Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಹನುಮಂತ ಬೊಮ್ಮಗೌಡ

ಹನುಮಂತ ಬೊಮ್ಮಗೌಡ ಅವರು ಪಾರ್ಶ್ವ ರೋಗವನ್ನು ನಿವಾರಿಸುವಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದವರು. ತಮ್ಮ ತಂದೆಯವರಿಂದ ಕಲಿತ ಈ ಔಷಧಿ ಕೊಡುವ ಕಾಯಕವನ್ನು ವ್ಯಾಪಕವಾಗಿ ಕೈಗೊಳ್ಳಲು ಒಳರೋಗಿಗಳಿಗಾಗಿ ಕೇಂದ್ರವನ್ನು ಸ್ಥಾಪಿಸಿ ಪಾರ್ಶ್ವರೋಗ ಪೀಡಿತರಿಗೆ ಅವರು ನೆರವಾಗುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಇವರ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ ಹನುಮಂತ ಬೊಮ್ಮಗೌಡ ವನ ಔಷಧಗಳಿಂದ ಪಾರ್ಶ್ವರೋಗ ಪೀಡಿತರಿಗೆ ಲೇಪನ ಚಿಕಿತ್ಸೆಯನ್ನು ಮಾಡುವಲ್ಲಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬೈಕಂಪಾಡಿ ರಾಮಚಂದ್ರ

ಮಂಗಳೂರಿನ ಮೀನುಗಾರರ ನಾಯಕ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಚೇರ್ಮನ್ ಆಗಿರುವ ಪಣಂಬೂರಿನ ಶ್ರೀ ಬೈಕಂಪಾಡಿ ರಾಮಚಂದ್ರ ಮೀನುಗಾರರ ಹಿತಕ್ಕಾಗಿ ಹೋರಾಟ ಮಾಡುತ್ತಿರುವವರು. ೧೯೮೯ ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕರಾದವರು. ೧೯೯೨ ರಲ್ಲಿ ವಿದೇಶಿ ಕಂಪನಿಗಳು ಸಾಗರದಲ್ಲಿ ಮಾಡುವ ಅಕ್ರಮ ಮೀನುಗಾರಿಕೆ ವಿರುದ್ಧ ೪೮ ದಿನಗಳ ಕಾಲ ಮತ್ಯ ಜಲ ಯಾತ್ರೆಯ ನಾಯಕತ್ವ ವಹಿಸಿ ನ್ಯಾಯ ಒದಗಿಸುವಲ್ಲಿ ಸಫಲರಾದವರು. ಸಮುದ್ರ ಮಾಲಿನ್ಯದ ವಿರುದ್ಧ ಹಲವಾರು ಬಾರಿ ಯಶಸ್ವಿ ಹೋರಾಟ ಮಾಡಿದ್ದಾರೆ.

ಇವರಿಗೆ ೨೦೨೧ ರಲ್ಲಿ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಲಭಿಸಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕ್ಯಾಪ್ಟನ್ ರಾಜಾರಾವ್

ಖ್ಯಾತ ನೀರಾವರಿ ತಜ್ಞರಾದ ಕ್ಯಾಪ್ಟನ್ ರಾಜರಾವ್ ಅವರು, ಕಾವೇರಿ ನದಿ ನೀರು ಹಂಚಿಕೆ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಸ್ತಿತ್ವವನ್ನು ಒತ್ತಾಯಿಸಿದವರು. ಕರ್ನಾಟಕ ಸೀನಿಯರ್ ಇಂಜಿನಿಯರ್ಸ್ ಫೋರಂನ ಚೇರ್ಮನ್ ಆಗಿರುವ ರಾಜಾರಾವ್ ಅವರು, ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು ಹಾಳಾಗಿ ಪರಿಸರಕ್ಕೆ ಧಕ್ಕೆಯಾಗುವ ಮುನ್ನ ಡಿಟರ್ಜೆಂಟ್ ಗಳಲ್ಲಿ ಪಾಸ್ಟೇಟ್ ಬಳಕೆಯನ್ನು ನಿಲ್ಲಿಸಿ, ಕೆರೆಗಳನ್ನು ಉಳಿಸಿ ಎಂದು ಎಚ್ಚರಿಕೆ ನೀಡುತ್ತ ಈಗಲೂ ಪರಿಸರ ಕಾಳಜಿಯನ್ನು ಹೊಂದಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಸುಲ್ತಾನಚೀ ಜಗಳೂರು

ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಶ್ರೀಮತಿ ಸುಲ್ತಾನ್ ಬಿ, ನಾಟಿ ಔಷಧಿ ಕೊಡುವುದರಲ್ಲಿ ಸುತ್ತಮುತ್ತ ಹೆಸರುವಾಸಿ. ಚರ್ಮ ರೋಗ, ಹುಳುಕಡ್ಡಿ ಮತ್ತು ಇಸುಬಿಗೆ ತಾನೇ ಔಷಧಿ ತಯಾರಿಸಿ ಚಿಕಿತ್ಸೆ ನೀಡುವ ಸುಲಾನ್ ಬಿ ಯವರ ಖ್ಯಾತಿ ಈಗ ಆಂಧ್ರ, ತಮಿಳುನಾಡು, ಬೆಂಗಳೂರು ಹಾಗೂ ಮಂಗಳೂರಿನವರೆಗೂ ಹಚ್ಚಿದೆ.

ಶ್ರೀಮತಿ ಸುಲ್ತಾನ್ ಬಿ ಸೂಲಗಿತ್ತಿ ಕಾರ್ಯವನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ಹೆರಿಗೆ ಕಿಟ್ ಗಳನ್ನು ವಿತರಿಸಿ ಅಧೀಕೃತಗೊಳಿಸಲಾಗಿದ್ದು, ಎಲ್ಲ ಹೆರಿಗೆಗಳನ್ನು ಯಶಸ್ವಿಯಾಗಿಸಿದ ಹೆಗ್ಗಳಿಕೆ ಇವರದು.

ರೋಟರಿ ಕ್ಲಬ್‌, ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ ಹಾಗೂ ಗ್ರಾಮಪಂಚಾಯಿತಿಗಳು ಇವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಜೆ. ಎನ್. ರಾಮಕೃಷ್ಣಗೌಡ

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಜವರನಹಳ್ಳಿಯವರಾದ ಡಾ. ಜೆ. ಎನ್. ರಾಮಕೃಷ್ಣಗೌಡರು, ಶ್ರೀ ಆದಿಚುಂಚನಗಿರಿ ಮಠದ ದೊಡ್ಡಗುರುಗಳಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸತ್ಕಾರ್ಯಗಳನ್ನು ಸಾಕಾರಗೊಳಿಸಲು ಶ್ರಮಿಸಿರುವವರಲ್ಲಿ ಅಗ್ರಗಣ್ಯರು.

ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಕಲೆ,ಸಾಹಿತ್ಯ, ಆರೋಗ್ಯ, ಕ್ರೀಡೆ, ವೈದ್ಯಕೀಯ, ಪರಿಸರ ಸಂರಕ್ಷಣೆ, ನೆರೆ ಸಂತ್ರಸ್ತರಿಗೆ ಪರಿಹಾರ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತ ನಾಡಿನ ಏಳಿಗೆಗೆ ಕಾರಣರಾಗಿದ್ದಾರೆ. ಬೆಳ್ಳೂರು ಹಾಗು ಸುತ್ತಮುತ್ತಲಿನ ತಾಲ್ಲೂಕಿನ ಅಭಿವೃದ್ಧಿಗೆ ರಾಮಕೃಷ್ಣಗೌಡರು ದುಡಿದಿದ್ದಾರೆ. ಶ್ರೀಯುತರಿಗೆ ‘ಸಾರ್ಥಕ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ, ಅಮೇರಿಕಾದ ಫ್ಲಾರಿಡಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಮಂಡ್ಯ ಜಿಲ್ಲಾಡಳಿತದ ವತಿಯಿಂದ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ನೀಡಿ ಪುರಸ್ಕರಿಸಲಾಗಿದೆ

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಸವಪ್ರಭು ಲಕಮ ಗೌಡ ಪಾಟೀಲ್

ದೇವದಾಸಿ ಮುಗ್ಧ ಹೆಣ್ಣು ಮಕ್ಕಳ ವಿಮೋಚನೆ ಹಾಗೂ ಪುನರ್ವಸತಿಗಾಗಿ ಶ್ರೀ ಬಸವಪ್ರಭು ಲಕಮಗೌಡ ಪಾಟೀಲರು ಹಗಲಿರುಳು ದುಡಿದು ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘವನ್ನು ಕಟ್ಟಿದರು.
ಮೂಲತ: ವಕೀಲರಾಗಿರುವ ಪಾಟೀಲರು ಅಥಣಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ದೇವದಾಸಿಯರಿಗೆ ‘ವಿಮೋಚನಾ ಸಂಸ್ಥೆಯಿಂದ ನೆಲೆ ಒದಗಿಸಿಕೊಟ್ಟಿದ್ದಾರೆ. ತಾಲ್ಲೂಕಿನ ೭೦ ಕ್ಕೂ ಮೀರಿ ಹೆಚ್ಚಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳನ್ನು ಆಯ್ದುಕೊಂಡು ಅವರ ರಕ್ಷಣೆಯ ಭಾರ ಹೊರಲಾಗಿದೆ. ದೇವದಾಸಿಯರಿಗೆ ವಿದ್ಯಾಭ್ಯಾಸ, ಹೊಲಿಗೆ, ಹೈನುಗಾರಿಕೆ, ಕಸೂತಿ ಮುಂತಾದ ತರಬೇತಿಗಳನ್ನು ಕೊಟ್ಟು ಅವರು ಸ್ವಾವಲಂಬಿ ಬದುಕನ್ನು ನಡೆಸಲು ಅನುವು ಮಾಡಿಕೊಡಲಾಗಿದೆ. ದೇವದಾಸಿಯರ ಹೆಣ್ಣು ಮಕ್ಕಳಿಗೆ ಪಾಟೀಲರು ಮದುವೆ ಮಾಡಿಸಿ ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ದೇಶದ ಏಕೈಕ ದೇವದಾಸಿ ಮಕ್ಕಳ ವಸತಿ ಶಾಲೆ ಕಟ್ಟಿಸಿದ್ದು ಅದು ೩೦ ವರ್ಷಗಳನ್ನು ದಾಟಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಮುನಿಯಪ್ಪ ದೊಮ್ಮಲೂರು

ಲೆಕ್ಕವಿಲ್ಲದಷ್ಟು ಶವಗಳು ತಮಗೆ ಅಂತ್ಯಕ್ರಿಯೆ ಮಾಡುವವರಿಲ್ಲದೇ ಅನಾಥವಾಗುತ್ತವೆ. ಅಂಥ ಅನಾಥಶವಗಳ ಬಂಧುವಾಗಿ ದೊಮ್ಮಲೂರು ಮುನಿಯಪ್ಪ ಅಂತ್ಯಕ್ರಿಯೆ ನೆರವೇರಿಸಿ ಋಣ ಕಳೆದುಕೊಳ್ಳುತ್ತಾರೆ. ಸಾವಿರಾರು ಅನಾಥಶವಗಳಿಗೆ ದಿಕ್ಕಾದ ಮುನಿಯಪ್ಪ ಸ್ಮಶಾನವಾಸಿಯಾಗಿದ್ದು ಹರನಂತೆ ಸ್ಮಶಾನದಲ್ಲೇ ನೆಲೆಸಿದ್ದಾರೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೋಹಿನಿ ಸಿದ್ದೇಗೌಡ

ಶೋಷಿತ ಮಹಿಳೆಯರನ್ನು ಸಲುಹಿದ ಅಪರೂಪದ ಸಮಾಜಸೇವಕಿ ಮೋಹಿನಿ ಸಿದ್ದೇಗೌಡ, ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶ್ರಮಿಸಿದ ಅಪ್ಪಟ ಅಬಲೆಯರ ಆಶಾಕಿರಣ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅಂಜುಗೊಂಡನಹಳ್ಳಿಯಲ್ಲಿ ಜನಿಸಿದ ಮೋಹಿನಿ ಸಿದ್ದೇಗೌಡ ಚಿಕ್ಕಮಗಳೂರಿನ ಸೊಸೆ. 23ನೇ ವಯಸ್ಸಿನಿಂದಲೇ ಮಹಿಳಾ ಸಮಾಜದ ಸದಸ್ಯೆಯಾಗಿ ಸಮಾಜಸೇವಾ ಕಾರ್ಯಾರಂಭ. ಮಹಿಳಾ ಶೋಷಣೆ, ಮದ್ಯಪಾನ, ವರದಕ್ಷಿಣೆ ಕಿರುಕುಳ, ಸಾರಾಯಿ ಮಾರಾಟದ ವಿರುದ್ಧ ಗುಡುಗಿದ ಸ್ತ್ರೀದನಿ. ಕಸ್ತೂರಿಬಾ ಕೌಟುಂಬಿಕ ಸಲಹಾ ಕೇಂದ್ರದ ಕಾರ್ಯದರ್ಶಿಯಾಗಿ ನೊಂದ ಮಹಿಳೆಯರಿಗೆ ಆಸರೆ. ನಾಲ್ಕು ದಶಕದ ಅನನ್ಯ ಸೇವೆ. ವಿದ್ಯುಚ್ಛಕ್ತಿ ಮಂಡಳಿಯ ಮಹಿಳೆಯರ ಕ್ಲಬ್ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಿಮ್ಯಾಂಡ್ ಹೋಂ ಸದಸ್ಯೆ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯೆ, ಸಹಕಾರಿ ಸಂಘದ ಸದಸ್ಯೆ, ನಗರಸಭೆಯ ಸದಸ್ಯೆ ಸೇರಿದಂತೆ ಹತ್ತಾರು ಸಂಸ್ಥೆಗಳ ವಿವಿಧ ಹುದ್ದೆಗಳ ನಿರ್ವಹಣೆ-ಅನುಗಾಲವೂ ಸಮಾಜಸೇವೆ. ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೊಹಮದ್ ಮೀರಾನ್ ಸಾಹೇಬ್

ವಿದೇಶದಲ್ಲಿದ್ದೂ ತಾಯ್ತಾಡಿನ ಸಮಾಜಸೇವೆಯಲ್ಲಿ ಅನವರತ ನಿರತರು ಮೊಹಮದ್ ಮೀರಾನ್ ಸಾಹೇಬ್. ಬಡಕುಟುಂಬಗಳ ಬಾಳು ಬೆಳಗಿದ ಹೆಮ್ಮೆಯ ಅನಿವಾಸಿ ಕನ್ನಡಿಗ
ದಕ್ಷಿಣ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜನಿಸಿದ ಮೊಹಮದ್ ಮೀರಾನ್ ಸಾಹೇಬ್ ಶಿಕ್ಷಣದ ಬಳಿಕ ಬದುಕು ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದರು. ಅನಿವಾಸಿ ಭಾರತೀಯ ಉದ್ಯಮಿಯಾಗಿ ಛಾಪು ಮೂಡಿಸಿರುವ ಮೊಹಮದ್ ಮೀರಾನ್ ಸಾಹೇಬ್ ಅವರಿಗೆ ತಾಲ-ತಾಯ್ತುಡಿಯೆಂದರೆ ಅಪಾರ ಪ್ರೀತಿ. ವಿದೇಶದಲ್ಲಿದ್ದುಕೊಂಡೇ ತವರೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿರಳ ಕನ್ನಡಿಗ, ಗಲ್ಫ್ನ ಕುಂದಾಪ್ರ ಕನ್ನಡ ಬಳಗ, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ನಲವತ್ತು ವರ್ಷಗಳಿಂದಲೂ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ನಾಡು-ನುಡಿಯ ಸೇವೆ. ಕರ್ನಾಟಕದ ಹಲವೆಡೆ ಜನಪರ ಕಾರ್ಯಕ್ರಮಗಳ ಮುಖೇನ ನೂರಾರು ಬಡಕುಟುಂಬಗಳಿಗೆ ನೆರವಾದ ದಯಾಳು. ಹುಟ್ಟೂರಿಗೆ ಆ್ಯಂಬುಲೆನ್ಸ್, ಕಸದ ವಾಹನ ಸೇರಿದಂತೆ ಹಲವು ಸೌಲಭ್ಯಗಳ ಧಾರೆಯೆರೆದಿರುವ ಸಮಾಜಸೇವಕರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಕೆ. ಪ್ರೇಮಾ

ಧರ್ಮ-ಸಾಹಿತ್ಯ-ಸಂಗೀತದ ಮೂಲಕ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಗೆ ಶ್ರಮಿಸಿದ ಸೇವಾಚೇತನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಬಹುಮುಖಿ ಆಸಕ್ತಿಯ ಬಹುಶ್ರುತ ಸಾಧಕಿ.
ಕೋಲಾರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಜನಿಸಿದ ಪ್ರೇಮಾ ಅವರು ಆಗಿನ ಕಾಲದಲ್ಲೇ ಎಲ್.ಎಸ್. ಪರೀಕ್ಷೆ ಪಾಸು ಮಾಡಿದ ವಿದ್ಯಾವಂತೆ, ಭಗವದ್ಗೀತೆ ಪಠಣದಲ್ಲಿ ಪ್ರಾವೀಣ್ಯತೆ, ಹದಿನೈದನೇ ವಯಸ್ಸಿನಿಂದಲೇ ಮಕ್ಕಳಿಗೆ ‘ಗೀತಾಪಾಠ’, ಪ್ರೇಮಾರದ್ದು ಸಾಹಿತ್ಯ, ಧರ್ಮ ಮತ್ತು ಸಂಗೀತದಿಂದ ಮುಪ್ಪರಿಗೊಂಡ ವ್ಯಕ್ತಿತ್ವ, ಗಾಯಕಿ, ಗಮಕಿ, ಆಶುಕವಿಯೂ ಸಹ, ಚಿಕ್ಕಮಗಳೂರಿನ ಕೋದಂಡರಾಮ ಶ್ರೇಷ್ಠ ಅವರೊಡನೆ ಮದುವೆಯಾದ ಬಳಿಕ ಸಮಾಜಸೇವಾ ಕಾರ್ಯದಲ್ಲಿ ಪೂರ್ಣ ತಲ್ಲೀನ. ಕಾಫಿನಾಡಲ್ಲಿ ಸಮೃದ್ಧ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ಪರಿಶ್ರಮ. ಪ್ರತಿ ವರ್ಷ ಗೀತಾಜ್ಞಾನ ಯಜ್ಞ ಆಯೋಜನೆ. ಸಾವಿರಾರು ಜನರಿಗೆ ಗೀತಬೋಧನೆ-ಗೀತಾ ಪುಸ್ತಕ ವಿತರಣೆ. ವಿದೇಶಗಳಲ್ಲೂ ಹಿಂದು ಧರ್ಮದ ಪ್ರಚಾರಕಾರ್ಯ. ರಾಜ್ಯಮಟ್ಟದ ಆರವೈಶ್ಯ ಮಹಿಳಾ ಸಮ್ಮೇಳನ ಆಯೋಜಿಸಿದ ಕೀರ್ತಿ. ಪರಮಾರ್ಥ ಕೃತಿಗಾರ್ತಿ, ಆರೂವರೆ ದಶಕಗಳಿಂದ ಆಧ್ಯಾತ್ಮ-ಗಾಯನ ಕ್ಷೇತ್ರದ ಕೃಷಿಯಲ್ಲಿ ನಿರತವಾಗಿರುವ ‘ಗುರುಭಕ್ತಿರತ್ನ’ ಬಿರುದಾಂಕಿತ ಸೇವಾಮೂರ್ತಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ನಾರಾಯಣ ಸುಬ್ರಾಯ ಹೆಗಡೆ

ಬಹುರಂಗಗಳಲ್ಲಿ ಸಾರ್ಥಕ ಸಮಾಜಸೇವೆಗೈದ ಬಹುರೂಪಿ ಎನ್.ಎಸ್. ಹೆಗಡೆ (ಕುಂದರಗಿ, ಗ್ರಾಮೀಣ ಭಾಗದ ಏಳೆಗೆ ಆರು ದಶಕಗಳಿಂದಲೂ ಪರಿಶ್ರಮಿಸುತ್ತಿರುವ ಸಮಾಜಬಂಧು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಕುಂದರಗಿಯವರಾದ ನಾರಾಯಣ ಸುಬ್ರಾಯ ಹೆಗಡೆ ಅವರು ಹರೆಯದಿಂದಲೂ ಸಮಾಜಸೇವಾನಿರತರು. ಹಿಂದುಳಿದ ಪ್ರದೇಶವೆನಿಸಿದ್ದ ಕುಂದರಗಿಯಲ್ಲಿ ಪ್ರಪ್ರಥಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ತೆರೆದವರು. ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರು. ಬಡಮಕ್ಕಳಿಗೆ ಅನಾಥಾಲಯ, ವಾಚನಾಲಯ ಸೌಲಭ್ಯ, ಸಹಕಾರ ಸಂಘಗಳ ಸ್ಥಾಪನೆ-ಸೇವೆ, ಹಲವು ದೇವಸ್ಥಾನಗಳ ಆಡಳಿತ ಮಂಡಳಿಯ ಸದಸ್ಯರಾಗಿ ದುಡಿಮೆ. ಸಾಹಿತ್ಯ ಪರಿಷತ್ತಿನ ಪ್ರಥಮ ಜಿಲ್ಲಾಧ್ಯಕ್ಷ, ಸಮ್ಮೇಳನಗಳ ಸಂಘಟನೆ, ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕನ್ನಡದ ಕೈಂಕರ್ಯ, ಹತ್ತಾರು ಸಂಘಟನೆಗಳ ಹೊಣೆಗಾರಿಕೆಯ ಸಮರ್ಥ ನಿರ್ವಹಣೆ, ಪತ್ರಕರ್ತ, ಅಂಕಣಕಾರರಾಗಿಯೂ ಅಕ್ಷರಸೇವೆಗೈದ ಎನ್.ಎಸ್. ಹೆಗಡೆ ಅವರು ಶ್ರಮಿಸಿದ ಕ್ಷೇತ್ರಗಳಿಲ್ಲ. ೮೭ರ ವಯದಲ್ಲೂ ಸಮಾಜಸೇವೆಗೆ ಮಿಡಿವ ವಿರಳಾತಿವಿರಳ ಜೀವಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕತ್ತಿಗೆ ಚನ್ನಪ್ಪ

