Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜಾ

ಬ್ಯಾಂಡ್ ಮಾಸ್ಟರ್ ಎಂದೇ ಖ್ಯಾತರಾದ ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜ ಅವರು, ಕಳೆದ ಐವತ್ತು ವರ್ಷಗಳಿಂದ ಬ್ರಾಸ್ ಬಾಂಡ್ ಕಲೆಯಲ್ಲಿ ಸಕ್ರಿಯರಾಗಿದ್ದಾರೆ. ತನ್ನ ಬದುಕಿನ ಬಹುಭಾಗವನ್ನು ವಾದ್ಯ ಸಂಗೀತಕ್ಕಾಗಿಯೇ ವಿನಿಯೋಗಿಸಿದ ಇವರು, ಮೈಸೂರು ಅರಮನೆ ಬ್ಯಾಂಡ್ನಲ್ಲೂ ನುಡಿಸಿದ್ದಾರೆ. ‘ಸಾನಿಧ್ಯ’ ಎನ್ನುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ಮಕ್ಕಳನ್ನು ತರಬೇತುಗೊಳಿಸಿ, ಕಲಾವಿದರಾಗುವಂತೆ ಮಾಡಿದ್ದಾರೆ. ‘ಹ್ಯಾರಿಸ್ ಸೆಂಚುರಿ ಸಿಲ್ವ ಬ್ಯಾಂಡ್’ ಸ್ಥಾಪಿಸಿ ೧೦೦೦ ಕ್ಕೂ ಹೆಚ್ಚು ಸಂಗೀತಗಾರರನ್ನು ಬ್ಯಾಂಡ್ ನುಡಿಸುವಲ್ಲಿ ತರಬೇತುಗೊಳಿಸಿದ್ದಾರೆ. ನಶಿಸಿ ಹೋಗುತ್ತಿರುವ ಬ್ರಾಸ್ ಬ್ಯಾಂಡ್ ಕಲೆಯನ್ನು ಪುನರುಜ್ಜಿವನಗೊಳಿಸಲು ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ. ಸಿ. ತ್ಯಾಗರಾಜ್

ಕೋಪಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದವರಾದ ಶ್ರೀ.ಸಿ. ತ್ಯಾಗರಾಜ್ ಅವರು, ಖ್ಯಾತ ನಾದಸ್ವರ ವಿದ್ವಾಂಸರು. ಕಳೆದ ೫೦ ವರ್ಷಗಳಿಂದ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ನಾದಸ್ವರ ಕಚೇರಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮ ಮತ್ತು ಹಂಪಿ ಮಹೋತ್ಸವಗಳಲ್ಲಿ ಹಾಗೂ ಜಾನಪದ ಜಾತ್ರೆಗಳಲ್ಲಿ ಜೊತೆಗೆ ನಾಡಿನ ಹೆಸರಾಂತ ದೇಗುಲಗಳಲ್ಲಿ ನಾದಸ್ವರ ಸೇವೆ ಸಲ್ಲಿಸಿರುವುದು ಇವರ ಹೆಗ್ಗಳಿಕೆ. ಸುಮಾರು ೭೦೦ ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ನಾದಸ್ವರ ಕಲೆಯನ್ನು ಕಲಿಸುತ್ತ ಕಲಾಸೇವೆ ಮುಂದುವರೆಸಿದ್ದಾರೆ.
ಇವರ ಪ್ರತಿಭೆಗೆ ಪುರಸ್ಕಾರವಾಗಿ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸವಿತಾ ಕಲಾವಿದರ ಸಮಾವೇಶದಲ್ಲಿ ಕಲಾರತ್ನ ಪ್ರಶಸ್ತಿ, ದಸರಾ ಮಹೋತ್ಸವ ಪ್ರಶಸ್ತಿ, ಹಂಪಿ ಉತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ದುರುಗಪ್ಪ ಚನ್ನದಾಸರ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಮೆಟಿ ಗ್ರಾಮದ ಶ್ರೀ ದುರ್ಗಪ್ಪ ಚನ್ನದಾಸರ, ಮನೆ ಮನೆಗೆ ತೆರಳಿ, ಪಾರಂಪರಿಕ ಕಲಾಪ್ರದರ್ಶನ ಹಾಗೂ ತತ್ವಪದ ಗಾಯನ ಮಾಡುತ್ತ ಅಲೆಮಾರಿ ಬದುಕು ನಡೆಸುತ್ತ ಬರುತ್ತಿದ್ದಾರೆ. ಕಲಾಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡ ಇವರು ದಿಮ್ಮಡಿ, ಗೆಜ್ಜೆ, ತಂಬೂರಿ, ಏಕತಾರಿ ವಾದನ ನುಡಿಸುತ್ತ ದಾನಧರ್ಮ ಸ್ವೀಕಾರ ಮಾಡುತ್ತ ಜಾನಪದ ಕಲಾಪ್ರಕಾರವನ್ನು ಜೀವಂತಗೊಳಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ತತ್ವಪದ ಹಾಗೂ ದಾಸರ ಪದಗಳ ಗಾಯನಕ್ಕೆ ಮನಸೋತು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಸನ್ಮಾನಿಸಿವೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ. ಲಿಂಗಪ್ಪ ಶೇರಿಗಾರ ಕಟೀಲು

ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಪ್ರತಿಭೆ ಕೆ. ಲಿಂಗಪ್ಪ ಶೇರಿಗಾರ. ನಾಡು ಕಂಡ ಶ್ರೇಷ್ಠ ನಾಗಸ್ವರ ವಾದಕರು, ಪಕ್ಕವಾದ್ಯ ಪ್ರವೀಣರು. ಹೆಮ್ಮೆಯ ಸಾಧಕರು ಕೂಡ.
ಲಿಂಗಪ್ಪ ಶೇರಿಗಾರ ತಂದೆ ವಾಸು ಶೇರಿಗಾರ ಸುಪ್ರಸಿದ್ಧ ನಾಗಸ್ವರ ವಾದಕರು, ಬಾಲ್ಯದಲ್ಲೇ ಸ್ವರಾಭ್ಯಾಸ, ತಂದೆಯೇ ಮೊದಲ ಗುರು, ವಿದ್ವಾನ್ ಕೃಷ್ಣಭಟ್ರಿಂದ ಕೊಳಲು ವಾದನ, ಮಧುರೈನ ಎಂ.ಪಿ.ಆರ್. ಅಯ್ಯಾ ಸ್ವಾಮಿ ಅವರಿಂದ ನಾಗಸ್ವರ ಕಲಾದೀಕ್ಷೆ, ಒಲಿದ ನಾದವೇ ಬದುಕು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಲಾಜೀವನದ ಆರಂಭ, ನಲವತ್ತು ವರ್ಷಗಳಿಂದಲೂ ದೇವಳದಲ್ಲಿ ಸ್ವರಸೇವೆ. ವಾರ್ಷಿಕ ಉತ್ಸವ, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ನಾಗಸ್ವರ ಕಛೇರಿ ಮೂಲಕ ದೇವಿಕೃಪೆಗೆ ಪಾತ್ರರು. ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿ ಪ್ರಮುಖ ದೇವಾಲಯಗಳಲ್ಲೂ ಕಛೇರಿ ನಡೆಸಿಕೊಟ್ಟ ಹಿರಿಮೆ. ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ನಾಗಸ್ವರ ವಿಶಾರದ ಮುಂತಾದ ಪ್ರಶಸ್ತಿಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಗಿರಿಜಾ ನಾರಾಯಣ

ಸುಗಮ ಸಂಗೀತ ಕ್ಷೇತ್ರದ ಅನನ್ಯ ಸಾಧಕಿ ಗಿರಿಜಾ ನಾರಾಯಣ. ಸಂಗೀತಕ್ಕೇ ಬದುಕು ಮೀಸಲಿಟ್ಟ ಗಾಯಕಿ, ಸ್ವರಸಂಯೋಜಕಿ, ಸಂಘಟಕಿ ಹಾಗೂ ಸಮಾಜಸೇವಕಿ,
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಗಿರಿಜಾ ನಾರಾಯಣ ಅವರದ್ದು ಸಂಗೀತದ ಕುಟುಂಬ. ಅಪ್ಪ-ಅಮ್ಮ ಇಬ್ಬರೂ ಸಂಗೀತಜ್ಞರೇ. ಸಹಜವಾಗಿ ಬಾಲ್ಯದಲ್ಲೇ ಸ್ವರಾಭ್ಯಾಸ, ವಿದ್ವಾನ್ ಗುರುರಾಜಾಚಾರ್, ವೆಂಕಟರಾಂ, ಎಸ್. ಸೋಮಸುಂದರಂ, ಪಾರ್ವತಿಸುತ, ಶ್ಯಾಮಲಾ ಜಿ. ಭಾವೆ ಮುಂತಾದವರಿಗೆ ಸಂಗೀತಪಾಠದ ಯೋಗ. ೧೯೮೩ರಲ್ಲೇ ಆಕಾಶವಾಣಿ ‘ಬಿ ಹೈ’ ಗ್ರೇಡ್ ಕಲಾವಿದೆ. ಸುಗಮಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ಕವಿಕಾವ್ಯಕ್ಕೆ ಸ್ವರಧಾರೆ. ಜನಪದ, ದೇವರನಾಮ, ವಚನಗಳ ಗಾಯನದಲ್ಲೂ ಸುಪ್ರಸಿದ್ಧಿ. ೧೦೦೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ಗಾನಸುಧೆ. ‘ಸ್ವರ’ ಸಂಸ್ಥೆ ಮುಖೇನ ನೂರಾರು ಶಿಷ್ಯರ ರೂಪಿಸಿದ ಗುರು. ‘ಸ್ವರಾಲಯ’ ಸಂಸ್ಥೆ ಸ್ಥಾಪಿಸಿ ೨೦೦ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ೨೦೦ ಗೀತೆಗಳಿಗೆ ಸ್ವರಸಂಯೋಜನೆ. ದೇಶಾದ್ಯಂತ ಸಂಗೀತ ಕಾರ್ಯಕ್ರಮ, ನೊಂದವರಿಗೆ ನೆರವಾದ ಸಮಾಜಸೇವಕಿ. ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಗೌರವಗಳಿಂದ ಸಂಪನ್ನವಾದ ಕಲಾಬದುಕು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಬಿ.ವಿ. ಶ್ರೀನಿವಾಸ್

ಸುಗಮ ಸಂಗೀತ ಕ್ಷೇತ್ರದಲ್ಲಿ ಸ್ವರಸಂಯೋಜಕ ಬಿ.ವಿ. ಶ್ರೀನಿವಾಸ್ ಅವರದ್ದು ಅಚ್ಚಳಿಯದ ಹೆಸರು, ನಾಲ್ಕು ದಶಕಕ್ಕೂ ಮೀರಿ ಸಂಗೀತ ಸೇವಾನಿರತ ಸಾಧಕರು.
ಹಾರ್ಮೋನಿಯಂ ವಿದ್ವಾನ್ ವೆಂಕಟೇಶಮೂರ್ತಿ ಹಾಗೂ ಚೆಲುವರಂಗಮ್ಮರ ಸುಪುತ್ರರಾದ ಬಿ.ವಿ. ಶ್ರೀನಿವಾಸ್ ಬಾಲ್ಯದಲ್ಲೇ ಸಂಗೀತಾಸಕ್ತರು, ಭಜನೆಮನೆಯೇ ಸ್ವರಪ್ರೇಮ ಪಲ್ಲವಿಸಿದ ಮಂದಿರ. ತಂದೆಯಿಂದ ಹಾರ್ಮೋನಿಯಂ ಪಾಠ. ಚೆಲುವೀರಯ್ಯ ಹಾಗೂ ವಿದ್ವಾಂಸರಾದ ಬಾಲಕೃಷ್ಣಪ್ಪರಿಂದ ಕರ್ನಾಟಕ ಸಂಗೀತದಲ್ಲಿ ವಯಲಿನ್ ಅಭ್ಯಾಸ, ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಯವರಿಂದ ಸಿತಾರ್ ವಾದನ ಕಲಿಕೆ. ಕವಿಗೀತೆಗಳಿಗೆ ರಾಗ ಸಂಯೋಜಿಸುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ೪೨ ವರ್ಷಗಳಿಂದ ಅಹರ್ನಿಶಿ ಸೇವೆ. ೨೦೦೦ಕ್ಕೂ ಅಧಿಕ ಗೀತೆಗಳಿಗೆ ಸಂಗೀತ ನಿರ್ದೇಶನ, ಅಪರಂಜಿ ಹಾಗೂ ಭಾಗ್ಯದ ಬೆಳೆಗಾರ ಜನಪ್ರಿಯ ಧ್ವನಿಸುರುಳಿಗಳು. ನಾಡಿನ ಬಹುತೇಕ ಗಾಯಕರೆಲ್ಲರಿಗೂ ಹಾರ್ಮೋನಿಯಂ-ಕೀಬೋರ್ಡ್ ಸಹಕಾರ, ಅಮೆರಿಕಾ, ಯೂರೋಪ್ ದೇಶಗಳಲ್ಲೂ ಪಕ್ಕವಾದ್ಯ ಸೇವೆ. ಕರ್ನಾಟಕ ಕಲಾಶ್ರೀ ಸೇರಿದಂತೆ ನಾಡಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಂದ ಗೌರವಿಸಲ್ಪಟ್ಟ ಹಿರಿಮೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಅನಂತ ತೇರದಾಳ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಅನಂತ ತೇರದಾಳ ಪ್ರಮುಖರು. ಆರು ದಶಕಕ್ಕೂ ಮೀರಿ ಸಂಗೀತಸೇವಾ ನಿರತ ಗಾಯಕಮಣಿ.
ಬೆಳಗಾವಿ ಜಿಲ್ಲೆಯ ಗಡಿನಾಡ ಪ್ರತಿಭೆ ಅನಂತ ತೇರದಾಳರ ಸ್ವರಪ್ರೇಮಕ್ಕೆ ಅಮ್ಮ ಹಾಡುತ್ತಿದ್ದ ದೇವರನಾಮವೇ ಸ್ಫೂರ್ತಿ. ಏಳನೇ ವಯಸ್ಸಿಗೆ ಹಾರ್ಮೋನಿಯಂ ವಾದಕ ಬಾಬುರಾವ್ ಬೋರಕರರಲ್ಲಿ ಸಂಗೀತಾಭ್ಯಾಸ. ಬಿ.ಡಿ. ಜೋಷ್ಯ ಅವರಿಂದ ಗ್ವಾಲಿಯರ್ ಘರಾಣೆ ತರಬೇತಿ. ಸಂಗೀತ ಮಾಂತ್ರಿಕ ಪಂಡಿತ್ ಭೀಮಸೇನ ಜೋಷಿ ಅವರ ಶಿಷ್ಯಗಾರಿಕೆಯ ಭಾಗ್ಯ ಒಲಿದದ್ದು ಪೂರ್ವಜನ್ಮದ ಸುಕೃತ. ‘ಸಂಗೀತ ವಿಶಾರದ’ ಪದವಿ ಬಳಿಕ ಸಂಗೀತವೇ ಬದುಕು-ಉಸಿರು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾಗಿ ಬಡ್ತಿ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದುಬೈ, ಅಬುದಾಬಿ, ಶಾರ್ಜಾ ಸೇರಿದಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಸಭೆಗಳಲ್ಲಿ ಸ್ವರಸೇವೆ. ರಸಿಕರ ಮನಗೆದ್ದ ಹಾಡುಗಾರಿಕೆ. ಕರ್ನಾಟಕ ಕಲಾಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ಅಂಬಯ್ಯ ನುಲಿ

ಅಂಬಯ್ಯ ನುಲಿ ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕ್ಷೇತ್ರದ ಮೇರುಸದೃಶ ಪ್ರತಿಭೆ, ಪಂಡಿತ್ ಅಂಬಯ್ಯ ನುಲಿ, ಅಪ್ಪಟ ಸಂಗೀತಗಾರ, ಸ್ವರಸಂಯೋಜಕ, ತೀರ್ಪುಗಾರರು.
ರಾಯಚೂರು ಜಿಲ್ಲೆ, ಹೂಸೂರಿನಲ್ಲಿ ೧೯೫೯ರಲ್ಲಿ ಜನಿಸಿದ ಅಂಬಯ್ಯರ ಪರಿವಾರವೇ ಸಂಗೀತಶಾಲೆ. ನಾದೊಲುಮೆ ಹುಟ್ಟಿನಿಂದಲೇ ಬಂದ ಬಳುವಳಿ. ಶಾಲಾಶಿಕ್ಷಕನಾಗಿ ವೃತ್ತಿ ಬದುಕು ಸಂಪನ್ನ. ಶರಣರ ವಚನ, ದಾಸರ ಕೀರ್ತನೆ, ಭಾವಗೀತೆಗಳ ಗಾಯನದಲ್ಲಿ ಸದಾ ತನ್ಮಯರು. ಅದ್ಭುತ ಕಂಠಸಿರಿಯ ಅನನ್ಯ ಗಾಯಕರು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು. ಗಾಯನವೇ ಜೀವ-ಭಾವ. ೧೮೫ಕ್ಕೂ ಅಧಿಕ ಧ್ವನಿಸುರುಳಿ, ೧೫೦೦ಕ್ಕೂ ಹೆಚ್ಚು ಗೀತೆಗಳಿಗೆ ಸ್ವರಸಂಯೋಜನೆ, ನಾಟಕಗಳಿಗೆ ಗೀತರಚನೆ-ಸ್ವರಧಾರೆ, ಸುಪ್ರಸಿದ್ಧ ಟಿ.ವಿ. ಕಾರ್ಯಕ್ರಮಗಳ ತೀರ್ಪುಗಾರಿಕೆ, ಅಮೆರಿಕಾದ ಅಕ್ಕ ಸಮ್ಮೇಳನ, ದುಬೈನ ಉತ್ಸವ, ವಿಶ್ವಕನ್ನಡ ಸಮ್ಮೇಳನ, ದಸರಾ ಉತ್ಸವ, ಹಂಪಿ ಉತ್ಸವ ಮುಂತಾದ ದೇಶ-ವಿದೇಶಗಳ ಸಂಗೀತೋತ್ಸವಗಳಲ್ಲಿ ಹಾಡುಗಾರಿಕೆಯ ಹೆಚ್ಚುಗಾರಿಕೆ. ಸ್ವರಮಂದಾರ, ಗಾನಕೋಗಿಲೆ ಮುಂತಾದ ಹತ್ತಾರು ಪ್ರಶಸ್ತಿ-ಬಿರುದಾವಳಿಗಳಿಂದ ಅಲಂಕೃತರು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವೀರೇಶ ಕಿತ್ತೂರು

ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಯಾಗಿ ಸಂಗೀತಾಭ್ಯಾಸ ಮಾಡಿದ ವೀರೇಶ ಕಿತ್ತೂರು ಕರ್ನಾಟಕ ಸರ್ಕಾರದ ವಿದ್ವತ್ ಹಾಗೂ ಗಾಯನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಆಕಾಶವಾಣಿಯ ಕಲಾವಿದರಾಗಿರುವ ವೀರೇಶ ಅವರು ಶೀಶೈಲ, ಸೊಲ್ಲಾಪುರ ಸೇರಿದಂತೆ ನೂರಾರು ಸಂಗೀತ ಸಮ್ಮೇಳನಗಳಲ್ಲಿ ಕಚೇರಿಗಳನ್ನು ನೀಡಿದ್ದು, ಇವರ ನೂರಕ್ಕೂ ಹೆಚ್ಚು ಧ್ವನಿಸುರುಳಿಗಳು ಜನಪ್ರಿಯವಾಗಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ರಂಭಾಪುರಿ ಧಾರ್ಮಿಕ ಸಮ್ಮೇಳನದ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ರಾಜೇಂದ್ರಸಿಂಗ್ ಪವಾರ್

ಹಾರ್ಮೋನಿಯಂ ವಾದ್ಯವನ್ನು ರಾಷ್ಟ್ರಮಟ್ಟದಲ್ಲಿಯೂ ಬೆಳಗುವಂತೆ ಮಾಡಿದ ಕೆಲವೇ ವಿದ್ವಾಂಸರಲ್ಲಿ ಬೀದರ್ ಜಿಲ್ಲೆಯ ರಾಜೇಂದ್ರ ಸಿಂಗ್ ಪವಾರ್ ಅವರು ಒಬ್ಬರು.

ನಾಲ್ಕು ದಶಕಗಳಿಂದ ಹಾರ್ಮೋನಿಯಂ ವಾದಕರಾಗಿದ್ದು, ಸಂಗೀತ ಸೇವೆ ಮಾಡುತ್ತಿರುವ ಇವರು ಬೀದರಿನಲ್ಲಿ ಸಂಗೀತ ಕಲಾಮಂಡಳವನ್ನು ಸ್ಥಾಪಿಸಿ ಭಕ್ತಿಗೀತೆ ಹಾಗು ಭಜನಾ ಹಾಡುಗಳಿಗೆ ಹೊಸ ಬಗೆಯ ಸಂಗೀತ ಸಂಯೋಜನೆ ಮಾಡಿ ಕೇಳುಗರ ಮನಗೆದ್ದಿದ್ದಾರೆ.

ಪವಾರ್ ಅವರ ಹಾರ್ಮೋನಿಯಂ ಸೋಲೋ ಪ್ರಯೋಗ ರಾಷ್ಟ್ರ ಹಾಗೂ ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಲ್ಲಿ ಜನಪ್ರಿಯವಾಗಿದ್ದು, ಅದಕ್ಕಾಗಿ ಇವರಿಗೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಪ್ರಭು ಧೋತ್ರೆ

ಆರನೆಯ ವಯಸ್ಸಿಗೆ ಸಂಗೀತಾಭ್ಯಾಸ ಆರಂಭಿಸಿದ ರಾಜಪ್ರಭು ಧೋತ್ರೆ, ಪಂಡಿತ್ ಬಿ.ವಿ.ಕಡಲಾಸ್ಕರ ಬುವಾ ಇವರಿಂದ ಶಾಸ್ತ್ರೀಯಸಂಗೀತ ಶಿಕ್ಷಣ ಪಡೆದರು. ಕರ್ನಾಟಕದ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಮೊದಲ ಬ್ಯಾಂಕ್ ಪಡೆದ ರಾಜಪ್ರಭು ಹಿಂದೂಸ್ಥಾನಿ ಸಂಗೀತದಲ್ಲಿ ಪರಿಣತರಾದರೂ ಸುಗಮ ಸಂಗೀತದಲ್ಲಿ ನೈಪುಣ್ಯತೆ ಪಡೆದವರು.

ವಚನ ಗಾಯನ, ಭಕ್ತಿಗೀತೆ, ರಂಗಗೀತೆಗಳನ್ನು ಹಾಡಬಲ್ಲ ಇವರು ಹಿಂದೂಸ್ಥಾನಿ ಹಾಗೂ ಸುಗಮ ಸಂಗೀತದಲ್ಲಿ ಆಕಾಶವಾಣಿಯ ಎ ಶೇಣಿ ಕಲಾವಿದರು.

ದೇಶದ ಹಲವು ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಕಚೇರಿ ನಡೆಸಿರುವ ರಾಜಪ್ರಭು ಅವರಿಗೆ ಮಹಾರಾಷ್ಟ್ರ ನೇಕಾರ ಸಮಾಜದ ಪುರಸ್ಕಾರ, ಬೆಳಗಾವಿಯ ಪ್ರಸಿದ್ಧ ಗಣೇಶೋತ್ಸವದ ಗೌರವಗಳು ಲಭಿಸಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿದುಷಿ ಲಲಿತಾ ಜೆ ರಾವ್

ಆಡ್ರಾ ಘರಾಣೆಯ ಪ್ರಮುಖ ಗಾಯಕಿ ಎಂದು ಹೆಸರಾಗಿರುವ ಲಲಿತ್ ಜೆ ರಾವ್ ಅವರು ಸಂಗೀತ ಕಲಿಕೆ ನಡೆಸಿದ್ದು ಪದ್ಮಭೂಷಣ ಪುರಸ್ಕತ ಪಂಡಿತ್ ಖಾದೀಮ್ ಹುಸೇನ್ ಖಾನ್, ದಿನಕರ ಕಾಯ್ಕಿಣಿ ಹಾಗೂ ಪಂ.ರಾಮರಾವ್ ನಾಯಕ್ ಅವರುಗಳ ಬಳಿ.

