Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಗಂಗಾವತಿ ಪ್ರಾಣೇಶ್

ಬೀಚಿ ಅವರ ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್ ಅವರು ತಮ್ಮ ಹಾಸ್ಯದ ಮಾತುಗಳಿಂದ ಜನರನ್ನು ರಂಜಿಸುತ್ತಾ ಸ್ಟಾ ಂಡಪ್ ಕಾಮಿಡಿ ಅನ್ನುವ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದವರು. ಹಾಸ್ಯದ ಜೊತೆಯಲ್ಲಿಯೇ ಸಮಾಜಕ್ಕೆ ಸಂದೇಶವನ್ನೂ ನೀಡುವ ಕಾಯಕವನ್ನು ಮಾಡುತ್ತ ನಗೆಯ ಚಾಟಿಯಿಂದಲೇ ಜನತೆಯನ್ನು ಎಚ್ಚರಿಸುತ್ತಿದ್ದಾರೆ.

ಪ್ರಾಣೇಶ್ ಅವರ ವೈಶಿಷ್ಟ್ಯತೆಯೆಂದರೆ ಉತ್ತರ ಕರ್ನಾಟಕ ಭಾಷಾ ಶೈಲಿ. ಆ ಸೊಗಡಿನಲ್ಲಿಯೇ ರಂಜಿಸುವ ಇವರ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟದೆ. ಅಮೇರಿಕಾದ ಅಕ್ಕ ಸಂಸ್ಥೆಯು ಅಲ್ಲಿನ ೧೯ ಪ್ರಮುಖ ನಗರಗಳಲ್ಲಿ ಇವರ ಕಾರ್ಯಕ್ರಮವನ್ನು ಏರ್ಪಡಿಸಿ ಸಂಭ್ರಮಿಸಿದೆ. ಹಾಸ್ಯದ ಕುರಿತ ಸಾಕಷ್ಟು ಪುಸ್ತಕಗಳು, ಸಿ.ಡಿಗಳನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣೇಶ್ ಅವರ ಹಾಸ್ಯಕ್ಕೆ ಅಸಂಖ್ಯಾತ ವೀಕ್ಷಕರಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಸಿದ್ದಪ್ಪ ಬಿದರಿ

ಬಾಗಲಕೋಟೆ ಜಿಲ್ಲೆ ಬೀಳಗಿಯವರಾದ ಶ್ರೀ ಸಿದ್ದಪ್ಪ ಸಾಬಣ್ಣ ಬಿದರಿ ಅವರು ಅನಕ್ಷರಸ್ಥ ಆಶುಕವಿ. ಅಪ್ಪಟ ಕೃಷಿ ಕುಟುಂಬದವರಾದ ಇವರ ಸಾವಿರಾರು ಕವಿತೆಗಳು ೨೩ ಕ್ಕೂ ಹೆಚ್ಚು ಕವನ ಸಂಕಲಗಳನ್ನು ಕನ್ನಡ ಸಾಹಿತ್ಯಕ್ಕೆ ಬಳುವಳಿಯಾಗಿ ನೀಡಿ ಜಾನಪದ ಸಾಹಿತ್ಯದ ಕಣಜವೇ ಆಗಿದ್ದಾರೆ. ಹಳ್ಳಿ ಬದುಕಿನ ಅನುಭವ, ಉತ್ತರ ಕರ್ನಾಟಕದ ಭಾಷೆಯ ಸೊಬಗು, ಇವರ ಕವಿತೆಗಳ ಪ್ರಮುಖ ಆಕರ್ಷಣೆ. ಮೈಸೂರಿನ ದಸರಾ ಕವಿಗೋಷ್ಠಿಯಿಂದ ಹಿಡಿದು ಬೆಳಗಾವಿಯ ೭೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯವರೆಗೂ ಹತ್ತಾರು ಕವಿಗೋಷ್ಟಿಗಳಲ್ಲಿ ತನ್ನ ಕವನ ವಾಚನ ಮಾಡಿರುವ ಹೆಗ್ಗಳಿಕೆ ಇವರದು.
‘ಹೊಆಸಾಲ ಹೋರಿ’,’ಹತ್ತೂನ ಬಾ ಪ್ರೀತಿ ಗಾಡಿ’ ಮತ್ತು ಅನುಭವದ ಅಡಿಗಿ’, ‘ಮಾತು ಮಾಣಿಕ್ಯ’, ‘ಕೆರೆಯ ನೀರನು ಕೆರಿಗೆ ಚೆಕ್ಲೀನಿ’ ಹಾಗೂ ‘ಹತ್ತಿತೋ ಉರಿ’ ಇವು ಇವರ ಪ್ರಸಿದ್ಧ ಕವನ ಸಂಕಲನಗಳು. ಹಲವು ಹಾಡುಗಳು ಧ್ವನಿಸುರುಳಿಗಳಾಗಿಯೂ ಹೆಸರು ಮಾಡಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಕೃಷ್ಣ ಕೊಲ್ದಾರ ಕುಲಕರ್ಣಿ

ದಾಸಸಾಹಿತ್ಯದಲ್ಲಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿರುವ ಡಾ.ಕೃಷ್ಣ ಕೊಲ್ದಾರ ಕುಲಕರ್ಣಿ ಅವರು ವಿಜಯಪುರದ ಹಿರಿಯ ವಿದ್ವಾಂಸರು. ಗಮಕದ ಮುಖೇನ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಖ್ಯಾತಿ ಇವರದು. ಈವರೆಗೆ ಸುಮಾರು ಐವತ್ತು ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಸುಮಾರು ೧೪ ಪುಸ್ತಕಗಳು ದಾಸಸಾಹಿತ್ಯದ ಕುರಿತದ್ದೇ ಆಗಿವೆ.
ದಾಸಸಾಹಿತ್ಯದ ಬಗೆಗಿನ ಕುಲಕರ್ಣಿಯವರ ಸಂಶೋಧನೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು ಅವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಡಿ. ಟಿ. ರಂಗಸ್ವಾಮಿ

ಚಿತ್ರದುರ್ಗ ಜಿಲ್ಲೆ ಹೊರಕೆರೆದೇವರಪುರದವರಾದ ಶ್ರೀ.ಡಿ.ಟಿ. ರಂಗಸ್ವಾಮಿಯವರು ಕನ್ನಡದಲ್ಲಿ ೫೦ ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ವಿಮರ್ಶೆ,ಜೀವನಚರಿತ್ರೆ, ನಾಟಕಗಳು, ಶಾಸ್ತ್ರ ಗ್ರಂಥಗಳು, ಪತ್ರಲೇಖನ ಕಲೆ, ಮಕ್ಕಳ ಸಾಹಿತ್ಯ ಇತ್ಯಾದಿ ಎಲ್ಲ ಪ್ರಕಾರಗಳಲ್ಲು ಕೃತಿ ರಚನೆ ಮಾಡಿದ್ದಾರೆ.
ಸಾವಿರಾರು
ಮೂಲತ: ಅಧ್ಯಾಪಕರಾದ ಪ್ರೊ.ಡಿ.ಟಿ. ರಂಗಸ್ವಾಮಿಯವರು ರೀಡರ್,ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಇವರು ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ೧೦ ನೇ ತರಗತಿ ಕನ್ನಡ ಪಠ್ಯಪುಸ್ತಕ ರಚನೆಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿಯೂ ಭಾಗವಹಿಸಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರರು ಎನಿಸಿಕೊಂಡಿದ್ದಾರೆ.
‘ಶ್ರೀ ರಂಗಬಿನ್ನಪ’ ಅಭಿನಂದನಾ ಗ್ರಂಥವು ಪ್ರೊ. ರಂಗಸ್ವಾಮಿಯವರ ಸಮಗ್ರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಗ್ರಂಥವಾಗಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಮಹಾದೇವ ಶಂಕನಪುರ

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಶ್ರೀ ಮಹಾದೇವ ಶಂಕನಪುರ, ಇವರು ಶೋಷಿತ ಸಮುದಾಯದಿಂದ ಬಂದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತ, ಇತಿಹಾಸ- ಸಂಸ್ಕೃತಿ-ಜಾನಪದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಸಾಹಿತ್ಯ ಪ್ರಕಾರವನ್ನು ಕಂಡುಕೊಂಡವರು.
ಮಾರಿಹಬ್ಬಗಳು,ಚಿಕ್ಕಲ್ಲೂರು ಜಾತ್ರೆ,ಮಂಟೇಸ್ವಾಮಿ, ಮಲೆಯ ಮಾದಯ್ಯನ ಸಾಂಸ್ಕೃತಿಕ ಜಾತ್ರೆ, ಮಂಟೇಸ್ವಾಮಿ ಮೌಖಿಕ ಚರಿತ್ರೆ-ಇತ್ಯಾದಿ ಇವರ ಕೃತಿಗಳು. ಸಾಹಿತ್ಯ ಮತ್ತು ಸಂಶೋದನೆಗೆ ಇವರು ಸಲ್ಲಿಸಿರುವ ಸೇವೆಗೆ ೨೦೦೨ ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪುಸ್ತಕ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದ ತೀನಂಶ್ರಿ ಪುಸ್ತಕ ಪ್ರಶಸ್ತಿ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಪ್ರಶಸ್ತಿ ಇವರ ಮಡಿಅಗಿವೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಶಂಕರ ಬುಚಡಿ

ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ನೆಲಜಲಪರವಾದ ಹೋರಾಟಗಳಿಂದ ಮರಾಠಿ ಪ್ರಾಬಲ್ಯ ಕ್ಷೀಣಿಸುವಂತೆ ಮಾಡಿದ ವೀರಕನ್ನಡಿಗ ಶಂಕರ ಮಾಣಿಕಾ ಬುಚಡಿ. (೧೯೬೦-೭೦ರ ದಶಕದಲ್ಲಿ ಬೆಳಗಾವಿಯಲ್ಲಿದ್ದ ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಲು ಕನ್ನಡದ ಉಳಿವಿಗಾಗಿ ಕನ್ನಡ ಗೆಳೆಯರ ಬಳಗ ಸ್ಥಾಪಿಸಿ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡ ಸೇವೆಗೈದವರು. ಕನ್ನಡ ವಾಚಾನಾಲಯ ತೆರೆದವರು, ರಸ್ತೆನಾಮಫಲಕಗಳನ್ನು ಕನ್ನಡಜಾರಿಗೆ ಶ್ರಮಿಸಿದವರು, ಕನ್ನಡ ಚಳವಳಿಗಾರರ ಸಂಘದ ಮೂಲಕ ಕನ್ನಡದಕಹಳೆ ಮೊಳಗಿಸಿದವರು. ಮಹಾಜನ್‌ ವರದಿ ಜಾರಿಗಾಗಿ ಹೋರಾಡಿದ ಶಂಕರ್ ಬುಚಡಿ ನೇಕಾರರ ಸಂಘದ ಮೂಲಕ ಸಮುದಾಯದ ಸೇವೆಗೈದವರು. ಗಾಯಿತ್ರಿ ಅರ್ಬನ್ ಸೊಸೈಟಿ ತೆರೆದು ಜನಾಂಗದ ಆರ್ಥಿಕಾಭಿವೃದ್ಧಿಗೆ ನೀರೆರೆದವರು. ಹಲವು ಕೃತಿಗಳ ಲೇಖಕರು, ಹವ್ಯಾಸಿ ಬರಹಗಾರರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವರದಾಸಿಮಯ್ಯ ಅಧ್ಯಯನ ಪೀಠದ ಸಂಪಾದಕ ಮಂಡಲ ಸದಸ್ಯರಾಗಿ ಗುರುತರ ಸೇವೆಗೈದವರು. ಜೈಲುವಾಸ ಅನುಭವಿಸಿದ ಅಪ್ರತಿಮ ಚಳವಳಿಗಾರರು. ದಶಕಗಳ ಕಾಲ ಕನ್ನಡದ ಗೇಯತೆ ಮೆರೆಯಲು ಅಹರ್ನಿಶಿ ದುಡಿದ ಬುಚಡಿ ಅವರು ಕನ್ನಡನುಡಿ ಶ್ರೀ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ನೇಕಾರರತ್ನ ಪ್ರಶಸ್ತಿ, ಪ್ರತಿಭಾರತ್ನ ಪ್ರಶಸ್ತಿ ಮುಂತಾದ ಗೌರವಗಳಿಂದ ಭೂಷಿತರು. ೮೦ರ ಇಳಿವಯಸ್ಸಿನಲ್ಲೂ ಕನ್ನಡಸೇವೆಗೆ ಮುಂದಾಗುವ ಅಪ್ಪಟ ಕನ್ನಡಪ್ರೇಮಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಿ.ಎನ್. ಅಕ್ಕಿ

ಆದರ್ಶ ಶಿಕ್ಷಕ, ಕವಿ, ಲೇಖಕ, ಚಿತ್ರಕಲಾವಿದ, ಇತಿಹಾಸ ಸಂಶೋಧಕ ಡಿ.ಎನ್. ಅಕ್ಕಿ ಸದ್ದುಗದ್ದಲವಿಲ್ಲದ ಅಪರೂಪದ ಸಾಧಕರು. ಕಲ್ಯಾಣ ಕರ್ನಾಟಕದ ಮೇರು ಪ್ರತಿಭೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ದೇವೀಂದ್ರಪ್ಪ ನಾಭಿರಾಜ ಅಕ್ಕಿ ಚಿತ್ರಕಲೆಯಲ್ಲಿ ಡಿಪ್ಲೋಮಾ-ಆರ್ಟ್ ಮಾಸ್ಟರ್ ಪದವೀಧರರು. ಮೂರೂವರೆ ದಶಕದ ಚಿತ್ರಕಲಾ ಶಿಕ್ಷಕ ವೃತ್ತಿಯ ಜೊತೆಗೆ ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನಾ ಬರಹಗಳಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲರು, ಶಹಾಪುರ ತಾಲ್ಲೂಕು ದರ್ಶನ, ಮುಂಬೆಳಗು, ಚಿಗುರು ಚಿಂತನ, ಸಗರನಾಡು ಸಿರಿ, ಹಡದವ್ವ ಹಾಡ್ಯಾಳ, ಯಕ್ಷಪ್ರಶ್ನೆ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ ಹೆಗ್ಗಳಿಕೆ. ಇತಿಹಾಸದ ಕಾಲಘಟ್ಟಗಳ ಮೇಲೆ ಬೆಳಕು ಚೆಲ್ಲಿದ ಸಂಶೋಧಕರು. ಶಾತವಾಹನರ ಕಾಲದ ೨೦೦೦ ವರ್ಷಗಳ ಹಿಂದಿನ ಸೀಸದ ನಾಣ್ಯಗಳ ಶೋಧನೆ-ಸಂಗ್ರಹ ಸ್ಮರಣೀಯ ಕ್ಷೇತ್ರಕಾರ್ಯ. ರಾಜ್ಯ- ಕೇಂದ್ರದ ಆದರ್ಶ ಶಿಕ್ಷಕ ಸೇರಿ ಅನೇಕ ಪ್ರಶಸ್ತಿಗಳಿಂದ ಸಂಪನ್ನರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ವಲೇರಿಯನ್ ಡಿಸೋಜ (ವಲ್ಲಿ ವಗ್ಗ)

ಕೊಂಕಣಿ ಪ್ರಾದೇಶಿಕ ಭಾಷೆಯ ವಿಶಿಷ್ಟ ಪ್ರತಿಭೆ ವಲೇರಿಯನ್ ಡಿಸೋಜ, ಕೊಂಕಣಿ ಸಾಹಿತಿ, ಕನ್ನಡ ಕಥೆಗಾರರಾಗಿ ಅವರದ್ದು ಅಚ್ಚಳಿಯದ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ವಗ್ಗದವರಾದ ವಲೇರಿಯನ್ ಡಿಸೋಜ 17ರ ಹರೆಯದಲ್ಲೇ ಸಾಹಿತ್ಯ ಲೋಕ ಪ್ರವೇಶಿಸಿದ ಕಥೆಗಾರ. ವೃತ್ತಿಯಲ್ಲಿ ಕೈಗಾರಿಕೋದ್ಯಮಿ, ಪ್ರವೃತ್ತಿಯಲ್ಲಿ ಬರಹಗಾರ- ಪ್ರಕಾಶಕ, ಚೊಚ್ಚಲ ಕೊಂಕಣಿ ಕಥೆ ‘ರಾಕೆ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ಬರವಣಿಗೆಗೆ ಮಹಾಸ್ಫೂರ್ತಿ. ಕಥೆ, ಕವನ, ಲೇಖನ, ಅಂಕಣಬರಹ, ನಾಟಕ ಪ್ರಕಾರಗಳಲ್ಲಿ 56 ವರ್ಷಗಳಿಂದ ನಿರಂತರ ಸಾಹಿತ್ಯ ಕೃಷಿ, ಕವಿಗೋಷ್ಠಿ- ವಿಚಾರಗೋಷ್ಠಿಯಲ್ಲಿ ವಿದ್ವತ್ತಿನ ಮಂಡನೆ, ಕೊಂಕಣಿಯಲ್ಲಿ ಏಳು, ಕನ್ನಡದ ಒಂದು ಕೃತಿ ಪ್ರಕಟಣೆ, ಕೊಂಕಣಿ ನಿಯತಕಾಲಿಕಗಳಲ್ಲಿ 150, ಕನ್ನಡದ ಪತ್ರಿಕೆಗಳಲ್ಲಿ 40 ಕಥೆಗಳು ಪ್ರಕಟ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೌರವ ಪ್ರಶಸ್ತಿ, ಬೆಹರಾನ್-ದುಬೈ ಸಂಘಟನೆಗಳಿಂದಲೂ ಗೌರವಕ್ಕೆ ಭಾಜನರಾದ ಸಾಧಕ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ರಾಮಣ್ಣ ಬ್ಯಾಟಿ (ವಿಶೇಷ ಚೇತನ)

ಗದಗ ಜಿಲ್ಲೆಯ ವಿಶೇಷ ಚೇತನ ರಾಮಣ್ಣ ಬ್ಯಾಟಿ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಅನನ್ಯ ಸಾಧಕರು. ಅಂಧತ್ವದಲ್ಲೇ ಸಾಹಿತ್ಯದ ಬೆಳಕು ಹರಿಸಿದ ಮಹಾಪ್ರತಿಭೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮನಿಹಾಳ-ಸುರೇಖಾನ ರಾಮಣ್ಣರ ಹುಟ್ಟೂರು. ಓದಿದ್ದು ನಾಲ್ಕ ತರಗತಿಯಾದರೂ ಬೆಳೆದದ್ದು ಆಗಸದೆತ್ತರಕ್ಕೆ, ಹೊರಗಣ್ಣಿನ ಅಂಧತ್ವ ಮೀರಿ ಒಳಗಣ್ಣಿಂದ ಲೋಕ ಅರಿತವರು. ಆಂತರ್ಯದ ಭಾವಗಳಿಗೆ ಅಕ್ಷರ ರೂಪವಿತ್ತು ಕಾವ್ಯಕಟ್ಟಿದ ಆಶುಕವಿ. ಗದ್ಯ-ಪದ್ಯಗಳ ರಚನೆಯಲ್ಲಿ ನಿಸ್ಸಿಮರು. ಚೌಪದಿ ಕಾವ್ಯ, ಭಾಮಿನಿ ಷಟ್ನದಿಯಲ್ಲಿ ರಚಿಸಿದ ಉದ್ಭಂಥಗಳು ಜನಾನುರಾಗಿ, ಸಿದ್ದಲಿಂಗ ಕಾವ್ಯಸುಧೆ, ಹೊಳಲಮ್ಮದೇವಿ ಶತಕ, ರಂಗಾವಧೂತರ ಚರಿತ್ರೆ ಗೌರಿಶಂಕರ ಚರಿತಾಮೃತ, ಹುಲಿಗೆಮ್ಮದೇವಿ ವ್ರತ ಮಹಾತ್ಮ ಮುಂತಾದ ೬೦ ಗ್ರಂಥಗಳು ಸಾಹಿತ್ಯಲೋಕಕ್ಕೆ ಕೊಟ್ಟ ಅನನ್ಯ ಕೊಡುಗೆ. ಗದಗ-ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅವ್ವ ಪ್ರಶಸ್ತಿ, ದೇವರ ದಾಸಿಮಯ್ಯ ಮುಂತಾದ ಪ್ರಶಸ್ತಿಗಳಿಗೆ ಸತ್ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ವಿ. ಮುನಿವೆಂಕಟಪ್ಪ

ಕವಿ, ವಿಮರ್ಶಕ, ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ ಹಾಗೂ ಹೋರಾಟಗಾರರಾದ ಡಾ. ವಿ. ಮುನಿವೆಂಕಟಪ್ಪ ಬಹುಮುಖಿ ವ್ಯಕ್ತಿತ್ವದ ಸಾಧನಾಶೀಲರು.
ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನ ಯಡಹಳ್ಳಿಯಲ್ಲಿ ಜನಿಸಿದ ಮುನಿವೆಂಕಟಪ್ಪ ಅವರು ಕೃಷಿ ಪದವಿ, ಸ್ನಾತಕೋತ್ತರ ಪದವೀಧರರು. ಪಿ.ಎಚ್ಡಿ ಪುರಸ್ಕೃತರು. ಬಂಡಾಯ ಸಾಹಿತ್ಯ-ದಲಿತ ಚಳವಳಿಯ ಅಂಗಳದಲ್ಲಿ ಅರಳಿದ ಸಮಸಮಾಜದ ಕನಸುಗಾರ. ದಲಿತ ಸಂಘರ್ಷ ಸಮಿತಿಯ ಮೂಲಕ ಸಾಮಾಜಿಕ ಬದುಕಿಗೆ ಪ್ರವೇಶ. ಬಂಡಾಯ ಸಾಹಿತ್ಯ ಚಳವಳಿಯ ಸಂಸ್ಥಾಪಕ ಸದಸ್ಯರು. ಕರ್ನಾಟಕ ವಿಚಾರವಾದಿ ಒಕ್ಕೂಟ, ಚೇತನ ಟ್ರಸ್ಟ್ನ ಅಧ್ಯಕ್ಷರಾಗಿ ದುಡಿದವರು. ಲೋಕಾಭನುವ ಒಳಬೇಗುದಿಯನ್ನೇ ಕಾವ್ಯವಾಗಿಸಿದ ಕವಿ. ಕೆಂಡದ ನಡುವೆ, ಸ್ವಾಭಿಮಾನದ ಬೀಡಿಗೆ, ಕಾಡು ಕಣಿವೆಯ ಹಕ್ಕಿ, ಬಾಲಕ ಅಂಬೇಡ್ಕರ್್ರ ಮುಂತಾದ ಮಹತ್ವದ ೬೨ ಕೃತಿಗಳ ಕರ್ತೃ, ವಿಚಾರವಾದಿ, ಲೇಖಕ, ಚಳವಳಿಗಾರರಾಗಿ ಅವರದ್ದು ಹೆಗ್ಗುರುತಿನ ಸಾಧನೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಸಾಹಿತ್ಯಶ್ರೀ ಮತ್ತಿತರ ಪ್ರಶಸ್ತಿ ಪುರಸ್ಕೃತ ಸಶಕ್ತ ದಲಿತಧ್ವನಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಪಿ. ಸಿದ್ಧಾಶ್ರಮ

ಕನ್ನಡದ ಸಾರಸ್ವತ ಲೋಕ ಕಂಡ ಬಹುಮುಖ ಪ್ರತಿಭೆ ಪ್ರೊ. ಸಿ.ಪಿ. ಸಿದ್ಧಾಶ್ರಮ. ಸಾಹಿತ್ಯಾಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದ ಬಹುಶ್ರುತ ಸಾಧಕರು.
ಧಾರವಾಡ ಜಿಲ್ಲೆ, ಹುಲ್ಲಂಬಿ ಗ್ರಾಮದ ಪ್ರೊ. ಚಿದಾನಂದ ಪರಸಪ್ಪ ಸಿದ್ಧಾಶ್ರಮ ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ಡಿ ಪಡೆದವರು. ಕನ್ನಡ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕರಾಗಿ ನಾಲ್ಕೂವರೆ ದಶಕಗಳ ಕಾಲದ ಅನನ್ಯ ಸೇವೆ. ಮೈಸೂರು ವಿವಿ ಪ್ರಭಾರ ಕುಲಪತಿ, ಕಲಾನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಪಾರ ಆಡಳಿತಾತ್ಮಕ-ಶೈಕ್ಷಣಿಕ ಅನುಭವ. ವಿಮರ್ಶಕ, ಸಂಶೋಧಕ, ಕವಿ, ಆಧುನಿಕ ವಚನಕಾರ, ಸಂಸ್ಕೃತಿ ಚಿಂತಕರಾಗಿ ಅಮೂಲ್ಯ ಸಾಹಿತ್ಯಾರಾಧನೆ. ಹೊಸ ಅಲೆ, ಹೊಳಹು, ನಿಕಷ, ದಿಟದ ದಿಟ್ಟಿಯ ಪಯಣ ಸೇರಿದಂತೆ ೨೪ ಕೃತಿಗಳ ರಚನಕಾರರು. ಹಲವಾರು ಪ್ರಶಸ್ತಿ- ಗೌರವಗಳಿಂದ ಭೂಷಿತರು. ಭೂಷಿತರ