ಮಲೆನಾಡಿನ ಬಹುಮುಖಿ ಸಾಧಕರ ಸಾಲಿಗೆ ನಿಸ್ಸಂಶಯವಾಗಿ ಸೇರುವವರು ಕತ್ತಿಗೆ ಚನ್ನಪ್ಪ, ಸಾಹಿತ್ಯ, ರಂಗಭೂಮಿ, ಸಮಾಜಸೇವೆಯಲ್ಲಿ ಧನ್ಯತೆ ಕಂಡುಕೊಂಡ ನಿನ್ನಹ ಸಾಧಕರು.
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕತ್ತಿಗೆ ಚೆನ್ನಪ್ಪ ಅವರು ಹೊನ್ನಾಳಿ ತಾಲ್ಲೂಕಿ ಕತ್ತಿಗೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿಇಡಿ ವ್ಯಾಸಂಗ ಮಾಡಿದವರು. ಸಾಹಿತ್ಯಾಭಿರುಚಿ, ರಂಗಪ್ರೇಮ, ಸಮಾಜಚಿಂತನೆ ಕತ್ತಿಗೆ ಚೆನ್ನಪ್ಪರ ವೈಶಿಷ್ಟ್ಯತೆ.ಕವಿ, ಕಥೆಗಾರರಾಗಿಯೂ ಜನಪ್ರಿಯ. ಜೇನುಹುಟ್ಟು ಕವನಸಂಕಲನ, ಮಾನಜ್ಜಿ ಮತ್ತು ಇತರೆ ಕಥೆಗಳು ಕಥಾಸಂಕಲನ, ಮುತ್ತಿನ ತೆನೆ, ಚಿತ್ತಾರ ಮಕ್ಕಳ ಕವಿತಾಸಂಕಲನವೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನಕಾರರು. ನಟನೆ ನೆಚ್ಚಿನ ಗೀಳು. ಹಲವಾರು ನಾಟಕಗಳ ಪಾತ್ರಗಳಿಗೆ ಜೀವತುಂಬಿದ ಪಾತ್ರಧಾರಿ, ಸಾಮಾಜಿಕ ಸೇವೆ ವ್ಯಕ್ತಿತ್ವದ ಮತ್ತೊಂದು ಮುಖ. ಶ್ರೀಚೆನ್ನೇಶ್ವರ ಯುವಕ ಸಂಘ, ಹೊನ್ನಾಳಿ ತಾಲ್ಲೂಕು ಕಸಾಪ, ಶಿಕಾರಿಪುರ ತಾಲ್ಲೂಕು ಕಸಾಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತಿತರ ಸಂಸ್ಥೆಗಳಲ್ಲಿ ಸೇವೆ. ಹುಟ್ಟೂರಿನಲ್ಲಿ ಗ್ರಂಥಾಲಯ ಕಟ್ಟಡ, ಲಂಕೇಶ್ ಬಯಲು ರಂಗಮಂದಿರ, ಯುವಕರಿಗೆ ಕ್ರೀಡಾ ಉಪಕರಣಗಳ ನೀಡಿಕೆ, ಸಮುದಾಯ ಭವನ ನಿರ್ಮಾಣ, ನೀರಾವರಿ ಯೋಜನೆ ಕುರಿತ ಹೋರಾಟ ಮುಂತಾದ ಸಾಮಾಜಿಕ ಕಾರ್ಯಗಳ ನಿರ್ವಹಿಸಿರುವ ಚನ್ನಪ್ಪ ಸೇವೆಗೆ ಮುಡಿಪಾಗಿರುವ ಜೀವಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಸ್.ಜಿ. ಭಾರತಿ

ದಮನಿತರ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಂಡುಕೊಂಡಿರುವ ವಿಶಿಷ್ಟ ಸಮಾಜ ಸೇವಕ ಎಸ್.ಜಿ. ಭಾರತಿ. ಲೋಕಕಲ್ಯಾಣಕ್ಕಾಗಿ ಮಿಡಿವ ಹೃದಯವಂತ.
ಬಯಲು ನಾಡಾದ ಕಲ್ಲುಗಿಯ ನಿವಾಸಿಯಾಗಿರುವ ಎಸ್.ಜಿ.ಭಾರತಿ ಹುಟ್ಟಿದ್ದು ೧೯೫೮ರ ಜುಲೈ ೧೧ರಂದು. ಸ್ನಾತಕೋತ್ತರ ಪದವೀಧರರಾದ ಅವರದ್ದು ಶುದ್ಧ ಸೇವಾಮನೋಭಾವ. ಬಹು ದಶಕಗಳಿಂದಲೂ ತರಹೇವಾರಿ ಸಮಾಜಸೇವೆಯಲ್ಲಿ ನಿರತರು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ, ಅಸ್ಪಶ್ಯತೆ ನಿವಾರಣೆ, ದಮನಿತರು ಮತ್ತು ಇತರೆ ಜನಾಂದವರಿಗೆ ಸರ್ಕಾರದಿಂದ ಸಿಗಬೇಕಿರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವುದೇ ನಿತ್ಯದ ಕಾಯಕ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಕ್ಷಣವೂ ಮೀಸಲಿಟ್ಟಿರುವ ಎಸ್.ಜಿ.ಭಾರತಿ ಅವರು ಗುಲ್ಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ರಾಜ್ಯ ಸರ್ಕಾರದ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ಭಾರತಿ ಅವರ ಸೇವಾತತ್ಪರತೆಗೆ ರಾಜ್ಯಾದ್ಯಂತ ಸಾಕಷ್ಟು ಸಂಘ ಸಂಸ್ಥೆಗಳು, ಅಕಾಡೆಮಿಗಳು ಪ್ರಶಸ್ತಿ-ಸನ್ಮಾನಗಳನ್ನಿತ್ತು ಗೌರವಿಸಿರುವುದು ನೈಜಸೇವೆಗೆ ಸಂದ ಸತ್ಫಲವೇ ಸರಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ|| ಸಯ್ಯದ್ ಷಾ ಖುಸ್ರೋ ಹುಸೇನಿ

ಗುಲಬರ್ಗಾದ ಸ್ವಾಜಾ ಬಂದೇನವಾಜ್ ಅವರ ವಂಶಸ್ಥರಾದ ಖುಸ್ರೋ ಹುಸೇನಿ ತಾವು ಸ್ಥಾಪಿಸಿದ ಖಾಜಾ ವಿದ್ಯಾಸಂಸ್ಥೆಯ ಮೂಲಕ ಶೈಕ್ಷಣಿಕ ಮತ್ತು ಸಮಾಜಮುಖಿ ಸೇವಾ ಕಾರ್ಯಗಳನ್ನು ಆರು ದಶಕಗಳಿಂದ ಅವ್ಯಾಹತವಾಗಿ ನಡೆಸುತ್ತ ಬಂದಿರುವರು.

ಗುಲಬರ್ಗ ಪ್ರದೇಶದಲ್ಲಿರುವ ಮುಸ್ಲಿಂ ಸಮುದಾಯದ ಉನ್ನತಿಗಾಗಿ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಖುಸ್ರೋ ಹುಸೇನಿ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಒದಗಿಸಿದವರು.

ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಖುಸ್ರೋ ಹುಸೇನಿ ಮುಂದಿನ ಪೀಳಿಗೆಯ ವ್ಯಕ್ತಿತ್ವ ವಿಕಸನಕ್ಕಾಗಿ ಶ್ರಮಿಸಿದ್ದು ಇವರ ಸೇವೆಗಾಗಿ ಕರ್ನಾಟಕ ಉರ್ದು ಅಕಾಡೆಮಿ, ನವದೆಹಲಿಯ ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆಯ ಪ್ರಥಮ ನಾಗರಿಕ ಪ್ರಶಸ್ತಿ, ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಲೆಫ್ಟಿನೆಂಟ್ ಜನರಲ್ ರಮೇಶ ಹಲ್ಗಲಿ

ಬಾಗಲಕೋಟೆಯ ಲೆ. ಕರ್ನಲ್ ರಮೇಶ ಹಲ್ಗಲಿ ಭಾರತೀಯ ಸೈನ್ಯದಲ್ಲಿ ಉಪಮುಖ್ಯಸ್ಥರಾಗಿದ್ದು, ತಮ್ಮ ವಿಶಿಷ್ಟ ಸೇವೆಗಾಗಿ ಹಲವು ಸೇವಾ ಪದಕಗಳನ್ನು ಗಳಿಸಿದವರು.

ನಿವೃತ್ತಿಯ ನಂತರ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿಯೂ ಅಪರಿಮಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ರಮೇಶ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೀರಾ ನಾಯಕ್

ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಕನ್ನಡ ಭಾಷೆಯ ಉನ್ನತಿಗಾಗಿ ಶ್ರಮಿಸುತ್ತಿರುವ ಮೀರಾ ನಾಯಕ್ ಅವರು ಮೈಸೂರಿನ ಸಮತಾ ವೇದಿಕೆಯ ಸಂಸ್ಥಾಪಕ ಸದಸ್ಯರು.

ಹತ್ತು ಹಲವು ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮೀರಾನಾಯಕ್ ಅವರು ದೇಶವಿದೇಶಗಳಲ್ಲಿ ನಡೆದ ಹಲವಾರು ಸಮ್ಮೇಳನ, ವಿಚಾರ ಸಂಕಿರಣ ಹಾಗೂ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಸ್ತ್ರೀ ಚಿಂತನೆಯ ವಿಚಾರಗಳನ್ನು ಮಂಡಿಸಿದ್ದಾರೆ.

ಹವ್ಯಾಸಿ ರಂಗಭೂಮಿಯಲ್ಲಿಯೂ ನಟಿ ಹಾಗು ನಿರ್ದೇಶಕಿಯಾಗಿರುವ ಮೀರಾ ನಾಯಕ್ ಅವರು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಇವರಿಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಬೆಂಗಳೂರಿನ ಶಕ್ತಿ ರಾಜ್ಯ ಮಟ್ಟದ ಪ್ರಶಸ್ತಿ, ಒಡನಾಡಿ ಸಂಸ್ಥೆಯ ಮಹಿಳಾ ಸಾಧಕಿ ಗೌರವ ಲಭಿಸಿದೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಮಾರ್ಗರೇಟ್ ಆಳ್ವಾ

ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಮಾರ್ಗರೇಟ್ ಆಳ್ವಾ ಅವರದ್ದು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸಿದ ಪ್ರಮುಖರು.
ಮಂಗಳೂರಿನ ಕ್ರೈಸ್ತ ಕುಟುಂಬದ ಕುಡಿಯಾಗಿ ೧೯೪೨ರ ಏಪ್ರಿಲ್ ೧೪ರಂದು ಜನಿಸಿದ ಮಾರ್ಗರೇಟ್ ಆಳ್ವಾ ಅವರು ಸುಶಿಕ್ಷಿತರು. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿ.ಎ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು. ವಿದ್ಯಾಭ್ಯಾಸದ ಬಳಿ ವಕೀಲೆಯಾಗಿ ವೃತ್ತಿಬದುಕು ಆರಂಭಿಸಿದ ಮಾರ್ಗರೇಟ್ ಆಳ್ವಾ ಅವರು ಮಹಿಳೆ ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುವ ‘ಕರುಣಾ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿ ಸೇವೆ ಸಲ್ಲಿಸಿದವರು. ಪತಿಯ ಪ್ರೋತ್ಸಾಹದ ಮೇರೆಗೆ ೧೯೬೯ರಲ್ಲಿ ರಾಜಕಾರಣಕ್ಕೆ ಧುಮುಕಿದ ಅವರು ೧೯೭೪ರಿಂದ ೯೨ರವರೆಗೆ ಸತತವಾಗಿ ನಾಲ್ಕು ಬಾರಿ ರಾಜ್ಯಸಭಾ ಸದಸ್ಯೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡವರು. ರಾಜ್ಯಸಭೆಯ ಉಪಾಧ್ಯಕ್ಷೆಯೂ ಆಗಿದ್ದ ಅವರು ೧೯೯೯ರಲ್ಲಿ ೧೩ನೇ ಲೋಕಸಭೆಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ೨೦೦೯ರಲ್ಲಿ ಉತ್ತರಾಕಾಂಡನ ಪ್ರಪ್ರಥಮ ಮಹಿಳಾ ರಾಜ್ಯಪಾಲೆಯಾಗಿದ್ದ ಅವರು ೨೦೧೨ರಿಂದ ೧೪ರವರೆಗೆ ರಾಜಸ್ತಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದು ವಿಶೇಷ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಕೆ. ಕೃಷ್ಣಕುಮಾರ್ ಪೂಂಜ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯವರದ ಕೃಷ್ಣಕುಮಾರ್ ಪೂಂಜ ಅವರು ಸಮಾಜಸೇವೆಗಾಗಿ ಬದುಕು ಮುಡಿಪಿಟ್ಟ ನಿಜಸೇವಕರು. ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಅಹರ್ನಿಶಿ ಶ್ರಮಿಸಿದ ಕರುಣಾಮಯಿ.
೧೯೫೪ರಲ್ಲಿ ಫರಂಗಿಪೇಟೆಯಲ್ಲಿ ಜನಿಸಿದ ಕೃಷ್ಣಕುಮಾರ್ ಪೂಂಜ ಬಿ.ಕಾಂ ಪದವೀಧರರು. ವಿಜಯಾಬ್ಯಾಂಕ್ ವೃತ್ತಿಯಲ್ಲಿದ್ದುಕೊಂಡೇ ಸಮಾಜಸೇವೆಯನ್ನೇ ಪ್ರವೃತ್ತಿಯಾಗಿಸಿಕೊಂಡವರು. ಸೇವೆಯಿಂದ ಸಾರ್ಥಕತೆ ಎಂಬುದು ಅವರ ಧೈಯವಾಕ್ಯ. ಸೇವಾಂಜಲಿ ಪ್ರತಿಷ್ಠಾನದ ಧರ್ಮದರ್ಶಿಯಾಗಿ ೨೫ ವರ್ಷಗಳಿಂದಲೂ ಪ್ರತಿ ತಿಂಗಳಗೊಂದರಂತೆ ೫೪೫ ಉಚಿತ ವೈದ್ಯಕೀಯ ಶಿಬಿರ ಸಂಘಟಿಸಿ ಲಕ್ಷಾಂತರ ಜನರಿಗೆ ನೆರವಾದವರು. ೯೯ ರಕ್ತದಾನ ಶಿಬಿರ, ೬೦ ಉಚಿತ ನೇತ್ರ ತಪಾಸಣಾ ಶಿಬಿರ, ೨೦ಕ್ಕೂ ಹೆಚ್ಚು ದಂತ ಚಿಕಿತ್ಸಾ ಶಿಬಿರ, ೩೦೦೦ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೨೦ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು. ಲಲಿತಕಲೆಗಳ ತರಬೇತಿ, ಉಚಿತ ಆರೋಗ್ಯ ಕೇಂದ್ರ ಸ್ಥಾಪನೆ, ೩೦೦೦ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ ಮುಂತಾದ ಸೇವಾಕೈಂಕರ್ಯ ಕೈಗೊಂಡ ಹಿರಿಮೆ ಇವರದ್ದು. ಹಲವು ಪ್ರಶಸ್ತಿ-ನೂರಾರು ಸನ್ಮಾನಗಳಿಂದ ತ್ತೇಜಿತಗೊಂಡ
ಸೇವಾನಿರತರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ರಾಚಪ್ಪ ಹಡಪದ

ಕಿತ್ತೂರು ಚೆನ್ನಮ್ಮನ ನಾಡಿನ ಬೈಲಹೊಂಗಲ ತಾಲ್ಲೂಕಿನ ಹೊಳೆಹೊಸೂರಿನ ರಾಚಪ್ಪ ಹಡಪದ ಹಿರಿಯ ಸಮಾಜವಾದಿ, ಹೋರಾಟ, ಸಮಾಜಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡ ಹಿರಿಯರು.
ಎರಡನೇ ತರಗತಿಯಷ್ಟೇ ಓದಿದ ರಾಚಪ್ಪ ಹಡಪದ ಬದುಕಿನ ಅನುಭವ ಶಾಲೆಯಲ್ಲಿ ರೂಪಗೊಂಡವರು. ಎಳವೆಯಲ್ಲೇ ಮನಸ್ಸಿನ ಮೇಲೆ ಸ್ವಾತಂತ್ರ್ಯ ಆಂದೋಲನದ ಪ್ರಭಾವಕ್ಕೊಳಗಾಗಿ ಸಮಾಜವಾದಿ ಹೋರಾಟಕ್ಕೆ ಧುಮುಕಿದವರು, ಲೋಹಿಯಾ ಸಿದ್ಧಾಂತ, ಗಾಂಧೀಜಿ ಪ್ರಣೀತ ತತ್ವಗಳ ಪಾಲಕರು, ಸಮಾಜವಾದಿ ಧುರೀಣ ಶಾಂತವೀರಗೋಪಾಲಗೌಡರು, ಚಿಂತಕರಾದ ಪ್ರೊ. ನಂಜುಂಡಸ್ವಾಮಿ, ಪಿ.ಲಂಕೇಶ್, ಪ್ರೊ. ರಾಮದಾಸ್, ಪೂರ್ಣಚಂದ್ರತೇಜಸ್ವಿ ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದ ರಾಚಪ್ಪ ಹಡಪದ ಅವರು ಭೂಸತ್ಯಾಗ್ರಹ ಚಳವಳಿಗಳಲ್ಲಿ ಸಕ್ರಿಯರಾಗಿದ್ದವರು. ಧಾರವಾಡ ಸಮೀಪದ ಹೆಬ್ಬಳ್ಳಿಯಲ್ಲಿ ಜಮೀನ್ದಾರರು ೧೨ ಸಾವಿರ ಎಕರೆ ಜಮೀನನ್ನು ಗೇಣಿದಾರರ ಹೆಸರಿಗೆ ಹಂಚದಿದ್ದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ತುರ್ತು ಪರಿಸ್ಥಿತಿಯ ವಿರುದ್ದದ ಜಯಪ್ರಕಾಶ್ ನಾರಾಯಣರ ಚಳವಳಿಯ ಭಾಗವಾಗಿದ್ದವರು. ನಿರಂತರವಾಗಿ ಸಮಾಜಮುಖಿಯಾಗಿ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ರಾಚಪ್ಪ ಹಡಪದ ಅವರು ತತ್ವ- ಸಿದ್ಧಾಂತಗಳ ಪಾಲನೆಗೆ ಬದುಕಿ ಮೀಸಲಿಟ್ಟ ಅಪರೂಪದ ವ್ಯಕ್ತಿತ್ವ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಆನಂದ ಸಿ. ಕುಂದರ್

ಸಮುದಾಯದ ಸೇವೆಯನ್ನು ದೈವಸೇವೆಯೆಂದು ಕೈಗೊಂಡವರು ಆನಂದ್ ಸಿ. ಕುಂದರ್. ಹಲವು ಕ್ಷೇತ್ರಗಳಲ್ಲಿ ಅಶಕ್ತರಿಗೆ ನೆರವಾದ ಬಂಧು. ಶಿಕ್ಷಣದ ಜ್ಯೋತಿ ಬೆಳಗಿದ ದಯಾಳು.
ದಕ್ಷಿಣ ಕನ್ನಡ ಜಿಲ್ಲೆಯ ಮಣೂರು-ಪಡುಕೆರೆಯ ಆನಂದ್ ಸಿ. ಕುಂದರ್ ಕುಂದಾಪುರದಲ್ಲಿ ಕಾಲೇಜು ಶಿಕ್ಷಣ ಪೂರೈಸಿದವರು. ಜನತಾಶಿಕ್ಷಣ ಸಂಸ್ಥೆ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ, ಧಾರ್ಮಿಕ, ಕ್ರೀಡೆ, ಪರಿಸರ ಮತ್ತು ನೈರ್ಮಲ್ಯದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು. ೨೫ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ ಪುಸ್ತಕ, ೮೦೦ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ, ಮಳೆನೀರು ಸಂಗ್ರಹಗಾರಗಳ ನಿರ್ಮಾಣ, ೧೨ ಸಾವಿರ ಗಿಡಗಳ ವಿತರಣೆ, ಪ್ಲಾಸ್ಟಿಕ್ ವಿರೋಧಿ ಜಾಥಾ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತುರ್ತು ರಕ್ತನಿಧಿ ಸ್ಥಾಪನೆ ಮುಂತಾದವು ಆನಂದ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು, ಪರಿಸರ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ.ರಾಮು

ಸಹಕಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ದುಡಿದವರು ಸಿ. ರಾಮು, ರಾಮನಗರ ಜಿಲ್ಲೆಯ ವಿಶಿಷ್ಟ ಪ್ರತಿಭೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುಪ್ಪೆಪಾಳ್ಯದವರಾದ ಸಿ.ರಾಮು ಅವರು ಬಿಸ್ಕೂರ್ನಲ್ಲಿ ಪ್ರಾಥಮಿಕ, ಕುದೂರಿನಲ್ಲಿ ಪ್ರೌಢಶಾಲಾ ಶಿಕ್ಷಣ, ಬೆಂಗಳೂರಿನಲ್ಲಿ ಐಟಿಐ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದವರು. ೧೯೬೫ರಲ್ಲಿ ಹೆಚ್ ಎಂ.ಟಿ ಗಡಿಯಾರ ಕಾರ್ಖಾನೆಗೆ ಸಾಮಾನ್ಯ ನೌಕರರಾಗಿ ಸೇರಿ ಕಾರ್ಮಿಕ ನಾಯಕರಾಗಿ ರೂಪಗೊಂಡವರು, ಕಾರ್ಖಾನೆಯ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ೧೯೯೨ರಲ್ಲಿ ಪೀಣ್ಯದಲ್ಲಿ ಸ್ವಂತ ಕಾರ್ಖಾನೆಯನ್ನು ತೆರೆದು ಹೆಚ್ ಎಂ ಟಿ ಕಾರ್ಖಾಣೆಗೆ ಬಿಡಿಭಾಗಗಳನ್ನು ಸರಬರಾಜು ಮಾಡುತ್ತಿದ್ದ ಅವರು ಆತ್ಮೀಯ ಗೆಳೆಯರ ಬಳಗ ಎಂಬ ಗೃಹ ನಿರ್ಮಾಣ ಸಂಸ್ಥೆ ಆರಂಭಿಸಿ ೪೦೦ಕ್ಕೂ ಹೆಚ್ಚು ನಿವೇಶನ ಹಂಚಿದವರು. ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಜನತಾ ಸೇವಾ ಕೋಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ೧೯ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬ್ಯಾಂಕ್ ಅನ್ನು ಆರ್ಥಿಕವಾಗಿ ಸದೃಢಗೊಳಿಸಿದವರು. ಉತ್ತಮ ಸಹಕಾರಿ ಪ್ರಶಸ್ತಿಯನ್ನೂ ಪಡೆದಿರುವ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕುವೆಂಪು ಪ್ರಶಸ್ತಿ, ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಎಂ.ಎಸ್. ಕೋರಿಶೆಟ್ಟರ್