ಆರು ದಶಕಗಳಿಂದ ದೇಶದ ಪ್ರಮುಖ ಸಂಗೀತ ಉತ್ಸವಗಳಲ್ಲಿ ಪಾಲುಗೊಳ್ಳುತ್ತಿರುವ ಲಲಿತ್ .ಜೆ.ರಾವ್ ಅವರು ಗ್ವಾಲಿಯರ್‌ನ ತಾನಸೇನ್ ಸಮಾರೋಹ್, ದೆಹಲಿಯ ವಿಷ್ಣು ದಿಗಂಬರ ಜಯಂತಿ ಉತ್ಸವ, ಮಥುರಾದ ಗುಣಿದಾಸ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತ ಸಮ್ಮೇಳನ ಸೇರಿದಂತೆ ದೇಶ ವಿದೇಶಗಳಲ್ಲಿ ೧೫೦೦ಕ್ಕೂ ಹೆಚ್ಚು ಕಚೇರಿಗಳನ್ನು ನೀಡಿದ ಹಿರಿಮೆ ಇವರದು.

ಇಂಜಿನಿಯರಿಂಗ್ ಪದವೀಧರರಾದ ಇವರು ಹಿಂದೂಸ್ಥಾನಿ ಸಂಗೀತಕ್ಕಾಗಿ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದು ಆಕಾಶವಾಣಿ ಹಾಗೂ ದೂರದರ್ಶನದ ಎ ಶ್ರೇಣಿ ಕಲಾವಿದರಾಗಿದ್ದಾರೆ.

ಕೇರಳ ಸರ್ಕಾರದ ನಿಶಾಗಂಧಿ ಪ್ರಶಸ್ತಿ, ಗುಜರಾತ್ ಸರ್ಕಾರದ ತಾನಾ ರೀರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಗೌರವಗಳಿಗೆ ಪಾತ್ರರಾಗಿರುವ ಇವರು ಭಾರತೀಯ ಸಾಂಪ್ರದಾಯಿಕ ಹಿಂದೂಸ್ಥಾನಿ ಸಂಗೀತ ಭಂಡಾರದ ಕಾರ್ಯಕ್ರಮದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀನಿವಾಸ ಉಡುಪ

ಸುಗಮ ಸಂಗೀತ ಕ್ಷೇತ್ರವನ್ನೇ ಸಾಧನಾ ಕ್ಷೇತ್ರವಾಗಿಸಿಕೊಂಡವರಲ್ಲಿ ನಗರ ಶ್ರೀನಿವಾಸ ಉಡುಪ ಸಹ ಪ್ರಮುಖರು. ಗಾಯಕರು, ಸಂಗೀತ ಶಿಕ್ಷಕರು ಮತ್ತು ಸಂಘಟಕರಾಗಿ ಅವರದ್ದು ಅನುಕರಣೀಯ ಸಾಧನೆ.
ಶಿವಮೊಗ್ಗ ಜಿಲ್ಲೆಯ ನಗರ ಶ್ರೀನಿವಾಸ ಉಡುಪರ ಹುಟ್ಟೂರು. ನಾಲ್ಕು ತಲೆಮಾರಿನಿಂದಲೂ ಸಂಗೀತದ ಹಿನ್ನೆಲೆಯುಳ್ಳ ಕುಟುಂಬ. ಹುಟ್ಟಿನಿಂದಲೇ ಸ್ವರಸಂಸ್ಕಾರ. ವಿದ್ವಾನ್ ಬಾಲಕೃಷ್ಣರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಪಂಡಿತ್ ಶಿವರಾಜ್ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತದ ಕಲಿಕೆ. ಶಿವಮೊಗ್ಗ ಸುಬ್ಬಣ್ಣರ ಸಖ್ಯದಿಂದ ಸುಗಮ ಸಂಗೀತದತ್ತ ಒಲವು, ಮೈಸೂರು ಅನಂತಸ್ವಾಮಿ ಬಳಿ ಶಿಷ್ಯತ್ವ-ಗಾಯನ, ೧೯೬೭ರಲ್ಲಿ ಆಕಾಶವಾಣಿ ಕಲಾವಿದರಾಗಿ ಮುನ್ನೆಲೆಗೆ ಐದು ದಶಕದಿಂದಲೂ ನಿರಂತರ ಸಂಗೀತ ಕಾರ್ಯಕ್ರಮಗಳ ಮೂಲಕ ಶೋತೃಗಳಿಗೆ ಸಂಗೀತದ ರಸದೌತಣ ಉಣಬಡಿಸಿದ ಹಿರಿಮೆ, ದೇಶಾದ್ಯಂತ ಹಾಗೂ ಹಲವು ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ. ಸಾಧನಾ ಸಂಗೀತ ಶಾಲೆಯಿಂದ ಆರಂಭವಾದ ‘ಗುರುತ್ವ’ ಇಂದಿಗೂ ಅವ್ಯಾಹತ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವ ಖಜಾಂಚಿ-ಕಾರ್ಯದರ್ಶಿಯಾಗಿ ಸಂಘಟನೆಯಲ್ಲೂ ಛಾಪು.ಕರ್ನಾಟಕ ಕಲಾಶ್ರೀ, ಗಾನಗಂಧರ್ವ ಮತ್ತಿತರ ಪ್ರಶಸ್ತಿಗಳಿಂದ ಭೂಷಿತರಾದ ಶಾರದಾಪುತ್ರರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮುದ್ದುಮೋಹನ್

ಸಾರ್ವಜನಿಕ ಆಡಳಿತ ಮತ್ತು ಸಂಗೀತ ಕ್ಷೇತ್ರದಲ್ಲಿ ಸಮನ್ವಯ ಸಾಧಿಸಿದ ವಿಶಿಷ್ಟ ಸಾಧಕರು ಡಾ.ಮುದ್ದುಮೋಹನ್, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ, ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆಗೈದ ಬಹುಮುಖಿ.
ರಾಯಚೂರು ಜಿಲ್ಲೆಯ ಮಸ್ಕಿ ಮುದ್ದುಮೋಹನ್‌ ಹುಟ್ಟೂರು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಿಕಾಂ ಪದವಿಯಲ್ಲಿ ೨ನೇ ಬ್ಯಾಂಕ್ ಪಡೆದವರು. ಕೆ.ಎ.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಪಡೆದು ನಂತರ ಐಎಎಸ್ ಹುದ್ದೆಗೆ ಪದೋನ್ನತಿಗೊಂಡು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಪರ ಕಾರ್ಯಕೈಗೊಂಡವರು, ಪದ್ಮಭೂಷಣ ಡಾ. ಬಸವರಾಜ ರಾಜಗುರು, ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ ಮತ್ತು ಚಂದ್ರಶೇಖರ ಗವಾಯಿಗಳಿಂದ ಹಿಂದೂಸ್ತಾನಿ ಸಂಗೀತ ಕಲಿತವರು. ದಾಸವಾಣಿ, ಶರಣರ ವಚನ ಗಾಯನ ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರು. ರಂಗದಿಗ್ಗಜ ಏಣಗಿ ಬಾಳಪ್ಪರಿಂದ ತರಬೇತುಗೊಂಡು ನಾಟ್ಯಗೀತೆಗಳನ್ನು ಹಾಡಿದವರು, ಭಾವಗೀತೆಗಳನ್ನು ಹಾಡುವಲ್ಲಿ ಹೆಸರುವಾಸಿ, ಆಕಾಶವಾಣಿಯ ಬಿ’ಹೈ’ ಗ್ರೇಡ್ ಕಲಾವಿದರು, ದೂರದರ್ಶನ ಕಾರ್ಯಕ್ರಮಗಳ ಮೂಲಕ ಚಿರಪರಿಚಿತರು. ರಾಜ್ಯದ ಎಲ್ಲಾ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ, ದೇಶ- ವಿದೇಶಗಳಲ್ಲಿ ಗಾನಸುಧೆ ಹರಿಸಿದ, ನೂರಾರು ಸಿಡಿಗಳಿಗೆ ಹಾಡಿರುವ ಮುದ್ದು ಮೋಹನ್ ತಮ್ಮ ಬಹುಶ್ರುತ ಸಾಧನೆಗೆ ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ಪಂಚಾಕ್ಷರ ಗವಾಯಿ, ಕೆಂಪೇಗೌಡ ಪ್ರಶಸ್ತಿಗಳಿಂದ ಭೂಷಿತರು. ೧೯೯೨ರಲ್ಲಿ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಸಿವಿಲ್ ಸರ್ವಿಸಸ್ ಸಾಂಸ್ಕೃತಿಕ ಸ್ಪರ್ಧೆಗಲ್ಲಿ ಭಾರತ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಗೌರವಿಸಲ್ಪಟ್ಟಿದ್ದಾರೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ನಾಗವಲ್ಲಿ ನಾಗರಾಜ್

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರ ಕಂಡ ವಿಶಿಷ್ಟ ಕಲಾವಿದೆ ವಿದ್ವಾನ್ ನಾಗವಲ್ಲಿ ನಾಗರಾಜ್, ತ್ರಿಸ್ಥಾಯಿಯಲ್ಲೂ ಸಂಚರಿಸಬಲ್ಲ ಅಪರೂಪದ ಕಂಠವುಳ್ಳ ಶಾರದಾಪುತ್ರಿ.
ಪ್ರಸಿದ್ಧ ವಾಗ್ಗೇಯಕಾರರಾದ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳ ಮೊಮ್ಮಗಳು ನಾಗವಲ್ಲಿ ನಾಗರಾಜ್. ತಂದೆಯೂ ಸಂಗೀತಜ್ಞ ಬಾಲ್ಯದಲ್ಲೇ ಸ್ವರಸಂಸ್ಕಾರ, ತಂದೆಯೇ ಮೊದಲ ಗುರು, ಪ್ರಸಿದ್ಧ ಪಿಟೀಲು ವಿದ್ವಾಂಸರಾದ ಅನೂರು ರಾಮಕೃಷ್ಣ ಅವರಲ್ಲಿ ಉನ್ನತಸ್ತರದ ವ್ಯಾಸಂಗ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್‌ಡಿ ಪಡೆದವರು, ಬೆಂಗಳೂರು ವಿ.ವಿ ಯಲ್ಲಿ ಪ್ರಾಧ್ಯಾಪಕಿಯಾಗಿ ಮೂರು ದಶಕಗಳಿಂದಲೂ ನಿರಂತರ ಸೇವೆ. ಏಕಕಾಲಕ್ಕೆ ವಿದ್ವಾಂಸರು, ಜನಸಾಮಾನ್ಯರನ್ನು ರಂಜಿಸಬಲ್ಲ ವಿಶಿಷ್ಟ ಗಾಯನ ಶೈಲಿವುಳ್ಳ ಆಕಾಶವಾಣಿಯ ಎ ಟಾಪ್ ಕಲಾವಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತಸುಧೆ ಹರಿಸಿ ಸುವಿಖ್ಯಾತರಾದವರು. ಸಂಗೀತ ಚೂಡಾಮಣಿ, ಸಂಗೀತ ವಿದ್ಯಾವಾರಿಧಿ, ಗಾನಕಲಾಶ್ರೀ ಮುಂತಾದ ಬಿರುದುಗಳಿಂದ ಭೂಷಿತರು. ರಾಗವಲ್ಲಿ ರಸಾಲ ಹೆಸರಿನಡಿ ಅರವತ್ತು ಕೃತಿಗಳನ್ನು ಹೊರತಂದಿರುವ ಹೆಗ್ಗಳಿಕೆ. ಕನ್ನಡದ ಮಹಾಕಾವ್ಯಗಳಾದ ಕುಮಾರವ್ಯಾಸ ಭಾರತ, ಹರಿಶ್ಚಂದ್ರಕಾವ್ಯ ದಾಸಸಾಹಿತ್ಯ ಮತ್ತು ವಚನಸಾಹಿತ್ಯವನ್ನು ಸಂಗೀತಕ್ಕಳವಡಿಸಿ ಜನಪ್ರಿಯಗೊಳಿಸಿದ ಹಿರಿಮೆಯ ನಾಗವಲ್ಲಿ ಅವರು ಅಭಿಜಾತ ಕಲೆಗಳ ಉಳಿವಿಗೆ ಅನವರತ ಸೇವಾನಿರತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಛೋಟೆ ರೆಹಮತ್ ಖಾನ್

ಕನ್ನಡ ನಾಡು ಕಂಡ ಪ್ರಖ್ಯಾತ ಸಂಗೀತ ಕಲಾವಿದರು ಉಸ್ತಾದ್ ಛೋಟೆ ರಹಿಮತ್ ಖಾನ್, ಸಿತಾರ್ ವಾದನದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಸಾಧಕರು.
ಛೋಟೆ ರಹಿಮತ್ ಖಾನ್ ಅವರದ್ದು ಸಿತಾರ್ ವಾದಕರ ಕುಟುಂಬ. ಧಾರವಾಡ ಘರಾಣೆಯ ಆರನೇ ತಲೆಮಾರಿನ ಕುಡಿ, ಸಿತಾರ್ ರತ್ನ ಉಸ್ತಾದ್ ರಹಿಮತ್ ಖಾನ್‌ ಮೊಮ್ಮಗ, ಉಸ್ತಾದ್ ಅಬ್ದುಲ್ ಕರೀಂಖಾನ್‌ ಸುಪುತ್ರರು. ಸಂಗೀತಕಲೆ ರಕ್ತಗತ. ಬಾಲ್ಯದಿಂದಲೇ ಕಲಿಕೆ. ೧೫ರ ಹರೆಯದಲ್ಲೇ ಛೋಟೆ ರಹಿಮತ್ ಖಾನ್‌ರ ಸಿತಾರ್ ವಾದನಕ್ಕೆ ತಲೆದೂಗಿದವರೇ ಎಲ್ಲಾ. ೧೯ನೇ ವಯಸ್ಸಿನಲ್ಲಿ ಆಕಾಶವಾಣಿಯ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಡಾ.ಗಂಗೂಬಾಯಿ ಹಾನಗಲ್‌ರಿಂದ ಸನ್ಮಾನಿಸಲ್ಪಟ್ಟ ಪ್ರತಿಭಾವಂತರು. ಆನಂತರದ್ದು ಅವ್ಯಾಹತ ಸಾಧನಾಪರ್ವ. ಆಕಾಶವಾಣಿಯ ಉನ್ನತಶ್ರೇಣಿಯ ಕಲಾವಿದರಾಗಿರುವ ಛೋಟೆ ರಹಿಮತ್ ಖಾನ್ ರಾಜ್ಯ, ಹೊರರಾಜ್ಯಗಳು ಮಾತ್ರವಲ್ಲದೆ, ಪ್ರಪಂಚದ ಉದ್ದಗಲಕ್ಕೂ ಕಛೇರಿ ನಡೆಸಿಕೊಟ್ಟ ಸಾಧಕ.ಗೋವಾ ಕಲಾ ಅಕಾಡೆಮಿಯ ನಿರ್ದೇಶಕರಾಗಿ ಮೂರು ದಶಕಗಳಿಂದಲೂ ಸೇವಾನಿರತರು. ವಿಶ್ವಾದ್ಯಂತ ಅಸಂಖ್ಯ ಗೌರವ-ಸನ್ಮಾನಗಳಿಗೆ ಪಾತ್ರವಾಗಿರುವ ಛೋಟಿ ರಹಿಮತ್ ಖಾನ್ ರಾಜ್ಯ ಸಂಗೀತಲೋಕದ ಅನರ್ಥ್ಯ ರತ್ನಗಳಲ್ಲೊಬ್ಬರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಎಂ. ನಾರಾಯಣ

ಸಂಗೀತ ಕ್ಷೇತ್ರ ಕಂಡ ಪ್ರತಿಭಾವಂತ ಕೃತಿರಚನಕಾರರು ಎಂ.ನಾರಾಯಣ, ತುಳುಭಾಷೆಯಲ್ಲಿ ವರ್ಣ ಮತ್ತು ಕೃತಿಗಳನ್ನು ರಚಿಸಿದ ಮೊದಲಿಗರು. ಸಂಗೀತದ ಗುರು, ಅತ್ಯುತ್ತಮ ಗಾಯಕರು ಹಾಗೂ ಅಪರೂಪದ ೭೨ ಮೇಳ ಕರ್ತರಾಗಗಳ ಕೃತಿ ರಚನೆಕಾರರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ (೧೯೪೩ರಲ್ಲಿ ಜನಿಸಿದ ಸಂಗೀತ ವಿದ್ವಾನ್ ಎಂ. ನಾರಾಯಣ ಅವರಿಗೆ ಹೆಸರಾಂತ ವೇಣುವಾದನ ವಿದ್ವಾಂಸರಾಗಿದ್ದ ತಂದೆ ಎಂ.ಬಾಬು ಮೊದಲ ಗುರು. ಗೋಪಾಲಕೃಷ್ಣ ಅಯ್ಯರ್ ಅವರ ಬಳಿ ವಿಶೇಷ ಸ್ವರಾಭ್ಯಾಸ, ಮಂಗಳೂರು ಆಕಾಶವಾಣಿ ಕಲಾವಿದರಾಗಿ ಸಂಗೀತಕ್ಷೇತ್ರದಲ್ಲಿ ಸಾಧನಾಯಾನ ಆರಂಭ. ದೂರದರ್ಶನ ಕಲಾವಿದರಾಗಿ ಸ್ವರಪ್ರೇಮಿಗಳಿಗೆ ಚಿರಪರಿಚಿತರು. ಸುರತ್ಕಲ್ ಮತ್ತು ಮುಲ್ಕಿಯಲ್ಲಿ ಮೂರು ದಶಕಗಳಿಂದ ಸಾವಿರಾರು ಮಕ್ಕಳಿಗೆ ಸಂಗೀತ ಕಲಿಸಿದ ಮಹಾಗುರು, ಹೆಸರಾಂತ ಗಾಯನ-ಬೋಧನೆಯ ಜತೆಗೆ ಕೃತಿರಚನಕಾರರಾಗಿ ಹೆಗ್ಗುರುತು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಡಿ.ಅಣ್ಣು ದೇವಾಡಿಗ

ದಕ್ಷಿಣ ಕನ್ನಡ ಜಿಲ್ಲೆಯ ಕಲಾಪ್ರತಿಭೆ ಡಿ. ಅಣ್ಣು ದೇವಾಡಿಗ ಅವರು ಸಂಗೀತದ ಪರಂಪರೆಯಿಂದ ಬೆಳೆದ ಬಂದ ಕಲಾವಿದರು. ನಾಗಸ್ವರ ವಾದನ ಪ್ರವೀಣರು.
ಬಾಲ್ಯದಲ್ಲೇ ಪಾರಂಪರಿಕ ಕಲೆ ನಾಗಸ್ವರಕ್ಕೆ ಮನಸೋತ ಅಣ್ಣು ದೇವಾಡಿಗ ಅವರು ಅಯ್ಯನಾರು ಸಂಗೀತ ಶಾಲೆಯ ಎಂ.ಕೋದಂಡರಾಮರಲ್ಲಿ ಪ್ರಾರಂಭಿಕ ತರಬೇತಿ ಪಡೆದು ಕಲಾಲೋಕ ಪ್ರವೇಶಿಸಿದವರು. ಟಿ.ಕೆ.ಗೋವಿಂದರಾಜ ಪಿಳ್ಳೆ, ಕೊಟ್ಟೂರು ರಾಜರತ್ನಂರ ಗರಡಿಯಲ್ಲಿ ಪರಿಣಿತಿ ಪಡೆದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಸೇವೆಗೆ ನಿಯುಕ್ತರಾದವರು. ಶ್ರೀಕ್ಷೇತ್ರದಲ್ಲಿ ೪೫ ವರ್ಷಗಳಿಂದಲೂ ನಾಗಸ್ವರ ಸೇವೆಗೈಯುತ್ತಿರುವ ಇವರು ಬೆಂಗಳೂರು, ಶ್ರೀರಂಗಪಟ್ಟಣ, ತಿರುಪತಿ, ತಂಜಾವೂರು, ಮಧುರೈ ಮುಂತಾದೆಡೆ ನಾಗಸ್ವರ ಕಛೇರಿ ನಡೆಸಿರುವರು. ಆಕಾಶವಾಣಿಯ ಎ ದರ್ಜೆ ಕಲಾವಿದರೂ ಸಹ. ಹಲವು ಶಿಷ್ಯರನ್ನು ರೂಪಿಸಿದ ಗುರು, ಗಣ್ಯವ್ಯಕ್ತಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಅಣ್ಣು ದೇವಾಡಿಗರ ಕಲಾಸಾಧನೆಗೆ ಕರ್ನಾಟಕ ಕಲಾಶ್ರೀ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಗಸ್ವರದೊರೆ ಬಿರುದು ಮತ್ತಿತರ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಬ್ಲಿ.ಜಿ. ಮಹಾಪುರುಷ

ಬಾಗಲಕೋಟೆಯ ಬಸವೇಶ್ವರ ಕಲಾಮಹಾವಿದ್ಯಾಲಯದಲ್ಲಿ ಸಿತಾರ್ ಪ್ರಾಧ್ಯಾಪಕರಾಗಿ ಮುವ್ವತ್ತು ವರ್ಷ ಕಾಲ ಸೇವೆ ಸಲ್ಲಿಸಿದ ಪ್ರೊ. ವಿ.ಜಿ. ಮಹಾಪುರುಷ ತಮ್ಮ ಗುರು ಗಂಗಾಧರ ಸಂಗೀತ ವಿದ್ಯಾಲಯದ ಮೂಲಕ ಅನೇಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಬಾಗಲಕೋಟೆಯಂತಹ ಸ್ಥಳದಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಸಂಗೀತ ವಾದ್ಯಗಳ ಸಂಗ್ರಹಾಲಯವನ್ನು ಸಂಗೀತ ಕಲಾವಿದರ ಭಾವಚಿತ್ರಗಳನ್ನು ಒಳಗೊಂಡ ಕಲಾಭವನವನ್ನು ನಿರ್ಮಿಸಿರುವುದು ಇವರ ಸಂಗೀತ ಪ್ರೇಮಕ್ಕೊಂದು ಸಾಕ್ಷಿ.
ಮಹಾಪುರುಷ ಅವರು ಸಿತಾರ ದರ್ಪಣ ಎಂಬ ಕೃತಿಯನ್ನು ರಚಿಸಿದ್ದು, ನಾಡಿನ ಪ್ರಮುಖ ಉತ್ಸವಗಳಲ್ಲಿ ಸಿತಾರ್ ಕಚೇರಿಗಳನ್ನು ನೀಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ನಾರಾಯಣ ಢಗೆ

ಸಾಂಪ್ರದಾಯಿಕ ಸಂಗೀತ ಶಿಕ್ಷಣ ಪಡೆದು ನಾಡಿನ ಹಲವೆಡೆ ಕಚೇರಿಗಳನ್ನು ನಡೆಸಿರುವ ನಾರಾಯಣ ಢಗೆ ಅವರು ಹಾರ್ಮೋನಿಯಂ ಹಾಗೂ ಸಿತಾರ್ ವಾದನಗಳಲ್ಲಿ ಸಹ ಪರಿಶ್ರಮ ಹೊಂದಿದವರು.
ಸುಗಮ ಸಂಗೀತ ಕ್ಷೇತ್ರದಲ್ಲಿಯೂ ಹೆಸರು ಪಡೆದಿರುವ ಪಂಡಿತ್ ನಾರಾಯಣ ಢಗೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಗೌರವವೂ ದೊರೆತಿದೆ.
ರಾಜ್ಯದುದ್ದಕ್ಕೂ ಹಲವಾರು ಶಿಷ್ಯರನ್ನು ಪಡೆದಿರುವ ಇವರು ಹೈದರಾಬಾದ್ ಕರ್ನಾಟಕದ ಮೇರು ಗಾಯಕರಾಗಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ.ಬಿ. ಹೈಮಾವತಮ್ಮ

ಹೈಮಾವತಮ್ಮ ಅವರು ನಾಡಿನ ಹೆಸರಾಂತ ಗಮಕಿಗಳಲ್ಲೊಬ್ಬರು. ಗಮಕದ ಜೊತೆಗೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಕೆ.ಬಿ.ಹೈಮಾವತಮ್ಮ ಅವರು ನಾಡಿನಾದ್ಯಂತ ಗಮಕ ಕಲೆಯನ್ನು ಪಸರಿಸುವ ಜೊತೆಗೆ ನೂರಾರು ಮಂದಿಯನ್ನು ಗಮಕ ಕಲೆಯಲ್ಲಿ ತರಬೇತುಗೊಳಿಸುತ್ತಿದ್ದಾರೆ.
ಕುಮಾರವ್ಯಾಸ, ಲಕ್ಷ್ಮೀಶ ಅವರನ್ನು ಕುರಿತ ಪುಸ್ತಕಗಳನ್ನು ಸಹ ಪ್ರಕಟಿಸಿರುವ ಹೈಮಾವತಮ್ಮ ಅವರು ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ದ್ವಾರಕೀ ಕೃಷ್ಣಸ್ವಾಮಿ