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕೃಷ್ಣೇಗೌಡ

ಕನ್ನಡ ಸಾಹಿತ್ಯಲೋಕದಲ್ಲಿ ಪ್ರಾಧ್ಯಾಪಕ, ಚಿಂತಕ, ವಾಲ್ಮೀ, ಮಾತಿನಮಲ್ಲರಾಗಿ ಹೆಸರಾಗಿರುವ ಪ್ರೊ. ಕೃಷ್ಣೇಗೌಡರದ್ದು ವಿಶಿಷ್ಟ ಸಾಧನೆ. ಅಸ್ಖಲಿತ ಮಾತುಗಾರಿಕೆಯಿಂದ ದೇಶ-ವಿದೇಶಗಳಲ್ಲಿ ಕನ್ನಡ ಭಾಷೆಯ ಸೌಂದರ್ಯವನ್ನು ಬೆಳಗಿದ ಕನ್ನಡಬಂಧು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗಮನಮರಡಿ ಗ್ರಾಮದಲ್ಲಿ ೧೯೫೮ರಲ್ಲಿ ಜನಿಸಿದ ಕೃಷ್ಣೇಗೌಡರು ಕೃಷಿಕ ಕುಟುಂಬದ ಕುಡಿ. ಹುಟ್ಟೂರಿನಲ್ಲಿ ಪ್ರೌಢಶಿಕ್ಷಣ, ಮೈಸೂರಿನಲ್ಲಿ ಉನ್ನತ ಶಿಕ್ಷಣ. ಮೈಸೂರು ವಿವಿಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಸೆಂಟ್‌ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ (೧೯೮೩ರಲ್ಲಿ ವೃತ್ತಿಬದುಕು ಆರಂಭಿಸಿದ ಗೌಡರು ಪ್ರಾಂಶುಪಾಲರಾಗಿ ನಿವೃತ್ತರಾದವರು. ಬಾಲ್ಯದಿಂದಲೂ ರಂಗಕಲೆ, ಜನಪದಕಲೆಗಳ ಬಗ್ಗೆ ಆಸಕ್ತರಾಗಿದ್ದ ಕೃಷ್ಣಗೌಡರು ಗ್ರಾಮ್ಯ ಭಾಷೆ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲವರು. ನಿರರ್ಗಳವಾಗಿ, ಸುಸ್ಪಷ್ಟವಾಗಿ ಮಾತನಾಡುವ ಅಪೂರ್ವ ಕಲೆಗಾರಿಕೆ ಅವರದ್ದು. ಹಾಗಾಗಿ ವೃತ್ತಿಯಲ್ಲಿ ಪ್ರಾಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಅವರು ಅಪ್ಪಟ ಹಾಸ್ಯಗಾರ. ನಗೆಕೂಟಗಳಲ್ಲಿ ಕೃಷ್ಣೇಗೌಡರು ಮಾತಿಗೆ ನಿಂತರೆ ಸಾಕು ನಗುವಿನ ಅಲೆಗಳ ಭೋರ್ಗರೆತ ಖಚಿತ, ದೇಶಾದ್ಯಂತ ಹಾಗೂ ೫೦ಕ್ಕೂ ಹೆಚ್ಚು ವಿದೇಶಗಳಲ್ಲಿ ನಗೆಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಿರುವ ಕೃಷ್ಣಗೌಡರು ಮಾತಿನಮಲ್ಲರೆಂದೇ ಸುವಿಖ್ಯಾತಿ, ಕವಣೆಕಲ್ಲು, ಕೃಷ್ಣವಿನೋದ ಮತ್ತು ಜಲದ ಕಣ್ಣು ಕೃತಿಗಳ ಲೇಖಕರೂ ಸಹ. ಬದುಕಿನ ಪುಟ್ಟಪುಟ್ಟ ಅನುಭವಗಳನ್ನು ಆಸ್ವಾದಿಸಬೇಕೆಂಬ ನಂಬಿಕೆಯ ಕೃಷ್ಣೇಗೌಡರ ಕನ್ನಡ ಭಾಷೆಯ ಬೆರಗು, ಮಾತಿನ ಬೆಡಗಿನ ಮೂರ್ತರೂಪ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸರಸ್ವತಿ ಚಿಮ್ಮಲಗಿ

ವಿಜಯಪುರದವರಾದ ಡಾ. ಸರಸ್ವತಿ ಚಿಮ್ಮಲಗಿ ಅವರು ಬಹುಮುಖ ಪ್ರತಿಭೆಯ ಲೇಖಕಿ. ಮಹಿಳಾ ಸಂಘಟಕಿ, ಉಪನ್ಯಾಸಕಿ ಹಾಗೂ ಹೋರಾಟಗಾರ್ತಿಯಾಗಿಯೂ ಹೆಜ್ಜೆಗುರುತು ಮೂಡಿಸಿದ ಸಾಧಕಿ.
ವಿಜಯಪುರದಲ್ಲಿ ೧೯೫೦ರ ಡಿಸೆಂಬರ್ ೨೪ರಂದು ಜನಿಸಿದ ಸರಸ್ವತಿ ಚಿಮ್ಮಲಗಿ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು, ಕನ್ನಡ ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದವರು, ಬಂಡಾಯದ ಮನೋಧರ್ಮದಿಂದಲೇ ಬರವಣಿಗೆಗೆ ಧುಮುಕಿದವರು. ನಾವು ನಿಮ್ಮವರೇ ಸ್ವಾಮಿ, ಸಾಹಿತ್ಯ ವಿಹಾರ, ಮುಳ್ಳುಬೇಲಿ, ಹಡೆದವ್ವ, ಬಾಳು ಕೊಡವ್ವ ನೋವಾಮಿ, ರಂಗಾರೇರು, ಹಳೆ ನೆನಪು ಹಸಿರಾದಾಗ ಮುಂತಾದ ಕೃತಿಗಳ ರಚನಕಾರರು.ರಂಗಭೂಮಿಯಲ್ಲೂ ತೊಡಗಿಕೊಂಡಿರುವ ಚಿಮ್ಮಲಗಿ ನಟಿಯೂ ಸಹ.ಕತ್ತಲೆ ಬೆಳಕು, ಅಮ್ಮಾವ್ರ ಗಂಡ, ಕಾಡುಕುದುರೆ ಮುಂತಾದ ನಾಟಕ, ಹಳ್ಳಿಹಳ್ಳಿಯ ಕಥೆ, ನೋಸಿಲಾ ಚಲನಚಿತ್ರಗಳಲ್ಲಿ ನಟಿಸಿರುವ ಕಲಾವಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ, ಕವಯತ್ರಿಯರ ಸಮ್ಮೇಳನ, ಟರ್ಕಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿಯಾಗಿರುವ ಅವರು ಸಮಾಜಸೇವಾ ಕಾರ್ಯದಲ್ಲೂ ಸದಾ ಮುಂದು.ಅಂತಾರಾಷ್ಟ್ರೀಯ ಮಹಿಳಾ ವರ್ಷ ಪ್ರಶಸ್ತಿ, ಆದರ್ಶ ಸ್ತ್ರೀರತ್ನ ಪ್ರಶಸ್ತಿ, ಅತ್ತಿಮಬ್ಬೆ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರತಿಭಾವಂತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಚಂದ್ರಕಾಂತ ಕರದಳ್ಳಿ

ಲೇಖಕ, ಪ್ರಕಾಶಕ, ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಸಾರಸ್ವತ ಲೋಕದ ಗಟ್ಟಿಪ್ರತಿಭೆ. ಶಿಶುಸಾಹಿತ್ಯದಲ್ಲೇ ತಮ್ಮದೇ ಛಾಪು ಮೂಡಿಸಿರುವ ಪ್ರತಿಭಾವಂತರು.
ಯಾದಗಿರಿ ಜಿಲ್ಲೆಯ ಶಹಾಪುರ ಚಂದ್ರಕಾಂತ ಕರದಳ್ಳಿ ಅವರ ಮೂಲನೆಲೆ, ಬಾಲ್ಯದಿಂದಲೂ ಓದು- ಬರಹದೆಡೆಗೆ ತೀವ್ರಾಸಕ್ತಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿ.ಇಡಿ ಪಡೆದವರು. ಶಹಾಪುರದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಅನನ್ಯ ಸೇವೆ. ಮಕ್ಕಳ ಮನೋಭೂಮಿಯೇ ಬರಹದ ತಪೋಭೂಮಿ. ಮಕ್ಕಳಿಗಾಗಿ ಆರು ಕವಿತಾಸಂಕಲನ, ೫ ಕಥಾಸಂಕಲನ, ೬ ಕಾದಂಬರಿ, ೨ ಶಿಶುಪ್ರಾಸಗಳು, ೧ ಒಗಟುಗಳು ಸೇರಿದಂತೆ ೨೫ಕ್ಕೂ ಹೆಚ್ಚು ಕೃತಿಗಳು, ಪ್ರೌಢ ಸಾಹಿತ್ಯದಲ್ಲಿ ೨೫ ಕೃತಿಗಳನ್ನು ರಚಿಸಿರುವ ಸಾಹಿತಿಗಳು. ಸುರಪುರದ ಮಕ್ಕಳ ಸಾಹಿತ್ಯ ಸಮ್ಮೇಳನ, ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪುಸ್ತಕ ಆಯ್ಕೆ ಸಮಿತಿಯ ಸದಸ್ಯತ್ವ, ಸಿಸು ಸಂಗಮೇಶ ಪ್ರಶಸ್ತಿ, ಸಗರನಾಡ ಸಿರಿ, ಉತ್ತಮ ಶಿಕ್ಷಕ ರಾಷ್ಟ್ರ-ರಾಜ್ಯ ಪ್ರಶಸ್ತಿಗಳಿಗೆ ಭಾಜನರು, ಸದ್ದಿಲ್ಲದೆ ಆದರಣೀಯ ಸಾಧನೆಯ ಕೃಷಿಗೈದ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ|| ಬಿ.ರಾಜಶೇಖರಪ್ಪ

ಕನ್ನಡ ಪ್ರಾಧ್ಯಾಪಕರು, ಇತಿಹಾಸ ಸಂಶೋಧಕರು, ಶಾಸನತಜ್ಞರೂ ಆಗಿರುವ ಡಾ. ಬಿ.ರಾಜಶೇಖರಪ್ಪ ಕ್ರಿಯಾಶೀಲ ಸಾಧಕರು.ದಣಿವರಿಯದ ಸಾಹಿತ್ಯ ಸೇವಕರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರಿನಲ್ಲಿ ೧೯೪೭ರ ಜೂನ್ ೧೫ರಂದು ಜನಿಸಿದ ರಾಜಶೇಖರಪ್ಪ ಸ್ನಾತಕೋತ್ತರ ಪದವೀಧರರು. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಪ್ರಾಧ್ಯಾಪಕರು, ಅಧ್ಯಯನ, ಅಧ್ಯಾಪನ, ಸಾಹಿತ್ಯ ರಚನೆ ಮತ್ತು ಸಂಶೋಧನೆಯಲ್ಲಿ ಸತತ ನಿರತರು. ಭಾಷಾ- ವಿಜ್ಞಾನ, ಗ್ರಂಥ ಸಂಪಾದನೆ, ಶಾಸನಲಿಪಿ, ಹಸ್ತಪ್ರತಿ ಲಿಪಿ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರು. ಚಿತ್ರದುರ್ಗ ಸುತ್ತಮುತ್ತ ೬೫೦ ಅಪ್ರಕಟಿತ ಶಾಸನಗಳ ಅನ್ವೇಷಕರು. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ ಸಂಶೋಧಕರು, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ೨೦೦ಕ್ಕೂ ಹೆಚ್ಚು ವಿದ್ವತ್ಪಬಂಧಗಳನ್ನು ಮಂಡಿಸಿರುವ ರಾಜಶೇಖರಪ್ಪ ಹತ್ತಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಸಂಶೋಧನಾಶ್ರೀ ಪ್ರಶಸ್ತಿ, ರಾಷ್ಟ್ರೀಯ ಹಂಡೆಶ್ರೀ ಪ್ರಶಸ್ತಿ, ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳ ಪುರಸ್ಕೃತ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಮಂಜಪ್ಪಶೆಟ್ಟಿ ಮಸಗಲಿ

ಕವಿ, ವಿಮರ್ಶಕ, ಸಂಶೋಧಕ, ಸಂಪಾದಕ, ಜೀವನಚರಿತ್ರೆಕಾರ, ವ್ಯಾಕರಣಕಾರ ಹಾಗೂ ಹಸ್ತಪ್ರತಿ ತಜ್ಞರೂ ಆಗಿರುವ ಮಂಜಪ್ಪಶೆಟ್ಟಿ ಮಸಗಲಿ ಅವರು ಬಹುಮುಖಿ ಆಸಕ್ತಿಯ ಪ್ರತಿಭಾಶಾಲಿ.
ಚಿಕ್ಕಮಗಳೂರು ತಾಲ್ಲೂಕಿನ ಮಸಗಲಿ ಮಂಜಪ್ಪಶೆಟ್ಟರ ಹುಟ್ಟೂರು. ಚಿಕ್ಕಮಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ. ಚಿನ್ನದಪದಕ ವಿಜೇತರು. ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕ-ಸಹ ನಿರ್ದೇಶಕರಾಗಿ ಸಾರ್ಥಕ ಸೇವೆ. ಅಧ್ಯಯನ- ಅಧ್ಯಾಪನ ಜೊತೆಗೆ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ-ಕ್ರಿಯಾಶೀಲರು. ಅರವತ್ತಕ್ಕೂ ಹೆಚ್ಚು ಕೃತಿಗಳು, ೮೦ಕ್ಕೂ ಅಧಿಕ ಸಂಶೋಧನಾ ಲೇಖನಗಳು, ಅಪಾರ ಜಾನಪದ ಸಾಹಿತ್ಯದ ಸಂಗ್ರಹ, ಹಲವಾರು ಶಾಸನಗಳ ಪತ್ತೆಹಚ್ಚುವಿಕೆ ಮಂಜಪ್ಪ ಶೆಟ್ಟರ ಕ್ರಿಯಾಶೀಲತೆ-ಪ್ರತಿಭಾವಂತಿಕೆಗೆ ಸಾಕ್ಷಿ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಾಹಿತ್ಯ ಗೋಷ್ಠಿಗಳಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಹಿರಿಮೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ೧೪ನೇ ಹಸ್ತಪ್ರತಿಶಾಸ್ತ್ರ ಸಮ್ಮೇಳನ, ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಅತ್ತಿಮಬ್ಬೆ ಪ್ರಶಸ್ತಿ, ಸಾಹಿತ್ಯಸಿರಿ ಪ್ರಶಸ್ತಿ, ಕಸಾಪ ದತ್ತಿ ಮತ್ತಿತರ ಪ್ರಶಸ್ತಿಗಳಿಗೆ ಪುರಸ್ಕೃತ ತರಾಗಿರುವ ದೈತ್ಯ ಪ್ರತಿಭೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಿ.ಎಸ್. ನಾಗಭೂಷಣ

ವಿಮರ್ಶಾ ಲೋಕದಲ್ಲಿ ಗಮನಾರ್ಹ ಕೆಲಸ ಮಾಡಿರುವ ಡಿ.ಎಸ್.ನಾಗಭೂಷಣ ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿಲಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.

‘ಲೋಹಿಯಾ ವ್ಯಕ್ತಿವಿಚಾರ’, ‘ಮಾಸ್ತಿ ಸಾಹಿತ್ಯ ಸಮಗ್ರ ಚಿಂತನೆ’, ‘ಕಾಡಿನ ಹುಡುಗ ಕೃಷ್ಣ’ ಎಂಬ ಸಂಪಾದಿತ ಕೃತಿಗಳನ್ನು ಜೇಪಿ-ಸೆರೆಮನೆ ದಿನಚರಿ ಅನುವಾದ ಕೃತಿಯನ್ನು ಹಾಗು ಜೇಪಿ ಒಂದು ಅಪೂರ್ಣ ಕ್ರಾಂತಿಯ ಕತೆ ಎಂಬ ವೈಚಾರಿಕ ಕೃತಿಯನ್ನು ಹಾಗೂ ಕರ್ನಾಟಕ ಏಳು-ಬೀಳುಗಳನ್ನು ಕುರಿತ ಹಲವು ಪುಸ್ತಕಗಳನ್ನು ಡಿ.ಎಸ್.ನಾಗಭೂಷಣ ರಚಿಸಿದ್ದಾರೆ.

ಏಕೀಕರಣ ಕಂಡ ಕರ್ನಾಟಕದ ಬಹುಮುಖ ಬೆಳವಣಿಗೆ ಕುರಿತಂತೆ ಹಲವು ಮಹತ್ವದ ಕೃತಿಗಳನ್ನು ಹೊರತಂದಿರುವ ಇವರು ಅಂಕಣಕಾರರಾಗಿಯೂ ಜನಪ್ರಿಯರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಚಂದ್ರಶೇಖರ ತಾಳ್ಯ

ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಸಹ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸಾಹಿತ್ಯ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ ಸಾಧಕರು.
ನನ್ನ ಕಣ್ಣಗಲಕ್ಕೆ, ಸಿಂಧೂ ನದಿಯ ದಂಡೆಯ ಮೇಲೆ, ಎಲ್ಲಿ ನವಿಲು ಹೇಳಿರೇ, ಸುಡುವ ಭೂಮಿ, ಕಾವಳದ ಸಂಜೆಯಲ್ಲಿ, ಮೌನಮಾತಿನ ಸದ್ದು ತಾಳ್ಯರ ಕವನಸಂಕಲನಗಳು. ಪ್ರಭು ಅಲ್ಲಮ, ನೆಲದ ಹುಡುಕಿ ಗದ್ಯ, ಅಲ್ಲಮ ನಾಟಕ, ರಾಮಕೃಷ್ಣ ಮತ್ತು ಅವರ ಕಾಲ, ಗಾಂಧಿ ಹೋದರು: ನಮಗೆ ದಿಕ್ಕು ತೋರುವವರು ಯಾರು ಮತ್ತು ಭಾರತೀಯ ತತ್ವಶಾಸ್ತ್ರ ಇವರ ಸಾಹಿತ್ಯಕ ಕೊಡುಗೆಗಳು. ನವೋತ್ತರ ಸಾಹಿತ್ಯದ ಕಾವ್ಯ ಕಟ್ಟೋಣಕ್ಕೆ ಮಾದರಿಯಂತಹ ಕಾವ್ಯ ರಚನೆ ತಾಳ್ಯರ ವಿಶೇಷತೆ, ನಡೆ-ನುಡಿ ಎರಡರಲ್ಲೂ ಏಕಮಯತೆ, ೧೪ ಕೃತಿಗಳನ್ನು ರಚಿಸಿರುವ ಅವರು ಆರ್ಯಭಟ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಡಿ.ಎಸ್.ಮ್ಯಾಕ್ಸ್ ಸಾಹಿತ್ಯಶ್ರೀ ಗೌರವ ಮುಂತಾದ ಪ್ರಶಸ್ತಿಗಳಿಗೆ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಚ, ಸರ್ವಮಂಗಳಾ

ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದವರು ಚ. ಸರ್ವಮಂಗಳಾ. ಕಾವ್ಯ, ಅನುವಾದ ಮತ್ತು ಸಂಪಾದನಾ ಕ್ಷೇತ್ರದಲ್ಲಿ ಕೃಷಿಗೈದವರು.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸರ್ವಮಂಗಳಾ ಹುಟ್ಟಿದ್ದು ೧೯೪೮ರಲ್ಲಿ. ಓದಿನೊಟ್ಟಿಗೆ ಬರಹ, ಸಾಮಾಜಿಕ ಹೋರಾಟಗಳಿಂದ ಅರಳಿದ ಮಹಿಳಾ ಪರ ಸಶಕ್ತ ದನಿ. ಇವರ ಅಮ್ಮನಗುಡ್ಡ ಕವನಸಂಕಲನ. ೯ ಭಾಷೆಗಳಿಗೆ ಅನುವಾದಿತಗೊಂಡಿರುವ ಕೃತಿ, ಜ್ಞಾನಶ್ರೀ, ಎರಡು ದಶಕಗಳ ಕಾವ್ಯ, ಚದುರಂಗ ಮಾಚಿಕೆ ಸಂಪಾದಿತ ಕೃತಿಗಳು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮ ಎಂಬ ಮುಕ್ತವೇದಿಕೆ, ಪಿಯುಸಿಎಲ್ ಹಾಗೂ ಭಾರತ-ಚೀನಾ ಮೈತ್ರಿ ಸಂಘದ ಸಂಚಾಲಕಿ, ಮೈಸೂರು ವಿವಿ ಮಹಿಳಾ ದೌರ್ಜನ್ಯ ವಿಚಾರಣಾ ಸಮಿತಿಯ ಅಧ್ಯಕ್ಷೆಯಾಗಿಯೂ ದುಡಿದವರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಾಹಿತ್ಯ ಸಲಹಾ ಸಮಿತಿಯ ಸದಸ್ಯೆಯಾಗಿ ಸೇವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ದಿನಕರ್ ದೇಸಾಯಿ ಪ್ರಶಸ್ತಿ ಹಾಗೂ ಚನ್ನಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಹಸನ್ ನಂ ಸುರಕೋಡ

ಬೆಳಗಾವಿ ಜಿಲ್ಲೆಯ ರಾಮದುರ್ಗದ ಪ್ರತಿಭೆ ಹಸನ್ ನಯೀಂ ಸುರಕೋಡ, ಕನ್ನಡದ ಹೆಸರಾಂತ ಅನುವಾದಕರು. ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು, ಸಮಾಜವಾದಿ ಚಿಂತಕರು.
ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮಯೆ ಮುಂತಾದವರ ಬರಹಗಳನ್ನು ಅನ್ಯಭಾಷೆಗೂ, ಕೋಮುಸೌಹಾರ್ದತೆಯ ನೆಲೆಗಳನ್ನು ಬಿಂಬಿಸುವ ಹಲವಾರು ಬರಹಗಳನ್ನು ಕನ್ನಡಕ್ಕೂ ಅನುವಾದಿಗೊಳಿಸಿದ ಹಿರಿಮೆ ಹಸನ್ ನ ೀಂ ಸುರಕೋಡರದ್ದು. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಕಾವ್ಯ-ಬದುಕು, ಸಾದತ್ ಹಸನ್ ಮಾಂಟೋ ಕಥನಕೃತಿಗಳು, ಅಮೃತಾಪ್ರೀತಂರ ಆತ್ಮಕತೆ, ಅಸರ್ ಆಲಿ ಅವರ ವೈಚಾರಿಕ ಬರಹಗಳನ್ನು ಕನ್ನಡಕ್ಕೆ ತಂದಿರುವ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಸನ್ ನಯೀಂ ಸುರಕೋಡ ಅವರಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. ಉರ್ದು ಕವಿ ಸಾಹಿರ್ ಲುಧಿಯಾನವಿರ ಕುರಿತ ‘ಪ್ರೇಮ ಲೋಕದ ಮಾಯಾವಿ’ ಇವರ ವಿಶಿಷ್ಟ ಕೃತಿಯಾಗಿದೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಎಂ.ಎಸ್.ಪ್ರಭಾಕರ್ (ಕಾಮರೂಪಿ)

ಕನ್ನಡ ಸಾಹಿತ್ಯಲೋಕದಲ್ಲಿ ‘ಕಾಮರೂಪಿ’ ಕಾವ್ಯನಾಮದಿಂದಲೇ ಹೆಸರುವಾಸಿಯಾಗಿರುವ ಎಂ.ಎಸ್.ಪ್ರಭಾಕರ್ರ ಪೂರ್ಣ ಹೆಸರು ಮೊಟ್ಲಹಳ್ಳಿ ಸೂರಪ್ಪ ಪ್ರಭಾಕರ. ೧೯೩೯ರಲ್ಲಿ ಕೋಲಾರದಲ್ಲಿ ಹುಟ್ಟಿದ ಕಾಮರೂಪಿ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆ ತಂದುಕೊಟ್ಟವರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದವರು. ೧೯೬೨ರಿಂದ ೬೫ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ ಸೇವೆ ಸಲ್ಲಿಸಿದವರು. ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕ-ಹಿಂದೂ ಪತ್ರಿಕೆಯ ಈಶಾನ್ಯ ಭಾರತ-ದಕ್ಷಿಣ ಭಾರತದ ವಿಶೇಷ ಬಾತ್ಮೀದಾರರಾಗಿ ಸೇವೆಗೈದು ನಿವೃತ್ತರಾದವರು.
ಪ್ರಭಾಕರ್ ಅವರು ಬರೆದದ್ದು ಕಡಿಮೆಯೇ. ಒಂದು ತೊಲ ಪುನುಗು ಮತ್ತು ಇತರೆ ಕಥೆಗಳು, ಕುದುರೆಮೊಟ್ಟೆ, ಅಂಜಿಕಿನ್ಯಾತಕಯ್ಯೋ ಕಿರುಕಾದಂಬರಿ ಇವರ ಕೃತಿಗಳು ಸದ್ಯ ‘ಕಾಮರೂಪಿ’ ಬ್ಲಾಗ್ನಲ್ಲಿ ಬರವಣಿಗೆ, ಹೊಸತನ, ವ್ಯಂಗ್ಯ, ತಮಾಷೆಯ ಮೂಲಕ ಜೀವನವನ್ನು ನೋಡುವ ದೃಷ್ಟಿಕೋನ ಅವರ ಬರಹದ ವಿಶೇಷ ಶಕ್ತಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ|| ವೈದೇಹಿ

‘ವೈದೇಹಿ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿಯವರು ಕನ್ನಡದ ಪ್ರಮುಖ ಲೇಖಕಿ, ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಚಿಂತನಶೀಲ ಬರಹಗಾರರು.

