಮ ಮೆಟ್ರೊ ಯೋಜನೆ ಎಂಬ ನೋಂದಣಿ ಪತ್ರವನ್ನು ಅಮೆರಿಕದಿಂದ ಪಡೆದಿದೆ. ಸೌರಶಕ್ತಿ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್, ಮೆಟ್ರೊ ಭವನದ ವಿದ್ಯುತ್ ಅಗತ್ಯವನ್ನೂ ಪೂರೈಸುತ್ತಿದೆ.

2015: ಸೂರ್ಯಗ್ರಹಣ, ಈಕ್ವಿನಾಕ್ಸ್ ಮತ್ತು ಸೂಪರ್ ಮೂನ್ ಮೂರು ಒಂದೇ ದಿನ ಸಂಭವಿಸಿದವು.

ಪ್ರಮುಖಜನನ/ಮರಣ:

ಕ್ರಿಸ್ತ ಪೂರ್ವ 43: ರೋಮನ್ ಕವಿ ಓವಿಡ್ ಅವರು ಇಟಲಿಯ ಸುಲ್ಮೋ ಎಂಬಲ್ಲಿ ಜನಿಸಿದರು.

1854: ವಿದ್ವಾಂಸ, ಕವಿ, ನಾಟಕಕಾರ ಸೋಸಲೆ ಅಯ್ಯಾ ಶಾಸ್ತ್ರಿಗಳು ತಿರುಮಕೂಡಲು ಬಳಿಯ ಸೋಸಲೆ ಎಂಬ ಹಳ್ಳಿಯಲ್ಲಿ ಜನಿಸಿದರು. ಮೈಸೂರು ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿ ಮಹಾವಿದ್ವಾನ್ (1905), ಕವಿತಿಲಕ (1912) ಮೊದಲಾದ ಪ್ರಶಸ್ತಿ ಗಳಿಸಿದ್ದ ಇವರ ‘ಸ್ವಾಮಿ ದೇವನೆ ಲೋಕ ಪಾಲನೆ ಗೀತೆ’ ಶಾಲೆಗಳ ಪ್ರಾರ್ಥನೆಯಿಂದ ಚಲನಚಿತ್ರಗಳವರೆಗೆ ವ್ಯಾಪಿಸಿದೆ.

1856: ವಿಶ್ವದ ಪ್ರಥಮ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಗಳಲ್ಲಿ ಪ್ರಮುಖರಾದ ಫ್ರೆಡ್ರಿಕ್ ವಿನ್ ಸ್ಲೋ ಟೇಲರ್ ಫಿಲಡೆಲ್ಫಿಯಾದಲ್ಲಿ ಜನಿಸಿದರು. ‘ದಿ ಪ್ರಿನ್ಸಿಪಲ್ಸ್ ಆಫ್ ಸೈಂಟಿಫಿಕ್ ಮ್ಯಾನೇಜ್ಮೆಂಟ್’ ಇವರ ಪ್ರಖ್ಯಾತ ಕೃತಿಯಾಗಿದೆ. ‘ಇಂಡಸ್ಟ್ರಿಯಲ್ ಇಂಜಿನಿಯರಿಂಗ್’ ಎಂಬ ಹೊಸ ಜ್ಞಾನ ಖಾತೆ ಸಹಾ ಇವರ ಮೂಲಕ ಬೆಳಕು ಕಂಡಿದೆ. ಇವರು ಉತ್ತಮ ಟೆನಿಸ್ ಆಟಗಾರರೂ ಆಗಿದ್ದರು.

1911: ನೊಬೆಲ್ ಶಾಂತಿ ಪುರಸ್ಕೃತ ಮೆಕ್ಸಿಕನ್ ನ್ಯಾಯಮೂರ್ತಿ ಮತ್ತು ರಾಜಕಾರಣಿ ಅಲ್ಫಾನ್ಸೋ ಗಾರ್ಸಿಯಾ ರೊಬ್ಲೆಸ್ ಮೆಕ್ಸಿಕೋದ ಜ್ಯಮೋರದಲ್ಲಿ ಜನಿಸಿದರು. ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ಪ್ರದೇಶಗಳಲ್ಲಿ ಪರಮಾಣು ಮುಕ್ತ ವಲಯವನ್ನು ‘ಟ್ರೀಟಿ ಆಫ್ ಟ್ಲಾಟಿಲೋಲ್ಕೋ’ ಮೂಲಕ ಸಾಧ್ಯವಾಗಿಸಿದ ಇವರಿಗೆ 1982 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1920: ಸಾಂಪ್ರದಾಯಕ ಶಿಲ್ಪಕಲೆಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಗೌರವ ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ ಜನಿಸಿದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾದಿರಾಜರಿಗೆ ಸಂದಿದ್ದವು.

1941: ನಾಗರಹೊಳೆ ಅಭಯಾರಣ್ಯವನ್ನು ವಿಶ್ವದ ಅತ್ಯುತ್ತಮ ಅಭಯಾರಣ್ಯಗಳಲ್ಲಿ ಒಂದಾಗಿ ಮಾಡಿ ಆ ಕಾಡಿನಲ್ಲಿ ಅಧಿಕಾರಿಯಾಗಿ ಎಲ್ಲ ಕಷ್ಟಗಳ ನಡುವೆ ಎರಡು ದಶಕಗಳ ಕಾಲ ಅಪೂರ್ವ ಸೇವೆ ಸಲ್ಲಿಸಿದ ಕೆ. ಎಂ. ಚಿಣ್ಣಪ್ಪನವರು ನಾಗರಹೊಳೆಯ ಬಳಿಯ ಗ್ರಾಮವೊಂದರಲ್ಲಿ ಜನಿಸಿದರು. ಪರಿಸರ ಪ್ರಿಯರಾದ ಇವರು ಪರಿಸರ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದು 2009ರಲ್ಲಿ ಸಿ.ಎನ್.ಎನ್. ಐಬಿಎನ್ ರಿಯಲ್ ಹೀರೋಸ್ ಪ್ರಶಸ್ತಿಯೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳನ್ನು ಸ್ವೀಕರಿಸಿದ್ದಾರೆ.

1951: ಭಾರತದ ಕ್ರಿಕೆಟ್ ಆಟಗಾರ, ತರಬೇತು ದಾರ, 1983ರ ವರ್ಷದಲ್ಲಿ ವಿಶ್ವ ಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದ ಮದನ್ ಲಾಲ್ ಅವರು ಅಮೃತಸಾರದಲ್ಲಿ ಜನಿಸಿದರು.

1952: ಭಾರತದ ಅಂತರರಾಷ್ಟ್ರೀಯ ಪ್ರಮುಖ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಆನಂದ್ ಅಮೃತರಾಜ್ ಅವರು ಚೆನ್ನೈನಲ್ಲಿ ಜನಿಸಿದರು. ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳಲ್ಲಿ ಆಡಿದ್ದರ ಜೊತೆಗೆ ಇವರು ಎರಡು ಬಾರಿ ಭಾರತವನ್ನು ಡೇವಿಸ್ ಕಪ್ ಫೈನಲ್ಗೆ ಕೊಂಡೊಯ್ದ ತಂಡದಲ್ಲಿ ಭಾಗಿಯಾಗಿದ್ದರು.

1966: ಪ್ರಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಅವರು ಕೋಲ್ಕತ್ತಾದಲ್ಲಿ ಜನಿಸಿದರು. ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 36 ಬಾರಿ ಫಿಲಂ ಫೇರ್ ಪ್ರಶಸ್ತಿಗಳಲ್ಲಿ ನಾಮಾಂಕಿತಗೊಂಡು 7 ಬಾರಿ ಪ್ರಶಸ್ತಿ ಗೆದ್ದ ಸಾಧನೆ ಇವರದ್ದಾಗಿದೆ.

1727:ಮಹಾನ್ ಭೌತವಿಜ್ಞಾನಿ, ಗಣಿತಜ್ಞ , ಖಗೋಳಶಾಸ್ತ್ರಜ್ಞ, ತತ್ವಜ್ಞಾನಿ ಐಸಾಕ್ ನ್ಯೂಟನ್ ಅವರು ಲಂಡನ್ನಿನ ಕೆನ್ಸಿಂಗ್ಟನ್ ಎಂಬಲ್ಲಿ ನಿಧನರಾದರು. ವಿಶ್ವದ ಇತಿಹಾಸದಲ್ಲಿ ಪ್ರಭಾವ ಬೀರಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರೆಂದು ನ್ಯೂಟನ್ ಪರಿಗಣಿತರಾಗಿದ್ದಾರೆ. 1687ರಲ್ಲಿ ಅವರು ಪ್ರಕಟಿಸಿದ ಗ್ರಂಥ ‘ಪ್ರಿನ್ಸಿಪಿಯಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೂರ್ಯಕೇಂದ್ರಿತ ಖಗೋಳ ವ್ಯವಸ್ಥೆಯ ಬಹಳಷ್ಟು ಅನುಮಾನಗಳನ್ನು ಪರಿಹರಿಸಿದ ಇವರು ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದರು.

1925: ಭಾರತದ ಗವರ್ನರ್ ಜನರಲ್ ಆಗಿದ್ದ ಜಾರ್ಜ್ ಕರ್ಜನ್ ಲಂಡನ್ನಿನಲ್ಲಿ ನಿಧನರಾದರು.

1993: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಪಾಲಿಕಾರ್ಪ್ ಕುಸ್ಚ್ ಟೆಕ್ಸಾಸಿನ ಡೆಲ್ಲಾಸ್ ಎಂಬಲ್ಲಿ ನಿಧನರಾದರು. ಮ್ಯಾಗ್ನೆಟಿಕ್ ಮೊಮೆಂಟ್ ಆಫ್ ದಿ ಎಲೆಕ್ಟ್ರಾನ್ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ಭೌತವಿಜ್ಞಾನದ ಪ್ರಶಸ್ತಿ ಸಂದಿತ್ತು.

2008: ತೆಲುಗಿನ ಜನಪ್ರಿಯ ನಟ ಶೋಭನ್ ಬಾಬು ಅವರು ತಮ್ಮ 71ನೆಯ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಅವರಿಗೆ ಐದು ಬಾರಿ ಆಂಧ್ರಪ್ರದೇಶ ಸರ್ಕಾರದ ನಂದೀಪುರಸ್ಕಾರ ಸಂದಿತ್ತು.

Categories
e-ದಿನ

ಮಾರ್ಚ್-19

ಪ್ರಮುಖಘಟನಾವಳಿಗಳು:

1649: ‘ಹೌಸ್ ಆಫ್ ಲಾರ್ಡ್ಸ್’ ಅನ್ನು ಅನುಪಯೋಗಿ ಮತ್ತು ಇಂಗ್ಲೆಂಡಿನ ಜನರಿಗೆ ಮಾರಕವಾದದ್ದು ಎಂದು ಘೋಷಿಸಿದ ‘ಹೌಸ್ ಆಫ್ ಕಾಮನ್ಸ್’ ಅದನ್ನು ರದ್ದುಗೊಳಿಸುವ ಕಾಯಿದೆಯನ್ನು ಜಾರಿಗೊಳಿಸಿತು.

1687: ಮಿಸಿಸಿಪಿ ನದಿಯ ಬಾಯಿಯನ್ನು ಹುಡುಕುತ್ತಿದ್ದ ಅನ್ವೇಷಕರಾದ ರಾಬರ್ಟ್ ಕಾವೆಲಿಯರ್ ಅವರನ್ನು ಆತನ ಜನರು ಕೊಂದುಹಾಕಿದರು.

1863: ಅಮೆರಿಕದ ಒಕ್ಕೂಟದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಯಾದ ‘ಎಸ್.ಎಸ್ ಜಾರ್ಜೀನಿಯಾ’ ಹಡಗು ಅಂದಿನ ಕಾಲದಲ್ಲಿನ ಒಂದು ಮಿಲಿಯನ್ ಡಾಲರಿಗೂ ಹೆಚ್ಚು ಮೌಲ್ಯದ ಯುದ್ಧ ಸಾಮಗ್ರಿಗಳು, ಔಷಧಗಳು ಮತ್ತು ಆಹಾರ ಪದಾರ್ಥಗಳೊಂದಿಗೆ ತನ್ನ ಮೊದಲ ಯಾನದಲ್ಲೇ ನಾಶಗೊಂಡಿತು.

1895: ಅಗಸ್ಟೆ ಮ್ಮತ್ತು ಲೂಯಿ ಲುಮಿಯೆರೆ ಅವರು ತಾವು ಪೇಟೆಂಟ್ ಪಡೆದ ಸಿನಿಮಾಟೋಗ್ರಾಫ್ ಮೂಲಕ ತಮ್ಮ ನಡೆಯನ್ನು ಚಿತ್ರೀಕರಿಸಿಕೊಂಡರು

1918: ಅಮೆರಿಕದ ಕಾಂಗ್ರೆಸ್ ಟೈಮ್ ಜೋನ್ಗಳನ್ನು ಅಳವಡಿಸಿ ‘ಡೇಲೈಟ್ ಸೇವಿಂಗ್ ಟೈಮ್’ ಅನ್ನು ಅಂಗೀಕರಿಸಿತು

1932:ಸಿಡ್ನಿ ಹಾರ್ಬರ್ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಯಿತು

1945: ಎರಡನೇ ವಿಶ್ವಮಹಾಯುದ್ಧದಲ್ಲಿ ಜಪಾನಿನ ಡೈವರ್ ಬಾಂಬಿನೇಟು ತಿಂದ ‘ಏರ್ ಕ್ರಾಫ್ಟ್ ಕ್ಯಾರಿಯರ್ ಫ್ರಾಂಕ್ಲಿನ್’ನಲ್ಲಿದ್ದ 724 ಜನ ಮೃತರಾದರು. ತೀವ್ರವಾಗಿ ಜಖಂಗೊಂಡಿದ್ದರೂ ಈ ಹಡಗು ತನ್ನದೇ ಆದ ಶಕ್ತಿಯಲ್ಲಿ ಅಮೆರಿಕಕ್ಕೆ ಹಿಂದಿರುಗಿತು

1945: ಹುಚ್ಚು ಆಜ್ಞೆಯ ‘ನೀರೋ ಡಿಕ್ರಿ’ಯನ್ನು ಹೊರಡಿಸಿದ ಅಡೋಲ್ಫ್ ಹಿಟ್ಲರ್ ಜರ್ಮನಿಯ ಎಲ್ಲ ಕೈಗಾರಿಕೆಗಳು, ಮಿಲಿಟರಿ ನೆಲೆಗಳು, ಅಂಗಡಿಗಳು, ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಗಳೆಲ್ಲವನ್ನೂ ನಾಶಗೊಳಿಸಲು ಆದೇಶಿಸಿದ

1954: ವಿಲ್ಲಿ ಮಾಸ್ಕೊನಿ ಎಂಬಾತ ಓಹಿಯೋದ ಸ್ಪ್ರಿಂಗ್ ಫೀಲ್ಡ್ ಎಂಬಲ್ಲಿನ ಈಸ್ಟ್ ಹೈ ಬಿಲಿಯರ್ಡ್ ಕ್ಲಬ್ಬಿನ ಪ್ರದರ್ಶನ ಪಂದ್ಯವೊಂದರಲ್ಲಿ ಒಂದಾದ ನಂತರ ಮತ್ತೊಂದು ಎಂಬಂತೆ ನಿರಂತರವಾಗಿ 526 ಚೆಂಡುಗಳನ್ನು ಉರುಳಿಸಿದ ಅನನ್ಯ ಸಾಧನೆಯ ವಿಶ್ವದಾಖಲೆ ಮೆರೆದರು.

1965: ಕಡಲಾಳದಲ್ಲಿನ ಸಂಚಾರ ಸಾಹಸಿ ಮತ್ತು ಪುರಾತತ್ವ ಸಂಶೋಧನೆಯಲ್ಲಿ ಪ್ರಸಿದ್ಧರಾದ ಈ ಲೀ ಸ್ಪೆನ್ಸ್ ಅವರು ಇದೇ ದಿನದಂದು 102 ವರ್ಷಗಳ ಹಿಂದೆ ಭಗ್ನಗೊಂಡಿದ್ದ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯವುಳ್ಳದೆಂದು ಅಂದಾಜಿಸಲಾಗಿರುವ ಅಮೆರಿಕನ್ ಒಕ್ಕೂಟದ ಶಕ್ತಿಶಾಲಿ ಕನ್ಫೆಡರೇಟ್ ಹಡಗಿನ ಅವಶೇಷಗಳನ್ನು ಪತ್ತೆಹಚ್ಚಿದರು.

1971: ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸರ್ಕಾರವು ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲ ಜಿ.ಎಸ್. ಪಾಠಕ್ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರು. ಮಾರ್ಚ್ 1972ರ ವರೆಗೆ ರಾಷ್ಟ್ರಪತಿಗಳ ಆಳ್ವಿಕೆ ಮುಂದುವರೆಯಿತು.

2001: ವೆಸ್ಟ್ ಇಂಡೀಸಿನ ವೇಗದ ಬೌಲರ್ ಕರ್ಟ್ನಿ ವಾಲ್ಷ್ ಅವರು 500 ವಿಕೆಟ್ ಗಳಿಸಿದ ವಿಶ್ವದ ಪ್ರಥಮ ಬೌಲರ್ ಎನಿಸಿದರು. ಟ್ರಿನಿಡಾಡಿನ ಪೋರ್ಟ್ ಆಫ್ ಸ್ಪೇನಿನಲ್ಲಿ ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್ ಅವರನ್ನು ಔಟ್ ಮಾಡಿ ಅವರು ಈ ಸಾಧನೆ ಮೆರೆದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಜಯ್ ಪೆಂಬಾ ತಮಾಂಗ್ ಅವರಿಗೆ ಶೂಟಿಂಗ್ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ಪೇರ್ಸ್ ಬಂಗಾರ, ರಾಜ್ಯವರ್ಧನ್ ಸಿಂಗ್ ರಾಥೋಡ್ – ವಿಕ್ರಮ್ ಭಟ್ನಾಗರ್ ಅವರಿಗೆ ಡಬಲ್ ಟ್ರ್ಯಾಪ್ ಫೇರ್ಸ್ ರಜತ, ಅಂಜಲಿ ಭಾಗ್ವತ್ – ಅನುಜಾ ಜಂಗ್ ಅವರಿಗೆ 50 ಮೀ. ರೈಫಲ್ ಮೂರು ಭಂಗಿ ಫೇರ್ಸಿನಲ್ಲಿ ಎರಡನೇ ಸ್ಥಾನ, ವೇಟ್ ಲಿಫ್ಟಿಂಗಿನಲ್ಲಿ ಮೊಹಮ್ಮದ್ ಜಾಕೀರ್ ಅಸುದುಲ್ಲಾ ಅವರಿಗೆ ಪುರುಷರ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದವು.

2007: ಸೇಂಟ್ ಲೂಸಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್ನಲ್ಲಿ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಗರಿಷ್ಠ ರನ್ (257) ಅಂತರದ ಜಯ ಗಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತು. ಇದರ ಜೊತೆಗೇ ವಿಶ್ವ ಕಪ್ ಕ್ರಿಕೆಟಿನಲ್ಲೇ ಅತಿ ಹೆಚ್ಚು ಮೊತ್ತ (413), ಕೊನೆಯ 10 ಓವರುಗಳಲ್ಲಿ 136 ರನ್ ಗಳಿಕೆಯ ದಾಖಲೆಗಳನ್ನೂ ಭಾರತ ನಿರ್ಮಿಸಿತು. ವಿಶ್ವದ ಮಹಾ ಕ್ರಿಕೆಟ್ ಸಮರಗಳಲ್ಲಿ 25 ಸಿಕ್ಸರ್ ಸಿಡಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟುವ ಮೂಲಕ ಸೌರವ ಗಂಗೂಲಿ ಇನ್ನೊಂದು ದಾಖಲೆ ಸೃಷ್ಟಿಸಿದರು. ಒಂದೇ ಪಂದ್ಯದಲ್ಲಿ 18 ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನೂ ಭಾರತ ಸರಿಗಟ್ಟಿತು.

2007: ಇರಾಕಿನಲ್ಲಿ ಸುಮಾರು 148 ಮಂದಿ ಶಿಯಾಗಳನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ, ಸದ್ದಾಮ್ ಹುಸೇನರ ಮಾಜಿ ಸಹಾಯಕರಾಗಿದ್ದ ತಾಹಾ ಯಾಸಿನ್ ರಂಜಾನ್ ಅವರನ್ನು ಬಾಗ್ದಾದಿನಲ್ಲಿ ಬೆಳಗಿನ ಜಾವ ಗಲ್ಲಿಗೇರಿಸಲಾಯಿತು.

2007: ದಕ್ಷಿಣ ರಷ್ಯಾದ ಗ್ರಾಮವೊಂದರ ವೃದ್ಧಾಶ್ರಮದಲ್ಲಿ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿ 63 ಹಿರಿಯ ನಾಗರಿಕರು ಮೃತರಾಗಿ, 33 ಮಂದಿ ಗಾಯಗೊಂಡರು.

2007: ಅಮೆರಿಕದ ಉತ್ತರ ನೆವಾಡಾ ರಾಜ್ಯದ ಅಧಿವೇಶನವು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಗೊಂಡಿತು. ಉತ್ತರ ನೆವಾಡಾದ ಹಿಂದೂ ದೇವಾಲಯದ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ರಾಜನ್ ಜೆದ್ ವಿಧಾನಸಭೆಯ ಆರಂಭದಲ್ಲಿ ಗಾಯತ್ರಿ ಮಂತ್ರ ಪಠಿಸಿದರು. ನಂತರ ಉಪನಿಷತ್ತಿನಿಂದಲೂ ಕೆಲವು ಶ್ಲೋಕಗಳನ್ನು ಪ್ರಸ್ತುತ ಪಡಿಸಿದರು.

2008: ಭಾರತದ ಉಪಪ್ರಧಾನಿಗಳಾಗಿದ್ದ ಹಿರಿಯ ರಾಜಕಾರಣಿ ಎಲ್.ಕೆ. ಅಧ್ವಾನಿ ಅವರ `ಮೈ ಕಂಟ್ರಿ, ಮೈ ಲೈಫ್’ ಪುಸ್ತಕ ಬಿಡುಗಡೆಗೊಂಡಿತು. ಇದಕ್ಕೆ ಅಧ್ವಾನಿ ಅವರ ಹಲವಾರು ವರ್ಷಗಳ ಸಹಚಾರಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುನ್ನುಡಿ ಬರಿದಿದ್ದಾರೆ.

2008: “ಭ್ರಷ್ಟಾಚಾರವುಳ್ಳ ವಿಶ್ವದ 180 ರಾಷ್ಟ್ರಗಳಲ್ಲಿ ಭಾರತವು 72ನೇ ಸ್ಥಾನದಲ್ಲಿದೆ” ಎಂದು ‘ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ’ ಇತ್ತೀಚೆಗೆ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ವಿಷಯಸೂಚಿ ವರದಿ ತಿಳಿಸಿದೆ. ಈ ವಿಚಾರವು ಇಂದು ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಫಾಹ್ಮಿದಾ ಮಿರ್ಜಾ ಅವರು ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ 60 ವರ್ಷಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳಾ ಸಭಾಧ್ಯಕ್ಷರಾಗಿ ಆಯ್ಕೆಯಾದರು.

2008: ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1968′ ತಿದ್ದುಪಡಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿ ರಾಜ್ಯದಾದ್ಯಂತ ಜಾರಿಗೆ ಬಂದಿತು.

2009: 1975ರ ನಂತರ ಇದೇ ಮೊದಲ ಬಾರಿಗೆ ಹಣದುಬ್ಬರ ಶೇ.0.44 ಮಟ್ಟಕ್ಕೆ ಕುಸಿಯಿತು. ಬಹುತೇಕ ಆಹಾರ ವಸ್ತುಗಳ ಬೆಲೆಗಳಲ್ಲಿ ಇಳಿಕೆ ಆಗದಿದ್ದರೂ ಹಣದುಬ್ಬರ ಇಳಿಯುವುದು ಮುಂದುವರಿಯಿತು. ಆರ್ಥಿಕತೆ ತೀವ್ರತರದ ಹಿಂಜರಿತಕ್ಕೆ ಸಿಲುಕಲಿದೆ ಎಂಬ ಭೀತಿಯನ್ನು ಇದು ಹುಟ್ಟುಹಾಕಿತು.

2009: ಪಾನೀಯ ಮತ್ತು ಆಹಾರ ತಯಾರಿಕಾ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿದ ವಿವಿಧ ಬಗೆಯ ಪದಾರ್ಥಗಳ ಬಗ್ಗೆ ವಿವರಣೆ ನೀಡುವುದನ್ನು ಕಡ್ಡಾಯಗೊಳಿಸಿದ ಭಾರತ ಸರ್ಕಾರದ ನೂತನ ಆಹಾರ ಸುರಕ್ಷತಾ ಕಾನೂನು ಜಾರಿಗೊಂಡಿತು.

2009: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಮ್ ತೆಲಗಿಗೆ ಅಹಮದಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಪ್ರಮುಖಜನನ/ಮರಣ:

1821: ಇಂಗ್ಲಿಷ್ ವಿದ್ವಾಂಸ, ಪ್ರವಾಸಿ ಮತ್ತು ಸಂಶೋಧಕ ಸರ್ ರಿಚರ್ಡ್ ಫ್ರಾನ್ಸಿಸ್ ಬರ್ಟನ್ ಅವರು ಇಂಗ್ಲೆಂಡಿನ ಡೆವೋನ್ ಬಳಿಯ ಟಾರ್ಕ್ವೇ ಎಂಬಲ್ಲಿ ಜನಿಸಿದರು. ‘ದಿ ಅರೇಬಿಯನ್ ನೈಟ್ಸ್’ ನ ಭಾಷಾಂತರವನ್ನು ಪ್ರಕಟಿಸಿದ ಇವರಿಗೆ ಯೂರೋಪ್, ಏಷ್ಯಾ ಮತ್ತು ಆಫ್ರಿಕಾದ 29 ಭಾಷೆಗಳ ಅದ್ಭುತ ಜ್ಞಾನವಿತ್ತು.

1876: 1920ರ ವರ್ಷದಲ್ಲಿ ಸಿಂಧೂ ಕಣಿವೆ ನಾಗರೀಕತೆಯ ಪ್ರದೇಶಗಳಾದ ಹರಪ್ಪ ಮತ್ತು ಮೊಹೆಂಜದಾರೋ ಉತ್ಖನನಕ್ಕೆ ಕಾರಣರಾದ ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಅವರು ಇಂಗ್ಲೆಂಡಿನ ಚೆಶೈರ್ ಬಳಿಯ ಚೆಸ್ಟರ್ ಎಂಬಲ್ಲಿ ಜನಿಸಿದರು. ಭಾರತೀಯ ಪುರಾತತ್ವ ಇಲಾಖೆಯಲ್ಲಿ 1920-31 ಅವಧಿಯಲ್ಲಿ ಇವರು ಡೈರೆಕ್ಟರ್ ಜನರಲ್ ಆಗಿದ್ದರು.

1883: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ನಾರ್ಮನ್ ಹಾವೊರ್ಥ್ ಅವರು ಇಂಗ್ಲೆಂಡಿನ ಲಂಕಾಶೈರ್ ಬಳಿಯ, ಕೋರ್ಲಿ ಎಂಬಲ್ಲಿ ಜನಿಸಿದರು. “ವಿಟಮಿನ್ ‘ಸಿ’ಯಲ್ಲಿ ಕಾರ್ಬೋ ಹೈಡ್ರೇಟ್ಸ್” ಕುರಿತಾದ ಸಂಶೋಧನೆಗೆ ಇವರಿಗೆ 1937 ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತು.

1900: ಫ್ರೆಂಚ್ ವೈದ್ಯ ಶಾಸ್ತ್ರ್ರಜ್ಞ ಫ್ರೆಡೆರಿಕ್ ಜೋಲಿಯಟ್ ಕ್ಯೂರಿ ಅವರು ಪ್ಯಾರಿಸ್ನಲ್ಲಿ ಜನಿಸಿದರು. ಇವರು ಮತ್ತು ಇವರ ಪತ್ನಿ ಐರೀನ್ ಕ್ಯೂರಿ ಅವರಿಬ್ಬರಿಗೂ ಜಂಟಿಯಾಗಿ 1935ರ ವರ್ಷದಲ್ಲಿ ‘ಆರ್ಟಿಫಿಸಿಯಲ್ ರೆಡಿಯೋ ಆಕ್ಟಿವಿಟಿ’ ಕುರಿತಾದ ಸಂಶೋಧನೆಗಾಗಿ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1912: ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ವೇಷಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ವಾಸುದೇವ ಗಿರಿಮಾಜಿ ಜನಿಸಿದರು. ರಂಗಭೂಮಿ ನಟನೆಯೊಂದಿಗೆ ಸಿನಿಮಾದೊಂದಿಗೂ ಇವರಿಗೆ ನಂಟು ಬೆಳೆದು ಕನ್ನಡ, ಹಿಂದಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದರಲ್ಲದೆ ನಾಯಕ, ಖಳನಾಯಕ ಪಾತ್ರಗಳನ್ನೂ ನಿರ್ವಹಿಸಿದ್ದರು.

1943: ಮೆಕ್ಸಿಕನ್ ರಸಾಯನ ಶಾಸ್ತ್ರಜ್ಞ ಮಾರಿಯೋ ಜೆ. ಮೊಲಿನಾ ಅವರು ಮೆಕ್ಸಿಕೋ ನಗರದಲ್ಲಿ ಜನಿಸಿದರು. ‘ಓಜೋನ್ ಲೇಯರ್ಗಳಲ್ಲಿ ಕ್ಲೋರೋಫ್ಲೋರ್ ಕಾರ್ಬನ್ ಗ್ಯಾಸ್ಗಳಿಂದ ಆಗುವ ಬದಲಾವಣೆಗಳ ಬಗ್ಗೆ ಗಮನ ಸೆಳೆದ’ ಇವರ ಸಂಶೋಧನೆಗಳಿಗಾಗಿ ಇವರಿಗೆ 1995 ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತು.

1950: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ನಾರ್ಮನ್ ಹಾವೊರ್ಥ್ ಅವರು ಇಂಗ್ಲೆಂಡಿನ ವೋರ್ಸೆಸ್ಟ್ಶೈರ್ ಪ್ರದೇಶದ ಬಾರ್ನ್ಟ್ ಗ್ರೀನ್ ಎಂಬಲ್ಲಿ ನಿಧನರಾದರು. “ವಿಟಮಿನ್ ‘ಸಿ’ಯಲ್ಲಿ ಕಾರ್ಬೋ ಹೈಡ್ರೇಟ್ಸ್” ಕುರಿತಾದ ಸಂಶೋಧನೆಗೆ ಇವರಿಗೆ 1937 ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತು.

1978: ಭಾರತದ ನ್ಯಾಯವಾದಿ ಮತ್ತು ಲೋಕಸಭೆಯ ಎರಡನೇ ಅಧ್ಯಕ್ಷರಾಗಿದ್ದ ಎಂ. ಎ. ಅಯ್ಯಂಗಾರ್ ಅವರು ಆಂಧ್ರಪ್ರದೇಶದ ತಿರುಪತಿಯಲ್ಲಿ ನಿಧನರಾದರು. ಅವರು ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

1982: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಂಸದೀಯ ಪಟು, ಕಿಸಾನ್ ಮಜ್ದೂರ್ ದಳ ಸ್ಥಾಪಕರಾದ ಜೆ.ಬಿ. ಕೃಪಲಾನಿ ಅವರು ತಮ್ಮ 93ನೇ ವಯಸ್ಸಿನಲ್ಲಿ ಅಹಮದಾಬಾದಿನಲ್ಲಿ ನಿಧನರಾದರು.

1987: ಫ್ರೆಂಚ್ ಭೌತವಿಜ್ಞಾನಿ ಲೂಯಿ ಡಿ ಬ್ರೊಗಿಲೆ ಅವರು ಫ್ರಾನ್ಸಿನ ಲೊವೀಸಿಯೆನ್ನೆಸ್ ಎಂಬಲ್ಲಿ ನಿಧನರಾದರು. ‘ವೇವ್ ಲೈಕ್ ಬಿಹೇವಿಯರ್ ಆಫ್ ಮ್ಯಾಟರ್’ ಕುರಿತಾಗಿ ಪ್ರಾತ್ಯಕ್ಷಿಕೆಯ ರೂಪದಲ್ಲಿ ನಿರೂಪಣೆಗೈದ ಇವರಿಗೆ 1929 ವರ್ಷದಲ್ಲಿ ಭೌತವಿಜ್ಞಾನದ ನೊಬೆಲ್ ಪುರಸ್ಕಾರ ಸಂದಿತು.

1998: ಕೇರಳದ ಪ್ರಥಮ ಮುಖ್ಯಮಂತ್ರಿಗಳೂ, ಭಾರತದ ಕಮ್ಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ನಾಯಕರೂ ಮತ್ತು ಬರಹಗಾರರೂ ಆದ ಇ.ಎಮ್.ಎಸ್. ನಂಬೂದರಿಪಾದ್ ಅವರು ತಿರುವನಂತಪುರದಲ್ಲಿ ನಿಧನರಾದರು.

2007: ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಬೆಂಗಳೂರಿನಲ್ಲಿ ನಿಧನರಾದರು. ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ ಜನಿಸಿದ್ದ ಇವರಿಗೆ ಕರ್ನಾಟಕ ಸಾಹಿತ್ಯ ಆಕಾಡೆಮಿಯ ಕೃತಿ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿಗಳು ಸಂದಿದ್ದವು. ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ.

2008: ವೈಜ್ಞಾನಿಕ ಕಲ್ಪನೆಗಳ ಜಗತ್ಪ್ರಸಿದ್ಧ ಇಂಗ್ಲಿಷ್ ಕಥೆಗಾರ ಸರ್ ಆರ್ಥರ್ ಚಾರ್ಲ್ಸ್ ಕ್ಲಾರ್ಕ್ ತಮ್ಮ 90ನೇ ವಯಸ್ಸಿನಲ್ಲಿ ಕೊಲೊಂಬೋದಲ್ಲಿ ನಿಧನರಾದರು.

2008: ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ಚಲನಚಿತ್ರ ನಟ ರಘುವರನ್ ತಮ್ಮ 60ನೇ ವಯಸ್ಸಿನಲ್ಲಿ ಚೆನ್ನೈಯಲ್ಲಿ ನಿಧನರಾದರು. ಇವರು ಬಹಳಷ್ಟು ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ವೈವಿಧ್ಯಪೂರ್ಣ ಪಾತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದರು.

Categories
e-ದಿನ

ಮಾರ್ಚ್-18

ಪ್ರಮುಖಘಟನಾವಳಿಗಳು:

1068: ಲೆವಾಂಟ್ ಮತ್ತು ಅರೇಬಿಯನ್ ಪೆನಿನ್ಸುಲಾಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ 20,000 ಜನ ಸಾವಿಗೀಡಾದರು.

1850: ಹೆನ್ರಿ ವೆಲ್ಸ್ ಮತ್ತು ವಿಲಿಯಂ ಫರ್ಗೋ ಅವರಿಂದ ಪ್ರಸಿದ್ಧ ‘ಅಮೆರಿಕನ್ ಎಕ್ಸ್ಪ್ರೆಸ್’ ಹಣಕಾಸು ವ್ಯವಹಾರ ಸಂಸ್ಥೆ ಸ್ಥಾಪನೆಗೊಂಡಿತು.

1922: ಮಹಾತ್ಮಾ ಗಾಂಧೀಜಿ ಅವರಿಗೆ ಕಾನೂನು ಉಲ್ಲಂಘನೆಗಾಗಿ ಆರು ವರ್ಷದ ಶಿಕ್ಷೆ ವಿಧಿಸಲಾಯ್ತು. ಆದರೆ ಎರಡೇ ವರ್ಷಗಳಲ್ಲಿ ಬಿಡುಗಡೆ ಮಾಡಲಾಯಿತು.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ನೇತೃತ್ವದಲ್ಲಿ ಅಜಾದ್ ಹಿಂದ್ ಫೌಜ್ ಸೇನೆ ಭಾರತದ ವಿಮೋಚನೆಗಾಗಿ ಬರ್ಮಾ ಗಡಿ ದಾಟಿ ಭಾರತದತ್ತ ಚಲಿಸಿತು.

1965: ಸೋವಿಯತ್ ಗಗನಯಾತ್ರಿ ಅಲೆಕ್ಸೀ ಲೆನೋವ್ ಅವರು ತಾವಿದ್ದ ಬಾಹ್ಯಾಕಾಶ ನೌಕೆ ವೊಸ್ಖೋಡ್ 2 ರಿಂದ ಹೊರಕ್ಕೆ ಬಂದು 12 ನಿಮಿಷಗಳ ಕಾಲ ನಡೆದಾಡಿದರು.

1968: ಅಮೆರಿಕದ ಕಾಂಗ್ರೆಸ್ಸು ‘ಕರೆನ್ಸಿ’ ಚಲಾವಣಾ ಹಣಕ್ಕೆ ಚಿನ್ನದ ಸಂಪನ್ಮೂಲದ ಅಗತ್ಯತೆಯನ್ನು ತೆಗೆದುಹಾಕಿತು.

1990: ವಿಶ್ವದ ಚರಿತ್ರೆಯಲ್ಲೇ ‘ಅತಿ ದೊಡ್ಡ ಕಲಾತ್ಮಕ ವಸ್ತುಗಳ ಕಳ್ಳತನ’ದಲ್ಲಿ, ಅಮೆರಿಕದ ಬೋಸ್ಟನ್ ನಗರದಲ್ಲಿನ ಇಸಾಬೆಲ್ಲಾ ಸ್ಟವಾರ್ಟ್ ಗಾರ್ಡನರ್ ಮ್ಯೂಸಿಯಂನಲ್ಲಿ 300 ದಶಲಕ್ಷ ಡಾಲರ್ ಮೌಲ್ಯದ ಕಲಾತ್ಮಕ ವಸ್ತುಗಳ ಕಳವಾಯಿತು.

1992: ವರ್ಣಭೇದವನ್ನು ಕಿತ್ತೊಗೆಯುವ ವಿಚಾರದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಕ್ರೋಡೀಕರಣ ‘ರೆಫರೆಂಡಮ್’ನಲ್ಲಿ ದಕ್ಷಿಣ ಆಫ್ರಿಕಾದ ಬಿಳಿಯರು ಅತ್ಯಂತ ಬಹುಮತದಿಂದ ವರ್ಣಭೇದವನ್ನು ಕಿತ್ತೊಗೆಯುವುದಕ್ಕೆ ಪೂರಕವಾದ ಬೆಂಬಲ ವ್ಯಕ್ತಪಡಿಸಿದರು.

2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು 2007ರ ವಿಶ್ವಕಪ್ ವರೆಗೆ ರಾಹುಲ್ ದ್ರಾವಿಡ್ ಅವರನ್ನು ಭಾರತದ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಿಸಿತು.

2006: ಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್ ಅವರ ಪುತ್ರ ಮಾಣಿಕ್ ಸರ್ಕಾರ್ ಅವರಿಗೆ ಅಂತಾರಾಷ್ಟ್ರೀಯ ಲೇಸರ್ ಪ್ರದರ್ಶನ ಸಂಸ್ಥೆಯ ಪ್ರಶಸ್ತಿ ಸಂದಿತು. ವಾಷಿಂಗ್ಟನ್ನಿನಲ್ಲಿ ನಡೆದ ಲೇಸರ್ ಪ್ರದರ್ಶನದಲ್ಲಿ ಮಾಣಿಕ್ ಸರ್ಕಾರ್ ಅವರ ಬುದ್ಧನ ಚರಿತ್ರೆ ಕುರಿತಾದ ಲೇಸರ್ ಪ್ರದರ್ಶನಕ್ಕೆ ಈ ಬಹುಮಾನ ಲಭಿಸಿತು.

2008: ಈಜಿಪ್ಟಿನಲ್ಲಿ ನಡೆದ ಕೈರೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತದಿಂದ ಆಯ್ಕೆಯಾಗಿದ್ದ ‘ಕೇರ್ ಆಫ್ ಫುಟ್ ಪಾತ್’ ಮಕ್ಕಳ ಚಿತ್ರ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

2009: ರಾಹುಲ್ ದ್ರಾವಿಡ್ ಅವರು ಹ್ಯಾಮಿಲ್ಟನ್ನಿನಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟಿನಲ್ಲಿ ಆಸ್ಟ್ರೇಲಿಯಾದ ಮಾರ್ಕ್ ವಾ ಅವರ ಅತಿ ಹೆಚ್ಚು 181 ಟೆಸ್ಟ್ ಕ್ಯಾಚುಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

2009: ಬೆಂಗಳೂರಿನ ಕೃಷ್ಣರಾಜಪುರ ರೈಲ್ವೆ ನಿಲ್ದಾಣ ಬಳಿಯಲ್ಲಿ ನಿರ್ಮಾಣಗೊಂಡಿರುವ ತೂಗುಸೇತುವೆಯು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಎಂಜಿನಿಯರ್ಸ್‌ ಸಂಸ್ಥೆ ನೀಡುವ ಅತ್ಯುತ್ತಮ ರಾಷ್ಟ್ರೀಯ ಸೇತುವೆ ಪ್ರಶಸ್ತಿಗೆ ಪಾತ್ರವಾಯಿತು.

ಪ್ರಮುಖಜನನ/ಮರಣ:

1828: ನೊಬೆಲ್ ಶಾಂತಿ ಪುರಸ್ಕೃತ ಇಂಗ್ಲಿಷ್ ಕಾರ್ಯಕರ್ತ ಮತ್ತು ರಾಜಕಾರಣಿ ರಾಂಡಲ್ ಕ್ರೀಮರ್ ಅವರು ಇಂಗ್ಲೆಂಡಿನಲ್ಲಿ ಜನಿಸಿದರು. ‘ಇಂಟರ್ನ್ಯಾಶನಲ್ ಆರ್ಬಿಟ್ರೇಶನ್ ಮೂವ್ಮೆಂಟ್’ನಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1858: ಡೀಸೆಲ್ ಇಂಜಿನ್ ಸಂಶೋಧಿಸಿದ ರುಡಾಲ್ಫ್ ಡೀಸೆಲ್ ಅವರು ಜರ್ಮನಿಯಲ್ಲಿ ಜನಿಸಿದರು.

1891: ಸಮಾಜ ಸೇವಕ, ಬರಹಗಾರ, ವೈದ್ಯ, ಯೋಗಿ, ಶತಾಯುಷಿ ರಾಘವೇಂದ್ರ ಸ್ವಾಮಿ ಅವರು ಕೇರಳದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ‘ತಿರುಕ’ ಇವರ ಕಾವ್ಯನಾಮದ ಇವರು ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದು ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು. ಮಲ್ಲಾಡಿಹಳ್ಳಿಯಲ್ಲಿ ಅನಂತ ಸೇವಾಶ್ರಮವನ್ನು ಸ್ಥಾಪಿಸಿದರು. ಇವರು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಮುಂದೆ ಮಾಡಿದ ಯಾವುದೇ ಪ್ರಶಸ್ತಿಗಳನ್ನೂ ಸ್ವೀಕರಿಸಲಿಲ್ಲ.

1936: ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಕೊನೆಗಾಣಿಸಿದ ಎಫ್.ಡಬ್ಲ್ಯೂ. ಡಿ. ಕ್ಲರ್ಕ್ ಅವರು ಜೋಹಾನ್ಸ್ ಬರ್ಗ್ ನಗರದಲ್ಲಿ ಜನಿಸಿದರು. ಇವರು ತಮ್ಮ ರಾಷ್ಟ್ರದಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಿ ಬಹುಸಂಖ್ಯಾತರಿಗೆ ಸಂಧಾನದ ಮೂಲಕ ಆಡಳಿತ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದರು. ಈ ಮಹಾನ್ ಸಾಧನೆಗಾಗಿ ಅವರಿಗೆ 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು.

1938: ಪ್ರಖ್ಯಾತ ನಟ, ನಿರ್ಮಾಪಕ ಶಶಿಕಫೂರ್ ಕೋಲ್ಕತ್ತಾದಲ್ಲಿ ಜನಿಸಿದರು. ಉತ್ತಮ ನಟನೆ, ಉತ್ತಮ ಚಿತ್ರ ನಿರ್ಮಾಣಗಳಿಗೆ ರಾಷ್ಟ್ರೀಯ ಪ್ರಶಸ್ತಿಯೇ ಅಲ್ಲದೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿಯೂ ಇವರಿಗೆ ಸಂದಿದೆ.

1871: ಭಾರತದಲ್ಲಿ ಜನಿಸಿದ ಇಂಗ್ಲಿಷ್ ಗಣಿತಜ್ಞ ಅಗಸ್ಟಸ್ ಡಿ ಮೊರ್ಗಾನ್ ಲಂಡನ್ನಿನಲ್ಲಿ ನಿಧನರಾದರು.

1947: ಜನರಲ್ ಮೋಟಾರ್ಸ್ ಮತ್ತು ಚೆವ್ರೋಲೆಟ್ ಸಹ ಸಂಸ್ಥಾಪಕ ವಿಲಿಯಮ್ ಸಿ. ಡುರಾಂಟ್ ಅವರು ನ್ಯೂಯಾರ್ಕ್ನಲ್ಲಿ ನಿಧನರಾದರು.

1996: ನೊಬೆಲ್ ಪುರಸ್ಕೃತ ಗ್ರೀಕ್ ಸಾಹಿತಿ ಒಡಿಸ್ಸಿಯಾಸ್ ಎಲೈಟಿಸ್ ಅವರು ಅಥೆನ್ಸ್ ನಗರದಲ್ಲಿ ನಿಧನರಾದರು.

2007: ಭಾರತದಲ್ಲಿ ಜನಿಸಿದ ಇಂಗ್ಲಿಷ್ ಕ್ರಿಕೆಟ್ ಆಟಗಾರ ಮತ್ತು ತರಬೇತುದಾರ ಬಾಬ್ ವುಲ್ಮರ್ ಅವರು ಜಮೈಕಾದಲ್ಲಿ ನಿಧನರಾದರು.

Categories
e-ದಿನ

ಮಾರ್ಚ್-17

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 45: ಜೂಲಿಯಸ್ ಸೀಸರನು ತನ್ನ ಕೊನೆಯ ವಿಜಯವಾದ ‘ಬ್ಯಾಟಲ್ ಆಫ್ ಮುಂಡಾ’ದಲ್ಲಿ ಟೈಟಸ್ ಲೆಬೀನಸ್ ಮತ್ತು ಪಾಂಪಿ ದಿ ಯಂಗರ್ ನೇತೃತ್ವದ ‘ಪಾಂಪೀಯನ್’ ಪಡೆಯನ್ನು ಸೋಲಿಸಿದನು.

1805: ನೆಪೋಲಿಯನ್ ಅಧ್ಯಕ್ಷನಾಗಿದ್ದ ‘ಇಟಾಲಿಯನ್ ರಿಪಬ್ಲಿಕ್’, ಆತ ರಾಜನಾದ ‘ಕಿಂಗ್ಡಂ ಆಫ್ ಇಟಲಿ’ ಎಂದು ಬದಲಾಯಿತು.

1941: ಅಮೆರಿಕದ ‘ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್’ ಅನ್ನು ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ವಾಷಿಂಗ್ಟನ್ ನಗರದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.

1959: ‘ದಲೈ ಲಾಮಾ’ ಆದ ಟೆನ್ಸಿನ್ ಗ್ಯಾಟ್ಸೋ ಅವರು ಟಿಬೆಟ್ ತ್ಯಜಿಸಿ ಭಾರತಕ್ಕೆ ಆಗಮಿಸಿದರು. ಅವರಿಗೆ 1959ರ ಮಾರ್ಚ್ 31ರಂದು ಭಾರತದಲ್ಲಿ ರಾಜಕೀಯ ಆಶ್ರಯ ನೀಡಲಾಯಿತು.

1919: ‘ಬಾಲಿ’ಯಲ್ಲಿ ಮೌಂಟ್ ಆಗಂಗ್ ಸ್ಪೋಟಗೊಂಡು 1,100 ಜನರು ಮೃತರಾದರು

1968: ಊಟಾಹ್ನಲ್ಲಿನ ಸ್ಕಲ್ ವ್ಯಾಲಿಯಲ್ಲಿ ನರ್ವ್ ಗ್ಯಾಸ್ ಪರೀಕ್ಷೆಯ ಕಾರಣದಿಂದಾಗಿ ಆ ಪ್ರದೇಶದಲ್ಲಿನ ಆರು ಸಾವಿರಕ್ಕೂ ಹೆಚ್ಚು ಕುರಿಗಳು ಸತ್ತುಬಿದ್ದವು.

1969: ತಮ್ಮ 70ನೇ ವಯಸ್ಸಿನಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೋಲ್ಡಾ ಮೀರ್ ಅವರು, ಆ ದೇಶದಲ್ಲಿ ಪ್ರಧಾನಿ ಹುದ್ದೆಗೆ ಏರಿದ ಪ್ರಪ್ರಥಮ ಮಹಿಳೆ ಎನಿಸಿದರು.

1973: ಈ ದಿನದಂದು ಪುಲಿಟ್ಸರ್ ಬಹುಮಾನ ವಿಜೇತ ‘ಬರ್ಸ್ಟ್ ಆಫ್ ಜಾಯ್’ ಚಿತ್ರದ ಛಾಯಾಗ್ರಹಣವಾಯಿತು. ಯುದ್ಧ ಖೈದಿಯೊಬ್ಬ ಯುದ್ಧಾನಂತರದಲ್ಲಿ ತನ್ನ ಕುಟುಂಬವನ್ನು ಕೂಡಿಕೊಳ್ಳುವ ಚಿತ್ರಣ ಇದರಲ್ಲಿದ್ದು, ಅಮೆರಿಕ ದೇಶವು ಪಾಲ್ಗೊಂಡಿದ್ದ ವಿಯೇಟ್ನಾಂ ಯುದ್ಧದ ಅಂತ್ಯವನ್ನು ಈ ಚಿತ್ರ ಸೂಚಿಸುತ್ತಿತ್ತು.

1992: ವರ್ಣಭೇದ ನೀತಿಯನ್ನು ಅಂತ್ಯಗೊಳಿಸುವುದಕ್ಕೆ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾದ ಜನಾಭಿಪ್ರಾಯ ಸಂಗ್ರಹಣಾ ‘ರೆಫೆರೆಂಡಮ್’ 68.7% ಪರವಾದ ಮತಗಳಿಂದ ಅಂಗೀಕೃತಗೊಂಡಿತು. ಇದಕ್ಕೆ ವಿರುದ್ಧವಾದ ಮತಗಳು ಶೇಕಡಾ 31.2 ಮಾತ್ರಾ ಇದ್ದವು.

2006: ದೀಪಾ ಮೆಹ್ತಾ ಅವರ ‘ವಾಟರ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಖ್ಯಾತ ನಟಿ ಸೀಮಾ ಬಿಸ್ವಾಸ್ ಅವರಿಗೆ ಕೆನಡಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಅತ್ಯುತ್ತಮ ನಟಿ’ (‘ಬೆಸ್ಟ್ ಅ್ಯಕ್ಟ್ರೆಸ್ ಜೆನೀ’) ಪ್ರಶಸ್ತಿ ಲಭಿಸಿತು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಅವರ ಸ್ಥಾನಕ್ಕೆ ರಾಣಾ ಭಗವಾನ್ ದಾಸ್ ಅವರನ್ನು ಹಂಗಾಮಿಯಾಗಿ ನೇಮಿಸಿರುವುದಾಗಿ ಪಾಕಿಸ್ಥಾನ ಸರ್ಕಾರ ಪ್ರಕಟಿಸಿತು. ರಾಣಾ ಭಗವಾನ್ ದಾಸ್ ಅವರು ಪಾಕ್ ಸುಪ್ರೀಂಕೋರ್ಟಿನ ಏಕೈಕ ಹಿಂದೂ ನ್ಯಾಯಾಧೀಶರೆನಿಸಿದ್ದಾರೆ.

2007: ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವು ನಂದಿಗ್ರಾಮದಲ್ಲಿ ಭೂಸ್ವಾಧೀನವನ್ನು ತತ್ ಕ್ಷಣವೇ ಸ್ಥಗಿತಗೊಳಿಸಿ, ಪೊಲೀಸ್ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತು.

2009: ಇನ್ನು ಮುಂದೆ ತಂಬಾಕು (ಸಿಗರೇಟ್) ಕಂಪೆನಿಗಳು ಪ್ರಶಸ್ತಿ ಪ್ರದಾನ ಸಮಾರಂಭ, ಕ್ರೀಡಾಕೂಟಗಳನ್ನು ಪ್ರಾಯೋಜಿಸುವಂತಿಲ್ಲ! ತಂಬಾಕು ಕಂಪೆನಿಗಳು ಪ್ರಚಾರ ಗಿಟ್ಟಿಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಂಪೆನಿಗಳು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತು.

ಪ್ರಮುಖಜನನ/ಮರಣ:

1864: ಸ್ವಾತಂತ್ರ್ಯ ಹೋರಾಟಗಾರ ಮತ್ತು ನ್ಯಾಯವಾದಿ ಜೋಸೆಫ್ ಬ್ಯಾಪ್ಟಿಸ್ಟಾ ಮುಂಬೈನಲ್ಲಿ ಜನಿಸಿದರು. ಲೋಕಮಾನ್ಯ ತಿಲಕ್ ಅವರ ಜೊತೆಗಾರರಾಗಿ ಮತ್ತು ಹೋಮ್ ರೂಲ್ ಚಳುವಳಿಯ ಪಾತ್ರಧಾರಿಯಾಗಿ ಪ್ರಸಿದ್ಧರಾದ ಇವರು, 1925ರ ವರ್ಷದಲ್ಲಿ ಬಾಂಬೆ ನಗರದ ಮೇಯರ್ ಆಗಿ ಆಯ್ಕೆಗೊಂಡಿದ್ದರು. 1930ರಲ್ಲಿ ನಿಧನರಾದರು.

1881: ಸ್ವಿಸ್ ವೈದ್ಯ ವಿಜ್ಞಾನಿ ವಾಲ್ಟರ್ ರುಡಾಲ್ಫ್ ಹೆಸ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಫ್ರೌನ್ಫೆಲ್ಡ್ ಎಂಬಲ್ಲಿ ಜನಿಸಿದರು. ಮೆದುಳಿನಲ್ಲಿ ಅಂಗಾಂಗಗಳ ಚಲನೆಯ ನಿಯಂತ್ರಕಗಳನ್ನು ಗುರುತಿಸುವ ಕಾರ್ಯವನ್ನು ಮಾಡಿದ ಇವರಿಗೆ 1949 ವರ್ಷದ ನೊಬೆಲ್ ವೈದ್ಯಶಾಸ್ತ್ರ ಪುರಸ್ಕಾರ ಸಂದಿತ್ತು.

1887: ಸಾಹಿತ್ಯ, ಸಮಾಜಸೇವೆ, ರಾಜಕೀಯ ಚರ್ಚೆ, ಪತ್ರಿಕೋದ್ಯಮ, ಪಾಂಡಿತ್ಯ, ಸಹೃದಯತೆ ಹೀಗೆ ಎಲ್ಲ ವಿಧಗಳಲ್ಲಿ ಮೇಲ್ಪಂಕ್ತಿಯವರಾದ ಡಿ.ವಿ. ಗುಂಡಪ್ಪನವರು ಮುಳಬಾಗಿಲಿನಲ್ಲಿ ಜನಿಸಿದರು. ಕಾವ್ಯ, ನಾಟಕ, ಪ್ರಬಂಧ, ಜೀವನ ಚರಿತ್ರೆ, ರಾಜಕೀಯ ವಿಚಾರ, ಆಧ್ಯಾತ್ಮ, ಮಕ್ಕಳ ಸಾಹಿತ್ಯಗಳ ಕುರಿತಾದ ವಿಫುಲ ಸಾಹಿತ್ಯ ಸೃಷ್ಟಿ, ಪೂರ್ವಾಗ್ರಹ ಮನೋಭಾವವಿಲ್ಲದ ಆದರೆ ಯಾವುದೇ ಅನ್ಯಾಯವನ್ನೂ ಒಪ್ಪದ ಪತ್ರಿಕಾ ಬರಹ, ಗೋಖಲೆ ಸಾರ್ವಜನಿಕ ಸಂಸ್ಥೆಯ ಸ್ಥಾಪನೆ ಮತ್ತು ಅಭಿವೃದ್ಧಿ, ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಕಾಯಕಲ್ಪ ಹೀಗೆ ಅವರ ಸೇವೆ ಅಪಾರವಾದದ್ದು. ಅವರಿಗೆ ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವವೂ ಸೇರಿ ಅನೇಕ ಗೌರವಗಳು ಸಂದವು.

1905: ಮಹಾನ್ ಕವಿ, ವಿದ್ವಾಂಸ ಪು.ತಿ. ನರಸಿಂಹಾಚಾರ್ ಮೇಲುಕೋಟೆಯಲ್ಲಿ ಜನಿಸಿದರು. ಪು.ತಿ.ನ ಎಂದೇ ಖ್ಯಾತರಾದ ಅವರ ಸಾಹಿತ್ಯಸೃಷ್ಟಿಯು ಕಾವ್ಯ, ನಾಟಕ, ಲಲಿತ ಪ್ರಬಂಧ, ಭಾವ ಪ್ರಬಂಧ, ಕಾವ್ಯಾರ್ಥ ಚಿಂತನೆ, ಅನುವಾದ ಮುಂತಾದ ಹಲವು ಪ್ರಕಾರಗಳಲ್ಲಿ ಸಂದಿದೆ. ‘ಪದ್ಮಶ್ರೀ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಗ್ರಂಥಲೋಕ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, 53ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1920: ಷೇಖ್ ಮುಜಿಬುರ್ ರಹಮಾನ್ ಅವರು ಬಂಗಾಳದ ತುಂಗಿಪರ ಎಂಬಲ್ಲಿ ಜನಿಸಿದರು. ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿ, ಸೆರೆಮನೆ ವಾಸ ಅನುಭವಿಸಿದ ಇವರು, ಬಾಂಗ್ಲಾದೇಶದ ಪ್ರಥಮ ಪ್ರಧಾನಿಯಾಗಿ ಹಾಗೂ ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರನ್ನು 1975ರಲ್ಲಿ ಕೊಲೆಗೈಯಲಾಯಿತು.

1927: ‘ಜಾನಪದ ಜಂಗಮ’ರೆಂದು ಪ್ರಖ್ಯಾತರಾದ ಮುದೇನೂರು ಸಂಗಣ್ಣನವರು ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ಜನಿಸಿದರು. ಅನೇಕ ಜಾನಪದ ಸಂಗ್ರಹ ಮತ್ತು ಪ್ರಕಟಣೆಗಳನ್ನು ಮಾಡಿದ ಇವರಿಗೆ ಕರ್ಣಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಜಾನಪದ ಯಕ್ಷಗಾನ ಅಕಾಡೆಮಿಯ ಜನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ‘ಸೂಳೆ ಸಂಕವ್ವೆ’ ನಾಟಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ನಾಡೋಜ ಪ್ರಶಸ್ತಿ, ‘ಚಿಗಟೇರಿ ಪದಕೋಶ’ಕ್ಕೆ ತ್ರಿವೇಂಡ್ರಮ್ಮಿನಲ್ಲಿರುವ ದ್ರಾವಿಡ ಭಾಷಾ ಸಂಸ್ಥೆಯ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿದ್ದವು.

1934: ಸಾಹಿತಿ, ಜಾನಪದ ವಿದ್ವಾಂಸ, ಶ್ರೇಷ್ಠ ಶಿಕ್ಷಕ, ಸಂಶೋಧಕ, ಸಾಂಸ್ಕೃತಿಕ ಪ್ರತಿನಿಧಿಗಳೆನಿಸಿದ್ದ ಪ್ರೊ. ಕು.ಶಿ.ಹರಿದಾಸ ಭಟ್ಟರು ಉಡುಪಿಯಲ್ಲಿ ಜನಿಸಿದರು. ಕರ್ನಾಟಕದ ಜಾನಪದ ಕಲೆಯನ್ನು ವಿಶ್ವಾದ್ಯಂತ ಪರಿಚಯಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಫಿನ್‌ಲ್ಯಾಂಡ್‌ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಭಟ್ಟರಿಗೆ ಸಂದಿದ್ದವು.

1962: ಭಾರತೀಯ ಮೂಲಸಂಜಾತೆ, ಅಮೆರಿಕದ ಪ್ರಜೆ ಮತ್ತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರು ಪಂಜಾಬಿನ ಕರ್ನಾಲ್ ಪಟ್ಟಣದಲ್ಲಿ ಜನಿಸಿದರು. ಬಾಹ್ಯಾಕಾಶದಲ್ಲಿ ತಮ್ಮ ಹದಿನಾರು ದಿನಗಳ ಯಾನವನ್ನು ಪೂರೈಸಿ ಮರಳಿ ಭೂಕಕ್ಷೆ ಪ್ರವೇಶಿಸುವ ಸಂದರ್ಭದಲ್ಲಿ, ಇವರು ಪಯಣಿಸುತ್ತಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ನಗರದ ಮೇಲ್ಭಾಗದಲ್ಲಿ ಸ್ಪೋಟಗೊಂಡು, ಕಲ್ಪನಾ ಚಾವ್ಲಾ ಅವರನ್ನೂ ಒಳಗೊಂಡಂತೆ ಅದರಲ್ಲಿದ್ದ ಏಳೂ ಜನ ಯಾತ್ರಿಗಳೂ ನಿಧನರಾದರು

1963: ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಜಗ್ಗೇಶ್ ಅವರು ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಮಾಯಸಂದ್ರದಲ್ಲಿ ಜನಿಸಿದರು. ಅನೇಕ ಚಲನಚಿತ್ರಗಳ ನಟರಾಗಿ ಮತ್ತು ನಿರ್ಮಾಪಕರಾಗಿರುವ ಇವರು ಹಾಸ್ಯರೀತಿಯ ನಟನೆಗೆ ಜನಪ್ರಿಯರಾಗಿದ್ದಾರೆ.

1975: ಪ್ರಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರು ಚೆನ್ನೈ ನಗರದಲ್ಲಿ ಜನಿಸಿದರು. ಬೆಟ್ಟದ ಹೂವು ಚಿತ್ರಕ್ಕೆ ಬಾಲ ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಇವರು ಹಲವು ಚಿತ್ರಗಳ ಅಭಿನಯಕ್ಕೆ ಕರ್ನಾಟಕ ರಾಜ್ಯದ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.

1990: ಭಾರತದ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಸೈನಾ ನೆಹವಾಲ್ ಅವರು ಹರ್ಯಾಣಾದ ಹಿಸ್ಸಾರ್ ಎಂಬಲ್ಲಿ ಜನಿಸಿದರು. ಒಲಿಂಪಿಕ್ ಕಂಚು ಪದಕದ ಸಾಧನೆಯ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಇವರು ಕೆಲ ಸಮಯ ವಿಶ್ವದ ನಂಬರ್ ಒನ್ ಆಗ್ರಶ್ರೇಣಿಯನ್ನು ಅಲಂಕರಿಸಿದ್ದರು. ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1956: ಮೇಡಂ ಕ್ಯೂರಿ ಮತ್ತು ಪಿಯೆರೆ ಕ್ಯೂರಿ ಅವರ ಪುತ್ರಿಯಾದ ಐರೆನೆ ಜೋಲಿಯಟ್ ಕ್ಯೂರಿ ಅವರು ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರು ತಮ್ಮ ಪತಿ ಫ್ರೆಡೆರಿಕ್ ಜೋಲಿಯಟ್ ಅವರೊಂದಿಗೆ ಜಂಟಿಯಾಗಿ 1935 ವರ್ಷದಲ್ಲಿ ‘ಆರ್ಟಿಫಿಷಿಯಲ್ ರೇಡಿಯೋ ಆಕ್ಟಿವಿಟಿ’ ಕುರಿತಾದ ಸಂಶೋಧನೆಗಾಗಿ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಗಳಿಸಿದರು.

1957: ಫಿಲಿಪೈನ್ಸ್ ದೇಶದ ಅತ್ಯಂತ ಜನಪ್ರಿಯ ನಾಯಕರಾಗಿ ಆ ದೇಶದ 7ನೇ ಅಧ್ಯಕ್ಷರಾಗಿದ್ದ ರಾಮನ್ ಮ್ಯಾಗ್ಸೇಸೆ ಅವರು ವಿಮಾನ ಅಪಘಾತದಲ್ಲಿ ನಿಧನರಾದರು. ನ್ಯೂಯಾರ್ಕಿನ ರಾಕ್ ಫೆಲ್ಲರ್ ಬ್ರದರ್ಸ್ ನಿಧಿಯು ಇವರ ಗೌರವಾರ್ಥವಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿದೆ.

1983: ಅಮೆರಿಕದ ವೈದ್ಯವಿಜ್ಞಾನಿ ಹಲ್ಡಾನ್ ಕೆಫ್ಫರ್ ಹಾರ್ಟ್ಲೈನ್ ಅವರು ಮೇರಿಲ್ಯಾಂಡಿನ ಹಾಲ್ಸ್ಟನ್ ಎಂಬಲ್ಲಿ ನಿಧನರಾದರು. ‘ನ್ಯೂರೋ ಫಿಸಿಯಲಾಜಿಕಲ್ ಮೆಕಾನಿಸಂಸ್ ಆಫ್ ವಿಷನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1967 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

Categories
e-ದಿನ

ಮಾರ್ಚ್-16

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 597: ಬ್ಯಾಬಿಲೋನಿಯನ್ನರು ಜೆರುಸಲೇಮ್ ಅನ್ನು ಆಕ್ರಮಿಸಿ ರಾಜನಾದ ಜೆಕೋನಿಯಾ ಜಾಗದಲ್ಲಿ ಜೆಡೇಕಿಯಾ ಎಂಬಾತನನ್ನು ಸ್ಥಾಪಿಸಿದರು.

1527: ಮೊಘಲ್ ಚಕ್ರವರ್ತಿ ಬಾಬರ್, ಆಗ್ರಾ ಸಮೀಪದ ಖಾನ್ವಾದಲ್ಲಿ ಮೇವಾಡದ ರಾಣಾ ಸಂಘ ನೇತೃತ್ವದ ರಜಪೂತ ಪಡೆಗಳನ್ನು ಸೋಲಿಸಿದನು. ಪಾಣಿಪತ್ ಯುದ್ಧಕ್ಕಿಂತಲೂ ಭೀಕರವಾಗಿ ನಡೆದ ಈ ಕದನದಲ್ಲಿ ಉಭಯ ಕಡೆಗಳಲ್ಲೂ ಬಹಳಷ್ಟು ಸಾವು ನೋವು ಸಂಭವಿಸಿತು. ಈ ವಿಜಯದಿಂದ ಬಾಬರ್ ಹಿಂದೂಸ್ಥಾನದ ಚಕ್ರವರ್ತಿಯಾದ.

1870: ಟಿಚೈಕೋವ್ಸ್ಕೈ ಅವರ ರೋಮಿಯೋ ಜೂಲಿಯೆಟ್ ರಂಗಕಲ್ಪನೆಯು ತನ್ನ ಪ್ರಥಮ ಪ್ರದರ್ಶನವನ್ನು ನೀಡಿತು.

1872: ವಿಶ್ವದ ಅತ್ಯಂತ ಹಳೆಯ್ ಫುಟ್ಬಾಲ್ ಪಂದ್ಯಾವಳಿ ಎನಿಸಿರುವ ‘ಎಫ್.ಎ’ ಕಪ್ ಅನ್ನು ವಾಂಡರರ್ಸ್ ಎಫ್.ಸಿ. ತಂಡವು ಗೆದ್ದಿತು. ಲಂಡನ್ನಿನ ಓವಲ್ ಕೆನ್ನಿಂಗ್ಟನ್ ಎಂಬಲ್ಲಿ ನಡೆದ ಪಂದ್ಯಾವಳಿಯಲ್ಲಿ ಇದು ‘ರಾಯಲ್ ಎಂಜಿನಿಯರ್ಸ್ ಎ.ಎಫ್.ಸಿ’ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು.

1926: ಅಮೆರಿಕದ ರಾಬರ್ಟ್ ಎಚ್ ಗೊಡ್ಡಾರ್ಡ್ ಅವರು ಮೊದಲ ಬಾರಿಗೆ ದ್ರವ-ಇಂಧನವನ್ನು ಬಳಸಿದ ರಾಕೆಟ್ ಅನ್ನು ಮೆಸ್ಸಚುಸೆಟ್ ಪ್ರದೇಶದ ಔಬರ್ನ್ ಎಂಬಲ್ಲಿ ಉಡಾಯಿಸಿದರು

1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನಿಯ ವುರ್ಜ್ಬರ್ಗ್ ನಗರವು ಕೇವಲ 20 ನಿಮಿಷಗಳಲ್ಲಿ ಬ್ರಿಟಿಷ್ ಬಾಂಬುಗಳಿಂದ ನಿರ್ನಾಮವಾಗಿ ಸುಮಾರು 5000 ಮಂದಿ ಸಾವಿಗೀಡಾದರು

1958: ಫೋರ್ಡ್ ಮೋಟಾರ್ ಸಂಸ್ಥೆಯು ತನ್ನ 50ನೇ ದಶಲಕ್ಷ ವಾಹನವನ್ನು ಉತ್ಪಾದಿಸಿತು.

1968: ಫೋರ್ಡ್ ಮೋಟಾರ್ ಸಂಸ್ಥೆಯು ತನ್ನ 100ನೇ ದಶಲಕ್ಷ ವಾಹನವನ್ನು ಉತ್ಪಾದಿಸಿತು.

1989: ಈಜಿಪ್ಟಿನ ಚಿಯೋಪ್ಸ್ ಪಿರಮಿಡ್ಡಿನಲ್ಲಿ 4,400 ವರ್ಷ ಹಳೆಯ ಮಮ್ಮಿ ಪತ್ತೆಯಾಯಿತು

2002: ನ್ಯೂಜಿಲ್ಯಾಂಡಿನ ನೇಥನ್ ಅಸ್ಟ್ಲೆ ಅವರು 218 ನಿಮಿಷಗಳಲ್ಲಿ 153 ಚೆಂಡುಗಳಿಗೆ (ಬಾಲ್ಗಳಿಗೆ) 200 ರನ್ ಗಳಿಸಿ ಅಂದಿನ ದಿನದವರೆಗೆ ಅತಿ ಕಡಿಮೆ ಅವಧಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರನೆನಿಸಿದರು. ಇಂಗ್ಲೆಂಡಿನ ಕ್ರೈಸ್ಟ್ ಚರ್ಚಿನಲ್ಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಸ್ಟ್ಲೆ ಅವರು ಈ ಸಾಧನೆ ಮಾಡಿದರು.

2006: ಮೆಲ್ಬೋರ್ನಿನಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿರಿಯ ವೇಟ್ ಲಿಫ್ಟಿಂಗ್ ಪಟು ಕುಂಜುರಾಣಿ ದೇವಿ ಅವರು ಭಾರತಕ್ಕೆ ಮೊದಲ ಸ್ವರ್ಣಪದಕ ತಂದುಕೊಟ್ಟರು. ಮಹಿಳೆಯರ 48 ಕಿಲೋ ವಿಭಾಗದಲ್ಲಿ 166 ಕಿಲೋ ತೂಕ ಎತ್ತುವ ಮೂಲಕ ಕುಂಜುರಾಣಿ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.

2007: ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೇ ಓವರಿನ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಅವರು ವಿಶ್ವದಾಖಲೆ ಸ್ಥಾಪಿಸಿದರು. ಹಾಲೆಂಡ್ ಮತ್ತು ದಕ್ಷಿಣ ಆಫ್ರಿಕದ ಮಧ್ಯೆ ನಡೆದ ವಿಶ್ವ ಕಪ್ ಎ ಬಣದ ಪಂದ್ಯದಲ್ಲಿ ಗಿಬ್ಸ್ ಈ ದಾಖಲೆ ಮಾಡಿದರು.

ಪ್ರಮುಖಜನನ/ಮರಣ:

1836: ವಿಶ್ವದ ಪ್ರಥಮ ಕೇಬಲ್ ಕಾರ್ ವ್ಯವಸ್ಥೆಯಾದ ಸ್ಯಾನ್ ಫ್ರಾನ್ಸಿಸ್ಕೋದ ‘ಕ್ಲೇ ಸ್ಟ್ರೀಟ್ ರೈಲ್ ರೋಡ್’ ಸ್ಥಾಪಕರಾದ ಆ್ಯಂಡ್ರ್ಯೂ ಸ್ಮಿತ್ ಹಲ್ಲಿಡೀ ಅವರು ಲಂಡನ್ನಿನಲ್ಲಿ ಜನಿಸಿದರು. ಇದಲ್ಲದೆ ಇವರು ಕ್ಯಾಲಿಫೋರ್ನಿಯಾದಲ್ಲಿ ವೈರ್ ರೋಪ್ ನಿರ್ಮಾಣವನ್ನು ಪರಿಚಯಿಸಿದರಲ್ಲದೆ, ಪ್ರಾರಂಭದ ದಿನಗಳಲ್ಲೇ ಕ್ಯಾಲಿಫೋರ್ನಿಯಾ ನಗರದಲ್ಲಿ ಅನೇಕ ಸೇತುವೆಗಳನ್ನು ನಿರ್ಮಿಸಿದರು.

1839: ನೊಬೆಲ್ ಪುರಸ್ಕೃತ ಫ್ರೆಂಚ್ ಕವಿ ಸುಲ್ಲಿ ಪ್ರುಡ್ಹೊಮ್ಮೆ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು.

1910: ಭಾರತ ಮತ್ತು ಇಂಗ್ಲೆಂಡ್ ಎರಡೂ ಕ್ರಿಕೆಟ್ ತಂಡಗಳ ಪರವಾಗಿ ಆಡಿದ ಇಫ್ತಿಕರ್ ಆಲಿ ಪಟೌಡಿ ಅವರು ಈಗಿನ ಹರ್ಯಾಣಾದಲ್ಲಿರುವ ಪಟೌಡಿ ಸಂಸ್ಥಾನದಲ್ಲಿ ಜನಿಸಿದರು. ಪಟೌಡಿ ಮನೆತನದ 8ನೇ ನವಾಬರಾಗಿದ್ದ ಇವರು 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿದ್ದರು. ಇವರು ಕೇವಲ ತಮ್ಮ 41ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ಪೋಲೊ ಆಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು.

1918: ಅಮೆರಿಕದ ಭೌತವಿಜ್ಞಾನಿಗಳಾದ ಫ್ರೆಡ್ರಿಕ್ ರೀನೇಸ್ ಅವರು ನ್ಯೂಜೆರ್ಸಿಯ ಪ್ಯಾಟರ್ಸನ್ ಎಂಬಲ್ಲಿ ಜನಿಸಿದರು. ‘ನ್ಯೂಟ್ರಿನೋ ಸಂಶೋಧನೆ’ಯಲ್ಲಿನ ಇವರ ಕೊಡುಗೆಗಾಗಿ 1995 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1927: 1960ರ ಸೋವಿಯತ್ ಯೂನಿಯನ್ನಿನ ಸೋಯುಜ್ 1 ಬಾಹ್ಯಾಕಾಶ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಪುನಃ ಭೂಮಿಗೆ ಹಿಂದಿರುಗುವ ಸಂದರ್ಭದಲ್ಲಿ ಪ್ಯಾರಾಚೂಟ್ ವೈಫಲ್ಯದ ದೆಸೆಯಿಂದ ನಿಧನರಾದ ವ್ಲಾಡಿಮಿರ್ ಕೊಮಾರೋವ್ ಅವರು ಮಾಸ್ಕೋ ನಗರದಲ್ಲಿ ಜನಿಸಿದರು.

1929: ವಿಶ್ವಮಾನ್ಯ ಕವಿ, ವಿದ್ವಾಂಸ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪೇಟೆ ಕೃಷ್ಣಸ್ವಾಮಿ ರಾಮಾನುಜನ್ ಅವರು ಮೈಸೂರಿನಲ್ಲಿ ಜನಿಸಿದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಇಂಗ್ಲಿಷ್ ಭಾಷೆಯ ಮೂಲಕ ಪಸರಿಸುವ ಮನೋಜ್ಞ ಕಾರ್ಯ ಮಾಡಿದರು. 1993ರ ವರ್ಷದಲ್ಲಿ ನಿಧನರಾದ ಇವರಿಗೆ 1976ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1983ರಲ್ಲಿ ಪ್ರಸಿದ್ಧ ಮ್ಯಾಕ್ ಆರ್ಥರ್ ಫೆಲ್ಲೋಷಿಪ್ ಗೌರವ ಸಂದಿತು.

1935: ಸೂರ್ಯನಾರಾಯಣ ಶಾಸ್ತ್ರಿ ಎಂಬ ಹೆಸರಿನ ಪ್ರಖ್ಯಾತ ನಟ ಉದಯಕುಮಾರ್ ಅವರು ತಮಿಳುನಾಡಿನ ಧರ್ಮಪುರಿಯ ಪಾಲಕೋಡ್ ಎಂಬಲ್ಲಿ ಜನಿಸಿದರು. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದರು. ಪೋಷಕ ಪಾತ್ರಗಳಲ್ಲಿನ ಅಭಿನಯಕ್ಕಾಗಿ ಇವರು ಎರಡು ಬಾರಿ ಕರ್ನಾಟಕ ರಾಜ್ಯಸರ್ಕಾರದ ಚಲನಚಿತ್ರ ಪ್ರಶಸ್ತಿ ಗಳಿಸಿದ್ದರು.

1935: ಪ್ರಖ್ಯಾತ ರಂಗಕರ್ಮಿ ಜಿ.ವಿ. ಶಿವಾನಂದ್ ಅವರು ನಾಟಕ ರತ್ನ ಡಾ. ಗುಬ್ಬಿವೀರಣ್ಣನವರು ಮತ್ತು ತಾಯಿ ಜಿ. ಸುಂದರಮ್ಮನವರ ಪುತ್ರರಾಗಿ ಜನಿಸಿದರು. ಅನೇಕ ನಾಟಕ, ಸಿನಿಮಾ ಮತ್ತು ಕಿರುತೆರೆ ಕಥಾನಕಗಳಲ್ಲಿ ನಟಿಸಿ, ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದ ಇವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಗೌರವ ಮತ್ತು ಇನ್ನಿತರ ಗೌರವಗಳು ಸಂದಿದ್ದವು.

1952: ಪ್ರಸಿದ್ಧ ಸಂಗೀತ, ಸುಗಮ ಸಂಗೀತ ಮತ್ತು ನೃತ್ಯ ಕಲಾವಿದರಾದ ಎಂ. ಎಸ್. ಶೀಲಾ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿಶ್ವದಾದ್ಯಂತ ಕಾರ್ಯಕ್ರಮ ನೀಡುತ್ತಿರುವ ಇವರಿಗೆ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ಅತ್ಯುತ್ತಮ ಹಿರಿಯ ಗಾಯಕಿ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ರಾಜ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1961: ಮೆಕ್ಫರ್ಲೇನ್ ಆಟಿಕೆ ಸಂಸ್ಥೆ ಸ್ಥಾಪಕ ಟಾಡ್ ಮೆಕ್ಫರ್ಲೇನ್ ಅವರು ಕೆನಡಾದ ಕಾಲ್ಗರಿ ಎಂಬಲ್ಲಿ ಜನಿಸಿದರು.

1914: ಸ್ವಿಟ್ಜರ್ಲ್ಯಾಂಡ್ ದೇಶದ ರಾಜಕಾರಣಿ ನೊಬೆಲ್ ಶಾಂತಿ ಪುರಸ್ಕೃತ ಚಾರ್ಲ್ಸ್ ಆಲ್ಬರ್ಟ್ ಗೊಬಾಟ್ ಅವರು ಬೆರ್ನ್ ಎಂಬಲ್ಲಿ ನಿಧನರಾದರು.

1935: ಸ್ಕಾಟಿಷ್ ವೈದ್ಯ ವಿಜ್ಞಾನಿ ಜಾನ್ ಜೇಮ್ಸ್ ರಿಕ್ಕರ್ಡ್ ಅವರು ಸ್ಕಾಟ್ಲ್ಯಾಂಡಿನ ಅಬೆರ್ಡೀನ್ ಎಂಬಲ್ಲಿ ನಿಧನರಾದರು. ‘ಕಾರ್ಬೋಹೈಡ್ರೇಟ್ ಮೆಟಬಾಲಿಸಂ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1923 ವರ್ಷದ ನೊಬೆಲ್ ವೈದ್ಯಪುರಸ್ಕಾರ ಸಂದಿತ್ತು.

1940: ನೊಬೆಲ್ ಪುರಸ್ಕೃತ ಸ್ವೀಡಿಷ್ ಲೇಖಕಿ ಸೇಲ್ಮಾ ಲೇಗರ್ಲೋಫ್ ಅವರು ಸ್ವೀಡನ್ನಿನ ಮರ್ಬಕ್ಕ ಎಂಬಲ್ಲಿ ನಿಧನರಾದರು. ಇವರ ಮಕ್ಕಳ ಕೃತಿ ‘ನಿಲ್ಸ್ ಹೊಲ್ಗೆರ್ಸನ್ಸ್ ಅಂಡರ್ಬೆರಾ ರೆಸಾ ಜೆನೋಮ್ ಸ್ವೆರಿಗೆ’ (ನಿಲ್ಸನ ಅತ್ಯದ್ಭುತ ಸಾಹಸಗಳು) ಎಂಬ ಕೃತಿ ಅತ್ಯಂತ ಜನಪ್ರಿಯವಾಗಿತ್ತು.

1998: ಇಂಗ್ಲಿಷ್-ಅಮೆರಿಕನ್ ಸಾವಯವ ರಸಾಯನಶಾಸ್ತ್ರ ವಿಜ್ಞಾನಿ ಡೆರೆಕ್ ಬಾರ್ಟನ್ ಅವರು ಅಮೆರಿಕದ ಟೆಕ್ಸಾಸಿನ ಕಾಲೇಜ್ ಸ್ಟೇಷನ್ ಎಂಬಲ್ಲಿ ನಿಧನರಾದರು. ‘ಕಾನ್ಸೆಪ್ಟ್ ಆಫ್ ಕನ್ಫಾರ್ಮೇಶನ್ ಅಂಡ್ ಇಟ್ಸ್ ಅಪ್ಲಿಕೇಶನ್ ಇನ್ ಕೆಮಿಸ್ಟ್ರಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1969 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತ್ತು.

Categories
e-ದಿನ

ಮಾರ್ಚ್-15

ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ

ಗ್ರಾಹಕರ ಹಕ್ಕುಗಳ ಚಳುವಳಿಗಾರ ಅನ್ವರ್ ಫೈಸಲ್ ಅವರ ಶ್ರಮದ ಮೇರೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವದೆಲ್ಲೆಡೆಯಲ್ಲಿರುವ ಎಲ್ಲಾ ಗ್ರಾಹಕರ ಹಕ್ಕುಗಳನ್ನೂ ಗೌರವಿಸಿ, ಸಂರಕ್ಷಿಸುವ ಸಲುವಾಗಿ ಹಾಗೂ ಗ್ರಾಹಕರನ್ನು ಮಾರುಕಟ್ಟೆಯಲ್ಲಿ ದುರುಪಯೋಗಪಡಿಸಿಕೊಳ್ಳುವುದು ಮತ್ತು ಅವರ ಮೇಲಿನ ಸಾಮಾಜಿಕ ಅನ್ಯಾಯಗಳನ್ನು ತಪ್ಪಿಸಲು ಪ್ರತೀ ವರ್ಷ ಮಾರ್ಚ್ 15 ದಿನವನ್ನು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 44: ಮಾರ್ಕಸ್ ಜೂನಿಯಸ್ ಬ್ರೂಟಸ್, ಗೆಯಸ್ ಕಾಸಿಯಸ್ ಲಾಂಗಿನಸ್, ಮತ್ತು ಇನ್ನಿತರ ರೋಮನ್ ಸೆನೆಟರುಗಳ ಕೈವಾಡದಿಂದ ರೋಮನ್ ರಿಪಬ್ಲಿಕ್ ಸರ್ವಾಧಿಕಾರಿಯಾಗಿದ್ದ ಜೂಲಿಯಸ್ ಸೀಸರ್ ಹತ್ಯೆಗೊಳಗಾದ.

1493: ಕ್ರಿಸ್ಟಫರ್ ಕೊಲಂಬಸ್ ತಮ್ಮ ಪ್ರಥಮ ಅಮೆರಿಕದ ಯಾತ್ರೆ ಮುಗಿಸಿ ಸ್ಪೇನ್ಗೆ ಹಿಂದಿರುಗಿದರು

1783: ತಮ್ಮ ಮನಮಿಡಿಯುವ ಭಾಷಣದಲ್ಲಿ ಜಾರ್ಜ್ ವಾಷಿಂಗ್ಟನ್ ಅವರು ತಮ್ಮ ಅಧಿಕಾರಿಗಳನ್ನು ಉದ್ದೇಶಿಸಿ ನ್ಯೂ ಬರ್ಗ್ ಕಾನ್ಸ್ಪಿರೆಸಿಯಲ್ಲಿ ಭಾಗವಹಿಸದಿರಲು ಮನವಿ ಮಾಡಿಕೊಂಡರು. ಈ ಕೋರಿಕೆಯು ಯಶಸ್ವಿಯಾಗಿ ಭಯದ ವಾತಾವಾರಣ ಸೃಷ್ಟಿಸಿದ್ದ ಒಳಸಂಚು ನಡೆಯಲೇ ಇಲ್ಲ

1877: ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಅಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೆಲ್ಬೋರ್ನ್ ನಗರದ ಎಂ.ಸಿ.ಜಿ ಸ್ಟೇಡಿಯಂನಲ್ಲಿ ನಡೆಯಿತು.

1906: ಭವ್ಯ ಕಾರುಗಳು ಮತ್ತು ಏರೋ ಇಂಜಿನ್ ತಯಾರಿಕೆಗೆ ಪ್ರಸಿದ್ಧವಾದ ರೋಲ್ಸ್ ರಾಯ್ಸ್ ಲಿಮಿಟೆಡ್ ಸಂಸ್ಥೆಯು ಇಂಗ್ಲೆಂಡಿನ ಡರ್ಬಿ ಎಂಬಲ್ಲಿ ಸ್ಥಾಪನೆಗೊಂಡಿತು.

1952: ಫ್ರಾನ್ಸಿಗೆ ಸೇರಿದ ಸಿಲೋಸ್ ರೀಯೂನಿಯನ್ ದ್ವೀಪದಲ್ಲಿ ಮಾರ್ಚ್ 15ರಿಂದ ಮಾರ್ಚ್ 16ರ ನಡುವಿನ 24 ಗಂಟೆಗಳಲ್ಲಿ 73 ಇಂಚುಗಳ ದಾಖಲೆಯ ಭೀಕರ ಮಳೆ ಸುರಿಯಿತು

1964: ನಟಿ ಎಲಿಜಬೆತ್ ಟೇಲರ್ ಅವರು ಮಾಂಟ್ರಿಯಲ್ನಲ್ಲಿ ನಟ ರಿಚರ್ಡ್ ಬರ್ಟನ್ ಅವರನ್ನು ಮದುವೆಯಾದರು. ಇದು ಆಕೆಯ ಐದನೇ ಮದುವೆ ಮತ್ತು ರಿಚರ್ಡ್ ಬರ್ಟನ್ ಅವರ ಎರಡನೇ ಮದುವೆ. ಮುಂದೆ ಎಲಿಜಬೆತ್ ತನ್ನ 8ನೇ ಮದುವೆಯನ್ನೂ ಈತನ ಜೊತೆಗೇ ಮಾಡಿಕೊಂಡರು.

1985: ಪ್ರಥಮ ಅಂತರಜಾಲ ತಾಣದ ಹೆಸರಾದ ‘ಸಿಂಬಾಲಿಕ್ಸ್.ಕಾಂ’ ಎನ್ನುವ ಡೊಮೇನ್ ನೇಮ್ ನೊಂದಾಯಿತಗೊಂಡಿತು.

1990: ಮಿಖೈಲ್ ಗೋರ್ಬೆಚವ್ ಅವರು ಸೋವಿಯತ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಗೊಂಡರು.

1991: ಜರ್ಮನಿಯ ಕುರಿತಾದ ಪೂರ್ಣ ಒಮ್ಮತದ ‘ಟ್ರೀಟಿ ಆನ್ ದಿ ಫೈನಲ್ ಸೆಟ್ಟಲ್ಮೆಂಟ್ ವಿಥ್ ರೆಸ್ಪೆಕ್ಟ್ ಟು ಜರ್ಮನಿ’ ಕಾರ್ಯರೂಪಕ್ಕೆ ಬಂದು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಒಂದಾದ ಸಂಪೂರ್ಣ ರಾಷ್ಟ್ರವಾಗಲು ಅನುವು ಮಾಡಿಕೊಡುವ ಸ್ವಾತಂತ್ರ್ಯ ದೊರಕಿದಂತಾಯಿತು. ಈ ಒಪ್ಪಂದದ ಮೇರೆಗೆ ಬ್ರಿಟನ್, ಸೋವಿಯತ್ ಯೂನಿಯನ್ ಮತ್ತು ಫ್ರಾನ್ಸ್ ದೇಶಗಳು ತಮಗೆ ಜರ್ಮನಿಯ ಪ್ರದೇಶಗಳ ಮೇಲಿದ್ದ ಹಕ್ಕುಗಳನ್ನು ಬಿಟ್ಟುಕೊಟ್ಟವು.