ಗಾಯಕಿಯಾಗಿದ್ದ ದ್ವಾರಕಿ ಕೃಷ್ಣಸ್ವಾಮಿ ಶಸ್ತ್ರಚಿಕಿತ್ಸೆ ನಂತರ ಗಾಯನ ಸಾಮರ್ಥ ಕಳೆದುಕೊಂಡ ನಂತರ ಆಯ್ಕೆ ಮಾಡಿಕೊಂಡದ್ದು ಕೊಳಲು ವಾದನವನ್ನು
ದೇಶದ ಪ್ರಸಿದ್ಧ ಭರತನಾಟ್ಯ ಕಲಾವಿದರೊಂದಿಗೆ ಕೊಳಲು ವಾದನ ಸಹಕಾರ ನೀಡುತ್ತಾ ಹೆಸರು ಮಾಡಿರುವ ದ್ವಾರಕಿ ಕೃಷ್ಣಸ್ವಾಮಿ ನೃತ್ಯ ಹಾಗೂ ಸಂಗೀತ ಕ್ಷೇತ್ರವನ್ನು ಕುರಿತಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಅನೇಕ ರೂಪಕಗಳನ್ನು ಸಂಯೋಜಿಸಿರುವ ಇವರು ನೃತ್ಯ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಹಲವು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಇವರಿಗೆ ಸಂಗೀತ ನೃತ್ಯ ಅಕಾಡೆಮಿ, ಗಾಯನ ಸಮಾಜದ ಗೌರವ ಪ್ರಶಸ್ತಿಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ. ಮುರಳೀಧರರಾವ್

ಯಕ್ಷಗಾನ ಕಲಾವಿದರ ಮನೆತನದವರಾದ ಕೆ.ಮುರಳೀಧರರಾವ್ ಮೈಸೂರಿನಲ್ಲಿ ನಾಟ್ಯಾಚಾರ್ಯರಾಗಿ ಪ್ರಸಿದ್ಧರು. ಪಂದಾನಲ್ಲೂರು ಶೈಲಿಯ ಭರತನಾಟ್ಯ ಶಿಕ್ಷಣವನ್ನು ಪಡೆದು ನಂತರ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸಿದ ಮುರಳೀಧರರಾವ್ ನಾಡಿನುದ್ದಕ್ಕೂ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಉಭಯ ನೃತ್ಯ ಪ್ರಕಾರಗಳಲ್ಲಿ ಹಲವು ಮಂದಿಗೆ ಶಿಕ್ಷಣ ನೀಡಿರುವ ಮುರಳೀಧರರಾವ್ ಅವರಿಗೆ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶೋಭ.ಆರ್. ಹುಂಖಲಗೋಳ

ಸ್ನಾತಕೋತ್ತರ ಸಂಗೀತ ಪದವಿಯಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ ಶೋಭಾ.ಆರ್.ಹುಯಿಲಗೋಳ ಅವರು ತಮ್ಮ ತಂದೆಯವರಿಂದ ಎಳೆಯ ವಯಸ್ಸಿನಲ್ಲಿಯೇ ಸಂಗೀತದತ್ತ ಆಕರ್ಷಣೆ ಹೊಂದಿದವರು, ವಿದ್ವತ್ತಿನಲ್ಲಿ ಎರಡನೆಯ ಬ್ಯಾಂಕ್ ಪಡೆದು ಹಿಂದೂಸ್ಥಾನಿ ಸಂಗೀತವನ್ನು ಪಂಡಿತ್ ವೆಂಕಟೇಶಕುಮಾರ್ ಅವರಲ್ಲಿ ಅಭ್ಯಾಸ ಮಾಡಿದ ಇವರು ತಮ್ಮದೇ ಆದ ‘ರಾಜೀವ ಪುರಂಧರೆ ಸಂಗೀತ ಸಂಸ್ಥೆ’ಯ ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಹಲವು ಕಡೆಗಳಲ್ಲಿ ಸಂಗೀತ ತರಬೇತಿ ನೀಡುತ್ತ ಬಂದಿರುವ ಶೋಭಾ ಅವರು ಗೀತ ರಾಮಾಯಣ, ವಿಶ್ವಾಮಿತ್ರ ಮೇನಕೆ, ಮೊದಲಾದ ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಂಗ ಗೀತೆಗಳ ಬಗ್ಗೆಯೂ ವಿಶೇಷ ತರಬೇತಿಯನ್ನು ರಂಗದಿಗ್ಗಜರಾದ ಏಣಗಿ ಬಾಳಪ್ಪನವರಿಂದ ಪಡೆದುಕೊಂಡಿರುವ ಶೋಭಾ ಅವರು ಆಕಾಶವಾಣಿಯ ಏ-ಗ್ರೇಡ್ ಕಲಾವಿದೆ.
ಅನೇಕ ಸಂಗೀತ ಕಾರ್ಯಕ್ರಮಗಳಿಗೆ ನಿರ್ದೇಶನ ನೀಡಿರುವ ಇವರು ರಂಗಗೀತೆ ಹಾಗೂ ಶಾಸ್ತ್ರೀಯ ಸಂಗೀತ ರೂಪಕಗಳ ಧ್ವನಿಸುರುಳಿಗಳನ್ನು ರೂಪಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಶ್ರೀಮತಿ ಶೋಭಾ.ಆರ್.ಹುಯಿಲಗೋಳ ಅವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀರಾಮುಲು

ತಂದೆಯವರಿಂದಲೇ ಕುಟುಂಬ ಕಲೆಯಾದ ನಾದಸ್ವರವನ್ನು ಅಭ್ಯಾಸ ಮಾಡಿದ ಕೋಲಾರ ಶ್ರೀರಾಮುಲು ಅವರು ನಂತರದ ವರ್ಷಗಳಲ್ಲಿ ದಕ್ಷಿಣ ಭಾರತದ ಕೆಲವು ಹಿರಿಯ ವಿದ್ವಾಂಸರಲ್ಲಿ ಹೆಚ್ಚಿನ ತರಬೇತು ಪಡೆದುಕೊಂಡರು.
ಹಲವು ಉತ್ಸವಗಳು, ಸಂಗೀತ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಪ್ರತಿಭಾವಂತ ನಾದಸ್ವರ ವಾದಕ ಶ್ರೀರಾಮುಲು ಅವರು ಹಲವು ವರ್ಷಗಳಿಂದ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಟಿತ ಗೌರವ ಪುರಸ್ಕಾರಗಳಿಗೆ ನಾದಸ್ವರ ವಾದಕ ಶ್ರೀರಾಮುಲು ಅವರು ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಶಾಂತಾ ಆನಂದ

ಸಂಗೀತ ಕ್ಷೇತ್ರದ ಸಾಧನೆಯ ಜತೆಗೆ ಚುಟುಕ ಕವನ ರಚನೆ ಮತ್ತು ಸಮಾಜ ಸೇವೆಯಲ್ಲಿ ನಿರತರಾದವರು ಶ್ರೀಮತಿ
ಶಾಂತಾ ಆನಂದ್ ಅವರು.
೧೯೬೩ರಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗೆ ತಾಲ್ಲೂಕಿನ ಕೊಟ್ಟೂರಿನಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಗುರು ಹುಮಾಯೂನ್ ಹರ್ಲಾಪುರ ಅವರ ಬಳಿ ಸುಗಮ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ.
ಭದ್ರಾವತಿ ಆಕಾಶವಾಣಿಯಲ್ಲಿ ಗಾಯಕಿಯಾಗಿ, ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀರಾಮ ಮಂದಿರದಲ್ಲಿ ವಚನ ಗಾಯನ, ಮಲೆನಾಡು ಉತ್ಸವದಲ್ಲಿ ಜಾನಪದ ಗೀತ ಗಾಯನ ನೀಡಿದ ಹಿರಿಮೆ ಶಾಂತಾ ಆನಂದ್ ಅವರದು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕಿಯಾಗಿ, ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ಸೇವಾ ಟ್ರಸ್ಟ್ ಕಾರ್ಯದರ್ಶಿಯಾಗಿ, ಬೆಕ್ಕಿನಕಲ್ಮಠದ ಗುರುಬಸವೇಶ್ವರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಎರಡು ವರ್ಷ ಸೇವೆ ಸಲ್ಲಿಕೆ.
ರಜತ ಕಲಾಶಾಲೆ ಮೂಲಕ ಶಿಷ್ಯರಿಗೆ ತರಬೇತಿ ನೀಡುತ್ತಿರುವ ಅವರು ಸಂಗೀತ ಸೇವೆಗಾಗಿ ಚನ್ನಗಿರಿ ಹಾಲಸ್ವಾಮಿ ಅವರಿಂದ ವಚನ ಕೋಗಿಲೆ ಬಿರುದಿಗೆ ಹಾಗೂ ಸಾಮಾಜಿಕ ಸೇವೆಗಾಗಿ ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿಗೆ ಭಾಜನರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ ಗಾಯಕಿ ಶ್ರೀಮತಿ ಶಾಂತಾ ಆನಂದ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಯಶವಂತ ಹಳಬಂಡಿ

ವರಕವಿ ಬೇಂದ್ರೆಯವರ ಸಾಹಿತ್ಯದ ಬದುಕು, ಬರಹಗಳಿಂದ ಪ್ರಭಾವಿತರಾಗಿ ಅವರ ಬಹುತೇಕ ಕವನಗಳಿಗೆ ರಾಗ ಸಂಯೋಜನೆ ಅಳವಡಿಸಿ ದನಿ ನೀಡಿದವರು ಗಾಯಕ ಯಶವಂತ ಹಳಬಂಡಿ.
ಗಂಡು ಮೆಟ್ಟಿದ ನಾಡು ಧಾರವಾಡದಲ್ಲಿ ೧೯೫೦ರಲ್ಲಿ ಕಲಾವಿದರ ಮನೆತನದಲ್ಲಿ ಜನಿಸಿದ ಹಳಬಂಡಿಯವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು ಶ್ರೀ ಲಕ್ಷ್ಮಣರಾವ್‌ ದೇವಾಂಗ ಮಠ ಹಾಗೂ ನಾರಾಯಣ ರಾವ್ ಮಜುಂದಾ‌
ಅವರ ಬಳಿ.
ಕಳೆದ ೨೮ ವರ್ಷಗಳಿಂದ ನಾಡಿನಾದ್ಯಂತ ಹಾಗೂ ಹೊರರಾಜ್ಯಗಳಲ್ಲೂ ಸಾವಿರಕ್ಕೂ ಮಿಕ್ಕಿ ಕಾಯಕ್ರಮ ನೀಡಿರುವರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ‘ಬಿ’ ಹೈಗ್ರೇಡ್ ಗಾಯಕರೂ ಆಗಿರುವ ಅವರು ಹಲವು ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಮುಖ್ಯವಾಗಿ ಅನುಭಾವಿ ಕವಿ ಶಿಶುನಾಳ ಷರೀಫರ ಗೀತೆಗಳಿಗೆ ನೀಡಿರುವ ಕಂಠ ಶೈಲಿ ಜನಪ್ರಿಯ.
ಸ್ವತಃ ಸಂಗೀತ ನಿರ್ದೇಶಕರಾಗಿ, ತಮ್ಮದೇ ವಾದ್ಯ ವೃಂದ ರಚಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವರು. ಬೇಂದ್ರೆಯವರ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿರುವ ‘ಬೇಂದ್ರೆ ಕಾವ್ಯವಾಣಿ’ ರೂಪಕ ಅತ್ಯಂತ ಜನಪ್ರಿಯ. ಅವರ ‘ಪಾತರಗಿತ್ತಿ ಪಕ್ಕ’, ‘ಹೋಗು ಮನಸೇ’, ‘ಮಲ್ಲಿಗೆ ತರುವೆನು’ ಧ್ವನಿಸುರುಳಿಗಳು ಸಂಗೀತ ರಸಿಕರಿಗೆ ಅಚ್ಚುಮೆಚ್ಚು. ಶರಣರ ವಚನ, ದೇಶಭಕ್ತಿಗೀತೆ, ನಾಡಗೀತೆ, ಭಾವಗೀತೆಗಳನ್ನು ಜಾನಪದ ಶೈಲಿಯ ಸೊಗಡಿನೊಂದಿಗೆ ಹಾಡುವ ವಿಶಿಷ್ಟ ಶಾರೀರ ಶ್ರೀ ಯಶವಂತ ಹಳಬಂಡಿ ಅವರದು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಖಾಸೀಂಸಾಬ್ ಜಮಾದಾ

ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದನ್ನು ಇಷ್ಟಪಡದ ತಂದೆಯ ಮನೆಯಿಂದ ಹೊರಬಂದ ಖಾಸೀಂಸಾಬ್ ಜಮಾದಾರ್ ನಾಟಕ, ಕಥಕ್ ನೃತ್ಯ, ಸಂಗೀತ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ನಂತರ ಗುರುಕುಲ ಪದ್ದತಿಯಲ್ಲಿ ಕಥಕ್ ಹಾಗೂ ತಬಲಾ ಶಿಕ್ಷಣವನ್ನು ಪಡೆಯಲಾರಂಭಿಸಿದ ಖಾಸೀಂಸಾಬ್ ಜಮಾದಾ ಅವರಿಗೆ ಮೊದಮೊದಲು ಬೆಂಬಲ ಕೊಟ್ಟವರು ಬೈಲಹೊಂಗಲದ ಪಂಡಿತ್ ಚಿನ್ನಯ್ಯಶಾಸ್ತ್ರಿಗಳು.
ಕಥಕ್ ಹಾಗೂ ತಬಲಾ ಅಭ್ಯಾಸವನ್ನು ಗುರುಕುಲ ಪದ್ಧತಿಯಲ್ಲಿ ಪಡೆದುಕೊಂಡ ಜಮಾದಾರ್ ಹಸಿರು ಚಿಮ್ಮುವ ದಾಂಡೇಲಿಯಲ್ಲಿ ನೆಲೆಗೊಂಡರು. ತಬಲಾ ವಾದಕರಾಗಿ ತಮ್ಮನ್ನು ಗುರುತಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಬಲಾ ವಾದನ ಮಾಡುತ್ತಿದ್ದ ಇವರು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಿಗೆ ಅನಿವಾರ್ಯವಾದರು.
ತಾವು ಕಲಿತ ತಬಲಾ ಕಲೆಯನ್ನು ಸತತ ೫೧ ತಾಸುಗಳ ಕಚೇರಿ ನೀಡುವ ಮೂಲಕ ವಿಶ್ವದಾಖಲೆ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ದಾಖಲಾದ ಕಾಸೀಂಸಾಬ್ ಆಸಕ್ತರಿಗಾಗಿ ತಬಲಾ ಕಲೆಯನ್ನು ಕಲಿಸತೊಡಗಿದರು. ತಬಲಾ ತರಬೇತಿ ಪಡೆದ ಹಲವಾರು ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಆಕಾಶವಾಣಿಯಲ್ಲಿಯೂ ಕೆಲ ಕಾಲ ತಬಲಾ ವಾದಕರಾಗಿದ್ದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಟಿ.ವಿ.ರಾಜು

ಸುಗಮ ಸಂಗೀತ ಗಾಯನ ಕ್ಷೇತ್ರದಲ್ಲಿ ಟಿ.ವಿ.ರಾಜು ಅವರದು ಗಮನಾರ್ಹ ಸಾಧನೆ.
ನಗರ ಪ್ರದೇಶಗಳಲ್ಲಿ ಚಿರಪರಿಚಿತವಿರುವ ಸುಗಮ ಸಂಗೀತ ಪ್ರಕಾರವನ್ನು ಗ್ರಾಮಾಂತರ ಪ್ರದೇಶಗಳಲ್ಲೂ ಪಸರಿಸುವ ನಿಟ್ಟಿನಲ್ಲಿ ಗಾಯಕ ರಾಜು ಅವರ ಪರಿಶ್ರಮ ಶ್ಲಾಘನೀಯ.
ಮೂಲತಃ ತುಮಕೂರಿನವರಾದ ರಾಜು ಕಳೆದ ೪೫ ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿರುವರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಗ್ರಾಮಾಂತರ ಪ್ರದೇಶಗಳ ಯುವಜನರಿಗೆ ಸುಗಮ ಸಂಗೀತ ತರಬೇತಿ ನೀಡುವ ಮೂಲಕ ಕಲಿತ ಕಲೆಯನ್ನು ಸಾರ್ಥಕಗೊಳಿಸಿರುವ ಅಪರೂಪದ ಕಲಾವಿದರು ಶ್ರೀಯುತರು.
ಸುಗಮ ಸಂಗೀತ ಕ್ಷೇತ್ರವನ್ನೇ ನೆಚ್ಚಿಕೊಂಡಿರುವ ಅವರು ಏರ್ಪಡಿಸಿರುವ ವಿಚಾರ ಸಂಕಿರಣ, ಕಾರ್ಯಾಗಾರ, ಸುಗಮ ಸಂಗೀತ ಸಾಪ್ತಾಹಿಕ ಕಾರ್ಯಕ್ರಮಗಳು ಹಲವಾರು. ೨೦೦೨ರಲ್ಲಿ ರಾಜ್ಯಮಟ್ಟದ ಜನ ಸಂಸ್ಕೃತಿ ಮೇಳ ಆಯೋಜನೆ ಹಾಗೂ ೨೦೦೨-೦೩ನೇ ಸಾಲಿನಲ್ಲಿ ರಾಜ್ಯ ಮಟ್ಟದ ಚಿಣ್ಣರ ಪ್ರತಿಭಾ ಪ್ರಗತಿ ಪ್ರದರ್ಶನ ಪ್ರಮುಖವಾದವು.
ಕೂಡಲ ಸಂಗಮ, ಮಹಾಶಕ್ತಿ ಗಣಪತಿ, ಶೃಂಗೇರಿ ಶಾರದೆ ಸೇರಿದಂತೆ ಅನೇಕ ಧ್ವನಿಸುರುಳಿಗಳಿಗೆ ಶ್ರೀಯುತರು ಹಾಡಿರುವರು.
ರಾಜು ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ‘ಕರ್ನಾಟಕ ಕಲಾಶ್ರೀ’ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಸಂದಿರುವ ಗೌರವಗಳು ಹಲವು.
ಸುಗಮ ಸಂಗೀತದ ಮೂಲಕ ಕಾವ್ಯ ಪರಂಪರೆಯನ್ನು ಜನಮನಕ್ಕೆ ಮುಟ್ಟಿಸುವ ಕಾಯಕದಲ್ಲಿ ತೊಡಗಿರುವವರು ಶ್ರೀ ಟಿ.ವಿ.ರಾಜು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಚಿ. ಶಂಕರ ರಾವ್‌

ವಿಶಿಷ್ಟ ವಿದ್ವತ್ತಿನ ವೇಣು ವಾದಕ, ಸಂಗೀತ ಸಾಧಕ ಬಿ.ಶಂಕರ ರಾವ್‌ ಅವರು.
೧೯೨೨ರಲ್ಲಿ ಬೆಂಗಳೂರಿನಲ್ಲಿ ಜನನ, ಸಂಗೀತ ಲೋಕದ ಈ ಕಾಯಕ ಜೀವಿಗೆ ಈಗ ೮೬ ಹರೆಯ. ಖ್ಯಾತ ಸಂಗೀತಗಾರರಾಗಿದ್ದ ಅಕ್ಕ ಬಾಲಾಂಬ ಮತ್ತು ಭಾವ ಶಿವರಾಮಯ್ಯನವರ ಪ್ರೋತ್ಸಾಹದಿಂದ ಚಿಕ್ಕ ವಯಸ್ಸಿನಲ್ಲೇ ಸಂಗೀತ ಲೋಕಕ್ಕೆ ಕಾಲಿಟ್ಟರು.
ಏಕಲವ್ಯ ಮಾದರಿಯಲ್ಲಿ ಸ್ವಯಂ ಸಂಗೀತ ಕಲಿಕೆ ಆರಂಭಿಸಿದ ರಾಯರು ಸತತ ಮೂರು ವರ್ಷ ಅಂತರ ವಿಶ್ವವಿದ್ಯಾಲಯ ಸಂಗೀತ ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು. ಸಂಗೀತ ಕ್ಷೇತ್ರದ ಮಹಾನ್ ಸಾಧಕ ಟಿ.ಆರ್.ಮಹಾಲಿಂಗಂ ಅವರ ಆತ್ಮೀಯ ವಲಯಕ್ಕೆ ೧೯೪೦ರಲ್ಲಿ ಸೇರ್ಪಡೆ. ಬಳಿಕ ಶ್ರೀಯುತರ ಸಂಗೀತ ಯಾನಕ್ಕೆ ಹೊಸ ತಿರುವು. ಮಹಾಲಿಂಗಂ ಅವರೊಂದಿಗಿನ ಸ್ನೇಹ-ನಂಟು ಅರ್ಧ ಶತಮಾನದ ಪರಿಧಿಯನ್ನು ದಾಟಿದ್ದು ಸಂಗೀತ ವಲಯದ ದಂತಕಥೆ. ೧೯೬೫ರಿಂದ ರಾಷ್ಟ್ರದಾದ್ಯಂತ ಶಂಕರರಾವ್‌ ಅವರು ನಡೆಸಿಕೊಟ್ಟಿರುವ ಸಂಗೀತ ಗೋಷ್ಠಿಗಳು ಹಲವು. ಶ್ರೀಯುತರ ಕೊಳಲು ವಾದನಕ್ಕೆ ಉಪರಾಷ್ಟ್ರಪತಿ ಬಿ.ಡಿ.ಜತ್ತಿಯವರಿಂದಲೂ ವಿಶೇಷ ಪ್ರಶಂಸೆ.
ಹಾಲೆಂಡ್ ಮತ್ತು ಜರ್ಮನಿವರೆಗೂ ಅವರ ಕೊಳಗಾನದ ಸವಿ ಸಂಚರಿಸಿದೆ. ಮ್ಯೂಸಿಕಲ್ ಥೆರಪಿ ಸಂಗೀತದಿಂದ ರಕ್ತದೊತ್ತಡ, ಆರ್ಥೈಟೀಸ್ ಹತೋಟಿ ಸಾಧ್ಯ ಎಂದು ಪ್ರಮಾಣಿಕರಿಸಿದ ಸಂಗೀತ ಸಾಧಕರು ಶ್ರೀಯುತರು.
ವೇಣು ವಾದನ ಕ್ಷೇತ್ರದಲ್ಲಿನ ಸಾಧನೆಗಾಗಿ ತಿರುಪತಿಯ ರಂಗನಾಥ ಸಭಾದಿಂದ ‘ವೇಣುಗಾನ ಗಂಧರ್ವ’, ಸಂದ ಶರ್ಮಾರಿಂದ ‘ಮುರಳಿ ಮೋಹಕ’ ಪ್ರಶಸ್ತಿಗಳು ಸಂದಿವೆ.
ಶ್ರೀ ಶಂಕರ ರಾವ್ ಅವರು ಸಂಯೋಜಿಸಿರುವ ಸ್ವರ ಸಂಗಮ, ಗಾನ-ರಾಗ-ಅಲಂಕಾರ, ಪಂಚರಂಜನಿ ರಾಗಗಳು ಸಂಗೀತ ವಲಯದಲ್ಲಿ ಜನಪ್ರಿಯ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಶಿವಪ್ಪ ಯಲ್ಲಪ್ಪ ಭಜಂತ್ರಿ