‘ಕ್ರೌಂಚ ಪಕ್ಷಿಗಳು’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ವೈದೇಹಿಯವರು ‘ಮರಗಿಡಬಳ್ಳಿ’ ಎಂಬ ಸಣ್ಣಕಥಾ ಸಂಕಲನ, ‘ಮಲ್ಲಿನಾಥನ ಧ್ಯಾನ’ ಎಂಬ ಪ್ರಬಂಧ, ‘ಬೆಳ್ಳಿ ಸಂಕೋಲೆಗಳು’ ಎಂಬ ಮಹಿಳಾ ವಿಮೋಚನಾ ಹೋರಾಟ ಕಥನ ಹಾಗೂ ಹಲವಾರು ಅನುವಾದ ಮತ್ತು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ವೈದೇಹಿಯವರಿಗೆ ನಿರಂಜನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೌರವ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಪುರಸ್ಕಾರ ಸೇರಿದಂತೆ ಹಲವಾರು ಗೌರವಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ|| ಬಸವರಾಜ ಸಬರದ

ಕಾವ್ಯ, ಸಂಶೋಧನೆ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಬಸವರಾಜ ಸಬರದ ಅವರು ನಾಡಿನ ಪ್ರಮುಖ ಸಾಹಿತಿಗಳು, ಹೋರಾಟ, ಬೆಳದಿಂಗಲು ಬಿಸಿಲಾಯಿತು, ಕೆಂಡ ಸಂಪಿಗೆ ಇವರ ಮುಖ್ಯ ಕಾವ್ಯ ಸಂಕಲನಗಳು.

ಗುಲಬರ್ಗಾ, ರಾಯಚೂರು ಹಾಗು ಬೀದರ್ ಜಿಲ್ಲೆಯ ಅನುಭಾವಿ ಕವಿಗಳ ಬಗ್ಗೆ ಸಂಶೋಧನೆ ನಡೆಸಿರುವ ಸಬರದ ಅವರು ಬಸವೇಶ್ವರ ಹಾಗೂ ಪುರಂದರ ದಾಸರ ಬಗ್ಗೆ ಸಹ ಆಳವಾದ ಅಧ್ಯಯನ ಮಾಡಿದ್ದಾರೆ.

‘ಪ್ರತಿರೂಪ’, ‘ರೆಕ್ಕೆ ಮೂಡಿದಾಗ’, ‘ನಾಕುಬೀದಿ’ ನಾಟಕಗಳು ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ವಿಮರ್ಶಾ ಕ್ಷೇತ್ರದಲ್ಲಿಯೂ ಇವರ ಸೇವೆ ಗಣನೀಯ. ಕುವೆಂಪು ಸಾಹಿತ್ಯ ಪುರಸ್ಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹಾದ್ದೂರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸುಕನ್ಯಾ ಮಾರುತಿ

ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಸುಕನ್ಯಾ ಮಾರುತಿ ಹೆಸರಾಂತ ಕವಿಯಿತ್ರಿ. ಪಂಚಾಗ್ನಿ ಮಧ್ಯೆ, ನಾನು-ನನ್ನವರು ಹಾಗೂ ತಾಜಮಹಲಿನ ಹಾಡು, ಅವರ ಕವನ ಸಂಕಲನಗಳು. ಹಲವಾರು ಗ್ರಂಥಗಳನ್ನು ಸಂಪಾದಿಸಿರುವ ಸುಕನ್ಯಾ ಅವರ ಪ್ರಯಾಣಿನಿ ಮತ್ತು ಸಂಕೃತಿ ಕೃತಿಗಳು ಖ್ಯಾತಿ ಪಡೆದಿವೆ.
ನಿರ್ಲಕ್ಷಿತ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಸುಕನ್ಯಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಜನಪರ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು ಉತ್ತಮ ವಾಗಿ ಎಂದು ಸಹ ಖ್ಯಾತರು. ರಾಜ್ಯ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಅನೇಕ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಕೆ.ಟಿ. ಗಟ್ಟಿ

ಕನ್ನಡದ ಹೆಸರಾಂತ ಕತೆಗಾರರಾದ ಕೆ.ಟಿ.ಗಟ್ಟಿ ಅವರು ಹಲವಾರು ಕಾದಂಬರಿಗಳನ್ನು ರಚಿಸಿದ್ದಾರೆ.
ದೂರದ ಆಫ್ರಿಕಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಗಟ್ಟಿಯವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಗುರಿಯನ್ನಿಟ್ಟುಕೊಂಡು ಮಹತ್ವದ ಕೃತಿಗಳನ್ನು ಬರೆದಿದ್ದಾರೆ. ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷ್ಯಾಧ್ಯಯನ, ವ್ಯಾಕರಣ, ಇಂಗ್ಲಿಷ್ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪೋಷಕರಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನೂ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ.
ಇವರ ಸಾಹಿತ್ಯ ಸೇವೆಗೆ ಸಾಹಿತ್ಯ ಅಕಾಡೆಮಿ ಗೌರವ ಮತ್ತು ದ.ಕ ಜಿಲ್ಲಾ ಮತ್ತು ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗಳ ಗೌರವ ಲಭಿಸಿದೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶಾಮಸುಂದರ

ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಕನ್ನಡ ವಿಶ್ವಕೋಶದ ಮಾನವಿಕ ಸಂಪಾದಕರಾಗಿ ನೇಮಕಗೊಂಡ ಬಿ.ಶಾಮಸುಂದರ್ ಅವರು ವಿಶ್ವಕೋಶ ವಿಭಾಗದ ಮುಖ್ಯಸ್ಥರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ಕತೆ, ಪ್ರಬಂಧಗಳನ್ನು ರಚಿಸಿರುವ ಶಾಮಸುಂದ ಅವರು ಬಾನುಲಿಯಲ್ಲಿಯೂ ಹಲವಾರು ಸಾಹಿತ್ಯಕ ಭಾಷಣಗಳನ್ನು ಮಾಡಿದ್ದಾರೆ. ಮೈಸೂರು ವಿವಿ, ಕನ್ನಡ ಸಾಹಿತ್ಯ ಪರಿಷತ್ತು, ಇವರ ಪುಸ್ತಕಗಳನ್ನು ಹೊರತಂದಿದ್ದು, ಇವರು ಬರೆದ ನಾಟಕಗಳು ಹಾಗೂ ಲೇಖನಗಳು ವಿವಿಧ ಪಠ್ಯಪುಸ್ತಕಗಳಲ್ಲಿ ಮುದ್ರಣಗೊಂಡಿವೆ.
ಬಿ.ಶಾಮಸುಂದರ ಅವರ ಸಾಹಿತ್ಯ ಸಾಧನೆಯ ಬಗ್ಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಸಹ ನಡೆದಿರುವುದು ಇವರ ಹೆಗ್ಗಳಿಕೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ರಂ.ಶಾ, ಲೋಕಾಪುರ

ಕಥೆಗಾರರಾಗಿದ್ದು ಹಲವು ಕಥಾ ಸಂಕಲನಗಳನ್ನು ಹೊರತಂದಿರುವ ರಂ.ಶಾ.ಲೋಕಾಪುರ ಅವರು ಅನಂತಮೂರ್ತಿ ಮತ್ತು ಕಾರಂತರ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಸಂತ ಜ್ಞಾನೇಶ್ವರ ಅವರ ಮರಾಠಿ ಭಾಷೆಯ ಜ್ಞಾನೇಶ್ವರಿ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿರುವ ರಂ.ಶಾ.ಲೋಕಾಪುರ ಅವರು ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳ ಬಗ್ಗೆ ಮೌಲಿಕ ಸಾಹಿತ್ಯ ರಚಿಸಿದ್ದಾರೆ. ಹಾಸ್ಯ ಲೇಖನಗಳ ಮೂಲಕ ಜನಮಾನಸದಲ್ಲಿ ತಮ್ಮ ಛಾಪನ್ನು ಒತ್ತಿದ ರಂ.ಶಾ.ಲೋಕಾಪುರ ಅವರ ‘ಸಾವಿತ್ರಿ’ ಕಾದಂಬರಿಗೆ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. ಈ ಕಾದಂಬರಿಯನ್ನು ಟಿ.ಎಸ್.ರಂಗಾ ಅವರು ಚಲನಚಿತ್ರವಾಗಿಸಿದರು. ಇವರ ಇನ್ನೊಂದು ಕಾದಂಬರಿ ‘ತಾಯಿ ಸಾಹೇಬ’ವನ್ನು ಗಿರೀಶ ಕಾಸರವಳ್ಳಿ ಅವರು ಚಲನಚಿತ್ರವಾಗಿಸಿದರು.
ಇವರ ಸಾಹಿತ್ಯ ಸಾಧನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಹೆಚ್.ಎಲ್. ಕೇಶವಮೂರ್ತಿ

ಮಂಡ್ಯ ಶೈಲಿಯ ಭಾಷೆಯನ್ನು ಬಳಸಿಕೊಂಡು ಹಾಸ್ಯ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟ ಎಚ್.ಎಲ್.ಕೇಶವಮೂರ್ತಿ ಅವರು. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧಿಸುವ ಇವರು ಸಮಕಾಲೀನ ಸಮಸ್ಯೆಗಳನ್ನು ಹಾಸ್ಯದ ಮೂಲಕ ಉಣ ಬಡಿಸುವಲ್ಲಿ ಸಿದ್ಧಹಸ್ತರು. ಲಂಕೇಶ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದ ಎಚ್.ಎಲ್.ಕೇಶವಮೂರ್ತಿ ರೈತ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು. ನಗುವ ಗುಳಿಗೆಗಳನ್ನು ಬರಹಗಳ ಮೂಲಕ ಮನಸ್ಸಿನಾಳಕ್ಕೆ ಇಳಿಸುವ ಮಂಡ್ಯ ಆಡುಭಾಷೆಯಲ್ಲಿ ಕೇಶವ ಮೂರ್ತಿಯವರು ರಾಜಕೀಯ ವಿಡಂಬನೆಗಳನ್ನು ಹೆಚ್ಚು ಬರೆದಿದ್ದಾರೆ.
ಜನಪರ ಆಂದೋಲನಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಆಕರ್ಷಕವಾಗಿ ನಗೆಯುಕ್ಕಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಇವರ ಅನೇಕ ಹಾಸ್ಯ ಬರೆಹ ಸಂಕಲನಗಳು ಪ್ರಕಟವಾಗಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ವೀರೇಂದ್ರ ಸಿಂಪಿ

ಲಲಿತ ಪ್ರಬಂಧಗಳ ಮೂಲಕ ನಾಡಿನ ಗಮನ ಸೆಳೆದಿರುವ ವೀರೇಂದ್ರ ಸಿಂಪಿ ಅವರು ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರು. ಕಾಲೇಜು ದಿನಗಳಲ್ಲಿಯೇ ಕಥೆ, ಅನುವಾದಗಳಲ್ಲಿ ಆಸಕ್ತಿ ಹೊಂದಿದ್ದ ಇವರು ನಂತರ ಲಲಿತ ಪ್ರಬಂಧ ರಚನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರು.
ಅನೇಕ ಪ್ರಬಂಧ ಕೃತಿಗಳನ್ನು ಬರೆದಿರುವ ವೀರೇಂದ್ರ ಸಿಂಪಿ ಅವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಹಲವು ಇಂಗ್ಲಿಷ್ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಇವರು ಅನೇಕ ಜಿಲ್ಲಾ ದರ್ಶನಗಳನ್ನು ರಚಿಸಿದ್ದಾರೆ.
ಹಿರಿಯ ಸಾಹಿತಿಗಳ ಜೀವನಚರಿತ್ರೆಯನ್ನು ಬರೆದಿರುವ ಸಿಂಪಿಯವರು ರಚಿಸಿದ ಕೃತಿಗಳು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳಾಗಿವೆ. ಇವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ವಿಶ್ವವಿದ್ಯಾಲಯಗಳು ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಅಲ್ಯಾಂಬ ಪಟ್ಟಾಭಿ

ಕನ್ನಡದ ಹಿರಿಯ ಬರಹಗಾರ್ತಿಯರಲ್ಲಿ ಒಬ್ಬರಾದ ಆಲ್ಯಾಂಬ ಪಟ್ಟಾಭಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕ ಪದವೀಧರರು. ಸಾಹಿತ್ಯದಲ್ಲಿ ಬೃಹತ್ ಕಾದಂಬರಿಯೊಂದಿಗೆ ಕಾಲಿಟ್ಟ ಆರಾಂಬ ಅವರು ಈವರೆಗೆ ೩೪ ಕಾದಂಬರಿಗಳನ್ನು ರಚಿಸಿದ್ದಾರೆ.
ಜನಪ್ರಿಯ ಕಾದಂಬರಿಗಳನ್ನು ನೀಡುವುದರ ಜೊತೆಗೆ ನೂರಾರು ಸಣ್ಣ ಕತೆಗಳನ್ನು ರಚಿಸಿದ ಹಿರಿಮೆ ಆರಾಂಬ ಅವರದು. ಶಿಶು ಸಾಹಿತ್ಯದಲ್ಲಿಯೂ ಕೆಲಸ ಮಾಡಿರುವ ಇವರು ಹನ್ನೆರಡು ಶಿಶು ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಅನೇಕ ಕಾದಂಬರಿಗಳು ಕನ್ನಡವೇ ಅಲ್ಲದೆ ದಕ್ಷಿಣದ ಎಲ್ಲ ಭಾಷೆಗಳಲ್ಲಿಯೂ ಚಲನಚಿತ್ರಗಳಾಗಿ ಮೂಡಿ ಬಂದಿವೆ.
ಸ್ವತಃ ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳ ನಿಪುಣೆಯಾದ ಆಲ್ಯಾಂಬ ಪಟ್ಟಾಭಿಯವರು ಟೆನ್ನಿಸಿನಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರಲ್ಲದೆ ಟೆನಿಸ್ ಕುರಿತಂತೆ ಮಾಹಿತಿ ಪೂರ್ಣ ಕೃತಿಯೊಂದನ್ನು ಅವರು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಜಿನದತ್ತ ದೇಸಾ

ಕಾವ್ಯ ಸೃಷ್ಠಿಯನ್ನು ಅತ್ಯಂತ ಸುಲಲಿತವಾಗಿ ಜನಮನ ಮುಟ್ಟುವಂತೆ ರೂಪಿಸಿರುವ ಜಿನದತ್ತ ದೇಸಾಯಿಯವರು ಈವರೆಗೆ ಹದಿನೇಳು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕಾವ್ಯದೊಂದಿಗೆ ಏಳು ಸಾಹಿತ್ಯ ಕೃತಿಗಳನ್ನು ಸಂಪಾದಿಸಿರುವ ದೇಸಾಯಿಯವರ ಲೇಖನಿಯಲ್ಲಿ ಈವರೆಗೆ ಒಡಮೂಡಿರುವ ಕೃತಿಗಳು ಇಪ್ಪತ್ನಾಲ್ಕು. ಸಾಹಿತ್ಯ ರಚನೆಯ ಜೊತೆಜೊತೆಯಲ್ಲಿಯೇ ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಇಳಿವಯಸ್ಸಿನ ಜಿನದತ್ತ ದೇಸಾಯಿಯವರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರತಿಷ್ಠಾನ, ದಕ್ಷಿಣ ಭಾರತ ಜೈನ ಸಭಾ ನೀಡುವ ಆಚಾರ್ಯ ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ, ಕಾಂತಾವರ ಕರ್ನಾಟಕ ಸಂಘದ ೨೦೧೦ನೆ ಸಾಲಿನ ವಾರ್ಷಿಕ ಗೌರವವೂ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕರ್ನಾಟಕದ ಗಡಿನಾಡಿನಲ್ಲಿ ನಾಡು-ನುಡಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ರಚಿಸಿರುವ ಗಡಿ ಸಲಹಾ ಸಮಿತಿಯ ಸದಸ್ಯರಾಗಿಯೂ ಜಿನದತ್ತ ದೇಸಾಯಿಯವರು ಸೇವೆ ಸಲ್ಲಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕೆ.ಜಿ. ನಾಗರಾಜಪ್ಪ

ತುಮಕೂರು ಜಿಲ್ಲೆಯ ಕಲ್ಲೂರಿನವರಾದ ಕೆ.ಜಿ.ನಾಗರಾಜಪ್ಪ ಕಾಲೇಜು ಅಧ್ಯಾಪಕರಾಗಿದ್ದು, ನಂತರ ಪ್ರಾಧ್ಯಾಪಕರಾದವರು. ಸಂಶೋಧಕರಾಗಿ ಹೆಸರು ಮಾಡಿರುವ ಇವರು ಕುವೆಂಪು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೇವಾಂಗ ಜನಾಂಗದ ಬಗ್ಗೆ ವಿಶೇಷ ಸಂಶೋಧನೆ ನಡೆಸಿರುವ ಪ್ರೊ. ಕೆ.ಜಿ.ನಾಗರಾಜಪ್ಪ ಅವರು ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ ಪುರಸ್ಕೃತರು. ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿರುವ ಹಿರಿಮೆ ನಾಗರಾಜಪ್ಪನವರದು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅಂಬಾತನಯ ಮುದ್ರಾಡಿ

ಬಹುಮುಖ ಪ್ರತಿಭೆಯ ಯಕ್ಷಗಾನದ ಅರ್ಥಧಾರಿಯಾಗಿ, ಹರಿದಾಸ ಮತ್ತು ಜಿನದಾಸರಾಗಿ ಖ್ಯಾತಿ ಪಡೆದ ಕಲಾವಿದರು ಅಂಬಾತನಯ ಮುದ್ರಾಡಿ.
ಸಾಮಗ, ಶೇಣಿ, ಪೊಲ್ಯ, ಸೀತಾನದಿ, ಕುಂಬಳೆ, ಜೋಷಿ, ಕೋಳ್ಳೂರು ಇತರ ಮುಖ್ಯರೊಂದಿಗೆ ಯಕ್ಷಗಾನದಲ್ಲಿ ಅರ್ಥಧಾರಿಯಾಗಿ ಶ್ರೀಯುತರು ಖ್ಯಾತಿ ಪಡೆದವರು. ಶ್ರೀ ಇಡುಗಂಜಿ ಮತ್ತು ಶ್ರೀ ಅಮೃತೇಶ್ವರಿ ಮೇಳಗಳಲ್ಲಿ ಎರಡು ವರ್ಷ ಅತಿಥಿ ಕಲಾವಿದರಾಗಿ ಅಂಬಾತನಯ ಮುದ್ರಾಡಿ ಅವರಿಂದ ಸೇವೆ ಸಂದಿದೆ.
ಮಂಜುಲಗಾನ- ಶಿಶುಗೀತೆ, ಭಕ್ತ ಕುಚೇಲ, ರುಕ್ಕಾಂಗದ, ಅಹಮ್ಮೋದ್ಧಾರ- ಏಕಾಂಕ ನಾಟಕಗಳು ಮತ್ತು ಭಜನೆಗಳ ರಚನೆ ಮಾಡಿರುವ ಶ್ರೀಯುತರು ಅನೇಕ ನಾಟಕಗಳನ್ನು ಬರೆದಿರುವರು. ಹೆಬ್ರಿ ಕರ್ನಾಟಕ ಸಂಘದ ಕಾರ್ಯದರ್ಶಿ, ಅಧ್ಯಕ್ಷರಾಗಿ ಗೌರವ, ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಏಳು ವರ್ಷ ಸೇವೆ ಹಾಗೂ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ಮತ್ತು ಪ್ರಬಂಧ, ಕವನಗಳ ಮಂಡನೆ ಶ್ರೀಯುತರ ಹೆಗ್ಗಳಿಕೆಗಳು. ಕಳೆದ ೩೦ ವರ್ಷಗಳಿಂದ ಹರಿದಾಸರಾಗಿ ಸನಾತನ ಧರ್ಮ ಸಂಸ್ಕೃತಿಯ ಪ್ರಚಾರ, ೨೦ ವರ್ಷಗಳಿಂದ ಜೈನೇತರರಾಗಿ ಜಿನಕಥೆ ಮಾಡಿದ ಹೆಗ್ಗಳಿಕೆ ಅವರದು.
ಆಕಾಶವಾಣಿ ಕಲಾವಿದರೂ ಆಗಿರುವ ಅಂಬಾತನಯ ಮುದ್ರಾಡಿ ಅವರು ಹಲವು ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯ ನೀಡುವ ಮೂಲಕ ಸಮಾಜ ಸೇವೆಯಲ್ಲೂ ತೊಡಗಿರುವರು.
ಶ್ರೀಯುತರು ತಮ್ಮ ಸಾಧನೆಗಾಗಿ ಪೇಜಾವರ ಶ್ರೀಗಳಿಂದ ರಾಮ ವಿಠಲ ಪುರಸ್ಕಾರ, ಪೊಳಲಿ ಶಂಕರ ನಾರಾಯಣಶಾಸ್ತ್ರಿ ಹಾಗೂ ಕುಕ್ಕಿಲ ಕೃಷ್ಣಭಟ್ಟ ಪ್ರಶಸ್ತಿಗೆ ಭಾಜನರು.
ಯಕ್ಷಗಾನ ಕಲಾವಿದರಾಗಿ ಹಾಗೂ ಹರಿದಾಸರಾಗಿ ಅರ್ಥಪೂರ್ಣ ಸೇವೆಗೈದವರು ಶ್ರೀ ಅಂಬಾತನಯ ಮುದ್ರಾಡಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸಣ್ಣರಾಮನಾಯ್ಕ