2001: ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ಜೊತೆಗೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಅವರು 281 ರನ್ ಗಳಿಸಿ, ಅದುವರೆಗೆ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಅಂದಿನವರೆಗೆ ಅತೀ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗಾವಸ್ಕರ್ ಗಳಿಸಿದ್ದ 236 ರನ್ನುಗಳ ದಾಖಲೆಯನ್ನು ಇದು ಮುರಿಯಿತು.

2006: ಮೆಲ್ಬೋರ್ನಿನಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಸಂಭ್ರಮೋತ್ಸಾಹದ ಮಧ್ಯೆ ಉದ್ಘಾಟನೆಗೊಂಡವು.

2007: ಸುದೀರ್ಘಕಾಲದಿಂದ ಉಚಿತವಾಗಿ ಪ್ರತಿವಾರ ವೈದ್ಯಕೀಯ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದ ಬೆಂಗಳೂರಿನ ವೈದ್ಯರಾದ ಡಾ. ಬಿ. ರಮಣರಾವ್ ಅವರ ಸಾಧನೆ ‘ಲಿಮ್ಕಾ ದಾಖಲೆಗಳ ಪುಸ್ತಕ’ಕ್ಕೆ ಸೇರ್ಪಡೆಗೊಂಡಿತು.

ಪ್ರಮುಖಜನನ/ಮರಣ:

1767: ಆಂಡ್ರ್ಯೂ ಜಾಕ್ಸನ್ ಅವರು ಬ್ರಿಟಿಷ್ ಅಮೆರಿಕದ ಕೆರೋಲಿನಾದಲ್ಲಿ ಜನಿಸಿದರು. ಅಮೆರಿಕಾದ ಸೇನಾ ನಾಯಕರಾಗಿದ್ದ ಇವರು ಅಮೆರಿಕದ ಡೆಮೊಕ್ರೆಟಿಕ್ ಪಕ್ಷವನ್ನು ಸ್ಥಾಪಿಸಿ, 1829-37ರ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷರಾದರು. ಕೇವಲ ಪ್ರತಿಷ್ಟಿತ ಮಂದಿಗೆ ಒಲಿಯುತ್ತಿದ್ದ ಅಮೆರಿಕದ ಅಧ್ಯಕ್ಷ ಪದವಿ ಜನಸಾಮಾನ್ಯನಿಗೂ ಒದಗುವಂತೆ ಪ್ರಾರಂಭ ನೀಡಿದ ಇವರ ನಡೆ ‘ಜಾಕ್ಸೋನಿಯನ್ ಡೆಮೋಕ್ರೆಸಿ’ ಎಂದೇ ಪ್ರಸಿದ್ಧಿ ಪಡೆದಿದೆ.

1839: ನೊಬೆಲ್ ಪುರಸ್ಕೃತ ಜರ್ಮನ್ ಸಾಹಿತಿ ಪಾಲ್ ಹೇಯ್ಸೆ ಅವರು ಬರ್ಲಿನ್ ನಗರದಲ್ಲಿ ಜನಿಸಿದರು. ಕಾದಂಬರಿ, ನಾಟಕ ಮತ್ತು ಸಣ್ಣ ಕತೆಗಳಿಗೆ ಇವರು ಪ್ರಸಿದ್ಧರಾಗಿದ್ದರು.

1854: ಜರ್ಮನಿಯ ವೈದ್ಯ ವಿಜ್ಞಾನಿ ಎಮಿಲ್ ವಾನ್ ಬೆಹ್ರಿಂಗ್ ಅವರು ಈಗಿನ ಪೋಲೆಂಡ್ ದೇಶಕ್ಕೆ ಸೇರಿದ ಹ್ಯಾನ್ಸ್ ಡಾರ್ಫ್ ಎಂಬಲ್ಲಿ ಜನಿಸಿದರು. ಡಿಫ್ತೀರಿಯಾ ರೋಗಕ್ಕೆ ಔಷದ ಕಂಡುಹಿಡಿದ ಇವರು ‘ಮಕ್ಕಳ ಸಂರಕ್ಷರೆಂಬ’ ಕೀರ್ತಿಗೆ ಪಾತ್ರರಾಗಿ 1901 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಪಡೆದರು.

1944: ಮಹಾನ್ ಸಂಗೀತ ವಿದ್ವಾಂಸರೂ, ವೈಣಿಕರೂ, ವಾಗ್ಗೇಯಕಾರರೂ, ಸಂಗೀತ ಗುರುಗಳೂ ಆದ ಪ್ರೊ. ರಾ. ವಿಶ್ವೇಶ್ವರನ್ ಜನಿಸಿದರು. ಮದರಾಸಿನ ಕೃಷ್ಣ ಗಾನ ಸಭಾದ ಸಂಗೀತ ಚೂಡಾಮಣಿ, ರಾಜ್ಯ ಸರಕಾರದ ಸಂಗೀತ ವಿದ್ವಾನ್, ಗಾನ ಕಲಾ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1958: ಪತ್ರಕರ್ತ ಮತ್ತು ಬರಹಗಾರರಾದ ರವಿ ಬೆಳಗೆರೆ ಅವರು ಬಳ್ಳಾರಿಯಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1920: ಅಮೇರಿಕದ ವೈದ್ಯ ವಿಜ್ಞಾನಿ ಇ. ಡೊನ್ನಾಲ್ ಥಾಮಸ್ ಅವರು ಈಗಿನ ಟೆಕ್ಸಾಸ್ ಪ್ರದೇಶದ ಮಾರ್ಟ್ ಎಂಬಲ್ಲಿ ಜನಿಸಿದರು. ‘ಆರ್ಗನ್ ಟ್ರಾನ್ಸ್ ಪ್ಲಾಂಟೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1990 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1930:  ಬೆಲಾರುಸಿಯನ್-ರಷ್ಯನ್ ಭೌತವಿಜ್ಞಾನಿ ಜ್ಹೊರ್ಸ್ ಅಲ್ಫೆರೋವ್ ಸೋವಿಯತ್ ಯೂನಿಯನ್ನಿನ ವಿಟೆಬ್ಸ್ಕ್ ಎಂಬಲ್ಲಿ ಜನಿಸಿದರು. ಹೆಟೆರೊ ಟ್ರಾನ್ಸಿಸ್ಟರ್ ಕುರಿತಾದ ಸಂಶೋಧನೆಗಾಗಿ ಇವರಿಗೆ 2000ದ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1930: ಆಸ್ಟ್ರಿಯನ್-ಅಮೇರಿಕನ್ ರಸಾಯನಶಾಸ್ತ್ರ ವಿಜ್ಞಾನಿ ಮಾರ್ಟಿನ್ ಕಾರ್ ಪ್ಲಸ್ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಜನಿಸಿದರು. ‘ಮಲ್ಟಿ ಸ್ಕೇಲ್ ಮಾಡೆಲ್ಸ್ ಫಾರ್ ಕಾಂಪ್ಲೆಕ್ಸ್ ಕೆಮಿಕಲ್ ಸಿಸ್ಟಮ್ಸ್’ ಕುರಿತ ಅಭಿವೃದ್ಧಿಗಾಗಿ ಇವರಿಗೆ 2013ದ ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1962: ಅಮೆರಿಕದ ಭೌತವಿಜ್ಞಾನಿ ಆರ್ಥರ್ ಕಾಂಪ್ಟನ್ ಕ್ಯಾಲಿಫೋರ್ನಿಯಾದ ಬರ್ಕ್ಲಿ ಎಂಬಲ್ಲಿ ನಿಧನರಾದರು. ‘ಕಾಂಪ್ಟನ್ ಎಫೆಕ್ಟ್’ ಎಂಬ ‘ಪಾರ್ಟಿಕಲ್ ನೇಚರ್ ಅಆಫ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೆಡಿಯೇಷನ್’ ಎಂಬ ಕೊಡುಗೆಗಾಗಿ ಇವರಿಗೆ 1927ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1994: ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯ ಎಂದು ಪ್ರಸಿದ್ಧರಾದ ಎಂ.ಕೆ. ಇಂದಿರಾ ಅವರು ತಮ್ಮ 77ನೇ ವಯಸ್ಸಿನಲ್ಲಿ ನಿಧನರಾದರು. ಕೇವಲ 2ನೇ ತರಗತಿ ಓದಿದರೂ, 48 ಕಾದಂಬರಿಗಳನ್ನೂ, 15 ಸಣ್ಣಕಥಾ ಸಂಕಲನಗಳನ್ನೂ ಮತ್ತು ಆತ್ಮಚರಿತ್ರೆಯನ್ನೂ ಬರೆದ ಅವರ ‘ತುಂಗಭದ್ರ’, ‘ಸದಾನಂದ’, ‘ನವರತ್ನ’, ‘ಫಣಿಯಮ್ಮ’ – ಈ ನಾಲ್ಕು ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು. ಚಲನಚಿತ್ರವಾದ ‘ಫಣಿಯಮ್ಮ’ ರಾಷ್ಟ್ರ ಪ್ರಶಸ್ತಿ ಗಳಿಸಿತು. ‘ಗೆಜ್ಜೆಪೂಜೆ’ ಮತ್ತೊಂದು ಮಹತ್ವದ ಚಿತ್ರವಾಯಿತು. ತೇಜಸ್ವಿ ನಿರಂಜನ ಅವರು ಮೂಡಿಸಿದ ‘ಫಣಿಯಮ್ಮ’ ಕೃತಿಯ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು

2004: ನೊಬೆಲ್ ಪುರಸ್ಕೃತ ಇಂಗ್ಲಿಷ್-ಅಮೆರಿಕನ್ ರಸಾಯನ ಶಾಸ್ತ್ರಜ್ಞ ಜಾನ್ ಪೋಪಲ್ ಅವರು ಚಿಕಾಗೋದಲ್ಲಿ ನಿಧನರಾದರು. ‘ಕಂಪ್ಯುಟೇಶನಲ್ ಮೆಥಡ್ಸ್ ಇನ್ ಕ್ವಾಂಟಮ್ ಥಿಯರಿ’ ಕುರಿತಾದ ಇವರ ಕೊಡುಗೆಗಾಗಿ 1998 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2006: ದಕ್ಷಿಣ ಭಾರತದ ಚಿತ್ರಗಳ, ಪ್ರಮುಖವಾಗಿ ಮಲಯಾಳಂ ಚಲನಚಿತ್ರಗಳ ಸಂಗೀತ ನಿರ್ದೇಶಕರಾಗಿದ್ದ ಜಿ. ದೇವರಾಜನ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಮಲಯಾಳಂ ಅಲ್ಲದೆ ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಸಹಾ ಇವರ ಸಂಗೀತ ಹರಿದಿತ್ತು. ಇವರಿಗೆ ಕೇರಳ ಸರ್ಕಾರದ ಚಲನಚಿತ್ರ ಸಂಗೀತ ಮತ್ತು ಹಿನ್ನೆಲೆ ಸಂಗೀತಕ್ಕೆ ಐದು ಪ್ರಶಸ್ತಿಗಳು ಮತ್ತು ಜೀವಮಾನ ಸಾಧನೆಯ ಪ್ರಶಸ್ತಿ ಸಂದಿತ್ತು.

Categories
e-ದಿನ

ಮಾರ್ಚ್-14

ಪ್ರಮುಖಘಟನಾವಳಿಗಳು:

1663: ಜರ್ಮನ್ ವಿಜ್ಞಾನಿ ಓಟ್ಟೋ ವಾನ್ ಗ್ಯೂರಿಕೆ ಅವರು ‘ವ್ಯಾಕ್ಯೂಮ್ಸ್’ ಕುರಿತಾದ ತಮ್ಮ ಪ್ರಸಿದ್ಧ ಕೃತಿಯನ್ನು ಪೂರ್ಣಗೊಳಿಸಿದರು.

1794: ಎಲಿ ವಿಟ್ನಿ ಅವರು ಹತ್ತಿಯನ್ನು ಬೀಜದಿಂದ ಬೇರ್ಪಡಿಸುವ ‘ಕಾಟನ್ ಜಿನ್’ (ಹತ್ತಿಯ ರಾಟೆ)ಗೆ ಪೇಟೆಂಟ್ ಪಡೆದರು.

1931: ಭಾರತದ ಮೊಟ್ಟ ಮೊದಲ ಮಾತಿನ ಚಿತ್ರ ‘ಅಲಂ ಅರಾ’ ಮುಂಬೈನ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಅರ್ಡೆಶಿರ್ ಎಂ. ಇರಾನಿ ನಿರ್ದೇಶನದ ಈ ಚಿತ್ರವನ್ನು ಇಂಪೀರಿಯಲ್ ಕಂಪೆನಿ ನಿರ್ಮಿಸಿತು. ಮಾಸ್ಟರ್ ವಿಠಲ್, ಜುಬೇದಾ, ಪೃಥ್ವಿರಾಜ್ ಕಪೂರ್ ಅವರುಗಳು ಪ್ರಮುಖ ಪಾತ್ರದಲ್ಲಿದ್ದರು.

1942: ಅಮೆರಿಕದಲ್ಲಿ ಒರ್ವಾನ್ ಹೆಸ್ ಮತ್ತು ಜಾನ್ ಬಮ್ಸ್ಟೆಡ್ ಅವರು ಪೆನ್ಸಿಲಿನ್ ಉಪಯೋಗಿಸಿ ಯಶಸ್ವಿಯಾಗಿ ಆನ್ ಮಿಲ್ಲರ್ ಎಂಬವರಿಗೆ ಚಿಕಿತ್ಸೆ ನೀಡಿದ ಕೀರ್ತಿಗೆ ಪಾತ್ರರಾದರು

1948: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಿಂಧಿಯಾ ನೆವಿಗೇಷನ್ ಕಂಪೆನಿಯ ಎಸ್. ಎಸ್. ಜಲಉಷಾ ಹಡಗಿಗೆ ಚಾಲನೆ ನೀಡಿದರು. ವಿಶಾಖಪಟ್ಟಣದಲ್ಲಿ ನಿರ್ಮಿಸಲಾದ ಇದು ಭಾರತದಲ್ಲೇ ನಿರ್ಮಿತಗೊಂಡ ಮೊತ್ತ ಮೊದಲ ಹಡಗಾಗಿದೆ.

1962: ಶಿವಲಿಂಗಪ್ಪ ಆರ್. ಕಂಠಿ ಅವರು ಮೈಸೂರು ರಾಜ್ಯದ ಆರನೇ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಕೇವಲ 96 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಈ ಹಿಂದೆ ವಿದಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದ ಇವರು ಮುಂದೆ, ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಶಿಕ್ಷಣ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು.

1994: ಮುಕ್ತ ತಂತ್ರಜ್ಞಾನದಲ್ಲಿ ರೂಪುಗೊಂಡ ಕಂಪ್ಯೂಟರ್ ಚಾಲನಾ ವ್ಯವಸ್ಥೆಯಾದ ಲಿನಕ್ಸ್ ಆಪರೇಟಿಂಗ್ ಸಿಸ್ಟಮಿನ ಪ್ರಥಮ ಅವತರಣಿಕೆ – ‘ವರ್ರ್ಷನ್ 1.0.0’ ಬಿಡುಗಡೆಗೊಂಡಿತು

1995: ನಾರ್ಮನ್ ಥಗಾರ್ಡ್ ಅವರು ರಷ್ಯಾದ ರಾಕೆಟ್ಟಿನ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಪ್ರಥಮ ಅಮೆರಿಕದ ಗಗನ ಯಾತ್ರಿ ಎನಿಸಿದರು.

2007: ಪಶ್ಚಿಮ ಬಂಗಾಳದ ಎಡಪಕ್ಷ ಸರ್ಕಾರವು ಭೂಮಿ ಉಚ್ಚೇದ್ ಪ್ರತಿರೋದ್ ಸಮಿತಿಯ ಪ್ರತಿಭಟನೆಯನ್ನು ಹತ್ತಿಕ್ಕಲು ನಂದಿಗ್ರಾಮಕ್ಕೆ 3000 ಪೋಲೀಸ್ ಪಡೆಯನ್ನು ಕಳುಹಿಸಿಕೊಟ್ಟಿತು. ಈ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ 14 ಸಾವು ಸಂಭವಿಸಿತು.

2008: ಕರ್ನಾಟಕ ಹೈಕೋರ್ಟಿನಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ನ್ಯಾಯಮೂರ್ತಿ ಅರಳಿ ನಾಗರಾಜ್ ಚಾರಿತ್ರಿಕ ದಾಖಲೆ ನಿರ್ಮಿಸಿದರು.

2007: ಸಾಹಿತ್ಯ ಸೇವೆಗಾಗಿ ಕರ್ನಾಟಕ ಸರ್ಕಾರವು ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಮತ್ತು ಲೇಖಕಿಯರಿಗೆ ನೀಡಲಾಗುವ ‘ದಾನ ಚಿಂತಾಮಣಿ ಅತ್ತಿಮಬ್ಬೆ’ ಪ್ರಶಸ್ತಿಗೆ ಹಿರಿಯ ಬರಹಗಾರ್ತಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಆಯ್ಕೆಯಾದರು.

2008: ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕೆ ಬಂದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹತ್ತು ವರ್ಷ ಕಾಲ ಯಶಸ್ವಿಯಾಗಿ ನಿಭಾಯಿಸಿ ಸಕ್ರಿಯ ರಾಜಕಾರಣದಲ್ಲಿ ದಶಮಾನೋತ್ಸವ ಆಚರಿಸಿದ ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ವಿಶೇಷ ಅಧಿವೇಶನದಲ್ಲಿ ಗೌರವ ಸೂಚಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಪ್ರಮುಖಜನನ/ಮರಣ:

1854: ಜರ್ಮನಿಯ ಪ್ರಸಿದ್ಧ ವೈದ್ಯ ವಿಜ್ಞಾನಿ ಮತ್ತು ಜೀವವಿಜ್ಞಾನಿ ಪಾಲ್ ಎಹ್ರ್ಲಿಚ್ ಅವರು ಜರ್ಮನಿಯ ಸ್ಟ್ರೆಹ್ಲೆನ್ ಎಂಬಲ್ಲಿ ಜನಿಸಿದರು. ಇಮ್ಯುನಾಲಜಿ ಕುರಿತಾದ ಕೊಡುಗೆಗಾಗಿ ಇವರಿಗೆ 1908ರ ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಲ್ಲಿಸಲಾಗಿತ್ತು.

1874: ಡಚ್ ಉದ್ಯಮಿ ಫಿಲಿಪ್ಸ್ ಸಂಸ್ಥೆಯ ಸಹಸಂಸ್ಥಾಪಕರದ ಆಂಟನ್ ಫಿಲಿಪ್ಸ್ ಅವರು ನೆದರ್ಲ್ಯಾಂಡ್ಸ್ ದೇಶದಲ್ಲಿ ಜನಿಸಿದರು. ತಮ್ಮ ತಂದೆಯವರೊಡಗೂಡಿ ಪ್ರಸಿದ್ಧ ಫಿಲಿಪ್ಸ್ ಉದ್ಯಮವನ್ನು ಸ್ಥಾಪಿಸಿದ ಇವರು, 1922-39 ಅವಧಿಯಲ್ಲಿ ಆ ಸಂಸ್ಥೆಯ ಪ್ರಧಾನರಾಗಿ (ಸಿ.ಇ.ಓ. ಆಗಿ) ಕಾರ್ಯನಿರ್ವಹಿಸಿದರು.

1879: ವಿಶ್ವ ಕಂಡ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಆಲ್ಬರ್ಟ್ ಐನ್ ಸ್ಟೈನರು ಜರ್ಮನಿಯ ಉರ್ಟೆಂಬರಿನ ಉಲ್ಮ್ ಎಂಬಲ್ಲಿ ಜನಿಸಿದರು. ಬ್ರೌನಿಯನ್ ಚಲನೆ, ದ್ಯುತಿ ವಿದ್ಯುತ್ ಪರಿಣಾಮ, ಹೊಸ ಸಾಪೇಕ್ಷ ಸಿದ್ಧಾಂತ ಮುಂತಾದ ವಿಷಯಗಳಲ್ಲಿ ಮಹತ್ವದ ವಿಜ್ಞಾನದ ವಿಸ್ಮಯಗಳನ್ನು ತೆರೆದಿಟ್ಟ ಇವರಿಗೆ ಬಹಳಷ್ಟು ಯೂರೋಪ್ ಮತ್ತು ಅಮೇರಿಕಾ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಗೌರವಗಳು ಸಂದವು. ಜೊತೆಗೆ ನೊಬೆಲ್ ಪಾರಿತೋಷಕವೇ ಅಲ್ಲದೆ ರಾಯಲ್ ಸೊಸೈಟಿ ಪಾರಿತೋಷಕ, ಫ್ರಾಂಕ್ಲಿನ್ ಪಾರಿತೋಷಕ, ಮುಂತಾದ ಅನೇಕ ಗೌರವಗಳು ಸಹಾ ಅವರನ್ನರಸಿ ಬಂದವು.

1887: ಅಮೆರಿಕನ್-ಫ್ರೆಂಚ್ ಪ್ರಕಾಶಕ ‘ಶೇಕ್ಸ್ಪಿಯರ್ ಅಂಡ್ ಕಂಪೆನಿ’ ಸ್ಥಾಪಕ ಸಿಲ್ವಿಯಾ ಬೀಚ್ ಅವರು ಅಮೆರಿಕದ ಬಾಲ್ಟಿಮೋರ್ ಪಟ್ಟಣದಲ್ಲಿ ಜನಿಸಿದರು.

1920: ‘ಡೆನ್ನಿಸ್ ದಿ ಮೆನೇಸ್’ ಸೃಷ್ಟಿಕರ್ತ ವ್ಯಂಗ್ಯಚಿತ್ರಕಾರ ಹ್ಯಾಂಕ್ ಕೆಚಮ್ ಅವರು ಅಮೆರಿಕದ ಸೀಟಲ್ ನಗರದಲ್ಲಿ ಜನಿಸಿದರು.

1928: ಮೊಟ್ಟ ಮೊದಲ ಗಗನಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಕ್ ಬೋರ್ಮನ್ ಅವರು, ಅಮೆರಿಕದ ಇಂಡಿಯಾನಾ ಪ್ರದೇಶದ ಗ್ಯಾರಿ ಎಂಬಲ್ಲಿ ಜನಿಸಿದರು. ಇವರು ಜೇಮ್ಸ್ ಎ ಲೋವೆಲ್ ಮತ್ತು ವಿಲಿಯಂ ಅವರ ಜೊತೆಗೆ ಅಪೋಲೊ 8ರ ಮೂಲಕ 1968ರಲ್ಲಿ ಚಂದ್ರನಿಗೆ ಸುತ್ತು ಹಾಕಿದರು. ಮಾನವ ಸಹಿತವಾಗಿ ಬಾಹ್ಯಾಕಾಶ ನೌಕೆ ಮೂಲಕ ಚಂದ್ರನಿಗೆ ಪ್ರದಕ್ಷಿಣೆ ಹಾಕಿದ ಮೊದಲ ಗಗನಯಾನವಿದು.

1941: ಉಭಯಗಾನ ವಿದುಷಿ ಎಂದೇ ಹೆಸರು ಪಡೆದಿರುವ ಶ್ಯಾಮಲಾ ಜಿ. ಭಾವೆ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿಶ್ವದಾದ್ಯಂತ ಅನೇಕ ಸಂಗೀತ ಕಚೇರಿಗಳನ್ನು ನೀಡಿ ಅನೇಕ ಶಿಷ್ಯರನ್ನು ತಯಾರು ಮಾಡುತ್ತಾ ಬಂದಿರುವ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸುರ್ ಸಿಂಗಾರ್ ಪ್ರಶಸ್ತಿ, ಅನೇಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಮುಂತಾದ ಗೌರವಗಳು ಸಂದಿವೆ.

1965: ಜನಪ್ರಿಯ ಹಿಂದೀ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಮತ್ತು ಕಿರುತೆರೆಯ ಕಾರ್ಯಕ್ರಮ ನಿರ್ವಾಹಕ ಅಮೀರ್ ಖಾನ್ ಅವರು ಮುಂಬೈನಲ್ಲಿ ಜನಿಸಿದರು. ಹಲವಾರು ಫಿಲಂ ಫೇರ್ ಪ್ರಶಸ್ತಿಗಳಲ್ಲದೆ ಪದ್ಮಶ್ರೀ, ಪದ್ಮಭೂಷಣ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.

1972: ಕವಯತ್ರಿ ಮತ್ತು ಹೋರಾಟಗಾರ್ತಿ ಐರೋಮ್ ಚನು ಶರ್ಮಿಳ ಮಣಿಪುರದ ಕಾಂಗ್ಪಾಲ್ ಎಂಬಲ್ಲಿ ಜನಿಸಿದರು. ನವೆಂಬರ್ 2, 2000 ದಿನಾಂಕದಿಂದ ಆಗಸ್ಟ್ 9, 2016ರ ವರೆಗೆ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಮಾಡಿದ ಅಪೂರ್ವ ಹೋರಾಟಗಾರ್ತಿ ಈಕೆ. ಮಾಲ್ಕಂ ಮಾರಣ ಹೋಮದ ಸಂದರ್ಭದಲ್ಲಿ ಮನನೊಂದ ಆಕೆ, ಭಾರತೀಯ ಸೇನೆಗೆ ಇರುವ ವಿಶೇಷ ಅಧಿಕಾರವನ್ನು ಕಿತ್ತುಹಾಕಬೇಕು ಎಂಬ ಒತ್ತಡದ ಮೇರೆಗೆ ಈ ಹೋರಾಟ ಉಪವಾಸಗಳನ್ನು ನಡೆಸಿದರು.

1974: ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರೋಹಿತ್ ಶೆಟ್ಟಿ ಅವರು ಮುಂಬೈನಲ್ಲಿ ಜನಿಸಿದರು. ಇವರ ತಂದೆ ಮುದ್ದು ಬಾಬು ಶೆಟ್ಟಿ ಅವರು ಮೂಲತಃ ಕರ್ನಾಟಕದ ಉಡುಪಿಯವರಾಗಿದ್ದು ಹಿಂದೀ ಮತ್ತು ಕನ್ನಡ ಚಲನಚಿತ್ರ’ಗಳಲ್ಲಿ ಸಾಹಸ ಚಿತ್ರಣಗಳ ಸಂಯೋಜಕರಾಗಿ, ಖಳ ನಟರಾಗಿ ಪ್ರಸಿದ್ಧಿ ಪಡೆದಿದ್ದರು.

1883: ಕಮ್ಯುನಿಸಂ ಚಿಂತನೆಯ ಮೂಲಪುರುಷರೆಂದು ಪರಿಗಣಿಸಲ್ಪಡುವ ಕಾರ್ಲ್ ಮಾರ್ಕ್ಸ್ ಅವರು ಲಂಡನ್ನಿನಲ್ಲಿ ನಿಧನರಾದರು. ತತ್ವಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಾಮಾಜಿಕಶಾಸ್ತ್ರಜ್ಞ, ಇತಿಹಾಸಜ್ಞ, ಪತ್ರಕರ್ತ ಹೀಗೆ ಹಲವು ಆಯಾಮಗಳು ಈ ಅಪೂರ್ವ ವ್ಯಕ್ತಿಯಲ್ಲಿ ಮೇಳೈಸಿದ್ದವು. ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಬಂಡೆದ್ದ ಇವರ ಚಿಂತನೆಗಳು ಕಮ್ಯೂನಿಸಮ್ ಎಂಬ ಹೊಸ ಪ್ರಪಂಚವನ್ನೇ ಸೃಷ್ಟಿಸಿತು.

1932: ಈಸ್ಟ್ಮನ್ ಕೊಡಕ್ ಸಂಸ್ಥೆಯ ಸ್ಥಾಪಕ, ಕೋಡಕ್ ಫಿಲಂ ಸಂಶೋಧಕ ಜಾರ್ಜ್ ಈಸ್ಟ್ ಮನ್ ಅವರು ನ್ಯೂಯಾರ್ಕಿನ ರೋಚೆಸ್ಟರ್ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಛಾಯಾಗ್ರಹಣ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಫಿಲಂ ರೋಲ್ ತಯಾರಿಕೆಯಲ್ಲಿ ಪ್ರಸಿದ್ಧ ಹೆಸರಾಗಿದ್ದ ಇವರು ಬೆನ್ನು ಮೂಳೆಯ ಬಾಧೆಯಿಂದ ತೀವ್ರ ಬಾಧೆ ಅನುಭವಿಸಿದವರಾಗಿ “ನನ್ನ ಕೆಲಸವೆಲ್ಲವೂ ಮುಗಿದಿದೆ, ಸುಮ್ಮನೆ ಏತಕ್ಕಾಗಿ ಕಾಯುವುದು” ಎಂಬ ಸಂದೇಶವನ್ನು ತಮ್ಮ ಮಿತ್ರರಿಗೆ ಉದ್ಧೇಶಿಸಿ ಚೀಟಿಯಲ್ಲಿ ಬರೆದು ಗುಂಡಿನೇಟಿನ ಮೂಲಕ ತಮ್ಮ 77 ವರ್ಷಗಳ ಬದುಕಿಗೆ ಮುಕ್ತಾಯ ಹಾಡಿದರು.

1995: ಅಮೆರಿಕದ ಭೌತಶಾಸ್ತ್ರಜ್ಞ ಮತ್ತು ಖಗೋಳತಜ್ಞ ವಿಲಿಯಂ ಆಲ್ಫ್ರೆಡ್ ಫೌಲರ್ ಕ್ಯಾಲಿಫೋರ್ನಿಯಾದ ಪಸಡೆನ ಎಂಬಲ್ಲಿ ನಿಧನರಾದರು. ಇವರು ಭಾರತೀಯ ಮೂಲ ಸಂಜಾತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜೊತೆಗೆ ತಮ್ಮ ‘ನ್ಯೂಕ್ಲಿಯರ್ ರಿಯಾಕ್ಷನ್ಸ್’ ಸಂಶೋಧನೆಗಾಗಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿಯನ್ನು 1983 ವರ್ಷದಲ್ಲಿ ಹಂಚಿಕೊಂಡರು.

 

Categories
e-ದಿನ

ಮಾರ್ಚ್-13

ಪ್ರಮುಖಘಟನಾವಳಿಗಳು:

624: ಮುಹಮ್ಮದ್ ಅವರ ಜೊತೆಗೂಡಿದ ನೂತನ ಇಸ್ಲಾಂ ಅನುಯಾಯಿಗಳ ಸೈನ್ಯ ಮತ್ತು ಮೆಕ್ಕಾದ ಸ್ಥಳೀಯ ಕುರೇಯಿಷ್ ಅವರುಗಳ ನಡುವಣ ಪಶ್ಚಿಮ ಅರೇಬಿಯಾದ ಹೆಜಾಸ್ ಎಂಬಲ್ಲಿ ನಡೆದ ‘ಬದರ್’ ಕದನದಲ್ಲಿ ಮುಹಮ್ಮದ್ ನೇತೃತ್ವದ ಮುಸ್ಲಿಮರ ಸೈನ್ಯಕ್ಕೆ ಗೆಲುವು ದೊರಕಿತು. ಇದು ಇಸ್ಲಾಂ ಬೆಳವಣಿಗೆಯಲ್ಲಿ ಮಹತ್ವದ ಘಟನೆಯಾಯಿತು.

1639: ಹಾರ್ವರ್ಡ್ ವಿಶ್ವವಿದ್ಯಾಲಯವಾದ ‘ಹಾರ್ವರ್ಡ್ ಕಾಲೇಜಿಗೆ’ ಪಾದ್ರಿ ಜಾನ್ ಹಾರ್ವರ್ಡ್ ಅವರ ಹೆಸರನ್ನಿರಿಸಲಾಯಿತು.

1781: ಸರ್ ವಿಲಿಯಂ ಹರ್ಷೆಲ್ ‘ಯುರೇನಸ್’ ಗ್ರಹವನ್ನು ಅನ್ವೇಷಿಸಿದರು.

1852: ‘ನ್ಯೂಯಾರ್ಕ್ ಲ್ಯಾಂಟರ್ನ್’ ನಲ್ಲಿ ಕಾರ್ಟೂನ್ ಪಾತ್ರವಾಗಿ ‘ಅಂಕಲ್ ಸ್ಯಾಮ್’ ಪರಿಚಿತಗೊಂಡಿತು.

1878: ಪ್ರಾದೇಶಿಕ ಪತ್ರಿಕೆಗಳನ್ನು ನಿಯಂತ್ರಿಸಲು ಭಾಷಾವಾರು ಪತ್ರಿಕಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಮರುದಿನವೇ ‘ಅಮೃತ ಬಜಾರ್ ಪತ್ರಿಕಾ’ ಇಂಗ್ಲಿಷ್ ಸುದ್ದಿ ಪತ್ರಿಕೆಯಾಯಿತು.

1930: ಪ್ಲೂಟೋದ ಅನ್ವೇಷಣಾ ಸುದ್ಧಿಯು ಹಾರ್ವರ್ಡ್ ಕಾಲೇಜ್ ವೀಕ್ಷಣಾಲಯಕ್ಕೆ ಟೆಲಿಗ್ರಾಫ್ ಸುದ್ಧಿಯಾಗಿ ಬಂತು.

1933: ಆರ್ಥಿಕ ಅಧಃಪತನದ ಕಾಲವಾದ ‘ಗ್ರೇಟ್ ಡಿಪ್ರೆಷನ್’ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅವರು ಘೋಷಿಸಿದ್ದ ಬ್ಯಾಂಕ್ ರಜೆಗಳಿಂದ, ಕ್ರಮೇಣವಾಗಿ ಬ್ಯಾಂಕುಗಳು ಪುನರಾರಂಭಗೊಂಡವು.

1969: ಚಂದ್ರನ ಮೇಲೆ ತನ್ನ ಪ್ರಯೋಗಗಳನ್ನು ಯಶಸ್ವಿಯಾಗಿ ಕೈಗೊಂಡ ಅಪೋಲೋ 9 ಕ್ಷೇಮವಾಗಿ ಭುವಿಗೆ ಹಿಂದಿರುಗಿತು.

1981: ಐವತ್ಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಕವಿ ಪು.ತಿ. ನರಸಿಂಹಾಚಾರ್ಯರ ಸಮ್ಮೇಳನಾಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನಲ್ಲಿ ಆರಂಭಗೊಂಡಿತು.

1986: ಮೈಕ್ರೋಸಾಫ್ಟ್ ಕಂಪೆನಿಯ ಷೇರು ವಹಿವಾಟು (ಸ್ಟಾಕ್ ಟ್ರೇಡಿಂಗ್) ಆರಂಭಗೊಂಡಿತು.

1997: ಭಾರತದ ಮಿಷಿನರೀಸ್ ಆಫ್ ಚಾರಿಟಿ ಸಂಘಟನೆಯು ಮದರ್ ತೆರೇಸಾ ಅವರ ಉತ್ತರಾಧಿಕಾರಿಯಾಗಿ ಸಹೋದರಿ ನಿರ್ಮಲಾ ಅವರನ್ನು ನೇಮಿಸಿತು.

2003: ಮಾನವ ವಿಕಾಸದ ಕುರಿತಾದ ಒಂದು ವಿಶಿಷ್ಟ ವರದಿ: ‘ನೇಚರ್’ ಪತ್ರಿಕೆಯು ಇಟಲಿಯಲ್ಲಿ ಮೂರೂವರೆ ಲಕ್ಷ ವರ್ಷಗಳ ಹಿಂದೆ ನೇರವಾಗಿ ನಡೆದ ಮಾನವನ ಪಾದದ ಗುರುತು ಕಂಡಿದೆ ಎಂದು ವರದಿ ಮಾಡಿತು.

ಪ್ರಮುಖಜನನ/ಮರಣ:

1855: ಅಮೆರಿಕದ ಉದ್ಯಮಿ, ಬರಹಗಾರ, ಗಣಿತಜ್ಞ ಮತ್ತು ಖಗೋಳ ತಜ್ಞ ಪರ್ಸೀವಲ್ ಲಾರೆನ್ಸ್ ಲೋವೆಲ್ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಇವರು ಲೋವೆಲ್ ಅಬ್ಸರ್ವೇಟರಿ ಸೃಷ್ಟಿಸಿ ಪ್ಲೂಟೋ ಕುರಿತು ಅನ್ವೇಷಣೆಗೆ ಅಡಿಪಾಯ ಹಾಕಿದರು. ಇವರ ನಿಧನಾನಂತರದಲ್ಲಿ ಈ ಅನ್ವೇಷಣೆ ಫಲ ನೀಡಿ ಪ್ಲೂಟೋದ ಅನ್ವೇಷಣೆ ಯಶಸ್ವಿಯಾಯಿತು.

1899: ಅಮೆರಿಕದ ಭೌತವಿಜ್ಞಾನಿ ಮತ್ತು ಗಣಿತಜ್ಞ ಜಾನ್ ಹಾಸ್ಬ್ರೌಕ್ ವ್ಯಾನ್ ವ್ಲೆಕ್ ಅವರು ಕನೆಕ್ಟಿಕಟ್ ಪ್ರದೇಶದ ಮಿಡಲ್ ಟೌನ್ ಎಂಬಲ್ಲಿ ಜನಿಸಿದರು. ಎಲೆಕ್ಟ್ರಾನ್ಸ್ ಇನ್ ಮ್ಯಾಗ್ನೆಟಿಕ್ ಸಾಲಿಡ್ಸ್ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿದೆ.

1900: ನೊಬೆಲ್ ಪುರಸ್ಕೃತ ಗ್ರೀಕ್ ಸಾಹಿತಿ ಜಿಯೋರ್ಗೋಸ್ ಸೆಫೆರಿಸ್ ಒಟ್ಟೋಮನ್ ಸಾಮ್ರಾಜ್ಯದ ಉರ್ಲಾ ಎಂಬಲ್ಲಿ ಜನಿಸಿದರು. ಇವರು 20ನೇ ಶತಮಾನದ ಮಹತ್ವದ ಕವಿಗಳಲ್ಲಿ ಒಬ್ಬರೆಂದು ಪ್ರಖ್ಯಾತರಾಗಿದ್ದಾರೆ.

1800: ಮರಾಠರ ಪೇಶ್ವೆ ಆಡಳಿತಕಾಲದ ಅತ್ಯಂತ ಚತುರ ರಾಜಕಾರಣಿ, ಮಂತ್ರಿ ಎನಿಸಿದ್ದ ನಾನಾ ಫಡ್ನವಿಸ್ ಅವರು ಪುಣೆಯಲ್ಲಿ ನಿಧನರಾದರು. ಇಂಗ್ಲಿಷರು ಇವರನ್ನು ‘ಮರಾಠ ಮಚಿಯವೆಲ್ಲಿ’ ಎಂದು ಶ್ಲಾಘಿಸುತ್ತಿದ್ದರು.

1975: ನೊಬೆಲ್ ಪುರಸ್ಕೃತ ಯುಗೋಸ್ಲಾವಿಯಾದ ಸಾಹಿತಿ ಇವೋ ಆಂಡ್ರಿಕ್ ಅವರು ಬೆಲ್ಗ್ರೇಡ್ ನಗರದಲ್ಲಿ ನಿಧನರಾದರು. ಬೋಸ್ನಿಯನ್ ಮತ್ತು ಒಟ್ಟೋಮನ್ ಕುರಿತಾದ ವಿಚಾರಗಳು ಇವರ ಬರಹಗಳಲ್ಲಿ ತುಂಬಿದ್ದು, ಕತೆ, ಕಾದಂಬರಿ ಮತ್ತು ಕಾವ್ಯಗಳಲ್ಲಿ ಇವರ ಸಾಹಿತ್ಯ ಹರಿದಿತ್ತು. 1961 ವರ್ಷದಲ್ಲಿ ಇವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತ್ತು.

2004: ಭಾರತದ ಪ್ರಖ್ಯಾತ ಸಿತಾರ್ ವಾದಕ ಮತ್ತು ಹಿಂದೂಸ್ಥಾನಿ ಸಂಗೀತ ವಿದ್ವಾಂಸ ಉಸ್ತಾದ್ ವಿಲಾಯತ್ ಖಾನ್ ನಿಧನರಾದರು. ಪಾಶ್ಚಿಮಾತ್ಯ ದೇಶದವರಿಗೆ ಭಾರತೀಯ ಸಂಗೀತವನ್ನು ತಲುಪಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದ ಇವರು ಸತ್ಯಜಿತ್ ರೇ ಅವರ ಚಿತ್ರವನ್ನೂ ಒಳಗೊಂಡ ಹಾಗೆ ಮೂರು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದರು. ಇವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ನೀಡಿದಾಗ ಅವರು ಅದನ್ನು ನಿರಾಕರಿಸಿದರು. ಅಂತೆಯೇ ಅವರು ಸಂಗೀತ ನಾಟಕ ಅಕಾಡೆಮಿ ಗೌರವವನ್ನೂ ತೀರಸ್ಕರಿಸಿದ್ದರು.

Categories
e-ದಿನ

ಮಾರ್ಚ್-12

ಪ್ರಮುಖಘಟನಾವಳಿಗಳು:

1881: ಆಂಡ್ರ್ಯೂ ವಾಟ್ಸನ್ ಅವರು ಸ್ಕಾಟ್ಲೆಂಡ್ ಪರವಾಗಿ ಮೊದಲ ಬಾರಿಗೆ ಆಡುವುದರ ಮೂಲಕ ಅಂತರರಾಷ್ಟ್ರೀಯ ಮಟ್ಟದ ಅಸೋಸಿಯೇಶನ್ ಫುಟ್ಬಾಲ್ ಕ್ರೀಡಾಂಕಣದಲ್ಲಿ ಪಾಲ್ಗೊಂಡ ಪ್ರಪ್ರಥಮ ಕರಿಯ ವ್ಯಕ್ತಿ ಎನಿಸಿದರು.

1894: ಕೋಕಾ-ಕೋಲಾ ಪಾನೀಯವನ್ನು ಮಿಸಿಸಿಪಿಯ ವಿಕ್ಸ್ಬರ್ಗಿನ ಸ್ಥಳೀಯ ಸೋಡಾ ಫೌಂಟೆನ್ ನಡೆಸುತ್ತಿದ್ದ ಬೀಡೆನ್ ಹಾರ್ನ್ ಎಂಬುವರು ಪ್ರಥಮಬಾರಿಗೆ ಬಾಟಲಿನಲ್ಲಿ ತುಂಬಿ ಮಾರಾಟ ಮಾಡಿದರು.

1918: ಮಾಸ್ಕೋ ಮತ್ತೊಮ್ಮೆ ರಷ್ಯಾದ ರಾಜಧಾನಿಯಾಯಿತು. 215 ವರ್ಷಗಳ ಕಾಲ ಈ ಸ್ಥಾನವನ್ನು ಅದು ಸೈಂಟ್ ಪೀಟರ್ಸ್ಬರ್ಗಿಗೆ ಕೊಟ್ಟಿತ್ತು.

1930: ಮಹಾತ್ಮಾ ಗಾಂಧೀಜಿಯವರು ಉಪ್ಪು ಉತ್ಪಾದನೆಯಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಬ್ರಿಟಿಷ್ ಕಾನೂನನ್ನು ಉಲ್ಲಂಘಿಸುವ ಉಪ್ಪಿನ ಸತ್ಯಾಗ್ರಹಕ್ಕಾಗಿ 24 ದಿನಗಳ 390 ಕಿಲೋಮೀಟರ್ ದೂರದ ‘ದಂಡಿ ಯಾತ್ರೆ’ಯನ್ನು ಪ್ರಾರಂಭಿಸಿದರು.

1954: ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಡಾ. ಎಸ್. ರಾಧಾಕೃಷ್ಣನ್ ಅವರು ನವದೆಹಲಿಯಲ್ಲಿ ಉದ್ಘಾಟಿಸಿದರು.

1993: ಮುಂಬೈನಲ್ಲಿ ಇಪ್ಪತ್ತೊಂಬತ್ತು ಮಹಡಿಗಳ ಷೇರು ವಿನಿಮಯ ಕಟ್ಟಡ ಮತ್ತು ಏರ್ ಇಂಡಿಯಾ ಕಟ್ಟಡ ಸೇರಿದಂತೆ ಮುಂಬೈಯಲ್ಲಿ ಹಲವೆಡೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದವು. ಈ ಸ್ಫೋಟಗಳಲ್ಲಿ 317 ಜನ ಮೃತರಾಗಿ 1100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಒಂದು ದಿನದ ಸೀಮಿತ 50 ಓವರುಗಳ ಪಂದ್ಯದಲ್ಲಿ ‘ಯಾವುದೇ ತಂಡವೇ ಆದರೂ 400 ರನ್ನುಗಳನ್ನು ಗಳಿಸುವುದು ಸಾಧ್ಯವೇ?’ ಎಂಬ ಊಹೆಯ ಪ್ರಶ್ನೆಗೆ, ‘ಸಾಧ್ಯ’ ಎಂಬ ಉತ್ತರ ಈ ದಿನ ಲಭ್ಯವಾಯಿತು. 50 ಓವರುಗಳಲ್ಲಿ ಆಸ್ಟ್ರೇಲಿಯಾ ಮೂಡಿಸಿದ ವಿಶ್ವದಾಖಲೆಯ 434 ರನ್ನುಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ, ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿ, ಐದು ಪಂದ್ಯಗಳ ಸರಣಿಯನ್ನು 3-2ರ ಅಂತರದಲ್ಲಿ ಗೆದ್ದುಕೊಂಡಿತು. ವಿಶ್ವಕಪ್ ಕ್ರಿಕೆಟಿನಲ್ಲಿ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 398 ರನ್ ಗಳಿಸಿದ್ದು ಇದುವರೆಗಿನ ಏಕದಿನ ಪಂದ್ಯಗಳಲ್ಲಿನ ಅತ್ಯಧಿಕ ಮೊತ್ತವಾಗಿತ್ತು.

2007: ಇಸ್ರೋ ನಿರ್ಮಿತ ಭಾರೀ ತೂಕದ ಇನ್ಸಾಟ್ 4 ಬಿ ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರು ಎಂಬಲ್ಲಿಂದ ಏರಿಯನ್ 5 ರಾಕೆಟ್ ಮೂಲಕ ಈದಿನ ಮುಂಜಾನೆ ಗಗನಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇನ್ಸಾಟ್ ಸರಣಿಯ ಎರಡನೇ ಉಪಗ್ರಹವಾದ ‘ಇನ್ಸಾಟ್ 4 ಬಿ’ ಉಪಗ್ರಹವು ಅಧಿಕ ಶಕ್ತಿಯ 12 ಕೆಯು ಬ್ರ್ಯಾಂಡ್ ಹಾಗೂ 12 ಸಿ. ಬ್ರ್ಯಾಂಡ್ ಟ್ರಾನ್ಸ್ ಪಾಂಡರುಗಳನ್ನು ಹೊಂದಿದ್ದು, ಈ ಉಪಗ್ರಹದಿಂದ ಮನೆ ಮನೆಗೆ ನೇರ (ಡಿಟಿಎಚ್) ಪ್ರಸಾರ, ಟಿ.ವಿ ಸೇವೆ ಹಾಗೂ ಸಂಪರ್ಕ ವ್ಯವಸ್ಥೆಗಳಿಗೆ ಸಹಾಯವಾಗಲಿವೆ.

2009: ಷೇರುಮಾರುಕಟ್ಟೆ ಇತಿಹಾಸದಲ್ಲೇ ಅತ್ಯಂತ ಬೃಹತ್ ಹಗರಣವಾದ ಹದಿನೆಂಟು ಬಿಲಿಯನ್ ಡಾಲರ್ ಬೃಹತ್ ವಂಚನೆಯ ಹಗರಣದಲ್ಲಿ ಪಾತ್ರವಹಿಸಿದ್ದಾಗಿ ಷೇರು ದಲ್ಲಾಳಿ ಬೆರ್ನಾರ್ಡ್ ಮೆಡಾಫ್ ತಪ್ಪೊಪ್ಪಿಗೆ ಸಲ್ಲಿಸಿದ.

2011: ಹಿಂದಿನ ದಿನ ನಡೆದ ಭೂಕಂಪನದ ದೆಸೆಯಿಂದ ಜಪಾನಿನ ಫುಕುಶಿಮ ದೈಚಿ ಪರಮಾಣು ಘಟಕದಲ್ಲಿನ ರಿಯಾಕ್ಟರ್ ಒಂದು ಸ್ಪೋಟಗೊಂಡು ಬೃಹತ್ ಪ್ರಮಾಣದ ರೇಡಿಯೋ ಆಕ್ಟಿವಿಟಿಯು ವಾತಾವರಣಕ್ಕೆ ಸೋರಿಕೆಯಾಗಿ ಭೂಕಂಪ ಸುನಾಮಿಗಳ ಭೀತಿಯನ್ನು ಹಲವು ಪಟ್ಟು ಹೆಚ್ಚಿಸಿತು.

ಪ್ರಮುಖಜನನ/ಮರಣ:

1831: ಕುದುರೆಗಳು ಎಳೆಯುವ ಬಂಡಿಗಳನ್ನು ಬ್ರಹತ್ ಉದ್ಯಮವಾಗಿ ಸ್ಥಾಪಿಸಿದ ಕ್ಲೆಮೆಂಟ್ ಸ್ಟುಡೆಬೇಕರ್ ಅವರು ಪೆನ್ಸಿಲ್ವೇನಿಯಾದ ಪೈನ್ ಟೌನ್ ಎಂಬಲ್ಲಿ ಜನಿಸಿದರು. ಇವರು ತಮ್ಮ ಸಹೋದರ ಹೆನ್ರಿ ಜೊತೆಗೂಡಿ ಹೆಚ್ ಅಂಡ್ ಸಿ ಸ್ಟುಡೆಬೇಕರ್ ಕಂಪೆನಿಯನ್ನು ಸ್ಥಾಪಿಸಿದರು. ಮುಂದೆ ಈ ಸಂಸ್ಥೆ ಮೋಟಾರು ವಾಹನ ನಿರ್ಮಾಣದಲ್ಲೂ ಬೆಳೆಯಿತು.

1832: ಇಂಗ್ಲೆಂಡಿನಲ್ಲಿ ಲ್ಯಾಂಡ್ ಏಜೆಂಟ್ ಆಗಿದ್ದ ಚಾರ್ಲ್ಸ್ ಬಾಯ್ಕಾಟ್ ತನ್ನ ‘ಬಹಿಷ್ಕಾರ’ ಗುಣದ ನಡತೆಯಿಂದಾಗಿ, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಆ ಗುಣಕ್ಕೆ ‘ಬಾಯ್ಕಾಟ್’ ಎಂದೇ ಹೆಸರಾದ. ಬ್ರಿಟಿಷ್ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ ಈತ ನಾರ್ಫೋಕ್ ಬಳಿಯ ಬರ್ಗ್ ಸೈಂಟ್ ಪೀಟರ್ ಎಂಬಲ್ಲಿ ಜನಿಸಿದ.

1913: ಭಾರತದ ರಾಜಕಾರಣಿ, ಸಹಕಾರ ಸಂಘಟನಕಾರ ಯಾಶವಂತರಾವ್ ಚೌವಾನ್ ಅವರು ಬ್ರಿಟಿಷ್ ಮುಂಬೈ ಅಧಿಪತ್ಯದ ದೇವರಾಷ್ಟ್ರೆ ಎಂಬಲ್ಲಿ ಜನಿಸಿದರು. ಮಹಾರಾಷ್ಟ್ರವು ಮುಂಬೈ ಪ್ರೆಸಿಡೆನ್ಸಿಯಿಂದ ಹೊಸ ರಾಜ್ಯವಾದಾಗ ಅದರ ಪ್ರಥಮ ಮುಖ್ಯಮಂತ್ರಿಗಳಾಗಿ, ರಾಷ್ಟ್ರದ ಉಪ ಪ್ರಧಾನಿಗಳಾಗಿ, ಹಣಕಾಸು ಖಾತೆ, ವಿದೇಶಾಂಗ ಖಾತೆ ಮುಂತಾದ ಅನೇಕ ಸಚಿವ ಸ್ಥಾನಗಳನ್ನು ಅಲಂಕರಿಸಿದವರಾಗಿ, ಕೃಷಿಕರ ಸಹಕಾರ ಸಂಘಕ್ಕೆ ವಿಶಾಲ ವ್ಯಾಪ್ತಿ ನೀಡಿದವರಾಗಿ ಇವರು ಪ್ರಸಿದ್ಧರಾಗಿದ್ದಾರೆ.

1917: ಆಸ್ಟ್ರೇಲಿಯಾದ ಪ್ರಸಿದ್ಧ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ತಾರೆ ಗೂಗಿ ವಿದರ್ಸ್ ಅವರು ಬ್ರಿಟಿಷ್ ಭಾರತದ ಕರಾಚಿಯಲ್ಲಿ ಜನಿಸಿದರು.

1925: ಜಪಾನಿನ ಪ್ರಸಿದ್ಧ ಭೌತವಿಜ್ಞಾನಿ ಲಿಯೋ ಎಸಾಕಿ ಅವರು ಒಸಾಕಾದಲ್ಲಿ ಜನಿಸಿದರು. ಎಲೆಕ್ಟ್ರಾನಿಕ್ ಟನೆಲಿಂಗ್ ಕುರಿತಾದ ಸಂಶೋಧನೆಗೆ ಅವರಿಗೆ 1973ರ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು.

1936: ಕನ್ನಡದ ಪ್ರಖ್ಯಾತ ಬರಹಗಾರ್ತಿ ಆರ್ಯಾಂಬ ಪಟ್ಟಾಭಿ ಅವರು ಮಂಡ್ಯದಲ್ಲಿ ಜನಿಸಿದರು. ಅನೇಕ ಕಾದಂಬರಿಗಳನ್ನು, ಮಕ್ಕಳ ಕತೆಗಳನ್ನು ರಚಿಸಿರುವ ಇವರ ‘ಕಪ್ಪು ಬಿಳುಪು’ ಕಾದಂಬರಿ ಪ್ರಸಿದ್ಧ ಚಲನಚಿತ್ರವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ, ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರನ್ನು ಅರಸಿ ಬಂದಿವೆ.

1954: ಪ್ರಸಿದ್ಧ ಭಾರತೀಯ-ಇಂಗ್ಲಿಷ್ ಶಿಲ್ಪಿ ಅನೀಶ್ ಕಪೂರ್ ಅವರು ಮುಂಬೈನಲ್ಲಿ ಜನಿಸಿದರು. ಇವರಿಗೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿ’ಗಳು ಸಂದಿವೆ.

1984: ಭಾರತದ ಪ್ರಖ್ಯಾತ ಹಿನ್ನೆಲೆಗಾಯಕಿ ಶ್ರೇಯಾ ಘೋಶಾಲ್ ಅವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪಟ್ಟಣದಲ್ಲಿ ಜನಿಸಿದರು. ಕನ್ನಡವನ್ನೂ ಒಳಗೊಂಡ ಹಾಗೆ ಭಾರತದ ಬಹುತೇಕ ಭಾಷಾ ಚಲನಚಿತ್ರಗಳಲ್ಲಿ ಪ್ರಮುಖ ಹಿನ್ನೆಲೆ ಗಾಯಕಿಯಗಿರುವ ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.

1925: ಚೀನಾದ ವೈದ್ಯ, ಬರಹಗಾರ, ತತ್ವಜ್ಞಾನಿ, ಬರಹ ಕಲೆಗಾರ, ಕ್ರಾಂತಿಕಾರ ಹಾಗೂ ರಿಪಬ್ಲಿಕ್ ಆಫ್ ಚೈನಾದ ಪ್ರಥಮ ಅಧ್ಯಕ್ಷ ಮತ್ತು ಸ್ಥಾಪನಾ ಪಿತಾಮಹರೆನಿಸಿರುವ ಸನ್ ಯತ್-ಸೆನ್ ಅವರು ನಿಧನರಾದರು.

1942: ಭೌತವಿಜ್ಞಾನಿ, ರಸಾಯನ ಶಾಸ್ತ್ರಜ್ಞ ಮತ್ತು ಗಣಿತಜ್ಞ ವಿಲಿಯಂ ಹೆನ್ರಿ ಬ್ರಾಗ್ ಅವರು ಲಂಡನ್ನಿನಲ್ಲಿ ಜನಿಸಿದರು. ‘ಎಕ್ಸ್-ರೇ ಮೂಲಕ ಅನಾಲಿಸಿಸ್ ಆಫ್ ಕ್ರಿಸ್ಟಲ್ ಸ್ಟ್ರಕ್ಚರ್ ಕುರಿತಾದ ಇವರ ಕುರಿತಾದ ಸಂಶೋಧನೆಗೆ 1915ರ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತ್ತು.

1960: ಭಾರತೀಯ ಇತಿಹಾಸಜ್ಞ, ಬರಹಗಾರ, ಶಿಕ್ಷಣ ತಜ್ಞ ಮತ್ತು ವಿಶ್ವಭಾರತಿ ವಿಶ್ವವಿದ್ಯಾಲಯದ ಉಪಾಚಾರ್ಯರಾದ ಕ್ಷಿತಿಮೋಹನ್ ಸೇನ್ ನಿಧನರಾದರು. ಇವರು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕನ್ನು ಚೆಲ್ಲುವ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ.

1942: ಫಿನ್ನಿಷ್-ಸ್ವೀಡಿಷ್ ವೈದ್ಯ ವಿಜ್ಞಾನಿ ರಾಗ್ನಾರ್ ಗ್ರಾನಿಟ್ ಅವರು ಸ್ವೀಡನ್ನಿನ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ‘ಪ್ರೈಮರಿ ಫಿಸಿಯಲಾಜಿಕಲ್ ಅಂಡ್ ಕೆಮಿಕಲ್ ವಿಷುಯಲ್ ಪ್ರೋಸೆಸ್ ಇನ್ ದಿ ಐ’ ಕುರಿತಾದ ಇವರ ಸಂಶೋಧನೆಗೆ 1967ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರ ಪುರಸ್ಕಾರ ಸಂದಿತ್ತು.

2006: ತಮಿಳುನಾಡಿನ ಖ್ಯಾತ ನಟಿ, ಗಾಯಕಿ ಎಂ.ಎಸ್. ಸುಂದರಬಾಯಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮೂಲತಃ ತಂಜಾವೂರಿನವರಾದ ಇವರು 1940ರಿಂದ 70 ರ ದಶಕದಲ್ಲಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. ತಮಿಳುನಾಡು ಸರ್ಕಾರ ನೀಡುವ ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2013: ಭಾರತೀಯ ಚಿತ್ರಕಾರರಲ್ಲಿ ಪ್ರಸಿದ್ಧರಾಗಿದ್ದ ಗಣೇಶ್ ಪೈನ್ ಅವರು ಕೋಲ್ಕತ್ತಾದಲ್ಲಿ ನಿಧನರಾದರು. ಇವರಿಗೆ ಕೇರಳ ಸರ್ಕಾರದ ರಾಜಾ ರವಿ ವರ್ಮ ಪ್ರಶಸ್ತಿ ಸಂದಿತ್ತು. ಇವರ ಕುರಿತಾದ ಸಾಕ್ಷಚಿತ್ರವು 1998ರ ವರ್ಷದಲ್ಲಿ ರಾಷ್ತ್ರೀಯ ಪ್ರಶಸ್ತಿ ಗಳಿಸಿತ್ತು.

2016: ಅಮೆರಿಕದ ಪ್ರಸಿದ್ಧ ಗಣಿತಜ್ಞ ಮತ್ತು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಲಾಯ್ಡ್ ಶೇಪ್ಲಿ ಅರಿಜೋನಾದ ಟಕ್ಸನ್ ಎಂಬಲ್ಲಿ ಜನಿಸಿದರು.

Categories
e-ದಿನ

ಮಾರ್ಚ್-11

ಪ್ರಮುಖಘಟನಾವಳಿಗಳು:

222: ರೋಮ್ ಸಾಮ್ರಾಜದಲ್ಲಿನ ದಂಗೆಯಲ್ಲಿ ಚಕ್ರವರ್ತಿ ಎಲಗಾಬಲುಸ್ ಮತ್ತು ಆತನ ತಾಯಿ ಸೋಮಿಯಾಸ್ ಅನ್ನು ಪ್ರಿಟೋರಿಯನ್ ಕಾವಲಿನೊಬ್ಬ ಹತ್ಯೆಗೈದ. ಈ ಈರ್ವರ ಜರ್ಝರಿತ ದೇಹಗಳನ್ನು ರಸ್ತೆಗಳಲ್ಲೆಲ್ಲಾ ಎಳೆದಾಡಿ ಕಡೆಗೆ ಟೈಬರ್ ನದಿಯಲ್ಲಿ ಎಸೆಯಲಾಯಿತು.

1702: ಇಂಗ್ಲೆಂಡಿನ ಪ್ರಥಮ ದಿನಪತ್ರಿಕೆ ‘ದಿ ಡೈಲಿ ಕೊರಾಂಟ್’ ತನ್ನ ಪ್ರಥಮ ಮುದ್ರಣವನ್ನು ಕಂಡಿತು.

1784: ಟಿಪ್ಪೂ ಸುಲ್ತಾನ್ ಮತ್ತು ಬ್ರಿಟಿಷರ ನಡುವೆ ಮಂಗಳೂರು ಒಪ್ಪಂದ ಏರ್ಪಟ್ಟು ಎರಡನೇ ಬ್ರಿಟಿಷ್-ಮೈಸೂರು ಯುದ್ಧ ಮುಕ್ತಾಯಗೊಂಡಿತು.

1818: ಮೇರಿ ವುಲ್ಸ್ಟೋನ್ ಕ್ರಾಫ್ಟ್ ಶೆಲ್ಲಿ ಅವರ ‘ಫ್ರಾಂಕೆನ್ಸ್ಟೀನ್’ ಅಥವಾ ‘ದಿ ಮಾಡರ್ನ್ ಪ್ರೊಮೇಥಿಯಸ್ ಪ್ರಕಟಗೊಂಡಿತು.

1872: ಬ್ರಿಟನ್ನಿನ ಸಂಪದ್ಭರಿತ ಕಲ್ಲಿದ್ದಲು ಪ್ರದೇಶದಲ್ಲಿರುವ ಸೌತ್ ವೇಲ್ಸಿನ ಸೆವೆನ್ ಸಿಸ್ಟರ್ಸ್ ಕೊಲೈರಿ ನಿರ್ಮಾಣ ಆರಂಭ

1886: ಪೆನ್ಸಿಲ್ವೇನಿಯಾದ ವುಮನ್ಸ್ ಮೆಡಿಕಲ್ ಕಾಲೇಜಿನಿಂದ ಪದವೀಧರೆಯಾಗುವ ಮೂಲಕ ಆನಂದಿಬಾಯಿ ಜೋಶಿ ಅವರು ಭಾರತದ ಮೊದಲ ವೈದ್ಯೆ ಎನಿಸಿದರು. ದಕ್ಷಿಣ ಏಷ್ಯಾದ ಪ್ರಪ್ರಥಮ ಮಹಿಳಾ ವೈದ್ಯರಲ್ಲಿ ಒಬ್ಬರು ಎಂದು ಪ್ರಸಿದ್ಧರಾಗಿರುವ ಆನಂದಿ ಗೋಪಾಲ್ ಜೋಷಿ ಅವರು 1865ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರು ಅಮೆರಿಕದಲ್ಲಿ ವೈದ್ಯಕಿಯ ಪದವಿ ಪಡೆದ ಪ್ರಪ್ರಥಮ ಭಾರತೀಯ ನೆಲದ ಮಹಿಳೆ ಎಂದೆನಿಸಿದ್ದಾರೆ. ಇವರು ಅಮೆರಿಕದ ನೆಲಕ್ಕೆ ಭೇಟಿ ಕೊಟ್ಟ ಪ್ರಪ್ರಥಮ ಹಿಂದೂ ಮಹಿಳೆ ಎಂಬ ಮಾತೂ ಇದೆ. ಅಲ್ಪಾಯುಷಿಯಾದ ಈಕೆ 1887ರ ವರ್ಷದಲ್ಲಿ ನಿಧನರಾದರು.

1918: ಅಮೆರಿಕಾದಲ್ಲಿ ಸ್ಪಾನಿಶ್ ಇನ್’ಫ್ಲುಯೆಂಜಾ ರೋಗದ ಮೊದಲ ಪ್ರಕರಣಗಳು ದಾಖಲಾದವು. ಜ್ವರ, ಗಂಟಲು ಕೆರೆತ ಮತ್ತು ತಲೆನೋವಿನ ದೂರಿನೊಂದಿಗೆ ಯುವಕನೊಬ್ಬ ಸೇನಾ ಆಸ್ಪತ್ರೆಗೆ ದಾಖಲಾದಾಗ ಇದು ಬೆಳಕಿಗೆ ಬಂತು. ಹೇಗೆ ನಿಗೂಢವಾಗಿ ಬಂತೋ ಅಷ್ಟೇ ನಿಗೂಢವಾಗಿ ಕಣ್ಮರೆಯಾದ ಈ ರೋಗ 6 ಲಕ್ಷ ಮಂದಿಯನ್ನು ಬಲಿತೆಗೆದುಕೊಳ್ಳುವ ಮೂಲಕ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ರೋಗ ಎನಿಸಿಕೊಂಡಿತು.

1982: ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟಿನಲ್ಲಿ ಮುಂಬೈ ತಂಡದ ದಿಢೀರ್ ಕುಸಿತಕ್ಕೆ ಕಾರಣರಾದ ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಮ ಭಟ್ ಅವರು ರಣಜಿ ಟ್ರೋಫಿ ಕ್ರಿಕೆಟಿನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಕರ್ನಾಟಕದ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.

1983: ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳ ಶೀತಲ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

1999: ‘ಇನ್ಫೋಸಿಸ್’ ಸಂಸ್ಥೆಯು, ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತಗೊಂಡ ಪ್ರಪ್ರಥಮ ಭಾರತೀಯ ಸಂಸ್ಥೆಯೆನಿಸಿತು.

2001: ಭಾರತದ ಪುಲ್ಲೇಲ ಗೋಪಿಚಂದ್ ಅವರು ‘ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್’ ಪ್ರಶಸ್ತಿ ಗೆದ್ದರು. ಅವರು ಚೀನಾದ ಚೆನ್ ಹಾಂಗ್ ಅವರನ್ನು ಅಂತಿಮ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪರಾಭವಗೊಳಿಸುವ ಮೂಲಕ ಈ ಪ್ರಶಸ್ತಿಯನ್ನು ಗಳಿಸಿದ ಎರಡನೇ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

2001: ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ ಭಜನ್ ಸಿಂಗ್ ಪಾತ್ರರಾದರು. ಎರಡನೇ ಟೆಸ್ಟ್ ಪಂದ್ಯದ ತಮ್ಮ 16ನೇ ಓವರಿನಲ್ಲಿ 2,3 ಮತ್ತು 4ನೇ ಚೆಂಡುಗಳಲ್ಲಿ ಅವರು ಸತತವಾಗಿ ಮೂರು ವಿಕೆಟ್ ಉರುಳಿಸಿದರು.

2004: ಸ್ಪೇನ್ ದೇಶದ ಮಡ್ರಿಡ್ನಲ್ಲಿ ದಿನದ ಬಿರುಸಿನ ವೇಳೆಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆದು 191 ಜನ ಮೃತರಾದರು.

2006: ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸ್ಟೀವ್ ಹರ್ಮಿಸನ್ ಅವರನ್ನು ಎಲ್. ಬಿ. ಡಬ್ಲ್ಯೂ ಬಲೆಗೆ ಕೆಡವಿ 500ನೇ ವಿಕೆಟ್ ಪಡೆದ ಕರ್ನಾಟಕದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು, ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ಮೊದಲ ಭಾರತೀಯರೆಂಬ ಗೌರವಕ್ಕೆ ಪಾತ್ರರಾದರು. ಇದಲ್ಲದೆ ಅತ್ಯಂತ ವೇಗವಾಗಿ 500 ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್ ಎಂಬ ಕೀರ್ತಿಯೂ ಅವರದ್ದಾಯಿತು.

2007: ಭಾರತೀಯ ಆಟಗಾರ ವಿಶ್ವನಾಥನ್ ಆನಂದ್ ಮೊರೆಲಿಯಾ ಲಿನಾರೆಸ್ ಗ್ರ್ಯಾಂಡ್ ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಉಕ್ರೇನಿನ ವೆಸೆಲಿ ಇವಾಂಚುಕ್ ಅವರನ್ನು ಪರಾಭವಗೊಳಿಸಿ, ವಿಶ್ವದ ಹೊಸ ನಂಬರ್ ಒನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ವಿಶ್ವ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ಅವರು ಮೂರನೇ ಬಾರಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡರು.

2007: ಕೆರಿಬಿಯನ್ ದ್ವೀಪದ ಟ್ರೆಲಾನಿಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವರ್ಣರಂಜಿತ ಉದ್ಘಾಟನೆ ನೆರವೇರಿತು. 16 ತಂಡಗಳು ಪಾಲ್ಗೊಂಡಿದ್ದ ಈ ಪಂದ್ಯಾವಳಿ 46 ದಿನಗಳ ಕಾಲ ಜರುಗಿದವು.

2008: ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ಇನ್ಫೋಸಿಸ್ ಅಧ್ಯಕ್ಷ ಎನ್. ನಾರಾಯಣ ಮೂರ್ತಿ ಅವರನ್ನು ಅಮೆರಿಕದ ವುಡ್ರೋ ವಿಲ್ಸನ್ ಪ್ರಶಸ್ತಿ ಹಾಗೂ ಕಾರ್ಪೋರೆಟ್ ಪೌರತ್ವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಮೆರಿಕದ ಸ್ಮಿತ್ ಸಾನಿಯನ್ ಸಂಸ್ಥೆಯ ವುಡ್ರೂ ವಿಲ್ಸನ್ ಅಂತರರಾಷ್ಟ್ರೀಯ ಕೇಂದ್ರ ಪ್ರಕಟಿಸಿತು.

2008: ಪಾಕಿಸ್ಥಾನದ ವೈದ್ಯೆ ಬೇಗಂ ಜಾನ್ ಅವರಿಗೆ, ಅವರ ಅಸೀಮ ಸಾಹಸದ ವೈದ್ಯಕೀಯ ಸೇವೆಗಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿತು. ಅಮೆರಿಕದ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ವಾಷಿಂಗ್ಟನ್ನಿನಲ್ಲಿ ಬೇಗಂ ಜಾನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಪಾಕ್ ಗಡಿಭಾಗದ ಅಫ್ಘಾನಿಸ್ಥಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರರ ವಾಸಸ್ಥಳಗಳಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಗಳಿಗೆ ಎದೆಕೊಟ್ಟು ಬೇಗಂ ಜಾನ್ ತಮ್ಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ತಮ್ಮದೇ ಆದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಮೂಲಕ ಬುಡಕಟ್ಟು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ವೃದ್ಧಿಸಲು ಬೇಗಂ ಈ ಪ್ರದೇಶದಲ್ಲಿ ಶ್ರಮ ವಹಿಸಿದ್ದರು.

2009: ನ್ಯೂಜಿಲೆಂಡಿನಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಕೇವಲ 60 ಎಸೆತಗಳಲ್ಲಿ 13 ಬೌಂಡರಿ, ನಾಲ್ಕು ಸಿಕ್ಸರುಗಳನ್ನು ಒಳಗೊಂಡ ಶತಕ ಬಾರಿಸಿ ಭಾರತೀಯ ತಂಡಕ್ಕೆ 10 ವಿಕೆಟ್‌ಗಳ ಜಯ ತಂದುಕೊಟ್ಟರು. ಸೆಹ್ವಾಗ್ 125 ರನ್ ಗಳಿಸಿ ಔಟಾಗದೆ ಉಳಿದರು.

2011: ಜಪಾನಿನ ಸೆಂಡೈ ಪ್ರದೇಶದ 130 ಕಿಲೋ ಮೀಟರ್ ಪೂರ್ವದಲ್ಲಿ ಉಂಟಾದ 9 ಪ್ರಮಾಣದ ಭೂಕಂಪ ತಂದ ಸುನಾಮಿಯಲ್ಲಿ ಸಹಸ್ರಾರು ಸಾವಿನ ಜೊತೆಗೆ ಗಂಭೀರ ಪ್ರಮಾಣದ ಪರಮಾಣು ಅಪಘಾತ ಸಹಾ ಉಂಟಾಯಿತು.

ಪ್ರಮುಖಜನನ/ಮರಣ:

1811: ಅರ್ಬೈನ್ ಜೀನ್ ಜೋಸೆಫ್ ಲೆ ವೆರಿಯರ್ ಅವರು ಫ್ರಾನ್ಸಿನ ಸೈಂಟ್ ಲೋ ಎಂಬಲ್ಲಿ ಜನಿಸಿದರು. ಫ್ರೆಂಚ್ ಖಗೋಳತಜ್ಞರಾದ ಈತ ಕೇವಲ ಗಣಿತ ಲೆಕ್ಕಾಚಾರದ ಮೂಲಕ ನೆಪ್ಚೂನ್ ಗ್ರಹದ ಅಸ್ತಿತ್ವ ಮತ್ತು ಅದಿರುವ ಜಾಗದ ಕುರಿತು ನುಡಿದಿದ್ದರು.

1873: ಇಂಗ್ಲಿಷ್-ಅಮೆರಿಕನ್ ಚಲನಚಿತ್ರ ಉದ್ಯಮಿ ಡೇವಿಡ್ ಹಾರ್ಸ್ಲಿ ಅವರು ಡರ್ಹ್ಯಾಮಿನ ವೆಸ್ಟ್ ಸ್ಟ್ಯಾನ್ಲಿ ಎಂಬಲ್ಲಿ ಜನಿಸಿದರು. ಇವರು ಸೆಂಟೌರ್ ಫಿಲಂ ಕಂಪೆನಿ ಸ್ಥಾಪಿಸಿದರಲ್ಲದೆ, ಅದರ ಪಶ್ಚಿಮ ತೀರದ ಶಾಖೆಯಾದ ಹಾಲಿವುಡ್ಡಿನ ಪ್ರಥಮ ಸ್ಟುಡಿಯೋ ಆದ ನೆಸ್ಟರ್ ಫಿಲಂ ಕಂಪೆನಿಯನ್ನು ಸ್ಥಾಪಿಸಿದರು.

1915: ಭಾರತೀಯ ಟೆಸ್ಟ್ ಕ್ರಿಕೆಟಿನ ನಾಯಕರಾಗಿದ್ದ ವಿಜಯ್ ಹಜಾರೆ ಸಂಗ್ಲಿಯಲ್ಲಿ ಜನಿಸಿದರು. ಭಾರತೀಯ ಟೆಸ್ಟ್ ಕ್ರಿಕೆಟ್ ತಂಡವನ್ನು 1951-53 ಅವಧಿಯಲ್ಲಿ 14 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಮುನ್ನಡೆಸಿದ ಇವರ ನಾಯಕತ್ವದಲ್ಲಿ, ಭಾರತವು ಇಂಗ್ಲೆಂಡ್ ತಂಡವನ್ನು ಮಣಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ಟಿನಲ್ಲಿ ತನ್ನ ಪ್ರಪ್ರಥಮ ಜಯವನ್ನು ದಾಖಲಿಸಿತು. ಟೆಸ್ಟ್ ಕ್ರಿಕೆಟ್ಟಿನಲ್ಲಿ ಬ್ಯಾಟುದಾರರಾಗಿ ಮತ್ತು ಬೌಲರ್ ಆಗಿ ಇವರು ಗಣನೀಯ ಸಾಧನೆಯನ್ನು ಮಾಡಿ ಪದ್ಮಶ್ರೀ ಪುರಸ್ಕೃತರಾಗಿದ್ದರು.

1916: ಎರಡು ಬಾರಿ ಬ್ರಿಟಿಷ್ ಪ್ರಧಾನಿಗಳಾಗಿದ್ದ ಹರೋಲ್ಡ್ ವಿಲ್ಸನ್ ಇಂಗ್ಲೆಂಡಿನ ಹಡರ್ಸ್ ಫೀಲ್ಡ್ ಎಂಬಲ್ಲಿ ಜನಿಸಿದರು.

1918: ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ ನಂಜನಗೂಡಿನಲ್ಲಿ ಜನಿಸಿದರು. ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಇವವರು ಉತ್ತಮ ಬರಹಗಾರರಾಗಿದ್ದು ಅನೇಕ ಕೃತಿಗಳನ್ನೂ ರಚಿಸಿದ್ದರು.

1920: ಡಚ್-ಅಮೆರಿಕನ್ ಭೌತವಿಜ್ಞಾನಿ ನಿಕೊಲಾಸ್ ಬ್ಲೋಮ್ಬರ್ಗನ್ ಅವರು ನೆದರ್ಲ್ಯಾಂಡ್ಸಿನ ಡಾರ್ಡ್ರೆಕ್ಟ್ ಎಂಬಲ್ಲಿ ಜನಿಸಿದರು. ಲೇಸರ್ ಸ್ಪೆಕ್ಟ್ರಾಸ್ಕೊಪಿ ಕುರಿತಾದ ಸಂಶೋಧನೆಗಾಗಿ ಅವರಿಗೆ 1981 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1955: ಸ್ಕಾಟಿಷ್ ಜೀವವಿಜ್ಞಾನಿ ಮತ್ತು ವೈದ್ಯರಾದ ಅಲೆಗ್ಸಾಂಡರ್ ಫ್ಲೆಮಿಂಗ್ ಅವರು ಲಂಡನ್ನಿನಲ್ಲಿ ನಿಧನರಾದರು. ‘ಪೆನ್ಸಿಲಿಯನ್ ನೊಟಾಟಮ್’ ಕುರಿತಾದ ಸಂಶೋಧನೆಗಾಗಿ ಅವರಿಗೆ 1945 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1958: ಪ್ರಖ್ಯಾತ ಆಟಿಕೆಗಳ ಉದ್ಯಮವಾದ ‘ದಿ ಲೆಗೋ ಗ್ರೂಪ್’ ಸಂಸ್ಥಾಪಕ ಒಲೆ ಕಿರ್ಕ್ ಕ್ರಿಶ್ಚಿಯಾನ್ಸೆನ್ ಅವರು ಡೆನ್ಮಾರ್ಕಿನ ಬಿಲ್ಲಂಡ್ ಎಂಬಲ್ಲಿ ನಿಧನರಾದರು.

1970: ಅಮೆರಿಕದ ಪ್ರಸಿದ್ಧ ಪತ್ತೇದಾರಿ ಬರಹಗಾರ ‘ಪೆರ್ರಿ ಮೇಸನ್’ ಪಾತ್ರದ ಸೃಷ್ಟಿಕರ್ತ ಅರ್ಲ್ ಸ್ಟಾನ್ಲೆ ಗಾರ್ಡನರ್ ಅವರು ಕ್ಯಾಲಿಫೋರ್ನಿಯಾದ ಟೆಮೆಕ್ಯೂಲಾದಲ್ಲಿ ತಮ್ಮ 80ನೇ ವಯಸಿನಲ್ಲಿ ನಿಧನರಾದರು. ಇವರು ಇಪ್ಪತ್ತನೇ ಶತಮಾನದಲ್ಲಿ ತಮ್ಮ ಕಾಲದ ಅತ್ಯಂತ ಬೇಡಿಕೆಯ ಬರಹಗಾರರಲ್ಲಿ ಒಬ್ಬರಾಗಿದ್ದರು.

1980: ತಮ್ಮ 17ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದ ಚಂದ್ರ ಭಾನು ಗುಪ್ತಾ ಅವರು ರೌಲಟ್ ಖಾಯಿದೆಯ ವಿರೋಧದ ಚಳುವಳಿಯಲ್ಲಿ ಪಾಲ್ಗೊಂಡು, 1929ನೆಯ ವರ್ಷದಲ್ಲಿ ನಡೆ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೋತಿಲಾಲ್ ನೆಹರೂ ಸೊಸೈಟಿ ಸ್ಥಾಪಕರಾಗಿ ಮಹತ್ವದ ಕೆಲಸ ಮಾಡಿದ್ದ ಇವರು, 1960-70 ಅವಧಿಯಲ್ಲಿ ಮೂರು ಅವಧಿಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದರು.

2002: ಅಮೆರಿಕದ ಅರ್ಥಶಾಸ್ತ್ರಜ್ಞ ಜೇಮ್ಸ್ ಟಾಬಿನ್ ಅವರು ಕನೆಕ್ಟಿಕಟ್ ಬಳಿಯ ನ್ಯಾ ಹ್ಯಾವೆನ್ ಎಂಬಲ್ಲಿ ನಿಧನರಾದರು. ಇವರಿಗೆ 1981 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

Categories
e-ದಿನ

ಮಾರ್ಚ್-10

ಪ್ರಮುಖಘಟನಾವಳಿಗಳು:

1814: ಮೊದಲನೆಯ ನೆಪೋಲಿಯನ್ಗೆ ಫ್ರಾನ್ಸಿನ ಲಾವೋನ್ ಕದನದಲ್ಲಿ ಸೋಲುಂಟಾಯಿತು.

1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರು ತಮ್ಮ ಸಂಶೋಧವಾದ ಟೆಲಿಫೋನಿನಲ್ಲಿ ತಮ್ಮ ಸಹಾಯಕ ವಾಟ್ಸನ್ ಅವರಿಗೆ ‘ಮಿಸ್ಟರ್ ವಾಟ್ಸನ್, ಕಮ್ ಹಿಯರ್, ಐ ವಾಂಟ್ ಟು ಸೀ ಯು’ ಎಂದು ಯಶಸ್ವಿಯಾಗಿ ಕರೆ ಮಾಡಿದರು.

1906: ಯೂರೋಪಿನ ಇತಿಹಾಸದಲ್ಲೇ ಭೀಕರವಾದ ಫ್ರಾನ್ಸಿನ ‘ಕೊರ್ರೀಯರಸ್ ಗಣಿ ದುರಂತದಲ್ಲಿ’ 1099 ಮಂದಿ ಗಣಿ ಕಾರ್ಮಿಕರು ಅಸುನೀಗಿದರು.

1922: ಮಹಾತ್ಮ ಗಾಂಧೀ ಅವರನ್ನು ರಾಜದ್ರೋಹದ ಆಪಾದನೆಯ ಮೇಲೆ ಬಂಧಿಸಿದ ಬ್ರಿಟಿಷ್ ಸರ್ಕಾರ ಆರು ವರ್ಷಗಳ ಜೈಲುವಾಸ ವಿಧಿಸಿತು. ಎರಡೇ ವರ್ಷಗಳ ನಂತರದಲ್ಲಿ ಅವರನ್ನು ಅಪೆಂಡಿಸೈಟಿಸ್ ಚಿಕಿತ್ಸೆಯ ಅಗತ್ಯತೆ ಇದ್ದದ್ದರಿಂದ ಬಿಡುಗಡೆ ಮಾಡಲಾಯಿತು.

1945: ಅಮೆರಿಕನ್ ವಾಯು ಪಡೆಯು ಟೋಕಿಯೋ ಮೇಲೆ ಬಾಂಬಿನ ಮಳೆಗೆರೆಯಿತು. ಇದು ಉಂಟುಮಾಡಿದ ದಳ್ಳುರಿಯಲ್ಲಿ ಒಂದು ಲಕ್ಷ ಜನ, ಬಹುತೇಕವಾಗಿ ಜನಸಾಮಾನ್ಯರು ಸಾವಿಗೀಡಾದರು

1947: ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲಿನ ‘ಅಟೋಮಿಕ್ ಎನರ್ಜಿ ಕಮಿಷನ್’ ಕುರಿತಾದ ಇಪ್ಪತ್ತನೇ ನಿರ್ಣಯವು ಅಂಗೀಕೃತಗೊಂಡಿತು.

1959: ಚೀನಾವು ದಲೈ ಲಾಮಾ ಅವರನ್ನು ಅಪಹರಣಗೈಯಲು ಯತ್ನಿಸುತ್ತದೆ ಎಂಬ ಭಯದಿಂದ ಮೂರು ಲಕ್ಷ ನೇಪಾಳಿಯರು ಅವರ ಅರಮನೆಯನ್ನು ಸುತ್ತುಗಟ್ಟಿ ರಕ್ಷಣೆಗೆ ನಿಂತರು.

1977: ಖಗೋಳ ಶಾಸ್ತ್ರಜ್ಞರು ಯುರೇನಸ್ ಸುತ್ತಲೂ ಉಂಗುರಗಳಿರುವುದನ್ನು ಪತ್ತೆ ಹಚ್ಚಿದರು.

1978: ಮೊದಲ ಮಿರೇಜ್ 2000 ಯುದ್ಧ ವಿಮಾನವು ಡಸ್ಸಾಲ್ಟ್ ಸಂಸ್ಥೆಯಿಂದ ನಿರ್ಮಾಣಗೊಂಡಿತು.

1982: ಸೂರ್ಯನ ಸುತ್ತ ಸುತ್ತುವ ಒಂಬತ್ತೂ ಗ್ರಹಗಳೂ ಸೂರ್ಯನ ಒಂದೇ ಬದಿಯಲ್ಲಿ ಸಾಲಾಗಿ ಕಂಡು ಬಂದವು.

1985: ಮೆಲ್ಬೋರ್ನಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಪರಾಭವಗೊಳಿಸುವ ಮೂಲಕ ಸುನಿಲ್ ಗಾವಸ್ಕಾರ್ ನಾಯಕತ್ವದ ಭಾರತ ತಂಡವು ‘ಬೆನ್ಸನ್ ಅಂಡ್ ಹೆಜೆಸ್’ ವಿಶ್ವ ಕ್ರಿಕೆಟ್ ಚಾಂಪಿಯನ್ ಶಿಪ್ ಅನ್ನು ಗೆದ್ದುಕೊಂಡಿತು. ರವಿಶಾಸ್ತ್ರಿ ಅವರು ‘ಚಾಂಪಿಯನ್ನರ ಚಾಂಪಿಯನ್’ ಪ್ರಶಸ್ತಿ ಪಡೆದರು.

2006 : ಅಮೆರಿಕದ ಮಾರ್ಸ್ ರೆಕನ್ನೈಸ್ಸಾನ್ಸ್ ಆರ್ಬಿಟರ್’ ಉಪಗ್ರಹವು ಮಂಗಳ ಗ್ರಹವನ್ನು ತಲುಪಿತು.

ಪ್ರಮುಖಜನನ/ಮರಣ:

1921: ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ, ಚಿತ್ರರಂಗದ ಪ್ರಥಮ ನಿರ್ಮಾಪಕಿ, ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ಎಂ.ವಿ. ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. 1943ರಲ್ಲಿ ‘ರಾಧಾರಮಣ’ ಚಿತ್ರವನ್ನು ನಿರ್ಮಿಸಿದ ಎಂ. ವಿ. ರಾಜಮ್ಮನವರು, ಚಿತ್ರರಂಗದ ಪ್ರಥಮ ನಿರ್ಮಾಪಕಿ ಎನಿಸಿದರು. 2000ದ ವರ್ಷದ ಜುಲೈ 6ರಂದು ನಿಧನರಾದ ಇವರಿಗೆ ಸ್ಕೂಲ್‌ಮಾಸ್ಟರ್, ಕಿತ್ತೂರು ಚೆನ್ನಮ್ಮ ಅಭಿನಯಕ್ಕಾಗಿ ಪ್ರಶಸ್ತಿ ಮತ್ತು ರಾಷ್ಟ್ರಾಧ್ಯಕ್ಷರ ಪದಕಗಳು ಸಂದಿದ್ದವು.

1923: ಅಮೆರಿಕದ ಭೌತವಿಜ್ಞಾನಿ ವಾಲ್ ಲಾಂಗ್ಸ್ಡನ್ ಫಿಚ್ ಅವರು ನೆಬ್ರಾಸ್ಕಾದ ಮೆರ್ರಿಮನ್ ಎಂಬಲ್ಲಿ ಜನಿಸಿದರು. ‘ಆಲ್ಟರ್ನೇಟಿಂಗ್ ಗ್ರೆಡಿಯಂಟ್ ಸಿಂಕ್ರೋಟ್ರಾನ್’ ಕುರಿತಾದ ಸಂಶೋಧನೆಗೆ ಇವರಿಗೆ 1980 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1932: ಉಡುಪಿ ರಾಮಚಂದ್ರ ರಾವ್ ಎಂಬ ವಿಸ್ತೃತ ಹೆಸರಿನ ಪ್ರೊ. ಯು. ಆರ್. ರಾವ್ ಅವರು ಉಡುಪಿ ಬಳಿಯ ಅಡಮಾರು ಗ್ರಾಮದಲ್ಲಿ ಜನಿಸಿದರು. ಉಡುಪಿ ರಾಮಚಂದ್ರ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಭಾರತ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರೆನಿಸಿದ್ದಾರೆ. ಅಮೆರಿಕದ ಪ್ರತಿಷ್ಠಿತ ‘ಸೆಟಲೈಟ್ ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾಗಿರುವ ಇವರಿಗೆ ಪದ್ಮವಿಭೂಷಣ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿವೆ.