ಜನಪರ ಹೋರಾಟಗಳ ಮೂಲಕ ಸಮುದಾಯದ ಸೇವೆಗೈದ ಸಮಾಜಸೇವಕರು ಎಂ.ಎಸ್.ಕೋರಿಶೆಟ್ಟರ್, ಕನ್ನಡಪರ ಹೋರಾಟಗಾರ, ಸಮಾಜದ ಹಿತಕಾಯಲು ಜೈಲು ವಾಸ ಅನುಭವಿಸಿದ ಸಮಾಜಮುಖಿ, ಮಹಂತೇಶ ಶಿವರುದ್ರಪ್ಪ ಕೋರಿ ಶೆಟ್ಟ‌ರ್ ಹಾವೇರಿ ಜಿಲ್ಲೆಯವರು. ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರದಲ್ಲಿ ೧೯೫೪ರಲ್ಲಿ ಜನನ. ಬಿಜಾಪುರ, ಧಾರವಾಡ ಮತ್ತು ಹಾವೇರಿಯಲ್ಲಿ ಶಿಕ್ಷಣ, ಬಿ.ಎ.ಪದವೀಧರರು. ಕೃಷಿಕರು, ವ್ಯಾಪಾರಸ್ಥರು. ಬಾಲ್ಯದಿಂದಲೂ ಸಮಾಜಪ್ರೇಮಿ, ಅನ್ಯಾಯದ ವಿರುದ್ಧ ಹೋರಾಡುವ ಛಾತಿ, ಜನಸಂಕಟವನ್ನು ಅನುಭಾವಿಸುವ ಅಂತಃಕರಣಿ. ಹರೆಯದಲ್ಲೇ ಸಾಮಾಜಿಕ ಹೋರಾಟಕ್ಕೆ ಪ್ರವೇಶ, ಜೆ.ಪಿ.ಚಳವಳಿ, ತುಂಗಾ ನೀರಾವರಿ ಹೋರಾಟ, ರೈತಪರ ಹೋರಾಟ, ಹಾವೇರಿ ಜಿಲ್ಲಾ ರಚನೆಗಾಗಿ ನಡೆದ ಚಳವಳಿ, ಗೋಕಾಕ್ ಚಳವಳಿಗಳಲ್ಲಿ ಹೋರಾಡಿದ ದಿಟ್ಟತೆ, ಎರಡು ಬಾಲ ಕಾರಾಗೃಹವಾಸಿಯಾದರೂ ಅಂಜದ ಗಂಡೆದೆ. ನಾಲ್ಕು ಮುಕ್ಕಾಲು ದಶಕಗಳಿಂದಲೂ ಸಮಾಜಸೇವೆಯಲ್ಲಿ ಅನವರತ ನಿರತರು, ನೆಲ, ಜಲ, ಬಡವರ ಪರವಾಗಿ ಸಮರ್ಥವಾಗಿ ದನಿ ಎತ್ತಿದ ಹೆಗ್ಗಳಿಕೆ, ಶಿಗ್ಗಾಂವಿಯಲ್ಲಿ ನಡೆದ ೯ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮೈಸೂರಿನಲ್ಲಿ ನಡೆದ ೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಮಾಜಸೇವಕ’ ಪ್ರಶಸ್ತಿ ಪುರಸ್ಕೃತರು. ಬದುಕನ್ನೇ ಸಮಾಜಸೇವೆಗೆ ಮುಡಿಪಿಟ್ಟಿರುವ ವಿರಳ ಜೀವಿ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ನಜೀರ್ ಅಹಮದ್.ಯು.ಶೇಖ್

ಅತಿ ಹೆಚ್ಚು ಬಾರಿ ರಕ್ತದಾನ ಮಾಡುವ ಹೆಸರುವಾಸಿಯಾಗಿರುವ ನಜೀರ್ ಅಹ್ಮದ್ ಯು.ಶೇಖ್ ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕಳೆದ ಮೂರು ದಶಕಗಳಿಂದ ದುಡಿಯುತ್ತಿದ್ದಾರೆ. ಅನೇಕ ಸಾಮಾಜಿಕ, ಶೈಕ್ಷಣಿಕ, ಭಾವೈಕ್ಯತೆಯ ಕಾರ್ಯಕ್ರಮಗಳನ್ನು ಸಂಘಟಿಸುತ್ತ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ನಜೀರ್ ಅಹ್ಮದ್ ಅವರು ಲಯನ್ಸ್ ಕ್ಲಬ್ ಸೇವಾ ಸಂಸ್ಥೆಯಲ್ಲಿ ಸಹ ಸಕ್ರಿಯ ಕಾರ್ಯಕರ್ತರು.
ಯುವ ಪ್ರಶಸ್ತಿಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗಳಿಸಿರುವ ನಜೀರ್ ಅವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಉತ್ತಮ ಸಮಾಜ ಸೇವಕರೆಂದು ಗೌರವಿಸಿದೆ. ರಕ್ತದಾನ ನೀಡುವುದರ ಜೊತೆಗೆ ಹಲವಾರು ರಕ್ತದಾನ ಶಿಬಿರಗಳನ್ನು ಏರ್ಪಡಿಸಿರುವುದು ಇವರ ವಿಶೇಷ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಟೀಂ ಯುವ ಬೀದರ್

ಬೀದರ್ ಜಿಲ್ಲೆಯಲ್ಲಿನ ಹಲವು ಸಮಾನ ಮನಸ್ಕ ಯುವಕರು ಒಗ್ಗೂಡಿ ರಚಿಸಿರುವ ಸಮಾಜಸೇವಾ ಸಂಘಟನೆ ಟೀಮ್ ಯುವ, ಬೀದರ್ ಜಿಲ್ಲೆಯಲ್ಲಿ ಸುಮಾರು ಹದಿನೈದನೆಯ ಶತಮಾನದಲ್ಲಿ ಆದಿಲ್ ಶಾಹಿ ನಿರ್ಮಿಸಿದ್ದ ಕರೇಜ್’ ಎಂಬ ನೀರು ಸರಬರಾಜು ವ್ಯವಸ್ಥೆಯನ್ನು ತಮ್ಮ ಶ್ರಮದಾನದಿಂದ ಮತ್ತೆ ಹುಡುಕಾಟ ನಡೆಸಿ, ಜಿಲ್ಲಾಡಳಿತದ ಅಗತ್ಯ ಸಹಕಾರ ಪಡೆದು, ಸಾಮಾಜಿಕ ಸಹಭಾಗಿತ್ವದಲ್ಲಿ ಮತ್ತೆ ಜಲಮೂಲಗಳನ್ನು ಪುನರಜೀವನಗೊಳಿಸಿದ ಶ್ರೇಯ ಇವರದು.
ಭೀಕರ ಬರಗಾಲದಲ್ಲಿ ಇವರು ಪುನರುಜ್ಜಿವನಗೊಳಿಸಿದ ಬೀದರ್ ನಗರದ ಬಾವಿಗಳಿಂದಾಗಿ ನಗರದ ಜನತೆಯ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗಿದ್ದು, ಟೀಮ್ ಯುವ ತಂಡದ ಸಾಧನೆಯ ಹೆಗ್ಗಳಿಕೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಸಿ.ಎಂ. ಮುನಿಯಪ್ಪ

ಶೋಷಿತ, ದಮನಿತ ಮತ್ತು ದಲಿತ ಸಮುದಾಯವನ್ನು ಸಂಘಟಿಸಿ, ಬಿ.ಕೃಷ್ಣಪ್ಪ, ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯ ಅವರುಗಳ ನೇತೃತ್ವದಲ್ಲಿ ನಡೆದ ದಲಿತ ಚಳುವಳಿಗಳಲ್ಲಿ ಸಂಘಟಕರಾಗಿ ದುಡಿದವರು ಸಿ.ಎಂ.ಮುನಿಯಪ್ಪ, ತರುವಾಯ ಅವರು ಎರಡು ಅವಧಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದವರು. ಹಾಸನ, ಚಿಕ್ಕಮಗಳೂರಿನ ಚಂಡಗೋಡು ಮತ್ತು ರಾಯಚೂರಿನ ಮಸ್ಕಿ ಜಿಲ್ಲೆಯ ಭೂಹೋರಾಟಗಳು, ಪ್ರಕರಣ ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಹಾಗು ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಜನಜಾಗೃತಿ ಮೂಡಿಸುವ ಹೋರಾಟಗಳಲ್ಲಿ ಇವರು ಸಕ್ರಿಯರಾಗಿದ್ದವರು.
ರಾಜ್ಯ ಮಟ್ಟದ ಹಲವು ಹೋರಾಟಗಳಲ್ಲಿ ಮುಂದಿನ ತಲೆಮಾರಿನ ಯುವಕರನ್ನು ಸಂಘಟಿಸಿ ಜಾಗೃತಿಗೊಳಿಸುತ್ತಿರುವ ಸಿ.ಎಂ.ಮುನಿಯಪ್ಪ ಅವರು ನಿರಂತರವಾಗಿ ಸಾಮಾಜಿಕ ಜಾಗೃತಿಯಲ್ಲಿ ತೊಡಗಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ತುಳಸಮ್ಮ ಕೆಲೂರ

ಬಡ ಮತ್ತು ಅನಾಥ ಮಕ್ಕಳನ್ನು ಸಮಾಜವು ತಿರಸ್ಕರಿಸದಂತೆ ಅವರಿಗೆ ಎಲ್ಲರಂತೆ ಶಿಕ್ಷಣ ಮತ್ತು ತರಬೇತಿ ಕೊಡಿಸಲು ಜ್ಞಾನಸಿಂಧು ಶಾಲೆ ಆರಂಭಿಸಿರುವ ತುಳಸಮ್ಮ ಅವರು ನಿರಂತರವಾಗಿ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.
ಭಿಕ್ಷೆ ಬೇಡುವ ಮಕ್ಕಳಿಗೆ ಅಕ್ಷರ ಮತ್ತು ಅನ್ನಾಹಾರಗಳನ್ನು ಒದಗಿಸುವ ಮೂಲಕ ಒಂದರಿಂದ ಆರನೆಯ ತರಗತಿವರೆಗೆ ಉಚಿತ ಶಾಲೆ ನಡೆಸುತ್ತಿದ್ದಾರೆ. ಯೋಗ, ಸಾಹಸಕ್ರೀಡೆ, ಆಧ್ಯಾತ್ಮ ಮತ್ತು ಕಂಪ್ಯೂಟರ್ ಶಿಕ್ಷಣ ನೀಡುವ ಏರ್ಪಾಡು ಮಾಡಿರುವ ತುಳಸಮ್ಮ ಅವರು ತನ್ನ ಸ್ವಂತ ಜಮೀನು ಮತ್ತು ಆದಾಯವನ್ನು ತನ್ನ ಕುಟುಂಬದ ಆದಾಯವನ್ನು ಸಮಾಜದ ಏಳಿಗೆಗಾಗಿ ತೊಡಗಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಅಕೈ ಪದ್ಮಶಾಲಿ

ಗಂಡಾಗಿದ್ದು ನಂತರ ಹೆಣ್ಣಾದ ಅಕೈ ಪದ್ಮಶಾಲಿ ಇಂದು ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿರುವ ಸಂಗಮ ಸಂಸ್ಥೆಯ ಪದಾಧಿಕಾರಿಗಳಲ್ಲೊಬ್ಬರು. ಸಮಾಜ ತೃತೀಯ ಲಿಂಗಿಗಳ ಬಗ್ಗೆ ತೋರುತ್ತಿರುವ ಅನಾದರಣೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸಂಗಮ ಸಂಸ್ಥೆಯಿಂದ ತೃತೀಯ ಲಿಂಗಿಗಳ ಸಂಘಟನೆ ಮಾಡುವ ಹೊಣೆ ಹೊತ್ತುಕೊಂಡಿರುವ ಅಕೈ ಪದ್ಮಶಾಲಿ ರಾಜ್ಯ ಹಾಗೂ ರಾಷ್ಟ್ರದ ತೃತೀಯ ಲಿಂಗಿಗಳ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ದೇಶದಲ್ಲಿಯೇ ಮೊಟ್ಟಮೊದಲ ಮೋಟಾರು ಚಾಲನಾ ಪರವಾನಗಿಯನ್ನು ಹೆಣ್ಣೆಂದು ಪಡೆದುಕೊಂಡ ಅಕೈ ಪದ್ಮಶಾಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಉತ್ತಮ ಗಾಯಕಿ ಎನಿಸಿಕೊಂಡಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಆರ್.ಆರ್. ಪದಕಿ

ಜನಸಾಮಾನ್ಯರ ಬದುಕಿನ ಅತ್ಯವಶ್ಯಕ ಸೌಲಭ್ಯವಾದ ಆರೋಗ್ಯ ನಿರ್ವಹಣೆಯಲ್ಲಿ ಸುಧೀರ್ಘವಾದ ೬೦ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ವೈದ್ಯರು. ಡಾ|| ಆರ್.ಆರ್.ಪದಕಿ.
ಮುದ್ದೇಬಿಹಾಳದಲ್ಲಿ ವೈದ್ಯಕೀಯ ಸೇವೆಗಳನ್ನು ಆರಂಭಿಸಿ ರೋಗ ಪತ್ತೆ ಹಚ್ಚುವಲ್ಲಿ ನಿಪುಣತೆ ಸಾಧಿಸಿದ ಆ.ಆ.ಪದಕಿ ಅನೇಕ ರೋಗಿಗಳು ಶೀಘ್ರವಾಗಿ ಗುಣಮುಖವಾಗುವಂತೆ ನೋಡಿಕೊಂಡರು.
ಅಶಕ್ತರು ಹಾಗೂ ಬಡವರಿಗೆ ಉಚಿತವಾದ ಆರೋಗ್ಯ ನೆರವು ನೀಡುವುದನ್ನು ಮೊದಲಿನಿಂದಲೂ ರೂಢಿಸಿಕೊಂಡ ಪದಕಿಯವರು ಅನೇಕ ಆರೋಗ್ಯ ಶಿಬಿರಗಳನ್ನು ವ್ಯವಸ್ಥೆ ಮಾಡಿದವರು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೀರಾ ಶ್ರೀನಿವಾಸ ಶಾನಭಾಗ

ಶ್ರೀಮತಿ ಮೀರಾ ಶ್ರೀನಿವಾಸ ಶಾನಭಾಗ ಅವರು ವೃತ್ತಿಜೀವನದ ಒತ್ತಡಗಳ ನಡುವೆಯೂ ಸಾಮಾಜಿಕ ಸೇವಾ ಕಾರ್ಯವನ್ನು ಪ್ರವೃತ್ತಿಯಾಗಿ ಕೈಗೊಂಡವರು. ನಿವೃತ್ತಿಯ ನಂತರ ಪೂರ್ಣ ವೇಳೆಯನ್ನು ಸಮಾಜದ ಕೈಂಕರ್ಯದಲ್ಲಿ ತೊಡಗಿಸಿದ್ದಾರೆ.
ಸ್ವಂತ ಜಮೀನನ್ನು ಸಾರ್ವಜನಿಕ ಕಾರ್ಯಗಳಿಗೆ ದಾನ ನೀಡಿರುವುದೇ ಅಲ್ಲದೆ ಜನರಲ್ಲಿ ಧಾರ್ಮಿಕ ಚಿಂತನೆಗಳನ್ನು ರೂಢಿಸುವ ಸಲುವಾಗಿ ಮಠ, ಮಂದಿರಗಳನ್ನು ಸ್ಥಾಪಿಸಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ನೆರವಾಗುತ್ತಿರುವ ಮೀರಾ ಶಾನಭಾಗ ಜೀವನ ಸಂಧ್ಯಾಕಾಲದಲ್ಲಿ ಗೌರವದ ಬದುಕನ್ನು ಬಾಳಲು ಅನುವಾಗುವಂತೆ ವೃದ್ಧಾಶ್ರಮಗಳನ್ನು ಸ್ಥಾಪಿಸಿದ್ದಾರೆ.
ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಮೀರಾ ಅವರು ಸಮಾಜದ ಮೂಲ ಅವಶ್ಯಕತೆಗಳಾದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಕಾಲಿನ್ ಕುಮಾರ್

ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಶ್ರೀಮತಿ ಕಾರಿನ್ ಕುಮಾರ್ ೧೯೭೮ರಲ್ಲಿ ವಿಮೋಚನಾ ಎಂಬ ಮಹತ್ವದ ಸ್ತ್ರೀವಾದಿ ಸಂಘಟನೆಯನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಆಸರೆಯಾಗಿದ್ದಾರೆ.
ಕಳೆದ ನಲವತ್ತೂರು ವರ್ಷಗಳಿಂದ ಹಲವಾರು ಸ್ತ್ರೀಪರವಾದ ಚಿಂತನೆಗಳನ್ನು ಪ್ರಚಾರ ಮಾಡುತ್ತ ಉಪನ್ಯಾಸ ಹಾಗೂ ವಿಚಾರ ಸಂಕಿರಣಗಳೇ ಅಲ್ಲದೆ ಮಹಿಳೆಯರ ಆರ್ಥಿಕಾಭಿವೃದ್ಧಿಗೂ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಉತ್ತರ ಆಫ್ರಿಕಾ ಹಾಗೂ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಗಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಬಹುಮುಖ ಅಭಿವೃದ್ಧಿಗೆ ನೆರವಾಗಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಎಸ್. ಹೆಳವರ್

ಅಲೆಮಾರಿ ಜನಾಂಗಕ್ಕೆ ಸೇರಿದ ಹೆಳವ ಪಿಚ್ಚಗುಂಟಲು ಸಮುದಾಯಕ್ಕೆ ಸೇರಿದ ಎಂ.ಎಸ್.ಹೆಳವ ಈ ಜನಾಂಗದಲ್ಲಿ ಮೊದಲ ಪದವೀಧರ ಹಾಗೂ ಮೊಟ್ಟಮೊದಲ ವಕೀಲರು. ವಿಜಯಪುರ ಜಿಲ್ಲೆಗೆ ಸೇರಿದವರಾದ ಎಂ.ಎಸ್.ಹೆಳವ ಸ್ವಂತ ಪರಿಶ್ರಮದಿಂದ ಉಚಿತ ವಿದ್ಯಾರ್ಥಿ ನಿಲಯಗಳಲ್ಲಿ ವಾಸ ಮಾಡುತ್ತ, ವಿಜ್ಞಾನ ಪದವಿಯನ್ನು ಹಾಗೂ ಕಾನೂನು ಪದವಿಯನ್ನು ಪಡೆದವರು.
ಕೇವಲ ೫೩,೦೦೦ ಜನಸಂಖ್ಯೆ ಉಳ್ಳ ಪಿಚ್ಚಗುಂಟಲು ಜನಾಂಗದ ಎಂ.ಎಸ್.ಹೆಳವರ್ ಅವರು ನಂತರ ವಕೀಲಿಕೆ ಕೈಗೊಂಡರು. ಡಿ.ದೇವರಾಜ ಅರಸು ಅವರ ಮಾರ್ಗದರ್ಶನದಲ್ಲಿ ಸಮಾಜಸೇವೆಗೆ ಕಾಲಿಟ್ಟ ಹೆಳವರ್, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಜಿಲ್ಲಾ ಹಾಗೂ ತಾಲೂಕು ನ್ಯಾಯ ಮಂಡಳಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿರುವ ಎಂ.ಎಸ್. ಹೆಳವರ್ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯ ಅಲೆಮಾರಿ ಜನಾಂಗಕ್ಕಾಗಿ ಪುಟ್ಟ ಗ್ರಾಮಗಳನ್ನು ಸರ್ಕಾರದ ನೆರವಿನಿಂದ ಅಸ್ಥಿತ್ವಕ್ಕೆ ತಂದರು. ಅಲೆಮಾರಿ ಜನಾಂಗದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಬಗೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯರಾಗಿರುವ ಹೆಳವರ್ ಅವರು ಅಲೆಮಾರಿ ಜನಾಂಗಗಳಿಗೆ ಸಂವಿಧಾನದ ಸವಲತ್ತುಗಳನ್ನು ಕೊಡಿಸುವಲ್ಲಿ ಈಗಲೂ ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಲೀಲಾ ಸಂಪಿಗೆ

ಸ್ತ್ರೀವಾದಿ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಡಾ. ಲೀಲಾ ಸಂಪಿಗೆ ಅವರು ಏಡ್ಸ್ ಸಂತ್ರಸ್ಥರ ಪುನರ್ವಸತಿ ಕುರಿತಂತೆ ರಾಜ್ಯದಾದ್ಯಂತ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಸರು ಮಾಡಿದವರು. ವೇಶ್ಯಾವೃತ್ತಿಯ ದುಷ್ಪರಿಣಾಮಗಳನ್ನು ಮನದಟ್ಟು ಮಾಡಿಕೊಡುವ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಲೀಲಾ ಸಂಪಿಗೆ ಅವರು ವೇಶ್ಯಾ ಸಮಸ್ಯೆಯ ವಿವಿಧ ಮುಖಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಏಡ್ಸ್ ಮಾರಣಾಂತಿಕ ರೋಗ ಕುರಿತು ಜನಜಾಗೃತಿ ಮೂಡಿಸುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಏಡ್ಸ್‌ ಪ್ರಿವೆನನ್ ಸಂಸ್ಥೆ ಮೂಲಕ ಡಾ|| ಲೀಲಾ ನಡೆಸಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎನ್. ವೆಂಕಟೇಶ್

ಎನ್. ವೆಂಕಟೇಶ್ ಅವರು ಹಿರಿಯ ದಲಿತ ಹೋರಾಟ ಕಾರ್ಯಕರ್ತರಲ್ಲೊಬ್ಬರು. ಎಪ್ಪತ್ತರ ದಶಕದಲ್ಲಿ ರಾಜ್ಯದಾದ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಚನೆಗಾಗಿ ಶ್ರಮಿಸಿದ ಎನ್. ವೆಂಕಟೇಶ್ ಸಂಘದ ಮುಂಚೂಣಿಯಲ್ಲಿ ಕೆಲಸ ಮಾಡಿದವರು. ನಿರಂತರವಾಗಿ ದಲಿತ ಸಂಘರ್ಷ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿರುವ ವೆಂಕಟೇಶ್ ಅನ್ಯಾಯಗಳ ವಿರುದ್ಧ ಈಗಲೂ ದನಿ ಎತ್ತುವುದರಲ್ಲಿ ಮುಂದು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ರೆ. ಫಾದರ್ ಡಾ. ಪಿ.ಜೆ. ಜೇಕಬ್

ರೆ. ಫಾದರ್ ಡಾ. ಪಿ.ಜೆ. ಜೇಕಬ್ ಅವರು ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಲೇ ತಮ್ಮ ಸುತ್ತಮುತ್ತಲ ಜನರನ್ನು ಸರ್ವರೀತಿಯಿಂದಲೂ ಪ್ರೋತ್ಸಾಹಿಸುವ ಹಾಗೂ ಅಭಿವೃದ್ಧಿಯ ಪಥದಲ್ಲಿ ನಡೆಸಲು ನಿರಂತರವಾಗಿ ಐದು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ.