ಜಾನಪದ ಮತ್ತು ಬುಡಕಟ್ಟು ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿ ಜಾನಪದ ಸಾಹಿತ್ಯಕ್ಕೆ ಮೌಲ್ಯಯುತ ಕಾಣಿಕೆ ನೀಡಿದವರು ಡಾ. ಸಣ್ಣರಾಮ ನಾಯ್ಕ ಅವರು.
೧೯೫೪ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕೋಟಿಪುರ ತಾಂಡದಲ್ಲಿ ಜನನ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು, ಹೊಸನಗರದ ಕೊಡಚಾದ್ರಿ ಕಾಲೇಜುಗಳಲ್ಲಿ ಅಧ್ಯಾಪನ ವೃತ್ತಿ. ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ.
ಶ್ರೀಯುತರ ಆಸಕ್ತಿಯ ಕ್ಷೇತ್ರಗಳು ಜಾನಪದ ಮತ್ತು ಬುಡಕಟ್ಟು ಅಧ್ಯಯನ. ‘ಲಂಬಾಣಿ-ಸಂಸ್ಕೃತಿ’ ಮತ್ತು ‘ಬುಡಕಟ್ಟು- ಸಂಸ್ಕೃತಿ’ ಸಂಶೋಧನಾ ಕೃತಿಗಳು. ‘ಜಡತೆ ಮತ್ತು ಚಲನೆ’ ಹಾಗೂ ‘ಅಂಬೇಡ್ಕರ್ ಮತ್ತು ಮೀಸಲಾತಿ ಕುರಿತು ವಿಚಾರ ಸಾಹಿತ್ಯ, ಬಂಕಿಮ ಚಂದ್ರರ ವಿಷವೃಕ್ಷ ಮತ್ತು ಆನಂದ ಮಠ ವಿಮರ್ಶಾ ಕೃತಿಗಳ ರಚನೆ. ‘ಕಾಮದಹನ ಮತ್ತು ‘ಕೆಮ್ಮಾವು’ ಕಥಾ ಸಂಕಲನಗಳ ಪ್ರಕಟ.
ಲಂಬಾಣಿ ಗಾದೆಗಳು, ಲಂಬಾಣಿ ಒಗಟುಲೋಕ, ಲಂಬಾಣಿ ಸಾಂಸ್ಕೃತಿಕ ಒಗಟುಗಳಂತಹ ವಿಶಿಷ್ಟ ಕೃತಿಗಳನ್ನು ನೀಡುವ ಮೂಲಕ ಜಾನಪದ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದವರು ಡಾ. ಸಣ್ಣರಾಮ ನಾಯ್ಕ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಫರಿದಾ ರಹಮತುಲ್ಲಾ ಖಾನ್

ಉರ್ದು ಕವಿ, ಸಾಹಿತಿ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞೆ ಸಮಾಜ ಸೇವಕಿ ಅಲ್ಲದೇ ಶೋಷಿತ ಮಹಿಳೆ ಹಾಗೂ ಮಕ್ಕಳ ಸಾಮಾಜಿಕ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಪ್ರಜ್ಞಾವಂತ ಮಹಿಳೆ ಶ್ರೀಮತಿ ಫರೀದಾ ರಹಮತುಲ್ಲಾ ಖಾನ್.
ಬೆಂಗಳೂರು, ಧಾರವಾಡ, ಅಲೀಘಡ್, ವಿಶ್ವವಿದ್ಯಾನಿಲಯಗಳಿಂದ ಸ್ನಾತಕ ಪದವಿ ಪಡೆದಿರುವ ಶ್ರೀಮತಿ ಫರೀದಾ ಅವರು ಕಳೆದ ೨೦ ವರ್ಷಗಳಿಂದ ಝರಿನ್ ಶುವಾಯೇಂ” ಉರ್ದು ಮಾಸಿಕ ಪತ್ರಿಕೆಯ ಸಂಪಾದಕಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
“ಟೂಟೆಮಾಲಾ ಭಿಕ್ಷೆ ಮೋತಿ’, ‘ದರ್ದ್ ಕಿ ಗೂಂಜ್’, ‘ಖಾತಿಲ್ ಮಸಿಹ’ ಎಂಬ ಸಣ್ಣ ಕಥೆ ಸಂಕಲಗಳನ್ನು ‘ಅನಮೋಲ್ ಯಾದೇಂ’, ‘ಕಿಸಮತ್ ಕಾಯ್’ ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ.
ಮೌಂಟ್ ಅರಾಫತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳಿಗೆ ನರ್ಸರಿಯಿಂದ ಹೈಸ್ಕೂಲು ವರೆಗೆ ಶಿಕ್ಷಣ ನೀಡುತ್ತಿದ್ದಾರೆ. ಕನ್ನಡ ಪ್ರಥಮ ಭಾಷೆಯೊಡನೆ ಹೋಲೀ ಮದರ್ಸ್ ಇಂಗ್ಲಿಷ್ ಸ್ಕೂಲನ್ನು ನಡೆಸುತ್ತಿದ್ದಾರೆ.
ಶೋಷಿತ ಹೆಣ್ಣುಮಕ್ಕಳ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ‘ಅಲ್ ಹುದ್ ವಿಮೆನ್ಸ್ ವೆಲ್ ಫೇರ್ ಸೊಸೈಟಿ’ ಸ್ಥಾಪಿಸಿದ್ದಾರೆ. ಗ್ಯಾರೇಜನಲ್ಲಿ ದುಡಿಯುವ ಹಾಗೂ ಕೊಳೆಗೇರಿ ಮಕ್ಕಳ ಬಗ್ಗೆ ವಿಶೇಷ ಆಸ್ಥೆ ವಹಿಸಿ ಅವರಿಗೆ ಉಚಿತ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಬಾಲಕಾರ್ಮಿಕ ಪದ್ಧತಿಗಳ ವಿರುದ್ಧ ಪ್ರಬಲವಾಗಿ ಧ್ವನಿಯೆತ್ತಿ ಹೋರಾಡುತ್ತಿರುವ ಅಪರೂಪದ ವಿದ್ಯಾವಂತ ಮುಸ್ಲಿಂ ಮಹಿಳೆ ಶ್ರೀಮತಿ ಫರೀದಾ ರಹಮತುಲ್ಲಾ ಖಾನ್

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಎಸ್.ಆರ್. ರಾಮಸ್ವಾಮಿ

ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಐದು ದಶಕಗಳಿಂದ ಗಮನಾರ್ಹ ಸಾಧನೆ ಮಾಡಿ ಹೆಸರಾದವರು ಶ್ರೀ ಎಸ್.ಆರ್.ರಾಮಸ್ವಾಮಿ ಅವರು.
ಶ್ರೀಯುತರು ಕಳೆದ ೨೯ ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆಯ ಮತ್ತು ‘ರಾಷ್ಟೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರು. ಪರಿಸರದ ಬಗ್ಗೆ ಅಪಾರ ಕಾಳಜಿ, ಹಲವು ಪರಿಸರ ಆಂದೋಲನಗಳಲ್ಲಿ ಭಾಗಿ. ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮವುಳ್ಳ ಅವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಕೃತಿ ಸಕಾಲಿಕ.
ರಾಷ್ಟ್ರ ನೇತಾರ ಸುಭಾಷ್ ಚಂದ್ರ ಬೋಸ್ ಅವರ ಸಮಗ್ರ ಜೀವನ ಚರಿತ್ರೆ ‘ಕೋಲ್ಕಿಂಚು’, ಜಯಪ್ರಕಾಶ್ ನಾರಾಯಣ್‌, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜೀವನ ಚರಿತ್ರೆ ಒಳಗೊಂಡಂತೆ ೪೫ ಕೃತಿಗಳ ಲೇಖಕರು.
ಯಾವುದೇ ವಿಷಯವನ್ನು ತಲಸ್ಪರ್ಶಿಯಾಗಿ ನೋಡಿ, ವಿಶ್ಲೇಷಿಸುವ ಚಾಕಚಕ್ಯತೆ ಅವರಿಗುಂಟು. ಡಿವಿಜಿ, ವೀ.ಸೀತಾರಾಮಯ್ಯ ಮೊದಲಾದ ಧೀಮಂತರನ್ನು ಕುರಿತು ಅವರು ಬರೆದ ‘ದೀವಟಿಗೆಗಳು ವ್ಯಕ್ತಿಚಿತ್ರ ಮಾಲೆ ಸಂಗ್ರಹಯೋಗ್ಯ ಕೃತಿ. ಪತ್ರಿಕೋದ್ಯಮದ ಸೇವೆಗಾಗಿ ಆರ್ಯಭಟ ಪುರಸ್ಕಾರ ಪಡೆದಿರುವ ಸಮಾಜಮುಖಿ ಚಿಂತಕರು ಶ್ರೀ ಎಸ್.ಆರ್.ರಾಮಸ್ವಾಮಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ವೀರಣ್ಣ ಬಿ.ರಾಜೂರ

ವಚನ, ಸಾಂಗತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು ಡಾ. ವೀರಣ್ಣ ಬಿ. ರಾಜೂರ ಅವರು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬೆನಕನಾಳದಲ್ಲಿ ಜನನ, ‘ಕನ್ನಡ ಸಾಂಗತ್ಯ ಸಾಹಿತ್ಯ’ ಕುರಿತು ಸಂಶೋಧನೆ ನಡೆಸಿ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅಧ್ಯಾಪನ ವೃತ್ತಿ ಆರಂಭ.
ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಅಂತಾರಾಷ್ಟ್ರೀಯ ಕಿಟೆಲ್ ಸಮ್ಮೇಳನದ ನಿರ್ದೇಶಕರಾಗಿ ಸೇವೆ ಸಲ್ಲಿಕೆ. ೨೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು ಎಂ.ಫಿಲ್ ಮಾರ್ಗದರ್ಶಕರು. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್ ಪಡೆದಿರುವ ಶ್ರೀಯುತರು, ಹಲವಾರು ವಿಚಾರ ಕಮ್ಮಟ, ಸಮ್ಮೇಳನಗಳಲ್ಲಿ ವಿಶೇಷ ಉಪನ್ಯಾಸ ನೀಡಿರುವರು.
ಕನ್ನಡ ಸಾಂಗತ್ಯ ಸಾಹಿತ್ಯ, ವಚನ ಅಧ್ಯಯನ, ಸ್ವರವಚನಗಳು, ಬಸವೋತ್ತರ ಯುಗದ ವಚನಕಾರರು, ಏಕಾಂಕ ನಾಟಕಗಳ ಸಂಗ್ರಹ ಅವರ ಸ್ವತಂತ್ರ ಕೃತಿಗಳು. ಉರಿಲಿಂಗ ದೇವರ ವಚನಗಳು, ಶರಣರ ನುಡಿಮುತ್ತುಗಳು, ವಚನಾಮೃತಸಾರ ಅವರು ಸಂಪಾದಿಸಿರುವ ಕೃತಿಗಳಲ್ಲಿ ಪ್ರಮುಖವಾದವು.
ವಚನ, ಸಾಂಗತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಡಾ. ವೀರಣ್ಣ ಬಿ.ರಾಜೂರ ಅವರು ಸಲ್ಲಿಸಿರುವ ಸೇವೆ ಮೌಲ್ಯಯುತ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಸೂಕ್ಷ್ಮವಾಗಿ ಬದುಕುವುದು, ಬರೆಯುವುದು ಎರಡೂ ಪ್ರಿಯವಾದ ಕವಿ, ವಿಮರ್ಶಕ, ನಾಟಕಕಾರರು ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು.
ಪ್ರೊ.ಸಿದ್ದರಾಮಯ್ಯ ಅವರ ಬದುಕು, ಬರಹ, ಚಿಂತನಗಳನ್ನು ರೂಪಿಸಿದ ಶಕ್ತಿಗಳು ವಚನ ಸಾಹಿತ್ಯ ಹಾಗೂ ಜಾನಪದ. ತುಮಕೂರು ಜಿಲ್ಲೆ ಸಿಂಗಾಪುರ ಗ್ರಾಮದಲ್ಲಿ ೧೯೪೬ರಲ್ಲಿ ಜಾನಪದ ಸಂಸ್ಕೃತಿಯ ಪಾರಂಪರಿಕ ರೈತ ಕುಟುಂಬದಲ್ಲಿ ಜನನ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ, ಮಡಿಕೇರಿ, ಸಿಂಧನೂರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ತುಮಕೂರು, ಹೊಸದುರ್ಗ, ಮಧುಗಿರಿಯಲ್ಲಿ ಪ್ರಾಂಶುಪಾಲರಾಗಿ ಹಾಗೂ ತುಮಕೂರು ಸ್ನಾತಕೋತ್ತರ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿ ಸೇವೆ.
ಕನ್ನಡ ಸಾಹಿತ್ಯ ಪರಿಷತ್‌ನ ಭೂಮಿ ಬಳಗದ ಸಕ್ರಿಯ ಸದಸ್ಯರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಯುತರು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿರುವ ಸೇವೆ ಅನುಪಮ. ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ- ಕಾವ್ಯ ಸಂಕಲನ, ಸಾಲಾವಳಿ, ಕೇಡಿಲ್ಲವಾಗಿ, ನಿಶ್ಯಬ್ದದ ಜಾಡು ವಿಮರ್ಶಾ ಕೃತಿಗಳು ಹಾಗೂ ದಂಡೆ ಮತ್ತು ದಾಳ ಅವರು ರಚಿಸಿರುವ ನಾಟಕ ಕೃತಿಗಳು.
ಶ್ರೀಯುತರು ೧೯೯೭ರಲ್ಲಿ ಪು.ತಿ.ನ. ಕಾವ್ಯ ಪ್ರಶಸ್ತಿ, ೨೦೦೩ನೇ ಸಾಲಿನ ಜಿ.ಎಸ್.ಎಸ್. ಪ್ರಶಸ್ತಿ ಹಾಗೂ ೧೯೯೬ ಮತ್ತು ೨೦೦೦ನೇ ಸಾಲಿನಲ್ಲಿ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಗೊರೂರುಪ್ರತಿಷ್ಠಾನ ಕಾವ್ಯ ಪ್ರಶಸ್ತಿಗೆ ಪಾತ್ರರು.
ಜೀವಪರತೆಯ ಮನೋಧರ್ಮದ ಲೇಖಕ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು ಇದ್ದಲ್ಲೆಲ್ಲ ಸಾಹಿತ್ಯ ಚಟುವಟಿಕೆಗಳ ಕಲರವ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ವಿಜಯಾ ದಬ್ಬೆ

ಸ್ತ್ರೀವಾದಿ ದೃಷ್ಟಿಕೋನ ಒಂದು ಮಾನಸಿಕ ಸ್ಥಿತಿ, ತಾತ್ವಿಕ ನೆಲೆ. ಈ ನೆಲೆಯನ್ನು ಯಾರಾದರೂ ಹೊಂದಿರಬಹುದು ಎಂದು ಸ್ತ್ರೀವಾದಕ್ಕೆ ನವೀನ ಆಯಾಮ ನೀಡಿದವರು ಲೇಖಕಿ, ವಿಮರ್ಶಕಿ ವಿಜಯಾ ದಬ್ಬೆ.
ಕಿರಿಯರ ಬದುಕಿನಲ್ಲಿ ಅವರು ಹಚ್ಚಿದ ವಿಚಾರ, ವಿಮರ್ಶೆ, ಸ್ತ್ರೀವಾದದ ಹಣತೆ ಸರ್ವಕಾಲಕ್ಕೂ ಪ್ರಕಾಶಮಾನವಾಗಿ ಬೆಳಗುವಂಥದ್ದು.
೧೯೫೩ರಲ್ಲಿ ಹಾಸನ ಜಿಲ್ಲೆಯ ದಬ್ಬೆ ಎಂಬ ಪುಟ್ಟ ಗ್ರಾಮದಲ್ಲಿ ಜನನ. ತಂದೆ ಕೃಷ್ಣಮೂರ್ತಿ, ತಾಯಿ ಸೀತಾಲಕ್ಷ್ಮಿ ಪದವಿವರೆಗೆ ಹಾಸನದಲ್ಲಿ ಕಲಿಕೆ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಾಗಚಂದ್ರ ಒಂದು ಅಧ್ಯಯನ” ಅವರ ಸಂಶೋಧನಾ ಕೃತಿ.
ಸಮಾಜದ ಅಸಂಖ್ಯಾತ ಅನಾಥ ಮಹಿಳೆಯರಿಗೆ ‘ಸಮತಾ ವೇದಿಕೆ’ ಮೂಲಕ ಬದುಕಿನ ಶಕ್ತಿಯಾದವರು. ‘ಇರುತ್ತವೆ’ ಅವರ ಪ್ರಥಮ ಕವನ ಸಂಕಲನ. ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶ. ವಿಜಯಾ ಅವರು ನೀಡಿದ ಮೌಲ್ಯಯುತ ಸಾಹಿತ್ಯ ಅನೇಕ ಕಿರಿಯ ಲೇಖಕಿಯರನ್ನು ರೂಪಿಸುವಲ್ಲಿ ಸಹಾಯಕ.
ಅವರ ವಿಚಾರಲಹರಿ ಮತ್ತು ಜೀವನ ದೃಷ್ಟಿ ‘ಮಹಿಳೆ ಸಾಹಿತ್ಯ ಸಮಾಜ’ ಹಾಗೂ ‘ನಾರಿ: ದಾರಿ ದಿಗಂತ’ ಮೊದಲಾದ ಕೃತಿಗಳಲ್ಲಿ ಬಿಂಬಿತ. ಇವರ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಲೇಖಕಿ ಪ್ರಶಸ್ತಿ, ರತ್ನಮ್ಮ ಹೆಗಡೆ ಬಹುಮಾನ ಹಾಗೂ ಅನುಪಮಾ ಪ್ರಶಸ್ತಿ ಸಂದಿವೆ. ಲಿಂಗ ಭೇದವಿಲ್ಲದ ಸಮಾಜ ವ್ಯವಸ್ಥೆಗಾಗಿ ಹೋರಾಟ ಮಾಡುತ್ತ ಚಳವಳಿಯಲ್ಲಿ ತೊಡಗಿಸಿಕೊಂಡ ಲೇಖಕಿ ಶ್ರೀಮತಿ ವಿಜಯಾ ದಬ್ಬೆ ಅವರು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ವಿಷ್ಣು ಜಿ. ಭಂಡಾರಿ

ವಿಷ್ಣು ಜಿ. ಭಂಡಾರಿ ಅವರು ಚುಟುಕ ಬ್ರಹ್ಮ ದಿನಕರ ದೇಸಾಯಿರವರ ಗರಡಿಯಲ್ಲಿ ಪಳಗಿ ದೇಸಾಯಿಯವರಂತೆಯೇ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡಪರ ಹೋರಾಟದಲ್ಲಿ ಪಾಲುಗೊಳ್ಳುತ್ತಾ ಬಂದಿದ್ದಾರೆ. ಕನ್ನಡ ಗ್ರಂಥಗಳ ಮಾರಾಟವನ್ನು ತಮ್ಮ ಊರಿನಿಂದಲೇ ಆರಂಭಿಸಿದರು ವಿಷ್ಣು ಜಿ. ಭಂಡಾರಿ ಚುಟುಕುಗಳನ್ನು ವಿಡಂಬಾರಿ ಎಂಬ ಕಾವ್ಯ ನಾಮದಿಂದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಅಂಚೆ ಪೇದೆ ಆಗಿಯೂ ಕಾರ್ಯನಿರ್ವಹಿಸಿದ ವಿಷ್ಣು ಜಿ. ಭಂಡಾರಿ ಅವರು ‘ಅಂಚೆ ಪೇದೆಯ ಆತ್ಮಕಥೆ’ ಎಂ ಕೃತಿಯನ್ನು ರಚಿಸಿದ್ದು ಇವರ ಆರು ಚುಟುಕ ಸಂಕಲನಗಳು ನಾಡಿನ ಓದುಗರ ಗಮನ ಸೆಳೆದಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಜಿ.ಎಚ್. ಹನ್ನೆರಡು ಮಠ

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಜಿ.ಎಚ್. ಹನ್ನೆರಡು ಮಠ ಅವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಬರೆಯುವ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ಪ್ರವಾಸ, ನಾಟಕ, ಪ್ರಬಂಧ, ಚಿಂತನೆ ಹೀಗೆ ಹಲವಾರು ವಿಚಾರ ವೈವಿಧ್ಯಗಳನ್ನು ಕುರಿತು ೯೪ ಪುಸ್ತಕಗಳನ್ನು ರಚಿಸಿದ್ದಾರೆ. ‘ಬಸವ ಕಾವ್ಯದರ್ಶನಂ’ ಎಂಬ ಮಹಾಕಾವ್ಯವನ್ನು ರಚಿಸಿರುವ ಜಿ.ಎಚ್. ಹನ್ನೆರಡು ಮಠ ಅವರು ನಾಟಕಕಾರರಾಗಿಯೂ ಹೆಸರು ಮಾಡಿದ್ದಾರೆ. ಮಕ್ಕಳ ನಾಟಕಗಳೂ ಸೇರಿಂದಂತೆ ೨೫ ನಾಟಕಗಳನ್ನು ಬರೆದಿರುವ ಅವರು, ಬಸವಣ್ಣನವರ ಆಶಯಗಳನ್ನು ಪ್ರಚುರಪಡಿಸಿದ ಶರಣರ ಬದುಕು ಹಾಗೂ ಸಾಧನೆಯನ್ನು ಕುರಿತು ಅರ್ಥಪೂರ್ಣವಾದಂತಹ ಎಂಟು ಕಾದಂಬರಿಗಳನ್ನು ಪ್ರತ್ಯೇಕವಾಗಿ ಹಾಗೂ ಸಂಕಲಿತವಾಗಿ ‘ಮಹಾಸಂಗಮ’ ಎಂಬ ಬೃಹತ್ಸಂಪುಟ ರೂಪದಲ್ಲಿ ಹೊರತಂದಿದ್ದಾರೆ. ಜಿ.ಎಚ್. ಹನ್ನೆರಡು ಮಠ ಅವರು ಚಲನ ಚಿತ್ರಗಳಿಗಾಗಿಯೂ ಹಾಗೂ ಟೆಲಿವಿಷನ್‌ಗಾಗಿಯೂ ಸಾಹಿತ್ಯ ಗೀತೆಗಳನ್ನು ರಚಿಸಿದ್ದು, ರಂಗದ ಮೇಲೆ ಹಾಗೂ ಬಾನುಲಿಯಲ್ಲಿಯೂ ಅವರ ರಂಗಕೃತಿಗಳು ಪ್ರಯೋಗವಾಗಿವೆ. ಇವರಿಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶೂದ್ರ ಶ್ರೀನಿವಾಸ್

ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶೂದ್ರ ಶ್ರೀನಿವಾಸ್‌ ವೃತ್ತಿಯಿಂದ ಶಿಕ್ಷಕರು. ಅನೇಕ ಸಾಹಿತ್ಯ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಬಂದಿರುವ ಶೂದ್ರ ಶ್ರೀನಿವಾಸ್ ‘ಶೂದ್ರ’ ಸಾಹಿತ್ಯ ಪತ್ರಿಕೆಯ ಸಂಪಾದಕರು. ಸಮಕಾಲೀನ ಸಾಮಾಜಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿರುವ ಶ್ರೀನಿವಾಸ್ ಈ ಅವಧಿಯಲ್ಲಿ ನಡೆದ ಬಹುತೇಕ ಎಲ್ಲಾ ಜನಪರ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

‘ಕನಸಿಗೊಂದು ಕಣ್ಣು’ ಎಂಬ ಜನಪ್ರಿಯ ಅಂಕಣ ಆರಂಭಿಸಿದ ಶ್ರೀನಿವಾಸ್‌ ಅದೇ ಹೆಸರಿನ ಲೇಖನ ಸಂಕಲನವನ್ನು ಪ್ರಕಟಿಸಿದರು. ಕಾವ್ಯ, ಕಥೆ ಹಾಗೂ ಪ್ರಬಂಧಗಳನ್ನು ಬರೆಯುವಲ್ಲಿ ನಿಪುಣರಾದ ಶೂದ್ರ ಶ್ರೀನಿವಾಸ್ ಪರಿಸರ ಕುರಿತಂತಹ ‘ನೆಲದ ಮಾತು’ ಎಂಬ ನಿಯತಕಾಲಿಕವನ್ನು ಸಂಪಾದಿಸುತ್ತಿದ್ದರು.

ಪ್ರಸ್ತುತ ಸಮಾಜದ ಆಗು-ಹೋಗುಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯಿಸುತ್ತಾ ಬೇರೆಯವರನ್ನು ಪ್ರತಿಕ್ರಿಯಿಸುವಂತೆ ಪ್ರೋತ್ಸಾಹಿಸುವ ಶೂದ್ರ ಶ್ರೀನಿವಾಸ್ ತಮ್ಮ ಪತ್ರಿಕೆ ಮೂಲಕ ಹಾಗೂ ವಿವಿಧ ವೇದಿಕೆಗಳ ಮೂಲಕ ಹೊಸ ಪೀಳಿಗೆಯ ಹಲವಾರು ಮಂದಿಯನ್ನು ತಯಾರು ಮಾಡಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಹೆಚ್. ಗಿರಿಜಮ್ಮ

ಡಾ. ಹೆಚ್. ಗಿರಿಜಮ್ಮನವರು ವೃತ್ತಿಯಿಂದ ವೈದ್ಯರಾಗಿದ್ದು ಪ್ರವೃತ್ತಿಯಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ನಿರತರಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರರಾಗಿಯೂ ಹೆಸರು ಮಾಡಿರುವ ಗಿರಿಜಮ್ಮನವರು ಸ್ವಾತಂತ್ರ್ಯನಂತರದ ಸಂದರ್ಭದಲ್ಲಿನ ಕೌಟುಂಬಿಕ ವಿಘಟನೆ, ದಾಂಪತ್ಯದ ವಿಷಮತೆ, ಸ್ತ್ರೀಪರ ಕಾಳಜಿ ಮೊದಲಾದ ಜನಮುಖಿ ನಿಲುವುಗಳ ಹಿನ್ನೆಲೆಯಲ್ಲಿ ಮನೋಜ್ಞವಾದ ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.