ಶಹನಾಯ್ ವಾದನದಲ್ಲಿ ಪರಿಣತಿ ಪಡೆದ ಕಲಾಸಾಧಕ, ಕಲೆಯ ಆರಾಧಕರೂ ಆಗಿರುವರು ಶಿವಪ್ಪ ಎಲ್ಲಪ್ಪ ಭಜಂತ್ರಿ ಅವರು.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಾಳಬೀಡು ಗ್ರಾಮದಲ್ಲಿ ಶ್ರೀಯುತರ ಜನನ, ಮನೆತನದ ಕಸುಬಾದ ಶಹನಾಯ್ ವಾದನ ಚಿಕ್ಕಂದಿನಿಂದಲೇ ಅಭ್ಯಾಸ. ಜತೆಗೆ ಗದಗದ ಸಂಗೀತ ಸಾಹಿತ್ಯ ಮಹಾವಿದ್ಯಾಲಯದಲ್ಲಿ ಸಂಗೀತ ಮತ್ತು ಶಹನಾಯ್‌ಗಳ ಶಾಸ್ತ್ರೀಯ ಕಲಿಕೆ.
ಶಹನಾಯ್ ಸಂಗೀತ ಕಲಾವಿದರ ತಂಡ ಕಟ್ಟಿಕೊಂಡಿರುವ ಅವರು ಮದುವೆ, ಜಾತ್ರೆ, ಸಭೆ, ಸಮಾರಂಭಗಳಲ್ಲಿ ಶಹನಾಯ್ ನುಡಿಸುತ್ತ ತೃಪ್ತಿಕಂಡುಕೊಂಡು ಕಳೆದ ೩೦ ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವರು. ಅವರ ಶಹನಾಯ್ ಕೇಳಲು ಜನ ತುದಿಗಾಲಲ್ಲಿ ನಿಲ್ಲುವರು. ಮೋಡಿ ಮಾಡುವಂತಹ ಮಂತ್ರಶಕ್ತಿಯಿದೆ ಅವರ ಶಹನಾಯ್ ವಾದನಕ್ಕೆ.
ಹಾನಗಲ್‌ನ ಕುಮಾರೇಶ್ವರಮಠದಲ್ಲಿ ಹಾಗೂ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠದಲ್ಲಿಯೂ ಶಹನಾಯ್ ವಾದಕರಾಗಿ ಶ್ರೀಯುತರಿಂದ ಹಲವು ವರ್ಷಗಳಿಂದ ಸೇವೆ ಸಲ್ಲಿಕೆ, ಅವರು ಕರಗತ ಮಾಡಿಕೊಂಡಿರುವ ಈ ಕಲೆಯನ್ನು ಹಲವು ವಿದ್ಯಾರ್ಥಿಗಳಿಗೂ ಕಲಿಸುತ್ತ ಶಹನಾಯ್ ಪ್ರಕಾರವನ್ನು ಬೆಳೆಸುತ್ತಿರುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ, ಹಾನಗಲ್‌ ನಾಡಹಬ್ಬ ಉತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ ಶ್ರೀಯುತರು.
ಶಹನಾಯ್ ವಾದನದಲ್ಲಿ ನುರಿತ ಪ್ರಭಾವಶಾಲಿ ಕಲಾವಿದರೂ, ಅನುಭಾವಿಗಳೂ ಮತ್ತು ಸೇವಾ ಮನೋಭಾವವುಳ್ಳವರು ಶ್ರೀ ಶಿವಪ್ಪ ಯಲ್ಲಪ್ಪ ಭಜಂತ್ರಿ,

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಹನುಮಂತಕುಮಾರ್ ಮುಧೋಳ್

ಕುಲಕಸುಬುಗಳಾದ ಕೊಳಲು ಮತ್ತು ಶಹನಾಯ್ ವಾದನಗಳಲ್ಲಿ ಪಾಂಡಿತ್ಯ ಗಳಿಸಿ ನಾಡಿನಾದ್ಯಂತ ಈ ಕಲೆಗಳ ಪ್ರಸಾರದಲ್ಲಿ ತೊಡಗಿರುವವರು ಹನುಮಂತ ಕುಮಾರ ಮುಧೋಳ್ ಅವರು.
ಕೊಪ್ಪಳ ಜಿಲ್ಲೆಯ ಕುದರಿಮೋತಿ ಗ್ರಾಮದಲ್ಲಿ ೧೯೪೭ರಲ್ಲಿ ಜನನ. ತಂದೆ ಬಸಪ್ಪ ಭಜಂತ್ರಿಯವರ ಪೂರ್ವಜರ ಕಾಲದಿಂದಲೂ ಬೆಳೆದು ಬಂದ ಸಂಗೀತ ಮನೆತನ ಹನುಮಂತ ಕುಮಾರ್ ಅವರದು. ಪಂಡಿತ್ ಪುಟ್ಟರಾಜ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತ ಅಭ್ಯಾಸ.
ಕೊಳಲು, ಹಾರ್ಮೋನಿಯಂ, ಕ್ಲಾರಿಯೋನೇಟ್ ವಾದಕರಾದ ಶ್ರೀಯುತರು ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ನಾಟಕ ಕಂಪೆನಿಗಳಲ್ಲಿ ಸಂಗೀತ ನಿರ್ದೇಶಕರಾಗಿ ದುಡಿದಿರುವರು. ಹೂವಿನ ಹಡಗಲಿಯ ರಂಗ ಭಾರತಿ ತಂಡದೊಂದಿಗೆ ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ ನಾಟಕಗಳಿಗೆ ಸಂಗೀತ ಸೇವೆ ನೀಡಿದ ಹಿರಿಮೆ ಅವರದು.
ಆಕಾಶವಾಣಿ ಮತ್ತು ದೂರದರ್ಶನಗಳಿಗೂ ಕಾರ್ಯಕ್ರಮ ನೀಡಿರುವ ಹನುಮಂತ ಕುಮಾರ್‌ ಅವರಿಂದ ಆನೆಗೊಂದಿ, ಹಂಪಿ, ಇಟಗಿ ಉತ್ಸವಗಳಲ್ಲಿ ಕೊಳಲು ವಾದನ ಪ್ರಸ್ತುತಿ. ಶ್ರೀಯುತರು ಸುಗಮ ಸಂಗೀತ ಗಾಯನಕ್ಕೆ ಸಂಗೀತದ ಸಾಥ್ ನೀಡಿರುವ ಕ್ಯಾಸೆಟ್‌ಗಳು ಹೊರಬಂದಿವೆ.
ಶ್ರೀಯುತರ ಸಂಗೀತ ಸೇವೆಗೆ ಕಲಾಪ್ರತಿಭೋತ್ಸವ ಪ್ರಶಸ್ತಿ, ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಪ್ರಶಸ್ತಿ, ಆನೆಗೊಂದಿ ಉತ್ಸವ ಸೇರಿದಂತೆ ಅನೇಕ ಉತ್ಸವಗಳಲ್ಲಿ ಸನ್ಮಾನಿತರು.
ಸಂಗೀತ ಸೇವೆಯ ಜತೆಗೆ ಹವ್ಯಾಸಿ ತಂಡಗಳಿಗಾಗಿ ನಾಟಕ ನಿರ್ದೇಶನ ಮಾಡುತ್ತ, ಹಾರ್ಮೋನಿಯಂ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ವಿದ್ಯೆಧಾರೆಯುತ್ತಿರುವವರು ಶ್ರೀ ಹನುಮಂತ ಕುಮಾರ ಮುಧೋಳ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಸ್ವಾಮಿ ಸಂಗಮೇಶ್ವರ ಹಿರೇಮಠ

ಸಮರ್ಥ ಹಿಂದೂಸ್ತಾನಿ ಸಂಗೀತ ಸಾಧಕ ಸ್ವಾಮಿ ಸಂಗಮೇಶ್ವರ ಹಿರೇಮಠ ಅವರು.
ಬಾಗಲಕೋಟೆ ಜಿಲ್ಲೆಯ ಮಧುರಖಂಡಿ ಗ್ರಾಮದಲ್ಲಿ ೧೯೩೦ರಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಆ ನಂತರ ಇಡೀ ಜೀವನ ಸಂಗೀತ ಸಾಧನೆಗೆ ಮುಡಿಪು. ಅವರ ತಾತನ ಕಾಲದಿಂದಲೂ ಬೆಳೆದು ಬಂದಿರುವ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು.
ಶ್ರೀ ಗಣಪತಿರಾವ್ ಗುರುವ ಜಮಖಂಡಿ ಅವರಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ. ೨೨ನೇ ವಯಸ್ಸಿಗೇ ಕಚೇರಿ ನೀಡಿದ ಹೆಗ್ಗಳಿಕೆ ಅವರದು. ತದನಂತರ ಮೃತ್ಯುಂಜಯ ಪುರಾಣಿಕ ಮಠ, ಪ್ರಭುದೇವ ಸರದಾರ, ಗುರುಬಸವಾರ್ಯ ಬ್ಯಾಡಗಿ ಅವರಿಂದ ಸಂಗೀತ ಕಲಿಯುವ ಕಾಯಕದ ಮುಂದುವರಿಕೆ. ಧಾರವಾಡದಲ್ಲಿ ಪಂಡಿತ ಬಸವರಾಜ ರಾಜಗುರು ಅವರ ಬಳಿ ಹತ್ತು ವರ್ಷ ಕಾಲ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತ ಜ್ಞಾನ ಸಂಪಾದನೆ.
ಧಾರವಾಡ ಆಕಾಶವಾಣಿ ಕೇಂದ್ರದಿಂದ ಹತ್ತಾರು ಬಾರಿ ಅವರ ಸಂಗೀತ ಕಾರ್ಯಕ್ರಮಗಳ ಪ್ರಸಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ತುಲಾಭಾರ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
ದೆಹಲಿ, ಮುಂಬೈ, ಪೂನಾ, ಬೆಂಗಳೂರು,ಗೋವಾ, ಮತ್ತಿತರ ಪ್ರದೇಶಗಳಲ್ಲಿ ಸಂಗೀತ ಕಛೇರಿ ನೀಡಿದ ಹಿರಿಮೆ ಶ್ರೀ ಸ್ವಾಮಿ ಸಂಗಮೇಶ ಹಿರೇಮಠ ಅವರದು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿದ್ವಾನ್ ಎಂ.ಜಿ. ವೆಂಕಟರಾಘವನ್

ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸ ಪ್ರಾರಂಭಿಸಿ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ಅಪ್ರತಿಮೆ ಪ್ರತಿಭೆ ಪ್ರದರ್ಶಿಸುತ್ತಿರುವ ಶ್ರೇಷ್ಠ ಗಾಯಕರು ವಿದ್ವಾನ್ ಎಂ. ಜಿ. ವೆಂಕಟರಾಘವನ್ ಅವರು.
ತಾಯಿ, ಸಂಗೀತ ವಿದುಷಿ ಶ್ರೀಮತಿ ಸಾವಿತ್ರಮ್ಮನವರಿಂದ ಸತತ ೧೫ ವರ್ಷಗಳ ಸಂಗೀತ ಶಿಕ್ಷಣ ಪಡೆದ ಶ್ರೀ ವೆಂಕಟರಾಘವನ್ ಅವರು ತಮ್ಮ ೧೧ನೇ ವಯಸ್ಸಿನಲ್ಲೇ ಕರ್ನಾಟಕ ಸಂಗೀತದ ೭೨ ಮೇಳ ರಾಗಗಳನ್ನು ನಿರರ್ಗಳವಾಗಿ ಹಾಡುತ್ತಿದ್ದ ಅದ್ವಿತೀಯ ಪ್ರತಿಭಾವಂತರು. ಮೇರು ಗಾಯಕ ಡಾ|| ಬಾಲ ಮುರಳಿ ಕೃಷ್ಣರವರಲ್ಲಿ ೬ ವರ್ಷಗಳ ಕಾಲ ಉನ್ನತ ಸಂಗೀತಾಭ್ಯಾಸ. ಬಿ.ಎಸ್‌ಸಿ ಹಾಗೂ ಎಂಜನಿಯರಿಂಗ್ ಪದವೀಧರರು.
ವಿಶ್ವಮಾನವ ಬಸವಣ್ಣ, ಮಹಾತ್ಮ ಏಸು, ಅಭಿಜ್ಞಾನ ಶಾಕುಂತಲ ಮೊದಲಾದ ರಾಷ್ಟ್ರೀಯ ಮಟ್ಟದ ಬ್ಯಾಲೆಗಳಿಗೆ ಸಂಗೀತ ನಿರ್ದೇಶನ ನೀಡಿದ ಹೆಮ್ಮೆ ಇವರದು.
ಕರ್ನಾಟಕದ ಸುಪ್ರಸಿದ್ಧ ‘ಪ್ರಭಾತ್ ಕಲಾವಿದರು’ ಸಂಸ್ಥೆಯ ಅನೇಕ ನೃತ್ಯರೂಪಕಗಳಿಗೆ ಹಿನ್ನೆಲೆ ಗಾಯನ, ವಚನಸಾಹಿತ್ಯ, ದಾಸಸಾಹಿತ್ಯ, ಡಾ| ಡಿವಿಜಿ ಹಾಗೂ ಅನ್ನಮಾಚಾರ್ಯರ ಕೃತಿಗಳಿಗೆ ರಾಗ ಸಂಯೋಜಿಸಿ, ಹಾಡಿದ್ದು ಸಂಗೀತ ಕ್ಷೇತ್ರಕ್ಕೆ ನೀಡಿದ ಅನನ್ಯ ಕಾಣಿಕೆ, ಡಿವಿಜಿಯವರ ‘ಅನ್ತಃಪುರ ಗೀತೆ’ಯನ್ನು ಧಾರಾವಾಹಿಯಾಗಿ ನಿರ್ಮಿಸಿ, ನಿರ್ದೇಶಿಸಿ ಬೆಂಗಳೂರು ದೂರ ದರ್ಶನದ ಮೂಲಕ ಪ್ರಸಾರ ಮಾಡಿ ಅಪಾರ ಖ್ಯಾತಿಗಳಿಸಿದರು.
ಹಂಸಿಕಾ, ಬೃಹತಿ, ಪ್ರಣಯರಾಗಿಣಿ, ಕನ್ನಡ ಹಂಸ, ಮಧುರಕನ್ನಡ ಮೊದಲಾದ ೩೦ ಹೊಸ ರಾಗಗಳನ್ನು ಸೃಷ್ಟಿಸಿ ಪ್ರಚುರ ಪಡಿಸಿದ ಹಿರಿಮೆಗೆ ಪಾತ್ರರು. ಸಂಗೀತ ಲಕ್ಷ ವಿಜ್ಞಾನ, ಸಂಗೀತ ವೈದ್ಯಕೀಯ ಮೌಲ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಲೇಖನ ರಚನೆ, “ನಾದ ಹಂಸ ಅಕಾಡೆಮಿ ಆಫ್ ಮ್ಯೂಸಿಕ್” ಸಂಗೀತ ಶಾಲೆಯ ಮೂಲಕ ಎಳೆಯರಲ್ಲಿ ಪರಂಪರಾಗತ ಸಂಗೀತ ಕಲೆಯನ್ನು ಬೇರೂರಿ, ಚಿಗುರಿಸುತ್ತಿದ್ದಾರೆ.
ಭಾರತ ಸರ್ಕಾರದಿಂದ ಸೀನಿಯರ್ ಫೆಲೊಷಿಪ್ ಗೌರವ, ಗುರುಶಿಷ್ಯ ಪರಂಪರೆ ಯೋಜನೆಯಲ್ಲಿ ಸಂಗೀತ ಗುರುವಾಗಿ ನೇಮಕ, ಬೆಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಮೊದಲಾದ ಗೌರವಗಳು ಇವರ ಪಾಲಾಗಿವೆ.
ಸಂಗೀತಕ್ಕಾಗಿ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡ ವೃತ್ತಿಶೀಲ ಕಲೋಪಾಸಕ ವಿದ್ವಾನ್ ಎಂ.ಜಿ. ವೆಂಕಟರಾಘವನ್
ಅವರು.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಕಜಾ ರಾಮಕೃಷ್ಣಯ್ಯ

ಪಂಕಜಾ ರಾಮಕೃಷ್ಣಯ್ಯನವರು ಪದವಿಯ ನಂತರ ನೃತ್ಯದತ್ತ ಒಲವು ಬೆಳಸಿಕೊಂಡು ನಾಟ್ಯಾಚಾರ್ಯ ಎಂ. ವಿಷ್ಣುದಾಸ್ ಗುರುಗಳನ್ನಾಗಿ ಸ್ವೀಕರಿಸಿ ನಾಟ್ಯವನ್ನು ಅಭ್ಯಾಸ ಮಾಡಿದರು. ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾಗಿ ನಂತರ ಕಥಕ್ ಪ್ರಾಕಾರವನ್ನೂ ತಮ್ಮದಾಗಿಸಿಕೊಂಡರು.

ತಾವು ಕಲಿತ ವಿದ್ಯೆಯನ್ನು ಆಸಕ್ತರಿಗೆ ಕಲಿಸುವ ಉದ್ದೇಶದಿಂದ ಪಂಕಜಾ ರಾಮಕೃಷ್ಣಯ್ಯ ಅವರು ಮೈಸೂರಿನಲ್ಲಿ ಸರ್ವೇಶ್ವರ ನೃತ್ಯ ಮಂದಿರದ ಮೂಲಕ ಆಸಕ್ತ ಯುವ ಯುವತಿಯರಿಗೆ, ವಿಶೇಷವಾಗಿ ಹಿಂದುಳಿದ ವರ್ಗಗಳ ಮತ್ತು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯ, ಸಂಗೀತ, ವಾದ್ಯ ಸಂಗೀತ, ಚಿತ್ರಕಲೆ ತರಬೇತಿ ನೀಡುವ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಇಂದೂ ವಿಶ್ವನಾಥ್

ಚಿಕ್ಕಂದಿನಲ್ಲಿಯೇ ಸಾಂಪ್ರದಾಯಿಕ ಸಂಗೀತ ಶಿಕ್ಷಣ ಪಡೆದ ಇಂದೂ ವಿಶ್ವನಾಥ್ ಅವರು ನಂತರದ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ತರಬೇತಿ ಪಡೆದರು. ಹಿನ್ನೆಲೆ ಗಾಯನದಲ್ಲಿ ಡಿಪ್ಲೋಮಾ ಗಳಿಸಿರುವ ಇಂದೂ ವಿಶ್ವನಾಥ್‌ ಅವರ ಆಕಾಶವಾಣಿ, ದೂರದರ್ಶನದ ‘ಎ’ ಶ್ರೇಣಿ ಕಲಾವಿದೆ.

೧೦೦ಕ್ಕೂ ಹೆಚ್ಚು ಧ್ವನಿಸುರಳಿಗಳಿಗೆ ಕಂಠದಾನ ಮಾಡಿರುವ ಇಂದೂ ವಿಶ್ವನಾಥ್ ಅವರು ಸ್ವತಂತ್ರವಾಗಿ ೨೫ಕ್ಕೂ ಹೆಚ್ಚು ಧ್ವನಿಸುರಳಿಗಳನ್ನು ತಾವೇ ತಯಾರಿಸಿದ್ದಾರೆ. ಚಲನಚಿತ್ರ ಹಿನ್ನಲೆ ಗಾಯಕಿಯಾಗಿ ಹೆಸರು ಮಾಡಿರುವ ಅವರು ದಕ್ಷಿಣ ಭಾರತದ ಹಲವಾರು ಗಾಯಕರೊಂದಿಗೆ ಹಾಡಿದ್ದಾರೆ. ಚಲನಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿರುವ ಇವರು

ಅನೇಕ ನೃತ್ಯ ರೂಪಕಗಳಿಗೆ ಟೆಲಿ ಧಾರವಾಹಿಗಳಿಗೆ ಸಂಗೀತ ನೀಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳಿಗೆ ಇಂದೂ ವಿಶ್ವನಾಥ್ ಅವರು ಪಾತ್ರರಾಗಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಎಸ್. ಶಂಕರ್

ವಿದ್ವಾನ್ ಎಸ್. ಶಂಕರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಿಸಿ ಎಲ್ಲಾ ವಾಗ್ಗೇಯಕಾರರ ಕೃತಿಗಳನ್ನು ಜನಮನಕ್ಕೆ ತಲುಪಿಸಿದವರು. ಆಕಾಶವಾಣಿ ಎ ಟಾಪ್ ಕಲಾವಿದರಾಗಿ ವಿದ್ವಾನ್ ಎಸ್. ಶಂಕರ್ ಅವರು ದೇಶ ವಿದೇಶಗಳ ಹಲವಾರು ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಗೌರವ ಪುರಸ್ಕಾರವೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳೂ ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಿ. ಕುಮಾರವಾಸ್

ಸುಪ್ರಸಿದ್ಧ ಹಿಂದೂಸ್ತಾನಿ ಗ್ವಾಲಿಯರ್ ಮತ್ತು ಕಿರಾಣ ಘರಾನದಲ್ಲಿ ಮೂರು ದಶಕಗಳಿಂದ ಗಾಯಕರಾಗಿರುವ ಡಿ. ಕುಮಾರದಾಸ್ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ‘ಎ’ ಶ್ರೇಣಿ ಗಾಯಕರಾಗಿ ಕಾಲು ಶತಮಾನ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದುಕೊಂಡ ಕುಮಾರವಾಸ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದ ಜೊತೆಗೆ ವಚನ ಸಾಹಿತ್ಯ ಮತ್ತು ದಾಸರ ಕೀರ್ತನ ಗಾಯನದಲ್ಲೂ ಖ್ಯಾತಿ ಪಡೆದಿದ್ದಾರೆ.

ಕನ್ನಡ ಸಾಹಿತ್ಯವನ್ನು ಸಂಗೀತದಲ್ಲಿ ಅಳವಡಿಸಿಕೊಂಡು ನಾಡು-ನುಡಿ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿರುವ ಕುಮಾರದಾಸ್ ಅವರು ವಚನ ಹಾಗೂ ಭಜನೆ ಗಾಯಕರಾಗಿ ದೇಶದ ತುಂಬಾ ಹೆಸರು ಪಡೆದವರು. ಇವರಿಗೆ ರಮಣಶ್ರೀ ಶರಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿ. ಮಣಿ

ಪರಂಪರೆಯಿಂದ ಬಂದ ಕಲೆಯನ್ನು ಮುಂದುವರಿಸುತ್ತಿರುವ ವಿ. ಮಣಿ ಅವರು ಚಿಕ್ಕಂದಿನಿಂದಲೇ ಸಂಗೀತದೆಡೆಗೆ ನಡೆದರು. ತಂದೆಯಿಂದ ಡೋಲು ವಾದನ ಕಲಿತ ವಿ. ಮಣಿ ನಂತರ ಅನೇಕ ಹಿರಿಯ ಡೋಲು ವಿದ್ವಾಂಸರಲ್ಲಿ ತರಬೇತಿ ಪಡೆದರು. ದಕ್ಷಿಣ ಭಾರತದ ಹಲವಾರು ಹಿರಿಯ ವಿದ್ವಾಂಸರೊಂದಿಗೆ ವಿ. ಮಣಿ ಅವರು ದೇಶ-ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕುನ್ನ ಕುಡಿ ವೈದ್ಯನಾಥನ್, ಕದ್ರಿ ಗೋಪಾಲನಾಥ್ ಮೊದಲಾದ ವಿದ್ವಾಂಸರ ಜೊತೆ ಡೋಲುವಾದಕರಾಗಿ ನೂರಾರು ಕಚೇರಿಗಳಲ್ಲಿ ಸಂಗಾತಿಯಾಗಿದ್ದ ವಿ. ಮಣಿ ಅವರು ಅನೇಕ ಧ್ವನಿಸುರಳಿಗಳನ್ನು ಹಾಗೂ ಧ್ವನಿ ಸಾಂದ್ರಿಕೆಗಳನ್ನು ಹೊರತಂದಿದ್ದಾರೆ. ಡೋಲು ವಾದನದಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿರುವ ಮಣಿ ಅವರು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ನಾಲ್ಕೂವರೆ ದಶಕಗಳಿಂದ ನಿರಂತರವಾಗಿ ಡೋಲು ಕಚೇರಿಗಳನ್ನು ಮಾಡುತ್ತಿರುವ ವಿ. ಮಣಿ ಅವರು ವೀಣೆ, ಮ್ಯಾಂಡೊಲೀನ್ ವಾದನ ಹಾಗೂ ಗಾಯನದಲ್ಲಿಯೂ ಪರಿಣತಿ ಹೊಂದಿದ್ದಾರೆ. ಇವರಿಗೆ ಕಲೆ ಮಾಮಣಿ ಗೌರವವೂ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಗೌರಾಂಗ ಕೋಡಿಕಲ್

ಸಂಗೀತದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ನಾಡಿನ ಉತ್ತಮ ತಬಲಾ ವಾದಕರು
ಶ್ರೀ ಗೌರಾಂಗ ಕೋಡಿಕಲ್ ಅವರು.
ತಂದೆಯಿಂದ ತಬಲವಾದನದ ಪ್ರಾರಂಭಿಕ ಶಿಕ್ಷಣ. ಅನಂತರ ಮುಂಬನ ಶಶಿಬೆಳ್ಳಾರೆ, ಹೈದರಾಬಾದಿನ ಶೇಕ್ದಾವೂದ್ ಮತ್ತು ಬೆಂಗಳೂಲಿನ ಡಿ.ಎಸ್. ಗರೂಡ ಅವರಲ್ಲಿ ಪ್ರೌಢಶಿಕ್ಷಣ ಪಡೆದು ಗೌರಾಂಗ ಕೋಡಿಕಲ್ ಅವರು ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಗುರುಕುಲಪರಂಪರೆಯಲ್ಲಿ ತಬಲಾವಾದನ ಅಭ್ಯಾಸ ಮಾಡಿದ ಗೌರಾಂಗ ಕೋಡಿಕಲ್ ಅವರು ಬಾಲ್ಯದಲ್ಲೇ ತಬಲಾವಾದನದಿಂದ ಎಲ್ಲರ ಗಮನ ಸೆಳೆದು ನಂತರದ ದಿನಗಳಲ್ಲಿ ಅನೇಕ ಪ್ರಸಿದ್ಧ ಗಾಯಕಲಗೆ, ವಾದಕರಿಗೆ ತಬಲಾ ಸಾಥಿ ನೀಡಿದಒಲಮೆಗೆ ಪಾತ್ರರು.
ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ತಬಲ ಸಾಥಿ ನೀಡಿರುವ ಇವರು ದಿನಕರ ಕೈಕಿಣಿ ಅವರೊಂದಿಗೆ ಅಮೆಲಕ, ಕೆನಡ ಹಾಗೂ ಇಂಗ್ಲೆಂಡ್ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಹಲವಾರು ಕಚೇಲಗಳಲ್ಲಿ ಪಾಲ್ಗೊಂಡಿದ್ದಾರೆ.
ಹವ್ಯಾಸಿ ಕಲಾವಿದರಾದ ಗೌರಾಂಗ ಕೋಡಿಕಲ್ ಅವರು ಬೆಂಗಳೂಲಿನ ಸುರ್ಸಾಗರ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರು.
ತಬಲಾವಾದನದಲ್ಲಿ ಇವರ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೦- ೨೦೦೧ನೇ ಸಾಱನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಕದ ಪ್ರತಿಭಾವಂತ ತಬಲಾ ವಾದಕರಲ್ಲೊಬ್ಬರು ಶ್ರೀ ಗೌರಾಂಗ ಕೋಡಿಕಲ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಬಸಪ್ಪ ಎಚ್. ಭಜಂತ್ರಿ

ಪ್ರಸಿದ್ಧ ಕ್ಲಾಲಿಯೋನೆಟ್ ಹಾಗೂ ಶಹನಾಯಿ ವಾದಕರು ಕರ್ನಾಟಕ ಭೂಷಣ ಶ್ರೀ ಬಸಪ್ಪ ಎಚ್. ಭಜಂತ್ರಿ ಅವರು.
ಬಾಗಲಕೋಟೆಜಿಲ್ಲೆ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದ ಶ್ರೀ ಬಸಪ್ಪ ಎಚ್. ಭಜಂತ್ರಿ ಅವರು ತಮ್ಮ ಎಂಟನೆಯ ವಯಸ್ಸಿನಲ್ಲಿ ಸಂಗೀತಲೋಕಕ್ಕೆ ಪ್ರವೇಶ. ಅಜ್ಜ ಫಕೀರಪ್ಪನವರಿಂದ ಕ್ಲಾಲಯೋನೆಟ್ ಕಂಕೆ. ನಂತರ ಪಂಡಿತ ಬಸವರಾಜ ರಾಜಗುರು, ಪಂಚಾಕ್ಷ ಸ್ವಾಮಿ ಮತ್ತಿಗಟ್ಟಿ, ಅರ್ಜುನ್ ಸಾ ನಾಕೋಡ್, ಚನ್ನಬಸಪ್ಪ ಬನ್ನೂರ ಗವಾಯಿ- ಮೊದಲಾದವರಲ್ಲಿ ಸಂಗೀತಾಭ್ಯಾಸ ಹಾಗೂ ಅವರಿಂದ ಮಾರ್ಗದರ್ಶನ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಲಾಲಿಯೋನೆಟ್ ಮತ್ತು ಶಹನಾಯಿ ವಾದನದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕಾಣಿಕೆ ಮಹತ್ವಪೂರ್ಣವಾದುದು. ಹಾಡುಗಾಲಕೆಯಲ್ಲೂ ವಿದ್ವತ್ ಮಾಡಿರುವ ಶ್ರೀ ಬಸಪ್ಪ ಎಚ್. ಭಜಂತ್ರಿ ಮೈಸೂರು ದಸರಾ,ಹಂಪಿ, ಪಟ್ಟದಕಲ್ಲು, ನವರಸಪುರ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ಹಾಗೂ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಶಹನಾಯಿ ನುಡಿಸಿ ಜನಮನ್ನಣೆಗಳಿಸಿರುವ ಕಲಾವಿದರು.
ಹಿಂದೂಸ್ತಾನಿ ವಾದ್ಯ ಸಂಗೀತ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಕ್ಲಾಲಿಯೋನೆಟ್ ಹಾಗೂ ಶಹನಾಯಿಯ ಅಪೂರ್ವ ಸಾಧಕರು ಶ್ರೀ ಬಸಪ್ಪ ಎಚ್. ಭಜಂತ್ರಿ ಅವರು

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಶೇಷಪ್ಪಾ ಗದ್ಗರು

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆ ಮಾಡಿ ನೂರಾರು ಶಿಷ್ಯರನ್ನು ರೂಪಿಸಿದ ಕಿರಾಣಾ ಹಾಗೂ ಗ್ವಾಲಿಯರ್ ಪದ್ಧತಿಯ ಪ್ರಸಿದ್ಧ ಗಾಯಕರು
ತಿಂದ ಶ್ರೀ ಶೇಷಪ್ಪಾ ಗಬ್ಬರು ಅವರು.
೧೯೪೭ರಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬಲಿನಲ್ಲಿ ಜನನ. ಯಕ್ಷಗಾನ ಹಾಗೂ ನಾಟಕ ಸಂಗೀತ ಪರಂಪರೆಯಿಂದ ಬಂದವರು. ಶ್ರೀ ಹಣಮಂತಪ್ಪಾ ಹೀರಾ ಅವರಲ್ಲಿ ಪ್ರಾರಂಭಿಕ ಸಂಗೀತಾಭ್ಯಾಸ. ನಂತರ ಡಾ. ಪುಟ್ಟರಾಜ ಗವಾಯಿಯವರ ವೀರೇಶ್ವರ ಪುಣ್ಯಾಶ್ರಮ ಸಂಗೀತ ಮಹಾವಿದ್ಯಾಲಯದಲ್ಲಿ ಹಏನೈದು ವರ್ಷ ಸಂಗೀತಾಭ್ಯಾಸ ಪಡೆದು ಪಾಂಡಿತ್ಯ ಸಂಪಾದನೆ. ೧೯೮೧ರಿಂದ ಬಸವಕಲ್ಯಾಣದ ಸರಕಾಲ ಪದವಿಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಕೆ. ಬೀದರ್, ಹೈದರಾಬಾದ್, ಗುಲ್ಬರ್ಗಾ, ಬಸವಕಲ್ಯಾಣ ಮುಂತಾದ ಸ್ಥಳಗಳಲ್ಲಿ ಕಾರ್ಯಕ್ರಮ ನೀಡಿಕೆ. ಹೈದರಾಬಾದ್ ಹಾಗೂ ಗುಲ್ಬರ್ಗಾ ಆಕಾಶವಾಣಿ ಕೇಂದ್ರಗಳಿಂದಲೂ ಕಾರ್ಯಕ್ರಮ ಪ್ರಸಾರ.
ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಕ್ತಿ ಸಂಗೀತ ಹೀಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಶೋತೃಗಳ ಮನರಂಜಿಸುತ್ತಿರುವ ಶ್ರೀ ಶೇಷಪ್ಪಾ ಗಟ್ಟೂರು ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಸಿದ್ಧರಾಮ ಜಂಬಲದಿನ್ನಿ ಪ್ರಶಸ್ತಿ, ಉತ್ತಮ ಸಂಗೀತ ಶಿಕ್ಷಕರೆಂಬ ಪುರಸ್ಕಾರ, ಅಭಿನಂದನಾ ಗ್ರಂಥ ಅರ್ಪಣೆ ಮುಂತಾದವು ಶ್ರೀ ಶೇಷಪ್ಪಾ ಗಬ್ಬರು ಅವಲಗೆ ಸಂದ ಇತರ ಪ್ರಶಸ್ತಿ ಪುರಸ್ಕಾರಗಳು. ಪ್ರಸಕ್ತ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರು.
ಅಚಲ ಶ್ರದ್ಧೆ, ಸತತ ಸಾಧನೆಯಿಂದ ಸಿದ್ಧಿ ಗಳಿಸಿ, ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹಿಂದೂಸ್ತಾನ ಸಂಗೀತ ವಿದ್ವಾಂಸರು ಶ್ರೀ ಶೇಷಪ್ಪಾ ಗಬ್ಬರು ಅವರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ

ತಮ್ಮ ನಾಲ್ಕನೇಯ ವಯಸ್ಸಿನಲ್ಲೇ ಕಚೇರಿ ನಡೆಸಿಕೊಟ್ಟಿದ್ದ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ದೇಶದ ಕಿರಿಯ ಪೀಳಿಗೆಯ ಹಿಂದೂಸ್ತಾನಿ ಶಾಸ್ತ್ರೀಯ ಹಾಡುಗಾರ್ತಿಯರಲ್ಲಿ ಪ್ರಮುಖರು. ಶಾಸ್ತ್ರೀಯ ಸಂಗೀತ, ದೇವರ ನಾಮ, ಸುಗಮ ಸಂಗೀತ, ಹಿನ್ನೆಲೆ ಗಾಯನ ಹೀಗೆ ಬಹುಮುಖ ಸಂಗೀತ ಪ್ರವೀಣೆಯಾದ ಶ್ರೀಮತಿ ಸಂಗೀತಾ ಹಿಂದೂಸ್ತಾನಿ ಗಾಯನ ಶಿಕ್ಷಕಿಯೂ ಹೌದು. ಸುಶ್ರಾವ್ಯ ಸಂಗೀತಗಾರ್ತಿಯೆಂದು ಕಿರಿಯ ವಯಸ್ಸಿನಲ್ಲೇ ಜನಪ್ರಿಯರಾದ ಶ್ರೀಮತಿ ಸಂಗೀತಾ ಸವಾಯಿ ಗಂಧರ್ವ ಸಂಗೀತೋತ್ಸವ ಸೇರಿದಂತೆ ದೇಶ ವಿದೇಶಗಳ ಹಲವು ಪ್ರತಿಷ್ಟಿತ ಸಂಗೀತೋತ್ಸವಗಳಲ್ಲಿ ತಮ್ಮ ಗಾಯನ ಗಂಗೆ ಹರಿಸಿದ್ದಾರೆ.
ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಶ್ರೀಮತಿ ಸಂಗೀತಾ ಅವರು ಹಾಡಿರುವ ಅನೇಕ ಧ್ವನಿಸುರಳಿ ಹಾಗೂ ಸಿಡಿಗಳು ಜನ ಮೆಚ್ಚುಗೆ ಪಡೆದಿವೆ.
ಈವರೆಗೆ ೨,೫೦೦ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿರುವ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ಗಾಯನ ಕ್ಷೇತ್ರದ ಕೋಗಿಲೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ವಿ. ಎ. ರಾಮದಾಸ್

ಮಂಗಳವಾದ್ಯವಾದ ನಾಗಸ್ವರ ಕಲೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸುವತ್ತ ದಾಪುಗಾಲು ಹಾಕಿರುವ ನಾದಸ್ವರ ಕಲಾವಿದರು ಹೊಸಕೋಟೆ ವಾಗಟದ ಶ್ರೀ ವಿ.ಎ. ರಾಮದಾಸ್ ಅವರು. ತಂದೆಯವರಿಂದಲೇ ನಾಗಸ್ವರದ ಮೊದಲ ಪಾಠಗಳನ್ನು ಹತ್ತನೆಯ ವಯಸ್ಸಿನಲ್ಲಿಯೇ ಕಲಿತ ಶ್ರೀ ವಿ.ಎ. ರಾಮದಾಸ್ ಬೇತಮಂಗಲ ಶ್ರೀ ಗಂಗಾಧರಂ ಹಾಗೂ ಹೊಸೂರು ರಾಜಣ್ಣನವರಿಂದ ಹೆಚ್ಚಿನ ಶಿಕ್ಷಣ ಪಡೆದರು.
ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಬಿ.ಹೈ ಗ್ರೇಡ್ ಕಲಾವಿದರಾಗಿದ್ದು ದಕ್ಷಿಣ ಭಾರತದ ಅನೇಕ ಊರುಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀ ವಿ.ಎ. ರಾಮದಾಸ್ ಅವರು ಪಡೆದಿರುವ ಗೌರವ ಪುರಸ್ಕಾರಗಳು ಹಲವು ಹತ್ತು.
ನಾಗಸ್ವರ ಕಲೆಯಲ್ಲಿ ಅನೇಕ ಪ್ರಯೋಗಗಳಿಗೆ ಕೈಹಾಕಿ ಯಶಸ್ಸು ಕಂಡಿರುವ ಶ್ರೀ ವಿ.ಎ. ರಾಮದಾಸ್ ಅವರು ಹೊಸಕೋಟೆಯಲ್ಲಿರುವ ಗುರುಕುಲದಲ್ಲಿ ಯುವಕರನ್ನು ನಾಗಸ್ವರ ಕಲೆಯಲ್ಲಿ ತರಬೇತಿಗೊಳಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ನಾಗನಾಥ ಒಡೆಯರ್

ಹಿಂದೂಸ್ತಾನಿಯ ಕಿರಾಣಾ ಘರಾಣೆಯ ಸಂಗೀತ ಶೈಲಿಯ ಗಾಯಕರಲ್ಲಿ ಪಂಡಿತ ನಾಗನಾಥ ಒಡೆಯರ್ ಅವರೂ ಒಬ್ಬರು.
ಧಾರವಾಡದ ಬಂಕಾಪುರದವರಾದ ಶ್ರೀ ನಾಗನಾಥ ಒಡೆಯರ್ ಅವರು ಪ್ರಾರಂಭಿಕ ಶಿಕ್ಷಣವನ್ನು ಪಂಡಿತ ವಿ.ಹೆಚ್. ಇನಾಂದಾರ್ ಅವರಲ್ಲಿ ಪಡೆದು ಕಿರಾಣಾ ಘರಾಣೆಯನ್ನು ರಾಘವೇಂದ್ರ ಚವಟಿ, ಡಾ. ಗಂಗೂಬಾಯಿ ಹಾನಗಲ್ ಅವರಲ್ಲಿ ಅಭ್ಯಾಸಮಾಡಿದರು.
ಧಾರವಾಡದ ಆಕಾಶವಾಣಿ ಕಲಾವಿದರಾದ ಪಂಡಿತ ನಾಗನಾಥ ಒಡೆಯರ್ ಅವರು ದೇಶದ ಹಲವು ಪ್ರಮುಖ ನಗರಗಳಲ್ಲಿ ತಮ್ಮ ಸಮರ್ಥ ಗಾಯನದಿಂದ ಕೇಳುಗರ ಮನ ಗೆದ್ದಿದ್ದಾರೆ.
ಪ್ರತಿಷ್ಟಿತ ಸಂಗೀತ ಉತ್ಸವಗಳಲ್ಲಿ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಕಾರ್ಯಕ್ರಮ ನೀಡುತ್ತ ಬಂದಿರುವ ಪಂಡಿತ ನಾಗನಾಥ ಒಡೆಯರ್ ಅವರು ಒಳ್ಳೆಯ ಹಾರ್ಮೋನಿಯಂ ವಾದಕರು ಹೌದು. ಹಿಂದೂಸ್ಥಾನಿ ಗಾಯಕರಾಗಿ, ಉತ್ತಮ ಹಾರ್ಮೋನಿಯಂ ವಾದಕರಾಗಿ ಹೆಸರು ಮಾಡಿರುವ ಪಂಡಿತ ನಾಗನಾಥ ಒಡೆಯರ್ ಅವರಿಗೆ ಹಲವು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ

ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಬಳಕೆಯಾಗುವ ಪಿಟೀಲು ವಾದ್ಯದಲ್ಲಿ ನಿಪುಣತೆ ಸಾಧಿಸಿದವರು ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ.
ಗದಗದವರಾದ ಕಬಾಡಿ ಅವರ ತಂದೆ ಹೆಸರಾಂತ ಹಾರೋನಿಯಂ ವಾದಕ ವಿಠಲ ಸಾ ಕಬಾಡಿ. ಶ್ರೀ ತುಕಾರಾಮ ಸಾ ವಯೋಲಿನ್ ಹಿಡಿದು ಮುನ್ನಡೆದರು.
ಸಬಣಸಾ ಕಲಬುರ್ಗಿ, ಡಾ. ಪುಟ್ಟರಾಜ ಗವಾಯಿ ನಂತರ ಖ್ಯಾತ ಪಿಟೀಲುವಾದಕ ಗಜಾನನ ರಾವ್ ಜೋಷಿಯವರಲ್ಲಿ ಪಿಟೀಲು ಶಿಕ್ಷಣ ಪಡೆದ ಶ್ರೀ ತುಕಾರಾಮಸಾ ದೇಶದುದ್ದಕ್ಕೂ ಗುರುಗಳ ಸಾಥಿದಾರರಾಗಿ ಹೋಗಿಬಂದರು.
ಗದುಗಿನಲ್ಲಿ ಸಂಗೀತ ಕೇಂದ್ರ ಸ್ಥಾಪಿಸಿದ ಶ್ರೀ ತುಕಾರಾಮ ಸಾ ಸಂಡೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿದ್ದರು. ಕೊನೆಗೆ ಧಾರವಾಡ ಆಕಾಶವಾಣಿ ಕೇಂದ್ರದ ನಿಲಯದ ಕಲಾವಿದರಾಗಿದ್ದು ನಿವೃತ್ತಿ ನಂತರ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.
ಭೀಮಸೇನ್‌ಜೋಷಿ, ಮನ್ಸೂರ್, ರಾಜಗುರು, ಗಂಗೂಬಾಯಿ ಹಾನಗಲ್ ಮೊದಲಾದ ಖ್ಯಾತ ಗಾಯಕರೊಂದಿಗೆ ಪಿಟೀಲು ಸಾಥಿ ನೀಡಿರುವ ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡಮಿ ಗೌರವ ಪ್ರಶಸ್ತಿ ಲಭಿಸಿದೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಸುಮಾ ಸುಧೀಂದ್ರ

ಸುಪ್ರಸಿದ್ಧ ವೀಣಾ ವಿದ್ವಾಂಸರಾದ ಎಲ್ ರಾಜಾರಾವ್, ಚಿಟ್ಟಿಬಾಬು, ಎಚ್ ವಿ ಕೃಷ್ಣಮೂರ್ತಿ, ಎಂ ಎ ನರಸಿಂಹಾಚಾರ್ ಅವರ ಶಿಷ್ಯ ಡಾ. ಸುಮಾ ಸುಧೀಂದ್ರ ಅವರು ಇಂದು ನಾಡಿನ ಹಾಗೂ ರಾಷ್ಟ್ರದ ಅಗ್ರಪಂಕ್ತಿಯ ಕಲಾವಿದರಲ್ಲಿ ಒಬ್ಬರು. ಬೆಂಗಳೂರಿನಲ್ಲಿ ೧೯೫೨ರಲ್ಲಿ ಜನಿಸಿದ ಡಾ. ಸುಮಾ ಸ್ನಾತಕೋತ್ತರ ಪದವಿಯ ಜೊತೆಗೆ ವೀಣಾ ಶಿಕ್ಷಣ ಪಡೆದು ವಿದ್ವತ್

ಪರೀಕ್ಷೆಯಲ್ಲಿ ದ್ವಿತೀಯ ಬ್ಯಾಂಕ್ ಗಳಿಸಿ ಈಗ ಕನ್ನಡ ನಾಡಿನ ಶ್ರೇಷ್ಠ : ಪರಂಪರೆಯೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿರುವ ಇವರು ಕರ್ನಾಟಕದಾದ್ಯಂತ ಹಾಗೂ ಚೆನ್ನೈ, ಮುಂಬೈ, ದೆಹಲಿ, ಔರಂಗಾಬಾದ್ ಮುಂತಾದೆಡೆಗಳಲ್ಲಿ ವೀಣಾವಾದನ ಕಚೇರಿ ನೀಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೆರಿಕ, ಸಿಂಗಪುರ್, ಮಲೇಶಿಯಾ ಹಾಗೂ ಇಂಗ್ಲೆಂಡ್ ರಾಷ್ಟ್ರಗಳಲ್ಲಿ ತಮ್ಮ ಕಲೆಯ ಕಂಪನ್ನು ಹರಿಸಿ ನಾಡಿಗೆ ಹೆಮ್ಮೆ ತಂದಿದ್ದಾರೆ.

ಡಾ. ಸುಮಾ ಸುಧೀಂದ್ರ ಅವರು ಪ್ರಾಧ್ಯಾಪಕರಾಗಿ, ಸಂಘಟಕರಾಗಿ, ವೀಣಾವಾದನ ಕಲಾವಿದೆಯಾಗಿ, ಸಂಗೀತ ಸಂಯೋಜಕಿಯಾಗಿ, ಆಡಳಿತಗಾರರಾಗಿ, ತಮ್ಮ ಸ್ಟಿಂಗ್ ಇನ್ಸ್‌ಟ್ರುಮೆಂಟ್ಸ್’ ಮಹಾಪ್ರಬಂಧಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಬಹುಮುಖ ಪ್ರತಿಭೆಯುಳ್ಳ ಇವರ ಕಲಾ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅತ್ಯುತ್ತಮ ವೈಣಿಕ ಪ್ರಶಸ್ತಿ ಗಾನಕಲಾಶ್ರೀ ಬಿರುದು, ವೈಣಿಕ ಕಲಾಭೂಷಣೆ, ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಮುಂತಾದವು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್

ಸಂಗೀತ ಕ್ಷೇತ್ರದ ಹಿರಿಯ ಕಲಾವಿದೆ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಅವರು.

೧೯೨೬ರಲ್ಲಿ ತಿರುವನಂತಪುರದಲ್ಲಿ ಜನನ, ಪಾಲಘಾಟ್ ವೈದ್ಯನಾಥ ಐಯ್ಯರ್, ಕೆ ಎಸ್ ನಾರಾಯಣಸ್ವಾಮಿ, ತಂಜಾವೂರು ವಿ ಶಂಕರನ್, ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್‌ರಂಥ ಹಿರಿಯ ವಿದ್ವಾಂಸರಿಂದ ಸಂಗೀತ ಶಿಕ್ಷಣ.

ಸದ್ದುಗದ್ದಲವಿಲ್ಲದೆ ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡುತ್ತಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ನಾಡಿನ ಹಲವು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಹಾಗೂ ಹೊರನಾಡಿನಲ್ಲಿಯೂ ಸಂಗೀತ ಕಚೇರಿ ನೀಡಿದ್ದಾರೆ. ಶ್ರೀ ರಾಮರಾವ್ ನಾಯಕ್ ಅವರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಕಲಿತಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಹಿಂದೂಸ್ತಾನಿ ಶೈಲಿಯಲ್ಲಿ ಭಜನ್‌ಗಳನ್ನು ಸುಶ್ರಾವ್ಯವಾಗಿ ಹಾಡುವುದರಲ್ಲಿ ನಿಸ್ಸಿಮರು.

ಮದ್ರಾಸ್ ಮ್ಯೂಸಿಕ್‌ ಅಕಾಡೆಮಿಯ ಸ್ವರ್ಣಪದಕ, ಅತ್ಯುತ್ತಮ ಕಿರಿಯ ಕಲಾವಿದೆ ಪ್ರಶಸ್ತಿ ಅತ್ಯುತ್ತಮ ಸಬ್ ಸೀನಿಯರ್ ಪ್ರಶಸ್ತಿ ತಿರುಮಲ ತಿರುಪತಿ ದೇವಾಲಯದ ‘ಗಾನಸರಸ್ವತಿ’ ಬರುದು, ಹಂಸಧ್ವನಿ ಸಭೆಯ ‘ಗಾನಕಲಾ ಪ್ರಪೂರ್ಣೆ’ ಬಿರುದು ಇವರ ಸಾಧನೆಗೆ ಸಂದ ಗೌರವಗಳು. ಅನಂತಪುರ, ಪಾಲ್‌ಘಾಟ್, ಎರ್ನಾಕುಲಂ, ಮಧುರೆ, ಮುಂಬೈ ಮುಂತಾದ ನಗರಗಳಲ್ಲಿ ನಡೆದ ಉತ್ಸವಗಳಲ್ಲಿ ಕಚೇರಿ ನೀಡಿರುವ ಇವರು ‘ಸದ್ಗುರು ಸಂಗೀತ ಸಮಿತಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಂಗೀತ ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಅವರು ಕರ್ನಾಟಕ ಗಾನಕಲಾ ಪರಿಷತ್ತಿನಿಂದ ಸನ್ಮಾನಿತರಾಗಿದ್ದಾರೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ

೧೯೧೭ರಲ್ಲಿ ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕು ಕವಿತಾಳ ಗ್ರಾಮದಲ್ಲಿ ಜನಿಸಿದ ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು ಸಂಗೀತ ಹಾಗೂ ರಂಗಭೂಮಿ ಕ್ಷೇತ್ರಗಳೆರಡಲ್ಲಿಯೂ ಸಾಧನೆಗೈದ ಹಿರಿಯ ಕಲಾವಿದರು.

ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು ಶ್ರೀ ಸಂಗನ ಬಸವ ಸ್ವಾಮಿಗಳಲ್ಲಿ ಸಂಗೀತ ಅಭ್ಯಾಸ ಮಾಡಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆದರು. ನಂತರ ಶ್ರೀಯುತರ ಕಲೆಯ ಕ್ಷೇತ್ರ ರಂಗಭೂಮಿಗೂ ವಿಸ್ತರಿಸಿತು. ನಾಟಕ ನಿರ್ದೆಶನ, ಅಭಿನಯ, ಸಂಗೀತ ನಿರ್ದೇಶನ, ವೇಷಭೂಷಣ ಹೀಗೆ ಹಲವು ನಿಟ್ಟಿನಲ್ಲಿ ಸಾಗಿದ ಅವರ ಕಲಾಸೇವೆ ಹೊರನಾಡಿನ ಮುಂಬೈವರೆಗೂ ಪಸರಿಸಿತು. ೨೨ ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿ, ಸಂಗೀತ ನಿರ್ದೇಶನ ನೀಡಿರುವ ಹಿರಿಮೆ ಇವರದು.

ಸ್ವತಃ ಸಂಗೀತಗಾರರಾದ ಶ್ರೀಯುತರು ೧೫ಕ್ಕೂ ಹೆಚ್ಚು ಪುರಾಣ ವಾಚನ ಕಾರ್ಯಕ್ರಮಗಳನ್ನು ಅರ್ಧಶತಮಾನದಿಂದಲೂ ನಡೆಸಿಕೊಂಡು ಬಂದಿರುವ ಹಿರಿಮೆಗೆ ಪಾತ್ರರು, ಶ್ರೀಯುತರ ಕಲಾ ಸೇವೆಗಾಗಿ ಸಂಗೀತ ಸುಧಾಕರ, ಶೀಘ್ರರಾಗ ರಚನಾ ಚತುರ, ಗಾಯನ ಕೋಕಿಲ ಮುಂತಾದ ಬಿರುದುಗಳು ಲಭಿಸಿವೆ. ಎಂಬತ್ತೈದರ ಹರೆಯದಲ್ಲೂ ಇವರ ಕುಂದದ ಕಲಾಸಕ್ತಿಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’ ನೀಡಿದೆ.

ದೇಶವಿದೇಶಗಳಲ್ಲಿ ನಾಟಕ, ಸಂಗೀತ, ಕೀರ್ತನೆಗಳ ಮೂಲಕ ಕಲೆಯ ರಸದೂಟವನ್ನು ಉಣಬಡಿಸಿದ ಹಿರಿಯ ಚೇತನ ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕೆ ಮಂಜಪ್ಪ

೧೯೨೫ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆಸ್ಥಾನ ವಿದ್ವಾಂಸರಾದ ಪಿಟೀಲು ರಾಮಯ್ಯನವರ ಮನೆತನದಲ್ಲಿ ಜನಿಸಿದ ಶ್ರೀ ಕೆ ಮಂಜಪ್ಪನವರಿಗೆ ಸಂಗೀತ ಕಲೆ ಕರತಲಾಮಲಕ.

ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮೂಡಲಾಟ, ನಾದಸ್ವರ, ಕೊಳಲು, ಹಾಕ್ಕೋನಿಯಂ, ಮುಖವೀಣೆ, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಜುಗಲ್‌ಬಂದಿ, ನಾಟಕ ನಿರ್ದೇಶನ, ಸಂಗೀತ ನಿರ್ದೇಶನ – ಹೀಗೆ ಹಲವಾರು ಕಲಾ ಪ್ರಕಾರಗಳಲ್ಲೂ ಪರಿಣತಿ ಹೊಂದಿರುವ ಅಪರೂಪದ ಕಲಾವಿದ ಶ್ರೀ ಮಂಜಪ್ಪ ಅವರು.

ಕರ್ನಾಟಕ ಸಂಗೀತವನ್ನು ವಿದ್ವಾನ್ ಧರ್ಮಪುರಿ ಕೆ ಲಕ್ಷ್ಮಣ್ ಮತ್ತು ವಿದ್ವಾನ್ ಮದ್ರಾಸ್ ಕೃಷ್ಣನ್ ಅವರಿಂದಲೂ, ಹಿಂದೂಸ್ತಾನಿ ಸಂಗೀತವನ್ನು ಪಂಡಿತ ರಟ್ಟೆಹಳ್ಳಿ ನಾರಾಯಣಪ್ಪ ಮತ್ತು ಪಂಡಿತ ಪಂಚಾಕ್ಷರ ಗವಾಯಿಗಳಿಂದ ಕಲಿತ ಶ್ರೀ ಮಂಜಪ್ಪನವರು ಕಲಾಸಾಧನೆಯನ್ನು ಸದ್ದಿಲ್ಲದೆ ಸಾಧಿಸಿದ್ದಾರೆ.

೧೯೪೮ರಲ್ಲಿ ಶಿವಮೊಗ್ಗ ಜಿಲ್ಲೆಯ ಗಾಮ ಗ್ರಾಮದಲ್ಲಿ ಶ್ರೀ ಮುರಳೀಧರ ಸಂಗೀತ ವಿದ್ಯಾಲಯ ಸ್ಥಾಪಿಸಿ, ಅನಂತರ ಅದರ ಶಾಖೆಗಳನ್ನು ಹಲವೆಡೆ ಎಸರಿಸಿ ಕಲಾಭಿಮಾನಿಗಳ ಮನೋಭಿಲಾಷೆಯನ್ನು ಪೂರೈಸಿದ್ದಾರೆ. ತಮ್ಮ ೭೬ನೆಯ ವಯಸ್ಸಿನಲ್ಲಿಯೂ ಸಂಗೀತ ಕಲೆಗಾಗಿ ಶ್ರಮಿಸುತ್ತಿರುವ ಕಲಾವಿದ ಶ್ರೀ ಮಂಜಪ್ಪ ಅವರು.

ಶ್ರೀಯುತರ ಸಂಗೀತ ಸಾಧನೆಗಾಗಿ ಅವರನ್ನು ಅರಸಿ ಪ್ರಶಸ್ತಿ ಸನ್ಮಾನಗಳು ಹಲವು ಹತ್ತು ಕಲಾಹಂಸ ಪ್ರಶಸ್ತಿ ಕಲಾಪೋಷಕ ಪ್ರಶಸ್ತಿ, ನಾದಗಾನ ಸುಧಾಕರ ಪ್ರಶಸ್ತಿ ಗಾಯಕ ಭೂಷಣ ಪ್ರಶಸ್ತಿ ಮುಂತಾದವು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಗೌರವ ಪಡೆದ ಸಂಗೀತ ವಿದ್ವಾನ್ ಗಾಮದ ಕೆ ಮಂಜಪ್ಪನವರು ಎಲೆಮರೆಯ ಕಾಯಿಯಂತೆ ಕಲಾಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಕಮಲಾ ಪುರಂದರೆ

ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಎರಡರಲ್ಲೂ ಸಾಧನೆ ಮಾಡಿದ ಕಲಾವಿದೆ ಶ್ರೀಮತಿ ಕಮಲಾ ಪುರಂದರೆ,

೧೯೪೦ರಲ್ಲಿ ಸಂಗೀತಗಾರರ ಮನೆತನದಲ್ಲಿ ಜನನ. ಶಿಂ, ಮ್ಯೂಸಿಕ್ ಪದವೀಧರೆ, ಸಂಗೀತ ಅಲಂಕಾರ ಪರೀಕ್ಷೆಯಲ್ಲೂ

ತೇರ್ಗಡೆ. ಹುಟ್ಟಿನಿಂದ ಪಡೆದ ಸಂಗೀತ ಕಲೆಗೆ ಶಿಕ್ಷಣದ ಚೌಕಟ್ಟನ್ನು ನೀಡಿದವರು ಇವರ ಪತಿ ದಿವಂಗತ ಪುರಂದರ ಅವರು

ಜಯಪುರ ಘರಾಣೆಯ ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಹೊಂದಿದ್ದರೂ, ಹಾರ್ಮೋನಿಯ ವಾದನದಲ್ಲಿ ನಿಷ್ಣಾತರು

 

ಶ್ರೀಮತಿ ಕಮಲಾ ಪುರಂದರೆಯವರು ಧಾರವಾಡ ಆಕಾಶವಾಣಿಯಲ್ಲಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ  ಕಾರ್ಯಕ್ರಮಗಳ ಮೂಲಕ  ಚಿರಪರಿಚಿತರ  ತಮ್ಮ ಸುಮಧುರ ಕಂಠದ ಸುಶ್ರಾವ್ಯ ಗಾಯನದಿಂದ  ಜನಮೆಚ್ಚುಗೆ ಗಳಿಸಿದ್ದಾರೆ. ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಗೀತ ವ್ಯಾಸಂಗ ಮಂಡಳಿಯ ಸದಸ್ಯೆಯಾಗಿ ಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತ ಕಲಾಕುಸುಮ ಹಾಗೂ ಸಂಗೀತ ಶಾಸ್ತ್ರ ಗ್ರಂಥಗಳನ್ನು ಅಲ್ಲದೆ ಸಂಗೀತಕ್ಕೆ ಸಂಬಂಧಿಸಿದ ಹಲವಾರು ಲೇಖನಗಳು ಬರೆದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ಪ್ರಾವೀಣ್ಯತೆ ಪಡೆದಿರುವ ಸರಳ ಸಜ್ಜನಿಕೆಯ ವ್ಯಕ್ತಿ ಶ್ರೀಮತಿ ಕಮಲಾ ಪುರಂದರೆ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ

– ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ೧೯೬೪ರಲ್ಲಿ ಜನಸಿದ ಕೃಷ್ಣಮೂರ್ತಿಯವರು ಕಲಾವಿದರ-ಸಾಹಿತ್ಯ ಪ್ರಿಯರ ಮನೆತನದಿಂದ ಬಂದವರು. ತಂದೆ ಬಿ.ಎಸ್. ನಾರಯಣಭಟ್ ಸಾಹಿತ್ಯ ಪ್ರಿಯರು.
ಬಿ.ಕಾಂ. ಪಧವೀಧರರಾಗಿ ಅನಂತರ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಧವಿಗಳಿಸಿ ಸಂಗೀತದಲ್ಲೂ ಆಸಕ್ತಿ ಬೆಳಸಿಕೊಂಡು ಡಾ. ಕೆ. ವರದರಂಗನ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಸಿಸಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲೂ ಸಾಕಷ್ಟು ಕೃಷಿಮಾಡಿ ಮುಂದೆ ಸುಗಮ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಡಾ. ಎಸ್. ಕರೀಂಖಾನ್ ಅವರ ಬಳಿ ಸಾಕಷ್ಟು ವರ್ಷ ಶಿಷ್ಯವೃತ್ತಿ ಮಾಡಿದ್ದಾರೆ. ಜೊತೆಗೆ ಸುಗಮ ಸಂಗೀತದ ಕುರಿತು ಹೆಚ್ಚಿನ ಅಧ್ಯಯನವನ್ನೂ ಮಾಡಿದ್ದಾರೆ.
ರಂಗಭೂಮಿಯಲ್ಲೂ ಸಾಕಷ್ಟು ಕೃಷಿಮಾಡಿ ನಟರಾಗಿ, ನಿರ್ದೇಕರಾಗಿ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಸೇವೆಸಲ್ಲಿಸಿದ್ದಾರೆ.ಚಲನಚಿತ್ರಗಳಲ್ಲೂ ತಮ್ಮ ಪ್ರತಿಭೆ ಬೆಳಗಿಸಿ ಕೆಲವೊಂದು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ತಮ್ಮದೇ ಆದ ಆದರ್ಶ ಸುಗಮ ಸಂಗೀತ ಆಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಕೃಷ್ಣಮೂರ್ತಿಯವರಿಗೆ ಕಾಳಿಂಗ ರಾವ್ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾಗಿ ಹಲವಾರು ಪ್ರಶಸ್ತಿ ಗೌರವಗಳು ಅವರನ್ನು ಅರಿಸಿ ಬಂದಿವೆ ಆನೇಕ ಧ್ವನಿಸುರುಳಿಗಳನ್ನು ಹೊರತಂದಿರುವ ಕೃಷ್ಣಮೂರ್ತಿಯವರು ಸುಗಮ ಸಂಗೀತ ಕ್ಷೇತ್ರದ ಒಂದು ದೊಡ್ಡ ಆಸ್ತಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ವೈ.ಕೆ. ಮುದ್ದುಕೃಷ್ಣ

ಅಧಿಕಾರದ ಅವಿರತ ದುಡಿಮೆಯ ನಡುವೆಯೂ ತಮ್ಮ ಕಲಾಪ್ರೇಮವನ್ನು ಕಾಯ್ದುಕೊಂಡೇ ಬಂದ ಕಂಚಿನ ಕಂಠದ ಕೋಗಿಲೆ ಶ್ರೀಯುತ ವೈ.ಕೆ. ಮುದ್ದುಕೃಷ್ಣ.
೧೯೪೭ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಟ್ಟ ಮಲೆನಾಡಿನ ಎಡೆಕೆರೆ ಗ್ರಾಮದಲ್ಲಿ ಜನಿಸಿದ ಶ್ರೀಯುತರು ಬಾಲ್ಯದಿಂದಲೆ ಜನಪದ ಹಾಗೂ ಭಾವಗೀತೆಗಳ ಗಾಯನವನ್ನೂ ರೂಢಿಸಿಕೊಂಡುಬಂದರು. ೧೯೮೫ರಲ್ಲಿ ಮೊದಲಿಗೆ ಅಮೆರಿಕಾ ಪ್ರವಾಸ ಮಾಡಿ ತಮ್ಮ ಗಾನಸುಧೆಯನ್ನು ನಾಡಿನಾಚೆಗೂ ವಿಸ್ತರಿಸಿದ ಹೆಗ್ಗಳಿಕೆಗೆ ಪಾತ್ರರು.
ಜಾನಪದ ಗಾರುಡಿಗ ಡಾ. ಎಸ್.ಕೆ. ಕರೀಂಖಾನ್ ಅವರಿಂದ ಜನಪದ ಗಾಯನದಲ್ಲಿ ಪ್ರಭಾವಿತರಾದದ್ದರ ಜೊತೆಗೆ ಸುಗಮ ಸಂಗೀತ ಕ್ಷೇತ್ರದ ದಿಗ್ಗಜಗಳಾದ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಹುಕ್ಕೇರಿ ಬಾಳಪ್ಪ ಮುಂತಾದವರ ಪ್ರಭಾವಕ್ಕೂ ಒಳಗಾದವರು.
ಗಾನಸುಧೆಯಿಂದ ದೇಶ ವಿದೇಶಗಳ ಸಂಗೀತ ಪ್ರೇಮಿಗಳ ಮನಸೆಳೆದ ಶ್ರೀಯುತರ ಸಾಧನೆಗೆ ರಾಜ್ಯ ನಾಟಕ ಅಕಾಡೆಮಿ ಪುರಸ್ಕಾರ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರೀಂಖಾನ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಸನ್ಮಾನಗಳು ಸಂದಿವೆ. ಇಂದಿಗೂ ಸುಗಮ ಸಂಗೀತ ಪರಿಷತ್ ನಂಥ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಅಪರೂಪದ ಕ್ರಿಯಾಶೀಲ ಕಲಾವಿದರು. ಉತ್ತಮ ಸಂಘಟಕರಾದ ಶ್ರೀಯುತರು ತಮ್ಮ ಸೇವಾವಧಿಯಲ್ಲಿ ಕನ್ನಡ ಭವನ ನಿರ್ಮಿಸಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.
ದಕ್ಷ ಆಡಳಿತಗಾರರು ಹಾಗೂ ಸುಗಮ ಸಂಗೀತ ಕ್ಷೇತ್ರವನ್ನು ಪೋಷಿಸಿಕೊಂಡು ಬರುತ್ತಿರುವ ಹೃದಯವಂತ ಕಲಾವಿದರು ವೈ.ಕೆ. ಮುದ್ದುಕೃಷ್ಣ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಶೋಭಾನಾಯ್ಡು

ಹರಿಕಥಾ ಲೋಕದಲ್ಲಿ ಮಹಿಳೆಯರೇ ವಿರಳವಾಗಿರುವಾಗ ಬೆಳೆವ ಪೈರು ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೆ ಹರಿಕಥೆಗೆ ಒಲಿದ ಭರವಸೆಯ ಕಲಾವಿದೆ ಶ್ರೀಮತಿ ಜಿ.ಶೋಭಾ ನಾಯ್ಡು.
ಕನ್ನಡ ನಾಡಿನ ಹರಿಕಥಾ ಲೋಕದಲ್ಲಿ ಬಹುದೊಡ್ಡ ಹೆಸರಾದ ಗುರುರಾಜುಲು ನಾಯ್ಡು ಅವರ ಮಗಳಾಗಿ ೧೯೬೩ರಲ್ಲಿ ಹುಟ್ಟಿದ ಶೋಭಾ ಅವರು ಚಿಕ್ಕಂದಿನಿಂದಲೆ ತಂದೆಯ ಕಲಾನೈಪುಣ್ಯಕ್ಕೆ ಮಾರುಹೋಗಿ ಹರಿಕಥಾ ಕಲೆಗೆ ಒಲಿದವರು. ಬಿ.ಎಸ್ಸಿ., ಪದವೀಧರೆಯಾದರೂ ಕಲೆಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡು ಆಕಾಶವಾಣಿಯ ಎ ಗ್ರೇಡ್ ಮಟ್ಟಕ್ಕೆ ಏರಿದ ಕಿರಿಯ ಪ್ರತಿಭೆ ಶೋಭಾ ಅವರದು. ಈಗಾಗಲೇ ಅವರು ಈ ನಾಡಿನ ಎಲ್ಲ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲಿ ತಮ್ಮ ಹರಿಕಥೆಯನ್ನು ನಡೆಸಿಕೊಟ್ಟು ನಾಡಿನಾಚೆಗೂ ತಮ್ಮ ಕಲೆಯ ಪ್ರಭೆಯನ್ನು ಹರಡಿದ ಅದ್ವಿತೀಯ ಮಹಿಳಾ ಹರಿಕಥೆಗಾರರು. ಇಪ್ಪತ್ತಕ್ಕೂ ಹೆಚ್ಚು ಹರಿಕಥಾ ಧ್ವನಿಸುರುಳಿಗಳನ್ನು ಹೊರತಂದಿರುವ ಇವರು ಹೈದರಾಬಾದಿನಲ್ಲಿ ನಡೆದ ಫೋಕ್ ಟ್ರೆಡಿಷನಲ್ ಆಫ್ ಇಂಡಿಯನ್ ಕಲ್ಟರ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಯಾವುದೇ ಕ್ಷೇತ್ರದಲ್ಲಿ ಮಹಿಳೆ ಪುರುಷ ಸಮಾನವಾದ ಪ್ರತಿಭೆಯನ್ನು ತೋರಬಲ್ಲಳು ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ಕಲಾವಿದೆ ಶ್ರೀಮತಿ ಜಿ. ಶೋಭಾ ನಾಯ್ಡು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಮಾರೆಪ್ಪ ಮಾರೆಪ್ಪ ದಾಸರ

ಜನಪದ ಸಂಗೀತವನ್ನೇ ತಮ್ಮ ಬದುಕನ್ನಾಗಿಸಿಕೊಂಡು ಹಸಿವು ಬಡತನಗಳಿಂದ ನಲುಗಿದ್ದರೂ, ಹಾಡುತ್ತಲೇ ಹಾಡನ್ನಷ್ಟೇ ನೀಡುತ್ತಿರುವ ಜನಪದ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.
ಶ್ರೀ ಮಾರೆಪ್ಪ ದಾಸರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ತುಮ್ಮರಗುಬ್ಬಿಯೆಂಬ ಪುಟ್ಟ ಗ್ರಾಮದಲ್ಲಿ ಜೀವನದುದ್ದಕ್ಕೂ ಅಲೆಮಾರಿ ಜೀವನ. ಬೀದಿಬೀದಿಗಳಲ್ಲಿ ಹಾಡುತ್ತಾ, ಬೇಡುತ್ತಾ, ತತ್ವಪದ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ಬಳ್ಳಾರಿ ಶಿಶುಹತ್ಯಾ ಲಾವಣಿ, ಬಂಜೆ ಪದ ಹೀಗೆ ನೂರಾರು ಪದಗಳನ್ನು ರಾತ್ರಿಯಲ್ಲಿ ಹಾಡುತ್ತಾ, ಮೂರು ತಂತಿಯ ಏಕತಾರಿ, ಚೌಟಕಿತಾಳ, ಪಿಟೀಲು ಬಾರಿಸುತ್ತಾ ಉತ್ತರ ಕರ್ನಾಟಕದ ಮನೆ ಮಾತಾಗಿರುವ ಶ್ರೀ ಮಾರೆಪ್ಪ ದಾಸರ ಪದ ಎಂದರೆ ಜನ ಜಮಾಯಿಸುತ್ತಾರೆ. ತಂತಿವಾದ್ಯಗಳ ಮಧುರ ಧ್ವನಿಯೊಡನೆ ರಾಗ ಕೂಡಿಸುತ್ತಾ ಹಾಡುವ ಶ್ರೀಯುತರ ಗಾಯನ ಎಂಥವರನ್ನೂ ಮರುಳು ಮಾಡುತ್ತದೆ.
ಶ್ರೀ ಮಾರೆಪ್ಪ ದಾಸರ ಜನಪದ ಗಾಯನಕ್ಕೆ ಅನೇಕ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ದೊರೆತಿವೆ. ೧೯೮೫ರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಧಾರವಾಡದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಪ್ರಶಸ್ತಿ ಇವು ಅವರಿಗೆ ಸಂದ ಕೆಲವು ಗೌರವಗಳು.
ಜನಪದ ಸಂಗೀತಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟ ಅಲೆಮಾರಿ ಜನಪಢ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕೆ. ಚಂದ್ರಶೇಖರ ಮಾಲೂರು

– ನಾಗಸ್ವರ ಒಂದು ಮಂಗಳವಾದ್ಯ, ಇದು ಸುಶಿರವಾದ್ಯವೂ ಹೌದು. ಒಂದು ಕಾಲದಲ್ಲಿ ಇದು ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಮೆರವಣಿಗೆ, ಉತ್ಸವಾದಿಗಳಲ್ಲಿ ಮಾತ್ರ ನುಡಿಸುವ ವಾದ್ಯವಾಗಿದ್ದು. ಸಾರ್ವಜನಿಕವಾಗಿ ಇದಕ್ಕೊಂದು ಸೂಕ್ತ ವೇದಿಕೆ ಇದ್ದಿರಲಿಲ್ಲ. ಕ್ರಮೇಣ ದೊಡ್ಡ ದೊಡ್ಡ ನಗರಗಳಲ್ಲಿ ಇದಕ್ಕೆ ವೇದಿಕೆ ದೊರೆತು, ಸಂಗೀತ ಕಛೇರಿಗಳನ್ನು ನಡೆಸುವ ಅವಕಾಶವೂ ದೊರೆಯಿತು ಆದರೆ ತಾಲ್ಲೂಕು ಮಟ್ಟದಲ್ಲಿ ಈ ಸುಧಾರಣೆ ಬರಲಿಲ್ಲ, ಇದನ್ನು ಮನಗಂಡು ಇಂಥ ಸ್ಥಳಗಳಲ್ಲಿ ಇದಕ್ಕೆ ವೇದಿಕೆ ಸಿಗಬೇಕೆಂದು ಶ್ರಮಿಸಿ ಯಶಕಂಡವರು ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.
ತಮ್ಮ ನಿರಂತರ ಪರಿಶ್ರಮದಿಂದ ಈ ನಾಗಸ್ವರ ವಾದನ ಕಲೆಗೆ ಜೀವತುಂಬಿ ಅದಕ್ಕೆ ಒಂದು ರೂಪವನ್ನು ಕೊಟ್ಟವರು.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಸೇರಿದ ಕುಡಿಯನೂರು ಗ್ರಾಮದಲ್ಲಿ ಜನಿಸಿದ ಇವರಿಗೆ ಈ ಕಲೆ ಪಾರಂಪರಿಕವಾಗಿ ಬಂದದ್ದು. ತಮ್ಮ ತಂದೆ ವಿದ್ವಾನ್ ಕೃಷ್ಣಪ್ಪನವರಲ್ಲೇ ಶಿಕ್ಷಣ ಪಡೆದು ಮುಂದೆ ತಮ್ಮ ಸ್ವಯಂ ಪ್ರತಿಭೆಯಿಂದ ಅದನ್ನೇ ರೂಡಿಸಿಕೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಮುಖವಾಗಿ ಆಂಧ್ರ, ತಮಿಳುನಾಡು, ಕೇರಳ, ಪಾಂಡಿಚೇರಿಗಳಲ್ಲಿ ತಮ್ಮ ಪ್ರತಿಭೆ ಬೆಳಗಿದ್ದಾರೆ. ಆಕಾಶವಾಣಿ-ದೂರದರ್ಶನಗಳಿಂದಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಗುರು-ಶಿಷ್ಯ ಪರಂಪರೆಯಲ್ಲಿ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ರಸಿಕ ವೃಂದವನ್ನು ತಮ್ಮ ವಾದನದ ಸಂಮೋಹಕತೆಗೆ ಒಳಗಾಗಿಸುವ ಇವರಿಗೆ ಸಂದ ಬಿರುದು ಗೌರವ ಪ್ರಶಸ್ತಿಗಳು ಆಪಾರ. ಈ ಕಲೆಯನ್ನೇ ತಮ್ಮ ಜೀವನಾಡಿಯಾಗಿ ಮಾಡಿಕೊಂಡು ಜನಪ್ರಿಯ ಕಲಾವಿದರೆನಿಸಿದ್ದಾರೆ ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆರ್.ಕೆ. ಪದ್ಮನಾಭ