ಗ್ರಾಮೀಣ ಸೇವೆ, ಶೈಕ್ಷಣಿಕ ಸೌಲಭ್ಯ ಪೂರೈಸುತ್ತಾ ಮಾನವ ಹಕ್ಕು ರಕ್ಷಣೆ ಮಾಡುವಲ್ಲಿಯೂ ಮುಂದಾಗಿರುವ ಡಾ. ಪಿ.ಜೆ. ಜೇಕಬ್ ತಮ್ಮದೇ ಅಭಿವೃದ್ಧಿ ವೃಕ್ಷ ಎಂಬ ಮೂಲಮಂತ್ರವನ್ನು ಸಮಾಜದ ಬಹುಮುಖ ಬೆಳವಣಿಗೆಗಾಗಿ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮ ಪ್ರಚಾರ ಮಾಡುತ್ತಲೇ ಸಾರ್ವಜನಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ, ಶಾಸಕರಾಗಿ ಆಯ್ಕೆಯಾದ ಅಪರೂಪದ ವ್ಯಕ್ತಿತ್ವವುಳ್ಳವರು ಡಾ. ಪಿ.ಜೆ.ಜೇಕಬ್,

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಗುರುರಾಜ ಹೆಬ್ಬಾರ್

ಮೈಸೂರಿನಲ್ಲಿ ವೈದ್ಯಕೀಯ ಪದವಿ ಪಡೆದ ಡಾ. ಗುರುರಾಜ ಹೆಬ್ಬಾರ್ ಅವರು ಮೊದಲಿಗೆ ಗ್ರಾಮೀಣ ಭಾಗದಲ್ಲಿಯೇ ತಮ್ಮ ವೃತ್ತಿಯನ್ನು ಆರಂಭಿಸಿ ಬಹುಬೇಗ ಗ್ರಾಮೀಣ ಜನರ ನೆಚ್ಚಿನ ವೈದ್ಯರೆನಿಸಿಕೊಂಡರು. ವಿಶೇಷವಾಗಿ ಬಡವರ ಡಾಕ್ಟರ್ ಎಂದು ಕರೆಸಿಕೊಂಡ ಗುರುರಾಜ ಹೆಬ್ಬಾರ್ ಸರ್ಕಾರ ಸೇವೆಯಲ್ಲಿದ್ದರೂ ಬಲು ಬೇಗ ಸ್ವತಂತ್ರವಾಗಿ ಹಾಸನದಲ್ಲಿ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು.

ಜನಸಾಮಾನ್ಯರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯಗಳು ದೊರೆಯಬೇಕೆಂಬ ಸದುದ್ದೇಶದಿಂದ ಸಹಕಾರಿ ತತ್ವದಲ್ಲಿ ಆಸ್ಪತ್ರೆಯನ್ನು ಆರಂಭಿಸಿದ ಅವರು ಹಾಸನ ಜಿಲ್ಲೆಯಲ್ಲಿ ಸಹಕಾರಿ ತತ್ವವನ್ನು ಅತ್ಯಂತ ವ್ಯಾಪಕ ಚಳುವಳಿಯನ್ನಾಗಿ ರೂಪಿಸಿದರು. ಹಾಸನದಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಆಸ್ಪತ್ರೆ, ವೃದ್ಧಾಶ್ರಮ, ಸಿ.ಟಿ. ಸ್ಕ್ಯಾನ್ ಕೇಂದ್ರಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಗೌರವ ಸನ್ಮಾನಗಳು ಇವರನ್ನರಸಿ ಬಂದಿವೆ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಮೂಲ್‌ಚಂದ್ ನಹಾರ್

ವೃತ್ತಿಯಿಖಂದ ವ್ಯಾಪಾರಸ್ಥರು ಹಾಗೂ ಬಹುಮುಖಿ ಸಮಾಜಸೇವಾಕರ್ತರು ಶ್ರೀ
ಮೂಲ್ಚಂದ್ ನಹಾರ್ ಅವರು.
ಹಲವಾರು ಜೀವನ ವಿಜ್ಞಾನ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಒಂದು ಲಕ್ಷ ಪ್ರತಿಗಳನ್ನು ಕನ್ನಡದಲ್ಲಿ ಮುದ್ರಿಸಿ ಶಾಲಾವಿದ್ಯಾರ್ಥಿಗಳಿಗೆ ಉಚಿತವಾಗಿ ವಿತಲಸಿರುವ ಇವರು ಬಡಮಕ್ಕಆಗೆ ಕಂಪ್ಯೂಟರ್ ತರಬೇತಿ, ಅಂಧ ಮಕ್ಕಆಗೆ ಬಟ್ಟೆ ವಿತರಣೆ, ದುರ್ಬಲಲಿಗೆ ಉಚಿತ ಆರೋಗ್ಯ ಕೇಂದ್ರ ವ್ಯವಸ್ಥೆ ಒದಲಿಸಿದ್ದಾರೆ.
ಸ್ವತಃ ಅಂಗವಿಕಲರಾದ ಶ್ರೀ ಮೂಲ್ಚಂದ್ ನಹಾರ್ ಅವರು ನೂರಾರು ಅಂಧಮಕ್ಕಳ ಜೀವನದಲ್ಲಿ ಭರವಸೆ ಮೂಡಿಸುವ ನಿಟ್ಟನಲ್ಲ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸುನಾಮಿಯಿಂದ ಸಂತ್ರಸ್ಥರಾದವರಿಗೆ ಅಕ್ಕಿ, ಪಾತ್ರೆ, ಔಷಧಿ, ಬಟ್ಟೆ ಹಾಗೂ ನಗದು ಹಣವನ್ನು ಕಳಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ, ಬೆಂಗಳೂಲನ ಅಡಕಮಾರನಹಳ್ಳಿಯಲ್ಲಿನ ಆರೋಗ್ಯ ಕೇಂದ್ರದ ಮೂಲಕ ಉಚಿತ ಆರೋಗ್ಯ ತಪಾಸಣಿ, ಔಷಧಿ ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳ ತಜ್ಞರಿಂದ ಜೀವನ ಮೌಲ್ಯ ಶಿಕ್ಷಣ ತರಬೇತಿ ಶಿಬಿರಗಳನ್ನು ಶಿಕ್ಷಕಲಗಾಗಿ ಜೀವನ ವಿಜ್ಞಾನ ಪಠ್ಯ ರಚನೆ ಹಾಗೂ ಬೋಧನೆಯ ಬಗ್ಗೆ ಶಿಬಿರಗಳನ್ನು ವ್ಯವಸ್ಥೆ ಮಾಡಿರುವ ಇವರು ತಮ್ಮ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಉಚಿತ ತಪಾಸಣೆ ಹಾಗೂ ಔಷಧಿ ವಿತಲಸುವ ಕಾಯಕವನ್ನು ಕಳೆದ ಎರಡು ದಶಕಗಆಂದಲೂ ನಡೆಸುತ್ತಾ ಬಂದಿದ್ದಾರೆ.
ಸರ್ವಧರ್ಮ ಸಮ್ಮೇಳನವನ್ನು ಸಂಘಟಿಸಿರುವ ಶ್ರೀ ಮೂಲ್ಚಂದ್ ನಹಾರ್ ಅವರು ಅಡಕಮಾರನಹಳ್ಳಿಯ ಭಿಕ್ಷಾಧಾಮದ ಅಧ್ಯಕ್ಷರು.
ಅನೇಕ ಧಾರ್ಮಿಕ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಪಾತ್ರರಾಗಿರುವ ಮೂಲ್ಚಂದ್ ನಹಾ ಅವರು ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ದೀನ ದಲತರ ಏಆಗೆಗಾಲ ಸೇವಾಮನೋಭಾವದಿಂದ ದುಡಿಯುತ್ತಿರುವವರು ಶ್ರೀ ಮೂಲ್ಚಂದ್ ನಹಾ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಟಿ.ವಿ. ನಾರಾಯಣಶಾಸ್ತ್ರಿ

ಶಾಲಾದಿನಗಳಿಂದಲೇ ಸೌಟ್ಸ್ ಹಾಗೂ ಗೈಡ್ಸ್ ಬಗ್ಗೆ ಆಸಕ್ತಿ ತಳೆದವರು! ಶ್ರೀ ಟಿ.ವಿ. ನಾರಾಯಣಶಾಸ್ತ್ರಿ ಅವರು.
ಶಾಲಾ ದಿನಗಳಲ್ಲೇ ಸ್ಕಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ ಕಾರ್ಯಕರ್ತರಾಗಿ ಭಾಗವಹಿಸಿದ ಟಿ.ವಿ. ನಾರಾಯಣಶಾಸ್ತ್ರಿ ಅವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸ್ಕಟ್ಸ್ ಹಾಗೂ ಗೈಡ್ಸ್ನ ಆಯುಕ್ತರು.
ಆಟೋಮೊಬೈಲ್ ಇಂಜಿನಿಯಲಿಂಗ್ನಲ್ಲಿ ಡಿಪ್ಲೊಮಾ ಪಡೆದಿರುವ ಇವರು ೧೯೨೬ರಿಂದ ಸೈಟ್ ಕರ್ನಾಟಕ ಜಾಂಬೂಲಗಳಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯಾದ್ಯಂತ ನಡೆಯುವ ಶಿಬಿರಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಸೌಟ್ಸ್ ಚಳವಆಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಟಿ.ವಿ. ನಾರಾಯಣಶಾಸ್ತ್ರಿ ಅವರಿಗೆ ರಾಷ್ಟ್ರೀಯ ಭಾರತ್ ಸ್ಕಟ್ಸ್ ಹಾಗೂ ಗೈಡ್ಸ್ ಸಂಸ್ಥೆ ಅತ್ಯುನ್ನತವಾದ ಪ್ರಶಸ್ತಿ ಸಿಲ್ವರ್್ರ ಎಅಫೆಂಟ್ನ್ನು ೨೦೦೨ರ ಸಾಲಿಗಾಗಿ ನೀಡಿತು. ಕೈಗಾಲಕೋದ್ಯಮಿಯಾಗಿ ಅನೇಕ ಸಾಧನೆಗಳನ್ನು ಮಾಡಿರುವ ಶಾಸ್ತ್ರಿ ಅವರಿಗೆ ಉದ್ಯೋಗರತ್ನ, ಕೈಗಾಲಕಾ ಅರ್ಹತಾ ಪತ್ರ ಹಾಗೂ ಉದ್ಯಮಿಗಳಿಗಾಗಿ ನೀಡುವ ತಾವು ಪತ್ರವು ಸಂದಿದೆ.
ಸೌಟ್ಸ್ ಚಳುವಆಯಲ್ಲಿ ಏಳು ದಶಕಗಳಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಶಾಸ್ತ್ರಿಯವರು ಶಿವಮೊಗ್ಗೆಯಲ್ಲ ೨೧ನೆಯ ರಾಜ್ಯಮಟ್ಟದ ಸೌಟ್ಸ್ ಹಾಗೂ ಗೈಡ್ಸ್ ಬುಲ್ಬುಲ್ ಉತ್ಸವವನ್ನು ೧೯೯೬ರಲ್ಲಿ ಯಶಸ್ವಿಯಾಗಿ ನಡೆಸಿದರು. ಈ ಉತ್ಸವದಲ್ಲ ರಾಜ್ಯದ ಸಾವಿರಕ್ಕೂ ಹೆಚ್ಚು ಪುಟಾಣಿ ಸ್ಕಟ್ಸ್ಗಳು ಪಾಲ್ಗೊಂಡು ಸೌಟ್ ಚಳವಆಯ ಉದ್ದೇಶವನ್ನು ಅಲತರಲ್ಲದೆ, ಅದರ ಸಕ್ರಿಯ ಕಾರ್ಯಕರ್ತರಾಗಲು ಪ್ರೇರಣೆ ಪಡೆದರು.
ಮಕ್ಕಳಲ್ಲಿ ಸೌಟ್ಸ್ ಚಳವಳಿಯ ಬಗ್ಗೆ ಅಲವನ್ನು ಮೂಡಿಸಿ ಸೇವಾ ಮನೋಭಾವವನ್ನು ಬಿತ್ತಿದ ಸಮಾಜಸೇವಕರು ಶ್ರೀ ಟಿ.ವಿ. ನಾರಾಯಣ ಶಾಸ್ತ್ರಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಎಂ.ಜಿ. ಬೋಪಯ್ಯ

ದಿ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಮೂಲಕ ಸಮಾಜಸೇವೆಯಲ್ಲಿ ತೊಡಗಿರುವವರು ಶ್ರೀಮತಿ ಎಂ.ಜಿ.ಬೋಪಯ್ಯ ಅವರು.
ಕೊಡಲನವರಾದ ಶ್ರೀಮತಿ ಎಂ.ಜಿ. ಬೋಪಯ್ಯ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರು ಹಾಗೂ ಮದ್ರಾಸ್ಗಳಲ್ಲ. ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಪರ್ಕಕ್ಕೆ ಬಂದ ಶ್ರೀಮತಿ ಬೋಪಯ್ಯನವರು ಪ್ರಸ್ತುತ ಈ ಸಂಸ್ಥೆಯ ಕರ್ನಾಟಕ ಶಾಖೆಯ ಉಪಾಧ್ಯಕ್ಷೆ.
೮೮ ವರ್ಷ ಹರೆಯದ ಶ್ರೀಮತಿ ಬೋಪಯ್ಯ ೧೯೬೦ರಲ್ಲಿ ಗೈಡ್ಸ್ ಘಟಕವನ್ನು ಆರಂಭಿಸುವುದರ ಮೂಲಕ ಗೈಡ್ ಚಳವಳಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರು. ಎರಡನೆಯ ತರಗತಿಯಲ್ಲೇ ಗರ್ಲ್ಗೈಡ್ ಆಗಿ ಅನುಭವ ಪಡೆದಿದ್ದ ಇವರು ತಮ್ಮ ವಿದ್ಯಾಭ್ಯಾಸ ಉದ್ದಕ್ಕೂ ಈ ಸಂಸ್ಥೆಯೊಡನೆ ಸಂಪರ್ಕ ಇಟ್ಟುಕೊಂಡಿದ್ದವರು. ಕೊಡಗಿನಾದ್ಯಂತ ಸ್ಕಟ್ಸ್ ಹಾಗೂ ಗೈಡ್ಸ್ ಶಾಖೆಗಳನ್ನು ತೆರೆದು ಶಾಲಾ ಮಕ್ಕಳನ್ನು ಮತ್ತು ಸಾರ್ವಜನಿಕರನ್ನು ಈ ಚಳುವಆಯ ವ್ಯಾಪ್ತಿಗೆ ತಂದ ಶ್ರೀಮತಿ ಬೋಪಯ್ಯ ಅವರು ಭಾರತ ರಾಷ್ಟ್ರೀಯ ಸೌಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ 2019. ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದರು.
ಸೌಟ್ಸ್ ಹಾಗೂ ಗೈಡ್ ಆಂದೋಲನವಲ್ಲದೆ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿರುವ ಇವರು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷರೂ ಹೌದು.
ಏಷ್ಯಾ ಪೆಸಿಫಿಕ್ ಅಡಲ್ಟ್ ಲೀಡರ್ ಪ್ರಶಸ್ತಿಯೂ ಸೇಲದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಶ್ರೀಮತಿ ಬೋಪಯ್ಯ ಅವರಿಗೆ ಭಾರತ್ ಸೈಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ ಅತ್ಯುನ್ನತ ಗೌರವವಾದ ಸಿಲ್ವರ್ ಎಅಫೆಂಟ್ ಕೂಡಾ ದೊರಕಿದೆ. ಮೈಸೂರು ದಸರಾ ಪ್ರಶಸ್ತಿ, ಸಹಕಾರ ಶಿಲ್ಪ ಮೊದಲಾದ ಗೌರವಗಳು ಇವರಿಗೆ ಲಭಿಸಿವೆ. ಅನೇಕ ಯೂರೋಪ್ ದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿರುವ ಶ್ರೀಮತಿ ಬೋಪಯ್ಯ ಅವರು ಮಡಿಕೇಲಯ ಪುರಸಭೆ ಸದಸ್ಯರಾಗಿ ಒಂಬತ್ತು ವರ್ಷಗಳ ಕಾಲ, ಇನ್ನರ್ಲ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಲನಲ್ಲ ಕೆಲವು ಶಾಲೆಗಳನ್ನು, ಬಾಲವಾಡಿಗಳನ್ನು, ಮಹಿಳಾ ಕೇಂದ್ರಗಳನ್ನು ಸ್ಥಾಪಿಸಿದ ಇವರು ರಾಜ್ಯ ಸಮಾಜ ಕಲ್ಯಾಣ ಸಲಹಾ ಸಮಿತಿ, ಸಣ್ಣ ಉಳಿತಾಯ ಸಲಹಾ ಸಮಿತಿ ಸೇಲದಂತೆ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮಿತಿಗಳಲ್ಲಿ ಸೇವಾಮನೋಭಾವದಿಂದ ದುಡಿಯುತ್ತಿರುವವರು ಶ್ರೀಮತಿ ಎಂ. ಜಿ. ಬೋಪಯ್ಯ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ವೈ.ಎಂ.ಎಸ್. ಶರ್ಮ

ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳ ಸಾಧನೆ ಮಾಡಿರುವ ಹಿಲಯ ಸಮಾಜಸೇವಕರು ಶ್ರೀ ವೈ.ಎಂ.ಎಸ್. ಶರ್ಮ ಅವರು.
೧೯೨೫ರಲ್ಲಿ ಕೋಲಾರದ ಯಳಗೊಂಡಹಳ್ಳಿಯಲ್ಲಿ ಜನನ. ಶ್ರೀ ವೈ.ಎಂ.ಎಸ್. ಶರ್ಮ ಅವರು ಎಂಜಿನಿಯಲಂಗ್ ಶಿಕ್ಷಣ ಪಡೆದಿದ್ದು ಇಂಗ್ಲೆಂಡ್ನಲ್ಲಿ (೧೯೪೬-೫೦)
ಮೈಸೂರು-ಚಾಮರಾಜನಗರ ರೈಲ್ವೆ ಟ್ರಾಕ್ ನಿರ್ವಹಣೆಯ ಹೊಣೆಗಾಲಕೆ ಹೊತ್ತುಕೊಂಡ ಶರ್ಮ ಅವರು ಲಕ್ಷ್ಮಣತೀರ್ಥ ಸೇತುವೆ, ಕನ್ನಂಬಾಡಿ ಡೀಪ್ ಇಡ್ಜ್, ಶ್ರೀರಂಗಪಟ್ಟಣ-ಮೈಸೂರು ನಡುವಣ ರೈಲ್ವೆ ಹಆ ನಿರ್ವಹಣೆ ಮೊದಲಾದ ಕಾಮಗಾಲಗಳ ನೇತೃತ್ವ ವಹಿಸಿದ್ದರು.
ಮೈಸೂರು ಸಂಸ್ಥಾನದ ಹಲವಾರು ಕೆರೆ ನಿರ್ಮಾಣ ಹಾಗೂ ನಿರ್ವಹಣೆಯ ಉಸ್ತುವಾಲ ವಹಿಸಿಕೊಂಡಿದ್ದ ವೈ.ಎಂ.ಎಸ್. ಶರ್ಮ ರೈಲ್ವೆ ಹಾಲ ಹಾಗೂ ಸೇತುವೆ ನಿಲ್ದಾಣದಲ್ಲಿ ಹೊಸಪದ್ಧತಿಗಳನ್ನು ಅಳವಡಿಸಿ ನಿರಾಣ ವೆಚ್ಚದಲ್ಲಿ ಉಳಿತಾಯ ತೋರಿಸಿಕೊಟ್ಟರು. ಅವರು ಬಡವರ ಶ್ರೇಯೋಭಿವೃದ್ಧಿ ಕಾರ್ಯಗಳಿಗೆ ತೊಡಲಿಸಿಕೊಂಡವರು ಹಾಗೂ ಹಲವಾರು ರೋಗಳಿಗೆ ಪುನರ್ವಸತಿ ಕಲ್ಪಿಸಿದವರು.
ವಿದ್ಯಾರ್ಥಿ ಜೀವನದಲ್ಲಿ ಸೈನ್ಯದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಶರ್ಮ ಅವರು ಸ್ವಾತಂತ್ರಾನಂತರ ಕರ್ನಾಟಕದ ಹಲವಾರು ಕಡೆಗಳಲ್ಲಿ ಸೇತುವೆ, ಶಾಲಾಕಟ್ಟಡ, ಸಮುದಾಯ ಭವನ, ಆಸ್ಪತ್ರೆ, ತರಕಾಲ-ಮಾರುಕಟ್ಟೆ ನಿರಾಣ ಕಾರ್ಯದಲ್ಲಿ ದುಡಿದರು.
ಎಂಜಿನಿಯರ್ ಆಗಿ ವೃತ್ತಿ ಜೀವನ ನಡೆಸಿದ ಶರ್ಮ ಅವರು ತನ್ಮೂಲನಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಿದರಲ್ಲದೆ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿಗಾಗಿ ವ್ಯವಸ್ಥೆ ಮಾಡಿದರು.
ಇವಯಸ್ಸಿನಲ್ಲಿಯೂ ಹಲವು ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವವರು ಮೈ.ಎಂ.ಎಸ್. ಶರ್ಮ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್