ಮಕ್ಕಳ ಮನೋವಿಜ್ಞಾನ ಸಂಬಂಧಿ ಸಂಶೋಧನೆ ನಡೆಸಿ ಡಿ.ಲಿಟ್ ಪದವಿ ಪಡೆದಿರುವ ಡಾ.ಗಿರಿಜಮ್ಮನವರು ನಿರ್ದೇಶಿಸಿರುವ ಟೆಲಿಫಿಲ್ಡ್ ಹಾಗೂ ಧಾರಾವಾಹಿಗಳು ಹಲವಾರು. ಪ್ರತಿಷ್ಠಿತ ಡಾ|| ಬಿ.ಸಿ. ರಾಯ್, ಅತ್ತಿಮಬ್ಬೆ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವ ಪುರಸ್ಕಾರಗಳು ಇವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಮೂಡ್ನಾಕೂಡು ಚಿನ್ನಸ್ವಾಮಿ

ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದ ದಲಿತ ಸಾಹಿತ್ಯ ಚಳುವಳಿಯ ಮೊದಲ ತಲೆಮಾರಿನ ಬರಹಗಾರರು, ದಲಿತ-ಬಂಡಾಯ ಕಾವ್ಯ ಮಾರ್ಗದಲ್ಲಿ ನಡೆದು ಬಂದ ಇವರು ಕವಿತೆ, ನಾಟಕ, ಕಥೆ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಹಾದು ಬಂದಿದ್ದಾರೆ. ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸಿದ್ದಾರೆ.

ಮೂಡ್ನಾಕೂಡು ಚಿನ್ನಸ್ವಾಮಿ ಅವರು ತಮ್ಮ ಕೃತಿ ಮತ್ತು ಚಿಂತನೆಗಳ ಮೂಲಕ ಸಮಾಜದ ಶೋಷಿತ ಮತ್ತು ದಮನಿತ ವರ್ಗಗಳ ಅಭಿಮಾನವನ್ನು ಜಾಗೃತಗೊಳಿಸಿದವರು. ಇವರ ಅನೇಕ ಕವಿತೆಗಳು ಬೇರೆ ಬೇರೆ ಭಾಷೆಗಳಿಗೂ ಅನುವಾದಗೊಂಡಿದ್ದು, ಅನೇಕ ಕೃತಿಗಳನ್ನು ಇವರ ಸಂಪಾದನೆ ಮಾಡಿದ್ದಾರೆ. ಕನ್ನಡದಿಂದ ಸ್ಪ್ಯಾನಿಷ್ ಭಾಷೆಗೆ ಗ್ರಂಥ ರೂಪದಲ್ಲಿ ಪ್ರಕಟಗೊಂಡ ಮೊದಲ ಕೃತಿ ಕೂಡ ಇವರದೇ. ಇವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಅರಸಿ ಬಂದಿವೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ರಾಮಕೃಷ್ಣ ಮರಾಠೆ

ಕನ್ನಡ ವೃತ್ತಿ ರಂಗಭೂಮಿಯ ಆಳ ಅಧ್ಯಯನಕಾರರಲ್ಲಿ ಡಾ. ರಾಮಕೃಷ್ಣ ಮರಾಠೆ ಪ್ರಮುಖರು, ನಟ, ನಾಟಕಕಾರ, ಅನುವಾದಕ, ತೌಲನಿಕ ಅಧ್ಯಯನಕಾರ, ಕನ್ನಡ ಉಪನ್ಯಾಸಕ ಮತ್ತು ಪತ್ರಕರ್ತರಾಗಿ ಸೇವೆಗೈದ ಬಹುರೂಪಿ, ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವಣಗಾಂವ್‌ನಲ್ಲಿ ೧೯೫೮ರಲ್ಲಿ ಜನಿಸಿದ ಡಾ. ರಾಮಕೃಷ್ಣ ಮರಾಠೆ ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಬಹುರೂಪಿ, ರಂಗನಟನೆ, ನಾಟಕರಚನೆ ಮತ್ತು ಸಾಹಿತ್ಯ ಕೃಷಿ ಪ್ರಧಾನ ಆಸಕ್ತಿಯ ಕ್ಷೇತ್ರಗಳು, ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ *ಉತ್ತರಕರ್ನಾಟಕದ ವೃತ್ತಿರಂಗಭೂಮಿ ಕುರಿತು ಪಿಎಚ್‌ಡಿ ಮಾಡಿದವರು. ಕರ್ನಾಟಕ ವೃತ್ತಿರಂಗ ಕಂಪನಿಗಳ ನಿಖರ ಮಾಹಿತಿಯುಳ್ಳವರು. ಅಪರೂಪದ ಕಾವ್ಯ ಸಂಪಾದಿಸಿದವರು. ಕೊಣ್ಣೂರ ನಾಟಕ ಕಂಪನಿ, ಬಿ.ಆರ್.ಅಲಶಿನಗೋಜ ಜೀವನಚಲಿತ್ರೆ, ರಂಗಭೂಮಿಯ ಕನ್ನಡ ಸಂವೇದನೆ, ನಾಟಕ-ಕರ್ನಾಟಕ ಕೃತಿ ಮತ್ತು ರಾಮಧಾನ್ಯ ನಾಟಕದ ರಚನಾಕಾರರು. ಗ್ರಂಥ ಸಂಪಾದಕರು, ಅಂಗಾಯತ ಪತ್ತಿಕೆಯ ಸಹಸಂಪಾದಕರು. ಕನ್ನಡದಿಂದ ಮರಾಠಿ-ಮರಾಠಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ತಂದ ಅನುವಾದಕರು. ಮಾಧ್ಯಮಗಳಲ್ಲಿ ಲೇಖನ ಬರೆದವರು, ಅನೇಕ ಏಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ವಿದ್ವತ್ ದರ್ಶಿಸಿದವರು. ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರಾಮಕೃಷ್ಣ ಮರಾಠ ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸೇವಾನಿರತರಾಗಿರುವ ಕ್ರಿಯಾಶೀಲರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು

ಕೃಷಿಕರಾಗಿದ್ದು ಸಹಕಾರ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಾಕೇತದವರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ಚಿಕ್ಕಂದಿನಿಂದಲೂ ಸಹಕಾರಿ ಚಳವಳಿಯಲ್ಲಿ ಅತ್ಯಂತ ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀ ಆಳ್ವ ಅವರು ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ಕಾರಣರಾದವರು.

ದೇಶ ವಿದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡಿರುವ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದ ಕೃತಿಗಳು ಹತ್ತಕ್ಕೂ ಹೆಚ್ಚು. ಇವರು ರಚಿಸಿದ ‘ರಾಮಾಶ್ವಮೇಧದ ರಸ ತರಂಗಗಳು’ ಕೃತಿ ಮೈಸೂರು ಹಾಗೂ ಮದ್ರಾಸು ವಿಶ್ವವಿದ್ಯಾನಿಲಯ ಕಾಲೇಜುಗಳಿಗೆ ಪಠ್ಯಪುಸ್ತಕವಾಗಿತ್ತು.

ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹಕರಾಗಿ ಕೆಲಸ ಮಾಡಿರುವ ಶ್ರೀ ಆಳ್ವ ಅವರು ಸದಭಿರುಚಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಆರಂಭಿಸಲಾದ ಮಂಗಳ ಫಿಲ್ಡ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು. ನಮ್ಮ ಬಂಟ್ವಾಳ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹಲವಾರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಸಂತ ಕುಷ್ಟಗಿ

ಸಾಹಿತ್ಯ, ಸಂಶೋಧನೆ ಜೊತೆ ಶೈಕ್ಷಣಿಕ ಆಡಳಿತದಲ್ಲೂ ದುಡಿದು ಹೆಸರಾದವರು ವಸಂತ ಕುಷ್ಟಗಿ ಅವರು.

ಸ್ನಾತಕೋತ್ತರ ಪದವಿಯ ನಂತರ ಹಲವು ಕಾಲೇಜುಗಳ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿರುವ ವಸಂತ ಕುಷ್ಟಗಿ ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಮೊದಲ ನಿರ್ದೆಶಕರು,

ಕಾವ್ಯ, ಗದ್ಯ, ಮಕ್ಕಳ ಸಾಹಿತ್ಯ ಸಂಶೋಧನೆ ಹೀಗೆ ನಾಲ್ಕಾರು ವಿಭಾಗಗಳಲ್ಲಿ ಕುಷ್ಟಗಿಯವರು ರಚಿಸಿರುವ ಕೃತಿಗಳು, ೪೦ಕ್ಕೂ ಹೆಚ್ಚು.

ಅನೇಕ ಕೃತಿಗಳನ್ನು ಸಂಪಾದಿಸಿರುವ ವಸಂತ ಕುಷ್ಟಗಿಯವರು ಹತ್ತಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಿದವರು.

ಏಳೆಂಟು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ವಸಂತ ಕುಷ್ಟಗಿಯವರು ಗಳಿಸಿರುವ ಪ್ರಶಸ್ತಿ ಪುರಸ್ಕಾರಗಳು ಹತ್ತು ಹಲವು.

 

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಜಿ. ಎನ್. ಚಕ್ರವರ್ತಿ

ಋದ್ವೇದ ಕುಲಿತು ಉನ್ನತ ಮಟ್ಟದ ಅಧ್ಯಯನಕ್ಕೆ ಹೆಸರಾದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು ಪ್ರೊ. ಜಿ. ಎನ್. ಚಕ್ರವರ್ತಿ ಅವರು.
೧೯೧೨ರಲ್ಲಿ ಜನನ. ಸಂಸ್ಕೃತದಲ್ಲಿ ಎಂ.ಎ. ಪದವಿ, ಮೈಸೂಲನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ನಂತರ ೧೯೪೬ ಲಂದ ೭೨ರ ವರೆಗೆ ಮೈಸೂಲಿನ ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಕೆ. ೧೯೭೨ ಲಂದ ೭೭ರ ವರೆಗೆ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನಗಳ ವಿಭಾಗದಲ್ಲಿ ಸಂಸ್ಕೃತದ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಕೆ.
ವಿಸ್ತ್ರತ ಟಿಪ್ಪಣಿ ಮತ್ತು ವಿವರಣೆಗಳೊಂದಿಗೆ ಕನ್ನಡದಲ್ಲಿ ಋಗ್ವದ ೩೦ ಸಂಪುಟಗಳ ಸಂಪಾದನೆಯ ಕಾರ್ಯನಿರ್ವಹಣೆ. ಋಕ್ಸಂಹಿತಾ ಸಾರ, ಧರ್ಮಚಕ್ರ, ಋಗ್ ವೇದದಲ್ಲಿ ವಿಶ್ವಸಾಮರಸ್ಯ, ಇತಿಹಾಸ ಪ್ರದೀಪ, ಸಂಸ್ಕೃತ-ಕನ್ನಡ ನಿಘಂಟು – ಪ್ರೊ. ಜಿ. ಎನ್. ಚಕ್ರವರ್ತಿ ಅವರು ರಚಿಸಿದ ಪ್ರಮುಖ ಕೃತಿಗಳು. ಇಂಗ್ಲಿಷಿನಲ್ಲಿ ‘ಐ ಕಾನ್ಸೆಪ್ಟ್ ಆಫ್ ಕಾಸ್ಮಿಕ್ ಹಾರ್ಮೊನಿ ಇನ್ ಲಗ್ವೇದ, ವ್ಯಾಸಾಸ್ ಫಿಲಾಸಫಿ ಆಫ್ ಹಿಸ್ಟಲ, ದಿ ಪ್ರಾಬ್ಲೆಮ್ ಆಫ್ ಈವಿಲ್ ಇನ್ ದಿ ಮಹಾಭಾರತ’ ಕೃತಿಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರು. ಅಲ್ಲದೆ, ವಿವಿಧ ಪತ್ರಿಕೆಗಳಲ್ಲಿ ಶ್ರೀಯುತರ ಲೇಖನಗಳು ಪ್ರಕಟವಾಗಿವೆ.
೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವದ ಪ್ರಶಸ್ತಿ, ಭಾರತೀಯ ವಿದ್ಯಾಭವನದಿಂದ ವೇದರತ್ನ ಪುರಸ್ಕಾರ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ತೊಂಬತ್ತೈದರ ವಯೋವೃದ್ಧರೂ, ಜ್ಞಾನವೃದ್ಧರೂ, ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಯಲ್ಲೂ ಪಾಂಡಿತ್ಯ- ಪಡೆಬರುವ ವಿದ್ವಾಂಸರು ಪ್ರೊ. ಜಿ. ಎನ್. ಚಕ್ರವರ್ತಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಮ.ನ. ಜವರಯ್ಯ

ಕಾವ್ಯ, ನಾಟಕ, ಸಣ್ಣಕತೆ, ಕಾದಂಬಲ, ಅನುವಾದ, ವಿಮರ್ಶೆ, ಸಂಶೋಧನೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಬಹುಮುಖ ಪ್ರತಿಭಾವಂತ ಸಾಹಿತಿ ಡಾ. ಮ.ನ. ಜವರಯ್ಯ ಅವರು.
ಮೈಸೂರು ಸೀಮೆಯ ಲಾವಣಿ ಪಲಣತರಾದ ಶ್ರೀ ಮಲಚಾಮಯ್ಯನವರ ಮಗನಾದ ಡಾ. ಮ.ನ. ಜವರಯ್ಯ ಅವರು ಮನಜ ಎಂದೇ ಪ್ರಸಿದ್ಧರು. ಎಂಎ.ಪಿಹೆಚ್.ಡಿಡಿ.ಅಟ್ಎಲ್ಎಲ್.ಐ ಪದವೀಧರರು. ಇಪ್ಪತ್ತೇಳಕ್ಕೂ ಹೆಚ್ಚು ಪುಸ್ತಕಗಳನ್ನು, ನೂಲಪ್ಪತ್ತಕ್ಕೂ ಹೆಚ್ಚು ಲೇಖನಗಳ ಕರ್ತೃ.
ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರನ್ನು ಕುಲತು ಬರೆದ ಗ್ರಂಥಗಳು ಅತ್ಯಂತ ಮಹತ್ವಪೂರ್ಣವಾದವು. ಕೇಳು ಜಗಮಾದಿಗ ಹೊಲೆಯ, ಗುಲಾಮಿ (ಕವನ ಸಂಕಲನಗಳು), ಜಲ(ನಾಟಕ), ಬುರುಡೆಗೆ ಸ್ವರ್ಣ(ನಾಟಕ), ಮಾಲ (ಕಾದಂಬಲ),ದಂತ ವರ್ಗದ ಶರಣರು ಮತ್ತು ಶರಣೆಯರು-ಒಂದು ಅಧ್ಯಯನ, ಅಂಬೇಡ್ಕರ್ ಜೀವನಚಲತ್ರೆ, ಗಾಂಧಿ-ಅಂಬೇಡ್ಕರ್ ಧೈಯ-ಧೋರಣಿ (ಸಂಶೋಧನಾ ಗ್ರಂಥಗಳು), ಜಾತಿ ವಿನಾಶ, ರಾನಡೆ ಗಾಂಧಿ ಮತ್ತು ಜಿನ್ನಾ, ಬುದ್ಧ ಮತ್ತು ಕಾರ್ಲ್ಮಾರ್ಕ್ಸ್(ಅನುವಾದ ಕೃತಿಗಳು) ಮುಂತಾದವು ಡಾ. ಮ.ನ. ಜವರಯ್ಯ ಅವರ ಪ್ರಮುಖ ಕೃತಿಗಳು.
ಜಲ ನಾಟಕಕ್ಕೆ ಮತ್ತು ಮಾಣ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಪರಂಪರೆ ಹಾಗೂ ದಅತ ಬಂಡಾಯ ಸಾಹಿತ್ಯ ಸಮಗ್ರ ಅಧ್ಯಯನ ಗ್ರಂಥಕ್ಕೆ ಕಾವ್ಯಾನಂದ ಪ್ರಶಸ್ತಿ, ಅಂಬೇಡ್ಕರ್ ವಿಚಾರ ಸಾಹಿತ್ಯ ಸಮಗ್ರ ಅಧ್ಯಯನಕ್ಕೆ ವಿಶ್ವ ಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದವು ಡಾ.ಮನಃ ಅವಲಗೆ ಸಂದ ಪ್ರಶಸ್ತಿ ಪುರಸ್ಕಾರಗಳು. ಅಧ್ಯಯನಶೀಲತೆ, ಅವ್ಯಾಹತ ಸಾಹಿತ್ಯ ರಚನೆಯಿಂದ ಕನ್ನಡ ಸಾಹಿತ್ಯಕ್ಕೆ ಮೌಂಕ ಕೊಡುಗೆ ನೀಡಿದವರು ಡಾ. ಮ.ನ. ಜವರಯ್ಯ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಚಿ. ಶ್ರೀನಿವಾಸರಾಜು

ಪ್ರಗತಿಶೀಲ ಚಿಂತನೆ ಮತ್ತು ವಿಚಾರಧಾರೆಗಳಿಂದ ಕನ್ನಡ ಸಾರಸ್ವತ ಪ್ರಪಂಚದಲ್ಲ ಮಹತ್ವದ ಸ್ಥಾನವನ್ನು ಪಡೆದಿರುವ ವಿಮರ್ಶಕರು ಹಾಗೂ ಚಿಂತಕರು ಪ್ರೊ. ಚಿ. ಶ್ರೀನಿವಾಸರಾಜು ಅವರು. ೧೯೪೧ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನನ. ಎಂ.ಎ.(ಕನ್ನಡ) ಪದವಿ, ಇಂಡಾಲಜಿಯಲ್ಲಿ ಡಿಪ್ಲೋಮಾ ಗಳಿಕೆ. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಕೆ. ಪ್ರೊ. ಚಿ. ಶ್ರೀನಿವಾಸರಾಜು ಅವರು ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಿಗೆ ಪಲಪುಷ್ಟಿಯನ್ನು ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಕಟ್ಟಿಸಿ ಪ್ರೋತ್ಸಾಹ ನೀಡಿದ ಹಿಲಮೆಗೆ ಪಾತ್ರರು.
ಐದು ಮೂಕ ನಾಟಕಗಳು, ಮೂರು ಏಕಾಂಕಗಳು, ಹಆಯ ಮೇಲಿನ ಸದ್ದು, ನಿಮ್ಮಮಣ(ನಾಟಕಗಳು); ಛಸನಾಲ ಬಂಧು(ಕವನ ಸಂಕಲನ); ಬಾವಿ ಕಟ್ಟೆಯ ಬಳೀ (ಅನುವಾದ), ಆಗಾಗ(ಲೇಖನಗಳು)- ಮುಂತಾದವು ಪ್ರೊ. ಚಿ. ಶ್ರೀನಿವಾಸರಾಜು ಅವರ ಪ್ರಮುಖ ಕೃತಿಗಳು.
ಪ್ರೊ. ಚಿ. ಶ್ರೀನಿವಾಸರಾಜು ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪಲಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸಂಸ ಪ್ರಶಸ್ತಿ, ಮಾನು ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ
ಸಂಕೋಚ ಸ್ವಭಾವದ, ಅಚ್ಚುಕಟ್ಟಾದ ಕೆಲಸಕ್ಕೆ ಹೆಸರಾದ, ಚಿಂತನಪರ ವಿಮರ್ಶಕರು ಹಾಗೂ ಸದ್ದಿಲ್ಲದ ಕನ್ನಡ ಸಾಹಿತ್ಯ ಪಲಚಾರಕರು ಪ್ರೊ. ಚಿ. ಶ್ರೀನಿವಾಸರಾಜು ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ.ಸಿ.ಎನ್. ರಾಮಚಂದ್ರನ್

ಸತತ ಪಲಶ್ರಮ, ಆಳವಾದ ಅಧ್ಯಯನ, ವೈಚಾಲಕ ಮನೋಭಾವ, ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದವರು ಡಾ.ಸಿ.ಎನ್. ರಾಮಚಂದ್ರನ್ ಅವರು.
೧೯೩೬ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಲ್ಲುಂದ ಗ್ರಾಮದಲ್ಲಿ ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ.ಪದವಿ, ಒಹಾಯೋದ ಮಿಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ, ಅಲ್ಲದೆ ಎಲ್ಎಲ್.ಬಿ ಪದವೀಧರರು. ಸೊಲ್ಲಾಪುರ,ಕೊಲ್ಲಾಪುರ, ಸೊಮಾಲಿಯಾ,ನಿಪ್ಪಾಣಿ, ಅಮೆಲಕ, ಸೌದಿ ಅರೇಬಿಯಾ ಮುಂತಾದ ಸ್ಥಳಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಕೆ. ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲ್ಗಳ ಸದಸ್ಯರಾಗಿ ವ್ಯಾಪಕ ಅನುಭವ ಗಳಿಕೆ.
ಶೋಧ(ಕಾದಂಬಲ), ಶಿಲ್ಪವಿನ್ಯಾಸ, ಸ್ವರೂಪ, ಸಾಹಿತ್ಯ ವಿಮರ್ಶೆ, ಆಶಯ-ಅಕೃತಿ, ವಸಾಹತೋತ್ತರ ಚಿಂತನೆ(ವಿಮರ್ಶಾ ಕೃತಿಗಳು) ಅಮಾಸ, ಮಲೆ ಮಾದೇಶ್ವರ, ಬೇಟೆಯ ನೆನಪುಗಳು, ಕುವೆಂಪು ೨೧ ಕವನಗಳು(ಇಂಗ್ಲಿಷಿಗೆ ಅನುವಾದಿಸಿದ ಕೃತಿಗಳು) ಸೆಲ್ಫ್ ಕಾನ್ನಿಯಸ್ ಸ್ಟಕ್ಟರ್, ಅಮೆಲಕನ್ ಪೊದ್ರಿ(ಇಂಗ್ಲಿಷ್ ಕೃತಿಗಳು)-ಮುಂತಾದವು ಡಾ. ಸಿ.ಎನ್. ರಾಮಚಂದ್ರನ್ ಅವರ ಪ್ರಮುಖ ಕೃತಿಗಳು.
ಡಾ. ಸಿ.ಎನ್. ರಾಮಚಂದ್ರನ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇನಾಂದಾರ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಥಾ ಅವಾರ್ಡ್ ಮುಂತಾದ ಪ್ರಶಸ್ತಿಗಳಿಗೆ ಭಾಜನರು.
ಬಹು ಶಿಸ್ತೀಯ ಅಧ್ಯಯನಕ್ಕೆ ಹೆಸರಾದ ಹಾಗೂ ವಿಮರ್ಶೆ, ಅನುವಾದಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದವರು ಡಾ.ಸಿ.ಎನ್. ರಾಮಚಂದ್ರನ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಸುಮಿತ್ರಾ ಗಾಂಧಿ ಕುಲಕರ್ಣಿ