1939: ಭಾರತದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಮತ್ತು ಬರಹಗಾರ ಅಸ್ಘರ್ ಅಲಿ ಇಂಜಿನಿಯರ್ ರಾಜಾಸ್ಥಾನದ ಸಲುಂಬಾರ್ ಎಂಬಲ್ಲಿ ಜನಿಸಿದರು. 2013 ವರ್ಷದಲ್ಲಿ ನಿಧನರಾದ ಇವರಿಗೆ ಪ್ರತಿಷ್ಟಿತ ರೈಟ್ ಲೈವ್ಲಿಹುಡ್ ಗೌರವ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

1942: ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ, ದಿಟ್ಟ ಪರ್ತಕರ್ತೆ, ಲೇಖಕಿ ಡಾ. ವಿಜಯಾ ಅವರು ದಾವಣಗೆರೆಯಲ್ಲಿ ಹೋಳಿ ಹುಣ್ಣಿಮೆಯ ದಿನದಂದು ಜನಿಸಿದರು. ಚಲನಚಿತ್ರ, ನಾಟಕ, ಸಾಹಿತ್ಯಗಳಲ್ಲಿ ತೊಡಗಿಕೊಂಡಿರುವ ಡಾ. ವಿಜಯಾ ಅವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಕೃತಿ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್ ಮುಂತಾದ ಅನೇಕ ಗೌರವಗಳು ಸಂದಿವೆ.

1945: ಗ್ವಾಲಿಯರ್ ರಾಜಮನೆತನಕ್ಕೆ ಸೇರಿದ, ಕೇಂದ್ರ ಮಂತ್ರಿಗಳಾಗಿದ್ದ ಮಾಧವರಾವ್ ಸಿಂಧ್ಯಾ ಮುಂಬೈನಲ್ಲಿ ಜನಿಸಿದರು. ಕೇಂದ್ರ ರೈಲ್ವೇ ಮಂತ್ರಿಗಳಾಗಿದ್ದ ಇವರು 2001 ವರ್ಷದಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1974: ಅಮೆರಿಕದ ಉದ್ಯಮಿ ಟ್ವಿಟ್ಟರ್ ಸಹ ಸಂಸ್ಥಾಪಕ ಬಿಜ್ ಸ್ಟೋನ್ ಜನಿಸಿದರು.

1897: ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆ, ಆಧುನಿಕ ಶಿಕ್ಷಣ ಮಾತೆ, ಸಮಾಜ ಸೇವಕಿ ಎಂದು ಪ್ರಸಿದ್ಧರಾದ ಸಾವಿತ್ರಿಬಾಯಿ ಫುಲೆ ಅವರು ಪುಣೆ ಬಳಿಯ ಸಸಾನೆ ಮಾಲಾ ಎಂಬಲ್ಲಿ ಪ್ಲೇಗ್ ಕಾಯಿಲೆ ಇದ್ದವರಿಗೆ ಶುಶ್ರೂಷೆ ಮಾಡುತ್ತಾ ತಾವೇ ಆ ಕಾಯಿಲೆಗೆ ಬಲಿಯಾಗಿ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಅನೇಕ ಶಾಲೆಗಳನ್ನು ಸ್ಥಾಪಿಸಿ, ಹೆಣ್ಣುಮಕ್ಕಳನ್ನು ಮನೆ ಮನೆಗೆ ಹೋಗಿ ಶಿಕ್ಷಣಶಾಲೆಗೆ ಕರೆತಂದರು. ಅಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಇದ್ದ ಎಲ್ಲ ವಿರೋಧಗಳಿಗೂ ಎದೆಗುಂದದೆ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸದ ಧಾರೆ ಎರೆದರು.

1923: ಡಚ್ ಭೌತವಿಜ್ಞಾನಿ ಫ್ರಿಟ್ಜ್ ಜೆರ್ನಿಕೆ ಅವರು ನೆದರ್ಲ್ಯಾಂಡ್ಸಿನ ಆಮ್ಸ್ಟರ್ಡ್ಯಾಮ್ ನಗರದಲ್ಲಿ ನಿಧನರಾದರು. ‘ಫೇಸ್ ಕಾಂಟ್ರಾಕ್ಟ್ ಮೈಕ್ರೋಸ್ಕೋಪ್’ ಸಂಶೋಧನೆಗೆ ಇವರಿಗೆ 1953 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2007: ಖ್ಯಾತ ರಂಗಭೂಮಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಶಾಂತರಾಜ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ಶಾಂತರಾಜ್ ಅವರು ಚಿಂದೋಡಿ ಲೀಲಾ ಅವರ ಅಣ್ಣ. ಕನ್ನಡ ರಂಗಭೂಮಿ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶಾಂತರಾಜ್ ಟಿಪ್ಪು ಸುಲ್ತಾನ್ ನಾಟಕದಲ್ಲಿ ಮೀರ್ ಸಾದಕ್ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು.

Categories
e-ದಿನ

ಮಾರ್ಚ್-09

ಪ್ರಮುಖಘಟನಾವಳಿಗಳು:

1815: ಇಂಗ್ಲೆಂಡಿನ ಫ್ರಾನ್ಸಿಸ್ ರೋನಾಲ್ಡ್ಸ್ ಅವರು ‘ಫಿಲಸಾಫಿಕಲ್ ಮ್ಯಾಗಜಿನ್’ನಲ್ಲಿ ಮೊದಲ ಬ್ಯಾಟರಿ ಚಾಲಿತ ಗಡಿಯಾರದ ಕುರಿತು ವಿವರಿಸಿದರು.

1959: ‘ಬಾರ್ಬಿ’ ಬೊಂಬೆಯು ಮೊದಲಬಾರಿಗೆ ‘ಅಮೆರಿಕನ್ ಇಂಟರ್ ನ್ಯಾಷನಲ್ ಟಾಯ್ ಫೇರ್’ನಲ್ಲಿ ಪ್ರದರ್ಶನಗೊಂಡಿತು.

1960: ಡಾ. ಬೆಲ್ಡಿಂಗ್ ಹಿಬ್ಬರ್ಡ್ ಸ್ಕ್ರಿಬ್ನರ್ ಅವರು ರೋಗಿಯೊಬ್ಬನಿಗೆ ಹೆಮೋಡಯಾಲಿಸಿಸ್ ನೀಡಲಿಕ್ಕಾಗಿ ಮೊದಲ ಬಾರಿಗೆ ತಾವು ಸಂಶೋಧಿಸಿದ ಶಂಟ್ ಅಳವಡಿಸಿದರು.

1961: ‘ಇವಾನ್ ಇವಾನೋವಿಚ್’ ಎಂಬ ಹೆಸರುಳ್ಳ ಮನುಷ್ಯನ ಪ್ರತಿಕೃತಿಯೊಂದನ್ನು ಹೊತ್ತ ಸ್ಪುಟ್ನಿಕ್ 9 ಉಪಗ್ರಹವು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಜಿಗಿಯಿತು.

1979: ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಗೋಪಾಲಕೃಷ್ಣ ಅಡಿಗರ ಸಮ್ಮೆಳನಾಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ಆರಂಭಗೊಂಡಿತು.

2006: ಮ್ಯಾನ್ಮಾರ್ ದೇಶಕ್ಕೆ ಭೇಟಿ ನೀಡಿದ ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಯಾಂಗನ್ನಿನಲ್ಲಿ ಇರುವ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಹಕಾರ ನೀಡಿದ ಕೊನೆಯ ಮೊಘಲ್ ದೊರೆ ಬಹ್ದದೂರ್ ಷಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ ಬ್ರಿಟಿಷ್ ಆಡಳಿತ ಬಹದ್ದೂರ್ ಷಾ ಅವರನ್ನು ಯಾಂಗನ್ಗೆ ಗಡೀಪಾರು ಮಾಡಿತ್ತು. ಈ ಹಿಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ಸಮಾಧಿಗೆ ಬೇಟಿ ನೀಡಿದ್ದರು.

2006: ಭಾರತದ ಪರ ಮೊಹಾಲಿಯಲ್ಲಿ 131ನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಸಚಿನ್ ತೆಂಡೂಲ್ಕರ್ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಈ ಹಿಂದೆ ಭಾರತದ ಪರ ಕಪಿಲ್ ದೇವ್ ಅತ್ಯಂತ ಹೆಚ್ಚು ಟೆಸ್ಟುಗಳಲ್ಲಿ ಅಂದರೆ 131 ಪಂದ್ಯಗಳಲ್ಲಿ ಆಡಿದ ದಾಖಲೆ ಹೊಂದಿದ್ದರು.

2007: ಖ್ಯಾತ ಕಾಶ್ಮೀರಿ ಕವಿ, ವಿಮರ್ಶಕ ರೆಹಮಾನ್ ರಾಹಿ ಅವರನ್ನು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ರಾಹಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊತ್ತ ಮೊದಲ ಕಾಶ್ಮೀರಿ ಬರಹಗಾರರಾಗಿದ್ದು, ಈ ಹಿಂದೆ ಅವರು 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 1925ರಲ್ಲಿ ಜನಿಸಿದ ರಾಹಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಸಾಹಿತ್ಯ ಅಕಾಡೆಮಿ ಫೆಲೋ ಕೂಡಾ ಆಗಿದ್ದಾರೆ.

2007: ಭಾರತೀಯ ಮೂಲದ ಲೇಖಕಿ ಕಿರಣ್ ದೇಸಾಯಿ ಅವರ ‘ದಿ ಇನ್ ಹೆರಿಟೆನ್ಸ್ ಆಫ್ ಲಾಸ್’ ಪುಸ್ತಕವು ‘ದಿ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಫಿಕ್ಷನ್ ಪ್ರಶಸ್ತಿ’ಗೆ ಆಯ್ಕೆಯಾಯಿತು. ಈ ಮೊದಲು ಈ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿತ್ತು.

2007: ಭಾರತೀಯ ಮೂಲದ ಸಂಗೀತಗಾರ ಜುಬಿನ್ ಮೆಹ್ತಾ ಅವರಿಗೆ 2007ನೇ ಸಾಲಿನ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿತು.

2011: ಮೂವತ್ತೊಂಬತ್ತು ಬಾರಿ ಗಗನಕ್ಕೆ ಚಿಮ್ಮಿದ್ದ ಸ್ಪೇಸ್ ಷಟಲ್ ಡಿಸ್ಕವರಿ ತನ್ನ ಕೊನೆಯ ಬಾಹ್ಯಾಕಾಶ ಪಯಣವನ್ನು ಮಾಡಿತು.

ಪ್ರಮುಖಜನನ/ಮರಣ:

1454: ಇಟಲಿಯ ಪ್ರಸಿದ್ಧ ಭೂಪಟ ತಯಾರಕ ಮತ್ತು ಅನ್ವೇಷಕ ಅಮೇರಿಗೊ ವೆಸ್ಪುಸ್ಸಿ ಫ್ಲಾರೆನ್ಸ್ ನಗರದಲ್ಲಿ ಜನಿಸಿದರು.

1824: ಪಸಿದ್ಧ ಉದ್ಯಮಿ ಮತ್ತು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ಸ್ಥಾಪಕ ಅಮಾಸಾ ಲೇಲ್ಯಾಂಡ್ ಸ್ಟಾನ್ಫೋರ್ಡ್ ಅವರು ನ್ಯೂಯಾರ್ಕಿನ ವಾಟರ್ವಿಲೆಟ್ ಎಂಬಲ್ಲಿ ಜನಿಸಿದರು.

1862: ಫ್ರೆಂಚ್ ಸಂಶೋಧಕ ಮತ್ತು ವೈದ್ಯ ಫರ್ನಾಂಡ್ ಇಸಿಡೋರ್ ವೈಡಲ್ ಅವರು ಡೆಲ್ಲಿಸ್ ಎಂಬಲ್ಲಿ ಜನಿಸಿದರು. ವೈದ್ಯ ಹಾಗೂ ಬ್ಯಾಕ್ಟೀರಿಯಾ ತಜ್ಞರಾದ ಇವರು ಟೈಫಾಯಿಡ್ ಜ್ವರಕ್ಕೆ ಚಿಕಿತ್ಸೆ ನೀಡುವ ತಮ್ಮದೇ ಅದ ವಿಧಾನ ರೂಪಿಸಿದರು. ಈ ವಿಧಾನ ‘ವೈಡಾಲ್ ರಿಯಾಕ್ಷನ್’ ಎಂದು ಖ್ಯಾತಿ ಪಡೆದಿದೆ.

1907: ಮಿರ್ಸಿಯಾ ಎಲಿಯಾಡ್ ಅವರು ರೊಮೇನಿಯಾದ ಬುಚಾರೆಸ್ಟ್ ಎಂಬಲ್ಲಿ ಜನಿಸಿದರು. ಧಾರ್ಮಿಕ ಇತಿಹಾಸಕಾರರಾದ ಇವರು ಕೋಲ್ಕತ್ತಾದಲ್ಲಿ ಸುರೇಂದ್ರನಾಥ ದಾಸ್ ಗುಪ್ತ ಅವರ ಕೈಕೆಳಗೆ ಧಾರ್ಮಿಕ ಇತಿಹಾಸದ ಅಧ್ಯಯನ ನಡೆಸಿದ್ದರು. ಇವರು ಆರು ಸಂಪುಟಗಳ ‘ಎನ್ಸೈಕ್ಲೋಪಿಡಿಯಾ ಆಫ್ ರಿಲಿಜನ್ಸ್’ ಮುಖ್ಯ ಸಂಪಾದಕರಾಗಿದ್ದರು.

1923: ಆಸ್ಟ್ರಿಯನ್-ಅಮೆರಿಕನ್ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಜ್ಞಾನಿ ವಾಲ್ಟರ್ ಕೊಹ್ನ್ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಜನಿಸಿದರು. ‘ಡೆನ್ಸಿಟಿ ಫಂಕ್ಷನಲ್ ಥಿಯರಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1998 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1934: ವಿಶ್ವದ ಪ್ರಥಮ ಗಗನಯಾತ್ರಿ ಯೂರಿ ಅಲೆಕ್ಸೆಯಿವಿಚ್ ಗಗಾರಿನ್ ಅವರು ಸೋವಿಯತ್ ಯೂನಿಯನ್ನಿನ ಕ್ಲುಷಿನೋ ಎಂಬಲ್ಲಿ ಜನಿಸಿದರು. ಸೋವಿಯತ್ ವಿಮಾನ ಚಾಲಕ ಮತ್ತು ಗಗನಯಾತ್ರಿಯಾದ ಇವರು 1961ರಲ್ಲಿ ಭೂಮಿಯ ಕಕ್ಷೆಯನ್ನು ಸುತ್ತುಹಾಕಿದ ವೊಸ್ಟೋಕ್ ಬಾಹ್ಯಾಕಾಶ ವಾಹನದಲ್ಲಿ ಪಯಣಿಸಿದ್ದರು.

1951: ತಬಲಾ ವಾದನವನ್ನು, ಸಂಗೀತ ಕಚೇರಿಗಳಲ್ಲಿನ ಪಕ್ಕವಾದ್ಯವಷ್ಟೇ ಅಲ್ಲದೆ ಪ್ರಧಾನ ತಾಳ ಕಚೇರಿಯಾಗಿಯೂ ಅತ್ಯಂತ ಜನಪ್ರಿಯ ಮಾಡಿದ ಕೀರ್ತಿ ಜಾಕಿರ್ ಹುಸೇನರದ್ದು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಜಾಕಿರ್ ಹುಸೇನರನ್ನು ಅರಸಿ ಬಂದಿವೆ.

1956: ಭಾರತದ ರಾಜಕಾರಣಿಯಾಗಿ ಮತ್ತು ವಿಶ್ವಸಂಸ್ಥೆಯ ಅಧಿಕಾರಿಯಾಗಿ ಪ್ರಸಿದ್ಧರಾದ ಶಶಿ ತರೂರ್ ಲಂಡನ್ನಿನಲ್ಲಿ ಜನಿಸಿದರು. ವಿಶ್ವಸಂಸ್ಥೆಯಲ್ಲಿ ಅಂಡರ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಸೋಲನುಭವಿಸಿದರು. ಇವರು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

1959: ಜಪಾನ್ ಭೌತಶಾಸ್ತ್ರ ವಿಜ್ಞಾನಿ ತಕಾಕಿ ಕಜಿತ ಅವರು ಹಿಗಾಶಿಮತ್ಸುಯಾಮಾ ಎಂಬಲ್ಲಿ ಜನಿಸಿದರು. ನ್ಯೂಟ್ರಿನೊ ಸಂಶೋಧನೆಗೆ ಇವರಿಗೆ 2015 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1926: ರೇಖಿ ಧ್ಯಾನ ಪದ್ಧತಿ ಸ್ಥಾಪಕ ಮಿಕಾವೋ ಉಸುಯಿ ಅವರು ಜಪಾನಿನ ಫುಕುಯಾಮಾ ಎಂಬಲ್ಲಿ ನಿಧನರಾದರು.

1947: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ಗುಜರಾತಿ ಕವಿ ಜಾವೇರ್ಚಂದ್ ಮೆಘಾನಿ ಅವರು ಗುಜರಾತಿನ ಬೊಟಾಡ್ ಎಂಬಲ್ಲಿ ಜನಿಸಿದರು. ಇವರನ್ನು ಮಹಾತ್ಮಾ ಗಾಂಧೀಜಿ ಅವರು ಇವರನ್ನು ‘ರಾಷ್ಟ್ರ ಕವಿ’ ಎಂದು ಪ್ರಶಂಸಿಸಿದ್ದರು. ಮೆಘಾನಿ ಅವರಿಗೆ ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ರಂಜಿತ್ರಾಮ್ ಸುವರ್ಣ ಚಂದ್ರಕ್ ಪ್ರಶಸ್ತಿ ಸಂದಿತ್ತು.

1974: ಅಮೇರಿಕನ್ ವೈದ್ಯ ವಿಜ್ಞಾನಿ ಮತ್ತು ಜೈವಿಕ ವಿಜ್ಞಾನಿಗಳಾದ ಅರ್ಲ್ ವಿಲಬರ್ ಸುದರ್ಲ್ಯಾಂಡ್ ಅವರು ಮಿಯಾಮಿಯಲ್ಲಿ ನಿಧನರಾದರು. ಮೆಕಾನಿಸಮ್ಸ್ ಆಫ್ ದಿ ಆಕ್ಷನ್ಸ್ ಆಫ್ ದಿ ಹಾರ್ಮೋನ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1971 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1983: ಸ್ವೀಡಿಷ್ ವೈದ್ಯ ವಿಜ್ಞಾನಿ ಉಲ್ಫ್ ವಾನ್ ಯೂಲರ್ ನಿಧನರಾದರು. ‘ನ್ಯೂರೋ ಟ್ರಾನ್ಸ್ಮಿಟರ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1970 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1992: ಇಸ್ರೇಲ್ ರಾಜಕಾರಣಿ ನೊಬೆಲ್ ಶಾಂತಿ ಪುರಸ್ಕೃತ ಮೆನಾಚೆಮ್ ಬೆಗಿನ್ ಅವರು ಟೆಲ್ ಅವಿವ್ ನಗರದಲ್ಲಿ ನಿಧನರಾದರು. 1979ರಲ್ಲಿ ಈಜಿಪ್ಟ್ ಜೊತೆಗೆ ಶಾಂತಿ ಒಪ್ಪಂದ ಏರ್ಪಡಿಸಿದ ಸಾಧನೆಗಾಗಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

2012: 1960ರ ದಶಕದ ಪ್ರಸಿದ್ಧ ಸುರದ್ರೂಪಿ ನಟರಲ್ಲಿ ಒಬ್ಬರಾಗಿದ್ದ ಜಾಯ್ ಮುಖರ್ಜಿ ಅವರು ಮುಂಬೈನಲ್ಲಿ ನಿಧನರಾದರು. ಅವರು ಚಲನಚಿತ್ರ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಕಾರ್ಯನಿರ್ವಹಿಸಿದ್ದರು.

Categories
e-ದಿನ

ಮಾರ್ಚ್-08

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರರಾಷ್ಟ್ರೀಯ ಮಹಿಳಾ ಉದ್ಯೋಗಿಗಳ ದಿನಾಚರಣೆ ಎಂದು ಪ್ರಾರಂಭವಾದ ಮಾರ್ಚ್ 8ರ ದಿನವು ಕಾಲಕ್ರಮೇಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ 1909ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಮಹಿಳಾ ದಿನಾಚರಣೆಯು ಪ್ರಥಮವೆನಿಸಿದ್ದು, ಅದು ಸೋಷಿಯಲಿಸ್ಟರ ಒಂದು ರಾಜಕೀಯ ಆಚರಣೆಯಾಗಿ ನಡೆಯಿತು. 1917ರಲ್ಲಿ ಸೋವಿಯತ್ ಯೂನಿಯನ್ನಿನಲ್ಲಿ (ಜೂಲಿಯನ್ ಕ್ಯಾಲೆಂಡರಿನಲ್ಲಿ ಫೆಬ್ರವರಿ 23ರಂದು ನಡೆದ) ಮಹಿಳಾ ದಿನದ ಪ್ರತಿಭಟನೆಗಳು ಮಹತ್ವದ ಫೆಬ್ರವರಿ ಕ್ರಾಂತಿಗೆ ನಾಂದಿ ಹಾಡಿತು. ಮುಂದೆ ಅಲ್ಲಿ ಈ ದಿನವು ರಜಾದಿನವಾಗಿ ಘೋಷಿತಗೊಂಡು, ವಿಶ್ವದ ವಿವಿದೆಡೆಗಳಿಗೂ ವ್ಯಾಪಿಸಿತು. 1975ರ ವರ್ಷದಲ್ಲಿ ಐಸ್ಲ್ಯಾಂಡ್ ದೇಶದಲ್ಲಿ ನಡೆದ ಮಹಿಳೆಯರ ಮುಷ್ಕರವು, ಅತ್ಯಂತ ಅರ್ಥಪೂರ್ಣ ಮಹಿಳಾ ದಿನದ ಆಚರಣೆಗಳಲ್ಲಿ ಒಂದೆನಿಸಿದ್ದು ಅಲ್ಲಿ ವಿಶ್ವದಲ್ಲೇ ಪ್ರಪ್ರಥಮವಾಗಿ ಮಹಿಳೆಯರೊಬ್ಬರು ಅಧ್ಯಕ್ಷರಾಗುವುದಕ್ಕೆ ಎಡೆ ಮಾಡಿಕೊಟ್ಟಿತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿಶ್ವದ ವಿವಿಧ ಭಾಗಗಳಲ್ಲಿ ಮಹಿಳೆಯರ ಕುರಿತಾಗಿ ಗೌರವ, ಅವರ ಕೌಟುಂಬಿಕ ಸೇವೆ ಮತ್ತು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ತರಗಳಲ್ಲಿನ ಸಾಧನೆಗಳ ಕುರಿತಾಗಿ ಮೆಚ್ಚುಗೆ ಮತ್ತು ಪ್ರೀತ್ಯಾಭಿಮಾನಗಳನ್ನು ವ್ಯಕ್ತಪಡಿಸುವ ದ್ಯೋತಕವಾದ ಆಚರಣೆಯಾಗಿದೆ.

ಪ್ರಮುಖಘಟನಾವಳಿಗಳು:

1010: ಪ್ರಸಿದ್ಧ ಪರ್ಷಿಯನ್ ಕವಿವರ್ಯರಾದ ಫೆರ್ಡೌಸಿ ಅವರು ತಮ್ಮ ಮಹಾಕಾವ್ಯವಾದ ‘ಷಾಹ್ನಮೇಹ್’ ಅನ್ನು ಪೂರ್ಣಗೊಳಿಸಿದರು.

1576: ಸ್ಪಾನಿಷ್ ಅನ್ವೇಷಕರಾದ ಡೀಗೋ ಗ್ರೆಸಿಯಾ ಡಿ ಪೆಲೆಶಿಯೋ ಅವರು ಪ್ರಥಮ ಬಾರಿಗೆ ಕೋಪನ್ನಿನ ಮಯಾನ್ ನಗರದ ಅವಶೇಷಗಳನ್ನು ಕಂಡರು.

1618: ಜೊಹಾನ್ನೆಸ್ ಕೆಪ್ಲರ್ ಅವರು ಗ್ರಹಗಳ ಚಲನೆಯ ಮೂರನೆಯ ನಿಯಮ(third law of planetary motion)ವನ್ನು ಅನ್ವೇಷಿಸಿದರು

1655: ಜಾನ್ ಕೇಸರ್ ಅವರು ಇಂಗ್ಲೆಂಡಿನ ಉತ್ತರ ಅಮೆರಿಕದದ ವಸಾಹತುಗಳಲ್ಲಿನ ಮೊಟ್ಟ ಮೊದಲ ಕಾನೂನಿನ ರೀತ್ಯಾ ಗುರುತಿಸಲ್ಪಟ್ಟ ಗುಲಾಮರೆನಿಸಿದರು.

1775: ಅನಾಮಿಕ ಬರಹಗಾರರೊಬ್ಬರು ‘ಅಮೆರಿಕದಲ್ಲಿ ಆಫ್ರಿಕನ್ನರ ಗುಲಾಮಗಿರಿ’ ಎಂಬ ಲೇಖನ ಮೂಡಿಸಿ, ಅಮೆರಿಕದ ವಸಾಹತುಗಳ ಇತಿಹಾಸದಲ್ಲೇ ಮೊದಲಬಾರಿಗೆ, ಇಲ್ಲಿನ ಗುಲಾಮರ ವಿಮೋಚನೆ ಮತ್ತು ಗುಲಾಮಗಿರಿಯನ್ನು ನಿಷೇದಿಬೇಕೆಂಬ ಅಭಿಪ್ರಾಯ ಮಂಡಿಸಿದರು. ಈ ಅನಾಮಿಕ ಬರಹಗಾರರು ಥಾಮಸ್ ಪೈನ್ ಅವರೇ ಇರಬೇಕು ಎಂಬುದು ಕೆಲವೊಂದು ವಿದ್ವಾಂಸರ ಊಹೆಯಾಗಿದೆ.

1817: ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಸ್ಥಾಪನೆಗೊಂಡಿತು.

1910: ಫ್ರೆಂಚ್ ವಿಮಾನ ಚಾಲಕಿ ರೇಮಂಡೇ ಡಿ ಲರೋಚ್ ಅವರು ಪೈಲಟ್ ಪರವಾನಗಿ ಪಡೆದ ಪ್ರಥಮ ಮಹಿಳೆ ಎನಿಸಿದರು.

1917: ಸೈಂಟ್ ಪೀಟರ್ ಬರ್ಗ್’ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರತಿಭಟನೆಗಳು ಫೆಬ್ರವರಿ ಕ್ರಾಂತಿಗೆ ನಾಂದಿ ಹಾಡಿದವು. (ಅಂದಿನ ದಿನದಲ್ಲಿ ಅಲ್ಲಿ ಜೂಲಿಯನ್ ಕ್ಯಾಲೆಂಡರ್ ಅಸ್ತಿತ್ವದಲ್ಲಿದ್ದು, ಗ್ರೆಗೋರಿಯನ್ ಕ್ಯಾಲೆಂಡರಿನ ಮಾರ್ಚ್ 8ರ ದಿನ ಜೂಲಿಯನ್ ಕ್ಯಾಲೆಂಡರಿನ ಫೆಬ್ರವರಿ 23ರ ದಿನವಾಗಿತ್ತು. ಹಾಗಾಗಿ ಅದು ಫೆಬ್ರವರಿ ಕ್ರಾಂತಿ.)

1920: ಪ್ರಥಮ ಆಧುನಿಕ ಅರಾಬ್ ರಾಷ್ಟ್ರವಾದ ‘ಅರಾಬ್ ಕಿಂಗ್ಡಂ ಆಫ್ ಸಿರಿಯಾ’ ಸ್ಥಾಪನೆಗೊಂಡಿತು

1947: ಫೆಬ್ರವರಿ 28ರಂದು ತೈವಾನಿನಲ್ಲಿ ಬುಗಿಲೆದ್ದ ಅಧಿಕಾರಶಾಹಿ ವಿರುದ್ಧದ ಚಳುವಳಿಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದ ಚೀನಾದ ಆಡಳಿತವು, 13000 ಸೈನ್ಯಪಡೆಯನ್ನು ತೈವಾನಿಗೆ ತಂದು ವ್ಯಾಪಕ ಕಾರ್ಯಾಚರಣೆ ನಡೆಸಿ ಅನೇಕ ಪ್ರಾಜ್ಞರನ್ನೂ ಒಳಗೊಂಡಂತೆ ಸಹಸ್ರಾರು ಜನರನ್ನು ಕೊಂದುಹಾಕಿತು. ಇದು ತೈವಾನ್ ಸ್ವಾತಂತ್ರ್ಯ ಚಳುವಳಿಗೆ ಬೇರುಗಳನ್ನು ಸೃಷ್ಟಿಸಿತು.

1948: ಸಾಗರೋತ್ತರ ವಿಮಾನ ಸೇವೆಗಾಗಿ ಭಾರತದಲ್ಲಿ ಏರ್ ಇಂಡಿಯಾ ಇಂಟರ್ನ್ಯಾಷನಲ್ ಅನ್ನು ಸ್ಥಾಪಿಸಲಾಯಿತು.

1957: ಈಜಿಪ್ಟ್ ದೇಶವು ಸ್ಯೂಯೇಜ್ ಬಿಕ್ಕಟ್ಟು ಕೊನೆಗೊಂಡ ನಂತರದಲ್ಲಿ ಸ್ಯೋಯೇಜ್ ಕಾಲುವೆಯನ್ನು ಪುನಃ ತೆರೆಯಿತು

1971: ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಪೆಯರ್ ಗಾರ್ಡನ್ನಿನಲ್ಲಿ ನಡೆದ ಸ್ಪರ್ಧೆಯಲ್ಲಿ 15 ಸುತ್ತುಗಳಲ್ಲಿ ಜೋ ಫ್ರೇಜಿಯರ್ ಅವರು ಮಹಮ್ಮದ್ ಅಲಿ ಅವರನ್ನು ಪರಾಭವಗೊಳಿಸಿ ಜಗತ್ತಿನ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

1979: ಫಿಲಿಪ್ಸ್ ಸಂಸ್ಥೆ ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಂಪಾಕ್ಟ್ ಡಿಸ್ಕ್’ಗಳನ್ನು ಪ್ರದರ್ಶಿಸಿತು.

1985: 1983 ವರ್ಷದಲ್ಲಿ ಪೂರ್ಣ ಬಹುಮತ ಹೊಂದಿಲ್ಲದಿದ್ದರೂ, ಹೆಚ್ಚು ಸ್ಥಾನಗಳನ್ನು ಗಳಿಸಿದ್ದ ತಮ್ಮ ಜನತಾ ಪಕ್ಷ ಸರ್ಕಾರಕ್ಕೆ ಭಾರತೀಯ ಜನತಾಪಕ್ಷ, ಕಮ್ಯೂನಿಸ್ಟ್ ಪಕ್ಷ ಮತ್ತು ಪಕ್ಷೇತರರ ಹೊರಗಿನ ಬೆಂಬಲದಿಂದ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ರಾಮಕೃಷ್ಣ ಹೆಗಡೆ ಅವರು, 2015ರಲ್ಲಿ ಪೂರ್ಣ ಬಹುಮತ ಪಡೆದ ಚುನಾವಣಾ ಯಶಸ್ಸಿನೊಂದಿಗೆ ಎರಡನೆಯ ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

2007: ಎಲ್ಲಿಯವರೆಗೆ ಒಂದು ರಾಜ್ಯದಲ್ಲಿ ಅಧ್ಯಯನ ಮಾಡುವಿರೋ ಅಲ್ಲಿಯವರೆಗೆ ಆ ರಾಜ್ಯದ ಭಾಷೆ ಕಲಿಯುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು. ರಾಜ್ಯದಲ್ಲಿ ಸಿ ಬಿ ಎಸ್ ಇ ಅಥವಾ ಐ ಸಿ ಎಸ್ ಇ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವ ಹೊರದೇಶ ಅಥವಾ ಹೊರರಾಜ್ಯಗಳ ವಿದ್ಯಾರ್ಥಿಗಳು ಒಂದು ವಿಷಯವಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ರಾಜ್ಯ ಸರ್ಕಾರ 2006ರ ಮೇ 25ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿತು.

2008: ಜಾಗತಿಕ ಚೆಸ್ ಕ್ರೀಡೆಯಲ್ಲಿ ಮತ್ತೊಮ್ಮೆ ತಮ್ಮ ಪ್ರಭುತ್ವ ತೋರಿದ ಭಾರತದ ವಿಶ್ವನಾಥನ್ ಆನಂದ್ ಅವರು ಮೊರೆಲಿಯಾ-ಲಿನಾರೆಸ್ ಟೂರ್ನಿಯಲ್ಲಿ ಗೆಲುವು ಸಾಧಿಸಿದರು. ಅಂತಿಮ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಬಲ್ಗೇರಿಯದ ವೆಸೆಲಿನ್ ಟೊಪಲೊವ್ ಜೊತೆ ಡ್ರಾ ಸಾಧಿಸಿದರು. ಇದರೊಂದಿಗೆ ಸಾಧ್ಯವಿರುವ 14 ಪಾಯಿಂಟುಗಳಲ್ಲಿ 8.5 ಪಾಯಿಂಟ್ ಗಿಟ್ಟಿಸಿಕೊಂಡ ಈ ಭಾರತದ ಗ್ರ್ಯಾಂಡ್ ಮಾಸ್ಟರ್ ಅಗ್ರಸ್ಥಾನ ಪಡೆದುಕೊಂಡರು. ಕಳೆದ ವರ್ಷವೂ ಇಲ್ಲಿ ಪ್ರಶಸ್ತಿ ಆನಂದ್ ಅವರ ಪಾಲಾಗಿತ್ತು.

2008: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿದ ಏರ್ ಇಂಡಿಯಾ ವಿಮಾನವೊಂದು ಈದಿನದಂದು ಚೆನ್ನೈಯಿಂದ ಕೊಲಂಬೊಗೆ ತೆರಳಿತು. ಕ್ಯಾಪ್ಟನ್ ಎಂ.ದೀಪಾ ಮತ್ತು ಫ್ಲೈಟ್ ಆಫೀಸರ್ ಎನ್. ಆರ್. ವೇದಾ ಬಕಾವತಿ ಹಾಗೂ ಇತರ ಮಹಿಳಾ ಸಿಬ್ಬಂದಿಯನ್ನು ಈ ವಿಮಾನವು ಒಳಗೊಂಡಿತ್ತು. ಗಗನಸಖಿಯರು, ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಪ್ರಯಾಣಿಕರನ್ನು ಕೊಲಂಬೊದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಗುಲಾಬಿ ಹೂವಿನೊಂದಿಗೆ ಸ್ವಾಗತಿಸಲಾಯಿತು.

2016: ಪೂರ್ಣ ಸೂರ್ಯಗ್ರಹಣವು ಸಂಭವಿಸಿತು. ಇದರ ಪೂರ್ಣ ದರ್ಶನವು ಇಂಡೊನೇಷ್ಯಾ ಮತ್ತು ಉತ್ತರ ಪೆಸಿಫಿಕ್ ಪ್ರದೇಶಗಳಲ್ಲಿ ಲಭ್ಯವಾಯಿತು.

ಪ್ರಮುಖಜನನ/ಮರಣ:

1787: ಪ್ರಸಿದ್ಧ ಜರ್ಮನ್ ಶಸ್ತ್ರಚಿಕಿತ್ಸಕ ಕಾರ್ಲ್ ಫರ್ಡಿನಾಂಡ್ ವೊನ್ ಗ್ರಾಫ್ ವಾರ್ಸಾದಲ್ಲಿ ಜನಿಸಿದರು. ಇವರು ಪ್ಲಾಸ್ಟಿಕ್ ಸರ್ಜರಿ ಮತ್ತು ರಿಕನ್ಸ್ಟ್ರಕ್ಟಿವ್ ಸರ್ಜರಿಯಲ್ಲಿ ಆಗ್ರಗಣ್ಯರೆನಿಸಿದ್ದರು.

1822: ಸೀಮೆ ಎಣ್ಣೆ ದೀಪವನ್ನು ಕಂಡುಹಿಡಿದ ಪೋಲಿಷ್ ಉದ್ಯಮಿ ಮತ್ತು ಸಂಶೋಧಕ ಇಜ್ಞೆಸಿ ಲುಕಾಸೀವಿಕ್ಜ್ ಅವರು ಆಸ್ಟ್ರಿಯಾದ ಮೀಲೆಕ್ ಬಳಿಯ ಜಡುಸ್ನಿಕಿ ಎಂಬಲ್ಲಿ ಜನಿಸಿದರು.

1848: ರೋಲರ್ ಕೋಸ್ಟರ್ ಅಭಿವೃದ್ಧಿ ಪಡಿಸಿದ ಅಮೆರಿಕದ ತಂತ್ರಜ್ಞ ಮತ್ತು ಉದ್ಯಮಿ ಲಮಾರ್ಕಸ್ ಅಡ್ನ ಥಾಂಪ್ಸನ್ ಅವರು ಓಹಿಯೋ ಪ್ರಾಂತ್ಯದ ಲಿಕಿಂಗ್ ಕೌಂಟಿ ಬಳಿಯ ಜೆರ್ಸೀ ಎಂಬಲ್ಲಿ ಜನಿಸಿದರು.

1879: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಒಟ್ಟೋ ಹಾನ್ ಅವರು ಫ್ರಾಂಕ್ಫರ್ಟ್ ನಗರದಲ್ಲಿ ಜನಿಸಿದರು. ಪರಮಾಣು ರಸಾಯನಶಾಸ್ತ್ರದ ಪಿತಾಮಹರೆಂದು ಖ್ಯಾತರಾದ ಇವರಿಗೆ 1944 ವರ್ಷದಲ್ಲಿ ನೊಬೆಲ್ ಪರಮಾಣುಶಾಸ್ತ್ರದ ಪ್ರಶಸ್ತಿ ಸಂದಿತ್ತು.

1886: ಅಮೆರಿಕದ ರಸಾಯನಶಾಸ್ತ್ರ ವಿಜ್ಞಾನಿ ಎಡ್ವರ್ಡ್ ಕಾಲ್ವಿನ್ ಕೆಂಡಾಲ್ ಕನೆಕ್ಟಿಕಟ್ ಪ್ರಾಂತ್ಯದ ಸೌತ್ ನರ್ವಾಕ್ ಎಂಬಲ್ಲಿ ಜನಿಸಿದರು. ಹಾರ್ಮೋನ್ಸ್ ಆಫ್ ದಿ ಅಡ್ರಿನಲ್ ಗ್ಲ್ಯಾಂಡ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ ಇತರ ಮೂವರು ವಿಜ್ಞಾನಿಗಳೊಂದಿಗೆ 1950 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1921: ಕವಿ ಮತ್ತು ಚಲನಚಿತ್ರ ಗೀತರಚನಕಾರ ಸಾಹಿರ್ ಲೂಧಿಯಾನ್ವಿ ಕಾವ್ಯನಾಮವುಳ್ಳ ಅಬ್ದುಲ್ ಹಾಯೀ ಅವರು ಪಂಜಾಬಿನ ಲೂಧಿಯಾನಾದಲ್ಲಿ ಜನಿಸಿದರು. ತಾಜ್ ಮಹಲ್, ಕಭೀ ಕಭೀ ಮುಂತಾದ ಚಿತ್ರಗಳಲ್ಲಿನ ಗೀತೆಗಳಿಗೆ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದ ಇವರಿಗೆ ಭಾರತಸರ್ಕಾರದ ಪದ್ಮಶ್ರೀ ಪುರಸ್ಕಾರ ಸಂದಿತ್ತು. ಹಿಂದೀ ಮತ್ತು ಉರ್ದೂ ಕವಿಯಾಗಿದ್ದ ಇವರ ನೆನಪಿನಲ್ಲಿ 2013 ವರ್ಷದಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.

1886: ಉಕ್ರೇನ್-ಫ್ರೆಂಚ್ ಭೌತವಿಜ್ಞಾನಿ ಜಾರ್ಜಸ್ ಚರ್ಪಾರ್ಕ್ ಅವರು ಪೋಲೆಂಡಿನ ಡಬ್ರೋವಿಕಾ ಎಂಬಲ್ಲಿ ಜನಿಸಿದರು. ಮಲ್ಟಿವೈರ್ ಪ್ರೋಪೋರ್ಷನಲ್ ಚೇಂಬರ್ ಸಾಧನೆಗಾಗಿ ಪ್ರಸಿದ್ಧರಾದ ಇವರಿಗೆ 1992 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1928: ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಸೇವೆ, ನ್ಯಾಯಾಂಗದಲ್ಲಿ ನಿಷ್ಠಾವಂತ ಸೇವೆ, ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮತ್ತು ಬರವಣಿಗೆ, ಹೀಗೆ ಬಹುಮುಖಿ ಸಾಧಕರಾದ ಅನ್ನದಾನಯ್ಯ ಪುರಾಣಿಕರು ಕೊಪ್ಪಳ ಜಿಲ್ಲೆಯ ದ್ಯಾಂಪುರದಲ್ಲಿ ಜನಿಸಿದರು. ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ವಚನ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳೂ ಸೇರಿದಂತೆ ಅನೇಕ ಪ್ರಶಸ್ತಿ, ಗೌರವ, ಸನ್ಮಾನಗಳು ಅವರಿಗೆ ಸಂದಿದ್ದವು.

1933: ಆಕಾಶವಾಣಿಯಲ್ಲಿ ಅಧಿಕಾರಿಯಾಗಿ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ವಿವಿಧಮುಖೀ ಸಾಧಕರಾದ ಯಮುನಾ ಮೂರ್ತಿ ಅವರು ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಗೌರವವೂ ಸೇರಿದಂತೆ ಹಲವಾರು ಗೌರವಗಳು ಯಮುನಾ ಮೂರ್ತಿಯವರನ್ನು ಅರಸಿ ಬಂದಿವೆ.

1935: ಕಥೆ, ಕವನ, ಪತ್ರಿಕೆ, ಅಧ್ಯಾಪನ, ಸಂಪಾದನೆ, ವಿಮರ್ಶೆ, ನಾಟಕ, ಸಿನಿಮಾ, ಚಳುವಳಿ ಮುಂತಾದ ವಿಭಿನ್ನ ನೆಲೆಗಳ ಬಹುಮುಖಿ ಪ್ರತಿಭಾವಂತರಾದ ಪಿ. ಲಂಕೇಶ್ ಅವರು ಶಿವಮೊಗ್ಗ ಜಿಲ್ಲೆಯ ಕೊಂಗವಳ್ಳಿ ಎಂಬಲ್ಲಿ ಜನಿಸಿದರು. ಸಾಹಿತ್ಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಸಿನಿಮಾದಲ್ಲಿ ಶ್ರೇಷ್ಠ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1923: ಡಚ್ ಭೌತವಿಜ್ಞಾನಿ ಜೋಹಾನ್ನೆಸ್ ಡಿದೆರಿಕ್ ಡೆರ್ ವಾಲ್ಸ್ ಅವರು ನೆದರ್ಲ್ಯಾಂಡ್ಸಿನ ಆಮ್ಸ್ಟರ್ಡ್ಯಾಮ್ ನಗರದಲ್ಲಿ ನಿಧನರಾದರು. ಈಕ್ವೇಶನ್ ಆಫ್ ಸ್ಟೇಟ್ ಕುರಿತಾದ ಕುರಿತಾದ ಸಾಧನೆಗೆ ಪ್ರಸಿದ್ಧರಾದ ಇವರಿಗೆ 1910 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1988: ಪಂಜಾಬಿ ಗಾಯಕ, ಸ್ವರಸಂಯೋಜಕ, ಗೀತರಚನಕಾರ ಅಮರ್ ಸಿಂಗ್ ಚಂಕಿಲಾ ಪಂಜಾಬಿನ ಮೆಹಸಂಪುರ್ ಎಂಬಲ್ಲಿ ಹತ್ಯೆಗೀಡಾದರು

1999: ನ್ಯೂಯಾರ್ಕ್ ಯಾಂಕೀಸ್ ಬೇಸ್ ಬಾಲ್ ತಾರೆ ಜೋ ಡಿಮ್ಯಾಗ್ಗಿಯೊ ಅವರು ಫ್ಲಾರಿಡಾದ ಹಾಲಿವುಡ್ಡಿನಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.

2012: ಜಪಾನಿನ ಉದ್ಯಮಿ, ಮೋರಿ ಆರ್ಟ್ ಮ್ಯೂಸಿಯಂ ಸ್ಥಾಪಕ ಮಿನೋರು ಮೋರಿ ಅವರು ಟೋಕಿಯೋದಲ್ಲಿ ನಿಧನರಾದರು.

Categories
e-ದಿನ

ಮಾರ್ಚ್-07

ಪ್ರಮುಖಘಟನಾವಳಿಗಳು:

1799: ನೆಪೋಲಿಯನ್ ಬೋನಾಪಾರ್ಟೆ ಪ್ಯಾಲೆಸ್ಟೈನಿನ ಜಾಫಾ ವಶಪಡಿಸಿಕೊಂಡ. ಆತನ ಸೈನ್ಯ 2000 ಅಲ್ಬೇನಿಯನ್ ಯುದ್ಧ ಖೈದಿಗಳನ್ನು ಹತ್ಯೆಗೈಯಲು ಮುಂದಾಯಿತು.

1814: ಚಕ್ರವರ್ತಿ ನೆಪೋಲಿಯನ್ ಕ್ರಾವೋನ್ ಕದನದಲ್ಲಿ ವಿಜಯಿಯಾದ

1835: ಶೈಕ್ಷಣಿಕ ಅನುದಾನಗಳನ್ನು ಇನ್ನು ಮುಂದೆ ಪಾಶ್ಚಾತ್ಯ ತಿಳಿವಳಿಕೆ ವೃದ್ಧಿಗಾಗಿ ಬಳಸಲಾಗುವುದು ಎಂದು ಘೋಷಿಸುವ ಮೂಲಕ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನೇ ಬದಲಾಯಿಸಿದ. ಬ್ರಿಟಿಷ್ ಸರ್ಕಾರವು ‘ಇಂಗ್ಲಿಷ್ ಶಿಕ್ಷಣ’ ಪದ್ಧತಿಯನ್ನು ಅಂಗೀಕರಿಸಿತು.

1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರಿಗೆ ಟೆಲಿಫೋನ್ ಸಂಶೋಧನೆಗಾಗಿ ಪೇಟೆಂಟ್ ನೀಡಲಾಯಿತು.

1900: ಜರ್ಮನಿಯ ‘ಎಸ್.ಎಸ್. ಕೈಸರ್ ವಿಲ್ ಹೆಲ್ಮ್ ಡೆರ್ ಗ್ರಾಸೆ’ ಮೊಟ್ಟ ಮೊದಲ ಬಾರಿಗೆ ದಡಕ್ಕೆ ವೈರ್ಲೆಸ್ ಸಂಜ್ಞೆಗಳನ್ನು ಕಳುಹಿಸಿದ ನಾವೆ ಎನಿಸಿತು.

1971: ಷೇಕ್ ಮುಜೀಬುರ್ ರಹ್ಮಾನ್ ಅವರು ಸುಹ್ರಾವಾರ್ಡಿ ಉದ್ಯಾನ್ ಎಂಬಲ್ಲಿ ಐತಿಹಾಸಿಕ ಭಾಷಣ ಮಾಡಿದರು.

1985: ‘ವಿ ಆರ್ ದಿ ವರ್ಲ್ಡ್’ ಗೀತೆ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೊಂಡಿತು.

1987: ಅಹಮದಾಬಾದಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 10,000ನೇ ರನ್ ಗಳಿಸಿ, ಈ ದಾಖಲೆ ಮಾಡಿದ ಮೊತ್ತ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1989: ‘ದಿ ಸಟಾನಿಕ್ ವರ್ಸಸ್’ ರಚನೆಕಾರ ಸಲ್ಮಾನ್ ರಷ್ದಿ ಮೇಲೆ ಫತ್ವಾ ಹೊರಡಿಸಿದ ನಿಟ್ಟಿನಲ್ಲಿ ಯುನೈಟೆಡ್ ಕಿಂಗ್ಡಂ ರಾಷ್ಟ್ರವು ಇರಾನ್ ಜೊತೆಗಿನ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದು ಹಾಕಿತು.

2003: ಎಪ್ಪತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರಸಿದ್ಧ ಪತ್ರಕರ್ತ, ಬರಹಗಾರ ಮತ್ತು ಹೋರಾಟಗಾರರಾದ ಡಾ. ಪಾಟೀಲ ಪುಟ್ಟಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಆರಂಭಗೊಂಡಿತು.

2006: ವಾರಣಾಸಿಯ ದಂಡು ರೈಲು ನಿಲ್ದಾಣ ಮತ್ತು ಸಂಕಟಮೋಚನ ದೇವಸ್ಥಾನದಲ್ಲಿ ಉಗ್ರಗಾಮಿಗಳು ಶಕ್ತಿಶಾಲಿ ಬಾಂಬ್ ಸ್ಫೋಟ ನಡೆಸಿದ್ದರಿಂದ ಕನಿಷ್ಠ 20 ಜನ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಸಂಕಟಮೋಚನ ದೇವಸ್ಥಾನದ ಒಳಗೆ ಸಂಜೆ ಪೂಜೆ ನಡೆಯುತ್ತಿದ್ದಾಗ ಮೊದಲ ಸ್ಫೋಟದಲ್ಲಿ 6 ಜನ ಮತ್ತು ಕೆಲವೇ ನಿಮಿಷಗಳಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಮತ್ತು ನಿರೀಕ್ಷಣಾ ಕೊಠಡಿಯಲ್ಲಿ ಸಂಭವಿಸಿದ ಇನ್ನೊಂದು ಬಾಂಬ್ ಸ್ಫೋಟದಲ್ಲಿ 14 ಜನ ಮೃತರಾದರು.

2007: ‘ಅಮೃತ ಮಹೋತ್ಸವ’ ಆಚರಿಸಿದ ಭಾರತೀಯ ವಾಯುಪಡೆಯು, ಚಂಡೀಗಢದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ತಾನು ಭೂ ಮೇಲ್ಮೈಯಲ್ಲಿ ಹಾಗೂ ಬಾನಿನಲ್ಲಿ ಕಾರ್ಯಾಚರಣೆಗೆ ಬಳಸುವ ಎಲ್ಲ 27 ಮಾದರಿಯ ವಿಮಾನಗಳನ್ನು ಪ್ರದರ್ಶಿಸಿತು.

2007: ಕೇರಳ ಪ್ರವಾಸೋದ್ಯಮದಲ್ಲಿ ಹೊಸತನದ ಅಲೆ ಎನಿಸಿದ ಜಗತ್ತಿನ ಅತ್ಯಂತ ದೊಡ್ಡ ಹಾಗೂ ದುಬಾರಿ ಸಮುದ್ರಯಾನದ ‘ಕ್ವೀನ್ ಮೇರಿ-2′ ಹಡಗು ಕೊಚ್ಚಿಗೆ ಬಂದಿಳಿಯಿತು. ಅಲೆಯ ಮೇಲೆ ಅಂತರಿಕ್ಷ ತೋರಿಸುವ ತಾರಾ ವೀಕ್ಷಣಾಲಯ, ಜಗತ್ತಿನ ಸಮುದ್ರದ ಮೇಲಿನ ಅತಿದೊಡ್ಡ ಗ್ರಂಥಾಲಯ ಮತ್ತು ಬಾಲ್ ರೂಂ ಈ ಹಡಗಿನ ವಿಶೇಷಗಳು.

2008: ಮೊದಲ ಬಾರಿಗೆ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಹೊತ್ತ ಪ್ರಯೋಗಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆಯಿತು. ಕಿಂಗ್ ಫಿಷರ್ ಏರ್ ಲೈನ್ಸ್, ಭಾರತೀಯ ವಾಯುಪಡೆಗಳ ವಿಮಾನ ಮತ್ತು ಏರ್ ಡೆಕ್ಕನ್ ವಿಮಾನಗಳು ಈದಿನ ಬೆಳಗ್ಗೆ ಇಲ್ಲಿ ಇಳಿಯುವ ಮತ್ತು ಹಾರುವ ಮೂಲಕ ಮಾರ್ಚ್ 30ರಿಂದ ಪ್ರಾರಂಭವಾಗುವ ವಿಮಾನ ನಿಲ್ದಾಣದ ಕಾರ್ಯಾರಂಭವನ್ನು ಸುಗಮಗೊಳಿಸಿದವು.

2008: ತ್ರಿಪುರಾ ಮತ್ತು ಮೇಘಾಲಯಗಳಲ್ಲಿ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತು. ತ್ರಿಪುರಾದಲ್ಲಿ ಎಡರಂಗ ನಾಲ್ಕನೇಯ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದರೆ, ಮೇಘಾಲಯದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಪ್ರಮುಖಜನನ/ಮರಣ:

1481: ಇಟಾಲಿಯನ್ ವಿನ್ಯಾಸಕಾರ ಮತ್ತು ಚಿತ್ರಕಾರ ಬಲ್ದಸ್ಸಾರೆ ಪೆರುಸ್ಸಿ ಸಿಯೇನಾ ಎಂಬಲ್ಲಿ ಜನಿಸಿದರು.

1765: ಪೋಟೋಗ್ರಫಿ ಸಂಶೋಧಕ ಜೋಸೆಫ್ ನೀಪ್ಸ್ ಜನಿಸಿದರು. ಫ್ರೆಂಚ್ ಸಂಶೋಧಕರಾದ ಈತ ದೀರ್ಘಕಾಲ ಬಾಳುವಂತಹ ಹೀಲಿಯೋಗ್ರಫಿ ಫೋಟೋಗ್ರಾಫ್ ತಂತ್ರಜ್ಞಾನವನ್ನು ಸೃಷ್ಟಿಸಿದರು.

1819: ಶಿಶುನಾಳ ಶರೀಫರು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳಗ್ರಾಮದಲ್ಲಿ ಜನಿಸಿದರು. ಅವರ ಮೂಲ ಹೆಸರು ಮಹಮ್ಮದ ಶರೀಫ. ಗುರುಗೋವಿಂದ ಭಟ್ಟರಿಂದ ಸುಜ್ಞಾನವನ್ನು ಪಡೆದ ಇವರು ತಾವು ಕಂಡ ಬೆಳಕನ್ನು ಇತರರೂ ಕಂಡು ಪುನೀತರಾಗಬೇಕೆಂಬ ಸದುದ್ದೇಶದಿಂದ ಹಲವಾರು ಪದ್ಯಗಳನ್ನು ರಚಿಸಿದರು. ಈ ಪದ್ಯಗಳಾದರೋ ಕಾವ್ಯ ಸೃಷ್ಟಿಗೆಂದು ರಚಿಸಿದ ಕಾವ್ಯಗಳಾಗಿರದೆ, ಜನ ಬದುಕಬೇಕೆಂದು, ಹಾಗೂ ಧರ್ಮ ಮಾರ್ಗದಿಂದ ಬಾಳಿ ಜೀವನ್ಮುಕ್ತರಾಗಬೇಕೆಂಬ ಘನ ಉದ್ದೇಶದಿಂದ ರಚಿಸಿದ ಕಾವ್ಯಗಳಾಗಿವೆ.

1857: ಆಸ್ತ್ರಿಯನ್ ವೈದ್ಯವಿಜ್ಞಾನಿ ಜೂಲಿಯಸ್ ವಾಗ್ನರ್-ಜೌರೆಗ್ ಅವರು ಆಸ್ಟ್ರಿಯಾದ ವೇಲ್ಸ್ ಎಂಬಲ್ಲಿ ಜನಿಸಿದರು. ಡಿಮೆಂಟಿಕಾ ಪ್ಯಾರಲೆಟಿಕಾ ಚಿಕಿತ್ಸೆಯಲ್ಲಿ ಮಲೇರಿಯಾ ಇನಾಕ್ಯುಲೇಶನ್ ಬಳಸಬಹುದಾದ ಸಂಶೋಧನೆಗಾಗಿ ಇವರಿಗೆ 1927 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1905: ಚಿತ್ರ ಕಲಾವಿದ, ರಾಜ್ಯ ಪ್ರಶಸ್ತಿ ವಿಜೇತ ಶಂಕರರಾವ್ ಅಳಂದಕರ ಅವರು ಕಲ್ಬುರ್ಗಿಯಲ್ಲಿ ಜನಿಸಿದರು.

1911: ಸಚ್ಚಿದಾನಂದ ಹೀರಾನಂದ ವಾತ್ಸಾಯನ ಉತ್ತರಪ್ರದೇಶದ ಡಿವೋರಿಯಾ ಜಿಲ್ಲೆಯ ಖುಷಿನಗರ ಎಂಬಲ್ಲಿ ಜನಿಸಿದರು. ‘ನಯೀ ಕವಿತಾ’ ಮತ್ತು ‘ಪ್ರಯೋಗ್’ಗಳಿಗೆ ಹೆಸರಾದ ‘ಅಜ್ನೇಯಾ’ ಕಾವ್ಯನಾಮದ ಖ್ಯಾತ ಹಿಂದಿ ಕವಿಗಳಾದ ಇವರಿಗೆ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಗೋಲ್ಡನ್ ರೀತ್ ಅವಾರ್ಡ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1934: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿದ್ದ ನಾರಿ ಕಾಂಟ್ರಾಕ್ಟರ್ ಗುಜರಾಥಿನ ಗೋಧ್ರಾದಲ್ಲಿ ಜನಿಸಿದರು. ಭಾರತದ ಪರ 31 ಟೆಸ್ಟುಗಳಲ್ಲಿ ಪ್ರಾರಂಭಿಕ ಎಡಗೈ ಆಟಗಾರರಾಗಿದ್ದ ಇವರು 1962ರ ವರ್ಷದಲ್ಲಿ ವೆಸ್ಟ್ ಇಂಡೀಜ್ನಲ್ಲಿ ಪಂದ್ಯವನ್ನಾಡುವಾಗ ತೀವ್ರವಾಗಿ ಏಟು ಬಿದ್ದು ತಮ್ಮ ಕ್ರಿಕೆಟ್ ಆಟಕ್ಕೆ ಅಂತ್ಯ ಹೇಳಬೇಕಾಯಿತು.

1938: ಅಮೆರಿಕದ ಜೀವವಿಜ್ಞಾನಿ ಡೇವಿಡ್ ಬಾಲ್ಟಿಮೋರ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ‘ರಿವರ್ಸ್ ಟ್ರಾನ್ಸ್ ಕ್ರಿಪ್ಟೇಸ್ ಬಾಲ್ಟಿಮೋರ್ ಕ್ಲಾಸಿಫಿಕೇಶನ್’ ಕುರಿತಾದ ಕಾರ್ಯಕ್ಕೆ ಪ್ರಸಿದ್ಧರಾಗಿರುವ ಇವರಿಗೆ 1975 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1945: ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕರಾದ ಟಿ.ವಿ. ಶಂಕರನಾರಾಯಣನ್ ಅವರು ತಮಿಳುನಾಡಿನ ಮೈಲಾದುತ್ತುರೈ ಎಂಬಲ್ಲಿ ಜನಿಸಿದರು. ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1949: ಕೇಂದ್ರ ಮಂತ್ರಿಗಳಾಗಿ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿರುವ ಗುಲಾಮ್ ನಬೀ ಆಜಾದ್ ಸೋತಿ ಎಂಬಲ್ಲಿ ಜನಿಸಿದರು.

1955: ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ನಟ ಅನುಪಮ್ ಖೇರ್ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನಿಸಿದರು. 500ಕ್ಕೂ ಹೆಚ್ಚು ಭಾರತೀಯ ಚಿತ್ರಗಳಲ್ಲಿ ನಟಿಸಿರುವ ಇವರು ಅನೇಕ ಅಂತರರಾಷ್ಟ್ರೀಯ ಪ್ರಸಿದ್ಧ ಚಿತ್ರಗಳಲ್ಲೂ ನಟಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ರಾಷ್ಟ್ರೀಯ ಚಲನಚಿತ್ರಗಳಲ್ಲಿ ಎರಡು ಬಾರಿ ಜ್ಯೂರಿ ಪ್ರಶಸ್ತಿ ಹಾಗೂ ಅನೇಕ ಫಿಲಂ ಫೇರ್ ಮತ್ತು ಇನ್ನಿತರ ಪ್ರಶಸ್ತಿಗಳು ಇವರಿಗೆ ಸಂದಿವೆ. ರಾಷ್ಟ್ರೀಯ ಸೆನ್ಸಾರ್ ಮಂಡಳಿ ಮತ್ತು ರಾಷ್ಟ್ರೀಯ ನಾಟಕ ಶಾಲೆಯ ಮುಂತಾದ ಸಂಸ್ಥೆಗಳ ಮುಖ್ಯಸ್ಥರಾಗಿ ಸಹಾ ಇವರ ಸೇವೆ ಸಂದಿದೆ.

1960: ಜೆಕೋತ್ಸ್ಲಾವಿಯಾ ಸಂಜಾತ ಅಮೆರಿಕ್ ಟೆನಿಸ್ ಆಟಗಾರರಾದ ಇವಾನ್ ಲೆಂಡ್ಲ್ ಒಸ್ಟ್ರಾವಾ ಎಂಬಲ್ಲಿ ಜನಿಸಿದರು. 19 ಗ್ರ್ಯಾಂಡ್ ಸ್ಲಾಮ್ ಫೈನಲ್ಗಳಲ್ಲಿ ಆಡಿ 8 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ನಂಬರ್ ಒನ್ ಆಟಗಾರರಾಗಿಯೂ ರಾರಾಜಿಸಿದ್ದ ಇವರು ಟೆನಿಸ್ ಆಟದ ಇತಿಹಾಸದಲ್ಲಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

1984: ಚಲನಚಿತ್ರ ನಟಿ ರಾಧಿಕಾ ಪಂಡಿತ್ ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ ಚಲನಚಿತ್ರಗಳಲ್ಲಿನ ಅಭಿನಯಕ್ಕೆ ಮೂರು ಬಾರಿ ಸತತವಾಗಿ ಫಿಲಂ ಫೇರ್ ಪ್ರಶಸ್ತಿ ಹ್ಯಾಟ್ರಿಕ್ ಗಳಿಸಿದ ಸಾಧನೆ ಮಾಡಿದ್ದ ಇವರು ‘ಮೊಗ್ಗಿನ ಮನಸ್ಸು’ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ಶ್ರೇಷ್ಠ ನಟಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

161: ರೋಮನ್ ಚಕ್ರವರ್ತಿ ಆಂಟೋನಿಯಾಸ್ ಪಿಯಸ್ ನಿಧನರಾದರು.

1932: ಫ್ರೆಂಚ್ ಪತ್ರಕರ್ತ, ರಾಜಕಾರಣಿ, ಫ್ರಾನ್ಸಿನ ಪ್ರಧಾನಿ ನೊಬೆಲ್ ಪುರಸ್ಕೃತ ಅರಿಸ್ಟೈಡ್ ಬ್ರಿಯಾಂಡ್ ಪ್ಯಾರಿಸ್ ನಗರದಲ್ಲಿ ನಿಧನರಾದರು.

1952: ‘ಆಟೋಬಯಾಗ್ರಫಿ ಆಫ್ ಎ ಯೋಗಿ’ ಎಂಬ ಪ್ರಸಿದ್ಧ ಗ್ರಂಥರಚನೆಕಾರ, ಪಾಶ್ಚಿಮಾತ್ಯ ದೇಶಿರಿಗರಲ್ಲಿ ಧ್ಯಾನ ಮತ್ತು ಕ್ರಿಯಾ ಯೋಗವನ್ನು ಪ್ರಸಿದ್ಧಿ ಪಡಿಸಿದ ಪರಮಹಂಸ ಯೋಗಾನಂದರು ಲಾಸ್ ಎಂಜೆಲಿಸ್ ನಗರದಲ್ಲಿ ನಿಧನರಾದರು. ‘ಕ್ರಿಯಾಯೋಗ’ ಎಂಬ ಧ್ಯಾನಪದ್ಧತಿಯನ್ನು ಪ್ರಸಿದ್ಧಿಗೊಳಿಸಿದ ಇವರು ವಿಶ್ವದ ವಿವಿದೆಡೆಗಳಲ್ಲಿ ಧ್ಯಾನ ಬೋಧನಾ ಕೇಂದ್ರಗಳನ್ನು ಸ್ಥಾಪಿಸಿ ಬಹಳಷ್ಟು ಶಿಷ್ಯರನ್ನು ಹೊಂದಿದ್ದರು.

1954: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಓಟ್ಟೋ ಡೀಲ್ಸ್ ಅವರು ಕಿಯೇಲ್ ಎಂಬಲ್ಲಿ ನಿಧನರಾದರು. ಡಿಯೇನ್ ಸಿಂಥೆಸಿಸ್ ಕುರಿತಾದ ಸಂಶೋಧನೆಗೆ ಇವರಿಗೆ 1950 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1961: ಸ್ವಾತಂತ್ರ್ಯ ಹೋರಾಟಗಾರ, ಉತ್ತರ ಪ್ರದೇಶದ ಪ್ರಥಮ ಮುಖ್ಯಮಂತ್ರಿಗಳಾಗಿದ್ದ ಗೋವಿಂದ ವಲ್ಲಭ ಪಂತ್ ನವದೆಹಲಿಯಲ್ಲಿ ನಿಧನರಾದರು. ಸ್ವಾತಂತ್ಯ್ರ ಹೋರಾಟದಲ್ಲಿ ಪೋಲೀಸರ ಲಾಠಿ ಏಟಿನಿಂದಇವರಿಗೆ ಅಂಗವೇ ಊನವಾಗಿತ್ತು. 1957ರಲ್ಲಿ ‘ಭಾರತ ರತ್ನ’ ಪ್ರಶಸ್ತಿಯನ್ನು ಅವರಿಗೆ ಕೊಟ್ಟು ಗೌರವಿಸಲಾಯಿತು. ಆಗ ಪಂತರು ಹೇಳಿದರು ‘‘ನಾನು ಸ್ವಾತಂತ್ರ್ಯಕ್ಕಾಗಿ ನಾಲ್ಕು ಸಲ ಜೈಲಿಗೆ ಹೋಗಿದ್ದೆ. ಅದೇ ನನಗೆ ಸಿಕ್ಕ ನಿಜವಾದ ಪುರಸ್ಕಾರ. ಅದಕ್ಕಿಂತ ಇನ್ನೇನು ಬೇಕು?’’

1997: ಅಮೇರಿಕಾದ ಭೌತವಿಜ್ಞಾನಿ ಎಡ್ವರ್ಡ್ ಮಿಲ್ಸ್ ಪರ್ಸೆಲ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನಾನ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1952 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2012: ಪ್ರಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿ ಶಂಕರ್ ಶರ್ಮಾ ಮುಂಬೈನಲ್ಲಿ ನಿಧನರಾದರು. ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು.

 

Categories
e-ದಿನ

ಮಾರ್ಚ್-06

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 12: ರೋಮನ್ ದೊರೆ ಆಗಸ್ಟಸ್ ‘ಪಾಂಟಿಫೆಕ್ಸ್ ಮ್ಯಾಕ್ಸಿಮಸ್’ ಗೌರವ ಪಡೆದು ಚಕ್ರವರ್ತಿಯಾದರು

632: ಪ್ರವಾದಿ ಮುಹಮ್ಮದ್ ಅವರ ಅಂತಿಮ ಸಂದೇಶ (ಫೇರ್ವೆಲ್ ಸರ್ಮನ್) ಸಂದಿತು.

1665: ರಾಯಲ್ ಸೊಸೈಟಿಯ ಪ್ರಥಮ ಜಂಟಿ ಕಾರ್ಯದರ್ಶಿಗಳಾದ ಹೆನ್ರಿ ಓಲ್ಡನ್ ಬರ್ಗ್ ಅವರು ‘ಫಿಲಸಾಫಿಕಲ್ ಟ್ರಾನ್ಸಾಕ್ಷನ್ಸ್ ಆಫ್ ದಿ ರಾಯಲ್ ಸೊಸೈಟಿ’ ಪ್ರಥಮ ಸಂಚಿಕೆಯನ್ನು ಪ್ರಕಟಿಸಿದರು.

1869: ಡ್ಮಿಟ್ರಿ ಮೆಂಡೆಲೀವ್ ಅವರು ಮೊದಲ ರಸಾಯನ ಶಾಸ್ತ್ರದ ಪೀರಿಯಾಡಿಕ್ ಟೇಬಲ್ ಅನ್ನು ರಷ್ಯನ್ ಕೆಮಿಕಲ್ ಸೊಸೈಟಿಯ ಮುಂದೆ ಪ್ರಸ್ತುತಪಡಿಸಿದರು.

1899: ಬಾಯರ್ ಸಂಸ್ಥೆಯು ‘ಆಸ್ಪಿರಿನ್’ ಅನ್ನು ತನ್ನ ಟ್ರೇಡ್ ಮಾರ್ಕ್ ಆಗಿ ನೊಂದಾಯಿಸಿತು.

1930: ಕಮ್ಯೂನಿಸ್ಟ್ ಇಂಟರ್ನ್ಯಾಷನಲ್ ಸಂಘಟನೆಯು ವಿಶ್ವದಾದ್ಯಂತ ‘ಇಂಟರ್ ನ್ಯಾಷನಲ್ ಅನ್ ಎಂಪ್ಲಾಯ್ಮೆಂಟ್’ ಪ್ರದರ್ಶನಗಳನ್ನು ಏರ್ಪಡಿಸಿತು. ‘ಗ್ರೇಟ್ ಡಿಪ್ರೆಷನ್’ ಅಥವಾ ಆರ್ಥಿಕ ಹಿನ್ನೆಡೆಯ ಸಂದರ್ಭದಲ್ಲಿ ಎಲ್ಲೆಲ್ಲೂ ನಿರುದ್ಯೋಗ ಕಾಡತೊಡಗಿದ್ದ ಸಂದರ್ಭದಲ್ಲಿ ಈ ಪ್ರದರ್ಶನಕ್ಕೆ ವ್ಯಾಪಕವಾದ ಬೆಂಬಲ ದೊರೆತಿತ್ತು.

1943: ನಾರ್ಮನ್ ರಾಕ್ವೆಲ್ ಅವರು ‘ದಿ ಸಾಟರ್ಡೇ ಈವನಿಂಗ್ ಪೋಸ್ಟ್’ ಪತ್ರಿಕೆಯಲ್ಲಿ ‘ಫೋರ್ ಫ್ರೀಡಮ್’ ಮಾಲಿಕೆಯಲ್ಲಿ ‘ಫ್ರೀಡಮ್ ಫ್ರಂ ವಾಂಟ್’ ಲೇಖನವನ್ನು ಪ್ರಕಟಿಸಿದರು.

1961: ಭಾರತದ ಮೊತ್ತ ಮೊದಲ ಆರ್ಥಿಕ ದಿನಪತ್ರಿಕೆ `ಇಕನಾಮಿಕ್ ಟೈಮ್ಸ್’ ಅನ್ನು ಟೈಮ್ಸ್ ಆಫ್ ಇಂಡಿಯಾ ಸಮೂಹ ಆರಂಭಿಸಿತು.

1964: ನೇಶನ್ ಆಫ್ ಇಸ್ಲಾಂ ನಾಯಕರಾದ ಎಲಿಜಃ ಮುಹಮ್ಮದ್ ಅವರು ಬಾಕ್ಸಿಂಗ್ ಚಾಂಪಿಯನ್ ಕ್ಯಾಸಿಯಸ್ ಕ್ಲೇ ಅವರಿಗೆ ಮುಹಮ್ಮದ್ ಅಲಿ ಎಂಬ ಹೆಸರು ಕೊಟ್ಟರು

1967: ಸೋವಿಯತ್ ಯೂನಿಯನ್ನಿನ ಜೋಸೆಫ್ ಸ್ಟಾಲಿನ್ ಅವರ ಪುತ್ರಿ ಸ್ವೆಟ್ಲಾನಾ ಅಲ್ಲಿಲುವೇವಾ ಅವರು ಅಮೆರಿಕಕ್ಕೆ ವಲಸೆ ಹೋದರು

1971: ಪೋರ್ಟ್ ಆಫ್ ಸ್ಪೇನಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವುದರೊಂದಿಗೆ ಸುನಿಲ್ ಗಾವಸ್ಕರ್ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಿದರು. ಅವರು ಔಟಾಗದೆ 65 ಮತ್ತು 67 ರನ್ನುಗಳನ್ನು ಪಡೆದರು.

1992: ‘ಮೈಕೆಲೇಂಜೆಲೊ’ ಹೆಸರಿನ ವೈರಸ್ ಜಗತ್ತಿನಾದ್ಯಂತ ಪರ್ಸನಲ್ ಕಂಪ್ಯೂಟರುಗಳನ್ನು ಬಾಧಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು.

1997: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ ರಾಯಲ್ ವೆಬ್ ಸೈಟನ್ನು ಉದ್ಘಾಟಿಸಿದರು (http://www.royal.gov.uk)

2006: ಸಾರ್ವಜನಿಕರ ಒತ್ತಡವನ್ನು ಅನುಸರಿಸಿ ದೆಹಲಿ ಪೊಲೀಸರು ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಹೊಸದಾಗಿ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಹರಿಯಾಣ ಸಚಿವರ ಪುತ್ರ ಮನುಶರ್ಮಾ ಸೇರಿದಂತೆ 9 ಆರೋಪಿಗಳನ್ನು ಖುಲಾಸೆ ಮಾಡಿತ್ತು.

2006: ಪ್ರಸ್ತುತ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯು ‘ಕ್ರಾಷ್’ ಚಿತ್ರಕ್ಕೆ ಲಭಿಸಿತು. ಆಂಜ್ ಲೀ ನಿರ್ದೇಶನದ ‘ಬ್ರೋಕ್ ಬ್ಯಾಕ್ ಮೌಂಟನ್’ ಚಿತ್ರವನ್ನು ‘ಕ್ರಾಷ್’ ಹಿಂದಿಕ್ಕಿತು. ಆಂಜ್ ಲೀಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು.

2007: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೊತ್ತ ಮೊದಲ ಬಾರಿಗೆ 1000 ಕೋಟಿ ರೂಪಾಯಿ ವಾರ್ಷಿಕ ವರಮಾನ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತು. 2006ರಲ್ಲಿ ಇದೇ ದಿನ ಸಂಸ್ಥೆಯು 838 ಕೋಟಿ ರೂಪಾಯಿ ವರಮಾನ ಗಳಿಸಿತ್ತು.

2008: ಅಮೆರಿಕದ ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲರ್ ಮಿತ್ತಲ್ ಸಂಸ್ಥೆಯ ಸ್ಥಾಪಕ ಮುಖ್ಯಸ್ಥ ಲಕ್ಷ್ಮೀ ಮಿತ್ತಲ್ ಅವರು 45 ಶತಕೋಟಿ ಡಾಲರುಗಳ ಒಡೆಯರಾಗಿ ಮೊದಲ ಸ್ಥಾನದಲ್ಲಿ ಕಂಗೊಳಿಸಿದರು.

ಪ್ರಮುಖಜನನ/ಮರಣ:

1475: ಮೈಕೆಲೇಂಜೆಲೋ ಬೊನೋರೊಟ್ಟಿ ಇಟಲಿಯ ಫ್ಲಾರೆನ್ಸ್ ನಗರದ ಸಮೀಪದ ಕೇಪ್ರೆಸೆ ಎಂಬಲ್ಲಿ ಜನಿಸಿದರು. ಮಹಾನ್ ಚಿತ್ರಕಾರ, ಶಿಲ್ಪಿ, ವಿನ್ಯಾಸಕಾರ ಹಾಗೂ ಕವಿಯೆನಿಸಿರುವ ಮೈಕೆಲೇಂಜೆಲೋ ಅವರು ಇಟಲಿಯ ಭವ್ಯ ಪುನರುತ್ಥಾನ ಕಾಲದ ಮೇರುಸದೃಶ ಕಲಾವಿದರೆಂದು ಪ್ರಸಿದ್ಧರಾಗಿದ್ದಾರೆ. ರೋಮ್ ನಗರದಲ್ಲಿ ‘ಪಿಯೇಟಾ’ ಶಿಲ್ಪ, ಫ್ಲಾರೆನ್ಸ್ ನಗರದಲ್ಲಿ ‘ಡೇವಿಡ್’ ಶಿಲ್ಪ, ವ್ಯಾಟಿಕನ್ ನಗರದ ಸಿಸ್ಟೀನ್ ಚಾಪೆಲ್ಲಿನಲ್ಲಿ ಕ್ರಿಸ್ತನ ಜೀವನ ಚರಿತ್ರೆ ಮತ್ತು ‘ದಿ ಲಾಸ್ಟ್ ಜಡ್ಜ್ಮೆಂಟ್’ ಮುಂತಾದವು ಅವರ ಪ್ರಸಿದ್ಧ ಸೃಷ್ಟಿಗಳಾಗಿವೆ.

1508: ಮೊಘಲ್ ವಂಶದ ಎರಡನೇ ದೊರೆ ಹುಮಾಯೂನ್ ಆಫ್ಘಾನಿಸ್ಥಾನದ ಕಾಬುಲ್ನಲ್ಲಿ ಜನಿಸಿದರು.

1697: ಬ್ರಿಟಿಷ್ ಭಾರತದ ಮೊಟ್ಟ ಮೊದಲ ಸೈನ್ಯಾಧಿಕಾರಿಗಳಾದ ಸ್ಟ್ರಿಂಜರ್ ಲಾರೆನ್ಸ್ ಇಂಗ್ಲೆಂಡಿನ ಹಿಯರ್ಫೋರ್ಡ್ ಎಂಬಲ್ಲಿ ಜನಿಸಿದರು.

1849: ಆಸ್ಟ್ರಿಯನ್ ಗನ್ ವಿನ್ಯಾಸಕಾರರಾದ ಜಾರ್ಜ್ ಲೂಗರ್ ಅವರು ಟೈರಾಲ್ ಪ್ರದೇಶದ ಸ್ಟೀನಾಕ್ ಆಮ್ ಬ್ರೆನ್ನರ್ ಎಂಬಲ್ಲಿ ಜನಿಸಿದರು. ಇವರು ವಿನ್ಯಾಸಗೊಳಿಸಿದ ಪಿಸ್ತೂಲು ‘ಲೂಗರ್ ಪಿಸ್ತೂಲ್’ ಎಂದೇ ಹೆಸರಾಗಿದೆ.

1920: ಗಂಧದ ಕೆತ್ತನೆ ಕೆಲಸಕ್ಕೆ ಹೆಸರಾದ ಗುಡಿಕಾರ ಕಲಾವಿದ ಯಶವಂತ ಈರಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಿಸಿದರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1927: ಕೊಲಂಬಿಯನ್ ಪತ್ರಕರ್ತ ಮತ್ತು ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮರ್ಕ್ವೆಜ್ ಅವರು ಕೊಲಂಬಿಯಾದ ಅರಕಟಾಕ ಎಂಬಲ್ಲಿ ಜನಿಸಿದರು. ಸ್ಪಾನಿಷ್ ಭಾಷೆಯ ಮಹತ್ವದ ಬರಹಗಾರರೆನಿಸಿರುವ ಇವರಿಗೆ 1982 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1937: ರಷ್ಯಾದ ಗಗನಯಾತ್ರಿ ವಾಲೆಂಟೀನಾ ತೆರೆಷ್ಕೋವಾ ಸೋವಿಯತ್ ಯೂನಿಯನ್ನಿನ ಬೋಲ್ ಶೋಯೇ ಮಸ್ಲೆನ್ನಿಕೋವೋ ಎಂಬಲ್ಲಿ ಜನಿಸಿದರು. ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ರಾಜಕಾರಣಿಯಾಗಿ ಸಹಾ ಅನೇಕ ಹುದ್ಧೆಗಳನ್ನು ನಿರ್ವಹಿಸಿದ್ದಾರೆ.

1938: ಚಲನಚಿತ್ರ ಕಲಾವಿದೆ ಎಂ. ಲೀಲಾವತಿ ಅವರು ಮಂಗಳೂರಿನಲ್ಲಿ ಜನಿಸಿದರು. ಸುಮಾರು 600 ಚಿತ್ರಗಳಲ್ಲಿ ನಟಿಸಿರುವ ಇವರು ಮದುವೆ ಮಾಡಿ ನೋಡು, ಸಂತ ತುಕಾರಾಂ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಪಡೆದರೆ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಅವರೇ ನಿರ್ಮಿಸಿದ ‘ಕನ್ನಡದ ಕಂದ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಪಡೆದರು. ಚಲನಚಿತ್ರ ರಂಗದ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯೂ ಇವರಿಗೆ ಸಂದಿದೆ.

1973: ಅಮೇರಿಕನ್ ಮಹಿಳಾ ಸಾಹಿತಿ ಪರ್ಲ್ ಎಸ್ ಬಕ್ ಅವರು ವೆರ್ಮಾಂಟ್ ಪ್ರದೇಶದ ಡ್ಯಾನ್ಬಿ ಎಂಬಲ್ಲಿ ನಿಧನರಾದರು. ‘ಗುಡ್ ಅರ್ಥ್’ ಎಂಬುದು ಅವರ ಪ್ರಸಿದ್ಧ ಕಾದಂಬರಿ. ಚೀನಾ ದೇಶದಲ್ಲಿನ ರೈತ ಜೀವನವನ್ನು ಮನೋಜ್ಞವಾಗಿ ನಿರೂಪಿಸಿರುವ ಮತ್ತು ತಮ್ಮ ಜೀವನಾನುಭವಗಳನ್ನು ತೆರೆದಿಟ್ಟಿರುವ ಅವರಿಗೆ 1938 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2005: ಜರ್ಮನ್-ಅಮೇರಿಕನ್ ಭೌತವಿಜ್ಞಾನಿ ಹಾನ್ಸ್ ಬೇಥೆ ಅವರು ನ್ಯೂಯಾರ್ಕಿನ ಇಥಾಕಾ ಎಂಬಲ್ಲಿ ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು. ಆಸ್ಟ್ರೋ ಫಿಸಿಕ್ಸ್, ಎಲೆಕ್ಟ್ರೋ ಡೈನಮಿಕ್ಸ್ ಮತ್ತು ಸಾಲಿಡ್ ಸ್ಟೇಟ್ ಫಿಸಿಕ್ಸ್ ಕುರಿತಾದ ಅವರ ಕುರಿತಾದ ಸಂಶೋಧನಾ ಕೊಡುಗೆಗಳಿಗಾಗಿ ಇವರಿಗೆ 1967 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2015: ಬಿಹಾರದ 18ನೇ ಮುಖ್ಯಮಂತ್ರಿಗಳಾಗಿದ್ದ ರಾಮ ಸುಂದರ ದಾಸ್ ಪಾಟ್ನಾದಲ್ಲಿ ನಿಧನರಾದರು.

Categories
e-ದಿನ

ಮಾರ್ಚ್-05

ಪ್ರಮುಖಘಟನಾವಳಿಗಳು:

363: ರೋಮನ್ ಚಕ್ರಾಧಿಪತಿ ಜೂಲಿಯನ್ ಆಂಟಿಯೋಕ್ನಿಂದ 90,000 ಸೈನಿಕರೊಂದಿಗೆ ಸಸಾನಿಯನ್ ಸಾಮ್ರಾಜ್ಯದ ವಿರುದ್ಧ ದಂಡಯಾತ್ರೆ ಹೊರಟ. ಈ ದಂಡಯಾತ್ರೆ ಆತನಿಗೇ ಸಾವು ತಂದಿತು.

1046: ಪರ್ಷಿಯನ್ ಕವಿ ನಾಸಿರ್ ಖುಸ್ರಾವ್ ಏಳು ವರ್ಷಗಳ ಮಧ್ಯ ಪೂರ್ವ ಪ್ರವಾಸವನ್ನು ಪ್ರಾರಂಭಿಸಿದರು. ತಮ್ಮ ಪ್ರವಾಸದ ಅನುಭವಗಳನ್ನು ಅವರ ತಮ್ಮ ‘ಸಫರ್ನಾಮಾ’ ಕೃತಿಯಲ್ಲಿ ವಿವಿರಿಸಿದ್ದಾರೆ.

1616: ನಿಕೊಲಸ್ ಕೂಪರ್ನಿಕಸ್ ಅವರ ಪುಸ್ತಕ ‘ಆನ್ ದಿ ರೆವಲ್ಯೂಷನ್ಸ್ ಆಫ್ ದಿ ಹೆವನ್ಲಿ ಸ್ಫಿಯರ್ಸ್’, ಅದು ಪ್ರಕಟಗೊಂಡ 73 ವರ್ಷಗಳ ನಂತರದಲ್ಲಿ ನಿಷೇಧಿತ ಪುಸ್ತಕಗಳ ಪರಿವಿಡಿಗೆ ಸೇರ್ಪಡೆಗೊಂಡಿತು.

1770: ಬೋಸ್ಟನ್ ಹತ್ಯಾಕಾಂಡದಲ್ಲಿ ಕ್ರಿಸ್ಪಸ್ ಆಟಕ್ಸ್ ಅವರೂ ಸೇರಿದಂತೆ ಐದು ಅಮೆರಿಕನ್ನರಿಗೆ ಬ್ರಿಟಿಷ್ ಪೋಲೀಸ್ ಕಾರ್ಯಾಚರಣೆಯಿಂದ ಗಂಭೀರ ಸ್ವರೂಪದ ಪೆಟ್ಟು ಬಿತ್ತು. ಈ ಘಟನೆ ಮುಂದೆ ಅಮೆರಿಕನ್ ಕ್ರಾಂತಿಕಾರಿ ಹೋರಾಟಕ್ಕೆ ತಿರುಗಿ ಅಮೆರಿಕನ್ ಸ್ವಾತಂತ್ರ್ಯಕ್ಕಾಗಿನ ಯುದ್ಧಸ್ವರೂಪ ಪಡೆಯಿತು.

1836: ಸಾಮ್ಯುಯೆಲ್ ಕೋಲ್ಟ್ ಅವರು ‘.34-ಕ್ಯಾಲಿಬರ್’ನ ಪ್ರಥಮ ಉತ್ಪಾದನಾ ಮಾದರಿ ರಿವಾಲ್ವರ್ಗೆ ಪೇಟೆಂಟ್ ಪಡೆದರು.

1850: ಮೆನಾಯ್ ಸ್ಟ್ರೀಟ್ ಮೇಲುಗಡೆಯಲ್ಲಿ ಆಂಗ್ಲೆಸೆ ದ್ವೀಪ ಮತ್ತು ಮೈನ್ ಲ್ಯಾಂಡ್ ವೇಲ್ಸ್ ನಡುವಣ ಬ್ರಿಟಾನಿಯಾ ಸೇತುವೆ ಸಂಚಾರಕ್ಕೆ ತೆರೆದುಕೊಂಡಿತು.

1851: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1872: ಜಾರ್ಜ್ ವೆಸ್ಟಿಂಗ್ ಹೌಸ್ ಅವರು ‘ಏರ್ ಬ್ರೇಕ್’ಗೆ ಪೇಟೆಂಟ್ ಪಡೆದರು.

1931: ಗಾಂಧೀ-ಇರ್ವಿನ್ ಒಪ್ಪಂದಕ್ಕೆ ಸಹಿಯಾಯಿತು.

1933: ‘ಗ್ರೇಟ್ ಡಿಪ್ರೆಷನ್’ ಎಂಬ ಭೀಕರ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ಬ್ಯಾಂಕುಗಳಿಗೆ ರಜೆ ಘೋಷಿಸಿ, ಅದರ ಬಾಗಿಲುಗಳನ್ನು ಮುಚ್ಚಿ ಎಲ್ಲಾ ಹಣಕಾಸು ವ್ಯವಹಾರಗಳನ್ನೂ ಸ್ಥಗಿತಗೊಳಿಸಿದರು.

1933: ರೀಚ್ ಸ್ಟ್ಯಾಗ್ ಚುನಾವಣೆಯಲ್ಲಿ ಅಡೋಲ್ಫ್ ಹಿಟ್ಲರನ ನಾಜಿ ಪಕ್ಷ 43.9% ಮತಗಳಿಸಿತು. ಇದರಿಂದಾಗಿ ಅದು ‘ಎನೇಬ್ಲಿಂಗ್ ಖಾಯಿದೆ’ಯನ್ನು ಜಾರಿಗೆ ತಂದು ಸರ್ವಾಧಿಕಾರತ್ವದ ಸರ್ಕಾರವನ್ನು ರಚಿಸುವುದಕ್ಕೆ ಮುಂದಾಯಿತು.

1940: ಕಟಿನ್ ಮಾರಣಹೋಮ ಎಂದು ಹೆಸರಾಗಿರುವ ಘಟನೆಯಲ್ಲಿ ಜೋಸೆಫ್ ಸ್ಟಾಲಿನ್ ಒಳಗೊಂಡಂತೆ ಆರು ಜನ ಪ್ರಮುಖ ಅಧಿಕಾರಿಗಳನ್ನೊಳಗೊಂಡ ‘ಸೋವಿಯತ್ ಪೊಲಿಟ್ಬ್ಯುರೋ’ ನಿರ್ಣಾಯಕ ಮಂಡಳಿಯು, 14,700 ಯುದ್ಧಖೈದಿಗಳನ್ನೂ ಒಳಗೊಂಡಂತೆ 25,700 ಪೋಲಿಷ್ ಬುದ್ಧಿಜೀವಿಗಳನ್ನು ಹತ್ಯೆಗೈಯುವ ಆದೇಶಕ್ಕೆ ಸಹಿ ಹಾಕಿತು.

1940: ಮಹಾತ್ಮಾ ಗಾಂಧಿಯವರು ಸೆಗಾಂವ್ ಗ್ರಾಮಕ್ಕೆ ‘ಸೇವಾ ಗ್ರಾಮ’ ಎಂದು ಮರುನಾಮಕರಣ ಮಾಡಿದರು.

1946: ವಿನ್ಸ್’ಟನ್ ಚರ್ಚಿಲ್ ಅವರು ಮಿಸ್ಸೌರಿಯ ವೆಸ್ಟ್ ಮಿನಿಸ್ಟರ್ ಕಾಲೇಜಿನಲ್ಲಿನ ತಮ್ಮ ಭಾಷಣದಲ್ಲಿ ‘ಕಬ್ಬಿಣದ ಪರದೆ’(Iron Curtain) ಎಂಬ ರೂಪಕವನ್ನು ಬಳಸಿದರು.