ರಾಜನ ಮಗ ಕಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪರ ಕಾರ್ಯಕ್ರಮಗಳ ಆಯೋಜನೆ ಹಾಗೂ ದುರ್ಬಲ ವರ್ಗದವರ … ಏಆಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್.
‘ ೨೦೦೨ರಲ್ಲಿ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಶ್ರೀ ಜಿ. ಶಂಕರ್ ನೇತೃತ್ವದಲ್ಲಿ ಸಂಸ್ಥೆಯ ಸ್ಥಾಪನೆ. ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕು ಮೂಡುಬಗೆ-ಅಂಪಾರು ಇಲ್ಲಿನ ವಾಗ್ದತಿ ಕಿವುಡ, ಮೂಗ ಮತ್ತು ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ ಆರಂಭ. ಅಲ್ಲದೆ ಟ್ರಸ್ಟ್ ವತಿಯಿಂದ ಬಡವರ್ಗದ ವಿದ್ಯಾರ್ಥಿ- ವಿದ್ಯಾರ್ಥಿನಿಯಲಿಗೆ ವಿದ್ಯಾರ್ಥಿವೇತನ ವಿತರಣೆ, ೨೦೦೦ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ನೋಟ್ಬುಕ್ಗಳ ವಿತರಣಿ, ಯಕ್ಷಗಾನ ಕಲಾವಿದರಿಗೆ ಹಾಗೂ ಕಡುಬಡವ ರೋಗಳಿಗೆ ಧನಸಹಾಯ, ಉಡುಪಿ ಗಾಂಛಿ ಆಸ್ಪತ್ರೆಗೆ ಉಚಿತ ಡಯಾಲಿಸಿಸ್ಗಾಗಿ ಡಯಾಲಿಸಿಸ್ ಯಂತ್ರ ವಿತರಣೆ, ಗುಜರಾತ್ ಭೂಕಂಪನಿಛಿ ಹಾಗೂ ಸುನಾಮಿ ದುರಂತಕ್ಕೆ ದೇಣಿಗೆ ನೀಡಿಕೆ, ಉಚಿತ ಸಾಮೂಹಿಕ ವಿವಾಹಕ್ಕೆ ಧನಸಹಾಯ, ಉಡುಪಿ ತಾಲೂಕಿನ ಕೋಟ ಪಡುಕೆರೆ ಪ್ರಥಮ ದರ್ಜೆ ಸರ್ಕಾಲ ಕಾಲೇಜಿಗೆ ಉಚಿತ ಭೂಮಿ ನೀಡಿಕೆ, ಉಡುಪಿ ಜಿಲ್ಲೆ ಕೋಲ ಕಲ್ಯಾಣದಲ್ಲಿ ಹೈಸ್ಕೂಲ್ ಸ್ಥಾಪನೆಗೆ ಎರಡು ಕೊಠಡಿ ಹಾಗೂ ಸಭಾಭವನ ಕೊಡುಗೆ, ಆಯ್ದ ಶಾಲೆಗಳಿಗೆ ಕಂಪ್ಯೂಟರ್ ನೆರವು, ಮಂಗಳೂಲಿನ ಎ.ಜೆ. ಆಸ್ಪತ್ರೆಗೆ ಮಾರ್ಗಮಧ್ಯದಲ್ಲಿ ಹೃದಯಾಘಾತವಾಗುವ ರೋಣಗಳ ಅನುಕೂಲಕ್ಕೆ ವೈದ್ಯಕೀಯ ಸಲಕರಣಿಗಳನ್ನೊಳಗೊಂಡ ಟೆಂಪೊ ಟ್ರಾವಲರ್ ನೀಡಿಕೆ ಮುಂತಾದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ.
ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ವೈದ್ಯಕೀಯ ಕ್ಷೇತ್ರಗಳಲ್ಲಿ ಸಮಾಜೋಪಯೋಗಿ ಮತ್ತು ಜನಪರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಮಾದಲ ಸಂಸ್ಥೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಾದಲ್ ಚಂದ್ ಜೊರ್ಡಿಯಾ ಟ್ರಸ್ಟ್

ಹೃದ್ರೋಗದಿಂದ ಬವಣೆಪಡುವ ಅಸಹಾಯಕರಿಗೆ ಆಸರೆ ದೀಪವಾಗಿ ನಿಂತಿದೆ ಶ್ರೀ ಬಾದಲ್ ಚಂದ್ ಚೊರ್ಡಿಯಾ ಟ್ರಸ್ಟ್.
ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಡವರಿಗೆ ಸಂಪೂರ್ಣ ವೆಚ್ಚವನ್ನು ಭರಿಸುವ ಶ್ರೀ ಬಾದಲ್ ಚಂದ್ ಚೊರ್ಡಿಯಾ ಟ್ರಸ್ಟ್ (ಚೆನ್ನೈ) ಈವರೆಗೆ ನೂರಾರು ರೋಗಿಗಳ ನೆರವಿಗೆ ಬಂದಿದೆ.
ಚೆನ್ನೈನಲ್ಲಿರುವ ಈ ಟ್ರಸ್ಟ್ ತನ್ನ ದತ್ತಿ ನಿಧಿಯಿಂದ ಪ್ರತಿ ತಿಂಗಳು ೧೦-೧೫ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿದ್ದು ಕರ್ನಾಟಕದ ಕಡೂರು ಸೇರಿದಂತೆ ೧೧ ಕಡೆಗಳಲ್ಲಿ ಶಾಲಾ ಕಟ್ಟಡ ನಿರಾಣಕ್ಕೂ ಸಹಾಯ ಹಸ್ತ ನೀಡಿದೆ.
ಚೊರ್ಡಿಯಾ ಟ್ರಸ್ಟ್‌ನ ಪರವಾಗಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಶ್ರೀ ಶಾಂತಿಲಾಲ್ ಕಂಕರಿಯಾ ಜೈನ್ ರಾಜಾಸ್ತಾನ್ ಯೂತ್ ಅಸೋಸಿಯೇಷನ್ ಮೂಲಕ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ ವಿತರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಚೊರ್ಡಿಯಾ ಟ್ರಸ್ಟ್‌ನಿಂದ ಈವರೆಗೆ ಕರ್ನಾಟಕದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಅಶಕ್ತರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಪೂರ್ಣ ಧನಸಹಾಯ ನೀಡಲಾಗಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ರುಡ್‌ಸೆಟ್‌, ಧರ್ಮಸ್ಥಳ

ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್, ಕೆನರಾಬ್ಯಾಂಕ್ ಸಾರ್ಡ್ ಫೌಂಡೇಷನ್, ಸಿಬಿಪಿಜೆಆರ್‌ಡಿ ಟ್ರಸ್ಟ್ ಸಂಯುಕ್ತವಾಗಿ ೧೯೮೨ರಲ್ಲಿ ಪ್ರಾರಂಭಿಸಿದ ಸಂಸ್ಥೆಯೇ ‘ರುಡ್‌ಸೆಟ್’.
ಕರ್ನಾಟಕದ ಉಜಿರೆಯಲ್ಲಿ ಕೇಂದ್ರ ಸ್ಥಾನವಿರುವ ರುಡ್‌ಸೆಟ್ ದೇಶದಾದ್ಯಂತ ೨೦ ಶಾಖೆಗಳನ್ನು ಹೊಂದಿದ್ದು ಗ್ರಾಮೀಣ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವಕಾಶ ಒದಗಿಸುತ್ತಾ ಬಂದಿದೆ.
ಪ್ರಧಾನ ಮಂತ್ರಿಗಳ ರೋಜ್ಜಾರ್ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡುವ ‘ರುಡ್‌ಸೆಟ್’ ಮಾದರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಎಲ್ಲಾ ರಾಜ್ಯಗಳಲ್ಲೂ ಇದರ ಜಾರಿಗೆ ಆದೇಶಿಸಿದೆ.
ಕರ್ನಾಟಕದ ನಾಲ್ಕು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಕ್ಷೇತ್ರಾಧಿಕಾರಿಗಳಿಗೆ ‘ಸ್ವಶಕ್ತಿ ಯೋಜನೆಯಡಿ ತರಬೇತಿ ನೀಡಿರುವ ‘ರುಡ್ ಸೆಟ್’ ರಾಜ್ಯದ ವೃತ್ತಿಪರ ಕಾಲೇಜುಗಳ ಅಧಿಕಾರಿಗಳಿಗೆ ಮಾನವ ಸಂಪನ್ಮೂಲ ಬಳಕೆ ಕುರಿತ ತರಬೇತಿಯನ್ನು ವ್ಯವಸ್ಥೆ ಮಾಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗದ ಸೂಕ್ತ ಅವಕಾಶಗಳನ್ನು ಗುರುತಿಸಿ ಅವುಗಳ ಅನುಷ್ಟಾನಕ್ಕೆ ತರಬೇತಿ ನೀಡುತ್ತಿರುವ ‘ರುಡ್‌ಸೆಟ್’ ಹಳ್ಳಿಗಾಡಿನ ಯುವ ಸಮುದಾಯದ ದಾರಿದೀಪ.

Categories
ರಾಜ್ಯೋತ್ಸವ 2006 ಸಮಾಜಸೇವೆ

ಶ್ರೀ ಎಚ್. ಜಿ. ಗೋವಿಂದಗೌಡ

ರಾಜಕಾರಣದಲ್ಲಿದ್ದೂ ಸರಳತೆ, ಪ್ರಾಮಾಣಿಕತೆ ಹಾಗೂ ತತ್ವನಿಷ್ಠೆಗಳಿಂದ ಜನಮನ ಗೆದ್ದ ಅಪರೂಪದ ರಾಜಕಾರಣಿ ಶ್ರೀ ಎಚ್.ಜಿ. ಗೋವಿಂದ ಗೌಡ ಅವರು.
ಹಸಿರು ಚಿಮ್ಮುವ ಮಲೆನಾಡಿನ ಕಾನೂರಿನಲ್ಲಿ ಜನಿಸಿದ ಗೋವಿಂದಗೌಡರು ಜೀವನ ಶಿಕ್ಷಣ ಪಡೆದದ್ದು ಸ್ವಾತಂತ್ರ ಹೋರಾಟದ ಪಾಠಶಾಲೆಯಲ್ಲಿ, ಕಡಿದಾಳು ಮಂಜಪ್ಪನವರ ಗರಡಿಯಲ್ಲಿದ್ದುಕೊಂಡು ಪುಟ್ಟ ಅಂಗಡಿ ಆರಂಭಿಸಿದ ಗೋವಿಂದಗೌಡರು ಕೊಪ್ಪ ಪುರಸಭೆಯ ಅಧಿಕಾರೇತರ ಅಧ್ಯಕ್ಷನಾಗುವ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟರು.
ಜನಹಿತ ಕಾಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಗೋವಿಂದಗೌಡರು ತಾಲ್ಲೂಕು ಅಭಿವೃದ್ಧಿ ಮಂಡಲಿ ಹಾಗೂ ಕೃಷಿ ವ್ಯವಸಾಯೋತ್ಪನ್ನ ಸಮಿತಿ ಅಧ್ಯಕ್ಷರಾಗಿದ್ದು ನಂತರ ವಿಧಾನಸಭೆ ಪ್ರವೇಶಿಸಿದರು.
ಪ್ರಾಥಮಿಕ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಎಚ್.ಜಿ. ಗೋವಿಂದಗೌಡ ವಿದ್ಯಾ ಇಲಾಖೆಯಲ್ಲಿ ತಂದ ಸುಧಾರಣೆಗಳು ಹತ್ತಾರು. ಶಿಕ್ಷಕರ ನೇಮಕಾತಿ ಹಾಗೂ ವರ್ಗಾವಣೆಯಲ್ಲಿ ಅವರು ರೂಪಿಸಿದ ಪಾರದರ್ಶಕ ವಿಧಾನ ಅನುಕರಣೀಯ.
ದೀರ್ಘಕಾಲದ ರಾಜಕೀಯ ಜೀವನದಲ್ಲಿ ಯಾವುದೇ ವಿವಾದಕ್ಕೊಳಗಾಗದೆ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿ ಬಾಳುತ್ತಿರುವ ಶ್ರೀ ಗೋವಿಂದಗೌಡರು ಆದರ್ಶಪ್ರಾಯರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಎಸ್. ಬಲಬೀರ್‌ಸಿಂಗ್‌

ಬಹುಮುಖಿ ಕ್ಷೇತ್ರಗಳಲ್ಲಿ ಸೇವೆಗೈದ ವಿಶಿಷ್ಟ ಸಮಾಜಸೇವಕ ಡಾ. ಎಸ್. ಬಲಬೀರ್‌ಸಿಂಗ್‌, ಬೀದರ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ಪಾತ್ರಧಾರಿ. ಬಡವರಿಗೆ ನೆರವಾದ ಉದ್ಯಮಿ. ೧೯೬೦ರ ಮಾರ್ಚ್‌ ೧೫ರಂದು ಜನಿಸಿದ ಬಲಬೀರ್‌ಸಿಂಗ್‌ ಬಿ.ಎ ಪದವೀಧರರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ, ಪ್ರವೃತ್ತಿಯಲ್ಲಿ ಸಮಾಜಸೇವಕ, ಭಾವಸಂಪನ್ನದ ಸಹೃದಯಿ, ಹಣವಂತರಾದರೂ ಹೃದಯವಂತರು. ಗುರುನಾನಕ್ ಶೈಕ್ಷಣಿಕ ಸಂಸ್ಥೆ, ಗುರುದ್ವಾರ ಶ್ರೀನಾನಕ್ ಜೀರಾಸಾಹೇಬ್ ಹಾಗೂ ಗುರುನಾನಕ್ ಆಸ್ಪತ್ರೆಯ ಅಧ್ಯಕ್ಷರಾಗಿ ಬಹುರೂಪಿ ಸೇವೆ. ಗುರುದ್ವಾರದಲ್ಲಿ ೪೦೦ ಕೊಠಡಿಗಳ ನಿರ್ಮಾಣ, ಉಚಿತ ವಸತಿ, ಅನ್ನದಾಸೋಹದ ಸೇವೆ. ೧೫ ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ. ೧೫೦೦ಕ್ಕೂ ಹೆಚ್ಚು ಶಿಕ್ಷಿತರಿಗೆ ಉದ್ಯೋಗದಾಸರೆ, ಗುರುನಾನಕ್ ಆಸ್ಪತ್ರೆಯಲ್ಲಿ ಬಡವರಿಗೆ ಅಲ್ಪದರದಲ್ಲಿ ಚಿಕಿತ್ಸೆ, ಸಿಖ್ ಸಮುದಾಯಕ್ಕೆ ೨೦೦೮ರಲ್ಲಿ ಕೇಂದ್ರ ಸರ್ಕಾರ ಕೊಟ್ಟ ೧೫೦ ಕೋಟಿ ರೂ. ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ, ಹೊರವರ್ತುಲ ರಸ್ತೆ ನಿರ್ಮಾಣದಿಂದ ಬೀದರ್‌ನ ಶೈಕ್ಷಣಿಕ-ಆರ್ಥಿಕ ಚಿತ್ರಣವನ್ನೇ ಬದಲಿಸಿದ ಉದ್ಯಮಿ, ಸಮುದಾಯದ ಸೇವೆಯಲ್ಲೇ ಸಾರ್ಥಕತೆ ಕಂಡುಕೊಂಡ ಬಲಬೀರ್‌ಸಿಂಗ್‌ ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್‌ಗೆ ಪಾತ್ರರು. ಬೀದರ್ ಜಿಲ್ಲೆಯ ಹೆಮ್ಮೆ-ಸಮಾಜಸೇವೆಗೆ ಮಾದರಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಬ್ಲ್ಯೂ, ಪಿ. ಕೃಷ್ಣ

ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡವರು ಸಮಾಜಸೇವಕ ಶ್ರೀ ಡಬ್ಲ್ಯೂ, ಪಿ. ಕೃಷ್ಣರವರು.
೧೯೬೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀಯುತರು ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಹಾಗೂ ಎಲ್ಎಲ್.ಬಿ. ಪದವಿಗಳಿಸಿದ್ದಾರೆ. ಇವರ ತಂದೆ ಶ್ರೀ ಡಬ್ಲ್ಯೂ, ಹೆಚ್. ಪುಟ್ಟಯ್ಯನವರು ಹಿರಿಯ ಸ್ವಾತಂತ್ರ್ಯ ಯೋಧರು ಹಾಗೇ ತಾತನವರರಾದ ದಿ|| ಡಬ್ಲ್ಯೂ, ಹೆಚ್, ಹನುಮಂತಪ್ಪನವರು ಸಹ ಸ್ವಾತಂತ್ರ್ಯಯೋಧರಾಗಿದ್ದು ಬೆಂಗಳೂರಿನ ಪುರಸಭಾಧ್ಯಕ್ಷರು, ಮೈಸೂರು ಪ್ರಜಾಪ್ರತಿನಿಧಿಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ಆಗಿದ್ದವರು.
ವೃತ್ತಿಯಲ್ಲಿ ಚಾರ್ಟಡ್್ರ ಇಂಜಿನಿಯರ್ ಹಾಗೂ ಅಧಿಕೃತ ಮೌಲ್ಯಮಾಪಕರೂ ಆಗಿರುವ ಕೃಷ್ಣ ಅವರು ಪ್ರತಿಷ್ಠಿತ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳ ಗೌII ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಖಾಸಗಿ ಸ್ನಾತಕೋತ್ತರ ಮಹಾವಿದ್ಯಾಲಯಗಳ ಸಂಘದ ಸ್ಥಾಪಕ ಕಾರ್ಯದರ್ಶಿಗಳು, ಭಾರತೀಯ ರೆಡ್ಕ್ರಾಸ್ ಸೊಸೈಟಿ, ಭಾರತ ಸೇವಾದಳ ಮುಂತಾದ ಸಂಸ್ಥೆಗಳ ಪ್ರಮುಖ ಸದಸ್ಯರೂ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಬೆಂಗಳೂರು ಕೇಂದ್ರದ ಖಜಾಂಚಿಗಳಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಾಗಿ ೨೦೦೨ರಲ್ಲಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಸಮುದಾಯ ಸೇವೆಗಾಗಿ ೧೯೯೨ರಲ್ಲಿ ರಾಜ್ಯಯುವ ಪ್ರಶಸ್ತಿ ಇವರಿಗೆ ದೊರೆತಿದೆ.
ಇದಲ್ಲದೆ ರಾಜ್ಯದ ಹಲವಾರು ಸೇವಾಪರ ಸಂಸ್ಥೆಗಳಲ್ಲಿ ಪ್ರಮುಖ ಸದಸ್ಯರಾಗಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದು ನಾಡಿನ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ.
ಇವರ ಈ ಬಹುಮುಖ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇವರ ಪ್ರತಿಭೆಯ ಕಿರೀಟಕ್ಕೆ ತೊಡಿಸಿದ ಮತ್ತೊಂದು ಗರಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ತಿರ್ತಾಡಿ ವಿಲಿಯಂ ಪಿಂಟೊ

ದೀನ ದಲಿತರ, ಕೃಷಿ ಕಾರ್ಮಿಕರ, ಬಡಜನರ ಏಳಿಗೆಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಮತ್ತು ಸಮಾಜಸೇವಾ ಕಾರ್ಯಕರ್ತರು ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅವರು.
ಕಾರ್ಕಳ ತಾಲೂಕಿನ ಶಿರ್ತಾಡಿ ಎಂಬ ಹಳ್ಳಿಯ ಬಡ ರೈತ ಕುಟುಂಬದಲ್ಲಿ ೧೯೩೯ರಲ್ಲಿ ಜನನ, ಪ್ರಾಥಮಿಕ ವಿದ್ಯಾಭ್ಯಾಸ ಶಿರ್ತಾಡಿಯಲ್ಲಿ. ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಎಲ್ಎಲ್.ಬಿ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ೨೨ ವರ್ಷ ಉಡುಪಿ ಲಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅವರು ಉಡುಪಿಯ ಜನಪ್ರಿಯ ನ್ಯಾಯವಾದಿ.
ಭೂಸುಧಾರಣೆ ಕುರಿತು ಕರ್ನಾಟಕ ಭೂ ಸುಧಾರಣೆ ಸಂಕ್ಷಿಪ್ರ ಪರಿಚಯ ‘ಜಿಲ್ಲಾ ಪಂಚಾಯತ್’ ಮಂಡಲ ಪಂಚಾಯತ್ ಕಾನೂನು ಹಾಗೂ ರಾಜಕೀಯ ಜಾಗೃತಿ, ಕರ್ನಾಟಕ ಪಂಚಾಯತ್ ರಾಜ್ ವಿಧೇಯಕ ರಾಜ್ಯ ಅಧಿನಿಯಮ ೯೩, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ಥಾಪಕ ಸದಸ್ಯರಾಗಿ ಸುಮಾರು ೨೦ ವರ್ಷ ಉಡುಪಿ ತಾಲೂಕು ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಉಡುಪಿ ಎಲ್.ಐ.ಸಿ. ಯೂನಿಯನ್ನಿನ ಗೌರವ ಸದಸ್ಯರಾಗಿ ಹೀಗೆ ಹಲವು ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.
ನೂರಾರು ಭಾಷಣಗಳ ಮೂಲಕ ಬಡಗೆಲ್ದಾರರಲ್ಲಿ ಜಾಗೃತಿ ಮೂಡಿಸಿದ ಶ್ರೀ ಶಿರ್ತಾಡಿ ವಿಲಿಯಂ ಪಿಂಟೋ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ, ಸಿಂಹ ಪ್ರಶಸ್ತಿ, ಕ್ಯಾಥೊಲಿಕ್ ಸಭಾ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಭೂ ಸುಧಾರಣಾ ಕಾನೂನು ಜಾರಿಯಾದಾಗ ನೂರಾರು ಭೂಹೀನ ರೈತರಿಗೆ ಭೂಮಿಯ ಹಕ್ಕನ್ನು ದೊರಕಿಸಿದೆ., ಗ್ರಾಮೀಣ ಜನರಿಗೆ ಕಾನೂನಿನ ನೆರವು ಹಾಗೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಣಾಭಾವದಿಂದ ಶ್ರಮಿಸುತ್ತಿರುವ ನ್ಯಾಯ ಪರವಾಗಿ ಸಮಾಜ ಸೇನಾ ಧುರೀಣ ಶ್ರೀ ಶಿರ್ತಾಡಿ ವಿಲಿಯಂ ಪಿಂಟೋ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಹರಿಕೃಷ್ಣ ಪುನರೂರು