ಮಹಾತ್ಮಾಗಾಂಧಿಯವರ ಮೊಮ್ಮಗಳು, ಅಡಳಿತ ಸಾಹಿತ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ದುಡಿದವರು ಶ್ರೀಮತಿ ಸುಮಿತ್ರಾ ಗಾ೦ಛಿ ಕುಲಕರ್ಣಿ ಅವರು. ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡುವ ಮೂಲಕ ಗಮನ ಸೆಳೆದಿರುವ ಸುಮಿತ್ರಾ ಗಾಂಧಿ ಅವರು ನಾಗಪುರ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಡನೆ ಮೊದಲ ಬ್ಯಾಂಕ್ ಪಡೆದು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಎಂ.ಎ. ಪದವಿ ಅಂತರ್ ರಾಷ್ಟ್ರೀಯ ಸಂಬಂಧಗಳಲ್ಲಿ ಅಮೆಲಕದ ಕ್ಲಾರ್ಕ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಹಾಗೂ ನಾಗಪುರ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಗಳಿಸಿದವರು. ಹಏನೇಳು ವರ್ಷಗಳ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.
ಕೇಂದ್ರ ಸರ್ಕಾರದ ಯೋಜನಾ ಆಯೋಗ ಹಾಗೂ ಹಣಕಾಸು ಮಂತ್ರಾಲಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಸುಮಿತ್ರಾ ಗಾಂಧಿ ಕುಲಕರ್ಣಿ ಅವರು ಜನಪ್ರಿಯ ಸಾಹಿತಿ, ತಾತ ಮಹಾತ್ಮಾಗಾಂಧಿಯವರ ಜೀವನ ಚಲತ್ರೆ ರಚಿಸಿರುವ ಇವರು ಅನೇಕ ರಾಜಕೀಯ ವಿಶ್ಲೇಷಣಾ ಲೇಖನಗಳನ್ನು ಬರೆದವರು. ಇವರು ಬರೆದ ‘ಗಾಂಧಿ’ ಕೃತಿ ಅನೇಕ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜೀವನ ಚಲತ್ರೆಗಳನ್ನು ರಚಿಸಿರುವ ಇವರು ‘ಅನ್ಮೋಲ್ ವಿರಾಸತ್’ ಎಂಬ ಹಿಂಬ ಕೃತಿಯನ್ನು ಮೂರು ಸಂಪುಟಗಳಲ್ಲಿ ರಚಿಸಿದ್ದಾರೆ.
ರಾಜ್ಯಸಭೆಗೆ ೧೯೭೨ರಲ್ಲಿ ಆಯ್ಕೆಯಾದ ಸುಮಿತ್ರಾಗಾಂಧಿ ಕುಲಕರ್ಣಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಸದಸ್ಯರಾಗಿದ್ದರು. ಫಿಜಿ ದೇಶಕ್ಕೆ ಪ್ರವಾಸಕ್ಕಾಗಿ ಹೋಗಿದ್ದ ಭಾರತೀಯ ಸೌಹಾರ್ದ ನಿಯೋಗದ ಅಧ್ಯಕ್ಷರಾಗಿದ್ದ
ಇವರು ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆ ಕುಲತ ಕೇಂದ್ರ ಸಮಿತಿಯ ಪಲಶೀಲನಾ ಘಟಕದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕಾಳೇಗೌಡ ನಾಗವಾರ

ಕನ್ನಡದ ಪ್ರಗತಿಪರ ಚಳುವಳಿಗಳೊಂದಿಗೆ ಬೆಳೆದು ಬಂದ ಪ್ರೊ. ಕಾಳೇಗೌಡ ನಾಗವಾರ ಅವರು ಕಥೆಗಾರ, ಕವಿ, ವಿಚಾರವಾದಿ ಹಾಗೂ ಜಾನಪದ ತಜ್ಞರು.
ಕನ್ನಡದ ಸಾಂಸ್ಕೃತಿಕ ಇತಿಹಾಸದ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳವಳಿಯ ಸ್ಥಾಪಕ ಸಂಚಾಲಕರಲ್ಲೊಬ್ಬರಾದ ಕಾಳೇಗೌಡರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು.
ಗ್ರಾಮ ಸೊಗಡಿನಿಂದ ಎದ್ದು ಬಂದ ಕಾಳೇಗೌಡರು ಜಾನಪದ ಕಲೆ ಹಾಗೂ ಕಲಾವಿದರ ನೋವು ನಲಿವುಗಳ ಅಂತರಂಗ ಬಲ್ಲವರು. ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿದ್ದ ಅವರು ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರುವಲ್ಲಿ ಯಶ ಕಂಡರು.
ಕಥಾಸಂಕಲನ, ಕಾವ್ಯ, ವಿಚಾರ-ವಿಮರ್ಶೆ, ಜಾನಪದ ಗಿರಿಜನ ಕಾವ್ಯ ಹಾಗೂ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿಕೊಂಡ ಪ್ರೊ. ಕಾಳೇಗೌಡ ನಾಗವಾರ ಅವರು ಜನಪರ ಆಲೋಚನೆಯುಳ್ಳ ಬರಹಗಾರರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಿಷ್ಣುನಾಯ್ಕ

ಕನ್ನಡ ಪಾಠ ಮಾಡುತ್ತ ಕನ್ನಡ ಸಾಹಿತ್ಯ ರಚನೆಯಲ್ಲೂ ಸಾಧನೆ ಮಾಡಿದವರು ಅಂಕೋಲಾದ ಶ್ರೀ ವಿಷ್ಣುನಾಯ್ಕ ಅವರು.
ಕವನ, ನಾಟಕ, ಚರಿತ್ರೆ, ಕಥೆ ಹೀಗೆ ೪೩ ಗ್ರಂಥಗಳನ್ನು ರಚಿಸಿರುವ ಶ್ರೀ ವಿಷ್ಣುನಾಯ್ಕ ಅವರು ಗೌರೀಶ ಕಾಯ್ಕಿಣಿ, ಅಕಬರ ಅಲಿ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಸಂಪಾದಕರು.
ಕಾವ್ಯ ಕೃಷಿಗಾಗಿ ಬೇಂದ್ರೆ ಕಾವ್ಯ ಪುರಸ್ಕಾರ, ಲಿಂಗರಾಜ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಪಾತ್ರರಾಗಿರುವ ಶ್ರೀ ವಿಷ್ಣುನಾಯ್ಕ ಅವರ ರಾಘವೇಂದ್ರ ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಗ್ರಂಥ ಪ್ರಕಾಶನ ಪ್ರಶಸ್ತಿಯೂ ಸಂದಿದೆ.
ಕನ್ನಡ ಸಾಹಿತ್ಯ ಪರಿಚಾರಿಕೆಗಾಗಿ, ತಮ್ಮ ಕೃತಿಗಳಿಗಾಗಿ, ತಮ್ಮ ಪ್ರಕಾಶನಕ್ಕಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಶ್ರೀ ವಿಷ್ಣುನಾಯ್ಕ ಅವರಿಗೆ ಕರ್ನಾಟಕ ಸರ್ಕಾರ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ನೀಡಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ

ಕೃಷಿಕರಾಗಿದ್ದು ಸಹಕಾರ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಾಕೇತದವರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ಚಿಕ್ಕಂದಿನಿಂದಲೂ ಸಹಕಾರಿ ಚಳವಳಿಯಲ್ಲಿ ಅತ್ಯಂತ ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀ ಆಳ್ವ ಅವರು ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ಕಾರಣರಾದವರು.
ದೇಶ ವಿದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡಿರುವ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದ ಕೃತಿಗಳು ಹತ್ತಕ್ಕೂ ಹೆಚ್ಚು. ಇವರು ರಚಿಸಿದ ‘ರಾಮಾಶ್ವಮೇಧದ ರಸ ತರಂಗಗಳು’ ಕೃತಿ ಮೈಸೂರು ಹಾಗೂ ಮದ್ರಾಸು ವಿಶ್ವವಿದ್ಯಾನಿಲಯ ಕಾಲೇಜುಗಳಿಗೆ ಪಠ್ಯಪುಸ್ತಕವಾಗಿತ್ತು.
ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹಕರಾಗಿ ಕೆಲಸ ಮಾಡಿರುವ ಶ್ರೀ ಆಳ್ವ ಅವರು ಸದಭಿರುಚಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಆರಂಭಿಸಲಾದ ಮಂಗಳ ಫಿಲ್ಡ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು. ನಮ್ಮ ಬಂಟ್ವಾಳ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹಲವಾರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಸಂತ ಕುಷ್ಟಗಿ

ಸಾಹಿತ್ಯ, ಸಂಶೋಧನೆ ಜೊತೆ ಶೈಕ್ಷಣಿಕ ಆಡಳಿತದಲ್ಲೂ ದುಡಿದು ಹೆಸರಾದವರು ವಸಂತ ಕುಷ್ಟಗಿ
ಅವರು.
ಸ್ನಾತಕೋತ್ತರ ಪದವಿಯ ನಂತರ ಹಲವು ಕಾಲೇಜುಗಳ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿರುವ ವಸಂತ ಕುಷ್ಟಗಿ ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಮೊದಲ ನಿರ್ದೆಶಕರು,
ಕಾವ್ಯ, ಗದ್ಯ, ಮಕ್ಕಳ ಸಾಹಿತ್ಯ ಸಂಶೋಧನೆ ಹೀಗೆ ನಾಲ್ಕಾರು ವಿಭಾಗಗಳಲ್ಲಿ ಕುಷ್ಟಗಿಯವರು ರಚಿಸಿರುವ ಕೃತಿಗಳು, ೪೦ಕ್ಕೂ ಹೆಚ್ಚು.
ಅನೇಕ ಕೃತಿಗಳನ್ನು ಸಂಪಾದಿಸಿರುವ ವಸಂತ ಕುಷ್ಟಗಿಯವರು ಹತ್ತಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಿದವರು.
ಏಳೆಂಟು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ವಸಂತ ಕುಷ್ಟಗಿಯವರು ಗಳಿಸಿರುವ ಪ್ರಶಸ್ತಿ ಪುರಸ್ಕಾರಗಳು ಹತ್ತು ಹಲವು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸುಧಾಕರ

ಸಾಹಿತ್ಯ ಸಂಶೋಧನೆ, ಜಾನಪದ ಹೀಗೆ ಬಹುಮುಖ ಸೇವೆ ಸಲ್ಲಿಸಿ ಪ್ರಬುದ್ಧತೆಯನ್ನು ಸ್ಥಾಪಿಸಿದ ಕಥೆಗಾರ; ಜಾನಪದ ವಿದ್ವಾಂಸ ಪ್ರೊ. ಸುಧಾಕರ ಅವರು.

ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೆಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶ್ರೀಯುತರು ಹಂತ ಹಂತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸತತವಾಗಿ ‘ಸಾಕಿದ ನಾಯಿ’, ‘ಕಣ್ಣಿ ಕಿತ್ತ ಹಸು’ ಹಾಗೂ ‘ಹೊರಲಾಗದ ಹೊರೆ’ ಈ ಮೂರೂ ಕಥೆಗಳಿಗೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹೆಗ್ಗಳಿಕೆಯ ಹ್ಯಾಟ್ರಿಕ್ ಹೀರೋ! ಗ್ರಾಮೀಣ ಸೊಗಡನ್ನು ತಮ್ಮ ಕಥಾ ತೆಕ್ಕೆಗೆ ತೆಗೆದುಕೊಂಡು ಕಥೆ ಮಾಡುವ ಪರಿಯನ್ನು ಕನ್ನಡ ಕಥಾಲೋಕಕ್ಕೆ ನೀಡಿದ ಅವರ ಕಾಣಿಕೆ ಅನನ್ಯವಾದದ್ದು, ಅಪ್ಪಟ ಗ್ರಾಮೀಣ ನೆಲೆಯಿಂದ ಮೂಡಿ ಬಂದ ಸುಧಾಕರರ ಸಾಹಿತ್ಯದಲ್ಲಿ ಸಹಜವಾಗಿಯೇ ಹಳ್ಳಿಯ ಸಮೃದ್ಧ ಸಂಸ್ಕೃತಿ ಅನಾವರಣಗೊಂಡಿದೆ. ಜನಪದ ಕಥೆಗಳು, ಒಗಟುಗಳು ಮತ್ತು ಗಾದೆಗಳ ಕ್ಷೇತ್ರದಲ್ಲಿ ಆಳವಾದ ಅರಿವಿರುವ ಸುಧಾಕರರ ವಿಮರ್ಶೆ, ಸಂಶೋಧನೆ ಕೂಡ ತುಂಬ ಕುಶಲತೆ ಮತ್ತು ಸೂಕ್ಷ್ಮತೆಯಿಂದ ಕೂಡಿದೆ. ‘ಕಣ್ಣಿ ಕಿತ್ತ ಹಸು’, ‘ಗರಿಕೆ ಬೇಕು’, ‘ಬಾಡಬಕ್ಕನಮುಳ್ಳು’ ಕಥಾ ಸಂಕಲನಗಳನ್ನು, ‘ದಡ ಕುಸಿದ ಬಾವಿ’ ಎಂಬ ಕಾದಂಬರಿ ಮತ್ತು ಪ್ರೇಮಸುಧಾ’ ಎಂಬ ಕಾವ್ಯವನ್ನು ಬರೆದಿರುವ ಸುಧಾಕರರು ಮುಂದೆ ಹೆಚ್ಚಾಗಿ ವಿಮರ್ಶೆ, ಸಂಶೋಧನೆ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಸಾಹಿತ್ಯ ಕೃಷಿಯೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊಫೆಸರ್ ಸುಧಾಕರರಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಜಾನಪದ ತಜ್ಞ ಮನ್ನಣೆ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನಕಪೀಠದ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಸುಧಾಕರರ ಭಾಷೆ ಮತ್ತು ಬದುಕು ಸದಾ ನೇರ, ನಿಷ್ಟುರ ಮತ್ತು ಕ್ರಿಯಾಶೀಲ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಎಚ್ ಜಿ ಸಣ್ಣಗುಡ್ಡಯ್ಯ

ತುಮಕೂರು ಜಿಲ್ಲೆಯ ಸಿರಾ ತಾಲೂಕಿಗೆ ಸೇರಿದ ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರು ಮೂಲತಃ ಅಧ್ಯಾಪಕರು. ಕಾಲೇಜು ಅಧ್ಯಾಪಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಿರಂತರ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯದ ಲಲಿತ ಪ್ರಬಂಧ ಪ್ರಕಾರವನ್ನು ಶ್ರೀಮಂತಗೊಳಿಸಿದ ಅಪರೂಪದ ಪ್ರತಿಭೆ.

ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರಿಂದ ರಚಿತವಾದ ‘ಏಕಾಂತ ಮತ್ತು ಇತರ ಪ್ರಬಂಧಗಳು’ ಹಾಗೂ ‘ಹದ್ದು ಮತ್ತು ಇತರ ಪ್ರಬಂಧಗಳು’ ಎಂಬ ಎರಡು ಲಲಿತ ಪ್ರಬಂಧ ಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭ್ಯವಾಗಿದೆ. ಇವರು ಬರೆದ ಮೊದಲ ಕವನ ಸಂಕಲನವಾದ ‘ಅಭೀಷ್ಟೆ’ಗೆ ೧೯೬೨ರಲ್ಲಿ ರಾಜ್ಯ ಸರ್ಕಾರದ ಪುಸ್ತಕ ಪ್ರಶಸ್ತಿ ಸಂದದ್ದು ಇಲ್ಲಿ ಉಲ್ಲೇಖನೀಯ ಸಂಗತಿಯಾಗಿದೆ. ಕನ್ನಡ ಪ್ರೇಮಗೀತೆಗಳ ಆಂಥಾಲಜಿ ‘ಪಾರಿಜಾತ’ದ ಸಂಪಾದಕರಾಗಿ ‘ವಿಚಾರ ಸಾಹಿತ್ಯ’ ಆಂಥಾಲಜಿಯ ಸಂಪಾದಕರಲ್ಲೊಬ್ಬರಾಗಿ ಇವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ತೀ.ನಂ.ಶ್ರೀ.ಯವರನ್ನು ಕುರಿತು ಬರೆದ ಇವರ ಕೃತಿ, ಜೀವನ ಚರಿತ್ರೆ ಪ್ರಕಾರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ನಿಷ್ಠುರ ನುಡಿಗೆ ಹೆಸರಾದ ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರು ಬರೆದ ವಿಮರ್ಶಾ ಲೇಖನಗಳು ಅವರ ವಿಶಿಷ್ಟ ನೋಟಕ್ಕೆ ಹೆಸರಾಗಿವೆ. ತುಮಕೂರಿನಂತಹ ಜಿಲ್ಲಾ ಕೇಂದ್ರವೊಂದರಲ್ಲಿ ಸಾಂಸ್ಕೃತಿಕ ಪರಿಸರ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಪೂರಕವಾಗಿರುವ ಇವರು ಸಾಂಸ್ಕೃತಿಕ ಚರ್ಚೆಗೆ ಸದಾ ಚಾಲಕ ಶಕ್ತಿಯಾಗಿದ್ದಾರೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ

ಕನ್ನಡದ ಸಂವೇದನಾಶೀಲ ಕಥೆಗಾರ, ಚಿಂತಕ ಶ್ರೀ ಫಕೀರ ಮಹಮ್ಮದ್ ಕಟ್ಟಾಡಿ.

ದಕ್ಷಿಣ ಕನ್ನಡ ಜಿಲ್ಲೆಯ ಕಟಪಾಡಿಯಲ್ಲಿ ೧೯೪೮ರಲ್ಲಿ ಜನಿಸಿ ಅದೇ ಜಿಲ್ಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿರುವ ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ ಅವರು ಈಗ ವೃತ್ತಿಯಲ್ಲಿ ಬ್ಯಾಂಕಿನಲ್ಲಿ ಅಧಿಕಾರಿಯಾದರೂ ಪ್ರವೃತ್ತಿಯಲ್ಲಿ ಮೂಲತಃ ಸೃಜನಶೀಲ ಲೇಖಕ.

ಯಾಂತ್ರಿಕ ಬದುಕನ್ನು ಹಸನಾದ ಸಾರ್ಥಕ ಜೀವನಕ್ಕೆ ತಿರುಗಿಸಲು ಸಾಹಿತ್ಯದ ಸಾಧನೆಗೆ ತೊಡಗಿದ ಲೇಖಕ. ತಮ್ಮ ಕಥೆ, ಕಾದಂಬರಿಗಳ ಮೂಲಕ ಮೂಕ ಮನಸುಗಳ ತಳಮಳವನ್ನು ಕಲಾತ್ಮಕವಾಗಿ ಹಿಡಿದುಕೊಟ್ಟ ಸಮರ್ಥ ಕಥೆಗಾರ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ಪ್ರವಾಸ ಕಥನ ಹೀಗೆ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿ ಸೈ ಅನಿಸಿಕೊಂಡಿದ್ದಾರೆ.

ಗೋರಿ ಕಟ್ಟಿಕೊಂಡವರು, ನೋಂಬು ಇವರ ಎರಡು ಕಥಾಸಂಕಲನಗಳು; ಸರಕುಗಳು, ಕಚ್ಚಾದ, ನೆರೆ, ಮೂರು ಕಾದಂಬರಿಗಳು; ಕೇರಳದಲ್ಲಿ ಹದಿನೈದು ದಿನಗಳು ಪ್ರವಾಸಕಥನ ರಾಷ್ಟ್ರೀಯತೆ ಮತ್ತು ಮುಸ್ಲಿಮರು ಪ್ರಬಂಧ ಲೇಖನ; ದುಶ್ಯಾಸನ ರಾಜ್ಯ, ಕಾಗಕ್ಕ, ಆನೆ ಬಂತು ಆನೆ ನಾಟಕಗಳು ಮೊದಲಾದ ಕೃತಿಗಳು.

ಭಾರತೀಯ ಸ್ಟೇಟ್ ಬ್ಯಾಂಕಿನ ಕಾರ್ನಾಡ್ ಶಾಖೆಯಲ್ಲಿ ಅಧಿಕಾರಿಯಾಗಿ ಪ್ರಸಕ್ತ ಸೇವೆ ಸಲ್ಲಿಸುತ್ತಿರುವ ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ ಅವರ ‘ನೋಂಬು’ ಕಥಾಸಂಕಲನಕ್ಕೆ ೧೯೯೧ರಲ್ಲಿ ರಾಷ್ಟ್ರೀಯ ಕಥಾ ಪುರಸ್ಕಾರ ದೊರಕಿದೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಶಂ ಗು ಬಿರಾದಾರ

ಕತೆ, ಕವನ, ಕಾದಂಬರಿ, ಲಲಿತಪ್ರಬಂಧ, ಬಾಲಸಾಹಿತ್ಯ – ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿ ಸೈ ಎನಿಸಿಕೊಂಡ ಹಿರಿಯ ಲೇಖಕ ಶಂಕರಗೌಡ ಗುರುಗೌಡ ಬಿರಾದಾರ.

೧೯೨೬ರಲ್ಲಿ ಬಬಲೇಶ್ವರ ತಾಲೂಕು ವಿಜಾಪುರದಲ್ಲಿ ಜನಿಸಿದ ಶ್ರೀಯುತರು ನಾಲ್ಕು ದಶಕಗಳಿಗೂ ಮಿಕ್ಕಿ ಕನ್ನಡ ಸಾಹಿತ್ಯದ ಕೃತಿರಚನೆಯಲ್ಲಿ ತೊಡಗಿಸಿಕೊಂಡವರು. ವಿದ್ಯಾರ್ಥಿ ದೆಸೆಯಲ್ಲಿ ಕಥೆ, ಕವನ, ನಾಟಕ ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದರಲ್ಲದೆ ಗೆಳೆಯರ ಬಳಗ ಕಟ್ಟಿಕೊಂಡು ನಾಟಕ ಪ್ರದರ್ಶನ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ದುಡಿದವರು. ನಾಡಿನ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ, ಕರ್ಮವೀರ, ಉದಯವಾಣಿ, ತರಂಗ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. ಸುಮಾರು ೨೩ಕ್ಕೂ ಹೆಚ್ಚು ಕೃತಿಗಳ ರಚನಕಾರರಾದ ಶ್ರೀ ಬಿರಾದಾರರ ಬೆಳಕಿನೆಡೆಗೆ, ಬಸವ ಶತಕ, ಭಾವಸಂಗಮ, ಬಬಲೇಶ್ವರ ಬೆಳಕು, ದೇವನೊಡನೆ ಪ್ರಥಮರಾತ್ರಿ, ಭಯೋತ್ಪಾದಕರು, ಹಣತೆಗಳು ಮುಂತಾದವು ಪ್ರಮುಖ ಕೃತಿಗಳು.

ಇವರ ಅನೇಕ ಕಥೆ, ಕವನಗಳು ಆಕಾಶವಾಣಿಯಿಂದ ಬಿತ್ತರಗೊಂಡಿರುವುದಲ್ಲದೆ ಅನೇಕ ತರಗತಿಯ ಪಠ್ಯಗಳಲ್ಲಿ ಸೇರಿವೆ. ವಿಜಾಪುರ ಜಿಲ್ಲೆ ಐದನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸೊಲ್ಲಾಪುರದಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಎರಡನೆಯ ಮಕ್ಕಳ ಸಮ್ಮೇಳನದ ಅಧ್ಯಕ್ಷತೆಗಳನ್ನು ವಹಿಸಿದ ಹಿರಿಮೆ ಇವರದು.