1949: ಮುವ್ವತ್ತೆರಡನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರೆವರೆಂಡ್ ಉತ್ತಂಗಿ ಚನ್ನಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಕಲಬುರ್ಗಿಯಲ್ಲಿ ಆರಂಭಗೊಂಡಿತು.

1970: 43 ದೇಶಗಳು ಸಹಿ ಹಾಕುವುದರೊಂದಿಗೆ ‘ನ್ಯೂಕ್ಲಿಯರ್ ನಾನ್-ಪ್ರೊಲಿಫಿರೇಶನ್ ಟ್ರೀಟಿ’ ಚಾಲನೆ ಪಡೆದುಕೊಂಡಿತು.

1990: ಭೋಪಾಲಿನಲ್ಲಿ 1984ರಲ್ಲಿ ಸಂಭವಿಸಿದ ಭೀಕರ ವಿಷಾನಿಲ ದುರಂತದಲ್ಲಿ ತೊಂದರೆಗೆ ಒಳಗಾದ 5 ಲಕ್ಷ ಜನರಿಗೆ 360 ಕೋಟಿ ರೂಪಾಯಿಗಳ ನೆರವನ್ನು ಸರ್ಕಾರ ಘೋಷಿಸಿತು.

1995: ಭಾರತ ಮತ್ತು ಚೀನಾ ಹೊಸ ಗಡಿ ರೇಖೆಯನ್ನು ಗುರುತಿಸಿದವು. ಮಿಲಿಟರಿ ಅಧಿಕಾರಿಗಳ ಮಾತುಕತೆಗೆ ನೆರವಾಗಲು ಸಿಕ್ಕಿಂನ ನಾಥೂಲಾ ಪ್ರದೇಶವನ್ನು ಗುರುತಿಸಲಾಯಿತು.

1997: ಮುಂಬೈನ ಪಾಂಡುರಂಗ ಶಾಸ್ತ್ರಿ ಅಠವಳೆ ಅವರನ್ನು ಧಾರ್ಮಿಕ ಪ್ರಗತಿಗಾಗಿ ನೀಡಲಾಗುವ 1997ರ `ಜಾನ್ ಎಂ.ಟಿ. ಟೆಂಪ್ಲೆಟನ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು. ಈ ಪ್ರಶಸ್ತಿಯ ಮೊತ್ತ 12 ಲಕ್ಷ ಡಾಲರುಗಳು.

2007: ಭಾರತವು ಪೈಲಟ್ ರಹಿತ ಯುದ್ಧ ವಿಮಾನ ‘ಲಕ್ಷ್ಯ’ದ ಪರೀಕ್ಷಾರ್ಥ ಪ್ರಯೋಗವನ್ನು ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಿತು. ಬೆಂಗಳೂರಿನ ವಿಮಾನ ಅಭಿವೃದ್ಧಿ ಸಂಸ್ಥೆಯಲ್ಲಿ (ಎಡಿಇ) ಸಿದ್ಧ ಪಡಿಸಲಾಗಿರುವ ಈ ವಿಮಾನವು ಚಾಲಕರಿಲ್ಲದೆಯೇ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.

2008: ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆ ಸಲ್ಲಿಸಿದರು.

ಪ್ರಮುಖಜನನ/ಮರಣ:

1512: ಜರ್ಮನ್-ನೆದರ್ಲ್ಯಾಂಡ್ ಪ್ರದೇಶದವರಾದ ಭೂಪಟ ತಯಾರಕ, ಭೂಗೊಳತಜ್ಞ ಮತ್ತು ಕಾಸ್ಮೋಗ್ರಾಫರ್ ಆದ ಗೆರಾರ್ಡಸ್ ಮರ್ಕೇಟರ್ ನೆದರ್ಲ್ಯಾಂಡಿನ ರೂಪೆಲ್ಮೊಂಡೆ ಎಂಬಲ್ಲಿ ಜನಿಸಿದರು. ‘ನಕಾಶೆ’ ಅಥವಾ ‘ಮ್ಯಾಪ್’ ತಯಾರಿಕೆ ಇವರು ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ‘ಮರ್ಕೇಟರ್ ಪ್ರೊಜೆಕ್ಷನ್’ ಎಂದೇ ಖ್ಯಾತಿ ಪಡೆದಿದೆ. ಇದಲ್ಲದೆ ಇವರು ನಕಾಶೆಗಳ ಸಂಗ್ರಹಕ್ಕೆ ‘ಅಟ್ಲಾಸ್’ ಎಂಬ ಶಬ್ದವನ್ನು ಬಳಕೆಗೆ ತಂದರು.

1730: ಆಂಟನಿ ಲೌಮೆಟ್ ಡೆ ಲಾ ಮೋತ್ ಕಾಡಿಲ್ಯಾಕ್ ಅವರು ಪ್ರಾನ್ಸಿನ ಸೈಂಟ್-ನಿಕೊಲಸ್-ಡಿ-ಲಾ ಗ್ರೇವ್ ಎಂಬಲ್ಲಿ ಜನಿಸಿದರು. ಫ್ರೆಂಚ್ ಯೋಧ, ಸಂಶೋಧಕ ಹಾಗೂ ಉತ್ತರ ಅಮೆರಿಕಾದ ಆಡಳಿತಗಾರರಾದ ಇವರು ಡೆಟ್ರಾಯಿಟ್ ನಗರವನ್ನು ಸ್ಥಾಪಿಸಿದರು. ಸಿಟಿ ಆಫ್ ಕಾಡಿಲ್ಯಾಕ್, ಕಾಡಿಲ್ಯಾಕ್ ಮೌಂಟನ್, ಕಾಡಿಲ್ಯಾಕ್ ಆಟೋಮೊಬೈಲ್ ಮುಂತಾದವುಗಳೆಲ್ಲಾ ಇವರ ಹೆಸರನ್ನು ಪಡೆದುಕೊಂಡಿವೆ.

1912: ಕತೆಗಾರ್ತಿ ಕೊಡಗಿನ ಗೌರಮ್ಮನವರು ಮಡಿಕೇರಿಯಲ್ಲಿ ಜನಿಸಿದರು. ತಮ್ಮೂರಿಗೆ ಬಂದ ಗಾಂಧೀಜಿಯವರನ್ನು ಉಪವಾಸ ಕುಳಿತು ತನ್ನ ಮನೆಗೆ ಬರುವಂತೆ ಮಾಡಿ ತನ್ನ ಆಭರಣಗಳನ್ನೆಲ್ಲಾ ಕೊಟ್ಟುಬಿಟ್ಟರೆಂದು ಸ್ವಯಂ ಗಾಂಧೀಜಿಯವರೇ, ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದಾರೆ. ಅವರ ಮೊದಲ ಕತೆ ಪ್ರಕಟವಾದದ್ದು 1931ರಲ್ಲಿ. ಅಲ್ಲಿಂದ ಸುಮಾರು ಎಂಟು ವರ್ಷಗಳವರೆಗಿನ ಅವಧಿಯಲ್ಲಿ ಸುಮಾರು ಇಪ್ಪತ್ತೊಂದು ಕಥೆಗಳನ್ನು ಬರೆದಿದ್ದಾರೆ. 1939ರ ಏಪ್ರಿಲ್ 13ರಂದು ಅವರ ಮನೆಗೆ ಸಮೀಪ ಹರಿಯುತ್ತಿದ್ದ ಹಟ್ಟಿ ಹಳ್ಳಿಯಲ್ಲಿ ಈಜಲು ಹೋಗಿ ಸುಳಿಗೆ ಸಿಕ್ಕಿ ಹೊರಬರಲಾಗದೆ ಮೃತರಾದರು.

1913: ಕಿರಾಣಾ ಘರಾಣೆಯ ಸ್ವರ ಸಾಮ್ರಾಜ್ಞಿ ಎಂದು ಪ್ರಸಿದ್ಧರಾಗಿದ್ದ ಗಾಂಗೂಬಾಯಿ ಹಾನಗಲ್ ಅವರು ಹಾನಗಲ್ ಎಂಬಲ್ಲಿ ಜನಿಸಿದರು. ಜೀವನಪರ್ಯಂತ ಸೀದಾ ಸಾದಾ ವ್ಯಕ್ತಿತ್ವವನ್ನೇ ರೂಪಿಸಿಕೊಂಡು ನಡೆದ ಅವರಿಗೆ ಪದ್ಮವಿಭೂಷಣ, ಎಂಟು ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಪದವಿಗಳು, ರಾಷ್ಟ್ರಮಟ್ಟದಲ್ಲೇ ಮೇರುಮಟ್ಟದ ನಲವತ್ತೆಂಟು ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

1916: ಬಿಜೊಯಾನಂದ ‘ಬಿಜು’ ಪಟ್ನಾಯಕ್ ಒರಿಸ್ಸಾದ ಕಟಕ್ ನಗರದಲ್ಲಿ ಜನಿಸಿದರು. ವೈಮಾನಿಕರಾಗಿಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು 1961-63 ಮತ್ತು 1990-95ರ ಅವಧಿಗಳಲ್ಲಿ ಎರಡು ಬಾರಿ ಒರಿಸ್ಸಾ ಮುಖ್ಯಮಂತ್ರಿಯಾಗಿ, 1977-80 ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1934: ಇಸ್ರೇಲಿ-ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ಮನಃಶಾಸ್ತ್ರಜ್ಞರಾದ ಡೇನಿಯಲ್ ಕಹ್ನೆಮನ್ ಪ್ಯಾಲೆಸ್ಟೈನಿನ ಟೆಲ್ ಅವಿವ್ ಎಂಬಲ್ಲಿ ಜನಿಸಿದರು. ಇವರಿಗೆ 2002 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1966: ಭಾರತೀಯ-ಅಮೇರಿಕನ್ ನಟ, ನಿರ್ಮಾಪಕ, ಚಿತ್ರಕತೆಗಾರ ಆಸಿಫ್ ಮಾಂಡ್ವಿ ಮುಂಬೈನಲ್ಲಿ ಜನಿಸಿದರು. ಇವರು ಅಮೆರಿಕದ ಅನೇಕ ಚಲನಚಿತ್ರ ಮತ್ತು ಕಿರುತೆರೆ ಕಾರ್ಯಕ್ರಮಗಳ ನಟ, ನಿರ್ಮಾಪಕ ಮತ್ತು ಕತೆಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.

1539: ಭಾರತದಲ್ಲಿ ಪೋರ್ಚುಗೀಸ್ ಗವರ್ನರ್ ಆಗಿದ್ದ ನುನೋ ಡ ಕುನ್ಹ ಅವರು ಗುಡ್ ಹೋಪ್ನಲ್ಲಿ ನಿಧನರಾದರು.

1953: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ದೇಶಾಡಳಿತದ ಮುಖ್ಯಸ್ಥರಾಗಿದ್ದ ಜೋಸೆಫ್ ಸ್ಟಾಲಿನ್ ಅವರು ಸೋವಿಯತ್ ಯೂನಿಯನ್ನಿನ ಕುಂಟ್ಸೆವೋ ಎಂಬಲ್ಲಿ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಸುಮಾರು ಮೂರು ದಶಕಗಳ ಕಾಲ ಈತ ಸೋವಿಯತ್ ಒಕ್ಕೂಟದ ಸರ್ವಾಧಿಕಾರಿಯಂತೆ ಅಧಿಕಾರ ನಡೆಸಿದರು.

Categories
e-ದಿನ

ಮಾರ್ಚ್-04

ಪ್ರಮುಖಘಟನಾವಳಿಗಳು:

51: ಮುಂದೆ ರೋಮ್ ಚಕ್ರವರ್ತಿಯಾದ ನೀರೋ ‘ಯುವಕರ ನಾಯಕ’ ಎಂಬ ಬಿರುದು ಪಡೆದ.

1493: ಈಗಿನ ಬಹಾಮಾಸ್ ಎಂದು ಕರೆಯುವ ಪ್ರದೇಶ ಮತ್ತು ಕ್ಯಾರಿಬಿಯನ್ ದ್ವೀಪಗಳ ಅನ್ವೇಷಣೆಯ ನಂತರದಲ್ಲಿ ನಾವಿಕ ಕ್ರಿಸ್ತೋಫರ್ ಕೊಲಂಬಸ್ ಅವರು ತಮ್ಮ ನೀನಾ ಹಡಗಿನಲ್ಲಿ ಪೋರ್ಚುಗಲ್ಲಿನ ಲಿಸ್ಬನ್ ನಗರಕ್ಕೆ ಹಿಂದಿರುಗಿದರು.

1675: ಜಾನ್ ಫ್ಲಾಮ್ ಸ್ಟೀಡ್ ಅವರು ಇಂಗ್ಲೆಂಡಿನ ಪ್ರಥಮ ಅಸ್ಟ್ರಾನಮರ್ ರಾಯಲ್ ಎಂದು ನೇಮಕಗೊಂಡರು.

1681: ಉತ್ತರ ಅಮೆರಿಕದಲ್ಲಿ ವಸಾಹತು ಸ್ಥಾಪನೆಗಾಗಿ ಎರಡನೇ ಚಾರ್ಲ್ಸ್ ಅವರು ವಿಲ್ಲಿಯಮ್ ಪೆನ್ ಅವರಿಗೆ ಅಧಿಕಾರ ಪತ್ರ ನೀಡಿದರು. ಮುಂದೆ ಈ ಪ್ರದೇಶ ಪೆನ್ಸಿಲ್ವೇನಿಯಾ ಎನಿಸಿತು.

1789: ಅಮೆರಿಕದ ಸಂವಿಧಾನಕ್ಕೆ ಚಾಲನೆ ನೀಡುವ ಅಮೆರಿಕದ ಪ್ರಥಮ ಕಾಂಗ್ರೆಸ್ ಅಧಿವೇಶನ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. ಅಮೆರಿಕದ ‘ಬಿಲ್ ಆಫ್ ರೈಟ್ಸ್’ ಲಿಖಿತಗೊಂಡು ಕಾಂಗ್ರೆಸ್ ಮುಂದೆ ಪ್ರಸ್ತಾಪಿಸಲ್ಪಟ್ಟಿತು.

1811: ಜಾನ್ ಲೈರ್ಡ್ ಮೈರ್ ಲಾರೆನ್ಸ್ ನಾರ್ತ್ ಯಾರ್ಕ್ ಶೈರಿನ ರಿಚ್ಮಂಡ್ ಎಂಬಲ್ಲಿ ಜನಿಸಿದರು. ಬ್ರಿಟಿಷ್ ವೈಸ್ ರಾಯ್ ಹಾಗೂ ಭಾರತದ ಗವರ್ನರ್ ಜನರಲ್ ಆಗಿದ್ದ ಉವರಿ ಸರ್ ಜಾನ್ ಲಾರೆನ್ಸ್ ಎಂದು ಪ್ರಖ್ಯಾತರಾಗಿದ್ದರು. ಇವರು ಪಂಜಾಬಿನಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೊಳಿಸಿದ್ದರು.

1865: ಅಮೆರಿಕದಲ್ಲಿ ಮೂರನೆಯ ಮತ್ತು ಕೊನೆಯ ರಾಷ್ಟ್ರೀಯ ಧ್ವಜವು ಕಾಂಗ್ರೆಸ್ ಇಂದ ಅಂಗೀಕೃತವಾಯಿತು.

1854: ಸರ್ ವಿಲಿಯಂ ನೇಪಿಯರ್ ಶಾ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ಎಂಬಲ್ಲಿ ಜನಿಸಿದರು. ಇಂಗ್ಲಿಷ್ ಹವಾಮಾನ ತಜ್ಞರಾದ ಈತ ಗಾಳಿಯ ಒತ್ತಡ ಕಂಡು ಹಿಡಿಯಲು ‘ಮಿಲಿಬಾರ್’ ಸಂಶೋಧಿಸಿದರು. ಇದೇ ಮುಂದೆ ಆಧುನಿಕ ಹವಾಮಾನ ವಿಜ್ಞಾನದ ಅಭಿವೃದ್ಧಿಗೆ ಅಪಾರ ಕಾಣಿಕೆ ನೀಡಿತು.

1858: ಜೆ.ಪಿ. ವಾಕರ್ ಇನ್ನೂರು ಮಂದಿ ಖೈದಿಗಳೊಂದಿಗೆ ಅಂಡಮಾನ್ ದ್ವೀಪಗಳಿಗೆ ಹೊಸ ವಸತಿ ವ್ಯವಸ್ಥೆ ಆರಂಭಿಸುವ ಸಲುವಾಗಿ ಹೊರಟರು. ಆತನ ಜೊತೆಗೆ ಇದ್ದ ಖೈದಿಗಳಲ್ಲಿ ಹೆಚ್ಚಿನ ಮಂದಿ ಹಿಂದಿನ ವರ್ಷ ನಡೆದ ‘ಸಿಪಾಯಿ ದಂಗೆ’ಯ ಖೈದಿಗಳಾಗಿದ್ದರು. ಜೊತೆಗೆ ಇಬ್ಬರು ವೈದ್ಯರೂ ಈ ತಂಡದೊಂದಿಗೆ ಇದ್ದರು.

1890: ಗ್ರೇಟ್ ಬ್ರಿಟನ್ನಿನ ಅತ್ಯಂತ ಉದ್ದದ ಸೇತುವೆಯಾದ, 1710 ಅಡಿ ಉದ್ದದ ಸ್ಕಾಟ್ಲೆಂಡಿನ ‘ಫಾರ್ತ್ ಬ್ರಿಡ್ಜ್’ ಅನ್ನು ಪ್ರಿನ್ಸ್ ಆಫ್ ವೇಲ್ಸ್ ಉದ್ಘಾಟಿಸಿದರು. ಇದು ಸ್ಕಾಟ್ಲೆಂಡಿನ ಎಡಿನ್ಬರ್ಗ್ ಎಂಬಲ್ಲಿದೆ.

1951: ನವದೆಹಲಿಯಲ್ಲಿ ಮೊದಲ ಏಷ್ಯನ್ ಗೇಮ್ಸ್ ಆರಂಭವಾಯಿತು. 11 ರಾಷ್ಟ್ರಗಳ 489 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

1961: ಭಾರತದ ಮೊದಲ ವಿಮಾನ ವಾಹಕ ನೌಕೆ ‘ಐ ಎನ್ ಎಸ್ ವಿಕ್ರಾಂತ್’ಗೆ ಬೆಲ್ ಫಾಸ್ಟ್ನಲ್ಲಿ ಇಂಗ್ಲೆಂಡಿನ ಭಾರತದ ಹೈಕಮೀಷನರ್ ವಿಜಯಲಕ್ಷ್ಮಿ ಪಂಡಿತ್ ಔಪಚಾರಿಕವಾಗಿ ಚಾಲನೆ ನೀಡಿ, ಭಾರತ ಸರ್ಕಾರದ ಪರವಾಗಿ ಇದನ್ನು ಸ್ವೀಕರಿಸಿದರು.

1968: ಟೆನಿಸ್ ಅಧಿಕಾರಿಗಳು ವಿಂಬಲ್ಡನ್ನಿನಲ್ಲಿ ವೃತ್ತಿಪರ ಆಟಗಾರರಿಗೆ ಪ್ರವೇಶ ಕಲ್ಪಿಸಿದರು. ಇದಕ್ಕೆ ಮೊದಲು ವಿಂಬಲ್ಡನ್ನಿಗೆ ಹವ್ಯಾಸಿ ಆಟಗಾರರಿಗೆ ಮಾತ್ರ ಪ್ರವೇಶವಿತ್ತು.

1974: ‘ಪೀಪಲ್’ ಮ್ಯಾಗಜೈನ್ ಮೊದಲಬಾರಿಗೆ ಅಮೆರಿಕದಲ್ಲಿ ವಾರಪತ್ರಿಕೆಯಾಗಿ ಪ್ರಕಟಗೊಂಡಿತು.

1986: ‘ಸೋವಿಯತ್ ವೇಗ 1’ ಉಪಗ್ರಹವು ಹ್ಯಾಲಿ ಕಾಮೆಟ್ ಮತ್ತು ಅವುಗಳ ಕೇಂದ್ರದ ಚಿತ್ರಗಳನ್ನು ಕಳುಹಿಸಲು ಆರಂಭಿಸಿತು.

2006: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ವಿಶೇಷ ಸಲಹೆಗಾರರಾಗಿ ಭಾರತೀಯ ರಾಜತಂತ್ರಜ್ಞ ಮತ್ತು ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ವಿಜಯ ನಂಬಿಯಾರ್ ನೇಮಕಗೊಂಡರು.

2007: ಮೂರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾರ್ಚ್ 3ರ ರಾತ್ರಿ ಮತ್ತು ಮಾರ್ಚ್ 4ರ ಮುಂಜಾನೆ ಸಂಭವಿಸಿದ ಸಂಪೂರ್ಣ ಚಂದ್ರಗ್ರಹಣ ಕಾಲದಲ್ಲಿ ಕಡು ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರನನ್ನು ಕಂಡು ಜಗತ್ತಿನಾದ್ಯಂತ ಖಗೋಳ ವೀಕ್ಷಕರು ಮತ್ತು ಖಗೋಳವಿಜ್ಞಾನಿಗಳು ಸಂಭ್ರಮಿಸಿದರು. ಭಾರತೀಯ ಕಾಲಮಾನ ನಸುಕಿನ 1.48 ಗಂಟೆ (ಜಿಎಂಟಿ ಕಾಲಮಾನ ಶನಿವಾರ 20.18 ಗಂಟೆ) ಸಮಯದಲ್ಲಿ ಆರಂಭವಾದ ಚಂದ್ರಗ್ರಹಣ ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಅಮೆರಿಕ ಹಾಗೂ ಕೆನಡಾದ ಪೂರ್ವ ಭಾಗಗಳಲ್ಲಿ ಕಾಣಿಸಿತು. ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಈ ಚಂದ್ರಗ್ರಹಣ ಕಾಣಿಸಿತು.

2008: ಮೂವತ್ತೈದು ವರ್ಷಗಳಷ್ಟು ಸುದೀರ್ಘ ಕಾಲ ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿದ್ದ ಕಾಶ್ಮೀರ ಸಿಂಗ್ ಬಿಡುಗಡೆ ಹೊಂದಿ ವಾಘಾ ಗಡಿ ದಾಟಿ ಪತ್ನಿಯನ್ನು ಸಂಧಿಸಿದರು. 67 ವರ್ಷದ ಸಿಂಗ್ 1973ರಲ್ಲಿ ಗೂಢಚರ್ಯೆ ಆಪಾದನೆಗಾಗಿ ಪಾಕಿಸ್ಥಾನ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು, ಆದರೆ ಈ ತೀರ್ಪು ಜಾರಿಯಾಗಿರಲಿಲ್ಲ. ಕಳೆದ ಫೆಬ್ರುವರಿಯಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಿಂಗ್ ಅವರಿಗೆ ಕ್ಷಮಾದಾನ ನೀಡಿದ್ದರು.

2008: ಬೆಳಗಾವಿ ಮಹಾನಗರಪಾಲಿಕೆಯ ಕನ್ನಡ ಭಾಷಿಕ ಮೊದಲ ಮಹಿಳಾ ಮೇಯರ್ ಆಗಿ ಪ್ರಶಾಂತಾ ಬುಡವಿ, ಉಪಮೇಯರ್ ಆಗಿ ಯೂನುಸ್ ಮೋಮಿನ್ ಆಯ್ಕೆಯದರು. ಇದರೊಂದಿಗೆ ಹದಿನಾರು ವರ್ಷಗಳ ನಂತರ ಕನ್ನಡ ಭಾಷಿಕ ಅಭ್ಯರ್ಥಿಯೊಬ್ಬರಿಗೆ ಮೇಯರ್ ಪಟ್ಟ ಲಭಿಸಿತು. ಈ ಮೊದಲು 1991ರಲ್ಲಿ ಸಿದ್ಧನಗೌಡ ಪಾಟೀಲ ಅವರು ಕನ್ನಡದ ಪ್ರಥಮ ಮೇಯರ್ ಆಗಿ ಆಯ್ಕೆಯಾಗಿದ್ದರು.

2009: ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಮರುಭೂಮಿಯಲ್ಲಿರುವ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ‘ಬೆಳಗ್ಗೆ 10.30 ಸುಮಾರಿಗೆ ಎರಡನೇ ಮಾದರಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಲಾಯಿತು. ಎರಡೂವರೆ ನಿಮಿಷದಲ್ಲಿ ಅದು ಗುರಿ ತಲುಪಿತು’ ಎಂದು ರಷ್ಯಾದ ವಿಜ್ಞಾನಿಗಳೊಂದಿಗೆ ಸೇರಿ ಅದನ್ನು ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಓ) ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಮುಖಜನನ/ಮರಣ:

1903: ಸಂಗೀತ ವಿದ್ವಾಂಸರೂ ಮತ್ತು ಮಹಾನ್ ವೈಣಿಕರೂ ಆದ ಆರ್.ಎಸ್. ಕೇಶವಮೂರ್ತಿ ಅವರು ಬೇಲೂರಿನಲ್ಲಿ ಜನಿಸಿದರು. ಧ್ವನಿವರ್ಧಕ ಸಾಧನಗಳಿಲ್ಲದ ಕಾಲದಲ್ಲಿ ವೀಣೆಯ ನಾದವನ್ನು ಹೆಚ್ಚಿಸುವುದರ ಬಗ್ಗೆ ಸಂಶೋಧನೆ ನಡೆಸಿ, ಇಪ್ಪತ್ನಾಲ್ಕು ತಂತಿಗಳ ವೀಣೆಯನ್ನು ಪ್ರಥಮವಾಗಿ ರಚಿಸಿದ ಇವರು ಪಿಟೀಲು ಕೊಳಲು, ಜಲತರಂಗ್‌, ಪಿಯಾನೋ, ಬಾಲಕೋಕಿಲ ವಾದ್ಯಗಳನ್ನು ಸಹ ನುಡಿಸುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನ ವಿದ್ವಾಂಸರಾಗಿದ್ದ ಇವರ ವೀಣಾವಾದನಕ್ಕೆ ಗಾಂಧೀಜಿಯವರೂ ಮಾರುಹೋಗಿದ್ದರು. 1971ರಲ್ಲಿ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾಗಿದ್ದ ಮೂರ್ತಿಗಳಿಗೆ ಗಾನಕಲಾಭೂಷಣ ಪ್ರಶಸ್ತಿ ಸಂದಿತು.

1906:  ಅಮೆರಿಕನ್ ಪಿಟೀಲು ವಾದಕ, ತಂತ್ರಜ್ಞ ಮತ್ತು ಫಿಷರ್ ಎಲೆಕ್ಟ್ರಾನಿಕ್ಸ್ ಸ್ಥಾಪಕ ಏವರಿ ಫಿಷರ್ ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬಲ್ಲಿ ಜನಿಸಿದರು.

1967: ಚಲನಚಿತ್ರ ಕಲಾವಿದೆ ತಾರಾ ಅವರು ಅನುರಾಧಾ ಎಂಬ ಹೆಸರಿನಿಂದ ಬೆಂಗಳೂರಿನಲ್ಲಿ ಜನಿಸಿದರು. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ ಮತ್ತೊಮ್ಮೆ ತಂದರು. ‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’ ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಸಹಾ ಸೇವೆ ಸಲ್ಲಿಸಿದ್ದಾರೆ.

1980: ಅಂತರರಾಷ್ಟ್ರೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಬೆಂಗಳೂರಿನಲ್ಲಿ ಜನಿಸಿದರು. ಕೊಡಗಿನ ಮೂಲದವರಾದ ಇವರು ಪಾಕಿಸ್ಥಾನದ ತಮ್ಮ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದ್ದಾರೆ. ಈ ಜೋಡಿ ‘ಇಂಡೋ ಪಾಕ್ ಎಕ್ಸ್ ಪ್ರೆಸ್’ ಎಂದು ಹೆಸರು ಮಾಡಿದ್ದರು. ಇದರಲ್ಲಿ 2010 ವರ್ಷದ ಯು ಎಸ್ ಓಪನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ, 2010 ವಿಂಬಲ್ಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, 2011 ಫ್ರೆಂಚ್ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮುಂತಾದ ಸಾಧನೆಗಳು ಸೇರಿವೆ.

1986: ಬ್ರೆಜಿಲಿಯನ್-ಅಮೇರಿಕನ್ ಕಂಪ್ಯೂಟರ್ ತಂತ್ರಜ್ಞ ಮತ್ತು ಉದ್ಯಮಿ ‘ಇನ್ಸ್ಟಾಗ್ರಾಮ್’ ಸ್ಥಾಪಕ ಮೈಕ್ ಕ್ರೀಗರ್ ಬ್ರೆಜಿಲ್ ದೇಶದ ಸಾಲ್ ಪಾಲೋ ಎಂಬಲ್ಲಿ ಜನಿಸಿದರು.

1939: ಭಾರತೀಯ ಕ್ರಾಂತಿಕಾರಿ ನಾಯಕ, ವಿದ್ವಾಂಸ ಲಾಲಾ ಹರದಯಾಳ್ ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. 1911ರಲ್ಲಿ ಅಮೆರಿಕಕ್ಕೆ ತೆರಳಿ ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಅವರು ಈ ಸಮಯದಲ್ಲೇ ‘ಘದರ್’ ಪಕ್ಷವನ್ನು ಸ್ಥಾಪಿಸಿ ಆರು ಭಾಷೆಗಳಲ್ಲಿ ಗದ್ದಾರ್ ಪತ್ರಿಕೆಯನ್ನು ಪ್ರಕಟಿಸಿದ್ದರು. 1987ರಲ್ಲಿ ಭಾರತ ಸರ್ಕಾರ ಹರದಯಾಳ್ ನೆನಪಿಗಾಗಿ ಇವರ ಭಾವಚಿತ್ರದೊಂದಿಗೆ ಅಂಚೆ ಚೀಟಿಯನ್ನು ಪ್ರಕಟಿಸಿತು.

1941: ಜರ್ಮನಿಯ ಕಾರ್ಯಕರ್ತ ಮತ್ತು ರಾಜಕಾರಣಿ ಲುಡ್ವಿಗ್ ಕ್ವಿಡ್ಡೆ ಜಿನೀವಾದಲ್ಲಿ ನಿಧನರಾದರು. 1927 ವರ್ಷದಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1952: ಇಂಗ್ಲಿಷ್ ವೈದ್ಯಶಾಸ್ತ್ರ ವಿಜ್ಞಾನಿ ಚಾರ್ಲ್ಸ್ ಸ್ಕಾಟ್ ಷೆರಿಂಗ್ಟನ್ ಅವರು ಸಸೆಕ್ಸ್ ಬಳಿಯ ಈಸ್ಟ್ ಬೌರ್ನೆ ಎಂಬಲ್ಲಿ ನಿಧನರಾದರು. ನ್ಯೂರಾನ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1932 ವರ್ಷದಲ್ಲಿ ನೊಬೆಲ್ ವೈದ್ಯ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1952: ಡಚ್-ಸ್ವಿಸ್ ಭೌತವಿಜ್ಞಾನಿ ಸೈಮನ್ ವ್ಯಾನ್ ಡೆರ್ ಮೀರ್ ಅವರು ಜಿನೀವಾ ನಗರದಲ್ಲಿ ನಿಧನರಾದರು. ‘CERN’ ಯೋಜನೆಯಲ್ಲಿ ಇವರ ಅಮೂಲ್ಯ ಕೊಡುಗೆಗಾಗಿ 1984 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2016: ಲೋಕಸಭಾ ಸ್ಪೀಕರ್ ಆಗಿದ್ದ ಪಿ.ಎ. ಸಂಗ್ಮಾ ಅವರು ನವದೆಹಲಿಯಲ್ಲಿ ನಿಧನರಾದರು. ಅವರು ಮೇಘಾಲಯದ ಮುಖ್ಯ ಮಂತ್ರಿಗಳಾಗಿ ಮತ್ತು ಕೇಂದ್ರ ಸಚಿವರಾಗಿ ಸಹಾ ಸೇವೆ ಸಲ್ಲಿಸಿದ್ದರು.

Categories
e-ದಿನ

ಮಾರ್ಚ್-03

ಪ್ರಮುಖಘಟನಾವಳಿಗಳು:

724: ಜಪಾನಿನ ಚಕ್ರವರ್ತಿನಿ ಜೆನ್ಶೋ ಅವರು ತಮ್ಮ ಸೋದರಳಿಯ ಶೋಮು ಎಂಬಾತನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟರು. ಆತ ಜಪಾನಿನ ಚಕ್ರವರ್ತಿಯಾದನು.

1575: ಮುಘಲ್ ಚಕ್ರವರ್ತಿ ಅಕಬರ್ ತುಕೋರಾಯ್ ಕದನದಲ್ಲಿ ಬೆಂಗಾಲಿ ಸೇನೆಯನ್ನು ಸೋಲಿಸಿದರು.

1585: ಇಟಲಿಯ ವಿಸೆನ್ಸಾದಲ್ಲಿ ಆಂಡ್ರಿಯಾ ಪಲ್ಲಾಡಿಯೋ ಅವರು ವಿನ್ಯಾಸೀಕರಿಸಿದ ‘ಒಲಿಂಪಿಕ್ ಥಿಯೇಟರ್’ ಉದ್ಘಾಟನೆಗೊಂಡಿತು.

1865: ಎಚ್.ಎಸ್.ಬಿ.ಸಿ (HSBC ಗುಂಪಿನ) ಪ್ರಾರಂಭ ರೂಪವಾದ ‘ದಿ ಹಾಂಕಾಂಗ್ ಅಂಡ್ ಶಾಂಘೈ ಬ್ಯಾಂಕಿಂಗ್ ಕಾರ್ಪೋರೇಶನ್ ಲಂಡನ್ನಿನಲ್ಲಿ ಆರಂಭಗೊಂಡಿತು.

1873: ಅಮೆರಿಕದ ಕಾಂಗ್ರೆಸ್ ‘ಕಾಮ್ಸ್ಟಾಕ್ ಕಾನೂನು’ ಮೂಲಕ ಅಶ್ಲೀಲ, ನೀಚ, ಅಥವಾ ಕಾಮ ಪ್ರಚೋದಕ ಪುಸ್ತಕಗಳನ್ನು ಅಂಚೆಯಲ್ಲಿ ಕಳುಹಿಸುವುದನ್ನು ನಿಷೇಧಿಸಿತು.

1875: ಪ್ಯಾರಿಸ್ಸಿನ ‘ಒಪೇರಾ-ಕಾಮಿಕ್’ನಲ್ಲಿ ಜಾರ್ಜಸ್ ಬಿಜೆಟ್ ಅವರ ‘ಕಾರ್ಮೆನ್’ ಒಪೇರಾ ತನ್ನ ಪ್ರಥಮ ಪ್ರದರ್ಶನವನ್ನು ನೀಡಿತು

1904: ಕೈಸರ್ ಜರ್ಮನಿಯ ಎರಡನೇ ವಿಲ್ಹೆಮ್ ಅವರು ಥಾಮಸ್ ಎಡಿಸನ್ ಅವರ ಫೋನೋಗ್ರಾಫ್ ಸಿಲಿಂಡರ್ ಬಳಸಿ ರಾಜಕೀಯ ದಾಖಲೆಯೊಂದರ ಧ್ವನಿ ಮುದ್ರಣ ಮಾಡಿದ ಪ್ರಥಮ ವ್ಯಕ್ತಿ ಎನಿಸಿದರು.

1910: ಜಾನ್ ಡಿ. ರಾಕ್ ಫೆಲ್ಲೆರ್ ಜೂನಿಯರ್ ಅವರು ‘ರಾಕ್ ಫೆಲ್ಲರ್ ಫೌಂಡೇಶನ್’ ಮೂಲಕವಾಗಿ ಲೋಕಕಲ್ಯಾಣದ ಕಾರ್ಯಗಳಿಗೆ ತಮ್ಮ ಪೂರ್ಣ ಸಮಯವನ್ನು ಮೀಸಲಿಡುವ ಸಲುವಾಗಿ, ಉದ್ಯಮದ ಜವಾಬ್ದಾರಿಗಳಿಂದ ನಿವೃತ್ತರಾದರು.

1923: ‘ಟೈಮ್’ ನಿಯತಕಾಲಿಕವು ಪ್ರಥಮ ಬಾರಿಗೆ ಪ್ರಕಟಗೊಂಡಿತು.

1931: ಅಮೆರಿಕವು ‘ದಿ ಸ್ಟಾರ್-ಸ್ಪಾಂಗಲ್ಡ್ ಬ್ಯಾನರ್’ ಅನ್ನು ತನ್ನ ರಾಷ್ಟ್ರಗೀತೆಯನ್ನಾಗಿಸಿಕೊಂಡಿತು.

1938: ಸೌದಿ ಅರೇಬಿಯಾದಲ್ಲಿ ತೈಲ ನಿಕ್ಷೇಪ ಪತ್ತೆಯಾಯಿತು.

1939: ಮುಂಬೈನಲ್ಲಿ ಮಹಾತ್ಮ ಗಾಂಧೀಜಿ ಅವರಿಂದ ಬ್ರಿಟಿಷ್ ನಿರಂಕುಶ ಆಡಳಿತದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಗೊಂಡಿತು.

1969: ನಾಸಾವು ಚಂದ್ರಲೋಕದ ಪರೀಕ್ಷಣೆಗಾಗಿ ‘ಅಪೋಲೋ 9’ ಉಪಗ್ರಹವನ್ನು ಉಡಾವಣೆ ಮಾಡಿತು.

1997: ದಕ್ಷಿಣ ಗೋಳಾರ್ಧದಲ್ಲಿ ಅತ್ಯಂತ ಎತ್ತರದ ಮುಕ್ತ ನಿರ್ಮಾಣವೆನಿಸಿರುವ ‘ಸ್ಕೈ ಟವರ್’, ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್ನಲ್ಲಿ ಉದ್ಘಾಟನೆಗೊಂಡಿತು. ಇದು ಎರಡೂವರೆ ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿತು.

2005: ಸ್ಟೀವ್ ಫಾಸ್ಸೆಟ್ ಅವರು ಎಲ್ಲಿಯೂ ಪುನಃ ಇಂಧನ ತುಂಬಿಸಿಕೊಳ್ಳದೆ ಏಕೈಕಿಯಾಗಿ ವಿಶ್ವಪರ್ಯಟನೆ ನಡೆಸಿದ ಪ್ರಥಮ ವಿಮಾನ ಚಾಲಕರೆನಿಸಿದರು.

2008: ಇನ್ಫೋಸಿಸ್ ಸಂಸ್ಥಾಪಕರಾದ ಎನ್. ಆರ್. ನಾರಾಯಣ ಮೂರ್ತಿ ಅವರು ಜಾಗತಿಕ ಖಾಸಗಿ ಬ್ಯಾಂಕ್ ಆದ ಎಚ್.ಎಸ್.ಬಿ.ಸಿ. ನಿರ್ದೇಶಕರಾಗಿ ನೇಮಕಗೊಂಡರು.

2008: ಕನ್ನಡ ಮಾಧ್ಯಮದಲ್ಲಿ ತರಗತಿ ನಡೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟು ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತು.

2008: ರಷ್ಯದಲ್ಲಿ ನಡೆದ ಚುನಾವಣೆಯಲ್ಲಿ ಡಿಮಿಟ್ರಿ ಮೆಡ್ವಡೆವ್ ಅವರು ಶೇ 70.22ರಷ್ಟು ಮತ ಗಳಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಮುಖಜನನ/ಮರಣ:

1839: ಭಾರತೀಯ ಕೈಗಾರಿಕಾ ಪಿತಾಮಹರಾದ ಜೆಮ್ಸೇಟ್ಜಿ ನಸರ್ವಾನ್ಜಿ ಟಾಟಾ ಅವರು ಬರೋಡಾ ಬಳಿಯ ನವ್ಸಾರಿ ಎಂಬಲ್ಲಿ ಜನಿಸಿದರು. ಇಂದು ಭಾರತದಲ್ಲೇ ಅಲ್ಲದೆ ವಿಶ್ವವ್ಯಾಪಾರಿ ಸಮುದಾಯದಲ್ಲಿ ವೈಶಿಷ್ಟ್ಯಪೂರ್ಣ ಹೆಸರಾದ ಟಾಟಾ ಸಮೂಹಕ್ಕೆ ಅಡಿಪಾಯವನ್ನು ಒದಗಿಸಿದ ಮಹಾಪುರುಷರೀತ. ಅಷ್ಟು ಮಾತ್ರವಲ್ಲದೆ ಜೆಮ್ಸೇಟ್ಜಿ ಟಾಟಾ ಅವರು ಭಾರತವನ್ನು ಕೈಗಾರಿಕರಂಗಕ್ಕೆ ಮೊದಲು ಕೈಹಿಡಿದು ಕರೆತಂದ ಅವಿಸ್ಮರಣೀಯರೂ ಹೌದು. ಜೆಮ್ಸೇಟ್ಜಿ ಅವರ ಅಪಾರಸಾಧನೆಯಿಂದಾಗಿ ಜಾರ್ಖಂಡ್ ರಾಜ್ಯದ ಜಮ್ಷೆಡ್ಪುರವು ಇಂದು ಟಾಟಾ ನಗರವೆಂದೇ ಜನಪ್ರಿಯಗೊಂಡಿದೆ.

1847: ದೂರಸಂಪರ್ಕ ಮಾಧ್ಯಮದ ಹರಿಕಾರ, ಮಹಾನ್ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಾಂಬೆಲ್ ಅವರು ಸ್ಕಾಟ್ಲ್ಯಾಂಡಿನ ಎಡಿನ್ಬರ್ಗ್ ಎಂಬಲ್ಲಿ ಜನಿಸಿದರು. ಕಿವುಡುತನ ಹೊಂದಿದ್ದ ತಮ್ಮ ತಾಯಿಯೊಂದಿಗೆ ಅವರು ಸಂಭಾಷಿಸಲು ಉಪಯೋಗಿಸುತ್ತಿದ್ದ ಹಲವು ಸ್ವಯಂನಿರ್ಮಿತ ತಂತ್ರಗಳು ಅವರನ್ನು ಕಿವುಡ ಮಕ್ಕಳ ಕುರಿತಾಗಿ ಅಪಾರ ಆಸಕ್ತಿ ವಹಿಸುವಂತೆ ಮಾಡಿದವು. ಈ ಆಸಕ್ತಿಯು ಅವರನ್ನು ಮೈಕ್ರೋಫೋನ್ ನಿರ್ಮಿಸಲು ಪ್ರೇರಣೆ ನೀಡಿ, 1876ರ ವೇಳೆಗೆ “ವಿದ್ಯುತ್ ಚಾಲಿತ ಸಂಭಾಷಣಾ ಯಂತ್ರ” ಅಥವ “ಎಲೆಕ್ಟ್ರಿಕಲ್ ಸ್ಪೀಚ್ ಮೆಷಿನ್” ಅನ್ನು ನಿರ್ಮಿಸಿದರು. ಈ ಯಂತ್ರವೇ ಇಂದು ನಾವೆಲ್ಲರೂ ಉಪಯೋಗಿಸುತ್ತಿರುವ ‘ಟೆಲಿಫೋನ್’.

1888: ಕನ್ನಡ ಪಂಡಿತರಾಗಿ, ಪ್ರಕಾಂಡ ವೈಯಾಕರಣರಾಗಿ ಆದರ್ಶ ಅಧ್ಯಾಪಕರಾಗಿ, ಉತ್ತಮ ಪತ್ರಕರ್ತರಾಗಿ, ಅಗಾಧ ಸಂಪನ್ನ – ಸಂಶೋಧಕ – ವಿಮರ್ಶಕರಾಗಿ, ಸುಮಧುರ ಕಂಠದ ಗಮಕಿಗಳಾಗಿ, ಚಿತ್ತಾಕರ್ಷಕ ವ್ಯಾಖ್ಯಾನಕಾರರಾಗಿ ಪ್ರಸಿದ್ಧಿ ಪಡೆದಿದ್ದ ಮುಳಿಯ ತಿಮ್ಮಪ್ಪಯ್ಯನವರು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಜನಿಸಿದರು. ಇವರು 1931ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

1895: ನಾರ್ವೆಯ ಅರ್ಥಶಾಸ್ತ್ರಜ್ಞ ರಾಗ್ನರ್ ಫ್ರಿಸ್ಚ್ ಅವರು ನಾರ್ವೆಯ ಕ್ರಿಶ್ಚಿಯಾನ ಎಂಬಲ್ಲಿ ಜನಿಸಿದರು. ‘ಎಕನಾಮಿಟ್ರಿಕ್ಸ್’ ಕುರಿತಾದ ಮಹತ್ವದ ಕೊಡುಗೆಗಾಗಿ ಜಾನ್ ಟಿನ್ಬರ್ಗನ್ ಅವರೊಂದಿಗೆ ಇವರಿಗೆ ಜಂಟಿಯಾಗಿ ಪ್ರಪ್ರಥಮ ನೊಬೆಲ್ ಅರ್ಥ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1904: ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್‌ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಗಾಯನವಷ್ಟೇ ಅಲ್ಲದೆ ಸಂಗೀತ ಲೋಕದ ಬಹುತೇಕ ವಾದ್ಯಗಾರಿಕೆಯಲ್ಲೂ ಇವರಿಗೆ ಅಪ್ರತಿಮ ಸಾಧನೆಯಿತ್ತು. ವೀರೇಶ್ವರ ಆಶ್ರಮದ ಪೀಠಾಧಿಪತಿಯಾಗಿ ಮತ್ತು ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತಿದ್ದ ಇವರು ಅನೇಕ ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ ದೊರಕುವಂತೆ ಮಾಡಿದರು.

1918: ಅಮೇರಿಕಾದ ಜೈವಿಕ ವಿಜ್ಞಾನಿ ಆರ್ಥರ್ ಕಾರ್ನ್ ಬರ್ಗ್ ಅವರು ನ್ಯೂಯಾರ್ಕಿನಲ್ಲಿ ಜನಿಸಿದರು. ‘ಡಿ.ಎನ್.ಎ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1959 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1925: ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಎಂ. ಅಕಬರ ಅಲಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡ್ಡಿ ಖಾನಾಪುರದಲ್ಲಿ ಜನಸಿದರು. ಅವರ ‘ಸುಮನ ಸೌರಭ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಗಂಧಕೇಶರ’ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಅನೇಕ ಗೌರವಗಳು ಸಂದಿದ್ದವು.

1941: ನಾಡಿನ ಅಪೂರ್ವ ಕಲಾವಿದರಾದ ಎಸ್. ಜಿ. ವಾಸುದೇವ್ ಅವರು ಮೈಸೂರಿನಲ್ಲಿ ಜನಿಸಿದರು. ಪೇಂಟಿಂಗ್, ರೇಖಾಚಿತ್ರ. ಲೋಹ (ತಾಮ್ರ), ಜವಳಿ (ಟ್ಯಾಪೆಸ್ಟ್ರಿ) – ಹೀಗೆ ವಿವಿಧ ಮಾಧ್ಯಮಗಳಲ್ಲಿ ಅವರ ಕಲಾಭಿವ್ಯಕ್ತಿ ಹರಡಿಕೊಂಡಿದೆ. ಅವರು ‘ ರಾಷ್ಟ್ರಪ್ರಶಸ್ತಿ ವಿಜೇತ ‘ಸಂಸ್ಕಾರ` ಚಿತ್ರಕ್ಕೆ ಕಲಾ ನಿರ್ದೇಶಕರಾಗಿಯೂ ದುಡಿದಿದ್ದರು. ಇವರಿಗೆ ಕರ್ನಾಟಕ ಲಲಿತ ಆಕಾಡೆಮಿಯ ಗೌರವ ಫೆಲೋಷಿಪ್, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1951: ಪ್ರಖ್ಯಾತ ರಂಗಭೂಮಿ ಕಲಾವಿದೆ ಮತ್ತು ಸುಗಮ ಸಂಗೀತ ಗಾಯಕಿ ಮಾಲತಿ ಶರ್ಮ ಜನಿಸಿದರು. ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

1962: ಪ್ರಸಿದ್ಧ ಅಥ್ಲೀಟ್ ಜಾಕಿ ಜಾಯ್ನರ್ ಕೆರ್ಸೀ ಅಮೆರಿಕದ ಇಲಿನಾಯ್ಸ್ ಪ್ರದೇಶದ ಈಸ್ಟ್ ಸೈಂಟ್ ಲೂಯಿಸ್ ಎಂಬಲ್ಲಿ ಜನಿಸಿದರು. ಈಕೆ ಹೆಪ್ಲಾಥಾನಿನಲ್ಲಿ 7000ಕ್ಕೂ ಹೆಚ್ಚು ಪಾಯಿಂಟ್ ಗಳಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1967: ಪ್ರಸಿದ್ಧ ಭಾರತೀಯ ಚಲನಚಿತ್ರ ಹಿನ್ನೆಲೆಗಾಯಕ ಮತ್ತು ಶಂಕರ್-ಎಹಸನ್-ಲಾಯ್ ಜೋಡಿಯ ಸಂಗೀತ ನಿರ್ದೇಶಕರಲ್ಲೊಬ್ಬರಾದ ಶಂಕರ್ ಮಹಾದೇವನ್ ಅವರು ಮುಂಬೈನ ಚೆಂಬೂರಿನಲ್ಲಿ ಜನಿಸಿದರು. ಮೂರು ಬಾರಿ ಶ್ರೇಷ್ಠ ಹಿನ್ನೆಲೆಗಾಯಕರಾಗಿ ಮತ್ತು ಒಮ್ಮೆ ಶ್ರೇಷ್ಠ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗೌರವ ಇವರಿಗೆ ಸಂದಿದೆ. ಇವರು ತಮ್ಮ ಶಂಕರ್ ಮಹಾದೇವನ್ ಅಕಾಡೆಮಿಯ ಮೂಲಕ ಆನ್ಲೈನ್ ಸಂಗೀತ ಶಾಲೆ ನಡೆಸುತ್ತಿದ್ದಾರೆ.

1707: ಮೊಘಲ್ ಚಕ್ರವರ್ತಿ ಔರಂಗಜೇಬ್ ತನ್ನ 88ನೇ ವಯಸ್ಸಿನಲ್ಲಿ ಅಹಮದ್ ನಗರದಲ್ಲಿ ನಿಧನನಾದ.

1982: ಫಿರಾಕ್ ಗೋರಖ್ ಪುರಿ ಎಂದು ಪ್ರಸಿದ್ಧರಾದ ರಘುಪತಿ ಸಹಾಯ್ ಅವರು ನವದೆಹಲಿಯಲ್ಲಿ ನಿಧನರಾದರು. ಭಾರತೀಯ ಶ್ರೇಷ್ಠ ಉರ್ದು ಕವಿಗಳಲ್ಲಿ ಪ್ರಮುಖರಾದ ಇವರು ಭಾರತೀಯ ಜ್ಞಾನಪೀಠ, ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದರು.

1999: ಜರ್ಮನ್-ಕೆನಡಿಯನ್ ರಸಾಯನಶಾಸ್ತ್ರ, ಭೌತಶಾಸ್ತ್ರ ವಿಜ್ಞಾನಿ ಗೆರ್ಹಾರ್ಡ್ ಹೆರ್ಜ್ಬರ್ಗ್ ಅವರು ಕೆನಡಾದ ಒಟ್ಟಾವಾದಲ್ಲಿ ನಿಧನರಾದರು. ‘ಡಯಾಟಾಮಿಕ್ ಮತ್ತು ಪಾಲಿಯಾಟಾಮಿಕ್ ಮಾಲೆಕ್ಯೂಲ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1971 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2002: 12ನೇ ಲೋಕಸಭಾ ಸ್ಪೀಕರ್ ಜಿ.ಎಮ್.ಸಿ ಬಾಲಯೋಗಿ ಅವರು ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ ಕೈಕಾಲೂರು ಬಳಿ ಅವರು ಪಯಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ನಿಧನರಾದರು.

2003: ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಬೆಂಗಳೂರಿನಲ್ಲಿ ನಿಧನರಾದರು. ಅನೇಕ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧರಾದ ಇವರಿಗೆ ಸುರಸಿಂಗಾರ್ ಪ್ರಶಸ್ತಿ, ಕರ್ನಾಟಕ ಸರ್ಕಾರದ ಡಾ. ರಾಜ್ ಕುಮಾರ್ ಪ್ರಶಸ್ತಿ ಹಾಗೂ ಆರು ಚಿತ್ರಗಳಿಗೆ ಶ್ರೇಷ್ಠ ಸಂಗೀತಸಂಯೋಜನೆಗಾಗಿನ ಪ್ರಶಸ್ತಿಗಳು ಸಂದಿದ್ದವು.

Categories
e-ದಿನ

ಮಾರ್ಚ್-02

ಪ್ರಮುಖಘಟನಾವಳಿಗಳು:

1484: ಇಂಗ್ಲೆಂಡಿನ ಮೂರನೆಯ ರಿಚರ್ಡ್ ಅವರಿಂದ ಒಪ್ಪಿಗೆ ಪಡೆದ ರಾಯಲ್ ಚಾರ್ಟರ್ ಮೂಲಕ ‘ಕಾಲೇಜ್ ಆಫ್ ಆರ್ಮ್ಸ್’ ಆರಂಭಗೊಂಡಿತು.

1498: ಪ್ರಸಿದ್ಧ ನಾವಿಕ ವಾಸ್ಕೋಡಗಾಮ ಅವರ ನೌಕೆ ಮೊಸಾಂಬಿಕ್ ದ್ವೀಪಕ್ಕೆ ಭೇಟಿ ನೀಡಿತು.

1657: ಅಂದು ‘ಎಡೋ’ ಎಂದು ಹೆಸರಾಗಿದ್ದ ಇಂದಿನ ಟೋಕಿಯೋದಲ್ಲಿ ‘ಗ್ರೇಟ್ ಫೈರ್ ಆಫ್ ಮೀರೇಕಿ’ ಬೆಂಕಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಿತು. ಈ ಬೆಂಕಿ ಮೂರು ದಿನಗಳವರೆಗೆ ವ್ಯಾಪಿಸಿತ್ತು.

1717: ‘ದಿ ಲೌವ್ಸ್ ಆಫ್ ಮಾರ್ಸ್ ಅಂಡ್ ವೀನಸ್’ ಇಂಗ್ಲೆಂಡಿನಲ್ಲಿ ಅಭಿನಯಿಸಲ್ಪಟ್ಟ ಪ್ರಥಮ ಬ್ಯಾಲೆಟ್ ಎನಿಸಿತು.

1791: ಪ್ಯಾರಿಸ್ನಲ್ಲಿ ಸೆಮಾಫೋರ್ ಯಂತ್ರದ ಸ್ಥಾಪನೆಯಿಂದಾಗಿ ದೂರ ಪ್ರದೇಶಗಳ ನಡುವಣ ಸಂಪರ್ಕಗಳು ಹೆಚ್ಚು ವೇಗವನ್ನು ಪಡೆದುಕೊಂಡಿತು.

1797: ಬ್ಯಾಂಕ್ ಆಫ್ ಇಂಗ್ಲೆಂಡು, ಒಂದು ಪೌಂಡ್ ಮತ್ತು ಎರಡು ಪೌಂಡ್ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿತು.

1807: ಅಮೆರಿಕದ ಕಾಂಗ್ರೆಸ್ಸು, ಹೊಸದಾಗಿ ದೇಶದೊಳಕ್ಕೆ ಗುಲಾಮರನ್ನು ಆಮದುಮಾಡಿಕೊಳ್ಳುವುದನ್ನು ನಿಷೇದಿಸುವ ಕಾನೂನನ್ನು ಜಾರಿಗೆ ತಂದಿತು.

1808: ‘ವೆರಿನೆರಿಯನ್ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯ ಪ್ರಾರಂಭಿಕ ಸಭೆ ಎಡಿನ್ಬರ್ಗ್ ನಗರದಲ್ಲಿ ಏರ್ಪಟ್ಟಿತು. ಹಿಂದೆ ಇದು ‘ಸ್ಕಾಟಿಷ್ ಲರ್ನೆಡ್ ಸೊಸೈಟಿ’ ಎಂಬ ಹೆಸರು ಹೊಂದಿತ್ತು.

1859: ಅಮೆರಿಕದ ಚರಿತ್ರೆಯಲ್ಲೇ ಅತ್ಯಂತ ಬೃಹತ್ತಾದ ಎರಡು ದಿನಗಳ ‘ಗ್ರೇಟ್ ಸ್ಲೇವ್ ಆಕ್ಷನ್’ ಅಥವಾ ‘ಗುಲಾಮರ ಹರಾಜು’ ಪ್ರಾರಂಭಗೊಂಡಿತು.

1882: ರಾಣಿ ವಿಕ್ಟೋರಿಯಾ ಅವರು ವಿಂಡ್ಸರ್ ಎಂಬಲ್ಲಿ, ಸ್ವಲ್ಪದರಲ್ಲೇ ರೋಡೆರಿಕ್ ಮೆಕ್ಲೀನ್ ಎಂಬಾತ ಪ್ರಯತ್ನಿಸಿದ್ದ ಹತ್ಯೆಯಿಂದ ಪಾರಾದರು.

1901: ಕಾರ್ನಿಗೆ ಸ್ಟೀಲ್ ಕಂಪೆನಿ ಮತ್ತು ಫೆಡರಲ್ ಸ್ಟೀಲ್ ಕಂಪೆನಿಯ ವಿಲೀನದೊಂದಿಗೆ ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್ ಉದಯವಾಗಿ ವಿಶ್ವದಲ್ಲೇ ಒಂದು ಬಿಲಿಯನ್ ಡಾಲರ್ ಬೃಹತ್ ಬಂಡವಾಳದ ಹೊಂದಿದ ಮೊಟ್ಟ ಮೊದಲ ಸಂಸ್ಥೆ ಎನಿಸಿತು.

1903: ಮಹಿಳೆಯರಿಗೇ ಪ್ರತ್ಯೇಕವಾದ ‘ಮಾರ್ಥಾ ವಾಷಿಂಗ್ಟನ್ ಹೋಟೆಲ್’ ನ್ಯೂಯಾರ್ಕ್ ನಗರದಲ್ಲಿ ಆರಂಭಗೊಂಡಿತು.

1962: ವಿಲ್ಟ್ ಚೇಂಬರ್ಲೈನ್ ಅವರು ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೆಶನ್ನಿನಲ್ಲಿ ನಡೆದ ಪಂದ್ಯದಲ್ಲಿ ಒಂದೇ ಆಟದಲ್ಲಿ ನೂರು ಪಾಯಿಂಟ್ ಗಳಿಸಿ ದಾಖಲೆ ನಿರ್ಮಿಸಿದರು.

1972: ಫ್ಲೋರಿಡಾದ ಕೇಪ್ ಕಾನವೆರಲ್ನಲ್ಲಿ ಹೊರ ಗ್ರಹಗಳನ್ನು ಅನ್ವೇಷಿಸುವ ಉದ್ದೇಶದ ‘ಪಯನಿಯರ್ 10’ ಉಡಾವಣೆಗೊಂಡಿತು

1983: ಅಮೆರಿಕದ ಮಾರುಕಟ್ಟೆಯಲ್ಲಿ ಮೊದಲಬಾರಿಗೆ ಕಾಂಪ್ಯಾಕ್ಟ್ ಡಿಸ್ಕ್’ಗಳು ಬಿಡುಗಡೆಗೊಂಡವು. ಈ ಮೊದಲ ಅವು ಜಪಾನಿನಲ್ಲಿ ಮಾತ್ರಾ ಲಭ್ಯವಿದ್ದವು.

1989: ಹನ್ನೆರಡು ಯೂರೋಪ್ ದೇಶಗಳು 2000ದ ವರ್ಷಕ್ಕೆ ಮುಂಚೆ ಕ್ಲೋರೋಫ್ಲೋರೋ ಕಾರ್ಬನ್ ತಯಾರಿಕೆಯನ್ನು ನಿಷೇದಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

1990: ನೆಲ್ಸನ್ ಮಂಡೇಲಾ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿ ಚುನಾಯಿತರಾದರು.

1995: ಫೆರ್ಮಿಲ್ಯಾಬ್ ಸಂಶೋಧಕರು ‘ಟಾಪ್ ಕ್ವಾರ್ಕ್’ ಪತ್ತೆ ಹಚ್ಚಿದರು. ‘ಟಾಪ್ ಕ್ವಾರ್ಕ್’ ಎಂಬುದು ಕ್ವಾರ್ಕ್ ಗಳಲ್ಲಿ ಅತಿ ಹೆಚ್ಚಿನ ರಾಶಿಯುಳ್ಳದ್ದು. ‘ಕ್ವಾರ್ಕ್’ಗಳು ಪ್ರೋಟಾನ್ ಮತ್ತು ನ್ಯೂಟ್ರ‍ಾನ್ ಗಳ ಒಳಗೆ ಬಂಧಿಸಲ್ಪಟ್ಟಿವೆ. ಸಾಂಪ್ರದಾಯಿಕ ಚಲನವಿಜ್ಞಾನದ ಪ್ರಕಾರ ‘ಕ್ವಾರ್ಕ್’ ಅಂದರೆ ಒಂದು ಬಿಂದು ಎಂದು ಊಹಿಸಬಹುದು. ಆದರೆ ಕ್ವಾಂಟಮ್ ವಿಜ್ಞಾನದನ್ವಯ ಕ್ವಾರ್ಕ್ ಕೆಲವು ಬಾರಿ ಬಿಂದುವಿನಂತೆ ಮತ್ತೆ ಕೆಲವು ಸಲ ತರಂಗದಂತೆ ವರ್ತಿಸುತ್ತದೆ.

1998: “ಗೆಲಿಲಿಯೋ ಬಾಹ್ಯಾಕಾಶ ವಾಹನವು ಕಳುಹಿಸಿದ ಮಾಹಿತಿಯ ಪ್ರಕಾರ ಗುರು ಗ್ರಹದ ಚಂದ್ರ- ‘ಯುರೋಪಾ’ದಲ್ಲಿ ಗಟ್ಟಿಗೊಂಡಿರುವ ಮಂಜುಗಡ್ಡೆಯ ತಳಭಾಗದಲ್ಲಿ ದ್ರವಸಾಗರವಿದೆ” ಎಂಬುದು ವಿಜ್ಞಾನಿಗಳ ಅಂಬೋಣವಾಗಿದೆ.

2006: ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಅಂಗೀಕಾರ ದೊರಕಿತು. ನಾಗರಿಕ ಮತ್ತು ಸೇನಾ ಉದ್ದೇಶದ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸುವ ಮೂಲಕ ಉಭಯರಾಷ್ಟ್ರಗಳು ವಿವಾದದ ಕಗ್ಗಂಟು ಬಗೆಹರಿಸಿಕೊಂಡವು. ಭಾರತದ 22 ಪರಮಾಣು ಸ್ಥಾವರಗಳ ಪೈಕಿ, ನಾಗರಿಕ ಬಳಕೆಯ 14 ಸ್ಥಾವರಗಳನ್ನು ಅಂತಾರಾಷ್ಟ್ರೀಯ ಸುರಕ್ಷತಾ ನಿಯಮಗಳಿಗೆ ಒಳಪಡಿಸಲು ಭಾರತ ಸಮ್ಮತಿಸಿತು. ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರುಗಳು ಯಾವುದೇ ಜಾಗತಿಕ ನಿಯಮಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟ ಪಡಿಸಿತು. ಹೈದರಾಬಾದ್ ಹೌಸಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು.

2007: ಪಂಜಾಬಿನ ನೂತನ ಮುಖ್ಯಮಂತ್ರಿಗಳಾಗಿ ಶಿರೋಮಣಿ ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮಣಿಪುರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಇಬೋಬಿ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ಅತಿ ದೀರ್ಘಕಾಲ ಆಳ್ವಿಕೆ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾದಲ್ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಇದು ನಾಲ್ಕನೇ ಬಾರಿ.

2008: ‘ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾದರೆ ಅದಕ್ಕೆ ವಾಹನ ಸವಾರರೇ ಸಂಪೂರ್ಣ ಹೊಣೆ’ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

2008: ಭಾರತೀಯ ಕ್ರಿಕೆಟ್ಟಿಗೆ ಇದು ಸ್ಮರಣೀಯ ದಿನ ಎನಿಸಿತು. ಎಂ.ಎಸ್.ದೋನಿ ಬಳಗ ಸಿಡ್ನಿಯಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲಿನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿತು. ಇತ್ತ ಕೌಲಾಲಂಪುರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕಿರಿಯ ಆಟಗಾರರು ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದರು.

ಪ್ರಮುಖಜನನ/ಮರಣ:

1920: ‘ಸತ್ಯಕಾಮ’ ಎಂದೇ ಪ್ರಸಿದ್ಧರಾದ ಅನಂತ ಕೃಷ್ಣ ಶಹಾಪುರ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಜನಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಕನಾಗಿದ್ದಾಗ 5 ಘಟಕಿಯ ಶಿಕ್ಷೆ, ಮುಂದೆ 6 ತಿಂಗಳ ಸೆರೆವಾಸ ಅನುಭವಿಸಿ ಹಲವು ಕಾಲ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದ ಅವರು ಹಿಮಾಲಯದಲ್ಲಿ ಹಲವು ಕಾಲ ವಿವಿಧ ಯೋಗಿಗಳ ಜೊತೆ ಇದ್ದು ಬಂದರು. ಅನೇಕ ನಾಟಕ, ಕತೆ, ಕಾದಂಬರಿಗಳನ್ನು ಬರೆದು ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದರು. ಕೃಷಿಕರಾಗಿ ಜಮಖಂಡಿ ಸಮೀಪದ ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನವನವಾಗಿ ಪರಿವರ್ತಿಸಿದ್ದರು.

1931: ಸೋವಿಯತ್ ಅಧ್ಯಕ್ಷರಾಗಿದ್ದ, ನೊಬೆಲ್ ಶಾಂತಿ ಪುರಸ್ಕೃತ ಗೋರ್ಬೇಚೆವ್ ಅವರು ಸೋವಿಯತ್ ಯೂನಿಯನ್ನಿನ ಪ್ರಿವೊಲ್ನೋಯೇ ಎಂಬಲ್ಲಿ ಜನಿಸಿದರು. ಅವರ ‘ಗ್ಲಾಸ್ನಾಸ್ಟ್’ (ಮುಕ್ತತೆ) ‘ಪೆರಿಸ್ಟ್ರೋಯಿಕಾ’(ಪುನರ್ನಿರ್ಮಾಣ) ನೀತಿಗಳು ಸೋವಿಯತ್ ಯೂನಿಯನ್ನಿನಲ್ಲಿದ್ದ ‘ಶೀತಲ ಸಮರವನ್ನು’ ಕೊನೆಗಾಣಿಸಿದವು. ಆದರೆ ಈ ಹಾದಿಯಲ್ಲಿ ಅವರು ದೇಶದ ಆಳುವಿಕೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ಪಾತ್ರವನ್ನು ಸಂವಿಧಾನದಲ್ಲಿ ತೆಗೆದದ್ದರಿಂದ ರಾಜಕೀಯ ಅಸ್ಥಿರತೆ ತಲೆದೋರಿ ಮುಂದೆ ಸೋವಿಯತ್ ಯೂನಿಯನ್ನಿನ ವಿಭಜನೆಗೆ ಹಾದಿಮಾಡಿಕೊಟ್ಟವು.

1933: ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಆಕಾಡೆಮಿಯ ಕೃತಿ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿಗಳು ಇವರಿಗೆ ಸಂದಿದ್ದವು. ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ.

1935:  ಖ್ಯಾತ ಪಿಟೀಲು ವಾದಕ ಮತ್ತು ಸಂಗೀತ ವಿದ್ವಾಂಸ ಕುನ್ನುಕ್ಕುಡಿ ವೈದ್ಯನಾಥನ್ ಅವರು ಮುರುಗನ್ ದೇವಾಲಯದ ಊರಾದ ಕುನ್ನುಕ್ಕುಡಿಯಲ್ಲಿ ಜನಿಸಿದರು. ಪಿಟೀಲು ವಾದನದಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡಿದ್ದ ಅವರ ಡೋಲಿನ ಜೊತೆಗಿನ ಪಿಟೀಲು ವಾದನ ಅತ್ಯಂತ ಜನಪ್ರಿಯಗೊಂಡಿತ್ತು. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯೇ ಅಲ್ಲದೆ, ಕಲೈಮಾಮಣಿ, ಸಂಗೀತ ನಾಟಕ ಅಕಾಡೆಮಿ ಗೌರವ, ಚಿತ್ರ ಸಂಗೀತಕ್ಕಾಗಿನ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

274: ಪರ್ಷಿಯನ್ ಪ್ರವಾದಿ ‘ಮಣಿ’ ಸಸ್ಸಾನಿಡ್ ಚಕ್ರಾಧಿಪತ್ಯಕ್ಕೆ ಸೇರಿದ್ದ ಗುಂಡೇಶ್ಪುರ್ ಎಂಬಲ್ಲಿ ನಿಧನರಾದರು.

1506: ರಜಪೂತ ದೊರೆ ರಾಣಾ ರತನ್ ಸಿಂಗ್ ಪುತ್ರಿ ಸಂತ ಕವಯಿತ್ರಿಯರಲ್ಲಿ ಪ್ರಮುಖರಾದ ಮೀರಾಬಾಯಿ ದ್ವಾರಕಾದಲ್ಲಿ ನಿಧನರಾದರು. ಕವಯತ್ರಿಯಾಗಿ ಮತ್ತು ಭಕ್ತಿ ಪಂತದ ಮಹಾನ್ ಸಂತೆಯಾಗಿ ಇವರು ಪ್ರಸಿದ್ಧಿ ಪಡೆದಿದ್ದಾರೆ.

1949: ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಲಕ್ನೋದಲ್ಲಿ ನಿಧನರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

 

Categories
e-ದಿನ

ಮಾರ್ಚ್-01

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 752: ರೋಮ್ ಸಾಮ್ರಾಜ್ಯದ ಪ್ರಥಮ ದೊರೆಯಾದ ರೊಮ್ಯುಲಸ್ ಅವರು ಸೀನಿಯೇನ್ಸೆಸ್ ವಿರುದ್ಧ ಜಯಗಳಿಸುವುದರ ಮೂಲಕ ತಮ್ಮ ಪ್ರಥಮ ವಿಜಯವನ್ನು ಸಾಧಿಸಿದರು

1565: ರಿಯೋ ಡಿ. ಜನೈರೋ ಪಟ್ಟಣವು ಪೋರ್ಚುಗೀಸರಿಂದ ಸ್ಥಾಪಿತಗೊಂಡಿತು

1776: ಮರಾಠರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಪುರಂದರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು 1775ರ ಸೂರತ್ ಒಪ್ಪಂದವನ್ನು ಅನೂರ್ಜಿತಗೊಳಿಸಿತು.

1815: ಗಡೀಪಾರಾಗಿದ್ದ ನೆಪೋಲಿಯನ್ ಎಲ್ಬಾದಿಂದ ಫ್ರಾನ್ಸಿಗೆ ವಾಪಸ್ಸಾದರು. ಇದು ಚಾರಿತ್ರಿಕ ‘ನೂರು ದಿನಗಳ’ ಗಣನೆಯ ಮೊದಲ ದಿನವೆನಿಸಿತು. ಗಡೀಪಾರಾಗಿದ್ದ ನೆಪೋಲಿಯನ್ ಎಲ್ಬಾದಿಂದ ಫ್ರಾನ್ಸಿಗೆ ಬಂದ ದಿನದಿಂದ ಮೊದಲುಗೊಂಡಂತೆ, ಹದಿನಾರನೇ ಲೂಯಿ ಎರಡನೇ ಬಾರಿ ರಾಜನಾದ ಜುಲೈ 8, 1815 ಅವಧಿಯನ್ನು, ಚಾರಿತ್ರಿಕವಾಗಿ ‘ನೂರು ದಿನ’ ಎಂದು ಕರೆಯಲಾಗುತ್ತಿದೆ.

1858: ಜರ್ಮನಿಯ ಸಮಾಜ ವಿಜ್ಞಾನಿ ಜಾರ್ಜ್ ಸಿಮ್ಮೆಲ್ ಬರ್ಲಿನ್ ನಗರದಲ್ಲಿ ಜನಿಸಿದರು.

1872: ಪ್ರಪಂಚದ ಪ್ರಥಮ ನ್ಯಾಷನಲ್ ಪಾರ್ಕ್ ಆಗಿ ‘ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕ್ ಸ್ಥಾಪನೆ’ಗೊಂಡಿತು. ಇದು ಅಮೇರಿಕಾದ ವ್ಯೋಮಿಂಗ್, ಮೊಂಟಾನಾ ಮತ್ತು ಇಡಾಹೋ ಪ್ರದೇಶಗಳಲ್ಲಿ ವ್ಯಾಪಿಸಿದೆ.

1873: ‘ಇ. ರೆಮಿಂಗ್ಟನ್ ಅಂಡ್ ಸನ್ಸ್ ಸಂಸ್ಥೆ’ಯು ನ್ಯೂಯಾರ್ಕಿನ ಲ್ಲಿಯಾನ್ ಎಂಬಲ್ಲಿ ಪ್ರಾಯೋಗಿಕವಾಗಿ ಟೈಪರೈಟರ್ ಯಂತ್ರದ ಉತ್ಪಾದನೆಯನ್ನು ಪ್ರಾರಂಭಿಸಿತು.

1886: ಸಿಂಗಪುರದಲ್ಲಿ ಬಿಷಪ್ ವಿಲಿಯಂ ಓಲ್ಡ್ ಹ್ಯಾಮ್ ಅವರು ಪ್ರಥಮ ಆಂಗ್ಲೋ-ಚೈನೀಸ್ ಶಾಲೆಯನ್ನು ಸ್ಥಾಪಿಸಿದರು.

1893: ಎಲೆಕ್ಟ್ರಿಕಲ್ ಇಂಜಿನಿಯರ್ ಆದ ನಿಕೊಲಾ ಟೆಲ್ಸಾ ಅವರು ಮಿಸ್ಸೌರಿಯ ಸೈಂಟ್ ಲೂಯಿಸ್ ಎಂಬಲ್ಲಿ ಪ್ರಥಮ ಸಾರ್ವಜನಿಕ ರೇಡಿಯೋ ಪ್ರಾತ್ಯಕ್ಷಿಕೆಯನ್ನು ನೀಡಿದರು.

1921: ವಾರ್ವಿಕ್ ಆರ್ಮ್ಸ್ಟ್ರಾಂಗ್ ಅವರ ನೇತೃತ್ವದ ತಂಡ ‘ಆಷಸ್’ ಕ್ರಿಕೆಟ್ ಸರಣಿಯನ್ನು ಸೋಲೇ ಇಲ್ಲದೆ ಅಜೇಯವಾಗಿ ಗೆದ್ದ ಪ್ರಥಮ ಆಸ್ಟ್ರೇಲಿಯನ್ ಕ್ರಿಕೆಟ್ ತಂಡವಾಯಿತು. ಇದು ಮುಂದೆ 86 ವರ್ಷಗಳವರೆಗೆ ಘಟಿಸಲಿಲ್ಲ.

1947: ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಇಂದ ಹಣಕಾಸಿನ ವ್ಯವಹಾರವು ಆರಂಭಗೊಂಡಿತು.

1953: ಸೋವಿಯತ್ ಪ್ರಮುಖರಾದ ಜೋಸೆಫ್ ಸ್ಟಾಲಿನ್ ಅವರು ಆಘಾತದಿಂದ ಕುಸಿದರು. ಮುಂದೆ ನಾಲ್ಕು ದಿನಗಳ ನಂತರ ಅವರು ನಿಧನರಾದರು.

1954: ಅಣ್ವಸ್ತ್ರ ಪ್ರಯೋಗ ಪರೀಕ್ಷೆಯಲ್ಲಿ, ಅಮೆರಿಕದಿಂದ 15 ಮೇಘಾ ಟನ್ ‘ಕ್ಯಾಸಲ್ ಬ್ರೆವೋ’ ಹೈಡ್ರೋಜನ್ ಬಾಂಬ್ ಸಿಡಿತದ ಪ್ರಯೋಗವು ಪೆಸಿಫಿಕ್ ಸಾಗರದ ಬಿಕಿನಿ ಅಟೋಲ್ ಎಂಬಲ್ಲಿ ನಡೆಯಿತು. ಇದು ಭೀಕರ ರೇಡಿಯೋ ಆಕ್ಟೀವ್ ಮಾಲಿನ್ಯಕ್ಕೆ ಎಡೆಕೊಟ್ಟಿತು. ಈ ಬಾಂಬು 1945ರಲ್ಲಿ ಹಿರೋಷಿಮಾವನ್ನು ಧ್ವಂಸಗೊಳಿಸಿದ ಬಾಂಬಿಗಿಂತ 500 ಪಟ್ಟು ಹೆಚ್ಚು ದೈತ್ಯಶಕ್ತಿಯುಳ್ಳದ್ದಾಗಿತ್ತು.

1961: ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ‘ಪೀಸ್ ಕಾರ್ಪ್ಸ್’ ಸ್ಥಾಪಿಸಿದರು. ಇದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಪೂರಕ ಅಂಶಗಳ ಕಡೆಗೆ ಗಮನ ನೀಡುವ ವಿವಿಧ ಜನಾಂಗಗಳೊಂದಿಗೆ ಸೌಹಾರ್ದ ಬೆಸೆಯುವ ಆಶಯವುಳ್ಳದ್ದಾಗಿತ್ತು.

1966: ಸೋವಿಯತ್ ಬಾಹ್ಯಾಕಾಶ ತನಿಖಾ ವಾಹನವಾದ ‘ವೆನೆರಾ 3 ಸೋವಿಯತ್ ಸ್ಪೇಸ್ ಪ್ರೋಬ್’ ಶುಕ್ರಗ್ರಹದ ಮೇಲೆ ಅಪ್ಪಳಿಸಿ, ಮತ್ತೊಂದು ಗ್ರಹದ ಮೇಲೆ ಇಳಿದ ಪ್ರಥಮ ಬಾಹ್ಯಾಕಾಶ ವಾಹನವೆನಿಸಿತು.

1995: ಪ್ರಸಿದ್ಧ ಅಂತರ್ಜಾಲ ತಾಣವಾದ ಯಾಹೂ ಸ್ಥಾಪನೆಗೊಂಡಿತು.

1998: ಅಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಕರ್ನಾಟಕ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು.

1998: ‘ಟೈಟಾನಿಕ್’ ಚಿತ್ರವು ಒಂದು ಬಿಲಿಯನ್ ಡಾಲರ್ ಹಣಗಳಿಸಿದ ಪ್ರಪ್ರಥಮ ಚಿತ್ರವೆನಿಸಿತು.

2001: ಆಫ್ಘಾನಿಸ್ಥಾನದ ತಾಲಿಬಾನ್ 2000 ವರ್ಷಗಳಷ್ಟು ಪುರಾತನವಾದ ಬಾಮಿಯಾನಿನ ಬೌದ್ಧ ವಿಗ್ರಹಗಳ ನಾಶವನ್ನು ಆರಂಭಿಸಿತು.

2002: ‘ಎನ್ವಿಸಾಟ್(ENVISAT)’ ಅಥವ ‘ಎನ್ವೈರನ್ಮೆಂಟ್ ಸ್ಯಾಟಲೈಟ್’ ಉಪಗ್ರಹವು ಭೂಮಿಯಿಂದ 850 ಕಿಲೋಮೀಟರ್ ಮೇಲೆ ಕಕ್ಷೆಯನ್ನು ತಲುಪಿತು. ಯೂರೋಪಿನ ಉಪಗ್ರಹವಾದ ಇದು ಇದುವರೆಗಿನ ಅತಿ ಹೆಚ್ಚು ತೂಕವಾದ 8500 ಟನ್ ತೂಕವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಉಪಗ್ರಹವಾಗಿದೆ.

2003: ಹೇಗ್ನಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟು ತನ್ನ ಪ್ರಥಮ ಸಭೆಯನ್ನು ನಡೆಸಿತು.

2006: ಇಂಗ್ಲಿಷ್ ವಿಕಿಪೀಡಿಯಾವು ಮಿಲಿಯನ್ ಲೇಖನಗಳ ಸಂಖ್ಯೆಯನ್ನು ಮುಟ್ಟಿತು. ‘ಜೋರ್ಡಾನ್ ಹಿಲ್ ರೈಲ್ವೇ ಸ್ಟೇಶನ್’ ಹತ್ತು ಲಕ್ಷ ಸಂಖ್ಯೆಯ ಲೇಖನವೆನಿಸಿತು.

2007: ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ಕಂಪೆನಿಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟವು ಸಮ್ಮತಿ ನೀಡಿತು.

2007: ಖ್ಯಾತ ರಂಗನಿರ್ದೇಶಕ ಆರ್. ನಾಗೇಶ್, ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಸೇರಿದಂತೆ ವಿವಿಧ ಕ್ಷೇತ್ರಗಳ 33 ಗಣ್ಯರಿಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ನೀಲ್ ಮೆಕೆಂಜಿ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 415 ರನ್ನುಗಳನ್ನು ಸೇರಿಸಿ, 53 ವರ್ಷಗಳ ಹಿಂದಿದ್ದ ದಾಖಲೆಯನ್ನು ಅಳಿಸಿಹಾಕಿದರು. 1956ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ, ಭಾರತದ ಪಂಕಜ್ ರಾಯ್ ಮತ್ತು ವಿನೂ ಮಂಕಡ್ ಜೊತೆಗೂಡಿ ಮೊದಲ ವಿಕೆಟಿಗೆ 413 ರನ್ನುಗಳನ್ನು ಸೇರಿಸಿದ್ದು ಹಿಂದಿನ ವಿಶ್ವದಾಖಲೆಯಾಗಿತ್ತು.

2008: ಕರ್ನಾಟಕ ಸರ್ಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕವಯತ್ರಿ-ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಬಿ.ಟಿ. ಲಲಿತಾ ನಾಯಕ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಹೆಸರನ್ನು ಶಿಫಾರಸು ಮಾಡಿತು.

2009: ಬೆಂಗಳೂರಿನಲ್ಲಿ ಕನ್ನಡ ವಾಕ್ಚಿತ್ರ ಅಮೃತ ಮಹೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿದರು.

ಪ್ರಮುಖಜನನ/ಮರಣ:

1812: ‘ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರ್’ ವಿನ್ಯಾಸದ ಖ್ಯಾತಿಯ ಇಂಗ್ಲಿಷ್ ವಿನ್ಯಾಸಕಕಾರ ಆಗಸ್ಟಸ್ ಪ್ಯುಗಿನ್ ಅವರು ಇಂಗ್ಲೆಂಡಿನ ಬ್ಲೂಮ್ಸ್ ಬರಿಯಲ್ಲಿನ ಕೆಪ್ಪೆಲ್ ಸ್ಟ್ರೀಟ್ ಎಂಬಲ್ಲಿ ಜನಿಸಿದರು.

1910: ಇಂಗ್ಲಿಷ್ ರಸಾಯನಶಾಸ್ತ್ರ ವಿಜ್ಞಾನಿ ಆರ್ಚರ್ ಜಾನ್ ಪೋರ್ಟರ್ ಮಾರ್ಟಿನ್ ಅವರು ಲಂಡನ್ನಿನಲ್ಲಿ ಜನಿಸಿದರು. ಕ್ರೋಮೆಟಾಗ್ರಫಿ ಕುರಿತಾದ ಸಂಶೋಧನೆಗೆ ಇವರಿಗೆ 1952 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1922: ‘ಮ್ಯಾಡ್’ ಮ್ಯಾಗಜೈನ್ ಪ್ರಕಾಶಕ ಮತ್ತು ‘EC ಕಾಮಿಕ್ಸ್’ ಸಹಸಂಪಾದಕ ವಿಲಿಯಂ ಮ್ಯಾಕ್ಸ್ ವೆಲ್ ಗೈನ್ಸ್ ಅವರು ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬಲ್ಲಿ ಜನಿಸಿದರು.

1936: ನಿರಂತರ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯನ್ನು ಅಭಿವ್ಯಕ್ತಿಸಿದ ಆರ್. ಎಂ. ಹಡಪದ್ ಅವರು ವಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಜನಿಸಿದರು. ಕೆಲ ಕಾಲ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಸೀನಿಯರ್ ಫೆಲೋಷಿಪ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1944: ಪಶ್ಚಿಮ ಬಂಗಾಳದ ಏಳನೇ ಮುಖ್ಯಮಂತ್ರಿಗಳಾಗಿದ್ದ ಬುದ್ಧದೇಬ್ ಭಟ್ಟಾಚಾರ್ಜಿ ಕೋಲ್ಕತ್ತಾದಲ್ಲಿ ಜನಿಸಿದರು.

1980: ಪ್ರಖ್ಯಾತ ಕ್ರಿಕೆಟ್ ಆಟಗಾರ ಶಾಹಿದ್ ಆಫ್ರಿದಿ ಅವರು ಪಾಕಿಸ್ತಾನದ ಗುಡ್ಡಗಾಡು ಪ್ರದೇಶವಾದ ಖೈಬರ್ ಎಂಬಲ್ಲಿ ಜನಿಸಿದರು. ಆಲ್ರೌಂಡರ್ ಆದ ಈತ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಕೇವಲ 37 ಚೆಂಡುಗಳಲ್ಲಿ ಶತಕ ಬಾರಿಸಿದ್ದಲ್ಲದೆ, ಅತ್ಯಂತ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ.

1983: ವಿಶ್ವ ಬಾಕ್ಸಿಂಗ್ ಕ್ರೀಡೆಯಲ್ಲಿ ಮಹತ್ವದ ಸಾಧನೆ ಮಾಡಿರುವ ಮೇರಿ ಕೋಮ್ ಅವರು ಮಣಿಪುರದ ಚುರಾಚನಪುರದ ಕಂಗಾಥೈ ಎಂಬ ಗ್ರಾಮದ ಬುಡಕಟ್ಟು ಜನಾಂಗದ ಕುಟುಂಬವೊಂದರಲ್ಲಿ ಜನಿಸಿದರು. ಐದು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್, 2012ರ ಒಲಿಂಪಿಕ್ಸ್ ಸ್ಪರ್ಧೆಯ 51 ಕೆ ಜಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಮತ್ತು 2014 ವರ್ಷ ದಕ್ಷಿಣ ಕೊರಿಯಾದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳ ಸಾಧನೆ ಇವರದ್ದಾಗಿದೆ. ರಾಜ್ಯಸಭೆಗೆ ನಾಮಾಂಕಣ ಹೊಂದಿರುವ ಇವರು ಪದ್ಮಭೂಷಣ, ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್ ಖೇಲ್ ರತ್ನ, ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ರಾಯಭಾರಿ ಗೌರವ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

1773: ಇಟಲಿಯ ಕಟ್ಟಡ ವಿನ್ಯಾಸಕಾರರಾದ ಲ್ಯೂಗಿ ಅವರು ವ್ಯಾನ್ವಿಟೆಲ್ಲಿ ಕ್ಯಾಸೆರ್ಟಾ ಎಂಬಲ್ಲಿ ನಿಧನರಾದರು. ಪ್ಯಾಲೇಸ್ ಆಫ್ ಕ್ಯಾಸೆರ್ಟಾ ಇವರ ಪ್ರಸಿದ್ಧ ವಿನ್ಯಾಸಕ್ಕೆ ಹೆಸರಾಗಿದೆ.

1911: ಡಚ್-ಜರ್ಮನ್ ರಸಾಯನ ಶಾಸ್ತ್ರ ವಿಜ್ಞಾನಿ ಜಾಕೋಬಸ್ ಹೆನ್ರಿಕಸ್ ವಾಂಟ್’ಹಾಫ್ ಅವರು ಬರ್ಲಿನ್ ಬಳಿಯ ಸ್ಟೆಗ್ಲಿಟ್ಜ್ ಎಂಬಲ್ಲಿ ನಿಧನರಾದರು. ಇವರ ಸಂಶೋಧನೆಯಿಂದ ಕೆಮಿಕಲ್ ಅಫಿನಿಟಿ, ಕೆಮಿಕಲ್ ಈಕ್ವಿಲಿಬ್ರಿಯಮ್, ಕೆಮಿಕಲ್ ಕಿನೆಟಿಕ್ಸ್ ಮತ್ತು ಕೆಮಿಕಲ್ ಥರ್ಮೋ ಡೈನಮಿಕ್ಸ್ ಕುರಿತಾದ ವಿಚಾರಗಳು ಬೆಳಕಿಗೆ ಬಂದವು. 1901 ವರ್ಷದಲ್ಲಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರದ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1989: ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದ ವಸಂತದಾದಾ ಪಾಟೀಲ್ ನಿಧನರಾದರು. ಅವರು ರಾಜಾಸ್ಥಾನದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1994: ಭಾರತದ ಖ್ಯಾತ ಚಿತ್ರ ನಿರ್ದೇಶಕ ಮನಮೋಹನ್ ದೇಸಾಯಿ ಮುಂಬೈಯಲ್ಲಿ ಅವರು ಮನೆಯ ಬಾಲ್ಕನಿಯಿಂದ ಬಿದ್ದು ನಿಧನರಾದರು.