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಹೋಟಲ್ ಉದ್ಯಮಿಯಾಗಿದ್ದು ಸಮಾಜಸೇವೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡು ಕನ್ನಡ ಪ್ರೀತಿಯೇ ಕಾರಣವಾಗಿ ಸಂಘಟನೆಯತ್ತಲೂ ಹೊರಳಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದಿಯೇರುವಲ್ಲಿನವರೆಗೆ ಹರಿಕೃಷ್ಣ ಪುನರೂರು ನಡೆದು ಬಂದ ಹಾದಿಯೇ ಒಂದು ರೋಚಕ ಹೋರಾಟದ ಕಥನ.
ಮುಲ್ಕಿ ಎಜುಕೇಷನ್ ಸೊಸೈಟಿ, ಶಾರದಾ ಎಜುಕೇಷನ್ ಸೊಸೈಟಿ, ಪಟೇಲ್ ವಾಸುದೇವರಾವ್ ಮೆಮೋರಿಯಲ್ ಟ್ರಸ್ಟ್ಗಳ ಮೂಲಕ ಬಡಮಕ್ಕಳಿಗೆ ಉಚಿತ ಶಿಕ್ಷಣ ಬಿಜಾಪುರದ ನಿರ್ಗತಿಕರ ಕುಟುಂಬದ ಮಕ್ಕಳಿಗೆ ರೂ. ಒಂದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ, ರೈತರಿಗೆ ಅನುಕೂಲವಾಗುವ ಕೃಷಿ ಮಾಹಿತಿ ನೀಡುವ ಪುಸ್ತಕಗಳ ಮುದ್ರಣ ಮತ್ತು ಉಚಿತ ಹಂಚಿಕೆ, ೧೨ ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ೮೧ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ೧೩ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂಘಟನೆ, ಅಖಿಲ ಭಾರತ ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನ ಸಂಘಟನೆ, ೧೦ ಸಾವಿರಕ್ಕಿಂತ ಅಧಿಕ ಮಂದಿಗೆ ಉಚಿತ ನೇತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ, ಕ್ಷಯ ಹಾಗೂ ಏಡ್ಸ್ ರೋಗಿಗಳಿಗಾಗಿ ಜಾಗೃತಿ ಶಿಬಿರ ಮತ್ತು ಶುಕ್ರೂಷೆಗೆ ವ್ಯವಸ್ಥೆ, ಪ್ರಕೃತಿ ವಿಕೋಪಕ್ಕೊಳಗಾಗಿ ನಿರ್ಗತಿಕರಾದ ೬೦೦ ಬಡಕುಟುಂಬಗಳಿಗೆ ಮನೆ ನಿರ್ಮಾಣ ಸಾಮಗ್ರಿಗಳ ವಿತರಣೆ ಮತ್ತು ಧನಸಹಾಯ, ಮುಲ್ಕಿಯಲ್ಲಿ ೧೦೧ ಸುಸಜ್ಜಿತ ಕಾಂಕ್ರೀಟ್ ಮನೆಗಳನ್ನು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿ ಅವುಗಳನ್ನು ಬಡವರಿಗೆ ಉಚಿತವಾಗಿ ಹಂಚಿದ್ದು ಹೀಗೆ ಪುನರೂರರ ಸಮಾಜಸೇವಾ ಚಟುವಟಿಕೆಗಳ ಪಟ್ಟಿ ನಿಲುಗಡೆಯಿಲ್ಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಧಾರ್ಮಿಕ ಸಾಂಹಿತ್ಯಕ ಸಾಂಸ್ಕೃತಿಕ ಹಾಗೂ ರಾಜಕಾರಣ ಕ್ಷೇತ್ರಗಳೊಂದಿಗೂ ಒಡನಾಡವಿರಿಸಿಕೊಂಡಿರುವ ಹರಿಕೃಷ್ಣ ಪುನರೂರರ ಇತ್ತೀಚಿನ ಸಾಧನೆಯೆಂದರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ಅಗತ್ಯವಾಗಿದ್ದ ಆರ್ಥಿಕ ದೃಢತೆಯನ್ನು ತಂದು ಕೊಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾದದ್ದು ಮತ್ತು ಅದರ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಮಹತ್ವ ಕೊಟ್ಟದ್ದು.
ಹಲವು ಸಾಧನೆಗಳನ್ನು ಬೆನ್ನಟ್ಟಿರುವ ಪುನರೂರರು ಸಮಾಜಸೇವಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ವ್ಯಕ್ತಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಿ.ಕೆ. ಆದಿಕೇಶವುಲು

ದೇಶ ಭಾಷೆಗಳ ಎಲ್ಲೆಮೀರಿ ಕೈಗಾರಿಕೋದ್ಯಮದಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು ಶ್ರೀ ಆದಿಕೇಶವುಲು ಅವರು.
ಶ್ರೀನಿವಾಸ ಟ್ರಸ್ಟ್ ಎಂಬ ಸಮಾಜೋಧಾರ್ಮಿಕ ಸಂಸ್ಥೆ-ಸ್ಥಾಪಿಸಿ ಶೈಕ್ಷಣಿಕ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ. ಕನ್ನಡ ತೆಲುಗು ಧಾರ್ಮಿಕ ಬಾಂಧವ್ಯದಲ್ಲೂ ಇವರ ಸಂಸ್ಥೆಯ ಪಾತ್ರ ಹಿರಿದು. ಕೊಲ್ಲೂರಿನಲ್ಲಿ ವೇದ ಪರಾಯಣ ಮಂಟಪ, ಶೃಂಗೇರಿಯಲ್ಲಿ ಭಾರತಿ ತೀರ್ಥ ಆನಂದ ಸಭಾಂಗಣ ಮತ್ತು ಹೊರರೋಗಿಗಳ ಚಿಕಿತ್ಸಾ ಘಟಕಗಳನ್ನು ಕಟ್ಟಿಸಿದ್ದಾರೆ. ಗುಂಡ್ಲು ಪೇಟೆಯ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ್ದಾರೆ. ಇಂಥ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕರ್ನಾಟಕ ಮತ್ತು ಆಂಧ್ರದಲ್ಲಿ ಉದಾರ ಕೊಡುಗೆ ನೀಡಿದ್ದಾರಲ್ಲದೆ ಆಂಧ್ರದಲ್ಲಿನ ಬರಪೀಡಿತ ಜನತೆಗೆ ಬೆಂಗಳೂರಿನಿಂದ ನಿಧಿ ಸಂಗ್ರಹಿಸಿ ಸಹಕರಿಸಿದ್ದಾರೆ.ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸ ತಾಲೂಕಿನ ೧೮೦ ಹಳ್ಳಿಗಳಿಗೆ ಕುಡಿಯುವ ನೀರುಪೂರೈಕೆ ಯೋಜನೆ ಕೈಗೊಂಡಿದ್ದು ಇವರ ಬಹುದೊಡ್ಡ ಸಾಧನೆಯೇ ಸರಿ. ತಮ್ಮ ವೈದೇಹಿ ಆರೋಗ್ಯ ಸಂಸ್ಥೆ ಮೂಲಕ ವರ್ಷಕ್ಕೆ ಸುಮಾರು ೫೦೦ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಹೆಗ್ಗಳಿಕೆ ಇವರದ್ದು. ಬೇರೆ ಬೇರೆ ಸಂಘ ಸಂಸ್ಥೆಗಳ ಜತೆಗೂ ಸಕ್ರಿಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಂಡಿರುವ ಮಹಾಚೇತನ ಶ್ರೀ ಡಿ.ಕೆ. ಆದಿಕೇಶವುಲು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಿ.ಎಸ್. ಪಾಟೀಲ

ಸರಳ ನಡೆನುಡಿಗೆ ಖಾದಿ ಪಾಟೀಲರೆಂದೇ ಹೆಸರಾದ ಅಪ್ಪಟ ಗಾಂಧೀವಾದಿ, ದೇಶಭಕ್ತ ಸಮಾಜ ಸೇವಕರು ಶ್ರೀ ಬಸವನಗೌಡ ಶಿವನಗೌಡ ಪಾಟೀಲ.
೧೯೩೧ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜನನ. ೧೯೫೧ರಲ್ಲಿ ಎನ್.ಸಿ.ಸಿ. ಸೇರ್ಪಡೆ, ಕರ್ನಾಟಕ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ. ೧೯೫೨ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿಜೀವನದ ಆರಂಭ. ದಿವಂಗತ ವೀರನಗೌಡ ಪಾಟೀಲ ಮತ್ತು ವೆಂಕಟೇಶ ಮಾಗಡಿ ಅವರಿಂದ ಖಾದಿ ದೀಕ್ಷೆ ಪಡೆದು ನೌಕರಿಗೆ ರಾಜೀನಾಮೆ.
ಸರ್ಕಾರಿ ನೌಕರರಾಗಿ, ಖಾದಿ ಕಾರ್ಯಕರ್ತರಾಗಿ, ಕೈಗಾರಿಕೋದ್ಯಮಿಯಾಗಿ, ಸಮಾಜ ಸೇವಕರಾಗಿ, ಪರಿಸರವಾದಿಯಾಗಿ, ನಗರ ಪಿತೃವಾಗಿ, ಮಹಾಪೌರರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಾಧಿಕಾರಿಗಳ ಹುದ್ದೆಗಳನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಖಾದಿ ಗ್ರಾಮೋದ್ಯೋಗ ಆಯೋಗ, ಮುಂಬಯಿಯ ರೋನಲ್ ಕಮಿಟಿಯ ಸದಸ್ಯರು ಹಾಗೂ ತಮ್ಮ ಸೇವಾಕ್ಷೇತ್ರದಲ್ಲಿ ಪ್ರಾಮಾಣಿಕತೆಯ ಛಾಪು ಮೂಡಿಸಿರುವ ನಿಸ್ಪೃಹ ಸಮಾಜಸೇವಕ ಶ್ರೀ ಬಿ.ಎಸ್. ಪಾಟೀಲ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ತೋಂಟೇಶ ಶೆಟ್ಟಿ

ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಸಮಾಜಸೇವಾ ಧುರೀಣರು ಶ್ರೀ ತೋಂಟೇಶ ಶೆಟ್ಟಿ ಅವರು.
ಗದಗಿನ ನೀರು ಸಮಸ್ಯೆ, ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ, ಆಸ್ಪತ್ರೆಗಳ ಸುಧಾರಣೆ, ಹೀಗೆ ಜಿಲ್ಲೆಯ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಜಾಗೃತ ನಾಗರಿಕರಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸುವ ರೀತಿಯಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ಆಡಳಿತ ಸುಧಾರಣೆ ಇವುಗಳ ಬಗ್ಗೆ ಶ್ರೀ ತೋಂಟೇಶ ಶೆಟ್ಟಿ ಸದಾ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಜನಹಿತ ಪಕ್ಷಪಾತಿ ನಾಯಕರಾಗಿ, ಪ್ರಜ್ಞಾವಂತ ನಾಗರಿಕರಾಗಿ, ಸಮಾಜ ಸೇವೆಗೆ ಅರ್ಪಣಾ ಮನೋಭಾವದಿಂದ ದುಡಿಯುತ್ತಿರುವವರು ಶ್ರೀ ತೋಂಟೇಶ ಶೆಟ್ಟಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಪ್ರೊ. ಬಿ. ಬಸವರಾಜು

ಶಿಕ್ಷಣ, ಕ್ರೀಡೆ, ಹಾಗೂ ಸಮಾಜ ಸೇವೆಗಳಲ್ಲಿ ತಮ್ಮ ಬದುಕಿನ ಸಾರ್ಥಕ್ಯ ಕಾಣುತ್ತಿರುವ ಹಿರಿಯ ಚೇತನ ಪ್ರೊ. ಬಿ. ಬಸವರಾಜು ಅವರು.
ಕರ್ನಾಟಕ ರಾಜ್ಯದ ಭಾರತೀಯ ತಾಂತ್ರಿಕ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಅದ್ಭುತ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ತಾಂತ್ರಿಕ ವಿದ್ಯಾಕ್ಷೇತ್ರದ ಸದಸ್ಯತ್ವವನ್ನು ನೀಡಿ ಗೌರವಿಸಲಾಗಿದೆ. ಭಾರತ ಟೆಕ್ಸ್ಟೈಲ್ ಅಸೋಸಿಯೇಷನ್ ರಾಜ್ಯ ಶಾಖೆಯ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸಲ್ಲಿಸಿದ ಸೇವೆಗೆ ಸ್ವರ್ಣಪದಕ ಪಡೆದವರು ಶ್ರೀ ಬಸವರಾಜು ಅವರು.
ಕಳೆದ ನಲವತ್ತೈದು ವರ್ಷಗಳಿಂದ ಟೆನ್ನಿಸ್ ಪಟುವಾಗಿರುವ ಇವರು ಅಖಿಲ ಭಾರತ ನಾಗರಿಕ ಸೇವಾ ಟೆನ್ನಿಸ್ ಟೂರಮೆಂಟಿನಲ್ಲಿ ೧೦ ವರ್ಷಗಳ ಕಾಲ ರಾಜ್ಯವನ್ನು ಪ್ರತಿನಿಧಿಸಿದ ಹೆಮ್ಮೆಯ ಕ್ರೀಡಾಪಟುವೂ ಹೌದು, ಮೂರು ದಶಕಗಳಿಗೂ ಮಿಕ್ಕು ಶಿಕ್ಷಣಾನುಭವ ಪಡೆದಿರುವ ಶ್ರೀಯುತ ಬಿ. ಬಸವರಾಜು ಅವರು ಇಂದಿಗೂ ಶಿಕ್ಷಣ, ಕ್ರೀಡೆ ಹಾಗೂ ಸಮಾಜ ಸೇವೆಗಳಲ್ಲಿ ತೊಡಗಿಕೊಂಡಿರುವ ಹಿರಿಯ ಚೇತನ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತ್ ಸ್ವಾಮಿ ಜಪಾನಂದಜ

ನಿರಂತರವಾಗಿ ವಿವಿಧ ಸಂಘ-ಸಂಸ್ಥೆಗಳನ್ನು ಕಟ್ಟಿ ಸಮಾಜ ಸೇವೆಯಲ್ಲಿ ತೊಡಗಿರುವ ದಣಿವರಿಯದ ಕರ್ಮಯೋಗಿ ಶ್ರೀಮತ್ ಸ್ವಾಮಿ ಜಪಾನಂದಜಿ.
೧೯೫೮ರಲ್ಲಿ ಜನಿಸಿದ ಸ್ವಾಮೀಜಿಯವರು ಬಾಲ್ಯದಿಂದಲೇ ಅಧ್ಯಾತ್ಮದತ್ತ ಹೊರಳಿ ಮುಂದೆ ಶ್ರೀ ರಾಮಕೃಷ್ಣ ಆಶ್ರಮದ ಪ್ರಭಾವಕ್ಕೆ ಒಳಗಾಗಿ ಸ್ವಾಮಿ ವಿವೇಕಾನಂದರ ದಿವ್ಯಜೀವನ ಸಂದೇಶಗಳನ್ನು ಸಾರುವ ಬ್ರಹ್ಮಚಾರಿಯಾಗಿ ಉಳಿದರು. ೧೯೮೬ರಲ್ಲಿ ರಾಜ್ಯವು ಭೀಕರ ಬರಗಾಲಕ್ಕೆ ತುತ್ತಾದಾಗ ತುಮಕೂರು ಜಿಲ್ಲೆಯ ಪಾವಗಡ ಸುತ್ತಮುತ್ತ ನಲವತ್ತು ಸೇವಾ ಕೇಂದ್ರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದರು. ಗ್ರಾಮೀಣ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಅಂಧತ್ವ ನಿವಾರಣಾ ಯೋಜನೆಗಳು ಇವರ ಸೇವೆಯ ಫಲಗಳು.
ಶಾಲಾ ಮಕ್ಕಳ ನೇತ್ರ ತಪಾಸಣಾ ಯೋಜನೆ, ಅನ್ನಪೂರ್ಣ ನಿಲಯ ಸ್ಥಾಪನೆ, ಆದರ್ಶ ದರ್ಶನ ಅನುಷ್ಠಾನ, ಹೀಗೆ ಅನೇಕ ಸಂಘ ಸಂಸ್ಥೆಗಳನ್ನು, ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಗ್ರಾಮೀಣ ಬಡಜನರಿಗೆ ಬೌದ್ಧಿಕ, ಆಧ್ಯಾತ್ಮಿಕ, ಶೈಕ್ಷಣಿಕ, ವೈದ್ಯಕೀಯ ಸೇವೆ ಒದಗಿಸುವ ನಿರಂತರ ಕಾಯಕದಲ್ಲಿ ತೊಡಗಿರುವ ಸರಳ ಚಿಂತಕ, ಸಮಾಜ ಸೇವಕ ಶ್ರೀಮತ್ ಸ್ವಾಮಿ ಜಪಾನಂದಜಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಗಂಗಾಧರ (ಗುರು ಟೀಕ್)

ರಾಜ್ಯದ ಸಾವಿರಾರು ಎಕರೆ ಬರಡು ಪ್ರದೇಶಗಳಲ್ಲಿ ಗಿಡಮರಗಳನ್ನು ನೆಟ್ಟು, ಹಸಿರ ಹರಿಕಾರರಾಗಿರುವವರು ಶ್ರೀ ಗಂಗಾಧರ ಅವರು.
ರೈತ ಕುಟುಂಬದ ಹಿನ್ನೆಲೆಯಲ್ಲಿ ಹಂತಹಂತವಾಗಿ ಪ್ರವರ್ಧಮಾನಕ್ಕೆ ಬಂದು ಗಿಡಮರ ಬೆಳೆಸುವ ಗುರು ಟೀಕ್ ಇನ್ವೆಸ್ಟ್ಮೆಂಟ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹುಟ್ಟು ಹಾಕಿದವರು. ಪ್ರಾರಂಭದಲ್ಲಿ ಹಾಸನ ಜಿಲ್ಲೆಯ ಟಿ. ಕೊಪ್ಪಲು ಗ್ರಾಮದಲ್ಲಿ ಟೀಕ್ ಗಿಡಗಳನ್ನು ಬೆಳೆಸಲು ಪ್ರಾರಂಭಿಸಿದ ಶ್ರೀಯುತರು ಇಂದು ೨೭ ಜಿಲ್ಲೆಗಳಲ್ಲೂ ಕಚೇರಿಗಳನ್ನು ತೆರೆದು ಮೈಸೂರು, ಮಂಡ್ಯ, ಬೆಂಗಳೂರು, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಟೀಕ್ ಪ್ಲಾಂಟೇಶನ್ ಪ್ರಾರಂಭಿಸಿದ್ದಾರೆ. ತಮ್ಮ ಸಂಸ್ಥೆಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾವಂತ/ಅವಿದ್ಯಾವಂತ ಜನಕ್ಕೆ ಉದ್ಯೋಗ ನೀಡಿದ್ದಾರೆ.
ಶಾಲಾ ಕಾಲೇಜು ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆ, ಬೃಹತ್ ರಕ್ತದಾನ ಶಿಬಿರ, ಸ್ವಚ್ಛ ಗ್ರಾಮ ಯೋಜನೆ, ಕೆರೆಹೂಳು ತೆಗೆಸುವಿಕೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕರುನಾಡ ಸಂಜೆ ಮತ್ತು ಸೂರ್ಯೋದಯ ದಿನ ಪತ್ರಿಕೆಗಳ ಸ್ಥಾಪನೆ ಇವರ ಪತ್ರಿಕೋಧ್ಯಮದ ಸಾಧನೆಗಳು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ವಾಸುದೇವಾಚಾರ್ಯ

‘ಜನಸೇವೆಯೇ ಜನಾರ್ದನ ಸೇವೆ’ ಎಂಬಂತೆ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿರುವವರು ಶ್ರೀ ಮಟ್ಟು ವಾಸುದೇವಾಚಾರ್ಯ ಅವರು.
ಜನನ ೧೯೨೭ರಲ್ಲಿ ಉಡುಪಿಗೆ ಸಮೀಪದ ಮಟ್ಟು ಎಂಬ ಪುಟ್ಟ ಗ್ರಾಮದಲ್ಲಿ, ಉಡುಪಿ ಸಂಸ್ಕೃತ ಶಾಲೆಯಲ್ಲಿ ಎಂಟು ವರ್ಷ ಸಂಸ್ಕೃತ ಅಭ್ಯಾಸ. ೩ ವರ್ಷ ವೇದಾಧ್ಯಯನ. ಕಾರ್ಕಳದ ವಿದ್ವಾನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಶ್ರೀಯುತರು ಬಳ್ಳಾರಿಗೆ ಬಂದು ಅಲ್ಲಿನ ಪುರಸಭಾ ಪ್ರೌಢಶಾಲೆಯಲ್ಲಿ ಪಂಡಿತ ವೃತ್ತಿ ಆರಂಭಿಸಿದರು. ಅಧ್ಯಾಪಕ ವೃತ್ತಿಯಲ್ಲಿ ಬಿಡುವು ದೊರೆತಾಗಲೆಲ್ಲಾ ಖಾದಿ ಪ್ರಸಾರವನ್ನು ಕೈಗೊಂಡ ಗಾಂಧೀವಾದಿ. ಇವರು ಶಿಕ್ಷಕರಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದರು. ಸರ್ವೋದಯ ಗ್ರಾಮದ ಹರಿಕಾರ, ಕ್ರಾಂತಿಯೋಗಿಯಾಗಿರುವ ಶ್ರೀ ಎಂ. ವಾಸುದೇವಾಚಾರ್ಯರು ದಾನವಾಗಿ ದೊರೆತ ೧೦೦ ಎಕರೆ ಜಾಗದಲ್ಲಿ ಗೋಶಾಲೆ, ವಸತಿ ಶಾಲೆ, ಭೋಜನ ಶಾಲೆ, ಅತಿಥಿಗೃಹ ಹೀಗೆ ಹಲವಾರು ಜನೋಪಯೋಗಿ ಕಟ್ಟಡಗಳನ್ನು ಕಟ್ಟಿಸಿ ಬಳ್ಳಾರಿ ಭಾಗದ ಸುತ್ತಮುತ್ತಲಿನ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಐದು ದಶಕಗಳಿಗೂ ಮೀರಿದ ನಿಸ್ವಾರ್ಥ ತ್ಯಾಗಗಳಿಂದ ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ನಿಸರ್ಗದ ಮಧ್ಯದಲ್ಲಿ ಸ್ಥಾಪಿಸಿರುವ ಸರ್ವೋದಯ ಗ್ರಾಮ
ಗುರುಕುಲವಾಗಿ ಪರಿವರ್ತನೆಯಾಗಿದೆ.
ಆದರ್ಶ ಶಿಕ್ಷಕ, ಸಮಾಜ ಸೇವಾ ಕಾರ್ಯಕರ್ತ, ನಿಸ್ವಾರ್ಥ ಹಾಗೂ ನಿರಾಡಂಬರ ವ್ಯಕ್ತಿ ಶ್ರೀ ಎಂ. ವಾಸುದೇವಾಚಾರ್ಯ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಗೌರಮ್ಮ ಬಸವೇಗೌಡ