ಶ್ರೀಯುತರ ಸಾಹಿತ್ಯ ಸೇವೆ ಮತ್ತು ಶಿಕ್ಷಣ ಸೇವೆಗಾಗಿ ಅನೇಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಶಿಕ್ಷಣ ಸೇವೆಗಾಗಿ ೧೯೭೪ರಲ್ಲಿ ರಾಜ್ಯ ಪ್ರಶಸ್ತಿ ೧೯೮೦ರಲ್ಲಿ ರಾಷ್ಟ್ರ ಪ್ರಶಸ್ತಿಗಳು ಸಂದಿವೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅಶೋಕಬಾಬು ನೀಲಗಾರ

ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿಗೈದು ಸೈ ಎನಿಸಿಕೊಂಡ ಅಶೋಕಬಾಬು ನೀಲಗಾರ ಅಪ್ಪಟ ದೇಸೀ ಪ್ರತಿಭೆ. ರಂಗಭೂಮಿ, ಕಿರುತೆರೆ, ಚಲನಚಿತ್ರ ಕ್ಷೇತ್ರದಲ್ಲೂ ಗುರುತು ಮೂಡಿಸಿದ ಬಹುಮುಖಿ ಸಾಧಕ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಶಿಂಧಿಕುರಬೆಟ್ಟ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಅಶೋಕಬಾಬು ಹೆಚ್ಚು ಕಲಿತವರಲ್ಲ, ಓದಿದ್ದು ಮಾಧ್ಯಮಿಕ ಶಿಕ್ಷಣದವರೆಗಷ್ಟೆ, ಹೊಟ್ಟೆ ಹೊರೆಯುವ ಲ್ಯಾಬೋರೇಟಲಿಯಲ್ಲಿ ದುಡಿಯುತ್ತಲೇ ಅನುಭವದ ಬುತ್ತಿ ತುಂಬಿಕೊಂಡವರು. ಅನುಭಾವಕ್ಕೆ ಅಕ್ಷರ ಲೇಪಿಸಿ ಸಾಹಿತ್ಯಲೋಕ ಪ್ರವೇಶಿಸಿ ಎತ್ತಿದ ಅವತಾರಗಳು ಹತ್ತಾರು, ಲೇಖಕ, ಕಾದಂಬರಿಕಾರ, ಕವಿ, ನಾಟಕಕಾರ, ಹಾಡುಗಾರ, ರಂಗನಟ, ನಿರ್ದೇಶಕ, ಸಾಮಾಜಿಕ ಕಾರ್ಯಕರ್ತರಾಗಿ ಬಹುಮುಖಿ ಕಾರ್ಯ. ಮಾಗಿದ ಕನಸು, ಬಿಡಿಸಲಾಗದ ಬೆಸುಗೆ, ನೆಲಕಚ್ಚಿದನೌಕೆ, ಕನಸು-ಮನಸು, ಓ ಪ್ರೇಮಿ ಎಲ್ಲಿರುವೆ ಮುಂತಾದ ಸಾಮಾಜಿಕ ಕಾದಂಬರಿ, ಹಲವು ಕಥಾಸಂಕಲನ, ನಾಟಕಗಳು, ಹತ್ತಕ್ಕೂ ಹೆಚ್ಚು ಧ್ವನಿಸುರುಳಿನಾಟಕಗಳು, ಮೂರು ಆಕಾಶವಾಣಿ ನಾಟಕ, ಭಜನಾಪದಗಳನ್ನು ಸೇರಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಮೆ. ನಟ-ಗಾಯಕನಾಗಿ ರಂಗದ ಮೇಲೆ ಬೆಳಗಿದ ಹಳ್ಳಿಹೈದ. ಕಿರುತೆರೆ–ಚಲನಚಿತ್ರದಲ್ಲೂ ನಟಿಸಿ ಮೋಡಿ ಮಾಡಿದರೂ ಎಲೆಮರೆಯ ಕಾಯಿಯಂತೆಯೇ ಉಳಿದಿರುವ ಪ್ರತಿಭಾವಂತರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅ.ರಾ.ಮಿತ್ರ

ಕನ್ನಡ ಸಾರಸ್ವತ ಲೋಕದ ವಿದ್ವತ್ಪರಂಪರೆಯನ್ನು ಬೆಳಗಿದ ಸಾಹಿತಿ ಅ.ರಾ.ಮಿತ್ರ, ಹಾಸ್ಯಜ್ಞ, ಉಪನ್ಯಾಸಕ, ಅಧ್ಯಾಪಕ, ಬರಹಗಾರ, ವಿಮರ್ಶಕರಾಗಿ ನಾಡಿನ ಮನೆಮಾತಾದ ಸಾಧಕರು, ಹಾಸನ ಜಿಲ್ಲೆ ಬೇಲೂರಿನಲ್ಲಿ ೧೯೩೫ರಲ್ಲಿ ಜನಿಸಿದ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತ್ಯಲೋಕದಲ್ಲಿ ಅ.ರಾ.ಮಿತ್ರರೆಂದೇ ಸುವಿಖ್ಯಾತರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ೧೯೫೫ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಬೆಂಗಳೂರಿನ ಸೆಂಟ್ ಜೋಸೆಫ್‌ ಕಾಲೇಜಿನಲ್ಲಿ ವೃತ್ತಿಬದುಕಿಗೆ ಮುನ್ನುಡಿ, ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕರಾಗಿ ಮಡಿಕೇರಿ, ತುಮಕೂರು, ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕ, ಅಮೆರಿಕನ್ ಪೀಸ್ ಕೋರ್‌ನಲ್ಲಿ ಕನ್ನಡ ಶಿಕ್ಷಕ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ, ಹಾಸ್ಯಪ್ರಜ್ಞೆ, ಸಜ್ಜನಿಕೆ, ಅಸ್ಖಲಿತ ಮಾತುಗಾರಿಕೆ ಅ.ರಾ.ಮಿತ್ರರ ವಿಶೇಷತೆ. ಅಧ್ಯಯನ-ಬರವಣಿಗೆ ನೆಚ್ಚಿನ ಕಾಯಕ, ಕ್ರಿಯಾಶೀಲತೆ ಅಮಿತೋತ್ಸಾಹದ ಮೂಲಧಾತು, ಹಾಸ್ಯಕೂಟಗಳ ಸಹಸಂಚಾಲಕರಾಗಿ ನಗೆಚಿಮ್ಮಿಸಿದ ವಾಗ್ಮಿ, ಬಾಲ್ಕನಿಯ ಬಂಧುಗಳು, ಯಾರೊ ಬಂದಿದ್ದರು, ನಾನೇಕೆ ಕೊರೆಯುತ್ತೇನೆ ಮುಂತಾದ ಪ್ರಬಂಧ ಸಂಕಲನಗಳು, ವಿಮರ್ಶೆ, ವ್ಯಕ್ತಿಪರಿಚಯ, ಗ್ರಂಥಸಂಪಾದನೆ, ಅನುವಾದದ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಅ.ರಾ.ಮಿತ್ರ ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅನಕೃ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರಗಳಿಂದ ಭೂಷಿತರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಹೆಚ್. ಮರಿದೇವರು

ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ ಸಾಧನೆ ಮಾಡುತ್ತಿರುವವರು ಪ್ರೊ. ಸಿ.ಹೆಚ್. ಮರಿದೇವರು ಅವರು.
೧೯೩೫ರಲ್ಲಿ ಜನಿಸಿದ ಪ್ರೊ. ಸಿ.ಹೆಚ್. ಮರಿದೇವರು ಅವರು. ಎಂ.ಎ., ಎಂ.ಎಡ್. ಪದವಿ ಪಡೆದು ಖಾದಿ ಮಂಡಳಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು.ನಂತರ ಪ್ರೌಡಶಾಲೆಯೊಂದರಲ್ಲಿ ಸಹಶಿಕ್ಷಕರಾಗಿ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕರಾಗಿ ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕವಿತೆಗಳು ಹುಟ್ಟಬೇಕು, ಶಬ್ದಪಾಕ (ಕವನ ಸಂಕಲನ) ಮಹಾಚೈತ್ರವನ್ನು ಕುರಿತು ವಿಮರ್ಶೆ, ಅಂಡಮಾನ್ ದ್ವೀಪದರ್ಶಿನಿ, ನೇಪಾಳ ಒಂದು ಭೂಸ್ವರ್ಗ, ಲಕ್ಷದ್ವೀಪಗಳಲ್ಲಿ ಮರಿದೇವರು (ಪ್ರವಾಸ ಸಾಹಿತ್ಯ), ಥಾಮಸ್ ಆಲ್ವ ಎಡಿಸನ್, ಡಾ. ಆಲ್ಬರ್ಟ್ ಐನ್ಸ್ಟಿನ್, ಡಾ. ಹೋಮಿ ಜಹಾಂಗೀರ್ ಬಾಬಾ (ಭಾಷಾಂತರಿಸಿದ ಕೃತಿಗಳು),ಶ್ರೀಯತರು ರಚಿಸಿದ ಪ್ರಮುಖ ಕೃತಿಗಳು. ಅಲ್ಲದೆ ಪ್ರೊ. ಸಿ.ಹೆಚ್. ಮರಿದೇವರು ಅವರಿಗೆ ಶಿಕ್ಷಣ ತತ್ವಶಾಸ್ತ್ರಕ್ಕೆ ಶ್ರೀ ದೇವರಾಜ ಬಹದ್ದೂರ್ ಪ್ರಶಸ್ತಿ, ಮುನ್ನಡೆದ ಶಿಕ್ಷಣ ಮನಶಾಸ್ತ್ರಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಶಬ್ದಪಾಕ ಕವನ ಸಂಕಲನಕ್ಕೆ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಲಭಿಸಿವೆ.
ಪ್ರೊ. ಸಿ.ಹೆಚ್. ಮರಿದೇವರು ತೆಂಗು ಬೆಳೆಗಾರರ ಸಂಘ ಸ್ಥಾಪಿಸಿ, ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿ, ತುಮಕೂರು ತಾಲ್ಲೂಕು ತೆಂಗು ಅಡಿಕೆ ಬೆಳೆಗಾರರ ಸಂಘ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ತು ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಸಿದ್ದಾರೆ.
ಅಧ್ಯಯನ, ಅಧ್ಯಾಪನ ಎರಡರಲ್ಲೂ ತೊಡಗಿಸಿಕೊಂಡಿರುವ ಚಿಂತನಶೀಲ ಬರಹಗಾರ ಶ್ರೀ ಸಿ.ಹೆಚ್. ಮರಿದೇವರು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಖಲೀಲ್ ಉರ್ ರೆಹಮಾನ್

ಆಧುನಿಕ ಉರ್ದು ಕವಿ ಹಾಗೂ ಉತ್ತಮ ಭಾಷಾಂತರಕಾರರು ಶ್ರೀ ಖಲೀಲ್ ಉ ರೆಹಮಾನ್ ಅವರು.
ಬೆಂಗಳೂರಿನಲ್ಲಿ ೧೯೪೮ರಲ್ಲಿ ಜನನ. ಕಳೆದ ೩೦ ವರ್ಷಗಳಿಂದ ಉರ್ದು ಭಾಷೆ ಮತ್ತು ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಶ್ರೀ ಖಲೀಲ್ ಉರ್ ರೆಹಮಾನ್ ಅವರ ಕಾವ್ಯನಾಮ ಖಲೀಲ್ ಮೆಮೂನ್. ಶ್ರೀಯುತರ ಕವನಗಳು ಭಾರತ ಮತ್ತು ವಿದೇಶದ ಹಲವು ಉರ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಹಿಂದಿ, ಮೊದಲಾದ ಭಾಷೆಗಳಿಂದ ಹಲವಾರು ಕವನಗಳು ಹಾಗೂ ಪ್ರಬಂಧಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ‘ಲಿಸಾನ್ ಫಾಲೈಪ್ ಕೆ ಐನೆ ಮೇನ್’, ‘ಕನ್ನಡ ಆದಾಬ್, ‘ಉನೀಸ್ ಲೈಲಾಹಿ ನಾಮೆನ್’, ‘ನಿಶಾತ್ ಇ-ಗಮ್’ ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡೆಮಿ ಸದಸ್ಯರಾಗಿ ಎರಡು ಬಾರಿ ಸೇವೆ ಸಲ್ಲಿಸಿರುವ ಶ್ರೀಯುತರು ಆಕಾಶವಾಣಿ, ದೆಹಲಿ ಹಾಗೂ ಬೆಂಗಳೂರು ಕೇಂದ್ರಗಳಿಗೂ ಹಲವಾರು ನಾಟಕಗಳನ್ನು ಬರೆದಿದ್ದಾರೆ. ‘ಆದಾಬ್’ ತ್ರೈಮಾಸಿಕ ಪತ್ರಿಕೆಯ ಸಂಪಾದಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯರಾಗಿ, ಉತ್ತಮ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಉರ್ದು ಸಾಹಿತ್ಯದ ವಿದ್ವಾಂಸರೂ ಹಾಗೂ ದೇಶದಲ್ಲಿ ಉರ್ದು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿರುವವರು ಶ್ರೀ ಖಲೀಲ್ ಉರ್ ರೆಹಮಾನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಬಿ.ವಿ. ವೀರಭದ್ರಪ್ಪ

೧೯೩೫ರಲ್ಲಿ ಚಿತ್ರದುರ್ಗ ಜಿಲ್ಲೆಯ ಘಟಪರ್ತಿಯಲ್ಲಿ ಜನಿಸಿದ ಪ್ರೊ.ಬಿ.ವಿ.ವೀರಭದ್ರಪ್ಪನವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಗಳಿಸಿ ದಾವಣಗೆರೆಯ ಎ.ಆರ್.ಬಿ. ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರಾದವರು. ಉತ್ತಮ ಬೋಧಕರು, ದಕ್ಷ ಆಡಳಿತಗಾರರೂ ಎಂಬ ಖ್ಯಾತಿಗೆ ಭಾಜನರಾದ ಶ್ರೀಯುತರು ನಾಡಿನ ಒಬ್ಬ ವಿಶಿಷ್ಟ ವಿಚಾರವಾದಿಯಾಗಿ, ಪ್ರಸಿದ್ಧ ಲೇಖಕರಾಗಿ ಹೆಸರುಗಳಿಸಿದ್ದಾರೆ. ಭಾಷಾ ವಿಜ್ಞಾನ, ಕಿರಿಯರ ವಿಚಾರ ಸಾಹಿತ್ಯ, ಮಾನವಿಕ ವೈಚಾರಿಕ ಸಾಹಿತ್ಯ ಮುಂತಾಗಿ ಸುಮಾರು ಒಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಪ್ರೊ. ಬಿ.ವಿ. ವೀರಭದ್ರಪ್ಪ ಅವರಿಗೆ ‘ವೇದಾಂತ ರೆಜಿಮೆಂಟ್’ ಮತ್ತು ‘ಇತರ ವೈಚಾರಿಕ ಬರಹಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಭಗವದ್ಗೀತೆ, ಒಂದು ವೈಚಾರಿಕ ಒಳನೋಟ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎಚ್.ಎನ್. ದತ್ತಿನಿಧಿ ಪ್ರಶಸ್ತಿ ಮತ್ತು ಮುಂಬಯಿ ಕರ್ನಾಟಕ ಸಂಘದ ಅ.ಸು. ಕೃಷ್ಣರಾವ್ ಸ್ಮಾರಕ ಪ್ರಶಸ್ತಿ ದೊರಕಿದೆ.
ಶಿಕ್ಷಣ ತಜ್ಞರೂ, ಚಿಂತಕರೂ ಆಗಿ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವವರು ಪ್ರೊ. ಬಿ.ವಿ. ವೀರಭದ್ರಪ್ಪ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಗುರುಮೂರ್ತಿ ಪೆಂಡಕೂರು

ಪ್ರವಾಸ ಸಾಹಿತ್ಯ, ಅನುವಾದ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಡಾ. ಗುರುಮೂರ್ತಿ ಪೆಂಡಕೂರು ಅವರು.
ಬಳ್ಳಾರಿ ಜಿಲ್ಲೆಯ ನಾರಾಯಣ ದೇವರ ಕೆರೆಯಲ್ಲಿ ೧೯೩೮ರಲ್ಲಿ ಜನನ, ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್), ಬಿ.ಕಾಂ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಹಾಗೂ’ ಕೃಷ್ಣದೇವರಾಯನ ಕಾಲದ ಕನ್ನಡ ಶಾಸನಗಳು’ ವಿಷಯ ಕುರಿತ ಸಂಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಬಹುರೂಪಾ ವಸುಂಧರಾ, ಆಂಧ್ರಪ್ರಪಂಚ, ಓ ಕೆನಡಾ, ಅವಕಾಶಗಳ ಅಮರಾವತಿ ಅಮೆರಿಕಾ (ಪ್ರವಾಸ ಸಾಹಿತ್ಯ), ದಿಗಂಬರ ಕಾವ್ಯ, ತೆಲುಗು ಕಾವ್ಯಮಾಲೆ, ಪಂಚಮವೇದ, ಕಲ್ಯಾಣ ಸಂಸ್ಕೃತಿ, ಸಮಗ್ರ ದಿಗಂಬರ ಕಾವ್ಯ ನೀರವ ನಿಮಿಷಗಳು (ಅನುವಾದ) ಕಂಠೀಸರ ಪಂಪಾ ತುಂತುರು, ಜಾನಪದ ಸಂಚಯ (ಸಂಪಾದನೆ) ಇವು ಶ್ರೀಯುತರ ಪ್ರಮುಖ ಕೃತಿಗಳು.
ಯೂರೋಪ್, ಮಧ್ಯಪ್ರಾಚ್ಯ, ದಕ್ಷಿಣ ಏಶಿಯಾ, ಅಮೆರಿಕಾ, ಕೆನಡಾ, ಜಪಾನ್ ಇಲ್ಲೆಲ್ಲ ಪ್ರವಾಸ ಮಾಡಿರುವ ಶ್ರೀಯುತರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಯುವಕರ ಸಂಘ ಪ್ರಕಾಶನ ಸಂಸ್ಥೆ ಸ್ಥಾಪಕರಾಗಿದ್ದು, ಆ ಸಂಸ್ಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಉತ್ತಮ ಪ್ರಕಾಶನ ಸಂಸ್ಥೆ ಮನ್ನಣೆ ಪಡೆದಿದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅರವಿಂದ ನಾಡಕರ್ಣಿ

ಮುಂಬಯಿಯ ನಾಕ ನರಕಗಳೆರಡರ ಜೊತೆಗೆ ಮುಂಬಯಿ ಮಹಾನಗರವನ್ನು ತಮ್ಮ ಕಾವ್ಯದ ಕೇಂದ್ರವಾಗಿಸಿಕೊಂಡ ಪ್ರಖರ ನಗರಪ್ರಜ್ಞೆಯ ನವ್ಯ ಕವಿ ಶ್ರೀ ಅರವಿಂದ ನಾಡಕರ್ಣಿ ಅವರು.
ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ೧೯೨೧ರಲ್ಲಿ ಜನನ. ಜರಾಸಂಧ, ನಾ ಭಾರತೀಕುಮಾರ, ನಗರಾಯಣ, ಆಹತ ಇವು ಶ್ರೀಯುತರ ಪ್ರಮುಖ ಕೃತಿಗಳು.
ನಗರಪ್ರಜ್ಞೆಯ ಅನೇಕ ಸ್ಥಳಗಳ ಸಂಪೂರ್ಣ ಅಭಿವ್ಯಕ್ತಿಗೆ ತೊಡಗಿದ ನಾಡಕರ್ಣಿ ಅವರ ಕಾವ್ಯದಲ್ಲಿ ನಗರದ ಗಂಧರ್ವಲೋಕ, ರಾಕ್ಷಸ ಲೋಕಗಳೆರಡೂ ಮೈದಳೆದಿವೆ. ಮಹಾನಗರದ ನಾಡಿಬಡಿತಕ್ಕೆ ತೀವ್ರವಾಗಿ ಸ್ಪಂದಿಸಿದ ಅವರ ನಗರಾಯಣ ಕನ್ನಡದ ವೇಸ್ಟ್ ಲ್ಯಾಂಡ್ ಎನ್ನಬಹುದು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನವ್ಯದ ಮುಖ್ಯ ಕವಿಗಳಲ್ಲೊಬ್ಬರು ಶ್ರೀಯುತ ನಾಡಕರ್ಣಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಕುಂ. ವೀರಭದ್ರಪ್ಪ

ಉತ್ತರ ಕರ್ನಾಟಕದ ದಲಿತ ಬದುಕಿನ ದಟ್ಟ ಅನುಭವಗಳಿಗೆ ಪ್ರಾದೇಶಿಕ ಭಾಷೆಯ ಸೊಗಡನ್ನು ನೀಡಿದ ತಾಜಾ ಪ್ರತಿಭೆ ಕಥೆ, ಕಾದಂಬರಿಕಾರ ಕುಂ. ವೀರಭದ್ರಪ್ಪ,
‘ಕುಂ.ವೀ’. ಎಂಬ ಸಂಕ್ಷಿಪ್ತ ನಾಮದಿಂದ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕುಂಬಾರ ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ೧೯೫೩ರಲ್ಲಿ ಜನಿಸಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಯುತರು ಶಾಲಾ ಉಪಾಧ್ಯಾಯರಾಗಿ ಸೇವಾವಧಿಯ ಬಹುಪಾಲನ್ನು ಆಂಧ್ರಪ್ರದೇಶದಲ್ಲಿ ಕಳೆದವರು.
ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಅನುವಾದ, ಜೀವನಚರಿತ್ರೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಲವತ್ತಕ್ಕೂ ಹೆಚ್ಚು ಅರ್ಥಪೂರ್ಣ ಕೃತಿಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಮುದ್ದಣ, ರತ್ನಾಕರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಲ್ಲ ಅದ್ಭುತ ಕಥನ ಶಿಲ್ಪಿ ಹಾಗೂ ವಿಶಿಷ್ಟ ನಿರೂಪಣಾ ಶೈಲಿಯಿಂದ ವೈಯಕ್ತಿಕ ಛಾಪನ್ನುಂಟುಮಾಡಿರುವ ಅನನ್ಯ ಸೃಜನಶೀಲ ಲೇಖಕರು ಶ್ರೀ ಕುಂ. ವೀರಭದ್ರಪ್ಪ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಎಚ್.ಎಸ್. ಪಾರ್ವತಿ

ಭಾರತದ ವಿವಿಧ ಭಾಷೆಗಳಲ್ಲಿ ರಚಿತವಾದ ನೂರಾರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಕಾಶವಾಣಿಯ ರಾಷ್ಟ್ರೀಯ ನಾಟಕಗಳ ಪ್ರಸಾರದಲ್ಲಿ ಚಿರಪರಿಚಿತರಾದವರು ಶ್ರೀಮತಿ ಎಚ್.ಎಸ್. ಪಾರ್ವತಿ ಅವರು.
೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಎಚ್.ಎಸ್. ಪಾರ್ವತಿ ಅವರು ತಮ್ಮ ಹದಿನೆಂಟನೆ ವಯಸ್ಸಿನಲ್ಲಿಯೇ ಬರವಣಿಗೆ ಆರಂಭಿಸಿ ಜೊತೆ ಜೊತೆಗೇ ಆಕಾಶವಾಣಿ ಕಲಾವಿದರಾಗಿ, ಭಾಷಾಂತರಕಾರರಾಗಿ ಕಾರ್ಯಕ್ರಮ ನಿರ್ವಾಹಕಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದವರು. ಕಥೆ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ನಾಟಕ, ಅನುವಾದ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಶ್ರೀಮತಿ ಪಾರ್ವತಿ ಅವರು ಲೇಖಕಿಯಾದಂತೆ ಕನ್ನಡ ಲೇಖಕಿಯರ ಸಂಘಟನೆಗೂ ದುಡಿದ ಹಿರಿಯ ಚೇತನ. ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಸೇವೆ ಸಲ್ಲಿಸುತ್ತಲೇ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಇವರ ಸಾಹಿತ್ಯ ಸೇವೆಗೆ ಸಂದ ಗೌರವ ಸಮ್ಮಾನಗಳು ಹತ್ತಾರು. ಬದುಕು ಬರಹದಲ್ಲಿ ಸದಾ ಸ್ತ್ರೀ ಪರವಾದ ದನಿ ಎತ್ತುವ ಹಿರಿಯ ಲೇಖಕಿ ಶ್ರೀಮತಿ ಎಚ್.ಎಸ್. ಪಾರ್ವತಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ನಿರುಪಮಾ

ಮಹಿಳೆಯರು ಗೃಹಕೃತ್ಯದಿಂದ ಹೊರಬರದ ಕಾಲದಲ್ಲೇ ಲೇಖಕಿಯಾಗಿ, ಲೇಖಕಿಯರ ಸಂಘಟಕಿಯಾಗಿ, ಪ್ರಕಾಶಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟು ಸುದೀರ್ಘ ಕಾಲ ಸಾಹಿತ್ಯದಲ್ಲೇ ಮಾಗಿದ ಹಿರಿಯ ಲೇಖಕಿ ಡಾ. ನಿರುಪಮಾ ಅವರು.
ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಕತೆ, ಕಾದಂಬರಿ, ಸಂಶೋಧನೆ, ಅನುವಾದ, ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ ಹೀಗೆ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ನಿರುಪಮಾ ಅವರು ಕನ್ನಡದ ಲೇಖಕಿಯರಲ್ಲೇ ಅತಿ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಪುಸ್ತಕ ಪ್ರಕಾಶಕಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯೆ, ಕಾರ್ಯದರ್ಶಿ, ಅಧ್ಯಕ್ಷೆಯಾಗಿ ಅವರು ಸಲ್ಲಿಸಿದ ಸೇವೆ ಅಪಾರ. ಸಮಕಾಲೀನ ಸಾಹಿತ್ಯ ಸಮೀಕ್ಷೆಗಾಗಿ ಇಡೀ ದೇಶವನ್ನು ಸುತ್ತಿರುವ ಡಾ. ನಿರುಪಮಾ ಅವರು ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಪ್ರಕಟಿಸಿದ ಭಾರತೀಯ ಮಕ್ಕಳ ಸಾಹಿತ್ಯ ಸಮೀಕ್ಷೆ ಭಾರತೀಯ ಭಾಷೆಗಳಲ್ಲೇ ಒಂದು ದಾಖಲೆಯಾಗಿ ಉಳಿಯುವ ಕೃತಿ.
ದಕ್ಷಿಣ ಭಾರತದ ಅತ್ಯುತ್ತಮ ಲೇಖಕಿ (೧೯೭೫), ಅತ್ಯುತ್ತಮ ಲೇಖಕಿ (೧೯೭೮), ಯುನಿಸೆಫ್ ಮಕ್ಕಳ ಸಾಹಿತ್ಯ ಪ್ರಶಸ್ತಿ (೧೯೯೮), ಸದೋದಿತಾ ಪ್ರಶಸ್ತಿ (೧೯೯೬), ರಾಷ್ಟ್ರೀಯ ಪ್ರಶಸ್ತಿ (೧೯೯೮) ಮುಂತಾದ ಪ್ರಶಸ್ತಿ ಸನ್ಮಾನಗಳು ನಿರುಪಮಾ ಅವರ ಸಾಹಿತ್ಯ ಸೇವೆಗೆ ಸಂದ ಗೌರವದ ಗರಿಗಳು. ಪರ ವಿಚಾರಗಳು ಮತ್ತು ಮಕ್ಕಳ ಸಾಹಿತ್ಯ ಅಭಿವೃದ್ಧಿಗಾಗಿ ಈ ಹಿರಿಯ ವಯಸ್ಸಿನಲ್ಲೂ ಶ್ರಮಿಸುತ್ತಿರುವ ಅಪರೂಪದ ಲೇಖಕಿ ಡಾ. ನಿರುಪಮಾ.