Categories
e-ದಿನ

ಫೆಬ್ರವರಿ-28

ದಿನಾಚರಣೆ

ರಾಷ್ಟ್ರೀಯ ವಿಜ್ಞಾನ ದಿನ

1928ರ ಫೆಬ್ರುವರಿ 28 ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು.
ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ ಉಂಟಾಯಿತು. ಆಕಾಶವೂ ನೀಲಿ, ಸಮುದ್ರವೂ ನೀಲಿ. ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಇಲ್ಲ, ಇದಕ್ಕೆ ಇನ್ನೇನಾದರೂ ಕಾರಣ ಇರಬಹುದೇ ಎಂದು ತೀವ್ರವಾಗಿ ಚಿಂತಿಸಿದ ಅವರಿಗೆ “ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ” ಎಂದು ದೃಢಪಟ್ಟಿತು. ಆ ಕ್ಷಣದಿಂದಲೇ ತಮ್ಮ ತೀವ್ರವಾದ ಸಂಶೋಧನೆಗಳನ್ನು ನಡೆಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು. ಈ ಸಂಶೋಧನೆಗಾಗಿ ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದಿತು. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ವಿಶ್ವ ದರ್ಜಿಗಳ ದಿನ (ವರ್ಲ್ಡ್ ಟೈಲರ್ಸ್ ಡೇ)

ಹಲವಾರು ದೇಶಗಳಲ್ಲಿ ಫೆಬ್ರವರಿ 28ದಿನ ‘ವರ್ಲ್ಡ್ ಟೈಲರ್ಸ್ ಡೇ’ ಎಂದು ಆಚರಿಸಲ್ಪಡುತ್ತಿದೆ. ಹೊಲಿಗೆ ಯಂತ್ರವನ್ನು 1845ರ ವರ್ಷದಲ್ಲಿ ಲಾಕ್ ಸ್ಟಿಚ್ ಲೂಪ್ ವ್ಯವಸ್ಥೆಯಲ್ಲಿ ಉಪಯೋಗಿಸುವ ಹಾಗೆ ಕಂಡು ಹಿಡಿದ ಸರ್ ಎಲಿಯಾಸ್ ಹೋವೆ ಅವರ ಗೌರವಾರ್ಥವಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1827: ಅಮೆರಿಕದ ಪ್ರಥಮ ವಾಣಿಜ್ಯ ಸಾರಿಗೆ ವ್ಯವಸ್ಥೆ ‘ಬಾಲ್ಟಿಮೋರ್ ಅಂಡ್ ಓಹಿಯೋ ರೈಲ್ ರೋಡ್’ ಪ್ರಾರಂಭ : ಅಮೆರಿಕದ ಪ್ರಥಮ ವಾಣಿಜ್ಯ ಸಾರಿಗೆ ವ್ಯವಸ್ಥೆ ‘ಬಾಲ್ಟಿಮೋರ್ ಅಂಡ್ ಓಹಿಯೋ ರೈಲ್ ರೋಡ್’ ಆರಂಭಗೊಂಡಿತು. ಜನ ಮತ್ತು ಸಾಮಗ್ರಿ ಸಾಗಣೆ ವ್ಯವಸ್ಥೆಗಳೆರಡನ್ನೂ ವಾಣಿಜ್ಯರೂಪದಲ್ಲಿ ಈ ಮೂಲಕ ಆರಂಭಿಸಲಾಯಿತು.

1885: ಅಮೆರಿಕನ್ ಟೆಲಿಫೋನ್ ಮತ್ತು ಟೆಲಿಗ್ರಾಫ್ ಸಂಸ್ಥೆ ಆರಂಭ ಅಮೆರಿಕನ್ ಟೆಲಿಫೋನ್ ಮತ್ತು ಟೆಲಿಗ್ರಾಫ್ ಸಂಸ್ಥೆಯು ಅಮೆರಿಕನ್ ಬೆಲ್ ಟೆಲಿಫೋನ್ ಸಂಸ್ಥೆಯ ಅಂಗಸಂಸ್ಥೆ(subsidiary)ಯಾಗಿ ಆರಂಭಗೊಂಡಿತು. ಮುಂದೆ ಅಮೇರಿಕನ್ ಬೆಲ್ ಸಂಸ್ಥೆಯು ತನ್ನ ಈ ಅಂಗಸಂಸ್ಥೆಯೊಂದಿಗೆ ವಿಲೀನಗೊಂಡಿತು.

1922: ಬ್ರಿಟನ್ ಏಕಪಕ್ಷೀಯವಾಗಿ ಈಜಿಪ್ಟಿಗೆ ಸ್ವಾತಂತ್ರ್ಯವನ್ನು ಘೋಷಿಸಿತು. ಬ್ರಿಟನ್ ಏಕಪಕ್ಷೀಯವಾಗಿ ಈಜಿಪ್ಟಿಗೆ ಸ್ವಾತಂತ್ರ್ಯವನ್ನು ಘೋಷಿಸಿತು.

1935: ಡ್ಯುಪಾಂಟ್ ಸಂಸ್ಥೆಯ ವಿಜ್ಞಾನಿ ವಾಲೇಸ್ ಕರೋದರ್ಸ್ ಅವರು ನೈಲಾನ್ ಸಂಶೋಧಿಸಿದರು. ಡ್ಯುಪಾಂಟ್ ಸಂಸ್ಥೆಯ ವಿಜ್ಞಾನಿ ವಾಲೇಸ್ ಕರೋದರ್ಸ್ ಅವರು ನೈಲಾನ್ ಸಂಶೋಧಿಸಿದರು.

1939: ವೆಬ್ಸ್ಟರ್ ನಿಘಂಟಿನಲ್ಲಿ ‘dord’ ಎಂಬ ತಪ್ಪು ಪದದ ನುಸುಳಿಕೆ” open=”no”]ವೆಬ್ಸ್ಟರ್ ಅವರ ನೂತನ ಅಂತರರಾಷ್ಟ್ರೀಯ ನಿಘಂಟಿನ ಎರಡನೇ ಅವತರಣಿಕೆಯಲ್ಲಿ ‘dord’ ಎಂಬ ತಪ್ಪು ಪದವೊಂದು ನುಸುಳಿ, ಆ ಕುರಿತಾದ ತನಿಖೆಗೆ ಮೊದಲಾಯಿತು.

1940: ಮೊಟ್ಟಮೊದಲ ಬಾರಿಗೆ ದೂರದರ್ಶನದಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡೆಯ ನೇರ ಪ್ರಸಾರ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಎಂಬಲ್ಲಿ ಫೋರ್ಧಾಮ್ ವಿಶ್ವವಿದ್ಯಾಲಯ ಮತ್ತು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯಗಳ ನಡುವೆ ನಡೆದ ಬ್ಯಾಸ್ಕೆಟ್ ಬಾಲ್ ಪಂದ್ಯವು ದೂರದರ್ಶನದಲ್ಲಿ ನೇರ ಪ್ರಸಾರಗೊಂಡಿತು. ಬ್ಯಾಸ್ಕೆಟ್ ಬಾಲ್ ಪಂದ್ಯವೊಂದು ದೂರದರ್ಶನದಲ್ಲಿ ನೇರಪ್ರಸಾರಗೊಂಡಿದ್ದು ಇದೇ ಮೊದಲು.

1947: ಟೈವಾನಿನಲ್ಲಿ ಸಾರ್ವಜನಿಕ ಧಂಗೆ ನಡೆದು ಸುಮಾರು 30,000 ಜನ ಸಾವಿಗೀಡಾದರು. ಟೈವಾನಿನಲ್ಲಿ ಸಾರ್ವಜನಿಕ ಧಂಗೆ ನಡೆದು ಸುಮಾರು 30,000 ಜನ ಸಾವಿಗೀಡಾದರು

1953: ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರು, ತಾವು ‘DNA’ ನಲ್ಲಿನ ರಾಸಾಯನಿಕ ಸ್ವರೂಪವನ್ನು ಸ್ಪಷ್ಟವಾಗಿ ನಿಷ್ಕರ್ಶಿಸಿರುವುದಾಗಿ ತಮ್ಮ ಗೆಳೆಯರುಗಳ ಬಳಿ ಘೋಷಿಸಿದರು. ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರು, ತಾವು ‘DNA’ ನಲ್ಲಿನ ರಾಸಾಯನಿಕ ಸ್ವರೂಪವನ್ನು ಸ್ಪಷ್ಟವಾಗಿ ನಿಷ್ಕರ್ಶಿಸಿರುವುದಾಗಿ ತಮ್ಮ ಗೆಳೆಯರುಗಳ ಬಳಿ ಘೋಷಿಸಿದರು. ಈ ಕುರಿತ ಅಧಿಕೃತ ಪ್ರಕಟಣೆ ಏಪ್ರಿಲ್ ತಿಂಗಳ ‘ನೇಚರ್’ ಪತ್ರಿಕೆಯಲ್ಲಿ ಮೂಡಿಬಂದ ನಂತರದಲ್ಲಿ ಏಪ್ರಿಲ್ 25ರಂದು ಹೊರಬಂತು.

1954: ಪ್ರಥಮ ಬಣ್ಣದ ಟೆಲಿವಿಷನ್ ಸಾರ್ವಜನಿಕ ಮಾರಾಟಕ್ಕೆ ‘ನ್ಯಾಷನಲ್ ಟೆಲಿವಿಷನ್ ಸಿಸ್ಟಮ್ ಕಮಿಟಿ’ ಸೂಚಿತ ಗುಣಮಟ್ಟವುಳ್ಳ ಪ್ರಥಮ ಬಣ್ಣದ ಟೆಲಿವಿಷನ್ ಯಂತ್ರಗಳನ್ನು ಸಾರ್ವಜನಿಕ ಮಾರಾಟಕ್ಕೆ ಬಿಡುಗಡೆ ಮಾಡಲಾಯಿತು.

1959: ಅಮೆರಿಕದ ಪ್ರಥಮ ಬೇಹುಗಾರಿಕೆ ಉಪಗ್ರಹವಾದ ‘ಡಿಸ್ಕವರರ್ 1’ ಪ್ರಯೋಗ :ಅಮೆರಿಕದ ಪ್ರಥಮ ಬೇಹುಗಾರಿಕೆ ಉಪಗ್ರಹವಾದ ‘ಡಿಸ್ಕವರರ್ 1’ ಪ್ರಯೋಗಿಸಲ್ಪಟ್ಟಿತು. ಆದರೆ ಪೋಲಾರ್ ಕಕ್ಷೆಯನ್ನು ಗುರಿಯಿಟ್ಟುಕೊಂಡು ಹೊರಟ ಈ ಉಪಗ್ರಹವು ತನ್ನ ನಿಗದಿತ ಕಕ್ಷೆಯನ್ನು ಮುಟ್ಟುವಲ್ಲಿ ವಿಫಲಗೊಂಡಿತು.

1983: ‘M*A*S*H’ ಕಾರ್ಯಕ್ರಮದ ಅಂತಿಮ ಕಾರ್ಯಕ್ರಮವು ಪ್ರಸಾರಗೊಂಡು ಅತಿ ಹೆಚ್ಚು 106 ದಶಲಕ್ಷ ವೀಕ್ಷಕರನ್ನು ತಲುಪಿತು. ‘M*A*S*H’ ಕಾರ್ಯಕ್ರಮದ ಅಂತಿಮ ಕಾರ್ಯಕ್ರಮವು ಪ್ರಸಾರಗೊಂಡು ಅತಿ ಹೆಚ್ಚು 106 ದಶಲಕ್ಷ ವೀಕ್ಷಕರನ್ನು ಸೆಳೆಯಿತು.

1986: ಸ್ವೀಡನ್ನಿನ ಪ್ರಧಾನ ಮಂತ್ರಿಗಳಾದ ಉಲುಫ್ ಪಾಮೆ ಹತ್ಯೆ: ಸ್ವೀಡನ್ನಿನ 26ನೇ ಪ್ರಧಾನ ಮಂತ್ರಿಗಳಾದ ಉಲುಫ್ ಪಾಮೆ ಅವರು ಸ್ಟಾಲ್ಕ್ ಹೋಮ್ ನಗರದಲ್ಲಿ ಕೊಲೆಗೀಡಾದರು.

1968: ಶ್ರೀಅರಬಿಂದೋ ಆಶ್ರಮದ ಅಂತಾರಾಷ್ಟ್ರೀಯ ಟೌನ್ ಶಿಪ್ ‘ಅರೋವಿಲ್ಲೆ’ ಉದ್ಘಾಟನೆ” open=”no”]ಶ್ರೀಅರಬಿಂದೋ ಆಶ್ರಮದ ಅಂತಾರಾಷ್ಟ್ರೀಯ ಟೌನ್ ಶಿಪ್ ‘ಅರೋವಿಲ್ಲೆ’ ಪಾಂಡಿಚೇರಿಯಲ್ಲಿ ಉದ್ಘಾಟನೆಗೊಂಡಿತು. ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಆರಂಭಗೊಂಡ ‘ಅರೋವಿಲ್ಲೆ’ ನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು. ಇಂದಿಗೆ ‘ಅರೋವಿಲ್ಲೆ’ ಪ್ರದೇಶದಲ್ಲಿ 35 ರಾಷ್ಟ್ರಗಳ ಸುಮಾರು 1700ಜನರು ನೆಲೆಸಿರುವರು.

1997: ಪ್ರಕಾಶಯುತ ‘ಗಮ್ಮ’ ಕಿರಣಗಳು ಭೂಮಿಯ ಮೇಲೆ 80 ಸೆಕೆಂಡುಗಳ ಕಾಲ ಸಿಡಿದವು: ಪ್ರಕಾಶಯುತ ‘ಗಮ್ಮ’ ಕಿರಣಗಳು ಭೂಮಿಯ ಮೇಲೆ 80 ಸೆಕೆಂಡುಗಳ ಕಾಲ ಸಿಡಿದವು. ಇದು ಗಮ್ಮ-ಕಿರಣಗಳ ಸಿಡಿತವು ಮಿಲ್ಕಿ ವೇ ಪರಿಧಿಯ ಆಚೆಗೆ ಸಹಾ ಸಂಭವಿಸಬಹುದೆಂಬುದನ್ನು ನಿರೂಪಿಸಿತು.

2002: ಗುಜರಾಥಿನಲ್ಲಿ ನಡೆದ ಹಿಂಸಾಚಾರಗಳಲ್ಲಿ ನರೋದ ಪಟಿಯಾ ಗಲಭೆಯಲ್ಲಿ 97 ಜನ ಮತ್ತು ಗುಲ್ಬರ್ಗ್ ಸೊಸೈಟಿ ಗಲಭೆಯಲ್ಲಿ 69 ಜನ ಸಾವಿಗೀಡಾದರು. ಗುಜರಾಥಿನಲ್ಲಿ ನಡೆದ ಹಿಂಸಾಚಾರಗಳಲ್ಲಿ ನರೋದ ಪಟಿಯಾ ಗಲಭೆಯಲ್ಲಿ 97 ಜನ ಮತ್ತು ಗುಲ್ಬರ್ಗ್ ಸೊಸೈಟಿ ಗಲಭೆಯಲ್ಲಿ 69 ಜನ ಸಾವಿಗೀಡಾದರು.

2004: ಟೈವಾನಿನಲ್ಲಿ 1947 ಫೆಬ್ರವರಿ 28ರಂದು ನಡೆದ ಘಟನೆಯ ಸ್ಮರಣಾರ್ಥವಾಗಿ ದಶಲಕ್ಷಕ್ಕೂ ಹೆಚ್ಚು ಜನ ಸುಮಾರು 500 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿದರು. ಟೈವಾನಿನಲ್ಲಿ 1947 ಫೆಬ್ರವರಿ 28ರಂದು ನಡೆದ ಘಟನೆಯ ಸ್ಮರಣಾರ್ಥವಾಗಿ 228 ಕೈ ಕೈ ಜೋಡಿಸುವ ಆಂದೋಲನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನ ಸುಮಾರು 500 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿದರು.

2008: ‘ಸರ್ಕಾರಿ ನೌಕರರೊಬ್ಬರು ಮೃತರಾದಾಗ ಅವರ ಹತ್ತಿರದ ಸಂಬಂಧಿಕರು ಮಾನವೀಯತೆಯ ಆಧಾರದಲ್ಲಿ ತಮ್ಮ ಹಕ್ಕೆಂದು ಪರಿಗಣಿಸಿ ಉದ್ಯೋಗ ಯಾಚಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪು ‘ಸರ್ಕಾರಿ ನೌಕರರೊಬ್ಬರು ಮೃತರಾದಾಗ ಅವರ ಹತ್ತಿರದ ಸಂಬಂಧಿಕರು ಮಾನವೀಯತೆಯ ಆಧಾರದಲ್ಲಿ ತಮ್ಮ ಹಕ್ಕೆಂದು ಪರಿಗಣಿಸಿ ಉದ್ಯೋಗ ಯಾಚಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪುನೀಡಿತು.

2009: “ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು, ಮೂರು ವರ್ಷದ ಪದವಿ ಶಿಕ್ಷಣದ ನಿಯಮಿತ ಅಧ್ಯಯನ ಕಡ್ಡಾಯ” ಮುಕ್ತವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮೂರು ವರ್ಷದ ಪದವಿ ಶಿಕ್ಷಣದ ನಿಯಮಿತ ಅಧ್ಯಯನ ಕಡ್ಡಾಯ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

2009: ಗುಲ್ಬರ್ಗ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಪ್ರೊ. ಎ. ಎಂ. ಪಠಾಣ್ ಆಯ್ಕೆ: ಗುಲ್ಬರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಹೈದರಾಬಾದಿನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ. ಎ. ಎಂ. ಪಠಾಣ್ ಅವರನ್ನು ಆಯ್ಕೆ ಮಾಡಲಾಯಿತು.

2009: ಬೃಹತ್ ಪ್ರಮಾಣದ ಯುದ್ಧನೌಕೆಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಶಕ್ತ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆ: ಬೃಹತ್ ಪ್ರಮಾಣದ ಯುದ್ಧನೌಕೆಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಶಕ್ತ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆಯಾಯಿತು. ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಕೊಚ್ಚಿ ಹಡಗುಕಟ್ಟೆಯಲ್ಲಿ ಭಾರತದ ಪ್ರಥಮ ದೇಶೀಯ ನಿರ್ಮಿತ ಬೃಹತ್ ಯುದ್ಧನೌಕೆ ಐಎಸಿಯಲ್ಲಿನ (ಇಂಡಿಯನ್ ಏರ್‌ಕ್ರಾಫ್ಟ್ ಕ್ಯಾರಿಯರ್) ರನ್‌ವೇ ನಿರ್ಮಾಣಕ್ಕೆ ಸಾಂಕೇತಿಕ ಚಾಲನೆ ನೀಡಿದರು.[

2009: ಕರ್ನಾಟಕದ ಇಬ್ಬರಿಗೆ ‘ಶ್ರೇಷ್ಠ ಅಂಗನವಾಡಿ ಕಾರ್ಯಕರ್ತ’ ಪ್ರಶಸ್ತಿ ಪ್ರದಾನ: ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಇಬ್ಬರಿಗೆ ‘ಶ್ರೇಷ್ಠ ಅಂಗನವಾಡಿ ಕಾರ್ಯಕರ್ತ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸನ ಜಿಲ್ಲೆ ಬೇಲೂರಿನ ಕೆಂಪದೇವಮ್ಮ ಮತ್ತು ಮಂಗಳೂರಿನ ಜಯಲಕ್ಷ್ಮಿ ಪ್ರಶಸ್ತಿಗೆ ಪಾತ್ರರಾದವರು. ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾಡಿದ ಪ್ರಯತ್ನವನ್ನು ಮೆಚ್ಚಿ ಈ ಪ್ರಶಸ್ತಿ ನೀಡಲಾಯಿತು.

2009: ಬೆಂಗಳೂರಿನ ಹಳೆಯ ಸೆಂಟ್ರಲ್ ಜೈಲ್ ಆವರಣದಲ್ಲಿ ‘ಸ್ವಾತಂತ್ರ್ಯ ಉದ್ಯಾನವನ’ ಉದ್ಘಾಟನೆ :ಬೆಂಗಳೂರಿನ ಹಳೆಯ ಸೆಂಟ್ರಲ್ ಜೈಲ್ ಆವರಣದಲ್ಲಿ ‘ಸ್ವಾತಂತ್ರ್ಯ ಉದ್ಯಾನವನ’ವು ಉದ್ಘಾಟನೆಗೊಂಡಿತು.

2013: ಪೋಪ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪೋಪ್ ಬೆನೆಡಿಕ್ಟ್ 16 ಪೋಪ್ ಬೆನೆಡಿಕ್ಟ್ 16 ಅವರು ಕ್ಯಾಥೊಲಿಕ್ ಚರ್ಚ್ ಪೋಪ್ ಆಗಿ ತಾವು ಹೊಂದಿದ್ದ ಅಧಿಕಾರಕ್ಕೆ ರಾಜೀನಾಮೆ ಸಲ್ಲಿಸಿದರು. 1415ನೇ ಇಸವಿಯ ನಂತರದಲ್ಲಿ ಚರ್ಚ್ ಇತಿಹಾಸದಲ್ಲಿ ಪೋಪ್ ಒಬ್ಬರು ರಾಜೀನಾಮೆ ಸಲ್ಲಿಸಿರುವುದು ಇದೇ ಮೊದಲಾಗಿದೆ.

ಪ್ರಮುಖಜನನ/ಮರಣ:

1533: ಫ್ರೆಂಚ್ ತತ್ವಜ್ಞಾನಿ ಮತ್ತು ಲೇಖಕ ಮೈಖೇಲ್ ಡಿ. ಮೊಂಟೈನ್ ಅವರು ಫ್ರಾನ್ಸಿನ ಗುಯೆನ್ನೇ ಪ್ರದೇಶದ ಚಾಟಿಯೂ ಡಿ ಮೊಂಟೈಗ್ನೆ ಎಂಬಲ್ಲಿ ಜನಿಸಿದರು.

1552: ಸ್ವಿಸ್ ಗಣಿತಜ್ಞ ಮತ್ತು ಗಡಿಯಾರ ಸೃಷ್ಟಿಕರ್ತ ಜೋಸ್ಟ್ ಬರ್ಗಿ ಅವರು ಟಾಗೆನ್ ಬರ್ಗ್ ಪ್ರಾಂತ್ಯದ ಲಿಚ್ಟೆನ್ ಸ್ತೀಗ್ ಎಂಬಲ್ಲಿ ಜನಿಸಿದರು.

1824: ನಯಾಗರ ಜಲಪಾತವನ್ನು ಹಗ್ಗದ ಮೇಲೆ ನಡೆಯುತ್ತಾ ದಾಟಿದ ಜೀನ್ ಫ್ರಾಂಕೋಯಿಸ್ ಗ್ರಾವೆಲೆಟ್ ಅವರು ಫ್ರಾನ್ಸಿನ ಸೈಂಟ್ ಒಮರ್ ಎಂಬಲ್ಲಿ ಜನಿಸಿದರು. ಇವರಿಗೆ ಚಾರ್ಲ್ಸ್ ಬ್ಲಾಂಡಿನ್ ಎಂಬ ಹೆಸರು ಕೂಡಾ ಇದೆ.

1896: ನೊಬೆಲ್ ಪುರಸ್ಕೃತ ವೈದ್ಯ ವಿಜ್ಞಾನಿ ಫಿಲಿಪ್ ಷೋ ಆಲ್ಟರ್ ಹೆಂಚ್ ಜನನ : ಅಮೆರಿಕದ ವೈದ್ಯ ವಿಜ್ಞಾನಿ ಫಿಲಿಪ್ ಷೋ ಆಲ್ಟರ್ ಹೆಂಚ್ ಅವರು ಪಿಟ್ಸ್ಬರ್ಗ್ ನಗರದಲ್ಲಿ ಜನಿಸಿದರು. ಹಾರ್ಮೋನ್ಸ್ ಆಫ್ ದಿ ಆಡ್ರೆನಾಲ್ ಕಾರ್ಟೆಕ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1950 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1901: ನೊಬೆಲ್ ರಸಾಯನ ಶಾಸ್ತ್ರ ಮತ್ತು ನೊಬೆಲ್ ಶಾಂತಿ ಪುರಸ್ಕೃತ ಲೈನಸ್ ಪಾಲಿಂಗ್ ಜನನ :ಅಮೆರಿಕದ ರಸಾಯನ ಶಾಸ್ತ್ರ ವಿಜ್ಞಾನಿ ಮತ್ತು ಶಾಂತಿ ಕಾರ್ಯಕರ್ತ ಲೈನಸ್ ಕಾರ್ಲ್ ಪಾಲಿಂಗ್ ಅವರು ಆರಿಗನ್ ಪ್ರಾಂತ್ಯದ ಪೋರ್ಟ್ಲ್ಯಾಂಡ್ ಎಂಬಲ್ಲಿ ಜನಿಸಿದರು. ಇವರು 1954ರಲ್ಲಿ ನೊಬೆಲ್ ರಸಾಯನ ಶಾಸ್ತ್ರ ಪ್ರಶಸ್ತಿ ಮತ್ತು 1962 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದಾರೆ.

1913: ಶಿಲಾ ಕೆತ್ತನೆ, ಲೋಹ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿ ಜನನ: ಶಿಲಾ ಕೆತ್ತನೆ, ಲೋಹ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿ ಅವರು ಖ್ಯಾತ ಶಿಲ್ಪಿ ಸಿದ್ಧಾಂತಿ ಸಿದ್ದಲಿಂಗ ಸ್ವಾಮಿಗಳ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದರು. ಅಸಂಖ್ಯಾತ ಕಲಾಕೃತಿಗಳನ್ನು ರಚಿಸಿದ ಇವರಿಗೆ ಮೈಸೂರು ಲಲಿತಕಲಾ ಅಕಾಡೆಮಿಯು 1965-66ರ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತ್ತು.

1915: ನೊಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಮೆಡಾವರ್ ಜನನ: ಬ್ರೆಜಿಲಿಯನ್-ಇಂಗ್ಲಿಷ್ ಜೀವವಿಜ್ಞಾನಿ ಪೀಟರ್ ಮೆಡಾವರ್ ಅವರು ಬ್ರೆಜಿಲ್ ದೇಶದ ರಯೋ ಡಿ ಜೆನೇರೋ ಪ್ರಾಂತ್ಯದ ಪೆಟ್ರೋಪೊಲಿಸ್ ಎಂಬಲ್ಲಿ ಜನಿಸಿದರು. ಟ್ರಾನ್ಸ್ ಪ್ಲಾಂಟೇಶನ್ ಪಿತಾಮಹರೆಂದು ಖ್ಯಾತರಾದ ಇವರಿಗೆ 1960 ವರ್ಷದಲ್ಲಿ ನೊಬೆಲ್ ವೈದ್ಯ ಶಾಸ್ತ್ರ ಪ್ರಶಸ್ತಿ ಸಂದಿತು.

1929: ಕೆನಡಿಯನ್-ಅಮೆರಿಕನ್ ಕಟ್ಟಡ ವಿನ್ಯಾಸಕಾರಾದ ಫ್ರಾಂಕ್ ಗೆಹ್ರಿ ಟೊರಾಂಟೋದಲ್ಲಿ ಜನಿಸಿದರು. ‘8 ಸ್ಪ್ರೂಸ್ ಸ್ಟ್ರೀಟ್’ ಮತ್ತು ‘ವಾಲ್ಟ್ ಡಿಸ್ನಿ ಕನ್ಸರ್ಟ್ ಹಾಲ್’ ಇವರ ಪ್ರಸಿದ್ಧ ವಿನ್ಯಾಸಗಳಲ್ಲಿ ಸೇರಿವೆ.

1930: ನೊಬೆಲ್ ಪುರಸ್ಕೃತ ಅಮೆರಿಕದ ಭೌತವಿಜ್ಞಾನಿ ಲಿಯಾನ್ ಕೂಪರ್ ಅವರು ನ್ಯೂಯಾರ್ಕಿನ ಬ್ರಾಂಕ್ಸ್ ಎಂಬಲ್ಲಿ ಜನಿಸಿದರು. ‘ಬಿಸಿಎಸ್ ಥಿಯರಿ ಆಫ್ ಸುಪರ್ ಕಂಡಕ್ಟಿವಿಟಿ’ ಪ್ರಸ್ತುತ ಪಡಿಸಿದ ಇವರು ಮತ್ತು ಇವರ ಸಹವಿಜ್ನಾನಿಗಳಿಗೆ 1972 ವರ್ಷದಲ್ಲಿ ನೊಬೆಲ್ ಭೌತ ಶಾಸ್ತ್ರ ಪ್ರಶಸ್ತಿ ಸಂದಿತು.

1915: ನೊಬೆಲ್ ಪುರಸ್ಕೃತ ವಿಜ್ಞಾನಿ ಡೇನಿಯಲ್ ಸಿ. ಟಿಸುಯ್ ಜನನ: ಚೀನೀ-ಅಮೇರಿಕನ್ ಭೌತವಿಜ್ಞಾನಿ ಡೇನಿಯಲ್ ಸಿ. ಟಿಸುಯ್ ಅವರು ಚೀನಾದ ಹೆನನ್ ಪ್ರದೇಶದ ಫ್ಯಾನ್ ವಿಲೆಜೆ ಎಂಬಲ್ಲಿ ಜನಿಸಿದರು. ‘ಕ್ವಾಂಟಮ್ ಹಾಲ್ ಎಫೆಕ್ಟ್’ ಕುರಿತಾದ ಸಂಶೋಧನೆ ಇವರಿಗೆ 1998 ವರ್ಷದಲ್ಲಿ ನೊಬೆಲ್ ಭೌತ ಶಾಸ್ತ್ರ ಪ್ರಶಸ್ತಿ ಸಂದಿತು.

1948: ನೊಬೆಲ್ ಪುರಸ್ಕೃತ ವಿಜ್ಞಾನಿ ಮತ್ತು ರಾಜಕಾರಣಿ ಸ್ಟೀವನ್ ಚು ಜನನ: ಅಮೇರಿಕದ ಭೌತವಿಜ್ಞಾನಿ ಮತ್ತು ರಾಜಕಾರಣಿ ಸ್ಟೀವನ್ ಚು ಅವರು ಮಿಸ್ಸೌರಿ ಪ್ರಾಂತ್ಯದ ಸೈಂಟ್ ಲೂಯಿಸ್ ಎಂಬಲ್ಲಿ ಜನಿಸಿದರು. ‘ಕೂಲಿಂಗ್ ಅಂಡ್ ಟ್ರಾಪಿಂಗ್ ಆಫ್ ಆಟಮ್ಸ್ ವಿಥ್ ಲೇಸರ್ ಲೈಟ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1997 ವರ್ಷದಲ್ಲಿ ನೊಬೆಲ್ ಭೌತ ಶಾಸ್ತ್ರ ಪ್ರಶಸ್ತಿ ಸಂದಿತು.

1953: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಪಾಲ್ ಕ್ರಗ್ ಮ್ಯಾನ್ ಅವರು ನ್ಯೂಯಾರ್ಕ್ ನಗರದ ಆಲ್ಬನಿ ಎಂಬಲ್ಲಿ ಜನಿಸಿದರು. ಇವರಿಗೆ 2008 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತು.

1959: ಚಲನಚಿತ್ರ ನಟಿ, ನಿರ್ಮಾಪಕಿ ಜಯಮಾಲಾ ಜನನ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷತೆ ಅಲಂಕರಿಸಿದ್ದ ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ವಾಣಿಜ್ಯ ಮತ್ತು ಕಲಾತ್ಮಕ ಚಿತ್ರಗಳೆರಡರಲ್ಲೂ ನಟಿಸಿರುವ ಇವರು ನಿರ್ಮಾಪಕಿಯಾಗಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ‘ತಾಯಿ ಸಾಹೇಬ’ ಚಿತ್ರ ನಿರ್ಮಿಸಿ ರಾಷ್ಟ್ರೀಯ ಪ್ರಶಸ್ತಿಗಳಿಸಿದರು. ಅದೇ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಆಯ್ಕೆಸಮಿತಿ ಪ್ರಕಟಿಸಿದ ವಿಶೇಷ ಜ್ಯೂರಿ ಪುರಸ್ಕಾರವನ್ನು ಸಹಾ ಸ್ವೀಕರಿಸಿದರು. ಅವರ ನಿರ್ಮಾಣದ ‘ತುತ್ತೂರಿ’ ಮಕ್ಕಳ ಚಿತ್ರ ಸಹಾ ರಾಷ್ಟ್ರಪಶಸ್ತಿ ಪಡೆಯಿತು.

1978: ಚಲನಚಿತ್ರ ಹಿನ್ನೆಲೆ ಗಾಯಕಿ ನಂದಿತಾ ಅವರು ಜನಿಸಿದರು. ಪ್ರಮುಖವಾಗಿ ಕನ್ನಡ ಚಿತ್ರಗಳಲ್ಲಿ ಹಿನ್ನೆಲೆ ಗಾಯನ ನೀಡುವ ಇವರು ಹಲವು ಇತರ ಭಾಷಾ ಚಿತ್ರಗಳಲ್ಲೂ ಹಾಡಿದ್ದಾರೆ. ಹಲವಾರು ಚಿತ್ರಗಳ ಗಾಯನಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿಯೇ ಅಲ್ಲದೆ ಇತರ ಪಶಸ್ತಿಗಳೂ ಇವರಿಗೆ ಸಂದಿವೆ.
ನಿಧನ:

1936: ನೊಬೆಲ್ ಪುರಸ್ಕೃತ ಚಾರ್ಲ್ಸ್ ನಿಕೊಲ್ಲೇ ನಿಧನ ” open=”no”]ಫ್ರೆಂಚ್ ಜೀವವಿಜ್ಞಾನಿ ಚಾರ್ಲ್ಸ್ ನಿಕೊಲ್ಲೇ ಅವರು ಟುನಿಸಿಯಾದಲ್ಲಿ ನಿಧನರಾದರು. ‘ಲೈಸ್ ಅಸ್ ದಿ ಟ್ರಾನ್ಸ್ಮಿಟರ್ ಆಫ್ ಎಪಿಡೆಮಿಕ್ ಟೈಫಸ್’ ಸಂಶೋಧನೆಗಾಗಿ ಇವರಿಗೆ 1928 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.[/fusion_toggle][fusion_toggle title=”1936: ಕಮಲಾ ನೆಹರೂ ನಿಧನ ” open=”no”]ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಸೇವಕರ್ತೆ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರು ಸ್ವಿಟ್ಜರ್ಲ್ಯಾಂಡಿನ ಲೌಸ್ಸಾನೆ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”1963: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ನಿಧನ” open=”no”]ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪಾಟ್ನಾದಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. ಅವರು 1950-62ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.[/fusion_toggle][fusion_toggle title=”1967: ಟೈಮ್ ಮ್ಯಾಗಜೈನ್ ಸಹ ಸಂಸ್ಥಾಪಕ ಹೆನ್ರಿ ಲ್ಯೂಸ್ ನಿಧನ” open=”no”]ಚೀನೀ-ಅಮೆರಿಕನ್ ಪ್ರಕಾಶಕ ಮತ್ತು ಟೈಮ್ ಮ್ಯಾಗಜೈನ್ ಪತ್ರಿಕೆಯ ಸಹ ಸಂಸ್ಥಾಪಕ ಹೆನ್ರಿ ಲ್ಯೂಸ್ ಅಮೆರಿಕದ ಅರಿಜೋನಾದ ಫೀನಿಕ್ಸ್ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”1986: ಸ್ಟಾಕ್ ಹೋಮ್ನಲ್ಲಿ ಸ್ವೀಡಿಷ್ ಪ್ರಧಾನಿ ಉಲೋಫ್ ಪಾಮೆ ಹತ್ಯೆ ” open=”no”]ಸ್ಟಾಕ್ ಹೋಮ್ನಲ್ಲಿ ಸ್ವೀಡಿಷ್ ಪ್ರಧಾನಿ ಉಲೋಫ್ ಪಾಮೆ ಅವರ ಹತ್ಯೆ ನಡೆಯಿತು.[/fusion_toggle][fusion_toggle title=”2006: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಓವೆನ್ ಚೇಂಬರ್ಲೈನ್ ನಿಧನ ” open=”no”]ಅಮೆರಿಕದ ಭೌತವಿಜ್ಞಾನಿ ಓವೆನ್ ಚೇಂಬರ್ಲೈನ್ ಕ್ಯಾಲಿಫೋರ್ನಿಯಾದ ಬರ್ಕ್ಲೆ ಎಂಬಲ್ಲಿ ನಿಧನರಾದರು. ‘ಆಂಟಿಪ್ರೊಟಾನ್’ ಕುರಿತಾದ ಸಂಶೋಧನೆಗೆ ಇವರಿಗೆ 1959 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.[/fusion_toggle][fusion_toggle title=”2006: ನೊಬೆಲ್ ಪುರಸ್ಕೃತ ವಿಜ್ಞಾನಿ ಡೊನಾಲ್ಡ್ ಎ. ಗ್ಲೇಸರ್ ನಿಧನ ” open=”no”]ಅಮೆರಿಕದ ಭೌತವಿಜ್ಞಾನಿ ಮತ್ತು ಜೀವವಿಜ್ಞಾನಿ ಡೊನಾಲ್ಡ್ ಎ. ಗ್ಲೇಸರ್ ಅವರು ಒಹಿಯೋದ ಕ್ಲೀವ್ಲ್ಯಾಂಡ್ ಎಂಬಲ್ಲಿ ನಿಧನರಾದರು. ‘ಬಬ್ಬಲ್ ಚೇಂಬರ್’ ಕುರಿತಾದ ಸಂಶೋಧನೆಗೆ ಇವರಿಗೆ 1960 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.[/fusion_toggle][/fusion_accordion]

Categories
e-ದಿನ

ಫೆಬ್ರವರಿ-27

ದಿನಾಚರಣೆಗಳುದಿನಾಚರಣೆಗಳು

ಮರಾಠಿ ಭಾಷಾ ದಿನ

ಮಹಾರಾಷ್ಟ್ರದಲ್ಲಿ ಫೆಬ್ರವರಿ 27 ದಿನವನ್ನು ಮಹಾನ್ ಕವಿ ‘ಕುಸುಮಾಗ್ರಜ್’ ಕಾವ್ಯ ನಾಮಾಂಕಿತರಾದ ಜ್ಞಾನಪೀಠ ಪುರಸ್ಕೃತ ವಿಷ್ಣು ವಾಮನ ಶಿರ್ವಾಡ್ಕರ್ ಅವರ ಜನ್ಮದಿನಕ್ಕೆ ಹೊಂದಿಕೊಂಡಂತೆ ಮರಾಠಿ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

425: ಚಕ್ರವರ್ತಿ ಎರಡನೇ ಥಿಯೋಡಿಯಸ್, ತಮ್ಮ ಪತ್ನಿ ಏಲಿಯಾ ಯೂಡೋಸಿಯಾ ಆಗ್ರಹದ ಮೇರೆಗೆ ‘ಕಾನ್ಸ್ಟಾಂಟಿನೋಪಲ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದರು.

1700: ನ್ಯೂ ಬ್ರಿಟನ್ ದ್ವೀಪವು ಪತ್ತೆಯಾಯಿತು. ಈ ದಿನದಂದು ವಿಲಿಯಂ ಡ್ಯಾಂಪಿಯರ್ ಎಂಬಾತ ಇಲ್ಲಿಗೆ ಭೇಟಿ ನೀಡಿದ ಪ್ರಥಮ ಯೂರೋಪಿನ ವ್ಯಕ್ತಿ ಎನಿಸಿದರು. ಆ ಸಮಯದಲ್ಲಿ ಈ ಸ್ಥಳಕ್ಕೆ ಆಟ ಲ್ಯಾಟಿನ್ ಭಾಷೆಯಲ್ಲಿ ‘ನೊವಾ ಬ್ರಿಟಾನಿಯಾ’ ಎಂದು ಕರೆದರು.

1812: ಹೌಸ್ ಆಫ್ ಲಾರ್ಡ್ಸ್ ಸದಸ್ಯರಾಗಿ ಮೊದಲ ಬಾರಿಗೆ ಅಧಿವೇಶನವೊಂದರಲ್ಲಿ ಮಾತನಾಡಿದ ಕವಿ ಬೈರನ್ ಅವರು ತಮ್ಮ ತವರಾದ ನಾಟಿಂಗ್ಹ್ಯಾಮ್ ಷೈರ್ ಪ್ರಾಂತ್ಯದಲ್ಲಿ ಕೈಗಾರಿಕಾ ಬೆಳವಣಿಗೆಯ ವಿರುದ್ಧ ಜರುಗಿದ ‘ಲುಡಿಟ್ಟೆ ಹಿಂಸಾಚಾರ’ವನ್ನು ಸಮರ್ಥಿಸಿದರು.

1860: ಅಬ್ರಹಾಂ ಲಿಂಕನ್ ಅವರು ಕೂಪರ್ ಯೂನಿಯನ್ ಉದ್ದೇಶಿಸಿ ಮಾತನಾಡಿದರು. ಇದು ಅವರಿಗೆ ಅಮೆರಿಕದ ರಾಷ್ಟ್ರಾಧ್ಯಕ್ಷತೆ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತು.

1900: ಬ್ರಿಟಿಷ್ ಲೇಬರ್ ಪಕ್ಷವು ಸ್ಥಾಪನೆಗೊಂಡಿತು.

1933: ಜರ್ಮನಿಯ ‘ರೀಚ್ ಸ್ಟಾಗ್’ ಪಾರ್ಲಿಮೆಂಟ್ ಭವನಕ್ಕೆ ಅಗ್ನಿ ಸ್ಪರ್ಶವಾಯಿತು. ಡಚ್ ಕಮ್ಯೂನಿಸ್ಟ್ ಯುವಕ ಮರಿನಸ್ ವಾನ್ ಡೆರ್ ಲುಬ್ಬೆ ಎಂಬ ಯುವಕ ಇದಕ್ಕೆ ತಾನೇ ಕಾರಣಕರ್ತ ಎಂದು ಘೋಷಿಸಿದ. ‘ನಾಜಿ’ ಗುಂಪು ಈ ‘ಅಗ್ನಿ’ ಘಟನೆಯನ್ನು ತಮ್ಮ ಅಧಿಕಾರವನ್ನು ವೃದ್ಧಿಸಿಕೊಳ್ಳಲಿಕ್ಕೆ ಮತ್ತು ಕಮ್ಮ್ಯೂನಿಸ್ಟರನ್ನು ನಾಮಾವಶೇಷಗೊಳಿಸಲಿಕ್ಕೆ ಯಶಸ್ವಿಯಾಗಿ ಬಳಸಿಕೊಂಡಿತು.

1940: ಅಮೆರಿಕದ ಮಾರ್ಟಿನ್ ಕಾಮೆನ್ ಮತ್ತು ಸಂ ರೂಬೆನ್ ಅವರಿಂದ ಕಾರ್ಬನ್-14 ಅಥವಾ ರೇಡಿಯೋ ಆಕ್ಟೀವ್ ಕಾರ್ಬನ್ ಸಂಶೋಧನೆ ನೆರವೇರಿತು.

1951: ಅಮೆರಿಕದ ಅಧ್ಯಕ್ಷರ ಅಧಿಕಾರಕ್ಕೆ ಎರಡು ಅವಧಿಗಳ ಮಿತಿ ವಿಧಿಸುವ 22ನೇ ಸಂವಿಧಾನದ ತಿದ್ದುಪಡಿ ಅಂಗೀಕೃತಗೊಂಡಿತು.

1964: ಪೀಸಾ ಗೋಪುರವು ಉರುಳಿ ಬೀಳದಂತೆ ರಕ್ಷಿಸುವುದಕ್ಕೆ ಸಹಾಯ ಮಾಡುವಂತೆ ಇಟಲಿಯ ಸರ್ಕಾರವು ಜನ ಸಾಮಾನ್ಯರ ಸಲಹೆ ಸಹಕಾರಗಳನ್ನು ಕೋರಿಕೊಂಡಿತು.

1991: ಕುವೈತ್ ವಿಮೋಚನೆಗಾಗಿ ಇರಾಕ್ ವಿರುದ್ಧ, ಅಮೆರಿಕ ಮತ್ತು ಅದರ ಮಿತ್ರಪಡೆಗಳು ನಡೆಸಿದ ಕೊಲ್ಲಿ ಯುದ್ಧವು ಇರಾಕಿನ ಸೋಲಿನೊಂದಿಗೆ ಅಂತ್ಯಗೊಂಡಿತು.

1998: ಇಂಗ್ಲೆಂಡಿನ ಸಿಂಹಾಸನ ಏರಲು 1000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪುರುಷ ಸಂತತಿಗೆ ಇದ್ದ ಆದ್ಯತೆಯನ್ನು ಕೊನೆಗೊಳಿಸಲು, ರಾಣಿ ಎಲಿಜಬೆತ್ ಅವರ ಒಪ್ಪಿಗೆಯೊಂದಿಗೆ ಹೌಸ್ ಆಫ್ ಲಾರ್ಡ್ಸ್ ಮಂಜೂರಾತಿ ನೀಡಿತು. ಇದರಿಂದ ಇಂಗ್ಲೆಂಡಿನ ಸಿಂಹಾಸನ ಏರಲು ಮೊದಲ ಪುತ್ರನಿಗೆ ಇರುವಷ್ಟೇ ಅಧಿಕಾರ ಮೊದಲ ಪುತ್ರಿಗೂ ಲಭಿಸುವಂತಾಯಿತು.

2002: ಧರ್ಮಾಂದ ದುಷ್ಕರ್ಮಿಗಳು ಗೋಧ್ರಾ ರೈಲಿಗೆ ಬೆಂಕಿ ಇಟ್ಟದ್ದರಿಂದ ಆ ರೈಲಿನಲ್ಲಿ ಪಯಣಿಸುತ್ತಿದ್ದ 59 ಯಾತ್ರಿಗರು ನಿಧನರಾದರು.

2008: ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಕಲ್ಪಿಸುವ ‘ಹೆರಿಗೆ ಭತ್ಯೆ ತಿದ್ದುಪಡಿ ಮಸೂದೆ-2007′ ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರಗೊಂಡಿತು. ಇದರಿಂದಾಗಿ ಇದುವರೆಗೆ ಸರ್ಕಾರಿ ನೌಕರರು ಮಾತ್ರ ಪಡೆಯುತ್ತಿದ್ದ ಹೆರಿಗೆ ಸೌಲಭ್ಯಗಳನ್ನು ಖಾಸಗಿ ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಹಾಗೂ ತೋಟಗಳಲ್ಲಿ ದುಡಿಯುತ್ತಿರುವ ಮಹಿಳೆಯರೂ ಸಹ ಪಡೆದುಕೊಳ್ಳಲು ಸಹಾಯಕವಾಗಿದೆ.

ಪ್ರಮುಖಜನನ/ಮರಣ:

272: ರೋಮನ್‌ ದೊರೆ ಕಾನ್ಸ್ವಾಂಟೈನ್‌ ಜನಿಸಿದರು.

1500: ಉದಾತ್ತ  ಉದಾತ್ತವ್ಯಕ್ತಿ, ವಿದ್ವಾಂಸ ಎಂದು ಪರಿಗಣಿತರಾದ ಪೋರ್ಚುಗೀಸ್ ಭಾರತದ ನಾಲ್ಕನೆಯ ವೈಸರಾಯ್ ಆಗಿದ್ದ ಜೋವೋ ಡಿ ಕ್ಯಾಸ್ಟ್ರೋ, ಲಿಸ್ಬನ್ ನಗರದಲ್ಲಿ ಜನಿಸಿದರು.

1891: ರೇಡಿಯೋ ಕಾರ್ಪೊರೇಷನ್ ಆಫ್ ಅಮೆರಿಕ’ ಸ್ಥಾಪಕ ಡೇವಿಡ್ ಸರ್ನಾಫ್ ಅವರು ರಷ್ಯನ್ ಸಾಮ್ರಾಜ್ಯದ ಮಿನ್ಸ್ಕ್ ಬಳಿಯ ಉಸ್ಲಿಯೆನಿ ಎಂಬಲ್ಲಿ ಜನಿಸಿದರು.

1899: ಇನ್ಸುಲಿನ್ ಕಂಡುಹಿಡಿದವರಲ್ಲಿ ಒಬ್ಬರಾದ ಕೆನಡಾ ದೇಶದ ಜೀವವಿಜ್ಞಾನಿ ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ ಅವರು ಅಮೆರಿಕದ ಮೈನೇ ಪ್ರಾಂತ್ಯದ ವೆಸ್ಟ್ ಪೆಂಬ್ರೋಕೆ ಎಂಬಲ್ಲಿ ಜನಿಸಿದರು.

1902: ಅಮೆರಿಕದ ಪತ್ರಕರ್ತ ಮತ್ತು ಸಾಹಿತಿ ಜಾನ್ ಸ್ಟೀಯಿನ್ ಬೆಕ್ ಅವರು ಕ್ಯಾಲಿಫೋರ್ನಿಯಾದ ಸಾಲ್ನಿಯಾಸ್ ಎಂಬಲ್ಲಿ ಜನಿಸಿದರು. ‘ಎ ಜಯಿಂಟ್ ಆಫ್ ಅಮೆರಿಕನ್ ಲೆಟರ್ಸ್’ ಎಂಬ ಪ್ರಖ್ಯಾತಿಯ ಇವರಿಗೆ 1962 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1912: ಪ್ರಖ್ಯಾತ ಮರಾಠಿ ಲೇಖಕ, ಕವಿ, ನಾಟಕಕಾರ ‘ಕುಸುಮಾಗ್ರಜ್’ ಕಾವ್ಯನಾಮದ ವಿಷ್ಣು ವಾಮನ ಶಿರ್ವಾಡ್ಕರ್ ಅವರು ಪುಣೆಯಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಇವರ ಜನ್ಮದಿನದ ಅಂಗವಾಗಿ ‘ಫೆಬ್ರವರಿ 27 ದಿನ’ವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಭಾಷಾದಿನವನ್ನಾಗಿ ಆಚರಿಸಲಾಗುತ್ತಿದೆ.

1912: ಭಾರತೀಯ-ಫ್ರೆಂಚ್ ಬರಹಗಾರ, ಕವಿ ಮತ್ತು ನಾಟಕಕಾರ ಲಾರೆನ್ಸ್ ಡರ್ರೆಲ್ ಅವರು ಪಂಜಾಬಿನ ಜಲಂಧರ್ ಪಟ್ಟಣದಲ್ಲಿ ಜನಿಸಿದರು. ಅವರ ‘ಅಲೆಗ್ಸಾಂಡ್ರಾ’ ಕೃತಿ ಪ್ರಖ್ಯಾತವಾಗಿದೆ.

1922: ನ್ಯಾಯಾಧೀಶರಾಗಿ, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರಾಗಿ ಮತ್ತು ಕನ್ನಡದ ಹಿರಿಯ ಬರಹಗಾರರಾಗಿ ಪ್ರಸಿದ್ಧರಾದ ನ್ಯಾಯಮೂರ್ತಿ ಕೋ. ಚೆನ್ನಬಸಪ್ಪನವರು ಬಳ್ಳಾರಿ ಜಿಲ್ಲೆ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ ಜನಿಸಿದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1926: ಕೆನಡಿಯನ್-ಅಮೇರಿಕನ್ ವೈದ್ಯವಿಜ್ಞಾನಿ ಡೇವಿಡ್ ಹೆಚ್ ಹ್ಯೂಬೆಲ್ ಅವರು ಕೆನಡಾದ ಒಂಟಾರಿಯೋ ಬಳಿಯ ವಿಂಡ್ಸರ್ ಎಂಬಲ್ಲಿ ಜನಿಸಿದರು. ‘ಇನ್ಫರ್ಮೇಷನ್ ಪ್ರೊಸೆಸಿಂಗ್ ಇನ್ ದಿ ವಿಷುಯಲ್ ಸಿಸ್ಟಮ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1981 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1932: ಇಂಗ್ಲೆಂಡ್-ಅಮೆರಿಕನ್ ಚಲನಚಿತ್ರ ಕಲಾವಿದೆ ಎಲಿಜಬೆತ್ ಟೇಲರ್ ಲಂಡನ್ನಿನಲ್ಲಿ ಜನಿಸಿದರು.

1942: ಅಮೆರಿಕದ ರಸಾಯನಶಾಸ್ತ್ರ ವಿಜ್ಞಾನಿ ರಾಬರ್ಟ್ ಹೆಚ್ ಗ್ರಬ್ಸ್ ಅವರು ಕೆಂಟಕಿಯ ಮಾರ್ಷಲ್ ಕೌಂಟಿ ಎಂಬಲ್ಲಿ ಜನಿಸಿದರು. ‘ಓಲೆಫಿನ್ ಮೆಟಾಥೆಸಿಸ್’ ಕುರಿತಾದ ಸಂಶೋಧನೆಗೆ ಇವರಿಗೆ 2005 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1971: ಅಮೆರಿಕದ ಪ್ರಸಿದ್ಧ ಮಹಿಳಾ ಉದ್ಯಮಿ ಸಾರಾ ಬ್ಲಾಕೆಲಿ ಫ್ಲೋರಿಡಾ ಬಳಿಯ ಕ್ಲಿಯರ್ ವಾಟರ್ ಎಂಬಲ್ಲಿ ಜನಿಸಿದರು. ಇವರು ‘ಸ್ಪಾಂಕ್ಸ್’ ಎಂಬ ಪ್ರಸಿದ್ಧ ಉಡುಪು ತಯಾರಿಕಾ ಸಂಸ್ಥೆಯನ್ನು ನಿರ್ಮಿಸಿದ್ದರು.

1931: ಚಂದ್ರಶೇಖರ ಆಜಾದರು‌ ಅಲಹಾಬಾದ್‌‌ನ ಆಲ್‌ಫ್ರೆಡ್‌ ಉದ್ಯಾನವನದಲ್ಲಿ ಆಜಾದರು ಏಕಾಕಿಯಾಗಿ ಹೋರಾಡಿದರಲ್ಲದೇ ಮೂವರು ಪೊಲೀಸರನ್ನು ಕೊಂದರಾದರೂ ಅವರ ತೊಡೆಗೆ ಗುಂಡೇಟು ಬಿದ್ದಿತ್ತು. ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡು ಜೀವತೊರೆದರು.

1936: ರಷ್ಯನ್ ವೈದ್ಯಶಾಸ್ತ್ರಜ್ಞ ಇವಾನ್ ಪಾವ್ಲಾವ್ ಅವರು ಸೋವಿಯತ್ ಯೂನಿಯನ್ನಿನ ಲೆನಿನ್ ಗ್ರಾಡ್ ನಗರದಲ್ಲಿ ನಿಧನರಾದರು. ಕ್ಲಾಸಿಕಲ್ ಕಂಡಿಷನಿಂಗ್ ಕುರಿತಾದ ಮಹಾನ್ ಸಂಶೋಧಕರೂ, ಇಪ್ಪತ್ತನೇ ಶತಮಾನದ ಮಹತ್ವದ ಕೊಡುಗೆ ಎಂದು ಪರಿಗಣಿಸಲಾಗಿರುವ ‘ರೆವ್ಯೂ ಆಫ್ ಜನರಲ್ ಸೈಕಾಲಜಿ’ ಕೃತಿಕಾರರೂ ಇವರಿಗೆ 1904 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1956: ಸ್ವಾತಂತ್ರ್ಯ ಹೋರಾಟಗಾರ ಮತ್ತು ಲೋಕಸಭೆಯ ಪ್ರಥಮ ಸ್ಪೀಕರ್ ಗಣೇಶ್ ವಾಸುದೇವ್ ಮಾವಲಂಕರ್ ಅಹಮದಾಬಾದಿನಲ್ಲಿ ನಿಧನರಾದರು. ಸರ್ದಾರ್ ವಲ್ಲಭವಾಯ್ ಪಟೇಲ್ ಅವರೊಂದುಗೂಡಿ 1920ರ ದಶಕದ ವೇಳೆಗೆ ಇವರು ಗುಜರಾತಿನಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1936: ಆಸ್ಟ್ರಿಯನ್ ಬಹುಮುಖಿ ವೈದ್ಯಶಾಸ್ತ್ರಜ್ಞ ಕಾನ್ರಾಡ್ ಲೊರೆನ್ಸ್ ಅವರು ವಿಯೆನ್ನಾ ನಗರದಲ್ಲಿ ನಿಧನರಾದರು. ಆಧುನಿಕ ‘ಎಥಾಲಜಿ’ ಜ್ಞಾನಶಾಖೆಯ ಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿತರಾದ ಇವರಿಗೆ 1973 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1936: ಅಮೆರಿಕದ ವೈದ್ಯಶಾಸ್ತ್ರಜ್ಞ ಜಾರ್ಜ್ ಎಚ್. ಹಿಚಿಂಗ್ಸ್ ಅವರು ನಾರ್ತ್ ಕೆರೋಲಿನಾದ ಚಾಪೆಲ್ ಹಿಲ್ ಎಂಬಲ್ಲಿ ನಿಧನರಾದರು. ‘ಕೀಮೋತೆರಪಿ’ ಕುರಿತಾದ ಕೊಡುಗೆಗಾಗಿ ಇವರಿಗೆ 1988 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2008: ‘ನ್ಯಾಷನಲ್ ರೆವ್ಯೂ’ ಸ್ಥಾಪಕ ವಿಲಿಯಂ ಎಫ್. ಬಕ್ಲಿ ಜೂನಿಯರ್ ಅವರು ಕನೆಕ್ಟಿಕಟ್ ಬಳಿಯ ಸ್ಟ್ಯಾಂಫೋರ್ಡ್ ಎಂಬಲ್ಲಿ ನಿಧನರಾದರು.

Categories
e-ದಿನ

ಫೆಬ್ರವರಿ-26

ಪ್ರಮುಖಘಟನಾವಳಿಗಳು:

1616: ಭೂಮಿಯು ಸೂರ್ಯನ ಸುತ್ತಾ ಸುತ್ತುತ್ತಿದೆ ಎಂಬ ವಾದವನ್ನು ಸಮರ್ಥಿಸಿದ ಗೆಲಿಲಿಯೋ ಗೆಲೀಲಿಯನ್ನು ರೋಮನ್ ಕ್ಯಾಥೊಲಿಕ್ ಚರ್ಚು ಅಧಿಕೃತವಾಗಿ ಬಹಿಷ್ಕರಿಸಿತು.

1794: ಕೋಪನ್ ಹ್ಯಾಗನ್ನಿನ ಪ್ರಥಮ ಕ್ರಿಶ್ಚಿಯನ್ಸ್ಬೋರ್ಗ್ ಅರಮನೆಯು ಬೆಂಕಿಗಾಹುತಿಯಾಯಿತು.

1815: ನೆಪೋಲಿಯನ್ ಬೋನಾಪಾರ್ಟೆಯು ಎಲ್ಬಾದಿಂದ ಪರಾರಿಯಾದರು.

1826: ಬ್ರಿಟಿಷರು ಯಾಂದಬೂ ಒಪ್ಪಂದದ ಮೂಲಕ ಅಸ್ಸಾಂನ್ನು ಚಹಾ ಎಸ್ಟೇಟ್ ಆಗಿ ಪರಿವರ್ತಿಸಿಕೊಳ್ಳುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.

1909: ಮೊದಲ ಯಶಸ್ವೀ ಚಲನಚಿತ್ರ ಸಂಸ್ಕರಣೆಯಾದ ಕಿನೇಮಾಕಲರ್ ಅನ್ನು ಲಂಡನ್ನಿನ ಪ್ಯಾಲೇಸ್ ಥಿಯೇಟರ್ ನಲ್ಲಿ ಪ್ರಥಮವಾಗಿ ಸಾರ್ವಜನಿಕರಿಗೆ ತೋರಿಸಲಾಯಿತು.

1919: ಗ್ರ್ಯಾಂಡ್ ಕ್ಯಾನನ್ ನ್ಯಾಷನಲ್ ಪಾರ್ಕ್ ಸ್ಥಾಪನೆಯ ಖಾಯಿದೆಗೆ ಅಧ್ಯಕ್ಷ ವುಡ್ರೋ ವಿಲ್ಸನ್ ಸಹಿ ಮಾಡಿದರು.

1929: ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರು ವಯೋಮಿಂಗ್ ಎಂಬಲ್ಲಿ 96000 ಎಕರೆ ಟೆಟನ್ ನ್ಯಾಷನಲ್ ಪಾರ್ಕ್ ಸ್ಥಾಪಿಸುವ ಆದೇಶಕ್ಕೆ ಸಹಿ ಹಾಕಿದರು.

1935: ರಾಬರ್ಟ್ ವಾಟ್ಸನ್-ವಾಟ್ ಅವರು ಡಾವೆಂಟ್ರಿ ಎಂಬಲ್ಲಿ ಒಂದು ಪ್ರಾತ್ಯಕ್ಷಿಕೆ ನೀಡಿದರು. ಇದು ಯುನೈಟೆಡ್ ಕಿಂಗ್ಡಂನಲ್ಲಿ ರಾಡಾರ್ ತಂತ್ರಜ್ಞಾನ ಅಭಿವೃದ್ಧಿಗೆ ನಾಂದಿ ಹಾಡಿತು.

1966: ಅಪೋಲೋ ಕಾರ್ಯಕ್ರಮದಲ್ಲಿ ಸಾಟರ್ನ್ 1ಬಿ ಮುಖೇನ ಎ.ಎಸ್ – 201 ಉಡಾವಣೆ

1971: ಭೂಮಿ ದಿನ ಆಚರಣೆ ನಿರ್ಣಯಕ್ಕೆ ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಯು ಥಾನ್ಟ್ ಸಹಿ ಮಾಡಿದರು. ಈ ಪ್ರಕರವಾಗಿ ಪ್ರತಿ ವರ್ಷ ಏಪ್ರಿಲ್ 22 ದಿನವನ್ನು ‘ಭೂಮಿ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

1993: ನ್ಯೂಯಾರ್ಕ್ ನಗರದ ‘ವರ್ಲ್ಡ್ ಟ್ರೇಡ್ ಸೆಂಟರ್’ನ ಉತ್ತರ ವಿಭಾಗದಲ್ಲಿ ಕೆಳಗೆ ನಿಲ್ಲಿಸಿದ್ದ ಟ್ರಕ್ ಒಂದರಲ್ಲಿ ಬಾಂಬ್ ಸ್ಪೋಟಿಸಿ 6 ಜನ ನಿಧನರಾಗಿ 1000 ಮಂದಿ ಗಾಯಗೊಂಡರು.

1995: ಯುನೈಟೆಡ್ ಕಿಂಗ್ಡಂನ ಅತ್ಯಂತ ಹಳೆಯ ಬಂಡವಾಳ ಹೂಡಿಕೆ ಸಂಸ್ಥೆಯಾದ ಬಾರಿಂಗ್ಸ್ ಬ್ಯಾಂಕ್ ಪತನಗೊಂಡಿತು. ನಿಕ್ ಲೀಸನ್ ಎಂಬಾತ ಅವಿವೇಕದಿಂದ 1.4 ಬಿಲಿಯನ್ ಡಾಲರ್ಗಳನ್ನು ಭವಿಷ್ಯದ ನಿಧಿಗಳನ್ನು ಉಪಯೋಗಿಸಿ ಸಿಂಗಪೂರ್ ಮಾನಿಟರಿ ಎಕ್ಸ್ಚೇಂಜ್ ಕುರಿತಾಗಿ ಬಾಜಿಕಟ್ಟುವ ತಿಕ್ಕಲುತನ ತೋರಿದ್ದರಿಂದ ಈ ಅಧಃಪತನ ಸಂಭವಿಸಿತು.

2009: ನೇಪಾಳದ ಪ್ರಸಿದ್ಧ ಐತಿಹಾಸಿಕ ವಸ್ತುಸಂಗ್ರಹಾಲಯ ‘ನಾರಾಯಣ ಹಿತಿ’ಯನ್ನು ಅಲ್ಲಿನ ಪ್ರಧಾನಿ ಪ್ರಚಂಡ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. 2008ರಲ್ಲಿ ನೇಪಾಳದ ಅರಸರ ಆಳ್ವಿಕೆ ಕೊನೆಗೊಂಡ ನಂತರದಲ್ಲಿ,ಈ ಶತಮಾನದಷ್ಟು ಹಳೆಯದಾದ ನಾರಾಯಣ ಹಿತಿ ಅರಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡುವ ಕಾರ್ಯ ಆರಂಭಗೊಂಡಿತ್ತು.

ಪ್ರಮುಖಜನನ/ಮರಣ:

1802: ಫ್ರೆಂಚ್ ರೊಮ್ಯಾಂಟಿಕ್ ಸಾಹಿತಿಗಳ ಪೈಕಿ ಅತ್ಯಂತ ಖ್ಯಾತಿವಂತರಾದ ವಿಕ್ಟರ್ ಹ್ಯೂಗೋ ಅವರು ಡೌಬ್ಸ್ ಬಳಿಯ ಬೆಸಾನ್ಕನ್ ಎಂಬಲ್ಲಿ ಜನಿಸಿದರು. ಕವಿ, ನಾಟಕಕಾರ, ಕಾದಂಬರಿಕಾರರಾಗಿದ್ದ ಇವರು 1862ರಲ್ಲಿ ತಮ್ಮ ಮಹತ್ವದ ಕೃತಿ ‘ಲೆಸ್ ಮಿಸೆರಬಲ್ಸ್ ಬರೆದರು. ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಇವರು ಹಲವು ಬಾರಿ ಗಡೀಪಾರು ಶಿಕ್ಷೆಗೊಳಗಾಗಿದ್ದರು.

1829: ಜರ್ಮನ್-ಅಮೆರಿಕನ್ ಫ್ಯಾಷನ್ ಡಿಸೈನರ್ ಲೆವಿ ಸ್ಟ್ರಾಸ್ ಅಂಡ್ ಕಂಪೆನಿ ಸ್ಥಾಪಕ ಲೆವಿ ಸ್ಟ್ರಾಸ್ ಅವರು ಕಿಂಗ್ಡಂ ಆಫ್ ಬವೇರಿಯಾದ ಬಟೆನ್ಹೀಮ್ ಎಂಬಲ್ಲಿ ಜನಿಸಿದರು.

1852: ಕಾರ್ನ್ ಫ್ಲೆಕ್ಸ್ ಸಹ ನಿರ್ಮಾತೃ ಅಮೆರಿಕದ ವೈದ್ಯ ಜಾನ್ ಹಾರ್ವೆ ಕೆಲ್ಲಾಗ್ ಮಿಚಿಗನ್ ಬಳಿಯ ಟೈರೋನ್ ಎಂಬಲ್ಲಿ ಜನಿಸಿದರು.

1857: ಮನಸ್ಸಿಗೆ ಸಕಾರಾತ್ಮಕ ಸೂಚನೆಗಳನ್ನು ನೀಡಿಕೊಳ್ಳುವ ‘ಕೊಯೆಯಿಸಂ’ ಸ್ಥಾಪಕ ಎಮಿಲ್ ಕೊಯೆ ಫ್ರಾನ್ಸಿನ ಟ್ರಾಯೇಸ್ ಎಂಬಲ್ಲಿ ಜನಿಸಿದರು. ವೈದ್ಯಶಾಸ್ತ್ರಜ್ಞರಾಗಿದ್ದ ಇವರು ಸೃಷ್ಟಿಸಿದ್ದ “ಪ್ರತಿದಿನ, ಪ್ರತಿಯೊಂದು ಮಾರ್ಗದಲ್ಲೂ ನಾನು ಸುಧಾರಿಸುತ್ತಿದ್ದೇನೆ, ಇನ್ನಷ್ಟು ಸುಧಾರಿಸುತ್ತಿದ್ದೇನೆ” ಎಂಬ ಮಾನಸಿಕ ಸೂಚನಾ ಚಿಕಿತ್ಸಾ ಪದ್ಧತಿ ಅತ್ಯಂತ ಪ್ರಸಿದ್ಧಿ ಪಡೆದಿದೆ.

1887: ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಾನೂನು ತಜ್ಞ, ವಿಶ್ವಸಂಸ್ಥೆಯನ್ನು ಪ್ರತಿನಿಧಿಸಿದ, ಭಾರತದ ಸಂವಿಧಾನದ ಕರಡು ಪ್ರತಿ ತಯಾರಿಸಿದ, ಅಂತರರಾಷ್ತ್ರೀಯ ನ್ಯಾಯಾಲಯದ ನ್ಯಾಯಾಧೀಶ ಸ್ಥಾನದವರೆಗೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ಸರ್ ಬೆನಗಲ್ ನರಸಿಂಗ ರಾವ್ ಅವರು ಮಂಗಳೂರಿನಲ್ಲಿ ಜನಿಸಿದರು.

1903: ಇಟಲಿಯ ರಸಾಯನಶಾಸ್ತ್ರ ವಿಜ್ಞಾನಿ ಗಿಯುಲಿಯೋ ಅವರು ಇಂಪೀರಿಯಾ ಎಂಬಲ್ಲಿ ಜನಿಸಿದರು. ಹೈ ಪಾಲಿಮರ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1969 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1908: ಬಂಗಾಳಿ ಲೇಖಕಿ ಲೀಲಾ ಮಜುಂದಾರ್ ಕೋಲ್ಕತ್ತದಲ್ಲಿ ಜನಿಸಿದರು. ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರದ ಪುರಸ್ಕಾರ, ರಬೀಂದ್ರ ಪುರಸ್ಕಾರ, ದೇಶಿಕೊತ್ತಮ ಪುರಸ್ಕಾರಗಳು ಸಂದಿದ್ದವು.

1946: ಈಜಿಪ್ಟ್-ಅಮೆರಿಕನ್ ರಸಾಯನಶಾಸ್ತ್ರ ವಿಜ್ಞಾನಿ ಅಹಮದ್ ಜೆವೈಲ್ ಅವರು ಇಟಲಿಯ ದಮಾನಹೌರ್ ಎಂಬಲ್ಲಿ ಜನಿಸಿದರು. ‘ಫಾದರ್ ಆಫ್ ಫೆಮ್ಟೋಕೆಮಿಸ್ಟ್ರಿ’ ಎಂದು ಪ್ರಸಿದ್ಧರಾದ ಇವರಿಗೆ 1999 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1887: ದಕ್ಷಿಣ ಏಷ್ಯಾದ ಪ್ರಪ್ರಥಮ ಮಹಿಳಾ ವೈದ್ಯರಲ್ಲಿ ಒಬ್ಬರು ಎಂದು ಪ್ರಸಿದ್ಧರಾಗಿರುವ ಆನಂದಿ ಗೋಪಾಲ್ ಜೋಷಿ ಅವರು ಮುಂಬೈನಲ್ಲಿ ನಿಧನರಾದರು. ಇವರು ಅಮೆರಿಕದಲ್ಲಿ ವೈದ್ಯಕಿಯ ಪದವಿ ಪಡೆದ ಪ್ರಪ್ರಥಮ ಭಾರತೀಯ ನೆಲದ ಮಹಿಳೆ ಎಂದೆನಿಸಿದ್ದಾರೆ. ಇವರು ಅಮೆರಿಕದ ನೆಲಕ್ಕೆ ಭೇಟಿ ಕೊಟ್ಟ ಪ್ರಪ್ರಥಮ ಹಿಂದೂ ಮಹಿಳೆ ಎಂಬ ಮಾತೂ ಇದೆ.

1903: ಗ್ಯಾಟ್ಲಿಂಗ್ ಗನ್ ಸೃಷ್ಟಿಕರ್ತ ರಿಚರ್ಡ್ ಜೋರ್ಡಾನ್ ಗ್ಯಾಟ್ಲಿಂಗ್ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು.

1931: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಓಟ್ಟೋ ವಲ್ಲಾಚ್ ಅವರು ಗೊಟಿನ್ಗೆನ್ ಎಂಬಲ್ಲಿ ನಿಧನರಾದರು. ‘ಅಲಿಸೈಕ್ಲಿಕ್ ಕಾಂಪೌಂಡ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1910 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1966: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಬ್ಯಾರಿಸ್ಟರ್‌ ಪದವೀಧರ, ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್ ಮುಂಬೈನಲ್ಲಿ ನಿಧನರಾದರು.

1931: ಡಚ್ ಅಮೆರಿಕನ್ ಅರ್ಥಶಾಸ್ತ್ರಜ್ಞ ಟ್ಜಾಲಿಂಗ್ ಕೂಪ್ಮಾನ್ಸ್ ಅವರು ಅಮೆರಿಕದ ಕನೆಕ್ಟಿಕಟ್ ಬಳಿಯ ನ್ಯೂ ಹ್ಯಾವೆನ್ ಎಂಬಲ್ಲಿ ನಿಧನರಾದರು. ಇವರಿಗೆ 1975 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತ್ತು.

1998: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಥಿಯೋಡೋರ್ ಸ್ಕಲ್ಟ್ಜ್ ಇಲಿನಾಯ್ಸ್ ಬಳಿಯ ಎವಾನ್ಸ್ಟನ್ ಎಂಬಲ್ಲಿ ನಿಧನರಾದರು. ಇವರಿಗೆ 1979 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತ್ತು.

2004: ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸರ್ಕಾರದಲ್ಲಿ ಅರ್ಥಮಂತ್ರಿಗಳಾಗಿ ಹಾಗೂ ಗೃಹಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಶಂಕರರಾವ್ ಚೌಹಾಣ್ ನಿಧನರಾದರು.

2005: 1970ರ ದಶಕದಲ್ಲಿ ಆಪಲ್ ಸಂಸ್ಥೆಗೆ ಮೆಕಿನ್ತೋಶ್ ಸೃಷ್ಟಿಸಿ ಪ್ರಸಿದ್ಧರಾದ ಜೆಫ್ ರಸ್ಕಿನ್ ಅವರು ಕ್ಯಾಲಿಫೋರ್ನಿಯಾದ ಪೆಸಿಫಿಕಾ ಎಂಬಲ್ಲಿ ನಿಧನರಾದರು.

2006: ಸಂಗೀತ ವಿದ್ವಾಂಸರಾದ ಚಿಂತಾಲಪಲ್ಲಿ ಚಂದ್ರಶೇಖರ್ ತಮ್ಮ 62ನೆಯ ವಯಸ್ಸಿನಲ್ಲಿ ನಿಧನರಾದರು. ಇವರು ಹಿಂದೂಸ್ಥಾನಿ ಸಂಗೀತ ಮತ್ತು ಸುಗಮ ಸಂಗೀತ ಗಾಯಕರಾಗಿ ಜನಪ್ರಿಯರಾಗಿದ್ದರು. ಇವರ ಎಂ.ಎಸ್.ಐ.ಎಲ್ ಪ್ರಾಯೋಜನೆಯ ‘ವಚನ ಸಾಹಿತ್ಯ’ ಮತ್ತು ರಾಜ್ಯಸರ್ಕಾರದ ಪ್ರಾಯೋಜನೆಯ ‘ದಾಸ ಸಾಹಿತ್ಯ’ ಸಂಯೋಜನೆಗಳು ಶ್ಲಾಘನೆ ಪಡೆದಿತ್ತು.

Categories
e-ದಿನ

ಫೆಬ್ರವರಿ-25

ಪ್ರಮುಖಘಟನಾವಳಿಗಳು:

1336: ಲಿಥುವೇನಿಯಾದ ಪಿಲೇನೈ ಎಂಬಲ್ಲಿನ ನಾಲ್ಕು ಸಾವಿರ ರಕ್ಷಣಾ ಯೋಧರು ತಾವು ‘ಟ್ಯುಟೋನಿಕ್ ನೈಟ್ಸ್’ ಸೈನಕ್ಕೆ ಬಂಧಿಯಾಗುವ ಬದಲು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡರು.

1836: ಅಮೆರಿಕದಲ್ಲಿ ಸಾಮ್ಯುಯಲ್ ಕೊಲ್ಟ್ ಅವರು ‘ಕೊಲ್ಟ್ ರಿವಾಲ್ವರ್’ಗೆ ಪೇಟೆಂಟ್ ಪಡೆದರು

1862: ಅಮೆರಿಕದಲ್ಲಿ ಅಂತರಿಕ ಕ್ರಾಂತಿ ಏರ್ಪಟ್ಟಿದ ಸಂದರ್ಭದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗ್ರೀನ್ ಬ್ಯಾಕ್ ನೋಟುಗಳನ್ನು ಬಿಡುಗಡೆ ಮಾಡಿದರು.

1901: ಜೆ.ಪಿ. ಮೊರ್ಗಾನ್ ಅವರು ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್ ಸ್ಥಾಪಿಸಿದರು.

1932: ಅಡೋಲ್ಫ್ ಹಿಟ್ಲರ್ ನ್ಯಾಚುರಲೈಸೇಶನ್ ಪ್ರಕ್ರಿಯೆಯ ಮೂಲಕ ಜರ್ಮನಿಯ ಪೌರತ್ವವನ್ನು ಪಡೆದುಕೊಂಡ. ಇದರಿಂದಾಗಿ ಆತನಿಗೆ 1932 ವರ್ಷದಲ್ಲಿ ‘ರೀಚ್ಸ್ ಪ್ರೆಸಿಡೆಂಟ್’ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಾಯಿತು.

1933: ಅಮೆರಿಕವು ಯು.ಎಸ್.ಎಸ್. ರೇಂಜರ್ ಸೇವೆಯನ್ನು ಆರಂಭಿಸಿತು. ಇದನ್ನು ವಿನ್ಯಾಸದ ಪ್ರಾರಂಭಿಕ ಹಂತದಿಂದಲೇ ವಿಮಾನಗಳನ್ನು ಹೊತ್ತೊಯ್ಯುವ ಅಮೆರಿಕದ ಪ್ರಥಮ ನೌಕಾ ಸೇನೆಯ ಹಡಗನ್ನಾಗಿ ರೂಪಿಸಲಾಯಿತು.

1939: ಉತ್ತರ ಇಂಗ್ಲೆಂಡಿನಲ್ಲಿ ಮೇಲಿನಿಂದ ಬೀಳಬಹುದಾದ ಬಾಂಬಿನಿಂದ ರಕ್ಷಣೆ ಒದಗಿಸಿಕೊಳ್ಳಲಿಕ್ಕಾಗಿ ಮೊದಲ 25 ಲಕ್ಷ ಸಂಖ್ಯೆ ‘ಅಂಡರ್ಸನ್ ವಾಯುದಾಳಿ ರಕ್ಷಣಾ ಗೂಡುಗಳು’ ತಲೆ ಎತ್ತಿದವು.

1964: ಮಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಅವರು ಮಿಯಾಮಿಯಲ್ಲಿ ಸೋನಿ ಲಿಸ್ಟನ್ ಅವರನ್ನು ಸೋಲಿಸಿ ಮೊತ್ತ ಮೊದಲ ಬಾರಿಗೆ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿ ಗೆದ್ದುಕೊಂಡರು.

1986: ಫಿಲಿಪ್ಪೀನ್ಸ್ ದೇಶದಲ್ಲಿ ನಡೆದ ಜನಾಂಗೀಯ ಕ್ರಾಂತಿಯಲ್ಲಿ ಅಲ್ಲಿನ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ರಾಷ್ಟ್ರ ಬಿಟ್ಟು ಓಡಿ ಹೋಗಿ ಹವಾಯಿಯಲ್ಲಿ ಆಶ್ರಯ ಪಡೆದರು. ಕೊರಜಾನ್ ಅಕ್ವಿನೋ ಆ ದೇಶದ ಪ್ರಥಮ ಮಹಿಳಾ ಅಧಕ್ಷರಾದರು.

1988: ಭಾರತದ ಮೊಟ್ಟ ಮೊದಲ ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯಾದ ‘ಪೃಥ್ವಿ’ಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಪ್ರಮುಖಜನನ/ಮರಣ:

1728: ಪ್ರಸಿದ್ಧ ಇಂಗ್ಲಿಷ್ ಕಟ್ಟಡ ವಿನ್ಯಾಸಕಾರ ಜಾನ್ ವುಡ್ ದಿ ಯಂಗರ್ ಅವರು ಬಾತ್ ಅಬ್ಬೆ ಎಂಬಲ್ಲಿ ಜನಿಸಿದರು. ಇವರು ವಿನ್ಯಾಸಗೊಳಿಸಿದ ರಾಯಲ್ ಕ್ರೆಸೆಂಟ್ ಅತ್ಯಂತ ಪ್ರಸಿದ್ಧಿ ಪಡೆದಿದೆ.

1894: ‘ಮೆಹರ್ ಬಾಬಾ’ ಎಂದು ಪ್ರಖ್ಯಾತರಾದ ಭಾರತೀಯ ಅಧ್ಯಾತ್ಮಿಕ ಗುರು ಮೆರ್ವಾನ್ ಷೆರಿಯರ್ ಇರಾನಿ ಅವರು ಪುಣೆಯಲ್ಲಿ ಜನಿಸಿದರು. ಇವರು 44 ವರ್ಷಗಳ ಕಾಲ ‘ಮೌನ’ ಆಚರಿಸಿದರು.

1925: ಶಿಕ್ಷಣ ತಜ್ಞ, ವಿದ್ವಾಂಸ, ವಾಜ್ಮಿ, ವಿಮರ್ಶಕ ಮತ್ತು ಸಾಹಿತಿ ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ ಅವರು ಬೇಲೂರಿನಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಮರ್ಶಾ ಕ್ಷೇತ್ರದಲ್ಲಿನ ಅವರ ಗಣನೀಯ ಸಾಧನೆಯನ್ನು ಗೌರವದಿಂದ ಪುರಸ್ಕರಿಸಿದೆ.

1953: ಸಲಾಖೆಯ ಗೊಂಬೆಯಾಟದ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ದತ್ತಾತ್ರೇಯ ಅರಳಿಕಟ್ಟೆ ಅವರು ಅರಳಿಕಟ್ಟೆ ಎಂಬಲ್ಲಿ ಜನಿಸಿದರು. ಅಂದಾಜು 9-10 ಕಿಲೋಗ್ರಾಂ ತೂಕದ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೆ ಒಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪ ಹಚ್ಚಿ, ಸರಳ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಎದುರು ಕಥೆ ಬಿಚ್ಚುವ ಕಲೆಯಲ್ಲಿ ಇವರು ಮಹತ್ವದ ಸಾಧನೆ ಮಾಡಿದ್ದಾರೆ. ಭಾರತ ಸರ್ಕಾರದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1938: ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಫರೂಖ್ ಎಂಜಿನಿಯರ್ ಮುಂಬೈನಲ್ಲಿ ಜನಿಸಿದರು. ವಿಶ್ವಕಪ್ ಪಂದ್ಯದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದ ಮೊದಲ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಇವರದ್ದಾಗಿದೆ. ಎಪ್ಪತ್ತರ ದಶಕದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡುಗಳಲ್ಲಿ ನಡೆದ ವಿಶ್ವ ಚಾಂಪಿಯನ್ ವಿರುದ್ಧದ ಇತರರ ಹನ್ನೊಂದು ಆಟಗಾರರ ತಂಡದಲ್ಲಿ ಇವರು ಪಥಮ ಆಯ್ಕೆಯ ವಿಕೆಟ್ ಕೀಪರ್ ಆಗಿರುತ್ತಿದ್ದರು.

1899: ಪ್ರಸಿದ್ಧ ಸುದ್ಧಿಸಂಸ್ಥೆ ‘ರೂಟರ್’ ಸ್ಥಾಪಕ ಪಾಲ್ ರೂಟರ್ ಅವರು ಫ್ರಾನ್ಸಿನ ನೈಸ್ ಬಳಿಯ ವಿಲ್ಲಾ ರೂಟರ್ ಎಂಬಲ್ಲಿ ನಿಧನರಾದರು. ಇವರು ಟೆಲಿಗ್ರಫಿ ಮತ್ತು ಸುದ್ಧಿ ಪ್ರಸರಣದಲ್ಲಿ ಚಾಣಾಕ್ಷರೆನಿಸಿದ್ದರು.

1914: ಇಂಗ್ಲಿಷ್ ಕಲಾವಿದ ಹಾಗೂ ‘ಅಲೀಸ್ ಇನ್ ವಂಡರ್ ಲ್ಯಾಂಡ್’ ಚಿತ್ರಕಥಾ ನಿರೂಪಕ ಜಾನ್ ಟೆನ್ನೀಲ್ ಅವರು ಲಂಡನ್ನಿನಲ್ಲಿ ನಿಧನರಾದರು.

2008: ಭಾರತದ ಪ್ರಖ್ಯಾತ ನ್ಯಾಯವಾದಿ, ನ್ಯಾಯಾಧೀಶ ಮತ್ತು ಕಾನೂನು ಸಚಿವ ಹನ್ಸ್ ರಾಜ್ ಖನ್ನಾ ನವದೆಹಲಿಯಲ್ಲಿ ನಿಧನರಾದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ‘ಹಬೀಯಾಸ್ ಕಾರ್ಪಸ್’ ಎಂಬ ಪ್ರಖ್ಯಾತ ನಿರ್ಣಯದಲ್ಲಿ ನಾಲ್ಕು ನ್ಯಾಯಾಧೀಶರ ಪೀಠದಲ್ಲಿ ಮೂವರು ನ್ಯಾಯಾಧೀಶರು, “ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳೂ ಕಸಿದುಕೊಳ್ಳಲು ಅರ್ಹವಾಗುತ್ತವೆ” ಎಂದು ಸರ್ಕಾರದ ಪರ ಒಮ್ಮತ ವ್ಯಕ್ತ ಪಡಿಸಿದರೆ, ನಾಲ್ಕನೆಯವರಾದ ಹನ್ಸ ರಾಜ್ ಖಾನ್ ಅವರು ಮಾತ್ರಾ “ಸಂವಿಧಾನವು ವ್ಯಕ್ತಿಯ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕನ್ನು, ಆಡಳಿತವು ಕಿತ್ತುಕೊಳ್ಳುವುದನ್ನು ಒಪ್ಪುವುದಿಲ್ಲ” ಎಂದು ಅಸಮ್ಮತಿಯನ್ನು ವ್ಯಕ್ತಪಡಿಸಿದ್ದು ಪ್ರಜಾಪ್ರಭುತ್ವದ ಪರವಾದ ಶ್ರೇಷ್ಠ ನಿರ್ಣಯವೆನಿಸಿದೆ. ಈ ಕಾರಣದಿಂದ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಿದ್ದ ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರ ಹುದ್ಧೆ ಕೈಬಿಟ್ಟುಹೋಯಿತಾದರೂ ವಿಶ್ವದೆಲ್ಲೆಡೆ ಅವರ ಹೆಸರು ಪ್ರಸಿದ್ಧಿ ಪಡೆಯಿತು. 1999ರ ವರ್ಷದಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.

1971: ಸ್ವೀಡಿಷ್ ವಿಜ್ಞಾನಿ ಥಿಯೋಡೋರ್ ಸ್ವೆಡ್ಬರ್ಗ್ ಅವರು ಕೊಪ್ಪಾರ್ಬರ್ಗ್ ಎಂಬಲ್ಲಿ ನಿಧನರಾದರು. ಅನಲಿಟಿಕಲ್ ಅಲ್ಟ್ರಾಸೆಂಟ್ರಿಫ್ಯುಗೇಶನ್ ಕುರಿತಾದ ಸಂಶೋಧನೆಗೆ ಇವರಿಗೆ 1926 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1971: ಅಮೆರಿಕದ ವಿಜ್ಞಾನಿ ಗ್ಲೆನ್ ಥಿಯೋಡೋರ್ ಸೀಬೋರ್ಗ್ ಅವರು ಕ್ಯಾಲಿಫೋರ್ನಿಯಾದ ಲಫಾಯೆಟ್ಟೆ ಎಂಬಲ್ಲಿ ನಿಧನರಾದರು. ‘ಟ್ರಾನ್ಸುರೇನಿಯಂ ಎಲಿಮೆಂಟ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1951 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2001: ಇಪ್ಪತ್ತನೆಯ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ ಅವರು ತಮ್ಮ 92ನೇ ವಯಸ್ಸಿನಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಕೆನ್ಸಿಂಗ್ ಟನ್ ಪಾರ್ಕ್ ಎಂಬಲ್ಲಿ ನಿಧನರಾದರು. ಸರಾಸರಿ 99.94 ರನ್ನುಗಳು, 10 ದ್ವಿಶತಕಗಳು ಮತ್ತು ಎರಡು ತ್ರಿಶತಕಗಳನ್ನು ಸಿಡಿಸಿದ ಅಪೂರ್ವ ಸಾಧನೆ ಇವರದ್ದಾಗಿದೆ.

2005: ಆಮ್ನೆಸ್ಟಿ ಇಂಟರ್ನ್ಯಾಶನಲ್ ಸ್ಥಾಪಕ ಪೀಟರ್ ಬೆನೆನ್ ಸನ್ ಅವರು ಆಕ್ಸ್’ಫರ್ಡಿನಲ್ಲಿ ನಿಧನರಾದರು.

2016: ಪ್ರಖ್ಯಾತ ಉದ್ಯಮಿ ಭವಾರ್ ಲಾಲ್ ಜೈನ್ ಮುಂಬೈನಲ್ಲಿ ನಿಧನರಾದರು. ಇವರು ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿಮಿಟೆಡ್ ಸ್ಥಾಪಿಸಿದರು. ಇದು ವಿಶ್ವದ ಎರಡನೇ ದೊಡ್ಡ ಮೈಕ್ರೋ ಇರಿಗೇಶನ್ ಸಂಸ್ಥೆ ಎನಿಸಿದೆ. ಗಾಂಧೀವಾದಿ ಮತ್ತು ಉದಾರಚರಿತರಾದ ಇವರು ಗಾಂಧೀ ರಿಸರ್ಚ್ ಫೌಂಡೆಶನ್ ಸ್ಥಾಪಕರಾಗಿಯೂ ಪ್ರಸಿದ್ಧಿ ಪಡೆದಿದ್ದರು. ಇವರಿಗೆ ಪದ್ಮಶ್ರೀ, ಯುನೆಸ್ಕೋದ ‘ಯುನೆಸ್ಕೋ-ವೆಸ್ಟ್-ನೆಟ್ ವಾಟರ್ ಕನ್ಸರ್ವರ್ ಆಫ್ ಇಂಡಿಯಾ’ ಗೌರವವೂ ಸೇರಿದಂತೆ 22 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿದ್ದವು.