ಮಲೆನಾಡ ವಲಯದ ಸಾಂಸ್ಕೃತಿಕ, ಸಾಹಿತ್ಯಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ವಲಯದಲ್ಲಿ ಚಿರಪರಿಚಿತರು ಶ್ರೀಮತಿ ಗೌರಮ್ಮ ಬಸವೇಗೌಡ ಅವರು.
ಸಕಲೇಶಪುರದ ಬೆಚ್ಚುವಳ್ಳಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ೧೯೩೩ ರಲ್ಲಿ ಜನನ, ಶಾಸಕ ಶ್ರೀ ಬಸವೇಗೌಡರ ಪತ್ನಿಯಾಗಿ ಮಹಾಮನೆಯ ಗೃಹಿಣಿಯಾಗಿ ಆತಿಥ್ಯಕ್ಕೆ ಹೆಸರಾದವರು. ಮಹಿಳಾ ಜಾಗೃತಿ ಸಂಘದ ಸ್ಥಾಪಕರು ಹಾಗೂ ಚಿಕ್ಕಮಗಳೂರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಜಿಲ್ಲಾಸ್ಪತ್ರೆ ವಿಸ್ತರಣೆ, ದೂರದರ್ಶನ ಮರುಪ್ರಸಾರ ಕೇಂದ್ರಕ್ಕೆ ಒತ್ತಡ ಹೇರಿ ಯಶಸ್ವಿಯಾದವರು. ಸಾಮೂಹಿಕ ವಿವಾಹ, ನಿರ್ಮಲ ಚಿಕ್ಕಮಗಳೂರು, ಸಂತ್ರಸ್ತರಿಗೆ ನೆರವು ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ಶ್ರೀಮತಿ ಗೌರಮ್ಮ ಬಸವೇಗೌಡ ಅವರ ವೈವಿಧ್ಯಮಯ ಸೇವೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಹಾಸನದ ಕನ್ನಡ ಸಂಘ ಮುಂತಾದ ಹಲವು ಸಂಸ್ಥೆಗಳು ‘ಮಲೆನಾಡ ರತ್ನ’ ಮುಂತಾದ ಪ್ರಶಸ್ತಿ ನೀಡಿ ಸನ್ಮಾನಿಸಿವೆ.
ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ರಚನಾತ್ಮಕ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಮಾಜಿಕ ಕಾರ್ಯಕರ್ತರು ಶ್ರೀಮತಿ ಗೌರಮ್ಮ ಬಸವೇಗೌಡ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಎಂ.ಎಂ. ಭಟ್ ಮರಕಿಣಿ

ಸ್ವಯಂ ಸ್ಪೂರ್ತಿಯಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡ ಹಿರಿಯ ಸಮಾಜ ಸೇವಾಕರ್ತ ಡಾ. ಎಂ.ಎಂ. ಭಟ್ (ಮರಕಿಣಿ).
೧೯೩೧ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಡ್ಯನಡ್ಕದಲ್ಲಿ ಜನಿಸಿದ ಶ್ರೀಯುತರು ಆಯುರ್ವೇದ ವೈದ್ಯ ಪದವಿ ಪಡೆದು ಲಂಡನ್ ಮತ್ತು ಹ್ಯಾಂಬರ್ಗ್ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ತಮ್ಮ ವೈದ್ಯಕೀಯ ಸೇವೆಗೆ ಆರಿಸಿಕೊಂಡದ್ದು ತಮ್ಮ ಹಳ್ಳಿಯನ್ನೇ. ಮುಂದೆ ತಮ್ಮ ವೈದ್ಯಸೇವೆಯನ್ನು ಸಮಾಜಸೇವೆಯಾಗಿ ಪರಿವರ್ತಿಸಿಕೊಂಡು ಚಿತ್ತಾಪುರದಲ್ಲಿ ಚಿಕಿತ್ಸಾಲಯ ಸ್ಥಾಪಿಸಿ ‘ಬಡವರ ಮನೆ ಬಾಗಿಲಿಗೆ ಧನ್ವಂತರಿ’ ಎಂಬ ಸಂಚಾರಿ ವೈದ್ಯ ಘಟಕ ಸ್ಥಾಪಿಸಿ ಬಡಜನರ ಸೇವೆಗೆ ನಿಂತವರು. ೧೯೭೨ರ ಬರಗಾಲದಲ್ಲಿ ೨೫ ಹಳ್ಳಿಗಳಲ್ಲಿ ಗಂಜಿ ಕೇಂದ್ರ ತೆರೆದು ವೃದ್ಧರು ಮತ್ತು ಮಕ್ಕಳನ್ನು ಕಾಪಾಡಿದ್ದು, ೧೯೭೭ರಲ್ಲಿ ಚಂಡಮಾರುತಕ್ಕೆ ಸಿಲುಕಿದ ಆಂಧ್ರಪ್ರದೇಶದ ಕೋನ ಸೀಮೆಯ ಮೀನುಗಾರರ ೧೩ ಹಳ್ಳಿಗಳಿಗೆ ಪುನರ್ವಸತಿ ಕಲ್ಪಿಸಲು ದುಡಿದದ್ದು, ಕಲಬುರ್ಗಿ ಜಿಲ್ಲೆಯ ಕಮಲಾಪುರ ಜಲಾನಯನ ಪ್ರದೇಶಾಭಿವೃದ್ಧಿಗೆ ದುಡಿದದ್ದು, ಹೆಗ್ಗಡದೇವನ ಕೋಟೆಯ ಗಿರಿಜನರ ಸಮಗ್ರ ವಿಕಾಸ ಹಾಗೂ ಆರೋಗ್ಯ ರಕ್ಷಣೆಗೆ ದುಡಿದದ್ದು, ಕಪ್ಪು ಹಲಗೆ ಯೋಜನೆಯಲ್ಲಿ ಕಲಬುರ್ಗಿ, ರಾಯಚೂರು, ಬೀದರ್ ಜಿಲ್ಲೆಯಲ್ಲಿ 2012 ರ ದುಡಿದದ್ದು, ಬಿಹಾರ ರಾಜ್ಯದ ಸಿವಾನ್ನಲ್ಲಿ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು, ಮುಂತಾದುವು ಇವರ ಸಮಾಜ ಸೇವೆಯ ಬಹುಮುಖ್ಯ ಘಟ್ಟಗಳು.
೩೦ವರ್ಷಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿರುವ, ಸಾಮಾಜಿಕ ವಿಕಾಸಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದಿರುವ ಅನುಭವಿ, ವೈದ್ಯ, ಸಮಾಜ ಸೇವಾಕರ್ತ ಡಾ. ಎಂ.ಎಂ. ಭಟ್ ಮರಕಿಣಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಇಂದಿರಾ ಮಾನ್ವಿಕ

ಗುಲಬರ್ಗಾ ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷರು ಮತ್ತು ಜನಪ್ರಿಯ ಸಮಾಜಸೇವಕಿ ಶ್ರೀಮತಿ ಇಂದಿರಾ ಮಾನ್ವಿಕ ಅವರು.
೧೯೪೪ರಲ್ಲಿ ಹೈದರಾಬಾದ್ ನಲ್ಲಿ ಜನನ, ವಿದ್ಯಾರ್ಥಿ ದೆಸೆಯಿಂದಲೇ ನೃತ್ಯ, ಕ್ರೀಡೆ, ಸಮಾಜ ಸೇವೆಯಲ್ಲಿ ತೊಡಗಿದವರು. ಮಹಿಳಾ ಯುವತಿ ಮಂಡಳಗಳೂ ಸೇರಿದಂತೆ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ವಿವಿಧ ಪದಾಧಿಕಾರಿ ಹುದ್ದೆಗಳ ಮೂಲಕ ಮಹಿಳೆಯರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.
ಮಕ್ಕಳ ಆರೋಗ್ಯ ರಕ್ಷಣೆ, ವರದಕ್ಷಿಣೆ ವಿರೋಧಿ ಪ್ರಜ್ಞೆ ಉಚಿತ ನೇತ್ರ ಚಿಕಿತ್ಸೆ, ವಯಸ್ಕರ ಶಿಕ್ಷಣ ಮತ್ತು ಕೊಳಚೆ ಪ್ರದೇಶದ ಮಹಿಳೆಯರಿಗೆ ಶಿಕ್ಷಣದ ಅರಿವು, ಯುವಜನ ಸೇವಾ ಇಲಾಖೆಯ ಸಹಕಾರದೊಂದಿಗೆ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಯುವಮೇಳಗಳನ್ನು ಸಂಘಟಿಸಿದ್ದಾರೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸತತವಾಗಿ ಶ್ರಮಿಸುತ್ತಿರುವ ಶ್ರೀಮತಿ ಇಂದಿರಾ ಮಾನ್ವಿಕರ್ ಅವರಿಗೆ ಹಲವು ಸನ್ಮಾನ ಮತ್ತು ಪುರಸ್ಕಾರಗಳು ಸಂದಿವೆ. ಮಹಿಳೆಯರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡು ಅದರ ಅನುಷ್ಠಾನಕ್ಕಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವವರು ಶ್ರೀಮತಿ ಇಂದಿರಾ ಮಾನ್ವಿಕ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಡೊನ್ನಾ ಫರ್ನಾಂಡಿಸ್

ಮಹಿಳಾ ಸಂಘಟನೆ ‘ವಿಮೋಚನಾ’ ದ ಸಂಸ್ಥಾಪಕರಲ್ಲಿ ಒಬ್ಬರಾಗಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿರುವವರು ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು.
ಬೆಂಗಳೂರು ಜ್ಯೋತಿನಿವಾಸ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನಿಂದ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದವರು, ಮಹಿಳೆಯರ ಹಕ್ಕುಗಳಿಗಾಗಿ ಸ್ಥಾಪಿತವಾಗಿರುವ ವಿಮೋಚನಾ ಸಂಸ್ಥೆಯ ಸಂಚಾಲಕಿಯಾಗಿರುವ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು ಮಾನವ ಹಕ್ಕುಗಳ ಪ್ರಚಾರಕರು.
ರಾಷ್ಟ್ರದ ಮೊದಲ ಮಹಿಳಾ ಪುಸ್ತಕದಂಗಡಿ ‘ಸ್ತ್ರೀಲೇಖ’ ಶ್ರೀಮತಿ ಡೊನ್ನ ಅವರ ಕನಸಿನ ಕೂಸೆ ಆಗಿದೆ. ವಿವಾಹಿತ ಮಹಿಳೆಯರ ಅಸ್ವಾಭಾವಿಕ ಸಾವುಗಳ ಬಗ್ಗೆ ವಸ್ತುನಿಷ್ಟ ಅಧ್ಯಯನ ನಡೆಸುವುದರೊಂದಿಗೆ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಮಾನವೀಯ ಹೋರಾಟಗಳಲ್ಲಿ ಸದಾ ಕೇಳಿಬರುವ ಹೆಸರು ಶ್ರೀಮತಿ ಡೊನ್ನಾ ಫರ್ನಾಂಡಿಸ್ ಅವರದು.
ಮಹಿಳಾಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಅವರ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿರುವ ಸಮಾಜ ಸೇವಾ ಕಾರ್ಯಕರ್ತೆ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಘನಶ್ಯಾಂ ತುಳಜನಸಾ ಭಾಂಡಗೆ

ಅಂಗವಿಕಲತೆ ಸಾಧನೆಯ ಬದುಕಿಗೆ ಅಡ್ಡಿಯಾಗದೆಂದು ತೋರಿಸಿಕೊಟ್ಟಿರುವ ಹಾಗೂ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವವರು ಶ್ರೀ ಘನಶ್ಯಾಂ ತುಳಜನಸಾ ಭಾಂಡಗೆ ಅವರು.
ಬಾಗಲಕೋಟೆಯ ಶ್ರೀ ಘನಶ್ಯಾಂ ಭಾಂಡಗೆ ಅವರ ಜನನ ೧೯೬೬ರಲ್ಲಿ. ಪೋಲಿಯೋದಿಂದ ತಮ್ಮೆರಡು ಕಾಲು ಕಳೆದುಕೊಂಡಾಗ ಶ್ರೀಯುತರಿಗೆ ಮೂರು ವರ್ಷ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುವಾಗ ಓದಿನೊಂದಿಗೆ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಶ್ರೀ ಘನಶ್ಯಾಂ
ಭಾಂಡಗೆ ಅವರು.
ಅಂಗವಿಕಲತೆಯ ಸಮಸ್ಯೆ ಕಾಡಬಾರದೆಂದು ಹಲವಾರು ಊರುಗಳನ್ನು ತಮ್ಮ ದ್ವಿಚಕ್ರ ಸೈಕಲ್ ನೊಂದಿಗೆ ಸುತ್ತಿ ಅಂಗವಿಕಲರನ್ನು ಸಂಘಟಿಸಿದ ಕೀರ್ತಿಗೆ ಪಾತ್ರರು. ೨೨೧೮ ಅಂಗವಿಕಲರಿಗೆ ಮಾಸಾಶನ, ಕೊಡಿಸಿದ್ದಾರೆ. ಪ್ರತಿ ವರ್ಷ ಅಂಗವಿಕಲರ ದಿನಾಚರಣೆಯ ಅರ್ಥಪೂರ್ಣ ಆಚರಣೆ, ಗ್ರಾಮಾಂತರ ಜನರಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ೨೦ ಸಾವಿರ ಅಂಗವಿಕಲರಿಗೆ ಉಚಿತ ಬಸ್ ಪಾಸ್ ದೊರಕಿಸಿಕೊಟ್ಟಿದ್ದಾರೆ. ಅಲ್ಲದೆ ಅಂಗವಿಕಲರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುವುದು, ಅಂಗವಿಕಲರ ಸಾಮೂಹಿಕ ವಿವಾಹ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು ಘನಶ್ಯಾಂ ಭಾಂಡಗೆ ಅವರು.
ರಾಜ್ಯ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ೧೮ ಚಿನ್ನ, ೯ ಬೆಳ್ಳಿ, ೬ ಕಂಚು ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಚಿನ್ನ, ೮ ಬೆಳ್ಳಿ, ೨ ಕಂಚನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ೨ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೆ ಸಿಡ್ನಿ ಕ್ರೀಡಾಕೂಟದಲ್ಲಿ ೧ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ರತ್ನಮ್ಮ ಹೆಗ್ಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಮನ ಗೆದ್ದು ಎಲ್ಲರಿಗೂ ದೊಡ್ಡಮ್ಮನಾಗಿರುವವರು ಧರ್ಮಸ್ಥಳದ ಶ್ರೀಮತಿ ರತ್ನಮ್ಮ ಹೆಗ್ಗಡೆ ಅವರು.

೧೯೨೯ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಮನಂಗಡಿಯಲ್ಲಿ ಸಂಕಷ್ಟಶೆಟ್ಟಿ ಮತ್ತು ಅನಂತಮತಿಯವರ ತುಂಬು ಸಂಸಾರದಲ್ಲಿ ಹುಟ್ಟಿ ಬೆಳೆದ ರತ್ನಮ್ಮನವರಿಗೆ ತಾಯಿಯ ಸದ್ಗುಣಗಳೆಲ್ಲವೂ ಬಳುವಳಿಯಾಗಿ ಬಂದವು. ಬೆಳ್ತಂಗಡಿಯ ೮೧ ಹಳ್ಳಿಗಳನ್ನು ದತ್ತು ಸ್ವೀಕರಿಸುವ ಮೂಲಕ ಅವುಗಳ ಸರ್ವಾಂಗೀಣ ಅಭಿವೃದ್ಧಿಯ ಕೀರ್ತಿ ಇವರದು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಸ್ಥಾಪನೆಗೆ ಕಾರಣಕರ್ತರು. ಶ್ರೀ ಬಾಹುಬಲಿ ಸೇವಾ ಸಮಿತಿ ಮಹಿಳಾ ವಿಭಾಗ, ಶ್ರೀ ಬಾಹುಬಲಿ ಶ್ರಾವಿಕಾಶ್ರಮಗಳನ್ನು ಸ್ಥಾಪಿಸಿ ಮಹಿಳೆಯರು ಸ್ವತಂತ್ರ ಉದ್ಯೋಗ ನಡೆಸುವಂತಹ ತರಬೇತಿ ನೀಡುತ್ತಿದ್ದಾರೆ.

ಸಮಾಜಸೇವೆಯ ಜೊತೆ ಜೊತೆಗೆ ಬರಹದ ಹವ್ಯಾಸವನ್ನು ಇರಿಸಿಕೊಂಡಿದ್ದಾರೆ. ನೂರಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಶಿಖರ್ಜಿಯ ಶಿಖರಗಳಲ್ಲಿ ಮತ್ತು ಮಗಳಿಗೊಂದು ಪತ್ರ ರತ್ನಮ್ಮನವರ ಎರಡು ಸ್ವತಂತ್ರ ಕೃತಿಗಳು.

ಆದರ್ಶ ಗೃಹಿಣಿಯಾಗಿ, ಪ್ರೀತಿಯ ಮಡದಿಯಾಗಿ, ಮಮತೆಯ ತಾಯಿಯಾಗಿ, ವಾತ್ಸಲ್ಯಮಯಿ ಅತ್ತೆಯಾಗಿ, ಸಮಾಜ ಸೇವೆಯ ದೊಡ್ಡಮ್ಮನಾಗಿ ಬಹುಮುಖ ವ್ಯಕ್ತಿತ್ವದ ‘ರತ್ನ’ ರತ್ನಮ್ಮನವರನ್ನು ಅರಸಿ ಬಂದ ಸನ್ಮಾನ-ಪ್ರಶಸ್ತಿಗಳು ಹಲವಾರು.

ಶ್ರೀಮತಿ ರತ್ನಮ್ಮ ಹೆಗ್ಗಡೆ ಅವರು ಬಡಬಗ್ಗರ, ದೀನದಲಿತರ, ಶೋಷಿತರ ಏಳೆಗಾಗಿ ಇಂದಿಗೂ ಶ್ರಮಿಸುತ್ತಿರುವ ಅಪರೂಪದ ಹಿರಿಯ ಚೇತನ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಎನ್ ಟಿ ಜಿತೂರಿ

೧೯೦೯ರಲ್ಲಿ ಹುಬ್ಬಳ್ಳಿಯಲ್ಲಿ ಬಡ ನೇಕಾರರ ಮನೆತನದಲ್ಲಿ ಜನನ. ಶ್ರೀಯುತರದು ಸಾತ್ವಿಕ ವ್ಯಕ್ತಿತ್ವದ ಶಿಸ್ತಿನ ಸಿಪಾಯಿಯ

ಬದುಕು.

ವಿಭಿನ್ನ ಹಾಗೂ ಶಿಸ್ತಿನ ವ್ಯಕ್ತಿತ್ವದ ಶ್ರೀ ನಾಗೋಸಾ ತುಳಜಾಸಾ ಜಿತೂರಿ ಸಾರ್ವಜನಿಕ ಹಿತಾಸಕ್ತಿ, ಧಾರ್ಮಿಕ ಚಟುವಟಿಕೆ, ಯುವಶಕ್ತಿ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವಯೋಮಾನ ಸಹಜವಾದ ಆಯಾಸವನ್ನು ಲೆಕ್ಕಿಸದೆ ಮುಕ್ತ ಮನಸ್ಸಿನಿಂದ, ಹುಮ್ಮಸ್ಸಿನಿಂದ ದುಡಿಯುವ ತರುಣ. ಇಂಟರ್‌ಮೀಡಿಯಟ್ ಓದುತ್ತಿದ್ದಾಗಲೇ ಶಿಕ್ಷಣಕ್ಕೆ ಶರಣು ಹೊಡೆದು ೧೯೩೧ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿ ಬೆಳಗಾವಿ ಜಿಲ್ಲೆಯ ಸಬ್‌ ಇನ್ಸ್‌ಪೆಕ್ಟರ್ ಸೇವೆ. ನಂತರ ೧೯೩೮ರಲ್ಲಿ ವಿಜಾಪುರದಲ್ಲಿ ಹೋಂ ಇನ್ಸ್‌ಪೆಕ್ಟರ್ ಆಗಿ ಹಾಗೂ ಅಸಹಕಾರ ಚಳವಳಿ ಕಾಲದಲ್ಲಿ ಸಿಐಡಿ ವಿಭಾಗದಲ್ಲಿ ಸೇವೆ. ಸಾಂಗ್ಲಿ ಮತ್ತು ಪುಣೆಯ ಸೆಂಟ್ರಲ್ ಬ್ಯೂರೊ, ಗದಗ, ಹೈದ್ರಾಬಾದ್, ಬೀದರ್‌ಗಳಲ್ಲಿಯೂ ಡಿವೈಎಸ್‌ಪಿಯಾಗಿ ಸಲ್ಲಿಸಿರುವ ಸೇವೆ ಅಪಾರ.