ಸಂಗೀತ ಕಾಶಿ ಎಂದೇ ಹೆಸರಾದ ರುದ್ರಪಟ್ಟಣದ ಸಂಗೀತ ಪರಂಪರೆಗೊಂದು ಮುಕುಟಮಣಿ ಗಾನಕಲಾ ಭೂಷಣ ಶ್ರೀಯುತ ಆರ್.ಕೆ. ಪದ್ಮನಾಭ ಅವರು.
ಬಾಲಕ ಪದ್ಮನಾಭರ ಸಂಗೀತಾಸಕ್ತಿಯನ್ನು ಊರಿನ ಸಂಗೀತ ಪರಂಪರೆಯೇ ಗಟ್ಟಿಗೊಳಿಸಿತು. ಭೌತಶಾಸ್ತ್ರದಲ್ಲಿ ಪದವಿ ಪಡೆದು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಅವರ ಪ್ರವೃತ್ತಿ ಶಾಸ್ತ್ರೀಯ ಸಂಗೀತವಾಗಿತ್ತು. ಮೈಸೂರು ನಂಜುಂಡಸ್ವಾಮಿ, ವಿದ್ವಾನ್ ಸೀತಾರಾಮಶಾಸ್ತ್ರಿ, ಹೆಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಶಾಸ್ತ್ರೀಯ ಶಿಕ್ಷಣ ಪಡೆದ ಬಹುಮುಖ ಪ್ರತಿಭಾ ಸಂಪನ್ನ ಸಂಗೀತಗಾರರಿವರು.
ಶುದ್ಧ ಶಾರೀರ, ಆಳವಾದ ಸಂಗೀತ ಜ್ಞಾನದಿಂದ ಕರ್ನಾಟಕ ಶೈವ ಹಾಗೂ ಹಿಂದೂಸ್ತಾನಿ ಶೈಲಿ ಎರಡರಲ್ಲಿಯೂ ಪ್ರಾವೀಣ್ಯತೆ ಪಡೆದ ಇವರ ಸಂಗೀತ ಕಚೇರಿಗಳು ದೇಶದೆಲ್ಲೆಡೆಯಷ್ಟೇ ಅಲ್ಲದೆ ದೇಶದಾಚೆಗೂ ಅಪಾರ ಶೋತೃವೃಂದವನ್ನು ಸೃಷ್ಟಿಸಿವೆ. ಶಾರದಾ ಕಲಾಕೇಂದ್ರ ಎಂಬ ಸಂಗೀತ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಪ್ರತಿಭೆಗಳನ್ನು ಬೆಳೆಸಿದ ಶ್ರೀಯುತರ ಸಂಗೀತ ಸಾಧನೆಯನ್ನು ಅರಸಿಬಂದ ಪ್ರಶಸ್ತಿ ಬಿರುದುಗಳು ಹಲವಾರು. ಗಾನಕಲಾ ಭೂಷಣ, ಸಂಗೀತ ಭೂಷಣ, ಸಂಗೀತ ಸೇವಾ ಮಣಿ, ಶ್ರೇಷ್ಠ ಗಾಯಕ, ಭಕ್ತಿಗಾನ ಸುಧಾಕರ, ನಾದತಪಸ್ವಿ, ಮುಂತಾದ ಬಿರುದು, ಸನ್ಮಾನಗಳು ಅನೇಕ ಸಂಘ ಸಂಸ್ಥೆಗಳಿಂದ ಸಂದಿವೆ.
ಅದ್ವಿತೀಯ ಸಂಗೀತಗಾರರಾಗಿ ಅಪಾರ ಶೋತೃಗಳನ್ನು ಪಡೆದಿರುವಂತೆ ಅನುಭವಿ ಗುರುವಾಗಿ ಅಸಂಖ್ಯ ಶಿಷ್ಯರನ್ನೂ ಪಡೆದಿರುವ ಸಂಗೀತ ನಿಧಿ ಶ್ರೀ ಆರ್.ಕೆ. ಪದ್ಮನಾಭ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಪರಮೇಶ್ವರ ಹೆಗಡೆ

ಪಂ.ಡಾ.ಬಸವರಾಜ ರಾಜಗುರು ಅವರ ಕೆಲವೇ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದವರೆಂದರೆ ಗಾಯಕ ಪರಮೇಶ್ವರ ಹೆಗಡೆಯವರು. “ಅವನ ಗಾಯನದಾಗೆ ಉಳಿದವರಕ್ಕಿಂತ ಭಿನ್ನವಾದುದೇನೋ ಐತಿ” ಎಂದು ಗುರುಗಳಿಂದಲೇ ಪ್ರಶಂಸೆಗಿಟ್ಟಿಸಿದ ಪ್ರತಿಭಾವಂತ ಗಾಯಕ. ಮರೆಯಲ್ಲಿ ಕೇಳಿದರೆ ಪಂ. ರಾಜಗುರುಗಳೇ ಹಾಡುತ್ತಿದ್ದಾರೇನೋ ಎಂಬ ಭಾವನೆ ಬರುವಷ್ಟು ಧ್ವನಿ ಅನುಕರಣೆ ಇರುವ ವಿಶಿಷ್ಠ ಶೈಲಿಯ ಗಾಯಕರು ಶ್ರೀಯುತ ಪರಮೇಶ್ವರ ಹೆಗಡೆಯವರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿ ಬಸವರಾಜ ರಾಜಗುರುಗಳಲ್ಲಿ ಗಾಯನಾಭ್ಯಾಸ ಮಾಡಿದ ಶ್ರೀಯುತರು ಹಿಂದೂಸ್ತಾನಿ ಗಾಯನದಲ್ಲಿ ಮಾಡಿದ ಸಾಧನೆ, ಏರಿದ ಎತ್ತರ ನಾಡಿನ ಸಂಗೀತ ಲೋಕ ಅಚ್ಚರಿಪಡುವಂಥದ್ದು. ರಾಷ್ಟ್ರಾದ್ಯಂತ ತಮ್ಮ ಸಂಗೀತ ಕಚೇರಿಗಳಿಂದ ರಸಿಕ ಜನವನ್ನು ಸೂಜಿಗಲ್ಲಿನಂತೆ ಸೆಳೆದ ಶ್ರೀಯುತರು ಅಮೆರಿಕಾ, ಲಂಡನ್, ಕೆನಡಾ, ಗಲ್ಫ್ ದೇಶಗಳ ಜನರ ಹೃದಯದೊಳಗೂ ತಮ್ಮ ಗಾಯನದ ಅಲೆಗಳು ಅನುರಣಿಸುವಂತೆ
ಮಾಡಿದವರು.
ಸಂಗೀತದ ಗುರುವಾಗಿ, ಸಂಘಟಕರಾಗಿ, ಅನೇಕ ಯುವಪ್ರತಿಭೆಗಳನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಲ್ಲದೆ ತಮ್ಮ ಗುರುಗಳ ನೆನಪಿನಲ್ಲಿ ರಾಜಗುರು ಸ್ಮೃತಿ ಟ್ರಸ್ಟನ್ನು ಸ್ಥಾಪಿಸಿ ತಮ್ಮ ಮೆಚ್ಚಿನ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಮಹಾನ್ ಕಲಾವಿದ ಶ್ರೀ ಪರಮೇಶ್ವರ ಹೆಗಡೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆಂಜಿನಪ್ಪ ಸತ್ಪಾಡಿ

ಅಳಿವಿನಂಚಿನಲ್ಲಿರುವ ಕಲೆಯ ಉಳಿವಿಗಾಗಿ ಜೀವತೇಯುತ್ತಿರುವ ಅನನ್ಯ ಕಲಾಚೇತನ ಆಂಜಿನಪ್ಪ ಸತ್ಪಾಡಿ, ಏಕಕಾಲಕ್ಕೆ ೩ ವಾದ್ಯಗಳನ್ನು ನುಡಿಸುವ ರಾಜ್ಯದ ಏಕೈಕ ಕಲಾವಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಗವಿಕುಂಟನಹಳ್ಳಿ ಗ್ರಾಮದ ಆಂಜಿನಪ್ಪ ಅಪ್ಪಟ ದೇಸೀ ಪ್ರತಿಭೆ, ಏಕಕಾಲದಲ್ಲಿ ಬಾಯಿ ಮತ್ತು ಮೂಗಿನ ಹೊಳ್ಳೆಗಳ ಮೂಲಕ ಮೂರು ವಾದ್ಯಗಳನ್ನು ಸುಶ್ರಾವ್ಯವಾಗಿ ನುಡಿಸುವ ಮುಖವೀಣೆ ಕಲಾವಿದರು. ಮೂಗಿನ ಒಂದು ಹೊಳ್ಳೆಯಲ್ಲಿ ನೀರು ತೆಗೆದು ಮತ್ತೊಂದು ಹೊಳ್ಳೆಯಲ್ಲಿ ನೀರು ಬಿಡುತ್ತಲೇ ಬಾಯಿಯಿಂದ ವಾದ್ಯವನ್ನು ನುಡಿಸುವುದು ಆಂಜಿನಪ್ಪರ ಮತ್ತೊಂದು ವಿಶೇಷ, ಈ ಜಲವಾದ್ಯ ಹಾಗೂ ಮುಖವೀಣೆ ನುಡಿಸಬಲ್ಲ ರಾಜ್ಯದಲ್ಲಿ ಬದುಕುಳಿದಿರುವ ಏಕೈಕ ಕಲಾವಿದ ಆಂಜಿನಪ್ಪ ಎಂಬುದು ನಿಜಕ್ಕೂ ಹೆಗ್ಗಳಿಕೆ ಮಾತ್ರವಲ್ಲ, ನಾಡಿನ ಹೆಮ್ಮೆ, ವಂಶಪಾರಂಪರ್ಯವಾಗಿ ಅಪ್ಪನಿಂದ ಬಂದ ಈ ಬಳುವಳಿಯೇ ಆಂಜಿನಪ್ಪಗೆ ಸದಾ ಜೀವನಾಧಾರ. ಭಿಕ್ಷೆ ಬೇಡಿ ಬದುಕುವ ಅನಿವಾರ್ಯತೆಯ ನಡುವೆಯೇ ಆರು ದಶಕಗಳಿಂದಲೂ ಕಲಾಸೇವೆಗೈದ ಅಂಜಿನಪ್ಪಗೆ ೮೨ ಇಆವಯಸ್ಸಿನಲ್ಲೂ ಈ ಕಲೆಯನ್ನು ಉಳಿಸುವರಾರೆಂಬ ಕೊರಗು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ನೂರಾರು ಸನ್ಮಾನಗಳ್ಯಾವುದರಿಂದಲೂ ಸಮಾಧಾನಗೊಳ್ಳದೆ “ಮುಂದೇನು” ಎಂಬ ಚಿಂತೆಯ ಆಂಜಿನಪ್ಪ ಕಲೆಗೆ ಅರ್ಪಿತಗೊಂಡ ಜೀವಿ, ಅಪರೂಪದ ಜಾನಪದ ಕಲಾಷುಷ್ಪ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಅನಂತ ಕುಲಕರ್ಣಿ

ಹಿಂದೂಸ್ಥಾನಿ ಸಂಗೀತದಲ್ಲಿ ವಿಶೇಷ ಕೃಷಿಗೈದ ಸ್ವರಪ್ರತಿಭೆ ಅನಂತ ಕುಲಕರ್ಣಿ, ಆಕಾಶವಾಣಿಯ ಎ ಗ್ರೇಡ್ ಕಲಾವಿದರು, ದಾಸ ಸಾಹಿತ್ಯ ಪ್ರಚಾರಕರು, ಭಕ್ತಿಸಂಗೀತದಲ್ಲಿ ಅನನ್ಯ ಸೇವೆಗೈದ ಹರಿದಾಸ ಸಂಗೀತ ವಿದ್ವನ್ಮಣಿ, ನಾದಲೋಕಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅನಂತಕುಲಕರ್ಣಿ ಜನಿಸಿದ್ದು ೧೯೫೭ರಲ್ಲಿ. ಗ್ವಾಲಿಯರ್ ಘರಾಣದಲ್ಲಿ ಸ್ವರಾಭ್ಯಾಸ, ಸಂಗೀತದಲ್ಲಿ ಬಿಎ ಪದವಿ, ಪ್ರಯಾಗ ಸಂಗೀತ ಸಮಿತಿಯಿಂದ ಸಂಗೀತ ಮಾರ್ತಾಂಡ, ೧೯೮೬ರಿಂದ ಆಕಾಶವಾಣಿ ಎ ಗ್ರೇಡ್ ಕಲಾವಿದರಾಗಿ ನಿರಂತರ ಸ್ವರಸೇವೆ. ೧೯೯೦ರಿಂದ ದಾಸಸಾಹಿತ್ಯ ಸೇವಾನಿರತರು. ರಾಜ್ಯದ ಹಲವೆಡೆ ಮಾತ್ರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಬರೋಡಾ, ಗುಜರಾತ್, ಹರಿದ್ವಾರಗಳಲ್ಲಿ ಭಕ್ತಿಸ್ವರಧಾರೆ, ಜಗನ್ನಾಥದಾಸರ ಹರಿಕಥಾಮೃತಸಾರವನ್ನು ಸುಶ್ರಾವ್ಯವಾಗಿ ಹಾಡಿ ಹರಿದಾಸ ಸಾಹಿತ್ಯ ಜನಸಾಮಾನ್ಯರ ನಾಲಿಗೆಯಲ್ಲಿ ಹರಿಯುವಂತೆ ಮಾಡಿದ ಹೆಗ್ಗಳಿಕೆ, ಈ-ಟಿವಿ, ಉದಯ-ಟಿವಿಯಲ್ಲಿ ಅನೇಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆ. ಈ-ಟಿವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯ. ಹತ್ತಾರು ಸಿ.ಡಿ ಹಾಗೂ ಧ್ವನಿಸುರುಳಿಗಳನ್ನು ಹೊರತಂದ ಕೀರ್ತಿ, ಹರಿಕಥಾಮೃತಸಾರ ಭೂಷಣ, ಹರಿದಾಸ ಸಂಗೀತಬ್ರಹ್ಮ ರಂಗವಿಠಲ ಪ್ರಶಸ್ತಿ, ಹರಿದಾಸನಿಧಿ, ಮೇಘಮಲ್ಹಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಬಿರುದು ಬಾವಲಿಗಳಿಂದ ಭೂಷಿತರಾದ ಅನಂತ ಕುಲಕರ್ಣಿ ಹಿಂದೂಸ್ತಾನಿ ಸಂಗೀತದ ಅನನ್ಯ ಸಾಧಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು

ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರ ಕಂಡ ಅಪರೂಪದ ವಿದ್ವತ್ಮಣಿ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು. ಸಾವಿರಾರು ದಾಸರ ಪದಗಳ ಅಪೂರ್ವ ಭಂಡಾರ, ಪ್ರೋತೃಗಳ ಮನ ಅರಳಿಸಿದ ಹರಿದಾಸ ತೀರ್ತನಾ ಶಿರೋಮಣಿ, ಧಾರವಾಡದ ಮಾಳಮಡ್ಡಿಯ ಕಟಗೇರಿಯವರಾದ ಅನಂತಾಚಾರ್ಯರು ಸಂಗೀತ ಆಚಾರ್ಯರೆಂದೇ ಜನಜನಿತ, ದಾಸರಪದ ಗಾಯನದ ಜತೆಗೆ ಅವುಗಳ ಅರ್ಥ, ಸಂದರ್ಭ, ಔಚಿತ್ಯ, ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ವಿವರಿಸಬಲ್ಲಷ್ಟು ಆಳ ಜ್ಞಾನವಂತರು. ದಾಸಸಾಹಿತ್ಯದ ಅನನ್ಯ ಪ್ರಚಾರಕರು. ಕಂಚಿನ ಕಂಠ, ಸುಶ್ರಾವ್ಯ ಗಾಯನ, ಸ್ವರಗಳ ಮೇಲಿನ ಕರಾರುವಾಕ್ ಹಿಡಿತ, ಸ್ವರಶುದ್ಧಿ, ಭಾವಶುದ್ಧಿಯ ಪಂಡಿತೋತ್ತಮರು. ೧೯ ಪ್ರಕಾರಗಳ ದಾಸಸಾಹಿತ್ಯದ ನಾಲ್ಕು ಸಾವಿರಕ್ಕೂ ಅಧಿಕ ದಾಸರ ಪದಗಳ ಭಂಡಾರ. ಸಾವಿರಾರು ಸಂಗೀತಾಸಕ್ತರಿಗೆ ಸ್ವರಜ್ಞಾನ ಧಾರೆಯೆರೆದ ಗುರು. ಮನೆಮನೆಗೆ ತೆರಳಿ ಮಕ್ಕಳಿಗೆ ದಾಸರ ಪದ ಕಲಿಸಿದ ಮಹಾನುಭಾವರು. ಹರಿದಾಸ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ಜ್ಞಾನವೃದ್ಧರು. ನೂರಾರು ಸನ್ಮಾನ-ಗೌರವಗಳಾಚೆಗೆ ನಿರ್ಲಿಪ್ತರಾಗಿ ಜೀವನಪ್ರೀತಿ–ನಾದಪ್ರೇಮದಲ್ಲಿ ೯೭ರ ವಯದಲ್ಲೂ ಶಾರದೆಯ ಸೇವೆಯಲ್ಲಿ ತನ್ಮಯರಾಗಿರುವ ವಿರಳಾತಿವಿರಳ ಸಾಧಕರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ ಸೋಮನಾಥ ಮರಡೂರ

ವೃತ್ತಿ ಪ್ರವೃತ್ತಿಗಳಿಂದ ಪ್ರಸಿದ್ಧರಾಗಿರುವ ಹಿಂದೂಸ್ತಾನಿ ಗಾಯಕ ಪಂಡಿತ ಸೋಮನಾಥ ಮರಡೂರ ಅವರು.
೧೯೪೪ರಲ್ಲಿ ಹಾವೇರಿ ಜಿಲ್ಲೆಯ ಮರಡೂರಿನಲ್ಲಿ ಜನನ. ಬಾಲ್ಯದಿಂದಲೆ ಸಂಗೀತಾಭ್ಯಾಸ ಆರಂಭವಾಗಿ ಗದಗಿನ ಶ್ರೀ ಪುಟ್ಟರಾಜ ಗವಾಯಿಗಳವರ ಬಳಿ ಶಿಕ್ಷಣದ ಮುಂದುವರಿಕೆ. ಪಂಡಿತ ಬಸವರಾಜ ರಾಜಗುರುಗಳಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತಾಭ್ಯಾಸ.
ನಾಡಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಮುಂಬೈ, ದಿಲ್ಲಿ, ಭೂಪಾಲ, ಗೋವಾ ಮುಂತಾದ ಕಡೆಗಳಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರತಿಭಾವಂತ ಗಾಯಕರಾದ ಶ್ರೀ ಮರಡೂರ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಅಖಿಲ ಭಾರತ ಆಕಾಶವಾಣಿ, ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದಿದ್ದಾರೆ. ಮುಂಬಯಿ ಸೂರಸಿಂಗಾರ ಸಂಸದ್ನ ಸುರ್ಮಣಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಕಿರಾಣ ಪರಂಪರೆಯ ಗಾಯಕರು ಪಂಡಿತ ಸೋಮನಾಥ ಮರಡೂರ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಫಕೀರೇಶ ಕಣವಿ

ಸಂಗೀತ ಮನೆತನದ ಪರಂಪರೆಯಲ್ಲಿ ಬೆಳೆದುಬಂದ ಸಂಗೀತಗಾರ ಶ್ರೀ ಫಕೀರೇಶ ಕಣವಿ ಅವರು.
೧೯೫೫ರಲ್ಲಿ ಗದಗ ಜಿಲ್ಲೆಯ ಕಣವಿ ಗ್ರಾಮದಲ್ಲಿ ಜನನ. ತಂದೆ ಹಾಗೂ ಸೋದರ ಮಾವಂದಿರಲ್ಲಿ ಸಂಗೀತದ ಮೊದಲ ಪಾಠಗಳು. ಅನಂತರ ಡಾ. ಪುಟ್ಟರಾಜ ಗವಾಯಿಗಳವರ ಹತ್ತಿರ ಸಂಗೀತದ ಅಧ್ಯಯನ.
ಸಂಗೀತ ಸಾಧನೆಗೆ ಕಾಶಿ ಎನಿಸಿದ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ, ಕೂಡ್ಲಿಗಿಯ ರೇಣುಕಾ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಗುಲಬರ್ಗಾ ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಮತ್ತು ಸುಗಮ ಸಂಗೀತದ ‘ಬಿ’ ಹೈ ಶ್ರೇಣಿಯ ನಿಲಯ ಕಲಾವಿದರಾಗಿರುವ ಶ್ರೀ ಫಕೀರೇಶ ಕಣವಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಕೇಂದ್ರ ಸಂಸ್ಕೃತಿ ಇಲಾಖೆಯ ಸುಗಮ ಸಂಗೀತ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರದ ವಿದ್ವತ್ ಪರೀಕ್ಷೆಯಲ್ಲಿ ಮೊದಲ ಸ್ಥಾನ, ಗಂಧರ್ವ ಮಹಾವಿದ್ಯಾಲಯದ ವಿಶಾರದ ಪರೀಕ್ಷೆಯಲ್ಲಿ ಮೊದಲ ಬಹುಮಾನ ಪಡೆದ ಸಂಗೀತಗಾರ ಶ್ರೀ ಫಕೀರೇಶ ಕಣವಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಎ. ಸುಂದರಮೂರ್ತಿ

ಸಂಗೀತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಮಹಾನ್ ಕಲಾವಿದ ಶ್ರೀ ಎ. ಸುಂದರಮೂರ್ತಿ ಅವರು.
೧೯೩೯ರಲ್ಲಿ ಜನಿಸಿದ ಶ್ರೀಯುತರದು ಸಂಗೀತದ ಮನೆತನ, ಪ್ರಾರಂಭದಲ್ಲಿ ಇಂಡಿಯನ್ ಟೆಲಿಫೋನ್‌ ಕಾರ್ಖಾನೆಯಲ್ಲಿ, ನಂತರ ಸಂಶೋಧನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ವೃತ್ತಿಗೆ ರಾಜೀನಾಮೆ ನೀಡಿ ಸಂಗೀತವನ್ನೇ ಸಂಪೂರ್ಣವಾಗಿ ಆಯ್ಕೆ ಮಾಡಿಕೊಂಡರು. ಆನುವಂಶಿಕವಾಗಿ ಬಂದ ಸಂಗೀತ ಪ್ರತಿಭೆಗೆ ಚೆಂಬೈ ಕೃಷ್ಣನ್ ಅವರಿಂದ ಪಡೆದ ಸಂಗೀತ ಶಿಕ್ಷಣದಿಂದ ಹೆಚ್ಚಿನ ಮೆರುಗು ಬಂದಿತು. ಪಂಡಿತ ಡಿ.ಬಿ. ಹರೀಂದ್ರ ಅವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಕೊಳಲು, ವೀಣೆ, ಸಿತಾರ್, ಮೃದಂಗಗಳಂಥ ಹತ್ತಾರು ವಾದ್ಯಗಳನ್ನು ಅವರೇ ಸ್ವತಃ ಕಲಿತುಕೊಂಡರು. ಅವರಿಗೆ ಕೊಳಲು ಮೆಚ್ಚಿನ ವಾದ್ಯವಾಯಿತು. ಹಲವು ವಾದ್ಯಗೋಷ್ಠಿಗಳ ನಿರ್ದೇಶಕರಾಗಿಯೂ ಶ್ರೀಯುತರು ಕೆಲಸ ಮಾಡಿದ ಹಾಗೂ ಕೊಳಲು ಮತ್ತು ಸಿತಾರ್ ವಾದ್ಯ ಸಹಕಾರಕ್ಕಾಗಿ ರಮಣಾಂಜಲಿ ತಂಡದೊಂದಿಗೆ ವಿದೇಶ ಪ್ರವಾಸ ಮಾಡಿದ ಹಿರಿಮೆ ಶ್ರೀ ಸುಂದರಮೂರ್ತಿ ಯವರದ್ದಾಗಿದೆ.
ಆಕಾಶವಾಣಿಯಲ್ಲಿ ಸುಗಮ ಸಂಗೀತ ನಿರ್ದೇಶಕರಾಗಿ, ಎಂ.ಎಸ್.ಐ.ಎಲ್. ನಡೆಸಿದ ಧ್ವನಿ ಮುದ್ರಣ ಕಾರ್ಯದ ನಿರ್ವಾಹಕರಾಗಿ, ಕರ್ನಾಟಕ ವಾರ್ತಾ ಇಲಾಖೆಯ ನ್ಯೂಸ್ ರೀಲ್‌ಗಳ ಸಂಗೀತ ನಿರ್ದೆಶಕರಾಗಿ, ಕರ್ನಾಟಕದ ಎಲ್ಲ ಮುಖ್ಯಸಂಗೀತ ಧ್ವನಿಮುದ್ರಣ ಸಂಸ್ಥೆಗಳಿಗೆ ನಿರ್ದೆಶಕರಾಗಿ, ಹಾಗೂ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಸಂಗೀತದ ಧ್ವನಿ ಮುದ್ರಣ ಕಾರ್ಯದಲ್ಲಿ ನಿರ್ದೆಶಕರಾಗಿ ಸಂಗೀತ ಕ್ಷೇತ್ರಕ್ಕೆ ಇವರು ಅಪಾರ ಸೇವೆ ಸಲ್ಲಿಸಿರುತ್ತಾರೆ.
ದಿ|| ಕಾಳಿಂಗರಾವ್, ದಿ|| ಮೈಸೂರು ಅನಂತಸ್ವಾಮಿ, ಶ್ರೀ ಸಿ. ಅಶ್ವಥ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀ ವೈ.ಕೆ. ಮುದ್ದು ಕೃಷ್ಣ, ಶ್ರೀಮತಿ ರತ್ನಮಾಲಾ ಪ್ರಕಾಶ್ ಮುಂತಾದ ಹಿರಿಯ ಹಾಗೂ ಕಿರಿಯ ಗಾಯಕರಿಗೆ ವಾದ್ಯ ಸಹಕಾರ ನೀಡಿರುತ್ತಾರೆ. ಶ್ರೀಯುತರ ಸ್ವಂತ ಧ್ವನಿ ಮುದ್ರಣ ನಿರ್ದೆಶನದಲ್ಲಿ ಸರ್ವಶ್ರೀ ಆರ್.ಕೆ. ಶ್ರೀಕಂಠನ್, ಶ್ರೀ ಹೆಚ್.ಕೆ. ನಾರಾಯಣ, ರಾಜಕುಮಾರ ಭಾರತಿ, ವಿದ್ಯಾಭೂಷಣರಂಥ ಹಲವಾರು ಶ್ರೇಷ್ಠ ಗಾಯಕರು ಹಾಡಿರುತ್ತಾರೆ.
ಮುನ್ನೂರಕ್ಕೂ ಹೆಚ್ಚು ಕ್ಯಾಸೆಟ್ಟುಗಳಿಗೆ ಸಂಗೀತ ನಿರ್ದೆಶನ ಮಾಡಿರುವ ಶ್ರೀ ಎ. ಸುಂದರಮೂರ್ತಿ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದಂತೆಯೂ ಆಸಕ್ತಿಯುಳ್ಳವರು.
ಸುಮಾರು ೬೦ ರಾಗಗಳ ನೂತನ ರೀತಿಯ ಲಕ್ಷಣ ಗೀತೆಗಳ ರಚನೆ, ಸ್ವರಜತಿ, ವರ್ಣ, ಕೀರ್ತನೆಗಳ ರಚನೆ ಮಾಡಿ ಸಂಗೀತ ಜ್ಞಾನದ ಪರಿಪೂರ್ಣತೆಗೆ ಸಾಕ್ಷಿಯಾಗಿರುವವರು ಶ್ರೀ ಎ. ಸುಂದರಮೂರ್ತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಎಸ್.ಕೆ. ವಸುಮತಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸುಮಾರು ನಲವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅನನ್ಯ ಸಾಧಕಿ ಶ್ರೀಮತಿ ಎಸ್.ಕೆ. ವಸುಮತಿ ಅವರು.
ಮೈಸೂರಿನಲ್ಲಿ ೧೯೩೪ನೆಯ ಇಸವಿಯಲ್ಲಿ ಜನಿಸಿರುವ ಶ್ರೀಮತಿ ವಸುಮತಿ ಅವರು ತಂದೆ ಶ್ರೀ ಕೃಷ್ಣಸ್ವಾಮಿ ಅವರ ಪ್ರೋತ್ಸಾಹದಿಂದಾಗಿ ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಪ್ರಾರಂಭಿಸಿದರು. ವಿದ್ವಾನ್ ಎಂ.ವಿ. ಕೃಷ್ಣಪ್ಪ, ವಿದ್ವಾನ್ ಆರ್.ಕೆ. ರಾಮನಾಥನ್, ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರಂತಹ ನಾದಲೋಕದ ದಿಗ್ಗಜರಲ್ಲಿ ಶಿಷ್ಯವೃತ್ತಿ ಪಡೆದು ಆಕಾಶವಾಣಿಯಲ್ಲಿ ಗಾಯನ ಕಲಾವಿದೆಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಸುಮಾರ ಇನ್ನೂರಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುವ ಕೀರ್ತಿ. ಕನ್ನಡ ಕವಿಗಳ ಹೊಸ ಕವಿತೆಗಳನ್ನು ‘ನವಸುಮ’ ಕಾರ್ಯಕ್ರಮದಡಿ ಪ್ರಸ್ತುತಪಡಿಸಿ ಕಾವ್ಯಲೋಕದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವತಃ ಕವಿ ಕುವೆಂಪು, ಪುತಿನ, ಡಿವಿಜಿಯವರಿಂದ ಮೆಚ್ಚುಗೆ, ಪ್ರೋತ್ಸಾಹ ಪಡೆದ ಹೆಗ್ಗಳಿಕೆ ಇವರದು.
ಎಳೆಯ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ ನೀಡಿ ಐನೂರಕ್ಕೂ ಹೆಚ್ಚು ಸಮರ್ಥ ಶಿಷ್ಯರ ತಂಡ ರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ‘ರಾಗತರಂಗ’ ಎಂಬ ಹೆಸರಿನಲ್ಲಿ ಕನ್ನಡದ ಪ್ರಖ್ಯಾತ ನೃತ್ಯ ರೂಪಕಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
ಕರ್ನಾಟಕ ಕಲಾಶ್ರೀ, ಅನನ್ಯ ಕಲಾಭಿಜ್ಞ ಹಂಸಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಗಾಯನ, ಬೋಧನ, ನಿರ್ದೇಶನಗಳಲ್ಲಿ ಸಂಪೂರ್ಣವಾಗಿ ಇಂದಿಗೂ ತೊಡಗಿಸಿಕೊಂಡಿರುವ ಹಿರಿಯ ಗಾನಶಿರೋಮಣಿ ಶ್ರೀಮತಿ ಎಸ್.ಕೆ. ವಸುಮತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮೈಸೂರು ಎಂ. ಮಂಜುನಾಥ್

ಪ್ರತಿಭಾವಂತ ಪಿಟೀಲು ವಾದಕ ಡಾ. ಮೈಸೂರು ಎಂ. ಮಂಜುನಾಥ್ ಅವರು.
ಸಂಗೀತ ಕುಟುಂಬದಲ್ಲಿ ಜನಿಸಿದ ಡಾ. ಮೈಸೂರು ಎಂ. ಮಂಜುನಾಥ್ ಅವರ ತಂದೆ ಪ್ರಸಿದ್ದ ಸಂಗೀತ ವಿದ್ವಾಂಸರಾದ ಶ್ರೀ ಮಹದೇವಪ್ಪ, ಸಹೋದರ ಮೈಸೂರು ನಾಗರಾಜ್ ಅವರು. ತಂದೆಯವರಲ್ಲಿ ಶಿಕ್ಷಣ ಪಡೆದು, ಎಂಟನೆಯ ವಯಸ್ಸಿನಲ್ಲಿಯೇ ಸಂಗೀತ ಕಚೇರಿಯನ್ನು ನೀಡಿ ವಿಸ್ಮಯಗೊಳಿಸಿದ ಶ್ರೀಯುತರು ಅದ್ಭುತ ಬಾಲಪ್ರತಿಭೆಯೆಂದು ಸಂಗೀತ ವಿದ್ವಾಂಸರು, ಕಲಾಭಿಮಾನಿಗಳು ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರರಾದರು.
ಮೈಸೂರು ಮಂಜುನಾಥ್‌ ಹಾಗೂ ಮೈಸೂರು ನಾಗರಾಜ್‌ರವರು ರಾಜ್ಯದ ಹೆಮ್ಮೆಯ ದ್ವಂದ್ವ ಪಿಟೀಲು ವಾದಕರು. ಅಮೆರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಸಿಂಗಾಪುರ ಹಾಗೂ ಇನ್ನಿತರ ದೇಶಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯಕ್ರಮ ನೀಡಿರುವ ಡಾ. ಮೈಸೂರು ಎಂ. ಮಂಜುನಾಥ್ ತಮ್ಮ ಪಿಟೀಲು ಕಾರ್ಯಕ್ರಮಗಳ ಮೂಲಕ ಸಂಗೀತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವುದಲ್ಲದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಮ್ಯೂಸಿಕ್ ಪದವಿಯಲ್ಲಿ ಪ್ರಥಮ ಬ್ಯಾಂಕನ್ನು ಪಡೆದ ಶ್ರೀಯುತರು ಪಿಹೆಚ್.ಡಿ. ಪದವಿ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆಗೈದಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿಕೊಂಡಿರುವ ಶ್ರೀಯುತರು ದೂರದರ್ಶನ, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಅಸಂಖ್ಯಾತ ಜುಗಲ್‌ಬಂದಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿರುವ ಶ್ರೀಯುತರು ಅತ್ಯುತ್ತಮ ವಯೋಲಿನ್ ವಾದಕ ಪ್ರಶಸ್ತಿ, ಪ್ರತಿಷ್ಠಿತ ಅಮೆರಿಕನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಭಾಜನರು.
ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಲೋಕದಲ್ಲಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದ ಅನನ್ಯ ಕಲಾವಿದರು ಡಾ. ಮೈಸೂರು ಎಂ. ಮಂಜುನಾಥ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವವರು ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.
ಬಿಜಾಪುರ ಜಿಲ್ಲೆಯ ಕಲಿಕೇರಿ ಗ್ರಾಮದಲ್ಲಿ ೧೯೪೦ ರಲ್ಲಿ ಜನಿಸಿದ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ತಂದೆ ಭಕ್ತಿ ಗೀತೆಗಳ ಗಾಯಕರು. ತಂದೆಯಿಂದ ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ತಳೆದ ಶ್ರೀಯುತರು ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರು ಹಾಗೂ ಕವಿ ಮತ್ತು ಲೇಖಕರು. ಗ್ವಾಲಿಯರ್ ಘರಾನಾಕ್ಕೆ ಸೇರಿದ ಹಿಂದೂಸ್ತಾನಿ ಗಾಯಕರಾದ ಹಾಗೂ ವಾದ್ಯಗಾರರಾದ ಪಂಡಿತ ಪುಟ್ಟರಾಜ ಗವಾಯಿಯವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದ ಶ್ರೀಯುತರು ಆಕಾಶವಾಣಿ ಮಾನ್ಯತೆ ಪಡೆದ ಗಾಯಕರು.
ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗಾಯಕರಲ್ಲದೆ ಹೃದಯ ಮುಟ್ಟುವ ಸುಪ್ರಭಾತಗಳನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಬನಾರಸ್, ಹೈದರಾಬಾದ್, ಚೆನ್ನೈ, ಪುಣೆ ಮುಂತಾಗಿ ರಾಷ್ಟ್ರಾದ್ಯಂತ ಸಂಗೀತ ಕಚೇರಿ ನೀಡಿರುವ ಶ್ರೀಯುತರು ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಕರ್ನಾಟಕದಲ್ಲಿ ಅನೇಕ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಶ್ರೀಯುತರ ಸಂಗೀತ ನಿರ್ದೆಶನದಲ್ಲಿ ಪ್ರಮುಖ ಹಿನ್ನೆಲೆ ಗಾಯಕರಾದ ಡಾ. ಪಿ.ಬಿ. ಶ್ರೀನಿವಾಸ, ಡಾ. ರಾಜಕುಮಾರ್, ಜಿ.ವಿ. ಅತ್ರಿ ಮುಂತಾದವರು ಹಾಡಿರುತ್ತಾರೆ. ಇವರ ಗಾನಭಾರತಿ, ಭಾವ ಭಗವದ್ಗೀತೆ ಸಂಗೀತ ಗ್ರಂಥಗಳನ್ನು ಪ್ರಕಟಿಸಿರುವ ಎಂಟು ಗ್ರಾಮಫೋನ್ ರೆಕಾರ್ಡುಗಳು, ಹದಿನಾಲ್ಕು ಆಡಿಯೋ ಕ್ಯಾಸೆಟ್‌ಗಳು, ನಾಲ್ಕು ನಾಟಕ ಕಂಪನಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಯುತರು ‘ಮಹಾತಪಸ್ವಿ’ ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಕವನ ಸಂಕಲನಗಳು, ಮೂರು ಕಾದಂಬರಿಗಳು, ಮೂರು ಜೀವನಚರಿತ್ರೆ ರಚಿಸಿರುವುದಲ್ಲದೆ ಪಂಚಾಕ್ಷರವಾಣಿಯ ಸಹಸಂಪಾದಕರಾಗಿ, ಇವರ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳು ಇವರ ಸಂಗೀತ ಸಾಧನೆಗಾಗಿ ಬಿರುದುಗಳನ್ನಿತ್ತು ಸನ್ಮಾನಿಸಿವೆ.
ಭಕ್ತಿ ಸಂಗೀತ ಗಾಯನದಲ್ಲಿ ಪ್ರಸಿದ್ಧಿ ಪಡೆದ, ಹಿಂದೂಸ್ತಾನಿ ಗಾಯಕ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಉಸ್ತಾದ್ ಶೇಖ್ ಹನ್ನುಮಿಯ್ಯಾ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆಗೈದು ನೂರಾರು ಶಿಷ್ಯರನ್ನು ತರಬೇತುಗೊಳಿಸಿ, ಭಾವೈಕ್ಯದ ಸಂದೇಶವನ್ನು ಸಂಗೀತದ ಮೂಲಕ ಕೃತಿಗಿಳಿಸಿರುವ ಮಧುರಕಂಠದ ಗಾಯಕ ಉಸ್ತಾದ್ ಶೇಖ್ ಹನ್ನು ಮಿಯ್ಯಾ ಅವರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೊರೂರಿನಲ್ಲಿ ೧೯೩೧ರಲ್ಲಿ ಜನಿಸಿದರು. ಪ್ರಕೃತಿಯ ವರವಾಗಿ ಬಂದ ಇಂಪಾದ ಕಂಠಸಿರಿಯನ್ನು ಹೊಂದಿದ್ದ ಶ್ರೀಯುತರು ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಒಂಬತ್ತು ವರ್ಷದವರಾಗಿದ್ದಾಗಲೇ ಸಾರಂಗಿ ವಾದಕರಾಗಿದ್ದ ತಂದೆ ತೀರಿಕೊಂಡರು. ಬಡತನದ ನಡುವೆಯೂ ಪೂನಾಕ್ಕೆ ಹೋಗಿ ಭಾಸ್ಕರ ಸಂಗೀತ ವಿದ್ಯಾಲಯದಲ್ಲಿ ಒಂದು ವರ್ಷ ಸಂಗೀತ ಕಲಿತರು. ಅನಂತರ ಪರಭಣಿ ಎಂಬ ಊರಿನಲ್ಲಿ ಉಸ್ತಾದ್ ಡಾ. ಗುಲಾಮ ರಸೂಲ ಇವರ ಬಳಿ ೧೨ ವರ್ಷ ಎಡೆಬಿಡದೆ ಶ್ರಮಪಟ್ಟು ಅಭ್ಯಾಸ ನಡೆಸಿದರು. ಹಿಂದೂಸ್ತಾನಿ ಸಂಗೀತದ ಎಲ್ಲ ಆಯಾಮಗಳ ಪರಿಚಯ ಮಾಡಿಕೊಂಡ ಶ್ರೀಯುತರು ಸೊಲ್ಲಾಪುರ, ಕೊಲ್ಲಾಪುರ, ಬೆಳಗಾವಿ, ಮೊದಲಾದ ಪಟ್ಟಣಗಳಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಶಿಷ್ಯವೃಂದವನ್ನು ತರಬೇತುಗೊಳಿಸಿದರು.
೧೯೭೯ರಲ್ಲಿ ಭಾಲ್ಕಿ ಗ್ರಾಮಕ್ಕೆ ಬಂದು ಅಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ನೂರಾರು ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದರು. ಇವರ ಶಾಲೆಗೆ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದ ಮಾನ್ಯತೆಯು ಲಭಿಸಿತು. ಕೊಳಲು, ತಬಲಾ ಹೀಗೆ ಇನ್ನಿತರ ವಾದ್ಯಗಳನ್ನು ಕಲಿಸತೊಡಗಿದರು. ಶಿಷ್ಯರೊಡಗೂಡಿ ಮಸೀದಿ, ಚರ್ಚು, ದೇವಸ್ಥಾನಗಳಲ್ಲಿ ತಮ್ಮ ಗಾಯನದ ರಸಗಂಗೆಯನ್ನು ಹರಿಸಿ ಜನ ಸಮೂಹದ ಮನಸೂರೆಗೊಂಡರು. ಸಹಜ ಗಾನದ ಮೋಡಿಯಿಂದ ಎಲ್ಲ ಜಾತಿ, ವರ್ಗಗಳ ಪ್ರೀತಿಗೆ ಪಾತ್ರರಾದರು ಶ್ರೀಯುತರು ನಿಜವಾದ ಅರ್ಥದಲ್ಲಿ ಭಾವೈಕ್ಯದ ಪ್ರತೀಕವಾಗಿದ್ದಾರೆ.
ಶ್ರೀಯುತರ ಗಾಯನ ಸಾಧನೆಯನ್ನು ಗಮನಿಸಿ ಜನ ಸಂಘಟನೆಗಳು ಪರಭಣಿ, ಮಹಾರಾಷ್ಟ್ರದ ಅಹ್ಮದ್‌ನಗರ, ಪಾಥರಡಿ, ಮಿರಜಗಾಂವ್, ಉದಗೀರ್ ಮೊದಲಾದ ಸ್ಥಳಗಳಲ್ಲಿ ಸಾರ್ವಜನಿಕ ಸನ್ಮಾನ ಮಾಡಿ ಬಿರುದು ಬಾವಲಿಗಳನ್ನು ನೀಡಿ ಸನ್ಮಾನಿಸಿವೆ. ಆಕಾಶವಾಣಿಯಲ್ಲಿ ಇವರ ಸಂಗೀತ ಬಿತ್ತರಗೊಂಡಿದೆ.
ಅಚಲ ಶ್ರದ್ಧೆ, ಅದಮ್ಮ ನಿಷ್ಠೆ, ಸತತ ಸಾಧನೆಗಳಿಂದ ಸಿದ್ದಿ ಪಡೆದು ಸ್ವಂತ ಪರಿಶ್ರಮದಿಂದ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಸಂಪಾದಿಸಿದ ಶ್ರೇಷ್ಠ ಹಿಂದೂಸ್ತಾನಿ ಗಾಯಕ ಉಸ್ತಾದ್ ಶೇಖ್ ಹನ್ನುಮಿಯ್ಯಾ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್

ಪ್ರಸಿದ್ಧ ವೀಣಾವಾದಕರು, ಸಂಗೀತ ಅಧ್ಯಾಪಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.
ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಏಳನೆಯ ವಯಸ್ಸಿನಿಂದಲೇ ವೈಣಿಕ ಪ್ರವೀಣ ವಿ. ವೆಂಕಟಗಿರಿಯಪ್ಪನವರು, ಪ್ರೊ. ಆರ್.ಎನ್. ದೊರೆಸ್ವಾಮಿಯವರು ಮತ್ತು ಪದ್ಮಭೂಷಣ ಲಾಲ್ಗುಡಿ ಜಿ. ಜಯರಾಮನ್ ಅವರ ಶಿಷ್ಯರು. ವೀಣೆ ಶೇಷಣ್ಣನವರ ವೀಣಾ ಪರಂಪರೆಗೆ ಸೇರಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಹದಿನೈದನೆ ವಯಸ್ಸಿನಲ್ಲಿಯೇ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಾದ್ಯಂತ ಮತ್ತು ದುಬೈ, ನ್ಯೂಜಿಲೆಂಡ್ ಮುಂತಾದ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರಾಗಿದ್ದು, ೧೯೫೦ರಿಂದ ಇವರ ಅನೇಕ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ರೀಡರ್ ಮತ್ತು ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದು, ಅನೇಕ ಶಿಷ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಗಾನಕಲಾ ಪರಿಷತ್ತಿನ ೨೯ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಬಿರುದು, ಗಾಯನ ಸಮಾಜದ ‘ವರ್ಷದ ಕಲಾವಿದೆ’, ಮೈಸೂರು ತ್ಯಾಗರಾಜ ಗಾಯನ ಸಭೆಯ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ನ್ಯೂಜಿಲೆಂಡ್‌ನಲ್ಲಿ ಆಕ್‌ಲೆಂಡ್ ಕರ್ನಾಟಕ ಮ್ಯೂಸಿಕ್ ಸೊಸೈಟಿಯ ಕಲಾ ಸಲಹೆಗಾರರು ಮತ್ತು ಪೋಷಕರು ಆಗಿದ್ದಾರೆ. ಲಂಡನ್‌ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಪಠ್ಯ ಚಟುವಟಿಕೆಗಳ ಸಮಿತಿ ಅಧ್ಯಕ್ಷರಾಗಿ, ಮುಖ್ಯ ಪರೀಕ್ಷಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದುದಾಗಿ ಲಂಡನ್ ಮುಖ್ಯಸ್ಥರಿಂದ ಮನ್ನಣೆ ಪಡೆದ ಹೆಗ್ಗಳಿಕೆ
ಇವರದು.
ಲಂಡನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಗಾಗಿ ಪಠ್ಯ ವಿಷಯಗಳನ್ನೊಳಗೊಂಡ ಪುಸ್ತಕ ಪ್ರಕಟಿಸಿ ಮನ್ನಣೆ ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು `ವಾಗ್ಗೇಯ ವೈಭವ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರ ಕ್ಯಾಸೆಟ್‌ಗಳು ಪ್ರಚಲಿತವಾಗಿವೆ. ಪಂಚವೀಣಾ ವಾದ್ಯ ಸಮ್ಮಿಲನದ ‘ಶೃಂಗಾರವೀಣಾ ಮಾಧುರಿ’ ನಿರ್ದೇಶಕರು.
ಮೈಸೂರು ಬಾನಿಯ ವೀಣಾವಾದನಕ್ಕೆ ಹೆಸರಾದ ಪ್ರತಿಭಾವಂತ ವೀಣಾವಾದಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.