Categories
e-ದಿನ

ಫೆಬ್ರವರಿ-24

ಪ್ರಮುಖಘಟನಾವಳಿಗಳು:

484: ಇಟಲಿಯಲ್ಲಿನ ಹ್ಯೂನರಿಕ್ ದೊರೆ ಕ್ರಿಶ್ಚಿಯನ್ ಬಿಷಪ್ಪರುಗಳನ್ನು ಅವರ ಸ್ಥಾನದಿಂದ ಕಿತ್ತೊಗೆದು ಹಲವರನ್ನು ಕಾರ್ಸಿಕಾಗೆ ಗಡೀಪಾರು ಮಾಡಿದನಲ್ಲದೆ, ‘ಅರಿಯನ್’ ಪಂಥವನ್ನು ಸ್ವೀಕರಿಸಲು ಒಪ್ಪದಿದ್ದ ವಿಕ್ಟೋರಿಯನ್ ಮತ್ತು ಫ್ರುಮೆಂಟಿಯಸ್ ಮತ್ತು ಹಲವಾರು ವ್ಯಾಪಾರಿಗಳನ್ನು ಹಡ್ರುಮೆಟಮ್ ಎಂಬಲ್ಲಿ ಕೊಲ್ಲಿಸಿದ.

1582: ಪೋಪ್ ಗ್ರೆಗೊರಿ ಅವರು ‘ಗ್ರೆಗೋರಿಯನ್ ಕ್ಯಾಲೆಂಡರ್’ ಗೆ ಸಮ್ಮತಿ ನೀಡಿ ಅಧಿಕೃತ ಪ್ರಕಟಣೆ ನೀಡಿದರು. ಈ ಕ್ಯಾಲೆಂಡರ್ ಇಟಲಿ ಮತ್ತು ಸ್ಪೇನಿನಲ್ಲಿ ಅಕ್ಟೋಬರ್ 15ರಂದು ಅನುಷ್ಠಾನಕ್ಕೆ ಬಂದಿತು.

1739: ಇರಾನಿನ ನಾದೆರ್ ಷಾ ಸೈನ್ಯವು ಭಾರತದ ಮುಘಲ್ ಚಕ್ರವರ್ತಿ ಮುಹಮ್ಮದ್ ಷಾ ಸೈನ್ಯವನ್ನು ಕರ್ನಾಲ್ ಕದನದಲ್ಲಿ ಸೋಲಿಸಿತು.

1822: ವಿಶ್ವದ ಮೊಟ್ಟ ಮೊದಲ ಸ್ವಾಮಿ ನಾರಾಯಣ ಮಂದಿರವು ಅಹಮದಾಬಾದಿನಲ್ಲಿ ಉದ್ಘಾಟನೆಗೊಂಡಿತು.

1916: ಕೊರಿಯಾದ ಗವರ್ನರ್ ಜನರಲ್ಲನು ಸೊರ್ಡೋಕೋ ಎಂಬಲ್ಲಿ ಕುಷ್ಟರೋಗಿಗಳಿಗಾಗಿ ‘ಜಾಹ್ಯೇವನ್’ ಎಂಬ ಪ್ರತ್ಯೇಕ ಆಸ್ಪತ್ರೆಯನ್ನು ಪ್ರಾರಂಭಿಸಿದನು.

1920: ಜರ್ಮನಿಯ ನಾಜಿ ಪಕ್ಷ ಪ್ರಾರಂಭಗೊಂಡಿತು.

1920: ನಾನ್ಸಿ ಆಸ್ಟರ್ ಅವರು ಯುನೈಟೆಡ್ ಕಿಂಗ್ಡಂನ ಹೌಸ್ ಆಫ್ ಕಾಮನ್ಸಿನಲ್ಲಿ ಮಾತನಾಡಿದ ಪ್ರಪಥಮ ಮಹಿಳೆ ಎನಿಸಿದರು. ಇದಕ್ಕೆ ಮೂರು ತಿಂಗಳ ಮುಂಚೆ ಅವರು ಪಾರ್ಲಿಮೆಂಟ್ ಸದಸ್ಯರಾಗಿ ಚುನಾಯಿತರಾಗಿದ್ದರು.

1938: ನ್ಯೂಜೆರ್ಸಿಯ ಅರ್ಲಿಂಗ್ಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ‘ಟೂಥ್ ಬ್ರಷ್’ಗಳನ್ನು ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆ ಮಾಡಲಾಯಿತು.

1945: ಈಜಿಪ್ಟಿನ ಪ್ರಧಾನಿ ಮಹೆರ್ ಪಾಶಾ ಅವರು ಸಂಸತ್ತಿನಲ್ಲಿ ಜರ್ಮನಿ, ಮತ್ತು ಜಪಾನ್ ವಿರುದ್ಧದ ಸಮರಘೋಷಣೆ ಓದುತ್ತಿದ್ದಾಗ ಅವರನ್ನು ಗುಂಡು ಹೊಡೆದು ಕೊಲ್ಲಲಾಯಿತು.

1989: ಇರಾನಿನ ಆಯಾತೊಲ್ಲಾಹ್ ರುಹೋಲ್ಲಾಹ್ ಖೊಮೈನಿ ಅವರು ‘ದಿ ಸಾಟಾನಿಕ್ ವರ್ಸಸ್’ ಕೃತಿ ರಚನಕಾರ ಸಲ್ಮಾನ್ ರಷ್ದಿ ತಲೆ ತೆಗೆಯಲು 3 ಮಿಲಿಯನ್ ಡಾಲರ್ ಬಹುಮಾನ ಮತ್ತು ಫತ್ವಾ ಹೊರಡಿಸಿದರು.

2006: ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಭಸ್ಮವಾದ ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ನ್ಯಾಯಾಲಯವು 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ದುಷ್ಕರ್ಮಿಗಳು 2002ರ ಮಾರ್ಚ್ 1ರಂದು ವಡೋದರಾದಲ್ಲಿನ ಬೆಸ್ಟ್ ಬೇಕರಿಗೆ ಬೆಂಕಿ ಹಚ್ಚಿದಾಗ 14 ಜನ ಸಜೀವ ದಹನಗೊಂಡಿದ್ದರು.

2009: ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದಲ್ಲಿ ಹೊಸದಾಗಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸಂಬಂಧ ರೂಪಿಸಲಾದ ಮಸೂದೆಗೆ ರಾಜ್ಯಸಭೆಯು ತನ್ನ ಸಮ್ಮತಿ ಸೂಚಿಸುವುದರೊಂದಿಗೆ ಸಂಸತ್ತಿನ ಅಂಗೀಕಾರ ದೊರಕಿತು. ಲೋಕಸಭೆಯು ಹಿಂದಿನ ವಾರವೇ ಮಸೂದೆಗೆ ಅಂಗೀಕಾರ ನೀಡಿತ್ತು.

ಪ್ರಮುಖಜನನ/ಮರಣ:

1304: ಖ್ಯಾತ ಅರಬ್ ಪ್ರವಾಸಿ ಮತ್ತು ವಿದ್ವಾಂಸ ಇಬ್ನ್ ಬಟ್ಟೂಟ ಮೊರಾಕ್ಕೋದ ಟಾಂಗಿಯರ್ ಎಂಬಲ್ಲಿ ಜನಿಸಿದರು. ವಿಶ್ವದ ಎಲ್ಲಾ ಕಾಲದ ಮಹಾನ್ ಪಯಣಿಗರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಇವರನ್ನು ಮಧ್ಯಯುಗದ ಖ್ಯಾತ ಪ್ರವಾಸಿ ಅರಾಬ್ ವ್ಯಕ್ತಿ ಎಂದು ಗುರುತಿಸಲಾಗಿದೆ. ತಮ್ಮ ಪ್ರವಾಸದ ವಿವರಗಳನ್ನು ರಿಹ್ಲಾ ಎಂಬ ಕೃತಿಯಲ್ಲಿ ಇವರು ನಿರೂಪಿಸಿದ್ದಾರೆ. ಬಹುತೇಕ ಆಫ್ರಿಕಾ, ಮಧ್ಯ ಪೂರ್ವ, ಭಾರತ, ಮಧ್ಯ ಏಷ್ಯಾ, ದಕ್ಷಿಣಪೂರ್ವ ಏಷ್ಯಾ ಮತ್ತು ಚೀನಾ ಹೀಗೆ ಅವರು ವ್ಯಾಪಕವಾಗಿ ಸುತ್ತಿದ್ದರು.

1894: ಸಮಾಜದಲ್ಲಿ ಸ್ತ್ರೀಯರು ಮತ್ತು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿದ ಆರ್. ಕಲ್ಯಾಣಮ್ಮ ಅವರು ಬೆಂಗಳೂರಿನಲ್ಲಿ ಜನಿಸಿದರು. ಹತ್ತನೇ ವಯಸ್ಸಿನಲ್ಲೇ ವೈಧವ್ಯ ಪ್ರಾಪ್ತಿಯಾದರೂ ಅಂಜದೆ ಧೈರ್ಯದಿಂದ ಕನ್ನಡ ನಾಡಿನ ಸೇವೆಗೆ ಮುಂದಡಿಯಿಟ್ಟರು. ಮೂರು ದಶಕಗಳವರೆಗೆ ಸರಸ್ವತಿ ಮಾಸಪತ್ರಿಕೆಯ ಮೂಲಕ ಸಾಹಿತ್ಯ ಸೇವೆಯನ್ನೂ, ಶಾರದಾ ಸ್ತ್ರೀಸಮಾಜವನ್ನು ಸ್ಥಾಪಿಸಿ (೧೯೧೩) ಮಹಿಳಾಸೇವೆಯನ್ನೂ, ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು ಸ್ಥಾಪಿಸಿ (೧೯೩೮) ಮಕ್ಕಳ ಸೇವೆಯನ್ನು ಸಲ್ಲಿಸಿದರು. ಇದಲ್ಲದೆ ನಗರ ಸಭೆಗೆ ಪ್ರಪ್ರಥಮ ಬಾರಿಗೆ ಮಹಿಳಾ ಸದಸ್ಯೆಯಾಗಿ, ನಗರ ಸಭೆಯ ಉಪಾಧ್ಯಕ್ಷಿಣಿಯಾಗಿದ್ದು, ಅಸೆಂಬ್ಲಿ ಮತ್ತು ಸೆನೆಟ್ಟಿನಲ್ಲಿ ಸದಸ್ಯೆಯಾಗಿದ್ದುಕೊಂಡು ಸಮಾಜ ಸೇವೆಯನ್ನೂ ಮಾಡಿ ಹೆಸರು ಗಳಿಸಿದರು. ಕಲ್ಯಾಣಮ್ಮನವರಿಗೆ ಮೈಸೂರಿನ ಶ್ರೀಮನ್ಮಹಾರಾಜರವರು ಸುವರ್ಣ ಪದಕವನ್ನಿತ್ತು ಗೌರವಿಸಿದರು.

1914: ಇಂಗ್ಲಿಷ್ ಸ್ವೀಡಿಷ್ ವಿನ್ಯಾಸಕ ರಾಲ್ಫ್ ಎರ್ಸ್ಕೈನ್ ಲಂಡನ್ನಿನಲ್ಲಿ ಜನಿಸಿದರು. ‘ದಿ ಆರ್ಕ್’ ಮತ್ತು ‘ಬೈಕರ್ ವಾಲ್’ ಕಟ್ಟಡ ವಿನ್ಯಾಸಗಳು ಇವರ ಪ್ರಸಿದ್ಧ ವಿನ್ಯಾಸಗಳಲ್ಲಿ ಸೇರಿವೆ.

1938: ಅಮೆರಿಕದ ಪ್ರಸಿದ್ಧ ವಾಪಾರೀ ಮತ್ತು ಉದಾರ ಕೊಡುಗೆದಾರ ಫಿಲ್ ನೈಟ್ ಅವರು ಅಮೆರಿಕದ ಒರಿಗಾನ್ ಬಳಿಯ ಪೋರ್ಟ್ಲ್ಯಾಂಡ್ ಎಂಬಲ್ಲಿ ಜನಿಸಿದರು. ಇವರು ಪ್ರಸಿದ್ಧ ನೈಕ್ ಇನ್ಕಾರ್ಪೋರೇಶನ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿದ್ದು ಅದರ ಚೇರ್ಮನ್, ಸಿ.ಇ.ಓ ಮುಂತಾದ ಹುದ್ದೆಗಳನ್ನು ನಿರ್ವಹಿಸಿದ್ದರು. ‘ಸ್ಟಾಪ್ ಮೋಷನ್’ ಚಿತ್ರಸಂಸ್ಥೆಗಳಾದ ಲೈಕಾ ಅಂತಹ ಸಂಸ್ಥೆಯ ಸ್ಥಾಪಕರೂ ಆಗಿದ್ದಾರೆ. ಇವರು ಅನೇಕ ವಿಶ್ವವಿದ್ಯಾಲಯಗಳಿಗೆ ಅತ್ಯಂತ ಬೃಹತ್ ಕೊಡುಗೆದಾರರಾಗಿಯೂ ಪ್ರಸಿದ್ಧರಾಗಿದ್ದಾರೆ.

1942: ಭಾರತೀಯ ಸಂಜಾತೆ ಗಾಯತ್ರಿ ಚಕ್ರವರ್ತಿ ಸ್ಪಿವಕ್ ಕೋಲ್ಕತ್ತಾದಲ್ಲಿ ಜನಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಇವರು ಲೇಖಕಿ, ಸಾಹಿತ್ಯ ವಿಮರ್ಶಕಿ, ಹಾಗೂ ಭಾಷಾಂತರಕಾರ್ತಿಯಾಗಿ ಖ್ಯಾತಿ ಗಳಿಸಿದ್ದಾರೆ. ಇವರ ಕೃತಿಗಳಲ್ಲಿ ತತ್ವಜ್ಞಾನಿ ಜಾಕಿಸ್ ಡೆರ್ರಿಡಾ ಅವರ ಕೃತಿಯ ಇಂಗ್ಲಿಷ್ ಭಾಷಾಂತರವೂ ಸೇರಿದೆ.

1948: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಅಣ್ಣಾ ಡಿ.ಎಂ.ಕೆ ಪಕ್ಷದ ನಾಯಕಿ ಮತ್ತು ಹಿಂದಿನ ದಶಕಗಳ ಚಲನಚಿತ್ರ ನಟಿ ಜಯಲಲಿತಾ ಅವರು ಕೋಮಲವಲ್ಲಿ ಎಂಬ ಹೆಸರಿನಿಂದ ಕರ್ನಾಟಕ ಮಂಡ್ಯದಲ್ಲಿ ಜನಿಸಿದರು.

1955: ಸೃಜನಶೀಲ ಉದ್ಯಮಿ ಸ್ಟೀವ್ ಜಾಬ್ಸ್ ಅವರು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಜನಿಸಿದರು. ಆಪಲ್ ಇನ್ಕಾರ್ಪೋರೇಷನ್, ಪಿಕ್ಸರ್ ಮುಂತಾದ ಪ್ರಸಿದ್ಧ ಸಂಸ್ಥೆಗಳ ಸಹ ಸಂಸ್ಥಾಪಕರಾದ ಇವರು ಪ್ರಸಿದ್ಧ ಐ ಫೋನ್, ಐ ಪಾಡ್, ಐ ಪ್ಯಾಡ್ , ಐ ಮ್ಯಾಕ್, ಐ ಟ್ಯೂನ್ಸ್, ಮ್ಯಾಕ್ ಓ.ಎಸ್, ಓ.ಎಸ್ ಎಕ್ಸ್ ಮುಂತಾದ ಹಲವಾರು ಕ್ರಾಂತಿಕಾರಕ ಸೃಜನೆಗಳ ಮೂಲಕ ವಿಶ್ವದ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.

1967: ಅಮೆರಿಕದ ಖಗೋಳ ಭೌತವಿಜ್ಞಾನಿ ಬ್ರಿಯಾನ್ ಸ್ಕ್ಮಿಡ್ಟ್ ಅವರು ಮೊಂಟಾನಾ ಬಳಿಯ ಮಿಸ್ಸೌಲಾ ಎಂಬಲ್ಲಿ ಜನಿಸಿದರು. ವಿಶ್ವದ ವಿಸ್ತಾರದ ಗತಿ ಏರುಮುಖವಾಗಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿದ ಸಂಶೋಧನೆಗಾಗಿ ಇವರಿಗೆ ಅವರ ಸಹ ವಿಜ್ಞಾನಿಗಳೊಂದಿಗೆ 2011 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1825: ಇಂಗ್ಲಿಷ್ ಸಂಪಾದಕ ಥಾಮಸ್ ಬೌಲ್ಡರ್ ವೇಲ್ಸ್ ಬಳಿಯ ಸ್ವಾನ್ಸಿಯಾ ಎಂಬಲ್ಲಿ ನಿಧನರಾದರು. ಷೇಕ್ಸ್ ಪಿಯರ್, ಓಲ್ಡ್ ಟೆಸ್ಟಾಮೆಂಟ್ ಸೇರಿದಂತೆ ಹಲವು ಕೃತಿಗಳನ್ನು ಇವರು ಸಂಪಾದಿಸಿದ್ದರು.

2011: ಭಾರತೀಯ ಕಾಮಿಕ್ ಸರಣಿಗಳಲ್ಲಿ ಮೊಟ್ಟ ಮೊದಲು ನೆನಪಿಗೆ ಬರುವ ಅಮರ ಚಿತ್ರ ಕಥಾ ಸೃಷ್ಟಿಕರ್ತ, ಕಾರ್ಕಳದವರಾದ ಅನಂತ ಪೈ ಅವರು ಮುಂಬೈನಲ್ಲಿ ನಿಧನರಾದರು. ‘ಅಂಕಲ್ ಪೈ’ ಎಂದೇ ಖ್ಯಾತರಾದ ಇವರು ಮಕ್ಕಳಿಗಾಗಿ ‘ಟಿಂಕಲ್’ ಕಾಮಿಕ್ ಪತ್ರಿಕೆಯನ್ನೂ ಹುಟ್ಟುಹಾಕಿದ್ದರು.

Categories
e-ದಿನ

ಫೆಬ್ರವರಿ-23

ಪ್ರಮುಖಘಟನಾವಳಿಗಳು:

1455: ಗುಟೆನ್ ಬರ್ಗ್ ಬೈಬಲ್ ಸುಲಭವಾಗಿ ಕೊಂಡೊಯ್ಯಬಹುದಾದ ರೀತಿಯಲ್ಲಿ ಮುದ್ರಣಗೊಂಡ ಪ್ರಥಮ ಪಾಶ್ಚಿಮಾತ್ಯ ಪುಸ್ತಕ ಎನಿಸಿತು.

1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ ‘ಸ್ಪೆಯಿರಿಸ್ಟಿಕ್’ (Sphairistike’) ಹೆಸರಿನಲ್ಲಿ ‘ಲಾನ್ ಟೆನಿಸ್’ ಆಟಕ್ಕೆ ಪೇಟೆಂಟ್ ಪಡೆದರು.

1886: ಚಾರ್ಲ್ಸ್ ಮಾರ್ಟಿನ್ ಹಾಲ್ ಅವರು ಹಲವರು ವರ್ಷಗಳ ನಿರಂತರ ಪರಿಶ್ರಮದಿಂದ ಪ್ರಥಮ ಬಾರಿಗೆ ತಮ್ಮ ಕೈಯಾರೆ ಅಲ್ಯೂಮಿನಿಯಮ್ ತಯಾರಿಸಿದರು. ಇದು ಪ್ರಥಮ ಮಾನವ ನಿರ್ಮಿತ ಅಲ್ಯೂಮಿನಿಯಂ ಎನಿಸಿದೆ. ಈ ಕಾರ್ಯಕ್ಕೆ ಅವರಿಗೆ ಅವರ ಹಿರಿಯ ಸಹೋದರಿ ಜೂಲಿಯಾ ಬ್ರೈನಡ ಹಾಲ್ ಅವರು ಸಹಕಾರ ನೀಡಿದರು.

1905: ಚಿಕಾಗೋದ ಅಟಾರ್ನಿ ಜನರಲ್ ಮತ್ತು ಮೂವರು ಅಮೆರಿಕದ ಉದ್ಯಮಿಗಳು ಈ ದಿನದಂದು ಊಟಕ್ಕೆ ಜೊತೆ ಸೇರಿ ವಿಶ್ವದ ಪ್ರಥಮ ನಾಗರಿಕ ಸೇವಾ ಸಂಸ್ಥೆಯಾದ ‘ರೋಟರಿ ಕ್ಲಬ್’ ಸ್ಥಾಪಿಸಿದರು. ಒಬ್ಬರ ಬಳಿಕ ಮತ್ತೊಬ್ಬ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಸುವ ಪದ್ಧತಿಯನ್ನು ಅನುಸರಿಸಿದ್ದರಿಂದ ಇದಕ್ಕೆ ‘ರೋಟರಿ’ ಎಂಬ ಹೆಸರು ಬಂತು. 1912ರಲ್ಲಿ ಇದರ ಹೆಸರು ‘ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್’ ಎಂದು ಬದಲಾಯಿತು. ಈಗಿನ ‘ರೋಟರಿ ಇಂಟರ್ ನ್ಯಾಷನಲ್’ ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.

1917: ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ಪ್ರಥಮ ಪ್ರತಿಭಟನಾ ಸಭೆ ನಡೆಯಿತು. ಇದು ಫೆಬ್ರವರಿ ಕ್ರಾಂತಿಗೆ ಪ್ರಾರಂಭವೆನಿಸಿತು. ಆಗಿನ ದಿನಗಳಲ್ಲಿ ರಷ್ಯಾದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಯಲ್ಲಿ ಇರಲಿಲ್ಲ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ದಿನ ಮಾರ್ಚ್ 8 ಎಂದಾಗುತ್ತದೆ.

1927: ಜರ್ಮನಿಯ ಭೌತವಿಜ್ಞಾನಿ ವೆರ್ನರ್ ಹೀಸೆನ್ ಬರ್ಗ್ ಅವರು ತಮ್ಮ ಸಹೋದ್ಯೋಗಿ ವುಲ್ಫ್ ಗ್ಯಾಂಗ್ ಪುಲಿ ಅವರಿಗೆ ಬರೆದ ಪತ್ರದಲ್ಲಿ, ಮೊಟ್ಟ ಮೊದಲ ಬಾರಿಗೆ ‘ಅನ್ಸರ್ಟನ್ಟಿ ಪ್ರಿನ್ಸಿಪಲ್’ ಕುರಿತಾಗಿ ವಿವರಿಸಿದ್ದರು.

1941: ಡಾ. ಗ್ಲೆನ್ ಟಿ. ಸೀಬೋರ್ಗ್ ಅವರು ಮೊದಲಬಾರಿಗೆ ಪ್ಲುಟೋನಿಯಮ್ ಉತ್ಪಾದಿಸಿ ಪ್ರತ್ಯೇಕಿಸಿದರು

1954: ಮಕ್ಕಳಿಗೆ ಸಲ್ಕ್ ವ್ಯಾಕ್ಸಿನ್ ರೂಪದಲ್ಲಿ ಪೋಲಿಯೋ ನಿರೋಧಕ ಲಸಿಕೆಯನ್ನು ಸಾರ್ವಜನಿಕವಾಗಿ ನೀಡುವ ಮೊಟ್ಟ ಮೊದಲ ಕಾರ್ಯಕ್ರಮ ಪಿಟ್ಸ್ ಬರ್ಗ್ ನಗರದಲ್ಲಿ ನಡೆಯಿತು.

1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ವಿಧಾನದಲ್ಲಿ ‘ಡಾಲಿ’ ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.

2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟು ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.

2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗ ನೋಡಿಕೊಳ್ಳುತ್ತಿದೆ.

2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ ಕಾರ್ಯಕ್ಷೇತ್ರವಾಗಿದ್ದ ಮುಂಬೈ ನಗರದಲ್ಲಿ, ಅಲ್ಲಿನ ಅಪಾರ ಸಂಖ್ಯೆಯ ಕನ್ನಡಿಗರ ಸಮಕ್ಷಮದಲ್ಲಿ, ಕರ್ನಾಟಕ ಸರ್ಕಾರದ ‘ಪಂಪ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2009: ‘ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕೆ ಸಂಗೀತ ನೀಡಿದ ಎ ಆರ್ ರೆಹಮಾನ್ ಅವರು ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಅವರು ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು.

2009: ಕನ್ನಡ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಒಕ್ಕೂಟವು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಆಯೋಜಿಸಿದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಚಾಲನೆ ನೀಡಿದರು.

2010: ಉತ್ತರ ಇಟಲಿಯಲ್ಲಿ ಅಘೋಷಿತ ಪಾತಕಿಗಳ ತಂಡದವರು ಲ್ಯಾಂಬ್ರೋ ನದಿಗೆ 2.5 ಮಿಲಿಯನ್ ಲೀಟರ್ ಡೀಸೆಲ್ ಮತ್ತು ಇನ್ನಿತರ ಹೈಡ್ರೋ ಕಾರ್ಬನ್ ಅಂಶಗಳನ್ನು ಚೆಲ್ಲಿ ಪರಿಸರದ ವಿನಾಶಕ್ಕೆ ಕಾರಣೀಭೂತರಾದರು.

ಪ್ರಮುಖಜನನ/ಮರಣ:

1834: ಜರ್ಮನ್ ಅನ್ವೇಷಕ ಸಹಾರಾ ಮರುಭೂಮಿಯನ್ನು ಕಂಡುಹಿಡಿದ ಗುಸ್ತಾವ್ ನಾಚ್ಟಿಗಲ್ ಅವರು ಈಚ್ ಸ್ಟೆಡ್ಟ್ ಎಂಬಲ್ಲಿ ಜನಿಸಿದರು.

1884: ಪೋಲಿಷ್-ಅಮೆರಿಕನ್ ಜೀವ ರಸಾಯನ ತಜ್ಞ, ‘ವಿಟಮಿನ್ ಶಬ್ಧವನ್ನು’ ಬಳಕೆಗೆ ತಂದ ಕಾಸಿಮೀರ್ ಫಂಕ್ ಪೋಲೆಂಡ್ ದೇಶದ ವಾರ್ಸಾ ಎಂಬಲ್ಲಿ ಜನಿಸಿದರು.

1908: ಕನ್ನಡ ಚಿತ್ರರಂಗದ ಚಿತ್ರಕಥಾ ಸಾಹಿತಿ ಹಾಗೂ ಗೀತರಚನಕಾರರಾದ ಚಿ. ಸದಾಶಿವಯ್ಯನವರು ಜನಿಸಿದರು. ಅವರು ಹಲವಾರು ನಾಟಕ ಹಾಗೂ ಕಾದಂಬರಿಗಳನ್ನೂ ಬರೆದರು. ಕನ್ನಡ ಚಿತ್ರರಂಗದ ಸಾಹಿತಿ ಚಿ. ಉದಯಶಂಕರ್ ಹಾಗೂ ಚಿತ್ರ ನಿರ್ಮಾಪಕ ದತ್ತುರಾಜ್ ಚಿ. ಸದಾಶಿವಯ್ಯನವರ ಮಕ್ಕಳು.

1924: ದಕ್ಷಿಣ ಆಫ್ರಿಕಾ-ಅಮೆರಿಕನ್ ವೈದ್ಯ ವಿಜ್ಞಾನಿ ಅಲನ್ ಮೆಕ್ ಲಿಯಾಡ್ ಕಾರ್ಮ್ಯಾಕ್ ಅವರು ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ ನಗರದಲ್ಲಿ ಜನಿಸಿದರು. ‘ಎಕ್ಸ್-ರೇ ಕಂಪ್ಯೂಟೆಡ್ ಟೊಮೋಗ್ರಫಿ’ ಕುರಿತಾದ ಸಂಶೋಧನೆಗೆ ಇವರಿಗೆ 1979 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1821: ಕವಿ ಜಾನ್ ಕೀಟ್ಸ್ ರೋಮ್ನಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ನಿಧನರಾದರು.

1969: ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂದರ್ಯಗಳಿಂದ ಬೆಳಗಿದ ಕಲಾವಿದರಲ್ಲಿ ಒಬ್ಬರಾದ ಮಧುಬಾಲ ಮುಂಬೈನಲ್ಲಿ ನಿಧನರಾದರು. ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಪ್ರಸಿದ್ಧರಾಗಿದ್ದ ಇವರು ಥಿಯೇಟರ್ ಆರ್ಟ್ಸ್‌ ನಂತಹ ಹಲವು ಅಮೆರಿಕನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. 1952ರ ಆಗಸ್ಟ್‌ ಸಂಚಿಕೆಯಲ್ಲಿ, ಮಧುಬಾಲಾರ ಪೂರ್ಣಪುಟದ ಭಾವಚಿತ್ರದೊಂದಿಗಿನ ದೊಡ್ಡದೊಂದು ಲೇಖನ ಪ್ರಕಟಗೊಂಡಿತ್ತು. ಆ ಲೇಖನದ ಶೀರ್ಷಿಕೆ ಹೀಗಿದೆ: “ದಿ ಬಿಗ್ಗೆಸ್ಟ್ ಸ್ಟಾರ್ ಇನ್ ದಿ ವರ್ಲ್ಡ್ (ಅಂಡ್ ಶಿ ಈಸ್ ನಾಟ್ ಇನ್ ಬೆವೆರ್ಲಿ ಹಿಲ್ಸ್)” .

1973: ಅಮೆರಿಕದ ವೈದ್ಯ ವಿಜ್ಞಾನಿ ಡಿಕಿನ್ಸನ್ ಡಬ್ಲ್ಯೂ ರಿಚರ್ಡ್ಸ್ ಅವರು ಕನೆಕ್ಟಿಕಟ್ ಬಳಿಯ ಲೇಕ್ ವಿಲ್ಲೆ ಎಂಬಲ್ಲಿ ನಿಧನರಾದರು. ಕಾರ್ಡಿಯಾಕ್ ಕ್ಯಾತೆಟಿರೈಸೇಶನ್ ಕುರಿತಾದ ಸಂಶೋಧನೆಗೆ ಇವರಿಗೆ 1956 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2004: ಕೇಂದ್ರ ಮಂತ್ರಿಗಳಾಗಿದ್ದ ಸಿಕಂದರ್ ಭಕ್ತ್ ತಿರುವನಂತಪುರದಲ್ಲಿ ನಿಧನರಾದರು. ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿ, ವಿದೇಶಾಂಗ ಖಾತೆ ಸಚಿವರಾಗಿ ಮತ್ತು ರಾಜ್ಯಪಾಲರಾಗಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ಇವರಿಗೆ ಪದ್ಮವಿಭೂಷಣ ಗೌರವ ನೀಡಲಾಗಿತ್ತು.

2004: ಪ್ರಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ ವಿಜಯ್ ಆನಂದ್ ನಿಧನರಾದರು. ಗೈಡ್, ಜಾನಿ ಮೇರಾ ನಾಮ್ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳನ್ನು ಇವರು ನಿರ್ದೇಶಿಸಿದ್ದರು.

2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ ತಮ್ಮ 97ನೇ ವಯಸ್ಸಿನಲ್ಲಿ ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.

2011: ಧಾರ್ಮಿಕ ನಾಯಕಿ, ‘ಸಹಜ ಯೋಗ’ ಪದ್ಧತಿಯ ಪ್ರವರ್ತಕಿ ನಿರ್ಮಲ ಶ್ರೀವಾಸ್ತವ ಅವರು ಇಟಲಿಯ ಜಿನೋವಾ ಎಂಬಲ್ಲಿ ನಿಧನರಾದರು.

2013: ಭಾರತದಲ್ಲಿ ಪ್ರಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎನಿಸಿರುವ ಲೋತಿಕಾ ಸರ್ಕಾರ್ ನವದೆಹಲಿಯಲ್ಲಿ ನಿಧನರಾದರು.

2015: ಪ್ರಥಮ ಹಿಂದೂ ಮತ್ತು ಎರಡನೇ ಮುಸ್ಲಿಮೇತರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ರಾಣಾ ಭಗವಾನ್ ದಾಸ್ ಕರಾಚಿಯಲ್ಲಿ ನಿಧನರಾದರು.

Categories
e-ದಿನ

ಫೆಬ್ರವರಿ-22

ಪ್ರಮುಖಘಟನಾವಳಿಗಳು:

1632: ‘ಎರಡು ಪ್ರಮುಖ ವಿಶ್ವ ವ್ಯವಸ್ಥೆ’ಗಳ ಕುರಿತಾದ ಗೆಲಿಲಿಯೋ ಅವರ ಚಿಂತನೆ ಪ್ರಕಟಗೊಂಡಿತು.

1651: ಜರ್ಮನಿ, ನೆದರ್ಲ್ಯಾಂಡ್ ಡೆನ್ಮಾರ್ಕ್ ಒಳಗೊಂಡ ಫ್ರಿಷಿಯನ್ ಸಾಗರ ತೀರದಲ್ಲಿ ಉಂಟಾದ ಸೈಂಟ್ ಪೀಟರ್ ಪ್ರವಾಹದಲ್ಲಿ 15,000 ಜನ ಮುಳುಗಡೆಗೊಂಡರು.

1819: ಸ್ಪೇನ್ ದೇಶದ ಆಡಮ್ಸ್, ಓನಿಸ್ ಒಪ್ಪಂದದ ಮೂಲಕ ಫ್ಲೋರಿಡಾವನ್ನು ಅಮೆರಿಕಕ್ಕೆ 5 ದಶಲಕ್ಷ ಡಾಲರಿಗೆ ಮಾರಿದ.

2006: ಬ್ರಿಟನ್ನಿನ ಕೆಂಟ್ ಪ್ರದೇಶದ ಟಾನ್ ಬ್ರಿಡ್ಜ್ ಎಂಬಲ್ಲಿನ ‘ಸೆಕ್ಯುರಿಟಾಸ್ ಡಿಪೋ’ದಲ್ಲಿ ಕಡೇ ಪಕ್ಷ ಆರು ಜನ ಕಳ್ಳರ ಗುಂಪು 53 ಮಿಲಿಯನ್ ಪೌಂಡುಗಳ ಬೃಹತ್ ಲೂಟಿ ಮಾಡಿತು.

2007: ಜವಾಹರಲಾಲ್ ನೆಹರು ಉನ್ನತ ವಿಜ್ಞಾನಗಳ ಕೇಂದ್ರದ ಅಧ್ಯಕ್ಷ ಪ್ರೊ. ಸಿ. ಎನ್. ಆರ್. ರಾವ್ ಅವರು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವಕ್ಕೆ ಆಯ್ಕೆಯಾದರು.

2007: ಬೆಂಗಳೂರಿನ ನೇಪಥ್ಯ ಕಲಾವಿದ ಅ.ನ. ರಮೇಶ್ ಅವರಿಗೆ ದೆಹಲಿಯ ‘ಚಮನ್ ಲಾಲ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಸಂದಿತು. ರಮೇಶ್ ಅವರು ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಮೊದಲಾದ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದವರಾಗಿದ್ದಾರೆ.

2007: ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಿತು.

2015: ನೂರು ಜನರನ್ನು ಕೊಂಡೊಯ್ಯುತ್ತಿದ್ದ ದೋಣಿ ಪದ್ಮಾ ನದಿಯಲ್ಲಿ ಮುಳುಗಿ 70 ಜನ ಸಾವಿಗೀಡಾದರು.

ಪ್ರಮುಖಜನನ/ಮರಣ:

1040: ‘ರಷಿ’ ಎಂಬ ಹೆಸರಿನಿಂದ ಪ್ರಖ್ಯಾತರಾದ ಫ್ರೆಂಚ್ ಬರಹಗಾರ ಮತ್ತು ರಬ್ಬಿ (ಗುರು) ಶ್ಲೋಮೋ ಯಿಟ್ಸ್ ಚಾಕಿ ಅವರು ಫ್ರಾನ್ಸಿನ ಟ್ರೋಯೆಸ್ ಎಂಬಲ್ಲಿ ಜನಿಸಿದರು.

1732: ಅಮೆರಿಕನ್ ಜನರಲ್ ಜಾರ್ಜ್ ವಾಷಿಂಗ್ಟನ್ ಜನಿಸಿದರು. ಮುಂದೆ ಇವರೇ ಅಮೆರಿಕಾದ ಪ್ರಥಮ ಅಧ್ಯಕ್ಷರಾದರು.

1857: ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಮಿಲಿಟರಿ ದಿನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಅವರು ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ಸ್ಥಳೀಯ ಹುಡುಗರ ಕ್ಯಾಂಪ್ ಒಂದರ ಮೂಲಕ 1907ರ ವರ್ಷದಲ್ಲಿ ಮೊದಲಿಗೆ ಕಾರ್ಯರೂಪಕ್ಕೆ ತಂದರು. ಇದು ಮುಂದೆ ಸ್ಕೌಟ್ ಚಳುವಳಿಯಾಗಿ ವಿಶ್ವದೆಲ್ಲೆಡೆ ಪ್ರವರ್ತನಗೊಳ್ಳುವಲ್ಲಿ ಪ್ರಮುಖ ಹೆಜ್ಜೆಯೆನಿಸಿತು.

1874: ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರಾದ ಪಂಜೆ ಮಂಗೇಶರಾಯರು ಬಂಟವಾಳದಲ್ಲಿ ಜನಿಸಿದರು. ಶಿಕ್ಷಕರಾಗಿದ್ದ ಅವರು ಹಲವಾರು ರೀತಿಗಳಲ್ಲಿ ಬರಹಗಳನ್ನು ಮಾಡಿದ್ದರು. ಅವರು ರಾಯಚೂರು ಸಮ್ಮೇಳನದ ಅಧ್ಯಕ್ಷಭಾಷಣದಲ್ಲಿ “….ನನಗೀಗ ಇರುವುದು ಒಂದೇ ಆಶೆ, ನನ್ನ ಕಡೆಯ ಗಳಿಗೆಯಲ್ಲಿ ನನ್ನ ನಾಲಗೆ ‘ಕೃಷ್ಣ’, ‘ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ’, ‘ಕನ್ನಡ’ ಎಂದೂ ನುಡಿಯುತ್ತಿರಲಿ!’ ಎಂದು ಉದ್ಘರಿಸಿದಾಗ ಸಭೆ ಸ್ತಬ್ದವಾಯಿತೆಂದೂ, ಚೇತರಿಸಿಕೊಳ್ಳಲು ಎರಡು ಗಳಿಗೆ ಬೇಕಾಯಿತೆಂದೂ ಆ ಸಂದರ್ಭವನ್ನು ಡಿ.ವಿ.ಜಿಯವರು ನೆನಪಿಸಿಕೊಂಡಿದ್ದಾರೆ. 1937ರಲ್ಲಿ ಇವರು ನಿಧನರಾದ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರು “ತುಳುನಾಡಿನ ಕನ್ನಡ ಸಾಹಿತ್ಯದ ವಿಗಡ ದೀಪಸ್ತಂಭವಾರಿತು; ಬೆಳಕು ಬೆಳಕಿಗೆ ಸಾರಿತು” ಎಂದು ಉದ್ಘರಿಸಿದರು.

1914: ಇಟಾಲಿಯನ್ ಅಮೆರಿಕನ್ ವೈದ್ಯವಿಜ್ಞಾನಿ ರೆನಾಲ್ಟೋ ಡುಲ್ಬೆಕ್ಕೋ ಅವರು ಇಟಲಿಯ ಕ್ಯಾಟನ್ಜಾರೋ ಎಂಬಲ್ಲಿ ಜನಿಸಿದರು. ಆನ್ಕೋವೈರಸಸ್ ಕುರಿತಾದ ಸಂಶೋಧನೆ ನಡೆಸಿರುವ ಇವರಿಗೆ 1975 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1918: ವಿಶ್ವದಲ್ಲೇ ಅತ್ಯಂತ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಮೆರಿಕದ ರಾಬರ್ಟ್ ಪರ್ಶಿಂಗ್ ವಾಡ್ಲೊ ಅವರು ಇಲಿನಾಯ್ಸ್ ಪ್ರದೇಶದ ಆಲ್ಟನ್ ಎಂಬಲ್ಲಿ ಜನಿಸಿದರು. ಇವರ ಎತ್ತರ 8 ಅಡಿ 11.1 ಅಂಗುಲಗಳು.

1891: ಚಿತ್ರ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಕಲಾವಿದ ಅ.ನ. ಸುಬ್ಬರಾಯರು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಅವರು ಕಟ್ಟಿದ ಕಲಾಮಂದಿರವು ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಇತ್ಯಾದಿ ಎಲ್ಲ ರಂಗಗಳ ಬೆಳವಣಿಗೆಗೂ ದುಡಿಯಿತು.

1892: ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಸಮಾಜವಾದಿ ನಾಯಕರಾದ ಇಂದುಲಾಲ್ ಯಾಜ್ಞಿಕ್ ಅವರು ಗುಜರಾತಿನ ಖೇಡ ಬಳಿಯ ನಾಡಿಯಾದ್ ಎಂಬಲ್ಲಿ ಜನಿಸಿದರು. ಅಖಿಲ ಭಾರತ ಕಿಸಾನ್ ಸಭಾದ ನಾಯಕರಾಗಿದ್ದ ಅವರು ಪ್ರತ್ಯೇಕ ಗುಜರಾತಿಗಾಗಿ ‘ಮಹಾ ಗುಜರಾತ್ ಚಳುವಳಿ’ ಆರಂಭಿಸಿ ಯಶಸ್ವಿಯಾದರು. ಇವರು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇವರು ಬರಹಗಾರರು ಮತ್ತು ಚಿತ್ರ ತಯಾರಕರೂ ಆಗಿದ್ದರು.

1914: ಅಮೆರಿಕದ ಜೀವವಿಜ್ಞಾನಿ ಜೆ. ಮೈಖೇಲ್ ಬಿಷಪ್ ಅವರು ಪೆನ್ಸಿಲ್ವೆನಿಯಾದಲ್ಲಿ ಜನಿಸಿದರು. ಇಮ್ಮ್ಯೂನಾಲಜಿಸ್ಟ್ ಮತ್ತು ಮೈಕ್ರೋಬಯಾಲಜಿಸ್ಟ್ ಆದ ಇವರ ಸಾಧನೆಗಳಿಗಾಗಿ 1989 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1945: ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ವೀಣಾ ಶಾಂತೇಶ್ವರ ಅವರು ಧಾರವಾಡದಲ್ಲಿ ಜನಿಸಿದರು. ಇವರ ‘ಕವಲು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಅಜ್ಞೇಯರ ‘ನದೀ ಕೇ ದ್ವೀಪ್’ ಕೃತಿಯ ಕನ್ನಡ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕಾತ್ಯಾಯಿನಿ ಸಮ್ಮಾನ್ ಮುಂತಾದ ಅನೇಕ ಗೌರವಗಳು ಸಂದಿವೆ.

1949: ಪ್ರಸಿದ್ಧ ಮೋಟಾರ್ ರೇಸಿಂಗ್ ಚಾಂಪಿಯನ್ ಅದ ನಿಕಿ ಲೌಡಾ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಜನಿಸಿದರು. ಫಾರ್ಮ್ಯುಲಾ ಒನ್ ಚಾಲಕರಾದ ಇವರು 1975, 1977 ಮತ್ತು 1984ರ ವರ್ಷಗಳಲ್ಲಿ ಎಫ್ 1 ವಿಶ್ವ ಡ್ರೈವರ್ಸ್ ಚಾಂಪಿಯನ್ ಆಗಿದ್ದರು. ಪ್ರಸಕ್ತದಲ್ಲಿ ಇವರು ಫೆರಾರಿ ಮತ್ತು ಮೆಕ್ಲಾರೆನ್ ಎಂಬ ಎರಡೂ ಪ್ರಸಿದ್ಧ ಮಾದರಿಯ ಚಾಲನೆಗಳಲ್ಲೂ ಚಾಂಪಿಯನ್ ಆಗಿರುವ ಏಕೈಕ ಸಾಧಕರಾಗಿದ್ದಾರೆ.

1944: ತಮ್ಮ ಪತಿ ಮಹಾತ್ಮ ಗಾಂಧಿಯವರೊಂದಿಗೆ ನಿರಂತರವಾಗಿದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಹೋರಾಟಗಾರ್ತಿಯಾಗಿ, ಸಮಾಜ ಸೇವಕಿಯಾಗಿ ಅನನ್ಯ ಸೇವೆ ಸಲ್ಲಿಸಿದ ಕಸ್ತೂರಬಾ ಗಾಂಧಿ ಅವರು ಪುಣೆಯ ಆಘಾ ಖಾನ್ ಅರಮನೆಯಲ್ಲಿ ನಿಧನರಾದರು.

1958: ಭಾರತದ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ರಾಜನೀತಿಜ್ಞ ಮೌಲಾನಾ ಅಬುಲ್ ಕಲಂ ಅವರು ದೆಹಲಿಯಲ್ಲಿ ನಿಧನರಾದರು. ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ಧರು. 1923ರ ವರ್ಷದಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರು ವಯಸ್ಸಿನವರಾಗಿದ್ದರು.

1964: ಬ್ರಿಟಿಷ್ ಸಂಜಾತ ಭಾರತೀಯ ಮಾನವ ಶಾಸ್ತ್ರಜ್ಞ ವೆರೀಯರ್ ಎಲ್ವಿನ್ ನಿಧನರಾದರು. ಗುಡ್ಡಗಾಡು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿದ್ದ ಇವರು ಮಧ್ಯಪ್ರದೇಶದ ‘ಗೊಂಡ’ ಜನಾಂಗದ ಬಗ್ಗೆ ಅಧ್ಯಯನ ನಡೆಸಿದ್ದರು.

2012: ಪ್ರಸಿದ್ಧ ಪಂಜಾಬಿ ಸಾಹಿತಿ ಸುಖ್ಬೀರ್ ಮುಂಬೈನಲ್ಲಿ ನಿಧನರಾದರು.

Categories
e-ದಿನ

ಫೆಬ್ರವರಿ-21

ಅಂತರರಾಷ್ಟ್ರೀಯ ಮಾತೃಭಾಷಾ ದಿನ

ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷೆಗಳ ಅಸ್ತಿತ್ವದ ಕುರಿತಾದ ತಿಳುವಳಿಕೆಗಳನ್ನು ಮನದಟ್ಟು ಮಾಡಿಕೊಡಲು ಫೆಬ್ರವರಿ 21ದಿನವನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುನೆಸ್ಕೋ ಸಂಸ್ಥೆ ಈ ಕುರಿತಾದ ಘೋಷಣೆಯನ್ನು 1999ರ ವರ್ಷದಲ್ಲಿ ಮಾಡಿತು. ಇದನ್ನು 2008ರ ವರ್ಷದ ತನ್ನ ಜನರಲ್ ಅಸೆಂಬ್ಲಿಯಲ್ಲಿ ವಿಶ್ವಸಂಸ್ಥೆಯು ಅನುಮೋದಿಸಿತು.

ಪ್ರಮುಖಘಟನಾವಳಿಗಳು:

1245: ಫಿನ್ಲ್ಯಾಂಡಿನ ಮೊದಲ ಗೊತ್ತಿರುವ ಬಿಷಪ್ ಆದ ಥಾಮಸ್ ಎಂಬಾತ ಹಿಂಸಾತ್ಮಕವಾಗಿ ನಡೆದುಕೊಂಡು, ನಕಲಿ ಸಹಿ ಮಾಡಿದ್ದಾಗಿ ಅರಿಕೆ ಮಾಡಿಕೊಂಡು ರಾಜಿನಾಮೆ ಸಲ್ಲಿಸಿದರು.

1804: ಬ್ರಿಟಿಷ್ ತಂತ್ರಜ್ಞ ರಿಚರ್ಡ್ ಟ್ರಿವಿತಿಕ್ ಎಂಬಾತ ಪೆನ್-ವೈ-ಡಾರೆನ್ ವರ್ಕ್ಸ್ ಎಂಬಲ್ಲಿ ಹಳಿಗಳ ಮೇಲೆ ಉಗಿಯಂತ್ರವನ್ನು ಓಡಿಸಿದರು.

1842: ಅಮೆರಿಕದ ಜಾನ್ ಗ್ರೀನಫ್ ಅವರು ಹೊಲಿಗೆ ಯಂತ್ರಕ್ಕೆ ಪೇಟೆಂಟ್ ಪಡೆದರು.

1848: ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಏಂಜೆಲ್ಸ್ ಅವರು ‘ದಿ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ’ ರಾಜಕೀಯ ಕರಪತ್ರ ಪ್ರಕಟಿಸಿದರು.

1878: ಮೊಟ್ಟ ಮೊದಲ ಟೆಲಿಫೋನ್ ಡೈರೆಕ್ಟರಿಯನ್ನು ಕನೆಕ್ಟಿಕಟ್ ಪ್ರಾಂತ್ಯದ ನ್ಯೂ ಹ್ಯಾವೆನ್ ಎಂಬಲ್ಲಿ ವಿತರಿಸಲಾಯಿತು.

1885: ಹೊಸದಾಗಿ ಪೂರ್ಣಗೊಳಿಸಲಾದ ವಾಷಿಂಗ್ಟನ್ ಮಾನ್ಯುಮೆಂಟ್ ಅನ್ನು ಸಮರ್ಪಿಸಲಾಯಿತು.

1896: ಆಸ್ಟ್ರೇಲಿಯಾದಲ್ಲಿ ಬೆಳೆಯಾದ ಬಾಬ್ ಫಿಟ್ಜ್ ಸಿಮ್ಮನ್ಸ್ ಎಂಬಾತ ಪೀಟರ್ ಮಹೇರ್ ಎಂಬ ಐರಿಷ್ ಸ್ಪರ್ಧಿಯನ್ನು ಸೋಲಿಸಿ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

1925: ‘ದಿ ನೂಯಾರ್ಕರ್’ ಪತ್ರಿಕೆ ತನ್ನ ಪ್ರಥಮ ಸಂಚಿಕೆಯನ್ನು ಪ್ರಕಟಿಸಿತು.

1947: ನ್ಯೂಯಾರ್ಕ್ ನಗರದ ಆಪ್ಟಿಕಲ್ ಸೊಸೈಟಿ ಆಫ್ ಅಮೆರಿಕದಲ್ಲಿ, ಎಡ್ವಿನ್ ಲ್ಯಾಂಡ್ ಅವರು ಮೊಟ್ಟ ಮೊದಲ ‘ಪೋಲರೈಡ್ ಲ್ಯಾಂಡ್ ಕ್ಯಾಮರಾ’ದ ಪ್ರಾತ್ಯಕ್ಷಿಕೆ ನೀಡಿದರು. ಈ ಕ್ಯಾಮರಾವು 60 ಸೆಕೆಂಡುಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರ ತೆಗೆದುಕೊಡುವ ಸಾಮರ್ಥ್ಯ ಹೊಂದಿತ್ತು.

1952: ವಿನ್ಸ್ಟನ್ ಚರ್ಚಿಲ್ ಅವರ ನೇತೃತ್ವದ ಬ್ರಿಟಿಷ್ ಸರ್ಕಾರವು ಜನರಿಗೆ ಮುಕ್ತ ಸ್ವಾತಂತ್ರ್ಯ ನೀಡುವುದಕ್ಕಾಗಿ ಗುರುತಿನ ಚೀಟಿಗಳನ್ನು ರದ್ದುಗೊಳಿಸಿತು.

1952: ಪಶ್ಚಿಮ ಪಾಕಿಸ್ತಾನದ ಡಾಕ್ಕಾ ವಿಶ್ವವಿದ್ಯಾಲಯದಲ್ಲಿ ಬೆಂಗಾಲಿ ಭಾಷಾ ಆಂದೋಲನ ನಡೆದು ವಿದ್ಯಾರ್ಥಿಗಳು ಚಳುವಳಿ ನಡೆಸಿದರು.

1972: ಸೋವಿಯತ್ ಯೂನಿಯನ್ನಿನ ಮಾನವರಹಿತ ಬಾಹ್ಯಾಕಾಶ ನೌಕೆ ‘ಲೂನಾ 20’ ಚಂದ್ರನ ಮೇಲಿಳಿಯಿತು.

1995: ಅಮೆರಿಕದ ಸ್ಟೀವ್ ಫಾಸೆಟ್ ಅವರು ದಕ್ಷಿಣಾ ಕೊರಿಯಾದಿಂದ ಬಲೂನಿನಲ್ಲಿ ಪಯಣಿಸಿ ಕೆನಡಾದ ಸಾಸ್ಕಟ್ ಚೆವನ್ ಎಂಬಲ್ಲಿ ಇಳಿದರು. ಹೀಗೆ ಅವರು, ಏಕಾಂಗಿಯಾಗಿ ಬಲೂನಿನಲ್ಲಿ ಪೆಸಿಫಿಕ್ ಸಾಗರದ ಮೇಲೆ ಪಯಣಿಸಿದ ಪ್ರಥಮರೆನಿಸಿದ್ದಾರೆ.

2006: ರಾಷ್ಟ್ರದ್ಯಂತ ಕುತೂಹಲ ಕೆರಳಿಸಿದ್ದ, ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನುಶರ್ಮಾ ಸೇರಿದಂತೆ ಎಲ್ಲಾ ಒಂಬತ್ತು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆ ಮಾಡಿತು.

2008: ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್ ಅವರಿಗೆ ಅಮೆರಿಕದ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯು ಫೆಲೋ ಗೌರವ ನೀಡಿತು.

2008: ಅಮೆರಿಕ ದೇಶವು 2006 ವರ್ಷದಲ್ಲಿ ತನ್ನ ಬೇಹುಗಾರಿಕಾ ಅವಶ್ಯಕತೆಗಾಗಿ ಬಾಹ್ಯಾಕಾಶಕ್ಕೆ ಕಳುಹಿಸಿ, ಸಂಪರ್ಕ ಕಳೆದುಕೊಂಡು ನಿರುಪಯೋಗಿಯಾಗಿದ್ದ ತನ್ನ ಉಪಗ್ರಹವೊಂದನ್ನು, ಅದು ವಿರೋಧಿ ಶಕ್ತಿಗಳ ಹಿಡಿತಕ್ಕೆ ಸಿಗಬಾರದೆಂಬ ಉದ್ದೇಶದಿಂದ ಕ್ಷಿಪಣಿಯ ಮೂಲಕವಾಗಿ ಹೊಡೆದುರುಳಿಸಿತು.

2009: ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಡಾ. ಶಿವರಾಮ ಕಾರಂತರು ರೂಪಿಸಿದ ‘ಯಕ್ಷರಂಗ’ದ ಹೊಸ ರೀತಿಯ ನೃತ್ಯ-ನಾಟಕ ಪ್ರಕಾರವಾದ ‘ಯಕ್ಷ ರಂಗ’ದ ಉಚಿತ ಪ್ರದರ್ಶನಗಳನ್ನು ಯಾವುದೇ ಹವ್ಯಾಸಿ ತಂಡವಾಗಲೀ, ಸಂಸ್ಥೆಯಾಗಲೀ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ‘ಯಕ್ಷ ರಂಗ’ದ ಉಚಿತ ಪ್ರದರ್ಶನ ನೀಡುವುದು ಕೃತಿಸ್ವಾಮ್ಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಎಸ್.ಬಿ.ಸಿನ್ಹಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿತು.

ಪ್ರಮುಖಜನನ/ಮರಣ:

1822: ರಿಚರ್ಡ್ ಸೌತ್ ವೆಲ್ ಬೌರ್ಕೆ ಐರ್ಲ್ಯಾಂಡಿನ ಡಬ್ಲಿನ್ ಎಂಬಲ್ಲಿ ಜನಿಸಿದ. ಐರಿಷ್ ರಾಜಕಾರಣಿ ಹಾಗೂ ಮೇಯೋವಿನ ಅಧಿಕಾರಿಯಾಗಿದ್ದ ಈತ ಭಾರತದ ವೈಸ್ ರಾಯ್ ಆಗಿದ್ದ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿ ನಡೆಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜ್ ಸ್ಥಾಪಿಸಿದ. ಕೃಷಿ ಮತ್ತು ವಾಣಿಜ್ಯಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಿದ.

1878: ಶ್ರೀ ಅರವಿಂದರ ಆಧ್ಯಾತ್ಮ ಸಹಕಾರಿಯಾಗಿ ‘ಮದರ್’ ಎಂದು ಪ್ರಸಿದ್ಧರಾದ ಮೀರಾ ಅಲ್ಫಾಸ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು. ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುತ್ತಿದ್ದ ದಂಪತಿಗಳ ಪುತ್ರಿಯಾಗಿದ್ದರೂ ಬಾಲ್ಯದಿಂದಲೂ ಕೆಲವು ಅಲೌಕಿಕ ಗುಣ ಸಂಪನ್ನರಾಗಿದ್ದ ಮೀರಾ ಅಲ್ಫಾಸಾ ಅವರು ತಮ್ಮ 36ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತರು. ಮುಂದೆ ಇವರು ಅರವಿಂದರ ಆಧ್ಯಾತ್ಮಿಕ ಕಾರ್ಯವನ್ನು ಮುಂದುವರೆಸಿ ವಿಸ್ತರಿಸಿದರು.

1894: ಭಾರತೀಯ ವಿಜ್ಞಾನಿಗಳಾದ ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಅವರು ಈಗ ಪಾಕಿಸ್ತಾನದ ಭಾಗವಾಗಿರುವ ಭೇರ ಎಂಬಲ್ಲಿ ಜನಿಸಿದರು. ಅನೇಕ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರಸಿದ್ಧರಾಗಿದ್ದ ಭಟ್ನಾಗರ್ ಅವರು ಹಲವಾರು ವೈಜ್ಞಾನಿಕ ಸಂಶೋಧನಾಲಯಗಳನ್ನು ಸ್ಥಾಪಿಸಿ ಸ್ವತಂತ್ರ ಭಾರತದ ‘ವೈಜ್ಞಾನಿಕ ಶಿಲ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಸಿ.ಎಸ್.ಐ.ಆರ್ ಸಂಸ್ಥೆಯ ಪ್ರಥಮ ಡೈರೆಕ್ಟರ್ ಜನರಲ್ ಹುದ್ದೆಯನ್ನು ನಿರ್ವಹಿಸಿದ್ದರಲ್ಲದೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ನಿನ ಪ್ರಥಮ ಚೇರ್ಮನ್ ಆಗಿದ್ದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧಕರಿಗೆ ಪ್ರತಿಷ್ಟಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ನೀಡಲಾಗುತ್ತಿದೆ.

1895: ಡ್ಯಾನಿಶ್ ವಿಜ್ಞಾನಿ ಹೆನ್ರಿಕ್ ಡ್ಯಾಮ್ ಅವರು ಕೋಪನ್ ಹ್ಯಾಗನ್ ಎಂಬಲ್ಲಿ ಜನಿಸಿದರು. ಕಾಗ್ಯುಲೆಶನ್ ವಿಟಮಿನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1943 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1896: ಆಧುನಿಕ ಹಿಂದೀ ಕವಿಗಳಲ್ಲಿ ಪ್ರಮುಖರಾದ ದೀನಬಂಧು ನಿರಾಲ ಅವರು ಬಂಗಾಳದ ಮಿದಾನ್ಪುರ್ ಎಂಬಲ್ಲಿ ಜನಿಸಿದರು.

1924: ಜಿಂಬಾಬ್ವೆಯ ಪ್ರಥಮ ಪ್ರಧಾನಿ ಮತ್ತು ಎರಡನೇ ರಾಷ್ಟ್ರಾಧ್ಯಕ್ಷರಾದ ರಾಬರ್ಟ್ ಮುಗಾಬೆ ದಕ್ಷಿಣ ರೊಡೇಶಿಯಾದ ಕುಟಾಮಾ ಎಂಬಲ್ಲಿ ಜನಿಸಿದರು. ಇವರು ಜಿಂಬಾಬ್ವೆಯ ಪ್ರಥಮ ಪ್ರಧಾನಿಯಾಗಿ 1980ರಿಂದ 1987ರ ಅವಧಿಯಲ್ಲಿ ಆಡಳಿತ ನಡೆಸಿದರು.

1976: ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮೈಸೂರಿನಲ್ಲಿ ಜನಿಸಿದರು. ಕನ್ನಡಿಗರಾದ ಇವರು ಬಹುತೇಕ ಭಾರತೀಯ ಭಾಷೆಗಳಲ್ಲಿ ಹಾಡಿ ನಾಡಿನ ಪ್ರಮುಖ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಆಸ್ಕರ್ ಪ್ರಶಸ್ತಿ ಗಳಿಸಿದ ‘ಜೈ ಹೋ’ ಗೀತೆ ಹಾಡಿದ ನಾಲ್ವರು ಪ್ರಮುಖರಲ್ಲಿ ಇವರೂ ಒಬ್ಬರು. ಹಲವು ಭಾಷೆಗಳ ಗಾಯನಕ್ಕೆ ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.

1926: ಡಚ್ ವಿಜ್ಞಾನಿ ಹೀಕ್ ಕಾಮೆರ್ ಲಿಂಗ್ ಓನ್ಸ್ ಅವರು ಲೀಡನ್ ನಗರದಲ್ಲಿ ನಿಧನರಾದರು. ಇವರಿಗೆ ‘ಹ್ಯಾಂಪ್ಸನ್ ಲಿಂಡೆ’ ಸಂಶೋಧನೆಗೆ 1913 ವರ್ಷದ ನೊಬೆಲ್ ಭೌತ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1941: ಕೆನಡಾದ ವೈದ್ಯಶಾಸ್ತ್ರಜ್ಞ ಫ್ರೆಡ್ರಿಕ್ ಬ್ಯಾಂಟಿಂಗ್ ಅವರು ಡೊಮಿನಿಯನ್ ಆಫ್ ನ್ಯೂಫೌಂಡ್ ಲ್ಯಾಂಡ್ ದೇಶದ ಮುಸ್ಗ್ರೇವ್ ಹಾರ್ಬರ್ ಬಳಿಯಲ್ಲಿ ನಿಧನರಾದರು. ‘ಇನ್ಸುಲಿನ್ ’ ಸಂಶೋಧಿಸಿದವರಲ್ಲಿ ಒಬ್ಬರಾದ ಇವರಿಗೆ 1923 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1968: ಆಸ್ಟ್ರೇಲಿಯಾದ ವೈದ್ಯಶಾಸ್ತ್ರಜ್ಞ ಹೊವರ್ಡ್ ಫ್ಲೋರಿ ಅವರು ಇಂಗ್ಲೆಂಡಿನ ಆಕ್ಸ್’ಫರ್ಡ್ನಲ್ಲಿ ನಿಧನರಾದರು. ‘ಪೆನ್ಸಿಲಿನ್ ’ ಸಂಶೋಧಿಸಿದವರಲ್ಲಿ ಒಬ್ಬರಾದ ಇವರಿಗೆ 1945 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1984: ನೊಬೆಲ್ ಪುರಸ್ಕೃತ ರಷ್ಯನ್ ಸಾಹಿತಿ ಮಿಖೈಲ್ ಶೊಲೋಖೊವ್ ಅವರು ಸೋವಿಯತ್ ಯೂನಿಯನ್ನಿನ ವ್ಯೋಷೆನ್ಕಾಯಾ ಎಂಬಲ್ಲಿ ನಿಧನರಾದರು.

1999: ಅಮೆರಿಕದ ಮಹಿಳಾ ಜೈವಿಕ ವಿಜ್ಞಾನಿ ಗೆರ್ಟ್ರೂಡ್ ಬಿ. ಎಲಿಯಾನ್ ಅವರು, ನಾರ್ತ್ ಕೆರೋಲಿನಾದ ಚಾಪೆಲ್ ಹಿಲ್ ಎಂಬಲ್ಲಿ ನಿಧನರಾದರು. ಈಕೆ ಹಲವಾರು ನವೀನ ವಿಧಾನಗಳಲ್ಲಿ ಹೊಸ ಹೊಸ ಔಷಧಗಳನ್ನು ಕಂಡುಹಿಡಿದಿದ್ದು, ಇವುಗಳಲ್ಲಿ ಏಡ್ಸ್ ರೋಗಕ್ಕೆ ಸಲ್ಲುವ ‘AZT’, ಆರ್ಗನ್ ಟ್ರಾನ್ಸ್ ಪ್ಲಾಂಟ್ಗಳಲ್ಲಿ ಉಪಯೋಗಿಸುವ ‘ಅಜತಿಯೋಪ್ರೈನ್’, ‘ಇಮ್ಯುನೋ ಸಪ್ರೆಸಿವ್ ಡ್ರಗ್ಸ್’ ಮುಂತಾದವು ಪ್ರಮುಖವಾಗಿವೆ. ಇವರಿಗೆ 1988ರ ವರ್ಷದಲ್ಲಿ, ಔಷದ ಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿನ ನೊಬೆಲ್ ಪುರಸ್ಕಾರ ಸಂದಿತ್ತು.

2007:  ಕನ್ನಡಪ್ರಭದ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಚ್. ಜಿ. ಪಟ್ಟಾಭಿರಾಮ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಅಪರಾಧ ವರದಿಗಾರಿಕೆಗೆ ಅವರು ಖ್ಯಾತರಾಗಿದ್ದರು.

Categories
e-ದಿನ

ಫೆಬ್ರವರಿ-20

ದಿನಾಚರಣೆಗಳು:
ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ
ವಿಶ್ವದಲ್ಲಿನ ಜನಸಮುದಾಯಗಳಲ್ಲಿನ ಅಸಮಾನತೆಯ ಸ್ವರೂಪಗಳಾದ ಬಡತನ, ಪ್ರತ್ಯೇಕೀಕರಣ, ನಿರುದ್ಯೋಗ ಮುಂತದಾವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಸಲುವಾಗಿ ಫೆಬ್ರುವರಿ 20 ದಿನವನ್ನು ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ಯನ್ನಾಗಿ ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪ್ರಮುಖಘಟನಾವಳಿಗಳು:

1792: ಅಮೆರಿಕದಲ್ಲಿ ‘ಯುನೈಟೆಡ್ ಸ್ಟೇಟ್ಸ್ ಪೋಸ್ಟ್ ಆಫೀಸ್ ಇಲಾಖೆ’ ಸ್ಥಾಪನೆಗಾಗಿ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರು ‘ಪೋಸ್ಟಲ್ ಸರ್ವೀಸ್ ಕಾಯಿದೆ’ಗೆ ಸಹಿ ಹಾಕಿದರು.

1835: ಭೂಕಂಪದಲ್ಲಿ ಚಿಲಿ ದೇಶದ ಕಾನ್ಸೆಪ್ಸಿಯಾನ್ ನಾಶಗೊಂಡಿತು.

1869: ಸಿಸಿರ್ ಕುಮಾರ್ ಘೋಷ್ ಅವರು ಕೋಲ್ಕತ್ತಾದಲ್ಲಿ ‘ಅಮೃತಬಜಾರ್ ಪತ್ರಿಕಾ’ ಆರಂಭಿಸಿದರು.

1872: ನ್ಯೂಯಾರ್ಕ್ ನಗರದಲ್ಲಿ ಮೆಟ್ರೋಪಾಲಿಟನ್ ಮ್ಯೂಸಿಯಮ್ ಆಫ್ ಆರ್ಟ್ ಆರಂಭಗೊಂಡಿತು.

1947: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರು ‘ಜವಾಬ್ದಾರಿಯುತ ಭಾರತೀಯರ ಕೈಗಳಿಗೆ’ ಅಧಿಕಾರ ಹಸ್ತಾಂತರಿಸುವುದಾಗಿ ಪ್ರಕಟಿಸಿದರು.

1962: ಅಮೆರಿಕದ ಜಾನ್ ಗ್ಲೆನ್ ಅವರು ಫ್ರೆಂಡ್ ಶಿಪ್-7 ಬಾಹ್ಯಾಕಾಶ ವಾಹನದಲ್ಲಿ ಕೇವಲ 4 ಗಂಟೆ 55 ನಿಮಿಷಗಳಲ್ಲಿ ಭೂಮಿಗೆ 3 ಪ್ರದಕ್ಷಿಣೆ ಹಾಕಿದರು.

1998: ಅಮೆರಿಕದ ಸ್ಕೇಟರ್ ತಾರಾ ಲಿಪಿನ್ಸ್ಕಿ ಅವರು 1998ರ ಜಪಾನಿನ ಚಳಿಗಾಲದ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯರೆನಿಸಿದರು.

2006: ಧಾರವಾಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರೂ ಸೇರಿದಂತೆ ವಿವಿಧ ಭಾಷೆಗಳ ಒಟ್ಟು 20 ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಅನುವಾದ ಪ್ರಶಸ್ತಿಗೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಖ್ವಾರತ್-ಉಲ್-ಹೈದರ್ ಅವರ ‘ಪಥ್ ಝಡ್ ಕೀ ಆವಾಜ್’ ಕೃತಿಯ ಅನುವಾದವಾದ ‘ಋತುವಿನ ಸ್ವರಗಳು’ ಕೃತಿಗೆ ಪಂಚಾಕ್ಷರಿ ಹಿರೇಮಠ ಅವರಿಗೆ ಈ ಪ್ರಶಸ್ತಿ ಸಂದಿದೆ.

2008: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇರಳದ ಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದ ಬರಹಗಾರ ಸುನಿಲ್ ಗಂಗೋಪಾಧ್ಯಾಯ ಅವರು ಗೆಲುವು ಸಾಧಿಸಿದರು.

2008: ವಿಶ್ವದ ಮೊದಲ ಬ್ರಾಡ್ಗೇಜ್ ಕೋಚ್ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆ ಹೊಂದಿರುವ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿರುವ ಭೂಪಾಲಿನ ‘ಶಾನ್-ಎ-ಭೂಪಾಲ್’ ರೈಲು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೊಡುವ ಅತ್ಯಂತ ಅನ್ವೇಷಣಾತ್ಮಕ, ಅಪೂರ್ವ ಪ್ರವಾಸೋದ್ಯಮ ಯೋಜನಾ ಪ್ರಶಸ್ತಿ ಪಡೆದುಕೊಂಡಿತು.

2009: ಭಾಷಾ ವೈವಿಧ್ಯೆತೆಯಿಂದ ಕೂಡಿದ ಭಾರತದಲ್ಲಿ ಸುಮಾರು 196 ಆಡು ಭಾಷೆಗಳು ವಿನಾಶದ ಅಂಚಿನಲ್ಲಿವೆ, ಅಲ್ಲದೆ ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳು ವಿನಾಶದ ಅಂಚಿನಲ್ಲಿರುವ ರಾಷ್ಟ್ರಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿದೆ ಎಂದು ಯುನೆಸ್ಕೊ ವರದಿ ತಿಳಿಸಿತು. ನಂತರದ ಸ್ಥಾನದಲ್ಲಿ ಅಮೆರಿಕ (192) ಮತ್ತು ಇಂಡೋನೇಷ್ಯಾ (147) ಇವೆ. ಅಂತರರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯನ್ನು ಯುನೆಸ್ಕೊ ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು. ಜಗತ್ತಿನಲ್ಲಿ ಸುಮಾರು ಆರು ಸಾವಿರ ಭಾಷೆಗಳಿದ್ದು ಅವುಗಳಲ್ಲಿ 2,500 ಭಾಷೆಗಳು ವಿನಾಶದ ಅಂಚಿನಲ್ಲಿವೆ. ಸುಮಾರು 200 ಭಾಷೆಗಳನ್ನು ಕೇವಲ 10 ಮಂದಿ ಹಾಗೂ 178 ಭಾಷೆಗಳನ್ನು 10ರಿಂದ 50 ಮಂದಿ ಮಾತ್ರ ಬಳಸುತ್ತಾರೆ. ಕಳೆದ ಮೂರು ಪೀಳಿಗೆಯ ಅಂತರದಲ್ಲಿ 200 ಬಾಷೆಗಳು ಸಂಪೂರ್ಣ ನಾಶವಾಗಿವೆ. 538 ಭಾಷೆಗಳು ಸಂಪೂರ್ಣ ನಾಶದ ಅಂಚಿನಲ್ಲಿದ್ದರೆ 632 ಭಾಷೆಗಳು ವಿನಾಶದ ಅಪಾಯದಲ್ಲಿವೆ.

2013: ಸೌರವ್ಯೂಹದ ಅತ್ಯಂತ ಪುಟ್ಟದಾದ ಎಕ್ಸ್ಟ್ರಾ ಸೋಲಾರ್ ಗ್ರಹ ‘ಕೆಪ್ಲರ್-37ಬಿ’ (extrasolar planet, Kepler-37b) ಅನ್ವೇಷಿಸಲ್ಪಟ್ಟಿತು.

ಪ್ರಮುಖಜನನ/ಮರಣ:

1844: ಕೆನಡಾದ ನೌಕಾಯಾತ್ರಿ ಜೊಶುವಾ ಸ್ಲೊಕಮ್ ಅವರು ನೊವಾಸ್ಕೋಟಿಯಾದ ಮೌಂಟ್ ಹ್ಯಾನ್ಲಿ ಎಂಬಲ್ಲಿ ಜನಿಸಿದರು. ಮಹಾನ್ ಸಾಹಸಿಯಾದ ಈತ ಏಕಾಂಗಿಯಾಗಿ ಜಗತ್ತಿನ ಸುತ್ತ ನಾವೆಯಲ್ಲಿ ಪಯಣಿಸಿದ ಮೊದಲ ವ್ಯಕ್ತಿ.

1901: ಅಮೆರಿಕದ ಪ್ರಸಿದ್ಧ ಕಟ್ಟಡ ವಿನ್ಯಾಸಕ ಲೂಯಿಸ್ ಕಾಹ್ನ್ ಜನಿಸಿದರು. ಅಮೆರಿಕದ ಸಾಲ್ಕ್ ಇನ್ಸ್ಟಿಟ್ಯೂಟ್, ಕಿಂಬೆಲ್ ಆರ್ಟ್ ಮ್ಯೂಸಿಯಂ ಮತ್ತು ಬಾಂಗ್ಲಾದೇಶದ ಪಾರ್ಲಿಮೆಂಟ್ ಭವನಗಳು ಇವರ ಪ್ರಸಿದ್ಧ ವಿನ್ಯಾಸಗಳಲ್ಲಿ ಸೇರಿವೆ.

1901: ಭಾರತೀಯ ನ್ಯಾಯವಾದಿ ಮತ್ತು ಬ್ರಿಟಿಷ್ ಭಾರತದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ರಂಗ ರಾವ್ ಬೊಬ್ಬಿಲಿ ಎಂಬಲ್ಲಿ ಜನಿಸಿದರು. 1930ರ ವರ್ಷದಲ್ಲಿ ಜಸ್ಟಿಸ್ ಪಾರ್ಟಿ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಇವರು ಮುಂದೆ ಸ್ವತಂತ್ರ ಭಾರತದಲ್ಲಿ ಸಂವಿಧಾನ ರಚನಾ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದರು.

1931: ಡಾ. ಜಿ. ಎಸ್. ಸಿದ್ಧಲಿಂಗಯ್ಯನವರು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ಜಿ.ಎಸ್. ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಶಿಕ್ಷಕರಾಗಿ, ವಿದ್ವಾಂಸರಾಗಿ, ಬರಹಗಾರರಾಗಿ, ಭಾಷಣಕಾರರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಇವರಿಗೆ ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ, ಬಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲಾವರು ಗೌರವಗಳು ಸಂದಿವೆ.

1932: ಹೆಗ್ಗೋಡು ಅಂದರೆ ಸುಬ್ಬಣ್ಣ, ಸುಬ್ಬಣ್ಣ ಎಂದರೆ ಹೆಗ್ಗೋಡು ಎಂಬಷ್ಟರವರೆಗೆ ನಂಟು. ಸುಮಾರು ಐದು ದಶಕಗಳ ಕಾಲ ಅವರು 16 ಜುಲೈ 2005ರಲ್ಲಿ ನಿಧನರಾಗುವವರೆಗೆ ಈ ಪುಟ್ಟ ಗ್ರಾಮದಲ್ಲಿ ನಡೆಸಿದ ನಾಟಕ, ಸಿನಿಮಾ ಮತ್ತು ಸಾಹಿತ್ಯ ಚಟುವಟಿಕೆಗಳ ಕ್ರಾಂತಿಯಿಂದ ಅದು ಜಗತ್ತಿನ ಕಲಾ ಭೂಪಟದಲ್ಲಿ ಗುರುತು ಹಿಡಿಯುವಷ್ಟು ಮಹತ್ವದ ಕಲಾ ಕೇಂದ್ರವಾಗಿ ಬೆಳೆದಿದೆ. ಸುಮಾರು 600 ಜನಗಳಿದ್ದ ಈ ಚಿಕ್ಕ ಗ್ರಾಮ ಅತ್ಯಂತ ಪ್ರಬುದ್ಧ ಅಭಿರುಚಿ, ರಸಿಕತೆಗೆ ಹೆಸರಾಗಿದೆ. ಈ ದೊಡ್ಡ ಬದಲಾವಣೆಯನ್ನು ತಂದವರು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣ.

1937: ಜರ್ಮನಿಯ ಜೈವಿಕ ವಿಜ್ಞಾನಿ ರಾಬರ್ಟ್ ಹ್ಯೂಬರ್ ಮ್ಯೂನಿಚ್ ನಗರದಲ್ಲಿ ಜನಿಸಿದರು. ಕ್ಯಾನೋಬ್ಯಾಕ್ಟೀರಿಯಾ ಮತ್ತು ಕ್ರಿಸ್ಟಲೋಗ್ರಫಿ ಕುರಿತಾದ ಸಂಶೋಧನೆ ನಡೆಸಿರುವ ಇವರಿಗೆ 1988 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1954: ಕನ್ನಡ ಸಾಹಿತ್ಯ ಲೋಕದ ಸಾಂಸ್ಕೃತಿಕ ವಿಮರ್ಶಕರೆಂದೇ ಪ್ರಖ್ಯಾತರಾದ ಡಿ.ಆರ್. ನಾಗರಾಜ್ ದೊಡ್ಡಬಳ್ಳಾಪುರದಲ್ಲಿ ಜನಿಸಿದರು. ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವುದರ ಜೊತೆಗೆ ಉತ್ತಮ ವಾಗ್ಮಿಗಳಾಗಿದ್ದ ಇವರು ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕೇವಲ ತಮ್ಮ 44ನೇ ವಯಸ್ಸಿನಲ್ಲಿ ನಿಧನರಾದ ಇವರಿಗೆ ಆರ್ಯಭಟ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಪ್ರಶಸ್ತಿಗಳೇ ಅಲ್ಲದೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಅರ್ಪಿತಗೊಂಡಿತು.

1967:  ಅಮೆರಿಕದ ನಟ ಮತ್ತು ಕಾರ್ಯಕರ್ತ ಅಂಡ್ರ್ಯೂ ಶ್ಯೂ ಜನಿಸಿದರು. ಇವರು ‘ಡೂ ಸಂತಿಂಗ್’ ಎಂಬ ಸಂಘಟನೆ ಸ್ಥಾಪಿಸಿದರು.

1907: ಫ್ರೆಂಚ್ ರಸಾಯನ ಶಾಸ್ತ್ರಜ್ಞ ಹೆನ್ರಿ ಮೊಯ್ಸಾನ್ ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರಿಗೆ ಫ್ಲೌರಿನ್ ಕುರಿತಾದ ಸಂಶೋಧನೆಗೆ 1906 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1916: ಸ್ವೀಡನ್ ದೇಶದ ಪತ್ರಕರ್ತ ಮತ್ತು ರಾಜಕಾರಣಿ ಕ್ಲಾಸ್ ಪಾಂಟಸ್ ಅರ್ನಾಲ್ಡ್ ಸನ್ ನಿಧನರಾದರು. ‘ಸ್ವೀಡಿಷ್ ಪೀಸ್ ಅಂಡ್ ಆರ್ಬಿಟ್ರೇಷನ್ ಸೊಸೈಟಿ’ ಸ್ಥಾಪಿಸಿದ ಇವರಿಗೆ 1908ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1972: ಜರ್ಮನ್-ಅಮೇರಿಕನ್ ಮಹಿಳಾ ಭೌತವಿಜ್ಞಾನಿ ಮಾರಿಯಾ ಗೋಪರ್ಟ್ ಮೇಯರ್ ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋ ಎಂಬಲ್ಲಿ ನಿಧನರಾದರು. ಪ್ರಥಮ ಭೌತಶಾಸ್ತ್ರದ ನೊಬೆಲ್ ಪುರಸ್ಕೃತೆ ಮೇಡಂ ಕ್ಯೂರಿ ನಂತರದಲ್ಲಿ ಇವರು ಭೌತಶಾಸ್ತ್ರದ ಎರಡನೇ ಮಹಿಳಾ ನೊಬೆಲ್ ಪುರಸ್ಕೃತೆ ಎನಿಸಿದ್ದಾರೆ. ಇವರು ಶೆಲ್ ಮಾಡೆಲ್ ಫಾರ್ ಆಟೋಮಿಕ್ ನ್ಯೂಕ್ಲಿಯಸ್ ಸಂಶೋಧನೆಗೆ ಪ್ರಸಿದ್ಧರಾಗಿದ್ದಾರೆ.

1976: ಫ್ರೆಂಚ್ ನ್ಯಾಯವಾದಿ ಮತ್ತು ನ್ಯಾಯಮೂರ್ತಿಗಳಾದ ರೆನೆ ಕ್ಯಾಸಿನ್ ಪ್ಯಾರಿಸ್ ನಗರದಲ್ಲಿ ನಿಧನರಾದರು. ವಿಶ್ವ ಸಂಸ್ಥೆಯಲ್ಲಿ ‘ಯೂನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್’ ರಚಿಸಿದ ಇವರಿಗೆ 1968 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

2015: ಮರಾಠಿಯಲ್ಲಿ ‘ಶಿವಾಜಿ ಕೌನ್ ಹೋತಾ’ ಕೃತಿಯಿಂದ ಖ್ಯಾತರಾದ ಭಾರತೀಯ ಸಾಹಿತಿ ಗೋವಿಂದ್ ಪನ್ಸಾರೆ ಅವರು ತಮ್ಮ ಪತ್ನಿ ಸಮೇತ ಮುಂಬೈನಲ್ಲಿ ಹಂತಕರ ಗುಂಡಿಗೆ ಬಲಿಯಾದರು. ಅವರ ‘ಶಿವಾಜಿ ಕೌನ್ ಹೋತಾ’ ಕೃತಿ ವಿವಿಧ ಭಾಷೆಗಳ ಅನುವಾದಗಳು ಸೇರಿ ಸುಮಾರು ಒಂದೂವರೆ ಲಕ್ಷ ಮಾರಾಟವಾಗಿದ್ದವು. ಕಮ್ಯೂನಿಸ್ಟ್ ಮನೋಭಾವದವರಾದ ಇವರು ಈ ಕೃತಿಯೇ ಅಲ್ಲದೆ ಇನ್ನೂ 20 ಕೃತಿಗಳನ್ನು ರಚಿಸಿದ್ದರು.

Categories
e-ದಿನ

ಫೆಬ್ರವರಿ-19

ಛತ್ರಪತಿ ಶಿವಾಜಿ ಜಯಂತಿ
ಫೆಬ್ರುವರಿ 19, 1630ರಂದು ಜುನ್ನಾರ್ ಸಮೀಪದ ಶಿವನೇರಿಯಲ್ಲಿ ಶಿವಾಜಿ ಜನಿಸಿದರು. ಭಾರತದ ಸಾಂಸ್ಕೃತಿಕ ಪರಂಪರೆಗಳು ಸ್ಥಳೀಯ ಭಾರತೀಯ ರಾಜರ ಕ್ಷುಲ್ಲಕತನ ಮತ್ತು ಈ ದೇಶವನ್ನು ಆಕ್ರಮಿಸಿದ ಪರಕೀಯರ ಅಂಧ ಮತಶ್ರದ್ಧೆಗಳ ದುರಾಕ್ರಮಣಕ್ಕೊಳಗಾಗಿದ್ದಾಗ ಅದನ್ನು ಚತುರತೆಯಿಂದ ಎದುರಿಸಿ ಮುಂದಿನ ಜನಾಂಗಗಳು ಭಾರತೀಯ ಸಂಸ್ಕೃತಿಯ ಗಾಳಿಯನ್ನು ಸವಿಯುವಂತೆ ಉಳಿಸಿ ಹೋದವರು ಶಿವಾಜಿ ಮಹಾರಾಜರು. ಈ ದಿನವನ್ನು ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1600: ಪೆರುವಿನಲ್ಲಿ ಸಂಭವಿಸಿದ ಜ್ವಾಲಾಮುಖಿಯು ದಕ್ಷಿಣ ಅಮೆರಿಕದ ಚರಿತ್ರೆಯಲ್ಲೇ ಅತ್ಯಂತ ಭೀಕರವಾದುದಾಗಿತ್ತು. 1600 ವರ್ಷದ ಫೆಬ್ರವರಿ 19ರಂದು ಪ್ರಾರಂಭಗೊಂಡ ಈ ಜ್ವಾಲಾಮುಖಿಯು ಮುಂದೆ ಮಾರ್ಚ್ ತಿಂಗಳವರೆವಿಗೂ ಮುಂದುವರೆದು 1500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ಹತ್ತು ಹಳ್ಳಿಗಳು ಸುಟ್ಟು ಬೂದಿಯಾದವು. ಈ ಜ್ವಾಲಾಮುಖಿಯಲ್ಲಿ ಉಂಟಾದ ವಿಷಾನಿಲದಿಂದ ಉಂಟಾದ ದುಷ್ಪರಿಣಾಮದಿಂದ ಈ ಪ್ರದೇಶದ ಸುತ್ತಮುತ್ತಲಿನ ರೈತ ಸಮುದಾಯಗಳು ಚೇತರಿಸಿಕೊಳ್ಳಲು ಸುಮಾರು 150 ವರ್ಷಗಳೇ ಬೇಕಾದವು.

1674: ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ‘ಮೂರನೇ ಆಂಗ್ಲೋ ಡಚ್ ಯುದ್ಧ’ವನ್ನು ಕೊನೆಗಾಣಿಸಿ ‘ಟ್ರೀಟಿ ಆಫ್ ವೆಸ್ಟ್ ಮಿನಿಸ್ಟರ್’ ಒಪ್ಪಂದಕ್ಕೆ ಸಹಿಮಾಡಿದವು. ಇದರ ಪ್ರಕಾರ ಡಚ್ ವಸಾಹತುವಾಗಿದ್ದ ನ್ಯೂ ಅಮ್ಸ್ಟರ್ಡ್ಯಾಮ್ ಅನ್ನು ಇಂಗ್ಲೆಂಡಿಗೆ ಹಸ್ತಾಂತರಿಸಲಾಯಿತು. ಮುಂದೆ ಇದರ ಹೆಸರು ನ್ಯೂಯಾರ್ಕ್ ಎಂದು ಬದಲಾಯಿತು.

1726: ರಷ್ಯಾದಲ್ಲಿ ಸುಪ್ರೀಂ ಪ್ರೈವಿ ಕೌನ್ಸಿಲ್ ಸ್ಥಾಪನೆಗೊಂಡಿತು

1807: ಅಮೆರಿಕದ ಮಾಜಿ ಉಪಾಧ್ಯಕ್ಷ ಆರೋನ್ ಬರ್ ರಾಜದ್ರೋಹದ ಆಪಾದನೆಯ ಮೇಲೆ ಅಲಬಾಮಾದ ವೇಕ್ ಫೀಲ್ಡ್ ಎಂಬಲ್ಲಿ ಬಂಧಿತನಾದ.

1878: ಥಾಮಸ್ ಆಲ್ವಾ ಎಡಿಸನ್ ಅವರು ಫೋನೋಗ್ರಾಫ್ಗೆ ಪೇಟೆಂಟ್ ಪಡೆದರು.

1948: ಆಗ್ನೇಯ ಏಷ್ಯಾದಲ್ಲಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಕರ ಸಮಾವೇಶವು ಕೋಲ್ಕತ್ತಾದಲ್ಲಿ ಜರುಗಿತು.

1985: ವಿಲಿಯಂ ಜೆ ಶ್ರೋಡರ್ ಅವರು ಕೃತಕ ಹೃದಯವನ್ನು ಪಡೆದು ಆಸ್ಪತ್ರೆಯನ್ನು ಬಿಟ್ಟ ಮೊಟ್ಟ ಮೊದಲಿಗರೆನಿಸಿದರು. ಕೆಂಟಕಿಯ ಲೌಸಿವಿಲ್ಲೇ ಎಂಬಲ್ಲಿನ ಹ್ಯೂಮಾನಾ ಹಾರ್ಟ್ ಇನ್ಸ್ಟಿಟ್ಯೂಟ್ ಇಂಟರ್ ನ್ಯಾಷನಲ್ ಎಂಬಲ್ಲಿ ಅವರಿಗೆ ಈ ಕೃತಕ ಹೃದಯದ ಕಸಿ ನೆರವೇರಿತು. ಈ ಶಸ್ತ್ರಕ್ರಿಯೆಯ ನಂತರದಲ್ಲಿ ಅವರು 620 ದಿನಗಳವರೆಗೆ ಜೀವಿಸಿದ್ದರು.

1986: ಶ್ರೀಲಂಕಾ ಸೈನ್ಯವು 80 ತಮಿಳು ಕೃಷಿ ಕಾರ್ಮಿಕರನ್ನು ಹತ್ಯೆ ಮಾಡಿತು.

2002: ನಾಸಾದ ಮಂಗಳಗ್ರಹಕ್ಕೆ ರವಾನಿಸಲ್ಪಟ್ಟ ಒಡಿಸ್ಸಿ ತನಿಖಾ ಯಂತ್ರವು ಥರ್ಮಲ್ ಎಮಿಷನ್ ಇಮೇಜಿಂಗ್ ವ್ಯವಸ್ಥೆ ಬಳಸಿ ಮಂಗಳ ಗ್ರಹದ ಮೇಲ್ಪದರದ ಚಿತ್ರಣಗಳನ್ನು ಸೆರೆಹಿಡಿಯತೊಡಗಿತು.