Categories
ಕನ್ನಡ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ನಾ. ಮೊಗಸಾಲೆ

ಡಾ. ನಾರಯಣ ಮೊಗಸಾಲೆಯವರು.
ಕಾರ್ಕಳ ತಾಲೂಕಿನ ಕಾಂತಾವರ ಎಂಬ ಹಿಂದುಳಿದ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವ ಮೊಗಸಾಲೆಯವರು ಜೊತೆಜೊತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸಂಘಟಕರಾಗಿ ತಮ್ಮನ್ನು ತೊಡಗಿಸಿಕೊಂಡವರು. ಕಾಂತಾವರದಲ್ಲಿ ಕನ್ನಡ ಸಂಘವನ್ನು ಹುಟ್ಟುಹಾಕಿ ತನ್ಮೂಲಕ ‘ಮುದ್ರಣ ಕಾವ್ಯ ಪ್ರಶಸ್ತಿ’, ರಾಜ್ಯಮಟ್ಟದ ವರ್ಧಮಾನ ಪ್ರಶಸ್ತಿ ಪೀಠದಿಂದ ವರ್ಧಮಾನ ಪ್ರಶಸ್ತಿ ಸ್ಥಾಪಿಸಿದ ಅಧ್ವರ್ಯ ಡಾ. ಮೊಗಸಾಲೆಯವರು. ಎರಡು ಬಾರಿ ೧೯೯೪ ಹಾಗು ೧೯೯೬ರಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸಿದ ಸಾಹಸಿ.
೧೯೮೦-೮೩ರ ಅವಧಿಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಶ್ರೀಯುತರು ಕಥೆ, ಕವನ, ಕಾದಂಬರಿ, ಪ್ರವಾಸ ಕಥನ ಮುಂತಾಗಿ ಅನೇಕ ಕೃತಿ ರಚನಕಾರರಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಇವರ ಅನೇಕ ಕೃತಿಗಳು ಮಲಯಾಳ, ಹಿಂದಿ ಹಾಗು ಆಂಗ್ಲ ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ.
ರಾಜ್ಯ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಪ್ರಶಸ್ತಿಗಳನ್ನು ಪಡೆದಿರುವ ವೈದ್ಯ – ಸಾಹಿತಿ ಡಾ. ನಾ. ಮೊಗಸಾಲೆ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಕೆ. ಅನಂತರಾಮು

ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ಪ್ರತಿಭೆ ಬೆಳಗಿಸಿದ ಅನಂತರಾಮು ಅವರು ಒಳ್ಳೆಯ ಅಧ್ಯಯನಶೀಲ ವಿದ್ಯಾರ್ಥಿಯೆನಿಸಿ ಅಂದಿನ ಮೈಸೂರು ಸರ್ಕಾರದಿಂದ ಜಪಾನಿನಲ್ಲಿ ನಡೆದ ‘ಎಕ್ಸ್ಪ್ರೆ ೭೦’ ಮೇಳಕ್ಕೆ ಆಯ್ಕೆಗೊಂಡ ಪ್ರತಿಭಾವಂತ.
ಲೌಕಿಕ ಶಿಕ್ಷಣದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾದರೂ ಭಾಷಾಶಾಸ್ತ್ರದ ಕಡೆಗೆ ಮನವೊಲಿದು ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ.ಪದವಿಗಳಿಸಿ ಅನಂತರ “ಕವಿಬ್ರಹ್ಮಶಿವ ಒಂದು ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ. ಗಳಿಕೆ. ಮುಂದೆ ಸಾಹಿತಿಯಾಗಿ, ಸಂಶೋಧಕರಾಗಿ, ಸಾಹಿತ್ಯ ಸೋಪಾನವನ್ನು ಏರುತ್ತಲೇ ಹೋದರು. ಜಪಾನ್ ಪ್ರವಾಸ ಕಥನ, ಉದಯರವಿ ನಾಡಿನಲ್ಲಿ’, ಮಂಡ್ಯದ ಹಳ್ಳಿಗಳನ್ನು ಸುತ್ತಿ ರಚಿಸಿದ ‘ಸಕ್ಕರೆ ಸೀಮೆ’, ದಕ್ಷಿಣ ಕನ್ನಡ ಜಿಲ್ಲೆಯ ಕುರಿತು ‘ದಕ್ಷಿಣದ ಸಿರಿ’ ಗ್ರಂಥಗಳಿಗೆ ಸತತವಾಗಿ ಮೂರು ವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಿಟ್ಟಿಸಿ ಹ್ಯಾಟ್ರಿಕ್ ಪಡೆದ ಅಪರೂಪದ ಸಾಹಿತಿ ಡಾ. ಕೆ. ಅನಂತರಾಮು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಗುರುಲಿಂಗ ಕಾಪಸೆ

೧೯೨೮ರಲ್ಲಿ ಬಿಜಾಪುರ ಜಿಲ್ಲೆಯ ಹಿರೇಲೋಣಿ ಎಂಬ ಕುಗ್ರಾಮದಲ್ಲಿ ಬಡ ರೈತ ಮಗನಾಗಿ ಜನಿಸಿದ ಡಾ. ಗುರುಲಿಂಗ ಕಾಪಸೆಯವರು ಎಲೆಮರೆಯ ಫಲದಂತೆ ಬೆಳೆದುಬಂದ ಸರಳ-ಸಜ್ಜನಿಕೆಯ ಅಪರೂಪದ ಸಾಹಿತಿ.
ವಿಮರ್ಶೆ, ಜೀವನಚರಿತ್ರೆ, ಪ್ರವಾಸ ಕಥನ, ಸಂಪಾದನೆ, ಮಕ್ಕಳ ಸಾಹಿತ್ಯ ಹಾಗೂ ಅನುವಾದ ಕ್ಷೇತ್ರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ಗುರುಲಿಂಗ ಕಾಪಸೆಯವರು ವಿಶೇಷ ಸಂಚಿಕೆ ಹಾಗೂ ನಿಯತಕಾಲಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಡಾ. ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್, ಮುಂಬೈ ಕರ್ನಾಟಕ ಸಂಘದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೌಲಿಕವಾದ ಯೋಜನೆಗಳ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನೀಡಿದ ಶ್ರೀ ಕಾಪಸೆಯವರು ಪ್ರಚಾರಗಳಿಂದ ಗಾವುದ ದೂರವೇ ಉಳಿಯುವವರು.
ಮೃದು ಸ್ವಭಾವ, ಶಿಷ್ಯವಾತ್ಸಲ್ಯ, ಕನ್ನಡ-ಮರಾಠಿ ಭಾಷಾ ಬಾಂಧವ್ಯವನ್ನು ಬೆಳೆಸುತ್ತಿರುವ ಹಾಗೂ ಬರಹ, ಭಾಷಣಗಳಲ್ಲಿ ಅಪಾರವಾದ ಒಳನೋಟಗಳನ್ನು ನೀಡುವ ಮೂಲಕ ತಲಸ್ಪರ್ಶಿಯಾದ ವಿದ್ವತ್ ವಿವೇಚನೆಗೆ ಹೆಸರಾದ ವಿದ್ವಾಂಸರಾದ ಡಾ. ಗುರುಲಿಂಗ ಕಾಪಸೆಯವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಡಿ. ಲಿಂಗಯ್ಯ

ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದ, ಬರಹ ಭಾಷಣಗಳಲ್ಲಿ ಅಪರೂಪದ ಒಳನೋಟಗಳನ್ನು ನೀಡಬಲ್ಲ ಜಾನಪದ ತಜ್ಞರು ಪ್ರೊ. ಡಿ. ಲಿಂಗಯ್ಯ ಅವರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ೧೯೩೯ ರಲ್ಲಿ ಜನಿಸಿದ ಪ್ರೊ. ಡಿ. ಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದು, ಬೆಂಗಳೂರು ವಿಶ್ವೇಶ್ವರಪುರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ, ಕನ್ನಡ ಪ್ರಾಧ್ಯಾಪಕ, ಕಾಲೇಜಿನ ಪ್ರಾಚಾರ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಹೀಗೆ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿ ೧೯೯೭ ರಲ್ಲಿ ನಿವೃತ್ತಿ ಹೊಂದಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೬೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಎರಡು ಕಾದಂಬರಿಗಳು, ಎರಡು ವ್ಯಕ್ತಿಚಿತ್ರಗಳು, ಹನ್ನೊಂದು ಕವನಸಂಗ್ರಹಗಳು, ಮೂರು ಕಥಾಸಂಗ್ರಹಗಳು, ನಾಲ್ಕು ನಾಟಕಗಳು, ಮೂರು ಚರಿತ್ರೆ (ಸ್ವಾತಂತ್ರ್ಯ ಚಳುವಳಿ), ಮೂರು ವಿಮರ್ಶೆ, ಐದು ಜೀವನಚರಿತ್ರೆ, ೧೬ ಜಾನಪದ ಕೃತಿಗಳನ್ನು ರಚಿಸಿರುವುದಲ್ಲದೆ ೧೪ ಕೃತಿಗಳನ್ನು ಸಂಪಾದಿಸಿದ್ದಾರೆ. ಶ್ರೀಯುತರ ಲೇಖನಗಳು ಪತ್ರಿಕೆಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರೊ. ಡಿ. ಲಿಂಗಯ್ಯ ಅವರು ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ — ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಯಲು ಸೀಮೆಯ ಜನಪದ ಗೀತೆಗಳು’ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ‘ಕರ್ನಾಟಕ ಜಾನಪದ ಕಾವ್ಯಗಳು’ ಕೃತಿಗೆ ರಾಜ್ಯ ಸರ್ಕಾರದ ದೇವರಾಜ್ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ, ಡಾ. ಜೀ.ಶಂ.ಪ. ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಜಾನಪದ ವಿದ್ವಾಂಸರು ಪ್ರೊ. ಡಿ. ಲಿಂಗಯ್ಯ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡದ ಪ್ರಸಿದ್ದ ಕವಿ, ನಾಟಕಕಾರ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನಕಾರ, ಸಾಹಿತ್ಯ ಲೋಕದ ಗಣ್ಯ ಬರಹಗಾರ ಡಾ|| ಎಚ್.ಎಸ್. ವೆಂಕಟೇಶಮೂರ್ತಿ ಅವರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ಜನಿಸಿದ ಡಾ. ವೆಂಕಟೇಶಮೂರ್ತಿ ಅವರು ಬಾಲ್ಯದಿಂದಲೇ ಪ್ರತಿಭಾವಂತರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಜೀವನ ನಡೆಸಿ ಇದೀಗ ನಿವೃತ್ತರಾಗಿದ್ದಾರೆ.
ಆಳವಾದ ಚಿಂತನೆ, ಸುಲಭಗ್ರಾಹ್ಯ ನಿರೂಪಣೆ, ಆಕರ್ಷಕ ಶೈಲಿ ಇವರ ಬರವಣಿಗೆಯ ವೈಶಿಷ್ಟ್ಯ. “ಪರಿವೃತ್ತ’, ‘ಬಾಗಿಲ ಬಡಿವ ಜನ’, ‘ಮೊಗ್ತಾ’, ‘ಕ್ರಿಯಾಪರ್ವ’, ‘ಒಣಮರದ ಗಿಳಿಗಳು, ‘ಸೌಗಂಧಿಕ’, ‘ಇಂದುಮುಖಿ’, ‘ಹರಿಗೋಲು’, ‘ಮರೆತ ಸಾಲುಗಳು’, ‘ಎಲೆಗಳು ನೂರಾರು’, ‘ಅಗ್ನಿ ಸಂಭ’, ‘ಎಷ್ಟೊಂದು ಮುಗಿಲು’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ.
ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಉರಿಯ ಉಯ್ಯಾಲೆ, ಹೂವಿ ಮತ್ತು ಸಂಧಾನ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.
ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕವಿತೆ, ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕಗಳನ್ನು ಬರೆದು ಜನಪ್ರಿಯ ಮಕ್ಕಳ ಸಾಹಿತಿ ಎಂದು ಮನ್ನಣೆ ಗಳಿಸಿದ್ದಾರೆ.
‘ನೂರು ಮರ ನೂರು ಸ್ವರ’, ‘ಕಥನ ಕವನ’, ‘ಮೇಘದೂತ’, ‘ಕವಿತೆಯ ಜೋಡಿ’, ‘ಆಕಾಶದ ಹಕ್ಕು ಮುಂತಾದ ಇವರ ವಿಮರ್ಶಾ ಬರವಣಿಗೆಗಳು ವಿದ್ವತ್ ಲೋಕದ ಮೆಚ್ಚುಗೆಗೆ ಪಾತ್ರವಾಗಿವೆ.
ಇವರು ಬರೆದ ಅನೇಕ ಕವಿತೆಗಳು, ನಾಟಕಗಳು ಹಿಂದಿ, ಇಂಗ್ಲಿಷ್, ತೆಲುಗು, ತಮಿಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕೆ ಅನಿಕೇತನದ ಸಂಪಾದಕರಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಕೃತ ನಾಟಕ ಹಾಗೂ ಬಂಗಾಳಿ ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕಾಳಿದಾಸನ ‘ಋತುಸಂಹಾರ’ದ ಅನುವಾದಕ್ಕಾಗಿ ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಡಾ|| ವೆಂಕಟೇಶಮೂರ್ತಿ ಅವರು ಬರೆದ ನಾಟಕಗಳು ರಾಷ್ಟ್ರೀಯ ಮನ್ನಣೆ ಗಳಿಸಿವೆ. ವರ್ಷದ ಉತ್ತಮ ಪುಸ್ತಕಕ್ಕಾಗಿ ಕೊಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಇವರು ಐದು ಬಾರಿ ಪಡೆದಿದ್ದಾರೆ. ದೇವರಾಜ್ ಬಹದ್ದೂರ್ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ ಮೊದಲಾದ ಗೌರವಗಳು ಶ್ರೀಯುತರಿಗೆ ಸಂದಿವೆ.
ಸಾಹಿತ್ಯ ವಲಯದ ಬಹುತೇಕ ಎಲ್ಲ ಹಿರಿ ಕಿರಿಯರೊಡನೆ ಸ್ನೇಹಪೂರ್ಣ ಸಂಬಂಧವಿರಿಸಿಕೊಂಡು, ಎಳೆಯ ಪ್ರತಿಭೆಗಳನ್ನು ಉತ್ತೇಜಿಸುತ್ತ ಸದಾ ಹಸನ್ಮುಖಿಯಾಗಿರುವ ಕನ್ನಡದ ಗಣ್ಯ ಸಾಹಿತಿ ಡಾ|| ಎಚ್‌. ಎಸ್. ವೆಂಕಟೇಶಮೂರ್ತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸೋಮಶೇಖರ ಇಮ್ರಾಪೂರ

ಕವಿ, ಸಂಶೋಧಕ, ಪ್ರಾಧ್ಯಾಪಕ, ಅಂಕಣಕಾರ, ಜಾನಪದ ತಜ್ಞರು ಡಾ. ಸೋಮಶೇಖರ ಇಮ್ರಾಪೂರ ಅವರು. ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ೧೯೪೦ರಲ್ಲಿ ಜನಿಸಿದ ಡಾ. ಸೋಮಶೇಖರ ಇಮ್ರಾಪೂರ ಅವರಿಗೆ ಕನ್ನಡ ಎಂ.ಎ.ಯಲ್ಲಿ ಸುವರ್ಣಪದಕ, ಜಾನಪದ ಒಗಟುಗಳು ಪಿಹೆಚ್.ಡಿ. ಪ್ರೌಢ ಪ್ರಬಂಧಕ್ಕೆ ಸುವರ್ಣಪದಕಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಡಾ. ಇಮ್ರಾಪೂರ ಅವರು ವಿಶ್ವವಿದ್ಯಾನಿಲಯದ ವಿದ್ವತ್ ವಲಯದಲ್ಲಿ ನಾನಾ ಅಧಿಕಾರ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಡಾ. ಇಮ್ರಾಪೂರ ಅವರು ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಕಲೆ, ಸಾಹಿತ್ಯ ಸಂಗ್ರಹ, ಸಂಪಾದನೆ, ವಿಚಾರ ಸಂಕಿರಣ, ಕಲಾ ಪ್ರದರ್ಶನ ಸಂಸ್ಕೃತಿಗೆ ಸಂಬಂಧಿಸಿದಂತೆ ೩೮ ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖವಾಗಿ ಜಾನಪದ ಸಾಹಿತ್ಯ, ಸಂಶೋಧನೆ ಹೀಗೆ ಹತ್ತಾರು ಕ್ಷೇತ್ರದಲ್ಲಿ ಜಾನಪದ ಅಧ್ಯಯನದ ಕ್ಷಿತಿಜವನ್ನು ವಿಸ್ತರಿಸಿದ ಶ್ರೀಯುತರು ಸಾವಿರ ಒಗಟುಗಳು, ಜನಪದ ಮಹಾಭಾರತ, ಜಾನಪದ ವಿಜ್ಞಾನ, ಜಾನಪದ ವ್ಯಾಸಂಗ ಹೀಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ವಿದ್ವಾಂಸರಾಗಿರುವಂತೆ ಸಮರ್ಥ ಕವಿಯೂ ಆಗಿರುವ ಡಾ. ಇಮ್ರಾಪೂರ ಅವರು ಬಿಸಿಲ ಹೂ, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಹುತ್ತಗಳು ಹಾಗೂ ಕನ್ನಡ ಕಾವ್ಯಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ದಾಂಗ’ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಲಾಲಿಸಿ ಕೇಳ ನನಮಾತ’, ‘ಅಂಕಣ ಬರಹ’, ಭಾವತೀವ್ರತೆಯಿಂದ ಕೂಡಿದ ಗದ್ಯ ಬರವಣಿಗೆಗೆ ಹೆಗ್ಗುರುತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾಗಿ, ಅನೇಕ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ೨೮ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರೆಂಬ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಜಾನಪದ ತಜ್ಞ ಪ್ರಶಸ್ತಿ ನೀಡಿ ಗೌರವಿಸಿದೆ. ಬೇವು ಬೆಲ್ಲ’ ಅಭಿನಂದನಾ ಗ್ರಂಥವನ್ನು ಶ್ರೀಯುತರಿಗೆ
ಅರ್ಪಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ವತಂತ್ರ ಜಾನಪದ ಅಧ್ಯಯನ ವಿಭಾಗವನ್ನು ಕಟ್ಟಿ ಬೆಳೆಸಿ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಜಾನಪದ ವಿದ್ವಾಂಸ ಡಾ. ಸೋಮಶೇಖರ ಇಮ್ರಾಪೂರ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಬರಗೂರು ರಾಮಚಂದ್ರಪ್ಪ

ಜನಪ್ರಿಯ ಪ್ರಾಧ್ಯಾಪಕ, ಬಂಡಾಯ ಸಾಹಿತ್ಯದ ಸೃಜನಶೀಲ ಲೇಖಕ, ಅದ್ಭುತ ಭಾಷಣಕಾರ, ಕ್ರಿಯಾಶೀಲ ಸಾಂಸ್ಕೃತಿಕ ವ್ಯಕ್ತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದ ರಾಮಚಂದ್ರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಬರಗೂರಿನಲ್ಲಿ, ಬಿ.ಎ. ಪದವಿಯನ್ನು ತುಮಕೂರಿನಲ್ಲಿ, ಎಂ.ಎ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಬರಗೂರರು ಸಾಹಿತಿಯಾಗಿ ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂವು, ಗುಲಾಮಗೀತೆ, ಮಗುವಿನ ಹಾಡು ಕವನ ಸಂಕಲನಗಳು; ಸುಂಟರಗಾಳಿ, ಕಪ್ಪುನೆಲದ ಕೆಂಪು ಕಾಲು, ಒಂದು ಊರಿನ ಕತೆಗಳು (ಆಯ್ದ ಕತೆಗಳು) ಕಥಾ ಸಂಕಲನಗಳು; ಸೂತ್ರ, ಉಕ್ಕಿನ ಕೋಟೆ, ಒಂದು ಊರಿನ ಕತೆ, ಬೆಂಕಿ, ಸೂರ್ಯ, ಸಂಗಪ್ಪನ ಸಾಹಸಗಳು, ಸೀಳು ನೆಲ, ಭರತನಗರಿ, ಗಾಜಿನ ಮನೆ, ಸ್ವಪ್ನ ಮಂಟಪ ಕಾದಂಬರಿಗಳು; ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕೃತಿ ಮತ್ತು ಸೃಜನಶೀಲತೆ, ಬಂಡಾಯ ಸಾಹಿತ್ಯ ಮೀಮಾಂಸೆ, ಇಣಕುನೋಟ, ಸಂಸ್ಕೃತಿ-ಉಪಸಂಸ್ಕೃತಿ, ವರ್ತಮಾನ, ರಾಜಕೀಯ ಚಿಂತನೆ ವಿಚಾರ ವಿಮರ್ಶೆಯ ಕೃತಿಗಳು; ಕಪ್ಪುಹಲಗೆ, ಕೋಟೆ, ನಾಟಕಗಳಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ೨೫೦ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ ಕೀರ್ತಿ ಶ್ರೀಯುತರದು.
ಎರಡು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನಾ ಸ್ಥಾಪಕರಾಗಿ, ಸಂಚಾಲಕರಾಗಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೌಲಿಕ ಸೇವೆ ಸಲ್ಲಿಸಿದ್ದಾರೆ.
ಬರಗೂರರು ನಿರ್ದೇಶಿಸಿದ ಚಲನಚಿತ್ರಗಳು ಒಂದು ಊರಿನ ಕಥೆ, ಬೆಂಕಿ, ಸೂರ್ಯ, ಕೋಟೆ, ಕರಡಿಪುರ, ಹಗಲುವೇಷ ಮತ್ತು ಹಲವಾರು ಸಾಕ್ಷ್ಯಚಿತ್ರಗಳು, ಸುಂಟರಗಾಳಿ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಂದು ಊರಿನ ಕಥೆ ಚಿತ್ರಕ್ಕೆ ಶ್ರೇಷ್ಠ ಲೇಖಕ, ಶ್ರೇಷ್ಠ ಸಂಭಾಷಣಕಾರ, ಚಲನಚಿತ್ರ ಪ್ರಶಸ್ತಿ, ಬೆಂಕಿ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕೋಟೆ ಚಿತ್ರಕ್ಕೆ ಶ್ರೇಷ್ಠ ಗೀತರಚನಕಾರ ಪ್ರಶಸ್ತಿ, ಜನುಮದ ಜೋಡಿ ಚಿತ್ರಕ್ಕೆ ಶ್ರೇಷ್ಠ ಸಂಭಾಷಣಕಾರ ಉದಯ ಟಿ.ವಿ. ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹೀಗೆ ಬರಗೂರರು ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗಾಗಿ ಪಡೆದ ಪ್ರಶಸ್ತಿ ಪುರಸ್ಕಾರಗಳು ಹಲವು.
ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮುಂತಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಒಳಸುಳಿಗಳನ್ನು ಅಭಿವ್ಯಕ್ತಿಸಿದ ವೈವಿಧ್ಯಮಯ ಕೃತಿಗಳ ರಚನೆ, ಚಲನಚಿತ್ರ ನಿರ್ದೇಶನ ಬಹು ಶಿಸ್ತೀಯ ಅಧ್ಯಯನದಲ್ಲಿ ವಿಶೇಷ ಆಸಕ್ತಿಯುಳ್ಳವರು ಪ್ರೊ. ಬರಗೂರು ರಾಮಚಂದಪ್ಪ ಅವರು.