ದಕ್ಷತೆಗೆ, ಪ್ರಾಮಾಣಿಕತೆಗೆ, ಕೋಮು ಸೌಹಾರ್ದತೆಗೆ, ದೇಶಭಕ್ತಿಗೆ ಹಾಗೂ ಮಾನವತಾ ಪ್ರೀತಿಗೆ ಮತ್ತೊಂದು ಹೆಸರಾಗಿರುವ ಶ್ರೀ ಜಿತೂರಿಯವರು ೧೯೬೮ರಲ್ಲಿ ಎಸ್‌.ಪಿ. ಆಗಿ ಸೇವೆ ಸಲ್ಲಿಸಿ ನಿವೃತ್ತರಾಗುವ ಮೊದಲು ಪೊಲೀಸ್ ಮೆಡಲ್ ಪಡೆದದ್ದೂ ಗಮನಾರ್ಹ. ಸೇವೆಯಿಂದ ನಿವೃತ್ತರಾದರೂ ಸದಾ ಕ್ರಿಯಾಶೀಲ ಸ್ವಭಾವದ ಶ್ರೀಯುತರು ಧಾರವಾಡ ಜಿಲ್ಲಾ ನಿವೃತ್ತ ಗೆಜೆಟೆಡ್ ನೌಕರರ ಸಂಸ್ಥಾಪಕ ಅಧ್ಯಕ್ಷರಾಗಿ, ಚಿನ್ಮಯ ಮಿಷನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಕ್ಷತ್ರಿಯ ಸಮಾಜದ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಲಕ್ಷ್ಮಣಸಾ ಖೋಡೆ ಹಾಸ್ಟೆಲ್‌ನ ಅಧ್ಯಕ್ಷರಾಗಿ ನವದೆಹಲಿಯ ಸರ್ವೆಂಟ್ಸ್ ಆಫ್ ಗಾಡ್ ಸಂಸ್ಥೆಯ ಸಹಸದಸ್ಯರಾಗಿ ಹೀಗೆ ಇನ್ನೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಕಾಲಿಕ ಮೌಲ್ಯಾಧಾರಿತ ಜೀವನಶ್ರದ್ಧೆಯ ಪ್ರತೀಕವಾಗಿರುವ ಸಮಾಜ ಸೇವಾ ನಿರತರು ಶ್ರೀ ನಾಗೋಸಾ ತುಳಜಾಸಾ ಜಿತೂರಿ ಅವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಿ. ಮಾದೇಗೌಡ

ಜನಸೇವೆಯೇ ಜನಾರ್ದನ ಸೇವೆಯೆಂದು ನಂಬಿ ನಡೆದ ವಿರಳ ರಾಜಕಾರಣಿ ಡಿ. ಮಾದೇಗೌಡ, ಸಾವಿರಾರು ಜನರಿಗೆ ಸೂರು ಕಲ್ಪಿಸಿದ ಜನನಾಯಕ, ಮಾಜಿ ಶಾಸಕರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೯೪೨ರಲ್ಲಿ ಜನಿಸಿದ ಮಾದೇಗೌಡರು ಬಿ.ಎ, ಬಿ.ಎಲ್‌. ಪದವೀಧರರು, ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ರಾಜಕಾರಣಿ, ಸಮಾಜಸೇವಕರು, ಜನಪರ ಕಾಳಜಿ, ಸಮಾಜಮುಖಿ ಚಿಂತನೆ ಮಾದೇಗೌಡರ ವಿಶೇಷತೆ, ಮೈಸೂರಿನ ಸಿಐಟಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೮ ಬಡಾವಣೆಗಳನ್ನು ನಿರ್ಮಿಸಿ ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಸೂರು ಕಲ್ಪಿಸುವ ಮೂಲಕ ಮನೆಮನೆ ಮಾದೇಗೌಡರೆಂದು ಜನಜನಿತರಾದವರು, ಆಶಾಮಂದಿರ ವಸತಿ ಯೋಜನೆ ಅನುಷ್ಠಾನಕ್ಕಾಗಿ ಹುಡ್ಕೋ ಸಂಸ್ಥೆಯಿಂದ ಪುರಸ್ಕಾರಕ್ಕೂ ಪಾತ್ರರಾದವರು. ಕುಂಬಾರಕೊಪ್ಪಲು ವಾರ್ಡ್‌ನಲ್ಲಿ ನಿರ್ಮಲನಗರ ಯೋಜನೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿದ ಕೀರ್ತಿ ಅವರದ್ದು. ಶೂನ್ಯ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ವಾರ್ಡ್‌ ಆಗಲು ಕಾರಣೀಕರ್ತರು. ಭಾರತ ಸೇವಾದಳ, ಯೂಥ್ ಹಾಸ್ಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ, ನಗರಾಭಿವೃದ್ಧಿ ವಿಶ್ವಸ್ತ ಮಂಡಳಿಯ ಅಧ್ಯಕ್ಷರು, ಮೇಲ್ಮನೆಯ ಸದಸ್ಯರಾಗಿ ಅನನ್ಯ ಸೇವೆ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ರೂವಾರಿ, ಬಡಾವಣೆಗಳಲ್ಲಿ ಸಸ್ಯಾರಾಧನೆ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಿರತರಾಗಿರುವ ಪರಿಸರ ಪ್ರೇಮಿ, ದಣಿವರಿಯದ ಸಮಾಜಸೇವಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಕರಿಯಪ್ಪ

ಗ್ರಾಮೀಣರಿಗೆ ವೈದ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯವನ್ನೇ ಬದುಕಿನ ಕಾಯಕವಾಗಿಸಿಕೊಂಡವರು ಸಿ. ಕರಿಯಪ್ಪ, ಸಾವಿರಾರು ಬಡವರ ಕಣ್ಣಲ್ಲಿ ಬೆಳಕು ಮೂಡಿಸಿದ ಮಾದರಿ ಸಮಾಜಸೇವಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನರಸೀಪುರದ ಭೂಗಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಜನಿಸಿದ ಕರಿಯಪ್ಪ ಓದಿದ್ದು ಪಿಯುಸಿ, ಕಣ್ಣಿನ ಕುರಿತ ಡಿಪ್ಲೋಮಾ, ಬಾಲ್ಯದಲ್ಲೇ ಆರ್‌ಎಸ್‌ಎಸ್ ಸಖ್ಯ ಶಿಕ್ಷವರ್ಗಾ ಪಡೆದು ಕಾರ್ಯವಾಹಕನಾಗಿಯೂ ದುಡಿದ ವೇಳೆಯೇ ಸೇವೆಗೆ ಬದುಕು ಮೀಸಲಿಡಬೇಕೆಂಬ ದಿವ್ಯನಿರ್ಧಾರ, ಅಯೋಧ್ಯೆಯ ರಥಯಾತ್ರೆಯಲ್ಲಿ ಭಾಗಿಯಾದ ಮೇಲೆ ಬದುಕೇ ಸೇವಾಕ್ಷೇತ್ರ, ಆರೋಗ್ಯ ಇಲಾಖೆಯ ನೇತ್ರ ಪರೀಕ್ಷಕನಾದ ಬಳಿಕ ಬಡಜನರ ಕಣ್ಣಿನ ಆರೋಗ್ಯರಕ್ಷಣೆಗಾಗಿ ಸಂಕಲ್ಪ, ಹಳ್ಳಿಗಳಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಖರಗಳ ಆಯೋಜನೆ, ಉಚಿತ ಕನ್ನಡಕಗಳನ್ನು ಕೊಡಿಸುವ ಕಾರ್ಯಕ್ಕೆ ಮುಂದಡಿ. ವಾರಕ್ಕೆ ೨೦ ಜನರಿಗೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಜತನದಿಂದ ಮಾಡಿಕೊಂಡು ಬಂದ ಕಾಯಕ, ಮೂರು ದಶಕಗಳಲ್ಲಿ ೧೦ ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೫ ಸಾವಿರ ಬಡವರಿಗೆ ಉಚಿತ ಕನ್ನಡಕಗಳನ್ನು ದೊರೆಯುವಂತೆ ಮಾಡಿದ ಸಾರ್ಥಕತೆ, ವೃತ್ತಿಯಿಂದ ನಿವೃತ್ತರಾದರೂ ವೈದ್ಯಕೀಯ ಸೇವೆ ತಲುಪಿಸುವ ಕಾರ್ಯದಲ್ಲಿ ಅನವರತ ನಿರತ ಅನುಕರಣೀಯ ಸಮಾಜಮುಖಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಜಿ. ಶ್ರೀನಿವಾಸನ್

ತಳಸಮುದಾಯದ ಏಳ್ಗೆಗೆ ಶ್ರಮಿಸಿ ಉದ್ಯಮಶೀಲತೆಗೆ ನೆರವಾದ ವಿಶಿಷ್ಟ ಸಮಾಜಸೇವಕ, ಸಿ.ಜಿ.ಶ್ರೀನಿವಾಸನ್, ಬಹುಮುಖಿ ಚಿಂತಕ, ದಲಿತೋದ್ಧಾರದ ಕನಸುಗಾರ, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಜನಿಸಿದ ಶ್ರೀನಿವಾಸನ್ ಅಕ್ಷರದಿಂದಲೇ ಅರಳಿದವರು. ಸ್ನಾತಕೋತ್ತರ ಪದವಿ, ಎಲ್‌ಎಲ್‌ಬಿ ಕಲಿತವರು. ವಿದ್ಯಾರ್ಥಿ ಜೀವನದಲ್ಲೇ ನಾಯಕರಾಗಿ ಸೇವೆ. ಹೊಟ್ಟೆಪಾಡಿಗೆ ಕೆಎಸ್‌ಎಸ್‌ಐಡಿಸಿಗೆ ಸೇರ್ಪಡೆಗೊಂಡು ಮುಖ್ಯ ವ್ಯವಸ್ಥಾಪಕ ಹುದ್ದೆಗೇರಿದರೂ ತುಳಿತಕ್ಕೊಳಗಾದ ದಲಿತೋದ್ಧಾರದ ಕನಸಿನ ಸಾಕಾರಕ್ಕಾಗಿ ಸ್ವಯಂನಿವೃತ್ತಿ, ದಲಿತರಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಸತತ ಪರಿಶ್ರಮ, ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ, ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯದರ್ಶಿಯಾಗಿ ಅಹರ್ನಿಶಿ ಸೇವೆ. ದಲಿತ ಕೈಗಾರಿಕೋದ್ಯಮಿಗಳಿಗಾಗಿಯೇ ವಿಶೇಷ ಕೈಗಾರಿಕಾ ನೀತಿ ಜಾರಿಗೆ ಬರುವಲ್ಲಿ ಸಾಫಲ್ಯ ಕಂಡ ಹೋರಾಟ, ಸ್ವಯಂ ಕೈಗಾರಿಕೋದ್ಯಮಿ, ಸಮಾಜಸೇವಕ ಹಾಗೂ ವ್ಯವಸಾಯಗಾರರಾಗಿ ಬಹುಮುಖಿ ಕ್ರಿಯಾಶೀಲತೆ, ದಲಿತರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಸಾರ್ಥಕತೆಯ ಸಿ.ಜಿ. ಶ್ರೀನಿವಾಸನ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಸಮಸಮಾಜ ನಿರ್ಮಾಣದ ಆಶಯಗಳ ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಮುಖಿ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಬೈಸರ್ ರೆಹಮಾನ್

ಬೀದರಿನ ಜನಪ್ರಿಯ ಸಮಾಜಸೇವಾಕರ್ತರೂ, ಸದಾ ಚಟುವಟಿಕೆಯ ಪತ್ರಕರ್ತರೂ ಆಗಿ ಹೆಸರಾದವರು ಖೈಸರ್ ರೆಹಮಾನ್ ಅವರು.
ಐವತ್ತೆಂಟು ವರ್ಷ ವಯಸ್ಸಿನ ಖೈಸರ್ ರೆಹಮಾನ್ ಅವರು ಪ್ರಾರಂಭದಿಂದಲೂ ಬೀದರಿನ ಸಾರ್ವಜನಿಕ ಹಿತಾಸಕ್ತಿಗೆ ದುಡಿದವರು. ಬೀದರ್‌ನ ಸ್ಥಳೀಯ ಪತ್ರಿಕೆಯಾದ ಗವಾನ್ ಉರ್ದು ಮತ್ತು ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಲೇ, ಬೀದರ್‌ ನಗರ ಸಭೆಯ ಸದಸ್ಯರೂ, ವಕ್ಸ್ ಸಮಿತಿಯ ಸದಸ್ಯರೂ, ಸೈಕಲ್ ರಿಕ್ಷಾ – ಆಟೋರಿಕ್ಷಾ ಸಂಘದ ಅಧ್ಯಕ್ಷರೂ ಕಾಂಗ್ರೆಸ್‌ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರೂ ಆಗಿ ಶ್ರಮಿಸುತ್ತಿದ್ದಾರೆ. ಬೀದರ್ ಜಿಲ್ಲೆಯ ಹದಿನೈದು ಅಂಶ ಕಾರ್ಯಕ್ರಮ ಸಮಿತಿ ಸದಸ್ಯರಾಗಿ ಬೀದರಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬೀದರಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಈದ್ದಾ ನಿರ್ವಹಣಾ ಸಮಿತಿ, ಬೀದರಿನ ಸಾರ್ವಜನಿಕರ ಸಲಹಾ ಮತ್ತು ಶಾಂತಿ ಸಮಿತಿಗಳ ಸದಸ್ಯರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಬೀದರಿನ ಸಾರ್ವಜನಿಕರ ಸಂಘಟಣಾ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀಯುತರು ಶಿಕ್ಷಣ ಕ್ಷೇತ್ರದ ಔನ್ನತ್ಯಕ್ಕೆ ಗಮನ ಹರಿಸಿ, ದಾರುಲ್ ಉಲೂಮ್ ಮಹಮೂದ್ ಗವಾನ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರೂ, ಶಾಂತಿ ವರ್ಧಕ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ. ಬೀದರಿನ ಸಣ್ಣ ಪುಟ್ಟ ವ್ಯಾಪಾರಿಗಳ ಹಿತಾಸಕ್ತಿಗೆ ದುಡಿಯುತ್ತ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹೈದರಾಬಾದಿನ ‘ಸಿಯಾಸತ್’ ಉರ್ದು ಪತ್ರಿಕೆಯ ಪ್ರತಿನಿಧಿ ಕರ್ನಾಟಕ ರಾಜ್ಯ ಉರ್ದು ಪತ್ರಕರ್ತರ ಸಂಘದ ಅಧ್ಯಕ್ಷ ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವ ನಿರ್ಭೀತ ಲೇಖನಕ್ಕೆ ಹೆಸರಾದವರು.
ಸಮಾಜಸೇವಕ, ಪತ್ರಕರ್ತ, ಕ್ರೀಡಾ ಪ್ರಚಾರಕರಾಗಿ ಜಾತ್ಯಾತೀತತೆಯನ್ನು ಧೈಯವಾಗಿಟ್ಟುಕೊಂಡು ಶ್ರಮಿಸುತ್ತಿರುವ ಪತ್ರಿಕೋದ್ಯಮಿ ಶ್ರೀ ಖೈಸರ್ ರೆಹಮಾನ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಮೋಹಿನಿ ಎ. ನಾಯಕ್

ಅಂಗವಿಕಲ ಬಡ ಮಕ್ಕಳು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿಯಬಾರದೆಂದು ಅವರಿಗೆ ಉಚಿತ ಶಿಕ್ಷಣ, ವೃತ್ತಿ ತರಬೇತಿ ನೀಡಿ ಜೀವನೋಪಾಯ ಕಲ್ಪಿಸುತ್ತಿರುವವರು ಶ್ರೀಮತಿ ಮೋಹಿನಿ ಎ. ನಾಯಕ್ ಅವರು.
೧೯೪೩ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ಶ್ರೀಮತಿ ಮೋಹಿನಿ ಅವರು ಪ್ರಾರಂಭದಿಂದಲೂ ಸಮಾಜಸೇವೆಗೆ ಒಲಿದವರು. ವಿವಿಧ ಸೇವಾ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ನಂತರ ೧೯೮೧ರಲ್ಲಿ ಅಂಗವಿಕಲ ಬಡ ಮಕ್ಕಳ ದುಸ್ಥಿತಿಗೆ ಮನಕರಗಿ ಮಂಗಳೂರು ಬಳಿಯ ವಾಮಂಜೂರಿನಲ್ಲಿ ಮಂಗಳಜ್ಯೋತಿ ಶಾಲೆಯನ್ನು ಸ್ಥಾಪಿಸಿದರು. ಮೊದಲಿಗೆ ಕೇವಲ ಆರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆ ಇಂದು ೫೬೬ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಉಚಿತ ಶಿಕ್ಷಣ, ಸಮವಸ್ತ್ರ, ಪುಸ್ತಕ ಹಾಗೂ ಆಹಾರ ಈ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಅಂಗವಿಕಲರಿಗೆ ಅಗತ್ಯವಾದ ಸಹಾಯ ಸಾಧನಗಳನ್ನೂ ನೀಡಲಾಗುತ್ತಿದೆ. ಅದರಿಂದ ಅಂಗವಿಕಲರ ದಿನ ನಿತ್ಯದ ಬದುಕು ಸರಾಗವಾಗುತ್ತಿದೆ. ಹತ್ತನೇ ತರಗತಿಯವರೆಗೆ ಕಲಿತ ನಂತರ ಅವರಿಗೆ ಬೆರಳಚ್ಚು, ಮರಗೆಲಸ, ಕಂಪ್ಯೂಟರ್, ಕುಶಲ ಕಲೆ ಇತ್ಯಾದಿಗಳಲ್ಲಿ ವೃತ್ತಿ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕಲಿತ ಮಕ್ಕಳು ಇಂದು ದೊಡ್ಡವರಾಗಿ ಸ್ವಂತ ಉದ್ಯೋಗ ನಡೆಸುತ್ತ, ಉತ್ತಮ ಹುದ್ದೆ ಅಲಂಕರಿಸಿ ಸ್ವಾವಲಂಬಿಗಳಾಗಿದ್ದಾರೆ.
ಶ್ರೀಮತಿ ಮೋಹಿನಿ ನಾಯಕ್ ಅವರ ನಿಸ್ವಾರ್ಥ ಸೇವೆಗೆ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಬಂಟರ ಸಂಘದ ಅತ್ಯುತ್ತಮ ಸಮಾಜ ಸೇವಾಕರ್ತೆ ಪ್ರಶಸ್ತಿ, ಮಾನವ ಹೊಣೆಗಾರಿಕೆಯ ಮೌಲ್ಯವರಿತ ಮಹಿಳೆ ಎಂದು ಅಮೆರಿಕದ ಟೆಕ್ಸಾಸ್‌ನ ಅಂತರರಾಷ್ಟ್ರೀಯ ಓರಿಯಂಟೇಶನ್ ಸೆಂಟರ್‌ನ ಪ್ರಶಸ್ತಿ, ಅಂತರರಾಷ್ಟ್ರೀಯ ಬಂಟ ಮಹಿಳೆಯರ ಸಮಾವೇಶದ ಮಿಲೇನಿಯಂ ಶ್ರೀ ೨೦೦೦ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಾಕರ್ತೆ ಶ್ರೀಮತಿ ಮೋಹಿನಿ ಎ. ನಾಯಕ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಎಂ.ಜಿ. ಅಬ್ದುಲ್ ರೆಹಮಾನ್

ರೋಗಿಗಳಿಗೆ ಜೀವದ್ರವ್ಯವಾಗಿರುವ ರಕ್ತಪೂರೈಕೆಯ ಆದರ್ಶ ಕಾಯಕದಲ್ಲಿ ನಿರತರಾಗಿರುವ ಸಮಾಜಸೇವಕ ಶ್ರೀ ಅಬ್ದುಲ್ ರೆಹಮಾನ್ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯಲ್ಲಿ ೧೯೪೪ರಲ್ಲಿ ಕೃಷಿಕ ಕುಟುಂಬದಲ್ಲಿ ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳನ್ನು ಉಪ್ಪಿನಂಗಡಿಯಲ್ಲಿ ಪಡೆದು ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣದ ನಂತರ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ.
ಪ್ರಸಿದ್ಧ ಸಾಮಾಜಿಕ ಧುರೀಣ ದಿವಂಗತ ಮಹಮ್ಮದ್ ಕಮಾಲ್‌ರವರ ಸ್ಮರಣಾರ್ಥ ೧೯೯೨ ರಲ್ಲಿ ನ್ಯಾಯವಾದಿ ಶ್ರೀ ಎಂ.ಬಿ. ಅಬ್ದುಲ್ ರೆಹಮಾನ್‌ರವರು ಸ್ಥಾಪಿಸಿದ ಬ್ಲಡ್‌ ಬೈನ್ ಬಯೋಮ್ ಬ್ಯಾಂಕಿಂಗ್ ಟ್ರಸ್ಟ್ ೧೯೯೫, ೯೬, ೯೭, ೯೮, ೯೯ ರಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರಗಳಲ್ಲಿ ಅನುಕ್ರಮವಾಗಿ ೨೭೭, ೩೨೪, ೫೧೩, ೧೮೦, ೧೦೦ ಯೂನಿಟ್‌ಗಳಷ್ಟು ರಕ್ತದ ಸಂಗ್ರಹಿಸಿದ್ದಲ್ಲದೆ, ವಿವಿಧ ಆಸ್ಪತ್ರೆಗಳಲ್ಲಿ ರಕ್ತ ಅಗತ್ಯವಿದ್ದ ಸುಮಾರು ೬೦೦೦ಕ್ಕೂ ಅಧಿಕ ರೋಗಿಗಳಿಗೆ ರಕ್ತ ಒದಗಿಸಿ ದಾಖಲೆ ನಿರ್ಮಿಸಿದೆ. ಈ ರಕ್ತದಾನ ಅಭಿಯಾನದ ರೂವಾರಿ ಶ್ರೀ ಅಬ್ದುಲ್ ರೆಹಮಾನ್ ಅವರು.
ರಕ್ತದಾನಕ್ಕಾಗಿ ಜಾಥಾ, ಸಭೆ, ಭಾಷಣ, ಕಲಾಮೇಳ, ಸ್ಪರ್ಧೆ ಹೀಗೆ ವಿವಿಧ ವಿಧಾನಗಳ ಮೂಲಕ ಪ್ರೇರೇಪಿಸುತ್ತಿರುವ ಶ್ರೀಯುತರ ಕಾರ್ಯವನ್ನು ವಿವಿಧ ಕ್ಷೇತ್ರಗಳಲ್ಲಿನ ಅನೇಕ ಮೇಧಾವಿಗಳು ಪ್ರಶಂಸಿಸಿದ್ದಾರೆ.
ರಕ್ತದಾನಿಗಳ ಡೈರೆಕ್ಟರಿ ಪ್ರಕಟಣೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು, ವಿದ್ಯಾರ್ಥಿವೇತನ ನೀಡಿಕೆ, ಬ್ಯಾಂಕ್ ವಿಜೇತರಿಗೆ ಪುರಸ್ಕಾರ ಇವೇ ಮೊದಲಾದ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್, ಕೆನರಾ ಬ್ಯಾಂಕ್‌ ಹಾಗೂ ವಿಜಯಾ ಬ್ಯಾಂಕಿನ ಕಾನೂನು ಸಲಹೆಗಾರರಾಗಿ, ನೇತ್ರಾವತಿ ಗ್ರಾಮೀಣ ಬ್ಯಾಂಕಿನ ನಿರ್ದೇಶಕರಾಗಿ, ಜಿಲ್ಲಾ ವಕ್ಸ್ ಮಂಡಳಿ ಉಪಾಧ್ಯಕ್ಷರಾಗಿ ಹೀಗೆ ವಿವಿಧ ಪದಗಳಲ್ಲಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವವರು ಶ್ರೀ ಎಂ.ಬಿ. ಅಬ್ದುಲ್ ರೆಹಮಾನ್ ಅವರು.