2006: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿಗೆ ನಡೆಯುವ ಹನ್ನೆರಡು ದಿನಗಳ ಮಹಾಮಸ್ತಕಾಭಿಷೇಕವು ಕೊನೆಗೊಂಡಿತು.

2006: ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರವನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದ ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ ‘ಜಿಲ್ಲಾಂಡ್ಸ್- ಪೋಸ್ಟೆನ್’, ಈ ವ್ಯಂಗ್ಯಚಿತ್ರಗಳಿಗೆ ಜಗತ್ತಿನಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಕೇಳಿತು.

2007: ಬೆಳಗಾವಿ ಜಿಲ್ಲೆಯ ರಂ.ಶಾ. ಲೋಕಾಪುರ ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ ‘ಜ್ಞಾನೇಶ್ವರಿ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು. ಮರಾಠಿ ಸಂತ ಜ್ಞಾನೇಶ್ವರ ಅವರು 1290ರಲ್ಲಿ ರಚಿಸಿದ್ದ ಸಾಹಿತ್ಯವನ್ನು ‘ಕನ್ನಡ ಜ್ಞಾನೇಶ್ವರಿ’ ಎಂಬ ಕೃತಿ ರಚನೆ ಮೂಲಕ ಲೋಕಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

2008: ಅಂತರ್ಜಾತೀಯ ವಿವಾಹವಾಗುವ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗಿದ್ದ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಮುಂಬೈ ಉಚ್ಛ ನ್ಯಾಯಾಲಯವು ತೀರ್ಪು ನೀಡಿತು.

2008: ಖ್ಯಾತ ಸಂಸ್ಕೃತ ಕವಿ ಸ್ವಾಮಿ ರಾಮಭದ್ರಾಚಾರ್ಯ ಅವರಿಗೆ ಕೆ. ಕೆ. ಬಿರ್ಲಾ ಪ್ರತಿಷ್ಠಾನದ 2007ನೇ ಸಾಲಿನ 16ನೇ ವಾಚಸ್ಪತಿ ಪುರಸ್ಕಾರ ಘೋಷಿಸಲಾಯಿತು. ರಾಮಭದ್ರಾಚಾರ್ಯರ ‘ಶ್ರೀ ಭಾರ್ಗವಾರಾಘವೀಯಂ’ ಮಹಾಕಾವ್ಯಕ್ಕೆ ಈ ಪ್ರಶಸ್ತಿ ಲಭಿಸಿತು. 2ನೇ ವರ್ಷದಲ್ಲೇ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಅವರು ಹಿಂದಿ ಮತ್ತು ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಅವರನ್ನು ಅಶಕ್ತರ ವಿ.ವಿ.ಯ ಜೀವಮಾನದ ಕುಲಪತಿಗಳನ್ನಾಗಿ ನೇಮಿಸಿದೆ.

ಪ್ರಮುಖಜನನ/ಮರಣ:

1473: ನಮ್ಮ ಜಗತ್ತಿಗೆ ಭೂಮಿ ಕೇಂದ್ರವಲ್ಲ, ಸೂರ್ಯನೇ ಕೇಂದ್ರ ಎಂಬ ವಾದವನ್ನು ಜನಗಳ ಮುಂದೆ ಸ್ಥಾಪಿಸಿದ ವ್ಯಕ್ತಿ ನಿಕೊಲಾಸ್ ಕೋಪರ್ನಿಕಸ್. ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಇವರು ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು. ತುಂಬಾಬ ಕರುಣಾಮಯಿಯಾಗಿದ್ದ ಈತ ಬಡಬಗ್ಗರಿಗೆ ಪುಕ್ಕಟೆ ಔಷಧ ನೀಡುತ್ತಿದ್ದರು.

1630: ಭೋಂಸ್ಲೆ ಮನೆತನದ ರಾಜರಾದ ಛತ್ರಪತಿ ಶಿವಾಜಿ ಅವರು ಜುನ್ನಾರ್ ಸಮೀಪದ ಶಿವನೇರಿಯಲ್ಲಿ ಶಹಾಜಿರಾಜ್ ಬೋಂಸ್ಲೆ ಮತ್ತು ಜೀಜಾಬಾಯಿ ದಂಪತಿಗಳ ಮಗನಾಗಿ ಜನಿಸಿದರು.

1833: ಸ್ವಿಟ್ಜರ್ಲ್ಯಾಂಡ್ ದೇಶದ ಶಾಂತಿ ಕಾರ್ಯಕರ್ತ ಎಲಿಯೆ ಡುಕೋಮುನ್ ಅವರು ಜಿನೀವಾದಲ್ಲಿ ಜನಿಸಿದರು. ಅಂತರರಾಷ್ಟ್ರೀಯ ಶಾಂತಿಗಾಗಿ ‘ಇಂಟರ್ನ್ಯಾಷನಲ್ ಡಿ ಲಾ ಪೈಕ್ಸ್’ ಎಂಬ ಅಂತರರಾಷ್ಟ್ರೀಯ ಶಾಂತಿ ಕಚೇರಿಯನ್ನು ಸ್ಥಾಪಿಸಿದ ಇವರಿಗೆ 1902 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1859: ಸ್ವೀಡನ್ನಿನ ಭೌತ ಮತ್ತು ರಸಾಯನಶಾಸ್ತ್ರ ತಜ್ಞರಾದ ಸ್ವಾಂಟೆ ಆಗಸ್ಟ್ ಆರ್ಹೆನಿಯಸ್ ಅವರು ವಿಲ್ಕ್ ಕ್ಯಾಸಲ್ ಎಂಬಲ್ಲಿ ಜನಿಸಿದರು. ಸ್ವೀಡಿಷ್ ಭೌತ ರಾಸಾಯನಿಕ ತಜ್ಞರಾದ ಈತ ‘ಗ್ರೀನ್ ಹೌಸ್ ಎಫೆಕ್ಟ್’ ಅಂದರೆ ಕಾರ್ಬನ್ ಡೈ ಆಕ್ಸೈಡ್ನಿಂದ ವಾತಾವರಣದ ಬಿಸಿ ಹೆಚ್ಚುವುದನ್ನು ಮೊದಲ ಬಾರಿಗೆ ಗುರುತಿಸಿದರು. 1903ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ವಿಜ್ಞಾನ ಪುರಸ್ಕಾರ ಪಡೆದ ಇವರು, ಸ್ವೀಡನ್ನಿನ ಪ್ರಪ್ರಥಮ ನೊಬೆಲ್ ಪುರಸ್ಕೃತರೆನಿಸಿದರು.

1901: ಭಾರತೀಯ ಅಮೆರಿಕನ್ ಗಣಿತಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಅವರು ಕೋಲ್ಕತ್ತದಲ್ಲಿ ಜನಿಸಿದರು. ಇವರ ಡಿಸೈನ್ ಥಿಯರಿ. ಫೈನೈಟ್ ಜಾಮೆಟ್ರಿ ಮತ್ತು ಥಿಯರಿ ಆಫ್ ಎರರ್ ಕರೆಕ್ಟಿಂಗ್ ಕೋಡ್ಸ್ ಬಹುಜನಪ್ರಿಯಗೊಂಡಿವೆ. ಇವುಗಳಲ್ಲಿ ಬಿ.ಸಿ.ಹೆಚ್ ಕೋಡ್ಸ್ ಎಂಬುದು ಇವರ ‘ಬೋಸ್’ ಹೆಸರನ್ನು ತನ್ನದಾಗಿಸಿಕೊಂಡು ಇವರಿಗೆ ಗೌರವ ಸಲ್ಲಿಸಿದೆ.

1906: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾಗಿದ್ದು, ಗುರೂಜಿ ಎಂದೇ ಜನಪ್ರಿಯರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ ಅವರು ರಾಮ್ ಟೆಕ್ ಎಂಬಲ್ಲಿ ಜನಿಸಿದರು. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಾರತದಲ್ಲಿ ಬಲಶಾಲಿಯಾಗಿ ಕಟ್ಟಿದರು.

1930: ಸಂಗೀತ, ನೃತ್ಯ ಮತ್ತು ಸಂಸ್ಕೃತಿ ಪ್ರಧಾನ ಕಥಾನಕಗಳನ್ನು ಚಲನಚಿತ್ರಗಳಲ್ಲಿ ಪ್ರತಿಬಿಂಬಿಸಿ ಪ್ರಸಿದ್ಧರಾದ ಕೆ. ವಿಶ್ವನಾಥ್ ಅವರು ಈಗಿನ ಆಂಧ್ರಪ್ರದೇಶಕ್ಕೆ ಸೇರಿದ ರೇಪಲ್ಲೇ ಎಂಬಲ್ಲಿ ಜನಿಸಿದರು. ಐದು ರಾಷ್ಟ್ರ ಪ್ರಶಸ್ತಿಗಳು, ಆರು ಆಂಧ್ರಪ್ರದೇಶದ ನಂದಿ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

1941: ಅಮೆರಿಕದ ಭೌತವಿಜ್ಞಾನಿ ಡೇವಿಡ್ ಗ್ರಾಸ್ ವಾಷಿಂಗ್ಟನ್ ನಗರದಲ್ಲಿ ಜನಿಸಿದರು. ‘ಅಸಿಂಟೋಟಿಕ್ ಫ್ರೀಡಮ್’ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿದೆ.

1943: ಇಂಗ್ಲಿಷ್ ಜೈವಿಕ ವಿಜ್ಞಾನಿ ಟಿಮ್ ಹಂಟ್ ಚೆಶೈರ್ ಬಳಿಯ ನೆಸ್ಟನ್ ಎಂಬಲ್ಲಿ ಜನಿಸಿದರು. ‘ಪ್ರೋಟೀನ್ ಮಾಲೆಕ್ಯುಲ್ಸ್ ಥಟ್ ಕಾಂಟ್ರೋಲ್ ದಿ ಡಿವಿಷನ್ ಆಫ್ ಸೆಲ್ಸ್’ ಸಂಶೋಧನೆಗಾಗಿ ಇವರಿಗೆ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1956: ಅಮೆರಿಕದ ಜೀವವಿಜ್ಞಾನಿ ರಾಡೆರಿಕ್ ಮೆಕಿನ್ನನ್ ಅವರು ಮೆಸಾಚುಸೆಟ್ಸ್ ಪ್ರಾಂತ್ಯದ ಬರ್ಲಿಂಗ್ ಟನ್ ಎಂಬಲ್ಲಿ ಜನಿಸಿದರು. ‘ಅಯಾನ್ ಚಾನೆಲ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2003 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1915: ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ರಾಜಕೀಯ ನಾಯಕರೂ ಮತ್ತು ಸಮಾಜ ಸುಧಾರಕರೂ ಆದ ಗೋಪಾಲಕೃಷ್ಣ ಗೋಖಲೆಯವರು 48ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ಜನಿಸಿದರು. “ಅಹಿಂಸೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಸಂಸ್ಥೆಗಳ ಆಡಳಿತದಲ್ಲಿ ಮೌಲ್ಯಯುತ ಕಾರ್ಯನಿರ್ವಹಣಾ ವಿಧಾನದ ಅನುಸರಣೆ”ಗಳನ್ನು ಪ್ರತಿಪಾದಿಸಿದ ಇವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು.

1951: ಫ್ರೆಂಚ್ ಕಾದಂಬರಿಕಾರ, ಪ್ರಬಂಧಕಾರ ಮತ್ತು ನಾಟಕಕಾರ ಅಂಡ್ರೆ ಗೈಡ್ ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರಿಗೆ 1947ರ ವರ್ಷದಲ್ಲಿ ನೊಬೆಲ್ ಸಾಹಿತ್ಯಕ ಪುರಸ್ಕಾರ ಸಂದಿತ್ತು.

1952: ನಾರ್ವೆ ದೇಶದ ಕಾದಂಬರಿಕಾರ, ಕವಿ, ನಾಟಕಕಾರ ಕ್ನಟ್ ಹ್ಯಾಮ್ಸನ್ ಅವರು ನೊರ್ಹೋಮ್ ಬಳಿಯ ಗ್ರಿಮ್ ಸ್ಟ್ಯಾಡ್ ಎಂಬಲ್ಲಿ ನಿಧನರಾದರು. ಇವರಿಗೆ 1920ರ ವರ್ಷದಲ್ಲಿ ನೊಬೆಲ್ ಸಾಹಿತ್ಯಕ ಪುರಸ್ಕಾರ ಸಂದಿತ್ತು.

1956: ಭಾರತೀಯ ಸ್ವಾತಂತ್ರ್ಯಯೋಧರೂ, ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಧ್ಯಕ್ಷರೂ ಆದ ಆಚಾರ್ಯ ನರೇಂದ್ರ ದೇವ್ ನಿಧನರಾದರು.

1988: ಫ್ರೆಂಚ್ ಅಮೆರಿಕನ್ ವಿಜ್ಞಾನಿ ಅಂಡ್ರೆ ಫ್ರೆಡ್ರಿಕ್ ಕೋರ್ನಾಂಡ್ ಅವರು ಮಸಾಚುಸೆಟ್ಸ್ ಪ್ರದೇಶದ ಗ್ರೇಟ್ ಬ್ಯಾರಿಂಗ್ ಟನ್ ಎಂಬಲ್ಲಿ ನಿಧನರಾದರು. ಕಾರ್ಡಿಯಾಕ್ ಕ್ಯಾಥೀಟರೈಸೇಶನ್ ಸಂಶೋಧನೆಗಾಗಿ ಇವರಿಗೆ 1956ರಲ್ಲಿ ನೊಬೆಲ್ ವೈದ್ಯಕೀಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

2007: ಇಂಗ್ಲಿಷ್ ಕೆನಡಾ ನೃತ್ಯ ಕಲಾವಿದೆ ಮತ್ತು ಸಂಯೋಜಕಿ ಸೇಲಿಯಾ ಫ್ರಾಂಕಾ ಒಟ್ಟಾವಾ ನಗರದಲ್ಲಿ ನಿಧನರಾದರು. ಇವರು ನ್ಯಾಷನಲ್ ಬ್ಯಾಲೆಟ್ ಆಫ್ ಕೆನಡಾ ಸ್ಥಾಪಿಸಿದರು.

2013: ಅಮೆರಿಕದ ಭೌತವಿಜ್ಞಾನಿ ರಾಬರ್ಟ್ ಕೊಲೆಮನ್ ರಿಚರ್ಡ್ ಸನ್ ಅವರು ನ್ಯೂಯಾರ್ಕಿನ ಇತಾಕಾ ಎಂಬಲ್ಲಿ ನಿಧನರಾದರು. ಇವರಿಗೆ 1996 ವರ್ಷದಲ್ಲಿ ಸೂಪರ್ ಫ್ಲೂಯಿಡಿಟಿ ಇನ್ ಹೀಲಿಯಂ-3 ಸಂಶೋಧನೆಗಾಗಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

Categories
e-ದಿನ

ಫೆಬ್ರವರಿ-18

ಪ್ರಮುಖಘಟನಾವಳಿಗಳು:

3102: ಕೃಷ್ಣಾವತಾರವು ಅಂತ್ಯಗೊಂಡು ಕಲಿಯುಗದ ಪ್ರಾರಂಭ

1861: ಇಟಲಿಯ ಏಕೀಕರಣವು ಬಹುತೇಕ ಸಂಪೂರ್ಣಗೊಂಡು, ಪೀಡ್ಮಾಂಟಿನ ಎರಡನೇ ವಿಕ್ಟರ್ ಎಮ್ಮಾನ್ಯುಯೆಲ್ ಅವರು ಇಟಲಿಯ ರಾಜರಾದರು.

1885: ಅಮೆರಿಕದಲ್ಲಿ ಮಾರ್ಕ್ ಟ್ವೈನ್ ಅವರ ‘ಅಡ್ವೆಂಚರ್ಸ್ ಆಫ್ ಹಕ್ಕಲ್ ಬೆರ್ರಿ ಫಿನ್’ ಪ್ರಕಟಣೆಗೊಂಡಿತು.

1911: ಹೆನ್ರಿ ಪೆಕ್ವೆಟ್ ಎಂಬ 23 ವರ್ಷದ ವಿಮಾನ ಚಾಲಕರು, ಸುಮಾರು 6,500 ಅಂಚೆ ಪತ್ರಗಳನ್ನು ಅಲಹಾಬಾದಿನಿಂದ ಹತ್ತು ಕಿಲೋಮೀಟರ್ ದೂರವಿರುವ ನೈನಿ ಎಂಬಲ್ಲಿಗೆ ವಿಮಾನದಲ್ಲಿ ಕೊಂಡೊಯ್ದರು. ಇದು ಪ್ರಪ್ರಥಮ ವಿಮಾನ ಅಂಚೆ (airmail) ಎಂಬ ಘಟನೆಯಾಗಿ ದಾಖಲಾಗಿದೆ.

1930: ಅಮೆರಿಕದ ಖಗೋಳ ಶಾಸ್ತ್ರಜ್ಞ ಕ್ಲೈಡ್ ಡಬ್ಲ್ಯೂ ಟೊಂಬಾಗ್ ಎಂಬಾತ ಜನವರಿಯಲ್ಲಿ ತೆಗೆದ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ‘ಪ್ಲೂಟೋ’ವನ್ನು ಅನ್ವೇಷಿಸಿದ.

1930: ಎಲ್ಮ್ ಫಾರ್ಮ್ ಒಲ್ಲಿಯೇ ಎಂಬ ಹಸು ಮೊದಲ ಬಾರಿಗೆ ವಿಮಾನವೊಂದರಲ್ಲಿ ಪ್ರಯಾಣಿಸಿದ ಕೀರ್ತಿಗೆ ಪಾತ್ರವಾಯಿತಲ್ಲದೆ, ಮೊದಲಬಾರಿಗೆ ವಿಮಾನದಲ್ಲಿ ಹಾಲು ಕರೆಯಲ್ಪಟ್ಟ ಹಸುವೆಂದು ಸಹಾ ಹೆಸರಾಯಿತು.

1946: ಮುಂಬೈ ಬಂದರಿನಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ರಾಯಲ್ ಇಂಡಿಯನ್ ನೇವಿಗೆ ಸೇರಿದ ನಾವಿಕರು ದಂಗೆ ಎದ್ದರು. ಇದು ಇಡೀ ಎಲ್ಲ ಬ್ರಿಟಿಷ್ ಪ್ರಾಂತ್ಯಗಳಿಗೆ ಹಬ್ಬಿ 78 ಹಡಗುಗಳು ಮತ್ತು ಇಪ್ಪತ್ತು ಬಂದರುಗಳಲ್ಲಿನ ಸಂಸ್ಥೆಗಳಲ್ಲಿದ್ದ 20,000 ಮಂದಿ ನಾವಿಕರು ಪಾಲ್ಗೊಳ್ಳುವಂತಾಯಿತು.

1977: ಸ್ಪೇಸ್ ಷಟಲ್ ಎಂಟರ್ ಪ್ರೈಸ್ ಪ್ರಯೋಗಾತ್ಮಕ ಬಾಹ್ಯಾಕಾಶ ವಾಹನವನ್ನು ಬೋಯಿಂಗ್ 747 ವಿಮಾನದ ಮೇಲೆ ಪರೀಕ್ಷಣಾ ನೆಲೆಗೆ ಕೊಂಡೊಯ್ಯಲಾಯಿತು.

2006: ತಮಿಳುನಾಡು ಸರ್ಕಾರ ತಮಿಳು ಕಲಿಕೆಯನ್ನು ಖಡ್ಡಾಯಗೊಳಿಸಿರುವ ವಿಚಾರದಲ್ಲಿ ಮದ್ರಾಸಿನ ಹೈಕೋರ್ಟು ಮಧ್ಯೆ ಪ್ರವೇಶಿಸಲು ನಿರಾಕರಿಸಿತು. ತಮಿಳುನಾಡಿನಲ್ಲಿ ತಮಿಳು ಕಡ್ಡಾಯಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಕನ್ಯಾಕುಮಾರಿ ಜಿಲ್ಲೆಯ ‘ಮಲಯಾಳ ಸಮಾಜ’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ಇದೇ ವೇಳೆ ವಜಾ ಮಾಡಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಿರುವುದನ್ನು ಕೋರ್ಟ್ ಈ ಸಂದರ್ಭದಲ್ಲಿ ಉಲ್ಲೇಖಿಸಿತು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಮಾತೃಭಾಷೆಯಲ್ಲಿಯೇ ಕಲಿಸುವ ಹಕ್ಕಿಗೆ ಈ ಕಾಯ್ದೆ ತೊಡಕಾಗುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟಪಡಿಸಿತು.

2007: ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ ಉಗ್ರಗಾಮಿಗಳು ಇಟ್ಟಿದ್ದ ಬಾಂಬು ಹರ್ಯಾಣಾದ ಪಾಣಿಪತ್ ಎಂಬಲ್ಲಿ ಸ್ಪೋಟಗೊಂಡು 68 ಮಂದಿ ಸಾವಿಗೀಡಾದರು.

2007: ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ‘ಕುವೆಂಪು ಕನ್ನಡ ತಂತ್ರಾಂಶ’ವನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಬಾಂಗ್ಲಾದೇಶದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ಅವರು ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದರು. ತಿಂಗಳ ಕೊನೆಯಲ್ಲಿ ಈ ಪಕ್ಷಕ್ಕೆ ‘ನಾಗರಿಕ ಶಕ್ತಿ’ ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

2007: ಭಾರತದ ಅಂಚೆ ಕಚೇರಿಯ ಪ್ರಪ್ರಥಮ ಅಂಚೆ ಚೀಟಿ ‘ಸಿಂಧೆ ಡಾಕ್ಸ್’ ನವದೆಹಲಿಯಲ್ಲಿ ಐದು ಸಾವಿರ ಡಾಲರುಗಳಿಗೆ ಮಾರಾಟಗೊಂಡಿತು. ಬ್ರಿಟಿಷ್ ಆಡಳಿತವಿದ್ದ ಭಾರತದ ಸಿಂಧ್ ಪ್ರಾಂತ್ಯದಲ್ಲಿ, ಅಂಚೆ ಸೇವೆ ಆರಂಭವಾಗುವುದರೊಂದಿಗೆ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂತು. 1854ರಲ್ಲಿ ಸಿಂಧೆ ಡಾಕ್ಸ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಬ್ರಿಟಿಷರು ಸಿಂಧ್ ಪ್ರಾಂತ್ಯವನ್ನು ಸಿಂಧೆ ಎಂದು, ಡಾಕ್ (ಅಂಚೆ) ಅನ್ನು ಡಾಕ್ಸ್ ಎಂದೂ ಉಚ್ಚರಿಸುತ್ತಿದ್ದುದರಿಂದ ಅಂಚೆ ಚೀಟಿಯನ್ನು ‘ಸಿಂಧೆ ಡಾಕ್ಸ್’ ಎಂದು ಕರೆಯುವುದು ರೂಢಿಯಲ್ಲಿ ಬಂತು. ವಿಶ್ವದಲ್ಲಿ 1840ರಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದ 14 ವರ್ಷಗಳ ನಂತರ ಅಂದರೆ 1854ರಲ್ಲಿ ಪ್ರಥಮ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸಿಂಧ್, ಕರಾಚಿ ಮತ್ತು ಮುಂಬೈ ಮಾರ್ಗವಾಗಿ ರವಾನೆಯಾಗುತ್ತಿದ್ದ ಪತ್ರಗಳ ಮೇಲೆ ಅಂಟಿಸಲಾಗುತ್ತಿತ್ತು.

2008: ಮಾತೃಭಾಷೆ ಬೋಧನೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಭಾಷೆ ಕಡ್ಡಾಯಗೊಳಿಸುವುದರಿಂದ ಏನೂ ತೊಂದರೆಯಾಗದು ಎಂದು ಹೇಳಿತು. ಶಾಲೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಆದೇಶ ಹೆಚ್ಚು ಮಹತ್ವ ಪಡೆಯಿತು.

2009: ಗುಲ್ಬರ್ಗ ವಿಭಾಗದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಡು ಬಡವರಿಗೆ ಉಚಿತ ಆರೋಗ್ಯ ವಿಮಾ ಸೌಕರ್ಯ ಒದಗಿಸುವ ‘ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ’ಗೆ ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿತು. ಗುಲ್ಬರ್ಗ, ಬೀದರ್, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 16 ಲಕ್ಷ ಮಂದಿ ಫಲಾನುಭವಿಗಳಿಗೆ ಸುಮಾರು 300 ವಿವಿಧ ರೀತಿಯ ರೋಗಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ಇದರ ಪೂರ್ಣ ವಿಮಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲು ನಿರ್ಧರಿಸಿತು.

2013: ಶಸ್ತ್ರ ಸಜ್ಜಿತ ದರೋಡೆಕೋರರು ಬೆಲ್ಜಿಯಮ್ಮಿನ ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ 50 ಮಿಲಿಯನ್ ಡಾಲರ್ ಮೌಲ್ಯದ ವಜ್ರಗಳ ಲೂಟಿ ಮಾಡಿದರು.

ಪ್ರಮುಖಜನನ/ಮರಣ:

1486: ಭಾರತದಲ್ಲಿ ಚೈತನ್ಯ ಮಹಾಪ್ರಭುಗಳು ಜನಿಸಿದರು. ಇವರು ಗೌಡೀಯ ವೈಷ್ಣವ ಪದ್ಧತಿಯ ಸ್ಥಾಪಕರೆನಿಸಿದ್ದಾರೆ. ಭಾಗವತ ಪುರಾಣ ಮತ್ತು ಭಗವದ್ಗೀತೆಯಲ್ಲಿನ ಭಕ್ತಿಯೋಗವನ್ನು ಇವರು ಹೆಚ್ಚು ಬೋಧಿಸಿದರು. ಇವರ ಅನುಯಾಯಿಗಳಿಗೆ ಇವರು ಅತ್ಯಂತ ಕರುಣಾಪೂರಿತ ಕೃಷ್ಣನ ಸ್ವರೂಪ ಎಂಬ ಭಾವ ಹುಟ್ಟಿಸಿದ್ದರು ಎಂದು ಹೇಳಲಾಗಿದೆ.

1745: ಇಟಲಿಯ ಭೌತತಜ್ಞ ಅಲೆಸ್ಸಾಂಡ್ರೊ ವೋಲ್ಟಾ ಅವರು ಡಚ್ಚಿ ಆಫ್ ಮಿಲನ್ ಬಳಿಯ ಕೊಮೋ ಎಂಬಲ್ಲಿ ಜನಿಸಿದರು.ಇವರು ಸಂಶೋಧಿಸಿದ ಎಲೆಕ್ಟ್ರಿಕ್ ಬ್ಯಾಟರಿ ನಿರಂತರ ವಿದ್ಯುತ್ತಿನ ಮೊದಲ ಮೂಲವಾಯಿತು.

1836:  ಶ್ರ್ಹೀ ರಾಮಕೃಷ್ಣ ಪರಮಹಂಸರು ಪಶ್ಚಿಮ ಬಂಗಾಳದ ಕಾಮಾಪುಕುರ ಎಂಬಲ್ಲಿ ಜನಿಸಿದರು. ಈ ಜಗತ್ತಿನಲ್ಲಿ ನಾನು ದೇವರನ್ನು ಕಂಡಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ ಅಪೂರ್ವವ್ಯಕ್ತಿಯಾದ ಪರಮಹಂಸರನ್ನು ನಾಸ್ತಿಕ ಮತ್ತು ಆಸ್ತಿಕರೆಂಬ ಭೇದವಿಲ್ಲದೆ ಪ್ರಾಜ್ಞರೆಲ್ಲರೂ ಶ್ರೇಷ್ಠರೆಂಬ ಗೌರವಭಾವ ಹೊಂದಿದ್ದಾರೆ. ಇವರ ಬದುಕಿನ ರೀತಿ ಮತ್ತು ಬೋಧನೆಗಳು ಅವರ ಶಿಷ್ಯರಾದ ಮಹೇಂದ್ರನಾಥ ಗುಪ್ತ ಅವರು ರಚಿಸಿದ ‘ಶ್ರೀ ರಾಮಕೃಷ್ಣ ವಚನ ವೇದ’ ಗ್ರಂಥದಲ್ಲಿದೆ. ಇವರ ಬೋಧನೆಗಳನ್ನು ಇವರ ಆಪ್ತ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರು ವಿಶ್ವದಲ್ಲಿ ಪ್ರಸಿದ್ಧಿ ಪಡಿಸಿದರು.

1848: ಸ್ಟೈನ್ಡ್ ಗ್ಲಾಸ್ ಆರ್ಟಿಸ್ಟ್ ಅಥವಾ ಗಾಜಿನ ಕಲಾಕೃತಿ ರಚನೆಗೆ ಪ್ರಸಿದ್ಧರಾದ ಕಲಾಕಾರ ಲೂಯಿಸ್ ಕಂಫರ್ಟ್ ಟಿಫಾನಿ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.

1889: ಹರ್ಡೇಕರ್ ಮಂಜಪ್ಪನವರು ಬನವಾಸಿಯಲ್ಲಿ ಜನಿಸಿದರು. ಅವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದರು. ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 3ನೆ ಜನವರಿ 1947ರಂದು ನಿಧನರಾದರು.

1898: ಇಟಲಿಯ ವ್ಯಾಪಾರಿ ಮತ್ತು ರೇಸ್ ಕಾರ್ ಚಾಲಕ ಎಂಜೋ ಫೆರ್ರಾರಿ ಅವರು ಮೊಡೆನಾ ಎಂಬಲ್ಲಿ ಜನಿಸಿದರು. ಅವರು ಪ್ರಸಿದ್ಧ ಕಾರ್ ನಿರ್ಮಾಣ ಸಂಸ್ಥೆ ಫೆರ್ರಾರಿ ಸ್ಥಾಪಿಸಿದರು.

1918: ಡಾ. ಎಂ. ಗೋಪಾಲಕೃಷ್ಣ ಅಡಿಗರು ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು. ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್, ಕಬೀರ್ ಸಂಮಾನ್ ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು ತಮ್ಮ ಕಿರಿಯ ತಲೆಮಾರಿನವರ ಮೇಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲುಗಳು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ.

1931: ಅಮೆರಿಕದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಮತ್ತು ‘ದಿ ವಿಜರ್ಡ್ ಆಫ್ ಐಡಿ’ ಸ್ಥಾಪಕ ಜಾನಿ ಹಾರ್ಟ್ ಅವರು ಅಮೆರಿಕದ ಎಂಡಿಕಾಟ್ ಎಂಬಲ್ಲಿ ಜನಿಸಿದರು.

1931: ಅಮೆರಿಕದ ಮಹಿಳಾ ಕಾದಂಬರಿಗಾರ್ತಿ, ನಾಟಕಗಾರ್ತಿ ಮತ್ತು ಚಿಂತಕಿ ಟೋನಿ ಮಾರಿಸನ್ ಲೋಹಿಯೋ ಬಳಿಯ ಲೊರಾಯನ್ ಎಂಬಲ್ಲಿ ಜನಿಸಿದರು. ಅವರಿಗೆ 1993ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1931: ಪ್ರಸಿದ್ಧ ಬ್ರಿಟಿಷ್ ಉದ್ಯಮಿ ಮತ್ತು ಕೊಡುಗೈ ಕೊಡುಗೆದಾರ ಸ್ವರಾಜ್ ಪಾಲ್ ಅವರು ಪಂಜಾಬಿನ ಜಲಂಧರ್ ಪಟ್ಟಣದಲ್ಲಿ ಜನಿಸಿದರು. ಬ್ರಿಟಿಷ್ ಸರ್ಕಾರವು ಇವರಿಗೆ ಅನೇಕ ಗೌರವಯುತವಾದ ಸ್ಥಾನಗಳನ್ನು ನೀಡಿತ್ತು. ಭಾರತ ಸರ್ಕಾರದ ಪದ್ಮಭೂಷಣ ಗೌರವದ ಜೊತೆಗೆ ಅನೇಕ ರಾಷ್ಟ್ರಗಳ ಗೌರವಯುತ ಪ್ರಶಸ್ತಿಗಳೂ ಇವರಿಗೆ ಸಂದವು.

1934: ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಸಾಹಿತಿ ಮತ್ತು ಗೀತರಚನೆಕಾರ ಚಿ. ಉದಯಶಂಕರ್ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿಟ್ನಹಳ್ಳಿ ಎಂಬಲ್ಲಿ ಜನಿಸಿದರು. ಹಲವು ಸಹಸ್ರ ಗೀತೆಗಳನ್ನು ರಚಿಸಿರುವ ಅವರ ಅನೇಕ ಗೀತೆಗಳು ಇಂದಿಗೂ ಪ್ರಸಿದ್ಧವಾಗಿವೆ. ಇವರು ಕೆಲವೊಂದು ಚಿತ್ರಗಳಲ್ಲಿ ಪಾತ್ರ ನಿರ್ವಹಣೆಯನ್ನೂ ಮಾಡಿದ್ದರು.

1957: ಜರ್ಮನಿಯ ಅಪ್ರತಿಮ ಅಥ್ಲೆಟ್ ಮರಿಟಾ ಕೋಚ್ ಪೂರ್ವ ಜರ್ಮನಿಯ ವಿಸ್ಮರ್ ಎಂಬಲ್ಲಿ ಜನಿಸಿದರು. ಈಕೆ ಹೊರಾಂಗಣ ಆಟಗಳಲ್ಲಿ 16 ಜಾಗತಿಕ ದಾಖಲೆಗಳನ್ನು ಹಾಗೂ ಒಳಾಂಗಣ ಕ್ರೀಡೆಗಳಲ್ಲಿ 14 ಜಾಗತಿಕ ದಾಖಲೆಗಳನ್ನು ನಿರ್ಮಿಸಿದರು.

1546: ಜರ್ಮನಿಯ ಪ್ರೊಟೆಸ್ಟೆಂಟ್ ಸುಧಾರಣಾವಾದಿ ನಾಯಕ ಮಾರ್ಟಿನ್ ಲೂಥರ್ ತಮ್ಮ 62ನೇ ವಯಸ್ಸಿನಲ್ಲಿ ಜರ್ಮನಿಯ ಐಸೆಲ್ ಬೆನ್ ಎಂಬಲ್ಲಿ ನಿಧನರಾದರು

1564: ಅಮರ ಕಲಾಕಾರರಾದ ಮೈಕೆಲೇಂಜೆಲೋ ಇಟಲಿಯ ರೋಮ್ ನಗರದಲ್ಲಿ ಜನಿಸಿದರು. ಮಹಾನ್ ಚಿತ್ರಕಾರ, ಶಿಲ್ಪಿ, ವಿನ್ಯಾಸಕಾರ ಹಾಗೂ ಕವಿಯೆನಿಸಿರುವ ಮೈಕೆಲೇಂಜೆಲೋ ಇಟಲಿಯ ಭವ್ಯ ಪುನರುತ್ಥಾನ ಕಾಲದ ಮೇರುಸದೃಶ ಕಲಾವಿದರೆಂದು ಪ್ರಸಿದ್ಧರಾಗಿದ್ದಾರೆ.

Categories
e-ದಿನ

ಫೆಬ್ರವರಿ-17

ಪ್ರಮುಖಘಟನಾವಳಿಗಳು:

364: ರೋಮನ್ ದೊರೆ ಜೋವಿಯನ್ನನು ಕಾನ್ಸ್ಟಾಂಟಿನೋಪಾಲ್ ಇಂದ ಹಿಂದಿರುಗುವ ಮಾರ್ಗ ಮಧ್ಯೆ, ತಾನಿಳಿದುಕೊಂಡಿದ್ದ ವಿಶ್ರಾಂತಿ ಶಿಬಿರದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದ.

1600: ರೋಮ್ ಸಾಮ್ರಾಜ್ಯದ ಕ್ಯಾಂಪೊ ಡಿ’ಫಿಯೋರಿ ಎಂಬಲ್ಲಿ ತತ್ವಜ್ಞಾನಿ ಜಿಯಾರ್ಡನೋ ಬ್ರೂನೋ ಅವರನ್ನು ನಾಸ್ತಿಕವಾದಿಯೆಂದು ಜೀವಂತವಾಗಿ ದಹಿಸಲಾಯಿತು.

1753: ಸ್ವೀಡನ್ ದೇಶದಲ್ಲಿ ಫೆಬ್ರವರಿ 17ರ ಮಾರನೆಯ ದಿನವೇ ಮಾರ್ಚ್ 1ರ ಬೆಳಗಾಯಿತು! ಕಾರಣವಿಷ್ಟೇ. ಅದು ಫೆಬ್ರವರಿ 17ರಂದು ಜೂಲಿಯನ್ ಕ್ಯಾಲೆಂಡರ್ ಬಳಕೆಯನ್ನು ನಿಲ್ಲಿಸಿ ಮಾರನೆಯ ದಿನದಿಂದ ಗ್ರೆಗ್ರೋರಿಯನ್ ಕ್ಯಾಲೆಂಡರ್ ಪದ್ಧತಿಯನ್ನು ಅಳವಡಿಸಿಕೊಂಡಿತು.

1801: ಚುನಾವಣೆಯಲ್ಲಿ ಥಾಮಸ್ ಜೆಫರ್ ಸನ್ ಮತ್ತು ಆರನ್ ಬರ್ ಇಬ್ಬರಿಗೂ ಒಂದೇ ಸಮನಾದ ಮತಗಳು ಬಂದು ‘ಟೈ’ ನಿರ್ಮಾಣವಾದ ಗೊಂದಲವು ನಿವಾರಣೆಗೊಂಡಿತು. ಜೆಫರ್ ಸನ್ ಅವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಮತ್ತು ಆರನ್ ಬರ್ ಅವರನ್ನು ಅಮೆರಿಕದ ಪ್ರತಿನಿಧಿ ಸಭೆಯ ಉಪಾಧ್ಯಕ್ಷರನ್ನಾಗಿಯೂ ನೆಮಿಸುವುದರ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಯಿತು.

1863: ಯುದ್ಧ ಗಾಯಾಳುಗಳಿಗೆ ಪರಿಹಾರ ನೀಡುವುದಕ್ಕಾಗಿ ಜಿನೀವಾದ ಕೆಲವೊಂದು ಪ್ರಜೆಗಳು ಒಂದು ಗೂಡಿ ‘ಇಂಟರ್ ನ್ಯಾಷನಲ್ ಕಮಿಟಿ ಫಾರ್ ರಿಲೀಫ್ ಟು ದಿ ವೂಂಡೆಡ್’ ಸ್ಥಾಪಿಸಿದರು. ಇದು ಮುಂದೆ ‘ಇಂಟರ್ ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್’ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿತು.

1864: ಎಚ್. ಎಲ್. ಹನ್ಲಿ ಎಂಬುದೊಂದು ಜಲಾಂತರ್ಗಾಮಿ ನೌಕೆ (ಸಬ್ಮೆರಿನ್). ಇದಕ್ಕೆ ಆ ಹೆಸರು ಬಂದದ್ದು ಅದನ್ನು ನಿರ್ಮಿಸಿದ ಎಚ್.ಎಲ್. ಹನ್ಲಿ ಎಂಬಾತನಿಂದ. ಇದು ಅಮೆರಿಕದ ಆಂತರಿಕ ಕ್ರಾಂತಿಯಲ್ಲಿ (American Civl War) ಕನ್ಫೆಡರೇಟ್ ಸ್ಟೇಟ್ಸ್ ಪಡೆಯಿಂದ ಚಲಿತಗೊಂಡು ಯು.ಎಸ್.ಎಸ್. ಹೌಸಟಾನಿಕ್ ಎಂಬ ಅಮೆರಿಕದ ದೊಡ್ಡ ಯುದ್ಧ ಹಡಗನ್ನು ಮುಳುಗಿಸಿತು. ಹೀಗೆ ಯುದ್ಧದಲ್ಲಿ ಪಾಲ್ಗೊಂಡು ಯುದ್ಧ ಹಡಗನ್ನು ಮುಳುಗಿಸಿದ ಪ್ರಥಮ ಸಬ್ ಮೆರಿನ್ ಎಂಬ ದಾಖಲೆ ಎಚ್.ಎಲ್. ಹನ್ಲಿ ಜಲಾಂತರ್ಗಮಿಯದಾಗಿದೆ.

1904: ಪ್ರಸಿದ್ಧ ‘ಮೆಡಾಮಾ ಬಟರ್ ಫ್ಲೈ’ ಒಪೇರಾ ಮಿಲನ್ ನಗರದ ಲಾ ಸ್ಕಾಲಾ ಎಂಬಲ್ಲಿ ತನ್ನ ಪ್ರಾರಂಭಿಕ ಪ್ರದರ್ಶನವನ್ನು ನೀಡಿತು.

1933: ಅಮೆರಿಕದ ಥಾಮಸ್ ಜೆ.ಸಿ. ಮಾರ್ಟಿನ್ ಅವರು ‘ನ್ಯೂಸ್ ವೀಕ್’ ವಾರಪತ್ರಿಕೆಯ ಪ್ರಕಟಣೆಯನ್ನು ಪ್ರಾರಂಭಿಸಿದರು.

1980: ಕ್ರಿಸ್ತೋಫ್ ವೀಲಿಕಿ ಮತ್ತು ಲೆಜೆಕ್ ಕಿಚಿ ಅವರು ಪ್ರಥಮ ಬಾರಿಗೆ ಚಳಿಗಾಲದಲ್ಲಿ ಮೌಂಟ್ ಎವರೆಸ್ಟ್ ಆರೋಹಣ ಮಾಡಿದ ಕೀರ್ತಿಗೆ ಪಾತ್ರರಾದರು.

1996: ಫಿಲೆಡೆಲ್ಫಿಯಾದಲ್ಲಿ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರು ಡೀಪ್ ಬ್ಲೂ ಸೂಪರ್ ಕಂಪ್ಯೂಟರ್ ಅನ್ನು ಚೆಸ್ ಪಂದ್ಯದಲ್ಲಿ ಸೋಲಿಸಿದರು.

ಪ್ರಮುಖಜನನ/ಮರಣ:

1781: ಸ್ಟೆತೋಸ್ಕೊಪ್ ಕಂಡು ಹಿಡಿದ ವೈದ್ಯರಾದ ರೆನೆ ಲೇನ್ನೆಕ್ ಅವರು ಫ್ರಾನ್ಸಿನ ಕ್ವಿಂಪರ್ ಎಂಬಲ್ಲಿ ಜನಿಸಿದರು.

1844: ಅಮೆರಿಕದ ಉದ್ಯಮಿ ‘ಮಾಂಟ್ಗೋಮೇರಿ ವಾರ್ಡ್’ ಸ್ಥಾಪಕರಾದ ಆರನ್ ಮಾಂಟ್ಗೋಮೇರಿ ವಾರ್ಡ್ ಅವರು ನ್ಯೂ ಜೆರ್ಸಿಯ ಚಾಥಾಮ್ ಎಂಬಲ್ಲಿ ಜನಿಸಿದರು. ಮಾಂಟ್ಗೋಮೇರಿ ವಾರ್ಡ್ ಪ್ರಸಿದ್ಧ ಡಿಪಾರ್ಟ್ಮೆಂಟಲ್ ಸ್ಟೋರ್ ಮತ್ತು ಮೈಲ್ ಆರ್ಡರ್ ವಹಿವಾಟು ನಡೆಸುವ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿತ್ತು.

1874: ಥಾಮಸ್ ಜಾನ್ ವಾಟ್ಸನ್ ಅವರು ಪ್ರಖ್ಯಾತ ಐ.ಬಿ.ಎಮ್ ಸಂಸ್ಥೆಯ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿ ಆ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ದ ಮಹತ್ಸಾಧನೆಗಾಗಿ ಪ್ರಸಿದ್ಧರಾಗಿದ್ದಾರೆ. ಅವರು ನ್ಯೂಯಾರ್ಕ್ ಪ್ರಾಂತ್ಯದ ಕ್ಯಾಂಬೆಲ್ ಎಂಬಲ್ಲಿ ಜನಿಸಿದರು.

1888: ಪ್ರಸಿದ್ಧ ಜರ್ಮನ್ ಭೌತವಿಜ್ಞಾನಿ ಓಟ್ಟೋ ಸ್ಟರ್ನ್ ಅವರು ಈಗಿನ ಪೋಲೆಂಡ್ ಭಾಗವಾಗಿರುವ ಸೊಹ್ರಾವ್ ಎಂಬಲ್ಲಿ ಜನಿಸಿದರು. 1925ರಿಂದ 1945ರ ಅವಧಿಯಲ್ಲಿ ಇವರ ಹೆಸರು 82 ಬಾರಿ ನೊಬೆಲ್ ಭೌತಶಾಸ್ತ್ರಕ್ಕೆ ಪ್ರಸ್ತಾಪಗೊಂಡು, ಕಡೆಗೆ 1943ರ ವರ್ಷದಲ್ಲಿ ಅದು ಅವರನ್ನರಸಿಬಂದಿತು.

1899: ಬಂಗಾಳಿ ಕವಿ, ಕಥೆಗಾರ ಮತ್ತು ಪ್ರಬಂಧಕಾರರಾದ ಜಿಬನಾನಂದ ದಾಸ್ ಅವರು ಬ್ರಿಟಿಷ್ ಭಾರತದ ಬಂಗಾಳ ಪ್ರಾಂತ್ಯದ ಬರಿಸಾಲ್ ಎಂಬಲ್ಲಿ ಜನಿಸಿದರು. ತಮ್ಮ ಜೀವಿತಕಾಲದಲ್ಲಿ ಅಷ್ಟೊಂದು ಪ್ರಾಮುಖ್ಯತೆಯಲ್ಲಿಲ್ಲದಿದ್ದ ಇವರು ಮುಂದೆ, ರವೀಂದ್ರನಾಥ ಠಾಗೂರರ ಕಾಲದ ನಂತರದ ಮಹತ್ವದ ಕವಿ ಎಂಬ ಪ್ರಸಿದ್ಧಿಗೆ ಪಾತ್ರರಾಗಿದ್ದಾರೆ.

1955: ಚೀನಾದ ಸಾಹಿತಿ ಮೊ ಯಾನ್ ಅವರು ಶಾನ್ಡಾಂಗ್ ಬಳಿಯ ಗವೋಮಿ ಎಂಬಲ್ಲಿ ಜನಿಸಿದರು. ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿದೆ.

1987: ಪ್ರಸಿದ್ಧ ಭಾರತೀಯ ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ ಜನನ. ಇವರು ಭ್ರಷ್ಟಾಚಾರ ವಿರೋದಿ ವ್ಯಂಗ್ಯಚಿತ್ರಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ. ಭಾರತದಲ್ಲಿ ಇಂಟರ್ನೆಟ್ ಸೆನ್ಸಾರ್ಷಿಪ್ ವಿರುದ್ಧ ಅವರು ‘ಸೇವ್ ಯುವರ್ ವಾಯ್ಸ್’ ಎಂಬ ಆಂದೋಲನವನ್ನು ಹುಟ್ಟುಹಾಕಿದ್ದಾರೆ. ಅವರಿಗೆ ‘ಕರೇಜ್ ಇನ್ ಎಡಿಟೋರಿಯಲ್ ಕಾರ್ಟೂನಿಂಗ್’ ಎಂಬ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ಸಂಘಟನೆಯ ಪ್ರಶಸ್ತಿ ಸಂದಿದೆ.

1968: ಹಿಂದೂಸ್ಥಾನಿ ಸಂಗೀತದಲ್ಲಿ ಸಾರಂಗಿ ವಾದನ, ತಬಲ ವಾದನ ಹಾಗೂ ಗಾಯನ – ಈ ಮೂರು ಪ್ರಕಾರಗಳಲ್ಲೂ ಪ್ರಭುತ್ವ ಪಡೆದಿರುವ ಉಸ್ತಾದ್ ಫಯಾಜ್ ಖಾನರು ಧಾರವಾಡದಲ್ಲಿ ಜನಿಸಿದರು.

1970: ಉಕ್ರೇನ್ ಮೂಲದ ಸಾಹಿತಿ ಷಾಮುಯೆಲ್ ಯೋಸೆಫ್ ಅವರು ಇಸ್ರೇಲಿನ ಜೆರುಸಲೇಮ್ ನಗರದಲ್ಲಿ ನಿಧನರಾದರು. ಆಧುನಿಕ ಹಿಬ್ರೂ ಕಾಲ್ಪನಿಕ ಕಥೆಗಳಲ್ಲಿ ಪ್ರಸಿದ್ಧರಾದ ಇವರಿಗೆ 1966ರ ವರ್ಷದ ನೊಬೆಲ್ ಸಾಹಿತ್ಯಕ ಪುರಸ್ಕಾರ ಸಂದಿತ್ತು.

1986: ಪ್ರಖ್ಯಾತ ತತ್ವಶಾಸ್ತ್ರಜ್ಞ, ಉಪನ್ಯಾಸಕ ಮತ್ತು ಬರಹಗಾರ ಜಿಡ್ಡು ಕೃಷ್ಣಮೂರ್ತಿ ಅವರು ಕ್ಯಾಲಿಫೋರ್ನಿಯಾದ ಓಜೈ ಎಂಬಲ್ಲಿ ನಿಧನರಾದರು. ಮಾನಸಿಕವಾಗಿ ಕ್ರಾಂತಿ, ಮನಸ್ಸಿನ ಪ್ರಕೃತಿ, ಧ್ಯಾನ, ಪ್ರಶ್ನಿಸಿಕೊಳ್ಳುವಿಕೆ, ಮನುಷ್ಯರ ನಡುವಿನ ಸಂಬಂಧಗಳು ಮತ್ತು ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ಮುಂತಾದ ವಿಚಾರಗಳಲ್ಲಿ ಅವರ ಚಿಂತನೆಗಳು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿವೆ.

Categories
e-ದಿನ

ಫೆಬ್ರವರಿ-16

ಪ್ರಮುಖಘಟನಾವಳಿಗಳು:

1659: ಬ್ರಿಟಿಷ್ ಬ್ಯಾಂಕ್ ಒಂದರಿಂದ ಚೆಕ್ ಪಡೆಯಲಾಯಿತು. ಈ ಚೆಕ್ಕಿನ ಮೂಲಪ್ರತಿಯನ್ನು ನ್ಯಾಷನಲ್ ವೆಸ್ಟ್ ಮಿನ್ ಸ್ಟರ್ ಬ್ಯಾಂಕಿನ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

1874: ಅಮೆರಿಕದಲ್ಲಿ ಸಿಲ್ವರ್ ಡಾಲರ್ ಅನ್ನು ಚಲಾವಣಾ ಹಣವನ್ನಾಗಿ ಬಳಸಲು ಆರಂಭಿಸಲಾಯಿತು.

1861: ಕೆನಡಾದಲ್ಲಿ ‘ಕೆನಡಿಯನ್ ಪೆಸಿಫಿಕ್ ರೈಲ್ವೇ’ ಆರಂಭಿಸಲು ಅಲ್ಲಿನ ಪಾರ್ಲಿಮೆಂಟ್ ನಿರ್ಧರಿಸಿತು.

1896: ರಿಚರ್ಡ್ ಫೆಲ್ಟನ್ ಔಟ್ ಕಾಲ್ಟ್ ಅವರ ಕಾಮಿಕ್ ಸರಣಿ ‘ದಿ ಯೆಲ್ಲೋ ಕಿಡ್’ ಮೊತ್ತ ಮೊದಲ ಬಾರಿಗೆ ಪ್ರಕಟಗೊಂಡಿತು.

1933: ಅಮೆರಿಕದಲ್ಲಿ ‘ಬ್ಲೈನ್ ಆಕ್ಟ್’ ಜಾರಿಗೆ ಬಂದು ಅಲ್ಲಿನ ಪಾನನಿರೋದ ಅಂತ್ಯಗೊಂಡಿತು.

1937: ವಾಲೇಸ್ ಹೆಚ್. ಕಾರೋತರ್ಸ್ ಅವರು ತಮ್ಮ ಸಂಶೋಧವಾದ ‘ನೈಲಾನ್’ ಬಟ್ಟೆಗೆ ಪೇಟೆಂಟ್ ಪಡೆದರು.

1962: ಪಶ್ಚಿಮ ಜರ್ಮನಿಯ ಕರಾವಳಿ ತೀರದಲ್ಲಿ ಭೀಕರ ಪ್ರವಾಹ ಉಂಟಾಗಿ 315 ಮಂದಿ ಸಾವಿಗೀಡಾಗಿ 60,000 ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡರು.

1968: ಅಲಬಾಮಾ ಪ್ರಾಂತ್ಯದ ಹ್ಯಾಲಿವಿಲ್ಲೆ ಎಂಬಲ್ಲಿ ಮೊಟ್ಟ ಮೊದಲ ತುರ್ತು ದೂರವಾಣಿ ಸೇವೆ 9-1-1 ಆರಂಭಗೊಂಡಿತು.

1978: ಚಿಕಾಗೋದ ‘ಸಿ.ಬಿ.ಬಿ.ಎಸ್’ ಸಂಸ್ಥೆಯಲ್ಲಿ ಮೊಟ್ಟ ಮೊದಲ ‘ಕಂಪ್ಯೂಟರ್ ಬುಲೆಟಿನ್ ಬೋರ್ಡ್’ ವ್ಯವಸ್ಥೆಯನ್ನು ಸೃಷ್ಟಿಸಲಾಯಿತು. ಪ್ರಮುಖ ವಿಷಯಗಳ ಸಾರಾಂಶವನ್ನು ಒಂದೆಡೆ ಸುಲಭವಾಗಿ ಗಮನಕ್ಕೆ ತರುವಂತಹ ಕಾರ್ಯ ಈ ಬುಲೆಟಿನ್ ಬೋರ್ಡ್ ವ್ಯವಸ್ಥೆಯಲ್ಲಿರುತ್ತದೆ. ಮುಂದುವರೆದ ತಂತ್ರಜ್ಞಾನ ವ್ಯವಸ್ಥೆಗಳಲ್ಲಿ ಇದನ್ನು ಡ್ಯಾಶ್ ಬೋರ್ಡ್ ಎಂಬ ಕರೆಯುವ ಪದ್ಧತಿಯೂ ಇದೆ.

2006: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು 2005ನೇ ಸಾಲಿನ ವಿಶೇಷ ಪ್ರಶಸ್ತಿಗಳಾದ ಡಾ. ಬಿ.ಎನ್. ಗದ್ಗೀಮಠ ಪ್ರಶಸ್ತಿಗೆ ಗುಲ್ಬರ್ಗದ ಡಾ. ವೀರಣ್ಣ ದಂಡೆ, ಡಾ. ಜೀಶಂ ಪ್ರಶಸ್ತಿಗೆ ಉಡುಪಿಯ ಡಾ. ರಾಘವ ನಂಬಿಯಾರ್ ಅವರನ್ನು ಆಯ್ಕೆ ಮಾಡಿತು.

2009: ಕರ್ನಾಟಕ ಲಲಿತ ಕಲಾ ಅಕಾಡೆಮಿಯು 2008ರ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿತು. ಬಿಜಾಪುರದ ಈಶ್ವರಪ್ಪ ಜೀವಪ್ಪ ಹಮೀದ್ ಖಾನ್, ಮೈಸೂರಿನ ಎಲ್.ಶಿವಲಿಂಗಪ್ಪ ಹಾಗೂ ಬೆಂಗಳೂರಿನ ಕೆ.ಎನ್ ರಾಮಚಂದ್ರನ್ ಅವರುಗಳು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.

2009: ಭಾರತೀಯ ನಟಿ, ನಿರ್ದೇಶಕಿ ನಂದಿತಾ ದಾಸ್ ಅವರು ನಿರ್ದೇಶಿಸಿದ ‘ಫಿರಾಕ್’ ಚಿತ್ರಕ್ಕೆ ಕರಾಚಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರಾಪ್ತವಾಯಿತು.

ಪ್ರಮುಖಜನನ/ಮರಣ:

1543: ಜಪಾನಿನ ಇತಿಹಾಸದಲ್ಲಿ ಅಸುಚಿ ಮೊಮೋಯಾಮಾ ಕಾಲಘಟ್ಟದಲ್ಲಿ ಜನಿಸಿದ ಕನೋ ಐಟೋಕು ಅವರು ಕನೋ ಚಿತ್ರಕಲೆಯ ಮಹತ್ವದ ಕಲೆಗಾರರೆನಿಸಿದ್ದಾರೆ.

1925: ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ, ಉಪನ್ಯಾಸಕ, ಹೋರಾಟಗಾರ, ಅಧ್ಯಾಪಕ ಮತ್ತು ಹಿರಿಯ ಬರಹಗಾರರಾದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಬೆಂಗಳೂರಿನಲ್ಲಿ ಜನಿಸಿದರು. ವಿಶಾಲ ವ್ಯಾಪ್ತಿಯ ಬರಹ ಮಾಡಿರುವ ಪ್ರೊ. ಎಲ್.ಎಸ್.ಎಸ್ ಅವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ದೇವರಾಜ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

1977: ಕನ್ನಡದ ಚಲನಚಿತ್ರ ನಟ, ನಿರ್ಮಾಪಕ ಮತ್ತು ವಿತರಕ ದರ್ಶನ್ ತೂಗುದೀಪ ಮೈಸೂರಿನಲ್ಲಿ ಜನಿಸಿದರು. ಕನ್ನಡ ಚಿತ್ರರಂಗದ ಹಿಂದಿನ ತಲೆಮಾರಿನ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರರಾದ ಇವರು ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಒಬ್ಬರಾಗಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಚಲನಚಿತ್ರ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.

1834: ಬ್ರಿಟನ್ನಿನ ಸಂಶೋಧಕ ಮತ್ತು ಜೀವರಕ್ಷಕ ದೋಣಿ (ಲೈಫ್ ಬೋಟ್) ಸೃಷ್ಟಿಕರ್ತ ಬ್ರಿಟನ್ನಿನ ಲಯನೆಲ್ ಲ್ಯೂಕಿನ್ ಅವರು ಕೆಂಟ್ ಪ್ರದೇಶದ ಹೈಥ್ ಎಂಬಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ಮೃತರಾದರು.

1907: ಇಟಲಿಯ ಪ್ರಸಿದ್ಧ ಕವಿ ಜಿಯೋಸ್ಯೂ ಕಾರ್ಡುಸ್ಸಿ ಇಟಲಿಯ ಬೊಲೋಗ್ನ ಎಂಬಲ್ಲಿ ನಿಧನರಾದರು. ಆಧುನಿಕ ಇಟಲಿಯ ರಾಷ್ಟ್ರಕವಿ ಎಂದು ಗೌರವಿಸಲ್ಪಡುವ ಇವರಿಗೆ 1906 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1932: ಫ್ರಾನ್ಸಿನ ರಾಜಕಾರಣಿ ಮತ್ತು ಮಾನವತಾವಾದಿ ಫರ್ಡಿನೆಂಡ್ ಬ್ಯೂಸನ್ ಫ್ರಾನ್ಸಿನಲ್ಲಿ ನಿಧನರಾದರು. ‘ಲೀಗ್ ಆಫ್ ಎಡುಕೇಶನ್’ ಮತ್ತು ‘ಹ್ಯೂಮನ್ ರೈಟ್ಸ್ ಲೀಗ್’ ಅಧ್ಯಕ್ಷತೆಯನ್ನು ಅಲಂಕರಿಸಿದ್ದ ಇವರಿಗೆ 1927 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಲಾಗಿತ್ತು.

1944: ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರು ನಾಸಿಕ್ ಪಟ್ಟಣದಲ್ಲಿ ನಿಧನರಾದರು. ಪ್ರಸಿದ್ಧ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಪದವೀಧರರಾದ ಇವರು 1913ರಲ್ಲಿ ತಯಾರಿಸಿದ ಭಾರತದ ಪ್ರಪ್ರಥಮ ಪೂರ್ಣಪ್ರಮಾಣದ ಚಿತ್ರ ‘ರಾಜಾ ಹರಿಶ್ಚಂದ್ರ’ ಸೇರಿದಂತೆ ತಮ್ಮ 19 ವರ್ಷಗಳ ಚಿತ್ರ ಜೀವನದಲ್ಲಿ 95 ಚಲನಚಿತ್ರಗಳನ್ನೂ ಮತ್ತು 26 ಕಿರುಚಿತ್ರಗಳನ್ನೂ ನಿರ್ಮಿಸಿದ್ದರು. ಭಾರತದಲ್ಲಿ ಶ್ರೇಷ್ಠ ಚಲನಚಿತ್ರರಂಗದ ಸೇವೆ ಮಾಡಿದವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

1956: ಭಾರತದ ಪ್ರಸಿದ್ಧ ಖಭೌತ ವಿಜ್ಞಾನಿ ಮೇಘನಾದ ಸಹಾ ಅವರು ನವದೆಹಲಿಯಲ್ಲಿ ತಮ್ಮ 62ನೆಯ ವಯಸ್ಸಿನಲ್ಲಿ ನಿಧನರಾದರು. ‘ಸಹಾ ಆಯೋನೈಸೇಷನ್ ಈಕ್ವೇಶನ್’ ಎಂಬುದು ವಿಜ್ಞಾನ ಲೋಕದಲ್ಲಿ ಅವರ ಹೆಸರಿರುವ ಪ್ರಸಿದ್ಧ ಸಮೀಕರಣ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದು, ಸರ್ಕಾರ ಇವರ ಮಾತುಗಳಿಗೆ ಸದಾ ಕಿವಿಗೊಡುವಂತೆ ಪ್ರಭಾಯುತವಾದ ಚರ್ಚೆ ನಡೆಸುತ್ತಿದ್ದರು. ದೇಶದ ನದಿ ಮತ್ತು ಕಣಿವೆ ಯೋಜನೆಗಳ ಸದಸ್ಯರಾಗಿದ್ದ ಇವರು ‘ದಾಮೋದರ್ ವ್ಯಾಲಿ’ ಯೋಜನೆಯ ಮೂಲ ಯೋಜನೆಯ ಸೃಷ್ಟಿಕರ್ತರಾಗಿದ್ದರು. ರಾಯಲ್ ಸೊಸೈಟಿಯ ಫೆಲೋ ಗೌರವ ಇವರಿಗೆ ಸಂದಿತ್ತು.

Categories
e-ದಿನ

ಫೆಬ್ರವರಿ-15

ಪ್ರಮುಖಘಟನಾವಳಿಗಳು:

590: ಎರಡನೇ ಕೊಸ್ರೋ ಪರ್ಷಿಯಾದ ರಾಜನಾದ

1493: ಕ್ರಿಸ್ತೋಫರ್ ಕೊಲಂಬಸ್ ‘ನೀನಾ’ ಎಂಬ ಹಡಗಿನಲ್ಲಿ ಪಯಣಿಸುವಾಗ ಪತ್ರವೊಂದನ್ನು ಬರೆದು ಅದರಲ್ಲಿ ತನ್ನ ಅನ್ವೇಷಣೆ, ಎದುರಾದ ಆಕಸ್ಮಿಕ ವಸ್ತುಗಳು ಮತ್ತು ಕೌತುಕಗಳನ್ನು ವರ್ಣಿಸಿದ. ಈ ಪತ್ರವು ಆತ ಪೋರ್ಚುಗಲ್ಲಿಗೆ ವಾಪಸ್ಸಾದ ನಂತರದಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿತು.

1870: ಅಮೆರಿಕದ ನ್ಯೂ ಜೆರ್ಸಿಯಲ್ಲಿ ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾರಂಭಗೊಂಡಿತು. ಇದು ಮೊಟ್ಟ ಮೊದಲ ಬ್ಯಾಚಲರ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಾರಂಭಿಸಿತು.

1879: ಅಮೆರಿಕದ ಅಧ್ಯಕ್ಷರಾದ ರುದರ್ ಫೋರ್ಡ್ ಬಿ. ಹೇಯ್ಸ್ ಅವರು ಸುಪ್ರೀಂ ಕೋರ್ಟಿನಲ್ಲಿ ಮಹಿಳಾ ಅಟಾರ್ನಿಗಳಿಗೆ ವಾದಿಸಲು ಅವಕಾಶವೀಯುವ ವಿದೇಯಕಕ್ಕೆ ಸಹಿ ಮಾಡಿದರು.

1903: ರಷ್ಯಾದಿಂದ ನ್ಯೂಯಾರ್ಕಿಗೆ ವಲಸೆ ಬಂದು ಬ್ರೂಕ್ಲಿನ್ನಿನ ಆಟಿಕೆಗಳ ಅಂಗಡಿಯೊಂದರ ಮಾಲೀಕರಾಗಿದ್ದ ಮೋರ್ರಿಸ್ ಮತ್ತು ರೋಸ್ ಮಿಚ್ ಟೊಮ್ ಅವರು ನ್ಯೂಯಾರ್ಕಿನಲ್ಲಿ ಮೊತ್ತ ಮೊದಲ ಬಾರಿಗೆ ‘ಟೆಡ್ಡಿ ಬೇರ್’ನ್ನು ಮಾರುಕಟ್ಟೆಗೆ ತಂದರು.
ರೂಸ್ ವೆಲ್ಟ್ ಅವರಿಗೆ ‘ಟೆಡ್ಡಿ’ ಎಂಬ ಅಡ್ಡ ಹೆಸರು ಇತ್ತು. 1902ರಲ್ಲಿ ಬೇಟೆಯಾಡುತ್ತಿದ್ದಾಗ ಅನಾಥವಾದ ಕರಡಿಮರಿಯೊಂದರ ಪ್ರಾಣ ರಕ್ಷಿಸಲು ನಿರ್ಧರಿಸಿದ್ದರಿಂದ ಈ ಅಡ್ಡ ಹೆಸರು ಅವರಿಗೆ ಬಂತು. ಇದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕ್ಕೆ ವಸ್ತುವಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಮಿಚ್ ಟೊಮ್ ಅವರು ಅಂಗಡಿಯ ಕಿಟಕಿಯಲ್ಲಿ ಪ್ರದರ್ಶನಕ್ಕೆ ಇಟ್ಟ ತಮ್ಮ ಆಟಿಕೆಗೆ ‘ಟೆಡ್ಡಿ ಬೇರ್’ ಎಂದು ಹೆಸರಿಟ್ಟರು.

1922:ಹೇಗ್’ನಲ್ಲಿ ಖಾಯಂ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊದಲ ಸಮಾವೇಶ ನಡೆಯಿತು.

1923: ಗ್ರೀಸ್ ದೇಶವು ಗ್ರೆಗೋರಿಯನ್ ಕ್ಯಾಲೆಂಡರನ್ನು ಜಾರಿಗೆ ತಂದ ಕೊನೆಯ ಯೂರೋಪ್ ರಾಷ್ಟ್ರವಾಯಿತು

1933: ಮಿಯಾಮಿಯಲ್ಲಿ ಜಿಯುಸಿಪ್ಪೆ ಜಂಗಾರ ಎಂಬಾತ ಅಮೆರಿಕದ ಅಧಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ. ಆದರೆ ಆತ ಚಿಕಾಗೋದ ಮೇಯರ್ ಅಂಟನ್ ಜೆ ಸೆರ್ಮಾರ್ಕ್ ಅವರಿಗೆ ಗುಂಡಿಟ್ಟ.

1942: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಆಕ್ರಮಣಕ್ಕೆ ಗುರಿಯಾದ ಸಿಂಗಪುರದಲ್ಲಿ ಬ್ರಿಟಿಷ್ ಜನರಲ್ ಆರ್ಥರ್ ಪೆರ್ಸಿವಲ್ ಶರಣಾಗತನಾದ. ಈ ಸಂದರ್ಭದಲ್ಲಿ ಭಾರತೀಯ, ಬ್ರಿಟಿಷ್ ಮತ್ತು ಆಸ್ಟ್ರೇಲಿಯನ್ ಜನಾಂಗಕ್ಕೆ ಸೇರಿದ 80,000 ಸೈನಿಕರು ಜಪಾನಿನ ಸೈನ್ಯಕ್ಕೆ ಸೆರೆಸಿಕ್ಕರು. ಇದು ಬ್ರಿಟಿಷ್ ಸೈನ್ಯ ಅನುಭವಿಸಿದ ಅತಿ ದೊಡ್ಡ ಶರಣಾಗತಿ ಎನಿಸಿದೆ.

1946: ಫಿಲಡೆಲ್ಫಿಯಾದ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ವಿಶ್ವದ ಪ್ರಥಮ ಸಾಮಾನ್ಯ ಉಪಯೋಗಿ ಗಣಕ ಯಂತ್ರವಾದ ‘ENIAC’ ಔಪಚಾರಿಕವಾಗಿ ಬಿಡುಗಡೆಗೊಂಡಿತು.

1949: ಬ್ರಿಟಿಷ್ ಪ್ರಾಚ್ಯ ಸಂಶೋಧಕರಾದ ಗೆರಾಲ್ಡ್ ಲಾಂಕೆಸ್ಟರ್ ಹಾರ್ಡಿಂಗ್ ಮತ್ತು ರೋಲ್ಯಾಂಡ್ ಡಿ ವಾಕ್ಸ್ ಅವರಿಂದ ಕುಮರನ್ ಗುಹೆಗಳಲ್ಲಿ ಮೊದಲ ಏಳು ಡೆಡ್ ಸೀ ಸ್ಕ್ರೋಲ್ಸ್ ಪತ್ತೆ.

1971: ಬ್ರಿಟಿಷ್ ಚಲಾವಣಾ ಹಣವನ್ನು ದಶಮಾಂಶ ರೂಪಕ್ಕೆ ತರುವ (decimalisation of British coinage) ಕೆಲಸವನ್ನು ಪೂರ್ಣಗೊಳಿಸಲಾಯಿತು

1972: ಸೌಂಡ್ ರೆಕಾರ್ಡಿಂಗ್ ಗಳಿಗೆ ಪ್ರಥಮ ಬಾರಿಗೆ ಅಮೆರಿಕದಲ್ಲಿ ರಾಷ್ಟ್ರೀಯ ಕಾಪಿ ರೈಟ್ಸ್ ಸಂರಕ್ಷಣೆ ಒದಗಿಸಲಾಯಿತು.

2003: ಇರಾಕ್ ಯುದ್ಧದ ವಿರುದ್ಧ ವಿಶ್ವದಾದ್ಯಂತ 600 ನಗರಗಳಲ್ಲಿನ ಒಟ್ಟು 30 ಮಿಲಿಯನ್ ಜನರು ಶಾಂತಿಯುತ ಪ್ರತಿಭಟನೆ ನಡೆಸಿದರು. ಇದು ವಿಶ್ವದ ಅತ್ಯಂತ ದೊಡ್ಡ ಶಾಂತಿಯುತ ಪ್ರತಿಭಟನೆ ಎಂದೆನಿಸಿದೆ.

2012: ಕೊಮಾಯಗುವ ನಗರದಲ್ಲಿನ ಹೊಂಡುರಾನ್ ಸೆರೆಮನೆಯಲ್ಲಿ ಬೆಂಕಿ ಆಕಸ್ಮಿಕದಿಂದ 360 ಜನ ಸಾವಿಗೀಡಾದರು.

1955: ಅಮೆರಿಕದಲ್ಲಿ ಅತ್ಯಂತ ಸುರಕ್ಷಿತ ಕಂಪ್ಯೂಟರುಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಿದ ಆರೋಪದಲ್ಲಿ ಕೆವಿನ್ ಮಿಟ್ನಿಕ್ ಎಂಬಾತನನ್ನು ಎಫ್ ಬಿ ಐ ಬಂಧಿಸಿತು. ಐದು ವರ್ಷಗಳ ಸೆರೆವಾಸದ ಬಳಿಕ 2001ರ ಜನವರಿಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು.

1978: ಲಾಸ್ ವೇಗಾಸಿನಲ್ಲಿ ನಡೆದ ಪಂದ್ಯದಲ್ಲಿ ಲಿಯೋನ್ ಸ್ಫಿಂಕ್ಸ್ ಎದುರು ಸೋತ ಮಹಮ್ಮದ್ ಅಲಿ ತನ್ನ ಜಾಗತಿಕ ಬಾಕ್ಸಿಂಗ್ ಪ್ರಶಸ್ತಿಯನ್ನು ಕಳೆದುಕೊಂಡರು.

2009: ಉಕ್ರೇನಿನ ಡೊಂಟೆಸ್ಕ್‌ನಲ್ಲಿ ನಡೆದ ಬುಕ್ಕಾ ಸ್ಮಾರಕ ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‌ ಶಿಪ್ಪಿನಲ್ಲಿ ರಷ್ಯಾದ ಅಥ್ಲೀಟ್ ಎಲೆನಾ ಇಸಿನ್ಬಾಯೇವಾ 5 ಮೀಟರ್ ಎತ್ತರ ಜಿಗಿಯುವ ಮೂಲಕ ವಿಶ್ವದಾಖಲೆ ಮಾಡಿದರು.

2009: ಭಾರತೀಯ ಮೂಲಸಂಜಾತೆ ಅಮೆರಿಕದ ಶಿಕಾಗೋ ನಿವಾಸಿ 19 ವರ್ಷ ವಯಸ್ಸಿನ ನಿಖಿತಾ ಶಾ ಮರ್‌ಹವಾ ಅವರು ‘2009ರ ಮಿಸ್ ಇಂಡಿಯಾ ವರ್ಲ್ಡ್‌ವೈಡ್’ ಸ್ಪರ್ಧೆಯ ವಿಜೇತೆಯಾದರು. ಡರ್ಬಾನಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈಕೆ ಭಾರತೀಯ ಶಾಸ್ತ್ರೀಯ ನೃತ್ಯದಿಂದ ಎಲ್ಲರ ಮನಸೂರೆಗೊಂಡರು.

ಪ್ರಮುಖಜನನ/ಮರಣ:

1564: ವಿಜ್ಞಾನ ಕ್ರಾಂತಿಯ ಮಹಾಪುರುಷರಲ್ಲಿ ಪ್ರಮುಖರಾದ ಭೌತಶಾಸ್ತ್ರಜ್ಞ, ಗಣಿತಜ್ಙ, ಖಗೋಳ ಶಾಸ್ತ್ರಜ್ಙ ಮತ್ತು ತತ್ವಶಾಸ್ತ್ರಜ್ಞ ಗೆಲಿಲಿಯೋ ಗೆಲೆಲಿ ಅವರು ಇಟಲಿಯ ಗ್ರಾಂಡ್ ಡಚ್ಚಿ ಆಫ್ ಫ್ಲಾರೆನ್ಸ್ ಬಳಿಯ ಪೀಸಾ ಎಂಬಲ್ಲಿ ಜನಿಸಿದರು. ಇವರು ಖಗೋಳ ಅನ್ವೇಷಣೆಗಳಿಗೆ ದೂರದರ್ಶಕವನ್ನು ಮೊತ್ತಮೊದಲ ಬಾರಿಗೆ ಬಳಸಿ, ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟವರಾಗಿದ್ದಾರೆ.

1845: ನೊಬೆಲ್ ಪುರಸ್ಕೃತ ಅಮೆರಿಕದ ನ್ಯಾಯವಾದಿ ಮತ್ತು ರಾಜಕಾರಣಿ ಎಲಿಹು ರೂಟ್ ನ್ಯೂಯಾರ್ಕಿನ ಕ್ಲಿಂಟನ್ ಎಂಬಲ್ಲಿ ಜನಿಸಿದರು. ಅವರಿಗೆ 1912ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1858: ಅಮೆರಿಕನ್ ಖಗೋಳ ತಜ್ಞರಾದ ವಿಲಿಯಂ ಹೆನ್ರಿ ಪಿಕರಿಂಗ್ ಜನಿಸಿದರು. ಇವರು 1919ರಲ್ಲಿ ಶನಿಗ್ರಹದ ಒಂಭತ್ತನೇ ಉಪಗ್ರಹವಾದ ‘ಫೋಬೆ’ಯನ್ನು ಅನ್ವೇಷಿಸಿದರು.

1861: ಭೌತವಿಜ್ಞಾನಿ ಚಾರ್ಲ್ಸ್ ಎಡ್ವರ್ಡ್ ಗುಲ್ಲೌಮೆ ಸ್ವಿಡ್ಜರ್ಲ್ಯಾಂಡ್ ದೇಶದ ಫ್ಲೂರಿಯರ್ ಎಂಬಲ್ಲಿ ಜನಿಸಿದರು. ಅನಾಮಲೀಸ್ ಇನ್ ನಿಕ್ಕಲ್ ಸ್ಟೀಲ್ ಅಲ್ಲಾಯ್ಸ್ ಕುರಿತಾದ ಸಂಶೋಧನೆಗಾಗಿ ಅವರಿಗೆ 1920 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

1873: ಹ್ಯಾನ್ಸ್ ವಾನ್ ಯೂಲರ್ ಚೆಲ್ಪಿನ್ ಅವರು ಕಿಂಗ್ಡಂ ಆಫ್ ಬವೇರಿಯಾದ ಆಗ್ಸ್ ಬರ್ಗ್ ಎಂಬಲ್ಲಿ ಜನಿಸಿದರು. ಫರ್ಮೆಂಟೇಷನ್ ಆಫ್ ಶುಗರ್ ಅಂಡ್ ಎನ್ಸೈಮ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1929ರ ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು. ಇವರ ಪುತ್ರ ಉಲ್ಫ್ ವಾನ್ ಯೂಲರ್ ಅವರು 1970ರ ವರ್ಷದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರ ಗಳಿಸಿದರು.

1915: ಸೋರಟ್ ಅಶ್ವಥ್ ನಂಜನಗೂಡಿನಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಅಶ್ವಥ್ ನಾರಾಯಣ ಶಾಸ್ತ್ರಿ. ವೃತ್ತಿ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸಿದ ನಂತರದಲ್ಲಿ 60 ಚಿತ್ರಗಳಿಗೆ ಸಂಭಾಷಣೆ, ಸುಮಾರು 160 ಚಿತ್ರಗೀತೆಗಳನ್ನು ಸೋರಟ್ ಅಶ್ವಥ್ ರಚಿಸಿದ್ದರು. 1998ರ ಫೆಬ್ರವರಿ 5ರಂದು ನಿಧನ ಹೊಂದಿದ ಇವರಿಗೆ 1994ರ ವರ್ಷದಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು.

1929: ಡಾ. ಪ್ರಭುಶಂಕರ ಅವರು ಚಾಮರಾಜನಗರದಲ್ಲಿ ಜನಿಸಿದರು. ಪ್ರಾಧ್ಯಾಪನ ಮತ್ತು ವಿವಿಧ ಮುಖಿ ಸಾಹಿತ್ಯ ರಚನೆಯಲ್ಲಿ ಪ್ರಸಿದ್ಧರಾದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.

1934: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಮೈಸೂರಿನಲ್ಲಿ ಜನಿಸಿದರು. 1953ರಲ್ಲಿ ತಂದೆ ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯನವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು. ಮಾಸ್ಟರ್ ಹಿರಣ್ಣಯ್ಯನವರಿಗೆ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ.

1934: ಗಣಕತಂತ್ರ ವಿಜ್ಞಾನಿ ನಿಕಲೌಸ್ ವಿರ್ಥ್ ಅವರು ಸ್ವಿಡ್ಜರ್ಲ್ಯಾಂಡ್ ದೇಶದಲ್ಲಿ ಜನಿಸಿದರು. ಅವರು ಪ್ಯಾಸ್ಕಲ್ ಪ್ರೊಗ್ರಾಮಿಂಗ್ ಲಾಂಗ್ವೇಜ್ ಸೃಷ್ಟಿಮಾಡಿದರು.

1964: ಪ್ರಸಿದ್ಧ ಹಿಂದೀ ಚಿತ್ರ ನಿರ್ಮಾಪಕ ನಿರ್ದೇಶಕ ಅಶುತೋಷ್ ಗೌರೀಕರ್ ಮುಂಬೈನಲ್ಲಿ ಜನಿಸಿದರು. ಅವರ ಲಗಾನ್, ಸ್ವದೇಶ್, ಜೋಧಾ ಅಕ್ಬರ್ ಮುಂತಾದ ಚಿತ್ರಗಳು ರಾಷ್ಟ್ರ ಮತ್ತು ಅಂತರರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿವೆ.

1869: ಪರ್ಷಿಯಾ ಹಾಗೂ ಉರ್ದು ಭಾಷೆಗಳಲ್ಲಿ ಸಮಾನವಾಗಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಸಾಹಿತಿ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ ದೆಹಲಿಯಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಾಹಿತ್ಯದ ಪುನರುತ್ಥಾನದ ಮೊದಲಿಗರಲ್ಲಿ ಒಬ್ಬರೆಂದು ಇವರು ಪ್ರಖ್ಯಾತರಾಗಿದ್ದಾರೆ.

1959: ಇಂಗ್ಲಿಷ್ ಭೌತವಿಜ್ಞಾನಿ ಓವೆನ್ಸ್ ವಿಲಿಯಂಸ್ ರಿಚರ್ಡ್ಸನ್ ಇಂಗ್ಲೆಂಡಿನ ಆಲ್ಟನ್ ಎಂಬಲ್ಲಿ ನಿಧನರಾದರು. ಥರ್ಮಿಯೋನಿಕ್ ಎಮಿಷನ್ ಕುರಿತಾದ ಸಂಶೋಧನೆಗೆ ಅವರಿಗೆ 1928ರ ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು. ಈ ಸಂಶೋಧನೆಯು ರಿಚರ್ಡ್ಸನ್ಸ್ ಲಾ ಎಂದೇ ಪ್ರಖ್ಯಾತಿ ಪಡೆದಿದೆ.

1988: ಅಮೆರಿಕದ ಭೌತವಿಜ್ಞಾನಿ ರಿಚರ್ಡ್ ಫೆಯ್ನ್ ಮ್ಯಾನ್ ಲಾಸ್ ಎಂಜೆಲಿಸ್ ನಗರದಲ್ಲಿ ನಿಧನರಾದರು. ಎಲೆಕ್ಟ್ರೋ ಡೈನಮಿಕ್ಸ್ ಕುರಿತಾದ ಕೊಡುಗೆಗಾಗಿ ಇವರಿಗೆ 1965ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1999: ಅಮೆರಿಕದ ಭೌತವಿಜ್ಞಾನಿ ಹಾಗೂ ಪರ್ವತಾರೋಹಿ ಹೆನ್ರಿ ವೇ ಕೆಂಡಾಲ್ ಫ್ಲೋರಿಡಾದಲ್ಲಿ ನಿಧನರಾದರು. ಕ್ವಾರ್ಕ್ ಮಾಡೆಲ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1990 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

2006: ತೈವಾನಿನ ಮಾಜಿ ಪ್ರಧಾನಿ, 1980ರ ದಶಕದಲ್ಲಿ ಆ ದ್ವೀಪದ ಆರ್ಥಿಕ ವಿಸ್ತರಣಾ ಕಾರ್ಯಕ್ರಮದ ರೂವಾರಿ ಸನ್ ಯುನ್-ಸುವಾನ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು.

Categories
e-ದಿನ

ಫೆಬ್ರವರಿ-14

ದಿನಾಚರಣೆಗಳು
ವ್ಯಾಲಂಟೈನ್ಸ್ ದಿನ
ಫೆಬ್ರವರಿ 14 ದಿನವನ್ನು ಸಂತ ವ್ಯಾಲಂಟೈನ್’ರ ದಿನ ಅಥವ ಫೀಸ್ಟ್ ಆಫ್ ಸೈಂಟ್ ವ್ಯಾಲಂಟೈನ್ ಎಂದು ಕರೆಯಲಾಗುತ್ತದೆ. ಪಾಶ್ಚಿಮಾತ್ಯ ಕ್ರಿಶ್ಚಿಯನ್ನರ ಆಚರಣೆಯಾದ ಇದನ್ನು ವ್ಯಾಲಂಟಿನಸ್ ಎಂಬ ಸಂತರ ಪರಂಪರೆಗೆ ಗೌರವ ಸೂಚಕವಾದ ದಿನವೆಂದು ಭಾವಿಸಲಾಗಿದ್ದು, ಕ್ರೈಸ್ತ ಮತವಿರುವ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸುವ ಪದ್ಧತಿಯಿದೆ.
ವ್ಯಾಲಂಟೈನ್ ದಿನಕ್ಕೆ ಹೊಂದಿಕೊಂಡಂತೆ ಕೆಲವೊಂದು ಹುತಾತ್ಮ ಭಾವಗಳುಳ್ಳ ಕತೆಗಳು ಪ್ರಚಲಿತದಲ್ಲಿದ್ದು, ಅವುಗಳಲ್ಲಿ ಪ್ರಮುಖವಾದದ್ದು ರೋಮ್ ನಗರದ ಸೈಂಟ್ ವ್ಯಾಲಂಟೈನ್ ಎಂಬ ಸಂತನ ಕತೆ. ಅಂದಿನ ರೋಮನ್ ಆಡಳಿತದಲ್ಲಿ ಸೈನಿಕರಾಗಿದ್ದವರಿಗೆ ಮದುವೆ ಆಗುವುದಕ್ಕೆ ಅವಕಾಶ ಇರಲಿಲ್ಲ. ಜೊತೆಗೆ ಈ ಆಡಳಿತ ಬಹುಜನರಿಗೆ ಕಿರುಕುಳ ನೀಡುತ್ತಿತ್ತು. ಇಂತಹ ಸಂದರ್ಭದಲ್ಲಿ ಸಂತ ವ್ಯಾಲಂಟೈನನಿಗೆ ಯುವ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದ ಮತ್ತು ಜನರನ್ನು ಆಡಳಿತ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದ ಎಂಬ ಆಪಾದನೆಯ ಮೇರೆಗೆ ಮರಣದಂಡನೆ ವಿಧಿಸಿ ಸೆರೆಮನೆ ವಾಸ ವಿಧಿಸಲಾಯಿತು. ನೇಣು ಬೀಳುವ ಮೊದಲಿನ ಕೆಲವೇ ಕೆಲವು ದಿನಗಳಲ್ಲಿ ಸೆರೆಮನೆಯಲ್ಲಿದ್ದ ಸಂದರ್ಭದಲ್ಲಿ ಈತ ಸೆರೆಮನೆಯ ಅಧಿಕಾರಿಯಾಗಿದ್ದವನ ಮಗಳಾದ ಆಸ್ಟೇರಿಯಸ್ ಅನ್ನು ಕಾಯಿಲೆಯಿಂದ ಗುಣಪಡಿಸಿದನಂತೆ. ಕಡೆಗೆ ಅವನನ್ನು ನೇಣು ಹಾಕುವ ಸಂದರ್ಭದಲ್ಲಿ ಆಸ್ಟೇರಿಯಸ್ಸಳಿಗೆ ಬರೆದ ಪತ್ರದಲ್ಲಿ ಕೊನೆಗೆ ‘ನಿನ್ನ ವ್ಯಾಲೆಂಟೈನ್’ ಎಂದು ಬರೆದಿದ್ದನಂತೆ.

ಪ್ರಮುಖಘಟನಾವಳಿಗಳು:

842: ಚಾರ್ಲ್ಸ್ ದ ಬಾಲ್ಡ್ ರಾಜಕುವರ ಫ್ರೆಂಚ್ ಭಾಷೆಯಲ್ಲಿಯೂ ಮತ್ತು ಲೂಯಿಸ್ ದ ಜರ್ಮನ್ ರಾಜಕುವರ ಜರ್ಮನೀ ಭಾಷೆಯಲ್ಲಿಯೂ ಸ್ಟ್ರಾಸ್ಬೋರ್ಗ್ ಎಂಬಲ್ಲಿ ತಮ್ಮ ರಾಜ್ಯಾಡಳಿತದ ಪ್ರಮಾಣವಚನ ಸ್ವೀಕರಿಸಿದರು.

1349: ಸ್ಟ್ರಾಸ್ಬೋರ್ಗ್ ನಗರದಲ್ಲಿನ ಜನರ ಗುಂಪು ಹಲವು ನೂರು ಜ್ಯೂ ಜನರನ್ನು ಬೆಂಕಿಯಲ್ಲಿ ಸುಟ್ಟು ಹಾಕಿ, ಉಳಿದ ಕೆಲವು ಜ್ಯೂ ಜನಾಂಗೀಯರನ್ನು ಸ್ಟ್ರಾಸ್ಬೋರ್ಗ್ ನಗರದಿಂದ ಬಲಾತ್ಕಾರವಾಗಿ ಹೊರಹೋಗುವಂತೆ ಮಾಡಿತು.

1400: ಹೆನ್ರಿ ಬೋಲಿಂಗ್ ಬ್ರೋಕ್ ಆಜ್ಞೆಯ ಮೇರೆಗೆ ಪೊಂಟಿಫ್ರಾಕ್ಟ್ ಕ್ಯಾಸೆಲ್ನಲ್ಲಿ ಆಹಾರವಿಲ್ಲದೆ ತಳ್ಳಲ್ಪಟ್ಟಿದ್ದ ಎರಡನೇ ರಿಚರ್ಡ್, ಹೊಟ್ಟೆಗಿಲ್ಲದೆ ಹಸಿವಿನಿಂದ ಮರಣಹೊಂದಿದ.

1778: ಫ್ರೆಂಚ್ ಅಧಿಕಾರಿ ಅಡ್ಮಿರಲ್ ಟೌಸ್ಸಿಯಾಂಟ್-ಗ್ವಿಲ್ಲೋಮೆ ಪಿಕೆಟ್ ಡಿ ಲಾ ಮೊಟ್ಟೆ ಎಂಬಾತ ಅಮೆರಿಕದ ಜಾನ್ ಪಾಲ್ ಜೋನ್ಸ್ ನೇತೃತ್ವದ ರೇಂಜರಿಗೆ 9 ಬಂದೂಕು ತೋಪಿನ ಗೌರವ ಸಲ್ಲಿಸಿದ. ಇದು ವಿದೇಶಿಯನೊಬ್ಬ ಅಮೆರಿಕ ಧ್ವಜಕ್ಕೆ ಮನ್ನಣೆ ಸಲ್ಲಿಸಿದ ಪ್ರಥಮ ಗೌರವವೆಂದು ದಾಖಲಾಗಿದೆ.

1849: ನ್ಯೂಯಾರ್ಕ್ ನಗರದಲ್ಲಿ ಜೇಮ್ಸ್ ನಾಕ್ಸ್ ಪೋಲ್ಕ್ ಅವರು ಕ್ಯಾಮೆರಾ ಮುಂದೆ ನಿಂತು ಫೋಟೋ ತೆಗೆಸಿಕೊಂಡ ಪ್ರಥಮ ಅಮೆರಿಕದ ಅಧ್ಯಕ್ಷರೆನಿಸಿದರು.

1852: ಗ್ರೇಟ್ ಆರ್ಮಂಡ್ ಸೈಂಟ್ ಹಾಸ್ಪಿಟಲ್ ಫಾರ್ ಸಿಕ್ ಚಿಲ್ಡ್ರನ್ ಎಂಬ ಮಕ್ಕಳ ಆಸ್ಪತ್ರೆ ಇಂಗ್ಲೆಂಡಿನಲ್ಲಿ ಪ್ರಾರಂಭಗೊಂಡಿತು. ಈ ಆಸ್ಪತ್ರೆಯು ಮೊಟ್ಟ ಮೊದಲ ಬಾರಿಗೆ ಒಳರೋಗಿ ಮಕ್ಕಳಿಗೆ ಹಾಸಿಗೆ ಸೌಲಭ್ಯವನ್ನು ಒದಗಿಸಿತು.

1855: ಟೆಕ್ಸಾಸ್ ನಗರದಲ್ಲಿ ನ್ಯೂ ಆರ್ಲಿಯನ್ಸ್ ಮತ್ತು ಮಾರ್ಷಲ್ ನಡುವೆ ಸಂಪರ್ಕ ವ್ಯವಸ್ಥೆ ನಿರ್ಮಾಣ ಪೂರ್ಣಗೊಂಡು,ಟೆಕ್ಸಾಸ್ ನಗರವು ಅಮೆರಿಕದ ಎಲ್ಲ ಕಡೆಗಳಿಂದ ಟೆಲಿಗ್ರಾಫ್ ಸಂಪರ್ಕ ಪಡೆದ ಪ್ರಥಮ ಪ್ರಾಂತ್ಯವೆನಿಸಿತು.

1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರು ಟೆಲಿಫೋನಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದರು. ಎಲಿಷಾ ಗ್ರೇ ಅವರು ಸಹಾ ಇದೇ ಪೇಟೆಂಟಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತಾದ ಹಲವು ವ್ಯಾಜ್ಯಗಳ ತೀರ್ಮಾನದಲ್ಲಿ ಈ ಪೇಟೆಂಟ್ ಗ್ರಹಾಂ ಬೆಲ್ ಅವರಿಗೇ ಸಲ್ಲಬೇಕೆಂದು ನ್ಯಾಯಾಲಯಗಳು ತೀರ್ಮಾನಿಸಿದವು.

1899: ಫೆಡರಲ್ ಚುನಾವಣೆಗಳಲ್ಲಿ ಮತಯಂತ್ರಗಳ ಬಳಕೆಗೆ ಅಮೆರಿಕದ ಕಾಂಗ್ರೆಸ್ ಅನುಮೋದನೆ ನೀಡಿತು.

1912: ಕನೆಕ್ಟಿಕಟ್ ಪ್ರಾಂತ್ಯದ ಗ್ರೋಟನ್ ಎಂಬಲ್ಲಿ ಮೊದಲ ಡೀಸೆಲ್ ಚಾಲಿತ ಸಬ್ ಮೆರಿನ್ ಬಳಕೆಗೆ ಬಂತು.

1920: ಚಿಕಾಗೊದಲ್ಲಿ ‘ಲೀಗ್ ಆಫ್ ವುಮೆನ್ ವೋಟರ್ಸ್’ ಎಂಬ ಮಹಿಳಾ ಮತದಾರರ ಒಕ್ಕೂಟ ಸ್ಥಾಪನೆಗೊಂಡಿತು.

1924: ಕಂಪ್ಯೂಟಿಂಗ್-ಟ್ಯಾಬ್ಯುಲೇಟಿಂಗ್-ರೆಕಾರ್ಡಿಂಗ್ ಕಂಪೆನಿ ತನ್ನ ಹೆಸರನ್ನು ಇಂಟರ್ ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ ಕಾರ್ಪೋರೇಶನ್ (ಐ.ಬಿ.ಎಮ್) ಎಂದು ಬದಲಿಸಿಕೊಂಡಿತು.

1929: ಚಿಕಾಗೊದಲ್ಲಿ ಉಂಟಾದ ಸೈಂಟ್ ವ್ಯಾಲೆಂಟೈನ್ ದಿನದ ಮಾರಣ ಹೋಮದಲ್ಲಿ ಏಳು ಜನ ಕೊಲ್ಲಲ್ಪಟ್ಟರು. ಈ ಏಳು ಜನರಲ್ಲಿ ಆರು ಜನರು ಗ್ಯಾಂಗ್ಸ್ಟರ್ ಎದುರಾಳಿಗಳಾದ ಅಲ್ ಕೆಪೋನ್ ಗ್ಯಾಂಗಿಗೆ ಸೇರಿದವರಾಗಿದ್ದರು.

1946: ಬ್ಯಾಂಕ್ ಆಫ್ ಇಂಗ್ಲೆಂಡ್ ಅನ್ನು ರಾಷ್ಟ್ರೀಕರಣ ಗೋಳಿಸಲಾಯಿತು.

1956: ಸೋವಿಯತ್ ಯೂನಿಯನ್ನಿನ ಇಪ್ಪತ್ತನೇ ಕಾಂಗ್ರೆಸ್ ಆಫ್ ದಿ ಕಮ್ಮ್ಯೂನಿಸ್ಟ್ ಪಾರ್ಟಿ ಮಾಸ್ಕೋದಲ್ಲಿ ಆರಂಭಗೊಂಡಿತು. ಈ ಸಭೆಯ ಕೊನೆಯಲ್ಲಿ ನಡೆದ ರಹಸ್ಯ ಭಾಷಣದಲ್ಲಿ ಸೋವಿಯೆತ್ ಅಧ್ಯಕ್ಷ ನಿಕಿತ ಕೃಶ್ಚೇವ್ ಅವರು ಜೋಸೆಫ್ ಸ್ಟಾಲಿನ್ನನು ಎಸಗಿದ ದುಷ್ಕೃತ್ಯಗಳನ್ನು ಖಂಡಿಸಿದರು.

1981: ಡಕಾಯಿತ ರಾಣಿ ಫೂಲನ್ ದೇವಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ 20 ಮಂದಿ ಠಾಕೂರರನ್ನು ಗುಂಡಿಟ್ಟು ಕೊಂದಳು. ತನ್ನ ಪ್ರಿಯಕರ ವಿಕ್ರಮ್ ಮಲ್ಹನನ್ನು ಕೊಂದದ್ದಕ್ಕೆ ಸೇಡಿನ ಕ್ರಮವಾಗಿ ಆಕೆ ಈ ಕ್ರಮ ಕೈಗೊಂಡಳು.

1989: ಇರಾನಿನ ಆಯತೊಲ್ಲಾ ಖೊಮೇನಿ ಸರ್ಕಾರ ಭಾರತದಲ್ಲಿ ಜನಿಸಿದ ಬ್ರಿಟಿಷ್ ಸಾಹಿತಿ ಸಲ್ಮಾನ್ ರಷ್ದಿ ಅವರಿಗೆ ‘ಸಟಾನಿಕ್ ವರ್ಸಸ್’ ಪುಸ್ತಕ ಬರೆದುದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿ ಫತ್ವಾ ಹೊರಡಿಸಿತು. ಈ ಫತ್ವಾವನ್ನು 1998ರಲ್ಲಿ ಹಿಂತೆಗೆದುಕೊಳ್ಳಲಾಯಿತು.

1989: ಭೋಪಾಲ್ ದುರಂತದಲ್ಲಿ ಆದ ಅನಾಹುತಕ್ಕೆ ಭಾರತ ಸರ್ಕಾರಕ್ಕೆ 470 ಮಿಲಿಯನ್ ಡಾಲರ್ ಪರಿಹಾರ ಕೊಡಲು ಯೂನಿಯನ್ ಕಾರ್ಬೈಡ್ ಒಪ್ಪಿಕೊಂಡಿತು.

1990: ಬೆಂಗಳೂರಿನಲ್ಲಿ ಉಂಟಾದ ಇಂಡಿಯನ್ ಏರ್ಲೈನ್ಸ್ ವಿಮಾನ 605 ದುರಂತದಲ್ಲಿ 92 ಮಂದಿ ಸಾವಿಗೀಡಾದರು.

2001: ನಿಯರ್ ಶೂಮೇಕರ್ ಬಾಹ್ಯಾಕಾಶ ವಾಹನವು ‘433 ಎರೋಸ್’ ಎಂಬ ಆಸ್ಟರಾಯ್ಡ್’ನ ತಡಿಯನ್ನು ಮುಟ್ಟಿ, ಹೀಗೆ ಆಸ್ಟರಾಯ್ಡ್ ಸ್ಪರ್ಶಿಸಿದ ಪ್ರಥಮ ಬಾಹ್ಯಾಕಾಶ ವಾಹನವೆಂಬ ಕೀರ್ತಿಗೆ ಪಾತ್ರವಾಯಿತು.

2005: ಕೆಲವೊಂದು ಉತ್ಸಾಹಿ ಕಾಲೇಜು ಹುಡುಗರು ಒಂದುಗೂಡಿ ‘ಯೂ ಟ್ಯೂಬ್’ ಎಂಬ ಅಂತರಜಾಲದಲ್ಲಿನ ವಿಡಿಯೋ ಹಂಚಿಕೊಳ್ಳುವ ವೆಬ್ ಸೈಟ್ ಒಂದನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಹಂಚಿಕೊಳ್ಳುವ ತಾಣವಾಗಿದೆ.

2006: ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.. ನೋಂದಣಿ ಇಲ್ಲದ ವಿವಾಹಗಳಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಮನ್ನಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2007: ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಾದ ಟಿ.ಬಿ. ಸೊಲಬಕ್ಕನವರ, ಕೆ.ಟಿ. ಶಿವಪ್ರಸಾದ ಹಾಗೂ ಎಚ್. ಎನ್. ಸುರೇಶ್ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ 2006ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿತು.

2007: ಮಡಗಾಂವಿನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10,000 ರನ್ ಗಳಿಸಿದ ಆರನೇ ಆಟಗಾರನ ಗೌರವಕ್ಕೆ ಪಾತ್ರರಾದರು.

2008: 58ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿದ್ಧಾರ್ಥ ಸಿನ್ಹಾ ನಿರ್ದೇಶನದ ಭಾರತೀಯ ಸಾಕ್ಷ್ಯಚಿತ್ರ ‘ಉಡೆಧ್ ಬನ್’ಗೆ ರಜತ ಪದಕ ಪ್ರಶಸ್ತಿ ಲಭಿಸಿತು.

2008: ರಾಜ್ಯಸಭೆಯ ಮಾಜಿ ಸದಸ್ಯೆ ಡಾ.ಪಿ. ಸೆಲ್ವಿದಾಸ್, ಮಾಜಿ ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಾಹಿತಿ ಸಾರಾ ಅಬೂಬಕ್ಕರ್ ಸೇರಿದಂತೆ ಐವರಿಗೆ ಗೌರವ ಡಾಕ್ಟರೇಟ್ ನೀಡಲು ಮಂಗಳೂರು ವಿಶ್ವವಿದ್ಯಾಲಯವು ತೀರ್ಮಾನಿಸಿತು.

ಪ್ರಮುಖಜನನ/ಮರಣ:

1483: ಭಾರತದಲ್ಲಿ ಮೊಘಲ್ ರಾಜವಂಶ ಸ್ಥಾಪಿಸಿದ ಬಾಬರ್ ಈಗಿನ್ ಉಜ್ಬೇಸ್ಕಿಸ್ತಾನದ ತಿಮುರಿಡ್ ಸಾಮ್ರಾಜ್ಯದ ಅಂಡಿಜಾನ್ ಎಂಬಲ್ಲಿ ಜನಿಸಿದ.

1819: ಟೈಪರೈಟರ್ ಕಂಡುಹಿಡಿದವರಲ್ಲಿ ಒಬ್ಬರಾದ ಅಮೆರಿಕದ ಕ್ರಿಸ್ಟೋಫರ್ ಲಥಾಮ್ ಶೋಲ್ಸ್ ಅವರು ಪೆನ್ಸಿಲ್ವೇನಿಯಾದ ಮೂರೆಸ್ ಬರ್ಗ್ ಎಂಬಲ್ಲಿ ಜನಿಸಿದರು. ಇವರು ರಾಜಕಾರಣಿಯೂ ಪತ್ರಿಕೋದ್ಯಮಿಯೂ ಆಗಿದ್ದರು.

1859: ಫೆರ್ರಿಸ್ ವೀಲ್ ಅಥವಾ ನಾವು ಜಾಯಿಂಟ್ ವೀಲ್ ಎನ್ನುವ ಬೃಹತ್ ಮೋಜಿನ ಚಕ್ರವನ್ನು ಮೊದಲು ನಿರ್ಮಿಸಿದ ಜಾರ್ಜ್ ವಾಷಿಂಗ್ಟನ್ ಗೆಲ್ ಫೆರ್ರಿಸ್ ಜೂನಿಯರ್ ಅವರು ಇಲಿನಾಯ್ಸ್ ಬಳಿಯ ಗೇಲ್ಸ್ ಬರ್ಗ್ ಎಂಬಲ್ಲಿ ಜನಿಸಿದರು.

1908: ಕೆಂಗಲ್ ಹನುಮಂತಯ್ಯನವರು ರಾಮನಗರದ ಬಳಿಯ ಲಕ್ಕಪ್ಪನಹಳ್ಳಿಯಲ್ಲಿ ಜನಿಸಿದರು. ಇವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕದ ಎರಡನೇ ಮುಖ್ಯಮಂತ್ರಿಗಳಾಗಿ, ಕೇಂದ್ರ ರೈಲ್ವೇ ಮತ್ತು ಕೈಗಾರಿಕಾ ಮಂತ್ರಿಗಳಾಗಿ ಮತ್ತು ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಡಿಸೆಂಬರ್ 1, 1980ರಂದು ನಿಧನರಾದರು.

1917: ಅಮೆರಿಕದ ಗಣಿತಜ್ಞ ಮತ್ತು ರಸಾಯನ ಶಾಸ್ತ್ರಜ್ಞ ಹರ್ಬರ್ಟ್ ಎ. ಹೌಪ್ಟ್ ಮ್ಯಾನ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ಇವರು ಕ್ರಿಸ್ಟಲೈಸ್ಡ್ ಮೆಟೀರಿಯಲ್ಗಳಲ್ಲಿ ಮಾಲೆಕ್ಯುಲರ್ ಸ್ಟ್ರಕ್ಚರ್ಸ್ ನಿಗಧೀಕರಣದ ಕುರಿತಾದ ಸಂಶೋಧನೆಗಾಗಿ 1985ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸ್ವೀಕರಿಸಿದರು.

1933: ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂದರ್ಯಗಳಿಂದ ಬೆಳಗಿದ ಕಲಾವಿದರಲ್ಲಿ ಒಬ್ಬರಾದ ಮಧುಬಾಲ ನವದೆಹಲಿಯಲ್ಲಿ ಜನಿಸಿದರು. ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಪ್ರಸಿದ್ಧರಾಗಿದ್ದ ಇವರು ಥಿಯೇಟರ್ ಆರ್ಟ್ಸ್‌ ನಂತಹ ಹಲವು ಅಮೇರಿಕನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. 1952ರ ಆಗಸ್ಟ್‌ ಸಂಚಿಕೆಯಲ್ಲಿ, ಮಧುಬಾಲಾರ ಪೂರ್ಣಪುಟದ ಭಾವಚಿತ್ರದೊಂದಿಗಿನ ದೊಡ್ಡದೊಂದು ಲೇಖನ ಪ್ರಕಟಗೊಂಡಿತ್ತು. ಆ ಲೇಖನದ ಶೀರ್ಷಿಕೆ ಹೀಗಿದೆ: “ದಿ ಬಿಗ್ಗೆಸ್ಟ್ ಸ್ಟಾರ್ ಇನ್ ದಿ ವರ್ಲ್ಡ್ (ಅಂಡ್ ಶಿ ಈಸ್ ನಾಟ್ ಇನ್ ಬೆವೆರ್ಲಿ ಹಿಲ್ಸ್)” .

1939: ಅಮೆರಿಕದ ಅರ್ಥಶಾಸ್ತ್ರಜ್ಞ ಯೊಗೇನೇ ಫಾಮಾ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಅವರು ವಿಶ್ವದ ಎಲ್ಲ ಕಾಲದ ಏಳನೇ ಪ್ರಭಾವಯುತ ಅರ್ಥಶಾಸ್ತ್ರಜ್ಞರೆಂದು ಖ್ಯಾತರಾಗಿದ್ದು 2013 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸ್ವೀಕರಿಸಿದ್ದರು.

1944: ಸಂಗೀತಾ ಮಹೇಶ್ ಎಂದೇ ಖ್ಯಾತರಾದ, ‘ಸಂಗೀತಾ ರೆಕಾರ್ಡಿಂಗ್’ ಸ್ಥಾಪಿಸಿ ಕನ್ನಡದ ಅನೇಕ ಜನಪ್ರಿಯ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ತಂದ ಎಚ್.ಎಂ. ಮಹೇಶ್ ಅವರು ಮಂಗಳೂರು ಸಮೀಪದ ಕುಂಬಳೆಯಲ್ಲಿ ಜನಿಸಿದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1948: ಕನ್ನಡದ ಪ್ರಖ್ಯಾತ ವಿಜ್ಞಾನ ಸಾಹಿತಿ, ಪರಿಸರವಾದಿ, ಪತ್ರಕರ್ತ, ಭೂವಿಜ್ಞಾನಿ, ಅಂಕಣಕಾರ ಡಾ. ನಾಗೇಶ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿಯ ಬಕ್ಕೆಮನೆ ಎಂಬಲ್ಲಿ ಜನಿಸಿದರು. ಸೌಜನ್ಯತೆಯ ನೆರಳಿನಲ್ಲೇ ತಾವು ಹೇಳಬೇಕಿದ್ದನ್ನು ಹೇಳಿ, ಪರಿಸರಕ್ಕೆ ಚ್ಯುತಿ ಬಂದಾಗಲೆಲ್ಲಾ ಧ್ವನಿ ಎತ್ತುವ ಡಾ. ನಾಗೇಶ್ ಹೆಗಡೆ ಅವರಿಗೆ ಅವರ ವಿಜ್ಞಾನ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಕೊಡುಗೆಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನಾ ಗೌರವ, ಪತ್ರಿಕೋದ್ಯಮದ ಜೀವಮಾನ ಸಾಧನಾ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

1952: ನ್ಯಾಯವಾದಿಯಾಗಿ, ರಾಜಕಾರಣಿಯಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಕೇಂದ್ರ ಸರ್ಕಾರದ ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿರುವ ಸುಷ್ಮಾ ಸ್ವರಾಜ್ ಅವರು ಹರ್ಯಾಣಾದ ಅಂಬಾಲಾ ಕಂಟೋನ್ಮೆಂಟ್ನಲ್ಲಿ ಜನಿಸಿದರು.

1967: ಕಡಿಮೆ ಬೆಲೆಯ ಬ್ರಿಟನ್ನಿನ ಪ್ರಸಿದ್ಧ ವಿಮಾನ ಯಾನ ಸಂಸ್ಥೆಯಾದ ಈಸಿಜೆಟ್ ಸಂಸ್ಥೆಯ ಸ್ಥಾಪಕ ಸ್ಟೀಲಿಯೋಸ್ ಹಾಜಿ-ಲೋವನ್ನು ಅವರು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ಜನಿಸಿದರು.

1972: ಸ್ಕೈಪ್ ನಿರ್ಮಿಸಿದವರಲ್ಲಿ ಒಬ್ಬರಾದ ಜಾನ್ ಟಲ್ಲಿನ್ ಅವರು ಎಸ್ಟೋನಿಯಾ ದೇಶದ ಟಲ್ಲಿನ್ ಎಂಬಲ್ಲಿ ಜನಿಸಿದರು. ಸ್ಕೈಪ್ ಎಂಬುದು ವಿಡಿಯೋ ಚಾಟ್ ವ್ಯವಸ್ಥೆ, ಮೆಸ್ಸೇಜ್ ವ್ಯವಸ್ಥೆ ಹಾಗೂ ವಿಡಿಯೋ ಕಾನ್ವರೆನ್ಸಿಂಗ್ ವ್ಯವಸ್ಥೆಗಳನ್ನು ಒದಗಿಸುತ್ತದೆ. ಇದಲ್ಲದೆ ಅವರು ಫಾಸ್ಟ್ ಟ್ರಾಕ್ / ಕಜಾ ಎಂಬ ಫೈಲ್ ಶೇರಿಂಗ್ ವ್ಯವಸ್ಥೆಯನ್ನೂ ನಿರ್ಮಿಸಿದ್ದಾರೆ.

1944: ಸಂಗೀತಾ ಮಹೇಶ್ ಎಂದೇ ಖ್ಯಾತರಾದ, ‘ಸಂಗೀತಾ ರೆಕಾರ್ಡಿಂಗ್’ ಸ್ಥಾಪಿಸಿ ಕನ್ನಡದ ಅನೇಕ ಜನಪ್ರಿಯ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ತಂದ ಎಚ್.ಎಂ. ಮಹೇಶ್ ಅವರು ಮಂಗಳೂರು ಸಮೀಪದ ಕುಂಬಳೆಯಲ್ಲಿ ಜನಿಸಿದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1744: ಗಣಿತದಲ್ಲಿ ಆಕ್ಟೆಂಟ್ ಸಂಶೋಧಿಸಿದ ಇಂಗ್ಲಿಷ್ ಗಣಿತಜ್ಞ ಜಾನ್ ಹೇಡ್ಲಿ ಅವರು ಈಸ್ಟ್ ಬರ್ನೆಟ್ ಎಂಬಲ್ಲಿ ನಿಧನರಾದರು.

1779: ಹದಿನೆಂಟನೇ ಶತಮಾನದ ಇಂಗ್ಲಿಷ್ ಕ್ಯಾಪ್ಟನ್, ನಕ್ಷೆಗಳ ತಯಾರಕ, ಅನ್ವೇಷಕ ಜೇಮ್ಸ್ ಕುಕ್ ಹವಾಯಿ ದ್ವೀಪದಲ್ಲಿ ಅಲ್ಲಿನ ಮೂಲ ನಿವಾಸಿಗಳ ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಮೃತನಾದ.

1975: ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF)ಸ್ಥಾಪಕರಲ್ಲಿ ಒಬ್ಬರಾದ ಜೂಲಿಯನ್ ಹಕ್ಸ್ಲೆ ಲಂಡನ್ನಿನಲ್ಲಿ ನಿಧನರಾದರು. ಈ ಸಂಸ್ಥೆ ವಿಶ್ವದಾದ್ಯಂತ ಪ್ರಾಕೃತಿಕ ಸಂಪತ್ತನ್ನು ಉಳಿಸುವ ಕ್ರಿಯೆಯಲ್ಲಿ ಮಹತ್ವದ ಕೆಲಸವನ್ನು ಮಾಡುತ್ತಿದೆ.

Categories
e-ದಿನ

ಫೆಬ್ರವರಿ-13

ದಿನಾಚರಣೆ
ವಿಶ್ವ ರೇಡಿಯೋ ದಿನ
ವಿಶ್ವದೆಲ್ಲೆಡೆಯ ಜನರನ್ನು ಒಂದುಗೂಡಿಸುವಲ್ಲಿ ರೇಡಿಯೋ ವಹಿಸಿರುವ ಪಾತ್ರವನ್ನು ನೆನೆಪಿಗೆ ತಂದುಕೊಳ್ಳುವ ದಿನವಾಗಿ, ಫೆಬ್ರವರಿ 13 ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ಪೇನ್ ದೇಶವು ಈ ಕುರಿತಾದ ಪ್ರಸ್ತಾಪವನ್ನು ಮುಂದಿಟ್ಟಾಗ ಅದನ್ನು ಯುನೆಸ್ಕೋ 2011ರ ವರ್ಷದ ನವೆಂಬರ್ 3ರಂದು ನಡೆದ ಮಹಾ ಸಭೆಯಲ್ಲಿ ಅನುಮೋದಿಸಿತು.

ಪ್ರಮುಖಘಟನಾವಳಿಗಳು:

1322: ಇಂಗ್ಲಿಷರ ನಗರವಾದ ‘ಎಲಿ’ ಎಂಬಲ್ಲಿರುವ ಎಲಿ ಕಾಥೆಡ್ರಲ್ ಅಥವಾ ಆಂಗ್ಲಿಕನ್ ಕಾಥೆಡ್ರಲ್ಲಿನ ಮಧ್ಯದ ಗೋಪುರವು ಕಳಚಿಬಿತ್ತು.

1739: ಕರ್ನಾಲ್ ಕದನದಲ್ಲಿ ಮುಘಲ್ ದೊರೆ ‘ಮುಹಮ್ಮದ್ ಷಾ’ನನ್ನು ಇರಾನಿಯನ್ ದೊರೆ ‘ನಾದೆರ್ ಷಾ’ ಸೋಲಿಸಿದನು

1880: ಥಾಮಸ್ ಆಲ್ವಾ ಎಡಿಸನ್ ಅವರು ವಿದ್ಯುತ್ ಬಲ್ಬ್ ಸಂಶೋಧನೆಯಲ್ಲಿದ್ದಾಗ ಫೆಬ್ರುವರಿ 13, 1880ರಂದು ಬಿಸಿಯಾದ ತಂತುವಿನಿಂದ ವಿದ್ಯುತ್ತು ಏಕಮುಖವಾಗಿ ಮಾತ್ರ ಹರಿಯುವುದೆಂದು ಕಂಡುಕೊಂಡರು. ಇದು ಮುಂದೆ ಡಯೋಡ್’ನಲ್ಲಿ ಕೊನೆಗೊಂಡು ಎಡಿಸನ್ ಎಫೆಕ್ಟ್ ಎಂದು ಪ್ರಖ್ಯಾತಗೊಂಡಿತು. ಇದು ಇಪ್ಪತ್ತನೇ ಶತಮಾನದಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಬೆಳವಣಿಗೆಗೆ ಮೂಲ ಸೆಲೆಯಾಗಿ ಒದಗಿದೆ.

1881: ಮೊದಲ ಮಹಿಳಾ ಪತ್ರಿಕೆ ‘ಲಾ ಸಿಟೋಯೆನ್ನೇ’ ಪ್ಯಾರಿಸ್ ನಗರದಲ್ಲಿ ಪ್ರಕಟಗೊಂಡಿತು. ಇದನ್ನು ಹ್ಯೂಬರ್ಟೈನ್ ಆಕ್ಲರ್ಟ್ ಎಂಬ ಕಾರ್ಯಕರ್ತೆ ಸ್ಥಾಪಿಸಿದರು.

1913: ಮಂಚು ಕ್ವಿಂಗ್ ಸಾಮ್ರಾಜ್ಯ ಅಂತ್ಯಗೊಂಡ ಸಂದರ್ಭದಲ್ಲಿ 13ನೇ ದಲೈ ಲಾಮಾ ಅವರು ಟಿಬೆಟ್ ಸ್ವಾತಂತ್ರ್ಯವನ್ನು ಘೋಷಿಸಿದರು. ಮುಂದೆ ಚೀನವು 1951ರಲ್ಲಿ ಟಿಬೆಟ್ ಅನ್ನು ತನ್ನ ಭಾಗವಾಗಿ ಆಕ್ರಮಿಸಿಕೊಳ್ಳುವವರೆಗೆ ಈ ಸ್ವಾತಂತ್ರ್ಯವು ಮುಂದುವರೆಯಿತು.

1914: ‘ಅಮೆರಿಕನ್ ಸೊಸೈಟಿ ಆಫ್ ಕಂಪೋಟರ್ಸ್, ಆಥರ್ಸ್ ಅಂಡ್ ಪಬ್ಲಿಷರ್ಸ್’ ಪ್ರಾರಂಭಗೊಂಡು ತನ್ನ ಸದಸ್ಯರ ಕಾಪಿರೈಟ್ ಹಕ್ಕುಗಳನ್ನು ಕಾಯ್ದುಕೊಳ್ಳುವ ಕೆಲಸವನ್ನು ಪ್ರಾರಂಭಿಸಿತು.

1931: ಬ್ರಿಟಿಷ್ ಆಡಳಿತವು ಕೋಲ್ಕತ್ತಾದಿಂದ ನವದೆಹಲಿಗಿನ ರಾಜಧಾನಿ ವರ್ಗಾವಣೆ ಕಾರ್ಯವನ್ನು ಪೂರ್ಣಗೊಳಿಸಿತು.

1941: ಮೊತ್ತ ಮೊದಲ ಬಾರಿಗೆ ಆಕ್ಸ್ ಫರ್ಡ್’ನ ಆಲ್ಬರ್ಟ್ ಅಲೆಗ್ಸಾಂಡರ್ ಎಂಬ ವ್ಯಕ್ತಿಯ ಮೇಲೆ ಪೆನ್ಸಿಲಿನ್ ಪ್ರಯೋಗಿಸಲಾಯಿತು. ಈತ ಗಡ್ಡ ಕ್ಷೌರ ಮಾಡುವಾಗ ಗಾಯವಾಗಿ ಬಳಿಕ ರಕ್ತ ವಿಷಮಯಗೊಂಡು ಸ್ಟೆಫೈಲೊಕೋಕಸ್ ಎಂಬ ಸೋಂಕಿಗೆ ತುತ್ತಾಗಿದ್ದ. ಈತನಿಗೆ ನೀಡಲಾದ ಯಾವುದೇ ಔಷಧಿಯೂ ಫಲ ನೀಡದೆ ಹೋದಾಗ ಆಸ್ಪತ್ರೆ ಅಧಿಕಾರಿಗಳು ಹೊವರ್ಡ್ ಫ್ಲೋರೇ ಮತ್ತು ಅರ್ನೆಸ್ಟ್ ಚೈನ್ ಅವರಿಗೆ ಸ್ವತಃ ಅವರುಗಳೇ ತಯಾರಿಸಿದ ಹೊಸ ಔಷಧಿ ಪ್ರಯೋಗಿಸಲು ಒಪ್ಪಿಗೆ ನೀಡಿದರು. ಅವರು ತಯಾರಿಸಿದ್ದ ಪೆನ್ಸಿಲಿನನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಲಾಯಿತು. ಸೋಂಕು ಹಾಗೇ ಮುಂದುವರಿಯಿತು. ರೋಗಿ ಮೃತನಾದ.

1946: ಜಗತ್ತಿನ ಮೊತ್ತ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ‘ಈನ್ಯಾಕ್’ (ದಿ ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟೆಗ್ರೇಟರ್ ಅಂಡ್ ಕ್ಯಾಲ್ಕುಲೇಟರ್) ಮೊದಲ ಬಾರಿಗೆ ಜಾನ್ ಡಬ್ಲ್ಯೂ ಮೌಕ್ಲಿ ಮತ್ತು ಜೆ. ಪ್ರಸ್ಪರ್ ಎಕರ್ಟ್ ಅವರಿಂದ ಪೆನ್ಸಿಲ್ವೇನಿಯಾದ ಮೂರೆ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಆವರಣದಲ್ಲಿ ಪ್ರದರ್ಶನಗೊಂಡಿತು. ಜಗತ್ತಿನಲ್ಲೇ ಅತ್ಯಂತ ದೊಡ್ಡ ಏಕೈಕ ಕಂಪ್ಯೂಟರ್ ಇದಾಗಿತ್ತು. ಇದು 30-40 ಅಡಿ ಅಳತೆಯ ಇಡೀ ಕೊಠಡಿಯನ್ನು ವ್ಯಾಪಿಸಿತ್ತು. ಆಧುನಿಕ ಎಲೆಕ್ಟ್ರಾನಿಕ್ ಗಣಕ ಉದ್ಯಮಕ್ಕೆ ಬುನಾದಿ ಹಾಕಿದ್ದರಿಂದ ಇದು ಚಾರಿತ್ರಿಕ ಘಟನೆಯಾಯಿತು. ಆಗ ಲಭ್ಯವಿದ್ದ ವ್ಯಾಕ್ಯೂಂ ಟ್ಯೂಬ್ ತಂತ್ರಜ್ಞಾನ ಬಳಸಿ ಡಿಜಿಟಲ್ ಗಣಕದ ವೇಗವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ಈ ಕಂಪ್ಯೂಟರ್ ಪ್ರದರ್ಶನದಿಂದ ಬೆಳಕಿಗೆ ಬಂತು.

1960: ಫ್ರಾನ್ಸ್ ದೇಶವು ಗೆರ್ಬೋಯ್ಸ್ ಬ್ಲ್ಯೂ ಎಂಬ ಗುಪ್ತನಾಮದ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಹೀಗೆ ಫ್ರಾನ್ಸ್ ದೇಶವು ಅಣ್ವಸ್ತ್ರ ಪರೀಕ್ಷೆ ನಡೆಸಿದ ನಾಲ್ಕನೇ ರಾಷ್ಟ್ರವೆನಿಸಿತು.

1961: ಅಮೆರಿಕದ ಕ್ಯಾಲಿಫೋರ್ನಿಯಾದ ಬಳಿ ಸುಮಾರು 5 ಲಕ್ಷ ವರ್ಷಗಳಷ್ಟು ಹಳೆಯದಾದ ಬಂಡೆ ಪತ್ತೆಯಾಗಿದ್ದು, ಅದು ಎಲ್ಲ ಕಾಲ ವಿರೋಧಗಳಿಗೂ ಒಗ್ಗುವಂತಹ ಸ್ಪಾರ್ಕ್ ಪ್ಲಗ್ ಅಂತಹ ರಕ್ಷಾ ಕವಚವನ್ನು ಹೊಂದಿರುವುದೆಂದು ವಿಜ್ಞಾನಿಗಳ ಅಂಬೋಣವಾಗಿದೆ.

1967: ಅಮೆರಿಕನ್ ಸಂಶೋಧಕರು ನ್ಯಾಷನಲ್ ಲೈಬ್ರೆರಿ ಆಫ್ ಸ್ಪೇನ್’ನಲ್ಲಿ ಲಿಯನಾರ್ಡೋ ಡ ವಿನ್ಸಿಯ ‘ಮಾಡ್ರಿಡ್ ಕೊಡೈಸಸ್’ ಅನ್ನು ಪತ್ತೆ ಮಾಡಿದರು. ಎರಡು ಸಂಪುಟಗಳ 197 ಪುಟಗಳಲ್ಲಿರುವ ಈ ಹಸ್ತ ಬರಹದ ಕೃತಿ ಕೆಂಪು ಚರ್ಮದ ರಟ್ಟನ್ನು ಹೊಂದಿದೆ. ಇದರಲ್ಲಿ ಯಂತ್ರಶಾಸ್ತ್ರ, ಸಂಖ್ಯಾಶಾಸ್ತ್ರ, ರೇಖಾಗಣಿತ, ಕೋಟೆಗಳ ನಿರ್ಮಾಣವೇ ಮುಂತಾದ ಮಹತ್ವದ ವಿಚಾರಗಳಲ್ಲದೆ, ಲಿಯನಾರ್ಡೋ ಡ ವಿನ್ಸಿ ಅವರು ಉಪಯೋಗಿಸುತ್ತಿದ್ದ 116 ಪುಸ್ತಕಗಳ ಪಟ್ಟಿಯೂ ಇದೆ. ಈ ಪುಸ್ತಕಗಳ ಪಟ್ಟಿಯಲ್ಲಿ ಕೆಲವೊಂದು ಲ್ಯಾಟಿನ್ ವ್ಯಾಕರಣ ಪುಸ್ತಕಗಳೂ ಸೇರಿವೆ. ಇಟಾಲಿಯನ್ ಉಪಭಾಷೆಯಲ್ಲಿ ಬರೆದಿರುವ ಈ ಹಸ್ತಪ್ರತಿಯಲ್ಲಿ ಕೆಲವೊಂದು ಭಾಷಾ ತಪ್ಪುಗಳಿವೆ ಎಂದು ಹೇಳಲಾಗಿದೆ.

1990: ಎರಡೂ ಜರ್ಮನಿಗಳನ್ನು ಒಂದುಗೂಡಿಸುವ ಎರಡು ಹಂತದ ಯೋಜನೆಯ ಕುರಿತು ಒಮ್ಮತ ಏರ್ಪಟ್ಟಿತು.

1996: ಮಾವೋಗಳ ನೇತೃತ್ವದ ನೇಪಾಳದ ಕಮ್ಮೂನಿಸ್ಟ್ ಪಕ್ಷವು ದೇಶದಲ್ಲಿ ಆಂತರಿಕ ಕ್ರಾಂತಿ ನಡೆಸಲು ಮುಂದಾಯಿತು.

2004: ಹಾರ್ವರ್ಡಿನ ಸ್ಮಿತ್ ಸೋನಿಯನ್ ಆಸ್ಟ್ರೋಫಿಸಿಕ್ಸ್ ಕೇಂದ್ರವು ವಿಶ್ವದ ಅತಿ ದೊಡ್ಡ ವಜ್ರ ನಕ್ಷತ್ರವಾದ ‘ವೈಟ್ ಡ್ವಾರ್ಫ್ ಸ್ಟಾರ್ ಬಿ.ಪಿ.ಎಮ್ 37093’ ಅನ್ನು ಅನ್ವೇಷಿಸಿದುದಾಗಿ ಘೋಷಿಸಿತು. ಖಗೋಳ ವಿಜ್ಞಾನಿಗಳು ಇದನ್ನು ‘ಲೂಸಿ ಇನ್ ದಿ ಸ್ಕೈ ವಿಥ್ ಡೈಮಂಡ್ಸ್’ ಎಂಬ ‘ದಿ ಬೀಟಲ್ಸ್’ ಪ್ರಖ್ಯಾತ ಹಾಡಿನಲ್ಲಿರುವಂತೆ ‘ಲೂಸಿ’ ಎಂದು ಹೆಸರಿಸಿದ್ದಾರೆ.

2006: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಶಾಖ ಪಟ್ಟಣದಿಂದ ಜಲಾಂತರ್ಗಾಮಿಯ ಮೂಲಕ ಕಡಲಾಳದ ಯಾನ ಕೈಗೊಂಡ ವೈಶಿಷ್ಟ್ಯತೆ ಸಾಧಿಸಿದರು. ಡಾ. ಕಲಾಂ ಅವರು ಭಾರತದ ನೌಕಾಪಡೆಗೆ ಸೇರಿದ ರಷ್ಯ ಮೂಲದ ಐ ಎನ್ ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸುಮಾರು ಮೂರೂವರೆ ತಾಸು ಕಾಲ ಪ್ರಯಾಣ ಮಾಡಿದರು.

2007: ಒರಿಯಾ ಭಾಷಾ ಸಾಹಿತಿ ಡಾ. ಜಗನ್ನಾಥ ಪ್ರಸಾದ್ ದಾಸ್ ಅವರ `ಪರಿಕ್ರಮ’ ಕವನ ಸಂಕಲನವು 2006ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆಯಾಯಿತು.

2008: ಆಸ್ಟ್ರೇಲಿಯಾದ ಪ್ರಧಾನಿ ಕೆವಿನ್ ರುಡ್ ಅವರು ವಿದೇಶಿ ಆಕ್ರಮಣದಿಂದ ತೊಂದರೆಗೊಳಗಾದ ಸ್ಥಳೀಯ ಆಸ್ಟ್ರೇಲಿಯನ್ ಜನಾಂಗ (Indigenous Australians) ಮತ್ತು ತಮ್ಮ ಕುಟುಂಬದಿಂದ ಬಲಾತ್ಕಾರಯುತವಾಗಿ ಬೇರೆ ಮಾಡಲ್ಪಟ್ಟ (Stolen Generations) ಮೂಲ ಸಂಜಾತರ ಕ್ಷಮೆ ಯಾಚಿಸಿದರು.

2008: ಚಿತ್ರಕಲಾ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ದಾವಣಗೆರೆಯ ಮಲ್ಲಿಕಾರ್ಜುನ ಜಾದವ್, ಬೆಂಗಳೂರಿನ ಜೆ.ಎಂ.ಎಸ್. ಮಣಿ, ಬೆಳಗಾವಿಯ ಎಸ್. ಅಪ್ಪಾಸಾಹೇಬ್ ಕಾಡಪುರಕರ ಅವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ 2007ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಮೂಲ್ಯ ಕಲಾ ವಸ್ತುಗಳನ್ನು ಸಂಗ್ರಹಿಸಿ, ಚಿತ್ರಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡುವುದಕ್ಕೂ ಅಕಾಡೆಮಿ ನಿರ್ಧರಿಸಿತು.

2009: ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಅಭಿವೃದ್ಧಿಪಡಿಸಿದ ಐದು ‘ಧ್ರುವ’ ಹೆಲಿಕಾಪ್ಟರುಗಳನ್ನು ದಕ್ಷಿಣ ಅಮೆರಿಕಾದ ಈಕ್ವೆಡಾರ್ ದೇಶದ ವಾಯುಪಡೆಗೆ ಹಸ್ತಾಂತರಿಸಲಾಯಿತು.

2009: ದೇಶದ ಮೊದಲ ಗಗನಯಾತ್ರಿಯಾದ ನಿವೃತ್ತ ವಿಂಗ್ ಕಮಾಂಡರ್ ರಾಕೇಶ್ ಶರ್ಮ ಅವರು, ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ, ಅಮೆರಿಕ ನಿರ್ಮಾಣದ ಬೋಯಿಂಗ್ ಎಫ್-18 ಸೂಪರ್ ಹಾರ್ನೆಟ್ ಯುದ್ಧ ವಿಮಾನದ ಹಾರಾಟ ನಡೆಸಿದ ಮೊದಲ ಭಾರತೀಯರೆನಿಸಿದರು.

ಪ್ರಮುಖಜನನ/ಮರಣ:

1469: ನವೋದಯ ಕಾಲದ ಹೀಬ್ರೂ ವ್ಯಾಕರಣಕಾರ, ವಿದ್ವಾಂಸ, ಕವಿ ಎಲಿಯಾ ಲೆವಿಟಾ ಅವರು ನ್ಯೂರೆಂಬರ್ಗ್ ಬಳಿಯ ನಿಯೋಸ್ಟಾಡ್ಟ್ ಎಂಬಲ್ಲ್ಲಿ ಜನಿಸಿದರು.

1835: ಅಹಮದ್ದೀಯ ಪಂಥದ ಸ್ಥಾಪಕ ಮಿರ್ಜಾ ಗುಲಾಮ್ ಅಹಮದ್ ಅವರು ಭಾರತದ ಸಿಖ್ಖರ ಸಾಮ್ರಾಜ್ಯದ ಭಾಗವಾಗಿದ್ದ ಕದೀಯಾನ್ ಎಂಬಲ್ಲಿ ಜನಿಸಿದರು. ಇವರು 90ಕ್ಕೂ ಹೆಚ್ಚು ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದರು.

1849: ಬ್ರಿಟಿಷ್ ಆಡಳಿತಗಾರ ಲಾರ್ಡ್ ರಾಂಡೋಲ್ಫ್ ಚರ್ಚಿಲ್ ಲಂಡನ್ನಿನಲ್ಲಿ ಜನಿಸಿದರು. ಚಾನ್ಸೆಲರ್ ಆಫ್ ದಿ ಎಕ್ಸ್ಚೆಕರ್ ಹುದ್ಧೆಯಲ್ಲಿದ ಇವರು ಮೊದಲ ಬಾರಿಗೆ ‘ಟೋರಿ ಡೆಮಾಕ್ರೆಸಿ’ ಚಿಂತನೆಯನ್ನು ಹುಟ್ಟುಹಾಕಿದ್ದರು. ಇವರ ಮಗ ವಿನ್ ಸ್ಟನ್ ಚರ್ಚಿಲ್ ಬಹುಪ್ರಸಿದ್ಧಿ ಪಡೆದ ಬ್ರಿಟನ್ನಿನ ಪ್ರಧಾನಿಯಾಗಿದ್ದರು.

1879: ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಹೈದರಾಬಾದಿನಲ್ಲಿ ಜನಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾದವರು.

1910: ಭೌತಶಾಸ್ತ್ರಜ್ಞ ವಿಲಿಯಂ ಶಾಕ್ಲಿ ಅವರು ಲಂಡನ್ನಿನಲ್ಲಿ ಜನಿಸಿದರು. ಮುಂದೆ ಅಮೆರಿಕದಲ್ಲಿ ನೆಲೆಸಿ ತಮ್ಮ ಸಂಗಡಿಗರ ಒಡಗೂಡಿ ‘ಪಾಯಿಂಟ್ ಆಫ್ ಕಾಂಟ್ಯಾಕ್ಟ್ ಟ್ರಾನ್ಸಿಸ್ಟರ್’ ಕಂಡು ಹಿಡಿದ ಇವರಿಗೆ 1956ರ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1935: ಕೃಷಿ ತಜ್ಞ, ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ, ರೈತರ ಹಕ್ಕುಗಳಿಗಾಗಿನ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಮೈಸೂರಿನಲ್ಲಿ ಜನಿಸಿದರು.

1948: ರಂಗಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಲ್ಲದೆ, ದೇಶ- ವಿದೇಶಗಳಲ್ಲಿ ಕನ್ನಡ ನಾಟಕಗಳನ್ನು ನಿರ್ದೇಶಿಸಿ ಖ್ಯಾತರಾದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

1967: ನಿಸ್ಸಾರ್ ಮೋಟಾರ್ ಕಂಪೆನಿಯನ್ನು ಸ್ಥಾಪಿಸಿದ ಯೋಶಿಸುಕೆ ಐಕವ ಅವರು ಜಪಾನಿನ ಟೋಕಿಯೋ ನಗರದಲ್ಲಿ ನಿಧನರಾದರು.

2014: ಶ್ರೀಲಂಕಾದಲ್ಲಿ ಜನಿಸಿದ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ದೇಶಕ, ಛಾಯಾಗ್ರಾಹಕ, ಚಿತ್ರಕಥಾಲೇಖಕ ಬಾಲು ಮಹೇಂದ್ರ ಅವರು ಚೆನ್ನೈ ನಗರದಲ್ಲಿ ನಿಧನರಾದರು. ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದೀ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಇವರಿಗೆ, ರಾಷ್ಟ್ರ ಮಟ್ಟದ ಹಾಗೂ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯ ಸರ್ಕಾರಗಳ ಪಶಸ್ತಿಗಳೂ ಸೇರಿದಂತೆ ಅನೇಕ ಚಲನಚಿತ್ರ ಪ್ರಶಸ್ತಿಗಳು ಸಂದಿದ್ದವು.

2016: ಪ್ರಸಿದ್ಧ ಮಲಯಾಳಂ ಭಾಷಾ ಸಾಹಿತಿ ಓ.ಎನ್.ವಿ. ಕುರುಪ್ ನಿಧನರಾದರು. ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

Categories
e-ದಿನ

ಫೆಬ್ರುವರಿ-12

ದಿನಾಚರಣೆಗಳು:
ಡಾರ್ವಿನ್ ದಿನ
ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ಜನ್ಮದಿನದ ಸಂದರ್ಭದಲ್ಲಿ ವಿಜ್ನಾನಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಲು ಮತ್ತು ವಿಜ್ಞಾನದ ಮಹತ್ವವನ್ನು ಲೋಕದಲ್ಲಿ ಹೆಚ್ಚು ಹೆಚ್ಚು ತಿಳಿಯಪಡಿಸಲು ಫೆಬ್ರವರಿ 12 ದಿನವನ್ನು ಡಾರ್ವಿನ್ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1502: ಎರಡನೇ ಬಾರಿ ಭಾರತಕ್ಕೆ ಪಯಣಿಸಲು ಲಿಸ್ಬನ್ ನಗರದಲ್ಲಿ ನೌಕಾಯಾನವನ್ನು ಪ್ರಾರಂಭಿಸಿದ ವಾಸ್ಕೋ ಡ ಗಾಮ” open=”no”]ವಾಸ್ಕೋ ಡ ಗಾಮ ಭಾರತಕ್ಕೆ ತನ್ನ ಎರಡನೇ ಯಾತ್ರೆಗಾಗಿ ಲಿಸ್ಬನ್ ನಗರದಲ್ಲಿ ತನ್ನ ನೌಕೆಗೆ ಹುಟ್ಟುಹಾಕಿದನು.[/fusion_toggle][fusion_toggle title=”1554: ಇಂಗ್ಲೆಂಡಿನ ಸಿಂಹಾಸನವನ್ನು 9 ದಿನಗಳವರೆಗೆ ಹೊಂದಿದ್ದ ಲೇಡಿ ಜೇನ್ ಗ್ರೇ ಶಿರಃಚೇದನ” open=”no”]ಇಂಗ್ಲೆಂಡಿನ ಸಿಂಹಾಸನವನ್ನು 9 ದಿನಗಳವರೆಗೆ ಹೊಂದಿದ್ದ ಲೇಡಿ ಜೇನ್ ಗ್ರೇ ಅನ್ನು, ಈ ಘಟನೆಯಾದ ಒಂದು ವರ್ಷದ ನಂತರದಲ್ಲಿ ರಾಜದ್ರೋಹದ ಆಪಾದನೆಯ ಮೇರೆಗೆ ಶಿರಃಚೇದನಗೊಳಿಸಲಾಯಿತು.[/fusion_toggle][fusion_toggle title=”1593: ಕೇವಲ 3,000 ಜೋಸಿಯಾನ್ ರಕ್ಷಣಾ ತಂಡದಿಂದ 30,000 ಜಪಾನೀ ಸೈನ್ಯಕ್ಕೆ ಸೋಲು” open=”no”]ಹೇಂಗ್ಜು ಎಂಬ ನಗರವನ್ನು ವಶಪಡಿಸಿಕೊಳ್ಳಲು ಬಂದ 30,000 ಜಪಾನ್ ಸೈನಿಕರ ಸೇನೆಯನ್ನು, ಆ ಪ್ರದೇಶದ ರಕ್ಷಣೆಗೆ ಹೋರಾಡಿದ ಕ್ವಾನ್ ಯಲ್ ಅವರ ನೇತೃತ್ವದ ಕೇವಲ 3,000 ಸೈನಿಕರ ಪಡೆ ಯಶಸ್ವಿಯಾಗಿ ಸೋಲಿಸಿ ಹಿಮ್ಮೆಟ್ಟಿಸಿತು.[/fusion_toggle][fusion_toggle title=”1816: ಬೆಂಕಿಗಾಹುತಿಯಾದ ಯೂರೋಪಿನ ಅತ್ಯಂತ ಪ್ರಾಚೀನ ರಂಗಮಂದಿನ” open=”no”]ಯೂರೋಪಿನ ಅತ್ಯಂತ ಪ್ರಾಚೀನ ರಂಗಮಂದಿರವಾದ ಇಟಲಿಯ ನೇಪಲ್ಸ್ ನಗರದಲ್ಲಿದ್ದ ‘ಟೀಟ್ರೋ ಡಿ ಸಾನ್ ಕಾರ್ಲೋ’ ಒಪೇರಾ ಹೌಸ್ ಬೆಂಕಿಗಾಹುತಿಯಾಗಿ ನಾಶಗೊಂಡಿತು.[/fusion_toggle][fusion_toggle title=”1851: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ” open=”no”]ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಬಳಿಯ ಬಾತ್ರಸ್ಟ್ ಎಂಬಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಸಿರುವುದಾಗಿ ಎಡ್ವರ್ಡ್ ಹಾರ್ಗ್ರೇವ್ಸ್ ಪ್ರಕಟಿಸಿದರು.[/fusion_toggle][fusion_toggle title=”1855: ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಸ್ಥಾಪನೆ” open=”no”]ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿತು.[/fusion_toggle][fusion_toggle title=”1909: ನ್ಯೂಜಿಲೆಂಡಿನಲ್ಲಿ ಇಪ್ಪತ್ತನೆಯ ಶತಮಾನದ ಭೀಕರ ನೌಕಾ ಅಪಘಾತ ” open=”no”]ನ್ಯೂಜಿಲೆಂಡಿನ ಇಪ್ಪತ್ತನೆಯ ಶತಮಾನದ ಭೀಕರ ನೌಕಾ ಅಪಘಾತ ಸಂಭವಿಸಿತು. ಎಸ್ ಎಸ್ ಪೆಂಗ್ವಿನ್ ಎಂಬ ಅಂತರ್ದ್ವೀಪೀಯ ಹಡಗು ವೆಲ್ಲಿಂಗ್ಟನ್ ಬಂದರಿನ ಸಮೀಪದಲ್ಲಿ ಮುಳುಗಿ ಸ್ಪೋಟಗೊಂಡಿತು.[/fusion_toggle][fusion_toggle title=”1914: ವಾಷಿಂಗ್ಟನ್ ನಗರದಲ್ಲಿ ಲಿಂಕನ್ ಮೆಮೋರಿಯಲ್ ಶಂಕುಸ್ಥಾಪನೆ” open=”no”]ವಾಷಿಂಗ್ಟನ್ ನಗರದಲ್ಲಿ ಲಿಂಕನ್ ಮೆಮೋರಿಯಲ್ ಶಂಕುಸ್ಥಾಪನೆ ನೆರವೇರಿತು.[/fusion_toggle][fusion_toggle title=”1924: ಪ್ರಸಿದ್ಧ ಪಿಯಾನೋ ವಾದಕ ಜಾರ್ಜ್ ಗೆರ್ಶ್ವಿನ್ ಅವರ ರಾಪ್ಸೊಡಿ ಇನ್ ಬ್ಲೂ ತನ್ನ ಮೊದಲ ಪ್ರದರ್ಶನ ನೀಡಿತು” open=”no”]ಪ್ರಸಿದ್ಧ ಪಿಯಾನೋ ವಾದಕ ಜಾರ್ಜ್ ಗೆರ್ಶ್ವಿನ್ ಅವರಿದ್ದ ‘ರಾಪ್ಸೊಡಿ ಇನ್ ಬ್ಲೂ’ ತಂಡವು ‘ಎನ್ ಎಕ್ಸ್ಪೆರಿಮೆಂಟ್ ಇನ್ ಮಾಡರ್ನ್ ಮ್ಯೂಸಿಕ್’ ಎಂಬ ಹೆಸರಿನ ತನ್ನ ಮೊದಲ ಪ್ರದರ್ಶನವನ್ನು ನ್ಯೂಯಾರ್ಕ್ ನಗರದ ಏವೋಲಿಯನ್ ಸಭಾಂಗಣದಲ್ಲಿ ನೀಡಿತು. ಈ ಕಾರ್ಯಕ್ರಮವನ್ನು ಪಾಲ್ ವೈಟ್ಮ್ಯಾನ್ ಅವರ ತಂಡ ಪ್ರಸ್ತುತಪಡಿಸಿದ್ದು, ಜಾರ್ಜ್ ಗೆರ್ಶ್ವಿನ್ ಅವರು ಪಿಯಾನೋ ನುಡಿಸಿದ್ದರು.[/fusion_toggle][fusion_toggle title=”1922: ಭಾರತದಲ್ಲಿ ಅಸಹಕಾರ ಚಳುವಳಿ ಅಂತ್ಯ ” open=”no”]ಫೆಬ್ರುವರಿ 5ರಂದು ಚೌರಿ ಚೌರಾದಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಯಲ್ಲಿ 22 ಪೊಲೀಸರು ಮೃತರಾದದ್ದರಿಂದ, ಅದರಿಂದ ನೊಂದ ಅಹಿಂಸಾ ಪ್ರತಿಪಾದಕರಾದ ಗಾಂಧೀಜಿಯವರು, ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು.[/fusion_toggle][fusion_toggle title=”1948: ಗಾಂಧೀಜಿ ಚಿತಾಭಸ್ಮ ಅಲಹಾಬಾದಿಗೆ ಆಗಮನ ” open=”no”]ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಅಲಹಾಬಾದ್ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಸಲುವಾಗಿ ತೃತೀಯ ದರ್ಜೆಯ ಬೋಗಿ ಸಂಖ್ಯೆ 2949ರಲ್ಲಿ ತರಲಾಯಿತು. ಚಿತಾಭಸ್ಮದಲ್ಲಿ ಸ್ವಲ್ಪ ಭಾಗವನ್ನು ಪರಮಹಂಸ ಯೋಗಾನಂದ ಅವರಿಗೆ ನೀಡಲಾಯಿತು. ಅವರು ಅದನ್ನು ಕ್ಯಾಲಿಫೋರ್ನಿಯಾದ ಗಾಂಧಿ ಶಾಂತಿ ಪ್ರತಿಷ್ಠಾನ ಸ್ಮಾರಕದಲ್ಲಿ ಇರಿಸಿದರು.[/fusion_toggle][fusion_toggle title=”1954: ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಂಬಳದ ಪಟ್ಟಿ (payroll report) ತಯಾರಿಸಲು ಕಂಪ್ಯೂಟರ್ ಬಳಕೆ” open=”no”]ಲಿಯಾನ್ಸ್ ಅವರ ಲಿಯೋ ಗಣಕ ಯಂತ್ರದ ಮೂಲಕ ಸಂಬಳದ ಪಟ್ಟಿ ತಯಾರಿಸಲಾಯಿತು. ಚರಿತ್ರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಕಂಪ್ಯೂಟರ್ ಅನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಯಿತು.[/fusion_toggle][fusion_toggle title=”1961: ಶುಕ್ರಗ್ರಹದೆಡೆಗೆ ‘ವೆನೆರಾ 1’ ಕಳುಹಿದ ಸೋವಿಯತ್ ಯೂನಿಯನ್” open=”no”]ಸೋವಿಯತ್ ಒಕ್ಕೂಟವು ಶುಕ್ರಗ್ರಹದೆಡೆಗೆ ‘ವೆನೆರಾ 1’ ಉಪಗ್ರಹವನ್ನು ಕಳುಹಿಸಿತು.[/fusion_toggle][fusion_toggle title=”1974: ನೊಬೆಲ್ ಪುರಸ್ಕೃತ ಸಾಹಿತಿ ಅಲೆಕ್ಸಾಂಡರ್ ಸೋಲ್ ಸೆನಿಸ್ಟನ್ ಅವರನ್ನು ಗಡಿಪಾರು ಮಾಡಿದ ಸೋವಿಯತ್ ಒಕ್ಕೂಟ” open=”no”]ಸೋವಿಯತ್ ಒಕ್ಕೂಟವು ತನ್ನ ಪ್ರಜೆ ನೊಬೆಲ್ ಪುರಸ್ಕೃತ ಸಾಹಿತಿ ಅಲೆಕ್ಸಾಂಡರ್ ಸೋಲ್ ಸೆನಿಸ್ಟನ್ ಅವರನ್ನು ಗಡಿಪಾರು ಮಾಡಿತು. ಇವರು ಸೋವಿಯತ್ ಯೂನಿಯನ್ ಮತ್ತು ಕಂಮ್ಯೂನಿಸಮ್ಮಿನ ಟೀಕಾಕಾರರಾಗಿದ್ದರು.[/fusion_toggle][fusion_toggle title=”1983: ಪಾಕಿಸ್ತಾನದ ಲಾಹೋರಿಲ್ಲಿ ಮಿಲಿಟರಿ ಸರ್ವಾಧಿಕಾರಿಯಾದ ಜಿಯಾ ಉಲ್ ಹಕ್ ಹೊರಡಿಸಿದ್ದ ಲಾ ಆಫ್ ಎವಿಡೆನ್ಸ್ ಅನ್ನು ವಿರೋಧಿಸಿ ಮಹಿಳೆಯರ ಪ್ರತಿಭಟನೆ” open=”no”]ಪಾಕಿಸ್ತಾನದ ಲಾಹೋರಿಲ್ಲಿ ಮಿಲಿಟರಿ ಸರ್ವಾಧಿಕಾರಿಯಾದ ಜಿಯಾ ಉಲ್ ಹಕ್ ಹೊರಡಿಸಿದ್ದ ಮಹಿಳೆಯರ ಪ್ರಮಾಣಿಕೆಯನ್ನು ಅಸಮಾನ ದೃಷ್ಟಿಯಿಂದ ಕಾಣುವ ‘ಲಾ ಆಫ್ ಎವಿಡೆನ್ಸ್’ ಅನ್ನು ವಿರೋಧಿಸಿ ನೂರು ಜನ ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ಮಹಿಳೆಯರ ಪ್ರತಿಭಟನೆಯನ್ನು ಬಗ್ಗುಬಡಿಯಲು ಅಶ್ರುವಾಯು, ಲಾಠಿ ಪ್ರಹಾರಗಳನ್ನು ನಡೆಸಿ, ಪ್ರತಿಭಟಿಸಿದ ಮಹಿಳೆಯರಿಗೆ ಕಾರಾಗ್ರಹ ವಾಸವನ್ನೂ ವಿಧಿಸಲಾಯಿತು. ಕಡೆಗೆ ಈ ಪ್ರತಿಭಟನಾಕಾರರು ಕಾನೂನಿನ ಅನ್ಯಾಯವನ್ನು ಅಳಿಸುವುದರಲ್ಲಿ ಯಶಸ್ವಿಯಾದರು.[/fusion_toggle][fusion_toggle title=”1994: ನಾರ್ವೆಯ ನ್ಯಾಷನಲ್ ಗ್ಯಾಲರಿಯಲ್ಲಿ ಅಮೂಲ್ಯ ಕಲಾಕೃತಿಯನ್ನು ಅಪಹರಿಸಿದ ಕಳ್ಳರು ” open=”no”]ನಾರ್ವೆಯ ನ್ಯಾಷನಲ್ ಗ್ಯಾಲರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಎಡ್ವರ್ಡ್ ಮಂಚ್ ಅವರ ಪ್ರಸಿದ್ಧ ವರ್ಣಚಿತ್ರವಾದ ‘ದಿ ಸ್ಕ್ರೀಮ್’ ಅನ್ನು ಅಪಹರಿಸಿದರು.[/fusion_toggle][fusion_toggle title=”2001: ಆಸ್ಟರಾಯ್ಡ್ ಸ್ಪರ್ಶಿಸಿದ ಶೂಮೇಕರ್” open=”no”]ನಿಯರ್ ಶೂಮೇಕರ್ ಬಾಹ್ಯಾಕಾಶ ವಾಹನವು ‘433 ಎರೋಸ್’ ಎಂಬ ಆಸ್ಟರಾಯ್ಡ್’ನ ತಡಿಯನ್ನು ಮುಟ್ಟಿ, ಹೀಗೆ ಆಸ್ಟರಾಯ್ಡ್ ಸ್ಪರ್ಶಿಸಿದ ಪ್ರಥಮ ಬಾಹ್ಯಾಕಾಶ ವಾಹನವೆಂಬ ಕೀರ್ತಿಗೆ ಪಾತ್ರವಾಯಿತು.[/fusion_toggle][fusion_toggle title=”2004: ಸಾನ್ ಫ್ರಾನ್ಸಿಸ್ಕೋ ನಗರದಲ್ಲಿ ಸಲಿಂಗ ವಿವಾಹಿತರಿಗೆ ಪರವಾನಿಗಿ” open=”no”]ಸ್ಯಾನ್ ಫ್ರಾನ್ಸಿಸ್ಕೋ ನಗರವು ಅಲ್ಲಿನ ಮೇಯರ್ ಗಾವಿನ್ ನ್ಯೂಸಂ ಅವರ ಆದೇಶದ ಮೇರೆಗೆ ಸಲಿಂಗ ವಿವಾಹಿತರಿಗೆ ಪರವಾನಿಗಿ ನೀಡಲು ಪ್ರಾರಂಭಿಸಿತು.[/fusion_toggle][fusion_toggle title=”2006: ಮುಂಬೈನ ಸಂಕಲ್ಪ ಹೋಟೆಲ್ನಿಂದ 30 ಅಡಿ ದೋಸೆಯ ಗಿನ್ನೆಸ್ ದಾಖಲೆ” open=”no”]ಮುಂಬೈನ ಸಂಕಲ್ಪ ಹೋಟೆಲ್ ಸಮೂಹವು 30 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡಿತು. ಈ ಹಿಂದೆ ಇದು 25 ಅಡಿ ಉದ್ದದ ದೋಸೆಯ ದಾಖಲೆ ನಿರ್ಮಿಸಿತ್ತು.[/fusion_toggle][fusion_toggle title=”2007: ಆಂಧ್ರ ಪ್ರದೇಶದ ಕೊಂಡಪಲ್ಲಿಯ ಬೊಂಬೆಗಳಿಗೆ ವಿಶ್ವಮಾನ್ಯತೆ” open=”no”]ಆಂಧ್ರ ಪ್ರದೇಶದ ವಿಜಯವಾಡ ಸಮೀಪದ ಕೊಂಡಪಲ್ಲಿ ಗ್ರಾಮದಲ್ಲಿ ತಯಾರಾಗುವ ಸಾಂಪ್ರದಾಯಿಕ ಶೈಲಿಯ ಮರದ ಬೊಂಬೆಗಳಿಗೆ ಜಿಐ (ಜಿಯಾಗ್ರಾಫಿಕಲ್ ಇಂಡಿಕೇಟರ್) ಮಾನ್ಯತಾ ಪ್ರಮಾಣ ಪತ್ರವನ್ನು ಚೆನ್ನೈನ ಪೇಟೆಂಟ್ ಕಚೇರಿಯು ನೀಡಿತು. ಇದರಿಂದಾಗಿ ಕೊಂಡಪಲ್ಲಿಯ ಬೊಂಬೆಗಳಿಗೆ ವಿಶ್ವಮಾನ್ಯತೆ ಲಭಿಸುವುದರ ಜೊತೆಗೆ ಈ ವಿನ್ಯಾಸಕ್ಕೆ ಈ ಗ್ರಾಮದ ಕುಶಲಕರ್ಮಿಗಳಿಗೆ ಪೇಟೆಂಟ್ ಕೂಡಾ ಲಭಿಸಿತು.[/fusion_toggle][fusion_toggle title=”2007: ನಾರ್ವೆಯ ಓರ್ ಕ್ಲಾ ಕಂಪೆನಿಯ ಭಾಗವಾದ ಬೆಂಗಳೂರಿನ ಎಂ.ಟಿ.ಆರ್ ಫುಡ್ಸ್ ಕಂಪೆನಿ” open=”no”]ಬೆಂಗಳೂರಿನ 80 ವರ್ಷಗಳಷ್ಟು ಹಳೆಯದಾದ ಎಂಟಿಆರ್ ಫುಡ್ಸ್ ಕಂಪೆನಿಯನ್ನು ನಾರ್ವೆಯ ಓರ್ ಕ್ಲಾ ಕಂಪೆನಿಯು 100 ದಶಲಕ್ಷ ಡಾಲರ್ ಕೊಟ್ಟು ಖರೀದಿಸಿದೆ ಎಂಬ ಸುದ್ದಿಯನ್ನು ಹಾಂಕಾಂಗಿನ ಫೈನಾನ್ಸ್ ಏಷ್ಯಾ ಡಾಟ್ ಕಾಂ ವೆಬ್ ಸೈಟ್ ಪ್ರಕಟಿಸಿತು.[/fusion_toggle][fusion_toggle title=”2007: ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಪ್ರಥಮ ಬಾರಿಗೆ ಮಹಿಳಾಧ್ಯಕ್ಷೆ ” open=”no”]ಬೋಸ್ಟನ್ ನಗರದಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲದಕ್ಕೆ, ದಕ್ಷಿಣ ಅಮೆರಿಕದ ಖ್ಯಾತ ಇತಿಹಾಸ ತಜ್ಞೆ ಡ್ರ್ಯೂ ಗಿಲ್ ಪಿನ್ ಫೌಸ್ಟ್ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. 1636ರಲ್ಲಿ ಪ್ರಾರಂಭಗೊಂಡ ಈ ವಿಶ್ವವಿದ್ಯಾಲಯಕ್ಕೆ ಮಹಿಳೆಯೊಬ್ಬರು ಅಧ್ಯಕ್ಷರಾಗುತ್ತಿರುವುದು ಇದೇ ಮೊದಲು.[/fusion_toggle][fusion_toggle title=”2008: ಸುಖದೇವ್ ಥೋರಟ್, ಗೀತಾ ನಾಗಭೂಷಣ ಒಳಗೊಂಡಂತೆ ಆರು ಸಾಧಕರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ” open=”no”]ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಡಾ. ಸುಖದೇವ್ ಥೋರಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ, ಗುಲ್ಬರ್ಗದ ಕೈಗಾರಿಕೋದ್ಯಮಿ ಗಳಂಗಳಪ್ಪ ಪಾಟೀಲ, ಖಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾ ನಶೀನ್ ಹಾಗೂ ಖಾಜಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸೈಯದ್ ಶಾ ಖುಸ್ರೋ ಹುಸೇನಿ ಹಾಗೂ ಬೀದರಿನ ಚೆನ್ನಬಸಪ್ಪ ಹಾಲಹಳ್ಳಿ ಅವರನ್ನು ಗುಲ್ಬರ್ಗ ವಿಶ್ವ ವಿದ್ಯಾಲಯವು 2008ರ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿತು.[/fusion_toggle][fusion_toggle title=”2008: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಆಕ್ಸ್ ಫರ್ಡ್ ಡಾಕ್ಟರೇಟ್ ಗೌರವ” open=”no”]ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತನ್ನ ಹಳೆಯ ವಿದ್ಯಾರ್ಥಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಜೂನ್ 18ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಿತು.[/fusion_toggle][fusion_toggle title=”2008: ಎಲ್ಲ ಅಧಿಸೂಚಿತ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ” open=”no”]2008ರ ಜುಲೈ 1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲ ಅಧಿಸೂಚಿತ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕವನ್ನು ಕಡ್ಡಾಯ ಮಾಡಿ ಹೈಕೋರ್ಟ್ ಆದೇಶ ನೀಡಿತು.[/fusion_toggle][fusion_toggle title=”2009: ಬಾಹ್ಯಾಕಾಶದಲ್ಲಿ ಎರಡು ಬೃಹತ್ ಉಪಗ್ರಹಗಳ ಡಿಕ್ಕಿ ” open=”no”]ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಎರಡು ಬೃಹತ್ ಉಪಗ್ರಹಗಳು ಪರಸ್ಪರ ಡಿಕ್ಕಿ ಹೊಡೆದು, ವಿಜ್ಞಾನಿಗಳಲ್ಲಿ ಭಾರಿ ಅಚ್ಚರಿಗೆ ಕಾರಣವಾದವು. ಅಮೆರಿಕದ ಖಾಸಗಿ ಒಡೆತನದ ಸಂಪರ್ಕ ಉಪಗ್ರಹ ಇರಿಡಿಯಂ 33 (1,235 ಪೌಂಡ್) ರಷ್ಯದ ಸೇನಾ ಉದ್ದೇಶದ ಕಾಸ್‌ಮಾಸ್ 2,251 ಉಪಗ್ರಹಕ್ಕೆ ಅಪ್ಪಳಿಸಿತು.[/fusion_toggle][/fusion_accordion]

ಪ್ರಮುಖಜನನ/ಮರಣ:

1809: ಆಧುನಿಕ ಜೀವವಿಜ್ಞಾನಕ್ಕೆ ಬುನಾದಿ ಒದಗಿಸಿದ ಚಾರ್ಲ್ಸ್ ಡಾರ್ವಿನ್ ಜನನ” open=”no”]ಆಧುನಿಕ ಜೀವವಿಜ್ಞಾನಕ್ಕೆ ಬುನಾದಿ ಒದಗಿಸಿದ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರು ಇಂಗ್ಲೆಂಡಿನ ಶ್ರೋಪ್ಸ್ ಹೈರ್ ಬಳಿಯ ಶ್ರೂಸ್ಬರಿ ಎಂಬಲ್ಲಿ ಜನಿಸಿದರು. “ನಿಸರ್ಗವು ಗುಣಗಳನ್ನು ಗುರಿಯಿಲ್ಲದೆ ನೀಡುತ್ತದೆ ಮತ್ತು ಪರಿಸರದ ಪರಿಸ್ಥಿತಿಗಳು ಈ ಗುಣಗಳಲ್ಲಿ ಉತ್ತಮವಾದವುಗಳನ್ನು ಆರಿಸುತ್ತದೆ. ಈ ರೀತಿಯಲ್ಲಿ ಹೊಸ ಜೀವಿಗಳು ಹುಟ್ಟುತ್ತವೆ” ಎಂದು ಅವರು ತಮ್ಮ ಸಂಶೋಧನೆಗಳಿಂದ ಮನವರಿಕೆ ಮಾಡಿಕೊಂಡರು. ಅವರ ಈ ನೈಸರ್ಗಿಕ ಆಯ್ಕೆ ಸಿದ್ಧಾಂತವು ಜೀವಶಾಸ್ತ್ರದ ಬುನಾದಿಯೆಂದು ವಿಜ್ಞಾನ ಲೋಕ ಒಪ್ಪಿಕೊಂಡಿತು. ಬ್ರಿಟನ್ನಿನ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಪ್ರಶಸ್ತಿಯಾದ ರಾಯಲ್ ಸೊಸೈಟಿಯ ಕೋಪ್ಲೆ ಪದಕ ಅವರಿಗೆ ಸಂದಿತ್ತು.[/fusion_toggle][fusion_toggle title=”1809: ಶ್ರೇಷ್ಠ ಆಡಳಿತಗಾರ, ಮಾನವತಾ ವಾದಿ ಅಬ್ರಹಾಂ ಲಿಂಕನ್ ಜನನ” open=”no”]ಅಬ್ರಹಾಂ ಲಿಂಕನ್ ಅವರು ಅಮೆರಿಕದ ಕೆಂಟಕಿಯ ಬಳಿಯ ಹಾಡ್ಗೆನ್ ವಿಲ್ಲೆ ಎಂಬಲ್ಲಿ ಜನಿಸಿದರು. ಮಾರ್ಚ್ 1861ರಿಂದ ಎಪ್ರಿಲ್ 1865ರಲ್ಲಿ ಹತ್ಯೆಯಾಗುವವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವರು ದೇಶದ ಆಂತರಿಕ ಕ್ರಾಂತಿಯ ಪರೀಕ್ಷೆಯ ಕಾಲದಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಗುಲಾಮಗಿರಿಯನ್ನು ಹೋಗಲಾಡಿಸಿ, ದೇಶದ ಗಣರಾಜ್ಯ ಸ್ವರೂಪವನ್ನು ಹೆಚ್ಚು ಶಕ್ತಿಯುತಗೊಳಿಸಿ, ಆರ್ಥಿಕ ಸ್ಥಿತಿಯನ್ನು ಆಧುನಿಕಗೊಳಿಸಿದರು.[/fusion_toggle][fusion_toggle title=”1824: ಆರ್ಯಸಮಾಜದ ಸಂಸ್ಥಾಪಕ್ಜ ದಯಾನಂದ ಸರಸ್ವತಿ ಜನನ” open=”no”]ಸ್ವಾಮಿ ದಯಾನಂದ ಸರಸ್ವತಿ ಅವರು ಗುಜರಾತಿನ ತಂಕರ ಎಂಬಲ್ಲಿ ಜನಿಸಿದರು. ಹಿಂದೂ ಸಮಾಜವನ್ನು ವೇದ ಕಾಲದ ಮೌಲ್ಯಗಳ ಬೆಳಕಿನಲ್ಲಿ ಆಧುನಿಕಗೊಳಿಸಿ, ಭಾರತೀಯರಲ್ಲಿ ಧರ್ಮದ ಆಚರಣೆಯ ಹೆಸರಿನಲ್ಲಿ ತುಂಬಿಕೊಂಡಿದ್ದ ಮೌಢ್ಯ ಗಳನ್ನು ಕಿತ್ತೊಗೆಯಲು ಶ್ರಮಿಸಿದರು. ಭಾರತೀಯರಿಗೆ ‘ಸ್ವರಾಜ್ಯ’ ಎಂಬುದನ್ನು ಮೊಟ್ಟಮೊದಲ ಬಾರಿಗೆ ಘೋಷಿಸಿದವರು ಕೂಡಾ ಇವರೇ. ಮುಂದೆ ಬಂದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸೇವಕರಿಗೆ ಗುರು ಮತ್ತು ಪ್ರೇರಣೆಯಾದ ಇವರು 1883ರ ಅಕ್ಟೋಬರ್ 30ರಂದು ಅಜ್ಮೀರದಲ್ಲಿ ನಿಧನರಾದರು.[/fusion_toggle][fusion_toggle title=”1876: ಟಿಬೆಟ್ಟಿನ 13ನೇ ದಲೈ ಲಾಮ ಜನನ” open=”no”]ಟಿಬೆಟ್ಟಿನ ಬೌದ್ಧ ಧರ್ಮಗುರು 13ನೆಯ ದಲೈ ಲಾಮ ಜನಿಸಿದರು.[/fusion_toggle][fusion_toggle title=”1877: ರೆನಾಲ್ಟ್ ಸಹ ಸಂಸ್ಥಾಪಕ ಲೂಯಿಸ್ ರೆನಾಲ್ಟ್ ಜನನ” open=”no”]ರೆನಾಲ್ಟ್ ಸಹ ಸಂಸ್ಥಾಪಕ ಲೂಯಿಸ್ ರೆನಾಲ್ಟ್ ಪ್ಯಾರಿಸ್ ನಗರದಲ್ಲಿ ಜನಿಸಿದರು.[/fusion_toggle][fusion_toggle title=”1918: ನೊಬೆಲ್ ಪುರಸ್ಕೃತ ಜೂಲಿಯನ್ ಸ್ಕ್ವಿಂಗರ್ ಜನನ” open=”no”]ಅಮೆರಿಕದ ಭೌತಶಾಸ್ತ್ರಜ್ಞ ಜೂಲಿಯನ್ ಸ್ಕ್ವಿಂಗರ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ಥಿಯರಿ ಆಫ್ ಕ್ವಾಂಟಮ್ ಎಲೆಕ್ಟ್ರೋ ಡೈನಮಿಕ್ಸ್ ಗಾಗಿ ಅವರಿಗೆ 1965 ವರ್ಷದ ಭೌತ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.[/fusion_toggle][fusion_toggle title=”1890: ಮಹಾನ್ ವಿದ್ವಾಂಸ, ಸಾಹಿತಿ ಎ.ಆರ್. ಕೃಷ್ಣಶಾಸ್ತ್ರಿ ಜನನ” open=”no”]ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ ಅವರು ಚಿಕ್ಕಮಗಳೂರು ಜಿಲ್ಲೆಯ ಅಂಬಳೆಯಲ್ಲಿ ಜನಿಸಿದರು. ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನಲ್ಲಿ ‘ಪ್ರಬುದ್ಧ ಕರ್ನಾಟಕ’ವನ್ನು ಪ್ರಾರಂಭಿಸಿದರಲ್ಲದೆ, ಕರ್ನಾಟಕದ ಎಲ್ಲ ಕನ್ನಡ ಸಂಘಗಳಿಗೆ ಪ್ರೇರಕವಾದ ‘ಕರ್ನಾಟಕ ಸಂಘ’ವನ್ನು ಸ್ಥಾಪಿಸಿದರು. 1968ರಲ್ಲಿ ನಿಧನರಾದ ಇವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.[/fusion_toggle][fusion_toggle title=”1934: ಚಿತ್ರ ಕಲಾವಿದ ವಿ.ಟಿ. ಕಾಳೆ ಜನನ ” open=”no”]ಚಿತ್ರ ಕಲಾವಿದ ವಿ.ಟಿ. ಕಾಳೆ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು. ಮುಂಬೈನ ಜೆ.ಜೆ. ಶಾಲೆಯ ಪದವಿ ಪಡೆದು ಮಹತ್ವದ ಸಾಧನೆ ಮಾಡಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.[/fusion_toggle][fusion_toggle title=”1945: ಸಾಹಿತಿ ವೈದೇಹಿ ಜನನ” open=”no”]ಸಾಹಿತಿ ವೈದೇಹಿ ಅವರು ಕುಂದಾಪುರದಲ್ಲಿ ಜನಿಸಿದರು. ಸಾಹಿತ್ಯ ಪ್ರಕಾರದ ಎಲ್ಲ ಶಾಖೆಗಳಲ್ಲೂ ಮಹತ್ವದ ಬರವಣಿಗೆ ಮಾಡಿರುವ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ.[/fusion_toggle][fusion_toggle title=”1949: ಕ್ರಿಕೆಟ್ ಆಟಗಾರ ಜಿ. ಆರ್. ವಿಶ್ವನಾಥ್ ಜನನ” open=”no”]ಗುಂಡಪ್ಪ ರಂಗನಾಥ ವಿಶ್ವನಾಥ್ ಅವರು ಭದ್ರಾವತಿಯಲ್ಲಿ ಜನಿಸಿದರು. ಅವರು ಒಟ್ಟು 13 ಶತಕಗಳನ್ನು ಸಿಡಿಸಿದ್ದು, ಅವರು ಶತಕ ಸಿಡಿಸಿದ್ದ ಒಂದೂ ಪಂದ್ಯದಲ್ಲಿ ಭಾರತ ಸೋತಿಲ್ಲ. ಅವರು ಆಡಿದ 15 ವರ್ಷಗಳಲ್ಲಿ 91 ಪಂದ್ಯಗಳನ್ನು ಮಾತ್ರಾ ಆಡಿದ್ದು ಅವುಗಳಲ್ಲಿ ಒಟ್ಟು 6080ರನ್ನುಗಳನ್ನು ಕೂಡಿಹಾಕಿದ್ದರು. ವಿಶ್ವನಾಥರು ಆಡುತ್ತಿದ್ದ ಸೊಗಸಿನ ಆಟದಲ್ಲಿ ಅವರ ಸ್ಕ್ವೇರ್ ಕಟ್ ಮೋಹಕತೆಗೆ ಕ್ರಿಕೆಟ್ ಯುಗದಲ್ಲಿ ಬಹಳ ಪ್ರಸಿದ್ಧಿ ಇರುವುದರ ಜೊತೆಗೆ ಅವರ ಶ್ರೇಷ್ಠ ಕ್ರೀಡಾ ಮನೋಭಾವಕ್ಕೆ ಕೂಡಾ ತುಂಬಾ ಗೌರವವಿದೆ.[/fusion_toggle][fusion_toggle title=”1975: ಪ್ರಸಿದ್ಧ ವಿಡಿಯೋ ಆಟ ತಯಾರಿಕಾ ಸಂಸ್ಥೆ ಬಾಸ್ ಕೀ ಪ್ರೊಡಕ್ಷನ್ ಸ್ಥಾಪಕ ಕ್ಲಿಫ್ ಬ್ಲೆಸ್ಸಿನ್ ಸ್ಕಿ ಜನನ” open=”no”]ಅಮೆರಿಕದ ಪ್ರಸಿದ್ಧ ವಿಡಿಯೋ ಆಟ ತಯಾರಿಕಾ ಸಂಸ್ಥೆ ‘ಬಾಸ್ ಕೀ ಪ್ರೊಡಕ್ಷನ್’ ಸ್ಥಾಪಕರಾದ ಕ್ಲಿಫ್ ಬ್ಲೆಸ್ಸಿನ್ ಸ್ಕಿ ಅವರು ಮಸಾಚುಸೆಟ್ಸ್ ಬಳಿಯ ನಾರ್ತ್ ಆಂಡೋವರ್ ಎಂಬಲ್ಲಿ ಜನಿಸಿದರು. ಎಪಿಕ್ ಗೇಮ್ಸ್ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಮತ್ತು ತಮ್ಮ ಬಾಸ್ ಕೀ ಪ್ರೊಡಕ್ಷನ್ ಸ್ಥಾಪಕರಾಗಿ ಅಲ್ಲದೆ, ಅವರು ಅನ್ ರಿಯಲ್ ಫ್ರಾಂಚೈಸ್, ಅನ್ ರಿಯಲ್ ಟೂರ್ನಮೆಂಟ್ ಮತ್ತು ಗೇರ್ಸ್ ಆಫ್ ವಾರ್ ಫ್ರಾಂಚೈಸ್ ಮುಂತಾದ ನಿರ್ಮಾಣಗಳಲ್ಲಿ ನಿರ್ವಹಿಸಿದ ಪಾತ್ರಗಳಿಗೂ ಪ್ರಸಿದ್ಧರಾಗಿದ್ದಾರೆ.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1538: ಚಿತ್ರಕಾರ ಅಲ್ಬ್ರೆಕ್ಟ್ ಆಲ್ಟ್ ಡೋರ್ಫರ್ ನಿಧನ” open=”no”]ಜರ್ಮನಿಯ ಪ್ರಸಿದ್ಧ ಚಿತ್ರಕಾರ ಅಲ್ಬ್ರೆಕ್ಟ್ ಆಲ್ಟ್ ಡೋರ್ಫರ್ ನಿಧನರಾದರು.[/fusion_toggle][fusion_toggle title=”1949: ಮುಸ್ಲಿ ಬ್ರದರ್ ಹುಡ್ ಸ್ಥಾಪಕ ಹಸ್ಸನ್ ಅಲ್-ಬನ್ನ ನಿಧನ” open=”no”]ಈಜಿಪ್ಟಿನ ಶಿಕ್ಷಕ, ‘ಮುಸ್ಲಿಂ ಬ್ರದರ್ ಹುಡ್’ ಸಂಘಟನೆಯ ಸ್ಥಾಪಕ ಹಸನ್ ಅಲ್-ಬನ್ನ ನಿಧನರಾದರು. ಅವರು ಸ್ಥಾಪಿಸಿದ ಈ ಸಂಸ್ಥೆ ರಾಜಕೀಯಕ್ಕೊಂದು ಮಾದರಿ ಮತ್ತು ಧರ್ಮಾರ್ತ ಕಾರ್ಯಗಳ ಉದ್ದೇಶಕ್ಕಾಗಿ ಎಲ್ಲ ಇಸ್ಲಾಂ ದೇಶಗಳಲ್ಲಿ ಗೌರವ ಪಡೆದಿತ್ತಾದರೂ, ಮುಂದೆ ಬಂದ ವರ್ಷಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಈ ಸಂಘಟನೆ ಉಗ್ರಗಾಮಿ ಚಟುವಟಿಕೆಗಳ ಸ್ವರೂಪ ಪಡೆದ ಕಾರಣ ಹಲವಾರು ಇಸ್ಲಾಂ ಆಚರಣೆಯ ದೇಶಗಳನ್ನೂ ಒಳಗೊಂಡಂತೆ ನಿಷೇಧಕ್ಕೊಳಗಾಗಿದೆ.[/fusion_toggle][fusion_toggle title=”2000: ‘ಪೀನಟ್ಸ್’ ಕಾಮಿಕ್ ಖ್ಯಾತಿಯ ಚಾರ್ಲ್ಸ್ ಶುಲ್ಜ್ ನಿಧನ” open=”no”]ವಿಶ್ವದ ಎಲ್ಲೆಡೆ ಪ್ರಕಟಗೊಂಡು ಜನಪ್ರಿಯವಾಗಿರುವ ‘ಪೀನಟ್’ ಕಾಮಿಕ್ ಸೃಷ್ಟಿಕರ್ತ ಚಾರ್ಲ್ಸ್ ಎಂ. ಶುಲ್ಜ್ ಅವರು ಕ್ಯಾಲಿಫೋರ್ನಿಯಾ ಬಳಿಯ ಸ್ಯಾಂಟ ರೋಸಾ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”2009: ಅಮೆರಿಕದ ನ್ಯೂಯಾರ್ಕಿನಲ್ಲಿ ಉಂಟಾದ ಕೊಲ್ಗಾನ್ ಏರ್ ಫ್ಲೈಟ್ 3407 ದುರಂತದಲ್ಲಿ ಹಲವಾರು ಪ್ರತಿಭಾವಂತರ ಮರಣ” open=”no”]ಅಮೆರಿಕದ ನ್ಯೂಯಾರ್ಕಿನಲ್ಲಿ ಉಂಟಾದ ಕೊಲ್ಗಾನ್ ಏರ್ ಫ್ಲೈಟ್ 3407 ದುರಂತದಲ್ಲಿ ಅಮೆರಿಕದ ಇತಿಹಾಸಜ್ಞ ಆಲಿಸನ್ ಡೆಸ್ ಫೋರ್ಜಸ್, ಸಂಘಟನೆಕಾರ ಬೆವರ್ಲಿ ಎಕರ್ಟ್, ಡಚ್ ಅಕಾರ್ಡಿಯನ್ ವಾದಕ ಮ್ಯಾಟ್ ಮಾಥ್ಯೂಸ್, ಅಮೆರಿಕದ ಗಿಟಾರ್ ವಾದಕ ಕೊಲೆಮನ್ ಮೆಲ್ಲೆಟ್ ಮತ್ತು ಅಮೆರಿಕದ ಸ್ಯಾಕ್ಸಾಫೋನ್ ವಾಡ ಗೆರಿ ನೀವುಡ್ ಸೇರಿದಂತೆ ಆ ವಿಮಾನದಲ್ಲಿ ಪಯಣಿಸುತ್ತಿದ್ದವರೆಲ್ಲ ಮೃತರಾದರು.[/fusion_toggle][/fusion_accordion]